ಕನ್ನಡ (Kannada): translationNotes

Updated ? hours ago # views See on DCS Draft Material

John

John front

ಯೋಹಾನನು ಬರೆದ ಸುವಾರ್ತೆಯ ಪರಿಚಯ

ಭಾಗ 1: ಸಹಜವಾದ ಪರಿಚಯ

ಯೋಹಾನನು ಬರೆದ ಸುವಾರ್ತೆಯ ವಿಭಜನೆ
  1. ಯೇಸು ಯಾರೆಂದು ಪರಿಚಯ (1:1-18)
  2. ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡದ್ದು ಮತ್ತು ಹನ್ನೆರಡು ಮಂದಿ ಶಿಷ್ಯರನ್ನು ನೇಮಿಸಿದ್ದು (1:19-51)
  3. ಯೇಸು ಪ್ರಸಂಗ ಮಾಡಿರುವುದು, ಬೋಧಿಸುವುದು, ಮತ್ತು ಜನರನ್ನು ಸ್ವಸ್ಥ ಮಾಡಿದ್ದು (2-11)
  4. ಯೇಸು ಮರಣದ ಏಳು ದಿನಗಳ ಮುಂಚೆ (12-19)
  5. ಮರಿಯಳು ಯೇಸು ಪದಗಳನ್ನು ಅಭಿಷೇಕಿಸಿದ್ದು (12:1-11)
  6. ಯೇಸು ಕತ್ತೆಯ ಮೇಲೆ ಕುಳಿತು ಯೆರೂಸಲೇಮಿಗೆ ಪ್ರವೇಶಿಸಿದ್ದು (12:12-19)
  7. ಗ್ರೀಕರಿಗೂ ಯೇಸುವನ್ನು ನೋಡುವ ಬಯಕೆ (12:20-36)
  8. ಯೆಹೂದ್ಯರ ನಾಯಕರು ಯೇಸುವನ್ನು ತಿರಸ್ಕರಿಸಿದ್ದು (12:37-50)
  9. ಯೇಸು ತನ್ನ ಶಿಷ್ಯರಿಗೆ ಬೋಧಿಸುವುದು (13-17)
  10. ಯೇಸು ಬಂಧಿಸಲ್ಪಟ್ಟದ್ದು ಮತ್ತು ವಿಚಾರಿಸಲ್ಪಟ್ಟದ್ದು (18:1-19:15)
  11. ಯೇಸುವನ್ನು ಶಿಲುಬೆಗೆ ಹಾಕಿದ್ದು ಮತ್ತು ಸಮಾಧಿ ಮಾಡಲ್ಪಟ್ಟಿದ್ದು (19:16-42)
  12. ಯೇಸು ಜೀವಿತನಾಗಿ ಬಂದದ್ದು (20:1-29)
  13. ಯೋಹನನು ಈ ಪುಸ್ತಕವನ್ನು ಬರೆದ ಉದ್ದೇಶ (20:30-31)
  14. ಯೇಸು ತನ್ನ ಶಿಷ್ಯರನ್ನು ಸಂಧಿಸಿದ್ದು (21)
ಯೋಹಾನನು ಬರೆದ ಸುವಾರ್ತೆಯ ಉದ್ದೇಶವೇನು?

ಹೊಸ ಒಡಂಬಡಿಕೆಯಲ್ಲಿರುವ ನಾಲ್ಕು ಸುವಾರ್ತೆಗಳಲ್ಲಿ ಯೋಹಾನನು ಬರೆದ ಸುವಾರ್ತೆ ಒಂದಾಗಿದೆ. ಈ ಪುಸ್ತಕ ಯೇಸು ಜೀವಿತವನ್ನು ಕುರಿತಾಗಿ ಸ್ವಲ್ಪ ಮಾಹಿತಿ ಕೊಡುತ್ತದೆ. ಸುವಾರ್ತೆಗಳ ಗ್ರಂಥಕರ್ತರು ಯೇಸು ಯಾರೆಂದು ಮತ್ತು ಅವರು ಮಾಡಿದ ಕಾರ್ಯಗಳನ್ನು ಕುರಿತು ವಿಭಿನ್ನ ಮಾಹಿತಿಯನ್ನು ಕೊಟ್ಟಿದ್ದಾರೆ. ಈ ಸುವಾರ್ತೆಯನ್ನು ಯೋಹಾನನೇ ಬರೆದಿದ್ದಾನೆಂದು ಆತನು ಹೇಳಿದ್ದಾನೆ “ಆದಕಾರಣ ಜನರು ಯೇಸುವೇ ಜೀವಿಸುವ ದೇವರ ಮಗನೆಂದು ನೀವು ನಂಬುವಂತೆಯೂ” (20:31).

ಯೋಹಾನನ ಸುವಾರ್ತೆ ಬೇರೆ ಮೂರು ಸುವಾರ್ತೆಗಳಿಗಿಂತ ತುಂಬಾ ಬಿನ್ನವಾಗಿರುತ್ತದೆ. ಬೇರೆ ಗ್ರಂಥಕರ್ತರು ತಮ್ಮ ಸುವಾರ್ತೆಗಳಲ್ಲಿ ಬರೆದಿರು ಕೆಲವೊಂದು ಬೋಧನೆಗಳನ್ನು ಮತ್ತು ಸನ್ನಿವೇಶಗಳನ್ನು ಕುರಿತಾಗಿ ಯೋಹಾನನು ಬರೆದಿಲ್ಲ. ಅಷ್ಟೇ ಅಲ್ಲದೆ, ಬೇರೆ ಗ್ರಂಥಕರ್ತರು ಬರೆಯದಿರುವ ಕೆಲವೊಂದು ಬೋಧನೆಗಳು ಮತ್ತು ಸನ್ನಿವೇಶಗಳನ್ನು ಕುರಿತಾಗಿ ಯೋಹಾನನು ಬರೆದಿದ್ದಾನೆ.

ಯೇಸು ತನ್ನನ್ನು ಕುರಿತಾಗಿ ಹೇಳಿಕೊಂಡಿರುವ ಸಂಗತಿಗಳು ಸತ್ಯವಾಗಿವೆಯೆಂದು ಯೇಸು ನಿರೂಪಿಸಲು ಮಾಡಿದ ಕಾರ್ಯಗಳನ್ನು ಕುರಿತಾಗಿ ಯೋಹಾನನು ಹೆಚ್ಚಾಗಿ ಬರೆದಿದ್ದಾನೆ. (ನೋಡಿರಿ: ಗುರುತು, ಗುರುತುಗಳು, ನಿರೂಪಣೆ, ಜ್ಞಾಪನೆ)

ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಅನುವಾದ ಮಾಡಬೇಕು?

”ಯೋಹಾನನ ಸುವಾರ್ತೆ” ಅಥವಾ “ಯೋಹಾನನು ಬರೆದ ಸುವಾರ್ತೆ” ಎನ್ನುವ ಸಂಪ್ರದಾಯಕ ಹೆಸರುಗಳ ಪ್ರಕಾರವಾಗಿ ಅನುವಾದಕರು ಈ ಪುಸ್ತಕವನ್ನು ಕರೆಯಬಹುದು. ಅಥವಾ “ಯೇಸು ಕುರಿತಾದ ಸುವಾರ್ತೆಯನ್ನು ಬರೆದ ಯೋಹಾನ” ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

ಯೋಹಾನನ ಸುವಾರ್ತೆಯನ್ನು ಯಾರು ಬರೆದರು?

ಈ ಪುಸ್ತಕವು ಗ್ರಂಥಕರ್ತನ ಹೆಸರು ಕೊಡುತ್ತಿಲ್ಲ. ಹೀಗಿದ್ದಲ್ಲಿ, ಆದಿ ಕ್ರೈಸ್ತರ ಕಾಲದಿಂದಲೂ, ಅಪೋಸ್ತಲನಾದ ಯೋಹಾನನು ಈ ಪುಸ್ತಕದ ಗ್ರಂಥಕರ್ತನು ಆಗಿದ್ದಾನೆಂದು ಅನೇಕ ಕ್ರೈಸ್ತರು ಭಾವಿಸಿದ್ದರು.

ಭಾಗ 2: ಪ್ರಾಮುಖ್ಯವಾದ ಭಕ್ತಿಪುರ್ವಕ ಮತ್ತು ಸಂಪ್ರದಾಯಕ ಅಂಶಗಳು

ಯೇಸು ಜೀವನದ ಅಂತಿಮ ವಾರದ ಕುರಿತಾಗಿ ಯೋಹಾನನು ಅಷ್ಟು ಮಾಹಿತಿಯನ್ನು ಯಾವ ಕಾರಣಕ್ಕಾಗಿ ಬರೆದಿದ್ದಾನೆ?

ಯೋಹಾನನು ಯೇಸು ಅಂತಿಮ ವಾರದ ಕುರಿತಾಗಿ ಹೆಚ್ಚು ಬರೆದಿದ್ದಾನೆ. ಆತನ ಓದುಗಾರರು ಯೇಸು ಅಂತಿಮ ವಾರದ ಕುರಿತು ಮತ್ತು ಶಿಲುಬೆಯ ಮೇಲೆ ಆತನ ಮರಣದ ಕುರಿತು ಆಳವಾಗಿ ಯೋಚಿಸಬೇಕೆಂದು ಆತನು ಬಯಸಿದನು. ದೇವರ ವಿರುದ್ದವಾಗಿ ಜನರು ಮಾಡಿರುವ ಪಾಪಗಳನ್ನು ಆತನು ಕ್ಷಮಿಸುವಂತೆ ಯೇಸು ಸ್ವಇಚ್ಛೆಯಿಂದ ಶಿಲುಬೆಯ ಮೇಲೆ ಮರಣಿಸಿದನು ಎಂದು ಜನರು ಅರ್ಥ ಮಾಡಿಕೊಳ್ಳಬೇಕೆಂದು ಯೋಹಾನನು ಬಯಸಿದನು. (ನೋಡಿರಿ: ಪಾಪ, ಪಾಪಸಹಿತ, ಪಾಪಿ, ಪಾಪ ಮಾಡುವುದು)

ಭಾಗ 3: ಪ್ರಾಮುಖ್ಯವಾದ ಅನುವಾದ ಸಮಸ್ಯೆಗಳು

ಯೋಹಾನನು ಬರೆದ ಸುವಾರ್ತೆಯಲ್ಲಿ “ಉಳಿದಿರು”, “ವಾಸಿಸು” ಮತ್ತು “ನೆಲೆಗೊಂಡಿರು” ಎನ್ನುವ ಪದಗಳಿಗೆ ಅರ್ಥವೇನು?

ಯೋಹಾನನು ಅನೇಕ ಬಾರಿ “ಉಳಿದಿರು”, “ವಾಸಿಸು” ಮತ್ತು “ನೆಲೆಗೊಂಡಿರು” ಎನ್ನುವ ಪದಗಳನ್ನು ರೂಪಕಾಲಂಕಾರಗಳಾಗಿ ಉಪಯೋಗಿಸುದ್ದಾನೆ. ಒಬ್ಬ ವಿಶ್ವಾಸಿಯಲ್ಲಿ ಯೇಸುವಿನ ವಾಕ್ಯವು “ನೆಲೆಗೊಂಡಿದೆ” ಎನ್ನುವಂತೆ ಒಬ್ಬ ವಿಶ್ವಾಸಿ ಯೇಸುವನ್ನು ತಿಳಿದುಕೊಳ್ಳುವುದು ಉತ್ತಮವೆಂದು ಮತ್ತು ಹೆಚ್ಚಾಗಿ ಯೇಸುವಿಗೆ ನಂಬಿಕೆಯಾಗಿರಬೇಕೆಂದು ಯೋಹಾನನು ಮಾತನಾಡಿದ್ದಾರೆ. ಇನ್ನೊಬ್ಬ ವ್ಯಕ್ತಿಯಲ್ಲಿ ಮತ್ತೊಬ್ಬರು “ಉಳುಕೊಂಡಿದ್ದಾರೆ” ಎನ್ನುವಂತೆ ಒಬ್ಬ ವ್ಯಕ್ತಿಯ ಜೊತೆಯಲ್ಲಿ ಮತ್ತೊಬ್ಬ ಆತ್ಮೀಯಕವಾದ ವ್ಯಕ್ತಿ ಯಾರೋ ಸೇರಿಕೊಂಡಿದ್ದಾರೆನ್ನುವಂತೆ ಯೋಹಾನನು ಮಾತನಾಡಿದ್ದಾರೆ. ಕ್ರೈಸ್ತರು ದೇವರಲ್ಲಿಯು ಮತ್ತು ಕ್ರಿಸ್ತನಲ್ಲಿಯು “ಉಳುಕೊಂಡಿರಬೇಕೆಂದು” ಹೇಳಲ್ಪಟ್ಟಿದ್ದಾರೆ. ಮಗನಲ್ಲಿ ತಂದೆ “ಇರಬೇಕೆಂದು” ಹೇಳಲ್ಪಟ್ಟಿದೆ, ಮತ್ತು ತಂದೆಯಲ್ಲಿ ಮಗನಲ್ಲಿ “ತಂದೆ ಇರಬೇಕೆಂದು” ಹೇಳಲ್ಪಟ್ಟಿದ್ದಾನೆ. ವಿಶ್ವಾಸಿಗಳಲ್ಲಿ ಮಗನು “ಇರಬೇಕೆಂದು” ಹೇಳಲ್ಪಟ್ಟಿದ್ದಾನೆ. ವಿಶ್ವಾಸಿಗಳಲ್ಲಿ ಪರಿಶುದ್ಧಾತ್ಮನು ಕೂಡ “ಇರಬೇಕೆಂದು” ಹೇಳಲ್ಪಟ್ಟಿದ್ದಾನೆ.

ಒಂದೇ ವಿಧಾನದಲ್ಲಿ ಖಚಿತವಾಗಿ ತಮ ಭಾಷೆಗಳಲ್ಲಿ ಈ ಆಲೋಚನೆಗಳನ್ನು ಹಂಚಿಕೊಳ್ಳುವುದಕ್ಕೆ ಅನೇಕ ಅನುವಾದಕರು ತುಂಬಾ ಕಷ್ಟಪಡುತ್ತಾರೆ. ಉದಾಹರಣೆಗೆ, “ಯಾರು ನನ್ನ ಶರೀರವನ್ನು ತಿಂದು ಮತ್ತು ರಕ್ತವನ್ನು ಕುಡಿಯುತ್ತಾರೋ ಅವರು ನನ್ನಲ್ಲಿ ಇರುತ್ತಾರೆ, ಮತ್ತು ನಾನು ಅವರಲ್ಲಿ ಇರುತ್ತೇನೆ” (ಯೋಹಾನ.6:56) ಎಂದು ಯೇಸು ಹೇಳಿದಾಗ ಕ್ರೈಸ್ತರೆಲ್ಲರೂ ಆತನೊಂದಿಗೆ ಐಕ್ಯವಾಗಿದ್ದಾರೆನ್ನುವ ಆಲೋಚನೆಯನ್ನು ವ್ಯಕ್ತಪಡಿಸುವುದೇ ಯೇಸುವಿನ ಉದ್ದೇಶವಾಗಿರುತ್ತದೆ. “ನನ್ನೊಂದಿಗೆ ಸೇರಿಕೊಂಡಿರುವರು ಮತ್ತು ನಾನು ಅವರೊಂದಿಗೆ ಇರುವೆನು” ಎನ್ನುವ ಮಾತನ್ನು ಯುಎಸ್.ಟಿ ಉಪಯೋಗಿಸುತ್ತದೆ. ಆದರೆ ಈ ಆಲೋಚನೆಯನ್ನು ಇತರ ವಿಧಾನಗಳಲ್ಲಿ ವ್ಯಕ್ತಪಡಿಸಲು ಅನುವಾದಕರು ಪ್ರಯತ್ನಿಸಬೇಕು.

ವಾಕ್ಯಭಾಗದಲ್ಲಿ, “ನಿಮ್ಮಲ್ಲಿ ನನ್ನ ವಾಕ್ಯಗಳು ನೆಲೆಗೊಂಡಿದ್ದರೆ” (ಯೋಹಾನ.15:7) ಎಂದು ಬರೆಯಲ್ಪಟ್ಟಿರುತ್ತದೆ, ಆದರೆ ಯುಎಸ್.ಟಿಯಲ್ಲಿ ಈ ಆಲೋಚನೆಯನ್ನು, “ನನ್ನ ಸಂದೇಶದ ಪ್ರಕಾರ ನೀವು ಜೀವಿಸುವುದಾದರೆ” ಎಂದು ಬರೆಯಲ್ಪಟ್ಟಿರುತ್ತದೆ. ಅನುವಾದಕರು ಈ ಅನುವಾದವನ್ನು ಒಂದು ಮಾದರಿಕರವಾಗಿ ಉಪಯೋಗಿಸಬಹುದು.

ಯೋಹಾನನು ಬರೆದ ಸುವಾರ್ತೆಯಲ್ಲಿರುವ ಕ್ಲಿಷ್ಟ ವಾಕ್ಯಭಾಗಗಳು ಯಾವುವು?

ಕೆಳಗಿರುವ ವಾಕ್ಯಭಾಗಗಳು ಸತ್ಯವೇದದ ಹಳೇ ಅನುವಾದಗಳಲ್ಲಿ ಕಂಡುಬರುತ್ತವೆ, ಆದರೆ ಆಧುನಿಕ ಅನುವಾದಗಳಲ್ಲಿ ಸೇರಿಸಲ್ಪಟ್ಟಿರುವದಿಲ್ಲ. ಅನುವಾದಕರು ಈ ವಾಕ್ಯಭಾಗಗಳನ್ನು ಅನುವಾದನೆ ಮಾಡಬೇಡಿರೆಂದು ಸಲಹೆ ನೀಡಲಾಗುತ್ತದೆ. ಒಂದುವೇಳೆ ಅನುವಾದಕರ ಸ್ಥಳದಲ್ಲಿ ಈ ವಾಕ್ಯಗಳನ್ನು ಸತ್ಯವೇದದ ಹಳೆಯ ಅನುವಾದಗಳಲ್ಲಿ ಸೇರಿಸಿರುವದಾದರೆ, ಅನುವಾದಕರು ಅವುಗಳನ್ನು ಸೇರಿಸಬಹುದು. ಅವರು ಅನುವಾದ ಮಾಡಿದ್ದರೆ, ಅವುಗಳನ್ನು ಯೋಹಾನನ ಸುವಾರ್ತೆಗೆ ಮೂಲ ಭಾಷೆಯಲ್ಲಿರುವವುಗಳಲ್ಲವೆಂದು ತಿಳಿಯುವುದಕ್ಕೆ ಚೌಕಿ ಆವರಣಗಳ ಚಿಹ್ನೆಗಳಲ್ಲಿ ([]) ಅವುಗಳನ್ನು ಇಡಬೇಕು.

  • ವ್ಯಭಿಚಾರದಲ್ಲಿರುವ ಹೆಂಗಸಿನ ಕಥೆ (7:53-8:11)

(ನೋಡಿರಿ: ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.)

John 1

ಯೋಹಾನ 01 ಸಾಧಾರಣ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಕೆಲವು ಅನುವಾದಗಳು ಓದಲು ಸುಲಭವಾಗುವಂತೆ ಉಳಿದ ವಚನಗಳಿಗಿಂತ ಕವಿತೆಯ ಪ್ರತಿಯೊಂದು ಸಾಲನ್ನು ಸರಿಯಾಗಿ ಹೊಂದಿಸಿ ಇಡುತ್ತಾರೆ. ಹಳೆಯ ಒಡಂಬಡಿಕೆಯ ವಚನಗಳಾದ 1:23ರಲ್ಲಿ ಕವಿತೆಯ ರೂಪದಲ್ಲಿ ಯು.ಎಲ್.ಟಿ ಇದನ್ನು ಹೊಂದಿಸಿರುತ್ತದೆ.

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

“ವಚನ”

ಯೇಸುವನ್ನು ಸೂಚಿಸುವುದಕ್ಕೆ ಯೋಹಾನನು “ವಚನ” ಎನ್ನುವ ಪದವನ್ನು ಉಪಯೋಗಿಸಿದ್ದಾನೆ ([ಯೋಹಾನ.1:1,14]) (./01.ಎಂ.ಡಿ.). ಸಮಸ್ತ ಜನರಿಗೆಲ್ಲರಿಗೂ ದೇವರ ಅತ್ಯಂತ ಪ್ರಾಮುಖ್ಯವಾದ ಸಂದೇಶವು ಭೌತಿಕ ಶರೀರದಲ್ಲಿರುವ ಒಬ್ಬ ವ್ಯಕ್ತಿಯಾದ ಯೇಸು ಆಗಿದ್ದಾನೆಂದು ಯೋಹಾನನು ಹೇಳುತ್ತಿದ್ದಾನೆ. (ನೋಡಿರಿ: ದೇವರ ವಾಕ್ಯ, ದೇವರ ವಾಕ್ಯಗಳು, ಯೆಹೋವನ ವಾಕ್ಯ, ಕರ್ತನ ವಾಕ್ಯ, ಸತ್ಯ ವಾಕ್ಯ, ಲೇಖನ, ಲೇಖನಗಳು)

ಬೆಳಕು ಮತ್ತು ಕತ್ತಲು

ಸತ್ಯವೇದವು ಅನೇಕಬಾರಿ ಜನರು ಕತ್ತಲೆಯಲ್ಲಿ ನಡೆಯುತ್ತಿರುವಂತೆ ದೇವರನ್ನು ಮೆಚ್ಚಿಸದ ಜನರ ಕುರಿತಾಗಿ ಮತ್ತು ಅನೀತಿವಂತರ ಕುರಿತಾಗಿ ಮಾತನಾಡುತ್ತದೆ. ಪಾಪಿಗಳಾದ ಜನರನ್ನು ನೀತಿವಂತರನ್ನಾಗಿಸುವಂತೆ, ಅವರು ಮಾಡುವುದು ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮತ್ತು ದೇವರಿಗೆ ವಿಧೇಯರಾಗಿರುವದಕ್ಕೆ ಬೆಳಕು ಇರುತ್ತದೆಯೆಂದು ಬೆಳಕಿನ ಕುರಿತಾಗಿ ಹೇಳಲ್ಪಟ್ಟಿದೆ. (ನೋಡಿರಿ: ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ)

“ದೇವರ ಮಕ್ಕಳು”

ಜನರು ಯೇಸುವಿನಲ್ಲಿ ನಂಬಿಕೆಯಿಟ್ಟಾಗ, ಅವರು “ಕ್ರೋಧಕ್ಕೆ ಗುರಿಯಾದ ಮಕ್ಕಳಿನ ಸ್ಥಾನ” ದಿಂದ “ದೇವರ ಮಕ್ಕಳ” ಸ್ಥಾನಕ್ಕೆ ಹೋಗಿರುತ್ತಾರೆ. ಅವರೆಲ್ಲರು ಈಗ “ದೇವರ ಕುಟುಂಬವಾಗಿದ್ದಾರೆ.” ಇದು ಹೊಸ ಒಡಂಬಡಿಕೆಯಲ್ಲಿ ಮರೆಯಾಗಿರುವ ತುಂಬಾ ಪ್ರಾಮುಖ್ಯವಾದ ವಿಷಯ. (ನೋಡಿರಿ: ನಂಬು, ನಂಬಿಕೆಗಳು, ನಂಬಿದೆ, ವಿಶ್ವಾಸಿ, ನಂಬಿಕೆ, ಅವಿಶ್ವಾಸಿ, ಅವಿಶ್ವಾಸಿಗಳು, ಆಪನಂಬಿಕೆ ಮತ್ತು ದತ್ತು ಸ್ವೀಕಾರ, ದತ್ತು ತೆಗೆದುಕೊಳ್ಳುವುದು, ದತ್ತು ತೆಗೆದುಕೊಂಡಿದ್ದಾರೆ)

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು

ರೂಪಕಲಂಕಾರಗಳು

ಯೇಸುವಿನ ಮೂಲಕ ದೇವರು ಹೇಳಬೇಕಾದ ವಿಷಯಗಳ ಕುರಿತಾಗಿ ಒಳ್ಳೆಯ ಕೆಟ್ಟ ವಿಷಯಗಳನ್ನು ಇನ್ನೂ ಹೆಚ್ಚಾಗಿ ಅವರು ಬರೆಯುತ್ತೇನೆಂದು ಓದುಗರಿಗೆ ಹೇಳುವುದಕ್ಕೆ ಯೋಹಾನನು ಬೆಳಕು, ಕತ್ತಲು ಮತ್ತು ವಚನ ಎನ್ನುವ ರೂಪಕಲಂಕಾರಗಳನ್ನು ಉಪಯೋಗಿಸುತ್ತಿದ್ದಾನೆ. (ನೋಡಿರಿ: ರೂಪಕ ಅಲಂಕಾರ)

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಇತರ ಕ್ಲಿಷ್ಟ ಸಂದರ್ಭಗಳು

“ಆದಿಯಲ್ಲಿ”

ಕೆಲವೊಂದು ಭಾಷೆಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಲೋಕವು ಯಾವಾಗಲೂ ಇರುತ್ತದೆಯೆನ್ನುವಂತೆ ಮತ್ತು ಅದಕ್ಕೆ ಆರಂಭವೇ ಇಲ್ಲ ಎನ್ನುವಂತೆ ಹೇಳುತ್ತಿರುತ್ತವೆ. ಆದರೆ “ಆದಿಯಲ್ಲಿ” ಎನ್ನುವ ಮಾತಿಗು, “ಎಷ್ಟೋ ಕಾಲದ ಹಿಂದೆ” ಎನ್ನುವ ಮಾತಿಗು ವ್ಯತ್ಯಾಸವುಂಟು. ನೀವು ಖಂಡಿತವಾಗಿ ಈ ಮಾತನ್ನು ಅನುವಾದ ಮಾಡುವಾಗ ಸರಿಯಾಗಿ ಅನುವಾದ ಮಾಡಬೇಕಾಗಿರುತ್ತದೆ.

”ಮನುಷ್ಯ ಕುಮಾರನು”

ಈ ಅಧ್ಯಾಯದಲ್ಲಿ ([ಯೋಹಾನ.1:51] (../../01/51.ಎಂ.ಡಿ.)) ಯೇಸು ತನ್ನನ್ನು ತಾನು “ಮನುಷ್ಯ ಕುಮಾರನು” ಎಂಬುದಾಗಿ ಸೂಚಿಸಿಕೊಂಡಿದ್ದಾರೆ. ಜನರು ಇತರ ವ್ಯಕ್ತಿಗಳ ಕುರಿತಾಗಿ ಮಾತನಾಡುವಹಾಗೆಯೇ, ಜನರು ತಮ್ಮ ಕುರಿತಾಗಿ ತಾವೇ ಮಾತನಾಡಿಕೊಳ್ಳುವ ಪದ್ಧತಿ ನಿಮ್ಮ ಭಾಷೆಯಲ್ಲಿ ಇರದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 1:1

ἐν ἀρχῇ

ದೇವರು ಭೂಮ್ಯಾಕಾಶಗಳನ್ನು ಸೃಷ್ಟಿಸಿದಕ್ಕಿಂತ ಮುಂಚೆಯೇ ಇದ್ದ ಕಾಲವನ್ನು ಇದು ಸೂಚಿಸುತ್ತಿದೆ.

ὁ λόγος

ಇದು ಯೇಸುವನ್ನು ಸೂಚಿಸುತ್ತದೆ. ಸಾಧ್ಯವಾದಷ್ಟು “ವಾಕ್ಯ” ಎಂದು ಅನುವಾದ ಮಾಡಿರಿ. ಒಂದುವೇಳೆ “ವಾಕ್ಯ” ಎನ್ನುವ ಪದ ನಿಮ್ಮ ಭಾಷೆಯಲ್ಲಿ ಸ್ತ್ರೀಲಿಂಗ ವಾಗಿದ್ದರೆ, “ವಾಕ್ಯ ಎಂಬಾತನು” ಎಂದು ಅನುವಾದ ಮಾಡಬಹುದು.

John 1:3

πάντα δι’ αὐτοῦ ἐγένετο

ಇದನ್ನು ಕ್ರಿಯಾಶೀಲ ಕ್ರಿಯಾಪದವಾಗಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿ ಮಾಡಿದನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

χωρὶς αὐτοῦ ἐγένετο οὐδὲ ἕν ὃ γέγονεν

ಇದನ್ನು ಕ್ರಿಯಾಶೀಲ ಕ್ರಿಯಾಪದವಾಗಿ ಅನುವಾದ ಮಾಡಬಹುದು. ನಿಮ್ಮ ಭಾಷೆಯಲ್ಲಿ ದ್ವಂದ್ವ ನಕಾರಾತ್ಮಕಗಳನ್ನು ಅನುಮತಿ ಕೊಡದಿದ್ದರೆ, “ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿಯಾಯಿತು” ಎನ್ನುವ ಮಾತುಗಳಿಗೆ ವಿರುದ್ಧವಾಗಿ ಹೇಳಲ್ಪಟ್ಟಿರುವ ಮಾತುಗಳೆಲ್ಲ ಸುಳ್ಳೆಂದು ಈ ಪದಗಳು ನಿರೂಪಿಸಬೇಕು. ಪರ್ಯಾಯ ಅನುವಾದ: “ಆತನಿಲ್ಲದೆ ದೇವರು ಒಂದಾದರೂ ಸೃಷ್ಟಿ ಮಾಡಲಿಲ್ಲ” ಅಥವಾ “ಸೃಷ್ಟಿ ಮಾಡಲ್ಪಟ್ಟ ಎಲ್ಲವು ಆತನ ಮೂಲಕ ಸೃಷ್ಟಿಸಲ್ಪಟ್ಟಿವೆ” ಅಥವಾ “ದೇವರು ಸೃಷ್ಟಿಸಿರುವ ಎಲ್ಲವನ್ನು ಆತನ ಮೂಲಕ ದೇವರು ಸೃಷ್ಟಿಸಿದ್ದಾನೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು ಮತ್ತು ದ್ವಿಗುಣ ನಕಾರಾತ್ಮಕಗಳು)

John 1:4

ἐν αὐτῷ ζωὴ ἦν, καὶ ἡ ζωὴ ἦν τὸ φῶς τῶν ἀνθρώπων

ಆತನಲ್ಲಿ ಜೀವವಿತ್ತು ಎನ್ನುವ ಮಾತು ಎಲ್ಲವನ್ನು ಜೀವಿಸುವಂತೆ ಮಾಡಿದನು ಎನ್ನುವ ಮಾತಿಗೆ ಸಮಾನರ್ಥ ಮಾತಾಗಿದೆ. ಮತ್ತು “ಬೆಳಕು” ಎನ್ನುವ ಪದವು ಇಲ್ಲಿ “ಸತ್ಯ” ಎನ್ನುವ ರೂಪಕಾಲಂಕಾರ ಪದವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಎಲ್ಲವೂ ಜೀವಂತವಾಗಿರಲು ಆತನು ಸೃಷ್ಟಿಸಿದನು. ಮತ್ತು ದೇವರು ಕುರಿತಾದ ಸತ್ಯವನ್ನು ಜನರಿಗೆ ಆತನು ಪ್ರತ್ಯಕ್ಷ ಮಾಡಿದನು” (ನೋಡಿರಿ: ಲಕ್ಷಣಾಲಂಕಾರ ಮತ್ತು ರೂಪಕ ಅಲಂಕಾರ)

ἐν αὐτῷ

ಇಲ್ಲಿ “ಆತನು” ಎನ್ನುವ ಪದವು ವಾಕ್ಯವೆಂಬಾತನನ್ನು ಸೂಚಿಸುತ್ತಿದೆ.

ζωὴ

“ಜೀವ” ಎನ್ನುವ ಪದಕ್ಕೆ ಇಲ್ಲಿ ಸಹಜವಾದ ಪದವನ್ನು ಉಪಯೋಗಿಸಿ. ನೀವು ಸ್ಪಷ್ಟವಾಗಿ ಹೇಳಬಯಸಿದರೆ, ಅದನ್ನು “ಆತ್ಮಿಯ ಜೀವನ” ಎಂದು ಅನುವಾದ ಮಾಡಿರಿ.

John 1:5

τὸ φῶς ἐν τῇ σκοτίᾳ φαίνει, καὶ ἡ σκοτία αὐτὸ οὐ κατέλαβεν

“ಬೆಳಕು” ಎನ್ನುವ ಪದವು ಇಲ್ಲಿ ಸತ್ಯ ಮತ್ತು ಒಳ್ಳೆಯದು ಎನ್ನುವ ರೂಪಕಾಲಂಕಾರ ಪದಗಳನ್ನು ಸೂಚಿಸುತ್ತಿದೆ. “ಕತ್ತಲು” ಎನ್ನುವ ಪದವು ಇಲ್ಲಿ ಸುಳ್ಳು ಮತ್ತು ದುಷ್ಟತ್ವ ಎನ್ನುವ ರೂಪಕಾಲಂಕಾರ ಪದಗಳನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಕತ್ತಲೆಯ ಸ್ಥಳದಲ್ಲಿ ಬೆಳಕು ಪ್ರಕಾಶಿಸುವಂತೆ ಸತ್ಯವಿರುತ್ತದೆ ಮತ್ತು ಕತ್ತಲೆಯ ಸ್ಥಳದಲ್ಲಿದ್ದವರಲ್ಲಿ ಯಾರಿಗೂ ಆ ಬೆಳಕನ್ನು ಹೊರಡಿಸಳು ಸದ್ಯವಾಗಲಿಲ್ಲ” (ನೋಡಿರಿ: ರೂಪಕ ಅಲಂಕಾರ)

John 1:7

μαρτυρήσῃ περὶ τοῦ φωτός

“ಬೆಳಕು” ಎನ್ನುವ ಪದವು ಇಲ್ಲಿ ಯೇಸುವಿನಲ್ಲಿ ದೇವರ ಪ್ರತ್ಯಕ್ಷತೆ ಎನ್ನುವ ರೂಪಕಾಲಂಕಾರವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಯೇಸು ಹೇಗೆ ದೇವರ ಸತ್ಯ ಬೆಳಕಾಗಿ ಇದ್ದಾನೆಂದು ತೋರಿಸುವುದು” (ನೋಡಿರಿ: ರೂಪಕ ಅಲಂಕಾರ)

John 1:9

τὸ φῶς τὸ ἀληθινὸν

ಇಲ್ಲಿ ಬೆಳಕು ಎನ್ನುವ ಪದವು ದೇವರ ಕುರಿತಾದ ಸತ್ಯವನ್ನು ಪ್ರತ್ಯಕ್ಷಪಡಿಸುವಾತನು ಮತ್ತು ಸತ್ಯವಾಗಿರುವಾತನಾಗಿ ಯೇಸು ಇದ್ದಾನೆಂದು ರೂಪಕಾಲಂಕಾರವಾಗಿ ಸೂಚಿಸುತ್ತಿದೆ. (ನೋಡಿರಿ: ರೂಪಕ ಅಲಂಕಾರ)

John 1:10

ἐν τῷ κόσμῳ ἦν, καὶ ὁ κόσμος δι’ αὐτοῦ ἐγένετο, καὶ ὁ κόσμος αὐτὸν οὐκ ἔγνω

ಆತನು ಈ ಲೋಕದಲ್ಲಿದ್ದರು ಮತ್ತು ದೇವರು ಆತನ ಮೂಲಕ ಎಲ್ಲವನ್ನು ಸೃಷ್ಟಿಸಿದರು, ಜನರು ಆತನನ್ನು ಗ್ರಹಿಸಲಿಲ್ಲ

ὁ κόσμος αὐτὸν οὐκ ἔγνω

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಆತನು ನಿಜಕ್ಕೂ ಯಾರೆಂದು ಜನರು ತಿಳಿದಿರಲಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 1:11

εἰς τὰ ἴδια ἦλθεν, καὶ οἱ ἴδιοι αὐτὸν οὐ παρέλαβον

ಆತನು ತನ್ನ ಸ್ವಂತ ಊರಿನವರ ಬಳಿಗೆ ಬಂದನು ಮತ್ತು ಆತನ ಊರಿನವರು ಸಹ ಆತನನ್ನು ಅರಿತುಕೊಳ್ಳಲಿಲ್ಲ

αὐτὸν…παρέλαβον

ಆತನನ್ನು ಅರಿಯುವುದು. ಯಾರನ್ನಾದರೂ ಸ್ವಿಕರಿಸುವುದು ಎಂದರೆ ಅವನನ್ನು ಸ್ವಾಗತಿಸುವುದು ಮತ್ತು ಅವನೊಂದಿಗೆ ಸಂಬಂಧವನ್ನು ಬಲಪಡಿಸುವ ನಿರೀಕ್ಷೆಯಲ್ಲಿ ಅವನನ್ನು ಗೌರವವಾಗಿ ನೋಡಿಕೊಳ್ಳುವುದು ಎಂದರ್ಥ.

John 1:12

πιστεύουσιν εἰς τὸ ὄνομα αὐτοῦ

“ಹೆಸರು” ಎನ್ನುವ ಪದ ಯೇಸುವಿನ ಗುರುತು ಮತ್ತು ಆತನ ಕುರಿತಾಗಿ ಎಲ್ಲ ವಿಷಯಗಳನ್ನು ಸೂಚಿಸುವ ಸಮಾನರ್ಥಕ ಮಾತಾಗಿದೆ. ಪರ್ಯಾಯ ಅನುವಾದ: “ಆತನಲ್ಲಿ ನಂಬಿಕೆ ಇಡುವುದು” (ನೋಡಿರಿ: ಲಕ್ಷಣಾಲಂಕಾರ)

ἔδωκεν…ἐξουσίαν

ಆತನು ಅವರಿಗೆ ಅಧಿಕಾರ ಕೊಟ್ಟನು ಅಥವಾ “ಆತನು ಅವರಿಗೆ ಸಾಧ್ಯವಾಗುವಂತೆ ಮಾಡಿದನು”

τέκνα Θεοῦ

“ಮಕ್ಕಳು” ಎನ್ನುವ ಪದವು ತಂದೆ ಮಗುವಿನ ಸಂಬಂಧದಂತಿರುವ ದೇವರೊಂದಿಗೆ ನಮಗಿರುವ ಸಂಬಂಧವನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. (ನೋಡಿರಿ: ರೂಪಕ ಅಲಂಕಾರ)

John 1:14

ὁ λόγος

ಇದು ಯೇಸುವನ್ನು ಸೂಚಿಸುತ್ತದೆ. ಸಾಧ್ಯವಾದಷ್ಟು “ವಾಕ್ಯ” ಎಂದು ಅನುವಾದ ಮಾಡಿರಿ. ಒಂದುವೇಳೆ “ವಾಕ್ಯ” ಎನ್ನುವ ಪದ ನಿಮ್ಮ ಭಾಷೆಯಲ್ಲಿ ಸ್ತ್ರೀಲಿಂಗ ವಾಗಿದ್ದರೆ, “ವಾಕ್ಯ ಎಂಬಾತನು” ಎಂದು ಅನುವಾದ ಮಾಡಬಹುದು. ಯೋಹಾನ.1:1 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

σὰρξ ἐγένετο

ಇಲ್ಲಿ “ಶರೀರ” ಎನ್ನುವ ಪದವು “ಒಬ್ಬ ವ್ಯಕ್ತಿ” ಅಥವಾ “ಒಬ್ಬ ಮನುಷ್ಯ” ಎನ್ನುವ ಪದಗಳನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಮಾನವನಾದನು” ಅಥವಾ “ಮನುಷ್ಯನಾದನು” (ನೋಡಿರಿ: ಉಪಲಕ್ಷಣಾಲಂಕಾರ)

μονογενοῦς παρὰ πατρός

ಆತನು ಪ್ರತ್ಯೇಕಿಸಲ್ಪಟ್ಟಿರುವನು, ಆತನಂತೆ ಇನ್ಯಾರು ಇಲ್ಲವೆಂದು “ಒಬ್ಬನೇ” ಎನ್ನುವ ಮಾತಿನ ಅರ್ಥವಾಗಿದೆ. “ತಂದೆ ಬಳಿಯಿಂದ ಬಂದಾತನು” ಎನ್ನುವ ಮಾತಿಗೆ ಆತನು ತಂದೆಯ ಮಗನೆಂದು ಅರ್ಥ. ಪರ್ಯಾಯ ಅನುವಾದ: “ತಂದೆಯ ಪ್ರತ್ಯೇಕ ಮಗನು” ಅಥವಾ “ತಂದೆಯ ಒಬ್ಬನೇ ಮಗನು”

πατρός

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

πλήρης χάριτος

ನಮ್ಮ ವಿಷಯದಲ್ಲಿ ನಡೆಯುವ ಸಂಪೂರ್ಣವಾದ ದಯೆಯ ಕೃತ್ಯಗಳು, ಈ ಕೃತ್ಯಗಳಿಗೆ ನಾವು ಅರ್ಹರಲ್ಲ

John 1:15

ὁ ὀπίσω μου ἐρχόμενος

ಯೋಹಾನನು ಯೇಸುವಿನ ಕುರಿತಾಗಿ ಹೇಳುತ್ತಿದ್ದಾನೆ. “ನನ್ನ ನಂತರ ಬರುವಾತನು” ಎನ್ನುವ ಮಾತಿಗೆ ಯೋಹಾನನ ಸೇವೆ ಪ್ರಾರಂಭವಾಗಿದೆಯೆಂದು ಮತ್ತು ಯೇಸುವಿನ ಸೇವೆ ಪ್ರಾರಂಭವಾಗುವುದೆಂದು ಅರ್ಥ.

ἔμπροσθέν μου γέγονεν

ನನಗಿಂತ ಪ್ರಾಮುಖ್ಯವಾದವನು ಅಥವಾ “ನನಗಿಂತ ಹೆಚ್ಚಿನ ಅಧಿಕಾರ ಹೊಂದಿರುವಾತನು”

ὅτι πρῶτός μου ἦν

ಮಾನವ ರೂಪದಲ್ಲಿ ಯೇಸು ಯೋಹಾನನಗಿಂತ ದೊಡ್ಡವನಾಗಿರುವದರಿಂದ ಆತನು ಪ್ರಾಮುಖ್ಯನಾಗಿದ್ದಾನೆ ಎನ್ನುವ ಅರ್ಥ ಬರದಂತೆ ಅನುವಾದ ಮಾಡುವಾಗ ಜಾಗ್ರತೆಯಿಂದ ನೋಡಿಕೊಳ್ಳಿರಿ. ಯೇಸು ಎಂದೆಂದಿಗೂ ಜೀವಿಸುವ ದೇವರ ಮಗನಾಗಿದ್ದ ಕಾರಣ ಆತನು ಯೋಹಾನನಗಿಂತ ಪ್ರಾಮುಖ್ಯನು ಮತ್ತು ದೊಡ್ಡವನು ಆಗಿದ್ದಾನೆ.

John 1:16

τοῦ πληρώματος

ಈ ಮಾತು ಮಿತಿಯಿಲ್ಲದ ದೇವರ ಕೃಪೆಯನ್ನು ಸೂಚಿಸುತ್ತಿದೆ.

χάριν ἀντὶ χάριτος

ಕೃಪೆಯ ಮೇಲೆ ಕೃಪೆಯನ್ನು

John 1:18

Πατρὸς

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 1:19

ἀπέστειλαν οἱ Ἰουδαῖοι ἐξ Ἱεροσολύμων

“ಯೆಹೂದ್ಯರು” ಎನ್ನುವ ಪದವು “ಯೆಹೂದ್ಯರ ನಾಯಕರನ್ನು” ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು ಅವನಿಗಾಗಿ ಯೆರೂಸಲೇಮಿನಿಂದ... ಕಳುಹಿಸಿದರು” (ನೋಡಿರಿ: ಉಪಲಕ್ಷಣಾಲಂಕಾರ)

John 1:20

ὡμολόγησεν καὶ οὐκ ἠρνήσατο, καὶ ὡμολόγησεν

“ಅವನು ಒಪ್ಪಿಕೊಂಡನು” ಎನ್ನುವ ಸಕಾರಾತ್ಮಕ ಮಾತಿನ ಅರ್ಥದಂತೆಯೇ “ಅವನು ಮರೆಮಾಡದೇ” ಎನ್ನುವ ನಕಾರಾತ್ಮಕವಾದ ಮಾತಿನ ಅರ್ಥವಾಗಿದೆ. ಯೋಹಾನನು ಸತ್ಯವನ್ನು ಹೇಳುತ್ತಿದ್ದಾನೆಂದು ಮತ್ತು ಅವನು ಕ್ರಿಸ್ತನಲ್ಲ ಎನ್ನುವ ವಿಷಯವನ್ನು ಬಲವಾಗಿ ಹೇಳುತ್ತಿದ್ದಾನೆ ಎಂದು ಈ ಮಾತು ಒತ್ತಾಯಿಸಿ ಹೇಳುತ್ತಿದೆ. ಇದನ್ನು ಮಾಡಲು ನಿಮ್ಮ ಭಾಷೆಯಲ್ಲಿ ಬೇರೆ ರೀತಿ ಇರಬಹುದು.

John 1:21

τί οὖν? σὺ

ಹಾಗಾದರೆ ನೀನು ಮೆಸ್ಸೀಯನು ಆಗದಿದ್ದರೆ, ಏನು? ಅಥವಾ “ಹಾಗಾದರೆ ಏನು ನಡೆಯುತ್ತಿದೆ?” ಅಥವಾ “ಹಾಗಾದರೆ ನೀನು ಏನು ಮಾಡುತ್ತಿದ್ದೀಯಾ?”

John 1:22

ಯೋಹಾನನು ಯಾಜಕರು ಮತ್ತು ಲೇವಿಯರೊಂದಿಗೆ ಮಾತಾಡುವುದನ್ನು ಮುಂದುವರೆಸುತ್ತಿದ್ದಾನೆ.

εἶπαν…αὐτῷ

ಯಾಜಕರು ಮತ್ತು ಲೇವಿಯರು ಯೋಹಾನನಿಗೆ ಹೇಳಿದರು

δῶμεν…ἡμᾶς

ಯಾಜಕರು ಮತ್ತು ಲೇವಿಯರು, ಯೋಹಾನನು ಅಲ್ಲ (ನೋಡಿರಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)

John 1:23

ἔφη

ಯೋಹಾನನು ಹೇಳಿದನು

ἐγὼ φωνὴ βοῶντος ἐν τῇ ἐρήμῳ

ಯೆಶಾಯ ಪ್ರವಾದನೆ ಅವನ ಕುರಿತಾಗಿದೆ ಎಂದು ಯೋಹಾನನು ಹೇಳುತ್ತಿದ್ದಾನೆ. “ಧ್ವನಿ” ಎನ್ನುವ ಪದವು ಇಲ್ಲಿ ಅಡವಿಯಲ್ಲಿ ಕೂಗುತ್ತಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಅಡವಿಯಲ್ಲಿ ಕೂಗುತ್ತಿರುವ ವ್ಯಕ್ತಿಯು ನಾನೇ” (ನೋಡಿರಿ: ಲಕ್ಷಣಾಲಂಕಾರ)

εὐθύνατε τὴν ὁδὸν Κυρίου

“ದಾರಿ” ಎನ್ನುವ ಪದವನ್ನು ರೂಪಕಾಲಂಕಾರವಾಗಿ ಉಪಯೋಗಿಸಲ್ಪಟ್ಟಿದೆ. ಪರ್ಯಾಯ ಅನುವಾದ: “ಪ್ರಾಮುಖ್ಯವಾದ ವ್ಯಕ್ತಿಗಾಗಿ ಜನರು ದಾರಿಯನ್ನು ಸಿದ್ಧಪಡಿಸಿದಂತೆ ಕರ್ತನ ಬರೋಣಕ್ಕಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಿರಿ” (ನೋಡಿರಿ: ರೂಪಕ ಅಲಂಕಾರ)

John 1:24

καὶ ἀπεσταλμένοι ἦσαν ἐκ τῶν Φαρισαίων

ಇದು ಯೋಹಾನನನ್ನು ಪ್ರಶ್ನಿಸಿದ ಜನರ ಹಿನ್ನೆಲೆ ಸಮಾಚಾರವಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 1:26

ಕಥೆಯ ಕ್ರಮವನ್ನು ಕುರಿತಾದ ಹಿನ್ನೆಲೆ ಸಮಾಚಾರವನ್ನು 28ನೇ ವಚನ ನೀಡುತ್ತಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 1:27

ὀπίσω μου ἐρχόμενος

ಆತನು ಬಂದಮೇಲೆ ಆತನು ಏನು ಮಾಡುವನು ಎನ್ನುವ ವಿಷಯವನ್ನು ನೀವು ಸ್ಪಷ್ಟವಾಗಿ ಹೇಳುವ ಅವಶ್ಯಕತೆಯುಂಟು. ಪರ್ಯಾಯ ಅನುವಾದ: “ನಾನು ಹೋದ ನಂತರ ನಿಮಗೆ ಬೋಧಿಸುವಾತನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

μου…οὗ οὐκ εἰμὶ ἐγὼ ἄξιος, ἵνα λύσω αὐτοῦ τὸν ἱμάντα τοῦ ὑποδήματος

ಪಾದರಕ್ಷೆಗಳನ್ನು ಬಿಚ್ಚುವುದು ಒಬ್ಬ ಗುಲಾಮ ಅಥವಾ ಸೇವಕನ ಕೆಲಸವಾಗಿತ್ತು. ಗುಲಾಮನ ಅತಿ ಕೆಳಮಟ್ಟದ ಕೆಲಸವನ್ನು ಸೂಚಿಸಲು ಈ ಮಾತುಗಳನ್ನು ರೂಪಕಾಲಂಕಾರವಾಗಿ ಉಪಯೋಗಿಸಲ್ಪಟ್ಟಿವೆ. ಪರ್ಯಾಯ ಅನುವಾದ: “ನಾನು, ಅತಿ ಕೆಳಮಟ್ಟದ ಕೆಲಸವನ್ನು ಮಾಡಲು ಸಹ ಯೋಗ್ಯನಲ್ಲ” ಅಥವಾ “ನಾನು. ಆತನ ಚಪ್ಪಲಿಗಳ ಪಟ್ಟಿ ಬಿಚ್ಚುವುದಕ್ಕು ನಾನು ಯೋಗ್ಯನಲ್ಲ” (ನೋಡಿರಿ: ರೂಪಕ ಅಲಂಕಾರ)

John 1:29

Ἀμνὸς τοῦ Θεοῦ

ದೇವರ ಪರಿಪೂರ್ಣವಾದ ಯಜ್ಞವನ್ನು ಸೂಚಿಸಲು ಇದನ್ನು ರೂಪಕಾಲಂಕಾರವಾಗಿ ಉಪಯೋಗಿಸಲ್ಪಟ್ಟಿದೆ. “ದೇವರ ಯಜ್ಞಕುರಿಮರಿ” ಎಂದು ಯೇಸು ಕರೆಯಲ್ಪಟ್ಟಿದ್ದನು ಯಾಕಂದರೆ ಆತನು ಜನರ ಪಾಪಗಳಿಗಾಗಿ ಯಜ್ಞವಾಗಿ ಅರ್ಪಿಸಲ್ಪಟ್ಟಿದ್ದನು. (ನೋಡಿರಿ: ರೂಪಕ ಅಲಂಕಾರ)

κόσμου

“ಲೋಕ” ಎನ್ನುವ ಪದವು ರೂಪಕಾಲಂಕಾರವಾಗಿದೆ ಮತ್ತು ಅದು ಲೋಕದಲ್ಲಿರುವ ಎಲ್ಲಾ ಜನರನ್ನು ಸೂಚಿಸುತ್ತಿದೆ. (ನೋಡಿರಿ: ಲಕ್ಷಣಾಲಂಕಾರ)

John 1:30

ὀπίσω μου ἔρχεται ἀνὴρ, ὃς ἔμπροσθέν μου γέγονεν, ὅτι πρῶτός μου ἦν.

ಯೋಹಾನ.1:15 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

John 1:32

καταβαῖνον

ಮೇಲಿನಿಂದ ಕೆಳಗೆ ಇಳಿಯುವುದು

ὡς περιστερὰν

ಈ ಮಾತು ಉಪಮಾಲಂಕಾರವಾಗಿದೆ. “ದೇವರತ್ಮನು” ಪಾರಿವಾಳದಂತೆ ಇಳಿದುಬಂದು ಆ ವ್ಯಕ್ತಿಯ ಮೇಲೆ ನೆಲೆಗೊಂಡಿತು. (ನೋಡಿರಿ: ಉಪಮಾಲಂಕಾರ.)

οὐρανοῦ

“ಪರಲೋಕ” ಎನ್ನುವ ಪದವು “ಆಕಾಶವನ್ನು” ಸೂಚಿಸುತ್ತಿದೆ.

John 1:34

ὁ Υἱὸς τοῦ Θεοῦ

ಕೆಲವೊಂದು ಪ್ರತಿಗಳಲ್ಲಿ ಈ ಮಾತನ್ನು “ದೇವ ಕುಮಾರನು” ಎಂದು ಹೇಳುತ್ತಿವೆ; ಬೇರೆ ಪ್ರತಿಗಳಲ್ಲಿ “ದೇವರು ಆಯ್ಕೆ ಮಾಡಿದಾತನು” ಎಂದು ಹೇಳುತ್ತಿವೆ. (ನೋಡಿರಿ: ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.)

Υἱὸς τοῦ Θεοῦ

ಇದು ದೇವರ ಮಗನಾದ ಯೇಸುವಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 1:35

τῇ ἐπαύριον πάλιν

ಇದು ಮತ್ತೊಂದು ದಿನ. ಯೋಹಾನನು ಯೇಸುವನ್ನು ಎರಡನೆಯ ದಿನದಂದು ನೋಡಿದನು.

John 1:36

Ἀμνὸς τοῦ Θεοῦ

ದೇವರ ಪರಿಪೂರ್ಣವಾದ ಯಜ್ಞವನ್ನು ಸೂಚಿಸಲು ಇದನ್ನು ರೂಪಕಾಲಂಕಾರವಾಗಿ ಉಪಯೋಗಿಸಲ್ಪಟ್ಟಿದೆ. “ದೇವರ ಯಜ್ಞದಕುರಿಮರಿ” ಎಂದು ಯೇಸು ಕರೆಯಲ್ಪಟ್ಟಿದ್ದನು ಯಾಕಂದರೆ ಆತನು ಜನರ ಪಾಪಗಳಿಗಾಗಿ ಯಜ್ಞವಾಗಿ ಅರ್ಪಿಸಲ್ಪಟ್ಟಿದ್ದನು. ಯೋಹಾನ.1:29 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

John 1:39

ὥρα…δεκάτη

10ನೇ ಗಂಟೆ. ಈ ಮಾತು ಕತ್ತಲಾಗದ ಮುಂಚೆ ಮಧ್ಯಾಹ್ನ ಸಮಯವನ್ನು ಸೂಚಿಸುತ್ತಿದೆ, ಆ ವೇಳೆಯಲ್ಲಿ ಬೇರೆ ಊರಿಗೆ ಪ್ರಯಾಣಿಸುವುದಕ್ಕೆ ತುಂಬಾ ಆಲಸ್ಯವಾಗಿರುವುದು, ಬಹುಶಃ ಸಂಜೆ 4 ಗಂಟೆ ಇರಬಹುದು.

John 1:40

ಈ ವಚನಗಳು ಅಂದ್ರೆಯನ ಕುರಿತು ಮತ್ತು ಅವನು ತನ್ನ ಸಹೋದರನಾದ ಪೇತ್ರನನ್ನು ಹೇಗೆ ಯೇಸುವಿನ ಬಳಿಗೆ ತಂದನು ಎನ್ನುವ ಸಮಾಚಾರವನ್ನು ಕೊಡುತ್ತವೆ. ಅವರು ಹೋಗಿ ಯೇಸು ಎಲ್ಲಿರುವುದನ್ನು ನೋಡುವದಕ್ಕಿಂತ ಮೊದಲು ಈ ಕಾರ್ಯ ನಡೆಯಿತು ಯೋಹಾನ.1:39

John 1:42

υἱὸς Ἰωάννου

ಇವನು ಸ್ನಾನಿಕನಾದ ಯೋಹಾನನು ಅಲ್ಲ. “ಯೋಹಾನ” ಎನ್ನುವುದು ಸಹಜವಾದ ಹೆಸರಾಗಿತ್ತು.

John 1:44

ἦν δὲ ὁ Φίλιππος ἀπὸ Βηθσαϊδά, ἐκ τῆς πόλεως Ἀνδρέου καὶ Πέτρου

ಇದು ಫಿಲಿಪ್ಪನ ಕುರಿತಾದ ಹಿನ್ನೆಲೆ ಸಮಾಚಾರವಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 1:46

εἶπεν αὐτῷ Ναθαναήλ

ನತಾನಯೇಲನು ಫಿಲಿಪ್ಪನಿಗೆ ಹೇಳಿದನು

ἐκ Ναζαρὲτ δύναταί τι ἀγαθὸν εἶναι

ಈ ಮಾತು ಹೆಚ್ಚಿನ ಪ್ರಭಾವವನ್ನು ತೋರಿಸಲು ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ನಜರೇತಿನಿಂದ ಒಳ್ಳೆಯದೇನು ಬರಲು ಸಾಧ್ಯವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 1:47

ἐν ᾧ δόλος οὐκ ἔστιν

ಇದನ್ನು ಸಕಾರಾತ್ಮಕ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಸಂಪೂರ್ಣವಾಗಿ ಸತ್ಯವಂತನಾಗಿರುವ ಮನುಷ್ಯನು” (ನೋಡಿರಿ: ಲಿಟೋಟ್ಸ್.)

John 1:49

Υἱὸς τοῦ Θεοῦ

ಇದು ಯೇಸುವಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 1:50

ὅτι εἶπόν σοι, ὅτι εἶδόν σε ὑποκάτω τῆς συκῆς, πιστεύεις

ಈ ಮಾತು ಹೆಚ್ಚಿನ ಪ್ರಭಾವವನ್ನು ತೋರಿಸಲು ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ನಾನು ನಿನಗೆ ಹೇಳಿದ ಮಾತ್ರಕ್ಕೆ ನಂಬುತ್ತೀಯೋ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 1:51

ἀμὴν, ἀμὴν

ಇದಾದ ಮೇಲೆ ಬರುವ ವಿಷಯಗಳು ಪ್ರಾಮುಖ್ಯವಾಗಿವೆ ಮತ್ತು ಸತ್ಯವಾಗಿವೆ ಎಂದು ಒತ್ತಾಯಿಸಿ ಹೇಳುವ ರೀತಿಯಲ್ಲಿ ನಿಮ್ಮ ಭಾಷೆಯಲ್ಲಿ ಅನುವಾದ ಮಾಡಿರಿ.

John 2

ಯೋಹಾನ 02 ಸಾಧಾರಣ ವಿಷಯಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

ದ್ರಾಕ್ಷೆರಸ

ಯೆಹೂದ್ಯರು ಊಟ ಮಾಡುವ ಪ್ರತಿಯೊಂದುಬಾರಿ ದ್ರಾಕ್ಷೆರಸವನ್ನು ಕುಡಿಯುತ್ತಾರೆ, ಪ್ರತ್ಯೇಕವಾಗಿ ಅವರು ವಿಶೇಷ ಘಟನೆಗಳು ನಡೆದಾಗ ಹೆಚ್ಚಾಗಿ ಕುಡಿಯುತ್ತಾರೆ. ದ್ರಾಕ್ಷೆರಸವನ್ನು ಕುಡಿಯುವುದು ಪಾಪವೆಂದು ಅವರು ನಂಬುವುದಿಲ್ಲ.

ಹಣಕಾಸುಗಳನ್ನು ಬದಲಿಸುವವರನ್ನು ಓಡಿಸುವುದು

ಯೇಸುವಿಗೆ ದೇವಾಲಯದ ಮೇಲೆ ಮತ್ತು ಇಸ್ರಾಯೇಲ್ಯರ ಮೇಲೆ ಅಧಿಕಾರವಿದೆಯೆಂದು ತೋರಿಸುವುದಕ್ಕೆ ದೇವಾಲಯದಿಂದ ಹಣ ಬದಲಿಸುವವರನ್ನು ಓಡಿಸಿದನು.

“ಮನುಷ್ಯನಲ್ಲಿರುವುದು ಆತನಿಗೆ ಗೊತ್ತಿತ್ತು”

ಯೇಸು ಮನುಷ್ಯ ಕುಮಾರನು ಮತ್ತು ದೇವರ ಮಗನು ಆಗಿರುವದರಿಂದ ಇತರ ಜನರು ಏನು ಆಲೋಚನೆ ಮಾಡುತ್ತಾರೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಇತರ ಕ್ಲಿಷ್ಟ ಭಾಗಗಳು

“ಆತನ ಶಿಷ್ಯರು ಜ್ಞಾಪಕ ಮಾಡಿಕೊಂಡರು”

ಮುಖ್ಯ ಚರಿತ್ರೆಯನ್ನು ಹೇಳುವದನ್ನು ನಿಲ್ಲಿಸುವುದಕ್ಕೆ ಮತ್ತು ನಂತರ ನಡೆದ ಅನೇಕ ವಿಷಯಗಳ ಕುರಿತಾಗಿ ಹೇಳುವುದಕ್ಕೆ ಯೋಹಾನನು ಈ ಮಾತನ್ನು ಉಪಯೋಗಿಸಿದ್ದಾರೆ. ಆತನು ಪಾರಿವಾಳಗಳ ಮಾರಾಟಗಾರರನ್ನು ಗದರಿಸಿದನಂತರ ([ಯೋಹಾನ.2:16] (../../ಯೋಹಾನ/02/16.ಎಂ.ಡಿ.)) ಯೆಹೂದ್ಯರ ಅಧಿಕಾರಿಗಳು ಆತನೊಂದಿಗೆ ಮಾತನಾಡಿದರು. ಯೇಸು ಜೀವಿತನಾಗಿ ತಿರುಗಿ ಎದ್ದು ಬಂದನಂತರ ಯೇಸು ತನ್ನ ದೇಹವಾಗಿರುವ ದೇವಾಲಯ ಕುರಿತಾಗಿ ಮಾತನಾಡಿದ ಮಾತುಗಳನ್ನು ಮತ್ತು ಎಷ್ಟೋ ಕಾಲದ ಹಿಂದೆ ಪ್ರವಾದಿಗಳು ಬರೆದಿರುವವುಗಳನ್ನು ತನ್ನ ಶಿಷ್ಯರು ಜ್ಞಾಪಕ ಮಾಡಿಕೊಂಡರು ([ಯೋಹಾನ.2:17] (../../ಯೋಹಾನ/02/17.ಎಮ್.ಡಿ.) ಮತ್ತು [ಯೋಹಾನ.2:22] (../../ಯೋಹಾನ/02/22.ಎಂ.ಡಿ.)).

John 2:1

ಯೇಸು ಮತ್ತು ಆತನ ಶಿಷ್ಯರನ್ನು ಮದುವೆಗೆ ಕರೆದಿದ್ದರು. ಕಥೆಯ ಕ್ರಮವನ್ನು ಕುರಿತಾದ ಹಿನ್ನೆಲೆ ಸಮಾಚಾರವನ್ನು ಈ ವಚನಗಳು ನೀಡುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

τῇ ἡμέρᾳ τῇ τρίτῃ

ಯೇಸು ಫಿಲಿಪ್ಪನನ್ನು ಮತ್ತು ನತಾನಯೇಲನನ್ನು ಕರೆದ ದಿನದಿಂದ ಮೂರನೆಯ ದಿನವೆಂದು ಅನೇಕ ವ್ಯಾಖ್ಯಾನಕಾರರು ಹೇಳುತ್ತಾರೆ. ಮೊದಲನೆಯ ದಿನ ಯೋಹಾನ.1:35ನೇ ವಚನದಲ್ಲಿ ಮತ್ತು ಎರಡನೆಯ ದಿನ ಯೋಹಾನ.1:43ನೇ ವಚನದಲ್ಲಿ ಕಾಣುತ್ತದೆ.

John 2:2

ἐκλήθη…ὁ Ἰησοῦς καὶ οἱ μαθηταὶ αὐτοῦ εἰς τὸν γάμον

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಯೇಸು ಮತ್ತು ಆತನ ಶಿಷ್ಯರನ್ನು ಯಾರೋ ಮದುವೆಗೆ ಕರೆದಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 2:4

γύναι

ಇದು ಮರಿಯಳನ್ನು ಸೂಚಿಸುತ್ತಿದೆ. ಒಬ್ಬ ಮಗನು ತನ್ನ ತಾಯಿಯನ್ನು “ಸ್ತ್ರೀ” ಎಂದು ಕರೆಯುವುದು ನಿಮ್ಮ ಭಾಷೆಯಲ್ಲಿ ಅಸಭ್ಯವಾಗಿದ್ದರೆ, ಅದಕ್ಕೆ ಬದಲಾಗಿ ಬೇರೆ ಮರ್ಯಾದೆಯ ಪದವನ್ನು ಉಪಯೋಗಿಸಿ ಅಥವಾ ಅದನ್ನು ಬಿಟ್ಟುಬಿಡಿರಿ.

τί ἐμοὶ καὶ σοί

ಒತ್ತಾಯಿಸಿ ಹೇಳುವದಕ್ಕಾಗಿ ಈ ಪ್ರಶ್ನೆಯನ್ನು ಕೇಳಲಾಗಿದೆ. ಪರ್ಯಾಯ ಅನುವಾದ: “ಇದಕ್ಕೂ ನನಗು ಯಾವ ಸಂಬಂಧವು ಇಲ್ಲ” ಅಥವಾ “ನಾನು ಏನು ಮಾಡಬೇಕೆಂದು ನೀನು ಹೇಳಬಾರದು.” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

οὔπω ἥκει ἡ ὥρα μου

ಯೇಸು ಮೆಸ್ಸೀಯ ಎಂದು ಅದ್ಭುತ ಕಾರ್ಯಗಳ ಮೂಲಕ ತೋರಿಸಿಕೊಳ್ಳಲು ಸರಿಯಾದ ಸಮಯವನ್ನು ಸೂಚಿಸಲು “ಸಮಯ” ಎನ್ನುವ ಪದವನ್ನು ಪರ್ಯಾಯ ಪದವಾಗಿ ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: “ಅದ್ಭುತ ಕಾರ್ಯ ಮಾಡಲು ನನಗೆ ಇದು ಸರಿಯಾದ ಸಮಯವಲ್ಲ” (ನೋಡಿರಿ: ಲಕ್ಷಣಾಲಂಕಾರ)

John 2:6

μετρητὰς δύο ἢ τρεῖς

ಇದನ್ನು ನೀವು ಆಧುನಿಕ ಅಳತೆಗೆ ಬದಲಾಯಿಸಬಹುದು. ಪರ್ಯಾಯ ಅನುವಾದ: “75 ರಿಂದ 115 ಲೀಟರ್ಗಳು” (ನೋಡಿರಿ: ಸತ್ಯವೇದದಲ್ಲಿನ ಪರಿಮಾಣಗಳು (ಘನ / ದ್ರವ))

John 2:7

ἕως ἄνω

“ಮೇಲಿನವರೆಗೆ” ಅಥವಾ “ಸಂಪೂರ್ಣವಾಗಿ ತುಂಬಿದೆ” ಎಂದು ಇದರ ಅರ್ಥವಾಗಿದೆ.

John 2:8

τῷ ἀρχιτρικλίνῳ

ಇದು ಆಹಾರ ಮತ್ತು ಪಾನೀಯಗಳ ಮೇಲ್ವಿಚಾರಕನಾಗಿರುವ ವ್ಯಕ್ತಿಯನ್ನು ಸೂಚಿಸುತ್ತಿದೆ.

John 2:9

οἱ δὲ διάκονοι ᾔδεισαν, οἱ ἠντληκότες τὸ ὕδωρ

ಇದು ಹಿನ್ನೆಲೆ ಸಮಾಚಾರವಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 2:10

μεθυσθῶσιν

ಹೆಚ್ಚಾಗಿ ಮಧ್ಯಸಾರ ಕುಡಿದಿರುವ ಕಾರಣವಾಗಿ ಸಾಮಾನ್ಯವಾದ ದ್ರಾಕ್ಷಾರಸ ಮತ್ತು ಉತ್ತಮವಾದ ದ್ರಾಕ್ಷಾರಸ ಮಧ್ಯದಲ್ಲಿರುವ ವ್ಯತ್ಯಾಸ ಹೇಳಲು ಸಾಧ್ಯವಿಲ್ಲ

John 2:11

ಈ ವಚನ ಮುಖ್ಯ ಕಥೆಯ ಭಾಗವಾಗಿ ಇರುವದಿಲ್ಲ, ಆದರೆ ಅದು ಕಥೆಯ ಕುರಿತು ವ್ಯಾಖ್ಯೆ ಕೊಡುತ್ತದೆ. (ನೋಡಿರಿ: ಹೊಸ ಘಟನೆಯ ಪರಿಚಯ.)

Κανὰ

ಇದು ಸ್ಥಳದ ಹೆಸರು. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

ἐφανέρωσεν τὴν δόξαν αὐτοῦ

“ತನ್ನ ಮಹಿಮೆ” ಎನ್ನುವ ಮಾತು ಯೇಸುವಿನ ಬಲವಾದ ಶಕ್ತಿಯನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಆತನ ಶಕ್ತಿಯನ್ನು ತೋರಿಸಿದನು”

John 2:12

κατέβη

ಅವರು ಹೆಚ್ಚಿನ ಎತ್ತರ ಸ್ಥಳದಿಂದ ಕಡಿಮೆ ಎತ್ತರ ಸ್ಥಳಕ್ಕೆ ಹೋದರೆಂದು ಇದು ಸೂಚಿಸುತ್ತಿದೆ. ಕಾನಾ ಊರಿನ ಈಶಾನ್ಯದಲ್ಲಿ ಮತ್ತು ಕಡಿಮೆ ಎತ್ತರದಲ್ಲಿ ಕಪೆರ್ನೌಮ್ ಇತ್ತು.

οἱ ἀδελφοὶ

“ತಮ್ಮಂದಿರು” ಎನ್ನುವ ಪದ ತಮ್ಮಂದಿರು ಮತ್ತು ತಂಗಿಯರನ್ನು ಸೂಚಿಸುತ್ತಿದೆ. ಯೇಸು ತಮ್ಮಂದಿರು ಮತ್ತು ತಂಗಿಯರು ಆತನಿಗಿಂತ ಚಿಕ್ಕವರಾಗಿದ್ದರು.

John 2:13

ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮ್ ದೇವಾಲಯಕ್ಕೆ ಹೋದರು.

ἀνέβη εἰς Ἱεροσόλυμα

ಆತನು ಕಡಿಮೆ ಎತ್ತರ ಸ್ಥಳದಿಂದ ಹೆಚ್ಚಿನ ಎತ್ತರ ಸ್ಥಳಕ್ಕೆ ಹೋದನೆಂದು ಇದು ಸೂಚಿಸುತ್ತಿದೆ. ಯೆರೂಸಲೇಮ್ ಒಂದು ಬೆಟ್ಟದ ಮೇಲೆ ಕಟ್ಟಲ್ಪಟ್ಟಿತ್ತು.

John 2:14

καθημένους

ಈ ಜನರು ದೇವಾಲಯದ ಪ್ರಾಂಗಣದಲ್ಲಿದ್ದಾರೆಂದು ಮುಂದಿನ ವಚನ ಸ್ಪಷ್ಟವಾಗಿ ತಿಳಿಸುತ್ತಿದೆ. ಆ ಸ್ಥಳವು ಆರಾಧನೆ ಸ್ಥಳವಾಗಿತ್ತೇ ಹೊರತು ಅಲ್ಲಿ ವ್ಯಾಪಾರ ನಡೆಸಲುದ್ದೇಶಿಸಿರಲಿಲ್ಲ.

τοὺς πωλοῦντας βόας καὶ πρόβατα καὶ περιστερὰς

ದೇವರಿಗೆ ಯಜ್ಞವನ್ನು ಅರ್ಪಿಸಲು ಜನರು ದೇವಾಲಯದ ಪ್ರಾಂಗಣದಲ್ಲಿ ಪ್ರಾಣಿಗಳನ್ನು ಕೊಂಡುಕೊಳ್ಳುತ್ತಿದ್ದರು.

κερματιστὰς

ಯಜ್ಞಕ್ಕಾಗಿ ಪ್ರಾಣಿಗಳನ್ನು ಕೊಂಡುಕೊಳ್ಳುವವರು “ಹಣ ವಿನಿಮಯ” ಮಾಡುವವರಿ೦ದ ವಿಶೇಷವಾದ ಹಣವನ್ನು ಬದಲಿಸುವುದು ಅಗತ್ಯವೆಂದು ಯೆಹೂದ್ಯರ ಅಧಿಕಾರಿಗಳು ಬಯಸಿದರು.

John 2:15

καὶ

ಮೊದಲು ಆಗಿರುವ ಸಂಘಟನೆಯ ಪರಿಣಾಮವಾಗಿ ಆಗುವ ಮತ್ತೊಂದು ಸಂಘಟನೆಯನ್ನು ಈ ಪದ ಸೂಚಿಸುತ್ತಿದೆ. ಈ ಸಂಧರ್ಭದಲ್ಲಿ, ದೇವಾಲಯದಲ್ಲಿ ಹಣ ವಿನಿಮಯರು ಕುಳಿತಿರುವದನ್ನು ಯೇಸು ನೋಡಿದ್ದನು.

John 2:16

μὴ ποιεῖτε τὸν οἶκον τοῦ πατρός μου οἶκον ἐμπορίου

ನನ್ನ ತಂದೆಯ ಮನೆಯಲ್ಲಿ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕು ಮತ್ತು ವಿಕ್ರಯಿಸುವುದನ್ನು ನಿಲ್ಲಿಸಿ

τὸν οἶκον τοῦ πατρός μου

ದೇವಾಲಯವನ್ನು ಸೂಚಿಸಲು ಯೇಸು ಈ ಮಾತನ್ನು ಉಪಯೋಗಿಸಿದ್ದಾನೆ.

τοῦ πατρός μου

ಇದು ಯೇಸು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 2:17

γεγραμμένον ἐστίν

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಯಾರೋ ಬರೆದಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

τοῦ οἴκου σου

ಈ ಮಾತು ದೇವರ ಮನೆಯಾಗಿರುವ ದೇವಾಲಯವನ್ನು ಸೂಚಿಸುತ್ತಿದೆ.

καταφάγεταί

“ದಹಿಸುತ್ತಿದೆ” ಎನ್ನುವ ಮಾತು “ಬೆಂಕಿ” ಎನ್ನುವ ಪದಕ್ಕೆ ರೂಪಕಾಲಂಕಾರವಾಗಿದೆ. ದೇವಾಲಯದ ಮೇಲೆ ಯೇಸು ಪ್ರೀತಿ ತನ್ನಲ್ಲಿ ದಹಿಸುತ್ತಿರುವ ಬೆಂಕಿಯಂತೆ ಇರುವುದು. (ನೋಡಿರಿ: ರೂಪಕ ಅಲಂಕಾರ)

John 2:18

σημεῖον

ಒಂದು ಸಂಘಟನೆ ಸತ್ಯವೆಂದು ನಿರೂಪಿಸುವುದನ್ನು ಇದು ಸೂಚಿಸುತ್ತಿದೆ.

ταῦτα

ದೇವಾಲಯದಲ್ಲಿ ಹಣ ವಿನಿಮಯ ಮಾಡುವವರ ಮೇಲೆ ಯೇಸು ಸಿಟ್ಟಿಗೆದ್ದು ಓಡಿಸಿದ್ದನ್ನು ಇದು ಸೂಚಿಸುತ್ತಿದೆ.

John 2:19

λύσατε τὸν ναὸν τοῦτον, καὶ ἐν τρισὶν ἡμέραις ἐγερῶ αὐτόν

ನಿಜವೆಂದು ನಂಬದಿರುವ ವಿಷಯವು ನಿಜವಾದಾಗ ಏನೋ ಒಂದು ತಪ್ಪದೇ ನಡೆಯುತ್ತದೆಯೆನ್ನುವ ಎನ್ನುವ ಸ್ಥಿತಿಯಲ್ಲಿ ಯೇಸು ಕಾಲ್ಪನಿಕ ಪರಿಸ್ಥಿತಿಯನ್ನು ವಿವರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯೆಹೂದ್ಯರ ಅಧಿಕಾರಗಳು ದೇವಾಲಯವನ್ನು ಬೀಳಿಸಿದರೂ ಯೇಸು ಅದನ್ನು ತಪ್ಪದೇ ತಿರಿಗಿ ಕಟ್ಟುವನು. ವಾಸ್ತವಿಕವಾದ ಭೌತಿಕ ದೇವಾಲಯವನ್ನು ಕೆಡವುತ್ತೇನೆಂದು ಯೇಸು ಯೆಹೂದ್ಯರ ಅಧಿಕಾರಿಗಳಿಗೆ ಹೇಳುತ್ತಿಲ್ಲ. “ನಾಶಮಾಡುವುದು” ಮತ್ತು “ಎಬ್ಬಿಸುವುದು” ಎನ್ನುವ ಮಾತುಗಳನ್ನು ನೀವು ಕೆಡವುದು ಮತ್ತು ತಿರಿಗಿ ಕಟ್ಟುವುದು ಎನ್ನುವ ಸಾಮಾನ್ಯ ಮಾತುಗಳಿಂದ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನೀವು ಈ ದೇವಾಲಯವನ್ನು ನಾಶಗೊಳಿಸಿದರೆ, ನಾನು ಅದನ್ನು ತಪ್ಪದೇ ತಿರಿಗಿ ಎಬ್ಬಿಸುವೇನು” ಅಥವಾ “ನೀವು ಈ ದೇವಾಲಯವನ್ನು ನಾಶಗೊಳಿಸಿದರೆ, ನಾನು ಅದನ್ನು ತಿರಿಗಿ ಎಬ್ಬಿಸುವೇನು” (ನೋಡಿರಿ: ಕಾಲ್ಪನಿಕ ಸನ್ನಿವೇಶಗಳು ಮತ್ತು ರೂಪಕ ಅಲಂಕಾರ)

ἐγερῶ αὐτόν

ಅದು ನಿಲ್ಲುವಂತೆ ಮಾಡುವುದು

John 2:20

20 ಮತ್ತು 22ನೆಯ ವಚನಗಳು ಮುಖ್ಯ ಕಥೆಯ ಭಾಗವಾಗಿ ಇರುವದಿಲ್ಲ, ಆದರೆ ಅವು ಕಥೆಯ ಕುರಿತು ವ್ಯಾಖ್ಯೆ ಕೊಡುತ್ತವೆ ಮತ್ತು ಆ ನಂತರ ನಡೆಯುವ ಸಂಗತಿಗಳನ್ನು ಕುರಿತು ಹೇಳುತ್ತವೆ. (ನೋಡಿರಿ: ಕಥೆಯ ಮುಕ್ತಾಯ)

τεσσεράκοντα…ἓξ ἔτεσιν…τρισὶν ἡμέραις

46 ವರ್ಷಗಳು... 3 ದಿನಗಳು (ನೋಡಿರಿ: ಸಂಖ್ಯೆಗಳು.)

σὺ ἐν τρισὶν ἡμέραις ἐγερεῖς αὐτόν

ಯೇಸು ದೇವಾಲಯವನ್ನು ಬೀಳಿಸಿ, ಅದನ್ನು ತಿರಿಗಿ ಮೂರು ದಿನದೊಳಗೆ ಕಟ್ಟುವುದಕ್ಕೆ ಯತ್ನಿಸುತ್ತಿದ್ದಾನೆಂದು ಯೆಹೂದ್ಯರ ನಾಯಕರು ಅರ್ಥಮಾಡಿಕೊಂಡಿದ್ದಾರೆಂದು ತೋರಿಸುವುದಕ್ಕೆ ಈ ವ್ಯಾಖ್ಯೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. “ಎಬ್ಬಿಸುವುದು” ಎನ್ನುವ ಪದವು “ಸ್ಥಾಪಿಸುವುದಕ್ಕೆ” ನಾಣ್ಣುಡಿಯಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ನೀನು ಮೂರು ದಿನಗಳಲ್ಲಿ ತಿರಿಗಿ ಇದನ್ನು ಸ್ಥಾಪಿಸುತ್ತೀಯಾ?” ಅಥವಾ “ನೀನು ಮೂರು ದಿನದಲ್ಲಿ ಇದನ್ನು ತಿರಿಗಿ ನಿರ್ಮಿಸುವುದಕ್ಕೆ ಸಾಧ್ಯವಾಗುತ್ತದೋ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ನುಡಿಗಟ್ಟುಗಳು.)

John 2:22

ἐπίστευσαν

ಸತ್ಯವಾಗಿರುವದನ್ನು ಅಂಗೀಕರಿಸುವುದು ಮತ್ತು ಅದು ನಿಜವೆಂದು ನಂಬುವುದು ಎಂದು “ನಂಬುವುದು” ಎನ್ನುವ ಪದದ ಅರ್ಥವಾಗಿದೆ.

τῷ λόγῳ

ಯೋಹಾನ.2:19 ವಚನದಲ್ಲಿ ಯೇಸು ಹೇಳಿರುವ ಮಾತನ್ನು ಇದು ಸೂಚಿಸುತ್ತಿದೆ.

John 2:23

ὡς δὲ ἦν ἐν τοῖς Ἱεροσολύμοις

“ಈಗ” ಎನ್ನುವ ಪದವು ಕಥೆಯ ಹೊಸ ಸಂಘಟನೆಯನ್ನು ಪರಿಚಯ ಮಾಡುತ್ತಿದೆ.

ἐπίστευσαν εἰς τὸ ὄνομα αὐτοῦ

ಇಲ್ಲಿ “ಹೆಸರು” ಎನ್ನುವ ಪದವು ಯೇಸು ವ್ಯಕ್ತಿತ್ವವನ್ನು ಸೂಚಿಸುವ ಸಮಾನರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಆತನಲ್ಲಿ ನಂಬಿಕೆಯಿಟ್ಟರು” ಅಥವಾ “ಆತನನ್ನು ನಂಬಿದರು” (ನೋಡಿರಿ: ಲಕ್ಷಣಾಲಂಕಾರ)

τὰ σημεῖα ἃ ἐποίει

ಅದ್ಭುತಕಾರ್ಯಗಳನ್ನು “ಸೂಚಕ ಕ್ರಿಯೆಗಳು” ಎಂದು ಸಹ ಕರೆಯಬಹುದು ಯಾಕಂದರೆ ವಿಶ್ವದ ಮೇಲೆ ಸಂಪೂರ್ಣವಾದ ಅಧಿಕಾರವು ದೇವರೋಬ್ಬರಿಗೆ ಇರುವುದೆಂದು ನಿರೂಪಿಸಲು ಅವುಗಳನ್ನು ಉಪಯೋಗಿಸಲಾಗಿವೆ.

John 2:25

περὶ τοῦ ἀνθρώπου…γὰρ ἐγίνωσκεν τί ἦν ἐν τῷ ἀνθρώπῳ

ಇಲ್ಲಿ “ಮನುಷ್ಯನು” ಎನ್ನುವ ಪದವು ಸಹಜ ಜನರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಜನರ ಕುರಿತು, ಜನರಲ್ಲಿ ಏನಿತ್ತು ಎಂದು ಆತನು ತಿಳಿದಿದ್ದನು” (ನೋಡಿರಿ: ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.)

John 3

ಯೋಹಾನ 03 ಸಾಧಾರಣ ವಿಷಯಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಅಂಶಗಳು

ಬೆಳಕು ಮತ್ತು ಕತ್ತಲು
ಸತ್ಯವೇದವು ಅನೇಕಬಾರಿ ಅನೀತಿವಂತರಿಗಾಗಿ ಮಾತನಾಡುತ್ತದೆ, ದೇವರಿಗೆ ಮೆಚ್ಚಿಕೆಯಾಗದ ಕಾರ್ಯಗಳನ್ನು ಮಾಡುವ ಜನರು ಕತ್ತಲೆಯಲ್ಲಿ ನಡೆಯುತ್ತಿದ್ದಾರೆಂದು ಮಾತನಾಡುತ್ತದೆ. ಪಾಪಿಗಳಾದ ಜನರು ನೀತಿವಂತರಾಗುವುದಕ್ಕೆ, ಅವರು ಮಾಡುವುದ ತಪ್ಪುಗಳನ್ನು ಒಪ್ಪುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ದೇವರಿಗೆ ವಿಧೇಯರಾಗುವ ಅರಿವನ್ನು ಮೂಡಿಸಿರುವುದು ಬೆಳಕು ಎಂಬುದಾಗಿ ಸತ್ಯವೇದವು ಮಾತನಾಡುತ್ತದೆ. (ನೋಡಿರಿ: ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ)

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಕ್ಲಿಷ್ಟ ಸಂದರ್ಭಗಳು

“ಮನುಷ್ಯ ಕುಮಾರನು”

ಈ ಅಧ್ಯಾಯದಲ್ಲಿ ಯೇಸು ತನ್ನನ್ನು ತಾನು “ಮನುಷ್ಯ ಕುಮಾರ” ಎಂಬುದಾಗಿ ಸೂಚಿಸಿಕೊಂಡಿದ್ದಾರೆ ([ಯೋಹಾನ.3:13] (../../ಯೋಹಾನ/03/13.ಎಂ.ಡಿ.)). ಜನರು ಇತರ ಕುರಿತಾಗಿ ಮಾತನಾಡುವಾಗ ಜನರು ತಮಗಾಗಿ ಮಾತನಾಡುಕೊಳ್ಳುವುದಕ್ಕೆ ನಿಮ್ಮ ಭಾಷೆಯಲ್ಲಿ ಅನುಮತಿ ಕೊಡದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 3:1

ಯೇಸುವನ್ನು ನೋಡಲು ನಿಕೊದೇಮನು ಬಂದದ್ದು.

δὲ

ಈ ಮಾತು ಕಥೆಯಲ್ಲಿ ಹೊಸ ಭಾಗವನ್ನು ಪ್ರಾರಂಭಿಸಲು ಮತ್ತು ನಿಕೊದೇಮನನ್ನು ಪರಿಚಯಿಸಲು ಇಲ್ಲಿ ಉಪಯೋಗಿಸಲಾಗಿದೆ. (ನೋಡಿರಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.)

John 3:2

οἴδαμεν

ಇಲ್ಲಿ “ನಾವು” ಎನ್ನುವ ಪದವು ಪ್ರತ್ಯೇಕವಾಗಿ ನಿಕೊದೇಮನನ್ನು ಮತ್ತು ಯೆಹೂದ್ಯರ ಸಭೆಯ ಸದಸ್ಯರನ್ನು ಮಾತ್ರವೇ ಸೂಚಿಸುತ್ತಿದೆ.

John 3:3

ಯೇಸು ಮತ್ತು ನಿಕೊದೇಮನು ಮಾತಾಡುವುದನ್ನು ಮುಂದುವರೆಸುತಿದ್ದಾರೆ.

ἀμὴν, ἀμὴν

ಯೋಹಾನ.1:1 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

γεννηθῇ ἄνωθεν

ಮೇಲಿಂದ ಹುಟ್ಟಿದವನು ಅಥವಾ “ದೇವರಿಂದ ಹುಟ್ಟಿದವನು”

Βασιλείαν τοῦ Θεοῦ

“ರಾಜ್ಯ” ಎನ್ನುವ ಪದವು ದೇವರ ಆಡಳಿತವನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ದೇವರು ಆಡಳಿತ ಮಾಡುವ ಸ್ಥಳ” (ನೋಡಿರಿ: ರೂಪಕ ಅಲಂಕಾರ)

John 3:4

πῶς δύναται ἄνθρωπος γεννηθῆναι, γέρων ὤν

ಇದು ಸಾಧ್ಯವಾಗುವುದಿಲ್ಲವೆಂದು ಹೇಳಲು ನಿಕೊದೇಮನು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಮನುಷ್ಯನು ಮುದುಕನಾದ ಮೇಲೆ ಮತ್ತೆ ಹುಟ್ಟುವುದು ಅಸಾಧ್ಯ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

μὴ δύναται εἰς τὴν κοιλίαν τῆς μητρὸς αὐτοῦ δεύτερον εἰσελθεῖν καὶ γεννηθῆναι

ಎರಡನೆಯ ಹುಟ್ಟುವುದು ಅಸಾದ್ಯವೆನ್ನುವ ಅವನ ನಂಬಿಕೆಯನ್ನು ಒತ್ತಾಯಿಸಿ ಹೇಳಲು ನಿಕೊದೇಮನು ಈ ಪ್ರಶ್ನೆಯನ್ನು ಉಪಯೋಗಿಸಿದ್ದಾನೆ. “ನಿಶ್ಚಯವಾಗಿ, ಅವನು ತನ್ನ ತಾಯಿಯ ಗ್ರರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸುವುದು ಸಾದ್ಯವಿಲ್ಲ! (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

δεύτερον

ಮತ್ತೆ ಅಥವಾ “ಎರಡು ಬಾರಿ”

τὴν κοιλίαν

ಮಗುವು ಬೆಳೆಯುವ ಸ್ತಳ ಸ್ತ್ರೀ ಶರೀರದಲ್ಲಿ ಒಂದು ಭಾಗ

John 3:5

ἀμὴν, ἀμὴν

ನೀವು ಯೋಹಾನನು.3:3 ವಚನದಲ್ಲಿ ಅನುವಾದ ಮಾಡಿರುವ ರೀತಿಯಲ್ಲೇ ಇದನ್ನು ಅನುವಾದ ಮಾಡಿರಿ.

γεννηθῇ ἐξ ὕδατος καὶ Πνεύματος

ಇದಕ್ಕೆ ಎರಡು ಅರ್ಥಗಳ ಸಾಧ್ಯತೆಯುಂಟು: 1) “ನೀರು ಮತ್ತು ಆತ್ಮದಲ್ಲಿ ದಿಕ್ಷಾಸ್ನಾನ ಹೊಂದುವುದು” ಅಥವಾ 2) “ಭೌತಿಕವಾಗಿ ಮತ್ತು ಆತ್ಮೀಯವಾಗಿ ಹುಟ್ಟುವುದು” (ನೋಡಿರಿ: ರೂಪಕ ಅಲಂಕಾರ)

εἰσελθεῖν εἰς τὴν Βασιλείαν τοῦ Θεοῦ

“ರಾಜ್ಯ” ಎನ್ನುವ ಪದವು ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರ ಆಡಳಿತವನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ದೇವರು ಆಡಳಿತ ಮಾಡುವ ಸ್ಥಳ” (ನೋಡಿರಿ: ರೂಪಕ ಅಲಂಕಾರ)

John 3:7

ಯೇಸು ನಿಕೊದೇಮನೊಂದಿಗೆ ಮಾತಾಡುವುದನ್ನು ಮುಂದುವರೆಸುತಿದ್ದಾನೆ.

δεῖ ὑμᾶς γεννηθῆναι ἄνωθεν

ನೀನು ಮೇಲನದಿಂದ ಹುಟ್ಟಬೇಕು

John 3:8

τὸ πνεῦμα ὅπου θέλει, πνεῖ

ಮೂಲ ಭಾಷೆಯಲ್ಲಿ, ಗಾಳಿ ಮತ್ತು ಆತ್ಮ ಎನ್ನುವವು ಒಂದೇ ಪದವಾಗಿವೆ. ಗಾಳಿ ಒಬ್ಬ ವ್ಯಕ್ತಿಯಂತೆ ಇರುವ ರೀತಿಯಲ್ಲಿ ಉಪನ್ಯಾಸಕರು ಅದನ್ನು ಸೂಚಿಸುತ್ತಿದ್ದಾರೆ. ಪರ್ಯಾಯ ಅನುವಾದ: “ಪವಿತ್ರತ್ಮಾನು ಅವನಿಗೆ ಬಯಸಿದ ಕಡೆ ಹೋಗುವ ಗಾಳಿಯಂತೆ ಇರುವುದು” (ನೋಡಿರಿ: ವ್ಯಕ್ತೀಕರಣ)

John 3:9

πῶς δύναται ταῦτα γενέσθαι

ಈ ಪ್ರಶ್ನೆ ಹೇಳಿರುವ ಮಾತನ್ನು ಒತ್ತಾಯಿಸಿ ಹೇಳುತ್ತಿದೆ. ಪರ್ಯಾಯ ಅನುವಾದ: “ಇದು ಹೇಗೆ ಸಾದ್ಯ!” ಅಥವಾ “ಇದು ನಡೆಯಲು ಸಾದ್ಯವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 3:10

σὺ εἶ ὁ διδάσκαλος τοῦ Ἰσραὴλ, καὶ ταῦτα οὐ γινώσκεις

ನಿಕೊದೇಮನು ಬೋಧಕನೆಂದು ಯೇಸು ತಿಳಿದಿದ್ದನು. ಆತನು ಮಾಹಿತಿಗಾಗಿ ನೋಡುತ್ತಿಲ್ಲ. ಪರ್ಯಾಯ ಅನುವಾದ: “ನೀನು ಇಇಸ್ರಾಯೇಲರಿಗೆ ಬೋಧಕನಾಗಿದ್ದು ಈ ಸಂಗತಿಗಳನ್ನು ಅರ್ಥ ಮಾಡಿಕೊಳ್ಳದಿರುವುದು ನನಗೆ ಆಶ್ಚರ್ಯ ಉಂಟುಮಾಡುತ್ತಿದೆ!” ಅಥವಾ “ನೀನು ಇಸ್ರಾಯೇಲರಿಗೆ ಬೋಧಕನಾಗಿದ್ದು ಈ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

σὺ εἶ ὁ διδάσκαλος τοῦ Ἰσραὴλ, καὶ…οὐ γινώσκεις

“ನೀನು” ಎನ್ನುವ ಪದ ಏಕವಚನವಾಗಿದೆ ಮತ್ತು ನಿಕೊದೇಮನನ್ನು ಸೂಚಿಸುತ್ತಿದೆ. (ನೋಡಿರಿ: https://git.door43.org/STR/kn_ta/src/branch/master/translate/figs-you/01.md)

John 3:11

οὐ λαμβάνετε

“ನೀವು” ಎನ್ನುವ ಪದ ಏಕವಚನವಾಗಿದೆ ಮತ್ತು ಯೆಹೂದ್ಯರನ್ನು ಸೂಚಿಸುತ್ತಿದೆ. (ನೋಡಿರಿ: https://git.door43.org/STR/kn_ta/src/branch/master/translate/figs-you/01.md)

ἀμὴν, ἀμὴν

ಇದಾದ ಮೇಲೆ ಬರುವ ವಿಷಯಗಳು ಪ್ರಾಮುಖ್ಯವಾಗಿವೆ ಮತ್ತು ಸತ್ಯವಾಗಿವೆ ಎಂದು ಒತ್ತಾಯಿಸಿ ಹೇಳುವ ರೀತಿಯಲ್ಲಿ ನಿಮ್ಮ ಭಾಷೆಯಲ್ಲಿ ಅನುವಾದ ಮಾಡಿರಿ.ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

λαλοῦμεν

ಯೇಸು “ನಾವು” ಎಂದು ಹೇಳಿದಾಗ, ಆತನು ನಿಕೊದೇಮನನ್ನು ಸೇರಿಸಿಕೊಂಡು ಹೇಳುತ್ತಿಲ್ಲ. (ನೋಡಿರಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)

John 3:12

ಯೇಸು ನಿಕೊದೇಮನಿಗೆ ಪ್ರತಿಸ್ಪಂದಿಸುವುದನ್ನು ಮುಂದಿವರೆಸುತ್ತಿದ್ದಾನೆ.

εἶπον ὑμῖν…οὐ πιστεύετε, πῶς ἐὰν εἴπω ὑμῖν…πιστεύσετε

“ನೀವು” ಎನ್ನುವ ಪದವು ಮೂರೂ ಸ್ಥಳಗಳಲ್ಲಿ ಬಹುವಚನವಾಗಿದೆ ಮತ್ತು ಅದು ಸಹಜವಾಗಿ ಯೆಹೂದ್ಯರನ್ನು ಸೂಚಿಸುತ್ತಿದೆ. (ನೋಡಿರಿ: "You" - " ನೀನು " – ವಿವಿಧ ರೂಪಗಳು.)

πῶς ἐὰν εἴπω ὑμῖν τὰ ἐπουράνια, πιστεύσετε

ನಿಕೊದೇಮ ಮತ್ತು ಯೆಹೂದ್ಯರ ಅಪನ೦ಬಿಕೆಯನ್ನು ಈ ಪ್ರಶ್ನೆ ಒತ್ತಾಯಿಸಿ ಹೇಳುತ್ತಿದೆ. ಪರ್ಯಾಯ ಅನುವಾದ: “ನಾನು ಪರಲೋಕ ಕಾರ್ಯಗಳನ್ನು ಕುರಿತು ಹೇಳಿದಾಗ ನೀನು ನಿಶ್ಚಯವಾಗಿ ನಂಬುವುದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

εἶπον ὑμῖν…οὐ πιστεύετε, πῶς ἐὰν εἴπω ὑμῖν…πιστεύσετε

ಆತ್ಮೀಯ ಕಾರ್ಯಗಳು

John 3:14

καθὼς Μωϋσῆς ὕψωσεν τὸν ὄφιν ἐν τῇ ἐρήμῳ, οὕτως ὑψωθῆναι δεῖ τὸν Υἱὸν τοῦ Ἀνθρώπου

ಈ ಅಲಂಕಾರವನ್ನು ಉಪಮಾಲಂಕಾರ ಎನ್ನುತ್ತಾರೆ. ಮೋಶೆಯು ಅಡವಿಯಲ್ಲಿ ಕಂಚಿನ ಸರ್ಪವನ್ನು “ಮೇಲೆ ಎತ್ತಿ” ನಿಲ್ಲಿಸಿದ ಹಾಗೆಯೆ ಕೆಲವು ಜನರು ಯೇಸುವನ್ನು “ಮೇಲೆ ಎತ್ತಿ” ನಿಲ್ಲಿಸುವರು. (ನೋಡಿರಿ: ಉಪಮಾಲಂಕಾರ.)

ἐν τῇ ἐρήμῳ

ಅಡವಿ ಎನ್ನುವ ಸ್ಥಳ ಒಣಗಿ, ಮರುಭೂಮಿಯಂತೆ ಇರುವುದು ಆದರೆ ಇಲ್ಲಿ ವಿಶೇಷವಾಗಿ ಮೋಶೆ ಮತ್ತು ಇಸ್ರಾಯೇಲ್ಯರು ಸುಮಾರು ನಲವತ್ತು ವರ್ಷಗಳ ಕಾಲ ನಡೆದ ಸ್ಥಳವನ್ನು ಸೂಚಿಸುತ್ತಿದೆ.

John 3:16

οὕτως…ἠγάπησεν ὁ Θεὸς τὸν κόσμον

“ಲೋಕ” ಎನ್ನುವ ಪದವು ಪ್ರಪಂಚದಲ್ಲಿರುವ ಎಲ್ಲರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. (ನೋಡಿರಿ: ಲಕ್ಷಣಾಲಂಕಾರ)

ἠγάπησεν

ಇದು ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆ. ದೇವರು ತಾನೆ ಪ್ರೀತಿಯಾಗಿದ್ದಾನೆ ಮತ್ತು ನಿಜವಾದ ಪ್ರೀತಿಯ ಮೂಲವಗಿದ್ದಾನೆ.

John 3:17

οὐ γὰρ ἀπέστειλεν ὁ Θεὸς τὸν Υἱὸν εἰς τὸν κόσμον, ἵνα κρίνῃ τὸν κόσμον, ἀλλ’ ἵνα σωθῇ ὁ κόσμος δι’ αὐτοῦ

ಈ ಎರಡು ಉಪವಾಕ್ಯಗಳು ಒಂದೇ ಅರ್ಥವನ್ನು ಹೊಂದಿವೆ, ಒತ್ತಾಯಿಸಿ ಹೇಳುವುದಕ್ಕಾಗಿ ಎರಡು ಬಾರಿ ಹೇಳಲಾಗಿದೆ, ಮೊದಲು ಸಕಾರಾತ್ಮಕವಾಗಿ ಮತ್ತೊಮ್ಮೆ ನಕಾರಾತ್ಮಕವಾಗಿ ಹೇಳಲಾಗಿದೆ. ಕೆಲವೊಂದು ಭಾಷೆಗಳಲ್ಲಿ ಒತ್ತಾಯಿಸಿ ಹೇಳುವುದನ್ನು ಬೇರೆ ರೀತಿಯಲ್ಲಿ ಸೂಚಿಸಬಹುದು. ಪರ್ಯಾಯ ಅನುವಾದ: ದೇವರು ತನ್ನ ಮಗನ ಮುಖಾಂತರ ಈ ಲೋಕವನ್ನು ರಕ್ಷಿಸಲು ಎನ್ನುವ ನಿಜವಾದ ಕಾರಣದಿಂದ ಈ ಲೋಕಕ್ಕೆ ಕಳುಹಿಸಿದನು” (ನೋಡಿರಿ: ಸಾದೃಶ್ಯತೆ. ಮತ್ತು ದ್ವಿಗುಣ ನಕಾರಾತ್ಮಕಗಳು)

ἵνα κρίνῃ

ಶಿಕ್ಷಿಸಲು. ಸಹಜವಾಗಿ “ಶಿಕ್ಷಿಸು” ಎನ್ನುವ ಪದ ಶಿಕ್ಷೆ ಅನುಭವಿಸಿದ ನಂತರ ದೇವರು ಅಂಗೀಕರಿಸಿದ ವ್ಯಕ್ತಿಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ ಖಂಡಿಸಲ್ಪಟ್ಟಾಗ, ಅವನು ಶಿಕ್ಷಿಸಲ್ಪಡುವನು ಆದರೆ ದೇವರಿಂದ ಅಂಗೀಕರಿಸಲ್ಪಡುವದಿಲ್ಲ.

John 3:18

Υἱοῦ τοῦ Θεοῦ

ಇದು ಯೇಸುವಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 3:19

ಯೇಸು ನಿಕೊದೇಮನಿಗೆ ಉತ್ತರಿಸುವುದನ್ನು ಮುಗಿಸುತ್ತಾನೆ.

τὸ φῶς ἐλήλυθεν εἰς τὸν κόσμον

“ಬೆಳಕು” ಎನ್ನುವ ಪದವು ಯೇಸುವಲ್ಲಿ ಪ್ರತ್ಯಕ್ಷವಾಗಿರುವ ದೇವರ ಸತ್ಯಕ್ಕೆ ರೂಪಕಾಲಂಕಾರವಾಗಿದೆ. ಯೇಸು ತನ್ನ ತಾನೆ ಮೂರನೆ ವ್ಯಕ್ತಿಯಾಗಿ ಮಾತಾಡಿಕೊಳ್ಳುತ್ತಿದ್ದಾನೆ. ಜನರು ತಮ್ಮನ್ನು ತಾವು ಮೂರನೆ ವ್ಯಕ್ತಿಯಾಗಿ ಸಂಬೋಧಿಸಿಕೊಂಡು ಮಾತಾಡಿಕೊಳ್ಳುವುದು ನಿಮ್ಮ ಭಾಷೆಯಲ್ಲಿ ಅನುಮತಿಸಲಿಲ್ಲದಿದ್ದರೆ, ಬೆಳಕು ಯಾರೆಂದು ನೀವು ಸ್ಪಷ್ಟವಾಗಿ ಹೇಳಬೇಕಾಗಿರುತ್ತದೆ. “ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಬೆಳಕಾಗಿರುವಾತನು ಎಲ್ಲಾ ಜನರಿಗೆ ದೇವರ ಸತ್ಯವನ್ನು ಪ್ರತ್ಯಕ್ಷ ಮಾಡಿದ್ದಾನೆ” ಅಥವಾ “ಬೆಳಕಾಗಿರುವ ನಾನು, ಲೋಕಕ್ಕೆ ಬಂದಿದ್ದೇನೆ” (ನೋಡಿರಿ: ರೂಪಕ ಅಲಂಕಾರ ಮತ್ತು ಲಕ್ಷಣಾಲಂಕಾರ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

ἠγάπησαν οἱ ἄνθρωποι…τὸ σκότος

ಇಲ್ಲಿ “ಕತ್ತಲು” ಎನ್ನುವ ಪದ ದುಷ್ಟತನಕ್ಕೆ ಸಮಾನರ್ಥಕ ಪದವಾಗಿದೆ. (ನೋಡಿರಿ: ರೂಪಕ ಅಲಂಕಾರ)

John 3:20

ἵνα μὴ ἐλεγχθῇ τὰ ἔργα αὐτοῦ

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಆದಕಾರಣ ಅವನು ಮಾಡುವ ಕಾರ್ಯಗಳನ್ನು ಬೆಳಕು ತೋರಿಸುವುದಿಲ್ಲ” ಅಥವಾ “ಆದಕಾರಣ ಅವನ ಕೃತ್ಯಗಳನ್ನು ಬೆಳಕು ಸ್ಪಷ್ಟ ಮಾಡುವದಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 3:21

φανερωθῇ αὐτοῦ τὰ ἔργα, ὅτι

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಜನರು ಅವನ ಕೃತ್ಯಗಳನ್ನು ಸ್ಪಷ್ಟವಾಗಿ ನೋಡಬಹುದು” ಅಥವಾ “ಅವನು ಮಾಡುವ ಕಾರ್ಯಗಳನ್ನು ಎಲ್ಲರು ಸ್ಪಷ್ಟವಾಗಿ ನೋಡಬಹುದು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 3:22

μετὰ ταῦτα

ನಿಕೊದೇಮನೊಂದಿಗೆ ಯೇಸು ಮಾತಾಡಿದ ನಂತರ ಎಂದು ಇದು ಸೂಚಿಸುತ್ತಿದೆ. ಯೋಹಾನ.2:12 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

John 3:23

Αἰνὼν

ನೀರಿನಂತೆ “ಬುಗ್ಗೆಗಳು” ಎಂದು ಈ ಪದದ ಅರ್ಥವಾಗಿದೆ. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

τοῦ Σαλείμ

ಯೊರ್ದನ್ ನದಿ ಪಕ್ಕದಲ್ಲಿದ್ದ ಗ್ರಾಮ ಅಥವಾ ಪಟ್ಟಣ (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

ὅτι ὕδατα πολλὰ ἦν ἐκεῖ

ಆ ಸ್ಥಳದಲ್ಲಿ ಅನೇಕ ಬುಗ್ಗೆಗಳು ಇದ್ದಕಾರಣ

ἐβαπτίζοντο

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯೋಹಾನನು ಅವರಿಗೆ ದಿಕ್ಷಾಸ್ನಾನ ಮಾಡಿಸುತ್ತಿದನು” ಅಥವಾ “ಅವನು ಅವರಿಗೆ ದಿಕ್ಷಾಸ್ನಾನ ಮಾಡಿಸುತ್ತಿದನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 3:25

ἐγένετο οὖν ζήτησις ἐκ τῶν μαθητῶν Ἰωάννου μετὰ Ἰουδαίου

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಆಗ ಯೋಹಾನನ ಶಿಷ್ಯರು ಮತ್ತು ಒಬ್ಬ ಯೆಹೂದ್ಯನಿಗೂ ವಾದ ಪ್ರಾರಂಭವಾಯಿತು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ζήτησις

ಮಾತುಗಳಲ್ಲಿ ಜಗಳವಾಡುವುದು

John 3:26

σὺ μεμαρτύρηκας, ἴδε, οὗτος βαπτίζει

ಈ ಮಾತಿನಲ್ಲಿ, “ಇಗೋ” ಎನ್ನುವ ಪದವು “ಗಮನಿಸು” ಎಂದು ಅರ್ಥಕೊಡುವ ಆಜ್ಞೆಯಾಗಿದೆ. ಪರ್ಯಾಯ ಅನುವಾದ: “ನೀನು ಸಾಕ್ಷಿಕೊಟ್ಟೆಯಲ್ಲ, ‘ಇಗೋ! ಅವನು ದಿಕ್ಷಾಸ್ನಾನ ಕೊಡುತ್ತಿದ್ದಾನೆ,’” ಅಥವಾ “ನೀನು ಸಾಕ್ಷಿಕೊಟ್ಟೆಯಲ್ಲ, ‘ಇಗೋ, ಅದನ್ನು ನೋಡು! ಅವನು ದಿಕ್ಷಾಸ್ನಾನ ಕೊಡುತ್ತಿದ್ದಾನೆ,’” (ನೋಡಿರಿ: https://git.door43.org/STR/kn_ta/src/branch/master/translate/figs-explicit/01.md)

John 3:27

οὐ δύναται ἄνθρωπος λαμβάνειν, οὐδὲ ἓν ἐὰν μὴ

ಹೊರೆತು ಯಾರಿಗೂ ಶಕ್ತಿವಿರುವುದಿಲ್ಲ

ᾖ δεδομένον αὐτῷ ἐκ τοῦ οὐρανοῦ

ಇಲ್ಲಿ “ಪರಲೋಕ” ಎನ್ನುವ ಪದವು ದೇವರಿಗೆ ಸೂಚಿಸುವ ಸಮಾನರ್ಥಕ ಪದವಾಗಿದೆ. ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ದೇವರು ಅದನ್ನು ಅವನಿಗೆ ಕೊಟ್ಟಿದ್ದಾನೆ” (ನೋಡಿರಿ: ಲಕ್ಷಣಾಲಂಕಾರ ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 3:28

αὐτοὶ ὑμεῖς

ಈ “ನೀವು” ಎನ್ನುವ ಪದವು ಬಹುವಚನವಾಗಿದ್ದು ಯೋಹಾನನು ಮಾತಾಡುತ್ತಿರುವ ಎಲ್ಲಾ ಜನರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನೀವೆಲ್ಲರೂ” ಅಥವಾ “ಎಲ್ಲರೂ” (ನೋಡಿರಿ: "You" - " ನೀನು " – ವಿವಿಧ ರೂಪಗಳು. ಮತ್ತು ಕರ್ತೃವಾಚ್ಯ ಸರ್ವನಾಮಗಳು.)

ἀπεσταλμένος εἰμὶ ἔμπροσθεν ἐκείνου

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಆತನ ಮುಂದೆ ಬರಬೇಕೆಂದು ದೇವರು ನನ್ನನ್ನು ಕಳುಹಿಸಿದ್ದಾನೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 3:29

ಸ್ನಾನಿಕನಾದ ಯೋಹಾನನು ಮಾತಾಡುವುದನ್ನು ಮುಂದುವರೆಸುತಿದ್ದಾನೆ.

ὁ ἔχων τὴν νύμφην, νυμφίος ἐστίν

ಇಲ್ಲಿ “ಮದುಮಗಳು” ಮತ್ತು “ಮದುಮಗ” ಎನ್ನುವ ಪದಗಳು ರೂಪಕಾಲಂಕಾರವಾಗಿವೆ. ಯೇಸು “ಮದಲಿಂಗನಾಗಿದ್ದಾನೆ” ಮತ್ತು ಯೋಹಾನನು “ಮದಲಿಂಗನ” ಸ್ನೇಹಿತನಾಗಿದ್ದಾನೆ. (ನೋಡಿರಿ: ರೂಪಕ ಅಲಂಕಾರ)

αὕτη οὖν ἡ χαρὰ ἡ ἐμὴ πεπλήρωται

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಆದಕಾರಣ ನನ್ನ ಸಂತೋಷ ಪರಿಪೂರ್ಣವಾಯಿತು” ಅಥವಾ “ಆದಕಾರಣ ನಾನು ತುಂಬಾ ಸಂತೋಷಿಸುತ್ತಿದ್ದೇನೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ἡ χαρὰ ἡ ἐμὴ

“ನನ್ನ” ಎನ್ನುವ ಪದವು ಮಾತಾಡುತ್ತಿರುವ ಸ್ನಾನಿಕನಾದ ಯೋಹಾನನನ್ನು ಸೂಚಿಸುತ್ತಿದೆ.

John 3:30

ἐκεῖνον δεῖ αὐξάνειν

ಪ್ರಾಮುಖ್ಯತೆ ಹೊಂದಿ ಬೆಳೆಯುವ ಯೇಸುವನ್ನು ಅವನು ಮದಲಿಂಗನೆಂದು ಸೂಚಿಸುತ್ತಿದ್ದಾನೆ.

John 3:31

ὁ ἄνωθεν ἐρχόμενος, ἐπάνω πάντων ἐστίν

ಪರಲೋಕದಿಂದ ಬಂದವನು ಬೇರೆಯವರಿಗಿಂತ ಪ್ರಾಮುಖ್ಯದವನಾಗಿದ್ದಾನೆ

ὁ ὢν ἐκ τῆς γῆς, ἐκ τῆς γῆς ἐστιν, καὶ ἐκ τῆς γῆς λαλεῖ

ಯೇಸು ಪರಲೋಕದಿಂದ ಬಂದಿರುವಾತನು ಮತ್ತು ಯೋಹಾನನು ಭೂಮಿಯಲ್ಲಿ ಹುಟ್ಟಿದವನು ಆದುದರಿಂದ ಆತನಿಗಿಂತ ಯೇಸು ದೊಡ್ಡವನೆಂದು ಯೋಹಾನನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಈ ಲೋಕದಲ್ಲಿ ಹುಟ್ಟಿದವರು ಈ ಲೋಕದಲ್ಲಿರುವ ಬೇರೆಯವರಂತೆ ಇರುತ್ತಾರೆ ಮತ್ತು ಈ ಲೋಕದಲ್ಲಿ ನಡೆಯುವ ಸಂಗತಿಗಳನ್ನು ಕುರಿತು ಮಾತನಾಡುತ್ತಾನೆ” (ನೋಡಿರಿ: ಲಕ್ಷಣಾಲಂಕಾರ)

ὁ ἐκ τοῦ οὐρανοῦ ἐρχόμενος, ἐπάνω πάντων ἐστίν

ಮೊದಲ ವಾಕ್ಯದಂತೆ ಇದು ಸಹ ಒಂದೇ ಅರ್ಥವನ್ನು ಹೊಂದಿದೆ. ಒತ್ತಾಯಿಸಿ ಹೇಳಲು ಯೋಹಾನನು ಇದನ್ನು ಮತ್ತೆ ಹೇಳುತ್ತಿದ್ದಾನೆ.

John 3:32

ὃ ἑώρακεν καὶ ἤκουσεν, τοῦτο μαρτυρεῖ

ಯೋಹಾನನು ಯೇಸು ಕುರಿತಾಗಿ ಮಾತಾಡುತ್ತಿದ್ದಾನೆ. ಪರ್ಯಾಯ ಅನುವಾದ: “ಪರಲೋಕದಿಂದ ಬಂದವನು ಪರಲೋಕದಲ್ಲಿ ಆತನು ನೋಡಿದ ಸಂಗತಿಗಳು ಮತ್ತು ಕೇಳಿದ ಸಂಗತಿಗಳನ್ನು ಕುರಿತು ಹೇಳುತ್ತಾನೆ”

τὴν μαρτυρίαν αὐτοῦ, οὐδεὶς λαμβάνει

ಕೆಲವೊಂದು ಜನರು ಮಾತ್ರವೇ ಯೇಸುವನ್ನು ನಂಬುತ್ತಾರೆಂದು ಒತ್ತಾಯಿಸಿ ಹೇಳಲು ಯೋಹಾನನು ಇಲ್ಲಿ ಉತ್ಪ್ರೇಕ್ಷಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಕೆಲವೊಂದು ಜನರು ಮಾತ್ರವೇ ಆತನನ್ನು ನಂಬುತ್ತಾರೆ” (ನೋಡಿರಿ: ಅತಿಶಯೋಕ್ತಿ)

John 3:33

ὁ λαβὼν αὐτοῦ τὴν μαρτυρίαν

ಯೇಸು ಹೇಳುವುದನ್ನು ಯಾರು ನಂಬುತ್ತಾರೋ

ἐσφράγισεν

ನಿರೂಪಿಸುತ್ತಾರೆ ಅಥವಾ “ಒಪ್ಪಿಕೊಳ್ಳುತ್ತಾರೆ”

John 3:34

ಸ್ನಾನಿಕನಾದ ಯೋಹಾನನು ಮಾತಾಡುವುದನ್ನು ನಿಲ್ಲಿಸುತ್ತಾನೆ.

ὃν γὰρ ἀπέστειλεν ὁ Θεὸς

ಆತನನ್ನು ಪ್ರತಿನಿಧಿಸಲು ದೇವರು ಕಳುಹಿಸಿದ, ಈ ಯೇಸು

οὐ γὰρ ἐκ μέτρου δίδωσιν τὸ Πνεῦμα

ದೇವರು ತನ್ನ ಆತ್ಮದ ಸರ್ವಶಕ್ತಿಯನ್ನು ಕೊಟ್ಟಿರುವ ವ್ಯಕ್ತಿ ಈತನೇ

John 3:35

Πατὴρ…Υἱόν

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

δέδωκεν ἐν τῇ χειρὶ αὐτοῦ

ಆತನ ಶಕ್ತಿ ಅಥವಾ ನಿಯಂತ್ರಣದಲ್ಲಿ ಇರುವುದು ಎಂದು ಇದರ ಅರ್ಥವಾಗಿದೆ. (ನೋಡಿರಿ: ನುಡಿಗಟ್ಟುಗಳು.)

John 3:36

ὁ πιστεύων

ನಂಬುವ ವ್ಯಕ್ತಿ ಅಥವಾ “ನಂಬುವವನು ಯಾರಾದರು”

ἡ ὀργὴ τοῦ Θεοῦ μένει ἐπ’ αὐτόν

“ಕೋಪ” ಎನ್ನುವ ಭಾವವಾಚಕ ನಾಮಪದವನ್ನು “ಶಿಕ್ಷಿಸು” ಎನ್ನುವ ಕ್ರಿಯಾಪದ ಉಪಯೋಗಿಸಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ಅವನನ್ನು ಶಿಕ್ಷಿಸುತ್ತಾ ಇರುವನು” (ನೋಡಿರಿ: https://git.door43.org/STR/kn_ta/src/branch/master/translate/figs-abstractnouns/01.md)

John 4

ಯೋಹಾನ 04 ಸಾಧಾರಣ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಯೋಹಾನ.4:4-33 ವಚನ ಭಾಗವು ಯೇಸುವಿನಲ್ಲಿ ನಂಬಿಕೆ ಇಟ್ಟವರಿಗೆ “ಜೀವಜಲವು” ನಿತ್ಯಜೀವವನ್ನು ಅನುಗ್ರಹಿಸುವುದೆನ್ನುವ ಯೇಸು ಬೋಧನೆಯ ಮೇಲೆ ಆಧಾರಿತವಾಗಿ ಒಂದು ಕಥೆಯನ್ನು ರೂಪಿಸುತ್ತಿದೆ. (ನೋಡಿರಿ: ನಂಬು, ನಂಬಿಕೆಗಳು, ನಂಬಿದೆ, ವಿಶ್ವಾಸಿ, ನಂಬಿಕೆ, ಅವಿಶ್ವಾಸಿ, ಅವಿಶ್ವಾಸಿಗಳು, ಆಪನಂಬಿಕೆ)

ಈ ಅಧ್ಯಾಯದಲ್ಲಿ ವಿಶೇಷವಾದ ಅಂಶಗಳು

“ಆತನು ಸಮಾರ್ಯದ ಮೂಲಕ ಹಾದು ಹೋಗಬೇಕಾದ ಅವಶ್ಯಕತೆ ಇದ್ದಿತ್ತು”

ಯೆಹೂದ್ಯರು ಸಮಾರ್ಯ ಸೀಮೆಯ ಮೂಲಕ ಹಾದು ಹೋಗುವುದನ್ನು ಬಿಟ್ಟುಬಿಟ್ಟಿದ್ದರು ಯಾಕಂದರೆ ಸಮಾರ್ಯದವರು ಅನ್ಯಜನರ ಸಂತಾನದವರಾಗಿದ್ದರು. ಆದ್ದರಿಂದ ಯೆಹೂದ್ಯರು ಮಾಡುವುದಕ್ಕೆ ಇಷ್ಟಪಡದವುಗಳನ್ನು ಯೇಸು ಮಾಡುತ್ತಿದ್ದರು. (ನೋಡಿರಿ: ದೈವಭಕ್ತಿಯುಳ್ಳ, ದೈವಭಕ್ತಿ, ದೈವಭಕ್ತಿಯಿಲ್ಲದ, ದೈವಹೀನ, ಭಕ್ತಿಹೀನತೆ, ದೇವರಿಲ್ಲದಿರುವಿಕೆ ಮತ್ತು ಇಸ್ರಾಯೇಲ್ ರಾಜ್ಯ)

“ಗಳಿಗೆ ಬಂದದೆ”

ಪ್ರವಾದನೆಗಳನ್ನು ಆರಂಭಿಸುವುದಕ್ಕೆ ಯೇಸು ಈ ಮಾತುಗಳನ್ನು ಉಪಯೋಗಿಸುತ್ತಿದ್ದಾರೆ, ಅದು ಅರವತ್ತು ನಿಮಿಷಗಳಿಗಿಂತ ಹೆಚ್ಚಾಗಿರಬಹುದು ಅಥವಾ ಕಡಿಮೆಯಾಗಿರಬಹುದು. “ಗಳಿಗೆ” ಎನ್ನುವದರಲ್ಲಿ ನಿಜವಾದ ಆರಾಧಿಕರು ಆತ್ಮದಲ್ಲಿ ಮತ್ತು ಸತ್ಯದಲ್ಲಿ ಆರಾಧಿಸುವ ಸಮಯ ಅರವತ್ತು ನಿಮಿಷಗಳಿಗಿಂತ ಹೆಚ್ಚಾಗಿರಬಹುದು.

ಆರಾಧನೆ ಮಾಡುವುದಕ್ಕೆ ಸರಿಯಾದ ಸ್ಥಳ

ಯೇಸು ಭೂಮಿಯ ಮೇಲೆ ಸಂಚಾರ ಮಾಡುವುದಕ್ಕೆ ಮುಂಚಿತವಾಗಿ, ಸಮಾರ್ಯದವರು ತಮ್ಮ ನೆಲದಲ್ಲಿ ನಕಲು ದೇವಾಲಯವನ್ನು ಕಟ್ಟುವುದರ ಮೂಲಕ ಮೋಶೆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದರು ([ಯೋಹಾನ.4:20] (../../ಯೋಹಾನ/04/20.ಎಂ.ಡಿ.)). ಜನರು ಎಲ್ಲಿ ಆರಾಧನೆ ಮಾಡುತ್ತಾರೆನ್ನುವುದು ಪ್ರಾಮುಖ್ಯವಾದ ವಿಷಯವಲ್ಲವೆಂದು ಯೇಸು ಸ್ತ್ರೀಗೆ ವಿವರಿಸುತ್ತಿದ್ದಾನೆ ([ಯೋಹಾನ.4:21-24] (./21.ಎಂ.ಡಿ.)).

ಜನರು ತಾವು ಬಿತ್ತಿರುವ ಆಹಾರ ಪದಾರ್ಥಗಳನ್ನು ಕೊಯ್ಯುವುದಕ್ಕೆ ಹೊರ ಹೋಗುವ ಸಮಯವನ್ನು ಕೊಯ್ಲು ಎಂದು ಕರೆಯುತ್ತಾರೆ, ಇದರಿಂದ ಅವರು ಆ ಬೆಳೆಯನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಬರುತ್ತಾರೆ ಮತ್ತು ಅವುಗಳನ್ನು ತಿನ್ನುತ್ತಾರೆ. ಅದೇ ರೀತಿಯಲ್ಲಿ ಯೇಸು ಈ ರೂಪಕಲಂಕಾರವನ್ನು ಉಪಯೋಗಿಸಿಕೊಂಡು, ತನ್ನ ಶಿಷ್ಯರು ಕೂಡ ಯೇಸುವಿನ ಕುರಿತಾಗಿ ಇತರ ಜನರಿಗೆ ಹೇಳುವುದಕ್ಕೆ ಹೊರಗಡೆ ಹೋಗಬೇಕಾದ ಅವಶ್ಯಕತೆಯಿದೆಯೆಂದು ಮತ್ತು ಇದರಿಂದ ಜನರು ದೇವರ ರಾಜ್ಯದಲ್ಲಿ ಪಾಲು ಹೊಂದುವರೆಂದು ತನ್ನ ಶಿಷ್ಯರಿಗೆ ಯೇಸು ಬೊದನೆ ಮಾಡಿದ್ದಾರೆ. (ನೋಡಿರಿ: ವಿಶ್ವಾಸ)
“ಸಮಾರ್ಯದ ಸ್ತ್ರೀ”

ಯೇಸುವನ್ನು ನಂಬಿದ ಸಮಾರ್ಯದ ಸ್ತ್ರೀಗೂ ಮತ್ತು ಯೇಸುವನ್ನು ನಂಬದೇ ಆತನನ್ನು ಶಿಲುಬೆಗೆ ಹಾಕಿದ ಯೆಹೂದ್ಯರ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸುವುದಕ್ಕೆ ಯೋಹಾನನು ಬಹುಶಃ ಈ ಸಂಘಟನೆಯ ಕುರಿತಾಗಿ ಹೇಳಿರಬಹುದು. (ನೋಡಿರಿ: ನಂಬು, ನಂಬಿಕೆಗಳು, ನಂಬಿದೆ, ವಿಶ್ವಾಸಿ, ನಂಬಿಕೆ, ಅವಿಶ್ವಾಸಿ, ಅವಿಶ್ವಾಸಿಗಳು, ಆಪನಂಬಿಕೆ)

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಇತರ ಕ್ಲಿಷ್ಟ ಭಾಗಗಳು

“ಆತ್ಮ ಮತ್ತು ಸತ್ಯದಲ್ಲಿ”

ದೇವರು ಯಾರೆಂದು ನಿಜವಾಗಿ ತಿಳಿದು, ಆತನನ್ನು ಆರಾಧಿಸಲು ಆನಂದಿಸುವ ಮತ್ತು ಆತನು ಏನಾಗಿದ್ದಾನೋ ಹಾಗೆಯೇ ಆತನನ್ನು ಪ್ರೀತಿಸುವ ಜನರೆಲ್ಲರೂ ಆತನನ್ನು ನಿಜವಾಗಿ ಮೆಚ್ಚಿಸುವವರು. ಅವರು ಎಲ್ಲಿ ಆರಾಧನೆ ಮಾಡುತ್ತಿದ್ದಾರೆನ್ನುವುದು ಪ್ರಾಮುಖ್ಯವಲ್ಲ.

John 4:1

ಯೋಹಾನ.4:1-6 ವಚನಗಳು, ಸಮಾರ್ಯ ಸ್ತ್ರೀಯೊಂದಿಗೆ ಯೇಸು ಮಾಡಿದ ಸಂಭಾಷಣೆ ಎನ್ನುವ ಮುಂದಿನ ಸಂಧರ್ಭದ ಹಿನ್ನೆಲೆ ಮಾಹಿತಿಯನ್ನು ಕೊಡುತ್ತಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ಇಲ್ಲಿ ದೊಡ್ಡ ವಾಕ್ಯ ಪ್ರಾರಂಭವಾಗುತ್ತಿದೆ.

ὡς οὖν ἔγνω ὁ Ἰησοῦς ὅτι ἤκουσαν οἱ Φαρισαῖοι, ὅτι Ἰησοῦς πλείονας μαθητὰς ποιεῖ καὶ βαπτίζει ἢ Ἰωάννης

ಯೋಹಾನನಿಗಿಂತ ಯೇಸು ಹೆಚ್ಚಿನ ಜನರಿಗೆ ದಿಕ್ಷಾಸ್ನಾನ ಮಾಡಿಸಿ ಶಿಷ್ಯರನ್ನಾಗಿ ಮಾಡುತ್ತಿದ್ದನು. ಆತನು ಮಾಡುತ್ತಿರುವ ಕಾರ್ಯಗಳನ್ನು ಕುರಿತು ಫರಿಸಾಯರು ಕೇಳಿದರು ಎಂದು ಆತನಿಗೆ ತಿಳಿದಾಗ.

ὡς οὖν ἔγνω ὁ Ἰησοῦς

ಮುಖ್ಯ ಸಂಘಟನೆಗಳಲ್ಲಿ ವಿರಾಮವನ್ನು ತೋರಿಸಲು “ಈಗ” ಎನ್ನುವ ಪದವನ್ನು ಉಪಯೋಗಿಸಲಾಗಿದೆ. ಇಲ್ಲಿ ವಿವರಗಳಲ್ಲಿ ಹೊಸ ಭಾಗವನ್ನು ಹೇಳಲು ಯೋಹಾನನು ಪ್ರಾರಂಭಿಸುತ್ತಿದ್ದಾನೆ.

John 4:2

Ἰησοῦς αὐτὸς οὐκ ἐβάπτιζεν

ಆತ್ಮವಾಚಕ ಸರ್ವನಾಮವಾಗಿರುವ “ತಾನೆ” ಎನ್ನುವ ಪದವು ಯೇಸು ಅಲ್ಲದೆ ಆತನ ಶಿಷ್ಯರು ದಿಕ್ಷಾಸ್ನಾನ ಮಾಡಿಸಿದರು ಎಂದು ಒತ್ತಾಯಿಸಿ ಹೇಳುತ್ತದೆ. (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

John 4:3

ἀφῆκεν τὴν Ἰουδαίαν καὶ ἀπῆλθεν πάλιν εἰς τὴν Γαλιλαίαν

“ಈಗ ಯೇಸುವಿಗೆ” ಎನ್ನುವ ಪದಗಳಿಂದ ಪ್ರಾರಂಭವಾಗುವ 1ನೇ ವಚನವನ್ನು ನೀವು ಮತ್ತೆ ಸರಿಯಾಗಿ ಹೇಳಬೇಕಾಗಿರಬಹುದು. “ಈಗ ಯೇಸು ಯೋಹಾನನಗಿಂತ ಹೆಚ್ಚಿನ ಜನರಿಗೆ ದಿಕ್ಷಾಸ್ನಾನ ಮಾಡಿಸುತ್ತಿದ್ದನು ಮತ್ತು ಶಿಷ್ಯರನ್ನಾಗಿ ಮಾಡುತ್ತಿದ್ದನು (ಯೇಸು ತಾನೆ ದಿಕ್ಷಾಸ್ನಾನ ಮಾಡಿಸುತ್ತಿರಲಿಲ್ಲ ಆದರೆ ಆತನ ಶಿಷ್ಯರು ಮಾಡಿಸುತ್ತಿದ್ದರು). ಯೇಸು ಇದನ್ನು ಮಾಡುತ್ತಿದ್ದನು ಎಂದು ಫರಿಸಾಯರು ಕೇಳಿದರು. ಆತನು ಮಾಡುತ್ತಿರುವ ಕಾರ್ಯಗಳನ್ನು ಕುರಿತು ಫರಿಸಾಯರಿಗೆ ಗೊತ್ತಾಗಿದೆ ಎಂದು ಯೇಸುವಿಗೆ ತಿಳಿದಾಗ, ಆತನು ಯೂದಾಯ ಬಿಟ್ಟು ತಿರುಗಿ ಗಲಿಲಾಯಕ್ಕೆ ಹೋದನು”

John 4:7

δός μοι πεῖν

ಇದು ಆಜ್ಞೆಯಲ್ಲ, ಇದು ಒಂದು ವಿನಯಪೂರ್ವಕ ವಿನಂತಿಯಾಗಿದೆ.

John 4:8

οἱ γὰρ μαθηταὶ αὐτοῦ ἀπεληλύθεισαν

ತನ್ನ ಶಿಷ್ಯರಿಗೆ ಬಾವಿಯಿಂದ ನೀರು ಸೇದಲು ಆತನು ಹೇಳಲಿಲ್ಲ ಏಕೆಂದರೆ ಅವರು ಮೊದಲೇ ಅಲಿಂದ ಹೋಗಿದ್ದರು.

John 4:9

λέγει οὖν αὐτῷ ἡ γυνὴ ἡ Σαμαρεῖτις

“ಆತನಿಗೆ” ಎನ್ನುವ ಪದವು ಯೇಸುವನ್ನು ಸೂಚಿಸುತ್ತಿದೆ.

πῶς σὺ Ἰουδαῖος ὢν, παρ’ ἐμοῦ πεῖν αἰτεῖς

ಯೇಸು ಆಕೆಯನ್ನು ನೀರು ಕೇಳಿದಕ್ಕೆ ಸಮಾರ್ಯದ ಸ್ತ್ರೀ ಆಶ್ಚರ್ಯ ವ್ಯಕ್ತಪಡಿಸಿದಳು ಎಂದು ತೋರಿಸಲು ಈ ಮಾತು ಪ್ರಶ್ನೆಯಂತೆ ಕಾಣಿಸುತ್ತದೆ. ಪರ್ಯಾಯ ಅನುವಾದ: “ನೀನು ಯೆಹೂದ್ಯನಾಗಿದ್ದು, ಸಮಾರ್ಯದವಳಾದ ನನ್ನನ್ನು ನೀರು ಕೇಳಿರುವುದು, ನನಗೆ ನಂಬುವುದಕ್ಕೆ ಆಗುತ್ತಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

οὐ…συνχρῶνται

ಸಹವಾಸದಲ್ಲಿರುವದಿಲ್ಲ

John 4:10

ὕδωρ ζῶν

ಒಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಲು ಮತ್ತು ನೂತನ ಜೀವನ ತರುವಂತೆ ಕಾರ್ಯ ಮಾಡುವ ಪವಿತ್ರತ್ಮಾನನ್ನು “ಜೀವಕರವಾದ ನೀರು” ಎನ್ನುವ ರೂಪಕಾಲಂಕಾರ ಪದವನ್ನು ಯೇಸು ಉಪಯೋಗಿಸುತ್ತಿದ್ದಾನೆ. (ನೋಡಿರಿ: ರೂಪಕ ಅಲಂಕಾರ)

John 4:12

μὴ σὺ μείζων εἶ τοῦ πατρὸς ἡμῶν Ἰακώβ, ὃς ἔδωκεν ἡμῖν τὸ φρέαρ, καὶ αὐτὸς ἐξ αὐτοῦ ἔπιεν, καὶ οἱ υἱοὶ αὐτοῦ, καὶ τὰ θρέμματα αὐτοῦ

ಒಂದು ವಿಷಯವನ್ನು ಒತ್ತಾಯಿಸಿ ಹೇಳಲು ಈ ಮಾತು ಪ್ರಶ್ನೆಯ ರೂಪದಲ್ಲಿ ಉಪಯೋಗಿಸಲ್ಪಟ್ಟಿದೆ. ಪರ್ಯಾಯ ಅನುವಾದ: “ನಮ್ಮ ಪಿತೃವಾದ ಯಾಕೋಬನಿಗಿಂತ ನೀನು ದೊಡ್ಡವನಲ್ಲ... ಪಶುಗಳು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τοῦ πατρὸς ἡμῶν Ἰακώβ

ನಮ್ಮ ಪಿತೃವಾದ ಯಾಕೋಬ

ἐξ αὐτοῦ ἔπιεν

ಅದರಿಂದ ಬಂದ ನೀರನ್ನು ಕುಡಿದರು

John 4:13

διψήσει πάλιν

ಮತ್ತೆ ನೀರು ಕುಡಿಯುವ ಅವಶ್ಯಕತೆಯುಂಟು

John 4:14

τὸ ὕδωρ ὃ δώσω αὐτῷ γενήσεται ἐν αὐτῷ πηγὴ ὕδατος

ಇಲ್ಲಿ ಜೀವ ಕೊಡುವ ನೀರು ಎನ್ನುವ ಪದಕ್ಕೆ “ನೀರಿನ ಬುಗ್ಗೆ” ಎನ್ನುವ ಪದ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ನೀರಿನ ಬುಗ್ಗೆಯಂತಿರುವುದು” (ನೋಡಿರಿ: ರೂಪಕ ಅಲಂಕಾರ)

ζωὴν αἰώνιον

ಇಲ್ಲಿ “ಜೀವ” ಎನ್ನುವ ಪದ ದೇವರು ಮಾತ್ರವೇ ಕೊಡುವ “ಆತ್ಮಿಯವಾದ ಜೀವವನ್ನು” ಸೂಚಿಸುತ್ತಿದೆ.

John 4:15

κύριε

ಈ ಸಂದರ್ಭದಲ್ಲಿ, ಸಮಾರ್ಯದ ಸ್ತ್ರೀ ಯೇಸುವನ್ನು “ಅಯ್ಯಾ” ಎಂದು ಸಂಬೋಧಿಸುತ್ತಿದ್ದಾಳೆ, ಇದು ಗೌರವ ಅಥವಾ ವಿನಯಪೂರ್ವಕವಾದ ಸಂಬೋಧನೆಯಾಗಿದೆ.

ἀντλεῖν

ನೀರನ್ನು ತರಲು ಅಥವಾ ಪಾತ್ರೆ ಮತ್ತು ಹಗ್ಗ ಉಪಯೋಗಿಸಿ “ಬಾವಿಯಿಂದ ನೀರು ಸೇದುವುದು”

John 4:18

τοῦτο ἀληθὲς εἴρηκας

17ನೇ ವಚನದಲ್ಲಿ “’ನನಗೆ ಗಂಡನಿಲ್ಲವೆಂದು’ ನೀನು ಹೇಳಿದ್ದು ಸರಿಯೇ” ಎನ್ನುವ ಮಾತುಗಳನ್ನು ಒತ್ತಾಯಿಸಿ ಹೇಳಲು ಯೇಸು ಈ ಮಾತುಗಳ ಮುಖಾಂತರ ತನ್ನ ಮಾತುಗಳನ್ನು ಒತ್ತಾಯಿಸಿ ಹೇಳುತ್ತಿದ್ದಾನೆ. ಅವಳು ಸತ್ಯವನ್ನು ಹೇಳುತ್ತಿವುದು ಆತನಿಗೆ ಗೊತ್ತಿದೆ ಎಂದು ಆಕೆ ತಿಳಿದುಕೊಳ್ಳಬೇಕೆಂದು ಆತನು ಬಯಸಿದನು.

John 4:19

κύριε

ಈ ಸಂದರ್ಭದಲ್ಲಿ, ಸಮಾರ್ಯದ ಸ್ತ್ರೀ ಯೇಸುವನ್ನು “ಅಯ್ಯಾ” ಎಂದು ಸಂಬೋಧಿಸುತ್ತಿದ್ದಾಳೆ, ಇದು ಗೌರವ ಅಥವಾ ವಿನಯಪೂರ್ವಕವಾದ ಸಂಬೋಧನೆಯಾಗಿದೆ.

θεωρῶ ὅτι προφήτης εἶ σύ

ನೀನು ಪ್ರವಾದಿ ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆನು

John 4:20

οἱ πατέρες ἡμῶν

ನಮ್ಮ ಪಿತೃಗಳು ಅಥವಾ “ನಮ್ಮ ಹಿರಿಯರು”

John 4:21

πίστευέ μοι

ಒಬ್ಬ ವ್ಯಕ್ತಿಯನ್ನು ನಂಬುವುದು ಎಂದರೆ ಅವನು ಹೇಳಿರುವುದು ಸತ್ಯವೆಂದು ಅಂಗೀಕರಿಸುವುದು.

προσκυνήσετε τῷ Πατρί

ಪಾಪಗಳಿಂದ ನಿತ್ಯ ರಕ್ಷಣೆ ತಂದೆಯಾದ ದೇವರು, ಯೆಹೂದ್ಯರ ದೇವರಾಗಿರುವ, ಯೆಹೋವನಿಂದ ಬರುವುದು.

Πατρί

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 4:22

ὑμεῖς προσκυνεῖτε ὃ οὐκ οἴδατε, ἡμεῖς προσκυνοῦμεν ὃ οἴδαμεν

ಈ ಸಮಯದಲ್ಲಿ ಯೇಸುವಿನ ಮಾತುಗಳ ಉದ್ದೇಶವೇನೆಂದರೆ ದೇವರು ತನ್ನನ್ನು ತಾನು ಮತ್ತು ಆತನ ಆಜ್ಞೆಗಳನ್ನು ಸಮಾರ್ಯದವರಿಗಲ್ಲಾ ಯೆಹೂದ್ಯರಿಗೆ ಪ್ರಕಟಣೆ ಮಾಡಿಕೊಂಡಿದ್ದಾನೆ. ಅದನ್ನು ಪವಿತ್ರ ಗ್ರಂಥಗಳಿಂದ ಯೆಹುಉದ್ಯರು ಸಮಾರ್ಯರಿಗಿಂತ ಹೆಚ್ಚಾಗಿ ತಿಳಿದಿದ್ದಾರೆ.

ὅτι ἡ σωτηρία ἐκ τῶν Ἰουδαίων ἐστίν

ಆತನ ರಕ್ಷಣೆಯನ್ನು ಕುರಿತಾಗಿ ಬೇರೆ ಜನರಿಗೆ ಹೇಳುವ ವಿಶೇಷವಾದ ಜನರಾಗಿ ದೇವರು ಯೆಹೂದ್ಯರನ್ನು ನೇಮಿಸಿಕೊಂಡಿದ್ದಾನೆಂದು ಇದರ ಅರ್ಥವಾಗಿದೆ. ಯೆಹೂದ್ಯರು ಬೇರೆ ಜನರನ್ನು ರಕ್ಷಿಸುತ್ತಾರೆಂದು ಇದರ ಅರ್ಥವಲ್ಲ. ಪರ್ಯಾಯ ಅನುವಾದ: “ಯೆಹೂದ್ಯರ ಮುಖಾಂತರ ಎಲ್ಲಾ ಜನರು ದೇವರ ರಕ್ಷಣೆಯನ್ನು ಕುರಿತು ತಿಳಿದುಕೊಳ್ಳುವರು”

ἡ σωτηρία ἐκ τῶν Ἰουδαίων ἐστίν

ಪಾಪಗಳಿಂದ ನಿತ್ಯ ರಕ್ಷಣೆ ತಂದೆಯಾದ ದೇವರು, ಯೆಹೂದ್ಯರ ದೇವರಾಗಿರುವ, ಯೆಹೋವನಿಂದ ಬರುವುದು.

John 4:23

ಸಮಾರ್ಯದ ಸ್ತ್ರೀಯೊಂದಿಗೆ ಯೇಸು ಮಾತಾಡುವುದನ್ನು ಮುಂದುವರೆಸುತಿದ್ದಾನೆ.

ἀλλὰ ἔρχεται ὥρα καὶ νῦν ἐστιν, ὅτε οἱ ἀληθινοὶ προσκυνηταὶ προσκυνήσουσιν

ಹೀಗಿದ್ದಲ್ಲಿ, ... ಮಾಡಲು ನಿಜವಾದ ಆರಾಧನೆ ಮಾಡುವವರಿಗೆ ಇದು ಸರಿಯಾದ ಸಮಯವಾಗಿದೆ

τῷ Πατρὶ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἐν πνεύματι καὶ ἀληθείᾳ

ಇಲ್ಲಿ “ಆತ್ಮ” ಎನ್ನುವ ಪದಕ್ಕೆ ಕೆಳಗೆಕೊಟ್ಟಿರುವ ಅರ್ಥಗಳು ಇರಬಹುದು 1) ಅಂತರಂಗ ಪುರುಷ, ಮನಸ್ಸು ಮತ್ತು ಹೃದಯ, ಒಬ್ಬ ವ್ಯಕ್ತಿ ಆಲೋಚನೆ ಮಾಡುವ ಸಂಗತಿಗಳು ಮತ್ತು ಆತನು ಪ್ರೀತಿಸುವ ವಿಷಯಗಳು, ಆರಾಧನೆ ಮಾಡಲು ಎಲ್ಲಿಗೆ ಹೋಗುವನು ಮತ್ತು ಅವನು ಮಾಡುವ ಕಾರ್ಯಕ್ರಮಗಳು ಬೇರೆ ಇರಬಹುದು, ಅಥವಾ 2) ಪವಿತ್ರತ್ಮಾನು. ಪರ್ಯಾಯ ಅನುವಾದ: “ಆತ್ಮದಲ್ಲಿ ಮತ್ತು ಸತ್ಯದಲ್ಲಿ” ಅಥವಾ “ಆತ್ಮನ ಸಹಾಯದಿಂದ ಮತ್ತು ಸತ್ಯದಲ್ಲಿ”

ἐν…ἀληθείᾳ

ದೇವರ ಕುರಿತು ಯಾವುದು ಸತ್ಯವೆಂದು ಸರಿಯಾಗಿ ಯೋಚಿಸುವುದು

John 4:25

οἶδα ὅτι Μεσσίας ἔρχεται, ὁ λεγόμενος Χριστός

ಈ ಎರಡು ಪದಗಳು “ದೇವರ ವಾಗ್ದಾನ ಅರಸನು” ಎಂದು ಅರ್ಥಕೊಡುತ್ತವೆ.

ἐκεῖνος, ἀναγγελεῖ ἡμῖν ἅπαντα

“ಎಲ್ಲವನ್ನು ತಿಳಿಸಿಕೊಡುವನು” ಎನ್ನುವ ಮಾತು ಜನರೆಲ್ಲರೂ ತಿಳಿದುಕೊಳ್ಳಬೇಕೆನ್ನುವ ಭಾವವನ್ನು ವ್ಯಕ್ತಗೊಳಿಸುತ್ತಿದೆ. ಪರ್ಯಾಯ ಅನುವಾದ: “ನಾವು ತಿಳಿದುಕೊಳ್ಳಬೇಕಾದ ಎಲ್ಲವನ್ನು ಆತನು ನಮಗೆ ಹೇಳುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 4:27

ἐπὶ τούτῳ ἦλθον οἱ μαθηταὶ αὐτοῦ

ಯೇಸು ಈ ಮಾತುಗಳನ್ನು ಹೇಳುತ್ತಿರುವಾಗ, ಆತನ ಶಿಷ್ಯರು ಪಟ್ಟಣದಿಂದ ಹಿಂತಿರುಗಿ ಬಂದರು

καὶ ἐθαύμαζον ὅτι μετὰ γυναικὸς ἐλάλει

ಅವನಿಗೆ ಪರಿಚಯವಿಲ್ಲದ ಸ್ತ್ರೀಯೊಂದಿಗೆ ಮಾತಾಡುವುದು, ಅದರಲ್ಲಿ ವಿಶೇಷವಾಗಿ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುವುದು ಒಬ್ಬ ಯೆಹೂದ್ಯನಿಗೆ ಸಾಮಾನ್ಯವಾದ ವಿಷಯವಲ್ಲ.

οὐδεὶς μέντοι εἶπεν, τί ζητεῖς? ἢ, τί λαλεῖς μετ’ αὐτῆς?

ಈ ಕೆಳಕಂಡ ಅರ್ಥಗಳು ಇರಬಹುದು 1) ಶಿಷ್ಯರು ಎರಡೂ ಪ್ರಶ್ನೆಗಳನ್ನು ಯೇಸುವಿಗೆ ಕೇಳಿದರು ಅಥವಾ 2) “ ‘ಏನು….. ಬೇಕು?’ ಎಂದು ಆ ಸ್ತ್ರೀಯೊಂದಿಗೆ ಯಾರು ಕೇಳಲಿಲ್ಲ ಅಥವಾ ‘ಅವಳು…… ಯಾಕೆ?’ ಎಂದು ಯೇಸುವನ್ನು ಕೇಳಲಿಲ್ಲ”

John 4:29

δεῦτε, ἴδετε ἄνθρωπον ὃς εἶπέ μοι πάντα ὅσα ἐποίησα

ಆಕೆಯ ಕುರಿತು ಯೇಸು ಎಷ್ಟೊಂದು ವಿಷಯಗಳು ತಿಳಿದಿರುವದನ್ನು ಕಂಡು ಪ್ರಭಾವಿತಳಾಗಿರುವುದನ್ನು ತೋರಿಸಲು ಸಮಾರ್ಯದ ಸ್ತ್ರೀ ಉತ್ಪ್ರೇಕ್ಷಿಸುತ್ತಿದ್ದಾಳೆ. ಪರ್ಯಾಯ ಅನುವಾದ: “ನಾನು ಆತನನ್ನು ಈ ದಿನದವರೆಗೂ ನೋಡದಿದ್ದರೂ, ನನ್ನ ಕುರಿತು ಹೆಚ್ಚಾಗಿ ತಿಳಿದಿರುವ ಆ ಮನುಷ್ಯನನ್ನು ನೋಡಲು ಬನ್ನಿರಿ” (ನೋಡಿರಿ: ಅತಿಶಯೋಕ್ತಿ)

μήτι οὗτός ἐστιν ὁ Χριστός

ಯೇಸು ಕ್ರಿಸ್ತನಾಗಿರುವನು ಎಂದು ಆ ಸ್ತ್ರೀಗೆ ನಿಶ್ಚಯತೆ ಇರಲಿಲ್ಲ, ಅದರಿಂದ “ಇಲ್ಲ” ಎನ್ನುವ ಉತ್ತರವನ್ನು ಬಯಸುತ್ತ ಆಕೆ ಒಂದು ಪ್ರಶ್ನೆಯನ್ನು ಕೇಳಿದಳು, ಆದರೆ ಜನರು ತಾವೇ ನಿರ್ಣಯ ಮಾಡಿಕೊಳ್ಳಲಿ ಎಂದು ಬಯಸುತ್ತ ಒಂದು ವ್ಯಾಖ್ಯೆ ಮಾಡುವದಕ್ಕೆ ಬದಲಾಗಿ ಪ್ರಶ್ನಿಸುತ್ತಿದ್ದಾಳೆ.

John 4:31

ἐν τῷ μεταξὺ

ಆ ಸ್ತ್ರೀ ಪಟ್ಟಣದೊಳಕ್ಕೆ ಹೋಗುತ್ತಿರುವಾಗ

ἠρώτων αὐτὸν οἱ μαθηταὶ

ಶಿಷ್ಯರು ಯೇಸುವಿಗೆ ಹೇಳುತ್ತಿದ್ದರು ಅಥವಾ “ಶಿಷ್ಯರು ಯೇಸುವನ್ನು ಪ್ರೋತ್ಸಾಹಿಸುತ್ತಿದ್ದರು”

John 4:32

ἐγὼ βρῶσιν ἔχω φαγεῖν, ἣν ὑμεῖς οὐκ οἴδατε

ಅಕ್ಷರಶಃ “ಆಹಾರ” ಕುರಿತಾಗಿ ಯೇಸು ಇಲ್ಲಿ ಮಾತನಾಡುತಿಲ್ಲ ಆದರೆ ಯೋಹಾನ.4:34 ವಚನದಲ್ಲಿರುವ ಆತ್ಮಿಯ ಪಾಠಕ್ಕಾಗಿ ತನ್ನ ಶಿಷ್ಯರನ್ನು ಸಿದ್ಧಪಡಿಸುತ್ತಿದ್ದಾನೆ.

John 4:33

μή τις ἤνεγκεν αὐτῷ φαγεῖν

ಅಕ್ಷರಶಃ “ಆಹಾರ” ಕುರಿತಾಗಿ ಯೇಸು ಮಾತಾಡುತ್ತಿದ್ದಾನೆಂದು ಶಿಷ್ಯರು ಅಂದುಕೊಂಡರು. “ಇಲ್ಲ” ಎನ್ನುವ ಉತ್ತರವನ್ನು ಬಯಸುತ್ತ ಒಬ್ಬರಿಗೊಬ್ಬರು ಈ ಪ್ರಶ್ನೆಯನ್ನು ಕೇಳಿಕೊಳ್ಳಲು ಪ್ರಾರಂಭಿಸಿದರು. ಪರ್ಯಾಯ ಅನುವಾದ: “ನಾವು ಪಟ್ಟಣದಲ್ಲಿದ್ದಾಗೆ ನಿಶ್ಚಯವಾಗಿ ಯಾರು ಆತನಿಗಾಗಿ ಆಹಾರವನ್ನು ತಂದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 4:34

ἐμὸν βρῶμά ἐστιν ἵνα ποιήσω τὸ θέλημα τοῦ πέμψαντός με, καὶ τελειώσω αὐτοῦ τὸ ἔργον

ಇಲ್ಲಿ “ಆಹಾರ” ಎನ್ನುವ ಪದವು “ದೇವರ ಚಿತ್ತವನ್ನು ಪಾಲಿಸುವುದು” ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಹಸಿದುಗೊಂಡಿರುವ ವ್ಯಕ್ತಿಯನ್ನು ಆಹಾರ ತೃಪ್ತಿಪಡಿಸುವ ರೀತಿಯಲ್ಲಿ ದೇವರ ಚಿತ್ತವನ್ನು ಪಾಲಿಸುವುದು ನನ್ನನ್ನು ತೃಪ್ತಿಪಡಿಸುವುದು” (ನೋಡಿರಿ: ರೂಪಕ ಅಲಂಕಾರ)

John 4:35

οὐχ ὑμεῖς λέγετε

ನಿಮ್ಮ ಪ್ರಸಿದ್ಧಿ ಹೇಳಿಕೆಗಳಲ್ಲಿ ಇದು ಒಂದಲ್ಲವೇ

ἐπάρατε τοὺς ὀφθαλμοὺς ὑμῶν καὶ θεάσασθε τὰς χώρας, ὅτι λευκαί εἰσιν πρὸς θερισμόν ἤδη

“ಹೊಲಗಳು” ಮತ್ತು “ಕೊಯ್ಲಿಗೆ ಸಿದ್ಧವಾಗಿವೆ” ಎನ್ನುವ ಪದಗಳು ರೂಪಕಾಲಂಕಾರಗಳಾಗಿವೆ. “ಹೊಲಗಳು” ಮನುಷ್ಯರನ್ನು ಸೂಚಿಸುತ್ತಿದೆ. “ಕೊಯ್ಲಿಗೆ ಸಿದ್ಧವಾಗಿವೆ” ಎನ್ನುವ ಮಾತು ಕೊಯ್ಲಿಗೆ ಸಿದ್ಧವಾಗಿರುವ ಹೊಲಗಳಂತೆ ಜನರು ಯೇಸುವಿನ ಸಂದೇಶವನ್ನು ಕೇಳಲು ಸಿದ್ಧವಾಗಿದ್ದಾರೆ ಎಂದರ್ಥ. ಪರ್ಯಾಯ ಅನುವಾದ: “ಕಣ್ಣುಗಳನ್ನು ಮೇಲೆತ್ತಿ ಜನರನ್ನು ನೋಡಿರಿ! ಜನರು ಅವುಗಳನ್ನು ಕೊಯ್ಲು ಸಿದ್ಧವಾಗಿರುವ ಹೊಲಗಳಲ್ಲಿನ ಬೆಳೆಗಳಂತೆ ಅವರು ನನ್ನ ಸಂದೇಶವನ್ನು ನಂಬುವುದಕ್ಕೆ ಸಿದ್ಧವಾಗಿದ್ದಾರೆ” (ನೋಡಿರಿ: ರೂಪಕ ಅಲಂಕಾರ)

John 4:36

καὶ συνάγει καρπὸν εἰς ζωὴν αἰώνιον

“ನಿತ್ಯ ಜೀವಕ್ಕಾಗಿ ಫಲ” ಎನ್ನುವ ಮಾತು ಕ್ರಿಸ್ತನ ಸಂದೇಶವನ್ನು ನಂಬಿ ಮತ್ತು ನಿತ್ಯ ಜೀವವನ್ನು ಪಡೆದುಕೊಳ್ಳುವ ಜನರನ್ನು ಸೂಚಿಸುತ್ತಿರುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಸಂದೇಶವನ್ನು ಕೇಳಿ ಮತ್ತು ನಿತ್ಯ ಜೀವವನ್ನು ಹೊಂದುವ ಜನರು ಕೊಯ್ಲಗಾರ ಶೇಕರಿಸುವ ಫಲದಂತೆ ಇರುವರು” (ನೋಡಿರಿ: ರೂಪಕ ಅಲಂಕಾರ)

John 4:37

ಯೇಸು ತನ್ನ ಶಿಷ್ಯರೊಂದಿಗೆ ಮಾತಾಡುವುದನ್ನು ಮುಂದುವರೆಸುತ್ತಿದ್ದಾನೆ.

