ಕನ್ನಡ (Kannada): Kannada Unlocked Literal Bible

Updated ? hours ago # views See on DCS

ಯೂದನು ಬರೆದ ಪತ್ರಿಕೆ

Chapter 1

ಪೀಠಿಕೆ

1 ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ [1] ದೇವರಲ್ಲಿ ಪ್ರಿಯರಾದವರಿಗೆ, [2] ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ, 2 ನಿಮಗೆ [3] ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.

ದುರ್ಬೋಧಕರು

3 ಪ್ರಿಯರೇ, [4] ನಮಗೆ [5] ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು [6] ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು. 4 ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು [7] ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. [8] ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.

5 ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು [9] ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತದೇಶದೊಳಗಿಂದ ರಕ್ಷಿಸಿದರೂ, ತರುವಾಯ [10] ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು. 6 ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ [11] ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. 7[12] ಸೊದೋಮ್ ಗೊಮೋರ ಪಟ್ಟಣಗಳವರೂ, [13] ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, [14] ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. 8 ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ. 9 ಆದರೂ [15] ಪ್ರಧಾನ ದೇವದೂತನಾದ [16] ಮೀಕಾಯೇಲನು [17] ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, [18] ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನ್ನಾಡದೆ, [19] <<ಕರ್ತನು ನಿನ್ನನ್ನು ಗದರಿಸಲಿ>> ಎಂದನು. 10 ಆದರೆ ಈ ಜನರು [20] ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ. 11 ಅವರ ಗತಿಯನ್ನು ಏನೆಂದು ಹೇಳಲಿ? ಇವರು [21] ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ [22] ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, [23] ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ. 12 ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, [24] ನಿಮ್ಮ [25] ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. [26] ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು [27] ಗಾಳಿಯಿಂದ ಬಡಿಸಿಕೊಂಡು ಹೋಗುವ [28] ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, [29] ಸಂಪೂರ್ಣವಾಗಿ ಸತ್ತ, [30] ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು. 13[31] ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ [32] ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ [33] ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ.

14 ಇಂಥವರ ವಿಷಯದಲ್ಲೇ [34] ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, [35] <<ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು, 15[36] ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು>> ಎಂಬುದಾಗಿ ಪ್ರವಾದಿಸಿದನು.

16 ಇವರು ಗೊಣಗುಟ್ಟುವವರೂ, ದೂರು ಹೇಳುವವರೂ, [37] ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ, [38] ಬಂಡಾಯಿಕೊಚ್ಚಿಕೊಳ್ಳುವವರು, [39] ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.

ಎಚ್ಚರಿಕೆಗಳೂ ಪ್ರಬೋಧನೆಗಳೂ

17 ಪ್ರಿಯರೇ, [40] ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. 18[41] <<ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು>> ಅವರು ನಿಮಗೆ ಹೇಳಿದರು. 19 ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, [42] ಪ್ರಾಕೃತ ಮನುಷ್ಯರೂ, [43] ದೇವರಾತ್ಮ ಇಲ್ಲದವರೂ ಆಗಿದ್ದಾರೆ. 20 ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ [44] ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, [45] ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ. 21[46] ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, [47] ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. 22 ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ, 23[48] ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು [49] ಭಯಪಡುತ್ತಾ ಕರುಣಿಸಿರಿ. [50] ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.

ಅಂತ್ಯಾಶೀರ್ವಾದ

24 ಮುಗ್ಗರಿಸದಂತೆ [51] ನಿಮ್ಮನ್ನು ಕಾಪಾಡಿಕೊಳ್ಳುತ್ತಾ, [52] ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು [53] ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ [54] ಶಕ್ತನಾಗಿರುವ, 25 ನಮ್ಮ ರಕ್ಷಕನಾದ [55] ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, [56] ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.


1:1 [1] 1 ಥೆಸ. 1:4; 2 ಥೆಸ. 2:13:
1:1 [2] ಯೋಹಾ. 17:11, 15; 1 ಥೆಸ. 5:23:
1:2 [3] 2 ಯೋಹಾ. 3:
1:3 [4] ತೀತ. 1:4:
1:3 [5] ಅಥವಾ, ಹಂಚಿಕೊಳ್ಳುವ.
1:3 [6] 1 ತಿಮೊ. 6:12; 2 ತಿಮೊ. 4:7; ಲೂಕ. 13:24; 1 ಕೊರಿ. 9:25; ಫಿಲಿ. 1:27:
1:4 [7] ತೀತ. 1:16; 2 ಪೇತ್ರ. 2:1; 1 ಯೋಹಾ. 2:22:
1:4 [8] 1 ಪೇತ್ರ. 2:8:
1:5 [10] ಅರಣ್ಯ. 14:29, 37; 26:64, 65; ಕೀರ್ತ. 106:26; ಇಬ್ರಿ. 3:17-19:
1:5 [9] 2 ಪೇತ್ರ. 1:12:
1:6 [11] 2 ಪೇತ್ರ. 2:4. ಪ್ರಕ. 20:2:
1:7 [12] ಆದಿ. 19:24:
1:7 [13] ಆದಿ. 10:19; 14:2, 8; ಧರ್ಮೋ. 29:23; ಹೋಶೇ. 11:8:
1:7 [14] 2 ಪೇತ್ರ. 2:10. ಸಲಿಂಗಕಾಮಿಗಳಾಗಿದ್ದರು.
1:9 [15] 1 ಥೆಸ. 4:16:
1:9 [16] ದಾನಿ. 10:13; 12:1; ಪ್ರಕ. 12:7:
1:9 [17] ಧರ್ಮೋ. 34:6:
1:9 [18] 2 ಪೇತ್ರ. 2:11:
1:9 [19] ಜೆಕ. 3:2:
1:10 [20] 2 ಪೇತ್ರ. 2:12:
1:11 [21] ಆದಿ. 4:5-8:
1:11 [22] ಅರಣ್ಯ. 31:15, 16; 2 ಪೇತ್ರ. 2:15:
1:11 [23] ಅರಣ್ಯ. 16:1-35:
1:12 [24] ಅಥವಾ, ಕಳಂಕಕ್ಕೆ ಕಾರಣರಾಗಿದ್ದು.
1:12 [25] 2 ಪೇತ್ರ. 2:13:
1:12 [26] ಯೆಹೆ. 34:2, 8, 10:
1:12 [27] ಎಫೆ. 4:14; ಇಬ್ರಿ. 13:9:
1:12 [28] 2 ಪೇತ್ರ. 2:17:
1:12 [29] ಎರಡು ಸಾರಿ ಸತ್ತ.
1:12 [30] ಮತ್ತಾ 15:13:
1:13 [31] ಫಿಲಿ. 3:19:
1:13 [32] ಯೆಶಾ. 57:20:
1:13 [33] 2 ಪೇತ್ರ. 2:17:
1:14 [34] ಆದಿ. 5:18:
1:14 [35] ಧರ್ಮೋ. 33:2; ದಾನಿ. 7:10; ಜೆಕ. 14:5; ಮಾರ್ಕ. 8:38; 1 ಥೆಸ. 3:13; 2 ಥೆಸ. 1:7:
1:15 [36] 2 ಪೇತ್ರ. 2:5:
1:16 [37] 2 ಪೇತ್ರ. 2:10:
1:16 [38] 2 ಪೇತ್ರ. 2:18:
1:16 [39] ಯಾಜ. 19:5; ಧರ್ಮೋ. 10:17:
1:17 [40] 2 ಪೇತ್ರ. 3:2:
1:18 [41] 2 ಪೇತ್ರ. 3:3:
1:19 [42] 1 ಕೊರಿ. 2:14:
1:19 [43] ರೋಮಾ. 8:9; ಫಿಲಿ. 3:3:
1:20 [44] ಕೊಲೊ. 2:7:
1:20 [45] ಎಫೆ. 6:18; ರೋಮಾ. 8:26:
1:21 [46] ತೀತ. 2:13; 2 ಪೇತ್ರ. 3:12:
1:21 [47] 2 ಕೊರಿ. 13:14; ಅ. ಕೃ. 13:43
1:23 [48] ಆಮೋ. 4:1; ಜೆಕ. 3:2:
1:23 [49] 2 ಕೊರಿ. 5:11:
1:23 [50] ಪ್ರಕ. 3:4; ಜೆಕ. 3:4:
1:24 [51] ಯೋಹಾ. 17:12:
1:24 [52] ಕೊಲೊ. 1:22; 1 ಪೇತ್ರ. 4:13:
1:24 [53] ಎಫೆ. 1:4; 5:27; ಫಿಲಿ. 2, 15; ಪ್ರಕ. 14:5:
1:24 [54] ರೋಮಾ. 16:25; ಎಫೆ. 3:20:
1:25 [55] ಯೋಹಾ 5:44; 1 ತಿಮೊ. 1:17:
1:25 [56] ರೋಮಾ. 11:36: