Names
ಅಂತಿಯೋಕ್ಯ
ಸತ್ಯಾಂಶಗಳು:
ಅಂತಿಯೋಕ್ಯ ಎನ್ನುವದು ಹೊಸ ಒಡಂಬಡಿಕೆಯಲ್ಲಿ ಎರಡು ಪಟ್ಟಣಗಳ ಹೆಸರಾಗಿರುತ್ತದೆ. ಒಂದು ಸಿರಿಯಾದಲ್ಲಿದೆ, ಇದು ಮೆಡಿಟರೆನಿಯನ್ ಸಮುದ್ರದ ಕರಾವಳಿ ದಿಕ್ಕಿಗೆ ತುಂಬಾ ಹತ್ತಿರದಲ್ಲಿರುತ್ತದೆ. ಇನ್ನೊಂದು ಪಿಸಿದ್ಯ ರೋಮಾ ಸೀಮೆಯಲ್ಲಿದೆ, ಇದು ಕೊಲೊಸ್ಸ ಪಟ್ಟಣಕ್ಕೆ ಹತ್ತಿರದಲ್ಲಿರುತ್ತದೆ.
- ಸಿರಿಯಾ ಅಂತಿಯೋಕ್ಯದಲ್ಲಿರುವ ಸ್ಥಳೀಯ ಸಭೆಯು ಯೇಸುವಿನಲ್ಲಿ ನಂಬಿದವರನ್ನು “ಕ್ರೈಸ್ತರೆಂದು” ಕರೆದ ಮೊಟ್ಟ ಮೊದಲನೇ ಸ್ಥಳ. ಅನ್ಯರನ್ನು ಸುವಾರ್ತೆಯಿಂದ ತಲುಪುವುದಕ್ಕೆ ಮಿಷನರೀಗಳನ್ನು ಕಳುಹಿಸುವುದರಲ್ಲಿ ಈ ಸಭೆಯು ತುಂಬಾ ಹೆಚ್ಚಾದ ಕೆಲಸವನ್ನು ಮಾಡಿತ್ತು.
- ಕ್ರೈಸ್ತರಾಗುವುದಕ್ಕೆ ಯೆಹೂದ್ಯರ ನಿಯಮ ನಿಬಂಧನೆಗಳನ್ನು ಅನುಸರಿಸಬೇಕಾಗಿರುವುಡಿಲ್ಲವೆಂದು ತಿಳಿದುಕೊಳ್ಳುವುದಕ್ಕೆ ಯೆರೂಸಲೇಮಿನಲ್ಲಿರುವ ಸಭೆಯ ನಾಯಕರು ಸಿರಿಯಾದಲ್ಲಿರುವ ಅಂತಿಯೋಕ್ಯ ಸಭೆಯಲ್ಲಿರುವ ವಿಶ್ವಾಸಿಗಳಿಗೆ ಒಂದು ಪತ್ರವನ್ನು ಕಳುಹಿಸಿದರು
- ಪೌಲ, ಬಾರ್ನಬ ಮತ್ತು ಯೋಹಾನ ಮಾರ್ಕರವರು ಸುವಾರ್ತೆಯನ್ನು ಹಂಚುವುದಕ್ಕೆ ಪಿಸಿದ್ಯದಲ್ಲಿರುವ ಅಂತಿಯೋಕ್ಯಗೆ ಪ್ರಯಾಣ ಮಾಡಿದರು. ಇತರ ಪಟ್ಟಣಗಳಿಂದ ಬಂದ ಕೆಲವರು ಯೆಹೂದ್ಯರು ಸಮಸ್ಯೆಯನ್ನುಂಟು ಮಾಡುವುದಕ್ಕೆ ಬಂದಿದ್ದರು, ಮತ್ತು ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡಿದರು. ಆದರೆ ಯೆಹೂದ್ಯರು ಮತ್ತು ಅನ್ಯರೆಲ್ಲರೂ ಮತ್ತು ಇತರ ಅನೇಕರು ಬೋಧನೆಯನ್ನು ಕೇಳಿ, ಯೇಸುವಿನಲ್ಲಿ ನಂಬಿಕೆ ಇಟ್ಟರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾರ್ನಬ, ಕೊಲೊಸ್ಸ, ಯೋಹಾನ ಮಾರ್ಕ, ಪೌಲ, ಸೀಮೆ, ರೋಮಾ, ಸಿರಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
- 2 ತಿಮೊಥೆ.03:10-13
- ಅಪೊ.ಕೃತ್ಯ.06:5-6
- ಅಪೊ.ಕೃತ್ಯ.11:19-21
- ಅಪೊ.ಕೃತ್ಯ.11:25-26
- ಗಲಾತ್ಯ.02:11-12
ಪದ ಡೇಟಾ:
- Strong's: G491
ಅಂದ್ರೆಯ
ಸತ್ಯಾಂಶಗಳು:
ಅಂದ್ರೆಯನು ಯೇಸು ಆರಿಸಿಕೊಂಡಿರುವ ಹನ್ನೆರಡು ಮಂದಿ ಶಿಷ್ಯರುಗಳಲ್ಲಿ ಒಬ್ಬರಾಗಿದ್ದರು (ಇವರು ಅಪೊಸ್ತಲರು ಎಂದು ಕರೆಯಲ್ಪಟ್ಟಿದ್ದರು).
- ಅಂದ್ರೆಯನ ಸಹೋದರ ಸೀಮೋನ ಪೇತ್ರನಾಗಿದ್ದನು. ಇವರಿಬ್ಬರು ಮೀನುಗಾರರಾಗಿದ್ದರು.
- ಯೇಸು ಪೇತ್ರ ಮತ್ತು ಅಂದ್ರೆಯರನ್ನು ತನ್ನ ಶಿಷ್ಯರಾಗಿರಲು ಕರೆದಾಗ, ಅವರು ಗಲಿಲಾಯ ಸಮುದ್ರದಲ್ಲಿ ಮೀನುಗಳನ್ನು ಹಿಡಿಯುತ್ತಿದ್ದರು.
- ಪೇತ್ರನು ಮತ್ತು ಅಂದ್ರೆಯನು ಯೇಸುವನ್ನು ಭೇಟಿಯಾಗುವುದಕ್ಕೆ ಮುಂಚಿತವಾಗಿ, ಅವರು ದೀಕ್ಷಾಸ್ನಾನ ಕೊಡುವ ಯೋಹಾನ ಶಿಷ್ಯರಾಗಿದ್ದರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲರ, ಶಿಷ್ಯ, ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.01:12-14
- ಯೋಹಾನ.01:40-42
- ಮಾರ್ಕ.01:16-18
- ಮಾರ್ಕ.01:29-31
- ಮಾರ್ಕ.03:17-19
- ಮತ್ತಾಯ.04:18-20
- ಮತ್ತಾಯ.10:2-4
ಪದ ಡೇಟಾ:
- Strong's: G406
ಅಕ್ವಿಲ
ಸತ್ಯಾಂಶಗಳು:
ಅಕ್ವಿಲ ಕಪ್ಪು ಸಮುದ್ರ ದಕ್ಷಿಣ ಕರಾವಳಿಯ ಪ್ರಾಂತ್ಯವಾಗಿರುವ, ಪೊಂತ ಸೀಮೆಯಿಂದ ಬಂದಿರುವ ಯೂದಾ ಕ್ರೈಸ್ತನಾಗಿದ್ದನು.
- ಅಕ್ವಿಲ ಮತ್ತು ಪ್ರಿಸ್ಕಿಲ್ಲ ರವರು ಇಟಲಿಯ ರೋಮಾದಲ್ಲಿ ಸ್ವಲ್ಪಕಾಲ ನಿವಾಸವಾಗಿದ್ದರು, ಆದರೆ ಆದಾದನಂತರ ರೋಮಾ ಚಕ್ರವರ್ತಿ ಕ್ಲೌದ್ಯನು ರೋಮಾ ನಗರವನ್ನು ಬಿಟ್ಟು ಹೋಗಬೇಕೆಂದು ಎಲ್ಲಾ ಯೆಹೂದ್ಯರಿಗೆ ಅಪ್ಪಣೆ ಕೊಟ್ಟನು.
- ಇದಾದನಂತರ ಅಕ್ವಿಲ ಮತ್ತು ಪ್ರಿಸ್ಕಿಲ್ಲ ರವರು ಕೊರಿಂಥಗೆ ಪ್ರಯಾಣಿಸಿದರು, ಅಲ್ಲಿಯೇ ಅವರು ಅಪೊಸ್ತಲನಾದ ಪೌಲನನ್ನು ಭೇಟಿಯಾದರು.
- ಅವರು ಪೌಲನ ಜೊತೆಗೆ ಗುಡಾರಗಳನ್ನು ಮಾಡುವ ಕಸುಬನ್ನು ಮಾಡುತ್ತಿದ್ದರು, ಅಷ್ಟೇಅಲ್ಲದೆ, ಅವರು ತನ್ನ ಸೇವೆಯ ಕೆಲಸದಲ್ಲಿಯೂ ಸಹಾಯ ಮಾಡಿದ್ದರು.
- ಅಕ್ವಿಲ ಮತ್ತು ಪ್ರಿಸ್ಕಿಲ್ಲರವರು ಯೇಸುವಿನ ಕುರಿತಾದ ಸತ್ಯವನ್ನು ವಿಶ್ವಾಸಿಗಳಿಗೆ ತಿಳಿಸಿದ್ದರು; ಆ ವಿಶ್ವಾಸಿಗಳಲ್ಲಿ ಒಬ್ಬರು ಬೋಧನೆ ಮಾಡುವ ವರವನ್ನು ಪಡೆದ ಅಪೋಲ್ಲೋಸ್ ಎನ್ನುವ ಹೆಸರಿನವನಾಗಿದ್ದನು.
(ಅನುವಾದ ಸಲಹೆಗಳು: /ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ತೋರಿಕೆ, ಶ್ರಮೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G207
ಅಜರ್ಯ
ಸತ್ಯಾಂಶಗಳು:
ಅಜರ್ಯ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕರಿದ್ದಾರೆ.
- ಒಬ್ಬ ಅಜರ್ಯ ಬಾಬೆಲೋನಿಯ ಹೆಸರಾದ ಅಬೇದ್ನೆಗೋ ಹೆಸರಿನ ಮೂಲಕ ಚೆನ್ನಾಗಿ ಗೊತ್ತು. ಈತನು ನೆಬುಕದ್ನೆಚರ ಸೈನ್ಯದಿಂದ ಸೆರೆಗೊಯ್ಯಲ್ಪಟ್ಟ ಯೂದಾದಿಂದ ಹೊರಟ ಅನೇಕಮಂದಿ ಇಸ್ರಾಯೇಲ್ಯರಲ್ಲಿ ಒಬ್ಬರಾಗಿದ್ದರು ಮತ್ತು ಇವರನ್ನು ಬಾಬೆಲೋನಿಯದಲ್ಲಿ ನಿವಾಸವಾಗಿರಲು ಕರೆದೊಯ್ಯಲ್ಪಟ್ಟಿದ್ದರು. ಅಜರ್ಯ ಮತ್ತು ತನ್ನ ಜೊತೆಯಲ್ಲಿರುವ ಇಸ್ರಾಯೇಲ್ಯರಾದ ಹನನ್ಯ, ಮೀಶಾಯೇಲರು ಬಾಬೆಲೋನಿಯ ಅರಸನನ್ನು ಆರಾಧಿಸುವುದನ್ನು ತಿರಸ್ಕರಿಸಿದರು, ಅದಕ್ಕಾಗಿ ಅವನು ಅವರಗೆ ಶಿಕ್ಷೆಯಾಗಿ ಅವರನ್ನು ಧಗಧಗನೆ ಉರಿಯುತ್ತಿರುವ ಬೆಂಕಿ ಕೊಂಡದಲ್ಲಿ ಹಾಕಿಸಿದನು. ಆದರೆ ದೇವರು ಅವರನ್ನು ಸಂರಕ್ಷಿಸಿದನು ಮತ್ತು ಅವರಿಗೆ ಯಾವ ಹಾನಿ ಆಗಿರಲಿಲ್ಲ.
- ಯೂದಯ ಅರಸನಾದ ಉಜ್ಜೀಯನನ್ನು ಕೂಡ “ಅಜರ್ಯ” ಎಂದು ಕರೆಯುತ್ತಿದ್ದರು.
- ಇನ್ನೊಬ್ಬ ಅಜರ್ಯ ಹಳೇ ಒಡಂಬಡಿಕೆಯಲ್ಲಿ ಪ್ರಧಾನ ಯಾಜಕನಾಗಿದ್ದನು.
- ಪ್ರವಾದಿಯಾದ ಯೆರೆಮೀಯ ಕಾಲದಲ್ಲಿ, ಅಜರ್ಯ ಎಂದು ಹೆಸರಿರುವ ಒಬ್ಬ ಮನುಷ್ಯನು ಇಸ್ರಾಯೇಲ್ಯರಿಗೆ ತಮ್ಮ ನಿವಾಸ ಸ್ಥಳವನ್ನು ಬಿಟ್ಟು ದೇವರಿಗೆ ಅವಿಧೇಯರಾಗಿರಿ ಎಂದು ತಪ್ಪಾಗಿ ಬೇಡಿಕೊಂಡನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬಾಬೇಲ್, ದಾನಿಯೇಲ, ಹನನ್ಯ, ಮೀಶಾಯೇಲ, ಉಜ್ಜೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5838
ಅತಲ್ಯ
ಸತ್ಯಾಂಶಗಳು:
ಅತಲ್ಯ ಯೂದಾ ರಾಜ್ಯದ ಅರಸನಾದ ಯೆಹೋರಾಮನ ದುಷ್ಟ ಹೆಂಡತಿಯಾಗಿದ್ದಳು. ಈಕೆ ಇಸ್ರಾಯೇಲ್ ದುಷ್ಟ ಅರಸನಾದ ಒಮ್ರಿಯ ಮೊಮ್ಮೊಗಳು.
- ಅತಲ್ಯ ಮಗನಾದ ಅಹಜ್ಯನು ಯೆಹೋರಾಮನು ಸತ್ತನಂತರ ಅರಸನಾದನು.
- ತನ್ನ ಮಗನಾದ ಅಹಜ್ಯನು ಸತ್ತನಂತರ, ಅತಲ್ಯಳು ಉಳಿದ ಅರಸನ ಕುಟುಂಬವನ್ನೆಲ್ಲಾ ಕೊಳ್ಳುವುದಕ್ಕೆ ಪ್ರಣಾಳಿಕೆ ಮಾಡಿದಳು.
- ಆದರೆ ಅತಲ್ಯಳ ಕೊನೆಯ ಮೊಮ್ಮೊಗನಾದ ಯೆಹೋವಾಷನು ಮಾತ್ರ ತನ್ನ ಸೋದರತ್ತೆಯಿಂದ ಬಚ್ಚಿಟ್ಟಲ್ಪಟ್ಟನು ಮತ್ತು ಆಕೆಯಿಂದ ಹತವಾಗದೇ ಸಂರಕ್ಷಿಸಲ್ಪಟ್ಟನು. ಅತಲ್ಯಳು ಆ ದೇಶವನ್ನು ಆರು ವರ್ಷ ಆಳಿದನಂತರ, ಆಕೆ ಕೊಂದಲ್ಪಟ್ಟಳು ಮತ್ತು ಯೆಹೋವಾಷನು ಅರಸನಾದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಹಜ್ಯ, ಯೆಹೋರಾಮ, ಯೆಹೋವಾಷ, ಒಮ್ರಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6721
ಅದೋನಿಯ
ನಿರ್ವಚನ:
ಅದೋನಿಯ ಅರಸನಾದ ದಾವೀದನ ನಾಲ್ಕನೆಯ ಮಗನು.
- ಅದೋನಿಯನು ತನ್ನ ಅಣ್ಣಂದಿಯರಾದ ಅಬ್ಷಾಲೋಮನು ಮತ್ತು ಅಮ್ನೋನನು ಮರಣ ಹೊಂದಿದನಂತರ ಇಸ್ರಾಯೇಲ್ ಅರಸನಾಗಲು ತುಂಬಾ ಪ್ರಯತ್ನಪಟ್ಟನು.
- ಏನೇಯಾಗಲಿ, ದಾವೀದನ ಮಗನಾದ ಸೊಲೊಮೋನನು ಅರಸನಾಗುವನೆಂದು ದೇವರು ವಾಗ್ಧಾನ ಮಾಡಿದ್ದರು. ಆದ್ದರಿಂದ ಅದೋನಿಯನ ಒಳಸಂಚು ಆಲೋಚನೆಗಳೆಲ್ಲಾ ಬಿಸಾಕಲ್ಪಟ್ಟವು ಮತ್ತು ಕೊನೆಗೆ ಸೊಲೊಮೋನನು ಅರಸನಾದನು.
- ಅದೋನಿಯ ಎರಡನೆಯಬಾರಿ ಅರಸನಾಗುವುದಕ್ಕೆ ಪ್ರಯತ್ನಪಟ್ಟಾಗ, ಸೊಲೊಮೋನನು ಅವನನ್ನು ಸಾಯಿಸಿದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : /ದಾವೀದ, /ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G138
ಅನ್ನ
ಸತ್ಯಾಂಶಗಳು:
ಅನ್ನನು ಸುಮಾರು 10 ವರ್ಷಗಳ ಕಾಲದವರೆಗೂ ಯೆರೂಸಲೇಮಿನಲ್ಲಿ ಯೆಹೂದ್ಯರ ಪ್ರಧಾನ ಯಾಜಕನಾಗಿದ್ದನು, ಅಂದರೆ ಸುಮಾರು ಕ್ರಿ.ಶ.6 ರಿಂದ 15 ರವರೆಗೆ ಕೆಲಸ ಮಾಡಿರಬಹುದು. ಇದಾದನಂತರ ಇವರನ್ನು ರೋಮಾ ಪ್ರಭುತ್ವದವರು ಪ್ರಧಾನ ಯಾಜಕತ್ವದಿಂದ ತೆಗೆದು ಹಾಕಿತು, ಆದರೂ ಇವರು ಯೆಹೂದಿಯರಲ್ಲಿ ಪ್ರಭಾವವನ್ನುಂಟು ಮಾಡುವ ನಾಯಕನಾಗಿ ಮುಂದೆವರಿದರು.
- ಅನ್ನನು ಕಾಯಫನಿಗೆ ಮಾವನಾಗಿದ್ದನು, ಈ ಕಾಯಫ ಯೇಸು ಸೇವೆ ಮಾಡುವ ದಿನಗಳಲ್ಲಿ ಮುಖ್ಯ ಪ್ರಧಾನ ಯಾಜಕನಾಗಿದ್ದನು.
- ಪ್ರಧಾನ ಅಧಿಕಾರಿಗಳು ತಮ್ಮ ಸ್ಥಳದಿಂದ ಇಳಿದುಹೋದನಂತರ, ಅವರು ಇನ್ನೂ ಆ ಬಿರುದುಗಳನ್ನು ಹೊಂದಿರುತ್ತಾರೆ ಮತ್ತು ಅವರು ಮಾಡುತ್ತಿರುವ ಉದ್ಯೋಗದ ಬಾಧ್ಯತೆಗಳನ್ನು ಹೊಂದಿರುತ್ತಾರೆ. ಆದ್ದರಿಂದ, ಅನ್ನನು ಕಾಯಫ ಮತ್ತು ಇತರರ ಯಾಜಕತ್ವದ ಕಾಲಗಳಲ್ಲಿ ಪ್ರಧಾನ ಯಾಜಕನಾಗಿ ಕರೆಯಲ್ಪಡುತ್ತಿದ್ದನು.
- ಯೇಸುವನ್ನು ಯೆಹೂದ್ಯರ ನಾಯಕರ ಮಧ್ಯೆದೊಳಗೆ ತೀರ್ಪಿಗಾಗಿ ಕರೆದುಕೊಂಡುಬರುವ ಸಮಯದಲ್ಲಿ, ಪ್ರಶ್ನೆಗಳನ್ನು ಕೇಳುವುದಕ್ಕೆ ಮೊಟ್ಟಮೊದಲು ಯೇಸುವನ್ನು ಅನ್ನನ ಬಳಿಗೆ ಯೇಸುವನ್ನು ಕರೆದುಕೊಂಡು ಬಂದರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಪ್ರಧಾನ ಯಾಜಕ, ಯಾಜಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G452
ಅಪೊಲ್ಲೋಸ
ಸತ್ಯಾಂಶಗಳು:
ಅಪೊಲ್ಲೋಸನು ಐಗುಪ್ತದಲ್ಲಿರುವ ಅಲೆಗ್ಜಾಂಡ್ರಿಯಾ ಪಟ್ಟಣದಿಂದ ಬಂದಿರುವ ಯೆಹೂದ್ಯನಾಗಿದ್ದನು, ಈತನಿಗೆ ಯೇಸುವಿನ ಕುರಿತಾಗಿ ಜನರಿಗೆ ಬೋಧಿಸುವುದರಲ್ಲಿ ವಿಶೇಷವಾದ ಸಾಮರ್ಥ್ಯವನ್ನು ಹೊಂದಿರುತ್ತಾನೆ.
- ಅಪೊಲ್ಲೋಸನು ಇಬ್ರಿ ಲೇಖನಗಳಲ್ಲಿ ಚೆನ್ನಾಗಿ ತರಬೇತಿ ಹೊಂದಿದವನು ಮತ್ತು ಒಳ್ಳೇಯ ಪ್ರಸಂಗೀಕನು ಆಗಿದ್ದನು.
- ಈತನು ಎಫೆಸದಲ್ಲಿರುವ ಕ್ರೈಸ್ತರಾದ ಅಕ್ವಿಲ ಮತ್ತು ಪ್ರಿಸ್ಕಿಲ್ಲರವರಿಂದ ಪರಿಚಯವಾದನು.
- ಯೇಸುವಿನಲ್ಲಿ ನಂಬಿಕೆಯನ್ನಿಡಲು ಜನರಿಗೆ ಸಹಾಯ ಮಾಡುವ ಒಂದೇ ಒಂದು ಗುರಿಯನ್ನು ತಲುಪುವದರಲ್ಲಿ ಪೌಲನು ಮತ್ತು ಅಪೊಲ್ಲೋಸನು, ಹಾಗೆಯೇ ಇತರ ಸುವಾರ್ತಿಕರು ಮತ್ತು ಬೋಧಕರು ಕೆಲಸ ಮಾಡುತ್ತಿದ್ದರೆಂದು ಪೌಲನೇ ಒತ್ತಿ ಹೇಳುತ್ತಿದ್ದಾನೆ.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವ ರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಕ್ವಿಲ, ಎಫೆಸ, ಪ್ರಿಸ್ಕಿಲ್ಲ, ದೇವರ ವಾಕ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G625
ಅಬಿಯಾತರ
ಪದದ ಅರ್ಥ ವಿವರಣೆ:
ಅಬಿಯಾತರನು ಅರಸನಾದ ದಾವೀದನ ಕಾಲದಲ್ಲಿ ಇಸ್ರಾಯೇಲ್ ದೇಶಕ್ಕೆ ಮಹಾಯಾಜಕನಾಗಿದ್ದನು.
- ಅರಸನಾದ ಸೌಲನು ಯಾಜಕರನ್ನು ಕೊಂದಾಗ, ಅಬಿಯಾತರನು ತಪ್ಪಿಸಿಕೊಂಡು ಅರಣ್ಯದಲ್ಲಿರುವ ದಾವೀದನ ಬಳಿಗೆ ಓಡಿಹೋದನು.
- ಅಬಿಯಾತರನು ಮತ್ತು ಮಹಾಯಾಜಕನಾದ ಚಾದೋಕನು ದಾವೀದನ ಆಳ್ವಿಕೆಯಲ್ಲಿ ತುಂಬಾ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸಿದ್ದರು.
- ದಾವೀದನು ಮರಣದ ನಂತರ, ಸೊಲೊಮೋನನು ರಾಜನಾಗುವುದಕ್ಕೆ ಬದಲಾಗಿ ಅದೋನಿಯಾ ಅರಸನಾಗಲು ಅಬಿಯಾತರನು ಅದೋನಿಗೆ ಸಹಾಯ ಮಾಡಿದನು.
- ಈ ಕಾರಣದಿಂದ ಅರಸನಾದ ಸೊಲೊಮೋನನು ಅಬಿಯಾತರನನ್ನು ಯಾಜಕತ್ವದಿಂದ ತೊಲಗಿಸಿದನು.
(ಈ ಪದಗಳನ್ನು ಸಹ ನೋಡಿರಿ: ಚಾದೋಕ, ಸೌಲ ಹ.ಒ., ದಾವೀದ, ಸೊಲೊಮೋನ, ಅದೋನಿಯ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ದತ್ತಾಂಶ:
- Strong's: H54, G8
ಅಬೀಮೆಲೆಕ
ಸತ್ಯಾಂಶಗಳು:
ಅಬೀಮೆಲೆಕ ಅಬ್ರಹಾಮನು ಮತ್ತು ಇಸ್ಸಾಕನು ಕಾನಾನ್ ದೇಶಕ್ಕೆ ಹೋಗಿ ನಿವಾಸ ಮಾಡಲು ಹೋಗುವ ಸಮಯದಲ್ಲಿ ಗೆರಾರ್ ಪ್ರಾಂತ್ಯವನ್ನು ಆಳ್ವಿಕೆ ಮಾಡುತ್ತಿರುವ ಫಿಲಿಸ್ಟೀಯರ ಅರಸನಾಗಿದ್ದನು.
- ಅಬ್ರಾಹಾಮನು ಸಾರಾಳನ್ನು ತನ್ನ ಹೆಂಡತಿಯೆಂದು ಹೇಳಿಕೊಳ್ಳದೆ, ತನ್ನ ತಂಗಿಯೆಂದು ಹೇಳಿಕೊಳ್ಳುವುದರ ಮೂಲಕ ಅರಸನಾದ ಅಬೀಮೆಲೆಕನನ್ನು ಮೋಸ ಮಾಡಿದ್ದನು.
- ಅಬ್ರಹಾಮ ಮತ್ತು ಅಬೀಮೆಲೆಕರಿಬ್ಬರು ಬೇರ್ಷೆಬದಲ್ಲಿರುವ ಬಾವಿಗಳನ್ನು ಹೊಂದಿಕೊಳ್ಳುವ ವಿಷಯದಲ್ಲಿ ಒಂದು ಒಪ್ಪಂದಕ್ಕೆ ಬಂದರು.
- ಅನೇಕ ವರ್ಷಗಳಾದನಂತರ, ರೆಬೆಕ್ಕಳು ತನ್ನ ಸಹೋದರಿಯೆಂದು, ತನ್ನ ಹೆಂಡತಿಯಲ್ಲವೆಂದು ಇಸ್ಸಾಕನು ಕೂಡ ಅಬೀಮೆಲೆಕನಿಗೆ ಮತ್ತು ಇತರ ಗೆರಾರ್ ಮನುಷ್ಯರಿಗೆ ಹೇಳುವುದರ ಮೂಲಕ ಮೋಸಗೊಳಿಸಿದನು.
- ಅರಸನಾದ ಅಬೀಮೆಲೆಕನು ತನ್ನೊಂದಿಗೆ ಸುಳ್ಳನ್ನು ಹೇಳಿದ್ದಕ್ಕೋಸ್ಕರ ಅಬ್ರಹಾಮನನ್ನು ಮತ್ತು ಕೆಲವು ಕಾಲವಾದನಂತರ ಇಸ್ಸಾಕನನ್ನು ಗದರಿಸಿದನು.
- ಅಬೀಮೆಲೆಕ ಎಂದು ಹೆಸರಿರುವ ಇನ್ನೊಬ್ಬ ವ್ಯಕ್ತಿ ಗಿದ್ಯೋನ್ ಮಗನಾಗಿದ್ದನು ಮತ್ತು ಯೋತಾಮನಿಗೆ ಸಹೋದರನಾಗಿದ್ದನು. ಕೆಲವೊಂದು ಅನುವಾದಗಳಲ್ಲಿ ಅರಸನಾದ ಅಬೀಮೆಲೆಕ ಎನ್ನುವ ವ್ಯಕ್ತಿಗೆ ಬೇರೆಯಾಗಿರುವ ವ್ಯಕ್ತಿಗಳು ಅದೇ ಹೆಸರಿನ ಮೇಲೆ ಇದ್ದು, ಅವರ ಹೆಸರುಗಳಿಗೆ ಬೇರೆಯಾದ ಅಕ್ಷರಗಳನ್ನು ಉಪಯೋಗಿಸಿರಬಹುದು, ಅದನ್ನು ಸರಿಯಾಗಿ ನೋಡಿ ಹಾಕಿರಿ.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : /ಸ್ವಾಸ್ಥ್ಯ, /ಇಸ್ರಾಯೇಲ್, /ಯಾಕೋಬ, /ಯಾಜಕ, /ಕುಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H40
ಅಬೀಯ
ಸತ್ಯಾಂಶಗಳು:
ಅಬೀಯ ಯೂದಾ ಅರಸನಾಗಿ ಕ್ರಿ.ಪೂ.915 ರಿಂದ 913 ರವರೆಗೆ ಆಳ್ವಿಕೆ ಮಾಡಿದ್ದನು. ಇವನು ಅರಸನಾದ ಯಾರೊಬ್ಬಾಮನ ಮಗನಾಗಿದ್ದನು. ಅಬೀಯ ಹೆಸರಿನ ಮೇಲೆ ಇರುವ ಇತರ ಜನರು ಕೂಡ ಹಳೇ ಒಡಂಬಡಿಕೆಯಲ್ಲಿ ಸೇವೆಯನ್ನು ಮಾಡಿದ್ದರು.
- ಸಮೂವೇಲ ಮಕ್ಕಳಾಗಿರುವ ಅಬೀಯ ಮತ್ತು ಯೋವೇಲರು ಬೇರ್ಷೆಬದಲ್ಲಿರುವ ಇಸ್ರಾಯೇಲ್ಯರ ಜನರ ಮೇಲೆ ನಾಯಕರಾಗಿದ್ದರು. * ಯಾಕಂದರೆ ಅಬೀಯ ಮತ್ತು ತನ್ನ ಸಹೋದರನು ಯಥಾರ್ಥವಾಗಿರದೇ ಲೋಭಿಗಳಾಗಿದ್ದರು. ಆದ್ದರಿಂದ ಜನರೆಲ್ಲರು ಸಮೂವೇಲನ ಹತ್ತಿರಕ್ಕೆ ಹೋಗಿ ನಿಮ್ಮ ಮಕ್ಕಳಿಗೆ ಬದಲಾಗಿ ನಮಗೆ ಬೇರೊಬ್ಬ ಅರಸನನ್ನು ನೇಮಿಸು ಎಂದು ಕೇಳಿಕೊಂಡರು.
- ಅಬೀಯ ಅರಸನಾದ ದಾವೀದನ ಆಳ್ವಿಕೆಯಲ್ಲಿ ದೇವಾಲಯದಲ್ಲಿ ಸೇವೆ ಮಾಡುವ ಯಾಜಕರುಗಳಲ್ಲಿ ಒಬ್ಬರಾಗಿದ್ದರು.
- ಅಬೀಯ ಅರಸನಾದ ಯಾರೊಬ್ಬಾಮನ ಮಕ್ಕಳಲ್ಲಿ ಒಬ್ಬನಾಗಿದ್ದನು.
- ಬಾಬೆಲೋನಿನ ಸೆರೆಯಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಅಬೀಯ ಜೆರೂಬ್ಬಾಬೆಲ್ ಜೊತೆಯಲ್ಲಿ ಹಿಂದಿರುಗಿ ಬಂದ ಪ್ರಧಾನ ಯಾಜಕನಾಗಿದ್ದನು.
(ಅನುವಾದ ಸಲಹೆಗಳು : /ಹೆಸರುಗಳನ್ನು ಅನುವಾದ ಮಾಡಿರಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H29, G7
ಅಬ್ನೇರ
ನಿರ್ವಚನ:
ಅಬ್ನೇರನು ಹಳೇ ಒಡಂಬಡಿಕೆಯಲ್ಲಿ ಅರಸನಾದ ಸೌಲನಿಗೆ ಸೋದರ ಸಂಬಂಧಿ.
- ಅಬ್ನೇರನು ಸೌಲನ ಸೈನ್ಯದಲ್ಲಿ ಮುಖ್ಯ ನಾಯಕನಾಗಿದ್ದನು ಮತ್ತು ದಾವೀದನು ಒಬ್ಬ ರಣ ಶೂರನಾದ ಗೊಲ್ಯಾತನನ್ನು ಸಾಯಿಸಿದನಂತರ, ಈ ಅಬ್ನೇರನೇ ದಾವೀದನನ್ನು ಸೌಲನಿಗೆ ಪರಿಚಯ ಮಾಡಿದನು.
- ಅರಸನಾದ ಸೌಲನ ಮರಣದನಂತರ, ಇಸ್ರಾಯೇಲನಲ್ಲಿ ಅರಸನಾಗಿ ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನೇ ನೇಮಿಸಿದನು.
- ಕೆಲವು ಕಾಲವಾದನಂತರ, ದಾವೀದನ ಸೇನಾಪತಿಯಾದ ಯೋವಾಬನಿಂದ ಅಬ್ನೇರನನ್ನು ವಿಶ್ವಾಸಘಾತುಕವಾಗಿ ಸಾಯಿಸಲ್ಪಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H74
ಅಬ್ರಹಾಮ, ಅಬ್ರಾಮ
ಸತ್ಯಾಂಶಗಳು:
ಅಬ್ರಾಮನು ಇಸ್ರಾಯೇಲ್ಯರಿಗೆ ತಂದೆಯಾಗಿರಲು ದೇವರು ಆಯ್ಕೆಮಾಡಿಕೊಂಡಿರುವ ವ್ಯಕ್ತಿ. ಇವರು ಕಲ್ದೀಯರ ಊರ್ ಎನ್ನುವ ಪಟ್ಟಣದಿಂದ ಬಂದಿರುವ ವ್ಯಕ್ತಿಯಾಗಿದ್ದನು. ದೇವರು ಈತನ ಹೆಸರನ್ನು “ಅಬ್ರಹಾಮ” ಎಂದು ಬದಲಾಯಿಸಿದನು.
- “ಅಬ್ರಾಮ” ಎನ್ನುವ ಹೆಸರಿಗೆ “ಉನ್ನತನಾದ ತಂದೆ” ಎಂದರ್ಥ.
- “ಅಬ್ರಹಾಮ” ಎನ್ನುವ ಹೆಸರಿಗೆ “ಅನೇಕ ಜನಾಂಗಗಳಿಗೆ ಮೂಲ ಪಿತೃ” ಎಂದರ್ಥ.
- ನಿನಗೆ ಅತ್ಯಧಿಕ ಸಂತಾನವನ್ನು ಕೊಡುವೆನು ಅವರು ದೊಡ್ಡ ಜನಾಂಗವಾಗಿ ಮಾರ್ಪಡುವರು ಎಂದು ದೇವರು ಅಬ್ರಹಾಮನೊಂದಿಗೆ ವಾಗ್ಧಾನ ಮಾಡಿದರು.
- ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆತನಿಗೆ ವಿಧೇಯನಾದನು. ದೇವರು ಅಬ್ರಹಾಮನನ್ನು ಕಲ್ದೀಯ ದೇಶದಿಂದ ಕಾನಾನ್ ಎಂಬ ದೇಶಕ್ಕೆ ನಡಿಸಿದನು.
- ಅಬ್ರಹಾಮನು ಮತ್ತು ತನ್ನ ಹೆಂಡತಿಯಾದ ಸಾರಾಳು ತುಂಬಾ ವೃದ್ಧಾಪ್ಯದಲ್ಲಿರುವಾಗ, ಕಾನಾನ್ ಭೂಮಿಯಲ್ಲಿ ಜೀವಿಸುತ್ತಿರುವಾಗ, ಅವರಿಗೆ ಗಂಡು ಮಗನಾದ ಇಸಾಕನನ್ನು ಹೊಂದಿಕೊಂಡಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಕಲ್ದೀಯ, ಸಾರಾಳು, ಇಸಾಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- __04:06___ ಅಬ್ರಾಮನು ಕಾನಾನ್ ದೇಶಕ್ಕೆ ಬಂದಾಗ, “ನಿನ್ನ ಸುತ್ತಮುತ್ತ ಇರುವದೆಲ್ಲವನ್ನು ನೋಡು, ನೀನು ನೋಡುತ್ತಿರುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಯವರಿಗೂ ಸ್ವಾಸ್ಥ್ಯವಾಗಿ ಕೊಡುವೆನು” ಎಂದು ದೇವರು ಹೇಳಿದರು.
- __05:04___ ದೇವರು ___ ಅಬ್ರಾಮನ __ ಹೆಸರನ್ನು ಅಬ್ರಹಾಮ ಎಂದು ಮಾರ್ಪಡಿಸಿದರು. ಇದಕ್ಕೆ “ಅನೇಕ ಜನಾಂಗಗಳಿಗೆ ಪಿತೃ” ಎಂದರ್ಥ.
- 05:05 ಒಂದು ವರ್ಷವಾದನಂತರ, ಅಬ್ರಹಾಮನು 100 ವರ್ಷಗಳ ವಯಸ್ಸು ಹೊಂದಿಕೊಂಡಾಗ ಮತ್ತು ಸಾರಾಳು 90 ವರ್ಷಗಳ ವಯಸ್ಸು ಬಂದಾಗ, ಸಾರಾಳು ಅಬ್ರಹಾಮನ ಮಗನಿಗೆ ಜನನವನ್ನು ಕೊಟ್ಟಳು.
- 05:06 ಇಸಾಕನು ಯೌವನಸ್ಥನಾಗಿರುವಾಗ, ದೇವರು, “ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಹೋಗಿ, ಅವನನ್ನು ನನಗೆ ಬಲಿಯಾಗಿ ಅರ್ಪಿಸು” ಎಂದು ಹೇಳುವುದರ ಮೂಲಕ __ ಅಬ್ರಹಾಮನ __ ನಂಬಿಕೆಯನ್ನು ಪರೀಕ್ಷೆ ಮಾಡಿದನು,
- 06:01 ಅಬ್ರಹಾಮನು ___ ವೃದ್ಧ ವಯಸ್ಸಿಗೆ ಬಂದಾಗ, ತನ್ನ ಮಗನಾದ ಇಸಾಕನು ದೊಡ್ಡವನಾಗಿದ್ದರಿಂದ, ___ ಅಬ್ರಹಾಮನು ತನ್ನ ಸೇವಕರಲ್ಲಿ ಒಬ್ಬರನ್ನು ಕರೆಕಳುಹಿಸಿ, ತನ್ನ ಸಂಬಂಧಿಕರಿರುವ ಸ್ಥಳಕ್ಕೆ ಕಳುಹಿಸಿ, ತನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ಹುಡಕಬೇಕೆಂದು ಹೇಳಿದನು.
- 06:04 ತುಂಬಾ ಹೆಚ್ಚು ಕಾಲವಾದನಂತರ, ___ ಅಬ್ರಹಾಮನು ___ ತೀರಿಕೊಂಡನು ಮತ್ತು ಒಡಂಬಡಿಕೆಯಲ್ಲಿ ದೇವರು ತನ್ನೊಂದಿಗೆ ಮಾಡಿದ ಪ್ರತಿಯೊಂದು ವಾಗ್ಧಾನವನ್ನು ಇಸಾಕನೊಂದಿಗೆ ಮಾಡಿ ಮುಂದೆವರಿಸಿದನು.
- 21:02 ಲೋಕದಲ್ಲಿರುವ ಸಮಸ್ತ ಜನಾಂಗಗಳು ಆತನ ಮೂಲಕ ಆಶೀರ್ವಾದವನ್ನು ಪಡೆಯುತ್ತಾರೆಂದು ದೇವರು __ ಅಬ್ರಹಾಮನೊಂದಿಗೆ __ ವಾಗ್ಧಾನ ಮಾಡಿದ್ದನು.
ಪದ ಡೇಟಾ:
- Strong's: H87, H85, G11
ಅಬ್ಷಾಲೋಮ
ಸತ್ಯಾಂಶಗಳು:
ಅಬ್ಷಾಲೋಮನು ಅರಸನಾದ ದಾವೀದನಿಗೆ ಮೂರನೆಯ ಮಗನಾಗಿದ್ದನು. ಈತನು ಬಹು ಸುಂದರವಾಗಿದ್ದನು ಮತ್ತು ಕೋಪಗೊಳ್ಳುವ ಸ್ವಭಾವವನ್ನು ಹೊಂದಿದವನಾಗಿದ್ದನು.
- ಅಬ್ಷಾಲೋಮ ತಂಗಿಯಾದ ತಾಮಾರಳು ಅವನ ಸಹೋದರನಾದ ಅಮ್ನೋನನಿಂದ ಮಾನಭಂಗಕ್ಕೆ ಗುರಿಯಾಗಿದ್ದಳು. ಅದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ಕೊಲ್ಲಬೇಕೆಂದು ಉಪಾಯ ಮಾಡಿದ್ದನು.
- ಅಮ್ನೋನನನ್ನು ಕೊಂದನಂತರ, ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ (ತನ್ನ ತಾಯಿ ಬಂದಿರುವ ಸ್ಥಳಕ್ಕೆ) ಓಡಿಹೋದನು ಮತ್ತು ಅಲ್ಲಿ ಮೂರು ವರ್ಷಗಳ ಕಾಲ ಇದ್ದುಕೊಂಡಿದ್ದನು. ಇದಾದನಂತರ ಅವನು ಯೆರೂಸಲೇಮಿಗೆ ತಿರುಗಿ ಬರಬೇಕೆಂದು ಅರಸನಾದ ದಾವೀದನು ಕರೆಕಳುಗಿಸಿದನು, ಆದರೆ ಸುಮಾರು ಎರಡು ವರ್ಷಗಳ ಕಾಲ ತನ್ನ ಹತ್ತಿರಕ್ಕೆ ಬರುವುದಕ್ಕೆ ದಾವೀದನು ಅಬ್ಷಾಲೋಮನಿಗೆ ಅನುಮತಿ ಕೊಟ್ಟಿರಲಿಲ್ಲ.
- ಅಬ್ಷಾಲೋಮನು ಕೆಲವೊಂದು ಜನರನ್ನು ಅರಸನಾದ ದಾವೀದನಿಗೆ ವಿರುದ್ಧವಾಗಿ ಎಬ್ಬಿಸಿದ್ದನು ಮತ್ತು ಅವನಿಗೆ ವಿರುದ್ಧವಾಗಿ ಒಂದು ದಂಗೆಯನ್ನು ನಡೆಸಿದ್ದನು.
- ದಾವೀದನ ಸೈನ್ಯವು ಅಬ್ಷಾಲೋಮನಿಗೆ ವಿರುದ್ಧವಾಗಿ ಹೋರಾಟ ಮಾಡಿ, ಅವನನ್ನು ಸಾಯಿಸಿದರು. ಇದೆಲ್ಲಾ ನಡೆದಾಗ ದಾವೀದನು ತುಂಬಾ ದುಃಖದಲ್ಲಿ ಮುಳುಗಿದ್ದನು.
(ಅನುವಾದ ಸಲಹೆಗಳು : ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಗೆಷೂರ್, ಅಮ್ನೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H53
ಅಮಚ್ಯ
ಸತ್ಯಾಂಶಗಳು:
ಅಮಚ್ಯ ತಂದೆ ಅರಸನಾದ ಯೋವಾಷನು ಕೊಂದು ಹಾಕಲ್ಪಟ್ಟಾಗ ಯೆಹೂದ ರಾಜ್ಯವನ್ನು ಆಳುವುದಕ್ಕೆ ಅರಸನಾದನು.
- ಅರಸನಾದ ಅಮಚ್ಯ ಯೆಹೂದ ರಾಜ್ಯವನ್ನು ಕ್ರಿ.ಪೂ.796 ರಿಂದ 767 ರವರೆಗೆ ಸುಮಾರು ಇಪ್ಪತ್ತೊಂಭತ್ತು ವರ್ಷಗಳ ಕಾಲ ಆಳಿದನು.
- ಇವರು ಒಳ್ಳೇಯ ಅರಸರಾಗಿದ್ದರು, ಆದರೆ ವಿಗ್ರಹಗಳಿಗೆ ಆರಾಧನೆ ಮಾಡುವ ಸ್ಥಳಗಳನ್ನು ತೆಗೆದು ಹಾಕಲಿಲ್ಲ.
- ಅಮಚ್ಯ ಕೊನೆಗೆ ತನ್ನ ತಂದೆಗೆ ಕೊಲೆಗೆ ಕಾರಣವಾದ ಎಲ್ಲಾ ಜನರನ್ನು ಸಾಯಿಸಿದನು.
- ಈತನು ತನಗೆ ವಿರುದ್ಧವಾಗಿರುವ ಎದೋಮ್ಯರನ್ನು ಸೋಲಿಸಿದನು ಮತ್ತು ಅವರೆಲ್ಲರನ್ನು ಯೆಹೂದ ರಾಜ್ಯದ ವಶದಲ್ಲಿರುವಂತೆ ಮಾಡಿದನು.
- ಈತನು ಯುದ್ಧ ಮಾಡುವುದಕ್ಕೆ ಇಸ್ರಾಯೇಲ್ ಅರಸನಾದ ಯೋವಾಷನಿಗೆ ಸವಾಲು ಬೀಸಿದನು. ಯೆರೂಸಲೇಮಿನ ಗೋಡೆಗಳ ಭಾಗವು ಕೆಳಗೆ ಬಿದ್ದುಹೋಗಿತ್ತು ಮತ್ತು ದೇವಾಲಯದ ಬೆಳ್ಳಿ, ಬಂಗಾರಗಳು ಕದಿಯಲ್ಪಟ್ಟಿದ್ದವು.
- ಕೆಲವು ವರ್ಷಗಳಾದನಂತರ, ಅರಸನಾದ ಅಮಚ್ಯನು ಯೆಹೋವ ದೇವರಿಂದ ದೂರವಾದರು ಮತ್ತು ಯೆರೂಸಲೇಮಿನಲ್ಲಿರುವ ಕೆಲವೊಂದು ಮನುಷ್ಯರು ಇವನನ್ನು ಸಿಕ್ಕಿಸಿಕೊಂಡು, ಸಾಯಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಯೋವಾಷ, ಎದೋಮ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H558
ಅಮಾಲೇಕ, ಅಮಾಲೇಕ್ಯ, ಅಮಾಲೇಕ್ಯರು
ಸತ್ಯಾಂಶಗಳು:
ಅಮಾಲೇಕ್ಯರು ಅಲೆಮಾರಿಗಳು, ಕಾನಾನ್ ದಕ್ಷಿಣ ಭಾಗದ ಎಲ್ಲಾ ಕಡೆ ನಿವಾಸ ಮಾಡಿದವರು, ಅಂದರೆ ನೆಗೆವ್ ಮರುಭೂಮಿಯಿಂದ ಅರಬ ದೇಶದವರೆಗೂ ನಿವಾಸ ಮಾಡಿದ ಜನರು. ಈ ವರ್ಗದ ಜನರು ಏಸಾವನ ಮೊಮ್ಮೊಗನಾದ ಅಮಾಲೇಕನಿಂದ ಬಂದ ಸಂತಾನದವರು,
- ಇಸ್ರಾಯೇಲ್ಯರು ಕಾನಾನ್.ಗೆ ಬಂದು ಜೀವಿಸುವ ಸಮಯದಿಂದ ಅಮಾಲೇಕ್ಯರು ಅವರಿಗೆ ಶತ್ರುಗಳಾಗಿದ್ದರು.
- “ಅಮಾಲೇಕ” ಎನ್ನುವ ಪದವು ಕೆಲವೊಂದುಬಾರಿ ಎಲ್ಲಾ ಅಮಾಲೇಕ್ಯರನ್ನು ಸೂಚಿಸುವುದಕ್ಕೆ ಅಲಂಕಾರವಾಗಿ ಉಪಯೋಗಿಸಿದ್ದಾರೆ. (ನೋಡಿರಿ : ಅಲಂಕಾರ ರೂಪದಲ್ಲಿರುವ ಮಾತುಗಳು)
- ಅಮಾಲೇಕ್ಯರಿಗೆ ವಿರುದ್ಧವಾಗಿ ನಡೆದ ಒಂದು ಯುದ್ಧದಲ್ಲಿ, ಮೋಶೆ ತನ್ನ ಕೈಗಳನ್ನು ಮೇಲಕ್ಕೆ ಎತ್ತಿದಾಗ, ಇಸ್ರಾಯೇಲ್ಯರು ಜಯವನ್ನು ಹೊಂದಿದರು. ಯಾವಾಗ ಆತನ ಕೈಗಳು ಸೋತುಗೊಂಡು, ಅವುಗಳನ್ನು ಕೆಳಕ್ಕೆ ಇಳಿಸಿದಾಗ, ಅವರು ಸೋತು ಹೋದರು. ಆದ್ದರಿಂದ ಇಸ್ರಾಯೇಲ್ಯರ ಸೈನ್ಯವು ಅಮಾಲೇಕ್ಯರನ್ನು ಸೋಲಿಸುವವರೆಗೂ ಮೋಶೆಯ ಕೈಗಳನ್ನು ಎತ್ತಿ ಹಿಡಿಯಲು ಆರೋನನು ಮತ್ತು ಹೂರನು ಸಹಾಯ ಮಾಡಿದರು.
- ಅರಸನಾದ ದಾವೀದನು ಮತ್ತು ಅರಸನಾದ ಸೌಲನು ಅಮಾಲೇಕ್ಯರ ವಿರುದ್ಧ ಸೈನ್ಯದ ಯುದ್ಧ ಕಾರ್ಯಗಳನ್ನು ನಡೆಸಿದರು.
- ಅಮಾಲೇಕ್ಯರ ಮೇಲೆ ಒಂದುಬಾರಿ ಜಯವನ್ನು ಪಡೆದನಂತರ, ದೇವರು ಸೌಲನಿಗೆ ಮಾಡಬೇಕಾದ ಕೆಲಸವನ್ನು ಮಾಡದೇ ಇರುವುದರಿಂದ, ಅಮಾಲೇಕ್ಯರ ಅರಸನನ್ನು ಸಾಯಿಸದೇ ಬಿಟ್ಟಿದ್ದರಿಂದ ಮತ್ತು ಕೆಲವೊಂದನ್ನು ಕದ್ದ ಕಾರಣದಿಂದ ಸೌಲನು ದೇವರಿಗೆ ಅವಿಧೇಯತೆಯನ್ನು ತೋರಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅರಾಬ, ದಾವೀದ, ಏಶಾವ, ನಿಗೆವ, ಸೌಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6002, H6003
ಅಮೋರಿಯ, ಅಮೋರಿಯರು
ಸತ್ಯಾಂಶಗಳು:
ಅಮೋರಿಯರು ನೋಹನ ಮೊಮ್ಮೊಗನಾದ ಕಾನಾನನಿಂದ ಬಂದ ಶಕ್ತಿಯುತವಾದ ಜನಾಂಗ ಗುಂಪು.
- ಈ ಹೆಸರಿಗೆ “ಉನ್ನತ ಸ್ಥಳ” ಎಂದರ್ಥ, ಇದು ಪರ್ವತ ಪ್ರಾಂತ್ಯಗಳನ್ನು ಸೂಚಿಸುತ್ತದೆ, ಅವರು ಅಲ್ಲಿಯೇ ನಿವಾಸ ಮಾಡುತ್ತಿದ್ದರು ಅಥವಾ ವಾಸ್ತವಿಕವಾಗಿ ಹೇಳಬೇಕಂದರೆ ಅವರೆಲ್ಲರೂ ತುಂಬಾ ಎತ್ತರವಾಗಿದ್ದರು.
- ಯೊರ್ದನ್ ನದಿಯ ಎರಡು ಬದಿಗೆ ಅಮ್ಮೋನಿಯರು ಜೀವನ ಮಾಡುತ್ತಿದ್ದರು. ಆಯಿ ಪಟ್ಟಣವು ಅಮೋರಿಯರ ನಿವಾಸ ಸ್ಥಾನವಾಗಿತ್ತು.
- ದೇವರು “ಅಮೋರಿಯರ ಪಾಪವನ್ನು” ಸೂಚಿಸುತ್ತಿದ್ದಾರೆ, ಆ ಪಾಪದಲ್ಲಿ ಅವರು ತಮ್ಮ ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದೂ ಇದ್ದಿತ್ತು ಮತ್ತು ಪಾಪ ಕೃತ್ಯಗಳನ್ನು ಮಾಡುವುದೂ ಒಳಗೊಂಡಿತ್ತು.
- ದೇವರು ಆಜ್ಞಾಪಿಸಿದಂತೆಯೇ ಯೆಹೋಶುವನು ಅಮೋರಿಯರನ್ನು ನಾಶಗೊಳಿಸಲು ಇಸ್ರಾಯೇಲ್ಯರನ್ನು ನಡೆಸಿದನು.`
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 15:07 ಸ್ವಲ್ಪಕಾಲವಾದನಂತರ, ಕಾನಾನ್.ನಲ್ಲಿ ಇತರ ಜನಾಂಗಗಳ ಅರಸರು, __ ಅಮ್ಮೋನಿಯರು __, ಇಸ್ರಾಯೇಲ್ಯರೊಂದಿಗೆ ಗಿಬ್ಯೋನ್ಯರು ಸಮಾಧಾನದ ಔತಣವನ್ನು ಮಾಡಿಕೊಂಡಿದ್ದಾರೆಂದು ಕೇಳಿಸಿಕೊಂಡರು, ಆದ್ದರಿಂದ ಅವರೆಲ್ಲರು ತಮ್ಮ ಸೈನ್ಯಗಳನ್ನು ಒಂದು ದೊಡ್ಡ ಸೈನ್ಯವನ್ನಾಗಿ ಮಾಡಿಕೊಂಡು ಗಿಬ್ಯೋನ್ ಮೇಲೆ ಧಾಳಿ ಮಾಡಿದರು.
- 15:08 ಬೆಳಗಿನ ಜಾವದಲ್ಲಿ __ ಅಮ್ಮೋನಿಯರ __ ಸೈನ್ಯಗಳು ಬಂದು ಅವರ ಮೇಲೆ ಧಾಳಿ ಮಾಡಿದ್ದನ್ನು ಕಂಡು ಅವರು ಬೆರಗಾದರು.
- 15:09 ಆ ದಿನದಂದು ದೇವರು ಇಸ್ರಾಯೇಲ್ಯರಿಗೋಸ್ಕರ ಹೋರಾಟ ನಡೆಸಿದರು. ಆತನು __ ಅಮ್ಮೋನಿಯರೆಲ್ಲರನ್ನು __ ಗೊಂದಲಕ್ಕೆ ಗುರಿ ಮಾಡಿದನು ಮತ್ತು ದೊಡ್ಡ ದೊಡ್ಡ ಆಲಿಕಲ್ಲುಗಳನ್ನು ಕಳುಹಿಸಿದನು, ಅವು __ ಅಮ್ಮೋನಿಯರನ್ನು __ ಸಾಯಿಸಿದವು.
- 15:10 ದೇವರು ಆಕಾಶದಲ್ಲಿ ಒಂದು ಸ್ಥಳದಲ್ಲಿಯೇ ಸೂರ್ಯನು ನಿಂತುಕೊಂಡಿರುವಂತೆ ಮಾಡಿದನು, ಆದ್ದರಿಂದ ಇಸ್ರಾಯೇಲ್ಯರು __ ಅಮ್ಮೋನಿಯರನ್ನು __ ಸಂಪೂರ್ಣವಾಗಿ ಸೋಲಿಸುವುದಕ್ಕೆ ಬೇಕಾದಷ್ಟು ಸಮಯವಿದ್ದಿತ್ತು.
ಪದ ಡೇಟಾ:
- Strong's: H567,
ಅಮ್ನೋನ್
ಸತ್ಯಾಂಶಗಳು:
ಅಮ್ನೋನನು ಅರಸನಾದ ದಾವೀದನ ಹಿರಿಯ ಮಗನಾಗಿದ್ದನು ತನ್ನ ತಾಯಿ ಅರಸನಾದ ದಾವೀದನ ಹೆಂಡತಿ ಅಹೀನೋವಮಳು.
- ಅಮ್ನೋನನು ತನ್ನ ಸಹೋದರಿಯಾದ ತಾಮಾರಳನ್ನು ಮಾನಭಂಗ ಮಾಡಿದನು. ಈಕೆ ಅಬ್ಷಾಲೋಮನ ಸಹೋದರಿಯಾಗಿದ್ದಳು.
- ಈ ಕಾರಣದಿಂದ, ಅಬ್ಷಾಲೋಮನು ಅಮ್ನೋನನನ್ನು ಸಿಕ್ಕಿಸಿಕೊಂಡು ಕೊಂದು ಹಾಕಿದನು.
(ಈ ಪದಗಳನ್ನು ಸಹ ನೋಡಿರಿ : ದಾವೀದ, ಅಬ್ಷಾಲೋಮ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H550
ಅಮ್ಮೋನ್, ಅಮ್ಮೋನಿಯ, ಅಮ್ಮೋನಿಯರು
ಸತ್ಯಾಂಶಗಳು:
“ಅಮ್ಮೋನ್ ಜನರು” ಅಥವಾ “ಅಮ್ಮೋನಿಯರು” ಎನ್ನುವವರು ಕಾನಾನ್ ದೇಶದಲ್ಲಿ ಒಂದು ವರ್ಗದ ಜನರಾಗಿರುತ್ತಾರೆ. ಅವರು ಲೋಟನ ಚಿಕ್ಕ ಮಗಳಿಗೆ ಹುಟ್ಟಿದ ಗಂಡು ಮಗುವಾದ ಬೆನಮ್ಮಿಯಿಂದ ಬಂದ ಸಂತಾನದವರು.
- “ಅಮ್ಮೋನಿಯಳು” ಎನ್ನುವ ಪದವು ವಿಶೇಷವಾಗಿ ಅಮ್ಮೋನ್ ಸ್ತ್ರೀಯರಿಗೆ ಸೂಚಿಸುತ್ತದೆ. ಇದನ್ನು “ಅಮ್ಮೋನ್ ಸ್ತ್ರೀ” ಎಂಬುದಾಗಿಯೂ ಅನುವಾದ ಮಾಡುತ್ತಾರೆ.
- ಅಮ್ಮೋನಿಯರು ಯೊರ್ದನ್ ನದಿಯ ಪೂರ್ವ ದಿಕ್ಕಿಗೆ ನಿವಾಸ ಮಾಡುತ್ತಿದ್ದರು ಮತ್ತು ಅವರು ಇಸ್ರಾಯೇಲ್ಯರಿಗೆ ಶತ್ರುಗಳಾಗಿದ್ದರು.
- ಒಂದು ವಿಷಯದಲ್ಲಿ, ಅಮ್ಮೋನಿಯರು ಇಸ್ರಾಯೇಲ್ಯರನ್ನು ಶಪಿಸುವುದಕ್ಕೆ ಪ್ರವಾದಿಯಾದ ಬಿಳಾಮನನ್ನು ಹಿಡಿದಿದ್ದರು, ಆದರೆ ದೇವರು ಅದನ್ನು ಮಾಡುವುದಕ್ಕೆ ಅನುಮತಿ ನೀಡಲಿಲ್ಲ.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಶಾಪ, ಯೊರ್ದನ್ ನದಿ, ಲೋಟ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5983, H5984, H5985
ಅರಬ್ಬೀ, ಅರಬಿಯನು, ಅರಬ್ಬೀ ದೇಶದವರು
ಸತ್ಯಾಂಶಗಳು :
ಅರಬ್ಬೀ ಎನ್ನುವುದು ಪ್ರಪಂಚದಲ್ಲಿಯೇ ಅತೀ ದೊಡ್ಡ ಪರ್ಯಾಯ ದ್ವೀಪ, ಸುಮಾರು 3,000,000 ಚದರ ಕಿಲೋಮೀಟರ್.ಗಳಷ್ಟು ಭೂಮಿಯನ್ನು ಹೊಂದಿರುತ್ತದೆ. ಇದು ಇಸ್ರಾಯೇಲ್ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ ಮತ್ತು ಇದರ ಗಡಿಗಳೆಲ್ಲವೂ ಕೆಂಪು ಸಮುದ್ರ, ಅರಬ್ಬೀ ಸಮುದ್ರ ಮತ್ತು ಪರ್ಷಿಯನ್ ಗಲ್ಫ್.ಗಳಿಂದ ಆವರಿಸಲ್ಪಟ್ಟಿರುತ್ತದೆ.
- “ಅರಬಿಯನು” ಎನ್ನುವ ಪದವು ಅರಬ್ಬೀ ದೇಶದಲ್ಲಿ ನಿವಾಸ ಮಾಡುವವರನ್ನು ಸೂಚಿಸುತ್ತದೆ ಅಥವಾ ಅರಬ್ಬೀ ದೇಶಕ್ಕೆ ಸಂಬಂಧಪಟ್ಟವರನ್ನು ಕೂಡ ಸೂಚಿಸುತ್ತದೆ.
- ಅರಬ್ಬೀ ದೇಶದಲ್ಲಿ ಜೀವಿಸಿದ ಆದಿ ಜನರೆಲ್ಲರೂ ಶೇಮ್ ಮೊಮ್ಮೊಕ್ಕಳಾಗಿರುತ್ತಾರೆ. ಅರಬ್ಬೀಯ ಇತರ ಆದಿ ನಿವಾಸಿಗಳೆಲ್ಲರೂ ಅಬ್ರಹಾಮನ ಮಗನಾದ ಇಷ್ಮಾಯೇಲ್ ಮತ್ತು ತನ್ನ ಸಂತಾನದವರು, ಅದೇರೀತಿಯಾಗಿ ಏಸಾವನ ಸಂತಾನದವರು ಆಗಿರುತ್ತಾರೆ.
- ಇಸ್ರಾಯೇಲ್ಯರು 40 ವರ್ಷಗಳ ಕಾಲ ಮರುಭೂಮಿಯ ಸೀಮೆಯಲ್ಲಿ ಪ್ರಯಾಣ ಮಾಡಿದ ಸ್ಥಳವು ಅರಬ್ಬೀ ದೇಶದಲ್ಲೇ ಕಂಡುಬರುತ್ತದೆ.
- ಯೇಸುವಿನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಯಾದನಂತರ, ಅಪೊಸ್ತಲನಾದ ಪೌಲನು ಅರಬ್ಬೀ ಮರುಭೂಮಿಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಸಮಯವನ್ನು ಕಳೆದರು.
- ಸೀನಾಯಿ ಪರ್ವತವು ಅರಬ್ಬೀ ದೇಶದಲ್ಲಿದೆಯೆಂದು ಪೌಲನು ಗಲಾತ್ಯದಲ್ಲಿರುವ ಕ್ರೈಸ್ತರಿಗೆ ಬರೆದ ಪತ್ರಿಕೆಯಲ್ಲಿ ಬರೆದಿದ್ದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಏಸಾವ, ಗಲಾತ್ಯ, ಇಷ್ಮಾಯೇಲ್, ಶೇಮ್, ಸೀನಾಯಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6152, H6153, H6163, G688, G690
ಅರಾರಟ್
ಸತ್ಯಾಂಶಗಳು:
ಸತ್ಯವೇದದಲ್ಲಿ “ಅರಾರಟ್” ಎನ್ನುವ ಹೆಸರು ಒಂದು ಪರ್ವತ ಶ್ರೇಣಿಗೆ, ಒಂದು ರಾಜ್ಯಕ್ಕೆ ಮತ್ತು ಒಂದು ದೇಶಕ್ಕೆ ಕೊಡಲ್ಪಟ್ಟಿದೆ.
- “ಅರಾರಟ್ ದೇಶ” ಎನ್ನುವುದು ಈಗಿನ ಟರ್ಕಿ ದೇಶದಲ್ಲಿನ ಈಶಾನ್ಯ ಭಾಗದಲ್ಲಿ ಬಹುಶಃ ಕಂಡುಬರಬಹುದು.
- ನೋಹನ ಕಾಲದಲ್ಲಿ ಬಂದಿರುವ ಪ್ರಳಯದಲ್ಲಿನ ನೀರೆಲ್ಲಾ ಹಿಮ್ಮೆಟ್ಟಿದನಂತರ ನೋಹನ ನಾವೆಯು ಅರಾರಟ್ ಎನ್ನುವ ಪರ್ವತದ ಹೆಸರಿನ ಮೇಲೆಯೇ ಬಂದು ನಿಂತಿತ್ತು.
- ಈ ಆಧುನಿಕ ಕಾಲದಲ್ಲಿ, “ಅರಾರಟ್ ಪರ್ವತ” ಎಂದು ಕರೆಯಲ್ಪಡುವ ಪರ್ವತವು ಅನೇಕಬಾರಿ ಸತ್ಯವೇದದಲ್ಲಿ ಕರೆಯಲ್ಪಡುವ “ಅರಾರಟ್ ಪರ್ವತಗಳು” ಎನ್ನುವ ಸ್ಥಳವನ್ನು ಸೂಚಿಸುತ್ತಿರಬಹುದೆನ್ನುವ ಆಲೋಚನೆಯುಂಟು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಾವೆ, ನೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H780
ಅರ್ತಷಸ್ತ
ಸತ್ಯಾಂಶಗಳು:
ಅರ್ತಷಸ್ತ ಪರ್ಷಿಯ ಚಕ್ರವರ್ತಿಯಾಗಿ ಸುಮಾರು ಕ್ರಿ.ಪೂ.464 ರಿಂದ 424 ರವರೆಗೆ ರಾಜ್ಯವನ್ನಾಳಿದ ಅರಸನಾಗಿದ್ದನು.
- ಅರ್ತಷಸ್ತನ ಆಳ್ವಿಕೆಯಲ್ಲಿ ಯೆಹೂದದಿಂದ ಬಂದಿರುವ ಇಸ್ರಾಯೇಲ್ಯರು ಬಾಬೆಲೋನಿಯಾಗೆ ಸೆರೆಗೆ ಒಯ್ಯಲ್ಪಟ್ಟಿದ್ದರು, ಆ ಸಮಯದಲ್ಲಿ ಅವರು ಪರ್ಷಿಯ ರಾಜ್ಯಾಧಿಕಾರದ ಕೆಳಗೆ ಇದ್ದಿದ್ದರು.
- ಅರ್ತಷಸ್ತನು ಯಾಜಕನಾದ ಎಜ್ರಾನನ್ನು ಮತ್ತು ಇತರ ಯೆಹೂದ್ಯ ನಾಯಕರನ್ನು ಬಾಬೆಲೋನಿಯನ್ನು ಬಿಟ್ಟು, ದೇವರ ಧರ್ಮಶಾಸ್ತ್ರವನ್ನು ಇಸ್ರಾಯೇಲ್ಯರಿಗೆ ಬೋಧಿಸಲು ಯೆರೂಸಲೇಮಿಗೆ ಹೋಗುವುದಕ್ಕೆ ಅನುಮತಿ ನೀಡಿದರು.
- ಈ ಸಮಯವಾದನಂತರ, ಯೆರೂಸಲೇಮಿನ ಸುತ್ತಲು ಬಿದ್ದು ಹೋದ ಗೋಡೆಗಳನ್ನು ತಿರಿಗಿ ಕಟ್ಟುವುದಕ್ಕೆ ಯೆಹೂದ್ಯರನ್ನು ನಡೆಸಲು ಯೆರೂಸಲೇಮಿಗೆ ತಿರುಗಿ ಹೋಗುವುದಕ್ಕೆ ಅರ್ತಷಸ್ತನು ತನ್ನ ಬಳಿಯಿರುವ ಪಾನಸೇವಕನಾದ ನೆಹೆಮೀಯನಿಗೆ ಕೂಡ ಅನುಮತಿ ಕೊಟ್ಟನು.
- ಪರ್ಷಿಯ ಆಡಳಿತದಲ್ಲಿ ಬಾಬೆಲ್ ಇರುವದರಿಂದ, ಅರ್ತಷಸ್ತನನ್ನು ಕೆಲವೊಂದುಸಲ “ಬಾಬೆಲೋನಿಯ ಅರಸ” ಎಂದು ಕರೆಯಲ್ಪಡುತ್ತಿದ್ದನು.
- ಅರ್ತಷಸ್ತ ಎನ್ನುವ ವ್ಯಕ್ತಿ ಅಹಷ್ವೇರೋಷ ಅಲ್ಲ, ಇವರಿಬ್ಬರು ಬೇರೆ ಬೇರೆಯಾಗಿರುತ್ತಾರೆ.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಹಷ್ವೇರೋಷ, ಬಾಬೆಲೋನ್, ಪಾನಸೇವಕ, ಎಜ್ರಾ, ನೆಹೆಮೀಯ, ಪರ್ಷಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H783
ಅಶೇರ, ಅಶೇರ ವಿಗ್ರಹ ಸ್ತಂಭ, ಅಶೇರ ವಿಗ್ರಹ ಸ್ತಂಭಗಳು, ಅಷ್ಟೋರೆತ್, ಅಷ್ಟೋರೆತ್ ದೇವತೆಗಳು
ಪದದ ಅರ್ಥವಿವರಣೆ:
ಅಶೇರ ಎನ್ನುವುದು ಒಂದು ದೇವತೆಯ ಹೆಸರು, ಅದನ್ನು ಹಳೇ ಒಡಂಬಡಿಕೆಯ ಕಾಲದಲ್ಲಿ ಕಾನಾನ್ಯ ಜನರ ಗುಂಪುಗಳು ಆರಾಧನೆ ಮಾಡುತ್ತಿದ್ದರು. “ಅಷ್ಟೋರೆತ್” ಎನ್ನುವದು “ಅಶೇರ” ಹೆಸರಿಗೆ ಬೇರೊಂದು ಹೆಸರಾಗಿರಬಹುದು, ಅಥವಾ ಇಲ್ಲದಿದ್ದರೆ ಅದೇ ಹೆಸರಿನ ದೇವತೆಯಿರುವ ಬೇರೊಂದು ಹೆಸರಾಗಿರಬಹುದು.
- “ಆಶೇರ ವಿಗ್ರಹ ಸ್ತಂಭ” ಎನ್ನುವ ಮಾತು ಕೆತ್ತಿದ ಮರದ ಚಿತ್ರಗಳಿಗೆ ಅಥವಾ ಈ ದೇವತೆಯನ್ನು ಪ್ರತಿಬಿಂಬಿಸುವ ಕೆತ್ತಿದ ಮರಗಳಿಗೆ ಸೂಚಿಸಬಹುದು.
- ಆಶೇರ ವಿಗ್ರಹಸ್ತಂಭಗಳು ಬಾಳ್ ಎನ್ನುವ ಸುಳ್ಳು ದೇವರ ಯಜ್ಞವೇದಿಗಳ ಹತ್ತಿರ ಇಡುತ್ತಿದ್ದರು, ಯಾಕಂದರೆ ಈ ಬಾಳ್ ದೇವರು ಆಶೇರ ಗಂಡನೆಂದು ಭಾವಿಸುತ್ತಿದ್ದರು. ಕೆಲವೊಂದು ಜನರ ಗುಂಪುಗಳು ಬಾಳ್ ದೇವರನ್ನು ಸೂರ್ಯ ದೇವರೆಂದು ಮತ್ತು ಆಶೇರ ಅಥವಾ ಅಷ್ಟೋರೆತ್ ದೇವತೆಯನ್ನು ಚಂದ್ರ ದೇವತೆಯೆಂದು ಆರಾಧನೆ ಮಾಡುತ್ತಿದ್ದರು.
- ಆಶೇರ ದೇವತೆಯ ಕೆತ್ತಿದ ಚಿತ್ರಗಳೆಲ್ಲವನ್ನು ನಾಶಗೊಳಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಅಪ್ಪಣೆ ಕೊಟ್ಟನು.
- ಗಿದ್ಯೋನ್, ಅರಸನಾದ ಆಸ, ಮತ್ತು ಅರಸನಾದ ಯೋಷೀಯ ಎನ್ನುವ ಕೆಲವರು ಇಸ್ರಾಯೇಲ್ ನಾಯಕರು ದೇವರಿಗೆ ವಿಧೇಯರಾದರು ಮತ್ತು ಈ ವಿಗ್ರಹಗಳೆಲ್ಲವುಗಳನ್ನು ನಾಶಗೊಳಿಸಲು ಜನರನ್ನು ನಡೆಸಿದರು.
- ಅರಸನಾದ ಸೊಲೊಮೋನ, ಅರಸನಾದ ಮನಷ್ಷೆ, ಮತ್ತು ಅರಸನಾದ ಆಹಾಬ ಎನ್ನುವ ಇತರ ಇಸ್ರಾಯೇಲ್ ನಾಯಕರು ಆಶೇರ ವಿಗ್ರಹ ಸ್ತಂಭಗಳಿಂದ ಬಿಡುಗಡೆಯಾಗಲಿಲ್ಲ ಮತ್ತು ಈ ವಿಗ್ರಹಗಳನ್ನು ಆರಾಧಿಸುವಂತೆ ಜನರನ್ನು ಪ್ರಭಾವಗೊಳಿಸಿದ್ದಾರೆ.
(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಬಾಳ್, ಗಿದ್ಯೋನ್, ರೂಪ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H842, H6252, H6253
ಅಶ್ಯೂರ್, ಅಶ್ಯೂರನು, ಅಶ್ಯೂರದವರು, ಅಶ್ಯೂರ್ ಚಕ್ರವರ್ತಿ
ಸತ್ಯಾಂಶಗಳು:
ಅಶ್ಯೂರ್ ಎನ್ನುವುದು ಇಸ್ರಾಯೇಲ್ಯರು ಕಾನಾನ್ ದೇಶದಲ್ಲಿ ನಿವಾಸ ಮಾಡುತ್ತಿರುವಾಗ ಅತ್ಯಂತ ಶಕ್ತಿಯುಳ್ಳ ದೇಶವಾಗಿದ್ದಿತ್ತು. ಅಶ್ಯೂರ್ ಸಾಮ್ರಾಜ್ಯವು ಅಶ್ಯೂರ್ ಅರಸನಿಂದ ಪಾಲಿಸಲ್ಪಡುವ ದೇಶಗಳ ಸಮೂಹ.
- ಅಶ್ಯೂರ್ ದೇಶವು ಈಗಿನ ಇರಾಕಿನ ಉತ್ತರ ದಿಕ್ಕಿನಲ್ಲಿರುವ ಸೀಮೆಯಲ್ಲಿ ಕಂಡುಬರುತ್ತದೆ.
- ಅಶ್ಯೂರಿನವರು ತಮ್ಮ ಚರಿತ್ರೆಯಲ್ಲಿ ಅನೇಕ ಸಂದರ್ಭಗಳಲ್ಲಿ ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಯುದ್ಧವನ್ನು ನಡೆಸಿದರು.
- ಕ್ರಿ.ಪೂ.722ನೇ ವರ್ಷದಲ್ಲಿ, ಅಶ್ಯೂರಿನವರು ಸಂಪೂರ್ಣವಾಗಿ ಇಸ್ರಾಯೇಲ್ ರಾಜ್ಯದ ಮೇಲೆ ಜಯವನ್ನು ಹೊಂದಿಕೊಂಡರು ಮತ್ತು ಅನೇಕಮಂದಿ ಇಸ್ರಾಯೇಲ್ಯರನ್ನು ಅಶ್ಯೂರಿಗೆ ಕರದೊಯ್ಯುವುದಕ್ಕೆ ಬಲವಂತಿಕೆ ಮಾಡಿದರು.
- ಅಶ್ಯೂರದವರು ಸಮಾರ್ಯದಿಂದ ಇಸ್ರಾಯೇಲ್ ದೇಶಕ್ಕೆ ಕರೆದುಕೊಂಡು ಬಂದಿರುವ ಅನ್ಯರನ್ನು ಆಲ್ಲಿ ಉಳಿದಂತ ಇಸ್ರಾಯೇಲ್ಯರು ವಿವಾಹ ಮಾಡಿಕೊಂಡರು. ಅವರಿಂದ ಬಂದಿರುವ ಸಂತಾನದವರನ್ನೇ ಸಮಾರ್ಯದವರು ಎಂದು ಕರೆದರು.
(ಈ ಪದಗಳನ್ನು ಸಹ ನೋಡಿರಿ : ಸಮಾರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 20:02 ಅವರನ್ನು ನಾಶಪಡಿಸಲು ತಮ್ಮ ಶತ್ರುಗಳನ್ನು ಅನುಮತಿಸಿದ್ದಕ್ಕಾಗಿ ದೇವರು ಎರಡು ರಾಜ್ಯಗಳನ್ನು ಶಿಕ್ಷಿಸಿದರು. ಶಕ್ತಿಯುತವಾದ ಕ್ರೂರ ದೇಶವಾದ __ ಅಶ್ಯೂರ್ ಸಾಮ್ರಾಜ್ಯದಿಂದ __ ಇಸ್ರಾಯೇಲ್ ರಾಜ್ಯವು ನಾಶಕ್ಕೊಳಗಾಗಿತು. __ ಅಶ್ಯೂರಿನವರು __ ಇಸ್ರಾಯೇಲ್ ರಾಜ್ಯದಲ್ಲಿ ಅನೇಕರನ್ನು ಕೊಂದು ಹಾಕಿದರು, ಬೆಲೆಯುಳ್ಳ ಪ್ರತಿಯೊಂದನ್ನು ತೆಗೆದುಕೊಂಡರು ಮತ್ತು ದೇಶದಲ್ಲಿ ಸಾಕಷ್ಟು ಭೂಭಾಗವನ್ನು ಸುಟ್ಟು ಹಾಕಿದರು.
- 20:03 __ ಅಶ್ಯೂರ್ ದೇಶದವರು __ ಎಲ್ಲಾ ನಾಯಕರನ್ನು, ಶ್ರೀಮಂತರನ್ನು, ಮತ್ತು ನೈಪುಣ್ಯವಿರುವವರನ್ನು ಒಂಗೂಡಿಸಿ ತಮ್ಮ ದೇಶಕ್ಕೆ ಸೆರೆ ಹಿಡಿದು ಕರೆದುಕೊಂಡು ಹೋದರು.
- 20:04 ಇದಾದನಂತರ __ ಅಶ್ಯೂರಿನವರು __ ಇಸ್ರಾಯೇಲ್ ರಾಜ್ಯವು ನಿವಾಸವಾಗಿರುವ ಸ್ಥಳದಲ್ಲಿ ಜೀವಿಸುವಂತೆ ಅನ್ಯರನ್ನು ಅಲ್ಲಿರಿಸಿದರು.
ಪದ ಡೇಟಾ:
- Strong's: H804, H1121
ಅಷ್ಕೆಲೋನ್
ಸತ್ಯಾಂಶಗಳು:
ಸತ್ಯವೇದದಲ್ಲಿ ನಡೆದ ಸಂಘಟನೆಗಳ ಕಾಲದಲ್ಲಿ, ಅಷ್ಕೆಲೋನ್ ಎನ್ನುವುದು ಫಿಲಿಷ್ಟಿಯನರ ಪ್ರಮುಖ ನಗರ, ಇದು ಮೆಡಿಟರೇನಿಯನ್ ಸಮುದ್ರದ ಕರಾವಳಿ ಪ್ರಾಂತ್ಯದಲ್ಲಿರುತ್ತದೆ. ಇದು ಇವತ್ತಿಗೂ ಇಸ್ರಾಯೇಲ್ ದೇಶದಲ್ಲಿದೆ.
- ಅಷ್ಕೆಲೋನ್ ಎನ್ನುವುದು ಫಿಲಿಷ್ಟಿಯನರ ಐದು ಪ್ರಾಮುಖ್ಯ ಪಟ್ಟಣಗಳಲ್ಲಿ ಒಂದಾಗಿರುತ್ತದೆ, ಉಳಿದ ಆ ನಾಲ್ಕು ಪಟ್ಟಗಳು ಯಾವುವೆಂದರೆ ಅಷ್ದೋದ್, ಎಕ್ರೋನ್, ಗತೂರು ಮತ್ತು ಗಾಜಾ.
- ಇಸ್ರಾಯೇಲ್ಯರು ಸಂಪೂರ್ಣವಾಗಿ ಅಷ್ಕೆಲೋನ್ ಜನರನ್ನು ಗೆಲ್ಲಲಿಲ್ಲ, ಆದರೂ ಯೂದಾ ರಾಜ್ಯವು ಅವರ ಬೆಟ್ಟದ ದೇಶವನ್ನು ಸ್ವಾಧೀನ ಮಾಡಿಕೊಂಡರು.
- ಅಷ್ಕೆಲೋನ್ ಪಟ್ಟಣವು ಸುಮಾರು ನಾಲ್ಕು ನೂರು ವರ್ಷಗಳ ಕಾಲ ಫಿಲಿಷ್ಟಿಯನರ ಸ್ವಾಧೀನದಲ್ಲಿತ್ತು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಷ್ದೋದ್, ಕಾನಾನ್, ಎಕ್ರೋನ್, ಗತೂರು, ಗಾಜಾ, ಫಿಲಿಷ್ಟಿಯನರು, ಮೆಡಿಟರೇನಿಯನ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H831
ಅಷ್ದೋದ್, ಅಜೋತ್
ಪದದ ಅರ್ಥವಿವರಣೆ:
ಅಷ್ದೋದ್ ಎನ್ನುವುದು ಫಿಲಿಷ್ಟಿಯರ ಐದು ಪ್ರಾಮುಖ್ಯವಾದ ಪಟ್ಟಣಗಳಲ್ಲಿ ಒಂದಾಗಿರುತ್ತದೆ. ಇದು ಮೆಡಿಟರೇನಿಯನ್ ಸಮುದ್ರಕ್ಕೆ ಹತ್ತಿರದಲ್ಲಿ ಕಾನಾನ್ ಆಗ್ನೇಯ ದಿಕ್ಕಿನಲ್ಲಿರುತ್ತದೆ, ಇದು ಗಾಜಾ ಮತ್ತು ಯೊಪ್ಪ ಪಟ್ಟಣಗಳ ರಹದಾರಿಯ ಮಧ್ಯಭಾಗದಲ್ಲಿರುತ್ತದೆ.
- ಫಿಲಿಷ್ಟಿಯರ ಸುಳ್ಳು ದೇವತೆಯಾದ ದಾಗೋನ್ ದೇವಾಲಯವು ಅಷ್ದೋದ್.ನಲ್ಲಿತ್ತು.
- ಫಿಲಿಷ್ಟಿಯರು ಒಡಂಬಡಿಕೆಯ ಮಂಜೂಷವನ್ನು ಕದ್ದುಕೊಂಡು ಹೋಗಿ, ಅಷ್ದೋದ್.ನಲ್ಲಿರುವ ಅನ್ಯ ದೇವಾಲಯದಲ್ಲಿಟ್ಟಾಗ ದೇವರು ಅಷ್ದೋದ್ ಜನರನ್ನು ತುಂಬಾ ತೀವ್ರವಾಗಿ ಶಿಕ್ಷಿಸಿದರು.
- ಈ ಪಟ್ಟಣಕ್ಕೆ ಗ್ರೀಕ್ ಹೆಸರು ಅಜೋತ್ ಆಗಿರುತ್ತದೆ. ಸುವಾರ್ತಿಕನಾದ ಫಿಲಿಪ್ಪನು ಸುವಾರ್ತೆಯನ್ನು ಸಾರಿದ ಪಟ್ಟಣಗಳಲ್ಲಿ ಇದೂ ಒಂದಾಗಿತ್ತು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎಕ್ರೋನ್, ಗತೂರು, ಗಾಜಾ, ಯೊಪ್ಪ, ಫಿಲಿಪ್ಪ, ಫಿಲಿಷ್ಟಿಯನರು)
ಸತ್ಯವೇದದ ಅನುಬಂಧ ವಾಕ್ಯಗಳು :
{{tag>publish ktlink}
ಪದ ಡೇಟಾ:
- Strong's: H795, G108
ಅಹಜ್ಯ
ಸತ್ಯಾಂಶಗಳು:
ಅಹಜ್ಯ ಎನ್ನುವ ಹೆಸರಿನ ಮೇಲೆ ಇಬ್ಬರು ಅರಸರಿದ್ದಾರೆ: ಒಬ್ಬರು ಇಸ್ರಾಯೇಲ್ ರಾಜ್ಯವನ್ನು ಆಳಿದವರು, ಮತ್ತೊಬ್ಬರು ಯೆಹೂದ ರಾಜ್ಯವನ್ನು ಆಳಿದವರು.
- ಯೆಹೂದ ಅರಸನು ಅರಸನಾದ ಯೆಹೋರಾಮನ ಮಗನಾಗಿರುತ್ತಾನೆ. ಈತನು ಒಂದು ವರ್ಷ ಕಾಲ (ಕ್ರಿ.ಪೂ.841) ಆಳಿದನು ಮತ್ತು ಯೆಹೂ ಎನ್ನುವವನಿಂದ ಕೊಲ್ಲಲ್ಪಡುತ್ತಾನೆ. ಅಹಜ್ಯ ಚಿಕ್ಕ ಮಗನಾದ ಯೋವಾಷನು ಕೊನೆಗೆ ಅರಸನಾಗಿ ತನ್ನ ತಂದೆಯ ಸ್ಥಾನವನ್ನು ಪಡೆಯುತ್ತಾನೆ.
- ಇಸ್ರಾಯೇಲ್ ಅರಸನಾದ ಅಹಜ್ಯನು ಅರಸನಾದ ಅಹಾಬನ ಮಗನಾಗಿರುತ್ತಾನೆ. ಇವನು ಎರಡು ವರ್ಷಗಳ ಕಾಲ ಆಳಿದನು (ಕ್ರಿ.ಪೂ.850-49). ಇವನು ತನ್ನ ನಿವಾಸ ಸ್ಥಳದಲ್ಲೇ ಬಿದ್ದು ಅನೇಕವಾದ ಗಾಯಗಳಿಂದ ನರಳಿ ಸತ್ತುಹೋದನು, ಮತ್ತು ತನ್ನ ಸಹೋದರನಾದ ಯೋರಾಮನು ಅರಸನಾದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : /ಯೆಹೂ, /ಅಹಾಬ, /ಯಾರೊಬ್ಬಾಮ, ಯೋವಾಷ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H274
ಅಹಷ್ವೇರೋಷ
ಸತ್ಯಾಂಶಗಳು:
ಅಹಷ್ವೇರೋಷನು ಇಪ್ಪತ್ತು ವರ್ಷಗಳ ಪುರಾತನ ಪಾರಸಿಯ ರಾಜ್ಯವನ್ನು ಆಳ್ವಿಕೆ ಮಾಡಿದ ಅರಸನಾಗಿದ್ದನು.
- ಇದು ಯೆಹೂದಿಯರೆಲ್ಲರೂ ಸೆರೆಗೆ ಕರೆದೊಯ್ಯಲ್ಪಟ್ಟು ಬಾಬೆಲೋನಿಯಯದಲ್ಲಿ ನಿವಾಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದಿತ್ತು, ಅದು ಆಗ ಪಾರಸಿಯ ಪಾಲನೆ ಕೆಳಗೆ ಇರುವದಾಗಿತ್ತು.
- ಈ ಅರಸನಿಗೆ ಇನ್ನೊಂದು ಹೆಸರು ಅರ್ತಷಸ್ತ ಎಂದಾಗಿರಬಹುದು.
- ಕೋಪದಲ್ಲಿ ತನ್ನ ರಾಣಿಯನ್ನು ಹೊರ ಕಳುಹಿಸಿದ ಸ್ವಲ್ಪ ಕಾಲವಾದನಂತರ ಅರಸನಾದ ಅಹಷ್ವೇರೋಷ ಯೆಹೂದ್ಯರ ಸ್ತ್ರೀಯಾದ ಎಸ್ತೇರಳನ್ನು ತನ್ನ ರಾಣಿಯನ್ನಾಗಿ ಮತ್ತು ತನ್ನ ಹೆಂಡತಿಯನ್ನಾಗಿ ಆಯ್ಕೆ ಮಾಡಿಕೊಂಡನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : /ಬಾಬೆಲೋನ, /ಎಸ್ತೇರಳು, /ಇಥಿಯೋಪ್ಯ, /ಸೆರೆ, /ಪಾರಸಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H325
ಅಹಾಬ
ಸತ್ಯಾಂಶಗಳು:
ಅಹಾಬನು ಸುಮಾರು ಕ್ರಿ.ಪೂ.875 ರಿಂದ 854 ರವರೆಗೆ ಇಸ್ರಾಯೇಲ್ ಉತ್ತರ ರಾಜ್ಯವನ್ನು ಆಳಿದ ದುಷ್ಟ ರಾಜನಾಗಿದ್ದನು.
- ಅರಸನಾದ ಅಹಾಬನು ಇಸ್ರಾಯೇಲ್ ಜನರನ್ನು ಐದು ದೇವತೆಗಳಿಗೆ ಆರಾಧನೆ ಮಾಡುವಂತೆ ಪ್ರಭಾವಗೊಳಿಸಿದ್ದನು.
- ಪ್ರವಾದಿಯಾದ ಎಲೀಯನು ಅಹಾಬನನ್ನು ಎದುರುಗೊಂಡು, ಇಸ್ರಾಯೇಲ್ಯರು ಪಾಪ ಮಾಡುವಂತೆ ಪ್ರೇರೇಪಿಸಿದ ಅಹಾಬನ ಪಾಪ ಕೃತ್ಯಗಳಿಗಾಗಿ ಶಿಕ್ಷೆಯಾಗಿ ಮೂರುವರೆ ವರ್ಷಗಳ ಕಾಲ ಅತೀ ಭಯಂಕರವಾದ ಬರಗಾಲ ಬರುತ್ತದೆಯೆಂದು ಅವನಿಗೆ ಹೇಳಿದನು.
- ಅಹಾಬ ಮತ್ತು ತನ್ನ ಪತ್ನಿಯಾದ ಈಜೆಬೆಲ್ ಇಬ್ಬರು ಸೇರಿ ಅನೇಕವಾದ ದುಷ್ಟ ಕಾರ್ಯಗಳನ್ನು ಮಾಡಿದರು, ಆ ಪಾಪಗಳಲ್ಲಿ ನೀತಿವಂತರನ್ನು ಸಾಯಿಸುವುದಕ್ಕೆ ತಮ್ಮ ಅಧಿಕಾರವನ್ನು ಬಳಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಳ್, ಎಲೀಯ, ಈಜೆಬೆಲ್, ಇಸ್ರಾಯೇಲ್ ರಾಜ್ಯ, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 19:02 ಇಸ್ರಾಯೇಲ್ ರಾಜ್ಯದ ಮೇಲೆ __ ಅಹಾಬನು __ ಆಳ್ವಿಕೆ ಮಾಡುತ್ತಿರುವಾಗ ಎಲೀಯನು ಪ್ರವಾದಿಯಾಗಿದ್ದನು. __ ಅಹಾಬ __ ಎನ್ನುವವನು ಬಾಳ್ ಎನ್ನುವ ಸುಳ್ಳು ದೇವರನ್ನು ಆರಾಧನೆ ಮಾಡುವಂತೆ ಜನರನ್ನು ಪ್ರೇರೇಪಿಸಿದ ದುಷ್ಟ ಮನುಷ್ಯನಾಗಿದ್ದನು.
- 19:03 ಅಹಾಬನು ಮತ್ತು ತನ್ನ ಸೈನ್ಯವು ಎಲೀಯನಿಗಾಗಿ ಹುಡುಕುತ್ತಿದ್ದರು, ಆದರೆ ಅವರು ಆತನನ್ನು ಹಿಡಿದುಕೊಳ್ಳುವುದಕ್ಕಾಗಲಿಲ್ಲ.
- 19:05 ಮೂರುವರೆ ವರ್ಷಗಳಾದನಂತರ, ಇಸ್ರಾಯೇಲ್ ದೇಶಕ್ಕೆ ಹಿಂದಿರುಗಿ ಬಂದು, __ ಅಹಾಬ __ನೊಂದಿಗೆ ಮಾತನಾಡುವಂತೆ ದೇವರು ಎಲೀಯನಿಗೆ ಹೇಳಿದರು. ಯಾಕಂದರೆ ಆತನು ಮತ್ತೊಮ್ಮೆ ಮಳೆ ಸುರಿಯುವಂತೆ ಮಾಡುವದಕ್ಕಿದ್ದನು.
ಪದ ಡೇಟಾ:
- Strong's: H256
ಅಹೀಯ
ಸತ್ಯಾಂಶಗಳು:
ಹಳೇ ಒಡಂಬಡಿಕೆಯಲ್ಲಿ ಅಹೀಯ ಎನ್ನುವ ಹೆಸರಿನ ಮೇಲೆ ಅನೇಕರಿದ್ದಾರೆ. ಆ ಹೆಸರುಗಳು ಈ ಕೆಳಗಿನಂತಿವೆ :
- ಸೌಲನ ಸಮಯದಲ್ಲಿ ಅಹೀಯ ಹೆಸರಿನ ಮೇಲೆ ಒಬ್ಬ ಯಾಜಕನಿದ್ದನು.
- ಸೊಲೊಮೋನನು ಆಳುತ್ತಿರುವ ಸಮಯದಲ್ಲಿ ಅಹೀಯ ಹೆಸರಿನ ಮೇಲೆ ಒಬ್ಬ ಕಾರ್ಯದರ್ಶಿ ಇದ್ದನು.
- ಇಸ್ರಾಯೇಲ್ ದೇಶವು ಎರಡು ರಾಜ್ಯಗಳಾಗಿ ವಿಭಜನೆ ಹೊಂದುತ್ತದೆಯೆಂದು ಮುಂಚಿತವಾಗಿಯೇ ನುಡಿದ ವ್ಯಕ್ತಿ ಅಹೀಯ ಆಗಿದ್ದರು, ಇವರು ಶಿಲೋವಿನಿಂದ ಬಂದ ಪ್ರವಾದಿಯಾಗಿದ್ದರು.
- ಇಸ್ರಾಯೇಲ್ ಅರಸನಾದ ಬಾಷ ತಂದೆ ಕೂಡ ಅಹೀಯ ಹೆಸರಿನ ಮೇಲೆ ಇದ್ದಿದ್ದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : /ಬಾಷ, /ಶಿಲೋವಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H281
ಆದಾಮ
ಸತ್ಯಾಂಶಗಳು:
ಅದಾಮನು ಸೃಷ್ಟಿಸಿರುವ ಮೊಟ್ಟ ಮೊದಲನೇ ವ್ಯಕ್ತಿಯಾಗಿದ್ದಾನೆ. ಈತನು ಮತ್ತು ತನ್ನ ಹೆಂಡತಿಯಾದ ಹವ್ವಳು ದೇವರ ಸ್ವರೂಪದಲ್ಲಿ ಉಂಟು ಮಾಡಲ್ಪಟ್ಟಿದ್ದಾರೆ.
- ದೇವರು ಆದಾಮನನ್ನು ನೆಲದ ಮಣ್ಣಿನಿಂದ ಸೃಷ್ಟಿಸಿ, ಅವನ ಮೂಗಿನಲ್ಲಿ ಜೀವ ಶ್ವಾಸವನ್ನು ಊದಿದನು.
- ಆದಾಮನ ಹೆಸರು “ಕೆಂಪು ಮಣ್ಣು” ಅಥವಾ “ನೆಲ” ಎಂದು ಇಬ್ರಿ ಪದದಲ್ಲಿ ಕರೆಯಲ್ಪಡುವ ಪದಗಳಿಗೆ ಸಮಾನವಾಗಿರುತ್ತದೆ.
- “ಆದಾಮ” ಎನ್ನುವ ಹೆಸರು ಹಳೇ ಒಡಂಬಡಿಕೆಯಲ್ಲಿರುವ “ಮನುಷ್ಯನು” ಅಥವಾ “ಮಾನವ ಕುಲ” ಎನ್ನುವ ಪದಗಳಿಗೆ ಸಮಾನವಾಗಿರುತ್ತದೆ.
- ಸರ್ವ ಜನರೆಲ್ಲರು ಆದಾಮ ಮತ್ತು ಹವ್ವರಿಂದ ಬಂದಿರುವ ಸಂತಾನದವರೇ.
- ಅದಾಮ ಮತ್ತು ಹವ್ವಳು ದೇವರಿಗೆ ಅವಿಧೇಯರಾದರು. ಇದೇ ಅವರನ್ನು ದೇವರಿಂದ ದೂರ ಮಾಡಿತು ಮತ್ತು ಪಾಪ ಮಾಡುವಂತೆ ಮಾಡಿತು ಮತ್ತು ಲೋಕದೊಳಗೆ ಮರಣ ಬರುವುದಕ್ಕೆ ಕಾರಣವಾಯಿತು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮರಣ, ಸಂತಾನ, ಹವ್ವ, ದೇವರ ಸ್ವರೂಪ, ಜೀವ)
ಸತ್ಯವೇದದ ಅನುಬಂಧ ವಾಕ್ಯಗಳು:
ಸತ್ಯವೇದದಿಂದ ಉದಾಹರಣೆಗಳು:
- 01:09 “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ” ಎಂದು ದೇವರು ಹೇಳಿದರು.
- 01:10 ಈ ಮನುಷ್ಯನ ಹೆಸರು __ ಆದಾಮ __. __ ಆದಾಮನು __ ತಂಗುವುದಕ್ಕೆ ದೇವರು ಒಂದು ತೋಟವನ್ನುಂಟು ಮಾಡಿದನು ಮತ್ತು ಅದನ್ನು ಕಾಯುವುದಕ್ಕೂ ಅವನನ್ನು ಆ ತೋಟದಲ್ಲಿ ಇರಿಸಿದನು.
- 01:12 “ಮನುಷ್ಯನು ಒಂಟಿಯಾಗಿರುವುದು ಒಳ್ಳೇದಲ್ಲ” ಎಂದು ದೇವರು ಹೇಳಿದನು. ಆದರೆ ಪ್ರಾಣಿಗಳಲ್ಲಿ ಯಾವುದಾದರೂ __ ಆದಾಮನಿಗೆ __ ಸಹಕಾರಿಯಾಗಿರುವುದಕ್ಕಾಗುವುದಿಲ್ಲ.
- 02:11 ದೇವರು ಆದಾಮನಿಗೆ ಮತ್ತು ಹವ್ವಳಿಗೆ ಪ್ರಾಣಿ ಚರ್ಮಗಳಿಗಿಂದ ಬಟ್ಟೆಗಳನ್ನು ಉಡಿಸಿದನು.
- 02:12 ಅದಕ್ಕಾಗಿ ದೇವರು __ ಆದಾಮನನ್ನು __ ಮತ್ತು ಹವ್ವಳನ್ನು ಆ ಸುಂದರವಾದ ತೋಟದಿಂದ ಹೊರ ಕಳುಹಿಸಿದನು.
- 49:08 ಆದಾಮ ಮತ್ತು ಹವ್ವಳು ಪಾಪ ಮಾಡಿದಾಗ, ಅದು ಅವರ ಸಂತಾನದವರೆಲ್ಲರಿಗೆ ವ್ಯಾಪಕವಾಯಿತು.
- 50:16 ಆದಕಾರಣ __ ಆದಾಮನು __ ಮತ್ತು ಹವ್ವಳು ದೇವರಿಗೆ ಅವಿಧೇಯರಾಗಿ, ಈ ಲೋಕದೊಳಗೆ ಪಾಪವನ್ನು ತೆಗೆದುಕೊಂಡುಬಂದರು, ದೇವರು ಅದನ್ನು ಶಪಿಸಿದರು ಮತ್ತು ಅದನ್ನು ನಾಶಗೊಳಿಸಲು ನಿರ್ಣಯಿಸಿಕೊಂಡರು.
ಪದ ಡೇಟಾ:
- Strong's: H120, G76
ಆಮೋಚ
ಸತ್ಯಾಂಶಗಳು:
ಆಮೋಚನು ಪ್ರವಾದಿಯಾದ ಯೆಶಾಯನ ತಂದೆ.
- ಯೇಶಾಯನು “ಆಮೋಚನ ಮಗ” ಎಂದು ಬರೆದಿರುವಾಗ ಮಾತ್ರವೇ ಆತನ ಹೆಸರು ಸತ್ಯವೇದದಲ್ಲಿ ಬರೆಯಲ್ಪಟ್ಟಿರುವಂತೆ ನಾವು ಕಾಣುತ್ತೇವೆ.
- ಪ್ರವಾದಿಯಾದ ಆಮೋಸ ಹೆಸರಿಗೂ ಈ ಹೆಸರಿಗೂ ತುಂಬಾ ವ್ಯತ್ಯಾಸವುಂಟು ಮತ್ತು ಉಚ್ಚರಿಸುವಾಗಲೂ ಸರಿಯಾಗಿ ಉಚ್ಚರಿಸಬೇಕು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಮೋಸ, ಯೇಶಾಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H531
ಆಮೋಸ
ಸತ್ಯಾಂಶಗಳು:
ಆಮೋಸನು ಇಸ್ರಾಯೇಲ್ ಪ್ರವಾದಿ, ಯೆಹೂದ ರಾಜ್ಯಕ್ಕೆ ಅರಸನಾದ ಉಜ್ಜೀಯನ ಕಾಲದಲ್ಲಿದ್ದ ವ್ಯಕ್ತಿ.
- ಇವರನ್ನು ಪ್ರವಾದಿಯೆಂದು ಕರೆಯುವುದಕ್ಕೆ ಮುಂಚೆ, ಆಮೋಸನು ಯೆಹೂದ ರಾಜ್ಯದಲ್ಲಿ ಅಂಜೂರದ ಹಣ್ಣುಗಳ ರೈತನು ಮತ್ತು ಕುರುಬನೂ ಆಗಿದ್ದನು.
- ಅಮೋಸನು ಅಭಿವೃದ್ಧಿ ಹೊಂದುತ್ತಿರುವ ಉತ್ತರ ರಾಜ್ಯವಾದ ಇಸ್ರಾಯೇಲ್ ವಿರುದ್ಧವಾಗಿ ಪ್ರವಾದಿಸಿದನು, ಯಾಕಂದರೆ ಅವರು ಜನರಲ್ಲಿ ಅನ್ಯಾಯವಾಗಿ ನಡೆದುಕೊಳ್ಳುತ್ತಿದ್ದರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಂಜೂರದ ಹಣ್ಣು, ಯೆಹೂದ, ಇಸ್ರಾಯೇಲ್ ರಾಜ್ಯ, ಕುರುಬ, ಉಜ್ಜೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5986
ಆಯಿ
ಸತ್ಯಾಂಶಗಳು:
ಹಳೇ ಒಡಂಬಡಿಕೆ ಕಾಲದಲ್ಲಿ, ಆಯಿ ಎನ್ನುವದು ಕಾನಾನ್ಯ ಪಟ್ಟಣವಾಗಿತ್ತು, ಇದು ದಕ್ಷಿಣ ಬೇತೇಲಿನಲ್ಲಿರುತ್ತದೆ ಮತ್ತು ಯೆರಿಕೋ ವಾಯುವ್ಯ ದಿಕ್ಕಿನಿಂದ 8 ಕಿ.ಮೀ. ದೂರದಲ್ಲಿರುತ್ತದೆ.
- ಯೆರಿಕೋವನ್ನು ಸೋಲಿಸಿದನಂತರ, ಯೆಹೋಶುವನು ಆಯಿ ಪಟ್ಟಣದ ಧಾಳಿ ಮಾಡುವದಕ್ಕೆ ಇಸ್ರಾಯೇಲ್ಯರನ್ನು ನಡೆಸುತ್ತಾನೆ. ಆದರೆ ಅವರು ಸೋತು ಬರುತ್ತಾರೆ ಯಾಕಂದರೆ ದೇವರು ಅವರ ವಿಷಯದಲ್ಲಿ ಸಂತೋಷವಾಗಿದ್ದಿಲ್ಲ.
- ಇಸ್ರಾಯೇಲಿಯನಾದ ಆಕಾನನು ಯೆರಿಕೋವಿನಿಂದ ತೆಗೆದುಕೊಂಡು ಬಂದಿರುವ ಕೆಲವು ವಸ್ತುಗಳನ್ನು ಕದ್ದಿದ್ದರಿಂದ, ದೇವರು ಅವನನ್ನು ಮತ್ತು ಅವನ ಕುಟುಂಬದವರನ್ನು ಸಾಯಿಸಬೇಕೆಂದು ಅಪ್ಪಣೆ ಕೊಟ್ಟನು. ಇದಾದನಂತರ ದೇವರು ಆಯಿ ಪಟ್ಟಣದ ಜನರನ್ನು ಸೋಲಿಸುವದಕ್ಕೆ ಸಹಾಯ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೇತೇಲ, ಯೆರಿಕೋ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5857
ಆರಾಬಾ
ಸತ್ಯಾಂಶಗಳು:
“ಆರಾಬಾ” ಎನ್ನುವ ಹಳೇ ಒಡಂಬಡಿಕೆಯ ಪದವು ಅತೀ ದೊಡ್ಡ ಮರುಭೂಮಿಯನ್ನು ಮತ್ತು ಯೊರ್ದನ್ ನದಿಯ ಸುತ್ತಮುತ್ತ ಬಯಲು ಸೀಮೆಗಳನ್ನೊಳಗೊಂಡ ತೋಪುಗಳನ್ನು ಮತ್ತು ಕೆಂಪು ಸಮುದ್ರದ ಉತ್ತರದ ಕೊನೆ ಭಾಗದಿಂದ ದಕ್ಷಿಣದ ವರೆಗೆ ವಿಸ್ತರಿಸಿದ ಪ್ರಾಂತ್ಯವನ್ನು ಸೂಚಿಸುತ್ತದೆ.
- ಇಸ್ರಾಯೇಲ್ಯರು ಐಗುಪ್ತದಿಂದ ಕಾನಾನ್ ಭೂಮಿಗೆ ಮಾಡಿದ ತಮ್ಮ ಪ್ರಯಾಣವನ್ನು ಈ ಮರುಭೂಮಿಯ ಸೀಮೆಯಿಂದಲೇ ಮಾಡಿದರು.
- “ಆರಾಬಾ ಸಮುದ್ರ” ಎನ್ನುವದನ್ನು “ಆರಾಬಾ ಮರುಭೂಮಿಯ ಸೀಮೆಯಲ್ಲಿರುವ ಸಮುದ್ರ” ಎಂದೂ ಅನುವಾದ ಮಾಡಬಹುದು. ಈ ಸಮುದ್ರವನ್ನು ಅನೇಕಬಾರಿ “ಉಪ್ಪು ಸಮುದ್ರ” ಎಂದು ಅಥವಾ “ಮೃತ ಸಮುದ್ರ” ಎಂದೂ ಸೂಚಿಸುತ್ತಾರೆ.
- “ಆರಾಬಾ” ಎನ್ನುವ ಪದವನ್ನು ಸಾಧಾರಣವಾಗಿ ಇತರ ಯಾವುದೇ ಮರುಭೂಮಿ ಪ್ರಾಂತ್ಯಕ್ಕೆ ಸೂಚನೆಯಾಗಿ ತೆಗೆದುಕೊಳ್ಳುತ್ತಾರೆ.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಮರುಭೂಮಿ, ಹುಲ್ಲುಗಾವಲುಗಳ ಸಮುದ್ರ, ಯೊರ್ದನ್ ನದಿ, ಕಾನಾನ್, ಉಪ್ಪು ಸಮುದ್ರ, ಐಗುಪ್ತ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1026, H6160
ಆರಾಮ್, ಅರಾಮ್ಯನು, ಅರಾಮ್ಯರು, ಅರಾಮ್ಯ ಲಿಪಿ (ಭಾಷೆ)
ಪದದ ಅರ್ಥವಿವರಣೆ:
“ಆರಾಮ್” ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರಿದ್ದಾರೆ. ಕಾನಾನ್ ಈಶಾನ್ಯ ಸೀಮೆಯನ್ನೂ ಈ ಹೆಸರಿನಿಂದ ಕರೆಯುತ್ತಾರೆ, ಇದು ಆಧುನಿಕ ದೇಶವಾಗಿರುವ ಸಿರಿಯಾದಲ್ಲಿ ಕಂಡುಬರುತ್ತದೆ.
- ಆರಾಮ್.ನಲ್ಲಿ ಜೀವಿಸುವ ಜನರೆಲ್ಲರೂ “ಅರಾಮ್ಯರು” ಎಂಬುದಾಗಿ ಕರೆಯಲ್ಪಡುತ್ತಾರೆ ಮತ್ತು ಅವರು ಮಾತನಾಡುವ ಭಾಷೆಯು “ಅರಾಮ್ಯ” ಭಾಷೆಯಾಗಿರುತ್ತದೆ. ಯೇಸು ಮತ್ತು ಇತರ ಯೆಹೂದ್ಯರೂ ಅರಾಮ್ಯ ಭಾಷೆಯನ್ನೂ ಮಾತನಾಡಿದ್ದಾರೆ.
- ಶೇಮ್ ಮಕ್ಕಳಲ್ಲಿ ಒಬ್ಬನು ಆರಾಮ್.ನಾಗಿರುತ್ತಾನೆ. ಆರಾಮ್ ಹೆಸರಿನ ಮೇಲೆ ಇರುವ ಇನ್ನೊಬ್ಬರ ಹೆಸರು ರೆಬೆಕ್ಕಳ ಸೋದರ ಸಂಬಂಧಿ. ಆರಾಮ್ ಸೀಮೆಯು ಈ ಹೆಸರು ಇರುವ ಈ ಇಬ್ಬರಲ್ಲಿ ಒಬ್ಬರಿಂದಲೇ ಬಂದಿರಬಹುದು.
- ಆರಾಮ್ ಎನ್ನುವ ಸೀಮೆಯನ್ನು ಸ್ವಲ್ಪ ಕಾಲವಾದನಂತರ ಗ್ರೀಕ್ ಹೆಸರಾದ “ಸಿರಿಯ” ಎನ್ನುವ ಹೆಸರಿನಿಂದ ಕರೆಯುತ್ತಿದ್ದಾರೆ.
- “ಪದ್ದನ್ ಆರಾಮ್” ಎನ್ನುವ ಪದಕ್ಕೆ “ಆರಾಮ್ ಬಯಲು” ಎಂದರ್ಥ ಮತ್ತು ಈ ಬಯಲು ಆರಾಮ್ ಉತ್ತರ ದಿಕ್ಕಿನಲ್ಲಿ ಕಂಡುಬರುತ್ತದೆ.
- ಅಬ್ರಹಾಮನ ಸಂಬಂಧಿಕರಲ್ಲಿ ಕೆಲವರು ಹಾರಾನ್ ಪಟ್ಟಣದಲ್ಲಿ ನಿವಾಸ ಮಾಡಿದರು, ಇದು “ಪದ್ದನ್ ಆರಾಮ್”ನಲ್ಲಿ ಇದ್ದಿತ್ತು.
- ಹಳೇ ಒಡಂಬಡಿಕೆಯಲ್ಲಿ ಕೆಲವೊಂದುಸಲ “ಆರಾಮ್” ಮತ್ತು “ಪದ್ದನ್ ಆರಾಮ್” ಎನ್ನುವ ಪದಗಳು ಬೇರೆ ಸೀಮೆಯನ್ನು (ಅಥವಾ ಪ್ರಾಂತ್ಯವನ್ನು) ಸೂಚಿಸುತ್ತವೆ.
“ಆರಾಮ್ ಸೀಮೆ” ಎನ್ನುವ ಪದಕ್ಕೆ ಬಹುಶಃ “ಎರಡು ನದಿಗಳ ಆರಾಮ್” ಎಂದು ಅರ್ಥವಿರಬಹುದು. ಈ ಸೀಮೆಯು ಮೆಸಪೋತೋಮಿಯಾ ಉತ್ತರ ಭಾಗದಲ್ಲಿಯೂ ಮತ್ತು “ಪದ್ದನ್ ಆರಾಮ್ “ ಪೂರ್ವ ಭಾಗದಲ್ಲಿ ಇದ್ದಿತ್ತು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮೆಸಪೋತೋಮಿಯಾ, ಪದ್ದನ್ ಆರಾಮ್, ರೆಬೆಕ್ಕ, ಶೇಮ್, ಸೀನಾಯಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H758, H763, G689
ಆರೋನ
ಸತ್ಯಾಂಶಗಳು :
ಆರೋನನು ಮೋಶೆಯ ಅಣ್ಣನಾಗಿರುತ್ತಾನೆ. ದೇವರು ಆರೋನನನ್ನು ಇಸ್ರಾಯೇಲ್ ಜನರಿಗೆ ಪ್ರಧಾನ ಯಾಜಕನನ್ನಾಗಿ ನೇಮಿಸಿದ್ದನು.
- ಇಸ್ರಾಯೇಲ್ ಜನರ ಬಿಡುಗಡೆಯ ಕುರಿತಾಗಿ ಫರೋಹನೊಂದಿಗೆ ಮೋಶೆ ಮಾತನಾಡುವಾಗ ಆರೋನನು ಸಹಾಯ ಮಾಡಿದ್ದನು.
- ಇಸ್ರಾಯೇಲ್ಯರು ಮರುಭೂಮಿಯ ಮುಖಾಂತರ ಪ್ರಯಾಣ ಮಾಡಿ ಹಾದು ಹೋಗುತ್ತಿರುವಾಗ, ಜನರೆಲ್ಲರು ಆರಾಧನೆ ಮಾಡುವುದಕ್ಕೆ ಜನರಿಗೋಸ್ಕರ ವಿಗ್ರಹವನ್ನು ಮಾಡುವುದರ ಮುಖಾಂತರ ಆರೋನನು ಪಾಪ ಮಾಡಿದನು.
- ದೇವರು ಆರೋನನನ್ನು ಮತ್ತು ತನ್ನ ಸಂತಾನದವರನ್ನು ಇಸ್ರಾಯೇಲರ ಯಾಜಕರುಗಳಾಗಿ / ಯಾಕನನ್ನಾಗಿ ನೇಮಿಸಿದ್ದನು.
(ಅನುವಾದ ಮಾಡುವುದಕ್ಕೆ ಸಲಹೆಗಳು : /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : /ಯಾಜಕ, /ಮೋಶೆ, /ಇಸ್ರಾಯೇಲ್)
ಸತ್ಯವೇದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 09:15 ದೇವರು ಮೋಶೆಯನ್ನು ಎಚ್ಚರಿಸಿದರು ಮತ್ತು ___ ಆರೋನನು ___ ಫರೋಹನ ಹೃದಯವು ಕಠಿಣವಾಗಿತ್ತು.
- 10:05 ಫರೋಹನು ಮೋಶೆಯನ್ನು ಮತ್ತು ಆರೋನನನ್ನು ಕರೆಸಿ ಅವರು ಮಾರಿ ರೋಗವನ್ನು ನಿಲ್ಲಿಸಿದರೆ, ಇಸ್ರಾಯೇಲ್ಯರು ಐಗುಪ್ತ ದೇಶವನ್ನು ಬಿಟ್ಟುಹೋಗಬಹುದು ಎಂದು ಹೇಳಿದನು.
- 13:09 ದೇವರು ಮೋಶೆಯ ಅಣ್ಣನನ್ನು, __ ಆರೋನ __ ಆಯ್ಕೆ ಮಾಡಿಕೊಂಡರು, ಮತ್ತು ಆರೋನನ ಸಂತಾನದವರನ್ನು ಯಾಜಕರನ್ನಾಗಿ ಆಯ್ಕೆ ಮಾಡಿಕೊಂಡನು.
- 13:11 ಅವರು (ಇಸ್ರಾಯೇಲ್ಯರು) ಆರೋನನ ಬಳಿಗೆ ಚಿನ್ನವನ್ನು ತೆಗೆದುಕೊಂಡು ಬಂದರು ಮತ್ತು ಅವರಿಗಾಗಿ ಒಂದು ವಿಗ್ರಹದ ಆಕಾರವನ್ನು ಮಾಡಬೇಕೆಂದು ಕೇಳಿಕೊಂಡರು.
- 14:07 ಅವರು (ಇಸ್ರಾಯೇಲ್ಯರು) ಮೋಶೆಯ ಮೇಲೆ ಮತ್ತು ___ ಆರೋನನ ___ ಮೇಲೆ ಕೊಪಗೊಂಡು, “ಅಯ್ಯೋ, ಯಾಕೆ ನೀವು ಇಂಥಹ ಭಯಂಕರವಾದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದೀರಿ” ಎಂದು ಕೇಳಿದರು.
ಪದ ಡೇಟಾ:
- Strong's: H175, G2
ಆಶೇರ್
ಸತ್ಯಾಂಶಗಳು:
ಆಶೇರ್ ಯಾಕೋಬಿನ ಎಂಟನೇ ಮಗ. ಈತನ ಸಂತಾನದವರೇ ಇಸ್ರಾಯೇಲ್ಯರ ಹನ್ನೆರಡು ಕುಲಗಳಲ್ಲಿ ಒಬ್ಬರಾಗಿರುತ್ತಾರೆ ಮತ್ತು ಈ ಕುಲದ ಹೆಸರು ಕೂಡ “ಆಶೇರ್” ಎಂದು ಕರೆಯುತ್ತಾರೆ.
- ಆಶೇರ್ ತಾಯಿಯು ಜಿಲ್ಪಾ, ಇವಳು ಲೇಯಾಳಿಗೆ ದಾಸಿಯಾಗಿರುತ್ತಾಳೆ.
- ಈತನ ಹೆಸರಿಗೆ “ಸಂತೋಷ” ಅಥವಾ “ಆಶೀರ್ವಾದ” ಎಂದು ಅರ್ಥವುಂಟು.
- ಇಸ್ರಾಯೇಲ್ಯರು ವಾಗ್ಧಾನ ಭೂಮಿಗೆ ಹೋದಾಗ ಆಶೇರ್ ಕುಲದವರಿಗೂ ಭೂಮಿಯನ್ನು ಕೊಡಲಾಗಿದೆ.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H836
ಆಸ
ಸತ್ಯಾಂಶಗಳು:
ಆಸನು ಸುಮಾರು ಕ್ರಿ.ಪೂ.913 ರಿಂದ ಕ್ರಿ.ಪೂ.873 ರವರೆಗೆ ನಲವತ್ತು ವರ್ಷಗಳ ಕಾಲ ಯೂದಾ ರಾಜ್ಯವನ್ನು ಆಳಿದ ಅರಸ.
- ಅರಸನಾದ ಆಸನು ಸುಳ್ಳು ದೇವತೆಗಳ ಅನೇಕ ವಿಗ್ರಹಗಳನ್ನು ತೆಗೆದುಹಾಕಿದ ಒಳ್ಳೇಯ ಅರಸನಾಗಿದ್ದನು ಮತ್ತು ಇಸ್ರಾಯೇಲ್ಯರೆಲ್ಲರು ತಿರುಗಿ ಯೆಹೋವನನ್ನು ಆರಾಧಿಸುವುದಕ್ಕೆ ಕಾರಣನಾದವನು.
- ಯೆಹೋವನು ಅರಸನಾದ ಆಸನಿಗೆ ಅನೇಕ ದೇಶಗಳಿಗೆ ವಿರುದ್ಧವಾಗಿ ಮಾಡಿದ ತನ್ನ ಹೋರಾಟದಲ್ಲಿ ಯಶಸ್ವಿಯನ್ನು ಕೊಟ್ಟನು.
- ಆದರೆ ಸ್ವಲ್ಪಕಾಲವಾದನಂತರ ಅರಸನಾದ ಆಸನು ಯೆಹೋವನನ್ನು ನಂಬುವುದನ್ನು ನಿಲ್ಲಿಸಿದನು ಮತ್ತು ತನ್ನನ್ನು ಸಾಯಿಸುವಂತಹ ಮಾರಣಾಂತಿಕ ರೋಗವನ್ನು ಹೊಂದಿ ನರಳಿದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H609
ಆಸಾಫ
ಸತ್ಯಾಂಶಗಳು:
ಆಸಾಫ ಲೇವಿಯ ಯಾಜಕನಾಗಿದ್ದನು ಮತ್ತು ಅರಸನಾದ ದಾವೀದನ ಕೀರ್ತನೆಗಳಿಗೆ ಸಂಗೀತವನ್ನು ಸಂಯೋಜಿಸಿದ ವರವನ್ನು ಪಡೆದ ಸಂಗೀತಕಾರನೂ ಆಗಿದ್ದನು. ಈತನು ಕೂಡ ತನ್ನ ಸ್ವಂತ ಕೀರ್ತನೆಗಳನ್ನು ಬರೆದುಕೊಂಡಿದ್ದನು.
- ಆಸಾಫನು ದೇವಾಲಯದಲ್ಲಿ ಆರಾಧನೆಗಾಗಿ ಹಾಡುಗಳನ್ನು ಹಾಡುವ ಬಾಧ್ಯತೆಯನ್ನು ಪಡೆದ ಮೂವರು ಸಂಗೀತಕಾರರಲ್ಲಿ ಒಬ್ಬರಾಗಿರುವುದಕ್ಕೆ ಅರಸನಾದ ದಾವೀದನಿಂದ ಅಭಿಷೇಕವನ್ನು ಪಡೆದಿದ್ದನು. ಈ ಕೀರ್ತನೆಗಳಲ್ಲಿ ಕೆಲವು ಪ್ರವಾದನೆಗಳೂ ಆಗಿದ್ದವು.
- ಆಸಾಫನು ತನ್ನ ಮಕ್ಕಳನ್ನು ತರಬೇತಿ ಮಾಡಿದ್ದನು ಮತ್ತು ಅವರು ತನ್ನ ಬಾಧ್ಯತೆಯನ್ನು, ಹೊಂದಿ, ಸಂಗೀತ ಉಪಕರಣಗಳನ್ನು ಬಾರಿಸುತ್ತಾ ಮತ್ತು ದೇವಾಲಯದಲ್ಲಿ ಪ್ರವಾದನೆಗಳನ್ನು ಹೇಳುತ್ತಾ ಇದ್ದಿದ್ದರು.
- ಈ ಸಂಗೀತ ಉಪಕರಣಗಳಲ್ಲಿ ಸ್ವರಮಂಡಲ, ಕಿನ್ನರಿ, ಕೊಂಬು ಧ್ವನಿ ಮತ್ತು ಝಲ್ಲರಿಗಳು ಇರುತ್ತವೆ.
- ಕೀರ್ತನೆ 50 ಮತ್ತು 73-83 ರವರೆಗೆ ಇರುವ ಕೀರ್ತನೆಗಳು ಆಸಾಫನ ಕೀರ್ತನೆಗಳಾಗಿದ್ದವು. ಈ ಕೀರ್ತನೆಗಳಲ್ಲಿ ಕೆಲವೊಂದು ಕೀರ್ತನೆಗಳು ತನ್ನ ಕುಟುಂಬದವರು ಬರೆದಿರಬಹುದು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಸಂತಾನ, ಕಿನ್ನರಿ, ಸ್ವರಮಂಡಲ, ಪ್ರವಾದಿ, ಕೀರ್ತನೆ, ಕೊಂಬು ಧ್ವನಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H623
ಆಸ್ಯ
ಸತ್ಯಾಂಶಗಳು:
ಬೈಬಲ್ ಕಾಲಗಳಲ್ಲಿ, “ಆಸ್ಯ” ಎನ್ನುವುದು ರೋಮಾ ಸಾಮ್ರಾಜ್ಯದ ಸೀಮೆಯಾಗಿತ್ತು. ಇದು ಈಗಿನ ಟರ್ಕಿ ದೇಶಕ್ಕೆ ಪಶ್ಚಿಮ ದಿಕ್ಕಿನಲ್ಲಿ ಕಂಡುಬರುತ್ತದೆ.
- ಪೌಲನು ಆಸ್ಯಕ್ಕೆ ಪ್ರಯಾಣ ಮಾಡಿದನು ಮತ್ತು ಅನೇಕವಾದ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರಿದನು. ಆ ಪಟ್ಟಣಗಳಲ್ಲಿ ಎಫೆಸ ಮತ್ತು ಕೊಲಸ್ಸ ಎನ್ನುವ ಪಟ್ಟಣಗಳೂ ಇವೆ.
- ಈ ಆಧುನಿಕ ಆಸ್ಯ ಖಂಡದೊಂದಿಗೆ ಇರುವ ಗೊಂದಲವನ್ನು ತಪ್ಪಿಸಲು, “ಪುರಾತನ ರೋಮಾ ಪ್ರಾಂತ್ಯವನ್ನು ಅಥವಾ ಸೀಮೆಯನ್ನು ಆಸ್ಯ ಎಂದು ಕರೆಯುತ್ತಾರೆ” ಅಥವಾ “ಆಸ್ಯ ಸೀಮೆ” ಎಂದು ಅನುವಾದ ಮಾಡಬೇಕಾದ ಅವಶ್ಯಕತೆಯುಂಟು.
- ಪ್ರಕಟನೆ ಗ್ರಂಥದಲ್ಲಿ ಹೇಳಲ್ಪಟ್ಟಿರುವ ಎಲ್ಲಾ ಸಭೆಗಳು ಆಸ್ಯ ಸೀಮೆಯಲ್ಲಿರುವ ರೋಮಾದಲ್ಲಿವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ರೋಮಾ, ಪೌಲ, ಎಜ್ರಾ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಕೊರಿಂಥ.16:19-20
- 1 ಪೇತ್ರ.01:1-2
- 2 ತಿಮೊಥೆ.01:15-18
- ಅಪೊ.ಕೃತ್ಯ.06:8-9
- ಅಪೊ.ಕೃತ್ಯ.16:6-8
- ಅಪೊ.ಕೃತ್ಯ.27:1-2
- ಪ್ರಕ.01:4-6
- ರೋಮಾ.16:3-5
ಪದ ಡೇಟಾ:
- Strong's: G773
ಆಹಾಜ
ಪದದ ಅರ್ಥ ವಿವರಣೆ:
ಆಹಾಜನು ಸುಮಾರು ಕ್ರಿ.ಪೂ.732 ರಿಂದ 716 ರವರೆಗೆ ಯೆಹೂದ ರಾಜ್ಯವನ್ನು ಆಳಿದ ದುಷ್ಟ ರಾಜನಾಗಿದ್ದನು. ಇದು ಇಸ್ರಾಯೇಲ್ ಮತ್ತು ಯೆಹೂದದಲ್ಲಿರುವ ಜನರೆಲ್ಲರನ್ನು ಬಾಬೆಲೋನಿಯಕ್ಕೆ ಸೆರೆಗೆ ಕರೆದೊಯ್ಯುವುದಕ್ಕೆ ಮುಂಚಿತವಾಗಿ ಸುಮಾರು 140 ವರ್ಷಗಳ ನಡೆದಿರುವ ಸಂಘಟನೆಯಾಗಿತ್ತು.
- ಇವನು ಯೆಹೂದವನ್ನು ಆಳುತ್ತಿರುವಾಗ, ಆಹಾಜ ಅಶ್ಯೂರ್ ಸುಳ್ಳು ದೇವತೆಗಳನ್ನು ಆರಾಧನೆ ಮಾಡುವುದಕ್ಕೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿದನು. ಇದರಿಂದ ಜನರೆಲ್ಲರು ನಿಜವಾದ ದೇವರಾದ ಯೆಹೋವನಿಂದ ದೂರವಾದರು.
- ಅರಸನಾದ ಆಹಾಜನು ಯೆಹೂದವನ್ನು ಆಳುತ್ತಿರುವಾಗ ತನ್ನ ವಯಸ್ಸು ಕೇವಲ 20 ವರ್ಷಗಳು ಮಾತ್ರ ಇದ್ದಿತ್ತು ಮತ್ತು ಅವನು 16 ವರ್ಷಗಳ ಕಾಲ ಆಳ್ವಿಕೆ ಮಾಡಿದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : /ಬಾಬೆಲೋನ)
ಸತ್ಯವೇದದ ಅನುಬಂಧ ವಾಕ್ಯಗಳು :
- /1 ಪೂರ್ವ.08:35-37
- /2 ಪೂರ್ವ.28:1-2
- /2 ಅರಸು.16:19-20
- /ಹೋಶೆಯ.01:1-2
- /ಯೆಶಯಾ.01:1
- / ಯೆಶಯಾ.07:3-4
- /ಮತ್ತಾಯ.01:9-11
ಪದ ಡೇಟಾ:
- Strong's: H271
ಇಕೋನ್ಯ
ಸತ್ಯಾಂಶಗಳು:
ಪ್ರಸ್ತುತ ಕಾಲದ ಟರ್ಕಿ ಎಂಬಂತಃ ದೇಶದ ದಕ್ಷಿಣ ಕೇಂದ್ರದಲ್ಲಿದ್ದ ಪಟ್ಟಣದ ಹೆಸರಾಗಿದೆ.
- ಪೌಲನು ಮೊದಲನೆಯ ಸುವಾರ್ತೆ ದಂಡೆಯತ್ರೆಲ್ಲಿ, ಯೆಹೂದಿಯರು ಅಂತಿಯೋಕ್ಯ ಪಟ್ಟಣವನ್ನು ಬಿಟ್ಟು ಹೋಗಬೇಕೆಂದು ಬಲವಂತ ಮಾಡಿದಾಗ ಅವನು ಮತ್ತು ಬಾರ್ನಬ ಇಕೋನ್ಯಕ್ಕೆ ಹೋದರು.
- ಪೌಲನು ಮತ್ತು ಅವನ ಜೊತೆ ಕೆಲಸಗಾರರನ್ನು ಕಲ್ಲೆಸೆದು ಕೊಲ್ಲಬೇಕೆಂದು ಇಕೋನ್ಯದಲ್ಲಿದ್ದ ಅಪನಂಬಿಕಸ್ತರಾದ ಯೆಹೂದಿಯರು ಮತ್ತು ಅನ್ಯರು ಪ್ರಯತ್ನಿಸಿದಾಗ ಅವರು ಅಲ್ಲಿಂದ ತಪ್ಪಿಸಿಕೊಂಡು ಲೂಸ್ತ್ರ ಪಟ್ಟಣಕ್ಕೆ ಹೋದರು.
- ಆ ನಂತರ ಅಂತಿಯೋಕ್ಯ ಹಾಗೂ ಇಕೋನ್ಯ ಪಟ್ಟಣಗಳಲ್ಲಿದ್ದ ಜನರು ಲೂಸ್ತ್ರ ಪಟ್ಟಣಕ್ಕೆ ಬಂದು ಪೌಲನನ್ನು ಕಲ್ಲೆಸೆದು ಕೊಲ್ಲಬೇಕೆಂದು ಪ್ರೇರೇಪಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾರ್ನಬ, ಲೂಸ್ತ್ರ, ಕಲ್ಲೆಸೆದು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2430
ಇಜ್ರೇಲ್, ಇಜ್ರೇಲ್ಯನು
ಪದದ ಅರ್ಥವಿವರಣೆ:
ಇಜ್ರೇಲ್ ಎನ್ನುವುದು ಇಸ್ಸಾಕಾರ್ ಕುಲದ ಕ್ಷೇತ್ರದಲ್ಲಿ ಮುಖ್ಯವಾದ ಇಸ್ರಾಯೇಲ್ ಪಟ್ಟಣವಾಗಿತ್ತು, ಇದು ಲವಣ ಸಮುದ್ರದ ನೈಋತ್ಯ ಭಾಗದಲ್ಲಿರುತ್ತದೆ.
- ಇಜ್ರೇಲ್ ಪಟ್ಟಣವು ಮೆಗಿದ್ದೋ ಬಯಲಿನಲ್ಲಿ ಪಶ್ಚಿಮದಲ್ಲಿರುವ ಪ್ರಾಮುಖ್ಯವಾದ ಪಟ್ಟಣಗಳಲ್ಲಿ ಒಂದಾಗಿತ್ತು, ಇದನ್ನು “ಇಜ್ರೇಲಿನ ಕಣಿವೆ” ಎಂದೂ ಕರೆಯುತ್ತಾರೆ.
- ಇಸ್ರಾಯೇಲ್ ರಾಜ್ಯದ ಅನೇಕಮಂದಿ ಅರಸರ ಅರಮನೆಗಳು ಇಜ್ರೇಲ್ ಪಟ್ಟಣದಲ್ಲಿಯೇ ಇದ್ದಿದ್ದವು.
- ನಾಬೋತನ ದ್ರಾಕ್ಷಿತೋಟವು ಇಜ್ರೇಲಿನಲ್ಲಿರುವ ಅರಸನಾದ ಆಹಾಬನ ಅರಮನೆಯ ಪಕ್ಕದಲ್ಲಿಯೇ ಇದ್ದಿತ್ತು. ಪ್ರವಾದಿಯಾದ ಎಲೀಯ ಆಹಾಬನಿಗೆ ವಿರುದ್ಧವಾಗಿ ಪ್ರವಾದಿಸಿದನು.
- ಆಹಾಬನ ದುಷ್ಟ ಹೆಂಡತಿಯಾದ ಈಜೆಬೆಲಳು ಇಜ್ರೇಲಿನಲ್ಲಿಯೇ ಕೊಂದು ಹಾಕಲ್ಪಟ್ಟಳು.
- ಅನೇಕವಾದ ಪ್ರಾಮುಖ್ಯವಾದ ಸಂಘಟನೆಗಳೆಲ್ಲವು ಮತ್ತು ಅನೇಕವಾದ ಯುದ್ಧಗಳು ಈ ಪಟ್ಟಣದಲ್ಲಿಯೇ ನಡೆದಿದ್ದವು.
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಎಲೀಯ, ಇಸ್ಸಾಕಾರ್, ಈಜೆಬೆಲ್, ಅರಮನೆ, ಲವಣ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3157, H3158, H3159
ಇತ್ರೋ, ರೆಗೂವೇಲ
ಸತ್ಯಾಂಶಗಳು:
“ಇತ್ರೋ” ಮತ್ತು “ರೆಗೂವೇಲ” ಎನ್ನುವ ಹೆಸರುಗಳೆರಡು ಮೋಶೆ ಹೆಂಡತಿಯಾದ ಚಿಪ್ಪೋರಳ ತಂದೆಯನ್ನೇ ಸೂಚಿಸುತ್ತವೆ. “ರೆಗೂವೇಲ” ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರು ಮನುಷ್ಯರು ಇದ್ದಾರೆ.
- ಮಿದ್ಯಾನ್ ಭೂಮಿಯಲ್ಲಿ ಮೋಶೆ ಕುರುಬನಾಗಿರುವಾಗ ಮಿದ್ಯಾನಿಯನಾದ ರೆಗೂವೇಲ ಎನ್ನುವ ಹೆಸರಿನ ವ್ಯಕ್ತಿಯ ಮಗಳನ್ನು ಮದುವೆ ಮಾಡಿಕೊಂಡನು.
- ಆದನಂತರ ರೆಗೂವೇಲನು “ಮಿದ್ಯಾನ್ ಯಾಜಕನಾದ ಇತ್ರೋ” ಎಂಬುದಾಗಿ ಸೂಚಿಸಲ್ಪಟ್ಟನು. ಬಹುಶಃ “ರೆಗೂವೇಲ” ಎನ್ನುವ ಹೆಸರು ಆತನ ವಂಶದ ಹೆಸರಾಗಿರಬಹುದು.
ಧಗಧಗನೆ ಉರಿಯುತ್ತಿರುವ ಪೊದೆಯೊಳಗಿಂದ ದೇವರು ಮೋಶೆಯೊಂದಿಗೆ ಮಾತನಾಡಿದಾಗ, ಮೋಶೆ ಇತ್ರೋ ಕುರಿಗಳನ್ನು ಮೇಯಿಸುತ್ತಿದ್ದನು,
- ಸ್ವಲ್ಪ ಕಾಲವಾದನಂತರ, ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ರಕ್ಷಿಸಿದನಂತರ, ಇತ್ರೋ ಅರಣ್ಯದಲ್ಲಿರುವ ಇಸ್ರಾಯೇಲ್ಯರ ಬಳಿಗೆ ಬಂದನು. ಅಲ್ಲಿ ಮೋಶೆಗೆ ಜನರ ಸಮಸ್ಯೆಗಳಿಗೆ ತೀರ್ಪು ಮಾಡುವುದರ ಕುರಿತಾಗಿ ಒಳ್ಳೇಯ ಸಲಹೆಯನ್ನು ಕೊಟ್ಟನು.
- ಐಗುಪ್ತದಲ್ಲಿರುವ ಇಸ್ರಾಯೇಲ್ಯರಿಗಾಗಿ ದೇವರು ಮಾಡಿದ ಎಲ್ಲಾ ಅದ್ಭುತ ಕಾರ್ಯಗಳ ಕುರಿತಾಗಿ ಅವನು ಕೇಳಿದಾಗ ದೇವರಲ್ಲಿ ನಂಬಿಕೆಯಿಟ್ಟಿದ್ದನು.
- ಏಸಾವನ ಗಂಡು ಮಕ್ಕಳಲ್ಲಿ ಒಬ್ಬನ ಹೆಸರು ರೆಗೂವೇಲ ಎಂದಾಗಿತ್ತು.
- ಬಾಬಿಲೋನಿಯದಲ್ಲಿ ಸೆರೆ ಮುಗಿದನಂತರ ಯೂದಾದಲ್ಲಿ ತಿರುಗಿ ಪುನರ್ವಸತಿಗಾಗಿ ಹಿಂದುರಿಗಿ ಬಂದ ಇಸ್ರಾಯೇಲ್ಯರ ವಂಶಾವಳಿಯಲ್ಲಿ ರೆಗೂವೇಲ ಎನ್ನುವ ಇನ್ನೊಬ್ಬ ವ್ಯಕ್ತಿ ದಾಖಲಿಸಲ್ಪಟ್ಟಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಸೆರೆ, ವಂಶ, ಅರಣ್ಯ, ಐಗುಪ್ತ, ಏಸಾವ, ಅದ್ಭುತ, ಮೋಶೆ, ಅರಣ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3503, H7467
ಇಥಿಯೋಪ್ಯ, ಇಥಿಯೋಪ್ಯದವನು
ಸತ್ಯಾಂಶಗಳು:
ಇಥಿಯೋಪ್ಯ ಎನ್ನುವುದು ಆಫ್ರಿಕಾದಲ್ಲಿರುವ ಒಂದು ದೇಶವಾಗಿರುತ್ತದೆ, ಇದು ದಕ್ಷಿಣ ಐಗುಪ್ತದ ಕಡೆಗೆ ಕಂಡುಬರುತ್ತದೆ. ಕೆಂಪು ಸಮುದ್ರದಿಂದ ಪೂರ್ವ ದಿಕ್ಕಿಗೆ ಮತ್ತು ನೈಲ್ ನದಿಯಿಂದ ಪಶ್ಚಿಮ ದಿಕ್ಕಿಗೆ ಇರುವ ಗಡಿಗಳ ಮಧ್ಯದಲ್ಲಿರುತ್ತದೆ. ಇಥಿಯೋಪ್ಯದಿಂದ ಬಂದ ವ್ಯಕ್ತಿಯನ್ನು “ಇಥಿಯೋಪ್ಯದವನು” ಎಂದು ಕರೆಯುತ್ತಾರೆ.
- ಪುರಾತನ ಇಥಿಯೋಪ್ಯ ಐಗುಪ್ತ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ ಮತ್ತು ಆಧುನಿಕ ಆಫ್ರಿಕಾ ದೇಶಗಳು ಅನೇಕವಾದವುಗಳು ಈಗ ಅದರಲ್ಲಿ ಒಳಗೊಂಡಿರುತ್ತವೆ, ಅವುಯಾವುವೆಂದರೆ ಸುಡಾನ್, ಆಧುನಿಕ ಇಥಿಯೋಪ್ಯ, ಸೊಮಾಲಿಯಾ, ಕೆನ್ಯಾ, ಉಗಾಂಡಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಮತ್ತು ಚಾದ್.
- ಸತ್ಯವೇದದಲ್ಲಿ ಇಥಿಯೋಪ್ಯವನ್ನು ಕೆಲವೊಂದುಬಾರಿ “ಕೂಷು” ಅಥವಾ “ನುಬಿಯಾ” ಎಂದು ಕರೆದಿರುತ್ತಾರೆ.
- ಇಥಿಯೋಪ್ಯ (“ಕೂಷು”) ದೇಶಗಳನ್ನು ಮತ್ತು ಐಗುಪ್ತ ದೇಶವನ್ನು ಸೇರಿಸಿ ಸತ್ಯವೇದದಲ್ಲಿ ದಾಖಲಿಸಿದ್ದಾರೆ, ಬಹುಶಃ ಅವರು ಪಕ್ಕಪಕ್ಕದಲ್ಲಿ ಇರುವದರಿಂದ ಮತ್ತು ಅವರ ಜನರು ಒಂದೇ ಪಿತೃಗಳನ್ನು ಹೊಂದಿರುವದರಿಂದ ಆ ರೀತಿ ದಾಖಲಿಸಿರಬಹುದು.
- ಇಥಿಯೋಪ್ಯದವನಿಗೆ ಯೇಸುವಿನ ಕುರಿತಾಗಿ ಸುವಾರ್ತೆಯನ್ನು ಹಂಚಿಕೊಳ್ಳುವುದಕ್ಕಾಗಿ ಅರಣ್ಯಕ್ಕೆ ಸುವಾರ್ತಿಕನಾದ ಫಿಲಿಪ್ಪನನ್ನು ದೇವರು ಕಳುಹಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕೂಷು, ಐಗುಪ್ತ, ಕಂಚುಕಿ, ಫಿಲಿಪ್ಪ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.08:26-28
- ಅಪೊ.ಕೃತ್ಯ.08:29-31
- ಅಪೊ.ಕೃತ್ಯ.08:32-33
- ಅಪೊ.ಕೃತ್ಯ.08:36-38
- ಯೆಶಯಾ.18:1-2
- ನಹೂ.03:8-9
- ಜೆಕರ್ಯ.03:9-11
ಪದ ಡೇಟಾ:
- Strong's: H3568, H3569, H3571, G128
ಇಷಯ
ಸತ್ಯಾಂಶಗಳು:
ಇಷಯನು ಅರಸನಾದ ದಾವೀದನ ತಂದೆ ಮತ್ತು ರೂತ ಹಾಗೂ ಬೋವಾಜರ ಮೊಮ್ಮಗ .
- ಇಷಯನು ಯೂದಾ ಕುಲದಿಂದ ಬಂದಿದವನಾಗಿರುತ್ತಾನೆ.
- ಇವನು “ಎಫ್ರಾಯಿಮ್ಯನು” ಆಗಿರುತ್ತಾನೆ, ಈ ಹೆಸರಿಗೆ ಎಫ್ರಾತ (ಬೆತ್ಲೆಹೇಮ) ಪಟ್ಟಣದಿಂದ ಬಂದವನು ಎಂದರ್ಥ.
- “ಇಷಯನ ಬೇರಿನಿಂದ” ಬರುವ “ಕೊಂಬೆ” ಅಥವಾ “ಚಿಗುರಿನ” ಕುರಿತಾಗಿ ಪ್ರವಾದಿಯಾದ ಯೆಶಾಯನು ಪ್ರವಾದಿಸಿದ್ದಾನೆ. ಇದು ಇಷಯನ ವಂಶಸ್ಥನಾಗಿರುವ ಯೇಸುವನ್ನು ಸೂಚಿಸುತ್ತದೆ,
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೆತ್ಲೆಹೇಮ್, ಬೋವಜ, ವಂಶಸ್ಥರು, ಫಲ, ಯೇಸು, ಅರಸ, ಪ್ರವಾದಿ, ರೂತಳು, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3448, G2421
ಇಷ್ಮಾಯೇಲ್, ಇಷ್ಮಾಯೇಲನು, ಇಷ್ಮಾಯೇಲರು
ಸತ್ಯಾಂಶಗಳು:
ಇಷ್ಮಾಯೇಲನು ಅಬ್ರಾಹಾಮನಿಗೆ ಮತ್ತು ಐಗುಪ್ತ ದಾಸಿಯಾಗಿರುವ ಹಾಗರಳಿಗೆ ಹುಟ್ಟಿದ ಮಗನಾಗಿದ್ದನು. ಹಳೇ ಒಡಂಬಡಿಕೆಯ ಮೇಲೆ ಇಷ್ಮಾಯೇಲ್ ಎನ್ನುವ ಹೆಸರಿನ ಮೇಲೆ ಅನೇಕ ಜನರಿದ್ದಾರೆ.
- “ಇಷ್ಮಾಯೇಲ್” ಎನ್ನುವ ಹೆಸರಿಗೆ “ದೇವರು ಕೇಳುವನು” ಎಂದರ್ಥ.
- ಅಬ್ರಾಹಾಮನ ಮಗನಾಗಿರುವ ಇಷ್ಮಾಯೇಲನನ್ನು ಆಶೀರ್ವಾದ ಮಾಡುತ್ತೇನೆಂದು ದೇವರು ವಾಗ್ಧಾನ ಮಾಡಿದ್ದರು, ಆದರೆ ಇವನು ದೇವರು ತನ್ನ ಒಡಂಬಡಿಕೆಯನ್ನು ಸ್ಥಾಪಿಸುವುದಕ್ಕೆ ವಾಗ್ಧಾನ ಮಾಡಿದ ಮಗನಲ್ಲ.
- ಹಾಗರಳನ್ನು ಮತ್ತು ಇಷ್ಮಾಯೇಲನನ್ನು ಅರಣ್ಯದೊಳಗೆ ಕಳುಹಿಸಿದಾಗ ದೇವರು ಅವರನ್ನು ಸಂರಕ್ಷಿಸಿದನು.
- ಇಷ್ಮಾಯೇಲನು ಪಾರಾನಿನ ಅರಣ್ಯದಲ್ಲಿ ನಿವಾಸ ಮಾಡುತ್ತಿರುವಾಗ, ಅವನು ಐಗುಪ್ತ ಸ್ತ್ರೀಯಳನ್ನು ವಿವಾಹ ಮಾಡಿಕೊಂಡನು.
- ನೆತನ್ಯನ ಮಗನಾಗಿರುವ ಇಷ್ಮಾಯೇಲನು ಯೂದಾ ಸೈನ್ಯಾಧಿಕಾರಿಯಾಗಿದ್ದನು, ಬಾಬೆಲೋನಿಯ ಅರಸನಾಗಿರುವ ನೆಬುಕದ್ನೆಚ್ಚರನಿಂದ ನೇಮಿಸಲ್ಪಟ್ಟ ಪಾಲಕನನ್ನು ಕೊಲ್ಲುವುದಕ್ಕೆ ಕೆಲವೊಂದು ಜನರ ಗುಂಪನ್ನು ನಡೆಸಿದ್ದನು.
- ಹಳೇ ಒಡಂಬಡಿಕೆಯಲ್ಲಿ ಇಷ್ಮಾಯೇಲ್ ಎಂಬ ಹೆಸರಿನ ಮೇಲೆ ಇನ್ನೂ ನಾಲ್ಕು ಮಂದಿ ಜನರಿದ್ದಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಬಾಬೆಲೋನಿಯ, ಒಡಂಬಡಿಕೆ, ಅರಣ್ಯ, ಐಗುಪ್ತ, ಹಾಗರು, ಇಸಾಕ, ನೆಬುಕದ್ನೆಚ್ಚರ, ಪಾರಾನ್, ಸಾರಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 05:02 ಆದ್ದರಿಂದ ಅಬ್ರಾಮನು ಹಾಗರಳನ್ನು ಮದುವೆ ಮಾಡಿಕೊಂಡನು. ಹಾಗರಳಿಗೆ ಒಂದು ಗಂಡು ಮಗುವಾಯಿತು, ಅಬ್ರಾಮನು ಅವನಿಗೆ __ ಇಷ್ಮಾಯೇಲ್ __ ಎಂದು ಹೆಸರಿಟ್ಟನು.
- 05:04 “ನಾನು __ ಇಷ್ಮಾಯೇಲನನ್ನು __ ಒಂದು ದೊಡ್ಡ ದೇಶವನ್ನಾಗಿ ಮಾಡುವೆನು, ಆದರೆ ನನ್ನ ಒಡಂಬಡಿಕೆಯು ಇಸಾಕನೊಂದಿಗೆ ಮಾತ್ರ ಇರುತ್ತದೆ.”
ಪದ ಡೇಟಾ:
- Strong's: H3458, H3459
ಇಸಾಕ
ಸತ್ಯಾಂಶಗಳು:
ಇಸಾಕನು ಅಬ್ರಾಹಾಮ ಮತ್ತು ಸಾರಾಳಗೆ ಒಬ್ಬನೇ ಮಗನಾಗಿದ್ದನು. ಅವರು ವೃದ್ಧರಾಗಿದ್ದರೂ ಅವರಿಗೆ ಮಗನನ್ನು ಕೊಡುತ್ತೇನೆಂದು ದೇವರು ವಾಗ್ಧಾನ ಮಾಡಿದ್ದರು.
- “ಇಸಾಕ” ಎನ್ನುವ ಪದಕ್ಕೆ “ಅವನು ನಕ್ಕನು” ಎಂದರ್ಥ. ಸಾರಾಳು ಒಬ್ಬ ಗಂಡು ಮಗುವಿಗೆ ಜನ್ಮ ಕೊಡುತ್ತಾಳೆಂದು ದೇವರು ಅಬ್ರಾಹಾಮನಿಗೆ ಹೇಳಿದಾಗ, ಅಬ್ರಾಹಾಮನು ನಕ್ಕನು, ಯಾಕಂದರೆ ಅವರು ತುಂಬಾ ವೃದ್ಧರಾಗಿದ್ದರು. ಸ್ವಲ್ಪ ಕಾಲವಾದನಂತರ, ಸಾರಾಳು ಕೂಡ ಈ ವಾರ್ತೆಯನ್ನು ಕೇಳಿಸಿಕೊಂಡಾಗ ನಕ್ಕಳು.
- ಆದರೆ ದೇವರು ತನ್ನ ವಾಗ್ಧಾನವನ್ನು ನೆರವೇರಿಸಿದನು ಮತ್ತು ಇಸಾಕನು ಅಬ್ರಾಹಾಮ ಮತ್ತು ಸಾರಾಳ ವೃದ್ಧಾಪ್ಯದಲ್ಲಿ ಜನಿಸಿದನು.
- ಅಬ್ರಾಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆಯು ಇಸಾಕನಿಗೂ ಮತ್ತು ಅವನ ಸಂತಾನದವರಿಗೂ ನಿರಂತರವಾಗಿರುತ್ತದೆಯೆಂದು ದೇವರು ಅಬ್ರಾಹಾಮನಿಗೆ ಹೇಳಿದನು.
- ಇಸಾಕನಿಗೆ ಯೌವನ ವಯಸ್ಸಿಗೆ ಬಂದಾಗ, ದೇವರು ಇಸಾಕನನ್ನು ಬಲಿ ಕೊಡಬೇಕೆಂದು ಆಜ್ನಾಪಿಸುವುದರ ಮೂಲಕ ಅಬ್ರಾಹಾಮನ ವಿಶ್ವಾಸವನ್ನು ಪರೀಕ್ಷೆ ಮಾಡಿದನು.
- ಇಸಾಕನ ಮಗನಾಗಿರುವ ಯಾಕೋಬನಿಗೆ ಹನ್ನೆರಡು ಮಂದಿ ಮಕ್ಕಳಿದ್ದರು, ಇವರೇ ಇಸ್ರಾಯೇಲ್ ದೇಶದ ಹನ್ನೆರಡು ಕುಲಗಳಾದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ವಂಶದವರು, ನಿತ್ಯತ್ವ, ನೆರವೇರಿಸು, ಯಾಕೋಬ, ಸಾರಾ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
- ಗಲಾತ್ಯ.04:28-29
- ಆದಿ.25:9-11
- ಆದಿ.25:19-20
- ಆದಿ.26:1
- ಆದಿ.26:6-8
- ಆದಿ.28:1-2
- ಆದಿ.31:17-18
- ಮತ್ತಾಯ.08:11-13
- ಮತ್ತಾಯ.22:31-33
ಸತ್ಯವೇದದಿಂದ ಉದಾಹರಣೆಗಳು:
- 05:04 “ನಿನ್ನ ಹೆಂಡತಿಯಾದ ಸಾರಾಯಳು ಒಂದು ಗಂಡು ಮಗುವನ್ನು ಹಡೆಯುವಳು, ಅವನು ನನ್ನ ವಾಗ್ಧಾನ ಪುತ್ರನಾಗಿರುವನು. ಅವನಿಗೆ ___ ಇಸಾಕ ___ ಎಂದು ಹೆಸರಿಡಬೇಕು.
- 05:06 ___ ಇಸಾಕನು ___ ಯೌವನಸ್ಥನಾಗಿರುವಾಗ, “ನಿನ್ನ ಒಬ್ಬನೇ ಮಗನಾಗಿರುವ ___ ಇಸಾಕನನ್ನು ___ ಕರೆದುಕೊಂಡು, ನನಗೆ ಬಲಿಯಾಗಿ ಅವನನ್ನು ಸಾಯಿಸು” ಎಂದು ಹೇಳುವುದರ ಮೂಲಕ ದೇವರು ಅಬ್ರಾಹಾಮನ ನಂಬಿಕೆಯನ್ನು ಪರೀಕ್ಷೆ ಮಾಡಿದನು.
- 05:09 ___ ಇಸಾಕನ ___ ಬಲಿಗೆ ಬದಲಾಗಿ ದೇವರು ಒಂದು ಕುರಿಯನ್ನು ಅನುಗ್ರಹಿಸಿದರು.
- 06:01 ಅಬ್ರಾಹಾಮನು ವೃದ್ಧಾಪ್ಯದಲ್ಲಿದ್ದಾಗ, ತನ್ನ ಮಗನಾದ ___ ಇಸಾಕನು ___ ದೊಡ್ಡವನಾಗಿ ಬೆಳೆದು ಬಂದಾಗ, ತನ್ನ ಮಗನು ___ ಇಸಾಕನಿಗಾಗಿ ___ ಹುಡಿಗಿಯನ್ನು ಕಂಡುಕೊಂಡು ಬರುವುದಕ್ಕೆ ಅಬ್ರಾಹಾಮನು ತನ್ನ ಆಳುಗಳಲ್ಲಿ ಒಬ್ಬರನ್ನು ಕರೆದು ತನ್ನ ಬಂಧುಗಳು ನಿವಾಸವಾಗಿರುವ ಸ್ಥಳಕ್ಕೆ ಕಳುಹಿಸಿದನು.
- 06:05 ___ ಇಸಾಕನು ___ ರೆಬೆಕ್ಕಳಿಗಾಗಿ ಪ್ರಾರ್ಥನೆ ಮಾಡಿದನು, ಮತ್ತು ಆಕೆ ಇಬ್ಬರು ಅವಳಿ ಜವಳಿ ಮಕ್ಕಳಿಗೆ ಗರ್ಭವನ್ನು ಧರಿಸುವುದಕ್ಕೆ ದೇವರು ಅನುಮತಿ ನೀಡಿದರು.
- 07:10 ಆದನಂತರ ___ ಇಸಾಕನು ___ ಮರಣ ಹೊಂದಿದನು, ಯಾಕೋಬ ಮತ್ತು ಏಸಾವರಿಬ್ಬರು ಅವನನ್ನು ಸಮಾಧಿ ಮಾಡಿದರು. ದೇವರು ಅಬ್ರಾಹಾಮನಿಗೆ ವಾಗ್ಧಾನ ಮಾಡಿದ ಒಡಂಬಡಿಕೆಯ ವಾಗ್ಧಾನಗಳು ___ ಇಸಾಕನಿಗೆ ___ ಬಂದವು, ಈಗ ಯಾಕೋಬನಿಗೆ ಬಂದವು.
ಪದ ಡೇಟಾ:
- Strong's: H3327, H3446, G2464
ಇಸ್ಕರಿಯೋತ ಯೂದ
ಸತ್ಯಾಂಶಗಳು:
ಇಸ್ಕರಿಯೋತ ಯೂದ ಯೇಸುವಿನ ಅಪೊಸ್ತಲರಲ್ಲಿ ಒಬ್ಬನಾಗಿರುತ್ತಾನೆ. ಇವನೇ ಯೇಸುವನ್ನು ಯೆಹೂದ್ಯ ನಾಯಕರಿಗೆ ಹಿಡಿಸಿಕೊಟ್ಟಿರುತ್ತಾನೆ.
- “ಇಸ್ಕರಿಯೋತ” ಎನ್ನುವ ಹೆಸರಿಗೆ “ಕೆರಿಯೋತನಿಂದ ಬಂದವನು” ಎಂದರ್ಥ, ಇದು ಯೂದನು ಆ ಪಟ್ಟಣದಲ್ಲಿ ಬೆಳೆದಿರುತ್ತಾನೆಂದು ನಮಗೆ ಸೂಚಿಸುತ್ತಿದೆ.
- ಇಸ್ಕರಿಯೋತ ಯೂದನು ಅಪೊಸ್ತಲರ ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಮತ್ತು ಆದರೆ ಆ ಹಣದಲ್ಲಿ ಸ್ವಲ್ಪ ಹಣವನ್ನು ಕದಿಯುತ್ತಾ ತನಗೋಸ್ಕರ ಉಪಯೋಗಿಸಿಕೊಳ್ಳುತ್ತಿದ್ದನು.
- ಯೂದನು ಯೇಸುವನ್ನು ಬಂಧಿಸಲು ಧರ್ಮ ನಾಯಕರಿಗೆ ಆತನಿರುವ ಸ್ಥಳವನ್ನು ಹೇಳುವ ಮೂಲಕ ಯೇಸುವಿಗೆ ದ್ರೋಹ ಮಾಡಿದ್ದಾನೆ,
- ಧರ್ಮ ನಾಯಕರೆಲ್ಲರು ಯೇಸುವಿಗೆ ಮರಣ ದಂಡನೆಯನ್ನು ವಿಧಿಸಿದಾಗ, ಯೇಸುವಿಗೆ ದ್ರೋಹ ಮಾಡಿದ್ದೇನೆಂದು ಯೂದನು ದುಃಖಪಟ್ಟನು, ಆದ್ದರಿಂದ ಅವನು ಮೋಸ ಮಾಡಿದ್ದಕ್ಕೆ ಕೊಟ್ಟ ಹಣವನ್ನು ಯೆಹೂದ್ಯರ ನಾಯಕರಿಗೆ ತಿರುಗಿ ಕೊಟ್ಟು, ನಂತರ ಆತ್ಮಹತ್ಯ ಮಾಡಿಕೊಂಡನು.
- ಇನ್ನೊಬ್ಬ ಅಪೊಸ್ತಲ ಹೆಸರು ಕೂಡ ಯೂದ ಎಂದಿತ್ತು, ಇವನು ಯೇಸುವಿನ ಸಹೋದರರಲ್ಲಿ ಒಬ್ಬನಾಗಿದ್ದನು. ಯೇಸುವಿನ ಸಹೋದರನು ಕೂಡ “ಯೂದ” ಎನ್ನುವ ಹೆಸರಿನವನಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ದ್ರೋಹ, ಯೆಹೂದ್ಯರ ನಾಯಕರು, ಯಾಕೋಬನ ಮಗನು ಯೂದ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 38:02 ಯೇಸುವಿನ ಶಿಷ್ಯರುಗಳಲ್ಲಿ ___ ಯೂದ ___ ಎನ್ನುವ ಹೆಸರಿನಲ್ಲಿ ಒಬ್ಬ ಮನುಷ್ಯನಿದ್ದನು. ಯೇಸು ಮತ್ತು ಶಿಷ್ಯರು ಯೆರೂಸಲೇಮಿನೊಳಗೆ ಬಂದಾಗ, ___ ಯೂದನು ___ ಯೆಹೂದ್ಯರ ನಾಯಕರ ಬಳಿಗೆ ಹೋದನು ಮತ್ತು ಹಣಕ್ಕಾಗಿ ಯೇಸುವನ್ನು ಅವರ ಕೈಗೆ ಒಪ್ಪಿಸಿಕೊಟ್ಟನು.
- 38:03 ಯೆಹೂದ್ಯ ನಾಯಕರೆಲ್ಲರು ಮಹಾ ಯಾಜಕನಿಂದ ನಡೆಸಲ್ಪಟ್ಟರು, ಯೇಸುವನ್ನು ಒಪ್ಪಿಸಿಕೊಟ್ಟಿದ್ದಕ್ಕಾಗಿ ___ ಯೂದನಿಗೆ ___ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
- 38:14 ___ ಯೂದನು ___ ಯೆಹೂದ್ಯ ನಾಯಕರು, ಸೈನಿಕರು ಮತ್ತು ದೊಡ್ಡ ಜನಸಮೂಹದೊಂದಿಗೆ ಬಂದನು. ಅವರೆಲ್ಲರು ಖಡ್ಗ ಗಳನ್ನು ಮತ್ತು ಬೆತ್ತಗಳನ್ನು ಹೊತ್ತಿಕೊಂಡು ಹೋಗುತ್ತಿದ್ದರು. ___ ಯೂದ ___ ಯೇಸುವಿನ ಬಳಿಗೆ ಬಂದು, “ಬೋಧಕನಿಗೆ ಶುಭಾಷಯಗಳನ್ನು” ಹೇಳಿ, ಆತನನ್ನು ಮುದ್ದಿಟ್ಟುಕೊಂಡನು.
- 39:08 ಆ ಸಮಯದಲ್ಲಿಯೇ, ಯೆಹೂದ್ಯರ ನಾಯಕರು ಯೇಸುವನ್ನು ಮರಣ ಶಿಕ್ಷೆಯನ್ನು ಹಾಕಿದ್ದಾರೆಂದು ದ್ರೋಹಿಯಾದ ___ ಯೂದನು ___ ನೋಡಿದನು. ಆಗ ಅವನು ತುಂಬಾ ದುಃಖಪಟ್ಟನು ಮತ್ತು ಹೊರಗೆ ಹೋಗಿ, ತನ್ನನ್ನು ತಾನು ಸಾಯಿಸಿಕೊಂಡನು.
ಪದ ಡೇಟಾ:
- Strong's: G2455, G2469
ಇಸ್ರಾಯೇಲ್ ರಾಜ್ಯ
ಸತ್ಯಾಂಶಗಳು:
ಸೊಲೊಮೋನನ ಮರಣದನಂತರ ಇಸ್ರಾಯೇಲ್ ಹನ್ನೆರಡು ಕುಲಗಳು ಎರಡು ರಾಜ್ಯಗಳಾಗಿ ವಿಭಜನೆ ಹೊಂದಿದಾಗ ಇಸ್ರಾಯೇಲ್ ದೇಶದ ಉತ್ತರ ಭಾಗವು ಇಸ್ರಾಯೇಲ್ ರಾಜ್ಯವಾಗಿ ಮಾರ್ಪಟ್ಟಿತು.
- ಉತ್ತರ ಭಾಗದಲ್ಲಿ ಇಸ್ರಾಯೇಲ್ ರಾಜ್ಯವು ಹತ್ತು ಕುಲಗಳನ್ನು ಮತ್ತು ದಕ್ಷಿಣ ಭಾಗದಲ್ಲಿ ಯೆಹೂದರಾಜ್ಯವು ಎರಡು ಕುಲಗಳನ್ನು ಹೊಂದಿದವು.
- ಇಸ್ರಾಯೇಲ್ ರಾಜ್ಯದ ರಾಜಧಾನಿ ಸಮಾರ್ಯವಾಗಿತ್ತು. ಇದು ಯೆಹೂದರಾಜ್ಯದ ರಾಜಧಾನಿಯಾಗಿರುವ ಯೆರೂಸಲೇಮಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುತ್ತದೆ.
- ಇಸ್ರಾಯೇಲ್ ರಾಜ್ಯದ ಎಲ್ಲಾ ಅರಸರು ದುಷ್ಟರಾಗಿದ್ದರು. ಅವರು ಸುಳ್ಳು ದೇವರುಗಳನ್ನು ಮತ್ತು ಆ ವಿಗ್ರಹಗಳಿಗೆ ಸೇವೆ ಮಾಡುವುದಕ್ಕೆ ಎಲ್ಲಾ ಜನರನ್ನು ಪ್ರೇರೇಪಿಸಿದ್ದರು.
- ಇಸ್ರಾಯೇಲ್ ರಾಜ್ಯವನ್ನು ಧಾಳಿ ಮಾಡುವುದಕ್ಕೆ ದೇವರು ಅಶ್ಯೂರರನ್ನು ಕಳುಹಿಸಿದನು. ಅನೇಕಮಂದಿ ಇಸ್ರಾಯೇಲ್ಯರನ್ನು ಸೆರೆ ಹಿಡಿದರು ಮತ್ತು ಅವರನ್ನು ಅಶ್ಯೂರಿನಲ್ಲಿ ನಿವಾಸವಾಗುವಂತೆ ಕರೆದೊಯ್ದರು.
- ಅಶ್ಯೂರಿಯನ್ನರು ಇಸ್ರಾಯೇಲ್ ರಾಜ್ಯದಲ್ಲಿ ಉಳಿದ ಜನರ ಮಧ್ಯೆದೊಳಗೆ ಅನ್ಯರನ್ನು ಕರೆದುಕೊಂಡು ಅಲ್ಲಿ ಬಿಟ್ಟರು. ಮೂವರು ಅನ್ಯರು ಇಸ್ರಾಯೇಲ್ಯರೊಂದಿಗೆ ವಿವಾಹವಾದರು, ಮತ್ತು ಅವರ ಮಕ್ಕಳು ಸಮಾರ್ಯದವರಾಗಿ ಮಾರ್ಪಟ್ಟರು.
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಇಸ್ರಾಯೇಲ್, ಯೂದಾ, ಯೆರೂಸಲೇಮ್, ರಾಜ್ಯ, ಸಮಾರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 18:08 ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿ ಇಸ್ರಾಯೇಲ್ ದೇಶದ ಹತ್ತು ಕುಲಗಳು ತಮಗೆ ಅರಸನಾಗಿರುವುದಕ್ಕೆ ಯಾರೊಬ್ಬಾಮನನ್ನು ನೇಮಿಸಿಕೊಂಡರು. ಆ ಭೂಮಿಯ ಉತ್ತರ ಭಾಗದಲ್ಲಿ ತಮ್ಮ ರಾಜ್ಯವನ್ನು ಕಟ್ಟಿಕೊಂಡರು ಮತ್ತು ಅವರು __ ಇಸ್ರಾಯೇಲ್ ರಾಜ್ಯ __ ಎಂಬುದಾಗಿ ಕರೆಯಲ್ಪಟ್ಟರು.
- 18:10 __ ಇಸ್ರಾಯೇಲ್ ಮತ್ತು ಯೆಹೂದ ರಾಜ್ಯಗಳು __ಒಬ್ಬರಿಗೊಬ್ಬರು ಶತ್ರುಗಳಾದರು ಮತ್ತು ಒಬ್ಬರಿಗೊಬ್ಬರ ವಿರುದ್ಧ ಹೋರಾಟಗಳನ್ನು ಮಾಡಿದರು.
- 18:11 ಹೊಸ __ ಇಸ್ರಾಯೇಲ್ ರಾಜ್ಯದಲ್ಲಿ __ ಎಲ್ಲಾ ಅರಸರು ದುಷ್ಟರಾಗಿದ್ದರು.
- 20:01 ಯೆಹೂದ ಮತ್ತು ಇಸ್ರಾಯೇಲ್ ರಾಜ್ಯಗಳೆರಡು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದರು.
- 20:02 ಶಕ್ತಿಯುತವಾದ, ಕ್ರೂರವುಳ್ಳ ಅಶ್ಯೂರ್ ಸಾಮ್ರಾಜ್ಯದಿಂದ __ ಇಸ್ರಾಯೇಲ್ ರಾಜ್ಯವು __ ನಾಶಗೋಳಿಸಲ್ಪಟ್ಟಿತು. ಅಶ್ಯೂರಿಯನರು __ ಇಸ್ರಾಯೇಲ್ ರಾಜ್ಯದಲ್ಲಿ __ ಅನೇಕ ಜನರನ್ನು ಸಾಯಿಸಿದರು, ಬೆಲೆಯುಳ್ಳ ಪ್ರತಿ ವಸ್ತುವನ್ನು ತೆಗೆದುಕೊಂಡರು ಮತ್ತು ಬಹಳಷ್ಟು ದೇಶವನ್ನು ಸುಟ್ಟು ಹಾಕಿದರು.
- 20:04 ಇದಾದನಂತರ ಅಶ್ಯೂರಿಯರು __ ಇಸ್ರಾಯೇಲ್ ರಾಜ್ಯವು __ ಇರುವ ಭೂಮಿಯಲ್ಲಿ ಅನ್ಯರನ್ನು ಕರೆದುಕೊಂಡು ಬಂದು ಬಿಟ್ಟರು. ಬಿದ್ದುಹೋಗಿರುವ ಪಟ್ಟಣಗಳನ್ನೆಲ್ಲಾ ಆ ಅನ್ಯರು ಕಟ್ಟಿದರು ಮತ್ತು ಅಲ್ಲಿ ಬಿಡಲ್ಪಟ್ಟಿರುವ ಇಸ್ರಾಯೇಲ್ಯರನ್ನು ಮದುವೆ ಮಾಡಿಕೊಂಡರು. ಇಸ್ರಾಯೇಲ್ಯರ ಸಂತಾನದವರನ್ನು ಮದುವೆ ಮಾಡಿಕೊಂಡಿರುವ ಅನ್ಯರನ್ನು ಸಮಾರ್ಯದವರು ಎಂದು ಕರೆಯಲ್ಪಟ್ಟರು.
ಪದ ಡೇಟಾ:
- Strong's: H3478, H4410, H4467, H4468
ಇಸ್ರಾಯೇಲ್, ಇಸ್ರಾಯೇಲನು, ಇಸ್ರಾಯೇಲ್ಯರು, ಯಾಕೋಬ
ಸತ್ಯಾಂಶಗಳು:
ಯಾಕೋಬನು ಇಸಾಕ ಮತ್ತು ರೆಬೆಕ್ಕಳಿಗೆ ಹುಟ್ಟಿದ ಅವಳಿಜವಳಿ ಮಕ್ಕಳಲ್ಲಿ ಚಿಕ್ಕವನಾಗಿದ್ದನು. ದೇವರು ಯಾಕೋಬನಿಗೆ ಇಸ್ರಾಯೇಲ್ ಎಂಬ ಹೆಸೆರನ್ನು ನೀಡಿದನು. ಆತನ ವಂಶಸ್ಥರು ಇಸ್ರಾಯೇಲ್ ರಾಷ್ಟ್ರದವರಾದರು
- ಯಾಕೋಬ ಎನ್ನುವ ಹೆಸರಿಗೆ “ಅವನು ಹಿಮ್ಮಡಿಯನ್ನು ಎಳೆಯುವನು” ಎಂದರ್ಥ. ಇದು “ಇವನು ಮೋಸಮಾಡುವವನು” ಎನ್ನುವ ಅರ್ಥ ಬರುವ ಮಾತಾಗಿರುತ್ತದೆ ಯಾಕೋಬ ಹುಟ್ಟುತ್ತಿರುವಾಗಲೇ ಅವನು ತನ್ನ ಅಣ್ಣನಾದ ಏಸಾವನ ಹಿಮ್ಮಡಿಯನ್ನು ಹಿಡಿದುಕೊಂಡು ಹುಟ್ಟಿದ್ದನು.
- ಅನೇಕ ವರ್ಷಗಳಾದಮೇಲೆ, ದೇವರು ಯಾಕೋಬನ ಹೆಸರನ್ನು “ಇಸ್ರಾಯೇಲ್” ಎಂಬುವುದಾಗಿ ಮಾರ್ಪಾಟು ಮಾಡಿದ್ದನು, ಇದಕ್ಕೆ “ಇವನು ದೇವರೊಂದಿಗೆ ಹೋರಾಡುವವನು” ಎಂದರ್ಥ.
- ಯಾಕೋಬನು ತುಂಬಾ ಜಾಣನು ಮತ್ತು ಮೋಸಗಾರನೂ ಆಗಿದ್ದನು. ಇವನು ತನ್ನ ಅಣ್ಣನಾದ ಏಸಾವನಿಂದ ಚೊಚ್ಚಲುತನವನ್ನು ಮತ್ತು ಸ್ವಾಸ್ಥ್ಯದ ಹಕ್ಕುಗಳನ್ನು ತೆಗೆದುಕೊಂಡವನಾಗಿ ನಮಗೆ ಕಾಣಿಸಿಕೊಳ್ಳುತ್ತಾನೆ.
- ಯಾಕೋಬನು ಲಾಬಾನನ ಎರಡು ಹೆಣ್ಣು ಮಕ್ಕಳಾದ ಲೇಯಾ, ರಾಹೇಲಳನ್ನು ಮತ್ತು ಅವರ ದಾದಿಗಳಾದ ಜಿಲ್ಪ ಮತ್ತು ಬಿಲ್ಹಾರನ್ನು ಮದುವೆಮಾಡಿಕೊಂಡನು. ಈ ನಾಲ್ಕು ಸ್ತ್ರೀಯರು ಇಸ್ರಾಯೇಲ್ಯರ ಹನ್ನೆರಡು ಕುಲಗಳ ಮೂಲಪಿತೃಗಳ ಜನ್ಮ ನೀಡಿದರು.
- ಯಾಕೋಬನು ಇಸ್ರಾಯೇಲ್ಯರ ಮೂರು ಮೂಲಪಿತೃಗಳಲ್ಲಿ ಕೊನೆಯವನಾಗಿದ್ದನು. ಯಾಕೋಬನಿಗೆ ಹನ್ನೆರಡು ಮಂದಿ ಗಂಡು ಮಕ್ಕಳು. ಅವರ ಸಂತಾನದವರೆಲ್ಲರು ಇಸ್ರಾಯೇಲ್ ಹನ್ನೆರಡು ಕುಲಗಳಾದರು.
- ಹೊಸ ಒಡಂಬಡಿಕೆಯಲ್ಲಿ, ಮತ್ತಾಯ ಸುವಾರ್ತೆಯ ವಂಶಾವಳಿಯಲ್ಲಿ ಯಾಕೋಬನ ಎಂಬ ವಿಭಿನ್ನ ವ್ಯಕ್ತಿಯನ್ನು ಯೋಸೇಫನ ತಂದೆ ಎಂದು ಪಟ್ಟಿಮಾಡಲಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಮೋಸಗೊಳಿಸು, ಏಸಾವ, ಇಸಾಕ, ಇಸ್ರಾಯೇಲ್, ರೆಬೆಕ್ಕ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.07:11-13
- ಅಪೊ.ಕೃತ್ಯ.07:44-46
- ಆದಿ.25:24-26
- ಆದಿ.29:1-3
- ಆದಿ.32:1-2
- ಯೋಹಾನ.04:4-5
- ಮತ್ತಾಯ.08:11-13
- ಮತ್ತಾಯ.22:31-33
ಸತ್ಯವೇದದಿಂದ ಉದಾಹರಣೆಗಳು:
- 07:01 ಗಂಡು ಮಕ್ಕಳು ಬೆಳೆದು ಬರುತ್ತಾ ಇರುವಾಗ, ರೆಬೆಕ್ಕಾಳು ___ ಯಾಕೋಬನನ್ನು ___ ಪ್ರೀತಿಸಿದಳು, ಆದರೆ ಇಸಾಕನು ಏಸಾವನನ್ನು ಪ್ರೀತಿಸಿದನು. ___ ಯಾಕೋಬನು ___ ಮನೆಯಲ್ಲಿರುವುದಕ್ಕೆ ಇಷ್ಟಪಟ್ಟನು, ಆದರೆ ಏಸಾವನು ಭೇಟಿಯಾಡುವುದನ್ನು ಇಷ್ಟಪಟ್ಟನು.
- 07:07 ___ ಯಾಕೋಬನು ___ ಅಲ್ಲಿ ಅನೇಕ ವರ್ಷಗಳು ನಿವಾಸವಾಗಿದ್ದನು, ಮತ್ತು ಆ ಸಮದಲ್ಲಿಯೇ ಅವನು ಅಲ್ಲಿ ಮದುವೆ ಮಾಡಿಕೊಂಡನು ಮತ್ತು ಹನ್ನೆರಡು ಮಂದಿ ಗಂಡು ಮಕ್ಕಳನ್ನು, ಒಂದು ಹೆಣ್ಣು ಮಗುವನ್ನು ಹಡೆದನು. ದೇವರು ಇವನನ್ನು ಉನ್ನತ ಶ್ರೀಮಂತನನ್ನಾಗಿ ಮಾಡಿದನು.
- 07:08 ಕಾನಾನ್.ನಲ್ಲಿರುವ ತನ್ನ ಮನೆಯಿಂದ ದೂರವಿದ್ದು ಸುಮಾರು ಇಪ್ಪತ್ತು ವರ್ಷಗಳು ಆದನಂತರ, ___ ಯಾಕೋಬನು ___ ತನ್ನ ಕುಟುಂಬ, ತನ್ನ ದಾಸರು ಮತ್ತು ತನಗಿರುವ ಎಲ್ಲಾ ಪಶು ಪ್ರಾಣಿಗಳೊಂದಿಗೆ ಹಿಂದುರಿಗಿ ಬಂದನು.
- 07:10 ದೇವರು ಅಬ್ರಾಹಾಮನೊಂದಿಗೆ ವಾಗ್ಧಾನ ಮಾಡಿದ ಒಡಂಬಡಿಕೆಯ ವಾಗ್ಧಾನಗಳು ಇಸಾಕನ ಬಳಿಗೆ ಹೋದವು ಮತ್ತು ಈಗ ___ ಯಾಕೋಬನ ___ ಬಳಿಗೆ ಹೋದವು.
- 08:01 ಅನೇಕ ವರ್ಷಗಳು ಆದನಂತರ, ___ ಯಾಕೋಬನು ___ ವೃದ್ಧಾಪ್ಯದಲ್ಲಿದ್ದಾಗ, ಯಾರ್ಯಾರು ಸರಿಯಾಗಿ ಹಿಂಡುಗಳನ್ನು ಕಾಯುತ್ತಿದ್ದಾರೋ ಇಲ್ಲವೋ ಎಂದು ತನ್ನ ಸಹೋದರರನ್ನು ನೋಡಿಕೊಂಡು ಬರಲು ಆತನು ತನಗೆ ಇಷ್ಟನಾಗಿರುವ ಮಗನಾದ ಯೋಸೇಫನನ್ನು ಕಳುಹಿಸುತ್ತಾನೆ.
ಪದ ಡೇಟಾ:
- Strong's: H3290, G2384
ಇಸ್ಸಾಕಾರ್
ಸತ್ಯಾಂಶಗಳು:
ಇಸ್ಸಾಕಾರ್ ಯಾಕೋಬನ ಐದನೆಯ ಕುಮಾರನಾಗಿದ್ದನು. ಲೇಯ ಅವನ ತಾಯಿಯಾಗಿದ್ದಳು.
- ಇಸ್ರಯೇಲ್ ಕುಲಗಳಲ್ಲಿ ಇಸ್ಸಾಕಾರ್ ಕುಲ ಒಂದಾಗಿತ್ತು.
- ಇಸ್ಸಾಕಾರ್ ದೇಶದ ಸುತ್ತಲು ನಫ್ತಾಲಿ, ಜೆಬುಲೂನ್, ಮನಸ್ಸೆ ಮತ್ತು ಗಾದ್ ಪ್ರಾಂತ್ಯಗಳಿದ್ದವು.
- ಅದು ಗಲಿಲಯ ಸಮುದ್ರದ ದಕ್ಷಿಣ ಭಾಗದಲ್ಲಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಗಾದ್, ಮನಸ್ಸೆ, ನಫ್ತಾಲಿ, ಇಸ್ರಯೇಲ್ ಹನ್ನೆರಡು ಕುಲಗಳು, ಜೆಬುಲೂನ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3485, G2466
ಈಜೆಬೆಲ್
ಸತ್ಯಾಂಶಗಳು:
ಈಜೆಬೆಲ್ ಇಸ್ರಾಯೇಲ್ ಅರಸನಾಗಿರುವ ಆಹಾಬನ ದುಷ್ಟ ಹೆಂಡತಿಯಾಗಿದ್ದಳು.
- ಈಜೆಬೆಲ್ ಆಹಾಬನನ್ನು ಮತ್ತು ವಿಗ್ರಹಗಳನ್ನು ಆರಾಧನೆ ಮಾಡುವುದಕ್ಕೆ ಉಳಿದ ಎಲ್ಲಾ ಇಸ್ರಾಯೇಲ್ಯರನ್ನು ಪ್ರಭಾವಗೊಳಿಸಿದಳು.
- ಈಕೆಯೂ ದೇವರ ಪ್ರವಾದಿಗಳಾದ ಅನೇಕಮಂದಿಯನ್ನು ಸಾಯಿಸಿದ್ದಳು.
- ಆಹಾಬನು ನಾಬೋತನ ದ್ರಾಕ್ಷಿತೋಟವನ್ನು ಕದ್ದುಕೊಳ್ಳಲು ನಿರ್ದೋಷಿಯಾದ ನಾಬೋತ ಎನ್ನುವ ವ್ಯಕ್ತಿಯನ್ನು ಸಾಯಿಸುತ್ತಾಳೆ.
- ಕೊನೆಗೆ ಈಜೆಬೆಲಳು ತಾನು ಮಾಡಿದ ಎಲ್ಲಾ ದುಷ್ಟ ಕಾರ್ಯಗಳಿಗಾಗಿ ಸಾವನ್ನಪ್ಪುತ್ತಾಳೆ. ಈಕೆ ಹೇಗೆ ಸಾಯುವಳೆಂದು ಎಲೀಯ ಪ್ರವಾದಿಸುತ್ತಾನೆ ಮತ್ತು ಆತನು ಪ್ರವಾದಿಸಿದಂತೆಯೇ ಆಕೆ ಸಾಯುತ್ತಾಳೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಎಲೀಯ, ಸುಳ್ಳು ದೇವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H348, G2403
ಉಜ್ಜೀಯ, ಅಜರ್ಯ
ಸತ್ಯಾಂಶಗಳು:
ಉಜ್ಜೀಯನು ತನ್ನ 16ನೇ ವಯಸ್ಸಿನಲ್ಲಿ ಯೆಹೂದ್ಯ ರಾಜ್ಯಕ್ಕೆ ಅರಸನಾದನು, ಸುಮಾರು 52 ವರ್ಷಗಳ ಕಾಲ ಆಳಿದನು, ಇದು ಅಸಾಧಾರಣವಾದ ದೀರ್ಘ ಆಡಳಿತವಾಗಿದ್ದಿತ್ತು. ಉಜ್ಜೀಯನಿಗೆ “ಅಜರ್ಯ” ಎನ್ನುವ ಹೆಸರೂ ಇದ್ದಿತ್ತು.
- ಅರಸನಾದ ಉಜ್ಜೀಯನು ಸಂಘಟಿತ ಮತ್ತು ನಿಪುಣತೆಯ ಸೈನಿಕನಾಗಿ ಹೆಸರುವಾಸಿಯಾಗಿದ್ದನು. ಪಟ್ಟಣವನ್ನು ಕಾಪಾಡುವುದಕ್ಕೆ ಇವನು ದೊಡ್ಡ ದೊಡ್ಡ ಗೋಡೆಗಳನ್ನು ಕಟ್ಟಿಸಿಕೊಂಡಿದ್ದನು, ಅವುಗಳ ಮೇಲೆ ವಿಶೇಷವಾಗಿ ತಯಾರು ಮಾಡಿಸಿರುವ ದೊಡ್ಡ ದೊಡ್ಡ ಕಲ್ಲುಗಳನ್ನು ಮತ್ತು ಜೋರಾಗಿ ಹೋಗುವ ಬಾಣಗಳೆನ್ನುವ ಯುದ್ಧ ಸಾಮಾಗ್ರಿಗಳನ್ನು ಇಟ್ಟಿರುತ್ತಾರೆ.
- ಉಜ್ಜೀಯನು ಕರ್ತನನ್ನು ಸೇವಿಸಿದ ಕಾಲದವರೆಗೂ ಅಭಿವೃದ್ಧಿ ಹೊಂದಿದ್ದನು. ತನ್ನ ಆಡಳಿತದ ಅಂತ್ಯದಲ್ಲಿ ಅವನು ಅಹಂಕಾರಿಯಾದನು ಮತ್ತು ದೇವಾಲಯದಲ್ಲಿ ಯಾಜಕನೊಬ್ಬನೇ ಧೂಪವನ್ನು ಹಾಕುವುದಕ್ಕೆ ಅನುಮತಿಯಿದ್ದಾಗ, ಅದನ್ನು ಉಲ್ಲಂಘಿಸಿ, ಅವನು ಧೂಪವನ್ನು ಉರಿಸುವುದರ ಮೂಲಕ ಕರ್ತನಿಗೆ ಅವಿಧೇಯನಾದನು.
- ಈ ಪಾಪದ ಮೂಲಕ ಉಜ್ಜೀಯನು ಕುಷ್ಠ ರೋಗಿಯಾದನು ಮತ್ತು ತನ್ನ ಆಳ್ವಿಕೆಯನ್ನು ಮುಗಿಸುವವರೆಗೂ ಜನರ ಮಧ್ಯೆದಲ್ಲಿ ಜೀವಿಸದೇ ಆಚೆ ಜೀವಿಸಬೇಕಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯೆಹೂದ್ಯ, ಅರಸ, ಕುಷ್ಠ, ಆಳ್ವಿಕೆ, ಬುರುಜು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5814, H5818, H5838, H5839
ಊರೀಯ
ಸತ್ಯಾಂಶಗಳು:
ಊರೀಯ ಎನ್ನುವವನು ನೀತಿಯುಳ್ಳ ಮನುಷ್ಯನಾಗಿದ್ದನು ಮತ್ತು ಅರಸನಾದ ದಾವೀದನ ಉತ್ತಮ ಸೈನಿಕರಲ್ಲಿ ಒಬ್ಬನಾಗಿದ್ದನು. ಇವನನ್ನು ಅನೇಕಬಾರಿ “ಹಿತ್ತಿಯನಾದ ಊರೀಯ” ಎಂದೂ ಸೂಚಿಸಲ್ಪಟ್ಟಿರುತ್ತಾನೆ.
- ಊರೀಯನಿಗೆ ಬತ್ಷೆಬೆ ಎನ್ನುವ ಹೆಸರಿನ ಸುಂದರವಾದ ಹೆಂಡತಿಯಿದ್ದಿದ್ದಳು,
- ದಾವೀದನು ಊರೀಯ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಿದ್ದನು, ಮತ್ತು ಆಕೆ ಗರ್ಭವತಿಯಾಗಿ, ದಾವೀದನಿಗೆ ಮಗನನ್ನು ಹೆತ್ತಳು.
- ಈ ಪಾಪವನ್ನು ಮುಚ್ಚಿಕೊಳ್ಳಲು, ದಾವೀದನು ಯುದ್ಧದಲ್ಲಿರುವ ಊರೀಯನನ್ನು ಕೊಲ್ಲಿಸಿದನು. ಆದನಂತರ ದಾವೀದನು ಊರೀಯಳನ್ನು ಮದುವೆ ಮಾಡಿಕೊಂಡನು.
- ಊರೀಯ ಎನ್ನುವ ಹೆಸರಿನ ಮೇಲೆ ಇನ್ನೊಬ್ಬ ವ್ಯಕ್ತಿ ಯಾಜಕನಾಗಿದ್ದನು, ಇವನು ಅರಸನಾದ ಆಹಾಜ ಕಾಲದಲ್ಲಿ ಕೆಲಸ ಮಾಡಿರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಹಾಜ, ಬತ್ಷೆಬೆ, ದಾವೀದ, ಹಿತ್ತಿಯನು)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 17:12 __ ಊರೀಯ __ ಎನ್ನುವ ವ್ಯಕ್ತಿ ಬತ್ಷೆಬೆಯ ಗಂಡನಾಗಿದ್ದನು, ಇವನು ದಾವೀದನ ಉತ್ತಮ ಸೈನಿಕರಲ್ಲಿ ಒಬ್ಬನಾಗಿದ್ದನು. ದಾವೀದನು __ ಊರೀಯನನ್ನು __ ಯುದ್ಧದಿಂದ ಹಿಂದಕ್ಕೆ ಕರೆಕಳುಹಿಸಿ, ನಿನ್ನ ಹೆಂಡತಿಯೊಂದಿಗೆ ಇರು ಎಂದು ಅವನಿಗೆ ಹೇಳಿದನು. ಆದರೆ ಯುದ್ಧದಲ್ಲಿ ಸೈನಿಕರು ಹೋರಾಟ ಮಾಡುತ್ತಿರುವುದರಿಂದ, __ ಊರೀಯ __ ಮನೆಗೆ ಹೋಗುವುದಕ್ಕೆ ತಿರಸ್ಕರಿಸಿದನು. ಇದರಿಂದ ದಾವೀದನು __ ಊರೀಯನನ್ನು __ ಯುದ್ಧಕ್ಕೆ ಕಳುಹಿಸಿದನು ಮತ್ತು ಇವನನ್ನು ಸಾಯಿಸುವುದಕ್ಕೆ ಶತ್ರುವು ಬಲವಾಗಿರುವ ಸ್ಥಳದಲ್ಲಿ ನಿಲ್ಲಿಸಬೇಕೆಂದು ಸೈನ್ಯಾಧಿಪತಿಗೆ ಹೇಳಿದನು.
- 17:13 __ ಊರೀಯನು __ ಮರಣಿಸಿದನಂತರ, ದಾವೀದನು ಬತ್ಷೆಬೆಯನ್ನು ಮದುವೆ ಮಾಡಿಕೊಂಡನು.
ಪದ ಡೇಟಾ:
- Strong's: H223, G3774
ಊರ್
ಸತ್ಯಾಂಶಗಳು:
ಊರ್ ಎನ್ನುವುದು ಒಂದು ಪ್ರಾಮುಖ್ಯವಾದ ಪಟ್ಟಣವಾಗಿತ್ತು, ಇದು ಮೆಸೊಪೂತಾಮ್ಯದಲ್ಲಿ ಭಾಗವಾಗಿರುವ ಪುರಾತನ ಪ್ರಾಂತ್ಯವಾಗಿರುವ ಕಲ್ದೀಯದಲ್ಲಿನ ಯೂಫ್ರೇಟೀಸ್ ನದಿಯ ಪಕ್ಕದಲ್ಲಿ ಕಂಡುಬರುತ್ತದೆ. ಈ ಪ್ರಾಂತ್ಯವು ಈಗಿನ ಅಧುನಿಕ ದೇಶವಾಗಿರುವ ಇರಾಕಿನಲ್ಲಿ ಕಂಡುಬರುತ್ತದೆ.
- ಅಬ್ರಾಹಾಮನು ಊರ್ ಎನ್ನುವ ಪಟ್ಟಣದವನಾಗಿರುತ್ತಾನೆ ಮತ್ತು ದೇವರು ಈತನನ್ನು ಈ ಊರಿನಿಂದಲೇ ಕಾನಾನ್ ಭೂಮಿಗೆ ಹೋಗಬೇಕೆಂದು ಕರೆದಿದ್ದನು.
- ಅಬ್ರಾಹಾಮ ಸಹೋದರ ಮತ್ತು ಲೋಟನ ತಂದೆಯಾಗಿರುವ ಹಾರಾನನು ಊರ್ ಎನ್ನುವ ಊರಿನಲ್ಲಿಯೇ ಮರಣಹೊಂದಿದನು. ಬಹುಶಃ ಈ ಸಂಬಂಧದಿಂದಲೇ ಲೋಟನು ಅಬ್ರಾಹಾಮನೊಂದಿಗೆ ಊರ್ ಎನ್ನುವ ಪ್ರಾಂತ್ಯವನ್ನು ಬಿಡುವುದಕ್ಕೆ ಪ್ರಭಾವಗೊಳಿಸರಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಕಾನಾನ್, ಕಲ್ದೀಯ, ಯೂಫ್ರೇಟೀಸ್ ನದಿ, ಹಾರಾನ್, ಲೋಟ, ಮೆಸೊಪೂತಾಮ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H218
ಎಕ್ರೋನ್, ಎಕ್ರೋನಿಯರು
ಸತ್ಯಾಂಶಗಳು:
ಫಿಲಿಷ್ಟಿಯಲ್ಲಿ ಎಕ್ರೋನ್ ಮಹಾ ನಗರವಾಗಿದೆ, ಇದು ಮೆಡಿಟರೇನಿಯನ್ ಸಮುದ್ರದಿಂದ ಒಂಬತ್ತು ಮೈಲುಗಳ ದೂರದಲ್ಲಿದೆ.
- ಅನ್ಯ ದೇವತೆಯಾದ ಬಾಳ್ಜೆಬೂಬನ ದೇವಾಲಯ ಎಕ್ರೋನಿನಲ್ಲಿತ್ತು.
- ಫಿಲಿಷ್ಟಿಯರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಸ್ವಾಧೀನಪಡಿಸಿಕೊಂಡಾಗ ಅದನ್ನು ಅಷ್ಡೋದಿಗೆ ತೆಗೆದುಕೊಂಡು ಹೋದರು, ಅಲ್ಲಿಂದ ಗತೂರು ಮತ್ತು ಎಕ್ರೋನಿಗೆ ತೆಗೆದುಕೊಂಡು ಹೋದರು ಯಾಕಂದರೆ ಮಂಜೂಷವಿದ್ದ ಸ್ಥಳದಲ್ಲಿ ಯೆಹೋವ ಜನರಿಗೆ ರೋಗವುಂಟು ಮಾಡಿ ಅವರು ಸಾಯುವಂತೆ ಮಾಡಿದನು. ಕೊನೆಗೆ ಫಿಲಿಷ್ಟಿಯರು ಮಂಜೂಷವನ್ನು ಇಸ್ರಾಯೇಲಿಗೆ ತಿರುಗಿ ಕಳುಹಿಸಿದರು.
- ಅರಸನಾದ ಅಹಜ್ಯನು ತನ್ನ ಮೇಲುಪ್ಪರಿಗೆಯ ಕಿಟಿಕಿಯಿಂದ ಬಿದ್ದು ಅಸ್ವಸ್ಥನಾದಾಗ ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿ ತಾನು ಈ ಅಸ್ವಸ್ಥತೆಯಿಂದ ವಾಸಿಯಾಗುತ್ತಾನೋ ಇಲ್ಲವೋ ಎಂಬುದನ್ನು ವಿಚಾರಿಸಿ ಯೆಹೋವ ದೃಷ್ಟಿಯಲ್ಲಿ ಪಾಪ ಮಾಡಿದನು. ಆದಕಾರಣ ಯೆಹೋವ ದೇವರು ಅವನು ಮಾಡಿದ ಪಾಪದ ವಿಷಯವಾಗಿ ಸಾಯುವನೆಂದು ಹೇಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಹಜ್ಯನು, ಯೆಹೋವನ ಒಡಂಬಡಿಕೆಯ ಮಂಜೂಷ, ಅಷ್ಡೋದ್, ಬಾಳ್ಜೆಬೂಬ, ಅನ್ಯ ದೇವತೆ, ಗತೂರು, ಫಿಲಿಷ್ಟಿಯರು )
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6138, H6139
ಎಜ್ರ
ಸತ್ಯಾಂಶಗಳು:
ಎಜ್ರ ಇಸ್ರಾಯೇಲ್ ಯಾಜಕನಾಗಿದ್ದನು ಮತ್ತು ಬಾಬುಲೋನಿಂದ ಯೆರುಸಲೇಮಿಗೆ ಇಸ್ರಾಯೇಲರು ಸೆರೆಯಿಂದ ಹಿಂತಿರುಗಿ ಬಂದ ಚರಿತ್ರೆಯನ್ನು ಬರೆದ ಯೆಹುದಿಯರ ಕಾನೂನು ತಿಳಿದವನಾಗಿದ್ದನು.
ಎಜ್ರ ಎಂಬ ಸತ್ಯವೇದದಲ್ಲಿರುವ ಒಂದು ಪುಸ್ತಕದಲ್ಲಿ ಇಸ್ರಾಯೇಲ್ ಚರಿತ್ರೆಯನ್ನು ಅವನು ಬರೆದಿದ್ದಾನೆ. ಅವನು ನೆಹೆಮೀಯ ಪುಸ್ತಕವನ್ನು ಸಹ ಬರೆದಿರಬಹುದು, ಯಾಕಂದರೆ ಈ ಎರಡು ಪುಸ್ತಕಗಳು ಮೂಲವಾಗಿ ಒಂದೇ ಪುಸ್ತವಗಿದ್ದವು.
- ಇಸ್ರಾಯೇಲರು ಸಬ್ಬತ್ ದಿನ ಆಚರಣೆಗಳನ್ನು ನಿಲ್ಲಿಸಿದ ಕಾರಣ ಮತ್ತು ಅನ್ಯ ದೇವತೆಗಳನ್ನೂ ಪೂಜಿಸುವ ಸ್ತ್ರೀಯರನ್ನು ಅವರು ವಿವಾಹ ಮಾಡಿಕೊಂಡ ಕಾರಣ ಎಜ್ರ ಯೆರುಸಲೇಮಿಗೆ ಹಿಂತಿರುಗಿ ಬಂದಾಗ ಧರ್ಮಶಾಸ್ತ್ರವನ್ನು ಪುನಃ ಸ್ಥಾಪಿಸಿದನು.
- ಬಾಬುಲೋನಿಯರು ಯೆರುಸಲೇಮನ್ನು ಸ್ವಾಧೀನ ಪಡಿಸಿಕೊಂಡಾಗ ದ್ವಂಸಮಾಡಿದ ದೇವಾಲಯವನ್ನು ಎಜ್ರ ಪುನರ್ನಿರ್ಮಿಸಿದನು.
- ಹಳೆ ಒಡಂಬಡಿಕೆಯಲ್ಲಿ ಇನ್ನಿಬ್ಬರ ಹೆಸರು ಎಂದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬಾಬುಲೋನ್, ಸೆರೆ, ಯೆರುಸಲೇಮಿ, ಧರ್ಮಶಾಸ್ತ್ರ, ನೆಹೆಮೀಯ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H250, H5830, H5831, H5834
ಎಣ್ಣೆಮರಗಳ ಪರ್ವತ
ಪದದ ಅರ್ಥವಿವರಣೆ:
ಎಣ್ಣೆಮರಗಳ ಪರ್ವತವು ಒಂದು ದೊಡ್ಡ ಬೆಟ್ಟವಾಗಿರುತ್ತದೆ ಅಥವಾ ಯೆರೂಸಲೇಮಿನ ಪಟ್ಟಣದ ಪೂರ್ವದಿಕ್ಕಿಗೆ ದೊಡ್ಡ ಗುಡ್ಡವಾಗಿ ಕಂಡುಬರುತ್ತದೆ. ಇದು ಸುಮಾರು 787 ಮೀಟರುಗಳ ಎತ್ತರವಿರುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಈ ಪರ್ವತವು ಕೆಲವೊಂದುಸಲ “ಯೆರೂಸಲೇಮಿನ ಪೂರ್ವ ದಿಕ್ಕಿನಲ್ಲಿರುವ ಪರ್ವತವನ್ನು” ಸೂಚಿಸುತ್ತದೆ.
- ಹೊಸ ಒಡಂಬಡಿಕೆಯಲ್ಲಿ ಅನೇಕ ಸಂದರ್ಭಗಳಲ್ಲಿ ಯೇಸು ಮತ್ತು ತನ್ನ ಶಿಷ್ಯರು ಎಣ್ಣೆಮರಗಳ ಪರ್ವತಕ್ಕೆ ಹೋಗಿ ಪ್ರಾರ್ಥನೆ ಮಾಡಿ, ವಿಶ್ರಾಂತಿ ತೆಗೆದುಕೊಳ್ಳುವ ಪ್ರತಿಯೊಂದುಬಾರಿ ದಾಖಲು ಮಾಡಲ್ಪಟ್ಟಿರುತ್ತದೆ,
- ಯೇಸು ಗೆತ್ಸೇಮನೆ ತೋಟದಲ್ಲಿ ಬಂಧಿಸಲ್ಪಟ್ಟಿರುತ್ತಾನೆ, ಇದು ಎಣ್ಣೆಮರಗಳ ಪರ್ವತದ ಮೇಲೆ ಕಂಡುಬರುತ್ತದೆ.
- ಇದನ್ನು “ಒಲೀವ ಗುಡ್ಡ” ಅಥವಾ “ಒಲೀವ ಮರಗಳ ಪರ್ವತ” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಗೆತ್ಸೇಮನೆ, ಒಲೀವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2022, H2132, G3735, G1636
ಎದೋಮ್, ಎದೋಮ್ಯರು, ಇದೂಮಾಯ
ಸತ್ಯಾಂಶಗಳು:
ಎದೋಮ್ ಎನ್ನುವುದು ಏಸಾವ ಎನ್ನುವ ಹೆಸರಿಗೆ ಇನ್ನೊಂದು ಹೆಸರಾಗಿರುತ್ತದೆ. ಇವನು ಜೀವಿಸಿದ ಪ್ರಾಂತ್ಯವೆಲ್ಲ “ಎದೋಮ್” ಎಂದು ಕರೆಯಲ್ಪಟ್ಟಿತು, ಸ್ವಲ್ಪ ಕಾಲವಾದ ನಂತರ “ಇದೂಮಾಯ” ಎಂದು ಕರೆಯಲ್ಪಟ್ಟಿತು. “ಎದೋಮ್ಯರು” ಇವನ ಸಂತತಿಯಾಗಿರುತ್ತಾರೆ.
- ಎದೋಮ್ ಎನ್ನುವ ಪ್ರಾಂತ್ಯವು ಕಾಲಾನುಕ್ರಮದಲ್ಲಿ ಮಾರ್ಪಾಟು ಹೊಂದಿದೆ. ಇದು ಬಹುಶಃ ಇಸ್ರಾಯೇಲ್ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ ಮತ್ತು ಕೊನೆಗೆ ಅದು ದಕ್ಷಿಣ ಯೂದಾಯದವರೆಗೆ ವಿಸ್ತರಿಸಲ್ಪಟ್ಟಿರುತ್ತದೆ.
- ಹೊಸ ಒಡಂಬಡಿಕೆಯ ಕಾಲದಲ್ಲಿ ಎದೋಮ್ ರಾಜ್ಯವು ಯೂದಾಯ ಪ್ರಾಂತ್ಯದಲ್ಲಿ ಅರ್ಧ ದಕ್ಷಿಣ ಭಾಗವನ್ನು ಆಕ್ರಮಿಸಿಕೊಂಡಿರುತ್ತದೆ. ಗ್ರೀಕರು ಇದನ್ನು “ಇದೂಮಾಯ” ಎಂದು ಕರೆಯುತ್ತಾರೆ.
- “ಎದೋಮ್” ಎನ್ನುವ ಹೆಸರಿಗೆ “ಕೆಂಪು” ಎಂದರ್ಥ, ಏಸಾವನು ಹುಟ್ಟಿದಾಗ ತನ್ನ ಮೈಯೆಲ್ಲಾ ಕೆಂಪು ಕೂದುಲುಗಳಿತ್ತು ಇದು ಅದನ್ನು ಸೂಚಿಸುತ್ತಿರಬಹುದು. ಅಥವಾ ಕೆಂಪಾದ ರುಚಿ ಪದಾರ್ಥಕ್ಕಾಗಿ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಮಾರಿದ ವಿಷಯವನ್ನು ಸೂಚಿಸುತ್ತಿರಬಹುದು.
- ಹಳೇ ಒಡಂಬಡಿಕೆಯಲ್ಲಿ ಎದೋಮ್ ದೇಶವು ಅನೇಕಬಾರಿ ಇಸ್ರಾಯೇಲ್ ಶತ್ರು ಎಂಬುದಾಗಿ ದಾಖಲಿಸಲಾಗಿದೆ.
- ಓಬದ್ಯ ಪುಸ್ತಕದಲ್ಲೆಲ್ಲಾ ಎದೋಮ್ ವಿನಾಶನದ ಕುರಿತಾಗಿಯೇ ಹೇಳಲ್ಪಟ್ಟಿದೆ. ಇತರ ಹಳೇ ಒಡಂಬಡಿಕೆಯ ಪ್ರವಾದಿಗಳು ಕೂಡ ಎದೋಮಿಗೆ ವಿರುದ್ಧವಾಗಿ ಪ್ರವಾದನೆಗಳನ್ನು ನುಡಿದಿದ್ದಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ಜನ್ಮ ಹಕ್ಕು, ಏಸಾವ, ಓಬದ್ಯ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ದತ್ತಾಂಶ:
- Strong's: H123, H130, H8165, G2401
ಎಫೆಸ, ಎಫೆಸದವನು
ಸತ್ಯಾಂಶಗಳು:
ಪ್ರಸ್ತುತ ಕಾಲದ ಟರ್ಕಿ ಇರುವ ಸ್ಥಳದಲ್ಲಿ ಪಶ್ಚಿಮ ಕರಾವಳಿಯಲ್ಲಿದ ಎಫೆಸ ಒಂದು ಪ್ರಾಚೀನ ಗ್ರೀಕ್ ಪಟ್ಟಣವಾಗಿತ್ತು.
- ಆದಿ ಕ್ರೈಸ್ತರ ಕಾಲದಲ್ಲಿ, ರೋಮಾ ಸಂಸ್ಥಾನದ ಒಂದು ಚಿಕ್ಕ ಭಾಗವಾಗಿದ್ದ ಎಫೆಸ ಆಸ್ಯಕ್ಕೆ ರಾಜಧಾನಿಯಾಗಿತ್ತು.
- ಅದರ ಸ್ಥಳದ ಕಾರಣ, ಈ ಪಟ್ಟಣವು ವ್ಯಾಪಾರ ಮತ್ತು ಯಾತ್ರೆಗಳಿಗೆ ಮುಖ್ಯ ಕೇಂದ್ರವಾಗಿತ್ತು.
- ಬಹಳ ಚೆನ್ನಾಗಿ ತಿಳಿದಿರುವ ಅನ್ಯ ದೇವತೆ ಅರ್ತೆಮೀ ದೇವಿಯ ದೇವಾಲಯವು ಎಫೆಸದಲ್ಲಿತ್ತು.
- ಪೌಲನು ಎಫೆಸದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚಾಗಿ ನಿವಾಸ ಮಾಡಿ ಅಲ್ಲಿ ಕೆಲಸ ಮಾಡಿದನು ನಂತರ ಅಲ್ಲಿರುವ ನೂತನ ವಿಶ್ವಾಸಿಗಳನ್ನು ನಡೆಸಲು ತಿಮೊಥೆಯನನ್ನು ನೇಮಿಸಿದನು.
- ಹೊಸ ಒಡಂಬಡಿಕೆಯಲ್ಲಿ ಎಫೆಸದವರಿಗೆ ಬರೆದ ಪತ್ರಿಕೆ ಎಫೆಸದಲ್ಲಿದ್ದ ವಿಶ್ವಾಸಿಗಳಿಗೆ ಪೌಲನು ಬರೆದ ಪತ್ರಿಕೆಯಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಸ್ಯ, ಪೌಲ್, ತಿಮೊಥೆ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: G2179, G2180, G2181
ಎಫ್ರಾತ, ಎಫ್ರಾತದವನು, ಎಫ್ರಾತದವರು
ಸತ್ಯಾಂಶಗಳು:
ಎಫ್ರಾತ ಒಂದು ಪಟ್ಟಣದ ಹೆಸರಾಗಿತ್ತು ಅದು ಇಸ್ರಾಯೇಲ್ ದೇಶಕ್ಕೆ ಉತ್ತರ ದಿಕ್ಕಿನಲ್ಲಿತ್ತು. ಎಫ್ರಾತ ಪಟ್ಟಣವನ್ನು ಸ್ವಲ್ಪ ಕಾಲದ ನಂತರ “ಬೇತ್ಲೆಹೇಮ್” ಅಥವಾ “ಎಫ್ರಾತ- ಬೇತ್ಲೆಹೇಮ್” ಕರೆಯಲ್ಪಟ್ಟಿತು.
- ಕಾಲೇಬನ ಕುಮಾರರಲ್ಲಿ ಎಫ್ರಾತ ಒಬ್ಬನಾಗಿದ್ದನು. ಬಹುಶ ಎಫ್ರಾತ ಪಟ್ಟಣಕ್ಕೆ ಆ ಹೆಸರು ಅವನ ಮೂಲಕ ಇಟ್ಟಿರಬಹುದು.
- ಎಫ್ರಾತ ಪಟ್ಟಣದವನನ್ನು “ಎಫ್ರಾತದವನು” ಎಂದು ಕರೆಯುತ್ತಿದ್ದರು.
- ದಾವೀದನ ಮುತ್ತಜ್ಜನಾದ ಬೋವಾಜನು ಎಫ್ರಾತದವನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬೇತ್ಲೆಹೇಮ್, ಬೋವಾಜ, ಕಾಲೇಬ, ದಾವೀದ, ಇಸ್ರಾಯೇಲ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H672, H673
ಎಫ್ರಾಯೀಮನು, ಎಫ್ರಾಯೀಮ್ಯರು
ಸತ್ಯಾಂಶಗಳು:
ಎಫ್ರಾಯೀಮನು ಯೋಸೇಫನ ಕಿರಿಯ ಮಗನಾಗಿದ್ದನು. ಇವನ ಸಂತಾನದವರೇ ಎಫ್ರಾಯೀಮ್ಯರು, ಇವರು ಇಸ್ರಾಯೇಲಿನ ಒಂದು ಕುಲವನ್ನು ರಚಿಸಿದರು.
- ಎಫ್ರಾಯೀಮ್ ಎಂಬ ಹೆಸರು ಇಬ್ರಿಯ ಪದದಂತೆ ಧ್ವನಿಸುತ್ತದೆ, ಇದರ ಅರ್ಥ "ಫಲವನ್ನುಂಟುಮಾಡುವುದು.”
- ಇಸ್ರಾಯೇಲಿನ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಹತ್ತು ಕುಲಗಳಲ್ಲಿ ಎಫ್ರಾಯೀಮ್ ಕುಲವು ಒಂದಾಗಿದೆ.
- ಕೆಲವೊಮ್ಮೆ ಎಫ್ರಾಯೀಮ್ ಎಂಬ ಹೆಸರನ್ನು ಸತ್ಯವೇದದಲ್ಲಿ ಇಸ್ರಾಯೇಲಿನ ಸಂಪೂರ್ಣ ಉತ್ತರ ರಾಜ್ಯವನ್ನು ಸೂಚಿಸಲು ಬಳಸಲಾಗುತ್ತದೆ (ಯೂದಾಯ ಎಂಬ ಹೆಸರನ್ನು ಕೆಲವೊಮ್ಮೆ ಇಸ್ರಾಯೇಲಿನ ಸಂಪೂರ್ಣ ದಕ್ಷಿಣ ರಾಜ್ಯವನ್ನು ಸೂಚಿಸಲು ಹೇಗೆ ಬಳಸಲಾಗುತ್ತದೆ).
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಇವುಗಳನ್ನು ಸಹ ನೋಡಿರಿ : ಯೋಸೇಫ, ಮನಸ್ಸೆ,ಇಸ್ರಾಯೇಲ್ ರಾಜ್ಯ, ಇಸ್ರಾಯೇಲಿನ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: H0669, H0673, G21870
ಎಲಿಸಬೇತಳು
ಸತ್ಯಾಂಶಗಳು:
ಎಲಿಸಬೇತಳು ಸ್ನಾನಿಕನಾದ ಯೋಹಾನನ ತಾಯಿಯಾಗಿದ್ದಳು. ಅವಳ ಗಂಡನ ಹೆಸರು ಜಕರೀಯ.
- ಜಕರೀಯ ಮತ್ತು ಎಲಿಸಬೇತಳಿಗೆ ಮಕ್ಕಳಾಗಿರಲಿಲ್ಲ ಆದರೆ ಅವರ ವೃದ್ಧಪ್ಯದಲ್ಲಿ, ಎಲಿಸಬೇತಳು ಅವನಿಗೆ ಮಗನನ್ನು ಹೇರುವಳೆಂದು ದೇವರು ಜಕರೀಯನಿಗೆ ವಾಗ್ಧಾನ ಮಾಡಿದನು.
- ದೇವರು ತಾನು ಮಾಡಿದ ವಾಗ್ಧಾನವನ್ನು ನೆರವೇರಿಸಿದನು, ಎಲಿಸಬೇತಳು ಗರ್ಭಿಣಿಯಾದಳು ಮತ್ತು ಆಕೆ ಒಬ್ಬ ಗಂಡು ಮಗುವಿಗೆ ಜನ್ಮನೀಡಿದಳು. ಅವರು ಆ ಮಗುವಿಗೆ ಯೋಹಾನ ಎಂದು ಹೆಸರಿಟ್ಟರು.
- ಯೇಸುವಿನ ತಾಯಿಯಾದ ಮರಿಯಳಿಗೆ ಎಲಿಸಬೇತಳು ಸಮೀಪ ಬಂಧುವಗಿದ್ದಳು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಕಲ್ದೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G1665
ಎಲೀಯ
ಸತ್ಯಾಂಶಗಳು:
ಎಲೀಯನು ಯೆಹೋವನ ಅತೀ ಪ್ರಾಮುಖ್ಯವಾದ ಪ್ರವಾದಿಗಳಲ್ಲಿ ಒಬ್ಬನಾಗಿರುತ್ತಾನೆ. ಇಸ್ರಾಯೇಲ್ ಮತ್ತು ಯೂದಾ ರಾಜ್ಯಗಳನ್ನು ಅನೇಕಮಂದಿ ಅರಸರು ಆಳುತ್ತಿರುವ ಕಾಲದಲ್ಲಿ ಎಲೀಯನು ಪ್ರವಾದಿಸಿದ್ದನು. ಅವರಲ್ಲಿ ಅರಸನಾದ ಅಹಾಬನು ಕೂಡ ಇದ್ದನು.
- ಸತ್ತ ಹುಡುಗನನ್ನು ಜೀವಕ್ಕೆ ತರುವುದು ಸೇರಿದಂತೆ ದೇವರು ಎಲೀಯ ಮೂಲಕ ಅನೇಕವಾದ ಅದ್ಭತ ಕಾರ್ಯವನ್ನು ಮಾಡಿದ್ದಾನೆ.
- ಅರಸನಾದ ಅಹಾಬನು ಬಾಳ್ ಎನ್ನುವ ಸುಳ್ಳು ದೇವರನ್ನು ಆರಾಧನೆ ಮಾಡಿದ್ದಕ್ಕಾಗಿ ಎಲೀಯನು ಅವನನ್ನು ಎಚ್ಚರಿಸಿದ್ದನು.
- ಯೆಹೋವನೆ ನಿಜವಾದ ದೇವರು ಎಂದು ನಿರೂಪಣೆ ಮಾಡುವದಕ್ಕಾಗಿ ಎಲೀಯನು ಬಾಳ್ ಪ್ರವಾದಿಗಳಿಗೆ ಸವಾಲನ್ನು ಹಾಕಿದನು.
- ಎಲೀಯ ಜೀವನದ ಅಂತಿಮ ಭಾಗದಲ್ಲಿ ಎಲೀಯನು ಇನ್ನೂ ಜೀವಂತವಾಗಿರುವಾಗಲೇ ದೇವರು ಅವನನ್ನು ಅದ್ಭುತ ರೀತಿಯಲ್ಲಿ ಪರಲೋಕಕ್ಕೆ ತೆಗೆದುಕೊಂಡು ಹೋದರು.
- ನೂರಾರು ವರ್ಷಗಳಾದನಂತರ ಎಲೀಯ ಮತ್ತು ಮೋಶೆ ಪರ್ವತದ ಮೇಲೆ ಯೇಸುವಿನೊಂದಿಗೆ ಕಾಣಿಸಿಕೊಂಡರು, ಯೆರೂಸಲೇಮಿನಲ್ಲಿ ನಡೆಯುವ ಯೇಸುವಿನ ಶ್ರಮೆ ಮತ್ತು ಮರಣಗಳ ಕುರಿತಾಗಿ ಅವರಿಬ್ಬರು ಮಾತನಾಡಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅದ್ಭುತ, ಪ್ರವಾದಿ, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 19:02 ಇಸ್ರಾಯೇಲ್ ರಾಜ್ಯದ ಮೇಲೆ ಅಹಾಬನು ಅರಸನಾಗಿದ್ದಾಗ ___ ಎಲೀಯನು ___ ಪ್ರವಾದಿಯಾಗಿದ್ದನು.
- 19:02 “ನಾನು ಹೇಳುವವರೆಗೂ ಇಸ್ರಾಯೇಲ್ ರಾಜ್ಯದಲ್ಲಿ ಯಾವ ಮಳೆಯೂ ಅಥವಾ ಯಾವ ಇಬ್ಬನಿ ಇರುವುದಿಲ್ಲ” ಎಂದು ___ ಎಲೀಯನು ___ ಅಹಾಬನಿಗೆ ಹೇಳಿದನು.
- 19:03 ನಿನ್ನನ್ನು ಕೊಲ್ಲಬೇಕೆಂದು ಬಯಸುತ್ತಿರುವ ಅಹಾಬನಿಂದ ಮರೆಯಾಗುವುದಕ್ಕೆ ಅರಣ್ಯದಲ್ಲಿರುವ ಒಂದು ತೊರೆಯೊಳಗೆ ಹೋಗು ಎಂದು ದೇವರು ___ ಎಲೀಯನಿಗೆ ___ ಹೇಳಿದನು. ಪ್ರತಿ ಮುಂಜಾನೆ ಮತ್ತು ಪ್ರತಿ ಸಾಯಂಕಾಲ ಪಕ್ಷಿಗಳು ಆತನಿಗೆ ರೊಟ್ಟಿ ಮತ್ತು ಮಾಂಸವನ್ನು ತೆಗೆದುಕೊಂಡು ಬರುತ್ತಿದ್ದವು.
- 19:04 ಆದರೆ ಅವರು __ ಎಲೀಯನನ್ನು __ ಚೆನ್ನಾಗಿ ನೋಡಿಕೊಂಡಿದ್ದರು, ಮತ್ತು ದೇವರು ಅವರಿಗೆ ಚೆನ್ನಾಗಿ ಒದಗಿಸಿಕೊಟ್ಟಿದ್ದನು, ಆದ್ದರಿಂದ ಅವರ ಹಿಟ್ಟಿನ ಪಾತ್ರೆಯು ಮತ್ತು ಅವರ ಎಣ್ಣೆಯ ಪಾತ್ರೆಯು ಕಡಿಮೆಯಾಗಲೇಯಿದ್ದಿಲ್ಲ.
- 19:05 ಮೂರುವರೆ ವರ್ಷಗಳಾದನಂತರ, ಇಸ್ರಾಯೇಲ್ ರಾಜ್ಯಕ್ಕೆ ಹಿಂದುರಿಗಿ ಬರಬೇಕೆಂದು ಮತ್ತು ಆತನು ಮಳೆಯನ್ನು ಕಳುಹಿಸುತ್ತಿದ್ದಾನೆನ್ನುವ ವಿಷಯವನ್ನು ಅಹಾಬನಿಗೆ ತಿಳಿಸ ಬೇಕೆಂದು ದೇವರು ___ ಎಲೀಯನಿಗೆ ___ ಹೇಳಿದನು.
- 19:07 “ಒಂದು ಎತ್ತನ್ನು ಸಾಯಿಸಿ, ಸರ್ವಾಂಗ ಹೋಮವಾಗಿ ಅದನ್ನು ಸಿದ್ಧಗೊಳಿಸಿ, ಅದಕ್ಕೆ ಬೆಂಕಿಯನ್ನು ಹಚ್ಚಬೇಡಿರಿ” ಎಂದು ___ ಎಲೀಯನು ___ ಬಾಳ್ ಪ್ರವಾದಿಗಳಿಗೆ ಹೇಳಿದನು.
- 19:12 “ಬಾಳ್ ಪ್ರವಾದಿಗಳು ಯಾರೂ ತಪ್ಪಿಸಿಕೊಂಡು ಹೋಗಬಾರದೆಂದು” ___ ಎಲೀಯ ___ ಹೇಳಿದನು.
- 36:03 ಮೋಶೆ ಮತ್ತು ಪ್ರವಾದಿಯಾದ ___ ಎಲೀಯ ___ ಕಾಣಿಸಿಕೊಂಡರು. ಈ ಸಂಘಟನೆಗೆ ಮುಂಚಿತವಾಗಿ ಇವರು ನೂರಾರು ವರ್ಷಗಳ ಕಾಲ ಜೀವಿಸಿದ್ದರು. ಯೆರೂಸಲೇಮಿನಲ್ಲಿ ಸಂಭವಿಸುವ ಯೇಸುವಿನ ಮರಣದ ಕುರಿತಾಗಿ ಯೇಸುವಿನೊಂದಿಗೆ ಅವರಿಬ್ಬರು ಮಾತನಾಡಿದ್ದರು.
ಪದ ಡೇಟಾ:
- Strong's: H452, G2243
ಎಲೀಷ
ಸತ್ಯಾಂಶಗಳು:
ಇಸ್ರಾಯೇಲ್ ರಾಜ್ಯವನ್ನು ಆಳಿದ ಹಲವಾರು ಅರಸರ ಕಾಲದಲ್ಲಿ ಎಲೀಷ ಪ್ರವಾದಿಯಾಗಿದ್ದನು: ಅಹಾಬ, ಅಹಜ್ಯ, ಯೆಹೋರಾಮ, ಯೇಹು, ಯೆಹೋವಾಹಾಜನು ಮತ್ತು ಯೋವಾಷ.
- ಎಲೀಷನನ್ನು ಪ್ರವಾದಿಯಾಗಿ ಅಭಿಷೇಕಿಸಬೇಕೆಂದು ದೇವರು ಎಲೀಯನಿಗೆ ಹೇಳಿದನು.
- ಎಲೀಯನನ್ನು ಅಗ್ನಿಮಯವಾದ ರಥಗಳು ಪರಲೋಕಕ್ಕೆ ಎತ್ತಿಕೊಂಡು ಹೋದಾಗ, ಎಲೀಷನು ಇಸ್ರಾಯೇಲ್ ಅರಸರಿಗೆ ದೇವರ ಪ್ರವಾದಿಯಾದನು.
- ಎಲೀಷನು ಸಿರಿಯಾದಿಂದ ಬಂದ ಒಬ್ಬ ಕುಷ್ಠರೋಗಿಯನ್ನು ಸ್ವಸ್ಥಪಡಿಸಿದನು ಮತ್ತು ಶೂನೇಮ್ಯಳ ಸತ್ತ ಮಗನನ್ನು ಎಬ್ಬಿಸಿದನು ಇಂತಹ ಅನೇಕವಾದ ಅದ್ಭುತ ಕಾರ್ಯಗಳನ್ನು ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎಲೀಯ, ನಾಮಾನ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H477
ಎಲ್ಯಾಕೀಮ್
ಸತ್ಯಾಂಶಗಳು:
ಹಳೆ ಒಡಂಬಡಿಕೆಯಲ್ಲಿ ಇಬ್ಬರು ಪುರುಷರಲ್ಲಿ ಒಬ್ಬನ ಹೆಸರು ಎಲ್ಯಾಕೀಮ್ ಆಗಿತ್ತು.
- ಎಲ್ಯಾಕೀಮ್ ಎಂಬ ಒಬ್ಬ ವ್ಯಕ್ತಿ ಅರಸನಾದ ಹಿಜ್ಕೀಯನ ಕೆಳಗೆ ಅರಮನೆಯ ವ್ಯವಸ್ಥಾಪಕನಾಗಿದ್ದನು.
- ಎಲ್ಯಾಕೀಮ್ ಎಂಬ ಇನ್ನೊಬ್ಬ ವ್ಯಕ್ತಿ ಅರಸನಾದ ಯೋಷೀಯನ ಮಗನಾಗಿದ್ದನು. ಐಗುಪ್ತ ದೇಶದ ಫರೋಹ ನೆಹೋನು ಯೂದಯ ಸೀಮೆಗೆ ಅವನನ್ನು ಅರಸನಾಗಿ ನೇಮಿಸಿದನು.
- ನೆಕೋ ಎಲ್ಯಾಕೀಮನಿಗೆ ಯೆಹೋಯಾಕೀಮನೆಂಬ ಹೊಸ ಹೆಸರನ್ನಿಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಹಿಜ್ಕೀಯ, ಯೆಹೋಯಾಕೀಮ, ಯೋಷೀಯ, ಫರೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H471, G1662
ಎಲ್ಲಾಜಾರ್
ಸತ್ಯಾಂಶಗಳು:
ಸತ್ಯವೇದದಲ್ಲಿರುವ ಅನೇಕ ಪುರುಷರಲ್ಲಿ ಎಲ್ಲಾಜಾರ್ ಒಬ್ಬನಾಗಿದ್ದನು.
- ಎಲ್ಲಾಜಾರ್ ಮೋಶೆನ ಸಹೋದರನಾದ ಆರೋನನ ಮಗನಾಗಿದ್ದನು. ಆರೋನನು ಮರಣಿಸಿದ ಮೇಲೆ, ಎಲ್ಲಾಜಾರನು ಇಸ್ರಾಯೇಲರಿಗೆ ಮಹಾ ಯಾಜಕನಾದನು.
- ದಾವೀದನ “ಬಲವಾದ ಪುರುಷರಲ್ಲಿ” ಎಲ್ಲಾಜಾರನು ಒಬ್ಬನಾಗಿದ್ದನು.
- ಇನ್ನೊಬ್ಬ ಎಲ್ಲಾಜಾರನು ಯೇಸುವಿನ ಪೂರ್ವಜನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆರೋನ, ಮಹಾ ಯಾಜಕ, ದಾವೀದ, ಬಲವಾದ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H499, G1648
ಎಸ್ತೇರಳು
ಸತ್ಯಾಂಶಗಳು:
ಯಹೂದಿಯರು ಬಾಬುಲೋನಿನ ಸೆರೆಯಲ್ಲಿದ್ದ ಕಾಲದಲ್ಲಿ ಎಸ್ತೇರಳು ಪರ್ಷಿಯಾ ರಾಜ್ಯಕ್ಕೆ ಮಹಾರಾಣಿಯಾಗಿ ನೇಮಿಸಲ್ಪಟ್ಟಳು.
- ಎಸ್ತೇರಳು ಹೇಗೆ ಪರ್ಷಿಯ ದೇಶದ ಅರಸನಾದ ಅಹಷ್ವೇರೋಷನ ಹೆಂಡತಿಯಾದಳು ಮತ್ತು ಯೆಹೋವ ಹೇಗೆ ಅವಳ ಜನರನ್ನು ರಕ್ಷಿಸಲು ಆಕೆಯನ್ನು ಉಪಯೋಗಿಸಿಕೊಂಡನೆಂದು ಎಸ್ತೇರಳ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
- ಎಸ್ತೇರಳು ಅನಾಥಳಾಗಿದ್ದಳು, ಅವಳ ಚಿಕ್ಕಪ್ಪನಾದ ಮೊರ್ದೆಕೈ ಆಕೆಯನ್ನು ಸಾಕಿದನು.
- ಅವಳು ತನ್ನನ್ನು ಸಾಕಿದ ತಂದೆಗೆ ವಿಧೇಯಳಾದ ಕಾರಣ ಅವಳು ಯೆಹೋವನಿಗೆ ವಿಧೇಯಳಾಗಿರಲು ಸಹಾಯವಾಯಿತು.
- ಎಸ್ತೇರಳು ಯೆಹೋವನಿಗೆ ವಿಧೇಯಳಾಗಿದ್ದಳು ಮತ್ತು ಯಹೂದಿಯರಾದ ಅವಳ ಜನರನ್ನು ರಕ್ಷಿಸಲು ಆಕೆಯ ಪ್ರಾಣವನ್ನು ಲೆಕ್ಕಿಸದೆ ಸಾಹಸ ಮಾಡಿದಳು.
- ಯೆಹೋವನಿಗೆ ವಿಧೇಯರಾಗಿರುವವರ ಮೂಲಕ ತನ್ನ ಜನರನ್ನು ಹೇಗೆ ಕಾಪಾಡುತ್ತಾನೆಂದು ಮತ್ತು ಇತಿಹಾಸದ ಘಟನೆಗಳು ಆತನ ಸರ್ವೋತ್ತಮ ಸ್ವಾಧೀನದಲ್ಲಿದೆ ಎಂದು ಎಸ್ತೇರಳ ಕಥೆ ವಿವರವಾಗಿ ತಿಳುಸುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಹಷ್ವೇರೋಷ, ಬಾಬುಲೋನ್, ಮೊರ್ದೆಕೈ, ಪರ್ಷಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H635
ಏಂಗೆದೀ
ಪದದ ಅರ್ಥವಿವರಣೆ
ಯೆರುಸಲೇಮಿಗೆ ಆಗ್ನೇಯ ದಿಕ್ಕಿನಲ್ಲಿ ಯೆಹೂದ ಅರಣ್ಯದಲ್ಲಿದ ಒಂದು ಪಟ್ಟಣದ ಹೆಸರು ಏಂಗೆದೀ ಆಗಿತ್ತು.
- ಉಪ್ಪಿನ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ ಏಂಗೆದೀ ಇತ್ತು.
- ಅದರ ಹೆಸರಿನಲ್ಲಿ ಒಂದು ಭಾಗಕ್ಕೆ “ನೀರುಬುಗ್ಗೆ” ಎಂದರ್ಥ, ಅದು ಪಟ್ಟಣದಲ್ಲಿ ಹುಟ್ಟಿ ಸಮುದ್ರಕ್ಕೆ ಹರಿಯುವ ನೀರಿನ ಒರತೆಯನ್ನು ಸೂಚಿಸುತ್ತದೆ.
- ಏಂಗೆದೀಯಲ್ಲಿ ಸುಂದರವಾದ ದ್ರಾಕ್ಷಿತೋಟಗಳು ಮತ್ತು ಸಾರವಂತವಾದ ನೆಲವಿತ್ತು ಎಂದು ಪ್ರಸಿದ್ಧವಾಗಿತ್ತು, ಅಲ್ಲಿ ಹರಿಯುತ್ತಿದ್ದ ನೀರಿನ ಬುಗ್ಗೆ ಅದಕ್ಕೆ ಕಾರಣವಾಗಿರಬಹುದು.
- ಅರಸನಾದ ಸೌಲನು ದಾವೀದನನ್ನು ಬೆನ್ನಟ್ಟಿದಾಗ ಏಂಗೆದೀಯಲ್ಲಿ ಬಲವಾದ ಗುರಾಣಿಯಿದ್ದ ಕಾರಣವಾಗಿ ಅಲ್ಲಿಗೆ ಓಡಿಹೋದನು.
(ಈ ಪದಗಳನ್ನು ಸಹ ನೋಡಿರಿ : ದಾವೀದ, ಮರ ಭೂಮಿ, ನೀರುಬುಗ್ಗೆ, ಯೆಹೂದ, ವಿಶ್ರಾಂತಿ, ಉಪ್ಪಿನ ಸಮುದ್ರ, ಸೌಲನು, ಬಲವಾದ ಗುರಾಣಿ, ದ್ರಾಕ್ಷಿತೋಟ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5872
ಏದೆನ್, ಏದೆನ್ ಉದ್ಯಾನವನ
ಸತ್ಯಾಂಶಗಳು:
ಪ್ರಾಚೀನ ಕಾಲದಲ್ಲಿ, ದೇವರು ಮೊದಲನೆಯ ಪುರುಷನನ್ನು ಮತ್ತು ಸ್ತ್ರಿಯನ್ನು ಏದೆನ್ ಸೀಮೆಯಲ್ಲಿದ್ದ ಉದ್ಯಾನವನದಲ್ಲಿ ತಂಗುವಂತೆ ಮಾಡಿದನು.
- ಆದಾಮ ಮತ್ತು ಹವ್ವ ತಂಗಿದ್ದ ಉದ್ಯಾನವನ ಏದೆನ್ ವನದ ಒಂದು ಭಾಗವಾಗಿತ್ತು.
- ಏದೆನ್ ಪ್ರಾಂತ್ಯದ ಖಚಿತವಾದ ಸ್ಥಳ ಎಲ್ಲಿದಿಯೋ ತಿಳಿಯದು, ಆದರೆ ಟೈಗ್ರಿಸ್ ಮತ್ತು ಯೂಫ್ರೇಟೀಸ್ ನದಿಗಳು ಅಲ್ಲಿ ಹರಿಯುತ್ತಿದ್ದವು.
- ಇಬ್ರಿ ಭಾಷೆಯಲ್ಲಿ “ಏದೆನ್” ಎನ್ನುವ ಪದಕ್ಕೆ “ಮಹಾ ಸಂತೋಷ ಹುಟ್ಟಿಸುವ” ಎಂದರ್ಥ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆದಾಮ, ಯೂಫ್ರೇಟೀಸ್ ನದಿ, ಹವ್ವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5729, H5731
ಏಲಾಮ್, ಏಲಾಮೀಯರು
ಸತ್ಯಾಂಶಗಳು:
ಏಲಾಮ್ ಶೇಮನ ಮಗನು ಮತ್ತು ನೋಹನ ಮೊಮ್ಮಗನಾಗಿದ್ದನು.
- ಏಲಾಮ್ ಸಂತತಿಯವರನ್ನು “ಏಲಾಮೀಯರು” ಎಂದು ಕರೆದರು ಮತ್ತು ಅವರು ವಾಸ ಮಾಡುವ ಸ್ಥಳವನ್ನು “ಏಲಾಮ್” ಎಂದು ಕರೆದರು.
- ಏಲಾಮ್ ಪ್ರಾಂತ್ಯವು ಟೈಗ್ರಿಸ್ ನದಿಯ ಆಗ್ನೇಯ ದಿಕ್ಕಿನಲ್ಲಿ ಪ್ರಸ್ತುತ ಕಾಲದ ಪಶ್ಚಿಮ ಇರಾನಲ್ಲಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ನೋಹ, ಶೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5867, H5962, G1639
ಏಸಾವ
ಸತ್ಯಾಂಶಗಳು:
ಏಸಾವನು ಇಸಾಕ ಮತ್ತು ರೆಬೆಕ್ಕಳಗೆ ಹುಟ್ಟಿದ ಅವಳಿ ಗಂಡುಮಕ್ಕಳಲ್ಲಿ ಒಬ್ಬನಾಗಿದ್ದನು. ಅವರಲ್ಲಿ ಇವನ್ನು ಮೊದಲನೇ ಮಗುವಾಗಿದ್ದನು. ತನ್ನ ಅವಳಿ ಸಹೋದರ ಯಾಕೋಬನಾಗಿದ್ದನು.
- ಏಸಾವನು ಕೆಂಪಾದ ರುಚಿಯಾದ ಪದಾರ್ಥಕ್ಕಾಗಿ ತನ್ನ ತಮ್ಮನಿಗೆ ತನ್ನ ಚೊಚ್ಚಲತನವನ್ನು ಮಾರಿಬಿಟ್ಟನು.
- ಏಸಾವನು ಮೊದಲ ಸಂತಾನವಾಗಿರುವುದರಿಂದ ತನ್ನ ತಂದೆಯಾದ ಇಸಾಕನು ಅವನಿಗೆ ವಿಶೇಷವಾದ ಆಶೀರ್ವಾದವನ್ನು ಕೊಡಬೇಕೆಂದು ಬಯಸಿದ್ದನು. ಆದರೆ ಯಾಕೋಬನು ಆಶೀರ್ವಾದವನ್ನು ಏಸಾವನಿಗೆ ಕೊಡದಂತೆ ಮೋಸ ಮಾಡಿದನು. ಅದಕ್ಕಾಗಿ ಏಸಾವನು ಯಾಕೋಬನನ್ನು ಕೊಲ್ಲಬೇಕೆಂದು ಸಿಟ್ಟುಗೊಂಡಿದ್ದನು, ಆದರೆ ಕೊನೆಗೆ ಅವನು ಯಾಕೋಬನನ್ನು ಕ್ಷಮಿಸಿದನು.
- ಏಸಾವನಿಗೆ ಅನೇಕಮಂದಿ ಮಕ್ಕಳು ಮತ್ತು ಮೊಮ್ಮೊಕ್ಕಳು ಇದ್ದರು, ಈ ಎಲ್ಲ ಸಂತಾನದವರೇ ಕಾನಾನ್ ಭೂಮಿಯಲ್ಲಿ ದೊಡ್ಡ ಗುಂಪಾಗಿ ಮಾರ್ಪಟ್ಟು ಜೀವನ ನೆಡೆಸುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎದೋಮ್, ಇಸಾಕ, ಯಾಕೋಬ, ರೆಬೆಕ್ಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 06:07 ರೆಬೆಕ್ಕಳ ಮಕ್ಕಳು ಹುಟ್ಟಿದಾಗ, ದೊಡ್ಡವನು ಕೆಂಪು ಬಣ್ಣದ ಕೂದಲುಗಳಿದ್ದು ಹೊರ ಬಂದನು, ಮತ್ತು ಅವರು ಅವನಿಗೆ __ ಏಸಾವ __ ಎಂದು ಹೆಸರಿಟ್ಟರು.
- 07:02 ಆದ್ದರಿಂದ __ ಏಸಾವನು __ ತನ್ನ ಚೊಚ್ಚಲತಾಣವನ್ನು ಯಾಕೋಬನಿಗೆ ಕೊಟ್ಟನು.
- 07:04 ಇಸಾಕನು ಮೇಕೆಯ ಕೂದಲು ಎಂದು ತಿಳಿದು, ಬಟ್ಟೆಗಳ ವಾಸನೆಯನ್ನು ನೋಡಿದನೋ, ಆಗ ಇವನು __ ಏಸಾವನೇ __ ಎಂದು ತಿಳಿದು, ಅವನನ್ನು ಆಶೀರ್ವಾದ ಮಾಡಿದನು.
- 07:05 __ ಏಸಾವನು __ ಯಾಕೋಬನನ್ನು ದ್ವೇಷಿಸಿದನು ಯಾಕಂದರೆ ಯಾಕೋಬನು ತನ್ನ ಚೊಚ್ಚಲತನವನ್ನು ಮತ್ತು ತನ್ನ ಆಶೀರ್ವಾದವನ್ನು ಕದ್ದುಕೊಂಡಿದ್ದನು.
- 07:10 ಆದರೆ __ ಏಸಾವನು __ ಯಾಕೋಬನನ್ನು ಕ್ಷಮಿಸಿದ್ದನು, ಮತ್ತು ಅವರಿಬ್ಬರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ತುಂಬಾ ಸಂತೋಷದಿಂದ ಇದ್ದಿದ್ದರು.
ಪದ ಡೇಟಾ:
- Strong's: H6215, G2269
ಐಗುಪ್ತ, ಐಗುಪ್ತ್ಯನು
ಸತ್ಯಾಂಶಗಳು:
ಐಗುಪ್ತ ಎನ್ನುವುದು ಆಫ್ರಿಕಾ ಈಶಾನ್ಯ ಭಾಗದಲ್ಲಿ ಒಂದು ದೇಶವಾಗಿದ್ದು, ಕಾನಾನ್ ದೇಶದ ನೈಋತ್ಯ ಭಾಗಕ್ಕೆ ಹರಡಿರುವ ದೇಶವಾಗಿರುತ್ತದೆ. ಐಗುಪ್ತ್ಯನು ಎನ್ನುವುದು ಐಗುಪ್ತ ದೇಶದಿಂದ ಬಂದಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
- ಪುರಾತನ ಕಾಲದಲ್ಲಿ, ಐಗುಪ್ತ ಎನ್ನುವುದು ತುಂಬಾ ಶಕ್ತಿಯುತವಾದ, ಶ್ರೀಮಂತ ದೇಶವಾಗಿತ್ತು.
- ಪುರಾತನ ಐಗುಪ್ತ ದೇಶವು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತ್ತು, ಅವೇನೆಂದರೆ ಕೆಳಗಿನ ಐಗುಪ್ತ (ನೈಲ್ ನದಿ ಕೆಳಗಡೆಗೆ ಹರಡಿ ಸಮುದ್ರದೊಳಗೆ ಸೇರುವ ಉತ್ತರ ಭಾಗ) ಮತ್ತು ಮೇಲಣ ಐಗುಪ್ತ (ದಕ್ಷಿಣ ಕಡೆಗೆ ಇರುವ ಭಾಗ). ಹಳೇ ಒಡಂಬಡಿಕೆಯಲ್ಲಿ, ಈ ಭಾಗಗಳನ್ನು “ಐಗುಪ್ತ” ಮತ್ತು “ಕೂಷ್” (ಮೂಲ ಭಾಷೆಯಲ್ಲಿ ಪಥ್ರೋಸ್ ಎಂದು ಕರೆಯುತ್ತಾರೆ) ಎಂದು ಸೂಚಿಸಲಾಗಿದೆ.
- ಅನೇಕಸಲ ಕಾನಾನ್ ದೇಶದಲ್ಲಿ ಆಹಾರ ಸ್ವಲ್ಪವಿದ್ದಾಗ, ಇಸ್ರಾಯೇಲ್ ಪಿತೃಗಳು ತಮ್ಮ ಕುಟುಂಬಗಳಿಗಾಗಿ ಆಹಾರವನ್ನು ಕೊಂಡುಕೊಂಡು ಬರುವುದಕ್ಕೆ ಐಗುಪ್ತಕ್ಕೆ ಪ್ರಯಾಣ ಮಾಡಿದ್ದರು.
- ನೂರಾರು ವರ್ಷಗಳು ಇಸ್ರಾಯೇಲ್ಯರು ಐಗುಪ್ತ ದೇಶದಲ್ಲಿ ಗುಲಾಮರಾಗಿದ್ದರು.
- ಯೋಸೇಫನು ಮತ್ತು ಮರಿಯಳು ಮಹಾ ಹೆರೋದನಿಂದ ತಪ್ಪಿಸಿಕೊಳ್ಳುವುದಕ್ಕೆ ಕೂಸಾಗಿದ್ದ ಯೇಸುವನ್ನು ಎತ್ತಿಕೊಂಡು ಐಗುಪ್ತಕ್ಕೆ ತೆರಳಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವ ರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮಹಾ ಹೆರೋದ, ಯೋಸೇಫ(NT), ನೈಲ್ ನದಿ, ಪಿತೃಗಳು)
ಸತ್ಯವೇದ ವಾಕ್ಯಗಳು:
ಸತ್ಯವೇದ ಕಥೆಗಳಿಂದ ಉದಾಹರಣೆಗಳು:
- 08:4 ಗುಲಾಮರನ್ನು ಕೊಂಡುಕೊಳ್ಳುವವರು ಯೋಸೇಫನನ್ನು __ ಐಗುಪ್ತಕ್ಕೆ __ ಕರೆದುಕೊಂಡು ಹೋದರು. __ ಐಗುಪ್ತ __ ದೇಶವು ತುಂಬಾ ವಿಸ್ತಾರವಾದ, ಶಕ್ತಿಯುತವಾದ ದೇಶವಾಗಿತ್ತು, ಇದು ನೈಲ್ ನದಿಯ ಪಕ್ಕದಲ್ಲಿ ಕಂಡುಬರುತ್ತದೆ.
- 8:8 ಫರೋಹನು ಯೋಸೇಫನೆಂದರೆ ತುಂಬಾ ಮೆಚ್ಚುಗೆಯಾಗಿದ್ದನು, ಇದರಿಂದ ಅವನು ಯೋಸೇಫನನ್ನು __ ಐಗುಪ್ತ __ ದೇಶದ ಮೇಲೆ ಅತೀ ಅಧಿಕಾರವುಳ್ಳ ಎರಡನೇ ಮನುಷ್ಯನನ್ನಾಗಿ ನೇಮಿಸಿದನು.
- 8:11 ಆದ್ದರಿಂದ ಆಹಾರವನ್ನು ಕೊಂಡುಕೊಂಡು ಬರುವುದಕ್ಕೆ ಯಾಕೋಬನು ತನ್ನ ಹಿರಿಯ ಮಕ್ಕಳನ್ನು __ ಐಗುಪ್ತಕ್ಕೆ __ ಕಳುಹಿಸಿದನು.
- 8:14 ಯಾಕೋಬನು ವೃದ್ಧನಾಗಿದ್ದರೂ, ಅವನು __ ಐಗುಪ್ತಕ್ಕೆ __ ತನ್ನ ಕುಟುಂಬದವರೊಂದಿಗೆ ತೆರಳಿದನು, ಮತ್ತು ಅವರೆಲ್ಲರು ಅಲ್ಲಿಯೇ ಜೀವನವನ್ನು ಮುಂದೆವರಿಸಿದರು.
- 9:1 ಯೋಸೇಫನು ಸತ್ತನಂತರ, ತನ್ನ ಎಲ್ಲಾ ಬಂಧುಗಳು __ ಐಗುಪ್ತದಲ್ಲೇ __ ನಿವಾಸವಾಗಿದ್ದರು.
ಪದ ಡೇಟಾ:
- Strong's: H4713, H4714, G1240, G1250
ಒಮ್ರಿ
ಸತ್ಯಾಂಶಗಳು:
ಒಮ್ರಿ ಸೈನ್ಯಾಧಿಪತಿಯಾಗಿದ್ದನು ಮತ್ತು ಇಸ್ರಾಯೇಲ್ ಆರನೇಯ ಅರಸನಾಗಿ ಆಳಿದನು.
- ಅರಸನಾದ ಒಮ್ರಿ ತಿರ್ಚಾ ಪಟ್ಟಣದಲ್ಲಿ 12 ವರ್ಷಗಳು ಆಳಿದನು.
- ಇವನ ಮುಂದೆ ಆಳಿದ ಇಸ್ರಾಯೇಲ್ಯರ ಎಲ್ಲಾ ಅರಸುಗಳಂತೆಯೇ ಒಮ್ರಿ ತುಂಬಾ ದುಷ್ಟ ಅರಸನಾಗಿದ್ದನು ಮತ್ತು ಇಸ್ರಾಯೇಲ್ ಜನರನ್ನು ವಿಗ್ರಹಾರಾಧನೆ ಮಾಡುವುದಕ್ಕೆ ನಡೆಸಿದ್ದನು.
- ಒಮ್ರಿ ಅರಸನಾದ ಆಹಾಬನ ತಂದೆಯೂ ಆಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಇಸ್ರಾಯೇಲ್, ಯಾರೊಬ್ಬಾಮ, ತಿರ್ಚಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6018
ಓಬದ್ಯ
ಸತ್ಯಾಂಶಗಳು:
ಓಬದ್ಯ ಹಳೇ ಒಡಂಬಡಿಕೆಯಲ್ಲಿ ಪ್ರವಾದಿಯಾಗಿದ್ದನು, ಈತನು ಏಸಾವನ ವಂಶಸ್ಥರಾಗಿರುವ ಎದೋಮ್ ಜನರಿಗೆ ವಿರುದ್ಧವಾಗಿ ಪ್ರವಾದಿಸಿದ್ದನು. ಹಳೇ ಒಡಂಬಡಿಕೆಯಲ್ಲಿ ಓಬದ್ಯ ಎನ್ನುವ ಹೆಸರಿನ ಮೇಲೆ ಇತರ ಅನೇಕಮಂದಿ ವ್ಯಕ್ತಿಗಳಿದ್ದಾರೆ.
- ಓಬದ್ಯ ಗ್ರಂಥವು ಹಳೇ ಒಡಂಬಡಿಕೆಯಲ್ಲಿ ಚಿಕ್ಕ ಪುಸ್ತಕವಾಗಿರುತ್ತದೆ ಮತ್ತು ಓಬದ್ಯ ದೇವರಿಂದ ಒಂದು ದರ್ಶನವನ್ನು ಪಡೆದುಕೊಂಡಿರುವ ಪ್ರವಾದನೆಯನ್ನು ಹೇಳುತ್ತದೆ.
- ಓಬದ್ಯನು ಯಾವಾಗ ಜೀವಿಸಿದ್ದನು ಮತ್ತು ಏನು ಪ್ರವಾದಿಸಿದ್ದನು ಎಂದು ನಮಗೆ ಸ್ಪಷ್ಟತೆಯಿಲ್ಲ. ಯೆಹೋರಾಮ, ಆಹಜ್ಯ, ಯೋವಾಷ ಮತ್ತು ಅತಲ್ಯ ಎನ್ನುವವರು ಯೆಹೂದದಲ್ಲಿ ಆಳುತ್ತಿರುವ ಕಾಲಗಳಲ್ಲಿ ಈ ಪ್ರವಾದನೆಯು ಇದ್ದಿರಬಹುದು. ಪ್ರವಾದಿಗಳಾದ ದಾನಿಯೇಲ, ಯೆಹೆಜ್ಕೇಲ ಮತ್ತು ಯೆರೆಮೀಯ ಎನ್ನುವವರು ಕೂಡ ಈ ಕಾಲದಲ್ಲಿ ಪ್ರವಾದಿಸಿದ್ದರು.
- ಓಬದ್ಯನು ಬಹುಶಃ ಬಾಬಿಲೋನಿಯ ಸೆರೆಯ ಸಂದರ್ಭದಲ್ಲಿ ಮತ್ತು ಚಿದ್ಕೀಯ ಆಳುತ್ತಿರುವ ಸಮಯದಲ್ಲಿ ಅಥವಾ ಈ ಸಂಘಟನೆಗಳು ನಡೆದಾದನಂತರ ಕಾಲದಲ್ಲಿ ಜೀವಿಸಿದ ವ್ಯಕ್ತಿಯಾಗಿರಬಹುದು.
- ಓಬದ್ಯ ಎನ್ನುವ ಹೆಸರಿನ ಮೇಲೆ ಇರುವ ಬೇರೆ ವ್ಯಕ್ತಿಗಳಲ್ಲಿ ಸೌಲನ ವಂಶಸ್ಥನು; ದಾವೀದನ ಮನುಷ್ಯರಲ್ಲಿ ಒಬ್ಬನಾಗಿರುವ ಗಾದ್ಯನು, ಅರಸನಾದ ಆಹಾಬನಿಗೆ ಅರಮನೆಯ ನಿರ್ವಾಹಕನು, ಅರಸನಾದ ಯೆಹೋಷಫಾಟನ ಅಧಿಕಾರಿ, ಅರಸನಾದ ಯೋಷೀಯ ಕಾಲದಲ್ಲಿ ದೇವಾಲಯವನ್ನು ರಿಪೇರಿ ಮಾಡುವದರಲ್ಲಿ ಸಹಾಯ ಮಾಡಿದವನು, ಮತ್ತು ನೆಹೆಮೀಯನ ಕಾಲದಲ್ಲಿ ಲೇವಿ ಎನ್ನುವ ದ್ವಾರಪಾಲಕನು ಇದ್ದಿರುತ್ತಾರೆ.
- ಈ ಮನುಷ್ಯರಲ್ಲಿ ಯಾರಾದರೊಬ್ಬರು ಓಬದ್ಯ ಗ್ರಂಥದ ರಚನಾಕಾರನಾಗಿರಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಬಾಬೆಲೋನಿಯ, ದಾವೀದ, ಎದೋಮ್, ಏಸಾವ, ಯೆಹೆಜ್ಕೇಲ, ದಾನಿಯೇಲ, ಗಾದ್, ಯೆಹೋಷಫಾಟ, ಯೋಷೀಯ, ಲೇವಿ, ಸೌಲ, ಚಿದ್ಕೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5662
ಕಪೆರ್ನೌಮ
ಸತ್ಯಾಂಶಗಳು:
ಕಪೆರ್ನೌಮ ಗಲಿಲಾಯ ಸಮುದ್ರದ ವಾಯುವ್ಯ ತೀರದ ಮೇಲಿರುವ ಮೀನುಗಳನ್ನು ಹಿಡಿಯುವ ಗ್ರಾಮ.
- ಗಲಿಲಾಯದಲ್ಲಿ ಯೇಸು ಬೋಧನೆ ಮಾಡುತ್ತಿರುವಾಗ ಅವರು ಕಪೆರ್ನೌಮದಲ್ಲಿ ಅವರು ನಿವಾಸವಾಗುತ್ತಿದ್ದರು.
- ಅನೇಕಮಂದಿ ಆತನ ಶಿಷ್ಯರು ಕಪೆರ್ನೌಮನಿಂದ ಬಂದವರೇ.
- ಯೇಸು ಕೂಡ ಅನೇಕವಾದ ಅದ್ಭುತಗಳನ್ನು ಈ ಪಟ್ಟಣದಲ್ಲಿ ಮಾಡಿದರು, ಇದರಲ್ಲಿ ಸತ್ತಂತ ಒಬ್ಬ ಹುಡುಗಿ ತಿರುಗಿ ಬಂದಿರುವ ಅದ್ಭುತಕಾರ್ಯವು ಒಳಗೊಂಡಿರುತ್ತದೆ.
- ಯೇಸು ಬಹಿರಂಗವಾಗಿ ಗದರಿಸಿದ ಮೂರು ಪಟ್ಟಣಗಳಲ್ಲಿ ಕಪೆರ್ನೌಮ ಒಂದಾಗಿರುತ್ತದೆ. ಯಾಕಂದರೆ ಈ ಪಟ್ಟಣದ ಜನರು ಈತನನ್ನು ತಿರಸ್ಕರಿಸಿದ್ದಾರೆ ಮತ್ತು ಆತನು ಹೇಳಿದ ಸಂದೇಶವನ್ನು ಯಾರೂ ನಂಬಲಿಲ್ಲ. ಅವರ ಅಪನಂಬಿಕೆಯನ್ನು ನೋಡಿ ದೇವರು ಅವರನ್ನು ಶಿಕ್ಷಿಸುತ್ತಾನೆಂದು ಆತನು ಅವರನ್ನು ಎಚ್ಚರಿಸಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಗಲಿಲಾಯ, ಗಲಿಲಾಯ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2584
ಕರ್ಮೆಲ್, ಕರ್ಮೆಲ್ ಪರ್ವತ
ಸತ್ಯಾಂಶಗಳು:
“ಕರ್ಮೆಲ್ ಪರ್ವತ” ಎನ್ನುವ ಈ ಪದವು ಶಾರೋನ ಉತ್ತರ ಬಯಲು ಪಕ್ಕದಲ್ಲಿರುವ ಮೆಡಿಟರೆನಿಯನ್ ಸಮುದ್ರ ತೀರದ ಬಳಿ ಇರುವ ಪರ್ವತ ಶ್ರೇಣಿಯನ್ನು ಸೂಚಿಸುತ್ತದೆ. ಇದರ ಅತ್ಯುನ್ನತ ಶಿಖರವು 546 ಮೀಟರುಗಳ ಎತ್ತರವಾಗಿರುತ್ತದೆ.
- “ಕರ್ಮೆಲ್” ಎಂದು ಒಂದು ಪಟ್ಟಣವನ್ನೂ ಕರೆಯುತ್ತಾರ, ಇದು ಉಪ್ಪಿನ ಸಮುದ್ರದ ದಕ್ಷಿಣದ ಕಡೆಗೆ ಯೂದಾದಲ್ಲಿ ಕಂಡುಬರುತ್ತದೆ
- ಸ್ವಂತ ಸೊತ್ತು ಹೊಂದಿ ಶ್ರೀಮಂತನಾದ ನಾಬಾಲ್ ಮತ್ತು ತನ್ನ ಹೆಂಡತಿಯಾದ ಅಬೀಗೈಲ್ ಕರ್ಮೆಲ್ ಪಟ್ಟಣದ ಹತ್ತಿರದಲ್ಲೇ ನಿವಾಸ ಮಾಡುತ್ತಿದ್ದರು. ಇಲ್ಲಿಯೇ ದಾವೀದನು ಮತ್ತು ತನ್ನ ಮನುಷ್ಯರು ನಾಬಾಲನ ಕುರಿ ಸುಲಿಗೆಕೋರರಿಗೆ ಸಹಾಯ ಮಾಡಿದರು.
- ಯೆಹೋವ ಮಾತ್ರವೇ ನಿಜವಾದ ದೇವರು ಎಂದು ನಿರೂಪಣೆ ಮಾಡಿದ ಕ್ರಮದಲ್ಲಿ ಬಾಳ್ ಪ್ರವಾದಿಗಳೊಂದಿಗೆ ಎಲೀಯ ಈ ಕರ್ಮೆಲ್ ಪರ್ವತದ ಮೇಲೆಯೇ ಸವಾಲನ್ನು ಬೀಸಿದನು.
- ಇದು ಕೇವಲ ಒಂದೇ ಒಂದು ಪರ್ವತವಲ್ಲ ಎಂಬುವದನ್ನು ಸ್ಪಷ್ಟಪಡಿಸಲು, “ಕರ್ಮೆಲ್ ಪರ್ವತ” ಎನ್ನುವದನ್ನು “ಕರ್ಮೆಲ್ ಪರ್ವತ ಶ್ರೇಣಿಯಲ್ಲಿರುವ ಪರ್ವತ” ಅಥವಾ “ಕರ್ಮೆಲ್ ಪರ್ವತ ಶ್ರೇಣಿ” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಳ್, ಎಲೀಯ, ಯೂದಾ, ಉಪ್ಪು ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3760, H3761, H3762
ಕಲ್ದೀಯ, ಕಲ್ದೀಯನು, ಕಲ್ದೀಯರು
ಸತ್ಯಾಂಶಗಳು:
ಕಲ್ದೀಯ ಎನ್ನುವುದು ಬಾಬೆಲೋನಿಯ ಅಥವಾ ಮೆಸಪೂತೋಮ್ಯದ ದಕ್ಷಿಣ ಭಾಗದಲ್ಲಿರುವ ಸೀಮೆಯಾಗಿರುತ್ತದೆ. ಈ ಸೀಮೆಯಲ್ಲಿ ನಿವಾಸವಾಗಿರುವ ಜನರನ್ನು ಕಲ್ದೀಯರು ಎಂದು ಕರೆಯುತ್ತಾರೆ.
- ಕಲ್ಧೀಯದಲ್ಲಿರುವ ಉರ್ ಎನ್ನುವ ಪಟ್ಟಣದಿಂದಲೇ ಅಬ್ರಹಾಮನು ಬಂದಿದ್ದನು. ಇದನ್ನು ಅನೇಕಬಾರಿ “ಕಲ್ದೀಯರ ಉರ್” ಎಂದು ಸೂಚಿಸಲ್ಪಟ್ಟಿರುತ್ತದೆ.
- ಬಾಬೆಲೋನಿಯ ಮೇಲೆ ಅರಸನಾದ ನೆಬುಕ್ನದೆಚ್ಚರನು ಅನೇಕ ಕಲ್ದೀಯರಲ್ಲಿ ಒಬ್ಬನಾಗಿದ್ದನು.
- ಅನೇಕ ವರ್ಷಗಳಾದನಂತರ, ಸುಮಾರು ಕ್ರಿ.ಪೂ.600 ವರ್ಷದಲ್ಲಿ “ಕಲ್ದೀಯ” ಎನ್ನುವ ಪದವು “ಬಾಬೆಲೋನಿಯ” ಎಂದು ಕರೆಯಲ್ಪಟ್ಟಿದೆ.
- ದಾನಿಯೇಲನ ಗ್ರಂಥದಲ್ಲಿ “ಕಲ್ಧೀಯನು” ಎನ್ನುವ ಪದವು ನಕ್ಷತ್ರಗಳನ್ನು ಅಧ್ಯಯನ ಮಾಡಿದ ಉನ್ನತ ಪಂಡಿತರ ವಿಶೇಷವಾದ ವರ್ಗದವರನ್ನು ಸೂಚಿಸುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಹಾಮ, ಬಾಬೆಲೋನ, ಶಿನಾರ್, ಉರ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3679, H3778, H3779, G5466
ಕಾದೇಶ್
ಸತ್ಯಾಂಶಗಳು:
ಕಾದೇಶ್ ಎನ್ನುವುದು ಕಾನಾನ್ ಪಟ್ಟಣವಾಗಿತ್ತು, ಇದು ಇಸ್ರಾಯೇಲ್ಯರು ಕಾನಾನ್ ಭೂಮಿಯೊಳಗೆ ಪ್ರವೇಶಿಸಿದಾಗ ಅವರಿಂದ ವಶಪಡಿಸಿಕೊಳ್ಳಳಾಗಿತ್ತು.
- ಈ ಪಟ್ಟಣವು ಇಸ್ರಾಯೇಲ್ ಉತ್ತರ ಭಾಗದಲ್ಲಿ ಕಂಡುಬರುತ್ತದೆ, ಆ ಭೂಮಿಯಲ್ಲಿನ ಭಾಗವನ್ನೇ ನಫ್ತಾಲಿ ಕುಲಕ್ಕೆ ಕೊಡಲ್ಪಟ್ಟಿರುತ್ತದೆ.
- ಕಾದೇಶ್ ಎನ್ನುವುದು ಪಟ್ಟಣಗಳಲ್ಲಿ ಒಂದು ಪಟ್ಟಣವಾಗಿರುತ್ತದೆ, ಇದು ಲೇವಿ ಯಾಜಕರು ನಿವಾಸವಾಗಿರುವ ಸ್ಥಳವಾಗಿದ್ದಿತ್ತು, ಯಾಕಂದರೆ ಅದುವರೆಗೆ ಅವರಿಗೆ ಯಾವ ಸ್ವಂತ ಭೂಮಿಯು ಇದ್ದಿರಲಿಲ್ಲ.
- ಇದನ್ನು “ಆಶ್ರಯ ಪಟ್ಟಣ” ಎಂಬುದಾಗಿಯೂ ಪ್ರತ್ಯೇಕಿಸಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹೆಬ್ರೋನ್, ಲೇವಿ, ನಫ್ತಾಲಿ, ಯಾಜಕ, ಆಶ್ರಯ, ಶೆಕೆಮ್, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
ಕಾದೇಶ್, ಕಾದೇಶ್-ಬರ್ನೇಯ, ಕಾದೇಶಿನ ಮೆರೀಬಾ
ಸತ್ಯಾಂಶಗಳು:
ಕಾದೇಶ್, ಕಾದೇಶ್-ಬರ್ನೇಯ ಮತ್ತು ಕಾದೇಶಿನ ಮೆರೀಬಾ ಎನ್ನುವ ಹೆಸರುಗಳೆಲ್ಲವು ಇಸ್ರಾಯೇಲ್ ಚರಿತ್ರೆಯಲ್ಲಿ ತುಂಬಾ ಪ್ರಾಮುಖ್ಯವಾದ ಪಟ್ಟಣವನ್ನು ಸೂಚಿಸುತ್ತಿವೆ, ಇದು ಇಸ್ರಾಯೇಲಿನ ದಕ್ಷಿಣ ಭಾಗದಲ್ಲಿ ಮತ್ತು ಎದೋಮ್ ಸೀಮೆಯ ಹತ್ತಿರದಲ್ಲಿ ಕಂಡುಬರುತ್ತದೆ.
- ಕಾದೇಶ್ ಪಟ್ಟಣವು ಒಂದು ನೀರೊಸರು ಆಗಿತ್ತು, ಇದು ನೀರು ಸಿಗುವ ಸ್ಥಳ ಮತ್ತು ಮರುಭೂಮಿಯ ಮಧ್ಯೆದಲ್ಲಿ ಫಲವತ್ತಾದ ಮಣ್ಣನ್ನು ಹೊಂದಿರುವ ಸ್ಥಳವಾಗಿತ್ತು, ಇದಕ್ಕೆ ಜಿನ್ ಎಂದು ಹೆಸರು.
- ಕಾದೇಶ್-ಬರ್ನೇಯದಿಂದಲೇ ಕಾನಾನ್ ಭೂಮಿಯೊಳಗೆ ಹನ್ನೆರಡು ಗೂಢಚಾರಿಗಳನ್ನು ಮೋಶೆ ಕಳುಹಿಸಿದ್ದನು.
- ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚಾರ ಮಾಡುತ್ತಿರುವಾಗ ಅವರು ಕಾದೇಶಿನಲ್ಲಿಯೂ ಇಳಿದುಕೊಂಡಿದ್ದರು.
- ಕಾದೇಶ್-ಬರ್ನೇಯ ಎನ್ನುವುದು ಮಿರ್ಯಾಮಳು ಮರಣಿಸಿದ ಸ್ಥಳವಾಗಿದ್ದಿತ್ತು.
- ಕಾದೇಶಿನ ಮೆರೀಬಾ ಎನ್ನುವ ಸ್ಥಳದಲ್ಲೇ ಮೋಶೆ ದೇವರಿಗೆ ಅವಿಧೇಯತೆ ತೋರಿಸಿದ್ದನು ಮತ್ತು ದೇವರು ಕಲ್ಲಿನೊಂದಿಗೆ ಮಾತನಾಡು ಎಂದು ಹೇಳಿದಾಗ, ಮೋಶೆ ಆ ಕಲ್ಲಿನೊಂದಿಗೆ ಮಾತನಾಡುವುದಕ್ಕೆ ಬದಲಾಗಿ, ಅದನ್ನು ಹೊಡೆಯುತ್ತಾನೆ. ಈ ಘಟನೆ ಈ ಸ್ಥಳದಲ್ಲೇ ನಡೆದಿದೆ.
- “ಕಾದೇಶ್” ಎನ್ನುವ ಹೆಸರು ಇಬ್ರಿಯ ಪದವಾಗಿರುತ್ತದೆ, ಇದಕ್ಕೆ “ಪರಿಶುದ್ಧನು” ಅಥವಾ “ಪ್ರತ್ಯೇಕಿಸಲ್ಪಟ್ಟವನು” ಎಂದರ್ಥ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮರುಭೂಮಿ, ಎದೋಮ್, ಪರಿಶುದ್ಧ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4809, H6946, H6947
ಕಾನಾ
ಅರ್ಥವಿವರಣೆ:
ಕಾನಾ ಎನ್ನುವುದು ಒಂದು ಗ್ರಾಮ ಅಥವಾ ಗಲಿಲಾಯ ಸೀಮೆಯಲ್ಲಿನ ಒಂದು ಪಟ್ಟಣವಾಗಿತ್ತು. ಇದು ಉತ್ತರ ನಜರೇತ ಎಂಬ ಊರಿನಿಂದ ಒಂಭತ್ತು ಮೈಲಿಗಳ ದೂರದಲ್ಲಿರುತ್ತದೆ.
- ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ, ನತಾನಯೇಲನ ಸ್ವಂತ ಊರು ಕಾನಾ ಆಗಿತ್ತು, .
- ಯೇಸು ಕಾನಾ ಊರಿನಲ್ಲಿ ನಡೆಯುವ ವಿವಾಹ ಔತಣ ಕೂಟಕ್ಕೆ ಬಂದಿದ್ದನು ಮತ್ತು ಆ ಸ್ಥಳದಲ್ಲಿಯೇ ಆತನು ಮೊಟ್ಟ ಮೊದಲನೇ ಅದ್ಭುತವನ್ನು ಅಂದರೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದನು.
- ಅದು ನಡೆದ ಸ್ವಲ್ಪ ಕಾಲವಾದನಂತರ, ಯೇಸು ಕಾನಾ ಊರಿಗೆ ತಿರುಗಿ ಬಂದನು ಮತ್ತು ಅಲ್ಲಿ ತನ್ನ ಮಗನನ್ನು ಗುಣಪಡಿಸು ಎಂದು ಮನವಿ ಮಾಡಿಕೊಳ್ಳುವುದಕ್ಕೆ ಕಪೆರ್ನೌಮಿನಿಂದ ಬಂದಿದ್ದ ಒಬ್ಬ ಅರಮನೆಯ ಪ್ರಧಾನನನ್ನು ಭೇಟಿಯಾದನು.
(ಇವುಗಳನ್ನು ಸಹ ನೋಡಿರಿ : ಕಪೆರ್ನೌಮ್, ಗಲಿಲಾಯ, ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: G25800
ಕಾನಾನ್, ಕಾನಾನ್ಯ, ಕಾನಾನ್ಯರು
ಸತ್ಯಾಂಶಗಳು:
ಕಾನಾನ್ ಎಂಬುವಾತನು ನೋಹನ ಮೂವರ ಮಕ್ಕಳಲ್ಲಿ ಒಬ್ಬನಾಗಿರುವ ಹಾಮ್ ಮಗನಾಗಿರುತ್ತಾನೆ. ಕಾನಾನ್ಯರು ಕಾನಾನ್ ಸಂತಾನದವರಾಗಿರುತ್ತಾರೆ.
- “ಕಾನಾನ್” ಅಥವಾ “ಕಾನಾನ್ ದೇಶ” ಎನ್ನುವ ಪದಗಳು ಮೆಡಿಟರೇನಿಯನ್ ಸಮುದ್ರಕ್ಕೆ ಮತ್ತು ಯೊರ್ದನ್ ನದಿಗೆ ಮಧ್ಯದಲ್ಲಿರುವ ಭೂಭಾಗವನ್ನು ಕೂಡ ಸೂಚಿಸುತ್ತವೆ. ಇದು ಸಿರಿಯಾ ಉತ್ತರ ಗಡಿವರೆಗೆ ಮತ್ತು ಐಗುಪ್ತ ದಕ್ಷಿಣ ಗಡಿವರೆಗೆ ವ್ಯಾಪಿಸಿರುತ್ತದೆ.
- ಈ ಭೂಮಿಯಲ್ಲಿ ಕಾನಾನ್ಯರು ವಾಸಿಸುತ್ತಾರೆ, ಅದೇರೀತಿಯಾಗಿ ಅನೇಕ ವಿವಿಧ ಜನಾಂಗಗಳ ಗುಂಪಿನವರು ವಾಸಿಸುತ್ತಾರೆ.
- ದೇವರು ಈ ಕಾನಾನ್ ದೇಶವನ್ನು ಅಬ್ರಹಾಮನಿಗೆ ಮತ್ತು ತನ್ನ ಸಂತಾನದವರಾದ ಇಸ್ರಾಯೇಲ್ಯರಿಗೆ ಕೊಡುವನೆಂದು ವಾಗ್ಧಾನ ಮಾಡಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಹಾಮ್, ವಾಗ್ಧಾನ ಭೂಮಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 04:05 ಆತನು (ಅಬ್ರಹಾಮನು) ತನ್ನ ಹೆಂಡತಿಯಾದ ಸಾರಯಳನ್ನು ಮತ್ತು ತನ್ನ ಎಲ್ಲಾ ದಾಸ ದಾಸಿಯರನ್ನು ಕರೆದುಕೊಂಡು, ತನಗೆ ಸಂಬಂಧಪಟ್ಟಿರುವ ಪ್ರತಿಯೊಂದನ್ನು ತೆಗೆದುಕೊಂಡು ದೇವರು ತೋರಿಸಿದ ವಾಗ್ಧಾನ ಭೂಮಿಯಾದ __ ಕಾನಾನ್__ ದೇಶಕ್ಕೆ ಹೊರಟನು.
- 04:06 ಅಬ್ರಹಾಮನು __ ಕಾನಾನ್ __ ದೇಶಕ್ಕೆ ಬಂದಾಗ, “ನಿನ್ನ ಸುತ್ತಮುತ್ತಲಿರುವ ಪ್ರತಿಯೊಂದನ್ನು ನೋಡು. ನೀನು ಕಾಣುತ್ತಿರುವ ಅಥವಾ ನೋಡುತ್ತಿರುವ ಈ ಭೂಮಿಯೆಲ್ಲವನ್ನು ಒಂದು ಸ್ವಾಸ್ಥ್ಯವಾಗಿ ನಿನಗೆ ಮತ್ತು ನಿನ್ನ ಸಂತಾನದವೆರೆಗೆ ಕೊಡುತ್ತೇನೆ” ಎಂದು ದೇವರು ಹೇಳಿದರು.
- 04:09 “ನಾನು ನಿನ್ನ ಸಂತಾನದವರಿಗೆ __ ಕಾನಾನ್ __ ದೇಶವನ್ನು ಕೊಡುತ್ತೇನೆ”.
- 05:03 “ನಾನು ನಿನಗೂ ಮತ್ತು ನಿನ್ನ ಸಂತಾನದವರಿಗೆ ಆಸ್ತಿಯನ್ನಾಗಿ __ ಕಾನಾನ್ __ ದೇಶವನ್ನು ಅವರ ಆಸ್ತಿಯನ್ನಾಗಿ ಕೊಡುತ್ತೇನೆ ಮತ್ತು ನಾನು ಎಂದೆಂದಿಗೂ ಅವರ ದೇವರಾಗಿರುತ್ತೇನೆ.
- 07:08 ಕಾನಾನ್.ನಲ್ಲಿ ಇರುವ ತನ್ನ ಮನೆಯಿಂದ ಸುಮಾರು ಇಪ್ಪತ್ತು ವರ್ಷಗಳಾದನಂತರ, ಯಾಕೋಬನು ತನ್ನ ಕುಟುಂಬದೊಂದಿಗೆ, ತನ್ನ ದಾಸರೊಂದಿಗೆ ಮತ್ತು ತನ್ನ ಎಲ್ಲಾ ಪಶು ಪ್ರಾಣಿಗಳೊಂದಿಗೆ ತಿರುಗಿ ಬಂದನು.
ಪದ ಡೇಟಾ:
- Strong's: H3667, H3669, G2581, G5478
ಕಾಯಫ
ಸತ್ಯಾಂಶಗಳು:
ಕಾಯಫನು ಯೇಸು ಮತ್ತು ದಿಕ್ಷಾಸ್ನಾನ ಕೊಡುವ ಯೋಹಾನರ ಕಾಲದಲ್ಲಿ ಇಸ್ರಾಯೇಲ್ ಪ್ರಧಾನ ಯಾಜಕನಾಗಿದ್ದನು.
- ಯೇಸು ಕ್ರಿಸ್ತನನ್ನು ಹಿಡಿದು, ತೀರ್ಪಿಗಾಗಿ ನಿಲ್ಲಿಸಿದ ಸಮಯದಲ್ಲಿ ಕಾಯಫ ಪ್ರಮುಖ ಪಾತ್ರವನ್ನು ವಹಿಸಿದನು.
- ಪೇತ್ರ ಮತ್ತು ಯೋಹಾನರು ಒಬ್ಬ ಕುಂಟನನ್ನು ಗುಣಪಡಿಸಿದನಂತರ ಅವರನ್ನು ಬಂಧಿಸಿದಾಗ ಪ್ರಧಾನ ಯಾಜಕರಾದ ಅನ್ನ ಮತ್ತು ಕಾಯಫರವರು ಅಲ್ಲೇ ಇದ್ದರು.
- ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ ಎಂಬುದಾಗಿ ಕಾಯಫನೇ ಹೇಳಿದ್ದನು. ಯೇಸು ತನ್ನ ಜನರನ್ನು ರಕ್ಷಿಸಿಕೊಳ್ಳುವುದಕ್ಕೆ ಯಾವರೀತಿ ಮರಣ ಹೊಂದುತ್ತಾನೆನ್ನುವುದರ ಕುರಿತಾಗಿ ಒಂದು ಪ್ರವಾದನೆಯಾಗಿ ಈ ಮಾತುಗಳನ್ನು ಹೇಳುವುದಕ್ಕೆ ದೇವರೇ ಅವನಿಗೆ ಕಾರಣರಾಗಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅನ್ನ, ಪ್ರಧಾನ ಯಾಜಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2533
ಕಾಯಿನ
ಸತ್ಯಾಂಶಗಳು:
ಕಾಯಿನ ಮತ್ತು ತನ್ನ ತಮ್ಮನಾದ ಹೇಬೆಲರು ಸತ್ಯವೇದದಲ್ಲಿ ಆದಾಮ ಮತ್ತು ಹವ್ವಳಿಗೆ ಹುಟ್ಟಿದ ಮೊಟ್ಟಮೊದಲ ಗಂಡು ಮಕ್ಕಳೆಂದು ಸತ್ಯವೇದದಲ್ಲಿ ದಾಖಲಿಸಲಾಗಿದೆ.
- ಹೇಬೆಲನು ಕುರಿಗಳನ್ನು ಸಾಕುವ ವ್ಯಕ್ತಿಯಾದರೆ, ಕಾಯಿನನು ಬೆಳೆಗಳನ್ನು ಹಾಕುವ ರೈತನಾಗಿದ್ದನು.
- ಕಾಯಿನನು ಅಸೂಯೆಯಿಂದ ತನ್ನ ತಮ್ಮನಾದ ಹೇಬೆಲನನ್ನು ಸಾಯಿಸಿದನು, ಯಾಕಂದರೆ ದೇವರು ಹೇಬೆಲನ ಕಾಣಿಕೆಯನ್ನು ಸ್ವೀಕರಿಸಿದ್ದನು, ಆದರೆ ಕಾಯಿನನ ಕಾಣಿಕೆಯನ್ನು ಸ್ವೀಕರಿಸಲಿಲ್ಲ.
- ದೇವರು ಕಾಯಿನನಿಗೆ ಶಿಕ್ಷೆಯನ್ನು ಕೊಟ್ಟು ಏದೆನ್ ತೋಟದಿಂದ ಹೊರ ಕಳುಹಿಸಿದನು ಮತ್ತು ಭೂಮಿ ಇನ್ನು ಮುಂದೆ ನಿನಗಾಗಿ ಬೆಳೆಗಳನ್ನು ಹುಟ್ಟಿಸುವುದಿಲ್ಲವೆಂದು ಹೇಳಿದನು.
- ಕಾಯಿನನನ್ನು ಇತರ ಜನರು ಕೊಲ್ಲದ ಹಾಗೆ ದೇವರು ಅವನನ್ನು ರಕ್ಷಿಸುವನೆಂದು ಒಂದು ಗುರುತನ್ನು ದೇವರು ಕಾಯಿನನ ಹಣೆಯ ಮೇಲೆ ಹಾಕಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆದಾಮ, ಕಾಣಿಕೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7014, G2535
ಕಾಲೇಬ್
ಸತ್ಯಾಂಶಗಳು:
ಕಾಲೇಬ್ ಎನ್ನುವವನು ಕಾನಾನ್ ಭೂಮಿಯನ್ನು ನೋಡಿ ಬರುವುದಕ್ಕೆ ಮೋಶೆ ಕಳುಹಿಸಿದ ಹನ್ನೆರಡುಮಂದಿ ಇಸ್ರಾಯೇಲ್ಯರ ಗೂಢಚಾರರಲ್ಲಿ ಒಬ್ಬನಾಗಿದ್ದನು.
- ಕಾನಾನ್ಯರನ್ನು ಸೋಲಿಸುವುದಕ್ಕೆ ನಮಗೆ ಸಹಾಯ ಮಾಡಲು ದೇವರನ್ನು ನಂಬಬೇಕೆಂದು ಈತನು ಮತ್ತು ಯೆಹೋಶುವನು ಜನರಿಗೆ ಹೇಳಿದರು.
- ಯೆಹೋಶುವ ಮತ್ತು ಕಾಲೇಬರು ಮಾತ್ರವೇ ತಮ್ಮ ತಲೆಮಾರಿನವರಲ್ಲಿ ವಾಗ್ಧಾನ ಭೂಮಿಯಾದ ಕಾನಾನ್.ನೊಳಗೆ ಪ್ರವೇಶಿಸುವುದಕ್ಕೆ ಅನುಮತಿ ಹೊಂದಿದ್ದರು.
- ಹೆಬ್ರೋನ್ ಭೂಮಿಯನ್ನು ನನಗೆ ಮತ್ತು ನನ್ನ ಸಂತಾನದವರಿಗೆ ಕೊಡಬೇಕೆಂದು ಕಾಲೇಬನು ಕೇಳಿಕೊಂಡನು. ಆ ಭೂಮಿಯ ಮೇಲೆ ನಿವಾಸವಾಗಿರುವ ಜನರನ್ನು ಸೋಲಿಸುವುದರಲ್ಲಿ ದೇವರು ತನಗೆ ಸಹಾಯ ಮಾಡುತ್ತಾನೆಂದು ಆತನು ತಿಳಿದಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಹೆಬ್ರೋನ್, ಯೆಹೋಶುವ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 14:04 ಇಸ್ರಾಯೇಲ್ಯರು ಕಾನಾನ್ ಎನ್ನುವ ದೇಶವನ್ನು ಸೇರಿದಾಗ, ಮೋಶೆ ಇಸ್ರಾಯೇಲ್ ಪ್ರತಿಯೊಂದು ಕುಲದಿಂದ ಒಬ್ಬೊಬ್ಬರಾಗಿ ಹನ್ನೆರಡು ಜನರನ್ನು ಆರಿಸಿಕೊಂಡನು. ಈ ದೇಶವು ಹೇಗಿದೆಯೆಂದು ನೋಡಿ ಬರುವುದಕ್ಕೆ ಅವರನ್ನು ಗೂಢಚಾರಿಗಳಾಗಿ ಸೂಚನೆಗಳನ್ನು ಹೇಳಿ ಕಳುಹಿಸಿದನು.
- 14:06 ತಕ್ಷಣವೇ __ ಕಾಲೇಬ್ __ ಮತ್ತು ಯೆಹೋಶುವ ಮತ್ತು ಇತರ ಇಬ್ಬರು ಗೂಢಚಾರಿಗಳು, “ಕಾನಾನ್ ದೇಶದ ಜನರು ಬಹು ಎತ್ತರವಾಗಿದ್ದಾರೆ, ಬಲವುಳ್ಳವರಾಗಿದ್ದಾರೆನ್ನುವುದು ನಿಜ, ಆದರೆ ನಾವು ಅವರನ್ನು ತಪ್ಪದೇ ಸೋಲಿಸುತ್ತೇವೆ” ಎಂದು ಹೇಳಿದರು. ದೇವರು ನಮ್ಮ ಪಕ್ಷವಾಗಿ ಯುದ್ಧ ಮಾಡುತ್ತಾನೆ!”
- 14:08 “ಅಲ್ಲಿ ಯೆಹೋಶುವ ಮತ್ತು __ ಕಾಲೇಬ್ __ ಇಬ್ಬರನ್ನು ಬಿಟ್ಟು ಉಳಿದ ಇಪ್ಪತ್ತು ವರ್ಷದ ವಯಸ್ಸಿನವರು ಅಥವಾ ಅದಕ್ಕೆ ಮೇಲ್ಪಟ್ಟವರು ಸತ್ತು ಹೋಗುತ್ತಾರೆ, ಅವರಿಬ್ಬರನ್ನು ಬಿಟ್ಟು ಇನ್ನು ಯಾರೂ ವಾಗ್ಧಾನ ದೇಶದೊಳಗೆ ಪ್ರವೇಶಿಸಲಿಲ್ಲ.
ಆ ಭೂಮಿಯಲ್ಲಿ ಅವರು ಸಮಾಧಾನದಿಂದ ಜೀವಿಸಬಹುದು.
ಪದ ಡೇಟಾ:
- Strong's: H3612, H3614
ಕಿದ್ರೋನ್ ಕಣಿವೆ
ಸತ್ಯಾಂಶಗಳು:
ಕಿದ್ರೋನ್ ಕಣಿವೆಯು ಯೆರೂಸಲೇಮ್ ನಗರದ ಹೊರಭಾಗದಲ್ಲಿ, ಅದರ ಪೂರ್ವ ಗೋಡೆ ಮತ್ತು ಒಲೀವ ಪರ್ವತದ ನಡುವೆ ಇರುವ ಆಳವಾದ ಕಣಿವೆಯಾಗಿದೆ.
- ಕಣಿವೆಯು 1,000 ಮೀಟರ್ ಆಳ ಮತ್ತು ಸುಮಾರು 32 ಕಿಲೋಮೀಟರ್ ಉದ್ದವಾಗಿದೆ.
- ಅರಸನಾದ ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿ ಹೋದಾಗ, ಅವನು ಕಿದ್ರೋನ್ ಕಣಿವೆಯ ಮೂಲಕ ಒಲೀವ ಮರಗಳ ಪರ್ವತಕ್ಕೆ ಹೋದನು.
- ಯೆಹೂದದ ಅರಸನಾದ ಯೋಷೀಯನು ಮತ್ತು ಅರಸನಾದ ಆಸನು ಸುಳ್ಳು ದೇವರುಗಳ ಎತ್ತರದ ಸ್ಥಳಗಳನ್ನು ಮತ್ತು ಯಜ್ಞವೇದಿಗಳನ್ನು ಒಡೆದು ಸುಟ್ಟುಹಾಕಲು ಆದೇಶಿಸಿದರು; ಬೂದಿಯನ್ನು ಕಿದ್ರೋನ್ ಕಣಿವೆಯಲ್ಲಿ ಎಸೆಯಲಾಯಿತು.
- ಅರಸನಾದ ಹಿಜ್ಕೀಯ ಆಳ್ವಿಕೆಯಲ್ಲಿ ಯಾಜಕರು ದೇವಾಲಯದಿಂದ ತೆಗೆಯುವ ಅಪವಿತ್ರವಾದವುಗಳನ್ನು ಕಿದ್ರೋನ್ ಕಣಿವೆಯೊಳಗೆ ಹಾಕುತ್ತಿದ್ದರು.
- ದುಷ್ಟ ರಾಣಿಯಾಗಿರುವ ಅತಲ್ಯಳು ಈ ಕಣಿವೆಯಲ್ಲಿಯೇ ಕೊಂದು ಹಾಕಲ್ಪಟ್ಟಳು, ಯಾಕಂದರೆ ಆಕೆ ದುಷ್ಟ ಕಾರ್ಯಗಳನ್ನು ಮಾಡಿದ್ದಳು .
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಇವುಗಳನ್ನು ಸಹ ನೋಡಿರಿ : ಅಬ್ಷಾಲೋಮನು, ಆಸನು, ಅತಲ್ಯಳು, ದಾವೀದನು, ಸುಳ್ಳು ದೇವರು, ಹಿಜ್ಕೀಯನು, ಉನ್ನತ ಸ್ಥಳಗಳು, ಯೋಷೀಯನು, ಯೆಹೂದ, ಒಲೀವ ಪರ್ವತ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: H5674, H6939, G27480, G54930
ಕಿಲಿಕ್ಯ
ಸತ್ಯಾಂಶಗಳು:
ಕಿಲಿಕ್ಯ ಎನ್ನುವುದು ರೋಮಾ ಸೀಮೆಯಲ್ಲಿರುವ ಒಂದು ಚಿಕ್ಕ ಪ್ರಾಂತ್ಯ. ಇದು ಈಗಿನ ಟರ್ಕಿ ದೇಶದ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ. ಇದರ ಗಡಿಗಳು ಏಜಿಯನ್ ಸಮುದ್ರದವರೆಗೂ ಇರುತ್ತವೆ.
- ಅಪೊಸ್ತಲನಾದ ಪೌಲನು ಕಿಲಿಕ್ಯದಲ್ಲಿರುವ ತಾರ್ಸ ನಗರದಿಂದ ಬಂದ ಪೌರನಾಗಿದ್ದನು.
- ಯೇಸು ಪೌಲನನ್ನು ದಮಸ್ಕ ಮಾರ್ಗದಲ್ಲಿ ಸಂದರ್ಶಿಸಿದ ನಂತರ ಅವರು ಕಿಲಿಕ್ಯದಲ್ಲಿ ಅನೇಕ ವರ್ಷಗಳಿದ್ದರು.
- ಕಿಲಿಕ್ಯದಿಂದ ಬಂದಿರುವ ಕೆಲವರು ಯೆಹೂದ್ಯರು ಸ್ತೆಫೆನನನ್ನು ಎದುರಿಸಿ, ಆತನನ್ನು ಕಲ್ಲುಗಳಿಂದ ಹೊಡೆದು ಸಾಯಿಸಬೇಕೆಂದು ಜನರನ್ನು ಪ್ರೇರೇಪಿಸದವರಲ್ಲಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಪೌಲ, ಸ್ತೆಫೆನ, ತಾರ್ಸ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2791
ಕುಪ್ರ
ಸತ್ಯಾಂಶಗಳು:
ಪ್ರಸ್ತುತ ಕಾಲದ ಟರ್ಕಿ ಇರುವ ಸ್ಥಳಕ್ಕೆ ದಕ್ಷಿಣ ಭಾಗದಲ್ಲಿ 64 ಕಿಲೋಮೀಟರ್ ದೂರದಲ್ಲಿ, ಕುರ್ಪ, ಮೆಡಿಟರೇನಿಯನ್ ಸಮುದ್ರದಲ್ಲಿರುವ ದ್ವೀಪವಾಗಿದೆ.
- ಬಾರ್ನಬ ಕುಪ್ರದ್ವೀಪದವನಾಗಿದ್ದನು ಆದಕಾರಣ ಅವನ ಸಹೋದರನಾದ ಮಾರ್ಕನೆನಿಸಿಕೊಳ್ಳುವ ಯೋಹನನು ಅಲ್ಲಿಂದ ಬಂದವನಾಗಿರಬಹುದು.
- ಪೌಲನು ಮತ್ತು ಬಾರ್ನಬ ತಮ್ಮ ಮೊದಲನೆಯ ಸುವಾರ್ತೆ ದಂಡೆಯಾತ್ರೆಯ ಪ್ರಾರಂಭದಲ್ಲಿ ಕುಪ್ರ ದ್ವೀಪದಲ್ಲಿ ಸುವಾರ್ತೆಯನ್ನು ಸಾರಿದರು. ಆ ಯಾತ್ರೆಯಲ್ಲಿ ಅವರಿಗೆ ಸಹಾಯಕನಾಗಿರಲು ಮಾರ್ಕನೆನಿಸಿಕೊಳ್ಳುವ ಯೋಹನನು ಬಂದನು.
- ನಂತರ, ಬಾರ್ನಬ ಮತ್ತು ಮಾರ್ಕನು ಕುಪ್ರವನ್ನು ಮತ್ತೆ ಬೇಟಿ ನೀಡಿದರು.
- ಹಳೆ ಒಡಂಬಡಿಕೆಯಲ್ಲಿ, ಶಂಕುಮರಗಳು ಹೆಚ್ಚಾಗಿರುವ ಸ್ಥಳವಾಗಿ ಕುಪ್ರ ದ್ವೀಪದ ಕುರಿತು ಬರೆಯಲ್ಪಟ್ಟಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡುವುದು)
(ಈ ಪದಗಳನ್ನು ಸಹ ನೋಡಿರಿ : ಬಾರ್ನಬ, ಮಾರ್ಕನೆನಿಸಿಕೊಳ್ಳುವ ಯೋಹನನು, ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2953, G2954
ಕುರೇನೆ
ಸತ್ಯಾಂಶಗಳು:
ಕುರೇನೆ ಗ್ರೀಕ್ ಪಟ್ಟಣವಾಗಿತ್ತು. ಅದು ಮೆಡಿಟರೇನಿಯನ್ ಸಮುದ್ರದ ಹತ್ತಿರ ಆಫ್ರಿಕಾ ದೇಶದ ಉತ್ತರ ಕರಾವಳಿಯಲ್ಲಿತ್ತು ಮತ್ತು ಕ್ರೇತ್ಯ ದ್ವಿಪಕ್ಕೆ ದಕ್ಷಿಣ ದಿಕ್ಕಿನಲ್ಲಿತ್ತು.
- ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತರು ಹಾಗೂ ಯಹೂದಿಯರು ಕುರೇನೆ ಪಟ್ಟಣದಲ್ಲಿ ವಾಸ ಮಾಡಿದರು.
- ಸತ್ಯವೇದದಲ್ಲಿ ಕುರೇನೆ ಪಟ್ಟಣ ಯೇಸುವಿನ ಶಿಲುಬೆಯನ್ನು ಹೊರುವುದಕ್ಕೆ ಸಹಾಯ ಮಾಡಿದ ಸೀಮೋನನ ಸ್ವಸ್ಥಳವಾಗಿದೆ ಎಂದು ಪ್ರಸಿದ್ಧವಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡುವುದು)
(ಈ ಪದಗಳನ್ನು ಸಹ ನೋಡಿರಿ : ಕ್ರೇತ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2956, G2957
ಕೂಷ್
ಸತ್ಯಾಂಶಗಳು:
ಕೂಷ್ ನೋಹನ ಮಗನಾದ ಹಾಮನ ಹಿರಿಯ ಮಗನಾಗಿದ್ದನು. ಅವನು ನಿಮ್ರೋದನ ಮೂಲಪುರುಷನಾಗಿದ್ದನು. ಐಗುಪ್ತ (ಮಿಚ್ರಯಿಮ್) ಮತ್ತು ಕಾನಾನ್ ಅವನ ಸಹೋದರರಾಗಿದ್ದರು.
- ಹಳೆ ಒಡಂಬಡಿಕೆಯಲ್ಲಿ, “ಕೂಷ್” ಎನ್ನುವುದು ಇಸ್ರಾಯೇಲ್ ದೇಶಕ್ಕೆ ದಕ್ಷಿಣ ದಿಕ್ಕಿನಲ್ಲಿದ್ದ ದೊಡ್ಡ ಪ್ರದೇಶದ ಹೆಸರಾಗಿತ್ತು. ಹಾಮನ ಮಗನಾದ ಕೂಷ್ ಹೆಸರಿನಲ್ಲಿ ಈ ಪ್ರದೇಶಕ್ಕೆ ಆ ಹೆಸರುಬಂದಿರಬಹುದು.
- ಅಧುನಿಕ ಕಾಲದಲ್ಲಿರುವ ಸೂಡಾನ್, ಈಜಿಪ್ಟ್, ಇಥಿಯೋಪಿಯ ಮತ್ತು ಸೌದಿ ಅರೇಬಿಯಾ ಎಂಬ ದೇಶಗಳಿರುವ ಪ್ರಾಂತ್ಯದಲ್ಲಿ ಪ್ರಾಚೀನ ಕಾಲದಲ್ಲಿದ್ದ ಕೂಷ್ ದೇಶವು ವ್ಯಾಪಕವಾಗಿತ್ತು.
- ಕೀರ್ತನೆಗಳಲ್ಲಿ ಕೂಷ್ ಎಂಬ ಮತ್ತೊಬ್ಬ ವ್ಯಕ್ತಿಯ ಕುರಿತು ಹೇಳಲಾಗಿದೆ. ಅವನು ಬೆನ್ಯಾಮೀನ ಕುಲದವನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡುವುದು)
(ಈ ಪದಗಳನ್ನು ಸಹ ನೋಡಿರಿ : ಅರೇಬಿಯಾ, ಕಾನಾನ್, ಐಗುಪ್ತ, ಇಥಿಯೋಪಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3568, H3569, H3570
ಕೆರೇತ್ಯರು
ಸತ್ಯಾಂಶಗಳು:
ಕೆರೇತ್ಯರು ಒಂದು ಜನಾಂಗದವರು ಅಥವಾ ಒಂದು ವರ್ಗದವರು, ಇವರು ಫಿಲಿಷ್ಟಿಯನರಲ್ಲಿ ಭಾಗವಾಗಿದ್ದ ಜನರಾಗಿರಬಹುದು. “ಕೆರೇತ್ಯರು” ಎಂಬುದಾಗಿ ಕೆಲವು ಅನುವಾದಗಳು ಬರೆದಿದ್ದಾರೆ.
- “ಕೆರೇತ್ಯರು ಮತ್ತು ಪೆಲೇತ್ಯರು” ಎನ್ನುವವರು ಅರಸನಾದ ದಾವೀದನಿಗೆ ವಿಶೇಷವಾಗಿ ಅಂಗರಕ್ಷಕರಾಗಿರಲು ಸಮರ್ಪಿಸಿಕೊಂಡವರು, ಇವರು ದಾವೀದನ ಸೈನ್ಯದಿಂದ ಒಂದು ವಿಶೇಷವಾದ ಸೈನಿಕ ಗುಂಪಾಗಿದ್ದರು.
- ದಾವೀದನ ಆಡಳಿತಾತ್ಮಕ ಸೈನಿಕರ ಸದಸ್ಯನು, ಯೆಹೋಯಾದಾವನ ಮಗನೂ ಆಗಿರುವ ಬೆನಾಯ ಕೆರೇತ್ಯರು ಮತ್ತು ಪೆಲೇತ್ಯರಿಗೆ ನಾಯಕನಾಗಿದ್ದನು.
- ದಾವೀದನು ಅಬ್ಷಾಲೋಮನ ಪ್ರತಿಭಟನೆ ಕಾರಣದಿಂದ ಯೆರೂಸಲೇಮಿಗೆ ಓಡಿ ಹೋದಾಗ ಕೆರೇತ್ಯರು ದಾವೀದನ ಬಳಿಯೇ ಇದ್ದುಕೊಂಡಿದ್ದರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಬೆನಾಯ, ದಾವೀದ, ಫಿಲಿಸ್ಟಿಯನರು )
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3774
ಕೇದಾರ್
ಸತ್ಯಾಂಶಗಳು:
ಕೇದಾರ್ ಎನ್ನುವವನು ಇಷ್ಮಾಯೇಲನ ಎರಡನೇ ಮಗನಾಗಿದ್ದನು. ಇದು ಕೂಡಾ ತುಂಬಾ ಪ್ರಾಮುಖ್ಯವಾದ ಪಟ್ಟಣ, ಇದಕ್ಕೆ ಈ ವ್ಯಕ್ತಿಯ ಹೆಸರನ್ನೇ ಇಟ್ಟಿರಬಹುದು.
- ಕೇದಾರ್ ಪಟ್ಟಣವು ಪಾಲಸ್ತೀನ ದಕ್ಷಿಣ ಗಡಿಯ ಹತ್ತಿರ ಅರಬಿಯ ಉತ್ತರ ಭಾಗದಲ್ಲಿ ಕಂಡುಬರುತ್ತದೆ. ಸತ್ಯವೇದದಲ್ಲಿ ಇದರ ಮಹತ್ವವನ್ನು ಮತ್ತು ಸೌಂದರ್ಯದ ಕುರಿತಾಗಿ ವಿವರಿಸಲಾಗಿದೆ.
- ಕೇದಾರ್ ಸಂತಾನದವರು ದೊಡ್ಡ ಜನ ಸಮೂಹವಾಗಿ ವಿಸ್ತರಣೆ ಹೊಂದಿದರು, ಇವರನ್ನೂ “ಕೇದಾರ್” ಎಂದು ಕರೆಯುತ್ತಾರೆ.
- “ಕೇದಾರ್ ಕಪ್ಪು ಗುಡಾರಗಳು” ಎನ್ನುವ ಮಾತು ಕೇದಾರ್.ನಲ್ಲಿ ಜೀವಿಸಿದ ಜನರ ಕಪ್ಪು ಮೇಕೆ ಕೂದಲು ಗುಡಾರಅಗಳನ್ನು ಸೂಚಿಸುತ್ತದೆ.
- ಈ ಜನರೆಲ್ಲರು ಕುರಿಗಳನ್ನು ಮತ್ತು ಮೇಕೆಗಳನ್ನು ಸಾಕುತ್ತಾರೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಕ್ಕಾಗಿ ಇವರು ಒಂಟೆಗಳನ್ನು ಉಪಯೋಗಿಸುತ್ತಿದ್ದರು.
- ಸತ್ಯವೇದದಲ್ಲಿ “ಕೇದಾರ್ ಮಹಿಮೆ” ಎನ್ನುವ ಮಾತು ಆ ಪಟ್ಟಣದ ಮಹತ್ವವು ಮತ್ತು ಅದರ ಜನರ ಘನತೆಯನ್ನು ಸೂಚಿಸುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅರಬಿಯ, ಮೇಕೆ, ಇಷ್ಮಾಯೇಲ್, ತ್ಯಾಗ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6938
ಕೈಸರ
ಸತ್ಯಾಂಶಗಳು:
“ಕೈಸರ” ಎನ್ನುವ ಪದವು ರೋಮಾ ಸಾಮ್ರಾಜ್ಯವನ್ನು ಆಳುವ ಆಡಳಿತಗಾರರಿಗೆ ಉಪಯೋಗಿಸುವ ಹೆಸರು ಅಥವಾ ಬಿರುದು ಆಗಿರುತ್ತದೆ. ಸತ್ಯವೇದದಲ್ಲಿ ಈ ಹೆಸರು ಮೂವರು ರೋಮಾ ಪಾಲಕರಿಗೆ ಸೂಚಿಸುತ್ತದೆ.
- ಮೊಟ್ಟಮೊದಲು ರೋಮಾ ಪಾಲಕರಾಗಿರುವ ಕೈಸರ ಯಾರೆಂದರೆ “ಕೈಸರ ಅಗಸ್ತ”, ಈ ಚಕ್ರವರ್ತಿ ಯೇಸು ಹುಟ್ಟಿದ ದಿನಗಳಲ್ಲಿ ಆಳುತ್ತಿದ್ದನು.
- ಸುಮಾರು ಮೂವತ್ತು ವರ್ಷಗಳಾದನಂತರ, ದೀಕ್ಷಾಸ್ನಾನ ಮಾಡಿಸುವ ಯೋಹಾನನು ಪ್ರಸಂಗ ಮಾಡುತ್ತಿರುವ ದಿನಗಳಲ್ಲಿ, ರೋಮಾ ಸಾಮ್ರಾಜ್ಯಕ್ಕೆ ಕೈಸರ ತಿಬೇರಿ ಆಳ್ವಿಕೆ ಮಾಡುತ್ತಿದ್ದನು.
- ಕೈಸರನದು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ ಎಂದು ಯೇಸು ಜನರಿಗೆ ಹೇಳಿದಾಗ ಕೈಸರ ತಿಬೇರಿ ರೋಮಾ ಸಾಮ್ರಾಜ್ಯವನ್ನು ಅಳುತ್ತಿದ್ದರು.
- ಪೌಲನು ಕೈಸರನ ಮುಂದೆ ನಿಂತುಕೊಂಡ ಸಂದರ್ಭವೂ ಕೂಡ “ಕೈಸರ” ಎಂದು ಬಿರುದನ್ನು ಹೊಂದಿರುವ ರೋಮಾ ಚಕ್ರವರ್ತಿಯಾದ ನೀರೋನನ್ನು ಸೂಚಿಸುತ್ತದೆ.
- “ಕೈಸರ” ಎನ್ನುವ ಪದವನ್ನು ಬಿರುದಾಗಿ ಉಪಯೋಗಿಸುವಾಗ, ಇದನ್ನು “ಚಕ್ರವರ್ತಿ” ಅಥವಾ “ರೋಮಾ ಪಾಲಕರು” ಎಂದೂ ಅನುವಾದ ಮಾಡಬಹುದು.
- ಕೈಸರ ಅಗಸ್ತ ಅಥವಾ ಕೈಸರ ತಿಬೇರಿ ಎನ್ನುವ ಹೆಸರುಗಳಲ್ಲಿ, “ಕೈಸರ” ಎನ್ನುವ ಪದವನ್ನು ಜಾತೀಯ ಭಾಷೆಯಲ್ಲಿ ಉಚ್ಚರಿಸುವ ವಿಧಾನದಲ್ಲೇ ಉಚ್ಚರಣೆ ಮಾಡಬಹುದು.
(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅರಸ, ಪೌಲ, ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2541
ಕೈಸರೈಯ, ಫಿಲಿಪ್ಪನ ಕೈಸರೈಯ
ಸತ್ಯಾಂಶಗಳು:
ಕೈಸರೈಯ ಮೆಡಿಟರನಿಯನ್ ಸಮುದ್ರದ ಕರಾವಳಿ ಪ್ರಾಂತ್ಯದಲ್ಲಿರುವ ಒಂದು ಪ್ರಾಮುಖ್ಯವಾದ ನಗರ, ಇದು ಕರ್ಮೆಲ್ ಪರ್ವತದ ದಕ್ಷಿಣ ದಿಕ್ಕಿಗೆ 39 ಕಿ.ಮೀ. ದೂರದಲ್ಲಿರುತ್ತದೆ. ಫಿಲಿಪ್ಪನ ಕೈಸರೈಯ ಎನ್ನುವ ಈ ನಗರವು ಹೆರ್ಮೋನ್ ಪರ್ವತದ ಬಳಿ, ಇಸ್ರಾಯೇಲ್ ಈಶಾನ್ಯ ಭಾಗದಲ್ಲಿ ಕಂಡುಬರುತ್ತದೆ.
- ಈ ಪಟ್ಟಣಗಳು ರೋಮಾ ಸಾಮ್ರಾಜ್ಯವನ್ನು ಆಳಿದ ಕೈಸರರ ನಿಮಿತ್ತವಾಗಿ ಹೆಸರಿಟ್ಟಂಥ ಪಟ್ಟಣಗಳಾಗಿರುತ್ತವೆ.
- ಕರಾವಳಿ ಕೈಸರೈಯ ಪಟ್ಟಣವು ಯೇಸು ಹುಟ್ಟಿದ ಕಾಲದಲ್ಲಿ ಯೂದಾಯ ರೋಮಾ ಸೀಮೆಗೆ ರಾಜಧಾನಿ ನಗರವಾಗಿತ್ತು.
- ಅಪೊಸ್ತಲನಾದ ಪೇತ್ರನು ಮೊಟ್ಟಮೊದಲು ಕೈಸರೈಯದಲ್ಲಿ ಅನ್ಯಜನರಿಗೆ ಸುವಾರ್ತೆಯನ್ನು ಸಾರಿದನು.
- ಪೌಲನು ಕೈಸರೈಯಿಂದ ತಾರ್ಸಗೆ ಪ್ರಯಾಣಿಸಿದನು ಮತ್ತು ತನ್ನ ಎರರು ಮಿಷನರೀ ಪ್ರಯಾಣಗಳಲ್ಲಿ ಈ ಪಟ್ಟಣದ ಮೂಲಕ ಹಾದು ಹೋದನು.
- ಸಿರಿಯಾದಲ್ಲಿರುವ ಫಿಲಿಪ್ಪನ ಕೈಸರೈಯ ಸುತ್ತಮುತ್ತಲಿರುವ ಸೀಮೆಯಲ್ಲಿ ಯೇಸು ಮತ್ತು ತನ್ನ ಶಿಷ್ಯರು ಪ್ರಯಾಣ ಮಾಡಿದ್ದರು. ಎರಡು ಪಟ್ಟಣಗಳಿಗೆ ಹೆರೋದ ಫಿಲಿಪ್ಪನ ನಿಮಿತ್ತವಾಗಿ ಈ ಹೆಸರಿಡಲಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಕೈಸರ, ಅನ್ಯಜನ, ಸಮುದ್ರ, ಕರ್ಮೆಲ್, ಹೆರ್ಮೋನ್ ಪರ್ವತ, ರೋಮಾ, ತಾರ್ಸ)
ಸತ್ಯವೇದದ ಅನುಬಂಧ ವಾಕ್ಯಗಳು:
- ಅಪೊ.ಕೃತ್ಯ. 09:28-30
- ಅಪೊ.ಕೃತ್ಯ. 10:1-2
- ಅಪೊ.ಕೃತ್ಯ. 25:1-3
- ಅಪೊ.ಕೃತ್ಯ. 25:13-16
- ಮಾರ್ಕ. 08:27-28
- ಮತ್ತಾಯ.1 6:13-16
ಪದದ ದತ್ತಾಂಶ:
- Strong's: G2542, G5376
ಕೊರಿಂಥ, ಕೊರಿಂಥದವರು
ಸತ್ಯಾಂಶಗಳು:
ಕೊರಿಂಥ ಎನ್ನುವುದು ಗ್ರೀಸ್ ದೇಶದಲ್ಲಿ ಒಂದು ಪಟ್ಟಣವಾಗಿರುತ್ತದೆ, ಇದು ಪಶ್ಚಿಮ ಅಥೆನ್ಸ್.ಗೆ 50 ಮೈಲಿಗಳ ದೂರದಲ್ಲಿರುತ್ತದೆ. ಕೊರಿಂಥದವರು ಕೊರಿಂಥ ಪಟ್ಟಣದಲ್ಲಿ ನಿವಾಸ ಮಾಡುವ ಜನರಾಗಿರುತ್ತಾರೆ.
- ಆದಿ ಕ್ರೈಸ್ತ ಸಭೆಗಳಿರುವ ಪಟ್ಟಣಗಳಲ್ಲಿ ಕೊರಿಂಥ ಕೂಡ ಒಂದು ಪಟ್ಟಣವಾಗಿರುತ್ತದೆ.
- ಹೊಸ ಒಡಂಬಡಿಕೆ ಪುಸ್ತಕಗಳಾದ 1 ಕೊರಿಂಥ ಮತ್ತು 2 ಕೊರಿಂಥ ಪೌಲ ಮೂಲಕ ಕೊರಿಂಥದಲ್ಲಿ ನಿವಾಸ ಮಾಡುತ್ತಿರುವ ಕ್ರೈಸ್ತರಿಗೆ ಬರೆಯಲ್ಪಟ್ಟಿವೆ.
- ಆತನ ಮೊದಲನೇ ಸುವಾರ್ತೆ ದಂಡಯಾತ್ರೆಯಲ್ಲಿ ಪೌಲನು ಕೊರಿಂಥ ನಗರದಲ್ಲಿ ಸುಮಾರು 18 ತಿಂಗಳು ಕಾಲ ಜೀವಿಸಿದ್ದನು.
- ಪೌಲನು ಕೊರಿಂಥದಲ್ಲಿ ವಿಶ್ವಾಸಿಗಳಾದ ಅಕ್ವಿಲ ಮತ್ತು ಪ್ರಿಸ್ಕಿಲ್ಲರವರನ್ನು ಭೇಟಿಯಾಗಿದ್ದನು.
- ಇತರ ಆದಿ ಸಭೆಯ ನಾಯಕರಿಗೆ ಕೊರಿಂಥದೊಂದಿಗೆ ಸಂಬಂಧಗಳಿದ್ದವು, ಅವರಲ್ಲಿ ತಿಮೊಥೆ, ತೀತ, ಅಪೊಲ್ಲೋಸ ಮತ್ತು ಸೀಲ ಎನ್ನುವವರು ಇದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಲ್ಲೋಸ, ತಿಮೊಥೆ, ತೀತ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2881, G2882
ಕೊರ್ನೇಲ್ಯ
ಸತ್ಯಾಂಶಗಳು:
ಕೊರ್ನೇಲ್ಯನು ಅನ್ಯನಾಗಿರುತ್ತಾನೆ, ಅಥವಾ ಯೆಹೂದ್ಯನಾಗಿರುವುದಿಲ್ಲ, ಈತನು ರೋಮಾ ಸೈನ್ಯದಲ್ಲಿ ಸೈನ್ಯಾಧಿಕಾರಿಯಾಗಿದ್ದನು.
- ಈತನು ಪ್ರತಿದಿನ ದೇವರಿಗೆ ಪ್ರಾರ್ಥಿಸುವವನಾಗಿದ್ದನು ಮತ್ತು ಬಡವರಿಗೆ ಕೊಡುವುದರಲ್ಲಿ ಉದಾರ ಸ್ವಭಾವಿಯಾಗಿದ್ದನು.
- ಅಪೊಸ್ತಲನಾದ ಪೇತ್ರನು ಸುವಾರ್ತೆಯನ್ನು ವಿವರಿಸಿ ಹೇಳಿದಾಗ ಕೊರ್ನೇಲ್ಯನು ಮತ್ತು ತನ್ನ ಕುಟುಂಬದವರು ಕೇಳಿಸಿಕೊಂಡು ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು.
- ಕೊರ್ನೇಲ್ಯನ ಮನೆಯಲ್ಲಿರುವ ಜನರು ಅಥವಾ ಯೆಹೂದ್ಯರಲ್ಲದ ಜನರು ಮೊಟ್ಟಮೊದಲಾಗಿ ವಿಶ್ವಾಸಿಗಳಾದರು.
- ಯೇಸು ಎಲ್ಲಾ ಜನರನ್ನು ಅಂದರೆ ಅನ್ಯರೆಲ್ಲರನ್ನು ಸೇರಿಸಿ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕೆ ಬಂದಿದ್ದಾನೆಂದು ಯೇಸುವಿನ ಹಿಂಬಾಲಕರು ಇದರ ಮೂಲಕ ತೋರಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ನಂಬು, ಅನ್ಯರು, ಸುವಾರ್ತೆ, ಗ್ರೀಕ್, ಶತಾಧಿಪತಿ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.10:1-2
- ಅಪೊ.ಕೃತ್ಯ.10:7-8
- ಅಪೊ.ಕೃತ್ಯ.10:17-18
- ಅಪೊ.ಕೃತ್ಯ.10:22-23
- ಅಪೊ.ಕೃತ್ಯ.10:24
- ಅಪೊ.ಕೃತ್ಯ.10:25-26
- ಅಪೊ.ಕೃತ್ಯ.10:30-33
ಪದ ಡೇಟಾ:
- Strong's: G2883
ಕೊಲೊಸ್ಸೆ, ಕೊಲೊಸ್ಸೆಯದವರು
ಸತ್ಯಾಂಶಗಳು:
ಕೊಲೊಸ್ಸೆ ಎನ್ನುವುದು ಹೊಸ ಒಡಂಬಡಿಕೆಯ ಕಾಲದಲ್ಲಿ ರೋಮಾ ಸೀಮೆಯಾದ ಫ್ರುಗ್ಯದಲ್ಲಿ ಒಂದು ಪಟ್ಟಣವಾಗಿರುತ್ತದೆ. ಈಗ ನೈಋತ್ಯ ಟರ್ಕಿಯಲ್ಲಿರುವ ಭೂಪ್ರದೇಶ. ಕೊಲೊಸ್ಸೆಯರು ಎಂದರೆ ಕೊಲೊಸ್ಸೆಯಲ್ಲಿ ನಿವಾಸ ಮಾಡುವ ಜನರು.
- ಮೆಡಿಟರೇನಿಯನ್ ಸಮುದ್ರದಿಂದ ಸುಮಾರು 100 ಮೈಲಿಗಳ ದೂರದಲ್ಲಿರುತ್ತದೆ, ಕೊಲೊಸ್ಸೆಯು ಎಫೆಸ ಪಟ್ಟಣದ ಮತ್ತು ಯೂಫ್ರೇಟೀಸ್ ನದಿಯ ಮಧ್ಯ ಮಾರ್ಗದಲ್ಲಿ ತುಂಬಾ ಪ್ರಾಮುಖ್ಯವಾದ ವಾಣಿಜ್ಯ ಕೇಂದ್ರವಾಗಿದ್ದಿತ್ತು.
- ಪೌಲನು ರೋಮಾ ಸೆರೆಮನೆಯಲ್ಲಿರುವಾಗ ಆತನು ಕೊಲೊಸ್ಸೆ ವಿಶ್ವಾಸಿಗಳ ಮಧ್ಯೆದಲ್ಲಿ ತಪ್ಪು ಬೋಧನೆಗಳನ್ನು ಖಂಡಿಸಿ ಅವರನ್ನು ಸರಿಪಡಿಸಲು “ಕೊಲೊಸ್ಸೆಯರಿಗೆ” ಒಂದು ಪತ್ರಿಕೆಯನ್ನು ಬರೆದನು.
- ಆತನು ಈ ಪತ್ರವನ್ನು ಬರೆದಾಗ ಪೌಲನು ಕೊಲೊಸ್ಸೆಯಲ್ಲಿರುವ ಸಭೆಯನ್ನು ಸಂದರ್ಶನ ಮಾಡಿರಲಿಲ್ಲ, ಆದರೆ ತನ್ನ ಜೊತೆ ಕೆಲಸಗಾರನಾದ ಎಪಫ್ರನಿಂದ ವಿಶ್ವಾಸಿಗಳ ಕುರಿತಾಗಿ ಸುದ್ಧಿಯನ್ನು ಕೇಳಿಸಿಕೊಂಡಿದ್ದನು.
- ಎಪಫ್ರನು ಬಹುಶಃ ಕೊಲೊಸ್ಸೆಯಲ್ಲಿ ಸಭೆಯನ್ನು ಆರಂಭಿಸಿದ ಸೇವಕನಾಗಿರಬಹುದು.
- ಪೌಲನು ಫಿಲೆಮೋನನಿಗೆ ಬರೆದ ಪುಸ್ತಕವನ್ನು ಅಥವಾ ಪತ್ರಿಕೆಯನ್ನು ಬರೆದಾಗ ಕೊಲೊಸ್ಸೆಯಲ್ಲಿರುವ ಸೆರೆಯಾಳು ಎಂದು ಸೂಚಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವ ರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎಫೆಸ, ಪೌಲ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: G28570
ಕೋರಹ, ಕೋರಹಿಯರು
ಪದದ ಅರ್ಥವಿವರಣೆ:
ಕೋರಹ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಮೂವರು ವ್ಯಕ್ತಿಗಳಿದ್ದಾರೆ.
- ಕೋರಹನು ಲೇವಿಯವಂಶಸ್ಥನಾಗಿದ್ದನು ಮತ್ತು ಆದ್ದರಿಂದ ಯಾಜಕನಾಗಿ ಗುಡಾರದಲ್ಲಿ ಸೇವೆಯನ್ನು ಮಾಡಿದನು. ಇವನು ಮೋಶೆ ಮತ್ತು ಆರೋನರ ವಿಷಯದಲ್ಲಿ ಅಸೂಯೆಪಟ್ಟಿದ್ದನು, ಇದರಿಂದ ಅವನು ಅವರಿಗೆ ವಿರುದ್ಧವಾಗಿ ಮನುಷ್ಯರ ಗುಂಪನ್ನು ನಡೆಸಿದ್ದನು.
- ಏಸಾವನ ಮಕ್ಕಳಲ್ಲಿ ಒಬ್ಬರ ಹೆಸರು ಕೋರಹ ಎಂಬುದಾಗಿರುತ್ತದೆ. ಇವನು ತನ್ನ ಸಮುದಾಯಕ್ಕೆ ನಾಯಕನಾದನು.
- ಮೂರನೇ ವ್ಯಕ್ತಿಯಾದ ಕೋರಹನು ಯೂದಾ ಸಂತಾನದವನಾಗಿ ಹೇಳಲ್ಪಟ್ಟಿದ್ದನು.
(ಈ ಪದಗಳನ್ನು ಸಹ ನೋಡಿರಿ : ಆರೋನ, ಅಧಿಕಾರ, ಕಾಲೇಬ, ವಂಶಸ್ಥನು, ಏಸಾವ, ಯೆಹೂದ, ಯಾಜಕ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H7141
ಕೋರೆಷನ್
ಸತ್ಯಾಂಶಗಳು:
ಸುಮಾರು ಕ್ರಿ.ಪು. 550ರಲ್ಲಿ ಪರ್ಷಿಯಾ ಅರಸನಾದ ಕೋರೆಷನ್ ಪರ್ಷಿಯಾ ಸಾಮ್ರಾಜ್ಯವನ್ನು ಯುದ್ದದಲ್ಲಿ ವಿಜಯವನ್ನು ಸಾಧಿಸಿ ಸ್ಥಾಪಿಸಿದರು. ಇತಿಹಾಸದಲ್ಲಿ ಮಹಾ ಕೋರೆಷನ್ ಎಂದು ಅವನು ಕರೆಯಲ್ಪಟ್ಟಿದ್ದಾನೆ.
- ಬಾಬುಲೋನ್ ಪಟ್ಟಣವನ್ನು ಅರಸನಾದ ಕೋರೆಷನ್ ಸ್ವಾಧೀನಪಡಿಸಿಕೊಂಡನು, ಆದಕಾರಣ ಅಲ್ಲಿ ಸೆರೆಯಲ್ಲಿದ್ದ ಇಸ್ರಾಯೇಲ್ ಜನರಿಗೆ ಬಿಡುಗಡೆ ಸಿಕ್ಕಿತು.
- ಅವನು ಸ್ವಾಧೀನಪಡಿಸಿಕೊಂಡ ಪ್ರಾಂತ್ಯದ ಪ್ರಜೆಗಳ ವಿಷಯದಲ್ಲಿ ತಾಳ್ಮೆಯುಳ್ಳವನಾಗಿದ್ದನೆಂದು ಕೋರೆಷನ್ ಬಗ್ಗೆ ತಿಳಿದಿರುತ್ತದೆ. ಯಹೂದಿಯರ ಮೇಲೆ ಆವನು ಕರುಣೆಯನ್ನು ತೋರಿಸಿದ ಕಾರಣವಾಗಿ ಸೆರೆಯಿಂದ ಹಿಂತಿರುಗಿದ ನಂತರ ಯೆರುಸಲೇಮಿನ ದೇವಾಲಯವು ತಿರುಗಿ ಕಟ್ಟಲ್ಪಟ್ಟಿತು.
- ದಾನಿಯೇಲನು, ಎಜ್ರ, ನೆಹೆಮೀಯ ಜೀವಿಸಿದ ಕಾಲದಲ್ಲಿ ಕೋರೆಷನ್ ಆಳ್ವಿಕೆ ಮಾಡುತ್ತಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ದಾನಿಯೇಲನು, ದಾರ್ಯಾವೇಷ, ಎಜ್ರ, ನೆಹೆಮೀಯ, ಪರ್ಷಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3566
ಕ್ರೇತ, ಕ್ರೇತ್ಯರು
ಸತ್ಯಾಂಶಗಳು:
ಕ್ರೇತ ಎನ್ನುವುದು ಗ್ರೀಸ್ ದೇಶದ ದಕ್ಷಿಣ ಕರಾವಳಿಯಲ್ಲಿ ಇರುವ ದ್ವೀಪದ ಹೆಸರಾಗಿದೆ. ಈ ದ್ವೀಪದಲ್ಲಿ ವಾಸ ಮಾಡುವ ವ್ಯಕ್ತಿಯನ್ನು ಕ್ರೆತ್ಯನು ಎನ್ನುತ್ತಾರೆ.
- ಅಪೊಸ್ತಲನಾದ ಪೌಲನು ತನ್ನ ಸುವಾರ್ತಾ ಪ್ರಾಯಣದ ಭಾಗವಾಗಿ ಕ್ರೇತ ದ್ವಿಪಕ್ಕೆ ಹೋಗಿದ್ದನು.
- ಕ್ರೇತ ಕ್ರೈಸ್ತರಿಗೆ ಬೋಧಿಸಲು ಮತ್ತು ಅಲ್ಲಿದ್ದ ಸಭೆಗೆ ನಾಯಕರನ್ನು ನೇಮಿಸುವದಕ್ಕೆ ಪೌಲನು ತನ್ನ ಸಹ ಕೆಲಸಗಾರನಾದ ತೀತನನ್ನು ಅಲ್ಲಿ ಬಿಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2912, G2914
ಖರಾನ್
ಸತ್ಯಾಂಶಗಳು:
ಖರಾನ್ ಎನ್ನುವ ವ್ಯಕ್ತಿ ಅಬ್ರಾಮನ ಚಿಕ್ಕ ತಮ್ಮನಾಗಿದ್ದನು ಮತ್ತು ಲೋಟನ ತಂದೆಯಾಗಿದ್ದನು.
- ಅಬ್ರಾಮ ಮತ್ತು ತನ್ನ ಕುಟುಂಬವು ಕಾನಾನ್ ಭೂಮಿಗೆ ಊರ್ ಎನ್ನುವ ಪಟ್ಟಣದಿಂದ ಪ್ರಯಾಣ ಮಾಡುವಾಗ ನಿವಾಸ ಮಾಡಿದ ಪಟ್ಟಣದ ಹೆಸರಾಗಿರುವ ಖರಾನ್.ನಲ್ಲಿ ಇಳಿದುಕೊಂಡಿದ್ದರು.
- ಖರಾನ್ ಎನ್ನುವ ಹೆಸರಿನ ಮೇಲೆ ಇರುವ ಇನ್ನೊಬ್ಬ ವ್ಯಕ್ತಿ ಕಾಲೇಬನ ಮಗನಾಗಿದ್ದನು.
- ಖರಾನ್ ಎನ್ನುವ ಹೆಸರಿನ ಮೇಲೆ ಸತ್ಯವೇದದಲ್ಲಿರುವ ಮೂರನೇಯ ವ್ಯಕ್ತಿ ಲೇವಿಯ ಸಂತಾನದವನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಕಾಲೇಬ, ಕಾನಾನ್, ಲೇವಿ, ಲೋಟ, ತೆರಹ, ಊರ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2039
ಗತೂರು, ಗತ್ ಊರಿನವನು, ಗತ್ ಊರಿನವರು
ಸತ್ಯಾಂಶಗಳು:
ಫಿಲಿಷ್ಟಿಯ ಮಹಾ ಪಟ್ಟಣಗಳಲ್ಲಿ ಗತೂರು ಒಂದಾಗಿತ್ತು. ಈ ಪಟ್ಟಣ ಎಕ್ರೋನ್ ಉತ್ತರ ದಿಕ್ಕಿನಲ್ಲಿ ಮತ್ತು ಅಷ್ಡೋದ್ ಹಾಗೂ ಅಷ್ಕೆಲೋನ್ ಪೂರ್ವದಿಕ್ಕಿನಲ್ಲಿತ್ತು.
- ಫಿಲಿಷ್ಟಿಯರ ರಣಶೂರನಾಗಿದ್ದ ಗೊಲ್ಯಾತನು ಗತೂರಿನವನಾಗಿದ್ದನು.
- ಸಮುವೇಲನ ಕಾಲದಲ್ಲಿ, ಫಿಲಿಷ್ಟಿಯರು ಇಸ್ರಾಯೇಲ್ಯರಿಂದ ಯೆಹೋವನ ನಿಬಂಧನೆ ಮಂಜೂಷವನ್ನು ಸ್ವಾಧೀನಪಡಿಸಿಕೊಂಡು ಅಷ್ಡೋದ್ ಎನ್ನುವ ಅನ್ಯ ದೇವತೆಯ ದೇವಾಲಯಕ್ಕೆ ತೆಗೆದುಕೊಂಡುಹೋದರು. ಆ ನಂತರ ಅದನ್ನು ಗತೂರಿಗೆ ಮತ್ತು ಎಕ್ರೋನ್ ಪಟ್ಟಣಗಳಿಗೆ ಸ್ಥಳಾಂತರಿಸಿದರು. ಆದರೆ ಆ ಪಟ್ಟಣದಲ್ಲಿದ್ದ ಜನರನ್ನು ಯೆಹೋವನು ರೋಗ ಮತ್ತು ಮರಣದ ಮೂಲಕ ಶಿಕ್ಷಿಸಿದನು, ಆದಕಾರಣ ಅದನ್ನು ಮತ್ತೆ ಇಸ್ರಾಯೇಲಿಗೆ ಕಳುಹಿಸಿದರು.
- ಅರಸನಾದ ಸೌಲನಿಂದ ದಾವೀದನು ತಪ್ಪಿಸಿಕೊಂಡು ಹೋದಾಗ ಅವನು ಗತೂರುಗೆ ಹೋಗಿ ಅಲ್ಲಿ ಅವನ ಇಬ್ಬರು ಹೆಂಡತಿಯರು ಮತ್ತು ಅವನಿಗೆ ನಂಬಿಗಸ್ತರಾಗಿದ್ದ ಆರು ನೂರು ಅನುಚರರೊಂದಿಗೆ ಅಲ್ಲಿ ವಾಸಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಷ್ಡೋದ್, ಅಷ್ಕೆಲೋನ್, ಎಕ್ರೋನ್, ಗಾಜಾ, ಗೊಲ್ಯಾತ, ಫಿಲಿಷ್ಟಿಯರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1661, H1663
ಗಬ್ರಿಯೇಲ
ಸತ್ಯಾಂಶಗಳು:
ಗಬ್ರಿಯೇಲ ಎನ್ನುವುದು ದೇವರ ದೂತರಗಳಲ್ಲಿ ಒಂದು ದೂತನ ಹೆಸರಾಗಿರುತ್ತದೆ. ಈ ದೂತನ ಹೆಸರು ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಅನೇಕಸಲ ದಾಖಲಿಸಿರುತ್ತದೆ.
- ಪ್ರವಾದಿಯಾದ ದಾನಿಯೇಲನು ಕಂಡ ದರ್ಶನದ ಅರ್ಥವನ್ನು ದಾನಿಯೇಲನಿಗೆ ಹೇಳುವುದಕ್ಕೆ ದೇವರು ಗಬ್ರಿಯೇಲನನ್ನು ಕಳುಹಿಸಿದನು.
- ಇನ್ನೊಂದು ಸಮಯದಲ್ಲಿ ದಾನಿಯೇಲನು ಪ್ರಾರ್ಥನೆ ಮಾಡುತ್ತಿರುವಾಗ, ದೂತನಾದ ಗಬ್ರಿಯೇಲನು ಅವನ ಬಳಿಗೆ ಹಾರಿಹೋಗಿ, ಭವಿಷ್ಯತ್ತಿನಲ್ಲಿ ಸಂಭವಿಸುವುದರ ಕುರಿತಾಗಿ ಪ್ರವಾದಿಸಿದನು. ದಾನಿಯೇಲನು ಆ ದೂತನನ್ನು “ಮನುಷ್ಯ” ಎಂಬುದಾಗಿ ಕರೆದನು.
- ಹೊಸ ಒಡಂಬಡಿಕೆಯಲ್ಲಿ ಗಬ್ರಿಯೇಲನು ಜೆಕರ್ಯನ ಬಳಿಗೆ ಬಂದು, ಯೋಹಾನ ಎಂಬುವ ಒಬ್ಬ ಗಂಡು ಮಗನನ್ನು ನಿನ್ನ ವೃದ್ಧ ಹೆಂಡತಿಯಾದ ಎಲಿಸಬೇತಳು ಹಡೆಯುವಳು ಎಂದು ಪ್ರವಾದಿಸಿರುವ ದಾಖಲಾತಿ ಇದೆ.
- ಆರು ತಿಂಗಳುಗಳಾದ ಮೇಲೆ, “ದೇವರು ಅದ್ಭುತಕರವಾಗಿ “ದೇವರ ಮಗ” ಎನ್ನುವ ಒಬ್ಬ ಕೂಸಿಗೆ ಗರ್ಭ ಧರಿಸುವುದಕ್ಕೆ ಆಕೆಯನ್ನು ಬಲಪಡಿಸಿದನು” ಎಂದು ಮರಿಯಳಿಗೆ ಹೇಳುವುದಕ್ಕೆ ಗಬ್ರಿಯೇಲನು ಆಕೆಯ ಬಳಿಗೆ ಕಳುಹಿಸಲ್ಪಟ್ಟನು, ಆ ಮಗನಿಗೆ “ಯೇಸು” ಎಂದು ಹೆಸರಿಡಬೇಕೆಂದು ದೇವರು ಮರಿಯಳಿಗೆ ಹೇಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದೂತ, ದಾನಿಯೇಲ, ಎಲಿಸಬೇತ್, ಸ್ನಾನಿಕನಾದ ಯೋಹಾನ, ಮರಿಯ, ಪ್ರವಾದಿ, ದೇವರ ಮಗ, ಜೆಕರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1403, G1043
ಗಲಾತ್ಯ, ಗಲಾತ್ಯದವರು
ಸತ್ಯಾಂಶಗಳು:
ಹೊಸ ಒಡಂಬಡಿಕೆಯ ಕಾಲಗಳಲ್ಲಿ ಗಲಾತ್ಯ ಎನ್ನುವುದು ರೋಮಾದ ದೊಡ್ಡ ಪ್ರಾಂತ್ಯವಾಗಿತ್ತು, ಇದೀಗ ಈಗಿನ ಟರ್ಕಿ ದೇಶದಲ್ಲಿನ ಮಧ್ಯ ಭಾಗದಲ್ಲಿ ಕಂಡುಬರುತ್ತದೆ.
- ಗಲಾತ್ಯದಲ್ಲಿನ ಸ್ವಲ್ಪ ಭಾಗದ ಗಡಿ ಕಪ್ಪು ಸಮುದ್ರದ ಉತ್ತರ ದಿಕ್ಕಿಗೆ ಸೇರಿರುತ್ತದೆ. ಇದರ ಗಡಿಗಳು ಆಸ್ಯ, ಬಿಥೂನ್ಯ, ಕಪ್ಪದೊಕ್ಯ, ಕಿಲಿಕ್ಯ, ಮತ್ತು ಪಂಫುಲ್ಯ ಸೀಮೆಗಳವರೆಗೂ ಹರಡಿದ್ದವು.
- ಗಲಾತ್ಯ ಸೀಮೆಯಲ್ಲಿ ನಿವಾಸ ಮಾಡುತ್ತಿರುವ ಕ್ರೈಸ್ತರಿಗೆ ಅಪೊಸ್ತಲನಾದ ಪೌಲನು ಪತ್ರವನ್ನು ಬರೆದನು. ಈ ಪತ್ರಿಕೆ ಹೊಸ ಒಡಂಬಡಿಕೆಯಲ್ಲಿರುತ್ತದೆ, ಇದನ್ನು “ಗಲಾತ್ಯದವರಿಗೆ ಬರೆದ ಪತ್ರಿಕೆ” ಎಂದು ಕರೆಯುತ್ತಾರೆ.
- ಪೌಲನು ಗಲಾತ್ಯದವರಿಗೆ ಪತ್ರಿಕೆಯನ್ನು ಬರೆಯುವುದಕ್ಕೆ ಒಂದೇ ಒಂದು ಕಾರಣವೇನೆಂದರೆ ಕೃಪೆಯ ಮೂಲಕವೇ ರಕ್ಷಣೆ ಸುವಾರ್ತೆಯು ಹೊರತು, ಕ್ರಿಯೆಗಳಿಂದಲ್ಲ ಎಂದು ಒತ್ತಿ ಹೇಳುವುದಕ್ಕೆ ಬರೆದಿದ್ದನು.
- ಯೇಸುವನ್ನು ನಂಬಿದ ವಿಶ್ವಾಸಿಗಳು ಯೆಹೂದ್ಯರ ಆಚಾರಗಳನ್ನು ಅನುಸರಿಸಬೇಕಾದ ಅವಶ್ಯಕತೆಯಿದೆಯೆಂದು ಗಲಾತ್ಯದಲ್ಲಿರುವ ಕ್ರೈಸ್ತರಿಗೆ ಯೆಹೂದ್ಯ ಕ್ರೈಸ್ತರು ತಪ್ಪಾಗಿ ಬೋಧನೆ ಮಾಡುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಸ್ಯ, ನಂಬು, ಕಿಲಿಕ್ಯ, ಸುವಾರ್ತೆ, ಪೌಲ, ಕ್ರಿಯೆಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G1053, G1054
ಗಲಿಲಾಯ ಸಮುದ್ರ, ಕಿನ್ನೆರೆತ್ ಸಮುದ್ರ, ಗೆನೆಜರೇತ್ ಕೆರೆ, ತಿಬೇರಿಯ ಸಮುದ್ರ
ಸತ್ಯಾಂಶಗಳು:
“ಗಲಿಲಾಯ ಸಮುದ್ರ” ಎನ್ನುವುದು ಪೂರ್ವ ಇಸ್ರಾಯೇಲಿನಲ್ಲಿ ಕೆರೆಯಾಗಿದ್ದಿತ್ತು. ಹಳೇ ಒಡಂಬಡಿಕೆಯಲ್ಲಿ ಇದನ್ನು “ಕಿನ್ನೆರೆತ್ ಸಮುದ್ರ” ಎಂಬುದಾಗಿಯೂ ಕರೆಯಲ್ಪಟ್ಟಿತ್ತು.
- ಈ ಕೆರೆಯ ನೀರು ದಕ್ಷಿಣದ ಕಡೆಗೆ ಹರಿಯುತ್ತಾ ಯೊರ್ದನ್ ಹೊಳೆಯಿಂದ ಲವಣ ಸಮುದ್ರದೊಳಗೆ ಸೇರುತ್ತವೆ.
- ಹೊಸ ಒಡಂಬಡಿಕೆಯ ಕಾಲಗಳಲ್ಲಿ ಗಲಿಲಾಯ ಸಮುದ್ರದ ಪಕ್ಕದಲ್ಲಿರುವ ಕೆಲವೊಂದು ಪಟ್ಟಣಗಳಲ್ಲಿ ಕಪೆರ್ನೌಮ, ಬೇತ್ಸಾಯಿದ, ಗೆನೆಜರೇತ್ ಮತ್ತು ತಿಬೇರಿಯ ಪಟ್ಟಣಗಳಿದ್ದವು.
- ಯೇಸುವಿನ ಜೀವನದಲ್ಲಿನ ಅನೇಕ ಸಂದರ್ಭಗಳು ಗಲಿಲಾಯ ಸಮುದ್ರದ ಪಕ್ಕದಲ್ಲಿ ನಡೆದಿರುತ್ತವೆ.
- ಗಲಿಲಾಯ ಸಮುದ್ರವನ್ನು ಕೂಡ “ತಿಬೇರಿಯ ಸಮುದ್ರ” ಮತ್ತು “ಗೆನೆಜರೇತ್ ಕೆರೆ” ಎಂಬುದಾಗಿ ಸೂಚಿಸಲಾಗುತ್ತಿತ್ತು.
- ಈ ಪದವನ್ನು “ಗಲಿಲಾಯ ಪ್ರಾಂತ್ಯದಲ್ಲಿರುವ ಕೆರೆ” ಅಥವಾ “ಗಲಿಲಾಯ ಕೆರೆ” ಅಥವಾ “ತಿಬೇರಿಯ (ಗೆನೆಜರೇತ್) ಹತ್ತಿರದಲ್ಲಿರುವ ಕೆರೆ” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಪೆರ್ನೌಮ, ಗಲಿಲಾಯ, ಯೊರ್ದನ್ ಹೊಳೆ, ಲವಣ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
- ಯೋಹಾನ.06:1-3
- ಲೂಕ.05:1-3
- ಮಾರ್ಕ.01:16-18
- ಮತ್ತಾಯ.04:12-13
- ಮತ್ತಾಯ.04:18-20
- ಮತ್ತಾಯ.08:18-20
- ಮತ್ತಾಯ.13:1-2
- ಮತ್ತಾಯ.15:29-31
ಪದ ಡೇಟಾ:
- Strong's: H3220, H3672, G1056, G1082, G2281, G3041, G5085
ಗಲಿಲಾಯ, ಗಲಿಲಾಯದವನು, ಗಲಿಲಾಯದವರು
ಸತ್ಯಾಂಶಗಳು
ಗಲಿಲಾಯ ಎನ್ನುವುದು ಇಸ್ರಾಯೇಲ್ ಉತ್ತರ ದಿಕ್ಕಿನಲ್ಲಿರುವ ಪ್ರಾಂತ್ಯ, ಉತ್ತರ ಸಮಾರ್ಯ ದಿಕ್ಕಿನಲ್ಲಿರುವ ಪ್ರಾಂತ್ಯವಾಗಿರುತ್ತದೆ. “ಗಲಿಲಾಯದವನು” ಎನ್ನುವ ಪದವು ಗಲಿಲಾಯದಲ್ಲಿ ನಿವಾಸವಾಗಿರುವ ವ್ಯಕ್ತಿಯನ್ನು ಸೂಚಿಸುತ್ತದೆ.
- ಗಲಿಲಾಯ, ಸಮಾರ್ಯ ಮತ್ತು ಯೂದಾಯ ಎನ್ನುವವು ಹೊಸ ಒಡಂಬಡಿಕೆ ಕಾಲಗಳಲ್ಲಿ ಇಸ್ರಾಯೇಲ್.ನಲ್ಲಿ ಮೂರು ಮುಖ್ಯ ಸೀಮೆಗಳಾಗಿದ್ದವು.
- ಗಲಿಲಾಯ ಸೀಮೆಯು “ಗಲಿಲಾಯ ಸಮುದ್ರ” ಎಂದು ಕರೆಯಲ್ಪಡುವ ದೊಡ್ಡ ಸಮುದ್ರದ ಪೂರ್ವ ದಿಕ್ಕುವರೆಗೂ ಹರಡಿತ್ತು.
- ಯೇಸು ಗಲಿಲಾಯದಲ್ಲಿರುವ ನಜರೇತ ಎನ್ನುವ ಪಟ್ಟಣದಲ್ಲಿ ಬೆಳೆದು, ಅಲ್ಲಿ ನಿವಾಸವಾಗಿದ್ದರು.
- ಯೇಸು ಮಾಡಿದ ಬೋಧನೆಗಳು ಮತ್ತು ಅದ್ಭುತಗಳು ಗಲಿಲಾಯ ಸೀಮೆಯಲ್ಲಿಯೇ ನಡೆದಿದ್ದವು.
(ಈ ಪದಗಳನ್ನು ಸಹ ನೋಡಿರಿ : ನಜರೇತ, ಸಮಾರ್ಯ, ಗಲಿಲಾಯ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.09:31-32
- ಅಪೊ.ಕೃತ್ಯ.13:30-31
- ಯೋಹಾನ.02:1-2
- ಯೋಹಾನ.04:1-3
- ಲೂಕ.13:1-3
- ಮಾರ್ಕ.03:7-8
- ಮತ್ತಾಯ.02:22-23
- ಮತ್ತಾಯ.03:13-15
ಸತ್ಯವೇದದಿಂದ ಉದಾಹರಣೆಗಳು:
- 21:10 ಮೆಸ್ಸೀಯ ___ ಗಲಿಲಾಯದಲ್ಲಿ ___ ಜೀವಿಸುವನು, ಮನ ಮುರಿದ ಜನರನ್ನು ಆದರಿಸುವನು, ಮತ್ತು ಬಂಧಿಸಲ್ಪಟ್ಟವರಿಗೆ ಸ್ವಾತಂತ್ರ್ಯವನ್ನು ಪ್ರಕಟಿಸುವನು, ಸೆರೆಯಲ್ಲಿರುವವನ್ನು ಬಿಡುಗಡೆಗೊಳಿಸುವನು ಎಂದು ಪ್ರವಾದಿಯಾದ ಯೆಶಯಾ ಹೇಳಿದರು.
- 26:01 ಸೈತಾನಿನ ಎಲ್ಲಾ ಶೋಧನೆಗಳನ್ನು ಜಯಿಸಿದ ಮೇಲೆ, ಯೇಸು ಪವಿತ್ರಾತ್ಮನ ಶಕ್ತಿಯಿಂದ ಆತನು ನಿವಾಸವಾಗಿರುವ __ ಗಲಿಲಾಯ __ ಸೀಮೆಗೆ ಹಿಂದುರಿಗಿ ಹೋದನು.
- 39:06 ಕೊನೆಗೆ, “ನೀವು ಯೇಸುವಿನೊಂದಿಗೆ ಇರುವವರೆಂದು ನಮಗೆ ಗೊತ್ತು, ಯಾಕಂದರೆ, ನೀವಿಬ್ಬರು ___ ಗಲಿಲಾಯದಿಂದ ___ ಬಂದವರೇ” ಎಂದು ಜನರು ಹೇಳಿದರು.
- 41:06 “’ಯೇಸು ಮರಣದಿಂದ ಎದ್ದು ಬಂದಿದ್ದಾನೆಂದು ಮತ್ತು ನಿಮಗಿಂತ ಮುಂಚಿತವಾಗಿ ಆತನು ___ ಗಲಿಲಾಯಕ್ಕೆ ___ ಹೋಗುತ್ತಾನೆ’ ಎಂದು ಹೋಗಿ ಶಿಷ್ಯರಿಗೆ ಹೇಳಿರಿ” ಎಂದು ದೂತ ಆ ಸ್ತ್ರೀಯರಿಗೆ ಹೇಳಿದನು.
ಪದ ಡೇಟಾ:
- Strong's: H1551, G1056, G1057
ಗಾಜಾ
ಸತ್ಯಾಂಶಗಳು:
ಸತ್ಯವೇದ ಕಾಲದಲ್ಲಿ, ಗಾಜಾ ಎನ್ನುವ ಪಟ್ಟಣ ಮೆಡಿಟರೇನಿಯನ್ ಸಮುದ್ರದ ತೀರದಲ್ಲಿ, ಅಷ್ಡೋದಿಂದ ಸುಮಾರು 38 ಕಿಲೋಮೀಟರ್ ದೂರದಲ್ಲಿದ ಸಮೃದ್ಧಿಯಾದ ಫಿಲಿಷ್ಟಿಯ ಪಟ್ಟಣವಾಗಿತ್ತು. ಫಿಲಿಷ್ಟಿಯರ ಐದು ಪ್ರಸಿದ್ಧವಾದ ಪಟ್ಟಣಗಳಲ್ಲಿ ಗಾಜಾ ಒಂದಾಗಿತ್ತು.
- ಇದು ಇದ್ದ ಸ್ಥಳದ ಕಾರಣ, ಜನರ ಮಧ್ಯೆ ಮತ್ತು ದೇಶಗಳ ಮಧ್ಯೆ ನಡೆಯುವ ವ್ಯಾಪಾರ ಕಾರ್ಯಗಳಿಗೆ ಗಾಜಾ ಮೂಲ ರೇವು ಪಟ್ಟಣವಾಗಿತ್ತು.
- ಪ್ರಸ್ತುತ ಕಾಲದಲ್ಲಿಯೂ, ಗಾಜಾ ಪಟ್ಟಣ ಪ್ರಾಮುಖ್ಯವಾದ ರೇವು ಪಟ್ಟಣವಾಗಿದೆ, ಅದು ಮೆಡಿಟರೇನಿಯನ್ ಸಮುದ್ರದ ತೀರದಲ್ಲಿದೆ ಅದಕ್ಕೆ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇಸ್ರಾಯೇಲ್ ದೇಶ ಮತ್ತು ದಕ್ಷಿಣಕ್ಕೆ ಈಜಿಪ್ಟ್ ಸರಿಹದ್ದುಗಳಾಗಿವೆ.
- ಸಂಸೋನನನ್ನು ಸ್ವಾಧೀನಪಡಿಸಿಕೊಂಡ ನಂತರ ಫಿಲಿಷ್ಟಿಯರು ಅವನನ್ನು ಗಾಜಾ ಪಟ್ಟಣಕ್ಕೆ ಕರೆದುಕೊಂಡು ಹೋದರು.
- ಸೌವರ್ತಿಕನಾದ ಫಿಲಿಪ್ಪ ಇಥಿಯೋಪ್ಯನಾದ ಕಂಚುಕಿಯನನ್ನು ಗಾಜಾಗೆ ಹೋಗುವ ಅರಣ್ಯ ಮಾರ್ಗದಲ್ಲಿ ಬೇಟಿ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಷ್ಡೋದ್, ಫಿಲಿಪ್ಪ, ಫಿಲಿಷ್ಟಿಯರು, ಇಥಿಯೋಪ್ಯ, ಗತೂರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5804, H5841, G1048
ಗಾದ್
ಸತ್ಯಾಂಶಗಳು:
ಯಾಕೋಬನ ಮಕ್ಕಳಲ್ಲಿ ಗಾದ್ ಒಬ್ಬನಾಗಿದ್ದನು. ಯಾಕೋಬನಿಗೆ ಮತ್ತೊಂದು ಹೆಸರು ಇಸ್ರಾಯೇಲ್ ಎಂದಿತ್ತು.
- ಇಸ್ರಾಯೇಲರ ಹನ್ನೆರಡು ಗೋತ್ರಗಳಲ್ಲಿ ಗಾದ್ ಕುಟುಂಬ ಒಂದಾಗಿತ್ತು.
- ಸತ್ಯವೇದದಲ್ಲಿ ಬರೆಯಲ್ಪಟ್ಟ ಗಾದ್ ಎನ್ನುವ ಮತ್ತೊಬ್ಬ ವ್ಯಕ್ತಿ ಪ್ರವಾದಿಯಾಗಿದ್ದನು. ಇಸ್ರಾಯೇಲರ ಜನಗಣತಿ ಮಾಡಿದಾಗ ಅರಸನಾದ ದಾವೀದನನ್ನು ಅವನು ವಿರೋಧಿಸಿದನು.
- ಬಾಲ್ಗಾದ್ ಮತ್ತು ಮಿಗ್ದಲ್ಗಾದ್ ಎನ್ನುವಂತ ಪಟ್ಟಣಗಳ ಹೆಸರುಗಳು ಮೂಲ ಭಾಷೆಯಲ್ಲಿ ಎರಡು ಪದಗಳಾಗಿವೆ ಮತ್ತು ಕೆಲವೊಮ್ಮೆ ಅವುಗಳನ್ನು “ಬಾಲ್ ಗಾದ್” ಮತ್ತು “ಮಿಗ್ದಲ್ ಗಾದ್” ಎಂದು ಬರೆಯುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಜನಗಣತಿ, ಪ್ರವಾದಿ, ಇಸ್ರಾಯೇಲರ ಹನ್ನೆರಡು ಗೋತ್ರಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1410, H1425, G1045
ಗಿದ್ಯೋನ
ಸತ್ಯಾಂಶಗಳು:
ಗಿದ್ಯೋನನು ಇಸ್ರಾಯೇಲಿಯನು, ದೇವರು ಇಸ್ರಾಯೇಲ್ಯರನ್ನು ತಮ್ಮ ಶತ್ರುಗಳಿಂದ ಬಿಡಿಸಲು ಇವನನ್ನು ಮೇಲಕ್ಕೆ ಎಬ್ಬಿಸಿದ್ದರು.
- ಗಿದ್ಯೋನನು ಜೀವಿಸುವ ಕಾಲದಲ್ಲಿ ಮಿದ್ಯಾನರೆನ್ನುವ ಒಂದು ಜನರ ಗುಂಪಿನವರು ಇಸ್ರಾಯೇಲ್ಯರ ಮೇಲೆ ಧಾಳಿ ಮಾಡುತ್ತಾ, ಅವರ ಬೆಳೆಗಳನ್ನು ನಾಶಗೊಳಿಸುತ್ತಿದ್ದರು.
- ಗಿದ್ಯೋನನು ಹೆದರಿಕೊಂಡರೂ ಮಿದ್ಯಾನರನ್ನು ಸೋಲಿಸುವುದಕ್ಕೆ ಮತ್ತು ಅವರಿಗೆ ವಿರುದ್ಧವಾಗಿ ಹೋರಾಟ ಮಾಡುವುದಕ್ಕೆ ಇಸ್ರಾಯೇಲ್ಯರನ್ನು ನಡೆಸಲು ದೇವರು ಅವನನ್ನು ಉಪಯೋಗಿಸಿಕೊಂಡರು.
- ಬಾಳ್ ಮತ್ತು ಅಶೇರ ಎನ್ನುವ ಸುಳ್ಳು ದೇವರಗಳ ಬಳಿಗೆ ಯಜ್ಞವೇದಿಗಳನ್ನು ತೆಗೆದುಕೊಂಡು ಹೋಗುವುದರ ಮೂಲಕ ಗಿದ್ಯೋನನು ದೇವರಿಗೆ ವಿಧೇಯನಾದನು.
- ಈತನು ಕೇವಲ ತಮ್ಮ ಶತ್ರುಗಳನ್ನು ಸೋಲಿಸುವುದಕ್ಕೆ ಜನರನ್ನು ನಡೆಸುವುದಲ್ಲದೆ, ಒಬ್ಬನೇ ನಿಜ ದೇವರಾದ ಯೆಹೋವನನ್ನು ಆರಾಧಿಸುವುದಕ್ಕೆ ಮತ್ತು ಆತನಿಗೆ ವಿಧೇಯರಾಗುವುದಕ್ಕೆ ಅವರನ್ನು ಪ್ರೋತ್ಸಾಹ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಳ್, ಅಶೇರ, ಬಿಡುಗಡೆ, ಮಿದ್ಯಾನ್, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 16:05 ಯೆಹೋವನ ದೂತ __ ಗಿದ್ಯೋನನ __ ಬಳಿಗೆ ಬಂದು, “ಪರಾಕ್ರಮಶಾಲಿಯೇ, ಯೆಹೋವ ನಿನ್ನ ಸಂಗಡ ಇದ್ದಾನೆ”. ಹೋಗಿ, ಮಿದ್ಯಾನರಿಂದ ಇಸ್ರಾಯೇಲ್ಯರನ್ನು ರಕ್ಷಿಸು” ಎಂದು ಹೇಳಿದನು.
- 16:06 __ ಗಿದ್ಯೋನನ __ ತಂದೆ ವಿಗ್ರಹಕ್ಕೆ ಯಜ್ಞವೇದಿಯನ್ನು ಪ್ರತಿಷ್ಠೆ ಮಾಡಿದನು. ಆ ಯಜ್ಞವೇದಿಯನ್ನು ಮುರಿದು ಹಾಕಬೇಕೆಂದು ದೇವರು __ ಗಿದ್ಯೋನನಿಗೆ __ ಹೇಳಿದನು.
- 16:08 ಅವರು ಲೆಕ್ಕಿಸಲಾರದಷ್ಟು ಜನರಿದ್ದರು (ಮಿದ್ಯಾನರು). ಅವರೊಂದಿಗೆ ಎಲ್ಲರು ಸೇರಿ ಯುದ್ಧ ಮಾಡುವುದಕ್ಕೆ __ ಗಿದ್ಯೋನನು __ ಇಸ್ರಾಯೇಲ್ಯರನ್ನು ಕರೆದನು.
- 16:08 ಅವರೊಂದಿಗೆ ಎಲ್ಲರು ಸೇರಿ ಯುದ್ಧ ಮಾಡುವುದಕ್ಕೆ __ ಗಿದ್ಯೋನನು __ ಇಸ್ರಾಯೇಲ್ಯರನ್ನು ಕರೆದನು. ಇಸ್ರಾಯೇಲ್ಯರನ್ನು ರಕ್ಷಿಸುವುದಕ್ಕೆ ದೇವರು ಗಿದ್ಯೋನನನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆನ್ನುವುದಕ್ಕೆ, __ ಗಿದ್ಯೋನನು __ ಎರಡು ಚಿಹ್ನೆಗಳನ್ನು ತೋರಿಸಬೇಕೆಂದು ದೇವರನ್ನು ಕೇಳಿಕೊಂಡನು.
- 16:10 __ ಗಿದ್ಯೋನನ __ ಬಳಿಗೆ 32,000 ಇಸ್ರಾಯೇಲ್ ಸೈನಿಕರು ಬಂದರು, ಆದರೆ ಸೈನಿಕರು ಹೆಚ್ಚಾಗಿದ್ದಾರೆಂದು ದೇವರು ಅವನಿಗೆ ಹೇಳಿದನು.
- 16:12 ಆದ್ದರಿಂದ __ ಗಿದ್ಯೋನನು __ ತನ್ನ ಸೈನಿಕರನ್ನು ಹಿಂದಕ್ಕೆ ಕಳುಹಿಸಿದನು ಮತ್ತು ಅವರೆಲ್ಲರಿಗೆ ಕೊಂಬನ್ನು, ಉರಿಯುವ ಪಂಜು ಇರುವ ಬರಿಕೊಡವನ್ನೂ ಕೊಟ್ಟನು.
- 16:15 ಜನರೆಲ್ಲರು __ ಗಿದ್ಯೋನನನ್ನು __ ಅವರ ಅರಸನಾಗಿ ಮಾಡಬೇಕೆಂದು ಬಯಸಿದ್ದರು.
- 16:16 ಪ್ರಧಾನ ಯಾಜಕನು ಧರಿಸಿಕೊಳ್ಳುವ ವಸ್ತ್ರದಂತೆ ಒಂದು ವಿಶೇಷವಾದ ವಸ್ತ್ರವನ್ನು ಮಾಡುವುದಕ್ಕೆ __ ಗಿದ್ಯೋನನು __ ಬಂಗಾರವನ್ನು ಉಪಯೋಗಿಸಿದನು. ಆದರೆ ಜನರೆಲ್ಲರು ಅದು ಒಂದು ವಿಗ್ರಹವೆಂದೆಣಿಸಿ ಅದನ್ನು ಆರಾಧಿಸಲು ಆರಂಭಿಸಿದರು.
ಪದ ಡೇಟಾ:
- Strong's: H1439, H1441
ಗಿಬ್ಯೋನ್, ಗಿಬ್ಯೋನ್ಯರು, ಗಿಬ್ಯೋನ್ಯರು
ಸತ್ಯಾಂಶಗಳು:
ಗಿಬ್ಯೋನ್ ಎನ್ನುವುದು ಒಂದು ಪಟ್ಟಣ, ಇದು ಯೆರೂಸಲೇಮ್ ವಾಯುವ್ಯ ದಿಕ್ಕಿಗೆ ಸುಮಾರು 13 ಕಿಲೋಮೀಟರ್ ದೂರದಲ್ಲಿ ಕಂಡುಬರುತ್ತದೆ. ಗಿಬ್ಯೋನಿನಲ್ಲಿ ಜೀವಿಸುವ ಜನರನ್ನು ಗಿಬ್ಯೋನ್ಯರು ಎಂದು ಕರೆಯುತ್ತಾರೆ.
- ಇಸ್ರಾಯೇಲ್ಯರು ಯೆರಿಕೋ ಮತ್ತು ಆಯಿ ಎನ್ನುವ ಪಟ್ಟಣಗಳನ್ನು ಹೇಗೆ ನಾಶಮಾಡಿದರೆಂದು ಗಿಬ್ಯೋನ್ಯರು ಕೇಳಿದಾಗ, ಅವರು ತುಂಬಾ ಹೆದರಿದರು.
- ಇದರಿಂದ ಗಿಲ್ಗಾಲ್.ನಲ್ಲಿರುವ ಇಸ್ರಾಯೇಲ್ ನಾಯಕರ ಬಳಿಗೆ ಗಿಬ್ಯೋನ್ಯರು ಬಂದರು ಮತ್ತು ಅವರು ಎಷ್ಟೋ ದೂರದಲ್ಲಿರುವ ದೇಶದ ಜನರು ಎಂಬುವರಾಗಿ ನಟಿಸಿದರು.
- ಇಸ್ರಾಯೇಲ್ ನಾಯಕರು ಮೋಸಹೋದರು ಮತ್ತು ಅವರು ತಮ್ಮನ್ನು ನಾಶಪಡಿಸದೇ, ರಕ್ಷಿಸುತ್ತೇವೆಂದು ಗಿಬ್ಯೋನ್ಯರೊಂದಿಗೆ ಒಪ್ಪಂದ ಮಾಡಿಕೊಂಡರು.
(ಈ ಪದಗಳನ್ನು ಸಹ ನೋಡಿರಿ : ಗಿಲ್ಗಾಲ್, ಯೆರಿಕೋ, ಯೆರೂಸೇಲಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 15:06 ಆದರೆ ಕಾನಾನ್ ಜನರ ಗುಂಪುಗಳಲ್ಲಿ __ ಗಿಬ್ಯೋನ್ಯರು __ ಎಂದು ಕರೆಯಲ್ಪಡುವ ಒಂದು ಜನರ ಗುಂಪು ಯೆಹೋಶುವನೊಂದಿಗೆ ಸುಳ್ಳಾಡಿದರು ಮತ್ತು ಅವರು ಕನಾನ್ ದೇಶದಿಂದ ತುಂಬಾ ದೂರದಲ್ಲಿರುವ ಸ್ಥಳದಿಂದ ಬಂದವರೆಂದು ಹೇಳಿದರು.
- 15:07 ಕೆಲವೊಂದು ಕಾಲದನಂತರ, ಕಾನಾನ್ ದೇಶದಲ್ಲಿರುವ ಇತರ ಜನರ ಗುಂಪುಗಳ ಅರಸರಾಗಿರುವ ಅಮೋರಿಯರು ಇಸ್ರಾಯೇಲ್ಯರೊಂದಿಗೆ __ ಗಿಬ್ಯೋನ್ಯರೊಂದಿಗೆ __ ಸಮಾಧಾನ ಔತಣವನ್ನು ಮಾಡಿಕೊಂಡಿದ್ದಾರೆಂದು ಕೇಳಿಸಿಕೊಂಡರು, ಅದ್ದರಿಂದ ಅವರು ತಮ್ಮ ಸೈನ್ಯಗಳನ್ನು ಒಂದು ದೊಡ್ಡ ಸೈನ್ಯವನ್ನಾಗಿ ಮಾಡಿಕೊಂಡು, __ ಗಿಬ್ಯೋನ್ __ ಮೇಲೆ ಧಾಳಿ ಮಾಡಿದರು.
- 15:08 ಆದ್ದರಿಂದ ಯೆಹೋಶುವ ಇಸ್ರಾಯೇಲ್ ಸೈನ್ಯವನ್ನು ಒಂದುಗೂಡಿಸಿದನು ಮತ್ತು ಅವರೆಲ್ಲರು __ ಗಿಬ್ಯೋನ್ಯರ __ ಬಳಿಗೆ ರಾತ್ರಿಯೆಲ್ಲಾ ನಡೆದುಕೊಂಡು ಹೋದರು.
ಪದ ಡೇಟಾ:
- Strong's: H1391, H1393
ಗಿರ್ಗಾಷಿಯರು
ಸತ್ಯಾಂಶಗಳು:
ಗಿರ್ಗಾಷಿಯರೆಂದರೆ ಗಲಿಲಾಯ ಸಮುದ್ರದ ಹತ್ತಿರ ಕಾನಾನ್ ದೇಶದಲ್ಲಿ ವಾಸಿಸುತ್ತಿದ್ದ ಜನರ ಗುಂಪಾಗಿತ್ತು.
- ಅವರು ಹಾಮನ ಮಗನಾದ ಕಾನಾನಿನ ವಂಶಸ್ಥರಾಗಿದ್ದರು ಮತ್ತು “ಕಾನಾನಿಯರು” ಎಂದು ಕರೆಯಲ್ಪಟ್ಟ ಅನೇಕ ಜನರ ಗುಂಪಿನಲ್ಲಿ ಇವರು ಒಂದು ಗುಂಪಿನವರಾಗಿದ್ದರು.
- ಗಿರ್ಗಾಷಿಯರನ್ನು ಮತ್ತು ಕಾನಾನಿಯರ ಬೇರೆ ಜನರ ಗುಂಪುಗಳನ್ನು ಸೋಲಿಸಲು ಸಹಾಯಮಾಡುತ್ತೇನೆಂದು ಯೆಹೋವ ಇಸ್ರಾಯೇಲ್ಯರಿಗೆ ವಾಗ್ಧಾನ ಮಾಡಿದನು.
- ಬೇರೆ ಕಾನಾನಿಯರ ಹಾಗೆ, ಗಿರ್ಗಾಷಿಯರು ಅನ್ಯ ದೇವತೆಗಳನ್ನು ಪೂಜಿಸುತ್ತಿದ್ದರು ಮತ್ತು ಆ ಪೂಜೆಯ ಭಾಗವಾಗಿ ಅನೇಕ ಅನೈತಿಕ ಕೆಲಸಗಳನ್ನು ಮಾಡುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹಾಮ್, ನೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1622
ಗಿಲ್ಗಾಲ್
ಸತ್ಯಾಂಶಗಳು:
ಗಿಲ್ಗಾಲ್ ಎನ್ನುವ ಪಟ್ಟಣ ಯೆರಿಕೋಗೆ ಉತ್ತರ ದಿಕ್ಕಿನಲ್ಲಿತ್ತು ಮತ್ತು ಇಸ್ರಾಯೇಲ್ಯರು ಕಾನಾನ್ ದೇಶಕ್ಕೆ ಹೋಗುತ್ತಿರುವಾಗ ಯೊರ್ದನ್ ನದಿಯನ್ನು ದಾಟಿದ ನಂತರ ಇಳಿದುಕೊಂಡ ಸ್ಥಳವಾಗಿತ್ತು.
- ಗಿಲ್ಗಾಲಿನಲ್ಲಿ, ಅವರು ದಾಟಿದ ನದಿಯಿಂದ ಅಂದರೆ ಒಣಗಿದ್ದ ಯೊರ್ದನ್ ನದಿಯಿಂದ ತೆಗೆದುಕೊಂಡು ಬಂದ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು.
- ಎಲೀಷನು ಪರಲೋಕಕ್ಕೆ ಏರಿಹೋದ ಸಮಯದಲ್ಲಿ ಎಲೀಯನು ಮತ್ತು ಎಲೀಷನು ಯೊರ್ದನ್ ನದಿಯನ್ನು ದಾಟುವದಕ್ಕೆ ಮುನ್ನ ಅವರು ಗಿಲ್ಗಾಲ್ ಪಟ್ಟಣವನ್ನು ಬಿಟ್ಟರು.
- ಹಳೆ ಒಡಂಬಡಿಕೆಯಲ್ಲಿ ಅನೇಕ ಪ್ರಾಂತ್ಯಗಳನ್ನು “ಗಿಲ್ಗಾಲ್” ಎಂದು ಕರೆಯುತ್ತಿದ್ದರು.
- “ಗಿಲ್ಗಾಲ್” ಎನ್ನುವ ಪದಕ್ಕೆ “ವೃತ್ತಾಕಾರದಲ್ಲಿದ್ದ ಕಲ್ಲುಗಳು” ಎಂದರ್ಥ, ಅದು ಬಹುಶಃ ವೃತ್ತಾಕಾರದಲ್ಲಿ ಕಟ್ಟಲ್ಪಟ್ಟ ಯಜ್ಞವೇದಿಯನ್ನು ಸೂಚಿಸುತ್ತಿರಬಹುದು.
- ಹಳೆ ಒಡಂಬಡಿಕೆಯಲ್ಲಿ, ಈ ಹೆಸರು ಅನೇಕ ಬಾರಿ “ಗಿಲ್ಗಾಲ್” ಎಂದಿರುತ್ತದೆ. ಇದು ಒಂದು ಪ್ರಾಂತ್ಯದ ಸ್ಥಳವಲ್ಲ ಆದರೆ ಒಂದು ವಿಧವಾದ ಸ್ಥಳದ ವಿವರಣೆಯಾಗಿರಬಹುದು ಎಂದು ಸೂಚಿಸುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಎಲೀಯ, ಎಲೀಷ, ಯೆರಿಕೋ, ಯೊರ್ದನ್ ಹೊಳೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1537
ಗಿಲ್ಯಾದ್, ಗಿಲ್ಯಾದ್ಯನು, ಗಿಲ್ಯಾದ್ಯರು
ಪದದ ಅರ್ಥವಿವರಣೆ
ಗಿಲ್ಯಾದ್ ಎನ್ನುವುದು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿದ್ದ ಪರ್ವತಮಯವಾದ ಪ್ರಾಂತ್ಯವಾಗಿತ್ತು, ಅಲ್ಲಿ ಇಸ್ರಾಯೇಲ್ ಗೋತ್ರಗಳಾದ ಗಾದ್, ರೂಬೇನ ಮತ್ತು ಮನಸ್ಸೆಯವರು ನಿವಾಸವಿದ್ದರು.
- ಈ ಪ್ರಾಂತ್ಯವನ್ನು “ಗುಟ್ಟ ಸ್ಥಳವಾದ ಗಿಲ್ಯಾದ್” ಅಥವಾ “ಗಿಲ್ಯಾದ್ ಬೆಟ್ಟ” ಎಂದು ಸೂಚಿಸಲಾಗಿತ್ತು.
- ಹಳೆ ಒಡಂಬಡಿಕೆಯಲ್ಲಿದ್ದ ಅನೇಕ ಪುರುಷರ ಹೆಸರು “ಗಿಲ್ಯಾದ್” ಎಂದಿತ್ತು. ಅವರಲ್ಲಿ ಒಬ್ಬನು ಮನಸ್ಸೆಯನ ಮೊಮ್ಮಗನಾಗಿದ್ದನು. ಇನ್ನೊಬ್ಬ ಗಿಲ್ಯಾದ್ ಎಫ್ತಾಹನ ತಂದೆಯಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಗಾದ್, ಎಫ್ತಾಹ, ಮನಸ್ಸೆ, ರೂಬೇನ, ಇಸ್ರಾಯೇಲ್ಯರ ಹನ್ನೆರಡು ಗೋತ್ರಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1568, H1569
ಗೆತ್ಸೇಮನೆ
ಸತ್ಯಾಂಶಗಳು:
ಗೆತ್ಸೇಮನೆ ಎನ್ನುವುದು ಒಲೀವ ಎಣ್ಣೆ ಮರಗಳಿದ್ದ ತೋಟವಾಗಿತ್ತು, ಅದು ಯೆರೂಸಲೇಮಿಗೆ ಪೂರ್ವದಲ್ಲಿ ಕಿದ್ರೋನ್ ಕಣಿವೆ ಆಚೆ ಮತ್ತು ಒಲೀವ ಎಣ್ಣೆ ಮರಗಳ ಗುಡ್ಡದ ಹತ್ತಿರವಿತ್ತು.
- ಗೆತ್ಸೇಮನೆ ತೋಟದಲ್ಲಿ ಯೇಸು ಮತ್ತು ಆತನ ಶಿಷ್ಯರು ಜನಸಮೂಹದಿಂದ ದೂರವಾಗಿದ್ದು ಏಕಾಂತವಾದ ಸಮಯ ಕಳೆಯುತ್ತಿದ್ದರು ಮತ್ತು ವಿಶ್ರಮಿಸುತ್ತಿದ್ದರು.
- ಯೆಹೂದ್ಯರ ನಾಯಕರು ಆತನನ್ನು ಬಂಧಿಸುವದಕ್ಕೆ ಬರುವದಕ್ಕೆ ಮುಂಚೆ, ಗೆತ್ಸೇಮನೆನಲ್ಲಿಯೇ ಯೇಸು ತುಂಬಾ ದುಃಖಪಟ್ಟು ಮನಗುಂದಿದವನಾಗಿ ಪ್ರಾರ್ಥಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯೂದ ಇಸ್ಕರಿಯೋತ, ಕಿದ್ರೋನ್ ಕಣಿವೆ, ಆಲಿವ್ ಎಣ್ಣೆ ಮರಗಳ ಗುಡ್ಡ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ದತ್ತಾಂಶ:
- Strong's: G1068
ಗೆಬೆಯಾ
ಸತ್ಯಾಂಶಗಳು:
ಗೆಬೆಯಾ ಯೆರುಸಲೇಮಿಗೆ ಉತ್ತರ ದಿಕ್ಕಿನಲ್ಲಿ ಮತ್ತು ಬೇತೇಲಿಗೆ ದಕ್ಷಿಣ ದಿಕ್ಕಿನಲ್ಲಿ ಪಟ್ಟಣವಾಗಿತ್ತು.
- ಗೆಬೆಯಾ ಬೆನ್ಯಾಮೀನ ಗೋತ್ರದವರ ಪ್ರಾಂತ್ಯವಾಗಿತ್ತು.
- ಬೆನ್ಯಾಮೀನರು ಮತ್ತು ಇಸ್ರಾಯೇಲ್ಯರ ನಡುವೆ ನಡೆದಂತ ದೊಡ್ಡ ಯುದ್ದ ಇಲ್ಲಿಯೇ ನಡೆಯಿತು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೆನ್ಯಾಮೀನ, ಬೇತೇಲ್, ಯೆರುಸಲೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1387, H1389, H1390, H1394
ಗೆರಾರ್
ಸತ್ಯಾಂಶಗಳು:
ಗೆರಾರ್ ಕಾನಾನ್ ದೇಶದಲ್ಲಿ ಇದ್ದ ಒಂದು ಪಟ್ಟಣದ ಹೆಸರಾಗಿತ್ತು, ಅದು ಹೆಬ್ರೋನ್ ದೇಶಕ್ಕೆ ನೈರುತ್ಯಕ್ಕೆ ಮತ್ತು ಬೆರ್ಷೆಬಗೆ ವಾಯುವ್ಯ ದಿಕ್ಕಿನಲ್ಲಿತ್ತು.
- ಅಬ್ರಹಾಮನು ಮತ್ತು ಸಾರಳು ಗೆರಾರಿನಲ್ಲಿ ತಂಗಿದ್ದಾಗ ಅಬೀಮೆಲೆಕನು ಅಲ್ಲಿನ ಅರಸನಾಗಿದ್ದನು.
- ಇಸ್ರಾಯೇಲ್ಯರು ಕಾನಾನಿನಲ್ಲಿ ಜೀವಿಸುತ್ತಿರುವಾಗ ಫಿಲಿಷ್ಟಿಯರು ಗೆರಾರ್ ಪ್ರಾಂತ್ಯವನ್ನು ಅವರ ಅಧೀನದಲ್ಲಿಟ್ಟಿಕೊಂಡಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಹೇಗೆ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬೀಮೆಲೆಕನು, ಬೆರ್ಷೆಬ, ಹೆಬ್ರೋನ್, ಫಿಲಿಷ್ಟಿಯರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1642
ಗೆಷೂರ್ಯ, ಗೆಷೂರ್ಯರು
ಪದದ ಅರ್ಥವಿವರಣೆ
ಅರಸನಾದ ದಾವೀದನ ಕಾಲದಲ್ಲಿ, ಗೆಷೂರ್ಯ ಎಂಬ ಊರು ಗಲಿಲಾಯ ಸಮುದ್ರ ತೀರದ ಪೂರ್ವ ದಿಕ್ಕಿನಲ್ಲಿ ಇಸ್ರಾಯೇಲ್ ಮತ್ತು ಅರಾಮ್ ದೇಶಗಳ ನಡುವೆ ಇದ್ದ ಚಿಕ್ಕ ಸಾಮ್ರಾಜ್ಯವಾಗಿತ್ತು.
- ಅರಸನಾದ ದಾವೀದನು ಗೆಷೂರ್ಯದ ಅರಸನ ಮಗಳಾದ ಮಾಕಳನ್ನು ವಿವಾಹ ಮಾಡಿಕೊಂಡನು ಮತ್ತು ಆಕೆ ಅವನಿಗೆ ಅಬ್ಷಾಲೋಮನನ್ನು ಹೆತ್ತಳು.
- ಅಬ್ಷಾಲೋಮನು ಅವನ ಸಹೋದರನಾದ ಅಮ್ನೋನನ್ನು ಕೊಂದನು, ನಂತರ ಯೆರೂಸಲೇಮಿನಿಂದ ಈಶಾನ್ಯ ದಿಕ್ಕಿನಲ್ಲಿ ಸುಮಾರು 140 ಕಿಲೋಮೀಟರ್ ದೂರದಲ್ಲಿದ್ದ ಗೆಷೂರ್ಯಕ್ಕೆ ತಪ್ಪಿಸಿಕೊಂಡುಹೋದನು. ಅಲ್ಲಿ ಅವನು ಮೂರು ವರ್ಷಗಳ ಕಾಲ ನಿವಾಸ ಮಾಡಿದನು.
(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಅಮ್ನೋನ, ಅರಾಮ್, ಗಲಿಲಾಯ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1650
ಗೊಮೋರ
ಸತ್ಯಾಂಶಗಳು:
ಸೊದೋಮ್ ಹತ್ತಿರ ಫಲವತ್ತಾದ ಕಣಿವೆಯ ಹತ್ತಿರ ಗೊಮೋರ ಇತ್ತು, ಅಬ್ರಹಾಮನ ಸಹೋದರನಾದ ಲೋಟನು ಅಲ್ಲಿ ವಾಸಿಸುತ್ತೇನೆಂದು ಆಯ್ಕೆ ಮಾಡಿಕೊಂಡನು.
- ಸೊದೋಮ್ ಮತ್ತು ಗೊಮೋರ ಪಟ್ಟಣಗಳು ಎಲ್ಲಿವೆ ಎಂದು ನಿಖರವಾಗಿ ತಿಳಿಯದು, ಆದರೆ ಆ ಪಟ್ಟಣಗಳು ಲವಣಸಮುದ್ರದ ದಕ್ಷಿಣ ಭಾಗದಲ್ಲಿರುವ ಸಿದ್ದೀಮ್ ಹತ್ತಿರವಿರಬಹುದು ಎಂದು ಸೂಚನೆಗಳಿವೆ.
- ಸೊದೋಮ್ ಮತ್ತು ಗೊಮೋರ ಪಟ್ಟಣಗಳು ಇದ್ದ ಸ್ಥಳದಲ್ಲಿ ಅನೇಕ ಅರಸರು ಯುದ್ಧ ಮಾಡುವವರಾಗಿದ್ದರು.
- ಸೊದೋಮ್ ಮತ್ತು ಬೇರೆ ಪಟ್ಟಣಗಳ ಜೊತೆ ಲೋಟನಿಗೆ ಜಗಳವಾದಾಗ ಅಬ್ರಹಾಮನು ಮತ್ತು ಅವನ ಆಳುಗಳು ಲೋಟನನ್ನು ಬಿಡಿಸಿದರು.
- ಇದಾದ ಸ್ವಲ್ಪ ಕಾಲದ ನಂತರ, ಯೆಹೋವನು ಸೊದೋಮ್ ಮತ್ತು ಗೊಮೋರ ಪಟ್ಟಣಗಳಲ್ಲಿ ಜೀವನ ಮಾಡುತ್ತಿದ್ದ ಜನರ ದುಷ್ಟತಣವನ್ನು ಕಂಡು ಅವುಗಳನ್ನು ನಾಶಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಅಬ್ರಹಾಮ, ಬಾಬಿಲೋನ್, ಲೋಟ, ಲವಣಸಮುದ್ರ, ಸೊದೋಮ್)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H6017
ಗೊಲ್ಗೊಥಾ
ಸತ್ಯಾಂಶಗಳು:
“ಗೊಲ್ಗೊಥಾ” ಎನ್ನುವುದು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳದ ಹೆಸರಾಗಿದೆ. ಅದರ ಹೆಸರು ಅರಮಾಯ ಭಾಷೆಯಿಂದ ಬಂದಿದೆ, ಅದಕ್ಕೆ “ಕಪಾಲ” ಅಥವಾ “ಕಪಾಲ ಸ್ಥಳ” ಎಂದರ್ಥ.
- ಗೊಲ್ಗೊಥಾವು ಯೆರುಸಲೇಮ್ ನಗರದ ಗೋಡೆಗಳ ಹೊರಗೆ ಎಲ್ಲೋ ಹತ್ತಿರದಲ್ಲಿದೆ. ಇದು ಬಹುಶಃ ಒಲೀವ ಪರ್ವತದ ಇಳಿಜಾರಿನಲ್ಲಿ ನೆಲೆಗೊಂಡಿದೆ.
- ಸತ್ಯವೇದದ ಕೆಲವು ಹಳೆಯ ಆಂಗ್ಲ ಆವೃತ್ತಿಗಳಲ್ಲಿ, ಗೊಲ್ಗೊಥಾವನ್ನು "ಕಲ್ವಾರಿ" ಎಂದು ಅನುವಾದಿಸಲಾಗಿದೆ, ಇದು "ಕಪಾಲ" ಎಂಬ ಲ್ಯಾಟಿನ್ ಪದದಿಂದ ಬಂದಿದೆ.
- ಅನೇಕ ಸತ್ಯವೇದದ ಆವೃತ್ತಿಗಳು "ಗೊಲ್ಗೊಥಾ" ದಂತೆಯೇ ಕಾಣುವ ಅಥವಾ ಧ್ವನಿಸುವ ಪದವನ್ನು ಬಳಸುತ್ತವೆ ಏಕೆಂದರೆ ಅದರ ಅರ್ಥವನ್ನು ಈಗಾಗಲೇ ಸತ್ಯವೇದದ ಪಠ್ಯದಲ್ಲಿ ವಿವರಿಸಲಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಇವುಗಳನ್ನು ಸಹ ನೋಡಿರಿ : ಆರಾಮ್, ಒಲೀವ ಮರಗಳ ಗುಡ್ಡ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: G11150
ಗೊಲ್ಯಾತನು
ಸತ್ಯಾಂಶಗಳು:
ದಾವೀದನು ಕೊಂದ ಗೊಲ್ಯಾತನು ಫಿಲಿಷ್ಟಿಯರ ಸೈನ್ಯದಲ್ಲಿ ಬಹಳ ಉದ್ದವಾಗಿ ಮತ್ತು ಭಾರಿ ಸೈನಿಕನಾಗಿದ್ದನು.
- ಗೊಲ್ಯಾತನು ಸುಮಾರು ಎರಡು ರಿಂದ ಮೂರೂ ಮೀಟರುಗಳ ಎತ್ತರವಿದ್ದನು. ಅವನ ಭಾರಿ ಶರೀರದ ಕಾರಣ ಗೊಲ್ಯಾತನನ್ನು ಮಹಾಶರೀರಕ ಎಂದು ಕರೆಯುತ್ತಿದ್ದರು.
- ಗೊಲ್ಯಾತನ ಬಳಿ ದಾವೀದನಿಗಿಂತ ಎತ್ತರವಿದ್ದರು ಮತ್ತು ಹೆಚ್ಚು ಆಯುಧಗಳಿದ್ದರು, ಯೆಹೋವನು ದಾವೀದನಿಗೆ ಗೊಲ್ಯಾತನನ್ನು ಸೋಲಿಸಲು ಶಕ್ತಿ ಸಾಮರ್ಥ್ಯವನ್ನು ಕೊಟ್ಟನು.
- ಗೊಲ್ಯಾತನ ಮೇಲೆ ದಾವೀದನು ವಿಜಯಹೊಂದಿದ ಕಾರಣವಾಗಿ ಫಿಲಿಷ್ಟಿಯರ ಮೇಲೆ ಇಸ್ರಾಯೇಲ್ಯರು ವಿಜಯಹೊಂದಿದರೆಂದು ಘೋಷಣೆಯಾಯಿತು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದಾವೀದ, ಫಿಲಿಷ್ಟಿಯರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1555
ಗೋಷೆನ್
ಪದದ ಅರ್ಥವಿವರಣೆ
ಗೋಷೆನ್ ಎನ್ನುವುದು ಐಗುಪ್ತ್ಯದ ಉತ್ತರ ಭಾಗದಲ್ಲಿ ನೈಲ್ ನದಿಯ ಹತ್ತಿರದಲ್ಲಿದ್ದ ಫಲವತ್ತಾದ ಪ್ರಾಂತ್ಯದ ಹೆಸರಾಗಿತ್ತು.
- ಯೋಸೇಫ್ ಐಗುಪ್ತ ದೇಶಕ್ಕೆ ಅರಸನಾಗಿದ್ದಾಗ, ಅವನ ತಂದೆ, ಸಹೋದರರು ಮತ್ತು ಅವರ ಕುಟುಂಬಗಳು ಕಾನಾನ್ ದೇಶದಲ್ಲಿ ಬರಗಾಲ ಬಂದ ಕಾರಣ ಗೋಷೆನಲ್ಲಿ ನಿವಾಸ ಮಾಡಲು ಬಂದರು.
- ಅವರು ಮತ್ತು ಅವರ ಸಂತತಿಯವರು ಗೋಷೆನಲ್ಲಿ ಸುಮಾರು 400 ವರ್ಷಗಳು ನಿವಾಸಮಾಡಿದರು, ಆದರೆ ಐಗುಪ್ತ ಫರೋಹನು ಅವರನ್ನು ಗುಲಾಮಗಿರಿಗೆ ಬಲವಂತ ಮಾಡಿದನು.
- ಕೊನೆಗೆ ಯೆಹೋವನು ಇಸ್ರಾಯೇಲ್ ಜನರನ್ನು ಗುಲಾಮಗಿರಿಯಿಂದ ಬಿಡಿಸಲು ಮತ್ತು ಗೋಷೆನಿನಿಂದ ಹೊರತರಲು ಮೋಶೆನನ್ನು ಕಳುಹಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ್ಯ, ಬರಗಾಲ, ಮೋಶೆ, ನೈಲ್ ಹೊಳೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1657
ಗ್ರೀಕ್, ಗ್ರೀಕನು ಗ್ರೀಕ್ ಪಂಡಿತ
ಸತ್ಯಾಂಶಗಳು:
“ಗ್ರೀಕ್” ಎನ್ನುವ ಪದವು ಗ್ರೀಸ್ ದೇಶದಲ್ಲಿ ಮಾತಾಡುವ ಭಾಷೆಯಾಗಿತ್ತು, ಗ್ರೀಕನು ಎಂದು ಗ್ರೀಸ್ ದೇಶದ ವ್ಯಕ್ತಿಯನ್ನು ಕರೆಯುತ್ತಾರೆ. ರೋಮಾ ಸಾಮ್ರಾಜ್ಯದಲ್ಲೆಲ್ಲಾ ಗ್ರೀಕ್ ಭಾಷೆಯನ್ನು ಮಾತಾಡುತ್ತಿದ್ದರು. “ಗ್ರೀಕನು” ಎಂದರೆ “ಗ್ರೀಕ್ ಮಾತಾಡುವವನು” ಎಂದರ್ಥ.
- ರೋಮಾ ಸಾಮ್ರಾಜ್ಯದಲ್ಲಿ ಯೆಹೂದ್ಯರಲ್ಲದ ಅನೇಕರು ಗ್ರೀಕ್ ಭಾಷೆಯನ್ನು ಮಾತಾಡುತ್ತಿದ್ದರು, ಆದಕಾರಣ ಹೊಸ ಒಡಂಬಡಿಕೆಯಲ್ಲಿ ಅನ್ಯರನ್ನು ಸೂಚಿಸಲು ವಿಶೇಷವಾಗಿ ಯೆಹೂದ್ಯರಿಂದ ಬೇರ್ಪಡಿಸಲು “ಗ್ರೀಕರು” ಎಂದು ಉಪಯೋಗಿಸಲ್ಪಟ್ಟಿದೆ.
- “ಯೆಹೂದ್ಯ ಗ್ರೀಕನು” ಅಥವಾ "ಗ್ರೀಕ್ ಪಂಡಿತರು" ಗ್ರೀಕ್ ಭಾಷೆ ಮಾತಾಡುತ್ತಿದ್ದ ಯೆಹೂದಿಯರನ್ನು ಸೂಚಿಸಲು ಉಪಯೋಗಿಸಲ್ಪಟ್ಟಿದೆ ಇವರು “ಇಬ್ರಿಯ ಭಾಷೆಯನ್ನು ಮಾತಾಡುವ ಯೆಹೂದ್ಯ”ರಿಂದ ಅಥವಾ ಅರಾಮಿಕ್ ಮಾತಾಡುವ ಯೆಹೂದಿಯರಿಂದ ಬೇರ್ಪಡಿಸಿ ಹೇಳಲು ಉಪಯೋಗಿಸುತ್ತಿದ್ದರು. "ಹೆಲೆನಿಸ್ಟ್ಸ್" ಎಂಬ ಪದವು ಗ್ರೀಕ್-ಮಾತನಾಡುವವರ ಗ್ರೀಕ್ ಪದದ ಉಚ್ಚಾರಣೆಯಿಂದ ಬಂದಿದೆ.
- “ಗ್ರೀಕರು” ಎನ್ನುವ ಪದವನ್ನು “ಗ್ರೀಕ್ ಮಾತಾಡುವ” ಅಥವಾ “ಗ್ರೀಕ್ ಸಂಪ್ರದಾಯದ” ಅಥವಾ “ಗ್ರೀಕ್” ಎಂದು ಅನುವಾದ ಮಾಡಬಹುದು.
- ಯಹೂದಿಯರಲ್ಲದವರನ್ನು ಸೂಚಿಸಲು “ಗ್ರೀಕ್” ಎನ್ನುವ ಪದವನ್ನು “ಅನ್ಯರು” ಎಂದು ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆರಾಮ್, ಅನ್ಯನು, ಗ್ರೀಸ್, ಇಬ್ರಿಯ, ರೋಮಾ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H3125, G16720, G16730, G16740, G16750, G16760
ಗ್ರೀಸ್, ಗ್ರೀಕರು
ಸತ್ಯಾಂಶಗಳು:
ಹೊಸ ಒಡಂಬಡಿಕೆಯ ಕಾಲದಲ್ಲಿ, ಗ್ರೀಸ್ ರೋಮಾ ಸಾಮ್ರಾಜ್ಯದ ಸಂಸ್ಥಾನವಾಗಿತ್ತು.
- ಪ್ರಸ್ತುತ ಕಾಲದ ಗ್ರೀಸ್ಅಂತೆ, ಅದು ಮೆಡಿಟರೇನಿಯನ್ ಸಮುದ್ರ, ಏಜಿಯನ್ ಸಮುದ್ರ ಮತ್ತು ಅಯೋನಿ ಸಮುದ್ರಗಳ ಪರ್ಯಾಯ ದ್ವೀಪವಾಗಿತ್ತು (ಪೆನೆನ್ಸುಲ).
- ಗ್ರೀಸ್ನಲ್ಲಿದ್ದ ಅನೇಕ ಪ್ರಾಂತ್ಯಗಳನ್ನು ಅಪೊಸ್ತಲನಾದ ಪೌಲನು ಸಂದರ್ಶಿಸಿದನು ಮತ್ತು ಕೊರಿಂಥ, ಥೆಸಲೋನಿಕ, ಫಿಲಿಪ್ಪ ಪಟ್ಟಣಗಳಲ್ಲಿ ಹಾಗೂ ಬೇರೆ ಪ್ರಾಂತ್ಯಗಳಲ್ಲಿ ಸಹ ಸಭೆಗಳನ್ನು ಸ್ಥಾಪಿಸಿದನು.
- ಗ್ರೀಸ್ ದೇಶದವರನ್ನು “ಗ್ರೀಕರು” ಎಂದು ಕರೆಯುತ್ತಾರೆ ಮತ್ತು “ಗ್ರೀಕ್” ಅವರು ಮಾತಾಡುವ ಭಾಷೆಯಾಗಿರುತ್ತದೆ. ಅನೇಕವಾದ ರೋಮಾ ಸಂಸ್ಥಾನಗಳಲ್ಲಿ ಗ್ರೀಕ್ ಭಾಷೆ ಮಾತಾಡುತ್ತಿದ್ದರು, ಅವರಲ್ಲಿ ಯಹೂದಿಯರು ಸಹ ಇದ್ದರು.
- ಕೆಲವೊಮ್ಮೆ “ಗ್ರೀಕ್” ಎನ್ನುವ ಪದವನ್ನು ಅನ್ಯರಿಗೆ ಸೂಚಿಸಲು ಉಪಯೋಗಿಸಲಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕೊರಿಂಥ, ಅನ್ಯರು, ಗ್ರೀಕ್, ಇಬ್ರಿ, ಫಿಲಿಪ್ಪಿ, ಥೆಸಲೋನಿಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3120, G1671
ಚಿದ್ಕೀಯ
ಸತ್ಯಾಂಶಗಳು:
ಚಿದ್ಕೀಯನು ಯೋಷೀಯ ಮಗನಾಗಿರುತ್ತಾನೆ, ಇವನು ಯೆಹೂದ್ಯ ಕೊನೆಯ ಅರಸನಾಗಿದ್ದನು (ಕ್ರಿ.ಪೂ.597-587). ಹಳೇ ಒಡಂಬಡಿಕೆಯಲ್ಲಿ ಚಿದ್ಕೀಯ ಎನ್ನುವ ಹೆಸರಿನ ಮೇಲೆ ಅನೇಕ ಜನರಿದ್ದಾರೆ.
- ಅರಸನಾದ ನೆಬುಕದ್ನೆಚ್ಚರನು ಅರಸನಾದ ಯೆಹೋಯಾಕೀನನನ್ನು ವಶಪಡಿಸಿಕೊಂಡನಂತರ ಮತ್ತು ಬಾಬೆಲೋನಿಯಾದಿಂದ ಅವನನ್ನು ಹೊರಗೆ ಕರೆದುಕೊಂಡು ಹೋದಾಗ ಯೆಹೂದಕ್ಕೆ ಚಿದ್ಕೀಯನನ್ನು ಅರಸನನ್ನಾಗಿ ಮಾಡಿದನು. ಚಿದ್ಕೀಯನು ಕೊನೆಗೆ ಎದುರುಬಿದ್ದನು, ಇದಕ್ಕೆ ಫಲಿತಾಂಶವಾಗಿ ನೆಬುಕದ್ನೆಚ್ಚರನು ಅವನನ್ನು ವಶಪಡಿಸಿಕೊಂಡು, ಯೆರೂಸಲೇಮೆಲ್ಲವನ್ನು ನಾಶಗೊಳಿಸಿದನು.
- ಚಿದ್ಕೀಯ ಎನ್ನುವ ಹೆಸರಿನ ಇನ್ನೊಬ್ಬ ಕಾನಾನನ ಮಗನಾಗಿದ್ದನು, ಇವನು ಇಸ್ರಾಯೇಲ್ ಅರಸನಾದ ಆಹಾಬನ ಕಾಲದಲ್ಲಿ ಸುಳ್ಳು ಪ್ರವಾದಿಯಾಗಿದ್ದನು.
- ಚಿದ್ಕೀಯ ಎನ್ನುವ ಹೆಸರಿನ ಮನುಷ್ಯನು ನೆಹೆಮೀಯನ ಕಾಲದಲ್ಲಿ ಕರ್ತನೊಂದಿಗೆ ಒಪ್ಪಂದ ಮಾಡಿದವರಲ್ಲಿ ಒಬ್ಬನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಬಾಬೆಲೋನಿಯ, ಇಸ್ರಾಯೇಲ್ ರಾಜ್ಯ, ಲವಯೆಹೋಯಾಕೀನ್, ಯೆರೆಮೀಯ, ಯೋಷಿಯ, ಯೆಹೂದ, ನೆಬುಕದ್ನೆಚ್ಚರ, ನೆಹೆಮೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6667
ಚೆಫನ್ಯ
ಸತ್ಯಾಂಶಗಳು:
ಚೆಫನ್ಯನು ಕೂಷಿಯನ ಮಗನಾಗಿದ್ದನು, ಈತನು ಅರಸನಾದ ಯೋಷೀಯನ ಕಾಲದಲ್ಲಿ ಪ್ರವಾದಿಸಿದ್ದನು ಮತ್ತು ಯೆರೂಸಲೇಮಿನಲ್ಲಿ ನಿವಾಸವಾಗಿದ್ದ ಪ್ರವಾದಿ. ಈತನು ಯೆರೆಮೀಯ ಕಾಲದಲ್ಲಿ ಜೀವಿಸಿದ ವ್ಯಕ್ತಿಯಾಗಿದ್ದನು.
- ಈತನು ಯೆಹೂದ್ಯ ಜನರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದ್ದಕ್ಕಾಗಿ ಅವರನ್ನು ಎಚ್ಚರಿಸಿದ ವ್ಯಕ್ತಿಯಾಗಿದ್ದನು. ಈತನ ಎಲ್ಲಾ ಪ್ರವಾದನೆಗಳು ಹಳೇ ಒಡಂಬಡಿಕೆಯಲ್ಲಿ ಚೆಫನ್ಯ ಗ್ರಂಥದಲ್ಲಿ ಬರೆಯಲ್ಪಟ್ಟಿವೆ.
- ಚೆಫನ್ಯ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ವ್ಯಕ್ತಿಗಳಿದ್ದಾರೆ, ಅವರಲ್ಲಿ ಯಾಜಕರೇ ಹೆಚ್ಚಿನವರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಯೆರೆಮೀಯ, ಯೋಷೀಯ, ಯಾಜಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6846
ಚೋಗರ
ಸತ್ಯಾಂಶಗಳು:
ಚೋಗರ ಎನ್ನುವುದು ಒಂದು ಚಿಕ್ಕ ಪಟ್ಟಣ, ದೇವರು ಸೊದೊಮ್ ಮತ್ತು ಗೊಮೋರಗಳನ್ನು ನಾಶಗೊಳಿಸಿದಾಗ ಲೋಟನು ಹೊರಟು ಹೋಗಿ ನಿವಾಸ ಮಾಡಿದ ಊರಾಗಿತ್ತು.
- ಇದು ಸಂಪ್ರದಾಯಿಕವಾಗಿ ಬೇಲ ಎಂದು ಕರೆಯಲ್ಪಡುತ್ತದೆ, ಆದರೆ ಇದಕ್ಕೆ “ಚೋಗರ’ ಎಂದು ಮರು ಹೆಸರು ಇಡಲಾಗಿರುತ್ತದೆ, ದೇವರು ಈ ಚಿಕ್ಕ ಪಟ್ಟಣವನ್ನು ಬಿಟ್ಟುಬಿಡು ಎಂದು ಲೋಟನು ದೇವರಲ್ಲಿ ಕೇಳಿಕೊಂಡಿದ್ದನು.
- ಚೋಗರ ಎನ್ನುವ ಪಟ್ಟಣವು ಯೊರ್ದನ್ ಹೊಳೆಯ ಬಯಲಿನಲ್ಲಿದ್ದಿತ್ತೆಂದು ಹೇಳಿಕೆ ಇದೆ ಅಥವಾ ಮೃತ ಸಮುದ್ರದ ದಕ್ಷಿಣ ಕೊನೆಯ ಭಾಗದಲ್ಲಿ ಕಂಡುಬರುತ್ತಿರಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಲೋಟ, ಸೊದೊಮ್, ಗೊಮೋರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6820
ಜಕ್ಕಾಯ
ಸತ್ಯಾಂಶಗಳು:
ಜಕ್ಕಾಯ ಎನ್ನುವ ವ್ಯಕ್ತಿ ಅನೇಕ ಸಮೂಹಗಳ ಮಧ್ಯೆದಲ್ಲಿರುವ ಯೇಸುವನ್ನು ನೋಡುವುದಕ್ಕೆ ಮರವನ್ನು ಹತ್ತಿದ ಯೆರಿಕೋ ಪಟ್ಟಣದಿಂದ ಬಂದ ಸುಂಕ ವಸೂಲಿ ಮಾಡುವವನಾಗಿದ್ದನು,
- ಜಕ್ಕಾಯನು ಯೇಸುವಿನ ನಂಬಿದಾಗ ಸಂಪೂರ್ಣವಾಗಿ ಮಾರ್ಪಾಟು ಹೊಂದಿದನು.
- ಇವನು ಜನರನ್ನು ಮೋಸಗೊಳಿಸ ಪಾಪದ ವಿಷಯದಲ್ಲಿ ಪಶ್ಚಾತ್ತಾಪವನ್ನು ಹೊಂದಿ, ಬಡವರಿಗೆ ತನ್ನ ಆಸ್ತಿಪಾಸ್ತಿಗಳಲ್ಲಿ ಅರ್ಧಭಾಗವನ್ನು ಕೊಡುವುದಕ್ಕೆ ವಾಗ್ಧಾನ ಮಾಡಿದ್ದನು.
- ಇವನು ಜನರು ಕಟ್ಟಬೇಕಾದ ಸುಂಕಗಳಿಗಿಂತ ಹೆಚ್ಚಾದ ಹಣವನ್ನು ಮಾಡಿದ್ದಕ್ಕಾಗಿ, ಅವರು ಕೊಟ್ಟಿರುವ ಹಣಕ್ಕೆ ನಾಲ್ಕುರಷ್ಟು ಹೆಚ್ಚಾಗಿ ಜನರಿಗೆ ಹಿಂದಿರುಗಿಸುತ್ತೇನೆಂದು ಆತನು ವಾಗ್ಧಾನ ಮಾಡಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಂಬು, ವಾಗ್ಧಾನ, ಪಶ್ಚಾತ್ತಾಪಪಡು, ಪಾಪ, ಸುಂಕ, ಸುಂಕ ವಸೂಲಿಗ,)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2195
ಜೆಕರ್ಯ (ಹಳೇ ಒಡಂಬಡಿಕೆ)
ಸತ್ಯಾಂಶಗಳು:
ಜೆಕರ್ಯ ಎನ್ನುವ ವ್ಯಕ್ತಿ ಪಾರಸಿಯ ಅರಸನಾಗಿರುವ ದಾರ್ಯಾವೇಷನ ಆಳ್ವಿಕೆಯಲ್ಲಿ ಪ್ರವಾದಿಸಿದ ಪ್ರವಾದಿಯಾಗಿದ್ದನು. ಹಳೇ ಒಡಂಬಡಿಕೆಯಲ್ಲಿರುವ ಜೆಕರ್ಯ ಪುಸ್ತಕದಲ್ಲಿ ಈತನ ಪ್ರವಾದನೆಗಳೆಲ್ಲವು ಒಳಗೊಂಡಿರುತ್ತವೆ, ದೇವಾಲಯವನ್ನು ತಿರುಗಿ ಕಟ್ಟುವುದಕ್ಕೆ ಸೆರೆಯಿಂದ ಬಂದಿರುವವರನ್ನು ಬೇಡುವ ಮಾತುಗಳನ್ನು ಈ ಪುಸ್ತಕದಲ್ಲಿ ನೋಡಬಹುದು.
- ಪ್ರವಾದಿಯಾದ ಜೆಕರ್ಯನು ಎಜ್ರಾ, ನೆಹೆಮೀಯ, ಜೆರುಬ್ಬಾಬೆಲ್ ಮತ್ತು ಹಗ್ಗಾಯರ ಕಾಲದಲ್ಲಿಯೇ ಜೀವಿಸಿದ್ದನು. ಹಳೇ ಒಡಂಬಡಿಕೆಯ ಕಾಲದಲ್ಲಿ ಪ್ರವಾದಿಗಳಲ್ಲಿ ಕೊನೆಯದಾಗಿ ಹತ್ಯೆಗೆ ಗುರಿಯಾದ ಪ್ರವಾದಿಯಾಗಿದ್ದನೆಂದು ಯೇಸು ಹೇಳಿದ್ದನು.
- ದಾವೀದನ ಕಾಲದಲ್ಲಿ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ಕಾವಲುಗಾರನಿಗೂ ಜೆಕರ್ಯ ಎನ್ನುವ ಹೆಸರಿದ್ದಿತ್ತು.
- ಅರಸನಾದ ಯೆಹೋಷಾಫಾಟನ ಮಕ್ಕಳಲ್ಲಿ ಒಬ್ಬನಿಗೆ ಜೆಕರ್ಯ ಎನ್ನುವ ಹೆಸರು ಇದ್ದಿತ್ತು, ಇವನು ತನ್ನ ತಮ್ಮನಾದ ಯೆಹೋರಾಮನಿಂದ ಸಾವಿಗೆ ಗುರಿಯಾಗಿದ್ದನು.
- ಜೆಕರ್ಯ ಎನ್ನುವ ಹೆಸರಿನ ಮೇಲೆ ಯಾಜಕನಿದ್ದನು, ಇವನು ಇಸ್ರಾಯೇಲ್ಯರನ್ನು ತಾವು ಮಾಡುತ್ತಿರುವ ವಿಗ್ರಹಾರಾಧನೆಯ ತಪ್ಪಿಗಾಗಿ ಗದರಿಸಿದ್ದರಿಂದ, ಅವರು ಅವನನ್ನು ಕಲ್ಲುಗಳಿಂದ ಹೊಡೆದು ಸಾಯಿಸಿದ್ದರು.
- ಅರಸನಾದ ಜೆಕರ್ಯ ಯಾರೊಬ್ಬಾಮನ ಮಗನಾಗಿದ್ದನು, ಇವನು ತನ್ನ ಮರಣಿಸುವುದಕ್ಕೆ ಮುಂಚಿತವಾಗಿ ಕೇವಲ ಆರು ತಿಂಗಳು ಇಸ್ರಾಯೇಲ್ಯರನ್ನು ಪಾಲಿಸಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ದಾರ್ಯಾವೇಷ, ಎಜ್ರಾ, ಯೆಹೋಷಾಫಾಟ, ಯಾರೊಬ್ಬಾಮ, ನೆಹೆಮೀಯ, ಜೆರುಬ್ಬಾಬೆಲ್,)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2148
ಜೆಕರ್ಯ (ಹೊಸ ಒಡಂಬಡಿಕೆ)
ಸತ್ಯಾಂಶಗಳು:
ಹೊಸ ಒಡಂಬಡಿಕೆಯಲ್ಲಿ ಜೆಕರ್ಯ ಎನ್ನುವ ವ್ಯಕ್ತಿ ಯೆಹೂದ್ಯ ಯಾಜಕನಾಗಿದ್ದನು, ಈತನು ಸ್ನಾನಿಕನಾದ ಯೋಹಾನನಿಗೆ ತಂದೆಯಾಗಿದ್ದನು.
- ಜೆಕರ್ಯ ದೇವರನ್ನು ಪ್ರೀತಿಸಿದ್ದನು ಮತ್ತು ಆತನಿಗೆ ವಿಧೇಯನಾಗಿದ್ದನು.
- ಅನೇಕ ವರ್ಷಗಳ ಕಾಲ ಜೆಕರ್ಯ ಮತ್ತು ತನ್ನ ಹೆಂಡತಿಯಾದ ಎಲೀಸಬೇತಳು ಮಗುವಾಗಿ (ಸಂತಾನಕ್ಕಾಗಿ) ನಿರಂತರವಾಗಿ ಪ್ರಾರ್ಥನೆ ಮಾಡಿದ್ದರು, ಆದರೆ ಅವರಿಗೆ ಸಂತಾನವಾಗಿದ್ದಿಲ್ಲ. ಆದನಂತರ ಅವರು ತುಂಬಾ ವೃದ್ಧಾಪ್ಯ ಸ್ಥಿತಿಗೆ ಬಂದಾಗ, ದೇವರು ಅವರ ಪ್ರಾರ್ಥನೆಗಳನ್ನು ಕೇಳಿಸಿಕೊಂಡು, ಅವರಿಗೆ ಮಗುವನ್ನು ಅನುಗ್ರಹಿಸಿದನು.
- ಜೆಕರ್ಯನು ತನ್ನ ಮಗನು ಮೆಸ್ಸೀಯನಿಗಾಗಿ ಮಾರ್ಗವನ್ನು ಸಿದ್ಧಪಡಿಸುವ ಮತ್ತು ಪ್ರಕಟಿಸುವ ಪ್ರವಾದಿಯಾಗುತ್ತಾನೆಂದು ಪ್ರವಾದಿಸಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಎಲೀಸಬೆತ್, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 22:01 ಆಕಸ್ಮಿಕವಾಗಿ ದೇವರಿಂದ ಸಂದೇಶವನ್ನು ಪಡೆದುಕೊಂಡು ದೇವದೂತ __ ಜೆಕರ್ಯ __ ಎನ್ನುವ ವೃದ್ಧ ಪ್ರವಾದಿಯ ಬಳಿಗೆ ಬಂದನು. __ ಜೆಕರ್ಯ __ ಮತ್ತು ತನ್ನ ಹೆಂಡತಿ ಎಲೀಸಬೇತಳು ದೈವಿಕ ಜನರಾಗಿದ್ದರು, ಆದರೆ ಆಕೆಗೆ ಮಕ್ಕಳಾಗಿರಲಿಲ್ಲ.
- 22:02 “ನಿನ್ನ ಹೆಂಡತಿ ಗಂಡು ಮಗುವನ್ನು ಹೆತ್ತುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು” ಎಂದು ದೂತ __ ಜೆಕರ್ಯನಿಗೆ __ ಹೇಳಿದನು.
- 22:03 ಆಕಸ್ಮಿಕವಾಗಿ ___ ಜೆಕರ್ಯನಿಗೆ ___ ಮಾತುಗಳು ನಿಂತುಹೋದವು (ಮೂಕನಾದನು).
- 22:07 ___ ಜೆಕರ್ಯನು ___ ತಿರುಗಿ ಮಾತನಾಡುವುದಕ್ಕೆ ದೇವರು ಅನುಮತಿ ನೀಡಿದನು.
ಪದ ಡೇಟಾ:
- Strong's: G2197
ಜೆಬುಲೋನ
ಸತ್ಯಾಂಶಗಳು:
ಜೆಬುಲೋನ ಎನ್ನುವ ವ್ಯಕ್ತಿ ಯಾಕೋಬನಿಗೆ ಹುಟ್ಟಿದ ಕೊನೆಯ ಮಗನಾಗಿದ್ದನು ಮತ್ತು ಇಸ್ರಾಯೇಲಿನ ಹನ್ನೆರಡು ಕುಲಗಳಲ್ಲಿ ಈ ಹೆಸರು ಒಂದಾಗಿರುತ್ತದೆ.
- ಜೆಬುಲೋನ ಇಸ್ರಾಯೇಲ್ ಕುಲಕ್ಕೆ ಲವಣ ಸಮುದ್ರದ ಪಶ್ಚಿಮ ಭಾಗದಲ್ಲಿರುವ ಭೂಭಾಗವನ್ನು ನೇರವಾಗಿ ಕೊಡಲ್ಪಟ್ಟಿರುತ್ತದೆ.
- ಕೆಲವೊಂದುಬಾರಿ “ಜೆಬುಲೋನ” ಎನ್ನುವ ಹೆಸರು ಈ ಇಸ್ರಾಯೇಲ್ ಕುಲವು ನಿವಾಸವಾಗಿರುವ ಸ್ಥಳವನ್ನು ಅಥವಾ ಭೂಮಿಯನ್ನು ಸೂಚಿಸುವುದಕ್ಕೆ ಕೂಡ ಉಪಯೋಗಿಸಲ್ಪಟ್ಟಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ಲೇಯಾ, ಲವಣ ಸಮುದ್ರ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2074, H2075, G2194
ಜೆಬೆದಾಯ
ಸತ್ಯಾಂಶಗಳು:
ಜೆಬೆದಾಯ ಎನ್ನುವ ವ್ಯಕ್ತಿ ಗಲಿಲಾಯದ ಬೆಸ್ತನಾಗಿದ್ದನು, ಇವನು ತನ್ನ ಇಬ್ಬರು ಗಂಡು ಮಕ್ಕಳಾಗಿರುವ ಅಂದರೆ ಯೇಸುವಿನ ಶಿಷ್ಯರಾಗಿರುವ ಯಾಕೋಬ ಮತ್ತು ಯೋಹಾನ ಮೂಲಕ ಪರಿಚಿತನಾಗಿರುತ್ತಾನೆ. ಅವರಿಬ್ಬರನ್ನು ಹೊಸ ಒಡಂಬಡಿಕೆಯಲ್ಲಿ “ಜೆಬೆದಾಯನ ಮಕ್ಕಳು” ಎಂಬುದಾಗಿ ಗುರುತಿಸಲ್ಪಟ್ಟಿರುತ್ತಾರೆ.
- ಜೆಬೆದಾಯನ ಮಕ್ಕಳು ಕೂಡ ಬೆಸ್ತರಾಗಿದ್ದರು ಮತ್ತು ಮೀನುಗಳನ್ನು ಹಿಡಿಯುವುದಕ್ಕೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು.
- ಯಾಕೋಬ ಮತ್ತು ಯೋಹಾನರು ತನ್ನ ತಂದೆಯೊಂದಿಗೆ ಮೀನುಗಳನ್ನು ಹಿಡಿಯುವ ಕೆಲಸವನ್ನು ಬಿಟ್ಟು, ಯೇಸುವನ್ನು ಹಿಂಬಾಲಿಸುವುದಕ್ಕೆ ಹೋದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಶಿಷ್ಯ, ಬೆಸ್ತರು ಮೀನುಗಾರರು, ಯಾಕೋಬ ಜೆಬೆದಾಯನ ಮಗ, ಯೋಹಾನ ಅಪೊಸ್ತಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2199
ಜೆರುಬ್ಬಾಬೆಲ್
ಸತ್ಯಾಂಶಗಳು:
ಜೆರುಬ್ಬಾಬೆಲ್ ಎಂಬುವುದು ಹಳೇ ಒಡಂಬಡಿಕೆಯಲ್ಲಿ ಇಬ್ಬರು ಇಸ್ರಾಯೇಲ್ ಪುರುಷರ ಹೆಸರು.
- ಇವರಲ್ಲಿ ಒಬ್ಬರು ಚಿದ್ಕೀಯ ಮತ್ತು ಯೆಹೋಯಾಕಿಮರ ಸಂತಾನದವನು.
- ಇನ್ನೊಬ್ಬ ಜೆರುಬ್ಬಾಬೆಲ್ ಶಯೇಲ್ತೀಯೇಲ್ ಮಗನಾಗಿರುತ್ತಾನೆ, ಇವನು ಪಾರಸಿಯ ಅರಸನಾದ ಕೋರೆಷನು ಇಸ್ರಾಯೇಲ್ಯರನ್ನು ತಮ್ಮ ಬಾಬೆಲೋನಿಯ ಸೆರೆಯಿಂದ ಬಿಡುಗಡೆ ಮಾಡಿದಾಗ, ಎಜ್ರಾ ಮತ್ತು ನೆಹೆಮೀಯ ಕಾಲದಲ್ಲಿ ಯೆಹೂದ್ಯ ಕುಲಕ್ಕೆ ನಾಯಕನಾಗಿದ್ದನು,
- ಜೆರುಬ್ಬಾಬೆಲ್ ಮತ್ತು ಮಹಾ ಯಾಜಕನಾಗಿರುವ ಯೆಹೋಶುವನು ಅವರಲ್ಲಿದ್ದು ದೇವರ ಯಜ್ಞವೇದಿಯನ್ನು ಮತ್ತು ದೇವಾಲಯವನ್ನು ತಿರುಗಿ ನಿರ್ಮಿಸುವುದರಲ್ಲಿ ಸಹಾಯ ಮಾಡಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಸೆರೆ, ಕೋರೆಷ, ಎಜ್ರಾ, ಮಹಾ ಯಾಜಕ, ಯೆಹೋಯಾಕೀಮ, ಯೆಹೋಶುವ, ಯೆಹೂದ, ನೆಹೆಮೀಯ, ಪಾರಸಿಯ, ಚಿದ್ಕೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2216, H2217, G2216
ಜೊಂಡುಗಳ ಸಮುದ್ರ, ಕೆಂಪು ಸಮುದ್ರ
ಸತ್ಯಾಂಶಗಳು:
“ಜೊಂಡುಗಳ ಸಮುದ್ರ” ಎನ್ನುವುದು ಐಗುಪ್ತ ಮತ್ತು ಅರೇಬಿಯಾ ಮಧ್ಯೆದಲ್ಲಿರುವ ನೀರಿನ ಭಾಗದ ಹೆಸರಾಗಿರುತ್ತದೆ. ಈಗ ಇದನ್ನು “ಕೆಂಪು ಸಮುದ್ರ” ಎಂದು ಕರೆಯುತ್ತಿದ್ದಾರೆ.
- ಕೆಂಪು ಸಮುದ್ರವು ತುಂಬಾ ಉದ್ದವಾಗಿದ್ದು ಮತ್ತು ಇಕ್ಕಟ್ಟಾಗಿರುತ್ತದೆ. ಇದು ಒಂದು ಕೆರೆಗಿಂತ ಅಥವಾ ನದಿಗಿಂತ ದೊಡ್ಡದಾಗಿರುತ್ತದೆ, ಆದರೆ ಒಂದು ಸಾಗರಕ್ಕಿಂತ ತುಂಬಾ ಚಿಕ್ಕದಾಗಿರುತ್ತದೆ.
- ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾಗಿ ಬಂದಾಗ ಅವರು ಕೆಂಪು ಸಮುದ್ರವನ್ನು ದಾಟಿದ್ದರು. ದೇವರು ಅದ್ಭುತವನ್ನು ಮಾಡಿದ್ದರು ಮತ್ತು ಆ ಸಮುದ್ರದ ನೀರನ್ನು ಎರಡು ಭಾಗಗಳನ್ನಾಗಿ ಮಾಡಿದರು, ಇದರಿಂದ ಜನರು ಒಣ ನೆಲದ ಮೇಲೆ ನಡೆದು ಆ ಸಮುದ್ರವನ್ನು ದಾಟಿದರು.
- ಕಾನಾನ್ ದೇಶವು ಈ ಸಮುದ್ರದ ಉತ್ತರ ಭಾಗದಲ್ಲಿರುತ್ತದೆ.
- ಇದನ್ನು “ಜೊಂಡು ಸಮುದ್ರ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ: ಅರೇಬಿಯಾ. ಕಾನಾನ್, ಐಗುಪ್ತ)
ಸತ್ಯವೇದದ ವಾಕ್ಯಗಳು:
ಸತ್ಯವೇದದ ಕಥೆಗಳಿಂದ ಉದಾಹರಣೆಗಳು:
- 12:4 ಐಗುಪ್ತ ಸೈನ್ಯವು ಹಿಂದಟ್ಟಿ ಬರುತ್ತಿದೆಯೆಂದು ಇಸ್ರಾಯೇಲ್ಯರು ನೋಡಿದಾಗ, ಅವರು ಫರೋಹನ ಸೈನ್ಯದವರಿಂದಲೂ ಮತ್ತು __ ಕೆಂಪು ಸಮುದ್ರದಲ್ಲಿ __ ಸಿಕ್ಕಿ ಬೀಳುತ್ತೇವೆಂದು ತಿಳಿದಿದ್ದರು.
- __12:5 __ ಕೆಂಪು ಸಮುದ್ರದ __ "ಮೂಲಕ ಹಾದು ಹೋಗಬೇಕೆಂದು ಜನರಿಗೆ ಹೇಳು” __ಎಂದು ದೇವರು ಮೋಶೆಗೆ ಹೇಳಿದನು.
- 13:1 ದೇವರು ಇಸ್ರಾಯೇಲ್ಯರನ್ನು __ ಕೆಂಪು ಸಮುದ್ರದ __ ಮೂಲಕ ನಡೆಸಿದನಂತರ, ಆತನು ಅವರನ್ನು ಸೀನಾಯಿ ಎನ್ನುವ ಪರ್ವತದ ಕಡೆಗೆ ಅರಣ್ಯದ ಮೂಲಕ ನಡೆಸಿದನು.
ಪದ ಡೇಟಾ:
- Strong's: H3220, H5488, G20630, G22810
ತಾಮಾರ
ಸತ್ಯಾಂಶಗಳು:
ತಾಮಾರ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ಸ್ತ್ರೀಯರಿದ್ದಾರೆ. ಈ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕ ಪಟ್ಟಣಗಳಿವೆ ಅಥವಾ ಅನೇಕ ಸ್ಥಳಗಳಿವೆ.
ತಾಮಾರಳು ಯೆಹೂದ ಸೊಸೆಯಾಗಿದ್ದಳು. ಈಕೆ ಯೇಸುವಿನ ಪೂರ್ವಜನಾಗಿರುವ ಪೆರೆಚನಿಗೆ ಜನನವನ್ನು ಕೊಟ್ಟಿದ್ದಳು.
- ಅರಸನಾದ ದಾವೀದನ ಹೆಣ್ಣು ಮಕ್ಕಳಲ್ಲಿ ತಾಮಾರಳೆನ್ನುವವಳು ಇದ್ದಳು; ಈಕೆ ಅಬ್ಷಾಲೋಮನ ಸಹೋದರಿಯಾಗಿದ್ದಳು. ತನ್ನ ಸಹೋದರ ಅಮ್ನೋನನು ಆಕೆಯನ್ನು ಮಾನಭಂಗ ಮಾಡಿದ್ದನು ಮತ್ತು ಆಕೆಯನ್ನು ಒಬ್ಬಂಟಿಯಾಗಿರಲು ಬಿಟ್ಟು ಬಿಟ್ಟಿದ್ದನು.
- ಅಬ್ಷಾಲೋಮನಿಗೆ ತಾಮಾರ ಎನ್ನುವ ಹೆಸರಿನ ಮೇಲೆ ಮಗಳಿದ್ದಿದ್ದಳು.
- “ಹಚಚೋನ್ ತಾಮಾರ್” ಎಂದು ಕರೆಯಲ್ಪಡುವ ಪಟ್ಟಣವು ಲವಣ ಸಮುದ್ರದ ದಡೆಯಲ್ಲಿರುವ ಪಶ್ಚಿಮ ಭಾಗದಲ್ಲಿರುವ ಎಂಗೆದೀ ಪಟ್ಟಣವು ಒಂದೇಯಾಗಿದ್ದಿತ್ತು. “ಬಾಳ್ ತಾಮಾರ್” ಎನ್ನುವುದೂ ಇದೆ, ಮತ್ತು “ತಾಮಾರ್” ಎಂದು ಕರೆಯಲ್ಪಡುವ ಸ್ಥಳಕ್ಕೆ ಸಾಧಾರಣವಾಗಿ ಪಟ್ಟಣಗಳಿಂದ ವಿಭಿನ್ನವಾಗಿ ಕರೆಯುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಪೂರ್ವಜ, ಅಮ್ನೋನ್, ದಾವೀದ, ಪೂರ್ವಜ, ಯೆಹೂದ, ಲವಣ ಸಮುದ್ರ)
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1193, H2688, H8412, H8559
ತಾರ್ಷಿಷ್
ಸತ್ಯಾಂಶಗಳು:
ತಾರ್ಷಿಷ್ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ. ಮತ್ತು ಈ ಹೆಸರಿನ ಮೇಲೆ ಒಂದು ಪಟ್ಟಣವೂ ಇರುತ್ತದೆ.
- ಯೆಫೆತ್ ಮೊಮ್ಮೊಕ್ಕಳಲ್ಲಿ ತಾರ್ಷಿಷ್ ಒಬ್ಬನಾಗಿದ್ದನು.
- ಅರಸನಾದ ಅಹಷ್ವೆರೋಷನ ಬಳಿಯಿರುವ ಜ್ಞಾನಿಗಳಲ್ಲಿ ತಾರ್ಷಿಷನು ಒಬ್ಬನಾಗಿದ್ದನು.
- ತಾರ್ಷಿಷ್ ಪಟ್ಟಣವು ಅತೀ ಹೆಚ್ಚಾಗಿ ಅಭಿವೃದ್ಧಿ ಹೊಂದಿದ ಬಂದರು ಪಟ್ಟಣವಾಗಿದ್ದಿತ್ತು, ಆಲ್ಲಿರುವ ಹಡಗುಗಳು ಬೆಲೆಯುಳ್ಳ ವಸ್ತುಗಳನ್ನು ಕೊಂಡುಕೊಳ್ಳಲು, ಮಾರಲು ಅಥವಾ ವ್ಯಾಪಾರ ಮಾಡಲು ನಡೆಸಲ್ಪಡುತ್ತಿದ್ದವು.
- ತೂರ್ ಪಟ್ಟಣದೊಂದಿಗೆ ಈ ಪಟ್ಟಣವು ಸಹಕಾರದಲ್ಲಿದ್ದಿತ್ತು ಮತ್ತು ಇಸ್ರಾಯೇಲಿನಿಂದ ಸ್ವಲ್ಪ ದೂರದಲ್ಲಿರುವ ಸಮುದ್ರ ದಡೆಯಲ್ಲಿರುವ ಪಟ್ಟಣ ಎಂದು ಆಲೋಚನೆ ಮಾಡುತ್ತಿದ್ದರು, ಬಹುಶಃ ಸ್ಪೇನ್ ದಕ್ಷಿಣ ಕರಾವಳಿ ಪ್ರಾಂತ್ಯ ಎಂದು ಕರೆಯುತ್ತಿರಬಹುದು.
- ಹಳೇ ಒಡಂಬಡಿಕೆ ಪ್ರವಾದಿಯಾದ ಯೋನನು ದೇವರ ಆಜ್ಞೆಯ ಪ್ರಕಾರ ನಿನೆವೆಗೆ ಹೋಗಿ ಸುವಾರ್ತೆಯನ್ನು ಪ್ರಕಟಿಸುವುದಕ್ಕೆ ವಿಧೇಯತೆ ತೋರಿಸುವುದರ ಬದಲಾಗಿ ತಾರ್ಷಿಷ್ ಪಟ್ಟಣಕ್ಕೆ ಹೋಗುತ್ತಿರುವ ಹಡಗಿನ ಮೇಲೆ ಪ್ರಯಾಣ ಮಾಡಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎಸ್ತೇರಳು, ಯೆಫೆತ್, ಯೋನ, ನಿನೆವೆ, ಪೊಯಿನಿಕೆ, ಜೋಯಿಸರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8659
ತಾರ್ಸ
ಸತ್ಯಾಂಶಗಳು:
ತಾರ್ಸ ಎನ್ನುವುದು ಕಿಲಿಕ್ಯ ರೋಮಾ ಸೀಮೆಯಲ್ಲಿನ ಅಭಿವೃದ್ಧಿ ಹೊಂದಿದ ಪಟ್ಟಣವಾಗಿದ್ದಿತ್ತು, ಇದೀಗ ದಕ್ಷಿಣ ಕೇಂದ್ರ ಟರ್ಕಿಯಾಗಿ ಕರೆಯಲ್ಪಡುತ್ತಿದೆ.
- ತಾರ್ಸ ಎನ್ನುವ ಈ ಪಟ್ಟಣವು ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿ ಮತ್ತು ದೊಡ್ಡ ನದಿಯ ಬದಿಯಲ್ಲಿ ಕಂಡುಬರುತ್ತದೆ, ಇದು ಅತೀ ಪ್ರಾಮುಖ್ಯವಾದ ವ್ಯಾಪಾರ ಮಾರ್ಗದಲ್ಲಿ ಭಾಗವಾಗಿರುತ್ತದೆ.
- ಒಂದುಬಾರಿ ಇದು ಕಿಲಿಕ್ಯ ರಾಜಧಾನಿಯ ಭಾಗವಾಗಿದ್ದಿತ್ತು.
- ಹೊಸ ಒಡಂಬಡಿಕೆಯಲ್ಲಿ ತಾರ್ಸ ಎನ್ನುವುದು ಅಪೊಸ್ತಲನಾದ ಪೌಲನ ಊರು ಎಂಬುದಾಗಿ ಪ್ರಸಿದ್ಧವಾಗಿದ್ದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಿಲಿಕ್ಯ, ಪೌಲ, ಸೀಮೆ, ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G5018, G5019
ತಿಮೊಥೆ
ಸತ್ಯಾಂಶಗಳು:
ತಿಮೊಥೆ ಎನ್ನುವ ವ್ಯಕ್ತಿ ಲೂಸ್ತ್ರ ಎನ್ನುವ ಪಟ್ಟಣದ ಯೌವನಸ್ಥನಾಗಿದ್ದನು. ಸ್ವಲ್ಪ ಕಾಲವಾದನಂತರ ಪೌಲನ ಸುವಾರ್ತೆ ಪ್ರಯಾಣಗಳಲ್ಲಿ ತನ್ನ ಜೊತೆಯಲ್ಲಿ ಸೇರಿದ್ದನು ಮತ್ತು ವಿಶ್ವಾಸಿಗಳ ಹೊಸ ಸಮುದಾಯಗಳಿಗೆ ಸಭಾಪಾಲಕನಾಗಿ ಕೆಲಸ ಮಾಡಿದನು.
- ತಿಮೊಥೆ ತಂದೆಯು ಗ್ರೀಕನಾಗಿದ್ದನು, ಆದರೆ ತನ್ನ ಅಜ್ಜಿ ಲೋವಿಯಳಾಗಿದ್ದಳು ಮತ್ತು ತನ್ನ ತಾಯಿ ಯೂನೀಕೆಯಳಾಗಿದ್ದಳು, ಇವರೆಲ್ಲರೂ ಯೆಹೂದ್ಯರು ಮತ್ತು ಕ್ರಿಸ್ತನಲ್ಲಿ ನಂಬಿಕೆ ಇಟ್ಟವರು.
- ಪೌಲನು ಮತ್ತು ಹಿರಿಯರು ತಿಮೊಥೆಯನ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು, ಅವನಿಗಾಗಿ ಪ್ರಾರ್ಥನೆ ಮಾಡುವುದರ ಮೂಲಕ ಸೇವೆಗಾಗಿ ನೇಮಿಸಿದರು.
- ಹೊಸ ಒಡಂಬಡಿಕೆಯಲ್ಲಿರುವ ಎರಡು ಪುಸ್ತಕಗಳು (I ತಿಮೊಥೆ ಮತ್ತು 2 ತಿಮೊಥೆ) ಅಥವಾ ಪತ್ರಿಕೆಗಳು ಸ್ಥಳೀಯ ಸಭೆಗಳ ಯೌವ್ವನ ನಾಯಕನಾಗಿ ತಿಮೊಥೆಗೆ ಮಾರ್ಗ ನಿರ್ದೇಶನ ಕೊಡುವುದಕ್ಕೆ ಪೌಲನು ತಿಮೊಥೆಗೆ ಬರೆದಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನೇಮಿಸು, ನಂಬು, ಸಭೆ, ಗ್ರೀಕ್, ಸೇವಕ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಥೆಸ್ಸ.03:1-3
- 1 ತಿಮೊಥೆ.01:1-2
- ಅಪೊ.ಕೃತ್ಯ.16:1-3
- ಕೊಲೊ.01:1-3
- ಫಿಲೆಮೋ.01:1-3
- ಫಿಲಿಪ್ಪಿ.01:1-2
- ಫಿಲಿಪ್ಪಿ.02:19-21
ಪದ ಡೇಟಾ:
- Strong's: G5095
ತಿರ್ಚಾ
ಸತ್ಯಾಂಶಗಳು:
ತಿರ್ಚಾ ಎನ್ನುವುದು ಇಸ್ರಾಯೇಲ್ಯರಿಂದ ವಶಪಡಿಸಿಕೊಂಡಿರುವ ತುಂಬಾ ಪ್ರಾಮುಖ್ಯವಾದ ಕಾನಾನ್ಯರ ಪಟ್ಟಣವಾಗಿದ್ದಿತ್ತು. ಇದಕ್ಕೆ ಮನಸ್ಸೆ ಸಂತಾನದವನಾಗಿರುವ ಗಿಲ್ಯಾದನ ಮಗಳ ಹೆಸರೂ ಇದ್ದಿತ್ತು.
- ತಿರ್ಚಾ ಪಟ್ಟಣವು ಮನಸ್ಸೆ ಕುಲದವರಿಂದ ವಶಪಡಿಸಿಕೊಂಡಿರುವ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಶೆಕೆಮ್ ಪಟ್ಟಣದ ಉತ್ತರ ಭಾಗದಿಂದ ಸುಮಾರು 10 ಮೇಲ್.ಗಳ ದೂರದಲ್ಲಿ ಈ ಪಟ್ಟಣವಿದ್ದಿರಬಹುದು.
- ಅನೇಕ ವರ್ಷಗಳಾದನಂತರ, ಇಸ್ರಾಯೇಲ್ಯರು ನಾಲ್ಕು ಮಂದಿ ಅರಸರು ಆಳುತ್ತಿರುವ ಕಾಲದಲ್ಲಿ ಇಸ್ರಾಯೇಲ್ ಉತ್ತರ ರಾಜ್ಯ ತಾತ್ಕಾಲಿಕ ರಾಜಧಾನಿ ಪಟ್ಟಣವಾಗಿ ತಿರ್ಚಾ ಇದ್ದಿತ್ತು.
- ತಿರ್ಚಾ ಎನ್ನುವ ಹೆಸರು ಮನಸ್ಸೆ ಹೆಣ್ಣು ಮೊಮ್ಮೊಕ್ಕಳ ಒಬ್ಬರ ಹೆಸರಾಗಿದ್ದಿತ್ತು. ಅವರ ತಂದೆ ಸತ್ತು ಹೋಗಿರುವುದರಿಂದ, ಸಾಂಪ್ರದಾಯಿಕವಾಗಿ ಸ್ವಾಸ್ಥ್ಯವನ್ನು ಹೊಂದಿಕೊಳ್ಳುವುದಕ್ಕೆ ಗಂಡು ಮಕ್ಕಳು ಇಲ್ಲದ ಕಾರಣದಿಂದ ಭೂಮಿಯಲ್ಲಿ ಒಂದು ಭಾಗವನ್ನು ತಮಗೆ ಕೊಡಬೇಕೆಂದು ಅವರು ಕೇಳಿಕೊಂಡರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಸ್ವಾಸ್ಥ್ಯ, ಇಸ್ರಾಯೇಲ್ ರಾಜ್ಯ, ಮನಸ್ಸೆ, ಶೆಕೆಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8656
ತೀತ
ಸತ್ಯಾಂಶಗಳು:
ತೀತನು ಅನ್ಯ ಮತದವನಾಗಿದ್ದನು. ಆದಿ ಸಭೆಗಳಲ್ಲಿ ನಾಯಕನಾಗಿರುವುದಕ್ಕೆ ಪೌಲನಿಂದ ತರಬೇತಿಯನ್ನು ಪಡೆದ ವ್ಯಕ್ತಿಯಾಗಿದ್ದನು.
- ಪೌಲನಿಂದ ತೀತನಿಗೆ ಬರೆಯಲ್ಪಟ್ಟ ಒಂದು ಪತ್ರಿಕೆಯು ಹೊಸ ಒಡಂಬಡಿಕೆಯ ಪುಸ್ತಕಗಳಲ್ಲಿ ಒಂದಾಗಿರುತ್ತದೆ.
- ಈ ಪತ್ರಿಕೆಯಲ್ಲಿ ಕ್ರೇತ ದ್ವೀಪದಲ್ಲಿರುವ ಸಭೆಗಳಿಗಾಗಿ ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಸೂಚನೆ ಕೊಡುತ್ತಿದ್ದಾನೆ.
- ಪೌಲನು ಕ್ರೈಸ್ತರಿಗೆ ಬರೆದ ಇತರ ಪತ್ರಿಕೆಗಳಲ್ಲಿ ತೀತನು ತನ್ನನ್ನು ಪ್ರೋತ್ಸಾಹಗೊಳಿಸಿದ್ದಾನೆಂದು ಮತ್ತು ತನಗೆ ಸಂತೋಷವನ್ನು ತೆಗೆದುಕೊಂಡು ಬಂದಿದ್ದಾನೆಂದು ಪೌಲನು ತೀತನ ಕುರಿತು ಹೇಳಿಕೊಂಡಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನೇಮಿಸು, ನಂಬು, ಸಭೆ, ಸುನ್ನತಿ, ಕ್ರೇತ, ಹಿರಿಯ, ಪ್ರೋತ್ಸಾಹ, ಸೂಚಿಸು, ಸೇವಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G5103
ತುಖಿಕ
ಸತ್ಯಾಂಶಗಳು:
ತುಖಿಕ ಎನ್ನುವ ವ್ಯಕ್ತಿ ಸುವಾರ್ತೆಯ ಸೇವೆಯಲ್ಲಿ ಪೌಲನ ಜೊತೆಗಾರರಲ್ಲಿ ಒಬ್ಬನಾಗಿದ್ದನು.
- ಆಸ್ಯಕ್ಕೆ ಪೌಲನು ಮಾಡಿದ ಸುವಾರ್ತೆಯ ಪ್ರಯಾಣಗಳಲ್ಲಿ ಕನಿಷ್ಟ ಒಂದರಲ್ಲಾದರೂ ತುಖಿಕನು ಪೌಲನ ಜೊತೆಯಲ್ಲಿದ್ದಿರುತ್ತಾನೆ.
- ಪೌಲನು ಈತನ ಕುರಿತು “ಪ್ರಿಯನೆಂದು” ಮತ್ತು “ನಂಬಿಗಸ್ತನೆಂದು” ವಿವರಿಸಿದ್ದಾನೆ.
- ತುಖಿಕನು ಪೌಲನ ಪತ್ರಿಕೆಗಳನ್ನು ಎಫೆಸ ಮತ್ತು ಕೊಲೊಸ್ಸೆ ಪಟ್ಟಣಗಳಿಗೆ ಹೊತ್ತಿಕೊಂಡು ಹೋಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಸ್ಯ, ಪ್ರಿಯ, ಕೊಲೊಸ್ಸೆ, ಎಫೆಸ, ವಿಶ್ವಾಸಾರ್ಹ, ಶುಭವಾರ್ತೆ, ಸೇವಕ)
ಸತ್ಯವೇದದ ಅನುಬಂಧ ವಾಕ್ಯಗಳು :
{{tag>publish ktlink}
ಪದ ಡೇಟಾ:
- Strong's: G5190
ತೂಬಲ್
ಸತ್ಯಾಂಶಗಳು:
“ತೂಬಲ್” ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ವ್ಯಕ್ತಿಗಳಿದ್ದಾರೆ.
- ತೂಬಲ್ ಎನ್ನುವ ಹೆಸರಿನ ಮೇಲಿರುವ ಒಬ್ಬ ವ್ಯಕ್ತಿ ಯೆಫೆತ್ ಮಕ್ಕಳಲ್ಲಿ ಒಬ್ಬನಾಗಿದ್ದನು.
- “ತೂಬಲ್-ಕಾಯಿನ” ಎನ್ನುವ ಹೆಸರನ್ನು ಹೊಂದಿರುವ ವ್ಯಕ್ತಿ ಕಾಯಿನನ ವಂಶಸ್ಥನು ಮತ್ತು ಲೇಮೆಕನ ಮಗನು ಆಗಿರುತ್ತಾನೆ.
- ತೂಬಲ್ ಎನ್ನುವುದು ಯೆಶಯಾ ಮತ್ತು ಯೆಹೆಜ್ಕೇಲರಿಂದ ದಾಖಲಿಸಿದ ಒಂದು ಜನರ ಗುಂಪಿನ ಹೆಸರಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾಯಿನ, ವಂಶಸ್ಥನು, ಯೆಹೆಜ್ಕೇಲ, ಯೆಶಯಾ, ಯೆಫೆತ್, ಲೇಮೆಕ್, ಜನರ ಗುಂಪು, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8422, H8423
ತೂರ್, ತೂರಿನವರು
ಸತ್ಯಾಂಶಗಳು:
ತೂರ್ ಎನ್ನುವುದು ಕಾನಾನಿನ ಪ್ರುರಾತನ ಪಟ್ಟಣವಾಗಿರುತ್ತದೆ, ಇದು ಆಧುನಿಕ ದೇಶವಾಗಿರುವ ಲೆಬಾನೋನಿನಲ್ಲಿರುವ ಪ್ರಾಂತ್ಯದಲ್ಲಿ ಮೆಡಿಟರೇನಿಯನ್ ಸಮುದ್ರದ ಕರಾವಳಿಯಲ್ಲಿ ಕಂಡುಬರುತ್ತದೆ. ಇದರಲ್ಲಿ ನಿವಾಸವಾಗಿರುವ ಜನರನ್ನು “ತೂರಿನವರು” ಎಂದು ಕರೆಯುತ್ತಾರೆ.
- ಪಟ್ಟಣ ಸ್ವಲ್ಪ ಭಾಗವು ಸಮುದ್ರದಲ್ಲಿರುವ ದ್ವೀಪದಲ್ಲಿಯೂ ಇರುತ್ತದೆ, ಇದು ಮುಖ್ಯ ನೆಲಭಾಗದಿಂದ ಸುಮಾರು ಒಂದು ಕಿಲೋ ಮೀಟರುವರೆಗೆ ಹರಡಿರುತ್ತದೆ.
- ಇದಿರುವ ಪ್ರದೇಶ ಮತ್ತು ಇದರ ಬೆಲೆಯುಳ್ಳ ಸ್ವಾಭಾವಿಕ ಸಂಪನ್ಮೂಲಗಳ ಕಾರಣದಿಂದ, ಅಂದರೆ ದೇವದಾರು ವೃಕ್ಷಗಳಂತಹ ಬೆಲೆಯುಳ್ಳ ಮರಗಳಿಂದ, ತೂರ್ ಅಭಿವೃದ್ಧಿ ವ್ಯಾಪಾರ ಕೇಂದ್ರವನ್ನು ಹೊಂದಿತ್ತು ಮತ್ತು ಅತೀ ಶ್ರೀಮಂತ ಪ್ರಾಂತ್ಯವಾಗಿದ್ದಿತ್ತು.
- ತೂರ್ ಅರಸನಾಗಿರುವ ಹಿರಾಮನು ಅರಸನಾದ ದಾವೀದನಿಗೆ ಅರಮನೆಯನ್ನು ನಿರ್ಮಿಸುವುದಕ್ಕೆ ಸಹಾಯ ಮಾಡಲು ನಿಪುಣರನ್ನು ಮತ್ತು ದೇವದಾರು ವೃಕ್ಷಗಳ ಕಟ್ಟಿಗೆಗಳನ್ನು ಕಳುಹಿಸಿದ್ದನು.
- ಅನೇಕ ವರ್ಷಗಳಾದನಂತರ, ಹಿರಾಮನು ದೇವಾಲಯವನ್ನು ನಿರ್ಮಿಸುವುದಕ್ಕೆ ಕಟ್ಟಿಗೆಗಳನ್ನು ಮತ್ತು ನಿಪುಣರನ್ನು ಅರಸನಾದ ಸೊಲೊಮೋನನಿಗೆ ಕಳುಹಿಸಿದ್ದನು. ಸೊಲೊಮೋನನು ಎಣ್ಣೆ ಮರಗಳ ಎಣ್ಣೆಯನ್ನು ಮತ್ತು ಗೋಧಿಯನ್ನು ಹೆಚ್ಚಿನ ಮೊತ್ತದಲ್ಲಿ ಅವನಿಗೆ ಕೊಟ್ಟಿದ್ದನು.
- ತೂರ್ ಎನ್ನುವುದು ಅನೇಕಬಾರಿ ಹತ್ತಿರದಲ್ಲಿರುವ ಪುರಾತನ ಪಟ್ಟಣವಾಗಿರುವ ಸೀದೋನ್ ಎನ್ನುವದಕ್ಕೆ ಸಹಕಾರಿಯಾಗಿದ್ದಿತ್ತು. ಕಾನಾನ್ ಪ್ರಾಂತ್ಯದಲ್ಲಿರುವ ಅನೇಕ ಪ್ರಾಮುಖ್ಯವಾದ ಪಟ್ಟಣಗಳನ್ನು ಫೊಯಿನೀಕೆ ಎಂದು ಕರೆಯುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ದೇವದಾರು, ಇಸ್ರಾಯೇಲ್, ಸಮುದ್ರ, ಫೊಯಿನೀಕೆ, ಸೀದೋನ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6865, H6876, G5183, G5184
ತೆರಹ
ಸತ್ಯಾಂಶಗಳು:
ತೆರಹನು ನೋಹನ ಮಗನಾದ ಶೇಮ್ ಸಂತಾನದವನಾಗಿದ್ದನು. ಇವನು ಅಬ್ರಾಹಾಮ, ನೋಹೊರ ಮತ್ತು ಹಾರಾನ್ ರವರಿಗೆ ತಂದೆಯಾಗಿದ್ದನು.
- ತೆರಹನು ತನ್ನ ಮಗನಾದ ಅಬ್ರಾಹಾಮನೊಂದಿಗೆ, ಅಬ್ರಾಹಾಮನ ಹೆಂಡತಿಯಾದ ಸಾರಳೊಂದಿಗೆ ಮತ್ತು ಲೋಟನೊಂದಿಗೆ ಕಾನಾನ್ ಭೂಮಿಯನ್ನು ಪಡೆದುಕೊಳ್ಳಲು ಊರ್.ನಲ್ಲಿರುವ ತನ್ನ ಮನೆಯನ್ನು ಬಿಟ್ಟನು.
- ಕಾನಾನ್ ಹೋಗುತ್ತಿರುವ ಪ್ರಯಾಣದಲ್ಲಿ ತೆರಹ ಮತ್ತು ತನ್ನ ಕುಟುಂಬದವರು ಮೆಸಪೋತೋಮಿಯಾದಲ್ಲಿರುವ ಹಾರಾನ್ ಪಟ್ಟಣದಲ್ಲಿ ಅನೇಕ ವರ್ಷಗಳು ಜೀವನ ಮಾಡಿದ್ದರು. ತೆರಹನು 205 ವಯಸ್ಸಿನಲ್ಲಿ ಹಾರಾನಿನಲ್ಲಿ ಮರಣಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಕಾನಾನ್, ಹಾರಾನ್, ಲೋಟ, ಮೆಸಪೋತೋಮಿಯ, ನಾಹೋರ್, ಸಾರಳು, ಶೇಮ್, ಊರ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8646, G2291
ತೋಮ
ಸತ್ಯಾಂಶಗಳು:
ತೋಮ ಎನ್ನುವ ವ್ಯಕ್ತಿ ಯೇಸು ತನಗೆ ಶಿಷ್ಯರಾಗಿರಲು, ಅಪೊಸ್ತಲರಾಗಿರಲು ಆಯ್ಕೆ ಮಾಡಿಕೊಂಡಿರುವ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದನು. ಈತನನ್ನು “ದಿದುಮ” ಎಂದೂ ಕರೆಯುತ್ತಾರೆ, ಈ ಹೆಸರಿಗೆ “ಅವಳಿಜವಳಿ” ಎಂದರ್ಥ.
- ಯೇಸುವಿನ ಜಿವತ ಅಂತ್ಯದಲ್ಲಿ, ನಾನು ನನ್ನ ತಂದೆಯ ಬಳಿಗೆ ಹೋಗುತ್ತಿದ್ದೇನೆ ಮತ್ತು ಆತನೊಂದಿಗೆ ಇರುವುದಕ್ಕೆ ನಿಮಗೆ ಬಿಡಾರಗಳನ್ನು ಸಿದ್ಧಗೊಳಿಸುತ್ತೇನೆ ಎಂದು ಆತನು ತನ್ನ ಶಿಷ್ಯರಿಗೆ ಹೇಳಿದನು. ನೀನು ಎಲ್ಲಿಗೆ ಹೋಗುತ್ತಿದ್ದೀಯೆಂದು ನಮಗೆ ಗೊತ್ತಾಗದಿದ್ದರೆ ನಾವು ಹೇಗೆ ನೀವಿರುವ ಸ್ಥಳಕ್ಕೆ ಬರಬೇಕು ಎಂದು ತೋಮ ಯೇಸುವನ್ನು ಕೇಳಿದನು.
- ಯೇಸು ಮರಣಿಸಿ ತಿರುಗಿಬಂದನಂತರ, ತೋಮ ಯೇಸುವು ತಿರುಗಿ ಎದ್ದುಬಂದಿದ್ದಾನೆಂದು ನಂಬಲಿಲ್ಲ, ಯಾಕಂದರೆ ಅವನು ಯೇಸುವಿನ ಗಾಯಗೊಂಡ ಕೈಗಳನ್ನು ಮತ್ತು ಕಾಲುಗಳನ್ನು ನೋಡಿ, ನಂಬಬೇಕೆಂದಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಶಿಷ್ಯ, ತಂದೆಯಾದ ದೇವರು, ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2381
ತ್ರೋವ
ಸತ್ಯಾಂಶಗಳು:
ತ್ರೋವ ಎನ್ನುವ ಪಟ್ಟಣವು ಬಂದರು ಇರುವ ಪಟ್ಟಣವಾಗಿದ್ದಿತ್ತು, ಇದು ಆಸ್ಯದ ಪುರಾತನ ರೋಮಾ ಸೀಮೆಯ ಉತ್ತರ ಕರಾವಳಿಯಲ್ಲಿ ಕಂಡುಬರುತ್ತದೆ.
- ಪೌಲನು ಅನೇಕ ಪ್ರಾಂತ್ಯಗಳಿಗೆ ಸುವಾರ್ತೆಯನ್ನು ಸಾರುವುದಕ್ಕೆ ಹೋದಾಗ ಕನಿಷ್ಟವೆಂದರೆ ಮೂರುಸಲ ತ್ರೋವವನ್ನು ಸಂದರ್ಶನ ಮಾಡಿದ್ದನು.
- ತ್ರೋವದಲ್ಲಿ ನಡೆದ ಒಂದು ಸಂದರ್ಭದಲ್ಲಿ ಪೌಲನು ಸುಧೀರ್ಘವಾಗಿ ಪ್ರಸಂಗವನ್ನು ಮಾಡಿದ್ದನು ಮತ್ತು ಆ ಸಮಯದಲ್ಲಿ ಯೂತಿಖನೆಂಬ ಒಬ್ಬ ಯೌವನಸ್ಥನು ಆ ಪ್ರಸಂಗವನ್ನು ಕೇಳುತ್ತಾ ನಿದ್ದೆ ಮಾಡಿ ಕೆಳಗೆ ಬಿದ್ದುಹೋಗಿದ್ದನು. ಯಾಕಂದರೆ ಅವನು ಕಿಟಿಕಯ ಪಕ್ಕದಲ್ಲಿಯೇ ಕುಳಿತುಕೊಂಡಿದ್ದನು, ಯೂತಿಖನು ತುಂಬಾ ಎತ್ತರದಿಂದ ಕೆಳಗೆ ಬಿದ್ದು ಸತ್ತು ಹೋಗಿದ್ದನು. ದೇವರ ಶಕ್ತಿಯಿಂದ ಪೌಲನು ಈ ಯೌವನಸ್ಥನನ್ನು ತಿರುಗಿ ಜೀವಂತ ವ್ಯಕ್ತಿಯನ್ನಾಗಿ ಎಬ್ಬಿಸಿದನು.
- ಪೌಲನು ರೋಮಾದಲ್ಲಿರುವಾಗ ತಾನು ತ್ರೋವದಲ್ಲಿ ಬಿಟ್ಟುಬಂದಿರುವ ತನ್ನ ಲೇಖನ ಸುರುಳಿಗಳನ್ನು ಮತ್ತು ತನ್ನ ಅಂಗಿಯನ್ನು ತೆಗೆದುಕೊಂಡು ಬರಬೇಕೆಂದು ತಿಮೊಥೆಯನನ್ನು ಕೇಳಿಕೊಂಡನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಸ್ಯ, ಪ್ರಸಂಗಿಸು, ಸೀಮೆ, ಎಬ್ಬಿಸು, ರೋಮ್, ಸುರುಳಿ, ತಿಮೊಥೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G5174
ಥೆಸ್ಸಲೋನಿಕ, ಥೆಸ್ಸಲೋನಿಕದವನು, ಥೆಸ್ಸಲೋನಿಕಾದವರು
ಸತ್ಯಾಂಶಗಳು:
ಹೊಸ ಒಡಂಬಡಿಕೆ ಕಾಲಗಳಲ್ಲಿ ಥೆಸ್ಸಲೋನಿಕ ಎನ್ನುವುದು ಪುರಾತನ ರೋಮಾ ಸಾಮ್ರಾಜ್ಯದಲ್ಲಿ ಮಕೆದೋನ್ಯ ರಾಜಧಾನಿಯ ಪಟ್ಟಣವಾಗಿತ್ತು. ಆ ಪಟ್ಟಣದಲ್ಲಿ ನಿವಾಸ ಮಾಡುವ ಜನರನ್ನು “ಥೆಸ್ಸಲೋನಿಕದವರು” ಎಂದು ಕರೆಯುತ್ತಾರೆ.
- ಥೆಸ್ಸಲೋನಿಕ ಪಟ್ಟಣವು ತುಂಬಾ ಪ್ರಾಮುಖ್ಯವಾದ ಸಮುದ್ರ ತೀರವನ್ನು ಹೊಂದಿರುತ್ತದೆ ಮತ್ತು ರೋಮಾ ಸಾಮ್ರಾಜ್ಯದಲ್ಲಿ ಪೂರ್ವ ದಿಕ್ಕಿನ ಭಾಗಕ್ಕೆ ರೋಮ್ ನಗರವನ್ನು ಸಂಧಿಸುವ ಹೆದ್ದಾರಿಯಲ್ಲಿ ಕಂಡುಬರುತ್ತದೆ.
- ಪೌಲನು ತನ್ನ ಜೊತೆಯಲ್ಲಿರುವ ಸೀಲ ಮತ್ತು ತಿಮೊಥೆಯವರೊಂದಿಗೆ ತನ್ನ ಎರಡನೇ ಸುವಾರ್ತೆ ದಂಡೆಯಾತ್ರೆಯಲ್ಲಿ ಥೆಸ್ಸಲೋನಿಕ ಪಟ್ಟಣವನ್ನು ಸಂದರ್ಶನ ಮಾಡಿದ್ದರು ಮತ್ತು ಆ ಪಟ್ಟಣದಲ್ಲಿ ಸಭೆಯನ್ನು ಸ್ಥಾಪನೆಗೊಳಿಸಿದ್ದರು. ಸ್ವಲ್ಪ ಕಾಲವಾದನಂತರ, ಪೌಲನು ಈ ಪಟ್ಟಣವನ್ನು ತನ್ನ ಮೂರನೇಯ ಸುವಾರ್ತೆಯ ಯಾತ್ರೆಯಲ್ಲಿ ಸಂದರ್ಶಿಸಿದ್ದರು.
- ಪೌಲನು ಥೆಸ್ಸಲೋನಿಕದಲ್ಲಿರುವ ಕ್ರೈಸ್ತರಿಗೆ ಎರಡು ಪತ್ರಿಕೆಗಳನ್ನು ಬರೆದಿದ್ದನು. ಈ ಪತ್ರಿಕೆಗಳು (1 ಥೆಸ್ಸಲೋನಿಕದವರಿಗೆ ಮತ್ತು 2 ಥೆಸ್ಸಲೋನಿಕದವರಿಗೆ) ಹೊಸ ಒಡಂಬಡಿಕೆಯಲ್ಲಿ ಒಳಗೊಂಡಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮಕೆದೋನ್ಯ, ಪೌಲ, ರೋಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2331, G2332
ದಕ್ಷಿಣ ಪ್ರಾಂತ್ಯ (ನೆಗೆವ್)
ಸತ್ಯಾಂಶಗಳು:
ದಕ್ಷಿಣ ಪ್ರಾಂತ್ಯ (ನೆಗೆವ್) ಎನ್ನುವುದು ಇಸ್ರಾಯೇಲ್ ದಕ್ಷಿಣ ಭಾಗದಲ್ಲಿ ಮರುಭೂಮಿ ಪ್ರಾಂತ್ಯವಾಗಿರುತ್ತದೆ, ಮತ್ತು ಲವಣ ಸಮುದ್ರದ ನೈಋತ್ಯ ಭಾಗದಲ್ಲಿರುತ್ತದೆ.
- ಈ ಪದಕ್ಕೆ ವಾಸ್ತವಿಕವಾಗಿ “ದಕ್ಷಿಣ” ಎಂದರ್ಥ ಮತ್ತು ಆಂಗ್ಲ ಭಾಷೆಯಲ್ಲಿ ಈ ಪದವನ್ನೇ (ದಕ್ಷಿಣ) ಅನುವಾದ ಮಾಡಿರುತ್ತಾರೆ.
- ಇದು “ದಕ್ಷಿಣ” ಎಂದಾಗಿರಬಹುದು, ಆದರೆ ಇದು ಈ ದಿನದ ನೆಗೆವ್ ಮರುಭೂಮಿಯಿರುವ ಸ್ಥಳದಲ್ಲಿ ಇದು ಕಂಡುಬರುವುದಿಲ್ಲ.
- ಕಾದೇಶ್ ಪಟ್ಟಣದಲ್ಲಿ ಅಬ್ರಾಹಾಮನು ನಿವಾಸಮಾಡಿದಾಗ, ಆತನು ದಕ್ಷಿಣ ಪ್ರಾಂತ್ಯದಲ್ಲಿ ಅಥವಾ ನೆಗೆವ್.ದಲ್ಲಿ ನಿವಾಸ ಮಾಡಿದ್ದನು.
- ರೆಬೆಕ್ಕಳು ಇಸಾಕನನ್ನು ಭೇಟಿ ಮಾಡಿದಾಗ ಮತ್ತು ತನ್ನ ಹೆಂಡತಿಯಾದಾಗ ಇಸಾಕನು ನೆಗೆವ್.ನಲ್ಲಿ ಜೀವಿಸಿದ್ದನು.
- ಯೂದಾ ಯೆಹೂದ್ಯ ಕುಲಗಳು ಮತ್ತು ಸಿಮೆಯೋನ್ ದಕ್ಷಿಣ ಪ್ರಾಂತ್ಯದಲ್ಲಿ ನಿವಾಸವಾಗಿದ್ದರು.
- ನೆಗೆವ್ ಪ್ರಾಂತ್ಯದಲ್ಲಿ ಅತೀ ದೊಡ್ಡ ಪಟ್ಟಣವು ಬೇರ್ಷೆಬ ಆಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಬೇರ್ಷೆಬ, ಇಸ್ರಾಯೇಲ್, ಯೂದಾ, ಕಾದೇಶ್, ಲವಣ ಸಮುದ್ರ, ಸಿಮೆಯೋನ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5045, H6160
ದಮಸ್ಕ
ಸತ್ಯಾಂಶಗಳು:
ದಮಸ್ಕ ಎನ್ನುವುದು ಸಿರಿಯಾ ದೇಶದ ರಾಜಧಾನಿಯಾಗಿತ್ತು. ಇದು ಸತ್ಯವೇದ ಕಾಲದಲ್ಲಿರುವ ಸ್ಥಳದಲ್ಲೇ ಈಗಲೂ ಇದೆ.
- ದಮಸ್ಕ ಎಂಬ ಪಟ್ಟಣವು ಪ್ರಪಂಚದಲ್ಲಿಯೇ ಜನರು ನಿರಂತರವಾಗಿ ನಿವಾಸವಾಗಿರುವ ಪಟ್ಟಣಗಳಲ್ಲಿ ಒಂದಾಗಿರುತ್ತದೆ ಮತ್ತು ಇದು ತುಂಬಾ ಹಳೇ ಪಟ್ಟಣವಾಗಿರುತ್ತದೆ.
- ಅಬ್ರಹಾಮನ ಕಾಲದಲ್ಲಿ ದಮಸ್ಕ ಆರಾಮ್ ರಾಜ್ಯದ ರಾಜಧಾನಿಯಾಗಿದ್ದಿತ್ತು (ಈಗ ಸಿರಿಯಾದಲ್ಲಿ ಕಂಡುಬರುತ್ತದೆ).
- ಹಳೇ ಒಡಂಬಡಿಕೆಯಲ್ಲೆಲ್ಲಾ ಇಸ್ರಾಯೇಲ್ ಜನರು ಮತ್ತು ದಮಸ್ಕ ನಿವಾಸಿಗಳ ಮಧ್ಯೆದಲ್ಲಿ ನಡೆದ ಪರಸ್ಪರ ಸಂಬಂಧಗಳಿಗೆ ಅನೇಕ ಅನುಬಂಧ ವಾಕ್ಯಗಳಿವೆ.
- ಸತ್ಯವೇದದಲ್ಲಿರುವ ಅನೇಕ ಪ್ರವಾದನೆಗಳು ದಮಸ್ಕ ವಿನಾಶನದ ಕುರಿತಾಗಿ ಹೇಳಲ್ಪಟ್ಟಿವೆ. ಹಳೇ ಒಡಂಬಡಿಕೆ ಕಾಲದಲ್ಲಿ ಅಶ್ಯೂರ್ಯದವರು ಪಟ್ಟಣವನ್ನು ನಾಶಗೊಳಿಸಿದಾಗ ಈ ಪ್ರವಾದನೆಗಳು ನೆರವೇರಿಸಲ್ಪಟ್ಟಿರಬಹುದು ಅಥವಾ ಇವು ಭವಿಷ್ಯತ್ತಿನಲ್ಲಿಯೂ ನೆರವೇರಿಕೆಯಾಗಬಹುದು, ಅಂದರೆ ಈ ಪಟ್ಟಣವು ಸಂಪೂರ್ಣವಾಗಿ ವಿನಾಶವಾಗುವುದನ್ನು ನೋಡಬಹುದು.
- ಹೊಸ ಒಡಂಬಡಿಕೆಯಲ್ಲಿ ಫರಿಸಾಯನಾದ ಸೌಲನು (ಪೌಲನು) ದಮಸ್ಕ ಪಟ್ಟಣದಲ್ಲಿ ಕ್ರೈಸ್ತರನ್ನು ಬಂಧಿಸಲು ಹೋದಾಗ, ಯೇಸುವು ಅವನನ್ನು ಸಂದರ್ಶಿಸಿ, ಅವನು ವಿಶ್ವಾಸಿಯಾಗುವಂತೆ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆರಾಮ್, ಅಶ್ಯೂರ್ಯ, ನಂಬು, ಸಿರಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು:
- 2 ಪೂರ್ವ. 24:23-24
- ಅಪೊ.ಕೃತ್ಯ. 09:1-2
- ಅಪೊ.ಕೃತ್ಯ. 09:3-4
- ಅಪೊ.ಕೃತ್ಯ. 26:12-14
- ಗಲಾತ್ಯ. 01:15-17
- ಆದಿ. 14:15-16
ಪದದ ದತ್ತಾಂಶ:
- Strong's: H1833, H1834, G1154
ದಾನಿಯೇಲ
ಸತ್ಯಾಂಶಗಳು:
ದಾನಿಯೇಲ ಇಸ್ರಾಯೇಲ್ ಯೌವ್ವನ ಪ್ರವಾದಿಯಾಗಿದ್ದನು, ಇವನು ಸುಮಾರು ಕ್ರಿ.ಪೂ.600 ವರ್ಷದಲ್ಲಿ ಬಾಬೆಲೋನಿಯ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಗೊಯ್ಯಲ್ಪಟ್ಟಿದ್ದನು.
- ಈ ಸಮಯದಲ್ಲಿ ಯೂದಾದಿಂದ ಇತರ ಅನೇಕ ಇಸ್ರಾಯೇಲ್ಯರು ಸುಮಾರು 70 ವರ್ಷಗಳ ಕಾಲ ಬಾಬೆಲೋನಿಯಾದಲ್ಲಿ ಸೆರೆಗೊಯ್ಯಲ್ಪಟ್ಟಿದ್ದರು.
- ದಾನಿಯೇಲನಿಗೆ ಬಾಬೆಲೋನಿಯಾದಲ್ಲಿ ಬೇಲ್ತೆಶೆಚ್ಚರ್ ಎಂದು ಹೆಸರಿಟ್ಟಿದ್ದರು.
- ದಾನಿಯೇಲನಿಗೆ ದೇವರಿಗೆ ವಿಧೇಯನಾಗಿರುವ ನೀತಿವಂತನಾದ ಯೌವನಸ್ಥನು ಮತ್ತು ಸನ್ಮಾನ್ಯ ಯೋಗ್ಯನೂ ಆಗಿದ್ದನು.
- ಬಾಬೆಲೋನಿಯ ಅರಸರಿಗೆ ಬಂದ ಅನೇಕವಾದ ಕನಸುಗಳಿಗೆ ಅಥವಾ ದರ್ಶನಗಳಿಗೆ ಅರ್ಥವನ್ನು ಹೇಳುವುದಕ್ಕೆ ದೇವರು ದಾನಿಯೇಲನನ್ನು ಬಲಪಡಿಸಿದನು.
- ಈ ಸಾಮರ್ಥ್ಯದಿಂದ ಮತ್ತು ಈ ರೀತಿಯ ಸನ್ಮಾನ್ಯ ನಡತೆಯಿಂದ ದಾನಿಯೇಲನಿಗೆ ಬಾಬೆಲೋನಿಯ ಸಾಮ್ರಾಜ್ಯದಲ್ಲಿ ಅತ್ಯುನ್ನತ ನಾಯಕತ್ವ ಸ್ಥಾನವು ಕೊಡಲ್ಪಟ್ಟಿತ್ತು.
- ಅನೇಕ ವರ್ಷಗಳಾದನಂತರ, ದಾನಿಯೇಲನ ಶತ್ರುಗಳು ಅರಸನಾದ ದಾರ್ಯಾವೇಷನನ್ನು ಮೋಸಗೊಳಿಸಿ, ಅರಸನನ್ನು ಬಿಟ್ಟು ಇನ್ನಾರನ್ನಾದರೂ ಆರಾಧನೆ ಮಾಡಬಾರದೆನ್ನುವ ನಿಷೇಧ ಆಜ್ಞೆಯನ್ನು ತರುವಂತೆ ಅರಸನನ್ನು ಪ್ರೇರೇಪಿಸಿದರು. * ದಾನಿಯೇಲನು ದೇವರಿಗೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಿದ್ದನು, ಆದ್ದರಿಂದ ಈತನನ್ನು ಬಂಧಿಸಿ, ಸಿಂಹಗಳ ಗುಹೆಯೊಳಗೆ ಹಾಕಲ್ಪಟ್ಟಿದ್ದನು. ಆದರೆ ದೇವರು ಆತನನ್ನು ರಕ್ಷಿಸಿದನು ಮತ್ತು ಆತನಿಗೆ ಯಾವ ಹಾನಿಯೂ ಉಂಟಾಗಲಿಲ್ಲ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ನೆಬೂಕದ್ನೆಚ್ಚರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1840, H1841, G1158
ದಾನ್
ಸತ್ಯಾಂಶಗಳು:
ದಾನ್ ಯಾಕೋಬನ ಐದನೇ ಮಗನಾಗಿರುತ್ತಾನೆ ಮತ್ತು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಒಂದು ಕುಲವಾಗಿರುತ್ತದೆ. ಕಾನಾನ್ ಉತ್ತರ ಭಾಗದಲ್ಲಿ ದಾನ್ ಕುಲಕ್ಕೆ ಕೊಡಲ್ಪಟ್ಟಿರುವ ಪ್ರಾಂತ್ಯಕ್ಕೂ ಈ ಹೆಸರನ್ನು ಕೊಟ್ಟಿರುತ್ತಾರೆ.
- ಅಬ್ರಾಮನ ಕಾಲದಲ್ಲಿ ಪಶ್ಚಿಮ ಯೆರೂಸಲೇಮಿನಲ್ಲಿ ದಾನ್ ಎನ್ನುವ ಪಟ್ಟಣವು ಇತ್ತು.
- ಅನೇಕ ವರ್ಷಗಳಾದ ಮೇಲೆ, ಇಸ್ರಾಯೇಲ್ ದೇಶವು ವಾಗ್ಧಾನ ಭೂಮಿಯಲ್ಲಿ ಪ್ರವೇಶಿಸಿದಾಗ ಉತ್ತರ ಯೆರೂಸಲೇಮಿಗೆ ಸುಮಾರು 60 ಮೈಲಿಗಳ ದೂರದಲ್ಲಿ ದಾನ್ ಎನ್ನುವ ಹೆಸರಿನ ಮೇಲೆ ಒಂದು ಪಟ್ಟಣವಿತ್ತು.
- “ದಾನ್ ಕುಲದವರು” ಎನ್ನುವ ಪದವು ದಾನ್ ಸಂತಾನವನ್ನು ಸೂಚಿಸುತ್ತದೆ. ಇವರು ದಾನ್ ವಂಶದ ಸದಸ್ಯರೂ ಆಗಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಯೆರೂಸಲೇಮ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1835, H1839, H2051
ದಾರ್ಯಾವೇಷ
ಸತ್ಯಾಂಶಗಳು:
ದಾರ್ಯಾವೇಷ ಪರ್ಷಿಯ ಅರಸರಲ್ಲಿ ಒಬ್ಬನಾಗಿದ್ದನು. “ದಾರ್ಯಾವೇಷ” ಎನ್ನುವುದು ಒಂದು ಹೆಸರಿಗಿಂತಲೂ ಇದನ್ನು ಒಂದು ಬಿರುದಾಗಿ ಎಣಿಸಲ್ಪಡುತ್ತಿತ್ತು.
- ಮೇದ್ಯನಾದ ದಾರ್ಯಾವೇಷನು ಅರಸನಾಗಿದ್ದಾಗ ಪ್ರವಾದಿಯಾದ ದಾನಿಯೇಲನು ದೇವರನ್ನು ಆರಾಧನೆ ಮಾಡಿದ್ದಕ್ಕಾಗಿ ಅವನನ್ನು ಸಿಂಹಗಳ ಗವಿಯೊಳಗೆ ಹಾಕುವುದಕ್ಕೆ ಮೋಸದ ಉಪಾಯವನ್ನು ಮಾಡಿದ್ದನು.
- “ಪರ್ಷಿಯಾದ ದಾರ್ಯಾವೇಷ”ನು ಎಜ್ರ ಮತ್ತು ನೆಹೆಮೀಯ ಕಾಲದಲ್ಲಿ ದೇವಾಲಯವನ್ನು ತಿರುಗಿ ಪುನಃರ್ ನಿರ್ಮಿಸಲು ಸಹಾಯ ಮಾಡಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಪರ್ಷಿಯ, ಬಾಬೆಲೋನಿಯ, ದಾನಿಯೇಲ, ಎಜ್ರಾ, ನೆಹೆಮೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1867, H1868
ದಾವೀದ
ಸತ್ಯಾಂಶಗಳು:
ದಾವೀದ ಇಸ್ರಾಯೇಲ್ ದೇಶಕ್ಕೆ ಎರಡನೇ ಅರಸನಾಗಿ ಆಳಿದನು. ದೇವರಿಂದ ಹೆಚ್ಚಾಗಿ ಪ್ರೀತಿಸಲ್ಪಟ್ಟು, ದೇವರಿಗೆ ಸೇವೆಯನ್ನು ಸಲ್ಲಿಸಿದನು. ಕೀರ್ತನೆಗಳ ಪುಸ್ತಕವನ್ನು ಬರೆದವರಲ್ಲಿ ಈತನೇ ಮುಖ್ಯಸ್ಥನಾಗಿದ್ದನು.
- ದಾವೀದನು ಚಿಕ್ಕ ವಯಸ್ಸಿನಲ್ಲಿರುವಾಗ ತನ್ನ ಕುಟುಂಬದಲ್ಲಿರುವ ಕುರಿಗಳನ್ನು ಕಾಯುತ್ತಿದ್ದನು, ದೇವರು ಇಸ್ರಾಯೇಲ್ ಅರಸನಾಗಿರುವುದಕ್ಕೆ ದಾವೀದನನ್ನು ಆಯ್ಕೆಮಾಡಿಕೊಂಡನು.
- ದಾವೀದನು ಉನ್ನತ ಹೋರಾಟಗಾರನಾಗಿದ್ದನು ಮತ್ತು ಇಸ್ರಾಯೇಲ್ ಜನಾಂಗವನ್ನು ತಮ್ಮ ಶತ್ರುಗಳೊಂದಿಗೆ ಹೋರಾಡಲು ನಡೆಸಿದನು. ಈತನು ಫಿಲಿಷ್ಟಿಯರ ಗೊಲ್ಯಾತನನ್ನು ಸೋಲಿಸಿದ ವಿಷಯವು ಎಲ್ಲರಿಗೆ ಚೆನ್ನಾಗಿ ಗೊತ್ತು.
- ಅರಸನಾದ ಸೌಲನು ದಾವೀದನನ್ನು ಸಾಯಿಸುವುದಕ್ಕೆ ಪ್ರಯತ್ನಪಟ್ಟನು, ಆದರೆ ದೇವರು ಅವನನ್ನು ಸಂರಕ್ಷಿಸಿದನು ಮತ್ತು ಸೌಲನ ಮರಣದನಂತರ ಅವನನ್ನು ಅರಸನನ್ನಾಗಿ ಮಾಡಿದನು.
- ದಾವೀದನು ಒಂದು ಭಯಂಕರವಾದ ಪಾಪವನ್ನು ಮಾಡಿದನು, ಆದರೆ ಅವನು ಅದರ ವಿಷಯದಲ್ಲಿ ಪಶ್ಚಾತ್ತಾಪಪಟ್ಟಿರುವುದರಿಂದ, ದೇವರು ಅವನನ್ನು ಕ್ಷಮಿಸಿದನು.
- ಮೆಸ್ಸೀಯನಾದ ಯೇಸುವು “ದಾವೀದನ ಮಗ” ಎಂದು ಕರೆಯಲ್ಪಟ್ಟಿರುತ್ತಾನೆ, ಯಾಕಂದರೆ ಈತನು ಅರಸನಾದ ದಾವೀದನ ವಂಶದವನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಗೊಲ್ಯಾತ, ಫಿಲಿಷ್ಟಿಯರು, ಸೌಲ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಸಮು.17:12-13
- 1 ಸಮು.20:32-34
- 2 ಸಮು.05:1-2
- 2 ತಿಮೊಥೆ.02:8-10
- ಅಪೊ.ಕೃತ್ಯ.02:25-26
- ಅಪೊ.ಕೃತ್ಯ.13:21-22
- ಲೂಕ.01:30-33
- ಮಾರ್ಕ.02:25-26
ಸತ್ಯವೇದದಿಂದ ಉದಾಹರಣೆಗಳು
- 17:02 ಸೌಲನನಂತರ ಅರಸನಾಗಿರುವುದಕ್ಕೆ ___ ದಾವೀದ ___ ಎನ್ನುವ ಒಬ್ಬ ಇಸ್ರಾಯೇಲ್ ಯೌವನಸ್ಥನನ್ನು ದೇವರು ಆಯ್ಕೆ ಮಾಡಿಕೊಂಡನು. ___ ದಾವೀದನು ___ ಬೇತ್ಲೇಹೇಮ್ ಎನ್ನುವ ಪಟ್ಟಣದಲ್ಲಿ ಕುರುಬನಾಗಿದ್ದನು. __ ದಾವೀದನು __ ದೇವರನ್ನು ನಂಬಿದ ಮತ್ತು ಆತನಲ್ಲಿ ಭರವಸೆವಿಟ್ಟ ವಿನಯವುಳ್ಳ ನೀತಿವಂತನಾಗಿದ್ದನು.
- 17:03 ___ ದಾವೀದನು ___ ಕೂಡ ದೊಡ್ಡ ಸೈನಿಕನು ಮತ್ತು ನಾಯಕನೂ ಆಗಿದ್ದನು. __ ದಾವೀದನು ___ ಚಿಕ್ಕ ವಯಸ್ಸಿನಲ್ಲೇ ಇರುವಾಗಲೇ ಇವನು ಗೊಲ್ಯಾತನೆಂಬ ಒಬ್ಬ ರಣಶೂರನೊಂದಿಗೆ ಹೋರಾಟ ಮಾಡಿದವನು.
- 17:04 ___ ದಾವೀದನನ್ನು __ ಜನರು ಹೆಚ್ಚಾಗಿ ಪ್ರೀತಿ ಮಾಡಿದ್ದಕ್ಕಾಗಿ ಸೌಲನು ಅವನ ಮೇಲೆ ಅಸೂಯೆಪಟ್ಟನು. ಸೌಲನು ಅವನನ್ನು ಸಾಯಿಸಬೇಕೆಂದು ಅನೇಕಬಾರಿ ಪ್ರಯತ್ನ ಮಾಡಿದನು, ಆದ್ದರಿಂದ ___ ದಾವೀದನು ___ ಸೌಲನಿಗೆ ಸಿಕ್ಕದೆ ಪಾರಾದನು.
- 17:05 ದೇವರು ___ ದಾವೀದನನ್ನು ___ ಆಶೀರ್ವಾದ ಮಾಡಿದನು ಮತ್ತು ತನ್ನ ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡಿದನು. ___ ದಾವೀದನು ___ ಅನೇಕ ಯುದ್ಧಗಳನ್ನು ಮಾಡಿದ್ದನು ಮತ್ತು ಇಸ್ರಾಯೇಲ್ ಶತ್ರುಗಳನ್ನು ಸೋಲಿಸಲು ದೇವರು ದಾವೀದನಿಗೆ ಸಹಾಯ ಮಾಡಿದನು.
- 17:06 ಇಸ್ರಾಯೇಲ್ ಜನರೆಲ್ಲರು ಒಂದು ಕಡೆ ಸೇರಿ ದೇವರನ್ನು ಆರಾಧಿಸುವುದಕ್ಕೆ ಮತ್ತು ಆತನಿಗೆ ಹೋಮಗಳನ್ನು ಸಮರ್ಪಿಸುವುದಕ್ಕೆ ಒಂದು ದೇವಾಲಯವನ್ನು ಕಟ್ಟಬೇಕೆಂದು __ ದಾವೀದನು __ ಬಯಸಿದ್ದನು.
- 17:09 ___ ದಾವೀದನು ___ ಅನೇಕ ವರ್ಷಗಳಕಾಲ ನ್ಯಾಯದಿಂದ ನಂಬಿಗಸ್ಥನಾಗಿ ಜನರನ್ನು ಆಳಿದನು. ಆದರೆ, ಆತನ ಕೊನೆಯ ದಿನಗಳಲ್ಲಿ ದೇವರಿಗೆ ವಿರುದ್ಧವಾಗಿ ಭಯಂಕರವಾದ ಪಾಪವನ್ನು ಮಾಡಿದನು.
- 17:13 ___ ದಾವೀದನು ___ ಮಾಡಿದ ಕೆಲಸಕ್ಕೆ ದೇವರು ತುಂಬಾ ಕೋಪದಿಂದ ಇದ್ದನು, ___ ದಾವೀದನು ___ ಮಾಡಿದ ಪಾಪವು ಎಂಥದ್ದೆಂದು ಹೇಳುವುದಕ್ಕೆ ದೇವರು ಪ್ರವಾದಿಯಾದ ನಾತಾನನನ್ನು ಕಳುಹಿಸಿಕೊಟ್ಟನು. ___ ದಾವೀದನು ___ ತನ್ನ ಪಾಪವನ್ನು ತಿಳಿದುಕೊಂಡು ಪಶ್ಚಾತ್ತಾಪಪಟ್ಟನಂತರ ದೇವರು ಅವನನ್ನು ಕ್ಷಮಿಸಿದನು. ತನ್ನ ಉಳಿದ ಜೀವಮಾನವೆಲ್ಲ, ___ ದಾವೀದನು ___ ದೇವರಿಗೆ ವಿಧೇಯನಾಗಿ, ಆತನನ್ನು ಸಂಕಷ್ಟಗಳಲ್ಲಿಯೂ ಅನುಸರಿಸಿದನು.
ಪದ ಡೇಟಾ:
- Strong's: H1732, G1138
ದಾವೀದ ನಗರ
ಸತ್ಯಾಂಶಗಳು:
“ದಾವೀದ ನಗರ” ಎನ್ನುವ ಮಾತು ಯೆರೂಸಲೇಮ ಮತ್ತು ಬೇತ್ಲೆಹೇಮ್ ಎನ್ನುವ ಎರಡು ಊರುಗಳಿಗೆ ಮತ್ತೊಂದು ಹೆಸರಾಗಿರುತ್ತದೆ.
- ಯೆರೂಸಲೇಮ್ ಎನ್ನುವುದು ದಾವೀದನು ಇಸ್ರಾಯೇಲ್ ದೇಶವನ್ನು ಆಳುತ್ತಿರುವಾಗ ನಿವಾಸ ಮಾಡಿದ ಸ್ಥಳವಾಗಿದ್ದಿತ್ತು.
- ಬೇತ್ಲೆಹೇಮ್ ದಾವೀದನು ಹುಟ್ಟಿದ ಸ್ಥಳವಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದಾವೀದ, ಬೇತ್ಲೆಹೇಮ್. ಯೆರೂಸಲೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1732, H5892, G1138, G4172
ದಾವೀದನ ಮನೆ
ಸತ್ಯಾಂಶಗಳು:
“ದಾವೀದನ ಮನೆ” ಎನ್ನುವ ಮಾತು ಅರಸನಾದ ದಾವೀದನ ಕುಟುಂಬವನ್ನು ಅಥವಾ ವಂಶಸ್ಥರನ್ನು ಸೂಚಿಸುತ್ತದೆ.
- ಇದನ್ನು “ದಾವೀದನ ವಂಶಸ್ಥರು” ಅಥವಾ “ದಾವೀದನ ಕುಟುಂಬ” ಅಥವಾ “ಅರಸನಾದ ದಾವೀದನ ಕುಲ” ಎಂದೂ ಅನುವಾದ ಮಾಡಬಹುದು.
- ಯಾಕಂದರೆ ಯೇಸು ದಾವೀದನ ವಂಶಸ್ಥನಾಗಿದ್ದನು, ಈತನು “ದಾವೀದನ ಮನೆಯಲ್ಲಿ” ಭಾಗವಾಗಿರುತ್ತಾನೆ.
- ಕೆಲವೊಂದುಸಲ “ದಾವೀದನ ಮನೆ” ಅಥವಾ “ದಾವೀದನ ಮನೆಯವರು” ಎನ್ನುವ ಮಾತು ಇನ್ನೂ ದಾವೀದನ ಕುಟುಂಬದಲ್ಲಿ ಜೀವಿಸುತ್ತಿರುವ ಜನರನ್ನು ಸೂಚಿಸುತ್ತದೆ.
- ಬೇರೊಂದು ಸಮಯಗಳಲ್ಲಿ ಈ ಪದವು ತುಂಬಾ ಸಾಧಾರಣ ಪದವಾಗಿರುತ್ತದೆ ಮತ್ತು ಆತನ ಎಲ್ಲಾ ವಂಶಸ್ಥರನ್ನು, ಅವರಿಗೆ ಸಂಬಂಧಪಟ್ಟು ಸತ್ತಂತವರನ್ನು ಕೂಡ ಸೂಚಿಸುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದಾವೀದ, ವಂಶಸ್ಥರು, ಮನೆ, ಯೇಸು, ಅರಸ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1004, H1732, G1138, G3624
ದೆಲೀಲಾ
ಸತ್ಯಾಂಶಗಳು:
ದೆಲೀಲಾ ಸಂಸೋನನಿಂದ ಪ್ರೀತಿಸಲ್ಪಟ್ಟ ಫಿಲಿಷ್ಟಿಯನ್ನರ ಸ್ತ್ರೀಯಳು, ಆದರೆ ಇವಳು ಸಂಸೋನನ ಹೆಂಡತಿಯಾಗಿರುವುದಿಲ್ಲ.
- ದೆಲೀಲಾ ಸಂಸೋನನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಆಕೆ ಹಣವನ್ನು ಪ್ರೀತಿ ಮಾಡಿದ್ದಳು.
- ಸಂಸೋನನನ್ನು ಯಾವರೀತಿ ಬಲಹೀನ ಪಡಿಸಬೇಕನ್ನುವ ರಹಸ್ಯವನ್ನು ಸಂಸೋನನಿಂದ ತಿಳಿದುಕೊಳ್ಳಬೇಕೆಂದು ಫಿಲಿಷ್ಟಿಯನ್ನರು ದೆಲೀಲಾಗೆ ಲಂಚವನ್ನು ಕೊಟ್ಟಿದ್ದರು. ಯಾವಾಗ ಸಂಸೋನನು ತನ್ನ ಬಲವನ್ನು ಕಳೆದುಕೊಂಡನೋ ಆಗ ಫಿಲಿಷ್ಟಿಯನ್ನರು ಅವನನ್ನು ಹಿಡಿದುಕೊಂಡರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಲಂಚ, ಫಿಲಿಷ್ಟಿಯನರು, ಸಂಸೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1807
ದೇವ ಮನುಷ್ಯ
ಸತ್ಯಾಂಶಗಳು:
‘ದೇವ ಮನುಷ್ಯ” ಎನ್ನುವ ಮಾತು ಯೆಹೋವನ ಪ್ರವಾದಿಯನ್ನು ಸೂಚಿಸಲು ಗೌರವಪೂರ್ವಕವಾದ ವಿಧಾನವಾಗಿರುತ್ತದೆ. ಈ ಪದವನ್ನು ಯೆಹೋವನ ದೂತನನ್ನು ಕೂಡ ಸೂಚಿಸುತ್ತದೆ.
- ಈ ಪದವು ಪ್ರವಾದಿಯನ್ನು ಸೂಚಿಸಿದಾಗ, ಈ ಪದವನ್ನು “ದೇವರಿಗೆ ಸಂಬಂಧಪಟ್ಟ ಮನುಷ್ಯ” ಅಥವಾ “ದೇವರು ಆದುಕೊಂಡ ಮನುಷ್ಯ” ಅಥವಾ “ದೇವರನ್ನು ಸೇವಿಸುವ ಮನುಷ್ಯ” ಎಂದೂ ಅನುವಾದ ಮಾಡಬಹುದು.
- ದೂತನನ್ನು ಸೂಚಿಸಿದಾಗ, ಈ ಪದವನ್ನು “ದೇವರ ಸಂದೇಶಕ” ಅಥವಾ “ನಿನ್ನ ದೂತ” ಅಥವಾ “ಮನುಷ್ಯನಂತೆ ಕಾಣಿಸುವ ದೇವರಿಂದ ಬಂದ ಪರಲೋಕಕ್ಕೆ ಸಂಬಂಧಪಟ್ಟವನು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ದೂತ, ಘನಪಡಿಸು, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H376, H430, G444, G2316
ನಜರೇತ, ನಜರೇತಿನವನು
ಸತ್ಯಾಂಶಗಳು:
ನಜರೇತ್ ಎನ್ನುವುದು ಉತ್ತರ ಇಸ್ರಾಯೇಲಿನಲ್ಲಿರುವ ಗಲಿಲಾಯ ಸೀಮೆಯಲ್ಲಿನ ಪಟ್ಟಣವಾಗಿರುತ್ತದೆ. ಇದು ಉತ್ತರ ಯೆರೂಸಲೇಮಿನಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುತ್ತದೆ, ಮತ್ತು ನಡೆದುಕೊಂಡು ಪ್ರಯಾಣ ಮಾಡಬೇಕೆಂದರೆ ಸುಮಾರು ಮೂರರಿಂದ ಐದು ದಿನಗಳ ಕಾಲ ಬೇಕಾಗಿರುತ್ತದೆ.
- ಯೋಸೇಫನು ಮತ್ತು ಮರಿಯಳು ನಜರೇತಿನಿಂದ ಬಂದವರು ಮತ್ತು ಇಲ್ಲಿ ಅವರು ಯೇಸುವನ್ನು ಬೆಳೆಸಿದರು. ಆದ್ದರಿಂದಲೇ ಯೇಸುವನ್ನು “ನಜರೇಯನು” ಎಂದು ಕರೆಯುತ್ತಾರೆ.
- ನಜರೇತಿನಲ್ಲಿ ಜೀವಿಸುತ್ತಿರುವ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಬೋಧನೆಯನ್ನು ಗೌರವಿಸಲಿಲ್ಲ ಯಾಕಂದರೆ ಆತನು ಅವರ ಮಧ್ಯದಲ್ಲಿಯೇ ಬೆಳೆದಿದ್ದನು, ಮತ್ತು ಅವರು ಆತನನ್ನು ಒಬ್ಬ ಸಾಧಾರಣ ಮನುಷ್ಯನೆಂದು ತಿಳಿದುಕೊಂಡಿದ್ದರು.
- ಒಂದುಬಾರಿ ನಜರೇತಿನವರ ಸಮಾಜ ಮಂದಿರದಲ್ಲಿ ಯೇಸು ಬೋಧನೆ ಮಾಡುತ್ತಿರುವಾಗ, ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ಯತ್ನಿಸಿದರು, ಯಾಕಂದರೆ ಆತನು ಮೆಸ್ಸೀಯನೆಂದು ಹೇಳಿಕೊಂಡಿದ್ದನು ಮತ್ತು ಆತನನ್ನು ತಿರಸ್ಕಾರ ಮಾಡಿದ್ದಕ್ಕಾಗಿ ಅವರನ್ನು ಗದರಿಸಿದ್ದನು.
- ಯೇಸು ನಜರೇತಿನಿಂದ ಬಂದವನೆಂದು ನತಾನಯೇಲನು ಕೇಳಿಸಿಕೊಂಡಾಗ, ಈ ಪಟ್ಟಣವು ಅಷ್ಟು ದೊಡ್ಡ ಪಟ್ಟಣವಲ್ಲ ಎಂದು ಅಂದುಕೊಂಡಿದ್ದನು.
(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಗಲಿಲಾಯ, ಯೋಸೇಫ, ಮರಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.26:9-11
- ಯೋಹಾನ.01:43-45
- ಲೂಕ.01:26-29
- ಮಾರ್ಕ.16:5-7
- ಮತ್ತಾಯ.02:22-23
- ಮತ್ತಾಯ.21:9-11
- ಮತ್ತಾಯ.26:71-72
ಸತ್ಯವೇದದಿಂದ ಉದಾಹರಣೆಗಳು:
- 23:04 ಯೋಸೇಫ ಮತ್ತು ಮರಿಯಳು ನಿವಾಸವಾಗಿದ್ದ ___ ನಜರೇತಿನಿಂದ ___ ಬೆತ್ಲೆಹೇಮಿಗೆ ಹೋಗುವುದಕ್ಕೆ ತುಂಬಾ ದೂರ ಪ್ರಯಾಣ ಮಾಡಿದ್ದರು, ಯಾಕಂದರೆ ಅವರ ಪೂರ್ವಜರು ಬೆತ್ಲೆಹೇಮಿನ ಸ್ವಂತ ಊರಿನವನಾಗಿದ್ದ ದಾವೀದನಾಗಿದ್ದನು.
- 26:02 ಯೇಸು ___ ನಜರೇತ್ ___ ಎನ್ನುವ ಪಟ್ಟಣಕ್ಕೆ ಹೋದನು, ಅಲ್ಲಿಯೇ ತನ್ನ ಬಾಲ್ಯದಿನಗಳನ್ನು ಕಳೆದಿದ್ದನು.
- 26:07 ___ ನಜರೇತಿನ ___ ಜನರು ಆರಾಧನೆ ಸ್ಥಳದಿಂದ ಹೊರಗಡೆ ಎಳೆದಿದ್ದರು ಮತ್ತು ಆತನನ್ನು ಕೊಲ್ಲುವ ಯತ್ನದಲ್ಲಿ ಆತನನ್ನು ಬಂಡೆಯ ತುದಿಬದಿಗೆ ಕರೆದುಕೊಂಡು ಬಂದಿದ್ದರು.
ಪದ ಡೇಟಾ:
- Strong's: G3478, G3479, G3480
ನಫ್ತಾಲಿ
ಸತ್ಯಾಂಶಗಳು:
ನಫ್ತಾಲಿ ಎನ್ನುವವನು ಯಾಕೋಬನ ಆರನೇಯ ಮಗನಾಗಿರುತ್ತಾನೆ. ಇವನ ಸಂತಾನದವರೆಲ್ಲಾ ನಫ್ತಾಲಿ ಕುಲವನ್ನಾಗಿ ಮಾರ್ಪಟ್ಟರು, ಇದು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಒಂದಾಗಿರುತ್ತದೆ.
- ಕೆಲವೊಂದುಸಲ ನಫ್ತಾಲಿ ಎನ್ನುವ ಹೆಸರು ಈ ಹೆಸರಿನ ಕುಲದವರು ನಿವಾಸವಾಗಿರುವ ದೇಶವನ್ನು ಸೂಚಿಸುತ್ತದೆ. (ನೋಡಿರಿ: ಅಲಂಕಾರ ರೂಪ)
- ನಫ್ತಾಲಿ ದೇಶವು (ಅಥವಾ ಭೂಮಿ) ಇಸ್ರಾಯೇಲ್ ಉತ್ತರ ಭಾಗದಲ್ಲಿ ಕಂಡುಬರುತ್ತದೆ, ಇದು ದಾನ್ ಮತ್ತು ಅಶೇರ್ ಕುಲಗಳಿಗೆ ತುಂಬಾ ಸಮೀಪವಾಗಿರುತ್ತದೆ. ಇದರ ಪೂರ್ವ ದಿಕ್ಕಿನ ಗಡಿಯು ಕಿನ್ನೆರೆತ್ ಸಮುದ್ರದ ಪಶ್ಚಿಮ ತೀರ ಪ್ರದೇಶದಲ್ಲಿ ಕಂಡುಬರುತ್ತದೆ.
- ಈ ಕುಲವನ್ನು ಸತ್ಯವೇದದಲ್ಲಿರುವ ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ದಾಖಲುಯಾಗಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಶೇರ್, ದಾನ್, ಯಾಕೋಬ, ಗಲಿಲಾಯ ಸಮುದ್ರ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5321, G3508
ನಹೂಮ
ಸತ್ಯಾಂಶಗಳು:
ದುಷ್ಟನಾಗಿರುವ ಅರಸ ಮನಸ್ಸೆ ಯೆಹೂದ ರಾಜ್ಯವನ್ನು ಆಳುತ್ತಿರುವ ಕಾಲದಲ್ಲಿ ನಹೂಮನು ಪ್ರವಾದಿಯಾಗಿದ್ದನು.
- ನಹೂಮನು ಎಲ್ಕೋಷ ಪಟ್ಟಣದಿಂದ ಬಂದವನಾಗಿದ್ದನು, ಇದು ಯೆರೂಸಲೇಮಿಗೆ 20 ಮೈಲಿಗಳಷ್ಟು ದೂರದಲ್ಲಿರುತ್ತದೆ.
- ಹಳೇ ಒಡಂಬಡಿಕೆಯಲ್ಲಿರುವ ನಹೂಮನ ಗ್ರಂಥದಲ್ಲಿ ಅಶ್ಯೂರ್ ಪಟ್ಟಣವಾಗಿರುವ ನಿನವೆಯ ನಾಶನದ ಕುರಿತಾಗಿ ಹೇಳಿರುವ ತನ್ನ ಪ್ರವಾದನೆಗಳೆಲ್ಲವು ದಾಖಲು ಮಾಡಲಾಗಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಮನಸ್ಸೆ, ಪ್ರವಾದಿ, ನಿನವೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5151, G3486
ನಾತಾನ್
ಸತ್ಯಾಂಶಗಳು:
ನಾತಾನ್ ದೇವರ ನಂಬಿಗಸ್ತನಾದ ಪ್ರವಾದಿಯಾಗಿರುತ್ತಾನೆ, ದಾವೀದನು ಇಸ್ರಾಯೇಲ್ ಮೇಲೆ ಅರಸನಾಗಿರುವ ಕಾಲದಲ್ಲಿ ಈತನು ಜೀವಿಸಿದ್ದನು.
- ದಾವೀದನು ಊರೀಯನಿಗೆ ವಿರುದ್ಧವಾಗಿ ಪಾಪವನ್ನು ಮಾಡಿದನಂತರ ದಾವೀದನನ್ನು ಎದುರುಗೊಳ್ಳಲು ದೇವರು ನಾತಾನನನ್ನು ಕಳುಹಿಸಿದನು.
- ದಾವೀದನು ಅರಸನಾಗಿರುವ ಸಮಯದಲ್ಲೂ ನಾತಾನನು ದಾವೀದನನ್ನು ಗದರಿಸಿದನು.
- ನಾತಾನನು ದಾವೀದನನ್ನು ಎದುರ್ಗೊಂಡನಂತರ, ದಾವೀದನು ತನ್ನ ಪಾಪದ ವಿಷಯದಲ್ಲಿ ಪಶ್ಚಾತ್ತಾಪಪಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದಾವೀದ, ನಂಬಿಗಸ್ತ, ಪ್ರವಾದಿ, ಊರೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 17:07 “ನೀನು ಯುದ್ಧ ಮಾಡುವ ಮನುಷ್ಯನಾಗಿರುವದರಿಂದ, ನೀನು ನನಗಾಗಿ ದೇವಾಲಯವನ್ನು ಕಟ್ಟಬಾರದು” ಎನ್ನುವ ಸಂದೇಶದೊಂದಿಗೆ ದಾವೀದನ ಬಳಿಗೆ ದೇವರು ತನ್ನ ಪ್ರವಾದಿಯಾದ ___ ನಾತಾನನ್ನು ___ ಕಳುಹಿಸಿದನು..
- 17:13ದಾವೀದನು ಮಾಡಿದ ಕೆಲಸದ ಕುರಿತಾಗಿ ದೇವರು ತುಂಬಾ ಕೋಪದಲ್ಲಿದ್ದನು, ಇದರಿಂದ ಇದು ಎಷ್ಟು ಭಯಂಕರವಾದ ಪಾಪವೆಂದು ದಾವೀದನಿಗೆ ತಿಳಿಸಿಕೊಡಲು ಆತನು ಪ್ರವಾದಿಯಾದ ___ ನಾತಾನನನ್ನು ___ ಕಳುಹಿಸಿದನು.
ಪದ ಡೇಟಾ:
- Strong's: H5416, G3481
ನಾಮಾನ್
ಸತ್ಯಾಂಶಗಳು:
ಹಳೇ ಒಡಂಬಡಿಕೆಯಲ್ಲಿ ನಾಮಾನನು ಆರಾಮ್ ರಾಜ್ಯದ ಸೈನ್ಯಕ್ಕೆ ಸೈನ್ಯಾಧಿಪತಿಯಾಗಿದ್ದನು.
- ನಾಮಾನನಿಗೆ ಎಂದಿಗೂ ವಾಸಿಯಾಗದ ಕುಷ್ಠ ರೋಗ ಎನ್ನುವ ಭಯಂಕರವಾದ ಚರ್ಮದ ರೋಗವು ಬಂದಿತ್ತು.
- ನಾಮಾನನ ಮನೆಯಲ್ಲಿರುವ ಯೆಹೂದ್ಯ ದಾಸಿ ಪ್ರವಾದಿಯಾದ ಎಲೀಷನ ಬಳಿಗೆ ಹೋಗಿ ನಿನ್ನ ರೋಗವನ್ನು ವಾಸಿ ಮಾಡಬೇಕೆಂದು ಕೇಳಿಕೊಳ್ಳಿರಿ ಎಂದು ಅವನಿಗೆ ಹೇಳಿದಳು.
- ಎಲೀಷನು ನಾಮಾನನಿಗೆ ಯೊರ್ದನ್ ನದಿಯೊಳಗೆ ಏಳು ಬಾರಿ ಮುಳುಗಿ ಎದ್ದೇಳಬೇಕೆಂದು ಹೇಳಿದನು. ನಾಮಾನನು ವಿಧೇಯನಾದಾಗ, ದೇವರು ಅವನ ರೋಗವನ್ನು ವಾಸಿ ಮಾಡಿದನು.
ಇದಕ್ಕೆ ಫಲಿತಾಂಶವು ನಾಮಾನನು ನಿಜವಾದ ಒಬ್ಬರೇ ದೇವರಾಗಿರುವ ಯೆಹೋವನಲ್ಲಿ ನಂಬಿಕೆಯಿಟ್ಟನು.
- ನಾಮಾನನ ಮೇಲಿರುವ ಇನ್ನೂ ಇಬ್ಬರು ಯಾಕೋಬನ ಮಗನಾಗಿರುವ ಬೆನ್ಯಾಮೀನನ ಸಂತಾನದವರಾಗಿರುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆರಾಮ್, ಯೊರ್ದನ್ ಹೊಳೆ, ಕುಷ್ಠ ರೋಗ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 19:14 ಅತೀ ಭಯಾನಕವಾದ ಚರ್ಮ ರೋಗವನ್ನು ಹೊಂದಿದ ಶತ್ರು ಸೈನ್ಯಾಧಿಪತಿಯಾಗಿರುವ ___ ನಾಮಾನನಿಗೆ ___ ಅನೇಕ ಅದ್ಭುತ ಕಾರ್ಯಗಳಲ್ಲಿ ಒಂದು ನಡೆದಿದೆ.
- 19:15 ಮೊದಲಬಾರಿಗೆ ___ ನಾಮಾನನು ___ ಸಿಟ್ಟುಗೊಂಡಿದ್ದನು, ಯಾಕಂದರೆ ಅದು ತುಂಬಾ ಮೂರ್ಖತನವೆಂದು ಭಾವಿಸಿ ಅದನ್ನು ಮಾಡುವುದಕ್ಕೆ ಇಷ್ಟಪಟ್ಟಿರಲಿಲ್ಲ. ಆದರೆ ಸ್ವಲ್ಪ ಸಮಯದನಂತರ ತನ್ನ ಮನಸ್ಸನ್ನು ಮಾರ್ಪಾಟು ಮಾಡಿಕೊಂಡು, ಯೊರ್ದನ್ ಹೊಳೆಯಲ್ಲಿ ಏಳು ಬಾರಿ ಮುಳುಗಿ ಎದ್ದಿದ್ದನು.
- 26:06 “ಇಸ್ರಾಯೇಲ್ ಶತ್ರುಗಳ ಸೈನ್ಯಾಧಿಪತಿಯಾದ ___ ನಾಮಾನನ ___ ಚರ್ಮ ರೋಗವನ್ನು ಮಾತ್ರವೇ ಆತನು (ಎಲೀಷನು) ವಾಸಿ ಮಾಡಿದ್ದನು.”
ಪದ ಡೇಟಾ:
- Strong's: H5283, G3497
ನಾಹೋರ್
ಸತ್ಯಾಂಶಗಳು:
ನಾಹೋರ್ ಎನ್ನುವ ಹೆಸರು ಅಬ್ರಾಹಾಮನ ಇಬ್ಬರ ಬಂಧುಗಳ ಹೆಸರಾಗಿರುತ್ತದೆ, ಅಂದರೆ ಅಬ್ರಾಹಾಮನ ತಾತ ಮತ್ತು ತನ್ನ ಸಹೋದರನ ಹೆಸರಾಗಿರುತ್ತದೆ.
- ಅಬ್ರಾಹಾಮನ ಸಹೋದರನಾದ ನಾಹೋರನು ಇಸಾಕನ ಹೆಂಡತಿಯಾದ ರೆಬೆಕ್ಕಳ ತಾತನಾಗಿರುತ್ತಾನೆ.
- “ನಾಹೋರ್ ಪಟ್ಟಣ” ಎನ್ನುವ ಮಾತಿಗೆ “ನಾಹೋರ್ ಹೆಸರಿನ ಪಟ್ಟಣ” ಅಥವಾ “ನಾಹೋರನು ನಿವಾಸವಾಗಿರುವ ಪಟ್ಟಣ” ಅಥವಾ “ನಾಹೋರನ ಪಟ್ಟಣ” ಎನ್ನುವ ಅರ್ಥಗಳಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ರೆಬೆಕ್ಕಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5152, G3493
ನಿನೆವೆ, ನಿನೆವೆಯನು
ಸತ್ಯಾಂಶಗಳು:
ನಿನೆವೆ ಅಶ್ಯೂರಿನ ರಾಜಧಾನಿ ಪಟ್ಟಣವಾಗಿತ್ತು. “ನಿನೆವೆಯನು” ಎನ್ನುವ ಪದವು ನಿನೆವೆಯಲ್ಲಿ ಜೀವಿಸುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
- ನಿನೆವೆಯರು ತಮ್ಮ ದುಷ್ಟ ಮಾರ್ಗಗಳಿಂದ ತಿರುಗಿಕೊಳ್ಳಬೇಕೆಂದು ಎಚ್ಚರಿಸಲು ದೇವರು ಪ್ರವಾದಿಯಾದ ಯೋನನನ್ನು ನಿನೆವೆಗೆ ಕಳುಹಿಸಿದನು. ಜನರೆಲ್ಲರೂ ಮಾನಸಾಂತರ ಹೊಂದಿದರು ಮತ್ತು ದೇವರು ಅವರನ್ನು ನಾಶಗೊಳಿಸಲಿಲ್ಲ.
- ಅಶ್ಯೂರಿಯರು ಸ್ವಲ್ಪ ಕಾಲವಾದನಂತರ ದೇವರನ್ನು ಸೇವಿಸುವುದನ್ನು ನಿಲ್ಲಿಸಿಬಿಟ್ಟರು. ಅವರು ಇಸ್ರಾಯೇಲ್ ರಾಜ್ಯವನ್ನು ಜಯಿಸಿದರು ಮತ್ತು ಜನರೆಲ್ಲರನ್ನು ನಿನೆವೆಗೆ ಕರೆದೊಯ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಯೋನ, ಪಶ್ಚಾತ್ತಾಪ ಹೊಂದು, ತಿರುಗಿಕೋ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5210, G3535, G3536
ನೆಬುಕದ್ನೆಚರ
ಸತ್ಯಾಂಶಗಳು:
ನೆಬುಕದ್ನೆಚರ ಬಾಬೆಲೋನಿಯ ಸಾಮ್ರಾಜ್ಯದ ಅರಸನಾಗಿದ್ದನು, ಈ ಸಾಮ್ರಾಜ್ಯವು ಅನೇಕ ಜನರ ಗುಂಪುಗಳನ್ನು ಮತ್ತು ದೇಶಗಳನ್ನು ಜಯಸಿದ ಶಕ್ತಿಯುತವಾದ ಸೈನ್ಯವಾಗಿದ್ದಿತ್ತು.
- ನೆಬುಕದ್ನೆಚರ ನಾಯಕತ್ವದ ಕೆಳಗೆ, ಬಾಬೆಲೋನಿಯ ಸೈನ್ಯವು ಯೆಹೂದ ರಾಜ್ಯದ ಮೇಲೆ ಧಾಳಿ ಮಾಡಿ ಜಯಸಿದರು, ಮತ್ತು ಯೆಹೂದ ಜನರಲ್ಲಿ ಅನೇಕರನ್ನು ಸೆರೆ ಹಿಡಿದು ಬಾಬೆಲೋನಿಯಾಗೆ ತೆಗೆದುಕೊಂಡು ಹೋದರು. ಸೆರೆ ಹಿಡಿದು ಜನರನ್ನು ಸುಮಾರು 70 ವರ್ಷಗಳ ಕಾಲ ಜೀವಿಸುವಂತೆ ಬಲವಂತಿಕೆ ಮಾಡಿದ್ದರು, ಇದನ್ನೇ ಬಾಬೆಲೋನಿಯ ಸೆರೆ ಎಂದು ಕರೆಯುತ್ತಾರೆ.
- ಒಂದು ಸೆರೆಯಲ್ಲಿ ದಾನಿಯೇಲನು ಅರಸನಾಗಿರುವ ನೆಬುಕದ್ನೆಚರನ ಕನಸುಗಳಿಗೆ ಅರ್ಥವಿವರಣೆಯನ್ನು ಹೇಳಿದನು.
- ಸೆರೆಗೊಯ್ದ ಮೂವರ ಇಸ್ರಾಯೇಲ್ಯರಾದ ಹನನ್ಯ, ಮೀಶಾಯೇಲ, ಮತ್ತು ಅಜರ್ಯ ಎನ್ನುವವರನ್ನು ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿದ್ದರು, ಯಾಕಂದರೆ ಅವರು ನೆಬುಕದ್ನೆಚರನು ಮಾಡಿಸಿದ ಬಂಗಾರದ ಪ್ರತಿಮೆಗೆ ಮುಗಿದಿರಲಿಲ್ಲ.
- ಅರಸನಾದ ನೆಬುಕದ್ನೆಚರನು ತುಂಬಾ ಅಹಂಕಾರಿಯಾಗಿದ್ದನು ಮತ್ತು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದನು. ಅವನು ಯೆಹೂದ್ಯವನ್ನು ಜಯಿಸಿದನಂತರ, ಅವನು ಯೆರೂಸಲೇಮಿನಲ್ಲಿ ದೇವಾಲಯದಿಂದ ಬೆಳ್ಳಿ ಬಂಗಾರ ವಸ್ತುಗಳನ್ನು ಕದ್ದಿದ್ದನು.
- ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದರಿಂದ ತಿರುಗಿಕೊಳ್ಳುವುದಕ್ಕೆ ನೆಬುಕದ್ನೆಚರನು ತುಂಬಾ ಗರ್ವದಿಂದಿದ್ದು, ತಿರಸ್ಕಾರ ಮಾಡಿರುವದರಿಂದ ಅವನು ಒಂದು ಪ್ರಾಣಿಯಂತೆ ಸುಮಾರು ಏಳು ವರ್ಷಗಳ ವರೆಗೆ ದಿಕ್ಕಿಲ್ಲದಂತೆ ಜೀವನ ಮಾಡಿದ್ದನು. ಏಳು ವರ್ಷಗಳಾದನಂತರ ನೆಬುಕದ್ನೆಚರನು ನಿಜವಾದ ದೇವರಾಗಿರುವ ಒಬ್ಬರೇ ದೇವರಾದ ಯೆಹೋವಾನನ್ನು ಸ್ತುತಿಸಿ, ತನ್ನನ್ನು ತಗ್ಗಿಸಿಕೊಂಡಿದ್ದ ಕಾರಣದಿಂದ ದೇವರು ಅವನನ್ನು ವಾಸಿ ಮಾಡಿದನು,
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಹಂಕಾರಿ, ಅಜರ್ಯ, ಬಾಬೆಲೋನಿಯ, ಹನನ್ಯ, ಮೀಶಾಯೇಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 20:06 ಇಸ್ರಾಯೇಲ್ ರಾಜ್ಯವನ್ನು ಅಶ್ಯೂರಿಯರು ನಾಶಗೊಳಿಸಿದನಂತರ ಸುಮಾರು 100 ವರ್ಷಗಳಾದ ಮೇಲೆ, ಯೆಹೂದ ರಾಜ್ಯದ ಮೇಲೆ ಧಾಳಿ ಮಾಡುವುದಕ್ಕೆ ಬಾಬೆಲೋನಿಯ ಅರಸನಾಗಿರುವ __ ನೆಬುಕದ್ನೆಚರನನ್ನು __ ದೇವರು ಕಳುಹಿಸಿದರು.
- 20:06 ಯೆಹೂದ ಅರಸನು __ ನೆಬುಕದ್ನೆಚರನ __ ದಾಸನಾಗಿರುವುದಕ್ಕೆ ಮತ್ತು ಪ್ರತಿ ವರ್ಷವು ಹೆಚ್ಚಿನ ಹಣವನ್ನು ಕೊಡುವುದಕ್ಕೆ ಒಪ್ಪಿಕೊಂಡಿರುತ್ತಾನೆ.
- 20:08 ತಿರಸ್ಕಾರ ಮಾಡಿದ್ದಕ್ಕಾಗಿ ಯೆಹೂದ ಅರಸನನ್ನು ಶಿಕ್ಷಿಸುವುದಕ್ಕೆ, __ ನೆಬುಕದ್ನೆಚರನ __ ಸೈನಿಕರು ಅರಸನ ಗಂಡು ಮಕ್ಕಳನ್ನು ಅವನ ಮುಂದೆಯೇ ಸಾಯಿಸಿದರು ಮತ್ತು ಅವನನ್ನು ಕುರುಡನನ್ನಾಗಿ ಮಾಡಿದರು.
- 20:09 __ ನೆಬುಕದ್ನೆಚರನು __ ಮತ್ತು ತನ್ನ ಸೈನ್ಯವು ಯೆಹೂದ ರಾಜ್ಯದಲ್ಲಿರುವ ಅನೇಕ ಜನರನ್ನು ಬಾಬೆಲೋನಿಯಗೆ ಕರೆದೊಯ್ದರು, ಆದರೆ ಹೊಲಗದ್ದೆಗಳಲ್ಲಿ ಬಡ ಜನರನ್ನು ಬಿಟ್ಟು ಹೋದರು.
ಪದ ಡೇಟಾ:
- Strong's: H5019, H5020
ನೆಹೆಮೀಯ
ಸತ್ಯಾಂಶಗಳು:
ನೆಹೆಮೀಯನು ಇಸ್ರಾಯೇಲಿಯನಾಗಿರುತ್ತಾನೆ, ಯೆಹೂದ ಮತ್ತು ಇಸ್ರಾಯೇಲ್ ಜನರನ್ನು ಬಾಬೆಲೋನಿಯರಿಂದ ಸೆರೆಗೊಯ್ಯಲ್ಪಟ್ಟ ಸಮಯದಲ್ಲಿ ಬಲವಂತಿಕೆಯಿಂದ ಕರೆದೊಯ್ಯಲ್ಪಟ್ಟಿದ್ದನು.
- ಈತನು ಪಾರಸೀಯ ಅರಸನಾದ ಅಹಷ್ವೆರೋಷನಿಗೆ ಪಾನದಾಯಕನಾಗಿರುವಾಗ, ನೆಹೆಮೀಯನು ಅರಸನ ಬಳಿಗೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿ ಹೋಗುವುದಕ್ಕೆ ಅನುಮತಿಗಾಗಿ ಕೇಳಿದನು.
- ಯೆರೂಸಲೇಮಿನ ಗೋಡೆಗಳನ್ನು ಬಾಬೆಲೋನಿಯರಿಂದ ನಾಶಗೊಂಡಾಗ, ಅವುಗಳನ್ನು ತಿರುಗಿ ಕಟ್ಟುವುದರಲ್ಲಿ ನೆಹೆಮೀಯನು ಇಸ್ರಾಯೇಲ್ಯರನ್ನು ನಡೆಸಿದನು.
- ಸುಮಾರು ಹನ್ನೆರಡು ವರ್ಷಗಳ ಕಾಲ ನೆಹೆಮೀಯನು ಅರಸನ ಮನೆಗೆ ಹೋಗುವುದಕ್ಕೆ ಮುಂಚಿತವಾಗಿ ಯೆರೂಸಲೇಮಿನ ಪಾಲಕನಾಗಿದ್ದನು.
- ಹಳೇ ಒಡಂಬಡಿಕೆಯಲ್ಲಿ ನೆಹೆಮೀಯ ಪುಸ್ತಕವು ಯೆರೂಸಲೇಮಿನಲ್ಲಿರುವ ಜನರ ಆತನ ಪಾಲನೆಯ ಕುರಿತಾಗಿ ಮತ್ತು ಗೋಡೆಗಳನ್ನು ತಿರುಗಿ ಕಟ್ಟುವುದರಲ್ಲಿ ನೆಹೆಮೀಯ ಕೆಲಸದ ಕಾರ್ಯಗಳನ್ನು ವಿವರಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ ನೆಹೆಮೀಯ ಎನ್ನುವ ಹೆಸರಿನ ಮೇಲೆ ಅನೇಕರಿದ್ದಾರೆ. ಯಾವ ನೆಹೆಮೀಯನ ಕುರಿತಾಗಿ ಮಾತನಾಡುತ್ತಿದ್ದಾರೆಂದು ವಿವರಿಸುವುದಕ್ಕೆ ಹೇಳಲು ಆ ಹೆಸರುಗಳ ಮುಂದೆ ಅವರ ತಂದೆಯ ಹೆಸರನ್ನು ಸಹಜವಾಗಿ ಬರೆಯುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಬಾಬೆಲೋನಿಯ, ಯೆರೂಸಲೇಮ್, ಮಗ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5166
ನೈಲ್ ನದಿ, ಐಗುಪ್ತ ನದಿ, ನೈಲ್
ಸತ್ಯಾಂಶಗಳು:
ನೈಲ್ ಎನ್ನುವುದು ಈಶಾನ್ಯ ಆಫ್ರಿಕಾದಲ್ಲಿರುವ ಉದ್ದವಾದ ಮತ್ತು ಅಗಲವಾದ ನದಿಯಾಗಿರುತ್ತದೆ. ಇದು ವಿಶೇಷವಾಗಿ ಐಗುಪ್ತ ದೇಶದ ಮುಖ್ಯ ನದಿಯಾಗಿ ಪ್ರಸಿದ್ಧಿ ಹೊಂದಿರುತ್ತದೆ..
- ನೈಲ್ ನದಿ ಉತ್ತರ ಐಗುಪ್ತದಿಂದ ಮೆಡಿಟರೇನಿಯನ್ ಸಮುದ್ರದೊಳಗೆ ಹರಡುತ್ತದೆ.
- ನೈಲ್ ನದಿಯ ಎರಡು ಬದಿಗೆ ಇರುವ ಫಲವತ್ತಾದ ಭೂಮಿಯಲ್ಲಿ ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ.
- ಇದು ಬೆಳೆಗಳಿಗೆ ಬೇಕಾದ ನೀರಿನ ಮುಖ್ಯ ಆಧಾರವಾಗಿರುವದರಿಂದ ನೈಲ್ ನದಿಯ ಪಕ್ಕದಲ್ಲಿಯೇ ಐಗುಪ್ತರಲ್ಲಿ ಹೆಚ್ಚಾಗಿ ಜೀವಿಸುತ್ತಾರೆ.
- ಇಸ್ರಾಯೇಲ್ಯರು ಗೋಷೆನ್ ಸೀಮೆಯಲ್ಲಿ ನಿವಾಸವಾಗಿದ್ದರೂ, ಇದು ನೈಲ್ ನದಿ ಪಕ್ಕದಲ್ಲಿಯೇ ಇದ್ದಿತ್ತು ಮತ್ತು ತುಂಬಾ ಫಲವತ್ತಾದ ಭೂಮಿಯಾಗಿದ್ದಿತ್ತು.
- ಮೋಶೆ ಶಿಶುವಾಗಿದ್ದಾಗ ತನ್ನನ್ನು ಫರೋಹನ ಮನುಷ್ಯರಿಂದ ಬಚ್ಚಿಡುವುದಕ್ಕೆ ತನ್ನ ತಂದೆತಾಯಿಗಳು ನೈಲ್ ಜೊಂಡುಗಳ ಮಧ್ಯೆಯಲ್ಲಿ ಒಂದು ಬುಟ್ಟಿಯಲ್ಲಿ ಹಾಕಿ ಬಿಟ್ಟಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಗೋಷೆನ್, ಮೋಶೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 08:04 ಐಗುಪ್ತ ದೇಶವು ಶಕ್ತಿಯುತವಾದ ದೊಡ್ಡ ದೇಶವಾಗಿರುತ್ತದೆ, ಇದು __ ನೈಲ್ ನದಿಯ __ ಪಕ್ಕದಲ್ಲಿ ಕಂಡುಬರುತ್ತದೆ.
- 09:04 ಇಸ್ರಾಯೇಲ್ಯರು ಅನೇಕಮಂದಿ ಶಿಶುಗಳನ್ನು ಹೊಂದುತ್ತಿದ್ದಾರೆಂದು ಫರೋಹನು ಕಂಡನು, ಆದ್ದರಿಂದ ಇಸ್ರಾಯೇಲ್ಯರ ಎಲ್ಲಾ ಶಿಶುಗಳನ್ನು ಕೊಂದು __ ನೈಲ್ ನದಿಯಲ್ಲಿ __ ಬಿಸಾಡಿರಿ ಎಂದು ತನ್ನ ಜನರಿಗೆ ಅಪ್ಪಣೆ ಕೊಟ್ಟನು.
- 09:06 ತನ್ನ ತಂದೆತಾಯಿಯರು ಶಿಶುವನ್ನು ಹೆಚ್ಚಿನ ಕಾಲ ಬಚ್ಚಿಡುವುದಕ್ಕಾಗದ ಕಾರಣದಿಂದ, ಆ ಶಿಶುವು ಸಾಯದಂತೆ ತನ್ನ ರಕ್ಷಿಸುವುದಕ್ಕೆ __ ನೈಲ್ ನದಿಯ __ ತುದಿ ಭಾಗದಲ್ಲಿ ಜೊಂಡುಗಳ ಮಧ್ಯೆಯಲ್ಲಿ ತೇಲಾಡುವ ಬುಟ್ಟಿಯಲ್ಲಿ ಅವನನ್ನು ಇಟ್ಟು ನೀರಿನ ಮೇಲೆ ಬಿಟ್ಟರು.
- 10:03 ದೇವರು __ ನೈಲ್ ನದಿಯನ್ನು __ ರಕ್ತವನ್ನಾಗಿ ಮಾರ್ಪಡಿಸಿದರು, ಆದರೂ ಫರೋಹನು ಇಸ್ರಾಯೇಲ್ಯರನ್ನು ಬಿಡಲಿಲ್ಲ.
ಪದ ಡೇಟಾ:
- Strong's: H2975, H4714, H5104
ನೋಹ
ಸತ್ಯಾಂಶಗಳು:
ನೋಹನು 4,000 ಸಾವಿರ ವರ್ಷಗಳ ಹಿಂದೆ ಜೀವಿಸಿದವನಾಗಿದ್ದನು, ದೇವರು ಪ್ರಪಂಚವ್ಯಾಪ್ತವಾಗಿ ಲೋಕದಲ್ಲಿರುವ ದುಷ್ಟ ಜನರೆಲ್ಲರನ್ನು ನಾಶ ಮಾಡುವುದಕ್ಕೆ ಪ್ರಳಯವನ್ನು ಕಳುಹಿಸಿದ ಸಮಯದಲ್ಲಿ ಜೀವಿಸಿದವನಾಗಿದ್ದನು. ದೇವರು ನೋಹನಿಗೆ ಅತಿ ದೊಡ್ಡ ನಾವೆಯನ್ನು ಕಟ್ಟಬೇಕೆಂದು ಹೇಳಿದನು ಮತ್ತು ಭೂಮಿಯ ಮೇಲೆ ಪ್ರಳಯವು ಆವರಿಸುವಾಗ ಅವನು ಮತ್ತು ಅವನ ಕುಟುಂಬದವರು ನಾವೆಯಲ್ಲಿ ಜೀವಿಸಬಹುದು.
- ನೋಹನು ಎಲ್ಲಾ ವಿಷಯಗಳಲ್ಲಿ ದೇವರಿಗೆ ವಿಧೇಯನಾಗಿರುವ ನೀತಿವಂತನಾದ ಮನುಷ್ಯನಾಗಿದ್ದನು.
- ಅತೀ ದೊಡ್ಡ ನಾವೆಯನ್ನು ಯಾವರೀತಿ ನಿರ್ಮಿಸಬೇಕೆಂದು ದೇವರು ನೋಹನಿಗೆ ಹೇಳಿದಾಗ, ನೋಹನು ದೇವರು ಹೇಳಿದ ಪ್ರಕಾರವೇ ಅದನ್ನು ನಿರ್ಮಿಸಿದನು.
- ನಾವೆಯಲ್ಲಿ ನೋಹನು ಮತ್ತು ತನ್ನ ಕುಟುಂಬದವರು ಸುರಕ್ಷಿತವಾಗಿದ್ದರು, ಮತ್ತು ತನ್ನ ಮಕ್ಕಳು, ಮೊಮ್ಮೊಕ್ಕಳು ಜನರನ್ನು ಹುಟ್ಟಿಸಿ ಭೂಮಿಯೆಲ್ಲಾ ತುಂಬಿಸಿದರು.
- ಪ್ರಳಯವಾದನಂತರ ಹುಟ್ಟಿದ ಪ್ರತಿಯೊಬ್ಬರೂ ನೋಹನ ಸಂತಾನದವರಾಗಿರುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ನಾವೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 03:02 ಆದರೆ ___ ನೋಹನು ___ ದೇವರ ದಯೆಯನ್ನು ಹೊಂದಿದನು.
- 03:04 ___ ನೋಹನು ___ ದೇವರಿಗೆ ವಿಧೇಯನಾದನು. ಆತನು ಮತ್ತು ತನ್ನ ಮೂವರು ಮಕ್ಕಳು ದೇವರು ತಮಗೆ ಹೇಳಿದ ಪ್ರಕಾರ ನಾವೆಯನ್ನು ನಿರ್ಮಿಸಿದರು.
- 03:13 ಎರಡು ತಿಂಗಳುಗಳಾದ ಮೇಲೆ, “ನೀನು ಮತ್ತು ನಿನ್ನ ಕುಟುಂಬ ಮತ್ತು ಎಲ್ಲಾ ಪ್ರಾಣಿಗಳು ನಾವೆಯೊಳಗಿಂದ ಹೊರ ಹೋಗಬಹುದು, ಅನೇಕಮಂದಿ ಮಕ್ಕಳನ್ನು, ಮೊಮ್ಮೊಕ್ಕಳನ್ನು ಹುಟ್ಟಿಸಿ, ಭೂಮಿಯನ್ನು ತುಂಬಿಸಿರಿ” ಎಂದು ದೇವರು ___ ನೋಹನಿಗೆ ___ ಹೇಳಿದನು. ಆದ್ದರಿಂದ ___ ನೋಹನು ___ ಮತ್ತು ತನ್ನ ಕುಟುಂಬವು ನಾವೆಯೊಳಗಿಂದ ಹೊರ ಬಂದರು.
ಪದ ಡೇಟಾ:
- Strong's: H5146, G3575
ಪದ್ದನ್ ಅರಾಮ್
ಸತ್ಯಾಂಶಗಳು:
ಪದ್ದನ್ ಆರಾಮ್ ಎನ್ನುವುದು ಅಬ್ರಾಹಾಮನು ಕಾನಾನ್ ಭೂಮಿಗೆ ಹೋಗುವುದಕ್ಕೆ ಮುಂಚಿತವಾಗಿ ತನ್ನ ಕುಟುಂಬವೆಲ್ಲ ನಿವಾಸವಾಗಿರುವ ಪ್ರಾಂತ್ಯದ ಹೆಸರಾಗಿರುತ್ತದೆ. ಈ ಮಾತಿಗೆ “ಆರಾಮ್ ಬಯಲು” ಎಂದರ್ಥ.
- ಅಬ್ರಾಹಾಮನು ಪದ್ದನ್ ಅರಾಮಿನಲ್ಲಿರುವ ಹಾರಾನ್ ಬಿಟ್ಟು ಕಾನಾನ್ ಭೂಮಿಗೆ ಪ್ರಯಾಣ ಮಾಡಿದಾಗ, ಉಳಿದ ತನ್ನ ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಹಾರಾನಿನಲ್ಲಿಯೇ ಜೀವಿಸಿದ್ದರು.
- ಅನೇಕ ವರ್ಷಗಳಾದನಂತರ ಅಬ್ರಾಹಾಮನ ಬಂಧುಗಳಲ್ಲಿ ಇಸಾಕನಿಗೆ ಹೆಂಡತಿಯನ್ನು ಕಂಡುಕೊಳ್ಳಲು ಅಬ್ರಾಹಾಮನ ದಾಸನು ಪದ್ದನ್ ಅರಾಮಿಗೆ ಹೋದನು, ಅಲ್ಲಿ ಬೆತೂವೇಲನ ಮೊಮ್ಮೊಗಳಾದ ರೆಬೆಕ್ಕಳನ್ನು ಕಂಡುಕೊಂಡನು.
- ಇಸಾಕ ಮತ್ತು ರೆಬೆಕ್ಕರವರ ಮಗನಾದ ಯಾಕೋಬನು ಕೂಡ ಪದ್ದನ್ ಅರಾಮಿಗೆ ಪ್ರಯಾಣ ಮಾಡಿದನು ಮತ್ತು ಹಾರಾನಿನಲ್ಲಿ ಜೀವಿಸುತ್ತಿರುವ ರೆಬೆಕ್ಕಳ ಅಣ್ಣನಾಗಿರುವ ಲಾಬಾನನ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಮಾಡಿಕೊಂಡನು.
- ಆರಾಮ್, ಪದ್ದನ್-ಆರಾಮ್ ಮತ್ತು ಆರಾಮ್ ಸೀಮೆ ಎನ್ನುವವುಗಳು ಈಗಿನ ಸಿರಿಯಾ ದೇಶವಿರುವ ಸ್ಥಳದ ಒಂದೇ ಪ್ರಾಂತ್ಯಕ್ಕೆ ಸಂಬಂಧಪಟ್ಟವುಗಳಾಗಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಆರಾಮ್, ಬೆತೂವೇಲ, ಕಾನಾನ್, ಹಾರಾನ್, ಯಾಕೋಬ, ಲಾಬಾನ್, ರೆಬೆಕ್ಕ, ಸಿರಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6307
ಪಾರಸಿ, ಪಾರಸಿಯರು
ಪದದ ಅರ್ಥವಿವರಣೆ:
ಪಾರಸಿ ಎನ್ನುವುದು ಒಂದು ದೇಶವಾಗಿತ್ತು, ಇದು ಸುಮಾರು ಕ್ರಿ.ಪೂ.550 ರಲ್ಲಿ ಮಹಾ ಕೋರೆಷನಿಂದ ಸ್ಥಾಪಿಸಲ್ಪಟ್ಟ ಶಕ್ತಿಯುತವಾದ ಸಾಮ್ರಾಜ್ಯವಾಗಿ ಮಾರ್ಪಟ್ಟಿತ್ತು. ಪಾರಸಿಯ ದೇಶವು ಈಗಿನ ಆಧುನಿಕ ಇರಾನ್ ದೇಶದ ಪ್ರಾಂತ್ಯದಲ್ಲಿರುವ ಬಾಬೆಲೋನಿಯ ಮತ್ತು ಆಶ್ಯೂರ್ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ.
- ಪಾರಸಿಯ ಜನರನ್ನು “ಪಾರಸಿಯರು” ಎಂದು ಕರೆಯುತ್ತಿದ್ದರು.
- ಅರಸನಾದ ಕೋರೆಷನ ಆಳ್ವಿಕೆಯಲ್ಲಿ ಯೆಹೂದ್ಯರೆಲ್ಲರು ಬಾಬೆಲೋನಿಯದಲ್ಲಿರುವ ತಮ್ಮ ಸೆರೆಯಿಂದ ಬಿಡುಗಡೆ ಹೊಂದಿ, ತಮ್ಮ ಮನೆಗೆ ಹೋಗುವುದಕ್ಕೆ ಅನುಮತಿಸಲ್ಪಟ್ಟಿದ್ದರು, ಮತ್ತು ಯೆರೂಸಲೇಮಿನಲ್ಲಿರುವ ದೇವಾಲಯವನ್ನು ಪಾರಸಿಯ ಸಾಮ್ರಾಜ್ಯದಿಂದ ಕೊಡಲ್ಪಟ್ಟಿರುವ ನಿಧಿಗಳಿಂದ ಪುನರ್ ನಿರ್ಮಾಣ ಮಾಡಲ್ಪಟ್ಟಿತ್ತು,
- ಎಜ್ರಾ ಮತ್ತು ನೆಹೆಮೀಯರು ಯೆರೂಸಲೇಮಿನಲ್ಲಿರುವ ಗೋಡೆಗಳನ್ನು ಪುನರ್ ನಿರ್ಮಾಣ ಮಾಡುವುದಕ್ಕೆ ಹಿಂದುರಿಗಿ ಹೋದಾಗ ಅರಸನಾದ ಅಹಷ್ವೆರೋಷನು ಪಾರಸಿಯ ಸಾಮ್ರಾಜ್ಯಕ್ಕೆ ಪಾಲಕನಾಗಿದ್ದನು.
- ಎಸ್ತೇರಳು ಅರಸನಾದ ಅಹಷ್ಟೇರೋಷನನ್ನು ವಿವಾಹ ಮಾಡಿಕೊಂಡಾಗ ಆಕೆ ಪಾರಸಿಯ ಸಾಮ್ರಾಜ್ಯದ ರಾಣಿಯಾದಳು.
(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಅರ್ತಷಸ್ತ, ಅಶ್ಯುರ್, ಬಾಬೆಲೋನಿಯ, ಕೊರೇಷ, ಎಸ್ತೇರ್, ಎಜ್ರಾ, ನೆಹೆಮೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6539, H6540, H6542, H6543
ಪಾರಾನ್
ಸತ್ಯಾಂಶಗಳು:
ಪಾರಾನ್ ಎನ್ನುವುದು ಕಾನಾನ್ ಭೂಮಿಯ ದಕ್ಷಿಣ ಭಾಗ ಮತ್ತು ಐಗುಪ್ತ ಪೂರ್ವ ಭಾಗದ ಮರುಭೂಮಿ ಅಥವಾ ಅರಣ್ಯ ಪ್ರಾಂತ್ಯವಾಗಿರುತ್ತದೆ. ಪಾರಾನ್ ಪರ್ವತವೂ ಇದೆ, ಇದು ಚೀಯೋನ್ ಪರ್ವತಕ್ಕೆ ಮತ್ತೊಂದು ಹೆಸರಾಗಿರಬಹುದು.
- ದಾಸಿಯಾದ ಹಾಗರಳನ್ನು ಮತ್ತು ತನ್ನ ಮಗನಾದ ಇಷ್ಮಾಯೇಲನನ್ನು ಹೊರಗೆ ಕಳುಹಿಸು ಎಂದು ಸಾರಳು ಅಬ್ರಾಹಾಮನನ್ನು ಆಜ್ಞಾಪಿಸಿದನಂತರ, ಅವರು ಜೀವಿಸುವುದಕ್ಕೆ ಪಾರಾನ್ ಅರಣ್ಯಕ್ಕೆ ಹೊರಟು ಹೋದರು.
- ಮೋಶೆ ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ನಡೆಸಿದನಂತರ, ಅವರು ಪಾರಾನ್ ಅರಣ್ಯದ ಮೂಲಕ ಹಾದು ಹೋಗಿದ್ದರು.
- ಮೋಶೆ ಹನ್ನೆರಡುಮಂದಿ ಗೂಢಚಾರಿಗಳನ್ನು ಕಾನಾನ್ ಭೂಮಿಗೆ ಕಳುಹಿಸಿ, ಮಾಹಿತಿಯನ್ನು ತೆಗೆದುಕೊಂಡು ಬನ್ನಿರಿ ಎಂದು ಹೇಳಿದ್ದು ಪಾರಾನ್ ಅರಣ್ಯದಲ್ಲಿರುವ ಕಾದೇಶ್ ಬರ್ನೇಯ ಪ್ರಾಂತ್ಯವಾಗಿದ್ದಿತ್ತು.
- ಚಿನ್ ಅರಣ್ಯವು ಪಾರಾನ್ ಉತ್ತರ ಭಾಗವಿತ್ತು ಮತ್ತು ಸೀನ್ ಮರುಭೂಮಿಯು ಪಾರಾನ್ ದಕ್ಷಿಣ ಭಾಗವಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಮರುಭೂಮಿ, ಐಗುಪ್ತ, ಕಾದೇಶ್, ಸೀನಾಯಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H364, H6290
ಪಿಲಾತ
ಸತ್ಯಾಂಶಗಳು:
ಪಿಲಾತ ಎನ್ನುವವನು ಯೇಸುವಿಗೆ ಮರಣದಂಡನೆಯನ್ನು ವಿಧಿಸಿದ ಯೆಹೂದದ ರೋಮಾ ಸೀಮೆಯ ಪಾಲಕನಾಗಿದ್ದನು.
- ಯಾಕಂದರೆ ಪಿಲಾತನು ಪಾಲಕನಾಗಿರುತ್ತಾನೆ, ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸುವುದಕ್ಕೆ ಅಧಿಕಾರವನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾನೆ.
- ಪಿಲಾತನು ಯೇಸುವನ್ನು ಶಿಲುಬೆಗೆ ಏರಿಸಬೇಕೆಂದು ಯೆಹೂದ್ಯರ ಧರ್ಮದ ನಾಯಕರು ಬಯಸಿದ್ದರು, ಆದಕಾರಣ ಅವರು ಸುಳ್ಳಾಡಿದರು ಮತ್ತು ಯೇಸು ಅಪರಾಧಿಯೆಂದು ಎಲ್ಲರು ಕೂಗಿ ಹೇಳಿದರು.
- ಯೇಸು ಅಪರಾಧಿಯಲ್ಲವೆಂದು ಪಿಲಾತನು ತಿಳಿದುಕೊಂಡನು, ಆದರೆ ಅವನು ಜನಸಮೂಹಗಳನ್ನು ನೋಡಿ ಹೆದರಿದನು ಮತ್ತು ಅವರೆಲ್ಲರನ್ನು ಮೆಚ್ಚಿಸಬೇಕೆಂದು ಬಯಸಿದನು, ಇದರಿಂದ ಯೇಸುವನ್ನು ಶಿಲುಬೆಗೆ ಏರಿಸಬೇಕೆಂದು ಅವನು ತನ್ನ ಸೈನಿಕರಿಗೆ ಅಪ್ಪಣೆ ಕೊಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಶಿಲುಬೆಗೆ ಏರಿಸು, ಪಾಲಕ, ಅಪರಾಧಿ, ಯೂದಾ, ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 39:09 ಆ ಮರುದಿನದ ಬೆಳಗಿನ ಜಾವದಲ್ಲಿ, ಯೆಹೂದ್ಯ ನಾಯಕರು ಯೇಸುವನ್ನು ರೋಮಾ ಪಾಲಕನಾಗಿರುವ ___ ಪಿಲಾತನ ___ ಬಳಿಗೆ ಕರೆದುಕೊಂಡು ಬಂದರು. ___ ಪಿಲಾತನು ___ ಯೇಸುವನ್ನು ಅಪರಾಧಿಯೆಂದು ನಿರ್ಣಯಿಸಿ, ಅವನನ್ನು ಸಾಯಿಸುತ್ತಾನೆಂದು ಅವರು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. “ನೀನು ಯೆಹೂದ್ಯರ ಅರಸನೋ?” ಎಂದು ___ ಪಿಲಾತನು ___ ಯೇಸುವನ್ನು ಕೇಳಿದನು.
- 39:10 “ಸತ್ಯವೇನು?” ಎಂದು ___ ಪಿಲಾತನು ___ ಹೇಳಿದನು.
- 39:11 ಯೇಸುವಿನೊಂದಿಗೆ ಮಾತನಾಡಿದನಂತರ, ___ ಪಿಲಾತನು ___ ಜನಸಮೂಹಗಳ ಬಳಿಗೆ ಹೋಗಿ, “ಈ ಮನುಷ್ಯನಲ್ಲಿ ಯಾವ ಅಪರಾಧವನ್ನೂ” ನಾನು ಕಂಡುಕೊಳ್ಳಲಿಲ್ಲ ಎಂದು ಹೇಳಿದನು. ಆದರೆ “ಅವನನ್ನು ಶಿಲುಬೆಗೇರಿಸಿರಿ!” ಎಂದು ಯೆಹೂದ್ಯರ ನಾಯಕರು ಮತ್ತು ಜನಸಮೂಹಗಳು ಕೂಗಿ ಹೇಳಿದರು, “ಇವನು ಅಪರಾಧಿಯಲ್ಲ” ಎಂದು ___ ಪಿಲಾತನು ___ ಉತ್ತರಿಸಿದನು. ಆದರೆ ಅವರು ಇನ್ನೂ ಹೆಚ್ಚಾಗಿ ಕೂಗಿದರು. ಆದರೂ ___ ಪಿಲಾತನು ___ ಮೂರನೆಯಸಲ “ಇವನು ಅಪರಾಧಿಯಲ್ಲ!” ಎಂದು ಹೇಳಿದನು.
- 39:12 ಜನಸಮೂಹಗಳು ಗಲಬೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆಂದು ___ ಪಿಲಾತನು ___ ಹೆದರಿ, ಯೇಸುವನ್ನು ಶಿಲುಬೆಗೇರಿಸುವುದಕ್ಕೆ ತನ್ನ ಸೈನಿಕರಿಗೆ ಅಪ್ಪಣೆ ಕೊಟ್ಟನು.
- 40:02 ಯೇಸುವಿನ ತಲೆಯ ಮೇಲೆ ಅಂದರೆ ಶಿಲುಬೆಯ ಮೇಲ್ಭಾಗದಲ್ಲಿ “ಯೆಹೂದ್ಯರ ಅರಸನು” ಎಂದು ಒಂದು ಗುರುತನ್ನು ಬರೆಯಬೇಕೆಂದು ___ ಪಿಲಾತನು ___ ಆಜ್ಞಾಪಿಸಿದನು.
- 41:02 “ಕೆಲವರು ಸೈನಿಕರನ್ನು ತೆಗೆದುಕೊಂಡು, ನಿಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ___ ಪಿಲಾತನು ___ ಹೇಳಿದನು.
ಪದ ಡೇಟಾ:
- Strong's: G4091, G4194
ಪೆಗೋರ್, ಪೆಗೋರ್ ಪರ್ವತ, ಬಾಳ್ ಪೆಗೋರ್
ಪದದ ಅರ್ಥವಿವರಣೆ:
“ಪೆಗೋರ್” ಮತ್ತು “ಪೆಗೋರ್ ಪರ್ವತ” ಎನ್ನುವ ಪದಗಳು ಮೋವಾಬ್ ಪ್ರಾಂತ್ಯದಲ್ಲಿ ಲವಣ ಸಮುದ್ರದ ಈಶಾನ್ಯ ಭಾಗದಲ್ಲಿ ಈ ಪರ್ವತವು ಕಂಡು ಬರುತ್ತದೆ.
- “ಬೆತ್ ಪೆಗೋರ್” ಎನ್ನುವ ಹೆಸರು ಒಂದು ಪಟ್ಟಣದ ಹೆಸರಾಗಿರುತ್ತದೆ, ಬಹುಶಃ ಈ ಪಟ್ಟಣ ಆ ಪರ್ವತದ ಪಕ್ಕದಲ್ಲಿಯೇ ಅಥವಾ ಹತ್ತಿರದಲ್ಲಿಯೇ ಕಂಡುಬರುತ್ತಿರಬಹುದು. ಇದು ದೇವರು ಮೋಶೆ ವಾಗ್ಧಾನ ಭೂಮಿಯನ್ನು ತೋರಿಸಿದನಂತರ, ಮೋಶೆ ಸತ್ತಂತ ಸ್ಥಳವಾಗಿರುತ್ತದೆ.
- “ಬಾಳ್ ಪೆಗೋರ್” ಎನ್ನುವುದು ಮೋವಾಬ್ಯರ ಸುಳ್ಳು ದೇವರಾಗಿರುತ್ತಾರೆ, ಇವರು ಪೆಗೋರ್ ಪರ್ವತದ ಮೇಲೆ ಈ ದೇವರನ್ನು ಆರಾಧನೆ ಮಾಡುತ್ತಿದ್ದರು. ಇಸ್ರಾಯೇಲ್ಯರು ಕೂಡ ಈ ವಿಗ್ರಹವನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದ್ದರು, ಈ ಕಾರಣದಿಂದ ದೇವರು ಅವರನ್ನು ಶಿಕ್ಷಿಸಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಳ್, ಸುಳ್ಳು ದೇವರು, ಮೋವಾಬ್, ಲವಣ ಸಮುದ್ರ, ಆರಾಧನೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1047, H1187, H6465
ಪೆರೆಜೀಯರು
ಸತ್ಯಾಂಶಗಳು:
ಪೆರೆಜೀಯರು ಕಾನಾನ್ ಭೂಮಿಯಲ್ಲಿ (ಅಥವಾ ದೇಶದಲ್ಲಿ) ಅನೇಕ ಜನರ ಗುಂಪುಗಳಲ್ಲಿ (ಅಥವಾ ಜನಾಂಗಗಳಲ್ಲಿ) ಒಂದು ಜನಾಂಗದವರಾಗಿದ್ದರು. ಈ ಗುಂಪಿನವರ ಕುರಿತಾಗಿ ತಿಳಿದುಕೊಳ್ಳಬೇಕಾದ ಒಂದು ಚಿಕ್ಕ ವಿಷಯವೇನೆಂದರೆ ಅವರ ಪೂರ್ವಜರು ನಿವಾಸವಾಗಿದ್ದ ಕಾನಾನ್ ಭಾಗದಲ್ಲಿ ಭಾಗಸ್ಥರಾಗಿದ್ದರು.
- ಪೆರೆಜೀಯರು ಎನ್ನುವ ಪದವನ್ನು ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ನ್ಯಾಯಾಧೀಶರು ಎನ್ನುವ ಪುಸ್ತಕದಲ್ಲಿ ಹೆಚ್ಚಿನ ಮಟ್ಟಿಗೆ ದಾಖಲು ಮಾಡಿರುತ್ತಾರೆ, ಪೆರೆಜೀಯರು ಇಸ್ರಾಯೇಲ್ಯರೊಂದಿಗೆ ವಿವಾಹ ಮಾಡಿಕೊಂಡಿದ್ದರು ಮತ್ತು ಸುಳ್ಳು ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಅವರನ್ನು ಪ್ರಭಾವಗೊಳಿಸಿದ್ದರು ಎನ್ನುವ ವಿಷಯವನ್ನು ದಾಖಲು ಮಾಡಿದ್ದನ್ನು ನೋಡಬಹುದು.
- ಪೆರೆಚ್ಯರು ಎಂದು ಕರೆಯಲ್ಪಡುವ ಪೆರೆಹನ ವಂಶದವರು ಪೆರೆಜೀಯರಿಂದ ಬಂದಿರುವ ಗುಂಪಿನ ಜನರು ಬೇರೆ ಬೇರೆ ಜನಾಂಗದವರಾಗಿರುತ್ತಾರೆ. ಇದನ್ನು ಸ್ಪಷ್ಟಗೊಳಿಸುವುದಕ್ಕೆ ಈ ಹೆಸರುಗಳನ್ನು ವಿಭಿನ್ನವಾಗಿ ಉಚ್ಚರಿಸುವುದು ತುಂಬಾ ಪ್ರಾಮುಖ್ಯವಾದ ವಿಷಯವೆಂದು ತಿಳಿಯುವುದು ಅತ್ಯಗತ್ಯ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಸುಳ್ಳು ದೇವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6522
ಪೇತ್ರ, ಸೀಮೋನ ಪೇತ್ರ, ಕೇಫ
ಸತ್ಯಾಂಶಗಳು:
ಪೇತ್ರನು ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಈತನು ಆದಿ ಸಭೆಯಲ್ಲಿ ತುಂಬಾ ಪ್ರಾಮುಖ್ಯವಾದ ನಾಯಕನಾಗಿದ್ದನು.
- ಯೇಸು ತನ್ನ ಶಿಷ್ಯನಾಗುವುದಕ್ಕೆ ಪೇತ್ರನನ್ನು ಕರೆಯುವುದಕ್ಕೆ ಮುಂಚಿತವಾಗಿ, ಪೇತ್ರನ ಹೆಸರು ಸೀಮೋನ ಎಂಬುದಾಗಿತ್ತು.
- ಸ್ವಲ್ಪ ಕಾಲವಾದನಂತರ, ಯೇಸು ಕೂಡ ತನಗೆ “ಕೇಫ” ಎನ್ನುವ ಹೆಸರಿನಿಂದ ಕರೆದಿದ್ದನು, ಇದಕ್ಕೆ ಅರಾಮಿಕ್ ಭಾಷೆಯಲ್ಲಿ “ಕಲ್ಲು” ಅಥವಾ “ಬಂಡೆ” ಎನ್ನುವ ಅರ್ಥಗಳಿರುತ್ತವೆ. ಪೇತ್ರ ಎನ್ನುವ ಹೆಸರಿಗೆ ಗ್ರೀಕ್ ಭಾಷೆಯಲ್ಲಿ “ಕಲ್ಲು” ಅಥವಾ “ಬಂಡೆ” ಎನ್ನುವ ಅರ್ಥಗಳಿವೆ.
- ಯೇಸುವಿನ ಕುರಿತಾದ ಶುಭವಾರ್ತೆಯನ್ನು ಪ್ರಕಟಿಸಲು ಮತ್ತು ಅನೇಕ ಜನರನ್ನು ವಾಸಿ ಮಾಡಲು ದೇವರು ಪೇತ್ರನ ಮೂಲಕ ಕೆಲಸ ಮಾಡಿದನು.
- ಅನೇಕಮಂದಿ ವಿಶ್ವಾಸಿಗಳಿಗೆ ಬೋಧಿಸುವುದಕ್ಕೆ ಮತ್ತು ಅವರನ್ನು ಪ್ರೋತ್ಸಾಹ ಮಾಡುವುದಕ್ಕೆ ಹೊಸ ಒಡಂಬಡಿಕೆಯಲ್ಲಿ ಎರಡು ಪುಸ್ತಕಗಳಾಗಿರುವ ಪತ್ರಿಕೆಗಳನ್ನು ಪೇತ್ರನು ಬರೆದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಶಿಷ್ಯ, ಅಪೊಸ್ತಲ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.08:25
- ಗಲಾತ್ಯ.02:6-8
- ಗಲಾತ್ಯ.02:11-12
- ಲೂಕ.22:56-58
- ಮಾರ್ಕ.03:13-16
- ಮತ್ತಾಯ.04:18-20
- ಮತ್ತಾಯ.08:14-15
- ಮತ್ತಾಯ.14:28-30
- ಮತ್ತಾಯ.26:33-35
ಸತ್ಯವೇದದಿಂದ ಉದಾಹರಣೆಗಳು:
- 28:09 “ನಾವು ಎಲ್ಲವನ್ನು ಬಿಟ್ಟು, ನಿಮ್ಮನ್ನು ಹಿಂಬಾಲಿಸುತ್ತಿದ್ದೇವೆ. ಇದರಿಂದ ನಮಗೆ ಸಿಕ್ಕುವ ಫಲವೇನು?” ಎಂದು ___ ಪೇತ್ರನು ___ ಯೇಸುವನ್ನು ಕೇಳಿದನು.
- 29:01 “ಬೋಧಕನೇ, ಒಬ್ಬನು ನನಗೆ ವಿರುದ್ಧವಾಗಿ ಪಾಪ ಮಾಡಿದಾಗ, ಆ ನನ್ನ ಸಹೋದರನನ್ನು ಎಷ್ಟುಸಲ ಕ್ಷಮಿಸಬೇಕು?” ಏಳು ಬಾರಿ ಮಟ್ಟಿಗೆ ಕ್ಷಮಿಸಬೇಕಾ? ಎಂದು ಒಂದು ದಿನ ___ ಪೇತ್ರನು ___ ಯೇಸುವನ್ನು ಕೇಳಿದನು.
- 31:05 “ಬೋಧಕನೇ, ನಿನೇಯಾಗಿದ್ದಾರೆ, ನೀರಿನ ಮೇಲೆ ನಡೆದುಕೊಂಡು ಬರುವುದಕ್ಕೆ ನನ್ನನ್ನು ಅಜ್ಞಾಪಿಸು” ಎಂದು ___ ಪೇತ್ರನು ___ ಯೇಸುವನ್ನು ಕೇಳಿದನು. “ಬಾ!” ಎಂದು ಯೇಸು ಪೇತ್ರನಿಗೆ ಹೇಳಿದನು.
- 36:01 ಒಂದು ದಿನ ಯೇಸು ತನ್ನ ಮೂವರು ಶಿಷ್ಯರಾಗಿರುವ ___ ಪೇತ್ರ ___, ಯಾಕೋಬ, ಮತ್ತು ಯೋಹಾನರನ್ನು ಆತನೊಂದಿಗೆ ಕರೆದುಕೊಂಡು ಹೋದನು.
- 38:09 “ಎಲ್ಲರೂ ನಿನ್ನನ್ನು ಕೈ ಬಿಟ್ಟರೂ, ನಾನು ಎಂದಿಗೂ ಕೈಬಿಡುವುಡಿಲ್ಲ!” ಎಂದು ___ ಪೇತ್ರನು ___ ಉತ್ತರಿಸಿದನು. “ಸೈತಾನನು ನೀವೇಲ್ಲರು ತನಗೆ ಬೇಕೆಂದು ಬಯಸುತ್ತಿದ್ದಾನೆ, ಆದರೆ ___ ಪೇತ್ರನೇ ___ ನಿನ್ನ ವಿಶ್ವಾಸ ವಿಫಲವಾಗಬಾರದೆಂದು ನಾನು ನಿನಗಾಗಿ ಪ್ರಾರ್ಥನೆ ಮಾಡುತ್ತಿದ್ದೇನೆ. ಆದರೂ ಈ ರಾತ್ರಿ ಕೋಳಿ ಕೂಗುವುದಕ್ಕೆ ಮುಂಚಿತವಾಗಿ, ನನ್ನ ಕುರಿತಾಗಿ ನಿನಗೆ ಗೊತ್ತಿದ್ದರೂ ಮೂರುಸಲ ನನ್ನನ್ನು ತಿರಸ್ಕರಿಸುವಿ” ಎಂದು ಯೇಸು ___ ಪೇತ್ರನಿಗೆ __ ಹೇಳಿದನು.
- 38:15 ಸೈನಿಕರು ಯೇಸುವನ್ನು ಬಂಧಿಸಿದಾಗ, ___ ಪೇತ್ರನು ___ ತನ್ನ ಕತ್ತಿಯನ್ನು ಹೊರ ತೆಗೆದು, ಮಹಾ ಯಾಜಕನ ದಾಸನ ಕಿವಿಯನ್ನು ಕತ್ತರಿಸುತ್ತಾನೆ.
- 43:11 “ನಿಮ್ಮಲ್ಲಿ ಪ್ರತಿಯೊಬ್ಬರೂ ಮಾನಸಾಂತರ ಹೊಂದಿ, ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಹೋದಬೇಕು, ಹೀಗೆ ಮಾಡುವುದರ ಮೂಲಕ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ___ ಪೇತ್ರನು ___ ಅವರಿಗೆ ಉತ್ತರಿಸಿದನು.
- 44:08 “ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾಗಿರುವ ಯೇಸುವಿನ ಶಕ್ತಿಯಿಂದ ವಾಸಿಯಾಗಿದ್ದಾನೆ” ಎಂದು ___ ಪೇತ್ರನು __ ಅವರಿಗೆ ಉತ್ತರಿಸಿದನು.
ಪದ ಡೇಟಾ:
- Strong's: G2786, G4074, G4613
ಪೊಂತ
ಸತ್ಯಾಂಶಗಳು:
ಪೊಂತ ಎನ್ನುವುದು ಆದಿ ಸಭೆಯ ಕಾಲದಲ್ಲಿ ಮತ್ತು ರೋಮ್ ಸಾಮ್ರಾಜ್ಯದ ಕಾಲದಲ್ಲಿ ರೋಮ್ ಪ್ರಾಂತ್ಯವಾಗಿತ್ತು. ಇದು ಕಪ್ಪು ಸಮುದ್ರದ ದಕ್ಷಿಣ ಕರಾವಳಿಯಲ್ಲಿ ನೆಲೆಗೊಂಡಿರುತ್ತದೆ, ಈಗಿನ ಟರ್ಕಿ ದೇಶದ ಉತ್ತರ ಭಾಗದಲ್ಲಿರುತ್ತದೆ.
- ಅಪೊಸ್ತಲರ ಪುಸ್ತಕದಲ್ಲಿ ದಾಖಲಾಗಿರುವಂತೆಯೇ, ಪಂಚಾಶತ್ತಮ ದಿನದಂದು ಅಪೊಸ್ತಲರ ಮೇಲೆ ಮೊಟ್ಟ ಮೊದಲಿಗೆ ಪವಿತ್ರಾತ್ಮನು ಇಳಿದು ಬಂದಾಗ ಪೊಂತ ಸೀಮೆಯಿಂದ ಬಂದಿರುವ ಜನರೆಲ್ಲರು ಯೆರೂಸಲೇಮಿನಲ್ಲಿಯೇ ಇದ್ದರು.
- ಅಕ್ವಿಲ ಎಂಬ ಹೆಸರಿನ ವಿಶ್ವಾಸಿಯು ಪೊಂತಯಿಂದ ಬಂದಿದ್ದನು.
- ಅನೇಕ ಪ್ರಾಂತ್ಯಗಳಿಗೆ ಚದುರಿ ಹೋಗಿರುವ ಕ್ರೈಸ್ತರಿಗೆ ಪೇತ್ರನು ಪತ್ರಗಳನ್ನು ಬರೆಯುತ್ತಿರುವಾಗ, ಪೊಂತ ಎನ್ನುವ ಪ್ರಾಂತ್ಯವನ್ನು ಅವನು ಸೂಚಿಸಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಇವುಗಳನ್ನು ನೋಡಿರಿ : ಅಕ್ವಿಲ, ಪಂಚಾಶತ್ತಮ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: G41930, G41950
ಪೋಟೀಫರ
ಸತ್ಯಾಂಶಗಳು:
ಪೋಟೀಫರ ಎನ್ನುವುದು ಕೆಲವೊಂದು ಇಷ್ಮಾಯೇಲ್ಯರಿಗೆ ಗುಲಾಮನಾಗಿ ಯೋಸೇಫನನ್ನು ಮಾರಿದ ಸಂದರ್ಭದಲ್ಲಿ ಐಗುಪ್ತ ಫರೋಹನಿಗೆ ಪ್ರಾಮುಖ್ಯವಾದ ಅಧಿಕಾರಿಯಾಗಿದ್ದನು.
- ಪೋಟೀಫರನು ಇಷ್ಮಾಯೇಲ್ಯರಿಂದ ಯೋಸೇಫನನ್ನು ಕರೆದುಕೊಂಡು ಬಂದು, ಆತನ ಮನೆತನದ ಮೇಲೆ ಅಧಿಕಾರಿಯನ್ನಾಗಿ ನೇಮಿಸಿದನು.
- ತಪ್ಪನ್ನು ಮಾಡಿದ್ದಾನೆಂದು ಯೋಸೇಫನ ಮೇಲೆ ಆರೋಪ ಮಾಡಿದಾಗ, ಪೋಟೀಫರನು ಯೋಸೇಫನನ್ನು ಸೆರೆಯಲ್ಲಿ ಹಾಕಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಯೋಸೇಫ, ಫರೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6318
ಪೌಲ, ಸೌಲ
ಸತ್ಯಾಂಶಗಳು:
ಪೌಲನು ಆದಿ ಸಭೆಗೆ ನಾಯಕನಾಗಿದ್ದನು, ಇತರ ಎಲ್ಲಾ ಜನರ ಗುಂಪುಗಳಿಗೆ ಶುಭವಾರ್ತೆಯನ್ನು ತೆಗೆದುಕೊಂಡು ಹೋಗುವುದಕ್ಕೆ ಯೇಸುವಿನಿಂದ ಕಳುಹಿಸಲ್ಪಟ್ಟ ವ್ಯಕ್ತಿಯಾಗಿದ್ದನು.
- ಪೌಲನು ತಾರ್ಸ ಎನ್ನುವ ರೋಮಾ ಪಟ್ಟಣದಲ್ಲಿ ಹುಟ್ಟಿದ ಯೆಹೂದ್ಯನಾಗಿದ್ದನು, ಮತ್ತು ರೋಮಾ ಪೌರನೂ ಆಗಿದ್ದನು.
- ಪೌಲನು ತನ್ನ ಯೆಹೂದ್ಯ ಹೆಸರಾಗಿರುವ ಸೌಲ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿದ್ದನು.
- ಸೌಲನು ಯೆಹೂದ್ಯ ಧರ್ಮದ ನಾಯಕನಾದನು ಮತ್ತು ಕ್ರೈಸ್ತರಾಗಿರುವ ಯೆಹೂದ್ಯರನ್ನು ಬಂಧಿಸಿದ್ದನು, ಯಾಕಂದರೆ ಅವರು ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ದೇವರನ್ನು ಅಗೌರವ ಮಾಡುತ್ತಿದ್ದಾರೆಂದು ಆತನು ಯೋಚನೆ ಮಾಡಿದ್ದನು.
- ಯೇಸು ತನ್ನನ್ನು ತಾನು ಸೌಲನಿಗೆ ಪ್ರಕಾಶಮಾನವಾದ ಬೆಳಕಿನಲ್ಲಿ ಕಾಣಿಸಿಕೊಂಡಿದ್ದನು ಮತ್ತು ಕ್ರೈಸ್ತರನ್ನು ಹಿಂಸೆ ಪಡಿಸುವುದನ್ನು ನಿಲ್ಲಿಸು ಎಂದು ಅವನಿಗೆ ಹೇಳಿದನು.
- ಸೌಲನು ಯೇಸುವಿನಲ್ಲಿ ನಂಬಿಕೆಯಿಟ್ಟನು ಮತ್ತು ಆತನ ಕುರಿತಾಗಿ ತನ್ನ ಸಹ ಯೆಹೂದ್ಯರಿಗೆ ಬೋಧನೆ ಮಾಡುವುದನ್ನು ಆರಂಭಿಸಿದನು.
- ಸ್ವಲ್ಪ ಕಾಲವಾದನಂತರ, ಯೇಸುವಿನ ಕುರಿತಾಗಿ ಯೆಹೂದ್ಯರಲ್ಲದ ಜನರಿಗೆ ಬೋಧನೆ ಮಾಡುವುದಕ್ಕೆ ದೇವರು ಸೌಲನನ್ನು ಕಳುಹಿಸಿದನು ಮತ್ತು ರೋಮಾ ಸೀಮೆಯಲ್ಲಿ ಅನೇಕ ಪ್ರಾಂತ್ಯಗಳಲ್ಲಿ, ಅನೇಕ ಪಟ್ಟಣಗಳಲ್ಲಿ ಸಭೆಗಳನ್ನು ಸ್ಥಾಪನೆಗೊಳಿಸಿದನು. ಈ ಸಮಯದಲ್ಲಿ ತನ್ನನ್ನು “ಪೌಲ” ಎನ್ನುವ ರೋಮಾ ಹೆಸರಿನಿಂದ ಕರೆಯುತ್ತಿದ್ದರು.
- ಈ ಪಟ್ಟಣಗಳಲ್ಲಿರುವ ಸಭೆಗಳಲ್ಲಿನ ಕ್ರೈಸ್ತರಿಗೆ ಬೋಧಿಸುವುದಕ್ಕೆ ಮತ್ತು ಪ್ರೋತ್ಸಾಹ ಮಾಡುವುದಕ್ಕೆ ಪೌಲನು ಕೂಡ ಅನೇಕ ಪತ್ರಿಕೆಗಳನ್ನು ಬರೆದನು. ಈ ಪತ್ರಿಕೆಗಳಲ್ಲಿ ಅನೇಕ ಪತ್ರಿಕೆಗಳು ಹೊಸ ಒಡಂಬಡಿಕೆಯಲ್ಲಿವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕ್ರೈಸ್ತ, ಯೆಹೂದ್ಯ ನಾಯಕರು, ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 45:06 ಸೌಲ ಎನ್ನುವ ಹೆಸರಿನ ಯೌವನಸ್ಥನು ಸ್ತೆಫೆನನನ್ನು ಸಾಯಿಸಿದ ಜನರೊಂದಿಗೆ ಇದ್ದುಕೊಂಡಿದ್ದನು ಮತ್ತು ಅವರು ಸ್ತೆಫೆನನ ಮೇಲೆ ಕಲ್ಲುಗಳನ್ನು ಎಸೆಯುತ್ತಿರುವಾಗ ಅವರ ಬಟ್ಟೆಗಳಿಗೆ ಕಾವಲುಗಾರನಾಗಿದ್ದನು.
- 46:01 ಸ್ತೆಫೆನನನ್ನು ಸಾಯಿಸಿದ ಮನುಷ್ಯರ ಬಟ್ಟೆಗಳಿಗೆ ಕಾವಲು __ ಸೌಲ __ ಎನ್ನುವ ಮನುಷ್ಯನಿದ್ದನು. ಅವನು ಯೇಸುವಿನಲ್ಲಿ ನಂಬಿಕೆಯಿಟ್ಟಿರಲಿಲ್ಲ, ಆದ್ದರಿಂದ ಅವನು ವಿಶ್ವಾಸಿಗಳನ್ನು ಹಿಂಸೆಗೆ ಒಳಪಡಿಸಿದ್ದನು.
- 46:02 ಸೌಲನು ದಮಸ್ಕ ಎನ್ನುವ ಮಾರ್ಗದಲ್ಲಿ ಹೋಗುತ್ತಿರುವಾಗ, ಪರಲೋಕದಿಂದ ಬಂದಿರುವ ಪ್ರಕಾಶಮಾನವುಳ್ಳ ಬೆಳಕು ಅವನ ಸುತ್ತಲು ಆವರಿಸಿತ್ತು, ಆಗ ಅವನು ನೆಲದ ಮೇಲೆ ಬಿದ್ದನು. “__ ಸೌಲಾ __ ! __ ಸೌಲಾ __ ! ಯಾಕೆ ನನ್ನು ಹಿಂಸಿಸುತ್ತಿದ್ದೀಯಾ?” ಎಂದು ಹೇಳುತ್ತಿರುವ ಸ್ವರವನ್ನು ಕೇಳಿದನು.
- 46:05 ಆದ್ದರಿಂದ ಅನನೀಯನು __ ಸೌಲನ __ ಬಳಿಗೆ ಹೋಗಿ, ತನ್ನ ಕೈಗಳನ್ನು ಅವನ ಮೇಲೆ ಇಟ್ಟು, “ನಿನ್ನ ಮಾರ್ಗದಲ್ಲಿ ನಿನಗೆ ಕಾಣಿಸಿಕೊಂಡ ಯೇಸು, ನಿನ್ನ ಬಳಿಗೆ ನನ್ನನ್ನು ಕಳುಹಿಸಿದ್ದಾರೆ; ಆದ್ದರಿಂದ ನಿನ್ನ ದೃಷ್ಟಿಯನ್ನು ನೀನು ತಿರುಗಿ ಹೊಂದಿಕೊಳ್ಳುವಿ ಮತ್ತು ಪವಿತ್ರಾತ್ಮನಿಂದ ತುಂಬಿಸಲ್ಪಡುವಿ” ಎಂದು ಹೇಳಿದನು. ತಕ್ಷಣವೇ __ ಸೌಲನು __ ತಿರುಗಿ ದೃಷ್ಟಿಯನ್ನು ಪಡೆದುಕೊಂಡನು ಮತ್ತು ಅನನೀಯನು ಅವನಿಗೆ ದೀಕ್ಷಾಸ್ನಾನವನ್ನು ಮಾಡಿಸಿದನು.
- 46:06 ಆ ಕ್ಷಣದಿಂದ ಆತನು “ಯೇಸು ದೇವರ ಮಗ” ಎಂದು ಹೇಳುತ್ತಾ ದಮಸ್ಕದಲ್ಲಿರುವ ಯೆಹೂದ್ಯರಿಗೆ ಬೋಧಿಸಲು ಆರಂಭಿಸಿದನು!
- 46:09 ಬರ್ನಾಬ ಮತ್ತು __ ಸೌಲನು __ ಯೇಸುವಿನ ಕುರಿತಾಗಿ ಇನ್ನೂ ಹೆಚ್ಚಾಗಿ ಈ ಹೊಸ ವಿಶ್ವಾಸಿಗಳಿಗೆ ಬೋಧನೆ ಮಾಡಲು ಅಲ್ಲಿಗೆ (ಅಂತಿಯೋಕ್ಯ) ಹೋದರು.
- 47:01 ರೋಮಾ ಸೀಮೆಯಲ್ಲೆಲ್ಲಾ __ ಸೌಲನು __ ಪ್ರಯಾಣ ಮಾಡುತ್ತಿರುವಾಗ, ಆತನು ತನ್ನ ರೋಮಾ ಹೆಸರಾಗಿರುವ “ಪೌಲ” ಎನ್ನುವ ಹೆಸರನ್ನು ಉಪಯೋಗಿಸಲು ಆರಂಭಿಸಿದನು.
- 47:14 __ ಪೌಲನು __ ಮತ್ತು ಇತರ ಕ್ರೈಸ್ತ ನಾಯಕರು ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡಿದರು, ಯೇಸುವಿನ ಕುರಿತಾದ ಶುಭವಾರ್ತೆಯನ್ನು ಜನರಿಗೆ ಬೋಧಿಸುತ್ತಾ ಮತ್ತು ಪ್ರಸಂಗ ಮಾಡುತ್ತಾ ಇದ್ದರು.
ಪದ ಡೇಟಾ:
- Strong's: G3972, G4569
ಪ್ರಿಸ್ಕಿಲ್ಲ
ಸತ್ಯಾಂಶಗಳು:
ಪ್ರಿಸ್ಕಿಲ್ಲ ಮತ್ತು ತನ್ನ ಗಂಡನಾದ ಅಕ್ವಿಲನು ಯೆಹೂದ್ಯ ಕ್ರೈಸ್ತರಾಗಿದ್ದರು, ಇವರು ಅಪೊಸ್ತಲನಾದ ಪೌಲನ ಸುವಾರ್ತೆಯ ದಂಡೆಯಾತ್ರೆಯಲ್ಲಿ ಕೆಲಸ ಮಾಡಿದ್ದಳು.
- ಪ್ರಿಸ್ಕಿಲ್ಲ ಮತ್ತು ಅಕ್ವಿಲರು ರೋಮಾವನ್ನು ಬಿಟ್ಟು ಹೋದರು, ಯಾಕಂದರೆ ಕ್ರೈಸ್ತರೆಲ್ಲರು ರೋಮಾವನ್ನು ಬಿಟ್ಟುಹೋಗಬೇಕೆಂದು ಚಕ್ರವರ್ತಿಯಿಂದ ಬಲವಂತ ಮಾಡಲ್ಪಟ್ಟಿದ್ದರು.
- ಪೌಲನು ಕೊರಿಂಥದಲ್ಲಿ ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಭೇಟಿಯಾದನು. ಅವರು ಗುಡಾರಗಳನ್ನು ತಯಾರು ಮಾಡುತ್ತಿದ್ದರು ಮತ್ತು ಪೌಲನು ಈ ಕೆಲಸವನ್ನು ಮಾಡಲು ಅವರೊಂದಿಗೆ ಸೇರಿಕೊಂಡಿದ್ದನು.
- ಪೌಲನು ಕೊರಿಂಥದಿಂದ ಸಿರಿಯಾಗೆ ಹೊರಟಾಗ, ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಆತನೊಂದಿಗೆ ಹೊರಟು ಹೋಗಿದ್ದರು.
- ಸಿರಿಯಾದಿಂದ ಅವರು ಮೂವರು ಎಫೆಸಕ್ಕೆ ಹೋದರು. ಪೌಲನು ಎಫೆಸವನ್ನು ಬಿಟ್ಟು ಹೋದನಂತರ, ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅಲ್ಲಿಯೇ ಉಳಿದುಕೊಂಡಿದ್ದರು, ಮತ್ತು ಸುವಾರ್ತೆಯನ್ನು ಪ್ರಕಟಿಸುವ ಕೆಲಸದಲ್ಲಿ ಅವರು ಮುಂದುವರೆದಿದ್ದರು.
- ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಅಪೊಲ್ಲೋ ಎನ್ನುವ ವ್ಯಕ್ತಿಯನ್ನು ಅವರು ಎಫೆಸದಲ್ಲಿ ವಿಶೇಷವಾಗಿ ವಾಕ್ಯದಿಂದ ಬಲಪಡಿಸಿದ್ದರು ಮತ್ತು ಆ ವ್ಯಕ್ತಿ ವರವನ್ನು ಪಡೆದ ಪ್ರಸಂಗೀಕನು ಮತ್ತು ಬೋಧಕನೂ ಆಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಂಬು, ಕ್ರೈಸ್ತ, ಕೊರಿಂಥ, ಎಫೆಸ, ಪೌಲ, ರೋಮಾ, ಸಿರಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
ಫರೋಹ, ಐಗುಪ್ತ ಅರಸ
ಸತ್ಯಾಂಶಗಳು:
ಪುರಾತನ ಕಾಲಗಳಲ್ಲಿ ಐಗುಪ್ತ ದೇಶವನ್ನು ಆಳಿದ ಅರಸರನ್ನು ಫರೋಹರು ಎಂದು ಕರೆಯುತ್ತಿದ್ದರು.
- ಎಲ್ಲರು ಸೇರಿ ಸುಮಾರು 300 ಮಂದಿ ಫರೋಹರು ಸುಮಾರು 2,000 ವರ್ಷಗಳಿಗಿಂತ ಹೆಚ್ಚಾಗಿ ಐಗುಪ್ತವನ್ನು ಆಳಿದರು.
- ಈ ಐಗುಪ್ತ ಅರಸರೆಲ್ಲರು ತುಂಬಾ ಶಕ್ತಿಯುಳ್ಳವರಾಗಿದ್ದರು ಮತ್ತು ಶ್ರೀಮಂತರೂ ಆಗಿದ್ದರು.
- ಈ ಫರೋಹಗಳಲ್ಲಿ ಅನೇಕರ ಕುರಿತಾಗಿ ಸತ್ಯವೇದದಲ್ಲಿ ದಾಖಲಿಸಲಾಗಿರುತ್ತದೆ.
- ಅನೇಕಬಾರಿ ಈ ಬಿರುದನ್ನೂ ಬಿರುದಾಗಿ ಉಪಯೋಗಿಸಲ್ಪಡದೇ ಒಂದು ಹೆಸರಾಗಿ ಉಪಯೋಗಿಸಲಾಗಿರುತ್ತದೆ. ಈ ಕೆಲವೊಂದು ವಿಷಯಗಳಲ್ಲಿ “ಫರೋಹ” ಎಂದು ಬರೆಯಲಾಗಿರುತ್ತದೆ ಮತ್ತು ಇದು ದೊಡ್ಡ ಅಕ್ಷರಗಳಲ್ಲಿ ಬರೆಯಲ್ಪಟ್ಟಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಅರಸ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 08:06 ಐಗುಪ್ತರೆಲ್ಲರು ತಮ್ಮ ಅರಸರೆಂದು ಕರೆಯುವ __ ಫರೋಹನು __ ಒಂದು ರಾತ್ರಿ ತನ್ನನ್ನು ಕಳವಳಗೊಳಿಸುವ ಎರಡು ಕನಸುಗಳನ್ನು ಕಂಡನು.
- 08:08 __ ಫರೋಹನು __ ಯೋಸೇಫನ ವಿಷಯದಲ್ಲಿ ತುಂಬಾ ಸಂತೋಷಪಟ್ಟಿದ್ದನು, ಇದರಿಂದ ಅವನು ಯೋಸೇಫನನ್ನು ಐಗುಪ್ತದಲ್ಲೇ ಎರಡನೇ ಅತ್ಯಂತ ಶಕ್ತಿಯುಳ್ಳ ಮನುಷ್ಯನನ್ನಾಗಿ ನೇಮಿಸಿದನು.
- 09:02 ಇಸ್ರಾಯೇಲ್ಯರು ಐಗುಪ್ತರಿಗೆ ಗುಲಾಮ ಗಿರಿಯಲ್ಲಿದ್ದಾಗ __ ಫರೋಹನು __ ಐಗುಪ್ತದ ಮೇಲೆ ಆಳ್ವಿಕೆ ಮಾಡುತ್ತಿದ್ದನು.
- 09:13 “ನಾನು __ ಫರೋಹನ __ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ, ಇದರಿಂದ ನೀನು ಐಗುಪ್ತದಲ್ಲಿರುವ ಇಸ್ರಾಯೇಲ್ಯರ ಗುಲಾಮ ಗಿರಿಯಿಂದ ಬಿಡುಗಡೆ ಮಾಡುತ್ತೀ.”
- 10:02 ಈ ಎಲ್ಲಾ ಮಾರಿರೋಗಗಳ ಮೂಲಕ __ ಫರೋಹನಿಗಿಂತ __ ಮತ್ತು ಐಗುಪ್ತ ದೇಶದ ಎಲ್ಲಾ ದೇವರುಗಳಿಗಿಂತ ಯೆಹೋವನು ತುಂಬಾ ಶಕ್ತಿಶಾಲಿಯಾಗಿರುತ್ತಾನೆಂದು ದೇವರು __ ಫರೋಹನಿಗೆ __ ಆತನು ತೋರಿಸಿಕೊಂಡನು.
ಪದ ಡೇಟಾ:
- Strong's: H4428, H4714, H6547, G5328
ಫಿನೇಹಾಸ
ಸತ್ಯಾಂಶಗಳು:
ಫಿನೇಹಾಸ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ.
- ಆರೋನನ ಮೊಮ್ಮೊಕ್ಕಳಲ್ಲಿ ಯಾಜಕನಾಗಿರುವ ಒಬ್ಬ ವ್ಯಕ್ತಿಯ ಹೆಸರು ಫಿನೇಹಾಸನಾಗಿದ್ದನು, ಇವನು ಇಸ್ರಾಯೇಲಿನಲ್ಲಿ ಸುಳ್ಳು ದೇವರುಗಳನ್ನು ಆರಾಧಿಸುವುದನ್ನು ಬಲವಾಗಿ ವಿರೋಧಿಸಿದ್ದನು.
- ಇಸ್ರಾಯೇಲ್ಯರು ಮಿದ್ಯಾನ್ ಸ್ತ್ರೀಯರನ್ನು ವಿವಾಹ ಮಾಡಿಕೊಂದಿದ್ದಕ್ಕಾಗಿ ಮತ್ತು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದ್ದಕ್ಕಾಗಿ ಯೆಹೋವನು ಅವರನ್ನು ಶಿಕ್ಷಿಸುವುದಕ್ಕಾಗಿ ಕಳುಹಿಸಿದ ಮಾರಿರೋಗದಿಂದ ಇಸ್ರಾಯೇಲ್ಯರನ್ನು ಫಿನೇಹಾಸನನ್ನು ಕಾಪಾಡಿದನು.
- ಅನೇಕ ಸಂದರ್ಭಗಳಲ್ಲಿ ಮಿದ್ಯಾನ್ಯರನ್ನು ನಾಶಗೊಳಿಸುವುದಕ್ಕೆ ಫಿನೇಹಾಸನು ಇಸ್ರಾಯೇಲ್ಯರೊಂದಿಗೆ ಹೊರಟು ಹೋದನು.
- ಹಳೇ ಒಡಂಬಡಿಕೆಯಲ್ಲಿ ದಾಖಲು ಮಾಡಿದ ಇತರ ಫಿನೇಹಾಸನು ಪ್ರವಾದಿಯಾದ ಸಮುವೇಲನ ಕಾಲದಲ್ಲಿ ಯಾಜಕನಾಗಿರುವ ಏಲಿಯನ ದುಷ್ಟ ಮಕ್ಕಳಲ್ಲಿ ಒಬ್ಬನಾಗಿದ್ದನು.
- ಫಿಲಿಷ್ಟಿಯನರು ಇಸ್ರಾಯೇಲ್ಯರ ಮೇಲೆ ಧಾಳಿ ಮಾಡಿದಾಗ ಫಿನೇಹಾಸನು ಮತ್ತು ತನ್ನ ಸಹೋದರನಾದ ಹೊಫ್ನಿ ಇಬ್ಬರು ಸತ್ತುಹೋದರು ಮತ್ತು ಒಡಂಬಡಿಕೆಯ ಮಂಜೂಷವನ್ನು ಕದ್ದುಕೊಂಡು ಹೋದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ಯೊರ್ದನ್ ಹೊಳೆ, ಮಿದ್ಯಾನ್, ಫಿಲಿಷ್ಟಿಯನರು, ಸಮುವೇಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6372
ಫಿಲಿಪ್ಪ, ಅಪೊಸ್ತಲ
ಸತ್ಯಾಂಶಗಳು:
ಅಪೊಸ್ತಲನಾದ ಫಿಲಿಪ್ಪನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಈತನು ಬೇತ್ಸಾಯಿದ ಪಟ್ಟಣದಿಂದ ಬಂದವನಾಗಿದ್ದನು.
- ಯೇಸುವನ್ನು ಭೇಟಿ ಮಾಡುವುದಕ್ಕೆ ಫಿಲಿಪ್ಪನು ನತಾನಯೇಲನನ್ನು ಕರೆದುಕೊಂಡು ಬಂದಿದ್ದನು.
- 5,000 ಜನರಿಗಿಂತ ಹೆಚ್ಚಿಗೆ ಇರುವ ಈ ಜನಸಮೂಹಕ್ಕೆ ಆಹಾರವನ್ನು ಹೇಗೆ ಒದಗಿಸಿಕೊಡುವುದು ಎಂದು ಯೇಸು ಫಿಲಿಪ್ಪನಿಗೆ ಪ್ರಶ್ನೆ ಕೇಳಿದನು.
- ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ರಾತ್ರಿ ಭೋಜನದ ಕೂಟದಲ್ಲಿ ತನ್ನ ತಂದೆಯಾದ ದೇವರ ಕುರಿತಾಗಿ ಆತನು ಅವರೊಂದಿಗೆ ಮಾತನಾಡಿದನು. ತಂದೆಯನ್ನು ತೋರಿಸಬೇಕೆಂದು ಫಿಲಿಪ್ಪನು ಯೇಸುವಿಗೆ ಕೇಳಿದನು.
- ಕೆಲವೊಂದು ಭಾಷೆಗಳಲ್ಲಿ ಗಲಿಬಿಲಿಯಾಗದಂತಿರುವುದಕ್ಕೆ ಶಿಷ್ಯನಾಗಿರುವ ಫಿಲಿಪ್ಪನ ಹೆಸರನ್ನು ಮತ್ತು ಸುವಾರ್ತಿಕನಾದ ಫಿಲಿಪ್ಪನ ಹೆಸರನ್ನು ಬೇರೆ ಬೇರೆಯಾಗಿ ಉಚ್ಚಾರಣೆ ಮಾಡುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಫಿಲಿಪ್ಪ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G5376
ಫಿಲಿಪ್ಪ, ಸುವಾರ್ತಿಕನು
ಸತ್ಯಾಂಶಗಳು:
ಯೆರೂಸಲೇಮಿನಲ್ಲಿರುವ ಆದಿ ಕ್ರೈಸ್ತ ಸಭೆಯಲ್ಲಿ ಬಡವರನ್ನು, ಅಗತ್ಯದಲ್ಲಿರುವ ಕ್ರೈಸ್ತರನ್ನು ಮತ್ತು ವಿಶೇಷವಾಗಿ ವಿಧವೆಯರನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಆಯ್ಕೆ ಮಾಡಿಕೊಂಡಿರುವ ಏಳು ಮಂದಿ ನಾಯಕರುಗಳಲ್ಲಿ ಫಿಲಿಪ್ಪನು ಒಬ್ಬನಾಗಿದ್ದನು.
- ದೇವರು ಫಿಲಿಪ್ಪನನ್ನು ಯೂದಾಯ ಮತ್ತು ಗಲಿಲಾಯ ಸೀಮೆಗಳಲ್ಲಿರುವ ಅನೇಕ ಪಟ್ಟಣಗಳಲ್ಲಿ ಜನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಉಪಯೋಗಿಸಿಕೊಂಡಿದ್ದರು, ಇದರಲ್ಲಿ ಯೆರೂಸಲೇಮಿನಿಂದ ಗಾಜಾಗೆ ಹೋಗುವ ಅರಣ್ಯ ಮಾರ್ಗದಲ್ಲಿ ಇಥಿಯೋಪ್ಯನನ್ನು ಭೇಟಿ ಮಾಡಿರುವುದು ಒಳಗೊಂಡಿರುತ್ತದೆ.
- ಅನೇಕ ವರ್ಷಗಳಾದನಂತರ ಫಿಲಿಪ್ಪನು ಕೈಸರೈದಲ್ಲಿ ನಿವಾಸವಾಗಿದ್ದನು, ಪೌಲನು ಮತ್ತು ತನ್ನ ಜೊತೆಗಾರರು ಯೆರೂಸಲೇಮಿಗೆ ಹಿಂದುರಿಗೆ ಹೋಗುತ್ತಿರುವಾಗ ತನ್ನ ಮನೆಯಲ್ಲಿಯೇ ಎಲ್ಲರು ಇಳಿದುಕೊಂಡಿದ್ದರು.
- ಸುವಾರ್ತಿಕನಾದ ಫಿಲಿಪ್ಪನು ಮತ್ತು ಆ ಹೆಸರಿನ ಮೇಲೆ ಇರುವ ಯೇಸುವಿನ ಶಿಷ್ಯನು ಒಬ್ಬರಲ್ಲ ಎಂದು ಅನೇಕಮಂದಿ ಸತ್ಯವೇದ ಪಂಡಿತರು ಆಲೋಚನೆ ಮಾಡಿದ್ದಾರೆ. ಇವರಿಬ್ಬರು ಬೇರೆ ಬೇರೆ ಎಂಬುದಾಗಿ ನಿರೂಪಿಸುವುದಕ್ಕೆ ಈ ಇಬ್ಬರ ಹೆಸರುಗಳ ಅಕ್ಷರಗಳನ್ನು ವಿಭಿನ್ನವಾಗಿ ಉಪಯೋಗಿಸುವುದಕ್ಕೆ ಅನೇಕ ಭಾಷೆಗಳು ಪ್ರಾಧಾನ್ಯತೆ ಕೊಡುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಫಿಲಿಪ್ಪ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.06:5-6
- ಅಪೊ.ಕೃತ್ಯ.08:6-8
- ಅಪೊ.ಕೃತ್ಯ.08:12-13
- ಅಪೊ.ಕೃತ್ಯ.08:29-31
- ಅಪೊ.ಕೃತ್ಯ.08:36-38
- ಅಪೊ.ಕೃತ್ಯ.08:39-40
ಪದ ಡೇಟಾ:
- Strong's: G5376
ಫಿಲಿಪ್ಪಿ, ಫಿಲಿಪ್ಪಿಯದವರು
ಸತ್ಯಾಂಶಗಳು:
ಫಿಲಿಪ್ಪಿ ಎನ್ನುವುದು ದೊಡ್ಡ ಪಟ್ಟಣ ಮತ್ತು ರೋಮಾ ಬಡಾವಣೆಯಾಗಿರುತ್ತದೆ, ಇದು ಪುರಾತನ ಗ್ರೀಸಿನ ಉತ್ತರ ಭಾಗದಲ್ಲಿರುವ ಮಕೆದೋನ್ಯದಲ್ಲಿ ಕಂಡುಬರುತ್ತದೆ. ಫಿಲಿಪ್ಪಿಯದಲ್ಲಿರುವ ಜನರನ್ನು ಫಿಲಿಪ್ಪಿಯನ್ನರು ಎಂದು ಕರೆಯುತ್ತಾರೆ.
- ಅಲ್ಲಿರುವ ಜನರಿಗೆಲ್ಲರಿಗೆ ಯೇಸುವಿನ ಕುರಿತಾಗಿ ಸಂದೇಶವನ್ನು ಹೇಳುವುದಕ್ಕೆ ಪೌಲ ಮತ್ತು ಸೀಲರು ಫಿಲಿಪ್ಪಿಗೆ ಪ್ರಯಾಣ ಮಾಡಿದರು.
- ಫಿಲಿಪ್ಪಿದಲ್ಲಿರುವಾಗ ಪೌಲ ಮತ್ತು ಸೀಲರು ಬಂಧಿತರಾದರು, ಆದರೆ ದೇವರು ಅದ್ಭುತ ರೀತಿಯಿಂದ ಅವರನ್ನು ಬಿಡಿಸಿದರು.
- ಹೊಸ ಒಡಂಬಡಿಕೆಯಲ್ಲಿರುವ ಫಿಲಿಪ್ಪಿದವರಿಗೆ ಬರೆದ ಪುಸ್ತಕವು ಅಪೊಸ್ತಲನಾದ ಪೌಲನು ಫಿಲಿಪ್ಪಿದಲ್ಲಿನ ಸಭೆಯಲ್ಲಿರುವ ಕ್ರೈಸ್ತರಿಗೆ ಬರೆದ ಪತ್ರಿಕೆಯಾಗಿತ್ತು.
- ಹೆರ್ಮೋನ್ ಪರ್ವತದ ಬಳಿ ಇರುವ ಈಶಾನ್ಯ ಇಸ್ರಾಯೇಲಿನಲ್ಲಿ ಕಂಡುಬರುವ ಕೈಸರೈ ಫಿಲಿಪ್ಪಿಯು ಈ ಪಟ್ಟಣವು ಬೇರೆ ಬೇರೆಯಾಗಿರುತ್ತದೆಯೆಂದು ತಿಳಿದುಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : ಕೈಸರೈ, ಕ್ರೈಸ್ತ, ಸಭೆ, ಮೆಕದೋನ್ಯ, ಪೌಲ, ಸೀಲ)
ಸತ್ಯವೇದದ ವಾಕ್ಯಗಳು :
ಸತ್ಯವೇದದ ಕಥೆಗಳಿಂದ ಉದಾಹರಣೆಗಳು:
- 47:01 ಒಂದು ದಿನ, ಪೌಲ ಮತ್ತು ತನ್ನ ಸ್ನೇಹಿತನಾದ ಸೀಲನು ಯೇಸುವಿನ ಕುರಿತಾದ ಶುಭವಾರ್ತೆಯನ್ನು ಪ್ರಕಟಿಸುವುದಕ್ಕೆ __ ಫಿಲಿಪ್ಪಿ __ ಪಟ್ಟಣಕ್ಕೆ ಹೊರಟರು.
- 47:13 ಆ ಮರುದಿನದಂದು, ಆ ಪಟ್ಟಣದ ನಾಯಕರು ಪೌಲ ಮತ್ತು ಸೀಲರನ್ನು ಸೆರೆಯಿಂದ ಬಿಡಿಸಿದರು ಮತ್ತು __ ಫಿಲಿಪ್ಪಿ __ ಪಟ್ಟಣವನ್ನು ಬಿಟ್ಟು ಹೋಗಬೇಕೆಂದು ಅವರಿಗೆ ಕೇಳಿಕೊಂಡರು.
ಪದ ಡೇಟಾ:
- Strong's: G53740, G53750
ಫಿಲಿಷ್ಟಿಯ
ಪದದ ಅರ್ಥವಿವರಣೆ:
ಫಿಲಿಷ್ಟಿಯ ಎನ್ನುವುದು ಕಾನಾನ್ ಭೂಮಿಯಲ್ಲಿ ದೊಡ್ಡ ಪ್ರಾಂತ್ಯದ ಹೆಸರಾಗಿತ್ತು, ಇದು ಮೆಡಿಟರೇನಿಯನ್ ಸಮುದ್ರದ ಕರಾವಳಿ ಪ್ರಾಂತ್ಯದ ಬಳಿಯಲ್ಲಿ ಕಂಡುಬರುತ್ತದೆ.
- ದಕ್ಷಿಣ ಭಾಗದಲ್ಲಿರುವ ಗಾಜಾಗೆ ಹೋಗುವ ಉತ್ತರ ಭಾಗದಲ್ಲಿರುವ ಯೊಪ್ಪದಿಂದ ಇರುವ ಫಲವತ್ತಾದ ಕರಾವಳಿ ಬಯಲುನಲ್ಲಿ ಕಂಡುಬರುತ್ತದೆ. ಇದು ಸುಮಾರು 64 ಕಿಲೋಮೀಟರ್ ಉದ್ದ ಮತ್ತು 16 ಕಿಲೋಮೀಟರ್ ಅಗಲ ಇರಬಹುದು.
- ಫಿಲಿಷ್ಟಿಯ ಎನ್ನುವ ಈ ಪಟ್ಟಣವು ಫಿಲಿಷ್ಟಿಯನ್ನರಿಂದ ವಶಪಡಿಸಿಕೊಳ್ಳಲಾಗಿರುತ್ತದೆ, ಇವರು ಇಸ್ರಾಯೇಲ್ಯರಿಗೆ ಯಾವಾಗಲೂ ಶತ್ರುಗಳಾಗಿರುವ ಶಕ್ತಿಯುಳ್ಳ ಜನರ ಗುಂಪಾಗಿರುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಫಿಲಿಷ್ಟಿಯನರು, ಗಾಜಾ, ಯೊಪ್ಪ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H776 H6429 H06430
ಫಿಲಿಷ್ಟಿಯನರು
ಸತ್ಯಾಂಶಗಳು:
ಫಿಲಿಷ್ಟಿಯನರು ಒಂದು ಜನಾಂಗದವರಾಗಿರುತ್ತಾರೆ, ಇವರು ಮೆಡಿಟರೇನಿಯನ್ ಸಮುದ್ರದ ಕರಾವಳಿ ಪ್ರಾಂತ್ಯದ ಬಳಿಗೆ ಇರುವ ಫಿಲಿಷ್ಟಿಯ ಎನ್ನುವ ಪ್ರಾಂತ್ಯವನ್ನು ವಶಪಡಿಸಿಕೊಂಡಿರುತ್ತಾರೆ. ಅವರ ಹೆಸರಿಗೆ “ಸಮುದ್ರದ ಜನರು” ಎಂದರ್ಥವಾಗಿರುತ್ತದೆ.
- ಐದು ಮುಖ್ಯ ಫಿಲಿಷ್ಟಿಯ ಪಟ್ಟಣಗಳಿರುತ್ತವೆ : ಅಷ್ದೋದ್, ಅಷ್ಕೆಲೋನ್, ಎಕ್ರೋನ್, ಗತೂರ್ ಮತ್ತು ಗಾಜಾ.
- ಅಷ್ದೋದ್ ಎನ್ನುವ ಪಟ್ಟಣವು ಫಿಲಿಷ್ಟಿಯ ಉತ್ತರ ಭಾಗವಾಗಿರುತ್ತದೆ, ಮತ್ತು ಗಾಜಾ ಪಟ್ಟಣವು ದಕ್ಷಿಣ ಭಾಗದಲ್ಲಿರುತ್ತದೆ.
- ಫಿಲಿಷ್ಟಿಯನ್ನರು ಬಹುಶಃ ಅನೇಕ ವರ್ಷಗಳು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಿದ ಜನರೆಂದು ಹೆಸರನ್ನು ಪಡೆದ ಜನರಾಗಿರಬಹುದು.
- ನ್ಯಾಯಾಧಿಪತಿಯಾದ ಸಂಸೋನನು ಫಿಲಿಷ್ಟಿಯನ್ನರ ವಿರುದ್ಧ ಹೋರಾಡುವ ಪ್ರಸಿದ್ಧ ಯೋಧನಾಗಿದ್ದನು, ಇವನು ದೇವರಿಂದ ಪಡೆದ ಪ್ರಕೃತಾತೀವಾದ ಶಕ್ತಿಯನ್ನು ಪಡೆದು ಹೋರಾಟ ಮಾಡುತ್ತಿದ್ದನು.
- ಅರಸನಾದ ದಾವೀದನು ಅನೇಕಬಾರಿ ಫಿಲಿಷ್ಟಿಯನ್ನರಿಗೆ ವಿರುದ್ಧವಾಗಿ ಯುದ್ಧಗಳನ್ನು ನಡೆಸಿದ್ದನು, ಅದರಲ್ಲಿ ಆತನು ಯೌವ್ವನದಲ್ಲಿರುವಾಗ ಫಿಲಿಷ್ಟಿಯನ್ನರ ಯೋಧನಾದ ಗೊಲ್ಯಾತನನ್ನು ಸೋಲಿಸಿರುವ ಸಂಘಟನೆಯು ಒಳಗೊಂಡಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಷ್ದೋದ್, ಅಷ್ಕೆಲೋನ್, ದಾವೀದ, ಎಕ್ರೋನ್, ಗತೂರ್, ಗಾಜಾ, ಗೊಲ್ಯಾತ್, ಲವಣ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6429, H6430
ಫೊಯಿನೀಕೆ
ಸತ್ಯಾಂಶಗಳು:
ಪುರಾತನ ಕಾಲಗಳಲ್ಲಿ ಫೊಯಿನೀಕೆ ಎನ್ನುವುದು ಶ್ರೀಮಂತ ದೇಶವಾಗಿರುತ್ತದೆ, ಇದು ಇಸ್ರಾಯೇಲ್ ಉತ್ತರ ಭಾಗದಲ್ಲಿರುವ ಮೆಡಿಟರೇನಿಯನ್ ಸಮುದ್ರದ ಕರಾವಳಿಯ ಬದಿಗೆ ಕಾನಾನ್.ನಲ್ಲಿ ಕಂಡುಬರುತ್ತದೆ.
- ಈಗಿನ ಲೆಬನೋನ್ ದೇಶವಾಗಿರುವ ಪಶ್ಚಿಮ ಭಾಗದಲ್ಲಿ ಫೊಯಿನೀಕೆಯು ಭೂಮಿಯನ್ನು ವಶಪಡಿಸಿಕೊಂಡಿರುತ್ತದೆ.
- ಹೊಸ ಒಡಂಬಡಿಕೆಯ ಕಾಲಗಳಲ್ಲಿ ಫೊಯಿನೀಕೆಯ ರಾಜಧಾನಿ ತೂರ್ ಆಗಿತ್ತು. ಇತರ ಪ್ರಾಮುಖ್ಯವಾದ ಫೊಯಿನೀಕೆಯು ಪಟ್ಟಣವು ಸೀದೋನ್ ಆಗಿತ್ತು.
- ಫೊಯಿನೀಕೆಯರು ತಮ್ಮ ದೇಶದ ದೇವದಾರು ವೃಕ್ಷಗಳನ್ನು ಉಪಯೋಗಿಸಿ ತಮ್ಮ ಮರಗೆಲಸದ ಕೌಶಲ್ಯಗಳಿಗೆ ಪ್ರಸಿದ್ದಿ ಹೊಂದಿರುತ್ತಾರೆ, ತುಂಬಾ ಬೆಲೆಯುಳ್ಳ ಕೆನ್ನರಳೆ ಬಣ್ಣ ಉತ್ಪಾದಕರಾಗಿದ್ದರು ಮತ್ತು ಸಮುದ್ರದ ಮೂಲಕ ಪ್ರಯಾಣಗಳನ್ನು ಮಾಡಿ, ವ್ಯಾಪಾರ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಹಡಗುಗಳನ್ನು ನಿರ್ಮಿಸುವುದರಲ್ಲಿ ಉನ್ನತವಾದ ನಿಪುಣತೆಯನ್ನು ಹೊಂದಿರುತ್ತಾರೆ.
- ಆದಿಮ ವರ್ಣಮಾಲೆಯಲ್ಲಿ ಒಂದನ್ನು ಫೊಯಿನೀಕೆಯ ಜನರಿಂದ ಸೃಷ್ಟಿಸಲ್ಪಟ್ಟಿರುತ್ತದೆ. ಅವರ ಅಕ್ಷರವು ತುಂಬಾ ಹೆಚ್ಚಾಗಿ ವಿಸ್ತರಿಸಲ್ಪಟ್ಟಿರುತ್ತದೆ,ಯಾಕಂದರೆ ಅವರು ಮಾಡುವ ವ್ಯಾಪಾರದ ಮೂಲಕ ಅನೇಕ ಜನರ ಗುಂಪಿಗಳೊಂದಿಗೆ ಹೆಚ್ಚಿನ ಸಂಬಂಧಗಳನ್ನು ಇಟ್ಟುಕೊಂಡಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕೇದಾರ್, ನೇರಳೆ ಬಣ್ಣ, ಸೀದೋನ್, ತೂರ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3667, G4949, G5403
ಬತ್ಷೆಬೆ
ಸತ್ಯಾಂಶಗಳು:
ಬತ್ಷೆಬೆ ಅರಸನಾದ ದಾವೀದನ ಸೈನ್ಯದಲ್ಲಿ ಸೈನಿಕನಾದ ಊರೀಯನ ಹೆಂಡತಿಯಾಗಿದ್ದಳು. ಊರೀಯನ ಮರಣದ ನಂತರ, ಆಕೆ ದಾವೀದನ ಹೆಂಡತಿಯೂ ಮತ್ತು ಸೊಲೊಮೋನಿನ ತಾಯಿಯೂ ಆದಳು.
- ಬತ್ಷೆಬೆ ಊರೀಯನ ಹೆಂಡತಿಯಾಗಿದ್ದಾಗ ದಾವೀದನು ಆಕೆಯೊಂದಿಗೆ ವ್ಯಭಿಚಾರ ಮಾಡಿದನು.
- ಬತ್ಷೆಬೆ ದಾವೀದನ ಮೂಲಕ ಗರ್ಭ ದರಿಸಿದಾಗ, ದಾವೀದನು ಊರೀಯನನ್ನು ಯುದ್ದದಲ್ಲಿ ಕೊಲ್ಲಿಸಿದನು.
- ಆ ನಂತರ ದಾವೀದನು ಬತ್ಷೆಬೆಯನ್ನು ವಿವಾಹ ಮಾಡಿಕೊಂಡನು ಮತ್ತು ಆಕೆ ಅವರ ಮಗುವಿಗೆ ಜನನ ನೀಡಿದಳು.
- ದಾವೀದನು ಮಾಡಿದ ಪಾಪದ ನಿಮಿತ್ತವಾಗಿ ಯೆಹೋವನು ಅವನ ಮಗು ಜನಿಸಿದ ಕೆಲವು ದಿನಗಳ ನಂತರ ಮರಣಿಸುವಂತೆ ಮಾಡಿದನು.
- ನಂತರ, ಬತ್ಷೆಬೆ ಮತ್ತೊಬ್ಬ ಕುಮಾರನಿಗೆ ಜನ್ಮ ನೀಡಿದಳು, ಅವನ ಹೆಸರು ಸೊಲೊಮೋನ್, ದಾವೀದನ ನಂತರ ಅವನು ಅರಸನಾದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ದಾವೀದ, ಸೊಲೊಮೋನ್, ಊರೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 17:10 ಒಂದು ದಿನ, ದಾವೀದನ ಸೈನಿಕರೆಲ್ಲರೂ ಯುದ್ಧ ಮಾಡಲು ಮನೆಯಿಂದ ದೂರವಾಗಿರುವಾಗ, ಅವನು ಮಧ್ಯಾಹ್ನದ ನಿದ್ದೆಯಿಂದೆದ್ದು, ಸ್ನಾನ ಮಾಡುತ್ತಿರುವ ಒಬ್ಬ ಸುಂದರವಾದ ಸ್ತ್ರಿಯನ್ನು ಕಂಡನು. ಆಕೆಯ ಹೆಸರು ಬತ್ಷೆಬೆ.
- 17:11 ಸ್ವಲ್ಪ ಕಾಲದ ನಂತರ ಬತ್ಷೆಬೆ ಗರ್ಭಿಣಿಯಾಗಿದ್ದಳೆಂದು ದಾವೀದನಿಗೆ ಸಂದೇಶವನ್ನು ಕಳುಹಿಸಿದಳು
- 17:12 __ಬತ್ಷೆಬೆ__ನ ಗಂಡನಾದ, ಊರೀಯನು, ದಾವೀದನ ಅತ್ಯುತ್ತಮ ಸೈನಿಕರಲ್ಲಿ ಒಬ್ಬನಾಗಿದ್ದನು.
- 17:13 ಊರೀಯನನ್ನು ಕೊಲ್ಲಿಸಿದ ನಂತರ, ದಾವೀದನು __ಬತ್ಷೆಬೆ__ಯನ್ನು ವಿವಾಹ ಮಾಡಿಕೊಂಡನು.
- 17:14 ನಂತರ, ದಾವೀದನಿಗೆ ಮತ್ತು ಬತ್ಷೆಬೆಗೆ ಮೊತ್ತೊಬ್ಬ ಮಗ ಹುಟ್ಟಿದನು, ಮತ್ತು ಅವನಿಗೆ ಸೊಲೊಮೋನ್ ಎಂದು ಹೆಸರಿಟ್ಟರು.
ಪದ ಡೇಟಾ:
- Strong's: H1339
ಬರಬ್ಬ
ಸತ್ಯಾಂಶಗಳು:
ಯೇಸು ಹಿಡಿಯಲ್ಪಟ್ಟಿರುವಾಗ ಬರಬ್ಬನು ಯೆರೂಸಲೇಮಿನಲ್ಲಿ ಬಂದಿಯಾಗಿದ್ದನು.
- ಬರಬ್ಬನು ನರಹತ್ಯೆ ಮಾಡಿದ ಅಪರಾದಿಯಾಗಿದ್ದನು ಮತ್ತು ರೋಮಾ ಪ್ರಭುತ್ವಕ್ಕೆ ವಿರುದ್ಧವಾಗಿದ್ದನು.
- ಬರಬ್ಬನನ್ನು ನಿಮಗೆ ಬಿಟ್ಟುಕೊಡಬೇಕೋ ಅಥವಾ ಯೇಸುವನ್ನೋ ಎಂದು ಪೋನಥ್ಯ ಪಿಲಾತನು ಕೇಳಿದಾಗ, ಜನರು ಬರಬ್ಬನನ್ನು ಎಂದು ಹೇಳಿದರು.
- ಆದಕಾರಣ ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿದನು, ಆದರೆ ಯೇಸುವನ್ನು ಕೊಲ್ಲಿಸಲು ಒಪ್ಪಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಪಿಲಾತ, ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G912
ಬಾಬೆಲ್
ಸತ್ಯಾಂಶಗಳು:
ಮೆಸಪೋತಾಮ್ಯದ ದಕ್ಷಿಣ ದಿಕ್ಕಿನಲ್ಲಿದ್ದ ಶಿನಾರ್ ಎಂಬ ಪ್ರಾಂತ್ಯಕ್ಕೆ ಬಾಬೆಲ್ ಮುಖ್ಯ ನಗರವಾಗಿತ್ತು. ಸ್ವಲ್ಪ ಕಾಲದ ನಂತರ ಶಿನಾರ್ ಪ್ರದೇಶವನ್ನು ಬಾಬೆಲೋನ್ ಎಂದು ಕರೆಯಲ್ಪಟ್ಟಿತ್ತು.
- ಬಾಬೆಲ್ ನಗರವನ್ನು ಶಿನಾರ್ ಪ್ರಾಂತವನ್ನು ಆಳುತ್ತಿದ್ದ, ಹಾಮನ ಮರಿ ಮೊಮ್ಮಗನಾದ, ನಿಮ್ರೋದನು ಸ್ಥಾಪಿಸಿದನು.
- ಶಿನಾರ್ ಪ್ರಾಂತದ ಜನರು ದುರಹಂಕಾರರಾಗಿದ್ದು ಆಕಾಶವನ್ನು ಮುಟ್ಟುವ ಗೋಪುರವನ್ನು ಕಟ್ಟಬೇಕೆಂದು ನಿರ್ದರಿಸಿದರು. ಇದು ಸ್ವಲ್ಪ ಕಾಲದ ನಂತರ “ಬಾಬೆಲಿನ ಗೋಪುರ”ವೆಂದು ಕರೆಯಲ್ಪಟ್ಟಿತ್ತು.
- ಯಾಕಂದರೆ ದೇವರು ಆಜ್ಞಾಪಿಸಿದ ಪ್ರಕಾರವಾಗಿ ಜನರು ಹರಡಿ ಹೋಗಲು ಗೋಪುರವನ್ನು ಕಟ್ಟುತ್ತಿರುವ ಜನರು ನಿರಾಕರಿಸಿ, ಆದಕಾರಣ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಆತನು ಅವರ ಭಾಷೆಗಳನ್ನು ಗಲಿಬಿಲಿ ಮಾಡಿದನು. ಅವರು ಭೂಲೋಕದ ಅನೇಕ ಪ್ರಾಂತಗಳಲ್ಲಿ ವಾಸಿಸುವಂತೆ ಇದು ಅವರನ್ನು ಒತ್ತಾಯಪಡಿಸಿತು.
- “ಬಾಬೆಲ್” ಎನ್ನುವ ಪದಕ್ಕೆ “ಗಲಿಬಿಲಿ” ಎಂದು ಮೂಲ ಅರ್ಥವಾಗಿದೆ, ದೇವರು ಜನರ ಭಾಷೆಯನ್ನು ಗಲಿಬಿಲಿ ಮಾಡಿದ ಕಾರಣ ಆ ಹೆಸರು ಇಟ್ಟರು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : /ಬಾಬೆಲೋನ್, /ಹಾಮ್, / ಮೆಸಪೋತಾಮ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H894
ಬಾಬೆಲ್, ಬಾಬೆಲು, ಬಾಬೆಲಿನವರು
ಸತ್ಯಾಂಶಗಳು:
ಪ್ರಾಚೀನ ಬಾಬೆಲ್ ಪ್ರಾಂತ್ಯಕ್ಕೆ ಬಾಬೆಲು ನಗರವು ರಾಜಧಾನಿಯಾಗಿತ್ತು, ಅದು ಬಾಬೆಲ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು.
- ನೂರಾರು ವರ್ಷಗಳ ಹಿಂದೆ ಬಾಬೆಲ್ ಗೋಪುರ ಕಟ್ಟಲ್ಪಟ್ಟ ಅದೇ ಪ್ರದೇಶದಲ್ಲಿ, ಬಾಬೆಲು ಯೂಫ್ರೇಟೀಸ್ ನದಿಯ ಉದ್ದಕ್ಕೂ ನೆಲೆಗೊಂಡಿದೆ.
- ಕೆಲವೊಮ್ಮೆ “ಬಾಬೆಲ್” ಎನ್ನುವ ಪದವು ಸಮಸ್ತ ಬಾಬೆಲ್ ಸಾಮ್ರಾಜ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ, “ಬಾಬೆಲಿನ ಅರಸನು” ಒಂದು ನಗರವನ್ನು ಮಾತ್ರವಲ್ಲದೆ, ಸಮಸ್ತ ಸಾಮ್ರಾಜ್ಯವನ್ನು ಆಳಿದನು.
- ಬಾಬೆಲಿನಿವರು ಯೂದಾಯ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಅದರಲ್ಲಿನ ಜನರನ್ನು ಬಾಬೆಲಿನಲ್ಲಿ 70 ವರ್ಷಗಳ ಕಾಲ ಬಾಬೆಲಿನಲ್ಲಿ ಸೆರೆಹಿಡಿದ ಪ್ರಬಲ ಜನರ ಗುಂಪಾಗಿ ಇದ್ದರು.
- ಈ ಪ್ರಾಂತ್ಯದ ಒಂದು ಭಾಗವನ್ನು “ಕಸ್ದೀಯ” ಎಂದು ಮತ್ತು ಅಲ್ಲಿ ವಾಸಿಸುತ್ತಿದ್ದ ಜನರನ್ನು “ಕಸ್ದೀಯರು” ಎಂದು ಕರೆಯುತ್ತಿದ್ದರು. ಅದರ ಪರಿಣಾಮವಾಗಿ, “ಕಸ್ದೀಯ” ಎಂಬ ಪದವು ಅನೇಕಬಾರಿ ಬಾಬೆಲಿನವರನ್ನು ಸೂಚಿಸಲು ಉಪಯೋಗಿಸಲಾಗುತ್ತಿತ್ತು. (ನೋಡಿರಿ: ಲಾಕ್ಷಣಿಕ ಪ್ರಯೋಗವನ್ನು)
(ಇವುಗಳನ್ನು ಸಹ ನೋಡಿರಿ : ಬಾಬೆಲ್, ಕಸ್ದೀಯ, ಯೂದಾಯ, ನೆಬೂಕದ್ನೆಚ್ಚರ)
ಸತ್ಯವೇದದ ಅನುಬಂಧ ವಾಕ್ಯಗಳು:
ಸತ್ಯವೇದದಿಂದ ಕೆಲವು ಉದಾಹರಣೆಗಳು:
- 20:6 ಅಶ್ಯೂರರು ಇಸ್ರಾಯೆಲ್ ರಾಜ್ಯವನ್ನು ನಾಶ ಮಾಡಿದ ಸುಮಾರು 100 ವರ್ಷಗಳ ನಂತರ, ಯೂದಯ ರಾಜ್ಯದ ಮೇಲೆ ದಾಳಿಮಾಡಲು ಬಾಬೆಲಿನವರ ಅರಸನಾದ ನೆಬೂಕದ್ನೆಚ್ಚರನನ್ನು ದೇವರು ಕಳುಹಿಸಿದನು. ಬಾಬೆಲು ಪ್ರಬಲವಾದ ಸಾಮ್ರಾಜ್ಯವಾಗಿತ್ತು.
- 20:7 ಆದರೆ ಕೆಲವು ವರ್ಷಗಳ ನಂತರ, ಯೂದಾಯದ ಅರಸನು ಬಾಬೆಲಿಗೆ ವಿರುದ್ಧವಾಗಿ ತಿರುಗಿಬಿದ್ದನು. ಆದುದರಿಂದ, ಬಾಬೆಲಿನವರು ಹಿಂತಿರುಗಿ ಯೂದಾಯ ರಾಜ್ಯವನ್ನು ಆಕ್ರಮಿಸಿದರು. ಅವರು ಯೆರೂಸಲೇಮಿನ ಪಟ್ಟಣವನ್ನು ಆಕ್ರಮಿಸಿ, ದೇವಾಲಯವನ್ನು ನಾಶಮಾಡಿದರು, ಮತ್ತು ಆ ಪಟ್ಟಣದ ಹಾಗೂ ದೇವಾಲಯದ ಎಲ್ಲಾ ಸಂಪತ್ತನ್ನು ತೆಗೆದುಕೊಂಡರು.
- 20:09 ನೆಬೂಕದ್ನೆಚ್ಚನು ಮತ್ತು ಅವನ ಸೇನೆಯು ಯೂದಾಯ ರಾಜ್ಯದಲ್ಲಿದ್ದ ಬಹುತೇಕ ಎಲ್ಲಾ ಜನರನ್ನು ಬಾಬೆಲಿಗೆ ಕರೆದೊಯ್ದರು, ಅವರಲ್ಲಿ ಬಡವರಾಗಿರುವವರನ್ನು ಹೊಲದಲ್ಲಿ ವ್ಯವಸಾಯ ಮಾಡಲು ಬಿಟ್ಟು ಬಿಟ್ಟರು.
- 20:11__ಸುಮಾರು ಎಪ್ಪತ್ತು ವರ್ಷಗಳ ನಂತರ, ಪಾರಸಿಯ ಅರಸನಾದ, ಕೋರೆಷನು, __ಬಾಬೆಲನ್ನು ಸೋಲಿಸಿದನು.
ಪದದ ಡೇಟಾ:
- Strong's: H3778, H3779, H8152, H0894, H0895, H0896, G08970
ಬಾರೂಕ
ಸತ್ಯಾಂಶಗಳು:
ಹಳೆಯ ಒಡಂಬಡಿಕೆಯಲ್ಲಿ ಹಲವಾರು ಪುರುಷರ ಹೆಸರುಗಳಲ್ಲಿ ಬಾರೂಕ ಒಂದು ಹೆಸರು.
- (ಜಕ್ಕೈಯ ಮಗನಾದ) ಒಬ್ಬ ಬಾರೂಕ ಯೆರೂಸಲೇಮಿನ ಗೋಡೆಗಳನ್ನು ಕಟ್ಟಲು ನೆಹೆಮೀಯನೊಂದಿಗೆ ಕೆಲಸ ಮಾಡಿದನು.
- ನೆಹೆಮೀಯನ ಕಾಲದಲ್ಲಿ, ಯೆರೂಸಲೇಮಿನ ಗೋಡೆಗಳನ್ನು ತಿರುಗಿ ಕಟ್ಟಿದ ನಂತರ (ಕೊಲ್ಹೋಜೆಯ ಮಗನಾದ) ಮತ್ತೊಬ್ಬ ಬಾರೂಕ ನಾಯಕರಲ್ಲಿ ಒಬ್ಬನಾಗಿದ್ದನು.
- ದೇವರು ಯೆರೆಮೀಯನಿಗೆ ಬಯಲು ಮಾಡಿದ ಸಂದೇಶಗಳನ್ನು ಬರೆಯುತ್ತಾ ಮತ್ತು ಅವುಗಳನ್ನು ಜನರಿಗಾಗಿ ಓದುತ್ತ (ನೇರೀಯನ ಮಗನಾದ) ಮತ್ತೊಬ್ಬ ಬಾರೂಕನು ಪ್ರವಾದಿಯಾದ ಯೆರೆಮೀಯನ ಸೇವಕನಗಿದ್ದು ಅವನಿಗೆ ಅನೇಕ ವಿಧವಾಗಿ ಸಹಾಯ ಮಾಡುತ್ತಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಶಿಷ್ಯನು, ಯೆರೆಮೀಯ, ಯೆರೂಸಲೇಮ್, ನೆಹೆಮೀಯ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G1263
ಬಾರ್ತೊಲೊಮಾಯ
ಸತ್ಯಾಂಶಗಳು:
ಬಾರ್ತೊಲೊಮಾಯ ಯೇಸುವಿನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾಗಿದ್ದನು.
- ಯೇಸುವಿನ ಹೆಸರಿನಲ್ಲಿ ಅದ್ಭುತ ಕಾರ್ಯಗಳನ್ನು ಮಾಡಲು ಮತ್ತು ಸುವಾರ್ತೆಯನ್ನು ಸಾರಲು ಬೇರೆ ಅಪೊಸ್ತಲರ ಜೊತೆಯಲ್ಲಿ ಬಾರ್ತೊಲೊಮಾಯ ಸಹ ಕಳುಹಿಸಲ್ಪಟ್ಟಿದ್ದನು.
- ಯೇಸು ಪರಲೋಕಕ್ಕೆ ಆರೋಹಣವಾಗಿ ಹೋಗುವುದನ್ನು ನೋಡಿದವರಲ್ಲಿ ಅವನು ಒಬ್ಬನಾಗಿದ್ದನು.
- ಅದಾದ ಕೆಲವು ವಾರಗಳ ನಂತರ, ಪವಿತ್ರಾತ್ಮನು ಇಳಿದು ಬಂದಾಗ ಇವನು ಬೇರೆ ಅಪೊಸ್ತಲರೊಂದಿಗೆ ಯೆರೂಸಲೇಮಿನಲ್ಲಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲನು, ಶುಭವಾರ್ತೆ, ಪವಿತ್ರಾತ್ಮ, ಅದ್ಭುತ, ಪಂಚಾಶತ್ತಮ ದಿನ, ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G918
ಬಾರ್ನಬ
ಸತ್ಯಾಂಶಗಳು:
ಬಾರ್ನಬನು ಅಪೊಸ್ತಲರ ಕಾಲದಲ್ಲಿ ಜೀವಿಸಿದ ಆದಿ ಕ್ರೈಸ್ತವನಾಗಿದ್ದನು.
- ಬಾರ್ನಬನು ಕುಪ್ರ ದ್ವೀಪದ ವಾಸಿಯು, ಇಸ್ರಯೇಲ್ ಗೋತ್ರದ ಲೇವಿಯನಾಗಿದ್ದನು.
- ಸೌಲನು (ಪೌಲನು) ಕ್ರೈಸ್ತನಾದಾಗ, ಇತರ ವಿಶ್ವಾಸಿಗಳು ಅವನನ್ನು ಸಹ ವಿಶ್ವಾಸಿ ಎಂದು ಭಾವಿಸಬೇಕಾಗಿ ಬಾರ್ನಬನು ಅವರಲ್ಲಿ ಪ್ರೇರೇಪಿಸಿದನು.
- ಅನೇಕ ಪಟ್ಟಣಗಳಲ್ಲಿ ಯೇಸು ಕುರಿತಾಗಿ ಸುವಾರ್ತೆಯನ್ನು ಸಾರಲು ಬಾರ್ನಬ ಮತ್ತು ಪೌಲನು ಜೊತೆಯಲ್ಲಿ ಪ್ರಯಾಣಿಸಿದರು.
- ಅವನ ಹೆಸರು ಯೋಸೇಫ, ಆದರೆ ಅವನನ್ನು “ಬಾರ್ನಬ” ಎಂದು ಕರೆದರು, ಅದಕ್ಕೆ “ಪ್ರೋತ್ಸಾಹ ನೀಡುವ ಮಗನು” ಎಂದು ಅರ್ಥ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(See also: ಕ್ರೈಸ್ತರು, ಕುಪ್ರ, ಶುಭ ಸಮಾಚಾರ, ಲೇವಿ, ಪೌಲ)
ಸತ್ಯವೇದದ ವಾಕ್ಯಗಳು :
- ಅಪೊ.ಕೃತ್ಯ 4:36
- ಅಪೊ.ಕೃತ್ಯ 11:26
- ಅಪೊ.ಕೃತ್ಯ 13:3
- ಅಪೊ.ಕೃತ್ಯ 15:33
- ಕೊಲೊಸ್ಸೆ 4:10-11
- ಗಲಾತ್ಯ 2:9-10
- ಗಲಾತ್ಯ 2:13
ಸತ್ಯವೇದದ ಕಥೆಗಳಿಂದ ಉದಾಹರಣೆಗಳು :
- 46:8 ಆಗ ಬಾರ್ನಬ ಎಂಬ ವಿಶ್ವಾಸಿ ಸೌಲನ ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನು ಅವರಿಗೆ ವಿವರವಾಗಿ ಹೇಳಿದನು.
- 46:9 ಈ ಹೊಸ ವಿಶ್ವಾಸಿಗಳಿಗೆ ಯೇಸುವಿನ ಕುರಿತಾಗಿ ಇನ್ನು ಹೆಚ್ಚಾಗಿ ಬೋದಿಸಲು ಮತ್ತು ಸಭೆಯನ್ನು ಬಲಪಡಿಸಲು ಬಾರ್ನಬ ಮತ್ತು ಸೌಲನು ಜೊತೆಯಾಗಿ ಹೋದರು. I
- 46:10 ಒಂದು ದಿನ, ಅಂತಿಯೋಕ್ಯದಲ್ಲಿರುವ ಕ್ರೈಸ್ತರು ಉಪವಾಸ ಮಾಡಿ ಪ್ರಾರ್ಥಿಸುತ್ತಿರುವಾಗ, “ನಾನು ಅವರಿಗೆ ನೇಮಿಸಿದ ಕೆಲಸವನ್ನು ಮಾಡುವಂತೆ ಬಾರ್ನಬನನ್ನು ಮತ್ತು ಸೌಲನನ್ನು ಪ್ರತ್ಯೇಕಪಡಿಸಿರಿ” ಎಂದು ಪವಿತ್ರಾತ್ಮನು ಅವರಿಗೆ ಹೇಳಿದನು. ಆದುದರಿಂದ ಅಂತಿಯೋಕ್ಯದಲ್ಲಿದ್ದ ಸಭೆ ಬಾರ್ನಬ ಮತ್ತು ಸೌಲನ ಮೇಲೆ ಕೈಯಿಟ್ಟು ಅವರಿಗಾಗಿ ಪಾರ್ಥಿಸಿದರು.
ಪದ ಡೇಟಾ:
- Strong's: G9210
ಬಾಳ್
ಸತ್ಯಾಂಶಗಳು:
“ಬಾಳ್” ಎಂದರೆ “ಕರ್ತನು” ಅಥವಾ “ಯಜಮಾನನು” ಎಂದು ಅರ್ಥ ಮತ್ತು ಕಾನಾನ್ಯರು ಪೂಜಿಸುತ್ತಿದ್ದ ಪ್ರಾಥಮಿಕ ಅನ್ಯ ದೇವತೆಯ ಹೆಸರಾಗಿದೆ.
- “ಬಾಳ್” ಎಂದು ಅವರ ಹೆಸರಿನಲ್ಲಿ ಒಂದು ಭಾಗವಾಗಿದ್ದ ಅನೇಕ ಸ್ಥಾನಿಕ ಅನ್ಯ ದೇವತೆಗಳಿದ್ದವು, ಅಂತಹ ದೇವತೆಗಳಲ್ಲಿ “ಪೆಗೋರದ ಬಾಳ್” ಒಂದು ಆಗಿದೆ. ಈ ಎಲ್ಲಾ ದೇವತೆಗಳನ್ನು ಒಟ್ಟಾಗಿ “ಬಾಳ್ ದೇವತೆಗಳೆಂದು” ಕರೆಯುತ್ತಿದ್ದರು.
- ಜನರಲ್ಲಿ ಕೆಲವರು ಅವರ ಹೆಸರಲ್ಲಿ “ಬಾಳ್” ಎಂದು ಸೇರಿಸಿಕೊಳ್ಳುತ್ತಿದ್ದರು.
- ಬಾಳ್ ದೇವತೆಯ ಆರಾಧನೆಯಲ್ಲಿ ಮಕ್ಕಳನ್ನು ಬಲಿಕೊಡುವುದು ಮತ್ತು ವೇಶ್ಯೆಯರನ್ನು ಉಪಯೋಗಿಸಿಕೊಳ್ಳುವ ದುಷ್ಟ ಆಚಾರಗಳು ಒಳಗೊಂಡಿದ್ದವು.
ಅವರ ಚರಿತ್ರೆಯ ವಿವಿದ ಸಂಧರ್ಭಗಳಲ್ಲಿ, ಅವರ ಸುತ್ತಲು ಇದ್ದ ಅನ್ಯ ರಾಜ್ಯಗಳನ್ನು ನಿದರ್ಶನವಾಗಿ ತೆಗೆದುಕೊಂಡು, ಇಸ್ರಾಯೇಲರು ಸಹ ಬಾಳ್ ಆರಾಧನೆಯಲ್ಲಿ ಗಂಭೀರವಾಗಿ ನಿರತರಾಗಿದ್ದರು.
- ಅರಸನಾದ ಆಹಾಬ ಆಳ್ವಿಕೆಯ ಸಮಯದಲ್ಲಿ, ಬಾಳ್ ದೇವತೆ ಇಲ್ಲವೆಂದು ಮತ್ತು ಯೆಹೋವನು ಒಬ್ಬನೇ ದೇವರೆಂದು ಧೃಡಪಡಿಸಲು ಒಂದು ಪರೀಕ್ಷೆಯನ್ನು ದೇವರ ಪ್ರವಾದಿಯಾಗಿದ್ದ ಎಲೀಯನು ಎನ್ನಿಸಿಕೊಂಡನು. ಆದಕಾರಣ, ಬಾಳ್ ದೇವತೆಯ ಪ್ರವಾದಿಯರು ನಶಿಸಿ ಹೋದರು ಮತ್ತು ಜನರು ಯೆಹೋವನನ್ನು ಆರಾಧಿಸಲು ಪ್ರಾರಂಭಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಆಶೀರ, ಎಲೀಯನು, ಅನ್ಯ ದೇವತೆ,ವೇಶ್ಯೆ, ಯೆಹೋವನು)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 19:02 ಜನರೆಲ್ಲರೂ ಬಾಳ್ ಎಂಬ ಅನ್ಯ ದೇವತೆಯನ್ನು ಆರಾಧಿಸಲು ಪ್ರೋತ್ಸಾಹಿಸಿದ ದುಷ್ಟ ಮನುಷ್ಯನಾಗಿದ್ದಾನೆ.
- 19:06 ಇಸ್ರಾಯೇಲ್ ರಾಜ್ಯದ ಎಲ್ಲಾ ಜನರೂ, ಬಾಳ್ ದೇವತೆಯ 450 ಪ್ರವಾದಿಯರನ್ನು ಸೇರಿ, ಕರ್ಮೆಲ್ ಬೆಟ್ಟಕ್ಕೆ ಬಂದರು. “ನಿಮ್ಮ ಮನಸ್ಸುಗಳನ್ನು ಎಷ್ಟು ಬಾರಿ ಮಾರ್ಪಡಿಸಿಕೊಳ್ಳುತ್ತೇರೆ?” ಎಂದು ಎಲೀಯನು ಜನರಿಗೆ ಹೇಳಿದನು. ಯೆಹೋವನು ದೇವರಾದರೆ, ಆತನನ್ನು ಸೇವಿಸಿರಿ! ಬಾಳ್ ದೇವರಾದರೆ, ಅವನನ್ನು ಸೇವಿಸಿರಿ!”
- 19:07 ಬಾಳ್ ದೇವತೆಯ ಪ್ರವಾದಿಯರನ್ನು ನೋಡಿ, “ನೀವು ಒಂದು ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ದಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಆದರೆ ಬೆಂಕಿಯನ್ನು ಹೊತ್ತಿಸಬಾರದು.
- 19:08 ಆಗ ಬಾಳ್ ದೇವತೆಯ ಪ್ರವಾದಿಯರು __ಬಾಳ್ __ ದೇವತೆಗೆ, “ಬಾಳನೇ ನಮಗೆ ಕಿವಿಗೊಡು!” ಎಂದು ಪ್ರಾರ್ಥಿಸಿದರು.
- 19:12 ಆದ ಕಾರಣ ಜನರು ಬಾಳ್ ದೇವತೆಯ ಪ್ರವಾದಿಯರನ್ನು ಸೆರೆಹಿಡಿದರು. ನಂತರ ಎಲೀಯನು ಅವರನ್ನು ಕರೆದುಕೊಂಡು ಹೋಗಿ ಅವರನ್ನು ಕೊಲ್ಲಿಸಿದನು.
ಪದ ಡೇಟಾ:
- Strong's: H1120, G896
ಬಾಷ
ಸತ್ಯಾಂಶಗಳು:
ಇಸ್ರಯೇಲರು ವಿಗ್ರಹವನ್ನು ಆರಾಧಿಸಲು ಪ್ರೋತ್ಸಾಹ ಮಾಡಿದ ದುಷ್ಟ ಅರಸರಲ್ಲಿ ಬಾಷ ಒಬ್ಬನಾಗಿದ್ದಾನೆ.
- ಆಸ ಯೆಹೂದದ ಅರಸನಾಗಿದ್ದಾಗ, ಬಾಷ ಇಸ್ರಯೇಲರ ಮೂರನೆಯ ಅರಸನಾಗಿದ್ದನು ಮತ್ತು ಇಪತ್ತು ನಾಲ್ಕು ವರ್ಷಗಳು ಆಳ್ವಿಕೆ ಮಾಡಿದನು,
- ಅವನು ಸೈನ್ಯಾಧಿಪತಿಯಾಗಿರುವಾಗ ಹಿಂದಿನ ಅರಸನಾದ ನಾದಾಬನನ್ನು ಕೊಂದು ಅವನೇ ಅರಸನಾದನು.
- ಬಾಷನ ಆಳ್ವಿಕೆಯಲ್ಲಿ ಇಸ್ರಯೇಲರು ಮತ್ತು ಯೆಹೂದರ ನಡುವೆ, ಪ್ರತ್ಯೇಕವಾಗಿ ಯೆಹೂದರ ಅರಸನಾದ ಆಸನೊಂದಿಗೆ ಅನೇಕ ಯುದ್ಧಗಳು ನಡೆದವು.
- ಬಾಷನ ಮಾಡಿದ ಅನೇಕ ಪಾಪಗಳ ಕಾರಣವಾಗಿ ದೇವರು ಅವನ ಮರಣದ ಮೂಲಕ ಅವನನ್ನು ತನ್ನ ವಿಧಿಗಳಿಂದ ತೊಲಗಿಸಿದನು.
(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : /ಆಸ, /ಅನ್ಯ ದೇವತೆಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1201
ಬಾಷಾನ್
ಸತ್ಯಾಂಶಗಳು:
ಗಲಿಲಾಯ ಸಮುದ್ರದ ಪೂರ್ವ ದಿಕ್ಕಿನಲ್ಲಿರುವ ಪ್ರಾಂತ್ಯವು ಬಾಷಾನ್ ಆಗಿದೆ. ಪ್ರಸ್ತುತ ಕಾಲದಲ್ಲಿ ಸಿರಿಯಾ ಮತ್ತು ಗೋಲಾನ್ ಹೈಟ್ಸ್ ಎಂಬ ಸ್ಥಳದಲ್ಲಿ ಅದು ಇತ್ತು.
- ಹಳೆಯ ಒಡಂಬಡಿಕೆಯಲ್ಲಿ ಆಶ್ರಯ ಪುರವಗಿದ್ದ “ಗೋಲಾನ್” ಪಟ್ಟಣವು ಬಾಷಾನ್ ಪ್ರಾಂತ್ಯದಲ್ಲಿತ್ತು.
- ಬಾಷಾನ್ ಪ್ರಾಂತ್ಯವು ಏಲಾ ಮರಗಳಿಗೆ ಮತ್ತು ಪ್ರಾಣಿಗಳ ಹುಲ್ಲುಗಾವಲುಗಳಿಗೆ ಪ್ರಸಿದ್ಧವಾಗಿದ್ದು ತುಂಬ ಫಲವತ್ತಾದ ಪ್ರಾಂತ್ಯವಾಗಿತ್ತು.
- ಅನೇಕ ಅರಸರು ಮತ್ತು ಅವರ ದೇಶಗಳ ನಡುವೆ ನಡೆದ ಯುದ್ಧಗಳಿಗೆ ಬಾಷಾನ್ ಯುದ್ಧ ಭೂಮಿಯಾಗಿತ್ತೆಂದು ಆದಿ. 14ನೇ ಅಧ್ಯಾಯದಲ್ಲಿ ಬರೆಯಲ್ಪಟ್ಟಿದೆ.
- ಐಗುಪ್ತ ದೇಶದಿಂದ ಇಸ್ರಾಯೆಲಿಯರು ಸ್ವತಂತ್ರರಾಗಿ ಅರಣ್ಯದಲ್ಲಿ ಸಂಚರಿಸುತ್ತಿರುವಾಗ, ಅವರು ಬಾಷಾನ್ ಪ್ರಾಂತ್ಯದ ಒಂದು ಭಾಗವನ್ನು ಸ್ವಾಧೀನಪಡಿಸಿಕೊಂಡರು.
- ಹಲವಾರು ವರ್ಷಗಳ ನಂತರ, ಅರಸನಾದ ಸೊಲೊಮೋನ್ ಅಲ್ಲಿಂದ ವಸ್ತುಗಳನ್ನು ಸಂಗ್ರಹಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಏಲಾ, ಗಲಿಲಾಯ ಸಮುದ್ರ, ಸಿರಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1316
ಬಿಳಾಮ
ಸತ್ಯಾಂಶಗಳು:
ಇಸ್ರಯೇಲ್ಯರು ಕಾನಾನ್ ದೇಶವನ್ನು ಸೇರಲು ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಬಯಲಿನಲ್ಲಿ ಇಳಿದುಕೊಂಡಿರುವಾಗ, ಅರಸನಾದ ಬಾಲಾಕನು ಇಸ್ರಯೇಲ್ಯರನ್ನು ಶಪಿಸಲು ಅನ್ಯ ಪ್ರವಾದಿಯಾದ ಬಿಳಾಮನನ್ನು ನೇಮಕ ಮಾಡಿದನು.
- ಬಿಳಾಮನು ಪೆತೋರ್ ಎಂಬ ಊರಿನವನಾಗಿದ್ದನು, ಅದು ಯೂಫ್ರೆಟೀಸ್ ನದಿಯ ತೀರದಲ್ಲಿರುವ ಮೋವಾಬ್ಯರ ದೇಶದಿಂದ 400 ಮೈಲುಗಳ ದೂರದಲ್ಲಿತ್ತು.
- ಇಸ್ರಾಯೇಲರು ಬಹಳ ಜನವಾಗಿರುವುದರಿಂದ ಮಿದ್ಯಾನಿನ ಅರಸನಾದ ಬಾಲಾಕನು, ಬಹಳ ಭಯಪಟ್ಟು ಹೆದರಿ, ಅವರನ್ನು ಶಪಿಸಲು ಬಿಳಾಮನನ್ನು ಆರಿಸಿಕೊಂಡನು.
- ಬಿಳಾಮನು ಇಸ್ರಾಯೇಲ್ ದೇಶಕ್ಕೆ ಹೋಗುತ್ತಿರುವಾಗ, ಯೆಹೋವನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು, ಆದಕಾರಣ ಬಿಳಾಮನ ಕತ್ತೆಯು ನಿಂತುಕೊಂಡಿತು. ಬಿಳಾಮನೊಂದಿಗೆ ಮಾತನಾಡಲು ಯೆಹೋವನು ಕತ್ತೆಗೆ ಶಕ್ತಿಕೊಟ್ಟನು.
- ಬಿಳಾಮನು ಇಸ್ರಾಯೇಲರನ್ನು ಶಪಿಸಲು ಅಪ್ಪಣೆ ಕೊಡಲಿಲ್ಲ ಬದಲಿಗೆ ಅವರನ್ನು ಆಶಿರ್ವಾದಿಸಲು ಆಜ್ಞಾಪಿಸಿದನು.
- ಆದರೂ ಸಹ ಕೊನೆಯಲ್ಲಿ, ಅನ್ಯದೇವತೆಯಾದ ಪೆಗೋರದ ಬಾಳನನ್ನು ಆರಾಧಿಸಲು ಇಸ್ರಾಯೇಲರನ್ನು ಪ್ರೋತ್ಸಾಹಿಸುವ ಮೂಲಕ ಬಿಳಾಮನು ಅವರ ಮೇಲೆ ದುಷ್ಟತನವನ್ನು ತಂದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದಿಸಿರಿ)
(ಈ ಪದಗಳನ್ನು ಸಹ ನೋಡಿರಿ : ಆಶಿರ್ವಾದ, ಕಾನಾನ್, ಶಾಪ, ಕತ್ತೆ, ಯೂಫ್ರೆಟೀಸ್ ನದಿ, ಯೊರ್ದನ್ ನದಿ, ಮಿದ್ಯಾನ್, ಮೋವಾಬ್, ಪೆಗೋರ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H1109, G9030
ಬೆತೂವೇಲ್
ಸತ್ಯಾಂಶಗಳು:
ಬೆತೂವೇಲನು ಅಬ್ರಹಾಮನ ಸಹೋದರನಾದ ನಾಹೋರಿನ ಮಗನಾಗಿದ್ದನು.
- ಬೆತೂವೇಲ್ ರೆಬೆಕ್ಕ ಮತ್ತು ಲಾಬಾನಿನ ತಂದೆಯಾಗಿದ್ದನು.
- ಬೆರ್ಷೆಬ ಪಟ್ಟಣದಿಂದ ಸ್ವಲ್ಪ ದೂರದಲ್ಲಿ, ಪಶ್ಚಿಮ ಯೂದಯ ಪ್ರಾಂತ್ಯದಲ್ಲಿ ಬೆತೂವೇಲ್ ಎಂಬ ಊರು ಇತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬೆರ್ಷೆಬ, ಲಾಬಾನ್, ನಾಹೋರ್, ರೆಬೆಕ್ಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1328
ಬೆನಾಯ
ಪದದ ಅರ್ಥವಿವರಣೆ
ಹಳೆಯ ಒಡಂಬಡಿಕೆಯಲ್ಲಿದ್ದ ಅನೇಕ ಪುರುಷರಲ್ಲಿ ಬೆನಾಯ ಒಬ್ಬನು.
- ದಾವವೀದನ ಶಕ್ತಿಯುತ ಮನುಷ್ಯರಲ್ಲಿ ಯೆಹೋಯಾದಾವನ ಮಗನಾದ ಬೆನಾಯ ಒಬ್ಬನಾಗಿದ್ದನು. ಅವನು ನೈಪುಣ್ಯತೆ ಹೊಂದಿದ್ದ ಯೋಧನು ಮತ್ತು ದಾವೀದನ ಸಂರಕ್ಷರ ಮೇಲ್ವಿಚಾರಕನಾಗಿದ್ದನು.
- ಸೊಲೊಮೋನನು ಅರಸನಾದಾಗ, ಅವನ ಶತ್ರುಗಳನ್ನು ಜಯಿಸಲು ಬೆನಾಯ ಸಹಾಯ ಮಾಡಿದನು. ಸ್ವಲ್ಪ ಕಾಲಕ್ಕೆ ಅವನು ಇಸ್ರಾಯೇಲ್ ಸೈನ್ಯಾಧಿಪತಿಯಾದನು.
- ಹಳೆಯ ಒಡಂಬಡಿಕೆಯಲ್ಲಿ ಕಾಣಿಸುವ ಬೇರೆ ಬೆನಾಯ ಮುವ್ವರು ಲೇವೀಯಾರಾಗಿದ್ದರು: ಒಬ್ಬನು ಯಾಜಕನು, ಮತೊಬ್ಬನು ಸಂಗೀತಕಾರನು ಮತ್ತು ಇನ್ನೊಬ್ಬನು ಆಸಾಫನ ಮಗನಾಗಿದ್ದನು.
(ಈ ಪದಗಳನ್ನು ಸಹ ನೋಡಿರಿ : ಆಸಾಫ, ಯೆಹೋಯಾದ, ಲೇವಿಯ, ಸೊಲೊಮೋನ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1141
ಬೆನ್ಯಾಮೀನ, ಬೆನ್ಯಾಮೀನ್ಯರು
ಸತ್ಯಾಂಶಗಳು:
ಬೆನ್ಯಾಮೀನನು ಯಾಕೋಬನ ಹನ್ನೆರಡನೇಯ ಮಗನು. ಅವನ ರಾಹೇಲಳಿನ ಎರಡನೇಯ ಮಗನು. ಇಸ್ರಾಯೇಲಿನ ಹನ್ನೆರಡು ಗೋತ್ರಗಳಲ್ಲಿ ಬೆನ್ಯಾಮಿನನ ಸಂತತಿಯವರು ಒಂದು ಗೋತ್ರದವರಾಗಿದ್ದರು.
- ಅವನಿಂದ ಬಂದ ಜನಾಂಗವನ್ನು "ಬೆನ್ಯಾಮೀನನ ಗೋತ್ರ" ಅಥವಾ "ಬೆನ್ಯಾಮೀನ" ಅಥವಾ "ಬೆನ್ಯಾಮೀನ್ಯರು" ಎಂದು ಕರೆಯಲಾಗುತ್ತಿತ್ತು.
- ಎಬ್ರೀಯ ಭಾಷೆಯಲ್ಲಿ, ಬೆನ್ಯಾಮೀನ್ ಎಂಬ ಹೆಸರಿನ ಅರ್ಥ "ನನ್ನ ಬಲಗೈಯ ಮಗ".
- ಬೆನ್ಯಾಮೀನ್ ಗೋತ್ರ ಯೆರೂಸಲೇಮಿನ ಉತ್ತರಕ್ಕೆ ಲವಣ ಸಮುದ್ರದ ವಾಯುವ್ಯಕ್ಕೆ ನೆಲೆಸಿದರು.
- ರಾಜ ಸೌಲನು ಬೆನ್ಯಾಮೀನ್ ಕುಲದವನು.
- ಅಪೊಸ್ತಲನಾದ ಪೌಲನು ಸಹ ಬೆನ್ಯಾಮೀನ ಗೋತ್ರಕ್ಕೆ ಸೇರಿದವನಾಗಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡುವುದು)
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲಿನ ಹನ್ನೆರಡು ಗೋತ್ರಗಳು, ಯಾಕೋಬ,ರಾಹೇಲ್)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H1144, G9580
ಬೆರೋಯ
ಸತ್ಯಾಂಶಗಳು:
ಹೊಸ ಒಡಂಬಡಿಕೆಯಲ್ಲಿ, ಸಮೃದ್ಧಿಯಾದ ಗ್ರೀಕ್ ಪಟ್ಟಣವಾದ ಬೆರೋಯ, ಮಕೆದೋನ್ಯ ಪ್ರಾಂತ್ಯದ ಆಗ್ನೇಯಕ್ಕೆ ಇತ್ತು, ಅದು ಥೆಸಲೋನೀಕ ಪಟ್ಟಣದ ದಕ್ಷಿಣಕ್ಕೆ ಸುಮಾರು 80 ಕಿಲೋಮೀಟರ್ ದೂರದಲ್ಲಿತ್ತು.
- ಥೆಸಲೋನೀಕ ಪಟ್ಟಣದಲ್ಲಿ ಯೆಹೋದ್ಯರಲ್ಲಿ ಕೆಲವರು ಪೌಲನು ಮತ್ತು ಸೀಲನನ್ನು ತೊಂದರೆ ಮಾಡಿದಾಗ, ಅವರ ಸಹ ಕ್ರೈಸ್ತರ ಸಹಾಯದಿಂದ ಅವರು ಬೆರೋಯ ಪಟ್ಟಣಕ್ಕೆ ತಪ್ಪಿಸಿಕೊಂಡು ಹೋದರು.
- ಬೆರೋಯ ಪಟ್ಟಣದಲ್ಲಿ ಪೌಲನ ಬೋಧನೆಯನ್ನು ಕೇಳಿದಾಗ, ಅವನು ಹೇಳುವುದು ಸತ್ಯವೋ ಅಲ್ಲವೋ ಎಂದು ಶಾಸ್ತ್ರಗ್ರಂಥಗಳನ್ನು ಶೋಧಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಪೌಲನು, ಸೀಲನು, ಥೆಸಲೋನೀಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G960
ಬೆಲ್ಜೆಬೂಲನು
ಸತ್ಯಾಂಶಗಳು:
ಸೈತಾನನಿಗೆ ಅಥವಾ ದೆವ್ವಕ್ಕೆ ಮತ್ತೊಂದು ಹೆಸರು ಬೆಲ್ಜೆಬೂಲನು. ಅದನ್ನು ಕೆಲವೊಮ್ಮೆ “ಬೆಲ್ಜೆಬೂಲನು” ಎಂದು ಬರೆಯಲ್ಪಟ್ಟಿದೆ.
- ಈ ಹೆಸರಿನ ಅಕ್ಷರಾರ್ಥ “ನೊಣಗಳ ಕರ್ತನು” ಅಂದರೆ “ದೆವ್ವಗಳನ್ನು ಆಳುವವನು” ಎಂದು ಅರ್ಥ. ಆದರೆ ಈ ಪದವನ್ನು ಅದರ ಅರ್ಥ ಅನುಸಾರವಾಗಿ ಅಲ್ಲದೆ ಮೂಲ ಉಚ್ಚಾರ ಪ್ರಕಾರವಾಗಿ ಅನುವಾದ ಮಾಡುವುದು ಉತ್ತಮ.
- ಅದು ಯಾರನ್ನು ಸೂಚಿಸುತ್ತದೆಂದು ಸ್ಪಷ್ಟಪಡಿಸಲು “ದೆವ್ವ ಆದ ಬೆಲ್ಜೆಬೂಲನು” ಎಂದು ಅನುವಾದ ಮಾಡಬಹುದು.
- ಈ ಹೆಸರು ಎಕ್ರೋನಿನ ಅನ್ಯ ದೇವತೆಯಾದ “ಬೆಲ್ಜೆಬೂಲನು” ಎನ್ನುವ ಹೆಸರೊಂದಿಗೆ ಸಂಬಂಧವನ್ನು ಹೊಂದಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ದೆವ್ವ, ಎಕ್ರೋನ್, ಸೈತಾನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G954
ಬೇತೇಲ್
ಸತ್ಯಾಂಶಗಳು:
ಕಾನಾನು ದೇಶದಲ್ಲಿ ಯೆರೂಸಲೇಮಿನ ಉತ್ತರ ದಿಕ್ಕಿನಲ್ಲಿ ಬೇತೇಲ್ ಪಟ್ಟಣವು ಇದೇ. ಅದನ್ನು ಮೊದಲು “ಲೂಜ್” ಎಂದು ಕರೆಯುತ್ತಿದ್ದರು.
- ದೇವರ ವಾಗ್ದಾನವನ್ನು ಮೊದಲನೆಯ ಬಾರಿ ಸ್ವಿಕರಿಸಿದಾಗ, ಬೇತೇಲಿನಲ್ಲಿ ಅಬ್ರಾಮ (ಅಬ್ರಹಾಮನು) ಯೆಹೋವನಿಗೆ ಒಂದು ಯಜ್ಞವೇದಿಯನ್ನು ಕಟ್ಟಿದನು. ಆ ಕಾಲದಲ್ಲಿ ಆ ಪಟ್ಟಣದ ಹೆಸರು ಬೇತೇಲ್ ಅಲ್ಲ, ಆದರೆ ಅದು ಬೇತೇಲ್ ಎಂದು ಪ್ರಸಿದ್ಧವಾಗಿದ್ದರಿಂದ ಎಲ್ಲರು ಅದನ್ನು ಬೇತೇಲ್ ಎಂದು ಕರೆಯುತ್ತಿದ್ದರು.
- ತನ ಅಣ್ಣನಾದ ಏಸಾವನಿಂದ ತಪ್ಪಿಸಿಕೊಂಡು ಹೋಗುತ್ತಿರುವಾಗ, ಯಾಕೋಬನು ಈ ಪಟ್ಟಣದಲ್ಲಿ ಉಳಿದುಕೊಂಡನು ಮತ್ತು ಹೊರಗೆ ನೆಲದ ಮೇಲೆ ಮಲಗಿದನು. ಅವನು ಮಲಗಿಕೊಂಡಾಗ, ಆಕಾಶವನ್ನು ಮುಟ್ಟುವ ಒಂದು ಏಣಿಯು ಭೂಮಿಯ ಮೇಲೆ ನಿಂತಿತು ಮತ್ತು ಅದರ ಮೇಲೆ ದೇವ ದೂತರು ಏರುತ್ತಾ ಇಳಿಯುತ್ತಾ ಇದ್ದರು.
- ಯಾಕೋಬನು ಈ ಪಟ್ಟಣಕ್ಕೆ “ಬೇತೇಲ್” ಎಂದು ಹೆಸರಿಡುವ ತನಕ ಅದಕ್ಕೆ ಆ ಹೆಸರು ಇರಲಿಲ್ಲ. ಇದನ್ನು ಸ್ಪಷ್ಟಪಡಿಸಲು, ಅಬ್ರಹಾಮನ ಕುರಿತಾದ ವಾಕ್ಯ ಭಾಗಗಳಲ್ಲಿ “ಲೂಜ್ (ನಂತರ ಬೇತೇಲ್ ಎಂದು ಕರೆಯಲ್ಪಟ್ಟಿತು)” ಎಂದು ಅದೇರೀತಿಯಲ್ಲಿ ಅಲ್ಲಿಗೆ ಯಾಕೋಬ ಮೊದಲು ಬಂದಾಗ (ಅದಕ್ಕೆ ಹಳೆಯ ಹೆಸರು) ಎಂದು ಕೆಲವು ಅನುವಾದಗಳು ಅನುವಾದ ಮಾಡಬಹುದು,
- ಹಳೆಯ ಒಡಂಬಡಿಕೆಯಲ್ಲಿ ಹಲವಾರು ಬಾರಿ ಬೇತೇಲ್ ಕುರಿತಾಗಿ ಹೇಳಲ್ಪಟ್ಟಿದೆ ಮತ್ತು ಅನೇಕ ಪ್ರಾಮುಖ್ಯವಾದ ಸಂಗತಿಗಳು ಇಲ್ಲಿ ನಡೆದಿವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಹಾಮ, ಯಜ್ಞವೇದಿ, ಯಾಕೋಬ, ಯೆರೂಸಲೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1008
ಬೇತ್ ಷೆಮೆಷ್
ಸತ್ಯಾಂಶಗಳು:
ಬೇತ್ ಷೆಮೆಷ್ ಎಂಬ ಊರು ಯೆರೂಸಲೇಮಿನ ಪಶ್ಚಿಮಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಾನಾನಿನ ಊರಾಗಿದೆ.
- ಯೆಹೋಶುವನ ನಾಯಕತ್ವದಲ್ಲಿ ಇಸ್ರಾಯೇಲರು ಬೇತ್ ಷೆಮೆಷ್ ಊರನ್ನು ಸ್ವಾಧೀನಪಡಿಸಿಕೊಂಡರು.
- ಲೇವಿಯ ಯಾಜಕರು ವಾಸ ಮಾಡುವದಕ್ಕಾಗಿ ಬೇತ್ ಷೆಮೆಷ್ ಊರನ್ನು ಪ್ರತ್ಯೇಕವಾಗಿ ನೇಮಿಸಿದರು.
- ಫಿಲಿಸ್ತೀಯರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಸ್ವಾಧೀನಪಡಿಸಿಕೊಂಡು ಯೆರೂಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವಾಗ, ಅದನ್ನು ಮೊದಲನೆಯ ಬಾರಿ ಬೇತ್ ಷೆಮೆಷಿನಲ್ಲಿ ನಿಲ್ಲಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಯೆರೂಸಲೇಮ್, ಯೆಹೋಶುವ, ಲೇವಿಯರು, ಫಿಲಿಸ್ತೀಯರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1053
ಬೇತ್ಲೆಹೇಮ್, ಎಫ್ರಾತ
ಸತ್ಯಾಂಶಗಳು:
ಇಸ್ರಾಯೇಲ್ ದೇಶದಲ್ಲಿ, ಯೆರೂಸಲೇಮಿನ ಸಮೀಪವಾಗಿ ಬೇತ್ಲೆಹೇಮ್ ಎಂಬ ಚಿಕ್ಕ ಪಟ್ಟಣವಿತ್ತು. ಅದನ್ನು “ಎಫ್ರಾತ” ಎಂದು ಸಹ ಕರೆಯುತ್ತಿದ್ದರು, ಬಹುಶಃ ಅದು ಅದರ ಮೂಲ ಹೆಸರಾಗಿರ ಬಹುದು.
- ಅರಸನಾದ ದಾವೀದನು ಬೇತ್ಲೆಹೇಮಲ್ಲಿ ಜನಿಸಿದ ಕಾರಣ, ಅದನ್ನು “ದಾವೀದ ನಗರ” ಎಂದು ಕರೆಯಲ್ಪಟ್ಟಿದೆ.
- “ಎಫ್ರಾತ ಬೇತ್ಲೆಹೇಮಿನಿಂದ” ಮೆಸ್ಸಿಯ ಹುಟ್ಟಿಬರುವನೆಂದು ಪ್ರವಾದಿಯಾದ ಮೀಕನು ಬರೆದಿದ್ದಾನೆ.
- ಆ ಪ್ರವಾದನೆಯನ್ನು ನೆರವೇರಿಸುತ್ತ, ಅನೇಕ ವರ್ಷಗಳ ನಂತರ, ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದನು.
- “ಬೇತ್ಲೆಹೇಮ್” ಎನ್ನುವ ಹೆಸರಿಗೆ “ರೊಟ್ಟಿಯ ಮನೆ” ಅಥವಾ “ಆಹಾರದ ಮನೆ” ಎಂದು ಅರ್ಥ.
(ಈ ಪದಗಳನ್ನು ಸಹ ನೋಡಿರಿ : ಕಾಲೇಬ್, ದಾವೀದ, ಮೀಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 17:02 ಕುರುಬನಾದ ದಾವೀದನು __ ಬೇತ್ಲೆಹೇಮ್__ ಪುರದವನಾಗಿದ್ದನು.
- 21:09 ಕನ್ಯಕೆಯ ಗರ್ಭದಿಂದ ಮೆಸ್ಸೆಯ ಹುಟ್ಟಿಬರುವನೆಂದು ಪ್ರವಾದಿಯಾದ ಯೆಶಾಯ ಪ್ರವಾದಿಸಿದರು. ಆತನು __ ಬೇತ್ಲೆಹೇಮ್__ ಪುರದಲ್ಲಿ ಹುಟ್ಟುವನೆಂದು ಪ್ರವಾದಿಯಾದ ಮೀಕನು ಪ್ರವಾದಿಸಿದರು.
- 23:04 ಯೋಸೇಫನು ಮತ್ತು ಮರಿಯಳು ನಜರೇತ್ ಎಂಬ ಊರಿನಿಂದ ಹೊರಟು ಬೇತ್ಲೆಹೇಮೆಂಬ ಊರಿಗೆ ಹೋದರು ಯಾಕಂದರೆ ಅವರ ಪುರ್ವಿಕನಾದ ದಾವೀದನು __ ಬೇತ್ಲೆಹೇಮ್__ ಪುರದವನಾಗಿದ್ದನು.
- 23:06 “ನಮ್ಮ ಮೆಸ್ಸಿಯ, ನಮ್ಮ ಒಡೆಯನು __ ಬೇತ್ಲೆಹೇಮಲ್ಲಿ__ ಹುಟ್ಟಿದನು.
ಪದ ಡೇಟಾ:
- Strong's: H376, H672, H1035, G965
ಬೇಥಾನ್ಯ
ಸತ್ಯಾಂಶಗಳು:
ಆಲೀವ್ ಎಣ್ಣೆಯ ಮರಗಳ ಗುಡ್ಡದ ಪೂರ್ವ ಗಟ್ಟ ಇಳಿಕೆಯಲ್ಲಿ ಬೇಥಾನ್ಯ ಪಟ್ಟಣವಿತ್ತು, ಅದು ಯೆರೂಸಲೇಮಿನಿಂದ ಪೂರ್ವಕ್ಕೆ ಸುಮಾರು 2 ಮೈಲುಗಳ ದೂರದಲ್ಲಿತ್ತು.
- ಯೆರೂಸಲೇಮ್ ಮತ್ತು ಯೆರಿಕೋ ಪಟ್ಟಣಗಳ ನಡುವೆ ಇದ್ದ ಮಾರ್ಗದ ಹತ್ತಿರ ಬೇಥಾನ್ಯ ಪಟ್ಟಣವಿತ್ತು.
- ಆತನ ಸನ್ನಿಹಿತ ಸ್ನೇಹಿತರಾದ ಲಾಜರ, ಮಾರ್ಥಳು ಮತ್ತು ಮರಿಯಳ ಜೀವಿಸುತ್ತಿದ ಬೇಥಾನ್ಯ ಪಟ್ಟಣವನ್ನು ಯೇಸು ಆಗಾಗ ಬೇಟಿನೀಡುತ್ತಿದ್ದರು.
- ಸತ್ತವರಿಂದ ಲಾಜರನನ್ನು ಯೇಸು ಎಬ್ಬಿಸಿದ ಸ್ಥಳವೆಂದು ಬೇಥಾನ್ಯ ಪ್ರಸಿದ್ಧಿ ಹೊಂದಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಯೆರಿಕೋ, ಯೆರೂಸಲೇಮ್, ಲಾಜರ, ಮಾರ್ಥಳು, ಮರಿಯ (ಮಾರ್ಥಳ ಸಹೋದರಿ), ಆಲೀವ್ ಎಣ್ಣೆಯ ಮರಗಳ ಗುಡ್ಡ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G963
ಬೇರ್ಷೆಬ
ಸತ್ಯಾಂಶಗಳು:
ಹಳೆಯ ಒಡಂಬಡಿಕೆಯ ಕಾಲದಲ್ಲಿ, ನೆಗೆವ್ ಎಂದು ಈಗ ಕರೆಯಲ್ಪಡುವ ಮರುಭೂಮಿ ಇರುವ ಕ್ಷೇತ್ರದಲ್ಲಿ ಯೆರೂಸಲೇಮಿನಿಂದ 45ಮೈಲುಗಳ ದೂರದಲ್ಲಿ, ನೈಋತ್ಯ ದಿಶೆಯಲ್ಲಿ ಬೇರ್ಷೆಬ ಎಂಬ ಪಟ್ಟಣ ಇತ್ತು.
- ಅಬ್ರಹಾಮನು ಹಾಗರಳು ಮತ್ತು ಇಷ್ಮಾಯೇಲನನ್ನು ತನ್ನ ಗುಡಾರಗಳಿಂದ ಹೊರಗೆ ಕಳುಹಿಸಿದಾಗ ಅವರು ಸುತ್ತಿದ ಪ್ರಾಂತ್ಯವು ಬೇರ್ಷೆಬ ಸುತ್ತಲು ಇದ್ದ ಮರುಭೂಮಿ ಅರಣ್ಯ ಪ್ರಾಂತ್ಯವಾಗಿತ್ತು.
- ಈ ಪಟ್ಟಣದ ಹೆಸರಿಗೆ “ಒಪ್ಪಂದದ ಬಾವಿ” ಎಂದರ್ಥ. ಅಬೀಮೆಲೆಕನ ಮನುಷ್ಯರು ಅಬ್ರಹಾಮನ ಬಾವಿ ಒಂದನ್ನು ಸ್ವಾಧೀನಪಡಿಸಿಕೊಂಡರು ಆದಕಾರಣ ಅಬ್ರಹಾಮನು ಅವರನ್ನು ಶಿಕ್ಷಿಸುವದಿಲ್ಲವೆಂದು ಪ್ರಮಾಣ ಮಾಡಿದ ಕಾರಣ ಅದಕ್ಕೆ ಆ ಹೆಸರು ಕೊಡಲ್ಪಟ್ಟಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಬೀಮೆಲೆಕ, ಅಬ್ರಹಾಮ, ಹಾಗರಳು, ಇಷ್ಮಾಯೇಲನು, ಯೆರೂಸಲೇಮ್, ಪ್ರಮಾಣ)
===== ಸತ್ಯವೇದದ ಅನುಬಂಧ ವಾಕ್ಯಗಳು: =====
ಪದ ಡೇಟಾ:
- Strong's: H884
ಬೋವಜ
ಸತ್ಯಾಂಶಗಳು:
ಬೋವಜ ಇಸ್ರಾಯೇಲ್ ವ್ಯಕ್ತಿ. ಇವನು ರೂತಳ ಗಂಡ, ಅರಸನಾದ ದಾವೀದನ ಮುತ್ತಾತ, ಮತ್ತು ಯೇಸು ಕ್ರಿಸ್ತನ ಪೂರ್ವಜನೂ ಆಗಿದ್ದನು.
- ಇಸ್ರಾಯೇಲ್.ನಲ್ಲಿ ನ್ಯಾಯಾಧೀಶರು ಇರುವ ಕಾಲದಲ್ಲಿ ಬೋವಜನು ಜೀವಿಸಿದ್ದನು.
- ಈತನು ಇಸ್ರಾಯೇಲ್ ಸ್ತ್ರೀಯಳಾದ ನೊವೊಮಿಗೆ ನಂಟನಾಗಿದ್ದನು. ಈಕೆ ಮೋವಾಬ್ಯದಲ್ಲಿ ತನ್ನ ಗಂಡ ಮತ್ತು ಇಬ್ಬರು ಗಂಡು ಮಕ್ಕಳು ಸತ್ತುಹೋದನಂತರ ಇಸ್ರಾಯೇಲ್.ಗೆ ತಿರುಗಿ ಬಂದಿದ್ದಳು.
- ಬೋವಜನು ನೊವೊಮಿಯ ವಿಧವೆಯಾದ ಸೊಸೆ ರೂತಳನ್ನು ಮದುವೆ ಮಾಡಿಕೊಳ್ಳುವದರ ಮೂಲಕ ಆಕೆಗೆ “ವಿಮೋಚನೆ” ಕೊಟ್ಟನು. ಮತ್ತು ಆಕೆಗೆ ಗಂಡ, ಮಕ್ಕಳೊಂದಿಗೆ ಭವಿಷ್ಯತ್ತನ್ನು ಅನುಗ್ರಹಿಸಿದನು.
- ಪಾಪದಿಂದ ನಮ್ಮನ್ನು ಯೇಸು ಹೇಗೆ ಬಿಡಿಸುವನು ಮತ್ತು ಹೇಗೆ ರಕ್ಷಿಸುವನು ಎನ್ನುವದಕ್ಕೆ ಈತನು ಒಂದು ಸಾದೃಶ್ಯವಾಗಿರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮೋವಾಬ್ಯ, ವಿಮೋಚಿಸು, ರೂತಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1162
ಮಕೆದೋನ್ಯ
ಸತ್ಯಾಂಶಗಳು:
ಹೊಸ ಒಡಂಬಡಿಕೆಯ ಕಾಲದಲ್ಲಿ, ಮಕೆದೋನ್ಯ ಎನ್ನುವುದು ರೋಮಾ ಸೀಮೆಯಾಗಿತ್ತು, ಇದು ಪುರಾತನ ಗ್ರೀಸ್ ಉತ್ತರಭಾಗದಲ್ಲಿ ಕಂಡುಬರುತ್ತದೆ.
- ಸತ್ಯವೇದದಲ್ಲಿ ದಾಖಲಿಸಿದ ಕೆಲವೊಂದು ಪ್ರಾಮುಖ್ಯವಾದ ಮಕದೋನ್ಯ ಪಟ್ಟಣಗಳು - ಬೆರೋಯ, ಫಿಲಿಪ್ಪಿ, ಮತ್ತು ಥೆಸಲೋನಿಕ.
- ದರ್ಶನದ ಮೂಲಕ ಮಕದೋನ್ಯದಲ್ಲಿರುವ ಜನರಿಗೆ ಸುವಾರ್ತೆಯನ್ನು ಸಾರಬೇಕೆಂದು ದೇವರು ಪೌಲನಿಗೆ ಹೇಳಿದನು.
- ಪೌಲನು ಮತ್ತು ತನ್ನ ಜೊತೆ ಕೆಲಸಗಾರರು ಮಕದೋನ್ಯಕ್ಕೆ ಹೋದರು ಮತ್ತು ಅಲ್ಲಿರುವ ಜನರಿಗೆ ಯೇಸುವಿನ ಕುರಿತಾಗಿ ಹೇಳಿದರು ಮತ್ತು ಹೊಸ ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಅಥವಾ ವಿಶ್ವಾಸದಲ್ಲಿ ಬೆಳೆಯುವುದಕ್ಕೆ ಸಹಾಯ ಮಾಡಿದರು.
- ಸತ್ಯವೇದದಲ್ಲಿ ಮಕದೋನ್ಯ ಪಟ್ಟಣಗಳಾಗಿರುವ ಫಿಲಿಪ್ಪಿ ಮತ್ತು ಥೆಸಲೋನಿಕದಲ್ಲಿರುವ ವಿಶ್ವಾಸಿಗಳಿಗೆ ಪೌಲನು ಪತ್ರಿಕೆಗಳನ್ನು ಬರೆದಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಂಬು, ಬೆರೋಯ, ವಿಶ್ವಾಸ, ಶುಭ ವಾರ್ತೆ, ಗ್ರೀಸ್, ಫಿಲಿಪ್ಪಿ, ಥೆಸಲೋನಿಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G3109, G3110
ಮಗ್ದಲದ ಮರಿಯ
ಸತ್ಯಾಂಶಗಳು:
ಮಗ್ದಲದ ಮರಿಯಳು ಯೇಸುವಿನ ಸೇವೆಯಲ್ಲಿ ಆತನನ್ನು ಹಿಂಬಾಲಿಸಿದ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಅನೇಕಮಂದಿ ಸ್ತ್ರೀಯರಲ್ಲಿ ಒಬ್ಬಳಾಗಿದ್ದಳು. ಈಕೆಯಲ್ಲಿರುವ ಏಳು ದೆವ್ವಗಳನ್ನು ಯೇಸು ಹೋಗಲಾಡಿಸಿ ಆಕೆಗೆ ಬಿಡುಗಡೆಯನ್ನು ಕೊಟ್ಟಿದ್ದನು, ಹೀಗೆ ಆಕೆ ಪ್ರಸಿದ್ಧಿಯಾಗಿದ್ದಳು.
- ಮಗ್ದಲದ ಮರಿಯಳು ಮತ್ತು ಇತರ ಬೇರೆ ಸ್ತ್ರೀಯರು ಯೇಸುವಿಗೆ ಮತ್ತು ಆತನ ಶಿಷ್ಯರಿಗೆ ಕೊಡುವುದರ ಮೂಲಕ ಹೆಚ್ಚಾಗಿ ಸಹಾಯ ಮಾಡಿದ್ದರು.
- ಯೇಸುವು ಮರಣದಿಂದ ಎಬ್ಬಿಸಲ್ಪಟ್ಟಾಗ ಆತನನ್ನು ಮೊಟ್ಟ ಮೊದಲಾಗಿ ನೋಡಿದ ಸ್ತ್ರೀಯರಲ್ಲಿ ಈಕೆಯು ಒಬ್ಬಳೆಂದು ದಾಖಲಿಸಿದ್ದಾರೆ.
- ಮಗ್ದಲದ ಮರಿಯಳು ಸಮಾಧಿಯ ಹೊರಗಡೆ ನಿಂತುಕೊಂಡಿರುವಾಗಲೇ ಆಕೆ ಯೇಸು ನಿಂತಿರುವುದನ್ನು ನೋಡಿದಳು ಮತ್ತು ಆತನು ಆಕೆಗೆ ನೀನು ಇತರ ಶಿಷ್ಯರ ಹತ್ತಿರ ಹೋಗಿ ಆತನು ಎದ್ದಿದ್ದಾನೆಂದು ಪ್ರಕಟಿಸು ಎಂದು ಹೇಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದೆವ್ವ, ದೆವ್ವ-ಹಿಡಿಯಲ್ಪಟ್ಟವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G3094, G3137
ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ
ಸತ್ಯಾಂಶಗಳು:
ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು.
- ಸೀಮೋನನ ಹೆಸರು ಯೇಸುವಿನ ಹನ್ನೆರಡು ಮಂದಿ ಶಿಷ್ಯರ ಪಟ್ಟಿಗಳಲ್ಲಿ ಮೂರು ಬಾರಿ ದಾಖಲು ಮಾಡಲಾಗಿರುತ್ತದೆ, ಆದರೆ ತನ್ನ ಕುರಿತಾಗಿ ಸ್ವಲ್ಪ ಮಾಹಿತಿ ಮಾತ್ರವೇ ಇರುತ್ತದೆ.
- ಯೇಸುವು ಪರಲೋಕಕ್ಕೆ ಹಿಂದಿರುಗಿ ಹೋದಾಗ ಯೆರೂಸಲೇಮಿನಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಭೇಟಿಯಾಗಿರುವ ಹನ್ನೊಂದು ಮಂದಿಯಲ್ಲಿ ಸೀಮೋನನು ಒಬ್ಬನಾಗಿದ್ದನು.
- “ಜೆಲೋತೆ” ಎನ್ನುವ ಪದವು ಸೀಮೋನನು “ಜೆಲೋತೆಯರಲ್ಲಿ” ಸದಸ್ಯನಾಗಿರಬಹುದು, ಯೆಹೂದ್ಯರ ಮತಾಭಿಮಾನಿಗಳ ಪಕ್ಷವು ಮೋಶೆಯ ಧರ್ಮಶಾಸ್ತ್ರವನ್ನು ಎತ್ತಿ ಹಿಡಿಯುವುದರಲ್ಲಿ ತುಂಬಾ ರೋಷವುಳ್ಳವರಾಗಿದ್ದರು, ಇವರು ರೋಮಾ ಸರ್ಕಾರವನ್ನು ಹೆಚ್ಚಾಗಿ ವಿರೋಧಿಸುತ್ತಿದ್ದರು.
- ಅಥವಾ, “ಜೆಲೋತೆ” ಎನ್ನುವ ಪದಕ್ಕೆ “ರೋಷವುಳ್ಳ ವ್ಯಕ್ತಿ” ಎಂದರ್ಥವಾಗಿರುತ್ತದೆ, ಇದು ಸೀಮೋನನ ಮತಾಭಿಮಾನವನ್ನು ಸೂಚಿಸುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲರ, ಶಿಷ್ಯ, ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2208, G2581, G4613
ಮತ್ತಾಯ, ಲೇವಿ
ಸತ್ಯಾಂಶಗಳು:
ಮತ್ತಾಯ ಎನ್ನುವ ವ್ಯಕ್ತಿ ಯೇಸು ತನ್ನ ಶಿಷ್ಯರನ್ನಾಗಿ ಆಯ್ಕೆ ಮಾಡಿಕೊಂಡಿರುವ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದನು. ಈತನನ್ನು ಅಲ್ಫಾಯ ಮಗನಾದ ಲೇವಿ ಎಂದೂ ಕರೆಯುತ್ತಿದ್ದರು.
- ಲೇವಿ (ಮತ್ತಾಯ) ಯೇಸುವನ್ನು ಭೇಟಿ ಮಾಡುವುದಕ್ಕೆ ಮುಂಚಿತವಾಗಿ ಕಪೆರ್ನೌಮದಲ್ಲಿ ಸುಂಕದವನಾಗಿದ್ದನು.
- ಮತ್ತಾಯನು ತನ್ನ ಹೆಸರನ್ನು ಹೊಂದಿರುವ ಸುವಾರ್ತೆಯನ್ನು ಬರೆದನು.
- ಸತ್ಯವೇದದಲ್ಲಿ ಲೇವಿ ಎನ್ನುವ ಹೆಸರಿನ ಮೇಲೆ ಅನೇಕಮಂದಿ ವ್ಯಕ್ತಿಗಳಿದ್ದಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಲೇವಿ, ಸುಂಕದವನು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G3017, G3156
ಮನಸ್ಸೆ
ಸತ್ಯಾಂಶಗಳು:
ಮನಸ್ಸೆ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಐದು ಮಂದಿ ಪುರುಷರು ಇದ್ದಾರೆ.
- ಮನಸ್ಸೆ ಎನ್ನುವವನು ಯೋಸೇಫನ ಚೊಚ್ಚಲ ಮಗನ ಹೆಸರಾಗಿರುತ್ತದೆ.
- ಮನಸ್ಸೆ ಮತ್ತು ತನ್ನ ಚಿಕ್ಕ ತಮ್ಮನಾದ ಎಫ್ರಾಯಿಮರಿಬ್ಬರನ್ನು ಯೋಸೇಫನ ತಂದೆ ದತ್ತು ತೆಗೆದುಕೊಂಡಿರುತ್ತಾನೆ, ಯಾಕೋಬನು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿರುವದಕ್ಕೆ ಅವರ ಸಂತಾನದವರಿಗೆ ಧನ್ಯತೆಯನ್ನು ಕೊಟ್ಟಿದ್ದನು.
- ಮನಸ್ಸೆ ಸಂತಾನದವರು ಇಸ್ರಾಯೇಲ್ ಕುಲಗಳಲ್ಲಿ ಒಂದು ಕುಲವಾಗಿ ಮಾರ್ಪಟ್ಟರು.
- ಮನಸ್ಸೆ ಕುಲವನ್ನು “ಮನಸ್ಸೆ ಅರ್ಧ ಕುಲ” ಎಂಬುದಾಗಿ ಕರೆಯಲ್ಪಟ್ಟರು, ಯಾಕಂದರೆ ಕುಲದ ಅರ್ಧ ಭಾಗವು ಯೊರ್ಧನ್ ನದಿಯ ಪಶ್ಚಿಮ ಭಾಗದಲ್ಲಿರುವ ಕಾನಾನ್ ಭೂಮಿಯಲ್ಲಿ ಸ್ಥಿರಪಟ್ಟರು. ಕುಲದಲ್ಲಿರುವ ಇನ್ನೊಂದು ಭಾಗವು ಯೊರ್ಧನ್ ಪೂರ್ವ ಕಡೆಗೆ ಸ್ಥಿರಪಟ್ಟರು.
- ಯೆಹೂದ ಅರಸರಲ್ಲಿ ಒಬ್ಬನು ಮನಷ್ಷೆ ಎನ್ನುವ ಹೆಸರಿನ ಮೇಲೆ ಇದ್ದಾನೆ.
- ಅರಸನಾದ ಮನಸ್ಸೆ ದುಷ್ಟ ಅರಸನಾಗಿದ್ದನು, ಇವನು ಸುಳ್ಳು ದೇವರುಗಳಿಗೆ ದಹನ ಬಲಿ ಅರ್ಪಣೆಗಳಾಗಿ ತನ್ನ ಸ್ವಂತ ಮಕ್ಕಳನ್ನು ಸರ್ವಾಂಗಹೋಮವನ್ನಾಗಿ ಅರ್ಪಿಸಿದನು.
- ಶತ್ರುವಿನ ಸೈನ್ಯದಿಂದ ಮನಸ್ಸೆಯ ಮೇಲೆ ಧಾಳಿ ಮಾಡುವುದಕ್ಕೆ ಅನುಸರಿಸುವುದರಿಂದ ದೇವರು ಅರಸನಾದ ಮನಸ್ಸೆಯನ್ನು ಶಿಕ್ಷಿಸಿದನು. ಮನಸ್ಸೆ ದೇವರ ಕಡೆಗೆ ತಿರುಗಿಕೊಂಡನು ಮತ್ತು ಆರಾಧಿಸಲ್ಪಡುವ ವಿಗ್ರಹಗಳಿರುವ ಸ್ಥಳಗಳನ್ನೆಲ್ಲಾ ನಾಶಗೊಳಿಸಿದನು.
- ಮನಸ್ಸೆ ಇರುವ ಇಬ್ಬರು ವ್ಯಕ್ತಿಗಳು ಎಜ್ರಾನ ಕಾಲದಲ್ಲಿ ಜೀವಿಸುತ್ತಿದ್ದರು. ಈ ಮನುಷ್ಯರೆಲ್ಲರು ಸುಳ್ಳು ದೇವರಗಳನ್ನು ಆರಾಧನೆ ಮಾಡುವುದಕ್ಕೆ ಪ್ರೇರೇಪಿಸಿದ ತಮ್ಮ ಅನ್ಯ ಹೆಂಡತಿಯರೊಂದಿಗೆ ವಿಚ್ಛೇದನ ಪತ್ರಗಳನ್ನು ಕೊಡಬೇಕಾದ ಅವಶ್ಯಕತೆವಿರುತ್ತದೆ.
- ಮನಸ್ಸೆ ಎನ್ನುವ ಇನ್ನೊಬ್ಬ ವ್ಯಕ್ತಿ ಸುಳ್ಳು ದೇವರುಗಳಿಗೆ ಯಾಜಕರಾಗಿರುವ ಕೆಲವುಮಂದಿ ದಾನೀಯರ ತಾತನಾಗಿರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ದಾನ್, ಎಫ್ರಾಯೀಮ್, ಎಜ್ರಾ, ಸುಳ್ಳು ದೇವರು, ಯಾಕೋಬ, ಯೆಹೂದ, ಅನ್ಯ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4519, H4520, G3128
ಮರಿಯ (ಮಾರ್ಥಳ ಸಹೋದರಿ)
ಸತ್ಯಾಂಶಗಳು:
ಮರಿಯಳು ಯೇಸುವನ್ನು ಹಿಂಬಾಲಿಸಿದ ಬೇಥಾನ್ಯದ ಸ್ತ್ರೀಯಳಾಗಿದ್ದಳು.
- ಮರಿಯಳಿಗೆ ಮಾರ್ಥ ಎನ್ನುವ ಸಹೋದರಿ ಮತ್ತು ಲಾಜರನೆಂಬ ಸಹೋದರನಿದ್ದನು, ಇವರು ಕೂಡ ಯೇಸುವಿನ ಹಿಂಬಾಲಕರಾಗಿದ್ದರು.
- ಮಾರ್ಥಳಂತೆ ಅಡಿಗೆ ಸಿದ್ಧಗೊಳಿಸಬೇಕೆನ್ನುವದರ ಕುರಿತಾದ ಆಸಕ್ತಿಗಿಂತಲೂ ಯೇಸುವಿನ ಬೋಧನೆಯನ್ನು ಕೇಳುವುದಕ್ಕೆ ಮರಿಯಳು ಆಯ್ಕೆ ಮಾಡಿಕೊಂಡದ್ದು ತುಂಬಾ ಉತ್ತಮವಾದ ಆಯ್ಕೆ ಎಂಬುದಾಗಿ ಯೇಸು ಮರಿಯಳ ಕುರಿತಾಗಿ ಒಂದುಸಲ ಸಾಕ್ಷಿ ಹೇಳಿದ್ದನು.
- ಯೇಸು ಮರಿಯಳ ಸಹೋದರನಾದ ಲಾಜರನನ್ನು ತಿರುಗಿ ಬದುಕಿಸಿದನು.
- ಇದಾದ ಸ್ವಲ್ಪ ಸಮಯದನಂತರ, ಬೇಥಾನ್ಯದಲ್ಲಿ ಬೇರೊಬ್ಬರ ಮನೆಯಲ್ಲಿ ಯೇಸು ಊಟ ಮಾಡುತ್ತಿರುವಾಗ, ಮರಿಯಳು ಆತನನ್ನು ಆರಾಧನೆ ಮಾಡುವ ಕ್ರಮದಲ್ಲಿ ಆತನ ಪಾದಗಳ ಮೇಲೆ ತುಂಬಾ ಬೆಲೆಯುಳ್ಳ ಸುಗಂಧ ದ್ರವ್ಯವನ್ನು ಸುರಿಸಿದಳು.
- ಆಕೆ ಮಾಡಿದ ಈ ಕಾರ್ಯಕ್ಕಾಗಿ ಯೇಸು ಸ್ತುತಿಸಿದನು ಮತ್ತು ಆಕೆ ತನ್ನ ಶರೀರವನ್ನು ಸಮಾಧಿಗೆ ಸಿದ್ಧ ಮಾಡುತ್ತಿದ್ದಾಳೆಂದು ಹೇಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೇಥಾನ್ಯ, ಸಾಂಬ್ರಾಣಿ, ಲಾಜರ, ಮಾರ್ಥ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G3137
ಮರಿಯಳು, ಯೇಸುವಿನ ತಾಯಿ
ಸತ್ಯಾಂಶಗಳು:
ಮರಿಯಳು ಯೋಸೇಫ ಎನ್ನುವ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವುದಕ್ಕೆ ನಿಶ್ಚಿತಾರ್ಥ ಮಾಡಿಕೊಂಡು ನಜರೆತ್ ಪಟ್ಟಣದಲ್ಲಿ ಜೀವಿಸುತ್ತಿರುವ ಒಬ್ಬ ಯೌವ್ವನ ಸ್ತ್ರೀಯಳಾಗಿದ್ದಳು. ದೇವರ ಮಗನಾಗಿರುವ, ಮೆಸ್ಸೀಯನಾಗಿರುವ ಯೇಸುವಿನ ತಾಯಿಯಾಗಿರುವುದಕ್ಕೆ ದೇವರು ಮರಿಯಳನ್ನು ಆಯ್ಕೆ ಮಾಡಿಕೊಂಡಿದ್ದರು.
- ಮರಿಯಳು ಕನ್ಯೆಯಾಗಿದ್ದಾಗ ಗರ್ಭಿಣಿಯಾಗುವುದಕ್ಕೆ ಪವಿತ್ರಾತ್ಮನು ಅದ್ಭುತವಾಗಿ ಕೆಲಸ ಮಾಡಿದನು.
- ದೇವರ ಮಗನಾಗಿರುವ ಒಬ್ಬ ಗಂಡು ಮಗು ಆಕೆಗೆ ಹುಟ್ಟುತ್ತಾನೆ ಮತ್ತು ಆಕೆ ಆತನಿಗೆ ಯೇಸು ಎಂದು ಹೆಸರಿಡ ಬೇಕೆಂದು ದೂತನು ಮರಿಯಳಿಗೆ ಹೇಳಿದನು.
- ಮರಿಯಳು ದೇವರನ್ನು ಪ್ರೀತಿಸಿದಳು ಮತ್ತು ಆಕೆಯ ಮೇಲೆ ಕೃಪೆಯನ್ನು ತೋರಿಸಿದ್ದಕ್ಕಾಗಿ ಆತನನ್ನು ಘನಪಡಿಸಿದಳು.
- ಯೋಸೇಫನು ಮರಿಯಳನ್ನು ವಿವಾಹ ಮಾಡಿಕೊಂಡನು, ಆದರೆ ಆಕೆ ಮಗುವಿಗೆ ಜನನವನ್ನು ಕೊಡುವವರೆಗೂ ಕನ್ಯೆಕೆಯಾಗಿ ಇದ್ದುಕೊಂಡಿದ್ದಳು.
- ಕುರುಬರು ಮತ್ತು ಜೋಯಿಸರು ಶಿಶುವಾಗಿರುವ ಯೇಸುವಿನ ಕುರಿತಾಗಿ ಹೇಳಿರುವ ಅನೇಕ ಅದ್ಭುತ ವಿಷಯಗಳ ಕುರಿತಾಗಿ ಮರಿಯಳು ಆಳವಾಗಿ ಆಲೋಚನೆ ಮಾಡಿದಳು.
- ಮರಿಯಳು ಮತ್ತು ಯೋಸೇಫನು ಶಿಶುವಾಗಿರುವ ಯೇಸುವನ್ನು ಎತ್ತಿಕೊಂಡು ಪ್ರತಿಷ್ಠೆ ಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಇದಾದನಂತರ ಆ ಶಿಶುವನ್ನು ಸಾಯಿಸಬೇಕೆನ್ನುವ ಅರಸನಾದ ಹೆರೋದನ ಪ್ರಣಾಳಿಕೆಯಿಂದ ತಪ್ಪಿಸಿಕೊಳ್ಳಲು ಆತನನ್ನು ಎತ್ತಿಕೊಂಡು ಐಗುಪ್ತಕ್ಕೆ ಹೋದರು. ಕೊನೆಗೆ ಅವರು ತಿರುಗಿ ನಜರೇತಿಗೆ ಹಿಂದುರಿಗೆ ಹೋದರು.
- ಯೇಸು ದೊಡ್ಡವನಾಗಿರುವಾಗ ಕಾನಾ ಎನ್ನುವ ಊರಿನಲ್ಲಿ ನಡೆದ ವಿವಾಹದಲ್ಲಿ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದಾಗ ಮರಿಯಳು ಆತನೊಂದಿಗೆ ಇದ್ದುಕೊಂಡಿದ್ದಳು.
- ಯೇಸು ಶಿಲುಬೆಯಲ್ಲಿ ಮರಣಿಸುತ್ತಿರುವ ಸಮಯದಲ್ಲಿ ಮರಿಯಳು ಆ ಶಿಲುಬೆಯ ಹತ್ತಿರವೇ ಇದ್ದುಕೊಂಡಿದ್ದಳೆಂದು ಸುವಾರ್ತೆಗಳು ಕೂಡ ದಾಖಲಿಸಿವೆ. ಯೇಸು ತನ್ನ ಶಿಷ್ಯನಾದ ಯೋಹಾನನಿಗೆ ಮರಿಯಳನ್ನು ತನ್ನ ಸ್ವಂತ ತಾಯಿಯಂತೆ ನೋಡಿಕೊಳ್ಳಬೇಕೆಂದು ಹೇಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾ, ಐಗುಪ್ತ, ಮಹಾ ಹೆರೋದ, ಯೇಸು, ಯೋಸೇಫ, ದೇವರ ಮಗ, ಕನ್ಯೆಕೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 22:04 ಎಲಿಸಬೇತಳು ಆರು ತಿಂಗಳು ಗರ್ಭಿಣಿಯಾಗಿದ್ದಾಗ, ಅದೇ ದೂತನು ಎಲಿಸಬೇತಳ ಬಂಧುವಾಗಿರುವ ___ ಮರಿಯ ___ ಎನ್ನುವ ಆಕೆಯನ್ನು ಸಂದರ್ಶಿಸಿದ್ದನು. ಆಕೆ ಕನ್ಯೆಕೆಯಾಗಿದ್ದಳು ಮತ್ತು ಯೋಸೇಫ ಎನ್ನುವ ವ್ಯಕ್ತಿಯೊಂದಿಗೆ ವಿವಾಹಕ್ಕಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. “ನೀನು ಗರ್ಭಿಣಿಯಾಗುವಿ ಮತ್ತು ಒಬ್ಬ ಗಂಡು ಶಿಶುವಿಗೆ ಜನನವನ್ನು ಕೊಡುವಿ, ನೀನು ಆ ಶಿಶುವಿಗೆ ಯೇಸು ಎಂದು ಹೆಸರಿಡಬೇಕು ಮತ್ತು ಆತನು ಮೆಸ್ಸೀಯನಾಗಿರುವನು” ಎಂದು ದೂತ ಹೇಳಿದನು.
- 22:05 “ಪವಿತ್ರಾತ್ಮನು ನಿನ್ನ ಮೇಲಕ್ಕೆ ಬರುವನು, ಮತ್ತು ದೇವರ ಶಕ್ತಿಯು ನಿನ್ನನ್ನು ಆವರಿಸುವುದು” ಎಂದು ದೂತನು ಹೇಳಿದನು. ಆದ್ದರಿಂದ ಶಿಶುವು ಪರಿಶುದ್ಧನಾಗಿರುವನು, ದೇವರ ಮಗನಾಗಿರುವನು.” ಎಂದು ದೂತನು ವಿವರಿಸಿದನು, ಆಗ ___ ಮರಿಯಳು ___ ಆ ಮಾತುಗಳನ್ನು ನಂಬಿ, ದೂತನು ಹೇಳಿದ ಪ್ರತಿಯೊಂದು ಮಾತನ್ನು ಸ್ವೀಕರಿಸಿದಳು.
- 22:06 ದೂತನು __ ಮರಿಯಳೊಂದಿಗೆ __ ಮಾತನಾಡಿದ ತಕ್ಷಣವೇ, ಆಕೆ ಹೊರಟು ಹೋಗಿ ಎಲಿಸಬೇತಳನ್ನು ಸಂದರ್ಶಿಸಿದಳು. ___ ಮರಿಯಳ ___ ಶುಭವಚನವನ್ನು ಎಲಿಸಬೇತಳು ಕೇಳಿಸಿಕೊಂಡ ತಕ್ಷಣವೇ, ಎಲಿಸಬೇತಳ ಗರ್ಭದಲ್ಲಿರುವ ಶಿಶುವು ಜಿಗಿಯುವುದಕ್ಕೆ ಆರಂಭಿಸಿತು.
- 23:02 “ಯೋಸೇಫನೇ, ___ ಮರಿಯಳನ್ನು ___ ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸುವುದಕ್ಕೆ ಹೆದರಬೇಡ, ತನ್ನ ದೇಹದಲ್ಲಿರುವ ಶಿಶುವು ಪವಿತ್ರಾತ್ಮನಿಂದ ಬಂದಿದವನಾಗಿರುತ್ತಾನೆ” ಎಂದು ದೂತನು ಹೇಳಿದನು.
- 23:04 ಯೋಸೇಫನು ಮತ್ತು ___ ಮರಿಯಳು ___ ಅವರು ನಿವಾಸವಾಗಿರುವ ನಜರೇತಿನಿಂದ ಬೆತ್ಲೆಹೇಮಿಗೆ ದೂರ ಪ್ರಯಾಣ ಮಾಡಿದ್ದರು, ಯಾಕಂದರೆ ಅವರ ಪೂರ್ವೀಕರಾದ ದಾವೀದನ ಊರು ಬೆತ್ಲೆಹೇಮ್ ಆಗಿತ್ತು.
- 49:01 ___ ಮರಿಯಳು ___ ದೇವರ ಮಗನಿಗೆ ಜನನ ಕೊಡುತ್ತಾಳೆಂದು ಆ ದೂತನು ಕನ್ಯೆಯಾದ ಅವಳಿಗೆ ಹೇಳಿದನು. ಆದ್ದರಿಂದ ಆಕೆ ಇನ್ನೂ ಕನ್ಯೆಕೆಯಾಗಿದ್ದಾಗಲೇ, ಆಕೆ ಒಬ್ಬ ಗಂಡು ಮಗನಿಗೆ ಜನನವನ್ನು ಕೊಟ್ಟಳು ಮತ್ತು ಆ ಶಿಶುವಿಗೆ ಯೇಸು ಎಂದು ಹೆಸರಿಟ್ಟರು.
ಪದ ಡೇಟಾ:
- Strong's: G3137
ಮಲಾಕಿ
ಸತ್ಯಾಂಶಗಳು:
ಮಲಾಕಿ ಎನ್ನುವ ವ್ಯಕ್ತಿ ಯೆಹೂದ ರಾಜ್ಯಕ್ಕೆ ಬಂದ ದೇವರ ಪ್ರವಾದಿಗಳಲ್ಲಿ ಒಬ್ಬನಾಗಿರುತ್ತಾನೆ. ಈತನು ಕ್ರಿಸ್ತನು ಈ ಭೂಮಿ ಮೇಲಕ್ಕೆ ಬರುವುದಕ್ಕೆ ಮುಂಚಿತ 500 ವರ್ಷಗಳ ಹಿಂದೆ ಜೀವಿಸುವವನಾಗಿರುತ್ತಾನೆ.
- ಬಾಬೆಲೋನಿಯ ಸೆರೆಯಿಂದ ತಿರುಗಿಬಂದನಂತರ ಇಸ್ರಾಯೇಲಿನ ದೇವಾಲಯವನ್ನು ತಿರುಗಿ ನಿರ್ಮಿಸಿದ ಕಾಲದಲ್ಲಿ ಮಲಾಕಿ ಪ್ರವಾದಿಸಿದ್ದನು.
- ಎಜ್ರಾ ಮತ್ತು ನೆಹೆಮೀಯರು ಜೀವಿಸಿದ ಕಾಲದಲ್ಲಿ ಮಲಾಕಿಯ ಕಾಲದಲ್ಲಿ ಜೀವಿಸುವವನಾಗಿದ್ದನು.
- ಮಲಾಕಿಯ ಗ್ರಂಥವು ಹಳೇ ಒಡಂಬಡಿಕೆಯ ಕೊನೆಯ ಪುಸ್ತಕವಾಗಿರುತ್ತದೆ.
- ಇನ್ನಿತರ ಹಳೇ ಒಡಂಬಡಿಕೆಯ ಪ್ರವಾದಿಗಳಂತೆಯೇ ಮಲಾಕಿಯು ಕೂಡ ಯೆಹೋವನನ್ನು ಆರಾಧಿಸುವುದಕ್ಕೆ ಹಿಂದಿರುಗಿ ಬರಲು ತಮ್ಮ ಪಾಪಗಳ ವಿಷಯದಲ್ಲಿ ಪಶ್ಚಾತಾಪ ಹೊಂದುವುದಕ್ಕೆ ಜನರನ್ನು ಎಚ್ಚರಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಸೆರೆ, ಎಜ್ರಾ, ಯೆಹೂದ, ನೆಹೆಮೀಯ, ಪ್ರವಾದಿ, ಪಶ್ಚಾತ್ತಾಪ, ತಿರುಗಿಕೋ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4401
ಮಹಾ ಹೆರೋದ್
ಸತ್ಯಾಂಶಗಳು:
ಮಹಾ ಹೆರೋದ್ ಯೇಸು ಹುಟ್ಟಿದ ಸಮಯದಲ್ಲಿ ಯೂದಾಯವನ್ನು ಆಳುತ್ತಿದ್ದನು. ಇವನೇ ಅನೇಕಮಂದಿ ಎದೋಮಿಯರ ಪಾಲಕರಲ್ಲಿ ಮೊಟ್ಟಮೊದಲನೇಯವನಾಗಿದ್ದನು, ಹೆರೋದ್ ಎನ್ನುವ ಹೆಸರಿನ ಮೇಲೆ ರೋಮಾ ಸಾಮ್ರಾಜ್ಯದ ಎಲ್ಲಾ ಭಾಗಗಳನ್ನು ಆಳ್ವಿಕೆ ಮಾಡಿದ್ದನು.
- ಇವನ ಪೂರ್ವಿಕರು ಯೆಹೂದ್ಯ ಮತದಲ್ಲಿ ಸೇರಿದ್ದರು ಮತ್ತು ಇವನು ಯೆಹೂದ್ಯನಾಗಿಯೇ ಬೆಳೆದಿದ್ದನು.
- ಇವನು ಅರಸನಾಗದಿದ್ದರೂ ಚಕ್ರವರ್ತಿಯಾದ ಅಗಸ್ತನು ಇವನಿಗೆ “ಅರಸನಾದ ಹೆರೋದ್” ಎಂದು ಹೆಸರಿಟ್ಟನು. ಇವನು ಯೂದಾಯದಲ್ಲಿ ಸುಮಾರು 33 ವರ್ಷಗಳ ಕಾಲ ಯೆಹೂದ್ಯರ ಮೇಲೆ ಆಳ್ವಿಕೆ ಮಾಡಿದನು.
- ಮಹಾ ಹೆರೋದನು ತಾನು ನಿರ್ಮಿಸಬೇಕೆಂದು ಆಜ್ಞಾಪಿಸಿದ ಅನೇಕವಾದ ಸುಂದರ ಭವನಗಳಿಗೆ ಹೆಸರುವಾಸಿಯಾಗಿದ್ದನು ಮತ್ತು ಯೆರೂಸಲೇಮಿನಲ್ಲಿರುವ ಯೆಹೂದ್ಯರ ಆಲಯವನ್ನು ತಿರುಗಿ ನಿರ್ಮಿಸಿದ್ದನು.
- ಈ ಹೆರೋದ್ ತುಂಬಾ ಕ್ರೂರಿಯಾಗಿದ್ದನು ಮತ್ತು ಅನೇಕ ಜನರನ್ನು ಸಾಯಿಸಿದ್ದನು. “ಯೆಹೂದ್ಯರ ಅರಸನು” ಬೆತ್ಲೆಹೇಮಿನಲ್ಲಿ ಜನಿಸಿದ್ದಾನೆಂದು ಇವನು ಕೇಳಿಸಿಕೊಂಡಾಗ, ಆ ಪಟ್ಟಣದಲ್ಲಿರುವ ಎಲ್ಲಾ ಗಂಡು ಶಿಶುಗಳನ್ನು ಕೊಂದುಹಾಕಿಸಿದನು.
- ತನ್ನ ಗಂಡು ಮಕ್ಕಳಾದ ಹೆರೋದ್ ಅಂತಿಪ ಮತ್ತು ಹೆರೋದ್ ಫಿಲಿಪ್ ಮತ್ತು ತನ್ನ ಮೊಮ್ಮೊಗನಾದ ಹೆರೋದ್ ಅಗ್ರಿಪ್ಪನು ಕೂಡ ರೋಮಾ ಪಾಲಕರಾಗಿದ್ದರು. ತನ್ನ ಮರಿ ಮೊಮ್ಮೊಗ ಹೆರೋದ್ ಅಗ್ರಿಪ್ಪ II (“ಅರಸನಾದ ಅಗ್ರಿಪ್ಪ” ಎಂದು ಕರೆಯಲ್ಪಡುವ ವ್ಯಕ್ತಿ) ಯೂದಾಯದ ಎಲ್ಲಾ ಭಾಗಗಳನ್ನು ಆಳಿದನು.
(ನೋಡಿರಿ: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಹೆರೋದ್ ಅಂತಿಪ, ಯೂದಾಯ, ಅರಸ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: G2264
ಮಾಕಾ
ಸತ್ಯಾಂಶಗಳು:
ಮಾಕಾ (ಅಥವಾ ಮಾಖ) ಅಬ್ರಾಹಾಮನ ಸಹೋದರನಾದ ನಾಹೋರನ ಮಕ್ಕಳಲ್ಲಿ ಒಬ್ಬನಾಗಿದ್ದನು. ಹಳೇ ಒಡಂಬಡಿಕೆಯಲ್ಲಿ ಈ ಹೆಸರಿನ ಮೇಲೆ ಅನೇಕರಿದ್ದಾರೆ.
- ಮಾಕಾ ಪಟ್ಟಣ ಅಥವಾ ಬೆತ್ ಮಾಕಾ ಎನ್ನುವುದು ನಫ್ತಾಲಿ ಕುಲದಿಂದ ವಶಪಡಿಸಿಕೊಂಡಿರುವ ಸೀಮೆಯಲ್ಲಿ, ಅಂದರೆ ಇಸ್ರಾಯೇಲ್ ಉತ್ತರ ಭಾಗದಲ್ಲಿ ಕಂಡುಬರುತ್ತದೆ,
- ಇದು ತುಂಬಾ ಪ್ರಾಮುಖ್ಯವಾದ ಪಟ್ಟಣವಾಗಿರುತ್ತದೆ ಮತ್ತು ಅನೇಕ ಸಂದರ್ಭಗಳಲ್ಲಿ ಶತ್ರುಗಳಿಂದ ಧಾಳಿಗೆ ಗುರಿಯಾಗಿರುತ್ತದೆ.
- ಮಾಕಾ ಎನ್ನುವ ಹೆಸರು ಅನೇಕಮಂದಿ ಸ್ತ್ರೀಯರು ಹೊಂದಿರುತ್ತಾರೆ, ಇವರಲ್ಲಿ ದಾವೀದನ ಮಗನಾದ ಅಬ್ಷಾಲೋಮನ ತಾಯಿಯೂ ಇರುತ್ತಾಳೆ.
- ಅರಸನಾದ ಆಸಾ ತನ್ನ ಅಜ್ಜಿಯಾದ ಮಾಕಾಳನ್ನು ರಾಣಿಯ ಸ್ಥಾನದಿಂದ ತೆಗೆದು ಹಾಕಿದನು, ಯಾಕಂದರೆ ಆಕೆ ಆಶೇರ ಆರಾಧನೆಗೆ ಪ್ರೋತ್ಸಾಹ ಮಾಡಿದ್ದಳು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಸ, ಅಶೇರ, ನಾಹೋರ, ನಫ್ತಾಲಿ, ಇಸ್ರಾಯೇಲ್ ಹನ್ನೆರಡು ಕುಲದವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4601
ಮಾರ್ಥಳು
ಸತ್ಯಾಂಶಗಳು:
ಮಾರ್ಥಳು ಯೇಸುವನನ್ನು ಅನುಸರಿಸಿದ ಬೇಥಾನ್ಯ ಗ್ರಾಮದ ಸ್ತ್ರೀಯಳಾಗಿದ್ದಳು.
- ಮಾರ್ಥಳಿಗೆ ಮರಿಯಳು ಎಂಬ ಸಹೋದರಿ ಮತ್ತು ಲಾಜರನು ಎಂಬ ಸಹೋದರನಿದ್ದನು, ಇವರೂ ಯೇಸುವನ್ನು ಹಿಂಬಾಲಿಸಿದವರಾಗಿದ್ದರು.
- ಒಂದುಸಲ ಯೇಸು ಅವರ ಮನೆಯಲ್ಲಿ ಅವರನ್ನು ಸಂದರ್ಶಿಸಿದಾಗ, ಮರಿಯಳು ಯೇಸುವಿನ ಬೋಧನೆಯನ್ನು ಕೇಳುತ್ತಾ, ಆತನ ಬಳಿ ಕುಳಿತುಕೊಂಡಿರುವಾಗ ಮಾರ್ಥಳು ಅಡಿಗೆಯನ್ನು ಸಿದ್ಧ ಮಾಡುವುದರ ಮೂಲಕ ಅತ್ತಿತ್ತ ಹೋಗುತ್ತಿದ್ದಳು.
- ಲಾಜರನು ಮರಣಹೊಂದಿದಾಗ, ಯೇಸು ಕ್ರಿಸ್ತನು ದೇವರ ಮಗನೆಂದು ನಂಬಿದ್ದೇನೆ ಎಂದು ಮಾರ್ಥಳು ಯೇಸುವಿಗೆ ಹೇಳಿದಳು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಲಾಜರ, ಮರಿಯ (ಮಾರ್ಥಳ ಸಹೋದರಿ))
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G3136
ಮಿಚ್ಪೆ
ಸತ್ಯಾಂಶಗಳು:
ಮಿಚ್ಪೆ ಎನ್ನುವುದು ಹಳೇ ಒಡಂಬಡಿಕೆಯಲ್ಲಿ ದಾಖಲಿಸಿದ ಅನೇಕ ಪಟ್ಟಣಗಳ ಹೆಸರಾಗಿರುತ್ತದೆ. ಈ ಪದಕ್ಕೆ “ಹೊರ ನೋಡುವ ಕೇಂದ್ರ” ಅಥವಾ “ಕಾವಲಿ ಕೋಟೆ” ಎಂದರ್ಥ.
- ಸೌಲನು ದಾವೀದನನ್ನು ಓಡಿಸುತ್ತಾ ಹೋಗಿರುವಾಗ, ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ಅರಸನ ಸಂರಕ್ಷಣೆಯಲ್ಲಿ ಮಿಚ್ಪೆಯಲ್ಲಿ ಬಿಟ್ಟು ಹೋಗಿದ್ದನು.
- ಮಿಚ್ಪೆ ಎಂದು ಕರೆಯಲ್ಪಡುವ ಒಂದು ಪಟ್ಟಣವು ಯೆಹೂದ್ಯ ಮತ್ತು ಇಸ್ರಾಯೇಲ್ ರಾಜ್ಯಗಳ ಮಧ್ಯೆದಲ್ಲಿರುವ ಗಡಿಗಳಲ್ಲಿ ಕಂಡುಬರುತ್ತದೆ. ಇದು ಸೈನಿಕರಿಗೆ ದೊಡ್ಡ ಕೇಂದ್ರವಾಗಿದ್ದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ದಾವೀದ, ಯೆಹೂದ್ಯ, ಇಸ್ರಾಯೇಲ್ ರಾಜ್ಯ, ಮೋವಾಬ್, ಸೌಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4708, H4709
ಮಿದ್ಯಾನ್, ಮಿದ್ಯಾನನು, ಮಿದ್ಯಾನರು
ಸತ್ಯಾಂಶಗಳು:
ಮಿದ್ಯಾನ್ ಎನ್ನುವವನು ಅಬ್ರಾಹಾಮ ಮತ್ತು ತನ್ನ ಹೆಂಡತಿಯಾದ ಕೆಟೂರಳ ಮಗನಾಗಿರುತ್ತಾನೆ. ಈ ಪದವು ಜನರ ಗುಂಪಿನವರಿಗೂ ಇಟ್ಟಿರುತ್ತಾರೆ ಮತ್ತು ಇದು ಕಾನಾನ್ ಭೂಮಿಯ ದಕ್ಷಿಣ ಭಾಗಕ್ಕೆ ಇರುವ ಉತ್ತರ ಅರಬೇಯಿನ್ ಮರುಭೂಮಿಯಲ್ಲಿ ಕಂಡುಬರುತ್ತದೆ. ಆ ಗುಂಪಿನ ಜನರೆಲ್ಲರು “ಮಿದ್ಯಾನರು” ಎಂದು ಕರೆಯಲ್ಪಡುತ್ತಿದ್ದರು.
- ಮೋಶೆ ಮೊಟ್ಟ ಮೊದಲಬಾರಿಗೆ ಐಗುಪ್ತ ದೇಶವನ್ನು ಬಿಟ್ಟುಹೋದಾಗ, ಅವನು ಮಿದ್ಯಾನ್ ಸೀಮೆಗೆ ಹೊರಟು ಹೋದನು, ಅಲ್ಲಿ ಇತ್ರೋ ಹೆಣ್ಣು ಮಕ್ಕಳನ್ನು ಭೇಟಿಯಾದನು, ಅಲ್ಲಿ ಅವರ ಹಿಂಡುಗಳಿಗೆ ನೀರನ್ನು ಕುಡಿಸಲು ಸಹಾಯ ಮಾಡಿದನು. ಇದಾದನಂತರ ಮೋಶೆ ಇತ್ರೋ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡನು.
- ಯೋಸೇಫನನ್ನು ಕೂಡ ಗುಲಾಮರನ್ನು ಕೊಂಡುಕೊಳ್ಳುವ ವ್ಯಾಪಾರಿಗಳಾದ ಮಿದ್ಯಾನರ ಗುಂಪಿನಿಂದಲೇ ಐಗುಪ್ತಕ್ಕೆ ಕರೆದೊಯ್ಯಲ್ಪಟ್ಟನು.
ಅನೇಕ ವರ್ಷಗಳಾದ ಮೇಲೆ ಮಿದ್ಯಾನರು ಕಾನಾನ್ ಭೂಮಿಯಲ್ಲಿರುವ ಇಸ್ರಾಯೇಲ್ಯರ ಮೇಲೆ ಧಾಳಿ ಮಾಡಿದರು. ಗಿದ್ಯೋನನು ಅವರನ್ನು ಸೋಲಿಸಲು ಇಸ್ರಾಯೇಲ್ಯರನ್ನು ನಡೆಸಿದನು.
- ಆಧುನಿಕ ಅರೇಬಿಯ ಜಾತಿಗಳಲ್ಲಿ ಅನೇಕವು ಈ ಗುಂಪಿನಿಂದಲೇ ಬಂದ ಸಂತಾನದವರಾಗಿರುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಅರೇಬಿಯ, ಐಗುಪ್ತ, ಹಿಂಡು, ಗಿದ್ಯೋನ್, ಇತ್ರೋ, ಮೋಶೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 16:03 ಆದರೆ ಜನರು ದೇವರನ್ನು ಮರೆತುಹೋಗಿ, ತಿರುಗಿ ವಿಗ್ರಹಾರಾಧನೆ ಮಾಡಲು ಪ್ರಾರಂಭಿಸಿದರು. ಆದ್ದರಿಂದ ದೇವರು ಅವರನ್ನು ಸೋಲಿಸುವುದಕ್ಕೆ ಶತ್ರು ಗುಂಪಿನವರಾಗಿರುವ __ ಮಿದ್ಯಾನರನ್ನು __ ಅನುಮತಿಸಿದರು,
- 16:04 ಇಸ್ರಾಯೇಲ್ಯರು ತುಂಬಾ ಹೆಚ್ಚಾಗಿ ಹೆದರಿದ್ದರು, ಅವರು ಅನೇಕ ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದರು, ಇದರಿಂದ __ ಮಿದ್ಯಾನರು __ ಅವರನ್ನು ಕಂಡುಕೊಳ್ಳಲಿಲ್ಲ.
- 16:11 “ಗಿದ್ಯೋನ್ ಸೈನ್ಯವು __ ಮಿದ್ಯಾನರ __ ಸೈನ್ಯವನ್ನು ಸೋಲಿಸುತ್ತದೆಯೆಂದು ಈ ಕನಸಿಗೆ ಅರ್ಥವಾಗಿರುತ್ತದೆ!” ಎಂದು ಒಬ್ಬ ಮನುಷ್ಯನ ಸ್ನೇಹಿತನು ಹೇಳಿದನು.
- 16:14 ದೇವರು __ ಮಿದ್ಯಾನರನ್ನು __ ಗೊಂದಲಪಡಿಸಿದನು, ಇದರಿಂದ ಅವರು ತಮ್ಮಲ್ಲೇ ಒಬ್ಬರಿಗೊಬ್ಬರನ್ನು ಧಾಳಿ ಮಾಡಿಕೊಂಡು, ಸಾಯಿಸಿಕೊಂಡರು.
ಪದ ಡೇಟಾ:
- Strong's: H4080, H4084, H4092
ಮಿರ್ಯಾಮಳು
ಸತ್ಯಾಂಶಗಳು:
ಮಿರ್ಯಾಮಳು ಆರೋನ ಮತ್ತು ಮೋಶೆಯವರಿಗೆ ಆಕ್ಕಳಾಗಿರುತ್ತಾಳೆ.
- ಆಕೆ ಯೌವನದಲ್ಲಿರುವಾಗ, ನೈಲ್ ನದಿಯ ನಳಿಕೆಗಳ ಮಧ್ಯೆದಲ್ಲಿರುವ ಬಿಡಲ್ಪಟ್ಟ ಬುಟ್ಟಿಯಲ್ಲಿರುವ ಶಿಶುವಾಗಿರುವ ತನ್ನ ಸಹೋದರ ಮೋಶೆಯನ್ನು ನೋಡಿಕೊಳ್ಳುತ್ತಾ ಇರಬೇಕೆಂದು ಆಕೆಗೆ ತನ್ನ ತಾಯಿ ಬಾಧ್ಯತೆ ಕೊಟ್ಟಿದ್ದಳು. ಫರೋಹನ ಮಗಳು ಆ ಶಿಶುವನ್ನು ಕಂಡುಕೊಂಡಾಗ, ಆ ಶಿಶುವನ್ನು ನೋಡಿಕೊಳ್ಳುವವರು ಯಾರಾದರೊಬ್ಬರು ಬೇಕಾಗಿದ್ದಿತ್ತು, ಮಿರ್ಯಾಮಳು ಆ ಶಿಶುವನ್ನು ನೋಡಿಕೊಳ್ಳುವುದಕ್ಕೆ ತನ್ನ ತಾಯಿಯನ್ನು ಕರೆದುಕೊಂಡು ಬಂದಿದ್ದಳು.
- ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ದಾಟುವುದರ ಮೂಲಕ ಐಗುಪ್ತರಿಂದ ರಕ್ಷಣೆ ಹೊಂದಿಕೊಂಡ ಮೇಲೆ ಕೃತಜ್ಞತೆಗಳನ್ನು ಹೇಳುವುದಕ್ಕೆ ಮತ್ತು ಆನಂದ ನೃತ್ಯವನ್ನು ಮಾಡುವುದಕ್ಕೆ ಮಿರ್ಯಾಮಳು ಅವರನ್ನು ನಡೆಸಿದಳು.
- ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚಾರ ಮಾಡುತ್ತಿರುವಾಗ ಅನೇಕ ವರ್ಷಗಳಾದ ಮೇಲೆ, ಮಿರ್ಯಾಮ ಮತ್ತು ಆರೋನರು ಮೋಶೆಯ ಕುರಿತಾಗಿ ತುಂಬಾ ಕೆಟ್ಟದಾಗಿ ಮಾತನಾಡುವುದಕ್ಕೆ ಆರಂಭಿಸಿದರು, ಯಾಕಂದರೆ ಅವನು ಕೂಷ್ ದೇಶದ ಸ್ತ್ರೀಯಳನ್ನು ವಿವಾಹ ಮಾಡಿಕೊಂಡಿದ್ದನು.
- ಮೋಶೆಗೆ ವಿರುದ್ಧವಾಗಿ ಮಾತನಾಡುವುದರಲ್ಲಿ ಆಕೆಯ ತಿರಸ್ಕಾರದಿಂದ ಮಿರ್ಯಾಮಳು ಕುಷ್ಠ ರೋಗದಿಂದ ನರಳುವಂತೆ ದೇವರು ಮಾಡಿದರು. ಆದರೆ ಮೋಶೆಯು ಆಕೆಯ ಕುರಿತು ಪ್ರಾರ್ಥನೆ ಮಾಡಿದಾಗ ದೇವರು ಆಕೆಯನ್ನು ಗುಣಪಡಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆರೋನ, ಕೂಷ್, ವಿಜ್ಞಾಪನೆ ಮಾಡು, ಮೋಶೆ, ನೈಲ್ ನದಿ, ಫರೋಹ, ತಿರಸ್ಕಾರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4813
ಮೀಕ
ಸತ್ಯಾಂಶಗಳು:
ಮೀಕ ಯೆಹೂದ ರಾಜ್ಯದ ಪ್ರವಾದಿಯಾಗಿದ್ದನು, ಈತನು ಯೆಹೂದ ರಾಜ್ಯಕ್ಕೆ ಯೆಶಯಾ ಪ್ರವಾದಿ ಸೇವೆ ಮಾಡುತ್ತಿರುವ ಸಮಯದಲ್ಲಿದ್ದವನು, ಮತ್ತು ಕ್ರಿಸ್ತನು ಈ ಲೋಕದೊಳಗೆ ಬರುವುದಕ್ಕೆ ಮುಂಚಿತವಾಗಿ ಸುಮಾರು 700 ವರ್ಷಗಳ ಕೆಳಗೆ ಪ್ರವಾದಿಯಾಗಿದ್ದನು. ನ್ಯಾಯಾಧೀಶರ ಕಾಲದಲ್ಲಿ ಮೀಕ ಎನ್ನುವ ಹೆಸರಿನ ಮೇಲೆ ಇನ್ನೊಬ್ಬ ವ್ಯಕ್ತಿ ಜೀವಿಸುತ್ತಿದ್ದನು.
- ಮೀಕನ ಗ್ರಂಥವು ಹಳೇ ಒಡಂಬಡಿಕೆಯ ಕೊನೆಯ ಪುಸ್ತಕಗಳಲ್ಲಿ ಒಂದಾಗಿತ್ತು.
- ಅಶ್ಯೂರಿನವರಿಂದ ಸಮಾರ್ಯ ನಾಶನವಾಗುತ್ತದೆ ಎನ್ನುವುದರ ಕುರಿತಾಗಿ ಮೀಕ ಪ್ರವಾದಿಸಿದನು.
- ಯೆಹೂದದ ಜನರು ದೇವರಿಗೆ ಅವಿಧೇಯತೆಯನ್ನು ತೋರಿಸಿದ್ದಕ್ಕಾಗಿ ಮೀಕನು ಅವರನ್ನು ಗದರಿಸಿದನು ಮತ್ತು ಅವರ ಶತ್ರುಗಳು ಅವರ ಮೇಲೆ ಧಾಳಿ ಮಾಡುತ್ತಾರೆಂದು ಎಚ್ಚರಿಸಿದನು.
- ನಂಬಿಗಸ್ತನಾಗಿರುವ, ತನ್ನ ಜನರನ್ನು ರಕ್ಷಿಸುವ ದೇವರಲ್ಲಿ ನಿರೀಕ್ಷೆಯ ಸಂದೇಶದೊಂದಿಗೆ ಈತನ ಪ್ರವಾದನೆಯು ಮುಕ್ತಾಯಗೊಳ್ಳುತ್ತದೆ.
- ನ್ಯಾಯಾಧೀಶರ ಪುಸ್ತಕದಲ್ಲಿ ಬೆಳ್ಳಿಯಿಂದ ವಿಗ್ರಹಗಳನ್ನು ತಯಾರಿಸುವ ಎಫ್ರಾಯೀಮಿನಲ್ಲಿ ಜೀವಿಸುವ ಮೀಕ ಎನ್ನುವ ಹೆಸರಿನ ಒಬ್ಬ ಮನುಷ್ಯನ ಕುರಿತಾದ ವಿಷಯವನ್ನು ಬರೆಯಲ್ಪಟ್ಟಿರುತ್ತದೆ. ಇತರ ವಸ್ತುಗಳನ್ನು ಮತ್ತು ವಿಗ್ರಹವನ್ನು ಕದಿಯುವುದಕ್ಕೆ ತನ್ನೊಂದಿಗೆ ಜೀವಿಸುವುದಕ್ಕೆ ಬಂದಿರುವ ಲೇವಿಯನಾದ ಯೌವ್ವನ ಯಾಜಕನು ಬಂದಿದ್ದನು, ಮತ್ತು ದಾನೀಯರ ಗುಂಪುನೊಂದಿಗೆ ಹೊರಟರು. ಕೊನೆಗೆ ದಾನಿಯರು ಮತ್ತು ಯಾಜಕನು ಲಯಿಷ ಪಟ್ಟಣದಲ್ಲಿ ಇಳಿದುಕೊಂಡರು, ಮತ್ತು ಅವರು ಆರಾಧನೆ ಮಾಡುವುದಕ್ಕೆ ಅದೇ ಬೆಳ್ಳಿಯ ವಿಗ್ರಹವನ್ನು ಇಟ್ಟುಕೊಂಡರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ದಾನ್, ಎಫ್ರಾಯೀಮ್, ಸುಳ್ಳು ದೇವರು, ಯೆಶಯಾ, ಯೂದಾ, ನ್ಯಾಯಾಧೀಶ, ಲೇವಿ, ಯಾಜಕ, ಪ್ರವಾದಿ, ಸಮಾರ್ಯ, ಬೆಳ್ಳಿ)
ಸತ್ಯವೇದದ ಅನುಬಂಧ ವಾಕ್ಯಗಳು :
{{tag>publish ktlink}
ಪದ ಡೇಟಾ:
- Strong's: H4316, H4318
ಮೀಕಾಯೇಲ
ಸತ್ಯಾಂಶಗಳು:
ಮೀಕಾಯೇಲನು ದೇವರ ಪರಿಶುದ್ಧವಾದ ವಿಧೇಯತೆಯುಳ್ಳ ದೂತರುಗಳಲ್ಲಿ ಮುಖ್ಯ ದೂತನಾಗಿರುತ್ತಾನೆ. ಈ ದೂತನನ್ನು ಮಾತ್ರವೇ ವಿಶೇಷವಾಗಿ ದೇವರ “ಪ್ರಧಾನ ದೂತ” ಎಂದು ಹೇಳಲಾಗಿರುತ್ತದೆ.
- “ಪ್ರಧಾನ ದೂತ” ಎನ್ನುವ ಪದಕ್ಕೆ “ಮುಖ್ಯ ದೂತ” ಅಥವಾ “ಪಾಲಿಸುವ ದೂತ” ಎನ್ನುವ ಅಕ್ಷರಾರ್ಥಗಳಿವೆ.
- ಮೀಕಾಯೇಲನು ದೇವರ ಶತ್ರುಗಳಿಗೆ ವಿರುದ್ಧವಾಗಿ ಹೋರಾಡುವ ಯುದ್ಧವೀರನಾಗಿದ್ದನು ಮತ್ತು ದೇವರ ಜನರನ್ನು ಸಂರಕ್ಷಿಸುವನಾಗಿದ್ದನು.
- ಈ ದೂತನು ಪಾರಸಿಯರ ಸೈನ್ಯಕ್ಕೆ ವಿರುದ್ಧವಾಗಿ ಹೋರಾಟ ಮಾಡುವುದರಲ್ಲಿ ಇಸ್ರಾಯೇಲ್ಯರನ್ನು ನಡೆಸಿದ್ದನು. ಅಂತ್ಯಕಾಲಗಳಲ್ಲಿ, ದಾನಿಯೇಲನ ಗ್ರಂಥದಲ್ಲಿ ಮುಂಚಿತವಾಗಿ ಹೇಳಲ್ಪಟ್ಟಿರುವಂತೆ ದುಷ್ಟ ಶಕ್ತಿಗಳ ವಿರುದ್ಧವಾಗಿ ಕೊನೆಯ ಯುದ್ಧದಲ್ಲಿ ಇಸ್ರಾಯೇಲ್ ಸೈನ್ಯಗಳನ್ನು ನಡೆಸುವನು .
- ಮೀಕಾಯೇಲ ಎನ್ನುವ ಹೆಸರಿನ ಮೇಲೆ ಸತ್ಯವೇದದಲ್ಲಿ ಅನೇಕಮಂದಿ ವ್ಯಕ್ತಿಗಳಿದ್ದಾರೆ. ಅನೇಕಮಂದಿ ಮನುಷ್ಯರು “ಮೀಕಾಯೇಲ ಮಗ” ಎಂದು ಗುರುತಿಸಲ್ಪಟ್ಟಿದ್ದಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದೂತ, ದಾನಿಯೇಲ, ಸಂದೇಶವಾಹಕ, ಪಾರಸಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4317, G3413
ಮೀಶಾಯೇಲ
ಸತ್ಯಾಂಶಗಳು:
ಮೀಶಾಯೇಲ ಎನ್ನುವ ಹೆಸರುಗಳು ಹಳೇ ಒಡಂಬಡಿಕೆಯಲ್ಲಿ ಮೂವರು ವ್ಯಕ್ತಿಗಳಿದ್ದಾರೆ.
- ಮೀಶಾಯೇಲನ ಹೆಸರಿನ ಮೇಲೆ ಇರುವ ಒಬ್ಬ ವ್ಯಕ್ತಿ ಆರೋನನ ಸೋದರ ಸಂಬಂಧಿಯಾಗಿರುತ್ತಾನೆ. ದೇವರು ಅವರಿಗೆ ಹೇಳಿದಂತೆ ಅಲ್ಲದೇ ಬೇರೆ ಇತರ ಧೂಪವನ್ನು ಆರೋನನ ಮಕ್ಕಳಲ್ಲಿ ಇಬ್ಬರು ಮಕ್ಕಳು ಅರ್ಪಿಸಿದ್ದಕ್ಕೆ, ದೇವರು ಅವರನ್ನು ಸಾಯಿಸಿದರು, ಆ ಸಮಯದಲ್ಲಿ ಮೀಶಾಯೇಲನು ಮತ್ತು ತನ್ನ ಸಹೋದರನು ಸತ್ತಂತ ತಮ್ಮ ಸಹೋದರರ ಶವಗಳನ್ನು ಇಸ್ರಾಯೇಲ್ ಅಂಗಳದಿಂದ ಹೊರ ತೆಗೆದುಕೊಂಡು ಬರುವುದಕ್ಕೆ ಜವಬ್ಧಾರಿಕೆಯನ್ನು ಹೊಂದಿದ್ದರು.
- ಎಜ್ರನು ಬಹಿರಂಗವಾಗಿ ಧರ್ಮಶಾಸ್ತ್ರವನ್ನು ಓದಿ ಎಲ್ಲರಿಗೆ ಕೇಳಿಸುತ್ತಿರುವಾಗ ಮೀಶಾಯೇಲನ ಹೆಸರಿನ ಮೇಲೆ ಇರುವ ಇನ್ನೊಬ್ಬ ವ್ಯಕ್ತಿ ಆತನ ಪಕ್ಕದಲ್ಲಿಯೇ ನಿಂತುಕೊಂಡಿದ್ದನು.
- ಇಸ್ರಾಯೇಲ್ ಜನರು ಬಾಬಿಲೋನಿಗೆ ಸೆರೆಗೆ ಹೋದಾಗ, ಮೀಶಾಯೇಲನ ಹೆಸರಿನಲ್ಲಿರುವ ಒಬ್ಬ ಯೌವನಸ್ಥನು ಕೂಡ ಸೆರೆಗೆ ಹೊಯ್ಯಲ್ಪಟ್ಟಿದ್ದನು ಮತ್ತು ಬಾಬೆಲೋನಿನಲ್ಲಿ ಜೀವಿಸುವುದಕ್ಕೆ ಬಲವಂತಿಕೆ ಮಾಡಲ್ಪಟ್ಟಿದ್ದನು. ಬಾಬೆಲೋನಿನಲ್ಲಿ ತನಗೆ “ಮೇಶೆಕ್” ಎನ್ನುವ ಹೆಸರನ್ನು ಇಟ್ಟಿದ್ದರು. ಈತನು ಮತ್ತು ತನ್ನ ಜೊತೆಯಲ್ಲಿರುವ ಅಜರ್ಯ (ಅಬೇದ್ನೆಗೋ), ಮತ್ತು ಹನನ್ಯ (ಶದ್ರಕ್) ಎನ್ನುವವರು ಅರಸನ ವಿಗ್ರಹಕ್ಕೆ ಆರಾಧನೆ ಮಾಡುವುದನ್ನು ತಿರಸ್ಕರಿಸಿದರು, ಮತ್ತು ಅವರನ್ನು ಧಗಧಗನೆ ಉರಿಯುವ ಬೆಂಕಿಯ ಕೆರೆಯೊಳಗೆ ಎಸೆದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆರೋನ, ಅಜರ್ಯ, ಬಾಬೆಲೋನಿಯ, ದಾನಿಯೇಲ, ಹನನ್ಯ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H4332, H4333
ಮೆಲ್ಕೀಚೆದೆಕ
ಸತ್ಯಾಂಶಗಳು:
ಅಬ್ರಾಮನು ಜೀವಿಸಿದ ಸಮಯದಲ್ಲಿ ಮೆಲ್ಕೀಚೆದೆಕ ಸಾಲೇಮಿನ (“ಯೆರೂಸಲೇಮ್”) ಅರಸನಾಗಿದ್ದನು.
- ಮೆಲ್ಕೀಚೆದೆಕ ಎನ್ನುವ ಹೆಸರಿಗೆ “ನೀತಿಗೆ ಅರಸ” ಎಂದರ್ಥ ಮತ್ತು ಆತನಿಗೆ ಕೊಟ್ಟ “ಸಾಲೇಮಿನ ಅರಸ” ಎನ್ನುವ ಬಿರುದಿಗೆ “ಸಮಾಧಾನ ಅರಸ” ಎಂದರ್ಥ.
- ಈತನನ್ನು “ಮಹೋನ್ನತನಾದ ದೇವರ ಯಾಜಕ” ಎಂದೂ ಕರೆಯಲ್ಪಟ್ಟಿದ್ದನು.
- ಅಬ್ರಾಮ ತನ್ನ ಸೋದರ ಸಂಬಂಧಿಯಾದ ಲೋಟನನ್ನು ಶಕ್ತಿಯುತವಾದ ಅರಸರಿಂದ ರಕ್ಷಿಸಿದಾಗ ಅಬ್ರಾಮನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಆತನಿಗೆ ಅರ್ಪಿಸಿದಾಗ ಸತ್ಯವೇದದಲ್ಲಿ ಮೊಟ್ಟ ಮೊದಲಿಗೆ ಮೆಲ್ಕೀಚೆದೆಕ ಎನ್ನುವ ಹೆಸರನ್ನು ದಾಖಲಿಸಲಾಗಿರುತ್ತದೆ. ಅಬ್ರಾಮನು ತನ್ನ ಜಯದೊಳಗಿಂದ ಬಂದ ವಸ್ತುಗಳಲ್ಲಿ ದಶಮ ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು.
- ಹೊಸ ಒಡಂಬಡಿಕೆಯಲ್ಲಿ ಮೆಲ್ಕೀಚೆದೆಕನು ತಂದೆತಾಯಿಗಳಿಲ್ಲದ ವ್ಯಕ್ತಿಯಾಗಿ ವಿವರಿಸಲ್ಪಟ್ಟಿದ್ದನು. ಈತನು ಯಾಜಕನಾಗಿ ಮತ್ತು ಸದಾಕಾಲವೂ ಆಳ್ವಿಕೆ ಮಾಡುವ ಅರಸನಾಗಿ ಕರೆಯಲ್ಪಟ್ಟಿದ್ದನು.
- ಹೊಸ ಒಡಂಬಡಿಕೆಯು ಕೂಡ “ಮೆಲ್ಕೀಚೆದೆಕನ ಕ್ರಮದ” ಯಾಜಕನ ಪ್ರಕಾರ ಯೇಸು ಯಾಜಕನಾಗಿದ್ದಾನೆಂದು ಹೇಳುತ್ತಿದೆ. ಇಸ್ರಾಯೇಲ್ ಯಾಜಕರಾಗಿರುವಂತೆ ಯೇಸು ಲೇವಿ ವಂಶಸ್ಥನಾಗಿರುವುದಿಲ್ಲ. ಈತನ ಯಾಜಕತ್ವವು ಮೆಲ್ಕೀಚೆದೆಕನಂತೆಯೇ ನೇರವಾಗಿ ದೇವರಿಂದ ಬಂದಿದ್ದಾಗಿರುತ್ತದೆ.
- ಸತ್ಯವೇದದಲ್ಲಿರುವ ಈತನ ಕುರಿತಾದ ಈ ವಿವರಣೆಗಳ ಆಧಾರದಮೇಲೆ, ಮೆಲ್ಕೀಚೆದೆಕನು ನಮ್ಮ ಮಹಾ ದೊಡ್ಡ ಯಾಜಕನಾದ, ನೀತಿ ಸಮಾಧಾನಗಳಿಗೆ ನಿತ್ಯ ಅರಸನಾದ ಯೇಸುವಿನ ಕಡೆಗೆ ನಡೆಸುವ ಅಥವಾ ಆತನನ್ನು ಪ್ರತಿನಿಧಿಸುವ ದೇವರಿಂದ ಆಯ್ಕೆ ಮಾಡಲ್ಪಟ್ಟಿರುವ ಮನುಷ್ಯ ಯಾಜಕನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ್, ನಿತ್ಯತ್ವ, ಮಹಾ ಯಾಜಕ, ಯೆರೂಸಲೇಮ್, ಲೇವಿ, ಯಾಜಕ, ನೀತಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4442, G3198
ಮೆಸಪೋತಾಮ್ಯ, ಆರಾಮ್ ನಹರೆಮ್
ಸತ್ಯಾಂಶಗಳು:
ಮೆಸಪೋತಾಮ್ಯ ಎನ್ನುವುದು ಟೈಗ್ರೀಸ್ ಮತ್ತು ಯೂಫ್ರೇಟೀಸ್ ನದಿಗಳ ಮಧ್ಯೆದಲ್ಲಿರುವ ಭೂಪ್ರದೇಶವಾಗಿರುತ್ತದೆ. ಈ ಭೂಪ್ರದೇಶವು ಈಗಿನ ಆಧುನಿಕ ದೇಶವಾಗಿರುವ ಇರಾಕ್ ಪ್ರಾಂತ್ಯದಲ್ಲಿ ಕಂಡುಬರುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಈ ಪ್ರಾಂತ್ಯವನ್ನು “ಆರಾಮ್ ಸೀಮೆ” ಎಂದು ಕರೆದಿದ್ದಾರೆ.
- ಮೆಸಪೋತಾಮ್ಯ ಎನ್ನುವ ಪದಕ್ಕೆ “ನದಿಗಳ ಮಧ್ಯೆದಲ್ಲಿ” ಎಂದರ್ಥ. “ಆರಾಮ್ ನಹರೆಮ್” ಎನ್ನುವ ಮಾತಿಗೆ “ಎರಡು ನದಿಗಳ ಆರಾಮ್” ಎಂದರ್ಥ.
- ಅಬ್ರಾಹಾಮನು ಕಾನಾನ್ ದೇಶಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಊರ್ ದೇಶದ ಮೆಸಪೋತಾಮ್ಯ ಪಟ್ಟಣಗಳಲ್ಲಿ ನಿವಾಸವಾಗಿದ್ದನು.
- ಮೆಸಪೋತಾಮ್ಯದಲ್ಲಿ ಇನ್ನೊಂದು ಪ್ರಾಮುಖ್ಯವಾದ ಪಟ್ಟಣ ಬಾಬೆಲೋನಿಯವಾಗಿತ್ತು.
- “ಕಲ್ದೀಯ” ಎನ್ನುವ ಪ್ರಾಂತ್ಯವು ಕೂಡ ಮೆಸಪೋತಾಮ್ಯದಲ್ಲಿ ಭಾಗವಾಗಿದ್ದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆರಾಮ್, ಬಾಬೆಲೋನಿಯ, ಕಲ್ದೀಯ, ಯೂಫ್ರೇಟೀಸ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H763, G3318
ಮೇದ್ಯರು, ಮೇದ್ಯ
ಸತ್ಯಾಂಶಗಳು:
ಮೇದ್ಯ ಎನ್ನುವುದು ಪುರಾತನ ಸಾಮ್ರಾಜ್ಯವಾಗಿತ್ತು, ಇದು ಬಾಬೆಲೋನಿಯ ಮತ್ತು ಅಶ್ಯೂರ್ ಪೂರ್ವ ಭಾಗದಲ್ಲಿ, ಎಲಾಂ ಮತ್ತು ಪಾರಸಿಯ ಉತ್ತರ ಭಾಗದಲ್ಲಿ ಕಂಡುಬರುತ್ತದೆ. ಮೇದ್ಯ ಸಾಮ್ರಾಜ್ಯದಲ್ಲಿ ಜೀವಿಸಿದ ಜನರನ್ನು “ಮೇದ್ಯರು” ಎಂದು ಕರೆಯುತ್ತಾರೆ.
- ಮೇದ್ಯ ಸಾಮ್ರಾಜ್ಯವು ಈಗಿನ ಟರ್ಕಿ, ಇರಾನ್, ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ಭಾಗಗಳನ್ನು ಆವರಿಸಿರುತ್ತದೆ.
- ಮೇದ್ಯ ಪಾರಸಿಯರಿಗೆ ತುಂಬಾ ಹತ್ತಿರವಾಗಿ ಸಹಕಾರ ಮಾಡಿರುತ್ತದೆ, ಈ ಎರಡು ಸಾಮ್ರಾಜ್ಯಗಳು ಸೇರಿ ಬಾಬೆಲೋನಿಯ ಸಾಮ್ರಾಜ್ಯವನ್ನು ಜಯಿಸಬೇಕೆಂದು ಹೋರಾಟ ಮಾಡಿದರು.
- ಪ್ರವಾದಿಯಾದ ದಾನಿಯೇಲನು ಜೀವಿಸುತ್ತಿರುವ ಕಾಲದಲ್ಲೇ ಮೇದ್ಯನಾದ ದಾರ್ಯಾವೆಷನಿಂದ ಬಾಬೆಲೋನಿಯ ಸಾಮ್ರಾಜ್ಯವು ಧಾಳಿಗೆ ಗುರಿಯಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಬಾಬೆಲೋನಿಯ, ಕೋರೆಷ, ದಾನಿಯೇಲ, ದಾರ್ಯಾವೆಷ, ಏಲಾಮ್, ಪಾರಸಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4074, H4075, H4076, H4077, G3370
ಮೇಶೆಕ್
ಸತ್ಯಾಂಶಗಳು:
ಹಳೇ ಒಡಂಬಡಿಕೆಯಲ್ಲಿ ಮೇಶೆಕ್ ಎನ್ನುವ ಹೆಸರಿನ ಮೇಲೆ ಇಬ್ಬರು ಮನುಷ್ಯರಿದ್ದಾರೆ.
- ಒಬ್ಬ ಮೇಶೆಕ್ ಯೆಫೆತ್ ಮಗನಾಗಿರುತ್ತಾನೆ.
- ಇನ್ನೊಬ್ಬ ಮೇಶೆಕ್ ಶೇಮನ ಮೊಮ್ಮೊಗನಾಗಿರುತ್ತಾನೆ.
- ಮೇಶೆಕ್ ಎನ್ನುವುದು ಒಂದು ದೇಶದ ಸೀಮೆಯ ಹೆಸರೂ ಆಗಿರುತ್ತದೆ, ಇದು ಬಹುಶಃ ಈ ಮನುಷ್ಯರಲ್ಲಿ ಒಬ್ಬರ ಹೆಸರಾಗಿರಬಹುದು.
- ಮೇಶೆಕ್ ಎನ್ನುವ ಸೀಮೆಯು ಈಗಿನ ಟರ್ಕೀ ದೇಶದಲ್ಲಿನ ಒಂದು ಭಾಗದಲ್ಲಿ ಕಂಡುಬರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯೆಫೆತ್, ನೋಹ, ಶೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4851, H4902
ಮೊರ್ದೆಕೈ
ಸತ್ಯಾಂಶಗಳು:
ಮೊರ್ದೆಕೈ ಪಾರಸಿಯ ದೇಶದಲ್ಲಿ ಜೀವಿಸುತ್ತಿರುವ ಒಬ್ಬ ಯೆಹೂದ್ಯ ಮನುಷ್ಯನಾಗಿರುತ್ತಾನೆ. ಈ ವ್ಯಕ್ತಿ ಪಾರಸೀಯ ಅರಸನಾಗಿರುವ ಅಹಷ್ವೆರೋಷನಿಗೆ ಹೆಂಡತಿಯಾಗಿರುವ ತನ್ನ ಸೋದರಸಂಬಂಧಿಯಾದ ಎಸ್ತೇರಳಿಗೆ ರಕ್ಷಕನಾಗಿದ್ದನು,
- ರಾಜ ಭವನದಲ್ಲಿ ಕೆಲಸ ಮಾಡುತ್ತಿರುವಾಗ, ಅರಸ ಅಹಷ್ವೆರೋಷನನ್ನು ಸಾಯಿಸುವುದಕ್ಕೆ ಪ್ರಣಾಳಿಕೆ ಹಾಕುತ್ತಿರುವ ಮನುಷ್ಯರ ಮಾತುಗಳನ್ನು ಮೊರ್ದೆಕೈ ಕೇಳಿಸಿಕೊಂಡಿದ್ದನು. ಇವನು ಈ ವಿಷಯವನ್ನು ಹೇಳಿ, ಅರಸನ ಪ್ರಾಣವನ್ನು ಕಾಪಾಡಿದನು.
- ಸ್ವಲ್ಪ ಕಾಲವಾದನಂತರ, ಪಾರಸಿಯ ರಾಜ್ಯದಲ್ಲಿ ಜೀವನ ಮಾಡುತ್ತಿರುವ ಯೆಹೂದ್ಯರನ್ನು ಕೂಡ ಸಾಯಿಸಬೇಕೆಂದು ಪ್ರಣಾಳಿಕೆ ಹಾಕುತ್ತಿರುವುದರ ಕುರಿತಾಗಿ ಮೊರ್ದಕೈ ಕೇಳಿಸಿಕೊಂಡನು. ಇದಕ್ಕಾಗಿ ಇವನು ಎಸ್ತೇರಳಿಗೆ ತನ್ನ ಜನರನ್ನು ರಕ್ಷಿಸಿಕೊಳ್ಳಲು ಅರಸನಿಗೆ ಮನವಿ ಮಾಡಬೇಕೆಂದು ಸಲಹೆ ಕೊಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಬಾಬೆಲೋನಿಯ, ಎಸ್ತೇರಳು, ಪಾರಸಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4782
ಮೋಫ್
ಪದದ ಅರ್ಥವಿವರಣೆ:
ಮೋಫ್ ಎನ್ನುವುದು ಐಗುಪ್ತದಲ್ಲಿರುವ ಪುರಾತನ ರಾಜಧಾನಿ ಪಟ್ಟಣವಾಗಿರುತ್ತದೆ, ಇದು ನೈಲ್ ನದಿಯ ಪಕ್ಕದಲ್ಲಿ ಕಂಡುಬರುತ್ತದೆ.
- ಮೋಫ್ ಪಟ್ಟಣವು ಐಗುಪ್ತ ಕೆಳಭಾಗದಲ್ಲಿ ಕಂಡುಬರುತ್ತದೆ, ಇದು ಮಣ್ಣು ಫಲವತ್ತಾಗಿರುವ ಮತ್ತು ಬೆಳೆಗಳು ಹೇರಳವಾಗಿ ಬೆಳೆಯುವ ನೈಲ್ ನದಿಯ ಡೆಲ್ಟಾ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ.
- ಇದು ಫಲವತ್ತಾದ ಮಣ್ಣು ಇರುವ ಪ್ರದೇಶ ಮತ್ತು ಐಗುಪ್ತ ಕೆಳ ಮೇಲ್ಭಾಗದ ಮಧ್ಯೆದಲ್ಲಿರುವ ಪ್ರಾಮುಖ್ಯವಾದ ಸ್ಥಳವಾಗಿರುತ್ತದೆ, ಇದರಿಂದ ಮೋಫ್ ಎನ್ನುವ ಈ ಪಟ್ಟಣವು ವ್ಯಾಪಾರ ಮತ್ತು ವಾಣಿಜ್ಯಗಳಿಗೆ ದೊಡ್ಡ ಪಟ್ಟಣವಾಗಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ನೈಲ್ ನದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4644, H5297
ಮೋಲೆಕ್
ಸತ್ಯಾಂಶಗಳು:
ಮೋಲೆಕ್ ಎನ್ನುವುದು ಕಾನಾನ್ಯರು ಆರಾಧನೆ ಮಾಡುವ ಸುಳ್ಳು ದೇವರುಗಳಲ್ಲಿ ಒಂದು ಸುಳ್ಳು ದೇವರ ಹೆಸರಾಗಿರುತ್ತದೆ. ಈ ಪದಕ್ಕೆ “ಮೊಲೋಕ್” ಮತ್ತು “ಮೊಲೇಕ” ಎನ್ನುವ ಪದಗಳನ್ನು ಬಳಸುತ್ತಾರೆ.
- ಮೋಲೆಕ್.ನನ್ನು ಆರಾಧಿಸುವ ಜನರು ಅವನಿಗೆ ತಮ್ಮ ಮಕ್ಕಳನ್ನು ಅಗ್ನಿಯಿಂದ ಬಲಿ ಮಾಡುತ್ತಿದ್ದರು.
- ಇಸ್ರಾಯೇಲ್ಯರಲ್ಲಿ ಕೆಲವರು ನಿಜವಾದ ಒಬ್ಬನೇ ದೇವರನ್ನು ಆರಾಧಿಸುವುದರ ಬದಲಾಗಿ ಮೋಲೆಕ್ ಸುಳ್ಳು ದೇವರನ್ನು ಆರಾಧನೆ ಮಾಡಿದರು. ಅವರು ಮೋಲೆಕ್ ಆರಾಧಿಕರು ಆಚರಿಸುವ ದುಷ್ಟ ಆಚಾರಗಳನ್ನು ಆಚರಿಸಿದರು, ಅದರಲ್ಲಿ ತಮ್ಮ ಮಕ್ಕಳನ್ನು ಬಲಿ ಕೊಡುವುದೂ ಒಳಗೊಂಡಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ದುಷ್ಟ, ಸುಳ್ಳು ದೇವರು, ದೇವರು, ಸುಳ್ಳು ದೇವರು, ಸರ್ವಾಂಗ ಹೋಮ, ನಿಜ, ಆರಾಧನೆ, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4428, H4432, G3434
ಮೋವಾಬ್, ಮೋವಾಬ್ಯನು, ಮೋವಾಬ್ಯರು
ಸತ್ಯಾಂಶಗಳು:
ಮೋವಾಬ್ ಎನ್ನುವವನು ಲೋಟನ ಹಿರಿಯ ಮಗಳ ಮಗನಾಗಿರುತ್ತಾನೆ. ಇವನು ಮತ್ತು ಇವನ ಕುಟುಂಬವು ಜೀವಿಸಿದ ದೇಶದ ಹೆಸರಾಗಿತ್ತು. “ಮೋವಾಬ್ಯನು” ಎನ್ನುವ ಪದವು ಮೋವಾಬ್ ಸಂತಾನದ ವ್ಯಕ್ತಿಯನ್ನು ಸೂಚಿಸುತ್ತದೆ ಅಥವಾ ಮೋವಾಬ್ ದೇಶದಲ್ಲಿ ಜೀವಿಸುವ ವ್ಯಕ್ತಿಯನ್ನು ಸೂಚಿಸುತ್ತದೆ.
- ಮೋವಾಬ್ ದೇಶವು ಲವಣ ಸಮುದ್ರದ ಪೂರ್ವ ದಿಕ್ಕಿನಲ್ಲಿ ಕಂಡುಬರುತ್ತದೆ.
- ಮೋವಾಬ್ ಎನ್ನುವುದು ಬೆತ್ಲೆಹೇಮ್ ಪಟ್ಟಣದಿಂದ ಆಗ್ನೇಯ ಭಾಗದಲ್ಲಿತ್ತು, ಈ ಸ್ಥಳದಲ್ಲಿಯೇ ನೋವೊಮಿ ಕುಟುಂಬ ನಿವಾಸವಾಗಿತ್ತು.
- ಬೆತ್ಲೆಹೇಮಿನಲ್ಲಿರುವ ಜನರು “ಮೋವಾಬ್ಯಳ’ ರೂತಳು ಕರೆಯಲ್ಪಟ್ಟರು, ಯಾಕಂದರೆ ಈಕೆ ಮೋವಾಬ್ ದೇಶದಿಂದ ಬಂದ ಸ್ತ್ರೀಯಳಾಗಿದ್ದಳು. ಈ ಪದವನ್ನು “ಮೋವಾಬ್ಯಳಾದ ಸ್ತ್ರೀ” ಅಥವಾ “ಮೋವಾಬ್ ದೇಶದಿಂದ ಬಂದಿರುವ ಸ್ತ್ರೀ” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೆತ್ಲೆಹೇಮ್, ಯೂದಾ, ಲೋಟ, ರೂತಳು, ಲವಣ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4124, H4125
ಮೋಶೆ
ಸತ್ಯಾಂಶಗಳು:
ಮೋಶೆ ಸುಮಾರು 40 ವರ್ಷಗಳ ಕಾಲ ಇಸ್ರಾಯೇಲ್ ಜನರಿಗೆ ನಾಯಕನೂ ಮತ್ತು ಪ್ರವಾದಿಯೂ ಆಗಿದ್ದನು.
- ಮೋಶೆ ಶಿಶುವಾಗಿದ್ದಾಗ, ಮೋಶೆ ತಂದೆತಾಯಿಗಳು ತನ್ನನ್ನು ಐಗುಪ್ತ ಫರೋಹನಿಗೆ ಕಾಣಿಸದಂತೆ ಬಚ್ಚಿಡಬೇಕೆಂದು ಒಂದು ಬುಟ್ಟಿಯಲ್ಲಿಟ್ಟು ನೈಲ್ ನದಿಯಲ್ಲಿ ಬಿಟ್ಟಿದ್ದರು. ಮೋಶೆಯ ಅಕ್ಕ ಆ ನದಿಯಲ್ಲಿ ಹೋಗುತ್ತಿರುವ ಆ ಬುಟ್ಟಿಗೆ ಕಾವಲುಗಾರಳಾಗಿದ್ದಳು. ಆಗ ಫರೋಹನ ಮಗಳು ಆ ಬುಟ್ಟಿಯನ್ನು ಕಂಡುಕೊಂಡಾಗ ಮೋಶೆ ಪ್ರಾಣವು ಕಾಪಾಡಲ್ಪಟ್ಟಿತ್ತು ಮತ್ತು ಅವನನ್ನು ತನ್ನ ಮಗನನ್ನಾಗಿ ಬೆಳೆಸಿಕೊಳ್ಳಲು ಅರಮನಗೆ ಕರೆದುಕೊಂಡು ಹೋದಳು.
- ಐಗುಪ್ತ ದೇಶದಲ್ಲಿ ಗುಲಾಮಗಿರಿಯಲ್ಲಿರುವ ಇಸ್ರಾಯೇಲ್ಯರನ್ನು ಬಿಡಿಸುವುದಕ್ಕೆ ಮತ್ತು ಅವರನ್ನು ವಾಗ್ಧಾನ ದೇಶದೊಳಗೆ ಸೇರಲು ನಡೆಸುವುದಕ್ಕೆ ದೇವರು ಮೋಶೆಯನ್ನು ಆದುಕೊಂಡರು.
- ಐಗುಪ್ತದಿಂದ ಇಸ್ರಾಯೇಲ್ಯರು ಬಿಡಿಸಲ್ಪಟ್ಟನಂತರ, ಅವರು ಅರಣ್ಯದಲ್ಲಿ ಹಾದು ಹೋಗುತ್ತಿರುವಾಗ, ದೇವರು ಮೋಶೆಗೆ ಹತ್ತು ಆಜ್ಞೆಗಳನ್ನು ಬರೆದಿರುವ ಎರಡು ಶಿಲಾಶಾಸನಗಳನ್ನು ಕೊಟ್ಟನು.
- ಆತನ ಕೊನೆಯ ಜೀವನದಲ್ಲಿ, ಮೋಶೆ ವಾಗ್ಧಾನ ದೇಶವನ್ನು ನೋಡಿದನು, ಆದರೆ ಆ ದೇಶದೊಳಗೆ ಪ್ರವೇಶವಾಗಲಿಲ್ಲ, ಯಾಕಂದರೆ ಆತನು ದೇವರಿಗೆ ಅವಿಧೇಯನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಮಿರ್ಯಾಮ, ವಾಗ್ಧಾನ ದೇಶ, ಹತ್ತು ಆಜ್ಞೆಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 09:12 ಒಂದು ದಿನ ___ ಮೋಶೆ ___ ಕುರಿಗಳನ್ನು ಮೇಯಿಸುತ್ತಿರುವಾಗ, ಅವನು ಉರಿಯುತ್ತಿರುವ ಪೊದೆಯನ್ನು ನೋಡಿದನು.
- 12:05 “ಹೆದರುವುದನ್ನು ನಿಲ್ಲಿಸಿರಿ, ಈ ದಿನದಂದು ದೇವರು ನಿಮಗಾಗಿ ಯುದ್ಧ ಮಾಡುವನು ಮತ್ತು ನಿಮ್ಮನ್ನು ರಕ್ಷಿಸುವನು” ಎಂದು ___ ಮೋಶೆ ___ ಇಸ್ರಾಯೇಲ್ಯರಿಗೆ ಹೇಳಿದನು.
- 12:07 ಸಮುದ್ರದ ಮೇಲೆ ನಿನ್ನ ಕೈಯನ್ನು ಚಾಚಿ, ನೀರು ವಿಭಾಗಿಸುವಂತೆ ಮಾಡಬೇಕೆಂದು ದೇವರು ___ ಮೋಶೆಗೆ ___ ಹೇಳಿದನು.
- 12:12 ಐಗುಪ್ತದವರೆಲ್ಲರು ಸತ್ತು ಹೋಗಿರುವುದನ್ನು ಇಸ್ರಾಯೇಲ್ಯರು ನೋಡಿದಾಗ, ಅವರು ದೇವರಲ್ಲಿ ಭರವಸೆವಿಟ್ಟರು ಮತ್ತು ಮೋಶೆ ದೇವರ ಪ್ರವಾದಿಯೆಂದು ನಂಬಿದರು.
- 13:07 ಇದಾದನಂತರ, ದೇವರು ಈ ಎರಡು ಶಿಲಾಶಾಸನಗಳ ಮೇಲೆ ಈ ಹತ್ತು ಆಜ್ಞೆಗಳನ್ನು ಬರೆದು, ಅವುಗಳನ್ನು ___ ಮೋಶೆಗೆ ___ ಕೊಟ್ಟನು.
ಪದ ಡೇಟಾ:
- Strong's: H4872, H4873, G3475
ಯಾಕೋಬ (ಅಲ್ಫಾಯ ಮಗ)
ಸತ್ಯಾಂಶಗಳು:
ಅಲ್ಫಾಯ ಮಗನಾದ ಯಾಕೋಬನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು.
- ಇವನ ಹೆಸರನ್ನು ಮತ್ತಾಯ, ಮಾರ್ಕ ಮತ್ತು ಲೂಕ ಸುವಾರ್ತೆಗಳಲ್ಲಿ ದಾಖಲಿಸಿದ ಯೇಸುವಿನ ಶಿಷ್ಯರುಗಳ ಪಟ್ಟಿಯಲ್ಲಿ ಕೊಡಲ್ಪಟ್ಟಿದೆ.
- ಯೇಸು ಪರಲೋಕಕ್ಕೆ ಹಿಂದುರಿಗೆ ಹೋದನಂತರ ಯೆರೂಸಲೇಮಿನಲ್ಲಿ ಒಂದು ಸ್ಥಳದಲ್ಲಿ ಸೇರಿ ಪ್ರಾರ್ಥಿಸುತ್ತಿರುವ ಹನ್ನೊಂದುಮಂದಿ ಶಿಷ್ಯರಲ್ಲಿ ಒಬ್ಬನಾಗಿ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಇವನ ಹೆಸರನ್ನು ದಾಖಳಿಸಲಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಶಿಷ್ಯ, ಯಾಕೋಬ (ಯೇಸುವಿನ ಸಹೋದರ), ಯಾಕೋಬ (ಜೆಬೆದಾಯನ ಮಗ), ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2385
ಯಾಕೋಬ (ಜೆಬೆದಾಯನ ಮಗ)
ಸತ್ಯಾಂಶಗಳು:
ಯಾಕೋಬ, ಜೆಬೆದಾಯನ ಮಗ, ಯೇಸು ಕ್ರಿಸ್ತನ ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಇವನಿಗೆ ಯೋಹಾನನೆಂಬ ಚಿಕ್ಕ ತಮ್ಮನಿದ್ದನು, ಇವನು ಕೂಡ ಯೇಸುವಿನ ಅಪೊಸ್ತಲರಲ್ಲಿ ಒಬ್ಬನಾಗಿದ್ದನು.
- ಯಾಕೋಬನು ಮತ್ತು ತನ್ನ ತಮ್ಮನಾದ ಯೋಹಾನನ್ನು ತನ್ನ ತಂದೆಯಾದ ಜೆಬೆದಾಯನೊಂದಿಗೆ ಮೀನುಗಳನ್ನು ಹಿಡಿಯುವ ಕೆಲಸ ಮಾಡುತ್ತಿದ್ದನು.
- ಯಾಕೋಬ ಮತ್ತು ಯೋಹಾನರಿಗೆ “ಸಿಡಿಲ ಮರಿಗಳು” ಎಂದು ಮುದ್ದಿನ ಹೆಸರಿತ್ತು, ಬಹುಶಃ ಅವರು ಅತಿ ಬೇಗನೆ ಕೋಪಗೊಳ್ಳುತ್ತಿರಬಹುದು.
- ಪೇತ್ರ, ಯಾಕೋಬ ಮತ್ತು ಯೋಹಾನರು ಯೇಸುವಿನ ಅತೀ ಹತ್ತಿರವಾದ ಶಿಷ್ಯರು, ಇವರು ಆತನೊಂದಿಗೆ ಮೋಶೆ ಮತ್ತು ಎಲೀಯರು ಪರ್ವತದ ಮೇಲೆ ಕಾಣಿಸಿಕೊಂಡಾಗ ಇದ್ದಿದ್ದರು, ಯೇಸು ಸತ್ತಂತ ಹುಡಿಗಿಯನ್ನು ತಿರುಗಿ ಎಬ್ಬಿಸಿದಾಗ ಅಲ್ಲಿಯೇ ಇದ್ದಿದ್ದರು. ಹೀಗೆ ಅವರು ಅದ್ಭುತವಾದ ಕಾರ್ಯಗಳು ನಡೆದ ಅನೇಕ ಸಂಘಟನೆಗಳಲ್ಲಿ ಇದ್ದುಕೊಂಡಿದ್ದರು.
- ಈ ಯಾಕೋಬನು ಮತ್ತು ಸತ್ಯವೇದದಲ್ಲಿ ಒಂದು ಪುಸ್ತಕವನ್ನು ಬರೆದ ಯಾಕೋಬನು ಬೇರೆ ಬೇರೆಯಾಗಿರುತ್ತಾರೆ. * ಕೆಲವೊಂದು ಭಾಷೆಗಳಲ್ಲಿ ಇವರಿಬ್ಬರ ವಿಷಯದಲ್ಲಿ ಇವರಿಬ್ಬರು ವಿಭಿನ್ನವಾದ ವ್ಯಕ್ತಿಗಳೆಂದು ಸ್ಪಷ್ಟತೆ ಬರುವುದಕ್ಕೆ ಅವರ ಹೆಸರುಗಳನ್ನು ಬೇರೆ ಬೇರೆಯಾಗಿ ಬರೆಯುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಎಲೀಯ, ಯಾಕೋಬ (ಯೇಸುವಿನ ತಮ್ಮ), ಯಾಕೋಬ (ಅಲ್ಫಾಯ ಮಗ), ಮೋಶೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2385
ಯಾಕೋಬ (ಯೇಸು ಸಹೋದರ)
ಸತ್ಯಾಂಶಗಳು:
ಯಾಕೋಬನು ಯೋಸೇಫ ಮತ್ತು ಮರಿಯಳ ಮಗನಾಗಿದ್ದನು. ಇವನು ಯೇಸುವಿನ ಸಹೋದರರಲ್ಲಿ ಒಬ್ಬನಾಗಿದ್ದನು.
- ಯೇಸುವಿನ ತಮ್ಮಂದಿರ ಹೆಸರುಗಳು ಯೋಸೇಫ, ಯೂದ ಮತ್ತು ಸೀಮೋನ.
- ಯೇಸು ಜೀವಿಸಿದ ದಿನಗಳಲ್ಲಿ ಯಾಕೋಬ ಮತ್ತು ತನ್ನ ಸಹೋದರರು ಯೇಸು ಮೆಸ್ಸೀಯಯೆಂದು ನಂಬಲಿಲ್ಲ.
- ಸ್ವಲ್ಪಕಾಲವಾದನಂತರ, ಯೇಸು ಮರಣದಿಂದ ಎಬ್ಬಿಸಲ್ಪಟ್ಟನಂತರ, ಯಾಕೋಬನು ಈತನಲ್ಲಿ ನಂಬಿದನು ಮತ್ತು ಯೆರೂಸಲೇಮಿನಲ್ಲಿರುವ ಸಭೆಗೆ ನಾಯಕನಾದನು.
ಹೊಸ ಒಡಂಬಡಿಕೆ ಪುಸ್ತಕವಾಗಿರುವ ಯಾಕೋಬ ಪತ್ರಿಕೆಯನ್ನು ಯಾಕೋಬನು ಹಿಂಸೆಗಳನ್ನು ಸಹಿಸಿಕೊಳ್ಳದೆ ಅನೇಕ ಪ್ರಾಂತ್ಯಗಳಿಗೆ ಚೆದರಿ ಹೋಗಿರುವ ಕ್ರೈಸ್ತರಿಗೆ ಬರೆದಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಕ್ರಿಸ್ತ, ಸಭೆ, ಯಾಕೋಬನ ಮಗ ಯೂದ, ಹಿಂಸೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2385
ಯಾಕೋಬನ ಮಗನಾದ ಯೂದ
ಸತ್ಯಾಂಶಗಳು:
ಯಾಕೋಬನ ಮಗನಾದ ಯೂದನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಈ ಯೂದನು ಮತ್ತು ಇಸ್ಕರಿಯೋತ ಯೂದನು ಬೇರೆಯಾಗಿರುತ್ತಾರೆ ಎಂದು ಗಮನಿಸಬೇಕು.
- ಸತ್ಯವೇದದಲ್ಲಿ ಅನೇಕಸಲ ಪುರುಷರಿಗೆ ಒಂದೇ ಹೆಸರು ಇರುವಾಗ, ಅವರನ್ನು ತಮ್ಮ ತಂದೆಯ ಹೆಸರುಗಳನ್ನು ಜೋಡಿಸಿ ಕರೆಯುತ್ತಿದ್ದರು. ಇಲ್ಲಿ ಯೂದ ನು “ಯಾಕೋಬನ ಮಗ” ಎಂಬುದಾಗಿ ಗುರುತಿಸಲ್ಪಟ್ಟಿದ್ದಾನೆ.
- ಇನ್ನೊಬ್ಬ ವ್ಯಕ್ತಿ ಹೆಸರು ಕೂಡ ಯೂದ ಆಗಿದ್ದನು, ಆದರೆ ಇವನು ಯೇಸುವಿನ ತಮ್ಮನಾಗಿದ್ದನು. ಇವನನ್ನು “ಯೂದಾ” ಎಂದೂ ಕರೆಯುತ್ತಾರೆ.
- ಹೊಸ ಒಡಂಬಡಿಕೆಯಲ್ಲಿ “ಯೂದಾ” ಎಂದು ಕರೆಯಲ್ಪಡುವ ಪುಸ್ತಕವನ್ನು ಬಹುಶಃ ಯೇಸುವಿನ ಸಹೋದರನಾದ ಈ ಯುದಾನೇ ಬರೆದಿರಬಹುದು. ಯಾಕಂದರೆ ಈ ಪುಸ್ತಕದಲ್ಲಿ ರಚನಾಕಾರರು “ಯಾಕೋಬನ ಸಹೋದರ” ಎಂಬುದಾಗಿ ತನ್ನನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ಯಾಕೋಬನು ಯೇಸುವಿನ ಮತ್ತೊಬ್ಬ ಸಹೋದರನಾಗಿದ್ದನು.
- ಯೂದಾ ಪುಸ್ತಕವು ಯಾಕೋಬನ ಮಗನು, ಯೇಸುವಿನ ಶಿಷ್ಯನಾದ ಯೂದಾನು ಬರೆದಿರುವುದಕ್ಕೆ ಸಾಧ್ಯತೆಗಳಿವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಯಾಕೋಬ (ಜೆಬೆದಾಯನ ಮಗ), ಯೂದಾ ಇಸ್ಕರಿಯೋತ, ಮಗ, ಹನ್ನೆರಡು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2455
ಯಾರೊಬ್ಬಾಮ
ಸತ್ಯಾಂಶಗಳು:
ನೆಬಾಟನ ಮಗನಾದ ಯಾರೊಬ್ಬಾಮನು ಸುಮಾರು ಕ್ರಿ.ಪೂ.900-910 ರವರೆಗೆ ಆಳಿದ ಇಸ್ರಾಯೇಲ್ ಉತ್ತರ ರಾಜ್ಯದ ಮೊಟ್ಟ ಮೊದಲನೇ ಅರಸನಾಗಿದ್ದನು. ಇನ್ನೊಬ್ಬ ಯಾರೊಬ್ಬಾಮನು ಅರಸನಾದ ಯೋವಾಷನ ಮಗನಾಗಿರುತ್ತಾನೆ, ಇವನು ಸುಮಾರು 120 ವರ್ಷಗಳಿಗಿಂತ ಹೆಚ್ಚಾಗಿ ಇಸ್ರಾಯೇಲ್ ದೇಶವನ್ನು ಆಳಿರಬಹುದು.
- ಸೊಲೊಮೋನನ ನಂತರ ಅರಸನಾಗುವಿಯೆಂದು ಮತ್ತು ನೀನು ಇಸ್ರಾಯೇಲ್ ಹತ್ತು ಕುಲಗಳನ್ನು ಆಳುವಿಯೆಂದು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಯೆಹೋವನು ಒಂದು ಪ್ರವಾದನೆಯನ್ನು ಕೊಟ್ಟನು,
- ಸೊಲೊಮೋನನು ಸತ್ತನಂತರ, ಇಸ್ರಾಯೇಲ್ ಉತ್ತರ ರಾಜ್ಯದ ಹತ್ತು ಕುಲಗಳು ಸೊಲೊಮೋನನ ಮಗನಾದ ರೆಹಬ್ಬಾಮನಿಗ ವಿರೋಧವಾಗಿ ತಿರಸ್ಕಾರ ಮಾಡಿದರು ಮತ್ತು ಅವರ ಅರಸನಾಗಿ ಯಾರೊಬ್ಬಾಮನನ್ನು ಮಾಡಿಕೊಳ್ಳುವುದಕ್ಕೆ ಬದಲಾಗಿ, ದಕ್ಷಿಣ ರಾಜ್ಯದಲ್ಲಿರುವ ಯೂದಾ ಮತ್ತು ಬೆನ್ಯಾಮೀನ ಎನ್ನುವ ಎರಡು ಕುಲಗಳಿಗೆ ಅರಸನಾಗುವಂತೆ ರೆಹಬ್ಬಾಮನಿಗೆ ಅವಕಾಶ ಕೊಟ್ಟರು.
- ಯಾರೊಬ್ಬಾಮ ದುಷ್ಟ ಅರಸನಾಗಿ ಮಾರ್ಪಟ್ಟನು, ಅಷ್ಟೇಅಲ್ಲದೆ ಜನರು ಯೆಹೋವನನ್ನು ಆರಾಧಿಸದಂತೆ ಮಾಡಿ, ಅವರೆಲ್ಲರು ಆರಾಧನೆ ಮಾಡುವುದಕ್ಕೆ ಕೆಲವೊಂದು ವಿಗ್ರಹಗಳನ್ನು ಸ್ಥಾಪಿಸಿದನು. ಉಳಿದ ಇಸ್ರಾಯೇಲ್ ಅರಸರೆಲ್ಲರು ಯಾರೊಬ್ಬಾಮನ ಮಾದರಿಯನ್ನು ಅನುಸರಿಸಿದರು ಮತ್ತು ಅವನು ಇದ್ದಂತೆಯೇ ಅವರೆಲ್ಲರು ದುಷ್ಟರಾದರು.
- ಸುಮಾರು 120 ವರ್ಷಗಳಾದನಂತರ, ಯಾರೊಬ್ಬಾಮ ಹೆಸರಿನ ಮೇಲೆ ಇನ್ನೊಬ್ಬ ಅರಸನು ಇಸ್ರಾಯೇಲ್ ಉತ್ತರ ರಾಜ್ಯವನ್ನು ಆಳುವುದಕ್ಕೆ ಆರಂಭಿಸಿದನು. ಈ ಯಾರೊಬ್ಬಾಮನು ಅರಸನಾದ ಯೋವಾಷನ ಮಗನಾಗಿರುತ್ತಾನೆ ಮತ್ತು ಮುಂದಿದ್ದ ಇಸ್ರಾಯೇಲ್ ಅರಸರ ಹಾಗೆಯೇ ಇವನು ದುಷ್ಟನಾಗಿದ್ದನು.
- ಇಸ್ರಾಯೇಲ್ಯರ ಈ ದುಷ್ಟತನವನ್ನು ಹೊರತುಪಡಿಸಿ, ದೇವರು ಅವರ ಮೇಲೆ ಕರುಣೆ ತೋರಿಸಿದನು ಮತ್ತು ಯಾರೊಬ್ಬಾಮ ಎನ್ನುವ ಈ ಅರಸನು ಭೂಮಿ ಗಳಿಸುವುದಕ್ಕೆ ಅಂಟ್ಟು ತಮ್ಮ ಕ್ಷೇತ್ರಕ್ಕೆ ಗಡಿಗಳನ್ನು ಹಾಕುವುದಕ್ಕೆ ಸಹಾಯ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಇಸ್ರಾಯೇಲ್ ರಾಜ್ಯ, ಯೂದಾ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 18:08 ರೆಹಬ್ಬಾಮನಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದ ಇಸ್ರಾಯೇಲ್ ದೇಶದ ಹತ್ತು ಕುಲಗಳು ತಮಗೆ ಅರಸನನ್ನಾಗಿ __ ಯಾರೊಬ್ಬಾಮ __ ಎಂದು ಹೆಸರಿರುವ ಒಬ್ಬ ಮನುಷ್ಯನನ್ನು ನೇಮಿಸಿಕೊಂಡರು.
- 18:09 __ ಯಾರೊಬ್ಬಾಮನು __ ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡಿದನು ಮತ್ತು ಜನರೆಲ್ಲರು ಪಾಪ ಮಾಡುವುದಕ್ಕೆ ಕಾರಣನಾದನು. ಯೂದಾ ರಾಜ್ಯದಲ್ಲಿರುವ ದೇವಾಲಯದಲ್ಲಿ ದೇವರನ್ನು ಆರಾಧಿಸುವುದರ ಬದಲಾಗಿ ಆರಾಧನೆ ಮಾಡುವುದಕ್ಕೆ ಇವನು ತನ್ನ ಜನರಿಗೋಸ್ಕರ ಎರಡು ವಿಗ್ರಹಗಳನ್ನು ಕಟ್ಟಿಸಿದನು.
ಪದ ಡೇಟಾ:
- Strong's: H3379
ಯೂದಯ ಸೀಮೆ
ಸತ್ಯಾಂಶಗಳು:
“ಯೂದಯ ಸೀಮೆ” ಎನ್ನುವ ಪದವು ಪುರಾತನ ಇಸ್ರಾಯೇಲಿನಲ್ಲಿರುವ ಒಂದು ಸೀಮೆಯ ಹೆಸರು. ಇದನ್ನು ಕೆಲವೊಂದುಬಾರಿ ಇಕ್ಕಟ್ಟಿನ ಭಾವನೆಯಲ್ಲಿ ಉಪಯೋಗಿಸುತ್ತಾರೆ ಮತ್ತು ಇನ್ನೂ ಕೆಲವೊಂದುಬಾರಿ ವಿಶಾಲವಾದ ಭಾವಾನೆಯಲ್ಲಿ ಉಪಯೋಗಿಸುತ್ತಾರೆ.
- ಕೆಲವೊಂದುಬಾರಿ “ಯೂದಯ ಸೀಮೆ” ಎನ್ನುವ ಪದವನ್ನು ಮೃತ ಸಮುದ್ರಕ್ಕೆ ಪಶ್ಚಿಮ ದಿಕ್ಕಿನಲ್ಲಿರುವ ಪುರಾತನ ಇಸ್ರಾಯೇಲ್ ದಕ್ಷಿಣ ಭಾಗದಲ್ಲಿರುವ ಸೀಮೆಯನ್ನು ಮಾತ್ರವೇ ಸೂಚಿಸುತ್ತದೆ. ಕೆಲವೊಂದು ಭಾಷಾಂತರಗಳಲ್ಲಿ ಇದನ್ನು “ಯೂದಾ” ಸೀಮೆ ಎಂದು ಕರೆಯುತ್ತಾರೆ.
- ಇನ್ನೂ ಕೆಲವೊಂದು ಸಮಯಗಳಲ್ಲಿ “ಯೂದಯ ಸೀಮೆ” ಎನ್ನುವದನ್ನು ವಿಶಾಲವಾದ ಭಾವನೆಯಲ್ಲಿ ಉಪಯೋಗಿಸುತ್ತಾರೆ, ಇದನ್ನು ಪುರಾತನ ಇಸ್ರಾಯೇಲ್ ಸೀಮೆಯನ್ನೆಲ್ಲಾ ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಅದರಲ್ಲಿ ಗಲಿಲಾಯ, ಸಮಾರ್ಯ, ಪೆರೆಯ, ಇದುಮಾಯ ಮತ್ತು ಯೂದಯ (ಯೂದಾ) ಎನ್ನುವ ಪ್ರಾಂತಗಳನ್ನೂ ಸೂಚಿಸುತ್ತದೆ.
- ಒಂದುವೇಳೆ ಅನುವಾದಕರು ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಯೂದಯ ವಿಶಾಲವಾದ ಭಾವನೆಯನ್ನು “ಯೂದಯ ದೇಶ” ಎಂದೂ ಅನುವಾದ ಮಾಡಬಹುದು ಮತ್ತು ಇಕ್ಕಟ್ಟಾದ ಭಾವನೆಯನ್ನು ಸೂಚಿಸುವುದನ್ನು “ಯೂದಯ ಸೀಮೆ” ಅಥವಾ “ಯೂದಾ ಸೀಮೆ” ಎಂದೂ ಅನುವಾದ ಮಾಡಬಹುದು, ಇದು ಪುರಾತನ ಇಸ್ರಾಯೇಲ್ ದೇಶದಲ್ಲಿ ಭಾಗವಾಗಿರುವದರಿಂದ ಮತ್ತು ಯೂದಾ ಕುಲದ ಜನರೆಲ್ಲರು ಅಲ್ಲಿಯೇ ನಿವಾಸ ಮಾಡಿರುವದರಿಂದ ಆ ರೀತಿ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಗಲಿಲಾಯ, ಎದೋಮ್, ಯೂದಾ, ಯೂದಾ, ಸಮಾರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಥೆಸ್ಸ.02:14-16
- ಅಪೊ.ಕೃತ್ಯ.02:8-11
- ಅಪೊ.ಕೃತ್ಯ.09:31-32
- ಅಪೊ.ಕೃತ್ಯ.12:18-19
- ಯೋಹಾನ.03:22-24
- ಲೂಕ.01:5-7
- ಲೂಕ.04:42-44
- ಲೂಕ.05:17
- ಮಾರ್ಕ.10:1-4
- ಮತ್ತಾಯ.02:1-3
- ಮತ್ತಾಯ.02:4-6
- ಮತ್ತಾಯ.02:22-23
- ಮತ್ತಾಯ.03:1-3
- ಮತ್ತಾಯ.19:1-2
ಪದ ಡೇಟಾ:
- Strong's: H3061, G2453
ಯೂದಾ
ಸತ್ಯಾಂಶಗಳು:
ಯೂದಾ ಯಾಕೋಬನ ಹಿರಿಯ ಗಂಡು ಮಕ್ಕಳಲ್ಲಿ ಒಬ್ಬನಾಗಿದ್ದನು. ತನ್ನ ತಾಯಿಯ ಹೆಸರು ಲೇಯಾ ಇವನ ಸಂತಾನದವರೆಲ್ಲರನ್ನು “ಯೂದಾ ಕುಲ” ಎಂದು ಕರೆಯುತ್ತಾರೆ.
- ಯೋಸೇಫನನ್ನು ಆಳವಾದ ಬಾವಿಯೊಳಗೆ ಸಾಯುವುದಕ್ಕೆ ಬಿಡುವುದಕ್ಕೆ ಬದಲಾಗಿ, ಅವನ ಚಿಕ್ಕ ತಮ್ಮನಾದ ಯೋಸೇಫನನ್ನು ಗುಲಾಮನನ್ನಾಗಿ ಮಾರುವುದಕ್ಕೆ ತನ್ನ ಸಹೋದರರಿಗೆ ಯೂದಾ ಸಲಹೆಯನ್ನು ಕೊಟ್ಟಿದ್ದರು.
- ಆತನ ಹೆಸರು "ಸ್ತುತಿ" ಎಂಬ ಅರ್ಥವನ್ನು ನೀಡುವ ಇಬ್ರಿಯ ಪದವನ್ನು ಹೋಲುತ್ತದೆ.
- ಅರಸನಾದ ದಾವೀದನು ಮತ್ತು ಅವನನಂತರ ಬಂದ ಎಲ್ಲಾ ಅರಸರು ಯೂದಾ ವಂಶದವರಾಗಿದ್ದರು. ಯೇಸು ಕೂಡ ಯೂದಾ ವಂಶಸ್ಥನಾಗಿದ್ದನು.
- ಸೊಲೊಮೋನನ ಆಳ್ವಿಕೆ ಮುಗಿದನಂತರ, ಇಸ್ರಾಯೇಲ್ ದೇಶವು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿತು, ಯೂದಾ ರಾಜ್ಯವು ದಕ್ಷಿಣ ರಾಜ್ಯವಾಗಿತ್ತು.
- ಹಳೇ ಒಡಂಬಡಿಕೆಯಲ್ಲಿ, ಯೂದ ಹೆಸರನ್ನು ಕೆಲವೊಮ್ಮೆ ಇಸ್ರಾಯೇಲಿನ ಸಂಪೂರ್ಣ ದಕ್ಷಿಣ ಸಾಮ್ರಾಜ್ಯವನ್ನು ಉಲ್ಲೇಖಿಸಲು ಬಳಸಲಾಗುತ್ತದೆ.
- ಹೊಸ ಒಡಂಬಡಿಕೆಯ ಪುಸ್ತಕವಾಗಿರುವ ಪ್ರಕಟನೆ ಗ್ರಂಥದಲ್ಲಿ ಯೇಸುವನ್ನು “ಯೂದಾ ಸಿಂಹ” ಎಂದು ಕರೆಯಲ್ಪಟ್ಟಿದ್ದಾನೆ.
- “ಯೆಹೂದ್ಯ” ಮತ್ತು “ಯೆಹೂದ ಸೀಮೆ” ಎನ್ನುವ ಪದಗಳು “ಯೂದಾ” ಎನ್ನುವ ಹೆಸರಿನಿಂದ ಬಂದಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ಯೆಹೂದ್ಯ, ಯೂದಾ, ಯೆಹೂದ ಸೀಮೆ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3063
ಯೂಫ್ರೇಟೀಸ್ ನದಿ, ಮಹಾ ನದಿ
ಸತ್ಯಾಂಶಗಳು:
ಏದೆನ್ ಉದ್ಯಾನವನದಲ್ಲಿ ಹರಿಯುತ್ತಿದ್ದ ನಾಲ್ಕು ನದಿಗಳಲ್ಲಿ ಒಂದು ನದಿಯ ಹೆಸರು ಯೂಫ್ರೇಟೀಸ್ ಆಗಿತ್ತು. ಈ ನದಿಯನ್ನು ಕುರಿತಾಗಿ ಸತ್ಯವೇದದಲ್ಲಿ ಹಲವಾರು ಬಾರಿ ಹೇಳಲ್ಪಟ್ಟಿದ್ದೆ.
- ಪ್ರಸ್ತುತ ಕಾಲದ ಯೂಫ್ರೇಟೀಸ್ ನದಿ ಮಿಡ್ಲ್ ಈಸ್ಟಿನಲ್ಲಿದ್ದೆ ಮತ್ತು ಅದು ಆಸ್ಯದಲ್ಲಿ ಅತಿ ಉದ್ದವಾದ ಹಾಗೂ ಬಹಳ ಪ್ರಾಮುಖ್ಯವಾದ ನದಿಯಾಗಿದೆ.
- ಯೂಫ್ರೇಟೀಸ್ ಮತ್ತು ಟೈಗ್ರೀಸ್ ನದಿಗಳು ಮೇಸಪೋತಮ್ಯ ಎಂಬ ಪ್ರಾಂತ್ಯಕ್ಕೆ ಸರಿಹದ್ದುಗಳಾಗಿರುತ್ತವೆ.
- ಅಬ್ರಾಮನು ನಿವಾಸ ಮಾಡಿದ ಪ್ರಾಚೀನ ಪಟ್ಟಣವಾದ ಉರ್ ಯೂಫ್ರೇಟೀಸ್ ನದಿಯ ತೀರದಲ್ಲಿತ್ತು.
- ಯೆಹೋವ ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿದ ದೇಶದಲ್ಲಿ ಈ ನದಿಯ ತೀರವು ಸರಿಹದ್ದು ಆಗಿತ್ತು. (Genesis 15:18).
- ಯೂಫ್ರೇಟೀಸ್ ನದಿಯನ್ನು “ಮಹಾ ನದಿ” ಎಂದು ಕರೆಯುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5104, H6578, G2166
ಯೆಫೆತ್
ಸತ್ಯಾಂಶಗಳು:
ಯೆಫೆತ್ ನೋಹನ ಮೂರು ಗಂಡು ಮಕ್ಕಳಲ್ಲಿ ಒಬ್ಬನಾಗಿರುತ್ತಾನೆ.
- ಭೂಮಿಯನ್ನೆಲ್ಲಾ ಪ್ರಪಂಚದಾದ್ಯಂತ ಬಂದಿರುವ ಪ್ರಳಯದೊಂದಿಗೆ ತುಂಬಿದ ಸಮಯದಲ್ಲಿ ಯೆಫೆತ್ ಮತ್ತು ತನ್ನ ಇಬ್ಬರು ಸಹೋದರರು ತಮ್ಮ ಹೆಂಡತಿಗಳ ಜೊತೆಯಲ್ಲಿ ನೋಹನೊಂದಿಗೆ ಇದ್ದಿದ್ದರು.
- ನೋಹನ ಗಂಡು ಮಕ್ಕಳನ್ನು ಸಹಜವಾಗಿ “ಶೇಮ್, ಹಾಮ್ ಮತ್ತು ಯೆಫೆತ್” ಎಂದು ದಾಖಲಿಸಲಾಗಿದೆ. ಇದರಿಂದ ಯೆಫೆತನು ಕೊನೆಯವನಾಗಿ ಅಂದರೆ ಅವರ ಚಿಕ್ಕ ತಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಾವೆ, ಪ್ರಳಯ, ಹಾಮ್, ನೋಹ, ಶೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3315
ಯೆಫ್ತಾಹ
ಸತ್ಯಾಂಶಗಳು:
ಯೆಫ್ತಾಹ ಎನ್ನುವ ವ್ಯಕ್ತಿ ಇಸ್ರಾಯೇಲ್ ರಾಜ್ಯದ ಮೇಲೆ ನ್ಯಾಯಾಧೀಶನಾಗಿ ಸೇವೆ ಮಾಡಿದ ಗಿಲ್ಯಾದ್,ನಿಂದ ಬಂದ ಯುದ್ಧವೀರನಾಗಿದ್ದನು.
- ಇಬ್ರಿ 11:32 ವಚನದಲ್ಲಿ ಯೆಫ್ತಾಹನು ತನ್ನ ಜನರ ಶತ್ರುಗಳಿಂದ ತನ್ನ ಜನರನ್ನು ಬಿಡುಗಡೆಗೊಳಿಸಿದ ಪ್ರಾಮುಖ್ಯವಾದ ನಾಯಕನಾಗಿ ಎಣಿಸಲ್ಪಟ್ಟನು.
- ಇವನು ಇಸ್ರಾಯೇಲ್ಯರನ್ನು ಅಮ್ಮೋನಿಯರಿಂದ ರಕ್ಷಿಸಿದನು ಮತ್ತು ಎಫ್ರಾಯೀಮರನ್ನು ಸೋಲಿಸುವುದಕ್ಕೆ ತನ್ನ ಜನರನ್ನು ನಡೆಸಿದನು.
- ಏನೇಯಾದರೂ ಯೆಫ್ತಾಹನು ದೇವರೊಂದಿಗೆ ಒಂದು ಮೂರ್ಖತನದ ಪ್ರತಿಜ್ಞೆಯನ್ನು ಮಾಡಿದನು, ಕೊನೆಗೆ ಅದು ತನ್ನ ಮಗಳನ್ನು ಬಲಿ ಕೊಡಬೇಕಾದ ಪರಿಸ್ಥಿತಿ ಬಂದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಮ್ಮೋನ್, ಬಿಡುಗಡೆಗೊಳಿಸು, ಎಫ್ರಾಯೀಮ್, ತೀರ್ಪು ಮಾಡು, ಪ್ರತಿಜ್ಞೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3316
ಯೆಬೂಸ್, ಯೆಬೂಸಿ, ಯೆಬೂಸಿಯರು
ಸತ್ಯಾಂಶಗಳು:
ಯೆಬೂಸಿಯರು ಒಂದು ಜನಾಂಗದವರು, ಇವರು ಕಾನಾನ್ ಭೂಮಿಯಲ್ಲಿ ನೆಲೆಗೊಂಡಿದ್ದರು. ಇವರು ಹಾಮ್ ಮಗನಾದ ಕನಾನ್.ಯಿಂದ ಬಂದ ಸಂತಾನದವರಾಗಿದ್ದರು.
- ಯೆಬೂಸಿಯರು ಯೆಬೂಸ್ ಎನ್ನುವ ಪಟ್ಟಣದಲ್ಲಿ ನಿವಾಸವಾಗಿದ್ದರು, ಮತ್ತು ಈ ಪಟ್ಟಣವನ್ನು ಅರಸನಾದ ದಾವೀದನು ವಶಪಡಿಸಿಕೊಂಡಾಗ ಇದಕ್ಕೆ ಯೆರೂಸಲೇಮ್ ಎನ್ನುವ ಹೆಸರು ಇಟ್ಟನು.
- ಶಾಲೆಮ್ ಅರಸನಾಗಿರುವ ಮೆಲ್ಕೀಚೆದಕನು ಬಹುಶಃ ಯೆಬೂಸಿಯರ ಮೂಲವಾಗಿರಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಕನಾನ್, ಹಾಮ್, ಯೆರೂಸಲೇಮ್, ಮೆಲ್ಕೀಚೆದಕ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H2982, H2983
ಯೆರಿಕೋ
ಸತ್ಯಾಂಶಗಳು:
ಯೆರಿಕೋ ಎನ್ನುವುದು ಕಾನಾನ್ ಭೂಮಿಯಲ್ಲಿ ತುಂಬಾ ಶಕ್ತಿಯುತವಾದ ಪಟ್ಟಣವಾಗಿದ್ದಿತ್ತು. ಇದು ಯೋರ್ದನ್ ನದಿ ಪಶ್ಚಿಮ ಭಾಗದಲ್ಲಿ ಮತ್ತು ಉಪ್ಪು ಸಮುದ್ರದ ಉತ್ತರ ಭಾಗದಲ್ಲಿ ಕಂಡುಬರುತ್ತದೆ.
- ಎಲ್ಲಾ ಕಾನಾನ್ಯರು ಮಾಡಿದಂತೆ, ಯೆರಿಕೋದಲ್ಲಿರುವ ಜನರು ಕೂಡ ಸುಳ್ಳು ದೇವರುಗಳನ್ನು ಆರಾಧನೆ ಮಾಡಿದ್ದರು.
- ಇಸ್ರಾಯೇಲ್ಯರು ಜಯಿಸುವುದಕ್ಕೆ ದೇವರು ಹೇಳಿದ ಮೊಟ್ಟ ಮೊದಲನೇ ಪಟ್ಟಣ ಕಾನಾನ್ ಭೂಮಿಯಲ್ಲಿರುವ ಯೆರಿಕೋ ಆಗಿತ್ತು.
- ಯೆರಿಕೋಗೆ ವಿರುದ್ಧವಾಗಿ ಯೆಹೋಶುವನು ಇಸ್ರಾಯೇಲ್ಯರನ್ನು ನಡಿಸಿದಾಗ, ಆ ಪಟ್ಟಣವನ್ನು ಸೋಲಿಸುವುದಕ್ಕೆ ಸಹಾಯ ಮಾಡಲು ದೇವರು ದೊಡ್ಡ ಅದ್ಭುತ ಕಾರ್ಯವನ್ನು ಮಾಡಿದರು.
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಯೋರ್ದನ್ ನದಿ, ಯೆಹೋಶುವ, ಅದ್ಭುತ, ಉಪ್ಪು ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 15:01 ಯೆಹೋಶುವ ಕಾನಾನ್ ಪಟ್ಟಣವಾಗಿರುವ ___ ಯೆರಿಕೋಗೆ ___ ಇಬ್ಬರು ಗೂಢಚಾರಿಗಳನ್ನು ಕಳುಹಿಸಿದನು.
- 15:03 ಜನರೆಲ್ಲರು ಯೋರ್ದನ್ ನದಿಯನ್ನು ದಾಟಿದನಂತರ, ಮಹಾ ಶಕ್ತಿಯುಳ್ಳ ___ ಯೆರಿಕೋ ___ ಪಟ್ಟಣವನ್ನು ಹೇಗೆ ಧಾಳಿ ಮಾಡಬೇಕೆಂದು ದೇವರು ಯೆಹೋಶುವನಿಗೆ ಹೇಳಿದನು.
- 15:05 ಅದಾದನಂತರ ___ ಯೆರಿಕೋ ___ ಸುತ್ತಲು ಇರುವ ಗೋಡೆಗಳು ಬಿದ್ದುಹೋದವು! ದೇವರು ಆಜ್ಞಾಪಿಸಿದ ಪ್ರಕಾರವೇ ಪಟ್ಟಣದಲ್ಲಿರುವ ಪ್ರತಿಯೊಂದನ್ನು ಇಸ್ರಾಯೇಲ್ಯರು ನಾಶ ಮಾಡಿದರು.
ಪದ ಡೇಟಾ:
- Strong's: H3405, G2410
ಯೆರೂಸಲೇಮ್
ಸತ್ಯಾಂಶಗಳು:
ಯೆರೂಸಲೇಮ್ ಮೂಲತಃ ಪ್ರಾಚೀನ ಕಾನಾನ್ಯರ ಪಟ್ಟಣವಾಗಿದ್ದು ಅದು ನಂತರ ಇಸ್ರಾಯೇಲ್ ನ ಪ್ರಮುಖ ಪಟ್ಟಣವಾಯಿತು. ಇದು ಬೆತ್ಲೆಹೇಮ್ ಊರಿನ ಉತ್ತರ ದಿಕ್ಕಿಗೆ ಮತ್ತು ಮೃತ ಸಮುದ್ರ ಪಶ್ಚಿಮದ ಕಡೆಗೆ 34 ಕಿಲೋಮೀಟರ್ ದೂರದಲ್ಲಿರುತ್ತದೆ. ಇದು ಇವತ್ತಿಗೂ ಇಸ್ರಾಯೇಲ್ ದೇಶಕ್ಕೆ ರಾಜಧಾನಿಯಾಗಿರುತ್ತದೆ.
- “ಯೆರೂಸಲೇಮ್” ಎನ್ನುವ ಹೆಸರು ಮೊಟ್ಟ ಮೊದಲು ಯೆಹೋಶುವ ಗ್ರಂಥದಲ್ಲಿ ದಾಖಲಿಸಲಾಗಿರುತ್ತದೆ. ಈ ಪಟ್ಟಣಕ್ಕೆ ಹಳೇ ಒಡಂಬಡಿಕೆಯಲ್ಲಿ “ಸಾಲೇಮ್” “ಯೆಬೂಸಿಯರ ಪಟ್ಟಣ” ಮತ್ತು “ಚೀಯೋನ್” ಎನ್ನುವ ಪದಗಳನ್ನೂ ಉಪಯೋಗಿಸಿದ್ದಾರೆ. “ಯೆರೂಸಲೇಮ್” ಮತ್ತು “ಸಾಲೇಮ್” ಎನ್ನುವ ಎರಡು ಪದಗಳಿಗೆ “ಸಮಾಧಾನ” ಎನ್ನುವ ಮೂಲಾರ್ಥವಿದೆ.
- ಯೆರೂಸೇಲಮ್ ಎನ್ನುವುದು ವಾಸ್ತವಿಕವಾಗಿ “ಚೀಯೋನ್” ಎನ್ನುವ ಹೆಸರಿನ ಮೇಲೆ ಯೆಬೂಸಿಯರ ಕೋಟೆಯಾಗಿತ್ತು, ಇದನ್ನು ದಾವೀದನು ವಶಪಡಿಸಿಕೊಂಡು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.
ದಾವೀದನ ಮಗನಾಗಿರುವ ಸೊಲೊಮೋನನು ಯೆರೂಸಲೇಮಿನಲ್ಲಿಯೇ ಮೊಟ್ಟ ಮೊದಲು ಮೊರಿಯಾ ಪರ್ವತದ ಮೇಲೆ ದೇವಾಲಯವನ್ನು ನಿರ್ಮಿಸಿದನು, ಈ ಪರ್ವತದ ಮೇಲೆಯೇ ಅಬ್ರಾಹಾಮನು ಇಸಾಕನನ್ನು ದೇವರಿಗೆ ಸರ್ವಾಂಗ ಹೋಮವನ್ನಾಗಿ ಅರ್ಪಿಸಿದನು. ಅಲ್ಲಿರುವ ದೇವಾಲಯವು ಬಾಬೆಲೋನಿಯರಿಂದ ನಾಶಕ್ಕೊಳಗಾದನಂತರ ಅಲ್ಲಿ ಮತ್ತೊಮ್ಮೆ ದೇವಾಲಯವನ್ನು ತಿರುಗಿ ನಿರ್ಮಿಸಿದರು.
- ಯೆರೂಸಲೇಮಿನಲ್ಲಿ ದೇವಾಲಯ ಇರುವುದರಿಂದ, ಯೆಹೂದ್ಯರ ದೊಡ್ಡ ಹಬ್ಬಗಳು ಅಲ್ಲೇ ಆಚರಿಸುತ್ತಿದ್ದರು.
- ಸಾಮಾನ್ಯವಾಗಿ ಜನರು ಯೆರೂಸಲೇಮಿಗೆ “ಏರಿ” ಹೋಗುತ್ತಿದ್ದರು, ಯಾಕಂದರೆ ಇದು ಬೆಟ್ಟಗುಡ್ಡಗಳ ಮಧ್ಯೆ ಇದೆ.
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನ, ಕ್ರಿಸ್ತ, ದಾವೀದ, ಜೆಬೂಸಿಯರು, ಯೇಸು, ಸೊಲೊಮೋನ, ದೇವಾಲಯ, ಚೀಯೋನ್)
ಸತ್ಯವೇದದ ಅನುಬಂಧ ವಾಕ್ಯಗಳು :
- ಗಲಾತ್ಯ.04:26-27
- ಯೋಹಾನ.02:13-14
- ಲೂಕ.04:9-11
- ಲೂಕ.13:4-5
- ಮಾರ್ಕ.03:7-8
- ಮಾರ್ಕ.03:20-22
- ಮತ್ತಾಯ.03:4-6
- ಮತ್ತಾಯ.04:23-25
- ಮತ್ತಾಯ.20:17-19
ಸತ್ಯವೇದದಿಂದ ಉದಾಹರಣೆಗಳು:
- 17:05 ದಾವೀದನು ___ ಯೆರೂಸೇಲಮನ್ನು ___ ಜಯಿಸಿದನು ಮತ್ತು ಅದನ್ನು ತನ್ನ ಮುಖ್ಯ ಪಟ್ಟಣವನ್ನಾಗಿ ಮಾಡಿಕೊಂಡನು.
- 18:02 ಸೊಲೊಮೋನನು ___ ಯೆರೂಸಲೇಮಿನಲ್ಲಿ ___ ದೇವಾಲಯವನ್ನು ಕಟ್ಟಿದನು, ಯಾಕಂದರೆ ತನ್ನ ತಂದೆಯಾದ ದಾವೀದನು ಪ್ರಣಾಳಿಕೆ ಮಾಡಿದ್ದನು ಮತ್ತು ಎಲ್ಲಾ ವಸ್ತುಗಳನ್ನು ಸಂಗ್ರಹಿಸಿದ್ದನು.
- 20:07 ಅವರು (ಬಾಬೆಲೋನಿಯರು)___ ಯೆರೂಸಲೇಮ್ ___ ಸ್ವಾಧೀನ ಮಾಡಿಕೊಂಡರು, ದೇವಾಲಯವನ್ನು ಕೆಡಿಸಿದರು ಮತ್ತು ದೇವಾಲಯದಲ್ಲಿರುವ, ಪಟ್ಟಣದಲ್ಲಿರುವ ನಿಧಿಗಳೆಲ್ಲವುಗಳನ್ನು ತೆಗೆದುಕೊಂಡು ಹೋದರು.
- 20:12 ಸುಮಾರು ಎಪ್ಪತ್ತು ವರ್ಷಗಳು ಸೆರೆಯಲ್ಲಿದ್ದನಂತರ, ಯೆಹೂದ್ಯರ ಚಿಕ್ಕ ಗುಂಪು ಯೂದಾದಲ್ಲಿರುವ __ ಯೆರೂಸಲೇಮ್ __ ಪಟ್ಟಣಕ್ಕೆ ಹಿಂದುರಿಗಿದರು.
- 38:01 ಮೂವತ್ತು ವರ್ಷಗಳಾದನಂತರ ಯೇಸು ಬಹಿರಂಗವಾಗಿ ಬೋಧಿಸುವುದಕ್ಕೂ ಮತ್ತು ಪ್ರಸಂಗ ಮಾಡುವುದಕ್ಕೂ ಆರಂಭಿಸಿದರು, ಯೇಸು ___ ಯೆರೂಸಲೇಮಿನಲ್ಲಿ ___ ತನ್ನ ಶಿಷ್ಯರೊಂದಿಗೆ ಈ ಪಸ್ಕಾವನ್ನು ಆಚರಿಸಬೇಕೆಂದು ಬಯಸಿ ಆತನು ತನ್ನ ಶಿಷ್ಯರಿಗೆ ಹೇಳಿದನು ಮತ್ತು ಆತನು ಅಲ್ಲಿಯೇ ಮರಣ ಹೊಂದಬೇಕಾಗಿತ್ತು.
- 38:02 __ ಯೆರೂಸಲೇಮಿನೊಳಗೆ __ ಯೇಸು ಮತ್ತು ತನ್ನ ಶಿಷ್ಯರು ಬಂದನಂತರ, ಯೂದಾನು ಯೆಹೂದ್ಯರ ನಾಯಕರ ಬಳಿಗೆ ಹೋದನು ಮತ್ತು ಹಣಕ್ಕಾಗಿ ಯೇಸುವಿಗೆ ದ್ರೋಹ ಮಾಡಲು ಅವರೊಂದಿಗೆ ಒಪ್ಪಂದ ಮಾಡಿಕೊಂಡನು.
- 42:08 “ಎಲ್ಲಾ ಜನರು ತಮ್ಮ ಪಾಪಗಳಿಗೆ ಕ್ಷಮಾಪಣೆಯನ್ನು ಹೊಂದಿಕೊಳ್ಳಬೇಕೆನ್ನುವ ಕ್ರಮದಲ್ಲಿ ಪ್ರತಿಯೊಬ್ಬರೂ ಮಾನಸಾಂತರ ಹೊಂದಬೇಕೆಂದು ನನ್ನ ಶಿಷ್ಯರು ಪ್ರಕಟಿಸುತ್ತಾರೆಂದು ವಾಕ್ಯಗಳಲ್ಲಿಯೂ ಬರೆಯಲ್ಪಟ್ಟಿದೆ. ಅವರು ಇದನ್ನು ___ ಯೆರೂಸಲೇಮಿನಲ್ಲಿ ___ ಆರಂಭ ಮಾಡಿ, ಪ್ರತಿಯೊಂದು ಸ್ಥಳದಲ್ಲಿ ನಿವಾಸವಾಗಿರುವ ಜನರ ಗುಂಪುಗಳ ಬಳಿಗೆ ಹೋಗುವರು.”
- 42:11 ಯೇಸು ಮರಣದಿಂದ ಎದ್ದುಬಂದನಂತರ, “ಮೇಲಣ ಲೋಕದಿಂದ ಪವಿತ್ರಾತ್ಮನು ನಿಮ್ಮ ಮೇಲಕ್ಕೆ ಇಳಿದು ಬಂದಾಗ ನೀವು ಶಕ್ತಿಯನ್ನು ಹೊಂದುವವರೆಗೂ ___ ಯೆರೂಸಲೇಮಿನಲ್ಲಿಯೇ ___ ನಿಂತಿರಿ” ಎಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
ಪದ ಡೇಟಾ:
- Strong's: H3389, H3390, G2414, G2415, G2419
ಯೆರೆಮೀಯ
ಸತ್ಯಾಂಶಗಳು:
ಯೆರೆಮೀಯ ಎನ್ನುವ ವ್ಯಕ್ತಿ ಯೂದಾ ರಾಜ್ಯದಲ್ಲಿ ದೇವರ ಪ್ರವಾದಿಯಾಗಿರುತ್ತಾನೆ. ಹಳೇ ಒಡಂಬಡಿಕೆಯಲ್ಲಿರುವ ಯೆರೆಮೀಯ ಗ್ರಂಥದಲ್ಲಿ ಆತನ ಪ್ರವಾದನೆಗಳು ಇರುತ್ತವೆ.
- ಅನೇಕ ಪ್ರವಾದಿಗಳಂತೆ, ಇಸ್ರಾಯೇಲ್ ಜನರ ಪಾಪ ಕೃತ್ಯಗಳಿಗಾಗಿ ದೇವರು ಅವರನ್ನು ಶಿಕ್ಷಿಸುತ್ತಾನೆಂದು ಯೆರೆಮೀಯ ಅವರನ್ನು ಎಚ್ಚರಿಸಿದನು.
- ಯೂದಾ ಜನರಲ್ಲಿ ಕೆಲವರನ್ನು ಸಿಟ್ಟಿಗೆಬ್ಬಿಸುತ್ತಾ, ಬಾಬೆಲೋನಿಯರು ಯೆರೂಸಲೇಮನ್ನು ವಶಪಡಿಸಿಕೊಳ್ಳುತ್ತಾರೆಂದು ಪ್ರವಾದಿಸಿದನು. ಅದಕ್ಕಾಗಿ ಆ ಜನರು ಅವನನ್ನು ಒಂದು ಆಳವಾದ ಒಣ ಬಾವಿಯಲ್ಲಿ ಹಾಕಿ, ಸಾಯುವುದಕ್ಕೆ ಆಲ್ಲೇ ಬಿಟ್ಟುಬಿಟ್ಟರು. ಆದರೆ ಆ ಬಾವಿಯಿಂದ ಯೆರೆಮೀಯಾನನ್ನು ರಕ್ಷಿಸುವುದಕ್ಕೆ ಯೂದಾ ಅರಸನು ತನ್ನ ಆಳುಗಳಿಗೆ ಆಜ್ಞಾಪಿಸಿದನು.
- ಯೆರೆಮೀಯಾ ತನ್ನ ಜನರ ಶ್ರಮೆಗಳ ಮತ್ತು ತಿರಸ್ಕಾರಗಳ ಮಧ್ಯೆದಲ್ಲಿದ್ದು ಆಳವಾದ ಬಾಧೆಯನ್ನು ಅಥವಾ ನೋವನ್ನು ಅನುಭವಿಸಿದ್ದನ್ನು ವ್ಯಕ್ತಗೊಳಿಸಲು, ನನ್ನ ನೇತ್ರಗಳು “ಕಣ್ಣೀರಿನ ಬುಗ್ಗೆಯಾಗಿದ್ದರೆ” ಎಷ್ಟೋ ಲೇಸು ಎಂದು ತನ್ನ ಗ್ರಂಥದಲ್ಲಿ ಬರೆದಿದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬಿಲೋನಿಯ, ಯೂದಾ, ಪ್ರವಾದಿ, ತಿರಸ್ಕಾರ, ಶ್ರಮಿಸು, ಬಾವಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 19:17 ಪ್ರವಾದಿಯಾದ __ ಯೆರೆಮೀಯಾನನ್ನು __ ಒಣಗಿದ ಬಾವಿಯಲ್ಲಿ ಹಾಕಿ, ಅಲ್ಲೇ ಅವನು ಸಾಯುವುದಕ್ಕೆ ಬಿಟ್ಟುಬಿಟ್ಟರು. ಅವನು ಬಾವಿಯ ಕೆಳಭಾಗದಲ್ಲಿರುವ ಕೆಸರಿನಲ್ಲಿ ಸಿಳುಕಿಕೊಂಡನು, ಆದರೆ ಅರಸನು ಅವನ ಮೇಲೆ ದಯೆ ತೋರಿಸಿದ್ದನು ಮತ್ತು ಆ ಬಾವಿಯಲ್ಲಿ __ ಯೆರೆಮೀಯಾ __ ಸಾಯುವುದಕ್ಕೆ ಮುಂಚಿತವಾಗಿ, ಅವನನ್ನು ಮೇಲಕ್ಕೆ ಎಳೆಯಿರಿ ಎಂದು ತನ್ನ ದಾಸರಿಗೆ ಆಜ್ಞಾಪಿಸಿದನು.
- 21:05 ಪ್ರವಾದಿಯಾದ __ಯೆರೆಮೀಯಾ __ ಮೂಲಕ, ದೇವರು ಒಂದು ಹೊಸ ಒಡಂಬಡಿಕೆಯನ್ನು ಮಾಡುತ್ತೇನೆಂದು ವಾಗ್ಧಾನ ಮಾಡಿದರು, ಆದರೆ ಸೀನಾಯಿ ಮೇಲೆ ಇಸ್ರಾಯೇಲ್.ನೊಂದಿಗೆ ಮಾಡಿದ ಒಡಂಬಡಿಕೆಯಂಥದ್ದಲ್ಲ.
ಪದ ಡೇಟಾ:
- Strong's: H3414, G2408
ಯೆಶಯಾ
ಸತ್ಯಾಂಶಗಳು:
ಯೆಶಯಾ ದೇವರ ಪ್ರವಾದಿಯಾಗಿದ್ದನು, ಇವರು ಯೂದಾ ರಾಜ್ಯವನ್ನು ನಾಲ್ಕು ಮಂದಿ ಆಳುತ್ತಿರುವ ಸಮಯದಲ್ಲಿ ಪ್ರವಾದಿಯಾಗಿದ್ದನು : ಉಜ್ಜೀಯ, ಯೋತಾಮ, ಆಹಾಜ ಮತ್ತು ಹಿಜ್ಕೀಯ.
- ಈತನು ಹಿಜ್ಕೀಯ ಆಳುವ ಕಾಲದಲ್ಲಿ ಪಟ್ಟಣವನ್ನು ಅಶ್ಯೂರಿಯರು ಧಾಳಿ ಮಾಡಿದ ಸಂದರ್ಭದಲ್ಲಿ ಯೆರೂಸಲೇಮಿನಲ್ಲಿ ಜೀವಿಸುತ್ತಿದ್ದನು.
- ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಯೆಶಯಾ ಗ್ರಂಥ ಸತ್ಯವೇದದ ದೊಡ್ಡ ಪುಸ್ತಕಗಳಲ್ಲಿ ಒಂದಾಗಿರುತ್ತದೆ.
- ಯೆಶಯನು ಅನೇಕ ಪ್ರವಾದನೆಗಳನ್ನು ಬರೆದಿದ್ದಾನೆ, ಆತನು ಜೀವಂತವಾಗಿರುವಾಗಲೇ ಅವುಗಳಲ್ಲಿ ಕೆಲವು ನಡೆದಿದ್ದವು.
- ಯೆಶಯಾನು ವಿಶೇಷವಾಗಿ ಪ್ರವಾದಿಸುವುದರಲ್ಲಿ ಪ್ರಸಿದ್ಧನಾಗಿದ್ದನು, ಮೆಸ್ಸೀಯಾನ ಕುರಿತಾಗ ಪ್ರವಾದನೆಯು ಸುಮಾರು 7೦೦ ವರ್ಷಗಳಾದನಂತರ ಅಂದರೆ ಯೇಸುವು ಈ ಭೂಮಿಯ ಮೇಲೆ ಬರುವ ಸಮಯದಲ್ಲಿ ನೇರವೆರಿಸಲ್ಪಟ್ಟಿತ್ತು.
- ಯೇಸು ಮತ್ತು ತನ್ನ ಶಿಷ್ಯರು ಮೆಸ್ಸೀಯನ ಕುರಿತಾಗಿ ಜನರಿಗೆ ಬೋಧನೆ ಮಾಡುವುದಕ್ಕೆ ಯೆಶಯಾನ ಪ್ರವಾದನೆಗಳನ್ನು ಕ್ರೋಡೀಕರಿಸಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಹಾಜ, ಅಶ್ಯೂರ, ಕ್ರಿಸ್ತ, ಹಿಜ್ಕೀಯ, ಯೋತಾಮ, ಪ್ರವಾದಿ, ಉಜ್ಜೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
- 2 ಅರಸ.20:1-3
- ಅಪೊ.ಕೃತ್ಯ.28:25-26
- ಯೆಶಯಾ.01:1
- ಲೂಕ.03:4
- ಮಾರ್ಕ.01:1-3
- ಮಾರ್ಕ.07:6-7
- ಮತ್ತಾಯ.03:1-3
- ಮತ್ತಾಯ.04:14-16
ಸತ್ಯವೇದದಿಂದ ಉದಾಹರಣೆಗಳು:
- 21:09 ಮೆಸ್ಸೀಯ ಒಬ್ಬ ಕನ್ಯೆಯ ಮೂಲಕ ಜನಿಸುವನೆಂದು ಪ್ರವಾದಿಯಾದ ___ ಯೆಶಯಾ ___ ಪ್ರವಾದಿಸಿದನು.
- 21:10 ಮೆಸ್ಸೀಯ ಗಲಿಲಾಯದಲ್ಲಿ ನಿವಾಸವಾಗಿರುವನು, ಮನ ಮುರಿದ ಜನರನ್ನು ಆದರಿಸುವನು, ಮತ್ತು ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಪ್ರಕಟಿಸುವನು ಮತ್ತು ಬಂಧಿತರನ್ನು ಬಿಡುಗಡೆಗೊಳಿಸುವನು ಎಂದು ಪ್ರವಾದಿಯಾದ ___ ಯೆಶಯಾ ___ ನುಡಿದನು.
- 21:11 ಮೆಸ್ಸೀಯನು ಯಾವ ಕಾರಣವಿಲ್ಲದೆ ದ್ವೇಷಿಸಲ್ಪಡುವನು ಮತ್ತು ತಿರಸ್ಕರಿಸಲ್ಪಡುವನು ಎಂದೂ ಪ್ರವಾದಿಯಾದ ___ ಯೆಶಯಾ ___ ಪ್ರವಾದಿಸಿದನು.
- 21:12 ಜನರು ಮೆಸ್ಸೀಯನನ್ನು ಉಗಿಯುವರು, ಹಿಯಾಳಿಸುವರು ಮತ್ತು ಹೊಡೆಯುವರು ಎಂದು ___ ಯೆಶಯಾ ___ ಪ್ರವಾದಿಸಿದನು.
- 26:02 ಅವರು ಪ್ರವಾದಿಯಾದ ___ ಯೆಶಾಯನ ___ ಸುರುಳಿಯನ್ನು ಓದಬೇಕೆಂದು ಆತನಿಗೆ (ಯೇಸುವಿಗೆ) ಕೊಟ್ಟರು. ಆಗ ಯೇಸು ಅದನ್ನು ತೆರೆದು, ಜನರೆಲ್ಲರಿಗೆ ಅದರ ಭಾಗವನ್ನು ಓದಿದನು.
- 45:08 ಫಿಲಿಪ್ಪನು ರಥವನ್ನು ಸಮೀಪಿಸಿದನಂತರ, ಪ್ರವಾದಿಯಾದ ___ ಯೆಶಯಾನು ___ ಬರೆದಿರುವ ಪುಸ್ತಕದಿಂದ ಇಥಿಯೋಪ್ಯನು ಓದುತ್ತಿರುವುದನ್ನು ಕೇಳಿಸಿಕೊಂಡನು.
- 45:10 ___ ಯೆಶಯಾನು ___ ಯೇಸುವಿನ ಕುರಿತಾಗಿ ಬರೆದಿದ್ದಾನೆಂದು ಫಿಲಿಪ್ಪನು ಇಥಿಯೋಪ್ಯದವನಿಗೆ ವಿವರಿಸಿ ಹೇಳಿದನು.
ಪದ ಡೇಟಾ:
- Strong's: H3470, G2268
ಯೆಹೂದ, ಯೆಹೂದ ರಾಜ್ಯ
ಸತ್ಯಾಂಶಗಳು:
ಯೆಹೂದ ಕುಲ ಎನ್ನುವುದು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಅತಿ ದೊಡ್ಡದಾದ ಕುಲ. ಯೆಹೂದ ಕುಲವು ಯೆಹೂದ ಮತ್ತು ಬೆನ್ಯಾಮೀನ ಕುಲಗಳಿಂದ ಉಂಟಾಗಿರುತ್ತದೆ.
- ಅರಸನಾದ ಸೊಲೊಮೋನನು ಸತ್ತುಹೋದನಂತರ, ಇಸ್ರಾಯೇಲ್ ರಾಜ್ಯವು ಎರಡು ರಾಜ್ಯಗಳಾಗಿ ವಿಂಗಡನೆಯಾಯಿತು: ಇಸ್ರಾಯೇಲ್ ಮತ್ತು ಯೆಹೂದ. ಯೆಹೂದ ರಾಜ್ಯವು ದಕ್ಷಿಣ ರಾಜ್ಯವಾಗಿರುತ್ತದೆ, ಇದು ಲವಣ ಸಮುದ್ರದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ.
- ಯೆಹೂದ ರಾಜ್ಯದ ರಾಜಧಾನಿ ಪಟ್ಟಣವು ಯೆರೂಸಲೇಮ್ ಆಗಿತ್ತು.
- ಯೆಹೂದ ರಾಜ್ಯದ ಎಂಟು ಮಂದಿ ಅರಸರು ಯೆಹೋವನಿಗೆ ವಿಧೇಯರಾದರು ಮತ್ತು ಆತನನ್ನೇ ಜನರು ಆರಾಧನೆ ಮಾಡುವಂತೆ ಮಾಡಿದರು. ಯೆಹೂದದಲ್ಲಿರುವ ಇತರ ಅರಸರೆಲ್ಲರೂ ದುಷ್ಟರಾಗಿದ್ದರು ಮತ್ತು ಎಲ್ಲಾ ಜನರು ವಿಗ್ರಹಗಳಿಗೆ ಆರಾಧನೆ ಮಾಡುವಂತೆ ನಡೆಸಿದರು.
- ಅಶ್ಯೂರಿಯರು ಇಸ್ರಾಯೇಲ್ (ಉತ್ತರ ರಾಜ್ಯ) ರಾಜ್ಯವನ್ನು ಸೋಲಿಸಿ 120 ವರ್ಷಗಳಾದನಂತರ, ಯೆಹೂದ ರಾಜ್ಯವನ್ನು ಬಾಬೆಲೋನಿಯ ದೇಶದವರು ವಶಪಡಿಸಿಕೊಂಡರು. ಬಾಬೆಲೋನಿಯನ್ನರು ಪಟ್ಟಣವನ್ನು ಮತ್ತು ದೇವಾಲಯವನ್ನು ನಾಶಗೊಳಿಸಿದರು, ಮತ್ತು ಅನೇಕಮಂದಿ ಯೆಹೂದ್ಯರನ್ನು ಸೆರೆ ಹಿಡಿದು ಬಾಬೆಲೋನಿಯಾಗೆ ಕರೆದೊಯ್ದರು.
(ಈ ಪದಗಳನ್ನು ಸಹ ನೋಡಿರಿ : ಯೆಹೂದ, ಲವಣ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 18:07 ಅವನಿಗೆ (ರೆಹೊಬ್ಬಾಮನಿಗೆ) ಕೇವಲ ಎರಡು ಕುಲದವರು ಮಾತ್ರ ನಂಬಿಕೆಯಿಂದ ಇದ್ದರು. ಈ ಎರಡು ಕುಲಗಳು __ ಯೆಹೂದ ರಾಜ್ಯವಾಗಿ __ ಮಾರ್ಪಟ್ಟಿದವು.\
- 18:10 __ ಯೆಹೂದ ರಾಜ್ಯವು __ ಮತ್ತು ಇಸ್ರಾಯೇಲ್ ರಾಜ್ಯವು ಶತ್ರುಗಳಾದರು, ಮತ್ತು ಅವರು ಒಬ್ಬರಿಗೊಬ್ಬರ ವಿರುದ್ಧ ಹೋರಾಟ ಮಾಡಿಕೊಂಡರು. \
- 18:13 __ ಯೆಹೂದ ಅರಸರು __ ದಾವೀದನ ವಂಶಸ್ಥರಾಗಿದ್ದರು. ಈ ಅರಸರಲ್ಲಿ ಕೆಲವರು ಒಳ್ಳೇಯ ವ್ಯಕ್ತಿಗಳು, ನ್ಯಾಯವಾಗಿ ಪಾಲನೆ ಮಾಡಿದರು ಮತ್ತು ದೇವರನ್ನು ಆರಾಧಿಸಿದರು. ಆದರೆ __ ಯೆಹೂದದ __ ಅರಸರಲ್ಲಿ ಹೆಚ್ಚಿನ ಜನರು ದುಷ್ಟರು, ಭ್ರಷ್ಟರು ಮತ್ತು ಅವರು ವಿಗ್ರಹಗಳನ್ನು ಆರಾಧನೆ ಮಾಡಿದರು. \
- 20:01 __ ಯೆಹೂದ ಮತ್ತು ಇಸ್ರಾಯೇಲ್ ರಾಜ್ಯಗಳೆರಡು __ ದೇವರಿಗೆ ವಿರುದ್ಧವಾಗಿ ಪಾಪಮಾಡಿದರು.\
- 20:05 ದೇವರಿಗೆ ಅವಿಧೇಯರಾಗಿದ್ದಕ್ಕಾಗಿ ಮತ್ತು ಆತನಲ್ಲಿ ನಂಬಿಕೆ ಇಡದಿದ್ದಕ್ಕಾಗಿ ಇಸ್ರಯೇಲ್ ರಾಜ್ಯದ ಜನರನ್ನು ದೇವರು ಯಾವರೀತಿ ಶಿಕ್ಷಿಸಿದ್ದಾನೆಂದು __ ಯೆಹೂದ ರಾಜ್ಯದಲ್ಲಿರುವ __ ಜನರು ಚೆನ್ನಾಗಿ ನೋಡಿದ್ದಾರೆ. ಆದರೂ ಅವರು ವಿಗ್ರಹಗಳಿಗೆ ಆರಾಧನೆ ಮಾಡಿದರು, ಆ ವಿಗ್ರಹಗಳಲ್ಲಿ ಕಾನಾನ್ಯರ ಸುಳ್ಳು ದೇವರುಗಳೂ ಒಳಗೊಂಡಿದ್ದವು.
- 20:06 ಇಸ್ರಾಯೇಲ್ ರಾಜ್ಯವನ್ನು ಅಶ್ಯೂರಿಯನ್ನರು ನಾಶಗೊಳಿಸಿ ಸುಮಾರು 100 ವರ್ಷಗಳು ಆದನಂತರ, __ ಯೆಹೂದ ರಾಜ್ಯದ ಮೇಲೆ __ ಧಾಳಿ ಮಾಡುವುದಕ್ಕಾಗಿ ದೇವರು ಬಾಬೆಲೋನಿಯ ಅರಸನಾಗಿರುವ ನೆಬೂಕದ್ನೆಚ್ಚರನನ್ನು ಕಳುಹಿಸಿಕೊಟ್ಟರು. \
- 20:09 ನೆಬೂಕದ್ನೆಚ್ಚರ ಮತ್ತು ತನ್ನ ಸೈನ್ಯವು __ ಯೆಹೂದ ರಾಜ್ಯದಲ್ಲಿರುವ __ ಜನರೆಲ್ಲರನ್ನು ಬಾಬೆಲೋನಿಗೆ ಸೆರೆಗೊಯ್ದರು, ಆದರೆ ಹೊಲಗಳಲ್ಲಿ ಮತ್ತು ಮರಗಳ ಕೆಳಗೆ ಇರುವ ಬಡ ಜನರನ್ನು ಮಾತ್ರ ಅಲ್ಲಿಯೇ ಬಿಟ್ಟುಬಿಟ್ಟರು.
ಪದ ಡೇಟಾ:
- Strong's: H4438, H3063
ಯೆಹೆಜ್ಕೇಲನು
ಸತ್ಯಾಂಶಗಳು:
ಯಹೂದಿಯರು ಬಾಬುಲೋನಿಗೆ ಸೆರೆಯಾಗಿ ಹಿಡಿದಿದ್ದಾಗ ಯೆಹೆಜ್ಕೇಲನು ಯೆಹೋವನ ಪ್ರವಾದಿಯಾಗಿದ್ದನು.
- ಯೆಹೆಜ್ಕೇಲನು ಯೆಹೂದಿಯ ರಾಜ್ಯದಲ್ಲಿ ನಿವಾಸ ಮಾಡುತ್ತಿದ್ದಾಗ ಅವನನ್ನು ಮತ್ತು ಅನೇಕ ಯಹೂದಿಯರನ್ನು ಬಾಬುಲೋನಿನ ಸೈನ್ಯವು ಸ್ವಾಧೀನಪಡಿಸಿಕೊಂಡರು.
- ಸುಮಾರು ಇಪತ್ತು ವರ್ಷಗಳ ಕಾಲ, ಅವನು ಮತ್ತು ಅವನ ಹೆಂಡತಿ ಬಾಬುಲೋನ್ ನದಿಯ ಬಳಿ ಜೀವಿಸಿದರು ಮತ್ತು ಯೆಹೋವನ ಸಂದೇಶಗಳನ್ನು ಕೇಳಲು ಯೆಹೂದ್ಯರು ಅವನ ಬಳಿಗೆ ಬರುತ್ತಿದ್ದರು.
- ಬೇರೆ ವಿಷಯಗಳಲ್ಲಿ, ಯೆರುಸಲೇಮ್ ಪಟ್ಟಣ ಮತ್ತು ದೇವಾಲಯದ ನಾಶವು ಮತ್ತು ಪುನರ್ನಿರ್ಮಾಣವನ್ನು ಕುರಿತು ಯೆಹೆಜ್ಕೇಲನು ಪ್ರವಾದಿಸಿದನು.
- ಬರುವಂತಹ ಮೆಸ್ಸಯನ ರಾಜ್ಯವನ್ನು ಕುರಿತಾಗಿ ಯೆಹೆಜ್ಕೇಲನು ಪ್ರವಾದಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬುಲೋನ್, ಕ್ರಿಸ್ತನು, ಸೆರೆ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3168
ಯೆಹೋಯಾಕೀಮ
ಸತ್ಯಾಂಶಗಳು:
ಯೆಹೋಯಾಕೀಮನು ಯೂದಾ ರಾಜ್ಯವನ್ನು ಆಳಿದ ದುಷ್ಟ ಅರಸನಾಗಿದ್ದನು, ಇವನು ಕ್ರಿ.ಪೂ.608 ಆರಂಭದಲ್ಲಿ ಆಳ್ವಿಕೆಯನ್ನು ಆರಂಭಿಸಿದ್ದನು. ಇವನು ಅರಸನಾದ ಯೋಷೀಯ ಮಗನಾಗಿದ್ದನು. ಇವನ ಹೆಸರು ನಿಜವಾಗಿ ಎಲ್ಯಾಕೀಮ್ ಎಂದಾಗಿತ್ತು.
- ಐಗುಪ್ತ ಫರೋಹನಾಗಿರುವ ನೆಕೋನನು ಎಲ್ಯಾಕೀಮ್ ಹೆಸರನ್ನು ಯೆಹೋಯಾಕೀಮ್ ಎಂದಾಗಿ ಮಾರ್ಪದಿಸಿದನು ಮತ್ತು ಇವನನ್ನು ಯೂದಾ ಅರಸನನ್ನಾಗಿ ಮಾಡಿದನು.
- ನೆಕೋ ಯೆಹೋಯಾಕೀಮನನ್ನು ಐಗುಪ್ತಕ್ಕೆ ತೆರಿಗೆಗಳನ್ನು ಕಟ್ಟಬೇಕೆಂದು ಬಲವಂತ ಮಾಡಿದನು.
- ಅರಸನಾದ ನೆಬುಕದ್ನೆಚ್ಚರನಿಂದ ಯೂದಾ ದಾಳಿಗೆ ಗುರಿಯಾದಾಗ, ಸೆರೆಗೆ ಸಿಕ್ಕಿದವರಲ್ಲಿ ಯೆಹೋಯಾಕೀಮನು ಇದ್ದಿದ್ದನು ಮತ್ತು ಅವರನ್ನು ಬಾಬೆಲೋನಿಯಕ್ಕೆ ಕರೆದೊಯ್ಯಲ್ಪಟ್ಟನು.
- ಯೆಹೋವನಿಂದ ಯೂದಾವನ್ನು ಪಕ್ಕಕ್ಕೆ ನಡೆಸಿದ ದುಷ್ಟ ಅರಸ ಯೆಹೋಯಾಕೀಮನಾಗಿದ್ದನು. ಪ್ರವಾದಿಯಾದ ಯೆರೆಮೀಯ ಅವನಿಗೆ ವಿರುದ್ಧವಾಗಿ ಪ್ರವಾದಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಎಲ್ಯಾಕೀಮ, ಯೆರೆಮೀಯ, ಯೂದಾ, ನೆಬುಕದ್ನೆಚ್ಚರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3079
ಯೆಹೋಯಾಖೀನ
ಸತ್ಯಾಂಶಗಳು:
ಯೆಹೋಯಾಖೀನನು ಯೂದಾ ರಾಜ್ಯವನ್ನು ಆಳಿದ ಅರಸನಾಗಿದ್ದನು.
- ಯೆಹೋಯಾಖೀನನು ತನ್ನ 18ನೇ ವಯಸ್ಸಿನಲ್ಲಿಯೇ ಅರಸನಾಗಿದ್ದನು. ಇವನು ಕೇವಲ ಮೂರು ತಿಂಗಳು ಮಾತ್ರ ಆಳಿದನು, ಮತ್ತು ಇವನನ್ನು ಬಾಬೆಲೋನಿಯ ಸೈನ್ಯವು ಹಿಡಿದು, ಬಾಬೆಲೋನಿಯಗೆ ಕರೆದೊಯ್ದರು.
- ತನ್ನ ಚಿಕ್ಕ ಆಳ್ವಿಕೆಯಲ್ಲಿ, ಯೆಹೋಯಾಖೀನನು ತನ್ನ ತಾತನಾಗಿರುವ ಅರಸನಾದ ಮನಸ್ಸೆ ಮತ್ತು ತನ್ನ ತಂದೆಯಾದ ಯೆಹೋಯಾಕೀಮರು ಮಾಡಿದಂತೆ ಅನೇಕ ಕೆಟ್ಟ ಕಾರ್ಯಗಳನ್ನು ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಯೆಹೋಯಾಕೀಮ, ಯೂದಾ, ಮನಸ್ಸೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3078, H3112, H3204, H3659
ಯೆಹೋಯಾದ
ಸತ್ಯಾಂಶಗಳು:
ಯೊಹೋಯಾದನು ಒಬ್ಬ ಯಾಜಕನಾಗಿದ್ದನು, ಇವನು ಅರಸನಾದ ಅಹಜ್ಯನ ಮಗ ಯೋವಾಷನು ದೊಡ್ಡವನಾಗಿ ಅರಸನೆಂದು ಪ್ರಕಟಿಸುವವರೆಗೂ ಯೋವಾಷನನ್ನು ಬಚ್ಚಿಡುವುದರಲ್ಲಿ ಸಹಾಯಮಾಡಿ ಸಂರಕ್ಷಿಸಿದನು.
- ದೇವಾಲಯದಲ್ಲಿ ಜನರಿಂದ ಯೋವಾಷನನ್ನು ಅರಸನೆಂದು ಪ್ರಕಟನೆ ಮಾಡುವವರೆಗೂ ಚಿಕ್ಕವನಾಗಿರುವ ಯೋವಾಷನನ್ನು ಸಂರಕ್ಷಿಸುವುದಕ್ಕೆ ನೂರಾರುಮಂದಿ ರಕ್ಷಕ ಭಟರನ್ನು ಯೆಹೋಯಾದ ಸಿದ್ಧಪಡಿಸಿದ್ದನು.
- ಯೆಹೋಯಾದನು ಸುಳ್ಳು ದೇವರಾದ ಬಾಳ್ ಯಜ್ಞವೇದಿಗಳೆಲ್ಲವುಗಳಿಂದ ಬಿಡುಗಡೆಯಾಗುವುದಕ್ಕೆ ಜನರೆಲ್ಲರನ್ನು ನಡೆಸಿದನು.
- ಉಳಿದ ತನ್ನ ಜೀವಮಾನವೆಲ್ಲಾ, ಅರಸನಾದ ಯೋವಾಷನು ದೇವರಿಗೆ ವಿಧೇಯರಾಗವುದಕ್ಕೆ ಮತ್ತು ಜ್ಞಾನದಿಂದ ಜನರನ್ನು ಆಳುವುದಕ್ಕೆ ಯಾಜಕನಾದ ಯೆಹೋಯಾದನು ಸಲಹೆ ಕೊಡುವುದರಲ್ಲಿ ಸಹಾಯ ಮಾಡಿದನು.
- ಯೆಹೋಯಾದ ಎನ್ನುವ ಹೆಸರಿನ ಮೇಲೆ ಬೆನಯಾನ ತಂದೆಯಾಗಿರುವ ಇನ್ನೊಬ್ಬ ವ್ಯಕ್ತಿಯು ಇದ್ದಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಹಜ್ಯ, ಬಾಳ್, ಬೆನಯಾನ, ಯೋವಾಷ)
ಸತ್ಯವೇದದ ಅನುಬಂಧ ವಾಕ್ಯಗಳು :
- 2 ಅರಸ.11:4-6
- 2 ಕೊಲೊಸ್ಸ.12:1-3
ಪದ ಡೇಟಾ:
- Strong's: H3077, H3111
ಯೆಹೋರಾಮ, ಯೋರಾಮ
ಸತ್ಯಾಂಶಗಳು:
“ಯೆಹೋರಾಮ” ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರು ಅರಸರು ಇದ್ದಾರೆ. ಆ ಇಬ್ಬರ ಅರಸರು “ಯೋರಾಮ” ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿದ್ದಾರೆ.
- ಯೆಹೋರಾಮ ಎನ್ನುವ ಒಬ್ಬ ಅರಸ ಎಂಟು ವರ್ಷಗಳು ಯೂದಾ ರಾಜ್ಯವನ್ನು ಆಳಿದನು. ಇವನು ಯೆಹೋಷಾಫಾಟನ ಮಗನಾಗಿರುತ್ತಾನೆ. ಈ ಅರಸನೇ ಯೆಹೋರಾಮ ಎಂದು ಹೆಚ್ಚಾಗಿ ಹೆಸರುವಾಸಿಯಾಗಿರುತ್ತಾನೆ.
- ಯೆಹೋರಾಮ ಹೆಸರಿನ ಮೇಲೆ ಇರುವ ಇನ್ನೊಬ್ಬ ಅರಸನು ಹನ್ನೆರಡು ವರ್ಷಗಳ ಕಾಲ ಇಸ್ರಾಯೇಲ್ ರಾಜ್ಯವನ್ನು ಆಳಿದನು. ಇವನು ಅರಸನಾದ ಆಹಾಬನ ಮಗನಾಗಿದ್ದನು.
- ಯೂದಾ ಅರಸನಾಗಿರುವ ಯೆಹೋರಾಮನು ಯೆರೆಮೀಯ, ದಾನಿಯೇಲ, ಓಬದ್ಯ, ಮತ್ತು ಯೆಹೆಜ್ಕೇಲರು ಯೂದಾ ರಾಜ್ಯದಲ್ಲಿ ಪ್ರವಾದಿಸುವ ಕಾಲದಲ್ಲಿ ಆಳಿದನು.
- ಯೂದಾ ರಾಜ್ಯದ ಮೇಲೆ ಅರಸನಾದ ಯೆಹೋರಾಮನ ತಂದೆ ಅರಸನಾದ ಯೆಹೋಷಾಫಾಟನು ಅಳುತ್ತಿರುವಾಗ ಅವನೂ ಪಾಲನೆ ಮಾಡಿದ್ದನು.
- ಕೆಲವೊಂದು ಅನುವಾದಗಳಲ್ಲಿ “ಯೆಹೋರಾಮ” ಎನ್ನುವ ಹೆಸರನ್ನು ಇಸ್ರಾಯೇಲ್ ಅರಸನಿಗೆ ಉಪಯೋಗಿಸಿದಾಗ, “ಯೋರಾಮ” ಎನ್ನುವ ಹೆಸರನ್ನು ಯೂದಾ ಅರಸನಿಗೆ ಉಪಯೋಗಿಸುವುದಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ.
- ಇಬ್ಬರನ್ನು ಚೆನ್ನಾಗಿ ಗುರುತಿಸುವ ಬೇರೊಂದು ವಿಧಾನದಲ್ಲಿ ಅವರ ಹೆಸರುಗಳ ಪಕ್ಕಕ್ಕೆ ಅವರ ತಂದೆಗಳ ಹೆಸರುಗಳನ್ನು ಬಳಸುವುದು ಉತ್ತಮ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಯೆಹೋಷಾಫಾಟ, ಯೋರಾಮ, ಯೂದಾ, ಇಸ್ರಾಯೇಲ್ ರಾಜ್ಯ, ಓಬದ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3088, H3141, G2496
ಯೆಹೋಶುವ
ಸತ್ಯಾಂಶಗಳು:
ಸತ್ಯವೇದದಲ್ಲಿ ಯೆಹೋಶುವ ಎನ್ನುವ ಹೆಸರಿನಲ್ಲಿ ಅನೇಕಮಂದಿ ಇಸ್ರಾಯೇಲ್ ಜನರಿದ್ದಾರೆ. ಚೆನ್ನಾಗಿ ಗೊತ್ತಿರುವ ಯೆಹೋಶುವ ಮೋಶೆ ಸಹಾಯಕನಾಗಿರುವ ನೂನನ ಮಗನಾಗಿರುತ್ತಾನೆ ಮತ್ತು ಈ ನೂನನು ದೇವರ ಜನರಿಗೆ ಮುಖ್ಯ ನಾಯಕನಾದನು.
- ವಾಗ್ಧಾನ ಭೂಮಿಯನ್ನು ನೋಡಿ ಬರುವುದಕ್ಕೆ ಮೋಶೆ ಕಳುಹಿಸಿದ ಹನ್ನೆರಡು ಮಂದಿ ಗೂಢಚಾರಿಗಳಲ್ಲಿ ಒಬ್ಬನಾಗಿರುತ್ತಾನೆ.
- ಕಾನಾನ್ ಭೂಮಿಯೊಳಗೆ ಪ್ರವೇಶಿಸಲು ಮತ್ತು ಕಾನಾನ್ಯರನ್ನು ಸೋಲಿಸುವುದಕ್ಕೆ ದೇವರ ಆಜ್ಞೆಗೆ ವಿಧೇಯರಾಗಬೇಕೆಂದು ಇಸ್ರಾಯೇಲ್ ಜನರನ್ನು ಕೇಳಿಕೊಂಡವರಲ್ಲಿ ಕಾಲೇಬ್ ಜೊತೆಯಲ್ಲಿ ಯೆಹೋಶುವನಿದ್ದನು.
- ಅನೇಕ ವರ್ಷಗಳಾದನಂತರ ಮೋಶೆ ಮರಣಿಸಿನಂತರ, ವಾಗ್ಧಾನ ಭೂಮಿಯೊಳಗೆ ಪ್ರವೇಶಿಸಾಲು ಇಸ್ರಯೇಲ್ ಜನರನ್ನು ನಡೆಸುವುದಕ್ಕೆ ದೇವರು ಯೆಹೋಶುವನನ್ನು ನೇಮಿಸಿದನು.
- ಕಾನಾನ್ಯರಿಗೆ ವಿರುದ್ಧವಾಗಿ ಮೊಟ್ಟ ಮೊದಲು ಮಾಡಿದ ಅತ್ಯಂತ ಪ್ರಸಿದ್ಧವಾದ ಯುದ್ಧದಲ್ಲಿ, ಯೆರಿಕೋ ಪಟ್ಟಣವನ್ನು ಸೋಲಿಸುವುದರಲ್ಲಿ ಯೆಹೋಶುವನು ಇಸ್ರಾಯೇಲ್ಯರನ್ನು ನಡೆಸಿದನು.
- ವಾಗ್ಧಾನ ಭೂಮಿಯನ್ನು ನಿಯಂತ್ರಣದಲ್ಲಿ ತೆಗೆದುಕೊಳ್ಳುವುದಕ್ಕೆ ಯೆಹೋಶುವನು ಹೇಗೆ ಇಸ್ರಾಯೇಲ್ಯರನ್ನು ನಡೆಸಿದ್ದಾನೆಂದು ಮತ್ತು ಆ ದೇಶದಲ್ಲಿ ಜೀವಿಸುವುದಕ್ಕೆ ಭೂಮಿಯ ಭಾಗಗಳನ್ನು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಪ್ರತಿಯೊಬ್ಬರಿಗೆ ಯಾವರೀತಿ ಹಂಚಿದ್ದಾನೆಂದು ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಯೆಹೋಶುವ ಗ್ರಂಥವು ಚೆನ್ನಾಗಿ ತಿಳಿಸುತ್ತದೆ.
- ಹಗ್ಗಯಿ ಮತ್ತು ಜೆಕರ್ಯ ಗ್ರಂಥಗಳಲ್ಲಿ ಯೆಹೋಚಾದಾಕ ಮಗನಾದ ಯೆಹೋಶುವನನ್ನು ದಾಖಲಿಸಲಾಗಿದೆ; ಇವನು ಯೆರೂಸಲೇಮಿನ ಗೋಡೆಗಳನ್ನು ತಿರುಗಿ ಕಟ್ಟುವುದಕ್ಕೆ ಸಹಾಯ ಮಾಡಿದ ಮಹಾ ಯಾಜಕನಾಗಿದ್ದನು.
ಸತ್ಯವೇದದಲ್ಲಿ ದಾಖಲಿಸಿದ ವಂಶಾವಳಿಗಳಲ್ಲಿ ಮತ್ತು ಬೇರೊಂದು ಸ್ಥಳಗಳಲ್ಲಿ ಯೆಹೋಶುವ ಎನ್ನುವ ಹೆಸರಿನ ಮೇಲೆ ಅನೇಕ ಜನರಿದ್ದಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹಗ್ಗಾಯ, ಯೆರಿಕೋ, ಮೋಶೆ, ವಾಗ್ಧಾನ ಭೂಮಿ, ಜೆಕರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 14:04 ಇಸ್ರಾಯೇಲ್ಯರು ಕಾನಾನ್ ಎನ್ನುವ ದೇಶವನ್ನು ಸೇರಿದಾಗ, ಮೋಶೆ ಇಸ್ರಾಯೇಲ್ ಪ್ರತಿಯೊಂದು ಕುಲದಿಂದ ಒಬ್ಬೊಬ್ಬರಾಗಿ ಹನ್ನೆರಡು ಜನರನ್ನು ಆರಿಸಿಕೊಂಡನು. ಆ ದೇಶವು ಹೇಗಿದೆಯೆಂದು ನೋಡಿಕೊಂಡು ಬರುವುದಕ್ಕೆ ಆತನು ಆ ಮನುಷ್ಯರಿಗೆ ಸೂಚನೆಗಳನ್ನು ಕೊಟ್ಟು ಕಳುಹಿಸಿದನು.
- 14:06 “ಕಾನಾನ್ ಜನರು ತುಂಬಾ ಎತ್ತರವಾಗಿಯೂ ಮತ್ತು ತುಂಬ ಬಲವುಳ್ಳವರಾಗಿಯೂ ಇದ್ದಾರೆನ್ನುವುದು ನಿಜಾನೇ, ಆದರೆ ನಾವು ಖಂಡಿತವಾಗಿ ಅವರನ್ನು ಸೋಲಿಸಬಹುದು” ಎಂದು ತಕ್ಷಣವೇ ಕಾಲೇಬ್ ಮತ್ತು __ ಯೆಹೋಶುವ __, ಬೇರೆ ಇಬ್ಬರು ಗೂಢಚಾರರು ಹೇಳಿದರು.
- 14:08 __ ಯೆಹೋಶುವ __ ಮತ್ತು ಕಾಲೇಬರಿಬ್ಬರು ಬಿಟ್ಟು, ಇಪ್ಪತ್ತು ವರ್ಷಗಳ ವಯಸ್ಸಿನವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಲ್ಲಿಯೇ ಸತ್ತುಹೋದರು, ಅಷ್ಟೇಅಲ್ಲದೆ ಅವರೆಲ್ಲರು ವಾಗ್ಧಾನ ದೇಶದೊಳಗೆ ಪ್ರವೇಶಿಸಲೇಯಿಲ್ಲ.
- 14:14 ಮೋಶೆ ತುಂಬಾ ವೃದ್ಧಾಪ್ಯದಲ್ಲಿದ್ದಾಗಲೇ, ಜನರನ್ನು ನಡೆಸುವುದಕ್ಕೆ ಆತನಿಗೆ ಸಹಾಯವಾಗಲು ದೇವರು __ ಯೆಹೋಶುವನನ್ನು __ ಆರಿಸಿಕೊಂಡರು.
- 14:15 __ ಯೆಹೋಶುವನು __ ಒಳ್ಳೇಯ ನಾಯಕನಾಗಿದ್ದನು ಯಾಕಂದರೆ ಆತನು ದೇವರನ್ನು ನಂಬಿ, ಆತನಿಗೆ ವಿಧೇಯನಾಗಿದ್ದನು.
- 15:03 ಜನರೆಲ್ಲರು ಯೊರ್ದನ್ ಹೊಳೆಯನ್ನು ದಾಟಿದನಂತರ, ಶಕ್ತಿಯುತ ಯೆರಿಕೋ ಪಟ್ಟಣವನ್ನು ಹೇಗೆ ಧಾಳಿ ಮಾಡಬೇಕೆಂದು ದೇವರು __ ಯೆಹೋಶುವನಿಗೆ __ ಹೇಳಿದನು.
ಪದ ಡೇಟಾ:
- Strong's: H3091, G2424
ಯೆಹೋಷಾಫಾಟ @
ಸತ್ಯಾಂಶಗಳು:
ಯೆಹೋಷಾಫಾಟ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಕನಿಷ್ಟವೆಂದರೆ ಇಬ್ಬರು ವ್ಯಕ್ತಿಗಳು ಇದ್ದಾರೆ.
- ಈ ಹೆಸರಿನ ಮೇಲೆ ಚೆನ್ನಾಗಿ ಗೊತ್ತಿರುವ ಒಬ್ಬ ವ್ಯಕ್ತಿ ಅರಸನಾದ ಯೆಹೋಷಾಫಾಟ ಆಗಿರುತ್ತಾನೆ, ಇವನು ಯೂದಾ ರಾಜ್ಯದ ಮೇಲೆ ನಾಲ್ಕನೇಯ ಅರಸನಾಗಿ ಆಳ್ವಿಕೆ ಮಾಡಿರುತ್ತಾನೆ.
- ಈ ವ್ಯಕ್ತಿ ಯೂದಾ ಮತ್ತು ಇಸ್ರಾಯೇಲ್ ನಡುವೆ ಸಮಾಧಾನವನ್ನು ಸ್ಥಿರಪಡಿಸಿರುತ್ತಾನೆ, ಮತ್ತು ಸುಳ್ಳು ದೇವರ ಎಲ್ಲಾ ವಿಗ್ರಹಗಳನ್ನು ಕೆಡಿಸಿಟ್ಟಿರುತ್ತಾನೆ.
- ಇನ್ನೊಬ್ಬ ಯೆಹೋಷಾಫಾಟನು ದಾವೀದ ಮತ್ತು ಸೊಲೊಮೋನನಿಗೆ “ದಾಖಲಾತಿ” ಮಾಡುವವನಾಗಿರುತ್ತಾನೆ. ಇವನ ಕೆಲಸವೇನಂದರೆ ಅರಸನು ಸಹಿ ಮಾಡುವುದಕ್ಕೆ ಪತ್ರಗಳನ್ನು ಬರೆದು ಸಿದ್ಧಗೊಳಿಸುವುದು ಮತ್ತು ರಾಜ್ಯದಲ್ಲಿ ಏನಾದರು ಪ್ರಾಮುಖ್ಯವಾದ ಸಂಘಟನೆಗಳು ನಡೆದಿದ್ದರೆ ಅದರ ಚರಿತ್ರೆಯನ್ನು ಬರೆಯುವುದೂ ಆಗಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ದಾವೀದ, ಸುಳ್ಳು ದೇವರು, ಇಸ್ರಾಯೇಲ್, ಯೂದಾ, ಯಾಜಕ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3092, H3146, G2498
ಯೇಹು
ಸತ್ಯಾಂಶಗಳು:
ಯೇಹು ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ.
- ಹನಾನಿಯ ಮಗನಾದ ಯೇಹು ಇಸ್ರಾಯೇಲ್ ಅರಸನಾದ ಆಹಾಬನು ಮತ್ತು ಯೂದಾ ಅರಸನಾದ ಯೆಹೋಷಾಫಾಟನು ಆಳುತ್ತಿರುವ ದಿನಗಳಲ್ಲಿ ಪ್ರವಾದಿಯಾಗಿದ್ದನು.
- ಯೆಹೋಷಾಫಾಟನ ಮಗನಾದ (ವಂಶಸ್ಥನಾದ) ಯೇಹು ಇಸ್ರಾಯೇಲ್ ಸೈನ್ಯದಲ್ಲಿ ಸೇನಾಧಿಪತಿಯಾಗಿದ್ದನು, ಇವನು ಪ್ರವಾದಿಯಾದ ಎಲೀಷನ ಆಜ್ಞೆಯಿಂದ ಅರಸನಾಗಿ ಅಭಿಷೇಕಿಸಲ್ಪಟ್ಟನು.
- ಅರಸನಾದ ಯೇಹು ಇಸ್ರಾಯೇಲ್ ಅರಸನಾದ ಯೋರಾಮ ಮತ್ತು ಯೂದಾ ಅರಸನಾಗಿರುವ ಅಹಜ್ಯ ಎನ್ನುವ ಈ ದುಷ್ಟ ಅರಸರನ್ನು ಕೊಂದು ಹಾಕಿದನು,
- ಅರಸನಾದ ಯೇಹು ಬಂಧುಗಳಾಗಿರುವ ಎಲ್ಲರನ್ನು ಅರಸನಾಗಿರುವ ಆಹಾಬನನ್ನು ಮತ್ತು ದುಷ್ಟ ರಾಣಿಯಾಗಿರುವ ಈಜೆಬೆಲ್.ನನ್ನು ಸಾಯಿಸಿದನು.
- ಅರಸನಾದ ಯೇಹು ಸಮಾರ್ಯದಲ್ಲಿರುವ ಬಾಳ್ ಆರಾಧನೆಯ ಸ್ಥಳಗಳನ್ನೆಲ್ಲಾ ನಾಶಗೊಳಿಸಿದನು ಮತ್ತು ಬಾಳ್ ಪ್ರವಾದಿಗಳೆಲ್ಲರನ್ನು ಸಾಯಿಸಿದನು.
- ಅರಸನಾದ ಯೇಹು ನಿಜವಾದ ದೇವರಾಗಿರುವ ಯೆಹೋವನನ್ನು ಮಾತ್ರ ಸೇವಿಸಿದನು, ಮತ್ತು ಸುಮಾರು ಇಪ್ಪತ್ತು ವರ್ಷಗಳ ಕಾಲ ಇಸ್ರಾಯೇಲ್ ರಾಜ್ಯವನ್ನು ಆಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಅಹಜ್ಯ, ಬಾಳ್, ಎಲೀಷ, ಯೆಹೋಷಾಫಾಟ, ಯೇಹು, ಈಜೆಬೆಲ್, ಯೋರಾಮ, ಯೂದಾ, ಸಮಾರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3058
ಯೊಪ್ಪ
ಸತ್ಯಾಂಶಗಳು:
ಸತ್ಯವೇದ ಕಾಲಗಳಲ್ಲಿ ಯೊಪ್ಪ ಎನ್ನುವ ಪಟ್ಟಣವು ತುಂಬ ಪ್ರಾಮುಖ್ಯವಾದ ವಾಣಿಜ್ಯ ಬಂದರಾಗಿತ್ತು, ಇದು ಶಾರೋನಿನ ದಕ್ಷಿಣ ಬಯಲುನಲ್ಲಿ ಮೆಡಿಟರೇನಿಯನ್ ಸಮುದ್ರದ ಬಳಿ ಕಂಡುಬರುತ್ತದೆ.
- ಯೊಪ್ಪ ಎನ್ನುವ ಪುರಾತನ ಸ್ಥಳವು ಈಗಿನ ಜಫ್ಫಾ ಎನ್ನುವ ಸ್ಥಳವಾಗಿರುತ್ತದೆ, ಇದೀಗ ಟೆಲ್-ಅವೀವ್ ಪಟ್ಟಣದ ಭಾಗವಾಗಿರುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಯೊಪ್ಪ ಪಟ್ಟಣವು ಯೋನನು ತಾರ್ಷೀಷಿಗೆ ಹೋಗುವ ಹಡಗು ಏರಿದ ಸ್ಥಳವಾಗಿದ್ದಿತ್ತು.
- ಹೊಸ ಒಡಂಬಡಿಕೆಯಲ್ಲಿ ತಬಿಥಾ ಎನ್ನುವ ಕ್ರೈಸ್ತ ಮಹಿಳೆ ಯೊಪ್ಪ ಪಟ್ಟಣದಲ್ಲಿಯೇ ಮರಣ ಹೊಂದಿದ್ದಳು, ಮತ್ತು ಪೇತ್ರನು ಆ ಸ್ಥಳದಲ್ಲಿಯೇ ಆಕೆಯನ್ನು ಜೀವಂತವನ್ನಾಗಿ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಸಮುದ್ರ, ಯೆರೂಸಲೇಮ್, ಶಾರೋನ್, ತಾರ್ಷೀಷ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3305, G2445
ಯೊರ್ದನ್ ಹೊಳೆ, ಯೊರ್ದನ್
ಸತ್ಯಾಂಶಗಳು:
ಯೊರ್ದನ್ ಹೊಳೆ ಎನ್ನುವುದು ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಹೊಳೆಯಾಗಿರುತ್ತದೆ, ಮತ್ತು ಕಾನಾನ್ ಎಂದು ಕರೆಯಲ್ಪಡುವ ದೇಶದ ಪೂರ್ವ ದಿಕ್ಕಿನ ಗಡಿಗಳವರೆಗೂ ವಿಸ್ತರಿಸಲ್ಪಟ್ಟಿರುತ್ತದೆ.
- ಈ ದಿನದಂದು ಯೊರ್ದನ್ ಹೊಳೆ ಅದರ ಪಶ್ಚಿಮ ದಿಕ್ಕಿನಲ್ಲಿ ಇಸ್ರಾಯೇಲ್ ದೇಶವಿರುವಂತೆ ಮತ್ತು ಪೂರ್ವ ದಿಕ್ಕಿನಲ್ಲಿ ಯೊರ್ದನ್ ಇರುವಂತೆ ಬೇರ್ಪಡಿಸುತ್ತದೆ.
- ಯೊರ್ದನ್ ಹೊಳೆ ಎನ್ನುವುದು ಗಲಿಲಾಯ ಸಮುದ್ರದ ಮೂಲಕ ಹರಿದು, ಮೃತ ಸಮುದ್ರದಲ್ಲಿ ಸೇರುತ್ತದೆ.
- ಯೆಹೋಶುವನು ಇಸ್ರಾಯೇಲ್ಯರನ್ನು ಕಾನಾನ್ ದೇಶಕ್ಕೆ ನಡೆಸಿದಾಗ, ಅವರು ಯೊರ್ದನ್ ಹೊಳೆಯನ್ನು ದಾಟಿದ್ದರು. ಸಾಧಾರಣವಾಗಿ ದಾಟುವುದಕ್ಕೆ ಅದು ತುಂಬಾ ಆಳವಾಗಿದ್ದಿತ್ತು, ಆದರೆ ದೇವರು ಅದ್ಭುತ ರೀತಿಯಲ್ಲಿ ಹೊಳೆಯು ಹರಿಯದಂತೆ ನಿಲ್ಲಿಸಿದರು, ಇದರಿಂದ ಅವರು ತುಂಬಾ ಸುಲಭವಾಗಿ ಆ ಹೊಳೆಯನ್ನು ದಾಟಿದರು.
- ಸತ್ಯವೇದದಲ್ಲಿ ಅನೇಕಸಲ ಯೊರ್ದನ್ ಹೊಳೆಯನ್ನು “ಯೊರ್ದನ್” ಎಂದು ಸೂಚಿಸಿದ್ದಾರೆ.
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಲವಣ ಸಮುದ್ರ, ಗಲಿಲಾಯ ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
- ಆದಿ.32:9-10
- ಯೋಹಾನ.01:26-28
- ಯೋಹಾನ.03:25-26
- ಲೂಕ.03:3
- ಮತ್ತಾಯ.03:4-6
- ಮತ್ತಾಯ.03:13-15
- ಮತ್ತಾಯ.04:14-16
- ಮತ್ತಾಯ.19:1-2
ಸತ್ಯವೇದದಿಂದ ಉದಾಹರಣೆಗಳು:
- 15:02 ಇಸ್ರಾಯೇಲ್ಯರು ವಾಗ್ಧಾನ ಭೂಮಿಯೊಳಗೆ ಸೇರಬೇಕಾದರೆ ಅವರು ___ ಯೊರ್ದನ್ ಹೊಳೆಯನ್ನು ___ ದಾಟಬೇಕಾಗಿದ್ದರು.
- 15:03 ಜನರೆಲ್ಲರು ___ ಯೊರ್ದನ್ ಹೊಳೆಯನ್ನು ___ ದಾಟಿದನಂತರ, ಶಕ್ತಿಯುತವಾದ ಯೆರಿಕೋ ಪಟ್ಟಣವನ್ನು ಯಾವರೀತಿ ಧಾಳಿ ಮಾಡಬೇಕೆಂದು ದೇವರು ಯೆಹೋಶುವನಿಗೆ ಹೇಳಿದರು.
- 19:14 ಎಲೀಷ ಅವನಿಗೆ (ನಾಮಾನನಿಗೆ)___ ಯೊರ್ದನ್ ಹೊಳೆಯಲ್ಲಿ ___ ಏಳುಬಾರಿ ಮುಳುಗಬೇಕೆಂದು ಹೇಳಿದನು.
ಪದ ಡೇಟಾ:
- Strong's: H3383, G2446
ಯೋತಾಮ
ಪದದ ಅರ್ಥವಿವರಣೆ:
ಹಳೇ ಒಡಂಬಡಿಕೆಯಲ್ಲಿ ಯೋತಾಮ ಎನ್ನುವ ಹೆಸರಿನ ಮೇಲೆ ಮೂವರು ವ್ಯಕ್ತಿಗಳಿದ್ದಾರೆ.
- ಯೋತಾಮ ಎನ್ನುವ ಹೆಸರಿನ ಮೇಲೆ ಒಬ್ಬ ವ್ಯಕ್ತಿ ಗಿದ್ಯೋನನ ಚಿಕ್ಕ ಮಗನಾಗಿರುತ್ತಾನೆ. ಯೋತಾಮನು ತನ್ನ ಹಿರಿಯ ಅಣ್ಣನಾದ ಅಬೀಮೆಲೆಕನನ್ನು ಸೋಲಿಸುವುದರಲ್ಲಿ ಸಹಾಯ ಮಾಡಿದನು, ಯಾಕಂದರೆ ಅಬೀಮೆಲೆಕನು ಉಳಿದ ಎಲ್ಲಾ ಸಹೊದರರನ್ನು ಕೊಂದು ಹಾಕಿದ್ದನು.
- ಯೋತಾಮ ಹೆಸರಿನ ಮೇಲಿರುವ ಇನ್ನೊಬ್ಬ ವ್ಯಕ್ತಿ ಸುಮಾರು ಹದಿನಾರು ವರ್ಷಗಳ ಕಾಲ ಯೂದಾ ರಾಜ್ಯವನ್ನು ತನ್ನ ತಂದೆಯಾದ ಉಜ್ಜೀಯ (ಅಜರ್ಯ) ಮರಣಿಸಿದನಂತರ ಆಳಿದನು.
ಅವನ ತಂದೆಯಂತೆಯೇ, ಅರಸನಾದ ಯೋತಾಮನು ದೇವರಿಗೆ ವಿಧೇಯನಾಡನು ಮತ್ತು ಒಳ್ಳೇಯ ಅರಸನಾಗಿ ಪ್ರಸಿದ್ಧಿ ಹೊಂದಿದನು.
- ಏನೇಯಾದರೂ, ವಿಗ್ರಹ ಆರಾಧನೆ ಮಾಡುವ ಸ್ಥಳಗಳನ್ನು ತೆಗೆದುಹಾಕದೇ, ದೇವರಿಂದ ಯೂದಾ ರಾಜ್ಯದ ಜನರೆಲ್ಲರು ದೂರವಾಗುವುದಕ್ಕೆ ಕಾರಣನಾದನು.
- ಯೋತಾಮನು ಮತ್ತಾಯ ಬರೆದ ಸುವಾರ್ತೆಯಲ್ಲಿ ಯೇಸುಕ್ರಿಸ್ತನ ವಂಶಾವಳಿಯಲ್ಲಿ ದಾಖಲಿಸಲ್ಪಟ್ಟ ಪೂರ್ವಜನಾಗಿದ್ದನು.
(ಈ ಪದಗಳನ್ನು ಸಹ ನೋಡಿರಿ : ಅಬೀಮೆಲೆಕ, ಆಹಾಜ, ಗಿದ್ಯೋನ್, ಉಜ್ಜೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3147
ಯೋನ
ಪದದ ಅರ್ಥವಿವರಣೆ:
ಯೋನನು ಹಳೇ ಒಡಂಬಡಿಕೆಯಲ್ಲಿ ಇಬ್ರಿ ಪ್ರವಾದಿಯಾಗಿದ್ದನು.
- ಯೋನನ ಗ್ರಂಥವು ನಿನೆವೆ ಜನರಿಗೆ ಸಂದೇಶವನ್ನು ಹೇಳುವುದಕ್ಕೆ ದೇವರು ಯೋನನನ್ನು ಕಳುಹಿಸಿದಾಗ ಏನು ನಡೆದಿದೆಯೆನ್ನುವ ಕಥೆಯನ್ನು ಚೆನ್ನಾಗಿ ವಿವರಿಸುತ್ತದೆ.
- ಯೋನನು ನಿನೆವೆಗೆ ಹೋಗುವುದಕ್ಕೆ ನಿರಾಕರಿಸಿದನು ಮತ್ತು ತಾರ್ಷೀಷಿಗೆ ಹೋಗುವ ಹಡಗನ್ನು ಹಿಡಿದು ಅದರಲ್ಲಿ ಪ್ರಯಾಣಿಸಿದನು.
- ಆ ಹಡಗು ತುಂಬಿ ಮುಳುಗುವಷ್ಟು ದೊಡ್ಡ ಬಿರುಗಾಳಿಯನ್ನು ದೇವರುಂಟು ಮಾಡಿದರು.
- ಅವನು ದೇವರಿಂದ ಓಡಿ ಬಂದಿದ್ದೇನೆಂದು, ತನ್ನನ್ನು ಸಮುದ್ರದೊಳಗೆ ಎಸೆದು ಹಾಕಬೇಕೆನ್ನುವ ಸಲಹೆಯನ್ನು ಆ ಹಡಗನ್ನು ನಡೆಸುತ್ತಿರುವ ಮನುಷ್ಯರಿಗೆ ಯೋನನು ಹೇಳಿದನು. ಅವರು ಅವನು ಹೇಳಿದಂತೆ ಮಾಡಿದಾಗ ಆ ಬಿರುಗಾಳಿಯು ನಿಂತುಹೋಯಿತು.
- ಯೋನನನ್ನು ಒಂದು ದೊಡ್ಡ ಮೀನು ನುಂಗಿಬಿಟ್ಟಿತು, ಮತ್ತು ಅವನು ಆ ಮೀನಿನೊಳಗೆ ಮೂರು ದಿನ ಹಗಲು ರಾತ್ರಿಗಳ ಕಾಲ ಇದ್ದನು.
- ಆದಾದನಂತರ, ಯೋನನು ನಿನೆವೆಗೆ ಹೋದನು ಮತ್ತು ಅಲ್ಲಿರುವ ಜನರಿಗೆ ಸಂದೇಶವನ್ನು ಪ್ರಕಟಿಸಿದನು, ಮತ್ತು ಅವರು ತಮ್ಮ ಪಾಪಗಳಿಂದ ತಿರುಗಿಕೊಂಡರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ನಿನೆವೆ, ತಿರುಗಿಕೋ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3124, G2495
ಯೋನಾತಾನ
ಸತ್ಯಾಂಶಗಳು:
ಯೋನಾತಾನ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಸುಮಾರು ಹತ್ತು ಮಂದಿ ವ್ಯಕ್ತಿಗಳಿದ್ದಾರೆ. ಈ ಹೆಸರಿಗೆ “ಯೆಹೋವ ನೀಡಿದ್ದಾನೆ” ಎಂದರ್ಥ.
- ದಾವೀದನ ಒಳ್ಳೇಯ ಸ್ನೇಹಿತನಾಗಿರುವ ಯೋನಾತಾನನೇ ಸತ್ಯವೇದದಲ್ಲಿ ಪ್ರಸಿದ್ಧಿ ಹೊಂದಿದ ವ್ಯಕ್ತಿಯಾಗಿರುತ್ತಾನೆ. ಈ ಯೋನಾತಾನನು ಅರಸನಾಗಿರುವ ಸೌಲನ ಹಿರಿಯ ಮಗನಾಗಿರುತ್ತಾನೆ.
- ಹಳೇ ಒಡಂಬಡಿಕೆಯಲ್ಲಿ ದಾಖಲಿಸಿದ ಇತರ ಯೋನಾತಾನರಲ್ಲಿ ಮೋಶೆ ಸಂತಾನದವರು ಸೇರಿರುತ್ತಾರೆ; ಅರಸನಾದ ದಾವೀದ ಸೋದರಳಿಯ; ಅನೇಕಮಂದಿ ಯಾಜಕರು, ಅವರಲ್ಲಿ ಎಬ್ಯಾತಾರ ಮಗನೂ ಸೇರಿರುತ್ತಾನೆ; ಮತ್ತು ಪ್ರವಾದಿಯಾದ ಯೆರೆಮೀಯನನ್ನು ಸೆರೆಗೆ ಹಾಕಿದ ಮನೆಯ ಯಜಮಾನನಾಗಿರುವ ಹಳೇ ಒಡಂಬಡಿಕೆಯ ಶಾಸ್ತ್ರಿಯಾಗಿರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎಬ್ಯಾತಾರ, ದಾವೀದ, ಮೋಶೆ, ಯೆರೆಮೀಯ, ಯಾಜಕ, ಸೌಲ, ಶಾಸ್ತ್ರಿ,)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3083, H3129
ಯೋಬ
ಸತ್ಯಾಂಶಗಳು:
ಯೋಬನು ದೇವರ ಮುಂದೆ ನೀತಿವಂತನು ಮತ್ತು ದೋಷವಿಲ್ಲದವನು ಎಂಬುದಾಗಿ ಸತ್ಯವೇದದಲ್ಲಿ ವಿವರಿಸಲ್ಪಟ್ಟ ವ್ಯಕ್ತಿಯಾಗಿರುತ್ತಾನೆ. ಈತನು ಭಯಂಕರವಾದ ಶ್ರಮೆಗಳ ಮೂಲಕ ದೇವರಲ್ಲಿಟ್ಟ ಆತನ ನಂಬಿಕೆಯನ್ನು ಕಾಪಾಡಿಕೊಂಡ ಭಕ್ತನಾಗಿ ಪ್ರಸಿದ್ಧಿ ಹೊಂದಿದವನು.
- ಯೋಬನು ಊಚ್ ದೇಶದಲ್ಲಿ ಜೀವಿಸಿದ್ದನು, ಇದು ಕಾನಾನ್ ಪೂರ್ವ ದಿಕ್ಕಿನಲ್ಲಿ ಕಂಡುಬರುತ್ತದೆ, ಬಹುಶಃ ಇದು ಎದೋಮ್ಯರ ಸೀಮೆಗೆ ತುಂಬಾ ಹತ್ತಿರವಾಗಿತ್ತು.
- ಈತನು ಏಸಾವ ಮತ್ತು ಯಾಕೋಬರ ಕಾಲದಲ್ಲಿ ಜೀವಿಸಿದವನಾಗಿದ್ದನೆಂದು ಒಂದು ವಿವರಣೆಯಿದೆ, ಯಾಕಂದರೆ ಯೋಬನ ಸ್ನೇಹಿತರಲ್ಲಿ ಒಬ್ಬ ಸ್ನೇಹಿತನಾಗಿರುವ “ತೇಮಾನೀಯನಿದ್ದನು”, ಇದು ಏಸಾವನ ಮೊಮ್ಮೊಗನಾದ ಮೇಲೆ ಜನರ ಗುಂಪಿಗೆ ಹೆಸರಾಗಿದ್ದಿತ್ತು.
- ಹಳೇ ಒಡಂಬಡಿಕೆಯಲ್ಲಿರುವ ಯೋಬನ ಗ್ರಂಥವು ಯೋಬನ ಶ್ರಮೆಗಳಲ್ಲಿ ಯೋಬನು ಮತ್ತು ತನ್ನ ಸ್ನೇಹಿತರು ಹೇಗೆ ಸ್ಪಂದಿಸಿದ್ದಾರೆನ್ನುವುದರ ಕುರಿತಾಗಿ ಹೇಳುತ್ತದೆ. ಸಾರ್ವಭೌಮಾಧಿಕಾರ ಸೃಷ್ಟಿಕರ್ತನನ್ನಾಗಿ ಮತ್ತು ಸರ್ವಸೃಷ್ಟಿಯನ್ನು ಆಳುವವನಾಗಿದ್ದ ದೇವರ ದೃಷ್ಟಿಕೋನವನ್ನು ಕೂಡ ಈ ಪುಸ್ತಕವು ನಮಗೆ ಕೊಡುತ್ತದೆ.
- ಎಲ್ಲಾ ಶ್ರಮೆಗಳಾದನಂತರ ದೇವರು ಕೊನೆಗೆ ಯೋಬನನ್ನು ಸ್ವಸ್ಥಪಡಿಸಿದನು ಮತ್ತು ಆತನಿಗೆ ಅನೇಕಮಂದಿ ಮಕ್ಕಳನ್ನು ಮತ್ತು ಸಂಪತ್ತನ್ನು ಕೊಟ್ಟನು.
- ಮರಣ ಸಮಯದಲ್ಲಿ ಯೋಬನು ತುಂಬಾ ವೃದ್ಧಾಪ್ಯದಲ್ಲಿದ್ದನೆಂದು ಯೋಬನ ಗ್ರಂಥವು ಹೇಳುತ್ತಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಏಸಾವ, ಪ್ರಳಯ, ಯಾಕೋಬ, ಜನರ ಗುಂಪು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H347, H3102, G2492
ಯೋರಾಮ
ಸತ್ಯಾಂಶಗಳು:
ಯೋರಾಮನು ಇಸ್ರಾಯೇಲ್ ಅರಸನಾಗಿರುವ ಆಹಾಬನ ಮಗನಾಗಿರುತ್ತಾನೆ. ಕೆಲವೊಂದುಸಲ ಇವನ ಹೆಸರು “ಯೆಹೋರಾಮ” ಎಂಬುದಾಗಿ ಸೂಚಿಸಲ್ಪಟ್ಟನು.
- ಯೂದಾ ಅರಸನಾಗಿ ಯೆಹೋರಾಮನು ಆಳುವ ಸಮಯದಲ್ಲಿಯೇ ಇಸ್ರಾಯೇಲ್ ಅರಸನಾಗಿ ಯೋರಾಮನು ಆಳುತ್ತಿದ್ದನು.
- ಯೋರಾಮನು ಸುಳ್ಳು ದೇವರುಗಳನ್ನು ಆಳಿದ ದುಷ್ಟ ಅರಸನಾಗಿದ್ದನು ಮತ್ತು ಇಸ್ರಾಯೇಲ್ಯರು ಪಾಪ ಮಾಡುವುದಕ್ಕೆ ಕಾರಣನಾದನು.
- ಎಲೀಯ ಮತ್ತು ಓಬದ್ಯ ಪ್ರವಾದಿಗಳಿರುವ ಕಾಲದಲ್ಲಿ ಇಸ್ರಾಯೇಲ್ ಅರಸನಾದ ಯೋರಾಮನು ಆಳಿದನು.
- ಯೋರಾಮ ಎನ್ನುವ ಹೆಸರಿನ ಮೇಲಿರುವ ಇನ್ನೊಬ್ಬ ವ್ಯಕ್ತಿ ದಾವೀದನು ಅರಸನಾಗಿ ಆಳಿದ ಕಾಲದಲ್ಲಿ ಹಾಮಾತಿನ ಅರಸನಾದ ಟೋ ಮಗನಾಗಿರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ದಾವೀದ, ಎಲೀಯ, ಹಾಮಾತ್, ಯೆಹೋರಾಮ, ಇಸ್ರಾಯೇಲ್ ರಾಜ್ಯ, ಯೂದಾ, ಓಬದ್ಯ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3088, H3141, G2496
ಯೋವಾಬ
ಪದದ ಅರ್ಥವಿವರಣೆ:
ಯೋವಾಬನು ದಾವೀದನ ಸಂಪೂರ್ಣ ಆಳ್ವಿಕೆಯಲ್ಲಿ ಅರಸನಾದ ದಾವೀದನಿಗಾಗಿ ನೇಮಿಸಲ್ಪಟ್ಟಿರುವ ಪ್ರಮುಖ ಸೈನ್ಯಾಧಿಪತಿಯಾಗಿರುತ್ತಾನೆ.
- ದಾವೀದನು ಅರಸನಾಗುವುದಕ್ಕೆ ಮುಂಚಿತವಾಗಿ ಯೋವಾಬನು ದಾವೀದನ ನಂಬಿಗಸ್ತ ಹಿಂಬಾಲಕರಲ್ಲಿ ಒಬ್ಬನಾಗಿದ್ದಿದ್ದನು.
- ಸ್ವಲ್ಪಕಾಲವಾದನಂತರ, ದಾವೀದನು ಅರಸನಾಗಿ ಇಸ್ರಾಯೇಲ್ ದೇಶವನ್ನು ಆಳಿದನು, ಆಗ ಯೋವಾಬನು ಅರಸನಾದ ದಾವೀದನ ಸೈನ್ಯಕ್ಕೆ ಸೈನ್ಯಾಧಿಪತಿಯಾದನು.
- ಯೋವಾಬನು ಅರಸನಾದ ದಾವೀದನ ಸೋದರಳಿಯನಾಗಿದ್ದನು, ಇವನ ತಾಯಿ ದಾವೀದನ ಅಕ್ಕಂದಿರಲ್ಲಿ ಒಬ್ಬಳಾಗಿದ್ದಳು.
- ಅರಸನ ಸ್ಥಾನವನ್ನು ಹೊಂದಿಕೊಳ್ಳುವುದಕ್ಕಾಗಿ ದಾವೀದ ಮಗನಾದ ಅಬ್ಷಾಲೋಮನು ತನ್ನನ್ನು ಮೋಸ ಮಾಡಿದಾಗ, ಅರಸನನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಯೋವಾಬನು ಅಬ್ಷಾಲೋಮನನ್ನು ಸಾಯಿಸಿದನು.
- ಯೋವಾಬನು ತುಂಬಾ ರೋಷವುಳ್ಳ ಹೋರಾಟಗಾರನಾಗಿದ್ದನು ಮತ್ತು ಇಸ್ರಾಯೇಲ್ ಶತ್ರುಗಳಾಗಿರುವ ಅನೇಕ ಜನರನ್ನು ಕೊಂದು ಹಾಕಿದನು.
(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ದಾವೀದ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3097
ಯೋವಾಷ
ಸತ್ಯಾಂಶಗಳು:
ಯೋವಾಷ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕ ಜನರಿದ್ದಾರೆ.
- ಯೋವಾಷ ಎನ್ನುವ ಹೆಸರಲ್ಲಿ ಒಬ್ಬನು ಇಸ್ರಾಯೇಲ್ಯರನ್ನು ಬಿಡಿಸಿದ ಗಿದ್ಯೋನನ ತಂದೆಯಾಗಿರುತ್ತಾರೆ.
- ಇನ್ನೊಬ್ಬ ಯೋವಾಷ ಯಾಕೋಬನ ಚಿಕ್ಕ ಮಗನಾಗಿರುವ ಬೆನ್ಯಾಮೀನ ಸಂತತಿಯಲ್ಲಿರುವ ವ್ಯಕ್ತಿ.
- ಹೆಚ್ಚಾಗಿ ಎಲ್ಲರಿಗೂ ಪ್ರಸಿದ್ಧಿಯಾದ ಯೋವಾಷನು ತನ್ನ ಏಳನೇ ವಯಸ್ಸಿನಲ್ಲಿಯೇ ಯೂದಾ ಅರಸನಾಗಿದ್ದನು. ಇವನು ಯೂದಾ ಅರಸನಾಗಿರುವ ಅಹಜ್ಯನ ಮಗನಾಗಿರುತ್ತಾನೆ, ಇವನು ಕೊಲೆಯಾಗಿರುತ್ತಾನೆ.
- ಯೋವಾಷನು ಅತೀ ಚಿಕ್ಕ ವಯಸ್ಸಿನಲ್ಲಿರುವಾಗ ಅವನು ಅರಸನ ಕಿರೀಟವನ್ನು ಹೊಂದುವಷ್ಟು ದೊಡ್ಡವನಾಗುವವರೆಗೂ ಅವನನ್ನು ಬಚ್ಚಿಡುವುದರ ಮೂಲಕ ತನ್ನ ಚಿಕ್ಕಮ್ಮ ತನ್ನನ್ನು ಕೊಲ್ಲಲ್ಪಡದಂತೆ ರಕ್ಷಿಸಿದ್ದಳು.
- ಅರಸನಾದ ಯೋವಾಷನು ದೇವರಿಗೆ ಮೊಟ್ಟ ಮೊದಲು ವಿಧೇಯನಾಗಿರುವ ಒಳ್ಳೇಯ ಅರಸನಾಗಿದ್ದನು. ಆದರೆ ಇವನು ಉನ್ನತ ಸ್ಥಳಗಳನ್ನು ತೆಗೆದುಹಾಕಲಿಲ್ಲ, ಮತ್ತು ಇಸ್ರಾಯೇಲ್ಯರು ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ಪುನಃ ಆರಂಭಿಸಿದರು.
- ಅರಸನಾದ ಯೆಹೋವಾಷನು ಇಸ್ರಾಯೇಲ್ ರಾಜ್ಯವನ್ನು ಆಳುತ್ತಿರುವ ವರ್ಷಗಳಲ್ಲಿ ಅರಸನಾದ ಯೋವಾಷನು ಯೂದಾ ರಾಜ್ಯವನ್ನು ಆಳುತ್ತಿದ್ದನು. ಅವರಿಬ್ಬರು ವಿಶಿಷ್ಟವಾದ ಅರಸರಾಗಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಹಜ್ಯ, ಯಜ್ಞವೇದಿ, ಬೆನ್ಯಾಮೀನ, ಸುಳ್ಳು ದೇವರು, ಗಿದ್ಯೋನ್, ಉನ್ನತ ಸ್ಥಳಗಳು, ಸುಳ್ಳು ದೇವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3101, H3135
ಯೋವೇಲ
ಸತ್ಯಾಂಶಗಳು:
ಯೋವೇಲ ಪ್ರವಾದಿಯಾಗಿದ್ದನು, ಇವರು ಯೂದಾ ಅರಸನಾಗಿರುವ ಯೋವಾಷನ ಕಾಲದಲ್ಲಿ ಜೀವಿಸಿರಬಹುದು. ಹಳೇ ಒಡಂಬಡಿಕೆಯಲ್ಲಿ ಯೋವೇಲ ಎನ್ನುವ ಹೆಸರಿನ ಮೇಲೆ ಅನೇಕಮಂದಿ ಜನರಿದ್ದಾರೆ.
- ಹಳೇ ಒಡಂಬಡಿಕೆಯಲ್ಲಿ ಕೊನೆಯ ಭಾಗವಾಗಿರುವ ಪ್ರವಾದಿಗಳ ಚಿಕ್ಕ ಹನ್ನೆರಡು ಪುಸ್ತಕಗಳಲ್ಲಿ ಯೋವೇಲನ ಪುಸ್ತಕವಾಗಿರುತ್ತದೆ.
- ಪ್ರವಾದಿಯಾದ ಯೋವೇಲನ ಕುರಿತಾಗಿ ನಮಗೆ ಸಿಕ್ಕ ಒಂದೇ ಒಂದು ವೈಯುಕ್ತಿಕ ಮಾಹಿತಿ ಏನೆಂದರೆ ಆತನ ತಂದೆ ಪೆತೂವೇಲ.
- ಅಪೊಸ್ತಲನಾದ ಪೇತ್ರನು ಪಂಚಶತ್ತಮ ದಿನದಂದು ಮಾಡಿದ ತನ್ನ ಪ್ರಸಂಗದಲ್ಲಿ ಯೋವೇಲನ ಗ್ರಂಥದಿಂದ ವಾಕ್ಯವನ್ನು ಕ್ರೋಡೀಕರಿಸಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯೋವಾಷ, ಯೂದಾ, ಪಂಚಶತ್ತಮ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3100, G2493
ಯೋಷೀಯ
ಸತ್ಯಾಂಶಗಳು:
ಯೋಷೀಯ ದೈವಿಕ ಅರಸನಾಗಿದ್ದನು, ಈತನು ಸುಮಾರು ಮುವತ್ತೊಂದು ವರ್ಷಗಳ ಕಾಲ ಯೂದಾ ರಾಜ್ಯವನ್ನು ಆಳಿದನು. ಈತನು ಯೂದಾ ಜನರು ಪಶ್ಚಾತ್ತಾಪ ಹೊಂದುವುದಕ್ಕೆ ಮತ್ತು ಯೆಹೋವನನ್ನು ಆರಾಧಿಸುವುದಕ್ಕೆ ನಡೆಸಿದನು.
- ತನ್ನ ತಂದೆಯಾದ ಅರಸ ಅಮ್ಮೋನನನ್ನು ಕೊಂದನಂತರ, ಯೋಷೀಯ ತನ್ನ ಎಂಟನೇ ವಯಸ್ಸಿನಲ್ಲಿ ಯೂದಾ ರಾಜ್ಯದ ಮೇಲೆ ಅರಸನಾದನು.
- ತನ್ನ ಆಳ್ವಿಕೆಯಲ್ಲಿ ಹದಿನೆಂಟನೇ ವರ್ಷದಲ್ಲಿ, ಕರ್ತನ ದೇವಾಲಯವನ್ನು ಪುನಃರ್ ನಿರ್ಮಿಸಲು ಮಹಾ ಯಾಜಕನಾದ ಹಿಲ್ಕೀಯನನ್ನು ನೇಮಿಸಿದನು. ಇದೆಲ್ಲಾ ನಿರ್ಮಿಸಿದನಂತರ, ಧರ್ಮಶಾಸ್ತ್ರವು ದೊರಕಿತು.
- ಧರ್ಮಶಾಸ್ತ್ರದ ಪುಸ್ತಕಗಳನ್ನು ಯೋಷೀಯನಿಗೆ ಓದಿ ತಿಳಿಸಿದನಂತರ, ಆತನ ಜನರು ಯಾವರೀತಿ ದೇವರಿಗೆ ಅವಿಧೇಯತೆಯನ್ನು ತೋರಿಸುತ್ತಿದ್ದಾರೆಂದು ತಿಳಿದು, ತುಂಬಾ ದುಃಖಪಟ್ಟನು. ಆತನು ವಿಗ್ರಹಾರಾಧನೆ ನಡೆಯುವ ಸ್ಥಳಗಳನ್ನೆಲ್ಲಾ ನಾಶ ಮಾಡಬೇಕೆಂದು ಮತ್ತು ಸುಳ್ಳು ದೇವರುಗಳ ಯಾಜಕರನ್ನು ಕೊಂದು ಹಾಕಬೇಕೆಂದು ಆಜ್ಞಾಪಿಸಿದನು.
- ಪಸ್ಕ ಹಬ್ಬವನ್ನು ತಿರುಗಿ ಆಚರಿಸಬೇಕೆಂದೂ ಆತನು ಜನರೆಲ್ಲರಿಗೆ ಆಜ್ಞಾಪಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಸುಳ್ಳು ದೇವರು, ಯೂದಾ, ಧರ್ಮಶಾಸ್ತ್ರ, ಪಸ್ಕ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2977, G2502
ಯೋಸೇಫ (ಹಳೇ ಒಡಂಬಡಿಕೆ)
ಸತ್ಯಾಂಶಗಳು:
ಯೋಸೇಫನು ಯಾಕೋಬನ ಹನ್ನೊಂದನೆಯ ಮಗ. ಅವನು ರಾಹೇಲಳ ಮೊದಲ ಮಗ. ಅವನ ಇಬ್ಬರು ಮಕ್ಕಳಾದ ಎಫ್ರಾಯೀಮ್ ಮತ್ತು ಮನಸ್ಸೆಯ ವಂಶಸ್ಥರು ಇಸ್ರಾಯೇಲ್ಯರ ಎರಡು ಕುಲಗಳಾದರು.
- ಯೋಸೇಫ ಎಂಬ ಇಬ್ರಿಯ ಹೆಸರು ಇಬ್ರಿಯ ಪದದ ಅರ್ಥ "ಸೇರಿಸುವುದು, ಹೆಚ್ಚಿಸುವುದು" ಮತ್ತು ಇಬ್ರಿಯ ಪದದ ಅರ್ಥ "ಕೂಡುವುದು, ತೆಗೆಯುವುದು" ಎಂಬ ಎರಡಕ್ಕೂ ಹೋಲುತ್ತದೆ.
- ಆದಿಕಾಂಡ ಪುಸ್ತಕದ ಹೆಚ್ಚಿನ ಭಾಗವನ್ನು ಯೋಸೇಫನ ಕಥೆಗೆ ಸಮರ್ಪಿಸಲಾಗಿದೆ, ಅವನು ತನ್ನ ಅನೇಕ ಕಷ್ಟಗಳ ಮದ್ಯದಲ್ಲೂ ದೇವರಿಗೆ ಹೇಗೆ ನಂಬಿಗಸ್ತನಾಗಿ ಇದ್ದನು ಮತ್ತು ಅವನನ್ನು ಐಗುಪ್ತಕ್ಕೆ ಗುಲಾಮನನ್ನಾಗಿ ಮಾರಾಟ ಮಾಡಿದ ತನ್ನ ಸಹೋದರರನ್ನು ಹೇಗೆ ಕ್ಷಮಿಸಿದನು.
- ಅಂತಿಮವಾಗಿ ದೇವರು ಯೋಸೇಫನನ್ನು ಐಗುಪ್ತದಲ್ಲಿ ಎರಡನೇ ಅತ್ಯುನ್ನತ ಸ್ಥಾನಕ್ಕೆ ಏರಿಸಿದನು ಮತ್ತು ಸ್ವಲ್ಪ ಆಹಾರವಿದ್ದ ಸಮಯದಲ್ಲಿ ಐಗುಪ್ತದ ಜನರನ್ನು ಮತ್ತು ಸುತ್ತಮುತ್ತಲಿನ ರಾಷ್ಟ್ರಗಳನ್ನು ರಕ್ಷಿಸಲು ಅವನನ್ನು ಉಪಯೋಗಿಸಿದನು. ಯೋಸೇಫನು ತನ್ನ ಕುಟುಂಬವನ್ನು ಹಸಿವಿನಿಂದ ರಕ್ಷಿಸಲು ಸಹಾಯ ಮಾಡಿದನು ಮತ್ತು ಅವರನ್ನು ಐಗುಪ್ತದಲ್ಲಿ ತನ್ನೊಂದಿಗೆ ವಾಸಿಸಲು ಕರೆತಂದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಇವುಗಳನ್ನು ಸಹ ನೋಡಿರಿ : ಇಸ್ರಾಯೇಲಿನ ಹನ್ನೆರಡುಕುಲಗಳು, ಎಫ್ರಾಯೀಮ್, ಮನಸ್ಸೆ, ಯಾಕೋಬ, ರಾಹೇಲಳು)
ಸತ್ಯವೇದದ ಅನುಬಂಧ ವಾಕ್ಯಗಳು:
ಸತ್ಯವೇದ ಕಥೆಗಳಿಂದ ಉದಾಹರಣೆಗಳು:
- 8:02 ___ ಯೋಸೇಫನನ್ನು __ ತನ್ನ ತಂದೆ ಹೆಚ್ಚಾಗಿ ಪ್ರೀತಿಸಿದ್ದರಿಂದ ಮತ್ತು ಇವನು ಅವರಿಗೆ ನಾಯಕನಾಗುತ್ತಾನೆನ್ನುವ ಕನಸು ಯೋಸೇಫನಿಗೆ ಬಂದಿರುವುದರಿಂದ ತನ್ನ ಸಹೋದರರು ಆವನನ್ನು ದ್ವೇಷಿಸಿದರು.
- 8:04 ಗುಲಾಮರನ್ನು ಕೊಂಡುಕೊಳ್ಳುವವರು __ ಯೋಸೇಫನನ್ನು ___ ಐಗುಪ್ತಕ್ಕೆ ಕರೆದುಕೊಂಡು ಹೋದರು.
- 8:05 ಸೆರೆಮನೆಯಲ್ಲಿಯೂ ___ ಯೋಸೇಫನು ___ ದೇವರಿಗೆ ನಂಬಿಗಸ್ತನಾಗಿದ್ದನು, ಮತ್ತು ದೇವರು ಆತನನ್ನು ಆಶೀರ್ವಾದ ಮಾಡಿದನು.
- 8:07 ಕನಸುಗಳಿಗೆ ಅರ್ಥವಿವರಣೆಯನ್ನು ಹೇಳುವ ಸಾಮರ್ಥ್ಯವನ್ನು ದೇವರು ___ ಯೋಸೇಫನಿಗೆ __ ಕೊಟ್ಟಿದ್ದನು, ಆದ್ದರಿಂದ ಫರೋಹನು ಯೋಸೇಫನನ್ನು ಸೆರೆಮನೆಯಿಂದ ತನ್ನ ಬಳಿಗೆ ಕರೆಸಿಕೊಂಡಿದ್ದನು.
- 8:09 ಚೆನ್ನಾಗಿ ಬೆಳೆಗಳು ಬೆಳೆಯುವ ಏಳು ವರ್ಷಗಳ ಕಾಲದಲ್ಲಿಯೇ ಹೆಚ್ಚಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಬೇಕೆಂದು ___ ಯೋಸೇಫನು __ ಜನರಿಗೆ ಹೇಳಿದನು.
- 9:02 ಐಗುಪ್ತರು ___ ಯೋಸೇಫನನ್ನು ___ ಮತ್ತು ಅವನು ಅವರಿಗೆ ಮಾಡಿದ ಎಲ್ಲಾ ಕಾರ್ಯಗಳನ್ನು ಹೆಚ್ಚಿನ ಕಾಲ ನೆನಪಿನಲ್ಲಿಟ್ಟುಕೊಳ್ಳಲಿಲ್ಲ.
ಪದದ ಡೇಟಾ:
- Strong's: H3084, H3130, G25000, G25010
ಯೋಸೇಫ (ಹೊಸ ಒಡಂಬಡಿಕೆ)
ಸತ್ಯಾಂಶಗಳು:
ಯೋಸೇಫನು ಯೇಸುವಿನ ಭೂಲೋಕದ ತಂದೆಯಾಗಿದ್ದನು ಮತ್ತು ತನ್ನ ಮಗನನ್ನಾಗಿ ಸಾಕಿದನು. ಇವನು ನೀತಿವಂತನಾಗಿದ್ದನು ಮತ್ತು ಬಡಿಗಿ ಕೆಲಸ ಮಾಡುವವನಾಗಿದ್ದನು.
- ಯೋಸೇಫನು ಯೆಹೂದ್ಯರ ಹುಡಿಗಿಯಾದ ಮರಿಯಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು, ಅವರು ಪ್ರಧಾನ ಮಾಡಿಕೊಂಡಿರುವ ಸಮಯದಲ್ಲಿಯೇ, ದೇವರು ಮೆಸ್ಸೀಯನಾದ ಯೇಸುಕ್ರಿಸ್ತನಿಗೆ ಮರಿಯಳನ್ನು ತಾಯಿಯನ್ನಾಗಿ ಮಾಡಿದನು.
- ಪವಿತ್ರಾತ್ಮನು ಅದ್ಭುತವಾದ ರೀತಿಯಲ್ಲಿ ಮರಿಯಳು ಗರ್ಭ ಧರಿಸುವಂತೆ ಮಾಡಿದನೆಂದು ಮತ್ತು ಮರಿಯಳ ಶಿಶುವು ದೇವರ ಮಗನೆಂದು ದೂತನು ಯೋಸೇಫನಿಗೆ ಹೇಳಿದನು.
- ಯೇಸು ಹುಟ್ಟಿದನಂತರ, ಹೆರೋದನಿಂದ ಯೇಸುವನ್ನು ತಪ್ಪಿಸಲು ಶಿಶುವನ್ನು ಮತ್ತು ಮರಿಯಳನ್ನು ಐಗುಪ್ತಕ್ಕೆ ಕರೆದುಕೊಂಡು ಹೋಗಬೇಕೆಂದು ದೂತನು ಯೋಸೇಫನಿಗೆ ತಿಳಿಸಿದನು.
- ಸ್ವಲ್ಪ ಕಾಲವಾದನಂತರ ಯೋಸೇಫ ಮತ್ತು ತನ್ನ ಕುಟುಂಬವು ಗಲಿಲಾಯದಲ್ಲಿರುವ ನಜರೇತನಲ್ಲಿ ಜೀವಿಸಿದರು, ಅಲ್ಲಿಯೇ ಅವನು ಬಡಿಗೆ ಕೆಲಸವನ್ನು ಮಾಡಿಕೊಳ್ಳುತ್ತಾ ಜೀವನವನ್ನು ಮುಂದೆವರಿಸಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಗಲಿಲಾಯ, ಯೇಸು, ನಜರೇತ, ದೇವರ ಮಗ, ಕನ್ನಿಕೆ)
ಸತ್ಯವೇದದ ಅನುಬಂಧ ವಾಕ್ಯಗಳು :
- ಯೋಹಾನ.01:43-45
- ಲೂಕ.01:26-29
- ಲೂಕ.02:4-5
- ಲೂಕ.02:15-16
- ಮತ್ತಾಯ.01:18-19
- ಮತ್ತಾಯ.01:24-25
- ಮತ್ತಾಯ.02:19-21
- ಮತ್ತಾಯ.13:54-56
ಸತ್ಯವೇದದಿಂದ ಉದಾಹರಣೆಗಳು:
- 22:04 ಈಕೆ (ಮರಿಯ) ಕನ್ನಿಕೆಯಾಗಿದ್ದಳು ಮತ್ತು ___ ಯೋಸೇಫ ___- ಎನ್ನುವ ಹೆಸರಿನವನನ್ನು ವಿವಾಹ ಮಾಡಿಕೊಳ್ಳುವುದಕ್ಕೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು.
- 23:01 ನೀತಿವಂತನಾಗಿರುವ __ -ಯೋಸೇಫ __ ಎನ್ನುವ ವ್ಯಕ್ತಿಗೆ ಮತ್ತು ಮರಿಯಳಿಗೆ ನಿಶ್ಚಿತಾರ್ಥವಾಗಿತ್ತು. ಮರಿಯಳು ಗರ್ಭವನ್ನು ಧರಿಸಿದ್ದಾಳೆಂದು ಅವನು ಕೇಳಿದಾಗ, ಆ ಶಿಶುವು ನನ್ನದಲ್ಲ ಎಂದು ಮನದಲ್ಲಿ ತಿಳಿದನು. ಅವನು ಆಕೆಯನ್ನು ಅವಮಾನ ಮಾಡಬೇಕೆಂದು ಬಯಸಲಿಲ್ಲ, ಇದರಿಂದ ಅವನು ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚನೆ ಮಾಡಿದ್ದನು.
- 23:02 “__ ಯೋಸೇಫನೇ __ , ನಿನ್ನ ಹೆಂಡತಿಯಾದ ಮರಿಯಳನ್ನು ಕರೆದುಕೊಂಡು ಹೋಗುವುದಕ್ಕೆ ಹೆದರಬೇಡ” ಎಂದು ದೂತ ಹೇಳಿದನು. ಆಕೆಯ ಗರ್ಭದಲ್ಲಿರುವ ಶಿಶುವು ಪವಿತ್ರಾತ್ಮನಿಂದ ಬಂದಿರುವ ಶಿಶುವಾಗಿರುತ್ತದೆ. ಆಕೆ ಒಬ್ಬ ಮಗನಿಗೆ ಜನ್ಮವನ್ನು ಕೊಡುತ್ತಾಳೆ. ಆತನಿಗೆ ಯೇಸು ಹೆಸರಿಡಬೇಕು (ಈ ಹೆಸರಿಗೆ “ಯೆಹೋವನು ರಕ್ಷಿಸುವನು” ಎಂದರ್ಥ), ಯಾಕಂದರೆ ಆತನು ಜನರ ಪಾಪಗಳಿಂದ ಅವರನ್ನು ರಕ್ಷಿಸುವನು.
- 23:03 ಆದ್ದರಿಂದ ___ ಯೋಸೇಫನು ___ ಮರಿಯಳನ್ನು ಮದುವೆ ಮಾಡಿಕೊಂಡನು ಮತ್ತು ಆತನು ಆಕೆಯನ್ನು ತನ್ನ ಹೆಂಡತಿಯಾಗಿ ಕರೆದುಕೊಂಡು ಹೋದನು, ಆದರೆ ಆಕೆ ಹೆರೆಗೆ ಆಗುವವರೆಗೂ ಅವನು ಆಕೆಯೊಂದಿಗೆ ಕೂಡಿರಲಿಲ್ಲ.
- 23:04 ___ ಯೋಸೇಫನು ___ ಮತ್ತು ಮರಿಯಳು ನಿವಾಸವಾಗಿದ್ದ ನಜರೇತಿನಿಂದ ಬೆತ್ಲೆಹೇಮಿಗೆ ಸೇರಲು ತುಂಬಾ ದೂರ ಪ್ರಯಾಣ ಮಾಡಬೇಕಾಗಿದ್ದಿತ್ತು. ಯಾಕಂದರೆ ಅವರ ಪೂರ್ವಜನಾಗಿರುವ ದಾವೀದನ ಊರು ಬೆತ್ಲೆಹೇಮ್ ಆಗಿತ್ತು.
- 26:04 “ನಿಮ್ಮೊಂದಿಗೆ ನಾನು ಹೇಳುತ್ತಿರುವ ಈ ಮಾತುಗಳೆಲ್ಲವೂ ಈ ಕ್ಷಣದಲ್ಲಿಯೇ ನೆರವೇರಿಸಲ್ಪಡುತ್ತಿವೆಯೆಂದು” ಯೇಸು ಹೇಳಿದನು. ಅಲ್ಲಿರುವ ಎಲ್ಲಾ ಜನರು ಬೆರಗಾದರು. ಅವರೆಲ್ಲರು “ಇವನು ___ ಯೋಸೇಫನ ___ ಮಗನಲ್ಲವೋ?” ಎಂದು ಹೇಳಿಕೊಂಡರು.
ಪದ ಡೇಟಾ:
- Strong's: G2501
ಯೋಹಾನ (ಅಪೊಸ್ತಲನು)
ಸತ್ಯಾಂಶಗಳು:
ಯೋಹಾನನು ಯೇಸುವಿನ ಹನ್ನೆರಡು ಮಂದಿ ಅಪೋಸ್ತಲರಲ್ಲಿ ಒಬ್ಬನಾಗಿರುತ್ತಾನೆ ಮತ್ತು ಯೇಸುವಿಗೆ ತುಂಬಾ ಪ್ರಿಯ ಸ್ನೇಹಿತರಲ್ಲಿ ಒಬ್ಬನಾಗಿದ್ದನು.
- ಯೋಹಾನ ಮತ್ತು ತನ್ನ ಸಹೋದರನಾದ ಯಾಕೋಬನು ಮೀನುಗಾರನಾದ ಜೆಬೆದಾಯನ ಪುತ್ರರಾಗಿದ್ದರು.
- ಈತನು ಬರೆದ ಸುವಾರ್ತೆಯಲ್ಲಿ ಯೇಸುವಿನ ಜೀವನದ ಕುರಿತಾಗಿ ಬರೆದಿದ್ದನು, “ಯೇಸು ಹೆಚ್ಚಾಗಿ ಪ್ರೀತಿಸಿದ ಶಿಷ್ಯ” ಎಂಬುದಾಗಿ ಯೋಹಾನನು ತನಗೋಸ್ಕರ ತಾನೇ ಹೇಳಿಕೊಂಡಿದ್ದನು. ಇದರಿಂದ ಯೋಹಾನನು ಯೇಸುವಿಗೆ ತುಂಬಾ ವಿಶೇಷವಾದ ಆತ್ಮೀಯ ಗೆಳೆಯನಾಗಿರುತ್ತಾನೆಂದು ಪರೋಕ್ಷವಾಗಿ ತಿಳಿದುಬರುತ್ತಿದೆ.
- ಅಪೊಸ್ತಲನಾದ ಯೋಹಾನನು ಹೊಸ ಒಡಂಬಡಿಕೆಯಲ್ಲಿ ಐದು ಪುಸ್ತಕಗಳನ್ನು ಬರೆದಿರುತ್ತಾನೆ: ಯೋಹಾನನ ಸುವಾರ್ತೆ, ಯೇಸು ಕ್ರಿಸ್ತನ ಪ್ರಕಟನೆ, ಮತ್ತು ಇತರ ವಿಶ್ವಾಸಿಗಳಿಗೆ ಬರೆದ ಮೂರು ಪತ್ರಿಕೆಗಳು.
- ಅಪೊಸ್ತಲನಾದ ಯೋಹಾನನು ಸ್ನಾನೀಕನಾದ ಯೋಹಾನನು ಬೇರೆ ಬೇರೆಯಾಗಿರುತ್ತಾರೆಂದು ಸ್ಪಷ್ಟಪಡಿಸಿರಿ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಬಹಿರಂಗಪಡಿಸು, ಯಾಕೋಬ (ಜೆಬೆದಾಯನ ಮಗ), ಯೋಹಾನ (ಸ್ನಾನಿಕನು), ಜೆಬೆದಾಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 36:01 ಒಂದು ದಿನ ಯೇಸು ತನ್ನ ಶಿಷ್ಯರಾದ ಪೇತ್ರ, ಯಾಕೋಬ ಮತ್ತು ___ ಯೋಹಾನರನ್ನು ___ ಆತನೊಂದಿಗೆ ಇದ್ದುಕೊಂಡು ಕರೆದುಕೊಂಡು ಹೋದನು. (___ ಯೋಹಾನ ___ ಎನ್ನುವ ಹೆಸರಿರುವ ಶಿಷ್ಯನು ಯೇಸುವಿಗೆ ದೀಕ್ಷಾಸ್ನಾನ ಕೊಟ್ಟ ವ್ಯಕ್ತಿಯಾದ ಯೋಹಾನನು ಒಂದೇ ಅಲ್ಲ.) ಅವರು ತಮ್ಮಷ್ಟಕ್ಕೆ ತಾವು ಎತ್ತರವಾದ ಬೆಟ್ಟದ ಮೇಲಕ್ಕೆ ಏರಿ ಹೋದರು.
- 44:01 ಒಂದು ದಿನ ಪೇತ್ರ ಮತ್ತು ___ ಯೋಹಾನರು ___ ದೇವಾಲಯಕ್ಕೆ ಹೋಗಿದ್ದರು. ಅವರು ದೇವಾಲಯ ಬಾಗಿಲವರೆಗೆ ಹೋದಾಗ, ಅಲ್ಲಿ ಒಬ್ಬ ಹುಟ್ಟು ಕುಂಟನು ದುಡ್ಡಿಗಾಗಿ ಬೇಡಿಕೊಳ್ಳುವುದನ್ನು ನೋಡಿದರು.
- 44:06 ದೇವಾಲಯದ ನಾಯಕರು ಪೇತ್ರನು ಮತ್ತು ___ ಯೋಹಾನರು ___ ಹೇಳುತ್ತಿರ ಮಾತುಗಳನ್ನು ಕೇಳಿಸಿಕೊಂಡು ತುಂಬಾ ನಿರಾಸೆಗೊಂಡಿದ್ದರು. ಆದ್ದರಿಂದ ಅವರು ಅವರನ್ನು ಬಂಧಿಸಿ, ಅವರನ್ನು ಸೆರೆಯೊಳಗೆ ಹಾಕಿದರು.
- 44:07 ಆ ಮರುದಿನ, ಯೆಹೂದ್ಯರ ನಾಯಕರು ಪೇತ್ರನನ್ನು ಮತ್ತು ___ ಯೋಹಾನನನ್ನು ___ ಮಹಾ ಯಾಜಕನ ಬಳಿಗೆ ಮತ್ತು ಇತರ ಧರ್ಮದ ನಾಯಕರ ಬಳಿಗೆ ಕರೆದುಕೊಂಡು ಹೋದರು. “ನೀವು ಯಾವ ಶಕ್ತಿಯಿಂದ ಈ ಕುಂಟನನ್ನು ವಾಸಿ ಮಾಡಿದರು?” ಎಂದು ಅವರು ಪೇತ್ರ ಮತ್ತು ___ ಯೋಹಾನರನ್ನು ___ ಕೇಳಿದರು.
- 44:09 ಪೇತ್ರ ಮತ್ತು ___ ಯೋಹಾನರು ___ ಧೈರ್ಯವಾಗಿ ಮಾತನಾಡಿದ್ದನ್ನು ನೋಡಿ ನಾಯಕರು ಬೆರಗಾದರು, ಯಾಕಂದರೆ ಅವರು ಈ ಮನುಷ್ಯರು ಅವಿದ್ಯಾವಂತರು ಸಾಧಾರಣ ವ್ಯಕ್ತಿಗಳೆಂದು ಅವರು ತಿಳಿದಿದ್ದರು. ಈ ಮನುಷ್ಯರು ಯೇಸುವಿನೊಂದಿಗೆ ಇದ್ದವರೆಂದು ಅವರು ಜ್ಞಾಪಕ ಮಾಡಿಕೊಂಡಿದ್ದರು. ಅವರು ಪೇತ್ರ ಮತ್ತು ___ ಯೋಹಾನರನ್ನು ___ ಬೆದರಿಸಿದನಂತರ, ಅವರನ್ನು ಕಳುಹಿಸಿಬಿಟ್ಟರು.
ಪದ ಡೇಟಾ:
- Strong's: G2491
ಯೋಹಾನ (ಸ್ನಾನಿಕನು)
ಸತ್ಯಾಂಶಗಳು:
ಯೋಹಾನನು ಜೆಕರ್ಯ ಮತ್ತು ಎಲೀಸಬೆತಳಿಗೆ ಹುಟ್ಟಿದ ಮಗನಾಗಿದ್ದನು. “ಯೋಹಾನ” ಎನ್ನುವ ಹೆಸರು ಸಾಧಾರಣವಾಗಿದ್ದರಿಂದ, ಯೋಹಾನ ಮತ್ತು ಅಪೊಸ್ತಲನಾದ ಯೋಹಾನ ಎನ್ನುವ ಹೆಸರುಗಳಿರುವವರಿಂದ ಬೇರ್ಪಡಿಸಿ ಹೇಳಲು ಈತನನನ್ನು “ಸ್ನಾನಿಕನಾದ ಯೋಹಾನ” ಎಂದು ಕರೆಯುತ್ತಾರೆ.
- ಜನರು ಮೆಸ್ಸೀಯಾನನ್ನು ಅನುಸರಿಸುವುದಕ್ಕೆ ಮತ್ತು ಆತನನ್ನು ನಂಬುವುದಕ್ಕೆ ಯೋಹಾನನು ಜನರನ್ನು ಸಿದ್ಧಗೊಳಿಸಲು ಕಳುಹಿಸಲ್ಪಟ್ಟ ದೇವರ ಪ್ರವಾದಿಯಾಗಿದ್ದನು.
- ಜನರೆಲ್ಲರು ಪಾಪಗಳನ್ನು ಒಪ್ಪಿಕೊಳ್ಳಬೇಕೆಂದು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು, ಮತ್ತು ಪಾಪ ಮಾಡದಿರಬೇಕೆಂದು ಯೋಹಾನನು ಜನರಿಗೆ ಪ್ರಕಟಿಸಿದನು, ಇದರಿಂದ ಅವರು ಮೆಸ್ಸೀಯನನ್ನು ಸ್ವೀಕರಿಸುವುದಕ್ಕೆ ಸಿದ್ಧರಾಗಿರುತ್ತಾರೆ.
- ಜನರೆಲ್ಲರು ತಮ್ಮ ಪಾಪಗಳಿಗೆ ಕ್ಷಮೆಯನ್ನು ಹೊಂದುವ ಸೂಚನೆಯಾಗಿ ಮತ್ತು ಆ ಪಾಪಗಳಿಂದ ತಿರುಗಿಕೊಂಡಿದ್ದಾರೆನ್ನುವುದಕ್ಕೆ ಸೂಚನೆಯಾಗಿ ಯೋಹಾನನು ಅನೇಕ ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಕೊಟ್ಟನು.
- ಯೋಹಾನನು ಅನೇಕರಿಗೆ ದೀಕ್ಷಾಸ್ನಾನ ಕೊಟ್ಟಿದ್ದರಿಂದ ಆತನನ್ನು “ಸ್ನಾನಿಕನಾದ ಯೋಹಾನ” ಎಂದು ಕರೆಯಲ್ಪಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದೀಕ್ಷಾಸ್ನಾನ, ಜೆಕರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
- ಯೋಹಾನ.03:22-24
- ಲೂಕ.01:11-13
- ಲೂಕ.01:62-63
- ಲೂಕ.03:7
- ಲೂಕ.03:15-16
- ಲೂಕ.07:27-28
- ಮತ್ತಾಯ.03:13-15
- ಮತ್ತಾಯ.11:13-15
ಸತ್ಯವೇದದಿಂದ ಉದಾಹರಣೆಗಳು:
- 22:02 “ನಿನ್ನ ಹೆಂಡತಿ ನಿನಗೆ ಒಬ್ಬ ಗಂಡು ಮಗನನ್ನು ಹೆರುವಳು. ನೀನು ಅವನಿಗೆ __ ಯೋಹಾನ __ ಎಂದು ಹೆಸರಿಡಬೇಕು. ಅವನು ಪವಿತ್ರಾತ್ಮಭರಿತನಾಗಿರುವನು ಮತ್ತು ಮೆಸ್ಸೀಯಾನಿಗಾಗಿ ಜನರನ್ನು ಸಿದ್ಧಗೊಳಿಸುವನು!” ಎಂದು ದೂತ ಜೆಕರ್ಯನಿಗೆ ಹೇಳಿದನು.
- 22:07 ಎಲಿಸಬೇತಳು ಗಂಡು ಮಗನನ್ನು ಹೆತ್ತನಂತರ, ದೂತನು ಹೇಳಿದಂತೆಯೇ ಜೆಕರ್ಯ ಮತ್ತು ಎಲಿಸಬೇತಳು ಆ ಮಗುವಿಗೆ __ ಯೋಹಾನ __ ಎಂದು ಹೆಸರಿಟ್ಟರು.
- 24:01 ಜೆಕರ್ಯ ಮತ್ತು ಎಲಿಸಬೇತಳ ಮಗನಾದ __ ಯೋಹಾನ __ ದೊಡ್ಡವನಾಗಿ, ಪ್ರವಾದಿಯಾದನು. ಇವನು ಕಾಡು ಜೇನು ಮತ್ತು ಮಿಡತೆಗಳನ್ನು ತಿನ್ನುತ್ತಾ, ಒಂಟೆಯ ಕೂದಲುಗಳಿಂದ ಮಾಡಿದ ವಸ್ತ್ರಗಳನ್ನು ಧರಿಸಿಕೊಳ್ಳುತ್ತಾ ಅರಣ್ಯದಲ್ಲಿ ಜೀವಿಸುತ್ತಿದ್ದನು.
- 24:02 __ ಯೋಹಾನನ __ ವಾಕ್ಯವನ್ನು ಕೇಳಲು ಅನೇಕರು ಆ ಅರಣ್ಯದೊಳಗೆ ಬರುತ್ತಿದ್ದರು. “ದೇವರ ರಾಜ್ಯವು ಸಮೀಪವಾಯಿತು, ಪಶ್ಚಾತ್ತಾಪ ಹೊಂದಿರಿ” ಎಂದು ಅವನು ಅವರಿಗೆ ಪ್ರಕಟಿಸಿದನು!
- 24:06 ಮರುದಿನ, ಯೇಸು __ ಯೋಹಾನನಿಂದ __ ದೀಕ್ಷಾಸ್ನಾನ ತೆಗೆದುಕೊಳ್ಳುವುದಕ್ಕೆ ಅವನ ಬಳಿಗೆ ಬಂದನು. __ ಯೋಹಾನನು __ ಆತನನ್ನು ನೋಡಿದಾಗ, “ಅಗೋ! ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದ ಕುರಿಮರಿ” ಎಂದು ಹೇಳಿದನು
ಪದ ಡೇಟಾ:
- Strong's: G910 G2491
ಯೋಹಾನ ಮಾರ್ಕ
ಸತ್ಯಾಂಶಗಳು:
ಯೋಹಾನ ಮಾರ್ಕನು “ಮಾರ್ಕ” ಎಂದು ಹೆಸರಿನ ಮೇಲೆ ಕರೆಯಲ್ಪಡುತ್ತಿದ್ದನು, ಇವನು ಪೌಲನ ಸುವಾರ್ತೆ ದಂಡೆಯಾತ್ರೆಯ ಪ್ರಯಾಣಗಳಲ್ಲಿ ಪೌಲನೊಂದಿಗೆ ಪ್ರಯಾಣ ಮಾಡಿದವರಲ್ಲಿ ಒಬ್ಬನಾಗಿದ್ದನು. ಈತನು ಮಾರ್ಕನ ಸುವಾರ್ತೆ ಎನ್ನುವ ಪುಸ್ತಕಕ್ಕೆ ಲೇಖಕನಾಗಿದ್ದನು.
- ಯೋಹಾನ ಮಾರ್ಕನು ತನ್ನ ಸೋದರ ಸಂಬಂಧಿಯಾದ ಬಾರ್ನಬ ಮತ್ತು ಪೌಲರ ಜೊತೆಯಲ್ಲಿ ತಮ್ಮ ಮೊದಲನೇ ಸುವಾರ್ತೆಯ ಪ್ರಯಾಣದಲ್ಲಿ ಹೋಗಿದ್ದನು.
- ಪೇತ್ರನನ್ನು ಯೆರೂಸಲೇಮಿನಲ್ಲಿರುವ ಸೆರೆಯೊಳಗೆ ಹಾಕಿದಾಗ, ವಿಶ್ವಾಸಿಗಳೆಲ್ಲರು ಯೋಹಾನ ಮಾರ್ಕನ ಮನೆಯಲ್ಲಿ ಪೇತ್ರನಿಗಾಗಿ ಪ್ರಾರ್ಥನೆ ಮಾಡುತ್ತಿದ್ದರು.
- ಮಾರ್ಕ ಅಪೊಸ್ತಲನಲ್ಲ, ಆದರೆ ಪೌಲ ಮತ್ತು ಪೇತ್ರರಿಂದ ಬೋಧನೆಯನ್ನು ಹೊಂದಿ, ಸೇವೆಯಲ್ಲಿ ಅವರೊಂದಿಗೆ ಸೇರಿ ಕೆಲಸ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬೆಲೋನಿಯ, ಯೂದಾ)
ಸತ್ಯವೇದದ ಅನುಬಂಧ ವಾಕ್ಯಗಳು :
- 2 ತಿಮೊಥೆ.04:11-13
- ಅಪೊ.ಕೃತ್ಯ.12:24-25
- ಅಪೊ.ಕೃತ್ಯ.13:4-5
- ಅಪೊ.ಕೃತ್ಯ.13:13-15
- ಅಪೊ.ಕೃತ್ಯ.15:36-38
- ಅಪೊ.ಕೃತ್ಯ.15:39-41
- ಕೊಲೊಸ್ಸ.04:10-11
ಪದ ಡೇಟಾ:
- Strong's: G2491, G3138
ರಬ್ಬ
ಪದದ ಅರ್ಥವಿವರಣೆ:
ರಬ್ಬ ಎನ್ನುವುದು ಅಮ್ಮೋನಿಯ ಜನರ ಪ್ರಾಮುಖ್ಯವಾದ ಪಟ್ಟಣವಾಗಿತ್ತು.
- ಅಮ್ಮೋನಿಯರಿಗೆ ವಿರುದ್ಧವಾಗಿ ನಡೆದ ಯುದ್ಧದಲ್ಲಿ ಇಸ್ರಾಯೇಲ್ಯರು ಅನೇಕಬಾರಿ ರಬ್ಬವನ್ನು ಧಾಳಿ ಮಾಡಿದ್ದರು.
- ಇಸ್ರಾಯೇಲಿಯರ ಅರಸನಾಗಿರುವ ದಾವೀದನು ತನ್ನ ಕೊನೆಯ ಜಯವು ರಬ್ಬವನ್ನು ವಶಪಡಿಸಿಕೊಂಡಾಗ ಹೊಂದಿದ್ದನು.
- ಈಗಿನ ಆಧುನಿಕ ಅಮ್ಮಾನ್ ಯೊರ್ದನ್ ಪಟ್ಟಣವು ಆಗಿನ ರಬ್ಬ ಇರುವ ಪ್ರಾಂತ್ಯವಾಗಿದ್ದಿತ್ತು.
(ಈ ಪದಗಳನ್ನು ಸಹ ನೋಡಿರಿ : ಅಮ್ಮೋನ್, ದಾವೀದ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7237
ರಾಮಾ
ಸತ್ಯಾಂಶಗಳು:
ರಾಮಾ ಎನ್ನುವುದು ಇಸ್ರಾಯೇಲ್ ಪುರಾತನ ಪಟ್ಟಣವಾಗಿರುತ್ತದೆ, ಇದು ಯೆರೂಸಲೇಮಿನಿಂದ ಸುಮಾರು 8 ಕಿ.ಮೀ. ದೂರದಲ್ಲಿ ಕಂಡುಬರುತ್ತದೆ. ಇದು ಬೆನ್ಯಾಮಿನ್ ಕುಲದವರು ನಿವಾಸವಾಗಿರುವ ಪ್ರಾಂತ್ಯದಲ್ಲಿತ್ತು.
- ರಾಮಾ ಎನ್ನುವುದು ರಾಹೇಲಳು ಬೆನ್ಯಾಮೀನನಿಗೆ ಜನನ ಕೊಟ್ಟನಂತರ ಮರಣ ಹೊಂದಿದ ಸ್ಥಳವಾಗಿರುತ್ತದೆ.
- ಬಾಬೆಲೋನಿಯ ಸೆರೆಯಲ್ಲಿ ಇಸ್ರಾಯೇಲ್ಯರನ್ನು ಹಿಡಿದುಕೊಂಡು ಹೋದಾಗ, ಅವರು ಬಾಬೇಲೋನಿಗೆ ಹೋಗುವುದಕ್ಕೆ ಮುಂಚಿತವಾಗಿ ಅವರನ್ನು ರಾಮಾಗೆ ಕರೆದುಕೊಂಡು ಬಂದಿದ್ದರು.
- ರಾಮಾ ಎನ್ನುವುದು ಸಮುವೇಲನ ತಂದೆತಾಯಿಗಳ ಊರಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೆನ್ಯಾಮೀನ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7414, G4471
ರಾಮೋತ್
ಸತ್ಯಾಂಶಗಳು:
ರಾಮೋತ್ ಎನ್ನುವುದು ಯೊರ್ದನ್ ಹೊಳೆಯ ಹತ್ತಿರ ಗಿಲ್ಯಾದಿನ ಪರ್ವತಗಳಲ್ಲಿ ಒಂದು ಪ್ರಾಮುಖ್ಯ ಪಟ್ಟಣವಾಗಿದ್ದಿತ್ತು. ಇದನ್ನು ರಾಮೋತ್ ಗಿಲ್ಯಾದ್ ಎಂದೂ ಕರೆಯುತ್ತಾರೆ.
- ರಾಮೋತ್ ಎನ್ನುವುದು ಇಸ್ರಾಯೇಲ್ ಕುಲವಾಗಿರುವ ಗಾದಿಗೆ ಸಂಬಂಧಪಟ್ಟಿರುತ್ತದೆ ಮತ್ತು ಇದನ್ನು ಆಶ್ರಯ ನಗರ ಎಂಬುದಾಗಿ ಗುರುತಿಸಲಾಗಿರುತ್ತದೆ.
- ಇಸ್ರಾಯೇಲ್ ಅರಸನಾದ ಆಹಾಬ ಮತ್ತು ಯೆಹೂದ ಅರಸನಾಗಿರುವ ಯೆಹೋಷಫಾಟರು ರಾಮೋತ್ .ನಲ್ಲಿ ಆರಾಮ್ ಅರಸನಿಗೆ ವಿರುದ್ಧವಾಗಿ ಯುದ್ಧ ಮಾಡಿದ್ದರು. ಆಹಾಬನು ಆ ಯುದ್ಧದಲ್ಲಿ ಸಾಯಿಸಲ್ಪಟ್ಟನು.
- ಸ್ವಲ್ಪ ಕಾಲವಾದನಂತರ, ಅರಸನಾದ ಅಹಜ್ಯ ಮತ್ತು ಅರಸನಾದ ಯೋರಾಮರು ಅರಸನಾದ ಆರಾಮನ ಕೈಯಿಂದ ರಾಮೋತ್ ಪಟ್ಟಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಪಟ್ಟರು.
- ರಾಮೋತ್ ಗಿಲ್ಯಾದ್ ಎನ್ನುವುದು ಇಸ್ರಾಯೇಲ್ ಜನರಿಗೆ ಅರಸನಾಗಿ ಯೇಹು ಅಭಿಷೇಕಿಸಲ್ಪಟ್ಟ ಸ್ಥಳವಾಗಿದ್ದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆಹಾಬ, ಅಹಜ್ಯ, ಆರಾಮ್, ಗಾದ್, ಯೆಹೋಷಫಾಟ, ಯೇಹು, ಯೋರಾಮ, ಯೊರ್ದನ್ ಹೊಳೆ, ಯೆಹೂದ, ಆಶ್ರಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7216, H7418, H7433
ರಾಹಾಬಳು
ಸತ್ಯಾಂಶಗಳು:
ರಾಹಾಬಳು ಇಸ್ರಾಯೇಲ್ಯರು ಯೆರಿಕೋವನ್ನು ದಾಳಿ ಮಾಡಿದಾಗ ಆ ಪಟ್ಟಣದಲ್ಲಿಯೇ ನಿವಾಸವಾಗಿರುವ ಒಬ್ಬ ಸ್ತ್ರೀಯಾಗಿದ್ದಳು. ಈಕೆ ಸೂಳೆಯಾಗಿದ್ದಳು.
- ಇಸ್ರಾಯೇಲ್ಯರು ಯೆರಿಕೋವನ್ನು ದಾಳಿ ಮಾಡುವುದಕ್ಕೆ ಮುಂಚಿತವಾಗಿ ಯೆರಿಕೋವನ್ನು ಗೂಡಚಾರ ಮಾಡಲು ಬಂದಿರುವ ಇಬ್ಬರು ಇಸ್ರಾಯೇಲ್ಯರನ್ನು ರಾಹಾಬಳು ಬಚ್ಚಿಟ್ಟಿದ್ದಳು. ಗೂಢಚಾರಿಗಳು ತಿರುಗಿ ಇಸ್ರಾಯೇಲ್ ಬಿಡಾರಕ್ಕೆ ತಿರುಗಿ ಹೋಗುವುದಕ್ಕೆ ಈಕೆ ಸಹಾಯ ಮಾಡಿದ್ದಳು.
- ರಾಹಾಬಳು ಯೆಹೋವನಲ್ಲಿ ನಂಬಿಕೆಯಿಟ್ಟಳು.
- ಯೆರಿಕೋವನ್ನು ನಾಶಗೊಳಿಸಿದನಂತರ ಆಕೆ ಮತ್ತು ಆಕೆಯ ಕುಟುಂಬವು ರಕ್ಷಿಸಲ್ಪಟ್ಟರು, ಮತ್ತು ಅವರು ಇಸ್ರಾಯೇಲ್ಯರ ಜೊತೆಯಲ್ಲಿ ನಿವಾಸ ಮಾಡುವುದಕ್ಕೆ ಬಂದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಯೆರಿಕೋ, ವ್ಯಭಿಚಾರಿಣಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 15:01 ಗೂಢಚಾರಿಗಳನ್ನು ಬಚ್ಚಿಟ್ಟು, ಅವರು ತಪ್ಪಿಸಿಕೊಂಡು ಹೋಗುವುದಕ್ಕೆ ಸಹಾಯ ಮಾಡಿದ ___ ರಾಹಬಳು ___ ಎನ್ನುವ ಹೆಸರಿನ ವೇಶ್ಯಯು ಆ ಪಟ್ಟಣದಲ್ಲಿಯೇ ನಿವಾಸವಾಗಿದ್ದಳು. ಆಕೆ ದೇವರಲ್ಲಿ ನಂಬಿಕೆಯಿಟ್ಟಿದ್ದ ಕಾರಣದಿಂದ ಆಕೆ ಈ ರೀತಿ ಅವರಿಗೆ ಸಹಾಯ ಮಾಡಿದ್ದಳು. ಇಸ್ರಾಯೇಲ್ಯರು ಯೆರಿಕೋವನ್ನು ನಾಶಗೊಳಿಸಿದಾಗ, ಅವರು ___ ರಾಹಾಬಳನ್ನು ___ ಮತ್ತು ತನ್ನ ಕುಟುಂಬವನ್ನು ರಕ್ಷಿಸುತ್ತೇವೆಂದು ವಾಗ್ಧಾನ ಮಾಡಿದರು.
- 15:05 ದೇವರು ಆಜ್ಞಾಪಿಸಿದಂತೆ ಪಟ್ಟಣದಲ್ಲಿರುವ ಪ್ರತಿಯೊಂದನ್ನು ಇಸ್ರಾಯೇಲ್ಯರು ನಾಶಗೊಳಿಸಿದರು. ___ ರಾಹಾಬಳನ್ನು ___ ಮತ್ತು ಆಕೆಯ ಕುಟುಂಬವನ್ನು ಮಾತ್ರ ಅವರು ಆ ಪಟ್ಟಣದಲ್ಲಿ ಸಾಯಿಸಿದೇ ಬಿಟ್ಟುಬಿಟ್ಟರು. ಅವರು ಇಸ್ರಾಯೇಲ್ಯರಲ್ಲಿ ಒಬ್ಬರಾಗಿ ಬೆರೆತು ಹೋದರು.
ಪದ ಡೇಟಾ:
- Strong's: H7343, G4460
ರಾಹೇಲ
ಸತ್ಯಾಂಶಗಳು:
ರಾಹೇಲಳು ಯಾಕೋಬನ ಹೆಂಡತಿಯರಲ್ಲಿ ಒಬ್ಬಳಾಗಿದ್ದಳು. ಆಕೆ ಮತ್ತು ತನ್ನ ಅಕ್ಕ ಲೇಯಳು ಯಾಕೋಬನ ಸೋದರ ಮಾವನಾಗಿರುವ ಲಾಬಾನನ ಹೆಣ್ಣು ಮಕ್ಕಳಾಗಿದ್ದರು,
- ರಾಹೇಲಳು ಯೋಸೇಫ ಮತ್ತು ಬೆನ್ಯಾಮೀನರ ತಾಯಿಯಾಗಿದ್ದಳು, ಇವರ ಸಂತಾನದವರೇ ಇಸ್ರಾಯೇಲ್ ಕುಲಗಳಲ್ಲಿ ಎರಡು ಕುಲಗಳಾದರು.
- ಅನೇಕ ವರ್ಷಗಳ ಕಾಲ ರಾಹೇಲಳಿಗೆ ಮಕ್ಕಳಾಗಿರಲಿಲ್ಲ. ತದನಂತರ ಆಕೆ ಯೋಸೇಫನಿಗೆ ಜನನವನ್ನು ಕೊಡುವುದಕ್ಕೆ ದೇವರು ಬಲಗೊಳಿಸಿದರು.
- ಅನೇಕವರ್ಷಗಳಾದನಂತರ, ಆಕೆ ಬೆನ್ಯಾಮೀನನಿಗೆ ಜನನವನ್ನು ಕೊಟ್ಟನಂತರ, ರಾಹೇಲಳು ಸತ್ತುಹೋದಳು ಮತ್ತು ಯಾಕೋಬನು ಆಕೆಯನ್ನು ಬೆತ್ಲೆಹೇಮಿನಲ್ಲಿ ಹೂಣಿಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೆತ್ಲೆಹೇಮ್, ಯಾಕೋಬ, ಲಾಬಾನ್, ಲೇಯಾ, ಯೋಸೇಫ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7354, G4478
ರಿಮ್ಮೋನ್
ಸತ್ಯಾಂಶಗಳು:
ರಿಮ್ಮೋನ್ ಎನ್ನುವುದು ಒಬ್ಬ ಮನುಷ್ಯನ ಹೆಸರಾಗಿರುತ್ತದೆ ಮತ್ತು ಸತ್ಯವೇದದಲ್ಲಿ ದಾಖಲು ಮಾಡಿರುವ ಅನೇಕ ಸ್ಥಳಗಳ ಹೆಸರಾಗಿರುತ್ತದೆ. ಇದು ಒಂದು ಸುಳ್ಳು ದೇವರ ಹೆಸರೂ ಆಗಿರುತ್ತದೆ.
- ರಿಮ್ಮೋನ್ ಎನ್ನುವ ಹೆಸರಿನ ವ್ಯಕ್ತಿ ಜೆಬೂಲೂನ್.ನಲ್ಲಿರುವ ಬೇರೋತ್ ಪಟ್ಟಣದಿಂದ ಬೆನ್ಯಾಮೀನ ಕುಲದವನಾಗಿದ್ದನು. ಈ ವ್ಯಕ್ತಿಯ ಮಕ್ಕಳು ಯೋನಾತಾನನ ದುರ್ಬಲ ಮಗನಾಗಿರುವ ಈಷ್ಬೋಶೇತನನ್ನು ಕೊಂದು ಹಾಕಿದರು.
- ಬೆನ್ಯಾಮೀನ ಕುಲದವರಿಂದ ವಶಪಡಿಸಿಕೊಂಡಿರುವ ಪ್ರಾಂತ್ಯದಲ್ಲಿರುವ ಯೆಹೂದ ದಕ್ಷಿಣ ಭಾಗದಲ್ಲಿ ರಿಮ್ಮೋನ್ ಎನ್ನುವ ಪಟ್ಟಣವಿದ್ದಿತ್ತು.
- “ರಿಮ್ಮೋನ್ ಬಂಡೆ” ಎನ್ನುವುದು ಸುರಕ್ಷಿತವಾದ ಸ್ಥಳವಾಗಿದ್ದಿತ್ತು, ಇಲ್ಲಿಯೇ ಬೆನ್ಯಾಮೀನ ಕುಲದವರು ಯುದ್ಧದಲ್ಲಿ ಸಾವನ್ನು ತಪ್ಪಿಸಿಕೊಂಡು ಈ ಸ್ಥಳಕ್ಕೆ ಬಂದಿದ್ದರು.
- ರಿಮ್ಮೋನ್ ಪೆರೆಜ್ ಎನ್ನುವುದು ಯೂದಾ ಅರಣ್ಯದಲ್ಲಿ ಗೊತ್ತಿಲ್ಲದ ಸ್ಥಳವಾಗಿತ್ತು.
- ಸಿರಿಯಾ ಸೈನ್ಯಾಧಿಪತಿಯಾದ ನಾಮಾನನು ಸಿರಿಯಾ ಅರಸನು ಆರಾಧಿಸಲ್ಪಡುತ್ತಿರುವ ಸ್ಥಳದಲ್ಲಿ ಸುಳ್ಳು ದೇವರಾದ ರಿಮ್ಮೋನ್ ದೇವಾಲಯದ ಕುರಿತು ಮಾತನಾಡಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬೆನ್ಯಾಮೀನ, ಯೂದಾ, ನಾಮಾನ, ಸಿರಿಯಾ, ಜೆಬೂಲೂನ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7417
ರೂತಳು
ಸತ್ಯಾಂಶಗಳು:
ರೂತಳು ಮೋವಾಬ್ಯ ಸ್ತ್ರೀಯಾಗಿರುತ್ತಾಳೆ, ಈಕೆ ನ್ಯಾಯಾಧೀಶರು ಇಸ್ರಾಯೇಲ್ಯರನ್ನು ನಡೆಸುತ್ತಿರುವ ಕಾಲದಲ್ಲಿ ಜೀವನ ಮಾಡಿದ್ದಳು. ನ್ಯಾಯಾಧೀಶರು ಇಸ್ರಾಯೇಲ್ಯರನ್ನು ನಡೆಸುತ್ತಿರುವ ಕಾಲದಲ್ಲಿ ಬರಗಾಲ ಬಂದ ಕಾರಣದಿಂದ ಈಕೆ ತನ್ನ ಕುಟುಂಬದೊಂದಿಗೆ ಮೋವಾಬ್ಯಿಗೆ ಹೋದಾಗ ಅಲ್ಲಿ ಒಬ್ಬ ಇಸ್ರಾಯೇಲ್ ವ್ಯಕ್ತಿಯನ್ನು ಮದುವೆ ಮಾಡಿಕೊಂಡಳು.
- ರೂತಳ ಗಂಡನು ಸತ್ತುಹೋದನು, ಮತ್ತು ಸ್ವಲ್ಪ ಕಾಲವಾದನಂತರ ಈಕೆ ಮೋವಾಬ್ಯ ದೇಶವನ್ನು ಬಿಟ್ಟು ತನ್ನ ಅತ್ತೆಯಾದ ನೊವೊಮಿಯಳೊಂದಿಗೆ ಪ್ರಯಾಣಿಸಿದಳು, ತನ್ನ ಆತ್ತೆಯು ಆ ಸಮಯದಲ್ಲಿ ಇಸ್ರಾಯೇಲಿನಲ್ಲಿರುವ ತನ್ನ ಸ್ವಂತ ಊರು ಬೆತ್ಲೆಹೇಮಿಗೆ ಬರುತ್ತಿದ್ದಳು.
- ರೂತಳು ನೊವೊಮಿಗೆ ತುಂಬಾ ನಂಬಿಗಸ್ತಳಾಗಿದ್ದಳು ಮತ್ತು ಆಕೆಗೆ ಆಹಾರವನ್ನು ಒದಗಿಸಿ ಕೊಡುವುದಕ್ಕೆ ತುಂಬಾ ಹೆಚ್ಚಿನ ಕಷ್ಟವನ್ನು ಮಾಡಿದ್ದಳು.
- ಈಕೆ ಕೂಡ ಇಸ್ರಾಯೇಲ್ ನಿಜವಾದ ದೇವರನ್ನು ಸೇವಿಸುವುದಕ್ಕೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಂಡಿದ್ದಳು.
- ರೂತಳು ಬೋವಜ ಎನ್ನುವ ಇಸ್ರಾಯೇಲ್ ವ್ಯಕ್ತಿಯನ್ನು ವಿವಾಹ ಮಾಡಿಕೊಂಡಳು ಮತ್ತು ಅಲ್ಲಿ ಒಂದು ಗಂಡು ಮಗುವಿಗೆ ಜನ್ಮವನ್ನು ತಾಳಿದಳು, ಇವನು ಅರಸನಾದ ದಾವೀದನ ತಾತನಾಗಿದ್ದನು. ಯೇಸುಕ್ರಿಸ್ತನ ಪೂರ್ವಜನಾಗಿರುವ ಅರಸನಾದ ದಾವೀದನು ರೂತಳಿಂದ ಬಂದಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೇತ್ಲೆಹೇಮ್, ಬೋವಜ, ದಾವೀದ, ನ್ಯಾಯಾಧೀಶ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7327, G4503
ರೂಬೇನ್
ಸತ್ಯಾಂಶಗಳು:
ರೂಬೇನ್ ಯಾಕೋಬನಿಗೆ ಹುಟ್ಟಿದ ಮೊದಲ ಸಂತಾನವಾಗಿದ್ದನು. ತನ್ನ ತಾಯಿ ಲೇಯಳಾಗಿದ್ದಳು.
- ತನ್ನ ಸಹೋದರರು ತನ್ನ ಚಿಕ್ಕ ತಮ್ಮನಾದ ಯೋಸೇಫನನ್ನು ಸಾಯಿಸುವುದಕ್ಕೆ ಪ್ರಣಾಳಿಕೆ ಮಾಡಿದಾಗ, ರೂಬೇನ್ ತನ್ನ ತಮ್ಮನನ್ನು ಒಂದು ಗುಂಡಿಯೊಳಗೆ ಹಾಕೋಣ ಎಂದು ಎಲ್ಲರಿಗೆ ಹೇಳುವುದರ ಮೂಲಕ ತನ್ನ ತಮ್ಮನ ಪ್ರಾಣವನ್ನು ಕಾಪಾಡಿದ್ದನು.
- ರೂಬೇನ್ ಸ್ವಲ್ಪ ಸಮಯವಾದನಂತರ ಯೋಸೇಫನನ್ನು ರಕ್ಷಿಸುವುದಕ್ಕೆ ಹಿಂತಿರುಗಿ ಬಂದನು, ಆದರೆ ಇತರ ಅಣ್ಣಂದಿಯರು ಆ ದಾರಿಯಲ್ಲಿ ಹೋಗುತ್ತಿರುವ ವ್ಯಾಪಾರಿಗಳಿಗೆ ಗುಲಾಮನನ್ನಾಗಿ ತನ್ನನ್ನು ಮಾರಿ ಬಿಟ್ಟರು.
- ರೂಬೇನ್ ಸಂತಾನದವರು ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಒಂದು ಕುಲವಾಗಿ ಮಾರ್ಪಟ್ಟರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ಯೋಸೇಫ, ಲೇಯಾ, ಇಸ್ರಾಯೇಲ್ ಹನ್ನೆರಡು ಕುಲದವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7205, H7206, G4502
ರೆಬೆಕ್ಕ
ಸತ್ಯಾಂಶಗಳು:
ರೆಬೆಕ್ಕಳು ಅಬ್ರಾಹಾಮನ ಸಹೋದರನಾದ ನಾಹೋರನ ಮೊಮ್ಮೊಗಳಾಗಿದ್ದಳು.
- ರೆಬೆಕ್ಕಳು ಅಬ್ರಾಹಾಮನ ಮಗನಾದ ಇಸಾಕನ ಹೆಂಡತಿಯಾಗಿರುವುದಕ್ಕೆ ದೇವರು ಆಯ್ಕೆ ಮಾಡಿದರು.
- ರೆಬೆಕ್ಕಳು ತಾನು ನಿವಾಸವಾಗಿದ್ದ ಆರಾಮ್ ನಹರೆಮ್ ಪ್ರಾಂತ್ಯವನ್ನು ಬಿಟ್ಟು, ಇಸಾಕನು ಜೀವಿಸುತ್ತಿರುವ ನೆಗೆವ್ ಪ್ರಾಂತ್ಯಕ್ಕೆ ಅಬ್ರಾಹಾಮನ ದಾಸನೊಂದಿಗೆ ಹೊರಟು ಹೋದಳು.
- ತುಂಬಾ ವರ್ಷಗಳ ಕಾಲ ರೆಬೆಕ್ಕಳಿಗೆ ಮಕ್ಕಳಾಗಲಿಲ್ಲ, ಆದರೆ ಕೊನೆಗೆ ದೇವರು ಆಕೆಯನ್ನು ಏಸಾವ ಮತ್ತು ಯಾಕೋಬ ಎನ್ನುವ ಇಬ್ಬರು ಗಂಡು ಮಕ್ಕಳೊಂದಿಗೆ ಆಶೀರ್ವಾದ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಆರಾಮ್, ಏಸಾವ, ಇಸಾಕ, ಯಾಕೋಬ, ನಾಹೋರ, ನೆಗೆವ್)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 06:02 ಅಬ್ರಾಹಾಮನ ಬಂಧುಗಳು ನಿವಾಸವಾಗಿರುವ ಭೂಮಿಗೆ ಮಾಡಿದ ಅತೀ ದೂರ ಪ್ರಯಾಣದನಂತರ, ದೇವರು ಆ ದಾಸನನ್ನು __ ರೆಬೆಕ್ಕಳ __ ಬಳಿಗೆ ನಡೆಸಿಕೊಟ್ಟನು. ಈಕೆ ಅಬ್ರಾಹಾಮನ ಸಹೋದರ ಮೊಮ್ಮೊಗಳಾಗಿದ್ದಳು.
- 06:06 “ನಿನ್ನಲ್ಲಿ ಎರಡು ದೇಶಗಳು ಒಳಗೊಂಡಿವೆ” ಎಂದು ದೇವರು __ ರೆಬಕ್ಕಳಿಗೆ __ ಹೇಳಿದನು.
- 07:01 ಮಕ್ಕಳು ಬೆಳೆಯುತ್ತಿರುವಾಗ, __ ರೆಬೆಕ್ಕ __ ಯಾಕೋಬನನ್ನು ಪ್ರೀತಿಸಿದಳು, ಆದರೆ ಇಸಾಕನು ಏಸಾವನನ್ನು ಪ್ರೀತಿಸಿದನು.
- 07:03 ಇಸಾಕನು ತನ್ನ ಆಶೀರ್ವಾದವನ್ನು ಏಸಾವನಿಗೆ ಕೊಡಬೇಕೆಂದು ಬಯಸಿದನು. ಆದರೆ ಆವನು ಅದನ್ನು ಮಾಡುವುದಕ್ಕೆ ಮುಂಚಿತವಾಗಿ, ಏಸಾವನಂತೆ ಯಾಕೋಬನು ನಟಿಸುವುದರ ಮೂಲಕ __ ರೆಬೆಕ್ಕಳು __ ಮತ್ತು ಯಾಕೋಬನು ಅವನನ್ನು ಮೋಸಗೊಳಿಸಿದರು.
- 07:06 ಆದರೆ __ ರೆಬೆಕ್ಕಳು __ ಏಸಾವನ ಪ್ರಣಾಳಿಕೆಯನ್ನು ಕೇಳಿಸಿಕೊಂಡಿದ್ದಳು. ಆದ್ದರಿಂದ ಆಕೆ ಯಾಕೋಬನನ್ನು ತನ್ನ ಬಂಧುಗಳೊಂದಿಗೆ ಜೀವಿಸುವುದಕ್ಕೆ ಪ್ರೇರೇಪಿಸಿ ದೂರ ಪ್ರಾಂತ್ಯಕ್ಕೆ ಕಳುಹಿಸಿಬಿಟ್ಟಳು.
ಪದ ಡೇಟಾ:
- Strong's: H7259
ರೆಹಬ್ಬಾಮ
ಸತ್ಯಾಂಶಗಳು:
ರೆಹಬ್ಬಾಮನು ಅರಸನಾದ ಸೊಲೊಮೋನನ ಇಬ್ಬರ ಮಕ್ಕಳಲ್ಲಿ ಒಬ್ಬನಾಗಿರುತ್ತಾನೆ, ಮತ್ತು ಸೊಲೊಮೋನನ ಮರಣದನಂತರ ಇವನು ಇಸ್ರಾಯೇಲ್ ದೇಶದ ಅರಸನಾದನು.
- ತನ್ನ ಆಳ್ವಿಕೆಯ ಆರಂಭದಲ್ಲಿ, ರೆಹಬ್ಬಾಮನು ತನ್ನ ಜನರೊಂದಿಗೆ ಗಂಭೀರವಾಗಿದ್ದನು, ಇದರಿಂದ ಇವನಿಗೆ ವಿರುದ್ಧವಾಗಿ ಇಸ್ರಾಯೇಲ್ ಹತ್ತು ಕುಲದವರು ತಿರಸ್ಕಾರ ಮಾಡಿದರು ಮತ್ತು ಉತ್ತರದಲ್ಲಿ “ಇಸ್ರಾಯೇಲ್ ರಾಜ್ಯ” ರೂಪಗೊಂಡಿತು.
- ರೆಹಬ್ಬಾಮನು ಯೆಹೂದ ದಕ್ಷಿಣ ರಾಜ್ಯಕ್ಕೆ ಅರಸನಾಗಿ ಮುಂದುವರಿದನು, ಈ ರಾಜ್ಯದಲ್ಲಿ ಯೆಹೂದ ಮತ್ತು ಬೆನ್ಯಾಮೀನ ಎರಡು ಕುಲಗಳು ಮಾತ್ರ ಉಳಿದುಕೊಂಡಿದ್ದವು.
- ರೆಹಬ್ಬಾಮನು ಯೆಹೋವನಿಗೆ ವಿಧೇಯನಾಗದ ದುಷ್ಟ ಅರಸನಾಗಿದ್ದನು, ಆದರೆ ಅವನು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಇಸ್ರಯೇಲ್ ರಾಜ್ಯ, ಯೆಹೂದ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 18:05 ಸೊಲೊಮೋನನ ಮರಣದನಂತರ, ತನ್ನ ಮಗನಾಗಿರುವ __ ರೆಹಬ್ಬಾಮನು __ ಅರಸನಾದನು. __ ರೆಹಬ್ಬಾಮನು __ ಮೂರ್ಖನಾಗಿದ್ದನು.
- 18:06 __ ರೆಹಬ್ಬಾಮನು __ ಮೂರ್ಖವಾಗಿ ಉತ್ತರಿಸುತ್ತಿದ್ದನು ಮತ್ತು “ನನ್ನ ತಂದೆಯಾದ ಸೊಲೊಮೋನನು ನೀವು ಹೆಚ್ಚಾಗಿ ಕಷ್ಟಪಡುವಂತೆ ಮಾಡಿದನು ಎಂದು ನೀವು ಆಲೋಚನೆ ಮಾಡುತ್ತಿದ್ದೀರಿ, ಆದರೆ ನಾನು ಆತನು ಮಾಡಿದ್ದಕ್ಕಿಂತ ಹೆಚ್ಚಾಗಿ ನೀವು ಕಷ್ಟಪಡುವಂತೆ ಮಾಡುತ್ತೇನೆ, ಮತ್ತು ಆತನು ನಿಮ್ಮನ್ನು ಶಿಕ್ಷಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಕಠಿಣವಾಗಿ ಶಿಕ್ಷಿಸುತ್ತೇನೆ” ಎಂದು ಅವರಿಗೆ ಹೇಳಿದನು.
- 18:07 __ ರೆಹಬ್ಬಾಮನಿಗೆ __ ವಿರುದ್ಧವಾಗಿ ಇಸ್ರಾಯೇಲ್ ಹತ್ತು ದೇಶದ ಕುಲಗಳು ತಿರುಗಿಬಿದ್ದವು. ಕೇವಲ ಎರಡು ಕುಲಗಳು ಮಾತ್ರ ಅವನಿಗೆ ನಂಬಿಗಸ್ತರಾಗಿದ್ದವು.
ಪದ ಡೇಟಾ:
- Strong's: H7346, G4497
ರೋಮ್, ರೋಮಾ
ಸತ್ಯಾಂಶಗಳು:
ಹೊಸ ಒಡಂಬಡಿಕೆಯ ಕಾಲಗಳಲ್ಲಿ ರೋಮ್ ಪಟ್ಟಣವು ರೋಮಾ ಸಾಮ್ರಾಜ್ಯಕ್ಕೆ ಕೇಂದ್ರವಾಗಿದ್ದಿತ್ತು. ಇದೀಗ ಆಧುನಿಕ ದಿನಗಳಲ್ಲಿನ ಇಟಲಿ ದೇಶಕ್ಕೆ ರಾಜಧಾನಿ ಪಟ್ಟಣವಾಗಿದೆ.
- ರೋಮಾ ಸಾಮ್ರಾಜ್ಯವು ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತಲಿರುವ ಎಲ್ಲಾ ಪ್ರಾಂತ್ಯಗಳ ಮೇಲೆ ಆಡಳಿತವನ್ನು ಮಾಡಿದೆ, ಅದರಲ್ಲಿ ಇಸ್ರಾಯೇಲ್ ಕೂಡ ಒಳಗೊಂಡಿರುತ್ತದೆ.
- “ರೋಮಾ” ಎನ್ನುವ ಪದವು ರೋಮ್ ನಿಯಂತ್ರಣದಲ್ಲಿರುವ ಪ್ರಭುತ್ವದ ಪ್ರಾಂತ್ಯಗಳಿಗೆ ಸಂಬಂಧಪಟ್ಟ ಪ್ರತಿಯೊಂದನ್ನು ಸೂಚಿಸುತ್ತದೆ, ಅವುಗಳಲ್ಲಿ ರೋಮಾ ಪೌರರು ಮತ್ತು ರೋಮಾ ಅಧಿಕಾರಿಗಳೂ ಬರುತ್ತಾರೆ.
- ಅಪೊಸ್ತಲನಾದ ಪೌಲನನ್ನು ಒಬ್ಬ ಖೈದಿಯನ್ನಾಗಿ ರೋಮಾ ಪಟ್ಟಣಕ್ಕೆ ಕರೆದುಕೊಂಡು ಹೋದರು, ಯಾಕಂದರೆ ಆತನು ಯೇಸುವಿನ ಕುರಿತಾದ ಶುಭವಾರ್ತೆಯನ್ನು ಪ್ರಕಟಿಸಿದ್ದನು.
- ಹೊಸ ಒಡಂಬಡಿಯ ಪುಸ್ತಕವಾಗಿರುವ “ರೋಮಾಪುರದವರಿಗೆ” ಬರೆದ ಪತ್ರಿಕೆಯನ್ನು ಪೌಲನು ರೋಮಾ ಪಟ್ಟಣದಲ್ಲಿರುವ ಕ್ರೈಸ್ತರಿಗೆ ಬರೆದನು.
(ಈ ಪದಗಳನ್ನು ಸಹ ನೋಡಿರಿ : ಶುಭವಾರ್ತೆ, ಸಮುದ್ರ, ಪಿಲಾತ, ಪೌಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 23:04 ಮರಿಯಳು ಶಿಶುವಿಗೆ ಜನನ ಕೊಡುವ ಸಮಯವು ಹತ್ತಿರಕ್ಕೆ ಬಂದಾಗ, ಪ್ರತಿಯೊಬ್ಬರು ತಮ್ಮ ಪೂರ್ವಜರು ನಿವಾಸವಾಗಿರುವ ಪಟ್ಟಣಗಳಿಗೆ (ಅಥವಾ ಊರುಗಳಿಗೆ) ಹೋಗಿ ಜನಸಂಖ್ಯೆಯಲ್ಲಿ ಸೇರಿರಿ ಎಂದು ___ ರೋಮಾ ___ ಸರ್ಕಾರ ಪ್ರಕಟಣೆ ಮಾಡಿದ್ದಿತ್ತು.
- 32:06 “ನಿನ್ನ ಹೆಸರು ಏನು?” ಎಂದು ಯೇಸು ಆ ದೆವ್ವಕ್ಕೆ ಕೇಳಿದರು. “ನನ್ನ ಹೆಸರು ಸೈನ್ಯದಳ, ಯಾಕಂದರೆ ನಮ್ಮ ಸಂಖ್ಯೆ ಹೆಚ್ಚಾಗಿರುತ್ತದೆ” ಎಂದು ಆತನು ಉತ್ತರಿಸಿದನು. (“ಸೈನ್ಯದಳ” ಎಂದರೆ ___ ರೋಮಾ ___ ಸೈನ್ಯದಲ್ಲಿ ಸಾವಿರಾರು ಸೈನಿಕರಿರುವ ಗುಂಪಾಗಿರುತ್ತದೆ.)
- 39:09 ಆ ಮರುದಿನ ಬೆಳಿಗ್ಗೆ, ಯೆಹೂದ್ಯ ನಾಯಕರು ಯೇಸುವನ್ನು ಮರಣದ ಶಿಕ್ಷೆಯನ್ನು ಹಾಕುವುದಕ್ಕೆ ___ ರೋಮಾ ___ ಪಾಲಕನಾಗಿರುವ ಪಿಲಾತನ ಬಳಿಗೆ ಯೇಸುವನ್ನು ಕರೆದುಕೊಂಡು ಬಂದರು.
- 39:12 ___ ರೋಮಾ ___ ಸೈನಿಕರು ಯೇಸುವನ್ನು ಬೆತ್ತದಿಂದ ಹೊಡೆದರು ಮತ್ತು ಆತನ ಮೇಲೆ ದೊರೆತನದ ನಿಲುವಂಗಿಯನ್ನು ತೊಡಸಿ, ಆತನ ತಲೆಯ ಮೇಲೆ ಮುಳ್ಳುಗಳ ಕಿರೀಟವನ್ನು ಇಟ್ಟರು. “ನೋಡಿರಿ, ಯೆಹೂದ್ಯರ ಅರಸನು!” ಎಂದು ಹೇಳುತ್ತಾ ಅವರು ಆತನನ್ನು ಹೀಯಾಳಿಸಿದರು.
ಪದ ಡೇಟಾ:
- Strong's: G4514, G4516
ಲವಣ ಸಮುದ್ರ, ಮೃತ ಸಮುದ್ರ
ಸತ್ಯಾಂಶಗಳು:
ಲವಣ ಸಮುದ್ರವು (ಇದನ್ನು ಮೃತ ಸಮುದ್ರವೆಂದೂ ಕರೆಯುತ್ತಾರೆ) ದಕ್ಷಿಣ ಇಸ್ರಾಯೇಲಿನ ಪಶ್ಚಿಮ ಭಾಗ ಮತ್ತು ಮೋವಾಬ್ಯಿನ ಪೂರ್ವ ಭಾಗದ ಮಧ್ಯೆದಲ್ಲಿ ಕಂಡುಬರುತ್ತದೆ.
- ಯೊರ್ದನ್ ಹೊಳೆಯು ಲವಣ ಸಮುದ್ರದೊಳಗೆ ಹರಡುತ್ತದೆ.
- ಯಾಕಂದರೆ ಇದು ಎಲ್ಲಾ ಸಮುದ್ರಗಳಿಗಿಂತ ತುಂಬಾ ಚಿಕ್ಕದಾಗಿರುತ್ತದೆ, ಇದನ್ನು “ಲವಣ ಕೆರೆ” ಎಂದೂ ಕರೆಯುತ್ತಾರೆ.
- ಈ ಸಮುದ್ರದಲ್ಲಿರುವ ನೀರು ಜೀವವುಳ್ಳದ್ದಾಗಿರದಂತಹ ಹೆಚ್ಚಿನ ಪ್ರಮಾಣದಲ್ಲಿ ಖನಿಜಗಳನ್ನು (ಅಥವಾ “ಉಪ್ಪನ್ನು”) ಹೊಂದಿರುತ್ತದೆ. ಅಲ್ಲಿ ಮರಗಳು ಮತ್ತು ಪ್ರಾಣಿಗಳ ಕೊರತೆ ಇರುವುದರಿಂದ, ಅದಕ್ಕೆ “ಮೃತ ಸಮುದ್ರ” ಎನ್ನುವ ಹೆಸರು ಬಂದಿದೆ.
- ಹಳೇ ಒಡಂಬಡಿಕೆಯಲ್ಲಿ ಈ ಸಮುದ್ರವನ್ನು “ಅರಾಭ ಸಮುದ್ರ” ಮತ್ತು “ನೆಗೆವೆ ಸಮುದ್ರ” ಎಂದೂ ಕರೆಯುತ್ತಾರೆ, ಯಾಕಂದರೆ ಈ ಸಮುದ್ರವು ಅರಾಭ ಮತ್ತು ನೆಗೆವೆ ಎನ್ನುವ ಪ್ರಾಂತ್ಯಗಳಿಗೆ ಅತೀ ಸಮೀಪವಾಗಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಮ್ಮೋನ್, ಅರಾಭ, ಯೊರ್ದನ್ ಹೊಳೆ, ಮೋವಾಬ್, ನೆಗೆವ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3220, H4417
ಲಾಜರನು
ಸತ್ಯಾಂಶಗಳು:
ಲಾಜರನು ಮತ್ತು ಅವನ ಇಬ್ಬರ ಅಕ್ಕಂದಿಯರಾದ ಮರಿಯಳು ಮತ್ತು ಮಾರ್ಥಳು ಯೇಸುವಿಗೆ ವಿಶೇಷವಾದ ಸ್ನೇಹಿತರಾಗಿದ್ದರು. ಬೆಥಾನ್ಯದಲ್ಲಿರುವ ಅವರ ಮನೆಯಲ್ಲಿ ಯೇಸು ಆಗಾಗ್ಗೆ ಅವರೊಂದಿಗೆಇರುತ್ತಿದ್ದನು.
- ಲಾಜರನು ಸತ್ತನಂತರ ಸುಮಾರು ದಿನಗಳ ಕಾಲ ಸಮಾಧಿಯಲ್ಲಿದ್ದ ನಂತರ ಯೇಸು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನೆಂಬ ಅಂಶಕ್ಕೆ ಲಾಜರನು ಹೆಚ್ಚು ಹೆಸರುವಾಸಿಯಾಗಿದ್ದಾನೆ.
- ಯಹೂದ್ಯ ನಾಯಕರು ಯೇಸುವಿನ ಮೇಲೆ ಕೋಪಗೊಂಡರು ಮತ್ತು ಆತನು ಈ ಅದ್ಭುತವನ್ನು ಮಾಡಿದ್ದಕ್ಕಾಗಿ ಅಸೂಯೆಪಟ್ಟರು ಮತ್ತು ಅವರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಲು ಒಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸಿದರು.
- ಒಬ್ಬ ಬಡ ಭಿಕ್ಷುಕ ಮತ್ತು ಶ್ರೀಮಂತ ವ್ಯಕ್ತಿಯ ಕುರಿತಾದ ಒಂದು ದೃಷ್ಟಾಂತವನ್ನು ಸಹ ಯೇಸು ಹೇಳಿದನು, ಅದರಲ್ಲಿ “ಲಾಜರ” ಎಂಬ ಹೆಸರಿನ ಭಿಕ್ಷುಕನು ಬೇರೆ ವ್ಯಕ್ತಿಯಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಇವುಗಳನ್ನು ಸಹ ನೋಡಿರಿ : ಬಿಕ್ಷೆಬೇಡು, ಯೆಹೂದ್ಯ ನಾಯಕರು, ಮಾರ್ಥಳು, ಮರಿಯಳು, ಎಬ್ಬಿಸು)
ಸತ್ಯವೇದದ ಅನುಬಂಧ ವಾಕ್ಯಗಳು:
ಸತ್ಯವೇದದಿಂದ ಉದಾಹರಣೆಗಳು:
- 37:1 ಒಂದು ದಿನ ಯೇಸುವು ___ ಲಾಜರನು ___ ಅನಾರೋಗ್ಯದಿಂದ ಇದ್ದಾನೆನ್ನುವ ಸಂದೇಶವನ್ನು ಕೇಳಿಸಿಕೊಂಡನು. ___ ಲಾಜರನು ___ ಮತ್ತು ತನ್ನ ಇಬ್ಬರು ಅಕ್ಕಂದಿಯರಾದ ಮರಿಯಳು ಮತ್ತು ಮಾರ್ಥಳು ಯೇಸುವಿಗೆ ತುಂಬಾ ಹತ್ತಿರ ಸ್ನೇಹಿತರಾಗಿದ್ದರು.
- 37:2 “ನಮ್ಮ ಸ್ನೇಹಿತನಾದ ___ ಲಾಜರನು ___ ನಿದ್ರಿಸುತ್ತಾನೆ, ಮತ್ತು ನಾನು ಅವನನ್ನು ಮೇಲಕ್ಕೆ ಎಬ್ಬಿಸಬೇಕು” ಎಂದು ಯೇಸು ಹೇಳಿದನು.
- 37:3 “ಬೋಧಕನೇ, ___ ಲಾಜರನು ___ ನಿದ್ರಿಸುತ್ತಿದ್ದರೆ, ಅವನು ಚೆನ್ನಾಗಿ ಆಗುತ್ತಾನಲ್ಲ” ಎಂದು ಯೇಸುವಿನ ಶಿಷ್ಯರು ಉತ್ತರಿಸಿದರು. “___ ಲಾಜರನು ___ ಮರಣಿಸಿದ್ದಾನೆ” ಎಂದು ಯೇಸು ಅವರಿಗೆ ಸ್ಪಷ್ಟವಾಗಿ ಹೇಳಿದನು.
- 37:4 ಯೇಸು ___ ಲಾಜರನ __ ಊರಿಗೆ ಹೋದಾಗ, ಅಲ್ಲಿ __ ಲಾಜರನು ___ ಸತ್ತು ಸುಮಾರು ನಾಲ್ಕು ದಿವಸ ಆಗಿತ್ತು.
- 37:6 “___ ಲಾಜರನನ್ನು ___ ಎಲ್ಲಿಟ್ಟಿದ್ದೀರಿ?” ಎಂದು ಯೇಸು ಅವರನ್ನು ಕೇಳಿದನು.
- 37:9 ಆಗ ಯೇಸು “___ ಲಾಜರನೇ ___ ಹೊರಗೆ ಬಾ!” ಎಂದು ಕೂಗಿದನು.
- 37:10 ಆಗ ___ ಲಾಜರನು ___ ಹೊರ ಬಂದನು! ಅವನನ್ನು ಬಟ್ಟೆಗಳಿಂದ ಸುತ್ತಿ ಸಮಾಧಿಯಲ್ಲಿಟ್ಟಿದ್ದರು.
- 37:11 ಆದರೆ ಯೆಹೂದ್ಯರ ನಾಯಕರು ತುಂಬಾ ಅಸೂಯೆದಿಂದ ಇದ್ದರು, ಇದರಿಂದ ಅವರು ಯೇಸುವನ್ನು ಮತ್ತು ___ ಲಾಜರನನ್ನು ___ ಹೇಗೆ ಸಾಯಿಸಬೇಕೆಂದು ಯೋಜನೆ ಮಾಡುವುದಕ್ಕಾಗಿ ಎಲ್ಲರು ಒಟ್ಟು ಸೇರಿದರು.
ಪದದ ಡೇಟಾ:
- Strong's: G29760
ಲಾಬಾನ
ಸತ್ಯಾಂಶಗಳು:
ಹಳೇ ಒಡಂಬಡಿಕೆಯಲ್ಲಿ ಲಾಬನನು ಯಾಕೋಬನ ಸೋದರಮಾಮನಾಗಿದ್ದನು.
- ಯಾಕೋಬನು ಪದ್ದನ್ ಅರಾಮಿನಲ್ಲಿ ಲಾಬಾನನ ಮನೆಯಲ್ಲಿದ್ದನು ಮತ್ತು ಅಲ್ಲಿ ಲಾಬಾನಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳುವ ಷರತ್ತಿನಲ್ಲಿ ಅವನು ಕುರಿಗಳನ್ನು ಮತ್ತು ಮೇಕೆಗಳನ್ನು ಮೇಯಿಸುತ್ತಿದ್ದನು.
- ಯಾಕೋಬನು ಲಾಬಾನಿನ ಮಗಳಾದ ರಾಹೇಲಳನ್ನು ಮದುವೆ ಮಾಡಿಕೊಳ್ಳಬೇಕೆಂದಿದ್ದನು.
- ಲಾಬಾನನು ಯಾಕೋಬನನ್ನು ಮೋಸಮಾಡಿದನು ಮತ್ತು ಅವನಿಗೆ ತನ್ನ ಚಿಕ್ಕ ಮಗಳನ್ನು ಕೊಡುವುದಕ್ಕೆ ಮುಂಚಿತವಾಗಿ ತನ್ನ ದೊಡ್ಡ ಮಗಳಾದ ಲೇಯಾಳನ್ನು ಯಾಕೋಬನು ಮದುವೆ ಮಾಡಿಕೊಳ್ಳುವಂತೆ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ನಾಹೋರ, ಲೇಯಾ, ರಾಹೇಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3837
ಲಿವ್ಯಾತಾನ್
ಸತ್ಯಾಂಶಗಳು:
“ಲಿವ್ಯಾತಾನ್” ಎನ್ನುವ ಪದವು ಹಳೇ ಒಡಂಬಡಿಕೆಯ ಆದಿಮ ಬರವಣೆಗಳಾಗಿರುವ ಯೋಬ, ಕೀರ್ತನೆ ಮತ್ತು ಯೆಶಯಾ ಪುಸ್ತಕಗಳಲ್ಲಿ ದಾಖಲು ಮಾಡಿದ ದೊಡ್ಡದಾದ ನಂದಿಹೋದ ಪ್ರಾಣಿಯನ್ನು ಸೂಚಿಸುತ್ತದೆ.
- ಲಿವ್ಯಾತಾನ್ ಎನ್ನುವ ಪದವು ಹಾವಿನಂತೆ ಇರುವ ದೊಡ್ಡದಾದ ಜೀವಿಯನ್ನು, ಬಲವಾದ ಮತ್ತು ಕ್ರೂರವಾದ ಪ್ರಾಣಿಯನ್ನು ವಿವರಿಸುತ್ತದೆ, ಈ ಪ್ರಾಣಿ ಇರುವ ನೀರೆಲ್ಲಾ “ಬಿಸಿಯಾಗುತ್ತವೆ”. ಇದರ ಕುರಿತಾಗಿರುವ ವಿವರಣೆಗಳು ಅಥವಾ ಲಕ್ಷಣಗಳು ಡೈನೋಸರ್ ಪ್ರಾಣಿಯ ಲಕ್ಷಣಗಳು ಒಂದೇಯಾಗಿರುತ್ತವೆ.
- ಲಿವ್ಯಾತಾನ್ ಎನ್ನುವ ಪ್ರಾಣಿಯು “ಜಾರಿಹೋಗುವ ಸರ್ಪ” ಎನ್ನುವಂತೆ ಪ್ರವಾದಿಯಾದ ಯೆಶಯಾನು ಸೂಚಿಸಿದ್ದಾನೆ.
- ಲಿವ್ಯಾತಾನ್ ಕುರಿತಾದ ಮೊದಲ ಜ್ಞಾನದಿಂದ ಯೋಬನು ಬರೆದಿದ್ದಾನೆ, ಇದರಿಂದ ಪ್ರಾಣಿ ಯೋಬನ ಜೀವಮಾನದಲ್ಲೆಲ್ಲಾ ಹೆಚ್ಚಾಗಿ ಜೀವಿಸಿರುವ ಪ್ರಾಣಿ ಎಂಬುದಾಗಿ ಸೂಚಿಸಲ್ಪಟ್ಟಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯೇಶಾಯ, ಯೋಬ, ಸರ್ಪ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3882
ಲೂಕ
ಸತ್ಯಾಂಶಗಳು:
ಲೂಕ ರವರು ಹೊಸ ಒಡಂಬಡಿಕೆಯಲ್ಲಿ ಎರಡು ಪುಸ್ತಕಗಳನ್ನು ಬರೆದಿರುತ್ತಾನೆ: ಲೂಕನ ಸುವಾರ್ತೆ ಮತ್ತು ಅಪೊಸ್ತಲರ ಕೃತ್ಯಗಳ ಪುಸ್ತಕ.
- ಪೌಲನು ಕೊಲೊಸ್ಸದವರಿಗೆ ಬರೆದ ಪತ್ರಿಕೆಯಲ್ಲಿ ಲೂಕನು ವೈದ್ಯನೆಂದು ಸೂಚಿಸಿದ್ದಾನೆ. ಪೌಲನು ಬರೆದ ಇತರ ಪತ್ರಿಕೆಗಳಲ್ಲಿ ಲೂಕನನ್ನು ದಾಖಲಿಸಿದ್ದಾನೆ.
- ಲೂಕನು ಗ್ರೀಕನೆಂದು ಮತ್ತು ಅನ್ಯನಾಗಿರುವಾಗ ಕ್ರಿಸ್ತನನ್ನು ತಿಳಿದುಕೊಂಡಿದ್ದಾನೆಂದು ಹೇಳಲ್ಪಟ್ಟಿದೆ. ಲೂಕನು ಬರೆದ ಸುವಾರ್ತೆಯಲ್ಲಿ ಜನರೆಲ್ಲರಿಗೆ, ಯೆಹೂದ್ಯರಿಗೆ ಮತ್ತು ಅನ್ಯರಿಗೆಲ್ಲರಿಗೆ ತೋರಿಸಲ್ಪಟ್ಟ ಯೇಸುವಿನ ಪ್ರೀತಿಯ ಹಲವಾರು ಸಂಘಟನೆಗಳು ಒಳಗೊಂಡಿರುತ್ತವೆ.
- ಲೂಕನು ಪೌಲನು ಮಾಡಿದ ಎರಡು ಸುವಾರ್ತೆ ದಂಡೆಯಾತ್ರೆಯಲ್ಲಿ ಜೊತೆಯಲ್ಲಿದ್ದು, ಆತನ ಸೇವೆಯಲ್ಲಿ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಿದ್ದನು.
- ಕೆಲವೊಂದು ಆದಿ ಸಭೆಯ ಬರವಣಿಗೆಗಳಲ್ಲಿ ಲೂಕನು ಸಿರಿಯಾದಲ್ಲಿರುವ ಅಂತಿಯೋಕ್ಯ ಪಟ್ಟಣದಲ್ಲಿ ಜನಿಸಿರುತ್ತಾನೆಂದು ಹೇಳಲ್ಪಟ್ಟಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಂತಿಯೋಕ್ಯ, ಪೌಲ, ಸಿರಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
ಲೂಸ್ತ್ರ
ಸತ್ಯಾಂಶಗಳು:
ಲೂಸ್ತ್ರ ಎನ್ನುವುದು ಪುರಾತನ ಚಿಕ್ಕ ಆಸ್ಯದಲ್ಲಿ ಒಂದು ಪಟ್ಟಣವಾಗಿತ್ತು, ಪೌಲನು ಮಾಡಿದ ಸುವಾರ್ತೆ ಪ್ರಯಾಣಗಳಲ್ಲಿ ಈ ಪಟ್ಟಣವನ್ನು ಸಂದರ್ಶಿಸಿದ್ದನು. ಲುಕವೋನ್ಯ ಸೀಮೆಯಲ್ಲಿ ಇದು ಕಂಡುಬರುತ್ತದೆ, ಇದು ಈಗಿನ ಆಧುನಿಕ ದಿನದ ಟರ್ಕಿ ದೇಶದಲ್ಲಿರುತ್ತದೆ.
- ಪೌಲನು ಮತ್ತು ತನ್ನ ಜೊತೆಯಲ್ಲಿರುವವರು ಇಕೋನ್ಯದಲ್ಲಿ ಯೆಹೂದ್ಯರಿಂದ ಬೆದರಿಸಲ್ಪಟ್ಟಾಗ ದೆರ್ಬೆ ಮತ್ತು ಲೂಸ್ತ್ರಗಳಿಗೆ ಹೋದರು.
- ಲೂಸ್ತ್ರದಲ್ಲಿ ಪೌಲನು ತಿಮೊಥೆಯನ್ನು ಭೇಟಿಯಾದನು, ಈ ತಿಮೊಥೆಯನು ಸಹ ಸುವಾರ್ತೀಕನಾಗಿ ಮತ್ತು ಸಭೆಯ ಸ್ಥಾಪಕನಾಗಿ ಮಾರ್ಪಟ್ಟನು.
- ಪೌಲನು ಲೂಸ್ತ್ರದಲ್ಲಿ ಹುಟ್ಟು ಕುಂಟನನ್ನು ಗುಣಪಡಿಸಿದನಂತರ, ಅಲ್ಲಿರುವ ಜನರು ಪೌಲನನ್ನು ಮತ್ತು ಬಾರ್ನಬನನ್ನು ದೇವರುಗಳಾಗಿ ಎನಿಸಿ, ಅವರನ್ನು ಆರಾಧಿಸುವುದಕ್ಕೆ ಯತ್ನಿಸಿದರು, ಆದರೆ ಅಪೊಸ್ತಲರು ಅವರನ್ನು ಗದರಿಸಿದರು ಮತ್ತು ಅದನ್ನು ಮಾಡದಂತೆ ಅವರನ್ನು ನಿಲ್ಲಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಸುವಾರ್ತಿಕ, ಇಕೋನ್ಯ, ತಿಮೊಥೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G3082
ಲೆಬನೋನ್
ಸತ್ಯಾಂಶಗಳು:
ಲೆಬನೋನ್ ಎನ್ನುವುದು ತುಂಬಾ ಸುಂದರವಾದ ಪ್ರಾಂತ್ಯವಾಗಿರುತ್ತದೆ, ಇದು ಇಸ್ರಾಯೇಲ್ ಉತ್ತರ ಭಾಗದಲ್ಲಿರುವ ಮೆಡಿಟರೇನಿಯನ್ ಸಮುದ್ರದ ಕರಾವಳಿ ಜೊತೆಯಲ್ಲಿ ಕಂಡುಬರುತ್ತದೆ. ಸತ್ಯವೇದದ ಕಾಲದಲ್ಲಿ ಈ ಸೀಮೆಯು ದಟ್ಟವಾದ ದೇವದಾರು ವೃಕ್ಷಗಳಿಂದ ತುಂಬಿರುತ್ತದೆ, ತುರಾಯಿ ಮರಗಳು ಮತ್ತು ಶಂಕುಮರಗಳಂತೆ (ಸೈಪ್ರಿಸ್ ಮರಗಳು) ದಟ್ಟವಾಗಿರುತ್ತದೆ.
- ದೇವರ ಆಲಯವನ್ನು ನಿರ್ಮಿಸುವುದರಲ್ಲಿ ಉಪಯೋಗಿಸುವುದಕ್ಕೆ ತುರಾಯಿ ಮರಗಳನ್ನು ಕೊಯ್ಯಲು ಅರಸನಾದ ಸೊಲೊಮೋನನು ಲೇಬನೋನ್ ಪ್ರಾಂತ್ಯಕ್ಕೆ ತನ್ನ ಆಳುಗಳನ್ನು ಕಳುಹಿಸುತ್ತಿದ್ದನು.
- ಪುರಾತನ ಲೆಬನೋನ್.ನಲ್ಲಿ ಪೊಯಿನಿಕ್ಯದ ಜನರು ನಿವಾಸಿಗಳಾಗಿದ್ದರು, ಇವರು ದೊಡ್ಡ ದೊಡ್ಡ ಹಡಗುಗಳನ್ನು ನಿರ್ಮಿಸುವುದರಲ್ಲಿ ನಿಪುಣರಾಗಿದ್ದರು, ಇವರು ನಿರ್ಮಿಸಿದ ಹಡಗುಗಳನ್ನು ಯಶಸ್ವಿಯಾದ ವ್ಯಾಪಾರ ಸಂಸ್ಥೆಗೆ ಉಪಯೋಗಿಸುತ್ತಿದ್ದರು.
- ತೂರ್ ಮತ್ತು ಸೀದೋನ್ ಪಟ್ಟಣಗಳು ಲೆಬನೋನ್.ನಲ್ಲಿಯೇ ಕಂಡುಬರುತ್ತವೆ. ಈ ಪಟ್ಟಣಗಳಲ್ಲಿ ತುಂಬಾ ಬೆಲೆಯುಳ್ಳ ನೇರಳೆ ಬಣ್ಣವನ್ನು ತಲೆಗೆ ಹಚ್ಚಿಕೊಳ್ಳುವುದನ್ನು ಮೊಟ್ಟ ಮೊದಲು ಉಪಯೋಗಿಸಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ತುರಾಯಿ, ಶಂಕು ಮರ (ಸೈಪ್ರಿಸ್), ದೇವದಾರು, ಪೊಯಿನಿಕ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3844
ಲೆಮೆಕ
ಸತ್ಯಾಂಶಗಳು:
ಆದಿಕಾಂಡ ಪುಸ್ತಕದಲ್ಲಿ ಉಲ್ಲೇಖಿಸಿದ ಇಬ್ಬರು ವ್ಯಕ್ತಿಗಳ ಹೆಸರು ಲೆಮೆಕ.
- ಮೊದಲನೆ ಲೆಮೆಕನು ಕಾಯಿನನ ಸಂತಾನದವನಾಗಿ ದಾಖಲಿಸಲಾಗಿದೆ. ತನಗೆ ಗಾಯ ಮಾಡಿದ್ದಕ್ಕಾಗಿ ಅವನು ಒಬ್ಬ ಮನುಷ್ಯನನ್ನು ಸಾಯಿಸಿದ್ದಾನೆಂದು ತನ್ನ ಇಬ್ಬರ ಹೆಂಡತಿಗಳ ಕುರಿತಾಗಿ ಹೇಳಿಕೊಂಡಿದ್ದಾನೆ.
- ಎರಡನೇ ಲೆಮೆಕನು ಸೇತನ ಸಂತಾನದವನಾಗಿರುತ್ತಾನೆ. ಇವನು ನೋಹನಿಗೆ ತಂದೆಯಾಗಿರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾಯಿನ, ನೋಹ, ಸೇತ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3929, G2984
ಲೇಯಾ
ಸತ್ಯಾಂಶಗಳು:
ಲೇಯಾಳು ಯಾಕೋಬಿನ ಹೆಂಡತಿಯರಲ್ಲಿ ಒಬ್ಬಳಾಗಿದ್ದಳು. ಈಕೆ ಯಾಕೋಬಿನ ಹತ್ತು ಮಂದಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಳು ಮತ್ತು ಅವರ ಸಂತಾನದವರೇ ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಹತ್ತು ಕುಲದವರಾಗಿದ್ದರು.
- ಲೇಯಾಳ ತಂದೆ ಲಾಬಾನನಾಗಿದ್ದನು, ಇವನು ಯಾಕೋಬಿನ ತಾಯಿ ರೆಬೆಕ್ಕಳ ಅಣ್ಣನಾಗಿದ್ದನು.
- ಯಾಕೋಬನು ರಾಹೇಲಳನ್ನು ಪ್ರೀತಿಸಿದಂತೆ ಹೆಚ್ಚಾಗಿ ಲೇಯಾಳನ್ನು ಪ್ರೀತಿ ಮಾಡಲಿಲ್ಲ, ಆದರೆ ದೇವರು ಆಕೆಯನ್ನು ಅನೇಕಮಂದಿ ಮಕ್ಕಳನ್ನು ಕೊಡುವುದರ ಮೂಲಕ ಹೆಚ್ಚಾಗಿ ಆಶೀರ್ವಾದ ಮಾಡಿದ್ದನು.
- ಲೇಯಾ ಮಗನಾದ ಯೆಹೂದನು ಅರಸನಾದ ದಾವೀದ ಮತ್ತು ಯೇಸುವಿನ ಪೂರ್ವಜನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ಯೆಹೂದ, ಲಾಬಾನ, ರಾಹೇಲ, ರೆಬೆಕ್ಕ, ಇಸ್ರಾಯೇಲ್ ಹನ್ನೆರಡು ಮಂದಿ ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3812
ಲೇವಿ, ಲೇವಿಯನು, ಲೇವಿಯರು, ಲೇವಿಯರ
ಪದದ ಅರ್ಥವಿವರಣೆ:
ಲೇವಿ ಎನ್ನುವವನು ಯಾಕೋಬಿನ ಅಥವಾ ಇಸ್ರಾಯೇಲ್ ಹನ್ನೆರಡು ಮಂದಿ ಗಂಡು ಮಕ್ಕಳಲ್ಲಿ ಒಬ್ಬನಾಗಿರುತ್ತಾನೆ. “ಲೇವಿಯನು” ಎನ್ನುವ ಪದವು ಲೇವಿ ಪೂರ್ವಜನಾಗಿರುವ ಇಸ್ರಾಯೇಲ್ ಕುಲದ ಸದಸ್ಯನಾಗಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
- ಲೇವಿಯರು ದೇವಾಲಯವನ್ನು ನೋಡಿಕೊಳ್ಳುವುದಕ್ಕೆ ಮತ್ತು ಧರ್ಮ ಸಂಬಂಧವಾದ ಆಚಾರಗಳನ್ನು ನೋಡಿಕೊಳ್ಳುವುದರಲ್ಲಿ ಬಾಧ್ಯರಾಗಿದ್ದರು, ಅದರಲ್ಲಿ ಸರ್ವಾಂಗ ಹೋಮಗಳ ಅರ್ಪಣೆ ಮತ್ತು ಪ್ರಾರ್ಥನೆಗಳು ಇರುತ್ತವೆ.
- ಯೆಹೂದ್ಯ ಯಾಜಕರೆಲ್ಲರು ಲೇವಿಯರಾಗಿರುತ್ತಾರೆ, ಲೇವಿ ಸಂತಾನದವರಾಗಿರುತ್ತಾರೆ ಮತ್ತು ಲೇವಿ ಕುಲದ ಭಾಗವಾಗಿರುತ್ತಾರೆ. (ಆದರೆ, ಲೇವಿಯರೆಲ್ಲರೂ ಯಾಜಕರಲ್ಲ.)
- ಲೇವಿ ಯಾಜಕರು ಪ್ರತ್ಯೇಕಿಸಲ್ಪಟ್ಟವರು ಮತ್ತು ದೇವಾಲಯದಲ್ಲಿ ದೇವರ ಸೇವೆಯನ್ನು ಮಾಡಲು ವಿಶೇಷವಾದ ಕೆಲಸಕ್ಕಾಗಿ ಪ್ರತಿಷ್ಠೆ ಮಾಡಿಕೊಂಡವರು.
- “ಲೇವಿ” ಎನ್ನುವ ಹೆಸರಿನ ಮೇಲಿರುವ ಇಬ್ಬರು ವ್ಯಕ್ತಿಗಳು ಕೂಡ ಯೇಸುವಿನ ಪೂರ್ವಜರಾಗಿರುತ್ತಾರೆ, ಮತ್ತು ಅವರ ಹೆಸರುಗಳು ಲೂಕನ ಸುವಾರ್ತೆಯಲ್ಲಿರುವ ವಂಶಾವಳಿಯಲ್ಲಿ ದಾಖಲಿಸಲಾಗಿರುತ್ತದೆ.
- ಯೇಸುವಿನ ಶಿಷ್ಯನಾಗಿರುವ ಮತ್ತಾಯನನ್ನು ಲೇವಿ ಎಂದೂ ಕರೆಯಲ್ಪಟ್ಟಿದ್ದಾನೆ.
(ಈ ಪದಗಳನ್ನು ಸಹ ನೋಡಿರಿ : ಮತ್ತಾಯ, ಯಾಜಕ, ತ್ಯಾಗ, ದೇವಾಲಯ, ಇಸ್ರಾಯೇಲ್ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3878, H3879, H3881, G3017, G3018, G3019, G3020
ಲೋಟ
ಸತ್ಯಾಂಶಗಳು:
ಲೋಟನು ಅಬ್ರಾಹಾಮನ ಸಹೋದರನ ಮಗನಾಗಿದ್ದನು.
- ಇವನು ಅಬ್ರಾಹಾಮನ ಸಹೋದರನಾದ ಹಾರಾನನ ಮಗನಾಗಿದ್ದನು.
- ಲೋಟನು ಅಬ್ರಾಹಾಮನೊಂದಿಗೆ ಕಾನಾನ್ ಭೂಮಿಗೆ ಪ್ರಯಾಣ ಮಾಡಿದ್ದನು ಮತ್ತು ಸೊದೋಮ್ ಪಟ್ಟಣದಲ್ಲಿ ನಿವಾಸವಾಗಿದ್ದನು.
- ಲೋಟನು ಮೋವಾಬ್ಯರಿಗೆ ಮತ್ತು ಅಮ್ಮೋನಿಯರಿಗೆ ಪೂರ್ವಜನಾಗಿರುತ್ತಾನೆ.
- ಅರಸರು ಸೊದೋಮ ಪಟ್ಟಣದ ಮೇಲೆ ಧಾಳಿ ಮಾಡಿದಾಗ, ಲೋಟನನ್ನು ಹಿಡಿದುಕೊಂಡಿದ್ದರು, ಲೋಟನು ಮತ್ತು ತನಗೆ ಸಂಬಂಧಪಟ್ಟವರನ್ನು ರಕ್ಷಿಸಲು ಅಬ್ರಾಹಾಮನು ಸುಮಾರು ನೂರು ಮಂದಿ ಮನುಷ್ಯರೊಂದಿಗೆ ಬಂದಿದ್ದನು.
- ಸೊದೋಮ ಪಟ್ಟಣದಲ್ಲಿ ನಿವಾಸವಾಗಿದ್ದ ಜನರೆಲ್ಲರೂ ದುಷ್ಟ ಜನರಾಗಿದ್ದರು, ಆದ್ದರಿಂದ ದೇವರು ಆ ಪಟ್ಟಣವನ್ನು ನಾಶಗೊಳಿಸಿದನು. ಆದರೆ ಈತನು ಮೊಟ್ಟ ಮೊದಲು ಆ ಪಟ್ಟಣವನ್ನು ಬಿಡಬೇಕೆಂದು ಲೋಟನಿಗೆ ಮತ್ತು ತನ್ನ ಕುಟುಂಬಕ್ಕೆ ಹೇಳಿದನು, ಇದರಿಂದ ಅವರು ತಪ್ಪಿಸಿಕೊಳ್ಳಬಹುದಾಗಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮನು, ಅಮ್ಮೋನ್, ಹಾರಾನ್, ಮೋವಾಬ್, ಸೊದೋಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3876, G3091
ವಷ್ಟಿ
ಸತ್ಯಾಂಶಗಳು:
ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಎಸ್ತೇರಳ ಗ್ರಂಥದಲ್ಲಿ ವಷ್ಟಿ ಪಾರಸಿಯ ಅರಸನಾಗಿರುವ ಅಹಷ್ವೆರೋಷನ ಹೆಂಡತಿಯಾಗಿದ್ದಳು.
- ಈಕೆ ಅರಸನ ಔತಣ ಕೂಟಕ್ಕೆ ಬಂದು, ತನ್ನ ಸೌಂದರ್ಯವನ್ನು ಕುಡುಕರಾದ ಅತಿಥಿಗಳಿಗೆ ತೋರಿಸುವುದಕ್ಕೆ ವಿಧೇಯಳಾಗಲಿಲ್ಲದ ಕಾರಣದಿಂದ ಅರಸನಾದ ಅಹಷ್ವೆರೋಷನು ರಾಣಿಯಾದ ವಷ್ಟಿಯನ್ನು ಹೊರ ಕಳುಹಿಸಿದನು.
- ಇದರ ಫಲವಾಗಿಯೇ, ಹೊಸ ರಾಣಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆರಂಭವಾಯಿತು, ಕೊನೆಗೆ ಎಸ್ತೇರಲು ಅರಸನ ಹೆಂಡತಿಯಾಗಿರುವುದಕ್ಕೆ ಆಯ್ಕೆಯಾದಳು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಎಸ್ತೇರಳು, ಪಾರಸಿಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2060
ಶಾರೋನ್, ಶಾರೋನ್ ಬಯಲು
ಸತ್ಯಾಂಶಗಳು:
ಶಾರೋನ್ ಎನ್ನುವುದು ಒಂದು ಭೂಮಿಯ ಹೆಸರಾಗಿರುತ್ತದೆ, ಕರ್ಮೆಲ್ ಬೆಟ್ಟದ ದಕ್ಷಿಣ ಭಾಗದಲ್ಲಿರುವ ಮೆಡಿಟರೇನಿಯನ್ ಸಮುದ್ರದ ಕರಾವಳಿ ಜೊತೆಯಲ್ಲಿರುವ ಫಲವತ್ತಾದ ಭೂಭಾಗವಾಗಿರುತ್ತದೆ. ಇದನ್ನು “ಶಾರೋನ್ ಬಯಲು” ಎಂದಾಗಿಯೂ ಕರೆಯುತ್ತಾರೆ.
- ಸತ್ಯವೇದದಲ್ಲಿ ದಾಖಲು ಮಾಡಿದ ಅನೇಕ ಪಟ್ಟಣಗಳು ಶಾರೋನ್ ಬಯಲುನಲ್ಲಿ ಕಂಡುಬರುತ್ತವೆ, ಅವುಗಳಲ್ಲಿ ಯೊಪ್ಪ, ಲುದ್ಯ ಮತ್ತು ಕೈಸರೈಗಳೂ ಇರುತ್ತವೆ.
- ಇದನ್ನು “ಶಾರೋನ್ ಎಂದು ಕರೆಯುವ ಬಯಲು” ಅಥವಾ “ಶಾರೋನ್ ಬಯಲು” ಎಂದೂ ಅನುವಾದ ಮಾಡಬಹುದು.
- ಶಾರೋನ್ ಸೀಮೆಯಲ್ಲಿ ನಿವಾಸವಾಗಿರುವ ಜನರನ್ನು “ಶಾರೋನಿಯರು” ಎಂದು ಕರೆಯುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕೈಸರೈ, ಕರ್ಮೆಲ್, ಯೊಪ್ಪ, ಸಮುದ್ರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8289, H8290
ಶಿನಾರ್
ಸತ್ಯಾಂಶಗಳು:
ಶಿನಾರ್ ಎನ್ನುವ ಪದಕ್ಕೆ “ಎರಡು ನದಿಗಳ ದೇಶ” ಎಂದರ್ಥ ಮತ್ತು ದಕ್ಷಿಣ ಮೆಸಪೋತಾಮ್ಯದಲ್ಲಿರುವ ಪ್ರಾಂತ್ಯದ ಅಥವಾ ಬಯಲಿನ ಹೆಸರಾಗಿರುತ್ತದೆ.
- ಸ್ವಲ್ಪಕಾಲವಾದನಂತರ ಶೀನಾರ್ ಎನ್ನುವುದು “ಕಲ್ದೀಯ” ಎಂದಾಗಿ ಮಾರ್ಪಟ್ಟಿತು, ಇನ್ನೂ ಸ್ವಲ್ಪ ಕಾಲವಾದನಂತರ “ಬಾಬೆಲೋನಿಯ” ಎಂದಾಗಿ ಮಾರ್ಪಟ್ಟಿತು.
- ಶೀನಾರ್ ಬಯಲಿನಲ್ಲಿ ಬಾಬೇಲ್ ಪಟ್ಟಣದಲ್ಲಿ ನಿವಾಸವಾಗಿರುವ ಪುರಾತನ ಜನರು ತಮ್ಮನು ತಾವು ಪ್ರಸಿದ್ಧಿ ಮಾಡಿಕೊಳ್ಳಲು ಒಂದು ದೊಡ್ಡ ಗೋಪುರವನ್ನು ಕಟ್ಟುವುದಕ್ಕೆ ಪ್ರಯತ್ನಿಸಿದರು.
- ಆ ತದನಂತರ ಬಂದಿರುವ ತಲೆಮಾರಿಗಳು ಈ ಪ್ರಾಂತ್ಯದಲ್ಲಿ ಊರ್ ಪಟ್ಟಣದಲ್ಲಿ ಯೆಹೂದ್ಯರ ಪಿತೃವಾಗಿರುವ ಅಬ್ರಾಹಾಮನು ಜೀವಿಸಿದ್ದನು, ಆ ಕಾಲದಲ್ಲಿ ಇದನ್ನು “ಕಲ್ದೀಯ” ಎಂದು ಕರೆಯುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಬಾಬೇಲ್, ಬಾಬೆಲೋನಿಯ, ಕಲ್ದೀಯ, ಮೆಸಪೋತಾಮಿಯ, ಪೂರ್ವಿಕರು, ಊರ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8152
ಶಿಮ್ಮೀ
ಪದದ ಅರ್ಥವಿವರಣೆ:
ಶಿಮ್ಮೀ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ವ್ಯಕ್ತಿಗಳಿದ್ದಾರೆ.
- ಗೆರಾ ಮಗನಾಗಿರುವ ಶಿಮ್ಮೀ ಅರಸನಾಗಿರುವ ದಾವೀದನನ್ನು ಶಪಿಸಿದ ಬೆನ್ಯಾಮೀನಿಯನಾಗಿದ್ದನು ಮತ್ತು ದಾವೀದನು ತನ್ನ ಮಗನಾಗಿರುವ ಅಬ್ಷಾಲೋಮನಿಂದ ಸಾವನ್ನು ತಪ್ಪಿಸಿಕೊಳ್ಳುವುದಕ್ಕೆ ಯೆರೂಸಲೇಮಿನಿಂದ ಪಾರಾಗುತ್ತಿರುವಾಗ ಅವನ ಮೇಲೆ ಕಲ್ಲುಗಳನ್ನು ಎಸೆದಿದ್ದರು.
- ಶಿಮ್ಮೀ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ಲೇವಿ ಯಾಜಕರು ಕೂಡ ಇದ್ದಾರೆ.
(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ, ಬೆನ್ಯಾಮೀನ, ಲೇವಿ, ಯಾಜಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8096, H8097
ಶಿಲೋವ
ಸತ್ಯಾಂಶಗಳು:
ಶಿಲೋವ ಎನ್ನುವುದು ಗೋಡೆಗಳ ಕಾನಾನ್ ಪಟ್ಟಣವಾಗಿತ್ತು, ಇದನ್ನು ಯೆಹೋಶುವನ ನಾಯಕತ್ವದಲ್ಲಿ ಇಸ್ರಾಯೇಲ್ಯರ ಮೂಲಕ ಜಯಸಲ್ಪಟ್ಟಿತ್ತು.
- ಶಿಲೋವ ಪಟ್ಟಣವು ಬೇತೆಲ್ ಪಟ್ಟಣದ ಈಶಾನ್ಯ ಭಾಗದಲ್ಲಿ ಮತ್ತು ಯೊರ್ದನ್ ಹೊಳೆಯ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ.
- ಯೆಹೋಶುವನು ಇಸ್ರಾಯೇಲ್ ಜನರನ್ನು ನಡೆಸುತ್ತಿರುವ ಸಂದರ್ಭದಲ್ಲಿ ಶಿಲೋವ ಪಟ್ಟಣವು ಇಸ್ರಾಯೇಲ್ ಜನರೆಲ್ಲರು ಭೇಟಿಯಾಗುವ ಸ್ಥಳವಾಗಿದ್ದಿತ್ತು.
- ಇಸ್ರಾಯೇಲ್ ಹನ್ನೆರಡು ಕುಲಗಳಿಗೆ ಕಾನಾನ್ ಭೂಮಿಯನ್ನು ಯಾರ್ಯಾರಿಗೆ ಯಾವ ಭಾಗವನ್ನು ಕೊಡಬೇಕೆಂದು ಹೇಳುವ ಯೆಹೋಶುವನ ಮಾತುಗಳನ್ನು ಕೇಳುವುದಕ್ಕೆ ಅವರೆಲ್ಲರು ಶಿಲೋವಿನಲ್ಲಿ ಭೇಟಿಯಾಗುತ್ತಿದ್ದರು.
- ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟುವುದಕ್ಕೆ ಮುಂಚಿತವಾಗಿ, ಇಸ್ರಾಯೇಲ್ಯರು ದೇವರಿಗೆ ಸರ್ವಾಂಗ ಹೋಮಗಳನ್ನು ಮಾಡುವುದಕ್ಕೆ ಶಿಲೋವಿಗೆ ಬರುತ್ತಿದ್ದರು.
- ಸಮುವೇಲನು ಚಿಕ್ಕ ವಯಸ್ಸಿನಲ್ಲಿರುವಾಗ ತನ್ನ ತಾಯಿ ಹನ್ನಳು ತನ್ನ ಮಗನು ಯೆಹೋವನನ್ನು ಸೇವಿಸುವುದಕ್ಕೆ ಯಾಜಕನಾದ ಏಲಿಯಿಂದ ತರಬೇತಿಯನ್ನು ಹೊಂದುವುದಕ್ಕೆ ಶಿಲೋವಿನಲ್ಲಿರಲು ಅವನನ್ನು ಕರೆದುಕೊಂಡುಬಂದಿದ್ದಳು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬೆತೇಲ್, ಪ್ರತಿಷ್ಠಾಪಿಸು, ಹನ್ನಳು, ಯೆರೂಸಲೇಮ್, ಯೊರ್ದನ್ ಹೊಳೆ, ಯಾಜಕ, ಹೋಮ, ಸಮುವೇಲ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7886, H7887
ಶೆಕೆಮ್
ಸತ್ಯಾಂಶಗಳು:
ಶೆಕೆಮ್ ಎನ್ನುವುದು ಕಾನಾನಿನಲ್ಲಿ ಒಂದು ಪಟ್ಟಣವಾಗಿದ್ದಿತ್ತು, ಇದು ಉತ್ತರ ಯೆರೂಸಲೇಮಿಗೆ ಸುಮಾರು 40 ಮೈಲಿಗಳ ದೂರದಲ್ಲಿ ಕಂಡುಬರುತ್ತದೆ. ಶೆಕೆಮ್ ಎನ್ನುವುದು ಹಳೇ ಒಡಂಬಡಿಕೆಯಲ್ಲಿ ಒಬ್ಬ ವ್ಯಕ್ತಿಯ ಹೆಸರಾಗಿತ್ತು.
- ಶೆಕೆಮ್ ಪಟ್ಟಣವು ಯಾಕೋಬನು ತನ್ನ ಅಣ್ಣನಾಗಿರುವ ಏಸಾವನೊಂದಿಗೆ ಸಮಾಧಾನ ಹೊಂದಿದನಂತರ ಸ್ಥಿರಪಟ್ಟ ಸ್ಥಳವಾಗಿತ್ತು.
- ಯಾಕೋಬನು ಶೆಕೆಮಿನಲ್ಲಿರುವ ಹಿವ್ವಿಯನಾದ ಹಾಮೋರನ ಮಕ್ಕಳಿಂದ ಭೂಮಿಯನ್ನು ಕೊಂಡುಕೊಂಡಿದ್ದನು. ಸ್ವಲ್ಪ ಕಾಲವಾದನಂತರ ಈ ಭೂಮಿಯು ತನ್ನ ಕುಟುಂಬದವರಿಗೆ ಸಮಾಧಿ ತೋಟವಾಗಿ ಮಾರಲ್ಪಟ್ಟಿತು ಮತ್ತು ಯಾಕೋಬನನ್ನು ತನ್ನ ಮಕ್ಕಳು ಸಮಾಧಿ ಮಾಡಿದ ಸ್ಥಳವಾಗಿತ್ತು.
- ಹಾಮೋರನ ಮಗನಾಗಿರುವ ಶೆಕೆಮನು ಯಾಕೋಬನ ಮಗಳಾಗಿರುವ ದೀನಳನ್ನು ಮಾನಭಂಗ ಮಾಡಿದ್ದನು, ಇದಕ್ಕೆ ಫಲವಾಗಿ ಯಾಕೋಬನ ಮಕ್ಕಳು ಶೆಕೆಮ್ ಪಟ್ಟಣದಲ್ಲಿರುವ ಮನುಷ್ಯರೆಲ್ಲರನ್ನು ಸಾಯಿಸಿದರು.
(ಅನುವಾದ ಸಲಹೆಗಳು: ಹಾಮೋರ್)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಏಸಾವ, ಹಾಮೋರ್, ಹಿವ್ವಿಯನು, ಯಾಕೋಬ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H7928, H7930
ಶೇಮ್
ಸತ್ಯಾಂಶಗಳು:
ಶೇಮ್ ಎನ್ನುವವನು ಆದಿಕಾಂಡ ಗ್ರಂಥದಲ್ಲಿ ಹೇಳಲ್ಪಟ್ಟಿರುವ ಲೋಕದಾದ್ಯಂತ ಬಂದಿರುವ ಪ್ರಳಯದ ಸಂದರ್ಭದಲ್ಲಿ ನಾವೆಯೊಳಗೆ ನೋಹನೊಂದಿಗೆ ಹೋಗಿರುವ ನೋಹನ ಮೂವರ ಮಕ್ಕಳಲ್ಲಿ ಒಬ್ಬನಾಗಿದ್ದನು,
- ಶೇಮ್ ಎನ್ನುವಾತನು ಅಬ್ರಾಹಾಮನಿಗೆ ಮತ್ತು ತನ್ನ ಸಂತಾನದವರಿಗೆ ಪೂರ್ವಜನಾಗಿದ್ದನು.
- ಶೇಮ್ ಸಂತಾನದವರನ್ನು “ಶೇಮಿಯರು” ಎಂದು ಕರೆಯಲ್ಪಡುತ್ತಿದ್ದರು; ಅವರು ಇಬ್ರಿ ಮತ್ತು ಆರಾಬಿಕ್ ಭಾಷೆಗಳಂತಹ “ಶೇಮಿಯನ್ನು” ಮಾತನಾಡುತ್ತಾರೆ.
- ಶೇಮ್ ಸುಮಾರು 600 ವರ್ಷಗಳ ಕಾಲ ಜೀವಿಸಿರುತ್ತಾನೆಂದು ಸತ್ಯವೇದವು ತಿಳಿಯಪಡಿಸುತ್ತಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಅರೇಬಿಯಾ, ನಾವೆ, ಪ್ರಳಯ, ನೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8035, G4590
ಸಂಸೋನ
ಸತ್ಯಾಂಶಗಳು:
ಸಂಸೋನನು ಇಸ್ರಾಯೇಲ್ ನ್ಯಾಯಾಧೀಶರಲ್ಲಿ ಅಥವಾ ವಿಮೋಚಕರಲ್ಲಿ ಒಬ್ಬನಾಗಿದ್ದನು. ಇವನು ದಾನ್ ಕುಲದಿಂದ ಬಂದವನಾಗಿದ್ದನು.
- ದೇವರು ಸಂಸೋನನಿಗೆ ಪ್ರಕೃತಾತೀತವಾದ ಬಲವನ್ನು ಕೊಟ್ಟಿದ್ದನು, ಇದರಿಂದ ಅವನು ಇಸ್ರಾಯೇಲ್ ಶತ್ರುಗಳಾಗಿರುವ ಫಿಲಿಷ್ಟಿಯನ್ನರ ವಿರುದ್ಧ ಹೋರಾಟವನ್ನು ಮಾಡುತ್ತಿದ್ದನು.
- ಸಂಸೋನನು ತನ್ನ ಕೂದಲನ್ನು ಕತ್ತರಿಸಿಕೊಳ್ಳುವುದಿಲ್ಲವೆಂದು ಮತ್ತು ದ್ರಾಕ್ಷಾರಸವನ್ನು ಕುಡಿಯುವುದಿಲ್ಲವೆಂದು ಅಥವಾ ಇತರ ಯಾವುದೇ ಹುದುಗಿಸಿದ ಪಾನೀಯವನ್ನು ಕುಡಿಯುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿದ್ದನು. ಅವನು ಪ್ರತಿಜ್ಞೆ ಅನುಸರಿಸಿದ ದಿನಗಳೆಲ್ಲಾ ದೇವರು ಅವನಿಗೆ ಬಲವನ್ನು ಕೊಡುತ್ತಾ ಬಂದನು.
- ಅವನು ಕೊನೆಗೆ ಮಾಡಿಕೊಂಡಿರುವ ಪ್ರತಿಜ್ಞೆಯನ್ನು ಮೀರಿದನು ಮತ್ತು ತನ್ನ ಕೂದಲನ್ನು ಕತ್ತರಿಸುವುದಕ್ಕೆ ಅನುಮತಿಸಿದನು, ಫಿಲಿಷ್ಟಿಯರು ತನ್ನನ್ನು ಬಂಧಿಸುವುದಕ್ಕೆ ಅವಕಾಶವನ್ನು ಕೊಟ್ಟನು.
- ಸಂಸೋನನು ಸೆರೆಯಲ್ಲಿರುವಾಗ ದೇವರು ಅವನಿಗೆ ತನ್ನ ಬಲವನ್ನು ತಿರುಗಿ ಹೊಂದಿಕೊಳ್ಳುವುದಕ್ಕೆ ಅವಕಾಶವನ್ನು ಕೊಟ್ಟನು ಮತ್ತು ಫಿಲಿಷ್ಟಿಯನ್ನರ ಜೊತೆಗೆ, ದಾಗೋನ್ ಸುಳ್ಳು ದೇವರ ದೇವಾಲಯವನ್ನು ನಾಶಗೊಳಿಸುವ ಅವಕಾಶವನ್ನು ಕೊಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ವಿಮೋಚಿಸು, ಫಿಲಿಷ್ಟಿಯನ್ನರು, ಇಸ್ರಾಯೇಲ್ ಹನ್ನೆರಡು ಕುಲದವರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8123, G4546
ಸದೋಕ
ಸತ್ಯಾಂಶಗಳು:
ಸದೋಕ ಎನ್ನುವ ವ್ಯಕ್ತಿ ಅರಸನಾದ ದಾವೀದ ಆಳ್ವಿಕೆಯಲ್ಲಿ ಇಸ್ರಾಯೇಲಿನಲ್ಲಿ ತುಂಬಾ ಪ್ರಾಮುಖ್ಯವಾದ ಮಹಾ ಯಾಜಕನಾಗಿದ್ದನು.
- ಅಬ್ಷಾಲೋಮನು ಅರಸನಾದ ದಾವೀದನಿಗೆ ವಿರುದ್ಧವಾಗಿ ನಡೆದುಕೊಂಡಾಗ, ಸದೋಕನು ದಾವೀದನಿಗೆ ಬೆಂಬಲ ಕೊಟ್ಟನು ಮತ್ತು ಯೆರೂಸಲೇಮಿಗೆ ಒಡಂಬಡಿಕೆಯ ಮಂಜೂಷವನ್ನು ಹಿಂದಕ್ಕೆ ತೆಗೆದುಕೊಂಡುಬರಲು ಸಹಾಯ ಮಾಡಿದನು.
- ಅನೇಕ ವರ್ಷಗಳಾದನಂತರ, ದಾವೀದನ ಮಗನಾಗಿರುವ ಸೊಲೊಮೋನನನ್ನು ಅರಸನಾಗಿ ಅಭಿಷೇಕಿಸುವ ಕಾರ್ಯಕ್ರಮದಲ್ಲಿ ಇವನು ಕೂಡ ಪಾಲ್ಗೊಂಡಿದ್ದನು.
- ನೆಹೆಮೀಯನ ಕಾಲದಲ್ಲಿ ಯೆರೂಸಲೇಮಿನ ಗೋಡೆಗಳನ್ನು ಕಟ್ಟುವುದಕ್ಕೆ ಸದೋಕ ಎನ್ನುವ ಹೆಸರಿನ ಇಬ್ಬರು ವ್ಯಕ್ತಿಗಳು ಸಹಾಯ ಮಾಡಿದ್ದರು.
- ಸದೋಕ ಎನ್ನುವ ಹೆಸರು ಅರಸನಾದ ಯೋತಾಮನ ತಾತನಿಗೆ ಕೂಡ ಇದ್ದಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ದಾವೀದ, ಯೋತಾಮ, ನೆಹೆಮೀಯ, ಪಾಲನೆ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6659, G4524
ಸಮಾರ್ಯ, ಸಮಾರ್ಯದವನು
ಸತ್ಯಾಂಶಗಳು:
ಸಮಾರ್ಯ ಎನ್ನುವುದು ಒಂದು ಪಟ್ಟಣವಾಗಿರುತ್ತದೆ ಮತ್ತು ಇದರ ಸುತ್ತಮುತ್ತ ಪ್ರಾಂತ್ಯವು ಇಸ್ರಾಯೇಲಿನ ಉತ್ತರ ಭಾಗದಲ್ಲಿರುತ್ತದೆ. ಈ ಪ್ರಾಂತ್ಯವು ಶಾರೋನ್ ಬಯಲಿನ ಪಶ್ಚಿಮ ಭಾಗ ಮತ್ತು ಯೊರ್ದನ್ ಹೊಳೆಯ ಪೂರ್ವ ಭಾಗದ ಮಧ್ಯೆದಲ್ಲಿರುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಸಮಾರ್ಯ ಎನ್ನುವುದು ಇಸ್ರಾಯೇಲ್ ಉತ್ತರ ರಾಜ್ಯದ ರಾಜಧಾನಿಯಾಗಿದ್ದಿತ್ತು. ಆದನಂತರ ಇದರ ಸುತ್ತಮುತ್ತಲಿರುವ ಪ್ರಾಂತ್ಯವನ್ನು ಕೂಡ ಸಮಾರ್ಯ ಎಂದು ಕರೆದರು.
- ಅಶ್ಯೂರಿಯರು ಇಸ್ರಾಯೇಲ್ ಉತ್ತರ ರಾಜ್ಯವನ್ನು ಜಯಿಸಿದಾಗ, ಅವರು ಸಮಾರ್ಯ ಪಟ್ಟಣವನ್ನು ವಶಪಡಿಸಿಕೊಂಡಿದ್ದರು ಮತ್ತು ಆ ಪ್ರಾಂತ್ಯವನ್ನು ಬಿಟ್ಟು ಹೋಗಬೇಕೆಂದು ಉತ್ತರ ಭಾಗದಲ್ಲಿರುವ ಇಸ್ರಾಯೇಲ್ಯರಲ್ಲಿ ಅನೇಕರನ್ನು ಬಲವಂತಿಕೆ ಮಾಡಿದರು, ಅವರನ್ನು ಅಶ್ಯೂರ್.ನಲ್ಲಿರುವ ವಿವಿಧ ಪಟ್ಟಣಗಳಿಗೆ ಹೋಗುವಂತೆ ದೂರ ಮಾಡಿದರು.
- ಕರೆದೊಯ್ಯಲ್ಪಟ್ಟ ಇಸ್ರಾಯೇಲ್ಯರ ಸ್ಥಾನವನ್ನು ತುಂಬಿಸುವುದಕ್ಕೆ ಸಮಾರ್ಯ ಪ್ರಾಂತ್ಯದೊಳಗೆ ಅಶ್ಯೂರೀಯರು ಅನೇಕ ಅನ್ಯರನ್ನು ಕರೆದುಕೊಂಡುಬಂದು ಅಲ್ಲಿ ಬಿಟ್ಟರು.
- ಆ ಪ್ರಾಂತ್ಯದಲ್ಲಿ ಉಳಿದ ಇಸ್ರಾಯೇಲ್ಯರಲ್ಲಿ ಕೆಲವರು ಆಲ್ಲಿಗೆ ಬಂದಿರುವ ಅನ್ಯರನ್ನು ಮದುವೆ ಮಾಡಿಕೊಂಡರು, ಮತ್ತು ಅವರ ಸಂತಾನದವರೇ ಸಮಾರ್ಯದವರಾಗಿದ್ದರು.
- ಯೆಹೂದ್ಯರು ಸಮಾರ್ಯದವರನ್ನು ಕಡೆಗಣಿಸಿದ್ದರು, ಯಾಕಂದರೆ ಅವರು ಕೇವಲ ಒಂದು ಕಡೆಗೆ ಮಾತ್ರ ಯೆಹೂದ್ಯರಾಗಿದ್ದರು ಮತ್ತು ಅವರ ಪೂರ್ವಜರು ಅನ್ಯ ದೇವರುಗಳನ್ನು ಆರಾಧನೆ ಮಾಡಿದವರಾಗಿದ್ದರು.
- ಹೊಸ ಒಡಂಬಡಿಕೆಯ ಕಾಲಗಳಲ್ಲಿ, ಸಮಾರ್ಯ ಪ್ರಾಂತ್ಯವು ಗಲಿಲಾಯ ಉತ್ತರ ಪ್ರಾಂತ್ಯ ಮತ್ತು ಯೂದಾಯ ದಕ್ಷಿಣ ಪ್ರಾಂತ್ಯಗಳ ಗಡಿಗಳಲ್ಲಿದ್ದಿತ್ತು.
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಗಲಿಲಾಯ, ಯೂದಾಯ, ಶಾರೋನ್, ಇಸ್ರಾಯೇಲ್ ರಾಜ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 20:04 ಇಸ್ರಾಯೇಲ್ ರಾಜ್ಯವು ಇದ್ದ ಪ್ರಾಂತ್ಯದಲ್ಲಿ ಜೀವನ ಮಾಡುವುದಕ್ಕೆ ಅಶ್ಯೂರಿಯರು ಅನ್ಯರನ್ನು ಕರೆದುಕೊಂಡುಬಂದು ಅಲ್ಲಿ ಬಿಟ್ಟರು. ಅನ್ಯರು ಕೆಡಿಸಲ್ಪಟ್ಟ ಪಟ್ಟಣಗಳನ್ನು ತಿರುಗಿ ನಿರ್ಮಿಸಿದರು ಮತ್ತು ಅಲ್ಲಿ ಉಳಿದ ಇಸ್ರಾಯೇಲ್ಯರನ್ನು ವಿವಾಹ ಮಾಡಿಕೊಂಡರು. ಅನ್ಯರನ್ನು ವಿವಾಹ ಮಾಡಿಕೊಂಡಿರುವ ಇಸ್ರಾಯೇಲ್ ಸಂತತಿಯವರನ್ನು ___ ಸಮಾರ್ಯದವರು ___ ಎಂದು ಕರೆಯುತ್ತಾರೆ.
- 27:08 “ಒಬ್ಬ ___ ಸಮಾರ್ಯದವನು ___ ಆ ಮಾರ್ಗದಲ್ಲಿ ಇಳಿದು ಹೋಗುತ್ತಾ ಇದ್ದನು. (___ ಸಮಾರ್ಯದವರು ___ ಇತರ ದೇಶಗಳಿಂದ ಬಂದಿರುವ ಜನರನ್ನು ವಿವಾಹ ಮಾಡಿಕೊಂಡಿರುವ ಯೆಹೂದ್ಯರ ಸಂತಾನದವರಾಗಿದ್ದರು. ___ ಸಮಾರ್ಯದವರು ___ ಮತ್ತು ಯೆಹೂದ್ಯರು ಒಬ್ಬರನ್ನೊಬ್ಬರು ದ್ವೇಷಿಸಿಕೊಳ್ಳುತ್ತಿದ್ದರು.)”
- 27:09 “___ ಸಮಾರ್ಯದವನು ___ ತನ್ನ ಸ್ವಂತ ಕತ್ತೆಯ ಮೇಲೆ ಆ ಮನುಷ್ಯನನ್ನು ಏರಿಸಿಕೊಂಡು, ಅವನನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಮಾರ್ಗ ಪಕ್ಕದಲ್ಲಿರುವ ಛತ್ರಕ್ಕೆ ಕರೆದುಕೊಂಡು ಹೋದನು.
- 45:07 ಯೇಸುವಿನ ಕುರಿತಾಗಿ ಬೋಧನೆ ಮಾಡಿದ ಮತ್ತು ಅನೇಕರು ರಕ್ಷಿಸಲ್ಪಟ್ಟ ಸ್ಥಳವಾಗಿರುವ ___ ಸಮಾರ್ಯಗೆ ___ ಈತನು (ಫಿಲಿಪ್ಪ) ಹೋದನು.
ಪದ ಡೇಟಾ:
- Strong's: H8111, H8115, H8118, G4540, G4541, G4542
ಸಮುದ್ರ, ಮಹಾ ಸಮುದ್ರ, ಪಶ್ಚಿಮ ಸಮುದ್ರ, ಮೆಡಿಟರೇನಿಯನ್ ಸಮುದ್ರ
ಸತ್ಯಾಂಶಗಳು:
ಸತ್ಯವೇದದಲ್ಲಿ “ಮಹಾ ಸಮುದ್ರ” ಅಥವಾ “ಪಶ್ಚಿಮ ಸಮುದ್ರ” ಎನ್ನುವ ಪದಗಳು ಈಗಿನ ಕಾಲದಲ್ಲಿ “ಮೆಡಿಟರೇನಿಯನ್ ಸಮುದ್ರ” ಎಂದು ಕರೆಯುತ್ತಾರೆ, ಸತ್ಯವೇದ ಕಾಲದಲ್ಲಿ ಇದು ಹೆಚ್ಚಿನ ನೀರನ್ನು ಹೊಂದಿರುವ ಸಮುದ್ರ ಎಂಬುದಾಗಿ ಹೆಸರುವಾಸಿಯಾಗಿತ್ತು.
- ಮೆಡಿಟರೇನಿಯನ್ ಸಮುದ್ರವು ಈ ಕೆಳಗಿನ ಪ್ರಾಂತ್ಯಗಳ ಗಡಿಗಳನ್ನು ಹೊಂದಿರುತ್ತದೆ : ಇಸ್ರಾಯೇಲ್ (ಪೂರ್ವ), ಯುರೋಪ್ (ಉತ್ತರ ಮತ್ತು ಪಶ್ಚಿಮ), ಮತ್ತು ಆಫ್ರಿಕಾ (ದಕ್ಷಿಣ).
- ಈ ಸಮುದ್ರವು ಅನೇಕ ದೇಶಗಳ ಗಡಿಗಳನ್ನು ಹೊಂದಿರುವುದರಿಂದ ಪುರಾತನ ಕಾಲಗಳಲ್ಲಿ ವ್ಯಾಪಾರ ವ್ಯವಹಾರಗಳಿಗೆ ಮತ್ತು ಸಾರಿಗೆಗೆ ತುಂಬಾ ಪ್ರಾಮುಖ್ಯವಾಗಿತ್ತು. ಈ ಸಮುದ್ರ ಕರಾವಳಿಯಲ್ಲಿ ಕಂಡುಬರುವ ಪಟ್ಟಣಗಳು ಮತ್ತು ಜನರ ಗುಂಪುಗಳು ತುಂಬಾ ಅಭಿವೃದ್ಧಿ ಹೊಂದಿದವುಗಳಾಗಿದ್ದವು ಅಥವಾ ಹೊಂದಿದವರಾಗಿದ್ದರು, ಯಾಕಂದರೆ ಹಡಗಿನ ಮೂಲಕ ಇತರ ದೇಶಗಳಿಂದ ವಸ್ತುಗಳನ್ನು ತುಂಬಾ ಸುಲಭವಾಗಿ ವರ್ಗಾಯಿಸುತ್ತಿದ್ದರು.
- ಮಹಾ ಸಮುದ್ರ ಎನ್ನುವುದು ಇಸ್ರಾಯೇಲ್ ಪಶ್ಚಿಮ ದಿಕ್ಕಿನಲ್ಲಿ ಕಂಡುಬರುತ್ತದೆ, ಇದನ್ನು ಕೆಲವೊಂದುಸಲ “ಪಶ್ಚಿಮ ಸಮುದ್ರ” ಎಂದೂ ಸೂಚಿಸುತ್ತಾರೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಜನರ ಗುಂಪು, ಅಭಿವೃದ್ಧಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H314, H1419, H3220
ಸಮುವೇಲ
ಸತ್ಯಾಂಶಗಳು:
ಸಮುವೇಲ ಪ್ರವಾದಿಯಾಗಿದ್ದನು ಮತ್ತು ಇಸ್ರಾಯೇಲ್ ಕೊನೆಯ ನ್ಯಾಯಾಧೀಶನಾಗಿದ್ದನು. ಈತನು ಸೌಲ ಮತ್ತು ದಾವೀದರಿಬ್ಬರನ್ನು ಇಸ್ರಾಯೇಲ್ ಮೇಲೆ ಅರಸರನ್ನಾಗಿ ಅಭಿಷೇಕ ಮಾಡಿದ್ದನು.
- ಸಮುವೇಲನು ಎಲ್ಕಾನ ಮತ್ತು ಹನ್ನಳಿಗೆ ರಾಮದಲ್ಲಿ ಜನಿಸಿದ್ದನು.
- ಹನ್ನಳು ಬಂಜೆಯಾಗಿದ್ದಳು, ಆದ್ದರಿಂದ ದೇವರು ತನಗೆ ಒಂದು ಮಗುವನ್ನು ಕೊಡಬೇಕೆನ್ನುವ ಪ್ರಾರ್ಥನೆಯನ್ನು ಆಕೆ ಮಾಡಿದ್ದಳು. ಆ ಪ್ರಾರ್ಥನೆಗೆ ಸಮುವೇಲನೇ ಉತ್ತರವಾಗಿದ್ದನು.
- ತನ್ನ ಪ್ರಾರ್ಥನೆಗೆ ದೇವರು ಉತ್ತರ ಕೊಟ್ಟು ಒಂದು ಗಂಡು ಮಗುವನ್ನು ಕೊಟ್ಟರೆ, ಹನ್ನಳು ಆ ಮಗುವನ್ನು ಯೆಹೋವನಿಗೆ ಸಮರ್ಪಿಸುತ್ತೇನೆಂದು ವಾಗ್ಧಾನ ಮಾಡಿದ್ದಳು, ಹಾಗೆಯೇ ಆಕೆಯ ಪ್ರಾರ್ಥನೆಗೆ ಉತ್ತರವನ್ನು ಪಡೆದುಕೊಂಡಳು.
- ಆ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕೆ ಸಮುವೇಲನು ಚಿಕ್ಕವನಾಗಿದ್ದಾಗಲೇ, ಹನ್ನಳು ಅವನನ್ನು ದೇವಾಲಯದಲ್ಲಿ ಯಾಜಕನಾಗಿರುವ ಏಲಿಗೆ ಸಹಾಯ ಮಾಡಲು ಮತ್ತು ಆತನೊಂದಿಗೆ ಜೀವಿಸುವುದಕ್ಕೆ ಕಳುಹಿಸಿದಳು.
- ದೇವರು ಸಮುವೇಲನನ್ನು ದೊಡ್ಡ ಪ್ರವಾದಿಯನ್ನಾಗಿ ಮಾಡಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಹನ್ನಳು, ತೀರ್ಪು ಮಾಡು, ಪ್ರವಾದಿ, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8050, G4545
ಸಾರಳು, ಸಾರಯಳು
ಸತ್ಯಾಂಶಗಳು:
- ಸಾರಳು ಅಬ್ರಾಹಾಮನ ಹೆಂಡತಿಯಾಗಿದ್ದಳು.
- ವಾಸ್ತವಿಕವಾಗಿ ಆಕೆಯ ಹೆಸರು “ಸಾರಯಳು” ಆಗಿತ್ತು, ಆದರೆ ದೇವರು “ಸಾರಾ” ಎಂದು ಬದಲಾಯಿಸಿದನು.
- ಸಾರಳು ಇಸಾಕನಿಗೆ ಜನನವನ್ನು ಕೊಟ್ಟಳು, ಇವನು ಆಕೆಗೆ ಮತ್ತು ಅಬ್ರಾಹಾಮನಿಗೆ ದೇವರು ವಾಗ್ಧಾನ ಮಾಡಿದ್ದ ಮಗನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಇವುಗಳನ್ನು ಸಹ ನೋಡಿರಿ : ಅಬ್ರಾಹಾಮ, ಇಸಾಕ)
ಸತ್ಯವೇದದ ಅನುಬಂಧ ವಾಕ್ಯಗಳು:
ಸತ್ಯವೇದದಿಂದ ಉದಾಹರಣೆಗಳು:
- __5:1__ಅಬ್ರಾಹಾಮನ ಹೆಂಡತಿಯಾದ __ ಸಾರಯಳು __ ಅವನಿಗೆ, “ನಾನೀಗ ಮಕ್ಕಳನ್ನು ಹಡೆಯುವುದಕ್ಕೆ ವೃದ್ಧಳಾಗಿರುವುದರಿಂದ ಮತ್ತು ನಾನು ಮಕ್ಕಳನ್ನು ಹೊಂದುವುದಕ್ಕೆ ದೇವರು ಅನುಮತಿ ಕೊಡದ ಕಾರಣದಿಂದ, ಇಲ್ಲಿ ನನ್ನ ದಾಸಿ ಹಾಗರಳಿದ್ದಾಳೆ. ಆಕೆಯನ್ನು ಮದುವೆ ಮಾಡಿಕೋ ಆಕೆಯು ನನಗಾಗಿ ಮಗುವನ್ನು ಹಡೆಯುವಳು” ಎಂದು ಹೇಳಿದಳು.
- 5:4 “ನಿನ್ನ ಹೆಂಡತಿ __ ಸಾರಯಳು __ ಮಗನನ್ನು ಹೇರುವಳು, ಅವನು ವಾಗ್ಧಾನದ ಮಗನಾಗಿರುವನು.”
- 5:4 “ದೇವರು __ ಸಾರಯಳ __ ಹೆಸರನ್ನು __ ಸಾರಾ__ ಎಂದು ಬದಲಾಯಿಸಿದನು, ಈ ಹೆಸರಿಗೆ “ರಾಜಕುಮಾರಿ” ಎಂದರ್ಥ.”
- 5:5 “ಒಂದು ವರ್ಷದನಂತರ, ಅಬ್ರಾಹಾಮನು 100 ವರ್ಷಗಳವನಾದಾಗ, __ ಸಾರಳಿಗೆ __ 90 ವರ್ಷಗಳಾಗಿತ್ತು, __ ಸಾರಳು __ ಅಬ್ರಾಹಾಮನ ಮಗನಿಗೆ ಜನನವನ್ನು ಕೊಟ್ಟಳು. ದೇವರು ಅವರಿಗೆ ಹೇಳಿದ ಪ್ರಕಾರವೇ ಅವರು ಅವನಿಗೆ ಇಸಾಕ ಎಂದು ಹೆಸರಿಟ್ಟರು.
ಪದದ ಡೇಟಾ:
- Strong's: H8283, H8297, G45640
ಸಿಮೆಯೋನ್
ಸತ್ಯಾಂಶಗಳು:
ಸಿಮೆಯೋನ್ ಯಾಕೋಬನ ಎರಡನೇಯ ಮಗ. ಆತನು ಲೇಯಳ ಎರಡನೇಯ ಮಗ. ಅವನ ವಂಶಸ್ಥರು ಇಸ್ರಾಯೇಲಿನ ಕುಲಗಳಲ್ಲಿ ಒಂದಾಗಿದೆ.
- ಅವನ ಕುಲದವರನ್ನು "ಸಿಮೆಯೋನನ ಕುಲ" ಎಂದು ಕರೆಯಲ್ಪಟ್ಟಿದೆ.
- ಸಿಮೆಯೋನ್ ಎಂಬ ಹೆಸರು "ಕೇಳಲು" ಎಂಬ ಇಬ್ರಿಯ ಪದಕ್ಕೆ ಹೋಲುತ್ತದೆ.
- ಸಿಮೆಯೋನ್ ಕುಲವು ಕಾನಾನ್ ಎನ್ನುವ ವಾಗ್ಧಾನ ಭೂಮಿಯಲ್ಲಿ ದಕ್ಷಿಣ ಪ್ರದೇಶದಲ್ಲಿ ಒಂದು ಭಾಗವನ್ನು ವಶಪಡಿಸಿಕೊಂಡಿದ್ದರು. ಇವರ ಭೂಭಾಗವು ಯೆಹೂದ್ಯಕ್ಕೆ ಸಂಬಂಧಪಟ್ಟಿರುವ ಭೂಭಾಗದಿಂದ ಆವರಿಸಲ್ಪಟ್ಟಿತ್ತು.
- ಮರಿಯ ಮತ್ತು ಯೋಸೇಫರು ಶಿಶುವಾದ ಯೇಸುವನ್ನು ದೇವರಿಗೆ ಪ್ರತಿಷ್ಠಾಪನೆ ಮಾಡುವುದಕ್ಕೆ ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ಕರೆದುಕೊಂಡು ಬಂದಾಗ, ಅಲ್ಲಿ ಹಿರಿಯನಾದ ಸಿಮೆಯೋನ್ ಎನ್ನುವ ಹೆಸರಿನ ವ್ಯಕ್ತಿ ಮೆಸ್ಸೀಯನನ್ನು ನೋಡುವುದಕ್ಕೆ ಆತನನ್ನು ಅನುಮತಿಸಲು ದೇವರನ್ನು ಸ್ತುತಿಸಿದನು.
- ಲೂಕನ ಸುವಾರ್ತೆಯಲ್ಲಿ ಯೇಸುವಿನ ವಂಶಾವಳಿಯಲ್ಲಿ ಸಿಮೆಯೋನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಉಲ್ಲೇಖಿಸಲಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಕ್ರಿಸ್ತ, ಪ್ರತಿಷ್ಠಾಪಿಸು, ಯಾಕೋಬ, ಯೆಹೂದ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8095, H8099, G4826
ಸಿರಿಯಾ
ಸತ್ಯಾಂಶಗಳು:
ಸಿರಿಯಾ ಎನ್ನುವುದು ಒಂದು ದೇಶವಾಗಿರುತ್ತದೆ, ಇದು ಇಸ್ರಾಯೇಲ್ ಈಶಾನ್ಯ ಭಾಗದಲ್ಲಿ ಕಂಡುಬರುತ್ತದೆ. ಹೊಸ ಒಡಂಬಡಿಕೆಯ ಕಾಲದಲ್ಲಿ ಈ ದೇಶವು ರೋಮಾ ಸಾಮ್ರಾಜ್ಯದ ಆಡಳಿತದಲ್ಲಿರುವ ಸೀಮೆಯಾಗಿದ್ದಿತ್ತು.
- ಹಳೇ ಒಡಂಬಡಿಕೆಯ ಕಾಲದಲ್ಲಿ ಸಿರಿಯನ್ನರು ಇಸ್ರಾಯೇಲ್ಯರಿಗೆ ಬಲವಾದ ಸೈನ್ಯವಾದ ಶತ್ರುಗಳಾಗಿದ್ದರು.
- ನಾಮಾನನು ಸಿರಿಯಾ ಸೈನ್ಯಕ್ಕೆ ಅಧಿಪತಿಯಾಗಿದ್ದನು, ಇವನ ಕುಷ್ಠ ರೋಗವು ಪ್ರವಾದಿಯಾದ ಎಲೀಷನಿಂದ ಗುಣವಾಗಿದ್ದಿತ್ತು.
- ಸಿರಿಯಾ ನಿವಾಸಿಗಳಲ್ಲಿ ಅನೇಕರು ಆರಾಮನ ಸಂತತಿಯಾಗಿದ್ದರು, ಈ ಆರಾಮನು ನೋಹನ ಮಗನಾದ ಶೇಮ್ ಸಂತಾನದವನಾಗಿದ್ದನು.
- ಸಿರಿಯಾ ರಾಜಧಾನಿಯಾದ ದಮಸ್ಕ ಪಟ್ಟಣದ ಕುರಿತು ಸತ್ಯವೇದದಲ್ಲಿ ಅನೇಕಬಾರಿ ದಾಖಲು ಮಾಡಲ್ಪಟ್ಟಿರುತ್ತದೆ.
- ಸೌಲನು ಕ್ರೈಸ್ತರನ್ನು ಹಿಂಸಿಸುವುದಕ್ಕೆ ಒಂದು ಪ್ರಣಾಳಿಕೆಯನ್ನು ಹಾಕಿಕೊಂಡು ದಮಸ್ಕ ಪಟ್ಟಣಕ್ಕೆ ಹೊರಟು ಹೋದನು, ಆದರೆ ಯೇಸು ಅವನನ್ನು ನಿಲ್ಲಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆರಾಮ, ಸೈನ್ಯಾಧಿಪತಿ, ದಮಸ್ಕ, ವಂಶಸ್ಥರು, ಎಲೀಷ, ಕುಷ್ಠ, ನಾಮಾನ, ಹಿಂಸೆ, ಪ್ರವಾದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H130, H726, H758, H761, H762, H804, H1834, H4601, H7421, G4947, G4948
ಸೀದೋನ್
ಸತ್ಯಾಂಶಗಳು:
ಸೀದೋನ್ ಎನ್ನುವವನು ಕಾನಾನ್ ಹಿರಿಯ ಮಗನಾಗಿದ್ದನು. ಸೀದೋನ್ ಎನ್ನುವ ಹೆಸರಿನ ಮೇಲೆ ಕಾನಾನಿಯ ಪಟ್ಟಣವೂ ಇದೆ, ಬಹುಶಃ ಕಾನಾನ್ ಮಗನ ಹೆಸರೇ ಇದಕ್ಕೆ ಇಟ್ಟಿರಬಹುದು.
- ಸೀದೋನ್ ಪಟ್ಟಣವು ಆಧುನಿಕ ದೇಶವಾಗಿರುವ ಲೆಬಾನೋನ್ ಪ್ರಾಂತ್ಯದಲ್ಲಿ ಮೆಡಿಟರೇನಿಯನ್ ಕರಾವಳಿಯಲ್ಲಿ ಇಸ್ರಾಯೇಲ್ ಈಶಾನ್ಯ ಭಾಗದಲ್ಲಿ ಕಂಡುಬರುತ್ತದೆ.
- “ಸೀದೋನಿಯರು” ಪುರಾತನ ಸೀದೋನ್ ಮತ್ತು ಅದರ ಸುತ್ತಮುತ್ತಲಿರುವ ಪ್ರಾಂತ್ಯಗಳಲ್ಲಿ ನಿವಾಸ ಮಾಡುತ್ತಿದ್ದ ಪೊಯಿನಿಕ್ಯ ಜನರ ಗುಂಪಿನವರಾಗಿದ್ದರು.
- ಸತ್ಯವೇದದಲ್ಲಿ ಸೀದೋನ್ ತೂರ್ ಎನ್ನುವ ಪಟ್ಟಣದೊಂದಿಗೆ ತುಂಬಾ ಹತ್ತಿರವಾಗಿ ಸಹಕಾರವನ್ನು ಮಾಡಿರುತ್ತದೆ, ಇದರಿಂದ ಈ ಎರಡು ಪಟ್ಟಣಗಳು ಶ್ರೀಮಂತಕ್ಕೆ ಮತ್ತು ಆ ಪಟ್ಟಣಗಳಲ್ಲಿ ನಿವಾಸವಾಗಿರುವ ಜನರು ಅನೈತಿಕ ನಡತೆಗಳಿಗೆ ಪ್ರಸಿದ್ಧಿಯನ್ನು ಹೊಂದಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ನೋಹ, ಪೊಯಿನಿಕ್ಯ, ಸಮುದ್ರ, ತೂರು)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.12:20-21
- ಅಪೊ.ಕೃತ್ಯ.27:3-6
- ಆದಿ.10:15-18
- ಆದಿ.10:19-20
- ಮಾರ್ಕ.03:7-8
- ಮತ್ತಾಯ.11:20-22
- ಮತ್ತಾಯ.15:21-23
ಪದ ಡೇಟಾ:
- Strong's: H6721, H6722, G4605, G4606
ಸೀನಾಯಿ
ಸತ್ಯಾಂಶಗಳು:
ಸೀನಾಯಿ ಬೆಟ್ಟ ಎನ್ನುವುದು ಒಂದು ಪರ್ವತವಾಗಿರುತ್ತದೆ, ಇದು ಬಹುಶಃ ಈಗಿನ ಸೀನಾಯಿ ಪೆನಿನ್ಸುಲ ಎಂದು ಕರೆಯಲ್ಪಡುವ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ. ಇದನ್ನು “ಹೋರೆಬ್ ಬೆಟ್ಟ” ಎಂದೂ ಕರೆಯುತ್ತಾರೆ.
- ಸೀನಾಯಿ ಬೆಟ್ಟ ಎನ್ನುವುದು ಬಂಡೆಗಳು ಇರುವ ಅಡವಿಯಲ್ಲಿ ದೊಡ್ಡ ಭಾಗವಾಗಿರುತ್ತದೆ.
- ಇಸ್ರಾಯೇಲ್ಯರು ಐಗುಪ್ತದಿಂದ ವಾಗ್ಧಾನ ಭೂಮಿಗೆ ಪ್ರಯಾಣ ಮಾಡುತ್ತಿರುವಾಗ ಅವರು ಸೀನಾಯಿ ಬೆಟ್ಟಕ್ಕೆ ಬಂದಿದ್ದರು.
- ದೇವರು ಸೀನಾಯಿ ಬೆಟ್ಟದ ಮೇಲೆ ಮೋಶೆಗೆ ಹತ್ತು ಆಜ್ಞೆಗಳನ್ನು ಕೊಟ್ಟನು.
(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಹೋರೆಬ್, ವಾಗ್ಧಾನ ಭೂಮಿ, ಹತ್ತು ಆಜ್ಞೆಗಳು,)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 13:01 ದೇವರು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದಿಂದ ನಡೆಸಿದನಂತರ, ಆತನು ಅವರನ್ನು __ ಸೀನಾಯಿ __ ಎನ್ನುವ ಬೆಟ್ಟದ ಕಡೆಗೆ ಅರಣ್ಯದ ಮೂಲಕ ನಡೆಸಿದನು.
- 13:03 ಮೂರು ದಿನಗಳಾದನಂತರ, ಜನರು ತಮ್ಮನ್ನು ತಾವು ಆತ್ಮೀಕವಾಗಿ ಸಿದ್ಧಗೊಳಿಸಿಕೊಂಡನಂತರ, ದೇವರು ತುತೂರಿ ಧ್ವನಿಯಿಂದ, ಗುಡುಗು, ಮಿಂಚು, ಮತ್ತು ಹೊಗೆಯೊಳಗಿಂದ __ ಸೀನಾಯಿ ಬೆಟ್ಟದ __ ಮೇಲಕ್ಕೆ ಇಳಿದು ಬಂದರು.
- 13:11 ಅನೇಕ ದಿನಗಳವರೆಗೆ, ಮೋಶೆಯು __ ಸೀನಾಯಿ ಬೆಟ್ಟದ __ ಮೇಲೆ ದೇವರೊಂದಿಗೆ ಮಾತನಾಡುತ್ತಾ ಇದ್ದರು.
- 15:13 __ ಸೀನಾಯಿ __ ಮೇಲೆ ದೇವರು ಇಸ್ರಾಯೇಲ್ಯರೊಂದಿಗೆ ಮಾಡಿದ ಒಡಂಬಡಿಕೆಗೆ ವಿಧೇಯರಾಗುವುದಕ್ಕೆ ಯೆಹೋಶುವ ಜನರಿಗೆ ತಮ್ಮ ಕರ್ತವ್ಯವನ್ನು ನೆನಪು ಮಾಡಿದನು.
ಪದ ಡೇಟಾ:
- Strong's: H2022, H5514, G3735, G4614
ಸೀಲ, ಸಿಲ್ವಾನ
ಸತ್ಯಾಂಶಗಳು:
ಸೀಲನು ಯೆರೂಸಲೇಮಿನಲ್ಲಿರುವ ವಿಶ್ವಾಸಿಗಳ ಮಧ್ಯದಲ್ಲಿ ನಾಯಕನಾಗಿದ್ದನು.
- ಅಂತಿಯೋಕ್ಯ ಪಟ್ಟಣಕ್ಕೆ ಪತ್ರವನ್ನು ತೆಗೆದುಕೊಳ್ಳುವುದಕ್ಕೆ ಪೌಲ ಮತ್ತು ಬಾರ್ನಬರವರೊಂದಿಗೆ ಹೋಗಲು ಯೆರೂಸಲೇಮಿನಲ್ಲಿರುವ ಸಭೆಯ ಹಿರಿಯರು ಸೀಲನನ್ನು ನೇಮಿಸಿದರು.
- ಸೀಲನು ಸ್ವಲ್ಪಕಾಲವಾದನಂತರ ಯೇಸುವಿನ ಕುರಿತಾಗಿ ಜನರಿಗೆ ಬೋಧನೆ ಮಾಡುವುದಕ್ಕೆ ಅನೇಕ ಪಟ್ಟಣಗಳಿಗೆ ಪೌಲನ ಜೊತೆಯಲ್ಲಿ ಪ್ರಯಾಣ ಮಾಡಿದನು.
- ಪೌಲ ಮತ್ತು ಸೀಲನನ್ನು ಫಿಲಿಪ್ಪಿ ಪಟ್ಟಣದಲ್ಲಿನ ಸೆರೆಗೆ ಹಾಕಿದ್ದರು. ಅವರು ಆ ಸೆರೆಯಲ್ಲಿರುವಾಗಲೇ ದೇವರಿಗೆ ಹಾಡುಗಳನ್ನು ಹಾಡುತ್ತಿದ್ದರು, ಆಗ ದೇವರು ಅವರನ್ನು ಸೆರೆಯಿಂದ ಅವರನ್ನು ಬಿಡಿಸಿದರು. ಈ ಸಾಕ್ಷಿಯ ಫಲವಾಗಿ ಜೈಲಾಧಿಕಾರಿ ಕ್ರೈಸ್ತನಾಗಿ ಮಾರ್ಪಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವ ರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಂತಿಯೋಕ್ಯ, ಬರ್ನಬ, ಯೆರೂಸಲೇಮ್, ಪೌಲ, ಫಿಲಿಪ್ಪಿ, ಸೆರೆ, ಸಾಕ್ಷಿ)
ಸತ್ಯವೇದದ ವಾಕ್ಯಗಳು:
ಸತ್ಯವೇದದ ಕಥೆಗಳಿಂದ ಉದಾಹರಣೆಗಳು:
- 47:1 ಒಂದು ದಿನ ಪೌಲ ಮತ್ತು ತನ್ನ ಸ್ನೇಹಿತನಾದ __ ಸೀಲನು __ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಪ್ರಕಟಿಸುವುದಕ್ಕೆ ಫಿಲಿಪ್ಪಿ ಪಟ್ಟಣಕ್ಕೆ ಹೋದರು.
- 47:2 ಆಕೆ (ಲುದ್ಯಳು) ತನ್ನ ಮನೆಯಲ್ಲಿಯೇ ಇಳಿದುಕೊಳ್ಳುವುದಕ್ಕೆ ಪೌಲ ಮತ್ತು __ ಸೀಲ __ ರನ್ನು ಆಹ್ವಾನಿಸಿದಳು, ಅದಕ್ಕಾಗಿ ಅವರು ಆಕೆ ಮತ್ತು ಆಕೆಯ ಕುಟುಂಬದೊಂದಿಗೆ ಇದ್ದರು.
- 47:3 ಪೌಲ ಮತ್ತು __ ಸೀಲರು __ ಅನೇಕಬಾರಿ ಪ್ರಾರ್ಥನೆಯ ಸ್ಥಳದಲ್ಲಿ ಜನರೊಂದಿಗೆ ಭೇಟಿಯಾದರು.
- 47:7 ಅದ್ದರಿಂದ ದಾಸಿಯಾದ ಯಜಮಾನರು ಪೌಲ ಮತ್ತು __ ಸೀಲರನ್ನು __ ರೋಮಾ ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋದರು, ಅಲ್ಲಿ ಇವರು ಅವರನ್ನು ಹೊಡೆದು, ಜೈಲಿಗೆ ಹಾಕಿದರು.
- 47:8 ಅವರು ಪೌಲ ಮತ್ತು ಸೀಲರನ್ನು ಸೆರೆಮನೆಯಲ್ಲಿ ಅತೀ ಭದ್ರವಾಗಿರುವ ಸ್ಥಳದಲ್ಲಿ ಬಂಧಿಸಿದ್ದರು ಮತ್ತು ಅವರ ಪಾದಗಳನ್ನು ಕಟ್ಟಿ ಹಾಕಿದ್ದರು.
- 47:11 ಜೈಲಾಧಿಕಾರಿ ಪೌಲ ಮತ್ತು __ ಸೀಲರ __ ಬಳಿಗೆ ನಡಗುತ್ತಾ ಬಂದು, “ರಕ್ಷಣೆ ಹೊಂದುವುದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು.
- 47:13 ಆ ಮರುದಿನದಂದು ಪಟ್ಟಣದ ನಾಯಕರು ಸೆರೆಯಿಂದ ಪೌಲ ಮತ್ತು __ ಸೀಲರನ್ನು __ ಬಿಡಿಸಿದರು ಮತ್ತು ಅವರನ್ನು ಫಿಲಿಪ್ಪಿಯನ್ನು ಬಿಟ್ಟು ಹೋಗಬೇಕೆಂದು ಹೇಳಿದರು. ಪೌಲ ಮತ್ತು __ ಸೀಲರು __ ಲುದ್ಯಳನ್ನು ಮತ್ತು ಇತರ ಸ್ನೇಹಿತರನ್ನು ಸಂದರ್ಶಿಸಿ, ಪಟ್ಟಣವನ್ನು ಬಿಟ್ಟು ಹೋದರು.
ಪದ ಡೇಟಾ:
- Strong's: G46090 , G46100
ಸುಕ್ಕೋತ್
ಪದದ ಅರ್ಥವಿವರಣೆ:
ಸುಕ್ಕೋತ್ ಎನ್ನುವುದು ಹಳೇ ಒಡಂಬಡಿಕೆಯಲ್ಲಿರುವ ಅನೇಕ ಪಟ್ಟಣಗಳಲ್ಲಿ ಒಂದಾಗಿರುತ್ತದೆ. “ಸುಕ್ಕೋತ್” ಎನ್ನುವ ಪದಕ್ಕೆ “ಆಶ್ರಯಗಳು” ಎಂದರ್ಥ.
- ಮೊಟ್ಟ ಮೊದಲಿಗೆ ಕರೆಯಲ್ಪಟ್ಟ ಸುಕ್ಕೋತ್ ಎನ್ನುವುದು ಯೊರ್ದನ್ ಹೊಳೆಯ ಪೂರ್ವ ದಿಕ್ಕಿನಲ್ಲಿ ಕಂಡುಬರುತ್ತದೆ.
- ಯಾಕೋಬನು ತನ್ನ ಕುಟುಂಬದೊಂದಿಗೆ ಮತ್ತು ಹಿಂಡುಗಳೊಂದಿಗೆ ಸುಕ್ಕೋತಿನಲ್ಲಿ ತಮಗೆ ಆಶ್ರಯಗಳನ್ನು ಕಟ್ಟಿಕೊಳ್ಳುತ್ತಾ ನಿವಾಸವಾಗಿದ್ದನು.
- ನೂರು ವರ್ಷಗಳಾದನಂತರ, ಗಿದ್ಯೋನನು ಮತ್ತು ತನ್ನ ಬಳಿಯಿರುವ ಮನುಷ್ಯರು ಮಿದ್ಯಾನ್ಯರನ್ನು ಬೆನ್ನಟ್ಟಿದಾಗ ಸುಕ್ಕೋತಿನಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡರು, ಆದರೆ ಅಲ್ಲಿರುವ ಜನರು ಅವರಿಗೆ ಆಹಾರವನ್ನು ಕೊಡುವುದಕ್ಕೆ ತಿರಸ್ಕಾರ ಮಾಡಿದರು.
- ಎರಡನೇ ಸುಕ್ಕೋತ್ ಐಗುಪ್ತದ ಉತ್ತರ ಗಡಿಯಲ್ಲಿ ಕಂಡುಬರುತ್ತದೆ, ಇಲ್ಲಿಯೇ ಇಸ್ರಾಯೇಲ್ಯರು ಐಗುಪ್ತದಲ್ಲಿರುವ ಗುಲಾಮಗಿರಿಯಿಂದ ತಪ್ಪಿಸಿಕೊಂಡಿರುವಾಗ ಕೆಂಪು ಸಮುದ್ರವನ್ನು ದಾಟಿದನಂತರ ಇಲ್ಲಿಯೇ ಇಳಿದುಕೊಂಡಿದ್ದರು.
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5523, H5524
ಸೃಷ್ಟಿಸುವಾತನು
ಸತ್ಯಾಂಶಗಳು:
ಸಾಧಾರಣವಾಗಿ “ಸೃಷ್ಟಿಸುವಾತನು” ಎನ್ನುವ ಪದವು ವಸ್ತುಗಳನ್ನು ಮಾಡುವವನನ್ನು ಅಥವಾ ಸೃಷ್ಟಿಸುವವನನ್ನು ಸೂಚಿಸುತ್ತದೆ.
- ಸತ್ಯವೇದದಲ್ಲಿ “ಸೃಷ್ಟಿಸುವಾತನು” ಎನ್ನುವ ಪದವು ಕೆಲವೊಂದುಸಲ ಯೆಹೋವನಿಗೆ ಬಿರುದಾಗಿಯೂ ಅಥವಾ ಆತನ ಹೆಸರಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ, ಯಾಕಂದರೆ ಆತನು ಸರ್ವವನ್ನು ಸೃಷ್ಟಿಸಿದ್ದಾನೆ.
- ಸಾಧಾರಣವಾಗಿ ಈ ಪದವು “ಆತನ” ಅಥವಾ “ನನ್ನ” ಅಥವಾ “ನಿನ್ನ” ಎನ್ನುವ ಪದಗಳೊಂದಿಗೆ ಬೆರೆತುಗೊಂಡಿರುತ್ತದೆ.
ಅನುವಾದ ಸಲಹೆಗಳು:
- “ಸೃಷ್ಟಿಸುವಾತನು” ಎನ್ನುವ ಪದವು “ಸೃಷ್ಟಿಕರ್ತ” ಅಥವಾ “ಸೃಷ್ಟಿಸುವ ದೇವರು” ಅಥವಾ “ಸರ್ವವನ್ನುಂಟು ಮಾಡಿದ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
- “ಆತನನ್ನು ಸೃಷ್ಟಿಸುವಾತನು” ಎನ್ನುವ ಮಾತು “ಆತನನ್ನು ಸೃಷ್ಟಿಸಿದ ವ್ಯಕ್ತಿ” ಅಥವಾ “ಆತನನ್ನು ಸೃಷ್ಟಿಸಿದ ದೇವರು” ಎಂದೂ ಅನುವಾದ ಮಾಡಬಹುದು.
- “ನಿನ್ನ ಸೃಷ್ಟಿಕರ್ತ” ಮತ್ತು “ನನ್ನ ಸೃಷ್ಟಿಕರ್ತ” ಎನ್ನುವ ಮಾತುಗಳನ್ನು ಒಂದೇ ವಿಧಾನದಲ್ಲಿ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಸೃಷ್ಟಿಸು, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2796, H3335, H6213, H6466, H6467, G1217
ಸೆನ್ಹೆರೀಬ
ಸತ್ಯಾಂಶಗಳು:
ಸೆನ್ಹೆರೀಬನು ಅಶ್ಯೂರಿನ ಶಕ್ತಿಯುತವಾದ ಅರಸನಾಗಿರುತ್ತಾನೆ, ಇವನು ನಿನೆವೆ ಪಟ್ಟಣವನ್ನು ಪ್ರಾಮುಖ್ಯವಾದ ಶ್ರೀಮಂತ ಪಟ್ಟಣವನ್ನಾಗಿ ಮಾರ್ಪಡಿಸಿದನು.
- ಅರಸನಾದ ಸೆನ್ಹೆರೀಬನು ಯೆಹೂದ ರಾಜ್ಯ ಮತ್ತು ಬಾಬೆಲೋನಿಯಗೆ ವಿರುದ್ಧವಾಗಿ ಯುದ್ಧಗಳನ್ನು ಮಾಡಿದ್ದರಲ್ಲಿ ಪ್ರಸಿದ್ಧನಾಗಿದ್ದನು.
- ಇವನು ತುಂಬಾ ಅಹಂಕಾರಿಯುಳ್ಳ ಅರಸನಾಗಿರುತ್ತಾನೆ ಮತ್ತು ಇವನು ಯೆಹೋವನನ್ನು ಹಿಯಾಳಿಸಿದ್ದನು.
- ಅರಸನಾದ ಹಿಜ್ಕೀಯ ಕಾಲದಲ್ಲಿ ಸೆನ್ಹೆರೀಬನು ಯೆರೂಸಲೇಮಿನ ಮೇಲೆ ಧಾಳಿ ಮಾಡಿರುತ್ತಾನೆ.
- ಯೆಹೋವನು ಸೆನ್ಹೆರೀಬನ ಸೈನ್ಯವು ನಾಶವಾಗುವಂತೆ ಮಾಡಿದನು.
- ಹಳೇ ಒಡಂಬಡಿಕೆಯ ಪುಸ್ತಕಗಳಾಗಿರುವ ಅರಸಗಳು ಮತ್ತು ಪೂರ್ವಕಾಲ ವೃತ್ತಾಂತಗಳಲ್ಲಿ ಸೆನ್ಹೆರೀಬನ ಪಾಲನೆಯ ಸಂಘಟನೆಗಳನ್ನು ದಾಖಲು ಮಾಡಲ್ಪಟ್ಟಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಶ್ಯೂರ್, ಬಾಬೆಲೋನಿಯ, ಹಿಜ್ಕೀಯ, ಯೆಹೂದ, ಹಿಯಾಳಿಸು, ನಿನೆವೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
ಸೇಥ
ಸತ್ಯಾಂಶಗಳು:
ಆದಿಕಾಂಡ ಪುಸ್ತಕದಲ್ಲಿ ಸೇಥ ಎನ್ನುವವನು ಆದಾಮ ಮತ್ತು ಹವ್ವಳಿಗೆ ಮೂರನೇಯ ಮಗನಾಗಿದ್ದನು.
- ಸೇಥನು ಕಾಯಿನನ ಕೈಯಲ್ಲಿ ಕೊಲ್ಲಲ್ಪಟ್ಟ ಹೇಬೆಲನ ಸ್ಥಾನದಲ್ಲಿ ಹವ್ವಳಿಗೆ ಕೊಡಲ್ಪಟ್ಟ ಮಗನಾಗಿದ್ದನು,
- ನೋಹನು ಸೇಥನ ಸಂತಾನದವರಲ್ಲಿ ಒಬ್ಬನಾಗಿದ್ದನು, ಪ್ರಳಯ ಬಂದ ಸಮಯದಿಂದ ನಿವಾಸವಾಗಿರುವ ಪ್ರತಿಯೊಬ್ಬರೂ ಸೇಥನ ವಂಶಸ್ಥರಾಗಿದ್ದರು.
- ಸೇಥನು ಮತ್ತು ತನ್ನ ಕುಟುಂಬವು ಕರ್ತನ ನಾಮದಲ್ಲಿ ಪ್ರಾರ್ಥನೆ ಮಾಡಿದ ಜನರಾಗಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಹೇಬೆಲ, ಕರೆ, ವಂಶಸ್ಥರು, ಪೂರ್ವಜ, ಪ್ರಳಯ, ನೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8352, G4589
ಸೇಬ
ಸತ್ಯಾಂಶಗಳು:
ಪುರಾತನ ಕಾಲಗಳಲ್ಲಿ ಸೇಬ ಎನ್ನುವುದು ಪುರಾತನ ನಾಗರಿಕತೆಯಾಗಿದ್ದಿತ್ತು ಅಥವಾ ದಕ್ಷಿಣ ಅರೇಬಿಯಾದಲ್ಲಿ ಕಂಡುಬರುವ ಭೂಮಿಯ ದೇಶವಾಗಿದ್ದಿತ್ತು.
- ಸೇಬ ದೇಶವು ಅಥವಾ ಪ್ರಾಂತ್ಯವು ಈಗಿನ ದೇಶಗಳಾಗಿರುವ ಯೆಮೆನ್ ಮತ್ತು ಇಥಿಯೋಪ್ಯಗಳ ಪಕ್ಕದಲ್ಲಿ ಬಹುಶಃ ಕಂಡುಬರುತ್ತಿರಬಹುದು.
- ಈ ಸೀಮೆಯ ನಿವಾಸಿಗಳು ಬಹುಶಃ ಹಾಮ್ ಸಂತತಿಯಾಗಿರಬಹುದು.
- ಸೇಬ ದೇಶದ ರಾಣಿ ಅರಸನಾದ ಸೊಲೊಮೋನನ ಜ್ಞಾನದ ಕುರಿತಾಗಿ ಮತ್ತು ವೈಭವದ ಕುರಿತಾಗಿ ಕೇಳಿಸಿಕೊಂಡಾಗ, ಆಕೆ ಆತನನ್ನು ಸಂದರ್ಶಿಸುವುದಕ್ಕೆ ಬಂದಿದ್ದಳು,
- ಹಳೇ ಒಡಂಬಡಿಕೆ ವಂಶಾವಳಿಗಳಲ್ಲಿ “ಸೇಬ” ಎನ್ನುವ ಹೆಸರಿನ ಮೇಲೆ ಅನೇಕಮಂದಿಯನ್ನು ಪಟ್ಟಿ ಮಾಡಲಾಗಿರುತ್ತದೆ. ಸೇಬ ಎನ್ನುವ ಪ್ರಾಂತ್ಯವು ಬಹುಶಃ ಈ ಮನುಷ್ಯರಿಂದಲೇ ಬಂದಿದೆ ಎನ್ನುವುದಕ್ಕೆ ಸಾಧ್ಯತೆಗಳಿವೆ.
- ಹಳೇ ಒಡಂಬಡಿಕೆಯಲ್ಲಿ ಬೇರ್ಷೆಬ ಎನ್ನುವ ಪಟ್ಟಣವನ್ನು ಸೇಬಗೆ ಹೋಲಿಸಿ ಒಂದುಸಲ ಹೇಳಲ್ಪಟ್ಟಿತ್ತು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅರೇಬಿಯಾ, ಬೇರ್ಷೆಬ, ಇಥಿಯೋಪ್ಯ, ಸೊಲೊಮೋನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5434, H7614
ಸೊದೋಮ್
ಪದದ ಅರ್ಥವಿವರಣೆ:
ಸೊದೋಮ್ ಎನ್ನುವುದು ಕಾನಾನಿನಲ್ಲಿ ದಕ್ಷಿಣ ಭಾಗದಲ್ಲಿ ಒಂದು ಪಟ್ಟಣವಾಗಿರುತ್ತದೆ, ಇಲ್ಲಿಯೇ ಅಬ್ರಾಹಾಮನ ಸಹೋದರನ ಮಗ ಲೋಟನು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಜೀವನ ಮಾಡುತ್ತಿದ್ದನು.
- ಸೊದೋಮ್ ಸುತ್ತಮುತ್ತಲಿರುವ ಪ್ರಾಂತ್ಯದ ಭೂಮಿಯು ಹೆಚ್ಚಿನ ನೀರನ್ನು ಮತ್ತು ಫಲವತ್ತಾದ ಮಣ್ಣನ್ನು ಹೊಂದಿರುವ ಪ್ರದೇಶವಾಗಿರುತ್ತದೆ, ಇದರಿಂದ ಕಾನಾನಿನಲ್ಲಿ ಮೊಟ್ಟ ಮೊದಲು ನಿವಾಸವಾಗಿರುವಾಗ ಲೋಟನು ಆ ಸ್ಥಳದಲ್ಲೇ ಜೀವಿಸುವುದಕ್ಕೆ ಆಯ್ಕೆ ಮಾಡಿಕೊಂಡನು.
- ಈ ಪಟ್ಟಣದ ಖಂಡಿತವಾದ ಸ್ಥಳವು ಯಾರಿಗೂ ಗೊತ್ತಿರುವುದಿಲ್ಲ, ಯಾಕಂದರೆ ಸೊದೋಮ್ ಮತ್ತು ಆ ಪಟ್ಟಣದ ಹತ್ತಿರದಲ್ಲಿರುವ ಗೊಮೋರಗಳು ಸಂಪೂರ್ಣವಾಗಿ ದೇವರಿಂದ ನಾಶಕ್ಕೆ ಗುರಿಯಾಗಿರುತ್ತವೆ, ಯಾಕಂದರೆ ಆ ಪಟ್ಟಣಗಳಲ್ಲಿರುವ ಜನರು ದುಷ್ಟ ಕಾರ್ಯಗಳನ್ನು ಮಾಡಿದ್ದರು.
- ಸೊದೋಮ್ ಮತ್ತು ಗೊಮೋರ ಜನರ ಅತೀ ಪ್ರಾಮುಖ್ಯವಾದ ಪಾಪವು ಏನೆಂದರೆ ಸ್ವಲಿಂಗ ಸಂಪರ್ಕವನ್ನು ಅಭ್ಯಾಸ ಮಾಡುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಗೊಮೋರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5467, G4670
ಸೊಲೊಮೋನ
ಸತ್ಯಾಂಶಗಳು:
ಸೊಲೊಮೋನನು ಅರಸನಾದ ದಾವೀದನ ಮಕ್ಕಳಲ್ಲಿ ಒಬ್ಬನಾಗಿರುತ್ತಾನೆ. ಇವನ ತಾಯಿ ಬತ್ಷೆಬಳಾಗಿದ್ದಳು.
- ಸೊಲೊಮೋನನು ಅರಸನಾದಾಗ, ನಿನಗೆ ಏನು ಬೇಕಾದರೂ ಬೇಡಿಕೋ ಎಂದು ದೇವರು ಅವನಿಗೆ ಹೇಳಿದನು. ಇದರಿಂದ ಜನರನ್ನು ನ್ಯಾಯವಾಗಿಯೂ ಮತ್ತು ಚೆನ್ನಾಗಿಯೂ ಆಳುವುದಕ್ಕೆ ಜ್ಞಾನ ಬೇಕೆಂದು ಸೊಲೊಮೋನನು ಕೇಳಿದನು. ದೇವರು ಸೊಲೊಮೋನನ ಮನವಿಯನ್ನು ಕೇಳಿ ಸಂತೋಷಪಟ್ಟನು, ಮತ್ತು ಆತನು ಅವನಿಗೆ ಜ್ಞಾನವನ್ನು, ಸಂಪತ್ತನ್ನು ಕೊಟ್ಟನು.
- ಯೆರೂಸಲೇಮಿನಲ್ಲಿ ಕಟ್ಟಲ್ಪಟ್ಟಿರುವ ವೈಭವವುಳ್ಳ ದೇವಾಲಯಕ್ಕೆ ಸೊಲೊಮೋನನು ನಿರ್ಮಾಣಕನಾಗಿ ಪ್ರಸಿದ್ಧನಾಗಿದ್ದನು.
- ಸೊಲೊಮೋನನು ತನ್ನ ಆಳ್ವಿಕೆಯ ಮೊದಲ ವರ್ಷಗಳಲ್ಲಿ ಜ್ಞಾನಪೂರ್ವಕವಾಗಿ ಜನರನ್ನು ಆಳಿದರೂ ಕೆಲವು ವರ್ಷಗಳನಂತರ ಇವನು ಮೂರ್ಖತನದಿಂದ ಬಹುಮಂದಿ ಅನ್ಯ ಸ್ತ್ರೀಯರನ್ನು ವಿವಾಹ ಮಾಡಿಕೊಂಡನು ಮತ್ತು ಅವರ ದೇವರುಗಳಾಗಿರುವ ವಿಗ್ರಹಗಳಿಗೆ ಆರಾಧನೆ ಮಾಡುವುದನ್ನು ಪ್ರಾರಂಭಿಸಿದನು.
- ಸೊಲೊಮೋನನ ಅಪನಂಬಿಕೆಯ ಕಾರಣದಿಂದ ಇವನ ಮರಣವಾದನಂತರ, ದೇವರು ಇಸ್ರಾಯೇಲ್ಯರನ್ನು ಯೆಹೂದ್ಯ ಮತ್ತು ಇಸ್ರಾಯೇಲ್ ಎನ್ನುವ ಎರಡು ರಾಜ್ಯಗಳನ್ನಾಗಿ ವಿಭಾಗಿಸಿದರು. ಈ ರಾಜ್ಯಗಳು ಅನೇಕಬಾರಿ ಒಂದಕ್ಕೊಂದು ವಿರುದ್ಧವಾಗಿ ಯುದ್ಧಗಳನ್ನು ಮಾಡುತ್ತಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬತ್ಷೆಬ, ದಾವೀದ, ಇಸ್ರಾಯೇಲ್, ಯೆಹೂದ್ಯ, ಇಸ್ರಾಯೇಲ್ ರಾಜ್ಯ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 17:14 ಆದನಂತರ ದಾವೀದ ಮತ್ತು ಬತ್ಷೆಬರು ಇನ್ನೊಬ್ಬ ಮಗನನ್ನು ಪಡೆದರು, ಅವರು ಆ ಶಿಶುವಿಗೆ ___ ಸೊಲೊಮೋನ ___ ಎಂದು ಹೆಸರಿಟ್ಟರು.
- 18:01 ಅನೇಕ ವರ್ಷಗಳಾದನಂತರ, ದಾವೀದನು ಮರಣಿಸಿದನು, ಮತ್ತು ತನ್ನ ಮಗ ___ ಸೊಲೊಮೋನನು ___ ಆಳುವುದಕ್ಕೆ ಆರಂಭಿಸಿದನು. ದೇವರು __ ಸೊಲೊಮೋನನೊಂದಿಗೆ __ ಮಾತನಾಡಿದರು ಮತ್ತು ನಿನಗೆ ಏನು ಬೇಕಾದರೂ ಅದನ್ನು ಬೇಡಿಕೋ ಎಂದು ದೇವರು ಅವನಿಗೆ ಹೇಳಿದನು. __ ಸೊಲೊಮೋನನು __ ಜ್ಞಾನಕ್ಕಾಗಿ ಬೇಡಿಕೊಂಡಾಗ, ದೇವರು ತುಂಬಾ ಸಂತೋಷಪಟ್ಟನು ಮತ್ತು ಆತನು ಅವನನ್ನು ಲೋಕದಲ್ಲಿ ಜ್ಞಾನವುಳ್ಳ ಮನುಷ್ಯನನ್ನಾಗಿ ಮಾಡಿದನು. __ ಸೊಲೊಮೋನನು __ ಅನೇಕ ವಿಷಯಗಳನ್ನು ಕಲಿತುಕೊಂಡನು ಮತ್ತು ಮಹಾ ನ್ಯಾಯಾಧೀಶನಾಗಿದ್ದನು. ದೇವರು ಅವನನ್ನು ಶ್ರೀಮಂತನನ್ನಾಗಿ ಮಾಡಿದನು.
- 18:02 ದಾವೀದನು ದೇವಾಲಯವನ್ನು ಕಟ್ಟುವುದಕ್ಕೆ ಪ್ರಣಾಳಿಕೆ ಮಾಡಿ, ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ತರಿಸಿಟ್ಟನಂತರ ಯೆರೂಸಲೇಮಿನಲ್ಲಿ ___ ಸೊಲೊಮೋನನು ___ ದೇವಾಲಯವನ್ನು ನಿರ್ಮಿಸಿದನು.
- 18:03 ಆದರೆ ___ ಸೊಲೊಮೋನನು ___ ಇತರ ದೇಶಗಳಿಂದ ಬಂದಿರುವ ಸ್ತ್ರೀಯರನ್ನು ಪ್ರೀತಿಸಿದನು. ___ ಸೊಲೊಮೋನನು ___ ವೃದ್ಧಾಪ್ಯದಲ್ಲಿದ್ದಾಗ ಅವನು ಅವರ ದೇವರುಗಳನ್ನು ಆರಾಧನೆ ಮಾಡಿದನು.
- 18:04 ದೇವರು __ ಸೊಲೊಮೋನನ __ ಮೇಲೆ ಕೋಪಗೊಂಡನು, __ ಸೊಲೊಮೋನನ __ ಅಪನಂಬಿಕೆಗೆ ___ ಶಿಕ್ಷೆಯನ್ನಾಗಿ, ___ ಸೊಲೊಮೋನನ ಮರಣದನಂತರ ಇಸ್ರಾಯೇಲ್ ದೇಶವನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸುತ್ತೇನೆಂದು ಆತನು ವಾಗ್ಧಾನ ಮಾಡಿದರು.
ಪದ ಡೇಟಾ:
- Strong's: H8010, G4672
ಸೌಲ (ಹಳೇ ಒಡಂಬಡಿಕೆ)
ಸತ್ಯಾಂಶಗಳು:
ಸೌಲನು ಇಸ್ರಾಯೇಲ್ಯರಿಗೆ ಮೊಟ್ಟ ಮೊದಲು ಅರಸನಾಗಿರಲು ದೇವರು ಆದುಕೊಂಡ ಇಸ್ರಾಯೇಲಿಯನಾಗಿದ್ದನು.
- ಸೌಲನು ಎತ್ತರವಾಗಿದ್ದನು ಮತ್ತು ಸುಂದರವಾಗಿದ್ದನು, ಮತ್ತು ಶಕ್ತಿಯುತವಾದ ಸೈನಿಕನಾಗಿದ್ದನು. ಇವನು ಇಸ್ರಾಯೆಲ್ಯರು ತಮ್ಮ ಅರಸನಾಗಿರಲು ಬಯಸಿದ ಒಂದು ವಿಧವಾದ ಮನುಷ್ಯನಾಗಿದ್ದನು.
- ಇವನು ಮೊಟ್ಟ ಮೊದಲಿಗೆ ದೇವರಿಗೆ ಸೇವೆ ಮಾಡಿದ್ದನು, ಸ್ವಲ್ಪ ಕಾಲವಾದನಂತರ ಸೌಲನು ಗರ್ವಪಟ್ಟು, ದೇವರಿಗೆ ಅವಿಧೇಯನಾದನು. ಇದಕ್ಕೆ ಫಲವಾಗಿ ಅರಸನಾಗಿರುವುದಕ್ಕೆ ಸೌಲನ ಸ್ಥಾನದಲ್ಲಿ ದೇವರು ದಾವೀದನನ್ನು ನೇಮಿಸಿದನು ಮತ್ತು ಸೌಲನು ಯುದ್ಧದಲ್ಲಿ ಸಾಯುವಂತೆ ಅನುಮತಿಸಿದನು.
- ಹೊಸ ಒಡಂಬಡಿಕೆಯಲ್ಲಿ ಸೌಲ ಎನ್ನುವ ಯೆಹೂದ್ಯ ಹೆಸರಿನ ಮೇಲೆ ಪೌಲನಿದ್ದನು, ಈತನು ಯೇಸು ಕ್ರಿಸ್ತನಿಗೆ ಅಪೊಸ್ತಲನಾದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅರಸ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 17:01 __ ಸೌಲನು __ ಇಸ್ರಾಯೇಲ್.ಗೆ ಮೊದಲ ಅರಸನಾಗಿದ್ದನು. ಇವನು ಎತ್ತರವಾಗಿದ್ದು, ಬಹು ಸುಂದರವಾಗಿದ್ದನು, ಜನರಿಗೆ ಬೇಕಾದ ರೀತಿಯಲ್ಲಿ ಇದ್ದನು. __ ಸೌಲನು __ ಇಸ್ರಾಯೇಲ್ಯರನ್ನು ಆಳಿದ ಮೊದಲ ಕೆಲವು ವರ್ಷಗಳವರೆಗೂ ಒಳ್ಳೇಯವನಾಗಿದ್ದನು. ಆದರೆ ಸ್ವಲ್ಪಕಾಲವಾದನಂತರ ದೇವರಿಗೆ ವಿಧೇಯನಾಗದ ದುಷ್ಟ ಮನುಷ್ಯನಾಗಿದ್ದನು, ಆದರೆ ದೇವರು ಇವನ ಸ್ಥಾನದಲ್ಲಿ ಅರಸನಾಗಿರುವುದಕ್ಕೆ ಒಂದು ದಿನ ಬೇರೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದನು.
- 17:04 ಜನರೆಲ್ಲರು ದಾವೀದನನ್ನು ಪ್ರೀತಿ ಮಾಡಿದ್ದಕ್ಕೆ __ ಸೌಲನು __ ಅವನ ಮೇಲೆ ಅಸೂಯೆಪಟ್ಟಿದ್ದನು. __ ಸೌಲನು __ ದಾವೀದನನ್ನು ಸಾಯಿಸಲು ಅನೇಕಸಲ ಪ್ರಯತ್ನಿಸಿದನು, ಇದರಿಂದ ದಾವೀದನು __ ಸೌಲನಿಂದ __ ಪಾರಾಗಿ ಮರೆಯಾದನು.
- 17:05 ಕೊನೆಗೆ, __ ಸೌಲನು __ ಯುದ್ಧದಲ್ಲಿ ಸತ್ತನು, ಮತ್ತು ದಾವೀದನು ಇಸ್ರಾಯೇಲ್ ಅರಸನಾದನು.
ಪದ ಡೇಟಾ:
- Strong's: H7586, G4549
ಸ್ತೆಫನ್
ಸತ್ಯಾಂಶಗಳು:
ಸ್ತೆಫೆನ್ ಎನ್ನುವ ವ್ಯಕ್ತಿ ಮೊಟ್ಟ ಮೊದಲಾಗಿ ಕೊಲ್ಲಲ್ಪಟ್ಟ ಮೊದಲ ಕ್ರೈಸ್ತ ಹುತಾತ್ಮನಾಗಿ ನೆನಪಿಸಿಕೊಳ್ಳುತ್ತೇವೆ, ಯಾಕಂದರೆ ಈತನು ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದನು. ಈತನ ಜೀವನ ಮತ್ತು ಮರಣದ ಕುರಿತಾದ ಸತ್ಯಾಂಶಗಳೆಲ್ಲವೂ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿವೆ.
- ಸ್ತೆಫೆನ್ ಎನ್ನುವ ಈ ವ್ಯಕ್ತಿ ಅಗತ್ಯತೆಯಲ್ಲಿರುವ ಇತರ ಕ್ರೈಸ್ತರಿಗೆ ಮತ್ತು ವಿಧವೆರಿಗೆ ಆಹಾರವನ್ನು ಬಡಿಸುವುದಕ್ಕೆ ಪರಿಚಾರಕನಾಗಿ ಕ್ರೈಸ್ತರಿಗೆ ಸೇವೆ ಮಾಡುವುದಕ್ಕೆ ಯೆರೂಸಲೇಮಿನಲ್ಲಿ ಆದಿ ಸಭೆಯಿಂದ ನೇಮಿಸಲ್ಪಟ್ಟಿರುತ್ತಾನೆ.
- ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಮತ್ತು ದೇವರಿಗೆ ವಿರುದ್ಧವಾಗಿ ಸ್ತೆಫೆನನು ಮಾತನಾಡುತ್ತಿದ್ದಾನೆಂದು ಕೆಲವರು ಯೆಹೂದ್ಯರು ಸ್ತೆಫೆನನ ಮೇಲೆ ಆರೋಪ ಮಾಡಿರುತ್ತಾರೆ.
ಸ್ತೆಫೆನನು ಮೆಸ್ಸೀಯ ಯೇಸುವಿನ ಕುರಿತಾದ ಸತ್ಯವನ್ನು ಧೈರ್ಯವಾಗಿ ಪ್ರಕಟಿಸಿದ್ದಾನೆ, ಈ ಪ್ರಕಟನೆಯು ಇಸ್ರಾಯೇಲ್ ಜನರೊಂದಿಗೆ ದೇವರು ನಡೆದುಕೊಂಡಿರುವ ಚರಿತ್ರೆಯೊಂದಿಗೆ ಆರಂಭವಾಗಿರುತ್ತದೆ. ಯೆಹೂದ್ಯರ ನಾಯಕರು ಪಟ್ಟಣದ ಆಚೆ ಸ್ತೆಫೆನ್ ಕಲ್ಲುಗಳಿಂದ ಹೊಡೆದು ಅತೀ ಕ್ರೂರವಾಗಿ ಮರಣದಂಡನೆಯನ್ನು ವಿಧಿಸಿದರು.
- ತನ್ನ ಈ ಮರಣವನ್ನು ತಾರ್ಸಿನ ಸೌಲನು ಸಾಕ್ಷಿಯಾಗಿದ್ದನು, ಈ ಸೌಲನು ಸ್ವಲ್ಪ ಕಾಲವಾದನಂತರ ಅಪೊಸ್ತಲನಾದ ಪೌಲನಾಗಿ ಮಾರ್ಪಟ್ಟನು.
- ಸ್ತೆಫೆನನು ತಾನು ಸಾಯುವುದಕ್ಕೆ ಮುಂಚಿತವಾಗಿ ಹೇಳಿರುವ ಮಾತುಗಳು ಕೂಡ ತುಂಬಾ ಪ್ರಸಿದ್ಧವಾದವು, ಅವು ಯಾವುವೆಂದರೆ “ಕರ್ತನೆ, ದಯವಿಟ್ಟು ಅವರಿಗೆ ವಿರುದ್ಧವಾಗಿ ಈ ಪಾಪವನ್ನು ಅವರ ಮೇಲೆ ಆಪಾದನೆ ಮಾಡಬೇಡ” ಎಂದು ಹೇಳಿದ್ದನು, ಈ ಮಾತುಗಳು ಇತರರ ವಿಷಯದಲ್ಲಿ ಆತನಿಗಿರುವ ಪ್ರೀತಿಯನ್ನು ತೋರಿಸುತ್ತಿವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನೇಮಿಸು, ಪರಿಚಾರಕನು, ಯೆರೂಸಲೇಮ್, ಪೌಲ, ಕಲ್ಲು, ನಿಜ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.06:5-6
- ಅಪೊ.ಕೃತ್ಯ.06:8-9
- ಅಪೊ.ಕೃತ್ಯ.06:10-11
- ಅಪೊ.ಕೃತ್ಯ.06:12-15
- ಅಪೊ.ಕೃತ್ಯ.07:59-60
- ಅಪೊ.ಕೃತ್ಯ.11:19-21
- ಅಪೊ.ಕೃತ್ಯ.22:19-21
ಪದ ಡೇಟಾ:
- Strong's: G4736
ಹಗ್ಗಾಯ
ಸತ್ಯಾಂಶಗಳು:
ಯೆಹೂದಿಯರು ಬಾಬುಲೋನ್ ಸೆರೆಯಿಂದ ಬಿಡಿಸಲ್ಪಟ್ಟು ಹಿಂತಿರುಗಿ ಬಂದಾಗ ಹಗ್ಗಾಯ ಯೂದಯ ದೇಶದಲ್ಲಿ ಪ್ರವಾದಿಯಾಗಿದ್ದನು.
- ಹಗ್ಗಾಯ ಪ್ರವಾದಿಸುತ್ತಿರುವ ಕಾಲದಲ್ಲಿ, ಯೂದಯ ಸೀಮೆಯಲ್ಲಿ ಉಜ್ಜೀಯನು ಆಳ್ವಿಕೆ ಮಾಡುತ್ತಿದ್ದನು.
- ಇದೇ ಕಾಲದಲ್ಲಿ ಪ್ರವಾದಿಯಾದ ಜೆಕರ್ಯನು ಪ್ರವಾದಿಸುತ್ತಿದ್ದನು.
- ಅರಸನಾದ ನೆಬೂಕದ್ನೆಚ್ಚರನ ಕೆಳಗೆ ಬಾಬುಲೋನಿಯರು ದ್ವಂಸಮಾಡಿದ ದೇವಾಲಯವನ್ನು ಮತ್ತೆ ಕಟ್ಟಬೇಕೆಂದು ಹಗ್ಗಾಯನು ಮತ್ತು ಜೆಕರ್ಯನು ಯೆಹೂದಿಯರನ್ನು ಎಚ್ಚರಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬಾಬುಲೋನ್, ಯೂದಯ, ನೆಬೂಕದ್ನೆಚ್ಚರ, ಉಜ್ಜೀಯ, ಜೆಕರ್ಯನು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2292
ಹನನ್ಯ
ಸತ್ಯಾಂಶಗಳು:
ಹನನ್ಯ ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ವ್ಯಕ್ತಿಗಳಿದ್ದಾರೆ.
- ಒಬ್ಬ ಹನನ್ಯನು ಬಾಬೆಲೋನಿಯ ಸೆರೆಗೆ ಕರೆದೊಯ್ಯಲ್ಪಟ್ಟಿದ್ದನು, ಅಲ್ಲಿ ಇವನ ಹೆಸರನ್ನು “ಶದ್ರಕ್” ಎಂಬುದಾಗಿ ಮಾರ್ಪಾಟು ಮಾಡಿದರು.
- ಈತನಿಗೆ ಇರುವ ಅದ್ಭುತವಾದ ನಡೆತೆಗೆ ಮತ್ತು ಸಾಮರ್ಥ್ಯಗಳಿಗೆ ರಾಜ ಸೇವಕನಾಗಿರುವ ಸ್ಥಾನವನ್ನು ಕೊಡಲ್ಪಟ್ಟಿತ್ತು.
- ಒಂದುಸಲ ಹನನ್ಯ (ಶದ್ರಕ್) ಮತ್ತು ಇನ್ನೂ ಇಬ್ಬರ ಇಸ್ರಾಯೇಲ್ ಯೌವನಸ್ಥರನ್ನು ಬೆಂಕಿಯ ಕೆರೆಯೊಳಗೆ ಹಾಕಿದ್ದರು, ಯಾಕಂದರೆ ಅವರು ಬಾಬೆಲೋನಿಯ ಅರಸನನ್ನು ಆರಾಧನೆ ಮಾಡುವುದಕ್ಕೆ ತಿರಸ್ಕಾರ ಮಾಡಿದ್ದರು. ಆದರೆ ಅವರಿಗೆ ಯಾವ ಹಾನಿಯು ನಡೆಯದೇ ದೇವರು ಅವರನ್ನು ರಕ್ಷಿಸುವುದರ ಮೂಲಕ ತನ್ನ ಶಕ್ತಿಯನ್ನು ತೋರಿಸಿಕೊಂಡಿದ್ದರು.
- ಹನನ್ಯ ಹೆಸರಿನ ಮೇಲೆ ಇನ್ನೊಬ್ಬ ವ್ಯಕ್ತಿ ಅರಸನಾದ ಸೊಲೊಮೋನನ ವಂಶಸ್ಥರ ಪಟ್ಟಿಯಲ್ಲಿ ದಾಖಲಿಸಾಲಾಗಿದೆ.
- ಇನ್ನೊಬ್ಬ ಹನನ್ಯ ಪ್ರವಾದಿಯಾದ ಯೆರೆಮೀಯ ಕಾಲದಲ್ಲಿ ಸುಳ್ಳು ಪ್ರವಾದಿಯಾಗಿದ್ದನು.
- ಇನ್ನೊಬ್ಬ ಹನನ್ಯ ನೆಹೆಮೀಯ ಕಾಲದಲ್ಲಿ ಆಚರಣೆಯನ್ನು ನಡೆಸುವುದಕ್ಕೆ ಸಹಾಯ ಮಾಡಿದ ಯಾಜಕನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಅಜರ್ಯ, ಬಾಬೆಲೋನಿಯ, ದಾನಿಯೇಲ, ಸುಳ್ಳು ಪ್ರವಾದಿ, ಯೆರೆಮೀಯ, ಮೀಶಾಯೇಲ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2608
ಹನೋಕ, ಎನೋಷ
ಸತ್ಯಾಂಶಗಳು:
ಹಳೆ ಒಡಂಬಡಿಕೆಯಲ್ಲಿ ಇಬ್ಬರು ಪುರುಷರ ಹೆಸರು ಹನೋಕ ಆಗಿತ್ತು.
- ಹನೋಕ ಎಂಬಂತ ಒಬ್ಬ ವ್ಯಕ್ತಿ ಸೇತನ ವಂಶಸ್ಥನಾಗಿದ್ದನು. ಅವನು ನೋಹನ ಮುತ್ತಜ್ಜನಾಗಿದ್ದನು.
- ಈ ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ, ಅವನ 365 ವರ್ಷದಲ್ಲಿ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.
- ಇನ್ನೊಬ್ಬ ಹನೋಕ ಕಾಯಿನ ಮಗನಾಗಿದ್ದನು. ಇವನ ಹೆಸರು ಕನ್ನಡ ಭಾಷೆಯಲ್ಲಿ ಎನೋಷ ಎಂದು ಅನುವಾದ ಮಾಡಲ್ಪಟ್ಟಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡುವುದು)
(ಈ ಪದಗಳನ್ನು ಸಹ ನೋಡಿರಿ : ಕಾಯಿನ, ಸೇತ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2585, G1802
ಹನ್ನ
ಸತ್ಯಾಂಶಗಳು:
ಹನ್ನಳು ಪ್ರವಾದಿಯಾದ ಸಮುವೇಲನ ತಾಯಿಯಾಗಿರುತ್ತಾಳೆ. ಇವಳು ಎಲ್ಕಾನನ ಇಬ್ಬರ ಹೆಂಡತಿಯರಲ್ಲಿ ಒಬ್ಬಳಾಗಿರುತ್ತಾಳೆ.
- ಹನ್ನಳು ಗರ್ಭಿಣಿಯಾಗಿದ್ದಿಲ್ಲ, ಇದರಿಂದ ಆಕೆ ಬಹಳ ಹೆಚ್ಚಾಗಿ ಪ್ರಲಾಪಿಸಿದ್ದಳು.
- ಹನ್ನಳು ಗಂಡು ಮಗುವಿಗಾಗಿ ದೇವಾಲಯದಲ್ಲಿ ದೇವರ ಬಳಿ ಅಳುತ್ತಾ ಪ್ರಾರ್ಥನೆ ಮಾಡಿದ್ದಳು, ಮತ್ತು ಒಂದುವೇಳೆ ಗಂಡುಮಗು ಹುಟ್ಟಿದರೆ ದೇವರ ಸೇವೆ ಸಮರ್ಪಿಸುತ್ತೇನೆಂದು ವಾಗ್ಧಾನ ಮಾಡಿದಳು.
- ದೇವರು ಆಕೆಯ ಮನವಿಯನ್ನು ಅಂಗೀಕರಿಸಿದನು ಮತ್ತು ಸಮುವೇಲನು ದೊಡ್ಡವನಾದ ಮೇಲೆ, ಅವನನ್ನು ದೇವಾಲಯಕ್ಕೆ ಕರೆದುಕೊಂಡುಬಂದು ಅಲ್ಲಿಯೇ ಸೇವೆಗಾಗಿ ಬಿಟ್ಟಳು.
- ದೇವರು ಹನ್ನಳಿಗೆ ಸಮುವೇಲನನಂತರ ಮಕ್ಕಳನ್ನು ಕೊಟ್ಟನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಗರ್ಭ ಧರಿಸುವುದು, ಸಮುವೇಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2584
ಹಬಕ್ಕೂಕ
ಸತ್ಯಾಂಶಗಳು:
ಹಳೆ ಒಡಂಬಡಿಕೆಯಲ್ಲಿ ಅರಸನಾದ ಯೆಹೋಯಾಕೀಮ ಯೂದಯ ಸೇಮೆಯಲ್ಲಿ ಆಳ್ವಿಕೆ ಮಾಡುತ್ತಿರುವ ಕಾಲದಲ್ಲಿ ಪ್ರವಾದಿಯಾದ ಹಬಕ್ಕೂಕನು ಜೀವಿಸಿದನು. ಇದೇ ಕಾಲದಲ್ಲಿ ಪ್ರವಾದಿಯಾದ ಯೆರೆಮೀಯನು ಜೀವಿಸುತ್ತಿದ್ದನು.
- ಸುಮಾರು ಕ್ರಿ.ಪು. 600ರಲ್ಲಿ ಬಾಬುಲೋನಿನವರು ಯೆರುಸಲೇಮನ್ನು ಸ್ವಾಧೀನಪಡಿಸಿಕೊಂಡು ಯೂದಯ ಸೀಮೆಯಲ್ಲಿ ಜೀವಿಸುತ್ತಿದ್ದ ಅನೇಕ ಜನರನ್ನು ಸೆರೆಯಾಗಿ ತೆಗೆದುಕೊಂಡುಹೋದಾಗ ಈ ಪ್ರವಾದಿ ಹಬಕ್ಕೂಕನು ಎನ್ನುವ ಗ್ರಂಥವನ್ನು ಬರೆದನು.
- ಯೆಹೂದಿಯರನ್ನು “ಕಲ್ದೀಯರು” (ಬಾಬುಲೋನಿಯರು) ಹೇಗೆ ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಯೆಹೋವನು ಹಬಕ್ಕೂಕನಿಗೆ ಮುಂಚೆಯೇ ತಿಳಿಸಿದನು.
- “ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು” ಎನ್ನುವುದು ಹಬಕ್ಕೂಕನ ಮೆಚ್ಚಿಗೆಯಾದ ಹೇಳಿಕೆಯಾಗಿದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಬಾಬುಲೋನ್, ಯೆಹೋಯಾಕೀಮ, ಯೆರೆಮೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2265
ಹಮಾತ್, ಹಮಾತಿಯರು, ಲೆಬೋ ಹಮಾತ್
ಸತ್ಯಾಂಶಗಳು:
ಕಾನಾನ್ ದೇಶಕ್ಕೆ ಉತ್ತರ ದಿಕ್ಕಿನಲ್ಲಿ, ಸಿರಿಯ ದೇಶಕ್ಕೆ ಉತ್ತರದಿಕ್ಕಿನಲ್ಲಿದ್ದ ಹಮಾತ್ ಪ್ರಸಿದ್ಧವಾದ ಪಟ್ಟಣವಾಗಿತ್ತು. ಹಮಾತಿಯರು ನೋಹನ ಮಗನಾದ ಕಾನಾನಿಯರ ಸಂತತಿಯವರಾಗಿದ್ದರು.
- “ಲೆಬೋ ಹಮಾತ್” ಎನ್ನುವ ಹೆಸರು ಹಮಾತ್ ಪಟ್ಟಣದ ಹತ್ತಿರವಿದ್ದ ಗುಡ್ಡದ ಬದಿಯನ್ನು ಸೂಚಿಸುತ್ತಿರಬಹುದು.
- ಕೆಲವೊಂದು ಭಾಷಾಂತರಗಳಲ್ಲಿ “ಲೆಬೋ ಹಮಾತ್” ಎನ್ನುವುದನ್ನು “ಹಮಾತ್ ಮುಖದ್ವಾರ” ಎಂದು ಅನುವಾದ ಮಾಡಲಾಗಿದೆ.
- ಹಮಾತಿನ ಅರಸನಾದ ತೋವಿನ ಶತ್ರುಗಳನ್ನು ಅರಸನಾದ ದಾವೀದನು ಸೋಲಿಸಿ ಅವರು ಒಳ್ಳೆಯ ನಿಯಮಗಳಲ್ಲಿ ಇರುವಂತೆ ಮಾಡಿದನು.
- ಸಾಮಾನುಗಳನ್ನು ಇಡುವ ಸೊಲೊಮೋನನ ಉಗ್ರಾಣದ ನಗರಗಳಲ್ಲಿ ಹಮಾತ್ ಒಂದಾಗಿತ್ತು.
- ಹಮಾತ್ ಎನ್ನುವ ಪ್ರದೇಶವು ಅರಸನಾದ ಚಿದ್ಕೀಯನನ್ನು ಅರಸನಾದ ನೆಬೂಕದ್ನೆಚರು ಕೊಂದ ಸ್ಥಳವಾಗಿದೆ ಮತ್ತು ಐಗುಪ್ತ ಫರೋಹನು ಅರಸನಾದ ಯೆಹೋವಾಹಾಜನನ್ನು ಸ್ವಾಧೀನಪಡಿಸಿಕೊಂಡ ಸ್ಥಳವಾಗಿದೆ.
- “ಹಮಾತಿಯನು” ಎನ್ನುವ ಪದವನ್ನು “ಹಮಾತಿನಿಂದ ಬಂದ ವ್ಯಕ್ತಿ” ಎಂದು ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಬಾಬುಲೋನ್, ಕಾನಾನ್, ನೆಬೂಕದ್ನೆಚ, ಸಿರಿಯ, ಚಿದ್ಕೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2574, H2577
ಹಮೋರ
ಸತ್ಯಾಂಶಗಳು:
ಯಾಕೋಬನು ಮತ್ತು ಅವನ ಕುಟುಂಬದವರು ಸುಕ್ಕೋತ್ ಹತ್ತಿರ ನಿವಾಸಮಾಡುತ್ತಿದ್ದಾಗ, ಕಾನಾನಿಯನಾದ ಹಮೋರನು ಶೆಕೆಮ್ ಪಟ್ಟಣದಲ್ಲಿ ನಿವಾಸಮಾಡುತ್ತಿದ್ದನು. ಅವನು ಹಿವ್ವಿಯವನಾಗಿದ್ದನು.
- ತನ್ನ ಕುಟುಂಬಸ್ತರಿಗಾಗಿ ಶ್ಮಶಾನ ಭೂಮಿಯನ್ನು ಹಮೋರನ ಮಕ್ಕಳಿಂದ ಯಾಕೋಬನು ಕೊಂಡುಕೊಂಡನು.
- ಅವರು ಅಲ್ಲಿ ವಾಸ ಮಾಡುತ್ತಿದ್ದಾಗ ಹಮೋರನ ಮಗನಾದ ಶೆಕೆಮನು ಯಾಕೋಬನ ಮಗಳಾದ ದೀನಳನ್ನು ಮಾನಭಂಗ ಮಾಡಿದನು.
- ದೀನಳ ಸಹೋದರರು ಹಮೋರನ ಕುಟುಂಬದ ಮೇಲೆ ಸೇಡುತೀರಿಸಿಕೊಂಡರು ಮತ್ತು ಶೆಕೆಮ್ ಪಟ್ಟಣದಲ್ಲಿದ್ದ ಗಂಡಸರನೆಲ್ಲಾ ಕೊಂಡು ಹಾಕಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹಿವ್ವಿಯವನು, ಯಾಕೋಬ, ಶೆಕೆಮ್, ಸುಕ್ಕೋತ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2544
ಹವ್ವ
ಸತ್ಯಾಂಶಗಳು:
ಇದು ಮೊಟ್ಟಮೊದಲ ಸ್ತ್ರೀ ಹೆಸರಾಗಿರುತ್ತದೆ. ಈಕೆಯ ಹೆಸರಿಗೆ “ಜೀವ” ಅಥವಾ “ಜೀವಿಸುವ” ಎಂದರ್ಥ.
- ದೇವರು ಹವ್ವಳನ್ನು ಆದಾಮನ ಪಕ್ಕೆಲುಬುನಿಂದ ನಿರ್ಮಿಸಿದ್ದನು.
- ಹವ್ವಳು ಆದಾಮನ “ಸಹಾಯಕಳಾಗಿ” ಸೃಷ್ಟಿಸಲ್ಪಟ್ಟಿದ್ದಳು. ದೇವರು ಅವರಿಗೆ ಕೊಟ್ಟ ಕೆಲಸವನ್ನು ಮಾಡುವುದರಲ್ಲಿ ಆದಾಮನಿಗೆ ಸಹಾಯ ಮಾಡುವುದಕ್ಕೆ ಆಕೆ ಅವನ ಬಳಿಗೆ ಬಂದಳು.
- ಹವ್ವಳು ಸೈತಾನನಿಂದ (ಹಾವಿನ ರೂಪದಲ್ಲಿ ಬಂದಿರುವ) ಶೋಧನೆಗೆ ಗುರಿಯಾಗಿದ್ದಳು ಮತ್ತು ದೇವರು ತಿನ್ನಬಾರದೆಂದು ಹೇಳಿದ ಫಲವನ್ನು ತಿನ್ನುವುದರ ಮೂಲಕ ಮೊಟ್ಟಮೊದಲು ಪಾಪವನ್ನು ಮಾಡಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಆದಾಮ, ಜೀವ, ಸೈತಾನ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 01:13 ಆದನಂತರ ದೇವರು ಆದಾಮನ ಪಕ್ಕೆಲುಬು ತೆಗೆದುಕೊಂಡು, ಅದರಿಂದ ಸ್ತ್ರಿಯಳನ್ನು ಸೃಷ್ಟಿಸಿದನು ಮತ್ತು ಆಕೆಯನ್ನು ಅವನ ಬಳಿಗೆ ಕರೆದುಕೊಂಡುಬಂದನು.
- 02:02 ಆದರೆ ಆ ತೋಟದಲ್ಲಿ ವಂಚಿಸುವ ಹಾವು ಇದ್ದಿತ್ತು. “ಈ ತೋಟದಲ್ಲಿರುವ ಯಾವ ಮರದ ಹಣ್ಣಾಗಲಿ ತಿನ್ನಬಾರದೆಂದು ದೇವರು ನಿಜವಾಗಿ ಹೇಳಿದ್ದಾರೋ? ಎಂದು ಅವನು ಆಕೆಯನ್ನು ಕೇಳಿದನು.
- 02:11 ಆ ಮನುಷ್ಯನು ತನ್ನ ಹೆಂಡತಿಗೆ __ ಹವ್ವ __ ಎಂದು ಹೆಸರಿಟ್ಟನು, ಇದಕ್ಕೆ “ಜೀವ ಕೊಡುವವಳು” ಎಂದು ಅರ್ಥ. ಯಾಕೆಂದರೆ ಆಕೆ ಎಲ್ಲಾ ಜನರಿಗೆ ತಾಯಿಯಾಗುವಳು.
- 21:01 __ ಹವ್ವಳ __ ಸಂತಾನದಿಂದ ಹಾವಿನ ತಲೆಯನ್ನು ಜಜ್ಜುವವನು ಹುಟ್ಟುವನು ಎಂದು ದೇವರು ವಾಗ್ಧಾನ ಮಾಡಿದ್ದರು.
- 48:02 __ ಹವ್ವಳನ್ನು __ ಮೋಸ ಮಾಡುವ ಕ್ರಮದಲ್ಲಿ ಆ ತೋಟದಲ್ಲಿರುವ ಹಾವಿನ ಮೂಲಕ ಸೈತಾನನು ಮಾತನಾಡಿದನು.
- 49:08 ಆದಾಮ ಮತ್ತು __ ಹವ್ವಳು __ ಪಾಪ ಮಾಡಿದಾಗ, ಅದು ಅವರ ಸಂತಾನದವರೆಲ್ಲರ ಮೇಲೆ ಪ್ರಭಾವಬೀರಿತ್ತು.
- 50:16 ಆದಾಮನು ಮತ್ತು __ ಹವ್ವಳು __ ದೇವರಿಗೆ ಅವಿಧೇಯತೆ ತೋರಿಸಿರುವದರಿಂದಲೇ ಈ ಲೋಕದೊಳಗೆ ಪಾಪ ಎನ್ನುವುದು ಪ್ರವೇಶವಾದಿತು, ದೇವರು ಅದನ್ನು ಶಪಿಸಿದನು ಮತ್ತು ಅದನ್ನು ನಾಶ ಮಾಡಬೇಕೆಂದು ನಿರ್ಣಯಿಸಿದನು.
ಪದ ಡೇಟಾ:
- Strong's: H2332, G2096
ಹಾಗರಳು
ಸತ್ಯಾಂಶಗಳು:
ಹಾಗರಳು ಐಗುಪ್ತ ದೇಶದವಳು ಮತ್ತು ಸಾರಯಳ ದಾಸಿಯಾಗಿದ್ದಳು.
- ಸಾರಯಳಿಗೆ ಸಂತಾನವಾಗದಕಾರಣ ಆಕೆ ತನ್ನ ಗಂಡನಾದ ಅಬ್ರಾಮನಿಗೆ ಸಂತಾನವುಂಟು ಮಾಡುವಂತೆ ತನ್ನ ದಾಸಿಯಾದ ಹಾಗರಳನ್ನು ಒಪ್ಪಿಸಿದಳು.
- ಹಾಗರಳು ಬಸುರಾದಳು ಮತ್ತು ಅಬ್ರಾಮನಿಗೆ ಮಗನಾದ ಇಷ್ಮಾಯೇಲನಿಗೆ ಜನ್ಮ ನೀಡಿದಳು.
- ಮರಳುಗಾಡಿನಲ್ಲಿ ಹಾಗರಳು ಯಾತನೆಯಲ್ಲಿದ್ದಾಗ ಯೆಹೋವನು ಆಕೆಯನ್ನು ನೋಡಿದನು ಮತ್ತು ಆಕೆಯ ಸಂತಾನವನ್ನು ಆಶಿರ್ವಾದಿಸುತ್ತೇನೆಂದು ಹೇಳಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ರಾಮ, ಸಂತತಿ, ಇಷ್ಮಾಯೇಲ್, ಸಾರಯಳು, ದಾಸಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಕೆಲವು ಉದಾಹರಣೆಗಳು :
- 05:01 ಆದಕಾರಣ, ಅಬ್ರಾಮನ ಹೆಂಡತಿಯಾದ ಸಾರಯಳು “ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಲ್ಲಾ; ನೀನು ನನ್ನ ದಾಸಿಯಾದ ಹಾಗರಳ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು” ಎಂದು ಹೇಳಿದಳು.
- 05:02 ಹಾಗರಳಿಗೆ ಗಂಡು ಮಗು ಹುಟ್ಟಿದನು ಮತ್ತು ಅಬ್ರಾಮನು ಅವನಿಗೆ ಇಸ್ಮಾಯೇಲ್ ಎಂದು ಹೆಸರಿಟ್ಟನು.
ಪದ ಡೇಟಾ:
- Strong's: H1904
ಹಾಮ್
ಸತ್ಯಾಂಶಗಳು:
ನೋಹನ ಮುವ್ವರು ಮಕ್ಕಳಲ್ಲಿ ಹಾಮ್ ಎರಡನೇ ಮಗನಾಗಿದ್ದನು.
- ವಿಶ್ವಾದ್ಯಂತ ಪ್ರವಾಹವು ಇಡೀ ಭೂಮಿಯನ್ನು ಸಂಪೂರ್ಣವಾಗಿ ಆವರಿಸಿದಾಗ, ಹಾಮ್ ಮತ್ತು ಅವನ ಸಹೋದರರು ನೋಹನ ಜೊತೆಯಲ್ಲಿ ನಾವೆಯಲ್ಲಿ ತಮ್ಮ ತಮ್ಮ ಹೆಂಡತಿಯರೊಂದಿಗೆ ಇದ್ದರು.
- ಪ್ರವಾಹದ ನಂತರ, ಹಾಮನು ಅವನ ತಂದೆಯಾದ ನೋಹನನ್ನು ಅವಮಾನಿಸಿದ ಒಂದು ಸಂದರ್ಭವಿತ್ತು. ಆದಕಾರಣ, ನೋಹನು ಅವನನ್ನು ಕಾನಾನ್ ಎಂದು ಶಪಿಸಿದನು ಮತ್ತು ಅವನ ಸಂತತಿಯವರು ಕಾನಾನಿಯರು ಎಂದು ಕರೆಯಲ್ಪಟ್ಟರು.
(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ನಾವೆ, ಕಾನಾನ್, ಅವಮಾನಿಸು, ನೋಹ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2526
ಹಿಜ್ಕೀಯ
ಪದದ ಅರ್ಥವಿವರಣೆ:
ಹಿಜ್ಕೀಯ ಯೆಹೂದ ರಾಜ್ಯದ ಮೇಲೆ 13ನೇ ಅರಸನಾಗಿದ್ದನು. ದೇವರಲ್ಲಿ ಭರವಸೆ ಇಟ್ಟು, ಆತನಿಗೆ ವಿಧೇಯತೆ ತೋರಿಸಿದ ಅರಸನಾಗಿದ್ದನು.
- ದುಷ್ಟ ಅರಸನಾಗಿದ್ದ ತನ್ನ ತಂದೆಯಾಗಿರುವ ಆಹಾಜನಂತಿರದೇ, ಅರಸನಾದ ಹಿಜ್ಕೀಯ ಯೆಹೂದದಲ್ಲಿ ವಿಗ್ರಹ ಆರಾಧನೆಯ ಸ್ಥಳಗಳೆಲ್ಲವನ್ನು ನಾಶಗೊಳಿಸಿದ ಒಳ್ಳೇಯ ಅರಸನಾಗಿದ್ದನು.
- ಒಂದುಸಲ ಹಿಜ್ಕೀಯ ತುಂಬಾ ರೋಗಿಯಾಗಿ ಸಾಯುವ ಸ್ಥಿತಿಗೆ ಬಂದಿದ್ದನು, ದೇವರು ತನ್ನನ್ನು ರಕ್ಷಿಸಬೇಕೆಂದು ಮನಃಪೂರ್ವಕವಾಗಿ ಪ್ರಾರ್ಥನೆ ಮಾಡಿದ್ದನು. ದೇವರು ಅವನನ್ನು ಸ್ವಸ್ಥಪಡಿಸಿದರು ಮತ್ತು ಅವನಿಗೆ 15 ವರ್ಷಗಳ ಕಾಲ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟರು.
- ಇದು ನಡೆಯುತ್ತದೆಯೆಂದು ಹಿಜ್ಕೀಯನಿಗೆ ಒಂದು ಸೂಚನೆಯಾಗಿ, ದೇವರು ಒಂದು ಅದ್ಭುತವನ್ನು ಮಾಡಿದರು ಮತ್ತು ಆಕಾಶದಲ್ಲಿ ಸೂರ್ಯನು ಹಿಂದಕ್ಕೆ ಕದಲುವಂತೆ ಮಾಡಿದರು.
- ಹಿಜ್ಕೀಯನು ತನ್ನ ಜನರನ್ನು ಅಶ್ಯೂರದ ಅರಸನಾದ ಸೆನ್ಹೇರೀಬ ಧಾಳಿಯಿಂದ ರಕ್ಷಿಸಬೇಕೆಂದು ಮಾಡಿದ ಪ್ರಾರ್ಥನೆಗೆ ದೇವರು ಉತ್ತರ ಕೊಟ್ಟರು.
(ಈ ಪದಗಳನ್ನು ಸಹ ನೋಡಿರಿ : ಆಹಾಜ, ಅಶ್ಯೂರ, ಸುಳ್ಳು ದೇವರು, ಯೆಹೂದ, ಸೆನ್ಹೇರೀಬ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2396, H3169, G1478
ಹಿತ್ತೀಯ, ಹಿತ್ತೀಯರು
ಪದದ ಅರ್ಥವಿವರಣೆ:
ಹಿತ್ತೀಯರು ಹಾಮನ ಮಗನಾದ ಕಾನಾನನ ವಂಶಸ್ಥರಾಗಿರುತ್ತಾರೆ. ಅವರು ಒಂದು ದೊಡ್ಡ ಸಾಮ್ರಾಜ್ಯವಾಗಿ ಮಾರ್ಪಟ್ಟರು, ಇದೀಗ ಉತ್ತರ ಪಾಲಸ್ತೀನ ಮತ್ತು ಟರ್ಕಿಗಳಲ್ಲಿ ಕಂಡುಬರುತ್ತದೆ.
- ಹಿತ್ತೀಯನಾದ ಎಫ್ರೋನನಿಂದ ಅಬ್ರಾಹಾಮನು ಭೂಮಿಯ ಭಾಗವನ್ನು ಕೊಂಡುಕೊಂಡಿದ್ದನು, ಇದರಿಂದ ತನ್ನ ಮೃತ ಹೆಂಡತಿಯಾದ ಸಾರಳನ್ನು ಆ ಗುಹೆಯೊಳಗೆ ಸಮಾಧಿ ಮಾಡಿದನು. ಕೊನೆಗೆ ಅಬ್ರಾಹಾಮನನ್ನು ಮತ್ತು ಅನೇಕ ತನ್ನ ವಂಶಸ್ಥರನ್ನು ಆ ಗುಹೆಯೊಳಗೆ ಸಮಾಧಿ ಮಾಡಿದ್ದರು.
- ಏಸಾವನು ಹಿತ್ತೀಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಕ್ಕೆ ಅವನ ತಂದೆತಾಯಿಗಳು ತುಂಬಾ ಹೆಚ್ಚಾಗಿ ಪ್ರಲಾಪಪಟ್ಟರು.
- ದಾವೀದನ ಪರಾಕ್ರಮ ಮನುಷ್ಯರಲ್ಲಿ ಒಬ್ಬನು ಊರೀಯನು ಹಿತ್ತೀಯನಾಗಿದ್ದನು.
- ಸೊಲೊಮೋನನು ಮದುವೆ ಮಾಡಿಕೊಂಡಿರುವ ಅನೇಕಮಂದಿ ಅನ್ಯ ಸ್ತ್ರೀಯರಲ್ಲಿ ಹಿತ್ತೀಯರಾಗಿದ್ದರು. ಈ ಅನ್ಯ ಸ್ತ್ರೀಯರೆಲ್ಲರು ಸೊಲೊಮೋನನ ಹೃದಯವನ್ನು ದೇವರ ಕಡೆಯಿಂದ ತಿರುಗಿಸಿದರು, ಯಾಕಂದರೆ ಅವರು ಸುಳ್ಳು ದೇವರುಗಳನ್ನು ಆರಾಧನೆ ಮಾಡುತ್ತಿದ್ದರು.
- ಹಿತ್ತೀಯರು ಯಾವಾಗಲೂ ಇಸ್ರಾಯೇಲ್ಯರಿಗೆ ಭೌತಿಕವಾಗಿ ಮತ್ತು ಆತ್ಮೀಯಕವಾಗಿ ಅಪಾಯಕರವಾಗಿದ್ದರು.
(ಈ ಪದಗಳನ್ನು ಸಹ ನೋಡಿರಿ : ವಂಶಸ್ಥರು, ಏಸಾವ, ಅನ್ಯರು, ಹಾಮ್, ಶಕ್ತಿಯುಳ್ಳ, ಸೊಲೊಮೋನ, ಊರೀಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2850
ಹಿಲ್ಕೀಯ
ಸತ್ಯಾಂಶಗಳು:
ಹಿಲ್ಕೀಯ ಅರಸನಾದ ಯೋಷೀಯನ ಕಾಲದಲ್ಲಿ ಮಹಾ ಯಾಜಕನಾಗಿದ್ದನು.
- ದೇವಾಲಯವನ್ನು ತಿರುಗಿ ನಿರ್ಮಿಸುತ್ತಿರುವಾಗ, ಮಹಾ ಯಾಜಕನಾದ ಹಿಲ್ಕೀಯನು ಧರ್ಮಶಾಸ್ತ್ರವನ್ನು ಕಂಡುಕೊಳ್ಳುತ್ತಾನೆ ಮತ್ತು ಅರಸನಾದ ಯೋಷೀಯನ ಬಳಿಗೆ ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸಲ್ಪಟ್ಟನು.
- ಧರ್ಮಶಾಸ್ತ್ರವನ್ನು ಅವನಿಗೆ ಓದಿ ಕೇಳಿಸಿದನಂತರ, ಯೋಷೀಯನು ಪ್ರಲಾಪಿಸುತ್ತಾನೆ ಮತ್ತು ಯೆಹೂದ ಜನರೆಲ್ಲರು ತಿರುಗಿ ಯೆಹೋವನನ್ನೇ ಆರಾಧನೆ ಮಾಡಬೇಕೆಂದು ಮತ್ತು ಆತನ ಧರ್ಮಶಾಸ್ತ್ರಕ್ಕೆ ವಿಧೇಯನಾಗಬೇಕೆಂದು ಆಜ್ಞಾಪಿಸುತ್ತಾನೆ.
- ಹಿಲ್ಕೀಯ ಹೆಸರಿನ ಮೇಲೆ ಇನ್ನೊಬ್ಬ ವ್ಯಕ್ತಿ ಎಲ್ಯಾಕೀಮನ ಮಗನಾಗಿದ್ದನು ಮತ್ತು ಅರಸನಾದ ಹಿಜ್ಕೀಯನ ಕಾಲದಲ್ಲಿ ಅವರ ಅರಮನೆಯಲ್ಲಿ ಕೆಲಸ ಮಾಡಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಎಲ್ಯಾಕೀಮ್, ಹಿಜ್ಕೀಯ, ಮಹಾ ಯಾಜಕ, ಯೋಷೀಯ, ಯೆಹೂದ, ಧರ್ಮಶಾಸ್ತ್ರ, ಆರಾಧನೆ, ಯೆಹೋವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2518
ಹಿವ್ವಿಯನು, ಹಿವ್ವಿಯರು
ಸತ್ಯಾಂಶಗಳು:
ಹಿವ್ವಿಯರು ಕಾನಾನ್ ಭೂಮಿಯಲ್ಲಿ ನಿವಾಸ ಮಾಡಿದ ಏಳು ದೊಡ್ಡ ಜನರ ಗುಂಪುಗಳಲ್ಲಿ ಒಂದು ಗುಂಪಾಗಿದ್ದರು.
- ಹಿವ್ವಿಯರೊಂದಿಗೆ ಸೇರಿಸಿ ಈ ಎಲ್ಲಾ ಗುಂಪುಗಳು ಕಾನಾನ್ ವಂಶಸ್ಥರಾಗಿದ್ದರು, ಇವನು ನೋಹನ ಮೊಮ್ಮೊಗನಾಗಿದ್ದನು.
- ಹಿವ್ವಿಯನಾದ ಶೆಕೆಮ್ ಯಾಕೋಬಿನ ಮಗಳನಾದ ದೀನಳನ್ನು ಮಾನಭಂಗ ಮಾಡಿದ್ದನು ಮತ್ತು ತನ್ನ ಸಹೋದರರು ಸೇಡು ತೀರಿಸಿಕೊಳ್ಳುವುದಕ್ಕೆ ಅನೇಕಮಂದಿ ಹಿವ್ವಿಯರನ್ನು ಕೊಂದು ಹಾಕಿದರು.
- ಕಾನಾನ್ ಭೂಮಿಯನ್ನು ತೆಗೆದುಕೊಳ್ಳುವುದಕ್ಕೆ ಇಸ್ರಾಯೇಲ್ಯರನ್ನು ಯೆಹೋಶುವನು ನಡೆಸಿದಾಗ, ಇಸ್ರಾಯೇಲ್ಯರು ಹಿವ್ವಿಯರನ್ನು ಜಯಿಸುವುದಕ್ಕೆ ಬದಲಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಲ್ಲಿ ಮೋಸಗೊಳಿಸಿದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹಮೋರ, ನೋಹ, ಶೆಕೆಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2340
ಹೆಬ್ರೋನ್
ಸತ್ಯಾಂಶಗಳು:
ಹೆಬ್ರೋನ್ ಎನ್ನುವುದು ಯೆರೂಸಲೇಮಿಗೆ ಸುಮಾರು 20 ಮೈಲಿಗಳಷ್ಟು ದೂರದಲ್ಲಿ ಬಂಡೆಗಳ ಬೆಟ್ಟಗಳ ಉನ್ನತ ಸ್ಥಾನದಲ್ಲಿ ಕಂಡುಬರುವ ಪಟ್ಟಣವಾಗಿರುತ್ತದೆ.
- ಈ ಪಟ್ಟಣವು ಅಬ್ರಾಮನ ಕಾಲದಲ್ಲಿ ಸುಮಾರು ಕ್ರಿ.ಪೂ.2000 ವರ್ಷದಲ್ಲಿ ನಿರ್ಮಿಸಿರುತ್ತಾರೆ. ಈ ಪಟ್ಟಣದ ಕುರಿತಾಗಿ ಹಳೇ ಒಡಂಬಡಿಕೆಯಲ್ಲಿ ಕೊಡಲ್ಪಟ್ಟ ಇತಿಹಾಸದ ದಾಖಲಾತಿಗಳಲ್ಲಿ ಅನೇಕಸಲ ಉಪಯೋಗಿಸಲ್ಪಟ್ಟಿರುತ್ತದೆ.
- ಅರಸನಾದ ದಾವೀದನ ಜೀವನದಲ್ಲಿ ಹೆಬ್ರೋನ್ ತುಂಬಾ ಪ್ರಾಮುಖ್ಯವಾದ ಪಾತ್ರೆಯನ್ನು ಹೊಂದಿರುತ್ತದೆ. ಆತನ ಅನೇಕಮಂದಿ ಗಂಡು ಮಕ್ಕಳು, ಅಬ್ಷಾಲೋಮನು ಅಲ್ಲಿಯೇ ಜನಿಸಿರುತ್ತಾರೆ.
- ಈ ಪಟ್ಟಣವು ರೋಮಾದವರಿಂದ ಕ್ರಿ.ಶ.70ರಲ್ಲಿ ನಾಶಗೊಳಿಸಲ್ಪಟ್ಟಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಅಬ್ಷಾಲೋಮ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2275, H2276, H5683
ಹೆರೋದ, ಹೆರೋದ ಅಂತಿಪ
ಸತ್ಯಾಂಶಗಳು:
ಯೇಸುವಿನ ಜೀವಿತ ಕಾಲದಲ್ಲಿ ಹೆರೋದ ಅಂತಿಪ ಗಲಿಲಾಯ ಸೀಮೆಯು ಸೇರಿಸಿ ರೋಮಾ ಸಾಮ್ರಾಜ್ಯದ ಒಂದು ಭಾಗಕ್ಕೆ ಪಾಲಕನಾಗಿದ್ದನು.
- ತನ್ನ ತಂದೆಯಾದ ಮಹಾ ಹೆರೋದನಂತೆ ಅಂತಿಪನು ನಿಜವಾಗಿ ಅರಸನಾಗದಿದ್ದರೂ ಅವನನ್ನು ಕೆಲವೊಂದುಸಲ “ಅರಸ ಹೆರೋದ” ಎಂದೂ ಸೂಚಿಸಲ್ಪಟ್ಟಿರುತ್ತದೆ,
- ಹೆರೋದ ಅಂತಿಪ ರೋಮಾ ಸೀಮೆಯಲ್ಲಿರುವ ನಾಲ್ಕರಲ್ಲಿ ಒಂದು ಭಾಗವನ್ನು ಆಳಿದನು ಮತ್ತು ಇವನನ್ನು “ಹೆರೋದ ಪಾಳೆಯಗಾರ” ಎಂದೂ ಕರೆಯುತ್ತಿದ್ದರು.
- ಹೆರೋದನಾಗಿರುವ ಅಂತಿಪನೇ ಸ್ನಾನೀಕನಾದ ಯೋಹಾನನನ್ನು ಶಿರಚ್ಚೇದನ ಮಾಡಬೇಕೆಂದು ಆಜ್ಞಾಪಿಸಿದ್ದನು.
- ಯೇಸುವಿನ ಶಿಲುಬೆಯ ಮರಣದ ಮುಂಚಿತವಾಗಿ ಯೇಸುವನ್ನು ಪ್ರಶ್ನಿಸಿದ್ದು ಹೆರೋದ ಅಂತಿಪನಾಗಿದ್ದನು.
- ಹೊಸ ಒಡಂಬಡಿಕೆಯಲ್ಲಿರುವ ಇತರ ಹೆರೋದಿಯರು ಅಂತಿಪನ ಮಗ (ಅಗ್ರಿಪ್ಪ) ಮತ್ತು ಅವನ ಮೊಮ್ಮೊಗ (ಅಗ್ರಿಪ್ಪ 2) ಆಗಿದ್ದರು, ಇವರು ಅಪೊಸ್ತಲರ ಕಾಲದಲ್ಲಿ ಆಳಿದವರಾಗಿದ್ದರು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಶಿಲುಬೆಗೆ ಹಾಕು, ಮಹಾ ಹೆರೋದ, ಯೋಹಾನ (ಸ್ನಾನಿಕನು), ಅರಸ, ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G2264, G2265, G2267
ಹೆರೋದ್ಯಳು
ಸತ್ಯಾಂಶಗಳು:
ಹೆರೋದ್ಯಳು ಸ್ನಾನೀಕನಾದ ಯೋಹಾನನ ಕಾಲದಲ್ಲಿ ಯೂದಾಯದಲ್ಲಿರುವ ಹೆರೋದ್ ಅಂತಿಪನ ಹೆಂಡತಿಯಾಗಿದ್ದಳು.
- ಹೆರೋದ್ಯಳು ವಾಸ್ತವಿಕವಾಗಿ ಹೆರೋದ್ ಅಂತಿಪನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದಳು, ಆದರೆ ಸ್ವಲ್ಪಕಾಲವಾದನಂತರ ಈಕೆ ಕಾನೂನುರಹಿತವಾಗಿ ಹೆರೋದ್ ಅಂತಿಪನನ್ನು ವಿವಾಹ ಮಾಡಿಕೊಂಡಿದ್ದಳು.
- ಸ್ನಾನೀಕನಾದ ಯೋಹಾನನು ಹೆರೋದನು ಮತ್ತು ಹೆರೋದ್ಯಳು ಮಾಡಿದ ಕಾನೂನುರಹಿತವಾದ ವಿವಾಹದ ಕುರಿತು ಎಚ್ಚರಿಸಿದನು. ಈ ಕಾರಣದಿಂದಲೇ, ಹೆರೋದ್ ಯೋಹಾನನನ್ನು ಸೆರೆಯಲ್ಲಿ ಹಾಕಿಸಿದ್ದನು ಮತ್ತು ಹೆರೋದ್ಯಳ ಕಾರಣದಿಂದ ಕೊನೆಗೆ ಯೋಹಾನನ ತಲೆಯನ್ನು ಶಿರಚ್ಚೇದನ ಮಾಡಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಹೆರೋದ್ ಅಂತಿಪ, ಯೋಹಾನ (ಸ್ನಾನೀಕನು))
ಸತ್ಯವೇದದಿಂದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: G2266
ಹೆರ್ಮೋನ್ ಪರ್ವತ
ಸತ್ಯಾಂಶಗಳು:
ಹೆರ್ಮೋನ್ ಪರ್ವತ ಎನ್ನುವುದು ಲೆಬನೋನ್ ಪರ್ವತ ಶ್ರೇಣಿಯ ದಕ್ಷಿಣ ತುದಿ ಭಾಗದಲ್ಲಿರುವ ಇಸ್ರಾಯೇಲಿನಲ್ಲಿ ಅತೀ ಎತ್ತರವಾದ ಪರ್ವತದ ಹೆಸರಾಗಿರುತ್ತದೆ.
- ಇದು ಗಲಿಲಾಯ ಸಮುದ್ರ ಉತ್ತರ ಭಾಗದಲ್ಲಿ ಕಂಡುಬರುತ್ತದೆ ಮತ್ತು ಇಸ್ರಾಯೇಲ್, ಸಿರಿಯಾ ದೇಶಗಳ ನಡುವೆ ಉತ್ತರ ಗಡಿಗಳಲ್ಲಿ ಕಂಡುಬರುತ್ತದೆ.
- ಇತರ ಗುಂಪುಗಳಿಂದ ಹೆರ್ಮೋನ್ ಪರ್ವತಕ್ಕೆ ಕೊಟ್ಟಿರುವ ಇತರ ಹೆಸರುಗಳು “ಸಿರಿಯನ್ ಪರ್ವತ” ಮತ್ತು “ಸೇನಿರ್ ಪರ್ವತ” ಎಂದಾಗಿರುತ್ತವೆ.
- ಹೆರ್ಮೋನ್ ಪರ್ವತವು ಮೂರು ಪ್ರಮುಖ ಶಿಖರಗಳನ್ನು ಹೊಂದಿರುತ್ತದೆ. ಅತೀ ಎತ್ತರವಾದ ಶಿಖರವು ಸುಮಾರು 2,800 ಮೀಟರುಗಳು ಇರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಗಲಿಲಾಯ ಸಮುದ್ರ, ಸಿರಿಯಾ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2022, H2768, H2769, H8149
ಹೇಬೆಲ
ಸತ್ಯಾಂಶಗಳು:
ಹೇಬೆಲನು ಆದಾಮ ಮತ್ತು ಹವ್ವಳ ಎರಡನೇಯ ಮಗ. ಈತನು ಕಾಯಿನನ ತಮ್ಮನಾಗಿದ್ದನು.
- ಹೇಬೆಲ ಕುರುಬನಾಗಿದ್ದನು.
- ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ದೇವರಿಗೆ ಕಾಣಿಕೆಯಾಗಿ ಕೊಟ್ಟು, ಅವುಗಳನ್ನು ದೇವರಿಗೆ ಹೋಮ ಮಾಡಿದನು.
- ದೇವರು ಹೇಬೆಲನನ್ನು ಮತ್ತು ಅವನು ಕೊಟ್ಟ ಕಾಣಿಕೆಗಳನ್ನು ಮೆಚ್ಚಿದನು.
- ಆದಾಮ ಮತ್ತು ಹವ್ವಳ ಮೊದಲ ಮಗನಾದ ಕಾಯಿನನು ಹೇಬೆಲನನ್ನು ಕೊಂದನು.
(ಅನುವಾದ ಮಾಡುವುದಕ್ಕೆ ಸಲಹೆಗಳು : /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : /ಕಾಯಿನ, /ಹೋಮ, /ಕುರುಬ)
ಸತ್ಯವೇದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H01893, G6
ಹೋರೇಬ್
ಪದದ ಅರ್ಥವಿವರಣೆ:
ಹೋರೇಬ್ ಪರ್ವತ ಎನ್ನುವುದು ದೇವರು ಮೋಶೆಗೆ ಹತ್ತು ಆಜ್ಞೆಗಳ ಶಿಲಾಶಾಸನಗಳನ್ನು ಕೊಟ್ಟ ಸೀನಾಯ್ ಪರ್ವತಕ್ಕೆ ಮತ್ತೊಂದು ಹೆಸರಾಗಿರುತ್ತದೆ,
- ಹೋರೇಬ್ ಪರ್ವತವನ್ನು “ದೇವರ ಪರ್ವತ” ಎಂದೂ ಕರೆಯುತ್ತಾರೆ.
- ಹೋರೇಬ್ ಎನ್ನುವ ಸ್ಥಳದಲ್ಲೇ ಮೋಶೆಯು ಉರಿಯುತ್ತಿರುವ ಪೊದೆಯನ್ನು ನೋಡಿದ್ದನು ಮತ್ತು ಅಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದನು.
- ಹೋರೇಬ್ ಪರ್ವತದ ಮೇಲೆಯೇ ದೇವರು ತನ್ನ ಇಸ್ರಾಯೇಲ್ಯರಿಗೆ ಹತ್ತು ಆಜ್ಞೆಗಳ ಶಿಲಾಶಾಸನಗಳನ್ನು ಬರೆದು ಅವರೊಂದಿಗೆ ನಿಬಂಧನೆಯನ್ನು ಮಾಡಿಕೊಂಡಿದ್ದಾರೆ.
- ಈ ಸ್ಥಳದಲ್ಲಿಯೇ ಅಡವಿಯಲ್ಲಿ ಇಸ್ರಾಯೇಲ್ಯರು ಸಂಚಾರ ಮಾಡುತ್ತಿರುವಾಗ ಅವರಿಗೆ ನೀರನ್ನು ಕೊಡುವುದಕ್ಕೆ ಕಲ್ಲಿನ ಮೇಲೆ ಹೊಡೆಯಬೇಕೆಂದು ದೇವರು ಮೋಶೆಗೆ ಹೇಳಿದ್ದನು.
- ಈ ಪರ್ವತದ ಖಚಿತವಾದ ಸ್ಥಳವು ಗೊತ್ತಿಲ್ಲ, ಆದರೆ ಈಗಿನ ಸೀನಾಯ್ ಪೆನಿನ್ಸುಲಾದ ದಕ್ಷಿಣ ಭಾಗದಲ್ಲಿ ಇದು ಕಂಡುಬರಬಹುದು.
- “ಹೋರೇಬ್” ಎನ್ನುವುದು ಪರ್ವತದ ಖಚಿತವಾದ ಹೆಸರಾಗಿರುತ್ತದೆ ಮತ್ತು “ಪರ್ವತ ಸೀನಾಯ್” ಎನ್ನುವುದಕೆಕ್ “ಸೀನಾಯ್ ಪರ್ವತ” ಎಂದರ್ಥ, ಪರ್ವತ ಹೋರೇಬ್ ಎನ್ನುವುದು ಸೀನಾಯ್ ಅಡವಿಯಲ್ಲಿ ಕಂಡುಬರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ಇಸ್ರಾಯೇಲ್, ಮೋಶೆ, ಸೀನಾಯ್, ಹತ್ತು ಆಜ್ಞೆಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2722
ಹೋಶೇಯ
ಸತ್ಯಾಂಶಗಳು:
ಹೋಶೇಯ ಇಸ್ರಾಯೇಲ್ ಪ್ರವಾದಿಯಾಗಿದ್ದನು, ಈತನು ಕ್ರಿಸ್ತನು ಬರುವುದಕ್ಕೆ ಮುಂಚಿತವಾಗಿ ಸುಮಾರು 750 ವರ್ಷಗಳ ಮುಂದೆ ಜೀವಿಸಿ, ಪ್ರವಾದಿಸಿದ್ದನು.
- ಈತನ ಸೇವೆ ಯರೋಬ್ಬಾಮ, ಜೆಕರ್ಯ, ಯೋತಾಮ, ಆಹಾಜ, ಹೊಷೆಯಾ, ಉಜ್ಜೀಯ ಮತ್ತು ಹಿಜ್ಕೀಯ ಎನ್ನುವ ಅನೇಕಮಂದಿ ಅರಸರು ಆಳಿದ ಕಾಲಗಳಲ್ಲಿ ಅನೇಕ ವರ್ಷಗಳ ನಡೆದಿತ್ತು.
- ವ್ಯಭಿಚಾರಿಯಾದ ಗೋಮೆರಳನ್ನು ಮದುವೆ ಮಾಡಿಕೊಂಡು, ಆಕೆ ತನಗೆ ಅಪನಂಬಿಗಸ್ತಳಾಗಿದ್ದಳು, ಆಕೆಯನ್ನು ಪ್ರೀತಿಸಬೇಕೆಂದು ದೇವರು ಹೋಶೇಯನಿಗೆ ಆಜ್ಞಾಪಿಸಿದನು.
- ಈ ಸಂಘಟನೆಯ ಚಿತ್ರವೆಲ್ಲ ದೇವರು ತನ್ನ ಅಪನಂಬಿಗಸ್ತರಾದ ಇಸ್ರಾಯೇಲ್ ಜನರಗಾಗಿ ತೋರಿಸಿದ ಪ್ರೀತಿಯಾಗಿರುತ್ತದೆ.
- ಹೋಶೇಯ ಇಸ್ರಾಯೇಲ್ ಜನರು ಮಾಡಿದ ಪಾಪಗಳ ಕಾರಣದಿಂದ ಅವರಿಗೆ ವಿರುದ್ಧವಾಗಿ ಪ್ರವಾದಿಸಿದನು ಮತ್ತು ವಿಗ್ರಹ ಆರಾಧನೆಯಿಂದ ತಿರುಗಿಕೊಳ್ಳಬೇಕೆಂದು ಅವರನ್ನು ಎಚ್ಚರಿಸಿದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಜ, ಹಿಜ್ಕೀಯ, ಹೋಷೆಯ, ಯಾರೋಬ್ಬಾಮ, ಯೋತಾಮ, ಉಜ್ಜೀಯ, ಜೆಕರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1954, G5617
ಹೋಶೇಯ
ಸತ್ಯಾಂಶಗಳು:
ಹೋಶೇಯ ಎನ್ನುವ ಹೆಸರು ಇಸ್ರಾಯೇಲ್ ಅರಸನ ಹೆಸರಾಗಿರುತ್ತದೆ ಮತ್ತು ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ಪುರುಷರು ಈ ಹೆಸರಿನ ಮೇಲೆ ಇದ್ದಾರೆ.
- ಅಲಾ ಮಗನಾದ ಹೋಶೇಯ ಇಸ್ರಾಯೇಲ್ ಅರಸನಾಗಿದ್ದನು, ಇವನು ಯೆಹೂದ್ಯ ಅರಸರಾಗಿರುವ ಆಹಾಜ ಮತ್ತು ಹಿಜ್ಕೀಯ ಪಾಲನೆಗಳು ನಡೆಯುತ್ತಿರುವ ಸಮಯದಲ್ಲಿ ಸುಮಾರು ಒಂಭತ್ತು ವರ್ಷಗಳ ಆಳಿದನು.
- ನೂನನ ಮಗನಾದ ಯೆಹೋಶುವನಿಗೆ ಮತ್ತೊಂದು ಹೆಸರು ಹೋಶೇಯ ಆಗಿತ್ತು. ಮೋಶೆ ಕಾನಾನ್ಯರ ಭೂಮಿಯೊಳಗೆ ಗೂಢಚಾರಿಗಳನ್ನಾಗಿ ಕಳುಹಿಸಿದ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿರುವ ಹೋಶೇಯನ ಹೆಸರನ್ನು ಯೊಹೋಶುವ ಎಂಬುದಾಗ ಮಾರ್ಪಡಿಸಿದನು.
- ಮೋಶೆ ಮರಣಿಸಿದನಂತರ ಯೆಹೋಶುವನು ಕಾನಾನ್ ಭೂಮಿಯನ್ನು ವಶಪಡಿಸಿಕೊಳ್ಳಲು ಇಸ್ರಾಯೇಲ್ ಜನರನ್ನು ನಡೆಸಿದ್ದನು.
- ಹೋಶೆಯ ಎನ್ನುವ ಹೆಸರಿನ ಮೇಲೆ ಇನ್ನೊಬ್ಬ ವ್ಯಕ್ತಿ ಆಹಾಜನ ಮಗನಾಗಿದ್ದನು, ಇವನು ಎಫ್ರಾಯಿಮ್ಯರ ನಾಯಕರಲ್ಲಿ ಒಬ್ಬನಾಗಿದ್ದನು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ಆಹಾಜ, ಕಾನಾನ್, ಎಫ್ರಾಯಿಮ್, ಹಿಜ್ಕೀಯ, ಯೆಹೋಶುವ, ಮೋಶೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1954