ἄλλος ἐστὶν ὁ σπείρων, καὶ ἄλλος ὁ θερίζων

“ಬಿತ್ತುವುದು” ಮತ್ತು “ಕೊಯ್ಯುವುದು” ಎನ್ನುವ ಪದಗಳು ರೂಪಕಾಲಂಕಾರವಾಗಿವೆ. “ಬಿತ್ತುವವನು” ಯೇಸುವಿನ ಸಂದೇಶವನ್ನು ಹಂಚಿಕೊಳ್ಳುವನು. “ಕೊಯ್ಯುವವನು” ಯೇಸುವಿನ ಸಂದೇಶವನ್ನು ಸ್ವೀಕರಿಸುವಂತೆ ಮಾಡುವನು. ಪರ್ಯಾಯ ಅನುವಾದ: “ಒಬ್ಬ ವ್ಯಕ್ತಿ ಬೀಜವನ್ನು ಬಿತ್ತುವನು ಮತ್ತು ಮತ್ತೊಬ್ಬನು ಬೆಳೆಯನ್ನು ಕೊಯ್ಯುವನು” (ನೋಡಿರಿ: ರೂಪಕ ಅಲಂಕಾರ)

John 4:38

ὑμεῖς εἰς τὸν κόπον αὐτῶν εἰσεληλύθατε

ನೀವು ಈಗ ಅವರ ಕೆಲಸದಲ್ಲಿ ಸೇರುತ್ತಿರುವಿರಿ

John 4:39

ἐπίστευσαν εἰς αὐτὸν

ಒಬ್ಬರನ್ನು “ನಂಬುವುದು” ಎಂದರೆ ಆ ವ್ಯಕ್ತಿಯಲ್ಲಿ “ಭರವಸೆ” ವಿದುವುದು ಎಂದರ್ಥ. ಆತನು ದೇವರ ಮಗನೆಂದು ಅವರು ನಂಬಿದರೆನ್ನುವ ಅರ್ಥವೂ ಇಲ್ಲಿ ಬರುತ್ತದೆ.

εἶπέν μοι πάντα ἃ ἐποίησα

ಇದು ಉತ್ಪ್ರೇಕ್ಷವಾಗಿದೆ. ಆಕೆಯ ಕುರಿತು ಯೇಸು ತಿಳಿದಿರುವ ಸಂಗತಿಗಳನ್ನು ಕಂಡು ಆಕೆ ಪ್ರಭಾವಿತಳಾದಳು. ಪರ್ಯಾಯ ಅನುವಾದ: “ನನ್ನ ಜೀವನದ ಕುರಿತು ಅನೇಕ ಸಂಗತಿಗಳನ್ನು ಆತನು ನನಗೆ ಹೇಳಿದನು” (ನೋಡಿರಿ: ಅತಿಶಯೋಕ್ತಿ)

John 4:41

τὸν λόγον αὐτοῦ

ಇಲ್ಲಿ “ವಾಕ್ಯ” ಎನ್ನುವ ಪದ ಯೇಸು ಪ್ರಕಟಿಸಿದ ಸಂದೇಶವನ್ನು ಸೂಚಿಸುವ ಸಮಾನರ್ಥ ಮಾತಾಗಿದೆ. ಪರ್ಯಾಯ ಅನುವಾದ: “ಆತನ ಸಂದೇಶ” (ನೋಡಿರಿ: ಲಕ್ಷಣಾಲಂಕಾರ)

John 4:42

κόσμου

“ಲೋಕ” ಎನ್ನುವ ಪದವು ಪ್ರಪಂಚದಲ್ಲಿರುವ ಎಲ್ಲ ವಿಶ್ವಾಸಿಗಳನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಪ್ರಪಂಚದಲ್ಲಿರುವ ಎಲ್ಲಾ ವಿಶ್ವಾಸಿಗಳು” (ನೋಡಿರಿ: ಲಕ್ಷಣಾಲಂಕಾರ)

John 4:43

ಯೇಸು ಗಲಿಲಾಯಕ್ಕೆ ಹೋಗಿ ಒಂದು ಹುಡುಗನನ್ನು ಸ್ವಸ್ಥ ಮಾಡಿದನು. 44ನೇ ವಚನದಲ್ಲಿ ಯೇಸು ಮುಂಚಿತವಾಗಿ ಹೇಳಿರುವ ಮಾತುಗಳ ಹಿನ್ನೆಲೆ ಸಮಾಚಾರವನ್ನು ಕೊಡುತ್ತಿದ್ದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἐκεῖθεν

ಯೂದಾಯದಿಂದ

John 4:44

αὐτὸς γὰρ Ἰησοῦς ἐμαρτύρησεν

ಇದನ್ನು ಯೇಸು ಹೇಳಿದ್ದಾನೆ ಅಥವಾ “ಪ್ರಕಟಿಸಿದ್ದಾನೆ” ಎಂದು ಒತ್ತಾಯಿಸಿ ಹೇಳಲು “ತಾನೇ” ಎನ್ನುವ ಆತ್ಮವಾಚಕ ಸರ್ವನಾಮವನ್ನು ಉಪಯೋಗಿಸಲ್ಪಟ್ಟಿದೆ.. ಒಬ್ಬ ವ್ಯಕ್ತಿಗೆ ಪ್ರಾಧಾನ್ಯತೆ ಬರುವ ಹಾಗೆ ನಿಮ್ಮ ಭಾಷೆಯಲ್ಲಿ ನೀವು ಅನುವಾದ ಮಾಡಬಹುದು. (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

προφήτης ἐν τῇ ἰδίᾳ πατρίδι, τιμὴν οὐκ ἔχει

ಅವರ ಸ್ವಂತ ದೇಶದ ಪ್ರವಾದಿಗೆ ಜನರು ಗೌರವ ನೀಡುವುದಿಲ್ಲ ಅಥವಾ ಘನತೆ ಕೊಡುವದಿಲ್ಲ ಅಥವಾ “ತನ್ನ ಸ್ವಂತ ಜನರಿಂದ ಒಬ್ಬ ಪ್ರವಾದಿ ಗೌರವಿಸಲ್ಪಡುವುದಿಲ್ಲ”

John 4:45

ἐν τῇ ἑορτῇ

ಇಲ್ಲಿ ಪಸ್ಕ ಹಬ್ಬದ ಕುರಿತು ಹೇಳಲಾಗಿದೆ.

John 4:46

οὖν

ಮುಖ್ಯ ಕಥೆಯಿಂದ ವಿರಾಮವನ್ನು ಗುರುತಿಸಲು ಮತ್ತು ಕಥೆಯಲ್ಲಿ ಹೊಸ ಭಾಗಕ್ಕೆ ಹೋಗಲು ಈ ಮಾತನ್ನು ಉಪಯೋಗಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡಲು ಬೇರೆ ಪದ್ಧತಿಯಿದ್ದಲ್ಲಿ, ಅದನ್ನು ನೀವು ಉಪಯೋಗಿಸಬಹುದು.

βασιλικὸς

ಅರಸನ ಸೇವೆಯಲ್ಲಿರುವ ಒಬ್ಬರು

John 4:48

ἐὰν μὴ σημεῖα καὶ τέρατα ἴδητε, οὐ μὴ πιστεύσητε

ಹೊರತು... ನಂಬುವುದಿಲ್ಲ ಎನ್ನುವ ಮಾತು ಇಲ್ಲಿ ದ್ವಂದ್ವ ನಕಾರಾತ್ಮಕವಾದ ಮಾತಾಗಿದೆ. ಕೆಲವೊಂದು ಭಾಷೆಗಳಲ್ಲಿ ಈ ಮಾತನ್ನು ಸಕಾರಾತ್ಮಕವಾಗಿ ಅನುವಾದ ಮಾಡುವುದು ಸಹಜವಾಗಿರುತ್ತದೆ. ಪರ್ಯಾಯ ಅನುವಾದ: “ನೀವು ಸೂಚಕ ಕ್ರಿಯೆಗಳನ್ನು ನೋಡದೆ ಹೊರತು ನನ್ನನ್ನು ನಂಬುವದಿಲ್ಲ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

John 4:50

ἐπίστευσεν…τῷ λόγῳ

ಇಲ್ಲಿ “ವಾಕ್ಯ” ಎನ್ನುವ ಪದ ಯೇಸು ಹೇಳಿದ ಸಂದೇಶವನ್ನು ಸೂಚಿಸುವ ಸಮಾನರ್ಥ ಮಾತಾಗಿದೆ. ಪರ್ಯಾಯ ಅನುವಾದ: “ಸಂದೇಶವನ್ನು ನಂಬಿದರು” (ನೋಡಿರಿ: ಲಕ್ಷಣಾಲಂಕಾರ)

John 4:51

ἤδη

ಒಂದೇ ಸಮಯದಲ್ಲಿ ನಡೆಯುವ ಎರಡು ಸಂಘಟನೆಗಳನ್ನು ಗುರುತಿಸಲು ಈ ಪದವನ್ನು ಉಪಯೋಗಿಸಲಾಗಿದೆ. ಆ ಅಧಿಕಾರಿ ಮನೆಗೆ ಹೋಗುತ್ತಿದ್ದಾಗ, ಅವನ ಸೇವಕರು ಅವನನ್ನು ರಸ್ತೆಯಲ್ಲಿ ಬೇಟಿಯಾಗಲು ಬರುತ್ತಿದ್ದರು.

John 4:53

καὶ ἐπίστευσεν αὐτὸς καὶ ἡ οἰκία αὐτοῦ ὅλη

“ಆತನು” ಎನ್ನುವ ಪದವನ್ನು ಒತ್ತಾಯಿಸಿ ಹೇಳಲು “ತಾನೇ” ಎನ್ನುವ ಆತ್ಮವಾಚಕ ಸರ್ವನಾಮವನ್ನು ಉಪಯೋಗಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡಲು ಬೇರೆ ಪದ್ಧತಿಯಿದ್ದಲ್ಲಿ, ಅದನ್ನು ನೀವು ಉಪಯೋಗಿಸಬಹುದು.

John 4:54

σημεῖον

ಅದ್ಭುತ ಕಾರ್ಯಗಳನ್ನು “ಸೂಚಕಕಾರ್ಯಗಳು” ಎಂದು ಸಹ ಕರೆಯಬಹುದು ಯಾಕಂದರೆ ವಿಶ್ವದ ಮೇಲೆ ಸಂಪೂರ್ಣ ಅಧಿಕಾರವನ್ನು ಸರ್ವಶಕ್ತನಾದ ದೇವರು ಹೊಂದಿದ್ದಾನೆ ಎಂದು ನಿರೂಪಿಸಲು ಅಥವಾ ಸೂಚಿಸಲು ಇವುಗಳನ್ನು ಉಪಯೋಗಿಸಲಾಗಿವೆ.

John 5

ಯೋಹಾನ 05 ಸಾಧಾರಣ ಅಂಶಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಅಂಶಗಳು

ಗುಣಪಡಿಸುವ ನೀರು

ನೀರು “ಕದಲಾಡುವ” ಸಮಯದಲ್ಲಿ ಯೆರೂಸಲೇಮಿನಲ್ಲಿರುವ ಕೆಲವು ಕೊಳಗಳೊಳಗೆ ಜನರು ಇಳಿಯುವಾಗ ದೇವರು ಅವರನ್ನು ಗುಣಪಡಿಸುತ್ತಾರೆಂದು ಯೆಹೂದ್ಯರಲ್ಲಿ ಅನೇಕರು ನಂಬುತ್ತಿದ್ದರು.

ಸಾಕ್ಷಿ

ಸಾಕ್ಷಿ ಎನ್ನುವುದು ಇತರ ವ್ಯಕ್ತಿಯ ಕುರಿತಾಗಿ ಇನ್ನೊಬ್ಬ ವ್ಯಕ್ತಿ ಹೇಳುವ ಮಾತುಗಳಾಗಿರುತ್ತವೆ. ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಹೇಳಿಕೊಳ್ಳುವುದು ಪ್ರಾಮುಖ್ಯವಲ್ಲ ಇತರರು ಆ ವ್ಯಕ್ತಿಯ ಕುರಿತಾಗಿ ಹೇಳುವುದು ಬಹಳ ಪ್ರಾಮುಖ್ಯ. ಯೇಸು ಯಾರೆಂದೆನ್ನುವುದರ ಕುರಿತಾಗಿ ದೇವರು ಅವರಿಗೆ ಹೇಳಿದ್ದಾನೆಂದು ಯೇಸು ಯೆಹೂದ್ಯರಿಗೆ ಹೇಳಿದನು, ಆದ್ದರಿಂದ ಆತನು ಯಾರೆಂದು ಅವರಿಗೆ ಹೇಳುವ ಅವಶ್ಯಕತೆ ಇದ್ದಿಲ್ಲ. ಮೆಸ್ಸಯ್ಯಾ ಬಂದು ಏನು ಮಾಡುತ್ತಾನೆನ್ನುವದರ ಕುರಿತಾಗಿ ಹಳೇ ಒಡಂಬಡಿಕೆಯ ಲೇಖಕರಿಗೆ ದೇವರು ಹೇಳಿದ್ದರು ಮತ್ತು ಯೇಸು ಏನು ಮಾಡಬೇಕೆಂದು ಲೇಖನ ಭಾಗಗಳಲ್ಲಿ ಬರೆಯಲ್ಪಟ್ಟಿರುವುದೋ ಅದೆಲ್ಲವೂ ಅವೆಲ್ಲವುಗಳನ್ನು ಯೇಸು ಮಾಡಿದ್ದಾರೆ.

ಜೀವ ಪುನರುತ್ಥಾನ ಮತ್ತು ತೀರ್ಪು ಪುನರುತ್ಥಾನ

ದೇವರು ಕೆಲವರನ್ನು ಜೀವಂತರನ್ನಾಗಿ ಮಾಡುವನು, ಯಾಕಂದರೆ ಆತನಿಗೆ ಅವರಿಗೆ ತನ್ನ ಕೃಪೆಯನ್ನು ಅನುಗ್ರಹಿಸುವನು, ಅವರು ಆತನೊಂದಿಗೆ ಎಂದೆಂದಿಗೂ ಸದಾಕಾಲವು ಇರುತ್ತಾರೆ. ಆದರೆ ಆತನು ಕೆಲವರನ್ನು ಜೀವಂತವನ್ನಾಗಿ ಮಾಡುವನು ಯಾಕಂದರೆ ಆತನು ಅವರಿಗೆ ನ್ಯಾಯವಾಗಿ ತೀರ್ಪು ಮಾಡುವನು, ಅವರು ಆತನಿಗೆ ಬೇರ್ಪಟ್ಟು ಸದಾಕಾಲವು ಬೇರೊಂದು ಸ್ಥಳದಲ್ಲಿ ನಿವಾಸವಾಗಿರುವರು.

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಇತರ ಕ್ಲಿಷ್ಟ ಭಾಗಗಳು

ಮಗ, ದೇವರ ಮಗ ಮತ್ತು ಮನುಷ್ಯ ಕುಮಾರ

ಯೇಸು ಈ ಅಧ್ಯಾಯದಲ್ಲಿ ತನ್ನನ್ನು ತಾನು “ಮಗ” ಎಂಬುದಾಗಿ ಸೂಚಿಸಿಕೊಂಡಿದ್ದಾರೆ ([ಯೋಹಾನ.5:19] (../../ಯೋಹಾನ/05/19.ಎಂ.ಡಿ.)), “ದೇವರ ಮಗ” ([ಯೋಹಾನ.5:25] (../../ಯೋಹಾನ/05/25.ಎಂ.ಡಿ.)), ಮತ್ತು “ಮನುಷ್ಯ ಕುಮಾರ” ([ಯೋಹಾನ.5:27] (../../ಯೋಹಾನ/05/27.ಎಂ.ಡಿ.)). ಜನರು ಇತರರ ಕುರಿತಾಗಿ ಮಾತನಾಡುವಾಗ ಮಾತನಾಡುವವರು ಇತರರ ತಮಗೋಸ್ಕರ ಮಾತನಾಡಿಕೊಳ್ಳುವುದಕ್ಕೆ ನಿಮ್ಮ ಭಾಷೆಯಲ್ಲಿ ಅನುಮತಿ ಇರದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 5:1

ಯೇಸು ಯೆರೂಸಲೇಮಿಗೆ ಹೋಗಿ ಒಬ್ಬ ಮನುಷ್ಯನನ್ನು ಗುಣಪಡಿಸಿದರು, ಇದು ಕಥೆಯಲ್ಲಿ ಮುಂದಿನ ಸಂಘಟನೆಯಾಗಿದೆ. ಕಥೆಯ ಕ್ರಮವನ್ನು ಕುರಿತಾದ ಹಿನ್ನೆಲೆ ಸಮಾಚಾರವನ್ನು ಈ ವಚನಗಳು ನೀಡುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)`

μετὰ ταῦτα

ಇದು ಯೇಸು ಅಧಿಕಾರಿಯ ಮಗನನ್ನು ಗುಣಪಡಿಸಿದ್ದನ್ನು ಸೂಚಿಸುತ್ತಿದೆ. ಯೋಹಾನ.3:22 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ἦν ἑορτὴ τῶν Ἰουδαίων

ಯೆಹೂದ್ಯರು ಹಬ್ಬವನ್ನು ಆಚರಿಸುತ್ತಿದ್ದರು

ἀνέβη…εἰς Ἱεροσόλυμα

ಯೆರೂಸಲೇಮ್ ಬೆಟ್ಟದ ಮೇಲಿದೆ. ಯೆರೂಸಲೇಮಿಗೆ ಹೋಗುವ ದಾರಿ ಚಿಕ್ಕ ಬೆಟ್ಟಗಳ ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತಿದ್ದವು. ಸಮಾಂತರ ನೆಲದ ಮೇಲೆ ನಡೆಯುವದಕ್ಕೆ ಬೆನ್ನವಾಗಿ ಬೆಟ್ಟದ ಮೇಲಕ್ಕೆ ಹೋಗುವುದಕ್ಕೆ ನಿಮ್ಮ ಭಾಷೆಯಲ್ಲಿ ಬೇರೆ ಪದವಿದ್ದರೆ ಅದನ್ನಿಲ್ಲಿ ಉಪಯೋಗಿಸಬಹುದು.

John 5:2

κολυμβήθρα

ಇದು ಜನರು ನೀರು ತುಂಬಿಸುತ್ತಿದ್ದ ನೆಲದ ಮೇಲಿದ್ದ ಒಂದು ಕುಳಿಯಾಗಿತ್ತು. ಕೆಲವೊಮ್ಮೆ ಅವರು ನೀರಿನ ಕೊಳಗಳಿಗೆ ಟೈಲ್ಸ್ ಅಥವಾ ಬೇರೆ ಕಲ್ಲುಗಳ ಕೆಲಸ ಮಾಡುತ್ತಿದ್ದರು.

Βηθζαθά

ಒಂದು ಸ್ಥಳದ ಹೆಸರು (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

στοὰς

ಭವಂತಿಗಳಿಗೆ ಸೇರಿಸಿ ಕಟ್ಟಲ್ಪಟ್ಟಿರುವ ಮೇಲ್ಛಾವಣಿ, ಅದಕ್ಕೆ ಕನಿಷ್ಠ ಒಂದು ಗೋಡೆ ಇರುವದಿಲ್ಲ

John 5:3

πλῆθος τῶν ἀσθενούντων

ಅನೇಕ ಜನರು

John 5:5

5ನೇ ವಚನದಲ್ಲಿ ಕೊಳದ ಪಕ್ಕದಲ್ಲಿ ಮಲಗಿದ್ದ ಒಂಬ ಮನುಷ್ಯನನ್ನು ಕಥೆಗೆ ಪರಿಚಯ ಮಾಡುತ್ತಿದೆ. (ನೋಡಿರಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.)

ἦν…ἐκεῖ

ಬೇತ್ಸಥಾ ಕೊಳದಲ್ಲಿ (ಯೋಹಾನ.5:1)

τριάκοντα ὀκτὼ ἔτη

38 ವರ್ಷಗಳು (ನೋಡಿರಿ: ಸಂಖ್ಯೆಗಳು.)

John 5:6

γνοὺς

ಆತನು ಅರ್ಥಮಾಡಿಕೊಂಡನು ಅಥವಾ “ಆತನು ಅರಿತು”

λέγει αὐτῷ

ಪಾರ್ಶ್ವವಾಯು ಮನುಷ್ಯನಿಗೆ ಯೇಸು ಹೇಳಿದನು

John 5:7

κύριε…οὐκ ἔχω

ಇಲ್ಲಿ “ಅಯ್ಯಾ” ಎನ್ನುವ ಪದ ಸಂಬೋಧಿಸುವ ಸೌಮ್ಯ ರೂಪವಾಗಿದೆ.

ὅταν ταραχθῇ τὸ ὕδωρ

ಇದನ್ನು ಕ್ರಿಯಾಶೀಲ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ದೇವ ದೂತನು ನೀರನ್ನು ಉಕ್ಕಿಸಿದಾಗ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

εἰς τὴν κολυμβήθραν

ಇದು ಜನರು ನೀರು ತುಂಬಿಸುತ್ತಿದ್ದ ನೆಲದ ಮೇಲಿದ್ದ ಒಂದು ಕುಳಿಯಾಗಿತ್ತು. ಕೆಲವೊಮ್ಮೆ ಅವರು ಕೊಳಗಳಿಗೆ ಟೈಲ್ಸ್ ಅಥವಾ ಬೇರೆ ಕಲ್ಲುಗಳ ಕೆಲಸ ಮಾಡುತ್ತಿದ್ದರು. ಯೋಹಾನ.5:2 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ἄλλος πρὸ ἐμοῦ καταβαίνει

ನನಗಿಂತ ಮುಂಚೆ ಬೇರೆ ಒಬ್ಬನು ನೀರನಲ್ಲಿ ಇಳಿಯುತ್ತಾನೆ

John 5:8

ἔγειρε

ಎದ್ದು ನಿಲ್ಲು!

ἆρον τὸν κράβαττόν σου, καὶ περιπάτει

ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ!

John 5:9

ἐγένετο ὑγιὴς ὁ ἄνθρωπος

ಆ ಮನುಷ್ಯನು ಮತ್ತೆ ಆರೋಗ್ಯವಂತನಾದನು

δὲ…ἐκείνῃ τῇ ἡμέρᾳ

ಮುಂದೆ ಹೇಳಲ್ಪಡುವ ಮಾತುಗಳು ಹಿನ್ನೆಲೆ ಸಮಾಚಾರವಾಗಿದೆ ಎಂದು ಹೇಳಲು ಗ್ರಂಥಕರ್ತನು “ಈಗ” ಎನ್ನುವ ಪದವನ್ನು ಉಪಯೋಗಿಸುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 5:10

ἔλεγον οὖν οἱ Ἰουδαῖοι τῷ τεθεραπευμένῳ

ಆ ಮನುಷ್ಯನು ತನ್ನ ಹಾಸಿಗೆ ಎತ್ತಿಕೊಂಡು ಹೊಗುವುದನ್ನು ಕಂಡು ಯೆಹೂದ್ಯರು (ವಿಶೇಷವಾಗಿ ಯೆಹೂದ್ಯರ ನಾಯಕರು) ಕೋಪಗೊಂಡರು.

Σάββατόν ἐστιν

ಅದು ದೇವರ ವಿಶ್ರಾಂತಿ ದಿನವಾಗಿತ್ತು

John 5:11

ὁ ποιήσας με ὑγιῆ

ನನ್ನನ್ನು ಸ್ವಸ್ಥ ಮಾಡಿದಾತನು

John 5:12

ἠρώτησαν αὐτόν

ಸ್ವಸ್ಥನಾದ ಮನುಷ್ಯನನ್ನು ಯೆಹೂದ್ಯ ನಾಯಕರು ಕೇಳಿದರು

John 5:14

εὑρίσκει αὐτὸν ὁ Ἰησοῦς

ಆತನು ಸ್ವಸ್ಥ ಮಾಡಿದ ಮನುಷ್ಯನನ್ನು ಯೇಸು ಕಂಡನು

ἴδε

ಮುಂದೆ ಹೇಳಲ್ಪಡುವ ಮಾತುಗಳ ಕಡೆ ಗಮನ ಸೆಳೆಯಲು “ನೋಡು” ಎನ್ನುವ ಪದವನ್ನು ಇಲ್ಲಿ ಉಪಯೋಗಿಸಲಾಗಿದೆ.

John 5:16

καὶ

ಮುಂದೆ ಹೇಳಲ್ಪಡುವ ಮಾತುಗಳು ಹಿನ್ನೆಲೆ ಸಮಾಚಾರವಾಗಿದೆ ಎಂದು ಹೇಳಲು ಗ್ರಂಥಕರ್ತನು “ಈಗ” ಎನ್ನುವ ಪದವನ್ನು ಉಪಯೋಗಿಸುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಪದವು “ಯೆಹೂದ್ಯ ನಾಯಕರನ್ನು” ಸೂಚಿಸುವ ಉಪಲಕ್ಷಣವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

John 5:17

ἐργάζεται

ಇದು ಕೆಲಸ ಮಾಡುವುದನ್ನು ಸೂಚಿಸುತ್ತದೆ, ಬೇರೆಯವರಿಗೆ ಸೇವೆ ಮಾಡುವುದು ಸಹ ಇದರಲ್ಲಿ ಸೇರಿಸಲ್ಪಟ್ಟಿದೆ.

ὁ Πατήρ μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 5:18

ἴσον ἑαυτὸν ποιῶν τῷ Θεῷ

ಆತನು ದೇವರಂತೆ ಇದ್ದಾನೆಂದು ಹೇಳುತ್ತಾ ಅಥವಾ “ದೇವರಂತೆ ಅಧಿಕಾರ ಆತನು ಹೊಂದಿದ್ದಾನೆಂದು ಹೇಳುತ್ತಾ”

John 5:19

ಯೆಹೂದ್ಯ ನಾಯಕರೊಡನೆ ಮಾತಾಡುವುದನ್ನು ಯೇಸು ಮುಂದುವರೆಸುತಿದ್ದಾನೆ.

ἀμὴν, ἀμὴν

ಇದಾದ ಮೇಲೆ ಬರುವ ವಿಷಯಗಳು ಪ್ರಾಮುಖ್ಯವಾಗಿವೆ ಮತ್ತು ಸತ್ಯವಾಗಿವೆ ಎಂದು ಒತ್ತಾಯಿಸಿ ಹೇಳುವ ರೀತಿಯಲ್ಲಿ ನಿಮ್ಮ ಭಾಷೆಯಲ್ಲಿ ಅನುವಾದ ಮಾಡಿರಿ.ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ἃ γὰρ ἂν ἐκεῖνος ποιῇ, ταῦτα καὶ ὁ Υἱὸς…ποιεῖ

ಯೇಸು ದೇವರ ಮಗನಾಗಿದ್ದು, ಭೂಮಿಯ ಮೇಲೆ ತಂದೆಯ ನಾಯಕತ್ವವನ್ನು ಅನುಸರಿಸಿದನು ಮತ್ತು ಅದಕ್ಕೆ ವಿಧೇಯನಾದನು ಯಾಕಂದರೆ ತಂದೆ ಆತನನ್ನು ಪ್ರೀತಿಸುತ್ತಿದ್ದಾನೆಂದು ಯೇಸು ತಿಳಿದಿದ್ದನು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

Υἱὸς…Πατέρα

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 5:20

ὑμεῖς θαυμάζητε

ನೀವು ಆಶ್ಚರ್ಯಚಕಿತರಾಗುವಿರಿ ಅಥವಾ “ನೀವು ವಿಸ್ಮಯ ಹೊಂದುವಿರಿ”

ὁ γὰρ Πατὴρ φιλεῖ τὸν Υἱὸν

ಯೇಸು ದೇವರ ಮಗನಾಗಿದ್ದು, ಭೂಮಿಯ ಮೇಲೆ ತಂದೆಯ ನಾಯಕತ್ವವನ್ನು ಅನುಸರಿಸಿದನು ಮತ್ತು ಅದಕ್ಕೆ ವಿಧೇಯನಾದನು ಯಾಕಂದರೆ ತಂದೆ ಆತನನ್ನು ಪ್ರೀತಿಸುತ್ತಿದ್ದಾನೆಂದು ಯೇಸು ತಿಳಿದಿದ್ದನು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

φιλεῖ

ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆ. ದೇವರು ತಾನೆ ಪ್ರೀತಿಯಾಗಿದ್ದಾನೆ ಮತ್ತು ನಿಜವಾದ ಪ್ರೀತಿಯ ಮೂಲವಗಿದ್ದಾನೆ.

John 5:21

Πατὴρ…Υἱὸς

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ζῳοποιεῖ

ಇದು “ಆತ್ಮೀಯ ಜೀವನವನ್ನು” ಸೂಚಿಸುತ್ತಿದೆ.

John 5:22

οὐδὲ γὰρ ὁ Πατὴρ κρίνει οὐδένα, ἀλλὰ τὴν κρίσιν πᾶσαν δέδωκεν τῷ Υἱῷ

“ಅದಕ್ಕಾಗಿ” ಎನ್ನುವ ಪದವು ಹೋಲಿಕೆಯನ್ನು ಸೂಚಿಸುತ್ತಿದೆ. ತಂದೆಯಾದ ದೇವರಿಗಾಗಿ ದೇವರ ಮಗನು ತೀರ್ಪುಮಾಡುವನು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 5:23

τιμῶσι τὸν Υἱὸν, καθὼς τιμῶσι τὸν Πατέρα. ὁ μὴ τιμῶν τὸν Υἱὸν, οὐ τιμᾷ τὸν Πατέρα

ತಂದೆಯಾದ ದೇವರು ಆರಾಧಿಸಲ್ಪಡುವ ರೀತಿಯಲ್ಲೇ ದೇವರ ಮಗನು ಸಹ ಆರಾಧಿಸಲ್ಪಡಬೇಕು. ದೇವರ ಮಗನನ್ನು ನಾವು ಗೌರವಿಸಲು ವಿಫಲರಾದರೆ, ತಂದೆಯಾದ ದೇವರನ್ನು ಗೌರವಿಸುವುದರಲ್ಲಿ ವಿಫಲರಾಗುತ್ತೇವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 5:24

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ὁ τὸν λόγον μου ἀκούων

ಇಲ್ಲಿ “ವಾಕ್ಯ” ಎನ್ನುವ ಪದವು ಯೇಸು ಸಂದೇಶವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನನ್ನ ಸಂದೇಶವನ್ನು ಯಾರಾದರು ಕೇಳಿದರೆ” (ನೋಡಿರಿ: ಲಕ್ಷಣಾಲಂಕಾರ)

εἰς κρίσιν οὐκ ἔρχεται

ಇದನ್ನು ಸಕಾರಾತ್ಮಕವಾಗಿ ಹೇಳಬಹುದು. ಪರ್ಯಾಯ ಅನುವಾದ: “ನಿರಪರಾಧಿ ಎಂದು ತೀರ್ಪುಕೊಡಲಾಗುತ್ತದೆ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

John 5:25

ἀμὴν, ἀμὴν

ಇದಾದ ಮೇಲೆ ಬರುವ ವಿಷಯಗಳು ಪ್ರಾಮುಖ್ಯವಾಗಿವೆ ಮತ್ತು ಸತ್ಯವಾಗಿವೆ ಎಂದು ಒತ್ತಾಯಿಸಿ ಹೇಳುವ ರೀತಿಯಲ್ಲಿ ನಿಮ್ಮ ಭಾಷೆಯಲ್ಲಿ ಅನುವಾದ ಮಾಡಿರಿ.ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

οἱ νεκροὶ ἀκούσουσιν τῆς φωνῆς τοῦ Υἱοῦ τοῦ Θεοῦ, καὶ οἱ ἀκούσαντες ζήσουσιν

ದೇವಕುಮಾರನಾದ, ಯೇಸು ಸ್ವರವನ್ನು ಕೇಳಿದಾಗ ಸಮಾಧಿಯಿ೦ದ ಸತ್ತವರು ಜೀವವನ್ನು ಹೊಂದಿಕೊಳ್ಳುವರು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

Υἱοῦ τοῦ Θεοῦ

ಇದು ಯೇಸುವಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 5:26

ὥσπερ γὰρ ὁ Πατὴρ ἔχει ζωὴν ἐν ἑαυτῷ, οὕτως καὶ τῷ Υἱῷ ἔδωκεν ζωὴν, ἔχειν ἐν ἑαυτῷ

“ಅದಕ್ಕಾಗಿ” ಎನ್ನುವ ಪದವು ಹೋಲಿಕೆಯನ್ನು ಸೂಚಿಸುತ್ತಿದೆ. ತಂದೆಯಂತೆ, ದೇವಕುಮಾರನಿಗೆ ಜೀವವನ್ನು ಕೊಡುವ ಶಕ್ತಿ ಹೊಂದಿರುವನು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

Πατὴρ…Υἱῷ

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ζωὴν

ಆತ್ಮಿಯ ಜೀವನ ಎಂದು ಇದರ ಅರ್ಥ.

John 5:27

Υἱὸς Ἀνθρώπου

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἐξουσίαν ἔδωκεν αὐτῷ κρίσιν ποιεῖν

ತೀರ್ಪು ಮಾಡುವ ತಂದೆಯಾದ ದೇವರ ಅಧಿಕಾರವನ್ನು ದೇವಕುಮಾರನು ಹೊಂದಿಕೊಂಡಿರುವನು.

John 5:28

μὴ θαυμάζετε τοῦτο

ದೇವಕುಮಾರನಾದ ಯೇಸು, ನಿತ್ಯ ಜೀವವನ್ನು ಕೊಡಲು ಮತ್ತು ತೀರ್ಪು ಕೊಡಲು ಶಕ್ತನಾಗಿದ್ದಾನೆನ್ನುವ ವಾಸ್ತವವನ್ನು ಇದು ಸೂಚಿಸುತ್ತಿದೆ.

ἀκούσουσιν τῆς φωνῆς αὐτοῦ

ನನ್ನ ಸ್ವರವನ್ನು ಕೇಳಿರಿ

John 5:30

τὸ θέλημα τοῦ πέμψαντός με

“ಆತನು” ಎನ್ನುವ ಪದವು ತಂದೆಯಾದ ದೇವರನ್ನು ಸೂಚಿಸುತ್ತಿದೆ.

John 5:32

ἄλλος ἐστὶν ὁ μαρτυρῶν περὶ ἐμοῦ

ನನ್ನ ಕುರಿತು ಜನರಿಗೆ ತಿಳಿಸುವದಕ್ಕೆ ಯಾರೊಬ್ಬರು ಇದ್ದಾರೆ

ἄλλος

ಇದು ದೇವರನ್ನು ಸೂಚಿಸುತ್ತಿದೆ.

ἀληθής ἐστιν ἡ μαρτυρία ἣν μαρτυρεῖ περὶ ἐμοῦ

ನನ್ನ ಕುರಿತು ಆತನು ಜನರಿಗೆ ಹೇಳುವದೆಲ್ಲ ಸತ್ಯವಾಗಿವೆ

John 5:34

ἐγὼ…οὐ παρὰ ἀνθρώπου τὴν μαρτυρίαν λαμβάνω

ನನಗೆ ಜನರ ಸಾಕ್ಷ್ಯ ಅವಶ್ಯಕತೆ ಇಲ್ಲ

ἵνα ὑμεῖς σωθῆτε

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದ್ದರಿಂದ ದೇವರು ನಿಮ್ಮನ್ನು ರಕ್ಷಿಸುವನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 5:35

ἐκεῖνος ἦν ὁ λύχνος ὁ καιόμενος καὶ φαίνων; ὑμεῖς δὲ ἠθελήσατε ἀγαλλιαθῆναι πρὸς ὥραν ἐν τῷ φωτὶ αὐτοῦ

ಇಲ್ಲಿ “ದೀಪ” ಮತ್ತು “ಬೆಳಕು” ಎನ್ನುವ ಪದಗಳು ರೂಪಕಾಲಂಕಾರವಾಗಿವೆ. ಯೋಹಾನನು ದೇವರ ಕುರಿತಾಗಿ ಜನರಿಗೆ ಬೋಧಿಸಿದನು ಮತ್ತು ಅದು ಕತ್ತಲೆಯಲ್ಲಿ ಬೆಳಗುವ ದೀಪದಂತಿತ್ತು. ಪರ್ಯಾಯ ಅನುವಾದ: “ಯೋಹಾನನು ನಿಮಗೆ ದೇವರ ಕುರಿತು ಬೋಧಿಸಿದನು ಮತ್ತು ಅದು ಬೆಳಕನ್ನು ಕೊಡುವ ದೀಪದಂತಿತ್ತು. ಮತ್ತು ಸ್ವಲ್ಪ ಕಾಲದವರೆಗೂ ಯೋಹಾನನು ಹೇಳಿದ್ದು ನಿಮಗೆ ಸಂತೋಷ ಉಂಟುಮಾಡಿತು” (ನೋಡಿರಿ: ರೂಪಕ ಅಲಂಕಾರ)

John 5:36

τὰ…ἔργα ἃ δέδωκέν μοι ὁ Πατὴρ, ἵνα τελειώσω αὐτά, αὐτὰ τὰ ἔργα ἃ ποιῶ, μαρτυρεῖ περὶ ἐμοῦ, ὅτι ὁ Πατήρ με ἀπέσταλκεν

ತಂದೆಯಾದ ದೇವರು, ಮಗನಾದ ದೇವರು, ಯೇಸುವನ್ನು ಭೂಮಿಗೆ ಕಳುಹಿಸಿದನು. ತಂದೆ ಆತನಿಗೆ ಕೊಟ್ಟಿರುವುದನ್ನು ಯೇಸು ಸಂಪೂರ್ಣಗೊಳಿಸುತ್ತಾನೆ.

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

αὐτὰ τὰ ἔργα ἃ ποιῶ, μαρτυρεῖ περὶ ἐμοῦ

ಇಲ್ಲಿ ಅದ್ಭುತಕಾರ್ಯಗಳು ಆತನ ಕುರಿತಾಗಿ “ಜನರಿಗೆ ಹೇಳುತ್ತವೆ” ಅಥವಾ “ಸಾಕ್ಷಿಕೊಡುತ್ತವೆ” ಎಂದು ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ದೇವರು ನನ್ನನ್ನು ಕಳುಹಿಸಿದ್ದಾನೆ ಎಂದು ನಾನು ಮಾಡುವ ಕಾರ್ಯಗಳು ಜನರಿಗೆ ತೋರಿಸುತ್ತದೆ” (ನೋಡಿರಿ: ವ್ಯಕ್ತೀಕರಣ)

John 5:37

ὁ πέμψας με Πατὴρ, ἐκεῖνος μεμαρτύρηκεν

ಕಡಿಮೆ ಪ್ರಾಮುಖ್ಯತೆ ಇರುವ ಬೇರೆಯವರು ಅಲ್ಲದೆ, ತಂದೆಯೇ ಸಾಕ್ಷ್ಯಕೊಟ್ಟಿರುವನು ಎಂದು ಒತ್ತಾಯಿಸಿ ಹೇಳಲು “ತಾನೇ” ಎನ್ನುವ ಆತ್ಮವಾಚಕ ಸರ್ವನಾಮವನ್ನು ಉಪಯೋಗಿಸಲಾಗಿದೆ. (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

John 5:38

τὸν λόγον αὐτοῦ οὐκ ἔχετε ἐν ὑμῖν μένοντα, ὅτι ὃν ἀπέστειλεν ἐκεῖνος, τούτῳ ὑμεῖς οὐ πιστεύετε

ಆತನು ಕಳುಹಿಸಿದವನಲ್ಲಿ ನೀವು ನಂಬುವದಿಲ್ಲ. ಅದರ ಮುಖಾಂತರ ನಿಮ್ಮಲ್ಲಿ ಆತನ ಮಾತುಗಳು ಉಳಿದಿಲ್ಲವೆಂದು ನನಗೆ ತಿಳಿದಿದೆ.

τὸν λόγον αὐτοῦ οὐκ ἔχετε ἐν ὑμῖν μένοντα

ದೇವರ ಚಿತ್ತಾನುಸಾರವಾಗಿ ಜೀವಿಸುವ ಜನರು ಮನೆಯಂತೆ ಇರುವರೆಂದು ಮತ್ತು ದೇವರ ವಾಕ್ಯವೆಂಬ ವ್ಯಕ್ತಿ ಆ ಮನೆಗಳಲ್ಲಿ ವಾಸಿಸುತ್ತಿದ್ದಾನೆಂದು ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನೀವು ಆತನ ವಾಕ್ಯದಂತೆ ಜೀವಿಸುತ್ತಿಲ್ಲ” ಅಥವಾ “ನೀವು ಆತನ ವಾಕ್ಯಕ್ಕೆ ವಿಧೇಯರಾಗುತ್ತಿಲ್ಲ” (ನೋಡಿರಿ: ರೂಪಕ ಅಲಂಕಾರ)

τὸν λόγον αὐτοῦ

ಆತನು ನಿಮ್ಮೊಂದಿಗೆ ಮಾತನಾಡಿದ ವಾಕ್ಯ

John 5:39

ἐν αὐταῖς ζωὴν αἰώνιον ἔχειν

ಅದನ್ನು ನೀವು ಓದಿದರೆ ನೀವು ನಿತ್ಯ ಜೀವವನ್ನು ಪಡೆಯುವಿರಿ ಅಥವಾ “ನೀವು ನಿತ್ಯ ಜೀವವನ್ನು ಹೇಗೆ ಹೊಂದಿಕೊಳ್ಳಬಹುದೆಂದು ವಾಕ್ಯವು ಹೇಳುತ್ತದೆ”

John 5:40

οὐ θέλετε ἐλθεῖν πρός με

ನೀವು ನನ್ನ ಸಂದೇಶವನ್ನು ಕೇಳುವುದಕ್ಕೆ ನಿರಾಕರಿಸಿತ್ತಿದ್ದೀರ

John 5:41

λαμβάνω

ಅಂಗೀಕರಿಸಿ

John 5:42

τὴν ἀγάπην τοῦ Θεοῦ οὐκ ἔχετε ἐν ἑαυτοῖς

ಅಂದರೆ 1) “ನೀವು ನಿಜವಾಗಿ ದೇವರನ್ನು ಪ್ರೀತಿಸುತಿಲ್ಲ” ಅಥವಾ 2) “ನೀವು ನಿಜವಾಗಿ ದೇವರ ಪ್ರೀತಿಯನ್ನು ಹೊಂದಿಕೊಳ್ಳಲಿಲ್ಲ.”

John 5:43

ἐν τῷ ὀνόματι τοῦ Πατρός μου

ಇಲ್ಲಿ “ಹೆಸರು” ಎನ್ನುವ ಪದವು ದೇವರ ಶಕ್ತಿ ಮತ್ತು ಅಧಿಕಾರವನ್ನು ಸೂಚಿಸುವ ಸಮಾನರ್ಥಕ ಮಾತಾಗಿದೆ. ಪರ್ಯಾಯ ಅನುವಾದ: “ನಾನು ನನ್ನ ತಂದೆಯ ಅಧಿಕಾರದಿಂದ ಬಂದಿದ್ದೇನೆ” (ನೋಡಿರಿ: ಲಕ್ಷಣಾಲಂಕಾರ)

τοῦ Πατρός

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

λαμβάνετέ

ಸ್ನೇಹಿತನಂತೆ ಸ್ವೀಕರಿಸು

ἐὰν ἄλλος ἔλθῃ ἐν τῷ ὀνόματι τῷ ἰδίῳ

ಇಲ್ಲಿ “ಹೆಸರು” ಎನ್ನುವ ಪದವು ಅಧಿಕಾರವನ್ನು ಸೂಚಿಸುವ ಸಮಾನರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಆತನ ಸ್ವಂತ ಅಧಿಕಾರದಿಂದ ಬೇರೊಬ್ಬರು ಬರಬೇಕೆಂದರೆ” (ನೋಡಿರಿ: ಲಕ್ಷಣಾಲಂಕಾರ)

John 5:44

πῶς δύνασθε ὑμεῖς πιστεῦσαι, δόξαν παρὰ ἀλλήλων λαμβάνοντες, καὶ τὴν δόξαν τὴν παρὰ τοῦ μόνου Θεοῦ

ಒತ್ತಾಯಿಸಿ ಹೇಳುವದಕ್ಕಾಗಿ ಈ ಮಾತು ಪ್ರಶ್ನೆಯಂತೆ ಕಾಣುತ್ತದೆ. ಪರ್ಯಾಯ ಅನುವಾದ: “ದೇವರಿಂದ.... ಮಹಿಮೆಯನ್ನು ನೀವು ಅಂಗೀಕರಿಸುತ್ತೀರಿ ಆದಕಾರಣ ನೀವು ನಂಬುವುದಕ್ಕೆ ಯಾವುದೇ ಮಾರ್ಗವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

πιστεῦσαι

ಯೇಸುವಿನಲ್ಲಿ ನಂಬಿಕೆಯಿಡುವುದು ಎಂದು ಇದರ ಅರ್ಥ.

John 5:45

ἔστιν ὁ κατηγορῶν ὑμῶν Μωϋσῆς, εἰς ὃν ὑμεῖς ἠλπίκατε

ಧರ್ಮಶಾಸ್ತ್ರವನ್ನೇ ಸೂಚಿಸುವಂತೆ ಮೋಶೆ ಇಲ್ಲಿ ಪರ್ಯಾಯ ಪದವಾಗಿ ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: “ನೀವು ನಿರೀಕ್ಷಣೆ ಇಟ್ಟುಕೊಂಡಿರುವ ಧರ್ಮಶಾಸ್ತ್ರದಲ್ಲಿಯೇ ಮೋಶೆ ನಿಮ್ಮನ್ನು ಕುರಿತು ಆರೋಪಿಸುತ್ತಿದ್ದಾನೆ” (ನೋಡಿರಿ: ಲಕ್ಷಣಾಲಂಕಾರ)

ἠλπίκατε

ನಿಮ್ಮ ಭರವಸೆ ಅಥವಾ “ನಿಮ್ಮ ನಂಬಿಕೆ”

John 5:47

εἰ…τοῖς ἐκείνου γράμμασιν οὐ πιστεύετε, πῶς τοῖς ἐμοῖς ῥήμασιν πιστεύσετε

ಈ ಮಾತು ಹೆಚ್ಚಿನ ಪ್ರಭಾವವನ್ನು ತೋರಿಸಲು ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ನೀವು ಅವನು ಬರೆದಿರುವುದನ್ನು ನಂಬದಿದ್ದರೆ, ನನ್ನ ಮಾತುಗಳನ್ನು ನೀವು ಎಂದಿಗೂ ನಂಬುವುದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τοῖς ἐμοῖς ῥήμασιν

ನಾನು ಹೇಳುವುದು

John 6

ಯೋಹಾನ 06 ಸಾಧಾರಣ ಅಂಶಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಅಂಶಗಳು

ಅರಸ

ಯಾವ ದೇಶದ ಅರಸನಾಗಿರಲಿ ಶ್ರೀಮಂತನಾಗಿರುತ್ತಾನೆ ಮತ್ತು ಆ ದೇಶದಲ್ಲಿ ಅತೀ ಶಕ್ತಿವಂತ ವ್ಯಕ್ತಿಯಾಗಿರುತ್ತಾನೆ. ಯೇಸು ತಮ್ಮ ಅರಸನಾಗಬೇಕೆಂದು ಜನರು ಬಯಸಿದ್ದರು, ಯಾಕಂದರೆ ಆತನು ಅವರಿಗೆ ಆಹಾರವನ್ನು ಕೊಟ್ಟಿದ್ದನು. ಇದರಿಂದ ಆತನು ಯೆಹೂದ್ಯರನ್ನು ಶ್ರೀಮಂತರನ್ನಾಗಿ ಮಾಡುವನೆಂದು ಮತ್ತು ಪ್ರಪಂಚದಲ್ಲಿಯೇ ತಮ್ಮ ದೇಶವನ್ನು ಅತೀ ಶಕ್ತಿಯುಳ್ಳ ದೇಶವನ್ನಾಗಿ ಮಾಡುವನೆಂದು ಭಾವಿಸಿದ್ದರು. ಯೇಸು ಮರಣಿಸುವುದಕ್ಕೆ ಬಂದಿದ್ದಾನೆಂದು, ಇದರಿಂದ ದೇವರು ತನ್ನ ಜನರ ಪಾಪಗಳನ್ನು ಕ್ಷಮಿಸುತ್ತಾನೆಂದು ಮತ್ತು ಲೋಕವೆಲ್ಲಾ ತನ್ನ ಜನರನ್ನು ಹಿಂಸಿಗೆ ಗುರಿಮಾಡುತ್ತದೆಯೆಂದು ಅವರು ಅರ್ಥಮಾಡಿಕೊಳ್ಳಲಿಲ್ಲ.

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ರೂಪಕಲಂಕಾರಗಳು

ರೊಟ್ಟಿ

ರೊಟ್ಟಿ ಎನ್ನುವದು ಯೇಸುವಿನ ದಿನಗಳಲ್ಲಿ ತುಂಬಾ ಸಹಜವಾದ ಪ್ರಾಮುಖ್ಯವಾದ ಆಹಾರವಾಗಿದ್ದಿತ್ತು, ಮತ್ತು ಇದರಿಂದ “ರೊಟ್ಟಿ” ಎನ್ನುವ ಪದವನ್ನು ಅವರು “ಆಹಾರ”ಕ್ಕಾಗಿ ತುಂಬಾ ಸಹಜವಾಗಿ ಉಪಯೋಗಿಸುತ್ತಿದ್ದರು. ರೊಟ್ಟಿಯನ್ನು ತಿನ್ನದ ಜನರ ಭಾಷೆಗಳಲ್ಲಿ “ರೊಟ್ಟಿ” ಎನ್ನುವ ಪದವನ್ನು ಅನುವಾದ ಮಾಡುವುದು ತುಂಬಾ ಕಷ್ಟ. ಯಾಕಂದರೆ ಕೆಲವೊಂದು ಭಾಷೆಗಳಲ್ಲಿ ಆಹಾರಕ್ಕಾಗಿ ಉಪಯೋಗಿಸುವ ಸಾಧಾರಣ ಪದವು ಯೇಸುವಿನ ಸಂಸ್ಕೃತಿಯಲ್ಲಿ ಆಹಾರವೇ ಇರಲಿಲ್ಲ ಎನ್ನುವ ಭಾವನೆಯನ್ನು ಕೊಡುತ್ತಿದೆ. ಯೇಸು ಉಪಯೋಗಿಸಿರುವ “ರೊಟ್ಟಿ” ಎನ್ನುವ ಪದವು ತನ್ನನ್ನು ತಾನು ಸೂಚಿಸಿಕೊಳ್ಳುವುದಕ್ಕೆ ಉಪಯೋಗಿಸಿದ್ದರು. ಅವರಿಗೆ ಆತನು ಬೇಕಾಗಿದೆ, ಇದರಿಂದ ಅವರೆಲ್ಲರು ನಿತ್ಯಜೀವವನ್ನು ಹೊಂದಿಕೊಳ್ಳುತ್ತಾರೆ ಎನ್ನುವ ವಿಷಯವನ್ನು ಅವರು ಅರ್ಥಮಾಡಿಕೊಳ್ಳಬೇಕೆಂದು ಆತನು ಬಯಸಿದ್ದನು. (ನೋಡಿರಿ: ರೂಪಕ ಅಲಂಕಾರ ಮತ್ತು ಉಪಲಕ್ಷಣಾಲಂಕಾರ)

ಶರೀರವನ್ನು ತಿನ್ನುವುದು ಮತ್ತು ರಕ್ತವನ್ನು ಕುಡಿಯುವುದು

”ಮನುಷ್ಯ ಕುಮಾರನ ಶರೀರವನ್ನು ತಿನ್ನದಿದ್ದರೆ, ಆತನ ರಕ್ತವನ್ನು ಕುಡಿಯದಿದ್ದರೆ, ನಿಮ್ಮಲ್ಲಿ ನೀವು ಜೀವವನ್ನು ಪಡೆದುಕೊಳ್ಳುವುದಿಲ್ಲ,” ಎಂದು ಯೇಸು ಹೇಳಿದಾಗ, ಆತನು ಮರಣ ಹೊಂದುವುದಕ್ಕೆ ಮುಂಚಿತವಾಗಿ ತನ್ನ ಹಿಂಬಾಲಕರಿಗೆ ರೊಟ್ಟಿಯನ್ನು ತಿಂದು, ದ್ರಾಕ್ಷಾರಸವನ್ನು ಕುಡಿಯಿರಿ ಎಂದು ಹೇಳುತ್ತಾನೆಂದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಈ ಅಧ್ಯಾಯವು ಈ ವಿಷಯದ ಕುರಿತು ವಿವರಣೆ ಕೊಡುತ್ತಿದೆ, ತನ್ನ ಬೋಧನೆಯನ್ನು ಕೇಳುವವರು ತಾನು ರೂಪಕಲಂಕಾರವನ್ನು ಉಪಯೋಗಿಸುತ್ತಿದ್ದಾನೆಂದು ತಿಳಿದುಕೊಳ್ಳಬೇಕೆಂದು ನಿರೀಕ್ಷಿಸಿದ್ದನು, ಆದರೆ ಆತನು ಹೇಳಿದ ವಿಷಯಗಳನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. (ನೋಡಿರಿ: ಶರೀರ ಮತ್ತು ರಕ್ತ)

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಕ್ಲಿಷ್ಟ ವಿಷಯಗಳು

ಪ್ರತ್ಯೇಕಿಸಲ್ಪಟ್ಟ ಆಲೋಚನೆಗಳು

ಈ ವಾಕ್ಯಭಾಗದಲ್ಲಿ ಅನೇಕಬಾರಿ, ಯೋಹಾನನು ಓದುಗಾರರು ಕಥೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ಒಳ್ಳೇಯ ಸಂದರ್ಭವನ್ನು ವಿವರಿಸುತ್ತಿದ್ದಾನೆ. ಕಥೆಯ ಹೇಳಿಕೆಯನ್ನು ಯಾವ ಕಾರಣದಿಂದಲೂ ಕೆಡಿಸದೆ ಸ್ವಲ್ಪ ಹೆಚ್ಚಿನ ಮಾಹಿತಿಯನ್ನು ಓದುಗಾರರಿಗೆ ಕೊಡಬೇಕೆನ್ನುವುದೇ ಈ ವಿವರಣೆಗಳ ಮುಖ್ಯ ಉದ್ದೇಶವಾಗಿದ್ದಿತ್ತು. ಸಮಾಚಾರವು ಪ್ರತ್ಯೇಕ ವಿವರಣೆಗಳಲ್ಲಿ ಒಳಗೊಂಡಿರುತ್ತದೆ.

“ಮನುಷ್ಯ ಕುಮಾರ”

ಈ ಅಧ್ಯಾಯದಲ್ಲಿ ಯೇಸು ತನ್ನನ್ನು ತಾನು “ಮನುಷ್ಯ ಕುಮಾರ” ಎಂಬುದಾಗಿ ಸೂಚಿಸಿಕೊಂಡಿದ್ದಾನೆ ([ಯೋಹನ.6:26] (./26.ಎಂ.ಡಿ.)). ಜನರು ಇತರರ ಕುರಿತಾಗಿ ಮಾತನಾಡುವಾಗ ಮಾತನಾಡುವವರು ಇತರರ ತಮಗೋಸ್ಕರ ಮಾತನಾಡಿಕೊಳ್ಳುವುದಕ್ಕೆ ನಿಮ್ಮ ಭಾಷೆಯಲ್ಲಿ ಅನುಮತಿ ಇರದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 6:1

ಯೇಸು ಯೆರೂಸಲೇಮಿನಿಂದ ಗಲಿಲಾಯಕ್ಕೆ ಪ್ರಯಾಣ ಮಾಡಿದ್ದಾನೆ. ಜನರ ಸಮೂಹ ಆತನನ್ನು ಬೆಟ್ಟದ ಮಾರ್ಗದಿಂದ ಹಿಂಬಾಲಿಸಿದರು. ಈ ಕಥೆಯ ಭಾಗದ ಕುರಿತಾದ ಕ್ರಮವನ್ನು ಈ ವಚನಗಳು ನೀಡುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

μετὰ ταῦτα

“ಈ ಸಂಗತಿಗಳು” ಎನ್ನುವ ಮಾತು [ಯೋಹಾನ.5:1-46] (../05/01.md) ವಚನದಲ್ಲಿ ಹೇಳಿರುವ ಸಂಘಟನೆಗಳನ್ನು ಸೂಚಿಸುತ್ತಿದೆ ಮತ್ತು ಆ ನಂತರ ನಡೆಯುವ ಸಂಘಟನೆಯನ್ನು ಪರಿಚಯ ಮಾಡುತ್ತಿದೆ.

ἀπῆλθεν ὁ Ἰησοῦς

ಯೇಸು ದೋಣಿಯಲ್ಲಿ ಪ್ರಯಾಣ ಮಾಡಿದನೆಂದು ಮತ್ತು ಆತನೊಂದಿಗೆ ತನ್ನ ಶಿಷ್ಯರನ್ನು ಸಹ ಕರೆದುಕೊಂಡು ಹೋಗಿದ್ದನೆಂದು ವಾಕ್ಯಭಾಗದಿಂದ ಸ್ಪಷ್ಟವಾಗಿ ತಿಳಿದುಬರುತ್ತಿದೆ. ಪರ್ಯಾಯ ಅನುವಾದ: “ಯೇಸು ತನ್ನ ಶಿಷ್ಯರೊಂದಿಗೆ ದೋಣಿಯಲ್ಲಿ ಪ್ರಯಾಣಿಸಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 6:2

ὄχλος πολύς

ದೊಡ್ಡ ಜನ ಸಮೂಹ

σημεῖα

ಎಲ್ಲವುಗಳ ಮೇಲೆ ಸಂಪೂರ್ಣ ಅಧಿಕಾರಹೊಂದಿರುವ ದೇವರು ಸರ್ವ ಶಕ್ತಿಯುಳ್ಳವನೆಂದು ನಿರೂಪಿಸಲು ಮಾಡುವ ಅದ್ಭುತ ಕಾರ್ಯಗಳನ್ನು ಇದು ಸೂಚಿಸುತ್ತಿದೆ.

John 6:4

ಕಥೆಯಲ್ಲಿ ಕಾರ್ಯಾಚರಣೆಯನ್ನು 5ನೇ ವಚನದಲ್ಲಿ ನೋಡಬಹುದು.

ἦν δὲ ἐγγὺς τὸ Πάσχα, ἡ ἑορτὴ τῶν Ἰουδαίων

ಆ ಸಂಘಟನೆಗಳ ಯಾವಾಗ ನಡೆದವು ಎನ್ನುವ ಹಿನ್ನೆಲೆ ಸಮಾಚಾರವನ್ನು ಕೊಡುವದಕ್ಕಾಗಿ ಕಥೆಯಲ್ಲಿ ನಡೆಯುವ ಸಂಗತಿಗಳನ್ನು ಹೇಳುತ್ತಿರುವಾಗ ಯೋಹಾನನು ಸ್ವಲ್ಪ ವಿರಾಮವನ್ನು ಕೊಟ್ಟಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 6:6

τοῦτο δὲ ἔλεγεν πειράζων αὐτόν; αὐτὸς γὰρ ᾔδει τί ἔμελλεν ποιεῖν

ರೊಟ್ಟಿಯನ್ನು ಎಲ್ಲಿ ಖರೀದಿಸಬೇಕೆಂದು ಯೇಸು ಫಿಲಿಪ್ಪನಿಗೆ ಯಾಕೆ ಕೇಳಿದನು ಎನ್ನುವ ವಿಷಯವನ್ನು ವಿವರಿಸಲು ಕಥೆಯಲ್ಲಿ ನಡೆಯುವ ಸಂಗತಿಗಳನ್ನು ಹೇಳುತ್ತಿರುವಾಗ ಯೋಹಾನನು ಸ್ವಲ್ಪ ವಿರಾಮವನ್ನು ಕೊಟ್ಟಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

αὐτὸς γὰρ ᾔδει

“ಆತನು” ಎನ್ನುವ ಪದ ಯೇಸುವನ್ನು ಸೂಚಿಸುತ್ತಿದೆ ಎಂದು ಒತ್ತಾಯಿಸಿ ಹೇಳಲು “ತಾನೇ” ಎನ್ನುವ ಆತ್ಮವಾಚಕ ಸರ್ವನಾಮವನ್ನು ಉಪಯೋಗಿಸಲಾಗಿದೆ. ಆತನು ಏನು ಮಾಡುವನೆಂದು ಯೇಸು ತಿಳಿದಿದ್ದನು. (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

John 6:7

διακοσίων δηναρίων ἄρτοι

“ದಿನಾರಿಗಳು” ಎನ್ನುವ ಪದವು “ದಿನಾರಿ” ಎನ್ನುವ ಪದದ ಬಹುವಚನವಾಗಿದೆ. ಪರ್ಯಾಯ ಅನುವಾದ: “ಇನ್ನೂರು ದಿನಗಳ ವೇತನ ಮೌಲ್ಯದ ರೊಟ್ಟಿ: (ನೋಡಿರಿ: ಸತ್ಯವೇದದಲ್ಲಿನ ಹಣದ ಮೌಲ್ಯ.)

John 6:9

πέντε ἄρτους κριθίνους

ಐದು ಜವೆಗೋದಿಯ ರೊಟ್ಟಿಗಳು. ಜವೆಗೋದಿ ಸಾಮಾನ್ಯವಾದ ಧಾನ್ಯವಾಗಿತ್ತು.

ἄρτους

ರೊಟ್ಟಿ ಎಂದರೆ ಹಿಟ್ಟಿನ ಒಂದು ಭಾಗವನ್ನು ಒಂದು ಆಕರದಲ್ಲಿ ಸಿದ್ಧಪಡಿಸಿ ಮತ್ತು ಅದನ್ನು ಸುಡುವುದು. ಈ ರೊಟ್ಟಿಗಳು ಬಹುಶಃ ಚಿಕ್ಕದಾಗಿ ದಪ್ಪವಾಗಿ ಮತ್ತು ವೃತ್ತಾಕಾರದಲ್ಲಿರಬಹುದು.

ταῦτα τί ἐστιν εἰς τοσούτους

ಎಲ್ಲರಿಗೂ ಬಡಿಸುವಷ್ಟು ಆಹಾರ ಅವರ ಬಳಿ ಇರಲಿಲ್ಲ ಎಂದು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಈ ಕೆಳವು ರೊಟ್ಟಿಗಳು ಮತ್ತು ಮೀನುಗಳು ಇಷ್ಟು ಜನರಿಗೆ ಬಡಿಸಲು ಸಾಲದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 6:10

ἀναπεσεῖν

ಮಲಗು

ἦν δὲ χόρτος πολὺς ἐν τῷ τόπῳ

ಈ ಸಂಘಟನೆ ಎಲ್ಲಿ ನಡೆಯುತ್ತಿದೆ ಎನ್ನುವ ವಿಷಯದ ಕುರಿತಾಗಿ ಹಿನ್ನೆಲೆ ಸಮಾಚಾರವನ್ನು ವಿವರಿಸಲು ಕಥೆಯಲ್ಲಿ ನಡೆಯುವ ಸಂಗತಿಗಳನ್ನು ಹೇಳುತ್ತಿರುವಾಗ ಯೋಹಾನನು ಸ್ವಲ್ಪ ವಿರಾಮವನ್ನು ಕೊಟ್ಟಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἀνέπεσαν οὖν οἱ ἄνδρες, τὸν ἀριθμὸν ὡς πεντακισχίλιοι

ಜನಸಮೂಹದಲ್ಲಿ ಸ್ತ್ರೀಯರು ಮತ್ತು ಮಕ್ಕಳಿದ್ದರು (ಯೋಹಾನ.6:4-5) ಯೋಹಾನನು ಇಲ್ಲಿ ಪುರುಷರನ್ನು ಮಾತ್ರವೇ ಲೆಕ್ಕಿಸಿದ್ದಾನೆ.

John 6:11

εὐχαριστήσας

ಯೇಸು ಮೀನು ಮತ್ತು ರೊಟ್ಟಿಗಳಿಗಾಗಿ ತಂದೆಯಾದ ದೇವರಿಗೆ ಪ್ರಾರ್ಥಿಸಿದನು ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದನು.

διέδωκεν

ಆತನು ಎನ್ನುವ ಪದ ಇಲ್ಲಿ “ಯೇಸು ಮತ್ತು ಆತನ ಶಿಷ್ಯರನ್ನು” ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಯೇಸು ಮತ್ತು ಆತನ ಶಿಷ್ಯರು ಅದನ್ನು ಕೊಟ್ಟರು” (ನೋಡಿರಿ: ಉಪಲಕ್ಷಣಾಲಂಕಾರ)

John 6:13

ಯೇಸು ಜನಸಮೂಹದಿಂದ ಹೊರಕ್ಕೆ ಹೋಗಿದನು. ಬೆಟ್ಟದ ಮೇಲೆ ಯೇಸು ಜನಸಮೂಹಕ್ಕೆ ಆಹಾರವನ್ನು ಕೊಟ್ಟ ಕಥೆ ಇಲ್ಲಿ ಸಮಾಪ್ತವಾಗುತ್ತದೆ.

συνήγαγον

ಶಿಷ್ಯರು ಕೂಡಿಸಿದರು

ἃ ἐπερίσσευσαν

ಯಾರು ತಿನ್ನದೇ ಇರುವ ಆಹಾರ

John 6:14

ὃ…σημεῖον

ಯೇಸು ಐದು ಜವೆಗೋಧಿ ರೊಟ್ಟಿಗಳು ಮತ್ತು ಎರಡು ಮೀನುಗಳಿಂದ 5,000 ಜನರಿಗೆ ಆಹಾರ ಕೊಟ್ಟನು

ὁ προφήτης

ವಿಶೇಷವಾದ ಪ್ರವಾದಿ ಲೋಕಕ್ಕೆ ಬರುವನೆಂದು ಮೋಶೆ ಹೇಳಿದಹಾಗೆ

John 6:16

ಇದು ಕಥೆಯಲ್ಲಿ ನಡೆಯುವ ಮುಂದಿನ ಸಂಘಟನೆ. ಯೇಸು ಶಿಷ್ಯರು ದೋಣಿಯಲ್ಲಿ ಸರೋವರದ ಮಾರ್ಗವಾಗಿ ಹೊರಟರು.

John 6:17

σκοτία ἤδη ἐγεγόνει, καὶ οὔπω ἐληλύθει πρὸς αὐτοὺς ὁ Ἰησοῦς

ಇದು ಹಿನ್ನೆಲೆ ಸಮಾಚಾರವಾಗಿದೆ ಎಂದು ತೋರಿಸಲು ನಿಮ್ಮ ಭಾಷೆಯ ಶೈಲಿಯನ್ನು ಉಪಯೋಗಿಸಿರಿ. (ನೋಡಿರಿ: ಹಿನ್ನೆಲೆ ಮಾಹಿತಿ.)

John 6:19

ἐληλακότες

ಸಹಜವಾಗಿ ದೋಣಿಯಲ್ಲಿ ಇಬ್ಬರು, ನಾಲ್ವರು ಅಥವಾ ಆರು ಜನ ಅಂಬಿಗರಿದ್ದು ಅವರು ಎರಡು ಕಡೆಯಿಂದ ಜೊತೆಜೊತೆಯಾಗಿ ಹುಟ್ಟು ಹಾಕುತ್ತಾರೆ. ನಿಮ್ಮ ಸಂಪ್ರದಾಯದಲ್ಲಿ ಕೆರೆ ಅಥವಾ ಸಮುದ್ರದ ಮೇಲೆ ದೋಣಿಯನ್ನು ನಡೆಸುವದಕ್ಕೆ ಬೇರೆ ವಿಧಾನ ಇರಬಹುದು.

ὡς σταδίους εἴκοσι πέντε ἢ τριάκοντα

ಒಂದು “ಸ್ಟೇಡಿಯಂ” (ಹರದಾರಿ) ಸುಮಾರು 185 ಮೀಟರ್ಗಳಿರುತ್ತದೆ. ಪರ್ಯಾಯ ಅನುವಾದ: “ಸುಮಾರು ಐದಾರು ಕಿಲೋಮೀಟರ್” (ನೋಡಿರಿ: ಸತ್ಯವೇದದಲ್ಲಿ ಬರುವ ಅಂತರಗಳು.)

John 6:20

μὴ φοβεῖσθε

ಹೆದರಬೇಡಿರಿ!

John 6:21

ἤθελον…λαβεῖν αὐτὸν εἰς τὸ πλοῖον

ಯೇಸು ದೋಣಿಯನ್ನು ಹತ್ತುತ್ತಾರೆಂದು ಇದು ಸ್ಪಷ್ಟ ಮಾಡುತ್ತಿದೆ. ಪರ್ಯಾಯ ಅನುವಾದ: “ಅವರು ಸಂತೋಷವಾಗಿ ಆತನನ್ನು ದೋಣಿಯೊಳಕ್ಕೆ ಸ್ವೀಕರಿಸಿದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 6:22

τῆς θαλάσσης

ಗಲಿಲಾಯದ ಸಮುದ್ರ

John 6:23

ἄλλα ἦλθεν πλοῖα ἐκ Τιβεριάδος, ἐγγὺς τοῦ τόπου ὅπου ἔφαγον τὸν ἄρτον, εὐχαριστήσαντος τοῦ Κυρίου

ಇದು ಹಿನ್ನೆಲೆ ಸಮಾಚಾರವಾಗಿದೆ ಎಂದು ತೋರಿಸಲು ನಿಮ್ಮ ಭಾಷೆಯ ಶೈಲಿಯನ್ನು ಉಪಯೋಗಿಸಿರಿ. (ನೋಡಿರಿ: ಹಿನ್ನೆಲೆ ಮಾಹಿತಿ.)

ἦλθεν πλοῖα ἐκ Τιβεριάδος

ಇಲ್ಲಿ ಯೋಹಾನನು ಇನ್ನು ಹೆಚ್ಚಿನ ಹಿನ್ನೆಲೆ ಸಮಾಚಾರವನ್ನು ಕೊಡುತ್ತಿದ್ದಾನೆ. ಮರುದಿನ, ಯೇಸು ಜನರಿಗೆ ಆಹಾರವನ್ನು ಬಡಿಸಿದ ನಂತರ, ತಿಬೇರಿಯಾದಿಂದ ಕೆಲವು ದೋಣಿಗಳಲ್ಲಿ ಸ್ವಲ್ಪ ಜನರು ಬಂದರು. ಹೀಗಿದ್ದಲ್ಲಿ, ಯೇಸು ಮತ್ತು ಆತನ ಶಿಷ್ಯರು ಹಿಂದಿನ ರಾತ್ರಿ ಅಲ್ಲಿಂದ ಹೊರಟಿದ್ದರು. (ನೋಡಿರಿ: ಹಿನ್ನೆಲೆ ಮಾಹಿತಿ.)

John 6:24

ಯೇಸುವನ್ನು ಹುಡುಕುತ್ತಾ ಜನರು ಕಪೆರ್ನೌಮಿಗೆ ಹೋದರು. ಅಲ್ಲಿ ಆತನನ್ನು ನೋಡಿ, ಆತನನ್ನು ಪ್ರಶ್ನಿಸಲು ಪ್ರಾರಂಭಿಸಿದರು.

John 6:26

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

John 6:27

ζωὴν αἰώνιον, ἣν ὁ Υἱὸς τοῦ Ἀνθρώπου ὑμῖν δώσει; τοῦτον γὰρ ὁ Πατὴρ ἐσφράγισεν ὁ Θεός

ಆತನಲ್ಲಿ ಯಾರ್ಯಾರು ನಂಬಿಕ್ಕೆ ಇಟ್ಟಿದ್ದಾರೋ ಅವರಿಗೆ ನಿತ್ಯ ಜೀವವನ್ನು ಒದಗಿಸಲು ತಂದೆಯಾದ ದೇವರು, ದೇವ ಕುಮಾರನಾದ ಯೇಸುವಿಗೆ ಅನುಮತಿ ಕೊಟ್ಟಿದ್ದಾನೆ.

Υἱὸς τοῦ Ἀνθρώπου…ὁ Πατὴρ…ὁ Θεός

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τοῦτον…ἐσφράγισεν

ಯಾವುದರ ಮೇಲಾದರೂ “ಮುದ್ರೆ ಹಾಕಿದ್ದಾರೆ” ಅದು ಯಾರಿಗೆ ಸಂಬಂಧಪಟ್ಟದ್ದು ಎಂದು ತೋರಿಸಲು ಅದರ ಮೇಲೆ ಗುರುತು ಹಾಕಿರುತ್ತಾರೆ. ಮಗನು ತಂದೆಗೆ ಸಂಬಂಧಪಟ್ಟವನೆಂದು ಮತ್ತು ಆತನನ್ನು ಪ್ರತಿ ವಿಧವಾಗಿ ತಂದೆ ಅಂಗೀಕರಿಸುತ್ತಾನೆಂದು ಇದರ ಅರ್ಥವಾಗಿದೆ. (ನೋಡಿರಿ: ರೂಪಕ ಅಲಂಕಾರ)

John 6:31

οἱ πατέρες ἡμῶν

ನಮ್ಮ ಪಿತೃಗಳು ಅಥವಾ “ನಮ್ಮ ಪೂರ್ವಜರು”

τοῦ οὐρανοῦ

ದೇವರು ವಾಸಿಸುವ ಸ್ಥಳವನ್ನು ಇದು ಸೂಚಿಸುತ್ತಿದೆ.

John 6:32

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ὁ Πατήρ μου δίδωσιν ὑμῖν τὸν ἄρτον ἐκ τοῦ οὐρανοῦ τὸν ἀληθινόν

“ನಿಜವಾದ ರೊಟ್ಟಿ” ಎನ್ನುವ ಮಾತು ಯೇಸುವಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಪರಲೋಕದಿಂದ ಮಗನನ್ನು ನಿಜವಾದ ರೊಟ್ಟಿಯಾಗಿ ದೇವರು ನಿಮಗಾಗಿ ಕೊಟ್ಟಿದ್ದಾನೆ” (ನೋಡಿರಿ: ರೂಪಕ ಅಲಂಕಾರ ಮತ್ತು ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ὁ Πατήρ μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 6:33

ζωὴν διδοὺς τῷ κόσμῳ

ಲೋಕಕ್ಕೆ ಆತ್ಮೀಯ ಜೀವವನ್ನು ಕೊಡುವುದು

τῷ κόσμῳ

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. (ನೋಡಿರಿ: ಲಕ್ಷಣಾಲಂಕಾರ)

John 6:35

ἐγώ εἰμι ὁ ἄρτος τῆς ζωῆς

ರೂಪಕಾಲಂಕಾರವನ್ನು ಉಪಯೋಗಿಸಿ, ಯೇಸು ತನ್ನನ್ನು ತಾನು ರೊಟ್ಟಿಗೆ ಹೋಲಿಸಿಕೊಳ್ಳುತ್ತಿದ್ದಾನೆ. ನಮ್ಮ ಶಾರೀರಿಕ ಜೀವನಕ್ಕೆ ರೊಟ್ಟಿ ಅವಶ್ಯಕತೆ ಇರುವ ಹಾಗೆಯೆ, ನಮ್ಮ ಆತ್ಮೀಯ ಜೀವನಕ್ಕೆ ಯೇಸುವಿನ ಅವಶ್ಯಕತೆ ಇರುವುದು. ಪರ್ಯಾಯ ಅನುವಾದ: “ಶಾರೀರಿಕವಾಗಿ ಆಹಾರ ನಿಮ್ಮನ್ನು ಜೀವಂತವಾಗಿರಿಸುವ ಪ್ರಕಾರವೇ, ನಾನು ನಿಮಗೆ ಆತ್ಮಿಯ ಜೀವನವನ್ನು ಕೊಡಬಲ್ಲೆನು” (ನೋಡಿರಿ: ರೂಪಕ ಅಲಂಕಾರ)

ὁ πιστεύων εἰς

ಯೇಸು ದೇವರ ಮಗನೆಂದು, ಆತನನ್ನು ರಕ್ಷಕನಾಗಿ ನಂಬುವುದು ಮತ್ತು ಆತನನ್ನು ಸನ್ಮಾನಿಸುವ ರೀತಿಯಲ್ಲಿ ಜೀವಿಸುವುದು ಎಂದು ಇದರ ಅರ್ಥವಾಗಿದೆ.

John 6:37

πᾶν ὃ δίδωσίν μοι ὁ Πατὴρ, πρὸς ἐμὲ ἥξει

ಯೇಸುವಲ್ಲಿ ನಂಬಿಕೆಯಿಟ್ಟವರನ್ನು ತಂದೆಯಾದ ದೇವರು ಮತ್ತು ಮಗನಾದ ದೇವರು ಎಂದೆಂದಿಗೂ ರಕ್ಷಿಸುವರು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τὸν ἐρχόμενον πρός ἐμὲ, οὐ μὴ ἐκβάλω ἔξω

ಒತ್ತಾಯಿಸಿ ಹೇಳುವದಕ್ಕಾಗಿ ಈ ವಾಕ್ಯವು ಹೇಳುತ್ತಿರುವ ವಿಷಯಕ್ಕೆ ವಿರುದ್ಧ ಅರ್ಥವನ್ನು ಹೊಂದಿದೆ. ಪರ್ಯಾಯ ಅನುವಾದ: “ನನ್ನ ಬಳಿಗೆ ಬರುವ ಎಲ್ಲರನ್ನು ನಾನು ಸ್ವೀಕರಿಸುತ್ತೇನೆ” (ನೋಡಿರಿ: ಲಿಟೋಟ್ಸ್.)

John 6:38

ಜನಸಮೂಹದೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತಿದ್ದಾನೆ.

τοῦ πέμψαντός με

ನನ್ನನ್ನು ಕಳುಹಿಸಿದ ನನ್ನ ತಂದೆ

John 6:39

πᾶν ὃ…μὴ ἀπολέσω ἐξ αὐτοῦ

ದೇವರು ಆತನಿಗೆ ಕೊಟ್ಟ ಎಲ್ಲರನ್ನು ಯೇಸು ಸ್ವೀಕರಿಸುವನು ಎಂದು ಒತ್ತಿ ಹೇಳಲು ಇಲ್ಲಿ ಪರ್ಯಾಯೋಕ್ತಿಯನ್ನು ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: “ನಾನು ಅವರೆಲ್ಲರನ್ನು ಸ್ವೀಕರಿಸಬೇಕು” (ನೋಡಿರಿ: ಲಿಟೋಟ್ಸ್.)

ἀναστήσω αὐτὸ

ಇಲ್ಲಿ ಎಬ್ಬಿಸು ಎನ್ನುವ ಮಾತು ಸತ್ತಿರುವವರನ್ನು ಮತ್ತೆ ಮತ್ತೆ ಬದುಕುಸುವಂತೆ ಮಾಡುವುದು ಎನ್ನುವ ನುಡಿಗಟ್ಟು ಆಗಿದೆ. ಪರ್ಯಾಯ ಅನುವಾದ: “ಅವರು ಪುನಃ ಜೀವಿಸುವಂತೆ ಮಾಡುವುದು” (ನೋಡಿರಿ: ನುಡಿಗಟ್ಟುಗಳು.)

John 6:41

ಯೇಸು ಜನರೊಂದಿಗೆ ಮಾತನಾಡುತ್ತಿರುವಾಗ ಯೆಹೂದ್ಯರ ನಾಯಕರು ಆತನನ್ನು ಭಂಗಪಡಿಸಿದರು.

ἐγόγγυζον

ಅಸಂತೋಷವಾಗಿ ಮಾತಾಡಿದರು

ἐγώ εἰμι ὁ ἄρτος

ನಮ್ಮ ಶಾರೀರಿಕ ಜೀವನಕ್ಕೆ ರೊಟ್ಟಿ ಅವಶ್ಯಕತೆ ಇರುವ ಹಾಗೆಯೆ, ನಮ್ಮ ಆತ್ಮೀಯ ಜೀವನಕ್ಕೆ ಯೇಸುವಿನ ಅವಶ್ಯಕತೆ ಇರುವುದು. ಯೋಹಾನ.6:35 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ. ಪರ್ಯಾಯ ಅನುವಾದ: “ನಿಜವಾದ ರೊಟ್ಟಿಯಾಗಿರುವವನಾಗಿ ನಾನಿದ್ದೇನೆ” (ನೋಡಿರಿ: ರೂಪಕ ಅಲಂಕಾರ)

John 6:42

οὐχ οὗτός ἐστιν Ἰησοῦς ὁ υἱὸς Ἰωσήφ, οὗ ἡμεῖς οἴδαμεν τὸν πατέρα καὶ τὴν μητέρα

ಯೇಸು ವಿಶೇಷವಾದ ವ್ಯಕ್ತಿಯೆಂದು ಯೆಹೂದ್ಯರ ನಾಯಕರು ನಂಬಲಿಲ್ಲ ಎಂದು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಇವನು ಯೇಸು ಮಾತ್ರ, ಯೋಸೇಫನ ಮಗನು, ಇವನ ತಂದೆ ತಾಯಿ ನಮಗೆ ಗುತ್ತಿರುವರಲ್ಲ! (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

πῶς νῦν λέγει, ὅτι ἐκ τοῦ οὐρανοῦ καταβέβηκα

ಯೇಸು ಪರಲೋಕದಿಂದ ಬಂದಿರುವನು ಎಂದು ಯೆಹೂದ್ಯರ ನಾಯಕರು ನಂಬಲಿಲ್ಲ ಎಂದು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಆತನು ಪರಲೋಕದಿಂದ ಬಂದಿರುವನು ಎಂದು ಹೇಳಿದಾಗ ಆತನು ಸುಳ್ಳು ಹೇಳುತ್ತಿದ್ದಾನೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 6:43

ಯೇಸು ಜನಸಮೂಹದೊಂದಿಗೆ ಹಾಗೂ ಯೆಹೂದ್ಯರ ನಾಯಕರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.

John 6:44

ἀναστήσω αὐτὸν

ಇದು ನುಡಿಗಟ್ಟಾಗಿದೆ. ಪರ್ಯಾಯ ಅನುವಾದ: “ಅವನು ಪುನಃ ಜೀವಿಸುವಂತೆ ಮಾಡುವುದು” (ನೋಡಿರಿ: ನುಡಿಗಟ್ಟುಗಳು.)

ἑλκύσῃ

1) “ಎಳೆಯುವುದು” ಅಥವಾ 2) “ಆಕರ್ಷಿಸುವುದು” ಎಂದು ಇದರ ಅರ್ಥವಿರಬಹುದು.

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 6:45

ἔστιν γεγραμμένον ἐν τοῖς προφήταις

ಇದು ಕ್ರಿಯಾಶೀಲ ರೂಪದಲ್ಲಿ ಹೇಳಬಹುದಾದ ನಿಷ್ಕ್ರಿಯ ವಾಕ್ಯವಾಗಿದೆ. ಪರ್ಯಾಯ ಅನುವಾದ: “ಪ್ರವಾದಿಗಳು ಬರೆದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

πᾶς ὁ ἀκούσας παρὰ τοῦ Πατρὸς καὶ μαθὼν, ἔρχεται πρὸς ἐμέ

ಯೇಸು “ಯೋಸೇಫನ ಮಗನೆಂದು” ಯೆಹೂದ್ಯರು ನೆನೆದರು (ಯೋಹಾನ.6:42), ಆದರೆ ಆತನು ದೇವ ಕುಮಾರನಾಗಿದ್ದಾನೆ, ಯಾಕಂದರೆ ಆತನ ತಂದೆ ಯೋಸೇಫನು ಅಲ್ಲದೆ ದೇವರು ಆತನ ತಂದೆಯಾಗಿದ್ದಾನೆ.

John 6:46

ಯೇಸು ಜನಸಮೂಹದೊಂದಿಗೆ ಹಾಗೂ ಯೆಹೂದ್ಯರ ನಾಯಕರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 6:47

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ὁ πιστεύων ἔχει ζωὴν αἰώνιον

ದೇವರ ಮಗನಾಗಿರುವ ಯೇಸುವನ್ನು ನಂಬಿದವರಿಗೆ ದೇವರು “ನಿತ್ಯ ಜೀವವನ್ನು” ಕೊಡುತ್ತಾನೆ.

John 6:48

ἐγώ εἰμι ὁ ἄρτος τῆς ζωῆς

ನಮ್ಮ ಶಾರೀರಿಕ ಜೀವನಕ್ಕೆ ರೊಟ್ಟಿ ಅವಶ್ಯಕತೆ ಇರುವ ಹಾಗೆಯೆ, ನಮ್ಮ ಆತ್ಮೀಯ ಜೀವನಕ್ಕೆ ಯೇಸುವಿನ ಅವಶ್ಯಕತೆ ಇರುವುದು. ಯೋಹಾನ.6:35 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ. ಪರ್ಯಾಯ ಅನುವಾದ: “ಆಹಾರ ನಿಮ್ಮನ್ನು ಜೀವಂತರಾಗಿ ಉಳಿಸಿದ ರೀತಿಯಲ್ಲಿ, ಶಾಶ್ವತವಾಗಿ ಇರುವ ಆತ್ಮೀಯ ಜೀವನವನ್ನು ನಾನು ನಿನಗೆ ಕೊಡುವೆನು” (ನೋಡಿರಿ: ರೂಪಕ ಅಲಂಕಾರ)

John 6:49

οἱ πατέρες ὑμῶν

ನಿಮ್ಮ ಪಿತೃಗಳು ಅಥವಾ “ನಿಮ್ಮ ಪೂರ್ವಿಕರು”

ἀπέθανον

ಇದು ಶಾರೀರಕ ಮರಣವನ್ನು ಸೂಚಿಸುತ್ತಿದೆ.

John 6:50

οὗτός ἐστιν ὁ ἄρτος

ಇಲ್ಲಿ “ರೊಟ್ಟಿ” ಎನ್ನುವ ಪದವು ಶಾರೀರಕ ಜೀವವನ್ನು ಕೊಡುವ ರೊಟ್ಟಿಯಂತೆಯೇ ಆತ್ಮೀಯ ಜೀವ ಕೊಡುವ ಯೇಸುವನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ನಿಜವಾದ ರೊಟ್ಟಿಯಂತೆ ಇರುವೆನು” (ನೋಡಿರಿ: ರೂಪಕ ಅಲಂಕಾರ)

μὴ ἀποθάνῃ

ಶಾಶ್ವತವಾಗಿ ಜೀವಿಸುವುದು. ಇಲ್ಲಿ “ಸಾಯುವುದು” ಎನ್ನುವ ಪದ ಆತ್ಮೀಯ ಮರಣವನ್ನು ಸೂಚಿಸುತ್ತಿದೆ.

John 6:51

ἄρτος ὁ ζῶν

“ಜನರು ಜೀವಿಸುವಂತೆ ಮಾಡುವ ರೊಟ್ಟಿ” ಎಂದು ಇದರ ಅರ್ಥ (ಯೋಹಾನ.6:35).

ὑπὲρ τῆς τοῦ κόσμου ζωῆς

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಪ್ರಪಂಚದಲ್ಲಿರುವ ಎಲ್ಲ ಜನರಿಗೆ ಜೀವ ಕೊಡುವಂತದ್ದು” (ನೋಡಿರಿ: ಲಕ್ಷಣಾಲಂಕಾರ)

John 6:52

ಅಲ್ಲಿದ್ದ ಕೆಲವರು ಯೆಹೂದ್ಯರು ಅವರಲ್ಲವರು ವಾದಿಸುವುದಕ್ಕೆ ಪ್ರಾರಂಭಿಸಿದರು ಮತ್ತು ಯೇಸು ಅವರ ಪ್ರಶ್ನೆಗೆ ಪ್ರತಿಸ್ಪಂದಿಸುತ್ತಾರೆ.

πῶς δύναται οὗτος ἡμῖν δοῦναι τὴν σάρκα φαγεῖν

ಯೇಸು “ತನ್ನ ಶರೀರ” ಕುರಿತಾಗಿ ಹೇಳಿದಾಗ ಯೆಹೂದ್ಯ ನಾಯಕರು ನಕಾರಾತ್ಮಕವಾಗಿ ಪ್ರತಿಸ್ಪಂದಿಸಿದರು ಎಂದು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಈ ಮನುಷ್ಯನು ತನ್ನ ಶರೀರವನ್ನು ತಿನ್ನುವುದಕ್ಕೆ ನಮಗೆ ಕೊಡುವುದು ಅಸಾಧ್ಯ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 6:53

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

φάγητε τὴν σάρκα τοῦ Υἱοῦ τοῦ Ἀνθρώπου, καὶ πίητε αὐτοῦ τὸ αἷμα

ಇಲ್ಲಿ “ದೇಹವನ್ನು ತಿಂದು” ಮತ್ತು “ಆತನ ರಕ್ತವನ್ನು ಕುಡಿಯುವುದು” ಎನ್ನುವ ಮಾತುಗಳು ದೇವ ಕುಮಾರನಾದ ಯೇಸುವನ್ನು ನಂಬಿದವರು ಆತ್ಮೀಯ ಆಹಾರ ಮತ್ತು ಪಾನವನ್ನು ಹೊಂದಿರುತ್ತಾರೆ ಎಂದು ಹೇಳುವ ರೂಪಕಾಲಂಕಾರವಾಗಿದೆ. ಹೀಗಿದ್ದಲ್ಲಿ, ಯೆಹೂದ್ಯರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೇಸುಗಿಂತ ಹೆಚ್ಚಾಗಿ ಈ ರೂಪಕಾಲಂಕಾರಕ್ಕೆ ನೀವು ಸ್ಪಷ್ಟತೆಯನ್ನು ಕೊಡಬೇಡಿರಿ. (ನೋಡಿರಿ: ರೂಪಕ ಅಲಂಕಾರ)

οὐκ ἔχετε ζωὴν ἐν ἑαυτοῖς

ನೀವು ನಿತ್ಯ ಜೀವವನ್ನು ಹೊಂದುವುದಿಲ್ಲ

John 6:54

ಆತನಿಗೆ ಕಿವಿಗೊಟ್ಟು ಕೇಳುತ್ತಿರುವ ಎಲ್ಲರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

ὁ τρώγων μου τὴν σάρκα, καὶ πίνων μου τὸ αἷμα, ἔχει ζωὴν αἰώνιον

ಇಲ್ಲಿ “ದೇಹವನ್ನು ತಿಂದು” ಮತ್ತು “ಆತನ ರಕ್ತವನ್ನು ಕುಡಿಯುವುದು” ಎನ್ನುವ ಮಾತುಗಳು ಯೇಸುವನ್ನು ನಂಬುವುದು ಎನ್ನುವ ಮಾತಿಗೆ ರೂಪಕಾಲಂಕಾರವಾಗಿವೆ. ಜನರು ಜೀವಿಸಲು ಆಹಾರ ಮತ್ತು ನೀರು ಅವಶ್ಯಕತೆ ಇರುವ ರೀತಿಯಲ್ಲೇ ನಿತ್ಯ ಜೀವವನ್ನು ಪಡೆಯಲು ಜನರು ಯೇಸುವನ್ನು ನಂಬಬೇಕು. ಹೀಗಿದ್ದಲ್ಲಿ, ಯೆಹೂದ್ಯರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೇಸುಗಿಂತ ಹೆಚ್ಚಾಗಿ ಈ ರೂಪಕಾಲಂಕಾರಕ್ಕೆ ನೀವು ಸ್ಪಷ್ಟತೆಯನ್ನು ಕೊಡಬೇಡಿರಿ. (ನೋಡಿರಿ: ರೂಪಕ ಅಲಂಕಾರ)

ἀναστήσω αὐτὸν

ಇಲ್ಲಿ ಎಬ್ಬಿಸು ಎನ್ನುವ ಮಾತು ಸತ್ತಿರುವವರನ್ನು ಮತ್ತೆ ಬದುಕುಸುವಂತೆ ಮಾಡುವುದು ಎನ್ನುವ ನುಡಿಗಟ್ಟು ಆಗಿದೆ. ಪರ್ಯಾಯ ಅನುವಾದ: “ಅವನನ್ನು ಪುನಃ ಜೀವಿಸುವಂತೆ ಮಾಡುವುದು” (ನೋಡಿರಿ: ನುಡಿಗಟ್ಟುಗಳು.)

τῇ ἐσχάτῃ ἡμέρᾳ

ದೇವರು ಎಲ್ಲರಿಗೆ ತೀರ್ಪು ಮಾಡುವ ದಿನ

John 6:55

ἡ…σάρξ μου ἀληθής ἐστι βρῶσις, καὶ τὸ αἷμά μου ἀληθής ἐστι πόσις

ಯೇಸುವನ್ನು ನಂಬಿದವರಿಗೆ ಆತನು ಜೀವಕೊಡುವನು ಎಂದು ಹೇಳುವ ಮಾತಿಗೆ “ನಿಜವಾದ ಆಹಾರ” ಮತ್ತು “ನಿಜವಾದ ಪಾನ” ಎನ್ನುವ ಮಾತುಗಳು ರೂಪಕಾಲಂಕಾರವಾಗಿವೆ. ಹೀಗಿದ್ದಲ್ಲಿ, ಯೆಹೂದ್ಯರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೇಸುಗಿಂತ ಹೆಚ್ಚಾಗಿ ಈ ರೂಪಕಾಲಂಕಾರಕ್ಕೆ ನೀವು ಸ್ಪಷ್ಟತೆಯನ್ನು ಕೊಡಬೇಡಿರಿ. (ನೋಡಿರಿ: ರೂಪಕ ಅಲಂಕಾರ)

John 6:56

ἐν ἐμοὶ μένει, κἀγὼ ἐν αὐτῷ

ನನ್ನೊಂದಿಗೆ ಸತ್ಸಂಬಂಧವನ್ನು ಹೊಂದಿರುವರು

John 6:57

καὶ ὁ τρώγων με

“ನನ್ನನ್ನು ತಿನ್ನುವವರು” ಎನ್ನುವ ಮಾತು ಯೇಸುವನ್ನು ನಂಬುವುದಕ್ಕೆ ರೂಪಕಾಲಂಕಾರವಾಗಿದೆ. ಹೀಗಿದ್ದಲ್ಲಿ, ಯೆಹೂದ್ಯರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೇಸುಗಿಂತ ಹೆಚ್ಚಾಗಿ ಈ ರೂಪಕಾಲಂಕಾರಕ್ಕೆ ನೀವು ಸ್ಪಷ್ಟತೆಯನ್ನು ಕೊಡಬೇಡಿರಿ. (ನೋಡಿರಿ: https://git.door43.org/STR/kn_ta/src/branch/master/translate/figs-metaphor/01.md)

ζῶν Πατὴρ

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ಜೀವವನ್ನು ಕೊಡುವ ತಂದೆ” ಅಥವಾ 2) “ಜೀವಿಸುತ್ತಿರುವ ತಂದೆ”

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 6:58

οὗτός ἐστιν ὁ ἄρτος ὁ ἐξ οὐρανοῦ καταβάς

ಯೇಸು ತನ್ನನ್ನು ಕುರಿತಾಗಿ ಮಾತಾಡುತ್ತಿದ್ದಾರೆ. ಪರ್ಯಾಯ ಅನುವಾದ: “ಪರಲೋಕದಿಂದ ಬಂದ ರೊಟ್ಟಿಯು ನಾನೆ” (ನೋಡಿರಿ: https://git.door43.org/STR/kn_ta/src/branch/master/translate/figs-123person/01.md)

οὗτός ἐστιν ὁ ἄρτος ὁ ἐξ οὐρανοῦ καταβάς

ಜೀವವನ್ನು ಕೊಡುವ ವಸ್ತುವಿಗೆ ರೊಟ್ಟಿ ಎನ್ನುವ ಪದವು ರೂಪಕಾಲಂಕಾರವಾಗಿದೆ. ಹೀಗಿದ್ದಲ್ಲಿ, ಯೆಹೂದ್ಯರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೇಸುಗಿಂತ ಹೆಚ್ಚಾಗಿ ಈ ರೂಪಕಾಲಂಕಾರಕ್ಕೆ ನೀವು ಸ್ಪಷ್ಟತೆಯನ್ನು ಕೊಡಬೇಡಿರಿ. (ನೋಡಿರಿ: ರೂಪಕ ಅಲಂಕಾರ)

ὁ τρώγων τοῦτον τὸν ἄρτον

“ಈ ರೊಟ್ಟಿ” ಎಂದು ಯೇಸು ತನ್ನನ್ನು ಕುರಿತಾಗಿ ತಾನೆ ಹೇಳಿಕೊಂಡಿದ್ದಾನೆ. ಪರ್ಯಾಯ ಅನುವಾದ: “ರೊಟ್ಟಿ, ನನ್ನನ್ನು ತಿನ್ನುವವರು” (ನೋಡಿರಿ: https://git.door43.org/STR/kn_ta/src/branch/master/translate/figs-123person/01.md)

ὁ τρώγων τοῦτον τὸν ἄρτον

ಇಲ್ಲಿ “ಈ ರೊಟ್ಟಿ ತಿನ್ನುವವರು” ಎನ್ನುವ ಮಾತು ಯೇಸುವನ್ನು ನಂಬುವುದು ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಹೀಗಿದ್ದಲ್ಲಿ, ಯೆಹೂದ್ಯರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೇಸುಗಿಂತ ಹೆಚ್ಚಾಗಿ ಈ ರೂಪಕಾಲಂಕಾರಕ್ಕೆ ನೀವು ಸ್ಪಷ್ಟತೆಯನ್ನು ಕೊಡಬೇಡಿರಿ. (ನೋಡಿರಿ: https://git.door43.org/STR/kn_ta/src/branch/master/translate/figs-metaphor/01.md)

οἱ πατέρες

ಪಿತೃಗಳು ಅಥವಾ “ಪೂರ್ವಿಕರು”

John 6:59

ταῦτα εἶπεν ἐν συναγωγῇ, διδάσκων ἐν Καφαρναούμ

ಈ ಸಂಘಟನೆ ಯಾವಾಗ ನಡೆಯಿತು ಎನ್ನುವ ಹಿನ್ನೆಲೆ ಸಮಾಚಾರವನ್ನು ಯೋಹಾನನು ಇಲ್ಲಿ ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 6:60

ಕೆಲವರು ಶಿಷ್ಯರು ಪ್ರಶ್ನೆಯನ್ನು ಕೇಳಿದಾಗ ಯೇಸು ಜನರೊಂದಿಗೆ ಮಾತನಾಡುತ್ತ ಆ ಪ್ರಶ್ನೆಗೆ ಪ್ರತ್ಯುತ್ತರ ನೀಡುತ್ತಾನೆ.

τίς δύναται αὐτοῦ ἀκούειν

ಯೇಸು ಹೇಳಿರುವದನ್ನು ಅರ್ಥ ಮಾಡಿಕೊಳ್ಳಲು ಶಿಷ್ಯರಿಗೆ ಕಷ್ಟಕರವಾಗಿತ್ತು ಎಂದು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಯಾರು ಅದನ್ನು ಅಂಗೀಕರಿಸುವದಿಲ್ಲ!” ಅಥವಾ “ಅದು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟಕರವಾಗಿರುತ್ತದೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 6:61

τοῦτο ὑμᾶς σκανδαλίζει

ಇದು ನಿಮ್ಮನ್ನು ಆಶ್ಚರ್ಯಕ್ಕೆ ಒಳಮಾಡಿದ್ದಿಯಾ? ಅಥವಾ “ಇದು ನಿಮ್ಮನ್ನು ಕಳವಳಕ್ಕೆ ಒಳಮಾಡುತ್ತಿದ್ದೇಯಾ?

John 6:62

ἐὰν οὖν θεωρῆτε τὸν Υἱὸν τοῦ Ἀνθρώπου, ἀναβαίνοντα ὅπου ἦν τὸ πρότερον

ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿರುವ ಇನ್ನು ಅನೇಕ ಸಂಗತಿಗಳನ್ನು ಆತನ ಶಿಷ್ಯರು ನೋಡುತ್ತಾರೆಂದು ಒತ್ತಾಯಿಸಿ ಹೇಳಲು ಯೇಸು ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಮನುಷ್ಯ ಕುಮಾರನಾದ ನಾನು ಪರಲೋಕಕ್ಕೆ ಹೋಗುವುದನ್ನು ನೀವು ನೋಡಿದಾಗ ಏನು ಯೋಚನೆ ಮಾಡಬೇಕೆಂದು ನಿಮಗೆ ತಿಳಿಯದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 6:63

ὠφελεῖ

“ಲಾಭ” ಎನ್ನುವ ಮಾತು ಒಳ್ಳೆ ಕಾರ್ಯಗಳನ್ನು ನಡೆಯುವಂತೆ ಮಾಡುವುದೆಂದು ಅರ್ಥ.

ῥήματα

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) ಯೋಹಾನ.6:32-58 ವಚನದಲ್ಲಿ ಯೇಸುವಿನ ಮಾತುಗಳು ಅಥವಾ 2) ಯೇಸು ಬೋಧಿಸುವ ಎಲ್ಲಾ ಸಂಗತಿಗಳು. (ನೋಡಿರಿ: ಲಕ್ಷಣಾಲಂಕಾರ)

τὰ ῥήματα ἃ ἐγὼ λελάληκα ὑμῖν

ನಾನು ನಿಮಗೆ ಹೇಳಿರುವುದು

πνεῦμά ἐστιν καὶ ζωή ἐστιν

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ಆತ್ಮ ಮತ್ತು ನಿತ್ಯ ಜೀವವನ್ನು ಕುರಿತಾಗಿ” ಅಥವಾ 2) “ಆತ್ಮದಿಂದ ಮತ್ತು ನಿತ್ಯ ಜೀವವನ್ನು ಕೊಡುವುದು” ಅಥವಾ 3) “ಆತ್ಮೀಯ ಸಂಗತಿಗಳನ್ನು ಕುರಿತು ಮತ್ತು ಜೀವ ಕುರಿತಾಗಿ.”

John 6:64

ಜನ ಸಮೂಹದೊಂದಿಗೆ ಮಾತಾಡುವುದನ್ನು ಯೇಸು ಮುಗಿಸಿದನು.

ᾔδει γὰρ ἐξ ἀρχῆς ὁ Ἰησοῦς, τίνες εἰσὶν οἱ μὴ πιστεύοντες, καὶ τίς ἐστιν ὁ παραδώσων αὐτόν

ಮುಂದೆ ನಡೆಯುವ ಸಂಗತಿಗಳನ್ನು ಕುರಿತಾಗಿ ಯೇಸು ತಿಳಿದಿರುವ ವಿಷಯವನ್ನು ಕುರಿತು ಯೋಹಾನ ಹಿನ್ನೆಲೆ ಸಮಾಚಾರವನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 6:65

οὐδεὶς δύναται ἐλθεῖν πρός με, ἐὰν μὴ ᾖ δεδομένον αὐτῷ ἐκ τοῦ Πατρός

ನಂಬಿದವರು ಕುಮಾರನ ಮೂಲಕವೇ ದೇವರ ಬಳಿಗೆ ಬರಬೇಕು. ಯೇಸು ಬಳಿಗೆ ಜನರು ಬರುವದಕ್ಕಾಗಿ ತಂದೆಯಾದ ದೇವರು ಮಾತ್ರವೇ ಅನುಮತಿಕೊಡುವನು.

Πατρός

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἐλθεῖν πρός με

ನನ್ನನ್ನು ಹಿಂಬಾಲಿಸು ಮತ್ತು ನಿತ್ಯ ಜೀವವನ್ನು ಪಡೆಯಿರಿ

John 6:66

οὐκέτι μετ’ αὐτοῦ περιεπάτουν

ಯೇಸು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋದನು, ಆದಕಾರಣ ಆತನು ನಡೆದಾಗ ಆ ಸ್ಥಳಗಳಲ್ಲಿ ಅವರು ನಡೆಯಲಿಲ್ಲ ಎನ್ನುವ ಮಾತು ಅಕ್ಷರಶಃವಾಗಿ ಸತ್ಯವಾಗಿದೆ, ಆದರೆ ಆತನು ಹೇಳುತ್ತಿರುವುದನ್ನು ಕೇಳಲು ಅವರಿಗೆ ಇಷ್ಟ ಇರಲಿಲ್ಲವೆಂದು ಸೂಚಿಸುವ ಈ ರೂಪಕಾಲಂಕಾರವನ್ನು ಓದುಗಾರರು ಅರ್ಥ ಮಾಡಿಕೊಳ್ಳಬೇಕು. (ನೋಡಿರಿ: ರೂಪಕ ಅಲಂಕಾರ)

τῶν μαθητῶν αὐτοῦ

“ಆತನ ಶಿಷ್ಯರು” ಎನ್ನುವ ಮಾತು ಯೇಸುವನ್ನು ಹಿಂಬಾಲಿಸುತ್ತಿದ್ದ ಸಾಮಾನ್ಯ ಜನರನ್ನು ಸೂಚಿಸುತ್ತಿದೆ.

John 6:67

τοῖς δώδεκα

“ಹನ್ನೆರಡು ಮಂದಿ ಶಿಷ್ಯರು” ಎನ್ನುವ ಪದವು ತನ್ನ ಸಂಪೂರ್ಣ ಸೇವೆಯಲ್ಲಿ ಯೇಸುವನ್ನು ಹಿಂಬಾಲಿಸಿದ ನಿರ್ದಿಷ್ಟ ಗುಂಪನ್ನು ಸೂಚಿಸುವ ಪದಲೋಪವಾಗಿದೆ. ಪರ್ಯಾಯ ಅನುವಾದ: “ಹನ್ನೆರಡು ಮಂದಿ ಶಿಷ್ಯರು” (ನೋಡಿರಿ: ಪದಲೋಪ)

John 6:68

Κύριε, πρὸς τίνα ἀπελευσόμεθα

ಸೀಮೋನ್ ಪೇತ್ರನು ಯೇಸುವನ್ನು ಮಾತ್ರವೇ ಹಿಂಬಾಲಿಸುವ ಬಯಕೆಯನ್ನು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯವನ್ನು ಪ್ರಶ್ನೆಯ ರೂಪದಲ್ಲಿ ಅವನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಕರ್ತನೆ, ನಿಮ್ಮನ್ನು ಬಿಟ್ಟು ನಾವು ಇನ್ಯಾರನ್ನು ಹಿಂಬಾಲಿಸುವದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 6:70

71ನೇ ವಚನದಲ್ಲಿ ಯೋಹಾನನು ಯೇಸು ಹೇಳಿರುವ ಮಾತಿನ ಕುರಿತಾಗಿ ವ್ಯಾಖ್ಯೆಯನ್ನು ಮಾಡುತ್ತಿದ್ದಾನೆ ಅದರಿಂದ ಇದು ಮುಖ್ಯ ಕಥೆಯಲ್ಲಿ ಭಾಗವಾಗಿರುವದಿಲ್ಲ. (ನೋಡಿರಿ: ಹಿನ್ನೆಲೆ ಮಾಹಿತಿ.)

οὐκ ἐγὼ ὑμᾶς τοὺς δώδεκα ἐξελεξάμην, καὶ ἐξ ὑμῶν εἷς διάβολός ἐστιν

ತನ್ನ ಶಿಷ್ಯರಲ್ಲಿ ಒಬ್ಬರು ಆತನನ್ನು ದ್ರೋಹ ಮಾಡುವನು ಎನ್ನುವ ವಾಸ್ತವ ವಿಷಯದ ಕಡೆಗೆ ಗಮನ ತರಲು ಯೇಸು ಈ ಅಭಿಪ್ರಾಯವನ್ನು ಪ್ರಶ್ನೆಯ ರೂಪದಲ್ಲಿ ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನಿಮ್ಮೆಲ್ಲರನ್ನು ನಾನೇ ಆರಿಸಿಕೊಂಡಿದ್ದೇನೆ, ಆದರೆ ನಿಮ್ಮಲ್ಲಿ ಒಬ್ಬನು ಸೈತಾನನ ಮಗನಿದ್ದಾನೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7

ಯೋಹಾನ 07 ಸಾಧಾರಣ ವಿಷಯಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಯೇಸುವನ್ನು ಮೆಸ್ಸಯ್ಯಾ ಎಂದು ನಂಬುವ ವಿಷಯದ ಕುರಿತಾಗಿಯೇ ಈ ಸಂಪೂರ್ಣ ಅಧ್ಯಾಯವು ಒಳಗೊಂಡಿರುತ್ತದೆ. ಕೆಲವರು ಈ ವಿಷಯವನ್ನು ತಿರಸ್ಕರಿಸಿದ ಸಮಯದಲ್ಲೇ ಇನ್ನೂ ಕೆಲವರು ಇದನ್ನು ನಂಬಿದ್ದಾರೆ. ಕೆಲವರು ಆತನ ಶಕ್ತಿಯನ್ನು ಗುರುತಿಸುವುದಕ್ಕೆ ಇಷ್ಟಪಟ್ಟಿದ್ದರು ಮತ್ತು ಆತನು ಪ್ರವಾದಿಯೆಂದು ಕೂಡ ಗುರುತಿಸುವ ಅವಕಾಶಗಳಿದ್ದವು, ಆದರೆ ಹೆಚ್ಹಿನ ಮಟ್ಟಿಗೆ ಅನೇಕರು ಆತನು ಮೆಸ್ಸಯ್ಯಾ ಎಂದು ನಂಬುವುದಕ್ಕೆ ಇಷ್ಟಪಟ್ಟಿರಲಿಲ್ಲ. (ನೋಡಿರಿ: ಕ್ರಿಸ್ತ, ಮೆಸ್ಸೀಯ ಮತ್ತು ಪ್ರವಾದಿ, ಪ್ರವಾದಿಗಳು, ಪ್ರವಾದನೆ, ಪ್ರವಾದಿಸು, ದರ್ಶಿ, ಪ್ರವಾದಿನಿ)

7:53-8:11 ವಚನಗಳನ್ನು ಅನುವಾದಿಸುವುದಕ್ಕೆ ಅವರು ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಅಥವಾ ಮಾಡಿಕೊಂಡಿದ್ದರು ಎಂದು ಓದುಗಾರರಿಗೆ ವಿವರಿಸುವುದಕ್ಕೆ 53ನೇ ವಚನದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ಅನುವಾದಕರು ಇಷ್ಟಪಡಬಹುದು.

ಈ ಅಧ್ಯಾಯದಲ್ಲಿ ವಿಶೇಷವಾದ ಅಂಶಗಳು

“ನನ್ನ ಸಮಯ ಇನ್ನೂ ಬಂದಿಲ್ಲ”

ಈ ಮಾತು ಮತ್ತು “ಆತನ ಸಮಯ ಇನ್ನೂ ಬಂದಿಲ್ಲ” ಎನ್ನುವ ಮಾತುಗಳು ಯೇಸು ತನ್ನ ಜೀವನದಲ್ಲಿ ನಡೆಯುವ ಸಂಘಟನೆಗಳ ನಿಯಂತ್ರಣ ಆತನು ಇದ್ದಾನೆಂದು ಸೂಚಿಸುವುದಕ್ಕೆ ಈ ಅಧ್ಯಾಯದಲ್ಲಿ ಉಪಯೋಗಿಸಲ್ಪಟ್ಟಿವೆ.

“ಜೀವ ಜಲ”

ಇದು ಹೊಸ ಒಡಂಬಡಿಕೆಯಲ್ಲಿ ಪ್ರಾಮುಖ್ಯವಾದ ರೂಪವಾಗಿರುತ್ತದೆ. ಇದು ರೂಪಕಲಂಕಾರ. ಯಾಕಂದರೆ ಈ ರೂಪಕಲಂಕಾರವು ಮರುಭೂಮಿಯ ವಾತಾವರಣದಲ್ಲಿ ಕೊಡಲ್ಪಟ್ಟಿದೆ. ಇದು ಬಹುಶಃ ಯೇಸು ಜೀವವನ್ನು ಸಂರಕ್ಷಿಸುವ ಪೋಷಣೆಯನ್ನು ಅನುಗ್ರಹಿಸುವರೆಂದು ಒತ್ತಿ ಹೇಳುತ್ತಿರಬಹುದು. (ನೋಡಿರಿ: ರೂಪಕ ಅಲಂಕಾರ)

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ರೂಪಕಲಂಕಾರಗಳು

ಪ್ರವಾದನೆ

ಯೋಹಾನ [ಯೋಹಾನ.7:33-34] (./33.ಎಂ.ಡಿ.) ಸುವಾರ್ತೆಯಲ್ಲಿ ಸ್ಪಷ್ಟವಾದ ವ್ಯಾಖ್ಯೆಯಿಲ್ಲದೇ ತನ್ನ ಜೀವನದ ಕುರಿತು ಯೇಸು ಪ್ರವಾದನೆಯನ್ನು ಕೊಡುತ್ತಿದ್ದಾರೆ.

ವ್ಯಂಗ

ಅವರ ಕುರಿತಾದ ತೀರ್ಪನ್ನು ಮಾಡುವುದಕ್ಕೆ ಮುಂಚಿತವಾಗಿ ಒಬ್ಬ ವ್ಯಕ್ತಿಯಿಂದ ನೇರವಾಗಿ ಕೇಳುವುದು ಆತನಿಗೆ ಅವಶ್ಯಕವೆಂದು ಧರ್ಮಶಾಸ್ತ್ರ ಒತ್ತಾಯಿಸಿ ಹೇಳುತ್ತಿದೆಯೆಂದು ಇತರ ಫರಿಸಾಯನಿಗೆ ನಿಕೋದೇಮನು ವಿವರಿಸುತ್ತಿದ್ದಾನೆ. ಯೇಸುವಿನೊಂದಿಗೆ ಮಾತನಾಡದೇ ಯೇಸುವಿನ ಕುರಿತು ಫರಿಸಾಯರು ತೀರ್ಪು ಮಾಡುತ್ತಿದ್ದಾರೆ.

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟು ಇತರ ಕ್ಲಿಷ್ಟ ಭಾಗಗಳು

“ಆತನಲ್ಲಿ ನಂಬಿಕೆಯಿಡಲಿಲ್ಲ”

ಯೇಸುವಿನ ಸಹೋದರರು ಯೇಸು ಮೆಸ್ಸಯ್ಯಾಯೆಂದು ಯಾರು ನಂಬಿರಲಿಲ್ಲ. (ನೋಡಿರಿ: ನಂಬು, ನಂಬಿಕೆಗಳು, ನಂಬಿದೆ, ವಿಶ್ವಾಸಿ, ನಂಬಿಕೆ, ಅವಿಶ್ವಾಸಿ, ಅವಿಶ್ವಾಸಿಗಳು, ಆಪನಂಬಿಕೆ)

“ಯೆಹೂದ್ಯರು”

ಈ ಅಧ್ಯಾಯದಲ್ಲಿ ಎರಡು ಬಾರಿ ಈ ಪದವು ಉಪಯೋಗಿಸಲ್ಪಟ್ಟಿರುತ್ತದೆ. ಆತನನ್ನು ಸಾಯಿಸುವುದಕ್ಕೆ ಪ್ರಯತ್ನಪಡುತ್ತಿರುವ ಯೆಹೂದ್ಯ ನಾಯಕರ ವಿರುದ್ಧವಾಗಿ ಈ ಪದವು ವಿಶೇಷವಾಗಿ ಉಪಯೋಗಿಸಲ್ಪಟ್ಟಿರುತ್ತದೆ ([ಯೋಹಾನ.7:1] (../../ಯೋಹಾನ/07/01.ಎಂ.ಡಿ.)). ಈ ಪದವು ಯೇಸುವಿಗೆ ಅನುಕೂಲವಾಗಿರುವ ಯೂದಾಯಾ ಜನರ ಕುರಿತಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ ([ಯೋಹಾನ.7:13] (../../ಯೋಹಾನ/07/13.ಎಂ.ಡಿ.)). ಅನುವಾದಕರು “ಯೆಹೂದ್ಯರ ನಾಯಕರು” ಮತ್ತು “ಯೆಹೂದ್ಯರ ಜನರು” ಅಥವಾ “ಯೆಹೂದ್ಯ (ನಾಯಕರು)” ಮತ್ತು “ಯೆಹೂದ್ಯರು (ಸಾಧಾರಣವಾಗಿ)” ಎಂಬುದಾಗಿ ಉಪಯೋಗಿಸುವುದಕ್ಕೆ ಇಷ್ಟಪಡಬಹುದು.

John 7:1

ಯೇಸು ಗಲಿಲಾಯದಲ್ಲಿ ತನ್ನ ಸಹೋದರರೊಂದಿಗೆ ಯೇಸು ಮಾತಾಡುತ್ತಿದ್ದಾರೆ. ಈ ಸಂಘಟನೆ ಯಾವಾಗ ನಡೆಯಿತೆಂದು ಈ ವಚನಗಳು ಹೇಳುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

μετὰ ταῦτα

ಲೇಖಕರು ಹೊಸ ಸಂಘಟನೆಯನ್ನು ಕುರಿತು ಮಾತಾಡಲು ಪ್ರಾರಂಭಿಸುತ್ತಿದ್ದಾನೆಂದು ಈ ಮಾತುಗಳು ಓದುಗಾರರಿಗೆ ಹೇಳುತ್ತಿದೆ. “ಶಿಷ್ಯರೊಂದಿಗೆ ಆತನು ಮಾತಾಡುವುದು ಮುಗಿಸಿದ ನಂತರ” (ಯೋಹಾನ.6:66-71) ಅಥವಾ “ಸ್ವಲ್ಪ ಸಮಯದ ನಂತರ”

περιεπάτει

ಯೇಸು ಯಾವುದಾದರು ಪ್ರಾಣಿ ಅಥವಾ ವಾಹನವನ್ನು ಉಪಯೋಗಿಸದೆ ಆತನು ಕಾಲ್ನಡಿಗೆಯಲ್ಲಿ ಹೋಗಿದ್ದನೆಂದು ಓದುಗಾರರು ಅರ್ಥಮಾಡಿಕೊಳ್ಳಬೇಕು.

ἐζήτουν αὐτὸν οἱ Ἰουδαῖοι ἀποκτεῖναι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಆತನನ್ನು ಕೊಲ್ಲುವದಕ್ಕೆ ಯೆಹೂದ್ಯ ನಾಯಕರು ಯೋಚಿಸುತ್ತಿದ್ದರು” (ನೋಡಿರಿ: ಉಪಲಕ್ಷಣಾಲಂಕಾರ)

John 7:2

ἦν δὲ ἐγγὺς ἡ ἑορτὴ τῶν Ἰουδαίων ἡ σκηνοπηγία

ಈಗ ಯೆಹೂದ್ಯರ ಹಬ್ಬ ಸಮೀಪವಿತ್ತು ಅಥವಾ “ಈಗ ಯೆಹೂದ್ಯರ ಗುಡಾರಗಳ ಹಬ್ಬದ ಸಮಯವಾಗಿತ್ತು”

John 7:3

οἱ ἀδελφοὶ

ಮರಿಯಳು ಮತ್ತು ಯೋಸೇಫನ ಮಕ್ಕಳು, ಯೇಸುವಿನ ನಿಜವಾದ ತಮ್ಮಂದಿರನ್ನು ಇದು ಸೂಚಿಸುತ್ತಿದೆ.

σοῦ τὰ ἔργα ἃ ποιεῖς

“ಕಾರ್ಯಗಳು” ಎನ್ನುವ ಪದ ಯೇಸು ಮಾಡಿರುವ ಅದ್ಭುತಕಾರ್ಯಗಳನ್ನು ಸೂಚಿಸುತ್ತಿದೆ.

John 7:4

ζητεῖ αὐτὸς

“ಆತನೇ” ಎನ್ನುವ ಪದ “ಆತನು” ಎನ್ನುವ ಆತ್ಮವಾಚಕ ಸರ್ವನಾಮವನ್ನು ಒತ್ತಾಯಿಸಿ ಹೇಳುತ್ತಿದೆ. (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

τῷ κόσμῳ

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಎಲ್ಲಾ ಜನರು” ಅಥವಾ “ಎಲ್ಲರು” (ನೋಡಿರಿ: ಲಕ್ಷಣಾಲಂಕಾರ)

John 7:5

οὐδὲ γὰρ οἱ ἀδελφοὶ αὐτοῦ ἐπίστευον εἰς αὐτὸν

ಯೇಸುವಿನ ಸಹೋದರರನ್ನು ಕುರಿತಾಗಿ ಯೋಹಾನನು ಹಿನ್ನೆಲೆ ಸಮಾಚಾರವನ್ನು ಕೊಡುತ್ತಿದ್ದಾನೆ ಆದಕಾರಣ ಈ ವಾಕ್ಯವು ಮುಖ್ಯ ಕಥೆಯಿಂದ ಅಗಲಿಸಲಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

οἱ ἀδελφοὶ αὐτοῦ

ತನ್ನ ತಮ್ಮಂದಿರು

John 7:6

ὁ καιρὸς ὁ ἐμὸς οὔπω πάρεστιν

“ಸಮಯ” ಎನ್ನುವ ಪದ ಸಮಾನಾರ್ಥಕ ಪದವಾಗಿದೆ. ತನ್ನ ಸೇವೆಯನ್ನು ಮುಗಿಸುವುದಕ್ಕೆ ಇದು ಸರಿಯಾದ ಸಮಯವಲ್ಲವೆಂದು ಯೇಸು ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನನ್ನ ಕೆಲಸವನ್ನು ಮುಗಿಸಲು ಇದು ಸೂಕ್ತ ಸಮಯವಲ್ಲ” (ನೋಡಿರಿ: ಲಕ್ಷಣಾಲಂಕಾರ ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ…καιρὸς ὁ ὑμέτερος πάντοτέ ἐστιν ἕτοιμος

ನಿಮಗೆ ಎಲ್ಲಾ ಸಮಯವು ಸರಿಯಾಗಿರುತ್ತದೆ

John 7:7

οὐ δύναται ὁ κόσμος μισεῖν ὑμᾶς

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಲೋಕದಲ್ಲಿರುವ ಎಲ್ಲಾ ಜನರು ನಿಮ್ಮನ್ನು ದ್ವೇಷಿಸಲಾರರು” (ನೋಡಿರಿ: ಲಕ್ಷಣಾಲಂಕಾರ)

ἐγὼ μαρτυρῶ περὶ αὐτοῦ, ὅτι τὰ ἔργα αὐτοῦ πονηρά ἐστιν

ಅವರು ಮಾಡುತ್ತಿರುವುದು ತಪ್ಪೆ೦ದು ನಾನು ಅವರಿಗೆ ಹೇಳುತ್ತೇನೆ

John 7:8

ಯೇಸು ತನ್ನ ತಮ್ಮಂದಿರೊಂದಿಗೆ ಮಾತಾಡುವುದನ್ನು ಮುಂದುವರೆಸುತ್ತಿದ್ದಾನೆ.

ὁ ἐμὸς καιρὸς οὔπω πεπλήρωται

ಆತನು ಯೆರೂಸಲೇಮಿಗೆ ಹೋದರೆ, ತನ್ನ ಕೆಲಸ ಮುಗಿಯುತ್ತದೆ ಎಂದು ಯೇಸು ಇಲ್ಲಿ ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನಾನು ಯೆರೂಸಲೇಮಿಗೆ ಹೋಗಲು ಇದು ಸರಿಯಾದ ಸಮಯವಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 7:10

ಕಥೆಯ ಕ್ರಮ ಬದಲಾಗಿದೆ, ಯೇಸು ಮತ್ತು ತನ್ನ ಸಹೋದರರು ಈಗ ಹಬ್ಬದಲ್ಲಿದ್ದಾರೆ.

ὡς…ἀνέβησαν οἱ ἀδελφοὶ αὐτοῦ εἰς τὴν ἑορτήν

ಈ “ಸಹೋದರರು” ಯೇಸುವಿನ ತಮ್ಮಂದಿರಾಗಿದ್ದಾರೆ.

καὶ αὐτὸς ἀνέβη

ಯೇಸು ಮತ್ತು ತನ್ನ ಸಹೋದರರು ಹಿಂದೆ ಇದ್ದ ಗಲಿಲಾಯಕ್ಕಿಂತ ಯೆರೂಸಲೇಮ್ ಎತ್ತರದ ಸ್ಥಳದಲ್ಲಿತ್ತು.

οὐ φανερῶς, ἀλλὰ ὡς ἐν κρυπτῷ

ಈ ಎರಡು ಮಾತುಗಳು ಒಂದೇ ಅರ್ಥವನ್ನು ನೀಡುತ್ತಿವೆ. ಒತ್ತಾಯಿಸಿ ಹೇಳುವದಕ್ಕಾಗಿ ಈ ಆಲೋಚನೆಯನ್ನು ಮತ್ತೆ ಹೇಳಲಾಗಿದೆ. ಪರ್ಯಾಯ ಅನುವಾದ: “ತುಂಬಾ ರಹಸ್ಯವಾಗಿ” (ನೋಡಿರಿ: ದ್ವಿರುಕ್ತಿಗಳು)

John 7:11

οἱ…Ἰουδαῖοι ἐζήτουν αὐτὸν

ಇಲ್ಲಿ “ಯೆಹೂದ್ಯರು” ಎನ್ನುವ ಮಾತು “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. “ಆತನು” ಎನ್ನುವ ಪದ ಯೇಸುವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು ಯೇಸುವಿಗಾಗಿ ಹುಡುಕುತ್ತಿದ್ದರು” (ನೋಡಿರಿ: ಉಪಲಕ್ಷಣಾಲಂಕಾರ)

John 7:12

πλανᾷ τὸν ὄχλον

“ಮೋಸ ಗೊಳಿಸುತ್ತಿದ್ದಾನೆ” ಎನ್ನುವ ಮಾತು ಸತ್ಯವಾಗಿ ಇಲ್ಲದ ವಿಷಯಗಳನ್ನು ನಂಬುವಂಗೆ ಒಬ್ಬರನ್ನು ಹಿಂಬಾಲಿಸುವುದು ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಅವನು ಜನರನ್ನು ವಂಚಿಸುತ್ತಿದ್ದಾನೆ” (ನೋಡಿರಿ: ರೂಪಕ ಅಲಂಕಾರ)

John 7:13

τὸν φόβον

ಒಬ್ಬನಿಗೆ ಅಥವಾ ಬೇರೆಯವರಿಗೆ ಹಾನಿಕಾರಕವಾದ ಬೆದರಿಕೆಯಿದ್ದಲ್ಲಿ ಬರುವ ಅಹಿತಕರವಾದ ಭಾವನೆಯನ್ನು ಇದು ಸೂಚಿಸುತ್ತಿದೆ.

τῶν Ἰουδαίων

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ ಯೆಹೂದ್ಯರ ನಾಯಕರನ್ನು ಸೂಚಿಸುವ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

John 7:14

ಈಗ ಯೇಸು ದೇವಾಲಯದಲ್ಲಿ ಯೆಹೂದ್ಯರಿಗೆ ಬೊಧಿಸುತ್ತಿದ್ದಾರೆ.

John 7:15

πῶς οὗτος γράμματα οἶδεν

ಯೇಸುವಿಗೆ ಇಷ್ಟು ಜ್ಞಾನವಿರುವುದನ್ನು ನೋಡಿ ಯೆಹೂದ್ಯರ ನಾಯಕರ ಆಶ್ಚರ್ಯವನ್ನು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಲೇಖನಗಳನ್ನು ಕುರಿತು ಇಷ್ಟು ವಿಷಯಗಳು ಆತನಿಗೆ ತಿಳಿದಿರುವುದು ಸಾಧ್ಯವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:16

ἀλλὰ τοῦ πέμψαντός με

ಆದರೆ ನನ್ನನ್ನು ಕಳುಹಿಸಿದ ದೇವರಿಂದ ಬರುವುದು

John 7:17

ಯೆಹೂದ್ಯರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

John 7:18

ὁ…δὲ ζητῶν τὴν δόξαν τοῦ πέμψαντος αὐτὸν, οὗτος ἀληθής ἐστιν, καὶ ἀδικία ἐν αὐτῷ οὐκ ἔστιν

ಆತನನ್ನು ಕಳುಹಿಸಿದ ವ್ಯಕ್ತಿಯನ್ನು ಮಹಿಮೆಪಡಿಸಲು ಮಾತ್ರವೇ ಒಬ್ಬ ವ್ಯಕ್ತಿ ಬಯಸಿದರೆ, ಆ ವ್ಯಕ್ತಿ ಸತ್ಯವನ್ನು ಹೇಳುತ್ತಿದ್ದಾನೆ. ಅವನು ಸುಳ್ಳು ಹೇಳುವುದಿಲ್ಲ

John 7:19

ಯೆಹೂದ್ಯರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

οὐ Μωϋσῆς δέδωκεν ὑμῖν τὸν νόμον

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟಿದವನು ಮೋಶೆ ತಾನೆ” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ποιεῖ τὸν νόμον

ಧರ್ಮಶಾಸ್ತ್ರಕ್ಕೆ ವಿಧೇಯತೆಯಾಗುವುದು

τί με ζητεῖτε ἀποκτεῖναι

ಮೋಶೆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದಕ್ಕಾಗಿ ಆತನನ್ನು ಕೊಲ್ಲಬೇಕೆಂದು ಯೆಹೂದ್ಯ ನಾಯಕರ ಉದ್ದೇಶ್ಯಗಳನ್ನು ಯೇಸು ಪ್ರಶ್ನಿಸುತ್ತಿದ್ದಾನೆ. ಆ ನಾಯಕರು ತಾವೇ ಧರ್ಮಶಾಸ್ತ್ರದಂತೆ ನಡೆದಿಲ್ಲವೆಂದು ಆತನು ಸ್ಪಷ್ಟಮಾಡುತ್ತಿದ್ದಾನೆ. ಪರ್ಯಾಯ ಅನುವಾದ: “ನೀವೇ ಧರ್ಮಶಾಸ್ತ್ರದಂತೆ ನಡೆಯದೆ ನನ್ನನ್ನು ಕೊಳ್ಳಬೇಕೆಂದು ನೀವು ಬಯಸುತ್ತಿದ್ದೀರಾ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 7:20

δαιμόνιον ἔχεις

ನೀವು ಹುಚ್ಚರಾಗಿದ್ದೀರಿ ಎಂದು ಅಥವಾ ದೆವ್ವ ನಿಮ್ಮನ್ನು ನಿಯಂತ್ರಿಸುತ್ತಿದೆ ಎಂದು ಇದು ತೋರಿಸುತ್ತದೆ!

τίς σε ζητεῖ ἀποκτεῖναι

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ನಿಮ್ಮನ್ನು ಕೊಲ್ಲಲು ಯಾರು ಪ್ರಯತ್ನಿಸುತ್ತಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:21

ἓν ἔργον

ಒಂದು ಅದ್ಭುತಕಾರ್ಯ ಅಥವಾ “ಒಂದು ಗುರುತು”

πάντες θαυμάζετε

ನೀವೆಲ್ಲರೂ ಆಶ್ಚರ್ಯಪಡುವಿರಿ

John 7:22

οὐχ ὅτι ἐκ τοῦ Μωϋσέως ἐστὶν, ἀλλ’ ἐκ τῶν πατέρων

ಅಲ್ಲಿನ ಪರಿಸ್ಥಿತಿಯನ್ನು ಕುರಿತು ಯೋಹಾನನು ಇಲ್ಲಿ ಹೆಚ್ಚಿನ ಮಾಹಿತಿಯನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἐν Σαββάτῳ περιτέμνετε ἄνθρωπον

ಸುನ್ನತಿ ಮಾಡುವುದು ಸಹ ಕೆಲಸವನ್ನು ಒಳಗೊಂಡಿರುತ್ತದೆ ಎಂದು ಯೇಸು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನೀವು ಗಂಡು ಹುಡುಗನಿಗೆ ಸಬ್ಬತ್ ದಿನದಲ್ಲಿ ಸುನ್ನತಿ ಮಾಡುತ್ತೀರಿ. ಅದು ಸಹ ಕೆಲಸವಾಗಿರುತ್ತದೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἐν Σαββάτῳ

ಯೆಹೂದ್ಯರ ವಿಶ್ರಾಂತಿಯ ದಿನದಂದು

John 7:23

εἰ περιτομὴν λαμβάνει ἄνθρωπος ἐν Σαββάτῳ, ἵνα μὴ λυθῇ ὁ νόμος Μωϋσέως

ನೀವು ಗಂಡು ಹುಡುಗನನ್ನು ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿದರೆ ನೀವು ಮೋಶೆ ಧರ್ಮಶಾಸ್ತ್ರವನ್ನು ಉಲ್ಲಂಘಿಸುತ್ತಿಲ್ಲವೋ

ἐμοὶ χολᾶτε ὅτι ὅλον ἄνθρωπον ὑγιῆ ἐποίησα ἐν Σαββάτῳ

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ನಾನು ಸಬ್ಬತ್ ದಿನದಂದು ಒಬ್ಬ ಮನುಷ್ಯನನ್ನು ಸ್ವಸ್ಥ ಮಾಡಿದಕ್ಕಾಗಿ ನೀವು ನನ್ನ ಮೇಲೆ ಕೋಪಕೊಳ್ಳಬಾರದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ἐν Σαββάτῳ

ಯೆಹೂದ್ಯರ ವಿಶ್ರಾಂತಿಯ ದಿನದಂದು?

John 7:24

μὴ κρίνετε κατ’ ὄψιν, ἀλλὰ τὴν δικαίαν κρίσιν κρίνετε

ಜನರು ನೋಡುತ್ತಿರುವ ಸಂಗತಿಗಳನ್ನು ಆಧಾರ ಮಾಡಿಕೊಂಡು ಯಾವುದು ಸರಿಯಾದುದು ಎಂದು ನಿರ್ಣಯಿಸಬಾರದೆಂದು ಯೇಸು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಕಾರ್ಯದ ಹಿಂದೆ ಇರುವ ಉದ್ದೇಶ್ಯವು ಕಾಣುವುದಿಲ್ಲ. ಪರ್ಯಾಯ ಅನುವಾದ: “ಹೊರತೋರಿಕೆಯ ಆಧಾರವಾಗಿ ಜನರನ್ನು ತೀರ್ಪು ಮಾಡುವುದನ್ನು ನಿಲ್ಲಿಸಿ! ದೇವರ ಚಿತ್ತಾನುಸಾರವಾಗಿ ಯಾವುದು ಸರಿಯಾಗಿರುತ್ತದೆನ್ನುವ ವಿಷಯದ ಕುರಿತು ಹೆಚ್ಚಿನ ಕಾಳಜಿಹೊಂದಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 7:25

οὐχ οὗτός ἐστιν ὃν ζητοῦσιν ἀποκτεῖναι

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ಅವರು ಕೊಲ್ಲಬೇಕೆಂದು ಹುಡುಕುತ್ತಿರುವ ಯೇಸು ಈತನೇ ಅಲ್ಲವೇ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:26

οὐδὲν αὐτῷ λέγουσιν

ಯೆಹೂದ್ಯರ ನಾಯಕರು ಯೇಸುವನ್ನು ವಿರೋಧಿಸುತ್ತಿಲ್ಲ ಎಂದು ಇದು ಸ್ಪಷ್ಟವಾಗಿ ತಿಳಿಸುತ್ತದೆ. ಪರ್ಯಾಯ ಅನುವಾದ: “ಆತನನ್ನು ವಿರೋಧಿಸುವಂತೆ ಅವರು ಏನೂ ಹೇಳುತ್ತಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

μήποτε ἀληθῶς ἔγνωσαν οἱ ἄρχοντες, ὅτι οὗτός ἐστιν ὁ Χριστός

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ಆತನು ನಿಜವಾದ ಮೆಸ್ಸೀಯ ಎಂದು ಅವರು ನಿರ್ದರಿಸಿಕೊಂಡಿರ ಬಹುದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:28

ἔκραξεν

ಗಟ್ಟಿಯಾಗಿ ಕೂಗಿ ಹೇಳಿದನು

ἐν τῷ ἱερῷ

ವಾಸ್ತವದಲ್ಲಿ ಯೇಸು ಮತ್ತು ಜನರು ದೇವಾಲಯದ ಪ್ರಾಂಗಣದಲ್ಲಿದ್ದರು. ಪರ್ಯಾಯ ಅನುವಾದ: “ದೇವಾಲಯದ ಪ್ರಾಂಗಣದಲ್ಲಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

κἀμὲ οἴδατε, καὶ οἴδατε πόθεν εἰμί

ಈ ವಾಕ್ಯದಲ್ಲಿ ಯೋಹಾನನು ವ್ಯಂಗ್ಯವನ್ನು ಉಪಯೋಗಿಸುತ್ತಿದ್ದಾನೆ. ಯೇಸು ನಜರೇತಿನಿಂದ ಬಂದವನೆಂದು ಜನರು ನಂಬಿದರು. ದೇವರು ಆತನನ್ನು ಕಳುಹಿಸಿದ್ದಾರೆಂದು ಮತ್ತು ಆತನು ಬೆತ್ಲಹೇಮಲ್ಲಿ ಹುಟ್ಟಿರುವನೆಂದು ಅವರಿಗೆ ಗೊತ್ತಿರಲಿಲ್ಲ. ಪರ್ಯಾಯ ಅನುವಾದ: “ನಾನು ಎಲ್ಲಿಂದ ಬಂದವನೆಂದು ನೀವು ಬಲ್ಲಿರಿ ಮತ್ತು ನಾನು ಎಲ್ಲಿಂದ ಬಂದವನೆಂದು ನಿಮಗೆ ತಿಳಿದಿದೆಯೆಂದು ನೀವು ಅಂದುಕೊಳ್ಳುತ್ತಿದ್ದೀರಿ” (ನೋಡಿರಿ: ವ್ಯಂಗ್ಯ -)

ἀπ’ ἐμαυτοῦ

ನನ್ನ ಸ್ವಂತ ಅಧಿಕಾರದಿಂದ. “ಸ್ವತಃ” ಎನ್ನುವ ಪದವನ್ನು ಯೋಹಾನ.5:19 ವಚನದಲ್ಲಿ ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ.

ἔστιν ἀληθινὸς ὁ πέμψας με

ನನ್ನನ್ನು ಕಳುಹಿಸಿದಾತನು ದೇವರೇ ಮತ್ತು ಆತನು ಸತ್ಯವಂತನು

John 7:30

οὔπω ἐληλύθει ἡ ὥρα αὐτοῦ

“ಸಮಯ” ಎನ್ನುವ ಪದ, ದೇವರ ಚಿತ್ತಾನುಸಾರವಾಗಿ ಯೇಸು ಹಿಡಿಯಲ್ಪಡುವ ಸರಿಯಾದ ಸಮಯವನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಆತನನ್ನು ಬಂಧಿಸುವದಕ್ಕೆ ಅದು ಸರಿಯಾದ ಸಮಯವಾಗಿರಲಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 7:31

ὁ Χριστὸς, ὅταν ἔλθῃ, μὴ πλείονα σημεῖα ποιήσει ὧν οὗτος ἐποίησεν

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ಕ್ರಿಸ್ತನು ಬಂದಾಗ, ನಿಶ್ಚಯವಾಗಿ ಈ ಮನುಷ್ಯನಿಗಿಂತ ಹೆಚ್ಚಿನ ಸೂಚಕ ಕಾರ್ಯಗಳನ್ನು ಆತನು ಮಾಡಲು ಸಾಧ್ಯವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

σημεῖα

ಯೇಸು ಕ್ರಿಸ್ತನೆಂದು ನಿರೂಪಿಸುವ ಅದ್ಭುತಕಾರ್ಯಗಳನ್ನು ಇದು ಸೂಚಿಸುತ್ತಿದೆ.

John 7:33

ἔτι χρόνον μικρὸν μεθ’ ὑμῶν εἰμι

ನಾನು ನಿಮ್ಮ ಜೊತೆಯಲ್ಲಿ ಸ್ವಲ್ಪ ಕಾಲ ಮಾತ್ರವೇ ಇರುತ್ತೇನೆ

καὶ ὑπάγω πρὸς τὸν πέμψαντά με

ಆತನನ್ನು ಕಳುಹಿಸಿದ ತಂದೆಯಾದ ದೇವರನ್ನು ಯೇಸು ಇಲ್ಲಿ ಸೂಚಿಸುತ್ತಿದ್ದಾನೆ.

John 7:34

ὅπου εἰμὶ ἐγὼ ὑμεῖς, οὐ δύνασθε ἐλθεῖν

ನಾನು ಇರುವ ಸ್ಥಳಕ್ಕೆ ನೀವು ಬರಲು ಸಾಧ್ಯವಿಲ್ಲ

John 7:35

εἶπον οὖν οἱ Ἰουδαῖοι πρὸς ἑαυτούς

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ ಯೆಹೂದ್ಯರ ನಾಯಕರನ್ನು ಸೂಚಿಸುವ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು ತಮ್ಮಲ್ಲಿ ತಾವು ಮಾತನಾಡಿಕೊಂಡರು” (ನೋಡಿರಿ: ಉಪಲಕ್ಷಣಾಲಂಕಾರ)

τὴν διασπορὰν

ಫಿಲಿಷ್ಟಿಯರ ದೇಶದ ಹೊರಗೆ, ಗ್ರೀಕ್ ದೇಶದಲ್ಲೆಲ್ಲ ವ್ಯಾಪ್ತಿಯಾಗಿದ್ದ ಯೆಹೂದ್ಯರನ್ನು ಇದು ಸೂಚಿಸುತ್ತಿದೆ.

John 7:36

τίς ἐστιν ὁ λόγος οὗτος ὃν εἶπε

ಈ “ವಾಕ್ಯ” ಎನ್ನುವ ಪದ ಯೆಹೂದ್ಯರ ನಾಯಕರು ಅರ್ಥ ಮಾಡಿಕೊಳ್ಳಲು ವಿಫಲರಾದ ಯೇಸು ಹಂಚಿಕೊಂಡಿರುವ ಸಂದೇಶದ ಅರ್ಥವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಎಂದು ಹೇಳಿದಾಗ ಆತನ ಏನನ್ನು ಕುರಿತು ಮಾತಾಡುತ್ತಿದನು” (ನೋಡಿರಿ: ಲಕ್ಷಣಾಲಂಕಾರ)

John 7:37

ಸ್ವಲ್ಪ ಕಾಲ ಕಳೆದಿದೆ. ಇದೀಗ ಹಬ್ಬದ ಕೊನೆಯ ದಿನವಾಗಿದೆ ಮತ್ತು ಯೇಸು ಜನರೊಂದಿಗೆ ಮಾತಾಡುತ್ತಿದ್ದಾನೆ.

ἡμέρᾳ…μεγάλῃ

ಅದು “ಮಹಾ” ದಿನವಾಗಿದೆ ಯಾಕೆಂದರೆ ಅದು ಹಬ್ಬದ ಕೊನೆಯ ದಿನ ಅಥವಾ ಅತಿ ಪ್ರಾಮುಖ್ಯವಾದ ದಿನವಾಗಿತ್ತು.

ἐάν τις διψᾷ

“ಬಾಯಾರಿಕೆ” ಎನ್ನುವ ಪದ ಇಲ್ಲಿ ಒಬ್ಬನು ನೀರಿಗಾಗಿ “ಬಾಯಾರಿಕೆ” ಹೊಂದಿರುವ ರೀತಿಯಲ್ಲಿ ದೇವರ ಕಾರ್ಯಗಳಿಗಾಗಿ ಒಬ್ಬನು ಹೆಚ್ಚಿನ ಬಯಕೆಯನ್ನು ಹೊಂದಿರುವುದು ಎಂದು ಹೇಳುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನೀರಿಗಾಗಿ ಬಾಯಾರಿಕೆ ಹೊಂದಿರುವ ಮನುಷ್ಯನಂತೆ ದೇವರ ಕಾರ್ಯಗಳಿಗಾಗಿ ತವಕಪಡುವವರು” (ನೋಡಿರಿ: ರೂಪಕ ಅಲಂಕಾರ)

ἐρχέσθω πρός με καὶ πινέτω

“ಕುಡಿಯಲಿ” ಎನ್ನುವ ಪದ ಯೇಸು ಕೊಡುವ ಆತ್ಮೀಯ ಜೀವನವನ್ನು ಸ್ವಿಕರಿಸುವುದು ಎಂದರ್ಥ ಕೊಡುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಅವನು ನನ್ನ ಬಳಿಗೆ ಬರಲಿ ಮತ್ತು ತನ್ನ ಆತ್ಮೀಯ ಬಾಯಾರಿಕೆಯನ್ನು ತೀರಿಸಿಕೊಳ್ಳಲಿ” (ನೋಡಿರಿ: ರೂಪಕ ಅಲಂಕಾರ)

John 7:38

ὁ πιστεύων εἰς ἐμὲ, καθὼς εἶπεν ἡ Γραφή

ನನ್ನಲ್ಲಿ ನಂಬಿಕೆ ಇಟ್ಟಿರುವವರ ಕುರಿತು ಲೇಖನಗಳು ಹೇಳುವ ರೀತಿಯಲ್ಲಿ

ποταμοὶ…ῥεύσουσιν ὕδατος ζῶντος

“ಜೀವಕರವಾದ ನೀರಿನ ಬುಗ್ಗೆಗಳು” ಎನ್ನುವ ಮಾತು ಆತ್ಮೀಯವಾಗಿ “ಬಾಯಾರಿಕೆ” ಹೊಂದಿರುವವರಿಗೆ ಯೇಸು ಕೊಡುವ ಜೀವವನ್ನು ಸೂಚಿಸುತ್ತಿರುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನೀರಿನ ಬುಗ್ಗೆಗಳಂತೆ ಆತ್ಮೀಯ ಜೀವ ಹರಿಯುವುದು” (ನೋಡಿರಿ: ರೂಪಕ ಅಲಂಕಾರ)

ὕδατος ζῶντος

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ಜೀವವನ್ನು ಕೊಡುವ ನೀರು” ಅಥವಾ 2) “ಜನರು ಜೀವಿಸುವಂತೆ ಮಾಡುವ ನೀರು.” (ನೋಡಿರಿ: ರೂಪಕ ಅಲಂಕಾರ)

ἐκ τῆς κοιλίας αὐτοῦ

“ಹೊಟ್ಟೆ” ಎನ್ನುವ ಪದವು ಮನುಷ್ಯನ ಒಳಗಿನ ಭಾಗವನ್ನು, ವಿಶೇಷವಾಗಿ ಮನುಷ್ಯನ ಭೌತಿಕ ಭಾಗವಾಗಿರದ ಭಾಗವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಅವನೊಳಗಿಂದ” ಅಥವಾ “ಅವನ ಹೃದಯದಿಂದ” (ನೋಡಿರಿ: ಲಕ್ಷಣಾಲಂಕಾರ)

John 7:39

ಲೇಖಕರು ಈ ವಚನದಲ್ಲಿ ಯೇಸು ಯಾವ ಅಂಶವನ್ನು ಕುರಿತು ಮಾತಾಡುತ್ತಿದ್ದಾನೆಂದು ಸ್ಪಷ್ಟವಾದ ಸಮಾಚಾರವನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

δὲ εἶπεν

“ಆತನು” ಎನ್ನುವ ಪದವು ಇಲ್ಲಿ ಯೇಸುವನ್ನು ಸೂಚಿಸುತ್ತಿದೆ.

οὔπω…ἦν Πνεῦμα

ಯೇಸುವಿನಲ್ಲಿ ನಂಬಿಕೆಹೊಂದಿರುವವರ ಆತ್ಮ ಮತ್ತೆ ಜೀವವನ್ನು ಹೊಂದುವುದೆಂದು ಯೋಹಾನನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ವಿಶ್ವಾಸಿಗಳಲ್ಲಿ ಇನ್ನು ಆತ್ಮ ಜೀವಂತವಾಗಿರಲಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὅτι Ἰησοῦς οὐδέπω ἐδοξάσθη

“ಮಹಿಮೆ ಹೊಂದಿರಲಿಲ್ಲ” ಎನ್ನುವ ಮಾತು ಮಗನ ಮರಣ ಪುನರುತ್ಥಾನದ ನಂತರ ದೇವರು ಆತನನ್ನು ಮಹಿಮೆಪಡಿಸುವ ಸಮಯವನ್ನು ಸೂಚಿಸುತ್ತಿದೆ.

John 7:40

οὗτός ἐστιν ἀληθῶς ὁ προφήτης

ಇದನ್ನು ಹೇಳಿ, ದೇವರು ವಾಗ್ದಾನ ಮಾಡಿರುವಂತೆ ಯೇಸು ಸಹ ಮೋಶೆಯಂತೆ ಒಬ್ಬ ಪ್ರವಾದಿಯಾಗಿದ್ದಾನೆಂದು ಜನರು ಸೂಚಿಸುತ್ತಿದ್ದಾರೆ. ಪರ್ಯಾಯ ಅನುವಾದ: “ನಾವು ಎದುರುನೋಡುತ್ತಿರುವ ಮೋಶೆಯಂತಿರುವ ಪ್ರವಾದಿ ಈತನೇ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 7:41

ἐκ τῆς Γαλιλαίας ὁ Χριστὸς ἔρχεται

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ಕ್ರಿಸ್ತನ ಗಲಿಲಾಯದಿಂದ ಬರುವುದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:42

οὐχ ἡ Γραφὴ εἶπεν, ὅτι ἐκ τοῦ σπέρματος Δαυεὶδ, καὶ ἀπὸ Βηθλέεμ, τῆς κώμης ὅπου ἦν Δαυεὶδ, ἔρχεται ὁ Χριστός

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ಕ್ರಿಸ್ತನು ದಾವೀದನ ವಂಶದಲ್ಲಿ ಬರುವನೆಂದು ಮತ್ತು ದಾವೀದನು ವಾಸಿಸಿದ ಬೆತ್ಲಹೇಮ್ ಗ್ರಾಮದಿಂದ ಬರುವನೆಂದು ಲೇಖನಗಳು ಬೋಧಿಸುತ್ತಿವೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

οὐχ ἡ Γραφὴ εἶπεν

ಒಬ್ಬ ವ್ಯಕ್ತಿ ಮಾತಾಡುತ್ತಿರುವಾ ರೀತಿಯಲ್ಲೇ ಅವು ಮಾತಾಡುತ್ತಿವೆಯೆಂದು ಇದು ಲೇಖನಗಳನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಲೇಖನಗಳಲ್ಲಿ ಪ್ರವಾದಿಗಳು ಬರೆದಿರುವ ರೀತಿಯಲ್ಲಿ” (ನೋಡಿರಿ: ವ್ಯಕ್ತೀಕರಣ)

ὅπου ἦν Δαυεὶδ

ದಾವೀದನು ವಾಸಿಸಿದ ಸ್ಥಳ

John 7:43

σχίσμα οὖν ἐγένετο ἐν τῷ ὄχλῳ δι’ αὐτόν

ಯೇಸು ಯಾರು ಅಥವಾ ಏನು ಎಂದು ಜನರು ಒಪ್ಪಲು ಸಾಧ್ಯವಾಗಿರಲಿಲ್ಲ.

John 7:44

ἀλλ’ οὐδεὶς ἐπέβαλεν ἐπ’ αὐτὸν τὰς χεῖρας

ಯಾರನ್ನಾದರೂ ಹಿಡಿದುಕೊಳ್ಳುವುದು ಎಂದರೆ ಒಬ್ಬರನ್ನು ಬಂಧಿಸುವುದು ಅಥವಾ ಅವನ ಮೇಲೆ ಕೈಹಾಕುವುದು ಎಂದರ್ಥ. ಪರ್ಯಾಯ ಅನುವಾದ: “ಆದರೆ ಯಾರು ಆತನನ್ನು ಬಂಧಿಸಲು ಕೈಹಾಕಲಿಲ್ಲ” (ನೋಡಿರಿ: ನುಡಿಗಟ್ಟುಗಳು.)

John 7:45

οἱ ὑπηρέται

ದೇವಾಲಯದ ಕಾವಲುಗಾರರು

John 7:46

οὐδέποτε ἐλάλησεν οὕτως ἄνθρωπος

ಯೇಸು ಹೇಳಿರುವ ಸಂಗತಿಗಳ ವಿಷಯವಾಗಿ ಅವರು ಎಷ್ಟು ಪ್ರಭಾವಿತರಾಗಿದ್ದರೆಂದು ತೋರಿಸಲು ಅಧಿಕಾರಿಗಳು ಉತ್ಪ್ರೇಕ್ಷಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಎಲ್ಲಾ ಸಮಯದಲ್ಲಿ ಮತ್ತು ಎಲ್ಲಾ ಸ್ಥಳಗಳಲ್ಲಿ ಹೇಳಿರುವ ಪ್ರತಿಯೊಂದು ವಿಷಯವು ಅವರಿಗೆ ತಿಳಿದಿದೆಯೆಂದು ಅಧಿಕಾರಿಗಳು ಹೇಳುತ್ತಿಲ್ಲವೆಂದು ನೀವು ಸ್ಪಷ್ಟವಾಗಿ ತಿಳಿಸಬೇಕಾಗಿರುತ್ತದೆ. “ಈ ಮನುಷ್ಯನು ಹೇಳಿರುವಂತೆ ಬೇರೆಯಾರು ಈ ರೀತಿಯಾಗಿ ಹೇಳಿರುವದನ್ನು ನಾವು ಎಂದಿಗೂ ಕೇಳಿರಲಿಲ್ಲ!” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಅತಿಶಯೋಕ್ತಿ)

John 7:47

οὖν…οἱ Φαρισαῖοι

ಅವರು ಹಾಗೆ ಹೇಳಿದರಿಂದ, ಫರಿಸಾಯರು

ἀπεκρίθησαν…αὐτοῖς

ಅಧಿಕಾರಿಗಳಿಗೆ ಉತ್ತರಕೊಟ್ಟರು

καὶ ὑμεῖς πεπλάνησθε

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಅಧಿಕಾರಿಗಳ ಪ್ರತಿಸ್ಪಂದನವನ್ನು ನೋಡಿ ಫರಿಸಾಯರು ಆಶ್ಚರ್ಯಪಟ್ಟರು. ಪರ್ಯಾಯ ಅನುವಾದ: “ನೀವು ಸಹ ಮರುಳಾಗಿದ್ದೀರ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:48

τις ἐκ τῶν ἀρχόντων ἐπίστευσεν εἰς αὐτὸν, ἢ ἐκ τῶν Φαρισαίων

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ಹಿರಿಸಭೆಯವರಾಗಲಿ ಅಥವಾ ಫರಿಸಾಯರಾಗಲಿ ಆತನನ್ನು ನಂಬಿರಲಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 7:49

τὸν νόμον

ಇದು ಮೋಶೆ ಧರ್ಮಶಾಸ್ತ್ರವನ್ನು ಸೂಚಿಸುತ್ತಿಲ್ಲ ಆದರೆ ಫರಿಸಾಯರ ಧರ್ಮಶಾಸ್ತ್ರವನ್ನು ಸೂಚಿಸುತ್ತಿದೆ.

ἀλλὰ ὁ ὄχλος οὗτος, ὁ μὴ γινώσκων τὸν νόμον, ἐπάρατοί εἰσιν

ಧರ್ಮಶಾಸ್ತ್ರವನ್ನು ಕುರಿತು ತಿಳಿಯದ ಈ ಜನರ ವಿಷಯದಲ್ಲಿ, ದೇವರು ಅವರನ್ನು ನಾಶಮಾಡುವನು!

John 7:50

ὁ ἐλθὼν πρὸς αὐτὸν πρότερον, εἷς ὢν ἐξ αὐτῶν

ನಿಕೊದೇಮನು ಯಾರೆಂದು ಜ್ಞಾಪಕ ಮಾಡಲು ಯೋಹಾನನು ಈ ಸಮಾಚಾರವನ್ನು ಕೊಡುತ್ತಿದ್ದಾನೆ. ಹಿನ್ನೆಲೆ ಸಮಾಚಾರವನ್ನು ಗುರುತಿಸಲು ನಿಮ್ಮ ಭಾಷೆಯಲ್ಲಿ ವಿಶೇಷವಾದ ಪದ್ಧತಿ ಇರಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

John 7:51

μὴ ὁ νόμος ἡμῶν κρίνει τὸν ἄνθρωπον, ἐὰν μὴ ἀκούσῃ πρῶτον παρ’ αὐτοῦ, καὶ γνῷ τί ποιεῖ

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಇದನ್ನು ವಾಕ್ಯದಂತೆ ಅನುವಾದ ಮಾಡಲು ಸಾಧ್ಯವಿಲ್ಲ. ಪರ್ಯಾಯ ಅನುವಾದ: “ಒಬ್ಬನು ಮಾಡಿರುವುದು… ಒಬ್ಬ ವ್ಯಕ್ತಿಯನ್ನು ತೀರ್ಪುಮಾಡಲು ನಮ್ಮ ಯೆಹೂದ್ಯ ಧರ್ಮಶಾಸ್ತ್ರ ಅನುಮತಿಸುವದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ὁ νόμος ἡμῶν κρίνει τὸν ἄνθρωπον

ಧರ್ಮಶಾಸ್ತ್ರ ಒಬ್ಬ ವ್ಯಕ್ತಿಯಾಗಿರುವಂತೆ ನಿಕೊದೇಮನು ಇಲ್ಲಿ ಅದರ ಕುರಿತು ಮಾತಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಜವಾಗಿ ಬರದಿದ್ದರೆ, ವ್ಯಕ್ತಿಗತ ವಿಷಯವನ್ನು ಉಪಯೋಗಿಸಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನಾವು ಮನುಷ್ಯನನ್ನು ತೀರ್ಪು ಮಾಡುತ್ತಿವ” ಅಥವಾ “ನಾವು ಒಬ್ಬ ಮನುಷ್ಯನನ್ನು ತೀರ್ಪು ಮಾಡುವುದಿಲ್ಲ” (ನೋಡಿರಿ: ವ್ಯಕ್ತೀಕರಣ)

John 7:52

καὶ σὺ ἐκ τῆς Γαλιλαίας εἶ

ನಿಕೊದೇಮನು ಗಲಿಲಾಯದವನು ಅಲ್ಲವೆಂದು ಯೆಹೂದ್ಯರ ನಾಯಕರು ತಿಳಿದಿದ್ದರು. ಅವನನ್ನು ಅಪಹಾಸ್ಯನ ಮಾಡಲು ಅವರು ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಪರ್ಯಾಯ ಅನುವಾದ: “ಗಲಿಲಾಯದಲ್ಲಿರುವ ಆ ಕೆಳಮಟ್ಟದ ಜನರಲ್ಲಿ ನೀನು ಒಬ್ಬನಾಗಿದ್ದಿಯೋ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἐραύνησον καὶ ἴδε

ಇದು ಪದಲೋಪವಾಗಿದೆ. ಕಾಣದ ಸಮಾಚಾರವನ್ನು ನೀವು ಸೇರಿಸಲು ನೀವು ಬಯಸಬಹುದು. ಪರ್ಯಾಯ ಅನುವಾದ: “ಲೇಖನಗಳಲ್ಲಿ ಬರೆದಿರುವ ಸಂಗತಿಗಳನ್ನು ಜಾಗ್ರತೆಯಿಂದ ಪರಿಶೀಲಿಸಿ ಮತ್ತು ಓದಿರಿ” (ನೋಡಿರಿ: ಪದಲೋಪ)

προφήτης ἐκ τῆς Γαλιλαίας οὐκ ἐγείρεται

ಯೇಸು ಗಲಿಲಾಯದಲ್ಲಿ ಹುಟ್ಟಿರಬಹುದೆಂಬ ನಂಬಿಕೆಯನ್ನು ಇದು ಸೂಚಿಸುತ್ತಿರಬಹುದು.

John 7:53

ಅತ್ಯುತ್ತಮವಾದ ಪ್ರಾಚಿನ ಗ್ರಂಥಗಳಲ್ಲಿ 7:53-8:11 ವಚನಗಳು ಸೇರಿಸಲ್ಪಟ್ಟಿಲ್ಲ. ಯೋಹಾನನ ಮೂಲ ಕೃತಿಯಲ್ಲಿ ಬಹುಶಃ ಈ ಭಾಗವಿಲ್ಲವೆಂದು ತೋರಿಸಲು ಯುಎಲ್ಟಿ ಅನುವಾದದಲ್ಲಿ ಈ ಭಾಗವನ್ನು ([])ದಲ್ಲಿ ಸೇರಿಸಿದ್ದಾರೆ. ಅನುವಾದಕರು ಅದನ್ನು ಅನುವಾದ ಮಾಡಲು ಪ್ರೋತ್ಸಾಹ ಮಾಡಲ್ಪಟ್ಟಿದ್ದಾರೆ ಮತ್ತು ಅದನ್ನು ಚೌಕ ಕಂಸದಲ್ಲಿ (ಸ್ಕ್ವೇರ್ ಬ್ರಾಕೆಟ್) ಬೇರ್ಪಡಿಸಿ ಯೋಹಾನ.7:53 ವಚನದಲ್ಲಿ ಕೊಟ್ಟಿರುವ ರೀತಿಯಲ್ಲಿ ಅಡಿಟಿಪ್ಪಣಿ ಕೊಡಬೇಕು. (ನೋಡಿರಿ: ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.)

John 8

ಯೋಹಾನ 08 ಸಾಧಾರಣ ಅಂಶಗಳ

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

8:1-11 ವಚನಗಳನ್ನು ಅನುವಾದಿಸುವುದಕ್ಕೆ ಅವರು ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಅಥವಾ ಮಾಡಿಕೊಂಡಿದ್ದರು ಎಂದು ಓದುಗಾರರಿಗೆ ವಿವರಿಸುವುದಕ್ಕೆ 1ನೇ ವಚನದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ಅನುವಾದಕರು ಇಷ್ಟಪಡಬಹುದು.

ಈ ಅಧ್ಯಾಯದಲ್ಲಿ ವಿಶೇಷವಾದ ಅಂಶಗಳು

ಬೆಳಕು ಮತ್ತು ಕತ್ತಲು

ಸತ್ಯವೇದವು ಅನೇಕಬಾರಿ ಜನರು ಕತ್ತಲೆಯಲ್ಲಿ ನಡೆಯುತ್ತಿರುವಂತೆ ದೇವರನ್ನು ಮೆಚ್ಚಿಸದ ಜನರ ಕುರಿತಾಗಿ ಮತ್ತು ಅನೀತಿವಂತರ ಕುರಿತಾಗಿ ಮಾತನಾಡುತ್ತದೆ. ಪಾಪಿಗಳಾದ ಜನರನ್ನು ನೀತಿವಂತರನ್ನಾಗಿಸುವಂತೆ, ಅವರು ಮಾಡುವುದು ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮತ್ತು ದೇವರಿಗೆ ವಿಧೇಯರಾಗಿರುವದಕ್ಕೆ ಬೆಳಕು ಇರುತ್ತದೆಯೆಂದು ಬೆಳಕಿನ ಕುರಿತಾಗಿ ಹೇಳಲ್ಪಟ್ಟಿದೆ. (ನೋಡಿರಿ: ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ)

ನಾನೇ

ಈ ಪುಸ್ತಕದಲ್ಲಿ ಯೇಸು ಈ ಪದವನ್ನು ನಾಲ್ಕು ಹೇಳಿದಂತೆ ಮತ್ತು ಈ ಅಧ್ಯಾಯದಲ್ಲಿ ಮೂರುಸಲ ಯೋಹಾನನು ದಾಖಲಾತಿ ಮಾಡಿದ್ದಾನೆ. ಅವುಗಳೆಲ್ಲವೂ ಒಂದು ಸಂಪೂರ್ಣ ಸಂಖ್ಯೆಯಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವು ಯೆಹೋವನು ಮೋಶೆಗೆ ಕಾಣಿಸಿಕೊಂಡು ಹೇಳಿದ ಇಬ್ರಿಯ ಪದವಾಗಿರುವ “ನಾನೇ” ಎನ್ನುವ ಪದವನ್ನು ಅಕ್ಷರಾರ್ಥವಾಗಿ ಕಾಣಿಸಿಕೊಳ್ಳುತ್ತವೆ. ಈ ಕಾರಣಗಳಿಂದ, ಯೇಸು ಈ ಪದಗಳನ್ನು ಅಥವಾ ಈ ಹೆಸರುಗಳನ್ನು ಉಚ್ಚರಿಸುವಾಗ, ಅನೇಕಮಂದಿ ಯೇಸು ಯೆಹೋವ ಎಂಬುದಾಗಿ ಪ್ರಕಟಿಸಿಕೊಳ್ಳುತ್ತಿದ್ದಾನೆಂದು ನಂಬಿದ್ದರು. (ನೋಡಿರಿ: ಯೆಹೋವ).

ಶಾಸ್ತ್ರಿಗಳು ಮತ್ತು ಫರಿಸಾಯರು ಸಿಕ್ಕಿಬಿದ್ದಿರುವುದು

ಶಾಸ್ತ್ರಿಗಳು ಮತ್ತು ಫರಿಸಾಯರು ಯೇಸುವನ್ನು ಸಿಕ್ಕಿಬೀಳಿಸಬೇಕೆಂದಿದ್ದರು. ಮೋಶೆ ಧರ್ಮಶಾಸ್ತ್ರಕ್ಕೆ ಒಳಗಾಗಿ ವ್ಯಭಿಚಾರದಲ್ಲಿ ಹಿಡಿಯಲ್ಪಟ್ಟ ಸ್ತ್ರೀಯನ್ನು ಕೊಲ್ಲಬೇಕೋ ಅಥವಾ ಮೋಶೆ ಧರ್ಮಶಾಸ್ತ್ರಕ್ಕೆ ಅವಿಧೇಯರಾಗಿ ಆಕೆಯ ಪಾಪವನ್ನು ಕ್ಷಮಿಸಬೇಕೋ ಎಂದು ಯೇಸುವಿಗೆ ಪ್ರಶ್ನೆ ಹಾಕಿದರು. ಯೇಸುವನ್ನು ಸಿಕ್ಕಿಸುವುದಕ್ಕೆ ಅವರು ಈ ಪ್ರಯತ್ನ ಮಾಡುತ್ತಿದ್ದಾರೆಂದು ಮತ್ತು ಅವರು ನಿಜವಾಗಿ ಮೋಶೆ ಧರ್ಮಶಾಸ್ತ್ರಕ್ಕೆ ಒಳಗಾಗಬೇಕೆನ್ನುವ ಅಸೆ ಇಲ್ಲವೆನ್ನುವ ವಿಷಯ ಗೊತ್ತಿತ್ತು, ಸ್ತ್ರೀ ಪುರುಷರಿಬ್ಬರೂ ಸಾಯಬೇಕೆಂದು ಧರ್ಮಶಾಸ್ತ್ರ ಹೇಳುತ್ತಿದೆಯೆಂದು ಆತನಿಗೆ ಚೆನ್ನಾಗಿ ಗೊತ್ತಿತ್ತು, ಆದರೆ ಅವರು ಯೇಸುವಿನ ಹತ್ತಿರಕ್ಕೆ ಪುರುಷನನ್ನು ಕರೆದುಕೊಂಡು ಬಂದಿರಲಿಲ್ಲ. (ನೋಡಿರಿ: ವ್ಯಭಿಚಾರ, ಹಾದರ, ವ್ಯಭಿಚಾರಿ, ವ್ಯಭಿಚಾರಿಣಿ)

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟ ಪ್ರಾಮುಖ್ಯ ಕ್ಲಿಷ್ಟ ಭಾಗಗಳು

“ಮನುಷ್ಯ ಕುಮಾರ”

ಈ ಅಧ್ಯಾಯದಲ್ಲಿ ಯೇಸು ತನ್ನನ್ನು ತಾನು “ಮನುಷ್ಯ ಕುಮಾರ” ಎಂಬುದಾಗಿ ಸೂಚಿಸಿಕೊಂಡಿದ್ದಾರೆ ([ಯೋಹಾನ.8:28] (../../ಯೋಹಾನ/08/28.ಎಂ.ಡಿ.)). ಜನರು ಇತರರ ಕುರಿತಾಗಿ ಮಾತನಾಡುವಾಗ ಮಾತನಾಡುವವರು ಇತರರ ತಮಗೋಸ್ಕರ ಮಾತನಾಡಿಕೊಳ್ಳುವುದಕ್ಕೆ ನಿಮ್ಮ ಭಾಷೆಯಲ್ಲಿ ಅನುಮತಿ ಇರದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 8:1

ಕೆಲವೊಂದು ಕೃತಿಗಳಲ್ಲಿ 7:53 – 8:11 ವಚನಗಳು ಇದ್ದರು, ಅತ್ಯುತ್ತಮ ಮತ್ತು ಪ್ರಾಚಿನ ಕೃತಿಗಳಲ್ಲಿ ಈ ವಚನಗಳು ಸೇರಿಸಲ್ಪಟ್ಟಿಲ್ಲ.

John 8:12

ಯೋಹಾನ.7:1-52 ಅಥವಾ ಯೋಹಾನ.7:1-53 ವಚನಗಳಲ್ಲಿ ನಡೆಯುವ ಸಂಘಟನೆಯ ನಂತರ ಯೇಸು ದೇವಾಲಯದ ಖಜಾನೆಯ ಹತ್ತಿರ ಜನರೊಂದಿಗೆ ಮಾತಾಡುತ್ತಿದ್ದಾನೆ. ಈ ಸಂಘಟನೆಯನ್ನು ಕುರಿತು ಹಿನ್ನೆಲೆಯಾಗಲಿ ಅಥವಾ ಹೊಸ ಸಂಘಟನೆಯ ಕುರಿತಾದ ಗುರುತಾಗಲಿ ಲೇಖಕರು ನೀಡುತ್ತಿಲ್ಲ. (ನೋಡಿರಿ: ಹಿನ್ನೆಲೆ ಮಾಹಿತಿ. ಮತ್ತು ಹೊಸ ಘಟನೆಯ ಪರಿಚಯ.)

ἐγώ εἰμι τὸ φῶς τοῦ κόσμου

ಇಲ್ಲಿ “ಬೆಳಕು” ಎನ್ನುವ ಪದವು ದೇವರಿಂದ ಬರುವ ಪ್ರತ್ಯಕ್ಷತೆ ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಲೋಕಕ್ಕೆ ಬೆಳಕು ಕೊಡುವವನು ನಾನಾಗಿದ್ದೇನೆ” (ನೋಡಿರಿ: ರೂಪಕ ಅಲಂಕಾರ)

τοῦ κόσμου

ಇದು ಜನರಿಗೆ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಲೋಕದ ಜನರು” (ನೋಡಿರಿ: ಲಕ್ಷಣಾಲಂಕಾರ)

ὁ ἀκολουθῶν ἐμοὶ

“ನಾನು ಬೋಧಿಸುವದನ್ನು ಮಾಡುವ ಪ್ರತಿಯೊಬ್ಬರೂ” ಅಥವಾ “ನನಗೆ ವಿಧೇಯರಾಗಿರುವ ಪ್ರತಿಯೊಬ್ಬರೂ” ಎಂದು ಈ ನುಡಿಗಟ್ಟಿನ ಅರ್ಥವಾಗಿದೆ (ನೋಡಿರಿ: ನುಡಿಗಟ್ಟುಗಳು.)

οὐ μὴ περιπατήσῃ ἐν τῇ σκοτίᾳ

“ಕತ್ತಲೆಯಲ್ಲಿ ನಡೆಯುವವರು” ಎನ್ನುವ ಮಾತು ಪಾಪದ ಜೀವಿತವನ್ನು ಜೀವಿಸುವುದು ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಪಾಪದ ಅಂಧಕಾರದಲ್ಲಿ ಜೀವಿಸುವಂತೆ ಅವನಿರುವುದಿಲ್ಲ” (ನೋಡಿರಿ: ರೂಪಕ ಅಲಂಕಾರ)

φῶς τῆς ζωῆς

“ಜೀವದ ಬೆಳಕು” ಎನ್ನುವ ಮಾತು ಆತ್ಮೀಯ ಜೀವ ಕೊಡುವ ದೇವರಿಂದ ಬರುವ ಸತ್ಯವೆಂದು ಹೇಳುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಿತ್ಯ ಜೀವ ತರುವ ಸತ್ಯ” (ನೋಡಿರಿ: ರೂಪಕ ಅಲಂಕಾರ)

John 8:13

σὺ περὶ σεαυτοῦ μαρτυρεῖς

ನಿಮ್ಮನ್ನು ಕುರಿತು ಈ ಸಂಗತಿಗಳನ್ನು ನೀನು ಹೇಳುತ್ತಿರುವೆ

ἡ μαρτυρία σου οὐκ ἔστιν ἀληθής

ಅದು ಪರಿಶೀಲಿಸಲಾರದು ಆದಕಾರಣ ಒಬ್ಬ ವ್ಯಕ್ತಿಯ ಸಾಕ್ಷಿ ಸತ್ಯವಾಗಿರುವದಿಲ್ಲವೆಂದು ಫರಿಸಾಯರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನೀನೇ ನಿನ್ನ ಸ್ವಂತ ಸಾಕ್ಷಿಯಾಗಿರಲು ಸಾದ್ಯವಿಲ್ಲ” ಅಥವಾ “ನಿನ್ನನ್ನು ಕುರಿತು ನೀನು ಹೇಳುವ ವಿಷಯಗಳು ಸತ್ಯವಾಗಿರುವದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 8:14

κἂν ἐγὼ μαρτυρῶ περὶ ἐμαυτοῦ

ನನ್ನನ್ನು ಕುರಿತು ನಾನೇ ಈ ಸಂಗತಿಗಳನ್ನು ಹೇಳಿದರು

John 8:15

τὴν σάρκα

ಮಾನವ ಪ್ರಮಾಣ ಮತ್ತು ಮಾನವ ಧರ್ಮಶಾಸ್ತ್ರ

ἐγὼ οὐ κρίνω οὐδένα

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ನಾನು ಯಾರನ್ನು ತೀರ್ಪು ಮಾಡಲಿಲ್ಲ” ಅಥವಾ 2) “ಈಗ ನಾನು ಯಾರಿಗೂ ತೀರ್ಪು ಮಾಡುತ್ತಿಲ್ಲ.”

John 8:16

ἐὰν κρίνω…ἐγώ

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ನಾನು ಜನರಿಗೆ ತೀರ್ಪು ಮಾಡಿದರೆ” ಅಥವಾ 2) “ನಾನು ಜನರಿಗೆ ತೀರ್ಪು ಮಾಡುತ್ತಿರುವಾಗ.”

ἡ κρίσις ἡ ἐμὴ ἀληθινή ἐστιν

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ನನ್ನ ತೀರ್ಪು ಸರಿಯಾಗಿರುತ್ತದೆ” ಅಥವಾ 2) “ನನ್ನ ತೀರ್ಪು ಸರಿಯಾಗಿದೆ.”

μόνος οὐκ εἰμί, ἀλλ’ ἐγὼ καὶ ὁ πέμψας με Πατήρ

ದೇವರ ಮಗನಾದ ಯೇಸು ಅಧಿಕಾರವನ್ನು ಹೊಂದಿದ್ದಾನೆ ಯಾಕಂದರೆ ಆತನ ತಂದೆಯೊಂದಿಗೆ ಆತನು ವಿಶೇಷವಾದ ಸಂಬಂಧವನ್ನು ಹೊಂದಿರುವನು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

μόνος οὐκ εἰμί

ತನ್ನ ತೀರ್ಪಿನಲ್ಲಿ ಯೇಸು ಒಬ್ಬನೇ ಇರುವುದಿಲ್ಲವೆಂದು ಈ ಸಮಾಚಾರ ಸ್ಪಷ್ಟವಾಗಿ ತಿಳಿಸುತ್ತಿದೆ. ಪರ್ಯಾಯ ಅನುವಾದ: “ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವದಿಲ್ಲ” ಅಥವಾ “ನಾನು ಒಬ್ಬಂಟಿಯಾಗಿ ತೀರ್ಪು ಮಾಡುವುದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἐγὼ καὶ ὁ…Πατήρ

ತಂದೆ ಮತ್ತು ಮಗನು ಜೊತೆಯಾಗಿ ತೀರ್ಪು ಮಾಡುವರು. ಪರ್ಯಾಯ ಅನುವಾದ: “ನನ್ನ ಜೊತೆಗೆ ತಂದೆ ತೀರ್ಪು ಮಾಡುವನು” ಅಥವಾ “ನಾನು ತೀರ್ಪು ಮಾಡಿದ ರೀತಿಯಲ್ಲಿಯೇ ತಂದೆ ತೀರ್ಪು ಮಾಡುವನು”

ὁ…Πατήρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. ಇದು ಯಾರ ತಂದೆಯನ್ನು ಕುರಿತು ಹೇಳಲಾಗಿದೆ ಎಂದು ನಿಮ್ಮ ಭಾಷೆಯಲ್ಲಿ ಹೇಳಬೇಕಾದರೆ, ನೀವು “ನನ್ನ ತಂದೆ” ಎಂದು ಸಂಬೋಧಿಸಬಹುದು ಯಾಕಂದರೆ ಮುಂದಿನ ವಚನಗಳಲ್ಲಿ ಯೇಸು ಈ ಸಂಬೋಧನೆಯನ್ನು ಉಪಯೋಗಿಸುತ್ತಾನೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:17

ಯೇಸು ತನ್ನನ್ನು ಕುರಿತು ಫರಿಸಾಯರು ಮತ್ತು ಇತರ ಜನರೊಂದಿಗೆ ಮಾತಾಡುವುದನ್ನು ಮುಂದುವರೆಸುತ್ತಾನೆ.

καὶ ἐν τῷ νόμῳ δὲ τῷ ὑμετέρῳ

“ಹೌದು” ಎನ್ನುವ ಪದವು ಯೇಸು ಹಿಂದೆ ಹೇಳಿರುವ ವಿಷಯಗಳಿಗೆ ಹೆಚ್ಚು ವಿಷಯಗಳನ್ನು ಜೋಡಿಸುತ್ತದೆ.

γέγραπται

ಇದು ನಿಷ್ಕ್ರಿಯ ಮಾತಾಗಿದೆ. ಇದನ್ನು ವ್ಯಕ್ತಿಗತ ವಿಷಯವನ್ನು ಉಪಯೋಗಿಸಿ ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಮೋಶೆ ಬರೆದನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

δύο ἀνθρώπων ἡ μαρτυρία ἀληθής ἐστιν

ಒಬ್ಬ ವ್ಯಕ್ತಿಯ ಮಾತುಗಳನ್ನು ಮತ್ತೊಬ್ಬರು ಪರಿಶೀಲಿಸಬಹುದು ಎನ್ನುವುದೆ ಇಲ್ಲಿ ಉಪಯೋಗಿಸಲಾಗಿರುವ ತರ್ಕವಾಗಿದೆ. ಪರ್ಯಾಯ ಅನುವಾದ: “ಇಬ್ಬರು ವ್ಯಕ್ತಿಗಳು ಒಂದೇ ವಿಷಯವನ್ನು ಹೇಳಿದರೆ, ಅದು ಸತ್ಯವೆಂದು ಜನರು ನಂಬುತ್ತಾರೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 8:18

ἐγώ εἰμι ὁ μαρτυρῶν περὶ ἐμαυτοῦ

ಯೇಸು ತನ್ನನ್ನು ಕುರಿತು ತಾನೇ ಸಾಕ್ಷಿ ಹೇಳಿಕೊಳ್ಳುತ್ತಿದ್ದಾನೆ. ಪರ್ಯಾಯ ಅನುವಾದ: “ನನ್ನ ಪರವಾದ ಸಾಕ್ಷಿಯನ್ನು ನಾನೇ ಕೊಡುವೆನು”

μαρτυρεῖ περὶ ἐμοῦ ὁ πέμψας με Πατήρ

ಯೇಸುವನ್ನು ಕುರಿತು ತಂದೆಯು ಸಹ ಸಾಕ್ಷಿಕೊಡುತ್ತಾನೆ. ಯೇಸು ಕುರಿತಾದ ಸಾಕ್ಷಿ ಸತ್ಯವಾಗಿದೆಯೆಂದು ನೀವು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ನನ್ನನ್ನು ಕಳುಹಿಸಿದ ನನ್ನ ತಂದೆ, ನನ್ನ ಕುರಿತು ಸಾಕ್ಷಿ ಕೊಡುತ್ತಾನೆ. ಅದರಿಂದ ನಾವು ನಿಮಗೆ ಹೇಳುವ ಸಂಗತಿಗಳು ಸತ್ಯವೆಂದು ನೀವು ನಂಬಬೇಕು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ…Πατήρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. ಇದು ಯಾರ ತಂದೆಯನ್ನು ಕುರಿತು ಹೇಳಲಾಗಿದೆ ಎಂದು ನಿಮ್ಮ ಭಾಷೆಯಲ್ಲಿ ಹೇಳಬೇಕಾದರೆ, ನೀವು “ನನ್ನ ತಂದೆ” ಎಂದು ಸಂಬೋಧಿಸಬಹುದು ಯಾಕಂದರೆ ಮುಂದಿನ ವಚನಗಳಲ್ಲಿ ಯೇಸು ಈ ಸಂಬೋಧನೆಯನ್ನು ಉಪಯೋಗಿಸುತ್ತಾನೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:19

ಯೇಸು ಎಲ್ಲಿ ಬಾಧಿಸುತ್ತಿದಾನೆ ಎನ್ನುವ ಹಿನ್ನೆಲೆ ಸಮಾಚಾರವನ್ನು ಕೊಡಲು 20ನೇ ವಚನದಲ್ಲಿ ಲೇಖಕರು ಯೇಸು ಮಾತಾಡುತ್ತಿರುವಾಗ ಒಂದು ವಿರಾಮವನ್ನು ಕೊಟ್ಟಿದ್ದಾರೆ. ಕೆಲವು ಭಾಷಾ ನಿಯಮಗಳ ಪ್ರಕಾರವಾಗಿ ಯೋಹಾನನು.8:12 ವಚನದಲ್ಲಿರುವ ಕ್ರಮದ ಸಮಾಚಾರವನ್ನು ಕುರಿತು ಕಥೆಯ ಪ್ರಾರಂಭದಲ್ಲಿ ಜೋಡಿಸ ಅವಶ್ಯಕತೆ ಇರಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

οὔτε ἐμὲ οἴδατε, οὔτε τὸν Πατέρα μου. εἰ ἐμὲ ᾔδειτε, καὶ τὸν Πατέρα μου ἂν ᾔδειτε

ತನ್ನನ್ನು ತಿಳಿದಿದ್ದರೆ ತಂದೆಯನ್ನು ಸಹ ತಿಳಿದಿರುವಿರಿ ಎಂದು ಯೇಸು ಸೂಚಿಸುತ್ತಿದ್ದಾನೆ. ತಂದೆ ಮತ್ತು ಮಗನು ಇಬ್ಬರು ದೇವರಾಗಿದ್ದಾರೆ. “ತಂದೆ” ಎನ್ನುವುದು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τὸν Πατέρα μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:20

οὔπω ἐληλύθει ἡ ὥρα αὐτοῦ

“ಸಮಯ” ಎನ್ನುವ ಪದ ಯೇಸು ಮರಣಿಸುವ ಸಮಯವನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಯೇಸು ಮರಣಿಸಲು ಅದು ಸರಿಯಾದ ಸಮಯವಾಗಿರಲಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 8:21

ಜನರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

ἐν τῇ ἁμαρτίᾳ ὑμῶν ἀποθανεῖσθε

“ಸಾವು” ಎನ್ನುವ ಪದ ಇಲ್ಲಿ ಆತ್ಮೀಯ ಮರಣವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನೀವು ಇನ್ನು ಪಾಪದಲ್ಲಿದ್ದು ಸಾಯುವಿರಿ” ಅಥವಾ “ನೀವು ಪಾಪ ಮಾಡುತ್ತ ಸಾಯುತ್ತೀರಿ”

ὑμεῖς οὐ δύνασθε ἐλθεῖν

ನಿಮಗೆ ಬರಲು ಆಗುತ್ತಿಲ್ಲ

John 8:22

ἔλεγον…οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು ಹೇಳಿದರು” ಅಥವಾ “ಯೆಹೂದ್ಯ ಅಧಿಕಾರಿಗಳು ಹೇಳಿದರು” (ನೋಡಿರಿ: ಉಪಲಕ್ಷಣಾಲಂಕಾರ)

John 8:23

ὑμεῖς ἐκ τῶν κάτω ἐστέ

ನೀವು ಈ ಲೋಕದಲ್ಲಿ ಜನ್ಮಿಸಿದ್ದೀರಿ

ἐγὼ ἐκ τῶν ἄνω εἰμί

ನಾನು ಪರಲೋಕದಿಂದ ಬಂದಿರುವೆ

ὑμεῖς ἐκ τούτου τοῦ κόσμου ἐστέ

ನೀವು ಈ ಲೋಕಕ್ಕೆ ಸಂಬಂಧಿಸಿದವರು

ἐγὼ οὐκ εἰμὶ ἐκ τοῦ κόσμου τούτου

ನಾನು ಈ ಲೋಕಕ್ಕೆ ಸಂಬಂಧಿಸಿದವನಲ್ಲ

John 8:24

ἀποθανεῖσθε ἐν ταῖς ἁμαρτίαις ὑμῶν

ದೇವರು ನಿಮ್ಮ ಪಾಪಗಳನ್ನು ಕ್ಷಮಿಸದಿದ್ದರೆ ನೀವು ಸಾಯುವಿರಿ

ὅτι ἐγώ εἰμι

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ನಾನೇ” ಎಂದು ಮೋಶೆಗೆ ತೋರಿಸಿಕೊಂಡ ಯೆಹೋವನಿಗೆ ಯೇಸು ತನ್ನನ್ನು ತಾನು ಹೋಲಿಸಿಕೊಳ್ಳುತ್ತಿದ್ದಾನೆ ಅಥವಾ 2) “ನಾನು ಮೇಲಿಂದ ಬಂದಿರುವೆನು” ಎಂದು ಆತನು ತನ್ನನ್ನು ಕುರಿತು ತಾನು ಮುಂಚೆಯೇ ಹೇಳಿಕೊಂಡಿರುವ ವಿಷಯವನ್ನು ಜನರು ಅರ್ಥಮಾಡಿಕೊಳ್ಳಬೇಕೆಂದು ಯೇಸು ಉಪೇಕ್ಷಿಸುತ್ತಿದ್ದಾನೆ.

John 8:25

ἔλεγον

“ಅವರು” ಎನ್ನುವ ಪದವು ಯೆಹೂದ್ಯರ ನಾಯಕರನ್ನು ಸೂಚಿಸುತ್ತಿದೆ (ಯೋಹಾನನು.8:22).

John 8:26

ταῦτα λαλῶ εἰς τὸν κόσμον

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಈ ಸಂಗತಿಗಳನ್ನು ನಾನು ಎಲ್ಲಾ ಜನರಿಗೆ ಹೇಳುತ್ತಿದ್ದೇನೆ” (ನೋಡಿರಿ: ಲಕ್ಷಣಾಲಂಕಾರ)

John 8:27

τὸν Πατέρα

ಇದು ದೇವರಿಗೆ ಕೊಟ್ಟಿರುವ ವಿಶೇಷವಾದ ಹೆಸರಾಗಿದೆ. ಕೆಲವೊಂದು ಭಾಷೆಗಳಲ್ಲಿ ನಾಮಪದದ ಮುಂದೆ ಸಂಬಂಧಕಾರಕವನ್ನು ಉಪಯೋಗಿಸಬೇಕಾಗುತ್ತದೆ. ಪರ್ಯಾಯ ಅನುವಾದ: “ತನ್ನ ತಂದೆ” (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:28

ὅταν ὑψώσητε

ಯೇಸುವನ್ನು ಕೊಲ್ಲಲ್ಲು ಆತನನ್ನು ಶಿಲುಬೆಯ ಮೇಲೆ ಏರಿಸುವುದನ್ನು ಇದು ಸೂಚಿಸುತ್ತಿದೆ.

Υἱὸν τοῦ Ἀνθρώπου

ಆತನನ್ನೇ ಸೂಚಿಸಿಕೊಳ್ಳಲು “ಮನುಷ್ಯ ಕುಮಾರನು” ಎನ್ನುವ ಹೆಸರನ್ನು ಯೇಸು ಉಪಯೋಗಿಸಿದನು.

ἐγώ εἰμι

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ನಾನೇ” ಎಂದು ಮೋಶೆಗೆ ತೋರಿಸಿಕೊಂಡ ಯೆಹೋವನಿಗೆ ಯೇಸು ತನ್ನನ್ನು ತಾನು ಹೋಲಿಸಿಕೊಳ್ಳುತ್ತಿದ್ದಾನೆ ಅಥವಾ 2) “ನಾನು ಯಾರೆಂದು ಹೇಳಿಕೊಳ್ಳುವೆನೋ ನಾನು ಅವನೇ ಆಗಿದ್ದೇನೆ.”

καθὼς ἐδίδαξέν με ὁ Πατὴρ, ταῦτα λαλῶ

ನನ್ನ ತಂದೆ ನನಗೆ ಉಪದೇಶಿಸಿದ ಸಂಗತಿಗಳನ್ನು ಮಾತ್ರವೇ ನಾನು ಹೇಳುತ್ತಿದ್ದೇನೆ. “ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ವಿಶೇಷವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:29

ὁ πέμψας με

“ಆತನು” ಎನ್ನುವ ಪದವು ದೇವರನ್ನು ಸೂಚಿಸುತ್ತಿದೆ.

John 8:30

ταῦτα αὐτοῦ λαλοῦντος

ಯೇಸು ಈ ಮಾತುಗಳನ್ನು ಹೇಳುತ್ತಿರಲು

πολλοὶ ἐπίστευσαν εἰς αὐτὸν

ಅನೇಕ ಜನರು ಆತನನ್ನು ನಂಬಿದರು

John 8:31

μείνητε ἐν τῷ λόγῳ τῷ ἐμῷ

ಇದು “ಯೇಸುವಿಗೆ ವಿಧೇಯರಾಗಿರುವುದು” ಎಂದು ಅರ್ಥ ಕೊಡುವ ನುಡಿಗಟ್ಟಾಗಿದೆ. ಪರ್ಯಾಯ ಅನುವಾದ: “ನಾನು ಹೇಳಿರುವ ಸಂಗತಿಗಳಿಗೆ ವಿಧೇಯರಾಗಿರಿ” (ನೋಡಿರಿ: ನುಡಿಗಟ್ಟುಗಳು.)

μαθηταί μού

ನನ್ನ ಹಿಂಬಾಲಕರು

John 8:32

ἡ ἀλήθεια ἐλευθερώσει ὑμᾶς

ಇದು ಮಾನವೀಕರಣವಾಗಿದೆ. “ಸತ್ಯವು” ಒಬ್ಬ ವ್ಯಕ್ತಿಯಂತೆ ಇದ್ದಂತೆ ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನೀವು ಸತ್ಯಕ್ಕೆ ವಿಧೇಯರಾದರೆ, ದೇವರು ನಿಮಗೆ ಬಿಡುಗಡೆ ಕೊಡುವನು” (ನೋಡಿರಿ: ವ್ಯಕ್ತೀಕರಣ)

τὴν ἀλήθειαν

ದೇವರು ಕುರಿತಾಗಿ ಯೇಸು ಪ್ರತ್ಯಕ್ಷಪಡಿಸುವ ಸಂಗತಿಗಳನ್ನು ಇದು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ದೇವರ ಕುರಿತು ಸತ್ಯವಾಗಿರುವುದು”

John 8:33

πῶς σὺ λέγεις, ὅτι ἐλεύθεροι γενήσεσθε

ಯೇಸು ಹೇಳಿರುವ ಸಂಗತಿಗಳಿಗೆ ಯೆಹೂದ್ಯರ ನಾಯಕರು ಬೆರಗಾಗಿರುವುದನ್ನು ಸೂಚಿಸಲು ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ನಮಗೆ ಬಿಡುಗಡೆ ಆಗುವುದು ಅವಶ್ಯಕತೆ ಇಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 8:34

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

δοῦλός ἐστιν τῆς ἁμαρτίας

ಇಲ್ಲಿ “ಗುಲಾಮ” ಎನ್ನುವ ಪದ ರೂಪಕಾಲಂಕಾರವಾಗಿದೆ. ಪಾಪ ಮಾಡುವವರಿಗೆ “ಪಾಪ” ಎನ್ನುವುದು ಯಜಮಾನನಾಗಿರುತ್ತದೆ ಎಂದು ಇದರ ಅರ್ಥ. ಪರ್ಯಾಯ ಅನುವಾದ: “ಪಾಪಕ್ಕೆ ಗುಲಾಮಾಗಿದ್ದಂತೆ” (ನೋಡಿರಿ: ರೂಪಕ ಅಲಂಕಾರ)

John 8:35

ἐν τῇ οἰκίᾳ

ಇಲ್ಲಿ “ಮನೆ” ಎನ್ನುವ ಪದ “ಕುಟುಂಬ” ಎನ್ನುವ ಪದಕ್ಕೆ ಸಮಾನಾರ್ಥಕವಾಗಿದೆ. ಪರ್ಯಾಯ ಅನುವಾದ: “ಕುಟುಂಬದಲ್ಲಿ ಶಾಶ್ವತ ಸದಸ್ಯನಾಗಿ” (ನೋಡಿರಿ: ಲಕ್ಷಣಾಲಂಕಾರ)

ὁ Υἱὸς μένει εἰς τὸν αἰῶνα

ಇದು ಪದಲೋಪವಾಗಿದೆ. ಇದನ್ನು ಅನುವಾದ ಮಾಡುವಾಗ ಸೂಚಿಸುವ ಪದಗಳನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: “ಮಗನು ಕುಟುಂಬದಲ್ಲಿ ಎಂದೆಂದಿಗೂ ಸದಸ್ಯನಾಗಿರುತ್ತಾನೆ” (ನೋಡಿರಿ: ಪದಲೋಪ)

John 8:36

ἐὰν…ὁ Υἱὸς ὑμᾶς ἐλευθερώσῃ, ὄντως ἐλεύθεροι ἔσεσθε

ಪಾಪ ಮಾಡದೇ ಇರುವುದಕ್ಕೆ ರೂಪಕಾಲಂಕಾರವಾಗಿ, ಪಾಪದಿಂದ ಬಿಡುಗಡೆ ಹೊಂದುವುದರ ಕುರಿತಾಗಿ ಯೇಸು ಮಾತಾಡುತ್ತಿದ್ದಾನೆ ಎಂದು ಇದು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಮಗನು ನಿಮ್ಮನ್ನು ಬಿಡಿಸಿದರೆ, ನೀವು ನಿಜವಾಗಿಯೂ ಪಾಪ ಮಾಡಲು ನಿರಾಕರಿಸುತ್ತೀರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ರೂಪಕ ಅಲಂಕಾರ)

ἐὰν…ὁ Υἱὸς ὑμᾶς ἐλευθερώσῃ

ಮಗನು ಎನ್ನುವುದು ದೇವರ ಮಗನಾದ ಯೇಸುವಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. ಯೇಸು ತನ್ನನ್ನು ಕುರಿತು ಆತನೇ ಮಾತಾಡುತ್ತಿದ್ದಾನೆ. ಪರ್ಯಾಯ ಅನುವಾದ: “ಮಗನಾಗಿರುವ ನಾನು ನಿಮ್ಮನ್ನು ಬಿಡಿಸಿದರೆ” (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು. ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 8:37

ಯೆಹೂದ್ಯರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

ὁ λόγος ὁ ἐμὸς οὐ χωρεῖ ἐν ὑμῖν

ಇಲ್ಲಿ “ವಾಕ್ಯ” ಎನ್ನುವ ಪದವು ಯೆಹೂದ್ಯರ ನಾಯಕರು ಅಂಗೀಕರಿಸದ ಯೇಸು ಮಾಡಿದ “ಬೋಧನೆಗಳು” ಅಥವಾ “ಸಂದೇಶ” ಎನ್ನುವ ಪದಗಳಿಗೆ ಸಮಾನಾರ್ಥಕ ಪದಗಳಾಗಿವೆ. ಪರ್ಯಾಯ ಅನುವಾದ: “ನನ್ನ ಬೋಧನೆಗಳನ್ನು ನೀವು ಅಂಗೀಕರಿಸದಿದ್ದರೆ” ಅಥವಾ “ನಿಮ್ಮ ಜೀವನವನ್ನು ಬದಲಾಯಿಸಲು ನನ್ನ ಸಂದೇಶಕ್ಕೆ ನೀವು ಅವಕಾಶಕೊಡದಿದ್ದರೆ” (ನೋಡಿರಿ: ಲಕ್ಷಣಾಲಂಕಾರ)

John 8:38

ἃ ἐγὼ ἑώρακα παρὰ τῷ Πατρὶ, λαλῶ

ನಾನು ನನ್ನ ತಂದೆಯ ಬಳಿ ಇದ್ದಾಗ ನೋಡಿದ ಸಂಗತಿಗಳನ್ನು ಕುರಿತು ನಾನು ನಿಮಗೆ ಹೇಳುತ್ತಿದ್ದೇನೆ

καὶ ὑμεῖς…ἃ ἠκούσατε παρὰ τοῦ πατρὸς, ποιεῖτε

“ನಿಮ್ಮ ತಂದೆ” ಎಂದು ಯೇಸು ದೆವ್ವವನ್ನು ಸೂಚಿಸುತ್ತಿದ್ದಾನೆಂದು ಯೆಹೂದ್ಯರ ನಾಯಕರು ಅರ್ಥ ಮಾಡಿಕೊಳ್ಳಲಿಲ್ಲ. ಪರ್ಯಾಯ ಅನುವಾದ: “ನಿಮ್ಮ ತಂದೆ ನಿಮಗೆ ಹೇಳಿರುವುದನ್ನು ಮಾಡಲು ನೀವು ಮುಂದುವರೆಸುತ್ತಿದ್ದೀರಿ”

John 8:39

ὁ πατὴρ

ಪಿತೃ

John 8:40

τοῦτο Ἀβραὰμ οὐκ ἐποίησεν

ದೇವರ ಕುರಿತಾಗಿ ನಿಜವಾದ ಪ್ರತ್ಯಕ್ಷತೆಯನ್ನು ಕುರಿತು ಯಾರಾದರು ಅವನಿಗೆ ಹೇಳಿದಾಗ ಅವನನ್ನು ಕೊಳ್ಳುವುದಕ್ಕೆ ಅಬ್ರಹಾಮನು ಪ್ರಯತ್ನಿಸಲಿಲ್ಲ

John 8:41

ὑμεῖς ποιεῖτε τὰ ἔργα τοῦ πατρὸς ὑμῶν

ಅವರ ತಂದೆ ದೆವ್ವವಾಗಿದೆ ಎಂದು ಯೇಸು ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಇಲ್ಲ! ನಿಮ್ಮ ನಿಜವಾದ ತಂದೆ ಮಾಡಿರುವ ಕೆಲಸಗಳನ್ನೇ ನೀವು ಮಾಡುತ್ತಿದ್ದೀರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἡμεῖς ἐκ πορνείας οὐ γεγεννήμεθα

ಇಲ್ಲಿ ಯೇಸುವಿನ ನಿಜವಾದ ತಂದೆ ಯಾರೆಂದು ಆತನಿಗೆ ಗೊತ್ತಿಲ್ಲವೆಂಬುದಾಗಿ ಯೆಹೂದ್ಯರ ನಾಯಕರು ಸೂಚಿಸುತ್ತಿದ್ದಾರೆ. ಪರ್ಯಾಯ ಅನುವಾದ: “ನಿನ್ನ ಕುರಿತು ನಮಗೆ ತಿಳಿಯದು, ಆದರೆ ನಾವು ವ್ಯಭಿಚಾರದ ಮಕ್ಕಳಲ್ಲ” ಅಥವಾ “ನಾವೆಲ್ಲರೂ ಸರಿಯಾದ ವಿವಾಹ ಕ್ರಮದಲ್ಲಿ ಹುಟ್ಟಿದವರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἕνα Πατέρα ἔχομεν, τὸν Θεόν

ದೇವರು ತಮ್ಮ ಆತ್ಮೀಯವಾದ ತಂದೆಯಾಗಿದ್ದಾನೆಂದು ಇಲ್ಲಿ ಯೆಹೂದ್ಯರ ನಾಯಕರು ಹೇಳುತ್ತಿದ್ದಾರೆ. ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:42

ἠγαπᾶτε

ಇದು ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು (ನಮ್ಮ ಶತ್ರುಗಳ ಸಹಿತವಾಗಿ) ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆ.

John 8:43

διὰ τί τὴν λαλιὰν τὴν ἐμὴν οὐ γινώσκετε

ಮುಖ್ಯವಾಗಿ ಆತನ ಮಾತುಗಳನ್ನು ಕೇಳದೆ ಇರುವ ಯೆಹೂದ್ಯರ ನಾಯಕರನ್ನು ದಂಡಿಸಲು ಯೇಸು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನಾನು ಹೇಳಿರುವುದು ನಿಮಗೆ ಯಾಕೆ ಅರ್ಥವಾಗಲಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ὅτι οὐ δύνασθε ἀκούειν τὸν λόγον τὸν ἐμόν

“ವಾಕ್ಯ” ಎನ್ನುವ ಪದವು ಯೇಸುವಿನ “ಬೋಧನೆಗಳು” ಎನ್ನುವ ಮಾತಿನ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಯಾಕಂದರೆ ನೀವು ನನ್ನ ಬೋಧನೆಗಳನ್ನು ಅಂಗೀಕರಿಸುವದಿಲ್ಲ. (ನೋಡಿರಿ: ಲಕ್ಷಣಾಲಂಕಾರ)

John 8:44

ὑμεῖς ἐκ τοῦ πατρὸς τοῦ διαβόλου ἐστὲ

ನೀವು ನಿಮ್ಮ ತಂದೆಯಾದ ಸೈತಾನನಿಗೆ ಸಂಬಂಧಿಸಿದವರು

ὁ πατὴρ αὐτοῦ

ಇಲ್ಲಿ “ತಂದೆ” ಎನ್ನುವ ಪದವು ಸುಳ್ಳುಗಳನ್ನುಂಟು ಮಾಡುವವನು ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಆದಿಯಲ್ಲಿ ಎಲ್ಲಾ ಸುಳ್ಳುಗಳನ್ನು ಸೃಷ್ಟಿಸಿದವನು ಅವನೇ” (ನೋಡಿರಿ: ರೂಪಕ ಅಲಂಕಾರ)

John 8:45

ಯೆಹೂದ್ಯರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

ἐγὼ…ὅτι τὴν ἀλήθειαν λέγω

ಯಾಕಂದರೆ ನಾನು ದೇವರ ಕುರಿತಾಗಿ ಸತ್ಯವಾದ ಸಂಗತಿಗಳನ್ನು ಹೇಳುತ್ತಿದ್ದೇನೆ

John 8:46

τίς ἐξ ὑμῶν ἐλέγχει με περὶ ἁμαρτίας

ಆತನು ಎಂದಿಗೂ ಪಾಪ ಮಾಡಿಲ್ಲವೆಂದು ಒತ್ತಾಯಿಸಿ ಹೇಳಲು ಯೇಸು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನಾನು ಪಾಪ ಮಾಡಿರುವುದನ್ನು ನಿಮ್ಮಲ್ಲಿ ಯಾರು ನನಗೆ ತೋರಿಸುವುದಕ್ಕೆ ಸಾಧ್ಯವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

εἰ ἀλήθειαν λέγω

ನಾನು ಸತ್ಯವಾದ ಸಂಗತಿಗಳನ್ನು ಹೇಳಿದರೆ

διὰ τί ὑμεῖς οὐ πιστεύετέ μοι

ಯೆಹೂದ್ಯ ನಾಯಕರ ಅವಿಶ್ವಾಸವನ್ನು ಗದರಿಸುವುದಕ್ಕೆ ಯೇಸು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನನ್ನನ್ನು ನಂಬದೆ ಇರುವುದಕ್ಕೆ ನಿಮ್ಮಲ್ಲಿ ಯಾವ ಕಾರಣವು ಇರುವುದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 8:47

τὰ ῥήματα τοῦ Θεοῦ

“ವಾಕ್ಯ” ಎನ್ನುವ ಪದವು ಯೇಸುವಿನ “ಸಂದೇಶ” ಎನ್ನುವ ಮಾತಿನ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ದೇವರ ಸಂದೇಶ” ಅಥವಾ “ದೇವರಿಂದ ಬರುವ ಸಂದೇಶ” (ನೋಡಿರಿ: ಲಕ್ಷಣಾಲಂಕಾರ)

John 8:48

οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

οὐ καλῶς λέγομεν ἡμεῖς ὅτι Σαμαρείτης εἶ σὺ, καὶ δαιμόνιον ἔχεις

ಯೇಸುವನ್ನು ನಿಂದಿಸಲು ಮತ್ತು ಆತನನ್ನು ಅಗೌರವಪಡಿಸಲು ಯೆಹೂದ್ಯರ ನಾಯಕರು ಈ ಪ್ರಶ್ನೆಯನ್ನು ಉಪಯೋಗಿಸಿದ್ದಾರೆ. ಪರ್ಯಾಯ ಅನುವಾದ: “ನೀನು ಸಮಾರ್ಯದವವೆಂದು ಮತ್ತು ನಿನ್ನಲ್ಲಿ ದೆವ್ವ ಸೇರಿಕೊಂಡಿದೆ ಎಂದು ಹೇಳುವುದರಲ್ಲಿ ನಾವು ಹೇಳುವುದು ಸರಿಯೇ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 8:50

ಯೆಹೂದ್ಯರಿಗೆ ಪ್ರತ್ಯುತ್ತರ ಕೊಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ.

ἔστιν ὁ ζητῶν καὶ κρίνων

ಇದು ದೇವರನ್ನು ಸೂಚಿಸುತ್ತಿದೆ.

John 8:51

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

τὸν ἐμὸν λόγον τηρήσῃ

“ವಾಕ್ಯ” ಎನ್ನುವ ಪದವು ಯೇಸುವಿನ “ಬೋಧನೆಗಳು” ಎನ್ನುವ ಮಾತಿನ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ನನ್ನ ಬೋಧನೆಗಳಿಗೆ ವಿಧೇಯತೆ ತೋರಿಸಿದವರು” ಅಥವಾ “ನಾನು ಹೇಳಿದ್ದನ್ನು ಮಾಡುವವರು” (ನೋಡಿರಿ: ಲಕ್ಷಣಾಲಂಕಾರ)

θάνατον…θεωρήσῃ

ಇದು ಮರಣವನ್ನು ಅನುಭವಿಸುವುದು ಎಂದು ಅರ್ಥಕೊಡುವ ನುಡಿಗಟ್ಟಾಗಿದೆ. ಇಲ್ಲಿ ಯೇಸು ಆತ್ಮೀಯ ಮರಣವನ್ನು ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಆತ್ಮೀಯವಾಗಿ ಸಾಯುವುದು” (ನೋಡಿರಿ: ನುಡಿಗಟ್ಟುಗಳು.)

John 8:52

Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಸಮಾನಾರ್ಥಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

ἐάν τις τὸν λόγον μου τηρήσῃ

ನನ್ನ ಬೋಧನೆಗಳಿಗೆ ಯಾರಾದರೂ ವಿಧೇಯತೆ ತೋರಿಸಿದರೆ

γεύσηται θανάτου

ಇದು ಮರಣವನ್ನು ಅನುಭವಿಸುವುದು ಎಂದು ಅರ್ಥಕೊಡುವ ನುಡಿಗಟ್ಟಾಗಿದೆ. ಯೇಸು ಶರೀರಕ ಮರಣವನ್ನು ಕುರಿತು ಮಾತಾಡುತ್ತಿದ್ದಾನೆಂದು ಯೆಹೂದ್ಯ ನಾಯಕರು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಪರ್ಯಾಯ ಅನುವಾದ: “ಸಾಯುವುದು” (ನೋಡಿರಿ: ನುಡಿಗಟ್ಟುಗಳು.)

John 8:53

μὴ σὺ μείζων εἶ τοῦ πατρὸς ἡμῶν Ἀβραάμ, ὅστις ἀπέθανεν

ಯೇಸು ಅಬ್ರಹಾಮನಿಗಿಂತ ದೊಡ್ಡವನಲ್ಲವೆಂದು ಒತ್ತಾಯಿಸಿ ಹೇಳಲು ಯೆಹೂದ್ಯ ನಾಯಕರು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾರೆ. ಪರ್ಯಾಯ ಅನುವಾದ: “ನಿಶ್ಚಯವಾಗಿ ನೀನು ಸತ್ತುಹೋದ ನಮ್ಮ ತಂದೆಯಾದ ಅಬ್ರಹಾಮನಿಗಿಂತ ದೊಡ್ಡವನಾಗಿರುವದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τοῦ πατρὸς

ಪಿತೃ

τίνα σεαυτὸν ποιεῖς

ಅಬ್ರಹಾಮನಿಗಿಂತ ಆತನು ಪ್ರಾಮುಖ್ಯವಾದವನೆಂದು ಯೇಸುವಿನ ಯೋಚನೆಯನ್ನು ಗದರಿಸಲು ಯೆಹೂದ್ಯರು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾರೆ. ಪರ್ಯಾಯ ಅನುವಾದ: “ನೀನು ಅಷ್ಟು ಪ್ರಾಮುಖ್ಯವಾದವನೆಂದು ನೀನು ಭಾವಿಸಬಾರದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 8:54

ἔστιν ὁ Πατήρ μου ὁ δοξάζων με, ὃν ὑμεῖς λέγετε, ὅτι Θεὸς ἡμῶν ἐστιν

“ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. ದೇವರ ಮಗನಾದ ಯೇಸುವಿಗಿಂತ ತಂದೆಯಾದ ದೇವರ ಕುರಿತು ಯಾರಿಗೂ ಹೆಚ್ಚಾಗಿ ಗೊತ್ತಿರುವುದಿಲ್ಲ. ಪರ್ಯಾಯ ಅನುವಾದ: “ನನ್ನನ್ನು ಘನಪಡಿಸುವವನು ನನ್ನ ತಂದೆಯೇ ಮತ್ತು ಆತನು ನಿಮ್ಮ ದೇವರೆಂದು ನೀವು ಹೇಳಿಕೊಳ್ಳುತ್ತೀರಿ” (ನೋಡಿರಿ” ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 8:55

τὸν λόγον αὐτοῦ τηρῶ

ಇಲ್ಲಿ “ವಾಕ್ಯ” ಎನ್ನುವ ಪದವು ದೇವರು ಏನು ಹೇಳುತ್ತಾನೆ ಎನ್ನುವ ಮಾತಿನ ಸಮಾನಾರ್ಥಕವಾಗಿದೆ. ಪರ್ಯಾಯ ಅನುವಾದ: “ಆತನು ಏನು ಮಾಡಬೇಕೆಂದು ಹೇಳುತ್ತಾನೋ ನಾನು ಅದಕ್ಕೆ ವಿಧೇಯನಾಗಿರುತ್ತೇನೆ” (ನೋಡಿರಿ: ಲಕ್ಷಣಾಲಂಕಾರ)

John 8:56

τὴν ἡμέραν τὴν ἐμήν

ಯೇಸು ತನ್ನ ಜೀವನದ ಕಾಲದಲ್ಲಿ ಏನು ಸಾಧಿಸುತ್ತಾನೆ ಎನ್ನುವದಕ್ಕೆ ಇದು ಸಮಾನಾರ್ಥಕವಾಗಿದೆ. ಪರ್ಯಾಯ ಅನುವಾದ: “ನನ್ನ ಜೀವನದಲ್ಲಿ ನಾನು ಏನು ಮಾಡುತ್ತೀನೋ” (ನೋಡಿರಿ: ಲಕ್ಷಣಾಲಂಕಾರ)

εἶδεν καὶ ἐχάρη

ದೇವರ ಪ್ರತ್ಯಕ್ಷತೆಯಲ್ಲಿ ನಾನು ಬರುವುದನ್ನು ಅವನು ನೋಡಿ ಸಂತೋಷಿಸಿದನು

John 8:57

ಯೋಹಾನ.8:12 ವಚನದಲ್ಲಿ ಯೆಹೂದ್ಯರೊಂದಿಗೆ ದೇವಾಲಯಲ್ಲಿ ಯೇಸು ಮಾತಾಡುತ್ತಿರುವ ಕಥೆಯ ಭಾಗವು ಇಲ್ಲಿ ಸಮಾಪ್ತಿಯಾಗುತ್ತದೆ.

εἶπον…οἱ Ἰουδαῖοι πρὸς αὐτόν

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು ಆತನಿಗೆ ಹೇಳಿದರು” (ನೋಡಿರಿ: ಉಪಲಕ್ಷಣಾಲಂಕಾರ)

πεντήκοντα ἔτη οὔπω ἔχεις, καὶ Ἀβραὰμ ἑώρακας

ಅಬ್ರಹಾಮನನ್ನು ಆತನು ನೋಡಿದ್ದಾನೆಂದು ಯೇಸು ಹೇಳಿರುವ ಮಾತಿಗೆ ಬೆರಗಾಗಿ ಅವರ ಆಶ್ಚರ್ಯವನ್ನು ತೋರಿಸಲು ಯೆಹೂದ್ಯ ನಾಯಕರು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾರೆ. ಪರ್ಯಾಯ ಅನುವಾದ: “ನಿನಗೆ ಐವತ್ತು ವರ್ಷಗಳಿಗಿಂತ ಕಡಿಮೆ ವಯಸ್ಸು. ನೀನು ಅಬ್ರಹಾಮನನ್ನು ನೋಡಿರುವದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 8:58

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ἐγὼ εἰμί

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ನಾನೇ” ಎಂದು ಮೋಶೆಗೆ ತೋರಿಸಿಕೊಂಡ ಯೆಹೋವನಿಗೆ ಯೇಸು ತನ್ನನ್ನು ತಾನು ಹೋಲಿಸಿಕೊಳ್ಳುತ್ತಿದ್ದಾನೆ ಅಥವಾ 2) “ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನಿದ್ದೇನೆ.”

John 8:59

ἦραν οὖν λίθους, ἵνα βάλωσιν ἐπ’ αὐτόν

ಯೇಸು ಹೇಳಿರುವ ಮಾತುಗಳಿಗೆ ಯೆಹೂದ್ಯರ ನಾಯಕರು ಕೋಪಗೊಂಡರು. ಆತನು ದೇವರಿಗೆ ಸಮಾನವಾಗಿ ಮಾಡಿಕೊಂಡದಕ್ಕಾಗಿ ಅವರು ಆತನನ್ನು ಕೊಲ್ಲಬೇಕೆಂದು ಅಂದುಕೊಂಡರು ಎಂದು ಇದು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಆತನು ದೇವರಿಗೆ ಸಮಾನನೆಂದು ಹೇಳಿದಕ್ಕಾಗಿ ಅವರು ಆತನನ್ನು ಕೊಲ್ಲಲು ಕಲ್ಲುಗಳನ್ನು ಎತ್ತಿಕೊಂಡರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 9

ಯೋಹಾನ 09 ಸಾಧಾರಣ ಅಂಶಗಳು

ಈ ಅಧ್ಯಾಯದಲ್ಲಿ ವಿಶೇಷ ಅಂಶಗಳು

“ಪಾಪ ಮಾಡಿದವರು ಯಾರು?”

ಒಬ್ಬ ವ್ಯಕ್ತಿ ಕುರುಡನಾದರೆ ಅಥವಾ ಮೂಕನಾದರೆ ಅಥವಾ ಕುಂಟನಾದರೆ ಆ ವ್ಯಕ್ತಿ ಪಾಪ ಮಾಡಿರುವುದರಿಂದಲೇ ಆಗಿದ್ದಾನೆಂದು ಮತ್ತು ಆ ವ್ಯಕ್ತಿಯ ತಂದೆತಾಯಿಗಳು ಪಾಪ ಮಾಡಿರುವುದರಿಂದಲೇ ಆ ರೀತಿ ಆಗಿದ್ದಾನೆಂದು ಅಥವಾ ಆ ವ್ಯಕ್ತಿಯ ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಪಾಪ ಮಾಡಿದ್ದರಿಂದಲೇ ಆ ಸ್ಥಿತಿಯಲ್ಲಿದ್ದಾನೆಂದು ಯೇಸುವಿನ ಕಾಲದಲ್ಲಿ ಅನೇಕಮಂದಿ ಯೆಹೂದ್ಯರು ನಂಬುತ್ತಿದ್ದರು. ಆದರೆ ಈ ನಂಬಿಕೆಯನ್ನು ಮೋಶೆ ಧರ್ಮಶಾಸ್ತ್ರವು ಬೋಧಿಸುವುದಿಲ್ಲ. (ನೋಡಿರಿ: ಪಾಪ, ಪಾಪಸಹಿತ, ಪಾಪಿ, ಪಾಪ ಮಾಡುವುದು ಮತ್ತು ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ,)

“ಆತನು ಸಬ್ಬಾತನ್ನು ಆಚರಿಸಲಿಲ್ಲ”

ಯೇಸು ಕೆಲಸಮಾಡುತ್ತಿರುವುದರಿಂದ, ಸಬ್ಬಾತ್ ಅಂದರೆ ವಿಶ್ರಾಂತಿ ದಿನವನ್ನು ಆಚರಿಸುತ್ತಿಲ್ಲವೆಂದು ಫರಿಸಾಯರು ತಿಳಿದುಕೊಂಡಿದ್ದರು. (ನೋಡಿರಿ: ಸಬ್ಬತ್)

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ರೂಪಕಲಂಕಾರಗಳು

ಬೆಳಕು ಮತ್ತು ಕತ್ತಲು

ಸತ್ಯವೇದವು ಅನೇಕಬಾರಿ ಜನರು ಕತ್ತಲೆಯಲ್ಲಿ ನಡೆಯುತ್ತಿರುವಂತೆ ದೇವರನ್ನು ಮೆಚ್ಚಿಸದ ಜನರ ಕುರಿತಾಗಿ ಮತ್ತು ಅನೀತಿವಂತರ ಕುರಿತಾಗಿ ಮಾತನಾಡುತ್ತದೆ. ಪಾಪಿಗಳಾದ ಜನರನ್ನು ನೀತಿವಂತರನ್ನಾಗಿಸುವಂತೆ, ಅವರು ಮಾಡುವುದು ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮತ್ತು ದೇವರಿಗೆ ವಿಧೇಯರಾಗಿರುವದಕ್ಕೆ ಬೆಳಕು ಇರುತ್ತದೆಯೆಂದು ಬೆಳಕಿನ ಕುರಿತಾಗಿ ಹೇಳಲ್ಪಟ್ಟಿದೆ. (ನೋಡಿರಿ: ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ)

ನೋಡುವುದು ಮತ್ತು ಕುರುಡರಾಗಿರುವುದು

ಯೇಸು ಫರಿಸಾಯರನ್ನು ಕುರುಡರೆಂದು ಕರೆದಿದ್ದಾನೆ, ಯಾಕಂದರೆ ಯೇಸು ಕುರುಡರನ್ನು ಗುಣಪಡಿಸುತ್ತಿದ್ದಾನೆಂದು ಅವರು ನೋಡುತ್ತಿದ್ದಾರೆ, ಆದರೂ ಅವರು ಯೇಸು ದೇವರಿಂದ ಬಂದಿದ್ದಾನೆಂದು ನಂಬುವುದಕ್ಕೆ ಆಗುತ್ತಿರಲಿಲ್ಲ ([ಯೋಹಾನ.9:39-40] (./39.ಎಂ.ಡಿ)). (ನೋಡಿರಿ: ರೂಪಕ ಅಲಂಕಾರ)

“ಮನುಷ್ಯ ಕುಮಾರ”

ಈ ಅಧ್ಯಾಯದಲ್ಲಿ ಯೇಸು ತನ್ನನ್ನು ತಾನು “ಮನುಷ್ಯ ಕುಮಾರ” ಎಂಬುದಾಗಿ ಸೂಚಿಸಿಕೊಂಡಿದ್ದಾರೆ ([ಯೋಹಾನ.9:35] (../../ಯೋಹಾನ/09/35.ಎಂ.ಡಿ.)). ಜನರು ಇತರರ ಕುರಿತಾಗಿ ಮಾತನಾಡುವಾಗ ಮಾತನಾಡುವವರು ಇತರರ ತಮಗೋಸ್ಕರ ಮಾತನಾಡಿಕೊಳ್ಳುವುದಕ್ಕೆ ನಿಮ್ಮ ಭಾಷೆಯಲ್ಲಿ ಅನುಮತಿ ಇರದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 9:1

ಯೇಸು ಮತ್ತು ಆತನ ಶಿಷ್ಯರು ನಡೆದುಕೊಂಡು ಹೋಗುತ್ತಿರುವಾಗ, ಅವರು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು.

καὶ

ಲೇಖಕರು ಹೊಸ ಸಂಘಟನೆಯನ್ನು ವಿವರಿಸುತ್ತಿದ್ದಾರೆಂದು ಈ ಮಾತು ತೋರಿಸುತ್ತದೆ. (ನೋಡಿರಿ: ಹೊಸ ಘಟನೆಯ ಪರಿಚಯ.)

παράγων

ಇಲ್ಲಿ “ಯೇಸು” ಎನ್ನುವ ಪದವು ಯೇಸು ಮತ್ತು ಆತನ ಶಿಷ್ಯರಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೇಸು ಮತ್ತು ಆತನ ಶಿಷ್ಯರು ಹೋಗುತ್ತಿರುವಾಗ” (ನೋಡಿರಿ: ಉಪಲಕ್ಷಣಾಲಂಕಾರ)

John 9:2

τίς ἥμαρτεν, οὗτος ἢ οἱ γονεῖς αὐτοῦ, ἵνα τυφλὸς γεννηθῇ

ಎಲ್ಲಾ ವಿಧವಾದ ರೋಗಗಳಿಗೂ ಮತ್ತು ವಿರೂಪಗಳಿಗೂ ಪಾಪವೇ ಕಾರಣವಾಗಿರುತ್ತದೆಂದು ಪ್ರಾಚಿನ ಯೆಹೂದ್ಯರ ನಂಬಿಕೆಯನ್ನು ಈ ಪ್ರಶ್ನೆ ಪ್ರತಿಬಿಂಬಿಸುತ್ತಿದೆ. ಇನ್ನು ಗರ್ಭದಲ್ಲಿರುವ ಮಗು ಪಾಪ ಮಾಡಲು ಸಾಧ್ಯತೆಯುಂಟೆಂದು ಸಹ ಗುರುಗಳು ಬೋಧಿಸುತ್ತಿದ್ದರು. ಪರ್ಯಾಯ ಅನುವಾದ: “ಬೋಧಕನೆ, ಪಾಪ ಎನ್ನುವುದು ಒಬ್ಬ ವ್ಯಕ್ತಿಯನ್ನು ಕುರುಡನಾಗಿ ಮಾಡಬಲ್ಲದೆಂದು ನಾವು ತಿಳಿದಿದ್ದೇವೆ. ಈ ಮನುಷ್ಯನು ಕುರುಡನಾಗಿ ಹುಟ್ಟಲು ಯಾರ ಪಾಪ ಕಾರಣವಾಯಿತು? ಈ ಮನುಷ್ಯನೇ ಪಾಪ ಮಾಡಿದನೋ ಅಥವಾ ಅವನ ತಂದೆ ತಾಯಿ ಪಾಪ ಮಾಡಿದರೋ?” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 9:4

ἡμᾶς

“ನಾವು” ಎನ್ನುವ ಪದವು ಯೇಸು ಮತ್ತು ಆತನು ಮಾತಾಡುತ್ತಿದ್ದ ಶಿಷ್ಯರನ್ನು ಸಹ ಇದು ಸೇರಿಸಿಕೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)

ἡμέρα…νὺξ

ಇಲ್ಲಿ “ಹಗಲು” ಮತ್ತು “ರಾತ್ರಿ” ಎನ್ನುವ ಪದಗಳು ರೂಪಕಾಲಂಕಾರಗಳಾಗಿವೆ. ಜನರು ಸಹಜವಾಗಿ ಕೆಲಸ ಮಾಡುವ ಹಗಲಿನ ಸಮಯದಲ್ಲೇ ದೇವರ ಕೆಲಸವನ್ನು ಸಹ ಮಾಡಬಹುದೆಂದು ಮತ್ತು ಕತ್ತಲೆಯ ಸಮಯದಲ್ಲಿ ಕೆಲಸ ಮಾಡಲಾರದ ಹಾಗೆಯೇ ದೇವರ ಕೆಲಸವನ್ನು ಸಹ ಮಾಡಲಾರರೆಂದು ಯೇಸು ಹೋಲಿಸುತ್ತಿದ್ದಾನೆ. (ನೋಡಿರಿ: ರೂಪಕ ಅಲಂಕಾರ)

John 9:5

ἐν τῷ κόσμῳ

“ಲೋಕ” ಎನ್ನುವ ಪದವು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲ ಜನರನ್ನು ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಈ ಲೋಕದ ಜನರೊಂದಿಗೆ ಜೀವಿಸುವುದು” (ನೋಡಿರಿ: ಲಕ್ಷಣಾಲಂಕಾರ)

φῶς…τοῦ κόσμου

ಇಲ್ಲಿ “ಬೆಳಕು” ಎನ್ನುವ ಪದವು ದೇವರ ನಿಜವಾದ ಪ್ರತ್ಯಕ್ಷತೆಯನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಕತ್ತಲೆಯಲ್ಲಿರುವವುಗಳನ್ನು ಜನರಿಗೆ ತೋರಿಸುವ ಬೆಳಕಿನಂತೆ ಸತ್ಯವನ್ನು ತೋರಿಸುವವನು” (ನೋಡಿರಿ: ರೂಪಕ ಅಲಂಕಾರ)

John 9:6

ἐποίησεν πηλὸν ἐκ τοῦ πτύσματος

ಮಣ್ಣು ಮತ್ತು ಉಗುಳನ್ನು ಯೇಸು ತನ್ನ ಬೆರಳಿಂದ ಕಲಸಿದನು. ಪರ್ಯಾಯ ಅನುವಾದ: “ಕೆಸರನ್ನು ಮಾಡಲು ಆತನು ಮಣ್ಣು ಮತ್ತು ಉಗುಳನ್ನು ತನ್ನ ಬೆರಳಿಂದ ಕಲಸಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 9:7

νίψαι…ἐνίψατο

ಅವನ ಕಣ್ಣುಗಳನ್ನು ಕೊಳದಲ್ಲಿ ತೊಳೆದುಕೊಳ್ಳಬೇಕೆಂದು ಯೇಸು ಬಯಸಿದನು ಮತ್ತು ಅದನ್ನೇ ಆ ಕುರುಡನು ಮಾಡಿದನೆಂದು ನೀವು ಸ್ಪಷ್ಟವಾಗಿ ಹೇಳಬೇಕಾದ ಅವಶ್ಯಕತೆ ಇರಬಹುದು. (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὃ ἑρμηνεύεται, ἀπεσταλμένος

“ಸಿಲೋವ” ಎನ್ನುವ ಪದದ ಅರ್ಥವನ್ನು ತನ್ನ ಓದುಗಾರರಿಗೆ ವಿವರಿಸಬೇಕೆಂದು ಯೋಹಾನನು ಮುಖ್ಯ ಕಥೆಯಿಂದ ಇಲ್ಲಿ ಚಿಕ್ಕ ವಿರಾಮವನ್ನು ಕೊಟ್ಟಿದ್ದಾನೆ. ಪರ್ಯಾಯ ಅನುವಾದ: “ ‘ಕಳುಹಿಸಲ್ಪಟ್ಟವನು’ ಎಂದರ್ಥ” (ನೋಡಿರಿ: ಹಿನ್ನೆಲೆ ಮಾಹಿತಿ.)

John 9:8

οὐχ οὗτός ἐστιν ὁ καθήμενος καὶ προσαιτῶν

ಜನರ ಆಶ್ಚರ್ಯವನ್ನು ವ್ಯಕ್ತಪಡಿಸಲು ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಈ ಮನುಷ್ಯನು ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನಲ್ಲವೇ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 9:10

ಇನ್ನು ಕುರುಡರಾಗಿದ್ದ ಆ ಮನುಷ್ಯನ ನೆರೆಯವರು ಅವನೊಂದಿಗೆ ಮಾತಾಡುವುದನ್ನು ಮುಂದುವರೆಸುತ್ತಿದ್ದಾರೆ.

πῶς ἠνεῴχθησάν σου οἱ ὀφθαλμοί

ನೀನು ನೋಡುವಂತೆ ಹೇಗೆ ಸಾಧ್ಯವಾಯಿತು? ಅಥವಾ “ನೀನು ಹೇಗೆ ದೃಷ್ಟಿಯನ್ನು ಪಡೆದುಕೊಂಡೆ?”

John 9:11

ἐπέχρισέν μου τοὺς ὀφθαλμοὺς

ನನ್ನ ಕಣ್ಣುಗಳನ್ನು ಮುಚ್ಚಲು ಆತನ ಬೆರಳುಗಳನ್ನು ಉಪಯೋಗಿಸಿದನು. ಯೋಹಾನನು.9:6 ವಚನದಲ್ಲಿ ಈ ರೀತಿಯದ ವಾಕ್ಯವನ್ನು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ.

John 9:13

ಯೇಸು ಯಾವಾಗ ಆ ಮನುಷ್ಯನನ್ನು ಗುಣಪಡಿಸಿದನೆಂದು ಹಿನ್ನೆಲೆ ಸಮಾಚಾರವನ್ನು 14ನೇ ವಚನ ಹೇಳುತ್ತಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἄγουσιν αὐτὸν πρὸς τοὺς Φαρισαίους, τόν ποτε τυφλόν

ಆ ಮನುಷ್ಯನು ಅವರೊಂದಿಗೆ ಫರಿಸಾಯರ ಬಳಿಗೆ ಹೋಗಬೇಕೆಂದು ಜನರು ಬಲವಂತ ಮಾಡಿದರು. ಅವರು ಶಾರೀರಕವಾಗಿ ಅವನನ್ನು ಬಲವಂತ ಮಾಡಲಿಲ್ಲ.

John 9:14

Σάββατον ἐν ᾗ ἡμέρᾳ

ಯೆಹೂದ್ಯರ ವಿಶ್ರಾಂತಿ ದಿನ

John 9:15

πάλιν οὖν ἠρώτων αὐτὸν…οἱ Φαρισαῖοι

ಅದರಿಂದ ಫರಿಸಾಯರು ಸಹ ಅವನನ್ನು ಕೇಳಿದರು

John 9:16

ಯೆಹೂದ್ಯರ ಅಪನ೦ಬಿಕೆಯನ್ನು ಕುರಿತಾಗಿ ಯೋಹಾನನು ಹಿನ್ನೆಲೆ ಸಮಾಚಾರವನ್ನು ಕೊಡುವುದಕ್ಕಾಗಿ 18ನೇ ವಚನದಲ್ಲಿ ಮುಖ್ಯ ಕಥೆಯಿಂದ ಒಂದು ವಿರಾಮವಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

τὸ Σάββατον οὐ τηρεῖ

ಯೆಹೂದ್ಯರ ವಿಶ್ರಾಂತಿ ದಿನದಂದು ಯಾವ ಕೆಲಸ ಮಾಡಬಾರದು ಎನ್ನುವ ಧರ್ಮಶಾಸ್ತ್ರಕ್ಕೆ ಯೇಸು ವಿಧೇಯನಾಗಿರಲಿಲ್ಲವೆಂದು ಇದರ ಅರ್ಥ.

πῶς δύναται ἄνθρωπος ἁμαρτωλὸς τοιαῦτα σημεῖα ποιεῖν

ಆತನು ಪಾಪಾತ್ಮನಲ್ಲವೆಂದು ಯೇಸುವಿನ ಅದ್ಭುತಕಾರ್ಯಗಳು ನಿರೂಪಿಸುತ್ತಿವೆಯೆಂದು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಒಬ್ಬ ಪಾಪಿಯಾದ ಮನುಷ್ಯನು ಇಂತಹ ಅದ್ಭುತಕಾರ್ಯಗಳನ್ನು ಮಾಡಲಾರನು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

σημεῖα

ಇದು ಆಶ್ಚರ್ಯ ಕಾರ್ಯಗಳಿಗೆ ಮತ್ತೊಂದು ಪದವಾಗಿದೆ. ವಿಶ್ವದ ಮೇಲೆ ಸಮಸ್ತ ಅಧಿಕಾರವನ್ನು ಹೊಂದಿರುವವನು ಸರ್ವಶಕ್ತನಾದ ದೇವರೆಂದು “ಅದ್ಭುತಕಾರ್ಯಗಳು” ಆಧಾರಗಳಾಗಿವೆ.

John 9:17

προφήτης ἐστίν

ಆತನು ಪ್ರವಾದಿಯಾಗಿರಬಹುದೆಂದು ನಾನು ಅಂದುಕೊಳ್ಳುತ್ತಿದ್ದೇನೆ

John 9:18

οὐκ ἐπίστευσαν οὖν οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: ಈಗ ಯೆಹೂದ್ಯ ನಾಯಕರು ಇನ್ನು ನಂಬಲಿಲ್ಲ. (ನೋಡಿರಿ: ಉಪಲಕ್ಷಣಾಲಂಕಾರ)

John 9:19

ἠρώτησαν αὐτοὺς

ಅವರು ಎನ್ನುವ ಪದವು ಯೆಹೂದ್ಯ ನಾಯಕರನ್ನು ಸೂಚಿಸುತ್ತಿದೆ.

John 9:21

ἡλικίαν ἔχει, αὐτὸς

ಪ್ರಯದವನಾಗಿದ್ದಾನೆ ಅಥವಾ “ಅವನು ಇನ್ನು ಮಗು ಅಲ್ಲ”

John 9:22

ಯೆಹೂದ್ಯರ ವಿಷಯವಾಗಿ ಆ ಮನುಷ್ಯನ ತಂದೆತಾಯಿ ಹೆದರಿದ್ದಾರೆ ಎನ್ನುವ ವಿಷಯದ ಕುರಿತು ಯೋಹಾನನು ಹಿನ್ನೆಲೆ ಸಮಾಚಾರವನ್ನು ಕೊಡುವುದಕ್ಕಾಗಿ 22ನೇ ವಚನದಲ್ಲಿ ಮುಖ್ಯ ಕಥೆಯಿಂದ ಒಂದು ವಿರಾಮ ಕೊಡಲಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἐφοβοῦντο τοὺς Ἰουδαίους

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು ಅವರಿಗೆ ಏನು ಮಾಡುವರೋ ಎಂದು ಅವರು ಹೆದರಿದ್ದರು” (ನೋಡಿರಿ: ಉಪಲಕ್ಷಣಾಲಂಕಾರ)

ἐφοβοῦντο

ಒಬ್ಬನಿಗೆ ಅಥವಾ ಇತರರಿಗೆ ಯಾವುದಾದರು ಹಾನಿಕಾರಕ ಬೆದರಿಕೆ ಇದ್ದಾಗ ಆ ವ್ಯಕ್ತಿ ಅನುಭವಿಸುವ ಅಹಿತಕರ ಭಾವನೆಯನ್ನು ಇದು ಸೂಚಿಸುತ್ತಿದೆ.

αὐτὸν ὁμολογήσῃ Χριστόν…γένηται

ಯೇಸುವೇ ಕ್ರಿಸ್ತನೆಂದು ಹೇಳುವುದು

ἀποσυνάγωγος

ಸಭಾಮಂದಿರದೊಳಕ್ಕೆ ಹೋಗಲು ಅನುಮತಿ ಹೊಂದಿರುವುದಿಲ್ಲ ಮತ್ತು ಸಭಾಮಂದಿರದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಗುಂಪಿನಲ್ಲಿ ಇವರು ಇರುವುದಕ್ಕೆ ಅನುಮತಿ ಹೊಂದಿರುವುದಿಲ್ಲ ಎಂದು ಹೇಳಲು ಇಲ್ಲಿ “ಸಭಾಮಂದಿರದಿಂದ ಬಹಿಷ್ಕರಿಸಲ್ಪಡುವುದು” ಎನ್ನುವ ಮಾತಿನ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಸಭಾಮಂದಿರದೊಳಕ್ಕೆ ಪ್ರವೇಶಿಸಲು ಅವನಿಗೆ ಅನುಮತಿ ಇರುವುದಿಲ್ಲ” ಅಥವಾ “ಅವನು ಇನ್ನು ಸಭಾಮಂದಿರದಲ್ಲಿ ಸೇರಿಸಲ್ಪಡುವುದಿಲ್ಲ” (ನೋಡಿರಿ: ರೂಪಕ ಅಲಂಕಾರ)

John 9:23

ἡλικίαν ἔχει

ಪ್ರಯದವನಾಗಿದ್ದಾನೆ ಅಥವಾ “ಅವನು ಇನ್ನು ಮಗು ಅಲ್ಲ”. ಯೋಹಾನ.9:21 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

John 9:24

ἐφώνησαν…τὸν ἄνθρωπον

ಇಲ್ಲಿ, “ಅವರು” ಎನ್ನುವ ಪದವು ಯೆಹೂದ್ಯರನ್ನು ಸೂಚಿಸುತ್ತಿದೆ. ಯೋಹಾನ.9:18

δὸς δόξαν τῷ Θεῷ

ಜನರು ವಾಗ್ದಾನ ಮಾಡುವಾಗ ಈ ನುಡಿಗಟ್ಟನ್ನು ಉಪಯೋಗಿಸುತ್ತಿದ್ದರು. ಪರ್ಯಾಯ ಅನುವಾದ: “ದೇವರ ಸನ್ನಿಧಿಯಲ್ಲಿ, ಸತ್ಯವನ್ನು ಹೇಳು” ಅಥವಾ “ದೇವರ ಮುಂದೆ ಸತ್ಯವನ್ನು ಹೇಳು” (ನೋಡಿರಿ: ನುಡಿಗಟ್ಟುಗಳು.)

οὗτος ὁ ἄνθρωπος

ಇದು ಯೇಸುವನ್ನು ಸೂಚಿಸುತ್ತಿದೆ.

John 9:25

ἐκεῖνος

ಇದು ಕುರುಡನಾಗಿದ್ದ ಮನುಷ್ಯನನ್ನು ಸೂಚಿಸುತ್ತಿದೆ.

John 9:26

ಕುರುಡನಾಗಿದ್ದ ಮನುಷ್ಯನೊಂದಿಗೆ ಮಾತಾಡುವುದನ್ನು ಯೆಹೂದ್ಯರು ಮುಂದುವರೆಸುತ್ತಿದ್ದಾರೆ.

John 9:27

τί πάλιν θέλετε ἀκούειν

ಏನು ನಡೆದಿದೆ ಎಂದು ಅವರಿಗೆ ಮತ್ತೆ ಹೇಳಬೇಕೆಂದು ಯೆಹೂದ್ಯ ನಾಯಕರು ಕೇಳಿದಾಗ ಆ ಮನುಷ್ಯನ ಆಶ್ಚರ್ಯವನ್ನು ವ್ಯಕ್ತಪಡಿಸಲು ಈ ಅಭಿಪ್ರಾಯವು ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ನನಗೆ ಏನು ನಡೆದಿದೆಯೆಂದು ನೀವು ಮತ್ತೆ ಕೇಳಬೇಕು ಎಂದು ಭಯಸುವುದು ನನಗೆ ಆಶ್ಚರ್ಯವನ್ನುಂಟುಮಾಡುತ್ತಿದೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

μὴ καὶ ὑμεῖς θέλετε αὐτοῦ μαθηταὶ γενέσθαι

ಆ ಮನುಷ್ಯನ ವಾಕ್ಯಕ್ಕೆ ವ್ಯಂಗ್ಯವನ್ನು ಸೇರಿಸಲು ಈ ಅಭಿಪ್ರಾಯವು ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಯೆಹೂದ್ಯರ ನಾಯಕರು ಯೇಸುವನ್ನು ಹಿಂಬಾಲಿಸಲು ಬಯಸುತ್ತಿಲ್ಲವೆಂದು ಅವನು ತಿಳಿದಿದ್ದನು. ಇಲ್ಲಿ ಅವನು ಅವರನ್ನು ಅಪಹಾಸ್ಯ ಮಾಡುತ್ತಿದ್ದಾನೆ. ಪರ್ಯಾಯ ಅನುವಾದ: “ನೀವು ಸಹ ಆತನ ಶಿಷ್ಯರಾಗಬೇಕೆಂದು ಬಯಸಿದಂತೆ ಕಾಣುತ್ತಿದೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ವ್ಯಂಗ್ಯ -)

John 9:28

σὺ μαθητὴς εἶ ἐκείνου

ನೀನು ಯೇಸುವನ್ನು ಹಿಂಬಾಲಿಸುತ್ತಿದ್ದೀಯ!

ἡμεῖς δὲ τοῦ Μωϋσέως ἐσμὲν μαθηταί

“ನಾವು” ಎನ್ನುವ ಸರ್ವನಾಮ ಪ್ರತ್ಯೇಕಿಸಲ್ಪಟ್ಟಿದೆ. ಯೆಹೂದ್ಯರ ನಾಯಕರು ತಮ್ಮನ್ನು ಕುರಿತು ತಾವೇ ಮಾತಾಡುಕೊಳ್ಳುತ್ತಿದ್ದಾರೆ. ಪರ್ಯಾಯ ಅನುವಾದ: “ಆದರೆ ನಾವು ಮೋಶೆಯನ್ನು ಹಿಂಬಾಲಿಸುತ್ತಿದ್ದೇವೆ” (ನೋಡಿರಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)

John 9:29

ἡμεῖς οἴδαμεν ὅτι Μωϋσεῖ λελάληκεν ὁ Θεός

ದೇವರು ಮೋಶೆಯೊಂದಿಗೆ ಮಾತಾಡಿದ್ದಾನೆಂದು ನಮಗೆ ನಿಶ್ಚಯತೆಯುಂಟು

τοῦτον…οὐκ οἴδαμεν πόθεν ἐστίν

ಇಲ್ಲಿ ಯೆಹೂದ್ಯರ ನಾಯಕರು ಯೇಸುವನ್ನು ಸೂಚಿಸುತ್ತಿದ್ದಾರೆ. ಶಿಷ್ಯರನ್ನು ಕರೆಯಲು ಆತನಿಗೆ ಅಧಿಕಾರವಿಲ್ಲವೆಂದು ಅವರು ಸೂಚಿಸಿದರು. ಪರ್ಯಾಯ ಅನುವಾದ: “ಆತನು ಎಲ್ಲಿಂದ ಬಂದನೆಂದು ಅಥವಾ ಆತನಿಗೆ ಅಧಿಕಾರ ಎಲ್ಲಿಂದ ಬರುತ್ತದೆಂದು ನಮಗೆ ತಿಳಿಯದು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 9:30

ὅτι ὑμεῖς οὐκ οἴδατε πόθεν ἐστίν

ಆತನು ಸ್ವಸ್ಥಪಡಿಸಲು ಶಕ್ತಿ ಹೊಂದಿದ್ದಾನೆಂದು ತಿಳಿದಿದ್ದು ಯೇಸು ಹೊಂದಿರುವ ಅಧಿಕಾರವನ್ನು ಯೆಹೂದ್ಯರ ನಾಯಕರು ಪ್ರಶ್ನಿಸಿದಕ್ಕಾಗಿ ಆ ಮನುಷ್ಯನು ಆಶ್ಚರ್ಯಪಟ್ಟನು. ಪರ್ಯಾಯ ಅನುವಾದ: “ಆತನು ಎಲ್ಲಿಂದ ತನ್ನ ಅಧಿಕಾರವನ್ನು ಹೊಂದಿರುವನೆಂದು ನಿಮಗೆ ತಿಳಿಯದು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 9:31

ἁμαρτωλῶν…οὐκ ἀκούει…τούτου ἀκούει

ಪಾಪಿಷ್ಠರ ಪ್ರಾರ್ಥನೆಗಳಿಗೆ ಉತ್ತರಿಸುವುದಿಲ್ಲ … ದೇವರು ಅವನ ಪ್ರಾರ್ಥನೆಗಳಿಗೆ ಉತ್ತರಕೊಡುತ್ತಾನೆ

John 9:32

ಕುರುಡನಾಗಿದ್ದ ಮನುಷ್ಯನು ಯೆಹೂದ್ಯರೊಂದಿಗೆ ಮಾತಾಡುವುದನ್ನು ಮುಂದುವರೆಸುತ್ತಿದ್ದಾನೆ.

οὐκ ἠκούσθη, ὅτι ἠνέῳξέν τις

ಇದನ್ನು ನಿಷ್ಕ್ರಿಯ ವಾಕ್ಯವಾಗಿದೆ. ಇದನ್ನು ಕ್ರಿಯಾಶೀಲ ರೂಪದಲ್ಲಿ ನೀವು ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಹುಟ್ಟು ಕುರುಡನಾಗಿದ್ದ ಮನುಷ್ಯನನ್ನು ಸ್ವಸ್ತತೆ ಮಾಡಿರುವುದರ ಕುರಿತಾಗಿ ಯಾರು ಇದುವರೆಗೆ ಕೇಳಿರಲಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 9:33

εἰ μὴ ἦν οὗτος παρὰ Θεοῦ, οὐκ ἠδύνατο ποιεῖν οὐδέν

ಈ ವಾಕ್ಯ ದ್ವಂದ್ವ ನಕಾರಾತ್ಮಕ ವಿಧಾನವನ್ನು ಉಪಯೋಗಿಸುತ್ತಿದೆ. “ಅಂತಹ ಒಂದು ಕಾರ್ಯವನ್ನು ದೇವರು ನಂತರವಿರುವ ಮನುಷ್ಯನು ಮಾತ್ರವೇ ಮಾಡಬಲ್ಲನು!” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

John 9:34

ἐν ἁμαρτίαις σὺ ἐγεννήθης ὅλος, καὶ σὺ διδάσκεις ἡμᾶς

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಅವನ ತಂದೆತಾಯಿ ಮಾಡಿರುವ ಪಾಪಗಳ ನಿಮಿತ್ತವಾಗಿ ಆ ಮನುಷ್ಯನು ಹುಟ್ಟು ಕುರುಡನಾಗಿ ಜನ್ಮಿಸಿದ್ದನು ಎಂದು ಸಹ ಇದು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನೀನು ನಿನ್ನ ತಂದೆತಾಯಿಯವರ ಪಾಪಗಳ ಫಲವಾಗಿ ಜನಿಸಿದ್ದೀಯ. ನಮಗೆ ಭೋದಿಸಲು ನಿನಗೆ ಅರ್ಹತೆ ಇಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ἐξέβαλον αὐτὸν ἔξω

ಅವನನ್ನು ಸಭಾಮಂದಿರದಿಂದ ಹೊರಹಾಕಿದರು

John 9:35

ಯೇಸು ಸ್ವಸ್ಥ ಮಾಡಿದ ಮನುಷ್ಯನನ್ನು ಕಂಡನು (ಯೋಹಾನನು.9:1-7) ಮತ್ತು ಅವನೊಂದಿಗೆ ಹಾಗೂ ಜನರೊಂದಿಗೆ ಮಾತಾಡುವುದಕ್ಕೆ ಪ್ರಾರಂಭಿಸಿದನು.

πιστεύεις εἰς

“ಯೇಸುವನ್ನು ನಂಬುವುದು”, ಆತನು ದೇವರ ಮಗನೆಂದು ನಂಬುವುದು, ಆತನನ್ನು ರಕ್ಷಕನಾಗಿ ನಂಬುವುದು ಮತ್ತು ಆತನನ್ನು ಮಹಿಮೆಪಡಿಸುವ ರೀತಿಯಲ್ಲಿ ಜೀವಿಸುವುದೆಂದು ಇದರ ಅರ್ಥವಾಗಿದೆ.

τὸν Υἱὸν τοῦ Ἀνθρώπου

“ಮನುಷ್ಯ ಕುಮಾರನು” ಮತ್ತೊಬ್ಬ ವ್ಯಕ್ತಿಯಂತಿರುವನೆಂದು ಯೇಸು ಹೇಳುತ್ತಿದ್ದಾನೆ ಎಂದು ಓದುಗಾರರು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. “ಮನುಷ್ಯ ಕುಮಾರನು” ಎಂದು ಯೇಸು ತನ್ನ ಕುರಿತಾಗಿ ಮಾತಾಡುತ್ತಿದ್ದಾನೆಂದು ಹುಟ್ಟು ಕುರುಡನಾಗಿದ್ದ ಆ ಮನುಷ್ಯನು ಗ್ರಹಿಸಲಿಲ್ಲ. 37ನೇ ವಚನದವರೆಗೂ ಯೇಸು ಮನುಷ್ಯ ಕುಮಾರನಾಗಿದ್ದನೆಂದು ಆ ಮನುಷ್ಯನು ತಿಳಿಯದ ಹಾಗೆ ನೀವು ಅನುವಾದ ಮಾಡಬೇಕು.

John 9:39

εἰς τὸν κόσμον τοῦτον ἦλθον

“ಲೋಕ” ಎನ್ನುವ ಪದವು “ಪ್ರಪಂಚದಲ್ಲಿ ಜೀವಿಸುತ್ತಿರುವ ಜನರನ್ನು” ಸೂಚಿಸುವ ಸಮಾನರ್ಥ ಪದವಾಗಿದೆ. ಪರ್ಯಾಯ ಅನುವಾದ: “ಈ ಲೋಕದ ಜನರೊಂದಿಗೆ ಜೀವಿಸಲು ಬಂದನು” (ನೋಡಿರಿ: ಲಕ್ಷಣಾಲಂಕಾರ)

ἵνα οἱ μὴ βλέποντες, βλέπωσιν; καὶ οἱ βλέποντες, τυφλοὶ γένωνται

ಇಲ್ಲಿ “ದೃಷ್ಟಿ ಇರುವವರು” ಮತ್ತು “ಕುರುಡರು” ಎನ್ನುವ ಪದಗಳು ರೂಪಕಾಲಂಕಾರಗಳಾಗಿವೆ. ಆತ್ಮೀಯವಾಗಿ ಕುರುಡರಾಗಿರುವವರಿಗೆ ಮತ್ತು ಶಾರೀರಕವಾಗಿ ಕುರುಡರಾಗಿರುವವರಿಗೆ ನಡುವೆ ಇರುವ ವ್ಯತ್ಯಾಸವನ್ನು ಯೇಸು ತೋರಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಆತ್ಮೀಯವಾಗಿ ಕುರುಡರಾಗಿದ್ದು ದೇವರನ್ನು ನೋಡಬೇಕೆಂದು ಬಯಸಿದವರು, ಆತನನ್ನು ನೋಡಬಹುದು ಮತ್ತು ದೇವರನ್ನು ನಾವು ನೋಡುತ್ತಿದ್ದೇವೆ ಎಂದು ಸುಳ್ಳಾಗಿ ಯೋಚಿಸುವವರು ಅವರ ಅಂಧಕಾರದಲ್ಲಿಯೇ ಇರುವರು” (ನೋಡಿರಿ: ರೂಪಕ ಅಲಂಕಾರ)

John 9:40

μὴ καὶ ἡμεῖς τυφλοί ἐσμεν

ನಾವು ಆತ್ಮೀಯವಾಗಿ ಕುರುಡರಾಗಿದ್ದೇವೆಂದು ನೀವು ಯೋಚಿಸುತ್ತಿದ್ದೀರ?

John 9:41

εἰ τυφλοὶ ἦτε, οὐκ ἂν εἴχετε ἁμαρτίαν

ಇಲ್ಲಿ “ಕುರುಡುತನ” ಎನ್ನುವ ಮಾತು ದೇವರ ಸತ್ಯವನ್ನು ತಿಳಿಯದಿರುವುದು ಎನ್ನುವುದಕ್ಕೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನೀವು ದೇವರ ಸತ್ಯವನ್ನು ತಿಳಿದುಕೊಳ್ಳ ಬಯಸಿದರೆ, ನಿಮ್ಮ ದೃಷ್ಟಿಯನ್ನು ನೀವು ಹೊಂದಿಕೊಳ್ಳಬಹುದಾಗಿತ್ತು. (ನೋಡಿರಿ: ರೂಪಕ ಅಲಂಕಾರ)

νῦν δὲ λέγετε, ὅτι βλέπομεν, ἡ ἁμαρτία ὑμῶν μένει

ಇಲ್ಲಿ “ನೋಡುವುದು” ಎನ್ನುವ ಮಾತು ದೇವರ ಸತ್ಯವನ್ನು ತಿಳಿದುಕೊಳ್ಳುವುದು ಎನ್ನುವುದಕ್ಕೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನೀವು ದೇವರ ಸತ್ಯವನ್ನು ತಿಳಿದಿದ್ದೇವೆಂದು ಸುಳ್ಳಾಗಿ ಯೋಚಿಸುತ್ತಿದ್ದೀರಿ ಆದಕಾರಣ ನೀವು ಕುರುಡರಾಗಿ ಉಳಿದಿರುತ್ತೀರಿ” (ನೋಡಿರಿ: ರೂಪಕ ಅಲಂಕಾರ)

John 10

ಯೋಹಾನನು 10 ಸಾಧಾರಣ ಅಂಶಗಳು

ಈ ಅಧ್ಯಾಯದಲ್ಲಿರುವ ವಿಶೇಷವಾದ ಉದ್ದೇಶ್ಯಗಳು

ದೇವ ದೂಷಣೆ

ಒಬ್ಬ ವ್ಯಕ್ತಿ ತಾನೇ ದೇವರೆಂದು ಹೇಳಿಕೊಂಡರೆ ಅಥವಾ ಅವನು ಮಾತಾಡಬೇಕೆಂದು ದೇವರು ಹೇಳದಿದ್ದರು, ಅವನು ಮಾತಾಡಬೇಕೆಂದು ದೇವರು ಅವನೊಂದಿಗೆ ಹೇಳಿದ್ದಾನೆಂದು ಒಬ್ಬ ವ್ಯಕ್ತಿ ಹೇಳಿದರೆ, ಅದನ್ನು ದೇವ ದೂಷಣೆ ಅನ್ನುತ್ತಾರೆ. ದೇವ ದೂಷಣೆ ಮಾಡುವವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆ ಧರ್ಮಶಾಸ್ತ್ರವು ಇಸ್ರಾಯೇಲ್ಯರನ್ನು ಆಜ್ಞಾಪಿಸಿತ್ತು. “ನಾನು ಮತ್ತು ತಂದೆ ಒಂದೇ ಆಗಿದ್ದೀವಿ” ಎಂದು ಯೇಸು ಹೇಳಿದಾಗ ಆತನು ದೇವ ದೂಷಣೆ ಮಾಡುತ್ತಿದ್ದಾನೆಂದು ಯೆಹೂದ್ಯರು ನೆನೆದುಕೊಂಡು ಆತನನ್ನು ಕೊಲ್ಲುವುದಕ್ಕೆ ಕಲ್ಲುಗಳನ್ನು ಎತ್ತಿಕೊಂಡರು. (ನೋಡಿರಿ: ದೂಷಣೆ, ದೇವದೂಷಣೆ, ಧರ್ಮನಿಂದೆಯ ಮತ್ತು ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ,)

ಈ ಅಧ್ಯಾಯದಲ್ಲಿರುವ ಪ್ರಾಮುಖ್ಯವಾದ ರೂಪಕಾಲಂಕಾರಗಳು

ಕುರಿಗಳು

ಜನರು ಕುರಿಗಳಂತೆ ಇದ್ದಾರೆಂದು ಯೇಸು ಹೇಳಿದರು ಯಾಕಂದರೆ ಅವರು ಸರಿಯಾಗಿ ಯೋಚಿಸುವುದಿಲ್ಲ, ಅವರನ್ನು ಕಾಯುವವರಿಂದ ಅನೇಕ ಬಾರಿ ದೂರವಾಗಿ ಹೋಗುತ್ತವೆ, ಮತ್ತು ಬೇರೆ ಪ್ರಾಣಿಗಳು ಅವುಗಳ ಮೇಲೆ ದಾಳಿ ಮಾಡಿದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ದೇವರ ಜನರು ಸಹ ಆತನಿಗೆ ವಿರೋಧವಾಗಿ ನಡೆದುಕೊಳ್ಳುತ್ತಾರೆ ಮತ್ತು ಅವರು ಯಾವಾಗ ತಪ್ಪು ಮಾಡುತ್ತಾರೆಂದು ಅವರಿಗೆ ತಿಳಿಯದು.

ಕುರಿಗಳ ದೊಡ್ಡಿ

ಕುರಿಗಳ ದೊಡ್ಡಿ ಎಂದರೆ ಒಂದು ಸುತ್ತು ಕಲ್ಲುಗಳ ಗೋಡೆ ಇರುವ ಸ್ಥಳವಾಗಿರುತ್ತದೆ, ಕುರುಬರು ತಮ್ಮ ಕುರಿಗಳನ್ನು ಇಲ್ಲಿ ಇಡುತ್ತಿದರು. ಒಮ್ಮೆ ಅವುಗಳು ಕುರಿಗಳ ದೊಡ್ಡಿಯಲ್ಲಿದ್ದರೆ, ಕುರಿಗಳು ಹೊರಗೆ ಓಡುವುದಕ್ಕೆ ಸಾಧ್ಯವಿಲ್ಲ ಮತ್ತು ಪ್ರಾಣಿಗಳಾಗಲಿ ಕಳ್ಳರಾಗಲಿ ಸುಲಭವಾಗಿ ಅವುಗಳನ್ನು ಹಿಡಿದುಕೊಂಡು ಕೊಲ್ಲುವುದಕ್ಕೆ ಅಥವಾ ಕದಿಯುವುದಕ್ಕೆ ಸಾಧ್ಯವಿಲ್ಲ.

ಪ್ರಾಣವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು

ಆತನ ಪ್ರಾಣವು ಒಂದು ಭೌತಿಕ ವಸ್ತುವಂತೆ ಇರುತ್ತದೆಂದು, ಅದನ್ನು ಆತನು ಬಯಸಿದಾಗ ಕೊಡಬಹುದು ಅಂದರೆ ಸಾಯುವುದಕ್ಕೆ ರೂಪಕಾಲಂಕಾರ ಅಥವಾ ಆತನು ಬಯಸಿದಾಗ ತೆಗೆದುಕೊಳ್ಳಬಹುದು ಅಂದರೆ ಮತ್ತೆ ಜೀವಂತವಾಗುವುದಕ್ಕೆ ರೂಪಕಾಲಂಕಾರ, ಎಂದು ಯೇಸು ತನ್ನ ಪ್ರಾಣದ ಕುರಿತು ಹೇಳುತ್ತಿದ್ದಾನೆ.

John 10:1

ಯೇಸು ಸಾಮ್ಯಗಳಿಂದ ಮಾತಾಡಲು ಪ್ರಾರಂಭಿಸುತ್ತಾನೆ. (ನೋಡಿರಿ: ಸಾಮ್ಯಗಳು.)

ಫರಿಸಾಯರೊಂದಿಗೆ ಮಾತಾಡುವುದನ್ನು ಯೇಸು ಮುಂದುವರೆಸುತ್ತಿದ್ದಾನೆ. ಇದು ಯೋಹಾನನು.9:35 ವಚನದಲ್ಲಿ ಪ್ರಾರಂಭವಾದ ಕಥೆಯ ಅದೇ ಭಾಗವಾಗಿರುತ್ತದೆ.

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

αὐλὴν τῶν προβάτων

ಇದು ಕುರುಬನು ತನ್ನ ಕುರಿಗಳನ್ನು ಇಡುವ ಬೇಲಿ ಹಾಕಲ್ಪಟ್ಟಿರುವ ಸ್ಥಳವಾಗಿದೆ.

κλέπτης…καὶ λῃστής

ಇದು ಒತ್ತಾಯಿಸಿ ಹೇಳಲು ಒಂದೇ ಅರ್ಥ ಹೊಂದಿರುವ ಎರಡು ಪದಗಳ ಉಪಯೋಗವಾಗಿರುತ್ತದೆ. (ನೋಡಿರಿ: ದ್ವಿರುಕ್ತಿಗಳು)

John 10:3

τούτῳ ὁ θυρωρὸς ἀνοίγει

ಕುರುಬನಿಗಾಗಿ ಕಾವಲುಗಾರನು ಬಾಗಿಲನ್ನು ತೆರೆಯುವನು

ὁ θυρωρὸς

ಇವನು, ಕುರುಬನು ದೂರದಲ್ಲಿರುವ ಸಮಯದಲ್ಲಿ ಕುರುಗಳ ದೊಡ್ಡಿಯ ಬಾಗಿಲನ್ನು ರಾತ್ರಿಯ ವೇಳೆಯಲ್ಲಿ ಕಾವಲುಗಾಯುವ ