ಕನ್ನಡ (Kannada): translationWords

Updated ? hours ago # views See on DCS Draft Material

Key Terms

ಅಂತ್ಯ ದಿನ, ಅಂತ್ಯ ದಿನಗಳು, ಅನಂತರದ ದಿನಗಳು

ಪದದ ಅರ್ಥವಿವರಣೆ:

“ಅಂತ್ಯ ದಿನಗಳು” ಅಥವಾ “ಅನಂತರದ ದಿನಗಳು” ಎನ್ನುವ ಪದವು ಸಾಧಾರಣವಾಗಿ ಈಗಿನ ಯುಗದ ಅಂತ್ಯಕಾಲ ವ್ಯವಧಿಯನ್ನು ಸೂಚಿಸುತ್ತದೆ.

  • ಈ ಕಾಲಾವಧಿಯು ತಿಳಿಯದ ಅವಧಿಯನ್ನು ಹೊಂದಿರುತ್ತದೆ
  • “ಅಂತ್ಯ ದಿನಗಳು” ಎನ್ನುವವು ದೇವರಿಂದ ತಿರುಗಿಕೊಂಡು ತಮಗೆ ಇಷ್ಟವಾದ ನಡತೆಯಲ್ಲಿರುವ ಜನರಿಗೆ ಮಾಡುವ ತೀರ್ಪಿನ ಸಮಯ.

ಅನುವಾದ ಸಲಹೆಗಳು:

  • “ಅಂತ್ಯ ದಿನಗಳು” ಎನ್ನುವ ಪದವನ್ನು “ಕೊನೆಯ ದಿನಗಳು” ಅಥವಾ “ಅಂತ್ಯ ಕಾಲಗಳು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ ಈ ಪದವನ್ನು “ಪ್ರಪಂಚದ ಅಂತ್ಯ” ಅಥವಾ “ಈ ಪ್ರಪಂಚವು ಅಂತ್ಯಗೊಂಡಾಗ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕರ್ತನ ದಿನ, ತೀರ್ಪು ಮಾಡು, ತಿರುಗಿಕೋ, ಪ್ರಪಂಚ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H319, H3117, G2078, G2250

ಅಕ್ರಮ

ಪದದ ಅರ್ಥವಿವರಣೆ:

“ಅಕ್ರಮ” ಎನ್ನುವ ಪದವು “ಪಾಪ” ಎನ್ನುವ ಪದಕ್ಕೆ ಅರ್ಥವನ್ನೇ ಹೊಂದಿರುತ್ತದೆ, ಆದರೆ ಇನ್ನೂ ವಿಶೇಷವಾಗಿ ತಿಳಿದು ತಪ್ಪುಗಳನ್ನು ಮಾಡುವುದನ್ನು ಅಥವಾ ಭಯಂಕರ ದುಷ್ಟತನವನ್ನು ಸೂಚಿಸುತ್ತದೆ.

  • “ಅಕ್ರಮ” ಎನ್ನುವ ಪದವು ಅಕ್ಷರಾರ್ಥವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡುವುದು ಅಥವಾ ಅವುಗಳನ್ನು ವಕ್ರೀಕರಣ ಮಾಡುವುದು ಎಂದರ್ಥ. ಇದು ಭಾರೀ ಅನ್ಯಾಯವನ್ನು ಸೂಚಿಸುತ್ತದೆ.
  • ಅಕ್ರಮ ಎನ್ನುವುದು ಇತರ ಜನರಿಗೆ ವಿರುದ್ಧವಾಗಿ ಮಾಡುವ ಉದ್ದೇಶಪೂರ್ವಕವಾದ, ಹಾನಿಕರವಾದ ಕ್ರಿಯೆಗಳನ್ನು ಸೂಚಿಸುತ್ತದೆ.
  • ಅಕ್ರಮ ಎನ್ನುವ ಪದಕ್ಕೆ ಹೇಳುವ ಇತರ ನಿರ್ವಚನೆಗಳಲ್ಲಿ “ವಕ್ರ ಸ್ವಭಾವ” ಮತ್ತು “ನೀಚತನ” ಎನ್ನುವ ಪದಗಳು ಒಳಗೊಂಡಿರುತ್ತವೆ, ಆ ಎರಡು ಪದಗಳು ಭಯಾನಕವಾದ ಪಾಪದ ಸ್ಥಿತಿಗತಿಗಳನ್ನು ವಿವರಿಸುತ್ತದೆ.

ಅನುವಾದ ಸಲಹೆಗಳು:

  • “ಅಕ್ರಮ” ಎನ್ನುವ ಪದವನ್ನು “ದುಷ್ಟತನ” ಅಥವಾ “ವಕ್ರಬುದ್ಧಿಯ ಕ್ರಿಯೆಗಳು” ಅಥವಾ “ಹಾನಿಕರವಾದ ಕ್ರಿಯೆಗಳು” ಎಂದೂ ಅನುವಾದ ಮಾಡಬಹುದು.
  • “ಪಾಪ” ಮತ್ತು “ಅಪರಾಧ” ಎನ್ನುವ ಪದಗಳು ವಾಕ್ಯಭಾಗಗಳಲ್ಲಿ ಕಾಣಿಸಿಕೊಂಡಂತೆ ಅನೇಕಸಲ “ಅಕ್ರಮ” ಎನ್ನುವ ಪದವು ಕಾಣಿಸಿಕೊಳ್ಳುತ್ತದೆ, ಈ ಪದಗಳ ಅನುವಾದದಲ್ಲಿ ಅನೇಕ ವಿಧಾನಗಳನ್ನು ಹೊಂದಿರುವುದು ತುಂಬಾ ಪ್ರಾಮುಖ್ಯ.

(ಈ ಪದಗಳನ್ನು ಸಹ ನೋಡಿರಿ : ಪಾಪ, ಅತಿಕ್ರಮಿಸು, ದೋಷ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H205, H1942, H5753, H5758, H5766, H5771, H5932, H5999, H7562, G00902, G00930, G04580, G38920, G41890

ಅತಿಕ್ರಮಣ, ಅತಿಕ್ರಮಣಗಳು, ಉಲ್ಲಂಘನೆ

ಪದದ ಅರ್ಥವಿವರಣೆ:

“ಅತಿಕ್ರಮಣ” ಎನ್ನುವ ಪದವು ನೈತಿಕವಾದ ನೀತಿಯನ್ನು, ನಿಯಮವನ್ನು ಆಜ್ಞೆಯನ್ನು ಮೀರುವುದನ್ನು ಸೂಚಿಸುತ್ತದೆ. “ಅತಿಕ್ರಮಣ” ಎಂದರೆ “ಉಲ್ಲಂಘಿಸುವುದು” ಎಂದರ್ಥ.

  • ಅಲಂಕಾರಿಕವಾಗಿ “ಅತಿಕ್ರಮಣ” ಎನ್ನುವ ಪದವು “ಗೆರೆಯನ್ನು ದಾಟು” ಎಂದೂ ವಿವರಿಸುತ್ತದೆ, ಅಂದರೆ, ಒಬ್ಬ ವ್ಯಕ್ತಿಯ ಮತ್ತು ಇತರರ ಕ್ಷೇಮಕ್ಕಾಗಿ ಇಟ್ಟಿರುವ ಪರಿಮಿತಿಗೆ ಅಥವಾ ಗಡಿಗೆ ಅತೀತವಾಗಿ ಹೋಗುವುದು ಎಂದರ್ಥ.
  • “ಅತಿಕ್ರಮಣ”, “ಪಾಪ”, “ಅಕ್ರಮ”, ಮತ್ತು “ಎಲ್ಲೆಮೀರು” ಎನ್ನುವ ಪದಗಳೆಲ್ಲವೂ ದೇವರಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ಮತ್ತು ಆತನ ಆಜ್ಞೆಗಳಿಗೆ ಅವಿಧೇಯತೆ ತೋರಿಸುವುದನ್ನು ಸೂಚಿಸುವ ಅರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • “ಅತಿಕ್ರಮಣ” ಎನ್ನುವ ಪದವನ್ನು “ಪಾಪ” ಅಥವಾ “ಅವಿಧೇಯತೆ” ಅಥವಾ “ತಿರಸ್ಕಾರ” ಎಂದೂ ಅನುವಾದ ಮಾಡಬಹುದು.
  • “ಪಾಪ” ಅಥವಾ “ಅತಿಕ್ರಮಣ” ಅಥವಾ “ಎಲ್ಲೆಮೀರು” ಎಂದು ಅರ್ಥ ಬರುವ ಎರಡು ಪದಗಳನ್ನು ವಾಕ್ಯವಾಗಲಿ ಅಥವಾ ವಾಕ್ಯಭಾಗಲಿ ಉಪಯೋಗಿಸಿದ್ದರೆ, ಸಾಧ್ಯವಾದರೆ, ಈ ಪದಗಳನ್ನು ವಿಭಿನ್ನವಾಗಿ ಅನುವಾದ ಮಾಡುವುದು ತುಂಬಾ ಪ್ರಾಮುಖ್ಯ. ಒಂದೇ ಸಂದರ್ಭದಲ್ಲಿ ಒಂದೇ ಅರ್ಥಗಳೊಂದಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಪದಗಳನ್ನು ಸತ್ಯವೇದವು ಉಪಯೋಗಿಸಿದಾಗ, ಸಾಧಾರಣವಾಗಿ ಏನು ಹೇಳಲ್ಪಟ್ಟಿದೆಯೆಂದು ಒತ್ತಿ ಹೇಳುವುದಕ್ಕೆ ಅಥವಾ ಅದರ ಪ್ರಾಮುಖ್ಯತೆಯನ್ನು ತೋರಿಸುವುದಕ್ಕೆ ಮಾತ್ರ ಹೇಳಲಾಗಿರುತ್ತದೆ, ಇದೇ ಇದರ ಉದ್ದೇಶವಾಗಿರುತ್ತದೆ.

(ನೋಡಿರಿ: ಸಮಾಂತರತ್ವ)

(ಈ ಪದಗಳನ್ನು ಸಹ ನೋಡಿರಿ : ಪಾಪ, ಎಲ್ಲೆಮೀರು, ಅಕ್ರಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H898, H4603, H4604, H6586, H6588, G458, G459, G3845, G3847, G3848, G3928

ಅಧಿಕಾರ

ಅರ್ಥವಿವರಣೆ:

“ಅಧಿಕಾರ” ಎನ್ನುವ ಪದವು ಒಬ್ಬರ ಮೇಲೆ ಮತ್ತೊಬ್ಬರು ನಿಯಂತ್ರಣ ಮಾಡುವ ಮತ್ತು ಪ್ರಭಾವಕ್ಕೆ ಒಳಗಾಗುವಂತೆ ಮಾಡುವ ಶಕ್ತಿಗೆ ಸೂಚನೆಯಾಗಿರುತ್ತದೆ.

  • ಅರಸರು ಮತ್ತು ಇತರ ಪಾಲನೆ ಮಾಡುವ ಪಾಲಕರು ಅವರು ಆಳುತ್ತಿರುವ ಜನರ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ.
  • “ಅಧಿಕಾರಗಳು” ಎನ್ನುವ ಪದವು ಜನರಿಗೆ, ಪ್ರಭುತ್ವಗಳಿಗೆ ಅಥವಾ ಇತರರ ಮೇಲೆ ಅಧಿಕಾರವನ್ನು ಹೊಂದಿರುವ ಸಂಸ್ಥೆಗಳಿಗೆ ಕೂಡ ಸೂಚಿಸುತ್ತದೆ.
  • “ಅಧಿಕಾರಗಳು” ಎನ್ನುವ ಪದವು ದೇವರ ಅಧಿಕಾರಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಳ್ಳದ ಜನರ ಮೇಲೆ ಅಧಿಕಾರವನ್ನು ಹೊಂದಿರುವ ಆತ್ಮ ಸಂಬಂಧಿಗಳನ್ನು ಕೂಡ ಸೂಚಿಸುತ್ತದೆ.
  • ಯಜಮಾನರು ತಮ್ಮ ಆಳುಗಳ ಮೇಲೆ ಅಥವಾ ದಾಸದಾಸಿಯರ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ. ತಂದೆತಾಯಿಗಳು ತಮ್ಮ ಮಕ್ಕಳ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ.
  • ಸರ್ಕಾರಗಳು ತಮ್ಮ ಪೌರರನ್ನು ಆಳುವದಕ್ಕೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಅಥವಾ ಹಕ್ಕನ್ನು ಹೊಂದಿರುತ್ತಾರೆ.

ಅನುವಾದ ಸಲಹೆಗಳು:

“ಅಧಿಕಾರ” ಎನ್ನುವ ಪದವನ್ನು “ನಿಯಂತ್ರಣ” ಅಥವಾ “ಹಕ್ಕು” ಅಥವಾ “ಅರ್ಹತೆಗಳು” ಎಂದೂ ಅನುವಾದ ಮಾಡಬಹುದು.

  • ಕೆಲವೊಂದು ಬಾರಿ “ಅಧಿಕಾರ” ಎನ್ನುವುದು “ಶಕ್ತಿ” ಎಂದು ಅರ್ಥ ಕೊಡುವ ಪದವನ್ನು ಬಳಸಲು ಉಪಯೋಗಿಸಲ್ಪಡುತ್ತದೆ.
  • “ಅಧಿಕಾರಗಳು” ಎನ್ನುವ ಪದವನ್ನು ಜನರು ಅಥವಾ ಜನರನ್ನು ಆಳುವ ಸಂಸ್ಥೆಗಳಿಗೆ ಸೂಚಿಸಿ ಉಪಯೋಗಿಸಿದಾಗ, ಅದನ್ನು “ನಾಯಕರು” ಅಥವಾ “ಪಾಲಕರು” ಅಥವಾ “ಶಕ್ತಿಗಳು” ಎಂದೂ ಅನುವಾದ ಮಾಡಬಹುದು.
  • “ಈತನ ಸ್ವಂತ ಅಧಿಕಾರದಿಂದ” ಎನ್ನುವ ಮಾತನ್ನು ಕೂಡ “ಪಾಲಿಸುವದಕ್ಕೆ ತನ್ನ ಸ್ವಂತ ಹಕ್ಕಿನಿಂದ” ಅಥವಾ “ತನ್ನ ಸ್ವಂತ ಅರ್ಹತೆಗಳ ಆಧಾರದಿಂದ” ಎನ್ನುವ ಮಾತಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ಅಧಿಕಾರದ ಕೆಳಗೆ” ಎನ್ನುವ ಭಾವವ್ಯಕ್ತೀಕರಣವನ್ನು “ವಿಧೇಯರಾಗಲು ಬಾಧ್ಯತೆ” ಅಥವಾ “ಇತರರ ಆಜ್ಞೆಗಳಿಗೆ ವಿಧೇಯರಾಗಿರುವುದು” ಎಂದೂ ಅನುವಾದ ಮಾಡಬಹುದು.

(ಇವುಗಳನ್ನು ಸಹ ನೋಡಿರಿ : ಆದಿಪತ್ಯ, ರಾಜ, ಅಧಿಕಾರಿ, ಶಕ್ತಿ)

ಸತ್ಯವೇದದ ಉಲ್ಲೇಖಗಳು:

ಪದದ ಡೇಟಾ:

  • Strong's: H8633, G08310, G14130, G18490, G18500, G20030, G27150, G52470

ಅನ್ಯ ಜನರು

ಸತ್ಯಾಂಶಗಳು:

“ಅನ್ಯ ಜನರು” ಎನ್ನುವ ಪದವು ಯೆಹೂದ್ಯನಲ್ಲದ ವ್ಯಕ್ತಿಯನ್ನು ಸೂಚಿಸುತ್ತದೆ. ಅನ್ಯಜನರಾಗಿರುವವರು ಯಾಕೋಬನ ಸಂತತಿಯಲ್ಲದವರು.

  • ಸತ್ಯವೇದದಲ್ಲಿ “ಸುನ್ನತಿಮಾಡಿಸಿಕೊಳ್ಳದವನು” ಎನ್ನುವ ಪದವು ಅನ್ಯರಿಗೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ, ಯಾಕಂದರೆ ಅನ್ಯಜನರಲ್ಲಿ ಅನೇಕರು ಇಸ್ರಾಯೇಲ್ಯರು ಮಾಡಿಕೊಳ್ಳುವ ಹಾಗೆ ಅವರ ಗಂಡು ಮಕ್ಕಳಿಗೆ ಸುನ್ನತಿ ಮಾಡಿಸಿರುವುದಿಲ್ಲ.
  • ಯಾಕಂದರೆ ದೇವರು ಯೆಹೂದ್ಯರನ್ನು ತನ್ನ ವಿಶೇಷವಾದ ಜನರಾಗಿರುವುದಕ್ಕೆ ಆದುಕೊಂಡಿದ್ದಾನೆ, ಅನ್ಯರು ಎಂದಿಗೂ ದೇವ ಜನರಾಗದ ಹೊರಿಗಿನವರೆಂದು ಅವರು ಆಲೋಚನೆ ಮಾಡುತ್ತಾರೆ.
  • ಚರಿತ್ರೆಯಲ್ಲಿ ವಿವಿಧ ಕಾಲಗಳಲ್ಲಿ ಯೆಹೂದ್ಯರನ್ನು “ಇಸ್ರಾಯೇಲ್ಯರೆಂದು” ಅಥವಾ “ಇಬ್ರಿಯರೆಂದು” ಕರೆಯುತ್ತಾರೆ. ತಮ್ಮ ಜನಾಂಗದವರಲ್ಲದ ವ್ಯಕ್ತಿಯನ್ನು “ಅನ್ಯನು” ಎಂದು ಅವರು ಸೂಚಿಸುತ್ತಾರೆ.
  • ಅನ್ಯ ಜನರು ಎನ್ನುವ ಪದವನ್ನು “ಯೆಹೂದ್ಯನಾಗದವನು” ಅಥವಾ “ಯೆಹೂದ್ಯನಲ್ಲದವನು” ಅಥವಾ “ಇಸ್ರಾಯೇಲನಾಗದವನು” (ಹಳೇ ಒಡಂಬಡಿಕೆ) ಅಥವಾ “ಯೆಹೂದಿಯಲ್ಲ” ಎಂದೂ ಅನುವಾದ ಮಾಡಬಹುದು.
  • ಸಾಂಪ್ರದಾಯಿಕವಾಗಿ ಯೆಹೂದ್ಯರು ಅನ್ಯರೊಂದಿಗೆ ಸಹವಾಸ ಮಾಡುವುದಿಲ್ಲ ಮತ್ತು ತಿನ್ನುವುದಿಲ್ಲ, ಇದೇ ಆದಿ ಸಭೆಯಲ್ಲಿ ಮೊದಲ ಸಮಸ್ಯೆಯಾಗಿದ್ದಿತು.

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಯಾಕೋಬ, ಯೆಹೂದ್ಯ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1471, G1482, G1484, G1672

ಅಪರಾಧ, ಅಪರಾಧಿ

ಪದದ ಅರ್ಥವಿವರಣೆ:

“ಅಪರಾಧ” ಎನ್ನುವ ಪದವು ತಪ್ಪು ಮಾಡಿರುವುದನ್ನು ಅಥವಾ ಪಾಪ ಮಾಡಿರುವನ್ನು ಸೂಚಿಸುತ್ತದೆ.

  • “ಅಪರಾಧಿಯಾಗಿರುವುದು” ಎಂದರೆ ದೇವರಿಗೆ ಅವಿಧೇಯತೆ ತೋರಿಸುವ ನೈತಿಕವಾಗಿ ತಪ್ಪು ಮಾಡಿರುವುದನ್ನು ಸೂಚಿಸುತ್ತದೆ.
  • “ಅಪರಾಧಿ” ಎನ್ನುವ ಪದಕ್ಕೆ ವಿರುದ್ಧಾತ್ಮಕ ಪದ “ನಿರ್ದೋಷಿ” ಆಗಿರುತ್ತದೆ.

ಅನುವಾದ ಸಲಹೆಗಳು:

  • “ಅಪರಾಧ” ಎನ್ನುವ ಪದವನ್ನು ಕೆಲವೊಂದು ಭಾಷೆಗಳಲ್ಲಿ “ಪಾಪ ಭಾರ” ಅಥವಾ “ಪಾಪದ ಲೆಕ್ಕ” ಎಂಬುದಾಗಿ ಅನುವಾದ ಮಾಡುತ್ತಾರೆ.
  • “ಅಪರಾಧಿಯಾಗಿರುವುದು” ಎನ್ನುವ ಮಾತನ್ನು ಅನುವಾದ ಮಾಡುವ ಅನೇಕ ವಿಧಾನಗಳಲ್ಲಿ “ತಪ್ಪುಮಾಡಿದವನಾಗು” ಅಥವಾ “ನೈತಿಕವಾಗಿ ತಪ್ಪು ಮಾಡಿರುವುದು” ಅಥವಾ “ಪಾಪ ಮಾಡಿರುವುದನ್ನು” ಎನ್ನುವ ಅರ್ಥಗಳು ಬರುವ ಮಾತುಗಳನ್ನು ಒಳಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ನಿರ್ದೋಷಿ, ಅಕ್ರಮ, ಶಿಕ್ಷೆ, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 39:02 ಆತನ (ಯೇಸುವಿನ) ಕುರಿತಾಗಿ ಸುಳ್ಳು ಹೇಳಿದ ಅನೇಕ ಸಾಕ್ಷಿಗಳನ್ನು ಅವರು ಕರೆದುಕೊಂಡು ಬಂದರು. ಆದರೆ, ಅವರು ಹೇಳಿದ ಮಾತುಗಳು ಅವರಲ್ಲಿಯೇ ಸರಿಯಾಗಿದ್ದಿಲ್ಲ, ಆದ್ದರಿಂದ ಯೆಹೂದ್ಯರ ನಾಯಕರು ಆತನು ಯಾವುದರ ವಿಷದಲ್ಲಿಯೂ __ ಅಪರಾಧಿಗಳೆಂದು __ ನಿರೂಪಿಸುವುದಕ್ಕಾಗಲಿಲ್ಲ.
  • 39:11 ಯೇಸುವಿನೊಂದಿಗೆ ಮಾತನಾಡಿದನಂತರ, ಪಿಲಾತನು ಜನಸಮೂಹದ ಕಡೆಗೆ ಹೋಗಿ, “ಈ ಮನುಷ್ಯನಲ್ಲಿ ನಾನು ಯಾವ ___ ಅಪರಾಧವನ್ನು ___ ಕಂಡುಕೊಳ್ಳಲಿಲ್ಲ” ಎಂದು ಹೇಳಿದನು. ಆದರೆ ಯೆಹೂದ್ಯ ನಾಯಕರು ಮತ್ತು ಜನಸಮೂಹಗಳು “ಅವನನ್ನು ಶಿಲುಬೆಗೇರಿಸಿ” ಎಂದು ಜೋರಾಗಿ ಕೂಗಿದರು! “ಈತನು ___ ಅಪರಾಧಿಯಲ್ಲ ” ಎಂದು ಪಿಲಾತನು ಉತ್ತರ ಕೊಟ್ಟನು. ಆದರೆ ಅವರು ಇನ್ನೂ ಹೆಚ್ಚಾಗಿ ಕೂಗಿದರು. ಪಿಲಾತನು ಮೂರನೇಯಬಾರಿ “ಆತನು ___ ಅಪರಾಧಿಯಲ್ಲ” ಎನ್ನುವ ವಿಷಯವನ್ನು ಹೇಳಿದನು.
  • 40:04 ಯೇಸುವನ್ನು ಇಬ್ಬರ ಕಳ್ಳರ ಮಧ್ಯೆದಲ್ಲಿ ಶಿಲುಬೆಗೆ ಹಾಕಿದರು. ಅವರಲ್ಲಿ ಒಬ್ಬನು ಯೇಸುವನ್ನು ಹೀಯಾಳಿಸಿದನು, ಆದರೆ ಇನ್ನೊಬ್ಬ, “ನಿನಗೆ ದೇವರ ಭಯವಿಲ್ಲವೋ?” ನಾವಾದರೋ ___ ಅಪರಾಧಿಗಳು ___ , ಆದರೆ ಈ ಮನುಷ್ಯನು ನಿರ್ದೋಷಿ ಯೆಂದು ಹೇಳಿದನು.
  • 49:10 ನಿನ್ನ ಪಾಪದ ಕಾರಣದಿಂದ ನೀನು ___ ಅಪರಾಧಿ ___ ಯಾಗಿದ್ದೀ ಮತ್ತು ನೀನು ಸಾಯುವ ಅರ್ಹತೆಯನ್ನು ಹೊಂದಿದ್ದೀ.

ಪದ ಡೇಟಾ:

  • Strong's: H816, H817, H818, H5352, H5355, G338, G1777, G3784, G5267

ಅಪೊಸ್ತಲ, ಅಪೊಸ್ತಲತ್ವ

ಅರ್ಥವಿವರಣೆ:

“ಅಪೊಸ್ತಲರು” ಎನ್ನುವವರು ದೇವರ ಕುರಿತಾಗಿ ಮತ್ತು ಆತನ ರಾಜ್ಯದ ಕುರಿತಾಗಿ ಬೋಧಿಸುವುದಕ್ಕೆ ಯೇಸುವಿನಿಂದ ಕಳುಹಿಸಲ್ಪಟ್ಟವರು. “ಅಪೊಸ್ತಲತ್ವ” ಎನ್ನುವ ಪದವು ಅಪೊಸ್ತಲರಾಗಿ ನೇಮಿಸಲ್ಪಟ್ಟಿರುವವರ ಅಧಿಕಾರವನ್ನು ಮತ್ತು ಸ್ಥಾನವನ್ನು ಸೂಚಿಸುತ್ತದೆ.

“ಅಪೊಸ್ತಲ” ಎನ್ನುವ ಪದಕ್ಕೆ “ಒಂದು ವಿಶೇಷವಾದ ಉದ್ದೇಶಕ್ಕಾಗಿ ಹೊರಗೆ ಕಳುಹಿಸಲ್ಪಟ್ಟವರು” ಎಂದರ್ಥ. ಯಾರಿಂದ ಅಪೊಸ್ತಲರಾಗಿ ಕಳುಹಿಸಲ್ಪಡುತ್ತಾರೋ ಅವರಿಗಿರುವ ಅಧಿಕಾರವನ್ನೇ ಅಪೊಸ್ತಲರೂ ಹೊಂದಿರುತ್ತಾರೆ.

  • ಯೇಸುವಿನ ಅತೀ ಹತ್ತಿರದ ಹನ್ನೆರಡು ಮಂದಿ ಶಿಷ್ಯರು ಮೊಟ್ಟ ಮೊದಲ ಅಪೊಸ್ತಲರಾದರು. ಇತರರು, ಎಂದರೆ ಪೌಲ ಮತ್ತು ಯಾಕೋಬ, ಸಹ ಅಪೊಸ್ತಲರಾದರು.
  • ದೇವರ ಶಕ್ತಿಯಿಂದ, ಅಪೊಸ್ತಲರು ಧೈರ್ಯವಾಗಿ ಸುವಾರ್ತೆಯನ್ನು ಸಾರಿದರು ಮತ್ತು ಅನೇಕ ಜನರನ್ನು ಗುಣಪಡಿಸಿದರು, ಮತ್ತು ಜನರೊಳಗಿಂದ ದೆವ್ವಗಳೆಲ್ಲವು ಹೊರಬರುವಂತೆ ಅವರು ಮಾಡಿದರು.

ಅನುವಾದ ಸಲಹೆಗಳು:

  • “ಅಪೊಸ್ತಲ” ಎನ್ನುವ ಪದವನ್ನು “ಹೊರಗೆ ಕಳುಹಿಸಲ್ಪಟ್ಟ ಒಬ್ಬ ವ್ಯಕ್ತಿ” ಅಥವಾ “ಕಳುಹಿಸಲ್ಪಟ್ಟ ವ್ಯಕ್ತಿ” ಅಥವಾ “ಜನರಿಗೆ ದೇವರ ಸಂದೇಶವನ್ನು ಸಾರುವುದಕ್ಕೆ ಹೊರಗೆ ಹೋಗುವುದಕ್ಕೆ ಕರೆಯಲ್ಪಟ್ಟ ವ್ಯಕ್ತಿ” ಎನ್ನುವ ಪದಗಳಿಂದ ಅಥವಾ ನುಡಿಗಟ್ಟಿನಿಂದಲೂ ಅನುವಾದ ಮಾಡಬಹುದು.
  • “ಅಪೊಸ್ತಲ” ಮತ್ತು “ಶಿಷ್ಯ” ಎನ್ನುವ ಪದಗಳನ್ನು ಬೇರೆ ಬೇರೆಯಾಗಿ ಅನುವಾದ ಮಾಡುವುದು ಇಲ್ಲಿ ತುಂಬಾ ಪ್ರಾಮುಖ್ಯ.
  • ಅದೇರೀತಿ ಈ ಪದವನ್ನು ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಸತ್ಯವೇದದ ಅನುವಾದದಲ್ಲಿ ಯಾವರೀತಿ ಅನುವಾದ ಮಾಡಿದ್ದಾರೆಂಬುದನ್ನು ಕೂಡ ಪರಿಗಣಿಸಿರಿ. (ನೋಡಿರಿ ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಇವುಗಳನ್ನು ಸಹ ನೋಡಿರಿ : ಅಧಿಕಾರ, ಶಿಷ್ಯ, ಯಾಕೋಬ (ಜೆಬೆದಾಯನ ಮಗ), ಪೌಲ, ಹನ್ನೆರಡು)

ಸತ್ಯವೇದದ ಉಲ್ಲೇಖಗಳು:

ಸತ್ಯವೇದದ ಕಥೆಗಳಿಂದ ಉದಾಹರಣೆಗಳು:

  • 26:10 ಯೇಸು ಹನ್ನೆರಡು ಮಂದಿಯನ್ನು ಆರಿಸಿಕೊಂಡನು, ಅವರೇ ಆತನ __ ಅಪೊಸ್ತಲರು __ ಎಂದು ಕರೆಯಲ್ಪಟ್ಟವರು. __ ಅಪೊಸ್ತಲರು __ಯೇಸುವಿನೋಟ್ಟಿಗೆ ಪ್ರಯಾಣ ಮಾಡುತ್ತಾ ಆತನಿಂದ ಕಲಿತುಕೊಂಡರು.
  • 30:01 ಯೇಸು ಅನೇಕ ಗ್ರಾಮಗಳಲ್ಲಿ ಜನರಿಗೆ ಬೋಧಿಸುವುದಕ್ಕೆ ಮತ್ತು ಪ್ರಸಂಗಿಸುವುದಕ್ಕೆ ತನ್ನ __ ಅಪೊಸ್ತಲರನ್ನು __ ಕಳುಹಿಸಿದರು.
  • 38:02 ಯೂದನು ಯೇಸುವಿನ __ ಅಪೊಸ್ತಲರಲ್ಲಿ __ ಒಬ್ಬರಾಗಿದ್ದರು. ಇವನು __ ಅಪೊಸ್ತಲರ __ ಹಣದ ಚೀಲಕ್ಕೆ ಜವಾಬ್ದಾರಿ ವಹಿಸಿದ್ದನು, ಆದರೆ ಆತನು ಹಣವನ್ನು ಪ್ರೀತಿಸಿದ್ದನು ಮತ್ತು ಅನೇಕಸಲ ಆ ಚೀಲದಿಂದ ಹಣವನ್ನು ಕದ್ದಿದ್ದನು.
  • 43:13 ಶಿಷ್ಯರೆಲ್ಲರೂ ತಮ್ಮನು ತಾವು __ ಅಪೊಸ್ತಲರ __ ಬೋಧನೆ, ಸಹವಾಸ, ಸೇರಿ ಊಟಮಾಡುವುದು, ಮತ್ತು ಪ್ರಾರ್ಥನೆಗಳಲ್ಲಿ ಕಾರ್ಯನಿರತರಾಗಿದ್ದರು.
  • 46:08 ವಿಶ್ವಾಸಿಯಾಗಿದ್ದ ಬಾರ್ನಬ ಸೌಲನನ್ನು __ ಅಪೊಸ್ತಲರ __ ಬಳಿಗೆ ಕರೆದುಕೊಂಡು ಬಂದನು ಮತ್ತು ಸೌಲನು ದಮಸ್ಕದಲ್ಲಿ ಯಾವರೀತಿ ಧೈರ್ಯದಿಂದ ಸುವಾರ್ತೆಯನ್ನು ಸಾರಿದನೆಂದು ಅವರಿಗೆ ತಿಳಿಸಿದನು.

ಪದದ ದತ್ತಾಂಶ:

  • Strong's: G06510, G06520, G24910, G53760, G55700

ಅಭಿಷೇಕಿಸು, ಅಭಿಷೇಕಿಸಿದ್ದು, ಅಭಿಷೇಕ

ಪದದ ಅರ್ಥವಿವರಣೆ:

“ಅಭಿಷೇಕ” ಎಂಬ ಪದವು ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಎಣ್ಣೆಯನ್ನು ಹಚ್ಚುವುದು ಅಥವಾ ಸುರಿಯುವುದು ಎಂದರ್ಥ. ಕೆಲವೊಮ್ಮೆ ಎಣ್ಣೆಯಲ್ಲಿ ಪರಿಮಳ ದ್ರವ್ಯಗಳನ್ನು ಬೆರಸಲಾಗುತ್ತದೆ. ಇದು ಒಂದು ಒಳ್ಳೇಯ ಸುಗಂಧದ ವಾಸನೆಯನ್ನು ನೀಡುತ್ತದೆ. ಸತ್ಯವೇದದ ಸಮಯಗಳಲ್ಲಿ, ಎಣ್ಣೆಯಿಂದ ಅಭಿಷೇಕಿಸಲು ಅನೇಕ ಕಾರಣಗಳಿದ್ದವು.

  • ಹಳೇ ಒಡಂಬಡಿಕೆಯಲ್ಲಿ, ಯಾಜಕರು, ಅರಸರು, ಮತ್ತು ಪ್ರವಾದಿಗಳನ್ನುದೇವರ ವಿಶೇಷವಾದ ಸೇವೆಗೋಸ್ಕರ ಪ್ರತ್ಯೇಕಿಸಲು ಎಣ್ಣೆಯಿಂದ ಅಭಿಷೇಕಿಸಲಾಗುತ್ತಿತ್ತು.
  • ದೇವರನ್ನು ಮಹಿಮೆಪಡಿಸುವುದಕ್ಕೆ ಮತ್ತು ಆರಾಧಿಸುವುದಕ್ಕೆ ಉಪಯೋಗಿಸಲ್ಪಡುತ್ತಿರುವ ಯಜ್ಞವೇದಿಗಳು ಅಥವಾ ಗುಡಾರ ಎನ್ನುವ ವಸ್ತುಗಳ ಮೇಲೆ ಎಣ್ಣೆಯನ್ನು ಸುರಿಸಿ ಅಭಿಷೇಕ ಮಾಡಲಾಗುತ್ತಿತ್ತು.
  • ಹೊಸ ಒಡಂಬಡಿಕೆಯಲ್ಲಿ ಅನಾರೋಗ್ಯ ಜನರ ಸ್ವಸ್ಥತೆಗಾಗಿ ಎಣ್ಣೆಯಿಂದ ಅಭಿಷೇಕಿಸಿಲಾಗುತ್ತಿತ್ತು.
  • ಆರಾಧನೆ ಕ್ರಿಯೆಯಾಗಿ ತೋರ್ಪಡುವಂತೆ ಒಬ್ಬ ಸ್ತ್ರೀಯಿಂದ ಸುಗಂಧ ದ್ರವ್ಯದ ಎಣ್ಣೆಯೊಂದಿಗೆ ಯೇಸು ಅಭಿಷೇಕಿಸಲ್ಪಟ್ಟಿರುವ ಸಂದರ್ಭಗಳನ್ನು ಹೊಸ ಒಡಂಬಡಿಕೆಯಲ್ಲಿ ಎರಡು ಸಾರಿ ದಾಖಲಿಸಿದ್ದನ್ನು ನಾವು ನೋಡಬಹುದು. ಇದನ್ನು ಮಾಡುವ ಮೂಲಕ ಅವಳು ತನ್ನ ಭವಿಷ್ಯದ ಸಮಾಧಿಗಾಗಿ ಸಿದ್ಧಮಾಡುತ್ತಿದ್ದಾಳೆಂದು ಯೇಸು ಪ್ರತಿಕ್ರಿಯಿಸಿದನು.
  • ಯೇಸು ಸತ್ತ ನಂತರ, ಆತನ ದೇಹವನ್ನು ತನ್ನ ಸ್ನೇಹಿತರು ಎಣ್ಣೆಗಳಿಂದ ಮತ್ತು ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಸಮಾಧಿಗೋಸ್ಕರ ಸಿದ್ಧಗೊಳಿಸಿದ್ದರು.
  • “ಮೆಸ್ಸೀಯನು” (ಇಬ್ರಿಯ) ಮತ್ತು “ಕ್ರಿಸ್ತನು” (ಗ್ರೀಕ್) ಎನ್ನುವ ಬಿರುದುಗಳಿಗೆ “ಅಭಿಷೇಕಿಸಲ್ಪಟ್ಟವನು” ಎಂದರ್ಥ.
  • ಯೇಸು ಮೆಸ್ಸೀಯ ಅಂದರೆ ಪ್ರವಾದಿಯಾಗಿರಲು, ಮಹಾ ಯಾಜಕನಾಗಿರಲು ಮತ್ತು ಅರಸನಾಗಿರಲು ಆಯ್ಕೆಮಾಡಲ್ಪಟ್ಟಿರುವನು ಮತ್ತು ಅಭಿಷೇಕ ಹೊಂದಿದವನೂ ಎಂದರ್ಥ.
  • ಸತ್ಯವೇದದ ಸಮಯಗಳಲ್ಲಿ, ಒಬ್ಬ ಸ್ತ್ರೀಯು ತನ್ನನ್ನು ತಾನು ಲೈಂಗಿಕವಾಗಿ ಆಕರ್ಷಣೆಯುಳ್ಳವಳಾಗಿ ಮಾಡಿಕೊಳ್ಳಲು ಎಣ್ಣೆಯಿಂದ ತನ್ನನ್ನು ತಾನೇ ಅಭಿಷೇಕಿಸುತ್ತಿದ್ದಳು.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಹಾಗೆ, “ಅಭಿಷೇಕ” ಎನ್ನುವ ಪದವನ್ನು “ಎಣ್ಣೆಯನ್ನು ಹೊಯ್ಯುವುದು” ಅಥವಾ “ಎಣ್ಣೆಯನ್ನು ಹಚ್ಚುವುದು” ಅಥವಾ “ಸುಗಂಧ ದ್ರವ್ಯದ ಎಣ್ಣೆಯಿಂದ ಪ್ರತಿಷ್ಠೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಅಭಿಷೇಕಿಸಿದ್ದು” ಎನ್ನುವ ಪದವನ್ನು “ಎಣ್ಣೆಯಿಂದ ಪ್ರತಿಷ್ಠೆ ಮಾಡಲ್ಪಟ್ಟವನು” ಅಥವಾ “ನೇಮಿಸಲ್ಪಟ್ಟವನು” ಅಥವಾ “ಪ್ರತಿಷ್ಠೆ ಮಾಡಲ್ಪಟ್ಟವನು” ಎಂದೂ ಅನುವಾದ ಮಾಡಬಹುದು.
  • “ಅಭಿಷೇಕ” ಎನ್ನುವ ಪದವು ಕೆಲವು ಸಂದರ್ಭಗಳಲ್ಲಿ “ನೇಮಕ” ಎಂದೂ ಅನುವಾದ ಮಾಡಬಹುದು.
  • “ಅಭಿಷೇಕಿಸಲ್ಪಟ್ಟ ಯಾಜಕ” ಎನ್ನುವ ಮಾತನ್ನು “ಎಣ್ಣೆಯಿಂದ ಪ್ರತಿಷ್ಠೆ ಮಾಡಲ್ಪಟ್ಟ ಯಾಜಕನು” ಅಥವಾ “ಎಣ್ಣೆಯನ್ನು ಸುರಿಸುವುದರ ಮೂಲಕ ಪ್ರತ್ಯೇಕಿಸಲ್ಪಟ್ಟ ಯಾಜಕ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಪ್ರತಿಷ್ಠೆ, ಮಹಾಯಾಜಕ, ಯೆಹೂದ್ಯರ ಅರಸ, ಯಾಜಕ, ಪ್ರವಾದಿ)

ಸತ್ಯವೇದದ ಉಲ್ಲೇಖ ವಚನಗಳು:

ಪದದ ದತ್ತಾಂಶ:

  • Strong's: H47, H430, H1101, H1878, H3323, H4397, H4398, H4473, H4886, H4888, H4899, H5480, H8136, G32, G218, G743, G1472, G2025, G3462, G5545, G5548

ಅಯ್ಯೋ

ಪದದ ಅರ್ಥವಿವರಣೆ:

“ಅಯ್ಯೋ” ಎನ್ನುವ ಪದವು ದೊಡ್ಡ ತೊಂದರೆಯ ಭಾವನೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ ಗಂಭೀರವಾದ ತೊಂದರೆಯನ್ನು ಅನುಭವಿಸುತ್ತಾನೆಂದು ಕೊಡುವ ಎಚ್ಚರಿಕೆಯನ್ನೂ ಸೂಚಿಸುತ್ತದೆ.

  • “ಅಯ್ಯೋ” ಎನ್ನುವ ಪದವು ಜನರು ಮಾಡಿದ ಪಾಪಗಳಿಗಾಗಿ ಶಿಕ್ಷೆಯಾಗಿ ಅವರು ಶ್ರಮೆಗಳನ್ನು ಅನುಭವಿಸುತ್ತಾರೆಂದು ಜನರಿಗೆ ಎಚ್ಚರಿಕೆಯನ್ನು ಕೊಡುವ ಮಾತಿನಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
  • ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ “ಅಯ್ಯೋ” ಎನ್ನುವ ಪದವು ಅನೇಕಸಲ ಉಪಯೋಗಿಸಲ್ಪಟ್ಟಿರುತ್ತದೆ, ವಿಶೇಷವಾಗಿ ಭಯಂಕರವಾದ ತೀರ್ಪನ್ನು ಒತ್ತಿ ಹೇಳುತ್ತದೆ.
  • “ಅಯ್ಯೋ, ನಾನು” ಅಥವಾ “ನನಗೆ ಸಂಭವಿಸಿದ ಗತಿ” ಎಂದು ಒಬ್ಬ ವ್ಯಕ್ತಿ ಹೇಳಿದಾಗ ಗಂಭೀರವಾದ ಶ್ರಮೆಯ ಕುರಿತಾಗಿ ದುಃಖವನ್ನು ವ್ಯಕ್ತಪಡಿಸುವುದು ಎಂದರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಅಯ್ಯೋ” ಎನ್ನುವ ಪದವನ್ನು “ಮಹಾ ದುಃಖ” ಅಥವಾ “ದುಃಖಸ್ಥಿತಿ” ಅಥವಾ “ವಿಪತ್ತು” ಅಥವಾ “ದುರಂತ” ಎಂದೂ ಅನುವಾದ ಮಾಡಬಹುದು.
  • “ಅಯ್ಯೋ, (ಪಟ್ಟಣದ) ಗತಿ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ, “(ಪಟ್ಟಣಕ್ಕೆ) ಎಂತ ಭಯಂಕರವಾದ ಪರಿಸ್ಥಿತಿ” ಅಥವಾ “(ಪಟ್ಟಣದಲ್ಲಿ) ಜನರು ತುಂಬಾ ತೀವ್ರವಾಗಿ ಶಿಕ್ಷಿಸಲ್ಪಟ್ಟಿರುವುದು” ಅಥವಾ “ಆ ಜನರು ಅತೀ ಗಂಭೀರವಾಗಿ ಶ್ರಮೆಗಳನ್ನು ಅನುಭವಿಸುವರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಅಯ್ಯೋ, ನಾನು” ಅಥವಾ “ನನಗೆ ಸಂಭವಿಸಿದ ಗತಿ!” ಎನ್ನುವ ಮಾತನ್ನು “ನಾನು ಎಷ್ಟು ದುಃಖ ಸ್ಥಿತಿಯಲ್ಲಿದ್ದೇನೆ!” ಅಥವಾ “ನಾನು ದುಃಖದಲ್ಲಿದ್ದೇನೆ!” ಅಥವಾ “ಇದು ನನಗೆ ಎಷ್ಟು ಭಯಂಕರವಾಗಿದೆ!” ಎಂದೂ ಅನುವಾದ ಮಾಡಬಹುದು.
  • “ಅಯ್ಯೋ ನೀನು” ಎನ್ನುವ ಮಾತನ್ನು “ನೀನು ಅತೀ ಗಂಭೀರವಾಗಿ ಶ್ರಮೆ ಹೊಂದುವಿ” ಅಥವಾ “ನೀನು ಭಯಂಕರವಾದ ತೊಂದರೆಗಳನ್ನು ಅನುಭವಿಸುವಿ” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H188, H190, H337, H480, H1929, H1945, H1958, G3759

ಅಸಹ್ಯ, ಅಸಹ್ಯಕರ

ಅರ್ಥವಿವರಣೆ:

“ಅಸಹ್ಯ” ಎನ್ನುವ ಪದವು ಹೇಸಿಗೆಯನ್ನು ಉಂಟುಮಾಡುವ ವಿಷಯಗಳಿಗೆ ಅಥವಾ ಅತೀ ಹೆಚ್ಚಾಗಿ ಇಷ್ಟವಾಗದ ವಿಷಯಗಳಿಗೆ ಸೂಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.

  • ಐಗುಪ್ತರು ಇಬ್ರಿಯರನ್ನು “ಅಸಹ್ಯ” ಜನರಾಗಿ ಕಾಣುತ್ತಿದ್ದರು. ಇದರ ಅರ್ಥವೇನೆಂದರೆ ಐಗುಪ್ತರು ಇಬ್ರಿಯರನ್ನು ಇಷ್ಟಪಡುತ್ತಿರಲಿಲ್ಲ ಮತ್ತು ಅವರ ಬಳಿಗೆ ಹೋಗುತ್ತಿರಲಿಲ್ಲ ಅಥವಾ ಅವರೊಂದಿಗೆ ಸಹವಾಸ ಮಾಡುವುದಕ್ಕೆ ಇವರು ಇಷ್ಟಪಡುತ್ತಿರಲಿಲ್ಲ.
  • ಕೆಲವೊಂದು ವಿಷಯಗಳನ್ನು “ಯೆಹೋವನಿಗೆ ಅಸಹ್ಯ” ಎಂದು ಸತ್ಯವೇದವು ಕರೆಯುತ್ತದೆ, ಆ ವಿಷಯಗಳಲ್ಲಿ ಸುಳ್ಳಾಡುವುದು, ಗರ್ವ, ಮನುಷ್ಯರನ್ನು ಬಲಿಕೊಡುವುದು, ವಿಗ್ರಹಗಳಿಗೆ ಆರಾಧನೆ ಮಾಡುವುದು, ನರಹತ್ಯೆ, ಮತ್ತು ಲೈಂಗಿಕ ಪಾಪಗಳಾದ ವ್ಯಭಿಚಾರ ಮತ್ತು ಸಲಿಂಗ ಕಾರ್ಯಗಳನ್ನು ಒಳಗೊಂಡಿರುತ್ತದೆ.
  • ಯೇಸು ಕ್ರಿಸ್ತನು ಅಂತ್ಯಕಾಲದ ಕುರಿತಾಗಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿರುವಾಗ, ದೇವರಿಗೆ ವಿರುದ್ಧವಾಗಿ ತಿರಿಗಿಬೀಳುವ , ಆರಾಧನೆಯ ಸ್ಥಳವನ್ನು ನಾಶಗೊಳಿಸುವುದಾಗಿರುವ “ಹಾಳು ಮಾಡುವ ಅಸಹ್ಯ ವಸ್ತುಗಳ” ಕುರಿತಾಗಿ ಪ್ರವಾದಿಯಾದ ದಾನಿಯೇಲನ ಮುಖಾಂತರ ಬಂದಿರುವ ಪ್ರವಾದನೆಯನ್ನು ಸೂಚಿಸಿದನು.

ಅನುವಾದ ಸಲಹೆಗಳು:

  • “ಅಸಹ್ಯ” ಎನ್ನುವ ಪದವನ್ನು “ದೇವರು ದ್ವೇಷಿಸುವ ಕಾರ್ಯಗಳು” ಅಥವಾ “ಅಸಹ್ಯವಾದ ಕೃತ್ಯಗಳು” ಅಥವಾ “ಅಸಹ್ಯವಾದ ಆಚರಣೆ” ಅಥವಾ “ಅತೀ ಕೆಟ್ಟ ದುಷ್ಟ ಕಾರ್ಯ” ಎಂಬುದಾಗಿ ಕೂಡ ಅನುವಾದ ಮಾಡಬಹುದು.
  • ಸಂದರ್ಭ ತಕ್ಕಂತೆ, “ಅಸಹ್ಯವಾದ ಕಾರ್ಯ” ಎನ್ನುವ ಮಾತನ್ನು “ಅತಿ ಹೆಚ್ಚಾಗಿ ದ್ವೇಷಿಸಲ್ಪಡುವದು” ಅಥವಾ “ಅತೀ ನೀಚವಾದ ಕಾರ್ಯ” ಅಥವಾ “ಸ್ವೀಕಾರ ಮಾಡಲಾಗದ ಕಾರ್ಯ” ಅಥವಾ “ಅತೀ ಹೆಚ್ಚಾಗಿ ದ್ವೇಷಿಸುವುದಕ್ಕೆ, ಅಸಹ್ಯಪಟ್ಟುಕೊಳ್ಳುವುದಕ್ಕೆ ಕಾರಣವಾದ ಕಾರ್ಯ” ಎಂಬುದಾಗಿ ಅನುವಾದ ಮಾಡಬಹುದು.
  • “ಹಾಳು ಮಾಡುವ ಅಸಹ್ಯ ವಸ್ತುವು” ಎನ್ನುವ ಮಾತನ್ನು “ಜನರಿಗೆ ತುಂಬಾ ಹೆಚ್ಚಾಗಿ ಹಾನಿಯನ್ನುಂಟು ಮಾಡುವ ವಿನಾಶಕಾರಿಯಾದ ವಸ್ತುವು” ಅಥವಾ “ಅತೀ ಹೆಚ್ಚಾದ ನೋವನ್ನುಂಟು ಮಾಡುವ ಅಸಹ್ಯಕರವಾದ ವಸ್ತು” ಎಂಬುದಾಗಿಯೂ ಅನುವಾದ ಮಾಡಬಹುದು.

(ಇವುಗಳನ್ನು ಸಹ ನೋಡಿರಿ : /ವ್ಯಭಿಚಾರ, /ಅಪರಿಶುದ್ಧ, /ವಿನಾಶ, /ಸುಳ್ಳು ದೇವರು, /ಯಜ್ಞ)

ಸತ್ಯವೇದದ ಉಲ್ಲೇಖಗಳು:

ಪದದ ದತ್ತಾಂಶ:

  • Strong's: H0887, H6292, H8251, H8262, H8263, H8441, G9460

ಆಜ್ಞಾಪಿಸು, ಆಜ್ಞೆಗಳನ್ನು, ಆಜ್ಞಾಪಿಸಲ್ಪಟ್ಟಿದೆ, ಆಜ್ಞೆ, ಆಜ್ಞೆಗಳು

ಪದದ ಅರ್ಥವಿವರಣೆ:

“ಆಜ್ಞಾಪಿಸು” ಎಂಬ ಪದವು ಯಾರಿಗಾದರೂ ಏನನ್ನಾದರೂ ಮಾಡಲು ಆದೇಶಿಸುವುದು ಎಂದರ್ಥ. “ಆಜ್ಞೆಗಳು” ಎಂಬ ಪದವು ಕೆಲವೊಮ್ಮೆ ಹೆಚ್ಚು ಔಪಚಾರಿಕ ಮತ್ತು ಶಾಶ್ವತವಾದ ದೇವರ ಕೆಲವು ಆಜ್ಞೆಗಳನ್ನು ಸೂಚಿಸುತ್ತದೆ.

  • "ಆಜ್ಞೆಗಳು" ಕೆಲವೊಮ್ಮೆ ಹೆಚ್ಚು ಔಪಚಾರಿಕ ಮತ್ತು ಶಾಶ್ವತವಾದ ದೇವರ ಕೆಲವು ಆಜ್ಞೆಗಳನ್ನು ಉಲ್ಲೇಖಿಸುತ್ತದೆ, ಉದಾಹರಣೆಗೆ, "ಹತ್ತು ಆಜ್ಞೆಗಳು".
  • ಆಜ್ಞೆ ಎನ್ನುವುದು ಧನಾತ್ಮಕ ಆಲೋಚನೆಯಾಗಿರಬಹುದು “ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ” ಅಥವಾ ಋಣಾತ್ಮಕವಾಗಿರಬಹುದು (“ಕದಿಯಬಾರದು”).
  • “ಆಜ್ಞೆಯನ್ನು ಹೊಂದು” ಎನ್ನುವದಕ್ಕೆ “ನಿಯಂತ್ರಣದಲ್ಲಿರು” ಅಥವಾ ಯಾವುದಾದರೊಂದರ/ಯಾರಾದರೊಬ್ಬರ “ಬಾಧ್ಯತೆ ತೆಗೆದುಕೊಳ್ಳಿರಿ” ಎಂದರ್ಥ.

ಅನುವಾದ ಸಲಹೆಗಳು:

  • ಆ ಪದವನ್ನು ಇನ್ನೊಂದು ವಿಧಾನದಲ್ಲಿ ಅನುವಾದ ಮಾಡಬೇಕೆಂದರೆ, ಅದಕ್ಕೆ “ಕಾನೂನು” ಎಂದು ಅನುವಾದ ಮಾಡುವುದು ಉತ್ತಮ. “ಶಾಸನ” ಮತ್ತು “ಕಾಯಿದೆ” ಎನ್ನುವ ನಿರ್ವಚನಗಳೊಂದಿಗೆ ಕೂಡ ಹೋಲಿಸಿ ನೋಡಿರಿ.
  • ಕೆಲವೊಂದುಸಲ ಅನುವಾದಕರು “ಆಜ್ಞಾಪಿಸು” ಮತ್ತು “ಆಜ್ಞೆ” ಎನ್ನುವ ಪದಗಳಿಗೆ ಬದಲಾಗಿ ಅವರ ಸ್ವಂತ ಭಾಷೆಯಲ್ಲಿ ಉಪಯೋಗಿಸುವ ಪದಗಳನ್ನು ಬಳಸುತ್ತಾರೆ.
  • ಇನ್ನೂ ಕೆಲವರು ದೇವರು ಮಾಡಿದ ಶಾಶ್ವತವಾದ, ಮೂಲಭೂತ ಆಜ್ಞೆಗಳಿಗೆ ಸೂಚಿಸಲು ಆಜ್ಞೆ ಎನ್ನುವ ಪದಕ್ಕೆ ವಿಶೇಷವಾದ ಪದವನ್ನು ಉಪಯೋಗಿಸಲು ಪ್ರಾಧಾನ್ಯತೆಕೊಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಶಾಸನ, ಕಾಯಿದೆ, ಕಾನೂನು, ಹತ್ತು ಆಜ್ಞೆಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H559, H560, H565, H1696, H1697, H1881, H2706, H2708, H2710, H2941, H2942, H2951, H3027, H3982, H3983, H4406, H4662, H4687, H4929, H4931, H4941, H5057, H5713, H5749, H6213, H6310, H6346, H6490, H6673, H6680, H7101, H7218, H7227, H7262, H7761, H7970, H8269, G1263, G1291, G1296, G1297, G1299, G1690, G1778, G1781, G1785, G2003, G2004, G2008, G2036, G2753, G3056, G3726, G3852, G3853, G4367, G4483, G4487, G5506

ಆತ್ಮ, ಗಾಳಿ,ಶ್ವಾಸ

ಪದದ ಅರ್ಥವಿವರಣೆ:

"ಆತ್ಮ" ಎಂಬ ಪದವು ವ್ಯಕ್ತಿಯ ಭೌತಿಕವಲ್ಲದ ಭಾಗವನ್ನು ಸೂಚಿಸುತ್ತದೆ. ಸತ್ಯವೇದದ ಕಾಲದಲ್ಲಿ, ವ್ಯಕ್ತಿಯ ಆತ್ಮದ ಪರಿಕಲ್ಪನೆಯು ವ್ಯಕ್ತಿಯ ಉಸಿರಾಟದ ಪರಿಕಲ್ಪನೆಗೆ ನಿಕಟ ಸಂಬಂಧ ಹೊಂದಿದೆ. ಈ ಪದವು ಗಾಳಿಯನ್ನು ಸಹ ಸೂಚಿಸುತ್ತದೆ, ಅಂದರೆ ನೈಸರ್ಗಿಕ ಜಗತ್ತಿನಲ್ಲಿ ಗಾಳಿಯ ಚಲನೆ.

  • “ಆತ್ಮ” ಎಂಬ ಪದವು ಭೌತಿಕ ದೇಹವನ್ನು ಹೊಂದಿರದ, ಅಂದರೆ ದುಷ್ಟಶಕ್ತಿ ಎಂದು ಸೂಚಿಸುತ್ತದೆ.
  • ಸಾಮಾನ್ಯವಾಗಿ, “ಆಧ್ಯಾತ್ಮಿಕ” ಎಂಬ ಪದವು ಭೌತಿಕವಲ್ಲದ ಜಗತ್ತಿನ ವಿಷಯಗಳನ್ನು ವಿವರಿಸುತ್ತದೆ.
  • “ಆತ್ಮ” ಎಂಬ ಪದವು “ಬುದ್ಧಿವಂತಿಕೆಯ ಆತ್ಮ” ಅಥವಾ “ಎಲಿಯನ ಆತ್ಮ” ಇರುವಂತಹ “ಗುಣಲಕ್ಷಣಗಳನ್ನು ಹೊಂದಿದೆ” ಎಂದೂ ಅರ್ಥೈಸಬಹುದು. ಕೆಲವೊಮ್ಮೆ ಸತ್ಯವೇದದಲ್ಲಿ ಈ ಪದವನ್ನು ವ್ಯಕ್ತಿಯ ವರ್ತನೆ ಅಥವಾ ಭಾವನಾತ್ಮಕ ಸ್ಥಿತಿಯ ಸಂದರ್ಭದಲ್ಲಿ ಅನ್ವಯಿಸುತ್ತದೆ ಉದಾಹರಣೆಗೆ “ಭಯದ ಆತ್ಮ” ಮತ್ತು “ಅಸೂಯೆ ಮನೋಭಾವ”.
  • ದೇವರು ಆತ್ಮ ಎಂದು ಯೇಸು ಹೇಳಿದನು.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ಅನುಗುಣವಾಗಿ, “ಆತ್ಮನನ್ನು" ಭಾಷಾಂತರಿಸುವ ಕೆಲವು ವಿಧಾನಗಳಲ್ಲಿ “ಭೌತಿಕವಲ್ಲದ ಜೀವಿ” ಅಥವಾ “ಒಳಗಿನ ಭಾಗ” ಅಥವಾ “ಆಂತರಿಕ ಜೀವಿ” ಇರಬಹುದು.
  • ಕೆಲವು ಸಂದರ್ಭಗಳಲ್ಲಿ, “ಆತ್ಮ” ಎಂಬ ಪದವನ್ನು “ದುಷ್ಟಶಕ್ತಿ” ಅಥವಾ “ದುಷ್ಟಶಕ್ತಿ” ಎಂದು ಅನುವಾದಿಸಬಹುದು.
  • ಕೆಲವೊಮ್ಮೆ “ಆತ್ಮ” ಎಂಬ ಪದವನ್ನು ವ್ಯಕ್ತಿಯ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ, “ನನ್ನ ಆತ್ಮವು ನನ್ನ ಒಳಗಿನಿಂದ ದುಃಖಿತವಾಯಿತು.” ಇದನ್ನು "ನನ್ನ ಆತ್ಮದಲ್ಲಿ ದುಃಖಿತನಾಗಿದ್ದೇನೆ" ಅಥವಾ "ನಾನು ತುಂಬಾ ದುಃಖಿತನಾಗಿದ್ದೇನೆ" ಎಂದು ಅನುವಾದಿಸಬಹುದು.
  • "ಆತ್ಮವು" ಎಂಬ ಪದವನ್ನು "ಪಾತ್ರ" ಅಥವಾ "ಪ್ರಭಾವ" ಅಥವಾ "ವರ್ತನೆ" ಅಥವಾ "ಆಲೋಚನೆ (ಅಂದರೆ) ನಿರೂಪಿಸಲಾಗಿದೆ" ಎಂದು ಅನುವಾದಿಸಬಹುದು.
  • ಸಂದರ್ಭಕ್ಕೆ ಅನುಗುಣವಾಗಿ, “ಆಧ್ಯಾತ್ಮಿಕ” ವನ್ನು “ಭೌತಿಕವಲ್ಲದ” ಅಥವಾ “ಪವಿತ್ರಾತ್ಮದಿಂದ” ಅಥವಾ “ದೇವರ” ಅಥವಾ “ಭೌತಿಕವಲ್ಲದ ಪ್ರಪಂಚದ ಭಾಗ” ಎಂದು ಅನುವಾದಿಸಬಹುದು.
  • “ಆಧ್ಯಾತ್ಮಿಕ ಪರಿಪಕ್ವತೆ” ಎಂಬ ಪದವನ್ನು “ಪವಿತ್ರಾತ್ಮಕ್ಕೆ ವಿಧೇಯತೆಯನ್ನು ತೋರಿಸುವ ದೈವಿಕ ನಡವಳಿಕೆ” ಎಂದು ಅನುವಾದಿಸಬಹುದು.
  • “ಆಧ್ಯಾತ್ಮಿಕ ವರ” ಎಂಬ ಪದವನ್ನು “ಪವಿತ್ರಾತ್ಮವು ನೀಡುವ ವಿಶೇಷ ಸಾಮರ್ಥ್ಯ” ಎಂದು ಅನುವಾದಿಸಬಹುದು.
  • ಕೆಲವೊಮ್ಮೆ ಈ ಪದವನ್ನು ಗಾಳಿಯ ಸರಳ ಚಲನೆಯನ್ನು ಉಲ್ಲೇಖಿಸುವಾಗ "ಗಾಳಿ" ಅಥವಾ ಜೀವಂತ ಜೀವಿಗಳಿಂದ ಉಂಟಾಗುವ ವಾಯು ಚಲನೆಯನ್ನು ಉಲ್ಲೇಖಿಸುವಾಗ "ಉಸಿರು" ಎಂದು ಅನುವಾದಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ದೂತ, ದೆವ್ವ, ಪವಿತ್ರಾತ್ಮ, ಪ್ರಾಣ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 13:03 ಮೂರು ದಿನಗಳಾದನಂತರ ಜನರು ತಮ್ಮನ್ನು ತಾವು __ ಆತ್ಮೀಯಕವಾಗಿ __ ಸಿದ್ಧಪಡಿಸಿಕೊಂಡನಂತರ, ತುತೂರಿ ಧ್ವನಿಗಳ ಶಬ್ದಗಳಿಂದ, ಗುಡುಗುಗಳೊಂದಿಗೆ, ಸೀನಾಯಿ ಪರ್ವತದ ಮೇಲಕ್ಕೆ ದೇವರು ಇಳಿದು ಬಂದಿದ್ದಾರೆ.
  • 40:07 “ಇದು ಮುಗಿಯಿತು! ತಂದೆಯೇ, ನಾನು ನನ್ನ __ ಆತ್ಮವನ್ನು __ ನಿನ್ನ ಕೈಗಳಿಗೆ ಒಪ್ಪಿಸಿಕೊಡುತ್ತಿದ್ದೇನೆ” ಎಂದು ಯೇಸು ಅತ್ತನು. ಆತನು ತನ್ನ ತಲೆಯನ್ನು ಬಾಗಿಸಿ, ತನ್ನ __ ಆತ್ಮವನ್ನು __ ಒಪ್ಪಿಸಿಕೊಟ್ಟನು.
  • 45:05 ಸ್ತೆಫೆನನು ಸಾಯುತ್ತಿರುವಾಗ, “ಯೇಸು, ನನ್ನ __ ಆತ್ಮವನ್ನು __ ತೆಗೆದುಕೋ” ಎಂದು ಗಟ್ಟಿಯಾಗಿ ಕೂಗಿ ಅತ್ತನು.
  • 48:07 ಈತನ ಮೂಲಕ ಎಲ್ಲಾ ಜನರ ಗುಂಪುಗಳು ಆಶೀರ್ವಾದ ಹೊಂದಿವೆ, ಯಾಕಂದರೆ ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬನು ಪಾಪದಿಂದ ರಕ್ಷಣೆ ಹೊಂದಿದ್ದಾನೆ, ಮತ್ತು ಅಬ್ರಾಹಾಮನ __ ಆತ್ಮೀಯಕವಾದ __ ಸಂತಾನವಾಗಿ ಮಾರ್ಪಟ್ಟಿರುತ್ತಾನೆ.

ಪದ ಡೇಟಾ:

  • Strong's: H178, H1172, H5397, H7307, H7308, G4151, G4152, G4153, G5326, G5427

ಆಮೆನ್, ನಿಜವಾಗಿ

ಅರ್ಥವಿವರಣೆ:

“ಆಮೆನ್” ಎಂದರೆ ಒಬ್ಬ ವ್ಯಕ್ತಿ ಹೇಳಿದ ಮಾತುಗಳಿಗೆ ಲಕ್ಷ್ಯ ಕೊಡಲು ಕರೆಯುವುದಕ್ಕೆ ಉಪಯೋಗಿಸುವ ಪದ ಅಥವಾ ಆ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಉಪಯೋಗಿಸುವ ಪದವಾಗಿರುತ್ತದೆ. ಸಾಮಾನ್ಯವಾಗಿ ಈ ಪದವನ್ನು ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುತ್ತಾರೆ. ಕೆಲವೊಂದು ಸಲ ಈ ಪದವನ್ನು “ ನಿಜವಾಗಿ” ಎಂದೂ ಅನುವಾದ ಮಾಡಬಹುದು.

  • ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವ ಪದವು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳಿಗೆ ಸಮ್ಮತಿಯನ್ನು ತಿಳಿಸುತ್ತದೆ ಅಥವಾ ಮಾಡಿದ ಪ್ರಾರ್ಥನೆ ನೆರವೇರಿಸಲ್ಪಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದೆ.
  • ಯೇಸು ಕ್ರಿಸ್ತನು ಹೇಳಿದ ಸತ್ಯ ಮಾತುಗಳನ್ನು ಎತ್ತಿ ಹಿಡಿಯಲು “ಆಮೆನ್” ಎಂದು ಯೇಸು ತನ್ನ ಬೋಧನೆಯಲ್ಲಿ ಉಪಯೋಗಿಸಿದ್ದಾನೆ. ಮುಂಚಿತವಾಗಿ ಮಾಡಿದ ಬೋಧನೆಗೆ ಸಂಬಂಧಪಟ್ಟ ಮತ್ತೊಂದು ಬೋಧನೆಯನ್ನು ಪರಿಚಯ ಮಾಡುವುದಕ್ಕೆ “ನಾನು ನಿಮ್ಮೊಂದಿಗೆ ಹೇಳುತ್ತಿದ್ದೇನೆ” ಎಂದು ಹೇಳುವುದರ ಮೂಲಕ ಆತನು ಬೋಧನೆಯನ್ನು ಮಾಡಿದನು.
  • ಈ ರೀತಿಯಲ್ಲಿ ಯೇಸು “ಆಮೆನ್” ಎಂದು ಉಪಯೋಗಿಸುವಾಗ, ಕೆಲವೊಂದು ಆಂಗ್ಲ ಅನುವಾದಗಳು (ಮತ್ತು ಯುಎಲ್.ಟಿ) “ಖಂಡಿತವಾಗಿ” ಅಥವಾ “ನಿಜವಾಗಿ” ಎಂದು ಅನುವಾದ ಮಾಡಿವೆ.
  • “ನಿಜವಾಗಿ” ಎನ್ನುವ ಪದಕ್ಕೆ ಇನ್ನೊಂದು ಅರ್ಥದಲ್ಲಿ ಕೆಲವೊಂದು ಸಲ “ನಿಶ್ಚಯವಾಗಿ” ಅಥವಾ “ಖಂಡಿತವಾಗಿ” ಎಂದು ಅನುವಾದ ಮಾಡಲಾಗಿದೆ ಮತ್ತು ಇದನ್ನು ಬೋಧಕನು ಹೇಳಿದ ಪ್ರತಿಯೊಂದು ಮಾತನ್ನು ಒತ್ತಿ ಹೇಳುವುದಕ್ಕೂ ಉಪಯೋಗಿಸಲಾಗಿದೆ.

ಅನುವಾದ ಸಲಹೆಗಳು:

  • ಹೇಳಲಾದ ಏನನ್ನಾದರೂ ಒತ್ತಿ ಹೇಳುವುದಕ್ಕೆ ಉಪಯೋಗಿಸಿದ ಉದ್ದೇಶಿತ ಭಾಷೆಯು ವಿಶೇಷ ಪದ ಅಥವಾ ಪದಗುಚ್ಛವನ್ನು ಹೊಂದಿದೆಯೇ ಎಂಬುದನ್ನು ಪರಿಗಣಿಸಿರಿ.
  • ಏನಾದರೊಂದನ್ನು ದೃಡೀಕರಿಸಲು ಅಥವಾ ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವುದನ್ನು “ಹಾಗೆಯೇ ನಡೆಯಲಿ” ಅಥವಾ “ಇದು ನೆರವೇರಿಸಲ್ಪಡಲಿ” ಅಥವಾ “ಇದು ನಿಜವಾಗಲಿ” ಎಂದು ಅನುವಾದ ಮಾಡಬಹುದು.
  • “ನಿಜವಾಗಿ ನಾನು ನಿಮಗೆ ಹೇಳುತ್ತೇನೆ” ಎಂದು ಯೇಸು ಹೇಳಿದಾಗ, ಇದನ್ನು ಕೂಡ “ಹೌದು, ನಾನು ನಿಜ ನಿಜವಾಗಿ ನಿಮಗೆ ಹೇಳುತ್ತಿದ್ದೇನೆ” ಎಂದು ಅಥವಾ “ಅದು ನಿಜ, ಮತ್ತು ನಾನು ಕೂಡ ನಿಮಗೆ ಹೇಳುತ್ತಿದ್ದೇನೆ” ಎಂದು ಕೂಡ ಅನುವಾದ ಮಾಡಬಹುದು.
  • “ನಿಜ ನಿಜವಾಗಿ ನಾನು ನಿಮಗೆ ಹೇಳುತ್ತಿದ್ದೇನೆ” ಎನ್ನುವ ಮಾತನ್ನು “ಇದನ್ನು ನಾನು ತುಂಬಾ ಖಂಡಿತವಾಗಿ ಹೇಳುತ್ತಿದ್ದೇನೆ” ಅಥವಾ “ನಾನು ಇದನ್ನು ನಿಮಗೆ ಮನಃಪೂರ್ವಕವಾಗಿ ಹೇಳುತ್ತಿದ್ದೇನೆ” ಅಥವಾ “ನಾನು ಹೇಳುತ್ತಿರುವ ಪ್ರತಿಯೊಂದು ಮಾತು ಸತ್ಯವಾದ ಮಾತಾಗಿರುತ್ತದೆ” ಎಂದು ಅನುವಾದ ಮಾಡಬಹುದು.

(ಇವುಳನ್ನು ಸಹ ನೋಡಿರಿ : ನೆರವೇರಿಸು, ನಿಜ)

ಸತ್ಯವೇದದ ಉಲ್ಲೇಖಗಳು:

ಪದದ ದತ್ತಾಂಶ:

  • Strong's: H0543, G2810

ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ, ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು, ಆಯ್ಕೆ ಮಾಡಿಕೊ, ಆಯ್ಕೆಯಾಗಿರುವ ಜನರು, ಆಯ್ಕೆ ಮಾಡಲ್ಪಟ್ಟವನು, ಆರಿಸಿಕೊಂಡ

ಪದದ ಅರ್ಥವಿವರಣೆ:

“ಆರಿಸಿಕೊಂಡ” ಎನ್ನುವ ಪದಕ್ಕೆ “ಒಬ್ಬರನ್ನು ಆಯ್ಕೆ ಮಾಡಲ್ಪಟ್ಟವನು” ಅಥವಾ “ಆಯ್ಕೆಯಾದ ಜನರು” ಎಂದರ್ಥ ಮತ್ತು ಇದು ದೇವರು ತನ್ನ ಜನರಾಗಿರುವುದಕ್ಕೆ ಆರಿಸಿಕೊಂಡ ಅಥವಾ ನೇಮಿಸಿಕೊಂಡಿರುವ ಜನರನ್ನು ಸೂಚಿಸುತ್ತದೆ. “ಆಯ್ಕೆ ಮಾಡಲ್ಪಟ್ಟ ವ್ಯಕ್ತಿ” ಅಥವಾ “ದೇವರಿಂದ ಆಯ್ಕೆ ಮಾಡಲ್ಪಟ್ಟ ವ್ಯಕ್ತಿ” ಎನ್ನುವ ಪದವು ಮೆಸ್ಸೀಯನಾಗಿ ಆಯ್ಕೆಮಾಡಲ್ಪಟ್ಟ ಯೇಸುವಿಗೆ ಒಂದು ಬಿರುದಾಗಿ ಸೂಚಿಸುತ್ತದೆ.

  • “ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು” ಎನ್ನುವ ಪದಕ್ಕ ಏನಾದರೊಂದನ್ನು ನಿರ್ಣಯಿಸುವುದಕ್ಕೆ ಅಥವಾ ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು ಆಯ್ಕೆ ಮಾಡುವುದು ಎಂದರ್ಥ. ದೇವರನ್ನು ಸೇವಿಸುವುದಕ್ಕೆ ಮತ್ತು ಆತನಿಗೆ ಸಂಬಂಧವಾಗಿರುವದಕ್ಕೆ ಆತನು ಜನರನ್ನು ನೇಮಿಸುವುದನ್ನು ಈ ಪದವನ್ನು ಅನೇಕಬಾರಿ ಉಪಯೋಗಿಸಲ್ಪಟ್ಟಿರುತ್ತದೆ.
  • “ಆಯ್ಕೆ” ಮಾಡಲ್ಪಟ್ಟಿದೆ ಎನ್ನುವುದಕ್ಕೆ ಏನಾದರೊಂದನ್ನು ಮಾಡುವುದಕ್ಕೆ ಅಥವಾ ಏನಾದರೊಂದಾಗಿ ಇರುವುದಕ್ಕೆ “ಆರಿಸಿಕೊಳ್ಳಲಾಗಿದೆ” ಅಥವಾ “ನೇಮಿಸಲಾಗಿದೆ” ಎಂದರ್ಥ.
  • ಪರಿಶುದ್ಧರಾಗಿರುವುದಕ್ಕೆ, ಒಳ್ಳೇಯ ಆತ್ಮೀಕವಾದ ಫಲವನ್ನು ಕೊಡುವುದಕ್ಕಾಗಿ ದೇವರು ತನ್ನ ಜನರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಮತ್ತು ಆತನಿಂದ ಪ್ರತ್ಯೇಕಿಸಲ್ಪಡುತ್ತಾರೆ. ಆದಕಾರಣ ಅವರನ್ನು “ಆಯ್ಕೆಮಾಡಲ್ಪಟ್ಟವನು” ಅಥವಾ “ಆರಿಸಿಕೊಂಡವರು” ಎಂದು ಕರೆಯುತ್ತಾರೆ.
  • “ಆಯ್ಕೆ ಮಾಡಲ್ಪಟ್ಟವನು” ಎನ್ನುವ ಮಾತು ಕೆಲವೊಂದುಬಾರಿ ಸತ್ಯವೇದದಲ್ಲಿ ದೇವರು ತನ್ನ ಜನರ ಮೇಲೆ ನಾಯಕರನ್ನಾಗಿ ಆಯ್ಕೆಮಾಡಿಕೊಂಡಿರುವ ಅರಸನಾದ ದಾವೀದ ಮತ್ತು ಮೋಶೆಯಂತಿರುವ ಕೆಲವೊಂದು ನಿರ್ಧಿಷ್ಠವಾದ ಜನರನ್ನು ಸೂಚಿಸುತ್ತದೆ. ದೇವರಿಂದ ಆಯ್ಕೆಯಾದ ಜನರಾಗಿರುವ ಇಸ್ರಾಯೇಲ್ ದೇಶವನ್ನು ಕೂಡ ಈ ಪದವು ಸೂಚಿಸುತ್ತದೆ.
  • “ಆರಿಸಿಕೊಂಡ” ಎನ್ನುವ ಮಾತು ತುಂಬಾ ಹಳೇ ಮಾತಾಗಿರುತ್ತದೆ, ಇದಕ್ಕೆ “ಆಯ್ಕೆ ಮಾಡಲ್ಪಟ್ಟ ಜನರು” ಅಥವಾ “ಆಯ್ಕೆಯಾಗಿರುವ ಜನರು” ಎಂದರ್ಥ. ಮೂಲ ಭಾಷೆಯಲ್ಲಿ ಈ ಮಾತು ಬಹುವಚನವಾಗಿರುತ್ತದೆ, ವಿಶೇಷವಾಗಿ ಕ್ರಿಸ್ತನಲ್ಲಿರುವ ವಿಶ್ವಾಸಿಗಳನ್ನು ಸೂಚಿಸಿದಾಗ ಬಹುವಚನ ಪದವಾಗಿರುತ್ತದೆ.
  • ಹಳೇ ಆಂಗ್ಲ ಸತ್ಯವೇದ ಅನುವಾದಗಳಲ್ಲಿ “ಆರಿಸಿಕೊಂಡ” ಎನ್ನುವ ಪದವನ್ನು “ಆಯ್ಕೆಮಾಡಲ್ಪಟ್ಟವನು” ಎನ್ನುವ ಪದವನ್ನು ಅನುವಾದ ಮಾಡುವುದಕ್ಕಾಗಿ ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಉಪಯೋಗಿಸುತ್ತಿದ್ದರು. ಆಧುನಿಕ ಅನುವಾದಗಳಲ್ಲಿ “ಆರಿಸಿಕೊಂಡ” ಎನ್ನುವ ಪದವನ್ನು ಕೇವಲ ಹೊಸ ಒಡಂಬಡಿಕೆಯಲ್ಲಿ ಮಾತ್ರವೇ ಉಪಯೋಗಿಸುತ್ತಿದ್ದಾರೆ, ಅದೂ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ದೇವರಿಂದ ರಕ್ಷಣೆ ಹೊಂದಿರುವ ಜನರನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಿದ್ದಾರೆ. ಸತ್ಯವೇದದ ವಾಕ್ಯಭಾಗಗಳಲ್ಲಿ ಎಲ್ಲೋ ಒಂದು ಸ್ಥಳದಲ್ಲಿ, ಅವರು ಈ ಪದವನ್ನು “ಆಯ್ಕೆ ಮಾಡಲ್ಪಟ್ಟವರು” ಎಂದು ಅಕ್ಷರಾರ್ಥವಾಗಿ ಅನುವಾದ ಮಾಡಿದ್ದಾರೆ.

ಅನುವಾದ ಸಲಹೆಗಳು:

“ಆರಿಸಿಕೊಂಡ” ಎನ್ನುವ ಪದವನ್ನು “ಆಯ್ಕೆಮಾಡಲ್ಪಟ್ಟವರು” ಅಥವಾ “ಆಯ್ಕೆ ಯಾಗಿರುವ ಜನರು” ಎನ್ನುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅನುವಾದ ಮಾಡುವುದು ಉತ್ತಮ. ಇದನ್ನು “ದೇವರು ಆಯ್ಕೆಮಾಡಿಕೊಂಡ ಜನರು” ಅಥವಾ “ದೇವರು ತನ್ನ ಜನರಿಗಾಗಿ ನೇಮಿಸಲ್ಪಟ್ಟ ಜನರು” ಎಂಬುದಾಗಿಯೂ ಅನುವಾದ ಮಾಡಬಹುದು.

  • “ಆಯ್ಕೆ ಮಾಡಲ್ಪಟ್ಟವರು” ಎನ್ನುವ ಮಾತನ್ನು “ನೇಮಿಸಲ್ಪಟ್ಟವರು” ಅಥವಾ “ಆರಿಸಲ್ಪಟ್ಟವರು” ಅಥವಾ “ದೇವರಿಂದ ಆಯ್ಕೆಯಾದವರು” ಎಂದೂ ಅನುವಾದ ಮಾಡಬಹುದು.
  • “ನಾನು ನಿನ್ನನ್ನು ಆಯ್ಕೆ ಮಾಡಿಕೊಂಡಿದ್ದೇನೆ” ಎನ್ನುವ ಮಾತನ್ನು “ನಾನು ನಿನ್ನನ್ನು ನೇಮಿಸಿದ್ದೇನೆ” ಅಥವಾ “ನಾನು ನಿನ್ನನ್ನು ಆರಿಸಿಕೊಂಡಿದ್ದೇನೆ” ಎಂದೂ ಅನುವಾದ ಮಾಡಬಹುದು.
  • ಯೇಸುವನ್ನು ಸೂಚಿಸಿದಾಗ, “ಆಯ್ಕೆ ಮಾಡಲ್ಪಟ್ಟ ವ್ಯಕ್ತಿ” ಎನ್ನುವ ಮಾತನ್ನು “ದೇವರಿಂದ ಆಯ್ಕೆ ಮಾಡಲ್ಪಟ್ಟ ವ್ಯಕ್ತಿ” ಅಥವಾ “ದೇವರು ವಿಶೇಷವಾಗಿ ಆಯ್ಕೆಮಾಡಿಕೊಂಡಿರುವ ಮೆಸ್ಸೀಯ” ಅಥವಾ “ದೇವರು ನೇಮಿಸಿದ ವ್ಯಕ್ತಿ (ಜನರನ್ನು ರಕ್ಷಿಸುವುದಕ್ಕೆ)” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನೇಮಿಸು, ಕ್ರಿಸ್ತ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H970, H972, H977, H1262, H1305, H4005, H6901, G138, G140, G1586, G1588, G1589, G1951, G4400, G4401, G4758, G4899, G5500

ಆರಾಧನೆ

ಪದದ ಅರ್ಥವಿವರಣೆ:

“ಆರಾಧನೆ” ಎನ್ನುವ ಪದಕ್ಕೆ ಯಾರಾದರೊಬ್ಬರಿಗೆ ವಿಶೇಷವಾಗಿ ದೇವರಿಗೆ ವಿಧೇಯರಾಗಿರುವುದು, ಅವರನ್ನು ಸ್ತುತಿಸುವುದು ಮತ್ತು ಅವರನ್ನು ಘನಪಡಿಸುವುದು ಎಂದರ್ಥವಾಗಿರುತ್ತದೆ.

  • ಈ ಪದಕ್ಕೆ ಅನೇಕಬಾರಿ ಅಕ್ಷರಾರ್ಥವಾಗಿ “ಕೆಳಗೆ ಬಾಗುವುದು” ಅಥವಾ ಯಾರಾದರೊಬ್ಬರನ್ನು ತಗ್ಗಿಸಿಕೊಂಡು ಘನಪಡಿಸುವುದಕ್ಕೆ “ಸಾಷ್ಟಾಂಗ ನಮಸ್ಕರಿಸುವುದು” ಎಂದರ್ಥ.
  • ನಾವು ದೇವರನ್ನು ಸ್ತುತಿಸುವುದರ ಮೂಲಕ ಮತ್ತು ಆತನಿಗೆ ವಿಧೇಯತೆ ತೋರಿಸಿ ಘನಪಡಿಸಿದಾಗ, ಆತನಿಗೆ ಸೇವೆ ಮಾಡಿದಾಗ ಆತನನ್ನು ನಾವು ಆರಾಧನೆ ಮಾಡುತ್ತಿದ್ದೇವೆ,
  • ಇಸ್ರಾಯೇಲ್ಯರು ದೇವರನ್ನು ಆರಾಧನೆ ಮಾಡಿದಾಗ, ಅನೇಕಬಾರಿ ಇದರಲ್ಲಿ ಯಜ್ಞವೇದಿಯ ಬಳಿ ಪ್ರಾಣಿಯ ಬಲಿಯರ್ಪಣೆಯು ಒಳಗೊಂಡಿರುತ್ತದೆ.
  • ಕೆಲವೊಂದು ಜನರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದ್ದಾರೆ.

ಅನುವಾದ ಸಲಹೆಗಳು:

  • “ಆರಾಧನೆ” ಎನ್ನುವ ಪದವನ್ನು “ಕೆಳಕ್ಕೆ ಬಾಗುವುದು” ಅಥವಾ “ಘನಪಡಿಸು ಮತ್ತು ಸೇವೆ ಮಾಡು” ಅಥವಾ “ಘನಪಡಿಸು ಮತ್ತು ವಿಧೇಯತೆ ತೋರಿಸು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ ಇದನ್ನು “ತಗ್ಗಿಸುಕೊಂಡು ಸ್ತುತಿಸುವುದು” ಅಥವಾ “ಸ್ತುತಿ, ಘನವನ್ನು ಕೊಡು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಹೋಮ, ಸ್ತುತಿಸು, ಘನಪಡಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 13:04 ಆದನಂತರ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟನು ಮತ್ತು “ನಾನೇ ಯೆಹೋವನು, ಐಗುಪ್ತದಿಂದ ನಿಮ್ಮನ್ನು ರಕ್ಷಿಸಿದ ನಿಮ್ಮ ದೇವರು“ ಸುಳ್ಳು ದೇವರನ್ನು __ ಆರಾಧಿಸಬೇಡಿರಿ __” ಎಂದು ಹೇಳಿದನು.
  • 14:02 ಕಾನಾನಿಯರು ದೇವರನ್ನು __ ಆರಾಧಿಸಲಿಲ್ಲ __ ಅಥವಾ ಆತನಿಗೆ ವಿಧೇಯತೆ ತೋರಿಸಲಿಲ್ಲ. ಅವರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದರು ಮತ್ತು ಅನೇಕ ದುಷ್ಟ ಕಾರ್ಯಗಳನ್ನು ಮಾಡಿದರು.
  • 17:06 ಇಸ್ರಾಯೇಲ್ಯರೆಲ್ಲರು ದೇವರನ್ನು __ ಆರಾಧಿಸುವ __ ಅಂಟ್ಟು ಆತನಿಗೆ ಅರ್ಪಣೆಗಳನ್ನು ಅರ್ಪಿಸುವ ಸ್ಥಳವಾದ ದೇವಾಲಯವನ್ನು ನಿರ್ಮಿಸಬೇಕೆಂದು ದಾವೀದನು ಬಯಸಿದ್ದನು.
  • 18:12 ಅರಸರಲ್ಲಿ ಅನೇಕರು ಮತ್ತು ಇಸ್ರಾಯೇಲ್ ರಾಜ್ಯದಲ್ಲಿ ಅನೇಕ ಜನರು ವಿಗ್ರಹಗಳನ್ನು __ ಆರಾಧಿಸಿದರು __.
  • 25:07 “ಸೈತಾನನೇ, ನನ್ನಿಂದ ಹೊರಟು ಹೋಗು! ‘ಕರ್ತನಾದ ನಿಮ್ಮ ದೇವರನ್ನು ಮಾತ್ರವೇ __ ಆರಾಧಿಸು __ ಮತ್ತು ಆತನನ್ನು ಮಾತ್ರವೇ ಸೇವಿಸು’ ಎಂದು ಆತನು ತನ್ನ ಜನರಿಗೆ ಆಜ್ಞಾಪಿಸಿರುವುದು ದೇವರ ವಾಕ್ಯದಲ್ಲಿದೆ” ಎಂದು ಯೇಸು ಉತ್ತರಿಸಿದನು.
  • 26:02 ಸಬ್ಬತ್ ದಿನದಂದು ಆತನು (ಯೇಸು)__ ಆರಾಧನೆ __ ಸ್ಥಳಕ್ಕೆ ಹೋದನು.
  • 47:01 ಅಲ್ಲಿ ಅವರು ವ್ಯಾಪಾರಸ್ಥಳಾದ ಲುದ್ಯ ಎನ್ನುವ ಹೆಸರಿನ ಸ್ತ್ರೀಯಳನ್ನು ಭೇಟಿಯಾದರು. ಆಕೆ ದೇವರನ್ನು ಪ್ರೀತಿಸಿ, ಆತನನ್ನು __ ಆರಾಧಿಸಿದಳು __.
  • 49:18 ನೀವು ಇತರ ಕ್ರೈಸ್ತರೊಂದಿಗೆ ಸೇರಿ ದೇವರನ್ನು __ ಆರಾಧಿಸಬೇಕೆಂದು __, ತನ್ನ ವಾಕ್ಯವನ್ನು ಅಧ್ಯಯನ ಮಾಡಬೇಕೆಂದು ಮತ್ತು ಪ್ರಾರ್ಥಿಸಬೇಕೆಂದು ದೇವರು ಹೇಳಿದನು, ಮತ್ತು ಆತನು ನಿಮಗಾಗಿ ಮಾಡಿರುವ ಎಲ್ಲಾ ಕಾರ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಿರಿ ಎಂದು ಹೇಳಿದನು.

ಪದ ಡೇಟಾ:

  • Strong's: H5457, H5647, H6087, H7812, G1391, G1479, G2151, G2318, G2323, G2356, G3000, G3511, G4352, G4353, G4573, G4574, G4576

ಆಶೀರ್ವದಿಸು, ಆಶೀರ್ವದಿಸಲ್ಪಟ್ಟಿದ್ದೇನೆ, ಆಶೀರ್ವಾದ

ಪದದ ಅರ್ಥವಿವರಣೆ:

ಯಾರನ್ನಾದರೂ ಅಥವಾ ಯಾವುದನ್ನಾದರು “ಆಶೀರ್ವದಿಸುವುದು” ಎಂದರೆ ಆಶೀರ್ವಾದ ಹೊಂದಿದವನಾಗಿರಲು ವ್ಯಕ್ತಿಗೆಯಾಗಲಿ ಅಥವಾ ವಸ್ತುವಿಗಾಗಲಿ ಪ್ರಯೋಜನಕಾರಿ ಸಂಗತಿಗಳು ಸಂಭವಿಸುವಂತೆ ಮಾಡುವುದು ಎಂದರ್ಥ.

  • ಒಬ್ಬರನ್ನು ಆಶೀರ್ವಾದ ಮಾಡುವುದು ಎನ್ನುವುದಕ್ಕೆ ಆ ವ್ಯಕ್ತಿಗೆ ಪ್ರಯೋಜನಕರವಾದ ಕಾರ್ಯಗಳು ನಡೆಯಬೇಕೆಂದು ನಮ್ಮೊಳಗಿನ ಆಸೆಯನ್ನು ವ್ಯಕ್ತಗೊಳಿಸುವುದು ಎಂದರ್ಥ.
  • ಸತ್ಯವೇದ ಕಾಲದಲ್ಲಿ ತಂದೆ ಅನೇಕ ಬಾರಿ ತನ್ನ ಮಕ್ಕಳ ಮೇಲೆ ಔಪಚಾರಿಕ ಆಶೀರ್ವಾದವನ್ನು ಪ್ರಕಟಿಸುತ್ತಿದ್ದರು.
  • ಜನರು ದೇವರನ್ನು “ಆಶೀರ್ವಾದ” ಮಾಡಿದಾಗ ಅಥವಾ ದೇವರು ಆಶೀರ್ವಾದ ಹೊಂದಬೇಕೆಂದು ಆಸೆಯನ್ನು ವ್ಯಕ್ತಗೊಳಿಸಿದಾಗ, ಅವರು ಆತನನ್ನು ಮಹಿಮೆಪಡಿಸುತ್ತಿದ್ದಾರೆ ಎಂದರ್ಥ.
  • “ಆಶೀರ್ವದಿಸು” ಎನ್ನುವ ಪದವು ಕೆಲವೊಂದು ಸಲ ಆಹಾರವನ್ನು ತಿನ್ನುವುದಕ್ಕೆ ಮುಂಚಿತವಾಗಿ ಆಹಾರವನ್ನು ಪವಿತ್ರಗೊಳಿಸುವುದಕ್ಕೆ ಉಪಯೋಗಿಸುತ್ತಿದ್ದರು, ಅಥವಾ ಆಹಾರಕ್ಕಾಗಿ ದೇವರನ್ನು ಮಹಿಮೆಪಡಿಸುವುದಕ್ಕಾಗಿ ಮತ್ತು ಕೃತಜ್ಞತೆಗಳನ್ನು ಸಲ್ಲಿಸುವುದಕ್ಕಾಗಿ ಉಪಯೋಗಿಸುತ್ತಿದ್ದರು.

ಅನುವಾದ ಸಲಹೆಗಳು:

  • “ಆಶೀರ್ವದಿಸು” ಎನ್ನುವ ಪದವನ್ನು “ಸಮೃದ್ಧಿಯಾಗಿ ಒದಗಿಸಿಕೊಡು” ಅಥವಾ “ದಯೆಯಿಂದಲೂ ಮತ್ತು ಕರುಣೆಯಿಂದಲೂ ಇರು” ಎಂದೂ ಅನುವಾದ ಮಾಡಬಹುದು.
  • “ದೇವರೇ ಈ ದೊಡ್ಡ ಆಶೀರ್ವಾದವನ್ನು ತಂದರು” ಎನ್ನುವದನ್ನು “ದೇವರು ಅನೇಕವಾದ ಒಳ್ಳೇಯ ಉಪಕಾರಗಳನ್ನು ಮಾಡಿದನು” ಅಥವಾ “ದೇವರು ಸಮೃದ್ಧಿಯಾಗಿ ಒದಗಿಸಿಕೊಟ್ಟನು” ಅಥವಾ “ಅನೇಕ ಒಳ್ಳೇಯ ಕಾರ್ಯಗಳು ನಡೆಯುವಂತೆ ದೇವರೇ ಕಾರಣನಾದನು” ಎಂದೂ ಅನುವಾದ ಮಾಡಬಹುದು.
  • “ಅವನು ಆಶೀರ್ವದಿಸಲ್ಪಟ್ಟವನು” ಎನ್ನುವ ಮಾತನ್ನು “ಅವನು ಅನೇಕವಾದ ದೊಡ್ಡ ಪ್ರಯೋಜನೆಗಳನ್ನು ಹೊಂದಿಕೊಂಡವನು” ಅಥವಾ “ಅವನು ಒಳ್ಳೇಯ ಕಾರ್ಯಗಳನ್ನು ಅನುಭವಿಸುತ್ತಿದ್ದಾನೆ” ಅಥವಾ “ಅವನು ಸಮೃದ್ಧಿಯನ್ನು ಹೊಂದುವುದಕ್ಕೆ ದೇವರು ಕಾರಣನಾದನು” ಎಂದೂ ಅನುವಾದ ಮಾಡಬಹುದು.
  • “ಒಬ್ಬ ವ್ಯಕ್ತಿ ಆಶೀರ್ವದಿಸಲ್ಪಟ್ಟವನು” ಎನ್ನುವ ಮಾತನ್ನು “ಒಬ್ಬ ವ್ಯಕ್ತಿಗೆ ಅನುಗ್ರಹಿಸಲ್ಪಟ್ಟಿರುವುದು ಎಷ್ಟು ಒಳ್ಳೇಯದು” ಎಂದೂ ಅನುವಾದ ಮಾಡಬಹುದು.
  • “ದೇವರಿಗೆ ಆಶೀರ್ವಾದವಾಗಲಿ” ಎನ್ನುವ ಮಾತುಗಳನ್ನು “ಕರ್ತನೇ ಮಹಿಮೆಹೊಂದಲಿ” ಅಥವಾ “ಕರ್ತನಿಗೆ ಸ್ತೋತ್ರ” ಅಥವಾ “ನಾನು ದೇವರನ್ನು ಸ್ತುತಿಸುತ್ತಿದ್ದೇನೆ” ಎಂದೂ ಅನುವಾದ ಮಾಡಬಹುದು.
  • ಆಹಾರವನ್ನು ಆಶೀರ್ವಾದ ಮಾಡುವ ಸಂದರ್ಭದಲ್ಲಿ, ಈ ಪದವನ್ನು “ಆಹಾರಕ್ಕಾಗಿ ದೇವರಿಗೆ ವಂದನೆಗಳು ಸಲ್ಲಿಸುವುದು” ಅಥವಾ “ಅವರಿಗೆ ಆಹಾರವನ್ನು ಕೊಟ್ಟಿದ್ದಕ್ಕಾಗಿ ದೇವರನ್ನು ಮಹಿಮೆಪಡಿಸುವುದು” ಅಥವಾ “ಅದಕ್ಕಾಗಿ ದೇವರನ್ನು ಮಹಿಮೆಪಡಿಸುವುದರ ಮೂಲಕ ಆಹಾರವನ್ನು ಪವಿತ್ರಗೊಳಿಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸ್ತೋತ್ರ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 01:07 ದೇವರು ಅದು ಒಳ್ಳೆಯದೆಂದು ನೋಡಿದನು ಮತ್ತು ಆತನು ಅದನ್ನು ಆಶೀರ್ವಾದ ಮಾಡಿದನು.
  • 01:15 ದೇವರು ತನ್ನ ಸ್ವರೂಪದಲ್ಲಿ ಆದಾಮನನ್ನು ಮತ್ತು ಹವ್ವಳನ್ನು ಉಂಟು ಮಾಡಿದನು. ಆತನು ಅವರನ್ನು  ಆಶೀರ್ವದಿಸಿ “ನೀವು ಅನೇಕಮಂದಿ ಮಕ್ಕಳನ್ನು, ಮೊಮ್ಮೊಕ್ಕಳನ್ನು ಹಡೆದು, ಭೂಮಿಯನ್ನು ತುಂಬಿಸಿರಿ” ಎಂದು ಅವರಿಗೆ ಹೇಳಿದನು.

1:16__ ದೇವರು ಎಲ್ಲಾ ಕಾರ್ಯಗಳನ್ನು ಮಾಡಿದನಂತರ ವಿಶ್ರಾಂತಿ ತೆಗೆದುಕೊಂಡರು. ಆತನು ಏಳನೆಯ ದಿನವನ್ನು __ಆಶೀರ್ವಾದ ಮಾಡಿದನು ಮತ್ತು ಅದನ್ನು ಪರಿಶುದ್ಧ ದಿನವನ್ನಾಗಿ ಮಾಡಿದನು, ಯಾಕಂದರೆ ಆ ದಿನದಂದು ಆತನ ಕೆಲಸದಿಂದ ವಿಶ್ರಾಂತಿ ಪಡೆದ ದಿನವಾಗಿತ್ತು.

  • 04:04“ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನಿನ್ನನ್ನು

ಆಶೀರ್ವದಿಸುವವರನ್ನು ಆಶೀರ್ವದಿಸುವೆನು ಮತ್ತು ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ಭೂಮಿಯ ಮೇಲಿರುವ ಎಲ್ಲಾ ಕುಟುಂಬಗಳು ನಿನ್ನಿಂದ ಆಶೀರ್ವದಿಸಲ್ಪಡುವವು .”

  • 04:07 ಮೆಲ್ಕೀಚೆದೆಕ ಅಬ್ರಹಾಮನನ್ನು ಆಶೀರ್ವದಿಸಿದನು ಮತ್ತು “ಭೂಮ್ಯಾಕಾಶವನ್ನು ನಿರ್ಮಾಣ ಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ” ಎಂದು ಹೇಳಿದನು.
  • 07:03 ಇಸಾಕನು ಏಸಾವನಿಗೆ ತನ್ನ  ಆಶೀರ್ವಾದವನ್ನು ಕೊಡಬೇಕೆಂದು ಬಯಸಿದ್ದನು.
  • 08:05__ಯೋಸೇಫನು ಸೆರೆಮನೆಯಲ್ಲಿದ್ದರೂ ದೇವರಿಗೆ ನಂಬಿಗಸ್ಥನಾಗಿದ್ದನು, ದೇವರು ಅವನನ್ನು __ಆಶೀರ್ವಾದ ಮಾಡಿದನು.

ಪದ ಡೇಟಾ:

  • Strong's: H833, H835, H1288, H1289, H1293, G1757, G2127, G2128, G2129, G3106, G3107, G3108, G6050

ಆಸಕ್ತಿ, ಉತ್ಸಾಹಭರಿತ

ಪದದ ಅರ್ಥವಿವರಣೆ:

“ಆಸಕ್ತಿ” ಅಥವಾ “ಉತ್ಸಾಹಭರಿತ” ಎನ್ನುವ ಪದಗಳು ಒಂದು ಆಲೋಚನೆಯನ್ನು ಅಥವಾ ಒಬ್ಬ ವ್ಯಕ್ತಿಯನ್ನು ಬೆಂಬಲಿಸುವುದಕ್ಕೆ ತುಂಬಾ ಬಲವಾಗಿ ಸಮರ್ಥಿಸುವುದನ್ನು ಸೂಚಿಸುತ್ತದೆ.

  • ಆಸಕ್ತಿ ಎನ್ನುವದರಲ್ಲಿ ಬಲವಾದ ಆಶೆಯು ಮತ್ತು ಒಳ್ಳೇಯ ಕಾರ್ಯಕ್ಕಾಗಿ ಪ್ರೇರೇಪಿಸುವ ಕಾರ್ಯಗಳೂ ಒಳಗೊಂಡಿರುತ್ತವೆ. ದೇವರಿಗೆ ತುಂಬಾ ವಿಶ್ವಾಸಾರ್ಹವಾಗಿ ವಿಧೇಯನಾಗುವ ಮತ್ತು ಅದನ್ನು ಮಾಡುವುದಕ್ಕೆ ಇತರರಿಗೆ ಬೋಧಿಸುವ ವ್ಯಕ್ತಿಯನ್ನು ವಿವರಿಸುವುದಕ್ಕೆ ಈ ಪದವನ್ನು ಅನೇಕಬಾರಿ ಉಪಯೋಗಿಸುತ್ತಿರುತ್ತಾರೆ.
  • ಉತ್ಸಾಹಭರಿತವಾಗಿರುವುದು ಎನ್ನುವುದರಲ್ಲಿ ಏನಾದರೊಂದು ಮಾಡುವುದರಲ್ಲಿ ತೀವ್ರ ಪ್ರಯತ್ನ ಮಾಡುತ್ತಿರುವುದು ಮತ್ತು ಆ ಪ್ರಯಾಸೆಯಲ್ಲಿ ನಿರಂತರವಾಗಿ ಮುಂದೆವರಿಯುತ್ತಿರುವುದು ಒಳಗೊಂಡಿರುತ್ತದೆ.
  • “ಸೇನಾಧೀಶ್ವರನಾದ ಕರ್ತನಲ್ಲಿನ ಆಸಕ್ತಿ” ಅಥವಾ “ಯೆಹೋವನ ಆಸಕ್ತಿ” ಎನ್ನುವ ಮಾತುಗಳು ದೇವರು ತನ್ನ ಜನರನ್ನು ಆಶೀರ್ವಾದ ಮಾಡುವುದರಲ್ಲಿ ಅಥವಾ ಅವರಿಗೆ ನ್ಯಾಯವನ್ನುಂಟು ಮಾಡುವುದರಲ್ಲಿ ನಿರಂತರವಾಗಿ ಮಾಡುವ ಕ್ರಿಯೆಗಳನ್ನು, ದೇವರ ಬಲವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • “ಉತ್ಸಹಭರಿತವಾಗಿರುವುದು” ಎನ್ನುವ ಮಾತನ್ನು “ಬಲವಾದ ಶ್ರದ್ಧೆಯಿಂದ ಇರುವುದು” ಅಥವಾ “ತೀವ್ರ ಪ್ರಯತ್ನ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಆಸಕ್ತಿ” ಎನ್ನುವ ಪದವನ್ನು “ಬಲವಾದ ಭಕ್ತಿ” ಅಥವಾ “ಉತ್ಸಾಹಪೂರ್ವಕವಾದ ನಿರ್ಣಯ” ಅಥವಾ “ನೀತಿಯುತವಾದ ಉತ್ಸಾಹ” ಎಂದೂ ಅನುವಾದ ಮಾಡಬಹುದು.
  • “ನಿಮ್ಮ ಮನೆಗಾಗಿ ಆಸಕ್ತಿ” ಎನ್ನುವ ಮಾತನ್ನು “ನಿಮ್ಮ ದೇವಾಲಯವನ್ನು ಬಲವಾಗಿ ಘನಪಡಿಸಿರಿ” ಅಥವಾ “ನಿಮ್ಮ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಉತ್ಸಾಹಪೂರ್ವಕವಾದ ಬಯಕೆಯನ್ನು ಹೊಂದಿರಿ” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದದ ಡೇಟಾ:

  • Strong's: H7065, H7068, G2205, G2206, G2207, G6041

ಇಬ್ರಿ, ಇಬ್ರಿಯರು

ಪದದ ಅರ್ಥವಿವರಣೆ:

“ಇಬ್ರಿಯರು” ಇಸಾಕ ಮತ್ತು ಯಾಕೋಬರ ಮೂಲಕ ಅಬ್ರಾಹಾಮನಿಂದ ಬಂದ ಸಂತಾನದ ಜನರಾಗಿರುತ್ತಾರೆ. ಅಬ್ರಾಹಾಮನನ್ನೇ ಮೊಟ್ಟ ಮೊದಲು ಸತ್ಯವೇದದಲ್ಲಿ “ಇಬ್ರಿಯನು” ಎಂದು ಕರೆಯಲ್ಪಟ್ಟಿದ್ದಾನೆ.

  • “ಇಬ್ರಿ” ಎನ್ನುವ ಪದವು ಇಬ್ರಿಯರು ಮಾತನಾಡುವ ಭಾಷೆಯನ್ನು ಕೂಡ ಸೂಚಿಸುತ್ತದೆ. ಹಳೇ ಒಡಂಬಡಿಕೆಯ ಹೆಚ್ಚಿನ ಭಾಗವನ್ನು ಇಬ್ರಿಯ ಭಾಷದಲ್ಲಿಯೇ ಬರೆದಿರುತ್ತಾರೆ.
  • ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ಇಬ್ರಿಯರನ್ನು “ಯೆಹೂದ್ಯದ ಜನರು” ಅಥವಾ “ಇಸ್ರಾಯೇಲ್ಯರು” ಎಂದು ಕರೆಯಲ್ಪಟ್ಟಿದ್ದಾರೆ. ವಾಕ್ಯದಲ್ಲಿ ಈ ಮೂರು ಪದಗಳನ್ನು ಉಪಯೋಗಿಸುವುದು ಉತ್ತಮ, ಯಾಕಂದರೆ ಈ ಪದಗಳು ಒಂದೇ ವರ್ಗದ ಜನರನ್ನು ಸೂಚಿಸುತ್ತವೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಯೆಹೂದ್ಯ, ಯೆಹೂದ್ಯ ನಾಯಕರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5680, G1444, G1445, G1446, G1447

ಇಸ್ರಾಯೇಲ, ಇಸ್ರಾಯೇಲ್ಯರು

ಸತ್ಯಾಂಶಗಳು:

“ಇಸ್ರಾಯೇಲ” ಎನ್ನುವ ಪದವು ದೇವರು ಯಾಕೋಬನಿಗೆ ಕೊಟ್ಟ ಹೆಸರಾಗಿತ್ತು. ಈ ಪದಕ್ಕೆ “ಅವನು ದೇವರೊಂದಿಗೆ ಹೋರಾಟ ಮಾಡುವನು” ಎಂದರ್ಥ.

  • ಯಾಕೋಬನ ಸಂತತಿಯವರು “ಇಸ್ರಾಯೇಲ್ ಜನರು” ಅಥವಾ “ಇಸ್ರಾಯೇಲ್ ದೇಶ” ಅಥವಾ “ಇಸ್ರಾಯೇಲ್ಯರು” ಎಂಬುದಾಗಿ ಕರೆಯಲ್ಪಟ್ಟರು.
  • ದೇವರು ತನ್ನ ಒಡಂಬಡಿಕೆಯನ್ನು ಇಸ್ರಾಯೇಲ್ ಜನರೊಂದಿಗೆ ವಿಸ್ತರಿಸಿದರು. ಅವರು ಆತನು ಆದುಕೊಂಡ ಜನರಾಗಿದ್ದರು.
  • ಇಸ್ರಾಯೇಲ್ ದೇಶದವರು ಹನ್ನೆರಡು ಕುಲಗಳಿಗೆ ಸಂಬಂಧಪಟ್ಟವರಾಗಿದ್ದರು.
  • ಅರಸನಾದ ಸೊಲೊಮೋನನು ಮರಣಿಸಿದನಂತರ ಇಸ್ರಾಯೇಲ್ ದೇಶವು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿತು: ದಕ್ಷಿಣ ರಾಜ್ಯವನ್ನು “ಯೂದಾ” ಎಂದು ಕರೆದರು, ಮತ್ತು ಉತ್ತರ ರಾಜ್ಯವನ್ನು “ಇಸ್ರಾಯೇಲ್” ಎಂದು ಕರೆದರು.
  • “ಇಸ್ರಾಯೇಲ್” ಎನ್ನುವ ಪದವನ್ನು ಅನೇಕಬಾರಿ “ಇಸ್ರಾಯೇಲ್ ಜನರು” ಅಥವಾ “ಇಸ್ರಾಯೇಲ್ ದೇಶ” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ಇಸ್ರಾಯೇಲ್ ರಾಜ್ಯ, ಯೂದಾ, ದೇಶ, ಇಸ್ರಾಯೇಲ್ ಹನ್ನೆರಡು ಕುಲಗಳು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 08:15 ಹನ್ನೆರಡು ಮಂದಿ ಮಕ್ಕಳ ಸಂತಾನದವರು __ ಇಸ್ರಾಯೇಲ್ __ ಹನ್ನೆರಡು ಕುಲಗಳಾದರು.
  • 09:03 ಅನೇಕ ಭವನಗಳನ್ನು ಮತ್ತು ಪಟ್ಟಣವೆಲ್ಲವನ್ನು ಕಟ್ಟಬೇಕೆಂದು ಐಗುಪ್ತರು __ ಇಸ್ರಾಯೇಲ್ಯರನ್ನು __ ಬಲವಂತ ಮಾಡಿದರು.
  • 09:05 ಇಸ್ರಾಯೇಲ್ ಸ್ತ್ರೀ ಒಬ್ಬ ಗಂಡು ಮಗುವಿಗೆ ಜನ್ಮ ಕೊಟ್ಟಳು.
  • 10:01 ಇಸ್ರಾಯೇಲ್ ದೇವರು ಹೀಗೆನ್ನುತ್ತಾನೆ “’ನನ್ನ ಜನರನ್ನು ಕಳುಹಿಸು” ಎಂದು ಅವರು ಹೇಳಿದರು.
  • 14:12 ಇದೆಲ್ಲವನ್ನು ಹೊರತುಪಡಿಸಿ, ದೇವರಿಗೆ ಮತ್ತು ಮೋಶೆಗೆ ವಿರುದ್ಧವಾಗಿ __ ಇಸ್ರಾಯೇಲ್ __ ಜನರು ದೂರು ಹೇಳಿದರು ಮತ್ತು ಗುನುಗುಟ್ಟಿದರು.
  • 15:09 ಆ ದಿನದಂದು __ ಇಸ್ರಾಯೇಲನಿಗಾಗಿ __ ದೇವರು ಹೋರಾಟ ಮಾಡಿದರು. ಆತನು ಅಮೋರಿಯರಿಯರಲ್ಲಿ ಗೊಂದಲವನ್ನುಂಟು ಮಾಡಿದನು ಮತ್ತು ದೊಡ್ಡ ದೊಡ್ಡ ಆನೆಕಲ್ಲುಗಳನ್ನು ಕಳುಹಿಸಿದನು, ಆಗ ಅಮೋರಿಯರಲ್ಲಿ ಅನೇಕರು ಸತ್ತರು.
  • 15:12 ಈ ಹೋರಾಟವಾದನಂತರ, ದೇವರು ಪ್ರತಿಯೊಂದು __ ಇಸ್ರಾಯೇಲ್ __ ಕುಲಕ್ಕೆ ವಾಗ್ಧಾನ ಭೂಮಿಯನ್ನು ಹಂಚಿದನು. ಆದನಂತರ, ದೇವರು __ ಇಸ್ರಾಯೇಲ್ __ ಗಡಿಗಳಲ್ಲಿರುವ ಪ್ರತಿಯೊಬ್ಬರಿಗೆ ಸಮಾಧಾನವನ್ನು ಕೊಟ್ಟರು.
  • 16:16 ಆದ್ದರಿಂದ __ ಇಸ್ರಾಯೇಲ್ಯರು __ ವಿಗ್ರಹಗಳಿಗೆ ಆರಾಧನೆ ಮಾದುತ್ತಿದ್ದಕ್ಕಾಗಿ, ಅವರನ್ನು ದೇವರು ಶಿಕ್ಷಿಸಿದರು.
  • 43:06 ಇಸ್ರಾಯೇಲ್ ಜನರೇ, ನೀವು ಇದುವರೆಗೆ ತಿಳಿದುಕೊಂಡಂತೆ ಮತ್ತು ನೋಡಿದಂತೆ, ಯೇಸು ದೇವರ ಶಕ್ತಿಯಿಂದ ಅನೇಕವಾದ ಸೂಚಕ ಕ್ರಿಯೆಗಳನ್ನು ಮತ್ತು ಅದ್ಭುತಗಳನ್ನು ಮಾಡಿದನು.”

ಪದ ಡೇಟಾ:

  • Strong's: H3478, H3479, H3481, H3482, G935, G2474, G2475

ಉಪರಾಜ

ಪದದ ಅರ್ಥವಿವರಣೆ:

“ಉಪರಾಜ” ಎನ್ನುವ ಪದವು ರೋಮಾ ಸಾಮ್ರಾಜ್ಯದ ಭಾಗವನ್ನು ಆಳಿದ ಪ್ರಭುತ್ವ ಅಧಿಕಾರಿಗಳನ್ನು ಸೂಚಿಸುತ್ತದೆ. ಪ್ರತಿಯೊಬ್ಬ ಉಪರಾಜನು ರೋಮಾ ಸಾಮ್ರಾಜ್ಯದ ಅಧಿಕಾರದಲ್ಲಿರಬೇಕು.

  • “ಉಪರಾಜ” ಎನ್ನುವ ಪದಕ್ಕೆ “ಚತುರ್ಧಾಧಿಪತಿಗಳಲ್ಲಿ ಒಬ್ಬನು” ಎಂದರ್ಥ.
  • ದಯೋಕ್ಲೆಶಿಯನ್ ಚಕ್ರವರ್ತಿಯ ಕೆಳಗೆ ಆರಂಭಿಸಿ, ರೋಮಾ ಸಾಮ್ರಾಜ್ಯದಲ್ಲಿ ನಾಲ್ಕು ಮುಖ್ಯ ಭಾಗಗಳಿದ್ದವು, ಅವುಗಳಲ್ಲಿ ಪ್ರತಿಯೊಂದು ಭಾಗವನ್ನು ಒಬ್ಬೊಬ್ಬ ಉಪರಾಜನು ಆಳಬೇಕಾಗಿರುತ್ತಿತ್ತು.
  • ಯೇಸುವಿನ ಜನನ ಸಮಯದ ಕಾಲದಲ್ಲಿ ಅರಸನಾಗಿರುವ “ಮಹಾ” ಹೆರೋದನ ರಾಜ್ಯವು ಹೆರೋದನು ಸತ್ತುಹೋದನಂತರ ನಾಲ್ಕು ಮುಖ್ಯ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿತು, ಮತ್ತು ಅವುಗಳನ್ನು ತನ್ನ ಮಕ್ಕಳು “ಉಪರಾಜರಾಗಿ” ಅಥವಾ “ನಾಲ್ಕು ಮಂದಿ ಪಾಲಕರಾಗಿ” ಆಳಿದರು.
  • ಪ್ರತಿಯೊಂದು ಭಾಗದಲ್ಲಿ ಒಂದಕ್ಕಿಂತ ಹೆಚ್ಚಾಗಿ “ಸೀಮೆಗಳು” ಎಂದು ಕರೆಯಲ್ಪಡುವ ವಿಭಾಗಗಳನ್ನು ಇರುತ್ತಿದ್ದವು, ಉದಾಹರಣೆಗೆ, ಗಲಿಲಾಯ ಅಥವಾ ಸಮಾರ್ಯ.
  • ಹೊಸ ಒಡಂಬಡಿಕೆಯಲ್ಲಿ “ಉಪರಾಜನಾದ ಹೆರೋದ” ಎಂದು ಅನೇಕಸಲ ದಾಖಲಿಸಲಾಗಿದೆ. ಇವನನ್ನು “ಹೆರೋದ್ ಅಂತಿಪ” ಎಂದೂ ಕರೆಯಲ್ಪಟ್ಟಿರುತ್ತಾನೆ.
  • “ಉಪರಾಜ” ಎನ್ನುವ ಈ ಪದವನ್ನು “ಪ್ರಾಂತೀಯ ರಾಜ್ಯಪಾಲಕ” ಅಥವಾ “ಪ್ರಾಂತ್ಯದ ಪಾಲಕ” ಅಥವಾ “ಪಾಲಕ” ಅಥವಾ “ರಾಜ್ಯಪಾಲರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಹೆರೋದ್ ಅಂತಿಪ, ಸೀಮೆ, ರೋಮ್, ಪಾಲಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G5075, G5076

ಎಚ್ಚರಿಸು, ಎಚ್ಚರಿಕೆ

ಪದದ ಅರ್ಥವಿವರಣೆ:

“ಎಚ್ಚರಿಸು” ಎನ್ನುವ ಪದಕ್ಕೆ ಸರಿಯಾದದ್ದನ್ನು ಮಾಡಬೇಕೆಂದು ಒಬ್ಬರನ್ನು ಬಲವಾಗಿ ಪ್ರೋತ್ಸಾಹಗೊಳಿಸುವುದು ಮತ್ತು ಆರೈಸುವುದು. ಅಂಥಹ ಪ್ರೋತ್ಸಾಹವನ್ನೇ “ಎಚ್ಚರಿಕೆ” ಎಂದು ಕರೆಯುತ್ತಾರೆ.

  • ಎಚ್ಚರಿಕೆ ಮಾಡುವುದಕ್ಕೆ ಉದ್ದೇಶವೇನೆಂದರೆ ಇತರ ಜನರು ಪಾಪವನ್ನು ಮಾಡದೇ ದೇವರ ಚಿತ್ತವನ್ನು ಅನುಸರಿಸುವಂತೆ ನೋಡಿಕೊಳ್ಳುವುದು.
  • ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತರು ಒಬ್ಬರಿಗೊಬ್ಬರು ಕಠಿಣವಾಗಿಯೂ ಅಥವಾ ಥಟ್ಟನೆಯಾಗಿ ಎಚ್ಚರಿಸಿಕೊಳ್ಳದೇ, ಪ್ರೀತಿಯಲ್ಲಿ ಎಚ್ಚರಿಸಿಕೊಳ್ಳಿರಿ ಎಂದು ಬೋಧಿಸಲ್ಪಟ್ಟಿದೆ,

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಎಚ್ಚರಿಸು” ಎನ್ನುವ ಪದವನ್ನು “ಬಲವಾಗಿ ಕೇಳಿಕೊಳ್ಳಿ” ಅಥವಾ “ಮನವೊಲಿಸು” ಅಥವಾ “ಸಲಹೆಕೊಡು” ಎಂದೂ ಅನುವಾದ ಮಾಡಬಹುದು.
  • ಎಚ್ಚರಿಸುವವರು ಕೋಪಗೊಂಡಿರುತ್ತಾರೆನ್ನುವ ಭಾವನೆ ಅನುವಾದ ಪದಗಳಲ್ಲಿ ಬರದಂತೆ ನೋಡಿಕೊಳ್ಳಿರಿ. ಈ ಪದವು ಬಲವನ್ನು ಮತ್ತು ತೀವ್ರತೆಯನ್ನು ತಿಳಿಸಬೇಕು, ಆದರೆ ಕೋಪದಿಂದ ಮಾತನಾಡುವುದನ್ನು ಸೂಚಿಸಬಾರದು.
  • ಅನೇಕ ಸಂದರ್ಭಗಳಲ್ಲಿ “ಎಚ್ಚರಿಸು” ಎನ್ನುವ ಪದವನ್ನು “ಪ್ರೋತ್ಸಾಹಿಸು” ಎನ್ನುವ ಪದಕ್ಕಿಂತ, ಪ್ರೇರೇಪಿಸು, ಧೈರ್ಯ ತುಂಬು, ಅಥವಾ ಒಬ್ಬರನ್ನು ಆದರಿಸು ಎಂದು ಅರ್ಥ ಬರುವ ಪದಗಳಿಂದ ಅನುವಾದ ಮಾಡಲಾಗುತ್ತದೆ.
  • ಈ ಪದವನ್ನು ಸಹಜವಾಗಿ ವಿಭಿನ್ನ ರೀತಿಯಲ್ಲಿ “ಒತ್ತಿ ಹೇಳು” ಎಂದೂ ಅನುವಾದಿಸುತ್ತಾರೆ, ಇದಕ್ಕೆ ಒಬ್ಬರ ಕೆಟ್ಟ ನಡತೆಗಾಗಿ ಅವರನ್ನು ಸರಿಪಡಿಸುವುದು ಅಥವಾ ಅವರಿಗೆ ಎಚ್ಚರಿಕೆ ಕೊಡುವುದು ಎಂದರ್ಥ.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G3867, G3870, G3874, G4389

ಎಲ್ಲೆಮೀರುವುದು

ಪದದ ಅರ್ಥವಿವರಣೆ:

“ಎಲ್ಲೆಮೀರು” ಎನ್ನುವ ಪದಕ್ಕೆ ಒಬ್ಬರ ಹಕ್ಕುಗಳನ್ನು ಉಲ್ಲಂಘಿಸುವುದು ಅಥವಾ ನಿಯಮಗಳನ್ನು ಮೀರುವುದು ಎಂದರ್ಥ. “ಎಲ್ಲೆಮೀರು” ಎಂದರೆ “ಎಲ್ಲೆಮೀರುವ” ಕ್ರಿಯೆ ಎಂದರ್ಥ.

  • ಈ ಪದವು "ಎಲ್ಲೆಮೀರುವುದು" ಎಂಬ ಪದಕ್ಕೆ ಹೋಲುತ್ತದೆ, ಆದರೆ ಸಾಮಾನ್ಯವಾಗಿ ದೇವರ ವಿರುದ್ಧವಾಗಿ ಇತರ ಜನರ ವಿರುದ್ಧ ಎಲ್ಲೆಮೀರುವುದು ವಿವರಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
  • ಅತಿಕ್ರಮಣವು ನೈತಿಕ ಕಾನೂನು ಅಥವಾ ನಾಗರಿಕ ಕಾನೂನಿನ ಉಲ್ಲಂಘನೆಯಾಗಿರಬಹುದು.
  • ಅತಿಕ್ರಮಣವು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಮಾಡಿದ ಪಾಪವೂ ಆಗಿರಬಹುದು.
  • ಈ ಪದವು "ಪಾಪ" ಮತ್ತು "ಉಲ್ಲಂಘನೆ ಅಥವಾ ಎಲ್ಲೆಮೀರುವುದು" ಎಂಬ ಪದಗಳಿಗೆ ಸಂಬಂಧಿಸಿದೆ, ವಿಶೇಷವಾಗಿ ಇದು ದೇವರಿಗೆ ಅವಿಧೇಯತೆಗೆ ಸಂಬಂಧಿಸಿದೆ. ಎಲ್ಲಾ ಪಾಪಗಳು ದೇವರ ವಿರುದ್ಧದ ಅಪರಾಧಗಳಾಗಿವೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ‘ವಿರುದ್ಧವಾಗಿ ಎಲ್ಲೆಮೀರು” ಎನ್ನುವ ಮಾತನ್ನು “ವಿರುದ್ಧವಾಗಿ ಪಾಪ ಮಾಡು” ಅಥವಾ “ನಿಯಮವನ್ನು ಉಲ್ಲಂಘಿಸು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ “ಗೆರೆಯನ್ನು ದಾಟುವುದು” ಎನ್ನುವ ಮಾತನ್ನು ಹೊಂದಿರುತ್ತದೆ, ಇದನ್ನು “ಎಲ್ಲೆಮೀರು” ಅನುವಾದ ಮಾದುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ಸತ್ಯವೇದದ ವಾಕ್ಯಭಾಗದಲ್ಲಿರುವ ಅರ್ಥದೊಂದಿಗೆ ಈ ಪದವನ್ನು ಹೇಗೆ ಇಡಿಸುತ್ತದೆಯೆಂದು ಗಮನಿಸಿರಿ, “ಅತಿಕ್ರಮಣ” ಮತ್ತು “ಪಾಪ” ಎನ್ನುವ ಪದಗಳಿಗೆ ಅರ್ಥವನ್ನು ಹೊಂದಿರುವ ಇತರ ಪದಗಳೊಂದಿಗೆ ಹೋಲಿಸಿ ನೋಡಿರಿ.

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ಅಕ್ರಮ, ಪಾಪ, ಅತಿಕ್ರಮಣ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H816, H817, H819, H2398, H4603, H4604, H6586, H6588, G264, G3900

ಒಡಂಬಡಿಕೆ

ಪದದ ಅರ್ಥವಿವರಣೆ

"ಒಡಂಬಡಿಕೆ" ಎನ್ನುವ ಪದವು ಒಂದು ಅಥವಾ ಎರಡು ಪಕ್ಷದವರು ನೆರವೇರಿಸಬೇಕಾಗಿದ್ದು, ಯಾವುದಾದರು ಒಂದು ಕಾರ್ಯವನ್ನು ಮಾಡಬೇಕೆಂದು ಎರಡು ಪಕ್ಷದವರ ನಡುವೆ ನಿರ್ಣಯಿಸಿ ಸಾಂಪ್ರದಾಯಕವಾಗಿ ಮಾಡಿಕೊಳ್ಳುವ ಒಪ್ಪಂದವನ್ನು ಸೂಚಿಸುತ್ತದೆ.

  • ವ್ಯಕ್ತಿಗಳ ನಡುವೆ, ಜನರ ಗುಂಪಿಗಳ ನಡುವೆ ಅಥವಾ ದೇವರು ಮತ್ತು ಮನುಷ್ಯರ ನಡುವೆ ಈ ಒಪ್ಪಂದ ಮಾಡಿಕೊಳ್ಳಬಹುದು.
  • ಇಬ್ಬರು ವ್ಯಕ್ತಿಗಳು ಒಡಂಬಡಿಕೆಯನ್ನು ಮಾಡಿಕೊಂಡಾಗ, ಅವರು ಏನಾದರು ಮಾಡುತ್ತೇವೆ ಎಂದು ವಾಗ್ಧಾನ ಮಾಡುತ್ತಾರೆ ಮತ್ತು ಅವರು ಆ ವಾಗ್ಧಾನ ನೆರವೇರಿಸಬೇಕು.
  • ವಿವಾಹ ಒಡಂಬಡಿಕೆ, ವ್ಯಾಪಾರ ನಿಬಂಧನೆ, ಮತ್ತು ದೇಶಗಳ ನಡುವೆ ಒಪ್ಪಂದಗಳು, ಮಾನವ ಒಡಂಬಡಿಕೆ ಉದಾಹರಣೆಗಳಾಗಿವೆ.
  • ಸತ್ಯವೇದದುದ್ದಕ್ಕು ದೇವರು ತನ್ನ ಜನರೊಂದಿಗೆ ಅನೇಕ ಒಡಂಬಡಿಕೆಗಳನ್ನು ಮಾಡಿದ್ದಾನೆ.
  • ಕೆಲವೊಂದು ಒಡಂಬಡಿಕೆಗಳಲ್ಲಿ, ದೇವರು ತನ್ನ ಕೆಲಸವನ್ನು ಯಾವುದೇ ಷರತ್ತುಗಳಿಲ್ಲದೆ ಮಾಡಲು ವಾಗ್ಧಾನ ಮಾಡಿದ್ದಾನೆ. ಉದಾಹರಣೆಗೆ, ವಿಶ್ವಾದ್ಯಂತ ಪ್ರವಾಹದಿಂದ ಭುಲೋಕವನ್ನು ಎಂದಿಗೂ ನಾಶ ಮಾಡುವದಿಲ್ಲವೆಂದು ಎಲ್ಲಾ ಮಾನವ ಜಾತಿಯೊಂದಿಗೆ ದೇವರು ವಾಗ್ದಾನ ಮಾಡಿ ಒಡಂಬಡಿಕೆಯನ್ನು ಸ್ಥಿರಪಡಿಸಿದಾಗ, ಈ ವಾಗ್ದಾನವನ್ನು ನೆರವೇರಿಸುವದರಲ್ಲಿ ಮನುಷ್ಯರು ಮಾಡಬೇಕದ ಕೆಲಸ ಒಂದು ಇರುವದಿಲ್ಲ.
  • ಬೇರೆ ಒಡಂಬಡಿಕೆಗಳಲ್ಲಿ, ಮನುಷ್ಯರು ತಮ್ಮ ಕೆಲಸವನ್ನು ಮಾಡಿದ್ದರೆ ಮತ್ತು ಆತನಿಗೆ ವಿಧೇಯರಾಗಿದ್ದರೆ ಮಾತ್ರ ತನ್ನ ಪಕ್ಷದ ಕಾರ್ಯವನ್ನು ಮಾಡುವೆನೆಂದು ದೇವರು ವಾಗ್ದಾನ ಮಾಡಿದನು.

“ಹೊಸ ಒಡಂಬಡಿಕೆ” ಎನ್ನುವ ಪದವು ತನ್ನ ಮಗನಾದ, ಯೇಸು ಕ್ರಿಸ್ತನ ಮುಕಾಂತರ ದೇವರು ತನ್ನ ಜನರೊಂದಿಗೆ ಮಾಡಿದ ಒಪ್ಪಂದ ಅಥವಾ ಬಾಧ್ಯತೆಯನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ಹೊಸ ಒಡಂಬಡಿಕೆ” ಎನ್ನುವ ಭಾಗದಲ್ಲಿ ದೇವರ “ನೂತನ ನಿಬಂಧನೆಯ” ಕುರಿತಾಗಿ ವಿವರಿಸಲ್ಪಟ್ಟಿದೆ.
  • ಈ ನೂತನ ನಿಬಂಧನವು ಹಳೆ ಒಡಂಬಡಿಕೆಯ ಕಾಲದಲ್ಲಿ ದೇವರು ಇಸ್ರಾಯೇಲರ ಸಂಗಡ ಮಾಡಿದ “ಹಳೆ” ನಿಬಂಧನಕ್ಕೆ ವಿರುದ್ಧವಾಗಿದೆ.
  • ಹಳೆಯ ಒಡಂಬಡಿಕೆಯಗಿಂತ ಹೊಸ ಒಡಂಬಡಿಕೆ ತುಂಬಾ ಉತ್ತಮವಾಗಿದೆ ಯಾಕಂದರೆ ಅದು ಮನುಷ್ಯರ ಪಾಪಗಳನ್ನು ಶಾಶ್ವತವಾಗಿ ಪರಿಹಾರಮಾಡಿರುವ ಯೇಸು ಕ್ರಿಸ್ತನ ಬಲಿಯಾಗದ ಮೇಲೆ ಆಧಾರವಾಗಿದೆ. ಹಳೆ ಒಡಂಬಡಿಕೆಯ ಬಲಿಯಗದಲ್ಲಿ ಇದು ಮಾಡಿರಲಿಲ್ಲ.
  • ಯೇಸುವಿನ ವಿಶ್ವಾಸಿಗಳು ಆಗಿರುವವರ ಹೃದಯಗಳ ಮೇಲೆ ದೇವರು ಈ ನೂತನ ಒಡಂಬಡಿಕೆಯನ್ನು ಬರೆದಿದ್ದಾರೆ. ದೇವರಿಗೆ ವಿಧೇಯರಾಗಿರಲು ಮತ್ತು ಪರಿಶುದ್ಧ ಜೀವಿತವನ್ನು ಹೊಂದಿರಲು ಪ್ರಾರಂಭಿಸುವಂತೆ ಅದು ಅವರನ್ನು ಪ್ರೇರೇಪಿಸುತ್ತದೆ.
  • ಅಂತ್ಯ ಕಾಲದಲ್ಲಿ ದೇವರು ತನ್ನ ರಾಜ್ಯವನ್ನು ಭೂಲೋಕದಲ್ಲಿ ಸ್ಥಿರಪಡಿಸಿದಾಗ ಹೊಸ ಒಡಂಬಡಿಕೆ ಸಂಪೂರ್ಣವಾಗಿ ನೆರವೇರುತ್ತದೆ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ ಹೇಗಿತ್ತೋ ಅದೇರೀತಿರಲ್ಲಿ ಮತ್ತೋಮ್ಮೆ ಎಲ್ಲವು ಒಳ್ಳೆಯದಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂಧರ್ಭಕ್ಕೆ ತಕ್ಕಹಾಗೆ, ಈ ಪದವನ್ನು “ಬಂಧನದ ಒಪ್ಪಂದ” ಅಥವಾ “ಸಂಪ್ರದಾಯಕ ಒಪ್ಪಂದ” ಅಥವಾ “ವಾಗ್ದಾನ” ಅಥವಾ “ಒಪ್ಪಂದ” ಎಂದು ಅನುವಾದ ಮಾಡಬಹುದು.
  • ಒಂದು ಅಥವಾ ಎರಡು ಪಕ್ಷದವರು ನೆರವೇರಿಸಬೇಕಾದ ಕಾರ್ಯದ ವಿಷಯವಾಗಿ ಮಾಡಿರುವ ಒಪ್ಪಂದದ ಪ್ರಕಾರ ಬೇರೆ ಭಾಷೆಗಳಲ್ಲಿ ನಿಬಂಧನ ಎನ್ನುವ ಪದಕ್ಕೆ ಬೇರೆ ಪದಗಳನ್ನು ಉಪಯೋಗಿಸಿರ ಬಹುದು. ಒಡಂಬಡಿಕೆ ಒಂದು ಪಕ್ಷಕ್ಕೆ ಸೇರಿದ್ದು ಆಗಿದ್ದರೆ, ಅದನ್ನು “ವಾಗ್ದಾನ” ಅಥವಾ “ಪ್ರತಿಜ್ಞೆ” ಎಂದು ಅನುವಾದ ಮಾಡಬಹುದು.
  • ಜನರು ಒಡಂಬಡಿಕೆ ಮಾಡಲು ಪ್ರಸ್ತಾಪಿಸಿದ್ದಾರೆ ಎಂದು ಅರ್ಥಕೊಡದಂತೆ ನೋಡಿಕೊಳ್ಳಿರಿ. ದೇವರು ಮತ್ತು ಮನುಷ್ಯರ ನಡುವೆ ಮಾಡಿರುವ ಎಲ್ಲಾ ನಿಬಂಧನೆಗಳು, ದೇವರೇ ಆ ನಿಬಂಧನಗಳನ್ನು ಪ್ರಾರಂಭಿಸಿದ್ದಾರೆ.
  • “ನೂತನ ಒಡಂಬಡಿಕೆ ” ಎನ್ನುವ ಪದವನ್ನು “ಹೊಸ ಸಂಪ್ರದಾಯಕ ಒಪ್ಪಂದ” ಅಥವಾ “ಹೊಸ ಒಪ್ಪಂದ” ಅಥವಾ “ಹೊಸ ಕರಾರು” ಎಂದು ಅನುವಾದ ಮಾಡಬಹುದು.
  • ಈ ಪದವಿನ್ಯಾಸಗಳಲ್ಲಿ “ಹೊಸ” ಎನ್ನುವ ಪದಕ್ಕೆ “ತಾಜಾ” ಅಥವಾ “ಹೊಸ ವಿಧಾನ” ಅಥವಾ “ಇನ್ನೊಂದು” ಎಂದು ಅರ್ಥ ಕೊಡುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ವಾಗ್ದಾನ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಕೆಲವು ಉದಾಹರಣೆಗಳು:

  • 04:09 ದೇವರು ಅಬ್ರಹಾಮನೊಂದಿಗೆ __ಒಡಂಬಡಿಕೆ __ ಮಾಡಿದನು. __ಒಡಂಬಡಿಕೆ __ ಎಂದರೆ ಎರಡು ಪಕ್ಷದವರು ಮಾಡುವ ಒಪ್ಪಂದವಾಗಿದೆ.
  • 05:04 “ಇಷ್ಮಾಯೇಲನನ್ನು ಆಶೀರ್ವದಿಸಿ, ಅವನನ್ನು ಅಭಿವೃದ್ದಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ.”
  • 06:04 ಬಹು ಕಾಲದ ನಂತರ, ಅಬ್ರಹಾಮನು ತೀರಿಹೊದನು ಮತ್ತು ದೇವರು ಅವನೊಂದಿಗೆ ಮಾಡಿದ __ಒಡಂಬಡಿಕೆ __ ಅವನ ಮಗನಾದ ಇಸಾಕನ ಮೇಲೂ ಉಂಟಾಯಿತು.
  • 07:10 ದೇವರು ಅಬ್ರಹಾಮನಿಗೆ ಮತ್ತು ಇಸಾಕನಿಗೆ ಮಾಡಿದ __ಒಡಂಬಡಿಕೆ __ ಯಾಕೋಬನ ಮೇಲೂ ಉಂಟಾಯಿತು.”
  • 13:02 “ನೀವು ನನ್ನ ಮಾತುಗಳನ್ನು ಶ್ರದ್ದೆಯಿಂದ ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿಕೊಂಡರೆ, ನೀವು ನನಗೆ ಶ್ರೇಷ್ಠ ಯಾಜಕರೂ, ಪರಿಶುದ್ದ ಜನರೂ ಆಗಿರುವಿರಿ” ಎಂದು ದೇವರು ಮೋಶೆ ಮತ್ತು ಇಸ್ರಯೇಲ್ ಜನರೊಂದಿಗೆ ಹೇಳಿದನು.
  • 13:04 “ಐಗುಪ್ತ್ಯರು ಮಾಡಿಸುವ ಬಿಟ್ಟೀ ಸೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನೆಂಬ ನಾನೇ ನಿಮ್ಮ ದೇವರಗಿದ್ದೇನೆ” ಎಂದು ದೇವರು ಅವರಿಗೆ ಒಡಂಬಡಿಕೆ ಮಾಡಿದರು. ಬೇರೆ ಯಾವ ದೇವರನ್ನು ನೀವು ಸೇವಿಸಬಾರದು.”
  • 15:13 ಸಿನಾಯ್ ಬೆಟ್ಟದಲ್ಲಿ ಯೆಹೋವ ದೇವರು ಇಸ್ರಾಯೇಲ್ಯರೊಂದಿಗೆ ಮಾಡಿದ __ಒಡಂಬಡಿಕೆ __ ವಿಧೇಯರಾಗಬೇಕೆನ್ನುವ ಕರ್ತವ್ಯವನ್ನು ಯೆಹೋಶುವ ಜನರಿಗೆ ನೆನಪು ಮಾಡಿದನು.
  • 21:05 ಪ್ರವಾದಿಯಾದ ಯೆರೆಮೀಯನ ಮುಖಾಂತರ, ದೇವರು ಒಂದು ಹೊಸ ಒಡಂಬಡಿಕೆಯನ್ನು ಮಾಡುವೆನೆಂದು ವಾಗ್ದಾನ ಮಾಡಿದನು, ಆದರೆ ಆ ಒಡಂಬಡಿಕೆ ದೇವರು ಇಸ್ರಾಯೇಲರೊಂದಿಗೆ ಮಾಡಿದಂತೆ ಇರುವದ್ದಿಲ್ಲ. ಹೊಸ ಒಡಂಬಡಿಕೆಯಲ್ಲಿ, ದೇವರು ತನ್ನ ಆಜ್ಞೆಗಳನ್ನು ಜನರ ಹೃದಯಗಳ ಮೇಲೆ ಬರೆಯುವನು, ಜನರು ತಮ್ಮ ದೇವರನ್ನು ವ್ಯಕ್ತಿಗತವಾಗಿ ತಿಳಿದಿರುವರು, ಅವರು ಆತನ ಪ್ರಜೆಯಾಗಿರುವರು, ಮತ್ತು ದೇವರು ಅವರ ಪಾಪಗಳನ್ನು ಕ್ಷಮಿಸುವನು. ಮೆಸ್ಸಿಯ ಆ ಹೊಸಒಡಂಬಡಿಕೆ ಯನ್ನು ಪ್ರಾರಂಭಿಸುವನು.
  • 21:14 ಮೆಸ್ಸಿಯನ ಮರಣ ಮತ್ತು ಪುನರುತ್ಥಾನದ ಮೂಲಕ, ದೇವರು ಪಾಪಿಗಳನ್ನು ರಕ್ಷಿಸುವ ತನ್ನ ಪ್ರಣಾಳಿಕೆಯನ್ನು ನೆರವೇರಿಸುವನು ಮತ್ತು ಹೊಸ ಒಡಂಬಡಿಕೆಯನ್ನು ಪ್ರಾರಂಭಿಸುವನು.
  • 38:05 ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ. ಇದು ಬಹುಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ. ಇದನ್ನು ಪಾನ ಮಾಡುವಾಗೆಲ್ಲ ನನ್ನನ್ನು ನೆನಪು ಮಾಡಿಕೊಳ್ಳಿರಿ.”
  • 48:11 ಆದರೆ ದೇವರು ಈಗ ಹೊಸ ಒಡಂಬಡಿಕೆಯನ್ನು ಮಾಡಿದ್ದಾರೆ, ಅದು ಎಲ್ಲರಿಗೂ ಸಿಗುತ್ತದೆ. ಯಾಕಂದರೆ ಈ ಹೊಸ ಒಡಂಬಡಿಕೆಯ ಮೂಲಕ, ಯಾರಾದರು ಯೇಸು ಕ್ರಿಸ್ತನನ್ನು ನಂಬಿದರೆ ಅವರು ದೇವರ ಮಕ್ಕಳಾಗಬಹುದು.

ಪದ ಡೇಟಾ:

  • Strong's: H1285, H2319, H3772, G802, G1242, G4934

ಒಡಂಬಡಿಕೆಯ ನಂಬಿಕೆ, ಒಡಂಬಡಿಕೆಯ ನಿಯತ್ತು, ಪ್ರೀತಿಯ ದಯೆ, ವಿಫಲವಾಗದ ಪ್ರೀತಿ

ಪದದ ಅರ್ಥವಿವರಣೆ

ದೇವರು ತನ್ನ ಪ್ರಜೆಗಳೊಂದಿಗೆ ಮಾಡಿದ ವಾಗ್ದಾನಗಳನ್ನು ನೆರೆವೇರಿಸುವ ಬದ್ಧತೆಯನ್ನು ವಿವರಿಸಲು ಈ ಪದವನ್ನು ಉಪಯೋಗಿಸುತ್ತಾರೆ.

  • “ಒಡಂಬಡಿಕೆಗಳು” ಎನ್ನುವ ಸಾಂಪ್ರದಾಯಕ ಒಪ್ಪಂದಗಳ ಮೂಲಕ ದೇವರು ಇಸ್ರಾಯೇಲ್ಯರಿಗೆ ವಾಗ್ದಾನಗಳನ್ನು ಮಾಡಿದ್ದಾನೆ.
  • ಯೆಹೋವನ “ಒಡಂಬಡಿಕೆಯ ನಂಬಿಕೆ” ಅಥವಾ “ಒಡಂಬಡಿಕೆಯ ನಿಯತ್ತು” ಆತನು ತನ್ನ ಜನರೊಂದಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸುವನು ಎನ್ನುವ ವಾಸ್ತವಿಕೆಯನ್ನು ಸೂಚಿಸುತ್ತಿದೆ.
  • ದೇವರು ತಾನು ಮಾಡಿದ ನಿಬಂಧನೆಯ ವಾಗ್ದಾನವನ್ನು ನೆರವೇರಿಸುವಾತನು ಎನ್ನುವುದು ತನ್ನ ಜನರ ಮೇಲೆ ತನ್ನ ಕೃಪೆಯನ್ನು ತೋರಿಸುತ್ತಿದ್ದಾನೆ ಎನ್ನುವ ಭಾವವನ್ನು ವ್ಯಕ್ತಪಡಿಸುತ್ತಿದೆ.
  • “ನಿಯತ್ತು” ಎನ್ನುವ ಪದವು ಬದ್ಧತೆ ಮತ್ತು ಭರವಸೆ ಇಡಬಹುದು, ವಾಗ್ದಾನ ಮಾಡಿರುವದನ್ನು ನೆರವೇರಿಸುವುದು, ಮತ್ತು ಇನ್ನೊಬ್ಬರಿಗೆ ಪ್ರಯೋಜನಕರವಾಗಿರಿವುದು ಎನ್ನುವವುಗಳಿಗೆ ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಒಡಂಬಡಿಕೆ” ಮತ್ತು “ನಂಬಿಕೆ” ಎನ್ನುವ ಪದಗಳನ್ನು ಹೇಗೆ ಅನುವಾದ ಮಾಡಿದ್ದರೆ ಎನ್ನುವದರ ಮೇಲೆ ಈ ಪದವನ್ನು ಅನುವಾದ ಮಾಡುವುದು ಆಧಾರವಾಗಿರುತ್ತದೆ.
  • “ನಂಬಿಕೆಯಾದ ಪ್ರೀತಿ” ಅಥವಾ “ನಿಯತ್ತು, ಬದ್ಧತೆಯ ಪ್ರೀತಿ” ಅಥವಾ “ಭರವಸೆ ಇಡಬಹುದಾದ ಪ್ರೀತಿ” ಎಂದು ಈ ಪದವನ್ನು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಿಬಂಧನೆ, ನಂಬಿಕೆ, ಕೃಪೆ, ಇಸ್ರಾಯೇಲ್ಯರು, ದೇವರ ಜನರು, ವಾಗ್ದಾನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2617

ಒಡಂಬಡಿಕೆಯ ಮಂಜೂಷ, ಯೆಹೋವನ ಮಂಜೂಷ

ಪದದ ಅರ್ಥವಿವರಣೆ:

ಈ ಪದಗಳು ವಿಶೇಷವಾದ ಕಟ್ಟಿಗೆಯ ಪೆಟ್ಟಿಗೆಯನ್ನು, ಅದರ ಮೇಲೆ ಬಂಗಾರದ ಹೊದಿಕೆಯನ್ನು, ಅದರಲ್ಲಿ ಹತ್ತು ಆಜ್ಞೆಗಳನ್ನು ಬರೆದಿರುವ ಎರಡು ಹಲಗೆಗಳನ್ನು ಸೂಚಿಸುತ್ತದೆ. ಅದರಲ್ಲಿ ಆರೋನನ ಕೋಲು ಮತ್ತು ಮನ್ನ ಪಾತ್ರೆಯು ಒಳಗೊಂಡಿರುತ್ತದೆ.

  • “ಮಂಜೂಷ” ಎನ್ನುವ ಪದವು ಇಲ್ಲಿ “ಪೆಟ್ಟಿಗೆ” ಅಥವಾ “ಗೂಡು” ಅಥವಾ “ಪಾತ್ರೆ” ಎಂದೂ ಅನುವಾದ ಮಾಡಬಹುದು.
  • ಈ ಗೂಡಿನಲ್ಲಿರುವ ವಸ್ತುಗಳು ದೇವರ ಒಡಂಬಡಿಕೆಯ ಇಸ್ರಾಯೇಲ್ಯರನ್ನು ನೆನಪಿಸುತ್ತದೆ.
  • ಒಡಂಬಡಿಕೆಯ ಮಂಜೂಷವು “ಅತೀ ಪರಿಶುದ್ಧ ಸ್ಥಳದಲ್ಲಿ” ಮಾತ್ರ ಕಂಡುಬರುತ್ತದೆ.
  • ಗುಡಾರದಲ್ಲಿರುವ ಅತಿ ಪರಿಶುದ್ಧ ಸ್ಥಳದಲ್ಲಿಟ್ಟ ಒಡಂಬಡಿಕೆಯ ಮಂಜೂಷದ ಮೇಲೆ ದೇವರ ಸನ್ನಿಧಿಯು ಇಳಿದು ಬರುತ್ತಿತ್ತು, ಅಲ್ಲಿಯೇ ಇಸ್ರಾಯೇಲ್ಯರ ಪಕ್ಷವಾಗಿ ಮೋಶೆಯೊಂದಿಗೆ ದೇವರು ಮಾತನಾಡುವ ಸ್ಥಳವಾಗಿತ್ತು.
  • ದೇವಾಲಯದಲ್ಲಿರುವ ಅತಿ ಪರಿಶುದ್ಧ ಸ್ಥಳದಲ್ಲಿಟ್ಟ ಒಡಂಬಡಿಕೆಯ ಮಂಜೂಷದ ಸಮಯದಲ್ಲಿ, ಕೇವಲ ಪ್ರಧಾನ ಯಾಜಕನು ಮಾತ್ರವೇ ಮಂಜೂಷದ ಬಳಿಗೆ ಹೋಗುವುದಕ್ಕೆ ಸಾಧ್ಯ, ಅದು ಕೂಡ ವರ್ಷಕ್ಕೊಮ್ಮೆ ದೋಷ ಪರಿಹಾರ ದಿನದಂದು ಮಾತ್ರ ಗುಡಾರದೊಳಗೆ ಪ್ರವೇಶಿಸಬೇಕು.
  • ಅನೇಕ ಆಂಗ್ಲ ಅನುವಾದಗಳಲ್ಲಿ “ಒಡಂಬಡಿಕೆಯ ಆಜ್ಞೆಗಳನ್ನು” ಅಕ್ಷರಾರ್ಥವಾಗಿ “ಸಾಕ್ಷಿ” ಎಂಬುದಾಗಿ ಅನುವಾದಿಸಿದ್ದಾರೆ. ಹತ್ತು ಆಜ್ಞೆಗಳು ದೇವರು ತನ್ನ ಜನರೊಂದಿಗೆ ಮಾಡಿದ ಒಡಂಬಡಿಕೆಗೆ ಸಾಕ್ಷಿಯಾಗಿವೆ ಅಥವಾ ಆಧಾರವಾಗಿವೆ ಎನ್ನುವ ಸತ್ಯಕ್ಕೆ ಇದು ಸೂಚನೆಯಾಗಿರುತ್ತದೆ. “ಒಡಂಬಡಿಕೆಯ ಧರ್ಮಶಾಸ್ತ್ರ” ಎಂಬುದಾಗಿಯೂ ಇದನ್ನು ಅನುವಾದ ಮಾಡಿದ್ದಾರೆ.

(ಈ ಪದಗಳನ್ನು ಸಹ ನೋಡಿರಿ : ಮಂಜೂಷ, ಒಡಂಬಡಿಕೆ, ದೋಷ ಪರಿಹಾರ, ಪರಿಶುದ್ಧ ಸ್ಥಳ, ಸಾಕ್ಷಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H727, H1285, H3068

ಒಡೆಯ, ಒಡೆಯರು, ಕರ್ತನು, ಯಜಮಾನ, ಯಜಮಾನರು, ಅಯ್ಯಾ, ಸ್ವಾಮಿಗಳು

ಪದದ ಅರ್ಥವಿವರಣೆ:

“ಒಡೆಯ” ಎನ್ನುವ ಪದವು ಇತರ ಜನರ ಮೇಲೆ ಅಧಿಕಾರವನ್ನು ಅಥವಾ ಒಡೆತನವನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

  • ಈ ಪದವನ್ನು ಕೆಲವೊಂದುಸಲ ಯೇಸುವನ್ನು ಸೂಚಿಸಿದಾಗ ಅಥವಾ ಅನೇಕ ದಾಸದಾಸಿಯರನ್ನು ಇಟ್ಟುಕೊಂಡ ಒಬ್ಬ ವ್ಯಕ್ತಿಯನ್ನು ಸೂಚಿಸಿದಾಗ “ಯಜಮಾನ” ಎಂಬುದಾಗಿ ಅನುವಾದ ಮಾಡಿದ್ದಾರೆ,
  • ಕೆಲವೊಂದು ಆಂಗ್ಲ ಭಾಷೆಯ ಅನುವಾದಗಳಲ್ಲಿ ಈ ಪದವನ್ನು ಉನ್ನತ ಸ್ಥಾನದಲ್ಲಿರುವ ಒಬ್ಬರನ್ನು ಸೌಮ್ಯವಾಗಿ ಸೂಚಿಸುವ ಸಂದರ್ಭಗಳನ್ನು “ಅಯ್ಯಾ” ಎಂಬುದಾಗಿ ಉಪಯೋಗಿಸಿದ್ದಾರೆ.

ಆಂಗ್ಲ ಭಾಷೆಯಲ್ಲಿ "ಒಡೆಯರು" (ಲಾರ್ಡ್) ಎನ್ನುವ ಪದದಲ್ಲಿ ಮೊದಲನೇ ಅಕ್ಷರವು ದೊಡ್ಡದಾಗಿದ್ದರೆ, ಅದು ಖಂಡಿತವಾಗಿ ದೇವರನ್ನೇ ಸೂಚಿಸುತ್ತಿದೆ ಎಂದರ್ಥ. (ಏನೇಯಾಗಲಿ, ಯಾರಾದರೊಬ್ಬರನ್ನು ಸೂಚಿಸುವುದಕ್ಕೆ ಉಪಯೋಗಿಸಿದರೆ ಅಥವಾ ವಾಕ್ಯದ ಆರಂಭದಲ್ಲಿ ಈ ಪದವನ್ನು ಉಪಯೋಗಿಸಿದಾಗ ಮೊದಲನೇ ಅಕ್ಷರವು ದೊಡ್ಡದಾಗಿದರೆ, ಅದಕ್ಕೆ “ಅಯ್ಯಾ” ಅಥವಾ “ಯಜಮಾನರು” ಎಂದು ಅರ್ಥವನ್ನು ಹೊಂದಿರುತ್ತದೆಯೆಂದು ಗಮನಿಸಿ.)

  • ಹಳೇ ಒಡಂಬಡಿಕೆಯಲ್ಲಿ “ಕರ್ತನಾದ ಸರ್ವಶಕ್ತ ದೇವರು” ಅಥವಾ “ಕರ್ತನಾದ ಯೆಹೋವ” ಅಥವಾ “ಯೆಹೋವನೇ ನಮ್ಮ ಕರ್ತನು” ಎನ್ನುವ ಮಾತುಗಳ ಹಾಗೆಯೇ ಈ ಪದವು ಉಪಯೋಗಿಸಲ್ಪಟ್ಟಿದೆ.
  • ಹೊಸ ಒಡಂಬಡಿಕೆಯಲ್ಲಿ “ಕರ್ತನಾದ ಯೇಸು” ಮತ್ತು “ಕರ್ತನಾದ ಯೇಸು ಕ್ರಿಸ್ತ” ಎಂದು ಅನೇಕ ಮಾತುಗಳಲ್ಲಿ ಅಪೊಸ್ತಲರು ಈ ಪದವನ್ನು ಉಪಯೋಗಿಸಿದ್ದಾರೆ, ಇದು ಯೇಸು ದೇವರೆಂದು ತಿಳಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿರುವ “ಕರ್ತನು” ಎನ್ನುವ ಪದವು ಕೂಡ ದೇವರನ್ನು ಸೂಚಿಸುವುದಕ್ಕೆ ನೇರವಾಗಿ ಉಪಯೋಗಿಸಿದ್ದಾರೆ, ವಿಶೇಷವಾಗಿ ಹಳೇ ಒಡಂಬಡಿಕೆಯಿಂದ ತೆಗೆದುಕೊಂಡಿರುವ ಲೇಖನ ಭಾಗಗಳಲ್ಲಿ ಉಪಯೋಗಿಸಿದ್ದಾರೆ. ಉದಾಹರಣೆಗೆ, “ಯೆಹೋವನ ಹೆಸರಿನ ಮೇಲೆ ಬರುವವನು ಆಶೀರ್ವಾದ ಹೊಂದಿದ್ದಾನೆ” ಎಂದು ಹಳೇ ಒಡಂಬಡಿಕೆಯ ವಾಕ್ಯದಲ್ಲಿದೆ ಮತ್ತು “ಕರ್ತನ ಹೆಸರಿನಲ್ಲಿ ಬರುವವನು ಆಶೀರ್ವಾದ ಹೊಂದಿದ್ದಾನೆ” ಎಂದು ಹೊಸ ಒಡಂಬಡಿಕೆಯ ವಾಕ್ಯದಲ್ಲಿದೆ.
  • ಯು ಎಲ್ ಟಿ ಮತ್ತು ಯು ಎಸ್ ಟಿ ಯಲ್ಲಿ “ಕರ್ತ” ಎನ್ನುವ ಬಿರುದನ್ನು “ಯಜಮಾನ” ಎಂದು ಅರ್ಥ ಬರುವ ಇಬ್ರಿ ಮತ್ತು ಗ್ರೀಕ್ ಪದಗಳನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸಿರುತ್ತಾರೆ. ದೇವರ ನಾಮವಾಗಿರುವ ಯೆಹೋವ ಎನ್ನುವ ಹೆಸರನ್ನು ಅನುವಾದ ಮಾಡುವುದಕ್ಕೆ ಇದನ್ನು ಉಪಯೋಗಿಸಲಿಲ್ಲ, ಆದರೆ ಅನೇಕ ಅನುವಾದಗಳಲ್ಲಿ ಹಾಗೆಯೇ ಮಾಡಿದ್ದಾರೆ.
  • ಕೆಲವೊಂದು ಭಾಷೆಗಳಲ್ಲಿ “ಕರ್ತ” ಎನ್ನುವ ಪದವನ್ನು “ಯಜಮಾನ” ಅಥವಾ “ಪಾಲಕ” ಅಥವಾ ಸರ್ವೋಚ್ಚ ಪಾಲನೆಯನ್ನು ಮಾಡುವ ಅಥವಾ ಮಾಲಿಕತ್ವವನ್ನು ತೋರಿಸುವ ಬೇರೊಂದು ಪದವನ್ನಿಟ್ಟು ಅನುವಾದ ಮಾಡಿದ್ದಾರೆ.
  • ಕೆಲವೊಂದು ಸೂಕ್ತವಾದ ಸಂದರ್ಭಗಳಲ್ಲಿ ಈ ಪದವು ದೇವರನ್ನು ಮಾತ್ರವೇ ಸೂಚಿಸುತ್ತದೆಯೆಂದು ಓದುಗಾರರಿಗೆ ಸ್ಪಷ್ಟವಾಗಿ ಹೇಳುವುದಕ್ಕೆ ಅನೇಕವಾದ ಅನುವಾದಗಳಲ್ಲಿ ಈ ಪದದಲ್ಲಿನ ಮೊದಲನೇ ಅಕ್ಷರವನ್ನು ದೊಡ್ಡದಾಗಿಟ್ಟಿರುತ್ತಾರೆ.
  • ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲ್ಪಟ್ಟಿರುವ ಹಳೇ ಒಡಂಬಡಿಕೆಯ ಲೇಖನ ಭಾಗಗಳಲ್ಲಿ “ಕರ್ತನಾದ ದೇವರು” ಎನ್ನುವ ಪದವನ್ನು ಉಪಯೋಗಿಸಿದ್ದಾರೆ, ಇದು ಸ್ಪಷ್ಟವಾಗಿ ದೇವರನ್ನು ಮಾತ್ರವೇ ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಈ ಪದವು ದಾಸದಾಸಿಯರನ್ನು ಇಟ್ಟುಕೊಂಡಿರುವ ಒಬ್ಬ ವ್ಯಕ್ತಿಯನ್ನು ಸೂಚಿಸಿದಾಗ, “ಯಜಮಾನ” ಎನ್ನುವ ಪದಕ್ಕೆ ಸಮಾನವಾಗಿ ಅನುವಾದ ಮಾಡಬಹುದು. ಒಬ್ಬ ಕೆಲಸಗಾರನು ತನ್ನ ಮೇಲಾಧಿಕಾರಿಯನ್ನು ಸೂಚಿಸುವುದಕ್ಕೆ ಈ ಪದವನ್ನೇ ಬಳಸುತ್ತಾನೆ.
  • ಯೇಸುವನ್ನು ಸೂಚಿಸಿದಾಗ, ಬೋಧಿಸುವ ಒಬ್ಬ ವ್ಯಕ್ತಿ ಧರ್ಮೋಪದೇಶಕರಾಗಿದ್ದ ಸಂದರ್ಭದಲ್ಲಿ, ಇದನ್ನು ಆ ಧರ್ಮೋಪದೇಶಕನನ್ನು ಗೌರವಪೂರ್ವಕವಾಗಿ ಸೂಚಿಸುವುದಕ್ಕೆ “ಬೋಧಕನು” ಎಂಬುದಾಗಿ ಅನುವಾದ ಮಾಡಬಹುದು.
  • ಒಬ್ಬ ವ್ಯಕ್ತಿ ಯೇಸುವಿನ ಕುರಿತಾಗಿ ಗೊತ್ತಿಲ್ಲದೇ ಆತನನ್ನು ಸೂಚಿಸುತ್ತಿದ್ದಾನೆಂದರೆ “ಯಜಮಾನ” ಎನ್ನುವ ಪದವನ್ನು “ಅಯ್ಯಾ” ಎಂದು ಗೌರವಪೂರ್ವಕವಾಗಿ ಅನುವಾದ ಮಾಡಬಹುದು. ಒಬ್ಬ ಮನುಷ್ಯಅನನ್ನು ಸುಸಂಸ್ಕೃತವಾಗಿ ಕರೆಯುವ ವಿಧಾನದಲ್ಲಿ ಬೇರೊಂದು ಸಂದರ್ಭಗಳಲ್ಲಿ ಈ ಅನುವಾದವನ್ನು ಉಪಯೋಗಿಸುತ್ತಾರೆ.
  • ತಂದೆಯಾದ ದೇವರನ್ನಾಗಲಿ ಅಥವಾ ಯೇಸುವನ್ನಾಗಲಿ ಸೂಚಿಸಿದಾಗ, ಈ ಪದವು ಒಂದು ಬಿರುದಾಗಿ ಪರಿಗಣಿಸಲಾಗುತ್ತದೆ, ಆಂಗ್ಲ ಭಾಷೆಯಲ್ಲಿ "Lord" (ಲಾರ್ಡ್) ಎನ್ನುವ ಪದದಲ್ಲಿ ಮೊದಲನೇ ಅಕ್ಷರವು ದೊಡ್ಡದಾಗಿ ಬರೆಯಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ದೇವರು, ಯೇಸು, ಪಾಲಕ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 25:05 ಆದರೆ ಯೇಸು ಲೇಖನಗಳನ್ನು ಕ್ರೋಡೀಕರಿಸುತ್ತಾ ಸೈತಾನನಿಗೆ ಉತ್ತರ ಕೊಟ್ಟನು. “ದೇವರ ವಾಕ್ಯದಲ್ಲಿ, “ನಿಮ್ಮ ದೇವರಾದ ___ ಕರ್ತನನ್ನು ___ ಪರೀಕ್ಷೆ ಮಾಡಬೇಡಿರಿ” ಎಂದು ಆತನು ತನ್ನ ಜನರಿಗೆ ಆಜ್ಞಾಪಿಸಿದ್ದಾನೆ.
  • 25:07 “ಸೈತಾನ್, ನನ್ನಿಂದ ಹೊರಟು ಹೋಗು! ದೇವರ ವಾಕ್ಯದಲ್ಲಿ “ನಿಮ್ಮ ದೇವರಾದ ___ ಕರ್ತನನ್ನು ___ ಮಾತ್ರವೇ ಆರಾಧನೆ ಮಾಡಿರಿ ಮತ್ತು ಆತನನ್ನೇ ಸೇವಿಸಿರಿ” ಎಂದು ಆತನು ತನ್ನ ಜನರಿಗೆ ಆಜ್ಞಾಪಿಸಿದ್ದಾನೆ .
  • 26:03 ಇದು __ ಕರ್ತನ ___ ಶುಭ ವರ್ಷವಾಗಿರುತ್ತದೆ.
  • 27:02 “___ ಕರ್ತನಾದ __ ನಿನ್ನ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ, ಪೂರ್ಣ ಆತ್ಮದಿಂದಲೂ, ಪೂರ್ಣ ಬಲದಿಂದಲೂ ಮತ್ತು ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂದು ದೇವರ ಧರ್ಮಶಾಸ್ತ್ರ ಹೇಳುತ್ತಿದೆಯೆಂದು ಧರ್ಮಶಾಸ್ತ್ರದಲ್ಲಿ ನಿಪುಣನು ಉತ್ತರಿಸಿದನು.
  • 31:05 “___ ಬೋಧಕನೇ ___ ನಿನೇಯಾಗಿದ್ದರೆ, ನೀರಿನ ಮೇಲೆ ನಡೆದು ನಿನ್ನ ಹತ್ತಿರಕ್ಕೆ ಬರಲು ಆಜ್ಞಾಪಿಸು” ಎಂದು ಪೇತ್ರನು ಯೇಸುವಿಗೆ ಹೇಳಿದನು.
  • 43:09 “ದೇವರು ಯೇಸುವನ್ನು __ ಕರ್ತನನ್ನಾಗಿಯೂ ___ ಮತ್ತು ಮೆಸ್ಸೀಯನನ್ನಾಗಿಯೂ ಮಾಡಿದ್ದಾನೆಂದು ಖಂಡಿತವಾಗಿ ತಿಳಿದುಕೊಳ್ಳಿರಿ!”
  • 47:03 ಈ ದೆವ್ವ ಹೇಳಿದ್ದಕ್ಕೆ ಅರ್ಥವೇನೆಂದರೆ, ಅದು ಜನರಿಗಾಗಿ ಭವಿಷ್ಯತ್ತನ್ನು ಹೇಳಿದೆ, ಅವಳು ಕಣಿ ಹೇಳುತ್ತಿರುವದರಿಂದ ತನ್ನ ___ ಯಜಮಾನರಿಗೆ __ ಬಹು ಆದಾಯವಾಗುತ್ತಿತ್ತು.
  • 47:11 “___ ಯಜಮಾನನಾದ ___ ಯೇಸುವಿನಲ್ಲಿ ನಂಬಿಕೆಯಿಡು, ನೀನು ಮತ್ತು ನಿನ್ನ ಕುಟುಂಬವು ರಕ್ಷಿಸಲ್ಪಡುವುದು” ಎಂದು ಪೌಲನು ಉತ್ತರಕೊಟ್ಟನು.

ಪದ ಡೇಟಾ:

  • Strong's: H113, H136, H1167, H1376, H4756, H7980, H8323, G203, G634, G962, G1203, G2962

ಒಪ್ಪಿಕೋ, ಒಪ್ಪಿಕೊಂಡಿವೆ, ಒಪ್ಪಿಸುತ್ತದೆ, ಒಪ್ಪಿಕೊಳ್ಳುವಿಕೆ

ಪದದ ಅರ್ಥವಿವರಣೆ:

ಒಪ್ಪಿಕೋ ಎನ್ನುವ ಪದಕ್ಕೆ ಸತ್ಯವಾದದ್ದನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ದೃಡೀಕರಿಸುವುದು ಎಂದರ್ಥ. “ಒಪ್ಪಿಕೊಳ್ಳುವಿಕೆ” ಎನ್ನುವುದು ಸತ್ಯವಾದ ವಿಷಯವನ್ನು ಒಪ್ಪಿಕೊಳ್ಳುವುದು ಅಥವಾ ಅದನ್ನು ವ್ಯಾಖ್ಯೆಯನ್ನಾಗಿ ಹೇಳುವುದು.

  • “ಒಪಿಕೋ” ಎನ್ನುವ ಪದವು ದೇವರ ಕುರಿತಾದ ಸತ್ಯವನ್ನು ಧೈರ್ಯವಾಗಿ ಹೇಳುವುದನ್ನು ಸೂಚಿಸುತ್ತದೆ. ನಾವು ಪಾಪಿಗಳೆಂದು ಗ್ರಹಿಸುವುದನ್ನು ಅಥವಾ ಒಪ್ಪಿಕೊಳ್ಳುವುದನ್ನೂ ಸೂಚಿಸುತ್ತದೆ.
  • ಜನರು ತಮ್ಮ ಪಾಪಗಳನ್ನು ದೇವರ ಬಳಿ ಒಪ್ಪಿಕೊಂಡರೆ, ಆತನು ಅವರನ್ನು ಕ್ಷಮಿಸುತ್ತಾನೆಂದು ಸತ್ಯವೇದವು ಹೇಳುತ್ತಿದೆ.
  • ವಿಶ್ವಾಸಿಗಳು ತಮ್ಮ ಪಾಪಗಳನ್ನು ಒಬ್ಬರಲ್ಲೊಬ್ಬರು ಒಪ್ಪಿಕೊಂಡಾಗ, ಇದು ಆತ್ಮೀಕವಾದ ಸ್ವಸ್ಥತೆಯನ್ನು ತೆಗೆದುಕೊಂಡು ಬರುವುದೆಂದು ಅಪೊಸ್ತಲನಾದ ಯಾಕೋಬನು ತನ್ನ ಪತ್ರಿಕೆಯಲ್ಲಿ ಬರೆದಿದ್ದಾನೆ.
  • ಯೇಸು ಕ್ರಿಸ್ತ ಒಡೆಯನೆಂದು ಒಂದಾನೊಂದು ದಿನ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗುತ್ತದೆಯೆಂದು ಅಥವಾ ಪ್ರಕಟಿಸಬೇಕಾಗುತ್ತದೆಯೆಂದು ಅಪೊಸ್ತಲನಾದ ಪೌಲನು ಫಿಲಿಪ್ಪಿದವರಿಗೆ ಬರೆದಿದ್ದಾನೆ.
  • ಜನರು ಯೇಸು ಒಡೆಯನೆಂದು ಮತ್ತು ದೇವರು ಆತನನ್ನು ಮರಣದಿಂದ ಎಬ್ಬಿಸಿದ್ದಾರೆಂದು ನಂಬಿ ಒಪ್ಪಿಕೊಳ್ಳುವುದಾದರೆ, ಅವರು ರಕ್ಷಿಸಲ್ಪಡುತ್ತಾರೆಂದು ಪೌಲನು ಕೂಡ ಹೇಳಿದ್ದಾನೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಒಪ್ಪಿಕೋ” ಎನ್ನುವ ಪದವನ್ನು “ಅರಿಕೆ” ಅಥವಾ “ಸಾಕ್ಷಿ ಕೊಡು” ಅಥವಾ “ಘೋಷಣೆ ಮಾಡು” ಅಥವಾ “ತಿಳಿಸು” ಅಥವಾ “ದೃಢೀಕರಿಸು” ಎಂದೂ ಅನುವಾದ ಮಾಡಬಹುದು.
  • “ಒಪ್ಪಿಕೊಳ್ಳುವಿಕೆ” ಎನ್ನುವ ಪದವನ್ನು “ಘೋಷಣೆ ಮಾಡು” ಅಥವಾ “ಸಾಕ್ಷಿ ಕೊಡು” ಅಥವಾ “ನಾವು ನಂಬುವುದನ್ನು ವ್ಯಾಖ್ಯಾನಿಸು” ಅಥವಾ “ಪಾಪವನ್ನು ಅರಿಕೆ ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ಸಾಕ್ಷಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3034, H8426, G1843, G3670, G3671

ಒಳ್ಳೇಯದು, ಒಳ್ಳೇತನ

ಪದದ ಅರ್ಥವಿವರಣೆ:

“ಒಳ್ಳೇಯದು” ಎನ್ನುವ ಪದಕ್ಕೆ ಸಂದರ್ಭಾನುಸಾರವಾಗಿ ಎರಡು ವಿಭಿನ್ನ ಅರ್ಥಗಳು ಇರುತ್ತವೆ. ಈ ಎರಡು ವಿಭಿನ್ನವಾದ ಅರ್ಥಗಳನ್ನು ಅನುವಾದ ಮಾಡುವುದಕ್ಕೆ ಅನೇಕ ಭಾಷೆಗಳು ವಿವಿಧವಾದ ಪದಗಳನ್ನು ಉಪಯೋಗಿಸುತ್ತವೆ.

ಸಾಧಾರಣವಾಗಿ ದೇವರ ನಡತೆ, ಉದ್ದೇಶಗಳು ಮತ್ತು ಚಿತ್ತಗಳಿಗೆ ಇದು ಸರಿಯಾದ ಪ್ರತಿಯೊಂದು ಒಳ್ಳೇಯದು.

  • “ಒಳ್ಳೇಯದಾದ” ಪ್ರತಿಯೊಂದು ಮೆಚ್ಚಿಸಬಹುದು, ಶ್ರೇಷ್ಠವಾಗಿರಬಹುದು, ಸಹಾಯಕರವಾಗಿರಬಹುದು, ಸೂಕ್ತವಾಗಿರಬಹುದು, ಪ್ರಯೋಜನಕರವಾಗಿರಬಹುದು ಅಥವಾ ನೈತಿಕವಾಗಿ ಸರಿಯಾಗಿರಬಹುದು.
  • ಒಬ್ಬ ವ್ಯಕ್ತಿ ತಾನು ಮಾಡುವ ಕೆಲಸದಲ್ಲಿ ಅಥವಾ ಉದ್ಯೋಗದಲ್ಲಿ ನೈಪುಣ್ಯತೆಯಿದ್ದು ಮಾಡುವ ಕೆಲಸಗಳಲ್ಲಿ “ಒಳ್ಳೇಯ” ವ್ಯಕ್ತಿಯಾಗಿರಬಹುದು, ಇವರನ್ನು “ಒಳ್ಳೇಯ ರೈತ” ಎಂದು ಕರೆಯಬಹುದು.
  • ಸತ್ಯವೇದದಲ್ಲಿ “ಒಳ್ಳೇಯದು” ಎನ್ನುವದಕ್ಕೆ ಸಾಧಾರಣ ಅರ್ಥವು ಅನೇಕಸಾರಿ “ಕೆಟ್ಟದ್ದು” ಎನ್ನುವುದಕ್ಕೆ ವಿರುದ್ಧಾತ್ಮಕ ಪದವಾಗಿರುತ್ತದೆ.
  • “ಒಳ್ಳೆಯತನ” ಎನ್ನುವ ಪದವು ಸಹಜವಾಗಿ ನೈತಿಕವಾಗಿ ಒಳ್ಳೇಯದಾಗಿರುವುದನ್ನು ಅಥವಾ ಆಲೋಚನೆಗಳಲ್ಲಿ ಮತ್ತು ಕ್ರಿಯೆಗಳಲ್ಲಿ ನೀತಿಯಿಂದ ಇರುವುದನ್ನು ಸೂಚಿಸುತ್ತದೆ.
  • ದೇವರ ಒಳ್ಳೆಯತನ ಎನ್ನುವುದು ದೇವರು ತನ್ನ ಜನರಿಗೆ ಒಳ್ಳೇಯ ಮತ್ತು ಪ್ರಯೋಜನಕರವಾದವುಗಳನ್ನು ಕೊಡುವುದರ ಮೂಲಕ ಆತನು ಅವರನ್ನು ಹೇಗೆ ಆಶೀರ್ವಾದ ಮಾಡುತ್ತಿದ್ದಾನೆನ್ನುವುದನ್ನು ಸೂಚಿಸುತ್ತದೆ. ಇದು ಆತನ ನೈತಿಕತೆಯ ಪರಿಪೂರ್ಣತೆಯನ್ನು ಕೂಡ ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಅನುವಾದ ಭಾಷೆಯಲ್ಲಿ “ಒಳ್ಳೇಯ” ಎನ್ನುವ ಪದಕ್ಕೆ ಸಾಧಾರಣ ಪದವನ್ನು ಈ ಸಾಧಾರಣ ಅರ್ಥವು ಸರಿಯಾಗಿ ಸ್ವಾಭಾವಿಕವಾಗಿ ಬಂದಾಗ ಉಪಯೋಗಿಸಬಹುದು, ವಿಶೇಷವಾಗಿ ಕೆಟ್ಟದ್ದು ಎನ್ನುವುದಕ್ಕೆ ವಿರುದ್ಧವಾಗಿ ಬರುವ ಸಂದರ್ಭಗಳಲ್ಲಿ ಚೆನ್ನಾಗಿ ಬಳಸಬಹುದು.
  • ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದಯೆ” ಅಥವಾ “ಅತ್ಯುತ್ತಮ” ಅಥವಾ “ದೇವರನ್ನು ಮೆಚ್ಚಿಸುವುದು” ಅಥವಾ “ನೀತಿವಂತ” ಅಥವಾ “ನೈತಿಕವಾದ ನಡತೆ” ಅಥವಾ “ಪ್ರಯೋಜನಕರ” ಎನ್ನುವ ಪದಗಳನ್ನು ಕೂಡ ಒಳಗೊಂಡಿರುತ್ತದೆ.
  • “ಒಳ್ಳೇಯ ನೆಲ” ಎನ್ನುವ ಮಾತನ್ನು “ಫಲವತ್ತಾದ ಭೂಮಿ” ಅಥವಾ “ಉತ್ಪಾದಕ ಭೂಮಿ” ಎಂದೂ ಅನುವಾದ ಮಾಡಬಹುದು; “ಒಳ್ಳೇಯ ಬೆಳೆ” ಎನ್ನುವ ಮಾತನ್ನು “ಸಮೃದ್ಧವಾದ ಸುಗ್ಗಿ” ಅಥವಾ “ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು” ಎಂದೂ ಅನುವಾದ ಮಾಡಬಹುದು.
  • “ಅವರಿಗೆ ಒಳ್ಳೆದನ್ನು ಮಾಡು” ಎನ್ನುವ ಮಾತು ಇತರರಿಗೆ ಪ್ರಯೋಜನಕರವಾದದ್ದು ಏನಾದರೊಂದನ್ನು ಮಾಡು ಎಂದರ್ಥ ಮತ್ತು ಇದನ್ನು “ಅವರಿಗೆ ದಯೆ ತೋರಿಸು” ಅಥವಾ “ಸಹಾಯ ಮಾಡು” ಅಥವಾ ಒಬ್ಬ ವ್ಯಕ್ತಿಗೆ “ಪ್ರಯೋಜನ” ಮಾಡು ಎಂದೂ ಅನುವಾದ ಮಾಡಬಹುದು.

“ಸಬ್ಬತ್ ದಿನದಂದು ಒಳ್ಳೆದನ್ನು ಮಾಡು” ಎನ್ನುವದಕ್ಕೆ “ಸಬ್ಬತ್ ದಿನದಂದು ಇತರರಿಗೆ ಸಹಾಯವಾಗುವ ಕಾರ್ಯಗಳನ್ನು ಮಾಡು” ಎಂದರ್ಥ.

  • ಸಂದರ್ಭಾನುಸಾರವಾಗಿ “ಒಳ್ಳೆಯತನ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಲ್ಲಿ “ಆಶೀರ್ವಾದ” ಅಥವಾ “ದಯಾಳುತನ” ಅಥವಾ “ನೈತಿಕ ಪರಿಪೂರ್ಣತೆ” ಅಥವಾ “ನೀತಿ” ಅಥವಾ “ಪವಿತ್ರತೆ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕೆಟ್ಟ, ಪರಿಶುದ್ಧ, ಪ್ರಯೋಜನ, ನೀತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 01:04 ದೇವರು ಮಾಡಿದ ಸೃಷ್ಟಿಯನ್ನು ___ ಒಳ್ಳೇಯದೆಂದು __ ಆತನು ನೋಡಿದನು.
  • 01:11 ___ ಒಳ್ಳೇಯ ___ ಮತ್ತು ಕೆಟ್ಟದ್ದು ಎನ್ನುವ ಜ್ಞಾನವುಳ್ಳ ವೃಕ್ಷವನ್ನು ದೇವರು ಸ್ಥಾಪಿಸಿದರು.
  • 01:12 “ಮನುಷ್ಯನು ಒಬ್ಬಂಟಿಗನಾಗಿರುವುದು ___ ಒಳ್ಳೇಯದಲ್ಲ ___” ಎಂದು ದೇವರು ಹೇಳಿದನು.
  • 02:04 “ನೀವು ಇದನ್ನು ತಿಂದ ತಕ್ಷಣವೇ, ನೀವು ದೇವರಂತೆ ಆಗುವಿರಿಯೆಂದು ಮತ್ತು ಆತನಂತೆಯೇ ನಿಮಗೂ ___ ಒಳ್ಳೇಯ ___ ಮತ್ತು ಕೆಟ್ಟ ಸಂಗತಿಗಳ ಅರಿವು ಬರುತ್ತದೆಯೆಂದು ದೇವರಿಗೆ ಚೆನ್ನಾಗಿ ಗೊತ್ತು.
  • 08:12 “ನೀವು ನನ್ನನ್ನು ಗುಲಾಮನನ್ನಾಗಿ ಮಾರಿದಾಗ ನೀವು ಕೆಟ್ಟ ಕಾರ್ಯವನ್ನು ಮಾಡುವುದಕ್ಕೆ ಪ್ರಯತ್ನಪಟ್ಟಿದ್ದೀರಿ, ಆದರೆ ದೇವರು ಕೆಟ್ಟದ್ದನ್ನು ___ ಒಳ್ಳೇಯದಾಗಿ __ ಉಪಯೋಗಿಸಿಕೊಂಡರು!”
  • 14:15 ಯೆಹೋಶುವನು ___ ಒಳ್ಳೇಯ __ ನಾಯಕನು, ಯಾಕಂದರೆ ಆತನು ದೇವರಿಗೆ ವಿಧೇಯನಾಗಿದ್ದನು ಮತ್ತು ಜನರನ್ನು ನಡೆಸುವುದಕ್ಕೆ ಸಾಮರ್ಥ್ಯವನ್ನು ಹೊಂದಿದ್ದನು.
  • 18:13 ಈ ಅರಸರುಗಳಲ್ಲಿ ಕೆಲವರು ದೇವರನ್ನು ಆರಾಧನೆ ಮಾಡಿ, ನ್ಯಾಯವಾಗಿ ಆಳಿದ ___ ಒಳ್ಳೇಯ ___ ಮನುಷ್ಯರಾಗಿದ್ದರು.
  • 28:01 “ ___ ಒಳ್ಳೇಯ ___ ಬೋಧಕನೇ, ನಿತ್ಯಜೀವವನ್ನು ಪಡೆಯುವದಕ್ಕೆ ನಾನೇನು ಮಾಡಬೇಕು?” “ನನ್ನನ್ನು ಯಾಕೆ __ ಒಳ್ಳೇಯವನೆಂದು ___ ಕರೆಯುತ್ತಾಯಿದ್ದೀಯ? ___ ಒಳ್ಳೇಯವನು ___ ದೇವರು ಒಬ್ಬರೇ ಎಂದು ಯೇಸು ಅವನಿಗೆ ಹೇಳಿದನು.

ಪದ ಡೇಟಾ:

  • Strong's: H117, H145, H155, H202, H239, H410, H1580, H1926, H1935, H2532, H2617, H2623, H2869, H2895, H2896, H2898, H3190, H3191, H3276, H3474, H3788, H3966, H4261, H4399, H5232, H5750, H6287, H6643, H6743, H7075, H7368, H7399, H7443, H7999, H8231, H8232, H8233, H8389, H8458, G14, G15, G18, G19, G515, G744, G865, G979, G1380, G2095, G2097, G2106, G2107, G2108, G2109, G2114, G2115, G2133, G2140, G2162, G2163, G2174, G2293, G2565, G2567, G2570, G2573, G2887, G2986, G3140, G3617, G3776, G4147, G4632, G4674, G4851, G5223, G5224, G5358, G5542, G5543, G5544

ಕಂಚುಕಿಯನು, ಕಂಚುಕಿಯರು

ಪದದ ಅರ್ಥವಿವರಣೆ

“ಕಂಚುಕಿಯ” ಎನ್ನುವ ಪದವು ಅಂಗಚ್ಛೇದನೆ ಮಾಡಿಸಿಕೊಂಡಿರುವ ವ್ಯಕ್ತಿಯನ್ನು ಸೂಚಿಸುತ್ತದೆ. ಸ್ವಲ್ಪ ಕಾಲದ ನಂತರ ಈ ಪದವನ್ನು ಯಾವ ವಿರೂಪತೆ ಇಲ್ಲದ್ದಿದ್ದರು ಪ್ರಭುತ್ವ ಉದ್ಯೋಗಿಗಳನ್ನು ಸೂಚಿಸುವದಕ್ಕೆ ಉಪಯೋಗಿಸುವ ಸಹಜವಾದ ಪದವಾಯಿತು.

  • ಕಂಚುಕಿಯರಲ್ಲಿ ಕೆಲವರು ಜನ್ಮದಿಂದಲ್ಲೇ ಆ ರೀತಿಯಲ್ಲಿದ್ದಾರೆಂದು, ಅದಕ್ಕೆ ಕಾರಣ ಹಾನಿಗೊಳಗಾದ ಲೈಂಗಿಕ ಅಂಗಗಳು ಅಥವಾ ಅವರು ಲೈಂಗಿಕ ಕಾರ್ಯಗಳನ್ನು ಮಾಡುವದಕ್ಕಾಗದ ಅಸಮರ್ಥತೆಯನ್ನು ಹೊಂದಿರುವರೆಂದು ಯೇಸು ಹೇಳಿದ್ದರೆ. ಕೆಲವರು ಕಂಚುಕಿಯರಂತೆ ಬಾಳಲು ಬ್ರಹ್ಮಚರ್ಯ ಜೀವನವನ್ನು ಎನ್ನಿಸಿಕೊಳ್ಳುತ್ತಾರೆ.
  • ಪ್ರಾಚೀನ ಕಾಲದಲ್ಲಿ, ಸ್ತ್ರೀಯರ ನಿವಾಸ ಸ್ಥಳಗಳಿಗೆ ಕಾವಲುಗಾರರಾಗಿ ಇರಲು ಕಂಚುಕಿಯರನ್ನು ಅರಸರು ತಮ್ಮ ಸೇವಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು.
  • ಕಂಚುಕಿಯರಲ್ಲಿ ಕೆಲವರು ಪ್ರಭುತ್ವ ಉದ್ಯೋಗಿಗಳಾಗಿದ್ದರು, ಉದಾಹರಣೆಗೆ ಅಡವಿಯಲ್ಲಿ ಫಿಲಿಪ್ಪನು ಕಂಡ ಇಥಿಯೋಪ್ಯ ದೇಶದ ಕಂಚುಕಿಯನು.

(ಈ ಪದಗಳನ್ನು ಸಹ ನೋಡಿರಿ : ಫಿಲಿಪ್ಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5631, G2134, G2135

ಕನಿಕರ, ಕರುಣೆ

ಪದದ ಅರ್ಥವಿವರಣೆ:

“ಕನಿಕರ” ಎನ್ನುವ ಪದವು ಜನರ ಮೇಲೆ ಅಥವಾ ವಿಶೇಷವಾಗಿ ಶ್ರಮೆಗಳನ್ನು ಅನುಭವಿಸುತ್ತಿರುವವರ ಮೇಲೆ ದಯೆಯನ್ನು ತೋರಿಸುವ ಭಾವನೆಯನ್ನು ಸೂಚಿಸುತ್ತದೆ. “ಕರುಣೆಯುಳ್ಳ” ವ್ಯಕ್ತಿಯು ಇತರ ಜನರ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ.

  • “ಕನಿಕರ” ಎನ್ನುವ ಪದವು ಅಗತ್ಯತೆಯಲ್ಲಿರುವ ಜನರ ಕುರಿತಾಗಿ ಕಾಳಜಿ ಇಡುವುದನ್ನು, ಅವರಿಗೆ ಸಹಾಯ ಮಾಡುವುದಕ್ಕೆ ಕ್ರಿಯೆಯಲ್ಲಿ ಪ್ರೀತಿ ತೋರಿಸುವುದನ್ನು ಸೂಚಿಸುತ್ತದೆ.
  • ದೇವರು ಕರುಣೆಯುಳ್ಳವನು ಎಂದು ಸತ್ಯವೇದ ಹೇಳುತ್ತದೆ, ಅಂದರೆ ಆತನು ಪ್ರೀತಿಯನ್ನು ಮತ್ತು ಕನಿಕರವನ್ನು ಹೊಂದಿರುವಾತನು ಎಂದರ್ಥ.
  • ಪೌಲನು ಕೊಲೊಸ್ಸದವರಿಗೆ ಬರೆದ ಪತ್ರಿಕೆಯಲ್ಲಿ “ಕನಿಕರವನ್ನು ಧರಿಸಿಕೊಳ್ಳಿರಿ” ಎಂದು ಅವರಿಗೆ ಬರೆದಿದ್ದಾನೆ. ಅಗತ್ಯತೆಯಲ್ಲಿರುವ ಜನರಿಗೆ ಸಹಾಯ ಮಾಡಬೇಕೆಂದು ಮತ್ತು ಜನರ ಕುರಿತಾಗಿ ಕಾಳಜಿ ವಹಿಸಬೇಕೆಂದು ಆತನು ಅವರಿಗೆ ಆಜ್ಞಾಪಿಸಿದ್ದಾನೆ.

ಅನುವಾದ ಸಲಹೆಗಳು:

  • “ಕನಿಕರ” ಎನ್ನುವ ಪದಕ್ಕೆ “ಅತ್ಯಂತ ಕರುಣೆ” ಎಂದರ್ಥವಾಗಿರುತ್ತದೆ. ಈ ಪದಕ್ಕೆ “ಕರುಣೆ” ಅಥವಾ “ಸಹಾನುಭೂತಿ” ಎನ್ನುವ ಅರ್ಥಗಳು ಇವೆ. ಇತರ ಭಾಷೆಗಳು ಈ ಅರ್ಥಗಳು ಬರುವ ತಮ್ಮ ಸ್ವಂತ ಪದಗಳನ್ನು ಒಳಗೊಂಡಿರಬಹುದು.
  • “ಕನಿಕರ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಆಳವಾದ ಆರೈಕೆ” ಅಥವಾ “ಸಹಾಯ ಮಾಡುವ ಕರುಣೆ” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
  • “ಕರುಣೆ” ಎನ್ನುವ ಪದಕ್ಕೆ “ಇತರರನ್ನು ನೋಡಿಕೊಳ್ಳುವುದು ಮತ್ತು ಸಹಾಯ ಮಾಡುವುದು” ಅಥವಾ “ಆಳವಾಗಿ ಪ್ರೀತಿಸುವುದು ಮತ್ತು ಕರುಣೆ ತೋರಿಸುವುದು” ಎನ್ನುವ ಮಾತುಗಳನ್ನು ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2550, H7349, H7355, H7356, G1653, G3356, G3627, G4697, G4834, G4835

ಕಪಟಿ, ಕಪಟಿಗಳು, ಕಾಪಟ್ಯ

ಪದದ ಅರ್ಥವಿವರಣೆ:

“ಕಪಟಿ” ಎನ್ನುವ ಪದವು ನೀತಿವಂತನೆಂದು ಕಾಣಿಸಿಕೊಳ್ಳುವುದಕ್ಕೆ ಕಾರ್ಯಗಳನ್ನು ಮಾಡುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ, ಆದರೆ ಇಂಥವರು ರಹಸ್ಯವಾಗಿ ದುಷ್ಟ ಕಾರ್ಯಗಳನ್ನು ಮಾಡುತ್ತಿರುತ್ತಾರೆ. “ಕಾಪಟ್ಯ” ಎನ್ನುವ ಪದವು ಒಬ್ಬ ವ್ಯಕ್ತಿ ನೀತಿವಂತನೆಂದು ಆಲೋಚನೆ ಮಾಡುವಷ್ಟು ರೀತಿಯಲ್ಲಿ ಜನರನ್ನು ಮೋಸಗೊಳಿಸುವ ನಡತೆಯನ್ನು ಸೂಚಿಸುತ್ತದೆ.

  • ಕಪಟಿಗಳು ಒಳ್ಳೇಯ ಕಾರ್ಯಗಳು ಮಾಡುತ್ತಾ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ, ಇದರಿಂದ ಜನರು ಅವರನ್ನು ಒಳ್ಳೇಯ ಜನರು ಎಂಬುದಾಗಿ ಆಲೋಚನೆ ಮಾಡುತ್ತಾರೆ.
  • ಅನೇಕಬಾರಿ ಕಪಟಿ ತಾನು ಮಾಡುವ ಪಾಪದ ಕಾರ್ಯಗಳನ್ನು ಇತರರು ಮಾಡುತ್ತಿದ್ದರೇ, ಅವರನ್ನು ವಿಮರ್ಶಿಸುತ್ತಾ ಇರುತ್ತಾನೆ.
  • ಯೇಸು ಫರಿಸಾಯರನ್ನು ಕಪಟಿಗಳು ಎಂದು ಕರೆದಿದ್ದಾನೆ ಯಾಕಂದರೆ ಅವರು ಭಕ್ತಿಪೂರ್ವಕವಾಗಿ ಇದ್ದಂತೆ ಕೆಲವೊಂದು ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು ಮತ್ತು ಕೆಲವೊಂದು ಆಹಾರಗಳನ್ನು ಮಾತ್ರ ತಿನ್ನುತ್ತಿದ್ದರು, ಆದರೆ ಅವರು ಜನರ ಮೇಲೆ ದಯೆಯನ್ನು ಅಥವ ಒಳ್ಳೇಯತನವನ್ನು ತೋರಿಸುತ್ತಿರಲಿಲ್ಲ.
  • ಕಪಟಿಗಳು ಬೇರೆಯವರಲ್ಲಿ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಇರುತ್ತಾರೆ, ಆದರೆ ಅವನ ತಪ್ಪುಗಳನ್ನು ಮಾತ್ರ ಸರಿಪಡಿಸಿಕೊಳ್ಳುವುದಿಲ್ಲ.

ಅನುವಾದ ಸಲಹೆಗಳು:

  • ಕೆಲವೊಂದು ಭಾಷೆಗಳಲ್ಲಿ “ಎರಡು ಮುಖಗಳಿರುವವನು” ಎನ್ನುವ ಮಾತು ಇರುತ್ತದೆ, ಇದು ಕಪಟಿಯನ್ನು ಅಥವಾ ಕಪಟಿಯ ಕ್ರಿಯೆಗಳನ್ನು ಸೂಚಿಸುತ್ತದೆ.
  • “ಕಪಟಿ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಂಚನೆ” ಅಥವಾ “ನಟನೆ” ಅಥವಾ “ಅಹಂಕಾರಿ, ಮೋಸ ಮಾಡುವ ವ್ಯಕ್ತಿ” ಎಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಕಾಪಟ್ಯ” ಎನ್ನುವ ಪದವನ್ನು “ಮೋಸ” ಅಥವಾ “ನಕಲಿ ಕ್ರಿಯೆಗಳು” ಅಥವಾ “ನಟಿಸುವುದು” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H120, H2611, H2612, G505, G5272, G5273

ಕರುಣೆ, ಕರುಣಾಮಯ

ಪದದ ಅರ್ಥವಿವರಣೆ:

“ಕರುಣೆ’ ಮತ್ತು “ಕರುಣಾಮಯ” ಎನ್ನುವ ಎರಡು ಪದಗಳು ಅಗತ್ಯತೆಯಲ್ಲಿರುವ ಜನರಿಗೆ ಸಹಾಯ ಮಾಡುವುದನ್ನು ಸೂಚಿಸುತ್ತದೆ, ವಿಶೇಷವಾಗಿ ಅಗತ್ಯತೆಯಲ್ಲಿರುವವರು ತುಂಬಾ ದೀನ ಸ್ಥಿತಿಯಲ್ಲಿ ಅಥವಾ ಕೆಳ ಮಟ್ಟದಲ್ಲಿ ಇದ್ದಾಗ ಮಾಡುವ ಸಹಾಯವನ್ನು ಸೂಚಿಸುತ್ತದೆ.

  • “ಕರುಣೆ” ಎನ್ನುವ ಪದವು ಜನರು ಮಾಡಿದ ತಪ್ಪುಗಳಿಗೆ ಅವರನ್ನು ಶಿಕ್ಷಿಸಬಾರದೆನ್ನುವ ಅರ್ಥವನ್ನು ಒಳಗೊಂಡಿರುತ್ತದೆ.
  • ಅರಸನಾಗಿರುವ ಒಬ್ಬ ಶಕ್ತಿಯುಳ್ಳ ಒಬ್ಬ ವ್ಯಕ್ತಿ, ಜನರಿಗೆ ಹಾನಿ ಮಾಡುವ ವಿಧಾನದಲ್ಲಿ ನಡೆದುಕೊಳ್ಳುವ ಬದಲಾಗಿ ಅವರು ಸುಖವಾಗಿ ಚೆನ್ನಾಗಿ ನೋಡಿಕೊಳ್ಳುವಾಗ ಅವನನ್ನು “ಕರುಣಾಮಯ” ಎಂದು ಹೇಳಲಾಗುತ್ತದೆ.
  • ಕರುಣಾಮಯವಾಗಿ ಇರುವುದೆಂದರೆ ನಮಗೆ ವಿರುದ್ಧವಾಗಿ ತಪ್ಪು ಮಾಡಿದವರನ್ನು ಕ್ಷಮಿಸುವುದು ಎಂದರ್ಥ.
  • ಯಾರಾದರೂ ತುಂಬಾ ಅಗತ್ಯತೆಯಲ್ಲಿರುವಾಗ ಅವರಿಗೆ ನಾವು ಸಹಾಯ ಮಾಡಿದಾಗ, ನಾವು ಅವರ ಮೇಲೆ ಕರುಣೆ ತೋರಿಸುತ್ತಿದ್ದೇವೆ ಎಂದರ್ಥ.
  • ದೇವರು ನಮ್ಮ ವಿಷಯದಲ್ಲಿ ಕರುಣಾಮಯನಾಗಿದ್ದಾನೆ, ಮತ್ತು ನಾವೂ ಇತರರ ವಿಷಯದಲ್ಲಿ ಕರುಣೆಯನ್ನು ತೋರಿಸಬೇಕೆಂದು ಆತನು ನಮ್ಮಿಂದ ಬಯಸುತ್ತಿದ್ದಾನೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಕರುಣೆ” ಎನ್ನುವ ಪದವನ್ನು “ದಯೆ” ಅಥವಾ “ಕನಿಕರ” ಅಥವಾ “ಅನುಕಂಪ” ಎಂದೂ ಅನುವಾದ ಮಾಡಬಹುದು.
  • “ಕರುಣಾಮಯ” ಎನ್ನುವ ಪದವನ್ನು “ಅನುಕಂಪವನ್ನು ತೋರಿಸುವುದು” ಅಥವಾ “ದಯೆಯಿಂದ ಇರುವುದು” ಅಥವಾ “ಕ್ಷಮಿಸುವುದು” ಎಂದೂ ಅನುವಾದ ಮಾಡಬಹುದು.
  • “ಕರುಣೆಯನ್ನು ತೋರಿಸು” ಅಥವಾ “ಕರುಣೆ ಹೊಂದಿರು” ಎನ್ನುವ ಮಾತನ್ನು “ದಯೆಯಿಂದ ನಡೆದುಕೋ” ಅಥವಾ “ಇತರರ ವಿಷಯದಲ್ಲಿ ಕನಿಕರದಿಂದಿರು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕನಿಕರ, ಕ್ಷಮಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 19:16 ವಿಗ್ರಹಾರಾಧನೆಯನ್ನು ನಿಲ್ಲಿಸಿ, ಇತರರ ವಿಷಯದಲ್ಲಿ __ ಕರುಣೆ__ ಮತ್ತು ನ್ಯಾಯಗಳನ್ನು ತೋರಿಸುವುದು ಆರಂಭಿಸಬೇಕೆಂದು ಅವರು (ಪ್ರವಾದಿಗಳು) ಎಲ್ಲ ಜನರಿಗೆ ಹೇಳಿದರು.
  • 19:17 ಬಾವಿಯ ಕೆಳ ಭಾಗದಲ್ಲಿರುವ ಮಣ್ಣಿನೊಳಗೆ ಆತನು (ಯೆರೆಮೀಯ) ಮುಳುಗಿ ಹೋಗಿದ್ದನು, ಆದರೆ ಅರಸನು ಅವನ ಮೇಲೆ __ ಕರುಣೆ __ ತೋರಿಸಿದನು ಮತ್ತು ಯೆರೆಮೀಯನು ಸಾಯದೆ ಆ ಬಾವಿಯೊಳಗಿಂದ ಅವನನ್ನು ಹೊರ ತೆಗೆದುಕೊಂಡು ಬರಬೇಕೆಂದು ತನ್ನ ದಾಸರಿಗೆ ಆಜ್ಞಾಪಿಸಿದನು.
  • 20:12 ಪಾರಸೀಕ ಸಾಮ್ರಾಜ್ಯವು ಬಲವಾದದ್ದು, ಆದರೆ ಅವರು ಜಯಿಸಿದ ಜನರ ವಿಷಯದಲ್ಲಿ ಕರುಣಾಮಯವಾಗಿತ್ತು.
  • 27:11 “ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಯೇಸು ಆ ಧರ್ಮೋಪದೇಶಕನಿಗೆ ಕೇಳಿದನು. ಅವನು, “ಅವನಿಗೆ ___ ಕರುಣೆ ___ ತೋರಿಸಿದವನೇ” ಎಂದು ಉತ್ತರಿಸಿದನು.
  • 32:11 “ಇಲ್ಲ, ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ __ ಕರುಣೆಯಿಟ್ಟು __ ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು” ಎಂದು ಯೇಸು ಅವನಿಗೆ ಹೇಳಿದನು.
  • 34:09 “ಆದರೆ ತೆರಿಗೆ ಸಂಗ್ರಹಿಸುವವನು ಧಾರ್ಮಿಕ ಆಡಳಿತಗಾರರಿಂದ ದೂರವಿರುತ್ತಾನೆ, ಸ್ವರ್ಗದತ್ತಲೂ ನೋಡಲಿಲ್ಲ. ಬದಲಾಗಿ, ಅವನು ತನ್ನ ಎದೆಯ ಮೇಲೆ ಬಡಿದು, ‘ದೇವರೇ, ದಯವಿಟ್ಟು ನಾನು ಪಾಪಿಯಾಗಿದ್ದರಿಂದ ನನಗೆ ಕರುಣಿಸು ’ ಎಂದು ಪ್ರಾರ್ಥಿಸಿದನು.

ಪದ ಡೇಟಾ:

  • Strong's: H2551, H2603, H2604, H2616, H2617, H2623, H3722, H3727, H4627, H4819, H5503, H5504, H5505, H5506, H6014, H7349, H7355, H7356, H7359, G1653, G1655, G1656, G2433, G2436, G3628, G3629, G3741, G4698

ಕರೆ, ಕರೆಯಲ್ಪಟ್ಟಿದ್ದೇನೆ

ಪದದ ಅರ್ಥವಿವರಣೆ:

“ಕರೆ” ಮತ್ತು “ಕರೆಯಲ್ಪಟ್ಟಿದ್ದೇನೆ” ಎನ್ನುವ ಪದಗಳು ಸಾಮಾನ್ಯವಾಗಿ ಜೋರಾಗಿ ಮಾತನಾಡುವುದನ್ನು ಅರ್ಥೈಸುತ್ತವೆ, ಆದರೆ "ಕರೆ" ಎಂಬ ಪದವು ಒಬ್ಬ ವ್ಯಕ್ತಿಯನ್ನು ಹೆಸರಿಸುವುದು ಅಥವಾ ಕರೆಯುವುದು ಎಂದರ್ಥ. ಇದಕ್ಕೆ ಇನ್ನು ಕೆಲವು ಅರ್ಥಗಳಿವೆ.

  • ಒಬ್ಬರನ್ನು “ಕರೆಯಲ್ಪಟ್ಟಿದ್ದೇನೆ” ಎಂದರೆ ದೂರದಲ್ಲಿರುವ ಒಬ್ಬರನ್ನು ಗಟ್ಟಿಯಾಗಿ ಕಿರಿಚಿ ಮಾತನಾಡುವುದು. ಇದಕ್ಕೆ ಸಹಾಯಕ್ಕೆ ಬೇಡಿಕೊಳ್ಳುವುದು ಎನ್ನುವ ಅರ್ಥವೂ ಬರುತ್ತದೆ, ವಿಶೇಷವಾಗಿ ದೇವರ ಸಹಾಯಕ್ಕಾಗಿ ಬೇಡಿಕೊಳ್ಳುವ ಅರ್ಥವನ್ನು ಕೊಡುತ್ತದೆ.
  • ಸತ್ಯವೇದದಲ್ಲಿ ಅನೇಕಬಾರಿ, “ಕರೆ” ಎನ್ನುವ ಪದಕ್ಕೆ “ಅಪ್ಪಣೆ ಕೊಡು” ಅಥವಾ “ಬರಲು ಅಜ್ಞಾಪಿಸು” ಅಥವಾ “ಬರುವುದಕ್ಕೆ ಮನವಿ ಮಾಡು” ಎನ್ನುವ ಅರ್ಥಗಳು ಇವೆ.
  • ದೇವರು ತನ್ನ ಬಳಿಗೆ ಬರುವುದಕ್ಕೆ ಜನರನ್ನು ಕರೆಯುತ್ತಿದ್ದಾರೆ ಮತ್ತು ಆತನ ಪ್ರಜೆಯಾಗಿರುವುದಕ್ಕೆ ಇಷ್ಟಪಡುತ್ತಿದ್ದಾರೆ. ಇದೆ ಅವರ “ಕರೆ”.
  • ದೇವರು ಜನರನ್ನು “ಕರೆದಿದ್ದಾನೆ” ಎನ್ನುವದಕ್ಕೆ ದೇವರು ತನ್ನ ಜನರು ತನ್ನ ಮಕ್ಕಳಾಗಿರಲು, ತನ್ನ ದಾಸರಾಗಿರಲು ಮತ್ತು ಯೇಸು ಕ್ರಿಸ್ತನ ಮೂಲಕ ತನ್ನ ರಕ್ಷಣೆ ಸಂದೇಶವನ್ನು ಪ್ರಕಟಿಸುವವರಾಗಿರುವುದಕ್ಕೆ ಆರಿಸಿಕೊಂಡಿದ್ದಾರೆ ಅಥವಾ ನೇಮಿಸಿಕೊಂಡಿದ್ದಾರೆ ಎಂದರ್ಥ.
  • ಈ ಪದವನ್ನು ಯಾರನ್ನಾದರೂ ಹೆಸರಿಸುವ ಸಂದರ್ಭದಲ್ಲಿಯೂ ಉಪಯೋಗಿಸುತ್ತದೆ. ಉದಾಹರಣೆಗೆ, “ಈತನ ಹೆಸರು ಯೋಹಾನ ಎಂದು ಕರೆಯಲಾಗುತ್ತದೆ ” ಅಂದರೆ, “ಈತನಿಗೆ ಯೋಹಾನ ಎಂದು ಹೆಸರಿಡಲಾಗಿದೆ” ಅಥವಾ “ಈತನ ಹೆಸರು ಯೋಹಾನ”.
  • “ಹೆಸರಿನಿಂದ ಕರೆಯಲ್ಪಡುವುದು” ಎಂದರೆ ಒಬ್ಬರ ಹೆಸರನ್ನು ಇನ್ನೊಬ್ಬರು ಕೊಡುವುದು ಎಂದರ್ಥ. ಆತನು ತನ್ನ ಜನರನ್ನು ತನ್ನ ಹೆಸರಿನಿಂದ ಕರೆದಿದ್ದಾರೆಂದು ದೇವರು ಹೇಳಿದ್ದಾರೆ.
  • ವಿಭಿನ್ನ ಅಭಿವ್ಯಕ್ತಿ, “ನಾನು ಹೆಸರಿನಿಂದ ನಿನ್ನನ್ನು ಕರೆದಿದ್ದೇನೆ” ಎನ್ನುವ ಮಾತಿಗೆ ದೇವರು ಆ ವ್ಯಕ್ತಿಯನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಅನುವಾದ ಸಲಹೆಗಳು:

  • “ಕರೆ” ಎನ್ನುವ ಪದವು “ಅಪ್ಪಣೆ ಕೊಡು” ಎನ್ನುವ ಮಾತಿನಿಂದ ಅನುವಾದ ಮಾಡಬಹುದು, ಇದು ಉದ್ದೇಶಪೂರ್ವಕ ಅಥವಾ ಸಂಕಲ್ಪಪೂರ್ವಕ ಕರೆ ಮಾಡುವ ಕಲ್ಪನೆಯನ್ನು ಒಳಗೊಂಡಿರುತ್ತದೆ.
  • “ನಿನ್ನಲ್ಲಿ ಮೊರೆಯಿಡುವುದು” ಎಂಬ ಅಭಿವ್ಯಕ್ತಿಯು “ಸಹಾಯಕ್ಕಾಗಿ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ” ಅಥವಾ “ನಿನಗೆ ತುರ್ತಾಗಿ ಪ್ರಾರ್ಥಿಸುತ್ತಿದ್ದೇನೆ” ಎಂದೂ ಅನುವಾದ ಮಾಡಬಹುದು.
  • ದೇವರು ನಮ್ಮನ್ನು ಆತನ ದಾಸರಾಗಿರುವುದಕ್ಕೆ “ಕರೆದಿದ್ದಾನೆ” ಎಂದು ಸತ್ಯವೇದವು ಹೇಳುವ ಪ್ರತಿಯೊಂದುಬಾರಿ, ಆತನ ದಾಸರಾಗಿರಲು “ವಿಶೇಷವಾಗಿ ನಮ್ಮನ್ನು ಆದುಕೊಂಡಿದ್ದಾರೆ” ಅಥವಾ “ನಮ್ಮನ್ನು ನೇಮಿಸಿಕೊಂಡಿದ್ದಾರೆ” ಎಂದೂ ಅನುವಾದ ಮಾಡಬಹುದು.
  • “ನೀನು ಆತನ ಹೆಸರನ್ನು ಕರೆಯಲೇಬೇಕು” ಎನ್ನುವದನ್ನು “ನೀನು ತಪ್ಪದೇ ಆತನ ಹೆಸರಿನಿಂದ ಕರೆಯಬೇಕು” ಎಂದೂ ಅನುವಾದ ಮಾಡಬಹುದು.
  • “ಆತನ ಹೆಸರು ಕರೆಯಲ್ಪಟ್ಟಿದೆನೆ” ಎನ್ನುವ ಮಾತನ್ನು “ಆತನ ಹೆಸರು” ಅಥವಾ “ಆತನನ್ನು ಹೆಸರಿಸಲಾಗಿದೆ” ಎಂದೂ ಅನುವಾದ ಮಾಡಬಹುದು.
  • “ಕರೆಯಲ್ಪಡು” ಎನ್ನುವ ಮಾತನ್ನು “ಗಟ್ಟಿಯಾಗಿ ಹೇಳು” ಅಥವಾ “ಕೂಗು” ಅಥವಾ “ಗಟ್ಟಿಯಾದ ಸ್ವರದಿಂದ ಹೇಳು” ಎಂದೂ ಅನುವಾದ ಮಾಡಬಹುದು. ಪದಗಳಿಗೆ ಮಾಡುತ್ತಿರುವ ಅನುವಾದವನ್ನು ಒಬ್ಬ ವ್ಯಕ್ತಿ ಕೋಪದಿಂದ ಇದ್ದು ಮಾತನಾಡುತ್ತಿದ್ದಾನೆನ್ನುವ ಭಾವನೆ ಬಾರದಂತೆ ನೋಡಿಕೊಳ್ಳಿರಿ.
  • “ನಿನ್ನ ಕರೆ” ಎನ್ನುವ ಭಾವವ್ಯಕ್ತೀಕರಣೆಗೆ, “ನಿಮ್ಮ ಉದ್ದೇಶ” ಅಥವಾ “ನಿಮಗಾಗಿ ದೇವರಿಟ್ಟಿರುವ ಉದ್ದೇಶ” ಅನ್ವ “ನಿಮಗಾಗಿ ದೇವರಿಟ್ಟಿರುವ ವಿಶೇಷವಾದ ಕೆಲಸ” ಎಂದೂ ಅನುವಾದ ಮಾಡಬಹುದು.
  • “ಯೆಹೋವ ಹೆಸರಿನಲ್ಲಿ ಕರೆ” ಎನ್ನುವದನ್ನು “ದೇವರಲ್ಲಿ ನಿರೀಕ್ಷಿಸು ಮತ್ತು ಆತನ ಮೇಲೆ ಆತುಕೋ” ಅಥವಾ “ಕರ್ತನಲ್ಲಿ ನಂಬು ಮತ್ತು ಆತನಿಗೆ ವಿಧೇಯನಾಗು” ಎಂದೂ ಅನುವಾದ ಮಾಡಬಹುದು.
  • ಎನಾದರೊಂದಕ್ಕಾಗಿ “ಕರೆ ನೀಡು” ಎನ್ನುವದನ್ನು “ಬೇಡಿಕೆ” ಅಥವಾ “ಮನವಿ ಮಾಡು” ಅಥವಾ “ಆಜ್ಞಾಪಿಸು” ಎಂದು ಅನುವಾದ ಮಾಡಬಹುದು.
  • “ನೀವು ನನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೀರಿ" ಎನ್ನುವ ಭಾವವ್ಯಕ್ತೀಕರಣೆಗೆ, “ನಾನು ನಿನ್ನನ್ನು ತಿಳಿದಿದ್ದೇನೆ ಮತ್ತು ನಿನ್ನನ್ನು ಆರಿಸಿಕೊಂಡಿದ್ದೇನೆ" ಎಂದು ಅನುವಾದ ಮಾಡಬಹುದು.
  • “ಹೆಸರಿಟ್ಟು ನಾನು ನಿನ್ನನ್ನು ಕರೆದಿದ್ದೇನೆ” ಎಂದು ದೇವರು ಹೇಳಿದಾಗ, ಇದನ್ನು “ನನಗೆ ನೀನು ಚೆನ್ನಾಗಿ ಗೊತ್ತು ಮತ್ತು ನಾನು ನಿನ್ನನು ಆಯ್ಕೆ ಮಾಡಿಕೊಂಡಿದ್ದೇನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರಾರ್ಥನೆ, cry)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H559, H2199, H4744, H6817, H7121, H7123, H7769, H7773, G154, G363, G1458, G1528, G1941, G1951, G2028, G2046, G2564, G2821, G2822, G2840, G2919, G3004, G3106, G3333, G3343, G3603, G3686, G3687, G4316, G4341, G4377, G4779, G4867, G5455, G5537, G5581

ಕರ್ತನ ದಿನ, ಯೆಹೋವನ ದಿನ

ವಿವರಣೆ:

“ಯೆಹೋವನ ದಿನ” ಎನ್ನುವ ಹಳೇ ಒಡಂಬಡಿಕೆಯ ಮಾತು ಒಂದು ವಿಶೇಷವಾದ ಕಾಲವನ್ನು (ಅಥವಾ ಕಾಲಗಳನ್ನು) ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ, ಆ ಸಮಯದಲ್ಲಿ ದೇವರು ಪಾಪಗಳನ್ನು ಮಾಡಿದ ಜನರನ್ನು ಶಿಕ್ಷಿಸುತ್ತಾನೆ.

  • “ಕರ್ತನ ದಿನ” ಎನ್ನುವ ಹೊಸ ಒಡಂಬಡಿಕೆಯ ಮಾತನ್ನು ಸಾಧಾರಣವಾಗಿ ಅಂತ್ಯಕಾಲದಲ್ಲಿ ಜನರಿಗೆ ನ್ಯಾಯತೀರ್ಪು ಮಾಡುವುದಕ್ಕೆ ಕರ್ತನಾದ ಯೇಸು ಹಿಂದಿರುಗಿ ಬರುವ ಎರಡನೇ ಬರೋಣದ ಸಮಯವನ್ನು ಅಥವಾ ದಿನವನ್ನು ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ.
  • ಕೊನೆಗೆ “ಕಡೇ ದಿನ” ಎಂದು ಭವಿಷ್ಯತ್ತಿನಲ್ಲಿ ನ್ಯಾಯತೀರ್ಪಿನ ಸಮಯವನ್ನು ಮತ್ತು ಪುನರುತ್ಥಾನವನ್ನು ಕೂಡ ಕೆಲವೊಂದುಬಾರಿ ಸೂಚಿಸುತ್ತದೆ. ಕರ್ತನಾದ ಯೇಸು ಪಾಪಿಗಳಿಗೆ ನ್ಯಾಯತೀರ್ಪು ಮಾಡುವುದಕ್ಕೆ ಹಿಂದಿರುಗಿ ಬರುವಾಗ ಈ ಸಮಯವು ಆರಂಭವಾಗುತ್ತದೆ, ಆಗ ಆತನ ಆಳ್ವಿಕೆಯನ್ನು ಶಾಶ್ವತವಾಗಿ ಸ್ಥಿರಪಡಿಸುತ್ತಾನೆ.
  • ಈ ಮಾತುಗಳಲ್ಲಿರುವ “ದಿನ” ಎನ್ನುವ ಪದವು ಕೆಲವೊಂದುಬಾರಿ ಜೀವನದಲ್ಲಿ ಉಪಯೋಗಿಸುವ ಅಕ್ಷರಾರ್ಥ ದಿನವನ್ನು ಸೂಚಿಸಬಹುದು ಅಥವಾ ಇದು ಒಂದು ದಿನಕ್ಕಿಂತ ಹೆಚ್ಚಾದ ಕಾಲವನ್ನು ಸೂಚಿಸುವ “ಸಮಯ” ಅಥವಾ “ಸಂದರ್ಭ” ಎನ್ನುವದನ್ನೂ ಸೂಚಿಸಬಹುದು.
  • ಕೆಲವೊಂದುಬಾರಿ ಶಿಕ್ಷೆ ಎನ್ನುವುದು ದೇವರನ್ನು ನಂಬದಿರುವವರ ಮೇಲೆ “ದೇವರ ಕೋಪಾಗ್ನಿ ಸುರಿಸಲ್ಪಡುತ್ತದೆ” ಎಂದೂ ಸೂಚಿಸಲ್ಪಡುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ತಕ್ಕಂತೆ, “ಯೆಹೋವನ ದಿನ” ಎನ್ನುವ ಮಾತಿಗೆ ಬೇರೊಂದು ಮಾತುಗಳು ಉಪಯೋಗಿಸುವುದಾದರೆ “ಯೆಹೋವನ ಸಮಯ” ಅಥವಾ “ಯೆಹೋವನು ತನ್ನ ಶತ್ರುಗಳನ್ನು ಶಿಕ್ಸಿಸುವ ಸಮಯ” ಅಥವಾ “ಯೆಹೋವನ ಕೋಪಾಗ್ನಿಯ ಸಮಯ” ಎಂದು ಉಪಯೋಗಿಸಬಹುದು.
  • “ಕರ್ತನ ದಿನ” ಎನ್ನುವ ಮಾತಿಗೆ ಬೇರೊಂದು ಮಾತುಗಳನ್ನು ಉಪಯೋಗಿಸುವುದಾದರೆ, “ಕರ್ತನ ನ್ಯಾಯತೀರ್ಪಿನ ಸಮಯ” ಅಥವಾ “ಜನರಿಗೆ ನ್ಯಾಯತೀರ್ಪು ಮಾಡುವುದಕ್ಕೆ ಕರ್ತನಾದ ಯೇಸು ಹಿಂದುರಿಗಿ ಬರುವ ಸಮಯ” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ದಿನ, ನ್ಯಾಯತೀರ್ಪಿನ ದಿನ, ಕರ್ತನ, ಪುನರುತ್ಹಾನ, ಯೆಹೋವ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H3068, H3117, G22500, G29620

ಕರ್ತನ ಭೋಜನ

ಪದದ ಅರ್ಥವಿವರಣೆ:

“ಕರ್ತನ ಭೋಜನ” ಎನ್ನುವ ಮಾತು ಯೇಸು ಯೆಹೂದ್ಯರ ನಾಯಕರಿಂದ ಬಂಧಿಸಲ್ಪಟ್ಟ ರಾತ್ರಿಯಲ್ಲಿ ಆತನ ಶಿಷ್ಯರೊಂದಿಗೆ ಊಟ ಮಾಡಿದ ಪಸ್ಕ ಭೋಜನವನ್ನು ಸೂಚಿಸುವುದಕ್ಕೆ ಅಪೊಸ್ತಲನಾದ ಪೌಲನಿಂದ ಉಪಯೋಗಿಸಲ್ಪಟ್ಟಿರುವ ಪದವಾಗಿರುತ್ತದೆ.

  • ಈ ಭೋಜನ ಸಂದರ್ಭದಲ್ಲಿ ಯೇಸು ರೊಟ್ಟಿಯನ್ನು ಮುರಿದು, ಇದನ್ನು ಆತನ ದೇಹವೆಂದು ಕರೆದನು, ಈ ದೇಹವು ಅತೀ ಶೀಘ್ರವಾಗಿ ಹೊಡಿಸಲ್ಪಡುವದು ಮತ್ತು ಕೊಲ್ಲಲ್ಪಡುವುದು ಎಂದು ಹೇಳಿದನು.
  • ಆತನು ದ್ರಾಕ್ಷಾರಸದ ಬಟ್ಟಲನ್ನು ತೆಗೆದುಕೊಂಡು ಅದನ್ನು ಆತನ ರಕ್ತವೆಂದು ಹೇಳಿದನು, ಪಾಪಗಳ ಸರ್ವಾಂಗಹೋಮವಾಗಿ ಆತನು ಮರಣಿಸಿದಾಗ ಅದು ಸುರಿಸಲ್ಪಡುತ್ತದೆಯೆಂದು ಹೇಳಿದನು.
  • ಯೇಸುವಿನ ಹಿಂಬಾಲಕರೆಲ್ಲರು ಸೇರಿ ಬರುವಾಗ ಈ ಭೋಜನವನ್ನು ಹಂಚಿಕೊಳ್ಳಬೇಕೆಂದು ಆತನು ಆಜ್ಞಾಪಿಸಿದನು, ಆವರು ತಪ್ಪದೇ ಆತನ ಮರಣ ಮತ್ತು ಪುನರುತ್ಹಾನಗಳನ್ನು ನೆನಪಿಸಿಕೊಳ್ಳಬೇಕು.
  • ಆತನು ಕೊರಿಂಥದವರಿಗೆ ಬರೆದ ಪತ್ರಿಕೆಯಲ್ಲಿ ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವಿಶ್ವಾಸಿ ಕರ್ತನ ಭೋಜನವನ್ನು ಆಚರಣೆ ಮಾಡಬೇಕೆಂದು ಸ್ಥಾಪಿಸಿದ್ದನ್ನು ನಾವು ನೋಡಬಹುದು.
  • ಕರ್ತನ ಭೋಜನವನ್ನು ಸೂಚಿಸುವುದಕ್ಕೆ ಈಗಿನ ಸಭೆಗಳಲ್ಲಿ “ಸಂಸ್ಕಾರ” ಎಂದು ಕರೆಯುತ್ತಾರೆ. “ಕರ್ತನ ಭೋಜನ” ಎನ್ನುವ ಮಾತು ಕೂಡ ಉಪಯೋಗಿಸಲ್ಪಟ್ಟಿದೆ.

ಅನುವಾದ ಸಲಹೆಗಳು:

  • ಈ ಪದವನ್ನು “ಕರ್ತನ ಮೇಜು” ಅಥವಾ “ನಮ್ಮ ಕರ್ತನಾದ ಯೇಸುವಿನ ಊಟ” ಅಥವಾ “ಕರ್ತನಾದ ಯೇಸುವಿನ ನೆನಪಿನಲ್ಲಿ ಊಟ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ: ಪಸ್ಕ)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: G11730, G29600

ಕರ್ತನಾದ ಯೆಹೋವ, ಯೆಹೋವ ದೇವರು

ಸತ್ಯಾಂಶಗಳು:

ಹಳೇ ಒಡಂಬಡಿಕೆಯಲ್ಲಿ “ಕರ್ತನಾದ ಯೆಹೋವ” ಎನ್ನುವ ಮಾತು ಒಬ್ಬನೇ ದೇವರೆಂದು ಸೂಚಿಸುವುದಕ್ಕೆ ಅತೀ ಹೆಚ್ಚಾಗಿ ಉಪಯೋಗಿಸಲ್ಪಟ್ಟಿದೆ.

  • “ಕರ್ತನು” ಎನ್ನುವ ಪದವು ದೈವಿಕವಾದ ಬಿರುದಾಗಿರುತ್ತದೆ ಮತ್ತು “ಯೆಹೋವ” ಎನ್ನುವುದು ದೇವರ ವೈಯುಕ್ತಿಕ ಹೆಸರಾಗಿರುತ್ತದೆ.
  • “ಯೆಹೋವ” ಎನ್ನುವುದು ಅನೇಕಬಾರಿ “ದೇವರು” ಎನ್ನುವ ಪದದೊಂದಿಗೆ “ಯೆಹೋವ ದೇವರು” ಎಂಬುದಾಗಿ ಸೇರಿರುತ್ತದೆ.

ಅನುವಾದ ಸಲಹೆಗಳು:

  • “ಯೆಹೋವ” ಎನ್ನುವ ಪದವನ್ನು ದೇವರ ವೈಯುಕ್ತಿಕ ಹೆಸರಿಗೆ ಅನುವಾದವಾಗಿ ಉಪಯೋಗಿಸಲಾಗಿರುತ್ತದೆ, “ಕರ್ತನಾದ ಯೆಹೋವ” ಮತ್ತು “ಯೆಹೋವ ದೇವರು” ಎನ್ನುವ ಮಾತುಗಳು ಅಕ್ಷರಾರ್ಥವಾಗಿ ಉಪಯೋಗಿಸಬಹುದು. ಈ ಪದವು ದೇವರನ್ನು ಸೂಚಿಸಿದಾಗ ಅನೇಕವಾದ ಸಂದರ್ಭಗಳಲ್ಲಿ “ಕರ್ತನು” ಎನ್ನುವ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿಕೊಳ್ಳಿರಿ.
  • ಕೆಲವೊಂದು ಭಾಷೆಗಳಲ್ಲಿ ಹೆಸರಾದ ಮೇಲೆ ಬಿರುದುಗಳನ್ನು ಇಡುತ್ತಾರೆ ಮತ್ತು ಈ ಮಾತನ್ನು “ಯೆಹೋವ ಕರ್ತನು” ಎಂಬುದಾಗಿ ಅನುವಾದ ಮಾಡುತ್ತಾರೆ. ಅನುವಾದ ಮಾಡುವ ಭಾಷೆಯಲ್ಲಿ ಯಾವುದು ಸ್ವಾಭಾವಿಕವಾದದ್ದೆಂದು ಗಮನಿಸಿರಿ: “ಕರ್ತನು” ಎನ್ನುವ ಬಿರುದು “ಯೆಹೋವ” ಎನ್ನುವ ಹೆಸರಿಗೆ ಮುಂದೆ ಬರುತ್ತದೋ ಅಥವಾ ಹಿಂದೆ ಬರುತ್ತದೋ?
  • “ಯೆಹೋವ ದೇವರು” ಎನ್ನುವ ಮಾತು “ಯೆಹೋವ ಎಂದು ಕರೆಯಲ್ಪಡುವ ದೇವರು” ಅಥವಾ “ಜೀವಿಸುವ ದೇವರು” ಅಥವಾ “ದೇವರಾಗಿರುವ ನಾನು” ಎನ್ನುವ ಮಾತುಗಳಿಗೆ ಸಂಬಂಧಿಸಿರುತ್ತದೆ.
  • ಒಂದುವೇಳೆ “ಯೆಹೋವ” ಎನ್ನುವ ಪದವನ್ನು “ಕರ್ತನು” ಎಂಬುದಾಗಿ ಸಂಪ್ರದಾಯಿಕವಾಗಿ ಅನುವಾದ ಮಾಡುವುದಾಗಿದ್ದರೆ, “ಕರ್ತನಾದ ಯೆಹೋವ” ಎನ್ನುವ ಮಾತನ್ನು “ಕರ್ತನಾದ ದೇವರು” ಅಥವಾ “ಕರ್ತನಾಗಿರುವ ದೇವರು” ಎಂದೂ ಅನುವಾದ ಮಾಡಬಹುದು. ಬೇರೊಂದು ರೀತಿಯ ಅನುವಾದಗಳಲ್ಲಿ “ಯಜಮಾನನಾದ ಕರ್ತನು” ಅಥವಾ “ದೇವರಾಗಿರುವ ಕರ್ತನು” ಎಂಬುದಾಗಿ ಅನುವಾದ ಮಾಡಬಹುದು.
  • “ಕರ್ತನಾದ ಯೆಹೋವ” ಎನ್ನುವ ಮಾತು “ಕರ್ತಾದಿ ಕರ್ತನು” ಎಂದೂ ಸೂಚಿಸುವುದಿಲ್ಲ, ಯಾಕಂದರೆ ಓದುಗಾರರು ಈ ಎರಡು ಪದಗಳನ್ನು ವ್ಯತ್ಯಾಸಗೊಳಿಸುವುದಕ್ಕೆ ಉಪಯೋಗಿಸಿರುವ ಸಂಪ್ರದಾಯಿಕವಾದ ದೊಡ್ಡ ದೊಡ್ಡ ಅಕ್ಷರಗಳನ್ನು ಗಮನಿಸುವುದಿಲ್ಲ ಮತ್ತು ಅದು ವಿಚಿತ್ರವಾಗಿ ಕಾಣಿಸಿಕೊಳ್ಳುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೇವರು, ಯಜಮಾನ, ಕರ್ತನು, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H136, H430, H3068, G2316, G2962

ಕಲ್ಲು, ಕಲ್ಲುಗಳು, ಕಲ್ಲುಗಳನ್ನು ಎಸೆಯುವುದು

ಪದದ ಅರ್ಥವಿವರಣೆ:

ಕಲ್ಲು ಎನ್ನುವುದು ಬಂಡೆಯ ಒಂದು ಚೂರಾಗಿರುತ್ತದೆ. ಒಬ್ಬರ ಮೇಲೆ “ಕಲ್ಲನ್ನು” ಎಸೆ ಎಂದರೆ ಒಬ್ಬ ವ್ಯಕ್ತಿಯನ್ನು ಸಾಯಿಸಬೇಕೆನ್ನುವ ಉದ್ದೇಶದೊಂದಿಗೆ ಆ ವ್ಯಕ್ತಿಯ ಮೇಲೆ ದೊಡ್ಡ ದೊಡ್ಡ ಬಂಡೆಗಳನ್ನು ಮತ್ತು ಕಲ್ಲುಗಳನ್ನು ಎಸೆಯುವುದು ಎಂದರ್ಥ. “ಕಲ್ಲನ್ನು ಎಸೆಯುವುದು” ಎಂದರೆ ಒಬ್ಬರ ಮೇಲೆ ಕಲ್ಲುಗಳನ್ನು ಎಸೆಯುವ ಸಂಘಟನೆಯನ್ನು ಸೂಚಿಸುವುದಾಗಿರುತ್ತದೆ.

  • ಪುರಾತನ ಕಾಲಗಳಲ್ಲಿ ಕಲ್ಲುಗಳನ್ನು ಎಸೆಯುವುದೆನ್ನುವುದು ಜನರು ಮಾಡಿದ ಅಪರಾಧಗಳಿಗೆ ಶಿಕ್ಷೆಯಾಗಿ ಜನರನ್ನು ಸಾಯಿಸುವ ಒಂದು ಸರ್ವ ಸಾಧಾರಣವಾದ ವಿಧಾನವಾಗಿರುತ್ತದೆ.
  • ವ್ಯಭಿಚಾರ ಎನ್ನುವಂತಹ ಪಾಪಗಳನ್ನು ಮಾಡಿದಾಗ ಆ ಜನರನ್ನು ಕಲ್ಲುಗಳನ್ನು ಎಸೆದು ಸಾಯಿಸಿರಿ ಎಂದು ದೇವರು ಇಸ್ರಾಯೇಲ್ಯರ ನಾಯಕರಿಗೆ ಆಜ್ಞಾಪಿಸಿದನು.
  • ಹೊಸ ಒಡಂಬಡಿಕೆಯಲ್ಲಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಸ್ತ್ರೀಯಳನ್ನು ಯೇಸು ಕ್ಷಮಿಸಿದರು ಮತ್ತು ಆಕೆಯ ಮೇಲೆ ಕಲ್ಲುಗಳು ಬೀಳದಂತೆ ಜನರನ್ನು ನಿಲ್ಲಿಸಿದರು.
  • ಯೇಸುವಿನ ಕುರಿತಾಗಿ ಸಾಕ್ಷಿಯನ್ನು ಹೇಳಿದ್ದಕ್ಕೆ ಕಲ್ಲುಗಳನ್ನು ಎಸೆಯುವುದರ ಮೂಲಕ ಸಾಯಿಸಲ್ಪಟ್ಟ ಮೊಟ್ಟ ಮೊದಲ ವ್ಯಕ್ತಿಯಾಗಿ ಸತ್ಯವೇದದಲ್ಲಿ ದಾಖಲಿಸಲ್ಪಟ್ಟಿದ್ದಾನೆ.
  • ಲೂಸ್ತ್ರ ಪಟ್ಟಣದಲ್ಲಿ ಅಪೊಸ್ತಲನಾದ ಪೌಲನ ಮೇಲೆ ಕಲ್ಲುಗಳನ್ನು ಎಸೆದರು, ಆದರೆ ತನ್ನ ಗಾಯಗಳ ಮೂಲಕ ಆತನು ಸತ್ತುಹೋಗಲಿಲ್ಲ.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ಬದ್ಧನಾಗು, ಅಪರಾಧ, ಮರಣ, ಲೂಸ್ತ್ರ, ಸಾಕ್ಷಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H68, H69, H810, H1382, H1496, H1530, H2106, H2672, H2687, H2789, H4676, H4678, H5553, H5601, H5619, H6344, H6443, H6697, H6864, H6872, H7275, H7671, H8068, G2642, G2991, G3034, G3035, G3036, G3037, G4074, G4348, G5586

ಕಾರ್ಯಗಳು, ಕ್ರಿಯೆಗಳು, ಕೆಲಸ, ಕೃತ್ಯಗಳು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಕಾರ್ಯಗಳು,” “ಕ್ರಿಯೆಗಳು,” ಮತ್ತು “ಕೃತ್ಯಗಳು,” ಎನ್ನುವ ಪದಗಳು ದೇವರು ಅಥವಾ ಜನರು ಸಾಧಾರಣವಾಗಿ ಮಾಡುವ ಕೆಲಸಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.

  • ಸತ್ಯವೇದದಲ್ಲಿ, ಈ ಪದಗಳನ್ನು ಸಾಮಾನ್ಯವಾಗಿ ದೇವರು ಮತ್ತು ಮಾನವರನ್ನು ಉಲ್ಲೇಖಿಸಲು ಬಳಸಲಾಗುತ್ತದೆ.
  • “ಕೆಲಸ” ಎನ್ನುವ ಪದವು ಇತರ ಜನರಿಗೆ ಸೇವೆ ಮಾಡುವುದಕ್ಕೆ ಮಾಡುವ ಯಾವುದೇ ಕಾರ್ಯವನ್ನು ಅಥವಾ ಯಾವುದೇ ಕೃತ್ಯವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
  • ದೇವರ “ಕಾರ್ಯಗಳು” ಮತ್ತು “ತನ್ನ ಕೈಗಳ ಕೆಲಸ” ಎನ್ನುವ ಮಾತುಗಳು ಆತನು ಮಾಡುವ ಅಥವಾ ಆತನು ಮಾಡಿದ ಎಲ್ಲಾ ಕಾರ್ಯಗಳನ್ನು ಸೂಚಿಸುತ್ತವೆ, ಈ ಮಾತುಗಳಲ್ಲಿ ಪ್ರಪಂಚವನ್ನು ಸೃಷ್ಟಿಸುವುದು, ಪಾಪಿಗಳನ್ನು ರಕ್ಷಿಸುವುದು, ಎಲ್ಲಾ ಜೀವಿಗಳ ಅಗತ್ಯತೆಗಳನ್ನು ಪೂರೈಸುವುದು ಮತ್ತು ಒಂದು ಸ್ಥಳದಲ್ಲಿ ಇಡೀ ವಿಶ್ವವನ್ನು ಇಟ್ಟಿರುವುದು ಒಳಗೊಂಡಿರುತ್ತವೆ. “ಕ್ರಿಯೆಗಳು” ಮತ್ತು “ಕೃತ್ಯಗಳು” ಎನ್ನುವ ಪದಗಳು “ಅದ್ಭುತ ಕೃತ್ಯಗಳು” ಅಥವಾ “ಆಶ್ಚರ್ಯ ಕ್ರಿಯೆಗಳು” ಎನ್ನುವ ಮಾತುಗಳಂತೆ ದೇವರ ಅದ್ಭುತಗಳನ್ನು ಸೂಚಿಸುವುದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ.
  • ಒಬ್ಬ ವ್ಯಕ್ತಿ ಮಾಡುವ ಕಾರ್ಯಗಳು ಅಥವಾ ಕ್ರಿಯೆಗಳು ಒಳ್ಳೇಯದಾಗಿರುತ್ತವೆ ಅಥವಾ ಕೆಟ್ಟದ್ದಾಗಿರುತ್ತವೆ.
  • ವಿಶ್ವಾಸಿಗಳು ಒಳ್ಳೇಯ ಕಾರ್ಯಗಳನ್ನು ಮಾಡಬೇಕೆಂದು ಪವಿತ್ರಾತ್ಮನು ಅವರನ್ನು ಬಲಗೊಳಿಸುತ್ತಾನೆ, ಇವುಗಳನ್ನೇ “ಒಳ್ಳೇಯ ಫಲ” ಎಂದು ಕರೆಯುತ್ತಾರೆ.
  • ಜನರು ತಮ್ಮ ಒಳ್ಳೇಯ ಕಾರ್ಯಗಳಿಂದ ರಕ್ಷಿಸಲ್ಪಡುವುದಿಲ್ಲ; ಅವರು ಯೇಸುವಿನಲ್ಲಿ ನಂಬಿಕೆ ಇಡುವುದರ ಮೂಲಕ ರಕ್ಷಣೆ ಹೊಂದುತ್ತಾರೆ.
  • ಒಬ್ಬ ವ್ಯಕ್ತಿಯ “ಕೆಲಸ” ಎನ್ನುವುದು ಆ ವ್ಯಕ್ತಿ ಜೀವಿಸುವುದಕ್ಕೆ ಮಾಡುವುದಾಗಿರಬಹುದು ಅಥವಾ ದೇವರಿಗೆ ಸೇವೆ ಮಾಡುವುದಾಗಿರಬಹುದು. ದೇವರು “ಕೆಲಸ ಮಾಡಿದ್ದಾರೆ” ಎಂಬುದಾಗಿ ಸತ್ಯವೇದವು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಕಾರ್ಯಗಳು” ಅಥವಾ “ಕ್ರಿಯೆಗಳು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕೃತ್ಯಗಳು” ಅಥವಾ “ಮಾಡಿದ ಕೆಲಸಗಳು” ಎಂದಾಗಿ ಅನುವಾದ ಮಾಡಬಹುದು.
  • ದೇವರ “ಕಾರ್ಯಗಳು” ಅಥವಾ “ಕ್ರಿಯೆಗಳು” ಮತ್ತು “ತನ್ನ ಕೈ ಕೆಲಸಗಳು” ಎಂದು ಸೂಚಿಸಿದಾಗ, ಈ ಎಲ್ಲಾ ಮಾತುಗಳನ್ನು “ಆಶ್ಚರ್ಯ ಕಾರ್ಯಗಳು” ಅಥವಾ “ಶಕ್ತಿಯುತವಾದ ಕೃತ್ಯಗಳು” ಅಥವಾ “ಆತನು ಮಾಡುವ ಅತ್ಯದ್ಭುತವಾದ ಕೆಲಸಗಳು” ಎಂದೂ ಅನುವಾದ ಮಾಡಬಹುದು.
  • “ದೇವರ ಕೆಲಸ” ಎನ್ನುವ ಮಾತನ್ನು “ದೇವರು ಮಾಡುವ ಕಾರ್ಯಗಳು” ಅಥವಾ “ದೇವರು ಮಾಡುವ ಆಶ್ಚರ್ಯಕಾರ್ಯಗಳು” ಅಥವಾ “ದೇವರು ಮಾಡುವ ಅದ್ಭುತ ಕಾರ್ಯಗಳು” ಅಥವಾ “ದೇವರು ಮಾಡಿದ ಪ್ರತಿಯೊಂದು ಕಾರ್ಯ” ಎಂದೂ ಅನುವಾದ ಮಾಡಬಹುದು.
  • “ಕೆಲಸ” ಎನ್ನುವ ಪದವು ‘ಕೆಲಸಗಳು” ಎನ್ನುವ ಪದಕ್ಕೆ ಏಕವಚನ ಪದವಾಗಿರುತ್ತದೆ, ಉದಾಹರಣೆಗೆ, “ಪ್ರತಿಯೊಂದು ಒಳ್ಳೇಯ ಕೆಲಸ” ಅಥವಾ “ಪ್ರತಿಯೊಂದು ಒಳ್ಳೇಯ ಕ್ರಿಯೆ”.
  • “ಕಾರ್ಯ” ಎನ್ನುವ ಪದಕ್ಕೆ “ಸೇವೆ” ಅಥವಾ “ಕೆಲಸ” ಎನ್ನುವ ವಿಸ್ತಾರವಾದ ಅರ್ಥವನ್ನು ಹೊಂದಿರುತ್ತದೆ. ಉದಾಹರಣೆಗೆ, “ಕರ್ತನಲ್ಲಿ ನಿನ್ನ ಕೆಲಸ” ಎನ್ನುವ ಮಾತನ್ನು “ಕರ್ತನಿಗಾಗಿ ನೀನು ಏನು ಮಾಡುವಿ” ಎಂದೂ ಅನುವಾದ ಮಾಡಬಹುದು.
  • “ನಿನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೋ” ಎನ್ನುವ ಮಾತನ್ನು “ನೀನು ಮಾಡುತ್ತಿರುವುದು ದೇವರ ಚಿತ್ತವೋ ಇಲ್ಲವೋ ಎಂದು ನಿಶ್ಚಯ ಮಾಡಿಕೊಳ್ಳಿರಿ” ಅಥವಾ “ನೀವು ಮಾಡುತ್ತಿರುವುದು ದೇವರನ್ನು ಮೆಚ್ಚಿಸುವುದೋ ಇಲ್ಲವೋ ಎಂದು ನೋಡಿಕೊಳ್ಳಿರಿ” ಎಂದೂ ಅನುವಾದ ಮಾಡಬಹುದು.
  • “ಪವಿತ್ರಾತ್ಮನ ಕಾರ್ಯ” ಎನ್ನುವ ಮಾತನ್ನು “ಪವಿತ್ರಾತ್ಮನ ಅಧಿಕಾರ” ಅಥವಾ “ಪವಿತ್ರಾತ್ಮನ ಸೇವೆ” ಅಥವಾ “ಪವಿತ್ರಾತ್ಮನ ಕಾರ್ಯಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಫಲ, ಪವಿತ್ರಾತ್ಮ, ಆಶ್ಚರ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4566, H4567, H4611, H4659, H5949, G2041

ಕೀರ್ತನೆ

ಪದದ ಅರ್ಥವಿವರಣೆ:

“ಕೀರ್ತನೆ” ಎನ್ನುವ ಪದವು ಪರಿಶುದ್ಧವಾದ ಹಾಡನ್ನು ಸೂಚಿಸುತ್ತದೆ, ಅನೇಕ ಬಾರಿ ಹಾಡಿಕೊಳ್ಳುವುದಕ್ಕೆ ಬರೆಯಲ್ಪಟ್ಟ ಪದ್ಯರೂಪದಲ್ಲಿರುತ್ತದೆ.

  • ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಕೀರ್ತನೆಗಳ ಗ್ರಂಥವು ಅರಸನಾದ ದಾವೀದ, ಇತರ ಇಸ್ರಾಯೇಲ್ಯರಾದ ಮೋಶೆ, ಸೊಲೊಮೋನ, ಮತ್ತು ಆಸಾಫ, ಇನ್ನೂ ಅನೇಕರಿಂದ ಬರೆಯಲ್ಪಟ್ಟಿರುವ ಹಾಡುಗಳ ಸಂಗ್ರಹವಾಗಿರುತ್ತದೆ.
  • ಇಸ್ರಾಯೇಲ್ ದೇಶವು ದೇವರನ್ನು ಆರಾಧನೆ ಮಾಡುವ ಕೀರ್ತನೆಗಳನ್ನು ಉಪಯೋಗಿಸುತ್ತಿದ್ದರು.
  • ಸಂತೋಷ, ನಂಬಿಕೆ ಮತ್ತು ಗೌರವವನ್ನು, ಅದೇ ರೀತಿಯಾಗಿ ಬಾಧೆ ಮತ್ತು ದುಃಖಗಳನ್ನು ವ್ಯಕ್ತಪಡಿಸಲು ಕೀರ್ತನೆಗಳನ್ನು ಉಪಯೋಗಿಸಬಹುದು.
  • ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತರು ದೇವರನ್ನು ಆರಾಧಿಸುವ ವಿಧಾನವನ್ನಾಗಿ ಆತನಿಗೆ ಕೀರ್ತನೆಗಳನ್ನು ಹಾಡಬೇಕೆಂದು ಆಜ್ಞಾಪಿಸಲ್ಪಟ್ಟಿದ್ದರು.

(ಈ ಪದಗಳನ್ನು ಸಹ ನೋಡಿರಿ : ದಾವೀದ, ನಂಬಿಕೆ, ಸಂತೋಷ, ಮೋಶೆ, ಪರಿಶುದ್ಧ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H2158, H2167, H4210, G5567, G5568

ಕುರಿಮರಿ, ದೇವರ ಕುರಿಮರಿ

ಪದದ ಅರ್ಥವಿವರಣೆ:

“ಕುರಿಮರಿ” ಎನ್ನುವ ಪದವು ಚಿಕ್ಕ ಕುರಿಯನ್ನು ಸೂಚಿಸುತ್ತದೆ. ಕುರಿಗಳು ದಪ್ಪಗಿರುವ ಉಣ್ಣೆ ಕೂದಲು ಇರುವ ನಾಲ್ಕು ಕಾಲುಗಳ ಪ್ರಾಣಿಗಳು, ಇವುಗಳನ್ನು ಯೆಹೋವನಿಗೆ ಸರ್ವಾಂಗಹೋಮ ಮಾಡುವುದಕ್ಕಾಗಿ ಉಪಯೋಗಿಸುತ್ತಿದ್ದರು. ಯೇಸುವು “ದೇವರ ಕುರಿಮರಿ” ಎಂದು ಕರೆಯಲ್ಪಟ್ಟನು, ಯಾಕಂದರೆ ಜನರ ಪಾಪಗಳಿಗಾಗಿ ಆತನು ಕ್ರಯಧನವನ್ನು ಸಲ್ಲಿಸಲು ಬಲಿಯಾದನು.

  • ಈ ಪ್ರಾಣಿಗಳು ತುಂಬಾ ಸುಲಭವಾಗಿ ಪಕ್ಕ ದಾರಿಗೆ ಹೋಗುತ್ತವೆ ಮತ್ತು ಇವುಗಳಿಗೆ ಸಂರಕ್ಷಿಸುವವರು ಬೇಕೇ ಬೇಕಾಗುತ್ತಾರೆ. ದೇವರು ಮನುಷ್ಯರೆಲ್ಲರನ್ನು ಕುರಿಗಳಿಗೆ ಹೋಲಿಸಿದ್ದಾನೆ.
  • ದೇವರು ತನ್ನ ಜನರನ್ನು ಭೌತಿಕವಾಗಿ ಪರಿಪೂರ್ಣವಾದ ಕುರಿಗಳನ್ನು ಮತ್ತು ಕುರಿಮರಿಗಳನ್ನು ಆತನಿಗೆ ಸರ್ವಾಂಗಹೋಮ ಮಾಡಲು ಆಜ್ಞಾಪಿಸಿದನು.
  • ಯೇಸುವನ್ನು “ದೇವರ ಕುರಿಮರಿ” ಎಂದು ಕರೆಯಲ್ಪಟ್ಟನು, ಈತನು ಜನರ ಪಾಪಗಳಿಗೆ ಕ್ರಯಧನವನ್ನು ಸಲ್ಲಿಸಲು ಬಲಿಯಾಗಿದ್ದಾನೆ. ಈತನು ಪರಿಪೂರ್ಣನಾಗಿದ್ದಾನೆ, ಯಾವದೋಷವಿಲ್ಲದ ಬಲಿಯಾಗಿದ್ದಾನೆ, ಯಾಕಂದರೆ ಈತನು ಸಂಪೂರ್ಣವಾಗಿ ಯಾವ ಪಾಪವಿಲ್ಲದವನಾಗಿದ್ದನು.

ಅನುವಾದ ಸಲಹೆಗಳು:

  • ಭಾಷೆಯಲ್ಲಿ ಕುರಿಗಳು ಗೊತ್ತಿದ್ದರೆ, ಅವುಗಳ ಮರಿಗಳನ್ನು “ಕುರಿಮರಿ” ಮತ್ತು “ದೇವರ ಕುರಿಮರಿ” ಎನ್ನುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬೇಕಾಗಿರುತ್ತದೆ.
  • “ದೇವರ ಕುರಿಮರಿ” ಎನ್ನುವ ಮಾತನ್ನು “ದೇವರ (ಬಲಿಯಾಗುವ) ಕುರಿಮರಿ”, ಅಥವಾ “ದೇವರಿಗೆ ಬಲಿಯಾದ ಕುರಿಮರಿ” ಅಥವಾ “ದೇವರಿಂದ ಬಂದ (ಬಲಿಯಾಗುವ) ಕುರಿಮರಿ” ಎಂದೂ ಅನುವಾದ ಮಾಡಬಹುದು.
  • ಕುರಿಗಳ ಬಗ್ಗೆ ಗೊತ್ತಿಲ್ಲದಿದ್ದರೆ, ಈ ಪದವನ್ನು “ಚಿಕ್ಕ ಕುರಿ” ಎಂಬುದಾಗಿ ಅನುವಾದ ಮಾಡಬಹುದು, ಆದರೆ ಆ ಮಾತಿಗೆ ಪುಟದ ಕೆಳಭಾಗದಲ್ಲಿ ಎಂಥ ಕುರಿಯೆಂದು ವಿವರಣೆಯನ್ನು ಕೊಡಿರಿ. ಆ ಸೂಚನೆಯು ಆ ಪ್ರಾಂತ್ಯಕ್ಕೆ ಸಂಬಂಧಪಟ್ಟಿರುವ ಹಿಂಡುಗಳಲ್ಲಿ ಜೀವಿಸುವ ಅಂಜುಬುರುಕವಾಗಿರುವ, ಸಂರಕ್ಷಣೆಯಿಲ್ಲದ, ಆಚೆ ಹೋಗುವ ದಾರಿ ತಪ್ಪುವ ಪ್ರಾಣಿಗೆ ಈ ಕುರಿ ಮತ್ತು ಕುರಿಮರಿಗಳನ್ನು ಹೋಲಿಸಬೇಕು.
  • ಈ ಪದವನ್ನು ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿರುವ ಸತ್ಯವೇದದಲ್ಲಿ ಹೇಗೆ ಅನುವಾದ ಮಾಡಿದ್ದಾರೆನ್ನುವುದನ್ನು ಕೂಡ ನೋಡಿಕೊಳ್ಳಿರಿ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಕುರಿಗಳು, ಕುರುಬ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 05:07 ಅಬ್ರಾಹಾಮನು ಮತ್ತು ಇಸಾಕನು ಸರ್ವಾಂಗಹೋಮವನ್ನು ಕೊಡುವ ಸ್ಥಳಕ್ಕೆ ಹೋದಾಗ, “ತಂದೆಯೇ, ಸರ್ವಾಂಗಹೋಮಕ್ಕೆ ನಮ್ಮ ಬಳಿ ಕಟ್ಟಿಗೆಗಳು ಇದ್ದಾವೆ, ಆದರೆ __ ಕುರಿಮರಿ __ ಎಲ್ಲಿದೆ?” ಎಂದು ಇಸಾಕನು ಕೇಳಿದನು.
  • 11:02 ದೇವರು ತನ್ನಲ್ಲಿ ನಂಬಿದವರ ಚೊಚ್ಚಲ ಮಗುವನ್ನು ರಕ್ಷಿಸುವುದಕ್ಕೆ ಆತನು ಒಂದು ಮಾರ್ಗವನ್ನು ಕೊಟ್ಟನು. ಪ್ರತಿಯೊಂದು ಕುಟುಂಬವು ಒಂದು ಪರಿಪೂರ್ಣವಾದ __ ಕುರಿಮರಿಯನ್ನು __ ಅಥವಾ ಮೇಕೆಯನ್ನು ಆಯ್ದುಕೊಳ್ಳಬೇಕು ಮತ್ತು ಅದನ್ನು ಕೊಲ್ಲಬೇಕು.
  • 24:06 ಆ ಮರುದಿನ, ಯೇಸು ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ ಪಡೆಯುವುದಕ್ಕೆ ಬಂದನು. ಯೋಹಾನನು ಆತನನ್ನು ನೋಡಿ, “ಅಗೋ! ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದ __ ಕುರಿಮರಿ __” ಎಂದು ಹೇಳಿದನು.
  • 45:08 “ಅವರು ಆತನನ್ನು ಸಾಯಿಸುವುದಕ್ಕೆ __ ಕುರಿಮರಿಯಂತೆ __ ನಡೆಸಿದರು, ಮತ್ತು __ ಕುರಿಮರಿಯು __ ಮೌನವಾಗಿದ್ದಂತೆಯೇ, ಆತನು ಒಂದು ಮಾತನ್ನು ಮಾತನಾಡಲಿಲ್ಲ.
  • 48:08 ಅಬ್ರಾಹಾಮನ ಮಗನಾದ ಇಸಾಕನನ್ನು ಸರ್ವಾಂಗಹೋಮವನ್ನಾಗಿ ಅರ್ಪಿಸಬೇಕೆಂದು ದೇವರು ಅಬ್ರಾಹಾಮನನ್ನು ಕೇಳಿದಾಗ, ತನ್ನ ಮಗನಾದ ಇಸಾಕನಿಗೆ ಬದಲಾಗಿ ಸರ್ವಾಂಗ ಹೋಮವನ್ನು ಮಾಡುವುದಕ್ಕೆ ದೇವರು __ ಕುರಿಮರಿಯನ್ನು __ ಒದಗಿಸಿಕೊಟ್ಟಿದ್ದರು. ನಾವೆಲ್ಲರು ನಮ್ಮ ಪಾಪಗಳಿಗಾಗಿ ಸಾಯುವವರಾಗಿದ್ದೇವೆ! ಆದರೆ ನಮ್ಮ ಸ್ಥಾನದಲ್ಲಿ ಮರಣಿಸುವುದಕ್ಕೆ ಸರ್ವಾಂಗ ಹೋಮವನ್ನಾಗಿ ದೇವರು ತನ್ನ __ ಕುರಿಮರಿಯಾದ __ ಯೇಸುವನ್ನು ಅನುಗ್ರಹಿಸಿದ್ದಾನೆ.
  • 48:09 ದೇವರು ಐಗುಪ್ತದಲ್ಲಿ ಕೊನೆಯ ಮಾರಿರೋಗವನ್ನು ಕಳುಹಿಸಿಕೊಟ್ಟಾಗ, ಪರಿಪೂರ್ಣವಾದ __ ಕುರಿಮರಿಯನ್ನು __ ಕೊಂದು, ಅದರ ರಕ್ತವನ್ನು ಬಾಗಿಲಿನ ಎರಡು ಕಡೆಗೆ ಮತ್ತು ಮೇಲ್ಭಾಗದಲ್ಲಿ ಹಚ್ಚಬೇಕೆಂದು ಆತನು ಇಸ್ರಾಯೇಲ್ಯಲ್ ಕುಟುಂಬದವರಿಗೆ ಹೇಳಿದನು.

ಪದ ಡೇಟಾ:

  • Strong's: H7716, G721, G2316

ಕೃಪೆ, ಕೃಪೆಯುಳ್ಳ

ಪದದ ಅರ್ಥವಿವರಣೆ:

“ಕೃಪೆ” ಎನ್ನುವ ಪದವು ಸಹಾಯ ಅಥವಾ ಆಶೀರ್ವಾದ ಹೊಂದದ ಒಬ್ಬ ವ್ಯಕ್ತಿಗೆ ಅದನ್ನು ಕೊಡುವುದನ್ನು ಸೂಚಿಸುತ್ತದೆ. “ಕೃಪೆಯುಳ್ಳ” ಎನ್ನುವ ಪದವು ಇತರರಿಗೆ ಕೃಪೆಯನ್ನು ತೋರಿಸುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತಾ ಹೇಳುತ್ತದೆ.

  • ಪಾಪಾತ್ಮಗಳಾಗಿರುವ ಮನುಷ್ಯರ ವಿಷಯದಲ್ಲಿ ದೇವರ ಕೃಪೆ ಉಚಿತವಾಗಿ ಕೊಡಲ್ಪಡುತ್ತಿರುವ ಒಂದು ವರವಾಗಿರುತ್ತದೆ.
  • ಕೃಪೆಯ ಪರಿಕಲ್ಪನೆಯು ದಯೆಯಿಂದ ಇರುವುದನ್ನು ಮತ್ತು ಹಾನಿಕರವಾದ ಕೆಲಸಗಳನ್ನು ಅಥವಾ ಕೆಟ್ಟ ಕೆಲಸಗಳನ್ನು ಮಾಡಿದ ವ್ಯಕ್ತಿಯನ್ನು ಕ್ಷಮಿಸುವುದನ್ನು ಸೂಚಿಸುತ್ತದೆ.
  • “ಕೃಪೆಯನ್ನು ಕಂಡುಕೊ” ಎನ್ನುವ ಮಾತಿಗೆ ದೇವರಿಂದ ಕರುಣೆಯನ್ನು ಮತ್ತು ಸಹಾಯವನ್ನು ಪಡೆದುಕೊಳ್ಳುವುದು ಎಂದರ್ಥ. ಇದು ಅನೇಕಬಾರಿ ದೇವರಿಗೆ ಮೆಚ್ಚುಗೆಯಾದವರಿಗೆ ಸಹಾಯ ಮಾಡುವ ಅರ್ಥವನ್ನೂ ಒಳಗೊಂಡಿರುತ್ತದೆ.

ಅನುವಾದ ಸಲಹೆಗಳು:

  • “ಕೃಪೆ” ಎನ್ನುವ ಪದವನ್ನು ಅನುವಾದ ಮಾಡುವ ಇತರ ವಿಧಾನಗಳಲ್ಲಿ “ದೈವಿಕವಾದ ದಯೆ” ಅಥವಾ “ದೇವರ ದಯೆ” ಅಥವಾ “ಪಾಪಿಗಳಿಗಾಗಿ ದೇವರ ದಯೆ ಮತ್ತು ಕ್ಷಮಾಪಣೆ” ಅಥವಾ “ಕರುಣೆಯುಳ್ಳ ದಯೆ” ಎಂದೆನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಕೃಪೆಯುಳ್ಳ” ಎನ್ನುವ ಪದವನ್ನು “ಕೃಪಾಭರಿತ” ಅಥವಾ “ದಯೆ” ಅಥವಾ “ಕರುಣೆಯುಳ್ಳ” ಅಥವಾ “ಕರುಣೆಯುಳ್ಳ ದಯೆ” ಎಂದೂ ಅನುವಾದ ಮಾಡಬಹುದು.
  • “ಅವನು ದೇವರ ಕಣ್ಣುಗಳಲ್ಲಿ ಕೃಪೆಯನ್ನು ಕಂಡುಕೊಂಡನು” ಎನ್ನುವ ಮಾತನ್ನು “ಅವನು ದೇವರಿಂದ ಕರುಣೆಯನ್ನು ಪಡೆದುಕೊಂಡಿದ್ದಾನೆ” ಅಥವಾ “ದೇವರು ಕರುಣೆಯುಳ್ಳವನಾಗಿ ಅವನಿಗೆ ಸಹಾಯ ಮಾಡಿದನು” ಅಥವಾ “ದೇವರು ತನ್ನ ದಯೆಯನ್ನು ಅವನಿಗೆ ತೋರಿಸಿದನು” ಅಥವಾ “ದೇವರು ಅವನನ್ನು ಇಷ್ಟಪಟ್ಟನು, ಅದಕ್ಕೆ ಅವನಿಗೆ ಸಹಾಯ ಮಾಡಿದನು” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2580, H2587, H2589, H2603, H8467, G2143, G5485, G5543

ಕೆಟ್ಟ, ದುಷ್ಟ, ದುಷ್ಟತನ

ಪದದ ಅರ್ಥವಿವರಣೆ:

“ಕೆಟ್ಟ” ಮತ್ತು “ದುಷ್ಟ” ಎನ್ನುವ ಪದಗಳು ದೇವರ ಪರಿಶುದ್ಧ ಗುಣಲಕ್ಷಣಗಳಿಗೆ ಮತ್ತು ಆತನ ಚಿತ್ತಕ್ಕೆ ವಿರುದ್ಧಾಗಿರುವ ಪ್ರತಿಯೊಂದು ಕಾರ್ಯವನ್ನು ಸೂಚಿಸುತ್ತವೆ.

  • “ಕೆಟ್ಟ” ಎನ್ನುವ ಪದವು ಒಬ್ಬ ವ್ಯಕ್ತಿಯ ನಡತೆಯನ್ನು ಸೂಚಿಸುವಾಗ, “ದುಷ್ಟ” ಎನ್ನುವುದು ಒಬ್ಬ ವ್ಯಕ್ತಿಯ ನಡತೆಗಿಂತ ಹೆಚ್ಚಾದ ಕೆಟ್ಟತನವನ್ನು ಸೂಚಿಸಬಹುದು. ಆದರೆ, ಎರಡು ಪದಗಳು ಅರ್ಥ ಕೊಡುವುದರಲ್ಲಿ ಒಂದೇ ಅರ್ಥವನ್ನು ಕೊಡುತ್ತವೆ.
  • “ದುಷ್ಟತನ” ಎನ್ನುವ ಪದವು ಜನರು ದುಷ್ಟ ಕಾರ್ಯಗಳನ್ನು ಮಾಡುವಾಗ ಉಂಟಾಗುವ ಸ್ಥಿತಿಯನ್ನು ಸೂಚಿಸುತ್ತದೆ.
  • ಕೆಟ್ಟತನಕ್ಕೆ ಫಲಿತಗಳು ಸ್ಪಷ್ಟವಾಗಿ ತೋರಿಸಲ್ಪಟ್ಟಿವೆ, ಜನರು ಇತರರನ್ನು ಸಾಯಿಸುವುದು, ಅವರ ವಸ್ತುಗಳನ್ನು ಕದಿಯುವುದು, ಸುಳ್ಳುಸುದ್ಧಿ ಹೇಳುವುದರ ಮೂಲಕ, ಕ್ರೂರರಾಗಿ ಇರುವುದರ ಮೂಲಕ ಮತ್ತು ಕರುಣೆಯಿಲ್ಲದವರಾಗಿ ಇರುವುದರ ಮೂಲಕ ಯಾವರೀತಿ ಹಾನಿ ಮಾಡುತ್ತಾರೆಂದು ಹೇಳಲ್ಪಟ್ಟಿದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಕೆಟ್ಟ” ಮತ್ತು “ದುಷ್ಟ” ಎನ್ನುವ ಪದಗಳನ್ನು “ಚೆನ್ನಾಗಿಲ್ಲದಿರುವುದು” ಅಥವಾ “ಪಾಪತ್ಮವಾದದ್ದು” ಅಥವಾ “ಅನೈತಿಕವಾದದ್ದು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಒಳ್ಳೇಯದಲ್ಲ” ಅಥವಾ “ನೀತಿಯಲ್ಲದ್ದು” ಅಥವಾ “ನೈತಿಕತೆಯಿಲ್ಲದ್ದು” ಎನ್ನುವ ಪದಗಳನ್ನು ಉಪಯೋಗಿಸಬಹುದು.
  • ಅನುವಾದ ಮಾಡುವ ಭಾಷೆಯಲ್ಲಿ ಉಪಯೋಗಿಸುವ ಪದಗಳು ಸಂದರ್ಭಕ್ಕೆ ತಕ್ಕಂತೆ ಸ್ವಾಭಾವಿಕವಾಗಿ ಇರುವ ಪದಗಳು ಅಥವಾ ಮಾತುಗಳನ್ನು ಉಪಯೋಗಿಸಲು ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ಪಾಪ, ಒಳ್ಳೇಯದು, ನೀತಿ, ದೆವ್ವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 02:04 “ನೀವು ಇದನ್ನು ತಿಂದ ಮರುಕ್ಷಣವೇ, ನೀವು ದೇವರಂತೆ ಆಗುತ್ತೀರಿ ಮತ್ತು ಆತನಿಗೆ ತಿಳಿದಿರುವಂತೆ ನಿಮಗೆ ಕೂಡ ಒಳ್ಳೇಯದು __ ಕೆಟ್ಟದ್ದು __ ಎನ್ನುವ ಅರಿವು ಉಂಟಾಗುತ್ತದೆಯೆಂದು ದೇವರಿಗೆ ಗೊತ್ತು.”
  • 03:01 ಬಹುಕಾಲವಾದನಂತರ ಈ ಲೋಕದಲ್ಲಿ ಅನೇಕ ಜನರು ಜೀವಿಸಿದ್ದರು. ಅವರು ___ ದುಷ್ಟರಾದರು ___ ಮತ್ತು ಹಿಂಸೆಯನ್ನುಂಟು ಮಾಡುವವರಾದರು.
  • 03:02 ಆದರೆ ನೋಹನು ದೇವರ ದಯೆಯನ್ನು ಪಡೆದುಕೊಂಡನು. ___ ದುಷ್ಟ ___ ಜನರ ಮಧ್ಯೆದಲ್ಲಿ ಇವನೇ ನೀತಿವಂತನಾಗಿದ್ದನು.
  • 04:02 ___ ಕೆಟ್ಟದ್ದನ್ನು ___ ಮಾಡುವುದಕ್ಕೆ ಎಲ್ಲರು ಸೇರಿ ಕೆಲಸ ಮಾಡುತ್ತಿರುವುದನ್ನು ದೇವರು ನೋಡಿದರು, ಅವರು ಇನ್ನೂ ಅನೇಕ ಪಾಪ ಕಾರ್ಯಗಳನ್ನು ಮಾಡಬಹುದು.
  • 08:12 “ನನ್ನನ್ನು ಗುಲಾಮನನ್ನಾಗಿ ನೀವು ಮಾರಿದಾಗ ನೀವು ___ ಕೆಟ್ಟದ್ದನ್ನು ___ ಮಾಡುವುದಕ್ಕೆ ಯತ್ನಿಸಿದ್ದೀರಿ, ಆದರೆ ದೇವರು ಒಳ್ಳೆಯದಕ್ಕಾಗಿ ___ ಕೆಟ್ಟದ್ದನ್ನು ___ ಉಪಯೋಗಿಸಿಕೊಂಡಿದ್ದಾರೆ!”
  • 14:02 ಅವರು (ಕಾನಾನ್ಯರು) ಸುಳ್ಳು ದೇವರುಗಳನ್ನು ಆರಾಧನೆ ಮಾಡಿದರು ಮತ್ತು ಅನೇಕ ___ ದುಷ್ಟ ___ ಕಾರ್ಯಗಳನ್ನು ಮಾಡಿದರು.
  • 17:01 ಆದರೆ ಇವನು ದೇವರಿಗೆ ವಿಧೇಯನಾಗದಂತ ___ ದುಷ್ಟ ___ ಮನುಷ್ಯನಾಗಿ ಮಾರ್ಪಟ್ಟನು, ಆದ್ದರಿಂದ ಅವನ ಸ್ಥಾನದಲ್ಲಿ ಅರಸನಾಗಿರಲು ದೇವರು ಇನ್ನೊಬ್ಬ ವ್ಯಕ್ತಿಯನ್ನು ಆರಿಸಿಕೊಂಡರು.
  • 18:11 ಇಸ್ರಾಯೇಲ್ ಹೊಸ ರಾಜ್ಯದಲ್ಲಿದ್ದ ಅರಸರೆಲ್ಲರು ___ ದುಷ್ಟರಾಗಿದ್ದರು ___ .
  • 29:08 ಅರಸನು ತುಂಬಾ ಹೆಚ್ಚಾದ ಸಿಟ್ಟಿನಲ್ಲಿದ್ದನು, ಅದಕ್ಕೆ ಅವನು ___ ದುಷ್ಟ ___ ದಾಸನನ್ನು ಸೆರೆಮನೆಯೊಳಗೆ ಹಾಕಿದನು, ಅವನು ತನ್ನ ಎಲ್ಲಾ ಸಾಲವನ್ನು ತೀರಿಸುವತನಕ ಆ ಸೆರೆಮನೆಯಲ್ಲಿಯೇ ಬಿದ್ದಿರುವನು.
  • 45:02 ಇವನು (ಸ್ತೆಫೆನನು) ದೇವರ ಕುರಿತಾಗಿ ಮತ್ತು ಮೋಶೆಯ ಕುರಿತಾಗಿ ___ ಕೆಟ್ಟ ___ ಮಾತುಗಳನ್ನಾಡಿದ್ದನ್ನು ನಾವು ಕೇಳಿದೆವು!” ಎಂದು ಅವರು ಹೇಳಿದರು.
  • 50:17 ಆತನು (ಯೇಸು) ಪ್ರತಿಯೊಬ್ಬರ ಕಣ್ಣೀರನ್ನು ಹೊರೆಸುವನು ಮತ್ತು ಅಲ್ಲಿ ಯಾವ ಶ್ರಮೆಯು, ಬಾಧೆಯು, ಅಳುವುದು, ___ ಕೆಟ್ಟತನವು ___, ನೋವು, ಅಥವಾ ಮರಣವು ಇರುವುದಿಲ್ಲ.

ಪದ ಡೇಟಾ:

  • Strong's: H205, H605, H1100, H1681, H1942, H2154, H2162, H2617, H3415, H4209, H4849, H5753, H5766, H5767, H5999, H6001, H6090, H7451, H7455, H7489, H7561, H7562, H7563, H7564, G92, G113, G459, G932, G987, G988, G1426, G2549, G2551, G2554, G2555, G2556, G2557, G2559, G2560, G2635, G2636, G4151, G4189, G4190, G4191, G5337

ಕ್ರಮಶಿಕ್ಷಣೆ, ಕ್ರಮಪಡಿಸುವುದು, ಕ್ರಮಪಡಿಸಲಾಗಿದೆ, ಸ್ವಯಂ-ಕ್ರಮಶಿಕ್ಷಣೆ

ಪದದ ಅರ್ಥವಿವರಣೆ:

“ಕ್ರಮಶಿಕ್ಷಣೆ” ಎನ್ನುವ ಪದವು ನೈತಿಕವಾದ ನಡತೆಗಾಗಿ ಕೆಲವೊಂದು ನಿರ್ಧಿಷ್ಟವಾದ ನಿಯಮಗಳಿಗೆ ವಿಧೇಯರಾಗುವಂತೆ ಜನರನ್ನು ತರಬೇತಿಗೊಳಿಸುವುದನ್ನು ಸೂಚಿಸುವುದು.

  • ತಂದೆತಾಯಿಗಳು ತಮ್ಮ ಮಕ್ಕಳನ್ನು ನೈತಿಕವಾಗ ಮಾರ್ಗದರ್ಶನವನ್ನು ಕೊಟ್ಟು ಕ್ರಮಶಿಕ್ಷಣೆ ಕೊಡುತ್ತಾರೆ ಮತ್ತು ಅವುಗಳಿಗೆ ವಿಧೇಯರಾಗಬೇಕೆಂದು ಅವರಿಗೆ ಬೋಧನೆ ಮಾಡಿ, ಅವರನ್ನು ನಿರ್ದೇಶಿಸುತ್ತಾರೆ.
  • ಅದೇರೀತಿಯಾಗಿ, ದೇವರು ಕೂಡ ತನ್ನ ಆತ್ಮೀಯ ಮಕ್ಕಳು ತಮ್ಮ ಜೀವನಗಳಲ್ಲಿ ಆರೋಗ್ಯಕರವಾದ ಆತ್ಮೀಯತೆಯನ್ನು ತೋರಿಸುವುದಕ್ಕೆ ಅಂದರೆ ಸಂತೋಷ, ಪ್ರೀತಿ, ಸಮಾಧಾನಗಳನ್ನು ತೋರಿಸುವುದಕ್ಕೆ ಸಹಾಯ ಮಾಡಲು ಆತನು ಅವರಿಗೆ ಕ್ರಮಶಿಕ್ಷಣೆಯನ್ನು ಕೊಡುತ್ತಾನೆ.
  • ಕ್ರಮಶಿಕ್ಷಣೆಯಲ್ಲಿ ದೇವರನ್ನು ಮೆಚ್ಚಿಸುವ ಜೀವನ ಜೀವಿಸುವುದು ಹೇಗೆಂದು ಎನ್ನುವ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳೆಲ್ಲವೂ ಒಳಗೊಂಡಿರುತ್ತವೆ, ಅದೇರೀತಿಯಾಗಿ ದೇವರ ಚಿತ್ತಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಖಂಡಿತವಾಗಿ ಶಿಕ್ಷೆ ಕೊಡಲಾಗುತ್ತದೆ.
  • ಸ್ವಯಂ-ಕ್ರಮಶಿಕ್ಷಣೆ ಎನ್ನುವುದು ಒಬ್ಬರ ಸ್ವಂತ ಜೀವನದಲ್ಲಿ ನೈತಿಕವಾದ ಮತ್ತು ಆತ್ಮೀಯಕವಾದ ನಿಯಮಗಳನ್ನು ಅನ್ವಯಿಸುಕೊಳ್ಳುವ ಪದ್ಧತಿಯಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಕ್ರಮಶಿಕ್ಷಣೆ” ಎನ್ನುವ ಪದವನ್ನು “ತರಬೇತಿ ಕೊಟ್ಟು, ಆಜ್ಞಾಪಿಸು” ಅಥವಾ “ನೈತಿಕವಾಗಿ ಮಾರ್ಗದರ್ಶನ ನೀಡು” ಅಥವಾ “ತಪ್ಪುಗಳನ್ನು ಮಾಡಿದರೆ ಶಿಕ್ಷೆಯನ್ನು ಕೊಡು” ಎಂದೂ ಅನುವಾದ ಮಾಡಬಹುದು.
  • “ಕ್ರಮಶಿಕ್ಷಣೆ” ಎನ್ನುವ ನಾಮಪದವನ್ನು “ನೈತಿಕವಾಗಿ ತರಬೇತಿ ಕೊಡುವುದು” ಅಥವಾ “ಶಿಕ್ಷೆ ಕೊಡುವುದು” ಅಥವಾ “ನೈತಿಕವಾಗಿ ತಿದ್ದುಪಡಿಸುವುದು” ಅಥವಾ “ನೈತಿಕವಾಗಿ ಮಾರ್ಗದರ್ಶನ ನೀಡುವುದು ಮತ್ತು ಆದೇಶ ಮಾಡುವುದು” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4148, G1468

ಕ್ರಿಸ್ತ, ಮೆಸ್ಸೀಯ

ಸತ್ಯಾಂಶಗಳು;

“ಮೆಸ್ಸೀಯ” ಮತ್ತು “ಕ್ರಿಸ್ತ” ಎನ್ನುವ ಪದಗಳಿಗೆ “ಅಭಿಷೇಕಿಸಲ್ಪಟ್ಟವನು ಅಥವಾ ಅಭಿಷಿಕ್ತನು” ಎಂದರ್ಥ ಮತ್ತು ಈ ಪದವು ದೇವರ ಮಗನಾಗಿರುವ ಯೇಸುವನ್ನು ಸೂಚಿಸುತ್ತಿದೆ.

  • “ಮೆಸ್ಸೀಯ” ಮತ್ತು “ಕ್ರಿಸ್ತ” ಎನ್ನುವ ಎರಡೂ ಪದಗಳು ದೇವರ ಮಗನನ್ನು ಸೂಚಿಸುವುದಕ್ಕೆ ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲ್ಪಟ್ಟಿವೆ. ದೇವರು ಈತನನ್ನು ತನ್ನ ಜನರನ್ನು ಆಳುವುದಕ್ಕೆ ಮತ್ತು ಅವರ ಪಾಪಗಳಿಂದ, ಮರಣದಿಂದ ಬಿಡಿಸಿ ರಕ್ಷಿಸುವುದಕ್ಕೆ ಅರಸನಾಗಿ ನೇಮಿಸಿದ್ದನು.
  • ಮೆಸ್ಸೀಯ ಈ ಭೂಮಿಗೆ ಬರುವುದಕ್ಕೆ ಮುಂಚೆ ಸುಮಾರು ನೂರಾರು ವರ್ಷಗಳ ಮುಂದೆ ಹಳೇ ಒಡಂಬಡಿಕೆಯಲ್ಲಿ ಮೆಸ್ಸೀಯ ಕುರಿತು ಪ್ರವಾದಿಗಳು ಅನೇಕ ಪ್ರವಾದನೆಗಳನ್ನು ಬರೆದಿದ್ದರು.
  • ಈ ಪದದ ಅರ್ಥವಾಗಿರುವ “ಅಭಿಷೇಕಿಸಲ್ಪಟ್ಟವನು ಅಥವಾ ಅಭಿಷಿಕ್ತನು” ಎನ್ನುವ ಪದವು ಹಳೇ ಒಡಂಬಡಿಕೆಯಲ್ಲಿ ಈ ಭೂಲೋಕಕ್ಕೆ ಬರುವಂತಹ ಮೆಸ್ಸಯ್ಯಾನನ್ನೇ ಸೂಚಿಸುತ್ತದೆ.
  • ಈ ಪ್ರವಾದನೆಗಳಲ್ಲಿ ಅನೇಕ ಪ್ರವಾದನೆಗಳನ್ನು ಯೇಸು ನೆರವೇರಿಸಿದ್ದರು ಮತ್ತು ಆತನು ಮೆಸ್ಸೀಯ ಎಂದು ನಿರೂಪಣೆಯಾಗುವುದಕ್ಕೆ ಅನೆಕವಾದ ಅದ್ಭುತ ಕಾರ್ಯಾಗಳನ್ನು ಮಾಡಿದನು; ಈ ಪ್ರವಾದನೆಗಳಲ್ಲಿ ಉಳಿದವುಗಳು ಆತನು ಹಿಂದುರಿಗಿ ಬಂದಾಗ ನೆರವೇರಿಸುತ್ತಾನೆ.
  • “ಕ್ರಿಸ್ತ” ಎನ್ನುವ ಪದವು “ಕ್ರಿಸ್ತ ಯೇಸು” ಮತ್ತು "ಕ್ರಿಸ್ತನು" ಎಂದು ಸಾಮಾನ್ಯವಾಗಿ ಶೀರ್ಷಿಕೆಯಾಗಿ ಬಳಸಲಾಗುತ್ತದೆ.
  • ಯೇಸು ಕ್ರಿಸ್ತ“ಕ್ರಿಸ್ತ” ನಲ್ಲಿರುವಂತೆ "ಕ್ರಿಸ್ತ" ಕೂಡ ಅವನ ಹೆಸರಿನ ಭಾಗವಾಗಿ ಬಳಸಲ್ಪಟ್ಟಿದೆ.

ಅನುವಾದ ಸಲಹೆಗಳು:

  • ಈ ಪದವನ್ನು “ಅಭಿಷೇಕಿಸಲ್ಪಟ್ಟವನು” ಅಥವಾ “ದೇವರ ಅಭಿಷೇಕಿಸಲ್ಪಟ್ಟ ರಕ್ಷಕನು” ಎಂದು ಅರ್ಥ ಬರುವಂತಹ ಮಾತುಗಳಿಂದಲೂ ಅನುವಾದ ಮಾಡಬಹುದು.
  • ಅನೇಕ ಭಾಷೆಗಳಲ್ಲಿ “ಕ್ರಿಸ್ತ” ಅಥವಾ “ಮೆಸ್ಸೀಯ” ಎನ್ನುವ ಪದಗಳನ್ನು ಕ್ರಿಸ್ತ ಎಂದು ಅನುವಾದ ಮಾಡದೇ ಆ ಪದವನ್ನು ಹಾಗೆಯೇ ಉಚ್ಚರಿಸಿ, ಹಾಗೆಯೇ ಬರೆಯುತ್ತಿರುತ್ತಾರೆ. (ನೋಡಿರಿ: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)
  • ಲಿಪ್ಯಂತರಣ ಮಾಡಿದ ಪದದಲ್ಲಿ ಈ ಪದದ ಅರ್ಥವಿವರಣೆಯನ್ನಿಟ್ಟು ಬರೆಯಬಹುದು, ಉದಾಹರಣೆಗೆ, “ಕ್ರಿಸ್ತ, ಅಭಿಷಿಕ್ತನು”.
  • ಈ ಪದವನ್ನು ಸತ್ಯವೇದದಲ್ಲಿ ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿಕೊಳ್ಳಿರಿ, ಅದರಿಂದ ಈ ಪದವನ್ನು ಸರಿಯಾಗಿ ಸೂಚಿಸುವ ಪದವನ್ನೇ ಇಟ್ಟಿದ್ದೇವೋ ಇಲ್ಲವೋ ಎಂದು ಸ್ಪಷ್ಟವಾಗುತ್ತದೆ.
  • “ಮೆಸ್ಸೀಯ” ಮತ್ತು “ಕ್ರಿಸ್ತ” ಎನ್ನುವ ಪದಗಳಿಗೆ ಅನುವಾದವು ಸಂದರ್ಭಕ್ಕೆ ತಕ್ಕಂತೆ ಇದೆಯೋ ಇಲ್ಲವೋ ಎಂದು ನೋಡಿಕೊಳ್ಳಿರಿ. ಇವೆರಡು ಒಂದೇ ವಚನದಲ್ಲಿ ಕಾಣಿಸುವ ವಚನವನ್ನು ನೋಡಿರಿ (ಯೋಹಾನ.1:41).

(ಇದನ್ನು ಸಹ ನೋಡಿರಿ: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೇವರ ಮಗ, ದಾವೀದ, ಯೇಸು, ಅಭಿಷಿಕ್ತ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 17:07 ಪಾಪದಿಂದ ಲೋಕದ ಜನರನ್ನು ರಕ್ಷಿಸುವ ದೇವರು ಆಯ್ಕೆಮಾಡಿಕೊಂಡವನೇ ___ ಮೆಸ್ಸೀಯ___.
  • 17:08 ಇದು ನಡೆಯುವುದಕ್ಕಾಗಿ, __ ಮೆಸ್ಸೀಯ __ ಬರುವುದಕ್ಕೆ ಮುಂಚಿತವಾಗಿ ಇಸ್ರಾಯೇಲ್ಯರು ಸುಮಾರು 1,000 ವರ್ಷಗಳ ಕಾಲ ಎದುರುನೋಡ ಬೇಕಾಗಿತ್ತು.
  • 21:01 ಆರಂಭದಲ್ಲಿಯೇ ದೇವರು ___ ಮೆಸ್ಸೀಯನನ್ನು ___ ಕಳುಹಿಸಬೇಕೆಂದು ಪ್ರಣಾಳಿಕೆ ಮಾಡಿದ್ದನು.
  • 21:04 __ಮೆಸ್ಸೀಯ __ ದಾವೀದನ ಸಂತಾನದವರಲ್ಲಿ ಒಬ್ಬನಾಗಿರುವನೆಂದು ದೇವರು ಅರಸನಾದ ದಾವೀದನಿಗೆ ವಾಗ್ಧಾನ ಮಾಡಿದ್ದನು.
  • 21:05 __ ಮೆಸ್ಸೀಯ __ ಹೊಸ ಒಡಂಬಡಿಕೆಯನ್ನು ಆರಂಭಿಸುವನು.
  • 21:06 __ ಮೆಸ್ಸೀಯ __ ಪ್ರವಾದಿ, ಯಾಜಕ ಮತ್ತು ಅರಸನಾಗಿರುತ್ತಾನೆಂದು ದೇವರ ಪ್ರವಾದಿಗಳೂ ಹೇಳಿದ್ದರು.
  • 21:09 ___ ಮೆಸ್ಸೀಯ ___ ಕನ್ಯೆಯಿಂದ ಹುಟ್ಟಿ ಬರುತ್ತಾನೆಂದು ಪ್ರವಾದಿಯಾದ ಯೆಶಯಾ ಪ್ರವಾದಿಸಿದನು.
  • 43:07 “ನಿನ್ನ ___ ಪವಿತ್ರನಿಗೆ ___ ಕೊಳೆಯಲು ಬಿಡಲಾರೆ” ಎಂದು ಹೇಳುವ ಪ್ರವಾದನೆಯನ್ನು ನೆರವೇರಿಸಲು ದೇವರು ಆತನನ್ನು ತಿರುಗಿ ಎಬ್ಬಿಸಿದನು.
  • 43:09 __“ಯೇಸು ಒಡೆಯನಾಗಿರಲು ಮತ್ತು __ ಮೆಸ್ಸೀಯಯಾಗಿರಲು” ದೇವರ ಕಾರಣವಾಗಿದ್ದಾರೆಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ!
  • 43:11 “ನಿಮ್ಮಲ್ಲಿ ಪ್ರತಿಯೊಬ್ಬರೂ ಮಾನಸಾಂತರ ಹೊಂದಬೇಕು ಮತ್ತು ಯೇಸು ___ ಕ್ರಿಸ್ತನ ___ ನಾಮದಲ್ಲಿ ದೀಕ್ಷಾಸ್ನಾನ ಹೊಂದಬೇಕು, ಯಾಕಂದರೆ ಇದರಿಂದ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ” ಎಂದು ಪೇತ್ರನು ಉತ್ತರ ಕೊಟ್ಟನು.
  • 46:06 ಯೇಸು ದೇವರೇ ___ ಮೆಸ್ಸೀಯ ___ ಎಂದು ಸೌಲನು ಯೆಹೂದ್ಯರೊಂದಿಗೆ ವಾದಿಸಿದನು.

ಪದ ಡೇಟಾ:

  • Strong's: H4899, G3323, G5547

ಕ್ರಿಸ್ತನಲ್ಲಿ, ಯೇಸುವಿನಲ್ಲಿ, ಕರ್ತನಲ್ಲಿ, ಆತನಲ್ಲಿ

ಪದದ ಅರ್ಥವಿವರಣೆ:

“ಕ್ರಿಸ್ತನಲ್ಲಿ” ಎನ್ನುವ ಮಾತು ಮತ್ತು ಅದಕ್ಕೆ ಸಂಬಂಧಪಟ್ಟ ಮಾತುಗಳು ಯೇಸುಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದರ ಮೂಲಕ ಆತನ ಸಂಬಂಧದಲ್ಲಿರುವ ಸ್ಥಿತಿಯನ್ನು ಅಥವಾ ಸ್ಥಾನವನ್ನು ಸೂಚಿಸುತ್ತದೆ.

  • “ಕ್ರಿಸ್ತಯೇಸುವಿನಲ್ಲಿ, ಯೇಸುಕ್ರಿಸ್ತನಲ್ಲಿ, ಕರ್ತನಾದ ಯೇಸುವಿನಲ್ಲಿ, ಕರ್ತನಾದ ಯೇಸು ಕ್ರಿಸ್ತನಲ್ಲಿ” ಎನ್ನುವ ಇತರ ಸಂಬಂಧಿತವಾದ ಮಾತುಗಳು ಒಳಗೊಂಡಿರುತ್ತವೆ.
  • “ಕ್ರಿಸ್ತನಲ್ಲಿ” ಎನ್ನುವ ಪದಕ್ಕೆ ಬರುವ ಸಾಧಾರಣವಾದ ಅರ್ಥಗಳಲ್ಲಿ, “ನೀವು ಕ್ರಿಸ್ತನಿಗೆ ಸಂಬಂಧಪಟ್ಟಿರುವದರಿಂದ” ಅಥವಾ “ನೀವು ಕ್ರಿಸ್ತನೊಂದಿಗಿರುವ ಸಂಬಂಧದ ಮೂಲಕ” ಅಥವಾ “ನಿಮಗೆ ಕ್ರಿಸ್ತನಲ್ಲಿರುವ ನಂಬಿಕೆಯ ಆಧಾರದ ಮೇಲೆ” ಎನ್ನುವ ಅರ್ಥಗಳು ಬರುತ್ತವೆ.
  • ಯೇಸುವನ್ನು ನಂಬುವ ಸ್ಥಿತಿಯಲ್ಲಿರುವುದು ಮತ್ತು ಆತನ ಶಿಷ್ಯರಾಗಿರುವುದು ಎನ್ನುವ ಒಂದೇ ಅರ್ಥವನ್ನು ಈ ಎಲ್ಲಾ ಸಂಬಂಧಿತವಾದ ಪದಗಳು ಹೊಂದಿರುತ್ತವೆ.
  • ಸೂಚನೆ: ಕೆಲವೊಂದುಬಾರಿ “ಯಲ್ಲಿ” ಎನ್ನುವ ಪದವು ಕ್ರಿಯೆಗೆ ಸಂಬಂಧಪಟ್ಟಿರುತ್ತದೆ. ಉದಾಹರಣೆಗೆ, “ಕ್ರಿಸ್ತನಲ್ಲಿ ಹಂಚು” ಎನ್ನುವುದಕ್ಕೆ ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಬರುವ ಪ್ರಯೋಜನಗಳನ್ನು “ಹಂಚುವುದರಲ್ಲಿರು” ಎಂದರ್ಥ. ಕ್ರಿಸ್ತ”ನಲ್ಲಿ ಮಹಿಮೆ” ಎನ್ನುವುದಕ್ಕೆ ಯೇಸು ಯಾರೆಂದು ತಿಳಿದು ಮತ್ತು ಆತನು ಮಾಡಿದ ಕಾರ್ಯಕ್ಕಾಗಿ ದೇವರನ್ನು ಸ್ತುತಿಸು ಮತ್ತು ಸಂತೋಷವಾಗಿರು ಎಂದರ್ಥ. ಕ್ರಿಸ್ತ”ನಲ್ಲಿ ನಂಬಿಕೆಯಿಡುವುದು” ಎನ್ನುವುದಕ್ಕೆ ಆತನನ್ನು ರಕ್ಷಕನನ್ನಾಗಿ ನಂಬಿ, ಆತನ ಕುರಿತಾಗಿ ತಿಳಿದುಕೊಳ್ಳುವುದು ಎಂದರ್ಥ.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, “ಕ್ರಿಸ್ತನಲ್ಲಿ” ಮತ್ತು “ಕರ್ತನಲ್ಲಿ” (ಮತ್ತು ಅದಕ್ಕೆ ಸಂಬಂಧಪಟ್ಟ ಮಾತುಗಳನ್ನು) ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ ಅನೇಕ ಮಾತುಗಳು ಒಳಗೊಂಡಿರುತ್ತವೆ:
  • “ಕ್ರಿಸ್ತನಿಗೆ ಸಂಬಂಧಪಟ್ಟವರು”
  • “ಕ್ರಿಸ್ತನಲ್ಲಿ ನೀನು ನಂಬಿಕೆ ಇಟ್ಟಿರುವುದರಿಂದ”
  • “ಕ್ರಿಸ್ತನು ನಮ್ಮನ್ನು ರಕ್ಷಿಸಿದ್ದರಿಂದ”
  • “ಕರ್ತನ ಸೇವೆಯಲ್ಲಿ”
  • “ಕರ್ತನ ಮೇಲೆ ಆತುಕೊಳ್ಳುವುದು”
  • “ಕರ್ತನು ಮಾಡಿದ ಕಾರ್ಯದಿಂದ”
  • ಕ್ರಿಸ್ತ”ನಲ್ಲಿ ನಂಬಿಕೆಯಿಟ್ಟಿರುವ” ಜನರು ಅಥವಾ ಕ್ರಿಸ್ತನಲ್ಲಿ “ವಿಶ್ವಾಸವನ್ನು ಹೊಂದಿರುವ” ಜನರು ಕ್ರಿಸ್ತನು ಹೇಳಿದ ಪ್ರತಿಯೊಂದು ಮಾತನ್ನು ನಂಬುತ್ತಾರೆ ಮತ್ತು ಆತನು ಕಲ್ವಾರಿ ಶಿಲುಬೆಯಲ್ಲಿ ಮಾಡಿರುವ ತ್ಯಾಗದಿಂದ ಮತ್ತು ಅವರ ಪಾಪಗಳಿಗೆ ಸಲ್ಲಿಸಿದ ಕ್ರಯಧನದಿಂದ ಅವರನ್ನು ರಕ್ಷಿಸಿಕೊಳ್ಳುವುದಕ್ಕೆ ಆತನಲ್ಲಿ ಭರವಸೆ ಇಡುತ್ತಾರೆ, ಕೆಲವೊಂದು ಭಾಷೆಗಳಲ್ಲಿ ಒಂದೇ ಪದವನ್ನು ಹೊಂದಿರುತ್ತಾರೆ, “ಆತನಲ್ಲಿ ನಂಬಿಕೆಯಿಡು” ಅಥವಾ “ಆತನಲ್ಲಿ ಹಂಚು” ಅಥವಾ “ಆತನಲ್ಲಿ ಭರವಸೆವಿಡು” ಎನ್ನುವ ಕ್ರಿಯಾಪದಗಳನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಕರ್ತನು, ಯೇಸು, ನಂಬು, ವಿಶ್ವಾಸ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G1519, G2962, G5547

ಕ್ರಿಸ್ತವಿರೋಧಿ, ಕ್ರಿಸ್ತವಿರೋಧಿಗಳು

ಪದದ ಅರ್ಥವಿವರಣೆ:

“ಕ್ರಿಸ್ತವಿರೋಧಿ” ಎನ್ನುವ ಪದವು ಯೇಸು ಕ್ರಿಸ್ತನಿಗೆ ಅಥವಾ ಆತನ ಬೋಧನೆಗಳಿಗೆ ವಿರುದ್ಧವಾಗಿ ಮತ್ತು ಆತನ ಕಾರ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿಯನ್ನು ಸೂಚಿಸುತ್ತದೆ. ಪ್ರಪಂಚದಲ್ಲಿ ಕ್ರಿಸ್ತವಿರೋಧಿಗಳು ಅನೇಕರಿದ್ದಾರೆ.

  • ಯೇಸುಕ್ರಿಸ್ತ ಮೆಸ್ಸಯ್ಯಾ ಅಲ್ಲವೆಂದು ಅಥವಾ ಯೇಸು ದೇವರೂ ಅಲ್ಲ ಮತ್ತು ಮನುಷ್ಯನೂ ಅಲ್ಲವೆಂದು ಹೇಳಿ ಮನುಷ್ಯರನ್ನು ಮೋಸಗೊಳಿಸುವ ವ್ಯಕ್ತಿಯೇ ಕ್ರಿಸ್ತವಿರೋಧಿಯೆಂದು ಅಪೊಸ್ತಲನಾದ ಯೋಹಾನನು ಬರೆಯುತ್ತಿದ್ದಾನೆ.
  • ಯೇಸುವಿನ ಕಾರ್ಯಗಳನ್ನು ತಿರಸ್ಕರಿಸುವ ಕ್ರಿಸ್ತವಿರೋಧಿಯ ಸಾಮಾನ್ಯ ಆತ್ಮ ಪ್ರಪಂಚದಲ್ಲಿದೆಯೆಂದು ಸತ್ಯವೇದವು ಕೂಡ ಬೋಧಿಸುತ್ತಿದೆ.
  • ಹೊಸ ಒಡಂಬಡಿಕೆ ಪುಸ್ತಕದ ಪ್ರಕಟನೆ ಗ್ರಂಥದ 13ನೇ ಅಧ್ಯಾಯದಲ್ಲಿನ ಮೃಗವನ್ನು ಸಾಮಾನ್ಯವಾಗಿ ಕೊನೆಯ “ಕ್ರಿಸ್ತವಿರೋಧಿ” ಎಂದು ಗುರುತಿಸಲ್ಪಡುತ್ತಾನೆ, ಇವನು ಅಂತ್ಯಕಾಲದಲ್ಲಿ ಹೊರಬರುತ್ತಾನೆ. ದೇವರ ಜನರನ್ನು ನಾಶಗೊಳಿಸಲು ಈ ಮನುಷ್ಯನು ಪ್ರಯತ್ನಿಸುತ್ತಾನೆ, ಆದರೆ ಇವನು ಯೇಸುವಿನ ಮೂಲಕ ಸೋಲಿಸಲ್ಪಡುತ್ತಾನೆ.
  • ಅಪೊಸ್ತಲನಾದ ಪೌಲನು ಈ ಮನುಷ್ಯನನ್ನು "ಅಧರ್ಮಸ್ವರೂಪನು" ಎಂದು ಸೂಚಿಸುತ್ತಾನೆ (2 ಥೆಸ 2:3) ಮತ್ತು ಕ್ರೈಸ್ತ ವಿರೋಧಿಯ ಸಾಮಾನ್ಯ ಆತ್ಮವನ್ನು "ಅಧರ್ಮಸ್ವರೂಪನ ಗುಪ್ತ ಬಲ" ಎಂದು ಹೇಳುತ್ತಾನೆ.

(2 ಥೆಸ. 2:7).

ಅನುವಾದ ಸಲಹೆಗಳು:

  • ಈ ಪದವನ್ನು ಇನ್ನೊಂದು ರೀತಿಯಲ್ಲಿ ಅನುವಾದ ಮಾಡುವದರಲ್ಲಿ “ಕ್ರಿಸ್ತನ-ಎದುರಾಳಿ” ಅಥವಾ “ಕ್ರಿಸ್ತನ ಶತ್ರು” ಅಥವಾ “ಕ್ರಿಸ್ತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿ” ಎನ್ನುವ ಪದಗಳನ್ನೂ ಸೇರಿಸಬಹುದು.
  • “ಕ್ರಿಸ್ತವಿರೋಧಿಯ ಆತ್ಮವು” ಎನ್ನುವ ಮಾತು “ಕ್ರಿಸ್ತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಆತ್ಮ” ಅಥವಾ “ಕ್ರಿಸ್ತನ ಕುರಿತು ಸುಳ್ಳು ಬೋಧನೆಗಳನ್ನು ಮಾಡುವವರು” ಅಥವಾ “ಕ್ರಿಸ್ತನ ಕುರಿತು ಸುಳ್ಳು ಮಾತುಗಳನ್ನು ನಂಬುವ ಸ್ವಭಾವ” ಅಥವಾ “ಕ್ರಿಸ್ತನ ಕುರಿತು ಸುಳ್ಳು ಬೋಧನೆಗಳನ್ನು ಬೋಧಿಸುವ ಆತ್ಮ” ಎಂದೂ ಅನುವಾದ ಮಾಡಬಹುದು.
  • ಅದೇ ರೀತಿ ಈ ಪದವನ್ನು ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಸತ್ಯವೇದ ಅನುವಾದದಲ್ಲಿ ಯಾವರೀತಿ ಅನುವಾದ ಮಾಡಿದ್ದಾರೋ ಕೂಡ ನೋಡಿರಿ. (ಅನುವಾದ ಸಲಹೆಗಳು: /ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ತೋರಿಕೆ, ಶ್ರಮೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G500

ಕ್ರೈಸ್ತನು

ಅರ್ಥವಿವರಣೆ:

ಯೇಸು ಪರಲೋಕಕ್ಕೆ ಹಿಂತಿರುಗಿ ಹೋದ ಮೇಲೆ ಸ್ವಲ್ಪಕಾಲವಾದನಂತರ, ಜನರು “ಕ್ರೈಸ್ತರು” ಎಂದು ಹೆಸರನ್ನು ಇಟ್ಟುಕೊಂಡರು, ಇದಕ್ಕೆ “ಕ್ರಿಸ್ತನ ಹಿಂಬಾಲಕರು” ಎಂದರ್ಥ.

  • ಅಂತಿಯೋಕ್ಯ ಪಟ್ಟಣದಲ್ಲಿ ಯೇಸುವಿನ ಹಿಂಬಾಲಕರನ್ನು ಮೊಟ್ಟ ಮೊದಲು “ಕ್ರೈಸ್ತರು” ಎಂದು ಕರೆಯಲಾಯಿತು.
  • ಯಾವ ಒಬ್ಬ ವ್ಯಕ್ತಿ ಯೇಸುವನ್ನು ದೇವರ ಮಗನೆಂದು ನಂಬಿರುತ್ತಾನೋ ಮತ್ತು ತನ್ನ ಪಾಪಗಳಿಂದ ತನ್ನನ್ನು ರಕ್ಷಿಸುವುದಕ್ಕೆ ಯೇಸುವನ್ನು ನಂಬಿರುತ್ತಾನೋ ಅವನೇ ಕ್ರೈಸ್ತನು.
  • ನಮ್ಮ ಆಧುನಿಕ ಕಾಲದಲ್ಲಿ, “ಕ್ರೈಸ್ತನು” ಎನ್ನುವ ಪದವು ಅನೇಕಬಾರಿ ಕ್ರೈಸ್ತ ಧರ್ಮಕ್ಕೆ ಸೇರಿದವನೆಂದು ಗುರುತಿಸುವ , ಆದರೆ ಅವರು ನಿಜವಾಗಿ ಯೇಸುವನ್ನು ಹಿಂಬಾಲಿಸದವರಿಗೆ ಉಪಯೋಗಿಸುತ್ತಿದ್ದಾರೆ . ಸತ್ಯವೇದದಲ್ಲಿ “ಕ್ರೈಸ್ತನು” ಎನ್ನುವುದಕ್ಕೆ ಈ ಅರ್ಥವಲ್ಲ.
  • ಯಾಕಂದರೆ ಸತ್ಯವೇದದಲ್ಲಿ “ಕ್ರೈಸ್ತನು” ಎನ್ನುವ ಪದವನ್ನು ಯಾವಾಗಲೂ ಯೇಸುವನ್ನು ನಿಜವಾಗಿ ನಂಬಿದವರಿಗೆ ಮಾತ್ರ ಸೂಚಿಸಲಾಗಿತ್ತು. ಒಬ್ಬ ಕ್ರೈಸ್ತನನ್ನು “ವಿಶ್ವಾಸಿ” ಎಂದೂ ಕರೆಯುತ್ತಾರೆ.

ಅನುವಾದದ ಸಲಹೆಗಳು:

  • ಈ ಪದವನ್ನು “ಕ್ರಿಸ್ತ-ಹಿಂಬಾಲಕ” ಅಥವಾ “ಕ್ರಿಸ್ತನ ಅನುಚಾರಕ” ಅಥವಾ “ಕ್ರಿಸ್ತ-ಮನುಷ್ಯ” ಎಂದೂ ಅನುವಾದ ಮಾಡಬಹುದು.
  • ಈ ಪದದ ಅನುವಾದವು ಶಿಷ್ಯನು ಅಥವಾ ಅಪೊಸ್ತಲನು ಎನ್ನುವ ಪದಗಳಿಗೆ ಉಪಯೋಗಿಸುವ ಪದಗಳಿಗಿಂತ ಭಿನ್ನವಾಗಿ ಅನುವಾದ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಈ ಪದವನ್ನು ಅನುವಾದ ಮಾಡುತ್ತಿರುವಾಗ ಕೇವಲ ಒಂದು ಗುಂಪಿಗೆ ಮಾತ್ರವಲ್ಲದೇ, ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರನ್ನು ಸೂಚಿಸುವಂತೆ ನೋಡಿಕೊಳ್ಳಿರಿ.
  • ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಯಲ್ಲಿರುವ ಸತ್ಯವೇದದ ಅನುವಾದಗಳಲ್ಲಿ ಈ ಪದವನ್ನು ಯಾವರೀತಿ ಅನುವಾದಿಸಿದ್ದಾರೆಂಬುದನ್ನು ಪರಿಗಣಿಸಿ. (ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಇವುಗಳನ್ನು ಸಹ ನೋಡಿರಿ : ಅಂತಿಯೋಕ್ಯ, ಕ್ರಿಸ್ತನು, ಸಭೆ, ಶಿಷ್ಯನು, ನಂಬಿಕೆ, ಯೇಸು, ದೇವರ ಮಗ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 46:9 ಅಂತಿಯೋಕ್ಯದಲ್ಲಿಯೇ ಯೇಸುವಿನಲ್ಲಿ ನಂಬಿಕೆಯಿಟ್ಟವರನ್ನು ಮೊಟ್ಟ ಮೊದಲು ಕ್ರೈಸ್ತರೆಂದು ಕರೆಯಲಾಯಿತು.
  • 47:14 ಯೇಸುವಿನ ಕುರಿತಾಗಿ ಶುಭವಾರ್ತೆಯನ್ನು ಬೋಧಿಸಲು ಮತ್ತು ಸಾರಲು ಪೌಲನು ಮತ್ತು ಇತರ __ಕ್ರೈಸ್ತ __ನಾಯಕರು ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡಿದರು.
  • 49:15 ಯೇಸು ನಿನಗಾಗಿ ಏನು ಮಾಡಿದ್ದಾನೆಂದು ತಿಳಿದು, ಆತನಲ್ಲಿ ನೀನು ನಂಬಿಕೆ ಇಡುವುದಾದರೆ, ಆಗ ನೀನು ಕ್ರೈಸ್ತನು ಎಂಬುದಾಗಿ ಕರೆಯಲ್ಪಡುವಿ!
  • 49:16 ನೀನು ಕ್ರೈಸ್ತರಾಗಿದ್ದರೆ, ಯೇಸು ಮಾಡಿದ ಕಾರ್ಯದಿಂದ ದೇವರು ನಿಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ.
  • 49:17 ನೀನು ಕ್ರೈಸ್ತರಾಗಿದ್ದರೂ ಸಹ, ನೀವು ಪಾಪ ಮಾಡುವದಕ್ಕೆ ಶೋಧನೆಗೆ ಒಳಗಾಗುತ್ತೀ.
  • 50:3 ಆತನು ಪರಲೋಕಕ್ಕೆ ಹಿಂತಿರುಗಿ ಹೋಗುವುದಕ್ಕೆ ಮುಂಚಿತವಾಗಿ, ಸುವಾರ್ತೆಯನ್ನು ಕೇಳದ ಪ್ರತಿಯೊಬ್ಬರಿಗೆ ನೀವು ಶುಭವಾರ್ತೆಯನ್ನು ಸಾರಿರಿ ಎಂದು ಯೇಸು ಕ್ರೈಸ್ತರಿಗೆ ಹೇಳಿದನು.
  • 50:11 ಯೇಸು ಹಿಂದುರಿಗಿ ಬರುವಾಗ, ಮರಣ ಹೊಂದಿದ ಪ್ರತಿಯೊಬ್ಬ

ಕ್ರೈಸ್ತನು ಮರಣದಿಂದ ಎಬ್ಬಿಸಲ್ಪಡುವನು ಮತ್ತು ಆಕಾಶದಲ್ಲಿ ಆತನನ್ನು ಭೇಟಿಯಾಗುವನು.

ಪದದ ಡೇಟಾ:

  • Strong's: G55460

ಕ್ರೋಧ, ಕೋಪ

ಪದದ ಅರ್ಥವಿವರಣೆ:

ಕ್ರೋಧ ಎನ್ನುವುದು ಕೆಲವೊಂದು ಬಾರಿ ಅತೀ ಹೆಚ್ಚಿನ ಕಾಲ ಇರುವ ಗಂಭೀರವಾದ ಕೋಪವನ್ನು ಸೂಚಿಸುತ್ತದೆ. ಇದು ವಿಶೇಷವಾಗಿ ಪಾಪದ ಕುರಿತಾಗಿ ದೇವರ ನೀತಿಯುತವಾದ ತೀರ್ಪನ್ನು ಮತ್ತು ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರ ಶಿಕ್ಷೆಯನ್ನು ಸೂಚಿಸುತ್ತದೆ(ಇದು ಮಾನವ ವ್ಯಕ್ತಿಯ ವಿಷಯದಲ್ಲಿ ನಿಜವಾಗಬಹುದು).

  • ಸತ್ಯವೇದದಲ್ಲಿ “ಕ್ರೋಧ” ಎನ್ನುವ ಪದವು ಸಾಧಾರಣವಾಗಿ ದೇವರಿಗೆ ವಿರುದ್ಧವಾಗಿ ಪಾಪ ಮಾಡಿದವರ ಮೇಲೆ ದೇವರು ಕೋಪಪಡುವುದನ್ನು ಸೂಚಿಸುತ್ತದೆ.
  • “ದೇವರ ಕ್ರೋಧ” ಎನ್ನುವ ಮಾತು ಕೂಡ ಪಾಪಕ್ಕಾಗಿ ದೇವರು ಮಾಡುವ ತೀರ್ಪನ್ನು ಮತ್ತು ಶಿಕ್ಷೆಯನ್ನು ಸೂಚಿಸುತ್ತದೆ.
  • ದೇವರ ಕ್ರೋಧ ಎನ್ನುವುದು ಯಾರ್ಯಾರು ತಮ್ಮ ಪಾಪಗಳ ವಿಷಯವಾಗಿ ಪಶ್ಚಾತ್ತಾಪ ಹೊಂದದವರಿಗೆ ದೇವರು ಕೊಡುವ ನೀತಿಯುತವಾದ ದಂಡನೆಯಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, ಈ ಪದವನ್ನು ಅನುವಾದ ಬೇರೊಂದು ವಿಧಾನಗಳಲ್ಲಿ “ಗಂಭೀರವಾದ ಕೋಪ” ಅಥವಾ “ನೀತಿಯುತವಾದ ಶಿಕ್ಷೆ” ಅಥವಾ “ಕೋಪ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ದೇವರ ಕ್ರೋಧದ ಕುರಿತಾಗಿ ಮಾತನಾಡುವಾಗ, ಈ ಪದವನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸುವ ಶಬ್ದವಾಗಲಿ ಅಥವಾ ಮಾತಾಗಲಿ ಕ್ರೋಧದ ಪಾಪದ ಯೋಗ್ಯತೆಯನ್ನು ಸೂಚಿಸದಂತೆ ನೋಡಿಕೊಳ್ಳಿರಿ. ದೇವರ ಕ್ರೋಧವು ನ್ಯಾಯವಾದದ್ದು ಮತ್ತು ಪರಿಶುದ್ಧ ವಾದದ್ದು.

(ಈ ಪದಗಳನ್ನು ಸಹ ನೋಡಿರಿ : ತೀರ್ಪು ಮಾಡು, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H639, H2197, H2528, H2534, H2740, H3707, H3708, H5678, H7107, H7109, H7110, H7265, H7267, G2372, G3709, G3949, G3950

ಕ್ಷಮಿಸು, ಕ್ಷಮಿಸಲ್ಪಡು, ಕ್ಷಮಾಪಣೆ, ಕ್ಷಮೆ, ಕ್ಷಮಿಸುವಿಕೆ

ಪದದ ಅರ್ಥವಿವರಣೆ:

ಒಬ್ಬರನ್ನು ಕ್ಷಮಿಸು ಎನ್ನುವುದಕ್ಕೆ ಅವರು ನೋಯಿಸುವಂತಹ ಕೆಲಸ ಮಾಡಿದ್ದರೂ ಆ ವ್ಯಕ್ತಿಯ ಮೇಲೆ ದ್ವೇಷವನ್ನು ಇಟ್ಟುಕೊಳ್ಳಬೇಡ. “ಕ್ಷಮಾಪಣೆ” ಎನ್ನುವುದು ಒಬ್ಬರನ್ನು ಕ್ಷಮಿಸುವ ಕ್ರಿಯೆಯನ್ನು ಸೂಚಿಸುತ್ತದೆ.

  • ಒಬ್ಬರನ್ನು ಕ್ಷಮಿಸುವುದು ಎನ್ನುವುದಕ್ಕೆ ಆ ವ್ಯಕ್ತಿ ಮಾಡಿದ ತಪ್ಪು ಕೆಲಸಕ್ಕೆ ಅಥವಾ ಪಾಪಗಳಿಗೆ ಯಾವ ಶಿಕ್ಷೆಯನ್ನು ಕೊಡದೇ ಇರುವುದು ಎಂದರ್ಥ.
  • “ಸಾಲವನ್ನು ಕ್ಷಮಿಸು” ಎಂದೆನ್ನುವ ಮಾತಿನ ಅರ್ಥದಂತೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದರೆ, “ರದ್ದುಗೊಳಿಸು” ಎನ್ನುವ ಅರ್ಥ ಬರುತ್ತದೆ,
  • ಜನರು ತಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಯೇಸುವು ಶಿಲುಬೆಯ ಮೇಲೆ ಮಾಡಿದ ತ್ಯಾಗಪೂರಿತವಾದ ಮರಣದ ಆಧಾರದ ಮೇಲೆ ದೇವರು ಅವರನ್ನು ಕ್ಷಮಿಸುವನು.
  • ನಾನು ಕ್ಷಮಿಸಿದಂತೆಯೇ ನೀವೂ ಇತರರನ್ನು ಕ್ಷಮಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದಾನೆ.

“ಕ್ಷಮೆ” ಎನ್ನುವ ಪದಕ್ಕೆ ಕ್ಷಮಿಸುವುದು ಮತ್ತು ಒಬ್ಬರು ಮಾಡಿದ ಪಾಪಕ್ಕೆ ಅವರನ್ನು ಶಿಕ್ಷಿಸದಿರುವುದು ಎನ್ನುವ ಅರ್ಥಗಳು ಇವೆ.

  • ಈ ಪದಕ್ಕೆ “ಕ್ಷಮಿಸು” ಎನ್ನುವ ಒಂದೇ ರೀತಿಯ ಅರ್ಥವು ಹೊಂದಿರುತ್ತದೆ, ಆದರೆ ಅಪರಾಧ ಭಾವನೆಗೆ ಒಳಗಾದ ವ್ಯಕ್ತಿಯನ್ನು ಶಿಕ್ಷಿಸಬಾರದೆನ್ನುವ ಸಾಧಾರಣವಾದ ನಿರ್ಣಯವನ್ನು ತೆಗೆದುಕೊಳ್ಳುವ ಅರ್ಥವನ್ನು ಒಳಗೊಂಡಿರುತ್ತದೆ.
  • ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅಪರಾಧ ಮಾಡಿದ ವ್ಯಕ್ತಿಯನ್ನು ಕ್ಷಮಿಸುವ ಅವಕಾಶವಿದೆ.
  • ನಾವು ಪಾಪದ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದರೂ, ಯೇಸುಕ್ರಿಸ್ತ ನಮ್ಮನ್ನು ನರಕಕ್ಕೆ ಕಳುಹಿಸುವ ಶಿಕ್ಷೆಯನ್ನು ಕೊಡದೇ, ಆತನು ಶಿಲುಬೆಯಲ್ಲಿ ಮಾಡಿದ ತ್ಯಾಗಪೂರಿತವಾದ ಮರಣದಿಂದ ನಮ್ಮನ್ನು ಕ್ಷಮಿಸಿದ್ದಾನೆ

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ಅನುಸಾರವಾಗಿ, “ಕ್ಷಮಿಸು” ಎನ್ನುವ ಪದವನ್ನು “ಕ್ಷಮೆ” ಅಥವ “ರದ್ದುಗೊಳಿಸು” ಅಥವಾ “ಬಿಡುಗಡೆ ಮಾಡು” ಅಥವಾ (ಒಬ್ಬರ ಮೇಲೆ) “ಯಾವ ದ್ವೇಷವನ್ನು ಇಟ್ಟುಕೊಳ್ಳಬೇಡ” ಎಂದೂ ಅನುವಾದ ಮಾಡಬಹುದು.
  • “ಕ್ಷಮಾಪಣೆ” ಎನ್ನುವ ಪದವನ್ನು “ಅಸಮಾಧಾನವನ್ನು ಅಭ್ಯಾಸ ಮಾಡಬೇಡ” ಅಥವಾ “ಅಪರಾಧಿ ಎಂದು ಯಾರನ್ನೂ ನಿರ್ಧರಿಸಬೇಡ” ಅಥವಾ “ಕ್ಷಮಿಸುವ ಕ್ರಿಯೆ” ಎಂದೂ ಅರ್ಥ ಬರುವ ಮಾತುಗಳಿಂದ ಅನುವಾದ ಮಾಡಬಹುದು.
  • ಕ್ಷಮಿಸುವುದಕ್ಕೆ ಸಾಧಾರಣವಾಗಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇರೊಂದು ಪದವು ಭಾಷೆಯಲ್ಲಿ ಇರುವುದಾದರೆ, ಅದನ್ನು “ಕ್ಷಮೆ” ಎನ್ನುವ ಪದಕ್ಕೆ ಬದಲಾಗಿ ಉಪಯೋಗಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಅಪರಾಧ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದ ಕತೆಗಳಿಂದ ಉದಾಹರೆಣೆಗಳು:

  • 07:10 ಆದರೆ ಏಸಾವನು ಯಾಕೋಬನನ್ನು __ ಕ್ಷಮಿಸಿದ್ದನು __ ಮತ್ತು ಅವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಕ್ಕೆ ಸಂತೋಷಪಟ್ಟರು.
  • 13:15 ಆದನಂತರ ಮೋಶೆ ಮತ್ತೊಮ್ಮೆ ಪರ್ವತವನ್ನು ಏರಿದನು ಮತ್ತು ದೇವರೇ ಈ ಜನರನ್ನು __ ಕ್ಷಮಿಸು __ ಎಂದು ಪ್ರಾರ್ಥನೆ ಮಾಡಿದನು. ದೇವರು ಮೋಶೆಯ ಪ್ರಾರ್ಥನೆಯನ್ನು ಕೇಳಿ, ಅವರನ್ನು __ ಕ್ಷಮಿಸಿದನು __.
  • 17:13 ದಾವೀದನು ತನ್ನ ಪಾಪಕ್ಕಾಗಿ ಪಶ್ಚಾತ್ತಾಪಪಟ್ಟನು ಮತ್ತು ದೇವರು ಅವನನ್ನು __ ಕ್ಷಮಿಸಿದನು __.
  • 21:05 ಹೊಸ ಒಡಂಬಡಿಕೆಯಲ್ಲಿ ದೇವರು ತನ್ನ ಧರ್ಮಶಾಸ್ತ್ರವನ್ನು ತನ್ನ ಜನರ ಮೇಲೆ ಬರೆಯುತ್ತಾನೆ, ಜನರು ದೇವರನ್ನು ವೈಯುಕ್ತಿಕವಾಗಿ ತಿಳಿದುಕೊಳ್ಳುತ್ತಾರೆ, ಅವರು ಆತನ ಪ್ರಜೆಯಾಗಿರುವರು, ಮತ್ತು ದೇವರು ಆವರ ಪಾಪಗಳನ್ನು __ ಕ್ಷಮಿಸುವನು __.
  • 29:01 “ಬೋಧಕನೆ, ನನ್ನ ಸಹೋದರನು ನನಗೆ ವಿರುದ್ಧವಾಗಿ ಪಾಪಗಳನ್ನು ಮಾಡಿದಾಗ, ನಾನು ಎಷ್ಟುಸಲ __ ಕ್ಷಮಿಸಬೇಕು __?” ಎಂದು ಒಂದು ದಿನ ಪೇತ್ರನು ಯೇಸುವನ್ನು ಕೇಳಿದನು,
  • 29:08 ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನನ್ನು __ ಕ್ಷಮಿಸುತ್ತಿದ್ದೇನೆ __.
  • 38:05 ಆದನಂತರ ಯೇಸು ಪಾತ್ರೆಯನ್ನು ತೆಗೆದುಕೊಂಡು, “ಇದನ್ನು ಕುಡಿಯಿರಿ. ಇದು ಪಾಪಗಳನ್ನು __ ಕ್ಷಮಿಸುವುದಕ್ಕೆ __ ಸುರಿಸಲ್ಪಡುವ ನನ್ನ ಹೊಸ ಒಡಂಬಡಿಕೆಯ ರಕ್ತ” ಎಂದು ಹೇಳಿದನು.

ಪದ ಡೇಟಾ:

  • H5546, H5547, H3722, H5375, H5545, H5547, H7521, G859, G863, G5483

ಗುಡಾರ

ಪದದ ಅರ್ಥವಿವರಣೆ:

ಗುಡಾರ ಎನ್ನುವುದು ಇಸ್ರಾಯೇಲ್ಯರು ಸುಮಾರು 40 ವರ್ಷಗಳ ಕಾಲ ಅರಣ್ಯದಲ್ಲಿ ಪ್ರಯಾಣ ಮಾಡಿದ ಸಮಯದಲ್ಲಿ ಅವರು ದೇವರನ್ನು ಆರಾಧಿಸುವುದಕ್ಕೆ ಇಟ್ಟುಕೊಂಡಿರುವ ವಿಶೇಷವಾದ ರಚನೆಯಿಂದ ಕೂಡಿದ ಗುಡಾರವಾಗಿದ್ದಿತ್ತು.

  • ಈ ಒಂದು ದೊಡ್ಡ ಗುಡಾರವನ್ನು ನಿರ್ಮಿಸುವುದಕ್ಕೆ ದೇವರು ಇಸ್ರಾಯೇಲ್ಯರಿಗೆ ಎಲ್ಲಾ ರೀತಿಯ ಸೂಚನೆಗಳನ್ನು ಕೊಟ್ಟಿದ್ದರು, ಅದರಲ್ಲಿ ಎರಡು ಕೊಠಡಿಗಳಿದ್ದವು, ಇದರ ಸುತ್ತಲು ಗೋಡೆಗಳಿಂದ ಕೂಡಿದ ಪ್ರಾಂಗಣವಿದ್ದಿತ್ತು.
  • ಇಸ್ರಾಯೇಲ್ಯರು ಅರಣ್ಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದಾಗ, ಯಾಜಕರು ಗುಡಾರವನ್ನು ತೆಗೆದುಕೊಂಡು ಅವರು ನಿವಾಸ ಮಾಡುವುದಕ್ಕೆ ಹೋಗುತ್ತಿರುವ ಬೇರೊಂದು ಸ್ಥಳಕ್ಕೆ ಹೊತ್ತಿಕೊಂಡು ಹೋಗಬೇಕಾಗಿದ್ದಿತ್ತು. ಅವರು ಹೋಗಿರುವ ಹೊಸ ಸ್ಥಳದ ಮಧ್ಯಭಾಗದಲ್ಲಿ ಅದನ್ನು ಪುನಃ ನಿರ್ಮಿಸಬೇಕಾಗಿರುತ್ತಿತ್ತು.
  • ಗುಡಾರ ಎನ್ನುವುದನ್ನು ಬಟ್ಟೆ, ಮೇಕೆ ಕೂದಲು, ಮತ್ತು ಪ್ರಾಣಿಗಳ ಚರ್ಮಗಳಿಂದ ಮಾಡಿದ ತೆರೆಗಳನ್ನು ಕಟ್ಟಿಗೆ ಚೌಕಟ್ಟುಗಳಿಗೆ ಇಳಿಹಾಕುವುದರ ಮೂಲಕ ನಿರ್ಮಿಸುತ್ತಿದ್ದರು. ಇದರ ಸುತ್ತಮುತ್ತಲಿರುವ ಪ್ರಾಂಗಣವನ್ನು ಹೆಚ್ಚಿನ ತೆರೆಗಳಿಂದ ಸುತ್ತುವರಿಯಲ್ಪಟ್ಟಿರುತ್ತದೆ.
  • ಗುಡಾರದಲ್ಲಿರುವ ಎರಡು ಭಾಗಗಳಲ್ಲಿ ಒಂದು ಪರಿಶುದ್ಧವಾದ ಸ್ಥಳ (ಧೂಪವನ್ನು ಹಾಕುವುದಕ್ಕೆ ಯಜ್ಞವೇದಿಯನ್ನು ಇಟ್ಟಿರುವ ಸ್ಥಳವಾಗಿರುತ್ತದೆ) ಮತ್ತು ಇನ್ನೊಂದು ಅತಿ ಪರಿಶುದ್ಧ ಸ್ಥಳವಾಗಿರುತ್ತದೆ (ಒಡಂಬಡಿಕೆಯ ಮಂಜೂಷವನ್ನು ಇಟ್ಟಿರುವ ಸ್ಥಳವಾಗಿರುತ್ತದೆ).
  • ಗುಡಾರದ ಪ್ರಾಂಗಣದಲ್ಲಿ ಪ್ರಾಣಿಗಳನ್ನು ದಹಿಸುವುದಕ್ಕಿರುವ ಯಜ್ಞವೇದಿಯನ್ನು ಮತ್ತು ಧಾರ್ಮಿಕ ಶುದ್ಧೀಕರಣಕ್ಕೆ ಒಂದು ವಿಶೇಷವಾದ ಗಂಗಾಳವನ್ನು ಇಟ್ಟಿರುತ್ತಾರೆ.
  • ಸೊಲೊಮೋನನ ಮೂಲಕ ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಿದಾಗ ಇಸ್ರಾಯೇಲ್ಯರು ಗುಡಾರವನ್ನು ಉಪಯೋಗಿಸುವುದನ್ನು ನಿಲ್ಲಿಸಿದರು.

ಅನುವಾದ ಸಲಹೆಗಳು:

  • “ಗುಡಾರ” ಎನ್ನುವ ಪದಕ್ಕೆ “ನಿವಾಸವಾಗಿರುವ ಸ್ಥಳ” ಎಂದರ್ಥ. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನದಲ್ಲಿ “ಪರಿಶುದ್ಧ ಗುಡಾರ” ಅಥವಾ “ದೇವರು ಇರುವ ಗುಡಾರ” ಅಥವಾ “ದೇವರ ಗುಡಾರ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಪದಕ್ಕೆ ಮಾಡಿರುವ ಅನುವಾದವು “ದೇವಾಲಯ” ಎನ್ನುವ ಪದಕ್ಕೆ ಬೇರೆಯಾಗಿರುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಧೂಪ ವೇದಿಕೆ, ಒಡಂಬಡಿಕೆಯ ಮಂಜೂಷ, ದೇವಾಲಯ, ಭೇಟಿ ಮಾಡುವ ಗುಡಾರ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H168, H4908, H5520, H5521, H5522, H7900, G4633, G4634, G4636, G4638

ಗುರುತು, ಗುರುತುಗಳು, ನಿರೂಪಣೆ, ಜ್ಞಾಪನೆ

ಪದದ ಅರ್ಥವಿವರಣೆ:

ಗುರುತು ಎನ್ನುವುದು ಒಂದು ವಿಶೇಷವಾದ ಅರ್ಥವನ್ನು ನೀಡುವ ಉದ್ದೇಶವು, ಸಂಘಟನೆ, ಅಥವಾ ಕ್ರಿಯೆಯಾಗಿರುತ್ತದೆ.

  • “ಗುರುತು” ಎಂಬ ಪದವು ಸಾಮಾನ್ಯವಾಗಿ ವಿಶೇಷ ಅರ್ಥವನ್ನು ತಿಳಿಸುವ ವಸ್ತು, ಘಟನೆ ಮತ್ತು ಕ್ರೀಯೆಯನ್ನು ಸೂಚಿಸುತ್ತದೆ. .
  • ಆಕಾಶದಲ್ಲಿ ದೇವರು ಉಂಟುಮಾಡಿದ ಕಾಮನಬಿಲ್ಲುಗಳು ಪ್ರಚಂಚದಾದ್ಯಂತ ಪ್ರಳಯವನ್ನು ಬರಮಾಡುವುದರ ಮೂಲಕ ಎಲ್ಲಾ ಮನುಷ್ಯರನ್ನು ನಾಶಮಾಡುವುದಿಲ್ಲವೆಂದು ದೇವರು ಮಾಡಿದ ವಾಗ್ಧಾನವನ್ನು ಜನರಿಗೆ ನೆನಪು ಮಾಡುವ ಗುರುತುಗಳಾಗಿರುತ್ತವೆ.
  • ಇಸ್ರಾಯೇಲ್ಯರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆಂದು ಹೇಳುವುದಕ್ಕೆ ಗುರುತಾಗಿರಲು ಅವರ ಮಕ್ಕಳಿಗೆ ಸುನ್ನತಿಯನ್ನು ಮಾಡಬೇಕೆಂದು ದೇವರು ಅವರಿಗೆ ಆಜ್ಞಾಪಿಸಿದರು.
  • ಗುರುತುಗಳು ಕೆಲವೊಂದು ಮುಖ್ಯಾಂಶಗಳನ್ನು ಹೇಳುತ್ತವೆ:
  • ಬೆತ್ಲೆಹೇಮಿನಲ್ಲಿ ಯಾವ ಶಿಶುವು ಮೆಸ್ಸೀಯನಾಗಿ ಹುಟ್ಟಿದ್ದಾನೆಂದು ಕುರುಬರು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ದೂತನು ಒಂದು ಗುರುತನ್ನು ಹೇಳಿರುವುದನ್ನು ಲೂಕನ ಸುವಾರ್ತೆಯಲ್ಲಿ ವಿವರಿಸಲಾಗಿದೆ..
  • ಧರ್ಮ ಸಂಬಂಧವಾದ ನಾಯಕರು ಬಂಧಿಸಬೇಕಾದ ಯೇಸು ಯಾರೆಂದು ತಿಳಿದುಕೊಳ್ಳುವುದಕ್ಕೆ ಒಂದು ಗುರುತಾಗಿ ಯೂದನು ಯೇಸುವಿಗೆ ಮುದ್ದಿಟ್ಟಿದ್ದನು.
  • ಗುರುತುಗಳು ಕೆಲವೊಂದನ್ನು ನಿಜವೆಂದು ನಿರೂಪಿಸುತ್ತದೆ.
  • ಐಗುಪ್ತವನ್ನು ನಾಶಪಡಿಸಲು ಬಂದಂತಹ ವ್ಯಾಧಿಗಳು ಯೆಹೋವನು ಯಾರೆಂದು ಗುರುತಿಸುತ್ತದೆ, ಮತ್ತು ಯೆಹೋವನು ಐಗುಪ್ತ ದೇವರಿಗಿಂತ ಹಾಗೂ ಫರೋಹನನಿಗಿಂತ ದೊಡ್ಡವನು ಎಂದು ವಿಮೋಚನಕಾಂಡ ಪುಸ್ತಕವು ನಿರೂಪಿಸುತ್ತದೆ.
  • ಅಪೊಸ್ತಲರು ಮತ್ತು ಪ್ರವಾದಿಗಳಿಂದ ನಡೆದ ಅನೇಕ ಅದ್ಭುತ ಕಾರ್ಯಗಳು ಅವರು ದೇವರ ಸಂದೇಶವನ್ನು ಪ್ರಕಟಿಸುತ್ತಿದ್ದಾರೆಂದು ನಿರೂಪಿಸುವುದಕ್ಕೆ ಗುರುತುಗಳಾಗಿರುತ್ತವೆ.
  • ಯೇಸು ಮಾಡಿದ ಅನೇಕ ಆಶ್ಚರ್ಯಗಳೆಲ್ಲವು ಈತನು ನಿಜವಾಗಿಯೂ ಮೆಸ್ಸೀಯನೆಂದು ನಿರೂಪಿಸುವ ಗುರುತುಗಳಾಗಿದ್ದವು.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ “ಗುರುತು” ಎನ್ನುವದನ್ನು “ಸಂಕೇತ” ಅಥವಾ “ಚಿಹ್ನೆ” ಅಥವಾ “ಕರೆ” ಅಥವಾ “ಆಧಾರ” ಅಥವಾ “ಪುರಾವೆ” ಅಥವಾ “ಸೂಚನೆ” ಎಂದೂ ಅನುವಾದ ಮಾಡಬಹುದು.
  • “ಕೈಗಳಿಂದ ಸಂಕೇತಗಳನ್ನು ಮಾಡು” ಎನ್ನುವ ಮಾತನ್ನು “ಕೈಗಳನ್ನು ಅಲುಗಾಡಿಸು” ಅಥವಾ “ಕೈಗಳಿಂದ ಸೂಚನೆಗಳನ್ನು ಕೊಡು” ಅಥವಾ “ಸೂಚನೆಗಳನ್ನು ಕೊಡು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ ಯಾವುದಾದರೊಂದನ್ನು ನಿರೂಪಿಸುವ “ಗುರುತು” ಎನ್ನುವ ಪದಕ್ಕೆ ಒಂದೇ ಪದವನ್ನು ಹೊಂದಿರಬಹುದು, ಮತ್ತು ಆಶ್ಚರ್ಯಕಾರ್ಯವನ್ನು ಸೂಚಿಸುವ ಪದವು “ಸೂಚಕ ಕ್ರಿಯೆ” ಎನ್ನುವ ಮಾತನ್ನು ಬಳಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಆಶ್ಚರ್ಯಕಾರ್ಯ, ಅಪೊಸ್ತಲ, ಕ್ರಿಸ್ತ, ಒಡಂಬಡಿಕೆ, ಸುನ್ನತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H226, H852, H2368, H2858, H4150, H4159, H4864, H5251, H5824, H6161, H6725, H6734, H7560, G364, G880, G1213, G1229, G1718, G1730, G1732, G1770, G3902, G4102, G4591, G4592, G4953, G4973, G5280

ಘನಪಡಿಸು

ಪದದ ಅರ್ಥವಿವರಣೆ:

“ಘನಪಡಿಸು” ಮತ್ತು “ಘನಪಡಿಸುವುದು” ಎನ್ನುವ ಪದಗಳು ಒಬ್ಬರಿಗೆ ಗೌರವ ಕೊಡುವುದನ್ನು, ಮಾನ್ಯತೆ ನೀಡುವುದನ್ನು ಅಥವಾ ಭಕ್ತಿ ಮಾಡುವುದನ್ನು ಸೂಚಿಸುತ್ತದೆ.

  • ಘನಪಡಿಸುವುದೆನ್ನುವುದು ಅತ್ಯುನ್ನತ ಸ್ಥಾನದಲ್ಲಿರುವ ಮತ್ತು ಮುಖ್ಯವಾದ ವ್ಯಕ್ತಿಗಳಿಗೆ ಕೊಡುವುದಾಗಿರುತ್ತದೆ. ಉದಾಹರಣೆಗೆ, ದೇವರು ಅಥವಾ ಒಬ್ಬ ಅರಸ.
  • ಒಬ್ಬರನ್ನೊಬ್ಬರು ಗೌರವಿಸಿಕೊಳ್ಳಿರಿ ಎಂದು ದೇವರು ಕ್ರೈಸ್ತರಿಗೆ ಅಪ್ಪಣೆ ಕೊಟ್ಟಿದ್ದಾನೆ.
  • ಮಕ್ಕಳು ಕೂಡ ತಮ್ಮ ತಂದೆತಾಯಿಗಳನ್ನು ಘನಪಡಿಸಬೇಕೆಂದು ಆಜ್ಞಾಪಿಸಲ್ಪಟ್ಟಿದ್ದಾರೆ, ಅದರಲ್ಲಿ ಅವರನ್ನು ಗೌರವಿಸುವುದು ಮತ್ತು ಅವರಿಗೆ ವಿಧೇಯರಾಗಿರುವುದು ಒಳಗೊಂಡಿರುತ್ತದೆ.
  • “ಘನಪಡಿಸು” ಮತ್ತು “ಮಹಿಮೆ” ಎನ್ನುವ ಪದಗಳು ಅನೇಕಸಲ ಎರಡು ಸೇರಿಸಿ ಉಪಯೋಗಿಸಲ್ಪಟ್ಟಿರುತ್ತವೆ, ವಿಶೇಷವಾಗಿ ಯೇಸುವಿಗೆ ಸೂಚಿಸಿದಾಗ ಉಪಯೋಗಿಸಲ್ಪಟ್ಟಿರುತ್ತವೆ. ಈ ಪದಗಳು ಒಂದೇ ಅರ್ಥವನ್ನು ಸೂಚಿಸುವ ಎರಡು ವಿಧಾನಗಳಾಗಿರುತ್ತವೆ.
  • ದೇವರನ್ನು ಘನಪಡಿಸುವುದರಲ್ಲಿ ಕೃತಜ್ಞತೆ ಹೇಳುವುದು ಮತ್ತು ಆತನನ್ನು ಮಹಿಮೆಪಡಿಸುವುದು ಒಳಗೊಂಡಿರುತ್ತದೆ ಮತ್ತು ಆತನು ಎಷ್ಟು ದೊಡ್ಡವನೆಂದು ತೋರಿಸುವ ವಿಧಾನದಲ್ಲಿ ಜೀವಿಸುವುದು ಮತ್ತು ಆತನಿಗೆ ವಿಧೇಯತೆ ತೋರಿಸುವುದರ ಮೂಲಕ ಆತನಿಗೆ ಗೌರವವನ್ನು ತೋರಿಸುತ್ತೇವೆ.

ಅನುವಾದ ಸಲಹೆಗಳು:

  • “ಘನಪಡಿಸು” ಎನ್ನುವದನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಗೌರವಿಸು” ಅಥವಾ “ಮಾನ್ಯತೆ ಕೊಡು” ಅಥವಾ “ಹೆಚ್ಚಿನ ಗೌರವವನ್ನು ಕೊಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಘನಪಡಿಸು” ಎನ್ನುವ ಪದವನ್ನು “ವಿಶೇಷವಾದ ಗೌರವವನ್ನು ತೋರಿಸು” ಅಥವಾ “ಸ್ತುತಿ ಹೊಂದುವಂತೆ ಮಾಡು” ಅಥವಾ “ಹೆಚ್ಚಿನ ಗೌರವವನ್ನು ತೋರಿಸು” ಅಥವಾ “ಉನ್ನತ ಬೆಲೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಗೌರವಿಸು, ಮಹಿಮೆ, ಮಹಿಮೆ, ಸ್ತುತಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1420, H1921, H1922, H1923, H1926, H1927, H1935, H2082, H2142, H3366, H3367, H3368, H3372, H3373, H3374, H3444, H3513, H3519, H3655, H3678, H5081, H5375, H5457, H6213, H6286, H6437, H6942, H6944, H6965, H7236, H7613, H7812, H8597, H8416, G820, G1391, G1392, G1784, G2151, G2570, G3170, G4411, G4586, G5091, G5092, G5093, G5399

ಚೀಯೋನಿನ ಕುಮಾರ್ತೆ

ಅರ್ಥವಿವರಣೆ:

“ಚೀಯೋನಿನ ಕುಮಾರ್ತೆ” ಎನ್ನುವ ಮಾತು ಇಸ್ರಾಯೇಲ್ ಜನರನ್ನು ಸೂಚಿಸುವ ಅಲಂಕಾರಿಕ ಮಾತಾಗಿರುತ್ತದೆ. ಈ ಮಾತನ್ನು ಸಹಜವಾಗಿ ಪ್ರವಾದನೆಗಳಲ್ಲಿ ಉಪಯೋಗಿಸುತ್ತಾರೆ.

  • ಹಳೇ ಒಡಂಬಡಿಕೆಯಲ್ಲಿ “ಚೀಯೋನ್” ಎನ್ನುವ ಪದವು ಅನೇಕಬಾರಿ ಯೆರೂಸಲೇಮಿನ ಪಟ್ಟಣಕ್ಕೆ ಉಪಯೋಗಿಸಿದ ಮತ್ತೊಂದು ಪದವಾಗಿರುತ್ತದೆ.
  • “ಚೀಯೋನ್” ಮತ್ತು “ಯೆರೂಸಲೇಮ್” ಎನ್ನುವ ಪದಗಳು ಕೂಡ ಇಸ್ರಾಯೇಲ್ ಜನರನ್ನು ಸೂಚಿಸುತ್ತವೆ.
  • “ಕುಮಾರ್ತೆ” ಎನ್ನುವ ಪದವು ಪ್ರೀತಿ ವಿಶ್ವಾಸಗಳಿಗೆ ಸೂಚನೆಯಾಗಿರುತ್ತದೆ. ದೇವರು ತನ್ನ ಜನರ ಮೇಲೆ ಸಹನೆ ಮತ್ತು ಜಾಗರೂಕತೆಯನ್ನು ಇಟ್ಟಿದ್ದಾರೆನ್ನುವುದಕ್ಕೆ ಅಲಂಕಾರಿಕ ಮಾತಾಗಿರುತ್ತದೆ.

ಅನುವಾದ ಸಲಹೆಗಳು:

  • ಈ ಪದವನ್ನು ಉಪಯೋಗಿಸುವ ವಿಧಾನಗಳಲ್ಲಿ “ಚೀಯೋನಿನಿಂದ ಬಂದ ನನ್ನ ಇಸ್ರಾಯೇಲ್ ಕುಮಾರ್ತೆ” ಅಥವಾ “ಚೀಯೋನಿನ ಜನರೇ” ನನಗೆ ಕುಮಾರ್ತೆಯಂತೆ ಇದ್ದೀರಿ ಅಥವಾ “ಚೀಯೋನ್, ನನ್ನ ಪ್ರೀತಿಯ ಇಸ್ರಾಯೇಲ್ ಜನರೆ” ಎನ್ನುವ ಮಾತುಗಳನ್ನೂ ಉಪಯೋಗಿಸುತ್ತಾರೆ.
  • “ಚೀಯೋನ್” ಎನ್ನುವ ಪದವನ್ನು ಸತ್ಯವೇದದಲ್ಲಿ ಅನೇಕಬಾರಿ ಉಪಯೋಗಿಸಿದ್ದರಿಂದ, ಇದನ್ನು ಹಾಗೆಯೇ ಉಪಯೋಗಿಸುವುದು ಒಳ್ಳೇಯದು. ಅನುವಾದದಲ್ಲಿ ಈ ಮಾತಿನ ಅರ್ಥವನ್ನು ಮತ್ತು ಪ್ರವಾದನೆಯಲ್ಲಿ ಉಪಯೋಗಿಸುವ ವಿಧಾನದಲ್ಲಿ ವಿವರಿಸುವುದು ಒಳ್ಳೇಯದು.
  • “ಕುಮಾರ್ತೆ” ಎನ್ನುವ ಪದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದರಿಂದ ಅದನ್ನು ಹಾಗೆಯೇ ಉಪಯೋಗಿಸುವುದು ಒಳ್ಳೇಯದು.

(ಇವುಗಳನ್ನು ಸಹ ನೋಡಿರಿ : ಯೆರೂಸಲೇಮ್, ಪ್ರವಾದಿ, ಚೀಯೋನ್)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H1323, H6726

ಚೀಯೋನ್, ಚೀಯೋನ್ ಪರ್ವತ

ಅರ್ಥವಿವರಣೆ:

ವಾಸ್ತವಿಕವಾಗಿ “ಚೀಯೋನ್” ಅಥವಾ “ಚೀಯೋನ್ ಪರ್ವತ” ಎನ್ನುವ ಪದವು ಯೆಬೂಸಿಯರಿಂದ ಅರಸನಾದ ದಾವೀದನು ವಶಪಡಿಸಿಕೊಂಡಿರುವ ಕೋಟೆ ಅಥವಾ ಬಲವಾದ ಬುರುಜನ್ನು ಸೂಚಿಸುತ್ತದೆ. ಈ ಎರಡು ಪದಗಳು ಯೆರೂಸಲೇಮ್ ಪಟ್ಟಣವನ್ನು ಸೂಚಿಸುತ್ತವೆ.

  • ಚೀಯೋನ್ ಪರ್ವತವು ಮತ್ತು ಮೊರಿಯಾ ಬೆಟ್ಟವು ಯೆರೂಸಲೇಮ್ ಪಟ್ಟಣವಿರುವ ಸ್ಥಳದಲ್ಲಿ ಎರಡು ಬೆಟ್ಟಗಳಾಗಿರುತ್ತವೆ. ಸ್ವಲ್ಪ ಕಾಲವಾದನಂತರ “ಚೀಯೋನ್” ಮತ್ತು “ಚೀಯೋನ್ ಪರ್ವತ” ಎನ್ನುವ ಎರಡು ಪದಗಳು ಈ ಎರಡು ಬೆಟ್ಟಗಳನ್ನು ಮತ್ತು ಯೆರೂಸೇಲಮ್ ಪಟ್ಟಣವನ್ನು ಸೂಚಿಸುವುದಕ್ಕೆ ಸಾಧಾರಣವಾಗಿ ಉಪಯೋಗಿಸುತ್ತಿದ್ದರು. ಕೆಲವೊಂದುಬಾರಿ ಯೆರೂಸಲೇಮಿನಲ್ಲಿರುವ ದೇವಾಲಯವನ್ನು ಸೂಚಿಸುವುದಕ್ಕೂ ಉಪಯೋಗಿಸುತ್ತಿದ್ದರು. (ನೋಡಿರಿ: ಲಾಕ್ಷಣಿಕ ಪ್ರಯೋಗ)
  • ದಾವೀದನು ಚೀಯೋನನ್ನು ಅಥವಾ ಯೆರೂಸಲೇಮನ್ನು “ದಾವೀದನ ನಗರ” ಎಂದು ಹೆಸರಿಟ್ಟನು. ಇದು ದಾವೀದನ ಸ್ವಂತ ಊರಾಗಿರುವ ಬೆತ್ಲೆಹೇಮಿಗೆ ಬೇರೆಯಾಗಿರುತ್ತದೆ, ಇದನ್ನೂ ದಾವೀದನ ನಗರ ಎಂದು ಕರೆಯುತ್ತಾರೆ.
  • “ಚೀಯೋನ್” ಎನ್ನುವ ಪದವನ್ನು ಸಹಜವಾಗಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ, ಇದನ್ನು ಇಸ್ರಾಯೇಲ್ಯರನ್ನು ಅಥವಾ ದೇವರ ಆತ್ಮೀಯ ರಾಜ್ಯವನ್ನು ಅಥವಾ ದೇವರು ಸೃಷ್ಟಿಸುವ ಹೊಸ ಪರಲೋಕದ ಯೆರೂಸಲೇಮನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ.

(ಇವುಗಳನ್ನು ಸಹ ನೋಡಿರಿ : ಅಬ್ರಾಹಾಮ, ದಾವೀದ, ಯೆರೂಸಲೇಮ್, ಬೆತ್ಲೆಹೇಮ್, ಯೆಬೂಸಿಯರು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H6726

ಚೊಚ್ಚಲತನದ ಹಕ್ಕು

ಪದದ ಅರ್ಥವಿವರಣೆ

ಸತ್ಯವೇದದಲ್ಲಿ ಸಹಜವಾಗಿ “ಚೊಚ್ಚಲತನದ ಹಕ್ಕು” ಎನ್ನುವ ಪದವನ್ನು, ಕುಟುಂಬದ ಹೆಸರು ಮತ್ತು ಕುಟುಂಬದಲ್ಲಿ ಹುಟ್ಟಿದ ಚೊಚ್ಚಲ ಮಗನಿಗೆ ಕೊಡಲ್ಪಡುವ ಲೌಕಿಕ ಆಸ್ತಿಯನ್ನು ಸೂಚಿಸುತ್ತಿದೆ.

  • ಚೊಚ್ಚಲತನದ ಹಕ್ಕುನಲ್ಲಿ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಎರಡು ಪಾಲು ಚೊಚ್ಚಲ ಮಗನಿಗೆ ಸಿಗುತ್ತದೆ.
  • ಅರಸನು ಮರಣಿಸಿದ ನಂತರ ರಾಜ್ಯವನ್ನು ಆಳುವದಕ್ಕೆ ಚೊಚ್ಚಲತನದ ಹಕ್ಕು ಅವನ ಚೊಚ್ಚಲ ಮಗನಿಗೆ ಅಧಿಕಾರ ನೀಡುತ್ತದೆ.
  • ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ತನ್ನ ತಮ್ಮನಾದ ಯಾಕೋಬನಿಗೆ ವಿಕ್ರಯಿಸಿದನು. ಆದಕಾರಣ, ಚೊಚ್ಚಲ ಮಗನಾದ ಏಸಾವ ಅನುಭವಿಸ ಬೇಕಾದ ಆಶೀರ್ವಾದವನ್ನು ಯಾಕೋಬನು ಸಂಪಾದಿಸಿಕೊಂಡನು.
  • ಚೊಚ್ಚಲ ಮಗನ ಹೆಸರಿನಲ್ಲಿ ತನ್ನ ಕುಟುಂಬದ ವಂಶವನ್ನು ಗ್ರಹಿಸುವ ಭಾಗ್ಯವು ಚೊಚ್ಚಲತನದ ಹಕ್ಕುನಲ್ಲಿ ಒಂದಾಗಿದೆ.

ಅನುವಾದ ಸಲಹೆಗಳು:

  • “ಚೊಚ್ಚಲತನದ ಹಕ್ಕು” ಎನ್ನುವ ಪದವನ್ನು “ಚೊಚ್ಚಲ ಮಗನ ಹಕ್ಕುಗಳು ಮತ್ತು ಆಸ್ತಿ” ಅಥವಾ “ಕುಟುಂಬದ ಗೌರವ” ಅಥವಾ “ಚೊಚ್ಚಲ ಮಗನ ಭಾಗ್ಯ ಮತ್ತು ಸ್ವಾಸ್ಥ್ಯ” ಎಂದು ಅನುವಾದ ಮಾಡಬಹುದು

(ಈ ಪದಗಳನ್ನು ಸಹ ನೋಡಿರಿ : ಚೊಚ್ಚಲ ಮಗ, ಸ್ವಾಸ್ಥ್ಯ, ವಂಶ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1062, G4415

ಜೀವನ, ಜೀವಿಸು, ಜೀವಿಸಿದೆ,  ಜೀವಂತವಾಗಿರುವುದು

ಪದದ ಅರ್ಥವಿವರಣೆ:

"ಜೀವನ" ಎಂಬ ಪದವು ಭೌತಿಕವಾಗಿ ಸತ್ತವರ ವಿರುದ್ಧ ದೈಹಿಕವಾಗಿ ಜೀವಂತವಾಗಿರುವುದನ್ನು ಸೂಚಿಸುತ್ತದೆ. “ಭೌತಿಕವಾದ ಜೀವನ” ಮತ್ತು “ಆತ್ಮೀಯಕವಾದ ಜೀವನ” ಎನ್ನುವ ಮಾತುಗಳಿಗೆ ಅರ್ಥವೇನೆಂಬುವುದನ್ನು ಈ ಕೆಳಕಂಡ ಚರ್ಚೆಗಳು ಹೇಳುತ್ತವೆ.

1. ಭೌತಿಕವಾದ ಜೀವನ

  • “ಜೀವನ” ಎನ್ನುವ ಪದವು ಕೂಡ “ಜೀವನ ರಕ್ಷಿಸಲ್ಪಟ್ಟಿದೆ” ಎಂದೆನ್ನುವ ಮಾತಿನಲ್ಲಿರುವಂತೆ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
  • ಕೆಲವೊಂದುಬಾರಿ “ಜೀವನ” ಎನ್ನುವ ಪದವು “ತನ್ನ ಜೀವನ ಸಂತೋಷಕರವಾಗಿದೆ” ಎನ್ನುವ ಮಾತಿನಲ್ಲಿರುವಂತೆ ಜೀವನದ ಅನುಭವನ್ನು ಕೂಡ ಸೂಚಿಸುತ್ತದೆ.
  • “ತನ್ನ ಜೀವನದ ಅಂತ್ಯವು” ಎನ್ನುವ ಮಾತಿನಲ್ಲಿರುವಂತೆ ಈ ಪದವು ಒಬ್ಬ ವ್ಯಕ್ತಿಯ ಜೀವನ ಕಾಲವ್ಯವಧಿಯನ್ನು ಸೂಚಿಸುತ್ತದೆ.
  • “ನನ್ನ ತಾಯಿ ಇನ್ನೂ ಜೀವಿಸುತ್ತಿದ್ದಾರೆ” ಎನ್ನುವ ಮಾತಿನಲ್ಲಿ ಜೀವನ ಎಂಬ ಪದವು ದೈಹಿಕವಾಗಿ ಜೀವಂತವಾಗಿರುವುದನ್ನು ಉಲ್ಲೇಖಿಸಬಹುದು. "ಅವರು ನಗರದಲ್ಲಿ ವಾಸಿಸುತ್ತಿದ್ದರು" ಅವರು ಎಲ್ಲೋ ವಾಸಿಸುವಂತೆ ಉಲ್ಲೇಖಿಸಬಹುದು.
  • ಸತ್ಯವೇದದಲ್ಲಿ “ಜೀವನ” ಎನ್ನುವ ಪರಿಕಲ್ಪನೆಯು ಅನೇಕಬಾರಿ “ಮರಣ” ಎನ್ನುವ ಪರಿಕಲ್ಪನೆಗೆ ವಿರುದ್ಧವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

2. ಆತ್ಮೀಕವಾದ ಜೀವನ

  • ಒಬ್ಬ ವ್ಯಕ್ತಿ ದೇವರೊಂದಿಗೆ ಇರುವ ಯೇಸುವಿನಲ್ಲಿ ನಂಬಿದಾಗ ಆ ವ್ಯಕ್ತಿ ಆತ್ಮೀಕವಾದ ಜೀವನವನ್ನು ಹೊಂದಿರುತ್ತಾನೆ, ಆ ವ್ಯಕ್ತಿಯಲ್ಲಿ ಪವಿತ್ರಾತ್ಮನು ಜೀವಿಸುವದರಿಂದ ಜೀವನ ರೂಪಾಂತರವಾಗುತ್ತದೆ.
  • ಆತ್ಮೀಕವಾದ ಜೀವನಕ್ಕೆ ವಿರುದ್ಧವಾಗಿ ಆತ್ಮೀಯಕವಾದ ಮರಣ ಎಂದು ಕರೆಯುತ್ತಾರೆ, ಇದಕ್ಕೆ ದೇವರಿಂದ ದೂರವಾಗುವುದು ಮತ್ತು ನಿತ್ಯ ಶಿಕ್ಷೆಯನ್ನು ಅನುಭವಿಸುವುದು ಎಂದರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಜೀವನ” ಎನ್ನುವ ಪದವನ್ನು “ಅಸ್ತಿತ್ವದಲ್ಲಿರುವುದು” ಅಥವಾ “ವ್ಯಕ್ತಿ” ಅಥವಾ “ಪ್ರಾಣ” ಅಥವಾ “ಇರುವುದು” ಅಥವಾ “ಅನುಭವ” ಎಂದೂ ಅನುವಾದ ಮಾಡಬಹುದು.
  • “ಜೀವಿಸು” ಎನ್ನುವ ಪದವನ್ನು “ನಿವಾಸ ಮಾಡು” ಅಥವಾ “ಇರು” ಅಥವಾ “ಅಸ್ತಿತ್ವದಲ್ಲಿರು” ಎಂದೂ ಅನುವಾದ ಮಾಡಬಹುದು.
  • “ತನ್ನ ಜೀವನದ ಅಂತ್ಯ” ಎನ್ನುವ ಮಾತನ್ನು “ಅವನು ಜೀವಿಸುವುದನ್ನು ನಿಲ್ಲಿಸಿದಾಗ” ಎಂದು ಅನುವಾದ ಮಾಡಬಹುದು.
  • “ಅವರ ಜೀವನಗಳನ್ನು ಕಾಪಾಡಿದನು” ಎನ್ನುವ ಮಾತನ್ನು “ಅವರು ಜೀವಿಸುವುದಕ್ಕೆ ಅನುಮತಿಸಲ್ಪಟ್ಟರು” ಅಥವಾ “ಅವರನ್ನು ಸಾಯಿಸಲಿಲ್ಲ” ಎಂದೂ ಅನುವಾದ ಮಾಡಬಹುದು.
  • “ಅವರು ತಮ್ಮ ಜೀವನಗಳನ್ನು ಅಪಾಯಕ್ಕೊಳಗಾಗಿಸಿಕೊಂಡರು” ಎನ್ನುವ ಮಾತನ್ನು “ಅವರು ತಮ್ಮ ಜೀವನಗಳನ್ನು ಅಪಾಯದಲ್ಲಿ ಇರಿಸಿಕೊಂಡರು” ಅಥವಾ “ಅವರನ್ನು ಸಾಯಿಸಿಕೊಳ್ಳುವ ಕಾರ್ಯವನ್ನು ಅವರು ಮಾಡಿಕೊಂಡರು” ಎಂದೂ ಅನುವಾದ ಮಾಡಬಹುದು.
  • ಆತ್ಮೀಕವಾಗಿ ಜೀವಿಸುವುದರ ಕುರಿತಾಗಿ ಸತ್ಯವೇದವು ಮಾತನಾಡಿದಾಗ, “ಜೀವನ” ಎನ್ನುವ ಪದವನ್ನು “ಆತ್ಮೀಕವಾದ ಜೀವನ” ಅಥವಾ “ನಿತ್ಯಜೀವ” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • “ಆತ್ಮೀಕ ಜೀವನ” ಎನ್ನುವ ಉದ್ದೇಶದ ಮಾತನ್ನು “ನಮ್ಮ ಆತ್ಮಗಳಲ್ಲಿ ನಾವು ಜೀವಿಸುವಂತೆ ದೇವರು ಮಾಡುತ್ತಿದ್ದಾರೆ” ಅಥವಾ “ದೇವರ ಆತ್ಮದಿಂದ ಹೊಸ ಜೀವನ” ಅಥವಾ “ನಮ್ಮ ಸ್ವಂತ ಅಂತರಂಗದಲ್ಲಿ ಜೀವಂತರಾಗಿರುವಂತೆ ಮಾಡಿದನು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಜೀವನವನ್ನು ಅನುಗ್ರಹಿಸು” ಎನ್ನುವ ಮಾತನ್ನು “ಜೀವಿಸುವುದಕ್ಕೆ ಕಾರಣವಾಗು” ಅಥವಾ “ನಿತ್ಯ ಜೀವವನ್ನು ಕೊಡು” ಅಥವಾ “ನಿತ್ಯದಲ್ಲಿ ಜೀವಿಸುವುದಕ್ಕೆ ಕಾರಣವಾಗಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ: ಮರಣ, ನಿತ್ಯಜೀವ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕಥೆಗಳಿಂದ ಉದಾಹರಣೆಗಳು:

  • 01:10 ಆದ್ದರಿಂದ ದೇವರು ಮಣ್ಣನ್ನು ತೆಗೆದುಕೊಂಡು, ಮನುಷ್ಯನ ರೂಪವನ್ನು ಮಾಡಿ, ಅವನೊಳಗೆ __ ಜೀವವನ್ನು __ ಊದಿದನು.
  • 03:01 ಸ್ವಲ್ಪ ಕಾಲವಾದನಂತರ, ಅನೇಕ ಜನರು ಲೋಕದಲ್ಲಿ ಜೀವಿಸುತ್ತಿದ್ದರು .
  • 08:13 ಯೋಸೇಫನ ಅಣ್ಣಂದಿಯರು ಮನೆಗೆ ಹಿಂತಿರುಗಿ ಹೋದನಂತರ, ತಮ್ಮ ತಂದೆಯಾದ ಯಾಕೋಬನಿಗೆ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ , ಅವನು ಸಂತೋಷವಾಗಿದ್ದಾನೆಂದು ಹೇಳಿದರು.
  • 17:09 ಆದರೆ, ತನ್ನ ದಾವೀದನ __ಜೀವನದ __ ಅಂತ್ಯ ಭಾಗದಲ್ಲಿ ದೇವರ ಮುಂದೆ ಭಯಂಕರ ಪಾಪವನ್ನು ಮಾಡಿದನು.
  • 27:01 ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪಂಡಿತನಾಗಿರುವ ಒಬ್ಬ ವ್ಯಕ್ತಿ ಯೇಸುವನ್ನು ಪರೀಕ್ಷೆ ಮಾಡುವುದಕ್ಕೆ ಬಂದು, “ಬೋಧಕನೇ, ನಿತ್ಯ __ ಜೀವವನ್ನು __ ಪಡೆಯುವದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು.
  • 35:05 “ನಾನೇ ಪುನರುತ್ಥಾನವು ಮತ್ತು __ಜೀವವು __ ಆಗಿದ್ದೇನೆ” ಎಂದು ಯೇಸು ಹೇಳಿದನು.
  • 44:05 “ಯೇಸುವನ್ನು ಸಾಯಿಸಬೇಕೆಂದು ರೋಮಾ ಪಾಲಕನಿಗೆ ಹೇಳಿದ ವ್ಯಕ್ತಿ ನೀನೇ ಆಗಿದ್ದೀ. ನೀನು __ಜೀವಾಧಿಪತಿಯನ್ನು __ ಸಾಯಿಸಿದ್ದೀ, ಆದರೆ ದೇವರು ಆತನನ್ನು ಮರಣದಿಂದ ಎಬ್ಬಿಸಿದನು.”

ಪದ ಡೇಟಾ:

  • Strong's: H1934, H2416, H2417, H2421, H2425, H5315, G198, G222, G227, G806, G590

ಜ್ಞಾನಿ, ಜ್ಞಾನ

ಪದದ ಅರ್ಥವಿವರಣೆ:

“ಜ್ಞಾನಿ” ಎನ್ನುವ ಪದವು ಮಾಡುವುದಕ್ಕೆ ನೈತಿಕವಾದ ವಿಷಯವನ್ನು ಮತ್ತು ಸರಿಯಾದದ್ದನ್ನು ಅರ್ಥಮಾಡಿಕೊಂಡು, ಅದರಂತೆಯೇ ನಡೆಯುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. “ಜ್ಞಾನ” ಎಂದರೆ ನಿಜವಾದದ್ದನ್ನು ಮತ್ತು ನೈತಿಕವಾಗಿ ಸರಿಯಾದದ್ದನ್ನು ಅರ್ಥಮಾಡಿಕೊಂಡು, ಅದರ ಪ್ರಕಾರ ನಡೆದು ಅಭ್ಯಾಸ ಮಾಡುವುದು ಎಂದರ್ಥ.

  • ಜ್ಞಾನಿಯಾಗಿರುವುದರಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ, ವಿಶೇಷವಾಗಿ ದೇವರನ್ನು ಮೆಚ್ಚಿಸುವದನ್ನು ಮಾಡಲು ಆರಿಸಿಕೊಳ್ಳುವುದು.
  • ದೇವರಿಗೆ ಕಿವಿಗೊಟ್ಟು ಆತನ ಚಿತ್ತವನ್ನು ನಮ್ರತೆಯಿಂದ ಪಾಲಿಸುವ ಮೂಲಕ ಜನರು ಬುದ್ಧಿವಂತರಾಗುತ್ತಾರೆ.
  • ಜನರು ದೇವರನ್ನು ಕೇಳುವ ಮೂಲಕ ಮತ್ತು ಆತನ ಚಿತ್ತವನ್ನು ವಿನಮ್ರವಾಗಿ ಪಾಲಿಸುವ ಮೂಲಕ ಜ್ಞಾನಿಯಾಗಿರುತ್ತಾರೆ .*ಜ್ಞಾನಿಯಾದ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ, ದಯೆ, ಪ್ರೀತಿ ಮತ್ತು ತಾಳ್ಮೆಯಂತಹ ಪವಿತ್ರಾತ್ಮದ ಫಲವನ್ನು ತೋರಿಸುತ್ತಾನೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಜ್ಞಾನಿ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ದೇವರಿಗೆ ವಿಧೇಯನಾಗಿರುವುದು” ಅಥವಾ “ಸಂವೇದನಾಶೀಲ ಮತ್ತು ವಿಧೇಯನು” ಅಥವಾ “ದೇವರಲ್ಲಿ ಭಯಭಕ್ತಿಯುಳ್ಳ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಜ್ಞಾನ” ಎನ್ನುವ ಪದವನ್ನು “ಜ್ಞಾನಿ ಜೀವನ” ಅಥವಾ “ಸಂವೇದನಾಶೀಲ ಮತ್ತು ವಿಧೇಯನಾಗಿರುವ ಜೀವನ” ಅಥವಾ “ಒಳ್ಳೇಯ ತೀರ್ಪು” ಎಂದರ್ಥವನ್ನು ಕೊಡುವ ಮಾತು ಅಥವಾ ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು.
  • “ಜ್ಞಾನಿ” ಮತ್ತು “ಜ್ಞಾನ” ಎನ್ನುವ ಪದಗಳನ್ನು ನೀತಿವಂತ ಅಥವಾ ವಿಧೇಯನು ಎನ್ನುವ ಪದಗಳಿಗೆ ವಿಭಿನ್ನವಾಗಿರುತ್ತವೆಯೆನ್ನುವ ವಿಧಾನದಲ್ಲಿ ಅನುವಾದ ಮಾಡುವುದು ಉತ್ತಮ.

(ಈ ಪದಗಳನ್ನು ಸಹ ನೋಡಿರಿ : ವಿಧೇಯತೆ ತೋರಿಸು, ಫಲ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 02:05 ಆಕೆಯು ಕೂಡ __ ಜ್ಞಾನಿಯಾಗಬೇಕೆಂದು __ ಬಯಸಿದಳು, ಇದರಿಂದ ಆಕೆ ಕೆಲವೊಂದು ಫಲಗಳನ್ನು ತಿಂದು, ಅದನ್ನು ತಿಂದಳು.
  • 18:01 ಸೊಲೊಮೋನನು __ ಜ್ಞಾನಕ್ಕಾಗಿ __ ಬೇಡಿಕೊಂಡಾಗ, ದೇವರು ಸಂತೋಷಪಟ್ಟನು ಮತ್ತು ಆತನು ಅವನನ್ನು ಲೋಕದಲ್ಲಿ __ ಜ್ಞಾನಿಯನ್ನಾಗಿ __ ಮಾಡಿದನು.
  • 23:09 ಸ್ವಲ್ಪಕಾಲವಾದನಂತರ, ಪೂರ್ವ ದಿಕ್ಕಿನಲ್ಲಿರುವ ದೇಶಗಳಿಂದ ಬಂದ __ ಜೋಯಿಸರು __ ಆಕಾಶದಲ್ಲಿ ಅಸಹಜವಾದ ನಕ್ಷತ್ರವನ್ನು ನೋಡಿದರು.
  • 45:01 ಅವನು (ಸ್ತೆಫೆನ) ಒಳ್ಳೇಯ ಖ್ಯಾತಿಯನ್ನು ಹೊಂದಿದ್ದನು, ಮತ್ತು ಪವಿತ್ರಾತ್ಮನಿಂದಲೂ, __ ಜ್ಞಾನದಿಂದಲೂ __ ತುಂಬಿದ್ದನು.

ಪದ ಡೇಟಾ:

  • Strong's: H998, H1350, H2445, H2449, H2450, H2451, H2452, H2454, H2942, H3820, H3823, H6195, H6493, H6912, H7535, H7919, H7922, H8454, G4678, G4679, G4680, G4920, G5428, G5429, G5430

ತಂದೆಯಾದ ದೇವರು, ಪರಲೋಕದ ತಂದೆ, ತಂದೆ

ಸತ್ಯಾಂಶಗಳು:

“ತಂದೆಯಾದ ದೇವರು” ಮತ್ತು “ಪರಲೋಕದ ತಂದೆ” ಎನ್ನುವ ಪದಗಳು ಒಬ್ಬನೇ ನಿಜವಾದ ದೇವರಾಗಿರುವ ಯೆಹೋವನನ್ನೇ ಸೂಚಿಸುತ್ತವೆ. ಅದೇ ಅರ್ಥವು ಬರುವಂತಹ “ತಂದೆ” ಎನ್ನುವ ಇನ್ನೊಂದು ಪದವನ್ನು ಅನೇಕಬಾರಿ ಯೇಸು ಆತನನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

  • ದೇವರು ತಂದೆಯಾದ ದೇವರಾಗಿ, ಮಗನಾದ ದೇವರಾಗಿ ಮತ್ತು ಪವಿತ್ರಾತ್ಮ ದೇವರಾಗಿ ಅಸ್ತಿತ್ವದಲ್ಲಿದ್ದಾರೆ. ಪ್ರತಿಯೊಬ್ಬರು ಸಂಪೂರ್ಣವಾದ ದೇವರಾಗಿದ್ದಾರೆ ಮತ್ತು ಅವರು ಒಬ್ಬರೇಯಾದ ದೇವರಾಗಿರುತ್ತಾರೆ. ಈ ರಹಸ್ಯವನ್ನೇ ಅನೇಕಮಂದಿ ಮನುಷ್ಯರು ಅರ್ಥಮಾಡಿಕೊಳ್ಳುವುದಿಲ್ಲ.
  • ತಂದೆಯಾದ ದೇವರು ಮತ್ತು ಮಗನಾದ ದೇವರು (ಯೇಸು) ಲೋಕದೊಳಗೆ ಕಳುಹಿಸಲ್ಪಟ್ಟಿದ್ದಾರೆ, ಆತನು ಪವಿತ್ರಾತ್ಮನನ್ನು ಜನರೊಳಗೆ ಕಳುಹಿಸಿದ್ದಾನೆ.
  • ಮಗನಾದ ದೇವರಲ್ಲಿ ನಂಬುವ ಪ್ರತಿಯೊಬ್ಬ ವ್ಯಕ್ತಿ ತಂದೆಯಾದ ದೇವರಿಗೆ ಮಗನಾಗುತ್ತಾನೆ, ಮತ್ತು ಪವಿತ್ರಾತ್ಮ ದೇವರು ಆ ವ್ಯಕ್ತಿಯಲ್ಲಿ ಬಂದು ನಿವಾಸ ಮಾಡುತ್ತಾನೆ. ಇದು ಇನ್ನೊಂದು ರಹಸ್ಯ, ಇದನ್ನು ಮನುಷ್ಯರು ಅರ್ಥಮಾಡಿಕೊಳ್ಳುವುದಿಲ್ಲ.

ಅನುವಾದ ಸಲಹೆಗಳು:

  • “ತಂದೆಯಾದ ದೇವರು” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ ಮನುಷ್ಯನಾಗಿರುವ ತಂದೆಯನ್ನು ಸೂಚಿಸುವುದಕ್ಕೆ ಅನುವಾದ ಭಾಷೆಯಲ್ಲಿ ಸ್ವಾಭಾವಿಕವಾಗಿ ಉಪಯೋಗಿಸುವ ಪದವನ್ನು ಇತ್ತು ಅನುವಾದ ಮಾಡುವುದು ಉತ್ತಮ.
  • “ಪರಲೋಕದ ತಂದೆ” ಎನ್ನುವ ಮಾತನ್ನು “ಪರಲೋಕದಲ್ಲಿ ನಿವಾಸಿಸುವ ತಂದೆ” ಅಥವಾ “ಪರಲೋಕದಲ್ಲಿರುವ ತಂದೆಯಾದ ದೇವರು” ಅಥವಾ “ಪರಲೋಕದಿಂದ ಬಂದ ನಮ್ಮ ತಂದೆಯಾದ ದೇವರು” ಎಂದೂ ಅನುವಾದ ಮಾಡಬಹುದು.
  • ದೇವರನ್ನು ಸೂಚಿಸುವಾಗ ಆಂಗ್ಲ ಭಾಷೆಯಲ್ಲಿರುವ "Father" (ಫಾದರ್) ಎನ್ನುವ ಪದದಲ್ಲಿ ಮೊದಲ ಅಕ್ಷರವು ದೊಡ್ಡದಾಗಿ ಇಟ್ಟಿರುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಪೂರ್ವಜ, ದೇವರು, ಪರಲೋಕ, ಪವಿತ್ರಾತ್ಮ, ಯೇಸು, ದೇವರ ಮಗ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 24:09 ಒಬ್ಬನೇ ನಿಜವಾದ ದೇವರಿದ್ದಾನೆ. ಆದರೆ ___ ತಂದೆಯಾದ ದೇವರು ___ ಮಾತನಾಡಿದ್ದನ್ನು ಯೋಹಾನನು ಕೇಳಿಸಿಕೊಂಡನು ಮತ್ತು ಆತನು ಯೇಸುವಿಗೆ ದೀಕ್ಷಾಸ್ನಾನವನ್ನು ಕೊಟ್ಟಾಗ ಮಗನಾದ ಯೇಸುವನ್ನು ಮತ್ತು ಪವಿತ್ರಾತ್ಮನನ್ನು ನೋಡಿದನು.
  • 29:09 “ನೀವು ನಿಮ್ಮ ಹೃದಯಾಂತರಾಳದಿಂದ ನಿಮ್ಮ ಸಹೋದರನನ್ನು ಕ್ಷಮಿಸದಿದ್ದರೆ ನಿಮ್ಮಲ್ಲಿ ಪ್ರತಿಯೊಬ್ಬರಿಗೆ ನನ್ನ ___ ಪರಲೋಕದ ತಂದೆಯು ___ ಇದನ್ನೇ ಮಾಡುತ್ತಾನೆ” ಎಂದು ಯೇಸು ಹೇಳಿದನು.
  • 37:09 ತದನಂತರ ಯೇಸು ಪರಲೋಕದ ಕಡೆಗೆ ನೋಡಿ, “___ ತಂದೆಯೇ __ ನನ್ನ ಮನವಿಯನ್ನು ಕೇಳಿದ್ದಕ್ಕಾಗಿ ವಂದನೆಗಳು” ಎಂದು ಹೇಳಿದನು.
  • 40:07 ಆದನಂತರ “ಸಮಾಪ್ತವಾಯಿತು! __ ತಂದೆಯೇ ___ , ನನ್ನ ಆತ್ಮವನ್ನು ನಿಮ್ಮ ಕೈಗಳಿಗೆ ಒಪ್ಪಿಸುತ್ತಿದ್ದೇನೆ” ಎಂದು ಯೇಸು ಗಟ್ಟಿಯಾಗಿ ಅತ್ತರು.
  • 42:10 “ಹೋಗಿರಿ, ಸಮಸ್ತ ಜನರ ಗುಂಪುಗಳನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ___ ತಂದೆ __, ಮಗ, ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಕೊಟ್ಟು, ನಾನು ನಿಮಗೆ ಆಜ್ಞಾಪಿಸಿದ ಪ್ರತಿಯೊಂದಕ್ಕೆ ವಿಧೇಯರಾಗಬೇಕೆಂದು ಅವರಿಗೆ ಬೋಧಿಸಿರಿ.
  • 43:08 “ಈಗ ಯೇಸು ___ ತಂದೆಯಾದ ದೇವರ ___ ಬಲಗಡೆಯಲ್ಲಿದ್ದಾರೆ”.
  • 50:10 “ನೀತಿವಂತರು ಅವರ __ ತಂದೆಯಾದ ದೇವರ ___ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುತ್ತಾ ಇರುವರು”.

ಪದ ಡೇಟಾ:

  • Strong's: H1, H2, G3962

ತಗ್ಗಿಸು, ತಗ್ಗಿಸಿಕೊಂಡಿದೆ, ದೀನತೆ

ಪದದ ಅರ್ಥವಿವರಣೆ:

“ತಗ್ಗಿಸು” ಎನ್ನುವ ಪದವು ಇತರರಿಗಿಂತ ತಾನೇ ಉತ್ತಮ ವ್ಯಕ್ತಿಯೆಂದು ಆಲೋಚನೆ ಮಾಡದ ವ್ಯಕ್ತಿಯನ್ನು ವಿವರಿಸುತ್ತದೆ. ಅವನಲ್ಲಿ ಗರ್ವ ಅಥವಾ ಅಹಂಕಾರಗಳು ಇರುವುದಿಲ್ಲ. ದೀನತೆ ಎನ್ನುವುದು ತಗ್ಗಿಸಿಕೊಂಡಿರುವ ಗುಣವಾಗಿರುತ್ತದೆ.

  • ದೇವರ ಮುಂದೆ ತಗ್ಗಿಸಿಕೊಂಡಿರುವುದು ಎನ್ನುವುದಕ್ಕೆ ದೇವರ ಔನ್ನತ್ಯವನ್ನು, ಜ್ಞಾನವನ್ನು ಮತ್ತು ಪರಿಪೂರ್ಣತೆಯನ್ನು ತಿಳಿದು ಅವುಗಳೊಂದಿಗೆ ಒಬ್ಬರ ಬಲಹೀನತೆಯನ್ನು ಮತ್ತು ಅಪರಿಪೂರ್ಣತೆಯನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ.
  • ಒಬ್ಬ ವ್ಯಕ್ತಿ ತನ್ನನ್ನು ತಾನು ತಗ್ಗಿಸಿಕೊಂಡಾಗ, ಆ ವ್ಯಕ್ತಿ ತನ್ನನ್ನು ತಾನು ಪ್ರಾಮುಖ್ಯವಲ್ಲದ ಸ್ಥಿತಿಯಲ್ಲಿರಿಸಿಕೊಳ್ಳುತ್ತಾನೆ.
  • ದೀನತೆ ಎನ್ನುವುದು ಒಬ್ಬರ ಸ್ವಂತ ಅಗತ್ಯತೆಗಳಿಗಿಂತ ಇತರ ಅಗತ್ಯತೆಗಳನ್ನು ಹೆಚ್ಚಾಗಿ ನೋಡಿಕೊಳ್ಳುವುದಾಗಿರುತ್ತದೆ.
  • ದೀನತೆ ಎನ್ನುವುದು ಒಬ್ಬರ ವರಗಳನ್ನು ಮತ್ತು ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳುವಾಗ ಸಾಧಾರಣ ವರ್ತನೆಯೊಂದಿಗೆ ಸೇವೆ ಮಾಡುವುದು ಎಂದರ್ಥ.
  • “ತಗ್ಗಿಸಿಕೊ” ಎನ್ನುವ ಮಾತನ್ನು “ಗರ್ವದಿಂದ ಇರಬೇಡ” ಎಂದೂ ಅನುವಾದ ಮಾಡಬಹುದು.
  • “ದೇವರ ಮುಂದೆ ನಿನ್ನನ್ನು ನೀನು ತಗ್ಗಿಸಿಕೊ” ಎನ್ನುವ ಮಾತನ್ನು “ನಿನ್ನ ಚಿತ್ತವನ್ನು ದೇವರಿಗೆ ಸಮರ್ಪಿಸಿ, ಆತನ ಶ್ರೇಷ್ಟತೆ ಗುರುತಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಗರ್ವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • __17:02__ದಾವೀದನು ದೇವರಿಗೆ ವಿಧೇಯನಾಗಿರುವ ಮತ್ತು ಆತನಲ್ಲಿ ಭರವಸೆವಿಟ್ಟಿರುವ ___ ದೀನತೆಯುಳ್ಳ ___ ಮತ್ತು ನೀತಿವಂತನಾದ ಮನುಷ್ಯ.
  • 34:10 “ದೇವರು ಅಹಂಕಾರಿಗಳನ್ನು ___ ತಗ್ಗಿಸುವನು ___, ಮತ್ತು ಆತನು ___ ದೀನ ಸ್ವಭಾವವುಳ್ಳವರನ್ನು ___ ಮೇಲಕ್ಕೆ ಎತ್ತುವನು.”

ಪದ ಡೇಟಾ:

  • Strong's: H1792, H3665, H6031, H6035, H6038, H6041, H6800, H6819, H7511, H7807, H7812, H8213, H8214, H8215, H8217, H8467, G858, G4236, G4239, G4240, G5011, G5012, G5013, G5391

ತೀರ್ಪಿನ ದಿನ

ಪದದ ಅರ್ಥವಿವರಣೆ:

“ತೀರ್ಪಿನ ದಿನ” ಎನ್ನುವ ಪದವು ದೇವರು ಪ್ರತಿಯೊಬ್ಬರ ವಿಷಯದಲ್ಲಿ ತೀರ್ಪು ಮಾಡುವ ಭವಿಷ್ಯತ್ತಿನ ಸಮಯವನ್ನು ಸೂಚಿಸುತ್ತದೆ.

  • ದೇವರು ಎಲ್ಲಾ ಜನರಿಗೆ ತೀರ್ಪು ಮಾಡುವುದಕ್ಕೆ ತನ್ನ ಮಗನಾದ ಯೇಸುಕ್ರಿಸ್ತನನ್ನು ಇಟ್ಟಿದ್ದಾನೆ.
  • ತೀರ್ಪಿನ ದಿನದಂದು ಕ್ರಿಸ್ತನು ತನ್ನ ನೀತಿಯುತವಾದ ನಡತೆಯ ಆಧಾರದ ಮೇಲೆ ಜನರಿಗೆ ತೀರ್ಪು ಮಾಡುತ್ತಾನೆ.

ಅನುವಾದ ಸಲಹೆಗಳು:

  • ಈ ಪದವನ್ನು “ತೀರ್ಪು ಮಾಡುವ ಸಮಯ” ಎಂದೂ ಅನುವಾದ ಮಾಡಬಹುದು, ಯಾಕಂದರೆ ಇದು ಒಂದು ದಿನಕ್ಕಿಂತ ಹೆಚ್ಚಿನ ದಿನಗಳನ್ನು ಸೂಚಿಸಬಹುದು.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೇವರು ಎಲ್ಲಾ ಜನರನ್ನು ತೀರ್ಪು ಮಾಡುವ ಅಂತ್ಯಕಾಲ” ಎನ್ನುವ ಮಾತು ಒಳಗೊಂಡಿರುತ್ತದೆ.
  • ಕೆಲವೊಂದು ಅನುವಾದಗಳಲ್ಲಿ ಈ ಪದವನ್ನು ಒಂದು ವಿಶೇಷವಾದ ದಿನದ ಹೆಸರಾಗಿ ಅಥವಾ ಒಂದು ವಿಶೇಷವಾದ ಸಮಯದ ಹೆಸರಾಗಿ ತೋರಿಸುವುದಕ್ಕೆ ಪ್ರಯತ್ನಪಟ್ಟರು: “ತೀರ್ಪಿನ ದಿನ” ಅಥವಾ “ತೀರ್ಪಿನ ಸಮಯ.”

(ಈ ಪದಗಳನ್ನು ಸಹ ನೋಡಿರಿ : ನ್ಯಾಯಾಧೀಶ, ಯೇಸು, ಆಕಾಶ, ನರಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2962, H3117, H4941, G2250, G2920, G2962

ತೀರ್ಪು ಮಾಡು, ತೀರ್ಪು ಮಾಡಲಾಗುವುದು, ತೀರ್ಪು ಮಾಡಲಾಗಿದೆ, ಕಠಿಣವಾದ ತೀರ್ಪು

ಪದದ ಅರ್ಥವಿವರಣೆ:

“ತೀರ್ಪು ಮಾಡು” ಅಥವಾ “ಕಠಿಣವಾದ ತೀರ್ಪು” ಎನ್ನುವ ಪದಗಳು ಒಬ್ಬ ವಕ್ತಿ ಯಾವುದಾದರೊಂದು ತಪ್ಪು ಮಾಡಿದ್ದಕ್ಕೆ ಆ ವ್ಯಕ್ತಿಯನ್ನು ತೀರ್ಪು ಮಾಡುವುದನ್ನು ಸೂಚಿಸುತ್ತದೆ.

  • “ತೀರ್ಪು ಮಾಡು” ಎನ್ನುವ ಪದಕ್ಕೆ ಕೆಲವೊಂದುಸಲ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಕ್ಕೋಸ್ಕರ ಆ ವ್ಯಕ್ತಿಯನ್ನು ಶಿಕ್ಷಿಸುವುದು ಎಂದರ್ಥ.
  • “ತೀರ್ಪು ಮಾಡು” ಎನ್ನುವ ಪದಕ್ಕೆ ಕೆಲವೊಂದುಸಲ ಕಠಿಣವಾಗಿ ಒಬ್ಬರನ್ನು ತೀರ್ಪು ಮಾಡು ಅಥವಾ ಒಬ್ಬರ ಮೇಲೆ ತಪ್ಪಾಗಿ ಆರೋಪಣೆ ಮಾಡುವುದು ಎಂದರ್ಥ.
  • “ಕಠಿಣವಾದ ತೀರ್ಪು” ಎನ್ನುವ ಪದವು ಒಬ್ಬರ ಮೇಲೆ ದೋಷಾರೋಪಣೆ ಮಾಡುವುದು ಅಥವಾ ಒಬ್ಬರಿಗೆ ಶಿಕ್ಷೆ ಕೊಡುವ ಕ್ರಿಯೆಯನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಈ ಪದವನ್ನು “ಕಠಿಣವಾಗಿ ತೀರ್ಪು ಮಾಡು” ಅಥವಾ “ತಪ್ಪಾಗಿ ವಿಮರ್ಶೆ ಮಾಡು” ಎಂದೂ ಅನುವಾದ ಮಾಡಬಹುದು.
  • “ಅವನಿಗೆ ತೀರ್ಪು ಮಾಡು” ಎನ್ನುವ ಮಾತನ್ನು “ಅವನು ಅಪರಾಧಿಯೆಂದು ತೀರ್ಪು ಮಾಡು” ಅಥವಾ “ಅವನು ಮಾಡಿದ ಪಾಪಕ್ಕೆ ಅವರು ತಪ್ಪದೇ ಶಿಕ್ಷೆಯನ್ನು ಹೊಂದಬೇಕೆಂದು ಹೇಳು” ಎಂದೂ ಅನುವಾದ ಮಾಡಬಹುದು.
  • “ಕಠಿಣವಾದ ತೀರ್ಪು” ಎನ್ನುವ ಪದವನ್ನು “ಕಠಿಣವಾಗಿ ತೀರ್ಪು ಮಾಡುವುದು” ಅಥವಾ “ಅಪರಾಧಿಯೆಂದು ಪ್ರಕಟಿಸುವುದು” ಅಥವಾ “ಅಪರಾಧಕ್ಕೆ ಶಿಕ್ಷೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ತೀರ್ಪು, ಶಿಕ್ಷಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6064, H7034, H7561, H8199, G176, G843, G2607, G2613, G2631, G2632, G2633, G2917, G2919, G2920, G5272, G6048

ತೀರ್ಪುಮಾಡು, ನ್ಯಾಯಾಧೀಶರು, ತೀರ್ಪು, ತೀರ್ಪುಗಳು

ಪದದ ಅರ್ಥವಿವರಣೆ:

“ತೀರ್ಪು ಮಾಡು” ಮತ್ತು “ತೀರ್ಪು” ಎನ್ನುವ ಪದಗಳು ಅನೇಕಸಲ ಯಾವುದಾದರೊಂದು ನೈತಿಕವಾಗಿ ಸರಿಯೋ ಅಥವಾ ತಪ್ಪೋ ಎಂದೆನ್ನುವುದರ ಕುರಿತಾಗಿ ನಿರ್ಣಯ ತೆಗೆದುಕೊಳ್ಳುವುದನ್ನು ಸೂಚಿಸುತ್ತದೆ.

  • “ದೇವರ ತೀರ್ಪು” ಎನ್ನುವ ಮಾತು ಅನೇಕ ಸಲ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರು ಪಾಪಿಯೆಂದು ಶಿಕ್ಷಿಸುವುದಕ್ಕೆ ತೆಗೆದುಕೊಳ್ಳುವ ಆತನ ನಿರ್ಣಯವನ್ನು ಸೂಚಿಸುತ್ತದೆ.
  • ದೇವರ ತೀರ್ಪು ಸಾಧಾರಣವಾಗಿ ಜನರ ಪಾಪಗಳಿಗಾಗಿ ಅವರನ್ನು ಶಿಕ್ಷಿಸುವುದರ ಕುರಿತಾಗಿಯೇ ಇರುತ್ತದೆ.
  • “ತೀರ್ಪು ಮಾಡು” ಎನ್ನುವ ಪದಕ್ಕೆ “ಶಿಕ್ಷಿಸು” ಎನ್ನುವ ಅರ್ಥವೂ ಇದೆ. ಈ ವಿಧಾನದಲ್ಲಿ ಒಬ್ಬರನ್ನೊಬ್ಬರು ತೀರ್ಪು ಮಾಡಿಕೊಳ್ಳಬಾರದೆಂದು ದೇವರು ತನ್ನ ಜನರಿಗೆ ಹೇಳಿದನು.
  • ಇನ್ನೊಂದು ಅರ್ಥವೇನಂದರೆ “ಅವರ ಮಧ್ಯೆದಲ್ಲಿ ತೀರ್ಮಾನ ಮಾಡು” ಅಥವಾ “ಅವರ ಮಧ್ಯೆದಲ್ಲಿ ತೀರ್ಪು ಮಾಡು” ಎಂದು ಹೇಳಬಹುದು, ಅವರ ಮಧ್ಯೆದಲ್ಲಿರುವ ಜಗಳದಲ್ಲಿ ಯಾರು ಸರಿಯೆಂದು ತೀರ್ಮಾನ ಮಾಡುವುದು ಎಂದರ್ಥ.
  • ಕೆಲವೊಂದು ಸಂದರ್ಭಗಳಲ್ಲಿ, ದೇವರ “ತೀರ್ಪುಗಳೆಲ್ಲವು” ಯಾವುದು ಸರಿಯೆಂದು ಮತ್ತು ಯಾವುದು ನೀತಿಯೆಂದು ಆತನು ನಿರ್ಣಯ ಮಾದುವುದಾಗಿರುತ್ತದೆ. ಅವುಗಳೆಲ್ಲವೂ ಆತನ ವಿಧಿಗಳಿಗೆ, ನ್ಯಾಯಶಾಸನಗಳಿಗೆ ಅಥವಾ ಉಪದೇಶಗಳಿಗೆ ಹೋಲಿಕೆಯಾಗಿರುತ್ತವೆ.
  • “ತೀರ್ಪು” ಎನ್ನುವುದು ಜ್ಞಾನದಿಂದ ತೆಗೆದುಕೊಳ್ಳುವ ನಿರ್ಣಯ ಸಾಮರ್ಥ್ಯವನ್ನು ಸೂಚಿಸುತ್ತದೆ. “ತೀರ್ಪು” ಮಾಡದ ಕೊರತೆಯಿರುವ ಒಬ್ಬ ವ್ಯಕ್ತಿಗೆ ಜ್ಞಾನದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಜ್ಞಾನದ ಕೊರತೆಯಿದೆಯೆಂದರ್ಥ.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, “ತೀರ್ಪು ಮಾಡು” ಎನ್ನುವದನ್ನು ಅನುವಾದ ಮಾಡುವ ವಿಧಾನದಲ್ಲಿ “ನಿರ್ಣಯಿಸು” ಅಥವಾ “ಖಂಡಿಸು” ಅಥವಾ “ಶಿಕ್ಷಿಸು” ಅಥವಾ “ವಿಧಿಸು” ಎನುವ ಪದಗಳು ಸೇರಿಬರುತ್ತವೆ.
  • “ತೀರ್ಪು” ಎನ್ನುವ ಪದವನ್ನು “ಶಿಕ್ಷೆ” ಅಥವಾ “ನಿರ್ಣಯ” ಅಥವಾ “ತೀರ್ಮಾನ” ಅಥವಾ “ವಿಧಿ” ಅಥವಾ “ಖಂಡನೆ” ಎಂದೂ ಅನುವಾದ ಮಾಡಬಹುದು.
  • ಇನ್ನೂ ಕೆಲವು ಸಂದರ್ಭಗಳಲ್ಲಿ, “ತೀರ್ಪಿನಲ್ಲಿ” ಎನ್ನುವ ಮಾತನ್ನು “ತೀರ್ಪು ಮಾಡುವ ದಿನದಂದು” ಅಥವಾ “ದೇವರು ಜನರನ್ನು ತೀರ್ಪು ಮಾಡುವ ಸಮಯದಲ್ಲಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಿಧಿ, ತೀರ್ಪು ಮಾಡು, ತೀರ್ಪಿನ ದಿನ, ನ್ಯಾಯ, ಧರ್ಮಶಾಸ್ತ್ರ, ಧರ್ಮಶಾಸ್ತ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 19:16 ದುಷ್ಟ ಕಾರ್ಯಗಳು ಮಾಡುವುದನ್ನು ನಿಲ್ಲಿಸದಿದ್ದರೆ ಮತ್ತು ದೇವರಿಗೆ ವಿಧೇಯತೆಯನ್ನು ತೋರಿಸುವುದು ಆರಂಭಿಸಿದಿದ್ದರೆ, ದೇವರು ಅವರನ್ನು ಅಪರಾಧಿಗಳೆಂದು ___ ತೀರ್ಪು __ ಮಾಡುತ್ತಾರೆ ಮತ್ತು ಆತನು ಅವರನ್ನು ಶಿಕ್ಷಿಸುತ್ತಾರೆಂದು ಪ್ರವಾದಿಗಳು ಜನರನ್ನು ಎಚ್ಚರಿಸಿದ್ದರು.
  • 21:08 ಅರಸ ಎಂದರೆ ಒಂದು ರಾಜ್ಯವನ್ನು ಆಳುವವನು ಮತ್ತು ಜನರಿಗೆ __ ತೀರ್ಪು ___ ಮಾಡುವವನೂ ಆಗಿರುತ್ತಾನೆ. ಬರುವ ಮೆಸ್ಸೀಯ ತನ್ನ ಪೂರ್ವಜನಾಗಿರುವ ದಾವೀದನ ಸಿಂಹಾಸನದ ಮೇಲೆ ಕೂಡುವ ಪರಿಪೂರ್ಣತೆಯುಳ್ಳ ಅರಸನಾಗಿರುತ್ತಾನೆ. ಆತನು ಪ್ರಪಂಚವನ್ನೆಲ್ಲಾ ಶಾಶ್ವತವಾಗಿ ಆಳುವನು, ಮತ್ತು ಆತನು ಯಥಾರ್ಥವಾಗಿ __ ತೀರ್ಪು ___ ಮಾಡುವವನಾಗಿರುತ್ತಾನೆ ಮತ್ತು ಯಾವಾಗಲೂ ನೀತಿಯುತವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ.
  • 39:04 “ನಮಗೆ ಇನ್ನಾವ ಸಾಕ್ಷಿಯೂ ಬೇಕಾಗಿಲ್ಲ, ಆತನು ದೇವರ ಮಗನೆಂದು ಅವನ ಕುರಿತಾಗಿ ಹೇಳಿರುವುದನ್ನು ನೀವು ಕೇಳಿದ್ದೀರಿ. ಈಗ ನಿನ್ನ ___ ತೀರ್ಪು ___ ಏನು?” ಎಂದು ಮಹಾ ಯಾಜಕನು ಕೋಪಗೊಂಡು ತನ್ನ ವಸ್ತ್ರಗಳನ್ನು ಹರಿದುಕೊಂಡು, ಇತರ ಧರ್ಮ ನಾಯಕರ ಮೇಲೆ ಗಟ್ಟಿಯಾಗಿ ಕಿರುಚುತ್ತಾನೆ!
  • 50:14 ಯೇಸುವಿನಲ್ಲಿ ನಂಬಿಕೆಯಿಡದ ಪ್ರತಿಯೊಬ್ಬರಿಗೆ ದೇವರೇ __ ತೀರ್ಪು ___ ಮಾಡುವನು. ಆತನು ಅವರನ್ನು ನರಕದಲ್ಲಿ ಹಾಕುವನು, ಅಲ್ಲಿ ಅವರು ಅಳುತ್ತಾಯಿರುವರು ಮತ್ತು ಶಾಶ್ವತವಾದ ದುಃಖದಲ್ಲಿದ್ದು ಯಾವಾಗಲೂ ಹಲ್ಲುಗಳನ್ನು ಕಡಿಯುತ್ತಾ ಇರುವರು.

ಪದ ಡೇಟಾ:

  • Strong's: H148, H430, H1777, H1778, H1779, H1780, H1781, H1782, H2940, H4055, H4941, H6414, H6415, H6416, H6417, H6419, H6485, H8196, H8199, H8201, G144, G350, G968, G1106, G1252, G1341, G1345, G1348, G1349, G2917, G2919, G2920, G2922, G2923, G4232

ತೊರೆ, ತೊರೆಯುವುದು, ತೊರೆಯಲ್ಪಟ್ಟಿದೆ, ಬಿಟ್ಟುಬಿಡಿ

ಪದದ ಅರ್ಥವಿವರಣೆ:

“ತೊರೆ” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ಬಿಟ್ಟುಬಿಡುವುದು ಅಥವಾ ಯಾವುದಾದರೊಂದನ್ನು ಕೈಬಿಡುವುದು. “ತೊರೆಯಲ್ಪಟ್ಟ” ಒಬ್ಬ ವ್ಯಕ್ತಿ ಇನ್ನೊಬ್ಬರಿಂದ ಕೈಬಿಡಲ್ಪಟ್ಟಿರುತ್ತಾನೆ ಅಥವಾ ಇನ್ನೊಬ್ಬರಿಂದ ಬಹಿಷ್ಕರಿಸಲ್ಪಟ್ಟಿರುತ್ತಾನೆ.

  • ಜನರು ದೇವರನ್ನು “ತೊರೆದಾಗ”, ಆತನಿಗೆ ಅವರು ಅವಿಧೇಯತೆ ತೋರಿಸುವುದರ ಮೂಲಕ ಆತನಿಗೆ ವಿಶ್ವಾಸದ್ರೋಹವನ್ನು ಮಾಡಿದವರಾಗಿರುತ್ತಾರೆ.
  • ದೇವರು ಜನರನ್ನು “ತೊರೆದಾಗ”, ಆತನು ಅವರಿಗೆ ಸಹಾಯ ಮಾಡುವುದನ್ನು ನಿಲ್ಲಿಸುತ್ತಾನೆ ಮತ್ತು ಅವರೆಲ್ಲರು ತಿರುಗಿ ಆತನ ಬಳಿಗೆ ಬರಬೇಕೆಂದು ಬಯಸುವ ಕ್ರಮದಲ್ಲಿ ಅವರೆಲ್ಲರು ಶ್ರಮೆಗಳನ್ನು ಹೊಂದುವುದಕ್ಕೆ ಅನುಮತಿ ಕೊಡುತ್ತಾನೆ.
  • ದೇವರ ಬೋಧನೆಗಳನ್ನು ಅನುಸರಿಸದೇ ಇರುವುದನ್ನು ಅಥವಾ ತೊರೆಯುವುದು ಹೇಗೋ ಹಾಗೆಯೇ ಈ ಪದವು ವಸ್ತುಗಳನ್ನು ಬಿಟ್ಟುಬಿಡುವುದನ್ನೂ ಸೂಚಿಸುತ್ತದೆ,
  • “ಆತನು ನಿನ್ನನ್ನು ತೊರೆದಿದ್ದಾನೆ” ಎನ್ನುವ ಮಾತಿನಲ್ಲಿರುವಂತೆ ಅಥವಾ ಒಬ್ಬರು “ತೊರೆಯಲ್ಪಟ್ಟಿದ್ದಾರೆ” ಎಂದು ಸೂಚಿಸುವ ಮಾತಿನಂತೆ, “ತೊರೆಯಲ್ಪಟ್ಟಿದ್ದೀ” ಎನ್ನುವ ಪದವನ್ನು ಭೂತ ಕಾಲದಲ್ಲಿಯೂ ಉಪಯೋಗಿಸಬಹುದು,

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬಿಟ್ಟುಬಿಡುವುದು” ಅಥವಾ “ನಿರ್ಲಕ್ಷ್ಯೆ” ಅಥವಾ “ಕೈಬಿಡುವುದು” ಅಥವಾ “ಇಲ್ಲಿಂದ ಪಾರಾಗು” ಅಥವಾ “ಹಿಂದಕ್ಕೆ ಬಿಡು” ಎಂದು ಸಂದರ್ಭಕ್ಕೆ ತಕ್ಕಂತೆ ಪದಗಳನ್ನು ಉಪಯೋಗಿಸಬಹುದು.
  • ದೇವರ ಧರ್ಮಶಾಸ್ತ್ರವನ್ನು “ತೊರೆ” ಎನ್ನುವ ಮಾತನ್ನು “ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯತೆ ತೋರಿಸು” ಎಂದೂ ಅನುವಾದ ಮಾಡಬಹುದು. ಇದನ್ನು “ಬಿಟ್ಟುಬಿಡು” ಅಥವಾ “ಕೈಬಿಡು” ಅಥವಾ ಆತನ ಬೋಧನೆಗಳಿಗೆ ಅಥವಾ ಆತನ ಧರ್ಮಶಾಸ್ತ್ರಕ್ಕೆ “ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ತೊರೆಯಲ್ಪಡುವುದು” ಎನ್ನುವ ಮಾತನ್ನು “ಬಿಟ್ಟು ಬಿಡಲ್ಪಡುವುದು” ಅಥವಾ “ಬಿಡಲ್ಪಟ್ಟವರು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವುದಕ್ಕೆ ಅನೇಕ ವಿಭಿನ್ನವಾದ ಪದಗಳನ್ನು ಉಪಯೋಗಿಸಲು ಇದು ತುಂಬಾ ಸ್ಪಷ್ಟವಾಗಿದೆ, ವಾಕ್ಯದಲ್ಲಿ ಒಬ್ಬ ವ್ಯಕ್ತಿಯನ್ನು ತೊರೆಯುವುದು ಅಥವಾ ಒಂದು ವಸ್ತುವನ್ನು ಬಿಟ್ಟುಬಿಡುವುದು ಇದೆಯೋ ಇಲ್ಲವೋ ಎನ್ನುವುದರ ಮೇಲೆ ಆಧಾರಪಟ್ಟಿರುತ್ತದೆ.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H488, H2308, H5203, H5428, H5800, H5805, H7503, G646, G657, G863, G1459, G2641,

ದತ್ತು ಸ್ವೀಕಾರ, ದತ್ತು ತೆಗೆದುಕೊಳ್ಳುವುದು, ದತ್ತು ತೆಗೆದುಕೊಂಡಿದ್ದಾರೆ

ಅರ್ಥವಿವರಣೆ:

“ದತ್ತು ತೆಗೆದುಕೊಳ್ಳುವುದು” ಅಥವಾ “ದತ್ತು ಸ್ವೀಕಾರ” ಎನ್ನುವ ಪದಗಳು ಒಬ್ಬನು ಶಾರೀರಿಕವಾಗಿ ತನ್ನ ತಂದೆತಾಯಿಗಳಲ್ಲದವರಿಗೆ ಕಾನೂನುಬದ್ಧವಾಗಿ ಮಗು ಆಗುವ ಪ್ರಕ್ರಿಯೆಯನ್ನು ಸೂಚಿಸುತ್ತವೆ.

  • ದೇವರು ಹೇಗೆ ಜನರನ್ನು ತನ್ನ ಕುಟುಂಬದಲ್ಲಿ ಭಾಗಸ್ಥರನ್ನಾಗಿಯೂ ಅವರನ್ನು ತನ್ನ ಆತ್ಮೀಕ ಮಕ್ಕಳಾಗಿಯೂ ಮಾಡಿಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಿ ಹೇಳುವುದಕ್ಕೆ “ದತ್ತು ಸ್ವೀಕಾರ” ಅಥವಾ “ದತ್ತು ತೆಗೆದುಕೊಳ್ಳುವುದು” ಎಂಬ ಪದಗಳನ್ನು ಸತ್ಯವೇದವು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದೆ.
  • ದತ್ತು ತೆಗೆದುಕೊಂಡಿರುವ ಮಕ್ಕಳ ಹಾಗೆ ಇರುವ ವಿಶ್ವಾಸಿಗಳನ್ನು ದೇವರು ಯೇಸು ಕ್ರಿಸ್ತನೊಂದಿಗೆ ಸಹ ಬಾಧ್ಯರನ್ನಾಗಿ ಮಾಡಿ, ದೇವರ ಪುತ್ರರಿಗೂ ಪುತ್ರಿಯರಿಗೂ ಇರುವ ಎಲ್ಲಾ ಹಕ್ಕುಗಳನ್ನು ಅವರಿಗೆ ಅನುಗ್ರಹಿಸಿದ್ದಾನೆ.

ಅನುವಾದ ಸಲಹೆಗಳು:

  • ಭಾಷಾಂತರ ಮಾಡುವ ಭಾಷೆಯಲ್ಲಿ ಈ ವಿಶೇಷವಾದ ತಂದೆತಾಯಿ ಮಕ್ಕಳ ಸಂಬಂಧವನ್ನು ವಿವರಿಸುವುದಕ್ಕೆ ಇರುವಂಥ ಪದ ಬಳಕೆ ಮಾಡಿ ಈ ಪದವನ್ನು ಭಾಷಾಂತರ ಮಾಡಬಹುದು. ಈ ಪದದಲ್ಲಿ ಅಲಂಕಾರಿಕ ಭಾಷೆಯು ಅಥವಾ ಆತ್ಮೀಕ ಅರ್ಥವು ಇದೆಯೆಂದು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೋಡಿಕೊಳ್ಳಿರಿ.
  • “ದತ್ತು ಮಕ್ಕಳಾಗಿರುವ ಅನುಭವ ಹೊಂದಿರಿ” ಎನ್ನುವ ಮಾತಿಗೆ, ‘ದೇವರು ತನ್ನ ಮಕ್ಕಳಾಗಿ ದತ್ತು ಸ್ವೀಕಾರ ಮಾಡಿದ್ದಾನೆ” ಅಥವಾ “ದೇವರ (ಅತ್ಮೀಕ) ಮಕ್ಕಳಾಗಿರಿ” ಎಂದು ಅನುವಾದ ಮಾಡಬಹುದು.
  • “ದತ್ತು ಮಕ್ಕಳಾಗುವುದಕ್ಕೆ ಕಾಯುತ್ತಿರುವುದು” ಎಂಬುದನ್ನು “ದೇವರ ಮಕ್ಕಳಾಗುವುದಕ್ಕೆ ಎದುರುನೋಡಿರಿ” ಅಥವಾ “ದೇವರು ತನ್ನ ಮಕ್ಕಳಾಗಿ ಸ್ವೀಕಾರ ಮಾಡುವುದಕ್ಕೆ ನಿರೀಕ್ಷೆಯಿಂದ ಕಾಯಿರಿ" ಎಂದು ಅನುವಾದ ಮಾಡಬಹುದು.
  • “ಅವರನ್ನು ದತ್ತು ತೆಗೆದುಕೊಳ್ಳಿರಿ” ಎನ್ನುವ ಮಾತನ್ನು “ತನ್ನ ಸ್ವಂತ ಮಕ್ಕಳನ್ನಾಗಿ ಅವರನ್ನು ಸ್ವೀಕರಿಸಿರಿ” ಅಥವಾ “ತನ್ನ ಸ್ವಂತ (ಅತ್ಮೀಕ) ಮಕ್ಕಳಾಗಿ ಮಾಡಿಕೊಳ್ಳಿರಿ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಾಧ್ಯರಾಗಿರುವುದು, ಸ್ವಾಸ್ಥ್ಯ, ಆತ್ಮ)

ಸತ್ಯವೇದದ ಉಲ್ಲೇಖ ವಚನಗಳು:

ಪದದ ದತ್ತಾಂಶ:

  • Strong's: G5206

ದಯೆ, ದಯೆ ತೋರಿಸುತ್ತದೆ, ಇಷ್ಟವಾದ, ಪಕ್ಷಪಾತ

ಪದದ ಅರ್ಥವಿವರಣೆ:

ಸಾಮಾನ್ಯವಾಗಿ “ದಯೆ” ಎಂದರೆ ಅನುಮೋದನೆ ಎಂದರ್ಥ. ಇನ್ನೊಬ್ಬ ವ್ಯಕ್ತಿಗೆ ದಯೆ ತೋರುವ ಯಾರಾದರೂ ಆ ವ್ಯಕ್ತಿಯನ್ನು ಧನಾತ್ಮಕವಾಗಿ ಪರಿಗಣಿಸುತ್ತಾರೆ ಮತ್ತು ಅವರನ್ನು ಅನುಮೋದಿಸುತ್ತಾರೆ.

  • “ಪಕ್ಷಪಾತ” ಎನ್ನುವ ಪದಕ್ಕೆ ಕೇವಲ ಕೆಲವರ ವಿಷಯದಲ್ಲಿ ಮಾತ್ರ ದಯೆಯನ್ನು ಅಥವಾ ಇಷ್ಟವನ್ನು ತೋರಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಎಂದರ್ಥ. ಒಬ್ಬರ ಮೇಲೊಬ್ಬರು ಅಥವಾ ಒಂದರ ಮೇಲೊಂದು ಇಷ್ಟವನ್ನುಂಟು ಮಾಡಿಕೊಳ್ಳುವುದು ಎಂದರ್ಥ, ಯಾಕಂದರೆ ಆ ವ್ಯಕ್ತಿ ಅಥವಾ ಆ ವಸ್ತು ತುಂಬಾ ಪ್ರಾಮುಖ್ಯ. ಸಾಧಾರಣವಾಗಿ, ಪಕ್ಷಪಾತ ಎನ್ನುವುದು ಸರಿಯಾದದ್ದಲ್ಲವೆಂದು ಪರಿಗಣಿಸಲಾಗಿದೆ.
  • ಯೇಸು ದೇವರ ಮತ್ತು ಮನುಷ್ಯನ ”ದಯೆಯಲ್ಲಿ " ಬೆಳೆದನು. ದೇವರು ಮತ್ತು ಮನುಷ್ಯರು ಆತನ ನಡುವಳಿಕೆಯನ್ನು ಮತ್ತು ನಡತೆಯನ್ನು ಅನುಮೋದಿಸಿದ್ದಾರೆಂದು ಇದು ಅರ್ಥೈಸುತ್ತದೆ.
  • ಒಬ್ಬರಿಂದ “ದಯೆಯನ್ನು ಪಡೆದುಕೋ” ಎನ್ನುವ ಮಾತಿಗೆ ಆ ವ್ಯಕ್ತಿಯಿಂದ ಇನ್ನೊಬ್ಬರು ಅನುಮೋದನೆ ಹೊಂದುವುದು ಎಂದರ್ಥ.
  • ಅರಸನು ಒಬ್ಬರಿಗೆ ದಯೆ ತೋರಿಸಿದಾಗ, ಆ ವ್ಯಕ್ತಿಯ ಮನವಿಯನ್ನು ಅನುಮೋದಿಸಿದ್ದಾನೆ ಮತ್ತು ಅದಕ್ಕೆ ಅನುಮತಿ ಕೊಟ್ಟಿದ್ದಾನೆ ಎಂದರ್ಥ.
  • “ದಯೆ” ಎನ್ನುವುದು ಕೆಲವರ ಪ್ರಯೋಜನಕ್ಕಾಗಿ ಇನ್ನೊಬ್ಬ ವ್ಯಕ್ತಿಯ ವಿಷಯದಲ್ಲಿ ನಡೆದುಕೊಳ್ಳುವ ನಡೆತೆ ಅಥವಾ ಒಂದು ಸೂಚನೆಯೂ ಆಗಿರಬಹುದು.

ಅನುವಾದ ಸಲಹೆಗಳು:

  • ದಯೆ ಎಂಬ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಆಶೀರ್ವಾದ” ಅಥವಾ “ಪ್ರಯೋಜನ” ಅಥವ "ಅನುಮೋದನೆ" ಎಂಬ ಪದಗಳನ್ನು ಉಪಯೋಗಿಸುತ್ತಾರೆ.
  • “ಯೆಹೋವನ ಇಷ್ಟವಾದ ವರ್ಷ” ಎನ್ನುವ ಮಾತನ್ನು “ಯೆಹೋವನು ದೊಡ್ಡ ಆಶೀರ್ವಾದವನ್ನು ತೆಗೆದುಕೊಂಡು ಬಂದ ವರ್ಷ (ಅಥವಾ ಸಮಯ)” ಎಂದೂ ಅನುವಾದ ಮಾಡುತ್ತಾರೆ.
  • “ಪಕ್ಷಪಾತ” ಎನ್ನುವ ಪದವನ್ನು “ಆದ್ಯತೆ ಕೊಡುವುದು” ಅಥವಾ “ಅನುಕೂಲಕರವಾಗಿರುವುದು” ಅಥವಾ “ಅನ್ಯಾಯವಾದ ರೀತಿಯಲ್ಲಿ ನೋಡಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು. ಈ ಪದವು “ಅತ್ಯಂತ ಪ್ರೀತಿ” ಎನ್ನುವ ಪದಕ್ಕೆ ಹತ್ತಿರವಾಗಿರುತ್ತದೆ, ಇದಕ್ಕೆ “ಹೆಚ್ಚಿನ ಆದ್ಯತೆ ಇರುವ ಅಥವಾ ಹೆಚ್ಚಾಗಿ ಪ್ರೀತಿಸಲ್ಪಟ್ಟ ವ್ಯಕ್ತಿ” ಎಂದರ್ಥ.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H995, H1156, H1293, H1779, H1921, H2580, H2603, H2896, H5278, H5375, H5414, H5922, H6213, H6437, H6440, H7521, H7522, H7965, G1184, G3685, G4380, G4382, G5485, G5486

ದೀಕ್ಷಾಸ್ನಾನ ಮಾಡಿಸು, ದೀಕ್ಷಾಸ್ನಾನ ಮಾಡಿಸಿಕೊಳ್ಳಲಾದೆ, ದೀಕ್ಷಾಸ್ನಾನ

ಅರ್ಥವಿವರಣೆ:

ಹೊಸ ಒಡಂಬಡಿಕೆಯಲ್ಲಿ, ಒಬ್ಬ ಕ್ರೈಸ್ತನು ತನ್ನ ಪಾಪಗಳು ತೊಳೆಯಲ್ಪಟ್ಟಿದೆ ಎಂಬುದನ್ನು ಮತ್ತು ಕ್ರಿಸ್ತನೊಂದಿಗೆ ಐಕ್ಯತೆ ಹೊಂದಿರುವದನ್ನು ಸೂಚಿಸಲು ಧಾರ್ಮಿಕವಾಗಿ ಸ್ನಾನ ಮಾಡುವದನ್ನು “ದೀಕ್ಷಾಸ್ನಾನ” ಮತ್ತು "ದೀಕ್ಷಸ್ನಾನ ಮಾಡಿಸು” ಎಂದು ಕರೆಯುತ್ತಾರೆ.

ಅನುವಾದ ಸಲಹೆಗಳು:

  • ಒಬ್ಬ ವ್ಯಕ್ತಿ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಕುರಿತಾಗಿ ಕ್ರೈಸ್ತರಿಗೆ ಅನೇಕ ವಿಧವಾದ ಅಭಿಪ್ರಾಯಗಳುಂಟು. ನೀರನ್ನು ಅನೇಕ ವಿಧವಾಗಿ ಅನ್ವಯಿಸಲು ಅವಕಾಶ ನೀಡುವಂತೆ ಈ ಪದವನ್ನು ಸಾಮಾನ್ಯವಾಗಿ ಅನುವಾದ ಮಾಡುವುದು ಒಳ್ಳೆಯದು.
  • ಸಂಧರ್ಭಾನುಸಾರವಾಗಿ, “ದೀಕ್ಷಾಸ್ನಾನ ಮಾಡಿಸು” ಎನ್ನುವ ಪದವನ್ನು “ಪರಿಶುದ್ಧಗೊಳಿಸು”, “ಸುರಿಯುವುದು”, “ಮುಳುಗುವುದು”, “ತೊಳೆಯಲ್ಪಡುವುದು” ಅಥವಾ “ಆತ್ಮೀಯವಾಗಿ ಶುಚಿಗೊಳ್ಳುವುದು” ಎಂದು ಅನುವಾದ ಮಾಡಬಹುದು. ಉದಾಹರಣೆಗೆ, “ನಿನಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದು” ಎನ್ನುವ ವಾಕ್ಯವನ್ನು “ನಿನ್ನನ್ನು ನೀರಿನಲ್ಲಿ ಮುಳುಗಿಸುವುದು” ಎಂದು ಅನುವಾದ ಮಾಡಬಹುದು.
  • “ದೀಕ್ಷಾಸ್ನಾನ” ಎನ್ನುವ ಪದವನ್ನು “ಪರಿಶುದ್ಧಗೊಳಿಸುವುದು”, “ಸುರಿಯುವುದು”, “ಪವಿತ್ರಗೊಳಿಸು” ಅಥವಾ “ಆತ್ಮೀಯವಾಗಿ ಶುಚಿಗೊಳ್ಳುವುದು” ಎಂದು ಅನುವಾದ ಮಾಡಬಹುದು.
  • ಹಾಗೆಯೇ ಈ ಪದವನ್ನು ಸ್ಥಳಿಯ ಅಥವಾ ರಾಜ್ಯ ಭಾಷೆಗಳಲ್ಲಿ ಹೇಗೆ ಅನುವಾದ ಮಾಡಿರುವರೆಂದು ಸಹ ಗಮನಿಸಿ.

(ಇದನ್ನು ನೋಡಿರಿ: ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡುವುದು)

(ಇವುಗಳನ್ನು ಸಹ ನೋಡಿರಿ : ಯೋಹಾನ (ಸ್ನಾನಿಕನಾದ ), ಪಶ್ಚಾತ್ತಾಪ, ಪವಿತ್ರಾತ್ಮ)

ಸತ್ಯವೇದದ ಉಲ್ಲೇಖಗಳು:

ಸತ್ಯವೇದ ಕಥೆಗಳಿಂದ ಉದಾಹರಣೆಗಳು:

  • 24:3 ಯೋಹಾನನ ಸಂದೇಶವನ್ನು ಜನರು ಕೇಳಿದಾಗ, ಅನೇಕರು ಅವರ ಪಾಪಗಳಿಂದ ಪಶ್ಚಾತಾಪ ಪಟ್ಟರು, ಮತ್ತು ಯೋಹಾನನು ಅವರಿಗೆ ದೀಕ್ಷಾಸ್ನಾನ ಮಾಡಿಸಿದನು. ಯೋಹಾನನಿಂದ ದೀಕ್ಷಾಸ್ನಾನ ಹೊಂದಿಕೊಳ್ಳುವದಕ್ಕೆ ಅನೇಕ ಧಾರ್ಮಿಕ ನಾಯಕರುಗಳು ಬಂದರು, ಆದರೆ ಅವರು ಪಶ್ಚಾತಾಪಪಡಲಿಲ್ಲ ಅಥವಾ ಅವರ ಪಾಪಗಳನ್ನು ಒಪ್ಪಿಕೊಳ್ಳಲ್ಲಿಲ್ಲ.
  • 24:6 ಮರುದಿನ, ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕೆ ಯೇಸು ಬಂದನು.
  • 24:7__ಯೋಹಾನನು ಯೇಸುವಿಗೆ ಹೇಳಿದನು, “ನಿನಗೆ __ದೀಕ್ಷಾಸ್ನಾನ ಮಾಡಿಸಲು ನಾನು ಯೋಗ್ಯನಲ್ಲ”. ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು.”
  • 42:10 "ಆದುದರಿಂದ ನೀವು ಹೊರಟುಹೋಗಿ, ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ".
  • 43:11 ಪೇತ್ರನು ಉತ್ತರವಾಗಿ ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿ” ಎಂದು ಹೇಳಿದನು.
  • 43:12 ಪೇತ್ರನು 3,000 ಹೇಳಿದ್ದನ್ನು ಸುಮಾರು ಮೂರು ಸಾವಿರ ಜನರು ನಂಬಿದರು ಮತ್ತು ಯೇಸುವಿನ ಶಿಷ್ಯರಾದರು. ಅವರು ದೀಕ್ಷಾಸ್ನಾನ ಮಾಡಿಸಿಕೊಂಡು ಯೆರೂಸಲೇಮಿನ ಸಭೆಯಲ್ಲಿ ಸೇರಿಸಲ್ಪಟ್ಟರು.
  • 45:11 ಫಿಲಿಪ್ಪನು ಮತ್ತು ಕಂಚುಕಿಯು ದಾರಿಯಲ್ಲಿ ಹೋಗುತ್ತಿರುವಾಗ, ಅವರು ನೀರಿರುವ ಜಾಗಕ್ಕೆ ಬಂದರು. ಕಂಚುಕಿಯು ಹೀಗೆಂದನು, “ಆಗೋ, ನೀರು; ನನಗೆ ದೀಕ್ಷಾಸ್ನಾನ ವಾಗುವುದಕ್ಕೆ ಅಡ್ಡಿ ಏನು?"
  • 46:5 ಕೂಡಲೇ ಸೌಲನ ಕಣ್ಣು ಕಾಣಿಸಿದವು ಮತ್ತು ಅನನೀಯನು ಅವನಿಗೆದೀಕ್ಷಾಸ್ನಾನ ಮಾಡಿಸಿದನು.
  • 49:14 ನೀವು ಆತನನ್ನು ನಂಬಬೇಕೆಂದು ಮತ್ತು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೇಸು ಆಹ್ವಾನಿಸುತ್ತಿದ್ದಾನೆ.

ಪದದ ದತ್ತಾಂಶ:

  • Strong's: G09070

ದೂಷಣೆ, ದೇವದೂಷಣೆ, ಧರ್ಮನಿಂದೆಯ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ, ದೇವರಿಗೆ ಅಥವಾ ಜನರಿಗೆ ಅಗೌರವ ತೋರುವದನ್ನು “ದೂಷಣೆ” ಎಂದು ಸೂಚಿಸಲಾಗಿದೆ. ಇನ್ನೊಬ್ಬರ ಕುರಿತಾಗಿ “ದೇವದೂಷಣೆ” ಅಂದರೆ ಬೇರೆಯವರು ಅವನ ಕುರಿತಾಗಿ ಕೆಟ್ಟದಾಗಿ ಅಥವಾ ಅಸತ್ಯವಾಗಿ ಯೋಚಿಸುವಂತೆ ಆ ವ್ಯಕ್ತಿಗೆ ವಿರುದ್ಧವಾಗಿ ಮಾತಾಡುವುದು ಎಂದರ್ಥ.

  • ಅನೇಕ ಬಾರಿ, ದೇವದೂಷಣೆ ಎಂದರೆ ಆತನ ಕುರಿತಾಗಿ ಸುಳ್ಳು ಹೇಳುವುದು ಅಥವಾ ಅವನನ್ನು ಅವಮಾನಿಸುವುದು ಅಥವಾ ಅಗೌರವಪಡಿಸುವಂತೆ ಮಾತನಾಡುವುದು ಅಥವಾ ಆತನಿಗೆ ಅಗೌರವ ತರುವಂತೆ ಅನೈತಿಕವಾಗಿ ಪ್ರವರ್ತಿಸುವುದು ಎಂದರ್ಥ.
  • ಒಬ್ಬ ಮನುಷ್ಯನು ನಾನೇ ದೇವರು ಎಂದು ಹೇಳಿಕೊಳ್ಳುವುದು ಅಥವಾ ನಿಜವಾದ ದೇವರಲ್ಲದೆ ಮತ್ತೊಂದು ದೇವರು ಇದ್ದನೆಂದು ಹೇಳುವುದು ದೂಷಣೆಯಾಗಿರುತ್ತದೆ.
  • ದೇವ ದೂಷಣೆ ಮಾಡುವ ಜನರನ್ನು ಸೂಚಿಸಲು ಕೆಲವೊಂದು ಆಂಗ್ಲ ಅನುವಾದಗಳಲ್ಲಿ “ಅಪನಿಂದಕ” ಎಂದು ಅನುವಾದ ಮಾಡಿದ್ದಾರೆ.

ಅನುವಾದ ಸಲಹೆಗಳು:

  • “ಕೆಟ್ಟ ಸಂಗತಿಗಳನ್ನು ಹೇಳುವುದು” ಅಥವಾ “ದೇವರನ್ನು ಅಗೌರವಪಡಿಸುವುದು” ಅಥವಾ “ಅಪನಿಂದಕ” ಎಂದು “ದೇವ ದೂಷಣೆ” ಎನ್ನುವ ಪದವನ್ನು ಅನುವಾದ ಮಾಡಬಹುದು.
  • “ಬೇರೆಯವರ ಕುರಿತಾಗಿ ಸುಳ್ಳು ಮಾತಾಡುವುದು” ಅಥವಾ “ಅಪನಿಂದಕ” ಅಥವಾ “ಸುಳ್ಳು ಸುದ್ಧಿಗಳನ್ನು ಹರಡಿಸುವುದು” ಎಂದು “ದೂಷಣೆ” ಎನ್ನುವ ಪದವನ್ನು ಅನುವಾದ ಮಾಡಬಹುದು

(ಈ ಪದಗಳನ್ನು ಸಹ ನೋಡಿರಿ : ಅಗೌರವ, ಅಪನಿಂದಕ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1288, H1442, H2778, H5006, H5007, H5344, G987, G988, G989

ದೆವ್ವ ಹಿಡಿಯಲ್ಪಟ್ಟವರು

ಪದದ ಅರ್ಥವಿವರಣೆ:

ದೆವ್ವ ಹಿಡಿಯಲ್ಪಟ್ಟ ಒಬ್ಬ ವ್ಯಕ್ತಿಯೊಳಗೆ ದೆವ್ವ ಅಥವಾ ದುಷ್ಟಾತ್ಮ ಇದ್ದು ಅವನ ಆಲೋಚನೆಗಳನ್ನು ಮತ್ತು ಮಾಡುವ ಕ್ರಿಯೆಗಳನ್ನು ನಿಯಂತ್ರಿಸುತ್ತಿರುತ್ತದೆ.

  • ಅನೇಕಬಾರಿ ದೆವ್ವ ಹಿಡಿದ ಒಬ್ಬ ವ್ಯಕ್ತಿ ತನ್ನನ್ನು ತಾನು ಹಾನಿ ಮಾಡಿಕೊಳ್ಳುತ್ತಾನೆ ಅಥವಾ ಇನ್ನೊಬ್ಬರಿಗೆ ಹಾನಿ ಮಾಡುತ್ತಾನೆ ಯಾಕಂದರೆ ದೆವ್ವ ಆ ರೀತಿ ಮಾಡುವಂತೆ ಪ್ರೇರೇಪಿಸುತ್ತದೆ.
  • ಯೇಸು ದೆವ್ವ ಹಿಡಿದ ಜನರನ್ನು ಆ ದೆವ್ವಗಳಿಗೆ ಹೊರಬರಬೇಕೆಂದು ಆಜ್ಞಾಪಿಸುವುದರ ಮೂಲಕ ಗುಣಪಡಿಸಿದನು. ದೆವ್ವಗಳನ್ನು “ಹೋಗಲಾಡಿಸುವುದು” ಎಂದು ಇದನ್ನು ಅನೇಕಬಾರಿ ಕರೆಯುತ್ತಾರೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೆವ್ವ ನಿಯಂತ್ರಿಸುತ್ತದೆ” ಅಥವಾ “ದುರಾತ್ಮದಿಂದ ನಿಯಂತ್ರಿಸಲ್ಪಡುತ್ತಿದೆ” ಅಥವಾ “ದುರಾತ್ಮ ಒಳಗಡೆ ನಿವಾಸ ಮಾಡುತ್ತಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದೆವ್ವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 26:09 __ ದೆವ್ವಗಳನ್ನು __ ಒಳಗೊಂಡ ಅನೇಕಮಂದಿ ಜನರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು.
  • 32:02 ಅವರು ನದಿಯ ಆಚೆ ಕಡೆಗೆ ಸೇರಿದನಂತರ, __ ದೆವ್ವ ಹಿಡಿದ ಒಬ್ಬ ವ್ಯಕ್ತಿ __ ಯೇಸುವಿನ ಬಳಿಗೆ ಓಡಿಬಂದನು.
  • 32:06 __ ದೆವ್ವ __ ಇದ್ದ ಒಬ್ಬ ಮನುಷ್ಯನು ಗಟ್ಟಿಯಾಗಿ ಅತ್ತು, “ಪರಾತ್ಪರ ಮಗನಾದ ಯೇಸು ನನ್ನನ್ನು ಏನು ಮಾಡಬೇಕೆಂದಿದ್ದೀ? ದಯವಿಟ್ಟು ನನಗೆ ತೊಂದರೆ ಕೊಡಬೇಡ!” ಎಂದು ಕೂಗಿ ಹೇಳಿದನು.
  • 32:09 ಆ ಊರಿನಲ್ಲಿರುವ ಜನರೆಲ್ಲರು ಬಂದು __ ದೆವ್ವಗಳನ್ನು __ ಒಳಗೊಂಡ ಮನುಷ್ಯನನ್ನು ನೋಡಿದರು.
  • 47:03 ಅವರು (ಪೌಲ ಮತ್ತು ಸೀಲ) ನಡೆದ ಪ್ರತಿಯೊಂದು ದಿನ, __ ದೆವ್ವ __ ಹಿಡಿದ ಆ ಹುಡುಗಿ ಅವರನ್ನು ಹಿಂಬಾಲಿಸುತ್ತಿದ್ದಳು.

ಪದ ಡೇಟಾ:

  • Strong's: G1139

ದೆವ್ವ, ದುಷ್ಟಾತ್ಮ, ಅಶುದ್ಧ ಆತ್ಮ

ಪದದ ಅರ್ಥವಿವರಣೆ:

ಈ ಎಲ್ಲಾ ಪದಗಳು ದೆವ್ವಗಳನ್ನು ಸೂಚಿಸುತ್ತವೆ, ಇವು ದೇವರ ಚಿತ್ತಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಆತ್ಮಗಳಾಗಿರುತ್ತವೆ.

  • ದೇವರು ತನಗೆ ಸೇವೆ ಮಾಡುವುದಕ್ಕಾಗಿ ದೂತರನ್ನು ಸೃಷ್ಟಿಸಿಕೊಂಡಿದ್ದಾರೆ. ಸೈತಾನನು ದೇವರ ವಿರುದ್ಧ ಎದ್ದಾಗ ಕೆಲವು ದೂತರು ದೇವರ ವಿರುದ್ಧ ಎದ್ದರು, ಪರಲೋಕದಿಂದ ಹೊರ ಹಾಕಲ್ಪಟ್ಟರು. ದೆವ್ವಗಳು ಮತ್ತು ದುಷ್ಟಾತ್ಮಗಳೆಲ್ಲವು “ಬಿದ್ದುಹೋಗಿರುವ ದೂತರು” ಎಂದು ನಂಬಲಾಗಿದೆ.
  • ಕೆಲವೊಂದುಬಾರಿ ಈ ದೆವ್ವಗಳನ್ನು “ಅಶುದ್ಧ ಆತ್ಮಗಳು” ಎಂದು ಕರೆಯಲ್ಪಟ್ಟಿವೆ. “ಅಶುದ್ಧ” ಎನ್ನುವ ಪದಕ್ಕೆ “ಅಪವಿತ್ರ” ಅಥವಾ “ದುಷ್ಟ” ಅಥವಾ “ಅಪರಿಶುದ್ಧ” ಎಂದರ್ಥ.
  • ಯಾಕಂದರೆ ದೆವ್ವಗಳು ಸೈತಾನನನ್ನು ಸೇವಿಸುತ್ತವೆ, ಅವು ದುಷ್ಟ ಕಾರ್ಯಗಳನ್ನು ಮಾಡುತ್ತವೆ. ಕೆಲವೊಂದುಬಾರಿ ಅವು ಮನುಷ್ಯರೊಳಗೆ ನಿವಾಸ ಮಾಡಿ, ಆ ಮನುಷ್ಯರನ್ನು ನಿಯಂತ್ರಿಸುತ್ತವೆ.
  • ಮನುಷ್ಯರಿಗಿಂತ ದೆವ್ವಗಳು ತುಂಬಾ ಶಕ್ತಿಯುತವಾದವುಗಳು, ಆದರೆ ಅವು ದೇವರಿಗಿಂತ ಶಕ್ತಿಯುತವಾದವುಗಳಲ್ಲ.

ಅನುವಾದ ಸಲಹೆಗಳು:

  • “ದೆವ್ವ” ಎನ್ನುವ ಪದವನ್ನು “ದುಷ್ಟಾತ್ಮ” ಎಂದೂ ಅನುವಾದ ಮಾಡಬಹುದು.
  • “ಅಶುದ್ಧ ಆತ್ಮ” ಎನ್ನುವ ಪದವನ್ನು “ಅಪವಿತ್ರಾತ್ಮ” ಅಥವಾ “ಭ್ರಷ್ಟ ಆತ್ಮ” ಅಥವಾ “ದುಷ್ಟಾತ್ಮ” ಎಂದೂ ಅನುವಾದ ಮಾಡಬಹುದು.
  • ಈ ಪದಕ್ಕೆ ಉಪಯೋಗಿಸುವ ಪದವು ಅಥವಾ ಮಾತು ದೆವ್ವ ಎಂದು ಸೂಚಿಸುವುದಕ್ಕೆ ಉಪಯೋಗಿಸುವ ಪದಕ್ಕೆ ವಿಭಿನ್ನವಾಗಿರಲು ನೋಡಿಕೊಳ್ಳಿರಿ.
  • “ದೆವ್ವ” ಎನ್ನುವ ಪದವನ್ನು ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಯಾವರೀತಿ ಉಪಯೋಗಿಸುತ್ತಾರೆಂದು ಒಮ್ಮೆ ತಿಳಿದುಕೊಳ್ಳಿರಿ. (ಅನುವಾದ ಸಲಹೆಗಳು: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೆವ್ವ ಹಿಡಿಯಲ್ಪಟ್ಟವನು, ಸೈತಾನ್, ಸುಳ್ಳು ದೇವರು, ಸುಳ್ಳು ದೇವರು, ದೂತ, ದುಷ್ಟ, ಶುದ್ಧ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 26:09ದೆವ್ವಗಳನ್ನು ____ ಒಳಗೊಂಡ ಅನೇಕಮಂದಿ ಜನರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸು ಅವುಗಳನ್ನು ಆಜ್ಞಾಪಿಸಿದಾಗ, ____ ದೆವ್ವಗಳು ____ ಅ ಜನರಿಂದ ಹೊರಬಂದವು, ಮತ್ತು ಅನೇಕಬಾರಿ “ನೀನು ದೇವರ ಮಗ” ಎಂದು ಗಟ್ಟಿಯಾಗಿ ಕಿರುಚಿದವು.
  • ____32:08 ಆ ಮನುಷ್ಯನೊಳಗಿನಿಂದ ____ದೆವ್ವಗಳು ____ ಹೊರಬಂದವು ಮತ್ತು ಹೋಗಿ ಹಂದಿಗಳೊಳಗೆ ಸೇರಿಕೊಂಡವು.
  • ____47:05 ಒಂದು ದಿನ ದಾಸಿಯಾಗಿರುವ ಗಟ್ಟಿಯಾಗಿ ಕಿರುಚಿತ್ತಿರುವಾಗ, ಪೌಲನು ಆಕೆಯ ಕಡೆಗೆ ತಿರುಗಿ, ಅವಳೊಳಗಿರುವ _____ ದುರಾತ್ಮಕ್ಕೆ ____, “ಅವಳನ್ನು ಬಿಟ್ಟು ಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ಆಜ್ಞಾಪಿಸುತ್ತಿದ್ದೇನೆ” ಅಂದನು. ಆ ಕ್ಷಣದಲ್ಲೇ ____ ದುರಾತ್ಮವು ____ ಆಕೆಯನ್ನು ಬಿಟ್ಟು ಹೋಗಿತು.
  • 49:02 ಆತನು (ಯೇಸು) ನೀರಿನ ಮೇಲೆ ನಡೆದನು, ಬಿರುಗಾಳಿಯನ್ನು ಸುಮ್ಮನಿರಿಸಿದನು, ಅನೇಕ ರೋಗಿಗಳನ್ನು ಗುಣಪಡಿಸಿದನು, ____ ದೆವ್ವಗಳನ್ನು ____ ಹೋಗಲಾಡಿಸಿದನು, ಸತ್ತಂತ ಅನೇಕರನ್ನು ಜೀವಂತವಾಗಿ ಎಬ್ಬಿಸಿದನು ಮತ್ತು ಐದು ರೊಟ್ಟಿಗಳು, ಎರಡು ಮೀನುಗಳನ್ನು ಸುಮಾರು 5,000 ಜನರಿಗೆ ಹಂಚಿದನು.

ಪದ ಡೇಟಾ:

  • Strong's: H2932, H7307, H7451, H7700, G169, G1139, G1140, G1141, G1142, G4190, G4151, G4152, G4189

ದೇವ ಪುತ್ರರು

ಪದದ ಅರ್ಥವಿವರಣೆ:

“ದೇವ ಪುತ್ರರು” ಎನ್ನುವ ಮಾತು ಅನೇಕ ಅರ್ಥಗಳಿರುವ ಅಲಂಕಾರಿಕ ಮಾತಾಗಿರುತ್ತದೆ.

  • ಹೊಸ ಒಡಂಬಡಿಕೆಯಲ್ಲಿ “ದೇವ ಪುತ್ರರು” ಎನ್ನುವ ಮಾತು ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ ಮತ್ತು ಇದನ್ನು ಅನೇಕಬಾರಿ “ದೇವರ ಮಕ್ಕಳು” ಎಂಬುದಾಗಿ ಅನುವಾದ ಮಾಡಲಾಗಿರುತ್ತದೆ, ಯಾಕಂದರೆ ಈ ಮಾತಿನಲ್ಲಿ ಸ್ತ್ರೀ, ಪುರುಷರೂ ಒಳಗೊಂಡಿರುತ್ತಾರೆ.
  • ಈ ಮಾತಿನ ಉಪಯೋಗವು ಮನುಷ್ಯರ ತಂದೆ ಮತ್ತು ಮಗ ಸಂಬಂಧದಲ್ಲಿ ಪುತ್ರರಾಗಿರುವದರಿಂದ ಉಂಟಾಗುವ ಎಲ್ಲಾ ಸವಲತ್ತುಗಳಿರುವಂತೆಯೇ ದೇವರೊಂದಿಗಿರುವ ಸಂಬಂಧದ ಕುರಿತಾಗಿ ಮಾತನಾಡುತ್ತದೆ,
  • ಆದಿಕಾಂಡ 6ನೇ ಅಧ್ಯಾಯದಲ್ಲಿಕಾಣಿಸುವ “ದೇವ ಪುತ್ರರು” ಎನ್ನುವ ಪದವನ್ನು ಕೆಲವರು ಕೆಳಗೆ ಬಿದ್ದ ದೂತರು ಅಂದರೆ ದುಷ್ಟ ಆತ್ಮಗಳು ಅಥವಾ ದೆವ್ವಗಳು ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇನ್ನೂ ಕೆಲವರು ಇವರು ಸೇತನ ವಂಶಸ್ಥರು ಅಥವಾ ಶಕ್ತಿಯುತವಾದ ಪಾಲನಾ ಅಧಿಕಾರಿಗಳು ಎಂದು ಸೂಚಿಸುತ್ತಿರಬಹುದು.
  • ಹೊಸ ಒಡಂಬಡಿಕೆಯಲ್ಲಿ “ದೇವ ಪುತ್ರರು” ಎನ್ನುವ ಮಾತು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ವಿಶ್ವಾಸಿಯನ್ನು ಸೂಚಿಸುತ್ತದೆ ಮತ್ತು ಇದನ್ನು “ದೇವರ ಮಕ್ಕಳು” ಎಂದೂ ಅನುವಾದ ಮಾಡಲಾಗಿರುತ್ತದೆ, ಯಾಕಂದರೆ ಈ ಮಾತಿನಲ್ಲಿ ಸ್ತ್ರೀ ಪುರುಷರು ಒಳಗೊಂಡಿರುತ್ತಾರೆ.
  • ಈ ಮಾತಿನ ಉಪಯೋಗವು ಮನುಷ್ಯರ ತಂದೆ ಮತ್ತು ಮಗ ಸಂಬಂಧದಲ್ಲಿ ಪುತ್ರರಾಗಿರುವದರಿಂದ ಉಂಟಾಗುವ ಎಲ್ಲಾ ಸವಲತ್ತುಗಳಿರುವಂತೆಯೇ ದೇವರೊಂದಿಗಿರುವ ಸಂಬಂಧದ ಕುರಿತಾಗಿ ಮಾತನಾಡುತ್ತದೆ,
  • “ದೇವರ ಮಗ” ಎನ್ನುವ ಬಿರುದು ವಿಭಿನ್ನವಾದ ಮಾತಾಗಿರುತ್ತದೆ: ಇದು ದೇವರ ಒಬ್ಬನೇ ಮಗನಾಗಿರುವ ಯೇಸುವನ್ನು ಸೂಚಿಸುವಂತಹ ಮಾತಾಗಿರುತ್ತದೆ.

ಅನುವಾದ ಸಲಹೆಗಳು:

  • “ದೇವ ಪುತ್ರರು” ಎನ್ನುವ ಮಾತನ್ನು ಯೇಸುವಿನ ವಿಶ್ವಾಸಿಗಳಿಗೆ ಉಪಯೋಗಿಸಿದಾಗ, ಇದನ್ನು “ದೇವರ ಮಕ್ಕಳು” ಎಂದು ಅನುವಾದ ಮಾಡಬಹುದು.
  • ಆದಿಕಾಂಡ 6:2 ಮತ್ತು 4ರಲ್ಲಿರುವ “ದೇವ ಪುತ್ರರು” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೂತರು”, “ಆತ್ಮಗಳು”, “ಪ್ರಕೃತಾತೀತವಾದ ಜೀವಿಗಳು” ಅಥವಾ “ದೆವ್ವಗಳು” ಎನ್ನುವ ಪದಗಳು ಅಥವಾ ಮಾತುಗಳು ಒಳಗೊಂಡಿರುತ್ತವೆ.
  • “ಮಗ” ಎನ್ನುವ ಅನುಬಂಧನವನ್ನು ನೋಡಿರಿ.

(ಈ ಪದಗಳನ್ನು ಸಹ ನೋಡಿರಿ : ದೂತ, ದೆವ್ವ, ಮಗ, ದೇವರ ಮಗ, ಪಾಲಕ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H430, H1121, G2316, G5043, G5207

ದೇವದೂತ, ಪ್ರಧಾನದೂತ

ಅರ್ಥವಿವರಣೆ:

ದೇವದೂತ ಎಂದರೆ ದೇವರು ಉಂಟುಮಾಡಿದ ಅತ್ಯಂತ ಶಕ್ತಿಯುಳ್ಳ ಆತ್ಮೀಕ ಜೀವಿ. ದೇವದೂತರು ದೇವರು ಹೇಳಿದ ಪ್ರತಿಯೊಂದನ್ನು ಮಾಡುವುದರ ಮೂಲಕ ದೇವರಿಗೆ ಸೇವೆ ಮಾಡುವುದಕ್ಕಾಗಿ ಉಂಟುಮಾಡಿದವರಾಗಿದ್ದಾರೆ. “ಪ್ರಧಾನದೂತ” ಎನ್ನುವ ಪದವು ಇತರ ದೂತರನ್ನು ನಡೆಸುವುದಕ್ಕೆ ಅಥವಾ ಪಾಲಿಸುವುದಕ್ಕೆ ನೇಮಿಸಲ್ಪಟ್ಟ ವಿಶೇಷವಾದ ದೂತನಾಗಿರುತ್ತಾನೆ.

  • “ದೇವದೂತ” ಎಂಬ ಪದಕ್ಕೆ ಅಕ್ಷರಶಃ “ಸಂದೇಶಕ” ಎಂದರ್ಥ.
  • “ಪ್ರಧಾನದೂತ” ಎಂಬ ಪದಕ್ಕೆ “ಮುಖ್ಯ ಸಂದೇಶಕ” ಎಂದರ್ಥ. “ಪ್ರಧಾನ ದೂತ” ಎಂದು ಸತ್ಯವೇದದಲ್ಲಿ ಒಬ್ಬ ದೂತನನ್ನು ಮಾತ್ರವೇ ಉಲ್ಲೇಖಿಸಲಾಗಿದೆ ಅವನೇ ಮೀಕಾಯೇಲನು.
  • ಸತ್ಯವೇದದಲ್ಲಿ, ದೇವದೂತರು ದೇವರಿಂದ ಪಡೆದ ಸಂದೇಶಗಳನ್ನು ಜನರಿಗೆ ಕೊಟ್ಟರು. ದೇವರು ಬಯಸಿದ್ದನ್ನು ಜನರು ಮಾಡಬೇಕೆನ್ನುವುದರ ಕುರಿತಾಗಿ ಇರುವ ಆಜ್ಞೆಗಳು ಕೂಡ ಈ ಸಂದೇಶಗಳಲ್ಲಿ ಒಳಪಟ್ಟಿರುತ್ತವೆ.
  • ಭವಿಷ್ಯತ್ತಿನಲ್ಲಿ ನಡೆಯುವ ಘಟನೆಗಳ ಕುರಿತಾಗಿ ಅಥವಾ ಈಗಾಗಲೇ ನಡೆದ ಘಟನೆಗಳ ಕುರಿತಾಗಿ ಕೂಡ ದೂತರು ಜನರಿಗೆ ತಿಳಿಸಿದ್ದಾರೆ.
  • ದೇವದೂತರು ದೇವರ ಪ್ರತಿನಿಧಿಗಳಾಗಿ ದೇವರು ಕೊಟ್ಟ ಅಧಿಕಾರವನ್ನು ಪಡೆದಿರುತ್ತಾರೆ ಮತ್ತು ಸತ್ಯವೇದದಲ್ಲಿ ಕೆಲವು ಬಾರಿ ದೇವರೇ ಮಾತನಾಡಿದ ಹಾಗೆಯೇ ಅವರು ಮಾತನಾಡುತ್ತಿದ್ದರು.
  • ದೇವ ದೂತರು ದೇವರಿಗೆ ಸೇವೆ ಮಾಡುವ ಇನ್ನೊಂದು ವಿಧಗಳು ಜನರನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಮೂಲಕ.
  • “ಯೆಹೋವನ ದೂತರು,” ಎನ್ನುವ ವಿಶೇಷವಾದ ನುಡಿಗಟ್ಟು, ಒಂದು ಅರ್ಥಕ್ಕಿಂತ ಹೆಚ್ಚಾದ ಅರ್ಥಗಳನ್ನು ಹೊಂದಿರುತ್ತದೆ: (1) “ಯೆಹೋವನಿಗೆ ಪ್ರತಿನಿಧಿಯಾಗಿರುವ ದೇವದೂತ” ಅಥವಾ “ಯೆಹೋವನನ್ನು ಸೇವಿಸುವ ಸಂದೇಶಕ” ಎನ್ನುವ ಅರ್ಥಗಳಿರಬಹುದು. (2) ಆತನು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವಾಗ ದೂತನಂತೆ ಕಾಣಿಸಿಕೊಳ್ಳುವ, ಯೆಹೋವನನ್ನೇ ಇದು ಸೂಚಿಸಬಹುದು. ಈ ಅರ್ಥಗಳಲ್ಲಿ ಯಾವುದಾದರೊಂದು ಯೆಹೋವನೇ ವೈಯುಕ್ತಿಕವಾಗಿ ಮಾತನಾಡುತ್ತಿರುವಂತೆ “ನಾನೇ” ಎಂದು ದೂತ ಉಪಯೋಗಿಸುವುದನ್ನು ವಿವರಿಸಬಹುದು.

ಅನುವಾದ ಸಲಹೆಗಳು:

  • “ದೇವ ದೂತ” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ “ದೇವರಿಂದ ಬಂದ ಸಂದೇಶಕರು” ಅಥವಾ “ದೇವರ ಪರಲೋಕದ ಸೇವಕನು” ಅಥವಾ “ದೇವರ ಆತ್ಮ ಸಂದೇಶಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪ್ರಧಾನದೂತ” ಎನ್ನುವ ಪದವು “ಮುಖ್ಯ ದೇವದೂತ” ಅಥವಾ "ದ್ದೇವ ದೂತರ ಆಡಳಿತ ಮುಖ್ಯಸ್ಥ" ಅಥವಾ “ದ್ದೇವ ದೂತರ ನಾಯಕ” ಎಂದು ಕೂಡ ಅನುವಾದ ಮಾಡುತ್ತಾರೆ.
  • ಈ ಪದಗಳನ್ನು ರಾಷ್ಟ್ರೀಯ ಭಾಷೆಯಲ್ಲಿ ಅಥವಾ ಇನ್ನೊಂದು ಸ್ಥಳೀಯ ಭಾಷೆಯಲ್ಲಿ ಯಾವ ರೀತಿ ಅನುವಾದ ಮಾಡಿದ್ದಾರೆಂಬುದನ್ನು ಪರಿಗಣಿಸಿರಿ.
  • “ಯೆಹೋವನ ದೂತ” ಎನ್ನುವ ನುಡಿಗಟ್ಟನ್ನು “ದೂತ” ಮತ್ತು “ಯೆಹೋವ” ಎನ್ನುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬೇಕು. ಆ ನುಡಿಗಟ್ಟು ವಿವಿಧ ವ್ಯಾಖ್ಯಾನಗಳಿಗೆ ಅನುಮತಿ ಕೊಡುತ್ತದೆ. ಸಾಧ್ಯವಾದಷ್ಟು ಅನುವಾದಗಳು “ಯೆಹೋವನಿಂದ ಬಂದ ದೂತ” ಅಥವಾ “ಯೆಹೋವನಿಂದ ಕಳುಹಿಸಲ್ಪಟ್ಟ ದೂತ” ಅಥವಾ “ದೂತನಂತೆ ಕಾಣುವ, ಯೆಹೋವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಇವುಗಳನ್ನು ಸಹ ನೋಡಿರಿ: /ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಇವುಗಳನ್ನು ಸಹ ನೋಡಿರಿ : ಮುಖ್ಯ, ಪ್ರಧಾನ, ಸಂದೇಶಕ, ಮೀಕಾಯೇಲ, ಮುಖ್ಯಸ್ಥ, ಸೇವಕ)

ಸತ್ಯವೇದದ ಉಲ್ಲೇಖಗಳು:

ಸತ್ಯವೇದದ ಕಥೆಗಳಿಂದ ಉದಾಹರಣೆಗಳು:

  • 2:12 ಜೀವ ವೃಕ್ಷದ ಹಣ್ಣನ್ನು ಯಾರೂ ತಿನ್ನದಂತೆ ದೇವರು ಆ ತೋಟದ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ, ಶಕ್ತಿಯುಳ್ಳ ದೂತರನ್ನು ಇಟ್ಟಿದ್ದಾನೆ.
  • 22:03 ದೂತನು ಜೆಕರ್ಯನಿಗೆ ಪ್ರತ್ಯುತ್ತರವಾಗಿ, “ನಿಮಗೆ ಶುಭವಾರ್ತೆಯನ್ನು ತರುವುದಕ್ಕೆ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ.”
  • 23:06 ಕೂಡಲೇ, ಪ್ರಕಾಶಮಾನವಾದ ದೂತ ಅವರಿಗೆ (ಕುರುಬರಿಗೆ) ಪ್ರತ್ಯಕ್ಷ್ಯನಾದನು , ಮತ್ತು ಅವರು ಭಯಪಟ್ಟರು. “ನೀವು ಹೆದರಬೇಡಿರಿ, ಯಾಕಂದರೆ ನಿಮಗೆ ಹೇಳುವುದಕ್ಕೆ ನನ್ನ ಬಳಿ ಶುಭವಾರ್ತೆ ಇದೆ” ಎಂದು ದೂತನು ಹೇಳಿದನು.
  • 23:07 ಕೂಡಲೇ, ದೇವರನ್ನು ಸ್ತುತಿಸುವ ದೂತರೊಂದಿಗೆ ಆಕಾಶವೆಲ್ಲಾ ತುಂಬಿತು.
  • 25:08 ಆದನಂತರ, ದೂತರು ಬಂದು ಯೇಸುವಿಗೆ ಪರಿಚಾರ ಮಾಡಿದರು.
  • 38:12 ಯೇಸು ತುಂಬಾ ಮನೋವ್ಯಥೆಪಟ್ಟನು, ಆತನ ಬೆವರು ರಕ್ತದ ಹನಿಗಳಾಗಿ ಮಾರ್ಪಟ್ಟಿತು. ಆತನನ್ನು ಬಲಪಡಿಸುವುದಕ್ಕೆ ದೇವರು ದೂತನನ್ನು ಕಳುಹಿಸಿಕೊಟ್ಟನು.
  • 38:15 “ನನ್ನನ್ನು ರಕ್ಷಿಸುವುದಕ್ಕೆ ದೂತರ ಸೈನ್ಯವನ್ನು ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು".

ಪದದ ದತ್ತಾಂಶ:

  • Strong's: H0047, H0430, H4397, H4398, H8136, G00320, G07430, G24650

ದೇವರ ಚಿತ್ತ

ಪದದ ಅರ್ಥವಿವರಣೆ:

“ದೇವರ ಚಿತ್ತ” ಎನ್ನುವ ಮಾತು ದೇವರ ಆಶೆಗಳನ್ನು ಮತ್ತು ಯೋಜನೆಗಳನ್ನು ಸೂಚಿಸುತ್ತದೆ.

  • ದೇವರ ಚಿತ್ತವು ವಿಶೇಷವಾಗಿ ಜನರೊಂದಿಗೆ ತನ್ನ ಸ್ಪಂದನೆಯನ್ನು ಮತ್ತು ಆತನಿಗೆ ಜನರು ಹೇಗೆ ಸ್ಪಂದಿಸಬೇಕೆನ್ನುವುದರ ಕುರಿತಾದ ಆತನ ಬಯಕೆಯನ್ನು ಸೂಚಿಸುತ್ತದೆ.
  • ಈ ಮಾತು ಆತನು ಉಂಟು ಮಾಡಿದ ಸೃಷ್ಟಿಗಾಗಿ ತನ್ನ ಆಲೋಚನೆಗಳನ್ನು ಅಥವಾ ಆಸೆಗಳನ್ನು ಸೂಚಿಸುತ್ತದೆ.
  • “ಚಿತ್ತ” ಎನ್ನುವ ಪದಕ್ಕೆ “ಅಪೇಕ್ಷೆ” ಅಥವಾ “ಆಸೆ” ಎಂದರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • “ದೇವರ ಚಿತ್ತ” ಎನ್ನುವ ಮಾತನ್ನು “ದೇವರು ಆಶಿಸುವ ವಿಷಯಗಳು” ಅಥವಾ “ದೇವರು ಮಾಡಿದ್ದಂತ ಯೋಜನೆ” ಅಥವಾ “ದೇವರ ಉದ್ದೇಶಗಳು” ಅಥವಾ “ದೇವರನ್ನು ಮೆಚ್ಚಿಸುವವು” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H6310, H6634, H7522, G1012, G1013, G2307, G2308, G2309, G2596

ದೇವರ ಜನರು, ನನ್ನ ಜನರು

ಪದದ ಅರ್ಥವಿವರಣೆ:

“ದೇವರ ಜನರು” ಎನ್ನುವ ಮಾತು ದೇವರೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿರುವುದಕ್ಕೆ ಆತನು ಲೋಕದೊಳಗಿಂದ ಕರೆದ ಜನರನ್ನು ಸೂಚಿಸುತ್ತದೆ.

  • “ನನ್ನ ಜನರು” ಎಂದು ದೇವರು ಹೇಳಿದಾಗ, ಆತನು ತನ್ನೊಂದಿಗೆ ಸಂಬಂಧವನ್ನು ಹೊಂದಿರುವ ಮತ್ತು ಆಯ್ಕೆ ಮಾಡಿಕೊಂಡಿರುವ ಜನರ ಕುರಿತಾಗಿ ಮಾತನಾಡುತ್ತಿದ್ದಾನೆ.
  • ದೇವರ ಜನರು ಆತನಿಂದ ಆದುಕೊಂಡಿರುತ್ತಾರೆ ಮತ್ತು ಆತನನ್ನು ಮೆಚ್ಚಿಸುವ ವಿಧಾನದಲ್ಲಿ ಜೀವಿಸುವುದಕ್ಕೆ ಈ ಲೋಕದೊಳಗಿಂದ ಪ್ರತ್ಯೇಕಿಸಲ್ಪಟ್ಟಿರುತ್ತಾರೆ. ಆತನು ಕೂಡ ಅವರನ್ನು ತನ್ನ ಮಕ್ಕಳೆಂದು ಕರೆಯುತ್ತಾನೆ.
  • ಹಳೇ ಒಡಂಬಡಿಕೆಯಲ್ಲಿ “ದೇವರ ಜನರು” ದೇವರಿಂದ ಆಯ್ಕೆ ಮಾಡಲ್ಪಟ್ಟಿರುವ ಮತ್ತು ಆತನಿಗೆ ವಿಧೇಯತೆ ತೋರಿಸುವುದಕ್ಕೆ, ಆತನನ್ನು ಸೇವಿಸುವುದಕ್ಕೆ ಲೋಕದ ಎಲ್ಲಾ ದೇಶಗಳಿಂದ ಪ್ರತ್ಯೇಕಿಸಲ್ಪಟ್ಟಿರುವ ಇಸ್ರಾಯೇಲ್ ದೇಶವನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ “ದೇವರ ಜನರು” ಎನ್ನುವ ಮಾತು ವಿಶೇಷವಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಮತ್ತು ಸಭೆ ಎಂದು ಕರೆಯಲ್ಪಡುವ ಎಲ್ಲಾ ಜನರನ್ನು ಸೂಚಿಸುತ್ತದೆ. ಇದರಲ್ಲಿ ಯೆಹೂದ್ಯರು ಮತ್ತು ಅನ್ಯರು ಕೂಡ ಒಳಗೊಂಡಿರುತ್ತಾರೆ.

ಅನುವಾದ ಸಲಹೆಗಳು:

  • “ದೇವರ ಜನರು” ಎನ್ನುವ ಮಾತನ್ನು “ದೇವ ಜನರು” ಅಥವಾ “ದೇವರನ್ನು ಆರಾಧಿಸುವ ಜನರು” ಅಥವಾ “ದೇವರನ್ನು ಸೇವಿಸುವ ಜನರು” ಅಥವಾ “ದೇವರಿಗೆ ಸಂಬಂಧಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
  • “ನನ್ನ ಜನರು” ಎಂದು ದೇವರು ಹೇಳುತ್ತಿರುವಾಗ, ಇದನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನಾನು ಆದುಕೊಂಡಿರುವ ಜನರು” ಅಥವಾ “ನನ್ನನ್ನು ಆರಾಧಿಸುವ ಜನರು” ಅಥವಾ “ನನಗೆ ಸಂಬಂಧಪಟ್ಟ ಜನರು” ಎಂದೂ ಅನುವಾದ ಮಾಡಬಹುದು.
  • ಅದೇ ರೀತಿಯಾಗಿ, “ನಿನ್ನ ಜನರು” ಎನ್ನುವ ಮಾತನ್ನು “ನಿನಗೆ ಸಂಬಂಧಪಟ್ಟ ಜನರು” ಅಥವಾ “ನಿನಗೆ ಸಂಬಂಧಪಟ್ಟ ನೀನು ಆಯ್ಕೆ ಮಾಡಿಕೊಂಡಿರುವ ಜನರು” ಎಂದೂ ಅನುವಾದ ಮಾಡಬಹುದು.
  • “ಆತನ ಜನರು” ಎನ್ನುವ ಮಾತನ್ನು ಕೂಡ “ಆತನಿಗೆ ಸಂಬಂಧಪಟ್ಟಿರುವ ಜನರು” ಅಥವಾ “ಆತನಿಗೆ ಸಂಬಂಧಪಟ್ಟಿರುವ ದೇವರು ಆದುಕೊಂಡಿರುವ ಜನರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಜನರ ಗುಂಪು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H430, H5971, G2316, G2992

ದೇವರ ಮಗ, ಮಗ

ಸತ್ಯಾಂಶಗಳು:

“ದೇವರ ಮಗ” ಎನ್ನುವ ಮಾತು ಮನುಷ್ಯನಾಗಿ ಈ ಲೋಕಕ್ಕೆ ಬಂದಿರುವ ದೇವರ ವಾಕ್ಯವಾಗಿರುವ ಯೇಸುವನ್ನು ಸೂಚಿಸಿದನು. ಈತನು ಅನೇಕಬಾರಿ “ಒಬ್ಬನೇ ಮಗ” ಎಂಬುದಾಗಿಯೂ ಸೂಚಿಸಲ್ಪಟ್ಟಿದ್ದಾನೆ.

  • ದೇವರ ಮಗನು ತಂದೆಯಾದ ದೇವರ ಹಾಗೆಯೇ ಒಂದೇ ಸ್ವಭಾವವನ್ನು ಹೊಂದಿರುತ್ತಾನೆ, ಮತ್ತು ಆತನು ಸಂಪೂರ್ಣವಾದ ದೇವರಾಗಿದ್ದಾನೆ.
  • ತಂದೆಯಾದ ದೇವರು, ಮಗನಾದ ದೇವರು ಮತ್ತು ಪವಿತ್ರಾತ್ಮ ದೇವರು ಒಂದೇ ಮೂಲಭೂತವಾಗಿರುತ್ತಾರೆ.
  • ಮನುಷ್ಯರ ಮಕ್ಕಳಂತೆಯಲ್ಲದೇ ದೇವರ ಮಗ ಯಾವಾಗಲೂ ಅಸ್ತಿತ್ವದಲ್ಲಿರುತ್ತಾನೆ.
  • ಆದಿಯಲ್ಲಿ ತಂದೆ ಮತ್ತು ಪವಿತ್ರಾತ್ಮರವರೊಂದಿಗೆ ದೇವರ ಮಗ ಈ ಲೋಕವನ್ನು ಸೃಷ್ಟಿಸುವ ಸಂದರ್ಭದಲ್ಲಿದ್ದಾನೆ.

ಯಾಕಂದರೆ ಯೇಸು ದೇವರ ಮಗನಾಗಿದ್ದಾನೆ, ಆತನು ತನ್ನ ತಂದೆಯನ್ನು ಪ್ರೀತಿಸಿದ್ದಾನೆ ಮತ್ತು ಆತನಿಗೆ ವಿಧೇಯನಾಗಿದ್ದಾನೆ, ಮತ್ತು ತಂದೆಯು ಈತನನ್ನು ಪ್ರೀತಿಸಿದ್ದಾನೆ.

ಅನುವಾದ ಸಲಹೆಗಳು:

  • “ದೇವರ ಮಗ” ಎನ್ನುವ ಪದವನ್ನು ಸರ್ವ ಸಾಧಾರಣವಾಗಿ ಮನುಷ್ಯನ ಮಗನನ್ನು ಸೂಚಿಸುವುದಕ್ಕೆ ಸ್ವಾಭಾವಿಕವಾಗಿ ಉಪಯೋಗಿಸುವ ಭಾಷೆಯ “ಮಗ” ಎನ್ನುವ ಪದದೊಂದಿಗೆ ಅನುವಾದ ಮಾಡುವುದು ಉತ್ತಮ.
  • ಅನುವಾದ ಮಾಡಿರುವ “ಮಗ” ಎನ್ನುವ ಪದವು, “ತಂದೆ” ಎನ್ನುವ ಪದದೊಂದಿಗೆ ಸರಿಹೊಂದುವಂತೆ ನೋಡಿಕೊಳ್ಳಿರಿ, ಅನುವಾದ ಭಾಷೆಯಲ್ಲಿ ನಿಜವಾದ ತಂದೆ-ಮಗ ಸಂಬಂಧವನ್ನು ವ್ಯಕ್ತಪಡಿಸುವುದಕ್ಕೆ ಸ್ವಾಭಾವಿಕವಾಗಿ ಉಪಯೋಗಿಸುವ ಪದಗಳಾಗಿರುತ್ತವೆ.
  • ಆಂಗ್ಲ ಭಾಷೆಯಲ್ಲಿ “ಮಗ” ಎನ್ನುವ ಪದದಲ್ಲಿ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಉಪಯೋಗಿಸಿದಾಗ, ಇದು ದೇವರ ಕುರಿತಾಗಿ ಮಾತನಾಡುತ್ತಿದೆಯೆಂದು ತಿಳಿಸುತ್ತದೆ.
  • ಆಂಗ್ಲ ಭಾಷೆಯಲ್ಲಿ “ಮಗ” ಎನ್ನುವ ಪದದಲ್ಲಿ ಮೊದಲನೇ ಅಕ್ಷರವನ್ನು ಉಪಯೋಗಿಸಿದಾಗ, ಆ ಪದವು “ದೇವರ ಮಗ” ಎಂಬುದಾಗಿ ಸೂಚಿಸುತ್ತದೆ, ವಿಶೇಷವಾಗಿ ಇದು “ತಂದೆ” ಎಂದು ಉಪಯೋಗಿಸಿದ ಸಂದರ್ಭದಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಪೂರ್ವಜ, ದೇವರು, ತಂದೆಯಾದ ದೇವರು, ಪವಿತ್ರಾತ್ಮ, ಯೇಸು, ಮಗ, ದೇವರ ಮಕ್ಕಳು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 22:05 “ಪವಿತ್ರಾತ್ಮನು ನಿನ್ನ ಮೇಲಕ್ಕೆ ಬರುವನು, ಮತ್ತು ದೇವರ ಶಕ್ತಿಯು ನಿನ್ನನ್ನು ಆವರಿಸುವುದು” ಎಂದು ದೂತನು ಹೇಳಿದನು. ಇದರಿಂದ ಶಿಶುವು ಪರಿಶುದ್ಧನಾಗಿರುವನು, ದೇವರ __ ಮಗನಾಗಿರುವನು __.”
  • 24:09 “ಪವಿತ್ರಾತ್ಮನು ಕೆಳಕ್ಕೆ ಇಳಿದು ಬರುವನು ಮತ್ತು ನೀನು ದೀಕ್ಷಾಸ್ನಾನ ಕೊಡುವ ವ್ಯಕ್ತಿಯ ಮೇಲಕ್ಕೆ ಬರುವನು, ಆ ವ್ಯಕ್ತಿ __ ದೇವರ ಮಗನಾಗಿರುತ್ತಾನೆ __” ಎಂದು ದೇವರು ಯೋಹಾನನಿಗೆ ಹೇಳಿದನು.
  • 31:08 ಶಿಷ್ಯರು ಆಶ್ಚರ್ಯಪಟ್ಟರು. “ನಿಜವಾಗಿ ನೀನು __ ದೇವರ ಮಗ __ “ ಎಂದು ಆತನಿಗೆ ಹೇಳುತ್ತಾ ಅವರು ಯೇಸುವನ್ನು ಆರಾಧಿಸಿದರು.
  • 37:05 “ಹೌದು, ಬೋಧಕನೆ! ನೀನು __ ದೇವರ ಮಗನಾಗಿರುವ __ ಮೆಸ್ಸೀಯನೆಂದು ನಾನು ನಂಬುತ್ತಿದ್ದೇನೆ” ಎಂದು ಮಾರ್ಥಳು ಉತ್ತರಿಸಿದಳು.
  • 42:10 ಆದ್ದರಿಂದ ನೀವು ಹೋಗಿ, ಎಲ್ಲಾ ಜನರ ಗುಂಪುಗಳನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ತಂದೆ, __ ಮಗ __, ಪವಿತ್ರಾತ್ಮ ಹೆಸರಿನಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಅವರಿಗೆ ಬೋಧಿಸಿ, ಅವುಗಳಿಗೆ ವಿಧೇಯರಾಗಬೇಕೆಂದು ಹೇಳಿರಿ.”
  • 46:06 ಆ ಕ್ಷಣದಲ್ಲಿಯೇ, ಸೌಲನು ದಮಸ್ಕದಲ್ಲಿರುವ ಯೆಹೂದ್ಯರಿಗೆ “ಯೇಸು __ ದೇವರ ಮಗ __ “ ಎಂದು ಬೊಧಿಸಲು ಆರಂಭಿಸಿದನು!”
  • 49:09 ಆದರೆ ದೇವರು ಈ ಲೋಕವನ್ನು ಎಷ್ಟೋ ಪ್ರೀತಿಸಿದನು, ತನ್ನ ಒಬ್ನೇ __ ಮಗನನ್ನು __ ಕೊಟ್ಟನು, ಆದ್ದರಿಂದ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರು ತನ್ನ ಪಾಪಗಳಿಗೆ ಶಿಕ್ಷೆಯನ್ನು ಹೊಂದದೇ ಸದಾಕಾಲವೂ ದೇವರೊಂದಿಗೆ ಜೀವಿಸುವನು.

ಪದ ಡೇಟಾ:

  • Strong's: H426, H430, H1121, H1247, G2316, G5207

ದೇವರ ಮನೆ, ಯೆಹೋವನ ಮನೆ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ದೇವರ ಮನೆ” ಮತ್ತು “ಯೆಹೋವನ ಮನೆ” ಎನ್ನುವ ಪದಗಳು ದೇವರು ಆರಾಧಿಸಲ್ಪಡುವ ಸ್ಥಳವನ್ನು ಸೂಚಿಸುತ್ತವೆ.

  • ಈ ಪದವು ಗುಡಾರವನ್ನು ಅಥವಾ ದೇವಾಲಯವನ್ನು ಸೂಚಿಸುವುದಕ್ಕೂ ತುಂಬಾ ವಿಶೇಷವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
  • ಕೆಲವೊಂದುಸಲ “ದೇವರ ಮನೆ” ಎನ್ನುವುದು ದೇವರ ಜನರನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಆರಾಧನೆಯ ಸ್ಥಳವನ್ನು ಸೂಚಿಸುವಾಗ, ಈ ಪದವನ್ನು “ದೇವರನ್ನು ಆರಾಧನೆ ಮಾಡುವುದಕ್ಕೋಸ್ಕರ ಇರುವ ಮನೆ” ಅಥವಾ “ದೇವರನ್ನು ಆರಾಧಿಸುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • ಇದು ದೇವಾಲಯವನ್ನು ಅಥವಾ ಗುಡಾರವನ್ನು ಸೂಚಿಸಿದಾಗ, ಇದನ್ನು “ದೇವರನ್ನು ಆರಾಧನೆ ಮಾಡುವ (ಅಥವಾ “ದೇವರು ಪ್ರಸನ್ನತೆಯು ಇರುವ ಸ್ಥಳ” ಅಥವಾ “ದೇವರು ತನ್ನ ಜನರನ್ನು ಭೇಟಿ ಮಾಡುವ ಸ್ಥಳ”) ದೇವಾಲಯ (ಅಥವಾ ಗುಡಾರ)” ಎಂದೂ ಅನುವಾದ ಮಾಡಬಹುದು.
  • ದೇವರು “ನಿವಾಸವಾಗಿರುವ” ಸ್ಥಳವನ್ನಾಗಿ ಹೇಳುವ ಕ್ರಮದಲ್ಲಿ, ಅಂದರೆ ತನ್ನನ್ನು ಆರಾಧಿಸುವವರಿಂದ ಆರಾಧನೆ ಹೊಂದುವುದಕ್ಕೆ ಮತ್ತು ತನ್ನ ಜನರೊಂದಿಗೆ ಭೇಟಿ ಮಾಡುವ ಸ್ಥಳದಲ್ಲಿ ಆತನ ಆತ್ಮವು ಇರುತ್ತದೆಯೆಂದು ಸೂಚಿಸುವುದಕ್ಕೆ ಅನುವಾದದಲ್ಲಿ “ಮನೆ” ಎನ್ನುವ ಪದವು ಉಪಯೋಗಿಸುವುದು ತುಂಬಾ ಪ್ರಾಮುಖ್ಯವಾದದ್ದು,

(ಈ ಪದಗಳನ್ನು ಸಹ ನೋಡಿರಿ : ದೇವರ ಜನರು, ಗುಡಾರ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H426, H430, H1004, H1005, H3068, G2316, G3624

ದೇವರ ರಾಜ್ಯ, ಪರಲೋಕ ರಾಜ್ಯ

ಪದದ ಅರ್ಥವಿವರಣೆ:

“ದೇವರ ರಾಜ್ಯ” ಮತ್ತು “ಪರಲೋಕ ರಾಜ್ಯ” ಎನ್ನುವ ಪದಗಳು ದೇವರು ತನ್ನ ಜನರ ಮೇಲೆ ಮತ್ತು ಎಲ್ಲಾ ಸೃಷ್ಟಿಯ ಮೇಲೆ ತನ್ನ ಅಧಿಕಾರವನ್ನು ಮತ್ತು ಪಾಲನೆಯನ್ನು ಸೂಚಿಸುತ್ತದೆ.

  • ಯೆಹೂದ್ಯರು ದೇವರ ಹೆಸರನ್ನು ನೇರವಾಗಿ ಹೇಳುವುದನ್ನು ತಪ್ಪಿಸಲು “ಪರಲೋಕ” ಎನ್ನುವ ಪದವನ್ನು ಅನೇಕಸಲ ದೇವರನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದಾರೆ, (ನೋಡಿರಿ: ಲಾಕ್ಷಣಿಕ ಪ್ರಯೋಗ)
  • ಹೊಸ ಒಡಂಬಡಿಕೆಯ ಮತ್ತಾಯನು ಬರೆದ ಪುಸ್ತಕದಲ್ಲಿ ದೇವರ ರಾಜ್ಯವನ್ನು “ಪರಲೋಕ ರಾಜ್ಯವನ್ನಾಗಿ” ಸೂಚಿಸಿದ್ದಾನೆ, ಬಹುಶಃ ಯಾಕಂದರೆ ಪ್ರಾಥಮಿಕವಾಗಿ ಆತನು ಈ ಪುಸ್ತಕವನ್ನು ಯೆಹೂದ್ಯ ಪ್ರೇಕ್ಷಕರಿಗೆ ಬರೆಯುತ್ತಿದ್ದಾನೆ.
  • ದೇವರ ರಾಜ್ಯ ಎನ್ನುವುದು ದೇವರು ಎಲ್ಲಾ ಜನರನ್ನು ಆತ್ಮೀಯಕವಾಗಿ ಪಾಲಿಸುತ್ತಿದ್ದಾನೆನ್ನುವುದನ್ನು ಮತ್ತು ಭೌತಿಕ ಪ್ರಪಂಚವನ್ನು ಪಾಲಿಸುತ್ತಿದ್ದಾನೆನ್ನುವುದನ್ನು ಸೂಚಿಸುತ್ತದೆ.
  • ನೀತಿಯಿಂದ ಆಳಲು ದೇವರು ಮೆಸ್ಸೀಯನನ್ನು ಕಳುಹಿಸುವನೆಂದು ಹಳೇ ಒಡಂಬಡಿಕೆ ಪ್ರವಾದಿಗಳು ಹೇಳಿದ್ದಾರೆ. ದೇವರ ಮಗನಾದ ಯೇಸು ಮೆಸ್ಸೀಯನಾಗಿದ್ದಾನೆ, ಈತನು ದೇವರ ರಾಜ್ಯವನ್ನು ಎಂದೆಂದಿಗೂ ಆಳುತ್ತಿರುವನು.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ದೇವರ ರಾಜ್ಯ” ಎನ್ನುವ ಮಾತನ್ನು “ದೇವರ ಆಳ್ವಿಕೆ (ಅರಸನಾಗಿ)” ಅಥವಾ “ಅರಸನಾಗಿ ದೇವರು ಪಾಲನೆ ಮಾಡುವಾಗ” ಅಥವಾ “ಎಲ್ಲಾವುದರ ಮೇಲೆ ದೇವರ ಆಳ್ವಿಕೆ” ಎಂದೂ ಅನುವಾದ ಮಾಡಬಹುದು.
  • “ಪರಲೋಕ ರಾಜ್ಯ” ಎನ್ನುವ ಮಾತನ್ನು “ಅರಸನಾಗಿ ಪರಲೋಕದಿಂದ ದೇವರ ಆಳ್ವಿಕೆ” ಅಥವಾ “ಪರಲೋಕದಲ್ಲಿರುವ ದೇವರ ಆಳ್ವಿಕೆ” ಅಥವಾ “ಪರಲೋಕದ ರಾಜ್ಯಭಾರ” ಅಥವಾ “ಎಲ್ಲಾವುದರ ಮೇಲೆ ಪರಲೋಕದ ಆಳ್ವಿಕೆ” ಎಂದೂ ಅನುವಾದ ಮಾಡಬಹುದು. ಒಂದು ವೇಳೆ ಈ ಮಾತನ್ನು ಅತೀ ಸಾಧಾರಣವಾಗಿ ಮತ್ತು ಸ್ಪಷ್ಟವಾಗಿ ಅನುವಾದ ಮಾಡುವುದಾದರೆ, “ದೇವರ ರಾಜ್ಯ” ಎನ್ನುವ ಪದವನ್ನು ಅನುವಾದ ಮಾಡಬಹುದು.
  • ಕೆಲವೊಂದು ಅನುವಾದಕರು “ಪರಲೋಕ” ಎನ್ನುವ ಪದವನ್ನು ದೇವರಿಗೆ ಸೂಚಿಸುವಂತೆ ಉಪಯೋಗಿಸಿದ್ದಾರೆ. ಕೆಲವೊಬ್ಬರು ವಾಕ್ಯದಲ್ಲಿ ಸೂಚನೆಯನ್ನು ಕೊಟ್ಟಿರಬಹುದು, “ಪರಲೋಕ ರಾಜ್ಯ” ಎನ್ನುವದನ್ನು “ದೇವರ ರಾಜ್ಯ” ಎಂಬುದಾಗಿ ಬರೆದಿರಬಹುದು.
  • ಸತ್ಯವೇದದಲ್ಲಿ ಪುಟದ ಕೆಳ ಭಾಗದಲ್ಲಿ ಈ ಮಾತಿನಲ್ಲಿರುವ “ಪರಲೋಕ” ಎನ್ನುವ ಪದಕ್ಕೆ ವಿವರಣೆಯನ್ನು ಕೊಟ್ಟಿರಬಹುದು.

(ಈ ಪದಗಳನ್ನು ಸಹ ನೋಡಿರಿ : ದೇವರು, ಪರಲೋಕ, ಅರಸ, ರಾಜ್ಯ, ಯೆಹೂದ್ಯರ ಅರಸ, ಆಳ್ವಿಕೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 24:02 “ಮಾನಸಾಂತರ ಹೊಂದಿರಿ, ದೇವರ __ ರಾಜ್ಯ __ ಸಮೀಪವಾಗಿದೆ” ಎಂದು ಹೇಳುತ್ತಾ ಅವನು (ಯೋಹಾನ) ಅವರಿಗೆ ಸಂದೇಶವನ್ನು ಹೇಳಿದನು.
  • 28:06 “ಐಶ್ವರ್ಯವಂತನು ಪರಲೋಕ __ ರಾಜ್ಯದಲ್ಲಿ __ ಸೇರುವುದು ಕಷ್ಟ, ಹೌದು, ಐಶ್ವರ್ಯವಂತನು ದೇವರ __ ರಾಜ್ಯದಲ್ಲಿ __ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.
  • 29:02 ದೇವರ ರಾಜ್ಯ ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ” ಎಂದು ಯೇಸು ಹೇಳಿದನು.
  • 34:01 ದೇವರ ರಾಜ್ಯದ __ ಕುರಿತಾಗಿ ಅನೇಕವಾದ ಸಾಮ್ಯಗಳನ್ನು ಯೇಸು ಹೇಳಿದರು. ಉದಾಹರಣೆಗೆ, “__ ದೇವರ ರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ, ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು” ಎಂದು ಆತನು ಹೇಳಿದನು.
  • 34:03 ದೇವರ ರಾಜ್ಯವು ಹುಳಿ ಹಿಟ್ಟಿಗೆ ಹೋಲಿಕೆಯಾಗಿರುತ್ತದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಿಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಎಂದು ಯೇಸು ಮತ್ತೊಂದು ಸಾಮ್ಯವನ್ನು ಹೇಳಿದನು.
  • 34:04 ದೇವರ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಅದನ್ನು ಮೊತ್ತೊಂದುಬಾರಿ ಮುಚ್ಚಿಟ್ಟನು.
  • 34:05 ದೇವರ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ”.
  • 42:09 ಆತನು ಜೀವಂತವಾಗಿದ್ದಾನೆಂದು ಅನೇಕ ವಿಧಗಳಲ್ಲಿ ಆತನು ತನ್ನ ಶಿಷ್ಯರಿಗೆ ತೋರಿಸಿಕೊಂಡಿದ್ದಾರೆ ಮತ್ತು ಆತನು ಅವರಿಗೆ __ ದೇವರ ರಾಜ್ಯದ __ ಕುರಿತಾಗಿ ಹೇಳಿದನು.
  • 49:05 ದೇವರ ರಾಜ್ಯವು ಈ ಲೋಕದಲ್ಲಿರುವವುಗಳಿಗಿಂತ ತುಂಬಾ ಬೆಲೆಯುಳ್ಳದ್ದೆಂದು ಯೇಸು ಹೇಳಿದ್ದಾರೆ.
  • 50:02 “ಈ ಲೋಕದಲ್ಲಿರುವ ಪ್ರತಿಯೊಬ್ಬರಿಗೆ ಮತ್ತು ಭೂಮಿಯ ಕಟ್ಟ ಕಡೆಯ ಭಾಗಗಳಲ್ಲಿರುವ ಜನರಿಗೆ __ ದೇವರ ರಾಜ್ಯದ __ ಕುರಿತಾದ ಶುಭವಾರ್ತೆಯನ್ನು ನನ್ನ ಶಿಷ್ಯರು ಹೇಳುವರು” ಎಂದು ಯೇಸು ಈ ಭೂಮಿ ಮೇಲೆ ಸಂಚಾರ ಮಾಡಿದ ದಿನಗಳಲ್ಲಿ ಹೇಳಿದರು.

ಪದ ಡೇಟಾ:

  • Strong's: G932, G2316, G3772

ದೇವರ ವಾಕ್ಯ, ದೇವರ ವಾಕ್ಯಗಳು, ಯೆಹೋವನ ವಾಕ್ಯ, ಕರ್ತನ ವಾಕ್ಯ, ಸತ್ಯ ವಾಕ್ಯ, ಲೇಖನ, ಲೇಖನಗಳು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ದೇವರ ವಾಕ್ಯ” ಎನ್ನುವ ಮಾತು ದೇವರು ಜನರೊಂದಿಗೆ ಸಂಭಾಷಿಸಿದ ಪ್ರತಿಯೊಂದು ಮಾತನ್ನು ಸೂಚಿಸುತ್ತದೆ. ಇದರಲ್ಲಿ ಹೇಳಲ್ಪಟ್ಟ ಮತ್ತು ಬರೆಯಲ್ಪಟ್ಟ ಸಂದೇಶಗಳು ಒಳಗೊಂಡಿರುತ್ತವೆ. ಯೇಸುವನ್ನು ಕೂಡ “ದೇವರ ವಾಕ್ಯ’ ಎಂದು ಕರೆಯಲ್ಪಟ್ಟಿದ್ದಾನೆ.

  • “ಲೇಖನಗಳು” ಎಂದರೆ “ಬರವಣಿಗೆಗಳು” ಎಂದರ್ಥ. ಹಳೇ ಒಡಂಬಡಿಕೆಯಲ್ಲಿರುವ ಇಬ್ರಿ ಲೇಖನಗಳನ್ನು ಸೂಚಿಸುವವು ಮತ್ತು ಇವುಗಳನ್ನು ಹೊಸ ಒಡಂಬಡಿಕೆಯಲ್ಲಿ ಮಾತ್ರವೇ ಉಪಯೋಗಿಸಿರುತ್ತಾರೆ. ಈ ಬರವಣಿಗೆಗಳು ದೇವರು ತನ್ನ ಜನರು ಬರೆಯಬೇಕೆಂದು ಹೇಳಿರುವ ಆತನ ಸಂದೇಶಗಳಾಗಿರುತ್ತವೆ, ಇದರಿಂದ ಭವಿಷ್ಯತ್ತಿನಲ್ಲಿ ಅನೇಕ ವರ್ಷಗಳ ಕಾಲ ಜನರು ಈ ಲೇಖನಗಳನ್ನು ಓದುತ್ತಾರೆ.
  • “ಯೆಹೋವನ ವಾಕ್ಯ” ಮತ್ತು “ಕರ್ತನ ಮಾತು” ಎನ್ನುವ ಮಾತುಗಳು ಅನೇಕಬಾರಿ ಸತ್ಯವೇದದಲ್ಲಿ ದೇವರು ಒಬ್ಬ ಪ್ರವಾದಿಗೆ ಅಥವಾ ಇತರ ವ್ಯಕ್ತಿಗಳಿಗೆ ಕೊಡಲ್ಪಟ್ಟಿರುವ ವಿಶೇಷವಾದ ಸಂದೇಶವನ್ನು ಸೂಚಿಸುತ್ತವೆ.
  • ಕೆಲವೊಂದುಬಾರಿ ಈ ಮಾತು “ವಾಕ್ಯ” ಅಥವಾ “ನನ್ನ ಮಾತು” ಅಥವಾ “ನಿನ್ನ ಮಾತು” ಎಂಬುದಾಗಿ ಕಾಣಿಸಿಕೊಳ್ಳುತ್ತದೆ (ಇದು ದೇವರ ವಾಕ್ಯದ ಕುರಿತಾಗಿ ಮಾತನಾಡುವಾಗ ಮಾತ್ರ ಅನ್ವಯವಾಗುತ್ತವೆ).
  • ಹೊಸ ಒಡಂಬಡಿಕೆಯಲ್ಲಿ ಯೇಸುವನ್ನು “ವಾಕ್ಯ” ಮತ್ತು “ದೇವರ ವಾಕ್ಯ” ಎಂದು ಕರೆದಿದ್ದಾರೆ. ಈ ಬಿರುದುಗಳಿಗೆ ಅರ್ಥವೇನೆಂದರೆ ಯೇಸು ಸಂಪೂರ್ಣವಾಗಿ ದೇವರು ಯಾರೆಂದು ತೋರಿಸಿದ್ದಾರೆ, ಯಾಕಂದರೆ ಈತನು ದೇವರಾಗಿದ್ದಾನೆ.

“ಸತ್ಯದ ವಾಕ್ಯ” ಎನ್ನುವ ಮಾತನ್ನು ಇನ್ನೊಂದು ರೀತಿಯಲ್ಲಿ “ದೇವರ ವಾಕ್ಯ” ಎಂದು ಸೂಚಿಸಬಹುದು, ಇದು ಆತನ ಸಂದೇಶವು ಅಥವಾ ಬೋಧನೆಯು ಆಗಿರುತ್ತದೆ. ಇದು ಕೇವಲ ಒಂದು ವಾಕ್ಯವನ್ನು ಮಾತ್ರವೇ ಸೂಚಿಸುವುದಿಲ್ಲ.

  • ದೇವರ ಸತ್ಯವಾಕ್ಯದಲ್ಲಿ ದೇವರು ತನ್ನ ಕುರಿತಾಗಿ ಜನರಿಗೆ ಪ್ರತಿಯೊಂದನ್ನು ಹೇಳಿಕೊಂಡಿರುವ ವಿಷಯಗಳು, ಆತನ ಸೃಷ್ಟಿ, ಮತ್ತು ಯೇಸುವಿನ ಮೂಲಕ ರಕ್ಷಣೆಯ ಪ್ರಣಾಳಿಕೆಯು ಒಳಗೊಂಡಿರುತ್ತವೆ.
  • ಈ ಮಾತು ದೇವರು ನಮಗೆ ಹೇಳಿರುವ ಪ್ರತಿಯೊಂದೂ ಮಾತು ಸತ್ಯ, ವಿಶ್ವಾಸಾರ್ಹ ಮತ್ತು ನೈಜವಾಗಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಯೆಹೋವನ ಸಂದೇಶ” ಅಥವಾ “ದೇವರ ಸಂದೇಶ” ಅಥವಾ “ದೇವರಿಂದ ಬಂದಿರುವ ಬೋಧನೆಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಭಾಷೆಗಳಲ್ಲಿ ಈ ಪದವನ್ನು ಬಹುವಚನ ಪದವನ್ನಾಗಿ ಉಪಯೋಗಿಸುವುದು ಸಹಜ, “ದೇವರ ವಾಕ್ಯಗಳು” ಅಥವಾ “ಯೆಹೋವನ ವಾಕ್ಯಗಳು” ಎಂದೂ ಉಪಯೋಗಿಸುತ್ತಾರೆ.
  • “ಯೆಹೋವನ ವಾಕ್ಯ ಬಂದಿದೆ” ಎನ್ನುವ ಮಾತು ದೇವರು ತನ್ನ ಪ್ರವಾದಿಗಳಿಗೆ ಅಥವಾ ತನ್ನ ಜನರಿಗೆ ಹೇಳಿರುವವುಗಳನ್ನು ಪರಿಚಯ ಮಾಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ. ಈ ಮಾತನ್ನು “ಯೆಹೋವನು ಈ ಸಂದೇಶವನ್ನು ಹೇಳಿದ್ದಾನೆ” ಅಥವಾ “ಯೆಹೋವನು ಈ ಮಾತುಗಳನ್ನು ನುಡಿದಿದ್ದಾನೆ” ಎಂದೂ ಅನುವಾದ ಮಾಡಬಹುದು.
  • “ಲೇಖನ” ಅಥವಾ “ಲೇಖನಗಳು” ಎನ್ನುವ ಪದವನ್ನು “ಬರವಣಿಗೆಗಳು” ಅಥವಾ “ದೇವರಿಂದ ಬಂದಿರುವ ಸಂದೇಶವು ಬರೆಯಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು. ಈ ಪದವು ಅಥವಾ ಮಾತನ್ನು “ಮಾತು” ಎನ್ನುವ ಪದದ ಅನುವಾದಕ್ಕೆ ವಿಭಿನ್ನವಾಗಿ ಅನುವಾದ ಮಾಡಬೇಕಾಗಿರುತ್ತದೆ.
  • “ವಾಕ್ಯ” ಎನ್ನುವ ಪದವು ಮಾತ್ರವೇ ಕಂಡುಬಂದಾಗ, ಅದು ದೇವರ ವಾಕ್ಯವನ್ನು ಸೂಚಿಸುತ್ತದೆ, ಇದನ್ನು “ಸಂದೇಶ” ಅಥವಾ “ದೇವರ ವಾಕ್ಯ” ಅಥವಾ “ಬೋಧನೆಗಳು” ಎಂದೂ ಅನುವಾದ ಮಾಡಬಹುದು. ಮೇಲೆ ಹೇಳಲ್ಪಟ್ಟಿರುವ ಅನುವಾದಗಳನ್ನೂ ಪರಿಗಣಿಸಿರಿ.
  • ಸತ್ಯವೇದವು ಯೇಸುವನ್ನು “ವಾಕ್ಯ” ಎಂದು ಸೂಚಿಸಿದಾಗ, ಈ ಮಾತನ್ನು ಅಥವಾ ಪದವನ್ನು “ಸಂದೇಶ” ಅಥವಾ “ಸತ್ಯ” ಎಂದೂ ಅನುವಾದ ಮಾಡಬಹುದು.
  • ಸತ್ಯವಾಕ್ಯ” ಎನ್ನುವ ಮಾತನ್ನು “ದೇವರು ನಿಜವಾದ ಸಂದೇಶ” ಅಥವಾ “ದೇವರ ವಾಕ್ಯ, ಇದು ನಿಜ” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವಾಗ ನಿಜವಾಗಿ ಎನ್ನುವ ಪದವನ್ನು ಸೇರಿಸಿ ಅನುವಾದ ಮಾಡುವುದು ತುಂಬಾ ಪ್ರಾಮುಖ್ಯವಾದ ವಿಷಯ.

(ಈ ಪದಗಳನ್ನು ಸಹ ನೋಡಿರಿ : ಪ್ರವಾದಿ, ನಿಜ, ವಾಕ್ಯ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 25:07 “ನಿಮ್ಮ ದೇವರಾದ ಕರ್ತನನ್ನು ಮಾತ್ರವೇ ಆರಾಧನೆ ಮಾಡಿರಿ ಮತ್ತು ಆತನನ್ನು ಮಾತ್ರವೇ ಸೇವಿಸಿರಿ” ಎಂದು __ ದೇವರ ವಾಕ್ಯದಲ್ಲಿ __ ಆತನು ತನ್ನ ಜನರಿಗೆ ಆಜ್ಞಾಪಿಸಿದ್ದಾರೆ.
  • 33:06 “ಬೀಜವು ___ ದೇವರ ವಾಕ್ಯವೇ ___ “ ಎಂದು ಯೇಸು ವಿವರಿಸಿ ಹೇಳಿದನು.
  • 42:03 ಮೆಸ್ಸೀಯನ ಕುರಿತಾಗಿ ___ ದೇವರ ವಾಕ್ಯ ___ ಏನು ಹೇಳುತ್ತಿದೆಯೆಂದೆನ್ನುವುದರ ಕುರಿತಾಗಿ ಯೇಸು ಅವರಿಗೆ ವಿವರಿಸಿ ಹೇಳಿದನು.
  • 42:07 “___ ದೇವರ ವಾಕ್ಯದಲ್ಲಿ ___ ನನ್ನ ಕುರಿತಾಗಿ ಬರೆಯಲ್ಪಟ್ಟಿರುವ ಪ್ರತಿಯೊಂದು ನೆರವೇರಿಸಲ್ಪಡಬೇಕೆಂದು ನಾನು ನಿಮಗೆ ಹೇಳುತ್ತಿದೇನೆ” ಎಂದು ಯೇಸು ಹೇಳಿದರು. ಆದನಂತರ ಆತನು ತಮ್ಮ ಮನಗಳನ್ನು ತೆರೆದನು, ಇದರಿಂದ ಅವರು ___ ದೇವರ ವಾಕ್ಯವನ್ನು ___ ಅರ್ಥಮಾಡಿಕೊಳ್ಳುವರು.
  • 45:10 ಯೇಸುವಿನ ಕುರಿತಾದ ಶುಭವಾರ್ತೆಯನ್ನು ಅವನಿಗೆ ಹೇಳುವುದಕ್ಕೆ ಫಿಲಿಪ್ಪನು ಕೂಡ ಇತರ ___ ಲೇಖನ ಭಾಗಗಳನ್ನು ___ ಉಪಯೋಗಿಸಿದನು.
  • 48:12 ಆದರೆ ಯೇಸುವು ಎಲ್ಲಾ ಪ್ರವಾದಿಗಳಿಗಿಂತ ದೊಡ್ಡವನು. ಆತನೇ ___ ದೇವರ ವಾಕ್ಯ ___ ಆಗಿದ್ದಾನೆ.
  • 49:18 ನೀವು ಇತರ ಕ್ರೈಸ್ತರೊಂದಿಗೆ ಸೇರಿ ಆತನನ್ನು ಆರಾಧನೆ ಮಾಡಬೇಕೆಂದು, ಆತನ __ ವಾಕ್ಯವನ್ನು __ ಅಧ್ಯಯನ ಮಾಡಬೇಕೆಂದು, ಪ್ರಾರ್ಥನೆ ಮಾಡಬೇಕೆಂದು ಮತ್ತು ನಿಮಗೆ ಮಾಡಿದ ಪ್ರತಿಯೊಂದು ಕಾರ್ಯವನ್ನು ಇತರರಿಗೆ ಹೇಳಬೇಕೆಂದು ದೇವರು ನಿಮಗೆ ಹೇಳುತ್ತಿದ್ದಾನೆ.

ಪದ ಡೇಟಾ:

  • Strong's: H561, H565, H1697, H3068, G3056, G4487

ದೇವರ ಸ್ವರೂಪ, ರೂಪ

ಪದದ ಅರ್ಥವಿವರಣೆ:

“ರೂಪ” ಎನ್ನುವ ಪದವು ಇನ್ನೊಂದರಂತೆ ಬೇರೊಂದು ಕಾಣಿಸಿಕೊಳ್ಳುವುದನ್ನು ಅಥವಾ ಇನ್ನೊಬ್ಬರ ನಡತೆಯಲ್ಲಿ ಅಥವಾ ಮೂಲತತ್ವದಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. “ದೇವರ ಸ್ವರೂಪ” ಎನ್ನುವ ಮಾತು ಸಂದರ್ಭಾನುಸಾರವಾಗಿ ಅನೇಕ ವಿಧಾನಗಳಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.

  • ಆರಂಭ ಕಾಲದಲ್ಲಿ ದೇವರು ಮನುಷ್ಯರನ್ನು “ಆತನ ರೂಪದಲ್ಲಿ” ಉಂಟು ಸೃಷ್ಟಿಸಿದ್ದಾನೆ, ಅದನ್ನು “ಆತನ ಹೋಲಿಕೆಯಲ್ಲಿ” ಎಂದೂ ಉಪಯೋಗಿಸುತ್ತಾರೆ. ಜನರು ದೇವರ ರೂಪವನ್ನು ಪ್ರತಿಬಿಂಬಿಸುವ ನಿರ್ದಿಷ್ಟವಾದ ಗುಣಲಕ್ಷಣಗಳನ್ನು ಹೊಂದಿರುತ್ತಾರೆಂದು ಇದಕ್ಕೆ ಅರ್ಥವಾಗಿರುತ್ತದೆ, ಭಾವೋದ್ರೇಕವನ್ನು ಅನುಭವಿಸುವ ಸಾಮರ್ಥ್ಯ, ಮಾತನಾದುವುದಕ್ಕೆ ಮತ್ತು ಕಾರಣ ಹೇಳುವುದಕ್ಕೆ ಸಾಮರ್ಥ್ಯ, ಮತ್ತು ಶಾಶ್ವತವಾಗಿ ಜೀವಿಸುವ ಆತ್ಮವನ್ನು ಹೊಂದಿರುತ್ತಾರೆ.
  • ದೇವರ ಮಗನಾದ ಯೇಸು “ದೇವರ ಸ್ವರೂಪವಾಗಿರುತ್ತಾನೆ”, ಅದಕ್ಕೆ ಆತನೂ ದೇವರಾಗಿರುತ್ತಾನೆ ಎಂದು ಸತ್ಯವೇದವು ಬೋಧಿಸುತ್ತದೆ. ಮನುಷ್ಯರ ಹಾಗೆ ಯೇಸು ಸೃಷ್ಟಿಸಲ್ಪಟ್ಟಿಲ್ಲ. ನಿತ್ಯತ್ವದಿಂದ ಮಗನಾದ ದೇವರು ಎಲ್ಲಾ ದೈವಿಕ ಗುಣಲಕ್ಷಣಗಳನ್ನು ಹೊಂದಿರುತ್ತಾನೆ, ಯಾಕಂದರೆ ಈತನಲ್ಲಿ ತಂದೆಯಾದ ದೇವರಲ್ಲಿರುವ ಒಂದೇ ಮೂಲತತ್ವವು ಇರುತ್ತದೆ.

ಅನುವಾದ ಸಲಹೆಗಳು:

  • ಯೇಸುವನ್ನು ಸೂಚಿಸುವಾಗ, “ದೇವರ ಸ್ವರೂಪ” ಎನ್ನುವ ಮಾತು “ದೇವರ ನಿಖರವಾದ ಹೋಲಿಕೆ” ಅಥವಾ “ದೇವರಂತೆಯೇ ಒಂದೇ ಮೂಲತತ್ವ” ಅಥವಾ “ದೇವರ ಹಾಗೆಯೇ ಇರುವುದು” ಎಂದೂ ಅನುವಾದ ಮಾಡಬಹುದು.
  • ಮನುಷ್ಯರಿಗೆ ಸೂಚಿಸಿ ಹೇಳಿದಾಗ, “ದೇವರು ಅವರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿಕೊಂಡಿದ್ದಾನೆ” ಎನ್ನುವ ಮಾತನ್ನು “ದೇವರು ತನ್ನ ಹೋಲಿಕೆಯಲ್ಲಿಯೇ ಅವರನ್ನು ಸೃಷ್ಟಿಸಿದ್ದಾನೆ” ಅಥವಾ “ದೇವರು ಅವರನ್ನು ತನ್ನ ಸ್ವಂತ ಗುಣಗಳಿರುವಂತೆಯೇ ಅವರನ್ನು ಅದೇ ಗುಣಲಕ್ಷಣಗಳಿಂದ ಸೃಷ್ಟಿಸಿಕೊಂಡಿದ್ದಾನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಚಿತ್ರ, ದೇವರ ಮಗ, ದೇವರ ಮಗ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4541, H1544, H2553, H6456, H6459, H6754, H6816, H8403, G504, G179

ದೇವರು

ಸತ್ಯಾಂಶಗಳು:

ಸತ್ಯವೇದದಲ್ಲಿ “ದೇವರು” ಎಂಬ ಪದವು ವಿಶ್ವವನ್ನು ಶೂನ್ಯದಿಂದ ಸೃಷ್ಟಿಯನ್ನುಂಟು ಮಾಡಿದ ನಿತ್ಯನಾದವನನ್ನು ಸೂಚಿಸುತ್ತದೆ. ದೇವರು ತಂದೆ, ಮಗ ಮತ್ತು ಪವಿತ್ರಾತ್ಮರಾಗಿ ಅಸ್ತಿತ್ವದಲ್ಲಿದ್ದಾರೆ. ದೇವರ ವೈಯುಕ್ತಿಕ ಹೆಸರು “ಯೆಹೋವ” ಆಗಿರುತ್ತದೆ.

  • ದೇವರು ಯಾವಾಗಲೂ ಅಸ್ತಿತ್ವದಲ್ಲಿರುತ್ತಾರೆ; ಯಾವುದೂ ಅಸ್ತಿತ್ವದಲ್ಲಿರುವುದಕ್ಕೆ ಮುಂಚಿತವಾಗಿಯೇ ಆತನು ಅಸ್ತಿತ್ವದಲ್ಲಿದ್ದನು, ಮತ್ತು ಆತನು ಎಂದಿಗೂ ಎಂದೆಂದಿಗೂ ನಿರಂತರವಾಗಿ ಅಸ್ತಿತ್ವದಲ್ಲಿರುತ್ತಾನೆ.
  • ಈತನೇ ನಿಜವಾದ ದೇವರು ಮತ್ತು ಈ ವಿಶ್ವದಲ್ಲಿ ಪ್ರತಿಯೊಂದರ ಮೇಲೆ ಅಧಿಕಾರವನ್ನು ಹೊಂದಿರುವಾತನಾಗಿರುತ್ತಾನೆ.
  • ದೇವರು ಪರಿಪೂರ್ಣ ನೀತಿವಂತನು, ಅನಂತ ಜ್ಞಾನಿ, ಪರಿಶುದ್ಧನು, ಪಾಪರಹಿತನು, ನ್ಯಾಯವಂತನು, ಕರುಣೆಯುಳ್ಳವನು ಮತ್ತು ಪ್ರೀತಿಯುಳ್ಳವನು ಆಗಿರುತ್ತಾನೆ.
  • ಈತನು ಒಡಂಬಡಿಕೆಯನ್ನು ನೆರವೇರಿಸುವ ದೇವರು, ಆತನು ಮಾಡಿದ ವಾಗ್ಧಾನಗಳನ್ನು ನೆರವೇರಿಸುವಾತನು.
  • ದೇವರನ್ನು ಆರಾಧಿಸುವುದಕ್ಕಾಗಿಯೇ ಜನರು ಸೃಷ್ಟಿಸಲ್ಪಟ್ಟಿದ್ದಾರೆ ಮತ್ತು ಅವರು ಆತನನ್ನು ಮಾತ್ರವೇ ಆರಾಧನೆ ಮಾಡಬೇಕು.
  • ದೇವರು ತನ್ನ ಹೆಸರು “ಯೆಹೋವ (ಅಥವಾ ಯಾವ್ಹೆ)” ಎಂದು ಪ್ರಕಟಿಸಿದನು, ಇದಕ್ಕೆ “ಆತನಿದ್ದಾನೆ” ಅಥವಾ “ಇರುವಾತನು” ಅಥವಾ “(ಯಾವಾಗಲೂ) ಅಸ್ತಿತ್ವದಲ್ಲಿರುವಾತನು” ಎಂದರ್ಥ.
  • ಸತ್ಯವೇದವು ಸುಳ್ಳು “ದೇವರಗಳ” ಕುರಿತಾಗಿಯೂ ಬೋಧಿಸುತ್ತದೆ, ಇದರಲ್ಲಿ ಜನರು ತಪ್ಪಾಗಿ ಆರಾಧಿಸುವ ವಿಗ್ರಹಗಳು ಒಳಗೊಂಡಿರುತ್ತವೆ.

ಅನುವಾದ ಸಲಹೆಗಳು:

  • “ದೇವರು” ಎನ್ನುವ ಪದವನ್ನು “ದೈವತ್ವ” ಅಥವಾ “ಸೃಷ್ಟಿಕರ್ತ” ಅಥವಾ “ಪರಮಾತ್ಮ” ಎಂದೂ ಅನುವಾದ ಮಾಡಬಹುದು.
  • “ದೇವರು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಪರಮ ಸೃಷ್ಟಿಕರ್ತ” ಅಥವಾ “ಅನಂತ ಸಾರ್ವಭೌಮ ಕರ್ತ” ಅಥವಾ “ನಿತ್ಯತ್ವದಲ್ಲಿರುವ ಪರಮಾತ್ಮ” ಎಂದೂ ಅನುವಾದ ಮಾಡಬಹುದು.
  • ದೇವರು ಎನ್ನುವ ಪದವನ್ನು ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಗಳಲ್ಲಿ ಯಾವ ರೀತಿ ಸೂಚಿಸುತ್ತಾರೆನ್ನುವದನ್ನು ನೋಡಿಕೊಳ್ಳಿರಿ. ಅನುವಾದ ಮಾಡುವ ಭಾಷೆಯಲ್ಲಿ “ದೇವರು” ಎನ್ನುವ ಪದಕ್ಕೆ ಇನ್ನೊಂದು ಪದವೂ ಇರಬಹುದು. ಒಂದುವೇಳೆ ಇದ್ದರೆ, ಮೇಲೆ ವಿವರಿಸಿದಂತೆ ನಿಜವಾದ ದೇವರಿಗೆ ಇರುವ ಗುಣಲಕ್ಷಣಗಳೆಲ್ಲವುಗಳನ್ನು ತೋರಿಸುವ ಪದವು ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡುವುದು ಉತ್ತಮ.
  • ಅನೇಕ ಭಾಷೆಗಳಲ್ಲಿ ನಿಜವಾದ ದೇವರು ಎಂದು ಹೇಳುವುದಕ್ಕೆ ಮೊದಲನೇ ಅಕ್ಷರವನ್ನು ದೊಡ್ಡ ಅಕ್ಷರವನ್ನಾಗಿ ಬರೆಯುತ್ತಾರೆ, ಇದರಿಂದ ಸುಳ್ಳು ದೇವರು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
  • ಈ ವ್ಯತ್ಯಾಸವನ್ನು ತಿಳಿಸುವುದಕ್ಕೆ ಇನ್ನೊಂದು ವಿಧಾನ ಇದೆ, ಅದು ಆಂಗ್ಲ ಭಾಷೆಯಲ್ಲಿ "God" (ಗಾಡ್ (ನಿಜವಾದ ದೇವರು) - ಮೊದಲ ಅಕ್ಷರವಾಗಿರುವ “ಜಿ” ಎನ್ನುವುದು ದೊಡ್ಡದಾಗಿರುತ್ತದೆ) ಮತ್ತು "god" (ಗಾಡ್ (ಸುಳ್ಳು ದೇವರು) - ಮೊದಲ ಅಕ್ಷರವಾಗಿರುವ “ಜಿ” ಎನ್ನುವುದು ಚಿಕ್ಕದಾಗಿರುತ್ತದೆ).
  • “ನಾನು ಅವರಿಗೆ ದೇವರಾಗಿರುತ್ತೇನೆ ಮತ್ತು ಅವರು ನನ್ನ ಜನರಾಗಿರುತ್ತಾರೆ” ಎನ್ನುವ ಮಾತನ್ನು “ದೇವರಾಗಿರುವ ನಾನು ಈ ಜನರನ್ನು ಪಾಲಿಸುತ್ತೇನೆ ಮತ್ತು ಅವರು ನನ್ನನ್ನು ಆರಾಧಿಸುವರು” ಎಂದೂ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಸೃಷ್ಟಿಸು, ಸುಳ್ಳು ದೇವರು, ತಂದೆಯಾದ ದೇವರು, ಪವಿತ್ರಾತ್ಮ, ಸುಳ್ಳು ದೇವರು, ದೇವರ ಮಗ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 01:01 ___ ದೇವರು ___ ವಿಶ್ವವನ್ನು ಸೃಷ್ಟಿಸಿದನು, ಪ್ರತಿಯೊಂದನ್ನು ಆರು ದಿನಗಳಲ್ಲಿ ಉಂಟು ಮಾಡಿದನು.
  • 01:15 ___ ದೇವರು ___ ತನ್ನ ಸ್ವರೂಪದಲ್ಲಿ ಸ್ತ್ರೀ ಪುರುಷರನ್ನು ಉಂಟುಮಾಡಿದನು.
  • 05:03 “ ನಾನು ಸರ್ವಶಕ್ತನಾದ ___ ದೇವರು ___. ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡುವೆನು.”
  • 09:14 “ನಾನು ಇರುವಾತನಾಗಿದ್ದೇನೆ. “ಇರುವಾತನೆಂಬುವವನು ನನ್ನನ್ನು ಕಳುಹಿಸಿದ್ದಾನೆ” ಎಂದು ಅವರಿಗೆ ಹೇಳು ಎಂದು ___ ದೇವರು ___ ಹೇಳಿದನು. “ನಾನು ಯೆಹೋವನು, ನಿನ್ನ ಪಿತೃಗಳಾದ ಅಬ್ರಹಾಮ, ಇಸಾಕ, ಮತ್ತು ಯಾಕೋಬ __ ದೇವರು __ ಆಗಿದ್ದೇನೆ. ಎಂದೆಂದಿಗೂ ಇರುವ ನನ್ನ ಹೆಸರು ಇದೇ” ಎಂದೂ ಅವರಿಗೆ ಹೇಳು.
  • 10:02 ಈ ಮಾರಿರೋಗಗಳ ಮೂಲಕ ___ ದೇವರು ___ ಫರೋಹನಿಗಿಂತಲೂ ಮತ್ತು ಎಲ್ಲಾ ಐಗುಪ್ತರಗಿಂತಲೂ ಎಷ್ಟು ದೊಡ್ಡವನೆಂದು ಆತನು ತೋರಿಸಿಕೊಂಡನು.
  • 16:01 ನಿಜ __ ದೇವರಾದ__ ಯೆಹೋವನನ್ನು ಬಿಟ್ಟು ಇಸ್ರಾಯೇಲ್ಯರು ಕಾನಾನ್ ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು.
  • 22:07 ಮೆಸ್ಸೀಯನನ್ನು ಅಂಗೀಕರಿಸುವುದಕ್ಕೆ ಜನರನ್ನು ಸಿದ್ಧಪಡಿಸುವ ___ ಅತ್ಯುನ್ನತ ದೇವರಾದ ___ ಪ್ರವಾದಿಯೆಂದು ನನ್ನ ಮಗನಾಗಿರುವ ನೀನು ಕರೆಯಲ್ಪಡುವಿ!”
  • 24:09 ಒಬ್ಬ ___ ದೇವರು ___ ಮಾತ್ರ ಇದ್ದಾನೆ. ಆದರೆ ತಂದೆಯಾದ ___ ದೇವರು ___ ಮಾತನಾಡಿದ್ದನ್ನು ಯೋಹಾನನು ಕೇಳಿಸಿಕೊಂಡನು ಮತ್ತು ಆತನು ಯೇಸುವಿಗೆ ದೀಕ್ಷಾಸ್ನಾನವನ್ನು ಕೊಟ್ಟಾಗ ಮಗನಾದ ಯೇಸುವನ್ನು ಮತ್ತು ಪವಿತ್ರಾತ್ಮನನ್ನು ನೋಡಿದನು.
  • 25:07 “ಕರ್ತನಾದ ನಿನ್ನ ___ ದೇವರನ್ನು ___ ಮಾತ್ರ ಆರಾಧನೆ ಮಾಡು ಮತ್ತು ಆತನನ್ನೇ ನೀನು ಸೇವಿಸು”.
  • 28:01 “ಒಳ್ಳೇಯವನು ಒಬ್ಬನೇ, ಅವನೇ ___ ದೇವರು ___.”
  • 49:09 ಆದರೆ ___ ದೇವರು ___ ಲೋಕದಲ್ಲಿರುವ ಪ್ರತಿಯೊಬ್ಬರನ್ನು ಹೆಚ್ಚಾಗಿ ಪ್ರೀತಿಸಿದನು, ಇದರಿಂದ ಆತನು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ತನ್ನ ಪಾಪಗಳಿಗಾಗಿ ಶಿಕ್ಷಿಸಲ್ಪಡುವುದಿಲ್ಲ, ಆದರೆ ___ ದೇವರೊಂದಿಗೆ ___ ಸದಾಕಾಲವೂ ಜೀವಿಸುವನು.
  • 50:16 ಆದರೆ ಒಂದಾನೊಂದು ದಿನ ___ ದೇವರು ___ ಪರಿಪೂರ್ಣವಾದ ಹೊಸ ಆಕಾಶವನ್ನು ಮತ್ತು ಹೊಸ ಭೂಮಿಯನ್ನು ಉಂಟು ಮಾಡುವನು.

ಪದ ಡೇಟಾ:

  • Strong's: H136, H305, H410, H426, H430, H433, H2486, H2623, H3068, H3069, H3863, H4136, H6697, G112, G516, G932, G935, G1096, G1140, G2098, G2124, G2128, G2150, G2152, G2153, G2299, G2304, G2305, G2312, G2313, G2314, G2315, G2316, G2317, G2318, G2319, G2320, G3361, G3785, G4151, G5207, G5377, G5463, G5537, G5538

ದೇವರು, ಸುಳ್ಳು ದೇವರು, ದೇವತೆ, ವಿಗ್ರಹ, ವಿಗ್ರಹಾರಾಧಕ, ವಿಗ್ರಹಾರಾಧಿಕರು, ವಿಗ್ರಹ ಪೂಜೆ, ವಿಗ್ರಹಾರಾಧನೆ

ಪದದ ಅರ್ಥವಿವರಣೆ:

ಸುಳ್ಳು ದೇವರು ಎಂದರೆ ಜನರು ನಿಜವಾದ ದೇವರನ್ನು ಬಿಟ್ಟು ಬೇರೆ ಯಾವುದಾದರೊಂದನ್ನು ದೇವರು ಎಂದು ಭಾವಿಸಿ ಆರಾಧನೆ ಮಾಡುವುದು ಎಂದರ್ಥ. “ದೇವತೆ” ಎನ್ನುವ ಪದವು ವಿಶೇಷವಾಗಿ ಹೆಣ್ಣು ಸುಳ್ಳು ದೇವರನ್ನು ಸೂಚಿಸುತ್ತದೆ.

  • ಈ ಸುಳ್ಳು ದೇವರುಗಳು ಅಥವಾ ದೇವತೆಗಳು ಅಸ್ತಿತ್ವದಲ್ಲಿರುವದಿಲ್ಲ (ನಿಜವಾಗಿಲ್ಲ). ಯೆಹೋವನೇ ನಿಜವಾದ ದೇವರು.
  • ಜನರು ಕೆಲವೊಂದುಬಾರಿ ತಮ್ಮ ಸುಳ್ಳು ದೇವರಿಗೆ ಚಿಹ್ನೆಗಳಾಗಿ ಆರಾಧನೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ವಸ್ತುಗಳನ್ನು ವಿಗ್ರಹಗಳನ್ನಾಗಿ ಮಾಡಿಕೊಳ್ಳುತ್ತಾರೆ.
  • ಸತ್ಯವೇದದಲ್ಲಿ ದೇವ ಜನರು ಅನೇಕ ಸಲ ಸುಳ್ಳು ದೇವರುಗಳನ್ನು ಆರಾಧನೆ ಮಾಡುವ ಕ್ರಮದಲ್ಲಿ ನಿಜವಾದ ದೇವರಿಗೆ ವಿಧೇಯತೆಯನ್ನು ತೋರಿಸದೆ ಆಅನಿಂದ ದೂರ ಹೋಗಿದ್ದಾರೆ.
  • ಜನರು ಆರಾಧಿಸುವ ಸುಳ್ಳು ದೇವರುಗಳಲ್ಲಿ ಮತ್ತು ವಿಗ್ರಹಗಳಲ್ಲಿ ಶಕ್ತಿ ಇದೆಯೆಂದು ನಂಬಿಕೆಯನ್ನುಂಟು ಮಾಡುವುದರಲ್ಲಿ ದೆವ್ವಗಳು ಅನೇಕಬಾರಿ ಜನರನ್ನು ಮೋಸ ಮಾಡುತ್ತವೆ.
  • ಸತ್ಯವೇದದ ಕಾಲದಲ್ಲಿ ಜನರಿಂದ ಆರಾಧಿಸಲ್ಪಟ್ಟ ಅನೇಕ ಸುಳ್ಳು ದೇವರುಗಳಲ್ಲಿ ಬಾಳ್, ದಾಗೋನ್ ಮತ್ತು ಮೋಲೆಕನು ಮ್ನ್ನುೂರ್ು ಸುಳ್ಳುದೇವರಾಗಿದ್ದವು.
  • ಪುರಾತನ ಕಾಲದಲ್ಲಿನ ಜನರು ಅಶೇರ ಮತ್ತು ಅರ್ತೆಮೀ ದೇವಿ (ಡಯಾನ) ಎನ್ನುವ ದೇವತೆಗಳನ್ನು ಆರಾಧಿಸುತ್ತಿದ್ದರು.

ವಿಗ್ರಹ ಎನ್ನುವುದು ಆರಾಧನೆ ಮಾಡುವುದಕ್ಕಾಗಿ ಜನರು ಮಾಡಿಕೊಂಡಿರುವ ಒಂದು ವಸ್ತು ಮಾತ್ರ, . “ವಿಗ್ರಹ ಪೂಜೆ” ಎನ್ನುವ ಮಾತು ನಿಜವಾದ ದೇವರಿಗಿಂತ ಬೇರೆ ಸುಳ್ಳು ದೇವರುಗಳಿಗೆ ಹೆಚ್ಚಾದ ಗೌರವವನ್ನು ಕೊಡುವುದನ್ನು ವಿವರಿಸುತ್ತದೆ.

  • ಜನರು ಆರಾಧಿಸುವ ಸುಳ್ಳು ದೇವರುಗಳಿಗೆ ಪ್ರತಿನಿಧಿಗಳಾಗಿ ವಿಗ್ರಹಗಳನ್ನು ಇಟ್ಟುಕೊಳ್ಳುತ್ತಾರೆ.
  • ಈ ಸುಳ್ಳು ದೇವರುಗಳು ಅಸ್ತಿತ್ವದಲ್ಲಿರುವುದಿಲ್ಲ; ಯೆಹೋವನಿಗಿಂತ ಬೇರೊಂದು ದೇವರು ಯಾರೂ ಇಲ್ಲ.
  • ಕೆಲವೊಂದುಬಾರಿ ವಿಗ್ರಹಗಳಿಗೆ ಶಕ್ತಿಯಿಲ್ಲದಿದ್ದರೂ, ಅವುಗಳಿಗೆ ಶಕ್ತಿಯಿದೆ ಎನ್ನುವ ರೀತಿಯಲ್ಲಿ ದೆವ್ವಗಳು ಕೆಲಸ ಮಾಡುತ್ತವೆ,
  • ವಿಗ್ರಹಗಳನ್ನು ತುಂಬಾ ಬೆಲೆಯುಳ್ಳವುಗಳಾದ ಬಂಗಾರ, ಬೆಳ್ಳಿ, ಕಂಚು, ಅಥವಾ ವಿಪರೀತ ಬೆಲೆಯ ಮರಗಳಿಂದ ತಯಾರು ಮಾಡುತ್ತಾರೆ.
  • “ವಿಗ್ರಹಪೂಜೆ ಮಾಡುವ ರಾಜ್ಯ” ಎನ್ನುವದಕ್ಕೆ “ವಿಗ್ರಹಗಳನ್ನು ಆರಾಧನೆ ಮಾಡುವ ರಾಜ್ಯದ ಜನರು” ಅಥವಾ “ಭುಲೋಕದಲ್ಲಿರುವವುಗಳನ್ನು ಆರಾಧನೆ ಮಾಡುವ ರಾಜ್ಯದ ಜನರು” ಎಂದರ್ಥ.
  • “ವಿಗ್ರಹ ಪೂಜೆಯ ಆಕಾರ” ಎನ್ನುವ ಮಾತಿಗೆ “ಕೆತ್ತಿದ ಚಿತ್ರ” ಅಥವಾ “ಕೆತ್ತಿದ ವಿಗ್ರಹ” ಎನ್ನುವ ಬೇರೊಂದು ಪದಗಳನ್ನು ಉಪಯೋಗಿಸಬಹುದು.

ಅನುವಾದ ಸಲಹೆಗಳು:

  • ಅನುವಾದ ಮಾಡುವ ಭಾಷೆಯಲ್ಲಿ ಅಥವಾ ಅಕ್ಕಪಕ್ಕ ಭಾಷೆಯಲ್ಲಿ “ಸುಳ್ಳು ದೇವರು” ಎನ್ನುವ ಪದವನ್ನು ಸೂಚಿಸುವ ಬೇರೊಂದು ಪದಗಳಿರಬಹುದು.
  • “ವಿಗ್ರಹ” ಎನ್ನುವ ಪದವು “ಸುಳ್ಳು ದೇವರಿಗೆ” ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ.
  • ಆಂಗ್ಲ ಭಾಷೆಯಲ್ಲಿ "g" (ಚಿಕ್ಕ “ಜಿ”) ಎನ್ನುವ ಚಿಕ್ಕ ಅಕ್ಷರವು ಸುಳ್ಳು ದೇವರುಗಳನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. "G" (ದೊಡ್ಡ “ಜಿ”) ಎನ್ನುವ ದೊಡ್ಡ ಅಕ್ಷರವು ನಿಜವಾದ ದೇವರನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಇತರ ಭಾಷೆಗಳಲ್ಲಿಯೂ ಈ ರೀತಿ ಮಾಡುತ್ತಾರೆ.
  • ಸುಳ್ಳು ದೇವರುಗಳನ್ನು ಸೂಚಿಸುವುದಕ್ಕೆ ಸಂಪೂರ್ಣವಾಗಿ ಬೇರೊಂದು ಪದವನ್ನು ಉಪಯೋಗಿಸುವ ಇನ್ನೊಂದು ವಿಧಾನವು ಇರುತ್ತದೆ.
  • ಕೆಲವೊಂದು ಭಾಷೆಗಳಲ್ಲಿ ಸುಳ್ಳು ದೇವರು ಯಾವ ಲಿಂಗವೆಂದು ಅಂದರೆ ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸುವ ಪದವನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೇವರು, ಅಶೇರ, ಬಾಳ್, ಮೋಲೆಕ, ದೆವ್ವ, ರೂಪ, ರಾಜ್ಯ, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 10:02 ಈ ಎಲ್ಲಾ ಮಾರಿರೋಗಗಳ ಮೂಲಕ, ಫರೋಹನಿಗಿಂತ, ಐಗುಪ್ತ __ ದೇವರುಗಳಿಗಿಂತ__ ಹೆಚ್ಚಾಗಿ ಅತಿ ಶಕ್ತಿಯುಳ್ಳ ದೇವರು ಇದ್ದಾರೆಂದು ದೇವರು ಫರೋಹನಿಗೆ ತೋರಿಸಿದ್ದಾನೆ.
  • 13:04 ಆದನಂತರ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟರು, “ನಾನೇ ಯೆಹೋವನು, ನಿಮ್ಮನ್ನು ಐಗುಪ್ತ ಗುಲಾಮಗಿರಿಯಿಂದ ರಕ್ಷಿಸಿದ ನಿಮ್ಮ ದೇವರು” ಬೇರೊಂದು __ ದೇವರುಗಳನ್ನು __ ಆರಾಧಿಸಬೇಡಿರಿ”. ಎಂದು ಹೇಳಿದನು.
  • 14:02 ಅವರು (ಕಾನಾನಿಯರು)__ ಸುಳ್ಳು ದೇವರುಗಳನ್ನು __ ಆರಾಧಿಸಿದರು ಮತ್ತು ಅನೇಕ ದುಷ್ಟ ಕಾರ್ಯಗಳನ್ನು ಮಾಡಿದರು.
  • 16:01 ಇಸ್ರಾಯೇಲ್ಯರು ನಿಜವಾದ ದೇವರಾದ ಯೆಹೋವನನ್ನು ಆರಾಧನೆ ಮಾಡುವುದಕ್ಕೆ ಬದಲಾಗಿ ಕಾನಾನ್ಯ __ ದೇವರುಗಳನ್ನು __ ಆರಾಧನೆ ಮಾಡಲಾರಂಭಿಸಿದರು.
  • 18:13 ಆದರೆ ಯೂದಾ ರಾಜ್ಯದ ಅರಸರಲ್ಲಿ ಅನೇಕರು ದುಷ್ಟರು, ಭ್ರಷ್ಟರು ಮತ್ತು ಅವರು ವಿಗ್ರಹಗಳನ್ನು ಪೂಜಿಸುವವರಾಗಿದ್ದರು. ಅರಸರಲ್ಲಿ ಕೆಲವರು ತಮ್ಮ ಮಕ್ಕಳನ್ನು ಸುಳ್ಳು __ ದೇವರುಗಳಿಗೆ __ ಬಲಿ ಕೊಟ್ಟಿದ್ದಾರೆ.

ಪದ ಡೇಟಾ:

  • Strong's: H205, H367, H410, H426, H430, H457, H1322, H1544, H1892, H2553, H3649, H4656, H4906, H5236, H5566, H6089, H6090, H6091, H6456, H6459, H6673, H6736, H6754, H7723, H8163, H8251, H8267, H8441, H8655, G1493, G1494, G1495, G1496, G1497, G2299, G2712

ದೇವಾಲಯ, ಮನೆ, ದೇವರ ಮನೆ

ಸತ್ಯಾಂಶಗಳು:

ದೇವಾಲಯ ಎನ್ನುವುದು ಒಂದು ಭವನ, ಇದರ ಸುತ್ತಮುತ್ತ ಗೋಡೆಗಳಿದ್ದು ಅದರೊಳಗೆ ಒಂದು ಪ್ರಾಂಗಣವಿರುತ್ತದೆ, ಇಲ್ಲಿಗೆ ಇಸ್ರಾಯೇಲ್ಯರು ಪ್ರಾರ್ಥನೆ ಮಾಡಿಕೊಳ್ಳುವುದಕ್ಕೆ ಮತ್ತು ದೇವರಿಗೆ ಹೋಮಗಳನ್ನು ಅರ್ಪಿಸುವುದಕ್ಕೆ ಬರುತ್ತಿದ್ದರು. ಇದು ಯೆರೂಸಲೇಮ್ ಪಟ್ಟಣದಲ್ಲಿ ಮೋರಿಯಾ ಪರ್ವತದ ಮೇಲೆ ಇದ್ದಿತ್ತು.

  • “ದೇವಾಲಯ” ಎನ್ನುವ ಪದವು ಅನೇಕಬಾರಿ ಸಂಪೂರ್ಣ ದೇವಾಲಯ ಸಂಕೀರ್ಣವನ್ನು ತೋರಿಸುತ್ತದೆ, ಮುಖ್ಯ ಭವನದ ಸುತ್ತಲಿರುವ ಪ್ರಾಂಗಣಗಳನ್ನು ಇದರಲ್ಲಿ ಒಳಗೊಂಡಿರುತ್ತದೆ. ಈ ಪದವು ಕೆಲವೊಂದುಬಾರಿ ಭವನವನ್ನು ಮಾತ್ರವೇ ಸೂಚಿಸುತ್ತದೆ.
  • ದೇವಾಲಯ ಭವನದಲ್ಲಿ ಎರಡು ಕೊಠಡಿಗಳಿರುತ್ತವೆ, ಅವು ಯಾವುವೆಂದರೆ ಒಂದು ಪರಿಶುದ್ಧ ಸ್ಥಳ, ಮತ್ತೊಂದು ಅತಿ ಪರಿಶುದ್ಧ ಸ್ಥಳ.
  • ದೇವರು ತನ್ನ ದೇವಾಲಯನ್ನು ಆತನು ನಿವಾಸವಾಗಿರುವ ಸ್ಥಳವೆಂದು ಸೂಚಿಸಿದ್ದಾರೆ.
  • ಅರಸನಾದ ಸೊಲೊಮೋನನು ತನ್ನ ಆಳ್ವಿಕೆಯಲ್ಲಿ ದೇವಾಲಯವನ್ನು ನಿರ್ಮಿಸಿದನು. ಇದು ಯೆರೂಸಲೇಮಿನಲ್ಲಿ ಆರಾಧನೆ ಮಾಡುವುದಕ್ಕೆ ಶಾಶ್ವತ ಸ್ಥಳವಾಗಿ ಇರುತ್ತಿತ್ತು.
  • ಹೊಸ ಒಡಂಬಡಿಕೆಯಲ್ಲಿ “ಪವಿತ್ರಾತ್ಮನ ದೇವಾಲಯ” ಎನ್ನುವ ಮಾತನ್ನು ಯೇಸುವಿನಲ್ಲಿ ಭರವಸೆವಿಟ್ಟಿರುವ ಜನರ ಗುಂಪನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • ಜನರು “ದೇವಾಲಯದಲ್ಲಿದ್ದಾರೆ” ಎಂದು ವಾಕ್ಯವು ಸಾಧಾರಣವಾಗಿ ಹೇಳಿದಾಗ, ಇದು ಭವನದ ಆಚೆಯಲ್ಲಿರುವ ಪ್ರಾಂಗಣಗಳನ್ನು ಸೂಚಿಸುತ್ತಿದೆ ಎಂದರ್ಥ. ಇದನ್ನು “ದೇವಾಲಯ ಪ್ರಾಂಗಣಗಳಲ್ಲಿ” ಅಥವಾ “ದೇವಾಲಯ ಸಂಕೀರ್ಣದಲ್ಲಿ” ಎಂದೂ ಅನುವಾದ ಮಾಡಬಹುದು.
  • ಇದು ಭವನವನ್ನೇ ಸೂಚಿಸಿದಾಗ, ಕೆಲವೊಂದು ಅನುವಾದಗಳು “ದೇವಾಲಯ” ಎನ್ನುವ ಪದವನ್ನು “ದೇವಾಲಯ ಭವನ” ಎಂಬುದಾಗಿ ಸ್ಪಷ್ಟತೆಗಾಗಿ ಅನುವಾದ ಮಾಡಿರುತ್ತಾರೆ.
  • “ದೇವಾಲಯ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ದೇವರ ಪರಿಶುದ್ಧವಾದ ಮನೆ” ಅಥವಾ “ಪರಿಶುದ್ಧವಾದ ಆರಾಧನೆ ಸ್ಥಳ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸತ್ಯವೇದದಲ್ಲಿ ಅನೇಕಬಾರಿ ದೇವಾಲಯವನ್ನು “ಯೆಹೋವನ ಮನೆ” ಅಥವಾ “ದೇವರ ಮನೆ” ಎಂಬುದಾಗಿ ಸೂಚಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಹೋಮ, ಸೊಲೊಮೋನ, ಬಾಬೆಲೋನಿಯ, ಪವಿತ್ರಾತ್ಮ, ಗುಡಾರ, ಪ್ರಾಂಗಣ, ಚಿಯೋನ್, ಮನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 17:06 ಇಸ್ರಾಯೇಲ್ಯರೆಲ್ಲರು ದೇವರನ್ನು ಆರಾಧಿಸುವ ಮತ್ತು ಆತನಿಗೆ ಅರ್ಪಣೆಗಳನ್ನು ಅರ್ಪಿಸುವ __ ದೇವಾಲಯವನ್ನು __ ನಿರ್ಮಿಸಬೇಕೆಂದು ಬಯಸಿದ್ದನು.
  • 18:02 ಯೆರೂಸಲೇಮಿನಲ್ಲಿ ಸೊಲೊಮೋನನು __ ದೇವಾಲಯವನ್ನು __ ನಿರ್ಮಿಸಿದನು, ಯಾಕಂದರೆ ತನ್ನ ತಂದೆ ದಾವೀದನು ಪ್ರಣಾಳಿಕೆ ಹಾಕಿ, ಎಲ್ಲಾ ವಸ್ತುಗಳನ್ನು ಸಂಗ್ರಹಿಸಿದ್ದನು. ಇಸ್ರಾಯೇಲ್ಯರು ಗುಡಾರದ ಬಳಿ ಭೇಟಿಯಾಗುವುದಕ್ಕೆ ಬದಲಾಗಿ, ಅವರು ನಿರ್ಮಿಸಿದ __ ದೇವಾಲಯದ __ ಹತ್ತಿರ ದೇವರನ್ನು ಆರಾಧಿಸಿದರು ಮತ್ತು ಆತನಿಗೆ ಯಜ್ಞಗಳನ್ನು ಅರ್ಪಿಸಿದರು. ದೇವರು ಬಂದು, __ ದೇವಾಲಯದಲ್ಲಿ __ ನಿವಾಸವಾಗಿದ್ದರೂ, ಆತನು ಅವರೊಂದಿಗೆ ಅವರ ಮಧ್ಯೆದಲ್ಲಿ ನಿವಾಸವಾಗುತ್ತಿದ್ದರು.
  • 20:07 ಅವರು (ಬಾಬೆಲೋನಿಯರು) ಯೆರೂಸಲೇಮ್ ಪಟ್ಟಣವನ್ನು ಹಿಡಿದುಕೊಂಡರು, __ ದೇವಾಲಯವನ್ನು __ ಕೆಡವಿದರು, ಮತ್ತು ಅದರಲ್ಲಿರುವ ಎಲ್ಲಾ ನಿಧಿಗಳನ್ನು ತೆಗೆದುಕೊಂಡರು.
  • 20:13 ಜನರು ಯೆರೂಸಲೇಮಿನೊಳಗೆ ಬಂದಾಗ, ಅವರು ದೇವಾಲಯವನ್ನು __ ದೇವಾಲಯ __ ಮತ್ತು ಪಟ್ಟಣದ ಸುತ್ತಮುತ್ತಲಿರುವ ಗೋಡೆಗಳನ್ನು ನಿರ್ಮಿಸಿದರು.
  • 25:04 ಆದನಂತರ ಸಾತಾನನು ಯೇಸುವನ್ನು __ ದೇವಾಲಯದ __ ಮೇಲಿನ ತುದಿ ಭಾಗಕ್ಕೆ ಕರೆದುಕೊಂಡು ಹೋದರು, ಅಲ್ಲಿ “ನೀನು ದೇವರ ಮಗನಾದರೆ, ನೀನು ಕೆಳಗೆ ಬೀಳು, ಯಾಕಂದರೆ “ನಿನ್ನ ಪಾದಗಳು ಬಂಡೆಗೆ ತಗಲದಂತೆ ನಿನ್ನನ್ನು ಹಿಡಿದುಕೊಳ್ಳುವುದಕ್ಕೆ ದೇವರು ದೂತರನ್ನು ಕಳುಹಿಸುವನೆಂದು’ ಬರೆಯಲ್ಪಟ್ಟಿದೆ” ಎಂದು ಹೇಳಿದನು.
  • 40:07 ಆತನು ಮರಣಿಸಿದನಂತರ, ಅಲ್ಲಿ ಭೂಕಂಪ ಉಂಟಾಯಿತು ಮತ್ತು __ ದೇವಾಲಯದಲ್ಲಿ __ ದೇವರ ಸನ್ನಿಧಿಯಿಂದ ಜನರನ್ನು ಬೇರ್ಪಡಿಸುವ ದೊಡ್ಡ ತೆರೆ ಎರಡು ಭಾಗಗಳಾಗಿ ಮೇಲಿಂದ ಕೆಳಕ್ಕೆ ಹರಿದುಹೋಯಿತು.

ಪದ ಡೇಟಾ:

  • Strong's: H1004, H1964, H1965, G1493, G2411, G3485

ದೇಹ, ದೇಹಗಳು

ಪದದ ಅರ್ಥವಿವರಣೆ:

“ದೇಹ” ಎನ್ನುವ ಪದವು ಅಕ್ಷರಾರ್ಥವಾಗಿ ಒಬ್ಬ ವ್ಯಕ್ತಿಯ ಅಥವಾ ಒಂದು ಪ್ರಾಣಿಯ ಭೌತಿಕ ಶರೀರವನ್ನು ಸೂಚಿಸುತ್ತದೆ. ಒಂದು ವಸ್ತುವನ್ನು ಅಥವಾ ಗುಂಪಿನಲ್ಲಿರುವ ವೈಯುಕ್ತಿಕ ಸದಸ್ಯರನ್ನು ಸೂಚಿಸುವುದಕ್ಕೆ ಅಲಂಕಾರ ರೂಪದಲ್ಲಿಯೂ ಈ ಪದವನ್ನು ಉಪಯೋಗಿಸುತ್ತಾರೆ.

  • ಅನೇಕಬಾರಿ “ದೇಹ” ಎನ್ನುವ ಪದವನ್ನು ಸತ್ತಂತ ಪ್ರಾಣಿಯನ್ನು ಅಥವಾ ಸತ್ತಂತ ವ್ಯಕ್ತಿಯನ್ನು ಸೂಚಿಸುತ್ತದೆ. ಕೆಲವೊಂದುಬಾರಿ ಇದನ್ನು “ಮೃತ ದೇಹ” ಅಥವಾ “ಶವ” ಎಂದೂ ಸೂಚಿಸುತ್ತಾರೆ.
  • ಯೇಸು ತನ್ನ ಕೊನೆಯ ಪಸ್ಕ ಭೋಜನದ ಸಮಯದಲ್ಲಿ ತನ್ನ ಶಿಷ್ಯರಿಗೆ, “ಇದು ನನ್ನ ದೇಹ (ರೊಟ್ಟಿ)” ಎಂದು ಹೇಳಿದಾಗ, ಎಲ್ಲಾ ಜನರ ಪಾಪಗಳಿಗಾಗಿ “ಮುರಿಯಲ್ಪಡುವ” (ಜಜ್ಜಲ್ಪಡುವ) ತನ್ನ ಭೌತಿಕ ದೇಹದ ಕುರಿತಾಗಿಯೇ ಆತನು ಅದನ್ನು ಹೇಳಿದ್ದನು.
  • ಸತ್ಯವೇದದಲ್ಲಿ ಕ್ರೈಸ್ತರ ಗುಂಪನ್ನು “ಕ್ರಿಸ್ತನ ದೇಹ” ಎಂಬುದಾಗಿ ಹೇಳಲ್ಪಟ್ಟಿದೆ.
  • ಭೌತಿಕ ದೇಹದಲ್ಲಿ ಅನೇಕ ಭಾಗಗಳು ಇರುವಂತೆಯೇ, “ಕ್ರಿಸ್ತನ ದೇಹದಲ್ಲಿಯೂ” ಅನೇಕಮಂದಿ ವೈಯುಕ್ತಿಕ ಸದಸ್ಯರು ಇರುತ್ತಾರೆ.
  • ದೇವರಿಗೆ ಸೇವೆ ಮಾಡಲು ಮತ್ತು ಆತನಿಗೆ ಮಹಿಮೆಯನ್ನು ತರಲು ಎಲ್ಲಾ ಗುಂಪು ಸೇರಿ ಕೆಲಸ ಮಾಡುವುದಕ್ಕೆ ಸಹಾಯ ಮಾಡಲು ಕ್ರಿಸ್ತನ ದೇಹದಲ್ಲಿ ಪ್ರತಿಯೊಬ್ಬ ವೈಯುಕ್ತಿಕ ವಿಶ್ವಾಸಿ ಒಂದು ವಿಶೇಷವಾದ ಕೆಲಸವನ್ನು ಹೊಂದಿರುತ್ತಾನೆ.
  • ಯೇಸುವನ್ನು ಕೂಡ ಎಲ್ಲಾ ವಿಶ್ವಾಸಿಗಳ “ದೇಹದ” “ತಲೆ” (ನಾಯಕ) ಎಂಬುದಾಗಿ ಸೂಚಿಸಲ್ಪಟ್ಟಿದ್ದಾನೆ. ಒಬ್ಬ ವ್ಯಕ್ತಿಯ ತಲೆಯು ತನ್ನ ಶರೀರವು ಏನು ಮಾಡಬೇಕೆಂದು ಹೇಳುತ್ತದೋ, ಹಾಗೆಯೇ ಯೇಸು ತನ್ನ “ದೇಹದ” ಸದಸ್ಯರಾದ ಕ್ರೈಸ್ತರನ್ನು ನಿರ್ದೇಶಿಸುವವನು ಮತ್ತು ಅವರಿಗೆ ಮಾರ್ಗದರ್ಶಕನೂ ಆಗಿರುತ್ತಾನೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಉತ್ತಮ ವಿಧಾನವು ಯೋಜನೆಯ ಭಾಷೆಯಲ್ಲಿ ಭೌತಿಕ ಶರೀರವನ್ನು ಸೂಚಿಸುವುದಕ್ಕೆ ಅತಿ ಹೆಚ್ಚಾಗಿ ಉಪಯೋಗಿಸುವ ಪದವನ್ನು ಬಳಸುವುದು. ಉಪಯೋಗಿಸಿದ ಪದವು ಕೀಳಾಗಿ ತೋರಿಸುವ ಪದವಾಗಿರದಂತೆ ನೋಡಿಕೊಳ್ಳಿರಿ.
  • ವಿಶ್ವಾಸಿಗಳ ಸಮೂಹವನ್ನು ಸೂಚಿಸುವಾಗ, ಕೆಲವೊಂದು ಭಾಷೆಗಳಲ್ಲಿ “ಕ್ರಿಸ್ತನ ಆತ್ಮೀ ದೇಹ” ಎಂದು ಹೇಳುವುದಕ್ಕೆ ಈ ಪದವು ಬಹುಶಃ ಹೆಚ್ಚಾದ ಸ್ವಾಭಾವಿಕವಾಗಿರಬಹುದು.
  • “ಇದು ನನ್ನ ದೇಹ” ಎಂದು ಯೇಸು ಹೇಳಿದಾಗ, ಇದನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮ, ಇದಕ್ಕೆ ಒಂದು ಸೂಚನೆಯನ್ನಿಟ್ಟು ವಿವರಿಸುವುದು ಅತ್ಯಗತ್ಯ.
  • ಮೃತ ದೇಹವನ್ನು ಸೂಚಿಸುವಾಗ ಕೆಲವೊಂದು ಭಾಷೆಗಳಲ್ಲಿ ಒಂದು ವಿಶೇಷವಾದ ಪದವು ಇರಬಹುದು, ವ್ಯಕ್ತಿಯ ಶರೀರವಾದರೆ “ಶವ” ಎಂದೂ ಅಥವಾ ಪ್ರಾಣಿಯಾದರೆ “ಹೆಣ” ಎಂದೂ ಉಪಯೋಗಿಸುತ್ತಾರೆ. ಈ ಪದವನ್ನು ಅನುವಾದ ಮಾಡುವಾಗ ಸಂದರ್ಭಾನುಸಾರವಾಗಿ ಮತ್ತು ಅಂಗೀಕೃತವಾಗಿ ಇರುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ತಲೆ, hand; face; loins; righthand; tongue)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H990, H1320, H1460, H1465, H1472, H1480, H1655, H3409, H4191, H5038, H5085, H5315, H6106, H6297, H7607, G4430, G4954, G4983, G5559

ದೈವಭಕ್ತಿಯುಳ್ಳ, ದೈವಭಕ್ತಿ, ದೈವಭಕ್ತಿಯಿಲ್ಲದ, ದೈವಹೀನ, ಭಕ್ತಿಹೀನತೆ, ದೇವರಿಲ್ಲದಿರುವಿಕೆ

ಪದದ ಅರ್ಥವಿವರಣೆ:

“ದೈವಭಕ್ತಿಯುಳ್ಳ” ಎನ್ನುವ ಪದವನ್ನು ದೇವರು ಏನೆಂದು ತೋರಿಸುವ ವಿಧಾನದಲ್ಲಿ ಮತ್ತು ದೇವರನ್ನು ಘನಪಡಿಸುವ ವಿಧಾನದಲ್ಲಿ ಜೀವಿಸುವ ಒಬ್ಬ ವ್ಯಕ್ತಿಯನ್ನು ವಿವರಿಸುವುದಕ್ಕೆ ಉಪಯೋಗಿಸಲಾಗಿರುತ್ತದೆ. “ದೈವಭಕ್ತಿ” ಎನ್ನುವುದು ದೇವರ ಚಿತ್ತವನ್ನು ಮಾಡುವುದರ ಮೂಲಕ ದೇವರನ್ನು ಘನಪಡಿಸುವ ನಡತೆಯ ಗುಣ.

  • ದೈವಿಕ ಗುಣಲಕ್ಷಣವನ್ನು ಹೊಂದಿರುವ ಒಬ್ಬ ವ್ಯಕ್ತಿ ಪವಿತ್ರಾತ್ಮನ ಫಲಗಳಾಗಿರುವ ಪ್ರೀತಿ, ಸಂತೋಷ, ಸಮಾಧಾನ, ಸಹನೆ, ದಯೆ ಮತ್ತು ಶಮೆದಮೆಗಳನ್ನು ತೋರಿಸುತ್ತಾನೆ.

ದೈವಭಕ್ತಿಯ ಗುಣವು ಒಬ್ಬ ವ್ಯಕ್ತಿಯು ಪವಿತ್ರಾತ್ಮನನ್ನು ಹೊಂದಿದ್ದಾನೆಂದು ಮತ್ತು ಅವನು ಆತನಿಗೆ ವಿಧೇಯನಾಗುತ್ತಿದ್ದಾನೆಂದು ತೋರಿಸುತ್ತದೆ.

“ದೈವಭಕ್ತಿಯಿಲ್ಲದ” ಮತ್ತು “ದೇವರಿಲ್ಲದ” ಎನ್ನುವ ಪದಗಳು ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರನ್ನು ಸೂಚಿಸುತ್ತವೆ. ದೇವರ ಆಲೋಚನೆ ಇಲ್ಲದೇ ದುಷ್ಟ ಮಾರ್ಗದಲ್ಲಿ ಜೀವಿಸುವುದೆನ್ನುವುದು “ಭಕ್ತಿಹೀನತೆ” ಅಥವಾ “ದೇವರಿಲ್ಲದಿರುವಿಕೆ” ಎಂದೂ ಕರೆಯುತ್ತಾರೆ.

  • ಈ ಪದಗಳಿಗೆ ಅರ್ಥಗಳೆಲ್ಲವು ಸಮಾನವಾಗಿರುತ್ತವೆ. ಆದರೆ, “ದೈವಹೀನ” ಅಥವಾ “ದೇವರಿಲ್ಲದಿರುವಿಕೆ” ಎನ್ನುವ ಪದಗಳು ಹೆಚ್ಚಿನ ತೀವ್ರ ಸ್ಥಿತಿಯನ್ನು ವಿವರಿಸುತ್ತಿವೆ, ಅಂದರೆ ಜನರಾಗಲಿ ಅಥವಾ ದೇಶಗಳಾಗಲಿ ದೇವರ ಕುರಿತಾಗಿ ಸ್ವಲ್ಪವು ಗೊತ್ತಿಲ್ಲದಿರುವುದನ್ನು ಅಥವಾ ಅವರನ್ನು ಆಳುವುದಕ್ಕೆ ಆತನಿಗೆ ಅಧಿಕಾರ ಇದೆಯೆನ್ನುವ ಚಿಕ್ಕ ಸಂಗತಿಯು ತಿಳಿದವರನ್ನು ಸೂಚಿಸುತ್ತಿವೆ.
  • ದೇವರು ಭಕ್ತಿಹೀನರಾದ ಜನರ ಮೇಲೆ ಮತ್ತು ಆತನ ಮಾರ್ಗಗಳನ್ನು, ಆತನನ್ನು ತಿರಸ್ಕರಿಸುವ ಪ್ರತಿಯೊಬ್ಬರ ಮೇಲೆ ತನ್ನ ತೀರ್ಪನ್ನು ಮತ್ತು ಕೋಪವನ್ನು ಪ್ರಕಟಿಸುತ್ತಾನೆ,

ಅನುವಾದ ಸಲಹೆಗಳು:

  • “ದೈವಭಕ್ತಿಯುಳ್ಳ” ಎನ್ನುವ ಮಾತನ್ನು “ದೈವಭಕ್ತಿಯುಳ್ಳ ಜನರು” ಅಥವಾ “ದೇವರಿಗೆ ವಿಧೇಯರಾಗುವ ಜನರು” ಎಂದೂ ಅನುವಾದ ಮಾಡಬಹುದು. (ನೋಡಿರಿ: ನಾಮಾಂಕಿತ)
  • “ದೈವಭಕ್ತಿಯುಳ್ಳ” ಎನ್ನುವ ವಿಶೇಷಣವನ್ನು “ದೇವರಿಗೆ ವಿಧೇಯನಾಗುವ” ಅಥವಾ “ನೀತಿವಂತ” ಅಥವಾ ದೇವರನ್ನು ಮೆಚ್ಚಿಸುವ” ಎಂದೂ ಅನುವಾದ ಮಾಡಬಹುದು.
  • “ದೈವಿಕ ಪದ್ಧತಿಯಲ್ಲಿ” ಎನ್ನುವ ಮಾತನ್ನು “ದೇವರಿಗೆ ವಿಧೇಯತೆ ತೋರಿಸುವ ವಿಧಾನದಲ್ಲಿ” ಅಥವಾ “ದೇವರನ್ನು ಮೆಚ್ಚಿಸುವ ಕ್ರಿಯೆಗಳು ಮತ್ತು ಮಾತುಗಳು” ಎಂದೂ ಅನುವಾದ ಮಾಡಬಹುದು.
  • “ದೈವಭಕ್ತಿ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರನ್ನು ಮೆಚ್ಚಿಸುವ ವಿಧಾನದಲ್ಲಿ ನಡೆದುಕೊಳ್ಳುವುದು” ಅಥವಾ “ದೇವರಿಗೆ ವಿಧೇಯತೆ ತೋರಿಸುವುದು” ಅಥವಾ “ನೀತಿಯುತ ಮಾರ್ಗದಲ್ಲಿ ಜೀವಿಸುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸಂದರ್ಭಾನುಸಾರವಾಗಿ “ದೈವಭಕ್ತಿಯಿಲ್ಲದ” ಎನ್ನುವ ಪದವನ್ನು “ದೇವರಿಗೆ ಮೆಚ್ಚಿಕೆಯಾಗದಿರುವುದು” ಅಥವಾ “ಅನೈತಿಕತೆ” ಅಥವಾ “ದೇವರಿಗೆ ಅವಿಧೇಯರಾಗುವುದು” ಎಂದೂ ಅನುವಾದ ಮಾಡಬಹುದು.
  • “ದೈವಹೀನ” ಮತ್ತು “ದೇವರಿಲ್ಲದಿರುವಿಕೆ” ಎನ್ನುವ ಪದಗಳು “ದೇವರಿಲ್ಲ” ಜನರು ಅಥವಾ “ದೇವರ ಆಲೋಚನೆ ಇಲ್ಲದವರು” ಅಥವಾ “ದೇವರನ್ನು ಮರೆತು ನಡೆದುಕೊಳ್ಳುವುದು” ಎನ್ನುವ ಅಕ್ಷರಾರ್ಥಗಳಿವೆ.
  • “ಭಕ್ತಿಹೀನತೆ” ಅಥವಾ “ದೇವರಿಲ್ಲದಿರುವಿಕೆ” ಎನ್ನುವ ಪದಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದುಷ್ಟತನ” ಅಥವಾ “ಕೆಟ್ಟ” ಅಥವಾ “ದೇವರನ್ನು ತಿರಸ್ಕರಿಸುವುದು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕೆಟ್ಟ, ಘನಪಡಿಸು, ವಿಧೇಯತೆ, ನೀತಿವಂತ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H430, H1100, H2623, H5760, H7563, G516, G763, G764, G765, G2124, G2150, G2152, G2153, G2316, G2317

ದೈವಿಕ

ಪದದ ಅರ್ಥವಿವರಣೆ:

“ದೈವಿಕ” ಎನ್ನುವ ಪದವು ದೇವರಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಸೂಚಿಸುತ್ತದೆ.

  • ಈ ಪದವನ್ನು ಉಪಯೋಗಿಸುವ ಕೆಲವೊಂದು ವಿಧಾನಗಳಲ್ಲಿ “ದೈವಿಕ ಅಧಿಕಾರ”, “ದೈವಿಕ ನ್ಯಾಯತೀರ್ಪು”, “ದೈವಿಕ ಸ್ವಭಾವ”, “ದೈವಿಕ ಶಕ್ತಿ”, ಮತ್ತು “ದೈವಿಕ ಮಹಿಮೆ” ಎಂದೂ ಉಪಯೋಗಿಸಿದ್ದಾರೆ.
  • ಸತ್ಯವೇದದಲ್ಲಿರುವ ಒಂದು ವಾಕ್ಯಭಾಗದಲ್ಲಿ “ದೈವಿಕ” ಎನ್ನುವ ಪದವನ್ನು ತಪ್ಪು ದೈವಿಕತ್ವದ ಕುರಿತಾಗಿ ವಿವರಿಸುವುದಕ್ಕೆ ಉಪಯೋಗಿಸಿದ್ದಾರೆ.

ಅನುವಾದ ಸಲಹೆಗಳು:

  • “ದೈವಿಕ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರ” ಅಥವಾ “ದೇವರಿಂದ” ಅಥವಾ “ದೇವರಿಗೆ ಸಂಬಂಧಪಟ್ಟ” ಅಥವಾ “ದೇವರಿಂದ ಉಂಟಾದ ಗುಣಲಕ್ಷಣ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಉದಾಹರಣೆಗೆ, “ದೈವಿಕ ಅಧಿಕಾರ” ಎನ್ನುವ ಮಾತನ್ನು “ದೇವರ ಅಧಿಕಾರ” ಅಥವಾ “ದೇವರಿಂದ ಬರುವ ಅಧಿಕಾರ” ಎಂದು ಅನುವಾದ ಮಾಡಬಹುದು.
  • “ದೈವಿಕ ಮಹಿಮೆ” ಎನ್ನುವ ಮಾತನ್ನು “ದೇವರ ಮಹಿಮೆ” ಅಥವಾ “ದೇವರಿಗಿರುವ ಮಹಿಮೆ” ಅಥವಾ “ದೇವರಿಂದ ಬರುವ ಮಹಿಮೆ” ಎಂದೂ ಅನುವಾದ ಮಾಡಬಹುದು.
  • ಸುಳ್ಳು ದೇವರಿಗೆ ಸಂಬಂಧಪಟ್ಟ ವಿಷಯಗಳನ್ನು ವಿವರಿಸುವಾಗ ಕೆಲವೊಂದು ಅನುವಾದಕರು ಬೇರೊಂದು ಪದವನ್ನು ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಸುಳ್ಳು ದೇವರು, ಮಹಿಮೆ, ದೇವರು, ತೀರ್ಪು, ಶಕ್ತಿ)

ಸತ್ಯವೇದದ ವಾಕ್ಯಗಳು :

ಪದ ಡೇಟಾ:

  • Strong's: G23040, G29990

ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ,

ಪದದ ಅರ್ಥವಿವರಣೆ:

ಅತ್ಯಂತ ಸರಳವಾಗಿ, "ಧರ್ಮಶಾಸ್ತ್ರ" ಎಂಬ ಪದವು ಅನುಸರಿಸಬೇಕಾದ ನಿಯಮ ಅಥವಾ ಸೂಚನೆಯನ್ನು ಸೂಚಿಸುತ್ತದೆ. ಸತ್ಯವೆದದಲ್ಲಿ, "ಧರ್ಮಶಾಸ್ತ್ರ" ಎಂಬ ಪದವನ್ನು ಸಾಮಾನ್ಯವಾಗಿ ಯಾವುದನ್ನಾದರೂ ಉಲ್ಲೇಖಿಸಲು ಬಳಸಲಾಗುತ್ತದೆ ಮತ್ತು ದೇವರು ತನ್ನ ಜನರು ಪಾಲಿಸಬೇಕೆಂದು ಮತ್ತು ಮಾಡಬೇಕೆಂದು ದೇವರು ಬಯಸುತ್ತಾನೆ. "ಮೋಶೆಯ ಧರ್ಮಶಾಸ್ತ್ರ" ಎಂಬ ನಿರ್ದಿಷ್ಟ ಪದವು ಇಸ್ರಾಯೇಲ್ಯರಿಗೆ ವಿಧೇಯರಾಗಲು ದೇವರು ಮೋಶೆಗೆ ನೀಡಿದ ಆಜ್ಞೆಗಳು ಮತ್ತು ಸೂಚನೆಗಳನ್ನು ಸೂಚಿಸುತ್ತದೆ.

  • ಸಂದರ್ಭಾನುಸಾರವಾಗಿ “ಧರ್ಮಶಾಸ್ತ್ರ” ಎನ್ನುವುದು ಈ ಕೆಳಕಂಡವುಗಳನ್ನು ಸೂಚಿಸುತ್ತದೆ:
  • ದೇವರು ಇಸ್ರಾಯೇಲ್ಯರಿಗೋಸ್ಕರ ಎರಡು ಕಲ್ಲಿನ ಶಿಲೆಗಳ ಮೇಲೆ ಬರೆದ ಹತ್ತು ಆಜ್ಞೆಗಳು
  • ಮೋಶೆಗೆ ಕೊಡಲ್ಪಟ್ಟ ಎಲ್ಲಾ ಆಜ್ಞೆಗಳು
  • ಒಡಂಬಡಿಕೆಯ ಮೊದಲು ಐದು ಪುಸ್ತಕಗಳು
  • ಸಂಪೂರ್ಣ ಹಳೆ ಒಡಂಬಡಿಕೆ (ಹೊಸ ಒಡಂಬಡಿಕೆಯಲ್ಲಿ ಸೂಚಿಸಿದ “ವಾಕ್ಯಗಳು”).
  • ದೇವರ ಎಲ್ಲಾ ಆದೇಶಗಳು ಮತ್ತು ಚಿತ್ತ
  • ಇಬ್ರಿಯ ವಾಕ್ಯಗಳು (ಅಥವಾ “ಹಳೇ ಒಡಂಬಡಿಕೆ”) ಸೂಚಿಸುವುದಕ್ಕೆ ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಿದ “ಧರ್ಮಶಾಸ್ತ್ರ ಮತ್ತು ಪ್ರವಾದಿಗಳು” ಎನ್ನುವ ಮಾತು

ಅನುವಾದ ಸಲಹೆಗಳು:

  • ಈ ಪದಗಳನ್ನು “ಧರ್ಮಶಾಸ್ತ್ರಗಳು” ಎನ್ನುವ ಬಹುವಚನ ಪದದಿಂದಲೂ ಅನುವಾದ ಮಾಡಬಹುದು, ಯಾಕಂದರೆ ಅವು ಅನೇಕವಾದ ಆದೇಶಗಳನ್ನು ಸೂಚಿಸುತ್ತವೆ.
  • “ಮೋಶೆಯ ಧರ್ಮಶಾಸ್ತ್ರ” ಎನ್ನುವ ಮಾತನ್ನು “ಇಸ್ರಾಯೇಲ್ಯರಿಗೆ ಕೊಡುವುದಕ್ಕೆ ದೇವರು ಮೋಶೆಗೆ ಹೇಳಿರುವ ಆಜ್ಞೆಗಳು” ಎಂದೂ ಅನುವಾದ ಮಾಡಬಹದು.
  • ಸಂದರ್ಭಾನುಗುಣವಾಗಿ, “ಮೋಶೆಯ ಧರ್ಮಶಾಸ್ತ್ರ” ಎನ್ನುವ ಮಾತನ್ನು “ದೇವರು ಮೋಶೆಗೆ ಹೇಳಿದ ಧರ್ಮಶಾಸ್ತ್ರ” ಅಥವಾ “ಮೋಶೆ ಬರೆದಿರುವ ಧರ್ಮಶಾಸ್ತ್ರ” ಅಥವಾ “ಇಸ್ರಾಯೇಲ್ಯರಿಗೆ ಕೊಡಬೇಕೆಂದು ದೇವರು ಮೋಶೆಗೆ ಹೇಳಿದ ಧರ್ಮಶಾಸ್ತ್ರ” ಎಂದೂ ಅನುವಾದ ಮಾಡಬಹುದು.
  • “ಧರ್ಮಶಾಸ್ತ್ರ” ಅಥವಾ “ದೇವರ ಧರ್ಮಶಾಸ್ತ್ರ” ಅಥವಾ “ದೇವರ ಆಜ್ಞೆಗಳು” ಎನ್ನುವ ಮಾತುಗಳನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರಿಂದ ಬಂದಿರುವ ಆಜ್ಞೆಗಳು” ಅಥವಾ “ದೇವರ ಆಜ್ಞೆಗಳು” ಅಥವಾ “ದೇವರು ಕೊಟ್ಟ ಶಾಸನಗಳು” ಅಥವಾ “ದೇವರು ಆಜ್ಞಾಪಿಸಿದ ಪ್ರತಿಯೊಂದು” ಅಥವಾ “ದೇವರ ಎಲ್ಲಾ ಆದೇಶಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಯೆಹೋವನ ಧರ್ಮಶಾಸ್ತ್ರ” ಎನ್ನುವ ಮಾತನ್ನು “ಯೆಹೋವನ ಆಜ್ಞೆಗಳು” ಅಥವಾ “ವಿಧೇಯತೆ ತೋರಿಸಬೇಕೆಂದು ಯೆಹೋವನು ಹೇಳಿದ ಆದೇಶಗಳು” ಅಥವಾ “ಯೆಹೋವನಿಂದ ಬಂದಿರುವ ಆಜ್ಞೆಗಳು” ಅಥವಾ “ಯೆಹೋವನು ಆಜ್ಞಾಪಿಸಿದ ವಿಷಯಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆದೇಶ, ಮೋಶೆ, ಹತ್ತು ಆಜ್ಞೆಗಳು, ಕಾನೂನುಬದ್ಧ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದ ಕಥೆಗಳಿಂದ ಉದಾಹರಣೆಗಳು:

  • 13:07 ದೇವರು ಕೂಡ ಅನುಸರಿಸುವುದಕ್ಕೆ ಅನೇಕವಾದ ನಿಯಮಗಳನ್ನು ಮತ್ತು __ ಧರ್ಮಶಾಸ್ತ್ರಗಳನ್ನು __ ಕೊಟ್ಟಿದ್ದಾನೆ. ಒಂದುವೇಳೆ ಜನರು ಈ __ ಧರ್ಮಶಾಸ್ತ್ರಕ್ಕೆ __- ವಿಧೇಯರಾದರೆ, ದೇವರು ಅವರನ್ನು ಆಶೀರ್ವಾದ ಮಾಡಿ, ಅವರನ್ನು ಸಂರಕ್ಷಿಸುತ್ತಾರೆಂದು ವಾಗ್ಧಾನ ಮಾಡಿದ್ದರು. ಒಂದುವೇಳೆ ಅವರು ಅವಿಧೇಯರಾದರೆ ದೇವರು ಅವರನ್ನು ಶಿಕ್ಷಿಸುತ್ತಾನೆ.
  • 13:09 ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯರಾಗುವ ಪ್ರತಿಯೊಬ್ಬರೂ ದೇವರಿಗೆ ಸರ್ವಾಂಗಹೋಮವನ್ನಾಗಿ ಮಾಡಲು ಗುಡಾರದ ಮುಂದಿರುವ ಯಜ್ಞವೇದಿಯ ಬಳಿಗೆ ಒಂದು ಪ್ರಾಣಿಯನ್ನು ಕರೆದುಕೊಂಡು ಬರಬೇಕು.
  • 15:13 ಚಿಯೋನಿನಲ್ಲಿ ದೇವರು ಇಸ್ರಾಯೇಲ್ಯರೊಂದಿಗೆ ಮಾಡಿದ ಒಡಂಬಡಿಕೆಗೆ ವಿಧೇಯರಾಗಬೇಕೆಂದು ಜನರ ಬಾಧ್ಯತೆಯನ್ನು ಯೆಹೋಶುವ ಅವರಿಗೆ ಜ್ಞಾಪಕ ಮಾಡಿದ್ದಾನೆ. ದೇವರಿಗೆ ನಂಬಿಗಸ್ತರಾಗಿರುತ್ತೇವೆಂದು ಜನರೆಲ್ಲರು ವಾಗ್ಧಾನ ಮಾಡಿದರು ಮತ್ತು __ ಆತನ ಧರ್ಮಶಾಸ್ತ್ರವನ್ನು __ ಅನುಸರಿಸಿದರು.
  • 16:01 ಯೆಹೋಶುವ ಮರಣಿಸಿದನಂತರ ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರು ಮತ್ತು ಉಳಿದ ಕಾನಾನ್ಯರನ್ನು ಹೊರಗೆ ಹೋಗಲಾಡಿಸಲಿಲ್ಲ ಅಥವಾ __ ದೇವರ ಧರ್ಮಶಾಸ್ತ್ರಕ್ಕೆ __ ವಿಧೇಯರಾಗಲಿಲ್ಲ.
  • 21:05 ಹೊಸ ಒಡಂಬಡಿಕೆಯಲ್ಲಿ ದೇವರು ತನ್ನ __ ಧರ್ಮಶಾಸ್ತ್ರವನ್ನು __ ಜನರ ಹೃದಯಗಳ ಮೇಲೆ ಬರೆಯುತ್ತಾರೆ, ಇದರಿಂದ ಜನರು ದೇವರನ್ನು ವೈಯುಕ್ತಿಕವಾಗಿ ತಿಳಿದುಕೊಳ್ಳುತ್ತಾರೆ, ಅವರು ತನ್ನ ಜನರಾಗಿರುತ್ತಾರೆ, ಮತ್ತು ದೇವರು ಅವರ ಪಾಪಗಳನ್ನು ಕ್ಷಮಿಸುತ್ತಾರೆ.
  • 27:01 ದೇವರ ಧರ್ಮಶಾಸ್ತ್ರದಲ್ಲಿ ಏನು ಬರೆಯಲ್ಪಟ್ಟಿದೆ?” ಎಂದು ಯೇಸು ಉತ್ತರಿಸಿದರು.
  • 28:01 “ನನ್ನನ್ನು ಒಳ್ಳೆಯವನು ಎಂದು ಯಾಕೆ ಕರೆಯುತ್ತಿದ್ದೀರಿ?” ಒಳ್ಳೆಯವನು ಒಬ್ಬನೇ ಇದ್ದಾನೆ, ಆತನೇ ದೇವರು. ಆದರೆ ನಿಮಗೆ ನಿತ್ಯಜೀವ ಬೇಕೆಂದಿದ್ದರೆ, __ ದೇವರ ಆಜ್ಞೆಗಳಿಗೆ __ ವಿಧೇಯನಾಗು” ಎಂದು ಯೇಸು ಅವನಿಗೆ ಹೇಳಿದನು.

ಪದ ಡೇಟಾ:

  • Strong's: H430, H1881, H1882, H2706, H2710, H3068, H4687, H4872, H4941, H8451, G2316, G3551, G3565

ನಂಬಿಗೆಯ, ವಿಶ್ವಾಸಾರ್ಹತೆ, ವಿಶ್ವಾಸ ದ್ರೋಹಿ, ವಿಶ್ವಾಸ ದ್ರೋಹ

ಪದದ ಅರ್ಥವಿವರಣೆ:

ದೇವರಿಗೆ “ನಂಬಿಗೆಯ” ಎನ್ನುವುದಕ್ಕೆ ದೇವರ ಬೋಧನೆಗಳ ಪ್ರಕಾರ ನಿರಂತರವಾಗಿ ಜೀವಿಸುವುದು ಎಂದರ್ಥ. ಆತನಿಗೆ ವಿಧೇಯತೆ ತೋರಿಸುವುದರ ಮೂಲಕ ಆತನಿಗೆ ಪ್ರಾಮಾಣಿಕವಾಗಿರುವುದು ಎಂದರ್ಥ. ವಿಶ್ವಾಸರ್ಹದಿಂದ ನಡೆದುಕೊಳ್ಳುವುದು ಅಥವಾ ಆ ಸ್ಥಾನದಲ್ಲಿರುವುದನ್ನು “ವಿಶ್ವಾಸಾರ್ಹತೆ” ಎಂದು ಕರೆಯುತ್ತಾರೆ.

  • ನಂಬಿಗೆಯ ಒಬ್ಬ ವ್ಯಕ್ತಿ ತಾನು ಕೊಟ್ಟಿರುವ ಎಲ್ಲಾ ವಾಗ್ಧಾನಗಳನ್ನು ಪೂರೈಸುವುದರಲ್ಲಿ ನಿಷ್ಠಾವಂತನಾಗಿರುತ್ತಾನೆ ಮತ್ತು ಇತರ ಜನರ ವಿಷಯದಲ್ಲಿ ತನ್ನ ಬಾಧ್ಯತೆಗಳನ್ನು ಯಾವಾಗಲೂ ನೆರವೇರಿಸುತ್ತಾ ಇರುತ್ತಾನೆ.
  • ನಂಬಿಕೆಯ ಒಬ್ಬ ವ್ಯಕ್ತಿ ತನಗೆ ಕೊಟ್ಟಿರುವ ಕೆಲಸವನ್ನು ಮಾಡುವುದರಲ್ಲಿ ಅದು ಎಷ್ಟು ಕಷ್ಟವಾದರೂ ಮುಂದುವರೆಯುತ್ತಾ ಇರುತ್ತಾನೆ.
  • ದೇವರಿಗೆ ವಿಶ್ವಾಸಾರ್ಹತೆ ಎಂದರೆ ದೇವರು ನಮ್ಮನ್ನು ಏನು ಮಾಡಬೇಕೆಂದು ಆಜ್ಞಾಪಿಸಿದ್ದಾರೋ ಅದನ್ನು ಮಾಡುವುದರಲ್ಲಿ ನಿರತರಾಗಿರುವುದು ಎಂದರ್ಥ.

“ಅಪನಂಬಿಕತ್ವ” ಎನ್ನುವ ಪದವು ದೇವರು ಆಜ್ಞಾಪಿಸಿದ್ದವುಗಳನ್ನು ಮಾಡದಿರುವ ಜನರನ್ನು ಸೂಚಿಸುತ್ತದೆ. ಅಪನಂಬಿಗೆಯನಾಗಿದ್ದು ಜೀವಿಸುವುದು ಅಥವಾ ಅವನ ಸ್ಥಿತಿಯನ್ನೇ “ಅಪನಂಬಿಕತ್ವ” ಎಂದು ಕರೆಯುತ್ತಾರೆ.

  • ಇಸ್ರಾಯೇಲ್ ಜನರು ವಿಗ್ರಹಾರಾಧನೆ ಮಾಡಿದಾಗ ಮತ್ತು ಅವರು ದೇವರಿಗೆ ಅವಿಧೇಯರಾದಾಗ ಅವರನ್ನು “ಅಪನಂಬಿಗಸ್ತರು” ಎಂದು ಕರೆಯಲ್ಪಟ್ಟಿದ್ದಾರೆ.
  • ವಿವಾಹದಲ್ಲಿ ಜೊತೆ ಮಾಡಲ್ಪಟ್ಟವರು ಒಂದುವೇಳೆ ಯಾರೂ ವ್ಯಭಿಚಾರ ಮಾಡಿದರೂ ಅವರು ತಮ್ಮ ಗಂಡನಿಗೆ ಅಥವಾ ಹೆಂಡತಿಗೆ “ಅಪನಂಬಿಗಸ್ತರಾಗಿರುತ್ತಾರೆ”.
  • ಇಸ್ರಾಯೇಲ್ಯರ ಅವಿಧೇಯ ನಡೆತೆಗೆ ದೇವರು “ವಿಶ್ವಾಸ ದ್ರೋಹಿಗಳು” ಎನ್ನುವ ಪದವನ್ನು ಉಪಯೋಗಿಸಿದರು. ಅವರು ದೇವರಿಗೆ ವಿಧೇಯರಾಗಿರಲಿಲ್ಲ ಅಥವಾ ಆತನನ್ನು ಗೌರವಿಸಲಿಲ್ಲ.

ಅನುವಾದ ಸಲಹೆಗಳು:

  • ಅನೇಕ ಸಂದರ್ಭಗಳಲ್ಲಿ “ನಂಬಿಗೆಯ” ಎನ್ನುವ ಪದವನ್ನು “ನಿಷ್ಥೆಯುಳ್ಳ” ಅಥವಾ “ಸಮರ್ಪಣೆಯುಳ್ಳ” ಅಥವಾ “ಅವಲಂಬಿತವಾದ” ಎನ್ನುವ ಪದಗಳಿಂದಲೂ ಅನುವಾದ ಮಾಡಬಹುದು.
  • ಬೇರೊಂದು ಸಂದರ್ಭಗಳಲ್ಲಿ “ನಂಬಿಗೆಯ” ಎನ್ನುವ ಪದವನ್ನು “ನಿರಂತರವಾಗಿ ನಂಬುವುದು” ಎಂದು ಅಥವಾ “ದೇವರಿಗೆ ವಿಧೇಯರಾಗುವುದರಲ್ಲಿ ಮತ್ತು ನಂಬುವುದರಲ್ಲಿ ದೃಢಚಿತ್ತದಿಂದ ಇರುವುದು” ಎಂದು ಅರ್ಥವನ್ನು ಕೊಡುವ ಪದದಿಂದ ಅಥವಾ ಮಾತಿನಿಂದ ಅನುವಾದ ಮಾಡಬಹುದು.
  • “ವಿಶ್ವಾಸಾರ್ಹ” ಎನ್ನುವ ಪದಕ್ಕೆ ಪರ್ಯಾಯ ಪದಗಳಾಗಿ “ನಂಬುವದರಲ್ಲಿ ಮುಂದುವರೆಯುವುದು” ಅಥವಾ “ನಿಷ್ಠೆಯಿಂದ ಇರುವುದು” ಅಥವಾ “ನಂಬಲರ್ಹ” ಅಥವಾ “ದೇವರಿಗೆ ವಿಧೇಯತೆ ತೋರಿಸುವುದು ಮತ್ತು ನಂಬುವುದು” ಎನ್ನುವ ಪದಗಳನ್ನು ಉಪಯೋಗಿಸಬಹುದು.
  • ಸಂದರ್ಭಕ್ಕೆ ತಕ್ಕಂತೆ, “ವಿಶ್ವಾಸ ದ್ರೋಹಿ” ಎನ್ನುವ ಪದವನ್ನು “ಅಪನಂಬಿಗಸ್ತನು” ಅಥವಾ “ನಂಬಲರ್ಹವಾಗದ” ಅಥವಾ “ಅವಿಧೇಯನು” ಅಥವಾ “ನಿಷ್ಠಾವಂತನಲ್ಲದವನು” ಎಂದೂ ಅನುವಾದ ಮಾಡಬಹುದು.
  • “ವಿಶ್ವಾಸ ದ್ರೋಹಿ” ಎನ್ನುವ ಮಾತು “(ದೇವರಿಗೆ) ವಿಶ್ವಾಸಾರ್ಹರಾಗಿರದ ಜನರು” ಅಥವಾ “ವಿಶ್ವಾಸ ದ್ರೋಹಿಗಳಾದ ಜನರು” ಅಥವಾ “ದೇವರಿಗೆ ಅವಿಧೇಯರಾದ ಜನರು” ಅಥವಾ “ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದ ಜನರು” ಎಂದೂ ಅನುವಾದ ಮಾಡಬಹುದು.
  • “ವಿಶ್ವಾಸ ದ್ರೋಹ” ಎನ್ನುವ ಪದವು “ಅವಿಧೇಯತೆ” ಅಥವಾ “ವಿಶ್ವಾಸಘಾತುಕ” ಅಥವಾ “ವಿಧೇಯನಾಗದ ಅಥವಾ ನಂಬಲರ್ಹವಾಗದ” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ “ವಿಶ್ವಾಸ ದ್ರೋಹಿ” ಎನ್ನುವ ಪದವು “ಅಪನಂಬಿಕೆ” ಎನ್ನುವ ಪದಕ್ಕೆ ಸಂಬಂಧಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ನಂಬು, ಅವಿಧೇಯತೆ, ವಿಶ್ವಾಸ, ನಂಬು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 08:05 ಯೋಸೇಫನು ಸೆರೆಮನೆಯಲ್ಲಿದ್ದಾಗಲೂ ದೇವರಿಗೆ __ ವಿಶ್ವಾಸಾರ್ಹನಾಗಿದ್ದನು __, ಮತ್ತು ದೇವರು ಅವನನ್ನು ಆಶೀರ್ವಾದ ಮಾಡಿದನು.
  • 14:12 ಆದರೂ, ದೇವರು ಅಬ್ರಾಹಾಮ, ಇಸಾಕ ಮತ್ತು ಯಾಕೋಬರೊಂದಿಗೆ ಮಾಡಿದ ಆತನ ವಾಗ್ಧಾನಗಳಲ್ಲಿ __ ನಂಬಿಗಸ್ಥನಾಗಿದ್ದನು __.
  • 15:13 ದೇವರಿಗೆ __ ನಂಬಿಗಸ್ಥರಾಗಿರಲು __ ಮತ್ತು ಆತನ ಕಟ್ಟಳೆಗಳನ್ನು ಕೈಗೊಳ್ಳಲು ಜನರು ವಾಗ್ಧಾನ ಮಾಡಿದರು.
  • 17:09 ದಾವೀದನು ನ್ಯಾಯದಿಂದ ಆಳಿದನು ಮತ್ತು ಅನೇಕ ವರ್ಷಗಳ __ ವಿಶ್ವಾಸಾರ್ಹನಾಗಿ __ ಜೀವಿಸಿದನು ಮತ್ತು ದೇವರು ಅವನನ್ನು ಆಶೀರ್ವಾದ ಮಾಡಿದನು. ಆದರೆ, ತನ್ನ ಜೀವನದ ಅಂತ್ಯದಲ್ಲಿ ದೇವರಿಗೆ ವಿರುದ್ಧವಾಗಿ ಭಯಂಕರವಾರ ಪಾಪವನ್ನು ಮಾಡಿದನು.
  • 18:04 ಸೊಲೊಮೋನನ __ ವಿಶ್ವಾಸಘಾತುಕಕ್ಕಾಗಿ __ ದೇವರು ಸೊಲೊಮೋನನ ಮೇಲೆ ಕೋಪಗೊಂಡಿದ್ದನು, ಸೊಲೊಮೋನನ ಮರಣದನಂತರ ಇಸ್ರಾಯೇಲ್ ದೇಶವನ್ನು ಎರಡು ರಾಜ್ಯಗಳಾಗಿ ವಿಂಗಡಿಸುತೇನೆಂದು ಆತನು ವಾಗ್ಧಾನ ಮಾಡಿದನು.
  • 35:12 “ಈ ಎಲ್ಲಾ ವರ್ಷಗಳು ನಾನು ನಿನಗಾಗಿ ತುಂಬಾ __ ವಿಶ್ವಾಸಾರ್ಹನಾಗಿ __ ಕೆಲಸ ಮಾಡಿದೆನು” ಎಂದು ಹಿರಿಯ ಮಗ ತನ್ನ ತಂದೆಗೆ ಹೇಳಿದ್ದಾನೆ.
  • 49:17 ಆದರೆ ದೇವರು __ ನಂಬಿಗಸ್ತನು __ ಮತ್ತು ನೀವು ನಿಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆತನು ನಿಮ್ಮನ್ನು ಕ್ಷಮಿಸುವನು.
  • 50:04 ಅಂತ್ಯದವರೆಗೂ ನೀನು ನನಗೆ __ ವಿಶ್ವಾಸಾರ್ಹನಾಗಿದ್ದರೆ __, ದೇವರು ನಿನ್ನನ್ನು ರಕ್ಷಿಸುವನು.”

ಪದ ಡೇಟಾ:

  • Strong's: H529, H530, H539, H540, H571, H898, H2181, H4603, H4604, H4820, G569, G571, G4103

ನಂಬು, ನಂಬಿಕೆಗಳು, ನಂಬಿದೆ, ವಿಶ್ವಾಸಿ, ನಂಬಿಕೆ, ಅವಿಶ್ವಾಸಿ, ಅವಿಶ್ವಾಸಿಗಳು, ಆಪನಂಬಿಕೆ

ಪದದ ಅರ್ಥವಿವರಣೆ:

“ನಂಬು” ಮತ್ತು “ನಂಬಿಕೆಯಿಡು” ಎನ್ನುವ ಪದಗಳು ನಿಕಟ ಸಂಭಂದವನ್ನು ಹೊಂದಿದೆ, ಆದರೆ ಸ್ವಲ್ಪ ವಿಭಿನ್ನ ಅರ್ಥವನ್ನು ಹೊಂದಿರುತ್ತದೆ.

1. ನಂಬು

  • ಏನಾದರೊಂದನ್ನು ನಂಬುವುದು ಎಂದರೆ ಅದು ಸತ್ಯವೆಂದು ಅಂಗೀಕಾರ ಮಾಡುವುದು ಅಥವಾ ಅದರಲ್ಲಿ ಭರವಸೆಯಿಡುವುದು.
  • ಯಾರಾದರೊಬ್ಬರನ್ನು ನಂಬುವುದು ಎಂದರೆ ಆ ವ್ಯಕ್ತಿ ಹೇಳಿದ್ದು ಸತ್ಯ ಎಂದು ಒಪ್ಪಿಕೊಳ್ಳುವುದು.

2. ನಂಬಿಕೆಯಿಡು

  • ಒಬ್ಬರಲ್ಲಿ “ನಂಬಿಕೆಯಿಡುವುದು” ಎನ್ನುವುದಕ್ಕೆ ಆ ವ್ಯಕ್ತಿಯಲ್ಲಿ “ಭರವಸೆ” ಇಡು ಎಂದರ್ಥ. ಈ ಮಾತಿಗೆ ಆತನು ಹೇಳುವದೆಲ್ಲಾ ಆತನಾಗಿದ್ದಾನೆಂದು ಆ ವ್ಯಕ್ತಿಯಲ್ಲಿ ಭರವಸೆ ಇಡುವುದು ಎಂದರ್ಥ, ಆತನು ಯಾವಾಗಲೂ ಸತ್ಯವನ್ನೇ ನುಡಿಯುತ್ತಾನೆ ಮತ್ತು ಆತನು ಮಾಡುತ್ತೇನೆ ಎಂದು ವಾಗ್ದಾನ ಮಾಡಿದ್ದ ಪ್ರತಿಯೊಂದನ್ನು ಮಾಡಿ ತೋರಿಸುತ್ತಾನೆ.
  • ಯಾವುದಾದರೊಂದರಲ್ಲಿ ಒಬ್ಬ ವ್ಯಕ್ತಿ ನಿಜವಾದ ನಂಬಿಕೆಯನ್ನು ಇಟ್ಟಾಗ, ಆ ನಂಬಿಕೆಯು ತೋರಿಸುವ ವಿಧಾನದಲ್ಲಿಯೇ ಆತನು ನಡೆದುಕೊಳ್ಳುತ್ತಾನೆ.
  • “ವಿಶ್ವಾಸವನ್ನು ಹೊಂದಿರು” ಎನ್ನುವ ಮಾತಿಗೆ ಸಾಧಾರಣವಾಗಿ “ನಂಬಿಕೆಯಿಡು” ಎನ್ನುವ ಮಾತಿಗೆ ಇರುವ ಅರ್ಥವನ್ನೇ ಹೊಂದಿರುತ್ತದೆ.
  • “ಯೇಸುವಿನಲ್ಲಿ ನಂಬಿಕೆಯಿಡು” ಎನ್ನುವದಕ್ಕೆ ಆತನು ದೇವರ ಮಗನೆಂದು, ಆತನು ದೇವರು ಮತ್ತು ಈ ಭೂಲೋಕಕ್ಕೆ ಮನುಷ್ಯನಾಗಿ ಬಂದವನೆಂದು ಮತ್ತು ನಮ್ಮ ಪಾಪಗಳಿಗಾಗಿ ಕ್ರಯಧನವನ್ನು ಸಲ್ಲಿಸುವುದಕ್ಕೆ ಮರಣಹೊಂದಿದವನೆಂದು ನಂಬುವುದು ಎಂದರ್ಥ, ರಕ್ಷಕನನ್ನಾಗಿ ಆತನನ್ನು ನಂಬುವುದು ಮತ್ತು ಆತನಿಗೆ ಮಹಿಮೆ ತರುವ ವಿಧಾನದಲ್ಲಿ ಜೀವಿಸುವುದು ಎಂದರ್ಥ.

3. ವಿಶ್ವಾಸಿ

ಸತ್ಯವೇದದಲ್ಲಿ “ವಿಶ್ವಾಸಿ” ಎನ್ನುವ ಪದವು ಯೇಸುವನ್ನು ರಕ್ಷಕನನ್ನಾಗಿ ನಂಬಿ, ಆತನ ಮೇಲೆಯೇ ಆತುಕೊಳ್ಳುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

  • “ವಿಶ್ವಾಸಿ” ಎನ್ನುವ ಪದವು ಅಕ್ಷರಾರ್ಥವಾಗಿ “ನಂಬುವ ವ್ಯಕ್ತಿ” ಎಂದರ್ಥ.
  • “ಕ್ರೈಸ್ತನು” ಎನ್ನುವ ಪದವು ಕೊನೆಗೆ ವಿಶ್ವಾಸಿಗಳಿಗೆ ಒಂದು ಮುಖ್ಯ ಬಿರುದಾಗಿದೆ ಏಕೆಂದರೆ ಅವರು ಕ್ರಿಸ್ತನನ್ನು ನಂಬುತ್ತಾರೆ ಮತ್ತು ಆತನ ಬೋಧನೆಗಳಿಗೆ ವಿಧೇಯರಾಗಿರುತ್ತಾರೆ.

4. ಅಪನಂಬಿಕೆ

“ಅಪನಂಬಿಕೆ” ಎನ್ನುವ ಪದವು ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ನಂಬದೇ ಇರುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ಅಪನಂಬಿಕೆ” ಎನ್ನುವುದು ಯಾರೇಯಾಗಲಿ ಯೇಸುವನ್ನು ರಕ್ಷಕನನ್ನಾಗಿ ನಂಬದೇಯಿರುವ ಅಥವಾ ಭರವಸವನ್ನಿಡದ ತತ್ವವನ್ನು ಸೂಚಿಸುತ್ತದೆ.
  • ಯೇಸುವಿನಲ್ಲಿ ನಂಬಿಕೆಯಿಡದ ಒಬ್ಬ ವ್ಯಕ್ತಿಯನ್ನು “ಅವಿಶ್ವಾಸಿ” ಎಂದು ಕರೆಯುತ್ತಾರೆ.

ಅನುವಾದ ಸಲಹೆಗಳು:

  • “ನಂಬು” ಎನ್ನುವ ಪದವನ್ನು “ಸತ್ಯವಾಗಿರುವದಕ್ಕೆ ತಿಳಿದುಕೋ” ಅಥವಾ “ನೀತಿವಂತನಾಗುವುದಕ್ಕೆ ತಿಳಿದುಕೋ” ಎಂದೂ ಅನುವಾದ ಮಾಡಬಹುದು.
  • “ನಂಬಿಕೆಯಿಡು” ಎನ್ನುವ ಪದವನ್ನು ಅಥವಾ ಮಾತನ್ನು “ಸಂಪೂರ್ಣವಾಗಿ ಭರವಸೆವಿಡು” ಅಥವಾ “ಭರವಸೆವಿಡು ಮತ್ತು ವಿಧೇಯನಾಗು” ಅಥವಾ “ನಂಬಿದವರ ಮೇಲೆ ಸಂಪೂರ್ಣವಾಗಿ ಆತುಕೋ ಮತ್ತು ಹಿಂಬಾಲಿಸು” ಎಂದೂ ಅನುವಾದ ಮಾಡಬಹುದು.
  • “ಯೇಸುವನ್ನು ನಂಬು” ಅಥವಾ “ಕ್ರಿಸ್ತನಲ್ಲಿ ವಿಶ್ವಾಸಿ” ಎಂದೂ ಕೆಲವೊಂದು ಅನುವಾದಗಳು ಬರೆಯುತ್ತಾರೆ,
  • ಈ ಪದವನ್ನು “ಯೇಸುವಿನಲ್ಲಿ ಭರವಸೆಯನ್ನಿಟ್ಟ ವ್ಯಕ್ತಿ” ಅಥವಾ “ಯೇಸುವನ್ನು ಅರಿತ ಒಬ್ಬ ವ್ಯಕ್ತಿ ಮತ್ತು ಆತನಿಗಾಗಿ ಜೀವಿಸುವ ವ್ಯಕ್ತಿ” ಎಂದು ಅರ್ಥ ಬರುವ ಮಾತುಗಳಿಂದ ಅನುವಾದ ಮಾಡಬಹುದು.
  • “ವಿಶ್ವಾಸಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ರೀತಿಯಲ್ಲಿ. “ಯೇಸುವಿನ ಹಿಂಬಾಲಕ” ಅಥವಾ “ಯೇಸುವನ್ನು ಅರಿತ ಮತ್ತು ಆತನಿಗೆ ವಿಧೇಯನಾಗುವ ಒಬ್ಬ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ವಿಶ್ವಾಸಿ” ಎನ್ನುವ ಪದವು ಕ್ರಿಸ್ತನಲ್ಲಿರುವ ಪ್ರತಿಯೊಬ್ಬ ವಿಶ್ವಾಸಿಗೂ ಸಾಧಾರಣವಾಗಿ ಉಪಯೋಗಿಸುವ ಪದ, ಆದರೆ “ಶಿಷ್ಯ” ಮತ್ತು “ಅಪೊಸ್ತಲ” ಎನ್ನುವ ಪದಗಳು ಯೇಸು ಈ ಭೂಮಿಯ ಮೇಲಿದ್ದು ನಡೆದಾಗ ಆತನ ಜೊತೆಯಲ್ಲಿರುವ ಮತ್ತು ಆತನನ್ನು ತಿಳಿದಿರುವ ಜನರಿಗೆ ವಿಶೇಷವಾಗಿ ಉಪಯೋಗಿಸುತ್ತಿದ್ದರು. ಈ ಪದಗಳ ವಿಶಿಷ್ಟತೆಯನ್ನು ಕಾಪಾಡಲು ಈ ಪದಗಳನ್ನು ವಿವಿಧವಾದ ರೀತಿಯಲ್ಲಿ ಅನುವಾದ ಮಾಡುವುದು ಒಳ್ಳೇಯದು.
  • “ಅವಿಶ್ವಾಸ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ವಿಶ್ವಾಸ ಕಡಿಮೆ” ಅಥವಾ “ನಂಬುತ್ತಾಯಿಲ್ಲ” ಎಂದೂ ಸೇರಿಸಬಹುದು.
  • “ಅವಿಶ್ವಾಸಿ” ಎನ್ನುವ ಪದವನ್ನು “ಯೇಸುವಿನಲ್ಲಿ ನಂಬಿಕೆಯಿಡದ ಒಬ್ಬ ವ್ಯಕ್ತಿ” ಅಥವಾ “ರಕ್ಷಕನಾಗಿ ಯೇಸುವಿನಲ್ಲಿ ಭರವಸೆವಿಡದ ಒಬ್ಬ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ಅಪೊಸ್ತಲ, ಕ್ರೈಸ್ತ, ಶಿಷ್ಯ, ನಂಬಿಕೆ, ಭರವಸೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 03:04 ಬರುವಂಥಹ ಪ್ರಳಯದ ಕುರಿತಾಗಿ ನೋಹನು ಜನರನ್ನು ಎಚ್ಚರಿಸಿದನು ಮತ್ತು ದೇವರಿಗೆ ತಿರುಗಿಕೊಳ್ಳಿರಿ ಎಂದು ಹೇಳಿದನು, ಆದರೆ ಅವರು ಆತನನ್ನು ನಂಬಲಿಲ್ಲ.
  • 04:08 ಅಬ್ರಹಾಮನು ದೇವರ ವಾಗ್ಧಾನವನ್ನು ___ ನಂಬಿದನು ___. ಅಬ್ರಾಮನು ನೀತಿವಂತನೆಂದು ದೇವರು ಪ್ರಕಟನೆ ಮಾಡಿದರು ಯಾಕಂದರೆ ಆತನು ದೇವರ ವಾಗ್ಧಾನವನ್ನು ___ ನಂಬಿದ್ದನು __.
  • 11:02 ಆತನಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬರ ಮೊದಲ ಸಂತಾನವನ್ನು ರಕ್ಷಿಸುವುದಕ್ಕೆ ದೇವರು ಒಂದು ಮಾರ್ಗವನ್ನುಂಟು ಮಾಡಿದರು.
  • 11:06 ಆದರೆ ಐಗುಪ್ತರು ದೇವರನ್ನು __ ನಂಬಲಿಲ್ಲ __ ಅಥವಾ ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
  • 37:05 “ನಾನೇ ಪುನರುತ್ಥಾನವು ಮತ್ತು ಜೀವವೂ ಆಗಿದ್ದೇನೆ” ಎಂದು ಯೇಸು ಹೇಳಿದನು. ನನ್ನಲ್ಲಿ ___ ನಂಬಿಕೆಯಿಡುವವರೆಲ್ಲರು ಸತ್ತರೂ ಜೀವಿಸುವರು. ನನ್ನಲ್ಲಿ ___ ನಂಬಿಕೆಯಿಡುವ ___ ಪ್ರತಿಯೊಬ್ಬರೂ ಎಂದಿಗೂ ಸತ್ತುಹೋಗುವುದಿಲ್ಲ. ನೀವು ಇದನ್ನು ___ ನಂಬುತ್ತಿದ್ದೀರಾ?”
  • 43:01 ಯೇಸು ಪರಲೋಕಕ್ಕೆ ಹಿಂದುರಿಗಿ ಹೋದಾಗ, ಯೇಸು ಶಿಷ್ಯರಿಗೆ ಆಜ್ಞಾಪಿಸಿದಂತೆಯೇ ಅವರು ಯೆರೂಸಲೇಮಿನಲ್ಲಿ ಉಳಿದುಕೊಂಡರು. ___ ವಿಶ್ವಾಸಿಗಳು ___ ಅಲ್ಲಿ ನಿರಂತರವಾಗಿ ಪ್ರಾರ್ಥನೆ ಮಾಡುವುದಕ್ಕೆ ಭೇಟಿಯಾಗುತ್ತಿದ್ದರು.
  • 43:03 ವಿಶ್ವಾಸಿಗಲೆಲ್ಲರೂ ಸೇರಿ ಬಂದಾಗ, ಅವರಿರುವ ಮನೆಯಲ್ಲಿ ಆಕಸ್ಮಿಕವಾಗಿ ಬಲವಾದ ಗಾಳಿಯಂಥೆ ಒಂದು ಶಬ್ದದೊಂದಿಗೆ ತುಂಬಿಸಲ್ಪಟ್ಟಿತ್ತು. ಇದಾದನಂತರ ___ ವಿಶ್ವಾಸಿಗಳ ___ ಎಲ್ಲರ ತಲೆಗಳ ಮೇಲೆ ಅಗ್ನಿ ಜ್ವಾಲೆಗಳಂತೆ ಕಾಣಿಸಿಕೊಂಡವು.
  • 43:13 ಪ್ರತಿದಿನ ಅನೇಕರು __ ವಿಶ್ವಾಸಿಗಳಾಗುತ್ತಿದ್ದರು __.
  • 46:06 ಆ ದಿನದಂದು ಅನೇಕ ಜನರು ಯೇಸುವಿನ ಹಿಂಬಾಲಕರನ್ನು ಹಿಂಸಿಸುವುದುನ್ನು ಆರಂಭಿಸಿದರು. ಇದರಿಂದ __ ವಿಶ್ವಾಸಿಗಳು __ ಅನೇಕ ಸ್ಥಳಗಳಿಗೆ ಚದರಿಹೋದರು. ಆದರೆ ಇಂಥಹ ಸಂದರ್ಭದಲ್ಲಿಯೂ ಅವರು ಹೊರಟ ಪ್ರತಿಯೊಂದು ಸ್ಥಳದಲ್ಲಿ ಯೇಸುವಿನ ಕುರಿತಾಗಿ ಪ್ರಕಟನೆ ಮಾಡಿದರು.
  • 46:01 ಸ್ತೆಫೆನನನ್ನು ಸಾಯಿಸಿದ ಮನುಷ್ಯರ ವಸ್ತ್ರಗಳಿಗೆ ಕಾವಲುಗಾರನಾಗಿದ್ದಾಗ ಸೌಲನು ಯೌನಸ್ಥನಾಗಿದ್ದನು. ಆಗ ಅವನು ಯೇಸುವಿನಲ್ಲಿ ನಂಬಿಕೆಯಿಟ್ಟಿರಲಿಲ್ಲ, ಆದ್ದರಿಂದ ಅವನು ___ ವಿಶ್ವಾಸಿಗಳನ್ನು ___ ಹಿಂಸೆಗೆ ಗುರಿಮಾಡಿದನು.
  • 46:09 ಯೆರೂಸಲೇಮಿನಲ್ಲಿ ಹಿಂಸೆಯಾದನಂತರ ಬೇರೊಂದು ಸ್ಥಳಗಳಿಗೆ ಹೊರಟ ವಿಶ್ವಾಸಿಗಳಲ್ಲಿ ಕೆಲವರು ಅಂತಿಯೋಕ್ಯ ಪಟ್ಟಣದವರೆಗೆ ಹೋಗಿದ್ದರು ಮತ್ತು ಆ ಪಟ್ಟಣದಲ್ಲಿ ಯೇಸುವಿನ ಸುವಾರ್ತೆಯನ್ನು ಹಂಚಿದರು. ಯೇಸುವಿನಲ್ಲಿ ___ ವಿಶ್ವಾಸಿಗಳಾದ __ ಅಂತಿಯೋಕ್ಯದವರು ಮೊಟ್ಟ ಮೊದಲಬಾರಿಗೆ “ಕ್ರೈಸ್ತರು” ಎಂದು ಕರೆಯಲ್ಪಟ್ಟರು.
  • 47:14 ಸಭೆಗಳಲ್ಲಿರುವ __ ವಿಶ್ವಾಸಿಗಳನ್ನು __ ಪ್ರೋತ್ಸಹಿಸಲು ಮತ್ತು ಅವರಿಗೆ ಬೋಧನೆ ಮಾಡಲು ಅವರು ಕೂಡ ಅನೇಕ ಪತ್ರಿಕೆಗಳನ್ನು ಬರೆದಿದ್ದರು.

ಪದ ಡೇಟಾ:

  • Strong's: H539, H540, G543, G544, G569, G570, G571, G3982, G4100, G4102, G4103, G4135

ನರಕ, ಬೆಂಕಿಯ ಕೆರೆ

ಪದದ ಅರ್ಥವಿವರಣೆ:

ನರಕ ಎನ್ನುವುದು ಕೊನೆಯಿಲ್ಲದ ನೋವು ಮತ್ತು ಶ್ರಮೆಯ ಅಂತಿಮ ಸ್ಥಳವಾಗಿದೆ, ಅಲ್ಲಿಯೇ ದೇವರು ತನಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಮತ್ತು ಯೇಸುವಿನ ತ್ಯಾಗದ ಮೂಲಕ ಅವರನ್ನು ರಕ್ಷಿಸುವ ತನ್ನ ಯೋಜನೆಯನ್ನು ತಿರಸ್ಕರಿಸುವ ಪ್ರತಿಯೊಬ್ಬರನ್ನು ಶಿಕ್ಷಿಸುತ್ತಾನೆ. ಇದನ್ನು “ಬೆಂಕಿಯ ಕೆರೆ” ಎಂಬುದಾಗಿಯೂ ಸೂಚಿಸಿದ್ದಾರೆ.

  • ನರಕವನ್ನು ಬೆಂಕಿ ಮತ್ತು ಭಯಂಕರವಾದ ಹಿಂಸೆ ಇರುವ ಸ್ಥಳವೆಂದು ವಿವರಿಸಿದ್ದಾರೆ.
  • ಸೈತಾನನು ಮತ್ತು ಸೈತಾನನ್ನು ಹಿಂಬಾಲಿಸುವ ಪ್ರತಿಯೊಂದು ದುರಾತ್ಮವು ನಿತ್ಯಶಿಕ್ಷೆ ಹೊಂದುವುದಕ್ಕೆ ನರಕದಲ್ಲಿ ಹಾಕಲ್ಪಡುತ್ತಾರೆ.
  • ಜನರು ತಮ್ಮ ಪಾಪಗಳಿಗಾಗಿ ಯೇಸುವಿನ ಬಲಿಯಾಗದಲ್ಲಿ ನಂಬದವರು ಮತ್ತು ಅವರನ್ನು ರಕ್ಷಿಸುವುದಕ್ಕೆ ಆತನಲ್ಲಿ ಭರವಸೆವಿಡದ ಜನರು ನರಕದಲ್ಲಿ ನಿರಂತರವಾಗಿ ಶಿಕ್ಷೆ ಹೊಂದುತ್ತಾಯಿರುವರು.

ಅನುವಾದ ಸಲಹೆಗಳು:

  • ಈ ಪದಗಳು ವಿವಿಧವಾದ ಸಂದರ್ಭಗಳಲ್ಲಿ ಕಂಡುಬರುವುದರಿಂದ ಬಹುಶಃ ಇವುಗಳನ್ನು ವಿಭಿನ್ನವಾದ ರೀತಿಯಲ್ಲಿ ಅನುವಾದ ಬೇಕಾಗಿರುತ್ತದೆ.
  • “ಬೆಂಕಿಯ ಕೆರೆ” ಎನ್ನುವ ಮಾತಿನಲ್ಲಿ ಇರುವಂತೆ ಕೆಲವೊಂದು ಭಾಷೆಗಳಲ್ಲಿ “ಕೆರೆ” ಎನ್ನುವ ಪದವನ್ನು ಉಪಯೋಗಿಸುವುದಿಲ್ಲ, ಯಾಕಂದರೆ ಇದು ನೀರನ್ನು ಸೂಚಿಸುತ್ತದೆ.
  • “ನರಕ” ಎನ್ನುವ ಪದವನ್ನು “ಸಂಕಟದ ಸ್ಥಳ” ಅಥವಾ “ನೋವು ಮತ್ತು ಕತ್ತಲೆಯ ಅಂತಿಮ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ಬೆಂಕಿಯ ಕೆರೆ” ಎನ್ನುವ ಪದವನ್ನು “ಬೆಂಕಿಯ ಸಮುದ್ರ” ಅಥವಾ “ಹೆಚ್ಚಾದ ಬೆಂಕಿ (ಹಿಂಸೆಗಳ)” ಅಥವಾ “ಬೆಂಕಿಯ ನೆಲ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪರಲೋಕ, ಮರಣ, ಹೇಡೆಸ್, ಕೂಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • ___50:14__ ಆತನು (ದೇವರು) ಅವರನ್ನು ___ ನರಕದೊಳಗೆ ___ ಹಾಕುವನು, ಅಲ್ಲಿ ಅವರು ಅಳುವುದು ಮತ್ತು ಕೋಪದಲ್ಲಿ ಹಲ್ಲುಗಳನ್ನು ಕಡಿಯುವುದೂ ಇರುತ್ತದೆ. ಆ ಬೆಂಕಿಯು ಹೊರಗೆ ಎಲ್ಲಿಗೂ ಹೋಗದೆ , ಅವರನ್ನು ನಿರಂತರವಾಗಿ ಸುಡುತ್ತಾ ಇರುತ್ತದೆ, ಮತ್ತು ಹುಳಗಳು ಅವರನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ.
  • ___50:15__ ದೇವರಿಗೆ ವಿಧೇಯತೆ ತೋರಿಸದೆ ಅವನನ್ನು ಹಿಂಬಾಲಿಸುವುದಕ್ಕೆ ನಿರ್ಣಯ ಮಾಡಿಕೊಳ್ಳುವ ಪ್ರತಿಯೊಬ್ಬರೊಂದಿಗೆ ಸೈತಾನನನ್ನು ಆತನು ___ ನರಕದೊಳಗೆ ___ ಹಾಕುವನು, ಆಲ್ಲಿ ಅವನು ಯುಗಯುಗಗಳು ಸುಡಲ್ಪಡುತ್ತಾ ಇರುವನು,

ಪದ ಡೇಟಾ:

  • Strong's: H7585, G86, G439, G440, G1067, G3041, G4442, G4443, G4447, G4448, G5020, G5394, G5457

ನಾಜಿರ, ನಾಜಿರರು, ನಾಜಿರ ಪ್ರತಿಜ್ಞೆ

ಸತ್ಯಾಂಶಗಳು:

“ನಾಜಿರ” ಎನ್ನುವ ಪದವು “ನಾಜಿರ ಪ್ರತಿಜ್ಞೆಯನ್ನು” ತೆಗೆದುಕೊಂಡಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಪ್ರತಿಜ್ಞೆಯನ್ನು ಪುರುಷರು ಮಾತ್ರವೇ ತೆಗೆದುಕೊಳ್ಳುತ್ತಾರೆ, ಆದರೆ ಸ್ತ್ರೀಯರು ಕೂಡ ತೆಗೆದುಕೊಳ್ಳುತ್ತಾರೆ

  • ನಾಜೀರ ಪ್ರತಿಜ್ಞೆಯನ್ನು ತೆಗೆದುಕೊಂಡಿರುವ ಒಬ್ಬ ವ್ಯಕ್ತಿ ಆ ಪ್ರತಿಜ್ಞೆಯನ್ನು ನೆರವೇರಿಸುವವರೆಗೂ ಅಂದರೆ ಆ ನಿರ್ದಿಷ್ಟ ಕಾಲದವರೆಗೂ ದ್ರಾಕ್ಷಿಗಳಿಂದ ಮಾಡಿದ ಪಾನವನ್ನಾಗಲಿ ಅಥವಾ ಆಹಾರವನ್ನಾಗಲಿ ತೆಗೆದುಕೊಳ್ಳುವುದಿಲ್ಲವೆಂದು ಒಪ್ಪಂದ ಮಾಡಿಕೊಂಡಿರುತ್ತಾನೆ. ಈ ನಿರ್ದಿಷ್ಟ ಕಾಲದಲ್ಲಿ ಇವನು ತನ್ನ ಕೂದಲನ್ನು ಕತ್ತರಿಸಿಕೊಳ್ಳುವುದಿಲ್ಲ, ಮತ್ತು ಶವದ ಬಳಿಗೆ ಹೋಗುವುದಿಲ್ಲ.
  • ಇಟ್ಟಿಕೊಂಡಿರುವ ನಿರ್ಧಿಷ್ಠ ಕಾಲವು ಮುಗಿದನಂತರ, ಆ ಪ್ರತಿಜ್ಞೆಯು ನೆರವೇರಿಸಲ್ಪಡುತ್ತದೆ, ನಾಜಿರನು ಯಾಜಕನ ಬಳಿಗೆ ಹೋಗಿ, ಅರ್ಪಣೆಯನ್ನು ಅರ್ಪಿಸಬೇಕು. ಇದರಲ್ಲಿ ತನ್ನ ಕೂದಲನ್ನು ಕತ್ತರಿಸಿ, ಅವುಗಳನ್ನು ಸುಟ್ಟು ಹಾಕುವುದನ್ನು ಒಳಗೊಂಡಿರುತ್ತದೆ. ಎಲ್ಲಾ ಕಟ್ಟಳೆಗಳನ್ನು ತೆಗೆದುಹಾಕಲಾಗುತ್ತದೆ.
  • ನಾಜಿರ ಪ್ರತಿಜ್ಞೆಯ ಕೆಳಗೆ ಇರುವ ಸಂಸೋನನು ಹಳೇ ಒಡಂಬಡಿಕೆಯಲ್ಲಿ ಎಲ್ಲರಿಗೆ ಚೆನ್ನಾಗಿ ಗೊತ್ತಿದ್ದವನಾಗಿರುತ್ತಾನೆ.
  • ಜೆಕರ್ಯನ ಮಗನಾಗಿರುವ ಸ್ನಾನೀಕನಾದ ಯೋಹಾನನು ಬಲವಾದ ಪಾನವನ್ನು ಕುಡಿಯುವುದಿಲ್ಲವೆಂದು ದೂತನು ಜೆಕರ್ಯನಿಗೆ ಹೇಳುತ್ತಾನೆ, ಇದರಿಂದ ಯೋಹಾನನು ನಾಜಿರ ಕೆಳಗೆ ಇದ್ದಾನೆಂದು ತಿಳಿದುಬರುತ್ತಿದೆ.
  • ಅಪೊಸ್ತಲರ ಕೃತ್ಯಗಳಲ್ಲಿರುವ ವಾಕ್ಯಭಾಗದ ಪ್ರಕಾರ ಅಪೊಸ್ತಲನಾದ ಪೌಲನು ಕೂಡ ಒಂದಾನೊಂದುಸಲ ಅಪೊಸ್ತಲರ ಕೃತ್ಯಗಳಲ್ಲಿರುವ ವಾಕ್ಯಭಾಗದ ಪ್ರಕಾರ ಈ ಪ್ರತಿಜ್ಞೆಯನ್ನು ತೆಗೆದುಕೊಂಡಿರಬಹುದು,

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)

(ಈ ಪದಗಳನ್ನು ಸಹ ನೋಡಿರಿ : ಯೋಹಾನ (ಸ್ನಾನಿಕನು), ಸರ್ವಾಂಗ ಹೋಮ, ಸಂಸೋನ, ಪ್ರತಿಜ್ಞೆ, ಜೆಕರ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5139

ನಾವೆ

ಪದದ ಅರ್ಥವಿವರಣೆ:

“ನಾವೆ” ಎನ್ನುವ ಪದವು ಅಕ್ಷರಾರ್ಥವಾಗಿ ಹಿಡಿದುಕೊಳ್ಳುವುದಕ್ಕೆ ಮಾಡಿರುವ ಅಥವಾ ಏನಾದರೊಂದನ್ನು ಸಂರಕ್ಷಿಸುವುದಕ್ಕೆ ಮಾಡಿದ ಆಯಾತಾಕಾರದಲ್ಲಿರುವ ಕಟ್ಟಿಗೆಯ ಪೆಟ್ಟಿಗೆಯನ್ನು ಸೂಚಿಸುತ್ತದೆ. ನಾವೆ ಎನ್ನುವುದು ದೊಡ್ಡದಾಗಿರಬಹುದು ಅಥವಾ ಚಿಕ್ಕದಾಗಿರಬಹುದು, ಇದನ್ನು ಯಾವ ಉದ್ದೇಶಕ್ಕಾಗಿ ಉಪಯೋಗ ಮಾಡುತ್ತಿದ್ದೇವೆ ಎನ್ನುವದರ ಮೇಲೆ ಆಧಾರಪಟ್ಟಿರುತ್ತದೆ.

  • ಆಂಗ್ಲ ಸತ್ಯವೇದದಲ್ಲಿ, “ನಾವೆ” ಎನ್ನುವ ಪದವನ್ನು ಮೊಟ್ಟ ಮೊದಲು ಪ್ರಪಂಚದಲ್ಲೆಲ್ಲಾ ಬರುತ್ತಿರುವ ಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ನಿರ್ಮಿಸಿದ ಅತೀ ದೊಡ್ಡ ಕಟ್ಟಿಗೆಯ ಆಯಾತಾಕಾರದ ಹಡಗಿಗೆ ಸೂಚಿಸಲಾಗಿದೆ. ನಾವೆಗೆ ಸಪಾಟವಾದ ಅಡಿಭಾಗ, ಮೇಲ್ಛಾವಣಿ ಮತ್ತು ಗೋಡೆಗಳು ಇರುತ್ತವೆ.
  • ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಅತೀ ದೊಡ್ಡ ಹಡಗು” ಅಥವಾ “ದೋಣಿ” ಅಥವಾ “ಸರಕುಗಳನ್ನು ಹೊಯ್ಯುವ ಹಡಗು” ಅಥವಾ “ಅತೀ ದೊಡ್ಡ, ಪೆಟ್ಟಿಗೆಯ ಆಕಾರದ ಹಡಗು” ಎಂದೆನ್ನುವ ಪದಗಳನ್ನು ಒಳಗೊಂಡಿರುತ್ತವೆ.

ಈ ದೊಡ್ಡ ಹಡಗನ್ನು ಸೂಚಿಸುವುದಕ್ಕೆ ಉಪಯೋಗಿಸಿದ ಇಬ್ರಿಯ ಪದವನ್ನೇ ಮೋಶೆಯು ಕೂಸಾಗಿರುವಾಗ ತನ್ನ ತಾಯಿಯು ಕೂಸಾಗಿದ್ದ ಮೋಶೆಯನ್ನು ಬಚ್ಚಿಡುವುದಕ್ಕೆ ನೈಲ್ ನದಿಯಲ್ಲಿ ಇಟ್ಟ ಪೆಟ್ಟಿಗೆಗೆ ಅಥವಾ ಬುಟ್ಟಿಗೆ ಕೂಡ ಅದೇ ಪದವನ್ನು ಉಪಯೋಗಿಸಿದ್ದಾರೆ. ಇಂಥಹ ಸಂದರ್ಭದಲ್ಲಿ ಸಹಜವಾಗಿ “ಬುಟ್ಟಿ” ಎಂದೂ ಅನುವಾದ ಮಾಡುತ್ತಾರೆ.

  • “ಒಡಂಬಡಿಕೆಯ ಮಂಜೂಷ” ಎಂದು ಉಪಯೋಗಿಸಿದ ನುಡಿಗಟ್ಟಿನಲ್ಲಿ “ಮಂಜೂಷ” ಎನ್ನುವ ಪದಕ್ಕೆ ಬೇರೊಂದು ಇಬ್ರಿಯ ಪದವನ್ನು ಉಪಯೋಗಿಸಿದ್ದಾರೆ. ಇದನ್ನು “ಪೆಟ್ಟಿಗೆ” ಅಥವಾ “ಗೂಡು” ಅಥವಾ “ಪಾತ್ರೆ” ಎಂದೂ ಅನುವಾದ ಮಾಡಬಹುದು.
  • “ನಾವೆ” ಎನ್ನುವ ಪದವನ್ನು ಅನುವಾದ ಮಾಡಲು ಆಯ್ಕೆ ಮಾಡಿಕೊಂಡಾಗ, ಇದು ಎಂಥಾ ಅಳತೆಯಲ್ಲಿದೆ ಮತ್ತು ಇದು ಯಾವುದಕ್ಕೆ ಉಪಯೋಗಿಸಿದ್ದಾರೆ ಎನ್ನುವದನ್ನು ಪ್ರತಿ ಸಂದರ್ಭದಲ್ಲಿ ನೋಡುವುದು ತುಂಬಾ ಪ್ರಾಮುಖ್ಯ.

(ಇವುಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ಬುಟ್ಟಿ)

ಸತ್ಯವೇದದ ಉಲ್ಲೇಖಗಳು :

ಪದದ ದತ್ತಾಂಶ:

  • Strong's: H0727, H8392, G27870

ನಾಶವಾಗುವುದು, ನಾಶವಾಗಿದೆ, ನಾಶವಾಗುತ್ತಿರುವುದು, ನಾಶ ಹೊಂದುವ

ಪದದ ಅರ್ಥವಿವರಣೆ:

“ನಾಶವಾಗುವುದು” ಎನ್ನುವ ಪದಕ್ಕೆ ಸಾಯುವುದು ಅಥವಾ ನಾಶಗೊಳಿಸಲ್ಪಡುವುದು ಎಂದರ್ಥ, ಸಹಜವಾಗಿ ಈ ಪದಕ್ಕೆ ಇತರ ವಿಪತ್ತು ಅಥವಾ ಹಿಂಸೆಯ ಫಲಿತಾಂಶವಾಗಿರುತ್ತದೆ. ಸತ್ಯವೇದದಲ್ಲಿ ಇದಕ್ಕೆ ವಿಶೇಷವಾಗಿ ನಿತ್ಯ ನರಕದಲ್ಲಿ ಶಿಕ್ಷೆಯನ್ನು ಹೊಂದುವುದು ಎಂದರ್ಥ.

"ನಾಶವಾಗುವುದು" ಎಂಬುವುದರ ಆಧ್ಯಾತ್ಮಿಕ ಅರ್ಥ

  • "ತಮ್ಮ ರಕ್ಷಣಕ್ಕಾಗಿ ಯೇಸುವನ್ನು ನಂಬಲು ನಿರಾಕರಿಸಿದವರು "ನಾಶವಾಗುತ್ತಿರುವ" ಜನರಾಗಿದ್ದಾರೆ.
  • ಪ್ರತಿಯೊಬ್ಬರೂ ದೈಹಿಕವಾಗಿ ಸಾಯುತ್ತಾರೆ, ಆದರೆ ತಮ್ಮ ರಕ್ಷಣಕ್ಕಾಗಿ ಯೇಸುವನ್ನು ನಂಬದವರು ಶಾಶ್ವತವಾಗಿ ನಾಶವಾಗುತ್ತಾರೆ.
  • “ನಾಶವಾಗುತ್ತಿರುವ” ಜನರೆಲ್ಲರೂ ನರಕಕ್ಕೆ ಪಾತ್ರರಾಗಿರುವ ಪ್ರತಿಯೊಬ್ಬರು ಎಂದರ್ಥ, ಯಾಕಂದರೆ ಅವರ ರಕ್ಷಣೆಗಾಗಿ ಯೇಸುವಿನಲ್ಲಿ ನಂಬಿಕೆಯಿಡುವುದಕ್ಕೆ ತಿರಸ್ಕಾರ ಮಾಡುವುದು ಎಂದರ್ಥ.
  • ಯೋಹಾನ.3:16 ವಚನವು ಬೋಧಿಸುವ “ನಾಶ” ಎನ್ನುವುದಕ್ಕೆ ಪರಲೋಕದಲ್ಲಿ ನಿತ್ಯತ್ವದಲ್ಲಿ ಜೀವಿಸದಿರುವುದು ಎಂದರ್ಥ.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನಿತ್ಯತ್ವದಲ್ಲಿ ಸಾಯುವುದು” ಅಥವಾ “ನರಕದಲ್ಲಿ ಶಿಕ್ಷೆ ಹೊಂದುವುದು” ಅಥವಾ “ನಾಶಗೊಳಿಸಲ್ಪಡುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ನಾಶವಾಗುವುದು” ಎನ್ನುವ ಪದವು “ಅಸ್ತಿತ್ವದಲ್ಲಿರದಿರುವುದು” ಎನ್ನುವ ಅರ್ಥವು ಮಾತ್ರವೇ ಹೊಂದದ ಪದ ಅಥವಾ ಅಭಿವ್ಯಕ್ತಿಯನ್ನು ಬಳಸಲು ಪ್ರಯತ್ನಿಸಿ.

(ಈ ಪದಗಳನ್ನು ಸಹ ನೋಡಿರಿ : ಮರಣ, ನಿತ್ಯತ್ವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6, H7, H8, H1478, H1820, H5486, H5595, H6544, H8045, G599, G622, G684, G853, G1311, G2704, G4881, G5356

ನಿಜ, ಸತ್ಯ, ಸತ್ಯಾಸತ್ಯಗಳು

ಪದದ ಅರ್ಥವಿವರಣೆ:

“ಸತ್ಯ” ಎನ್ನುವ ಪದವು ಸತ್ಯಾಂಶಗಳಾಗಿರುವ ಒಂದು ಅಥವಾ ಹೆಚ್ಚಿನ ಪರಿಕಲ್ಪನೆಗಳನ್ನು, ನಿಜವಾಗಿ ನಡೆದ ಸಂಘಟನೆಗಳನ್ನು ಮತ್ತು ನಿಜವಾಗಿ ಹೇಳಲ್ಪಟ್ಟ ವ್ಯಾಖ್ಯೆಗಳನ್ನು ಸೂಚಿಸುತ್ತದೆ. ಅಂಥಹ ಪರಿಕಲ್ಪನೆಗಳು “ನಿಜವಾಗಿ” ಹೇಳಲ್ಪಟ್ಟಿರುತ್ತವೆ.

  • ನಿಜ ಸಂಗತಿಗಳೆಲ್ಲವು ಅಸ್ತಿತ್ವದಲ್ಲಿ ನಡೆದ, ವಾಸ್ತವಿಕವಾಗಿರುವ, ಮೋಸವಲ್ಲದ, ನ್ಯಾಯವಾಗಿರುವ, ತರ್ಕಬದ್ಧವಾಗಿರುವ ಮತ್ತು ನಡೆದ ಸಂಗತಿಗಳಾಗಿರುವ ಸಂದರ್ಭಗಳಾಗಿರುತ್ತವೆ.
  • ಸತ್ಯ ಎಂದರೆ ತಿಳುವಳಿಕೆ, ನಂಬಿಕೆಗಳು ಅಥವಾ ಸತ್ಯವಾದ ಹೇಳಿಕೆ.
  • ಪ್ರವಾದನೆಯು “ನಿಜವಾಗಿದೆ” ಅಥವಾ “ನಿಜವಾಗುತ್ತದೆ” ಎನ್ನುವ ಮಾತಿಗೆ ಹೇಳಿದ ಪ್ರಕಾರವೇ ಇದು ನಡೆದಿದೆ ಅಥವಾ ಅದರ ಪ್ರಕಾರವೇ ನಡೆಯುತ್ತದೆ ಎಂದರ್ಥವಾಗಿರುತ್ತದೆ.
  • "ಸತ್ಯ" ಎಂಬ್ವ ಸತ್ಯವೇದದ ಪರಿಕಲ್ಪನೆಯಲ್ಲಿ ವಿಶ್ವಾಸಾರ್ಹ ಮತ್ತು ನಿಷ್ಠಾವಂತ ವಿಧಾನದಲ್ಲಿ ನಡೆದುಕೊಳ್ಳುವ ಪರಿಕಲ್ಪನೆಯು ಒಳಗೊಂಡಿರುತ್ತದೆ.
  • ಯೇಸು ತಾನು ಮಾತನಾಡಿದ ಮಾತುಗಳಲ್ಲಿ ದೇವರ ಸತ್ಯವನ್ನು ಪ್ರಕಟಿಸಿದ್ದಾನೆ.
  • ದೇವರ ವಾಕ್ಯವೇ ಸತ್ಯ. ಇದು ನಿಜವಾಗಿ ನಡೆದ ಸಂಘಟನೆಗಳ ಕುರಿತಾಗಿ ಹೇಳುತ್ತದೆ, ದೇವರ ಕುರಿತಾಗಿ ಮತ್ತು ದೇವರು ಮಾಡಿದ ಎಲ್ಲಾ ಸೃಷ್ಟಿಯ ಕುರಿತಾಗಿ ಬೋಧಿಸುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಮತ್ತು ಹೇಳಲ್ಪಟ್ಟಿರುವ ಸಂಗತಿಗಳ ಪ್ರಕಾರ , “ನಿಜ” ಎನ್ನುವ ಪದವನ್ನು “ವಾಸ್ತವ” ಅಥವಾ “ನಡೆದ ಸಂಗತಿ” ಅಥವಾ “ಸರಿಯಾದ” ಅಥವಾ “ಸರಿ” ಅಥವಾ “ನಿರ್ದಿಷ್ಟ” ಅಥವಾ “ಪ್ರಾಮಾಣಿಕವಾದ” ಎಂದೂ ಅನುವಾದ ಮಾಡಬಹುದು.
  • “ಸತ್ಯ” ಎನ್ನುವ ಪದವನ್ನು ಅನುವಾದ ಮಾಡುವದರಲ್ಲಿ “ನಿಜವಾದದ್ದು” ಅಥವಾ “ಸತ್ಯಾಂಶವು” ಅಥವಾ “ನಿರ್ದಿಷ್ಟವಾದದ್ದು” ಅಥವಾ “ನಿಯಮ” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ನಿಜವಾಗು” ಎನ್ನುವ ಮಾತನ್ನು “ವಾಸ್ತವಿಕವಾಗಿ ನಡೆಯುವ ಸಂಗತಿ” ಅಥವಾ “ನೆರವೇರಿಸಲ್ಪಡುವುದು” ಅಥವಾ “ಹೇಳಿದ ಪ್ರಕಾರ ನಡೆಯುವುದು” ಎಂದೂ ಅನುವಾದ ಮಾಡಬಹುದು.
  • “ಸತ್ಯವನ್ನು ಹೇಳು” ಅಥವಾ “ಸತ್ಯವನ್ನು ಮಾತನಾಡು” ಎನ್ನುವ ಮಾತುಗಳನ್ನು “ನಿಜವಾದದ್ದನ್ನು ಹೇಳು” ಅಥವಾ “ವಾಸ್ತವಿಕವಾಗಿ ನಡೆದದ್ದನ್ನು ಹೇಳು” ಅಥವಾ “ನಂಬುವಂತಹ ವಿಷಯಗಳನ್ನು ಹೇಳು” ಎಂದೂ ಅನುವಾದ ಮಾಡಬಹುದು.
  • “ಸತ್ಯವನ್ನು ಅಂಗೀಕರಿಸು” ಎನ್ನುವ ಮಾತನ್ನು “ದೇವರ ಕುರಿತಾದ ಸತ್ಯವನ್ನು ನಂಬು” ಎಂದೂ ಅನುವಾದ ಮಾಡಬಹುದು.
  • “ಆತ್ಮದಲ್ಲಿ ಮತ್ತು ಸತ್ಯದಲ್ಲಿ ದೇವರನ್ನು ಆರಾಧಿಸು” ಎನ್ನುವ ಮಾತಿನಲ್ಲಿ, “ಸತ್ಯದಲ್ಲಿ” ಎನ್ನುವ ಪದವನ್ನು “ದೇವರು ನಮಗೆ ಹೇಳಿದವುಗಳಿಗೆ ವಿಶ್ವಾಸಾರ್ಹದಿಂದ ವಿಧೇಯರಾಗುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ವಿಶ್ವಾಸಾರ್ಹ, ನೆರವೇರಿಸು, ವಿಧೇಯತೆ ತೋರಿಸು, ಪ್ರವಾದಿ, ಅರಿತುಕೋ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 02:04 “ಇದು __ ನಿಜವಲ್ಲ __! ನೀನು ಸಾಯುವುದಿಲ್ಲ” ಎಂದು ಹಾವು ಸ್ತ್ರೀಯಳಲ್ಲಿ ಸ್ಪಂದಿಸಿತು.
  • 14:06 ತಕ್ಷಣವೇ ಕಾಲೇಬನು ಮತ್ತು ಯೆಹೋಶುವನು, ಇತರ ಗೂಢಚಾರಿಗಳು “ಕಾನಾನಿನಲ್ಲಿರುವ ಜನರು ತುಂಬಾ ಎತ್ತರವಾಗಿದ್ದಾರೆ ಮತ್ತು ಬಲವಾಗಿದ್ದಾರೆ, ಆದರೆ ನಾವು ತಪ್ಪದೇ ಅವರನ್ನು ಸೋಲಿಸಬಹುದು!” ಎಂದು ಹೇಳಿದರು.
  • 16:01 ___ ನಿಜ ___ ದೇವರಾಗಿರುವ ಯೆಹೋವನನ್ನು ಬಿಟ್ಟು, ಇಸ್ರಾಯೇಲ್ಯರು ಕಾನಾನ್ ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು.
  • 31:08 “___ ನಿಜವಾಗಿ ___ ನೀನು ದೇವರ ಮಗ” ಎಂದು ಹೇಳುತ್ತಾ ಅವರು ಯೇಸುವನ್ನು ಆರಾಧಿಸಿದರು.
  • 39:10 “ದೇವರ ಕುರಿತಾಗಿ ___ ಸತ್ಯವನ್ನು ___ ಹೇಳುವುದಕ್ಕೆ ನಾನು ಈ ಭೂಲೋಕಕ್ಕೆ ಬಂದಿದ್ದೇನೆ. ಸತ್ಯವನ್ನು ___ ಪ್ರೀತಿಸುವ ಪ್ರತಿಯೊಬ್ಬನು ನನ್ನ ಮಾತನ್ನು ಕೇಳುವನು.” “___ ಸತ್ಯ ಎಂದರೇನು?” ಎಂದು ಪಿಲಾತನು ಹೇಳಿದನು.

ಪದ ಡೇಟಾ:

  • Strong's: H199, H389, H403, H529, H530, H543, H544, H551, H571, H935, H3321, H3330, H6237, H6656, H6965, H7187, H7189, G225, G226, G227, G228, G230, G1103, G3303, G3483, G3689, G4103, G4137

ನಿತ್ಯತೆ, ಅಮರತ್ವ, ನಿತ್ಯ, ನಿರಂತರ

ಪದದ ಅರ್ಥವಿವರಣೆ:

“ಅಮರತ್ವ” ಮತ್ತು “ನೀತ್ಯ” ಎನ್ನುವ ಪದಗಳು ಒಂದೇ ರೀತಿಯ ಸಮಾನಾರ್ಥವನ್ನು ಹೊಂದಿರುತ್ತವೆ ಮತ್ತು ಎಂದೆಂದಿಗೂ ನಿರಂತರವಾಗಿರುವ ಅಥವಾ ಯಾವಾಗಲೂ ಅಸ್ತಿತ್ವದಲ್ಲಿರುವವುಗಳನ್ನು ಸೂಚಿಸುತ್ತದೆ.

  • “ನಿತ್ಯತೆ” ಎನ್ನುವ ಪದವು ಆರಂಭವು ಅಥವಾ ಅಂತ್ಯವು ಇಲ್ಲದ ಸ್ಥಿತಿಯನ್ನು ಸೂಚಿಸುತ್ತದೆ. ಎಂದಿಗೂ ಕೊನೆಯಾಗದ ಜೀವನವನ್ನೂ ಇದು ಸೂಚಿಸುತ್ತದೆ.
  • ಭೂಮಿಯ ಮೇಲಿರುವ ಈ ಪ್ರಸ್ತುತ ಜೀವನದನಂತರ, ಮನುಷ್ಯರು ನಿತ್ಯತೆಯಲ್ಲಿರುತ್ತಾರೆ, ಆದರೆ ಅದು ದೇವರೊಂದಿಗೆ ಪರಲೋಕದಲ್ಲಾಗಲಿ ಅಥವಾ ದೇವರಿಂದ ದೂರವಾಗಿ ನರಕದಲ್ಲಾಗಲಿ ಇರುತ್ತಾರೆ.
  • “ನಿತ್ಯಜೀವ” ಮತ್ತು “ಅಮರತ್ವದಲ್ಲಿರುವ ಜೀವನ” ಎನ್ನುವ ಪದಗಳು ಪರಲೋಕದಲ್ಲಿ ದೇವರೊಂದಿಗೆ ಎಂದೆಂದಿಗೂ ಜೀವಿಸುವುದಕ್ಕೆ ಸೂಚಿಸಲು ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲಾಗಿರುತ್ತದೆ.
  • “ನಿರಂತರ ಮತ್ತು ಎಂದಿಗೂ” ಎನ್ನುವ ಮಾತು ಎಂದಿಗೂ ಕೊನೆಯಾಗದ ಸಮಯದ ಆಲೋಚನೆಯನ್ನು ಮತ್ತು ನಿತ್ಯ ಜೀವ ಅಥವಾ ಅಮರತ್ವ ಎನ್ನುವ ಮಾತುಗಳನ್ನು ಹೊಂದಿರುತ್ತದೆ.

“ನಿರಂತರ” ಎನ್ನುವುದು ಎಂದಿಗೂ ಕೊನೆಯಾಗದ ಸಮಯವನ್ನು ಸೂಚಿಸುತ್ತದೆ. ಕೆಲವೊಂದುಬಾರಿ “ಬಹುಕಾಲ” ಎನ್ನುವ ಅರ್ಥವನ್ನು ಕೊಡುವುದಕ್ಕೆ ಇದನ್ನು ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸುತ್ತಾರೆ.

  • “ನಿರಂತರ ಮತ್ತು ಎಂದೆಂದಿಗೂ” ಎನ್ನುವ ಮಾತು ಯಾವುದಾದರೊಂದು ಯಾವಾಗಲೂ ನಡೆಯುತ್ತದೆ ಅಥವಾ ಯಾವಾಗಲೂ ಅಸ್ತಿತ್ವದಲ್ಲಿರುತ್ತದೆಯೆಂದು ತಿಳಿಸುತ್ತಿದೆ.
  • “ನಿರಂತರ ಮತ್ತು ಎಂದೆಂದಿಗೂ” ಎನ್ನುವ ಮಾತು ಅಮರತ್ವ ಎಂದರೇನು ಅಥವಾ ನಿತ್ಯಜೀವ ಎಂದರೇನು ಎನ್ನುವ ವಿಷಯವನ್ನು ವ್ಯಕ್ತಗೊಳಿಸುವ ವಿಧಾನವಾಗಿರುತ್ತದೆ. ಈ ಪದದಲ್ಲಿಯೂ ಕೊನೆಯಿಲ್ಲದ ಸಮಯ ಎನ್ನುವ ಆಲೋಚನೆಯನ್ನು ಹೊಂದಿರುತ್ತದೆ
  • ದಾವೀದನ ಸಿಂಹಾಸನವು “ನಿರಂತರವಾಗಿ” ಇರುವುದೆಂದು ದೇವರು ಹೇಳಿದರು. ದಾವೀದನ ಸಂತಾನವಾಗಿರುವ ಯೇಸುವು ಅರಸನಾಗಿ ನಿರಂತರವಾಗಿ ಆಳುತ್ತಾನೆನ್ನುವ ಸತ್ಯವನ್ನು ಇದು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ನಿತ್ಯ” ಅಥವಾ “ಅಮರತ್ವ” ಎನ್ನುವ ಪದಗಳನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕೊನೆಯಿಲ್ಲದ” ಅಥವಾ “ಎಂದಿಗೂ ನಿಂತುಹೋಗದ” ಅಥವಾ “ಯಾವಾಗಲೂ ಮುಂದುವರೆಯುವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ನಿತ್ಯ ಜೀವ” ಮತ್ತು “ಅಮರತ್ವ ಜೀವನ” ಎನ್ನುವ ಪದಗಳನ್ನು “ಎಂದಿಗೂ ಕೊನೆಯಾಗದ ಜೀವನ” ಅಥವಾ “ಎಂದಿಗೂ ನಿಂತುಹೋಗದೇ ಮುಂದುವರೆಯುವ ಜೀವನ” ಅಥವಾ “ಎಂದೆಂದಿಗೂ ಜೀವಿಸುವುದಕ್ಕೆ ನಮ್ಮ ದೇಹಗಳು ಎಬ್ಬಿಸಲ್ಪಡುವವು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ನಿತ್ಯತೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಸಮಯವು ಮುಗಿದರೂ ಅಸ್ತಿತ್ವದಲ್ಲಿರುವುದು” ಅಥವಾ “ಕೊನೆಯಿಲ್ಲದ ಜೀವನ” ಅಥವಾ “ಪರಲೋಕದಲ್ಲಿರುವ ಜೀವನ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸ್ಥಳೀಯ ಅಥವಾ ಜಾತೀಯ ಭಾಷೆಗಳಲ್ಲಿರುವ ಬೈಬಲ್ ಅನುವಾದದಲ್ಲಿ ಈ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆನ್ನುವದನ್ನೂ ನೋಡಿಕೊಳ್ಳಿರಿ. (ನೋಡಿರಿ: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)
  • “ನಿರಂತರ” ಎನ್ನುವ ಪದವನ್ನು “ಯಾವಾಗಲೂ” ಅಥವಾ “ಕೊನೆಯಿಲ್ಲದ” ಎಂದೂ ಅನುವಾದ ಮಾಡಬಹುದು.
  • “ನಿರಂತರವಾಗಿ ಇರುವ” ಎನ್ನುವ ಮಾತನ್ನು “ಯಾವಾಗಲೂ ಅಸ್ತಿತ್ವದಲ್ಲಿರುವ” ಅಥವಾ “ಎಂದಿಗೂ ನಿಂತುಹೋಗದ” ಅಥವಾ “ಯಾವಾಗಲೂ ಮುಂದುವರೆಯುವ” ಎಂದೂ ಅನುವಾದ ಮಾಡಬಹುದು.
  • “ನಿರಂತರ ಮತ್ತು ಎಂದೆಂದಿಗೂ” ಎಂದು ಎದ್ದುಕಾಣುವ ಮಾತನ್ನು “ಯಾವಾಗಲೂ ಮತ್ತು ಯಾವಾಗಲೂ” ಅಥವಾ “ಎಂದಿಗೂ ಕೊನೆಯಾಗದ” ಅಥವಾ “ಅದು ಎಂದೆಂದಿಗೂ ಕೊನೆಯಾಗದ” ಎಂದೂ ಅನುವಾದ ಮಾಡಬಹುದು.
  • ದಾವೀದನ ಸಿಂಹಾಸನವು ನಿರಂತರವಾಗಿ ಇರುವುದು ಎನ್ನುವದನ್ನು “ದಾವೀದನ ಸಂತಾನವು ನಿರಂತರವಾಗಿ ಆಳುತ್ತಾ ಇರುವರು” ಅಥವಾ “ದಾವೀದನ ಸಂತಾನವು ಯಾವಾಗಲೂ ಆಳುತ್ತಾ ಇರುವರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದಾವೀದ, ಪಾಲಿಸು, ಜೀವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 27:01 ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ನಿಪುಣನಾಗಿರುವ ಒಬ್ಬ ಯೇಸುವನ್ನು ಪರೀಕ್ಷೆ ಮಾಡಲು ಯೇಸುವಿನ ಬಳಿಗೆ ಬಂದು, “ಬೋಧಕನೆ, ನಾನು __ ನಿತ್ಯಜೀವವನ್ನು __ ಹೊಂದಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
  • 28:01 ಒಂದು ದಿನ ಶ್ರೀಮಂತನಾದ ಒಬ್ಬ ಯೌವನಸ್ಥನು ಯೇಸು ಬಳಿಗೆ ಬಂದು, “ಒಳ್ಳೇಯ ಬೋಧಕನೆ, ನಾನು __ ನಿತ್ಯಜೀವವನ್ನು __ ಹೊಂದಿಕೊಳ್ಳಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು. “ಯಾವುದು ಒಳ್ಳೇಯದು ಎನ್ನುವುದರ ಕುರಿತಾಗಿ ನನ್ನನ್ನು ಯಾಕೆ ಕೇಳುತ್ತೀ? ಎಂದು ಯೇಸು ಅವನಿಗೆ ಉತ್ತರ ಕೊಟ್ಟನು. ಒಳ್ಳೆಯವನು ಒಬ್ಬನೇ ಇದ್ದಾನೆ, ಅವರೇ ದೇವರು ಎಂದು ಹೇಳಿದನು. ಆದರೆ ನಿನಗೆ __ ನಿತ್ಯಜೀವ __ ಬೇಕೆಂದಿದ್ದರೆ, ದೇವರ ಆಜ್ಞೆಗಳನ್ನು ಕೈಗೊಳ್ಳು ಎಂದು ಹೇಳಿದನು.
  • 28:10 “ಯಾರ್ಯಾರು ನನಗೋಸ್ಕರ ಮನೆಗಳನ್ನು, ಅಣ್ಣತಮ್ಮಂದಿಯರನ್ನು, ಅಕ್ಕತಂಗಿಯರನ್ನು, ತಂದೆಯನ್ನು, ತಾಯಿಯನ್ನು, ಮಕ್ಕಳನ್ನು ಅಥವಾ ಅಸ್ತಿಪಾಸ್ತಿಗಳನ್ನು ಕಳೆದುಕೊಳ್ಳುತ್ತಾರೋ, ಅವರು 100 ಪಟ್ಟು ಹೆಚ್ಚಾಗಿ ತಿರುಗಿ ಹೊಂದಿಕೊಳ್ಳುವರು ಮತ್ತು __ ನಿತ್ಯಜೀವವನ್ನು __ ಪಡೆದುಕೊಳ್ಳುವರು” ಎಂದು ಯೇಸು ಉತ್ತರಕೊಟ್ಟರು.

ಪದ ಡೇಟಾ:

  • Strong's: H3117, H4481, H5331, H5703, H5705, H5769, H5865, H5957, H6924, G126, G165, G166, G1336

ನಿರೀಕ್ಷೆ, ನಿರೀಕ್ಷಿಸಲಾಗಿದೆ, ಭರವಸೆ

ಪದದ ಅರ್ಥವಿವರಣೆ:

ನಿರೀಕ್ಷೆ ಎಂದರೆ ಬಯಸಿದ್ದನ್ನು ನಡೆಯಬೇಕೆಂದು ಬಲವಾಗಿ ಆಸೆ ಪಡುವುದಾಗಿರುತ್ತದೆ. ನಿರೀಕ್ಷೆಯು ಭವಿಷ್ಯತ್ತಿನಲ್ಲಿ ನಡೆಯುವ ಒಂದು ಕಾರ್ಯಕ್ಕೆ ಸಂಬಂಧಪಟ್ಟು ನಿಶ್ಚಿತವನ್ನು ಅಥವಾ ಅನಿಶ್ಚಿತತೆಯನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ನಿರೀಕ್ಷೆ” ಎನ್ನುವುಡು ಕೂಡಾ “ಭರವಸೆ” ಎನ್ನುವ ಅರ್ಥವನ್ನು ಹೊಂದಿರುತ್ತದೆ, ಉದಾಹರಣೆಗೆ, “ಕರ್ತನಲ್ಲಿ ನನ್ನ ನಿರೀಕ್ಷೆ”. ದೇವರು ತನ್ನ ಜನರಿಗೆ ವಾಗ್ಧಾನ ಮಾಡಿರುವದನ್ನು ತಪ್ಪದೇ ಹೊಂದಿಕೊಳ್ಳುತ್ತೇವೆನ್ನುವುದನ್ನು ಸೂಚಿಸುತ್ತದೆ.
  • ಕೆಲವೊಂದುಬಾರಿ ಯುಎಲ್.ಬಿ ಅನುವಾದಗಳು ಮೂಲ ಭಾಷೆಯಲ್ಲಿರುವ ಪದವನ್ನು “ನಿಶ್ಚಯತೆ” ಎಂದೂ ಅನುವಾದ ಮಾಡಿದ್ದಾರೆ. ಯೇಸುವನ್ನು ರಕ್ಷಕನನ್ನಾಗಿ ಸ್ವೀಕಾರ ಮಾಡಿ ಯೇಸುವಿನಲ್ಲಿ ನಂಬಿದ ಪ್ರತಿಯೊಬ್ಬರೂ ದೇವರು ವಾಗ್ಧಾನ ಮಾಡಿದ್ದನ್ನು ಹೊಂದಿಕೊಳ್ಳುತ್ತೇವೆನ್ನು ಭರವಸೆ (ಅಥವಾ ನಿಶ್ಚಯತೆ, ಅಥವಾ ನಿರೀಕ್ಷೆ) ಹೊಂದಿರುತ್ತಾರೆ ಎನ್ನುವ ಸಂದರ್ಭಗಳಲ್ಲಿ ಹೊಸ ಒಡಂಬಡಿಕೆಯಲ್ಲಿ ಇದು ಬಹುಶಃ ಅನುವಾದ ಮಾಡಿರಬಹುದು.
  • “ನಿರೀಕ್ಷೆಯಿಲ್ಲದಿರುವುದು” ಎನ್ನುವುದಕ್ಕೆ ಒಳ್ಳೇಯದು ನಡೆಯುತ್ತದೆಯೆಂದು ಎದುರುನೋಡದೇ ಇರುವುದು ಎಂದರ್ಥ. ಇದಕ್ಕೆ ನಡೆಯಬೇಕಾದದ್ದು ನಡೆಯುವುದಿಲ್ಲ ಎಂದರ್ಥ.

ಅನುವಾದ ಸಲಹೆಗಳು:

  • ಕೆಲವೊಂದು ಸಂದರ್ಭಗಳಲ್ಲಿ “ನಿರೀಕ್ಷೆ” ಎನ್ನುವ ಪದವನ್ನು “ಬಯಸು” ಅಥವಾ “ಆಸೆ” ಅಥವಾ “ಎದುರುನೋಡು” ಎಂದೂ ಅನುವಾದ ಮಾಡಬಹುದು.
  • “ಆ ವಿಷಯದಲ್ಲಿ ನಿರೀಕ್ಷೆಯಿಲ್ಲ” ಎನ್ನುವ ಮಾತನ್ನು “ಅದರಲ್ಲಿ ಭರವಸೆ ಯಾವುದೂ ಇಲ್ಲ” ಅಥವಾ “ಒಳ್ಳೇಯದು ಯಾವುದೂ ನಡೆಯುತ್ತದೆಯೆಂದು ಎದುರುನೋಡುವಂಗಿಲ್ಲ” ಎಂದೂ ಅನುವಾದ ಮಾಡಬಹುದು.
  • “ಯಾವುದೇ ನಿರೀಕ್ಷೆ ಇಲ್ಲ” ಎನ್ನುವ ಮಾತನ್ನು “ಒಳ್ಳೇಯದಾಗುವುದನ್ನು ಎದುರುನೋಡುವಂಗಿಲ್ಲ” ಅಥವಾ “ಯಾವುದೇ ಭದ್ರತೆಯಿಲ್ಲ” ಅಥವಾ “ಯಾವ ಒಳ್ಳೇಯ ಕಾರ್ಯವು ನಡೆಯುವುದಿಲ್ಲ ಎನ್ನುವುದು ಖಂಡಿತ” ಎಂದೂ ಅನುವಾದ ಮಾಡಬಹುದು.
  • “ಅದರ ಮೇಲೆ ನಿನ್ನ ನಿರೀಕ್ಷೆಯನ್ನಿಡು” ಎನ್ನುವ ಮಾತನ್ನು “ಅದರಲ್ಲಿ ನಿನ್ನ ನಿಶ್ಚಯತೆಯನ್ನಿಡು” ಅಥವಾ “ಅದರಲ್ಲಿ ಭರವಸೆಯನ್ನಿಡು” ಎಂದೂ ಅನುವಾದ ಮಾಡಬಹುದು.
  • “ನಿನ್ನ ವಾಕ್ಯದಲ್ಲಿ ನಾನು ನಿರೀಕ್ಷೆಯನ್ನು ಪಡೆದೆ” ಎನ್ನುವ ಮಾತನ್ನು “ನಿನ್ನ ವಾಕ್ಯವು ಸತ್ಯವೆಂದು ನಾನು ನಿಶ್ಚಯತೆ ಹೊಂದಿದ್ದೇನೆ” ಅಥವಾ “ನಿನ್ನಲ್ಲಿ ಭರವಸೆವಿಡುವುದಕ್ಕೆ ನಿನ್ನ ಮಾತುಗಳು ನನಗೆ ಸಹಾಯ ಮಾಡುತ್ತಿವೆ” ಅಥವಾ “ನಿನ್ನ ವಾಕ್ಯಕ್ಕೆ ನಾನು ವಿಧೇಯನಾಗುವ, ನಾನು ಖಂಡಿತವಾಗಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದೇನೆ” ಎಂದೂ ಅನುವಾದ ಮಾಡಬಹುದು.
  • ದೇವರಲ್ಲಿ “ನಿರೀಕ್ಷೆ” ಎನ್ನುವ ಮಾತುಗಳನ್ನು “ದೇವರಲ್ಲಿ ಭರವಸೆ” ಅಥವಾ “ದೇವರು ವಾಗ್ಧಾನ ಮಾಡಿದ್ದನ್ನು ಖಂಡಿತವಾಗಿ ಮಾದುತ್ತಾರೆನ್ನುವ ನಿಶ್ಚಯತೆಯನ್ನು ತಿಳಿದುಕೊಂಡಿರುವುದು” ಅಥವಾ “ದೇವರು ನಂಬಿಗಸ್ತನೆಂದು ನಿಶ್ಚಯತೆಯಿಂದ ಇರುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಶೀರ್ವದಿಸು, ನಿಶ್ಚಯತೆ, ಒಳ್ಳೇಯದು, ವಿಧೇಯನಾಗು, ಭರವಸೆವಿಡು, ದೇವರ ವಾಕ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H982, H983, H986, H2620, H2976, H3175, H3176, H3689, H4009, H4268, H4723, H7663, H7664, H8431, H8615, G91, G560, G1679, G1680, G2070

ನಿರ್ಣಯಿಸು, ನಿರ್ಣಯಿಸಲ್ಪಟ್ಟಿದೆ

ಪದದ ಅರ್ಥವಿವರಣೆ:

“ನಿರ್ಣಯಿಸು” ಮತ್ತು “ನಿರ್ಣಯಿಸಲ್ಪಟ್ಟಿದೆ” ಎನ್ನುವ ಪದಗಳು ಯಾವುದಾದರೊಂದು ನಡೆಯುವುದಕ್ಕೆ ಮುಂಚಿತವಾಗಿ ಪ್ರಣಾಳಿಕೆ ಮಾಡುವುದನ್ನು ಅಥವಾ ನಿರ್ಣಯಿಸಲ್ಪಟ್ಟಿರುವುದನ್ನು ಸೂಚಿಸುತ್ತದೆ.

  • ಈ ಪದವು ವಿಶೇಷವಾಗಿ ನಿತ್ಯ ಜೀವವನ್ನು ಹೊಂದುವುದಕ್ಕೆ ದೇವರು ಜನರನ್ನು ಮುಂಚಿತವಾಗಿಯೇ ನಿರ್ಣಯಿಸಿದ್ದನ್ನು ಸೂಚಿಸುತ್ತದೆ.
  • ಕೆಲವೊಂದುಬಾರಿ “ಮೊದಲೇ ನೇಮಿಸಲ್ಪಟ್ಟಿರುವುದು” ಎನ್ನುವ ಪದವು ಉಪಯೋಗಿಸಲ್ಪಟ್ಟಿರುತ್ತದೆ, ಇದಕ್ಕೆ ಮುಂಚಿತವಾಗಿಯೇ ನಿರ್ಣಯಿಸುವುದು ಎಂದರ್ಥ.

ಅನುವಾದ ಸಲಹೆಗಳು:

  • “ನಿರ್ಣಯಿಸು” ಎನ್ನುವ ಪದವನ್ನು “ಮುಂಚಿತವಾಗಿಯೇ ನಿರ್ಣಯಿಸು” ಅಥವಾ “ಸಮಯ ಬರುವುದಕ್ಕೆ ಮುಂಚಿತವಾಗಿ ನಿರ್ಣಯಿಸು” ಎಂದೂ ಅನುವಾದ ಮಾಡಬಹುದು.
  • “ನಿರ್ಣಯಿಸಲ್ಪಟ್ಟಿರುತ್ತದೆ” ಎನ್ನುವ ಪದವನ್ನು “ಅನೇಕ ವರ್ಷಗಳ ಹಿಂದೆ ನಿರ್ಣಯಿಸಲ್ಪಡುವುದು” ಅಥವಾ “ಮುಂದೆ ನಡೆಯುವ ಕಾರ್ಯವನ್ನು ಪ್ರಣಾಳಿಕೆ ಮಾಡುವುದು’ ಅಥವಾ “ಮೊದಲೇ ನಿರ್ಧರಿಸುವುದು” ಎಂದೂ ಅನುವಾದ ಮಾಡಬಹುದು.
  • “ನಮ್ಮನ್ನು ಮುಂದೆ ನಿರ್ಣಯಿಸಿದ್ದಾರೆ” ಎನ್ನುವ ಮಾತನ್ನು “ನಮ್ಮನ್ನು ಅನೇಕ ವರ್ಷಗಳ ಹಿಂದೆಯೇ ನಿರ್ಣಯಿಸಲ್ಪಟ್ಟಿರುತ್ತೇವೆ” ಅಥವಾ “ಮುಂದಿನ ಕಾಲದಲ್ಲಿ ನಾವು ಹೀಗೆ ಇರುತ್ತೇವೆಂದು ಈಗಾಗಲೇ ಮುಂಚಿತವಾಗಿಯೇ ನಿರ್ಣಯಿಸಲ್ಪಟ್ಟಿರುತ್ತೇವೆ” ಎಂದೂ ಅನುವಾದ ಮಾಡಬಹುದು.
  • ಈ ಪದದ ಅರ್ಥಕ್ಕೂ ಮತ್ತು “ಮುಂತಿಳಿಯುವುದು” ಎನ್ನುವ ಪದಕ್ಕೂ ವ್ಯತ್ಯಾಸವಿರುತ್ತದೆಯೆಂದು ತಿಳಿದುಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಮುಂತಿಳಿಯುವುದು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G4309

ನಿರ್ದೋಷ

ಪದದ ಅರ್ಥವಿವರಣೆ:

“ನಿರ್ದೋಷ” ಎನ್ನುವ ಪದಕ್ಕೆ ಇತರ ತಪ್ಪುಗಳನ್ನು ಅಥವಾ ಅಕ್ರಮ ಅಪರಾಧವನ್ನು ಮಾಡದಿರುವುದು ಎಂದರ್ಥ. ಇದು ಸಾಧಾರಣವಾಗಿ ಕೆಟ್ಟ ಕಾರ್ಯಗಳಲ್ಲಿರದ ಜನರನ್ನು ಸೂಚಿಸುತ್ತದೆ.

  • ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆಂದು ಆರೋಪಿಸಲ್ಪಟ್ಟಿದ್ದರೆ, ಆ ವ್ಯಕ್ತಿ ಆ ತಪ್ಪು ಮಾಡಲಿಲ್ಲವೆಂದು ನಿರ್ಧಾರವಾದಾಗ ಆತನನ್ನು ನಿರ್ದೋಷಿ ಎಂದು ಕರೆಯುತ್ತಾರೆ.
  • “ನಿರ್ದೋಷ” ಎನ್ನುವ ಪದವು ಯಾವ ದೋಷವನ್ನು ಮಾಡದ ಜನರು ಹೊಂದಿಕೊಳ್ಳುವ ಶಿಕ್ಷೆಗೆ ಗುರಿಯಾದವರನ್ನು ಸೂಚಿಸುತ್ತದೆ. ಉದಾಹರಣೆಗೆ, ಸೈನ್ಯವು “ನಿರ್ದೋಷದ ಜನರ” ಮೇಲೆ ಧಾಳಿ ಮಾಡುವುದು.

ಅನುವಾದ ಸಲಹೆಗಳು:

  • ಅನೇಕ ಸಂದರ್ಭಗಳಲ್ಲಿ, “ನಿರ್ದೋಷ” ಎನ್ನುವ ಪದವನ್ನು “ಅಪರಾಧವಲ್ಲದ್ದು” ಅಥವಾ “ಬಾಧ್ಯತೆಯಲ್ಲದ್ದು” ಅಥವಾ ಏನಾದರೊಂದರ ವಿಷಯದಲ್ಲಿ “ಆರೋಪ ಮಾಡಲಾರದ್ದು” ಎಂದೂ ಅನುವಾದ ಮಾಡಬಹದು.
  • ಸಾಧಾರಣವಾಗಿ ನಿರ್ದೋಷ ಜನರನ್ನು ಸೂಚಿಸಿದಾಗ, ಈ ಪದವನ್ನು “ಯಾವ ತಪ್ಪನ್ನೂ ಮಾಡದವರು” ಅಥವಾ “ಕೆಟ್ಟ ಕಾರ್ಯಗಳಲ್ಲಿ ಕಾರ್ಯನಿರತರಾಗಿರುವವರು” ಎಂದೂ ಅನುವಾದ ಮಾಡಬಹುದು.
  • ಆಗಾಗ್ಗ ಕಾಣಿಸಿಕೊಳ್ಳುವ “ನಿರ್ದೋಷ ರಕ್ತ” ಎನ್ನುವ ಮಾತನ್ನು “ಕೊಲ್ಲಲ್ಪಡುವುದಕ್ಕೆ ಯಾವ ತಪ್ಪನ್ನು ಮಾಡದ ಜನರು” ಎಂದೂ ಅನುವಾದ ಮಾಡಬಹುದು.
  • “ಸುರಿಸಲ್ಪಟ್ಟ ನಿರ್ದೋಷ ರಕ್ತ” ಎನ್ನುವ ಈ ಮಾತಿಗೆ “ನಿರ್ದೋಷ ಜನರನ್ನು ಸಾಯಿಸುವುದು” ಅಥವಾ “ಸಾಯಿಸುವಷ್ಟು ತಪ್ಪು ಮಾಡದೇ ಇರುವ ಜನರನ್ನು ಕೊಲ್ಲುವುದು” ಎಂದೂ ಅನುವಾದ ಮಾಡಬಹುದು.
  • ಒಬ್ಬರು ಸಾಯಿಸಲ್ಪಟ್ಟಿದ್ದಾರೆನ್ನುವ ಸಂದರ್ಭದಲ್ಲಿ, “ನಿರ್ದೋಷಿಯ ರಕ್ತ” ಎನ್ನುವ ಮಾತು “ಮರಣ ಹೊಂದುವಷ್ಟು ಅಪರಾಧವಲ್ಲ” ಎಂದೂ ಅನುವಾದ ಮಾಡಬಹುದು.
  • ಯೇಸುವಿನ ಕುರಿತಾದ ಸುವಾರ್ತೆಯನ್ನು ಕೇಳದ ಮತ್ತು ಅದನ್ನು ಸ್ವೀಕರಿಸದ ಜನರ ಕುರಿತಾಗಿ ಮಾತನಾಡುವಾಗ, “ರಕ್ತದ ನಿರ್ದೋಷವು” ಎನ್ನುವ ಮಾತನ್ನು “ಅವರು ಆತ್ಮೀಯಕರಾಗಿ ಸತ್ತಿದ್ದರೂ ಅಥವಾ ಬದುಕಿದ್ದರೂ, ಅವರ ವಿಷಯದಲ್ಲಿ ಯಾವ ಜವಾಬ್ದಾರಿ ಇರುವುದಿಲ್ಲ” ಅಥವಾ “ಈ ಸಂದೇಶವನ್ನು ಅವರು ಸ್ವೀಕರಿಸಿದರೂ, ಸ್ವೀಕರಿಸದೇ ಇದ್ದರೂ ಜವಾಬ್ದಾರಿ ಇರುವುದಿಲ್ಲ” ಎಂದೂ ಅನುವಾದ ಮಾಡಬಹುದು.
  • “ನಾನು ನಿರ್ದೋಷ ರಕ್ತಕ್ಕೆ ದ್ರೋಹ ಮಾಡಿದ್ದೇನೆ” ಎಂದು ಯೂದನು ಹೇಳಿದಾಗ, “ಯಾವ ತಪ್ಪನ್ನು ಮಾಡದಿರುವ ಮನುಷ್ಯನಿಗೆ ನಾನು ದ್ರೋಹ ಮಾಡಿದ್ದೇನೆ” ಅಥವಾ “ಪಾಪರಹಿತ ಒಬ್ಬ ಮನುಷ್ಯನ ಮರಣಕ್ಕೆ ನಾನು ಕಾರಣನಾಗಿದ್ದೇನೆ” ಎಂದು ಆವನು ಹೇಳುತ್ತಿದ್ದಾನೆ.
  • “ಈ ನಿರ್ದೋಷನಾಗಿರುವ ಮನುಷ್ಯನ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿರುತ್ತೇನೆ” ಎಂದು ಯೇಸುವಿನ ಕುರಿತಾಗಿ ಪಿಲಾತನು ಹೇಳಿದ ಮಾತನ್ನು “ಯಾವ ತಪ್ಪನ್ನು ಮಾಡದ ಈ ಮನುಷ್ಯನನ್ನು ಸಾಯಿಸುವುದರಲ್ಲಿ ನನಗೆ ಯಾವ ಸಂಬಂಧವಿಲ್ಲ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಪರಾಧ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • ___08:06__ ಎರಡು ವರ್ಷಗಳಾದ ಮೇಲೆ, ಯೋಸೇಫನು ___ ನಿರ್ದೋಷಿಯಾಗಿದ್ದರೂ ___ , ಯೋಸೇಫನು ಸೆರೆಯಲ್ಲಿಯೇ ಇದ್ದನು.
  • 40:04 ಅವರಲ್ಲೊಬ್ಬರು ಯೇಸುವನ್ನು ಹಿಯಾಳಿಸಿದನು, ಆದರೆ ಇನ್ನೊಬ್ಬನು, “ನಿನಗೆ ದೇವರ ಭಯವಿಲ್ಲವೋ?” ಎಂದು ಕೇಳಿದನು. ನಾವಾದರೋ ಅಪರಾಧಿಗಳು, ಆದರೆ ಈ ಮನುಷ್ಯನು __ ನಿರ್ದೋಷಿಯಾಗಿದ್ದಾನೆ ___.”
  • 40:08 ಯೇಸುವಿಗೆ ಕಾವಲಿಯಾಗಿದ್ದ ಸೈನಿಕನು ಸಂಭವಿಸುತ್ತಿರುವ ಎಲ್ಲವುಗಳನ್ನು ನೋಡಿ, “ಈತನು ನಿಜವಾಗಿ ___ ನಿರ್ದೋಷಿಯಾಗಿದ್ದಾನೆ ___ ಈತನು ದೇವರ ಮಗನಾಗಿದ್ದಾನೆ” ಎಂದು ಹೇಳಿದನು.

ಪದ ಡೇಟಾ:

  • Strong's: H2136, H2600, H2643, H5352, H5355, H5356, G121

ನಿರ್ದೋಷಿ

ಅರ್ಥವಿವರಣೆ

“ನಿರ್ದೋಷಿ” ಎನ್ನುವ ಪದಕ್ಕೆ “ದೋಷ ಇಲ್ಲದವನು” ಎಂದರ್ಥ. ದೇವರನ್ನು ಪೂರ್ಣಮನಸ್ಸಿನಿಂದ ವಿಧೇಯರಾಗಿರುವವರನ್ನು ಸೂಚಿಸಲು ಇದನ್ನು ಉಪಯೋಗಿಸುತ್ತಾರೆ, ಅಂದರೆ ಆದರೆ ಆ ವ್ಯಕ್ತಿಯಲ್ಲಿ ಪಾಪವಿಲ್ಲವೆಂದು ಅರ್ಥವಲ್ಲ.

  • ಅಬ್ರಹಾಮನು ಮತ್ತು ನೋಹನು ದೇವರ ಸನ್ನಿಧಿಯಲ್ಲಿ ನಿರ್ದೋಷಿಗಳೆಂದು ಪರಿಗಣಿಸಲ್ಪಟ್ಟರು.
  • “ನಿರ್ದೋಷಿ” ಎಂದು ಖ್ಯಾತಿ ಹೊಂದಿರುವವನು ದೇವರನ್ನು ಗೌರವಿಸುವ ರೀತಿಯಲ್ಲಿ ನಡೆದುಕೊಳ್ಳುವನು.
  • ಒಂದು ವಚನದ ಪ್ರಕಾರ ನಿರ್ದೋಷಿಯಾದ ವ್ಯಕ್ತಿ ಎಂದರೆ “ದೇವರಲ್ಲಿ ಭಯಭಕ್ತಿಯುಳ್ಳವನಾಗಿರುವವನು ಮತ್ತು ಕೆಟ್ಟದ್ದನ್ನು ನಿರಾಕರಿಸುವವನು”.

ಅನುವಾದ ಸಲಹೆಗಳು:

  • “ಅವನ ಗುಣದಲ್ಲಿ ಯಾವ ತಪ್ಪಿಲ್ಲದವನು” ಅಥವಾ “ದೇವರಿಗೆ ಸಂಪೂರ್ಣವಾಗಿ ವಿಧೇಯನಾಗುವವನು” ಅಥವಾ “ಪಾಪವನ್ನು ತಡೆಯುವವನು” ಅಥವಾ “ಕೆಟ್ಟತನವನ್ನು ದೂರವಾಗಿ ಇಡುವವನು” ಎಂದು ಇದನ್ನು ಅನುವಾದ ಮಾಡಬಹುದು.

ಸತ್ಯವೇದದ ಉಲ್ಲೇಖಗಳು :

ಪದದ ದತ್ತಾಂಶ:

  • Strong's: H5352, H5355, H8535, G02730, G02740, G02980, G03380, G04100, G04230

ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ

ಪದದ ಅರ್ಥವಿವರಣೆ:

“ನೀತಿಯುತ” ಎನ್ನುವ ಪದವು ದೇವರು ಖಂಡಿತವಾದ ಒಳ್ಳೆಯತನ, ನ್ಯಾಯ, ನಂಬಿಕೆತನ ಮತ್ತು ಪ್ರೀತಿ ಎನ್ನುವವುಗಳನ್ನು ಸೂಚಿಸುತ್ತದೆ. ಈ ಗುಣಲಕ್ಷಣಗಳೆಲ್ಲವು ಸೇರಿ ದೇವರನ್ನು “ನೀತಿವಂತನನ್ನಾಗಿ” ಮಾಡುತ್ತವೆ. ದೇವರು ನೀತಿವಂತನಾಗಿರುವದರಿಂದ, ಆತನು ತಪ್ಪದೇ ಪಾಪವನ್ನು ಖಂಡಿಸುತ್ತಾನೆ.

  • ಈ ಪದಗಳನ್ನು ಅನೇಕಬಾರಿ ದೇವರಿಗೆ ವಿಧೇಯನಾಗುವ ವ್ಯಕ್ತಿಯನ್ನು ಮತ್ತು ನೈತಿಕವಾಗಿ ಒಳ್ಳೆಯತನದಿಂದ ಇರುವ ವ್ಯಕ್ತಿಯನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಡುತ್ತವೆ. ಏನೇಯಾದರೂ, ಜನರೆಲ್ಲರೂ ಪಾಪ ಮಾಡಿದ್ದರಿಂದ, ದೇವರನ್ನು ಬಿಟ್ಟು ಯಾವ ಮನುಷ್ಯನೂ ನೀತಿವಂತನಲ್ಲ.
  • ಸತ್ಯವೇದದಲ್ಲಿ “ನೀತಿವಂತರೆಂದು” ಕರೆಯಲ್ಪಟ್ಟಿರುವ ಜನರ ಉದಾಹರಣೆಗಳಲ್ಲಿ ನೋಹ, ಯೋಬ, ಅಬ್ರಾಹಾಮ, ಜೆಕರ್ಯ, ಮತ್ತು ಎಲೀಸಬೇತಳು ಇರುತ್ತಾರೆ.
  • ಜನರು ತಮ್ಮನ್ನು ರಕ್ಷಿಸಬೇಕೆಂದು ಯೇಸುವಿನಲ್ಲಿ ಭರವಸೆ ಇಟ್ಟಾಗ, ದೇವರು ಅವರ ಪಾಪಗಳಿಂದ ಅವರನ್ನು ತೊಳೆಯುವನು ಮತ್ತು ಯೇಸುವಿನ ನೀತಿಯ ಕಾರಣದಿಂದ ಅವರನ್ನು ನೀತಿವಂತರೆಂದು ಪ್ರಕಟಿಸುವನು.

“ಅನೀತಿ” ಎನ್ನುವ ಪದಕ್ಕೆ ಪಾಪವನ್ನು ಮಾಡುವುದು ಮತ್ತು ನೈತಿಕವಾಗಿ ಭ್ರಷ್ಟತ್ವದಲ್ಲಿರುವುದು ಎಂದರ್ಥ. “ಅನೀತಿಯುತ ಎನ್ನುವ ಪದವು ಪಾಪ ಸ್ವಭಾವದಿಂದ ಇರುವ ಸ್ಥಿತಿಯನ್ನು ಅಥವಾ ಪಾಪವನ್ನು ಸೂಚಿಸುತ್ತದೆ.

  • ಈ ಪದಗಳೆಲ್ಲವೂ ವಿಶೇಷವಾಗಿ ದೇವರ ಬೋಧನೆಗಳಿಗೆ ಮತ್ತು ಆಜ್ಞೆಗಳಿಗೆ ಅವಿಧೇಯತೆಯನ್ನು ತೋರಿಸುವ ವಿಧಾನದಲ್ಲಿ ಜೀವನ ಮಾಡುವುದನ್ನು ಸೂಚಿಸುತ್ತವೆ.
  • ಅನೀತಿಯುತವಾದ ಜನರು ತಮ್ಮ ಆಲೋಚನೆಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಅನೈತಿಕ ವ್ಯಕ್ತಿಗಳಾಗಿರುತ್ತಾರೆ.
  • ಕೆಲವೊಂದುಬಾರಿ “ಅನೀತಿಯು” ವಿಶೇಷವಾಗಿ ಯೇಸುವಿನಲ್ಲಿ ನಂಬದ ಜನರನ್ನು ಸೂಚಿಸುತ್ತದೆ.

“ನೀತಿ” ಮತ್ತು “ನೀತಿಯುತ” ಎನ್ನುವ ಪದಗಳು ದೇವರ ಆಜ್ಞೆಗಳನ್ನು ಅನುಸರಿಸುವ ವಿಧಾನದಲ್ಲಿ ನಡೆದುಕೊಳ್ಳುವುದನ್ನು ಸೂಚಿಸುತ್ತದೆ.

  • ಈ ಪದಗಳ ಅರ್ಥದಲ್ಲಿ ಲಂಬವಾಗಿ ನಿಂತಿಕೊಂಡಿರುವ ಆಲೋಚನೆಯು ಮತ್ತು ಮುಂದಕ್ಕೆ ನೇರವಾಗಿ ನೋಡುವ ಆಲೋಚನೆಯನ್ನು ಒಳಗೊಂಡಿರುತ್ತದೆ.
  • “ನೀತಿ”ಯಿಂದ ಇರುವ ವ್ಯಕ್ತಿ ಎಂದರೆ ದೇವರ ನಿಯಮಗಳಿಗೆ ವಿಧೇಯನಾಗಿರುವ ವ್ಯಕ್ತಿ ಮತ್ತು ದೇವರ ಚಿತ್ತಕ್ಕೆ ವಿರುದ್ಧವಾಗಿ ಕೆಲಸ ಕಾರ್ಯಗಳನ್ನು ಮಾಡದಿರುವ ವ್ಯಕ್ತಿ ಎಂದರ್ಥ.
  • “ಪೂರ್ಣತೆ” ಮತ್ತು “ನೀತಿ” ಎನ್ನುವ ಪದಗಳು ಒಂದೇ ಅರ್ಥಗಳನ್ನು ಹೊಂದಿರುತ್ತವೆ ಮತ್ತು ಕೆಲವೊಂದುಬಾರಿ ಸಮಾನಾಂತರ ನಿರ್ಣಯಗಳಲ್ಲಿ ಉಪಯೋಗಿಸಲ್ಪಡುತ್ತವೆ, ಉದಾಹರಣೆಗೆ, “ಪೂರ್ಣತೆ ಮತ್ತು ನೀತಿಯುತ”. (ನೋಡಿರಿ: ಸಮಾನಾಂತರ)

ಅನುವಾದ ಸಲಹೆಗಳು:

  • ಇದು ದೇವರನ್ನು ಸೂಚಿಸಿ ವಿವರಿಸುವಾಗ, “ನೀತಿ” ಎನ್ನುವ ಪದವನ್ನು “ಪರಿಪೂರ್ಣವಾಗಿ ಒಳ್ಳೇಯದು ಮತ್ತು ನ್ಯಾಯವಾದದ್ದು” ಅಥವಾ “ಯಾವಾಗಲೂ ನ್ಯಾಯವಾಗಿ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
  • ದೇವರ “ನೀತಿಯುತವು” ಎನ್ನುವ ಮಾತನ್ನು “ಪರಿಪೂರ್ಣವಾದ ನಂಬಿಗಸ್ಥಿಕೆಯನ್ನು ಮತ್ತು ಒಳ್ಳೇಯತನ” ಎಂದೂ ಅನುವಾದ ಮಾಡಬಹುದು.
  • ದೇವರಿಗೆ ವಿಧೇಯರಾಗಿರುವ ಜನರ ಕುರಿತಾಗಿ ಈ ಪದವು ವಿವರಿಸುವಾಗ, “ನೀತಿ” ಎನ್ನುವ ಪದವನ್ನು “ನೈತಿಕವಾಗಿ ಒಳ್ಳೇಯದು” ಅಥವಾ “ನ್ಯಾಯವಾದದ್ದು” ಅಥವಾ “ದೇವರು ಇಷ್ಟಪಡುವ ಜೀವನವನ್ನು ಜೀವಿಸುವುದು” ಎಂದೂ ಅನುವಾದ ಮಾಡಬಹುದು.
  • “ನೀತಿವಂತ” ಎನ್ನುವ ಪದವನ್ನು “ನೀತಿವಂತ ಜನರು” ಅಥವಾ “ದೇವರಿಗೆ ಭಯಪಡುವ ಜನರು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ನೀತಿಯುತವಾದ” ಎನ್ನುವ ಮಾತನ್ನು “ಒಳ್ಳೆಯತನ” ಅಥವಾ “ದೇವರ ಮುಂದೆ ಪರಿಪೂರ್ಣವಾಗಿರುವುದು” ಅಥವಾ “ದೇವರಿಗೆ ವಿಧೇಯತೆಯನ್ನು ತೋರಿಸುವುದರ ಮೂಲಕ ಸರಿಯಾದ ಮಾರ್ಗದಲ್ಲಿ ನಡೆದುಕೊಳ್ಳುವುದು” ಅಥವಾ “ಪರಿಪೂರ್ಣವಾದ ಒಳ್ಳೇಯದನ್ನೇ ಮಾಡುವುದು” ಎಂದು ಅರ್ಥಗಳಿರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • ಕೆಲವೊಂದುಬಾರಿ “ನೀತಿವಂತರು” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ ಮತ್ತು “ಜನರು ತಾವು ಒಳ್ಳೆಯವರೆಂದು ಆಲೋಚಿಸುವವರನ್ನು” ಅಥವಾ “ನೀತಿವಂತರಾಗಿ ಕಾಣುವ ಜನರನ್ನು” ಸೂಚಿಸುತ್ತದೆ.
  • “ಅನೀತಿ” ಎನ್ನುವ ಪದವನ್ನು ಸಾಧಾರಣವಾಗಿ “ನೀತಿಯಲ್ಲದ್ದು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದುಷ್ಟತ್ವ” ಅಥವಾ “ಅನೈತಿಕತೆ” ಅಥವಾ “ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರು” ಅಥವಾ “ಪಾಪ ಸ್ವಭಾವವುಳ್ಳವರು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
  • “ಅನೀತಿವಂತ” ಎನ್ನುವ ಮಾತನ್ನು “ಅನೀತಿವಂತ ಜನರು” ಎಂದೂ ಅನುವಾದ ಮಾಡಬಹುದು.
  • “ಅನೀತಿಯುತವಾದ” ಎನ್ನುವ ಪದವನ್ನು “ಪಾಪ” ಅಥವಾ “ದುಷ್ಟ ಆಲೋಚನೆಗಳು ಮತ್ತು ದುಷ್ಟ ಕ್ರಿಯೆಗಳು” ಅಥವಾ “ದುಷ್ಟತ್ವ” ಎಂದೂ ಅನುವಾದ ಮಾಡಬಹುದು.
  • ಸಾಧ್ಯವಾದರೆ, ಈ ಪದಗಳು “ನೀತಿ, ನೀತಿಯುತವಾದ” ಎನ್ನುವ ಪದಗಳೊಂದಿಗೆ ಇರುವ ಸಂಬಂಧವನ್ನು ತೋರಿಸುವ ವಿಧಾನದಲ್ಲಿ ಇದನ್ನು ಅನುವಾದ ಮಾಡುವುದು ಉತ್ತಮವಾಗಿರುತ್ತದೆ.
  • “ನೀತಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಉನ್ನತವಾಗಿ ನಡೆದುಕೊಳ್ಳುವುದು” ಅಥವಾ “ಸರಿಯಾಗಿ ನಡೆದುಕೊಳ್ಳುವ ವ್ಯಕ್ತಿ” ಅಥವಾ “ದೇವರ ಆಜ್ಞೆಗಳನ್ನು ಅನುಸರಿಸುವ ವ್ಯಕ್ತಿ” ಅಥವಾ “ದೇವರಿಗೆ ವಿಧೇಯನಾಗಿರುವ ವ್ಯಕ್ತಿ” ಅಥವಾ “ಸರಿಯಾದ ವಿಧಾನದಲ್ಲಿ ನಡೆದುಕೊಳ್ಳುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ನೀತಿಯುತವಾದ” ಎನ್ನುವ ಪದವನ್ನು “ನೈತಿಕವಾಗಿ ಪವಿತ್ರತೆಯನ್ನು ಹೊಂದಿರುವುದು” ಅಥವಾ “ಒಳ್ಳೇಯ ನೈತಿಕವಾದ ಸ್ಥಿತಿ” ಅಥವಾ “ಸರಿಯಾದದ್ದು” ಎಂದೂ ಅನುವಾದ ಮಾಡಬಹುದು.
  • “ನೀತಿಯುತ” ಎನ್ನುವ ಪದವನ್ನು “ನೀತಿವಂತರಾಗಿರುವ ಜನರು” ಅಥವಾ “ನೀತಿಯುಳ್ಳ ಜನರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ದುಷ್ಟ, ವಿಶ್ವಾಸಾರ್ಹ, ಒಳ್ಳೇಯ, ಪರಿಶುದ್ಧ, ಪೂರ್ಣತೆ, ನ್ಯಾಯ, ಧರ್ಮಶಾಸ್ತ್ರ, ಆಜ್ಞೆ, ವಿಧೇಯತೆ ತೋರಿಸು, ಪವಿತ್ರ, ನೀತಿ, ಪಾಪ, ನ್ಯಾಯವಲ್ಲದ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 03:02 ಆದರೆ ನೋಹನು ದೇವರ ದಯೆಯನ್ನು ಪಡೆದುಕೊಂಡನು. ಆತನು ___ ನೀತಿವಂತನಾಗಿದ್ದನು ___, ದುಷ್ಟ ಜನರ ಮಧ್ಯದಲ್ಲಿ ಜೀವಿಸುತ್ತಿದ್ದನು.
  • 04:08 ಅಬ್ರಾಹಾಮನು ___ ನೀತಿವಂತನೆಂದು ___ ದೇವರು ಹೇಳಿದರು, ಯಾಕಂದರೆ ಆತನು ದೇವರ ವಾಗ್ಧಾನದಲ್ಲಿ ನಂಬಿಕೆ ಇಟ್ಟಿದ್ದನು.
  • 17:02 ದಾವೀದನು ತಗ್ಗಿಸಿಕೊಂಡಿದ್ದನು ಮತ್ತು ದೇವರಿಗೆ ವಿಧೇಯನಾದ ಮತ್ತು ಭರವಸೆವಿಟ್ಟಿರುವ ___ ನೀತಿವಂತನಾಗಿದ್ದನು ___ .
  • 23:01 ಮರಿಯಳ ಜೊತೆಯಲ್ಲಿ ಪ್ರಧಾನ ಮಾಡಲ್ಪಟ್ಟಿರುವ ಯೋಸೇಫನು ___ ನೀತಿವಂತನಾಗಿದ್ದನು ___.
  • 50:10 ___ ನೀತಿವಂತರಾಗಿರುವವರು ___ ತಮ್ಮ ತಂದೆಯಂತೆಯೇ ದೇವರ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು.

ಪದ ಡೇಟಾ:

  • Strong's: H205, H1368, H2555, H3072, H3474, H3476, H3477, H3483, H4334, H4339, H4749, H5228, H5229, H5324, H5765, H5766, H5767, H5977, H6662, H6663, H6664, H6665, H6666, H6968, H8535, H8537, H8549, H8552, G93, G94, G458, G1341, G1342, G1343, G1344, G1345, G1346, G2118, G3716, G3717

ನೆರವೇರಿಸು, ನೆರವೇರಿಕೆಯಾಗಿದೆ

ಪದದ ಅರ್ಥವಿವರಣೆ:

“ನೆರವೇರಿಸು” ಎನ್ನುವ ಪದಕ್ಕೆ ಬಯಸಿದ ಏನನ್ನಾದರೂ ಸಾಧಿಸು ಅಥವಾ ಪೂರ್ಣಗೊಳಿಸು ಎಂದರ್ಥ.

  • ಪ್ರವಾದನೆಯು ನೆರವೇರಿಕೆಯಾದಾಗ, ಪ್ರವಾದನೆಯಲ್ಲಿ ಹೇಳಲ್ಪಟ್ಟಿರುವದನ್ನು ದೇವರು ನಡೆಸಿದ್ದಾರೆ ಎಂದರ್ಥ.
  • ಒಬ್ಬ ವ್ಯಕ್ತಿ ಒಂದು ವಾಗ್ಧಾನವನ್ನು ಅಥವಾ ಪ್ರತಿಜ್ಞೆಯನ್ನು ನೆರವೇರಿಸುವುದಾದರೆ, ಆತನು ಮಾಡುತ್ತೇನೆ ಎಂದು ಹೇಳಿದ ವಾಗ್ಧಾನವನ್ನು ನೆರವೇರಿಸಿದ್ದಾನೆ ಎಂದರ್ಥ.
  • ಜವಾಬ್ದಾರಿಯನ್ನು ಪೂರೈಸು ಎನ್ನುವುದಕ್ಕೆ ಕೊಡಲ್ಪಟ್ಟ ಅಥವಾ ಅಗತ್ಯವುಳ್ಳ ಕೆಲಸವನ್ನು ಮಾಡುವುದು ಎಂದರ್ಥ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ನೆರವೇರಿಸು” ಎನ್ನುವ ಪದವನ್ನು “ಸಾಧಿಸು” ಅಥವಾ “ಪೂರ್ತಿಗೊಳಿಸು” ಅಥವಾ “ನಡೆಯುವಂತೆ ಮಾಡು” ಅಥವಾ “ವಿಧೇಯನಾಗು” ಅಥವಾ “ನಿರ್ವಹಿಸು” ಎಂದೂ ಅನುವಾದ ಮಾಡಬಹುದು.
  • “ನೆರವೇರಿಸಲ್ಪಟ್ಟಿದೆ” ಎನ್ನುವ ಮಾತಿಗೆ “ನಿಜವಾಗಿ ನೆರವೇರಿದೆ” ಅಥವಾ “ನಡೆದಿದೆ” ಅಥವಾ “ನಡೆಯುತ್ತಿದೆ” ಎಂದೂ ಅನುವಾದ ಮಾಡಬಹುದು.
  • “ನೆರವೇರಿಸು” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ, “ನಿನ್ನ ಸೇವೆಯನ್ನು ನೆರವೇರಿಸು” ಎನ್ನುವ ಮಾತಿನಂತೆ, “ಸಂಪೂರ್ತಿಗೊಳಿಸು” ಅಥವಾ “ನಿರ್ವಹಿಸು” ಅಥವಾ “ಅಭ್ಯಾಸ ಮಾಡು” ಅಥವಾ “ಸೇವೆ ಮಾಡುವುದಕ್ಕೆ ದೇವರು ನಿಮ್ಮನ್ನು ಕರೆದಂತೆಯೇ ಇತರ ಜನರನ್ನು ರಕ್ಷಿಸು” ಎಂದು ಅನೇಕ ಪದಗಳನ್ನು ಸೇರಿಸಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಎಫೆಸ, ಪೌಲ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 24:04 “ನೋಡಿರಿ ನಾನು ನಿಮ್ಮ ಬಳಿಗೆ ನನ್ನ ದೂತನನ್ನು ಕಳುಹಿಸುತ್ತಿದ್ದೇನೆ, ಅವನು ನಿಮ್ಮ ಮಾರ್ಗವನ್ನು ಸಿದ್ಧಪಡಿಸುವನು” ಎಂದು ಪ್ರವಾದಿಗಳು ಹೇಳಿದ್ದನ್ನು ಯೋಹಾನನು __ ನೇರವೆರಿಸಿದನು ___.
  • 40:03 ಯೇಸುವಿನ ವಸ್ತ್ರಗಳಿಗಾಗಿ ಸೈನಿಕರು ಜೂಜಾಡಿದರು. ಅವರು ಈ ರೀತಿ ಮಾಡಿದಾಗ, “ಅವರ ಮಧ್ಯೆದಲ್ಲಿರುವ ನನ್ನ ವಸ್ತ್ರಗಳನ್ನು ಅವರು ವಿಂಗಡಿಸಿದರು, ಮತ್ತು ನನ್ನ ವಸ್ತ್ರಗಳಿಗಾಗಿ ಚೀಟು ಹಾಕಿದರು” ಎಂದು ಹೇಳಲ್ಪಟ್ಟ ಪ್ರವಾದನೆಯು ಅವರು ___ ನೆರವೇರಿಸಿದರು ___ .
  • 42:07 “ದೇವರ ವಾಕ್ಯದಲ್ಲಿ ನನ್ನ ಕುರಿತು ಬರೆಯಲ್ಪಟ್ಟ ಪ್ರತಿಯೊಂದು ತಪ್ಪದೇ ___ ನೆರವೇರಿಸಲ್ಪಡಬೇಕು ___ ಎಂದು ನಾನು ನಿಮಗೆ ಹೇಳಿದ್ದೇನು” ಎಂದು ಯೇಸು ಹೇಳಿದರು.
  • 43:05 “ಅಂತ್ಯಕಾಲದಲ್ಲಿ ನಾನು ನನ್ನ ಆತ್ಮವನ್ನು ಸುರಿಸುತ್ತೇನೆ” ಎಂದು ದೇವರು ಹೇಳಿದ ಮಾತುಗಳು ಪ್ರವಾದಿಯಾದ ಯೋವೇಲನಿಂದ ಪ್ರವಾದಿಸಲ್ಪಟ್ಟವು.
  • 43:07 ‘ನಿನ್ನ ಪವಿತ್ರನಿಗೆ ಕೊಳೆಯಲು ಬಿಡಲಾರೆ’ ಎಂದು ಹೇಳುವ ಪ್ರವಾದನೆಯನ್ನು ಇದು ___ ನೆರವೇರಿಸಿತು ___.”
  • 44:05 “ನೀನು ಮಾಡಿದ್ದನ್ನು ನೀನು ಅರ್ಥಮಾಡಿಕೊಳ್ಳದಿದ್ದರೂ, ಮೆಸ್ಸೀಯ ಶ್ರಮೆ ಹೊಂದಬೇಕು ಮತ್ತು ಸಾಯಬೇಕು ಎನ್ನುವ ಪ್ರವಾದನೆಗಳನ್ನು ___ ನೆರವೇರಿಸುವುದಕ್ಕೆ __ ನಿನ್ನ ಕ್ರಿಯೆಗಳನ್ನು ದೇವರು ಉಪಯೋಗಿಸಿಕೊಂಡಿದ್ದಾರೆ.

ಪದ ಡೇಟಾ:

  • Strong's: H1214, H5487, G1096, G4138

ನೇಮಕ, ನೇಮಕಗಳು, ನೇಮಿಸಲ್ಪಟ್ಟವನು

ಪದದ ಅರ್ಥವಿವರಣೆ:

“ನೇಮಕ” ಮತ್ತು “ನೇಮಿಸಲ್ಪಟ್ಟವನು” ಎನ್ನುವ ಪದಗಳು ಒಂದು ವಿಶೇಷವಾದ ಕೆಲಸವನ್ನು ಅಥವಾ ಪಾತ್ರವನ್ನು ನೆರವೇರಿಸಲು ಯಾರಾದರೊಬ್ಬರನ್ನು ಆಯ್ಕೆ ಮಾಡಿಕೊಳ್ಳುವದನ್ನು ಸೂಚಿಸುತ್ತದೆ.

  • “ನೇಮಿಸಲ್ಪಟ್ಟಿರುವುದು” ಎಂದರೆ “ನಿತ್ಯಜೀವವನ್ನು ಹೊಂದುವುದಕ್ಕೆ ನೇಮಿಸಲ್ಪಟ್ಟವನು” ಎಂಬಂತೆ ಏನನ್ನಾದರೂ ಪಡೆದುಕೊಳ್ಳುವುದಕ್ಕೆ “ಆಯ್ಕೆ ಮಾಡಲ್ಪಟ್ಟವನು” ಎನ್ನುವದನ್ನೂ ಸೂಚಿಸುತ್ತದೆ. ಜನರು “ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕೆ ನೇಮಿಸಲ್ಪಟ್ಟಿದ್ದಾರೆ” ಎನ್ನುವ ಮಾತಿಗೆ, ಅವರು ನಿತ್ಯಜೀವವನ್ನು ಪಡೆದುಕೊಳ್ಳುವುದಕ್ಕೆ ಆಯ್ಕೆಯಾಗಿದ್ದಾರೆ ಎಂದರ್ಥವನ್ನು ಕೊಡುತ್ತದೆ.
  • “ನೇಮಿಸಲ್ಪಟ್ಟ ಸಮಯ” ಎನ್ನುವ ಮಾತು ಏನಾದರು ಮಾಡಲು ದೇವರು “ಆಯ್ಕೆ ಮಾಡಿಕೊಂಡ ಸಮಯ” ಅಥವಾ “ಯೋಜಿತ ಸಮಯ” ವನ್ನು ಸೂಚಿಸುತ್ತದೆ.

“ನೇಮಕ” ಎನ್ನುವ ಪದವು ಯಾರಾದರೊಬ್ಬರು ಎನಾದರೊಂದು ಕೆಲಸವನ್ನು ಮಾಡುವುದಕ್ಕೆ ಅವರನ್ನು “ಆಜ್ಞಾಪಿಸು” ಅಥವಾ “ನಿಯೋಜಿಸು” ಎನ್ನುವ ಅರ್ಥವನ್ನೂ ಕೊಡುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, “ನೇಮಕ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ಆಯ್ಕೆ ಮಾಡು” ಅಥವಾ “ನಿಯೋಜಿಸು” ಅಥವಾ “ಸಂಪ್ರದಾಯಿಕವಾಗಿ ಆಯ್ಕೆ ಮಾಡು” ಅಥವಾ “ಆರಿಸು” ಎನ್ನುವ ಪದಗಳನ್ನೂ ಸೇರಿಸಬಹುದು.
  • “ನೇಮಿಸಲ್ಪಟ್ಟವನು” ಎನ್ನುವ ಪದವನ್ನು “ನಿಯೋಜಿಸಲ್ಪಟ್ಟಿದೆ” ಅಥವಾ “ಯೋಜಿಸಲ್ಪಟ್ಟಿದೆ” ಅಥವಾ “ವಿಶೇಷವಾಗಿ ಆಯ್ಕೆ ಮಾಡಲ್ಪಟ್ಟಿದೆ” ಎಂಬುದಾಗಿಯೂ ಅನುವಾದ ಮಾಡಬಹುದು.
  • “ನೇಮಿಸಲ್ಪಟ್ಟವನಾಗಿ” ಎನ್ನುವ ಮಾತು “ಆಯ್ಕೆ ಮಾಡಲ್ಪಟ್ಟವನಾಗಿ” ಎಂಬುದಾಗಿಯೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H561, H977, H2163, H2296, H2706, H2708, H2710, H3198, H3245, H3259, H3677, H3983, H4150, H4151, H4152, H4487, H4662, H5324, H5344, H5414, H5567, H5975, H6310, H6485, H6565, H6635, H6680, H6923, H6942, H6966, H7760, H7896, G322, G606, G1299, G1303, G1935, G2525, G2749, G4287, G4384, G4929, G5021, G5087

ನ್ಯಾಯ, ನ್ಯಾಯವಾದ, ಅನ್ಯಾಯ, ಅನ್ಯಾಯವಾಗಿ, ಸಮರ್ಥಿಸಿ, ಸಮರ್ಥನೆ ಮಾಡುವುದು

ಪದದ ಅರ್ಥವಿವರಣೆ:

“ನ್ಯಾಯ” ಮತ್ತು “ನ್ಯಾಯವಾದ” ಎನ್ನುವ ಪದಗಳು ದೇವರ ನ್ಯಾಯಶಾಸನಗಳ ಪ್ರಕಾರ ಜನರನ್ನು ಸರಿಯಾಗಿ ನೋಡಿಕೊಳ್ಳುವುದನ್ನು ಸೂಚಿಸುತ್ತದೆ. ಇತರ ಜನರು ಕೂಡ ನ್ಯಾಯವಂತರೆಂದು ಅವರ ವಿಷಯದಲ್ಲಿ ಸರಿಯಾದ ವರ್ತನೆಯ ದೇವರ ಸ್ಥಿರತೆಯನ್ನು ಮಾನವ ಕಾನೂನುಗಳೂ ಪ್ರತಿಬಿಂಬಿಸುತ್ತವೆ.

  • “ನ್ಯಾಯವಾಗಿ” ಇರುವುದು ಎಂದರೆ ಇತರರ ವಿಷಯದಲ್ಲಿ ಸರಿಯಾದ ವಿಧಾನದಲ್ಲಿರುವ ಮತ್ತು ಚೆನ್ನಾಗಿರುವ ಕ್ರಿಯೆಗಳನ್ನು ಮಾಡುವುದು ಎಂದರ್ಥ. ದೇವರ ದೃಷ್ಟಿಯಲ್ಲಿ ನೈತಿಕವಾಗಿರುವ ಸರಿಯಾದದ್ದನ್ನೇ ಮಾಡುವುದಕ್ಕೆ ಯಥಾರ್ಥತೆಯನ್ನು ಮತ್ತು ಸಮಗ್ರತೆಯನ್ನು ಸೂಚಿಸುತ್ತದೆ.
  • “ನ್ಯಾಯವಾಗಿ” ನಡೆದುಕೊಳ್ಳುವುದು ಎನ್ನುವುದಕ್ಕೆ ದೇವರ ನ್ಯಾಯಶಾಸನಗಳ ಪ್ರಕಾರ ಸರಿಯಾದ, ಒಳ್ಳೇಯದಾದ ಮತ್ತು ನಿಖರವಾದ ವಿಧಾನದಲ್ಲಿ ಜನರೊಂದಿಗೆ ವರ್ತಿಸುವುದು ಎಂದರ್ಥ.
  • “ನ್ಯಾಯವಾದ-ನಡತೆ”ಯನ್ನು ಪಡೆದುಕೊಳ್ಳುವುದು ಎನ್ನುವುದಕ್ಕೆ ಕಾನೂನಿನ ಕೆಳಗೆ ಸರಿಯಾಗಿ ನಡೆಸಲ್ಪಡುವುದು ಎಂದರ್ಥ, ಅದು ಕಾನೂನುಗಳಿಂದ ಸಂರಕ್ಷಿಸಲ್ಪಡಬಹುದು ಅಥವಾ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಶಿಕ್ಷೆಯನ್ನು ಪಡೆಯುವುದೂ ಆಗಿರಬಹುದು.
  • ಕೆಲವೊಂದುಬಾರಿ “ನ್ಯಾಯ” ಎನ್ನುವ ಪದವು “ನೀತಿಯುತ” ಅಥವಾ “ದೇವರ ನ್ಯಾಯಶಾಸನಗಳನ್ನು ಅನುಸರಿಸುವುದು” ಎನ್ನುವ ವಿಶಾಲ ಅರ್ಥವನ್ನು ಹೊಂದಿರುತ್ತದೆ.

“ಅನ್ಯಾಯ” ಮತ್ತು “ಅನ್ಯಾಯವಾಗಿ” ಎನ್ನುವ ಪದಗಳು ಜನರ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳದ ಪದ್ಧತಿಯನ್ನು ಮತ್ತು ಅವರಿಗೆ ಹಾನಿಯನ್ನುಂಟು ಮಾಡುವ ವರ್ತನೆಯನ್ನು ಸೂಚಿಸುತ್ತದೆ.

  • “ಅಧರ್ಮ” ಎನ್ನುವ ಪದವು ಒಬ್ಬ ವ್ಯಕ್ತಿ ಕೆಟ್ಟದ್ದನ್ನು ಅನುಭವಿಸುವದಕ್ಕೆ ಅರ್ಹನಾಗದಿದ್ದರೂ ಅವನಿಗೆ ಕೆಟ್ಟದ್ದೇ ನಡೆಯುವದನ್ನು ಸೂಚಿಸುತ್ತದೆ ಇದು ಜನರ ವಿಷಯದಲ್ಲಿ ಸರಿಯಾಗಿ ನೋಡಿಕೊಳ್ಳದ ವಿಧಾನವನ್ನು ಸೂಚಿಸುತ್ತದೆ.
  • ಅನ್ಯಾಯ ಎನ್ನುವುದಕ್ಕೆ ಕೆಲವೊಂದು ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವಾಗ, ಇನ್ನೂ ಕೆಲವರನ್ನು ಕೆಟ್ಟದ್ದಾಗಿ ನೋಡಿಕೊಳ್ಳುವ ಅರ್ಥವು ಇರುತ್ತದೆ.
  • ಅನ್ಯಾಯವಾದ ರೀತಿಯಲ್ಲಿ ಯಾರಾದರೂ ನಡೆದುಕೊಳ್ಳುತ್ತಿದ್ದರೆ, ಅವರು “ಪಕ್ಷಪಾತಿಯಾಗಿರುತ್ತಾನೆ” ಅಥವಾ “ದುಷ್ಟ ಆಲೋಚನೆಯನ್ನು ಹೊಂದಿರುತ್ತಾನೆ”, ಯಾಕಂದರೆ ಅವನು ಜನರ ವಿಷಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾಯಿಲ್ಲ.

“ಸಮರ್ಥಿಸು” ಮತ್ತು “ಸಮರ್ಥನೆ ಮಾಡು” ಎನ್ನುವ ಪದಗಳು ಅಪರಾಧಿಯಾಗಿರುವ ಒಬ್ಬ ವ್ಯಕ್ತಿಯನ್ನು ನೀತಿವಂತನನ್ನಾಗಿ ಮಾಡುವುದನ್ನು ಸೂಚಿಸುತ್ತದೆ. ದೇವರೊಬ್ಬನೇ ಪ್ರತಿಯೊಬ್ಬ ಮನುಷ್ಯನನ್ನು ನೀತಿವಂತರನ್ನಾಗಿ ಸಮರ್ಥಿಸುವವನಾಗಿರುತ್ತಾನೆ.

  • ದೇವರು ಜನರನ್ನು ನೀತಿವಂತರನ್ನಾಗಿ ಸಮರ್ಥಿಸಿದಾಗ, ಆತನು ಅವರ ಪಾಪಗಳನ್ನು ಕ್ಷಮಿಸುವನು ಮತ್ತು ಅವರನ್ನು ಪಾಪರಹಿತರಾದ ಜನರನ್ನಾಗಿ ಮಾಡಿದನು. ಆತನು ಜನರು ಮಾಡಿದ ಪಾಪಗಳಿಂದ ರಕ್ಷಿಸಲು ಯೇಸುವಿನಲ್ಲಿ ಭರವಸೆವಿಟ್ಟು ಪಶ್ಚಾತ್ತಾಪಪಡುವ ಪ್ರತಿ ಪಾಪಿಯನ್ನು ಸಮರ್ಥಿಸುವನು ಅಥವಾ ನೀತಿವಂತರನ್ನಾಗಿ ಮಾಡುವನು.
  • “ಸಮರ್ಥಿಸುವುದು” ಎನ್ನುವುದು ದೇವರು ಜನರ ಪಾಪಗಳನ್ನು ಕ್ಷಮಿಸುವಾಗ ಮಾಡುವ ಕೆಲಸವನ್ನು ಮತ್ತು ಆತನ ದೃಷ್ಟಿಯಲ್ಲಿ ಆ ವ್ಯಕ್ತಿಯನ್ನು ನೀತಿವಂತನನ್ನಾಗಿ ನಿರ್ಣಯಿಸುವುದನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ನ್ಯಾಯ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೈತಿಕವಾಗಿ ಸರಿಯಾದದ್ದು” ಅಥವಾ “ನ್ಯಾಯೋಚಿತ” ಎಂದೂ ಅನುವಾದ ಮಾಡಬಹುದು.
  • “ನ್ಯಾಯವಾದ” ಎನ್ನುವ ಪದವನ್ನು “ನ್ಯಾಯೋಚಿತವಾದ ನಡವಳಿಕೆ” ಅಥವಾ “ಅರ್ಹ ಪರಿಣಾಮಗಳು” ಎಂದೂ ಅನುವಾದ ಮಾಡಬಹುದು.
  • “ನ್ಯಾಯವಾಗಿ ನಡೆದುಕೊಳ್ಳುವುದು” ಎನ್ನುವ ಪದವನ್ನು “ನ್ಯಾಯೋಚಿತವಾಗಿ ನಡೆದುಕೊಳ್ಳಿರಿ” ಅಥವಾ “ನ್ಯಾಯವಾದ ವಿಧಾನದಲ್ಲಿ ವರ್ತಿಸುವುದು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ, “ನ್ಯಾಯ” ಎನ್ನುವ ಪದವನ್ನು “ನೀತಿಯುತ” ಅಥವಾ “ಪ್ರಾಮಾಣಿಕ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಅನ್ಯಾಯ” ಎನ್ನುವ ಪದವನ್ನು “ಅನ್ಯಾಯೋಚಿತ” ಅಥವಾ “ಪಕ್ಷಪಾತ” ಅಥವಾ “ಅನೀತಿವಂತ” ಎಂದೂ ಅನುವಾದ ಮಾಡಬಹುದು.
  • “ಅನ್ಯಾಯ” ಎನ್ನುವ ಮಾತನ್ನು “ಅನ್ಯಾಯಸ್ಥರು” ಅಥವಾ “ಅನ್ಯಾಯ ಜನರು” ಅಥವಾ “ಇತರರನ್ನು ಚೆನ್ನಾಗಿ ನೋಡಿಕೊಳ್ಳದ ಜನರು” ಅಥವಾ “ಅನೀತಿವಂತರಾದ ಜನರು” ಅಥವಾ “ದೇವರಿಗೆ ಅವಿಧೇಯರಾಗಿರುವ ಜನರು” ಎಂದೂ ಅನುವಾದ ಮಾಡಬಹುದು.
  • “ಅನ್ಯಾಯವಾಗಿ” ಎನ್ನುವ ಪದವನ್ನು “”ಅನ್ಯಾಯವಾದ ನಡತೆಯಲ್ಲಿ” ಅಥವಾ “ತಪ್ಪಾಗಿ” ಅಥವಾ “ಅನ್ಯಾಯೋಚಿತವಾಗಿ” ಎಂದೂ ಅನುವಾದ ಮಾಡಬಹುದು.
  • “ಅನ್ಯಾಯ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ತಪ್ಪಾಗಿ ನಡೆದುಕೊಳ್ಳುವುದು” ಅಥವಾ “ಅನ್ಯಾಯೋಚಿತವಾಗಿ ಕ್ರಿಯೆಗಳನ್ನು ಮಾಡುವುದು” ಎನ್ನುವ ಮಾತುಗಳು ಸೇರಿಸಬಹುದು. (ನೋಡಿರಿ: ಅಮೂರ್ತ ನಾಮಪದಗಳು)
  • “ಸಮರ್ಥಿಸು” ಎನ್ನುವ ಮಾತನ್ನು ಅನುವಾದ ಬೇರೊಂದು ವಿಧಾನಗಳಲ್ಲಿ, “ಒಬ್ಬರನ್ನು ನೀತಿವಂತರನ್ನಾಗಿ ಪ್ರಕಟಿಸುವುದು” ಅಥವಾ “ಒಬ್ಬರನ್ನು ನೀತಿವಂತರನ್ನಾಗಿ ಮಾಡುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ‘ಸಮರ್ಥನೆ ಮಾಡುವುದು” ಎನ್ನುವ ಮಾತು “ನೀತಿಯನ್ನು ಪ್ರಕಟಿಸುವುದು” ಅಥವಾ “ನೀತಿವಂತರಾಗುವುದು” ಅಥವಾ “ನೀತಿಯುತವಾಗಿ ಜನರನ್ನು ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಸಮರ್ಥನೆ ಮಾಡುವುದರಲ್ಲಿ ಫಲಿಸುವುದು” ಎನ್ನುವ ಮಾತನ್ನು “ದೇವರು ಅನೇಕಮಂದಿ ಜನರನ್ನು ನೀತಿವಂತರನ್ನಾಗಿ ಸಮರ್ಥಿಸಿದ್ದಾನೆ” ಅಥವಾ “ಇದರಿಂದ ದೇವರು ಜನರನ್ನು ನೀತಿವಂತರನ್ನಾಗಿ ಮಾಡಿದನು” ಎಂದೂ ಅನುವಾದ ಮಾಡಬಹುದು.
  • “ನಮ್ಮ ಸಮರ್ಥನೆಯಲ್ಲಿ” ಎನ್ನುವ ಮಾತನ್ನು “ದೇವರಿಂದ ನಾವು ನೀತಿವಂತರಾಗುವ ಕ್ರಮದಲ್ಲಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕ್ಷಮಿಸು, ಅಪರಾಧ, ತೀರ್ಪು ಮಾಡು, ನೀತಿ, ನೀತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 17:09 ದಾವೀದನು __ ನ್ಯಾಯವಾಗಿ __ ಆಳಿದನು ಮತ್ತು ಅನೇಕ ವರ್ಷಗಳ ಕಾಲ ನಂಬಿಗಸ್ತನಾಗಿದ್ದನು ಮತ್ತು ದೇವರು ಆತನನ್ನು ಆಶೀರ್ವಾದ ಮಾಡಿದನು.
  • 18:13 ಯೂದಾ ಅರಸರಲ್ಲಿ ಕೆಲವರು __ ನ್ಯಾಯವಾಗಿ __ ಅಳಿದ ಒಳ್ಳೇಯ ಮನುಷ್ಯರಿದ್ದರು ಮತ್ತು ದೇವರನ್ನು ಆರಾಧನೆ ಮಾಡಿದ್ದರು.
  • 19:16 ವಿಗ್ರಹಾರಾಧನೆ ನಿಲ್ಲಿಸಬೇಕೆಂದು, ಇತರರ ವಿಷಯದಲ್ಲಿ ಕರುಣೆ ತೋರಿಸುವುದನ್ನು ಮತ್ತು __ ನ್ಯಾಯವಾಗಿ __ ನಡೆದುಕೊಳ್ಳುವುದನ್ನು ಆರಂಭಿಸಬೇಕೆಂದು ಅವರು (ಪ್ರವಾದಿಗಳು) ಜನರೆಲ್ಲರಿಗೆ ಹೇಳಿದರು.
  • 50:17 ಯೇಸು ಸಮಾಧಾನದಿಂದ, __ ನ್ಯಾಯದಿಂದ __ ಆತನ ರಾಜ್ಯವನ್ನು ಆಳುವನು ಮತ್ತು ಆತನು ತನ್ನ ಜನರೊಂದಿಗೆ ಯಾವಾಗಲೂ ಇರುವನು

ಪದ ಡೇಟಾ:

  • Strong's: H205, H2555, H3477, H4941 H5765, H5766, H5767, H6662, H6663, H6664, H6666, H8003, H8264, H8636, G91, G93, G94, G1342, G1344, G1345, G1346, G1347, G1738

ಪಂಚಾಶತ್ತಮ, ವಾರಗಳ ಹಬ್ಬಗಳ

ಸತ್ಯಾಂಶಗಳು:

“ವಾರಗಳ ಹಬ್ಬಗಳು” ಎನ್ನುವುದು ಪಸ್ಕ ಹಬ್ಬ ಆದನಂತರ ಐವತ್ತು ದಿನಗಳವರೆಗೂ ಆಚರಿಸುವ ಯೆಹೂದ್ಯ ಹಬ್ಬವಾಗಿರುತ್ತದೆ. ಕೆಲವು ಕಾಲವಾದನಂತರ ಇದನ್ನು “ಪಂಚಾಶತ್ತಮ” ಎಂದು ಸೂಚಿಸುತ್ತಾರೆ.

  • ವಾರಗಳ ಹಬ್ಬ ಎನ್ನುವುದು ಪ್ರಥಮ ಫಲಗಳ ಹಬ್ಬ ಆದನಂತರ ಏಳು ವಾರಗಳ (ಐವತ್ತು ದಿನಗಳು) ವರೆಗೆ ನಡೆಯುವ ಹಬ್ಬವಾಗಿರುತ್ತದೆ. ಹೊಸ ಒಡಂಬಡಿಕೆ ಕಾಲದಲ್ಲಿ ಈ ಹಬ್ಬವನ್ನು “ಪಂಚಾಶತ್ತಮ” ಎಂದು ಕರೆಯುತ್ತಾರೆ, ಈ ಪದಕ್ಕೆ “ಐವತ್ತು” ಎಂದರ್ಥವಾಗಿರುತ್ತದೆ.
  • ವಾರಗಳ ಹಬ್ಬ ಎನ್ನುವುದನ್ನು ಧಾನ್ಯದ ಕೊಯ್ಲಿನ ಆರಂಭವನ್ನು ಆಚರಿಸುವುದಕ್ಕೆ ಇಟ್ಟಿರುತ್ತಾರೆ. ದೇವರು ಮೊಟ್ಟಮೊದಲಾಗಿ ಮೋಶೆಗೆ ಶಿಲಾಶಾಸನಗಳ ಮೇಲೆ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ನೆನಪಿಸಿಕೊಳ್ಳುವ ಸಂದರ್ಭವನ್ನೂ ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ, ಪಂಚಾಶತ್ತಮ ದಿನವು ವಿಶೇಷವಾದ ಸಂದರ್ಭವಾಗಿರುತ್ತದೆ ಯಾಕಂದರೆ ಒಂದು ವಿಶೇಷವಾದ ವಿಧಾನದಲ್ಲಿ ಯೇಸುವಿನ ವಿಶ್ವಾಸಿಗಳು ಪವಿತ್ರಾತ್ಮನನ್ನು ಪಡೆದುಕೊಂಡಿರುವ ಸಂದರ್ಭವಾಗಿರುತ್ತದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ: ಹಬ್ಬ, ಪ್ರಥಮ ಫಲಗಳು, ಕೊಯ್ಲು, ಪವಿತ್ರಾತ್ಮ, ಎಬ್ಬಿಸು)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H2282, H7620, G40050

ಪರಲೋಕ, ಆಕಾಶ, ಪರಲೋಕಗಳು, ಪರಲೋಕದ

ಪದದ ಅರ್ಥವಿವರಣೆ:

“ಪರಲೋಕ” ಎನ್ನುವ ಪದವು ಸಹಜವಾಗಿ ದೇವರು ನಿವಾಸ ಸ್ಥಳವನ್ನು ಸೂಚಿಸುತ್ತದೆ. ಅದೇ ಪದವು ಸಂದರ್ಭಾನುಗುಣವಾಗಿ “ಆಕಾಶ” ಎಂದೂ ಅರ್ಥ ಕೊಡುತ್ತದೆ.

  • “ಪರಲೋಕಗಳು” ಎಂಬ ಪದವು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಸೇರಿದಂತೆ ಭೂಮಿಯ ಮೇಲೆ ನಾವು ನೋಡುವ ಎಲ್ಲವನ್ನೂ ಸೂಚಿಸುತ್ತದೆ. ಇದು ಭೂಮಿಯಿಂದ ನಾವು ನೇರವಾಗಿ ನೋಡಲಾಗದ ದೂರದ ಗ್ರಹಗಳಂತಹ ಪರಲೋಕದ ದೇಹಗಳನ್ನು ಸಹ ಒಳಗೊಂಡಿದೆ.
  • “ಆಕಾಶ” ಎಂಬ ಪದವು ಭೂಮಿಯ ಮೇಲಿರುವ ನೀಲಿ ವಿಸ್ತಾರವನ್ನು ಮೋಡಗಳು ಮತ್ತು ನಾವು ಉಸಿರಾಡುವ ಗಾಳಿಯನ್ನು ಸೂಚಿಸುತ್ತದೆ. ಆಗಾಗ್ಗೆ ಸೂರ್ಯ ಮತ್ತು ಚಂದ್ರರನ್ನು "ಆಕಾಶದಲ್ಲಿ" ಎಂದು ಹೇಳಲಾಗುತ್ತದೆ.
  • ಸತ್ಯವೇದದಲ್ಲಿನ ಕೆಲವು ಸಂದರ್ಭಗಳಲ್ಲಿ, “ಪರಲೋಕ” ಎಂಬ ಪದವು ಆಕಾಶ ಅಥವಾ ದೇವರು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಮತ್ತಾಯನ ಪುಸ್ತಕದಲ್ಲಿನ “ಪರಲೋಕದ ರಾಜ್ಯ” ಕ್ಕೆ, “ಪರಲೋಕ” ಎಂಬ ಪದವನ್ನು ಇಟ್ಟುಕೊಳ್ಳುವುದು ಉತ್ತಮ, ಏಕೆಂದರೆ ಇದು ಮತ್ತಾಯನ ಸುವಾರ್ತೆಗೆ ವಿಶಿಷ್ಟವಾಗಿದೆ.
  • “ಪರಲೋಕಗಳು” ಅಥವಾ “ಪರಲೋಕದ ದೇಹಗಳು” ಎಂಬ ಪದಗಳನ್ನು “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು” ಅಥವಾ “ವಿಶ್ವದಲ್ಲಿನ ಎಲ್ಲಾ ನಕ್ಷತ್ರಗಳು” ಎಂದೂ ಅನುವಾದಿಸಬಹುದು.
  • “ಪರಲೋಕದ ನಕ್ಷತ್ರಗಳು” ಎಂಬ ಮಾತನ್ನು “ಆಕಾಶದಲ್ಲಿನ ನಕ್ಷತ್ರಗಳು” ಅಥವಾ “ತಾರಾಂಗಣದ ನಕ್ಷತ್ರಗಳು” ಅಥವಾ “ವಿಶ್ವದಲ್ಲಿನ ನಕ್ಷತ್ರಗಳು” ಎಂದು ಅನುವಾದಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ದೇವರ ರಾಜ್ಯ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 04:02 ಅವರು __ ಆಕಾಶವನ್ನು __ ತಲುಪುವುದಕ್ಕೆ ದೊಡ್ಡ ಗೋಪುರವನ್ನು ನಿರ್ಮಿಸುವುದಕ್ಕೆ ಆರಂಭಿಸಿದರು.
  • 14:11 ಆತನು (ದೇವರು)__ ಪರಲೋಕದಿಂದ __ ಆಹಾರವನ್ನು ಕೊಟ್ಟನು, ಇದನ್ನು “ಮನ್ನ” ಎಂದು ಕರೆಯುತ್ತಾರೆ.
  • 23:07 ಆಕಸ್ಮಿಕವಾಗಿ, ದೇವರನ್ನು ಸ್ತುತಿಸುವ ದೂತರಗಳೊಂದಿಗೆ ಆಕಾಶಗಳು ತುಂಬಿಸಲ್ಪಟ್ಟವು, ಅವೆಲ್ಲವೂ “__ ಪರಲೋಕದಲ್ಲಿರುವ __ ದೇವರಿಗೆ ಮಹಿಮೆ ಉಂಟಾಗಲಿ ಮತ್ತು ಭೂಮಿಯ ತನಗೆ ಇಷ್ಟವಾದ ಜನರಿಗೆ ಸಮಾಧಾನ ಉಂಟಾಗಲಿ” ಎಂದು ಹೇಳುತ್ತಿದ್ದವು.
  • 29:09 “ನಿಮ್ಮ ಹೃದಯದಿಂದ ನಿಮ್ಮ ಸಹೋದರನನ್ನು ಕ್ಷಮಿಸದಿದ್ದರೆ ನಿಮ್ಮಲ್ಲಿರುವ ಪ್ರತಿಯೊಬ್ಬರಿಗೆ ನನ್ನ __ ಪರಲೋಕದ __ ತಂದೆ ಇದನ್ನೇ ಮಾಡುತ್ತಾನೆ” ಎಂದು ಯೇಸು ಹೇಳಿದರು.
  • 37:09 ಆದನಂತರ ಯೇಸು __ ಪರಲೋಕದ __ ಕಡೆಗೆ ನೋಡಿ, “ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿಮಗೆ ವಂದನೆಗಳು” ಎಂದು ಹೇಳಿದನು.
  • 42:11 ಆದನಂತರ ಯೇಸು __ ಪರಲೋಕಕ್ಕೆ __ ಹೋದನು, ಮತ್ತು ಅವರು ನೋಡುತ್ತಿರುವಾಗಲೇ ಮೇಘವು ಆತನನ್ನು ಆವರಿಸಿತು.

ಪದ ಡೇಟಾ:

  • Strong's: H1534, H6160, H6183, H7834, H8064, H8065, G932, G2032, G3321, G3770, G3771, G3772

ಪರಾತ್ಪರನು

ಸತ್ಯಾಂಶಗಳು:

“ಪರಾತ್ಪರನು” ಎನ್ನುವ ಪದವು ದೇವರಿಗೆ ಬಿರುದಾಗಿರುತ್ತದೆ. ಇದು ಆತನ ಔನ್ನತ್ಯವನ್ನು ಅಥವಾ ಅಧಿಕಾರವನ್ನು ಸೂಚಿಸುತ್ತದೆ.

  • ಈ ಪದಕ್ಕಿರುವ ಅರ್ಥವೂ “ಸಾರ್ವಭೌಮಾಧಿಕಾರ” ಅಥವಾ “ಸರ್ವೋಚ್ಚ” ಎನ್ನುವ ಪದಗಳಿಗಿರುವ ಅರ್ಥವನ್ನೇ ಹೊಂದಿರುತ್ತದೆ.
  • “ಪರಾತ್ಪರ” ಎನ್ನುವ ಈ ಬಿರುದು ಭೌತಿಕವಾದ ಎತ್ತರವನ್ನು ಅಥವಾ ದೂರವನ್ನು ಸೂಚಿಸುವುದಿಲ್ಲ. ಈ ಪದವು ಆತನ ಅತ್ಯಧಿಕ ಮಹತ್ವವನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಈ ಪದವನ್ನು “ಪರಾತ್ಪರ ದೇವರು” ಅಥವಾ “ಅತ್ಯುನ್ನತ ಸರ್ವೋಚ್ಚ ಸ್ಥಾನವಿರುವವನು” ಅಥವಾ “ದೇವರಾಗಿರುವ ಪರಾತ್ಪರನು” ಅಥವಾ “ಮಹತ್ವವುಳ್ಳವನು” ಅಥವಾ “ಸರ್ವೋನ್ನತನು” ಅಥವಾ “ಎಲ್ಲಾವುದಕ್ಕಿಂತ ದೊಡ್ಡವನಾಗಿರುವ ದೇವರು” ಎಂದೂ ಅನುವಾದ ಮಾಡಬಹುದು.
  • “ಸರ್ವೋನ್ನತನು” ಎನ್ನುವ ಪದವನ್ನು ಉಪಯೋಗಿಸಿದಾಗ, ಇದು ಭೌತಿಕವಾದ ಎತ್ತರವನ್ನು ಸೂಚಿಸದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ದೇವರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5945, G5310

ಪರಿಶುದ್ಧ ಸ್ಥಳ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಕಂಡುಬರುವ “ಪರಿಶುದ್ಧ ಸ್ಥಳ” ಮತ್ತು “ಅತಿ ಪರಿಶುದ್ಧ ಸ್ಥಳ” ಎನ್ನುವ ಪದಗಳು ಗುಡಾರ ಅಥವಾ ದೇವಾಲಯ ಭವನದ ಎರಡು ಭಾಗಗಳನ್ನು ಸೂಚಿಸುತ್ತದೆ.

  • “ಪರಿಶುದ್ಧ” ಸ್ಥಳವು ಮೊದಲನೇ ಭಾಗ (ಅಥವಾ ಮೊದಲನೇ ಕೊಠಡಿ), ಇದರಲ್ಲಿ ಧೂಪವೇದಿ ಮತ್ತು ವಿಶೇಷವಾದ ಮೇಜಿನ ಮೇಲೆ “ಸಮ್ಮುಖದ ನೈವೇದ್ಯದ ರೊಟ್ಟಿಗಳು” ಇಡಲ್ಪಟ್ಟಿರುತ್ತವೆ.
  • “ಅತಿ ಪರಿಶುದ್ಧ ಸ್ಥಳ” ಎರಡನೇ ಭಾಗವಾಗಿರುತ್ತದೆ, ಅದು ಒಳಗಡೆ ಇರುವ ಕೊಠಡಿ, ಮತ್ತು ಅದರಲ್ಲಿ ಒಡಂಬಡಿಕೆಯ ಮಂಜೂಷವನ್ನು ಇಟ್ಟಿರುತ್ತಾರೆ.
  • ತುಂಬಾ ದಪ್ಪವಾಗಿರುವ, ಒಜೆಯಾಗಿರುವ ಒಂದು ತೆರೆ ಒಳಗಡೆ ಕೊಠಡಿಯನ್ನು ಮತ್ತು ಹೊರಗಿನ ಕೊಠಡಿಯನ್ನು ಬೇರ್ಪಡಿಸುತ್ತದೆ.
  • ಮಹಾ ಯಾಜಕನು ಮಾತ್ರವೇ ಅತಿ ಪರಿಶುದ್ಧ ಸ್ಥಳಕ್ಕೆ ಹೋಗಲು ಅನುಮತಿ ಹೊಂದಿರುತ್ತಾನೆ.
  • ಕೆಲವೊಂದುಬಾರಿ “ಪರಿಶುದ್ಧ ಸ್ಥಳ” ಎನ್ನುವ ಮಾತು ಗುಡಾರದ ಅಥವಾ ದೇವಾಲಯದ ಅಂಗಳದ ಆವರಣವನ್ನು ಮತ್ತು ಭವನವನ್ನೂ ಸೂಚಿಸುತ್ತದೆ. ದೇವರಿಗೆ ಪ್ರತ್ಯೇಕಿಸಿರುವ ಯಾವುದೇ ಸ್ಥಳವನ್ನು ಸಾಧಾರಣವಾಗಿ ಈ ಪದವು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಪರಿಶುದ್ಧ ಸ್ಥಳ” ಎನ್ನುವ ಪದವನ್ನು “ದೇವರಿಗೆ ಪ್ರತ್ಯೇಕಿಸಿರುವ ಕೊಠಡಿ” ಅಥವಾ “ದೇವರನ್ನು ಭೇಟಿ ಮಾಡುವುದಕ್ಕೆ ವಿಶೇಷವಾದ ಕೊಠಡಿ” ಅಥವಾ “ದೇವರಿಗಾಗಿ ಕಾಯ್ದಿರಿಸಿರುವ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ಅತಿ ಪರಿಶುದ್ಧ ಸ್ಥಳ” ಎನ್ನುವ ಮಾತನ್ನು “ದೇವರಿಗೋಸ್ಕರ ಹೆಚ್ಚಾಗಿ ಪ್ರತ್ಯೇಕಿಸಿರುವ ಕೊಠಡಿ” ಅಥವಾ “ದೇವರನ್ನು ಭೇಟಿ ಮಾಡುವುದಕ್ಕೆ ಅತಿ ವಿಶೇಷವಾದ ಕೊಠಡಿ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಪರಿಶುದ್ಧ ಸ್ಥಳ” ಎನ್ನುವ ಸಾಧಾರಣ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಪ್ರತಿಷ್ಠಾಪಿಸಿದ ಸ್ಥಳ” ಅಥವಾ “ದೇವರು ಪ್ರತ್ಯೇಕಿಸಿಕೊಂಡಿರುವ ಸ್ಥಳ” ಅಥವಾ “ದೇವಾಲಯದ ಸಂಕೀರ್ಣದಲ್ಲಿ ಪರಿಶುದ್ಧವಾದ ಸ್ಥಳ” ಅಥವಾ “ದೇವರ ಪರಿಶುದ್ಧ ಆಲಯದ ಅಂಗಳದ ಆವರಣ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಧೂಪವೇದಿ, ಒಡಂಬಡಿಕೆಯ ಮಂಜೂಷ, ರೊಟ್ಟಿ, ಪ್ರತಿಷ್ಠಾಪಿಸು, ಅಂಗಳ, ತೆರೆ, ಪರಿಶುದ್ಧ, ಪ್ರತ್ಯೇಕಿಸು, ಗುಡಾರ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1964, H4720, H4725, H5116, H6918, H6944, G39, G40, G3485, G5117

ಪರಿಶುದ್ಧ, ಪರಿಶುದ್ಧತೆ, ಅಪರಿಶುದ್ಧತೆ, ಪವಿತ್ರತೆ

ಪದದ ಅರ್ಥವಿವರಣೆ:

“ಪರಿಶುದ್ಧ” ಮತ್ತು “ಪರಿಶುದ್ಧತೆ” ಎನ್ನುವ ಪದಗಳು ಪಾಪ ಸ್ವಭಾವವುಳ್ಳ ಮತ್ತು ಅಪರಿಪುರ್ಣವಾದ ಪ್ರತಿಯೊಂದರರಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟ ದೇವರ ಗುಣಲಕ್ಷಣವನ್ನು ಸೂಚಿಸುತ್ತದೆ.

  • ದೇವರೊಬ್ಬನೇ ಪರಿಶುದ್ಧನಾಗಿರುತ್ತಾನೆ. ಆತನು ಜನರನ್ನು ಮತ್ತು ವಸ್ತುಗಳನ್ನು ಪವಿತ್ರಗೊಳಿಸುವನು.
  • ದೇವರಿಗೆ ಸಂಬಂಧಪಟ್ಟ ಒಬ್ಬ ವ್ಯಕ್ತಿ ಪರಿಶುದ್ಧನಾಗಿದ್ದರೆ, ಅವನನ್ನು ದೇವರಿಗೆ ಸೇವೆಯನ್ನು ಮಾಡುವುದಕ್ಕೋಸ್ಕರ ಮತ್ತು ಆತನಿಗೆ ಮಹಿಮೆ ತರುವಂತೆ ಪ್ರತಿಷ್ಠೆ ಮಾಡಬೇಕು.
  • ಒಂದು ವಸ್ತುವನ್ನು ದೇವರು ಪರಿಶುದ್ಧವಾದದ್ದು ಎಂದು ಪ್ರಕಟಿಸಿದರೆ, ಅದನ್ನು ಆತನ ಮಹಿಮೆಗಾಗಿ ಮತ್ತು ಆತನ ಸೇವೆಯಲ್ಲಿ ಉಪಯೋಗಿಸುವುದಕ್ಕಾಗಿ ಆತನು ಪ್ರತಿಷ್ಠೆ ಮಾಡಿರುತ್ತಾನೆ.
  • ದೇವರು ಅನುಮತಿ ಕೊಟ್ಟರೆ ಮಾತ್ರ ಜನರು ಆತನ ಬಳಿಗೆ ಹೋಗುವುದಕ್ಕೆ ಸಾಧ್ಯ, ಯಾಕಂದರೆ ಆತನು ಪರಿಶುದ್ಧನು ಮತ್ತು ಅವರು ಮನುಷ್ಯರು, ಪಾಪ ಸ್ವಭಾವವುಲ್ಲವರೂ ಮತ್ತು ಅಪರಿಪೂರ್ಣರು ಆಗಿರುತ್ತಾರೆ.
  • ಹಳೇ ಒಡಂಬಡಿಕೆಯಲ್ಲಿ ಆತನಿಗೆ ಸೇವೆ ಮಾಡುವುದಕ್ಕಾಗಿ ಆತನು ಯಾಕರನ್ನು ಪರಿಶುದ್ಧ ಜನರನ್ನಾಗಿ ಪ್ರತ್ಯೇಕಿಸಿದನು. ಅವರು ದೇವರನ್ನು ಸಮೀಪಿಸುವಾಗ ತಮ್ಮ ಪಾಪಗಳಿಂದ ಸಾಂಪ್ರದಾಯಿಕವಾಗಿ ತೊಳೆಯಲ್ಪಡಬೇಕಾಗಿತ್ತು.
  • ಪರಿಶುದ್ಧವಾದ ಕೆಲವು ನಿರ್ಧಿಷ್ಠ ಸ್ಥಳಗಳೆಂದು ಮತ್ತು ದೇವರಿಗೆ ಸಂಬಂಧಪಟ್ಟ ವಸ್ತುಗಳೆಂದು ಅಥವಾ ದೇವರು ತನ್ನನ್ನು ತಾನು ತೋರಿಸಿಕೊಳ್ಳುವ ಆತನ ದೇವಾಲಯ ಎನ್ನುವಂತವುಗಳಿಂದ ದೇವರು ಪ್ರತ್ಯೇಕಿಸಲ್ಪಟ್ಟಿದ್ದನು,

ಅಕ್ಷರಾರ್ಥವಾಗಿ, “ಅಪರಿಶುದ್ಧ” ಎನ್ನುವ ಪದಕ್ಕೆ “ಪರಿಶುದ್ಧವಲ್ಲದ್ದು” ಎಂದರ್ಥ. ಇದು ದೇವರನ್ನು ಘನಪಡಿಸದ ವ್ಯಕ್ತಿಯನ್ನು ಅಥವಾ ಯಾವುದಾದರೊಂದನ್ನು ವಿವರಿಸುತ್ತದೆ.

  • ದೇವರಿಗೆ ವಿರುದ್ಧವಾಗಿ ತಿರಸ್ಕರಿಸುವದರಿಂದ ಆತನನ್ನು ಅಗೌರವಪಡಿಸುವ ವ್ಯಕ್ತಿಯನ್ನು ವಿವರಿಸುವುದಕ್ಕೆ ಈ ಪದವು ಉಪಯೋಗಿಸಲ್ಪಟ್ಟಿರುತ್ತದೆ.
  • “ಅಪರಿಶುದ್ಧವಾದದ್ದು” ಎಂದು ಕರೆಯಲ್ಪಡುವ ಒಂದು ವಸ್ತುವು ಸಾಮಾನ್ಯವಾದ, ಲೌಕಿಕವಾದ ಅಥವಾ ಅಶುದ್ಧವಾದ ವಸ್ತುವು ಎಂದು ವಿವರಿಸಲ್ಪತ್ತಿರುತ್ತದೆ. ಇದು ದೇವರಿಗೆ ಸಂಬಂಧಪಟ್ಟಿದ್ದಲ್ಲ.

“ಪವಿತ್ರವಾದದ್ದು” ಎನ್ನುವ ಪದವು ದೇವರನ್ನು ಆರಾಧಿಸುವುದಕ್ಕೆ ಸಂಬಂಧಪಟ್ಟಿದ್ದನ್ನು ವಿವರಿಸುತ್ತದೆ ಅಥವಾ ಸುಳ್ಳು ದೇವರುಗಳ ಅನ್ಯ ಆರಾಧನೆಗೆ ಸಂಬಂಧಪಟ್ಟಿದ್ದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ “ಪವಿತ್ರತೆ” ಎನ್ನುವ ಪದವು ಸುಳ್ಳು ದೇವರುಗಳನ್ನು ಆರಾಧಿಸುವುದರಲ್ಲಿ ಉಪಯೋಗಿಸುವ ಇತರ ವಸ್ತುಗಳನ್ನು ಮತ್ತು ಕಲ್ಲಿನ ಸ್ತಂಭಗಳನ್ನು ವಿವರಿಸುವುದಕ್ಕೆ ಉಪಯೋಗಿಸಲಾಗಿರುತ್ತದೆ. ಇದನ್ನು “ಧಾರ್ಮಿಕತೆ” ಎಂದೂ ಅನುವಾದ ಮಾಡಬಹುದು.
  • “ಪವಿತ್ರವಾದ ಹಾಡುಗಳು” ಮತ್ತು “ಪವಿತ್ರವಾದ ಸಂಗೀತ” ಎನ್ನುವ ಮಾತುಗಳು ದೇವರ ಮಹಿಮೆಗಾಗಿ ಹಾಡುವ ಅಥವಾ ಬಾರಿಸುವ ಸಂಗೀತವನ್ನು ಸೂಚಿಸುತ್ತದೆ. ಇದನ್ನು “ಯೆಹೋವಾನನ್ನು ಆರಾಧಿಸುವುದಕ್ಕೆ ಸಂಗೀತ” ಅಥವಾ “ದೇವರನ್ನು ಸ್ತುತಿಸುವ ಹಾಡುಗಳು” ಎಂದೂ ಅನುವಾದ ಮಾಡಬಹುದು.
  • “ಪವಿತ್ರವಾದ ಕರ್ತವ್ಯಗಳು” ಎನ್ನುವ ಮಾತು “ಭಕ್ತಿಸಂಬಂಧವಾದ ಕರ್ತವ್ಯಗಳನ್ನು” ಅಥವಾ ದೇವರನ್ನು ಆರಾಧಿಸುವುದಕ್ಕೆ ಜನರನ್ನು ನಡೆಸಲು ಯಾಜಕನು ಮಾಡುವ “ಆಚರಣೆಗಳನ್ನು” ಸೂಚಿಸುತ್ತದೆ. ಇದು ಸುಳ್ಳು ದೇವರುಗಳನ್ನು ಆರಾಧಿಸುವುದಕ್ಕೆ ಅನ್ಯ ಯಾಜಕನಿಂದ ನಡೆಸಲ್ಪಡುವ ಆಚರಣೆಗಳನ್ನೂ ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಪರಿಶುದ್ಧ” ಎನ್ನುವ ಪದವನ್ನು ಅನುವಾದ ವಿಧಾನಗಳಲ್ಲಿ “ದೇವರಿಗಾಗಿ ಪ್ರತ್ಯೇಕಿಸು” ಅಥವಾ “ದೇವರಿಗೆ ಸಂಬಂಧಪಟ್ಟು” ಅಥವಾ “ಸಂಪೂರ್ಣವಾಗಿ ಸುರಿಸು” ಅಥವಾ “ಸಂಪೂರ್ಣವಾಗಿ ಪಾಪರಹಿತವಾಗಿರು” ಅಥವಾ “ಪಾಪದಿಂದ ಪ್ರತ್ಯೇಕಿಸಲ್ಪಡು” ಎನ್ನುವ ಮಾತುಗಳೂ ಬಹುಶಃ ಸೇರಿಸಲ್ಪಡಬಹುದು.
  • “ಪರಿಶುದ್ಧವನ್ನಾಗಿ ಮಾಡು” ಎನ್ನುವ ಮಾತು ಅನೇಕಬಾರಿ ಆಂಗ್ಲದಲ್ಲಿ “ಪವಿತ್ರಗೊಳಿಸು” ಎಂದೂ ಅನುವಾದ ಮಾಡಬಹುದು. ಇದನ್ನು “ದೇವರ ಮಹಿಮೆಗಾಗಿ (ಒಬ್ಬರನ್ನು) ಪ್ರತ್ಯೇಕಿಸು” ಎಂದೂ ಅನುವಾದ ಮಾಡಬಹುದು.
  • “ಅಪರಿಶುದ್ಧತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಪರಿಶುದ್ಧವಲ್ಲದ್ದು” ಅಥವಾ “ದೇವರಿಗೆ ಸಂಬಂಧವಿಲ್ಲದಿರುವುದು” ಅಥವಾ “ದೇವರನ್ನು ಘನಪಡಿಸದಿರುವುದು” ಅಥವಾ “ದೈವಿಕವಲ್ಲದ್ದು” ಇನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಸಂದರ್ಭಗಳಲ್ಲಿ “ಅಪರಿಶುದ್ಧವಾದದ್ದು” ಎನ್ನುವ ಪದವನ್ನು “ಅಶುಚಿಯಾದದ್ದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಪ್ರತಿಷ್ಠಾಪಿಸು, ಪವಿತ್ರಗೊಳಿಸು, ಪ್ರತ್ಯೇಕಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕಥೆಗಳಿಂದ ಉದಾಹರಣೆಗಳು:

  • 01:16 ಆತನು (ದೇವರು) ಏಳನೇ ದಿನವನ್ನು ಆಶೀರ್ವಾದ ಮಾಡಿದನು ಮತ್ತು ಅದನ್ನು __ ಪರಿಶುದ್ಧವನ್ನಾಗಿ __ ಮಾಡಿದನು, ಯಾಕಂದರೆ ಆ ದಿನದಂದು ಆತನು ತನ್ನ ಕೆಲಸದಿಂದ ವಿಶ್ರಾಂತಿ ತೆಗೆದುಕೊಂಡನು.
  • 09:12 “ನೀನು __ ಪರಿಶುದ್ಧವಾದ __ ನೆಲದ ಮೇಲೆ ನಿಂತುಕೊಂಡಿದ್ದೀ.”
  • 13:01 “ನೀವು ನನಗೆ ವಿಧೇಯರಾಗಿ, ನನ್ನ ಒಡಂಬಡಿಕೆಯನ್ನು ಅನುಸರಿಸಿದರೆ, ನೀವು ನನ್ನ ಸ್ವತ್ತಾಗಿಯು, ಯಾಜಕರ ರಾಜ್ಯವನ್ನಾಗಿ ಮತ್ತು __ ಪರಿಶುದ್ಧ __ ಜನರಾಗಿ ಇರುವಿರಿ.”
  • 13:05 “ಯಾವಾಗಲೂ ಸಬ್ಬತ ದಿನವನ್ನು __ ಪರಿಶುದ್ಧ __ದಿನವನ್ನಾಗಿ ಆಚರಿಸಿರಿ.”
  • 22:05 “ಆದ್ದರಿಂದ ಆ ಮಗುವು __ ಪರಿಶುದ್ಧನಾಗಿರುವನು __, ದೇವರ ಮಗನಾಗಿರುತ್ತಾನೆ.”
  • 50:02 ಯೇಸು ಎರಡನೇ ಬರೋಣಕ್ಕಾಗಿ ಕಾದಿದ್ದ ನಾವೆಲ್ಲರು __ ಪರಿಶುದ್ಧರಾಗಿ __ ಮತ್ತು ಆತನನ್ನು ಘನಪಡಿಸುವವರಾಗಿ ಇರಬೇಕೆಂದು ದೇವರು ನಮ್ಮಿಂದ ಬಯಸುತ್ತಿದ್ದಾನೆ.

ಪದ ಡೇಟಾ:

  • Strong's: H430, H2455, H2623, H4676, H4720, H6918, H6922, H6942, H6944, H6948, G37, G38, G39, G40, G41, G42, G462, G1859, G2150, G2412, G2413, G2839, G3741, G3742

ಪರಿಶುದ್ಧನು

ಪದದ ಅರ್ಥವಿವರಣೆ:

“ಪರಿಶುದ್ಧನು” ಎನ್ನುವ ಪದವು ಸತ್ಯವೇದದಲ್ಲಿ ಯಾವಾಗಲೂ ದೇವರನ್ನು ಮಾತ್ರ ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಈ ಬಿರುದು ಅಥವಾ ಈ ಪದವು ಅನೇಕಬಾರಿ “ಇಸ್ರಾಯೇಲ್ಯರ ಸದಮಲ ಸ್ವಾಮಿ” ಎನ್ನುವ ಮಾತಿನಲ್ಲಿ ಕಂಡುಬರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಯೇಸುವು “ಪರಿಶುದ್ಧನು” ಎಂಬುದಾಗಿ ಸೂಚಿಸಲ್ಪಟ್ಟಿದ್ದಾನೆ.
  • “ಪರಿಶುದ್ಧನು” ಎನ್ನುವ ಪದವನ್ನು ಕೆಲವೊಂದುಸಲ ಸತ್ಯವೇದದಲ್ಲಿ ದೇವದೂತನಿಗೆ ಸೂಚಿಸಲಾಗಿದೆ.

ಅನುವಾದ ಸಲಹೆಗಳು:

  • ವಾಸ್ತವಿಕವಾಗಿ “ಪರಿಶುದ್ಧನು” (ಇರುವಾತನಾಗಿರುವ “ಒಬ್ಬನಿಗೆ” ಅನ್ವಯಿಸಲಾಗುತ್ತದೆ) ಎನ್ನುವುದು ಅಕ್ಷರಶಃ ಪದ. ಅನೇಕ ಭಾಷೆಗಳು (ಆಂಗ್ಲ ಭಾಷೆಯಂತೆ) ಇದನ್ನು ನಾಮಪದವನ್ನಾಗಿ ಅನುವಾದ ಮಾಡುತ್ತಾರೆ, (“ಒಬ್ಬನು” ಅಥವಾ “ದೇವರು” ಎಂಬುದಾಗಿ ಅನುವಾದಿಸುತ್ತಾರೆ).
  • ಈ ಪದವನ್ನು “ಪರಿಶುದ್ಧನಾದ ದೇವರು” ಅಥವಾ “ಪ್ರತ್ಯೇಕಿಸಲ್ಪಟ್ಟವನು” ಎಂಬುದಾಗಿಯೂ ಅನುವಾದ ಮಾಡುತ್ತಾರೆ.
  • “ಇಸ್ರಾಯೇಲರ ಸದಮಲ ಸ್ವಾಮಿ” ಎನ್ನುವ ಮಾತನ್ನು “ಇಸ್ರಾಯೇಲ್ಯರು ಆರಾಧನೆ ಮಾಡುವ ಪರಿಶುದ್ಧನಾದ ದೇವರು” ಅಥವಾ “ಇಸ್ರಾಯೇಲ್ಯರನ್ನು ಆಳುವ ಸದಮಲ ಸ್ವಾಮಿ” ಎಂದೂ ಅನುವಾದ ಮಾಡಬಹುದು.
  • “ಪರಿಶುದ್ಧ” ಎಂದು ಭಾಷಾಂತರಿಸಲು ಬಳಿಸಿದ ಅದೇ ಪದ ಅಥವಾ ಪದಗುಚ್ಛವನ್ನು ಅನುವಾದಿಸುವುದು ಉತ್ತಮವಾಗಿದೆ.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ, ದೇವರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2623, H376, H6918, G40, G3741

ಪರೀಕ್ಷೆ, ಪರೀಕ್ಷಿಸಲಾಗಿದೆ, ಪರೀಕ್ಷಿಸು, ಬೆಂಕಿಯಿಂದ ಪರೀಕ್ಷಿಸು

ಪದದ ಅರ್ಥವಿವರಣೆ:

“ಪರೀಕ್ಷೆ” ಎನ್ನುವ ಪದವು ಒಬ್ಬ ವ್ಯಕ್ತಿಯ ಬಲಗಳನ್ನು ಮತ್ತು ಬಲಹೀನತೆಗಳನ್ನು ಎತ್ತಿ ತೋರಿಸುವ ಕಷ್ಟವನ್ನು ಅಥವಾ ಬಾಧೆಯನ್ನು ತೋರಿಸುತ್ತದೆ.

  • ದೇವರು ಜನರನ್ನು ಪರೀಕ್ಷಿಸುತ್ತಾರೆ, ಆದರೆ ಆತನು ಅವರು ಪಾಪ ಮಾಡುವಷ್ಟು ಪರೀಕ್ಷೆ ಮಾಡುವುದಿಲ್ಲ. ಏನೇಯಾಗಲಿ, ಸೈತಾನನು ಜನರು ಪಾಪ ಮಾಡುವಂತೆ ಶೋಧಿಸುತ್ತಾನೆ.
  • ದೇವರು ಕೆಲವೊಂದುಬಾರಿ ಜನರ ಪಾಪವನ್ನು ತೋರಿಸುವುದಕ್ಕೆ ಪರೀಕ್ಷೆಗಳನ್ನು ಉಪಯೋಗಿಸುತ್ತಾನೆ. ಪರೀಕ್ಷೆಯು ಒಬ್ಬ ವ್ಯಕ್ತಿ ಪಾಪ ಮಾಡದಂತೆ ಮತ್ತು ದೇವರಿಗೆ ಅದರ ಮೂಲಕ ಹತ್ತಿರವಾಗುವಂತೆ ಸಹಾಯ ಮಾಡುತ್ತದೆ.
  • ಬಂಗಾರ ಮತ್ತು ಇತರ ಲೋಹಗಳು ಎಷ್ಟರ ಮಟ್ಟಿಗೆ ಬೆಲೆಯುಳ್ಳವುಗಳೆಂದು ಮತ್ತು ಎಷ್ಟರಮಟ್ಟಿಗೆ ಗಟ್ಟಿಯಾದವುಗಳೆಂದು ಪರೀಕ್ಷಿಸಲಾಗಿದೆ. ಈ ಉದಾಹರಣೆಯಂತೆಯೇ, ದೇವರು ತನ್ನ ಜನರನ್ನು ಪರೀಕ್ಷಿಸುವುದಕ್ಕೆ ಅನೇಕ ಬಾಧೆಗಳಿರುವ ಕಠಿಣ ಪರಿಸ್ಥಿತಿಗಳನ್ನು ಅನುಮತಿಸುತ್ತಾರೆ.
  • “ಪರೀಕ್ಷೆಗೆ ಇಡಲಾಗಿದೆ” ಎನ್ನುವ ಮಾತಿಗೆ “ಇದು ಬೆಲೆಯುಳ್ಳದ್ದೆಂದು ನಿರೂಪಿಸುವುದಕ್ಕೆ ಯಾರಾದರೊಬ್ಬರನ್ನು ಅಥವಾ ಯಾವುದಾದರೊಂದನ್ನು ಸವಾಲ್ ಬೀಸುವುದು” ಎಂದರ್ಥ.
  • ದೇವರನ್ನು ಪರೀಕ್ಷೆಗೆ ಇಡುವುದೆನ್ನುವ ಸಂದರ್ಭದಲ್ಲಿ, ಆತನು ನಮಗಾಗಿ ಯಾವುದಾದರೊಂದು ಅದ್ಭುತ ಮಾಡುವುದಕ್ಕೆ ಪ್ರಯತ್ನಿಸುವುದು, ಆತನ ಕರುಣೆಯನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸುಕೊಳ್ಳುವುದು ಎಂದರ್ಥವಾಗಿರುತ್ತದೆ.
  • ದೇವರನ್ನು ಪರೀಕ್ಷೆ ಮಾಡುವುದು ತಪ್ಪು ಎಂದು ಯೇಸು ಸೈತಾನನಿಗೆ ಹೇಳಿದನು. ಆತನು ಪ್ರತಿಯೊಬ್ಬರ ಮೇಲೆ ಮತ್ತು ಪ್ರತಿಯೊಂದರ ಮೇಲೆ ಸರ್ವಶಕ್ತನು, ಪರಿಶುದ್ಧ ದೇವರು ಆಗಿದ್ದಾರೆ.

ಅನುವಾದ ಸಲಹೆಗಳು:

  • “ಪರೀಕ್ಷೆ” ಎನ್ನುವ ಪದವನ್ನು “ಸವಾಲು” ಅಥವಾ “ಕಷ್ಟಗಳನ್ನು ಅನುಭವಿಸುವುದಕ್ಕೆ ಕಾರಣವಾಗು” ಅಥವಾ “ನಿರೂಪಿಸು” ಎಂದೂ ಅನುವಾದ ಮಾಡಬಹುದು.
  • “ಪರೀಕ್ಷೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಸವಾಲು” ಅಥವಾ “ಕಷ್ಟದ ಅನುಭವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪರೀಕ್ಷೆಗೆ ನಿಲ್ಲಿಸು” ಎನ್ನುವ ಮಾತನ್ನು “ಶೋಧಿಸು” ಅಥವಾ “ಸವಾಲನ್ನು ಬೀಸು” ಎಂದೂ ಅನುವಾದ ಮಾಡಬಹುದು.
  • ದೇವರನ್ನು ಪರೀಕ್ಷಿಸುವ ಸಂದರ್ಭದಲ್ಲಿ ಇದನ್ನು “ದೇವರ ಪ್ರೀತಿಯನ್ನು ನಿರೂಪಿಸುಕೊಳ್ಳುವುದಕ್ಕೆ ಆತನನ್ನು ಬಲವಂತಿಕೆ ಮಾಡುವುದಕ್ಕೆ ಯತ್ನಿಸುವುದು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಲ್ಲಿ ದೇವರ ವಿಷಯವೇ ಬರದಿರುವಾಗ, “ಪರೀಕ್ಷೆ” ಎನ್ನುವ ಪದಕ್ಕೆ “ಶೋಧಿಸು” ಎಂದರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಶೋಧಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong’s: H5254, H5713, H5715, H5749, H6030, H8584, G1242, G1263, G1303, G1382, G1957, G3140, G3141, G3142, G3143, G3984, G4303, G4451, G4828, G6020

ಪವಾಡ, ಪವಾಡಗಳು, ಅದ್ಭುತ, ಅದ್ಭುತಗಳು, ಸೂಚಕ ಕಾರ್ಯ, ಸೂಚಕ ಕಾರ್ಯಗಳು

ಪದದ ಅರ್ಥವಿವರಣೆ:

“ಪವಾಡ” ಎನ್ನುವುದು ಯಾವುದಾದರೊಂದನ್ನು ಮಾಡುವುದಕ್ಕೆ ದೇವರು ಬಿಟ್ಟು ಯಾರೂ ಮಾಡುವುದಕ್ಕೆ ಸಾಧ್ಯವಾಗದ ಆಶ್ಚರ್ಯ ಕಾರ್ಯ ಎಂದರ್ಥ.

  • ಯೇಸು ಮಾಡಿದ ಅನೇಕ ಪಾವಡಗಳಲ್ಲಿ ಬಿರುಗಾಳಿಯನ್ನು ಶಾಂತಗೊಳಿಸುವುದು ಮತ್ತು ಹುಟ್ಟು ಕುರುಡನನ್ನು ಗುಣಪಡಿಸಿದ್ದು ಒಳಗೊಂಡಿರುತ್ತದೆ.
  • ಪವಾಡಗಳನ್ನು ಕೆಲವೊಂದುಬಾರಿ “ಅದ್ಭುತಗಳು” ಎಂದು ಕರೆಯುತ್ತಾರೆ, ಯಾಕಂದರೆ ಮನುಷ್ಯರೆಲ್ಲರು ಅದ್ಭುತ ಅಥವಾ ಆಶ್ಚರ್ಯ ಕಾರ್ಯಗಳಿಂದ ತುಂಬಿಸಲ್ಪಡುವಂತೆ ಮಾಡುತ್ತವೆ.
  • “ಅದ್ಭುತ” ಎನ್ನುವ ಪದವು ಕೂಡ ಸಾಧಾರಣವಾಗಿ ದೇವರ ಶಕ್ತಿಯ ಅದ್ಭುತವಾದ ತೋರಿಕೆಗಳನ್ನು ಸೂಚಿಸುತ್ತದೆ, ಹೇಗೆಂದರೆ ಆತನು ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿ ಮಾಡಿದನು.
  • ಪಾವಡಗಳನ್ನು “ಸೂಚಕ ಕ್ರಿಯೆಗಳು” ಎಂದೂ ಕರೆಯುತ್ತಾರೆ, ಯಾಕಂದರೆ ಸರ್ವ ವಿಶ್ವದ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿರುವ ಸರ್ವಶಕ್ತನು ದೇವರೇ ಎಂದು ಆಧಾರಗಳಾಗಿ ಅಥವಾ ಸೂಚನೆಗಳಾಗಿ ಅವು ಉಪಯೋಗಿಸಲ್ಪಟ್ಟಿರುತ್ತವೆ.
  • ಕೆಲವೊಂದು ಪಾವಡಗಳು ವಿಮೋಚನೆಯ ದೇವರ ಕಾರ್ಯಗಳಾಗಿರುತ್ತವೆ, ಹೇಗೆಂದರೆ ಐಗುಪ್ತದಲ್ಲಿ ಗುಲಾಮಗಿರಿಯಿಂದ ಆತನು ಇಸ್ರಾಯೇಲ್ಯರನ್ನು ರಕ್ಷಿಸಿದನು ಮತ್ತು ಸಿಂಹಗಳ ಬಾಯಿಗಳಿಂದ ದಾನಿಯೇಲನನ್ನು ದೇವರು ರಕ್ಷಿಸಿದನು.
  • ಇನ್ನಿತರ ಅದ್ಭುತಗಳು ತೀರ್ಪಿನ ಕುರಿತಾದ ದೇವರ ಕಾರ್ಯಗಳಾಗಿರುತ್ತವೆ, ಆತನು ನೋಹನ ಕಾಲದಲ್ಲಿ ಪ್ರಪಂಚವ್ಯಾಪ್ತವಾಗಿ ಪ್ರಳಯವನ್ನು ಕಳುಹಿಸಿದನು ಮತ್ತು ಮೋಶೆಯ ಕಾಲದಲ್ಲಿ ಐಗುಪ್ತ ದೇಶದ ಮೇಲೆ ಭಯಂಕರವಾದ ಮಾರಿರೋಗಗಳನ್ನು ಬರಮಾಡಿದನು.
  • ದೇವರ ಅದ್ಭುತಕಾರ್ಯಗಳಲ್ಲಿ ಕೆಲವೊಂದು ರೋಗಿಗಳಾಗಿರುವ ಜನರನ್ನು ಭೌತಿಕವಾಗಿ ಸ್ವಸ್ಥಪಡಿಸಿರುವ ಅಥವಾ ಸತ್ತವರನ್ನು ತಿರುಗಿ ಜೀವಂತರನ್ನಾಗಿ ಮಾಡಿರುವ ಕಾರ್ಯಗಳು ಒಳಗೊಂಡಿರುತ್ತವೆ.
  • ಯೇಸು ಜನರನ್ನು ಗುಣಪಡಿಸಿದಾಗ, ಬಿರುಗಾಳಿಯನ್ನು ಶಾಂತಗೊಳಿಸಿದಾಗ, ನೀರಿನ ಮೇಲೆ ನಡೆದಾಗ, ಮತ್ತು ಸತ್ತವರನ್ನು ಎಬ್ಬಿಸಿದಾಗ ಆತನಲ್ಲಿ ದೇವರ ಶಕ್ತಿ ಕಾಣಿಸಿಕೊಂಡಿರುತ್ತದೆ. ಈ ಎಲ್ಲ ಕಾರ್ಯಗಳು ಪಾವಡಗಳಾಗಿರುತ್ತದೆ.
  • ಪ್ರವಾದಿಗಳು ಮತ್ತು ಅಪೊಸ್ತಲರು ಅನೆಕವಾದ ಸ್ವಸ್ಥತೆಯ ಪಾವಡಗಳನ್ನು ಮಾಡುವುದಕ್ಕೆ ದೇವರು ಅವರನ್ನು ಬಲಪಡಿಸಿದ್ದನು, ಇವು ಕೇವಲ ದೇವರ ಶಕ್ತಿಯಿಂದ ಮಾತ್ರವೇ ನಡೆದಿರುತ್ತವೆ.

ಅನುವಾದ ಸಲಹೆಗಳು:

  • “ಪಾವಡಗಳು” ಅಥವಾ “ಅದ್ಭುತಗಳು” ಎನ್ನುವ ಪದಗಳಿಗೆ ಮಾಡುವ ಅನುವಾದದಲ್ಲಿ “ದೇವರು ಮಾಡುವ ಅಸಾಧ್ಯವಾದ ಕಾರ್ಯಗಳು” ಅಥವಾ “ದೇವರ ಶಕ್ತಿಯುಳ್ಳ ಕಾರ್ಯಗಳು” ಅಥವಾ “ದೇವರ ಅದ್ಭುತ ಕಾರ್ಯಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಸೂಚಕ ಕ್ರಿಯೆಗಳು ಮತ್ತು ಅದ್ಭುತಗಳು” ಎನ್ನುವ ಮಾತನ್ನು “ನಿರೂಪಣೆಗಳು ಮತ್ತು ಆಶ್ಚರ್ಯ ಕಾರ್ಯಗಳು” ಅಥವಾ “ದೇವರ ಶಕ್ತಿಯನ್ನು ನಿರೂಪಣೆ ಮಾಡುವ ಅದ್ಭುತಕರವಾದ ಮಾತುಗಳು” ಅಥವಾ “ದೇವರು ಎಷ್ಟು ದೊಡ್ಡವನೆಂದು ತೋರಿಸುವ ಅದ್ಭುತಕರವಾದ ಆಶ್ಚರ್ಯ ಕಾರ್ಯಗಳು” ಎಂದೂ ಅನುವಾದ ಮಾಡಬಹುದು.
  • ಅದ್ಭುತಕರವಾದ ಸೂಚನೆಯ ಈ ಅರ್ಥಕ್ಕೂ ಯಾವುದಾದರೊಂದಕ್ಕೆ ಅಧಾರ ಕೊಡುವ ಅಥವಾ ನಿರೂಪಣೆ ಮಾಡುವ ಸೂಚನೆಯಿಂದ ಬರುವ ಅರ್ಥಕ್ಕೂ ವ್ಯತ್ಯಾಸವಿರುತ್ತದೆ. ಆದರೆ ಆ ಎರಡು ಒಂದಕ್ಕೊಂದು ಸಂಬಂಧಿತವಾಗಿರಬಹುದು.

(ಈ ಪದಗಳನ್ನು ಸಹ ನೋಡಿರಿ : ಶಕ್ತಿ, ಪ್ರವಾದಿ, ಅಪೊಸ್ತಲ, ಸೂಚಕ ಕ್ರಿಯೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 16:08 ಗಿದ್ಯೋನನು ದೇವರ ಬಳಿ ಎರಡು __ ಸೂಚಕ ಕ್ರಿಯೆಗಳನ್ನು __ ತೋರಿಸಲು ಕೇಳಿದನು, ಇದರಿಂದ ಅವನು ಇಸ್ರಾಯೇಲ್ಯರನ್ನು ಕಾಪಾಡುವುದಕ್ಕೆ ದೇವರು ತನ್ನನ್ನು ಉಪಯೋಗಿಸಿಕೊಳ್ಳುತ್ತಾರೆಂದು ಖಚಿತಪಡಿಸಿಕೊಳ್ಳಬಹುದು.
  • 19:14 ದೇವರು ಎಲೀಷನ ಮೂಲಕ ಅನೇಕವಾದ __ ಆಶ್ಚರ್ಯಕಾರ್ಯಗಳನ್ನು __ ಮಾಡಿದನು.
  • 37:10 ಈ __ ಆಶ್ಚರ್ಯಕಾರ್ಯದಿಂದಲೇ __ ಯೆಹೂದ್ಯರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆಯಿಟ್ಟರು.
  • 43:06 “ಇಸ್ರಾಯೇಲ್ ಜನಾಂಗದವರೇ, ನಿಮಗೆ ಗೊತ್ತಿರುವಂತೆಯೇ ಮತ್ತು ನೀವು ನೋಡಿರುವಂತೆಯೇ ದೇವರ ಶಕ್ತಿಯಿಂದ ಅನೇಕ __ ಸೂಚಕ ಕ್ರಿಯೆಗಳನ್ನು __ ಮತ್ತು __ ಅದ್ಭುತ ಕಾರ್ಯಗಳನ್ನು __ ಮಾಡಿದ ಯೇಸುವಾಗಿರುತ್ತಾನೆ.”
  • 49:02 ಯೇಸು ದೇವರೆಂದು ನಿರೂಪಿಸುವುದಕ್ಕೆ ಆತನು ಅನೇಕ __ ಆಶ್ಚರ್ಯಕಾರ್ಯಗಳನ್ನು __ ಮಾಡಿದನು. ಆತನು ನೀರಿನ ಮೇಲೆ ನಡೆದನು, ಬಿರುಗಾಳಿಯನ್ನು ಶಾಂತಗೊಳಿಸಿದನು, ಅನೇಕಮಂದಿ ರೋಗಿಗಳನ್ನು ಗುಣಪಡಿಸಿದನು, ದೆವ್ವಗಳನ್ನು ಹೋಗಲಾಡಿಸಿದನು, ಸತ್ತ ಜನರನ್ನು ಎಬ್ಬಿಸಿದನು, ಮತ್ತು ಐದು ರೊಟ್ಟಿ, ಎರಡು ಚಿಕ್ಕ ಮೀನುಗಳನ್ನು ತೆಗೆದುಕೊಂಡು ಸುಮಾರು 5,000 ಜನರಿಗೆ ಸಾಕಾದ ಆಹಾರವನ್ನು ಒದಗಿಸಿಕೊಟ್ಟನು.

ಪದ ಡೇಟಾ:

  • Strong's: H226, H852, H2368, H2858, H4150, H4159, H4864, H5251, H5824, H5953, H6381, H6382, H6383, H6395, H6725, H7560, H7583, H8047, H8074, H8539, H8540,, G880, G1213, G1229, G1411, G1569, G1718, G1770, G1839, G2285, G2296, G2297, G3167, G3902, G4591, G4592, G5059

ಪವಿತ್ರ ಸ್ಥಳ

ಪದದ ಅರ್ಥವಿವರಣೆ:

“ಪವಿತ್ರ ಸ್ಥಳ” ಎನ್ನುವ ಪದವನ್ನು ಅಕ್ಷರಾರ್ಥವಾಗಿ “ಪರಿಶುದ್ಧ ಸ್ಥಾನ” ಎಂದರ್ಥ ಮತ್ತು ಇದು ದೇವರು ಪರಿಶುದ್ಧ ಮಾಡಿದ ಮತ್ತು ಪವಿತ್ರ ಮಾಡಿದ ಸ್ಥಳವನ್ನು ಸೂಚಿಸುತ್ತದೆ. ಇದನ್ನು ಸಂರಕ್ಷಣೆ ಮತ್ತು ಭದ್ರತೆಯನ್ನು ಕೊಡುವ ಸ್ಥಳವನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ “ಪವಿತ್ರ ಸ್ಥಳ” ಎನ್ನುವ ಪದವನ್ನು ಅನೇಕಬಾರಿ “ಪರಿಶುದ್ಧ ಸ್ಥಳ” ಮತ್ತು “ಅತಿ ಪರಿಶುದ್ಧ ಸ್ಥಳ”ಗಳನ್ನು ಹೊಂದಿರುವ ದೇವಾಲಯ ಭವನವನ್ನು ಅಥವಾ ಗುಡಾರವನ್ನು ಸೂಚಿಸುತ್ತದೆ.
  • ದೇವರು ತನ್ನ ಇಸ್ರಾಯೇಲ್ ಜನರ ಮಧ್ಯೆದಲ್ಲಿ ನಿವಾಸ ಮಾಡುವ ಸ್ಥಳವನ್ನಾಗಿ ದೇವರು ಈ ಪವಿತ್ರವಾದ ಸ್ಥಳವನ್ನು ಸೂಚಿಸಿದ್ದಾನೆ.
  • ದೇವರು ತನ್ನನ್ನು ತಾನು “ಪವಿತ್ರ ಸ್ಥಳ” ಎಂಬುದಾಗಿ ಕರೆದುಕೊಂಡನು ಅಥವಾ ಜನರು ತಮಗೆ ಸಂರಕ್ಷಣೆಯನ್ನು ಕಂಡುಕೊಳ್ಳುವ ಭದ್ರತೆಯ ಸ್ಥಳವನ್ನಾಗಿ ಕರೆದುಕೊಂಡನು.

ಅನುವಾದ ಸಲಹೆಗಳು:

  • ಈ ಪದಕ್ಕೆ ಪ್ರಾಥಮಿಕ ಅರ್ಥವು “ಪರಿಶುದ್ಧ ಸ್ಥಳವು” ಅಥವಾ “ಪ್ರತ್ಯೇಕಿಸಲ್ಪಟ್ಟ ಸ್ಥಳ” ಎಂದಾಗಿರುತ್ತದೆ.
  • ಸಂದರ್ಭಾನುಸಾರವಾಗಿ, “ಪವಿತ್ರ ಸ್ಥಳ” ಎನ್ನುವ ಮಾತನ್ನು “ಪರಿಶುದ್ಧ ಸ್ಥಳ” ಅಥವಾ “ಪವಿತ್ರ ಭವನ” ಅಥವಾ “ದೇವರ ನಿವಾಸವಾಗುವ ಪರಿಶುದ್ಧವಾದ ಸ್ಥಳ” ಅಥವಾ “ಸಂರಕ್ಷಣೆಯ ಪರಿಶುದ್ಧವಾದ ಸ್ಥಳ” ಅಥವಾ “ಭದ್ರತೆಯ ಪರಿಶುದ್ಧ ಸ್ಥಳ” ಎಂದೂ ಅನುವಾದ ಮಾಡಬಹುದು.
  • “ಪವಿತ್ರವಾದ ಶೆಕೆಲ್” ಎನ್ನುವ ಮಾತನ್ನು “ಗುಡಾರಕ್ಕಾಗಿ ಕೊಡಲ್ಪಡುವ ಒಂದು ವಿಧವಾದ ಶೆಕೆಲ್” ಅಥವಾ “ದೇವಾಲಯವನ್ನು ನೋಡಿಕೊಳ್ಳುವುದಕ್ಕೆ ತೆರಿಗೆ ಕಟ್ಟುವುದರಲ್ಲಿ ಉಪಯೋಗಿಸುವ ಶೆಕೆಲ್” ಎಂದೂ ಅನುವಾದ ಮಾಡಬಹುದು.
  • ಗಮನಿಸಿ: ಈ ಪದಕ್ಕೆ ಮಾಡಿದ ಅನುವಾದವು ಈಗಿನ ಆಧುನಿಕ ಸಭೆಯಲ್ಲಿ ಆರಾಧನೆ ಮಾಡುವುದಕ್ಕೆ ಉಪಯೋಗಿಸುವ ಕೊಠಡಿಯನ್ನು ಸೂಚಿಸದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ, ಪವಿತ್ರಾತ್ಮ, ಪರಿಶುದ್ಧ, ಪ್ರತ್ಯೇಕಿಸು, ಗುಡಾರ, ತೆರಿಗೆ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4720, H6944, G39

ಪವಿತ್ರಾತ್ಮ, ದೇವರ ಆತ್ಮ, ಕರ್ತನ ಆತ್ಮ, ಆತ್ಮ

ಸತ್ಯಾಂಶಗಳು:

ಈ ಎಲ್ಲಾ ಪದಗಳು ದೇವರಾಗಿರುವ ಪವಿತ್ರಾತ್ಮನನ್ನು ಸೂಚಿಸುತ್ತವೆ. ಒಬ್ಬರಾದ ನಿಜವಾದ ದೇವರು ನಿತ್ಯತ್ವದಲ್ಲಿ ತಂದೆ, ಮಗ ಮತ್ತು ಪವಿತ್ರಾತ್ಮರಾಗಿ ಅಸ್ತಿತ್ವದಲ್ಲಿದ್ದಾರೆ.

  • ಪವಿತ್ರಾತ್ಮನನ್ನು “ಆತ್ಮ”, “ಯೆಹೋವನ ಆತ್ಮ” ಮತ್ತು “ಸತ್ಯದ ಆತ್ಮ” ಎಂಬುದಾಗಿಯೂ ಸೂಚಿಸುತ್ತದೆ.
  • ಯಾಕಂದರೆ ಪವಿತ್ರಾತ್ಮನು ದೇವರಾಗಿದ್ದಾರೆ, ಆತನು ಪರಿಪೂರ್ಣವಾದ ಪವಿತ್ರತೆ, ಅನಂತವಾದ ಶುದ್ಧತೆ, ಮತ್ತು ಆತನ ಸ್ವಭಾವದಲ್ಲಿ , ಆತನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನೈತಿಕವಾದ ಪರಿಪೂರ್ಣತೆಯನ್ನು ಹೊಂದಿರುತ್ತಾನೆ.
  • ತಂದೆ ಮತ್ತು ಮ್ಗನೊಂದಿಗೆ, ಪವಿತ್ರಾತ್ಮನು ಸರ್ವ ಸೃಷ್ಟಿಯನ್ನುಂಟು ಮಾಡುವದರಲ್ಲಿ ಸಕ್ರಿಯವಾಗಿದ್ದನು.
  • ದೇವರ ಮಗನಾಗಿರುವ ಯೇಸು ಪರಲೋಕಕ್ಕೆ ಹೋದಾಗ, ದೇವರು ತನ್ನ ಜನರನ್ನು ನಡೆಸುವುದಕ್ಕೆ, ಬೋಧಿಸುವುದಕ್ಕೆ, ಆದರಿಸುವುದಕ್ಕೆ ಮತ್ತು ದೇವರ ಚಿತ್ತವನ್ನು ಮಾಡಲು ಅವರನ್ನು ಬಲಪಡಿಸುವುದಕ್ಕೆ ಪವಿತ್ರಾತ್ಮನನ್ನು ಕಳುಹಿಸಿಕೊಟ್ಟನು.
  • ಪವಿತ್ರಾತ್ಮನು ಯೇಸುವನ್ನು ನಡೆಸಿದನು ಮತ್ತು ಆತನು ಯೇಸುವಿನಲ್ಲಿ ನಂಬಿದ ಪ್ರತಿಯೊಬ್ಬರನ್ನು ನಡೆಸುತ್ತಾನೆ.

ಅನುವಾದ ಸಲಹೆಗಳು:

  • ಈ ಪದವನ್ನು “ಪವಿತ್ರ” ಮತ್ತು “ಆತ್ಮ” ಎನ್ನುವ ಈ ಪದಗಳಂತೆಯೇ ಸುಲಭವಾದ ಪದದೊಂದಿಗೆ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಪವಿತ್ರ ಆತ್ಮ” ಅಥವಾ “ಪರಿಶುದ್ಧನಾಗಿರುವ ಆತ್ಮ” ಅಥವಾ “ಆತ್ಮ ದೇವರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ, ಆತ್ಮ, ದೇವರು, ಕರ್ತನು, ತಂದೆಯಾದ ದೇವರು, ದೇವರ ಮಗ, ವರ)

ಸತ್ಯವೇದದ ಅನುಬಂಧ ವಾಕ್ಯಗಳ :

ಸತ್ಯವೇದದಿಂದ ಉದಾಹರಣೆಗಳು:

  • 01:01 ಆದರೆ __ ದೇವರ ಆತ್ಮವು __ ನೀರಿನ ಮೇಲೆ ಚಲಿಸುತ್ತಿತ್ತು.
  • 24:08 ಯೇಸುವು ದೀಕ್ಷಾಸ್ನಾನ ಪಡೆದು ನೀರಿನೊಳಗಿಂದ ಹೊರ ಬಂದಾಗ, __ ದೇವರ ಆತ್ಮವು __ ಪಾರಿವಾಳದ ಆಕಾರದಲ್ಲಿ ಕಾಣಿಸಿಕೊಂಡಿತು ಮತ್ತು ಇಳಿದು ಬಂದು, ಆತನ ಮೇಲೆ ಇಳಿಯಿತ್ತು.
  • 26:01 ಸೈತಾನನ ಶೋಧನೆಗಳನ್ನು ಜಯಿಸಿದ ನಂತರ, ಯೇಸು ತಾನು ನಿವಾಸವಾಗಿದ್ದ ಗಲಿಲಾಯ ಸೀಮೆಗೆ __ ಪವಿತ್ರಾತ್ಮನ __ ಶಕ್ತಿಯೊಂದಿಗೆ ಹಿಂದುರಿಗಿದನು.
  • 26:03 “ದೇವರು ತನ್ನ __ ಆತ್ಮವನ್ನು __ ನನಗೆ ಕೊಟ್ಟಿದ್ದಾನೆ, ಆದ್ದರಿಂದ ನಾನು ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕೆ, ಸೆರೆಯಲ್ಲಿರುವವರನ್ನು ಬಿಡುಗಡೆ ಮಾಡುವುದಕ್ಕೆ, ಕುರುಡರಿಗೆ ಕಣ್ಣು ಕೊಡುವುದಕ್ಕೆ, ಹಿಂಸಿಸಲ್ಪಟ್ಟವರನ್ನು ಬಿಡಿಸುವುದಕ್ಕೆ ಆತನು ನನ್ನನ್ನು ಕಳುಹಿಸಿದನು.
  • 42:10 “ಹೋಗಿರಿ, ಸಮಸ್ತ ಜನರ ಗುಂಪುಗಳನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ತಂದೆ, ಮಗ, ಮತ್ತು __ ಪವಿತ್ರಾತ್ಮನ __ ಹೆಸರಿನಲ್ಲಿ ದೀಕ್ಷಾಸ್ನಾನ ಕೊಟ್ಟು, ನಾನು ನಿಮಗೆ ಆಜ್ಞಾಪಿಸಿದ ಪ್ರತಿಯೊಂದಕ್ಕೆ ವಿಧೇಯರಾಗಬೇಕೆಂದು ಅವರಿಗೆ ಬೋಧಿಸಿರಿ.
  • 43:03 ಅವರೆಲ್ಲರು __ ಪವಿತ್ರಾತ್ಮನೊಂದಿಗೆ __ ತುಂಬಿಸಲ್ಪಟ್ಟರು ಮತ್ತು ಅವರು ಅನ್ಯ ಭಾಷೆಗಳಲ್ಲಿ ಮಾತನಾಡುವುದಕ್ಕೆ ಆರಂಭಿಸಿದರು.
  • 43:08 “ಯೇಸು ವಾಗ್ಧಾನ ಮಾಡಿದಂತೆಯೇ ಆತನು __ ಪವಿತ್ರಾತ್ಮನನ್ನು __ ಕಳುಹಿಸಿದನು. ನೀವೀಗ ನೋಡುತ್ತಿರುವ ಮತ್ತು ಕೇಳುತ್ತಿರುವ ಕಾರ್ಯಗಳನ್ನು ಮಾಡುತ್ತಿರುವುದು ಪವಿತ್ರಾತ್ಮ ದೇವರೇ .”
  • 43:11 “ನಿಮ್ಮಲ್ಲಿ ಪ್ರತಿಯೊಬ್ಬರು ಮಾನಸಾಂತರ ಹೊಂದಿ, ಯೇಸು ಕ್ರಿಸ್ತನ ನಾಮದಲ್ಲಿ ದೀಕ್ಷಾಸ್ನಾನ ಹೊಂದಬೇಕು, ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾರೆ. ಇದಾದನಂತರ ಆತನು ನಿಮಗೆ ಪವಿತ್ರಾತ್ಮನ __ ವರವನ್ನು ಕೊಡುತ್ತಾನೆ __.”
  • 45:01 ಆತನು (ಸ್ತೆಫೆನ) ಒಳ್ಳೇಯ ಸಾಕ್ಷ್ಯವನ್ನು ಹೊಂದಿದ್ದನು, ಮತ್ತು __ ಪವಿತ್ರಾತ್ಮನಿಂದಲೂ __, ಜ್ಞಾನದಿಂದಲೂ ತುಂಬಿಸಲ್ಪಟ್ಟಿದ್ದನು.

ಪದ ಡೇಟಾ:

  • Strong's: H3068, H6944, H7307, G40, G4151

ಪವಿತ್ರಾತ್ಮನಿಂದ ತುಂಬಿಸಲ್ಪಡುವುದು

ಪದದ ಅರ್ಥವಿವರಣೆ:

ದೇವರ ಚಿತ್ತವನ್ನು ನೆರವೇರಿಸುವಂತೆ ಪವಿತ್ರಾತ್ಮನು ಒಬ್ಬ ವ್ಯಕ್ತಿಗೆ ಶಕ್ತಿಯನ್ನು ನೀಡುತ್ತಾನೆ ಎಂದು ಹೇಳಲು “ಪವಿತ್ರಾತ್ಮನಿಂದ ತುಂಬಿಸಲ್ಪಡುವುದು” ಎನ್ನುವ ವಾಕ್ಯವು ಅಲಂಕಾರಿಕ ರೂಪದಲ್ಲಿ ಉಪಯೋಗಿಸಲ್ಪಟ್ಟಿದೆ,

  • “ತುಂಬಿಸಲ್ಪಟ್ಟ” ಎನ್ನುವ ಪದವು ಅನೇಕಬಾರಿ “ನಿಯಂತ್ರಿಸಲ್ಪಟ್ಟ” ಎಂದು ಅರ್ಥವಾಗಿರುತ್ತದೆ.
  • ಜನರು ಪವಿತ್ರಾತ್ಮನ ನಾಯಕತ್ವದಲ್ಲಿ ನಡೆಯುವಾಗ ಮತ್ತು ದೇವರು ಏನು ಬಯಸುತ್ತಾನೋ ಅದನ್ನು ಮಾಡಲು ಆತನನ್ನು ಸಂಪೂರ್ಣವಾಗಿ ಅವಲಂಬಿಸಿದರೆ ಅವರು “ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದಾರೆ” ಎಂದರ್ಥ.

ಅನುವಾದ ಸಲಹೆಗಳು:

  • ಈ ವಾಕ್ಯವನ್ನು “ಪವಿತ್ರಾತ್ಮನಿಂದ ಶಕ್ತಿಹೊಂದಿರುವುದು” ಅಥವಾ “ಪವಿತ್ರಾತ್ಮ ಸ್ವಾಧೀನದಲ್ಲಿರುವುದು” ಎಂದು ಅನುವಾದ ಮಾಡಬಹುದು. ಆದರೆ ಪವಿತ್ರಾತ್ಮನು ಬಲವಂತವಾಗಿ ಅವರು ಕೆಲಸಮಾಡುವಂತೆ ಮಾಡುತ್ತಿದ್ದಾನೆಂದು ಅರ್ಥಬರೆದಂತೆ ಗಮನವಹಿಸಿರಿ.
  • “ಅವನು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದಾನೆ” ಎನ್ನುವ ವಾಕ್ಯವನ್ನು “ಪವಿತ್ರಾತ್ಮನ ಶಕ್ತಿಯಿಂದಲೇ ಅವನು ಜೀವಿಸುತ್ತಿದ್ದಾನೆ” ಅಥವಾ “ಅವನು ಪವಿತ್ರಾತ್ಮನಿಂದ ನಡೆಸಲ್ಪಡುತ್ತಿದ್ದಾನೆ” ಅಥವಾ “ಪವಿತ್ರಾತ್ಮನು ಅವನನ್ನು ಸಂಪೂರ್ಣವಾಗಿ ನಡೆಸುತ್ತಿದ್ದಾನೆ” ಎಂದು ಅನುವಾದ ಮಾಡಬಹುದು.
  • “ಆತ್ಮನಲ್ಲಿ ಜೀವಿಸು” ಎನ್ನುವ ಸಮಾನಾರ್ಥವನ್ನು ಈ ಭಾವನೆ ನೀಡುತ್ತಿದೆ ಆದರೆ “ಪವಿತ್ರಾತ್ಮನಿಂದ ತುಂಬಿಸಲ್ಪಡುವುದು” ಎನ್ನುವ ವಾಕ್ಯವು ಒಬ್ಬ ವ್ಯಕ್ತಿ ಜೀವನದಲ್ಲಿ ಸಂಪೂರ್ಣವಾಗಿ ಪವಿತ್ರಾತ್ಮನೇ ನಡೆಸುತ್ತಿದ್ದಾನೆ ಎನ್ನುವ ಪರಿಪೂರ್ಣತೆಯನ್ನು ಒತ್ತಾಯಿಸಿ ಹೇಳುತ್ತಿದೆ. ಆದಕಾರಣ ಈ ಎರಡು ಭಾವನೆಗಳನ್ನು ಬೇರೆ ಬೇರೆಯಾಗಿ ಅನುವಾದ ಮಾಡಬೇಕು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮನು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G40, G4130, G4137, G4151

ಪವಿತ್ರೀಕರಿಸು, ಪವಿತ್ರೀಕರಿಸುವುದು

ಪದದ ಅರ್ಥವಿವರಣೆ:

ಪವಿತ್ರೀಕರಿಸು ಎಂದರೆ ಪರಿಶುದ್ಧವನ್ನಾಗಿ ಮಾಡು ಅಥವಾ ಪ್ರತ್ಯೇಕಿಸು ಎಂದರ್ಥ. ಪವಿತ್ರೀಕರಣ ಎನ್ನುವುದು ಪರಿಶುದ್ಧವನ್ನಾಗಿ ಮಾಡುವ ವಿಧಾನ ಎಂದರ್ಥ.

  • ಹಳೇ ಒಡಂಬಡಿಕೆಯಲ್ಲಿ ದೇವರ ಸೇವೆಗಾಗಿ ಕೆಲವೊಂದು ನಿರ್ದಿಷ್ಟವಾದ ಜನರು ಮತ್ತು ವಸ್ತುಗಳು ಪವಿತ್ರೀಕರಿಸಲ್ಪಡುತ್ತವೆ, ಅಥವಾ ಪ್ರತ್ಯೇಕಿಸಲ್ಪಡುತ್ತವೆ.
  • ಯೇಸುವಿನಲ್ಲಿ ನಂಬಿದ ಜನರನ್ನು ದೇವರು ಪವಿತ್ರೀಕರಿಸುವರೆಂದು ಹೊಸ ಒಡಂಬಡಿಕೆ ಬೋಧಿಸುತ್ತದೆ. ಆತನಿಗೆ ಸೇವೆ ಮಾಡುವುದಕ್ಕೆ ಆತನು ಅವರನ್ನು ಪ್ರತ್ಯೇಕಿಸುವನು ಮತ್ತು ಪರಿಶುದ್ಧಗೊಳಿಸುವನು.
  • ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಜನರು ತಮ್ಮನ್ನು ತಾವು ದೇವರಿಗಾಗಿ ಪವಿತ್ರೀಕರಿಸಿಕೊಳ್ಳಬೇಕೆಂದು, ಅವರು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಪರಿಶುದ್ಧರಾಗಿರಬೇಕೆನ್ನುವ ಆಜ್ಞೆಯನ್ನು ಹೊಂದಿರುತ್ತಾರೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಪವಿತ್ರೀಕರಿಸು” ಎನ್ನುವ ಪದವನ್ನು “ಪ್ರತ್ಯೇಕಿಸು” ಅಥವಾ “ಪರಿಶುದ್ಧವನ್ನಾಗಿ ಮಾಡು” ಅಥವಾ “ಶುದ್ಧೀಕರಿಸು” ಎಂದೂ ಅನುವಾದ ಮಾಡಬಹುದು.
  • ಜನರು ತಮ್ಮನ್ನು ತಾವು ಪವಿತ್ರೀಕರಿಸಿಕೊಳ್ಳುವಾಗ, ಅವರು ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುವರು ಮತ್ತು ದೇವರಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವರು. ಇದೇ ಅರ್ಥವನ್ನು ಹೊಂದಿರುವ ಪದವಾಗಿರುವ “ಪ್ರತಿಷ್ಠಾಪಿಸು” ಎನ್ನುವ ಪದವನ್ನು ಸತ್ಯವೇದದಲ್ಲಿ ಉಪಯೋಗಿಸಿರುತ್ತಾರೆ.
  • ಇದರ ಅರ್ಥವು “ಪ್ರತಿಷ್ಠಾಪಿಸು” ಎಂದಾಗಿದ್ದಾಗ, ಈ ಪದವನ್ನು “ದೇವರ ಸೇವೆಗಾಗಿ ಯಾರಾದರೊಬ್ಬರನ್ನು (ಅಥವಾ ಯಾವುದಾದರೊಂದನ್ನು) ಪ್ರತಿಷ್ಠೆ ಮಾಡು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ನಿನ್ನ ಪವಿತ್ರೀಕರಣ” ಎನ್ನುವ ಮಾತನ್ನು “ನಿನ್ನನ್ನು ಪರಿಶುದ್ಧ ಮಾಡುವುದು” ಅಥವಾ “(ದೇವರಿಗಾಗಿ) ನಿನ್ನನ್ನು ಪ್ರತ್ಯೇಕಿಸುವುದು” ಅಥವಾ “ನಿನ್ನನ್ನು ಪರಿಶುದ್ಧ ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರತಿಷ್ಠಾಪಿಸು, ಪರಿಶುದ್ಧ, ಪ್ರತ್ಯೇಕಿಸಿಕೋ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H6942, G37, G38

ಪಶ್ಚಾತ್ತಾಪ ಹೊಂದು, ಪಶ್ಚಾತ್ತಾಪಪಡಿಸುವುದು, ಪಶ್ಚಾತ್ತಾಪಪಡಿಸಲಾಗಿದೆ, ಪಶ್ಚಾತ್ತಾಪ

ಪದದ ಅರ್ಥವಿವರಣೆ:

“ಪಶ್ಚಾತ್ತಾಪ ಹೊಂದು” ಮತ್ತು “ಪಶ್ಚಾತ್ತಾಪ” ಎನ್ನುವ ಪದಗಳು ಪಾಪದಿಂದ ಮರಳಿಕೋ ಮತ್ತು ತಿರುಗಿ ದೇವರ ಬಳಿಗೆ ಬಾ ಎನ್ನುವುದನ್ನೇ ಸೂಚಿಸುತ್ತವೆ.

  • “ಪಶ್ಚಾತ್ತಾಪ ಹೊಂದು” ಎನ್ನುವುದಕ್ಕೆ ಆಕ್ಷರಾರ್ಥವು “ಒಬ್ಬರ ಮನಸ್ಸನ್ನು ಮಾರ್ಪಡಿಸು” ಎಂದರ್ಥವಾಗಿರುತ್ತದೆ.
  • ಸತ್ಯವೇದದಲ್ಲಿ “ಪಶ್ಚಾತ್ತಾಪ ಹೊಂದು” ಎನ್ನುವ ಮಾತು ಸಾಧಾರಣವಾಗಿ ಪಾಪ ಸ್ವಭಾವದಿಂದ, ಆಲೋಚನೆ ಮತ್ತು ಕ್ರಿಯೆಯ ಮಾನವ ವಿಧಾನದಿಂದ ತಿರುಗಿಕೊಳ್ಳುವುದನ್ನು, ಮತ್ತು ದೇವರ ವಿಧಾನದ ಆಲೋಚನೆ ಮತ್ತು ಕ್ರಿಯೆಗಳ ಕಡೆಗೆ ತಿರುಗಿಕೊಳ್ಳುವುದನ್ನು ಸೂಚಿಸುತ್ತದೆ.
  • ಜನರು ತಮ್ಮ ಪಾಪಗಳ ವಿಷಯದಲ್ಲಿ ನಿಜವಾಗಿ ಪಶ್ಚಾತ್ತಾಪಪಟ್ಟಿದ್ದರೆ, ದೇವರು ಅವರನ್ನು ಕ್ಷಮಿಸುತ್ತಾರೆ ಮತ್ತು ಅವರು ಆತನಿಗೆ ವಿಧೇಯತೆ ತೋರಿಸುವುದಕ್ಕೆ ಆರಂಭಿಸಲು ಸಹಾಯ ಮಾಡುತ್ತಾರೆ.

ಅನುವಾದ ಸಲಹೆಗಳು:

  • “ಪಶ್ಚಾತ್ತಾಪ ಹೊಂದು” ಎನ್ನುವ ಮಾತನ್ನು “(ದೇವರ ಕಡೆಗೆ) ತಿರುಗಿಕೋ” ಅಥವಾ “ಪಾಪದಿಂದ ತಿರುಗಿಕೊಂಡು, ದೇವರ ಕಡೆಗೆ ಮರಳುವುದು” ಅಥವಾ “ದೇವರ ಕಡೆಗೆ ತಿರುಗಿಕೊಂಡು, ಪಾಪದಿಂದ ದೂರಾಗುವುದು” ಎನ್ನುವ ಅರ್ಥಗಳು ಬರುವ ಮಾತುಗಳಿಂದ ಅನುವಾದ ಮಾಡಬಹುದು.
  • “ಪಶ್ಚಾತ್ತಾಪ “ ಎನ್ನುವ ಪದವನ್ನು ಅನೇಕಬಾರಿ “ಪಶ್ಚಾತ್ತಾಪ ಹೊಂದು” ಎನ್ನುವ ಕ್ರಿಯಾಪದದೊಂದಿಗೆ ಅನುವಾದ ಮಾಡಬಹುದು. ಉದಾಹರಣೆಗೆ, “ದೇವರು ಇಸ್ರಾಯೇಲ್ಯರಿಗೆ ಪಶ್ಚಾತ್ತಾಪವನ್ನು ಅನುಗ್ರಹಿಸಿದ್ದಾರೆ” ಎನ್ನುವ ಮಾತನ್ನು “ಇಸ್ರಾಯೇಲ್ ಪಶ್ಚಾತ್ತಾಪ ಹೊಂದಲು ದೇವರೇ ಬಲಗೊಳಿಸಿದ್ದಾರೆ” ಎಂದೂ ಅನುವಾದ ಮಾಡಬಹುದು.
  • “ಪಶ್ಚಾತ್ತಾಪ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಪಾಪದಿಂದ ತಿರುಗಿಕೋ” ಅಥವಾ “ಪಾಪದಿಂದ ದೂರಾಗಿ, ದೇವರ ಕಡೆಗೆ ತಿರುಗಿಕೊಳ್ಳುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕ್ಷಮಿಸು, ಪಾಪ, ತಿರುಗು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 16:02 ಅನೇಕವರ್ಷಗಳು ದೇವರಿಗೆ ಅವಿಧೇಯತೆಯನ್ನು ತೋರಿಸದ ಮೇಲೆ ಮತ್ತು ತಮ್ಮ ಶತ್ರುಗಳಿಂದ ಒತ್ತಡಕ್ಕೆ ಗುರಿ ಮಾಡಿದ ಮೇಲೆ, ಇಸ್ರಾಯೇಲ್ಯರು ___ ಪಶಾತ್ತಾಪ ಹೊಂದಿದರು ___ ಮತ್ತು ತಮ್ಮನ್ನು ರಕ್ಷಿಸಬೇಕೆಂದು ದೇವರಲ್ಲಿ ಕೇಳಿಕೊಂಡರು.
  • 17:13 ದಾವೀದನು ತನ್ನ ಪಾಪದ ಕುರಿತು ___ ಪಶ್ಚಾತ್ತಾಪ ಹೊಂದಿದನು ___ ಮತ್ತು ದೇವರು ಅವನನ್ನು ಕ್ಷಮಿಸಿದನು.
  • 19:18 ಅವರು ___ ಪಶ್ಚಾತ್ತಾಪ ಹೊಂದದಿದ್ದರೆ ___ ದೇವರು ಅವರನ್ನು ನಾಶಗೊಳಿಸುತ್ತಾರೆಂದು ಅವರು (ಪ್ರವಾದಿಗಳು) ಜನರನ್ನು ಎಚ್ಚರಿಸಿದರು.
  • 24:02 ಅನೇಕರು ಯೋಹಾನನ ಮಾತುಗಳನ್ನು ಕೇಳಲು ಅರಣ್ಯಕ್ಕೆ ಬಂದರು. “ ಪಶ್ಚಾತ್ತಾಪ ಹೊಂದಿರಿ , ದೇವರ ರಾಜ್ಯವು ಸಮೀಪವಾಗಿದೆ!” ಎಂದೂ ಹೇಳುತ್ತಾ ಆತನು ಅವರಿಗೆ ಪ್ರಕಟಿಸಿದನು.
  • 42:08 “ಪ್ರತಿಯೊಬ್ಬರು ತಮ್ಮ ಪಾಪಗಳಿಗೆ ಕ್ಷಮೆಯನ್ನು ___ ಪಡೆದುಕೊಳ್ಳುವುದಕ್ಕೆ ___ ಪ್ರತಿಯೊಬ್ಬರು ಪಶ್ಚಾತ್ತಾಪ ಹೊಂದಬೇಕೆಂದು ನನ್ನ ಶಿಷ್ಯರು ಪ್ರಕಟಿಸುವರು ಎಂದು ಲೇಖನಗಳಲ್ಲಿ ಕೂಡ ಬರೆಯಲ್ಪಟ್ಟಿರುತ್ತದೆ.”
  • 44:05 “ಆದ್ದರಿಂದ ಈಗ, ___ ಪಶ್ಚಾತ್ತಾಪ ಹೊಂದಿರಿ ___ ಮತ್ತು ದೇವರ ಕಡೆಗೆ ತಿರುಗಿಕೊಳ್ಳಿರಿ, ಇದರಿಂದ ನಿಮ್ಮ ಪಾಪಗಳು ತೊಳೆಯಲ್ಪಡುತ್ತವೆ.”

ಪದ ಡೇಟಾ:

  • Strong's: H5150, H5162, H5164, G278, G3338, G3340, G3341

ಪಸ್ಕ

ಸತ್ಯಾಂಶಗಳು:

“ಪಸ್ಕ” ಎನ್ನುವುದು ಪ್ರತಿ ವರ್ಷ ಯೆಹೂದ್ಯರು ಆಚರಿಸುವ ಧಾರ್ಮಿಕ ಹಬ್ಬದ ಹೆಸರಾಗಿರುತ್ತದೆ, ಐಗುಪ್ತದಲ್ಲಿ ಗುಲಾಮಗಿರಿಯಿಂದ ತಮ್ಮ ಪೂರ್ವಜರಾದ ಇಸ್ರಾಯೇಲ್ಯರನ್ನು ದೇವರು ಯಾವರೀತಿ ರಕ್ಷಿಸಿದ್ದಾರೆಂದು ನೆನಪು ಮಾಡಿಕೊಳ್ಳುವುದಕ್ಕೆ ಈ ಹಬ್ಬವನ್ನು ಮಾಡುತ್ತಾರೆ.

  • ಈ ಹಬ್ಬದ ಹೆಸರು ದೇವರು ಇಸ್ರಾಯೇಲ್ಯರ ಮನೆಗಳನ್ನು “ದಾಟಿ ಹೋಗಿದ್ದಾನೆ”, ಅವರ ಮಕ್ಕಳನ್ನು ಸಾಯಿಸಲಿಲ್ಲ, ಆದರೆ ಐಗುಪ್ತರ ಮೊದಲ ಸಂತಾನವಾಗಿರುವ ಗಂಡು ಮಕ್ಕಳನ್ನು ಸಾಯಿಸಿದನು ಎನ್ನುವ ಸತ್ಯದ ಘಟನೆಯೊಳಗಿಂದ ಬಂದಿದ್ದಾಗಿರುತ್ತದೆ.
  • ಪಸ್ಕ ಆಚರಣೆಯಲ್ಲಿ ಅವರು ಕೊಂದು, ಚೆನ್ನಾಗಿ ಸುಟ್ಟ ಪರಿಪೂರ್ಣವಾದ ಕುರಿಮರಿ ವಿಶೇಷವಾದ ಊಟ ಮತ್ತು ಅದರೊಂದಿಗೆ ಹುಳಿಯಿಲ್ಲದ ರೊಟ್ಟಿಯನ್ನು ಹೊಂದಿರುತ್ತಾರೆ. ಐಗುಪ್ತದಿಂದ ಇಸ್ರಾಯೇಲ್ಯರು ರಕ್ಷಿಸಲ್ಪಟ್ಟ ದಿನದ ಮುಂಚಿನ ರಾತ್ರಿ ಅವರು ಊಟ ಮಾಡಿದ ಊಟವನ್ನು ಈ ಆಹಾರ ಪದಾರ್ಥಗಳು ಜ್ಞಾಪಕ ಮಾಡುತ್ತವೆ.
  • ಇಸ್ರಾಯೇಲ್ಯರ ಮನೆಗಳನ್ನು ದೇವರು ಹೇಗೆ “ದಾಟಿ ಹೋದರು” ಎಂದು ಆಚರಿಸಿಕೊಳ್ಳಬೇಕೆಂದು ಮತ್ತು ಐಗುಪ್ತದಲ್ಲಿರುವ ಗುಲಾಮಗಿರಿಯಿಂದ ಆತನು ಹೇಗೆ ಬಿಡುಗಡೆಗೊಳಿಸಿದನೆಂದು ಜ್ಞಾಪಕ ಮಾಡಿಕೊಳ್ಳುವುದರ ಕ್ರಮದಲ್ಲಿ ಪ್ರತಿ ವರ್ಷವು ಈ ಊಟವನ್ನು ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು

ಅನುವಾದ ಸಲಹೆಗಳು:

  • “ಪಸ್ಕ” ಎನ್ನುವ ಪದವನ್ನು “ದಾಟು” ಮತ್ತು “ಹಾದು ಹೋಗು” ಅಥವಾ ಇದೇ ಅರ್ಥಬರುವ ಬೇರೊಂದು ಪದಗಳಿಂದ ಅನುವಾದ ಮಾಡಬಹುದು.
  • ಈ ಹಬ್ಬದ ಹೆಸರು ಇಸ್ರಾಯೇಲ್ಯರ ಮಕ್ಕಳನ್ನು ಸಂರಕ್ಷಿಸುತ್ತಾ, ಅವರ ಮನೆಗಳನ್ನು ದಾಟಿ ಹೋಗುವುದರಲ್ಲಿ ಕರ್ತನ ದೂತ ಏನು ಮಾಡಿತೆಂದು ವಿವರಿಸುವುದಕ್ಕೆ ಉಪಯೋಗಿಸುವ ಪದಗಳೊಂದಿಗೆ ಸ್ಪಷ್ಟವಾದ ಸಂಬಂಧವನ್ನು ಹೊಂದಿದ್ದರೆ ಎಷ್ಟೋ ಸಹಾಯಕವಾಗಿರುತ್ತದೆ.

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 12:14 ಐಗುಪ್ತರ ಮೇಲೆ ದೇವರ ಜಯವನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕೆ ಮತ್ತು ಪ್ರತಿ ವರ್ಷ __ ಪಸ್ಕ __ ಹಬ್ಬವನ್ನು ಆಚರಿಸುವುದರ ಮೂಲಕ ಗುಲಾಮಗಿರಿಯಿಂದ ಅವರ ಬಿಡುಗಡೆಯನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕೆ ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು.
  • 38:01 ಪ್ರತಿ ವರ್ಷ ಯೆಹೂದ್ಯರು __ ಪಸ್ಕವನ್ನು __ ಆಚರಿಸಿದರು. ಅನೇಕ ಶತಾಬ್ದಗಳಿಂದ ಐಗುಪ್ತದಲ್ಲಿರುವ ಗುಲಾಮಗಿರಿಯಿಂದ ತಮ್ಮ ಪೂರ್ವಜರನ್ನು ದೇವರು ಹೇಗೆ ರಕ್ಷಿಸಿದರೆನ್ನುವುದರ ಕುರಿತಾಗಿಯೇ ಈ ಆಚರಣೆಯಾಗಿತ್ತು.
  • 38:04 ಯೇಸು ತನ್ನ ಶಿಷ್ಯರೊಂದಿಗೆ __ ಪಸ್ಕವನ್ನು __ ಆಚರಿಸಿದರು.
  • 48:09 ದೇವರು ರಕ್ತವನ್ನು ನೋಡಿದಾಗ, ಅವರ ಮನೆಗಳಿಂದ ಆತನು ಹಾದು ಹೋದನು ಮತ್ತು ಅವರ ಚೊಚ್ಚಲ ಮಕ್ಕಳನ್ನು ಸಾಯಿಸಲಿಲ್ಲ. ಈ ಸಂಘಟನೆಯನ್ನು __ ಪಸ್ಕ __ ಎಂದು ಕರೆಯುತ್ತಾರೆ.
  • 48:10 ಯೇಸು ನಮ್ಮ __ ಪಸ್ಕ __ ಕುರಿಮರಿಯಾಗಿದ್ದಾನೆ. ಈತನು ಪರಿಪೂರ್ಣನು ಮತ್ತು ಪಾಪರಹಿತನು ಆಗಿದ್ದನು, ಮತ್ತು __ ಪಸ್ಕ __ ಆಚರಣೆಯ ಸಮಯದಲ್ಲಿಯೇ ಆತನನ್ನು ಸಾಯಿಸಿದ್ದರು.

ಪದ ಡೇಟಾ:

  • Strong's: H6453, G3957

ಪಾತಾಳ (ಹೇಡೆಸ್), ಸಮಾಧಿ (ಷಿಯೋಲ್)

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟ “ಪಾತಾಳ” ಮತ್ತು “ಸಮಾಧಿ” ಎನ್ನುವವುಗಳು ಜನರ ಮರಣವನ್ನು ಮತ್ತು ಮರಣದನಂತರ ಜನರ ಆತ್ಮಗಳು ಹೋಗಿ ಸೇರುವ ಸ್ಥಳವನ್ನು ಸೂಚಿಸುತ್ತವೆ. ಅವುಗಳ ಅರ್ಥವು ಒಂದೇಯಾಗಿರುತ್ತದೆ.

  • ಇಬ್ರಿ ಪದವಾದ “ಷಿಯೋಲ್” ಎನ್ನುವ ಪದವು ಹಳೇ ಒಡಂಬಡಿಕೆಯಲ್ಲಿ ಉಪಯೋಗಿಸಲಾಗಿರುತ್ತದೆ, ಇದು ಸಾಧಾರಣವಾಗಿ ಮರಣದ ಸ್ಥಳವನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಗ್ರೀಕ್ ಪದವಾದ “ಹೇಡೆಸ್” (ಅಥವಾ ಪಾತಾಳ) ಎನ್ನುವ ಪದವು ದೇವರನ್ನು ವಿರೋಧಿಸಿಸ ಜನರ ಆತ್ಮಗಳಿಗಾಗಿ ಸಿದ್ಧ ಮಾಡಿದ ಸ್ಥಳವನ್ನು ಸೂಚಿಸುತ್ತದೆ. ಈ ಆತ್ಮಗಳು ಪಾತಾಳಕ್ಕೆ “ಇಳಿದು” ಹೋಗುತ್ತಿವೆ ಎಂಬುದಾಗಿ ಸೂಚಿಸಲ್ಪಟ್ಟಿವೆ. ಕೆಲವೊಂದುಬಾರಿ ಇದಕ್ಕೆ ವಿರುದ್ಧತ್ಮಾಕವಾಗಿ ಪರಲೋಕಕ್ಕೆ “ಏರಿ” ಹೋಗುತ್ತಿವೆ ಎಂದು ಹೇಳಲಾಗುತ್ತದೆ, ಯೇಸುವಿನಲ್ಲಿ ನಂಬಿದ ಜನರ ಆತ್ಮಗಳು ಜೀವಂತವಾಗಿರುತ್ತವೆ.
  • “ಹೇಡೆಸ್” (ಅಥವಾ ಪಾತಾಳ) ಎನ್ನುವ ಪದವು ಪ್ರಕಟನೆ ಗ್ರಂಥದಲ್ಲಿ “ಮರಣ” ಎನ್ನುವ ಪದದೊಂದಿಗೆ ಸೇರಿಸಿ ಹೇಳಲಾಗಿರುತ್ತದೆ. ಅಂತ್ಯಕಾಲದಲ್ಲಿ ಮರಣ ಮತ್ತು ಹೇಡೆಸ್ (ಅಥವಾ ಪಾತಾಳ) ಗಳನ್ನು ಬೆಂಕಿಯ ಕೆರೆಯಾದ ನರಕದೊಳಗೆ ಎಸೆಯಲ್ಪಡುತ್ತವೆ.

ಅನುವಾದ ಸಲಹೆಗಳು:

  • ಹಳೇ ಒಡಂಬಡಿಕೆಯಲ್ಲಿ ಉಪಯೋಗಿಸಿದ “ಷಿಯೋಲ್” (ಅಥವಾ ಸಮಾಧಿ) ಎನ್ನುವ ಪದವನ್ನು “ಮರಣದ ಸ್ಥಳ” ಅಥವಾ “ಸತ್ತಂತ ಆತ್ಮಗಳಿರುವ ಸ್ಥಳ” ಎಂಬುದಾಗಿಯೂ ಅನುವಾದ ಮಾಡಬಹುದು. ಈ ಪದವನ್ನು ಕೆಲವೊಂದು ಭಾಷಾಂತರಗಳಲ್ಲಿ ಸಂದರ್ಭಾನುಸಾರವಾಗಿ “ಗುಂಡಿ” ಅಥವಾ “ಮರಣ” ಎಂದು ಅನುವಾದ ಮಾಡುತ್ತಾರೆ.
  • ಹೊಸ ಒಡಂಬಡಿಕೆಯಲ್ಲಿ ಪದವಾದ “ಹೇಡೆಸ್” (ಅಥವಾ ಪಾತಾಳ) ಎನ್ನುವ ಪದವನ್ನು “ನಂಬದಿರುವ ಸತ್ತಂತ ಆತ್ಮಗಳ ಸ್ಥಳ” ಅಥವಾ “ಸತ್ತವರು ಹಿಂಸೆ ಹೊಂದುವ ಸ್ಥಳ” ಅಥವಾ “ನಂಬದೇ ಸತ್ತ ಜನರ ಆತ್ಮಗಳ ಸ್ಥಳ” ಎಂದೂ ಅನುವಾದ ಮಾಡುತ್ತಾರೆ.

ಕೆಲವೊಂದು ಭಾಷಾಂತರಗಳಲ್ಲಿ “ಷಿಯೋಲ್” ಮತ್ತು “ಹೇಡೆಸ್” ಎನ್ನುವ ಪದಗಳನ್ನು ಹಾಗೆಯೇ ಇಟ್ಟಿರುತ್ತಾರೆ, ಅನುವಾದ ಮಾಡುವ ಭಾಷೆಯ ಶಬ್ದಗಳ ಮಾದರಿಗೆ ಸರಿಹೊಗುವಂತೆ ಉಚ್ಚರಿಸುತ್ತಾರೆ. (ನೋಡಿರಿ: ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

  • ಇದನ್ನು ವಿವರಿಸುವುದಕ್ಕೆ ಪ್ರತಿಯೊಂದು ಪದಕ್ಕೆ ಮಾತನ್ನು ಸೇರಿಸಬಹುದು, ಈ ರೀತಿ ಮಾಡುವುದಕ್ಕೆ ಕೆಲವೊಂದು ಉದಾಹರಣೆಗಳು ಇಲ್ಲಿವೆ, “ಸಮಾಧಿ, ಸತ್ತಂತ ಜನರು ಹೋಗುವ ಸ್ಥಳ” ಅಥವಾ “ಪಾತಾಳ, ಮರಣದ ಸ್ಥಳ” ಎಂಬುದಾಗಿ ಆ ಪದಗಳನ್ನು ವಿವರಿಸಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಮರಣ, ಪರಲೋಕ, ನರಕ, ಸಮಾಧಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7585, G86

ಪಾಪ ನಿವಾರಣೆ

ಪದದ ಅರ್ಥವಿವರಣೆ:

“ಪಾಪ ನಿವಾರಣೆ” ಎನ್ನುವ ಪದವು ದೇವರ ಕೋಪಾಗ್ನಿಯನ್ನು ಸಮಾಧಾನಪಡಿಸಲು ಮತ್ತು ದೇವರ ನೀತಿಯನ್ನು ನೆರವೇರಿಸಲು ಅಥವಾ ತೃಪ್ತಿಪಡಿಸಲು ಮಾಡಲ್ಪಟ್ಟ ತ್ಯಾಗವನ್ನು ಸೂಚಿಸುತ್ತದೆ.

  • ಯೇಸು ಕ್ರಿಸ್ತನ ತ್ಯಾಗಪೂರಿತವಾದ ರಕ್ತದ ಅರ್ಪಣೆಯು ಮಾನವಕುಲದ ಪಾಪಗಳಿಗಾಗಿ ದೇವರೇ ಮಾಡಿದ ಪಾಪ ನಿವಾರಣೆಯಾಗಿರುತ್ತದೆ.
  • ಶಿಲುಬೆಯಲ್ಲಿ ಯೇಸುವಿನ ಮರಣವು ಪಾಪಕ್ಕೆ ವಿರುದ್ಧವಾದ ದೇವರ ಕೋಪಾಗ್ನಿಯನ್ನು ಸಮಾಧಾನಪಡಿಸುತ್ತದೆ. ಈ ಕಾರ್ಯದಿಂದ ದೇವರು ಜನರ ಮೇಲೆ ತನ್ನ ದಯೆಯನ್ನು ತೋರಿಸುವನು ಮತ್ತು ಅವರಿಗೆ ನಿತ್ಯಜೀವವನ್ನು ಅನುಗ್ರಹಿಸುವನು.

ಅನುವಾದ ಸಲಹೆಗಳು:

  • ಈ ಪದವನ್ನು “ಸಮಾಧಾನಗೊಳಿಸುವುದು” ಅಥವಾ “ದೇವರು ಜನರ ಪಾಪಗಳನ್ನು ಕ್ಷಮಿಸಲು ಮತ್ತು ಜನರ ಮೇಲೆ ದಯೆಯನ್ನು ತೋರಿಸುವಂತೆ ಮಾಡುವುದು” ಎಂದೂ ಅನುವಾದ ಮಾಡಬಹುದು.
  • “ಪ್ರಾಯಶ್ಚಿತ್ತ” ಎನ್ನುವ ಪದವು “ಪಾಪ ನಿವಾರಣೆ” ಎನ್ನುವ ಪದದ ಅರ್ಥಕ್ಕೆ ತುಂಬಾ ಸಮೀಪವಾಗಿರುತ್ತದೆ. * ಈ ಎರಡು ಪದಗಳನ್ನು ಹೇಗೆ ಉಪಯೋಗಿಸಲ್ಪಟ್ಟಿರುತ್ತವೆಯೆಂದು ಹೋಲಿಸಿ ನೋಡುವುದು ತುಂಬಾ ಪ್ರಾಮುಖ್ಯ.

(ಈ ಪದಗಳನ್ನು ಸಹ ನೋಡಿರಿ : ಪ್ರಾಯಶ್ಚಿತ್ತ, ನಿತ್ಯ, ಕ್ಷಮಿಸು, ಯಜ್ಞ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2434, G2435

ಪಾಪ, ಪಾಪಸಹಿತ, ಪಾಪಿ, ಪಾಪ ಮಾಡುವುದು

ಪದದ ಅರ್ಥವಿವರಣೆ:

“ಪಾಪ” ಎನ್ನುವ ಪದವು ದೇವರ ಚಿತ್ತಕ್ಕೆ ಮತ್ತು ಆತನ ಆಜ್ಞೆಗಳಿಗೆ ವಿರುದ್ಧವಾಗಿ ಮಾಡುವ ಕ್ರಿಯೆಗಳು, ಆಲೋಚನೆಗಳು ಮತ್ತು ಪದಗಳನ್ನು ಸೂಚಿಸುತ್ತದೆ. ಪಾಪ ಎನ್ನುವುದು ದೇವರು ನಮ್ಮನ್ನು ಮಾಡಬೇಕೆಂದು ಬಯಸಿದ ಯಾವುದಾದರೊಂದು ಕಾರ್ಯವನ್ನು ಮಾಡದೇ ಇರುವುದನ್ನೂ ಸೂಚಿಸುತ್ತದೆ.

  • ದೇವರಿಗೆ ಇಷ್ಟವಾಗಿರದ ಅಥವಾ ಆತನಿಗೆ ವಿಧೇಯತೆ ತೋರಿಸದ ಪ್ರತಿಯೊಂದು ಕ್ರಿಯೆಯಲ್ಲಿ ಮತ್ತು ಇತರ ಜನರು ಇವುಗಳ ಕುರಿತಾಗಿ ಗೊತ್ತಿಲ್ಲದ ವಿಷಯಗಳಲ್ಲಿಯೂ ಪಾಪವು ಒಳಗೊಂಡಿರುತ್ತದೆ,
  • ದೇವರ ಚಿತ್ತಕ್ಕೆ ಅವಿಧೇಯತೆಯನ್ನು ತೋರಿಸುವ ಆಲೋಚನೆಗಳು ಮತ್ತು ಕ್ರಿಯೆಗಳನ್ನು “ಪಾಪಸಹಿತ” ಎಂದೂ ಕರೆಯುತ್ತಾರೆ.
  • ಆದಾಮನು ಪಾಪ ಮಾಡಿರುವ ಕಾರಣದಿಂದಲೇ ಎಲ್ಲಾ ಜನರು “ಪಾಪ ಸ್ವಭಾವದಿಂದ” ಹುಟ್ಟಿದ್ದಾರೆ, ಆ ಸ್ವಭಾವವು ಅವರನ್ನು ನಿಯಂತ್ರಿಸುತ್ತದೆ ಮತ್ತು ಅವರು ಪಾಪ ಮಾಡುವಂತೆ ಕಾರಣವಾಗುತ್ತದೆ.
  • “ಪಾಪಿ” ಎಂದರೆ ಪಾಪವನ್ನು ಮಾಡುವ ವ್ಯಕ್ತಿ ಎಂದರ್ಥ, ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ಪಾಪಿಯಾಗಿರುತ್ತಾನೆ.
  • ಕೆಲವೊಂದುಬಾರಿ “ಪಾಪಿಗಳು” ಎನ್ನುವ ಪದವನ್ನು ಫರಿಸಾಯರು ಎನ್ನುವ ಜನರಿಂದ ಉಪಯೋಗಿಸಲ್ಪಡುತ್ತದೆ, ಇದನ್ನು ಫರಿಸಾಯರು ಧರ್ಮಶಾಸ್ತ್ರಕ್ಕೆ ಒಳಗಾಗಬೇಕೆಂದು ಹೇಳಿದಾಗ ಧರ್ಮಶಾಸ್ತ್ರಕ್ಕೆ ಒಳಗಾಗದ ಜನರನ್ನು ಸೂಚಿಸುತ್ತದೆ.
  • “ಪಾಪಿ” ಎನ್ನುವ ಪದವು ಇತರ ಜನರಿಗಿಂತಲೂ ಪಾಪಿಗಳಾಗಿರುವುದಕ್ಕೆ ಪರಿಗಣಿಸಲ್ಪಟ್ಟ ಜನರ ಕುರಿತಾಗಿಯೂ ಈ ಪದವನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ, ಈ ಪದವನ್ನು ತೆರಿಗೆ ವಸೂಲಿದಾರರಿಗೆ ಮತ್ತು ಸೂಳೆಯರಿಗೆ ಕೊಡಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • “ಪಾಪ” ಎನ್ನುವ ಪದವನ್ನು “ದೇವರಿಗೆ ಅವಿಧೇಯತೆ” ಅಥವಾ “ದೇವರ ಚಿತ್ತಕ್ಕೆ ವಿರುದ್ಧವಾಗಿ ಹೋಗುವುದು” ಅಥವಾ “ದುಷ್ಟ ನಡತೆ ಮತ್ತು ಆಲೋಚನೆಗಳು” ಅಥವಾ “ತಪ್ಪನ್ನು ಮಾಡುವುದು” ಎನ್ನುವ ಅರ್ಥಗಳಿರುವ ಮಾತುಗಳನ್ನು ಅಥವಾ ಪದಗಳೊಂದಿಗೆ ಅನುವಾದ ಮಾಡಬಹುದು.
  • “ಪಾಪ” ಎನ್ನುವ ಪದವನ್ನು “ದೇವರಿಗೆ ಅವಿಧೇಯತೆ ತೋರಿಸು” ಅಥವಾ “ತಪ್ಪನ್ನು ಮಾಡು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಪಾಪಸಹಿತ” ಎನ್ನುವ ಪದವನ್ನು “ಸಂಪೂರ್ಣವಾಗಿ ತಪ್ಪನ್ನು ಮಾಡುವುದು” ಅಥವಾ “ದುಷ್ಟನಾಗಿರುವುದು” ಅಥವಾ “ಅನೈತಿಕವಾಗಿರುವುದು” ಅಥವಾ “ದುಷ್ಟ ಅಥವಾ ಕೆಟ್ಟ” ಅಥವಾ “ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವುದು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಪಾಪಿ” ಎನ್ನುವ ಪದವನ್ನು “ಪಾಪಗಳನ್ನು ಮಾಡುವ ವ್ಯಕ್ತಿ” ಅಥವಾ “ಕೆಟ್ಟ ಕೆಲಸಗಳನ್ನು ಮಾಡುವ ವ್ಯಕ್ತಿ” ಅಥವಾ “ದೇವರಿಗೆ ಅವಿಧೇಯನಾಗಿರುವ ವ್ಯಕ್ತಿ” ಅಥವಾ “ಧರ್ಮಶಾಸ್ತ್ರಕ್ಕೆ ಒಳಗಾಗದ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಪಾಪಿಗಳು” ಎನ್ನುವ ಪದವನ್ನು “ಹೆಚ್ಚಾಗಿ ಪಾಪ ಮಾಡುವ ಜನರು” ಅಥವಾ “ಜನರು ತುಂಬಾ ಪಾಪವನ್ನು ಮಾಡಿದವರಾಗಿ ಪರಿಗಣಿಸಲ್ಪಟ್ಟಿದ್ದಾರೆ” ಅಥವಾ “ಅನೈತಿಕವಾದ ಜನರು” ಎಂದೂ ಅನುವಾದ ಮಾಡಬಹುದು.
  • “ಸುಂಕ ವಸೂಲಿದಾರರು ಮತ್ತು ಪಾಪಿಗಳು” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ “ಪ್ರಭುತ್ವಕ್ಕಾಗಿ ಹಣವನ್ನು ಶೇಕರಣೆ ಮಾಡುವ ಜನರು, ಮತ್ತು ಅತೀ ಪಾಪಗಳನ್ನು ಮಾಡುವ ಜನರು” ಅಥವಾ “ಪಾಪಗಳನ್ನು ಮಾಡುವ ಜನರು, ಅದರಲ್ಲಿ ತೆರಿಗೆ ವಸೂಲಿದಾರರು ಇದ್ದಾರೆ” ಎಂದೂ ಅನುವಾದ ಮಾಡಬಹುದು.
  • ಪಾಪಸಹಿತವಾದ ನಡತೆ ಮತ್ತು ಆಲೋಚನೆಗಳು ಎನ್ನುವವುಗಳನ್ನು ಇತರ ಜನರು ನೋಡದಿದ್ದರೂ ಅಥವಾ ಅವುಗಳ ಕುರಿತಾಗಿ ತಿಳಿದುಕೊಳ್ಳದಿದ್ದರೂ ಈ ಪದದಲ್ಲಿ ಒಳಗೊಂಡಿರುತ್ತವೆಯೆಂದು ತಿಳಿದುಕೊಳ್ಳಿರಿ,
  • “ಪಾಪ” ಎನ್ನುವ ಪದವು ಸಾಧಾರಣವಾಗಿರಬೇಕು, ಮತ್ತು “ದುಷ್ಟತ್ವ”, “ಕೆಟ್ಟತನ” ಎನ್ನುವ ಪದಗಳಿಗೆ ವಿಭಿನ್ನವಾಗಿರಬೇಕು.

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ಕೆಟ್ಟ, ಮಾಂಸ, ಸುಂಕ ವಸೂಲಿದಾರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 03:15 “ಅವರು ದೇವರ ಮಕ್ಕಳಾಗುವ ಸಮಯದಿಂದ ಅವರು __ ಪಾಪಾತ್ಮರಾಗಿದ್ದರೂ __ ಜನರು ಮಾಡುವ ದುಷ್ಟ ಕಾರ್ಯಗಳಿಗೋಸ್ಕರ ನೆಲವನ್ನು ಎಂದಿಗೂ ಶಪಿಸುವುದಿಲ್ಲ, ಅಥವಾ ಪ್ರಳಯವನ್ನು ಬರಮಾಡುವುದರ ಮೂಲಕ ಲೋಕವನ್ನು ನಾಶಮಾಡುವುದಿಲ್ಲ” ಎಂದು ದೇವರು ಹೇಳಿದರು.
  • 13:12 ದೇವರು ಜನರು ಮಾಡುವ ಪಾಪದ ಕಾರಣದಿಂದ ಅವರೊಂದಿಗೆ ತುಂಬಾ ಕೋಪದಿಂದ ಇದ್ದನು ಮತ್ತು ಅವರನ್ನು ನಾಶಗೊಳಿಸಬೇಕೆಂದು ಆಲೋಚನೆ ಮಾಡಿಕೊಂಡಿದ್ದನು.
  • 20:01 ಯೆಹೂದ್ಯ ಮತ್ತು ಇಸ್ರಾಯೇಲ್ ಎರಡು ರಾಜ್ಯಗಳು ದೇವರಿಗೆ ವಿರುದ್ಧವಾಗಿ __ ಪಾಪ ಮಾಡಿದವು __. ಸೀನಾಯಿ ಬೆಟ್ಟದ ಮೇಲೆ ದೇವರು ಅವರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿದರು.
  • 21:13 ಮೆಸ್ಸೀಯಾನು ಪರಿಪೂರ್ಣನಾಗಿರುತ್ತಾನೆ, ಆತನಲ್ಲಿ ಯಾವ __ ಪಾಪವು __ ನೆಲೆಗೊಂಡಿರುವುದಿಲ್ಲ ಎಂದು ಪ್ರವಾದಿಗಳು ಕೂಡ ಹೇಳಿದ್ದಾರೆ. ಇತರ ಜನರು ಮಾಡಿದ __ ಪಾಪಗಳಿಗೆ __ ಶಿಕ್ಷೆಯನ್ನು ಪಡೆದುಕೊಳ್ಳುವುದಕ್ಕೆ ಆತನು ಮರಣ ಹೊಂದಿದನು.
  • 35:01 ಒಂದು ದಿನ ಯೇಸುವು ಅನೇಕಮಂದಿ ಸುಂಕದವರಿಗೆ ಮತ್ತು ಆತನು ಮಾತುಗಳನ್ನು ಕೇಳುವುದಕ್ಕೆ ಬಂದಿರುವ __ ಪಾಪಿಗಳಿಗೆ __ ಬೋಧನೆ ಮಾಡುತ್ತಿದ್ದನು.
  • 38:05 ಯೇಸು ಪಾತ್ರೆಯನ್ನು ತೆಗೆದುಕೊಂಡು ಮತ್ತು “ಇದನ್ನು ಕುಡಿಯಿರಿ. ಇದು ಎಲ್ಲಾ __ ಪಾಪಗಳನ್ನು __ ಕ್ಷಮಿಸುವುದಕ್ಕೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಆಗುವ ಹೊಸ ಒಡಂಬಡಿಕೆ” ಎಂದು ಹೇಳಿದನು.
  • 43:11 “ನಿಮ್ಮಲ್ಲಿ ಪ್ರತಿಯೊಬ್ಬರು ಪಶ್ಚಾತ್ತಾಪ ಹೊಂದಿ, ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನ ಹೊಂದಬೇಕು, ಇದರಿಂದ ದೇವರು ನಿಮ್ಮ __ ಪಾಪಗಳನ್ನು __ ಕ್ಷಮಿಸುವನು” ಎಂದು ಪೇತ್ರನು ಅವರಿಗೆ ಉತ್ತರ ಕೊಟ್ಟನು.
  • 48:08 ನಮ್ಮ ಎಲ್ಲಾ __ ಪಾಪಗಳಿಗೋಸ್ಕರ __ ಸಾಯುವವರಾಗಿದ್ದೇವೆ!
  • 49:17 ನೀವು ಕ್ರೈಸ್ತರಾಗಿದ್ದರೂ, ನೀವು__ ಪಾಪ __ ಮಾಡುವುದಕ್ಕೆ ಶೋಧನೆಗೆ ಒಳಗಾಗುವಿರಿ. ಆದರೆ ದೇವರು ನಂಬಿಗಸ್ತನು ಮತ್ತು ನೀವು ನಿಮ್ಮ __ ಪಾಪಗಳನ್ನು __ ಒಪ್ಪಿಕೊಂಡರೆ, ಆತನು ನಿಮ್ಮನ್ನು ಕ್ಷಮಿಸುವನು. ನೀವು __ ಪಾಪಕ್ಕೆ __ ವಿರುದ್ಧವಾಗಿ ಹೋರಾಡುವುದಕ್ಕೆ ಆತನು ನಿಮಗೆ ಬಲವನ್ನು ಕೊಡುವನು.

ಪದ ಡೇಟಾ:

  • Strong's: H817, H819, H2398, H2399, H2400, H2401, H2402, H2403, H2408, H2409, H5771, H6588, H7683, H7686, G264, G265, G266, G268, G361, G3781, G3900, G4258

ಪುತ್ರ, ಪುತ್ರರು

ಪದದ ಅರ್ಥವಿವರಣೆ:

ಸ್ತ್ರೀ ಪುರುಷರಿಗೆ ಸಂತಾನವಾಗಿರುವ ಗಂಡು ಮಗುವನ್ನು ತಮ್ಮ ಜೀವಮಾನವೆಲ್ಲ “ಮಗ (ಅಥವಾ ಪುತ್ರ)” ಎಂದು ಕರೆಯುತ್ತಾರೆ. ಇವನನ್ನು ಆ ಮನುಷ್ಯನ ಮಗನೆಂದು ಮತ್ತು ಆ ಸ್ತ್ರೀಯಳ ಮಗನೆಂದು ಕರೆಯಲ್ಪಡುತ್ತಾನೆ. “ದತ್ತುಪುತ್ರ” ಎನ್ನುವ ಪದವು ಸ್ವಂತ ಮಗನ ಸ್ಥಾನದಲ್ಲಿ ಕಾನೂನುಬದ್ಧವಾಗಿ ಸೇರಿಕೆಯಾಗಿರುವ ಗಂಡು ಮಗ ಎಂದರ್ಥವಾಗಿರುತ್ತದೆ.

  • ಅದೇ ಹಿಂದಿನ ಪೀಳಿಗೆಯಿಂದ ವ್ಯಕ್ತಿಯ ತಂದೆ, ತಾಯಿ ಅಥವಾ ಪೂರ್ವಜರನ್ನು ಗುರುತಿಸಲು "ಅವರ ಪುತ್ರ” ಎಂಬ ಪದಗುಚ್ಛವನ್ನು ಬಳಸಲಾಗಿದೆ. ಈ ಪದಗುಚ್ಛವನ್ನು ವಂಶಾವಳಿಗಳಲ್ಲಿ ಮತ್ತು ಇತರ ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ.
  • "ಇಸ್ರಾಯೇಲ್ಯರ ಪುತ್ರರು" ಎಂಬುವುದನ್ನು ಸಾಮಾನ್ಯವಾಗಿ ಇಸ್ರಾಯೇಲ್ ಮಕ್ಕಳನ್ನು ಸೂಚಿಸುತ್ತದೆ (ಆದಿಕಾಂಡದ ನಂತರ).
  • “ಪುತ್ರ” ಎನ್ನುವ ಪದವು ಮಾತನಾಡುವ ಮಗುವಿಗಿಂತ ಚಿಕ್ಕ ಶಿಶುವನ್ನು ಅಥವಾ ಬಾಲಕನನ್ನು ಸೂಚಿಸುವ ವಿನಯವಾದ ನಡೆನುಡಿಯಾಗಿ ಉಪಯೋಗಿಸಲ್ಪಟ್ಟಿರುತ್ತದೆ,
  • ಕೆಲವೊಂದುಬಾರಿ “ದೇವರ ಪುತ್ರರು” ಎನ್ನುವ ಮಾತನ್ನು ಕ್ರಿಸ್ತನಲ್ಲಿರುವ ವಿಶ್ವಾಸಿಗಳನ್ನು ಸೂಚಿಸುವುದಕ್ಕೆ ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
  • ದೇವರು ಇಸ್ರಾಯೇಲನ್ನು ತನ್ನ “ಮೊದಲ ಪುತ್ರ ಅಥವಾ ಚೊಚ್ಚಲ ಮಗ” ಎಂಬುದಾಗಿ ಕರೆದಿದ್ದಾನೆ. ಇದು ದೇವರು ಇಸ್ರಾಯೇಲ್ ದೇಶವನ್ನು ತನ್ನ ವಿಶೇಷವಾದ ಜನರಾಗಿರುವುದಕ್ಕೆ ಆಯ್ಕೆ ಮಾಡಿಕೊಂದಿದ್ದಾನೆಂದು ಸೂಚಿಸುತ್ತದೆ. ಇದು ದೇವರ ವಿಮೋಚನಾ ಸಂದೇಶ ಮತ್ತು ರಕ್ಷಣೆಯ ಮುಖಾಂತರ ಬಂದಿರುತ್ತದೆ, ಇದರ ಫಲಿತಾಂಶದಿಂದ ಅನೇಕಮಂದಿ ಇತರ ಜನರು ತನ್ನ ಆತ್ಮೀಯಕವಾದ ಮಕ್ಕಳಾಗಿ ಮಾರ್ಪಟ್ಟರು.
  • “ಪುತ್ರ” ಎನ್ನುವ ಪದವು ಅನೇಕಬಾರಿ “ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿ” ಎನ್ನುವ ಅಲಂಕಾರಿಕ ಅರ್ಥವನ್ನು ಹೊಂದಿರುತ್ತದೆ. ಈ ಪದಕ್ಕೆ ಉದಾಹರಣೆಗಳಲ್ಲಿ “ಬೆಳಕಿನ ಮಕ್ಕಳು”, “ಅವಿಧೇಯತೆಯ ಮಕ್ಕಳು”, “ಸಮಾಧಾನ ಪುತ್ರ” ಮತ್ತು “ಗುಡುಗಿನ ಪುತ್ರರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಇವರ ಪುತ್ರ” ಎನ್ನುವ ಪದವು ಒಬ್ಬ ವ್ಯಕ್ತಿಯ ತಂದೆಯನ್ನು ಹೇಳುವುದಕ್ಕೆ ಕೂಡ ಉಪಯೋಗಿಸುತ್ತಾರೆ. ಈ ಪದವನ್ನು ವಂಶಾವಳಿಗಳಲ್ಲಿ ಮತ್ತು ಇನ್ನಿತರ ವಾಕ್ಯಭಾಗಗಳಲ್ಲಿ ಉಪಯೋಗಿಸಿರುತ್ತಾರೆ.
  • ತಂದೆಯ ಹೆಸರನ್ನು ಕೊಡುವುದಕ್ಕೆ “ಇವರ ಪುತ್ರ” ಎನ್ನುವ ಮಾತನ್ನು ಉಪಯೋಗಿಸುವಾಗ, ಅನೇಕಬಾರಿ ಒಂದೇ ಹೆಸರನ್ನು ಹೊಂದಿರುವ ಜನರನ್ನು ಪ್ರತ್ಯೇಕಿಸಿ ಹೇಳುವುದಕ್ಕೆ ಸಹಾಯ ಮಾಡುತ್ತದೆ. ಉದಾಹರಣೆಗೆ, 1 ಅರಸರು 4 ಅಧ್ಯಾಯದಲ್ಲಿ “ಚಾದೋಕನ ಪುತ್ರನಾದ ಅಜರ್ಯನು” ಮತ್ತು “ನಾತಾನನ ಪುತ್ರನಾದ ಅಜರ್ಯನು” ಮತ್ತು 2 ಅರಸ 15ನೇಯ ಅಧ್ಯಾಯದಲ್ಲಿ “ಅಮಚ್ಯ್ ಪುತ್ರನಾದ ಅಜರ್ಯನು” ಎಂದು ಮೂವರು ಬೇರೆ ಬೇರೆ ವ್ಯಕ್ತಿಗಳನ್ನು ನೋಡುತ್ತಿದ್ದೇವೆ.

ಅನುವಾದ ಸಲಹೆಗಳು:

  • ಈ ಪದವು ಹೆಚ್ಚಾಗಿ ಕಾಣಿಸಿಕೊಳ್ಳುವುದರಲ್ಲಿ ಮಗನನ್ನು ಸೂಚಿಸುವುದಕ್ಕೆ ಭಾಷೆಯಲ್ಲಿ ಉಪಯೋಗಿಸುವ ಅಕ್ಷರಾರ್ಥವಾದ ಪದದಿಂದ “ಪುತ್ರ” ಎನ್ನುವ ಪದವನ್ನು ಅನುವಾದ ಮಾಡುವುದು ಉತ್ತಮ.
  • “ದೇವರ ಪುತ್ರ” ಎನ್ನುವ ಮಾತನ್ನು ಅನುವಾದ ಮಾಡುವಾಗ, ಅನುವಾದ ಮಾಡುವ ಭಾಷೆಯಲ್ಲಿ “ಮಗ” ಎನ್ನುವುದಕ್ಕೆ ಉಪಯೋಗಿಸುವ ಸಾಧಾರಣವಾದ ಪದವನ್ನು ಉಪಯೋಗಿಸಬಹುದು.
  • ಪುತ್ರನಿಗಿಂತಲು ವಂಶಸ್ಥರನ್ನು ಈ ಪದವು ಸೂಚಿಸಿದಾಗ, “ದಾವೀದನ ವಂಶಸ್ಥನು” ಎಂದು ಯೇಸುವನ್ನು ಸೂಚಿಸುವಂತೆಯೇ ಅಥವಾ ನಿಜವಾದ ಮಗನಲ್ಲದ ಗಂಡು ಸಂತಾನವನ್ನು ಸೂಚಿಸುವುದಕ್ಕೆ “ಪುತ್ರ” ಎಂದು ಕೆಲವೊಂದುಬಾರಿ ಉಪಯೋಗಿಸಿದ ವಂಶಾವಳಿಗಳಲ್ಲಿರುವಂತೆಯೇ “ವಂಶಸ್ಥನು” ಎನ್ನುವ ಪದವನ್ನು ಉಪಯೋಗಿಸಬಹುದು,
  • ಕೆಲವೊಂದುಬಾರಿ “ಪುತ್ರರು” ಎನ್ನುವ ಪದವನ್ನು “ಮಕ್ಕಳು” ಎಂಬುದಾಗಿಯೂ ಅನುವಾದ ಮಾಡಬಹುದು, ಹೀಗೆ ಉಪಯೋಗಿಸಿದಾಗ ಅದರಲ್ಲಿ ಸ್ತ್ರೀ ಪುರುಷರನ್ನು ಸೂಚಿಸುವದಂತಾಗಿರುತ್ತದೆ. ಉದಾಹರಣೆಗೆ, “ದೇವರ ಪುತ್ರರು” ಎನ್ನುವ ಮಾತನ್ನು “ದೇವರ ಮಕ್ಕಳು” ಎಂದೂ ಅನುವಾದ ಮಾಡಬಹುದು. ಯಾಕಂದರೆ ಇದರಲ್ಲಿ ಹೆಣ್ಣು ಮಕ್ಕಳು ಮತ್ತು ಸ್ತ್ರೀಯರು ಕೂಡ ಒಳಗೊಂಡಿರುತ್ತಾರೆ.
  • “ಇವರ ಪುತ್ರ” ಎನ್ನುವ ಮಾತನ್ನು “ಇವರ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿ” ಅಥವಾ “ಅವರಂತೆಯೇ ಇರುವ ವ್ಯಕ್ತಿ ಅಥವಾ ಹೊಂದಿಕೊಂಡಿರುವ ವ್ಯಕ್ತಿ” ಅಥವಾ ಇವರಂತೆಯೇ ನಟನೆ ಮಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು;.

(ಈ ಪದಗಳನ್ನು ಸಹ ನೋಡಿರಿ : ಅಜರ್ಯ, ವಂಶಸ್ಥನು, ಪೂರ್ವಜ, ಚೊಚ್ಚಲ ಮಗ, ದೇವರ ಮಗ, ದೇವರ ಮಕ್ಕಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 04:08 ದೇವರು ಅಬ್ರಾಹಾಮನೊಂದಿಗೆ ಮಾತನಾಡಿ, ಅವನು ___ ಮಗನನ್ನು ___ ಹೊಂದುವನು ಎಂದು ಮತ್ತು ತನ್ನ ಸಂತಾನದವರು ಆಕಾಶದಲ್ಲಿರುವ ನಕ್ಷತ್ರಗಳಂತೆ ವಿಸ್ತರಿಸುವರು ಎಂದು ಆತನು ಮತ್ತೊಮ್ಮೆ ವಾಗ್ಧಾನ ಮಾಡಿದನು.
  • 04:09 “ನಿನ್ನ ಸ್ವಂತ ಶರೀರದಿಂದಲೇ ನಾನು ನಿನಗೆ ಒಬ್ಬ ___ ಮಗನನ್ನು ___ ಕೊಡುತ್ತೇನೆ” ಎಂದು ದೇವರು ಹೇಳಿದರು.
  • 05:05 ಒಂದು ವರ್ಷವಾದನಂತರ, ಅಬ್ರಾಹಾಮನಿಗೆ 100 ವರ್ಷಗಳು ಮತ್ತು ಸಾರಳಿಗೆ 90 ವರ್ಷಗಳ ವಯಸ್ಸು ಇದ್ದಾಗ, ಸಾರಳು ಅಬ್ರಾಹಾಮನ ___ ಮಗನಿಗೆ ___ ಜನ್ಮವನ್ನು ಕೊಟ್ಟಳು.
  • 05:08 ಅವರು ಹೋಮ ಕೊಡುವ ಸ್ಥಳವನ್ನು ತಲುಪಿದಾಗ, ಅಬ್ರಾಹಾಮನು ತನ್ನ ___ ಮಗನಾದ ___ ಇಸಾಕನನ್ನು ಕಟ್ಟಿ, ಯಜ್ಞವೇದಿಯ ಮೇಲೆ ಮಲಗಿಸಿದನು. ಅವನು ತನ್ನ __ ಮಗನನ್ನು ___ ಸಾಯಿಸುವುದಕ್ಕೆ ಹೋಗುತ್ತಿರುವಾಗ, “ನಿಲ್ಲಿಸು! ಮಗುವನ್ನು ಸಾಯಿಸಬೇಡ! ನೀನು ನನಗೆ ಭಯಪಡುತ್ತಿದ್ದೀಯೆಂದು ನಾನೀಗ ತಿಳಿದುಕೊಂಡೆನು ಯಾಕಂದರೆ ನಿನ್ನ ಒಬ್ಬನೇ ___ ಮಗನನ್ನು ___ ನನ್ನಿಂದ ದೂರ ಮಾಡುವುದಕ್ಕೆ ಪ್ರಯತ್ನಪಟ್ಟಿಲ್ಲ “ ಎಂದು ದೇವರು ಹೇಳಿದನು.
  • 09:07 ಆಕೆ ಶಿಶುವನ್ನು ನೋಡಿದಾಗ, ಆಕೆಯ ಸ್ವಂತ ___ ಮಗ ___ ಎಂಬುದಾಗಿ ಅವನನ್ನು ಎತ್ತಿಕೊಂಡಳು.
  • 11:06 ದೇವರು ಐಗುಪ್ತರ __ ಚೊಚ್ಚಲ ಮಕ್ಕಳನ್ನು ___ ಸಂಹಾರ ಮಾಡಿದನು.
  • 18:01 ಅನೇಕ ವರ್ಷಗಳಾದನಂತರ, ದಾವೀದನು ಮರಣಿಸಿದನು, ಮತ್ತು ತನ್ನ ___ ಮಗನಾಗಿರುವ ___ ಸೊಲೊಮೋನನು ಆಳ್ವಿಕೆ ಮಾಡುವುದಕ್ಕೆ ಆರಂಭಿಸಿದನು.
  • 26:04 “ಇವನು ಯೋಸೇಫನ __ ಮಗನಲ್ಲವೋ __?” ಎಂದು ಅವರು ಹೇಳಿದರು.

ಪದ ಡೇಟಾ:

  • Strong's: H1060, H1121, H1123, H1248, H3173, H3206, H3211, H4497, H5209, H5220, G3816, G5043, G5207

ಪುನರುತ್ಥಾನ

ಪದದ ಅರ್ಥವಿವರಣೆ:

“ಪುನರುತ್ಥಾನ” ಎನ್ನುವ ಪದವು ಸತ್ತಂತ ನಂತರ ತಿರುಗಿ ಜೀವಂತವಾಗುವ ಕಾರ್ಯವನ್ನು ಸೂಚಿಸುತ್ತದೆ.

  • ಯಾರಾದರೊಬ್ಬರು ಪುನರುತ್ಥಾನವಾಗುವುದೆಂದರೆ ಸತ್ತಂತ ಆ ವ್ಯಕ್ತಿಯನ್ನು ತಿರುಗಿ ಜೀವಂತವನ್ನಾಗಿ ಮಾಡುವುದು ಎಂದರ್ಥವಾಗಿರುತ್ತದೆ. ಈ ಕಾರ್ಯವನ್ನು ಮಾಡುವುದಕ್ಕೆ ದೇವರಿಗೆ ಮಾತ್ರ ಶಕ್ತಿ ಇರುತ್ತದೆ.
  • “ಪುನರುತ್ಥಾನ” ಎನ್ನುವ ಪದವನ್ನು ಅನೇಕಬಾರಿ ಯೇಸು ಸತ್ತನಂತರ ಆತನು ತಿರುಗಿ ಜೀವಂತವಾಗಿರುವ ಕಾರ್ಯವನ್ನು ಸೂಚಿಸುತ್ತದೆ.
  • “ನಾನೇ ಪುನರುತ್ಥಾನ ಮತ್ತು ನಾನೇ ಜೀವ” ಎಂದು ಯೇಸು ಹೇಳಿದಾಗ, ಆತನ ಮಾತಿಗೆ ಆತನೇ ಪುನರುತ್ಥಾನಕ್ಕೆ ಆಧಾರ, ಜನರು ಸತ್ತಾಗ ಅವರನ್ನು ಜೀವಂತರನ್ನಾಗಿ ಮಾಡುವುದಕ್ಕೆ ಕಾರಣನು ಆಗಿರುತ್ತಾನೆಂದು ಅರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • ಒಬ್ಬ ವ್ಯಕ್ತಿಯ “ಪುನರುತ್ಥಾನ” ಎನ್ನುವ ಮಾತನ್ನು “ಜೀವಂತವಾಗುವುದಕ್ಕೆ ತಿರುಗಿ ಬರುವುದು” ಅಥವಾ “ಸತ್ತಂತ ವ್ಯಕ್ತಿಯನ್ನು ತಿರುಗಿ ಜೀವಂತವನ್ನಾಗಿ ಮಾಡುವುದು” ಎಂದೂ ಅನುವಾದ ಮಾಡಬಹುದು.
  • ಈ ಮಾತಿಗೆ ಅಕ್ಷರಾರ್ಥವು ಏನೆಂದರೆ “ಎಬ್ಬಿಸುವುದು” ಅಥವಾ “(ಮರಣದಿಂದ) ಎಬ್ಬಿಸುವ ಕಾರ್ಯ” ಎಂದರ್ಥವಾಗಿರುತ್ತದೆ. ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ ಹೀಗೆಯೇ ಬಳಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಜೀವ, ಮರಣ, ಎಬ್ಬಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 21:14 ಮೆಸ್ಸೀಯ ಮರಣ ಮತ್ತು ___ ಪುನರುತ್ಹಾನದ ___ ಮೂಲಕ, ದೇವರು ಪಾಪಿಗಳನ್ನು ರಕ್ಷಿಸುವುದಕ್ಕೆ ಹಾಕಿರುವ ತನ್ನ ಪ್ರಣಾಳಿಕೆಯು ಪೂರ್ತಿಯಾಯಿತು ಮತ್ತು ಹೊಸ ಒಡಂಬಡಿಕೆಯನ್ನು ಆರಂಭಿಸಿದನು.
  • 37:05 “ನಾನೇ ___ ಪುನರುತ್ಥಾನ ___ ಮತ್ತು ಜೀವ”, ನನ್ನಲ್ಲಿ ನಂಬುವ ಅಥವಾ ಭರವಸೆಯಿಡುವ ಪ್ರತಿಯೊಬ್ಬರು ಸತ್ತರೂ ಅವರು ತಿರುಗಿ ಬದುಕುವರು ಎಂದು ಯೇಸು ಉತ್ತರಿಸಿದನು.

ಪದ ಡೇಟಾ:

  • Strong's: G386, G1454, G1815

ಪುನಸ್ಥಾಪಿಸು, ಪುನಸ್ಥಾಪಿಸುವುದು, ಪುನಸ್ಥಾಪಿಸಲಾಗಿದೆ, ಪುನಸ್ಥಾಪನೆ

ಪದದ ಅರ್ಥವಿವರಣೆ:

“ಪುನಸ್ಥಾಪಿಸು” ಮತ್ತು “ಪುನಸ್ಥಾಪನೆ” ಎನ್ನುವ ಪದಗಳು ಯಾವುದಾದರೊಂದನ್ನು ತನ್ನ ಪೂರ್ವ ಸ್ಥಿತಿಗೆ ಮತ್ತು ಉತ್ತಮ ಸ್ಥಿತಿಗೆ ತೆಗೆದುಕೊಂಡುಬರುವುದನ್ನು ಸೂಚಿಸುತ್ತದೆ.

  • ರೋಗದಿಂದ ಇರುವ ಶರೀರ ಭಾಗವು ಪುನರ್ಸ್ಥಾಪನೆಗೊಂಡಾಗ, ಅದು “ಗುಣವಾಗಿದೆ” ಎಂದರ್ಥವಾಗಿರುತ್ತದೆ.
  • ಮುರಿದು ಹೋಗಿರುವ ಸಂಬಂಧವು ತಿರುಗಿ ಕಟ್ಟಲ್ಪಟ್ಟರೆ ಅಥವಾ ಪುನಸ್ಥಾಪನೆಗೊಂಡರೆ ಅದನ್ನು “ಸಂಧಾನವಾಗಿದೆ” ಎಂದು ಕರೆಯುತ್ತಾರೆ. ದೇವರು ಪಾಪ ಸ್ವಭಾವವುಳ್ಳ ಜನರನ್ನು ಪುನರ್.ಸ್ಥಾಪನೆ ಮಾಡುವರು ಮತ್ತು ಆತನ ಬಳಿಗೆ ಅವರೆಲ್ಲರನ್ನು ಹಿಂದಕ್ಕೆ ಕರೆದುಕೊಂಡುಬರುವರು.
  • ಜನರು ತಮ್ಮ ಸ್ವಂತ ದೇಶದಲ್ಲಿ ತಿರುಗಿ ಪುನರ್ ಸ್ಥಾಪನೆಗೊಂಡಾಗ, ಅವರು ಆ ದೇಶಕ್ಕೆ “ಹಿಂದುರಿಗಿ ಬಂದಿದ್ದಾರೆ” ಅಥವಾ “ಹಿಂದಕ್ಕೆ ಕರೆಯಲ್ಪಟ್ಟಿದ್ದಾರೆ”.

ಅನುವಾದ ಸಲಹೆಗಳು:

  • ಸಂದರ್ಭಾನುಗುಣವಾಗಿ, “ಪುನಸ್ಥಾಪಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ನವೀಕರಿಸು” ಅಥವಾ “ಮರುಪಾವತಿಸು” ಅಥವಾ “ಹಿಂದಿರುಗು” ಅಥವಾ “ಗುಣಪಡಿಸು” ಅಥವಾ “ಹಿಂದಕ್ಕೆ ಕರೆದುಕೊಂಡು ಬಾ” ಎನ್ನುವ ಮಾತುಗಳು ಒಳಗೊಂಡಿವೆ.
  • ಈ ಪದಕ್ಕೆ ಬೇರೊಂದು ಮಾತುಗಳು “ಹೊಸದಾಗಿ ಮಾಡು” ಅಥವಾ “ತಿರುಗಿ ಹೊಸದಾಗಿ ಮಾಡು” ಎಂದಾಗಿರುತ್ತವೆ.
  • ಆಸ್ತಿ “ಪುನರ್ ಸಂಗ್ರಹಿಸಿದಾಗ” ಅದನ್ನು “ಪರಿಷ್ಕರಿಸಲಾಗಿದೆ” ಅಥವಾ “ಪುನರ್ ಸ್ಥಾನಕ್ಕೆ ತರಲಾಗಿದೆ” ಅಥವಾ ತನ್ನ ಯಜಮಾನನಿಗೆ “ಹಿಂದಕ್ಕೆ ಕೊಡಲಾಗಿದೆ” ಎಂದು ಹೇಳಲಾಗುತ್ತದೆ.
  • ಸಂದರ್ಭಾನುಗುಣವಾಗಿ, “ಪುನಸ್ಥಾಪನೆ” ಎನ್ನುವ ಪದವನ್ನು “ನವೀಕರಣ” ಅಥವಾ “ಸ್ವಸ್ಥತೆ” ಅಥವಾ “ಸಂಧಾನ” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7725, H7999, H8421, G600, G2675

ಪ್ರತಿಜ್ಞೆ, ಪ್ರತಿಜ್ಞೆಗಳು, ಪ್ರತಿಜ್ಞೆ ಮಾಡಿದೆ

ಪದದ ಅರ್ಥವಿವರಣೆ:

ಪ್ರತಿಜ್ಞೆ ಎನ್ನುವುದು ಒಬ್ಬ ವ್ಯಕ್ತಿ ದೇವರೊಂದಿಗೆ ಮಾಡುವ ವಾಗ್ಧಾನವಾಗಿರುತ್ತದೆ. ಒಬ್ಬ ವ್ಯಕ್ತಿ ದೇವರಿಗೆ ಆರಾಧನೆ ಭಾವವನ್ನು ತೋರಿಸುವುದಕ್ಕೆ ಅಥವಾ ವಿಶೇಷವಾಗಿ ದೇವರನ್ನು ಘನಪಡಿಸುವುದಕ್ಕೆ ಒಂದು ನಿರ್ದಿಷ್ಟವಾದ ಕಾರ್ಯವನ್ನು ಮಾಡುವುದಕ್ಕೆ ವಾಗ್ಧಾನ ಮಾಡುವುದು ಆಗಿರುತ್ತದೆ.

  • ಒಬ್ಬ ವ್ಯಕ್ತಿ ಪ್ರತಿಜ್ಞೆ ಮಾಡಿದನಂತರ, ಆ ವ್ಯಕ್ತಿ ಆ ಆಣೆಯನ್ನು ನೆರವೇರಿಸುವುದಕ್ಕೆ ಬಾಧ್ಯತೆಯನ್ನು ಪಡೆದಿರುತ್ತಾನೆ.
  • ಅವನು ಒಂದುವೇಳೆ ತನ್ನ ಪ್ರತಿಜ್ಞೆಯನ್ನು ನೆರವೇರಿಸದಿದ್ದರೆ ದೇವರು ಅವನಿಗೆ ತೀರ್ಪು ಮಾಡುತ್ತಾನೆಂದು ಸತ್ಯವೇದವು ಬೋಧನೆ ಮಾಡುತ್ತಿದೆ.
  • ಕೆಲವೊಂದುಬಾರಿ ಆ ವ್ಯಕ್ತಿ ತನ್ನನ್ನು ರಕ್ಷಿಸುವುದಕ್ಕೆ ದೇವರನ್ನು ಕೇಳಿಕೊಳ್ಳಬಹುದು ಅಥವಾ ಪ್ರತಿಜ್ಞೆಯನ್ನು ನೆರವೇರಿಸುವುದರಲ್ಲಿ ತನಗಾಗಿ ಮಾರ್ಪಾಟು ಕೊಡಬಹುದು.
  • ಆದರೆ ಒಬ್ಬ ವ್ಯಕ್ತಿಯ ತನ್ನ ಪ್ರತಿಜ್ಞೆಯ ವಿಷಯವಾಗಿ ಕೇಳಿಕೊಳ್ಳುವ ಮನವಿಯನ್ನು ದೇವರು ನೆರವೇರಿಸಬೇಕಾದ ಅವಶ್ಯಕತೆಯಿರುವುದಿಲ್ಲ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಪ್ರತಿಜ್ಞೆ” ಎನ್ನುವ ಪದವನ್ನು “ಗಂಭೀರವಾದ ಭರವಸೆ” ಅಥವಾ “ದೇವರೊಂದಿಗೆ ಮಾಡಿರುವ ವಾಗ್ಧಾನ” ಎಂದೂ ಅನುವಾದ ಮಾಡಬಹುದು.
  • ಪ್ರತಿಜ್ಞೆ ಎನ್ನುವುದು ದೇವರೊಂದಿಗೆ ಮಾಡುವ ಒಂದು ವಿಶೇಷವಾದ ಪ್ರಮಾಣ ವಚನವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ವಾಗ್ಧಾನ, ಆಣೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5087, H5088, G2171

ಪ್ರತಿಷ್ಠಾಪಿಸು, ಪ್ರತಿಷ್ಟಾಪಿಸಲ್ಪಟ್ಟಿದೆ, ಪ್ರತಿಷ್ಠೆ

ಪದದ ಅರ್ಥವಿವರಣೆ:

ಪ್ರತಿಷ್ಠಾಪಿಸು ಎನ್ನುವ ಪದಕ್ಕೆ ದೇವರ ಸೇವೆಗಾಗಿ ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು ಸಮರ್ಪಿಸು ಎಂದರ್ಥ. ಪ್ರತಿಷ್ಥೆ ಮಾಡಲ್ಪಟ್ಟ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತು ಪರಿಶುದ್ಧವಾಗಿ ಪರಿಗಣಿಸಲಾಗುತ್ತದೆ ಮತ್ತು ದೇವರಿಗಾಗಿ ಪ್ರತ್ಯೇಕಿಸಲ್ಪಟ್ಟವರು ಎಂದು ಹೇಳಲಾಗುತ್ತದೆ.

  • ಈ ಪದದ ಸಮಾನಾರ್ಥಕ ಪದವೇನೆಂದರೆ “ಪವಿತ್ರೀಕರಿಸು” ಅಥವಾ “ಪರಿಶುದ್ಧಗೊಳಿಸು”, ಆದರೆ ಇದಕ್ಕೆ ಸಹಜವಾಗಿ ಬರುವ ಅರ್ಥವೇನೆಂದರೆ ದೇವರ ಸೇವೆಗಾಗಿ ಒಬ್ಬರನ್ನು ಪ್ರತ್ಯೇಕಿಸುವುದು ಎಂದರ್ಥ.
  • ದೇವರಿಗಾಗಿ ಪ್ರತಿಷ್ಟಾಪನೆ ಮಾಡಿದ ವಸ್ತುಗಳಲ್ಲಿ ಬಲಿಕೊಡುವ ಪ್ರಾಣಿಗಳು, ದಹನಬಲಿ ಕೊಡುವ ಯಜ್ಞವೇದಿ ಮತ್ತು ಗುಡಾರಗಳಿದ್ದವು.
  • ದೇವರಿಗೆ ಪ್ರತಿಷ್ಟಾಪನೆ ಮಾಡಲ್ಪಟ್ಟ ಪ್ರಜೆಗಳಲ್ಲಿ ಯಾಜಕರು, ಇಸ್ರಾಯೇಲ್ ಜನರು ಮತ್ತು ಹಿರಿಯ ಗಂಡು ಮಗ ಇದ್ದಿದ್ದರು.
  • “ಪ್ರತಿಷ್ಠಾಪಿಸು” ಎನ್ನುವ ಪದವು ಕೆಲವೊಂದುಬಾರಿ “ಪವಿತ್ರಗೊಳಿಸು” ಎನ್ನುವ ಅರ್ಥವನ್ನೇ ಹೊಂದಿರುತ್ತದೆ, ವಿಶೇಷವಾಗಿ ಇದು ದೇವರ ಸೇವೆಗಾಗಿ ವಸ್ತುಗಳನ್ನು ಅಥವಾ ಜನರನ್ನು ಸಿದ್ಧಗೊಳಿಸುವ ಸಂಬಂಧದಲ್ಲಿ ಅನ್ವಯವಾಗುತ್ತದೆ, ಇದರಿಂದ ಅವರು ಅಥವಾ ಅವುಗಳು ದೇವರ ಸೇವೆಗಾಗಿ ಅಂಗೀಕರಿಸಲ್ಪಟ್ಟಿರುತ್ತಾರೆ ಮತ್ತು ಅಂಗೀಕಾರವಾಗಿರುತ್ತವೆ.

ಅನುವಾದ ಸಲಹೆಗಳು:

  • “ಪ್ರತಿಷ್ಠಾಪಿಸು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರ ಸೇವೆಗಾಗಿ ಪ್ರತ್ಯೇಕಿಸು” ಅಥವಾ “ದೇವರ ಸೇವೆಗಾಗಿ ಪವಿತ್ರೀಕರಿಸು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಪರಿಶುದ್ಧ” ಮತ್ತು “ಶುದ್ಧೀಕರಿಸು” ಎನ್ನುವ ಪದಗಳನ್ನು ಕೂಡ ಒಂದುಬಾರಿ ನೋಡಿರಿ.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ, ಪವಿತ್ರ, ಶುದ್ಧೀಕರಣ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2763, H3027, H4390, H4394, H5144, H5145, H6942, H6944, G1457, G5048

ಪ್ರತ್ಯೇಕಿಸು

ಪದದ ಅರ್ಥವಿವರಣೆ:

“ಪ್ರತ್ಯೇಕಿಸು” ಎನ್ನುವ ಪದಕ್ಕೆ ಒಂದು ನಿರ್ದಿಷ್ಟವಾದ ಉದ್ದೇಶವನ್ನು ನೆರವೇರಿಸುವುದಕ್ಕೆ ಯಾವುದಾದರೊಂದರಿಂದ ಪ್ರತ್ಯೇಕಿಸುವುದು ಎಂದರ್ಥ. ಯಾವುದಾದರೊಂದನ್ನು ಅಥವಾ ಒಬ್ಬ ವ್ಯಕ್ತಿಯನ್ನು “ಪ್ರತ್ಯೇಕಿಸುವುದು” ಎಂದರೆ ಅವರನ್ನು ಅಥವಾ ಅದನ್ನು “ಪ್ರತ್ಯೇಕಿಸು” ಎಂದರ್ಥವಾಗಿರುತ್ತದೆ.

  • ದೇವರನ್ನು ಸೇವಿಸುವುದಕ್ಕೆ ಇಸ್ರಾಯೇಲ್ಯರು ಪ್ರತ್ಯೇಕಿಸಲ್ಪಟ್ಟಿರುತ್ತಾರೆ.
  • ದೇವರು ಬಯಸಿದ ಕೆಲಸವನ್ನು ಮಾಡುವುದಕ್ಕೆ ಪೌಲನನ್ನು ಮತ್ತು ಬರ್ನಾಬನನ್ನು ಪ್ರತ್ಯೇಕಿಸಬೇಕೆಂದು ಪವಿತ್ರಾತ್ಮನು ಅಂತಿಯೋಕ್ಯದಲ್ಲಿರುವ ಕ್ರೈಸ್ತರಿಗೆ ಆಜ್ಞಾಪಿಸಿದನು.
  • ದೇವರ ಸೇವೆಗಾಗಿ “ಪ್ರತ್ಯೇಕಿಸಲ್ಪಟ್ಟ” ಒಬ್ಬ ವಿಶ್ವಾಸಿ ದೇವರ ಚಿತ್ತವನ್ನು ನೆರವೇರಿಸುವುದಕ್ಕೆ “ಪ್ರತಿಷ್ಠಾಪನೆ” ಮಾಡಿದ್ದಾನೆ ಎಂದರ್ಥ.
  • “ಪರಿಶುದ್ಧ” ಎನ್ನುವದಕ್ಕೆ ಅನೇಕ ಅರ್ಥಗಳಲ್ಲಿ ಒಂದು ಅರ್ಥವು ಏನೆಂದರೆ ದೇವರಿಗೆ ಸಂಬಂಧಪಟ್ಟಿರುವಂತೆ ಪ್ರತ್ಯೇಕಿಸಲ್ಪಡುವುದು ಮತ್ತು ಲೋಕದ ಪಾಪ ಸ್ವಭಾವದ ಮಾರ್ಗಗಳಿಂದ ಪ್ರತ್ಯೇಕಿಸಲ್ಪಡುವುದು ಎಂದರ್ಥವಾಗಿರುತ್ತದೆ.
  • ಯಾರಾದರೊಬ್ಬರನ್ನು “ಪವಿತ್ರೀಕರಿಸುವುದು” ಎಂದರೆ ಆ ವ್ಯಕ್ತಿಯನ್ನು ದೇವರ ಸೇವೆಗಾಗಿ ಪ್ರತ್ಯೇಕಿಸಲ್ಪಡುವುದು ಎಂದರ್ಥ.

ಅನುವಾದ ಸಲಹೆಗಳು:

  • “ಪ್ರತ್ಯೇಕಿಸು” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ವಿಶೇಷವಾಗಿ ಆಯ್ಕೆ ಮಾಡು” ಅಥವಾ “ನಿಮ್ಮ ಮಧ್ಯೆದೊಳಗಿಂದ ಪ್ರತ್ಯೇಕಿಸಿರಿ” ಅಥವಾ “ಒಂದು ವಿಶೇಷವಾದ ಕೆಲಸಕ್ಕಾಗಿ ಪಕ್ಕಕ್ಕೆ ಬರುವುದು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಪ್ರತ್ಯೇಕಿಸಲ್ಪಡುವುದು” ಎನ್ನುವ ಮಾತಿಗೆ “ಯಾವುದಾದರೊಂದರಿಂದ ಪ್ರತ್ಯೇಕಿಸಲ್ಪಡುವುದು” ಅಥವಾ “ಒಂದು ವಿಶೇಷವಾದ ಕೆಲಸಕ್ಕೆ ವಿಶೇಷವಾಗಿ ಅಭಿಷೇಕ ಹೊಂದುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ, ಪವಿತ್ರೀಕರಿಸು, ನೇಮಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2764, H4390, H5674, H6918, H6942, H6944, G37, G38, G40, G873

ಪ್ರಲಾಪ, ಪ್ರಲಾಪಗಳು

ಅರ್ಥವಿವರಣೆ:

“ಪ್ರಲಾಪ” ಮತ್ತು “ಪ್ರಲಾಪಗಳು” ಎನ್ನುವ ಪದಗಳು ಶೋಕ, ದುಃಖ, ಅಥವಾ ಕೊರಗುವಿಕೆ ಬಲದ ವ್ಯಕ್ತೀಕರಣವನ್ನು ಸೂಚಿಸುತ್ತವೆ.

  • ಕೆಲವೊಂದುಬಾರಿ ಇದು ಪಾಪ ಮಾಡಿದ್ದಕ್ಕಾಗಿ ಆಳವಾದ ವಿಷಾದವನ್ನು ಅಥವಾ ವಿಪತ್ತನ್ನು ಅನುಭವಿಸಿದ ಜನರಿಗೆ ತೋರಿಸುವ ಕರುಣೆಯನ್ನು ಇದು ಒಳಗೊಂಡಿರುತ್ತದೆ.
  • ಪ್ರಲಾಪದಲ್ಲಿ ಶೋಕ, ಅಳುವುದು ಅಥವಾ ಗೋಳಿಡುವುದು ಒಳಗೊಂಡಿರುತ್ತದೆ.

ಅನುವಾದ ಸಲಹೆಗಳು:

  • “ಪ್ರಲಾಪ” ಎನ್ನುವ ಪದವನ್ನು “ಹೆಚ್ಚಾಗಿ ಅಳುವುದು” ಅಥವಾ “ಶೋಕದಲ್ಲಿ ಗೋಳಾಡುವುದು” ಅಥವಾ “ದುಃಖದಲ್ಲಿರುವುದು” ಎಂದೂ ಅನುವಾದ ಮಾಡಬಹುದು.
  • “ಪ್ರಲಾಪಗಳು” (ಅಥವಾ “ಪ್ರಲಾಪ”) ಎನ್ನುವ ಪದವನ್ನು “ಜೋರಾಗಿ ಗೋಳಾಡುವುದು ಮತ್ತು ಅಳುವುದು” ಅಥವಾ “ಹೆಚ್ಚಾಗಿ ದುಃಖಪಡುವುದು” ಅಥವಾ “ದುಃಖಕರವಾಗಿ ಬಿಕ್ಕಿ ಬಿಕ್ಕಿ ಅಳುವುದು” ಅಥವಾ “ಶೋಕದಲ್ಲಿ ಅಳುವುದು” ಎಂದೂ ಅನುವಾದ ಮಾಡಬಹದು.

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: H0056, H0421, H0578, H0592, H1058, H4553, H5091, H5092, H5594, H6088, H6969, H7015, H8567, G23540, G23550, G28700, G28750

ಪ್ರವಾದಿ, ಪ್ರವಾದಿಗಳು, ಪ್ರವಾದನೆ, ಪ್ರವಾದಿಸು, ದರ್ಶಿ, ಪ್ರವಾದಿನಿ

ಪದದ ಅರ್ಥವಿವರಣೆ:

“ಪ್ರವಾದಿ” ಎನ್ನುವವನು ದೇವರ ಸಂದೇಶವನ್ನು ಜನರಿಗೆ ತಿಳಿಸುವ ಒಬ್ಬ ವ್ಯಕ್ತಿಯಾಗಿರುತ್ತಾನೆ. ಈ ಕೆಲಸವನ್ನು ಮಾಡುವ ಸ್ತ್ರೀಯನ್ನು “ಪ್ರವಾದಿನಿ” ಎಂದು ಕರೆಯುತ್ತಾರೆ.

  • ಅನೇಕಬಾರಿ ಪ್ರವಾದಿಗಳು ಜನರನ್ನು ತಮ್ಮ ಪಾಪಗಳಿಂದ ಹಿಂದುರಿಗಿ, ದೇವರಿಗೆ ವಿಧೇಯರಾಗಿರಬೇಕೆಂದು ಎಚ್ಚರಿಸಿದ್ದಾರೆ.
  • “ಪ್ರವಾದನೆ” ಎನ್ನುವುದು ಪ್ರವಾದಿ ಮಾತನಾಡುವ ಸಂದೇಶವಾಗಿರುತ್ತದೆ. “ಪ್ರವಾದಿಸು” ಎಂದರೆ ದೇವರ ಸಂದೇಶಗಳನ್ನು ಮಾತನಾಡುವುದು ಎಂದರ್ಥ.
  • ಅನೇಕಬಾರಿ ಪ್ರವಾದಿಸುವ ಸಂದೇಶವು ಭವಿಷ್ಯತ್ತಿನಲ್ಲಿ ನಡೆಯುವ ಕಾರ್ಯಗಳ ಕುರಿತಾಗಿರುತ್ತದೆ.
  • ಹಳೇ ಒಡಂಬಡಿಕೆಯಲ್ಲಿ ಅನೇಕ ಪ್ರವಾದನೆಗಳು ಈಗಾಗಲೇ ನೆರವೇರಿಸಲ್ಪಟ್ಟಿರುತ್ತವೆ.
  • ಸತ್ಯವೇದದಲ್ಲಿ ಅನೇಕ ಪುಸ್ತಕಗಳು ಪ್ರವಾದಿಗಳಿಂದ ಬರೆಯಲ್ಪಟ್ಟಿರುತ್ತವೆ, ಕೆಲವೊಂದುಬಾರಿ “ಪ್ರವಾದಿಗಳು” ಎಂಬುದಾಗಿ ಸೂಚಿಸಲ್ಪಟ್ಟಿರುತ್ತದೆ.
  • “ನ್ಯಾಯಪ್ರಮಾಣ ಮತ್ತು ಪ್ರವಾದಿಗಳು” ಎನ್ನುವ ಮಾತಿನ ಉದಾಹರಣೆಯನ್ನು ತೆಗೆದುಕೊಂಡರೆ, ಈ ಮಾತು ಇಬ್ರಿಯ ಲೇಖಗಳೆಲ್ಲವುಗಳನ್ನು ಸೂಚಿಸುತ್ತವೆ, ಇವುಗಳನ್ನು “ಹಳೇ ಒಡಂಬಡಿಕೆ” ಎಂದೂ ಕರೆಯುತ್ತಾರೆ.
  • ಪ್ರವಾದಿ ಎನ್ನುವ ಹೆಸರಿಗೆ ಹಳೇಯ ಹೆಸರು “ದರ್ಶಿ” ಅಥವಾ “ನೋಡುವ ವ್ಯಕ್ತಿ” ಎಂದಾಗಿರುತ್ತದೆ.
  • “ದರ್ಶಿ” ಎನ್ನುವ ಪದವು ಕೆಲವೊಂದುಬಾರಿ ಸುಳ್ಳು ಪ್ರವಾದಿಯನ್ನು ಅಥವಾ ಕಣಿ ಹೇಳುವುದನ್ನು ಅಭ್ಯಾಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಪ್ರವಾದಿ” ಎನ್ನುವ ಪದವನ್ನು “ದೇವರ ಪ್ರತಿನಿಧಿ” ಅಥವಾ “ದೇವರು ಪಕ್ಷವಾಗಿ ಮಾತನಾಡುವ ವ್ಯಕ್ತಿ” ಅಥವಾ “ದೇವರ ಸಂದೇಶಗಳನ್ನು ಮಾತನಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ದರ್ಶಿ” ಎನ್ನುವ ಪದವನ್ನು “ದರ್ಶಗಳನ್ನು ನೋಡುವ ವ್ಯಕ್ತಿ” ಅಥವಾ “ದೇವರಿಂದ ಭವಿಷ್ಯತ್ತನ್ನು ನೋಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಪ್ರವಾದಿನಿ” ಎನ್ನುವ ಪದವನ್ನು “ದೇವರಿಗಾಗಿ ಮಾತನಾಡುವ ಪ್ರತಿನಿಧಿ” ಅಥವಾ “ದೇವರ ಪಕ್ಷವಾಗಿ ಮಾತನಾಡುವ ಸ್ತ್ರೀ” ಅಥವಾ “ದೇವರ ಸಂದೇಶಗಳನ್ನು ಮಾತನಾಡುವ ಸ್ತ್ರೀ” ಎಂದೂ ಅನುವಾದ ಮಾಡಬಹುದು.
  • “ಪ್ರವಾದನೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ದೇವರಿಂದ ಬಂದಿರುವ ಸಂದೇಶ” ಅಥವಾ “ಪ್ರವಾದಿಯ ಸಂದೇಶ” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.
  • “ಪ್ರವಾದಿಸು” ಎನ್ನುವ ಪದವನ್ನು “ದೇವರಿಂದ ಬಂದಿರುವ ಮಾತುಗಳನ್ನಾಡುವುದು” ಅಥವಾ “ದೇವರ ಸಂದೇಶವನ್ನು ಹೇಳು” ಎಂದೂ ಅನುವಾದ ಮಾಡಬಹುದು.
  • ಅಲಂಕಾರಿಕ ಮಾತುಗಳಲ್ಲಿ, “ನ್ಯಾಯಪ್ರಮಾಣ ಮತ್ತು ಪ್ರವಾದಿಗಳು” ಎನ್ನುವ ಮಾತನ್ನು “ಪ್ರವಾದಿಗಳ ಮತ್ತು ನ್ಯಾಯಪ್ರಮಾಣದ ಪುಸ್ತಕಗಳು” ಅಥವಾ “ದೇವರ ಕುರಿತಾಗಿ ಮತ್ತು ತನ್ನ ಜನರ ಕುರಿತಾಗಿ ಬರೆಯಲ್ಪಟ್ಟ ಪ್ರತಿಯೊಂದು ವಿಷಯವು” ಎಂದೂ ಅನುವಾದ ಮಾಡಬಹುದು, ಅದರಲ್ಲಿ ದೇವರ ಆಜ್ಞೆಗಳು ಮತ್ತು ಆತನ ಪ್ರವಾದಿಗಳು ಪ್ರಕಟಿಸಿರುವುದು ಒಳಗೊಂಡಿರುತ್ತದೆ.”
  • ಸುಳ್ಳು ದೇವರ ಪ್ರವಾದಿಯನ್ನು (ಅಥವಾ ದರ್ಶಿಯನ್ನು) ಸೂಚಿಸಿದಾಗ, ಉದಾಹರಣೆಗೆ, “ಸುಳ್ಳು ಪ್ರವಾದಿ (ದರ್ಶಿ)” ಅಥವಾ “ಸುಳ್ಳು ದೇವರ ಪ್ರವಾದಿ (ದರ್ಶಿ)” ಅಥವಾ “ಬಾಳ್ ಪ್ರವಾದಿ” ಎನ್ನುವುದು ತುಂಬಾ ಅತ್ಯಗತ್ಯ.

(ಈ ಪದಗಳನ್ನು ಸಹ ನೋಡಿರಿ : ಬಾಳ್, ಕಣಿ, ಸುಳ್ಳು ದೇವರು, ಸುಳ್ಳು ಪ್ರವಾದಿ, ನೆರವೇರಿಸು, ಧರ್ಮಶಾಸ್ತ್ರ, ದರ್ಶನ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 12:12 ಐಗುಪ್ತರೆಲ್ಲರೂ ಸತ್ತಿದ್ದಾರೆಂದು ಇಸ್ರಾಯೇಲ್ಯರು ನೋಡಿದಾಗ, ಅವರು ದೇವರಲ್ಲಿ ಭರವಸೆ ಇಟ್ಟರು ಮತ್ತು ಮೋಶೆ ದೇವರ ___ ಪ್ರವಾದಿ ___ ಎಂದು ನಂಬಿದರು.
  • 17:13 ದಾವೀದನು ಮಾಡಿದ ವಿಷಯದಲ್ಲಿ ದೇವರು ತುಂಬಾ ಹೆಚ್ಚಾಗಿ ಕೋಪಗೊಂಡಿದ್ದರು, ಅದಕ್ಕಾಗಿ ದಾವೀದನು ಎಂಥ ಭಯಂಕರವಾದ ಪಾಪವನ್ನು ಮಾಡಿದ್ದಾನೆಂದು ತಿಳಿಸಲು, ಆತನು ___ ಪ್ರವಾದಿಯಾದ ___ ನಾತಾನನನ್ನು ಕಳುಹಿಸಿದನು.
  • 19:01 ಇಸ್ರಾಯೇಲ್ಯರ ಚರಿತ್ರೆಯಲ್ಲೆಲ್ಲಾ ದೇವರು ಅವರನ್ನು ___ ಪ್ರವಾದಿಗಳ ___ ಬಳಿಗೆ ಕಳುಹಿಸಿದರು. ___ ಪ್ರವಾದಿಗಳು ___ ದೇವರಿಂದ ಸಂದೇಶಗಳನ್ನು ಕೇಳಿಸಿಕೊಂಡು, ಆ ದೇವರ ಸಂದೇಶಗಳನ್ನು ಜನರಿಗೆ ಹೇಳಿದರು.
  • 19:06 ಸುಮಾರು 450 ಮಂದಿ ಬಾಳ್ ಪ್ರವಾದಿಗಳನ್ನು ಸೇರಿಸಿ, ಇಸ್ರಾಯೇಲ್ ರಾಜ್ಯದಲ್ಲಿರುವ ಎಲ್ಲಾ ಜನರು ಕಾರ್ಮೆಲ್ ಪರ್ವತದ ಬಳಿಗೆ ಬಂದರು.
  • 19:17 ಜನರು ಹೆಚ್ಚಿನ ಮಟ್ಟಿಗೆ ದೇವರಿಗೆ ವಿಧೇಯತೆಯನ್ನು ತೋರಿಸಿದ್ದಿಲ್ಲ. ಅವರು ಹೆಚ್ಚಾಗಿ ___ ಪ್ರವಾದಿಗಳಲ್ಲಿ ___ ದುಷ್ಟ ನಡತೆಯಿಂದ ನಡೆದುಕೊಳ್ಳುತ್ತಿದ್ದರು ಮತ್ತು ಕೆಲವೊಂದುಬಾರಿ ಅವರು ಸಾಯಿಸಲ್ಪಡುತ್ತಿದ್ದರು.
  • 21:09ಮೆಸ್ಸೀಯ ಕನ್ಯೆಯ ಗರ್ಭದಿಂದ ಹುಟ್ಟುವನು ಎಂದು ___ ಪ್ರವಾದಿಯಾದ ___ ಯೆಶಾಯನು ___ ಪ್ರವಾದಿಸಿದ್ದನು ___ .
  • 43:05 “ ಯೋವೇಲನಿಂದ ಬಂದಿರುವ ಪ್ರವಾದನೆಯು ಇದು ನೆರವೇರಿಸಲ್ಪಡುವುದು ಎನ್ನುವುದರಲ್ಲಿ “ಅಂತ್ಯಕಾಲದಲ್ಲಿ, ನಾನು ನನ್ನ ಆತ್ಮವನ್ನು ಸುರಿಸುತ್ತೇನೆ” ಎಂದು ದೇವರು ಹೇಳಿದ ಮಾತನ್ನು ಹೇಳಿದ್ದನು.”
  • 43:07 “ನೀನು ನಿನ್ನ ಪರಿಶುದ್ಧನನ್ನು ಸಮಾಧಿಯೊಳಗೆ ಬಿಡುವುದಿಲ್ಲ” ಎಂದು ಹೇಳಿದ ___ ಪ್ರವಾದನೆಯು ___ ನೆರವೇರಿಸಲ್ಪಟ್ಟಿದೆ.”
  • 48:12 ದೇವರ ವಾಕ್ಯವನ್ನು ಸಾರಿದ ಮೋಶೆಯು ದೊಡ್ಡ __ ಪ್ರವಾದಿಯಾಗಿದ್ದನು __. ಆದರೆ ಯೇಸುವು ಎಲ್ಲರಿಗಿಂತ ದೊಡ್ಡ ___ ಪ್ರವಾದಿಯಾಗಿರುತ್ತಾನೆ ___. ಆತನೇ ದೇವರ ವಾಕ್ಯವಾಗಿದ್ದಾನೆ.

ಪದ ಡೇಟಾ:

  • Strong's: H2372, H2374, H4853, H5012, H5013, H5016, H5017, H5029, H5030, H5031, H5197, G2495, G4394, G4395, G4396, G4397, G4398, G5578

ಪ್ರಾಣ, ಸ್ವಂತ

ಪದದ ಅರ್ಥವಿವರಣೆ:

"ಪ್ರಾಣ" ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಅಂತಃರಂಗವು, ಕಾಣಿಸದಿರುವ ನಿತ್ಯತ್ವದ ಭಾಗವೂ ಆಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಭೌತಿಕ ಭಾಗವಲ್ಲದ್ದನ್ನು ಸೂಚಿಸುತ್ತದೆ.

  • “ಪ್ರಾಣ” ಮತ್ತು “ಆತ್ಮ” ಎನ್ನುವ ಪದಗಳು ಎರಡು ವಿಭಿನ್ನ ಪರಿಕಲ್ಪನೆಗಳಾಗಿರಬಹುದು, ಅಥವಾ ಅವು ಒಂದೇ ಪರಿಕಲ್ಪನೆಯನ್ನು ಸೂಚಿಸುವ ಎರಡು ಪದಗಳಾಗಿಯೂ ಇರಬಹುದು.
  • ಒಬ್ಬ ವ್ಯಕ್ತಿ ಸತ್ತಾಗ, ತನ್ನ ಪ್ರಾಣವು ತನ್ನ ಶರೀರವನ್ನು ಬಿಟ್ಟುಹೋಗುವುದು.
  • “ಪ್ರಾಣ” ಎನ್ನುವ ಪದವು ಕೆಲವೊಂದು ಬಾರಿ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ. ಉದಾಹರಣೆಗೆ, “ಪಾಪಗಳನ್ನು ಮಾಡುವ ಪ್ರಾಣ” ಎನ್ನುವ ಮಾತಿಗೆ “ಪಾಪಗಳನ್ನು ಮಾಡುವ ವ್ಯಕ್ತಿ” ಎಂದರ್ಥ ಮತ್ತು “ನನ್ನ ಪ್ರಾಣವು ನೊಂದಿದೆ” ಎನ್ನುವ ಮಾತಿಗೆ “ನಾನು ದಣಿದಿದ್ದೇನೆ” ಎಂದರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • “ಪ್ರಾಣ” ಎನ್ನುವ ಪದವನ್ನು “ಅಂತಃರಂಗ” ಅಥವಾ “ಅಂತಃರಂಗದಲ್ಲಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ “ನನ್ನ ಪ್ರಾಣ” ಎನ್ನುವ ಮಾತನ್ನು “ನಾನು” ಅಥವಾ “ನಾನೇ” ಎಂದೂ ಅನುವಾದ ಮಾಡಬಹುದು.
  • “ಪ್ರಾಣ” ಎನ್ನುವ ಪದವನ್ನು ಸಹಜವಾಗಿ “ವ್ಯಕ್ತಿ” ಅಥವಾ “ಅವನು” ಅಥವಾ “ಆತನು” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಲಾಗುತ್ತದೆ.
  • ಕೆಲವೊಂದು ಭಾಷೆಗಳಲ್ಲಿ “ಪ್ರಾಣ” ಮತ್ತು “ಆತ್ಮ” ಎನ್ನುವ ಪರಿಕಲ್ಪನೆಗಳಿಗೆ ಒಂದೇ ಪದವನ್ನು ಹೊಂದಿರಬಹುದು.
  • ಇಬ್ರಿ.4:12ನೇ ವಾಕ್ಯದಲ್ಲಿ “ಪ್ರಾಣ ಮತ್ತು ಆತ್ಮವನ್ನು ವಿಭಜಿಸುತ್ತಾ” ಎನ್ನುವ ಅಲಂಕಾರಿಕ ಮಾತಿಗೆ “ಆಳವಾಗಿ ವಿವೇಚಿಸುವುದು ಅಥವಾ ಅಂತಃರಂಗ ವ್ಯಕ್ತಿಯನ್ನು ತೋರಿಸುವುದು” ಎಂದರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H5082, H5315, H5397, G5590

ಪ್ರಾಯಶ್ಚಿತ್ತ ಮುಚ್ಚಳ

ಪದದ ಅರ್ಥವಿವರಣೆ:

“ಪ್ರಾಯಶ್ಚಿತ್ತ ಮುಚ್ಚಳ” ಎನ್ನುವದನ್ನು ಒಡಂಬಡಿಕೆಯ ಮಂಜೂಷದ ಮೇಲೆ ಮುಚ್ಚುವುದಕ್ಕೆ ಉಪಯೋಗಿಸುವ ಬಂಗಾರದ ಹಲಗೆಯಾಗಿರುತ್ತದೆ. ಅನೇಕ ಆಂಗ್ಲ ಅನುವಾದಗಳಲ್ಲಿ “ಪ್ರಾಯಶ್ಚಿತ್ತ ಹಲಗೆ” ಎಂದೂ ಸೂಚಿಸಿದ್ದಾರೆ.

  • ಪ್ರಾಯಶ್ಚಿತ್ತ ಮುಚ್ಚಳ ಸುಮಾರು 115 ಸೆಂಟಿ ಮೀಟರ್ ಉದ್ದ ಮತ್ತು 70 ಸೆಂಟಿ ಮೀಟರ್ ಅಗಲ ಇರುತ್ತದೆ.
  • ಪ್ರಾಯಶ್ಚಿತ್ತ ಮುಚ್ಚಳದ ಮೇಲೆ ಎರಡು ಬಂಗಾರದ ಕೆರೂಬಿಗಳನ್ನು ಇಟ್ಟು, ಅವುಗಳ ರೆಕ್ಕೆಗಳು ಅದಕ್ಕೆ ಅಂಟಿಕೊಂಡಿರುವಂತೆ ಮಾಡಿರುತ್ತಾರೆ.
  • ಯೆಹೋವನು ಪ್ರಾಯಶ್ಚಿತ್ತ ಮುಚ್ಚಳ ಮೇಲೆ ಇರುವ ಕೆರೂಬಿಗಳ ರೆಕ್ಕೆಗಳ ಮಧ್ಯೆದಲ್ಲಿ ಇಸ್ರಾಯೇಲ್ಯರೊಂದಿಗೆ ಭೇಟಿಯಾಗುತ್ತಾನೆಂದು ಹೇಳಿದನು, ಜನರ ಪ್ರತಿನಿಧಿಯಾಗಿ ಯೆಹೋವನನ್ನು ಭೇಟಿಯಾಗುವುದಕ್ಕೆ ಕೇವಲ ಪ್ರಧಾನ ಯಾಜಕನಿಗೆ ಮಾತ್ರ ಅನುಮತಿ ಇದ್ದಿತ್ತು.
  • ಕೆಲವೊಂದುಸಲ ಈ ಪ್ರಾಯಶ್ಚಿತ್ತ ಮುಚ್ಚಳವನ್ನು “ಕೃಪಾಸನ” ಎಂದು ಸೂಚಿಸಿದ್ದಾರೆ. ಯಾಕಂದರೆ ಪಾಪ ಸ್ವಭಾವಿಗಳಾದ ಜನರನ್ನು ವಿಮೋಚಿಸುವುದಕ್ಕೆ ದೇವರ ಕೃಪೆಯು/ಕರುಣೆಯು ಕೆಳಗೆ ಇಳಿದು ಬರುತ್ತಿತ್ತು.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಿಮೋಚಿಸುತ್ತೇನೆಂದು ದೇವರು ವಾಗ್ಧಾನ ಮಾಡಿದ ಮಂಜೂಷದ ಮುಚ್ಚಳ” ಅಥವಾ “ದೇವರು ವಿಮೋಚಿಸುವ ಸ್ಥಳ” ಅಥವಾ “ದೇವರು ಕ್ಷಮಿಸುವ ಮತ್ತು ಸಮಾಧಾನಪಡಿಸುವ ಮಂಜೂಷದ ಮುಚ್ಚಳ” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
  • “ತ್ಯಾಗದ ಸ್ಥಳ” ಎಂದೂ ಅರ್ಥ ಬರುತ್ತದೋ.
  • ಈ ಪದದೊಂದಿಗೆ “ಪ್ರಾಯಶ್ಚಿತ್ತ”, “ತ್ಯಾಗ” ಮತ್ತು “ವಿಮೋಚನೆ” ಎನ್ನುವ ಪದಗಳನ್ನು ಅನುವಾದನೆ ಮಾಡುತ್ತಿರುವ ಪದಗಳನ್ನು ಹೋಲಿಸಿ ನೋಡಿರಿ.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ಪ್ರಾಯಶ್ಚಿತ್ತ, ಕೆರೂಬಿ, ತ್ಯಾಗ, ವಿಮೋಚನೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3727, G2435

ಪ್ರಾಯಶ್ಚಿತ್ತ, ವಿಮೋಚನೆ, ಬಿಡುಗಡೆಗಳು

ಪದದ ಅರ್ಥವಿವರಣೆ:

“ವಿಮೋಚನೆ” ಮತ್ತು “ಪ್ರಾಯಶ್ಚಿತ್ತ” ಎನ್ನುವ ಪದಗಳು ಜನರ ಪಾಪಗಳಿಗೋಸ್ಕರ ದೇವರು ಯಾವರೀತಿ ತ್ಯಾಗವನ್ನು ಮಾಡಿದ್ದಾರೆಂದು ಮತ್ತು ಪಾಪಕ್ಕಾಗಿ ತನ್ನ ಕೋಪಾಗ್ನಿಯನ್ನು ಯಾವರೀತಿ ಶಮನಗೊಳಿಸಿಕೊಂಡಿದ್ದಾರೆಂದು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ, ಇಸ್ರಾಯೇಲ್ಯರು ತಾವು ಮಾಡಿದ ಪಾಪಗಳಿಗೋಸ್ಕರ ಒಂದು ಪ್ರಾಣಿಯನ್ನು ಬಲಿ ಕೊಟ್ಟು ರಕ್ತದ ಬಲಿದಾನವನ್ನು ಅರ್ಪಿಸುವುದರ ಮೂಲಕ ತಾತ್ಕಾಲಿಕವಾದ ಪ್ರಾಯಶ್ಚಿತ್ತವನ್ನು ದೇವರು ಅನುಮತಿಸಿದ್ದರು.
  • ಹೊಸ ಒಡಂಬಡಿಕೆಯಲ್ಲಿ ದಾಖಲಿಸಿದಂತೆ, ಶಿಲುಬೆಯ ಮೇಲೆ ಕ್ರಿಸ್ತನ ಮರಣವು ಸತ್ಯ ಮತ್ತು ಅದೇ ಪಾಪಕ್ಕಾಗಿ ಮಾಡಿದ ಶಾಶ್ವತವಾದ ಪ್ರಾಯಶ್ಚಿತ್ತವಾಗಿರುತ್ತದೆ.
  • ಯೇಸು ಮರಣ ಹೊಂದಿದಾಗ, ಜನರ ಹೊಂದಬೇಕಾದ ಶಿಕ್ಷೆಯನ್ನು ಆವರು ತನ್ನ ಮೇಲೆ ಹಾಕಿಕೊಂಡಿದ್ದಾರೆ ಯಾಕಂದರೆ ಜನರ ಪಾಪಗಳಿಂದ ಬಿಡಿಸುವುದಕ್ಕೋಸ್ಕರ ಆ ತ್ಯಾಗವನ್ನು ಮಾಡಿದ್ದರು. ಆತನು ತನ್ನ ತ್ಯಾಗಪೂರಿತವಾದ ಮರಣದಿಂದ ಪ್ರಾಯಶ್ಚಿತ್ತವಾದ ಬೆಲೆಯನ್ನು ಸಲ್ಲಿಸಿದ್ದಾರೆ.

ಅನುವಾದ ಸಲಹೆಗಳು:

  • “ವಿಮೋಚನೆ” ಎನ್ನುವ ಪದವನ್ನು “ಬೆಲೆಯನ್ನು ಸಲ್ಲಿಸು” ಅಥವಾ “ಕ್ರಯಧನವನ್ನು ಕೊಡು” ಅಥವಾ “ಒಬ್ಬರ ಪಾಪಗಳು ಕ್ಷಮಿಸಲ್ಪಡುವಂತೆ ಮಾಡು” ಅಥವಾ “ಮಾಡಿದ ಅಪರಾಧಕ್ಕೆ ಪರಿಹಾರ ಸಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ಪ್ರಾಯಶ್ಚಿತ್ತ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕ್ರಯಧನ” ಅಥವಾ “ಪಾಪಕ್ಕಾಗಿ ಸಲ್ಲಿಸಬೇಕಾದ ತ್ಯಾಗ” ಅಥವಾ “ಕ್ಷಮಾಪಣೆಯನ್ನು ಅನುಗ್ರಹಿಸುವುದು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
  • ಈ ಪದವನ್ನು ಅನುವಾದ ಮಾಡುವಾಗ ಹಣವನ್ನು ಪಾವತಿಸುವ ಅರ್ಥವು ಬರದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಪ್ರಾಯಶ್ಚಿತ್ತ ಮುಚ್ಚಳ, ಕ್ಷಮಿಸು, ತ್ಯಾಗ, ಸಮಾಧಾನಪಡು, ವಿಮೋಚಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3722, H3725, G2643

ಪ್ರಾರ್ಥಿಸು, ಪ್ರಾರ್ಥನೆ

ಪದದ ಅರ್ಥವಿವರಣೆ:

“ಪ್ರಾರ್ಥಿಸು” ಮತ್ತು “ಪ್ರಾರ್ಥನೆ” ಎನ್ನುವ ಪದಗಳು ದೇವರೊಂದಿಗೆ ಮಾತನಾಡುವುದನ್ನು ಸೂಚಿಸುತ್ತವೆ. ಈ ಪದಗಳು ಸುಳ್ಳು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುವ ಜನರನ್ನು ಸೂಚಿಸುವುದಕ್ಕೆ ಸಹ ಉಪಯೋಗಿಸಲಾಗುತ್ತದೆ.

  • ಜನರು ಮೌನವಾಗಿದ್ದು ಪ್ರಾರ್ಥಿಸುತ್ತಿದ್ದರು, ತಮ್ಮ ಆಲೋಚನೆಗಳಿಂದ ದೇವರೊಂದಿಗೆ ಮಾತನಾಡುತ್ತಿರುತ್ತಾರೆ, ಅಥವಾ ಅವರು ಗಟ್ಟಿಯಾಗಿ ಪ್ರಾರ್ಥಿಸುತ್ತಿದ್ದರು, ಅವರ ಸ್ವರದಿಂದ ದೇವರೊಂದಿಗೆ ಮಾತನಾಡುತ್ತಿರುತ್ತಾರೆ. ದಾವೀದನು ಕೀರ್ತನೆ ಪುಸ್ತಕಗಳಲ್ಲಿ ಆತನು ತನ್ನ ಪ್ರಾರ್ಥನೆಗಳನ್ನು ಬರೆದುಕೊಂಡಿರುವಂತೆಯೇ ಕೆಲವೊಂದುಬಾರಿ ಪ್ರಾರ್ಥನೆಗಳನ್ನು ಬರೆಯುತ್ತಿರುತ್ತಾರೆ.
  • ಪ್ರಾರ್ಥನೆಯಲ್ಲಿ ಕರುಣೆಗಾಗಿ ದೇವರನ್ನು ಕೇಳಿಕೊಳ್ಳುವುದು, ಸಮಸ್ಯೆಯಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವುದು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ಜ್ಞಾನಕ್ಕಾಗಿ ಬೇಡಿಕೊಳ್ಳುವುದು ಒಳಗೊಂಡಿರುತ್ತದೆ.
  • ಅನೇಕಬಾರಿ ಜನರು ರೋಗಿಗಳಾಗಿರುವ ಜನರನ್ನು ಗುಣಪಡಿಸುವುದಕ್ಕೆ ಅಥವಾ ಇತರ ವಿಧಾನಗಳಲ್ಲಿ ಆತನ ಸಹಾಯವು ಬೇಕಾಗಿರುವ ಪ್ರತಿಯೊಬ್ಬರಿಗೆ ಸಹಾಯಕ್ಕಾಗಿ ಪ್ರಾರ್ಥನೆ ಮಾಡುತ್ತಿರುತ್ತಾರೆ.
  • ಜನರು ದೇವರಿಗೆ ಪ್ರಾರ್ಥನೆ ಮಾಡುವಾಗ ಆತನನ್ನು ಸ್ತುತಿಸುತ್ತಾರೆ ಮತ್ತು ಆತನಿಗೆ ಕೃತಜ್ಞತೆಗಳನ್ನು ಹೇಳುತ್ತಿರುತ್ತಾರೆ.
  • ಪ್ರಾರ್ಥನೆ ದೇವರ ಬಳಿ ಪಾಪಗಳನ್ನು ಒಪ್ಪಿಕೊಳ್ಳುವುದು ಮತ್ತು ನಮ್ಮನ್ನು ಕ್ಷಮಿಸಬೇಕೆಂದು ಆತನನ್ನು ಬೇಡಿಕೊಳ್ಳುವುದು ಒಳಗೊಂಡಿರುತ್ತದೆ.
  • ಕೆಲವೊಂದು ಬಾರಿ ದೇವರೊಂದಿಗೆ ಮಾತನಾಡುವುದನ್ನು ಆತನೊಂದಿಗೆ “ಸಂಭಾಷಿಸುವುದು” ಎಂದು ಕರೆಯುತ್ತಾರೆ. ಅಂದರೆ ಆತನ ಆತ್ಮದೊಂದಿಗೆ ನಮ್ಮ ಆತ್ಮವು ಸಂಭಾಷಿಸುವುದು, ಆತನ ಸನ್ನಿಧಿಯಲ್ಲಿ ಸಂತೋಷಿಸುವುದು ಮತ್ತು ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಎಂದರ್ಥ.
  • ಈ ಪದವನ್ನು ‘ದೇವರೊಂದಿಗೆ ಮಾತನಾಡುವುದು” ಅಥವಾ “ದೇವರೊಂದಿಗೆ ಸಂಭಾಷಿಸುವುದು” ಎಂದೂ ಅನುವಾದ ಮಾಡಬಹುದು. ಈ ಪದವನ್ನು ಅನುವಾದ ಮಾಡುವಾಗ ಮೌನವಾಗಿದ್ದು ಪ್ರಾರ್ಥನೆ ಮಾಡುವುದೂ ಒಳಗೊಂಡಿರಬೇಕು.

(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಕ್ಷಮಿಸು, ಸ್ತುತಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 06:05 ಇಸಾಕನು ರೆಬೆಕ್ಕಳಿಗಾಗಿ __ ಪ್ರಾರ್ಥಿಸಿದನು __ , ಮತ್ತು ದೇವರು ಆಕೆ ಅವಳಿ ಮಕ್ಕಳಿಗೆ ಗರ್ಭವನ್ನು ಧರಿಸಲು ಅನುಮತಿಸಿದನು.
  • 13:12 ಆದರೆ ಮೋಶೆ ಅವರಿಗಾಗಿ __ ಪ್ರಾರ್ಥಿಸಿದನು __, ಮತ್ತು ದೇವರು ಆತನ __ ಪ್ರಾರ್ಥನೆಯನ್ನು __ ಕೇಳಿಸಿಕೊಂಡನು ಮತ್ತು ಅವರನ್ನು ನಾಶಮಾಡಲಿಲ್ಲ.
  • 19:08 “ಬಾಳ್, ನಮ್ಮ ಪ್ರಾರ್ಥನೆಯನ್ನು ಕೇಳು!” ಎಂದು ಬಾಳ್ ಪ್ರವಾದಿಗಳು ಬಾಳ್.ಗೆ __ ಪ್ರಾರ್ಥಿಸಿದರು __.
  • 21:07 ಯಾಜಕರು ಕೂಡ ಜನರಿಗಾಗಿ ದೇವರಿಗೆ __ ಪ್ರಾರ್ಥನೆ ಮಾಡಿದರು __ .
  • 38:11 ನೀವು ಶೋಧನೆಯೊಳಗೆ ಪ್ರವೇಶಿದಂತೆ __ ಪ್ರಾರ್ಥನೆ __ ಮಾಡಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.
  • 43:13 ಅಪೊಸ್ತಲರ ಬೋಧನೆಗಳನ್ನು ಶಿಷ್ಯರು ನಿರಂತರವಾಗಿ ಕೇಳಿಸಿಕೊಂಡರು, ಎಲ್ಲರು ಸೇರಿ ಸಮಯವನ್ನು ಕಳೆದರು, ಎಲ್ಲರು ಸೇರಿ ಊಟ ಮಾಡಿದರು ಮತ್ತು ಒಬ್ಬರಿಗೊಬ್ಬರು __ ಪ್ರಾರ್ಥನೆ __ ಮಾಡಿಕೊಂಡರು.
  • 49:18 ಕ್ರೈಸ್ತರೆಲ್ಲರು ಸೇರಿ ದೇವರನ್ನು ಆರಾಧಿಸಬೇಕೆಂದು, ಆತನ ವಾಕ್ಯವನ್ನು ಧ್ಯಾನ ಮಾಡಬೇಕೆಂದು, __ ಪ್ರಾರ್ಥನೆ __ ಮಾಡಬೇಕೆಂದು ಮತ್ತು ಆತನು ನಿಮಗಾಗಿ ಮಾಡಿದ ಕಾರ್ಯಗಳನ್ನು ಇತರರೊಂದಿಗೆ ಹೇಳಬೇಕೆಂದು ದೇವರು ಅವರಿಗೆ ಹೇಳಿದನು.

ಪದ ಡೇಟಾ:

  • Strong's: H559, H577, H1156, H2470, H3863, H3908, H4994, H6279, H6293, H6419, H6739, H7592, H7878, H7879, H7881, H8034, H8605, G154, G1162, G1189, G1783, G2065, G2171, G2172, G3870, G4335, G4336

ಪ್ರಿಯ

ಪದದ ಅರ್ಥವಿವರಣೆ

"ಪ್ರಿಯ" ಎಂಬ ಪದವು ಬೇರೋಬ್ಬರಿಗೆ ಪ್ರೀತಿಸುವ ಮತ್ತು ಪ್ರಿಯವಾದ ವ್ಯಕ್ತಿಯನ್ನು ವಿವರಿಸುವ ಅಭಿವ್ಯಕ್ತಿಯಾಗಿದೆ.

  • “ಪ್ರಿಯ” ಎನ್ನುವ ಪದಕ್ಕೆ “ಪ್ರೀತಿಸುವ (ವ್ಯಕ್ತಿ)” ಅಥವಾ “ಪ್ರೀತಿಸಲ್ಪಡುವ ವ್ಯಕ್ತಿ” ಎಂದು ಅಕ್ಷರಾರ್ಥವಾಗಿದೆ.
  • ದೇವರು ಯೇಸು ಯೇಸುವನ್ನು ತನ್ನ “ಪ್ರಿಯ ಮಗನು” ಎಂದು ಸಂಬೋಧಿಸಿದರು.
  • ಕ್ರೈಸ್ತರ ಸಭೆಗಳಿಗೆ ಬರೆದಂತ ಪತ್ರಿಕೆಗಳಲ್ಲಿ, ಅಪೊಸ್ತಲರು ತಮ್ಮ ಸಹ ವಿಶ್ವಾಸಿಗಳನ್ನು “ಪ್ರಿಯ” ಎಂದು ಕರೆದಿರುವರು.

ಅನುವಾದ ಸಲಹೆಗಳು:

  • ಈ ಪದವನ್ನು “ಪ್ರೀತಿ” ಅಥವಾ “ಪ್ರೀತಿಸುವ ವ್ಯಕ್ತಿ” ಅಥವಾ “ಅತಿ ಪ್ರಿಯನು” ಅಥವಾ “ಬಹು ಪ್ರಿಯನು” ಎಂದು ಅನುವಾದ ಮಾಡಬಹುದು.
  • ಒಬ್ಬ ಸನ್ನಿಹಿತನಾದ ಸ್ನೇಹಿತನ ಕುರಿತಾಗಿ ಮಾತನಾಡುವಾಗ, ಈ ಪದವನ್ನು “ನನ್ನ ಪ್ರಿಯ ಮಿತ್ರ” ಅಥವಾ “ಬಹು ಪ್ರಿಯನಾದ ನನ್ನ ಮಿತ್ರ” ಎಂದು ಅನುವಾದ ಮಾಡಬಹುದು. ಆಂಗ್ಲ ಭಾಷೆಯಲ್ಲಿ “ನನ್ನ ಪ್ರಿಯ ಗೆಳಯನಾದ, ಪಾಲ್” ಅಥವಾ “ಪಾಲ್, ಎನ್ನುವ ನನ್ನ ಪ್ರಿಯ ಗೆಳಯ” ಎಂದು ಸಂಬೋಧಿಸುವುದು ಸರ್ವ ಸಾಧಾರಣವಾದ ವಿಷಯ. ಬೇರೆ ಬಾಷೆಗಳಲ್ಲಿ ಈ ವಾಕ್ಯವನ್ನು ಬೇರೆ ರೀತಿಯಲ್ಲಿ ಹೇಳುವುದು ಸಾಧಾರಣವಾದ ವಿಷಯವಾಗಿರುತ್ತದೆ.
  • “ಪ್ರಿಯ” ಎನ್ನುವ ಪದವು ದೇವರ ಪ್ರೀತಿಯಿಂದ ಬಂದಿದೆ ಎಂದು ನಾವು ಗಮನಿಸಬೇಕು, ಅದು ಯಾವ ಷರತ್ತು ಇಲ್ಲದ್ದು, ಸ್ವಾರ್ಥವಿಲ್ಲದ್ದು ಮತ್ತು ತ್ಯಾಗಪೂರಿತವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಪ್ರೀತಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H157, H1730, H2532, H3033, H3039, H4261, G25, G27, G5207

ಪ್ರೀತಿ, ಪ್ರೀತಿಸುವ, ಪ್ರೀತಿಸುವುದು, ಪ್ರೀತಿಸಲ್ಪಟ್ಟಿದೆ

ಪದದ ಅರ್ಥವಿವರಣೆ:

ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಂದರೆ ಆ ವ್ಯಕ್ತಿಯ ಕುರಿತಾಗಿ ಕಾಳಜಿ ವಹಿಸುವುದು ಮತ್ತು ಆ ವ್ಯಕ್ತಿಗೆ ಪ್ರಯೋಜನಕರವಾಗುವ ಕಾರ್ಯಗಳನ್ನು ಮಾಡುವುದು ಎಂದರ್ಥ. “ಪ್ರೀತಿ” ಎನ್ನುವ ಪದಕ್ಕೆ ವಿಭಿನ್ನ ಅರ್ಥಗಳಿರುತ್ತವೆ, ಕೆಲವೊಂದು ಭಾಷೆಗಳಲ್ಲಿ ವಿಭಿನ್ನ ಪದಗಳನ್ನು ಉಪಯೋಗಿಸಿ ಪ್ರೀತಿಯನ್ನು ವ್ಯಕ್ತಪಡಿಸಬಹುದು:

  1. ದೇವರಿಂದ ಬರುವ ಪ್ರೀತಿ ತನ್ನ ವಿಷಯದಲ್ಲಿ ಯಾವ ಪ್ರಯೋಜನವನು ಹೊಂದದಿದ್ದರೂ ಇತರರ ಒಳ್ಳೇಯ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ರೀತಿಯ ಪ್ರೀತಿ ಇತರರು ಏನು ಮಾಡಿದ್ದಾರೆಂದು ಯೋಚಿಸದೇ ಅವರಿಗೋಸ್ಕರ ಪ್ರೀತಿಯನ್ನು ಹಂಚುತ್ತದೆ. ದೇವರೇ ಪ್ರೀತಿಯಾಗಿದ್ದಾನೆ ಮತ್ತು ನಿಜವಾದ ಪ್ರೀತಿಗೆ ಆತನೇ ಆಧಾರವಾಗಿದ್ದಾನೆ.

  2. ಪಾಪ ಮರಣಗಳಿಂದ ರಕ್ಷಿಸುವ ಕ್ರಮದಲ್ಲಿ ಆತನ ಜೀವನವನ್ನು ಸರ್ವಾಂಗಹೋಮ ಮಾಡುವುದರ ಮೂಲಕ ಈ ರೀತಿಯಾದ ಪ್ರೀತಿಯನ್ನೇ ಯೇಸು ತೋರಿಸಿದ್ದಾನೆ. ತ್ಯಾಗಪೂರಿತವಾಗಿ ಇತರರನ್ನು ಪ್ರೀತಿಸಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.

  3. ಈ ರೀತಿಯಾದ ಪ್ರೀತಿಯಿಂದ ಜನರು ಇತರರನ್ನು ಪ್ರೀತಿಸಿದರೆ, ಇತರರು ವೇಗವಾಗಿ ಆಲೋಚನೆ ಮಾಡುವಂತೆ ಅವರು ತೋರಿಸಿದವರಾಗಿರುತ್ತದೆ. ಈ ರೀತಿಯಾದ ಪ್ರೀತಿಯಲ್ಲಿ ವಿಶೇಷವಾಗಿ ಇತರರನ್ನು ಕ್ಷಮಿಸುವುದು ಒಳಗೊಂಡಿರುತ್ತದೆ.
  4. ಯುಎಲ್ ಟಿ ಯಲ್ಲಿ “ಪ್ರೀತಿ” ಎನ್ನುವ ಪದವು ಈ ರೀತಿಯಾದ ತ್ಯಾಗಪೂರಿತವಾದ ಪ್ರೀತಿಯನ್ನೇ ಸೂಚಿಸುತ್ತದೆ, ಈ ಪದಕ್ಕೆ ಬೇರೆಯಾದ ಅರ್ಥವನ್ನು ಅನುವಾದ ಮಾಡುವದರಲ್ಲಿ ಸೂಚಿಸದಿದ್ದರೆ ಹೊರತು ಬೇರೆ ಅರ್ಥ ಇರುವುದಿಲ್ಲ.

  5. ಹೊಸ ಒಡಂಬಡಿಕೆಯಲ್ಲಿ ಇನ್ನೊಂದು ಪದವು ಸಹೋದರ ಪ್ರೀತಿಯಯನ್ನು, ಅಥವಾ ಸ್ನೇಹಿತನಿಗಾಗಿ ತೋರಿಸುವ ಪ್ರೀತಿ ಅಥವಾ ಕುಟುಂಬ ಸದಸ್ಯರ ಪ್ರೀತಿಯನ್ನು ಸೂಚಿಸುತ್ತದೆ.

  6. ಈ ಪದವು ಸ್ನೇಹಿತರು ಅಥವಾ ಬಂಧುಗಳ ಮಧ್ಯೆದಲ್ಲಿರುವ ಸ್ವಾಭಾವಿಕವಾದ ಮನುಷ್ಯರ ಪ್ರೀತಿಯನ್ನು ಸೂಚಿಸುತ್ತದೆ.

  7. “ಅವರು ಔತಣ ಕೂಟದಲ್ಲಿ ಪ್ರಾಮುಖ್ಯವಾದ ಆಸನಗಳಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಾರೆ” ಇಂತಹ ಸಂದರ್ಭಗಳಲ್ಲಿ ಈ ಪದಗಳನ್ನು ಬಳಸಬಹುದು. "ಹೆಚ್ಚಾಗಿ ಇಷ್ಟಪಡುತ್ತಾರೆ” ಅಥವಾ “ಬಹಳ ಹೆಚ್ಚಾಗಿ ಅಪೇಕ್ಷಿಸುತ್ತಾರೆ” ಎಂದು ಇದರ ಅರ್ಥವಾಗಿರುತ್ತದೆ.

  8. “ಪ್ರೀತಿ” ಎನ್ನುವ ಪದವು ಒಬ್ಬ ಪುರುಷನಿಗೆ ಮತ್ತು ಒಬ್ಬ ಸ್ತ್ರೀಯಳ ಮಧ್ಯೆದಲ್ಲಿರುವ ಪ್ರಣಯ ಪ್ರೇಮವನ್ನೂ ಸೂಚಿಸುತ್ತದೆ.

  9. “ಯಾಕೋಬನನ್ನು ನಾನು ಪ್ರೀತಿಸಿದೆ, ಆದರೆ ಏಸಾವನನ್ನು ದ್ವೇಷಿಸಿದೆ” ಎನ್ನುವ ಅಲಂಕಾರಿಕ ಮಾತಿನಲ್ಲಿರುವ “ಪ್ರೀತಿ” ಎನ್ನುವ ಪದವು ದೇವರು ಯಾಕೋಬನೊಂದಿಗೆ ಮಾಡಿರುವ ಒಡಂಬಡಿಕಲ್ಲಿರುವುದಕ್ಕೆ ಆತನು ಯಾಕೋಬನನ್ನು ಆಯ್ಕೆಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಇದನ್ನು ‘ಆಯ್ಕೆಮಾಡಲಾಗಿದೆ” ಎಂದೂ ಅನುವಾದ ಮಾಡಬಹುದು. ಏಸಾವನು ಕೂಡ ದೇವರಿಂದ ಆಶೀರ್ವಾದವನ್ನು ಹೊಂದಿಕೊಂಡಿದ್ದರೂ, ಅವನು ಒಡಂಬಡಿಕೆಯಲ್ಲಿರುವ ಧನ್ಯತೆಯು ಸಿಕ್ಕಿರಲಿಲ್ಲ. “ದ್ವೇಷಿಸಿದ್ದೇನೆ” ಎನ್ನುವ ಪದವು “ತಿರಸ್ಕರಿಸಿದ್ದೇನೆ” ಅಥವಾ “ಆಯ್ಕೆ ಮಾಡಿಕೊಂಡಿಲ್ಲ” ಎಂದರ್ಥ ಬರುವ ಅಲಂಕಾರಿಕ ಭಾಷೆಯಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.

ಅನುವಾದ ಸಲಹೆಗಳು:

  • ಅನುವಾದದ ಸೂಚನೆಯಲ್ಲಿ ಹೇಳದಿದ್ದರೆ ಹೊರತು, ಯುಎಲ್.ಟ್ಲ್ಲಿಿರುವ “ಪ್ರೀತಿ” ಎನ್ನುವ ಪದವು ದೇವರಿಂದ ಬರುವ ತ್ಯಾಗಪೂರಿತವಾದ ಪ್ರೀತಿಯನ್ನು ಸೂಚಿಸುತ್ತದೆ.
  • ಕೆಲವೊಂದು ಭಾಷೆಗಳಲ್ಲಿ ಸ್ವಾರ್ಥರಹಿತವಾದ ಈ ಕ್ರಿಯೆಗಳಿಗೆ ವಿಶೇಷವಾದ ಪದವನ್ನು ಉಪಯೋಗಿಸುತ್ತಿರಬಹುದು, ದೇವರ ಬಳಿರುವ ತ್ಯಾಗಪೂರಿತವಾದ ಪ್ರೀತಿಯನ್ನು ಸೂಚಿಸುತ್ತವೆ. ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಭಕ್ತಿಯುಳ್ಳ, ನಂಬಿಗಸ್ತ ಆರೈಕೆ” ಅಥವಾ “ಸ್ವಾರ್ಥರಹಿತವಾಗಿ ಆರೈಸುವುದು” ಅಥವಾ “ದೇವರಿಂದ ಬಂದ ಪ್ರೀತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ದೇವರ ಪ್ರೀತಿಯನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸುವ ಪದವು ಇತರರ ಪ್ರಯೋಜನೆಗಳಿಗಾಗಿ ಒಬ್ಬರ ಸ್ವಂತ ಇಷ್ಟಗಳನ್ನು ಕೂಡ ಬಿಟ್ಟುಕೊಡುವ ಅರ್ಥವನ್ನು ಮತ್ತು ಇತರರು ಏನು ಮಾಡಿದರೂ ಅದನ್ನು ಲೆಕ್ಕಿಸಿದೆ ಅವರನ್ನು ಪ್ರೀತಿಸುವುದನ್ನು ಒಳಗೊಂಡಿರಬೇಕು.
  • ಕೆಲವೊಂದು ಸಲ ಆಂಗ್ಲದಲ್ಲಿರುವ “ಪ್ರೀತಿ” ಎನ್ನುವ ಪದವು ಸ್ನೇಹಿತರಿಗಾಗಿ ಮತ್ತು ಕುಟುಂಬ ಸದಸ್ಯರಿಗಾಗಿ ಆಳವಾದ ಆರೈಕೆಯನ್ನು ವಿವರಿಸುತ್ತದೆ. ಕೆಲವೊಂದು ಭಾಷೆಗಳಲ್ಲಿ “ಬಹಳ ಹೆಚ್ಚಾಗಿ” ಅಥವಾ “ಆರೈಸು” ಅಥವಾ “ಬಲವಾದ ಪ್ರೀತಿಯನ್ನು ಹೊಂದಿರು” ಎನ್ನುವ ಅರ್ಥ ಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಈ ಪದವನ್ನು ಅನುವಾದ ಮಾಡಬಹುದು.
  • ಯಾವುದಾದರೊಂದರ ಕುರಿತಾಗಿ ಬಲವಾದ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸುವುದಕ್ಕೆ “ಪ್ರೀತಿ” ಎನ್ನುವ ಪದವನ್ನು ಉಪಯೋಗಿಸುವ ಸಂದರ್ಭಗಳಲ್ಲಿ, ಇದನ್ನು “ಬಲವಾಗಿ ಆದ್ಯತೆ” ಅಥವಾ “ಬಹಳ ಹೆಚ್ಚಾಗಿ” ಅಥವಾ “ಬಹಳ ಹೆಚ್ಚಾಗಿ ಅಪೇಕ್ಷಿಸುವುದು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ ಗಂಡ ಮತ್ತು ಹೆಂಡತಿಯ ಮಧ್ಯೆದಲ್ಲಿರುವ ಲೈಂಗಿಕವಾದ ಅಥವಾ ಪ್ರಣಯದ ಪ್ರೀತಿಯನ್ನು ಸೂಚಿಸುವ ಪ್ರತ್ಯೇಕವಾದ ಪದವನ್ನು ಹೊಂದಿರುತ್ತವೆ.
  • ಅನೇಕ ಭಾಷೆಗಳಲ್ಲಿ “ಪ್ರೀತಿ”ಯನ್ನು ಕ್ರಿಯಾರೂಪಕದಲ್ಲಿ ವ್ಯಕ್ತಗೊಳಿಸಬೇಕಾಗಿರುತ್ತದೆ. ಉದಾಹರಣೆಗಾಗಿ, ಅವರು “ಪ್ರೀತಿ ಎಂದರೆ ಸಹನೆ, ಪ್ರೀತಿ ಎಂದರೆ ದಯೆ” ಎಂದು ಅನುವಾದ ಮಾಡುವುದಾದರೆ, “ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿ ಮಾಡುವದಾದರೆ, ಆ ವ್ಯಕ್ತಿ ಅವನೊಂದಿಗೆ ಸಹನೆಯಿಂದ ಮತ್ತು ದಯೆಯಿಂದ ಇರುತ್ತಾನೆ” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ಮರಣ, ತ್ಯಾಗ, ರಕ್ಷಿಸು, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 27:02 “ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ, ಪೂರ್ಣ ಬಲದಿಂದಲೂ ಮತ್ತು ಪೂರ್ಣ ಮನಸ್ಸಿನಿಂದಲೂ ___ ಪ್ರೀತಿಸು ___ “ ಮತ್ತು ನಿನ್ನಂತೆಯೇ ನಿನ್ನ ನೆರೆಹೊರೆಯವರನ್ನು ___ ಪ್ರೀತಿಸು ___ “ ಎಂದು ದೇವರ ಧರ್ಮಶಾಸ್ತ್ರದಲ್ಲಿದೆಯಲ್ಲ ಎಂದು ಧರ್ಮಶಾಸ್ತ್ರದ ಪಂಡಿತನು ಉತ್ತರಿಸಿದನು.
  • 33:08 “ಮುಳ್ಳಿನ ನೆಲವು ಒಬ್ಬ ವ್ಯಕ್ತಿ ದೇವರ ವಾಕ್ಯವನ್ನು ಕೇಳಿದವನನ್ನು, ಕಾಲ ಕಳೆಯುತ್ತಿರುವಂತೆ ಅವನು ದೇವರಿಗಾಗಿರುವ __ ಪ್ರೀತಿಯೊಳಗಿಂದ __ ಜೀವನದ ಸಂತೋಷಗಳು, ಸಂಪತ್ತುಗಳು ಮತ್ತು ಆರೈಕೆಗಳು ಎಲ್ಲಾ ಅಳಿದು ಹೋಗುತ್ತವೆ.”
  • 36:05 ಪೇತ್ರನು ಮಾತನಾಡುತ್ತಿರುವಾಗ, ಒಂದು ಪ್ರಕಾಶಮಾನವಾದ ಮೇಘವು ಅವರ ಮೇಲೆ ಇಳಿದು ಬಂದಾಗ, ಆ ಮೇಘದೊಳಗಿಂದ “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎನ್ನುವ ಸ್ವರವು ಕೇಳಿಬಂತು.
  • 39:10 “ಸತ್ಯವನ್ನು ___ ಪ್ರೀತಿಸುವ ___ ಪ್ರತಿಯೊಬ್ಬರೂ ನನ್ನ ಮಾತನ್ನು ಕೇಳುತ್ತಾರೆ.”
  • 47:01 ಆಕೆ (ಲುದ್ಯಳ) ದೇವರನ್ನು ___ ಪ್ರೀತಿಸಿದ್ದಳು ___ ಮತ್ತು ಆರಾಧನೆ ಮಾಡಿದ್ದಳು.
  • 48:01 ದೇವರು ಸರ್ವಸೃಷ್ಟಿಯನ್ನು ಉಂಟುಮಾಡಿದಾಗ, ಪ್ರತಿಯೊಂದೂ ಪರಿಪೂರ್ಣವಾಗಿದ್ದಿತ್ತು. ಅವಾಗ ಪಾಪವೇ ಇದ್ದಿರಲಿಲ್ಲ. ಆದಾಮನು ಮತ್ತು ಹವ್ವಳು ಒಬ್ಬರಿಗೊಬ್ಬರು ___ ಪ್ರೀತಿಸಿಕೊಂಡಿದ್ದರು ___ ಮತ್ತು ದೇವರನ್ನು ___ ಪ್ರೀತಿಸಿದ್ದರು ___.
  • 49:03 ನಿನ್ನನು ನೀನು ಪ್ರೀತಿಸಿಕೊಳ್ಳುವ ರೀತಿಯಲ್ಲಿಯೇ ಇತರ ಜನರನ್ನು ನೀನು ___ ಪ್ರೀತಿಸಬೇಕಾಗಿರುತ್ತದೆ ___ ಎಂದು ಆತನು (ಯೇಸು) ಹೇಳಿದನು.
  • 49:04 ನಿನ್ನ ಸಂಪತ್ತಿಗಿಂತಲೂ, ನೀನು ___ ಪ್ರೀತಿ ___ ಮಾಡುವ ಬೇರೊಂದು ವಿಷಯಗಿಂತಲೂ ನೀನು ಹೆಚ್ಚಾಗಿ ದೇವರನ್ನು ___ ಪ್ರೀತಿ ___ ಮಾಡಬೇಕಾಗಿರುತ್ತದೆಯೆಂದು ಆತನು (ಯೇಸು) ಹೇಳಿದನು.
  • 49:07 ದೇವರು ಪಾಪಿಗಳನ್ನು ಹೆಚ್ಚಾಗಿ ___ ಪ್ರೀತಿ ___ ಮಾಡಿದ್ದಾರೆಂದು ಯೇಸು ಹೇಳಿದನು.
  • 49:09 ಲೋಕದಲ್ಲಿರುವ ಪ್ರತಿಯೊಬ್ಬರನ್ನು ದೇವರು ಹೆಚ್ಚಾಗಿ ___ ಪ್ರೀತಿಸಿದ್ದಾರೆ ___, ಅದು ಹೇಗೆಂದರೆ ತನ್ನ ಒಬ್ಬನೇ ಮಗನಾದ ಯೇಸುವನ್ನು ಕೊಡುವಷ್ಟು ಪ್ರೀತಿ ಮಾಡಿದ್ದಾರೆ, ಈ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರು ತಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಹೊಂದುವುದಿಲ್ಲ, ಆದರೆ ಸದಾಕಾಲವೂ ದೇವರೊಂದಿಗೆ ಇರುತ್ತಾರೆ.
  • 49:13 ದೇವರು ನಿನ್ನನ್ನು ___ ಪ್ರೀತಿಸಿದ್ದಾರೆ ___ ಮತ್ತು ನೀನು ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ಬಯಸುತ್ತಿದ್ದಾರೆ, ಇದರಿಂದ ಆತನು ನಿನ್ನೊಂದಿಗೆ ತುಂಬಾ ಹತ್ತಿರವಾದ ಸಂಬಂಧವನ್ನು ಹೊಂದಿರುತ್ತಾರೆ.

ಪದ ಡೇಟಾ:

  • Strong's: H157, H158, H159, H160, H2245, H2617, H2836, H3039, H4261, H5689, H5690, H5691, H7355, H7356, H7453, H7474, G25, G26, G5360, G5361, G5362, G5363, G5365, G5367, G5368, G5369, G5377, G5381, G5382, G5383, G5388

ಫರಿಸಾಯ, ಫರಿಸಾಯರು

ಸತ್ಯಾಂಶಗಳು:

ಫರಿಸಾಯರು ಯೇಸುವಿನ ಕಾಲದಲ್ಲಿ ಯೆಹೂದ್ಯ ಧರ್ಮ ನಾಯಕರ ಪ್ರಾಮುಖ್ಯವಾದ ಶಕ್ತಿಯುತವಾದ ಗುಂಪಾಗಿರುತ್ತದೆ.

  • ಅವರಲ್ಲಿ ಅನೇಕರು ಮಧ್ಯ ತರಗತಿಯ ವ್ಯಾಪಾರಿಗಳಾಗಿದ್ದರು, ಮತ್ತು ಅವರಲ್ಲಿ ಇನ್ನೂ ಕೆಲವರು ಯಾಜಕರೂ ಆಗಿದ್ದರು.
  • ಫರಿಸಾಯರಾಗಿರುವ ಯೆಹೂದ್ಯರ ನಾಯಕರೆಲ್ಲರು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆ ತೋರಿಸುವುದರಲ್ಲಿ ಮತ್ತು ಇತರ ಯೆಹೂದ್ಯ ನಿಯಮಗಳನ್ನು ಮತ್ತು ಆಚಾರಗಳನ್ನು ಅನುಸರಿಸುವುದರಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದರು.
  • ಅವರಿಗೆ ಅವರ ಸುತ್ತ ಇರುವ ಅನ್ಯರನ್ನು ಪ್ರಭಾವಿಸುವುದಕ್ಕಿಂತ ಯೆಹೂದ್ಯರ ಜನರನ್ನು ಪ್ರತ್ಯೇಕಿಸಡಬೇಕೆನ್ನುವದರ ಮೇಲೆ ಹೆಚ್ಚಾಗಿ ಮನಸ್ಸನ್ನಿಟ್ಟಿರುತ್ತಾರೆ. “ಫರಿಸಾಯ” ಎನ್ನುವ ಪದವು “ಪ್ರತ್ಯೇಕಿಸು” ಎನ್ನುವ ಪದದಿಂದ ಬಂದಿರುತ್ತದೆ.
  • ಸತ್ತನಂತರ ಜೀವನವಿದೆಯೆನ್ನುವುದರ ಮೇಲೆ ಫರಿಸಾಯರು ನಂಬಿಕೆ ಇಟ್ಟಿರುತ್ತಾರೆ; ಅವರು ದೂತರಿದ್ದಾರೆಂದು ಮತ್ತು ಇತರ ಆತ್ಮೀಕ ಜೀವಿಗಳು ಇದ್ದಾವೆಂದು ಕೂಡ ನಂಬುತ್ತಿದ್ದರು.
  • ಫರಿಸಾಯರು ಮತ್ತು ಸದ್ದುಕಾಯರು ಯೇಸುವನ್ನು, ಕ್ರೈಸ್ತರನ್ನು ವಿರೋಧಿಸಿದ್ದರು.

(ಈ ಪದಗಳನ್ನು ಸಹ ನೋಡಿರಿ : ಕೌನ್ಸಿಲ್, ಯೆಹೂದ್ಯ ನಾಯಕರು, ಧರ್ಮಶಾಸ್ತ್ರ, ಸದ್ದುಕಾಯರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G5330

ಬಂಧ, ಕಟ್ಟು, ಬಂಧಿಸಲ್ಪಟ್ಟ

ಪದದ ಅರ್ಥವಿವರಣೆ:

“ಬಂಧಿಸು” ಎನ್ನುವ ಪದಕ್ಕೆ ಏನಾದರೊಂದನ್ನು ಕಟ್ಟು ಅಥವಾ ಸುರಕ್ಷಿತವಾಗಿರಲು ಅದನ್ನು ಕಟ್ಟು ಎಂದರ್ಥ. ಏನಾದರೊಂದನ್ನು ಜೊತೆಯಲ್ಲಿ ಸೇರಿಸುವುದು ಅಥವಾ ಅವುಗಳನ್ನು ಕಟ್ಟುವುದನ್ನು “ಕಟ್ಟು” ಎಂದು ಕರೆಯುತ್ತಾರೆ. ಈ ಪದದ ಭೂತ ಕಾಲ ಪದವೇ “ಬಂಧಿಸಲ್ಪಟ್ಟ” ಎನ್ನುವ ಪದವಾಗಿರುತ್ತದೆ.

  • “ಬಂಧಿಸಲ್ಪಟ್ಟಿರುವುದು” ಎನ್ನುವದಕ್ಕೆ ಏನಾದರೊಂದು ಸುತ್ತಲೂ ಏನಾದರೊಂದನ್ನು ಕಟ್ಟಿರುವುದು ಅಥವಾ ಸುತ್ತಿರುವುದು ಎಂದರ್ಥ.
  • ಅಲಂಕಾರ ರೂಪದಲ್ಲಿ ಆಣೆ ಮಾಡುವುದಕ್ಕೆ ಒಬ್ಬ ವ್ಯಕ್ತಿ “ಬಂಧಿಸಲ್ಪಟ್ಟಿರುತ್ತಾನೆ” ಎಂದು ಹೇಳುತ್ತೇವೆ, ಅದಕ್ಕೆ ಅವನು ಮಾಡಿದ ವಾಗ್ಧಾನವನ್ನು ಮಾಡುವುದಕ್ಕೆ “ನೆರವೇರಿಸುವ ಬಾಧ್ಯತೆಯಿದೆ” ಎಂದರ್ಥ.
  • “ಕಟು” ಎನ್ನುವ ಪದವು ಯಾವುದೇ ಒಂದು ಬಂಧನದಲ್ಲಿರುವುದನ್ನು, ಸೀಮಿತವಾಗಿರುವುದನ್ನು, ಅಥವಾ ಯಾರದರೊಬ್ಬರನ್ನು ಸೆರೆಯಲ್ಲಿಡುವುದನ್ನು ಸೂಚಿಸುತ್ತದೆ. ವಾಸ್ತವಿಕವಾಗಿ ಇದು ಒಬ್ಬ ವ್ಯಕ್ತಿಯನ್ನು ಎಲ್ಲಿಗೆ ಹೋಗದಂತೆ ಕಟ್ಟಿ ಹಾಕುವ ಹಗ್ಗಗಳನ್ನು ಅಥವಾ ಸಂಕೋಲೆಗಳನ್ನು ಮತ್ತು ಭೌತಿಕ ಸರಪಣಿಗಳನ್ನು ಸೂಚಿಸುತ್ತದೆ,
  • ಸತ್ಯವೇದ ಕಾಲದಲ್ಲಿ ಹಗ್ಗಗಳು ಅಥವಾ ಸರಪಣಿಗಳು ಎನ್ನುವ ಕಟ್ಟುಗಳನ್ನು ಸೆರೆಯಾಳುಗಳನ್ನು ಗೋಡೆಗೆ ಕಟ್ಟಿಹಾಕುವುದಕ್ಕೆ ಅಥವಾ ಒಂದು ಬಂಡೆಯ ಸೆರೆಮನೆಯ ನೆಲದಲ್ಲಿ ಕಟ್ಟುವುದಕ್ಕೆ ಉಪಯೋಗಿಸುತ್ತಿದ್ದರು.
  • “ಕಟ್ಟು” ಎನ್ನುವ ಪದವು ಕೂಡ ಒಂದು ಗಾಯವು ಗುಣವಾಗುವುದಕ್ಕೆ ಅದರ ಸುತ್ತಲು ಒಂದು ಬಟ್ಟೆಯಿಂದ ಸುತ್ತಿ ಕಟ್ಟುವದಕ್ಕೂ ಉಪಯೋಗಿಸುತ್ತಾರೆ.
  • ಸತ್ತಂತ ವ್ಯಕ್ತಿಯನ್ನು ಸಮಾಧಿ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸುವ ಕ್ರಮದಲ್ಲಿ ಒಂದು ಬಟ್ಟೆಯೊಂದಿಗೆ ಸುತ್ತಿ “ಬಂಧಿಸಲ್ಪಟ್ಟಿರುತ್ತಾರೆ”.
  • “ಕಟ್ಟು” ಎನ್ನುವ ಪದವು ಏನಾದರೊಂದು ಅಥವಾ ಒಂದು ಪಾಪವು ಒಬ್ಬರನ್ನು ದಾಸರನ್ನಾಗಿ ಮಾಡಿಕೊಳ್ಳುವುದನ್ನು ಅಥವಾ ನಿಯಂತ್ರಿಸುವುದನ್ನು ಸೂಚಿಸಲು ಅಲಂಕಾರ ರೂಪದಲ್ಲಿ ಉಪಯೋಗಿಸುತ್ತಾರೆ.
  • ಜನರು ಮಾನಸಿಕವಾಗಿ, ಆತ್ಮೀಯಕವಾಗಿ ಮತ್ತು ಭೌತಿಕವಾಗಿ ತುಂಬಾ ಹತ್ತಿರವಾದ ಸಂಬಂಧವನ್ನು ಹೊಂದಿಕೊಂಡಿದ್ದರೆ ಅದನ್ನು ಕೂಡ ಬಂಧನ ಎಂದು ಕರೆಯುತ್ತಾರೆ. ಈ ಪದವನ್ನು ವಿವಾಹ ಬಂಧನ ಎಂದೂ ಉಪಯೋಗಿಸುತ್ತಾರೆ.
  • ಉದಾಹರೆಣೆಗೆ, ಗಂಡ ಹೆಂಡತಿಯರಿಬ್ಬರು “ಬಂಧಿಸಲ್ಪಟ್ಟಿರುತ್ತಾರೆ” ಅಥವಾ ಒಬ್ಬರಿಗೊಬ್ಬರು ಕಟ್ಟಿ ಹಾಕಲ್ಪಟ್ಟಿರುತ್ತಾರೆ. ಈ ಬಂಧನವು ಮುರಿದು ಹೋಗಬಾರದೆಂದು ದೇವರ ಬಯಕೆಯಾಗಿರುತ್ತದೆ.

ಅನುವಾದ ಸಲಹೆಗಳು:

  • “ಬಂಧಿನ” ಎನ್ನುವ ಪದವು “ಕಟ್ಟು” ಅಥವು “ಕಟ್ಟಲ್ಪಡುವುದು” ಅಥವಾ “ಸುತ್ತು (ಸುತ್ತಲೂ)” ಎಂದೂ ಅನುವಾದ ಮಾಡಬಹುದು.
  • ಅಲಂಕಾರ ರೂಪದಲ್ಲಿ ಇದನ್ನು “ನಿಗ್ರಹಿಸು” ಅಥವಾ “ತಡೆಗಟ್ಟು” ಅಥವಾ “ಯಾವುದಾದರೊಂದರಿಂದ ದೂರವಿರು” ಎಂದೂ ಅನುವಾದ ಮಾಡಬಹುದು.
  • ಮತ್ತಾಯ 16 ಮತ್ತು 18 ಅಧ್ಯಾಯಗಳಲ್ಲಿ ವಿಶೇಷವಾಗಿ ಉಪಯೋಗಿಸಲ್ಪಟ್ಟಿರುವ “ನಿರ್ಬಂಧಿಸು” ಎನ್ನುವ ಪದಕ್ಕೆ “ನಿಷೇಧಿಸು” ಅಥವಾ “ಅನುಮತಿಸಬೇಡ” ಎಂದರ್ಥ.
  • ‘ಕಟ್ಟುಗಳು” ಎನ್ನುವ ಪದವನ್ನು “ಸರಪಣಿಗಳು” ಅಥವಾ “ಹಗ್ಗಗಳು” ಅಥವಾ “ಸಂಕೋಲೆಗಳು” ಎಂದೂ ಅನುವಾದ ಮಾಡಬಹುದು.
  • “ನಿರ್ಬಂಧಿಸು” ಎನ್ನುವ ಪದವನ್ನು ಅಲಂಕಾರ ರೂಪದಲ್ಲಿ “ಗಂಟು” ಅಥವಾ “ಸಂಪರ್ಕ” ಅಥವಾ “ಹತ್ತಿರ ಸಂಬಂಧ” ಎಂದೂ ಅನುವಾದ ಮಾಡಬಹುದು.
  • “ಸಮಾಧಾನ ಬಂಧ” ಎನ್ನುವ ಮಾತಿಗೆ “ಸಮಾದಾನದಲ್ಲಿರುವುದು, ಇದು ಒಬ್ಬರಿಗೊಬ್ಬರು ಅತೀ ಹತ್ತಿರವಾದ ಸಂಬಂಧದಲ್ಲಿ ಜನರನ್ನು ಇರಿಸುತ್ತದೆ” ಅಥವಾ “ಆ ಸಮಾಧಾನವು ಇಬ್ಬರನ್ನು ಕಟ್ಟಿ ಹಾಕುತ್ತದೆ” ಎಂದರ್ಥ.
  • “ನಿರ್ಬಂಧಿಸು” ಎನ್ನುವ ಮಾತನ್ನು “ಸುತ್ತಲೂ ಸುತ್ತು” ಅಥವಾ “ಪಟ್ಟಿಕಟ್ಟು” ಎಂದೂ ಅನುವಾದ ಮಾಡಬಹುದು.
  • ಒಬ್ಬರು ಆಣೆ ಮಾಡಿದವುಗಳೊಂದಿಗೆ “ಬಂಧಿಸಲ್ಪಟ್ಟಿದ್ದಾರೆ” ಎನ್ನುವ ಮಾತಿಗೆ “ಆಣೆಯನ್ನು ನೆರವೇರಿಸಲು ವಾಗ್ಧಾನ ಮಾಡಿದ್ದಾರೆ” ಅಥವಾ “ಆಣೆಯನ್ನು ನೆರವೇರಿಸಲು ಒಪ್ಪಿಕೊಂಡಿದ್ದಾರೆ” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಬಂಧಿಸಲ್ಪಟ್ಟಿದೆ” ಎನ್ನುವ ಪದವನ್ನು “ಕಟ್ಟಲ್ಪಟ್ಟಿದೆ” ಅಥವಾ “ಕಟ್ಟಿಹಾಕಲ್ಪಟ್ಟಿದೆ” ಅಥವಾ “ಸರಪಣಿಯಿಂದ ಕಟ್ಟಿಹಾಕಲ್ಪಟ್ಟಿದೆ” ಅಥವಾ “(ನೆರವೇರಿಸುವುದಕ್ಕೆ) ಬಾಧ್ಯತೆ ತೆಗೆದುಕೊಳ್ಳಲಾಗಿದೆ” ಅಥವಾ “ಮಾಡಲು ಬೇಕಾಗಿರುತ್ತದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನೆರವೇರಿಸು, ಸಮಾಧಾನ, ಸೆರೆಮನೆ, ದಾಸನು, ಆಣೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H247, H481, H519, H615, H631, H632, H640, H1366, H1367, H1379, H2280, H2706, H3256, H3533, H3729, H4147, H4148, H4205, H4562, H5650, H5656, H5659, H6029, H6123, H6616, H6696, H6872, H6887, H7194, H7405, H7573, H7576, H8198, H8244, H8379, G254, G331, G332, G1195, G1196, G1198, G1199, G1210, G1397, G1398, G1401, G1402, G2611, G2615, G3734, G3784, G3814, G4019, G4029, G4385, G4886, G4887, G5265

ಬಲಗೈ

ಪದದ ಅರ್ಥವಿವರಣೆ:

"ಬಲಗೈ" ಎಂಬ ಪದವು ವ್ಯಕ್ತಿಯ ದೇಹದ ಬಲಭಾಗದಲ್ಲಿರುವ ಕೈಯನ್ನು ಸೂಚಿಸುತ್ತದೆ. ಬೈಬಲ್ನಲ್ಲಿ, ಈ ಪದವನ್ನು ವ್ಯಕ್ತಿಯ ಬಲಭಾಗದಲ್ಲಿರುವ ಇತರ ದೇಹದ ಭಾಗಗಳನ್ನು, ವ್ಯಕ್ತಿಯ ಬಲದ ದಿಕ್ಕನ್ನು, ದಕ್ಷಿಣದ ದಿಕ್ಕನ್ನು ಅಥವಾ ಆಡಳಿತಗಾರನ ಬಲಭಾಗದಲ್ಲಿರುವ ಗೌರವ ಅಥವಾ ಬಲದ ಸ್ಥಳವನ್ನು ಸೂಚಿಸಲು ಸಾಂಕೇತಿಕವಾಗಿ ಬಳಸಲಾಗುತ್ತದೆ. ಅಥವಾ ಇತರ ಪ್ರಮುಖ ವ್ಯಕ್ತಿ

  • ಬಲಗೈಯನ್ನು ಶಕ್ತಿ, ಅಧಿಕಾರ, ಅಥವಾ ಬಲಗಳಿಗೆ ಗುರುತಾಗಿ ಉಪಯೋಗಿಸುತ್ತಾರೆ.
  • ಯೇಸುವು (ಸಭೆಯ) ವಿಶ್ವಾಸಿಗಳ ದೇಹದ ತಲೆಯಾಗಿ ತಂದೆಯಾದ ದೇವರ “ಬಲಗಡೆಯಲ್ಲಿ” ಕುಳಿತಿದ್ದಾರೆಂದು ಸತ್ಯವೇದವು ವಿವರಿಸುತ್ತಿದೆ.
  • ಒಬ್ಬ ವ್ಯಕ್ತಿಯ ಬಲಗೈಯನ್ನು ಒಬ್ಬ ವ್ಯಕ್ತಿಯನ್ನು ಆಶೀರ್ವಾದ ಮಾಡುವಾಗ ಆ ವ್ಯಕ್ತಿಯ ತಲೆಯ ಮೇಲೆ ಇಟ್ಟಾಗ ವಿಶೇಷವಾಗಿ ಘನಪಡಿಸುವುದನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ (ಉದಾಹರಣೆಗೆ, ಪಿತೃವಾಗಿರುವ ಯಾಕೋಬನು ತನ್ನ ಮಗನಾಗಿರುವ ಎಫ್ರಾಯೀಮನನ್ನು ಬಲಗೈ ಇಟ್ಟು ಆಶೀರ್ವಾದ ಮಾಡಿದ್ದನು).
  • ಯಾರಾದರೊಬ್ಬರ “ಬಲಗೈಗೆ ಸೇವೆ ಮಾಡುವುದು” ಎಂದರೆ ಆ ವ್ಯಕ್ತಿಗೆ ವಿಶೇಷವಾಗಿ ಸಹಾಯಕವಾಗಿರುವ ಮತ್ತು ಪ್ರಾಮುಖ್ಯವಾಗಿರುವ ಸೇವೆಯನ್ನು ಮಾಡುತ್ತಿರುವ ವ್ಯಕ್ತಿಯಾಗಿರುವುದು ಎಂದರ್ಥ.

ಅನುವಾದ ಸಲಹೆಗಳು:

  • “ಬಲಗೈ” ಎನ್ನುವ ಪದವು ಕೆಲವೊಂದುಬಾರಿ ಅಕ್ಷರಾರ್ಥವಾಗಿ ಒಬ್ಬ ವ್ಯಕ್ತಿ ಬಲಗೈಯನ್ನು ಸೂಚಿಸುತ್ತದೆ, ಉದಾಹರಣೆಗೆ, ರೋಮಾ ಸೈನಿಕರು ಯೇಸುವನ್ನು ಹಿಯಾಳಿಸುವುದಕ್ಕೆ ಯೇಸುವಿನ ಬಲಗೈಯಲ್ಲಿ ಕೋಲನ್ನು ಇಟ್ಟಿದ್ದರು. ಈ ಕೈಯನ್ನು ಸೂಚಿಸುವುದಕ್ಕೆ ಭಾಷೆಯು ಉಪಯೋಗಿಸುವ ಪದವನ್ನು ಉಪಯೋಗಿಸಿ ಈ ಪದವನ್ನು ಅನುವಾದ ಮಾಡಬಹುದು.
  • ಅಲಂಕಾರಿಕ ಉಪಯೋಗಗಳಲ್ಲಿ, ಅನುವಾದ ಭಾಷೆಯಲ್ಲಿ “ಬಲಗೈ” ಎನ್ನುವ ಪದಕ್ಕೆ ಒಂದೇ ಅರ್ಥವನ್ನು ಹೊಂದಿರದಿದ್ದರೆ, ಆದೆ ಅರ್ಥವನ್ನು ಹೊಂದಿರುವ ಬೇರೊಂದು ಪದವು ಆ ಭಾಷೆಯಲ್ಲಿ ಇದೆಯೋ ಇಲ್ಲವೋ ಎಂದು ನೋಡಿರಿ.
  • “ಬಲಗೈಯಲ್ಲಿ” ಎನ್ನುವ ಪದವನ್ನು “ಬಲ ಬದಿಯಲ್ಲಿ” ಅಥವಾ “ಘನಪಡಿಸುವ ಸ್ಥಳದ ಪಕ್ಕದಲ್ಲಿ” ಅಥವಾ “ಬಲ ಸ್ಥಾನದಲ್ಲಿ” ಅಥವಾ “ಸಹಾಯ ಮಾಡುವುದಕ್ಕೆ ಸಿದ್ಧರಾಗಿರುವುದು” ಎಂದೂ ಅನುವಾದ ಮಾಡಬಹುದು.
  • ಆತನ ಬಲಗೈಯೊಂದಿಗೆ” ಎನ್ನುವ ಮಾತನ್ನು ಅನುವಾದ ಮಾಡುವದರಲ್ಲಿ “ಅಧಿಕಾರದೊಂದಿಗೆ” ಅಥವಾ “ಶಕ್ತಿಯನ್ನು ಉಪಯೋಗಿಸುತ್ತಾ” ಅಥವಾ “ಆತನ ಆಶ್ಚರ್ಯಕರವಾದ ಬಲದೊಂದಿಗೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ತನ್ನ ಬಲಗೈ ಮತ್ತು ತನ್ನ ಶಕ್ತಿಯುತವಾದ ಕೈ” ಎನ್ನುವ ಅಲಂಕಾರಿಕ ಮಾತು ದೇವರ ಶಕ್ತಿ ಮತ್ತು ಆತನ ಶ್ರೇಷ್ಠವಾದ ಬಲವನ್ನು ಕುರಿತು ಹೇಳುವ ಎರಡು ವಿಧಾನಗಳಾಗಿರುತ್ತವೆ. ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಆತನ ಅದ್ಭುತವಾದ ಬಲ ಮತ್ತು ಶಕ್ತಿಯುತವಾದ ಅಧಿಕಾರ” ಎಂದೂ ಅನುವಾದ ಮಾಡಲಾಗುತ್ತದೆ.
  • “ಅವರ ಬಲಗೈ ಸುಳ್ಳುತನವಾಗಿರುತ್ತದೆ” ಎನ್ನುವ ಮಾತನ್ನು “ಅವರ ಕುರಿತಾಗಿ ಆತೀ ಹೆಚ್ಚಾಗಿ ಘನಪಡಿಸುವ ವಿಷಯವೂ ಸುಳ್ಳುಗಳಿಂದ ಕೆಟ್ಟುಹೋಗಿರುತ್ತದೆ” ಅಥವಾ “ಅವರ ಘನ ಸ್ಥಾನವು ಮೋಸ ಮಾಡುವುದರ ಮೂಲಕ ಭ್ರಷ್ಟವಾಗಿರುತ್ತದೆ” ಅಥವಾ “ಅವರು ತಮ್ಮನ್ನು ತಾವು ಶಕ್ತಿವಂತರೆಂದು ಹೇಳಿಕೊಳ್ಳುವುದಕ್ಕೆ ಸುಳ್ಳುಗಳನ್ನು ಉಪಯೋಗಿಸುತ್ತಾರೆ” ಎಂದೂ ಅನುವಾದ ಮಾಡುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಆರೋಪಿಸು, ದುಷ್ಟ, ಘನಪಡಿಸು, ಶಕ್ತಿ, ಶಿಕ್ಷಿಸು, ಮೀರು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H3225, H3231, H3233, G1188

ಬಹಿರಂಗಪಡಿಸು, ಬಹಿರಂಗಪಡಿಸುವುದು, ಬಹಿರಂಗಪಡಿಸಿದೆ, ಪ್ರತ್ಯಕ್ಷಪಡಿಸು

ಪದದ ಅರ್ಥವಿವರಣೆ:

“ಬಹಿರಂಗಪಡಿಸು” ಎನ್ನುವ ಪದಕ್ಕೆ ಯಾವುದಾದರೊಂದನ್ನು ಎಲ್ಲರಿಗೆ ತಿಳಿಯುವಂತೆ ಮಾಡು ಎಂದರ್ಥ. “ಪ್ರತ್ಯಕ್ಷತೆ” ಎನ್ನುವುದಕ್ಕೆ ಯಾವುದಾದರೊಂದನ್ನು ಸ್ಪಷ್ಟವಾಗಿ ಗೊತ್ತುಪಡಿಸುವುದು ಎಂದರ್ಥವಾಗಿರುತ್ತದೆ.

ದೇವರು ಜನರೊಂದಿಗೆ ಮಾತನಾಡುವುದರ ಮೂಲಕ ಮತ್ತು ಅವರಿಗೆ ಬರೆದ ಸಂದೇಶಗಳ ಮೂಲಕ, ಮತ್ತು ಆತನು ಉಂಟು ಮಾಡಿದ ಸರ್ವ ಸೃಷ್ಟಿಯ ಮೂಲಕ ತನ್ನನ್ನು ತಾನು ತೋರಿಸಿಕೊಂಡಿದ್ದಾರೆ ಅಥವಾ ಬಹಿರಂಗಪಡಿಸಿಕೊಂಡಿದ್ದಾರೆ.

  • ದೇವರು ಕನಸುಗಳು ಅಥವಾ ದರ್ಶನಗಳ ಮೂಲಕ ತನ್ನನ್ನು ತಾನು ಬಹಿರಂಗಪಡಿಸುತ್ತಾನೆ ಅಥವಾ ತೋರಿಸುತ್ತಾನೆ.
  • “ಯೇಸುಕ್ರಿಸ್ತನಿಂದ ಉಂಟಾದ ಪ್ರತ್ಯಕ್ಷತೆಯ” ಮೂಲಕ ಪೌಲನು ಸುವಾರ್ತೆಯನ್ನು ಪಡೆದುಕೊಂಡಿದ್ದಾನೆಂದು ಹೇಳಿದಾಗ, ತನಗೆ ಸುವಾರ್ತೆಯನ್ನು ಯೇಸುವೇ ತನಗೆ ತಾನಾಗಿಯೇ ವಿವರಿಸಿದ್ದಾನೆಂದು ಅದರ ಅರ್ಥವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿರುವ “ಪ್ರಕಟನೆ” ಗ್ರಂಥದಲ್ಲಿ ಅಂತ್ಯಕಾಲದಲ್ಲಿ ನಡೆಯುವ ಸಂಘಟನೆಗಳ ಕುರಿತಾಗಿ ದೇವರು ಬಹಿರಂಗಪಡಿಸಿದ ವಿಷಯಗಳು ಒಳಗೊಂಡಿರುತ್ತವೆ. ಆತನು ಅಪೊಸ್ತಲನಾದ ಯೋಹಾನನಿಗೆ ದರ್ಶನಗಳ ಮೂಲಕ ಅವುಗಳನ್ನು ಬಹಿರಂಗಪಡಿಸಿದನು.

ಅನುವಾದ ಸಲಹೆಗಳು:

  • “ಬಹಿರಂಗಪಡಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತಿಳಿಯುವಂತೆ ಮಾಡು” ಅಥವಾ “ಬಯಲುಮಾಡು” ಅಥವಾ “ಸ್ಪಷ್ಟವಾಗಿ ತೋರಿಸು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸಂದರ್ಭಾನುಸಾರವಾಗಿ, “ಪ್ರಕಟಣೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೇವರಿಂದ ಸಂಭಾಷಣೆ” ಅಥವಾ “ದೇವರು ಬಹಿರಂಗಪಡಿಸಿದ ವಿಷಯಗಳು” ಅಥವಾ “ದೇವರ ಕುರಿತಾಗಿ ಬೋಧಿಸುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ಅನುವಾದದಲ್ಲಿ “ಬಹಿರಂಗಪಡಿಸು” ಎನ್ನುವ ಅರ್ಥವನ್ನು ಉಪಯೋಗಿಸುವುದೇ ಉತ್ತಮವಾದದ್ದು.
  • “ಪ್ರತ್ಯಕ್ಷತೆ ಇಲ್ಲದಿರುವಾಗ” ಎನ್ನುವ ಮಾತನ್ನು “ದೇವರು ಜನರಿಗೆ ತನ್ನನ್ನು ತಾನು ತೋರಿಸಿಕೊಳ್ಳದಿರುವಾಗ” ಅಥವಾ “ದೇವರು ತನ್ನ ಜನರೊಂದಿಗೆ ಮಾತನಾಡದಿರುವಾಗ” ಅಥವಾ “ದೇವರು ಜನರ ಮಧ್ಯೆದಲ್ಲಿ ಸಂಭಾಷಣೆ ಮಾಡದಿರುವಾಗ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶುಭವಾರ್ತೆ, ಶುಭವಾರ್ತೆಗಳು, ಕನಸು, ದರ್ಶನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H241, H1540, H1541, G601, G602, G5537

ಬಾಧ್ಯನಾಗು, ಪಿತ್ರಾರ್ಜಿತ, ಬಾಧ್ಯಸ್ಥ

ಪದದ ಅರ್ಥವಿವರಣೆ:

“ಬಾಧ್ಯನಾಗು” ಎನ್ನುವ ಪದವು ಒಬ್ಬ ವ್ಯಕ್ತಿಯಿಂದ ಅಥವಾ ತಂದೆತಾಯಿಗಳಿಂದ ತೆಗೆದುಕೊಳ್ಳುವ ಬೆಲೆಯುಳ್ಳದ್ದನ್ನು ಸೂಚಿಸುತ್ತದೆ, ಯಾಕಂದರೆ ಆ ವ್ಯಕ್ತಿಯೊಂದಿಗೆ ವಿಶೇಷವಾದ ಸಂಬಂಧವಿರುತ್ತದೆ. “ಪಿತ್ರಾರ್ಜಿತ” ಎನ್ನುವುದು ಹೊಂದಿಕೊಂಡಿರುವುದನ್ನು ಅಥವಾ ಪಡೆದುಕೊಂಡಿರುವುದನ್ನು ಸೂಚಿಸುತ್ತದೆ. ವ್ಯಕ್ತಿಯೊಂದಿಗಿನ ವಿಶೇಷ ಸಂಬಂಧದಿಂದಾಗಿ ಈ ಪದವು ಇನ್ನೊಬ್ಬ ವ್ಯಕ್ತಿಯಿಂದ ಅಮೂಲ್ಯವಾದದ್ದನ್ನು ಪಡೆಯುವುದನ್ನು ಸಹ ಸೂಚಿಸುತ್ತದೆ.

  • ಪಡೆದುಕೊಂಡಿರುವ ಭೌತಿಕವಾದ ಪಿತ್ರಾರ್ಜಿತ ಬಹುಶಃ ಅದು ಹಣ, ಭೂಮಿ, ಅಥವಾ ಅಸ್ತಿಪಾಸ್ತಿಯಾಗಿರಬಹುದು.
  • ಕಾನಾನ್ ಭೂಮಿಯನ್ನು ಅಬ್ರಾಹಾಮನು ಮತ್ತು ತನ್ನ ಸಂತಾನದವರು ಸ್ವಾಧೀನ ಮಾಡಿಕೊಳ್ಳುತ್ತಾರೆಂದು, ಮತ್ತು ಅದು ಅವರಿಗೆ ಶಾಶ್ವತವಾಗಿ ಇರುತ್ತದೆಯೆಂದು ದೇವರು ಅವರೊಂದಿಗೆ ವಾಗ್ಧಾನ ಮಾಡಿದ್ದನು.

ಅನುವಾದ ಸಲಹೆಗಳು:

  • ಪಿತ್ರಾರ್ಜಿತ ಅಥವಾ ಬಾಧ್ಯಸ್ಥ ಎನ್ನುವ ಉದ್ದೇಶದಲ್ಲಿ ಅನುವಾದ ಮಾಡುವ ಭಾಷೆಯಲ್ಲಿ ಮುಂಚಿತವಾಗಿಯೇ ಪದಗಳು ಇದ್ದಾವೋ ಇಲ್ಲವೋ ಎಂದು ನೋಡಿರಿ, ಆ ಪದಗಳನ್ನೇ ಉಪಯೋಗಿಸಿರಿ.
  • ಸಂದರ್ಭಾನುಸಾರವಾಗಿ, “ಬಾಧ್ಯನಾಗು” ಎನ್ನುವ ಪದಕ್ಕೆ ಪರ್ಯಾಯ ಪದಗಳಾಗಿ “ಪಡೆದುಕೋ” ಅಥವಾ “ಸ್ವಾಧೀನಪಡಿಸಿಕೋ” ಅಥವಾ “ಅದರ ಆಸ್ತಿಪಾಸ್ತಿಗಳಲ್ಲಿ ಬಾಧ್ಯಸ್ಥನಾಗು” ಎಂದೂ ಉಪಯೋಗಿಸಬಹುದು.
  • “ಪಿತ್ರಾರ್ಜಿತ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಾಗ್ಧಾನ ಮಾಡಿದ ಬಹುಮಾನ” ಅಥವಾ “ಸ್ಥಿರವಾದ ಆಸ್ತಿಪಾಸ್ತಿ” ಎನ್ನುವ ಪದಗಳು ಒಳಗೊಂಡಿರಬಹುದು.
  • “ಬಾಧ್ಯಸ್ಥ” ಎನ್ನುವ ಪದವನ್ನು “ತಂದೆಯ ಆಸ್ತಿಪಾಸ್ತಿಗಳನ್ನು ಪಡೆದುಕೊಳ್ಳುವ ಸವಲತ್ತು ಹೊಂದಿರುವ ಮಗ” ಅಥವಾ “(ದೇವರ) ಆತ್ಮೀಯಕವಾದ ಆಸ್ತಿಪಾಸ್ತಿಗಳನ್ನು ಅಥವಾ ಆಶೀರ್ವಾದಗಳನ್ನು ಪಡೆಯುವುದಕ್ಕೆ ಆದುಕೊಂಡಿರುವ ವ್ಯಕ್ತಿ” ಎನ್ನುವ ಅರ್ಥಗಳು ಬರುವ ಮಾತುಗಳಿಂದ ಅನುವಾದ ಮಾಡಬಹುದು.
  • “ಪಿತ್ರಾರ್ಜಿತ” ಎನ್ನುವ ಪದವನ್ನು “ದೇವರಿಂದ ಬಂದ ಆಶೀರ್ವಾದಗಳು” ಅಥವಾ “ಪಿತ್ರಾರ್ಜಿತ ಆಶೀರ್ವಾದಗಳು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಬಾಧ್ಯಸ್ಥ, ಕಾನಾನ್, ವಾಗ್ಧಾನ ಭೂಮಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 04:06 ಕಾನಾನಿಗೆ ಅಬ್ರಾಮನು ಬಂದಾಗ, “ನಿನ್ನ ಸುತ್ತಮುತ್ತ ನೋಡು” ಎಂದು ದೇವರು ಹೇಳಿದರು. ನೀನು ನೋಡುತ್ತಿರುವ ಭೂಮಿಯನ್ನೆಲ್ಲಾ __ ಸ್ವಾಸ್ಥ್ಯವನ್ನಾಗಿ __ ನಿನಗೂ ಮತ್ತು ನಿನ್ನ ಸಂತಾನದವರಿಗೂ ಕೊಡುತ್ತೇನೆ.
  • 27:01 ಒಂದು ದಿನ, ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪಂಡಿತನಾಗಿರುವ ಒಬ್ಬ ವ್ಯಕ್ತಿ ಯೇಸುವನ್ನು ಪರೀಕ್ಷೆ ಮಾಡುವುದಕ್ಕೆ ಆತನ ಬಳಿಗೆ ಬಂದು, “ಬೋಧಕನೇ, ನಿತ್ಯಜೀವವನ್ನು __ ಪಡೆದುಕೊಳ್ಳುವುದಕ್ಕೆ __ ನಾನೇನು ಮಾಡಬೇಕು?” ಎಂದು ಕೇಳಿದನು.
  • 35:03 “ಇಬ್ಬರ ಪುತ್ರರನ್ನು ಪಡೆದ ಒಬ್ಬ ಮನುಷ್ಯನಿದ್ದನು. ಚಿಕ್ಕವನು ತನ್ನ ತಂದೆ ಬಳಿಗೆ ಬಂದು, “ತಂದೆಯೇ, ಈಗ ನನಗೆ ನನ್ನ __ ಸ್ವಾಸ್ಥ್ಯ __ ಬೇಕು!” ಎಂದು ಕೇಳಿದನು. ಆದ್ದರಿಂದ ತಂದೆ ತನಗಿರುವ ಆಸ್ತಿಪಾಸ್ತಿಯನ್ನೆಲ್ಲಾ ತನ್ನ ಇಬ್ಬರು ಮಕ್ಕಳಿಗೆ ಎರಡು ಭಾಗ ಮಾಡಿದನು.

ಪದ ಡೇಟಾ:

  • Strong's: H2490, H2506, H3423, H3425, H4181, H5157, H5159, G2816, G2817, G2819, G2820

ಭಯ, ಭಯಪಾಡು, ಕಳವಳ ಭೀತಿ

ಪದದ ಅರ್ಥವಿವರಣೆ:

"ಭಯ" ಎಂಬ ಪದವು ಅವರ ಸುರಕ್ಷತೆ ಅಥವಾ ಯೋಗಕ್ಷೇಮಕ್ಕೆ ಸಂಭಾವ್ಯ ಬೆದರಿಕೆಯನ್ನು ಅನುಭವಿಸುವಾಗ ವ್ಯಕ್ತಿಯು ಅನುಭವಿಸುವ ಅಹಿತಕರ ಭಾವನೆಯನ್ನು ಸೂಚಿಸುತ್ತದೆ. ಆದಾಗ್ಯೂ, ಸತ್ಯವೇದದಲ್ಲಿ, "ಭಯ" ಎಂಬ ಪದವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಆರಾಧನೆ, ಗೌರವ, ವಿಸ್ಮಯ ಅಥವಾ ವಿಧೇಯತೆಯ ಮನೋಭಾವವನ್ನು ಸೂಚಿಸುತ್ತದೆ, ಸಾಮಾನ್ಯವಾಗಿ ದೇವರು ಅಥವಾ ರಾಜನಂತಹ ಶಕ್ತಿಶಾಲಿ ವ್ಯಕ್ತಿ. "ಭೀತಿ" ಎಂಬ ಪದವು ತೀವ್ರ ಅಥವಾ ತೀವ್ರವಾದ ಭಯವನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ಭಯ” ಎನ್ನುವ ಪದವನ್ನು “ಕಳವಳಗೊಳ್ಳುವುದು” ಅಥವಾ “ಆಳವಾಗಿ ಗೌರವ ಕೊಡುವುದು” ಅಥವಾ “ಪೂಜಿಸುವುದು” ಅಥವಾ “ವಿಸ್ಮಯ ಹೊಂದುವುದು” ಎಂದೂ ಅನುವಾದ ಮಾಡಬಹುದು.
  • “ಕಳವಳ” ಎನ್ನುವ ಪದವನ್ನು “ಭಯಭೀತಗೊಳ್ಳುವುದು” ಅಥವಾ “ಹೆದರುವುದು” ಅಥವಾ “ಭಯದಿಂದರುವುದು” ಎಂದೂ ಅನುವಾದ ಮಾಡಬಹುದು.
  • “ಅವರೆಲ್ಲರ ಮೇಲೆ ದೇವರ ಭಯವಿದೆ” ಎನ್ನುವ ವಾಕ್ಯವನ್ನು “ಅಕಸ್ಮಿಕವಾಗಿ ಅವರೆಲ್ಲರು ದೇವರೆಂದರೆ ಆಳವಾದ ವಿಸ್ಮಯವನ್ನು ಮತ್ತು ಗೌರವವನ್ನು ಪಡೆದುಕೊಂಡರು” ಅಥವಾ “ತತ್.ಕ್ಷಣವೇ, ಅವರೆಲ್ಲರು ಆಶ್ಚರ್ಯಕ್ಕೊಳಗಾದರೂ ಮತ್ತು ದೇವರನ್ನು ಆಳವಾಗಿ ಗೌರವಿಸಿದರು” ಅಥವಾ “ಅದಾದನಂತರ, ಅವರೆಲ್ಲರು ದೇವರ ವಿಷಯದಲ್ಲಿ ಕಳವಳ ಹೊಂದಿದರು (ಆತನ ಪರಾಕ್ರಮ ಶಕ್ತಿಯನ್ನು ಕಂಡು)” ಎಂದೂ ಅನುವಾದ ಮಾಡಬಹುದು.
  • “ಭಯಗೊಳ್ಳದಿರು” ಎನ್ನುವ ಮಾತನ್ನು “ಕಳವಳಗೊಳ್ಳಬೇಡ” ಅಥವಾ “ಕಳವಳಪಡುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಶ್ಚರ್ಯ, ವಿಸ್ಮಯ, ಕರ್ತನು, ಶಕ್ತಿ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H367, H926, H1204, H1481, H1672, H1674, H1763, H2119, H2296, H2727, H2729, H2730, H2731, H2844, H2849, H2865, H3016, H3025, H3068, H3372, H3373, H3374, H4032, H4034, H4035, H4116, H4172, H6206, H6342, H6343, H6345, H6427, H7264, H7267, H7297, H7374, H7461, H7493, H8175, G870, G1167, G1168, G1169, G1630, G1719, G2124, G2125, G2962, G5398, G5399, G5400, G5401

ಭರವಸೆ, ಭರವಸೆವಿಡುವುದು, ಭರವಸೆವಿಟ್ಟಿದೆ, ನಂಬಿಗಸ್ತ, ವಿಶ್ವಾಸಾರ್ಹತೆ

ಪದದ ಅರ್ಥವಿವರಣೆ:

ಯಾವುದಾದರೊಂದನ್ನು ಅಥವಾ ಯಾರಾದರೊಬ್ಬರನ್ನು “ನಂಬು” ಎನ್ನುವುದಕ್ಕೆ ಆ ವಸ್ತುವು ಅಥವಾ ಆ ವ್ಯಕ್ತಿ ನಿಜವೆಂದು ಅಥವಾ ಭರವಸೆಇಡತಕ್ಕದ್ದೆಂದು/ಭರವಸೆ ಇಡತಕ್ಕವನೆಂದು ನಂಬುವುದು ಎಂದರ್ಥ. ಆ ನಂಬಿಕೆಯನ್ನು ಕೂಡ “ಭರವಸೆ” ಎಂದು ಕರೆಯುತ್ತಾರೆ. “ವಿಶ್ವಾಸಾರ್ಹ’ ವ್ಯಕ್ತಿ ಎಂದರೆ ಸರಿಯಾದದ್ದನ್ನು ಮತ್ತು ನಿಜವಾದದ್ದನ್ನು ಹೇಳುವುದಕ್ಕೆ ಮತ್ತು ಮಾಡುವುದಕ್ಕೆ ಭರವಸೆವಿಡುವ ಒಬ್ಬ ವ್ಯಕ್ತಿ ಎಂದರ್ಥ, ಮತ್ತು ಅದಕ್ಕಾಗಿ “ವಿಶ್ವಾಸಾರ್ಹತೆ” ಎನ್ನುವ ಗುಣಲಕ್ಷಣವನ್ನು ಹೊಂದಿರುವ ವ್ಯಕ್ತಿ ಎಂದರ್ಥ.

  • ಭರವಸೆ ಎನ್ನುವುದು ನಂಬಿಕೆಗೆ ತುಂಬಾ ಹತ್ತಿರವಾಗಿರುತ್ತದೆ. ನಾವು ಒಬ್ಬ ವ್ಯಕ್ತಿಯಲ್ಲಿ ಭರವಸೆವಿಟ್ಟರೆ, ಮಾಡುವುದಕ್ಕೆ ಅವರು ಮಾಡಿದ ವಾಗ್ಧಾನವನ್ನು ನೆರವೇರಿಸುವುದಕ್ಕೆ ಆ ವ್ಯಕ್ತಿಯಲ್ಲಿ ನಾವು ನಂಬಿಕೆಯನ್ನಿಡುವುದು ಎಂದರ್ಥ.
  • ಯಾರಾದರೊಬ್ಬರಲ್ಲಿ ಭರವಸೆಯನ್ನು ಹೊಂದಿರುವುದೆನ್ನುವುದು ಕೂಡ ಆ ವ್ಯಕ್ತಿಯ ಮೇಲೆ ಆಧಾರಪಟ್ಟಿರುವುದು ಎಂದರ್ಥ.
  • ಯೇಸುವಿನಲ್ಲಿ “ಭರವಸೆ” ಇಡುವುದು ಎಂದರೆ ಆತನು ದೇವರೆಂದು ನಂಬುವುದು, ನಮ್ಮ ಪಾಪಗಳಿಗಾಗಿ ಕ್ರಯಧನವನ್ನು ಸಲ್ಲಿಸುವುದಕ್ಕೆ ಆತನು ಶಿಲುಬೆಯ ಮೇಲೆ ಸತ್ತನೆಂದು, ಮತ್ತು ನಮ್ಮ ರಕ್ಷಿಸುವುದಕ್ಕೆ ಆತನ ಮೇಲೆ ಆತುಕೊಳ್ಳಬಹುದೆಂದು ಅರ್ಥವಾಗಿರುತ್ತದೆ.
  • “ವಿಶ್ವಾಸಾರ್ಹವಾದ ಮಾತು” ಎನ್ನುವುದು ಹೇಳಲ್ಪಟ್ಟಿರುವ ಮಾತು ನಿಜವೆಂದು ಪರಿಗಣಿಸುವುದನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಭರವಸೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ನಂಬು” ಅಥವಾ ‘ವಿಶ್ವಾಸವನ್ನು ಹೊಂದಿರು” ಅಥವಾ “ನಿಶ್ಚಯತೆ ಹೊಂದಿರು” ಅಥವಾ “ಆಧಾರಪಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಇದರಲ್ಲಿ ನಿನ್ನ ಭರವಸೆವಿಡು” ಎನ್ನುವ ಮಾತು “ಭರವಸೆಯಲ್ಲಿ” ಎನ್ನುವ ಮಾತಿಗೆ ಅರ್ಥವೂ ಒಂದೇ ಆಗಿರುತ್ತದೆ.
  • “ವಿಶ್ವಾಸಾರ್ಹ” ಎನ್ನುವ ಮಾತನ್ನು “ಆಧಾರಪಡುವಯೋಗ್ಯನು” ಅಥವಾ “ಭರವಸೆ ಇಡತಕ್ಕ” ಅಥವಾ “ಯಾವಾಗಲೂ ಭರವಸೆಯುಳ್ಳ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ನಿಶ್ಚಯತೆ, ವಿಶ್ವಾಸ, ವಿಶ್ವಾಸಭರಿತ, ನಿಜ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 12:12 ಐಗುಪ್ತೀಯರು ಸತ್ತು ಹೋಗಿದ್ದಾರೆಂದು ಇಸ್ರಾಯೇಲ್ಯರು ನೋಡಿದಾಗ, ಅವರು __ ದೇವರಲ್ಲಿ __ ಭರವಸೆವಿಟ್ಟರು ಮತ್ತು ಮೋಶೆ ದೇವರ ಪ್ರವಾದಿಯೆಂದು ನಂಬಿದರು.
  • 14:15 ಯೆಹೋಶುವನು ಒಳ್ಳೇಯ ನಾಯಕನು, ಯಾಕಂದರೆ ಆತನು ದೇವರಲ್ಲಿ __ ಭರವಸೆವಿಟ್ಟಿದ್ದನು __ ಮತ್ತು ಆತನಿಗೆ ವಿಧೇಯತೆಯನ್ನು ತೋರಿಸಿದನು.
  • 17:02 ದೇವರಲ್ಲಿ __ ಭರವಸೆವಿಟ್ಟ __ ಮತ್ತು ಆತನಿಗೆ ವಿಧೇಯತೆ ತೋರಿಸಿದ ನೀತಿವಂತನಾದ ಮನುಷ್ಯನು ಮತ್ತು ಹೆಚ್ಚಾಗಿ ತಗ್ಗಿಸಿಕೊಂಡವನು ದಾವೀದನಾಗಿದ್ದನು.
  • 34:06 ಜನರು ತಮ್ಮ ಒಳ್ಳೇಯ ಕ್ರಿಯೆಗಳಲ್ಲಿ __ ಭರವಸೆವಿಟ್ಟಿರುವ __ ಜನರ ಕುರಿತಾಗಿ ಮತ್ತು ಇತರ ಜನರನ್ನು ತೊರೆಯುವವರ ಕುರಿತಾಗಿ ಯೇಸು ಒಂದು ಕಥೆಯನ್ನು ಹೇಳಿದನು.

ಪದ ಡೇಟಾ:

  • Strong's: H539, H982, H1556, H2620, H2622, H3176, H4009, H4268, H7365, G1679, G3872, G3982, G4006, G4100, G4276

ಮಕ್ಕಳು, ಮಗು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಮಗು” ಎನ್ನುವ ಪದವು ಅನೇಕಬಾರಿ ಕೂಸಿಗೆ ಮತ್ತು ವಯಸ್ಸಿನಲ್ಲಿ ಚಿಕ್ಕ ಮಗುವಿಗೆ ಸಾಧಾರಣವಾಗಿ ಸೂಚಿಸಲ್ಪಟ್ಟಿರುತ್ತದೆ. “ಮಕ್ಕಳು” ಎನ್ನುವ ಪದವು ಮಗು ಎನ್ನುವ ಪದಕ್ಕೆ ಬಹುವಚನ ಪದವಾಗಿರುತ್ತದೆ ಮತ್ತು ಇದಕ್ಕೆ ಅನೇಕವಾದ ಅಲಂಕಾರ ಉಪಯೋಗಗಳನ್ನು ಹೊಂದಿರುತ್ತದೆ.

  • ಸತ್ಯವೇದದಲ್ಲಿ ಶಿಷ್ಯರನ್ನು ಅಥವಾ ಹಿಂಬಾಲಕರನ್ನು ಕೆಲವೊಂದುಸಲ “ಮಕ್ಕಳು” ಎಂದು ಕರೆಯಲಾಗಿದೆ.
  • ಅನೇಕಬಾರಿ “ಮಕ್ಕಳು” ಎನ್ನುವ ಪದವು ಒಬ್ಬ ವ್ಯಕ್ತಿಯ ಸಂತಾನದವರನ್ನು ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ.
  • “ಇತರರ ಮಕ್ಕಳು” ಎನ್ನುವ ಮಾತನ್ನು ಏನಾದರೊಂದರ ಗುಣಲಕ್ಷಣವನ್ನು ಹೊಂದಿಕೊಂಡಿರುವುದಕ್ಕೆ ಸೂಚನೆಯಾಗಿರುತ್ತದೆ. ಇದಕ್ಕೆ ಕೆಲವೊಂದು ಉದಾಹರಣೆಗಳು ಈ ಕೆಳಗಿನಂತಿರುತ್ತವೆ :
  • ಬೆಳಕಿನ ಮಕ್ಕಳು
  • ವಿಧೇಯತೆಯುಳ್ಳ ಮಕ್ಕಳು
  • ದೆವ್ವದ ಮಕ್ಕಳು
  • ಈ ಪದವು ಆತ್ಮೀಯಕ ಮಕ್ಕಳಾಗಿರುವ ಪ್ರಜೆಯನ್ನೂ ಸೂಚಿಸುತ್ತದೆ. ಉದಾಹರಣೆಗೆ, “ದೇವರ ಮಕ್ಕಳು” ಎನ್ನುವ ಮಾತು ಯೇಸುವಿನಲ್ಲಿಟ್ಟಿರುವ ನಂಬಿಕೆಯಿಂದ ದೇವರಿಗೆ ಸಂಬಂಧಪಟ್ಟ ಜನರನ್ನು ಸೂಚಿಸುತ್ತಿದೆ.

ಅನುವಾದ ಸಲಹೆಗಳು:

  • ಒಬ್ಬ ವ್ಯಕ್ತಿಯ ಮೊಮ್ಮೊಕ್ಕಳನ್ನು ಅಥವಾ ಮೊಮ್ಮೊಕ್ಕಳ ಮೊಮ್ಮೊಕ್ಕಳನ್ನು ಸೂಚಿಸುವಾಗ “ಮಕ್ಕಳು” ಎನ್ನುವ ಪದವನ್ನು “ವಂಶಸ್ಥರು” ಎಂದೂ ಅನುವಾದ ಮಾಡಬಹುದು,
  • ಸಂದರ್ಭಕ್ಕೆ ತಕ್ಕಂತೆ, “ಇತರರ/ಇತರೆ ಮಕ್ಕಳು” ಎನ್ನುವ ಪದವನ್ನು, “ಇತರ ಯಾವುದೊಂದರ/ಯಾರಾದರೊಬ್ಬರ ಗುಣಲಕ್ಷಣಗಳನ್ನು ಹೊಂದಿರುವ ಜನರು” ಎಂದಾಗಲಿ ಅಥವಾ “ಇತರರಂತೆ/ಇತರ ಯಾವುದಾದರೊಂದರಂತೆ ನಡೆದುಕೊಳ್ಳುವ ಜನರು” ಎಂದೂ ಅನುವಾದ ಮಾಡಬಹುದು.
  • ಸಾಧ್ಯವಾದರೆ “ದೇವರ ಮಕ್ಕಳು” ಎನ್ನುವ ಮಾತನ್ನು ಅಕ್ಷರಾರ್ಥವಾಗಿ ಅನುವಾದ ಮಾಡಬಹುದು, ಯಾಕಂದರೆ ದೇವರು ನಮ್ಮ ಪರಲೋಕದ ತಂದೆಯಾಗಿದ್ದರಿಂದ ಮತ್ತು ಅದು ಅತೀ ಪ್ರಾಮುಖ್ಯವಾದ ವಾಕ್ಯಾನುಸಾರವಾದ ಅಂಶ ಆಗಿರುವದರಿಂದ ಆ ರೀತಿ ಇರುವುದು ಸರಿಯೇ. ಒಂದುವೇಳೆ ಆ ಮಾತಿಗೆ ಅನುವಾದ ಇನ್ನೊಂದು ರೀತಿಯಾಗಿ ಮಾಡಬೇಕೆಂದರೆ, “ದೇವರಿಗೆ ಸಂಬಂಧಪಟ್ಟ ಜನರು” ಅಥವಾ “ದೇವರ ಆತ್ಮೀಯಕ ಮಕ್ಕಳು” ಎಂದೂ ಅನುವಾದ ಮಾಡಬಹುದು.

ಯೇಸು ತನ್ನ ಶಿಷ್ಯರನ್ನು “ಮಕ್ಕಳು” ಎಂದು ಕರೆದಾಗ, ಅದನ್ನು “ಪ್ರಿಯ ಸ್ನೇಹಿತರೆ” ಅಥವಾ “ನನ್ನ ಪ್ರೀತಿಯ ಶಿಷ್ಯರೇ” ಎಂದೂ ಅನುವಾದ ಮಾಡಬಹುದು.

  • ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳನ್ನು “ಮಕ್ಕಳು” ಎಂದು ಪೌಲ ಮತ್ತು ಯೋಹಾನರು ಸೂಚಿಸಿದ್ದಾರೆ, ಇಲ್ಲಿ ಈ ಪದವನ್ನು “ಪ್ರೀತಿಯ ಸಹ ವಿಶ್ವಾಸಿಗಳು” ಎಂದು ಅನುವಾದ ಮಾಡಬಹುದು.
  • “ವಾಗ್ಧಾನದ ಮಕ್ಕಳು” ಎನ್ನುವ ಮಾತನ್ನು “ದೇವರು ಜನರಿಗೆ ಮಾಡಿದ ವಾಗ್ಧಾನವನ್ನು ಹೊಂದಿದವರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವಂಶದವರು, ವಾಗ್ಧಾನ, ಮಗ, ಆತ್ಮ, ನಂಬು, ಪ್ರಿಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1069, H1121, H1123, H1129, H1323, H1397, H1580, H2029, H2030, H2056, H2138, H2145, H2233, H2945, H3173, H3205, H3206, H3208, H3211, H3243, H3490, H4392, H5271, H5288, H5290, H5759, H5764, H5768, H5953, H6185, H7908, H7909, H7921, G730, G815, G1025, G1064, G1471, G3439, G3515, G3516, G3808, G3812, G3813, G3816, G5040, G5041, G5042, G5043, G5044, G5206, G5207, G5388

ಮಧ್ಯಸ್ಥಿಕೆ ಮಾಡು, ವಿಜ್ಞಾಪನೆ ಮಾಡಲಾಗಿದೆ, ವಿಜ್ಞಾಪನೆ

ಪದದ ಅರ್ಥವಿವರಣೆ:

“ಮಧ್ಯಸ್ಥಿಕೆ ಮಾಡು” ಮತ್ತು “ವಿಜ್ಞಾಪನೆ” ಎನ್ನುವ ಪದಗಳು ಒಬ್ಬ ವ್ಯಕ್ತಿಯ ಪಕ್ಷವಾಗಿ ಇನ್ನೊಬ್ಬರನ್ನು ಬೇಡಿಕೊಳ್ಳುವುದನ್ನು ಸೂಚಿಸುತ್ತದೆ. ಸತ್ಯವೇದದಲ್ಲಿ ಇದು ಸಾಧಾರಣವಾಗಿ ಇತರರಿಗೋಸ್ಕರ ಪ್ರಾರ್ಥಿಸುವುದನ್ನು ಸೂಚಿಸುತ್ತದೆ.

  • “ಅದರ ಕುರಿತಾಗಿ ವಿಜ್ಞಾಪನೆ ಮಾಡು” ಅಥವಾ “ಅದರ ಕುರಿತಾಗಿ ಮಧ್ಯಸ್ಥಿಕೆ ಮಾಡು” ಎನ್ನುವ ಮಾತುಗಳು ಇತರ ಜನರ ಪ್ರಯೋಜನಕ್ಕಾಗಿ ದೇವರನ್ನು ಬೇಡಿಕೊಳ್ಳುವುದು ಎಂದರ್ಥ.
  • ಪವಿತ್ರಾತ್ಮನು ನಮಗೋಸ್ಕರ ಮಧ್ಯಸ್ಥಿಕೆ ಮಾಡುತ್ತಾನೆಂದು, ಅಂದರೆ ಆತನು ನಮಗಾಗಿ ದೇವರಿಗೆ ಪ್ರಾರ್ಥನೆ ಮಾಡುತ್ತಾನೆಂದು ಸತ್ಯವೇದ ಬೋಧನೆ ಮಾಡುತ್ತದೆ.
  • ಅಧಿಕಾರಿಕವಾಗಿ ಒಬ್ಬರು ಇನ್ನೊಬ್ಬರಿಗೆ ಇತರ ಜನರಿಗಾಗಿ ಮಾಡುವ ಬೇಡಿಕೆಗಳಿಂದ ಒಬ್ಬ ವ್ಯಕ್ತಿ ಮಧ್ಯಸ್ಥಿಕೆ ಮಾಡುತ್ತಾನೆ.

ಅನುವಾದ ಸಲಹೆಗಳು:

  • “ಮಧ್ಯಸ್ಥಿಕೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅದರಗೋಸ್ಕರ ಬೇಡುವುದು” ಅಥವಾ “(ಯಾರಾದರೊಬ್ಬರಿಗಾಗಿ) ಎನಾದರೊಂದನ್ನು ಮಾಡುವುದಕ್ಕೆ (ಇನ್ನೊಬ್ಬರ ಬಳಿ) ಬೇಡಿಕೊಳ್ಳುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ವಿಜ್ಞಾಪನೆಗಳು” ಎನ್ನುವನಾಮಪದವನ್ನು “ಬೇಡುವುದು” ಅಥವಾ ‘ಮನವಿಗಳು” ಅಥವಾ “ತುರ್ತು ಪ್ರಾರ್ಥನೆಗಳು” ಎಂದೂ ಅನುವಾದ ಮಾಡಬಹುದು.
  • “ಅದರಿಗೋಸ್ಕರ ವಿಜ್ಞಾಪನೆ ಮಾಡು” ಎನ್ನುವ ಮಾತನ್ನು “ಪ್ರಯೋಜನಕ್ಕಾಗಿ ಮನವಿಗಳನ್ನು ಮಾಡುವುದು” ಅಥವಾ “ಅವರ ಪಕ್ಷವಾಗಿದ್ದು ಬೇಡುವುದು” ಅಥವಾ “ಸಹಾಯಕ್ಕಾಗಿ ದೇವರನ್ನು ಕೇಳುವುದು” ಅಥವಾ “(ಯಾರಾದರೊಬ್ಬರನ್ನು) ಆಶೀರ್ವಾದ ಮಾಡುವುದಕ್ಕೆ ದೇವರನ್ನು ಬೇಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪ್ರಾರ್ಥಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6293, G1783, G1793, G5241

ಮನಸ್ಸಾಕ್ಷಿ, ಮನಸ್ಸಾಕ್ಷಿಗಳು

ಪದದ ಅರ್ಥವಿವರಣೆ:

ಮನಸ್ಸಾಕ್ಷಿ ಎನ್ನುವುದು ಒಬ್ಬ ವ್ಯಕ್ತಿಯ ಆಲೋಚನೆಯ ವಿಭಾಗವಾಗಿರುತ್ತದೆ, ಇದರ ಮೂಲಕದಿಂದಲೇ ಒಬ್ಬ ವ್ಯಕ್ತಿ ಪಾಪ ಮಾಡುತ್ತಿದ್ದಾನೆ ಎನ್ನುವದನ್ನು ದೇವರು ಆ ವ್ಯಕ್ತಿಗೆ ತಿಳಿಸುತ್ತಾನೆ.

  • ಯಾವುದು ಸರಿಯೋ ಮತ್ತು ಯಾವುದು ತಪ್ಪೋ ಎನ್ನುವದರ ಮಧ್ಯೆಯಿರುವ ವ್ಯತ್ಯಾಸವನ್ನು ತಿಳಿದುಕೊಳ್ಳಲು ಅವರಿಗೆ ಸಹಾಯ ಮಾಡುವುದಕ್ಕೆ ದೇವರು ಮನಸ್ಸಾಕ್ಷಿಯನ್ನು ಜನರಿಗೆ ಕೊಟ್ಟಿರುತ್ತಾನೆ.
  • ದೇವರಿಗೆ ವಿಧೇಯನಾಗುವ ಒಬ್ಬ ವ್ಯಕ್ತಿಯನ್ನು “ಪವಿತ್ರ”ವಾದ ಅಥವಾ “ಶುದ್ಧವಾದ” ಅಥವಾ “ಸ್ವಚ್ಛವಾದ” ಮನಸ್ಸಾಕ್ಷಿ ಇರುವ ವ್ಯಕ್ತಿಯೆಂದು ಕರೆಯಲ್ಪಟ್ಟಿದ್ದಾನೆ.
  • ಒಬ್ಬ ವ್ಯಕ್ತಿಗೆ “ಶುದ್ಧವಾದ ಮನಸ್ಸಾಕ್ಷಿ” ಇರುವುದಾದರೆ, ಆ ವ್ಯಕ್ತಿ ಯಾವ ಪಾಪವನ್ನು ಮರೆಮಾಚುತ್ತಿಲ್ಲ ಎಂದರ್ಥ.
  • ತಮ್ಮ ಮನಸ್ಸಾಕ್ಷಿಯನ್ನು ನಿರ್ಲಕ್ಷ್ಯೆ ಮಾಡಿ, ತಾವು ಪಾಪ ಮಾಡಿದ್ದೇವೆಂದು ತಿಳಿದು ಅಪರಾಧಕ್ಕೊಳಗಾಗದಿದ್ದರೆ ತಮ್ಮ ಮನಸ್ಸಾಕ್ಷಿಗಳು ಯಾವುದು ತಪ್ಪು ಎಂದು ಗ್ರಹಿಸುವುದುರಲ್ಲಿ ಕೆಲಸ ಮಾಡುತ್ತಿಲ್ಲವೆಂದು ಅದರ ಅರ್ಥವಾಗಿರುತ್ತದೆ. ಇಂಥಹ ಮನಸ್ಸಾಕ್ಷಿಯನ್ನೇ “ಬಾಡಿಹೋದ ಮನಸ್ಸಾಕ್ಷಿ” ಎಂದು ಸತ್ಯವೇದ ಕರೆಯುತ್ತದೆ, ಇದು ಬಿಸಿ ಕಬ್ಬಿಣದಂತೆ “ಮುದ್ರೆ” ಹಾಕಲ್ಪಟ್ಟಿರುವ ಹಾಗೆ ಇರುತ್ತೆದೆ. ಅಂಥಹ ಮನಸ್ಸಾಕ್ಷಿಯನ್ನು “ಅರಿವುಯಿರದ” ಮತ್ತು “ಮಾಲಿನ್ಯವಾದ” ಮನಸ್ಸಾಕ್ಷಿಯೆಂದು ಕರೆಯುತ್ತಾರೆ.
  • ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಅಂತರಂಗದ ನೈತಿಕ ಮಾರ್ಗದರ್ಶಿ” ಅಥವಾ “ನೈತಿಕ ಆಲೋಚನೆ” ಎಂದೂ ಅನುವಾದ ಮಾಡುತ್ತಾರೆ.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G4893

ಮನುಷ್ಯ ಕುಮಾರನು, ಮನುಷ್ಯನ ಮಗ

ಪದದ ಅರ್ಥವಿವರಣೆ:

“ಮನುಷ್ಯ ಕುಮಾರ” ಎನ್ನುವ ಬಿರುದು ಯೇಸುವನ್ನು ಸೂಚಿಸಿಕೊಳ್ಳುವುದಕ್ಕೆ ಯೇಸುವಿನಿಂದಲೇ ಉಪಯೋಗಿಸಲ್ಪಟ್ಟಿರುತ್ತದೆ. ಆತನು “ನಾನು” ಅಥವಾ “ನಾನೇ” ಎನ್ನುವ ಪದಗಳನ್ನು ಉಪಯೋಗಿಸುವುದಕ್ಕೆ ಬದಲಾಗಿ ಈ ಮಾತನ್ನು ಉಪಯೋಗಿಸಿರುತ್ತಾರೆ.

  • ಸತ್ಯವೇದದಲ್ಲಿ “ಮನುಷ್ಯ ಮಗ” ಎನ್ನುವ ಮಾತು ಮನುಷ್ಯನನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಇದಕ್ಕೆ “ಮಾನವ” ಎಂದರ್ಥ.
  • ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಯೆಹೆಜ್ಕೇಲ ಗ್ರಂಥದಲ್ಲೆಲ್ಲಾ ದೇವರು ಯೆಹೆಜ್ಕೇಲನನ್ನು “ನರಪುತ್ರ” ಎಂಬುದಾಗಿ ಸೂಚಿಸಿರುವುದನ್ನು ನಾವು ನೋಡಬಹುದು. ಉದಾಹರಣೆಗೆ, “ನರಪುತ್ರನೆ, ನೀನು ತಪ್ಪದೇ ಪ್ರವಾದಿಸಬೇಕು” ಎಂದು ದೇವರು ಹೇಳಿದ್ದಾರೆ.
  • “ಮನುಷ್ಯನ ಮಗ” ಮೇಘಗಳೊಂದಿಗೆ ಬರುತ್ತಿರುವುದನ್ನು ಪ್ರವಾದಿಯಾದ ದಾನಿಯೇಲನು ದರ್ಶನವನ್ನು ಕಂಡನು, ಇದು ಬರುವ ಮೆಸ್ಸೀಯನಿಗೆ ಸೂಚನೆಯಾಗಿದ್ದಿತ್ತು.
  • ಮನುಷ್ಯ ಕುಮಾರನು ತಿರುಗಿ ಮೇಘಗಳ ಮೇಲೆ ಬರುವನೆಂದು ಯೇಸು ಕೂಡ ಹೇಳಿದ್ದಾನೆ.
  • ಈ ಎಲ್ಲಾ ವಚನಗಳು ಮೇಘಗಳ ನಡುವೆ ಬರುವ ಮನುಷ್ಯ ಕುಮಾರನು ಬರುತ್ತಾನೆನ್ನುವುದು ಮೆಸ್ಸೀಯನಾಗಿರುವ ಯೇಸು ದೇವರಾಗಿದ್ದಾನೆ ಎಂದು ತಿಳಿಸುತ್ತದೆ.

ಅನುವಾದ ಸಲಹೆಗಳು:

  • “ಮನುಷ್ಯ ಕುಮಾರನು” ಎಂದು ಯೇಸು ಉಪಯೋಗಿಸಿದಾಗ, ಇದನ್ನು “ಮನುಷ್ಯನಾಗಿ ಬಂದಿರುವ ವ್ಯಕ್ತಿ” ಅಥವಾ “ಪರಲೋಕದಿಂದ ಬಂದಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಅನುವಾದಗಳು ಕೆಲವೊಮ್ಮೆ ಈ ಬಿರುದುನೊಂದಿಗೆ “ನಾನು” ಅಥವಾ “ನಾನೇ” (ಮನುಷ್ಯನಾಗಿರುವ ನಾನೇ) ಎಂಬುದಾಗಿಯೂ ಉಪಯೋಗಿಸಿರುತ್ತಾರೆ, ಯಾಕಂದರೆ ಯೇಸುವು ತನ್ನ ಕುರಿತಾಗಿಯೇ ಮಾತನಾಡುತ್ತಿದ್ದಾನೆಂದು ಸ್ಪಷ್ಟವಾಗಿ ಹೇಳುವುದಕ್ಕೆ ಈ ರೀತಿ ಉಪಯೋಗಿಸಿರುತ್ತಾರೆ.
  • ಈ ಪದದ ಅನುವಾದವು ತಪ್ಪಾದ ಅರ್ಥವನ್ನು ಕೊಡದಂತೆ ನೋಡಿಕೊಳ್ಳಿರಿ (ಯೇಸು ಮನುಷ್ಯ ಕುಮಾರನು ಮಾತ್ರವೇ ಆಗಿರುತ್ತಾನೆನ್ನುವ ತಪ್ಪಾದ ಭಾವನೆಯನ್ನು ಕೊಡದಂತೆ ಅಥವಾ ಅಕ್ರಮ ಮಗ ಎನ್ನುವುದನ್ನು ಸೂಚಿಸದಂತೆ ನೋಡಿಕೊಳ್ಳಿರಿ).
  • ಈ ಪದವು ಒಬ್ಬ ವ್ಯಕ್ತಿಗೆ ಸೂಚಿಸುವುದಕ್ಕೆ ಉಪಯೋಗಿಸಿದಾಗ, “ಮನುಷ್ಯನ ಮಗ” ಎನ್ನುವ ಮಾತನ್ನು “ನೀನು, ಮನುಷ್ಯನು” ಅಥವಾ “ನೀನು, ಮಾನವನು” ಅಥವಾ “ಮಾನವಾಳಿ” ಅಥವಾ “ಮನುಷ್ಯನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆಕಾಶ, ಮಗ, ದೇವರ ಮಗ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H120, H606, H1121, H1247, G444, G5207

ಮನ್ನ

ಅರ್ಥವಿವರಣೆ:

ಮನ್ನ ಎನ್ನುವುದು ಧಾನ್ಯದ ಹಾಗಿರುವ ಬಿಳಿಯ ಪದಾರ್ಥವಾಗಿರುತ್ತದೆ, ಇದನ್ನು ದೇವರು ಐಗುಪ್ತದಿಂದ ಇಸ್ರಾಯೇಲ್ಯರು ಹೊರಬಂದು ಅರಣ್ಯದಲ್ಲಿ ಜೀವಿಸಿದ 40 ವರ್ಷಗಳ ಕಾಲ ತಿನ್ನುವುದಕ್ಕೆ ಕೊಟ್ಟ ಆಹಾರವಾಗಿರುತ್ತದೆ.

  • ಮನ್ನ ಎನ್ನುವುದು ಇಬ್ಬನಿ ಕೆಳಗೆ ನೆಲದ ಮೇಲೆ ಪ್ರತಿ ಉದಯ ಕಾಲದಲ್ಲಿ ಕಾಣಿಸಿಕೊಳ್ಳುವ ತೆಳುವಾದ ಚಕ್ಕೆಗಳ ಹಾಗೆ ಕಾಣಿಸಿಕೊಳ್ಳುತ್ತವೆ. ಇದು ಜೇನಿನ ಹಾಗೆ ತುಂಬಾ ಸಿಹಿಯಾಗಿರುತ್ತವೆ.
  • ಇಸ್ರಾಯೇಲ್ಯರು ಈ ಮನ್ನವನ್ನು ಸಬ್ಬತ್ ದಿನವನ್ನು ಹೊರತುಪಡಿಸಿ ಪ್ರತಿಯೊಂದು ದಿನ ಸಂಗ್ರಹಿಸಿಕೊಳ್ಳುತ್ತಿದ್ದರು.
  • ಸಬ್ಬತ್ ದಿನಕ್ಕೆ ಮುಂದಿನ ದಿನದಂದು ಎರಡುಪಟ್ಟು ಮನ್ನವನ್ನು ಸಂಗ್ರಹಿಸಿಕೊಳ್ಳಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು, ಇದರಿಂದ ಅವರು ವಿಶ್ರಾಂತಿ ದಿನದಂದು ಅದನ್ನು ಸಂಗ್ರಹಿಸಿಕೊಳ್ಳುತ್ತಿರಲಿಲ್ಲ.
  • “ಮನ್ನ” ಎನ್ನುವ ಪದಕ್ಕೆ “ಏನಿದು?” ಎಂದರ್ಥ.
  • ಸತ್ಯವೇದದಲ್ಲಿ ಮನ್ನ ಎನ್ನುವುದು “ಪರಲೋಕದಿಂದ ಬಂದಿರುವ ಆಹಾರ” ಮತ್ತು “ಪರಲೋಕದಿಂದ ಬಂದ ಧಾನ್ಯ” ಎಂದೂ ಸೂಚಿಸುತ್ತದೆ.

ಅನುವಾದ ಸಲಹೆಗಳು

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತೆಳುವಾದ ಬಿಳಿಯ ಚಕ್ಕೆಗಳ ಆಹಾರ” ಅಥವಾ “ಪರಲೋಕದಿಂದ ಬಂದ ಆಹಾರ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಸತ್ಯವೇದದ ಅನುವಾದದಲ್ಲಿ ಈ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ನೋಡಿಕೊಳ್ಳಿರಿ. (ನೋಡಿ: ಅಪರಿಚಿತರನ್ನು ಹೇಗೆ ಅನುವಾದಿಸುವುದು)

(ಇವುಗಳನ್ನು ಸಹ ನೋಡಿರಿ: ರೊಟ್ಟಿ, ಮರುಭೂಮಿ, ಧಾನ್ಯ, ಪರಲೋಕ, ಸಬ್ಬತ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದದ ಡೇಟಾ:

  • Strong's: H4478, G31310

ಮಹತ್ವ

ಪದದ ಅರ್ಥವಿವರಣೆ:

“ಮಹತ್ವ” ಎನ್ನುವ ಪದವು ಶ್ರೇಷ್ಠತೆ ಮತ್ತು ವೈಭವವನ್ನು ಸೂಚಿಸುತ್ತದೆ, ಅನೇಕಸಲ ಈ ಪದವು ಅರಸನ ವೈಭೋಗಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ.

  • ಸತ್ಯವೇದದಲ್ಲಿ “ಮಹತ್ವ” ಎನ್ನುವ ಪದವು ಆಗಾಗ್ಗೆ ವಿಶ್ವದ ಮೇಲೆ ಸರ್ವೋಚ್ಚ ಅರಸನಾಗಿರುವ ದೇವರ ಶ್ರೇಷ್ಠತೆಯನ್ನು ಸೂಚಿಸುತ್ತದೆ,
  • “ನಿಮ್ಮ ಮಹತ್ವ” ಎನ್ನುವ ಮಾತು ಅರಸನು ಸೂಚಿಸುವ ವಿಧಾನವಾಗಿರುತ್ತದೆ.

ಅನುವಾದ ಸಲಹೆಗಳು:

  • ಈ ಪದವನ್ನು “ಅರಸನ ಶ್ರೇಷ್ಠತೆ” ಅಥವಾ “ರಾಜ ವೈಭವ” ಎಂದೂ ಅನುವಾದ ಮಾಡಬಹುದು.
  • “ನಿನ್ನ ಮಹತ್ವ” ಎನ್ನುವ ಮಾತನ್ನು “ನಿಮ್ಮ ಔನ್ನತ್ಯ” ಅಥವಾ “ನಿಮ್ಮ ಘನವೆತ್ತ” ಎಂಬುದಾಗಿ ಅನುವಾದ ಮಾಡಬಹುದು, ಅಥವಾ ಅನುವಾದ ಮಾಡುವ ಭಾಷೆಯಲ್ಲಿ ಪಾಲಕನನ್ನು ಸೂಚಿಸುವ ಸ್ವಾಭಾವಿಕ ವಿಧಾನವನ್ನು ಸೂಚಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಅರಸ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1347, H1348, H1420, H1923, H1926, H1935, H7238, G3168, G3172

ಮಹಾ ಯಾಜಕ

ಪದದ ಅರ್ಥವಿವರಣೆ:

“ಮಹಾ ಯಾಜಕನು” ಎನ್ನುವ ಮಾತು ಇಸ್ರಾಯೇಲ್ಯರ ಎಲ್ಲಾ ಯಾಜಕರುಗಳಿಗೆ ನಾಯಕನಾಗಿ ವರ್ಷಕ್ಕೊಮ್ಮೆ ಸೇವೆ ಮಾಡುವುದಕ್ಕೆ ನೇಮಿಸಲ್ಪಟ್ಟಿರುವ ಒಬ್ಬ ವಿಶೇಷ ಯಾಜಕನನ್ನು ಸೂಚಿಸುತ್ತದೆ.

  • ಮಹಾ ಯಾಜಕನಿಗೆ ವಿಶೇಷವಾದ ಬಾಧ್ಯತೆಗಳಿರುತ್ತವೆ. ವರ್ಷಕ್ಕೊಮ್ಮೆ ವಿಶೇಷವಾದ ಬಲಿಯಾಗವನ್ನು ಅರ್ಪಿಸುವುದಕ್ಕೆ ದೇವಾಲಯದಲ್ಲಿರುವ ಅತೀ ಪರಿಶುದ್ಧವಾದ ಸ್ಥಳದೊಳಗೆ ಹೋಗುವುದಕ್ಕೆ ಅನುಮತಿಸಲ್ಪಟ್ಟ ಏಕೈಕ ವ್ಯಕ್ತಿಯಾಗಿರುತ್ತಾನೆ.
  • ಇಸ್ರಾಯೇಲ್ಯರಲ್ಲಿ ಅನೇಕ ಯಾಜಕರು ಇರುತ್ತಾರೆ, ಆದರೆ ಆ ಸಮಯದಲ್ಲಿ ಕೇವಲ ಒಬ್ಬ ಮಹಾ ಯಾಜಕನು ಮಾತ್ರವೇ ಹೋಗಬೇಕು.
  • ಯೇಸು ಬಂಧಿಸಲ್ಪಟ್ಟಾಗ, ಕಾಯಫ ಅಧಿಕಾರಿಕ ಪ್ರಧಾನ ಯಾಜಕನಾಗಿದ್ದನು. ಕಾಯಫ ಮಾಮನಾದ ಅನ್ನನು ಕುರಿತಾಗಿಯೂ ದಾಖಲಿಸಲಾಗಿದೆ, ಯಾಕಂದರೆ ಇವನು ಮಾಜಿ ಪ್ರಧಾನ ಯಾಜಕನಾಗಿದ್ದನು, ಬಹುಶಃ ಆ ಸಮಯದಲ್ಲಿ ಜನರ ಮೇಲೆ ಅಧಿಕಾರ ಮತ್ತು ಶಕ್ತಿಯನ್ನು ಹೊಂದಿದವನಾಗಿರಬಹುದು.

ಅನುವಾದ ಸಲಹೆಗಳು:

  • “ಮಹಾ ಯಾಜಕ” ಎನ್ನುವ ಪದವನ್ನು “ಅತಿ ಮುಖ್ಯ ಯಾಜಕ” ಅಥವಾ “ಅತ್ಯುನ್ನತ ಶ್ರೇಣಿ ಹೊಂದಿದ ಯಾಜಕ” ಎಂದೂ ಅನುವಾದ ಮಾಡಬಹುದು.
  • ಈ ಮಹಾ ಯಾಜಕ ಎನ್ನುವ ಈ ಪದಕ್ಕಿಂತ “ಪ್ರಧಾನ ಯಾಜಕ” ಎನ್ನುವ ಪದವು ಬೇರೆಯಾಗಿರುತ್ತದೆ. ಇದನ್ನ ಒಂದುಸಲ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಅನ್ನ, ಕಾಯಫ, ಪ್ರಧಾನ ಯಾಜಕ, ಯಾಜಕ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 13:08 __ ಮಹಾ ಯಾಜಕನನ್ನು __ ಬಿಟ್ಟು ಯಾರೂ ಆ ತೆರೆಯ ಆ ಕಡೆಗೆ ಹೋಗಬಾರದು, ಯಾಕಂದರೆ ದೇವರು ಆ ಸ್ಥಳದಲ್ಲಿ ನಿವಾಸವಾಗಿರುತ್ತಾರೆ.
  • 21:07 ಬರುವ ಮೆಸ್ಸೀಯನು ಪರಿಪೂರ್ಣನಾದ __ ಮಹಾ ಯಾಜಕನಾಗಿರುತ್ತಾನೆ __, ಈತನೇ ದೇವರಿಗೆ ತನ್ನನ್ನು ತಾನೇ ಪರಿಪೂರ್ಣವಾದ ಸರ್ವಾಂಗಹೋಮವನ್ನಾಗಿ ಅರ್ಪಿಸಿಕೊಲ್ಲುತ್ತಾನೆ.
  • 38:03 ಯೆಹೂದ್ಯ ನಾಯಕರೆಲ್ಲರೂ __ ಪ್ರಧಾನ ಯಾಜನಿಂದ __ ನಡೆಸಲ್ಪಟ್ಟರು, ಯೇಸುವನ್ನು ಹಿಡಿಸಿಕೊಡುವುದಕ್ಕೆ ಯೂದಾನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
  • 39:01 ಸೈನಿಕರು ಯೇಸುವನ್ನು __ ಮಹಾ ಯಾಜಕನ __ ಮನೆಗೆ ಕರೆದುಕೊಂಡು ಹೋದರು, ಅಲ್ಲಿ __ ಮಹಾ ಯಾಜಕನಿಂದ __ ಯೇಸುವಿಗೆ ಪ್ರಶ್ನೆ ಹಾಕುವುದಕ್ಕೆ ಕರೆದೊಯ್ದರು.
  • 39:03 ಕೊನೆಗೆ, __ ಮಹಾ ಯಾಜಕನು __ ಯೇಸುವನ್ನು ನೇರವಾಗಿ ನೋಡಿದನು ಮತ್ತು “ನೀನು ಮೆಸ್ಸೀಯನೋ, ಜೀವಿಸುವ ದೇವರ ಮಗನೋ? ನಮಗೆ ಹೇಳು” ಎಂದು ಕೇಳಿದನು.
  • 44:07 ಇದಾದನಂತರ ಆ ಮರುದಿನದಂಡು, ಯೆಹೂದ್ಯರ ನಾಯಕರು ಪೇತ್ರನನ್ನು ಮತ್ತು ಯೋಹಾನನನ್ನು __ ಮಹಾ ಯಾಜಕನ __ ಬಳಿಗೆ ಮತ್ತು ಇತರ ನಾಯಕರ ಬಳಿಗೆ ಕರೆದುಕೊಂಡು ಬಂದರು.
  • 45:02 ಅದಕ್ಕಾಗಿ ಧರ್ಮದ ನಾಯಕರು ಸ್ತೆಫೆನನನ್ನು ಬಂಧಿಸಿ, __ ಮಹಾ ಯಾಜಕನ __ ಬಳಿಗೆ ಕರೆದುಕೊಂಡು ಬಂದರು ಮತ್ತು ಯೆಹೂದ್ಯರ ಇತರ ನಾಯಕರು ಸ್ತೆಫೆನನ ಕುರಿತಾಗಿ ತಪ್ಪಾದ ಸಾಕ್ಷಿಗಳನ್ನು ಹೆಚ್ಚಾಗಿ ಹೊರಿಸಿದರು.
  • 46:01 ದಮಸ್ಕನಲ್ಲಿರುವ ಕ್ರೈಸ್ತರನ್ನು ಬಂಧಿಸಿ, ಅವರನ್ನು ಯೆರೂಸಲೇಮಿಗೆ ಕರೆದುಕೊಂಡು ಬರುವುದಕ್ಕೆ __ ಮಹಾ ಯಾಜಕನು __ ಸೌಲನಿಗೆ ಅನುಮತಿ ಕೊಟ್ಟನು.
  • 48:06 ಯೇಸು ದೊಡ್ಡ __ ಮಹಾ ಯಾಜಕನಾಗಿರುತ್ತಾನೆ __ . ಇತರ ಯಾಜಕರಂತಲ್ಲದೆ, ಪ್ರಪಂಚದಲ್ಲಿರುವ ಪ್ರತಿಯೊಬ್ಬರ ಪಾಪಗಳನ್ನು ತೆಗೆದುಹಾಕುವುದಕ್ಕೆ ಒಂದೇ ಸಲ ಬಲಿಯಾಗಿ ತನ್ನನ್ನು ತಾನು ಅರ್ಪಿಸಿಕೊಂಡನು. ಯೇಸು ಪರಿಪೂರ್ಣನಾದ __ ಮಹಾ ಯಾಜಕನಾಗಿದ್ದನು __, ಯಾಕಂದರೆ ಪ್ರತಿಯೊಬ್ಬ ಮನುಷ್ಯನು ಮಾಡಿರುವ ಪ್ರತಿಯೊಂದು ಪಾಪಕ್ಕೆ ಬರಬೇಕಾದ ಶಿಕ್ಷೆಯನ್ನು ಆತನೇ ವಹಿಸಿದ್ದಾನೆ.

ಪದ ಡೇಟಾ:

  • Strong's: H7218, H1419, H3548, G748, G749

ಮಹಾಯಾಜಕನ ಕವಚ (ಏಫೋದ್)

ಪದದ ಅರ್ಥವಿವರಣೆ

ಏಫೋದ್ ಎನ್ನುವುದು ಇಸ್ರಾಯೇಲ್ ಯಾಜಕರು ಧರಿಸುತ್ತಿದ್ದ ಮುಂಗವಚವಾಗಿತ್ತು. ಅದಕ್ಕೆ ಎರಡು ಭಾಗಗಳಿದ್ದವು, ಮುಂದೆ ಮತ್ತು ಹಿಂದೆ, ಆ ಎರಡು ಭಾಗಗಳನ್ನು ಭುಜಗಳ ಮೇಲೆ ಕಟ್ಟಿಕೊಳ್ಳುತ್ತಿದ್ದರು ಮತ್ತು ಸೊಂಟಕ್ಕೆ ನಡಿಕಟ್ಟಿಕೊಳ್ಳುತ್ತಿದ್ದರು.

  • ಒಂದು ವಿಧವಾದ ಏಫೋದ್ ನಾರೆಯಿಂದ ಮಾಡಲ್ಪಡುತ್ತಿತ್ತು ಮತ್ತು ಅದನ್ನು ಸಾಮಾನ್ಯವಾದ ಯಾಜಕರು ಧರಿಸುತ್ತಿದ್ದರು.
  • ಮಹಾಯಾಜಕನು ಧರಿಸುತ್ತಿದ್ದ ಏಫೋದ್ ಬಂಗಾರ, ನೀಲಿ, ನೇರಳೆ ಮತ್ತು ಕೆಂಪು ಬಣ್ಣಗಳ ನೂಲುನಿಂದ ಕಸೂತಿ ಕೆಲಸ ಮಾಡಲ್ಪಟ್ಟಿತ್ತು.
  • ಮಹಾಯಾಜಕನ ಏಫೋದ್ ಮುಂಭಾಗದಲ್ಲಿ ಎದೆಗೆ ಧರಿಸುವ ಪದಕವಿತ್ತು. ಎದೆಗೆ ಧರಿಸುವ ಪದಕ ಹಿಂಭಾಗದಲ್ಲಿ ಊರೀಮ್ ಮತ್ತು ತುಮ್ಮೀಮ್ (ಪ್ರಕಟಣೆ ಮತ್ತು ಸತ್ಯ) ಎಂಬ ಕಲ್ಲುಗಳನ್ನು ಇಡಲ್ಪಟ್ಟಿದ್ದವು, ಕೆಲವು ವಿಷಯಗಳಲ್ಲಿ ಯೆಹೋವನ ಚಿತ್ತವನ್ನು ತಿಳಿದುಕೊಳ್ಳಲು ಈ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು.
  • ನ್ಯಾಯಸ್ಥಾಪಕನಾದ ಗಿದ್ಯೋನ್ ಮೂರ್ಖವಾಗಿ ಎದೆಗೆ ಧರಿಸುವ ಪದಕವನ್ನು ಮಾಡಿದನು ಮತ್ತು ಇಸ್ರಾಯೇಲ್ ಅದನ್ನು ವಿಗ್ರಹವಾಗಿ ಆರಾಧಿಸಿದರು.

(ಈ ಪದಗಳನ್ನು ಸಹ ನೋಡಿರಿ : ಯಾಜಕನು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H641, H642, H646

ಮಹಿಮೆ, ಮಹತ್ವವುಳ್ಳ, ಮಹಿಮೆಪಡಿಸು

ಪದದ ಅರ್ಥವಿವರಣೆ:

"ಮಹಿಮೆ" ಎಂಬ ಪದವು ಬೆಲೆ, ಮೌಲ್ಯ, ಪ್ರಾಮುಖ್ಯತೆ, ಗೌರವ, ವೈಭವ ಅಥವಾ ಗಾಂಭೀರ್ಯ ಸೇರಿದಂತೆ  ಪರಿಕಲ್ಪನೆಗಳ ಕುಟುಂಬಕ್ಕೆ ಒಂದು ಸಾಮಾನ್ಯ ಪದವಾಗಿದೆ. “ಮಹಿಮೆಪಡಿಸು” ಎಂಬ ಪದದ ಅರ್ಥ ಯಾರಿಗಾದರೂ ಅಥವಾ ಯಾವುದಕ್ಕೂ ಮಹಿಮೆಯನ್ನು ಸೂಚಿಸುವುದು, ಅಥವಾ ಏನಾದರೂ ಅಥವಾ ಯಾರಾದರೂ ಎಷ್ಟು ಮಹತ್ವವುಳ್ಳದ್ದು ಎಂಬುದನ್ನು ತೋರಿಸುವುದು ಅಥವಾ ಹೇಳುವುದು

  • ಸತ್ಯವೇದದಲ್ಲಿ "ಮಹಿಮೆ" ಎಂಬ ಪದವನ್ನು ವಿಶೇಷವಾಗಿ ದೇವರನ್ನು ವಿವರಿಸಲು ಬಳಸಲಾಗುತ್ತದೆ, ಅವರು ಹೆಚ್ಚು ಮೌಲ್ಯಯುತ, ಹೆಚ್ಚು ಯೋಗ್ಯರು, ಹೆಚ್ಚು ಮುಖ್ಯರು, ಹೆಚ್ಚು ಗೌರವಾನ್ವಿತರು, ಹೆಚ್ಚು ಭವ್ಯರು ಮತ್ತು ಲೋಕದಲ್ಲಿರುವ ಎಲ್ಲರಿಗಿಂತ ಅಥವಾ ಭವ್ಯವಾದವರು. ಅವನ ಪಾತ್ರದ ಬಗ್ಗೆ ಎಲ್ಲವೂ ಅವನ ಮಹಿಮೆಯನ್ನು ತಿಳಿಸುತ್ತದೆ.
  • ಜನರು ಅದ್ಭುತ ಕಾರ್ಯಗಳ ಬಗ್ಗೆ ಹೇಳುವದರ ಮೂಲಕ ದೇವರನ್ನು ಮಹಿಮೆಪಡಿಸಬಹುದು. ಅವರು ದೇವರ ಪಾತ್ರಕ್ಕೆ ಅನುಗುಣವಾಗಿ ಜೀವಿಸುವ ಮೂಲಕ ದೇವರನ್ನು ವೈಭವೀಕರಿಸಬಹುದು, ಏಕೆಂದರೆ ಹಾಗೆ ಮಾಡುವುದರಿಂದ ಅವನ ಮೌಲ್ಯ, ಪ್ರಾಮುಖ್ಯತೆ, ಗೌರವ, ವೈಭವ ಮತ್ತು ಮಹಿಮೆಯನ್ನು ಇತರರಿಗೆ ತೋರಿಸುತ್ತದೆ.
  • “ಮಹಿಮೆಯಲ್ಲಿ” ಎಂಬುದರ ಅಭಿವ್ಯಕ್ತಿ ಎಂದರೆ ಯಾವುದರ ಬಗ್ಗೆ ಹೆಮ್ಮೆ ಪಡುವುದು ಅಥವಾ ಅಹಂಕಾರ ಪಡುವುದು.

ಹಳೆಯ ಒಡಂಬಡಿಕೆ

  • ಹಳೆಯ ಒಡಂಬಡಿಕೆಯಲ್ಲಿ "ಯೆಹೋವನ ಮಹಿಮೆ" ಎಂಬ ನಿರ್ದಿಷ್ಟ ನುಡಿಗಟ್ಟು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಯೆಹೋವನ ಉಪಸ್ಥಿತಿಯ ಕೆಲವು ಗ್ರಹಿಸಬಹುದಾದ ಅಭಿವ್ಯಕ್ತಿಯನ್ನು ಸೂಚಿಸುತ್ತದೆ.

ಹೊಸ ಒಡಂಬಡಿಕೆ

  • ತಂದೆಯಾದ ದೇವರು ಯೇಸು ಎಷ್ಟು ಮಹತ್ವವುಳ್ಳವರು ಎಂದು ಪೂರ್ಣ ಪ್ರಮಾಣದಲ್ಲಿ ಎಲ್ಲ ಜನರಿಗೆ ತಿಳಿಸುವ ಮೂಲಕ ದೇವರ ಮಗನನ್ನು ಮಹಿಮೆಪಡಿಸುವನು.
  • ಕ್ರಿಸ್ತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರೂ ಆತನೊಂದಿಗೆ ಮಹಿಮೆ ಹೊಂದುತ್ತಾರೆ. "ಮಹಿಮೆಪಡಿಸು " ಎಂಬ ಪದದ ಈ ಬಳಕೆಯು ಒಂದು ವಿಶಿಷ್ಟ ಅರ್ಥವನ್ನು ಹೊಂದಿದೆ. ಕ್ರಿಸ್ತನಲ್ಲಿ ನಂಬಿಕೆಯಿಡುವ ಜನರನ್ನು ಜೀವಕ್ಕೆ ಏರಿಸಿದಾಗ, ಯೇಸುವಿನ ಪುನರುತ್ಥಾನದ ನಂತರ ಕಾಣಿಸಿಕೊಂಡಂತೆ ಅವರನ್ನು ದೈಹಿಕವಾಗಿ ಬದಲಾಯಿಸಲಾಗುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ಅನುಗುಣವಾಗಿ, “ಮಹಿಮೆಯನ್ನು ಭಾಷಾಂತರಿಸಲು ವಿಭಿನ್ನ ಮಾರ್ಗಗಳಲ್ಲಿ “ವೈಭವ” ಅಥವಾ “ಗಾಂಭೀರ್ಯ” ಅಥವಾ “ಅದ್ಭುತ ಶ್ರೇಷ್ಠತೆ” ಅಥವಾ “ವಿಪರೀತ ಮೌಲ್ಯ” ಸೇರಿವೆ.
  • “ಮಹತ್ವವುಳ್ಳ” ಎಂಬ ಪದವನ್ನು “ಮಹಿಮೆಯಿಂದ ತುಂಬಿದೆ” ಅಥವಾ “ಅತ್ಯಂತ ಅಮೂಲ್ಯವಾದದ್ದು” ಅಥವಾ “ಪ್ರಕಾಶಮಾನವಾಗಿ ಹೊಳೆಯುವ” ಅಥವಾ “ಅದ್ಭುತವಾದ ಭವ್ಯ” ಎಂದು ಅನುವಾದಿಸಬಹುದು.
  • “ದೇವರಿಗೆ ಮಹಿಮೆ ಕೊಡು” ಎಂಬ ಅಭಿವ್ಯಕ್ತಿಯನ್ನು “ದೇವರ ಶ್ರೇಷ್ಠತೆಯನ್ನು ಗೌರವಿಸು” ಅಥವಾ “ದೇವರ ವೈಭವದಿಂದಾಗಿ ದೇವರನ್ನು ಸ್ತುತಿಸು” ಅಥವಾ “ದೇವರು ಎಷ್ಟು ಶ್ರೇಷ್ಠನೆಂದು ಇತರರಿಗೆ ತಿಳಿಸಿ” ಎಂದು ಅನುವಾದಿಸಬಹುದು.
  • “ಮಹಿಮೆಪಡಿಸು” ಎಂಬ ಅಭಿವ್ಯಕ್ತಿಯನ್ನು “ಹೊಗಳಿಕೆ” ಅಥವಾ “ಹೆಮ್ಮೆ ಪಡಿಸು” ಅಥವಾ “ಹೆಮ್ಮೆಪಡುವ” ಅಥವಾ “ಆನಂದವನ್ನು ಪಡೆದುಕೊಳ್ಳಿ” ಎಂದೂ ಅನುವಾದಿಸಬಹುದು.
  • “ಮಹಿಮೆಪಡಿಸು” ಅನ್ನು “ಮಹಿಮೆ ಕೊಡು” ಅಥವಾ “ಮಹಿಮೆಯನ್ನು ತಂದುಕೊಡು” ಅಥವಾ “ಉತ್ತಮವಾಗಿ ಕಾಣಿಸಿಕೊಳ್ಳಲು ಕಾರಣ” ಎಂದೂ ಅನುವಾದಿಸಬಹುದು.
  • “ದೇವರನ್ನು ಮಹಿಮೆಪಡಿಸು” ಎಂಬ ಪದವನ್ನು “ದೇವರನ್ನು ಸ್ತುತಿಸು” ಅಥವಾ “ದೇವರ ಶ್ರೇಷ್ಠತೆಯ ಬಗ್ಗೆ ಮಾತನಾಡು” ಅಥವಾ “ದೇವರು ಎಷ್ಟು ಶ್ರೇಷ್ಠನೆಂದು ತೋರಿಸು” ಅಥವಾ “ದೇವರನ್ನು ಗೌರವಿಸಿ (ಅವನನ್ನು ಪಾಲಿಸುವ ಮೂಲಕ)” ಎಂದು ಅನುವಾದಿಸಬಹುದು.
  • “ಮಹಿಮೆಹೊಂದು ” ಎಂಬ ಪದವನ್ನು “ಬಹಳ ಶ್ರೇಷ್ಠವೆಂದು ತೋರಿಸಬೇಕು” ಅಥವಾ “ಹೊಗಳಬೇಕು” ಅಥವಾ “ಉದಾತ್ತರಾಗಿರಿ” ಎಂದು ಅನುವಾದಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಹೆಚ್ಚಿಸು, ವಿಧೇಯತೆ, ಸ್ತುತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 23:07 ತಕ್ಷಣವೇ, ಆಕಾಶಗಳು ದೇವರನ್ನು ಸ್ತುತಿಸುತ್ತಿರುವ ದೂತರಗಳೊಂದಿಗೆ ತುಂಬಿಸಲ್ಪಟ್ಟಿತು, ಆ ದೂತರು “ಪರಲೋಕದಲ್ಲಿರುವ ದೇವರಿಗೆ __ ಮಹಿಮೆಯುಂಟಾಗಲಿ __ ಮತ್ತು ಆತನಿಗೆ ಇಷ್ಟವಾದ ಜನರಿಗೆ ಭೂಮಿಯ ಮೇಲೆ ಸಮಾಧಾನವಾಗಲಿ” ಎಂದು ಹೇಳಿದವು.
  • 25:06 ಆದನಂತರ ಸೈತಾನನು ಲೋಕದಲ್ಲಿರುವ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ __ ಮಹಿಮೆಯನ್ನು __ ಯೇಸುವಿಗೆ ತೋರಿಸಿ, “ನನಗೆ ಅಡ್ಡಬಿದ್ದು ನಮಸ್ಕಾರ ಮಾಡಿ ಆರಾಧನೆ ಮಾಡಿದರೆ ನಾನು ನಿನಗೆ ಈ ಎಲ್ಲವನ್ನು ಅನುಗ್ರಹಿಸುತ್ತೇನೆ” ಎಂದು ಹೇಳಿದನು.
  • __37:01__ಈ ವಾರ್ತೆಯನ್ನು ಯೇಸು ಕೇಳಿಸಿಕೊಂಡಾಗ, “ಈ ರೋಗವು ಮರಣದಲ್ಲಿ ಅಂತ್ಯವಾಗುವುದಿಲ್ಲ, ಆದರೆ ಇದು ದೇವರ __ ಮಹಿಮೆಗಾಗಿ __ ಬಂದಿರುತ್ತದೆ” ಎಂದು ಹೇಳಿದನು.
  • 37:08

“ನೀನು ನನ್ನಲ್ಲಿ ನಂಬಿಕೆಯಿಡುವುದಾದರೆ ?”, ನೀನು ದೇವರ __ ಮಹಿಮೆಯನ್ನು __ ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೋ” ಎಂದು ಯೇಸು ಹೇಳಿದನು.

ಪದದ ಮಾಹಿತಿ :

  • Strong's: H117, H142, H155, H215, H1342, H1921, H1926, H1935, H1984, H3367, H3513, H3519, H3520, H6286, H6643, H7623, H8597, G1391, G1392, G1740, G1741, G2744, G4888

ಮೂರ್ಖ,  ಮೂರ್ಖತೆ, ಮೂರ್ಖತನ

ಪದದ ಅರ್ಥವಿವರಣೆ:

“ಮೂರ್ಖ” ಎನ್ನುವ ಪದವು ಯಾವಾಗಲೂ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳುವ ವ್ಯಕ್ತಿಯನ್ನು ಸೂಚಿಸುತ್ತದೆ, ವಿಶೇಷವಾಗಿ ಅವಿದ್ಗೇಯತೆಯನ್ನು ಆರಿಸಿಕೊಳ್ಳುವುದು. “ಮೂರ್ಖತೆ” ಎನ್ನುವ ಪದವು ಜ್ಞಾನಿಯಾಗದ ಅಥವಾ ಜ್ಞಾನವಿಲ್ಲದ ನಡತೆಯನ್ನು ವಿವರಿಸುತ್ತದೆ.

  • ಸತ್ಯವೇದದಲ್ಲಿ “ಮೂರ್ಖ” ಎನ್ನುವ ಪದವು ಸಹಜವಾಗಿ ದೇವರನ್ನು ನಂಬದ ಅಥವಾ ದೇವರಿಗೆ ವಿಧೇಯನಾಗದ ವ್ಯಕ್ತಿಯನ್ನು ಸೂಚಿಸುತ್ತದೆ. ಇದು ಯಾವಾಗಲೂ ದೇವರಲ್ಲಿ ನಂಬಿಕೆಯಿಡುವ ಮತ್ತು ದೇವರಿಗೆ ವಿಧೇಯನಾಗುವ ವ್ಯಕ್ತಿಗೆ ವ್ಯತಿರಿಕ್ತವಾಗಿದೆ.
  • ಕೀರ್ತನೆಗಳಲ್ಲಿ ದೇವರನ್ನು ನಂಬದ ವ್ಯಕ್ತಿ ಮೂರ್ಖನೆಂದು ಮತ್ತು ದೇವರು ಇದ್ದಾರೆನ್ನುವುದಕ್ಕೆ ದೇವರು ಉಂಟು ಮಾಡಿದ ಸೃಷ್ಟಿಯಲ್ಲಿರುವ ಎಲ್ಲಾ ಆಧಾರಗಳನ್ನು ನಿರ್ಲಕ್ಷ್ಯೆ ಮಾಡುವ ವ್ಯಕ್ತಿಯನ್ನು ಮೂರ್ಖನೆಂದು ದಾವೀದನು ವಿವರಿಸಿದ್ದಾನೆ,
  • ಹಳೇ ಒಡಂಬಡಿಕೆಯಲ್ಲಿರುವ ಜ್ಞಾನೋಕ್ತಿಗಳ ಪುಸ್ತಕವು ಕೂಡ ಮೂರ್ಖ ಎಂದರೇನು, ಅಥವಾ ಮೂರ್ಖತೆಯ ವ್ಯಕ್ತಿ ಎಂದರೇನು ಎನ್ನುವುದಕ್ಕೆ ಅನೇಕ ವಿವರಣೆಗಳನ್ನು ಕೊಟ್ಟಿರುವುದನ್ನು ನಾವು ನೋಡಬಹುದು.
  • “ಮೂರ್ಖತನ” ಎನ್ನುವ ಪದವು ಜ್ಞಾನದಿಂದಿರದ ಪ್ರತಿಯೊಂದು ಕ್ರಿಯೆಯನ್ನು ಸೂಚಿಸುತ್ತದೆ, ಯಾಕಂದರೆ ಅದು ದೇವರಿಗೆ ವಿರುದ್ಧವಾಗಿರುತ್ತದೆ. “ಮೂರ್ಖತನ” ಎನ್ನುವುದು ಅನೇಕಬಾರಿ ಅಪಾಯಕರವಾದ ಅಥವಾ ಹಾಸ್ಯಾಸ್ಪದವಾದ ಯಾವುದಾದರೊಂದರ ಅರ್ಥವನ್ನು ಒಳಗೊಂಡಿರುತ್ತದೆ.

ಅನುವಾದ ಸಲಹೆಗಳು:

  • “ಮೂರ್ಖ” ಎನ್ನುವ ಪದವನ್ನು “ಮೂರ್ಖತೆಯಿಂದಿರುವ ವ್ಯಕ್ತಿ” ಅಥವಾ “ಜ್ಞಾನಿಯಲ್ಲದ ವ್ಯಕ್ತಿ” ಅಥವಾ “ಪ್ರಜ್ಞಾಶೂನ್ಯನಾದ ವ್ಯಕ್ತಿ” ಅಥವಾ “ಅದೈವಿಕ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಮೂರ್ಖತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ತಿಳುವಳಿಕೆ ಕೊರತೆ” ಅಥವಾ “ಅಜ್ಞಾನಿ” ಅಥವಾ “ಪ್ರಜ್ಞಾಶೂನ್ಯತೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಜ್ಞಾನಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H191, H196, H200, H1198, H1984, H2973, H3684, H3687, H3688, H3689, H3690, H5014, H5034, H5036, H5039, H5528, H5529, H5530, H5531, H6612, H8417, H8602, H8604, G453, G454, G781, G801, G877, G878, G2757, G3150, G3154, G3471, G3472, G3473, G3474, G3912

ಮೂಲೆಗಲ್ಲು

ಪದದ ಅರ್ಥವಿವರಣೆ:

“ಮೂಲೆಗಲ್ಲು” ಎನ್ನುವ ಪದವು ಭವನದ ಅಡಿಪಾಯದ ಮೂಲೆಯಲ್ಲಿಡುವ ವಿಶೇಷವಾಗಿ ಕತ್ತರಿಸಿದ ಒಂದು ದೊಡ್ಡ ಕಲ್ಲನ್ನು ಸೂಚಿಸುತ್ತದೆ.

  • ಭವನ ನಿರ್ಮಾಣಕ್ಕೆ ಉಪಯೋಗಿಸುವ ಇತರ ಬೇರೆ ಕಲ್ಲುಗಳನ್ನು ಮೂಲೆಗಲ್ಲಿಗೆ ತಕ್ಕಂತೆ ಅಳತೆ ಮಾಡಿ ಅವುಗಳನ್ನು ಇಡುತ್ತಾರೆ.
  • ಇಡೀ ನಿರ್ಮಾಣವೆಲ್ಲಾ ಸ್ಥಿರವಾಗಿ ಮತ್ತು ಬಲವಾಗಿ ಇರುವುದಕ್ಕೆ ಇದು ತುಂಬಾ ಪ್ರಾಮುಖ್ಯವಾದ ಕಲ್ಲಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತನನ್ನು “ಮೂಲೆಗಲ್ಲು” ಎಂದು ಮತ್ತು ವಿಶ್ವಾಸಿಗಳೆಲ್ಲರನ್ನು ಅದರ ಮೇಲೆ ಕಟ್ಟುವ ನಿರ್ಮಾಣದ ಕಲ್ಲುಗಳೆಂದು ಅಲಂಕಾರಿಕವಾಗಿ ಉಪಯೋಗಿಸಿ ಹೇಳಿದ್ದಾರೆ.
  • ಭವನದ ಮೂಲೆಗಳ್ಳು ಯಾವರೀತಿ ಇಡೀ ನಿರ್ಮಾಣವನ್ನು ನಿರ್ಧರಿಸುತ್ತದೋ ಮತ್ತು ಆ ಭವನಕ್ಕೆ ಬೆಂಬಲವನ್ನು ಕೊಡುತ್ತದೋ ಅದೇ ರೀತಿ ಯೇಸುಕ್ರಿಸ್ತನು ಕೂಡ ವಿಶ್ವಾಸಿಗಳೆಲ್ಲರಿಗೂ ಮೂಲೆಗಲ್ಲಾಗಿದ್ದು ಬೆಂಬಲವನ್ನು ಕೊಡುತ್ತಾನೆ.

ಅನುವಾದ ಸಲಹೆಗಳು:

  • “ಮೂಲೆಗಲ್ಲು” ಎನ್ನುವ ಪದವನ್ನು “ಭವನದ ಮುಖ್ಯ ಕಲ್ಲು” ಅಥವಾ “ಬುನಾದಿ ಕಲ್ಲು” ಎಂದೂ ಅನುವಾದ ಮಾಡಬಹುದು.
  • ಅನುವಾದ ಮಾಡುವ ಭಾಷೆಯಲ್ಲಿ ಭವನದ ಬುನಾದಿಗೆ ಪ್ರಾಮುಖ್ಯವಾಗಿ ಬೆಂಬಲವನ್ನು ಕೊಡುವ ಕಲ್ಲಿನ ಇನ್ನೊಂದು ಹೆಸರು ಇರುವುದಾದರೆ ಅದನ್ನು ಉಪಯೋಗಿಸಿರಿ. ಇದ್ದರೂ ಈ ಪದವನ್ನು ಕೂಡ ಉಪಯೋಗಿಸಬಹುದು.
  • ಈ ಪದವನ್ನು “ಭವನದ ಮೂಲೆಯಲ್ಲಿ ಹಾಕುವ ಅಡಿಪಾಯದ ಕಲ್ಲು” ಎಂದೂ ಅನುವಾದ ಮಾಡಬಹುದು.
  • ಭವನದ ನಿರ್ಮಾಣವು ಭದ್ರವಾಗಿಯು ಮತ್ತು ಬಲವಾಗಿಯೂ ಇರುವುದಕ್ಕೆ ಉಪಯೋಗಿಸುವ ಒಂದು ದೊಡ್ಡ ಕಲ್ಲು ಎನ್ನುವ ಸತ್ಯಾಂಶವನ್ನು ತಿಳಿದಿರುವುದು ತುಂಬಾ ಪ್ರಾಮುಖ್ಯವಾದ ವಿಷಯ.
  • ನಿರ್ಮಿಸುವ ಭವನಗಳಿಗೆ ಕಲ್ಲುಗಳನ್ನು ಉಪಯೋಗಿಸದಿದ್ದರೆ, “ದೊಡ್ಡ ಕಲ್ಲು” (ದೊಡ್ಡ ಬಂಡೆ) ಎಂದು ಅರ್ಥ ಬರುವ ಇನ್ನೊಂದು ಪದವನ್ನೂ ಉಪಯೋಗಿಸಬಹುದು, ಆದರೆ ಅದು ಚೆನ್ನಾಗಿ ರೂಪಗೊಂಡ ಮತ್ತು ಹೊಂದಿಕೊಳ್ಳುವ ಕಲ್ಪನೆಯನ್ನು ಹೊಂದಬೇಕು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H68, H6438, H7218, G204, G1137, G2776, G3037

ಯಜ್ಞವೇದಿ

ಪದದ ಅರ್ಥವಿವರಣೆ:

ಯಜ್ಞವೇದಿ ಎನ್ನುವುದು ಇಸ್ರಾಯೇಲ್ಯರು ದೇವರಿಗೆ ಕಾಣಿಕೆಯಾಗಿ ಪ್ರಾಣಿಗಳನ್ನು ಮತ್ತು ಧಾನ್ಯಗಳನ್ನು ಅರ್ಪಿಸುವುದಕ್ಕೆ ನಿರ್ಮಿಸಿಕೊಂಡಿರುವ ಎತ್ತರಿಸಿದ ಆವರಣವಾಗಿದೆ.

  • ಸತ್ಯವೇದದ ಕಾಲದಲ್ಲಿ ಮಣ್ಣಿನಿಂದ ಅನೇಕವಾದ ಚಿಕ್ಕ ಚಿಕ್ಕ ಯಜ್ನವೇದಿಗಳನ್ನು ಕಟ್ಟುತ್ತಿದ್ದರು ಅಥವಾ ಸ್ಥಿರವಾಗಿ ಯಾವಾಗಲೂ ನಿಂತಿರುವಂತೆ ದೊಡ್ಡ ದೊಡ್ಡ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು.
  • ಕೆಲವೊಂದು ವಿಶೇಷವಾಗಿ ಪೆಟ್ಟಿಗೆ ಆಕಾರದಲ್ಲಿರುವ ಯಜ್ಞ ವೇದಿಗಳನ್ನು ಕಟ್ಟಿಗೆಗಳಿಂದ ಮಾಡಿ, ಅದರ ಮೇಲೆ ಬಂಗಾರ, ಹಿತ್ತಾಳೆ, ಅಥವಾ ಕಂಚು ಲೋಹಗಳೊಂದಿಗೆ ಹೊದಿಸಿ ತಯಾರು ಮಾಡುತ್ತಿದ್ದರು.
  • ಇಸ್ರಾಯೇಲ್ಯರ ಸುತ್ತಮುತ್ತಲು ವಾಸಮಾಡುತ್ತಿದ್ದ ಅನ್ಯಜನರು ಕೂಡ ತಮ್ಮ ದೇವತೆಗಳಿಗೆ ಬಲಿಗಳನ್ನು ಅರ್ಪಿಸುವುದಕ್ಕೆ ಯಜ್ನವೇದಿಗಳನ್ನು ನಿರ್ಮಿಸಿಕೊಂಡಿದ್ದರು.

(ಈ ಪದಗಳನ್ನು ಸಹ ನೋಡಿರಿ : ಧೂಪ ಯಜ್ಞವೇದಿ, ಸುಳ್ಳು ದೇವರು, ಧಾನ್ಯಗಳ ಅರ್ಪಣೆ, ಬಲಿ)

ಸತ್ಯವೇದದ ಉಲ್ಲೇಖ ವಚನಗಳು:

ಸತ್ಯವೇದದ ಕಥೆಗಳ ಉದಾಹರಣೆಗಳು:

  • 03:14 ನೋಹನು ನಾವೆಯೊಳಗೆ ಹೊರಬಂದಾಗ, ಆತನು ಒಂದು __ಯಜ್ಞವೇದಿ __ಯನ್ನು ಕಟ್ಟಿದನು ಮತ್ತು ಸರ್ವಾಂಗ ಹೋಮಕ್ಕೆ ಉಪಯೋಗಿಸುವ ಕೆಲವೊಂದು ಪ್ರಾಣಿಗಳನ್ನು ಬಲಿ ಅರ್ಪಿಸಿದನು.
  • 05:08 ಅವರು ಸರ್ವಾಂಗಹೋಮ ಮಾಡುವ ಸ್ಥಳಕ್ಕೆ ಬಂದಾಗ, ಅಬ್ರಹಾಮನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಹಾಕಿ, ಅವನನ್ನು ಯಜ್ಞವೇದಿಯ ಮೇಲೆ ಮಲಗಿಸಿದನು.
  • 13:09 ಯಾಜಕನು ಪ್ರಾಣಿಯನ್ನು ಕೊಂದು, ಅದನ್ನು ಯಜ್ಞವೇದಿ ಮೇಲೆ ಸುಡುವನು.
  • 16:06 ಅವನು (ಗಿದ್ಯೋನನು) ಹೊಸ ಯಜ್ಞವೇದಿಯನ್ನು ಕಟ್ಟಿ ದೇವರಿಗೆ ಸಮರ್ಪಿಸಿದನು, ವಿಗ್ರಹವನ್ನಿಡುವ ಆ ಸ್ಥಳಕ್ಕೆ ಹತ್ತಿರವಾಗಿರುವ ಯಜ್ಞವೇದಿಯ ಸ್ಥಳದಲ್ಲೇ ದೇವರಿಗೆ ಸರ್ವಾಂಗ ಹೋಮವನ್ನು ಅರ್ಪಿಸಿದನು.

ಪದದ ದತ್ತಾಂಶ:

  • Strong's: H741, H2025, H4056, H4196, G1041, G2379

ಯಾಜಕ, ಯಾಜಕರು, ಯಾಜಕತ್ವ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಯಾಜಕ ಎಂದರೆ ದೇವ ಜನರ ಪ್ರತಿನಿಧಿಯಾಗಿ ದೇವರಿಗೆ ಅರ್ಪಣೆಗಳನ್ನು ಅರ್ಪಿಸಲು ಆಯ್ಕೆ ಮಾಡಿಕೊಂಡಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. “ಯಾಜಕತ್ವ” ಎನ್ನುವ ಪದವು ಯಾಜಕನಾಗಿರುವ ಸ್ಥಿತಿ ಅಥವಾ ಯಾಜಕನ ಕರ್ತ್ಯವ್ಯವನ್ನು ಸೂಚಿಸುವ ಹೆಸರಾಗಿರುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ ಜನರ ಪಕ್ಷವಾಗಿ ದೇವರಿಗೆ ಯಾಜಕರಾಗಿರಲು ದೇವರು ಆರೋನನನ್ನು ಮತ್ತು ತನ್ನ ಸಂತಾನದವರನ್ನು ಆದುಕೊಂಡಿದ್ದನು.
  • “ಯಾಜಕತ್ವ” ಎನ್ನುವುದು ಲೇವಿಯರ ವಂಶದಲ್ಲಿ ತಂದೆಯಿಂದ ಮಗನಿಗೆ ಹೋಗುವ ಬಾಧ್ಯತೆಯು ಮತ್ತು ಹಕ್ಕು ಆಗಿರುತ್ತದೆ.
  • ಇಸ್ರಾಯೇಲ್ ಯಾಜಕರು ಜನರ ಹೋಮಗಳನ್ನು ದೇವರಿಗೆ ಅರ್ಪಿಸುವ ಬಾಧ್ಯತೆಯನ್ನು ಮತ್ತು ದೇವಾಲಯದಲ್ಲಿ ಮಾಡುವ ಕೆಲಸಗಳ ಬಾಧ್ಯತೆಗಳನ್ನು ಪಡೆದುಕೊಂಡಿದ್ದರು.
  • ಯಾಜಕರು ಕೂಡ ಇತರ ಧರ್ಮ ಕಾರ್ಯಗಳನ್ನು ಮಾಡುವುದರ ಜೊತೆಗೆ ದೇವ ಜನರ ಪಕ್ಷವಾಗಿ ದೇವರಿಗೆ ಪ್ರಾರ್ಥನೆಗಳನ್ನು ನಿರಂತರವಾಗಿ ಮಾಡುತ್ತಿದ್ದರು.
  • ಯಾಜಕರು ಜನರ ಮೇಲೆ ಸಾಂಪ್ರದಾಯಿಕವಾದ ಆಶೀರ್ವಾದಗಳನ್ನು ನುಡಿಯುತ್ತಿದ್ದರು ಮತ್ತು ದೇವರ ಆಜ್ಞೆಗಳನ್ನು ಆವರಿಗೆ ಬೋಧನೆ ಮಾಡುತ್ತಿದ್ದರು.
  • ಯೇಸುವಿನ ಕಾಲದಲ್ಲಿ ಯಾಜಕರಲ್ಲಿ ಅನೇಕ ರೀತಿಯಾದ ಹಂತಗಳು ಇದ್ದಿದ್ದವು, ಅದರಲ್ಲಿ ಪ್ರಧಾನ ಯಾಜಕರಿದ್ದರು ಮತ್ತು ಮಹಾ ಯಾಜಕನು ಇದ್ದಿದ್ದನು.
  • ದೇವರ ಸನ್ನಿಧಿಯಲ್ಲಿ ನಮಗಾಗಿ ವಿಜ್ಞಾಪನೆ ಮಾಡುವ “ಮಹೋನ್ನತನಾದ ಯಾಜಕನು” ಯೇಸುವಾಗಿದ್ದಾನೆ. ಪಾಪಗಳಿಗಾಗಿ ಅಂತಿಮ ಯಜ್ಞವನ್ನಾಗಿ ಆತನು ತನ್ನನ್ನು ತಾನೇ ಅರ್ಪಿಸಿಕೊಂಡನು. ಇದಕ್ಕೆ ಮನುಷ್ಯರ ಯಾಜಕರಿಂದ ಮಾಡುವ ಯಜ್ಞಗಳೆಲ್ಲವು ಬೇಕಾದ ಅವಶ್ಯಕತೆಯಿರುವುದಿಲ್ಲವೆಂದು ಇದರ ಅರ್ಥವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಯೇಸುವಿನಲ್ಲಿರುವ ಪ್ರತಿಯೊಬ್ಬ ವಿಶ್ವಾಸಿ “ಯಾಜಕ”ನಾಗಿರುತ್ತಾನೆ, ಈ ವಿಶ್ವಾಸಿಯು ತನಗಾಗಿ ಮತ್ತು ತನ್ನ ಇತರ ಜನರಿಗಾಗಿ ವಿಜ್ಞಾಪನೆ ಮಾಡುವುದಕ್ಕೆ ಪ್ರಾರ್ಥನೆಯಲ್ಲಿ ದೇವರಿಗೆ ನೇರವಾಗಿ ಬರುವ ಅವಕಾಶವನ್ನು ಹೊಂದಿರುತ್ತಾನೆ.
  • ಪುರಾತನ ಕಾಲಗಳಲ್ಲಿ ಬಾಳ್ ಎನ್ನುವಂತಹ ಸುಳ್ಳು ದೇವರುಗಳಿಗೆ ಅರ್ಪಣೆಗಳನ್ನು ಅರ್ಪಿಸಿದ ಅನ್ಯ ಯಾಜಕರೂ ಇದ್ದಿದ್ದರು.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಯಾಜಕ” ಎನ್ನುವ ಪದವನ್ನು “ತ್ಯಾಗ ಮಾಡಿಕೊಂಡ ವ್ಯಕ್ತಿ” ಅಥವಾ “ದೇವರ ಪ್ರತಿನಿಧಿ” ಅಥವಾ “ತ್ಯಾಗ ಮಾಡಿಕೊಂಡಿರುವ ಮಧ್ಯಸ್ಥ” ಅಥವಾ “ದೇವರನ್ನು ಪ್ರತಿನಿಧಿಸುವುದಕ್ಕೆ ಆತನು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಅನುವಾದ ಮಾಡಿದ “ಯಾಜಕ” ಎನ್ನುವ ಪದವು “ಮಧ್ಯಸ್ಥ” ಎನ್ನುವ ಪದಕ್ಕೆ ವಿಭಿನ್ನವಾಗಿರಬೇಕು.
  • ಕೆಲವೊಂದು ಅನುವಾದಗಳಲ್ಲಿ “ಇಸ್ರಾಯೇಲ್ ಯಾಜಕ” ಅಥವಾ “ಯೆಹೂದ್ಯ ಯಾಜಕ” ಅಥವಾ “ಯೆಹೋವನ ಯಾಜಕ” ಅಥವಾ “ಬಾಳ್ ಯಾಜಕ” ಎಂದು ಸ್ಪಷ್ಟತೆಗಾಗಿ ವಿವರಿಸಿ ಹೇಳುವುದಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ. ಇದರಿಂದ ಇದು ಈಗಿನ ಕಾಲದ ಯಾಜಕನನ್ನು ತೋರಿಸುವುದಿಲ್ಲ.
  • ಅನುವಾದ ಮಾಡಲ್ಪಟ್ಟಿರುವ “ಯಾಜಕ” ಎನ್ನುವ ಪದವು “ಪ್ರಧಾನ ಯಾಜಕ” ಮತ್ತು “ಮಹಾ ಯಾಜಕ” ಮತ್ತು “ಲೇವಿ” ಮತ್ತು “ಪ್ರವಾದಿ” ಎನ್ನುವ ಪದಗಳಿಗೆ ವಿಭಿನ್ನ ವಾಗಿರಬೇಕು.

(ಈ ಪದಗಳನ್ನು ಸಹ ನೋಡಿರಿ : ಆರೋನ, ಪ್ರಧಾನ ಯಾಜಕರು, ಮಹಾ ಯಾಜಕ, ಮಧ್ಯಸ್ಥ, ಹೋಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 04:07 “ಮೆಲ್ಕಿಚೆದೆಕನು ಮಹೋನ್ನತನ ದೇವರ __ ಯಾಜಕನಾಗಿದ್ದನು __”
  • 13:09 ಯಾರಾದರೂ ದೇವರ ನ್ಯಾಯಪ್ರಮಾಣಕ್ಕೆ ಅವಿಧೇಯತೆಯನ್ನು ತೋರಿಸಿದ್ದರೆ, ಅವರು ದೇವರಿಗೆ ಹೋಮ ಮಾಡುವುದಕ್ಕಾಗಿ ಗುಡಾರದ ಮುಂದಿರುವ ಯಜ್ಞವೇದಿಯ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡುಬರಬೇಕು. __ ಯಾಜಕನು __ ಆ ಪ್ರಾಣಿಯನ್ನು ಕೊಂದು, ಅದನ್ನು ಯಜ್ಞವೇದಿಯ ಮೇಲಿಟ್ಟು ದಹಿಸುತ್ತಾನೆ. ಪ್ರಾಣಿಯ ರಕ್ತವು ಆ ವ್ಯಕ್ತಿಯು ಮಾಡಿದ ಪಾಪವನ್ನು ಮುಚ್ಚುತ್ತದೆ, ಮತ್ತು ಅವನನ್ನು ದೇವರ ದೃಷ್ಟಿಯಲ್ಲಿ ಶುದ್ಧನಾದ ವ್ಯಕ್ತಿಯನ್ನಾಗಿಟ್ಟಿರುತ್ತದೆ. ದೇವರು ಮೋಶೆಯ ಅಣ್ಣನಾಗಿರುವ ಆರೋನನನ್ನು ಆಯ್ಕೆ ಮಾಡಿಕೊಂಡನು ಮತ್ತು ಆರೋನನ ಸಂತತಿಯವರು ಆತನಿಗೆ __ ಯಾಜಕರಾಗಿದ್ದರು __.
  • 19:07 ಆದ್ದರಿಂದ ಬಾಳ್ __ ಯಾಜಕರು __ ಹೋಮವನ್ನು ಸಿದ್ಧಗೊಳಿಸಿದರು, ಆದರೆ ಅವರು ಅದನ್ನು ಬೆಂಕಿಯಿಂದ ಹಚ್ಚುವುದಕ್ಕೆ ಸಾಧ್ಯವಾಗಲಿಲ್ಲ.
  • 21:07 ಇಸ್ರಾಯೇಲ್ __ ಯಾಜಕನು __ ಜನರ ಪಾಪಗಳ ಶಿಕ್ಷೆಗೆ ಬದಲಾಗಿ ಜನರ ಪಕ್ಷವಾಗಿ ದೇವರಿಗೆ ಹೋಮಗಳನ್ನು ಮಾಡುವ ವ್ಯಕ್ತಿಯಾಗಿರುತ್ತಾನೆ. __ ಯಾಜಕರು __ ಜನರಿಗೋಸ್ಕರ ದೇವರ ಬಳಿ ಪ್ರಾರ್ಥನೆಯೂ ಮಾಡುತ್ತಿದ್ದರು.

ಪದ ಡೇಟಾ:

  • Strong's: H3547, H3548, H3549, H3550, G748, G749, G2405, G2406, G2407, G2409, G2420

ಯೆಹೂದಿ, ಯೆಹೂದ್ಯ, ಯೆಹೂದ್ಯರು

ಸತ್ಯಾಂಶಗಳು:

ಯೆಹೂದಿಗಳು ಅಬ್ರಾಹಾಮನ ಮೊಮ್ಮೊಗನಾದ ಯಾಕೋಬನ ಸಂತಾನದ ಜನರಾಗಿರುತ್ತಾರೆ. “ಯೆಹೂದಿ” ಎನ್ನುವ ಪದವು “ಯೂದಾ” ಎನ್ನುವ ಪದದಿಂದ ಬಂದಿರುತ್ತದೆ.

  • ಬಾಬೆಲೋನಿಯದಲ್ಲಿ ಇಸ್ರಾಯೇಲ್ಯರ ಸೆರೆಯಿಂದ ಯೂದಾಗೆ ತಿರುಗಿಬಂದನಂತರ ಜನರು ಅವರನ್ನು “ಯೆಹೂದ್ಯರು” ಎಂದು ಕರೆಯುವುದಕ್ಕೆ ಆರಂಭಿಸಿದರು.
  • ಮೆಸ್ಸೀಯನಾದ ಯೇಸು ಯೆಹೂದ್ಯನಾಗಿದ್ದನು. ಆದರೆ, ಯೆಹೂದ್ಯ ಧರ್ಮದ ನಾಯಕರು ಯೇಸುವನ್ನು ತಿರಸ್ಕರಿಸಿದರು ಮತ್ತು ಆತನು ಸಾಯಿಸಬೇಕೆಂದು ಬೆಂಬಲ ಕೊಟ್ಟರು.
  • “ಯೆಹೂದ್ಯರು” ಎನ್ನುವ ಪದವು ಅನೇಕಬಾರಿ ಯೆಹೂದ್ಯರಾದ ಜನರೆಲ್ಲರನ್ನು ಸೂಚಿಸದೇ ಯೆಹೂದ್ಯ ನಾಯಕರನ್ನು ಮಾತ್ರವೇ ಸೂಚಿಸುತ್ತದೆ. ಬೇರೆ ಸಂದರ್ಭಗಳಲ್ಲಿ ಕೆಲವೊಂದು ಅನುವಾದಗಳಲ್ಲಿ “ನಾಯಕರು” ಎಂದು ಸೇರಿಸಿ ಹೇಳುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಯಾಕೋಬ, ಇಸ್ರಾಯೇಲ್, ಬಾಬೆಲೋನಿಯ, ಯೆಹೂದ್ಯ ನಾಯಕರು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 20:11 ಇಸ್ರಾಯೇಲ್ಯರನ್ನು ಈಗ __ ಯೆಹೂದ್ಯರೆಂದು __ ಕರೆಯಲ್ಪಡುತ್ತಿದ್ದಾರೆ ಮತ್ತು ಅವರಲ್ಲಿ ಅನೇಕರು ಬಾಬೆಲೋನಿಯಾದಲ್ಲೇ ಜೀವಿಸಿದ್ದರು.
  • 20:12 ಆದ್ದರಿಂದ, ಸೆರೆಯಲ್ಲಿ ಎಪ್ಪತ್ತು ವರ್ಷಗಳು ಇದ್ದಾದನಂತರ, __ ಯೆಹೂದ್ಯರಲ್ಲಿ __ ಒಂದು ಚಿಕ್ಕ ಗುಂಪು ಯೂದಾದಲ್ಲಿರುವ ಯೆರೂಸಲೇಮ್ ಪಟ್ಟಣಕ್ಕೆ ಹಿಂದುರಿಗೆ ಬಂದರು.
  • 37:10 ಈ ಅದ್ಭುತ ಕಾರಣದಿಂದ __ ಯೆಹೂದ್ಯರಲ್ಲಿ __ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.
  • 37:11 ಆದರೆ __ ಯೆಹೂದ್ಯರ __ ಧರ್ಮ ನಾಯಕರಲ್ಲಿ ಅಸೂಯೆ ಇದ್ದಿತ್ತು, ಆದ್ದರಿಂದ ಅವರು ಯೇಸುವನ್ನು ಮತ್ತು ಲಾಜರನನ್ನು ಹೇಗೆ ಸಾಯಿಸಬೇಕೆಂದು ಪ್ರಣಾಳಿಕೆ ಹಾಕುವುದಕ್ಕೆ ಎಲ್ಲರು ಸೇರಿಕೊಂಡಿದ್ದರು.
  • 40:02 ಶಿಲುಬೆಯಲ್ಲಿ ಇಳಿಹಾಕಲ್ಪಟ್ಟ ಯೇಸುವಿನ ತಲೆಯ ಮೇಲೆ “__ ಯೆಹೂದ್ಯರ __ ಅರಸ” ಎಂಬುದಾಗಿ ಒಂದು ಸೂಚನೆಯನ್ನು ಅವರು ಬರೆಯಬೇಕೆಂದು ಪಿಲಾತನು ಆಜ್ಞಾಪಿಸಿದ್ದನು.
  • 46:06 ಆ ಕ್ಷಣದಲ್ಲೇ, “ಯೇಸು ದೇವರ ಮಗ” ಎಂದು ಹೇಳುತ್ತಾ ದಮಸ್ಕದಲ್ಲಿ __ ಯೆಹೂದ್ಯರಿಗೆ __ ಸೌಲನು ಪ್ರಸಂಗ ಮಾಡುವುದಕ್ಕೆ ಆರಂಭಿಸಿದನು.

ಪದ ಡೇಟಾ:

  • Strong's: H3054, H3061, H3062, H3064, H3066, G2450, G2451, G2452, G2453, G2454

ಯೆಹೂದ್ಯರ ಅರಸ, ಯೆಹೂದ್ಯರ ಅರಸ

ಪದದ ಅರ್ಥವಿವರಣೆ:

“ಯೆಹೂದ್ಯರ ಅರಸ” ಎನ್ನುವ ಮಾತು ಒಂದು ಬಿರುದಾಗಿರುತ್ತದೆ, ಇದು ಮೆಸ್ಸೀಯನಾದ ಯೇಸುವನ್ನು ಸೂಚಿಸುತ್ತದೆ.

  • “ಯೆಹೂದ್ಯರ ಅರಸ”ನಾಗಿ ಹುಟ್ಟಿರುವ ಶಿಶುವನ್ನು ನೋಡುವುದಕ್ಕೆ ಬೆತ್ಲೆಹೇಮಿಗೆ ಪ್ರಯಾಣ ಮಾಡುತ್ತಿರುವ ಜ್ಞಾನಿಗಳಿಂದ ಉಪಯೋಗಿಸಲ್ಪಟ್ಟಾಗ ಈ ಬಿರುದನ್ನು ಮೊಟ್ಟ ಮೊದಲು ಸತ್ಯವೇದದಲ್ಲಿ ದಾಖಲಿಸಲಾಗಿದೆ.
  • “ನಿನಗೆ ಹುಟ್ಟುವ ಮಗನು ದಾವೀದನ ವಂಶಸ್ಥನಾಗಿರುತ್ತಾನೆ, ಈತನು ಅರಸನಾಗಿ ನಿರಂತರವಾಗಿ ಆಳುವವನಾಗಿರುತ್ತಾನೆ” ಎಂದು ದೂತನು ಮರಿಯಳಿಗೆ ಹೇಳಿದನು.
  • ಯೇಸುವನ್ನು ಶಿಲುಬೆಗೇರಿಸುವುದಕ್ಕೆ ಮುಂಚಿತವಾಗಿ, ರೋಮಾ ಸೈನಿಕರು ಯೇಸುವನ್ನು ಹಿಯಾಳಿಸುತ್ತಾ “ಯೆಹೂದ್ಯರ ಆರಸ” ಎಂದು ಕೂಗಿದರು. ಈ ಮಾತನ್ನು ಯೇಸುವಿನ ಶಿಲುಬೆಯ ಮೇಲೆ ಒಂದು ಕಟ್ಟಿಗೆಯ ಹಲಿಗೆಯ ಮೇಲೆ ಬರೆದಿದ್ದರು.
  • ಯೇಸು ನಿಜವಾಗಿಯೂ ಯೆಹೂದ್ಯರ ಅರಸನಾಗಿರುತ್ತಾನೆ ಮತ್ತು ಎಲ್ಲಾ ಸೃಷ್ಟಿಗೂ ಅರಸನಾಗಿರುತ್ತಾನೆ.

ಅನುವಾದ ಸಲಹೆಗಳು:

  • “ಯೆಹೂದ್ಯರ ಅರಸ” ಎನ್ನುವ ಮಾತನ್ನು “ಯೆಹೂದ್ಯರಿಗೆ ಅರಸ” ಅಥವಾ “ಯೆಹೂದ್ಯರನ್ನು ಆಳುವ ಅರಸ” ಅಥವಾ “ಯೆಹೂದ್ಯರ ಸರ್ವೋಚ್ಚ ಪಾಲಕ” ಎಂದೂ ಅನುವಾದ ಮಾಡಬಹುದು.
  • ಅನುವಾದದಲ್ಲಿ ಇತರ ಸ್ಥಳಗಳಲ್ಲಿ “ಅರಸ” ಎನ್ನುವ ಮಾತನ್ನು ಹೇಗೆ ಅನುವಾದ ಮಾಡಿದ್ದಾರೆಂದು ಪರಿಶೀಲನೆ ಮಾಡಿರಿ.

(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಯೆಹೂದ, ಯೇಸು, ಅರಸ, ರಾಜ್ಯ, ದೇವರ ರಾಜ್ಯ, ಜ್ಞಾನಿಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 23:09 ಸ್ವಲ್ಪ ಕಾಲವಾದನಂತರ, ಪೂರ್ವ ದೇಶಗಳಿಂದ ಬಂದಿರುವ ಜ್ಞಾನಿಗಳು ಆಕಾಶದಲ್ಲಿ ಅಸಹಜವಾಗಿ ಕಾಣಿಸಿಕೊಂಡ ನಕ್ಷತ್ರವನ್ನು ನೋಡಿದರು. __ ಯೆಹೂದ್ಯರ ಹೊಸ ಅರಸನು __ ಹುಟ್ಟುತ್ತಿದ್ದಾನೆ ಎನ್ನುವುದಕ್ಕೆ ಇದೇ ಅರ್ಥವೆಂದು ಅವರು ತಿಳಿದುಕೊಂಡರು.
  • 39:09 “ನೀನು __ ಯೆಹೂದ್ಯರ ಅರಸನೋ__? “ ಎಂದು ಪಿಲಾತನು ಯೇಸುವನ್ನು ಕೇಳಿದನು.
  • 39:12 ರೋಮಾ ಸೈನಿಕರು ಯೇಸುವನ್ನು ಕೋಲಿನಿಂದ ಹೊಡೆದು, ಒಂದು ಹಗ್ಗವನ್ನು ನಡುವಿಗೆ ಕಟ್ಟಿ, ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿದರು. “ನೋಡು, __ ಯೆಹೂದ್ಯರ ಅರಸನೇ__ ?” ಎಂದು ಹೇಳುತ್ತಾ ಆತನನ್ನು ಹಿಯಾಳಿಸಿದರು.
  • 40:02 “ಯೆಹೂದ್ಯರ ಅರಸ” ಎಂಬುದಾಗಿ ಒಂದು ಗುರುತನ್ನು ಶಿಲುಬೆಯಲ್ಲಿರುವ ಯೇಸುವಿನ ತಲೆಯ ಮೇಲೆ ಇಡಬೇಕೆಂದು ಪಿಲಾತನು ಅವರಿಗೆ ಆಜ್ಞಾಪಿಸಿದನು.

ಪದ ಡೇಟಾ:

  • Strong's: G935, G2453

ಯೆಹೋವ

ಸತ್ಯಾಂಶಗಳು:

“ಯೆಹೋವ” ಎನ್ನುವ ಪದವು ದೇವರ ವೈಯುಕ್ತಿಕ ಹೆಸರಾಗಿರುತ್ತದೆ, ದೇವರು ಈ ಹೆಸರನ್ನು ಮೋಶೆಗೆ ಉರಿಯುತ್ತಿರುವ ಪೊದೆಯ ಬಳಿ ಹೇಳಿರುತ್ತಾರೆ.

  • “ಯೆಹೋವ” ಎನ್ನುವ ಹೆಸರು “ಇರುವಾತನು” ಅಥವಾ “ಅಸ್ತಿತ್ವದಲ್ಲಿದ್ದಾನೆ” ಎನ್ನುವ ಅರ್ಥಗಳಿರುವ ಪದದಿಂದ ಬಂದಿರುತ್ತದೆ.
  • “ಯೆಹೋವ” ಎನ್ನುವ ಹೆಸರಿಗೆ ಸಾಧ್ಯವಾಗುವ ಅರ್ಥಗಳಲ್ಲಿ “ಆತನಿದ್ದಾನೆ” ಅಥವಾ “ಇರುವಂತೆ ಮಾಡುವವನು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಹೆಸರು ದೇವರು ಯಾವಾಗಲೂ ಜೀವಿಸಿದ್ದಾನೆ ಮತ್ತು ಎಂದಿಗೂ ನಿರಂತರವಾಗಿ ಜೀವಿಸುವಾತನಾಗಿದ್ದಾನೆಂದು ತಿಳಿಯಪಡಿಸುತ್ತಿದೆ. ಇದಕ್ಕೆ ಆತನು ಯಾವಾಗಲೂ ಇರುವಾತನಾಗಿದ್ದಾನೆಂದರ್ಥವೂ ಇದೆ.
  • ಸಂಪ್ರದಾಯಿಕವಾಗಿ, ಅನೇಕ ಬೈಬಲ್ ಅನುವಾದಗಳು “ಯೆಹೋವ” ಎನ್ನುವ ಹೆಸರನ್ನು ಪ್ರತಿನಿಧಿಸುವುದಕ್ಕೆ “ಕರ್ತನು” ಅಥವಾ “ಯೆಹೋವನಾದ ದೇವರು” ಎನ್ನುವ ಪದಗಳನ್ನು ಉಪಯೋಗಿಸಿದ್ದಾರೆ. ಈ ಸಂಪ್ರದಾಯವು ಇತಿಹಾಸದ ಸತ್ಯಾಂಶದಿಂದ ಉಂಟಾಯಿತು, ಯೆಹೋವನ ಹೆಸರನ್ನು ತಪ್ಪಾಗಿ ಉಚ್ಚರಿಸುವತ್ತೆವೇನೋ ಎಂದು ಯೆಹೂದ್ಯ ಜನರು ಹೆದರಿಕೆಪಟ್ಟಿದ್ದರು, ಇದಕ್ಕಾಗಿ ವಾಕ್ಯದಲ್ಲಿ “ಯೆಹೋವ” ಎನ್ನುವ ಹೆಸರಿಗೆ ಬದಲಾಗಿ ಪ್ರತಿಯೊಂದುಸಾರಿ ‘ಕರ್ತನು” ಎಂದು ಹೇಳುವುದನ್ನು ಆರಂಭಿಸಿರುತ್ತಾರೆ. ಆಧುನಿಕ ಬೈಬಲ್.ಗಳಲ್ಲಿ ದೇವರ ವೈಯುಕ್ತಿಕ ಹೆಸರಿಗೆ ಗೌರವವನ್ನು ತೋರಿಸುವುದಕ್ಕೆ ಮತ್ತು ಲಾರ್ಡ್ (Lord) ಎನ್ನುವ ಇಬ್ರಿ ಭಾಷೆಯ ಪದದಿಂದ ವಿಭಿನ್ನವಾಗಿರುವುದಕ್ಕೆ ಆಂಗ್ಲ ಭಾಷೆಯಲ್ಲಿ ಲಾರ್ಡ್ ("LORD") ಎನ್ನುವ ಪದವನ್ನು ದೊಡ್ಡ ಅಕ್ಷರಗಳಾಗಿ ಬರೆದಿರುತ್ತಾರೆ.
  • ಯುಎಲ್.ಬಿ ಮತ್ತು ಯುಡಿಬಿ ವಾಕ್ಯಭಾಗಗಳು ಯಾವಾಗಲೂ ಈ ಪದವನ್ನು ಹಳೇ ಒಡಂಬಡಿಕೆಯಲ್ಲಿ ಇಬ್ರಿ ವಾಕ್ಯದಲ್ಲಿರುವಂತೆಯೇ “ಯೆಹೋವ” ಎಂದಾಗಿ ಅನುವಾದ ಮಾಡಿರುತ್ತಾರೆ.
  • “ಯೆಹೋವ” ಎನ್ನುವ ಹೆಸರು ಹೊಸ ಒಡಂಬಡಿಕೆಯ ಮೂಲ ಭಾಷೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ; ಕೇವಲ “ಕರ್ತನು” ಎನ್ನುವ ಗ್ರೀಕ್ ಪದವನ್ನು ಮಾತ್ರವೇ ಉಪಯೋಗಿಸಿರುತ್ತಾರೆ, ಹಳೇ ಒಡಂಬಡಿಕೆಯಿಂದ ತೆಗೆದಿರುವ ವಾಕ್ಯಗಳಲ್ಲಿಯೂ ಕರ್ತನು ಎಂಬುದಾಗಿಯೇ ಉಪಯೋಗಿಸಿರುತ್ತಾರೆ.
  • ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಕುರಿತಾಗಿ ಮಾತನಾಡಿದಾಗ, ಆತನು ಅನೇಕಬಾರಿ ಸರ್ವನಾಮವನ್ನು ಉಪಯೋಗಿಸುವುದರ ಬದಲಾಗಿ ತನ್ನ ಹೆಸರನ್ನು ಉಪಯೋಗಿಸುತ್ತಿದ್ದನು.
  • “ನಾನು” ಅಥವಾ “ನಾನೇ” ಎನ್ನುವ ಸರ್ವನಾಮವು ಜೋಡಿಸುವದರಿಂದ, ದೇವರು ಮಾತನಾಡುತ್ತಿದ್ದಾರೆಂದು ಓದುಗಾರರಿಗೆ ಯುಎಲ್.ಬಿ ಸೂಚಿಸುತ್ತಿದೆ.

ಅನುವಾದ ಸಲಹೆಗಳು:

  • “ಯೆಹೋವ” ಎನ್ನುವ ಹೆಸರನ್ನು “ನಾನೇ” ಅಥವಾ “ಜೀವಿಸುವಾತನು” ಅಥವಾ “ಇರುವಾತನು” ಅಥವಾ “ಸಜೀವವುಳ್ಳವನು” ಎಂದರ್ಥಗಳಿರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.
  • “ಯೆಹೋವ” ಎನ್ನುವ ಹೆಸರನ್ನು ಹೇಗೆ ಉಚ್ಚರಿಸಬೇಕೆನ್ನುವ ವಿಧಾನದಲ್ಲಿಯೂ ಈ ಪದವು ಬರೆದಿರುತ್ತಾರೆ.
  • ಕೆಲವೊಂದು ಸಭೆಯ ಸಂಸ್ಥೆಗಳಲ್ಲಿ “ಯೆಹೋವ” ಎನ್ನುವ ಹೆಸರನ್ನು ಉಪಯೋಗಿಸುವುದಿಲ್ಲ ಮತ್ತು ಆದರೆ ಸಂಪ್ರದಾಯಿಕವಾಗಿ “ಕರ್ತನು” ಎಂದು ಉಪಯೋಗಿಸುತ್ತಾರೆ. ಇಲ್ಲಿ ಗಮನಿಸಬಹುದಾದ ಪ್ರಾಮುಖ್ಯವಾದ ವಿಷಯ ಏನೆಂದರೆ ಇದನ್ನು ಗಟ್ಟಿಯಾಗಿ ಓದುತ್ತಿರುವಾಗ ಬಹುಶಃ ಗಲಿಬಿಲಿಯಾಗುತ್ತಿರಬಹುದು, ಯಾಕಂದರೆ ಇದು “ಕರ್ತನು” ಎನ್ನುವ ಬಿರುದಿನಂತೆಯೇ ಉಚ್ಚರಿಸಲ್ಪಡುತ್ತದೆ. ಕೆಲವೊಂದು ಭಾಷೆಗಳಲ್ಲಿ “ಕರ್ತನು” ಎನ್ನುವ ಬಿರುದಿಗೂ ಮತ್ತು (ಯೆಹೋವ) ಎನ್ನುವ ಹೆಸರಾಗಿ ಉಪಯೋಗಿಸುವ ಪದಕ್ಕೂ ವ್ಯತ್ಯಾಸ ತೋರಿಸುವುದಕ್ಕೆ ವ್ಯಾಕರಣ ಸಂಬಂಧವಾದ ಗುರುತನ್ನು ಅಥವಾ ಬೇರೊಂದು ಪದದ ಜೋಡಣೆಯನ್ನು ಇಟ್ಟಿರುತ್ತಾರೆ.
  • ಮೂಲ ಭಾಷೆಯಲ್ಲಿರುವ ಕಾಣಿಸಿಕೊಳ್ಳುವಂತೆಯೇ ಅಕ್ಷರಾರ್ಥವಾದ ಪದವು ಯೆಹೋವ ಎನ್ನುವ ಹೆಸರನ್ನೇ ಇಡುವುದು ಉತ್ತಮವಾದ ಕೆಲಸ, ಆದರೆ ಕೆಲವೊಂದು ಅನುವಾದಗಳು ಕೆಲವೊಂದು ಸ್ಥಳಗಳಲ್ಲಿ ಮಾತ್ರ ವಾಕ್ಯವನ್ನು ಸ್ವಾಭಾವಿಕವಾಗಿಯು ಮತ್ತು ಸ್ಪಷ್ಟವಾಗಿರಲು ಸರ್ವನಾಮವನ್ನು ಮಾತ್ರವೇ ಉಪಯೋಗಿಸುವುದಕ್ಕೆ ನಿರ್ಣಯಿಸಿಕೊಂಡಿರುತ್ತಾರೆ..
  • “ಯೆಹೋವನು ಹೀಗೆನ್ನುತ್ತಾನೆ, “ ಎನ್ನುವ ವಾಕ್ಯವನ್ನು ಉಪಯೋಗಿಸಿ ಮಾತುಗಳನ್ನು ಪರಿಚಯಿಸುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೇವರು, ಒಡೆಯ, ಕರ್ತನು, ತೋರಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 09:14 “ನಾನು ಇರುವಾತನಾಗಿದ್ದೇನೆ”. ‘ಇರುವಾತನು ನಿನ್ನ ಬಳಿಗೆ ನನ್ನನ್ನು ಕಳುಹಿಸಿದ್ದಾನೆ’ ‘ನಾನು ನಿಮ್ಮ ಪಿತೃಗಳಾದ ಅಬ್ರಾಹಾಮ, ಇಸಾಕ, ಮತ್ತು ಯಾಕೋಬರ ದೇವರಾದ ___ ಯೆಹೋವ ___, ಇದೆ ನನ್ನ ಹೆಸರು ಎಂದಿಗೂ ಇರುವುದು’” ಎಂದೂ ಅವರಿಗೆ ಹೇಳು ಎಂದು ದೇವರು ಹೇಳಿದರು.
  • 13:04 ಆದನಂತರ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟರು, ಮತ್ತು “ಐಗುಪ್ತದಲ್ಲಿ ನಿಮ್ಮನ್ನು ಗುಲಾಮಗಿರಿಯಿಂದ ರಕ್ಷಿಸಿದ ನಿಮ್ಮ ದೇವರಾದ ___ ಯೆಹೋವ ___ ನಾನೇ ಆಗಿದ್ದೇನೆ” ಇತರ ದೇವರುಗಳನ್ನು ಆರಾಧನೆ ಮಾಡಬೇಡಿರಿ” ಎಂದು ಎಂದು ಹೇಳಿದನು.
  • 13:05 “ವಿಗ್ರಹಗಳನ್ನು ಮಾಡಬೇಡಿರಿ, ಅಥವಾ ಅವುಗಳನ್ನು ಆರಾಧಿಸಬೇಡಿರಿ, ಯಾಕಂದರೆ ನಾನು ___ ಯೆಹೋವ ___, ರೋಷವುಳ್ಳ ದೇವರಾಗಿದ್ದೇನೆ.”
  • 16:01 ಇಸ್ರಾಯೇಲ್ಯರು ನಿಜ ದೇವರಾಗಿರುವ __ ಯೆಹೋವನನ್ನು ___ ಬಿಟ್ಟು, ಕಾನಾನ್ಯ ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು.
  • 19:10 “ಅಬ್ರಾಹಾಮ, ಇಸಾಕ, ಯಾಕೋಬರ ದೇವರಾಗಿರುವ ___ ಯೆಹೋವನೇ __, ನೀನು ಇಸ್ರಾಯೇಲ್ ದೇವರೆಂದು ಮತ್ತು ನಾನು ನಿನ್ನ ಸೇವಕನೆಂದು ಈ ದಿನದಂದು ನಮಗೆ ತೋರಿಸಿಕೋ” ಎಂದು ಎಲೀಯ ಪ್ರಾರ್ಥನೆ ಮಾಡಿದನು.

ಪದ ಡೇಟಾ:

  • Strong's: H3050, H3068, H3069

ಯೇಸು, ಯೇಸು ಕ್ರಿಸ್ತ, ಕ್ರಿಸ್ತ ಯೇಸು

ಸತ್ಯಾಂಶಗಳು:

ಯೇಸು ದೇವರ ಮಗ. “ಯೇಸು” ಎನ್ನುವ ಹೆಸರಿಗೆ “ಯೆಹೋವ ರಕ್ಷಿಸುವನು” ಎಂದರ್ಥ. “ಕ್ರಿಸ್ತ” ಎನ್ನುವ ಪದವು ಬಿರುದಾಗಿರುತ್ತದೆ, ಇದಕ್ಕೆ “ಅಭಿಷಿಕ್ತ” ಎಂದರ್ಥ ಮತ್ತು ಇದಕ್ಕೆ ಮತ್ತೊಂದು ಹೆಸರು “ಮೆಸ್ಸೀಯ”.

  • ಈ ಎರಡು ಹೆಸರುಗಳು ಯಾವಾಗಲೂ “ಯೇಸು ಕ್ರಿಸ್ತ” ಎಂದು ಅಥವಾ “ಕ್ರಿಸ್ತ ಯೇಸು” ಎಂದು ಬರದಿರುತ್ತವೆ. ಜನರ ಪಾಪಗಳಿಗಾಗಿ ನಿತ್ಯಶಿಕ್ಷೆಯಿಂದ ಜನರನ್ನು ರಕ್ಷಿಸುವದಕ್ಕೆ ಬಂದ ದೇವರ ಮಗ ಮೆಸ್ಸೀಯ ಎಂದು ಈ ಎಲ್ಲಾ ಹೆಸರುಗಳು ಒತ್ತಿ ಹೇಳುತ್ತವೆ.
  • ಅದ್ಭುತವಾದ ವಿಧಾನದಲ್ಲಿ, ದೇವರ ನಿತ್ಯನಾದ ಮಗನು ಒಬ್ಬ ಮನುಷ್ಯನಾಗಿ ಹುಟ್ಟುವುದಕ್ಕೆ ಪವಿತ್ರಾತ್ಮನು ಕಾರಣನಾದನು. ದೇವದೂತನು ಅವನ ತಾಯಿಗೆ ಆತನನ್ನು “ಯೇಸು” ಎಂದು ಕರೆಯಬೇಕೆಂದು ಹೇಳಿದನು ಏಕೆಂದರೆ ಅವನು ಜನರನ್ನು ಅವರ ಪಾಪದಿಂದ ರಕ್ಷಿಸಲು ಉದ್ದೇಶಿಸಿದ್ದಾನೆ.
  • ಯೇಸು ಅನೇಕವಾದ ಅದ್ಭುತ ಕಾರ್ಯಗಳನ್ನು ಮಾಡಿರುವದರಿಂದ ಆತನು ದೇವರೆಂದು, ಆತನು ಕ್ರಿಸ್ತನೆಂದು, ಅಥವಾ ಮೆಸ್ಸೀಯನೆಂದು ತೋರಿಕೆಯಾಗಿದೆ.

ಅನುವಾದ ಸಲಹೆಗಳು:

  • ಅನೇಕ ಭಾಷೆಗಳಲ್ಲಿ “ಯೇಸು” (ಅಥವಾ ಜೀಸಸ್) ಮತ್ತು “ಕ್ರಿಸ್ತ” (ಕ್ರೈಸ್ಟ್) ಎನ್ನುವ ಪದಗಳನ್ನು ಮೂಲ ಭಾಷೆಯಲ್ಲಿ ಇರುವಂತೆಯೇ ಒಂದೇ ರೀತಿಯಾಗಿ ಉಚ್ಚರಿಸುತ್ತಾರೆ. ಉದಾಹರಣೆಗೆ, “ಜಿಸಕ್ರಿಸ್ಟೋ,” “ಜೀಜಸ್ ಕ್ರಿಸ್ಟಸ್”, “ಯೆಸಸ್ ಕ್ರಿಸ್ಟಸ್” ಅಥವಾ “ಹೇಸುಕೃಷ್ಟೊ” ಎನ್ನುವ ಪದಗಳು ವಿವಿಧವಾದ ಭಾಷೆಗಳಲ್ಲಿ ಅನುವಾದ ಬೇರೊಂದು ವಿಧಾನದ ಪದಗಳಾಗಿರುತ್ತವೆ.
  • “ಕ್ರಿಸ್ತ” ಎನ್ನುವ ಪದಕ್ಕೆ ಕೆಲವೊಂದು ಭಾಷೆಗಳಲ್ಲಿ ಕೇವಲ “ಮೆಸ್ಸೀಯ” ಎನ್ನುವ ಪದವನ್ನೇ ಎಲ್ಲಾ ಕಡೆಗೆ ಉಪಯೋಗಿಸುತ್ತಿರುತ್ತಾರೆ.
  • ಈ ಪದಗಳನ್ನು ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಯಾವರೀತಿ ಉಚ್ಚರಣೆ ಮಾಡುತ್ತಾರೋ ಎಂದು ನೋಡಿಕೊಳ್ಳಿರಿ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ದೇವರು, ತಂದೆಯಾದ ದೇವರು, ಮಹಾ ಯಾಜಕ, ದೇವರ ರಾಜ್ಯ, ಮರಿಯ, ಕ್ರಿಸ್ತ, ದೇವರ ಮಗ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 22:04 “ನೀನು ಗರ್ಭಿಣಿಯಾಗುವಿ ಮತ್ತು ಒಂದು ಗಂಡು ಮಗುವಿಗೆ ಜನ್ಮವನ್ನು ಕೊಡುವಿ” ಎಂದು ದೂತ ಹೇಳಿತು. ನೀನು ಆತನಿಗೆ ___ ಯೇಸು ___ ಎಂದು ಹೆಸರು ಇಡಬೇಕು ಮತ್ತು ಆತನು ಮೆಸ್ಸೀಯನಾಗಿರುವನು.”
  • 23:02 “ಆತನಿಗೆ ___ ಯೇಸು ___ (ಈ ಪದಕ್ಕೆ “ಯೆಹೋವನು ರಕ್ಷಿಸುವನು” ಎಂದರ್ಥ) ಎಂದು ಹೆಸರಿಡಬೇಕು, ಯಾಕಂದರೆ ಆತನು ಜನರ ಪಾಪಗಳಿಂದ ಬಿಡಿಸುವನು.”
  • 24:07 ___ ಯೇಸು ___ ಯಾವ ಪಾಪವನ್ನು ಮಾಡದಿದ್ದರೂ, ಯೋಹಾನನು ಆತನಿಗೆ (ಯೇಸುವಿಗೆ) ದೀಕ್ಷಾಸ್ನಾನವನ್ನು ಕೊಟ್ಟನು,
  • 24:09 ದೇವರು ಒಬ್ಬನೇ ಇದ್ದಾನೆ. ಆದರೆ ಯೋಹಾನನು ತಂದೆಯ ಸ್ವರವನ್ನು ಕೇಳಿದನು, ___ ಯೇಸುವನ್ನು ___ ನೋಡಿದನು ಮತ್ತು ಆತನು ___ ಯೇಸುವಿಗೆ ___ ದೀಕ್ಷಾಸ್ನಾನ ಕೊಟ್ಟನಂತರ ಪವಿತ್ರಾತ್ಮನನ್ನು ನೋಡಿದನು.
  • 25:08 ಸೈತಾನನ ಶೋಧನೆಗಳಿಗೆ ___ ಯೇಸು ___ ಅವಕಾಶ ಕೊಡಲಿಲ್ಲ, ಆದ್ದರಿಂದ ಸೈತಾನನು ಆತನನ್ನು ಬಿಟ್ಟು ಹೋದನು.
  • 26:08 ಆದನಂತರ, ___ ಯೇಸು ___ ಗಲಿಲಾಯ ಪ್ರಾಂತ್ಯಕ್ಕೆ ಹೊರಟು ಹೋದನು, ಮತ್ತು ಆತನ ಬಳಿಗೆ ಹೆಚ್ಚಿನ ಜನಸಮೂಹಗಳು ಬಂದವು. ಅವರು ರೋಗಿಗಳಾಗಿದ್ದವರನ್ನು ಅಥವಾ ಅಂಗವಿಕಲರನ್ನು ಹೆಚ್ಚಾಗಿ ಕರೆದುಕೊಂಡುಬಂದರು, ಅವರಲ್ಲಿ ಕುರುಡರು, ಕುಂಟರು, ಕಿವುಡರು, ಅಥವಾ ಮೂಕರು ಇದ್ದಿದ್ದರು. ___ ಯೇಸು ___ ಅವರೆಲ್ಲರನ್ನು ಮುಟ್ಟಿ ಗುಣಪಡಿಸಿದರು.
  • 31:03 ಆದನಂತರ, ___ ಯೇಸು ___ ಪ್ರಾರ್ಥನೆಯನ್ನು ಮುಗಿಸಿದನು ಮತ್ತು ಶಿಷ್ಯರ ಬಳಿಗೆ ಹೊರಟನು. ಆತನು ನೀರಿನ ಮೇಲೆ ನಡೆದುಕೊಂಡು ಅವರ ದೋಣಿ ಇರುವ ಕಡೆಗೆ ಬಂದನು.
  • 38:02 ___ ಯೇಸು ___ ಮೆಸ್ಸೀಯ ಎಂದು ಯೆಹೂದ್ಯರೆಲ್ಲರು ಒಪ್ಪಿಕೊಂಡಿಲ್ಲವೆಂದು ಮತ್ತು ಆತನನ್ನು ಅವರು ಕೊಲ್ಲಬೇಕೆಂದಿದ್ದರೆಂದು ಅವನಿಗೆ (ಯೂದಾನಿಗೆ) ಗೊತ್ತು.
  • 40:08 ತನ್ನ ಮರಣದ ಮೂಲಕ ಜನರೆಲ್ಲರೂ ದೇವರ ಬಳಿಗೆ ಬರುವ ಒಂದು ಮಾರ್ಗವನ್ನು ___ ಯೇಸು ___ ತೆರೆದನು.
  • 42:11 ಆದನಂತರ, ___ ಯೇಸು ___ ಪರಲೋಕಕ್ಕೆ ಎತ್ತಲ್ಪಟ್ಟನು, ಅವರು ನೋಡದಂತೆ ಒಂದು ಮೇಘವು ಆತನನ್ನು ಆವರಿಸಿತು. ___ ಯೇಸು ___ ಎಲ್ಲವನ್ನು ಆಳುವುದಕ್ಕೆ ತಂದೆ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.
  • 50:17 __ ಯೇಸು __ ಮತ್ತು ತನ್ನ ಜನರು ಹೊಸ ಭೂಮಿಯ ಮೇಲೆ ನಿವಾಸ ಮಾಡುವರು ಮತ್ತು ಆತನು ಉಂಟಾದ ಪ್ರತಿಯೊಂದರ ಮೇಲೆ ಶಾಶ್ವತವಾಗಿ ಆಳುತ್ತಾಯಿರುವನು. ಆತನು ಕಣ್ಣೀರನ್ನು ಹೊರೆಸುವನು ಮತ್ತು ಆಲ್ಲಿ ಯಾವ ನೋವು, ಬಾಧೆ, ಅಳು, ಕೆಟ್ಟತನ, ಶ್ರಮೆ, ಅಥವಾ ಮರಣ ಇರುವುದಿಲ್ಲ. ___ ಯೇಸು ___ ನ್ಯಾಯದಿಂದಲೂ ಮತ್ತು ಸಮಾಧಾನದಿಂದಲೂ ಆತನ ರಾಜ್ಯವನ್ನು ಆಳುವನು, ಮತ್ತು ಆತನು ತನ್ನ ಜನರೊಂದಿಗೆ ಯಾವಾಗಲೂ ಇರುವನು.

ಪದ ಡೇಟಾ:

  • Strong's: G2424, G5547

ಯೋಗ್ಯ, ಯೋಗ್ಯತೆ, ಅಯೋಗ್ಯ, ಯೋಗ್ಯರಹಿತ

ಪದದ ಅರ್ಥವಿವರಣೆ:

“ಯೋಗ್ಯ” ಎನ್ನುವ ಪದವು ಗೌರವ ಅಥವಾ ಘನ ಮಾನಗಳಿಗೆ ಅರ್ಹರಾಗಿರುವ ವ್ಯಕ್ತಿಯನ್ನು ಅಥವಾ ಯಾವುದೇ ಒಂದು ವಿಷಯವನ್ನು ಸೂಚಿಸುತ್ತದೆ. “ಯೋಗ್ಯತೆಯನ್ನು ಹೊಂದಿರು” ಎನ್ನುವ ಮಾತಿಗೆ ಬೆಲೆಯುಳ್ಳದ್ದಾಗಿರುವುದು ಅಥವಾ ಪ್ರಾಮುಖ್ಯತೆಯಿಂದಿರುವುದು ಎಂದರ್ಥ. “ಯೋಗ್ಯರಹಿತ” ಎನ್ನುವ ಪದಕ್ಕೆ ಯಾವುದೇ ಬೆಲೆಯನ್ನು ಹೊಂದದಿರುವುದು ಎಂದರ್ಥ.

  • ಯೋಗ್ಯವಾಗಿರುವುದು ಎನ್ನುವುದು ಪ್ರಾಮುಖ್ಯತೆಯನ್ನು ಹೊಂದಿರುವುದು ಅಥವಾ ಬೆಲೆಯುಳ್ಳದ್ದಾಗಿರುವುದು ಎನ್ನುವುದಕ್ಕೆ ಸಂಬಂಧಪಟ್ಟಿರುತ್ತದೆ.

“ಅಯೋಗ್ಯವಾಗಿರುವುದು” ಎನ್ನುವ ಮಾತಿಗೆ ಯಾವುದೇ ವಿಶೇಷವಾದ ಗಮನಕ್ಕೆ ಅರ್ಹರಾಗದಿರುವುದು ಎಂದರ್ಥ.

  • ಯೋಗ್ಯವೆಂದು ಭಾವಿಸಬೇಡಿ ಎನ್ನುವ ಮಾತಿಗೆ ಇನ್ನೊಬ್ಬರಿಗಿಂತ ಕಡಿಮೆ ಪ್ರಾಮುಖ್ಯತೆಯಿದೆಯೆಂದು ಭಾವಿಸುವುದು,ಅಥವಾ ದಯೆಯನ್ನು ಅಥವಾ ಘನತೆಯನ್ನು ಪಡೆದುಕೊಳ್ಳುವ ಅರ್ಹತೆಯಿಲ್ಲವೆಂದು ಭಾವಿಸುವುದು ಎಂದರ್ಥ.

“ಅಯೋಗ್ಯ” ಮತ್ತು “ಯೋಗ್ಯರಹಿತ” ಎನ್ನುವ ಪದಗಳು ಒಂದೊಕ್ಕೊಂದು ಸಂಬಂಧವನ್ನು ಹೊಂದಿರುತ್ತವೆ, ಆದರೆ ಅವುಗಳ ಅರ್ಥಗಳು ಬೇರೆ ಬೇರೆಯಾಗಿರುತ್ತವೆ. “ಅಯೋಗ್ಯ” ಎನ್ನುವ ಪದಕ್ಕೆ ಯಾವುದೇ ಘನತೆಗೆ ಅಥವಾ ಗೌರವಕ್ಕೆ ಅರ್ಹವಾಗದಿರುವುದು ಎಂದರ್ಥವಾಗಿರುತ್ತದೆ. “ಯೋಗ್ಯರಹಿತವಾಗಿರುವುದು” ಎಂದರೆ ಯಾವುದೇ ಉದ್ದೇಶವನ್ನು ಅಥವಾ ಬೆಲೆಯನ್ನು ಹೊಂದದಿರುವುದು ಎಂದರ್ಥ.

ಅನುವಾದ ಸಲಹೆಗಳು:

  • “ಯೋಗ್ಯ” ಎನ್ನುವ ಪದವನ್ನು “ಅರ್ಹವಾಗಿರುವುದು” ಅಥವಾ “ಪ್ರಾಮುಖ್ಯತೆ” ಅಥವಾ “ಬೆಲೆಯುಳ್ಳದ್ದು” ಎಂದೂ ಅನುವಾದ ಮಾಡಬಹುದು.
  • “ಯೋಗ್ಯ” ಎನ್ನುವ ಪದವನ್ನು “ಬೆಲೆ” ಅಥವಾ “ಪ್ರಾಮುಖ್ಯತೆ” ಎಂದೂ ಅನುವಾದ ಮಾಡಬಹುದು.
  • “ಯೋಗ್ಯವನ್ನು ಹೊಂದಿರುವುದು” ಎನ್ನುವ ಮಾತನ್ನು “ಬೆಲೆಯನ್ನು ಹೊಂದಿರುವುದು” ಅಥವಾ “ಪ್ರಾಮುಖ್ಯವಾದದ್ದು” ಎಂದೂ ಅನುವಾದ ಮಾಡಬಹುದು.
  • “ಇತರೆಗಳಿಗಿಂತ ಯೋಗ್ಯವಾದದ್ದು” ಎನ್ನುವ ಮಾತನ್ನು “ಇತರೆಗಳಿಗಿಂತ ಹೆಚ್ಚಿನ ಬೆಲೆಯುಳ್ಳದ್ದು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಅಯೋಗ್ಯ” ಎನ್ನುವ ಪದವನ್ನು “ಅಪ್ರಾಮುಖ್ಯ” ಅಥವಾ “ಗೌರವಕ್ಕೆ ಯೋಗ್ಯವಲ್ಲದ” ಅಥವಾ “ಅರ್ಹವಲ್ಲದಾಗಿರುವುದು” ಎಂದೂ ಅನುವಾದ ಮಾಡಬಹುದು.
  • “ಅಯೋಗ್ಯ” ಎನ್ನುವ ಮಾತನ್ನು “ಬೆಲೆಯಿಲ್ಲದರಿವುದು” ಅಥವಾ “ಉದ್ದೇಶವಿಲ್ಲದಿರುವುದು” ಅಥವಾ “ಯೋಗ್ಯವಲ್ಲದ್ದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಘನಪಡಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong’s: H117, H639, H1929, H3644, H4242, H4373, H4392, H4592, H4941, H6994, H7386, H7939, G96, G514, G515, G516, G2425, G2661, G2735

ರಕ್ತ

ಅರ್ಥವಿವರಣೆ:

“ರಕ್ತ” ಎಂಬ ಪದವು ಪೆಟ್ಟು ಅಥವಾ ಗಾಯವಾದಾಗ ವ್ಯಕ್ತಿಯ ಚರ್ಮದಿಂದ ಹೊರಬರುವ ಕೆಂಪು ದ್ರವವನ್ನು ಸೂಚಿಸುತ್ತದೆ. ರಕ್ತವು ವ್ಯಕ್ತಿಯ ಇಡೀ ದೇಹಕ್ಕೆ ಜೀವ ನೀಡುವ ಪೋಷಕಾಂಶಗಳನ್ನು ಒದಗಿಸುತ್ತದೆ. ಸತ್ಯವೇದದಲ್ಲಿ, "ರಕ್ತ" ಎಂಬ ಪದವನ್ನು ಸಾಂಕೇತಿಕವಾಗಿ "ಜೀವನ" ಮತ್ತು/ ಅಥವಾ ಹಲವಾರು ಇತರ ಪರಿಕಲ್ಪನೆಗಳನ್ನು ಅರ್ಥೈಸಲು ಬಳಸಲಾಗುತ್ತದೆ.

  • ಜನರು ದೇವರಿಗೆ ಬಲಿಗಳನ್ನು ಅರ್ಪಿಸಿದಾಗ, ಅವರು ಒಂದು ಪ್ರಾಣಿಯನ್ನು ಕೊಂದು ಅದರ ರಕ್ತವನ್ನು ಬಲಿಪೀಠದ ಮೇಲೆ ಸುರಿಯುವರು. ಇದು ಜನರ ಪಾಪಗಳಿಗೆ ಪಾವತಿಸಲು ಪ್ರಾಣಿಗಳ ಜೀವನದ ತ್ಯಾಗವನ್ನು ಸಂಕೇತಿಸುತ್ತದೆ.
  • “ಮಾಂಸ ಮತ್ತು ರಕ್ತ” ಎಂಬ ಅಭಿವ್ಯಕ್ತವು ಮನುಷ್ಯರನ್ನು ಸೂಚಿಸುತ್ತದೆ.
  • “ಸ್ವಂತ ಮಾಂಸ ಮತ್ತು ರಕ್ತ” ಎಂಬ ಅಭಿವ್ಯಕ್ತವು ರಕ್ತ ಸಂಬಂಧ ಹೊಂದಿರುವ ಜನರನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಭಾಷೆಯಲ್ಲಿ ಉಪಯೋಗಿಸುವ ಪದದೊಂದಿಗೆ ಮಾತ್ರವೇ ಅನುವಾದ ಮಾಡಿರಿ.
  • “ರಕ್ತ ಮಾಂಸಗಳು” ಎನ್ನುವ ಮಾತನ್ನು “ಜನರು” ಅಥವಾ “ಮನುಷ್ಯರು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ನನ್ನ ಸ್ವಂತ ಶರೀರ ಮತ್ತು ಸ್ವಂತ ರಕ್ತ” ಎನ್ನುವ ಮಾತನ್ನು “ನನ್ನ ಸ್ವಂತ ಕುಟುಂಬ” ಅಥವಾ “ನನ್ನ ಸ್ವಂತ ಬಂಧುಗಳು” ಅಥವಾ “ನನ್ನ ಸ್ವಂತ ಜನರು” ಎಂಬುದಾಗಿಯೂ ಅನುವದಾ ಮಾಡಬಹುದು.
  • ಅನುವಾದ ಮಾಡುವ ಭಾಷೆಯಲ್ಲಿ ಈ ಅರ್ಥ ಬರುವ ಬೇರೊಂದು ಮಾತು ಇದ್ದರೆ, ಆ ಮಾತನ್ನು “ರಕ್ತ ಮಾಂಸಗಳು” ಎನ್ನುವ ಮಾತಿಗೆ ಆ ಪದವನ್ನು ಉಪಯೋಗಿಸಬಹುದು. .

(ಈ ಪದಗಳನ್ನು ಸಹ ನೋಡಿರಿ: ರಕ್ತ ಸುರಿಸು; ಮಾಂಸ; ಜೀವ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 08:03 ಯೋಸೇಫನ ಅಣ್ಣಂದಿಯರು ಮನೆಗೆ ಹಿಂದುರಿಗಿ ಬರುವುದಕ್ಕೆ ಮುಂಚಿತವಾಗಿ, ಅವರು ಯೋಸೇಫನ ಅಂಗಿಯನ್ನು ಅರಿದು, ಅದನ್ನು ಒಂದು ಹೋತದ __ ರಕ್ತದೊಳಗೆ __ ಅದ್ದಿದರು.
  • 10:03 ದೇವರು ನೈಲ್ ನದಿಯನ್ನು __ರಕ್ತವನ್ನಾಗಿ __ ಮಾಡಿದನು, ಆದರೆ ಫರೋಹನು ಇಸ್ರಾಯೇಲ್ಯರು ಹೊರ ಹೋಗಲು ಬಿಡಲಿಲ್ಲ.
  • 11:05 ಇಸ್ರಾಯೇಲ್ಯರ ಎಲ್ಲಾ ಮನೆಗಳ ಬಾಗಿಲಗಳ ಸುತ್ತಲು __ ರಕ್ತವನ್ನು ಹಚ್ಚಿದರು, ಇದರಿಂದ ದೇವರು ಆ ಮನೆಗಳ ಮೂಲಕ ಹಾದುಹೋಗಿ, ಆ ಮನೆಗಳಲ್ಲಿರುವ ಪ್ರತಿಯೊಬ್ಬರನ್ನು ಸುರಕ್ಷಿತವಾಗಿಟ್ಟನು. ಕುರಿಯ __ರಕ್ತದಿಂದ ಅವರೆಲ್ಲರು ರಕ್ಷಣೆ ಹೊಂದಿದರು.
  • 13:09 ಬಲಿಯಾದ ಪ್ರಾಣಿಯ __ ರಕ್ತವು __ ಒಬ್ಬ ವ್ಯಕ್ತಿಯ ಪಾಪವನ್ನು ಕಪ್ಪಿತು ಮತ್ತು ಆ ವ್ಯಕ್ತಿ ದೇವರ ದೃಷ್ಟಿಯಲ್ಲಿ ಶುದ್ಧನಾಗಿ ಕಾಣುವಂತೆ ಮಾಡಿತು.
  • 38:05 ಯೇಸು ಪಾನ ಪಾತ್ರೆಯನ್ನು ತೆಗೆದುಕೊಂಡು, ಇದು ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುತ್ತಿರುವ “ನನ್ನ ಹೊಸ ಒಡಂಬಡಿಕೆಯ __ ರಕ್ತ __, ಇದರಲ್ಲಿರುವುದು ಎಲ್ಲರೂ ಕುಡಿಯಿರಿ” ಎಂದು ಹೇಳಿದನು.
  • 48:10 ಒಬ್ಬ ವ್ಯಕ್ತಿ ಯೇಸುವನ್ನು ನಂಬಿದಾಗ, ಯೇಸುವಿನ __ ರಕ್ತವು __ ಆ ವ್ಯಕ್ತಿಯ ಪಾಪಗಳನ್ನು ತೆಗೆದು ಹಾಕುವುದು ಮತ್ತು ಅವನ ಮೇಲೆ ಬರುವ ದೇವರ ಶಿಕ್ಷೆಯನ್ನು ತೊಲಗಿಸುವುದು.

ಪದ ಡೇಟಾ:

  • Strong's: H1818, H5332, G129, G130, G131,

ರಕ್ತಬೋಳ

ಅರ್ಥವಿವರಣೆ:

ರಕ್ತಬೋಳ ಎನ್ನುವುದು ಆಫ್ರಿಕಾ ಮತ್ತು ಏಷ್ಯಗಳಲ್ಲಿ ಬೆಳೆಯುವ ಸುಗಂಧ ಸಸ್ಯಗಳಿಂದ ತಯಾರಿಸುವ ಸುಗಂಧ ದ್ರವ್ಯ ಅಥವಾ ತೈಲವಾಗಿರುತ್ತದೆ. ಇದು ಸಾಂಬ್ರಾಣಿಗೆ ಸಂಬಂಧಪಟ್ಟಿರುತ್ತದೆ.

  • ರಕ್ತಬೋಳವನ್ನು ಧೂಪದ್ರವ್ಯ, ಸುಗಂಧ ಮತ್ತು ಔಷಧವನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ ಮತ್ತು ಶವಗಳನ್ನು ಸಮಾಧಿಗೆ ಸಿದ್ಧಗೊಳಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ.
  • ಯೇಸುವು ಜನಿಸಿದಾಗ ಆತನಿಗೆ ಜೋಯಿಸರು ಕೊಟ್ಟ ಉಡುಗೊರೆಗಳಲ್ಲಿ ರಕ್ತಬೋಳವು ಒಂದಾಗಿರುತ್ತದೆ.
  • ಯೇಸುವನ್ನು ಶಿಲುಬೆಗೆ ಏರಿಸಿದಾಗ ನೋವನ್ನು ಕಡಿಮೆ ಮಾಡುವುದಕ್ಕೆ ರಕ್ತಬೋಳದಲ್ಲಿ ದ್ರಾಕ್ಷಾರಸವನ್ನು ಕಲಸಿಕೊಟ್ಟಿದ್ದರು.

(ಇವುಗಳನ್ನು ಸಹ ನೋಡಿರಿ : ಸಾಂಬ್ರಾಣಿ, ಜೋಯಿಸರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದದ ಡೇಟಾ:

  • Strong's: H3910, H4753, G34640, G46660, G46690

ರಕ್ಷಕ, ಸಂರಕ್ಷಕ (ಅಥವಾ ಉದ್ಧಾರಕ)

ಸತ್ಯಾಂಶಗಳು:

“ಸಂರಕ್ಷಕ” ಎನ್ನುವ ಪದವು ಆಪಾಯಕರ ಸ್ಥಿತಿಯಿಂದ ಇತರರನ್ನು ಕಾಪಾಡುವ ಅಥವಾ ರಕ್ಷಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ಇತರರಿಗಾಗಿ ತನ್ನ ಬಲವನ್ನು ಒದಗಿಸಿಕೊಡುವ ಅಥವಾ ತನ್ನ ಬಲವನ್ನು ಕೊಟ್ಟು ರಕ್ಷಿಸುವ ವ್ಯಕ್ತಿಯನ್ನು ಕೂಡ ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ ರಕ್ಷಕನಾಗಿ ಸೂಚಿಸಲ್ಪಟ್ಟಿದ್ದಾನೆ, ಯಾಕಂದರೆ ಆತನು ಅವರನ್ನು ಅನೇಕಸಲ ತಮ್ಮ ವೈರಿಗಳಿಂದ ರಕ್ಷಿಸಿದ್ದನು, ಅವರಿಗೆ ಬಲವನ್ನು ಕೊಟ್ಟಿದ್ದನು, ಮತ್ತು ಅವರು ಜೀವನ ಮಾಡುವುದಕ್ಕೆ ಬೇಕಾದವುಗಳನ್ನೆಲ್ಲಾ ಅನುಗ್ರಹಿಸಿದ್ದನು.

ಹಳೆಒಂಡಂಬಡಿಕೆಯಲ್ಲಿ, ದೇವರು ಇಸ್ರಾಯೇಲ್ಯರನ್ನು ಆಕ್ರಮಿಸಲು ಬಂದ ಇತರ ಗುಂಪುಗಳ ವಿರುದ್ಧ ಮುನ್ನೆಡೆಸುವ ಮೂಲಕ ಅವರನ್ನು ರಕ್ಷಿಸಲು ನ್ಯಾಯಧೀಶರನ್ನು ನೇಮಿಸಿದನು. ಕೆಲೊವೊಮ್ಮೆ ಈ ನ್ಯಾಯಾಧೀಶರನ್ನು "ಸಂರಕ್ಷಕ" ಎಂದು ಕರೆಯಲಾಗುತ್ತಿತ್ತು. ಹಳೆ ಒಡಂಬಡಿಕೆಯ ನ್ಯಾಯಸ್ಥಾಪಕರು ಪುಸ್ತಕದಲ್ಲಿ ನ್ಯಾಯಾಡೀಶರು ಇಸ್ರಾಯೇಲ್ಯರನ್ನು ಆಳುತ್ತಿದ್ದ ಸಮಯವನ್ನು ದಾಖಿಸಲಾಗಿದೆ.

  • ಹೊಸ ಒಡಂಬಡಿಕೆಯಲ್ಲಿ “ರಕ್ಷಕ” ಎನ್ನುವ ಪದವನ್ನು ಯೇಸು ಕ್ರಿಸ್ತನನ್ನು ಸೂಚಿಸುವುದಕ್ಕೆ ವಿವರಣೆಯಾಗಿ ಅಥವಾ ಬಿರುದಾಗಿ ಉಪಯೋಗಿಸಲ್ಪಟ್ಟಿರುತ್ತದೆ, ಯಾಕಂದರೆ ಜನರು ಮಾಡಿದ ಪಾಪಗಳಿಗಾಗಿ ಹೊಂದುವ ನಿತ್ಯ ಶಿಕ್ಷೆಯಿಂದ ಅವರನ್ನು ಆತನು ರಕ್ಷಿಸುವನು. ಆತನು ತಮ್ಮ ಪಾಪಗಳ ನಿಯಂತ್ರಣದಿಂದಲೂ ಅವರನ್ನು ಬಿಡಿಸುವನು.

ಅನುವಾದ ಸಲಹೆಗಳು:

  • ಸಾಧ್ಯವಾದರೆ “ರಕ್ಷಕ” ಎನ್ನುವ ಪದವನ್ನು “ರಕ್ಷಿಸು” ಮತ್ತು “ರಕ್ಷಣೆ” ಎನ್ನುವ ಪದಗಳಿಗೆ ಸಂಬಂಧಪಟ್ಟ ಪದಗಳನ್ನು ಉಪಯೋಗಿಸಿ ಅನುವಾದ ಮಾಡಿರಿ.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ರಕ್ಷಿಸುವ ವ್ಯಕ್ತಿ” ಅಥವಾ “ರಕ್ಷಿಸುವ ದೇವರು” ಅಥವಾ “ಅಪಾಯದಿಂದ ಬಿಡುಗಡೆ ಮಾಡುವ ವ್ಯಕ್ತಿ” ಅಥವಾ “ವೈರಿಗಳಿಂದ ಕಾಪಾಡುವ ವ್ಯಕ್ತಿ” ಅಥವಾ “ಪಾಪದಿಂದ (ಜನರನ್ನು) ಕಾಪಾಡುವ ವ್ಯಕ್ತಿಯಾದ ಯೇಸು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಬಿಡುಗಡೆ ಮಾಡು, ಯೇಸು, ರಕ್ಷಿಸು, ಕಾಪಾಡು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3467, G4990

ರಕ್ಷಿಸು, ರಕ್ಷಿಸುವುದು, ರಕ್ಷಿಸಲ್ಪಟ್ಟಿದೆ, ಸಂರಕ್ಷಣೆ, ರಕ್ಷಣೆ

ಪದದ ಅರ್ಥವಿವರಣೆ:

“ರಕ್ಷಿಸು” ಎನ್ನುವ ಪದವು ಯಾರೇ ಒಬ್ಬರು ಯಾವುದಾದರೊಂದು ಕೆಟ್ಟದ್ದನ್ನು ಅಥವಾ ಹಾನಿಕರವಾದದ್ದನ್ನು ಅನುಭವಿಸದಂತೆ ಅವರನ್ನು ಕಾಪಾಡುವುದನ್ನು ಸೂಚಿಸುತ್ತದೆ. “ಸಂರಕ್ಷಣೆಯಿಂದಿರುವುದು” ಎಂದರೆ ಹಾನಿಯಿಂದ ಅಥವಾ ಅಪಾಯಕರ ಸ್ಥಿತಿಯಿಂದ ಸಂರಕ್ಷಿಸುವುದು ಎಂದರ್ಥ.

  • ಭೌತಿಕ ಅರ್ಥವನ್ನು ಸೂಚಿಸಿದಾಗ, ಜನರು ಹಾನಿಕರವಾದವುಗಳಿಂದ, ಅಪಾಯದಿಂದ ಅಥವಾ ಮರಣದಿಂದ ರಕ್ಷಿಸಲ್ಪಡುವರು ಅಥವಾ ತಪ್ಪಿಸಲ್ಪಡುವರು.
  • ಆತ್ಮೀಯ ಅರ್ಥವನ್ನು ಸೂಚಿಸಿದಾಗ, ಒಬ್ಬ ವ್ಯಕ್ತಿ ಶಿಲುಬೆಯ ಮೇಲೆ ಯೇಸುವಿನ ಮರಣದ ಮೂಲಕ “ರಕ್ಷಿಸಲ್ಪಟ್ಟಿದ್ದಾನೆಂದರೆ”, ಆ ವ್ಯಕ್ತಿಯನ್ನು ದೇವರು ಕ್ಷಮಿಸಿ, ತಾನು ಮಾಡಿದ ಪಾಪಕ್ಕೆ ನರಕದಲ್ಲಿ ಶಿಕ್ಷೆಯನ್ನು ಅನುಭವಿಸದಂತೆ ಮಾಡಿದ್ದಾನೆಂದರ್ಥ.
  • ಜನರು ಅಪಾಯದಿಂದ ಜನರನ್ನು ರಕ್ಷಿಸಿಕೊಳ್ಳಬಹುದು ಅಥವಾ ತಪ್ಪಿಸಬಹುದು, ಆದರೆ ದೇವರು ಮಾತ್ರವೇ ಜನರನ್ನು ತಮ್ಮ ಪಾಪಗಳಿಗಾಗಿ ನಿತ್ಯ ಶಿಕ್ಷೆಯನ್ನು ಅನುಭವಿಸದಂತೆ ಮಾಡುವ ಶಕ್ತನಾಗಿದ್ದಾನೆ.

“ರಕ್ಷಣೆ” ಎನ್ನುವ ಪದವು ದುಷ್ಟತ್ವದಿಂದ ಮತ್ತು ಅಪಾಯದಿಂದ ರಕ್ಷಣೆ ಹೊಂದುವುದನ್ನು ಅಥವಾ ತಪ್ಪಿಸಲ್ಪಡುವುದನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ರಕ್ಷಣೆ” ಎನ್ನುವುದು ಸಾಧಾರಣವಾಗಿ ಯೇಸುವಿನಲ್ಲಿ ನಂಬಿಕೆ ಇಟ್ಟು, ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡೆಯುವವರಿಗೆ ದೇವರಿಂದ ಅನುಗ್ರಹಿಸಲ್ಪಟ್ಟ ಆತ್ಮೀಯಕವಾದ ಮತ್ತು ನಿತ್ಯ ಬಿಡುಗಡೆಯನ್ನು ಸೂಚಿಸುತ್ತದೆ.
  • ದೇವರು ತನ್ನ ಜನರನ್ನು ತಮ್ಮ ಭೌತಿಕವಾದ ಶತ್ರುಗಳಿಂದ ತಮ್ಮನ್ನು ಬಿಡುಗಡೆಗೊಳಿಸುವ ಅಥವಾ ರಕ್ಷಿಸುವುದರ ಕುರಿತಾಗಿಯೂ ಸತ್ಯವೇದವು ಮಾತನಾಡುತ್ತಿದೆ.

ಅನುವಾದ ಸಲಹೆಗಳು:

  • “ರಕ್ಷಿಸು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬಿಡುಗಡೆ ಮಾಡು” ಅಥವಾ “ಹಾನಿಯಿಂದ ತಪ್ಪಿಸು” ಅಥವಾ ‘ಹಾನಿಕರವಾದ ಮಾರ್ಗದಿಂದ ತಪ್ಪಿಸು” ಅಥವಾ “ಮರಣಿಸುವುದರಿಂದ ಕಾಪಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಯಾರು ತಮ್ಮ ಜೀವನಗಳನ್ನು ರಕ್ಷಿಸಿಕೊಳ್ಳುತ್ತಾರೋ” ಎನ್ನುವ ಮಾತನಲ್ಲಿರುವ “ರಕ್ಷಿಸು” ಎನ್ನುವ ಪದವನ್ನು “ಭದ್ರಪಡಿಸಿಕೊಳ್ಳುವರೋ” ಅಥವಾ “ಸಂರಕ್ಷಿಸಿಕೊಳ್ಳುವರೋ” ಎಂದೂ ಅನುವಾದ ಮಾಡಬಹುದು.
  • “ಸುರಕ್ಷಿತ” ಎನ್ನುವ ಪದವನ್ನು “ಅಪಾಯದಿಂದ ಸಂರಕ್ಷಿಸಲ್ಪಡುವುದು” ಅಥವಾ “ಹಾನಿಯುಂಟು ಮಾಡದ ಸ್ಥಳದಲ್ಲಿ” ಎಂದೂ ಅನುವಾದ ಮಾಡಬಹುದು.
  • “ರಕ್ಷಣೆ” ಎನ್ನುವ ಪದವನ್ನು “ರಕ್ಷಿಸು” ಅಥವಾ “ಕಾಪಾಡು” ಎನ್ನುವ ಪದಗಳಿಗೆ ಸಂಬಂಧಪಟ್ಟಿರುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು, ಉದಾಹರಣೆಗೆ, “(ಜನರ ಪಾಪಗಳಿಗಾಗಿ ಕೊಡಲ್ಪಟ್ಟ ಶಿಕ್ಷೆಯಿಂದ) ದೇವರು ಜನರನ್ನು ರಕ್ಷಿಸುವುದು” ಅಥವಾ “(ಜನರ ಶತ್ರುಗಳಿಂದ) ದೇವರು ತನ್ನ ಜನರನ್ನು ಕಾಪಾಡುವುದು” ಎನ್ನುವ ಮಾತುಗಳಂತೆ ಅನುವಾದ ಮಾಡಬಹುದು.
  • “ದೇವರೇ ನನ್ನ ರಕ್ಷಣೆ” ಎನ್ನುವ ಮಾತನ್ನು “ನನ್ನನ್ನು ರಕ್ಷಿಸುವವನು ದೇವರೊಬ್ಬರೇ” ಎಂದೂ ಅನುವಾದ ಮಾಡಬಹುದು.
  • “ರಕ್ಷಣೆ ಬಾವಿಗಳಿಂದ ನೀನು ನೀರನ್ನು ಬರಮಾಡುವಿ” ಎನ್ನುವ ಮಾತನ್ನು “ದೇವರು ನಿನ್ನನ್ನು ಕಾಪಾಡುವದರಿಂದ ನೀರಿನ ಹಾಗೆಯೇ ನಿನ್ನನ್ನು ದಣಿವಾರಿಸುವನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶಿಲುಬೆ, ಬಿಡುಗಡೆ, ಶಿಕ್ಷಿಸು, ಪಾಪ, ರಕ್ಷಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 09:08 ಮೋಶೆ ತನ್ನ ಸಹ ಇಸ್ರಾಯೇಲ್ಯರನ್ನು ___ ರಕ್ಷಿಸುವುದಕ್ಕೆ ___ ಯತ್ನಿಸಿದನು.
  • 11:02 ದೇವರಲ್ಲಿ ನಂಬಿಕೆಯಿಟ್ಟಿರುವ ಜನರ ಮೊದಲ ಸಂತಾನ ಗಂಡು ಮಗುವನ್ನು (ಚೊಚ್ಚಲ ಮಗುವನ್ನು)___ ರಕ್ಷಿಸುವುದಕ್ಕೆ ___ ಆತನು ಒಂದು ಮಾರ್ಗವನ್ನು ಅನುಗ್ರಹಿಸುವನು.
  • 12:05 “ಹೆದರಬೇಡಿರಿ! ಈ ದಿನದಂದು ದೇವರು ನಿಮಗಾಗಿ ಯುದ್ಧ ಮಾಡುವನು ಮತ್ತು ನಿಮ್ಮನ್ನು ___ ರಕ್ಷಿಸುವನು ___ ಎಂದು ಮೋಶೆ ಇಸ್ರಾಯೇಲ್ಯರಿಗೆ ಹೇಳಿದನು.
  • 12:13 ಇಸ್ರಾಯೇಲ್ಯರು ದೇವರನ್ನು ಸ್ತುತಿಸುವುದಕ್ಕೆ ಮತ್ತು ತಮ್ಮ ಹೊಸ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುವುದಕ್ಕೆ ಅನೇಕವಾದ ಹಾಡುಗಳನ್ನು ಹಾಡಿದರು, ಯಾಕಂದರೆ ಆತನು ಅವರನ್ನು ಐಗುಪ್ತ ಸೈನ್ಯದಿಂದ __ ರಕ್ಷಿಸಿದ್ದನು ___.
  • 16:17 ಈ ವಿಧವಾದ ಪದ್ಧತಿಯು ಅನೇಕಸಲ ನಡೆದಿತ್ತು: ಇಸ್ರಾಯೇಲ್ಯರು ಪಾಪ ಮಾಡುತ್ತಿದ್ದರು, ದೇವರು ಅವರನ್ನು ಶಿಕ್ಷಿಸುತ್ತಿದ್ದನು, ಅವರು ಪಶ್ಚಾತ್ತಾಪ ಹೊಂದುತ್ತಿದ್ದರು, ಮತ್ತು ದೇವರು ಅವರನ್ನು ___ ರಕ್ಷಿಸುವುದಕ್ಕೆ ___ ವಿಮೋಚಕನನ್ನು ಕಳುಹಿಸುತ್ತಿದ್ದನು.
  • 44:08 “ನೀವು ಯೇಸುವನ್ನು ಶಿಲುಬೆಗೆ ಹಾಕಿದ್ದೀರಿ, ಆದರೆ ದೇವರು ಆತನನ್ನು ತಿರುಗಿ ಎಬ್ಬಿಸಿ, ಜೀವಂತವನ್ನಾಗಿ ಮಾಡಿದ್ದಾನೆ! ನೀವು ಆತನನ್ನು ತಿರಸ್ಕಾರ ಮಾಡಿದ್ದೀರಿ, ಆದರೆ ಯೇಸುವಿನ ಶಕ್ತಿಯಿಂದ ಬಿಟ್ಟು, ಇನ್ನು ಬೇರೆ ಯಾವ ಮಾರ್ಗದಿಂದಲೂ ___ ರಕ್ಷಣೆ __ ಹೊಂದುವುದಕ್ಕೆ ಸಾಧ್ಯವಿಲ್ಲ.
  • 47:11 ಸೆರೆಮನೆಯ ಅಧಿಕಾರಿ ನಡುಗುತ್ತಾ ಪೌಲ ಮತ್ತು ಸೀಲರವರ ಬಳಿಗೆ ಬಂದು, “__ ರಕ್ಷಣೆ ___ ಹೊಂದುವುದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು. “ಬೋಧಕನಾಗಿರುವ ಯೇಸುವಿನಲ್ಲಿ ನಂಬಿಕೆಯಿಡು, ನೀನು ಮತ್ತು ನಿನ್ನ ಕುಟುಂಬವು __ ರಕ್ಷಣೆ ___ ಹೊಂದುವರು” ಎಂದು ಪೌಲನು ಉತ್ತರಿಸಿದನು.
  • 49:12 ಒಳ್ಳೇಯ ಕಾರ್ಯಗಳು ನಿನ್ನನ್ನು ___ ರಕ್ಷಿಸುವುದಿಲ್ಲ ___.
  • 49:13 ಯೇಸುವಿನಲ್ಲಿ ನಂಬಿಕೆಯಿಡುವ ಮತ್ತು ಆತನನ್ನು ತಮ್ಮ ಒಡೆಯನನ್ನಾಗಿ ಸ್ವೀಕರಿಸುವ ಪ್ರತಿಯೊಬ್ಬರನ್ನು ದೇವರು ___ ರಕ್ಷಿಸುವನು ___ . ಆದರೆ ಆತನಲ್ಲಿ ನಂಬಿಕೆ ಇಡದವರನ್ನು ಆತನು ___ ರಕ್ಷಿಸುವುದಿಲ್ಲ ___.

ಪದ ಡೇಟಾ:

  • Strong's: H983, H2421, H3444, H3467, H3468, H4190, H4422, H4931, H6403, H7682, H7951, H7965, H8104, H8668, G803, G804, G806, G1295, G1508, G4982, G4991, G4992, G5198

ರಬ್ಬಿ

ಅರ್ಥವಿವರಣೆ:

“ರಬ್ಬಿ” ಎನ್ನುವ ಮಾತು ಅಕ್ಷರಾರ್ಥವಾಗಿ “ನನ್ನ ಬೋಧಕನು” ಅಥವಾ “ನನ್ನ ಗುರುವು” ಎಂದರ್ಥ.

  • ಯೆಹೂದ ಧರ್ಮದ ಬೋಧಕನನ್ನು, ವಿಶೇಷವಾಗಿ ದೇವರ ಧರ್ಮಶಾಸ್ತ್ರದ ಬೋಧಕನನ್ನು ಸಂಬೋಧಿಸುವುದಕ್ಕೆ ಉಪಯೋಗಿಸಲ್ಪಟ್ಟಿರುವ ಗೌರವವುಳ್ಳ ಬಿರುದಾಗಿರುತ್ತದೆ.
  • ಸ್ನಾನೀಕನಾದ ಯೋಹಾನನು ಮತ್ತು ಯೇಸುವು ಕೆಲವು ಬಾರಿ ತಮ್ಮ ಶಿಷ್ಯರಿಂದ “ರಬ್ಬಿ” ಎಂದು ಕರೆಯಲ್ಪಟ್ಟಿದ್ದರು.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನನ್ನ ಬೋಧಕನು” ಅಥವಾ “ನನ್ನ ಗುರುವು” ಅಥವಾ “ಮಾನ್ಯ ಗುರುವು” ಅಥವಾ “ಧಾರ್ಮಿಕ ಗುರುವು” ಎನ್ನುವ ಮಾತುಗಳು ಒಳಗೊಂಡಿರುತ್ತವೆ. ಕೆಲವೊಂದು ಭಾಷೆಗಳಲ್ಲಿ ವಂದನೆಗಳನ್ನು ಹೇಳುವುದಕ್ಕೆ ಈ ರೀತಿ ಅಕ್ಷರಗಳನ್ನು ದೊಡ್ಡದಾಗಿ ಬರೆಯುತ್ತಾರೆ, ಇನ್ನೂ ಕೆಲವು ಭಾಷೆಗಳಲ್ಲಿ ಆ ರೀತಿ ಉಪಯೋಗಿಸುವುದಿಲ್ಲ.
  • ಗುರುಗಳನ್ನು ಸಾಧಾರಣವಾಗಿ ಸಂಬೋಧಿಸುವ ವಿಶೇಷವಾದ ವಿಧಾನವನ್ನು ಯೋಜನಾ ಭಾಷೆಗಳಲ್ಲಿ ಉಪಯೋಗಿಸುತ್ತಿರಬಹುದು.
  • ಅನುವಾದ ಮಾಡಲ್ಪಟ್ಟಿರುವ ಈ ಪದವು ಯೇಸು ಪಾಠಶಾಲೆಯ ಗುರುವೆಂದು ಸೂಚಿಸದಂತೆ ನೋಡಿಕೊಳ್ಳಿರಿ.
  • ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಯಲ್ಲಿ ಅನುವಾದ ಮಾಡಿದ ಸತ್ಯವೇದಗಳಲ್ಲಿ “ರಬ್ಬಿ” ಎನ್ನುವ ಪದವನ್ನು ಯಾವರೀತಿ ಅನುವಾದ ಮಾಡಿದ್ದಾರೆಂದು ಗಮನಿಸಿರಿ.

(ನೋಡಿ: ಅಪರಿಚಿತರನ್ನು ಹೇಗೆ ಅನುವಾದಿಸುವುದು)

(ಇದನ್ನೂ ಸಹ ನೋಡಿರಿ : ಗುರುವು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ಡೇಟಾ:

  • Strong's: G44610

ರೋಷ, ಅಸೂಯೆ

ಪದದ ಅರ್ಥವಿವರಣೆ:

“ರೋಷ” ಮತ್ತು “ಅಸೂಯೆ” ಎನ್ನುವ ಪದಗಳು ಸಂಬಂಧದ ಪವಿತ್ರತೆಯನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಹುಟ್ಟುವ ಬಲವಾದ ಆಸೆಯನ್ನು ಸೂಚಿಸುತ್ತದೆ. ಒಬ್ಬರ ಅಥವಾ ಯಾವುದಾದರೊಂದರ ಆಸ್ತಿಯನ್ನು ಕಾಪಾಡಿಕೊಳ್ಳುವುದಕ್ಕೆ ಹುಟ್ಟುವ ಬಲವಾದ ಆಸೆಯನ್ನೂ ಸೂಚಿಸುತ್ತದೆ.

  • ವಿವಾಹ ಬಂಧನದಲ್ಲಿ ಅಪನಂಬಿಗಸ್ತರಾದ ಗಂಡನ ಮೇಲೆ ಹೆಂಡತಿ ಅಥವಾ ಹೆಂಡತಿಯ ಮೇಲೆ ಗಂಡನು ಹೊಂದಿರುವ ಕೋಪದ ಭಾವನೆಯನ್ನು ವಿವರಿಸುವುದಕ್ಕೆ ಅನೇಕಸಲ ಈ ಪದಗಳು ಉಪಯೋಗಿಸಲ್ಪಟ್ಟಿವೆ.
  • ಈ ಪದಗಳನ್ನು ಸತ್ಯವೇದದಲ್ಲಿ ಉಪಯೋಗಿಸಿದಾಗ, ದೇವರ ಪ್ರಜೆಯು ಯಾವ ಪಾಪದಿಂದ ಕಲೆಯಾಗದೆ, ಯಾವಾಗಲೂ ಪವಿತ್ರರಾಗಿರಬೇಕೆಂದು ದೇವರ ಬಲವಾದ ಆಸೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ.
  • ದೇವರು ಕೂಡ ತನ್ನ ಹೆಸರಿಗಾಗಿ “ರೋಷವುಳ್ಳವನಾಗಿರುತ್ತಾನೆ”, ಆ ಹೆಸರನ್ನು ಘನಪಡಿಸಬೇಕೆಂದು ಮತ್ತು ಗೌರವಿಸಬೇಕೆಂದು ಆಸೆಯನ್ನು ಹೊಂದಿರುತ್ತಾನೆ.
  • ಈ ಪದಕ್ಕೆ ಹೊಟ್ಟೆಕಿಚ್ಚು ಎನ್ನುವ ಇನ್ನೊಂದು ಅರ್ಥವೂ ಇದೆ, ಬೇರೊಬ್ಬರು ಯಶಸ್ವಿಯಾಗುತ್ತಿದ್ದೆ ಅಥವಾ ಅವರು ಪ್ರಸಿದ್ಧಿ ಹೊಂದುತ್ತಿದ್ದರೆ ಕೋಪಬರುವುದನ್ನು ಸೂಚಿಸುತ್ತದೆ. ಈ ಪದದ ಅರ್ಥವು “ಅಸೂಯೆ” ಎನ್ನುವ ಪದಕ್ಕೆ ಬರುವ ಅರ್ಥಕ್ಕೆ ತುಂಬಾ ಹತ್ತಿರವಾಗಿರುತ್ತದೆ.

ಅನುವಾದ ಸಲಹೆಗಳು:

  • “ರೋಷ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಬಲವಾಗಿ ಸಂರಕ್ಷಿಸಿಕೊಳ್ಳುವ ಆಸೆ” ಅಥವಾ “ಸ್ವಾರ್ಥವುಳ್ಳ ಆಸೆ” ಎನ್ನುವ ಪದಗಳು ಒಳಗೊಂಡಿರುತ್ತವೆ.
  • ‘ರೋಷ” ಎನ್ನುವ ಪದವನ್ನು “ಬಲವಾಗಿ ಸಂರಕ್ಷಿಸಿಕೊಳ್ಳುವ ಆಸೆ” ಅಥವಾ “ಸ್ವಾರ್ಥವುಳ್ಳ ಆಸೆ” ಎಂದೂ ಅನುವಾದ ಮಾಡಬಹುದು.
  • ದೇವರ ಕುರಿತಾಗಿ ಮಾತನಾಡುತ್ತಿರುವಾಗ, ಈ ಪದಗಳು ಇನ್ನೊಬ್ಬರ ವಿಷಯದಲ್ಲಿ ಅಸಮಾಧಾನವಿರುವ ಅನಾನುಕೂಲವಾದ ಅರ್ಥ ಬರದಂತೆ ನೋಡಿಕೊಳ್ಳಿರಿ.
  • ಹೆಚ್ಚಾಗಿ ಯಶಸ್ವಿಯಾಗುತ್ತಿರುವ ಬೇರೆ ಜನರ ವಿಷಯದಲ್ಲಿ ಕೋಪ ಮಾಡಿಕೊಂಡು ತಪ್ಪಾಗಿ ಆಲೋಚನೆ ಮಾಡುವ ಜನರ ಸಂದರ್ಭದಲ್ಲಿ, “ಅಸೂಯೆ” ಅಥವಾ “ಹೊಟ್ಟೆಕಿಚ್ಚು” ಎಂದೂ ಉಪಯೋಗಿಸಬಹುದು. ಆದರೆ ಈ ಪದಗಳನ್ನು ದೇವರಿಗೆ ಉಪಯೋಗಿಸಬಾರದು.

(ಈ ಪದಗಳನ್ನು ಸಹ ನೋಡಿರಿ : ಹೊಟ್ಟೆಕಿಚ್ಚು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7065, H7067, H7068, H7072, G2205, G3863

ಲೋಕ, ಲೌಕಿಕ

ಪದದ ಅರ್ಥವಿವರಣೆ:

“ಲೋಕ” ಎನ್ನುವ ಪದವು ಸಾಧಾರಣವಾಗಿ ವಿಶ್ವದಲ್ಲಿ ಒಂದು ಭಾಗವಾಗಿರುವ ಜನರು ನಿವಾಸವಾಗಿರುವ ಭೂಮಿಯನ್ನು ಸೂಚಿಸುತ್ತದೆ. * “ಲೌಕಿಕ” ಎನ್ನುವ ಪದವು ಈ ಲೋಕದಲ್ಲಿ ನಿವಾಸವಾಗುತ್ತಿರುವ ಜನರ ನಡತೆಗಳನ್ನು ಮತ್ತು ಕೆಟ್ಟ ಬೆಲೆಗಳನ್ನು ವಿವರಿಸುತ್ತದೆ.

  • ಇದರ ಸಾಧಾರಣ ಭಾವನೆಯಲ್ಲಿ “ಲೋಕ” ಎನ್ನುವ ಪದವು ಆಕಾಶಗಳನ್ನು ಮತ್ತು ಭೂಮಿಯನ್ನು, ಅವುಗಳಲ್ಲಿರುವ ಪ್ರತಿಯೊಂದನ್ನು ಸೂಚಿಸುತ್ತದೆ,
  • ಅನೇಕ ಸಂದರ್ಭಗಳಲ್ಲಿ “ಲೋಕ” ಎನ್ನುವ ಪದವು ವಾಸ್ತವಿಕವಾಗಿ “ಲೋಕದಲ್ಲಿರುವ ಜನರನ್ನು” ಸೂಚಿಸುತ್ತದೆ.
  • ಕೆಲವೊಂದುಬಾರಿ ಇದು ಭೂಮಿಯ ಮೇಲಿರುವ ದುಷ್ಟ ಜನರನ್ನು ಸೂಚಿಸುತ್ತದೆ ಅಥವಾ ದೇವರಿಗೆ ವಿಧೇಯರಾಗದ ಜನರನ್ನು ಸೂಚಿಸುತ್ತದೆ.
  • ಅಪೊಸ್ತಲರು ಕೂಡ “ಲೋಕ” ಎನ್ನುವ ಪದವನ್ನು ಈ ಲೋಕದಲ್ಲಿ ಜೀವಿಸುತ್ತಿರುವ ಜನರ ಕೆಟ್ಟ ಬೆಲೆಗಳನ್ನು ಮತ್ತು ಸ್ವಾರ್ಥ ನಡತೆಗಳನ್ನು ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ. ಇದರಲ್ಲಿ ಮನುಷ್ಯರ ಪ್ರಯಾಸೆಗಳ ಮೇಲೆ ಆಧಾರಪಟ್ಟಿರುವ ಸ್ವನೀತಿ ಭಕ್ತಿ ಆಚಾರಗಳು ಕೂಡ ಒಳಗೊಂಡಿರುತ್ತದೆ.
  • ಈ ಬೆಲೆಗಳ ಮೇಲೆ ಉಂಟು ಮಾಡಲ್ಪಟ್ಟ ಕಾರ್ಯಗಳನ್ನು ಮತ್ತು ಜನರನ್ನು “ಲೌಕಿಕ” ಎಂದು ಕರೆಯಲ್ಪಟ್ಟಿದ್ದಾರೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಲೋಕ” ಎನ್ನುವ ಪದವನ್ನು “ವಿಶ್ವ” ಅಥವಾ “ಈ ಲೋಕದ ಜನರು” ಅಥವಾ “ಲೋಕದಲ್ಲಿ ಭ್ರಷ್ಟುವಾಗಿರುವ ವಿಷಯಗಳು” ಅಥವಾ ‘ಲೋಕದಲ್ಲಿ ಜನರ ದುಷ್ಟ ಭಾವನೆಗಳು” ಎಂದೂ ಅನುವಾದ ಮಾಡಬಹುದು.
  • “ಲೋಕವೆಲ್ಲಾ” ಎನ್ನುವ ಮಾತಿಗೆ ಅನೇಕಬಾರಿ “ಅನೇಕ ಜನರು” ಎಂದರ್ಥವಾಗಿರುತ್ತದೆ, ಮತ್ತು ಒಂದು ನಿರ್ದಿಷ್ಟವಾದ ಪ್ರಾಂತ್ಯದಲ್ಲಿ ಜೀವಿಸುವ ಜನರನ್ನು ಸೂಚಿಸುತ್ತದೆ. ಉದಾಹರಣೆಗೆ, “ಲೋಕವೆಲ್ಲಾ ಐಗುಪ್ತಿಗೆ ಬಂತು” ಎನ್ನುವ ಮಾತನ್ನು “ಸುತ್ತಮುತ್ತಲಿರುವ ದೇಶಗಳಿಂದ ಅನೇಕ ಜನರು ಐಗುಪ್ತಕ್ಕೆ ಬಂದರು” ಅಥವಾ “ಐಗುಪ್ತಕ್ಕೆ ಸುತ್ತಮುತ್ತಲಿರುವ ದೇಶಗಳಿಂದ ಜನರು ಅಲ್ಲಿಗೆ ಬಂದರು” ಎಂದೂ ಅನುವಾದ ಮಾಡಬಹುದು.
  • “ಲೋಕ ಜನರೆಲ್ಲಾ ರೋಮಾ ಜನಗಣತಿಯಲ್ಲಿ ದಾಖಲು ಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮ ಊರುಗಳಿಗೆ ಹೋದರು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನದಲ್ಲಿ “ರೋಮಾ ಸಾಮ್ರಾಜ್ಯದಿಂದ ಆಳಲ್ಪಡುತ್ತಿರುವ ಪ್ರಾಂತ್ಯಗಳಲ್ಲಿ ಜೀವಿಸುತ್ತಿರುವ ಅನೇಕ ಜನರು ಹೊರಟರು... “ ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಲೌಕಿಕ” ಎನ್ನುವ ಪದವು “ದುಷ್ಟ” ಅಥವಾ “ಪಾಪಸ್ವಭಾವ” ಅಥವಾ “ಸ್ವಾರ್ಥ” ಅಥವಾ “ಅದೈವಿಕ” ಅಥವಾ “ಭ್ರಷ್ಟ” ಅಥವಾ “ಈ ಲೋಕದಲ್ಲಿರುವ ಜನರ ಭ್ರಷ್ಟ ನಿಯಮಗಳಿಂದ ಪ್ರಭಾವಕ್ಕೊಳಗಾಗುವಿಕೆ” ಎಂದೂ ಅನುವಾದ ಮಾಡಬಹುದು.
  • “ಲೋಕದಲ್ಲಿರುವ ಈ ಕಾರ್ಯಗಳನ್ನು ಹೇಳುವುದು” ಎನ್ನುವ ಮಾತನ್ನು “ಲೋಕದ ಜನರಿಗೆ ಈ ಕಾರ್ಯಗಳನ್ನು ಹೇಳುವುದು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಸಂದರ್ಭಗಳಲ್ಲಿ “ಲೋಕದಲ್ಲಿ” ಎನ್ನುವ ಮಾತನ್ನು “ಲೋಕದ ಜನರ ಮಧ್ಯೆದಲ್ಲಿ ಜೀವಿಸುವುದು” ಅಥವಾ “ಅದೈವಿಕ ಜನರ ಮಧ್ಯೆದಲ್ಲಿ ಜೀವಿಸುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಭ್ರಷ್ಟ, ಆಕಾಶ, ರೋಮ್, ದೈವಿಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H776, H2309, H2465, H5769, H8398, G1093, G2886, G2889, G3625

ವರ

ಪದದ ಅರ್ಥವಿವರಣೆ:

“ವರ” ಎನ್ನುವ ಪದವು ಒಬ್ಬರಿಗೆ ಕೊಡುವ ಅಥವಾ ನೀಡುವ ಯಾವುದಾದರೊಂದನ್ನು ಸೂಚಿಸುತ್ತದೆ. ಹಿಂದುರಿಗಿ ಪಡೆದುಕೊಳ್ಳುವುದಕ್ಕೆ ಎದುರುನೋಡದೇ ಕೊಡುವುದನ್ನೇ ಕಾಣಿಕೆ ಎಂದು ಹೇಳುತ್ತಾರೆ.

  • ಹಣ, ಆಹಾರ, ಬಟ್ಟೆಗಳು ಅಥವಾ ಇತರ ಯಾವುದೇ ವಸ್ತುಗಳನ್ನು ಬಡ ಜನರಿಗೆ ಕೊಟ್ಟರೆ ಅವುಗಳನ್ನು “ವರಗಳು” ಎಂದು ಕರೆಯುತ್ತಾರೆ.
  • ಸತ್ಯವೇದದಲ್ಲಿ ದೇವರಿಗೆ ಕೊಡುವ ಅರ್ಪಣೆ ಅಥವಾ ದೇವರಿಗೆ ಮಾಡುವ ಸರ್ವಾಂಗ ಹೋಮವಾಗಲಿ ಅದನ್ನೂ ಕಾಣಿಕೆ ಎಂದು ಕರೆಯುತ್ತಾರೆ.
  • ರಕ್ಷಣೆ ವರ ಎನ್ನುವದು ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ದೇವರು ನಮಗೆ ಕೊಡುವ ವರವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ “ವರಗಳು” ಎನ್ನುವ ಪದವನ್ನು ಇತರ ಜನರಿಗೆ ಸೇವೆ ಮಾಡುವುದಕ್ಕೆ ಕ್ರೈಸ್ತರೆಲ್ಲರಿಗೆ ದೇವರು ಕೊಡುವ ವಿಶೇಷವಾದ ಅತ್ಮೀಯಕವಾದ ಸಾಮರ್ಥ್ಯಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲಾಗಿದೆ.

ಅನುವಾದ ಸಲಹೆಗಳು:

  • “ವರ” ಎನ್ನುವ ಸಾಧಾರಣ ಪದವನ್ನು “ಏನಾದರೊಂದು ಕೊಡಲ್ಪಟ್ಟಿರುವುದು” ಎನ್ನುವ ಅರ್ಥ ಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.
  • ದೇವರಿಂದ ಬರುವ ವಿಶೇಷವಾದ ಸಾಮರ್ಥ್ಯ ಅಥವಾ ವರವನ್ನು ಒಬ್ಬ ವ್ಯಕ್ತಿ ಪಡೆದುಕೊಂಡ ಸಂದರ್ಭದಲ್ಲಿ, “ಆತ್ಮನಿಂದ ಬಂದ ವರ” ಎನ್ನುವ ಮಾತನ್ನು “ಆತ್ಮೀಕ ಸಾಮರ್ಥ್ಯ” ಅಥವಾ “ಪವಿತ್ರಾತ್ಮನಿಂದ ಬರುವ ವಿಶೇಷವಾದ ಸಾಮರ್ಥ್ಯ” ಅಥವಾ “ದೇವರು ಕೊಟ್ಟ ವಿಶೇಷವದ ಅತ್ಮೀಕವಾದ ನೈಪುಣ್ಯತೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಆತ್ಮ, ಪವಿತ್ರಾತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H814, H4503, H4864, H4976, H4978, H4979, H4991, H5078, H5083, H5379, H7810, H8641, G334, G1390, G1394, G1431, G1434, G1435, G3311, G5486

ವಾಗ್ಧಾನ ಭೂಮಿ

ಸತ್ಯಾಂಶಗಳು:

“ವಾಗ್ಧಾನ ಭೂಮಿ” ಎನ್ನುವ ಪದವು ಸತ್ಯವೇದದ ಚರಿತ್ರೆಯಲ್ಲಿ ಮಾತ್ರ ಕಂಡುಬರುತ್ತದೆ ಹೊರತು, ಸತ್ಯವೇದದಲ್ಲಿರುವ ವಾಕ್ಯಭಾಗಗಳಲ್ಲಿ ಕಂಡುಬರುವುದಿಲ್ಲ. ದೇವರು ಅಬ್ರಾಹಾಮನಿಗೆ ಮತ್ತು ತನ್ನ ಸಂತಾನದವರಿಗೆ ಕೊಡಲು ವಾಗ್ಧಾನ ಮಾಡಿದ ಕಾನಾನ್ ಭೂಮಿಯನ್ನು ಸೂಚಿಸುವ ಪರ್ಯಾಯ ವಿಧಾನವಾಗಿರುತ್ತದೆ.

  • ಅಬ್ರಾಮನು ಊರ್ ಎನ್ನುವ ಪಟ್ಟಣದಲ್ಲಿ ನಿವಾಸ ಮಾಡುತ್ತಿರುವಾಗ, ಕಾನಾನ್ ಭೂಮಿಯಲ್ಲಿ ಜೀವಿಸುವುದಕ್ಕೆ ಹೋಗು ದೇವರು ತನಗೆ ಆಜ್ಞೆಯನ್ನು ಕೊಟ್ಟರು. ಆತನು ಮತ್ತು ತನ್ನ ಸಂತಾನದವರಾಗಿರುವ ಇಸ್ರಾಯೇಲ್ಯರು ಅನೇಕ ವರ್ಷಗಳ ಕಾಲ ಅಲ್ಲಿಯೇ ಜೀವಿಸಿದ್ದರು.
  • ಭಯಂಕರವಾದ ಬರಗಾಲ ಬಂದಾಗ ಕಾನಾನ್ ಭೂಮಿಯಲ್ಲಿ ಆಹಾರವಿಲ್ಲದ ಸಮಯದಲ್ಲಿ, ಇಸ್ರಾಯೇಲ್ಯರು ಐಗುಪ್ತಕ್ಕೆ ಹೊರಟರು.
  • ಆ ಐಗುಪ್ತ ದೇಶದಲ್ಲಿ ನಾಲ್ಕು ನೂರು ವರ್ಷಗಳಾದನಂತರ, ದೇವರು ಐಗುಪ್ತದಲ್ಲಿ ಗುಲಾಮಗಿರಿಯಿಂದ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಿದನು ಮತ್ತು ಅವರನ್ನು ತಿರುಗಿ ದೇವರು ತಮಗೆ ಕೊಡುತ್ತೇನೆಂದು ವಾಗ್ಧಾನ ಮಾಡಿದ ಕಾನಾನ್ ದೇಶಕ್ಕೆ ಬರ ಮಾಡಿದನು.

ಅನುವಾದ ಸಲಹೆಗಳು:

  • “ವಾಗ್ಧಾನ ಭೂಮಿ” ಎನ್ನುವ ಪದವನ್ನು “ದೇವರು ಅಬ್ರಾಹಾಮನಿಗೆ ಕೊಡುತ್ತೇನೆಂದು ಹೇಳಿದ ಭೂಮಿ” ಅಥವಾ “ದೇವರು ಅಬ್ರಾಹಾಮನಿಗೆ ವಾಗ್ಧಾನ ಮಾಡಿದ ಭೂಮಿ” ಅಥವಾ “ದೇವರು ತನ್ನ ಜನರಿಗೆ ವಾಗ್ಧಾನ ಮಾಡಿದ ಭೂಮಿ” ಅಥವಾ “ಕಾನಾನ್ ದೇಶ” ಎಂದೂ ಅನುವಾದ ಮಾಡಬಹುದು.
  • ಸತ್ಯವೇದ ವಾಕ್ಯಭಾಗಗಳಲ್ಲಿ ಈ ಪದವು “ದೇವರು ವಾಗ್ಧಾನ ಮಾಡಿದ ಭೂಮಿ” ಎನ್ನುವ ರೂಪದಲ್ಲಿ ಕಂಡುಬರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ವಾಗ್ಧಾನ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 12:01 ಅವರು (ಇಸ್ರಾಯೇಲ್ಯರು) ಹೆಚ್ಚಿನ ಕಾಲ ಇಸ್ರಾಯೇಲ್ಯರಾಗಿರಲಿಲ್ಲ, ಮತ್ತು ಅವರು __ ವಾಗ್ಧಾನ ದೇಶಕ್ಕೆ __ ಹೋದರು!
  • 14:01 ದೇವರು ಇಸ್ರಾಯೇಲ್ಯರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯ ಭಾಗವಾಗಿ ಅವರು ನ್ಯಾಯಪ್ರಮಾಣಕ್ಕೆ ವಿಧೇಯರಾಗಬೇಕೆಂದು ಆತನು ಬಯಸಿದ್ದನ್ನು ದೇವರು ಇಸ್ರಾಯೇಲ್ಯರಿಗೆ ಹೇಳಿದಾದನಂತರ ಕಾನಾನ್ ಎಂದು ಕರೆಯಲ್ಪಡುವ __ ವಾಗ್ಧಾನ ಭೂಮಿಯ __ ಕಡೆಗೆ ಸೀನಾಯಿಯಿಂದ ದೇವರು ಅವರನ್ನು ನಡೆಸುವುದಕ್ಕೆ ಆರಂಭಿಸಿದರು.
  • 14:02 ದೇವರು __ ವಾಗ್ಧಾನ ಭೂಮಿಯನ್ನು __ ಅಬ್ರಾಹಾಮ, ಇಸಾಕ, ಮತ್ತು ಯಾಕೋಬರ ಸಂತಾನಕ್ಕೆ ಕೊಡುತ್ತೇನೆಂದು ದೇವರು ಅವರಿಗೆ ವಾಗ್ಧಾನ ಮಾಡಿದರು, ಆದರೆ ಈಗ ಅಲ್ಲಿ ಅನೇಕ ಜನರ ಗುಂಪುಗಳು ಜೀವಿಸುತ್ತಾಯಿವೆ.
  • 14:14 ಆದನಂತರ ದೇವರು ಮತ್ತೊಮ್ಮೆ ತನ್ನ ಜನರನ್ನು __ ವಾಗ್ಧಾನ ಭೂಮಿ __ ತುದಿ ಭಾಗಕ್ಕೆ ನಡೆಸಿದರು.
  • 15:02 ಇಸ್ರಾಯೇಲ್ಯರು __ ವಾಗ್ಧಾನ ಭೂಮಿಯೊಳಗೆ __ ಪ್ರವೇಶಿಸುವುದಕ್ಕೆ ಯೊರ್ದನ್ ನದಿಯನ್ನು ದಾಟಬೇಕಾಗಿರುತ್ತದೆ.
  • 15:12 ಈ ಯುದ್ಧದನಂತರ, ದೇವರು ಇಸ್ರಾಯೇಲ್ ಪ್ರತಿಯೊಂದು ಕುಲಕ್ಕೂ __ ವಾಗ್ಧಾನ ಭೂಮಿಯಲ್ಲಿ __ ತಮ್ಮದೇಯಾದ ಸ್ವಂತ ಭಾಗವನ್ನು ಹಂಚಿಕೊಟ್ಟಿದ್ದಾರೆ.
  • 20:09 ಈ ಕಾಲದಲ್ಲಿ ದೇವ ಜನರು __ ವಾಗ್ಧಾನ ಭೂಮಿಯನ್ನು __ ಬಿಟ್ಟು ಹೋಗುವುದಕ್ಕೆ ಬಲವಂತ ಮಾಡಲ್ಪಟ್ಟಿದ್ದರು, ಇದನ್ನೇ ಸೆರೆ ಎಂದು ಕರೆಯುತ್ತಾರೆ.

ಪದ ಡೇಟಾ:

  • Strong's: H776, H3068, H3423, H5159, H5414, H7650

ವಾಗ್ಧಾನ, ವಾಗ್ಧಾನಗಳು, ವಾಗ್ಧಾನ ಮಾಡಲಾಗಿದೆ

ಪದದ ಅರ್ಥವಿವರಣೆ:

ಕ್ರಿಯಾಪದವಾಗಿ ಬಳಸಲಾದಾಗ, ’ವಾಗ್ದಾನ’ ಎಂಬ ಪದವು ತಾನು ಹೇಳಿದ್ದನ್ನು ಪೂರೈಸಲು ತನ್ನನ್ನು ತಾನು ಬಾಧ್ಯತೆ ಮಾಡಿಕೊಳ್ಳುವ ರೀತಿಯಲ್ಲಿ ಏನನ್ನಾದರೂ ಮಾಡುತ್ತೇನೆ ಎಂದು ಹೇಳುವ ವ್ಯಕ್ತಿಯ ಕ್ರಿಯೆಯನ್ನು ಸೂಚುಸುತ್ತದೆ.

  • ದೇವರು ತನ್ನ ಜನರೊಂದಿಗೆ ಮಾಡಿದ ಅನೇಕ ವಾಗ್ಧಾನಗಳನ್ನು ಸತ್ಯವೇದದಲ್ಲಿ ದಾಖಲಿಸಲಾಗಿರುತ್ತದೆ.
  • ಒಡಂಬಡಿಕೆಗಳಂತೆ ಸಾಂಪ್ರದಾಯಿಕವಾದ ಒಪ್ಪಂದಗಳ ಪ್ರಾಮುಖ್ಯವಾದ ಭಾಗವೇ ವಾಗ್ಧಾನವಾಗಿರುತ್ತದೆ.
  • ವಾಗ್ಧಾನ ಎನ್ನುವುದು ಯಾವಾಗಲೂ ಮಾಡಿದ ವಾಗ್ಧಾನ ನಡೆಯುತ್ತದೆಯೆಂದು ನಿಶ್ಚಯಿಸುವುದಕ್ಕೆ ಒಂದು ಪ್ರಮಾಣ ವಚನವಾಗಿರುತ್ತದೆ.

ಅನುವಾದ ಸಲಹೆಗಳು:

  • “ವಾಗ್ಧಾನ” ಎನ್ನುವ ಪದವನ್ನು “ನಿಬದ್ಧತೆ” ಅಥವಾ “ಭರವಸೆ” ಅಥವಾ “ಖಾತರಿ” ಎಂದೂ ಅನುವಾದ ಮಾಡಬಹುದು.
  • “ಏನಾದರೊಂದು ಮಾಡುವುದಕ್ಕೆ ವಾಗ್ಧಾನ ಮಾಡುವುದು” ಎನ್ನುವ ಮಾತು “ನೀನು ಏನಾದರೊಂದು ಮಾಡಲು ಯಾರಾದರೊಬ್ಬರಿಗೆ ಖಾತರಿ ಕೊಡು” ಅಥವಾ “ಏನಾದರೊಂದನ್ನು ಮಾಡುವುದಕ್ಕೆ ಬದ್ಧನಾಗಿರುವುದು” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ಪ್ರಮಾಣ ವಚನ, ಆಣೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 03:15 “ಜನರು ಚಿಕ್ಕ ವಯಸ್ಸಿನಲ್ಲಿರುವ ಸಮಯದಿಂದ ಜನರು ಪಾಪ ಸ್ವಭಾವವುಳ್ಳವರಾಗಿದ್ದರೂ ಪ್ರಳಯವನ್ನು ಬರಮಾಡುವುದರ ಮೂಲಕ ಪ್ರಪಂಚವನ್ನು ನಾಶಗೊಳಿಸುವುದಾಗಲಿ ಅಥವಾ ಜನರು ದುಷ್ಟ ಕಾರ್ಯಗಳನ್ನು ಮಾಡುವುದರಿಂದಾಗಲಿ ನಾನು ಭೂಮಿವನ್ನು ಎಂದಿಗೂ ಶಪಿಸುವುದಿಲ್ಲ ಎಂದು ನಾನು ___ ವಾಗ್ಧಾನ ___ ಮಾಡುತ್ತಿದ್ದೇನೆ” ಎಂದು ದೇವರು ಹೇಳಿದರು.
  • 03:16 ದೇವರು ತನ್ನ ___ ವಾಗ್ಧಾನಕ್ಕೆ ___ ಗುರುತಾಗಿ ಮೊಟ್ಟ ಮೊದಲನೇ ಮುಗಿಲುಬಿಲ್ಲನ್ನು ಉಂಟು ಮಾಡಿದನು. ಆಕಾಶದಲ್ಲಿ ಮುಗಿಲುಬಿಲ್ಲು ಕಾಣಿಸಿಕೊಳ್ಳುವ ಪ್ರತಿಯೊಂದುಬಾರಿ, ದೇವರು ತಾನು ಮಾಡಿದ ___ ವಾಗ್ಧಾನವನ್ನು ___ ಮತ್ತು ತನ್ನ ಜನರನ್ನು ಜ್ಞಾಪಿಸಿಕೊಳ್ಳುವರು.
  • 04:08 ದೇವರು ಅಬ್ರಾಮನೊಂದಿಗೆ ಮಾತನಾಡಿದನು ಮತ್ತು ಮತ್ತೊಮ್ಮೆ ತನಗೆ ಮಗನು ಹುಟ್ಟುವನೆಂದು ಮತ್ತು ತನ್ನ ಸಂತಾನವು ಆಕಾಶದಲ್ಲಿ ನಕ್ಷತ್ರಗಳಂತೆ ಆಗುವರೆಂದು ___ ವಾಗ್ಧಾನ ___ ಮಾಡಿದನು. ಅಬ್ರಾಮನು ದೇವರ ___ ವಾಗ್ಧಾನವನ್ನು ___ ನಂಬಿದನು.
  • 05:04 “ನಿನ್ನ ಹೆಂಡತಿ ಸಾರಾಯಳು ಮಗನನ್ನು ಹಡೆಯುವಳು, ಇವನು ___ ವಾಗ್ಧಾನ ___ ಪುತ್ರನಾಗಿ ಇರುವನು.”
  • 08:15 ದೇವರು ಅಬ್ರಾಹಾಮನಿಗೆ ಕೊಟ್ಟಿರುವುದು ತನ್ನ ಮಕ್ಕಳಾಗಿರುವ ಇಸಾಕ, ಯಾಕೋಬ, ಮತ್ತು ಯಾಕೋಬನ ಹನ್ನೆರಡು ಮಂದಿ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಅನ್ವಯವಾಗುತ್ತದೆಯೆಂದು ಒಡಂಬಡಿಕೆ ___ ವಾಗ್ಧಾನಗಳಲ್ಲಿ ___ ಇರುತ್ತದೆ.
  • 17:14 ದಾವೀದನು ದೇವರಿಗೆ ಅಪನಂಬಿಗಸ್ತನಾಗಿದ್ದರೂ, ದೇವರು ತನ್ನ ___ ವಾಗ್ಧಾನಗಳಲ್ಲಿ ___ ನಂಬಿಗಸ್ತನಾಗಿದ್ದಾನೆ.
  • 50:01 ಯೇಸು ಲೋಕದ ಅಂತ್ಯದಲ್ಲಿ ಹಿಂದುರಿಗಿ ಬರುತ್ತಾನೆಂದು ಆತನು ___ ವಾಗ್ಧಾನ ___ ಮಾಡಿದನು. ಆತನು ಇಂದಿಗೂ ಬರದೇ ಇದ್ದರೂ, ಆತನು ತಪ್ಪದೇ ತನ್ನ ___ ವಾಗ್ಧಾನದ ___ ಪ್ರಕಾರ ಮಾಡುವವನಾಗಿದ್ದಾನೆ.

ಪದ ಡೇಟಾ:

  • Strong's: H559, H562, H1696, H8569, G1843, G1860, G1861, G1862, G3670, G4279

ವಿಮೋಚನಾ ಶುಲ್ಕ, ವಿಮೋಚನಾ ಶುಲ್ಕವನ್ನು ಕಟ್ಟಲಾಗಿದೆ

ಪದದ ಅರ್ಥವಿವರಣೆ:

“ವಿಮೋಚನಾ ಶುಲ್ಕ” ಎನ್ನುವ ಮಾತು ಸೆರೆಯಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡುವುದಕ್ಕೆ ಕಟ್ಟಬೇಕಾದ ಅಥವಾ ಬೇಡಿಕೆ ಮಾಡಲ್ಪಟ್ಟಿರುವ ಹಣದ ಮೊತ್ತವನ್ನು ಅಥವಾ ಇತರ ಪಾವತಿಯನ್ನು ಸೂಚಿಸುತ್ತದೆ.

  • ಕ್ರಿಯಾಪದವಾಗಿರುವ “ವಿಮೋಚನಾ ಮೌಲ್ಯ” ಎನ್ನುವ ಮಾತಿಗೆ ಸೆರೆಗೆ ಹಾಕಲ್ಪಟ್ಟಿರುವ, ಗುಲಾಮಗಿರಿಯಲ್ಲಿರುವ ಅಥವಾ ಬಂಧಿಯಾಗಿರುವ ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಕ್ರಮದಲ್ಲಿ ಏನಾದರೊಂದು ಸ್ವಯಂ ತ್ಯಾಗ ಮಾಡುವುದು ಅಥವಾ ಪಾವತಿಯನ್ನು ಮಾಡುವುದು ಎಂದರ್ಥವಾಗಿರುತ್ತದೆ. “ತಿರುಗಿ ಕೊಂಡುಕೊಳ್ಳು” ಎನ್ನುವ ಅರ್ಥವು “ವಿಮೋಚಿಸು” ಎನ್ನುವ ಅರ್ಥಕ್ಕೆ ಸಮಾನವಾಗಿರುತ್ತದೆ.
  • ಪಾಪಕ್ಕೆ ದಾಸತ್ವದಿಂದ ಪಾಪಿಗಳಾದ ಜನರನ್ನು ಬಿಡಿಸುವುದಕ್ಕೆ ವಿಮೋಚನಾ ಮೌಲ್ಯವಾಗಿ ಯೇಸು ತನ್ನನ್ನು ಮರಣಕ್ಕೆ ಅರ್ಪಿಸಿಕೊಳ್ಳುವುದಕ್ಕೆ ಒಪ್ಪಿಕೊಂಡನು. ಜನರ ಪಾಪಗಳಿಗಾಗಿ ಕ್ರಯಧನವನ್ನು ಸಲ್ಲಿಸುವುದರ ಮೂಲಕ ತನ್ನ ಜನರನ್ನು ಹಿಂದಕ್ಕೆ ಕರೆದುಕೊಂಡುಬಂದಿರುವ ಈ ದೇವರ ಕಾರ್ಯವನ್ನು ಸತ್ಯವೇದದಲ್ಲಿ “ವಿಮೋಚನೆ’ ಎಂದೂ ಕರೆಯುತ್ತಾರೆ.

ಅನುವಾದ ಸಲಹೆಗಳು:

  • “ವಿಮೋಚನಾ ಶುಲ್ಕ” ಎನ್ನುವ ಈ ಪದವನ್ನು “ಬಿಡುಗಡೆ ಮಾಡುವುದಕ್ಕೆ ಪಾವತಿಸು” ಅಥವಾ ‘ಬಿಡುಗಡೆ ಮಾಡುವುದಕ್ಕೆ ಹಣವನ್ನು ಸಲ್ಲಿಸು” ಅಥವಾ “ಹಿಂದಕ್ಕೆ ತಿರುಗಿ ಬರಲು ಕೊಂಡುಕೊಳ್ಳು” ಎಂದೂ ಅನುವಾದ ಮಾಡಬಹುದು.
  • “ವಿಮೋಚನಾ ಶುಲ್ಕವನ್ನು ಸಲ್ಲಿಸು” ಎನ್ನುವ ಮಾತನ್ನು “(ಬಿಡುಗಡೆ ಮಾಡುವುದಕ್ಕೆ) ಹಣವನ್ನು ಸಲ್ಲಿಸು” ಅಥವಾ “(ಜನರನ್ನು ಬಿಡುಗಡೆಗೊಳಿಸಲು) ದಂಡವನ್ನು ಕಟ್ಟು” ಅಥವಾ “ಪಾವತಿಸಬೇಕಾದದ್ದನ್ನು ಸಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ವಿಮೋಚನಾ ಶುಲ್ಕ” ಎನ್ನುವ ನಾಮಪದವನ್ನು “ಹಿಂದಕ್ಕೆ ಪಡೆಯಲು ಕೊಂಡುಕೊಳ್ಳುವುದು” ಅಥವಾ “ದಂಡವನ್ನು ಸಲ್ಲಿಸಿದೆ” ಅಥವಾ “(ಭೂಮಿಯನ್ನು ಅಥವಾ ಜನರನ್ನು ಹಿಂದಕ್ಕೆ ತಿರುಗಿ ಹೊಂದಲು ಪಾವತಿಸು ಅಥವಾ ಬಿಡುಗಡೆ ಮಾಡುವುದಕ್ಕೆ) “ಹಣವನ್ನು ಕಟ್ಟಿದೆ”
  • “ವಿಮೋಚನಾ ಶುಲ್ಕ” ಮತ್ತು “ವಿಮೋಚನೆ” ಎನ್ನುವ ಪದಗಳು ಆಂಗ್ಲ ಭಾಷೆಯಲ್ಲಿ ಒಂದೇ ಅರ್ಥವನ್ನು ಒಳಗೊಂಡಿರುತ್ತವೆ, ಆದರೆ ಕೆಲವೊಂದುಸಲ ಸ್ವಲ್ಪ ವ್ಯತ್ಯಾಸದೊಂದಿಗೆ ಉಪಯೋಗಿಸುತ್ತಾರೆ. ಈ ಅರ್ಥಕ್ಕಾಗಿ ಇತರ ಭಾಷೆಗಳು ಒಂದೇ ಒಂದು ಪದವನ್ನು ಉಪಯೋಗಿಸುತ್ತಿರಬಹುದು.
  • ಅನುವಾದ ಮಾಡಿದ ಈ ಪದಕ್ಕೆ “ಪ್ರಾಯಶ್ಚಿತ್ತ” ಎನ್ನುವ ಪದದ ಅರ್ಥಕ್ಕೂ ವ್ಯತ್ಯಾಸವಿರುವಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಪ್ರಾಯಶ್ಚಿತ್ತ, ವಿಮೋಚಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದದ ದತ್ತಾಂಶ:

  • Strong's: H1350, H3724, H6299, H6306, G487, G3083

ವಿಮೋಚಿಸು, ವಿಮೋಚಕ, ವಿಮೋಚನೆ

ಪದದ ಅರ್ಥವಿವರಣೆ:

"ವಿಮೋಚಿಸು" ಎಂಬ ಪದವು ಏನನ್ನಾದರೂ ಅಥವಾ ಹಿಂದೆ ಒಡೆತನದ ಅಥವಾ ಸೆರೆಯಲ್ಲಿರುವ ಯಾರನ್ನಾದರೂ ಮರಳಿ ಖರೀದಿಸುವುದನ್ನು ಸೂಚಿಸುತ್ತದೆ. "ವಿಮೋಚಕ" ಎಂದರೆ ಏನನ್ನಾದರೂ ಅಥವಾ ಯಾರನ್ನಾದರೂ ವಿಮೊಚಿಸಿದವನು

  • ಜನರು ಅಥವಾ ವಸ್ತುಗಳನ್ನು ಹೇಗೆ ವಿಮೊಚಿಸುವದು ಎಂಬುದರ ಕುರಿತು ದೇವರು ಇಸ್ರಾಯೇಲ್ಯರಿಗೆ ನಿಯಮಗಳನ್ನು ಕೊಟ್ಟನು. ಉದಾಹರಣೆಗೆ, ಗುಲಾಮಗಿರಿಯಲ್ಲಿದ್ದ ವ್ಯಕ್ತಿಯನ್ನು ಯಾರಾದರೂ ಬೆಲೆ ಪಾವತಿಸುವ ಮೂಲಕ ವಿಮೊಚಿಸಬಹುದು, ಇದರಿಂದ ಗುಲಾಮನು ಮುಕ್ತನಾಗಿ ಹೋಗಬಹುದು. “ದಾಸತ್ವ” ಎಂಬ ಪದವು ಈ ಸಂಪ್ರದಾಯವನ್ನು ಸಹ ಸೂಚಿಸುತ್ತದೆ.
  • ಯಾರೊಬ್ಬರ ಭೂಮಿಯನ್ನು ಮಾರಾಟ ಮಾಡಿದ್ದರೆ, ಆ ವ್ಯಕ್ತಿಯ ಸಂಬಂಧಿಯು ಆ ಭೂಮಿಯನ್ನು "ಪುನಃ ಪಡೆದುಕೊಳ್ಳಬಹುದು" ಅಥವಾ "ಮರಳಿ ಖರೀದಿಸಬಹುದು" ಇದರಿಂದ ಅದು ಕುಟುಂಬದಲ್ಲಿ ಉಳಿಯುತ್ತದೆ.
  • ಈ ಪದ್ಧತಿಗಳು ದೇವರು ಪಾಪದ ಗುಲಾಮಗಿರಿಯಲ್ಲಿರುವ ಜನರನ್ನು ಹೇಗೆ ಉದ್ಧರಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಅವನು ಶಿಲುಬೆಯಲ್ಲಿ ಮರಣಹೊಂದಿದಾಗ, ಯೇಸು ಜನರ ಪಾಪಗಳಿಗೆ ಸಂಪೂರ್ಣ ಬೆಲೆ ಕೊಟ್ಟನು ಮತ್ತು ಮೋಕ್ಷಕ್ಕಾಗಿ ತನ್ನ ಮೇಲೆ ನಂಬಿಕೆಯಿಟ್ಟವರೆಲ್ಲರನ್ನೂ ಉದ್ಧರಿಸಿದನು. ದೇವರಿಂದ ವಿಮೋಚನೆಗೊಂಡ ಜನರನ್ನು ಪಾಪ ಮತ್ತು ಅದರ ಶಿಕ್ಷೆಯಿಂದ ಮುಕ್ತಗೊಳಿಸಲಾಗುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಕ್ಕೆ ಅನುಗುಣವಾಗಿ, "ವಿಮೋಚಿಸು " ಎಂಬ ಪದವನ್ನು "ಮರಳಿ ಖರೀದಿಸು" ಅಥವಾ "ಉಚಿತ (ಯಾರಿಗಾದರೂ)" ಅಥವಾ "ಸುಲಿಗೆ" ಎಂದು ಅನುವಾದಿಸಬಹುದು.
  • "ವಿಮೋಚನೆ" ಎಂಬ ಪದವನ್ನು "ವಿಮೋಚನಾ ಮೌಲ್ಯ" ಅಥವಾ "ಬಿಡುಗಡೆಯ  ಪಾವತಿ" ಅಥವಾ "ಮರಳಿ ಖರೀದಿಸುವುದು" ಎಂದು ಅನುವಾದಿಸಬಹುದು.
  • “ವಿಮೋಚನಾ ಮೌಲ್ಯ” ಮತ್ತು “ವಿಮೋಚಿಸು” ಪದಗಳು ಮೂಲತಃ ಒಂದೇ ಅರ್ಥವನ್ನು ಹೊಂದಿವೆ, ಆದ್ದರಿಂದ ಕೆಲವು ಭಾಷೆಗಳು ಈ ಎರಡೂ ಪದಗಳನ್ನು ಭಾಷಾಂತರಿಸಲು ಕೇವಲ ಒಂದು ಪದವನ್ನು ಹೊಂದಿರಬಹುದು. "ವಿಮೋಚನಾ ಮೌಲ್ಯ" ಎಂಬ ಪದವು ಏನನ್ನಾದರೂ ಅಥವಾ ಯಾರನ್ನಾದರೂ "ಬಿಡುಗಡೆ" ಮಾಡಲು ಅಗತ್ಯವಾದ ಪಾವತಿಯನ್ನು ಸಹ ಅರ್ಥೈಸಬಲ್ಲದು. "ವಿಮೋಚಿಸು" ಎಂಬ ಪದವು ನಿಜವಾದ ಪಾವತಿಯನ್ನು ಎಂದಿಗೂ ಸೂಚಿಸುವುದಿಲ್ಲ.

(ಈ ಪದಗಳನ್ನು ಸಹ ನೋಡಿರಿ : ಬಿಡುಗಡೆ, ವಿಮೋಚನಾ ಮೌಲ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದದ ಡೇಟಾ:

  • Strong's: H1350, H1353, H6299, H6302, H6304, H6306, H6561, H7069, G59, G629, G1805, G3084, G3085

ವಿಶ್ವಾಸ

ಪದದ ಅರ್ಥವಿವರಣೆ:

ಸಾಧಾರಣವಾಗಿ “ವಿಶ್ವಾಸ” ಎನ್ನುವ ಪದವು ಒಬ್ಬರಲ್ಲಿ ಅಥವಾ ಯಾವುದಾದರೊಂದಲ್ಲಿ ನಂಬಿಕೆ, ಭರವಸೆ ಅಥವಾ ನಿಶ್ಚಯತೆ ಹೊಂದಿರುವುದನ್ನು ಸೂಚಿಸುತ್ತದೆ.

  • ಒಬ್ಬರಲ್ಲಿ “ವಿಶ್ವಾಸದಿಂದಿರು” ಎನ್ನುವುದಕ್ಕೆ ಆತನು ಹೇಳುವ ಪ್ರತಿಯೊಂದು ಮಾತು ಮತ್ತು ಪ್ರತಿಯೊಂದು ಕಾರ್ಯವು ಸತ್ಯವೆಂದು ಮತ್ತು ವಿಶ್ವಾಸಾರ್ಹವೆಂದು ನಂಬುವುದಾಗಿರುತ್ತದೆ.
  • “ಯೇಸುವಿನಲ್ಲಿ ವಿಶ್ವಾಸವನ್ನು ಹೊಂದಿರು” ಎನ್ನುವ ಮಾತಿಗೆ ಯೇಸುವಿನ ಕುರಿತಾದ ದೇವರ ಬೋಧನೆಗಳೆಲ್ಲವುಗಳನ್ನು ನಂಬು ಎಂದರ್ಥ. ಇದು ವಿಶೇಷವಾಗಿ ಯೇಸುವಿನಲ್ಲಿ ಜನರು ಇಡುವ ಭರವಸೆಯನ್ನು ಮತ್ತು ಅವರ ಪಾಪಗಳಿಂದ ಅವರನ್ನು ತೊಳೆಯುವ ಆತನ ತ್ಯಾಗವನ್ನು ಮತ್ತು ಅವರು ಪಾಪ ಮಾಡಿದ್ದರಿಂದ ಅವರು ಹೊಂದುವ ಶಿಕ್ಷೆಯಿಂದ ಅವರನ್ನು ರಕ್ಷಿಸುವುದನ್ನು ಸೂಚಿಸುತ್ತದೆ.
  • ಯೇಸುವಿನಲ್ಲಿ ನಿಜವಾದ ವಿಶ್ವಾಸ ಅಥವಾ ನಂಬಿಕೆಯು ಒಬ್ಬ ವ್ಯಕ್ತಿ ಒಳ್ಳೇಯ ಆತ್ಮೀಕವಾದ ಫಲಗಳನ್ನು ಕೊಡುವಂತೆ ಮಾಡುತ್ತದೆ ಅಥವಾ ಒಳ್ಳೇಯ ನಡತೆಯನ್ನುಂಟು ಮಾಡುತ್ತದೆ, ಯಾಕಂದರೆ ಪವಿತ್ರಾತ್ಮನು ಆ ವಿಶ್ವಾಸಿಯಲ್ಲಿ ನಿವಾಸಿಯಾಗಿರುತ್ತಾನೆ.
  • “ವಿಶ್ವಾಸ” ಎನ್ನುವುದು ಕೆಲವೊಂದುಬಾರಿ ಯೇಸುವಿನ ಕುರಿತಾದ ಬೋಧನೆಗಳೆಲ್ಲವನ್ನೂ ಸಾಧಾರಣವಾಗಿ ಸೂಚಿಸುತ್ತದೆ, ಅದು “ವಿಶ್ವಾಸದ ನಂಬಿಕೆಗಳು” ಎನ್ನುವ ಮಾತಿನಲ್ಲಿರುವಂತೆ ಆ ಬೋಧನೆಗಳನ್ನು ಸೂಚಿಸುತ್ತದೆ.
  • “ವಿಶ್ವಾಸದಿಂದಿರು” ಅಥವಾ “ವಿಶ್ವಾಸವನ್ನು ಬಿಟ್ಟುಬಿಡು” ಎನ್ನುವ ಮಾತುಗಳ ಸಂದರ್ಭದಲ್ಲಿ, “ವಿಶ್ವಾಸ” ಎನ್ನುವ ಪದವು ಯೇಸುವಿನ ಕುರಿತಾದ ಎಲ್ಲಾ ಬೋಧನೆಗಳನ್ನು ನಂಬುವುದರ ಸ್ಥಿತಿಯನ್ನು ಅಥವಾ ಸ್ಥಾನವನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಕೆಲವೊಂದು ಸಂದರ್ಭಗಳಲ್ಲಿ “ವಿಶ್ವಾಸ” ಎನ್ನುವ ಪದವನ್ನು “ನಂಬಿಕೆ” ಅಥವಾ “ಅಪರಾಧ ನಿರ್ಣಯ” ಅಥವಾ “ಆತ್ಮವಿಶ್ವಾಸ” ಅಥವಾ “ಭರವಸೆ” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ ಈ ಪದಗಳನ್ನು ಕ್ರಿಯಾಪದಗಳನ್ನಾಗಿ ಬಳಸುತ್ತಾರೆ, “ನಂಬು”. (ನೋಡಿರಿ: ಅಮೂರ್ತ ನಾಮಪದಗಳು)
  • “ವಿಶ್ವಾಸದಿಂದಿರು” ಎನ್ನುವ ಮಾತನ್ನು “ಯೇಸುವಿನಲ್ಲಿ ವಿಶ್ವಾಸದಿಂದಿರುವುದು” ಅಥವಾ “ಯೇಸುವಿನಲ್ಲಿರುವ ನಂಬಿಕೆಯನ್ನು ಮುಂದುವರಿಸುವುದು” ಎಂದೂ ಅನುವಾದ ಮಾಡಬಹುದು.
  • “ವಿಶ್ವಾಸದ ಆಳವಾದ ನಂಬಿಕೆಗಳನ್ನು ಅವರು ತಪ್ಪದೇ ಹೊಂದಿರಬೇಕು” ಎನ್ನುವ ವಾಕ್ಯವನ್ನು “ಅವರಿಗೆ ಯೇಸುವಿನ ಕುರಿತಾಗಿ ಹೇಳಲ್ಪಟ್ಟ ಪ್ರತಿಯೊಂದು ಸಂಗತಿಗಳನ್ನು ಅವರು ತಪ್ಪದೆ ನಂಬಬೇಕಾಗಿರುತ್ತದೆ” ಎಂದೂ ಅನುವಾದ ಮಾಡಬಹುದು.
  • “ವಿಶ್ವಾಸದಲ್ಲಿ ನನ್ನ ನಿಜವಾದ ಮಗನು” ಎನ್ನುವ ಮಾತಿಗೆ “ನನಗೆ ನನ್ನ ಮಗನಂತೆ ಯಾರಿದ್ದಾರೆ, ಯಾಕಂದರೆ ಯೇಸುವಿನಲ್ಲಿ ನಂಬಿಕೆಯಿಡುವುದಕ್ಕೆ ನಾನು ಅವನಿಗೆ ಹೇಳಿದ್ದೇನೆ” ಎಂದು ಅಥವಾ “ಯೇಸುವಿನಲ್ಲಿ ನಂಬಿಕೆಯಿಟ್ಟ ನನ್ನ ಆತ್ಮೀಯಕವಾದ ಮಗನು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ನಂಬು, ನಂಬಿಗೆಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 05:06 ಇಸಾಕನು ಯೌವನಸ್ಥನಾಗಿದ್ದಾಗ, “ನಿನ್ನ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು, ನನಗೆ ಅವನನ್ನು ಬಲಿ ಕೊಡು” ಎಂದು ಹೇಳುವುದರ ಮೂಲಕ ದೇವರು ಅಬ್ರಾಹಾಮನ __ ವಿಶ್ವಾಸವನ್ನು ___ ಪರೀಕ್ಷೆ ಮಾಡಿದನು,
  • 31:07 “ನೀನು ಸ್ವಲ್ಪ ___ ವಿಶ್ವಾಸವನ್ನು ___ ಹೊಂದಿಕೊಂಡಿದ್ದೀಯ, ಯಾಕೆ ಸಂದೇಹ ಪಡುತ್ತೀ?” ಎಂದು ಆತನು (ಯೇಸು) ಪೇತ್ರನಿಗೆ ಹೇಳಿದನು.
  • 32:16 “ನಿನ್ನ ___ ವಿಶ್ವಾಸವೇ __ ನಿನ್ನನ್ನು ಗುಣಪಡಿಸಿದೆ, ಸಮಾಧಾನದಿಂದ ಹೋಗು” ಎಂದು ಯೇಸು ಆಕೆಗೆ ಹೇಳಿದನು.
  • 38:09 “ಸೈತಾನನಿಗೆ ನೀವೆಲ್ಲರೂ ಬೇಕಾಗಿದ್ದಾರೆ, ಆದರೆ ಪೇತ್ರನೆ, ನಿಮ್ಮ ___ ವಿಶ್ವಾಸವು ___ ವಿಫಲವಾಗಬಾರದೆಂದು ನಿಮ್ಮೆಲ್ಲರಿಗಾಗಿ ನಾನು ಪ್ರಾರ್ಥನೆ ಮಾಡಿದ್ದೇನೆ,

ಪದ ಡೇಟಾ:

  • Strong's: H529, H530, G1680, G3640, G4102, G6066

ವಿಶ್ವಾಸರಹಿತ, ವಿಶ್ವಾಸಘಾತುಕತೆ

ಪದದ ಅರ್ಥವಿವರಣೆ

“ವಿಶ್ವಾಸರಹಿತ” ಎನ್ನುವ ಪದಕ್ಕೆ ವಿಶ್ವಾಸ ಅಥವಾ ನಂಬಿಕೆ ಇಲ್ಲವೆಂದು ಅರ್ಥ.

  • ದೇವರಲ್ಲಿ ನಂಬಿಕೆಯಿಲ್ಲದ ಜನರನ್ನು ಕುರಿತಾಗಿ ಈ ಪದವನ್ನು ಉಪಯೋಗಿಸುತ್ತಾರೆ. ಅವರು ಅನೈತಿಕವಾಗಿ ಮಾಡುವ ಕೆಲಸದ ಮೂಲಕ ಅವರ ಅಪನಂಬಿಕೆಯನ್ನು ತೋರಿಸುತ್ತದೆ.
  • ಇಸ್ರಾಯೇಲ್ ಜನರು ವಿಶ್ವಾಸರಹಿತರಾಗಿದ್ದರೆಂದು ಮತ್ತು ದೇವರಿಗೆ ಅವಿಧೇಯರಾಗಿದ್ದರೆಂದು ಯೆರೆಮೀಯ ಪ್ರವಾದಿ ಅವರನ್ನು ಆರೋಪಿಸಿದನು.
  • ಯೆಹೋವನಿಗೆ ವಿಧೇಯತೆ ತೋರದ ಅಥವಾ ಆರಾಧಿಸದ ಜನರು ಮಾಡುವಂತೆ ಅವರು ವಿಗ್ರಹಾರಧನೆ ಮಾಡಿದರು ಮತ್ತು ಅದೈವಿಕ ಪದ್ಧತಿಗಳನ್ನು ಆಚರಿಸುತ್ತಿದ್ದರು.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ, “ವಿಶ್ವಾಸರಹಿತ” ಎನ್ನುವ ಪದವನ್ನು “ಅವಿಶ್ವಾಸ” ಅಥವಾ “ಅಪನಂಬಿಕೆ” ಅಥವಾ “ದೇವರಿಗೆ ಅವಿಧೇಯರಾಗಿರುವುದು” ಅಥವಾ “ನಂಬುವುದಿಲ್ಲ” ಎಂದು ಅನುವಾದ ಮಾಡಬಹುದು.
  • “ವಿಶ್ವಾಸಘಾತುಕತೆ” ಎನ್ನುವ ಪದವನ್ನು “ಅಪನಂಬಿಕೆ” ಅಥವಾ “ಅವಿಶ್ವಾಸ” ಅಥವಾ “ದೇವರಿಗೆ ಅವಿಧೇಯತೆ ತೋರುವುದು” ಎಂದು ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)

(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ವಿಶ್ವಾಸ, ಅವಿಧೇಯತೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G571

ವ್ಯಭಿಚಾರ, ಹಾದರ, ವ್ಯಭಿಚಾರಿ, ವ್ಯಭಿಚಾರಿಣಿ

ಅರ್ಥವಿವರಣೆ:

“ವ್ಯಭಿಚಾರ” ಎನ್ನುವ ಪದವು ಮದುವೆ ಮಾಡಿಕೊಂಡಿರುವ ವ್ಯಕ್ತಿಯು ತನ್ನ ಸಂಗಾತಿ ಅಲ್ಲದವರೊಂದಿಗೆ ಲೈಂಗಿಕ ಸಂಬಂಧ ಇಟ್ವುಕೊಂಡ ಪಾಪವನ್ನು ಸೂಚಿಸುತ್ತದೆ. ಅವರಿಬ್ಬರೂ ವ್ಯಭಿಚಾರ ಮಾಡಿದ ತಪ್ಪಿತಸ್ಥರಾಗಿರುತ್ತಾರೆ. “ಹಾದರ” ಎಂಬ ಪದವು ಈ ರೀತಿಯ ವರ್ತನೆಯ ಕುರಿತು ಅಥವಾ ಇಂತಹ ಪಾಪ ಮಾಡುವ ವ್ಯಕ್ತಿಯ ಕುರಿತು ವಿವರಿಸುತ್ತದೆ.

  • “ವ್ಯಭಿಚಾರಿ” ಎನ್ನುವ ಪದವು ಸಹಜವಾಗಿ ವ್ಯಭಿಚಾರವನ್ನು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
  • “ವ್ಯಭಿಚಾರಿಣಿ” ಎನ್ನುವ ಪದವು ಕೆಲವೊಂದು ಸಲ ನಿರ್ದಿಷ್ಟವಾಗಿ ವ್ಯಭಿಚಾರ ಮಾಡಿದ ಸ್ತ್ರೀಯನ್ನು ಸೂಚಿಸುತ್ತದೆ.
  • ಗಂಡ ಹೆಂಡತಿಯರು ತಮ್ಮ ವಿವಾಹ ಒಡಂಬಡಿಕೆಯಲ್ಲಿ ಒಬ್ಬರಿಗೊಬ್ಬರು ಮಾಡಿರುವ ವಾಗ್ಧಾನಗಳನ್ನು ವ್ಯಭಿಚಾರವು ಮುರಿದುಹಾಕುತ್ತದೆ.
  • ದೇವರು ಇಸ್ರಾಯೇಲ್ಯರಿಗೆ ವ್ಯಭಿಚಾರ ಮಾಡಬಾರದೆಂದು ಆಜ್ಞಾಪಿಸಿದನು.

ಅನುವಾದ ಸಲಹೆಗಳು:

  • ಅನುವಾದ ಮಾಡಬೇಕಾದ ಭಾಷೆಯಲ್ಲಿ “ವ್ಯಭಿಚಾರ” ಎಂಬ ಅರ್ಥವು ಕೊಡುವ ಪದವು ಇಲ್ಲದಿದ್ದರೆ, ಈ ಪದವನ್ನು “ಇನ್ನೊಬ್ಬರ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದು” ಎಂದು ಅಥವಾ “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಅಕ್ರಮ ಸಂಬಂಧದಲ್ಲಿರುವುದು” ಎಂದು ಅನುವಾದ ಮಾಡಬಹುದು.
  • ಕೆಲವೊಂದು ಭಾಷೆಗಳಲ್ಲಿ ವ್ಯಭಿಚಾರದ ಕುರಿತಾಗಿ ಪರೋಕ್ಷವಾಗಿ, “ಇನ್ನೊಬ್ಬರ ಹೆಂಡತಿಯೊಂದಿಗೆ ಅಥವಾ ಗಂಡನೊಂದಿಗೆ ಮಲಗುವುದು” ಅಥವಾ “ಹೆಂಡತಿಗೆ ಅಪನಂಬಿಗಸ್ತರಾಗಿರುವುದು” ಎಂದು ಹೇಳುತ್ತಾರೆ. (ನೋಡಿರಿ: ಸೌಮ್ಯೋಕ್ತಿ)

(ಈ ಪದಗಳನ್ನು ಸಹ ನೋಡಿರಿ: ತಪ್ಪು ಮಾಡುವುದು, ಒಡಂಬಡಿಕೆ, ಲೈಂಗಿಕವಾದ ಅನೈತಿಕತೆ, ಇನ್ನೊಬ್ಬರೊಂದಿಗೆ ಮಲಗುವದು, ನಂಬಿಗಸ್ತಿಕೆ)

ಸತ್ಯವೇದದ ಉಲ್ಲೇಖ ವಚನಗಳು:

ಸತ್ಯವೇದದ ಕಥೆಗಳ ಉದಾಹರಣೆಗಳು:

  • 13:06ವ್ಯಭಿಚಾರ ಮಾಡಬೇಡಿರಿ.”
  • 28:02ವ್ಯಭಿಚಾರ ಮಾಡಬೇಡಿರಿ.”
  • 34:07 “ದೇವರೇ ನಿಮಗೆ ವಂದನೆಗಳು, ಯಾಕಂದರೆ ನಾನು ಕಳ್ಳರಂತೆ, ಅನ್ಯಾಯಸ್ಥರಂತೆ, ವ್ಯಭಿಚಾರಗಳಂತೆ, ಅಥವಾ ಸುಂಕದವರಂತೆ ಪಾಪಿಯಲ್ಲ ಎಂದು ಒಬ್ಬ ಧಾರ್ಮೀಕ ನಾಯಕನು ಪ್ರಾರ್ಥನೆ ಮಾಡಿದ್ದನು.

ಪದದ ದತ್ತಾಂಶ:

  • Strong's: H5003, H5004, G3428, G3429, G3430, G3431, G3432

ಶಕ್ತಿ, ಶಕ್ತಿಗಳು

ಪದದ ಅರ್ಥವಿವರಣೆ:

“ಶಕ್ತಿ” ಎನ್ನುವ ಪದವು ಕಾರ್ಯಗಳನ್ನು ಮಾಡುವುದಕ್ಕೆ ಅಥವಾ ಅನೇಕ ಕಾರ್ಯಗಳನ್ನು ನಡೆಯುವುದಕ್ಕೆ ಸಾಮರ್ಥ್ಯವನ್ನು ಸೂಚಿಸುತ್ತದೆ, ಈ ಪದವು ಅನೇಕಸಲ ಉನ್ನತ ಬಲವನ್ನು ಸೂಚಿಸುತ್ತವೆ. “ಶಕ್ತಿಗಳು” ಎನ್ನುವ ಪದವು ಅನೇಕ ಕಾರ್ಯಗಳನ್ನು ಮಾಡಲು ಉನ್ನತ ಸಾಮರ್ಥ್ಯವನ್ನು ಹೊಂದಿರುವ ಮನುಷ್ಯರನ್ನು ಅಥವಾ ಆತ್ಮಗಳನ್ನು ಸೂಚಿಸುತ್ತವೆ.

  • “ದೇವರ ಶಕ್ತಿ” ಎನ್ನುವ ಮಾತು ಪ್ರತಿಯೊಂದನ್ನು ಮಾಡುವ ದೇವರ ಸಾಮರ್ಥ್ಯವನ್ನು ಸೂಚಿಸುತ್ತದೆ, ವಿಶೇಷವಾಗಿ ಮನುಷ್ಯರು ಮಾಡುವುದಕ್ಕಾಗದಿರುವ ಅನೇಕ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.
  • ದೇವರು ಸೃಷ್ಟಿಸಿದ ಪ್ರತಿಯೊಂದರ ಮೇಲೆ ಆತನಿಗೆ ಸಂಪೂರ್ಣವಾದ ಶಕ್ತಿಯಿರುತ್ತದೆ.
  • ದೇವರು ಬಯಸಿದ ಕಾರ್ಯಗಳನ್ನು ಮಾಡಲು ದೇವರು ತನ್ನ ಜನರಿಗೆ ಶಕ್ತಿಯನ್ನು ಕೊಡುತ್ತಾರೆ, ಇದರಿಂದ ಅವರು ಜನರನ್ನು ಗುಣಪಡಿಸಿದಾಗ ಅಥವಾ ಅನೇಕ ಅದ್ಭುತಕಾರ್ಯಗಳನ್ನು ಮಾಡಿದಾಗ, ಅವರು ದೇವರು ಕೊಟ್ಟ ಶಕ್ತಿಯಿಂದಲೇ ಮಾಡುತ್ತಿರುತ್ತಾರೆ.
  • ಯಾಕಂದರೆ ಯೇಸು ಮತ್ತು ಪವಿತ್ರಾತ್ಮರು ಕೂಡಾ ದೇವರಾಗಿದ್ದಾರೆ, ಅವರು ಇದೇ ಶಕ್ತಿಯನ್ನು ಹೊಂದಿರುತ್ತಾರೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಶಕ್ತಿ” ಎನ್ನುವ ಪದವನ್ನು “ಸಾಮರ್ಥ್ಯ” ಅಥವಾ “ಬಲ” ಅಥವಾ “ಬಲವುಳ್ಳ” ಅಥವಾ “ಅದ್ಭುತಗಳನ್ನು ಮಾಡುವುದಕ್ಕೆ ಸಾಮರ್ಥ್ಯ” ಅಥವಾ “ನಿಯಂತ್ರಣ” ಎಂದೂ ಅನುವಾದ ಮಾಡಬಹುದು.
  • “ಶಕ್ತಿಗಳು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಶಕ್ತಿಯುತವಾದವುಗಳು” ಅಥವಾ “ನಿಯಂತ್ರಿಸುವ ಆತ್ಮಗಳು” ಅಥವಾ “ಇತರರನ್ನು ನಿಯಂತ್ರಿಸುವವರು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
  • “ನಮ್ಮ ಶತ್ರುಗಳ ಶಕ್ತಿಯಿಂದ ನಮ್ಮನ್ನು ರಕ್ಷಿಸು” ಎನ್ನುವ ಮಾತನ್ನು “ನಮ್ಮ ಶತ್ರುಗಳಿಂದ ಬರುವ ಒತ್ತಡದಿಂದ ನಮ್ಮನ್ನು ರಕ್ಷಿಸು” ಅಥವಾ “ನಮ್ಮ ಶತ್ರುಗಳ ನಿಯಂತ್ರಣದಿಂದ ನಮ್ಮನ್ನು ಬಿಡಿಸು” ಎಂದೂ ಅನುವಾದ ಮಾಡಬಹುದು. ಇಂಥಹ ಸಂದರ್ಭದಲ್ಲಿ “ಶಕ್ತಿ” ಎನ್ನುವ ಪದವು ಇತರರನ್ನು ಒತ್ತಾಯಗೊಳಿಸುವುದಕ್ಕೆ ಮತ್ತು ನಿಯಂತ್ರಿಸುವುದಕ್ಕೆ ಒಬ್ಬರ ಬಲವನ್ನು ಉಪಯೋಗಿಸುವುದು ಎನ್ನುವ ಅರ್ಥವನ್ನು ಹೊಂದಿರುತ್ತದೆ,

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ಯೇಸು, ಅದ್ಭುತ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 22:05 “ಪವಿತ್ರಾತ್ಮನು ನಿಮ್ಮ ಬಳಿಗೆ ಬರುವನು, ಮತ್ತು ನಿಮ್ಮ ಮೇಲೆ ದೇವರ __ ಶಕ್ತಿ __ ಇಳಿದು ಬಂದು ಆವರಿಸುವುದು. ಆದ್ದರಿಂದ ದೇವರ ಮಗನಾಗಿರುವ ಶಿಶುವು ಪವಿತ್ರನಾಗಿರುತ್ತಾನೆ.” ಎಂದು ದೂತನು ವಿವರಿಸಿ ಹೇಳಿದನು.
  • 26:01 ಸೈತಾನಿನ ಶೋಧನೆಗಳನ್ನು ಜಯಿಸಿದನಂತರ, ಯೇಸು ಪವಿತ್ರಾತ್ಮನ __ ಶಕ್ತಿಯಲ್ಲಿ __ ಹಿಂದುರಿಗಿ ತಾನು ನಿವಾಸವಾಗಿರುವ ಗಲಿಲಾಯ ಸೀಮೆಗೆ ಹೊರಟು ಹೋದನು.
  • 32:15 ಯೇಸು ತನ್ನೊಳಗಿಂದ __ ಶಕ್ತಿ __ ಹೊರಟು ಹೋಯಿತೆಂದು ತನ್ನಲ್ಲಿ ತಕ್ಷಣವೇ ತಿಳಿದುಕೊಂಡನು.
  • 42:11 ಯೇಸು ಮರಣದಿಂದ ಎದ್ದುಬಂದನಂತರ ನಲವತ್ತು ದಿನಗಳು, “ನನ್ನ ತಂದೆಯು ನಿಮ್ಮ ಮೇಲೆ ಪವಿತ್ರಾತ್ಮನನ್ನು ಕಳುಹಿಸಿ __ ಶಕ್ತಿಯನ್ನು __ ಅನುಗ್ರಹಿಸುವವರೆಗೂ ಯೆರೂಸಲೇಮಿನಲ್ಲಿಯೇ ಇರಿ” ಎಂದು ಆತನು ತನ್ನ ಶಿಷ್ಯರೊಂದಿಗೆ ಹೇಳಿದನು.
  • 43:06 “ಇಸ್ರಾಯೇಲ್ ಜನರೇ, ನಿಮಗೆ ಗೊತ್ತಿದ್ದು, ನೀವು ನೋಡುತ್ತಿರುವಂತೆಯೇ, ದೇವರ __ ಶಕ್ತಿಯಿಂದ __ ಅನೇಕ ಸೂಚಕ ಕ್ರಿಯೆಗಳನ್ನು ಮತ್ತು ಅದ್ಭುತಗಳನ್ನು ಮಾಡಿದ ವ್ಯಕ್ತಿ ಯೇಸುವಾಗಿದ್ದಾನೆ.
  • 44:08

ಪದ ಡೇಟಾ:

  • Strong's: H410, H1369, H2220, H2428, H2429, H2632, H3027, H3028, H3581, H4475, H4910, H5794, H5797, H5808, H6184, H7786, H7980, H7981, H7983, H7989, H8280, H8592, H8633, G1411, G1415, G1756, G1849, G1850, G2478, G2479, G2904, G3168

ಶತಾಧಿಪತಿ, ಶತಾಧಿಪತಿಗಳು

ಪದದ ಅರ್ಥವಿವರಣೆ:

ಶತಾಧಿಪತಿ ರೋಮಾ ಸೈನ್ಯದ ಅಧಿಕಾರಿ ಆಗಿರುತ್ತಾನೆ ಇವರ ಕೆಳಗೆ 100 ಮಂದಿ ಸೈನಿಕರು ಕೆಲಸ ಮಾಡುತ್ತಿರುತ್ತಾರೆ.

  • ಈ ಪದವನ್ನು “ನೂರು ಮಂದಿಗೆ ನಾಯಕನು” ಅಥವಾ “ಸೈನ್ಯದ ನಾಯಕ” ಅಥವಾ “ನೂರು ಮಂದಿಗೆ ಉಸ್ತುವಾರಿ ಅಧಿಕಾರಿ” ಎಂದು ಅರ್ಥ ಬರುವ ಮಾತುಗಳಿಂದಲೂ ಅನುವಾದ ಮಾಡಬಹುದು.
  • ಒಬ್ಬ ರೋಮಾ ಶತಾಧಿಪತಿ ತನ್ನ ಸೇವಕನನ್ನು ಗುಣಪಡಿಸಬೇಕೆಂದು ಕೇಳಿಕೊಳ್ಳಲು ಯೇಸುವಿನ ಬಳಿಗೆ ಬಂದಿದ್ದನು.
  • ಯೇಸುವಿನ ಶಿಲುಬೆಯ ಮರಣದ ಉಸ್ತುವಾರಿ ವಹಿಸಿದ್ದ ಶತಾಧಿಪತಿಯು ಯೇಸುವಿನ ಮರಣವನ್ನು ವೀಕ್ಷಿಸಿದಾಗ ಆಶ್ಚರ್ಯಚಿಕಿತನಾದನು..
  • ದೇವರು ಪೇತ್ರನ ಬಳಿಗೆ ಶತಾಧಿಪತಿಯನ್ನು ಕಳುಹಿಸಿದನು, ಇದರಿಂದ ಪೇತ್ರನು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಅವನಿಗೆ ತಿಳಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ರೋಮಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G1543, G2760

ಶರೀರ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಶರೀರ” ಎನ್ನುವ ಪದವು ಅಕ್ಷರಾರ್ಥವಾಗಿ ಮನುಷ್ಯರ ಅಥವಾ ಪ್ರಾಣಿಗಳ ಭೌತಿಕ ದೇಹದಲ್ಲಿನ ಮೃಧು ಅಂಗಾಂಶವನ್ನು ಸೂಚಿಸುತ್ತದೆ.

  • “ಶರೀರ” ಎನ್ನುವ ಪದವನ್ನು ಮನುಷ್ಯರೆಲ್ಲರನ್ನು ಅಥವಾ ಜೀವರಾಶಿಗಳನ್ನು ಸೂಚಿಸುವುದಕ್ಕೆ ಅಲಂಕಾರಿಕ ವಿಧಾನದಲ್ಲಿ ಸತ್ಯವೇದವು ಕೂಡ ಉಪಯೋಗಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ “ಶರೀರ” ಎನ್ನುವ ಪದವನ್ನು ಮನುಷ್ಯರ ಪಾಪ ಸ್ವಭಾವನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದಾರೆ. ಇದನ್ನು ಅನೇಕಬಾರಿ ಅವರ ಆತ್ಮೀಕವಾದ ಸ್ವಭಾವಕ್ಕೆ ವಿರುದ್ಧವಾಗಿ ಉಪಯೋಗಿಸಿದ್ದಾರೆ.
  • “ಸ್ವಂತ ರಕ್ತಶರೀರಗಳು” ಎನ್ನುವ ಮಾತು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ರಕ್ತ ಸಂಬಂಧವಿರುವುದನ್ನು ಸೂಚಿಸುತ್ತದೆ, ಉದಾಹರಣೆಗೆ ತಂದೆತಾಯಿಗಳು, ಅಣ್ಣತಮ್ಮ, ಮಗು ಅಥವಾ ಮೊಮ್ಮೊಗ.
  • “ಶರೀರ ಮತ್ತು ರಕ್ತ” ಎನ್ನುವ ಮಾತು ಕೂಡ ಒಬ್ಬ ವ್ಯಕ್ತಿಯ ಪೂರ್ವಜರನ್ನು ಅಥವಾ ಸಂತಾನದವರನ್ನು ಸೂಚಿಸುತ್ತದೆ.
  • “ಒಂದೇ ಶರೀರ” ಎನ್ನುವ ಮಾತು ವಿವಾಹದಲ್ಲಿ ಸ್ತ್ರೀ ಪುರುಷರಿಬ್ಬರು ಭೌತಿಕವಾಗಿ ಏಕವಾಗುವುದನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಪ್ರಾಣಿಯ ಶರೀರದ ಕುರಿತಾದ ಸಂದರ್ಭದಲ್ಲಿ, “ಶರೀರ” ಎನ್ನುವ ಪದವನ್ನು “ದೇಹ” ಅಥವಾ “ಚರ್ಮ” ಅಥವಾ “ಮಾಂಸ” ಎಂದೂ ಅನುವಾದ ಮಾಡಬಹುದು.
  • ಎಲ್ಲಾ ಜೀವರಾಶಿಗಳಿಗೆ ಇದನ್ನು ಸೂಚಿಸುವುದಕ್ಕೆ ಉಪಯೋಗಿಸಿದಾಗ, ಈ ಪದವನ್ನು “ಜೀವಿಸುವ ಪ್ರಾಣಿಗಳು” ಅಥವಾ “ಜೀವಿಸುವ ಪ್ರತಿಯೊಂದು” ಎಂದೂ ಅನುವಾದ ಮಾಡಬಹುದು.
  • ಸಾಧಾರಣವಾಗಿ ಜನರೆಲ್ಲರನ್ನು ಸೂಚಿಸುವಾಗ, ಈ ಪದವನ್ನು “ಜನರು” ಅಥವಾ “ಮನುಷ್ಯರು” ಅಥವಾ ಜೀವಿಸುವ ಪ್ರತಿಯೊಬ್ಬರು” ಎಂದೂ ಅನುವಾದ ಮಾಡಬಹುದು.
  • “ಶರೀರ ಮತ್ತು ರಕ್ತ” ಎನ್ನುವ ಮಾತನ್ನು “ಬಂಧುಗಳು” ಅಥವಾ “ಕುಟುಂಬ” ಅಥವಾ “ನಂಟರು” ಅಥವಾ “ಕುಟುಂಬ ವಂಶದವರು” ಎಂದೂ ಅನುವಾದ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ಈ ಪದವನ್ನು “ಪೂರ್ವಜರು” ಅಥವಾ “ಸಂತಾನದವರು” ಎಂದೂ ಅನುವಾದ ಮಾಡುತ್ತಾರೆ.
  • ಕೆಲವೊಂದು ಭಾಷೆಗಳಲ್ಲಿ “ಶರೀರ ಮತ್ತು ರಕ್ತ” ಎನ್ನುವ ಪದಗಳಿಗೆ ಬರುವ ಒಂದೇ ಅರ್ಥದ ಪದಗಳನ್ನು ಉಪಯೋಗಿಸುತ್ತಾರೆ.
  • “ಒಂದೇ ಶರೀರವಾಗಿರುವುದು” ಎನ್ನುವ ಮಾತನ್ನು “ಲೈಂಗಿಕವಾಗಿ ಐಕ್ಯವಾಗಿರುವುದು” ಅಥವಾ “ಒಂದೇ ಶರೀರವಾಗಿ ಮಾರ್ಪಡುವುದು” ಅಥವಾ “ಆತ್ಮ ದೇಹಗಳಲ್ಲಿ ಒಬ್ಬ ವ್ಯಕ್ತಿಯಂತೆ ಇರುವುದು” ಎಂದೂ ಅನುವಾದ ಮಾಡಬಹುದು. ಈ ಪದವು ಅನುವಾದ ಮಾಡುವ ಭಾಷೆಯಲ್ಲಿ ಮತ್ತು ಸಂಸ್ಕೃತಿಯಲ್ಲಿ ಅಂಗೀಕಾರ ಮಾಡುತ್ತಾರೋ ಇಲ್ಲವೋ ಎಂದು ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇದೆ. ನೋಡಿರಿ: ನಯನುಡಿ. ಈ ಪದವನ್ನು ಅಲಂಕಾರಿಕ ಭಾಷೆಯಲ್ಲಿಯೂ ಅರ್ಥಮಾಡಿಕೊಳ್ಳಬಹುದು, ಸ್ತ್ರೀ ಪುರುಷರು ನಿಜವಾಗಿ “ಒಂದು ಶರೀರವಾಗಿ ಮಾರ್ಪಡುತ್ತಾರೆ” ಅಥವಾ ಒಬ್ಬ ವ್ಯಕ್ತಿಯಾಗಿರುತ್ತಾರೆಂದು ಅದರ ಅರ್ಥವಲ್ಲ.

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H829, H1320, H1321, H2878, H3894, H4207, H7607, H7683, G2907, G4559, G4560, G4561

ಶಾಪ, ಶಾಪಗ್ರಸ್ತ, ಶಪಿದನು, ಶಪಿಸುವುದು

ಪದದ ಅರ್ಥವಿವರಣೆ

ಶಾಪಗ್ರಸ್ತ ಒಂದು ವಸ್ತು ಅಥವಾ ವ್ಯಕ್ತಿಗೆ ನಕಾರಾತ್ಮಕವಾದ ವಿಷಯಗಳು ಸಂಭವಿಸಬೇಕೆಂದು ಹೇಳುವುದು “ಶಾಪ” ಎನ್ನುವ ಪದಕ್ಕೆ ಅರ್ಥವಾಗಿದೆ.

  • ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವಿಗೆ ಕೇಡು ಆಗಬೇಕೆಂದು ಹೇಳುವಿಕೆ ಶಾಪವಾಗಿರುತ್ತದೆ.
  • ಯಾರಿಗಾದರೂ ಕೆಟ್ಟ ವಿಷಯಗಳು ನಡೆಯಬೇಕೆಂದು ಬಯೇಕೆ ಇರುವುದು ಸಹ ಶಾಪದ ಒಂದು ರೂಪವಾಗಿರಬಹುದು.
  • ಯಾರಾದರು ಯಾರಿಗಾದರೂ ನಕಾರಾತ್ಮಕವಾದ ಸಂಗತಿಗಳು ನಡೆಯುವಂತೆ ಶಿಕ್ಷಿಸುವುದು ಸಹ ಶಾಪವನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • “ಕೆಟ್ಟ ಕಾರ್ಯಗಳು ನಡೆಯುವಂತೆ ಮಾಡುವುದು” ಅಥವಾ “ಕೆಟ್ಟ ಕಾರ್ಯ ನಡೆಯಬೇಕೆಂದು ಘೋಷಿಸುವುದು” ಅಥವಾ “ದುಷ್ಟ ಕಾರ್ಯಗಳು ನಡೆಯುವಂತೆ ಆಣೆಯಿದುವುದು” ಎಂದು ಈ ಪದವನ್ನು ಅನುವಾದ ಮಾಡಬಹುದು.
  • ದೇವರು ತನ್ನ ಅವಿಧೇಯ ಜನರನ್ನು ಶಪಿಸಿದರು ಎನ್ನುವ ಸಂದರ್ಭದಲ್ಲಿ, “ಕೆಟ್ಟ ಕಾರ್ಯಗಳು ನಡೆಯುವಂತೆ ಅಪ್ಪಣೆಕೊಟ್ಟು ಶಿಕ್ಷಿಸುವುದು” ಎಂದು ಅನುವಾದ ಮಾಡಬಹುದು.
  • “ಶಾಪಗ್ರಸ್ತ” ಎನ್ನುವ ಪದವನ್ನು ಜನರನ್ನು ಕುರಿತಾಗಿ ಹೇಳಲ್ಪಟ್ಟಿರುವಾಗ ಅದನ್ನು “(ಈ ವ್ಯಕ್ತಿಯು) ಬಹಳ ತೊಂದರೆಯನ್ನು ಅನುಭವಿಸುತ್ತಾನೆ” ಎಂದು ಅನುವಾದ ಮಾಡಬಹುದು.
  • “ಶಾಪಗ್ರಸ್ತನಾದವನು” ಎನ್ನುವ ಪದವನ್ನು “(ಈ ವ್ಯಕ್ತಿ) ಹೆಚ್ಚಿನ ಸಂಕಟಗಳನ್ನು ಅನುಭವಿಸಲಿ” ಎಂದು ಅನುವಾದ ಮಾಡಬಹುದು.
  • “ಭೂಮಿಯು ಶಪಿತವಾಗಿದೆ” ಎನ್ನುವ ವಾಕ್ಯವನ್ನು “ಮಣ್ಣು ಸಾರವಂತವಾಗಿರುವದಿಲ್ಲ” ಎಂದು ಅನುವಾದ ಮಾಡಬಹುದು.
  • “ನಾನು ಹುಟ್ಟಿದ ದಿನ ಶಪಿತವಾಗಲಿ” ಎನ್ನುವ ವಾಕ್ಯವನ್ನು “ನಾನು ಎಷ್ಟು ಸಂಕಟವನ್ನು ಅನುಭವಿಸುತ್ತಿದ್ದೇನೆ, ನಾನು ಹುಟ್ಟದಿದ್ದರೆ ಚೆನ್ನಾಗಿರುತಿತ್ತು” ಎಂದು ಅನುವಾದ ಮಾಡಬಹುದು.
  • ಹೀಗಿದ್ದಲ್ಲಿ, ಅನುವಾದ ಮಾಡಲ್ಪಡುವ ಭಾಷೆಯಲ್ಲಿ “ಶಾಪಗ್ರಸ್ತನಾದವನು” ಎನ್ನುವ ಪದಕ್ಕೆ ಸಮಾನಾರ್ಥಕ ಪದವಿದ್ದರೆ ಅದನ್ನೇ ಉಪಯೋಗಿಸುವುದು ಒಳ್ಳೆಯದು.

(ಈ ಪದಗಳನ್ನು ಸಹ ನೋಡಿರಿ : ಆಶಿರ್ವಾದ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 02:09 ಯೆಹೋವನಾದ ದೇವರು ಸರ್ಪಕ್ಕೆ “ನೀನು ಶಾಪಗ್ರಸ್ತನಾಗಿರುವೆ” ಎಂದು ಹೇಳಿದನು.
  • 02:11 “ಈಗ ಭೂಮಿಯು ಶಾಪಗ್ರಸ್ತವಾಯಿತು, ನೀನು ಆಹಾರವನ್ನು ಬೆಳೆಸಲು ಕಷ್ಟಪಟ್ಟು ಬೆವರು ಸುರಿಸಬೇಕು”
  • 04:04 “ನಿನ್ನನ್ನು ಆಶಿರ್ವಾದಿಸುವವರನ್ನು ನಾನು ಆಶಿರ್ವಾದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು.”
  • 39:07 ಆದರೆ ಅವನು, “ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಂಡನು.
  • 50:16 ಆದಾಮ ಮತ್ತು ಹವ್ವ ದೇವರಿಗೆ ಅವಿಧೇಯರಾಗಿ ಲೋಕಕ್ಕೆ ಪಾಪವನ್ನು ಪ್ರವೇಶಿಸುವಂತೆ ಮಾಡಿದರು, ದೇವರು ಅದನ್ನು ಶಪಿಸಿ ನಾಶ ಮಾಡಲು ನಿಶ್ಚಯಿಸಿದನು.

ಪದ ಡೇಟಾ:

  • Strong's: H422, H423, H779, H1288, H2763, H2764, H3994, H5344, H6895, H7043, H7045, H7621, H8381, G331, G332, G685, G1944, G2551, G2652, G2653, G2671, G2672, G6035

ಶಾಸ್ತ್ರಿ, ಶಾಸ್ತ್ರಿಗಳು

ಪದದ ಅರ್ಥವಿವರಣೆ:

ಶಾಸ್ತ್ರಿಗಳು ಪ್ರಭುತ್ವದ ಅಧಿಕಾರಿಗಳಾಗಿದ್ದರು, ಇವರು ತಮ್ಮ ಹಸ್ತಗಳ ಮೂಲಕ ಪ್ರಾಮುಖ್ಯವಾದ ಪ್ರಭುತ್ವದ ಅಥವಾ ಧರ್ಮಸಂಬಂಧವಾದ ಪತ್ರಗಳನ್ನು ನಕಲು ಮಾಡುವುದರಲ್ಲಿ ಅಥವಾ ಬರೆಯುವುದರಲ್ಲಿ ಬಾಧ್ಯತೆಯನ್ನು ತೆಗೆದುಕೊಂಡಿದ್ದರು. ಯೆಹೂದ್ಯ ಶಾಸ್ತ್ರಿಗೆ ಇನ್ನೊಂದು ಹೆಸರು “ಯೆಹೂದ್ಯ ಧರ್ಮಶಾಸ್ತ್ರದಲ್ಲಿ ನಿಪುಣರು” ಎಂದಾಗಿತ್ತು.

  • ಹಳೇ ಒಡಂಬಡಿಕೆಯ ಪುಸ್ತಕಗಳನ್ನು ಭದ್ರಪಡಿಸುವುದರಲ್ಲಿ ಮತ್ತು ನಕಲು ಮಾಡುವುದರಲ್ಲಿ ಶಾಸ್ತ್ರಿಗಳನ್ನು ಬಾಧ್ಯತೆಯನ್ನು ಹೊಂದಿದ್ದರು.
  • ದೇವರ ಧರ್ಮಶಾಸ್ತ್ರದ ಮೇಲೆ ಭಕ್ತಿಸಂಬಂಧವಾದ ಅಭಿಪ್ರಾಯಗಳನ್ನು ಮತ್ತು ವ್ಯಾಖ್ಯೆಗಳನ್ನು ಅನುವಾದ ಮಾಡುತ್ತಿದ್ದರು, ಭದ್ರಪಡಿಸುತ್ತಿದ್ದರು ಮತ್ತು ನಕಲು ಮಾಡುತ್ತಿದ್ದರು.
  • ಅನೇಕ ಸಮಯಗಳಲ್ಲಿ ಶಾಸ್ತ್ರಿಗಳು ಪ್ರಾಮುಖ್ಯವಾದ ಪ್ರಭುತ್ವ ಅಧಿಕಾರಿಗಳಾಗಿದ್ದರು.
  • ಸತ್ಯವೇದದಲ್ಲಿ ಪ್ರಮುಖ ಶಾಸ್ತ್ರಿಗಳಲ್ಲಿ ಬಾರೂಕ ಮತ್ತು ಎಜ್ರಗಳಿದ್ದರು.
  • ಹೊಸ ಒಡಂಬಡಿಕೆಯಲ್ಲಿ “ಶಾಸ್ತ್ರಿಗಳು” ಎನ್ನುವ ಪದವನ್ನು “ಧರ್ಮಶಾಸ್ತ್ರದ ಬೋಧಕರು” ಎಂದೂ ಅನುವಾದ ಮಾಡಬಹುದು.
  • ಹೊಸ ಒಡಂಬಡಿಕೆಯಲ್ಲಿ ಶಾಸ್ತ್ರಿಗಳು “ಫರಿಸಾಯರು” ಎನ್ನುವ ಧರ್ಮ ಗುಂಪಿನಲ್ಲಿ ಭಾಗವಾಗಿರುತ್ತಾರೆ, ಮತ್ತು ಎರಡು ಗುಂಪುಗಳ ಹೆಸರುಗಳನ್ನು ಅನೇಕಬಾರಿ ಸೇರಿ ದಾಖಲಿಸಿರುವುದನ್ನು ನಾವು ನೋಡಬಹುದು.

(ಈ ಪದಗಳನ್ನು ಸಹ ನೋಡಿರಿ : ಧರ್ಮಶಾಸ್ತ್ರ, ಫರಿಸಾಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5608, H5613, H7083, G1122

ಶಿಲುಬೆ

ಪದದ ಅರ್ಥವಿವರಣೆ

ನೆಲದಲ್ಲಿ ಒಂದು ಮರದ ಸ್ತಂಭವನ್ನು ನೆಟ್ಟು ಅದಕ್ಕೆ ಮೇಲಿನ ಭಾಗದ ಹತ್ತಿರ ಇನ್ನೊಂದು ಮರದ ಸ್ತಂಭವನ್ನು ಅಡ್ಡವಾಗಿ ಜೋಡಿಸಿದರೆ ಅದನ್ನು ಸತ್ಯವೇದದ ಕಾಲದಲ್ಲಿ ಶಿಲುಬೆ ಎಂದು ಕರೆಯುತ್ತಿದ್ದರು.

  • ರೋಮಾ ಸಾಮ್ರಾಜ್ಯದ ಕಾಲದಲ್ಲಿ, ಅಪರಾಧಿಗಳನ್ನು ಶಿಕ್ಷಿಸಲು ರೋಮಾ ಸರ್ಕಾರವು ಅವರನ್ನು ಶಿಲುಬೆಗೆ ಕಟ್ಟಿಹಾಕಿ ಅಥವಾ ಮೊಳೆ ಹೊಡೆದು ಸಾಯುವವರೆಗೆ ಅವರನ್ನು ಅಲ್ಲಿಯೇ ಬಿಡುತ್ತಿದ್ದರು.
  • ಯೇಸು ಮಾಡದ ಅಪರಾಧಗಳಿಗೆ ತಪ್ಪಾಗಿ ಆರೋಪಿಸಲ್ಪಟ್ಟಿದ್ದನು ಮತ್ತು ರೋಮಾ ಪುರದವರು ಆತನನ್ನು ಶಿಲುಬೆಯ ಮರಣ ಶಿಕ್ಷೆ ಹಾಕಿದರು.
  • ನದಿ ಅಥವಾ ಕೆರೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಕ್ರಿಯೆಯನ್ನು ತೋರಿಸುವ “ದಾಟು” ಎನ್ನುವ ಕ್ರಿಯಾಪದದ ಅರ್ಥದಿಂದ ಈ ಪದ ಬೇರೊಂದು ಅರ್ಥವನ್ನು ಹೊಂದಿದೆ ಎಂದು ಗಮನಿಸಿ.

ಅನುವಾದ ಸಲಹೆಗಳು:

  • ಅನುವಾದದ ಭಾಷೆಯಲ್ಲಿ ಶಿಲುಬೆಯ ಆಕಾರವನ್ನು ಸೂಚಿಸುವಂತೆ ಯಾವುದಾದರು ಪದವನ್ನು ಈ ಪದಕ್ಕೆ ಅನುಗುಣವಾಗಿ ಉಪಯೋಗಿಸಬಹುದು.
  • ಶಿಲುಬೆಯ ಕುರಿತು ವಿವರಿಸುವಾಗ ಅದು ಜನರನ್ನು ಕೊಲ್ಲುವದಕ್ಕೆ ಉಪಯೋಗಿಸುತ್ತಿದ್ದರೆಂದು, ಅದನ್ನು “ಶಿಕ್ಷೆಯ ಸ್ತಂಭ” ಅಥವಾ “ಮರಣದ ಮರ” ಎಂದಾಗಲಿ ಕರೆಯಬಹುದು ಎಂದು ಗಮನದಲ್ಲಿಟ್ಟುಕೊಳ್ಳಿರಿ.
  • ಈ ಪದವನ್ನು ಸ್ಥಾನಿಕವಾಗಿ ಅಥವಾ ರಾಷ್ಟ್ರ ಭಾಷೆಯಲ್ಲಿ ಹೇಗೆ ಅನುವಾದ ಮಾಡಿದ್ದಾರೆಂದು ಸಹ ಗಮನಿಸಬೇಕು. (ಇದನ್ನು ನೋಡಿರಿ: ಗೊತ್ತಿಲ್ಲದವುಗಳನ್ನು ಹೇಗೆ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಶಿಲುಬೆಗೆ ಹಾಕುವುದು, ರೋಮಾ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಕೆಲವು ಉದಾಹರಣೆಗಳು:

  • 40:01 ಸೈನಿಕರು ಯೇಸುವನ್ನು ಅಪಹಾಸ್ಯ ಮಾಡಿದ ನಂತರ, ಅವರು ಆತನನ್ನು ಶಿಲುಬೆಗೆ ಹಾಕಲು ಕರೆದುಕೊಂಡು ಹೋದರು. ಆತನು ಮರಣಕ್ಕೆ ಒಳಗಾಗುವ ಶಿಲುಬೆಯನ್ನು ಆತನೇ ಹೊತ್ತಿಕೊಂಡು ಹೋಗುವಂತೆ ಅವರು ಮಾಡಿದರು.
  • 40:02 “ಕಪಾಲಸ್ಥಳ” ಎಂಬ ಸ್ಥಳಕ್ಕೆ ಯೇಸುವನ್ನು ಸೈನಿಕರು ಕರೆದುಕೊಂಡು ಬಂದರು ಮತ್ತು ಆತನ ಕೈಕಾಲುಗಳನ್ನು ಶಿಲುಬೆಗೆ ಮೊಳೆ ಹೊಡೆದರು.
  • 40:05 ಯಹೂದಿಯ ನಾಯಕರು ಮತ್ತು ಜನರ ಗುಂಪಿನಲ್ಲಿದ್ದ ಬೇರೆ ಜನರು ಯೇಸುವನ್ನು ಅಪಹಾಸ್ಯ ಮಾಡಿದರು. “ನೀನು ದೇವರ ಮಗನಾದರೆ ಶಿಲುಬೆಯಿಂದ ಇಳಿದು ಬಂದು ನಿನ್ನನ್ನು ನೀನೆ ಕಾಪಾಡಿಕೋ ಆಗ ನಾವು ನಿನ್ನನ್ನು ನಂಬುತ್ತೇವೆ” ” ಎಂದು ಅವರು ಆತನೊಂದಿಗೆ ಹೇಳಿದರು.
  • 49:10 ಯೇಸು ಶಿಲುಬೆಯ ಮೇಲೆ ಮರಣಿಸಿದಾಗ ಆತನು ನಿಮ್ಮ ಶಿಕ್ಷೆಯನ್ನು ಸ್ವಿಕರಿಸಿದನು.
  • 49:12 ಯೇಸು ದೇವರ ಮಗನೆಂದು ಆತನು ನಿಮಗಾಗಿ ಶಿಲುಬೆಯಲ್ಲಿ ನಿಮಗೆ ಬದಲಾಗಿ ಸತ್ತನೆಂದು ಮತ್ತು ದೇವರು ಆತನನ್ನು ಮತ್ತೆ ಎಬ್ಬಿಸಿದನೆಂದು ನೀವು ನಂಬಬೇಕು.

ಪದ ಡೇಟಾ:

  • Strong's: G4716

ಶಿಲುಬೆಗೆ ಹಾಕುವುದು, ಶಿಲುಬೆಗೆ ಹಾಕಲ್ಪಟ್ಟರು

ಪದದ ಅರ್ಥವಿವರಣೆ

“ಶಿಲುಬೆಗೆ ಹಾಕುವುದು” ಎಂದರೆ ಯಾರಾದರು ಒಬ್ಬ ವ್ಯಕ್ತಿಯನ್ನು ಶಿಲುಬೆಗೆ ಮೊಳೆಹೊಡೆದು ಮತ್ತು ಅವನು ಅತಿ ಘೋರವಾದ ನೋವಿನಲ್ಲಿ ಅಲ್ಲಿಯೇ ಸಾಯುವದಕ್ಕೆ ಬಿಡುವ ಶಿಕ್ಷೆ ಎಂದರ್ಥ.

  • ಅಪರಾಧಿಯನ್ನು ಶಿಲುಬೆಗೆ ಮೊಳೆಹೊಡೆಯುತ್ತಾರೆ ಅಥವಾ ಕಟ್ಟಿಹಾಕುತ್ತಾರೆ. ಶಿಲುಬೆಗೆ ಹಾಕಲ್ಪಟ್ಟ ಜನರು ರಕ್ತ ಹೀನತೆ ಅಥವಾ ಉಸಿರುಗಟ್ಟುವಿಕೆಯಿಂದ ಸತ್ತುಹೋದರು.
  • ಪ್ರಾಚೀನ ರೋಮಾ ಸಾಮ್ರಾಜ್ಯದಲ್ಲಿ ಅತಿ ಘೋರವಾದ ಅಪರಾಧಿಗಳಿಗೆ ಅಥವಾ ಅವರ ಸರ್ಕಾರದ ಅಧಿಕಾರವನ್ನು ಉಲ್ಲಂಘಿಸುವವರಿಗೆ ಈ ವಿಧವಾದ ಶಿಕ್ಷೆಯನ್ನು ಕೊಡುತ್ತಿದ್ದರು.
  • ಯೇಸುವನ್ನು ಶಿಲುಬೆಗೆ ಹಾಕಲು ತಮ್ಮ ಸೈನಿಕರಿಗೆ ಅಪ್ಪಣೆ ನೀಡಬೇಕೆಂದು ಯಹೂದಿಯರ ಮತಾಧಿಕರಿಗಳು ರೋಮಾ ಪ್ರಭುತ್ವದವರನ್ನು ಬೇಡಿಕೊಂಡರು. ಸೈನಿಕರು ಯೇಸುವನ್ನು ಶಿಲುಬೆಗೆ ಮೊಳೆಹೊಡೆದರು. ಆತನ ಅಲ್ಲಿ ಆರು ಘಂಟೆಗಳ ಕಾಲ ನೋವನ್ನು ಅನುಭವಿಸಿ ಆ ನಂತರ ಸತ್ತುಹೋದರು.

ಅನುವಾದ ಸಲಹೆಗಳು:

  • “ಶಿಲುಬೆಗೆ ಹಾಕುವುದು” ಎನ್ನುವ ಪದವನ್ನು “ಶಿಲುಬೆಯ ಮೇಲೆ ಸಾಯಿಸುವುದು” ಅಥವಾ “ಶಿಲುಬೆಗೆ ಮೊಳೆಯುವ ಮೂಲಕ ಮರಣದಂಡನೆ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶಿಲುಬೆ, ರೋಮಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಕೆಲವು ಉದಾಹರಣೆಗಳು :

  • 39:11 ಆದರೆ ಯಹೂದಿಯ ನಾಯಕರು ಮತ್ತು ಜನರು “ಆತನನ್ನು (ಯೇಸುವನ್ನು)ಶಿಲುಬೆಗೆ ಹಾಕಿರಿ!” ಎಂದು ಕೂಗಿ ಹೇಳಿದರು.
  • 39:12 ಗದ್ದಲ ಹೆಚ್ಚಾಗುತ್ತದೆ ಎಂದು ಪಿಲಾತನು ತಿಳಿದು ಯೇಸುವನ್ನು ಶಿಲುಬೆಗೆ ಹಾಕುವುದಕ್ಕೆ ತನ್ನ ಸೈನಿಕರಿಗೆ ಒಪ್ಪಿಸಿದನು. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸುವದರ ವಿಷಯದಲ್ಲಿ ಪ್ರಮುಖ ಪತ್ರ ವಹಿಸಿದರು.
  • 40:01 ಸೈನಿಕರು ಯೇಸುವನ್ನು ಅಪಹಾಸ್ಯ ಮಾಡಿದ ಮೇಲೆ ಆತನನ್ನು ಶಿಲುಬೆಗೆ ಹಾಕುವದಕ್ಕೆ ಕರೆದುಕೊಂಡುಹೋಗಿದರು. ಆತನು ಮರಣಿಸುವ ಶಿಲುಬೆಯನ್ನು ಆತನೇ ಹೊತ್ತಿಕೊಂಡು ಹೋಗುವಂತೆ ಅವರು ಮಾಡಿದುರು.
  • 40:04 ಇಬ್ಬರು ಕಳ್ಳರ ಮಧ್ಯದಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು.
  • 43:06 “ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೃಪೆಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೋಟ್ಟನು. ಆದರೂ ನೀವು ಆತನನ್ನು ಶಿಲುಬೆಗೆ ಹಾಕಿ ಮೊಳೆಜಡಿದು ಕೊಂದಿರಿ.
  • 43:09 “ನೀವು ಯೇಸು ಎಂಬ ಈ ಮನುಷ್ಯನನ್ನು ಶಿಲುಬೆಗೆ ಹಾಕಿ ಕೊಂದಿದ್ದೀರ”
  • 44:08 “ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ. ನೀವು ಯೇಸುವನ್ನು ಶಿಲುಬೆಗೆ ಹಾಕಿ ಕೊಲ್ಲಿಸಿದ್ದೀರಿ, ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು!”

ಪದ ಡೇಟಾ:

  • Strong's: G388, G4362, G4717, G4957

ಶಿಷ್ಯ, ಶಿಷ್ಯರು

ಪದದ ಅರ್ಥವಿವರಣೆ:

“ಶಿಷ್ಯ” ಎನ್ನುವ ಪದವು ಬೋಧಕರೊಂದಿಗೆ ಹೆಚ್ಚಾದ ಸಮಯವನ್ನು ಕಳೆಯುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ, ಆ ಬೋಧಕನ ಗುಣಲಕ್ಷಣಗಳಿಂದ ಮತ್ತು ಬೋಧನೆಗಳಿಂದ ಕಲಿತುಕೊಳ್ಳುವುದನ್ನು ಸೂಚಿಸುತ್ತದೆ.

  • ಯೇಸುವನ್ನು ಹಿಂಬಾಲಿಸಿದ ಜನರೆಲ್ಲರು ಆತನ ಬೋಧನೆಗಳನ್ನು ಕೇಳಿಸಿಕೊಂಡು ಮತ್ತು ಅವುಗಳಿಗೆ ವಿಧೇಯರಾಗಿರುವವರನ್ನು ಆತನ “ಶಿಷ್ಯರು” ಎಂದು ಕರೆಯಲ್ಪಟ್ಟಿದ್ದರು.
  • ಸ್ನಾನಿಕನಾದ ಯೋಹಾನನಿಗೂ ಶಿಷ್ಯರಿದ್ದರು.
  • ಯೇಸು ಸೇವೆ ಮಾಡಿದ ಕಾಲದಲ್ಲಿ, ಅನೇಕಮಂದಿ ಶಿಷ್ಯರು ಆತನನ್ನು ಹಿಂಬಾಲಿಸಿ, ಆತನ ಬೋಧನೆಗಳನ್ನು ಕೇಳಿದರು.
  • ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತನಗೆ ಅತೀ ಹತ್ತಿರವಾದ ಶಿಷ್ಯರಾಗಿರಲು ಆರಿಸಿಕೊಂಡರು; ಈ ಶಿಷ್ಯರೇ ಆತನ “ಅಪೊಸ್ತಲರಾಗಿ” ಕರೆಯಲ್ಪಟ್ಟರು.
  • ಯೇಸುವಿನ ಹನ್ನೆರಡು ಮಂದಿ ಅಪೊಸ್ತಲರು ಆತನ “ಶಿಷ್ಯರಾಗಿ” ಅಥವಾ “ಹನ್ನೆರಡು ಮಂದಿ ಶಿಷ್ಯರಾಗಿ” ಗುರುತಿಸಲ್ಪಟ್ಟರು.
  • ಯೇಸುವು ಪರಲೋಕಕ್ಕೆ ಆರೋಹಣವಾಗುವುದಕ್ಕೆ ಮುಂಚಿತವಾಗಿ, ಯೇಸುವಿನ ಶಿಷ್ಯರಾಗುವುದು ಹೇಗೆಂದು ಇತರರಿಗೂ ಬೋಧನೆ ಮಾಡಬೇಕೆಂದು ಆತನು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು.
  • ಯೇಸುವಿನಲ್ಲಿ ನಂಬಿಕೆಯಿಟ್ಟವರು ಯಾರೇಯಾಗಲಿ, ಆತನ ಬೋಧನೆಗಳಿಗೆ ವಿಧೇಯರಾಗುತ್ತಾರೆ, ಅವರನ್ನೇ ಯೇಸು ಶಿಷ್ಯರು ಎಂದು ಕರೆಯಲ್ಪಡುತ್ತಾರೆ.

ಅನುವಾದ ಸಲಹೆಗಳು:

  • “ಶಿಷ್ಯ” ಎನ್ನುವ ಪದವನ್ನು “ಹಿಂಬಾಲಕ” ಅಥವಾ “ವಿದ್ಯಾರ್ಥಿ” ಅಥವಾ “ತರಬೇತಿ ಹೊಂದುವವರು” ಅಥವಾ “ಕಲಿತುಕೊಳ್ಳುವವರು” ಎಂದು ಅರ್ಥಕೊಡುವ ಪದಗಳೊಂದಿಗೆ ಅನುವಾದ ಮಾಡಬಹುದು.
  • ಅನುವಾದ ಮಾಡಿದ ಈ ಪದವು ಕೇವಲ ತರಗತಿ ಕೊಠಡಿಯಲ್ಲಿ ಕಲಿತುಕೊಳ್ಳುವ ವಿಧ್ಯಾರ್ಥಿಯನ್ನು ಮಾತ್ರವೇ ಸೂಚಿಸದಂತೆ ನೋಡಿಕೊಳ್ಳಿರಿ.
  • ಅನುವಾದ ಮಾಡಿದ ಈ ಪದವು ಖಂಡಿತವಾಗಿ ಅಪೊಸ್ತಲ ಎನ್ನುವ ಪದಕ್ಕೆ ಬೇರೆಯಾಗಿರಬೇಕು.

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ನಂಬು, ಯೇಸು, ಸ್ನಾನೀಕನಾದ ಯೋಹಾನ, ಹನ್ನೆರಡು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 30:08 ಎಲ್ಲಾ ಜನರಿಗೆ ಕೊಡುವುದಕ್ಕೆ ಆತನು (ಯೇಸು) ರೊಟ್ಟಿಗಳನ್ನು ತನ್ನ __ ಶಿಷ್ಯರಿಗೆ __ ರೊಟ್ಟಿಗಳನ್ನು ಕೊಟ್ಟನು. __ ಶಿಷ್ಯರು __ ಆ ಆಹಾರವನ್ನು ಹಂಚಿದರು, ಆದರೂ ಕಡಿಮೆಯಾಗಲೇಯಿಲ್ಲ.
  • 38:01 ಮೂರು ವರ್ಷಗಳಾದನಂತರ ಬಹಿರಂಗವಾಗಿ ಯೇಸು ಬೋಧಿಸುವುದಕ್ಕೂ ಮತ್ತು ಪ್ರಸಂಗಿಸುವುದಕ್ಕೂ ಆರಂಭಿಸಿದನು, ಯೆರೂಸಲೇಮಿನಲ್ಲಿ ಅವರೊಂದಿಗೆ ಪಸ್ಕ ಹಬ್ಬವನ್ನು ನಡೆಸಬೇಕೆಂದು ಮತ್ತು ಆ ಸ್ಥಳದಲ್ಲೇ ನನ್ನನ್ನು ಸಾಯಿಸುತ್ತಾರೆಂದು ಯೇಸು ತನ್ನ __ ಶಿಷ್ಯರಿಗೆ __ ಹೇಳಿದನು.
  • 38:11 ಯೇಸು ತನ್ನ __ ಶಿಷ್ಯರೊಂದಿಗೆ __ ಗೆತ್ಸೇಮನೆ ಎಂದು ಕರೆಯಲ್ಪಡುವ ಸ್ಥಳಕ್ಕೆ ಹೊರಟನು. ಅವರು ಶೋಧನೆಗೆ ಗುರಿಯಾಗದಂತೆ ಪ್ರಾರ್ಥನೆ ಮಾಡಬೇಕೆಂದು ಯೇಸು ತನ್ನ __ ಶಿಷ್ಯರಿಗೆ __ ಹೇಳಿದನು.
  • 42:10 “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು __ ಶಿಷ್ಯರನ್ನಾಗಿ __ಮಾಡಿ, ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂದು ಯೇಸು ತನ್ನ __ ಶಿಷ್ಯರಿಗೆ __ ಹೇಳಿದನು.

ಪದ ಡೇಟಾ:

  • Strong's: H3928, G3100, G3101, G3102

ಶುದ್ಧ, ತೊಳೆಯು

ಪದದ ಅರ್ಥವಿವರಣೆ:

“ಶುದ್ದ” ”ಎಂಬ ಪದವು ಸಾಮಾನ್ಯವಾಗಿ ಯಾರೊಬ್ಬರಿಂದ / ಯಾವುದೋ ಕೊಳಕು ಅಥವಾ ಕಲೆಗಳನ್ನು ತೆಗೆದುಹಾಕುವುದು ಅಥವಾ ಮೊದಲಿಗೆ ಯಾವುದೇ ಕೊಳಕು ಅಥವಾ ಕಲೆಗಳನ್ನು ಹೊಂದಿರದಿರುವುದನ್ನು ಸೂಚಿಸುತ್ತದೆ. "ತೊಳೆಯುವುದು" ಎಂಬ ಪದವು ನಿರ್ದಿಷ್ಟವಾಗಿ ಯಾರೋ / ಯಾವುದೋ ಕೊಳಕು ಅಥವಾ ಕಲೆಗಳನ್ನು ತೆಗೆದುಹಾಕುವ ಕ್ರಿಯೆಯನ್ನು ಸೂಚಿಸುತ್ತದೆ.

  • “ಶುದ್ಧೀಕರಿಸು” ಎನ್ನುವ ಪದವನ್ನು ಯಾವುದಾದರೊಂದನ್ನು “ಶುದ್ಧ” ಮಾಡುವ ಪದ್ಧತಿಯ ಕ್ರಿಯೆಯನ್ನು ಸೂಚಿಸುತ್ತದೆ. ಇದನ್ನು “ತೊಳೆ” ಅಥವಾ “ಪವಿತ್ರಗೊಳಿಸು” ಎಂದೂ ಅನುವಾದ ಮಾಡಬಹುದು.
  • ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ಯರಿಗೆ “ಶುದ್ಧ” ಪ್ರಾಣಿಗಳು ಯಾವುವು ಮತ್ತು “ಅಶುದ್ಧ” ಪ್ರಾಣಿಗಳು ಯಾವುವೆಂದು ವಿಶೇಷವಾಗಿ ಹೇಳಿದ್ದನು. ಹೋಮಕ್ಕಾಗಿ ಮತ್ತು ತಿನ್ನುವುದಕ್ಕೆ ಕೇವಲ ಶುದ್ಧ ಪ್ರಾಣಿಗಳನ್ನು ಮಾತ್ರವೇ ಉಪಯೋಗಿಸುವುದಕ್ಕೆ ಅನುಮತಿಸಿದ್ದನು. ಈ ಸಂದರ್ಭದಲ್ಲಿ “ಶುದ್ಧ” ಎನ್ನುವ ಪದಕ್ಕೆ ಹೋಮಕ್ಕಾಗಿ ಉಪಯೋಗಿಸಲು ದೇವರಿಗೆ ಅಂಗೀಕೃತವಾದ ಪ್ರಾಣಿ ಎಂದರ್ಥ.
  • ಒಬ್ಬ ವ್ಯಕ್ತಿಗೆ ಚರ್ಮ ರೋಗವಿದ್ದರೆ ಆ ವ್ಯಕ್ತಿಯ ಚರ್ಮವು ಇನ್ನು ಮುಂದೆ ಯಾವ ಅಂಟುರೋಗವಿಲ್ಲದೆ ಗುಣವಾಗುವವರೆಗೂ ಅಶುದ್ಧನು ಎಂದರ್ಥ, ಆ ವ್ಯಕ್ತಿಯನ್ನು “ಶುದ್ಧನು” ಎಂದು ತಿರುಗಿ ಹೇಳುವವರೆಗೂ ಚರ್ಮವನ್ನು ಶುದ್ಧೀಕರಿಸುವುದಕ್ಕೋಸ್ಕರ ನಿಯಮಗಳಿಗೆ ವಿಧೇಯನಾಗಬೇಕು.
  • “ಶುದ್ಧ” ಎನ್ನುವ ಪದವು ಕೆಲವೊಂದುಬಾರಿ ನೈತಿಕ ಪವಿತ್ರತೆಯನ್ನು ಸೂಚಿಸಲು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.

ಸತ್ಯವೇದದಲ್ಲಿ “ಅಶುದ್ಧ” ಎನ್ನುವ ಪದವು ದೇವರು ತನ್ನ ಜನರು ಮುಟ್ಟಕೂಡದ, ತಿನ್ನಬಾರದ, ಅಥವಾ ಬಲಿಯಾಗಿ ಅರ್ಪಿಸಬಾರದ ವಿಷಯಗಳನ್ನು ಸೂಚಿಸಲು ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

  • ಯಾವ ಯಾವ ಪ್ರಾಣಿಗಳು “ಶುದ್ಧವೋ” ಮತ್ತು ಯಾವ ಯಾವ ಪ್ರಾಣಿಗಳು “ಅಶುದ್ಧವೋ” ಎನ್ನುವುದರ ಕುರಿತಾಗಿ ದೇವರು ಇಸ್ರಾಯೇಲ್ಯರಿಗೆ ಆಜ್ಞೆಗಳನ್ನು ಕೊಟ್ಟರು. ಅಶುದ್ಧವಾದ ಪ್ರಾಣಿಗಳು ಬಲಿಗೆ ಅಥವಾ ತಿನ್ನುವುದಕ್ಕೆ ಉಪಯೋಗಿಸಲು ಅನುಮತಿಯಿಲ್ಲ.
  • ಚರ್ಮ ರೋಗಗಳಿಂದಿರುವ ಜನರು ಗುಣವಾಗುವವರೆಗೂ ಅವರನ್ನು “ಅಶುದ್ಧರು” ಎಂದು ಕರೆಯುತ್ತಿದ್ದರು.
  • ಇಸ್ರಾಯೇಲ್ಯರು “ಅಶುದ್ಧ” ವಾದವುಗಳನ್ನು ಮುಟ್ಟಿದರೆ, ಅವರು ತಮ್ಮನ್ನು ತಾವೇ ಒಂದು ಕಾಲಾವದಿಯವರೆಗೆ ಅಶುದ್ಧರು ಎಂದು ಹೇಳಿಕೊಳ್ಳುತ್ತಿದ್ದರು.
  • ಅಶುದ್ಧವಾದವುಗಳನ್ನು ತಿನ್ನುವುದರ ಕುರಿತಾಗಿ ಅಥವಾ ಅವುಗಳನ್ನು ಮುಟ್ಟಿಕೊಳ್ಳುವುದರ ಕುರಿತಾಗಿ ದೇವರ ಆಜ್ಞೆಗಳಿಗೆ ವಿಧೇಯತೆ ತೋರಿಸುವುದೆನ್ನುವುದು ದೇವರ ಸೇವೆಗಾಗಿ ಇಸ್ರಾಯೇಲ್ಯರನ್ನು ಪ್ರತ್ಯೇಕಿಸಲ್ಪಟ್ಟವರನ್ನಾಗಿ ಇರಿಸುತ್ತದೆ.
  • ಈ ಭೌತಿಕವಾದ ಮತ್ತು ಸಾಂಪ್ರದಾಯಿಕವಾದ ಅಶುದ್ಧತೆಯು ನೈತಿಕ ಅಶುದ್ಧತೆಗೆ ಗುರುತಾಗಿರುತ್ತದೆ.
  • ಇನ್ನೊಂದು ಅಲಂಕಾರಿಕ ಭಾಷೆಯಲ್ಲಿ “ಅಶುದ್ಧ ಆತ್ಮ” ಎನ್ನುವುದು ದುಷ್ಟಾತ್ಮಕ್ಕೆ ಸೂಚನೆಯಾಗಿರುತ್ತದೆ.

ಅನುವಾದ ಸಲಹೆಗಳು:

  • ಈ ಪದವನ್ನು “ಸ್ವಚ್ಛ” ಅಥವಾ “ಪವಿತ್ರ” (ಮಾಲಿನ್ಯವಾಗದೆ ಎನ್ನುವ ಅರ್ಥ ಬರುವ ಪದ) ಎನ್ನುವ ಸಾಧಾರಣ ಪದದೊಂದಿಗೆ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ಆಚರಣೆ ಶುದ್ಧತೆ” ಅಥವಾ “ದೇವರಿಗೆ ಸ್ವೀಕೃತವಾದದ್ದು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
  • “ಶುದ್ಧೀಕರಿಸು” ಎನ್ನುವದನ್ನು “ತೊಳೆ” ಅಥವಾ “ಪವಿತ್ರಗೊಳಿಸು” ಎಂದೂ ಅನುವಾದ ಮಾಡಬಹುದು.
  • “ಶುದ್ಧ” ಮತ್ತು “ಶುದ್ಧೀಕರಿಸು” ಎನ್ನುವ ಪದಗಳನ್ನು ಅಲಂಕಾರಿಕ ಭಾವನೆಯಲ್ಲಿಯೂ ಅರ್ಥಮಾಡಿಕೊಳ್ಳುವಂತೆ ನೋಡಿಕೊಳ್ಳಿರಿ.
  • “ಅಶುದ್ಧ” ಎನ್ನುವ ಪದವನ್ನು “ಶುದ್ಧವಿಲ್ಲದ್ದು” ಅಥವಾ “ದೇವರ ದೃಷ್ಟಿಯಲ್ಲಿ ಅಯೋಗ್ಯವಾದದ್ದು” ಅಥವಾ “ಭೌತಿಕವಾಗಿ ಅಶುದ್ಧವಾದದ್ದು” ಅಥವಾ “ಕೊಳೆಯಾದದ್ದು” ಎಂದೂ ಅನುವಾದ ಮಾಡಬಹುದು.
  • ಅಶುದ್ಧ ಆತ್ಮ ಎಂದು ದೆವ್ವವನ್ನು ಸೂಚಿಸಿದಾಗ, “ಅಶುದ್ಧ” ಎನ್ನುವ ಪದವನ್ನು “ದುಷ್ಟ” ಅಥವಾ “ಕೊಳೆಯಾದದ್ದು” ಎಂದೂ ಅನುವಾದ ಮಾಡಬಹುದು.
  • ಈ ಪದದ ಅನುವಾದವು ಆತ್ಮೀಕ ಅಶುದ್ಧತೆಯನ್ನು ಅನುಮತಿಸಬೇಕು. ಮುಟ್ಟುವುದಕ್ಕೂ, ತಿನ್ನುವುದಕ್ಕೂ ಅಥವಾ ಬಲಿ ಕೊಡುವುದಕ್ಕೂ ಯೋಗ್ಯವಿಲ್ಲವೆಂದು ದೇವರು ಹೇಳಿದ ಪ್ರತಿಯೊಂದನ್ನು ಸೂಚಿಸಬೇಕು.

(ಈ ಪದಗಳನ್ನು ಸಹ ನೋಡಿರಿ : ಕೊಳಕು, ದೆವ್ವ, ಪವಿತ್ರ, ಹೋಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1249, H1252, H1305, H2134, H2135, H2141, H2398, H2548, H2834, H2889, H2890, H2891, H2893, H2930, H2931, H2932, H3001, H3722, H5079, H5352, H5355, H5356, H6172, H6565, H6663, H6945, H7137, H8552, H8562, G167, G169, G2511, G2512, G2513, G2839, G2840, G3394, G3689

ಶುದ್ಧ, ಶುದ್ಧೀಕರಿಸು, ಶುದ್ಧೀಕರಣೆ

ಪದದ ಅರ್ಥವಿವರಣೆ:

“ಶುದ್ಧ” ಎನ್ನುವ ಪದಕ್ಕೆ ಯಾವ ದೋಷಗಳೂ ಇಲ್ಲದಿರುವುದು ಅಥವಾ ಮಿಶ್ರಣವಿಲ್ಲದಿರುವುದು, ಅದರಲ್ಲಿ ಬೇರೆ ಯಾವುದೂ ಇರಬಾರದು. ಯಾವುದಾದರೊಂದನ್ನು ಶುದ್ಧೀಕರಿಸುವುದು ಎಂದರೆ ಅದನ್ನು ಚೊಕ್ಕಟಗೊಳಿಸು ಎಂದರ್ಥ ಮತ್ತು ಅದನ್ನು ಮಲಿನಗೊಳಿಸುವ ಅಥವಾ ಕಲುಷಿತಗೊಳಿಸುವವುಗಳನ್ನು ತೆಗೆದುಹಾಕುವುದು ಎಂದರ್ಥ.

  • ಹಳೇ ಒಡಂಬಡಿಕೆ ಆಜ್ಞೆಗಳಿಗೆ ಸಂಬಂಧಪಟ್ಟಂತೆ, “ಶುದ್ಧೀಕರಿಸು” ಮತ್ತು “ಶುದ್ಧೀಕರಣ” ಎನ್ನುವ ಪದಗಳು ಪ್ರಾಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಅಥವಾ ವಸ್ತುವನ್ನು ಅಶುದ್ಧವನ್ನಾಗಿ ಮಾಡುವ ವಿಷಯಗಳಿಂದ ಶುದ್ಧೀಕರಣ ಮಾಡುವುದುದನ್ನು ಸೂಚಿಸುತ್ತದೆ, ಉದಾಹರಣೆಗೆ, ರೋಗ, ದೇಹದ ದ್ರವಗಳು, ಅಥವಾ ಶಿಶು ಜನನ ಎನ್ನುವಂಥವುಗಳು.
  • ಹಳೇ ಒಡಂಬಡಿಕೆಯು ಕೂಡ ಪಾಪದಿಂದ ಹೇಗೆ ಶುದ್ಧೀಕರಣ ಹೊಂದಬೇಕೆಂದು ಜನರಿಗೆ ಹೇಳುವ ಆಜ್ಞೆಗಳನ್ನು ಒಳಗೊಂಡಿರುತ್ತದೆ, ಸಾಧಾರಣವಾಗಿ ಪ್ರಾಣಿಯನ್ನು ಬಲಿ ಕೊಡುವುದರ ಮೂಲಕ ಶುದ್ಧೀಕರಣವು ಇರುತ್ತದೆ. ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಯಜ್ಞಗಳು ಮತ್ತೇ ಮತ್ತೇ ಮಾಡಬೇಕಾದ ಪರಿಸ್ಥಿತಿ ಇರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಶುದ್ಧೀಕರಣೆ ಅನೇಕಬಾರಿ ಪಾಪದಿಂದ ತೊಳೆಯಲ್ಪಡುವುದನ್ನು ಸೂಚಿಸುತ್ತದೆ.
  • ಜನರು ತಮ್ಮ ಪಾಪಗಳಿಂದ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಶುದ್ಧೀಕರಿಸಲ್ಪಡುವ ಒಂದೇ ವಿಧಾನ ಏನೆಂದರೆ ಪಶ್ಚಾತ್ತಾಪ ಹೊಂದಿ, ದೇವರ ಕ್ಷಮೆಯನ್ನು ಪಡೆದುಕೊಳ್ಳುವುದರ ಮೂಲಕ ಮತ್ತು ಯೇಸುವಿನಲ್ಲಿ, ತನ್ನ ತ್ಯಾಗದಲ್ಲಿ ನಂಬಿಕೆಯಿಡುವುದರ ಮೂಲಕ ಸಾಧ್ಯವಾಗುತ್ತದೆ.

ಅನುವಾದ ಸಲಹೆಗಳು:

  • “ಶುದ್ಧೀಕರಿಸು” ಎನ್ನುವ ಪದವನ್ನು “ಪವಿತ್ರಗೊಳಿಸು” ಅಥವಾ “ತೊಳೆ” ಅಥವಾ “ಎಲ್ಲಾ ಕಲ್ಮಷಗಳಿಂದ ತೊಳೆ” ಅಥವಾ “ಎಲ್ಲಾ ಪಾಪಗಳಿಂದ ಬಿಡುಗಡೆ ಹೊಂದು” ಎಂದೂ ಅನುವಾದ ಮಾಡಬಹುದು.
  • “ಅವರ ಶುದ್ಧೀಕರಣಕ್ಕೆ ಸಮಯವು ಮುಗಿದು ಹೋದಾಗ” ಎನ್ನುವ ಮಾತನ್ನು “ಅನೇಕ ದಿನಗಳ ಕಾಲ ಎದುರುನೋಡುವುದರ ಮೂಲಕ ಅವರು ತಮ್ಮನ್ನು ತಾವು ಶುದ್ಧೀಕರಣ ಹೊಂದಿದಾಗ” ಎಂದೂ ಅನುವಾದ ಮಾಡಬಹುದು.
  • “ಪಾಪಗಳಿಗಾಗಿ ಶುದ್ಧೀಕರಣವನ್ನು ಅನುಗ್ರಹಿಸಿದಾಗ” ಎನ್ನುವ ಮಾತನ್ನು “ಜನರು ತಮ್ಮ ಪಾಪಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದಕ್ಕೆ ಮಾರ್ಗವನ್ನು ಅನುಗ್ರಹಿಸಿದಾಗ” ಎಂದೂ ಅನುವಾದ ಮಾಡಬಹುದು.
  • “ಶುದ್ಧೀಕರಣ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತೊಳೆಯುವುದು” ಅಥವಾ “ಆತ್ಮಿಕವಾಗಿ ತೊಳೆಯುವುದು” ಅಥವಾ “ಧಾರ್ಮಿಕವಾಗಿ ಸ್ವಚ್ಚಗೊಳಿಸಲ್ಪಡುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಪ್ರಾಯಶ್ಚಿತ್ತ, ಶುದ್ಧ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1249, H1252, H1253, H1305, H1865, H2134, H2135, H2141, H2212, H2398, H2403, H2561, H2889, H2890, H2891, H2892, H2893, H3795, H3800, H4795, H5343, H5462, H6337, H6884, H6942, H8562, G48, G49, G53, G54, G1506, G2511, G2512, G2513, G2514

ಶುಭವಾರ್ತೆ, ಸುವಾರ್ತೆ

ಪದದ ಅರ್ಥವಿವರಣೆ:

“ಸುವಾರ್ತೆ” ಎನ್ನುವ ಪದಕ್ಕೆ ಅಕ್ಷರಾರ್ಥವು “ಶುಭವಾರ್ತೆ” ಎಂದರ್ಥ, ಇದು ಜನರನ್ನು ಸಂತೋಷಪಡಿಸುವ ಮತ್ತು ಅವರಿಗೆ ಪ್ರಯೋಜನಕರವಾಗಿರುವ ಯಾವುದಾದರೊಂದನ್ನು ಜನರಿಗೆ ಹೇಳುವ ಪ್ರಕಟನೆಗಳನ್ನು ಅಥವಾ ಸಂದೇಶವನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ ಈ ಪದವು ಶಿಲುಬೆಯಲ್ಲಿ ಮಾಡಿದ ಯೇಸುವಿನ ಬಲಿಯಾಗದ ಮೂಲಕ ಜನರಿಗೆ ಉಂಟಾಗುವ ದೇವರ ರಕ್ಷಣೆಯ ಕುರಿತಾದ ಸಂದೇಶವನ್ನು ಸಹಜವಾಗಿ ಸೂಚಿಸುತ್ತದೆ.
  • ಅನೇಕ ಆಂಗ್ಲ ಸತ್ಯವೇದಗಳಲ್ಲಿ “ಶುಭವಾರ್ತೆ” ಎನ್ನುವ ಪದವು ಸಹಜವಾಗಿ “ಸುವಾರ್ತೆ” ಎಂದು ಅನುವಾದ ಮಾಡಿದ್ದಾರೆ, ಮತ್ತು “ಯೇಸು ಕ್ರಿಸ್ತನ ಸುವಾರ್ತೆ” “ದೇವರ ಸುವಾರ್ತೆ” ಅಥವಾ “ರಾಜ್ಯ ಸುವಾರ್ತೆ” ಎಂದೆನ್ನುವ ಮಾತುಗಳನ್ನು ಉಪಯೋಗಿಸಿದ್ದಾರೆ.

ಅನುವಾದ ಸಲಹೆಗಳು:

ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ಶುಭ ಸಂದೇಶ” ಅಥವಾ “ಶುಭ ಪ್ರಕಟನೆ” ಅಥವಾ “ದೇವರ ರಕ್ಷಣೆಯ ಸಂದೇಶ” ಅಥವಾ “ಯೇಸುವಿನ ಕುರಿತಾಗಿ ದೇವರ ಬೋಧನೆಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

  • ಸಂದರ್ಭಾನುಸಾರವಾಗಿ “ಶುಭವಾರ್ತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಇನ್ನೊಂದರ ಕುರಿತಾಗಿ ಶುಭವಾರ್ತೆ/ಸಂದೇಶ” ಅಥವಾ “ಇನ್ನೊಬ್ಬರಿಂದ ಶುಭ ಸಂದೇಶ” ಅಥವಾ “ಇನ್ನೊಂದರ ಕುರಿತಾಗಿ ದೇವರು ಹೇಳುವ ಒಳ್ಳೇಯ ವಿಷಯಗಳು” ಅಥವಾ “ದೇವರು ತನ್ನ ಜನರನ್ನು ಹೇಗೆ ರಕ್ಷಿಸುತ್ತಾರೆಂಬುದನ್ನು ದೇವರು ಹೇಳುವುದು” ಎನ್ನುವ ಮಾತುಗಳು ಸೇರಿಸಿ ಉಪಯೋಗಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ರಾಜ್ಯ, ಬಲಿ, ರಕ್ಷಿಸು )

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 23:06 “ಹೆದರಬೇಡಿರಿ, ಯಾಕಂದರೆ ನಾನು ನಿಮಗೆ ಹೇಳುವುದಕ್ಕೆ __ ಶುಭವಾರ್ತೆ__ ನನ್ನ ಬಳಿ ಇದೆ. ಬೋಧಕನಾಗಿರುವ ಮೆಸ್ಸೀಯ ಬೆತ್ಲೆಹೇಮಿನಲ್ಲಿ ಹುಟ್ಟಿದ್ದಾನೆ” ಎಂದು ದೂತ ಹೇಳಿತು.
  • 26:03 “ದೇವರು ತನ್ನ ಆತ್ಮವನ್ನು ನನಗೆ ಕೊಟ್ಟಿದ್ದಾನೆ, ಆದ್ದರಿಂದ ನಾನು ಬಡವರಿಗೆ __ ಶುಭವಾರ್ತೆಯನ್ನು __ ಸಾರುವುದಕ್ಕೆ, ಸೆರೆಯಲ್ಲಿರುವವರನ್ನು ಬಿಡುಗಡೆ ಮಾಡುವುದಕ್ಕೆ, ಕುರುಡರಿಗೆ ಕಣ್ಣು ಕೊಡುವುದಕ್ಕೆ, ಹಿಂಸಿಸಲ್ಪಟ್ಟವರನ್ನು ಬಿಡಿಸುವುದಕ್ಕೆ ಆತನು ನನ್ನನ್ನು ಕಳುಹಿಸಿದನು. ಇದು ಕರ್ತನು ನೇಮಿಸಿರುವ ಶುಭ ವರ್ಷ”
  • 45:10 ಯೇಸುವಿನ __ ಸುವಾರ್ತೆಯನ್ನು __ ಅವನಿಗೆ ಹೇಳಲು ಫಿಲಿಪ್ಪನು ಕೂಡ ಇತರ ವಾಕ್ಯಭಾಗವನ್ನು ಉಪಯೋಗಿಸಿಕೊಂಡನು.
  • 46:10 ಅನೇಕ ಸ್ಥಳಗಳಲ್ಲಿ __ ಯೇಸುವಿನ ಕುರಿತಾದ ಸುವಾರ್ತೆಯನ್ನು ಪ್ರಕಟಿಸುವುದಕ್ಕೆ __ ಅವರು ಅವರನ್ನು ಕಳುಹಿಸಿದರು.
  • 47:01 ಒಂದು ದಿನ ಪೌಲನು ಮತ್ತು ತನ್ನ ಸ್ನೇಹಿತನಾದ ಸೀಲನು __ ಯೇಸುವಿನ ಕುರಿತಾದ ಸುವಾರ್ತೆಯನ್ನು __ ಸಾರಲು ಫಿಲಿಪ್ಪಿ ಪಟ್ಟಣಕ್ಕೆ ಹೋದರು.
  • 47:13 ಯೇಸುವಿನ ಕುರಿತಾದ ಸುವಾರ್ತೆಯು ವಿಸ್ತರಣೆಯಾಗುತ್ತಾ ಇತ್ತು, ಮತ್ತು ಸಭೆಯು ಬೆಳೆಯುತ್ತಾ ಇತ್ತು.
  • 50:01 ಸುಮಾರು 2,000 ವರ್ಷಗಳಿಂದ, ಪ್ರಪಂಚದಾದ್ಯಂತ ಇರುವ ಅನೇಕ ಕೋಟ್ಯಾಂತ ಜನರು ಮೆಸ್ಸೀಯನಾದ __ ಯೇಸುವಿನ ಕುರಿತಾದ ಸುವಾರ್ತೆಯನ್ನು __ ಕೇಳುತ್ತಾ ಇದ್ದಾರೆ.
  • 50:02 ಯೇಸು ಈ ಭೂಮಿಯ ಮೇಲೆ ಜೀವಿಸುತ್ತಿರುವಾಗ, “ಪ್ರಪಂಚದಲ್ಲಿರುವ ಪ್ರತಿಯೊಂದು ಸ್ಥಳಗಳಲ್ಲಿರುವ ಜನರಿಗೆ ದೇವರ ರಾಜ್ಯದ ಕುರಿತಾದ __ ಸುವಾರ್ತೆಯನ್ನು __ ನನ್ನ ಶಿಷ್ಯರು ಪ್ರಕಟಿಸುವರು, ಇದಾದನಂತರ ಅಂತ್ಯ ಬರುತ್ತದೆ” ಎಂದು ಹೇಳಿದನು.
  • 50:03 ಆತನು ಪರಲೋಕಕ್ಕೆ ಹೋಗುವುದಕ್ಕೆ ಮುಂಚಿತವಾಗಿ, ಸುವಾರ್ತೆಯನ್ನು ಕೇಳದ ಜನರಿಗೆಲ್ಲರಿಗೆ __ ಸುವಾರ್ತೆಯನ್ನು __ ಸಾರಲು ಯೇಸು ಕ್ರೈಸ್ತರಿಗೆ ಹೇಳಿದನು.

ಪದ ಡೇಟಾ:

  • Strong's: G2097, G2098, G4283

ಶೇಷ

ಪದದ ಅರ್ಥವಿವರಣೆ:

“ಶೇಷ” ಎನ್ನುವ ಪದವು ಅಕ್ಷರಾರ್ಥವಾಗಿ ಒಂದು ದೊಡ್ಡ ಗುಂಪಿನಿಂದ “ಉಳಿದಿರುವ” ಅಥವಾ “ಉಳಿದ” ವಸ್ತುಗಳನ್ನು ಅಥವಾ ಜನರನ್ನು ಸೂಚಿಸುತ್ತದೆ.

  • ಅನೇಕಬಾರಿ “ಶೇಷ” ಎನ್ನುವುದು ಜೀವನ ಅಪಾಯಕರವಾದ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿರುವ ಜನರನ್ನು ಅಥವಾ ಹಿಂಸೆಗಳಲ್ಲಿ ಹಾದು ಹೋಗುತ್ತಿದ್ದರೂ ದೇವರಿಗೆ ನಂಬಿಗಸ್ತರಾಗಿರುವ ಜನರನ್ನು ಸೂಚಿಸುತ್ತದೆ.
  • ಹೊರಗಿನವೃಂದ ದಾಳಿಗೆ ಗುರಿ ಮಾಡಲ್ಪಟ್ಟಿರುವ ಉಳಿದ ಜನರಾಗಿ ಯೆಹೂದ್ಯ ಗುಂಪನ್ನು ಯೆಶಯಾ ಸೂಚಿಸಿದ್ದಾನೆ ಮತ್ತು ಕಾನಾನಿನಲ್ಲಿ ವಾಗ್ಧಾನ ಭೂಮಿಯಲ್ಲಿ ಜೀವಿಸುವುದಕ್ಕೆ ಹಿಂದುರಿಗಿ ಹೋದ ಜನರನ್ನು ಸೂಚಿಸಿದ್ದಾನೆ.
  • ದೇವರ ಕೃಪೆಯನ್ನು ಪಡೆದುಕೊಳ್ಳುವುದಕ್ಕೆ ದೇವರಿಂದ ಆದುಕೊಂಡ ಜನರಾಗಿರುವ “ಶೇಷ” ಜನರ ಕುರಿತಾಗಿ ಪೌಲನು ಮಾತನಾಡುತ್ತಿದ್ದಾನೆ.
  • “ಶೇಷ” ಎನ್ನುವ ಪದವು ನಂಬಿಗಸ್ತರಾಗಿರದ ಅಥವಾ ಜೀವಿಸುವುದಕ್ಕಾಗಿರದ ಅಥವಾ ಆಯ್ಕೆ ಮಾಡಿಕೊಂಡಿರದ ಇತರ ಜನರಿಗೂ ಇದು ಅನ್ವಯವಾಗುತ್ತದೆ.

ಅನುವಾದ ಸಲಹೆಗಳು:

  • “ಈ ಜನರ ಶೇಷವು” ಎನ್ನುವ ಈ ಮಾತನ್ನು “ಈ ಜನರಲ್ಲಿ ಉಳಿದವರು” ಅಥವಾ “ನಂಬಿಗಸ್ತರಾಗಿಯೇ ಇರುವ ಜನರು” ಅಥವಾ “ಬಿಡಲ್ಪಟ್ಟಿರುವ ಜನರು” ಎಂದೂ ಅನುವಾದ ಮಾಡಬಹುದು.
  • “ಶೇಷ ಜನರೆಲ್ಲರು” ಎನ್ನುವ ಮಾತನ್ನು “ಉಳಿದ ಎಲ್ಲಾ ಜನರು” ಅಥವಾ “ಶೇಷ ಜನರು” ಎಂದೂ ಅನುವಾದ ಮಾಡಬಹುದು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3498, H3499, H5629, H6413, H7604, H7605, H7611, H8281, H8300, G2640, G3005, G3062

ಶೋಧಿಸು, ಶೋಧನೆ

ಪದದ ಅರ್ಥವಿವರಣೆ:

ಯಾರಾದರೊಬ್ಬರನ್ನು ಶೋಧಿಸು ಎನ್ನುವ ಮಾತಿಗೆ ಆ ವ್ಯಕ್ತಿ ಯಾವುದಾದರೊಂದು ತಪ್ಪು ಮಾಡುವಂತೆ ಪ್ರೇರೇಪಿಸು ಎಂದರ್ಥ.

  • ಶೋಧನೆ ಎಂದರೆ ಒಬ್ಬ ವ್ಯಕ್ತಿ ಯಾವುದಾದರೊಂದು ತಪ್ಪನ್ನು ಮಾಡುವಂತೆ ಬಯಸಲು ಕಾರಣವಾಗುವ ಯಾವುದೇ ವಿಷಯವನ್ನು ಸೂಚಿಸುತ್ತದೆ.
  • ಜನರು ತಮ್ಮ ಸ್ವಂತ ಪಾಪ ಸ್ವಭಾವದಿಂದ ಮತ್ತು ಇತರ ಜನರಿಂದ ಶೋಧಿಸಲ್ಪಡುತ್ತಾರೆ.
  • ದೇವರಿಗೆ ಅವಿಧೇಯತೆ ತೋರಿಸುವಂತೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವುದರ ಮೂಲಕ ದೇವರಿಗೆ ವಿರುದ್ಧವಾಗಿ ಪಾಪ ಮಾಡುವಂತೆ ದೇವರು ಜನರನ್ನು ಶೋಧಿಸುತ್ತಾರೆ.
  • ಸೈತಾನನು ಯೇಸುವನ್ನು ಶೋಧಿಸಿದನು ಮತ್ತು ಕೆಟ್ಟ ಕಾರ್ಯವನ್ನು ಮಾಡುವಂತೆ ಆತನನ್ನು ಪ್ರೇರೇಪಿಸಲು ಯತ್ನಿಸಿದನು, ಆದರೆ ಯೇಸು ಸೈತಾನಿನ ಎಲ್ಲಾ ಶೋಧನೆಗಳನ್ನು ಜಯಿಸಿದನು ಮತ್ತು ಯಾವ ಪಾಪವು ಮಾಡಲಿಲ್ಲ.
  • “ದೇವರನ್ನು ಶೋಧಿಸುವ” ಒಬ್ಬ ವ್ಯಕ್ತಿ ಆತನು ಯಾವುದಾದರೊಂದು ತಪ್ಪು ಮಾಡುವುದಕ್ಕೆ ಪ್ರಯತ್ನಿಸುತ್ತಿಲ್ಲ, ಆದರೆ ಇದಕ್ಕೆ ಬದಲಾಗಿ, ದೇವರು ತನ್ನನ್ನು ಶಿಕ್ಷಿಸಬೇಕೆನ್ನುವ ಆಲೋಚನೆಯಿಂದ ದೇವರಿಗೆ ಅವಿಧೇಯತೆ ತೋರಿಸುವುದರಲ್ಲಿ ಮೊಂಡುತನ ಮುಂದುವರಿಯುತ್ತಿದ್ದಾನೆಂದರ್ಥ. ಇದನ್ನೇ “ದೇವರನ್ನು ಪರೀಕ್ಷಿಸುವುದು” ಎಂದೂ ಕರೆಯುತ್ತಾರೆ.

ಅನುವಾದ ಸಲಹೆಗಳು:

  • “ಶೋಧಿಸು” ಎನ್ನುವ ಪದವನ್ನು “ಪಾಪ ಮಾಡುವುದಕ್ಕೆ ಯತ್ನಿಸು” ಅಥವಾ “ಪ್ರಲೋಭೆಗೊಳಿಸು” ಅಥವಾ “ಪಾಪ ಮಾಡುವುದಕ್ಕೆ ಆಶೆಯನ್ನು ಹುಟ್ಟಿಸು” ಎಂದೂ ಅನುವಾದ ಮಾಡಬಹುದು.
  • “ಶೋಧನೆಗಳು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಶೋಧಿಸುವ ವಿಷಯಗಳು” ಅಥವಾ “ಯಾರಾದರೊಬ್ಬರು ಪಾಪ ಮಾಡಲು ಪ್ರಲೋಭೆಗೊಳಿಸುವ ವಿಷಯಗಳು” ಅಥವಾ “ಯಾವುದಾದರೊಂದು ತಪ್ಪು ಮಾಡುವುದಕ್ಕೆ ಆಶೆಯನ್ನು ಹುಟ್ಟಿಸುವ ವಿಷಯಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ದೇವರನ್ನು ಶೋಧಿಸು” ಎನ್ನುವ ಮಾತನ್ನು “ಪರೀಕ್ಷೆ ಮಾಡುವುದಕ್ಕೆ ದೇವರನ್ನು ನಿಲ್ಲಿಸು” ಅಥವಾ “ದೇವರನ್ನು ಪರೀಕ್ಷಿಸು” ಅಥವಾ “ದೇವರ ಸಹನೆಯನ್ನು ಶೋಧಿಸು” ಅಥವಾ “ದೇವರು ಶಿಕ್ಷಿಸುವಂತೆ ಮಾಡು” ಅಥವಾ “ಮೊಂಡುತನದಿಂದ ದೇವರಿಗೆ ಅವಿಧೇಯತೆ ತೋರಿಸುವುದರಲ್ಲಿ ಮುಂದೆವರಿ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ಸೈತಾನ, ಪಾಪ, ಪರೀಕ್ಷಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 25:01 ಸೈತಾನನು ಯೇಸುವಿನ ಬಳಿಗೆ ಬಂದನು ಮತ್ತು ಪಾಪ ಮಾಡುವಂತೆ ಆತನನ್ನು ___ ಶೋಧಿಸಿದನು ___.
  • 25:08 ಸೈತಾನಿನ ___ ಶೋಧನೆಗಳಿಗೆ ___ ಯೇಸುವು ಒಳಗಾಗಲಿಲ್ಲ, ಅದಕ್ಕಾಗಿ ಸೈತಾನನು ಆತನಿಂದ ಪಾರಾದನು.
  • 38:11 ನೀವು ___ ಶೋಧನೆಯೊಳಗೆ ___ ಪ್ರವೇಶಿಸದಂತೆ ಪ್ರಾರ್ಥನೆ ಮಾಡಿಕೊಳ್ಳಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.

ಪದ ಡೇಟಾ:

  • Strong's: H974, H4531, H5254, G551, G1598, G3985, G3986, G3987

ಸಂತರು

ಪದದ ಅರ್ಥವಿವರಣೆ:

“ಸಂತರು” ಎನ್ನುವ ಪದಕ್ಕೆ ಅಕ್ಷರಾರ್ಥವು “ಪವಿತ್ರರು” ಎಂದರ್ಥ, ಈ ಪದವು ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳನ್ನು ಸೂಚಿಸುತ್ತದೆ.

  • ಸ್ವಲ್ಪಕಾಲವಾದನಂತರ ಸಭೆಯ ಚರಿತ್ರೆಯಲ್ಲಿ, ಒಬ್ಬ ವ್ಯಕ್ತಿ ತಾನು ಮಾಡಿದ ಒಳ್ಳೇಯ ಕಾರ್ಯಗಳನ್ನು ನೋಡಿ, ಆ ವ್ಯಕ್ತಿಗೆ “ಸಂತ” ಎನ್ನುವ ಬಿರುದನ್ನು ಕೊಡಲ್ಪಟ್ಟಿದೆ.
  • ಯೇಸುವಿನ ವಿಶ್ವಾಸಿಗಳು ಅವರು ಮಾಡಿದ ಒಳ್ಳೇಯ ಕಾರ್ಯಗಳಿಂದ ಸಂತರು ಅಥವಾ ಪವಿತ್ರರು ಆಗಿರುವುದಿಲ್ಲ, ಆದರೆ ಯೇಸುವಿನ ರಕ್ಷಣೆಯ ಕಾರ್ಯದಲ್ಲಿ ತಮ್ಮ ವಿಶ್ವಾಸವನ್ನು ಇಡುವುದರ ಮೂಲಕ ಆಗಿರುತ್ತಾರೆ. ಈತನು ಅವರನ್ನು ಪರಿಶುದ್ಧರನ್ನಾಗಿ ಮಾಡುವ ಏಕೈಕ ವ್ಯಕ್ತಿಯಾಗಿರುತ್ತಾನೆ.

ಅನುವಾದ ಸಲಹೆಗಳು:

  • “ಸಂತರು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಪವಿತ್ರರು” ಅಥವಾ “ಪವಿತ್ರವಾದ ಜನರು” ಅಥವಾ “ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಪರಿಶುದ್ಧ ವಿಶ್ವಾಸಿಗಳು” ಅಥವಾ “ಪ್ರತ್ಯೇಕಿಸಲ್ಪಟ್ಟವರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಮಾತು ಕೇವಲ ಒಂದು ಕ್ರೈಸ್ತ ಗುಂಪಿನ ಜನರನ್ನು ಮಾತ್ರ ಸೂಚಿಸದಂತೆ ನೋಡಿಕೊಳ್ಳಿರಿ.

(ಈ ಪದಗಳನ್ನು ಸಹ ನೋಡಿರಿ : ಪರಿಶುದ್ಧ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H2623, H6918, H6922, G40

ಸಂಧಾನ, ಸಂಧಾನ ಮಾಡುವುದು, ಸಂಧಾನ ಮಾಡಲ್ಪಟ್ಟಿದೆ

ಪದದ ಅರ್ಥವಿವರಣೆ:

“ಸಂಧಾನ” ಮಾಡುವುದು ಮತ್ತು “ಸಂಧಾನ” ಎನ್ನುವ ಪದಗಳು ಒಬ್ಬರಿಗೊಬ್ಬರು ಶತ್ರುಗಳಾಗಿರುವ ಜನರ ಮಧ್ಯದಲ್ಲಿ “ಸಮಾಧಾನವನ್ನುಂಟು ಮಾಡು” ಎನ್ನುವದನ್ನು ಸೂಚಿಸುತ್ತದೆ. “ಸಂಧಾನ” ಎನ್ನುವುದು ಸಮಾಧಾನವನ್ನುಂಟು ಮಾಡುವ ಕ್ರಿಯೆಯಾಗಿರುತ್ತದೆ.

  • ಸತ್ಯವೇದದಲ್ಲಿ ಈ ಪದವು ಸಾಧಾರಣವಾಗಿ ದೇವರು ತನ್ನ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು ಯಜ್ಞದ ಬಲಿಯನ್ನಾಗಿ ಮಾಡುವದರಿಂದ ತನ್ನನ್ನು ತಾನು ಜನರೊಂದಿಗೆ ಸಮಾಧಾನ ಮಾಡಿಕೊಂಡಿದ್ದಾರೆ.
  • ಪಾಪ ಮಾಡಿದ ಕಾರಣದಿಂದ, ಮನುಷ್ಯರೆಲ್ಲರೂ ದೇವರ ಶತ್ರುಗಳಾಗಿರುತ್ತಾರೆ. ಆದರೆ ಆತನ ಕರುಣೆ ಪ್ರೀತಿಗಳಿಂದ, ದೇವರು ಯೇಸುವಿನ ಮೂಲಕ ತನ್ನೊಂದಿಗೆ ಸಮಾಧಾನ ಮಾಡಿಕೊಳ್ಳುವುದಕ್ಕೆ ಜನರಿಗೆ ಒಂದು ಮಾರ್ಗವನ್ನು ಉಂಟು ಮಾಡಿದ್ದಾನೆ.
  • ಜನರು ತಮ್ಮ ಪಾಪಗಳಿಗಾಗಿ ಕ್ರಯಧನವನ್ನಾಗಿ ಮಾಡಿದ ಯೇಸುವಿನ ಯಜ್ಞದಲ್ಲಿ ಭರವಸೆವಿಡುವುದರ ಮೂಲಕ, ಜನರು ಕ್ಷಮೆಯನ್ನು ಹೊಂದುವರು ಮತ್ತು ದೇವರೊಂದಿಗೆ ಸಮಾಧಾನವನ್ನು ಪಡೆದುಕೊಳ್ಳುವರು.

ಅನುವಾದ ಸಲಹೆಗಳು:

  • “ಸಂಧಾನ ಮಾಡು” ಎನ್ನುವ ಮಾತನ್ನು “ಸಮಾಧಾನವನ್ನುಂಟು ಮಾಡು” ಅಥವಾ “ಒಳ್ಳೇಯ ಸಂಬಂಧಗಳನ್ನು ಪುನಃ ಸ್ಥಾಪಿಸು” ಅಥವಾ “ಸ್ನೇಹಿತರಾಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • “ಸಂಧಾನ” ಎನ್ನುವ ಪದವನ್ನು “ಒಳ್ಳೇಯ ಸಂಬಂಧಗಳನ್ನು ಪುನಃ ಸ್ಥಾಪನೆ ಮಾಡುವುದು” ಅಥವಾ “ಸಮಾಧಾನವನ್ನುಂಟು ಮಾಡುವುದು” ಅಥವಾ ‘ಸಮಾಧಾನಕರವಾದ ಸಂಬಂಧಗಳನ್ನುಂಟು ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸಮಾಧಾನ, ಸರ್ವಾಂಗ ಹೋಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H2398 , H3722 , G604 , G1259 , G2433 , G2643, G2644

ಸದ್ದುಕಾಯ, ಸದ್ದುಕಾಯರು

ಪದದ ಅರ್ಥವಿವರಣೆ:

ಸದ್ದುಕಾಯರು ಯೇಸು ಕ್ರಿಸ್ತನ ಕಾಲದಲ್ಲಿ ಯೆಹೂದ್ಯ ಯಾಜಕರ ರಾಜಕೀಯ ಗುಂಪಾಗಿತ್ತು. ಅವರು ರೋಮಾ ಪಾಲನೆಯನ್ನು ಬೆಂಬಲಿಸುತ್ತಿದ್ದರು ಮತ್ತು ಪುನರುತ್ಥಾನದಲ್ಲಿ ನಂಬಿಕೆಯಿಟ್ಟಿದ್ದಿಲ್ಲ.

  • ಅನೇಕಮಂದಿ ಸದ್ದುಕಾಯರು ಶ್ರೀಮಂತರಾಗಿದ್ದರು, ಉನ್ನತ ತರಗತಿಯ ಯೆಹೂದ್ಯರೂ ಆಗಿದ್ದರು, ಇವರೇ ಪ್ರಧಾನ ಯಾಜಕ ಮತ್ತು ಮಹಾ ಯಾಜಕ ಎನ್ನುವ ಶಕ್ತಿಯುತವಾದ ನಾಯಕತ್ವ ಸ್ಥಾನಗಳನ್ನು ನಡೆಸುತ್ತಿದ್ದರು.
  • ದೇವಾಲಯ ಸಂಕೀರ್ಣವನ್ನು ನೋಡಿಕೊಳ್ಳುವುದು ಮತ್ತು ಅರ್ಪಣೆಯ ಹೋಮಗಳನ್ನು ಅರ್ಪಿಸುವ ಯಾಜಕ ಕರ್ತವ್ಯಗಳನ್ನು ಸದ್ದುಕಾಯರ ವಹಿಸುತ್ತಿದ್ದರು.
  • ಸದ್ದುಕಾಯರು ಮತ್ತು ಫರಿಸಾಯರು ಯೇಸುವನ್ನು ಶಿಲುಬೆಗೆ ಏರಿಸುವುದಕ್ಕೆ ರೋಮಾ ನಾಯಕರನ್ನು ಬಲವಾಗಿ ಪ್ರಭಾವಗೊಳಿಸಿದ್ದರು.
  • ಯೇಸುವು ಎರಡು ಧಾರ್ಮಿಕ ಗುಂಪುಗಳಿಗೆ ವಿರುದ್ಧವಾಗಿ ಮಾತನಾಡಿದ್ದರು, ಯಾಕಂದರೆ ಅವರಲ್ಲಿ ಸ್ವಾರ್ಥವು ಮತ್ತು ವೇಷಧಾರಣೆಯೂ ಇತ್ತು.

(ಈ ಪದಗಳನ್ನು ಸಹ ನೋಡಿರಿ : ಪ್ರಧಾನ ಯಾಜಕರು, ಕೌನ್ಸಿಲ್, ಮಹಾ ಯಾಜಕ, ವೇಷಧಾರಿ, ಯೆಹೂದ್ಯ ನಾಯಕರು, ಫರಿಸಾಯ, ಯಾಜಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G4523

ಸಬ್ಬತ್

ಪದದ ಅರ್ಥವಿರರಣೆ:

“ಸಬ್ಬತ್” ಎನ್ನುವ ಪದವು ವಾರದ ಏಳನೇಯ ದಿನವನ್ನು ಸೂಚಿಸುತ್ತದೆ, ಈ ದಿನದಂದು ಯಾವ ಕೆಲಸವನ್ನು ಮಾಡದೇ ವಿಶ್ರಾಂತಿ ತೆಗೆದುಕೊಂಡಿರಲು ಪ್ರತ್ಯೇಕಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.

  • ದೇವರು ಈ ಸರ್ವ ಸೃಷ್ಟಿಯನ್ನು ಆರು ದಿನಗಳಲ್ಲಿ ಮಾಡಿ ಮುಗಿಸಿದನಂತರ, ಆತನು ಏಳನೇಯ ದಿನದಂದು ವಿಶ್ರಾಂತಿ ತೆಗೆದುಕೊಂಡನು. ಈ ರೀತಿಯಲ್ಲಿಯೇ, ಆತನನ್ನು ಆರಾಧನೆ ಮಾಡುವುದಕ್ಕೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ವಿಶೇಷ ದಿನವನ್ನಾಗಿ ಏಳನೇ ದಿನವನ್ನು ಪ್ರತ್ಯೇಕಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
  • “ಸಬ್ಬತ್ ದಿನವನ್ನು ಪರಿಶುದ್ಧವೆಂದು ಎಣಿಸಿ ” ಆಜ್ಞೆಯು ಹತ್ತು ಆಜ್ಞೆಗಳಲ್ಲಿ ಒಂದಾಗಿರುತ್ತದೆ, ದೇವರು ಇಸ್ರಾಯೇಲ್ಯರಿಗಾಗಿ ಮೋಶೆ ಕೊಟ್ಟಿರುವ ಶಿಲಾಶಾಸನಗಳ ಮೇಲೆ ದೇವರು ಬರೆದಿರುವ ಆಜ್ಞೆಯಾಗಿತ್ತು.
  • ದಿನಗಳು ಎಣಿಸುವ ಯೆಹೂದ್ಯರ ವಿಧಾನದ ಪ್ರಕಾರ, ಸಬ್ಬತ್ ದಿನವು ಶುಕ್ರವಾರ ಸಾಯಂಕಾಲ ಆರಂಭವಾಗಿ ಶನಿವಾರ ಸಾಯಂಕಾಲದವರೆಗೆ ಇರುತ್ತದೆ.
  • ಸತ್ಯವೇದದಲ್ಲಿ ಕೆಲವೊಂದುಬಾರಿ ಸಬ್ಬತ್ ಎನ್ನುವುದನ್ನು ಕೇವಲ ಸಬ್ಬತ್ ಎಂದು ಕರೆಯಲ್ಪಡದೆ “ಸಬ್ಬತ್ ದಿನ” ಎಂದು ಕರೆಯಲ್ಪಟ್ಟಿದೆ.

ಅನುವಾದ ಸಲಹೆಗಳು:

  • ಈ ಪದವನ್ನು ‘ವಿಶ್ರಾಂತಿ ದಿನ” ಅಥವಾ “ವಿಶ್ರಾಂತಿಗಾಗಿ ನೇಮಿಸಿದ ದಿನ” ಅಥವಾ “ಕೆಲಸ ಮಾಡದ ದಿನ” ಅಥವಾ “ವಿಶ್ರಾಂತಿ ತೆಗೆದುಕೊಳ್ಳುವ ದೇವರ ದಿನ” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಅನುವಾದಗಳಲ್ಲಿ ಈ ಪದದ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಮಾಡಿ ತೋರಿಸುತ್ತಾರೆ, ಉದಾಹರಣೆಗೆ, “ಸಬ್ಬತ್ ದಿನ” ಅಥವಾ “ವಿಶ್ರಾಂತಿ ದಿನ”.
  • ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಈ ಪದವನ್ನು ಹೇಗೆ ಅನುವಾದ ಮಾಡಿದ್ದಾರೆಂದು ಗಮನಿಸಿರಿ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ವಿಶ್ರಾಂತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 13:05 “__ ಸಬ್ಬತ್ ದಿನವನ್ನು __ ಪರಿಶುದ್ಧ ದಿನವನ್ನಾಗಿ ನೋಡಿಕೊಳ್ಳುವುದರಲ್ಲಿ ನಿಶ್ಚಯ ಮಾಡಿಕೊಳ್ಳಿರಿ. ಆರು ದಿನಗಳು ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿರಿ, ಏಳನೇ ದಿನವು ನನ್ನನ್ನು ಘನ ಪಡಿಸುವುದಕ್ಕೆ ಮತ್ತು ನೀವು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಪ್ರತ್ಯೇಕಿಸಿರಿ.
  • 26:02 ಯೇಸು ನಿವಾಸ ಮಾಡಿರುವ ಸ್ಥಳವು ಮತ್ತು ತನ್ನ ಬಾಲ್ಯ ದಿನಗಳು ಎಲ್ಲವು ಕಳೆದ ನಜರೇತಿಗೆ ಹೋದನು. __ ಸಬ್ಬತ್ ದಿನದಂದು __ ಆತನು ಆರಾಧನೆ ಮಾಡುವ ಸ್ಥಳಕ್ಕೆ ಹೋದನು.
  • 41:03 ಯೇಸುವನ್ನು ಮಡಿದ ದಿನದ ಆ ಮರುದಿನವು __ ಸಬ್ಬತ್ ದಿನವಾಗಿದ್ದಿತ್ತು __, ಮತ್ತು ಆ ದಿನದಂದು ಸಮಾಧಿಯ ಬಳಿಗೆ ಹೋಗುವುದಕ್ಕೆ ಯೆಹೂದ್ಯರಿಗೆ ಅನುಮತಿಯಿದ್ದಿಲ್ಲ.

ಪದ ಡೇಟಾ:

  • Strong's: H4868, H7676, H7677, G4315, G4521

ಸಭಾಪಾಲಕ

ಪದದ ಅರ್ಥವಿವರಣೆ:

“ಸಭಾಪಾಲಕ” ಎನ್ನುವ ಪದವು ಅಕ್ಷರಾರ್ಥವಾಗಿ “ಕುರುಬ” ಎನ್ನುವ ಪದಕ್ಕೆ ಸಮಾನವಾಗಿರುತ್ತದೆ. ಈ ಪದವನ್ನು ವಿಶ್ವಾಸಿಗಳ ಗುಂಪಿಗೆ ಆತ್ಮೀಯ ನಾಯಕನಾಗಿರುವ ಒಬ್ಬ ವ್ಯಕ್ತಿಗೆ ಕೊಡಲ್ಪಟ್ಟ ಬಿರುದಾಗಿ ಉಪಯೋಗಿಸಲಾಗಿರುತ್ತದೆ.

  • ಆಂಗ್ಲ ಬೈಬಲ್ ಅನುವಾದಗಳಲ್ಲಿ “ಪಾಸ್ಟರ್” ಅಥವಾ “ಸಭಾಪಾಲಕ” ಎನ್ನುವ ಪದವು ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಕೇವಲ ಒಂದೇ ಒಂದು ವಚನದಲ್ಲಿ ಕಂಡುಬರುತ್ತದೆ. ಈ ಪದಕ್ಕೆ ಪರ್ಯಾಯ ಪದವಾಗಿರುವ “ಕುರುಬ” ಎನ್ನುವ ಪದವನ್ನು ಪ್ರತಿಯೊಂದು ಸ್ಥಳದಲ್ಲಿ ಉಪಯೋಗಿಸಲಾಗಿರುತ್ತದೆ.
  • ಕೆಲವೊಂದು ಭಾಷೆಗಳಲ್ಲಿ “ಪಾಸ್ಟರ್” (ಸಭಾಪಾಲಕ) ಎನ್ನುವ ಪದಕ್ಕೆ “ಕುರುಬ” ಎನ್ನುವ ಪದವನ್ನು ಉಪಯೋಗಿಸಿರುತ್ತಾರೆ.
  • ಇದೇ ಪದಕ್ಕೆ ಸಮಾಂತರ ಪದವಾಗಿರುವ “ಒಳ್ಳೇಯ ಕುರುಬ” ಎನ್ನುವ ಪದವನ್ನು ಯೇಸುವನ್ನು ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಭಾಷೆಯಲ್ಲಿ “ಕುರುಬ” ಎನ್ನುವ ಪದವನ್ನು ಉಪಯೋಗಿಸುವುದು ಉತ್ತಮ.
  • ಈ ಪದವನ್ನು ಅನುವಾದ ಮಾಡುವ ಇತರ ವಿಧಾನಗಳಲ್ಲಿ “ಆತ್ಮೀಯ ಕುರುಬ” ಅಥವಾ “ಕಾಯುವ ಕ್ರೈಸ್ತ ನಾಯಕ” ಎನ್ನುವ ಪದಗಳು ಒಳಗೊಂಡಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕುರುಬ, ಕುರಿಗಳು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H7462, G4166

ಸಭಾಮಂದಿರ

ಪದದ ಅರ್ಥವಿವರಣೆ:

ಸಭಾಮಂದಿರ ಎನ್ನುವುದು ದೇವರನ್ನು ಆರಾಧಿಸುವುದಕ್ಕೆ ಯೆಹೂದ್ಯರೆಲ್ಲರು ಒಂದು ಸ್ಥಳದಲ್ಲಿ ಭೇಟಿಯಾಗುವ ಭವನವಾಗಿರುತ್ತದೆ.

  • ಪುರಾತನ ಕಾಲಗಳಲ್ಲಿ, ಸಭಾಮಂದಿರ ಸೇವೆಗಳಲ್ಲಿ ಪ್ರಾರ್ಥನೆಯ ಕಾಲಗಳು, ಲೇಖನಗಳನ್ನು ಓದುವುದು, ಮತ್ತು ಲೇಖನಗಳ ಕುರಿತಾಗಿ ಬೋಧನೆಯನ್ನು ಒಳಗೊಂಡಿರುತ್ತದೆ.
  • ಯೆಹೂದ್ಯರು ವಾಸ್ತವಿಕವಾಗಿ ಸಭಾಮಂದಿರಗಳನ್ನು ತಮ್ಮ ಸ್ವಂತ ಪಟ್ಟಣಗಳಲ್ಲಿ ದೇವರನ್ನು ಆರಾಧಿಸುವುದಕ್ಕೆ ಮತ್ತು ಪ್ರಾರ್ಥನೆ ಮಾಡುವುದಕ್ಕೆ ಉಪಯೋಗಿಸುವ ಸ್ಥಳಗಳಾಗಿ ಉಪಯೋಗಿಸುತ್ತಿದ್ದರು, ಯಾಕಂದರೆ ಅವರೆಲ್ಲರು ಅನೇಕರು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತುಂಬಾ ದೂರದಲ್ಲಿ ನಿವಾಸ ಮಾಡುತ್ತಿದ್ದರು.
  • ಯೇಸು ಅನೇಕಬಾರಿ ಸಭಾಮಂದಿರಗಳಲ್ಲಿ ಬೋಧನೆ ಮಾಡಿದ್ದನು ಮತ್ತು ಅನೇಕ ಜನರನ್ನು ಆ ಸ್ಥಳಗಳಲಿಯೇ ಗುಣಪಡಿಸಿದ್ದನು.
  • “ಸಭಾಮಂದಿರ” ಎನ್ನುವ ಪದವು ಅಲ್ಲಿ ಕೂಡುವ ಜನರ ಗುಂಪನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಗುಣಪಡಿಸು, ಯೆರೂಸಲೇಮ್, ಯೆಹೂದ್ಯ, ಪ್ರಾರ್ಥನೆ, ದೇವಾಲಯ, ದೇವರ ವಾಕ್ಯ, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4150, G656, G752, G4864

ಸಭಾಸೇವಕ, ಸಭಾಸೇವಕರು

ಪದದ ಅರ್ಥವಿವರಣೆ:

ಸಭಾಸೇವಕ ಎನ್ನುವವನು ಸ್ಥಳೀಯ ಸಭೆಯಲ್ಲಿ ಸೇವೆ ಮಾಡುವ ವ್ಯಕ್ತಿಯಾಗಿರುತ್ತಾನೆ, ಪ್ರಯೋಗಾತ್ಮಕವಾದ ಅಗತ್ಯತೆಗಳನ್ನು ನೋಡಿ ಅಂದರೆ ಆಹಾರ ಅಥವಾ ಧನ ಎನ್ನುವ ಅಗತ್ಯತೆಗಳಿರುವಾಗ ಸಹ ವಿಶ್ವಾಸಿಗಳಿಗೆ ಸಹಾಯ ಮಾಡುವವನಾಗಿರುತ್ತಾನೆ.

  • “ಡೀಕನ್” ಎನ್ನುವ ಪದವನ್ನು ಗ್ರೀಕ್ ಪದದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ, ಇದಕ್ಕೆ “ಸೇವಕ” ಅಥವಾ “ಪರಿಚಾರಕನು” ಎಂದರ್ಥ.
  • ಆದಿ ಕ್ರೈಸ್ತರಿರುವ ಸಮಯದಿಂದ ಹಿಡಿದು ಸಭಾಸೇವಕನ ಪಾತ್ರ ಮತ್ತು ಸೇವೆಯು ಸಭೆಯಲ್ಲಿ ಚೆನ್ನಾಗಿ ವಿವರಿಸಲ್ಪಟ್ಟಿದೆ.
  • ಉದಾಹರಣೆಗೆ, ಹೊಸ ಒಡಂಬಡಿಕೆಯಲ್ಲಿ ಸಭಾಸೇವಕರು ಸಭೆಯಲ್ಲಿ ವಿಶ್ವಾಸಿಗಳು ಹಂಚಿಕೊಳ್ಳುವ ಆಹಾರವಾಗಿರಲಿ ಅಥವಾ ಧನವಾಗಿರಲಿ ಮತ್ತು ಇನ್ನಾವುದೇಯಾಗಿರಲಿ ಅವರ ಮಧ್ಯೆದಲ್ಲಿರುವ ವಿಧವೆಯಾರಿಗೂ ಸಮಾನವಾಗಿ ಹಂಚುವದನ್ನು ನೋಡಿಕೊಳ್ಳಬೇಕಾಗಿತ್ತು.
  • “ಸಭಾಸೇವಕ” ಎನ್ನುವ ಪದವನ್ನು “ಸಭೆಯ ಸೇವಕನು” ಅಥವಾ “ಸಭೆಯ ಕೆಲಸಗಾರನು” ಅಥವಾ “ಸಭೆಯ ದಾಸನು” ಅಥವಾ ಸ್ಥಳೀಯ ಕ್ರೈಸ್ತ ಸಮಾಜಕ್ಕೆ ಪ್ರಯೋಜನಕರವಾದ ವಿಶೇಷ ಕಾರ್ಯಗಳನ್ನು ಮಾಡಲು ಸಂಪ್ರದಾಯಿಕವಾಗಿ ನೇಮಿಸಿಕೊಳ್ಳುವ ವ್ಯಕ್ತಿಯನ್ನು ಸೂಚಿಸುವ ಇತರ ಯಾವುದೇ ಪದವನ್ನೂ ಅನುವಾದದಲ್ಲಿ ಉಪಯೋಗಿಸಬಹುದು.

(ಈ ಪದಗಳನ್ನು ಸಹ ನೋಡಿರಿ : ಸೇವಕ, ದಾಸನು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G1249

ಸಭೆ, ಸಭೆಗಳು

ಪದದ ಅರ್ಥವಿವರಣೆ:

ಹೊಸ ಒಡಂಬಡಿಕೆಯಲ್ಲಿ “ಸಭೆ” ಎನ್ನುವ ಪದವು ದೇವರ ವಾಕ್ಯವನ್ನು ಕೇಳುವುದಕ್ಕೆ ಮತ್ತು ಪ್ರಾರ್ಥನೆ ಮಾಡುವುದಕ್ಕೆ ನಿರಂತರವಾಗಿ ಭೇಟಿಯಾಗುವ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳ ಸ್ಥಳೀಯ ಗುಂಪನ್ನು ಸೂಚಿಸುತ್ತದೆ. “ಸಾರ್ವತ್ರಿಕ ಸಭೆಗಳು” ಎನ್ನುವ ಪದವು ಅನೇಕಬಾರಿ ಕ್ರೈಸ್ತರೆಲ್ಲರಿಗೂ ಸೂಚಿಸುತ್ತದೆ.

  • ಈ ಪದಕ್ಕೆ ನಿಜವಾದ ಅಕ್ಷರಾರ್ಥವಾದ ಅರ್ಥವೇನಂದರೆ “ಕರೆಯಲ್ಪಟ್ಟ” ಕೂಟ ಅಥವಾ ಒಂದು ವಿಶೇಷವಾದ ಉದ್ದೇಶಕ್ಕಾಗಿ ಎಲ್ಲರು ಒಂದಾಗಿ ಸೇರಿಬರುವ ಜನ ಸಮೂಹ.
  • ಕ್ರಿಸ್ತನ ಪರಿಪೂರ್ಣ ದೇಹದಲ್ಲಿ ಸೇರಿಬರುವ ಪ್ರತಿಯೊಂದು ಸ್ಥಳದ ಎಲ್ಲಾ ವಿಶ್ವಾಸಿಗಳನ್ನು ಈ ಪದವು ಸೂಚಿಸುತ್ತಿರುವಾಗ, ಕೆಲವೊಂದು ಸತ್ಯವೇದ ಅನುವಾದಗಳು ಸ್ಥಳೀಯ ಸಭೆಯಿಂದ ಬೇರ್ಪಡಿಸಲು “ಸಾರ್ವತ್ರಿಕ ಸಭೆ” ಎಂದು ಕರೆದಿದ್ದಾರೆ.
  • ಅನೇಕ ಬಾರಿ ನಿರ್ದಿಷ್ಟ ನಗರದಲ್ಲಿರುವ ವಿಶ್ವಾಸಿಗಳು ಒಬ್ಬರ ಮನೆಯಲ್ಲಿ ಭೇಟಿಯಾಗುತ್ತಾರೆ. ಈ ಸ್ಥಳೀಯ ಸಭೆಗಳಿಗೆ ಆ ನಗರದ ಹೆಸರನ್ನು ಕೊಡಲ್ಪಟ್ಟಿದೆ, ಉದಾಹರಣೆಗೆ “ಎಫೆಸದಲ್ಲಿರುವ ಸಭೆ”.
  • ಸತ್ಯವೇದದಲ್ಲಿ “ಸಭೆ” ಎನ್ನುವ ಪದವನ್ನು ಭವನಕ್ಕೆ ಸೂಚಿಸಲಿಲ್ಲ.

ಅನುವಾದ ಸಲಹೆಗಳು:

  • “ಸಭೆ” ಎನ್ನುವ ಪದವನ್ನು “ಎಲ್ಲರು ಒಂದುಗೂಡುವುದು” ಅಥವಾ “ಕೂಟ” ಅಥವಾ “ಜನಸಮೂಹ” ಅಥವಾ “ಒಂದು ಸಲ ಎಲ್ಲರು ಭೇಟಿಯಾಗುವುದು” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುತ್ತಿರುವಾಗ ಉಪಯೋಗಿಸುವ ಪದವಾಗಲಿ ಅಥವಾ ಮಾತಾಗಲಿ ಎಲ್ಲಾ ವಿಶ್ವಾಸಿಗಳನ್ನು ಸೂಚಿಸುವದಾಗಿರಬೇಕೇ ಹೊರತು ಯಾವುದೋ ಒಂದು ಚಿಕ್ಕ ಗುಂಪನ್ನು ಮಾತ್ರ ಸೂಚಿಸುವುದಾಗಿರಬಾರದು.
  • “ಸಭೆ” ಎನ್ನುವ ಪದವನ್ನು ಅನುವಾದ ಮಾಡುವಾಗ ಭವನಕ್ಕೆ ಸೂಚಿಸದಂತೆ ನೋಡಿಕೊಳ್ಳಿರಿ.
  • ಹಳೇ ಒಡಂಬಡಿಕೆಯಲ್ಲಿ “ಕೂಟ” ಎಂದು ಉಪಯೋಗಿಸಿದ ಶಬ್ದವನ್ನು ಈ ಪದಕ್ಕೂ ಉಪಯೋಗಿಸಲಾಗಿರುತ್ತದೆ.
  • ಜಾತೀಯ ಅಥವಾ ಸ್ಥಳೀಯ ಸತ್ಯವೇದ ಅನುವಾದದಲ್ಲಿ ಈ ಪದವನ್ನು ಯಾವ ರೀತಿ ಅನುವಾದ ಮಾಡಿದ್ದಾರೋ ನೋಡಿಕೊಳ್ಳಿರಿ. (ಇದನ್ನೂ ನೋಡಿರಿ: ಗೊತ್ತಿಲ್ಲದವುಗಳನ್ನು ಯಾವ ರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ವಿಧಾನಸಭೆ, ನಂಬಿಕೆ, ಕ್ರೈಸ್ತ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 43:12 ಪೇತ್ರ ಮಾಡಿದ ಪ್ರಸಂಗವನ್ನು ಸುಮಾರು 3,000 ಜನರು ನಂಬಿದರು ಮತ್ತು ಅವರೆಲ್ಲರು ಯೇಸುವಿಗೆ ಶಿಷ್ಯರಾದರು. ಅವರೆಲ್ಲರು ದೀಕ್ಷಾಸ್ನಾನ ಹೊಂದಿದರು ಮತ್ತು ಯೆರೂಸಲೇಮಿನಲ್ಲಿರುವ __ ಸಭೆಯಲ್ಲಿ __ ಭಾಗಿಗಳಾದರು.
  • 46:09 ಅಂತಿಯೋಕ್ಯದಲ್ಲಿ ಅನೇಕ ಜನರು ಯೆಹೂದ್ಯರಲ್ಲ, ಆದರೆ ಮೊಟ್ಟ ಮೊದಲನೇ ಬಾರಿ ಅವರಲ್ಲಿ ಅನೇಕರು ವಿಶ್ವಾಸಿಗಳಾದರು. __ ಸಭೆಯನ್ನು __ ಬಲಗೊಳಿಸಲು ಮತ್ತು ಯೇಸುವಿನ ಕುರಿತಾಗಿ ಈ ಹೊಸ ವಿಶ್ವಾಸಿಗಳಿಗೆ ಹೆಚ್ಚಾಗಿ ಬೋಧನೆ ಮಾಡಲು ಬಾರ್ನಬ ಮತ್ತು ಸೌಲರಿಬ್ಬರು ಆಲ್ಲಿಗೆ ಹೊರಟರು.
  • 46:10 ಆದ್ದರಿಂದ ಅಂತಿಯೋಕ್ಯದಲ್ಲಿರುವ __ ಸಭೆ __ ಬಾರ್ನಬ ಮತ್ತು ಸೌಲರಿಬ್ಬರ ಮೇಲೆ ತಮ್ಮ ಕೈಗಳನ್ನಿಟ್ಟು ಪ್ರಾರ್ಥನೆ ಮಾಡಿತು. ಇದಾದನಂತರ ಅವರು ಇನ್ನೂ ಅನೇಕವಾದ ಸ್ಥಳಗಲ್ಲಿ ಯೇಸುವಿನ ಶುಭವಾರ್ತೆಯನ್ನು ಸಾರಲು ಅವರಿಬ್ಬರನ್ನು ಕಳುಹಿಸಿದರು.
  • 47:13 ಶುಭವಾರ್ತೆಯು ವ್ಯಾಪಕವಾಗುತ್ತಾ ಇತ್ತು, ಮತ್ತು __ ಸಭೆ __ ಬೆಳೆಯುತ್ತಾ ಇತ್ತು.
  • 50:01 ಸುಮಾರು 2,000 ವರ್ಷಗಳಿಂದ ಪ್ರಪಂಚವ್ಯಾಪಕವಾಗಿ ಅನೇಕ ಮಂದಿ ಜನರು ಮೆಸ್ಸೀಯ ಯೇಸುವಿನ ಕುರಿತಾದ ಸುವಾರ್ತೆಯನ್ನು ಕೇಳುತ್ತಿದ್ದಾರೆ. __ ಸಭೆ __ ಬೆಳೆಯುತ್ತಾ ಇತ್ತು.

ಪದ ಡೇಟಾ:

  • Strong's: G1577

ಸರ್ವಶಕ್ತನು

ಸತ್ಯಾಂಶಗಳು:

“ಸರ್ವಶಕ್ತನು” ಎನ್ನುವ ಪದಕ್ಕೆ “ಸಕಲ ಶಕ್ತಿಯುಳ್ಳವನು” ಎಂಬ ಅಕ್ಷರಾರ್ಥವು ಇದೆ. ಸತ್ಯವೇದದಲ್ಲಿ ಈ ಪದವನ್ನು ಕೇವಲ ದೇವರನ್ನು ಮಾತ್ರ ಸೂಚಿಸುತ್ತದೆ.

  • “ಸರ್ವಶಕ್ತನು” ಅಥವಾ “ಸರ್ವಶಕ್ತನಾದವನು” ಎನ್ನುವ ಬಿರುದುಗಳು ದೇವರನ್ನು ಮಾತ್ರ ಸೂಚಿಸುತ್ತದೆ. ಆತನಿಗೆ ಪ್ರತಿಯೊಂದರ ಮೇಲೆಯೂ, ಪ್ರತಿಯೊಬ್ಬರ ಮೇಲೆಯೂ ಸರ್ವ ಅಧಿಕಾರವು ಮತ್ತು ಶಕ್ತಿಯು ಉಳ್ಳವನಾಗಿದ್ದಾನೆಂದು ತೋರಿಸುತ್ತದೆ.
  • ಈ ಪದವನ್ನು “ಸರ್ವಶಕ್ತನಾದ ದೇವರು”, “ದೇವರು ಸರ್ವಶಕ್ತನು” ಮತ್ತು “ಸರ್ವಶಕ್ತನಾದ ಕರ್ತನ”, "ಕರ್ತನಾದ ದೇವರು ಸರ್ವಶಕ್ತನು” ಎಂದು ದೇವರನ್ನು ವರ್ಣಿಸುವುದಕ್ಕೂ ಉಪಯೋಗಿಸುತ್ತಾರೆ.

ಅನುವಾದ ಸಲಹೆಗಳು:

  • ಈ ಪದವನ್ನು “ಎಲ್ಲಾ ಶಕ್ತಿಯನ್ನು ಹೊಂದಿದವನು” ಅಥವಾ “ಸಂಪೂರ್ಣವಾದ ಶಕ್ತಿಯನ್ನು ಪಡೆದವನು” ಅಥವಾ “ಸಂಪೂರ್ಣ ಶಕ್ತಿಯನ್ನು ಹೊಂದಿದ ದೇವರು” ಎಂದು ಕೂಡ ಅನುವಾದ ಮಾಡಬಹುದು.
  • “ಕರ್ತನಾದ ದೇವರು ಸರ್ವಶಕ್ತನು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರು, ಶಕ್ತಿಯುಳ್ಳ ಅಧಿಪತಿಯು” ಅಥವಾ “ಶಕ್ತಿಯುಳ್ಳ ಸಾರ್ವಭೌಮಾಧಿಕಾರಿಯಾದ ದೇವರು” ಅಥವಾ “ಎಲ್ಲಾವುದರ ಮೇಲೆ ಯಜಮಾನನಾದ ಶಕ್ತಿಯುಳ್ಳ ದೇವರು” ಎನ್ನುವವುಗಳನ್ನು ಕೂಡ ಒಳಪಡಿಸಬಹುದು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೇವರು, ಕರ್ತನು, ಶಕ್ತಿ)

ಸತ್ಯವೇದದ ಉಲ್ಲೇಖ ವಚನಗಳು:

ಪದದ ದತ್ತಾಂಶ:

  • Strong's: H7706, G3841

ಸರ್ವಾಧಿಕಾರ

ಪದದ ಅರ್ಥವಿವರಣೆ:

“ಸರ್ವಾಧಿಕಾರ” ಎನ್ನುವ ಪದವು ಶಕ್ತಿಯನ್ನು, ನಿಯಂತ್ರಣವನ್ನು ಅಥವಾ ಜನರ ಮೇಲೆ, ಪ್ರಾಣಿಗಳ ಮೇಲೆ ಅಥವಾ ಭೂಮಿಯ ಮೇಲೆ ಅಧಿಕಾರವನ್ನು ಸೂಚಿಸುತ್ತದೆ.

  • ಯೇಸುಕ್ರಿಸ್ತನಿಗೆ ಯಾಜಕನಾಗಿ, ಪ್ರವಾದಿಯಾಗಿ ಮತ್ತು ಅರಸನಾಗಿ ಭೂಮಿಯ ಮೇಲೆ ಸರ್ವಾಧಿಕಾರವು ಕೊಡಲ್ಪಟ್ಟಿದೆಯೆಂದು ಆತನು ಹೇಳಿದ್ದಾರೆ.
  • ಶಿಲುಬೆಯಲ್ಲಿ ಯೇಸುವಿನ ಮರಣದಿಂದ ಸೈತಾನಿನ ಆಧಿಪತ್ಯವು ಸಂಪೂರ್ಣವಾಗಿ ಸೋಲಿಸಲಾಗಿದೆ.
  • ಸೃಷ್ಟಿಕಾರ್ಯದ ಸಮಯದಲ್ಲಿ ದೇವರು ಮನುಷ್ಯನಿಗೆ ಮೀನು, ಪಕ್ಷಿಗಳು, ಮತ್ತು ಭೂಮಿಯ ಮೇಲಿರುವ ಎಲ್ಲಾ ಜೀವಿಗಳ ಮೇಲೆ ಆಧಿಪತ್ಯವನ್ನು ಮಾಡಬೇಕೆಂದು ಹೇಳಿದ್ದನು.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಅಧಿಕಾರ” ಅಥವಾ “ಶಕ್ತಿ” ಅಥವಾ “ನಿಯಂತ್ರಣ” ಎನ್ನುವ ಪದಗಳನ್ನು ಉಪಯೋಗಿಸುತ್ತಾರೆ.
  • “ಎಲ್ಲಾವುದರ ಮೇಲೆ ಆಧಿಪತ್ಯವನ್ನು ಹೊಂದಿರು” ಎನ್ನುವ ಮಾತನ್ನು “ಎಲ್ಲಾವುದರ ಮೇಲೆ ಆಡಳಿತ ಮಾಡು” ಅಥವಾ “ಎಲ್ಲವನ್ನು ನಡೆಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಶಕ್ತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1166, H4474, H4475, H4896, H4910, H4915, H7287, H7300, H7980, H7985, G2634, G2904, G2961, G2963

ಸಹವಾಸ

ಪದದ ಅರ್ಥವಿವರಣೆ

ಸಹಜವಾಗಿ, “ಸಹವಾಸ” ಎನ್ನುವ ಪದವು ಒಂದೇ ರೀತಿಯದ ಅನುಭವಗಳು ಮತ್ತು ಆಸಕ್ತಿಗಳು ಹೊಂದಿರುವ ಗುಂಪಿನ ಜನರಲ್ಲಿರುವ ಸ್ನೇಹಪೂರ್ವಕವಾದ ಸಂಭಾಷಣೆಯನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ, “ಸಹವಾಸ” ಎನ್ನುವ ಪದವು ಸಹಜವಾಗಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗಳ ಐಕ್ಯತೆಯನ್ನು ಸೂಚಿಸುತ್ತದೆ.
  • ಕ್ರಿಸ್ತನು ಮತ್ತು ಪವಿತ್ರಾತ್ಮನ ಜೊತೆಗಿರುವ ಸಂಬಂಧದ ಮೂಲಕ ವಿಶ್ವಾಸಿಗಳು ಒಬ್ಬರು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುವ ಸಂಬಂಧವಾಗಿರುತ್ತದೆ.
  • ಆರಂಭ ಕ್ರೈಸ್ತರು ಅವರ ಸಹವಾಸವನ್ನು ದೇವರ ವಾಕ್ಯವನ್ನು ಕೇಳುವುದರ ಮೂಲಕ ಮತ್ತು ಜೊತೆಗೆ ಪ್ರಾರ್ಥಿಸುವದರ ಮೂಲಕ, ಅವರ ವಸ್ತುಗಳನ್ನು ಹಂಚಿಕೊಳ್ಳುವದರ ಮೂಲಕ ಮತ್ತು ಜೊತೆಯಾಗಿ ಊಟ ಮಾಡುವುದರ ಮೂಲಕ ಅವರ ಸಹವಾಸವನ್ನು ವ್ಯಕ್ತಪಡಿಸಿಕೊಂಡರು.
  • ಯೇಸು ಕ್ರಿಸ್ತನಲ್ಲಿ ಮತ್ತು ಆತನು ಶಿಲುಬೆ ಮರಣ ಹೊಂದಿದರ ಮೂಲಕ ದೇವರು ಹಾಗೂ ಮನುಷ್ಯರ ನಡುವೆ ಇದ್ದ ಅಂತರವನ್ನು ತೊಲಗಿತು ಎಂದು ನಂಬುವುದರ ಮೂಲಕ ದೇವರೊಂದಿಗೆ ಕ್ರೈಸ್ತರು ಸಹವಾಸ ಹೊಂದಿರುತ್ತಾರೆ.

ಅನುವಾದ ಸಲಹೆಗಳು:

  • “ಸಹವಾಸ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳು ಯಾವುವೆಂದರೆ “ಜೊತೆಯಾಗಿ ಹಂಚಿಕೊಳ್ಳುವುದು” ಅಥವಾ “ಸಂಬಂಧ” ಅಥವಾ “ಸಹಚರ” ಅಥವಾ “ಕ್ರೈಸ್ತರ ಸಮುದಾಯ”.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2266, H8667, G2842, G2844, G3352, G4790

ಸಹೋದರ

ಪದದ ಅರ್ಥವಿವರಣೆ:

“ಸಹೋದರ” ಎನ್ನುವ ಪದವು ಸಹಜವಾಗಿ ಒಂದೇ ತಂದೆ ತಾಯಿಗೆ ಹುಟ್ಟಿದ ಪುರುಷ ವ್ಯಕ್ತಿಯ ಒಡಹುಟ್ಟಿದವರನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ “ಸಹೋದರರು” ಎನ್ನುವ ಪದವನ್ನು ಸಾಧಾರಣವಾಗಿ ಬಂಧುಗಳಿಗೆ ಉಪಯೋಗಿಸಿದ್ದರು, ಬಂಧುಗಳೆಂದರೆ ಒಂದೇ ಕುಲದಲ್ಲಿ, ಒಂದೇ ಜನರ ವರ್ಗದಲ್ಲಿ ಅಥವಾ ಒಂದೇ ವಂಶದಲ್ಲಿ ಇರುವ ಸದಸ್ಯರಿಗೆ ಸೂಚಿಸಲಾಗಿದೆ.
  • ಹೊಸ ಒಡಂಬಡಿಕೆಯಲ್ಲಿ ಅನೇಕ ಬಾರಿ ಅಪೊಸ್ತಲರು “ಸಹೋದರರು” ಎಂದು ಉಪಯೋಗಿಸಿದ್ದಾರೆ, ಇದು ತಮ್ಮ ಸಹ ಕ್ರೈಸ್ತರನ್ನು (ಕ್ರೈಸ್ತರಾಗಿರುವ ಸ್ತ್ರೀ ಪುರುಷರನ್ನು) ಸೂಚಿಸುತ್ತದೆ, ಕ್ರಿಸ್ತನಲ್ಲಿರುವ ಎಲ್ಲಾ ವಿಶ್ವಾಸಿಗಳು ಒಂದೇ ಆತ್ಮೀಯಕ ಕುಟುಂಬದಲ್ಲಿ ಸದಸ್ಯರಾಗಿರುತ್ತಾರೆ, ದೇವರೇ ಇವರಿಗೆ ಪರಲೋಕದ ತಂದೆಯಾಗಿರುತ್ತಾನೆ.
  • ಹೊಸ ಒಡಂಬಡಿಕೆಯಲ್ಲಿ ಕೆಲವೊಂದುಬಾರಿ ಒಬ್ಬ ಸಹ ಕ್ರೈಸ್ತಳಾಗಿರುವ ಸ್ತ್ರೀಯನ್ನು ಕುರಿತು ವಿಶೇಷವಾಗಿ ಹೇಳುವಾಗ, ಆಕೆಯನ್ನು “ಸಹೋದರಿ” ಎಂದು ಅಪೊಸ್ತಲರು ಉಪಯೋಗಿಸಿದ್ದಾರೆ, ಅಥವಾ ಇದರಲ್ಲಿ ಸ್ತ್ರೀ ಪುರುಷರು ಒಳಗೊಂಡಿರುತಾರೆ. ಉದಾಹರಣೆಗೆ, ಯಾಕೋಬನು “ಒಬ್ಬ ಸಹೋದರ ಅಥವಾ ಒಬ್ಬ ಸಹೋದರಿ ತನಗೆ ಆಹಾರವಾಗಲಿ ಅಥವಾ ಬಟ್ಟೆಯಾಗಲಿ ಬೇಕೆಂದಿರುವಾಗ” ಎಂದು ಉಲ್ಲೇಖಿಸುವಾಗ ಅವರು ಎಲ್ಲಾ ವಿಶ್ವಾಸಿಗಳನ್ನು ಬಗ್ಗೆ ಮಾತನಾಡುತ್ತಿದ್ದಾನೆಂದು ಒತ್ತಿಹೇಳುತ್ತಾನೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಭಾಷೆಯಲ್ಲಿ ಸ್ವಂತ ಸಹೋದರನನ್ನು ಸೂಚಿಸುವ ಮತ್ತು ಅಕ್ಷರಾರ್ಥ ಬರುವ ಪದಗಳೊಂದಿಗೆ ಅಥವಾ ಮಾತುಗಳೊಂದಿಗೆ ಅನುವಾದ ಮಾಡುವುದು ಉತ್ತಮ. ಆದರೆ ಈ ಪದವು ತಪ್ಪಾದ ಅರ್ಥವನ್ನು ಕೊಡಬಾರದು.
  • ವಿಶೇಷವಾಗಿ ಹಳೇ ಒಡಂಬಡಿಕೆಯಲ್ಲಿ “ಸಹೋದರರು” ಎಂದು ಉಪಯೋಗಿಸಿದಾಗ ಒಂದೇ ಕುಟುಂಬಕ್ಕೆ, ಒಂದೇ ವಂಶಕ್ಕೆ ಅಥವಾ ಒಂದೇ ವರ್ಗದ ಜನರಿಗೆ ಸೇರಿದ ಸದಸ್ಯರನ್ನೇ ಸೂಚಿಸುತ್ತಿದ್ದರು, ಅನುವಾದಗಳಲ್ಲಿ “ಬಂಧುಗಳು” ಅಥವಾ “ವಂಶದ ಸದಸ್ಯರು” ಅಥವಾ “ಸಹ ಇಸ್ರಾಯೇಲ್ಯರು” ಎನ್ನುವ ಪದಗಳನ್ನು ಸೇರಿಸಬಹುದು.
  • ಕ್ರಿಸ್ತನಲ್ಲಿರುವ ಸಹ ವಿಶ್ವಾಸಿಯನ್ನು ಸೂಚಿಸುವ ಸಂದರ್ಭದಲ್ಲಿ ಈ ಪದವನ್ನು “ಕ್ರಿಸ್ತನಲ್ಲಿ ಸಹೋದರ” ಅಥವಾ “ಅತ್ಮೀಕ ಸಹೋದರ” ಎಂದೂ ಅನುವಾದ ಮಾಡಬಹುದು.
  • ಸ್ತ್ರೀ ಪುರುಷರನ್ನು ಸೇರಿಸಿ ಸೂಚಿಸುವಾಗ “ಸಹೋದರ” ಎನ್ನುವ ಪದವು ತಪ್ಪಾದ ಅರ್ಥವನ್ನು ಕೊಡುತ್ತದೆ, ಸ್ತ್ರೀ ಪುರುಷರನ್ನು ಸೇರಿಸಿ ಉಪಯೋಗಿಸುವ ಅತೀ ಹೆಚ್ಚಾದ ಸಾಧಾರಣವಾದ ರಕ್ತ ಸಂಬಂಧ ಪದವನ್ನು ಉಪಯೋಗಿಸಬಹುದು.
  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ ಸ್ತ್ರೀ ಪುರುಷರಾದ ವಿಶ್ವಾಸಿಗಳನ್ನು ಸೂಚಿಸುವ “ಸಹ ವಿಶ್ವಾಸಿಗಳು” ಅಥವಾ “ಕ್ರೈಸ್ತ ಸಹೋದರರು ಮತ್ತು ಸಹೋದರಿಯರು” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
  • ಕೇವಲ ಪುರುಷರು ಮಾತ್ರವೇ ಸೂಚಿಸಲ್ಪಟ್ಟಿದ್ದಾರೋ ಅಥವಾ ಸ್ತ್ರೀ ಪುರುಷರೂ ಸೇರಿ ಸೂಚಿಸಲ್ಪಟ್ಟಿದ್ದಾರೋ ಎಂದು ನಿಶ್ಚಯತೆಯನ್ನು ಹೊಂದಲು ಸಂದರ್ಭವನ್ನು ಚೆನ್ನಾಗಿ ಪರಿಶೀಲನೆ ಮಾಡಿರಿ.

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ತಂದೆಯಾದ ದೇವರು, ಸಹೋದರಿ, ಆತ್ಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H251, H252, H264, H1730, H2992, H2993, H2994, H7453, G80, G81, G2385, G2455, G2500, G4613, G5360, G5569

ಸಾಕ್ಷ್ಯ, ಸಾಕ್ಷ್ಯ ಹೇಳು, ಸಾಕ್ಷಿ, ಸಾಕ್ಷಿಗಳು, ಪ್ರತ್ಯಕ್ಷಸಾಕ್ಷಿ, ಪ್ರತ್ಯಕ್ಷಸಾಕ್ಷಿಗಳು

ಪದದ ಅರ್ಥವಿವರಣೆ:

ಒಬ್ಬ ವ್ಯಕ್ತಿ “ಸಾಕ್ಷ್ಯ” ಕೊಡುತ್ತಿರುವಾಗ, ಆ ವ್ಯಕ್ತಿ ತನಗೆ ಗೊತ್ತಿರುವ ವಿಷಯದ ಕುರಿತಾಗಿ ವ್ಯಾಖ್ಯೆಯನ್ನು ಮಾಡುತ್ತಿದ್ದಾನೆ, ಆ ವ್ಯಾಖ್ಯೆಯು ಸತ್ಯವೆಂದು ಪ್ರಕಟಿಸುತ್ತಿದ್ದಾನೆ. “ಸಾಕ್ಷ್ಯ ಹೇಳು” ಎನ್ನುವದಕ್ಕೆ “ಸಾಕ್ಷ್ಯ” ಕೊಡು ಎಂದರ್ಥ.

  • ಅನೇಕಬಾರಿ ಒಬ್ಬ ವ್ಯಕ್ತಿ ತಾನು ನೇರವಾಗಿ ಅನುಭವಿಸಿದ ವಿಷಯದ ಬಗ್ಗೆ “ಸಾಕ್ಷಿ ಹೇಳುತ್ತಿದ್ದಾನೆ”.
  • “ಸುಳ್ಳು ಸಾಕ್ಷ್ಯ” ನೀಡುವ ಸಾಕ್ಷಿಯು ಏನಾಯಿತು ಎಂಬುದರ ಸತ್ಯವನ್ನು ಹೇಳುವುದಿಲ್ಲ.
  • ಕೆಲವೊಂದುಬಾರಿ “ಸಾಕ್ಷ್ಯ” ಎನ್ನುವ ಪದವು ಪ್ರವಾದಿ ಹೇಳಿದ ಪ್ರವಾದನೆಯನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಈ ಪದವನ್ನು ಅನೇಕಬಾರಿ ಯೇಸುವಿನ ಹಿಂಬಾಲಕರು ಹೇಗೆ ಯೇಸುವಿನ ಜೀವನ, ಮರಣ ಮತ್ತು ಪುನರುತ್ಥಾನಗಳ ಕುರಿತಾಗಿ ಸಾಕ್ಷ್ಯವನ್ನು ಹಂಚಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

“ಸಾಕ್ಷಿ” ಎನ್ನುವ ಪದವು ನಡೆದಿರುವ ಸಂಘಟನೆಯನ್ನು ನಿಜವಾಗಿ ವೈಯುಕ್ತಿಕವಾಗಿ ಅನುಭವಿಸಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಸಾಧಾರಣವಾಗಿ ಸಾಕ್ಷಿ ಎಂದರೆ ಒಬ್ಬ ವ್ಯಕ್ತಿ ತನಗೊತ್ತಿರುವ ಸತ್ಯವಾದ ವಿಷಯದ ಕುರಿತಾಗಿ ಸಾಕ್ಷ್ಯವನ್ನು ಹಂಚಿಕೊಳ್ಳುವುದೂ ಆಗಿರುತ್ತದೆ. “ಪ್ರತ್ಯಕ್ಷಸಾಕ್ಷಿ” ಎನ್ನುವ ಪದವು ಒಬ್ಬ ವ್ಯಕ್ತಿ ನಡೆದ ಸಂಘಟನೆಯನ್ನು ಕಣ್ಣಾರೆ ನೋಡಿದ್ದನ್ನು ಒತ್ತಿ ಹೇಳುತ್ತದೆ.

  • ಯಾವುದಾದರೊಂದರ ಕುರಿತಾಗಿ “ಸಾಕ್ಷಿ” ಕೊಡುವುದು ಎಂದರೆ ಅದು ಸಂಭವಿಸಿರುವುದನ್ನು ನೋಡಿರುವುದು.
  • ವಿಚಾರಣೆ ಮಾಡುವಾಗ, ಸಾಕ್ಷಿ “ಸಾಕ್ಷಿಯನ್ನು ಕೊಡುತ್ತಾನೆ” ಅಥವಾ “ಸಾಕ್ಷಿಯನ್ನು ಹೊಂದಿರುತ್ತಾನೆ” ಎಂದರ್ಥ. “ಸಾಕ್ಷ್ಯ ಹೇಳು” ಎನ್ನುವ ಅರ್ಥದಂತೆಯೇ ಇದಕ್ಕೂ ಅದೇ ಅರ್ಥವು ಬರುತ್ತದೆ.
  • ಸಾಕ್ಷಿಗಳು ತಾವು ನೋಡಿದ ಅಥವಾ ಕೇಳಿದವುಗಳ ಕುರಿತಾಗಿ ಸತ್ಯವನ್ನು ಹೇಳುವುದಕ್ಕೆ ಇರುತ್ತಾರೆ.
  • ನಡೆದ ಸಂಘಟನೆಯ ಕುರಿತಾಗಿ ಸತ್ಯವನ್ನು ಹೇಳದ ಸಾಕ್ಷಿಯನ್ನು “ಸುಳ್ಳು ಸಾಕ್ಷಿ” ಎಂದು ಕರೆಯುತ್ತಾರೆ. “ಸುಳ್ಳು ಸಾಕ್ಷಿಯನ್ನು ಕೊಡು” ಅಥವಾ “ಸುಳ್ಳು ಸಾಕ್ಷಿಯನ್ನು ಹೊತ್ತಿರು” ಎಂದು ಅವನಿಗೆ ಹೇಳಿರುತ್ತಾರೆ.
  • “ಅವರಿಬ್ಬರ ಮಧ್ಯೆದಲ್ಲಿ ಸಾಕ್ಷಿಯಾಗಿರು” ಎನ್ನುವ ಮಾತಿಗೆ ಒಪ್ಪಂದ ಮಾಡಲ್ಪಟ್ಟಿರುವ ವಿಷಯಕ್ಕೆ ಯಾರಾದರೊಬ್ಬರು ಅಥವಾ ಯಾವುದಾದರೊಂದು ಅಧಾರವಾಗಿರುವುದು ಎಂದರ್ಥ. ಒಪ್ಪಂದದಲ್ಲಿರುವ ಇಬ್ಬರು ವ್ಯಕ್ತಿಗಳು ಏನು ಮಾಡಬೇಕೆಂದು ವಾಗ್ಧಾನ ಮಾಡಿದ್ದನ್ನು ಮಾಡುವದಕ್ಕೆ ಸಾಕ್ಷಿ ಖಚಿತಪಡಿಸುವನು.

ಅನುವಾದ ಸಲಹೆಗಳು:

  • “ಸಾಕ್ಷ್ಯ ಹೇಳು” ಅಥವಾ “ಸಾಕ್ಷ್ಯವನ್ನು ಕೊಡು” ಎನ್ನುವ ಪದವನ್ನು ಅಥವಾ ಮಾತನ್ನು “ಸತ್ಯಾಂಶಗಳನ್ನು ಹೇಳು” ಅಥವಾ “ನೋಡಿರುವುದನ್ನು ಅಥವಾ ಕೇಳಿರುವುದನ್ನು ಹೇಳು” ಅಥವಾ “ವೈಯುಕ್ತಿಕ ಅನುಭವದಿಂದ ಹೇಳು” ಅಥವಾ “ಆಧಾರವನ್ನು ಕೊಡು” ಅಥವಾ “ನಡೆದಿರುವುದನ್ನು ಹೇಳು” ಎಂದೂ ಅನುವಾದ ಮಾಡಬಹುದು.
  • “ಸಾಕ್ಷ್ಯ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ನಡೆದಿರುವ ಸಂಘಟನೆಯ ಕುರಿತು ವರದಿಕೊಡು” ಅಥವಾ “ಸತ್ಯವಾದದ್ದನ್ನು ವ್ಯಾಖ್ಯಾನಿಸು” ಅಥವಾ “ಆಧಾರ” ಅಥವಾ “ಹೇಳಿದ ವಿಷಯಗಳು” ಅಥವಾ “ಪ್ರವಾದನೆ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಅವರಿಗೆ ಸಾಕ್ಷ್ಯವಾಗಿ” ಎನ್ನುವ ಮಾತನ್ನು “ಸತ್ಯವಾದದ್ದನ್ನು ಅವರಿಗೆ ತೋರಿಸು” ಅಥವಾ “ಸತ್ಯವಾದದ್ದನ್ನು ಅವರಿಗೆ ನಿರೂಪಿಸು” ಎಂದೂ ಅನುವಾದ ಮಾಡಬಹುದು.
  • “ಆವರಿಗೆ ವಿರುದ್ಧವಾಗಿ ಸಾಕ್ಷ್ಯವಾಗಿ” ಎನ್ನುವ ಮಾತನ್ನು “ಅವರ ಪಾಪವನ್ನು ಅವರಿಗೆ ತೋರಿಸುವ ವಿಷಯ” ಅಥವಾ “ಅವರ ವೇಷಧಾರವನ್ನು ಎತ್ತಿ ತೋರಿಸುವುದು” ಅಥವಾ “ಅವರು ತಪ್ಪು ಮಾಡುತ್ತಿದ್ದಾರೆಂದು ನಿರೂಪಿಸುವ ವಿಷಯ” ಎಂದೂ ಅನುವಾದ ಮಾಡಬಹುದು.
  • “ಸುಳ್ಳು ಸಾಕ್ಷ್ಯವನ್ನು ಕೊಡುವುದು” ಎನ್ನುವ ಮಾತನ್ನು “ಸುಳ್ಳು ವಿಷಯಗಳನ್ನು ಹೇಳು” ಅಥವಾ “ನಿಜವಲ್ಲದ ವಿಷಯಗಳನ್ನು ವ್ಯಾಖ್ಯಾನಿಸು” ಎಂದೂ ಅನುವಾದ ಮಾಡಬಹುದು.

“ಸಾಕ್ಷಿ” ಅಥವಾ “ಪ್ರತ್ಯಕ್ಷ ಸಾಕ್ಷಿ” ಎನ್ನುವ ಪದವನ್ನು “ಅದನ್ನು ನೋಡಿದ ವ್ಯಕ್ತಿ” ಅಥವಾ “ಅದು ನಡೆದಿದೆಯೆಂದು ನೋಡಿದ ಒಬ್ಬ ವ್ಯಕ್ತಿ” ಅಥವಾ “(ಆ ವಿಷಯಗಳನ್ನು) ನೋಡಿದ ಮತ್ತು ಕೇಳಿದ ವ್ಯಕ್ತಿಗಳು” ಎಂದು ಅರ್ಥ ಬರುವ ಮಾತುಗಳೊಂದಿಗೆ ಅಥವಾ ಪದಗಳೊಂದಿಗೆ ಅನುವಾದ ಮಾಡಬಹುದು.

  • “ಸಾಕ್ಷಿಯನ್ನು” ಹೊಂದಿರುವ ವಿಷಯ ಎನ್ನುವ ಮಾತನ್ನು “ಖಾತರಿ” ಅಥವಾ “ನಮ್ಮ ವಾಗ್ಧಾನಕ್ಕೆ ಚಿಹ್ನೆ” ಅಥವಾ “ಇದು ನಿಜವೆಂದು ಸಾಕ್ಷಿ ಕೊಡುವ ಯಾವುದಾದರೊಂದು” ಎಂದೂ ಅನುವಾದ ಮಾಡಬಹುದು.
  • “ನೀವು ನನ್ನ ಸಾಕ್ಷಿಗಳಾಗಿರುವಿರಿ” ಎನ್ನುವ ಮಾತನ್ನು “ನೀವು ನನ್ನ ಕುರಿತಾಗಿ ಇತರ ಜನರಿಗೆ ಹೇಳುವಿರಿ” ಅಥವಾ “ನಾನು ನಿಮಗೆ ಬೋಧನೆ ಮಾಡಿದ ಸತ್ಯವನ್ನು ನೀವು ಜನರಿಗೆ ಬೋಧಿಸುವಿರಿ” ಅಥವಾ “ನನ್ನಿಂದು ನೀವು ಕೇಳಿದ ಮತ್ತು ನಾನು ಮಾಡಿರುವ ಸಂಗತಿಗಳನ್ನು ನೀವು ನೋಡಿರುವವುಗಳನ್ನು ಜನರಿಗೆ ಹೇಳುವಿರಿ” ಎಂದೂ ಅನುವಾದ ಮಾಡಬಹುದು.
  • “ಸಾಕ್ಷಿ ಕೊಡು” ಎನ್ನುವ ಮಾತನ್ನು “ನೋಡಿದ್ದನ್ನು ಹೇಳು” ಅಥವಾ “ಸಾಕ್ಷ್ಯವನ್ನು ಹೇಳು” ಅಥವಾ “ನಡೆದಿರುವುದನ್ನು ವ್ಯಾಖ್ಯಾನಿಸು” ಎಂದೂ ಅನುವಾದ ಮಾಡಬಹುದು.
  • ಯಾವುದಾದರೊಂದಕ್ಕೆ “ಸಾಕ್ಷಿಯನ್ನು ಕೊಡು” ಎನ್ನುವ ಮಾತನ್ನು “ಯಾವುದಾದರೊಂದನ್ನು ನೋಡು” ಅಥವಾ “ನಡೆದಿರುವುದನ್ನು ಅನುಭವಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕಪೆರ್ನೌಮ, ಗಲಿಲಾಯ, ಯೊರ್ದನ್ ಹೊಳೆ, ಲವಣ ಸಮುದ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 39:02 ಮನೆಯ ಒಳಭಾಗದಲ್ಲಿ, ಯೆಹೂದ್ಯರ ನಾಯಕರು ಯೇಸುವನ್ನು ವಿಚಾರಣೆಗಾಗಿ ನಿಲ್ಲಿಸಿದ್ದರು. ಆತನ ಕುರಿತಾಗಿ ಸುಳ್ಳು ಹೇಳುವ ಅನೇಕ __ ಸುಳ್ಳು ಸಾಕ್ಷಿಗಳನ್ನು __ ಅವರು ತೆಗೆದುಕೊಂಡುಬಂದರು.
  • 39:04 ಮಹಾ ಯಾಜಕನು ಕೋಪಗೊಂಡು ತನ್ನ ವಸ್ತ್ರಗಳನ್ನು ಹರಿದುಕೊಂಡು, “ನಮಗೆ ಇನ್ನೇನು ಹೆಚ್ಚಿನ __ ಸಾಕ್ಷಿಗಳು __ ಬೇಕಾಗಿಲ್ಲ. ಈತನು ದೇವರ ಮಗನೆಂದು ಹೇಳುವ ಮಾತುಗಳನ್ನು ನೀನು ಅವನ ಕುರಿತಾಗಿ ಕೇಳಿಸಿಕೊಂಡಿರುವೆ. ನಿನ್ನ ತೀರ್ಪು ಏನು?” ಎಂದು ಕೂಗಿದನು.
  • 42:08 “ಪ್ರತಿಯೊಬ್ಬರು ತಾವು ಮಾಡಿದ ಪಾಪಗಳಿಗೆ ಕ್ಷಮಾಪಣೆಯನ್ನು ಪಡೆದುಕೊಳ್ಳುವುದಕ್ಕೆ ಪಶ್ಚಾತ್ತಾಪ ಹೊಂದಿಕೊಳ್ಳಬೇಕೆಂದು ನನ್ನ ಶಿಷ್ಯರು ಪ್ರಕಟಿಸುವರೆಂದು ಲೇಖನಗಳಲ್ಲಿ ಕೂಡ ಬರೆಯಲ್ಪಟ್ಟಿದೆ. ಅವರು ಈ ಸುವಾರ್ತೆ ಪ್ರಕಟಿಸುವುದನ್ನು ಯೆರೂಸಲೇಮಿನಲ್ಲಿ ಆರಂಭಿಸಿ, ಎಲ್ಲಾ ಸ್ಥಳಗಳಲ್ಲಿರುವ ಜನರ ಗುಂಪುಗಳ ಮಧ್ಯಕ್ಕೆ ಹೋಗಿ ಸಾರುವರು. ಈ ಎಲ್ಲಾ ಕಾರ್ಯಗಳಿಗೆ ನೀವೇ __ ಸಾಕ್ಷಿಗಳಾಗಿದ್ದೀರಿ __.”
  • 43:07 “ದೇವರು ಯೇಸುವನ್ನು ಜೀವಂತವನ್ನಾಗಿ ಎಬ್ಬಿಸಿದ್ದಾನೆನ್ನುವದಕ್ಕೆ ನಾವು __ ಸಾಕ್ಷಿಗಳಾಗಿದ್ದೇವೆ __.”

ಪದ ಡೇಟಾ:

  • Strong's: H5707, H5713, H5715, H5749, H6030, H8584, G267, G1263, G1957, G2649, G3140, G3141, G3142, G3143, G3144, G4303, G4828, G4901, G5575, G5576, G5577, G6020

ಸಾಮ್ಯ, ಸಾಮ್ಯಗಳು

ಪದದ ಅರ್ಥವಿವರಣೆ:

“ಸಾಮ್ಯ” ಎನ್ನುವ ಪದವು ಸಾಧಾರಣವಾಗಿ ನೈತಿಕ ಸತ್ಯವನ್ನು ಬೋಧಿಸುವುದಕ್ಕೆ ಅಥವಾ ವಿವರಿಸುವುದಕ್ಕೆ ಉಪಯೋಗಿಸುವ ನೀತಿ ಪಾಠವನ್ನು ಅಥವಾ ಚಿಕ್ಕ ಕಥೆಯನ್ನು ಸೂಚಿಸುತ್ತದೆ.

  • ಯೇಸು ತನ್ನ ಶಿಷ್ಯರಿಗೆ ಬೋಧಿಸುವುದಕ್ಕೆ ಸಾಮ್ಯಗಳನ್ನು ಉಪಯೋಗಿಸಿದನು. ಆತನು ಸಾಮ್ಯಗಳನ್ನು ಜನ ಸಮೂಹಗಳಿಗೆ ಹೇಳಿದರೂ, ಆತನು ಆ ಸಾಮ್ಯಗಳನ್ನು ಹೆಚ್ಚಿನ ಮಟ್ಟಿಗೆ ವಿವರಿಸಲಿಲ್ಲ.
  • ಯೇಸುವಿನಲ್ಲಿ ನಂಬಿಕೆಯಿಡದ ಫರಿಸಾಯರಂತ ಜನರಿಂದ ಸತ್ಯವನ್ನು ಮರೆಮಾಡಿ, ಯೇಸು ತನ್ನ ಶಿಷ್ಯರಿಗೆ ಸತ್ಯವನ್ನು ತಿಳಿಸುವುದಕ್ಕೆ ಸಾಮ್ಯವನ್ನು ಉಪಯೋಗಿಸಲಾಗಿರುತ್ತದೆ.
  • ದಾವೀದನ ಪಾಪವು ಎಷ್ಟು ಭಯಂಕರವಾದದ್ದೋ ಎಂದು ತೋರಿಸುವುದಕ್ಕೆ ಪ್ರವಾದಿಯಾದ ನಾತಾನನು ಅರಸನಾದ ದಾವೀದನಿಗೆ ಒಂದು ಸಾಮ್ಯವನ್ನು ಹೇಳಿದನು.
  • ಒಳ್ಳೇಯ ಸಮಾರ್ಯದವನ ಕಥೆಯೇ ಕಥೆಯಾಗಿರುವ ಸಾಮ್ಯದ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಯೇಸುವಿನ ಬೋಧನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಶಿಷ್ಯರಿಗೆ ಸಹಾಯ ಮಾಡುವುದಕ್ಕೆ ನೀತಿ ಪಾಠವನ್ನಾಗಿ ಯೇಸು ಹೋಲಿಸಿದ ಹಳೇ ಮತ್ತು ಹೊಸ ಬುದ್ದಲಿಗಳ ಸಾಮ್ಯವು ಒಂದು ಉದಾಹರಣೆಯಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಸಮಾರ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1819, H4912, G3850, G3942

ಸುನ್ನತಿ ಮಾಡು, ಸುನ್ನತಿ ಮಾಡಲಾಗಿದೆ, ಸುನ್ನತಿ, ಸುನ್ನತಿಯಿಲ್ಲದವರು, ಸುನ್ನತಿಯಾಗದವರು

ಪದದ ಅರ್ಥವಿವರಣೆ:

“ಸುನ್ನತಿ ಮಾಡು” ಎನ್ನುವ ಪದಕ್ಕೆ ಗಂಡು ಮಗುವಿನ ಅಥವಾ ಒಬ್ಬ ಪುರುಷನ ಮರ್ಮಾಂಗದ ಆಗ್ರ ಚರ್ಮವನ್ನು ಕತ್ತರಿಸಬೇಕೆಂದರ್ಥ. ಸುನ್ನತಿ ಕಾರ್ಯಕ್ರಮವು ಬಹುಶಃ ಈ ವಿಧಾನದಲ್ಲಿ ಮಾಡುತ್ತಿರಬಹುದು.

  • ದೇವರು ತನ್ನ ಜನರೊಂದಿಗೆ ಮಾಡುವ ಒಡಂಬಡಿಕೆಯ ಗುರುತಾಗಿ ಅಬ್ರಹಾಮನ ಕುಟುಂಬದಲ್ಲಿರುವ ಪ್ರತಿ ಗಂಡು ಮಕ್ಕಳಿಗೆ ಮತ್ತು ತನ್ನ ದಾಸರಿಗೆ ಸುನ್ನತಿ ಮಾಡಿಸಬೇಕೆಂದು ದೇವರು ಅಬ್ರಹಾಮನಿಗೆ ಅಪ್ಪಣೆ ಕೊಟ್ಟನು.
  • ಅಬ್ರಹಾಮನ ವಂಶದವರೆಲ್ಲರೂ ತಮ್ಮ ಕುಟುಂಬದಲ್ಲಿ ಜನಿಸಿದ ಪ್ರತಿಯೊಬ್ಬ ಗಂಡು ಮಗುವಿಗೆ ಇದನ್ನು ಮಾಡುವ ಕಾರ್ಯಕ್ರಮವನ್ನು ಮುಂದೆವರಿಸಬೇಕೆಂದು ದೇವರು ಆಜ್ಞಾಪಿಸಿದರು.
  • “ಹೃದಯದ ಸುನ್ನತಿ” ಎನ್ನುವ ಮಾತು “ಕತ್ತರಿಸಿ ಹೊರ ಹಾಕು” ಅಥವಾ ಒಬ್ಬ ವ್ಯಕ್ತಿಯಿಂದ ಪಾಪವನ್ನು ತೊಲಗಿಸು ಎನ್ನುವ ಅರ್ಥ ಬರುವುದಕ್ಕೆ ಅಲಂಕಾರ ರೂಪದಲ್ಲಿ ಉಪಯೋಗಿಸಲಾಗಿದೆ.
  • ಆತ್ಮೀಯ ಅರ್ಥದಲ್ಲಿ ಉಪಯೋಗಿಸಿದ “ಸುನ್ನತಿ ಮಾಡಲಾಗಿದೆ” ಎನ್ನುವ ಮಾತು ಯೇಸುವಿನ ರಕ್ತದಿಂದ ತನ್ನ ಜನರ ಪಾಪಗಳನ್ನು ಶುದ್ಧೀಕರಿಸಲ್ಪಟ್ಟ ಜನರನ್ನು ಸೂಚಿಸುತ್ತದೆ.
  • “ಸುನ್ನತಿಯಿಲ್ಲದವರು” ಎನ್ನುವ ಪದವು ಭೌತಿಕವಾಗಿ ಸುನ್ನತಿ ಮಾಡಿಕೊಳ್ಳದವರನ್ನು ಸೂಚಿಸುತ್ತದೆ. ಈ ಪದವು ಆತ್ಮೀಯಕವಾಗಿ ಸುನ್ನತಿ ಮಾಡಿಕೊಳ್ಳದ ಜನರನ್ನು ಅಂದರೆ ದೇವರೊಂದಿಗೆ ಸಹವಾಸವಿಲ್ಲದ ಜನರನ್ನು ಸೂಚಿಸುತ್ತದೆ.

“ಸುನ್ನತಿಯಿಲ್ಲದವರು” ಮತ್ತು “ಸುನ್ನತಿಯಾಗದವರು” ಎನ್ನುವ ಪದಗಳು ಭೌತಿಕವಾಗಿ ಸುನ್ನತಿ ಮಾಡಿಸಿಕೊಳ್ಳದ ಒಬ್ಬ ಪುರುಷನನ್ನು ಸೂಚಿಸುತ್ತಿವೆ. ಈ ಪದಗಳು ಕೂಡ ಅಲಂಕಾರ ರೂಪದಲ್ಲಿ ಉಪಯೋಗಿಸಿದ್ದಾರೆ.

  • ಐಗುಪ್ತ ದೇಶಕ್ಕೂ ಸುನ್ನತಿ ಮಾಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. “ಸುನ್ನತಿ ಮಾಡಿಸಿಕೊಳ್ಳದಿರುವ” ಕಾರಣದಿಂದ ಐಗುಪ್ತ ದೇಶವು ಸೋತುಹೋಗುವುದೆನ್ನುವದರ ಕುರಿತಾಗಿ ದೇವರು ಮಾತನಾಡಿದಾಗ, ಸುನ್ನತಿ ಮಾಡಿಸಿಕೊಳ್ಳುವುದಿಲ್ಲವೆಂದು ತಿರಸ್ಕಾರ ಮಾಡಿದ ಐಗುಪ್ತ ಜನರನ್ನು ಆತನು ಸೂಚಿಸುತ್ತಿದ್ದಾನೆ.
  • “ಹೃದಯ ಸುನ್ನತಿ ಮಾಡಿಸಿಕೊಳ್ಳದ” ಜನರನ್ನು ಅಥವಾ “ಹೃದಯದಲ್ಲಿ ಸುನ್ನತಿಯಿಲ್ಲದ ಜನರನ್ನು” ಸತ್ಯವೇದವು ಸೂಚಿಸುತ್ತಿದೆ. ಈ ವಿಧಾನವು ಇವರೆಲ್ಲರೂ ದೇವರ ಜನರಲ್ಲವೆಂದು ಅಲಂಕಾರ ರೂಪದಲ್ಲಿ ಹೇಳುವದಾಗಿರುತ್ತದೆ ಮತ್ತು ಇವರೆಲ್ಲರೂ ದೇವರಿಗೆ ಅವಿಧೇಯತೆ ತೋರಿಸುವ ಜನರಾಗಿರುತ್ತಾರೆ.
  • ಸುನ್ನತಿ ಎನ್ನುವ ಪದಕ್ಕೆ ಭಾಷೆಯಲ್ಲಿ ಬೇರೊಂದು ಪದವನ್ನು ಉಪಯೋಗಿಸಿದ್ದರೆ, “ಸುನ್ನತಿಯಿಲ್ಲದವರು” ಎನ್ನುವ ಪದವನ್ನು “ಸುನ್ನತಿಯಾಗಲಿಲ್ಲ” ಎಂದೂ ಅನುವಾದ ಮಾಡಬಹುದು.
  • “ಸುನ್ನತಿಯಾಗದವರು” ಎನ್ನುವ ಭಾವವ್ಯಕ್ತೀ ಕರಣವನ್ನು “ಸುನ್ನತಿ ಮಾಡಿಸಿಕೊಳ್ಳದ ಜನರು” ಅಥವಾ “ದೇವರಿಗೆ ಸಂಬಂಧವಲ್ಲದ ಜನರು” ಎಂದು ಸಂದರ್ಭಕ್ಕೆ ತಕ್ಕಂತೆ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವ ಅಲಂಕಾರ ಭಾವನೆಗಳ ಇತರ ವಿಧಾನಗಳಲ್ಲಿ, “ದೇವರ ಜನರಲ್ಲ” ಅಥವಾ “ದೇವರಿಗೆ ಸಂಬಂಧವಿಲ್ಲದ ಜನರು ತಿರಸ್ಕಾರ ಸ್ವಭಾವಿಗಳು” ಅಥವಾ “ದೇವರಿಗೆ ಸಂಬಂಧಪಟ್ಟವರೆಂದು ಯಾವ ಗುರುತು ಇಲ್ಲದ ಜನರು” ಎನ್ನುವ ಅನೇಕ ಮಾತುಗಳು ಒಳಗೊಂಡಿರುತ್ತವೆ.
  • “ಹೃದಯದಲ್ಲಿ ಮಾಡಿಸಿಕೊಳ್ಳದ ಸುನ್ನತಿ” ಎನ್ನುವ ಮಾತಿನ ಭಾವವ್ಯಕ್ತೀಕರಣಕ್ಕೆ “ಪಟ್ಟುಬಿಡದ ತಿರಸ್ಕಾರ ಸ್ವಭಾವಿಗಳು” ಅಥವಾ “ನಂಬುವುದಕ್ಕೆ ತಿರಸ್ಕರಿಸುವ ಜನರು” ಎಂದೂ ಅನುವಾದ ಮಾಡಬಹುದು. ಸಾಧ್ಯವಾದರೆ ಭಾವವ್ಯಕ್ತೀಕರಣವನ್ನಿಡುವುದು ಒಳ್ಳೇಯದು, ಯಾಕಂದರೆ ಆತ್ಮೀಯ ಸುನ್ನತಿ ತುಂಬಾ ಪ್ರಾಮುಖ್ಯವಾದ ವಿಷಯ.

ಅನುವಾದ ಸಲಹೆಗಳು:

  • ಅನುವಾದ ಮಾಡುವ ಭಾಷೆಯ ಸಂಸ್ಕೃತಿಯಲ್ಲಿ ಪುರುಷರ ಮೇಲೆ ಸುನ್ನತಿಗಳನ್ನು ನಡೆಸುವುದಾದರೆ, ಇದನ್ನು ಸೂಚಿಸುವುದಕ್ಕೆ ಉಪಯೋಗಿಸಿದ ಪದವನ್ನೇ ಈ ಪದಕ್ಕೂ ಉಪಯೋಗಿಸಬೇಕು.
  • ಈ ಪದವನ್ನು ಅನುವಾದಿಸುವ ಬೇರೊಂದು ವಿಧಾನಗಳಲ್ಲಿ, “ಸುತ್ತಲು ಕತ್ತರಿಸು” ಅಥವಾ “ವೃತ್ತಾಕಾರದಲ್ಲಿ ಕತ್ತರಿಸು” ಅಥವಾ “ಆಗ್ರ ಚರ್ಮವನ್ನು ಕತ್ತರಿಸಿಬಿಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಸುನ್ನತಿ ಕುರಿತಾಗಿ ಗೊತ್ತಿಲ್ಲದ ಕೆಲವೊಂದು ಸಂಸ್ಕೃತಿಗಳಲ್ಲಿ, ಕೆಳ ಭಾಗದಲ್ಲಿ ಇದರ ಕುರಿತಾಗಿ ವಿವರಿಸುವುದು ಅತ್ಯಗತ್ಯವಾಗಿರಬಹುದು.
  • ಈ ಪದವನ್ನು ಅನುವಾದ ಮಾಡುತ್ತಿರುವಾಗ, ಇದು ಸ್ತ್ರೀಯರಿಗೆ ಸಂಬಂಧವಾಗಿರದಂತೆ ನೋಡಿಕೊಳ್ಳಬೇಕು. “ಪುರುಷರ” ಅರ್ಥವು ಮಾತ್ರವೇ ಒಳಗೊಂಡಿರುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅನುವಾದ ಮಾಡುವುದು ಅತ್ಯಗತ್ಯವಾಗಿರಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ಅಬ್ರಹಾಮ, ಒಡಂಬಡಿಕೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 05:03 “ನಿನ್ನ ಕುಟುಂಬದಲ್ಲಿ ಪ್ರತಿಯೊಬ್ಬ ಪುರುಷನು __ ಸುನ್ನತಿ __ ಮಾಡಿಸಿಕೊಳ್ಳಬೇಕು”.
  • __05:05 __ “ಅಬ್ರಹಾಮನು ತನ್ನ ಕುಟುಂಬದಲ್ಲಿರುವ ಪ್ರತಿಯೊಬ್ಬ ಪುರುಷನಿಗೆ ___ ಸುನ್ನತಿ ___ ಮಾಡಿಸಿದನು.

ಪದ ಡೇಟಾ:

  • Strong's: H4135, H4139, H5243, H6188, H6189, H6190, G203, G564, G1986, G4059, G4061

ಸುವಾರ್ತಿಕನು

ಪದದ ಅರ್ಥವಿವರಣೆ:

ಯೇಸು ಕ್ರಿಸ್ತನ ಸುವಾರ್ತೆಯನ್ನು ಸಾರುವ ವ್ಯಕ್ತಿಯನ್ನು “ಸುವಾರ್ತಿಕನು” ಎಂದು ಕರೆಯುತ್ತಾರೆ.

  • “ಸುವಾರ್ತಿಕನು” ಎನ್ನುವ ಪದಕ್ಕೆ “ಶುಭವಾರ್ತೆಯನ್ನು ಸಾರುವವನು” ಎಂದು ಅಕ್ಷರಾರ್ಥವಾಗಿದೆ.
  • ಆತನ ಪಾಪ ಪರಿಹಾರ ಬಲಿಯ ಮೂಲಕ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ದೇವರ ರಾಜ್ಯದಲ್ಲಿ ಹೇಗೆ ಪಾಲುಹೊಂದಬೇಕೆನ್ನುವ ಶುಭವಾರ್ತೆಯನ್ನು ಸಾರಲು ಯೇಸು ತನ್ನ ಶಿಷ್ಯರನ್ನು ಕಳುಹಿಸಿದನು.
  • ಈ ಶುಭವಾರ್ತೆಯನ್ನು ಸಾರಲು ಎಲ್ಲಾ ಕ್ರೈಸ್ತರು ಪ್ರೋತ್ಸಾಹ ಹೊಂದಿದ್ದಾರೆ.
  • ಈ ಶುಭವಾರ್ತೆಯನ್ನು ಪ್ರಭಾವಿತವಾಗಿ ಪ್ರಕಟಿಸಲು ವಿಶೇಷವಾದ ಆತ್ಮಿಯ ವರವನ್ನು ಹೊಂದಿರುತ್ತಾರೆ. ಇಂತಹ ಜನರು ಸುವಾರ್ತಿಕಾರಣ ಮಾಡುವ ವರವನ್ನು ಹೊಂದಿದ್ದರೆಂದು ಹೇಳಲ್ಪಟ್ಟಿದೆ ಮತ್ತು ಇವರನ್ನು “ಸುವಾರ್ತಿಕರು” ಎಂದು ಕರೆಯುತ್ತಾರೆ.

ಅನುವಾದ ಸಲಹೆಗಳು:

  • “ಸುವಾರ್ತಿಕನು” ಎನ್ನುವ ಪದವನ್ನು “ಶುಭವಾರ್ತೆ ಬೋಧಿಸುವವನು” ಅಥವಾ “ಶುಭವಾರ್ತೆ ಸಾರುವವನು” ಅಥವಾ “(ಯೇಸು ಕ್ರಿಸ್ತನ ಕುರಿತಾಗಿ) ಶುಭವಾರ್ತೆಯನ್ನು ಸಾರುವ ವ್ಯಕ್ತಿ” ಎಂದು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಶುಭವಾರ್ತೆ, ಆತ್ಮ, ವರ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G2099

ಸೇನಾಧೀಶ್ವರನಾದ ಯೆಹೋವ, ಸೇನಾಧೀಶ್ವರನಾದ ದೇವರು, ಪರಲೋಕ ಸೇನೆ, ಆಕಾಶಗಳ ಸೈನ್ಯ, ಸೇನಾಧೀಶ್ವರನಾದ ಕರ್ತನು

ಪದದ ಅರ್ಥವಿವರಣೆ:

“ಸೇನಾಧೀಶ್ವರನಾದ ಯೆಹೋವ” ಮತ್ತು “ಸೇನಾಧೀಶ್ವರನಾದ ದೇವರು” ಎನ್ನುವ ಮಾತುಗಳು ದೇವರಿಗೆ ವಿಧೇಯತೆ ತೋರಿಸುವ ಸಾವಿರಾರು ದೂತಗಳ ಮೇಲೆ ಆತನಿಗಿರುವ ಅಧಿಕಾರವನ್ನು ವ್ಯಕ್ತಗೊಳಿಸುವ ಬಿರುದುಗಳಾಗಿರುತ್ತವೆ.

  • “ಸೈನ್ಯ” ಅಥವಾ “ಸೈನ್ಯಗಳು” ಎನ್ನುವ ಪದವು ಯಾವುದಾದರೊಂದರ ಹೆಚ್ಚಿನ ಸಂಖ್ಯೆಯನ್ನು ಸೂಚಿಸುವ ಪದಗಳಾಗಿರುತ್ತವೆ, ಉದಾಹರಣೆಗೆ ಜನರ ಸೇನೆ ಅಥವಾ ನಕ್ಷತ್ರಗಳ ಅಸಂಖ್ಯಾತ ಗುಂಪು. ಈ ಪದವು ಎಲ್ಲಾ ಆತ್ಮಗಳನ್ನು ಮತ್ತು ಅನೇಕ ದುರಾತ್ಮಗಳನ್ನು ಕೂಡ ಸೂಚಿಸುತ್ತದೆ. ಇದು ಯಾವುದನ್ನು ಸೂಚಿಸುತ್ತದೆಯೆಂದು ಅಲ್ಲಿ ಹೇಳಲ್ಪಡುವ ಸಂದರ್ಭವೇ ಸ್ಪಷ್ಟಗೊಳಿಸುತ್ತದೆ.
  • ಈ ಮಾತುಗಳು “ಆಕಾಶಗಳ ಸೈನ್ಯ” ಎನ್ನುವ ಮಾತಿಗೆ ಸಮಾಂತರವಾಗಿರುತ್ತದೆ, ಇದು ಆಕಾಶದಲ್ಲಿರುವ ಗ್ರಹಗಳನ್ನು, ನಕ್ಷತ್ರಗಳನ್ನು ಮತ್ತು ಇತರ ವಿಶ್ವದಲ್ಲಿರುವ ಭಾಗಗಳನ್ನು ಸೂಚಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ “ಸೇನಾಧೀಶ್ವರನಾದ ಕರ್ತನು” ಎನ್ನುವ ಮಾತಿಗೆ “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತಿಗಿರುವ ಅರ್ಥವಿರುತ್ತದೆ, ಆದರೆ ಆ ರೀತಿ ಇಲ್ಲಿ ಭಾಷಾಂತರ ಮಾಡಲಿಲ್ಲ, ಯಾಕೆಂದರೆ ಇಬ್ರಿ ಪದವಾಗಿರುವ ‘ಯೆಹೋವ” ಎನ್ನುವ ಪದವನ್ನು ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಲಿಲ್ಲ.

ಅನುವಾದ ಸಲಹೆಗಳು:

  • “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತನ್ನು ಅನುವಾದ ಮಾಡುವುದರಲ್ಲಿ “ದೂತರನ್ನು ಆಳುವ ಯೆಹೋವ” ಅಥವಾ “ದೂತರ ಸೈನ್ಯಗಳನ್ನು ಆಳುವ ಯೆಹೋವ” ಅಥವಾ “ಸರ್ವ ಸೃಷ್ಟಿಯನ್ನು ಆಳುವ ಯೆಹೋವ” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
  • “ಸೇನಾಧೀಶ್ವರನಾದ ದೇವರು” ಮತ್ತು “ಸೇನಾಧೀಶ್ವರನಾದ ಕರ್ತನು” ಎನ್ನುವ ಮಾತುಗಳಲ್ಲಿರುವ “ಸೇನೆಗಳು” ಎನ್ನುವ ಪದವನ್ನು ಮೇಲೆ ಇರುವ “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತಿನಲ್ಲಿರುವಂತೆಯೇ ಅನುವಾದ ಮಾಡಬಹುದು.
  • ಕೆಲವೊಂದು ಸಭೆಗಳು “ಯಾವ್ಹೆ” ಎನ್ನುವ ಪದವನ್ನು ಸ್ವೀಕರಿಸುವುದಿಲ್ಲ, ಇದಕ್ಕೆ ಬದಲಾಗಿ ಅನೇಕ ಭಾಷಾಂತರಗಳ ಸಂಪ್ರದಾಯವನ್ನು ಅನುಸರಿಸಿ “ಕರ್ತನು” ಎನ್ನುವ ಪದವನ್ನು ಬಳಸುವುದಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಇಂಥಹ ಸಭೆಗಳಲ್ಲಿ “ಸೇನಾಧೀಶ್ವರನಾದ ಕರ್ತನು” ಎನ್ನುವ ಮಾತನ್ನೇ ಹಳೇ ಒಡಂಬಡಿಕೆಯಲ್ಲಿರುವ “ಸೇನಾಧೀಶ್ವರನಾದ ಯೆಹೋವ” ಎನ್ನುವ ಮಾತಿಗೆ ಬದಲಾಗಿ ಉಪಯೋಗಿಸಿರುತ್ತಾರೆ.

(ಈ ಪದಗಳನ್ನು ಸಹ ನೋಡಿರಿ: ದೂತ, ಅಧಿಕಾರ, ದೇವರು, ಕರ್ತನು, ಕರ್ತನಾದ ಯೆಹೋವ, ಯೆಹೋವ)

ಸತ್ಯವೇದದಲ್ಲಿರುವ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H430, H3068, H6635

ಸೇವಕನಿಗೆ, ಸೇವೆ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಸೇವೆ” ಎನ್ನುವ ಪದವು ದೇವರ ಕುರಿತಾಗಿ ಇತರರಿಗೆ ಬೋಧನೆ ಮಾಡುವುದರ ಮೂಲಕ ಅವರಿಗೆ ಸೇವೆ ಮಾಡುವುದನ್ನು ಮತ್ತು ಅವರ ಆತ್ಮೀಯಕವಾದ ಅಗತ್ಯತೆಗಳನ್ನು ನೋಡಿಕೊಳ್ಳುವುದನ್ನು ಸೂಚಿಸುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಯಾಜಕರು ದೇವರಿಗೆ ಅರ್ಪಣೆಗಳನ್ನು ಮಾಡುವುದರ ಮೂಲಕ ದೇವಾಲಯದಲ್ಲಿ ಆತನಿಗೆ “ಸೇವೆ” ಮಾಡುತ್ತಿದ್ದರು.
  • ಅವರ “ಸೇವೆ”ಯಲ್ಲಿ ದೇವಾಲಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಜನರ ಪಕ್ಷವಾಗಿ ದೇವರಿಗೆ ಪ್ರಾರ್ಥನೆಗಳನ್ನು ಅರ್ಪಿಸುವುದು ಒಳಗೊಂಡಿರುತ್ತದೆ.
  • ಜನರಿಗೆ “ಸೇವೆ” ಮಾಡುವ ಕೆಲಸದಲ್ಲಿ ದೇವರ ಕುರಿತಾಗಿ ಅವರಿಗೆ ಬೋಧನೆ ಮಾಡುವುದರ ಮೂಲಕ ಅವರಿಗೆ ಆತ್ಮೀಯಕವಾಗಿ ಸೇವೆ ಮಾಡುವುದೂ ಒಳಗೊಂಡಿರುತ್ತದೆ.
  • ಈ ಪದವು ಜನರಿಗೆ ಭೌತಿಕವಾದ ವಿಧಾನಗಳಲ್ಲಿ ಸೇವೆ ಮಾಡುವುದನ್ನೂ ಸೂಚಿಸುತ್ತದೆ, ಬಡವರಿಗೆ ಊಟವನ್ನು ಒದಗಿಸಿಕೊಡುವುದು ಮತ್ತು ರೋಗಿಗಳಿಗೆ ವೈದ್ಯಕೀಯ ಸೇವೆಯನ್ನು ಮಾಡಿಸುವುದು ಒಳಗೊಂಡಿರುತ್ತದೆ.

ಅನುವಾದ ಸಲಹೆಗಳು:

  • ಜನರಿಗೆ ಸೇವೆ ಮಾಡುವ ಸಂದರ್ಭದಲ್ಲಿ, “ಸೇವಕನಿಗೆ” ಎನ್ನುವ ಪದವನ್ನು “ಸೇವೆ ಮಾಡು” ಅಥವಾ “ಜಾಗೃತಿ ತೆಗೆದುಕೋ” ಅಥವಾ “ಅವರ ಅಗತ್ಯತೆಗಳನ್ನು ಪೂರೈಸು” ಎಂದೂ ಅನುವಾದ ಮಾಡಬಹುದು.
  • ದೇವಾಲಯದಲ್ಲಿ ಸೇವೆ ಮಾಡುವುದನ್ನು ಸೂಚಿಸಿದಾಗ, “ಸೇವಕ” ಎನ್ನುವ ಪದವನ್ನು “ದೇವಾಲಯದಲ್ಲಿ ಸೇವೆ ಮಾಡು” ಅಥವಾ “ಜನರಿಗಾಗಿ ದೇವರಿಗೆ ಅರ್ಪಣೆಗಳನ್ನು ಅರ್ಪಿಸು” ಎಂದೂ ಅನುವಾದ ಮಾಡಬಹುದು.
  • ದೇವರಿಗೆ ಸೇವೆ ಮಾಡುವ ಸಂದರ್ಭದಲ್ಲಿ ಈ ಪದವನ್ನು “ಸೇವೆ ಮಾಡು” ಅಥವಾ “ದೇವರಿಗಾಗಿ ಕೆಲಸ ಮಾಡು” ಎಂದೂ ಅನುವಾದ ಮಾಡಬಹುದು.
  • “ಸೇವೆ ಮಾಡಿದೆ” ಎನ್ನುವ ಮಾತನ್ನು “ಜಾಗೃತಿ ತೆಗೆದುಕೊಂಡಿದೆ” ಅಥವಾ “ಕೊಡಲ್ಪಟ್ಟಿದೆ” ಅಥವಾ “ಸಹಾಯ ಮಾಡಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸೇವೆ ಮಾಡು, ಅರ್ಪಣೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6399, H8120, H8334, H8335, G1247, G1248, G1249, G2023, G2038, G2418, G3008, G3009, G3010, G3011, G3930, G5256, G5257, G5524

ಸೈತಾನ, ದೆವ್ವ, ದುಷ್ಟ

ಸತ್ಯಾಂಶಗಳು:

ದೆವ್ವವು ದೇವರು ಸೃಷ್ಟಿಸಿದ ಆತ್ಮವಾಗಿದ್ದರೂ, ಅವನು ದೇವರ ವಿರುದ್ಧ ದಂಗೆ ಎದ್ದನು ಮತ್ತು ದೇವರ ಶತ್ರುವಾದನು. ದೆವ್ವವನ್ನು “ಸೈತಾನ” ಮತ್ತು “ದುಷ್ಟನು” ಎಂದೂ ಕರೆಯುತ್ತಾರೆ.

  • ದೆವ್ವವು ದೇವರನ್ನು ಮತ್ತು ದೇವರು ಉಂಟು ಮಾಡಿದ ಪ್ರತಿಯೊಂದನ್ನು ದ್ವೇಷಿಸುತ್ತದೆ, ಯಾಕಂದರೆ ಅವನಿಗೆ ದೇವರ ಸ್ಥಾನ ಬೇಕಾಗಿರುತ್ತದೆ
  • ಜನರು ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವುದಕ್ಕೆ ಸೈತಾನನು ಅವರನ್ನು ಶೋಧಿಸುತ್ತಾನೆ.
  • ಸೈತಾನ ನಿಯಂತ್ರಣದಿಂದ ಜನರನ್ನು ರಕ್ಷಿಸುವುದಕ್ಕೆ ದೇವರು ತನ್ನ ಒಬ್ಬನೇ ಮಗನಾಗಿರುವ ಯೇಸುವನ್ನು ಕಳುಹಿಸಿದನು.
  • “ಸೈತಾನ” ಎನ್ನುವ ಹೆಸರಿಗೆ “ಅಪವಾದಿ” ಅಥವಾ “ವೈರಿ” ಎಂದರ್ಥ.
  • “ದೆವ್ವ” ಎನ್ನುವ ಹೆಸರಿಗೆ “ಆರೋಪಿ” ಎಂದರ್ಥ.

ಅನುವಾದ ಸಲಹೆಗಳು:

  • “ದೆವ್ವ” ಎನ್ನುವ ಪದವನ್ನು “ಆರೋಪಿ” ಅಥವಾ “ದುಷ್ಟನು” ಅಥವಾ “ದುರಾತ್ಮಗಳಿಗೆ ಅರಸನು” ಅಥವಾ “ಪ್ರಧಾನ ದುಷ್ಟಾತ್ಮನು” ಎಂದೂ ಅನುವಾದ ಮಾಡುತ್ತಾರೆ.
  • “ಸೈತಾನ” ಎನ್ನುವ ಪದವನ್ನು “ವಿರೋಧಿ” ಅಥವಾ “ಎದುರಾಳಿ” ಎಂದೂ ಅನುವಾದ ಮಾಡಬಹುದು. ಅಥವಾ ಅವನು ದೆವ್ವ ಎಂದು ತೋರಿಸುವ ಇತರ ಹೆಸರಿನಿಂದ ಅನುವಾದ ಮಾಡಬಹುದು.
  • ಈ ಪದವನ್ನು ರಾಕ್ಷಸ ಮತ್ತು ದುಷ್ಟ ಶಕ್ತಿ ಎನ್ನುವ ಪದಗಳಿಗೆ ವಿಭಿನ್ನವಾಗಿ ಅನುವಾದ ಮಾಡಬೇಕಾಗಿರುತ್ತದೆ.
  • ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಈ ಪದಗಳನ್ನು ಹೇಗೆ ಅನುವಾದ ಮಾಡಬೇಕೆಂದು ಗಮನಿಸಿರಿ.

(ನೋಡಿರಿ: ಗೊತ್ತಿಲ್ಲದವುಗಳನ್ನು ಯಾವ ರೀತಿ ಅನುವಾದ ಮಾಡಬೇಕು)

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಈ ಪದಗಳನ್ನು ಸಹ ನೋಡಿರಿ : ದೆವ್ವ, ದುಷ್ಟ, ದೇವರ ರಾಜ್ಯ, ಶೋಧಿಸು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯೆವೇದ ಕತೆಗಳಿಂದ ಉದಾಹರಣೆಗಳು:

  • 21:01 ಹವ್ವಳನ್ನು ಮೋಸಗೊಳಿಸಿದ ಹಾವು __ ಸೈತಾನನಾಗಿದ್ದನು __. ಮೆಸ್ಸೀಯ ಬಂದು __ ಸೈತಾನನನ್ನು __ ಪೂರ್ತಿಯಾಗಿ ಸೋಲಿಸುವನೆಂದು ವಾಗ್ಧಾನದ ಅರ್ಥವಾಗಿರುತ್ತದೆ.
  • 25:06 ಸೈತಾನನು ಯೇಸುವಿಗೆ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ಮಹಿಮೆಯನ್ನು ತೋರಿಸಿದನು, ಮತ್ತು “ನೀನು ನನಗೆ ಅಡ್ಡಬಿದ್ದು, ಆರಾಧನೆ ಮಾಡಿದರೆ ಈ ಎಲ್ಲಾ ರಾಜ್ಯಗಳನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
  • 25:08 ಸೈತಾನನ _ ಶೋಧನೆಗಳಿಗೆ ಯೇಸುವು ಒಳಗಾಗಲಿಲ್ಲ, ಇದರಿಂದ __ ಸೈತಾನನು __ ಆತನನ್ನು ಬಿಟ್ಟು ಹೋದನು.
  • 33:06 “ಬೀಜವು ದೇವರ ವಾಕ್ಯವೇ. ಮಾರ್ಗವು ದೇವರ ವಾಕ್ಯವನ್ನು ಕೇಳುವ ವ್ಯಕ್ತಿಯಾಗಿರುತ್ತಾನೆ, ಆದರೆ ಆ ವಾಕ್ಯವನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಮತ್ತು __ ದೆವ್ವವು __ ಆ ವಾಕ್ಯವನ್ನು ಅವನಿಂದ ತೆಗೆದುಕೊಳ್ಳುವನು.”
  • 38:07 ಯೂದನು ಆ ರೊಟ್ಟಿಯನ್ನು ತೆಗೆದುಕೊಂಡನಂತರ, __ ಸೈತಾನನು __ ಅವನೊಳಗೆ ಪ್ರವೇಶಿಸಿದನು.
  • 48:04 ಹವ್ವಳ ಸಂತಾನದಲ್ಲಿ ಒಬ್ಬರು __ ಸೈತಾನನ __ ತಲೆಯನ್ನು ಜಜ್ಜುವನು ಎಂದು ದೇವರು ವಾಗ್ಧಾನ ಮಾಡಿದ್ದಾರೆ ಮತ್ತು __ ಸೈತನಾನು __ ಆತನ ಹಿಮ್ಮಡಿಯನ್ನು ಕಚ್ಚುವನು. __ ಸೈತಾನನು __ ಮೆಸ್ಸೀಯನನ್ನು ಸಾಯಿಸುತ್ತಾನೆಂದು ಇದರ ಅರ್ಥವಾಗಿರುತ್ತದೆ. ಆದರೆ ದೇವರು ಆತನನ್ನು ತಿರುಗಿ ಎಬ್ಬಿಸುವವನಾಗಿದ್ದಾನೆ, ಮತ್ತು ಆದನಂತರ ಮೆಸ್ಸೀಯ __ ಸೈತಾನನ __ ಶಕ್ತಿಯನ್ನು ಶಾಶ್ವತವಾಗಿ ಜಜ್ಜುತ್ತಾನೆ.
  • 49:15 ದೇವರು ನಿನ್ನನ್ನು __ ಸೈತಾನನ __ ಕತ್ತಲೆಯ ರಾಜ್ಯದಿಂದ ಹೊರತಂದು, ಬೆಳಕು ಎನ್ನುವ ದೇವರ ರಾಜ್ಯದೊಳಗೆ ನಿನ್ನನ್ನು ಇಡುತ್ತಾನೆ.
  • 50:09 “ಕಳೆಯು __ ದುಷ್ಟನಿಗೆ __ ಸಂಬಂಧಪಟ್ಟಿರುವ ಜನರನ್ನು ಪ್ರತಿನಿಧಿಸುತ್ತಿದೆ. ಕಳೆಯನ್ನು ಬಿತ್ತಿದ ವೈರಿಯೂ __ ದುಷ್ಟನಿಗೆ __ ಪ್ರತಿನಿಧಿಸುತ್ತಾನೆ.”
  • 50:10 “ಲೋಕದ ಅಂತ್ಯವು ಮುಗಿದ ತಕ್ಷಣವೇ, ದೂತರು __ ದುಷ್ಟನಿಗೆ __ ಸಂಬಂಧಪಟ್ಟವರನ್ನು ಒಂದು ಸ್ಥಳಕ್ಕೆ ಕೂಡಿಸುತ್ತಾನೆ ಮತ್ತು ಅವರನ್ನು ಧಗಧಗನೆ ಉರಿಯುತ್ತಿರುವ ಬೆಂಕಿಯೊಳಗೆ ಹಾಕುತ್ತಾನೆ, ಅಲ್ಲಿ ಅವರು ಅಳುವರು ಮತ್ತು ಭಯಂಕರವಾದ ಶ್ರಮೆಯಲ್ಲಿ ಹಲ್ಲುಗಳನ್ನು ಕಡಿಯುತ್ತಾ ಇರುವರು.
  • 50:15 ಯೇಸು ಹಿಂದಿರುಗಿ ಬರುವಾಗ, ಆತನು ಸಂಪೂರ್ಣವಾಗಿ __ ಸೈತಾನನನ್ನು __ ಮತ್ತು ತನ್ನ ರಾಜ್ಯವನ್ನು ನಾಶಗೊಳಿಸುವನು. ಆತನು __ ಸೈತಾನನನ್ನು __ ಮತ್ತು ದೇವರಿಗೆ ವಿಧೇಯರಾಗದೇ ಅವನನ್ನು ಹಿಂಬಾಲಿಸುವ ಪ್ರತಿಯೊಬ್ಬರನ್ನೂ ಶಾಶ್ವತವಾಗಿ ಸುಟ್ಟು ಹೋಗುವುದಕ್ಕೆ ನರಕದಲ್ಲಿ ಎಸೆಯುತ್ತಾನೆ,

ಪದ ಡೇಟಾ:

  • Strong's: H7700, H7854, H8163, G1139, G1140, G1141, G1142, G1228, G4190, G4566, G4567

ಹನ್ನೆರಡು, ಹನ್ನೊಂದು

ಪದದ ಅರ್ಥವಿವರಣೆ:

“ಹನ್ನೆರಡು” ಎನ್ನುವ ಪದವು ಯೇಸು ತನಗೆ ಶಿಷ್ಯರಾಗಿರುವುದಕ್ಕೆ ಅಥವಾ ಅಪೊಸ್ತಲರಾಗಿರುವುದಕ್ಕೆ ಆಯ್ಕೆ ಮಾಡಿಕೊಂಡಿರುವ ಹನ್ನೆರಡು ಮಂದಿಯನ್ನು ಸೂಚಿಸುತ್ತದೆ. ಯೂದಾನು ತನ್ನನ್ನು ತಾನು ಸಾಯಿಸಿಕೊಂಡನಂತರ, ಅವರು “ಹನ್ನೊಂದು” ಮಂದಿ ಕರೆಯಲ್ಪಟ್ಟರು.

  • ಯೇಸುವಿಗೆ ಇವರನ್ನು ಬಿಟ್ಟು ಇತರ ಶಿಷ್ಯರು ಅನೇಕಮಂದಿ ಇದ್ದಿದ್ದರು, ಆದರೆ “ಹನ್ನೆರಡು” ಎನ್ನುವ ಈ ಬಿರುದು ಯೇಸುವಿಗೆ ತುಂಬಾ ಹತ್ತಿರವಾಗಿರುವ ಜನರನ್ನು ಪ್ರತ್ಯೇಕಿಸಿ ತೋರಿಸುತ್ತದೆ.
  • ಈ ಹನ್ನೆರಡು ಮಂದಿ ಶಿಷ್ಯರ ಹೆಸರುಗಳು ಮತ್ತಾಯ 10, ಮಾರ್ಕ 3, ಮತ್ತು ಲೂಕ 6 ಅಧ್ಯಾಯಗಳಲ್ಲಿ ಪಟ್ಟಿ ಮಾಡಿ ದಾಖಲಿಸಲಾಗಿರುತ್ತದೆ.
  • ಕೆಲವೊಂದುಬಾರಿ ಯೇಸುವು ಪರಲೋಕಕ್ಕೆ ಹಿಂದುರಿಗಿ ಹೋದಾಗ, “ಹನ್ನೊಂದು” ಮಂದಿ ಯೂದನ ಸ್ಥಾನದಲ್ಲಿರುವುದಕ್ಕೆ ಮತ್ತೀಯ ಎನ್ನುವ ಹೆಸರಿನ ಶಿಷ್ಯನನ್ನು ಆಯ್ಕೆ ಮಾಡಿಕೊಂಡರು. ಆದನಂತರ, ಅವರು ತಿರುಗಿ “ಹನ್ನೆರಡು” ಎಂಬುದಾಗಿ ಕರೆಯಲ್ಪಟ್ಟರು.

ಅನುವಾದ ಸಲಹೆಗಳು:

  • ಅನೇಕ ಭಾಷೆಗಳಲ್ಲಿ ಇದಕ್ಕೆ ನಾಮಪದವನ್ನು ಜೋಡಿಸುವುದು ಅತೀ ಸ್ವಾಭಾವಿಕವಾಗಿರುತ್ತದೆ ಅಥವಾ ತುಂಬಾ ಸ್ಪಷ್ಟವಾಗಿರುತ್ತದೆ, “ಹನ್ನೆರಡು ಮಂದಿ ಅಪೊಸ್ತಲರು” ಅಥವಾ “ಯೇಸುವಿನ ಹನ್ನೆರಡು ಮಂದಿ ಹತ್ತಿರವಾದ ಶಿಷ್ಯರು” ಎಂದು ಹೇಳಲಾಗುತ್ತದೆ.
  • “ಹನ್ನೊಂದು” ಎನ್ನುವ ಪದವನ್ನು “ಉಳಿದ ಯೇಸುವಿನ ಹನ್ನೊಂದು ಮಂದಿ ಶಿಷ್ಯರು” ಎಂದೂ ಅನುವಾದ ಮಾಡಬಹುದು.
  • ಕೆಲವೊಂದು ಅನುವಾದಗಳಲ್ಲಿ ಇವು ಬಿರುದುಗಳಾಗಿ ಕೊಡಲ್ಪಟ್ಟಿವೆ ಎಂದು ತೋರಿಸುವುದಕ್ಕೆ “ಹನ್ನೆರಡು” ಮತ್ತು “ಹನ್ನೊಂದು” ಎನ್ನುವ ಪದಗಳಲ್ಲಿನ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಉಪಯೋಗಿಸುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಶಿಷ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G1427, G1733

ಹುಳಿಯಿಲ್ಲದ ರೊಟ್ಟಿ

ಪದದ ಅರ್ಥವಿವರಣೆ:

“ಹುಳಿಯಿಲ್ಲದ ರೊಟ್ಟಿ” ಎನ್ನುವ ಮಾತು ಹುಳಿಯಿಲ್ಲದೆ ಮಾಡುವ ರೊಟ್ಟಿಯನ್ನು ಸೂಚಿಸುತ್ತದೆ. ಈ ವಿಧವಾದ ರೊಟ್ಟಿ ಸಪಾಟವಾಗಿರುತ್ತದೆ ಯಾಕಂದರೆ ಇದು ಉಬ್ಬುಕೊಳ್ಳುವುದಕ್ಕೆ ಇದರಲ್ಲಿ ಹುಳಿ ಇರುವುದಿಲ್ಲ.

  • ದೇವರು ಇಸ್ರಾಯೇಲ್ಯರನ್ನು ಐಗುಪ್ತದಲ್ಲಿನ ಗುಲಾಮಗಿರಿಯಿಂದ ಬಿಡುಗಡೆಯಾದಾಗ, ಐಗುಪ್ತರ ರೊಟ್ಟಿ ಉಬ್ಬಿಕೊಳ್ಳುವುದಕ್ಕೆ ಮುಂಚಿತವಾಗಿ ಆಲಸ್ಯ ಮಾಡದಂತೆ ಅತೀ ಶೀಘ್ರವಾಗಿ ಐಗುಪ್ತನ್ನು ಬಿಟ್ಟು ಹೋಗಬೇಕೆಂದು ಆತನು ಅವರಿಗೆ ಹೇಳಿದನು. ಇದರಿಂದ ಅವರು ತಮ್ಮ ಆಹಾರದಲ್ಲಿನ ಹುಳಿಯಿಲ್ಲದ ರೊಟ್ಟಿಯನ್ನು ತಿಂದರು. ಆ ದಿನದಿಂದ ಹುಳಿಯಿಲ್ಲದ ರೊಟ್ಟಿ ಪ್ರತಿ ವರ್ಷ ಆಚರಿಸುವ ಪಸ್ಕ ಹಬ್ಬದಲ್ಲಿ ಉಪಯೋಗಿಸಲಾಗುತ್ತಿತ್ತು, ಇದು ನಡೆದಿರುವ ಆ ಸಮಯವನ್ನು ಜ್ಞಾಪಕ ಮಾಡುತ್ತದೆ.
  • ಹುಳಿ ಎನ್ನುವುದು ಕೆಲವೊಂದುಬಾರಿ ಪಾಪಕ್ಕೆ ಗುರುತಾಗಿ ಉಪಯೋಗಿಸುವುದರಿಂದ, “ಹುಳಿಯಿಲ್ಲದ ರೊಟ್ಟಿ” ಎನ್ನುವುದು ಒಬ್ಬ ದೇವರನ್ನು ಘನಪಡಿಸುವ ವಿಧಾನದಲ್ಲಿ ಆ ವ್ಯಕ್ತಿಯ ಜೀವನದಿಂದ ಪಾಪವನ್ನು ತೆಗೆಯಲ್ಪಟ್ಟಿದೆ ಎನ್ನುವುದನ್ನು ಪ್ರತಿನಿಧಿಸುತ್ತದೆ.

ಅನುವಾದ ಸಲಹೆಗಳು:

  • ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಹುಳಿ ಇಲ್ಲದ ರೊಟ್ಟಿ” ಅಥವಾ “ಉಬ್ಬಿಕೊಳ್ಳದ ಸಪಾಟವಾದ ರೊಟ್ಟಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಪದಕ್ಕೆ ಮಾಡಿರುವ ಆನುವಾದವು “ಹುಳಿ, ಹುದುಗು” ಎನ್ನುವ ಪದವನ್ನು ನೀವು ಹೇಗೆ ಅನುವಾದ ಮಾಡುದ್ದೀರಿ ಎನ್ನುವುದಕ್ಕೆ ಸರಿಯಾಗಿರಲು ನೋಡಿಕೊಳ್ಳಿರಿ.
  • ಕೆಲವು ಸಂದರ್ಭಗಳಲ್ಲಿ “ಹುಳಿಯಿಲ್ಲದ ರೊಟ್ಟಿ” ಎನ್ನುವ ಮಾತು “ಹುಳಿಯಿಲ್ಲದ ರೊಟ್ಟಿಯ ಔತಣ” ಎನ್ನುವ ಮಾತನ್ನು ಸೂಚಿಸುತ್ತದೆ ಮತ್ತು ಆ ವಿಧಾನದಲ್ಲಿಯೇ ಇದನ್ನು ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ರೊಟ್ಟಿ, ಐಗುಪ್ತ, ಹಬ್ಬ, ಪಸ್ಕ, ಪಾಪ, ಹುಳಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4682, G106

ಹೃದಯ

ಪದದ ಅರ್ಥವಿವರಣೆ:

“ಹೃದಯ” ಎನ್ನುವ ಪದವು ಜನರು ಮತ್ತು ಪ್ರಾಣಿಗಳಲ್ಲಿ ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವ ಆಂತರಿಕ ದೈಹಿಕ ಅಂಗವನ್ನು ಸೂಚಿಸುತ್ತದೆ. ಸತ್ಯವೇದದಲ್ಲಿ ಅನೇಕಬಾರಿ ಒಬ್ಬರ ಆಲೋಚನೆಗಳನ್ನು, ಭಾವನೆಗಳನ್ನು, ಆಸೆಗಳನ್ನು ಅಥವಾ ಚಿತ್ತವನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ "ಹೃದಯ" ಉಪಯೋಗಿಸಲ್ಪಟ್ಟಿದೆ.

  • “ಕಠಿಣ ಹೃದಯ” ಹೊಂದಿರುವುದೆನ್ನುವುದು ದೇವರಿಗೆ ವಿಧೇಯತೆ ತೋರಿಸಲು ತಿರಸ್ಕರಿಸುವ ಒಬ್ಬ ವ್ಯಕ್ತಿಯ ಮೊಂಡುತನದ ಸಾಧಾರಣ ವ್ಯಕ್ತೀಕರಣವನ್ನು ತೋರಿಸುತ್ತದೆ.
  • “ನನ್ನ ಹೃದಯಯದಿಂದ” ಅಥವಾ “ನನ್ನ ಪೂರ್ಣ ಹೃದಯದೊಂದಿಗೆ” ಎನ್ನುವ ಮಾತುಗಳು ಯಾವ ಅಡಚಣೆಯಿಲ್ಲದೆ ಏನಾದರೊಂದನ್ನು ಮಾಡುವುದು, ಸಂಪೂರ್ಣ ಬದ್ಧತೆಯೊಂದಿಗೆ ಮತ್ತು ಇಷ್ಟತೆಯೊಂದಿಗೆ ಎಂದರ್ಥ.
  • “ಇದನ್ನು ನಿನ್ನ "ಹೃದಯಕ್ಕೆ ತೆಗೆದುಕೋ” ಇನ್ನುವ ಮಾತಿಗೆ ಮಾಡುವ ವಿಷಯವನ್ನು ಗಂಭೀರವಾಗಿ ಮಾಡು ಮತ್ತು ಅದನ್ನು ಒಬ್ಬರ ಜೀವನಕ್ಕೆ ಅನ್ವಯಿಸು ಎಂದರ್ಥ.
  • “ಮುರಿಯಲ್ಪಟ್ಟಿರುವ ಹೃದಯ” ಎನ್ನುವ ಮಾತು ತುಂಬಾ ಹೆಚ್ಚಾದ ಬಾಧೆಯಲ್ಲಿರುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತದೆ. ಆ ವ್ಯಕ್ತಿ ಮಾನಸಿಕವಾಗಿ ತುಂಬಾ ಆಳವಾಗಿ ನೋಯಿಸಲ್ಪಟ್ಟಿರುತ್ತಾನೆ.

ಅನುವಾದ ಸಲಹೆಗಳು:

  • ಕೆಲವೊಂದು ಭಾಷೆಗಳಲ್ಲಿ ವಿಭಿನ್ನವಾದ ಶರೀರ ಭಾಗಗಳನ್ನು ಸೂಚಿಸುತ್ತದೆ, ಅಂದರೆ “ಹೊಟ್ಟೆ” ಅಥವಾ “ಪಿತ್ತಜನಕಾಂಗ” ಎನ್ನುವ ಅಂಗಗಳನ್ನು ಅವರ ಆಲೋಚನೆಗಳನ್ನು ಸೂಚಿಸಲು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
  • ಕೆಲವೊಂದು ಭಾಷೆಗಳಲ್ಲಿ ಈ ಎಲ್ಲಾ ಪರಿಕಲ್ಪನೆಗಳನ್ನು ವ್ಯಕ್ತಪಡಿಸುವುದಕ್ಕೆ ಒಂದೇ ಪದವನ್ನು ಉಪಯೋಗಿಸುತ್ತಾರೆ ಮತ್ತು ಬೇರೆ ರೀತಿಯ ಭಾವನೆಗಳನ್ನು ವ್ಯಕ್ತಗೊಳಿಸಲು ಬೇರೊಂದು ಪದವನ್ನು ಉಪಯೋಗಿಸುತ್ತಾರೆ.
  • “ಹೃದಯ” ಅಥವಾ ಶರೀರದಲ್ಲಿರುವ ಬೇರೊಂದು ಭಾಗಗಳು ಈ ಅರ್ಥವನ್ನು ಸೂಚಿಸದಿದ್ದರೆ, ಕೆಲವೊಂದು ಭಾಷೆಗಳು ಇದರ ಅರ್ಥವನ್ನು ಅಕ್ಷರಾರ್ಥವಾಗಿ ಹೇಳಬೇಕಾಗಿರುತ್ತದೆ, ಅಂದರೆ “ಆಲೋಚನೆಗಳು” ಅಥವಾ “ಭಾವನೆಗಳು” ಅಥವಾ “ಆಸೆಗಳು” ಎಂದು ಹೇಳಬೇಕಾಗಿರುತ್ತದೆ.
  • ಸಂದರ್ಭಾನುಗುಣವಾಗಿ, “ನನ್ನ ಹೃದಯವೆಲ್ಲಾ” ಅಥವಾ “ನನ್ನ ಸಂಪೂರ್ಣ ಹೃದಯದೊಂದಿಗೆ” ಎನ್ನುವ ಮಾತುಗಳನ್ನು “ನನ್ನ ಪೂರ್ಣ ಶಕ್ತಿಯಿಂದ” ಅಥವಾ “ಸಂಪೂರ್ಣವಾದ ಪ್ರತಿಷ್ಠೆಯಿಂದ” ಅಥವಾ “ಸಂಪೂರ್ಣವಾಗಿ” ಅಥವಾ “ಸಂಪೂರ್ಣವಾದ ಬದ್ಧತೆಯೊಂದಿಗೆ” ಎಂದೂ ಅನುವಾದ ಮಾಡಬಹುದು.
  • “ಇದನ್ನು ಹೃದಯಕ್ಕೆ ತೆಗೆದುಕೋ” ಎನ್ನುವ ಮಾತನ್ನು “ಇದನ್ನು ತುಂಬಾ ಗಂಭೀರವಾಗಿ ತೆಗೆದುಕೋ” ಅಥವಾ “ಇದರ ಕುರಿತಾಗಿ ಜಾಗೃತಿಯಾಗಿ ಆಲೋಚನೆ ಮಾಡು” ಎಂದೂ ಅನುವಾದ ಮಾಡಬಹುದು.
  • ‘ಕಠಿಣ-ಹೃದಯವಿದ್ದವನು” ಎನ್ನುವ ಮಾತನ್ನು “ಮೊಂಡುತನದಿಂದ ತಿರಸ್ಕಾರ ಮಾಡುವವನು” ಅಥವಾ “ವಿಧೇಯತೆ ತೋರಿಸುವುದಕ್ಕೆ ತಿರಸ್ಕರಿಸುವುದು” ಅಥವಾ “ನಿರಂತರವಾಗಿ ದೇವರಿಗೆ ಅವಿಧೇಯತೆಯನ್ನು ತೋರಿಸುವುದು” ಎಂದೂ ಅನುವಾದ ಮಾಡಬಹುದು.
  • “ಹೃದಯ ಮುರಿದವನು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ತುಂಬಾ ಬಾಧೆ” ಅಥವಾ “ಆಳವಾಗಿ ನೋಯಿಸಲ್ಪಟ್ಟ ಭಾವನೆ” ಎನ್ನುವ ಪದಗಳು ಸೇರಿಸಲ್ಪಟ್ಟಿರುತ್ತವೆ.

(ಈ ಪದಗಳನ್ನು ಸಹ ನೋಡಿರಿ : ಕಠಿಣ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1079, H2436, H2504, H2910, H3519, H3629, H3820, H3821, H3823, H3824, H3825, H3826, H4578, H5315, H5640, H7130, H7307, H7356, H7907, G674, G1282, G1271, G2133, G2588, G2589, G4641, G4698, G5590

ಹೆಚ್ಚಿಸು, ಹೆಚ್ಚಿಸಲಾಗಿದೆ, ಹೆಚ್ಚಿಸುವುದು, ಮೇಲಕ್ಕೆ ಎತ್ತುವುದು

ಪದದ ಅರ್ಥವಿವರಣೆ:

ಹೆಚ್ಚಿಸು ಎನ್ನುವ ಪದಕ್ಕೆ ಒಬ್ಬರನ್ನು ಹೆಚ್ಚಾಗಿ ಪ್ರಶಂಸಿಸುವುದು ಮತ್ತು ಹೆಚ್ಚಾಗಿ ಗೌರವಿಸುವುದು ಎಂದರ್ಥ. ಉನ್ನತ ಸ್ಥಾನದಲ್ಲಿ ಒಬ್ಬರನ್ನು ಇರಿಸುವುದು ಎನ್ನುವ ಅರ್ಥವೂ ಈ ಪದಕ್ಕೆ ಇದೆ.

  • ಸತ್ಯವೇದದಲ್ಲಿ, “ಹೆಚ್ಚಿಸು” ಎನ್ನುವ ಪದವು ದೇವರನ್ನು ಹೆಚ್ಚಿಸುವುದಕ್ಕೋಸ್ಕರವೆ ಉಪಯೋಗಿಸಲ್ಪಟ್ಟಿರುತ್ತದೆ.
  • ಒಬ್ಬ ವ್ಯಕ್ತಿ ತನ್ನನ್ನು ತಾನು ಹೆಚ್ಚಿಸಿಕೊಂಡರೆ, ಅದಕ್ಕೆ ಅವನು ಅಹಂಕಾರ ವಿಧಾನದಲ್ಲಿ ಅಥವಾ ಗರ್ವದಿಂದ ತನ್ನ ಕುರಿತು ಆಲೋಚನೆ ಮಾಡಿಕೊಳ್ಳುವುದು ಎಂದರ್ಥ.

ಅನುವಾದ ಸಲಹೆಗಳು:

  • “ಹೆಚ್ಚಿಸು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಹೆಚ್ಚಾಗಿ ಪ್ರಶಂಸಿಸು” ಅಥವಾ “ಘನವಾಗಿ ಗೌರವಿಸು” ಅಥವಾ “ಸ್ತೋತ್ರ ಮಾಡು” ಅಥವಾ “ಉನ್ನತವಾಗಿ ಮಾತನಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಸಂದರ್ಭಗಳಲ್ಲಿ “ಉನ್ನತ ಸ್ಥಾನದಲ್ಲಿರಿಸು” ಅಥವಾ “ಹೆಚ್ಚಾದ ಗೌರವವನ್ನು ಕೊಡು” ಅಥವಾ “ಗರ್ವದಿಂದ ಮಾತನಾಡು” ಎಂದು ಅರ್ಥ ಬರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
  • “ನಿನ್ನನ್ನು ನೀನು ಹೆಚ್ಚಿಸಿಕೊಳ್ಳಬೇಡ” ಎನ್ನುವ ಮಾತನ್ನು “ನಿನ್ನ ಕುರಿತಾಗಿ ನೀನು ಹೆಚ್ಚಾಗಿ ಆಲೋಚನೆ ಮಾಡಿಕೊಳ್ಳಬೇಡ” ಅಥವಾ “ನಿನ್ನ ಕುರಿತಾಗಿ ಬಡಿವಾರ ಮಾಡಬೇಡ” ಎಂದೂ ಅನುವಾದ ಮಾಡಬಹುದು.
  • ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವವರು” ಎನ್ನುವ ಮಾತಿಗೆ “ಅವರ ಕುರಿತಾಗಿ ಅವರು ಗರ್ವದಿಂದ ಆಲೋಚನೆ ಮಾಡಿಕೊಳ್ಳುವವರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸ್ತುತಿ ಮಾಡು, ಆರಾಧನೆ, ಮಹಿಮೆ, ಹೊಗಳಿಗೆ, ಗರ್ವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1361, H4984, H5375, H5549, H5927, H7311, H7426, H7682, G1869, G5229, G5251, G5311, G5312

ಹೆಮ್ಮೆಪಡು, ಹೆಚ್ಚಳಪಡುವುದು

ಪದದ ಅರ್ಥವಿವರಣೆ:

“ಹೆಮ್ಮೆಪಡು” ಎನ್ನುವ ಪದಕ್ಕೆ ಯಾವುದಾದರೊಂದರ ಕುರಿತಾಗಿ ಅಥವಾ ಯಾರಾದರೊಬ್ಬರ ಕುರಿತಾಗಿ ಹೆಗ್ಗಳಿಕೆಯಿಂದ ಮಾತನಾಡಿಕೊಳ್ಳುವುದು ಎಂದರ್ಥ. ಅನೇಕಬಾರಿ ಈ ಪದಕ್ಕೆ ಒಬ್ಬರು ತನ್ನ ಕುರಿತಾಗಿ ಜಂಭ ಕೊಚ್ಚಿಕೊಳ್ಳುವುದು ಎಂದರ್ಥ.

  • “ಹೆಚ್ಚಳಪಡುವವನು” ತನ್ನ ಕುರಿತಾಗಿ ತಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.
  • ಇಸ್ರಾಯೇಲ್ಯರು ತಮ್ಮ ವಿಗ್ರಹಗಳಲ್ಲಿ "ಹೆಮ್ಮೆಪಟ್ಟದ್ದರಿಂದ" ದೇವರು ಅವರನ್ನು ಖಂಡಿಸಿದನು. ಅವರು ನಿಜವಾದ ದೇವರನ್ನು ಬಿಟ್ಟು ಸುಳ್ಳು ದೇವರುಗಳನ್ನು ಅಹಂಕಾರದಿಂದ ಆರಾಧನೆ ಮಾಡಿದರು.
  • ಜನರು ತಮ್ಮ ಸಿರಿ, ತಮ್ಮ ಬಲ, ತಮ್ಮ ಹೊಲಗದ್ದೆಗಳು ಮತ್ತು ತಮ್ಮ ಕಾನೂನುಗಳ ಕುರಿತಾಗಿ ಹೆಮ್ಮೆಪಡುವ ಜನರ ಕುರಿತಾಗಿ ಸತ್ಯವೇದವು ಮಾತನಾಡುತ್ತದೆ. ಇದರಿಂದ ಅವರು ಈ ಎಲ್ಲಾ ವಿಷಯಗಳ ಕುರಿತಾಗಿ ಹೆಮ್ಮೆ ಪಡುತ್ತಿದ್ದಾರೆಂದು ಇದರ ಅರ್ಥವಾಗಿರುತ್ತದೆ ಮತ್ತು ಈ ಎಲ್ಲಾವುಗಳನ್ನು ಕೊಡುವವರು ದೇವರೇ ಎನ್ನುವ ಜ್ಞಾನವನ್ನು ಹೊಂದಿರುವುದಿಲ್ಲವೆಂದು ತಿಳಿದು ಬರುತ್ತದೆ.
  • ಬದಲಾಗಿ, ಇಸ್ರಾಯೇಲ್ಯರು ದೇವರನ್ನು ಅರಿತಿದ್ದಾರೆನ್ನುವ ಸತ್ಯವನ್ನು ಕುರಿತಾಗಿ “ಹೆಮ್ಮೆಪಡ” ಬೇಕು ಅಥವಾ ಗರ್ವದಿಂದರಬೇಕೆಂದು ದೇವರು ಒತ್ತಾಯಿಸಿದನು.
  • ಕರ್ತನಲ್ಲಿ ಹೆಮ್ಮೆ ಪಡುವುದರ ಕುರಿತಾಗಿ ಅಪೊಸ್ತಲನಾದ ಪೌಲನು ಕೂಡ ಮಾತನಾಡುತ್ತಿದ್ದಾನೆ, ಆತನು ಅವರಿಗೆ ಮಾಡಿದ ಎಲ್ಲಾ ಉಪಕಾರಗಳಿಗಾಗಿ ದೇವರಲ್ಲಿ ಆನಂದಪಟ್ಟು ಮತ್ತು ಆತನಿಗೆ ಕೃತಜ್ಞತೆಯಿಂದ ಇರಬೇಕೆಂದು ಇದರ ಅರ್ಥವಾಗಿರುತ್ತದೆ.

ಅನುವಾದ ಸಲಹೆಗಳು:

  • “ಹೆಮ್ಮೆಪಡು” ಎನ್ನುವ ಪದವನ್ನು ಅನುವಾದ ಇತರ ವಿಧಾನಗಳಲ್ಲಿ “ಜಂಭಕೊಚ್ಚು” ಅಥವಾ “ಗರ್ವದಿಂದ ಮಾತಾಡು” ಅಥವಾ “ಗರ್ವದಿಂದಿರು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • “ಹೆಚ್ಚಳಪಡುವುದು” ಎನ್ನುವ ಮಾತು “ಗರ್ವದ ಮಾತುಗಳಿಂದ ತುಂಬಿರುವುದು” ಅಥವಾ “ಅಹಂಕಾರದಿಂದಿರುವುದು” ಅಥವಾ “ಒಬ್ಬರ ಕುರಿತಾಗಿ ಗರ್ವದಿಂದ ಮಾತನಾಡುವುದು” ಎನ್ನುವ ಮಾತುಗಳಿಂದಲೂ ಅನುವಾದ ಮಾಡಬಹುದು.
  • ದೇವರನ್ನು ತಿಳಿದುಕೊಳ್ಳುವುದರ ಕುರಿತಾಗಿ ಅಥವಾ ಆತನನ್ನು ಹೆಚ್ಚಿಸುವುದರ ಸಂದರ್ಭದಲ್ಲಿ, “ಹೆಮ್ಮೆಪಡು” ಅಥವಾ “ಹೆಚ್ಚಿಸು” ಅಥವಾ “ಆತನ ಕುರಿತಾಗಿ ಆನಂದಪಡು” ಅಥವಾ “ಆತನ ಕುರಿತು ಆತನಿಗೆ ವಂದನೆಗಳನ್ನು ಸಲ್ಲಿಸು” ಎಂದೂ ಅನುವಾದ ಮಾಡಬಹುದು.
  • “ಗರ್ವ” ಎನ್ನುವದಕ್ಕೆ ಕೆಲವೊಂದು ಭಾಷೆಗಳಲ್ಲಿ ಎರಡು ಪದಗಳು ಇರುತ್ತವೆ: ಒಂದು ಋಣಾತ್ಮಕವಾದದ್ದು, ಅಹಂಕಾರದಿಂದಿರುವ ಅರ್ಥವು ಬರುವ ಶಬ್ದ, ಮತ್ತು ಇನ್ನೊಂದು ಧನಾತ್ಮಕವಾದದ್ದು, ಒಬ್ಬರ ಕೆಲಸ, ಕುಟುಂಬ ಅಥವಾ ದೇಶದ ಕುರಿತಾಗಿ ಹೆಮ್ಮೆ ಪಡುವ ಅರ್ಥ ಬರುವಂಥದ್ದು.

ಅನುವಾದ ಸಲಹೆಗಳು:

(ಈ ಪದಗಳನ್ನು ಸಹ ನೋಡಿರಿ : ಗರ್ವ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1984, H3235, H6286, G212, G213, G174೦, G2620, G2744, G2745, G2746, G3166

ಹೆಸರು

ಪದದ ಅರ್ಥವಿವರಣೆ:

"ಹೆಸರು" ಎಂಬ ಪದವು ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವನ್ನು ಕರೆಯುವ ಪದವನ್ನು ಸೂಚಿಸುತ್ತದೆ. ಸತ್ಯವೇದದಲ್ಲಿ “ಹೆಸರು” ಎನ್ನುವ ಪದವು ಹಲವಾರು ವಿಭನ್ನ ಪರಿಕಲ್ಪನೆಗಳನ್ನು ಉಲ್ಲೇಖಿಸಲು ಹಲವಾರು ರೀತಿಯಲ್ಲಿ ಬಳಸಲಾಗುತ್ತದೆ.

  • ಕೆಲವು ಸಂದರ್ಭಗಳಲ್ಲಿ, "ಹೆಸರು" ವ್ಯಕ್ತಿಯ ಖ್ಯಾತಿಯನ್ನು ಉಲ್ಲೇಖಿಸಬಹುದು, "ನಾವು ನಮಗಾಗಿ ಹೆಸರನ್ನು ಮಾಡೋಣ"ದಲ್ಲಿರುವ ಪ್ರಕಾರ.
  • “ಹೆಸರು” ಎನ್ನುವ ಪದವು ಯಾವುದಾದರೊಂದನ್ನು ಜ್ಞಾಪಕ ಮಾಡಿಕೊಳ್ಳುವುದನ್ನು ಸೂಚಿಸುತ್ತದೆ. ಉದಾಹರಣೆಗೆ, ”ವಿಗ್ರಹಗಳ ಹೆಸರುಗಳನ್ನು ತೆಗೆದುಹಾಕು” ಎನ್ನುವ ಮಾತಿಗೆ ವಿಗ್ರಹಗಳೆಲ್ಲವನ್ನು ನಾಶಮಾಡು ಎಂದರ್ಥ, ಇದರಿಂದ ಅವುಗಳನ್ನು ಎಂದಿಗೂ ಜ್ಞಾಪಕಮಾಡಿಕೊಳ್ಳಬಾರದು ಅಥವಾ ಆರಾಧನೆ ಮಾಡಬಾರದು ಎಂದರ್ಥ.
  • “ದೇವರ ಹೆಸರಿನಲ್ಲಿ” ಮಾತನಾಡುವುದು ಎಂದರೆ ಆತನ ಶಕ್ತಿ ಮತ್ತು ಅಧಿಕಾರಗಳೊಂದಿಗೆ ಮಾತನಾಡುವುದು ಅಥವಾ ಆತನ ಪ್ರತಿನಿಧಿಯಾಗಿ ಮಾತನಾಡುವುದು ಎಂದರ್ಥ.
  • ಯಾರಾದರೊಬ್ಬರ “ಹೆಸರು” ಎನ್ನುವ ಮಾತು ಸಂಪೂರ್ಣವಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ, ಉದಾಹರಣೆಗೆ, “...ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರುವ ಮತ್ತ್ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ.” (ನೋಡಿರಿ: ಲಾಕ್ಷಣಿಕ ಪ್ರಯೋಗ)

ಅನುವಾದ ಸಲಹೆಗಳು:

  • “ಆತನ ಒಳ್ಳೇಯ ಹೆಸರು” ಎನ್ನುವ ಮಾತನ್ನು “ಆತನ ಒಳ್ಳೇಯ ಖ್ಯಾತಿ” ಎಂದೂ ಅನುವಾದ ಮಾಡಬಹುದು.
  • “ಯಾರಾದರೊಬ್ಬರ ಅಥವಾ ಯಾವುದಾದರೊಂದರ ಹೆಸರಿನಲ್ಲಿ” ಎನಾದರೊಂದನ್ನು ಮಾಡುವುದು ಎನ್ನುವುದನ್ನು “ಅಧಿಕಾರದೊಂದಿಗೆ’ ಅಥವಾ “ಅನುಮತಿಯೊಂದಿಗೆ” ಅಥವಾ ಆ ವ್ಯಕ್ತಿಯ “ಪ್ರತಿನಿಧಿ” ಎಂದೂ ಅನುವಾದ ಮಾಡಬಹುದು.
  • “ನಾವೆಲ್ಲರೂ ಹೆಸರುವಾಸಿಯಾಗೋಣ” ಎನ್ನುವ ಮಾತನ್ನು “ನಮ್ಮ ಕುರಿತಾಗಿ ಅನೇಕ ಜನರು ತಿಳಿದುಕೊಳ್ಳುವಂತೆ ಮಾಡುವುದು” ಅಥವಾ “ನಾವು ತುಂಬಾ ಪ್ರಾಮುಖ್ಯವಾದವರೆಂದು ಎಲ್ಲಾ ಜನರು ಆಲೋಚನೆ ಮಾಡುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
  • “ಆತನ ಹೆಸರನ್ನಿಟ್ಟು ಕರೆ” ಎನ್ನುವ ಮಾತನ್ನು “ಅವನಿಗೆ ಹೆಸರಿಡು” ಅಥವಾ “ಒಂದು ಹೆಸರನ್ನು ಅವನಿಗೆ ಕೊಡು” ಎಂದೂ ಅನುವಾದ ಮಾಡಬಹುದು.
  • “ನಿನ್ನ ಹೆಸರನ್ನು ಪ್ರೀತಿಸುವ ಪ್ರತಿಯೊಬ್ಬರು” ಎನ್ನುವ ಮಾತನ್ನು “ನಿನ್ನನ್ನು ಪ್ರೀತಿಸುವ ಪ್ರತಿಯೊಬ್ಬರು” ಎಂದು ಅನುವಾದ ಮಾಡಬಹುದು.
  • “ವಿಗ್ರಹಗಳ ಹೆಸರುಗಳನ್ನು ತೆಗೆದುಹಾಕು” ಎನ್ನುವ ಮಾತನ್ನು “ಅನ್ಯ ವಿಗ್ರಹಗಳಿಂದ ಬಿಡುಗಡೆ ಹೊಂದು, ಇದರಿಂದ ಅವುಗಳನ್ನು ತಿರುಗಿ ನೆನಸಿಕೊಳ್ಳಬಾರದು” ಅಥವಾ “ಜನರು ಸುಳ್ಳು ದೇವರುಗಳನ್ನು ಆರಾಧನೆ ಮಾಡದಂತೆ ಮಾಡು” ಅಥವಾ “ಎಲ್ಲಾ ವಿಗ್ರಹಗಳನ್ನು ಸಂಪೂರ್ಣವಾಗಿ ತೆಗೆದುಹಾಕು, ಇದರಿಂದ ಜನರು ಅವುಗಳ ಕುರಿತಾಗಿ ಎಂದಿಗೂ ಆಲೋಚನೆ ಮಾಡುವುದಿಲ್ಲ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕರೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H5344, H7121, H7761, H8034, H8036, G2564, G3686, G3687, G5122

ಹೊಸದಾಗಿ ಹುಟ್ಟುವುದು, ದೇವರಿಂದ ಹುಟ್ಟುವುದು, ಹೊಸ ಜನ್ಮ

ಪದದ ಅರ್ಥವಿವರಣೆ:

“ಹೊಸದಾಗಿ ಹುಟ್ಟುವುದು” ಎನ್ನುವ ಪದವು ಮೊಟ್ಟಮೊದಲು ಕ್ರಿಸ್ತಯೇಸು ಉಪಯೋಗಿಸಿರುತ್ತಾರೆ, ಇದಕ್ಕೆ ಆತ್ಮೀಯಕವಾಗಿ ಸತ್ತಂತ ಒಬ್ಬ ಮನುಷ್ಯನನ್ನು ಆತ್ಮೀಯಕವಾಗಿ ತಿರುಗಿ ಬದುಕುವಂತೆ ಮಾಡುವ ದೇವರ ಕ್ರಿಯೆ ಎಂದರ್ಥ. “ದೇವರಿಂದ ಹುಟ್ಟುವುದು” ಮತ್ತು “ಆತ್ಮನಿಂದ ಜನಿಸುವುದು” ಎನ್ನುವ ಪದಗಳು ಕೂಡ ಒಬ್ಬ ವ್ಯಕ್ತಿಗೆ ಹೊಸದಾದ ಆತ್ಮೀಕ ಜೀವನ ಕೊಡಲ್ಪಟ್ಟಿದೆ ಎನ್ನುವದನ್ನು ಸೂಚಿಸುತ್ತವೆ.

  • ಸರ್ವ ಜನರು ಆತ್ಮೀಯಕತೆಯಲ್ಲಿ ಸತ್ತವರಾಗಿ ಜನಿಸಿದ್ದರು ಮತ್ತು ಅವರು ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದಾಗ “ಹೊಸ ಜನ್ಮವನ್ನು” ಪಡೆದರು.
  • ಅತ್ಮೀಯಕವಾಗಿ ಹೊಸ ಜನ್ಮದ ಆ ಕ್ಷಣದಲ್ಲಿಯೇ ಹೊಸ ವಿಶ್ವಾಸಿಯಲ್ಲಿ ದೇವರ ಪವಿತ್ರಾತ್ಮನು ನಿವಾಸವಾಗಿರಲು ಪ್ರಾರಂಭಿಸುತ್ತಾನೆ ಮತ್ತು ತನ್ನ ಜೀವನದಲ್ಲಿ ಒಳ್ಳೇಯ ಆತ್ಮೀಯಕವಾದ ಫಲಗಳನ್ನು ಕೊಡುವುದಕ್ಕೆ ಆ ವ್ಯಕ್ತಿಯನ್ನು ಬಲಪಡಿಸುತ್ತಾನೆ.
  • ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ಆತನ ಮಗನಾಗುವಂತೆ ಮಾಡುವುದು ದೇವರ ಕೆಲಸವಾಗಿದೆ.

ಅನುವಾದ ಸಲಹೆಗಳು:

  • “ಹೊಸದಾಗಿ ಹುಟ್ಟುವುದು” ಎನ್ನುವ ಮಾತನ್ನು ಅನುವಾದಿಸುವ ಬೇರೊಂದು ವಿಧಾನಗಳಲ್ಲಿ “ಪುನಃ ಹುಟ್ಟುವುದು” ಅಥವಾ “ಆತ್ಮೀಯಕವಾಗಿ ಜನಿಸುವುದು” ಎನ್ನುವ ಪದಗಳು ಒಳಗೊಂಡಿರುತ್ತವೆ.
  • ಈ ಮಾತನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವುದು ಒಳ್ಳೇಯದು ಮತ್ತು ಹುಟ್ಟುವ ಸಮಯದಲ್ಲಿ ಉಪಯೋಗಿಸುವ ಸಾಧಾರಣ ಭಾಷೆಯ ಪದವನ್ನು ಉಪಯೋಗಿಸಿರಿ.
  • “ಹೊಸ ಜನ್ಮ” ಎನ್ನುವ ಮಾತು “ಆತ್ಮೀಕ ಜನನ” ಎಂದೂ ಬಹುಶಃ ಅನುವಾದ ಮಾಡಬಹುದು.
  • “ದೇವರಿಂದ ಹುಟ್ಟುವುದು” ಎನ್ನುವ ಮಾತನ್ನು “ಹೊಸದಾಗಿ ಹುಟ್ಟಿದ ಶಿಶುವಿನಂತೆ ಹೊಸ ಜೀವನವನ್ನು ಹೊಂದುವುದಕ್ಕೆ ದೇವರೇ ಕಾರಣವಾಗಿರುತ್ತಾನೆ” ಅಥವಾ “ದೇವರಿಂದ ಹೊಸ ಜೀವನ ಕೊಡಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.
  • ಇದೇ ರೀತಿಯಾಗಿ, “ಆತ್ಮನಿಂದ ಹುಟ್ಟುವುದು” ಎನ್ನುವ ಮಾತನ್ನೂ “ಪವಿತ್ರಾತ್ಮನಿಂದ ಹೊಸ ಜೀವನ ಕೊಡಲ್ಪಟ್ಟಿದೆ” ಅಥವಾ “ದೇವರ ಮಗುವಾಗುವುದಕ್ಕೆ ಪವಿತ್ರಾತ್ಮನ ಮೂಲಕ ಬಲವನ್ನು ಹೊಂದಿದ್ದಾನೆ” ಅಥವಾ “ಈಗಲೇ ಹುಟ್ಟಿದ ಶಿಶುವಿನಂತೆ ಹೊಸ ಜೀವನವನ್ನು ಹೊಂದಲು ಪವಿತ್ರಾತ್ಮ ದೇವರೇ ಕಾರಣವಾಗಿರುತ್ತಾರೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪವಿತ್ರಾತ್ಮ, ರಕ್ಷಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G313, G509, G1080, G3824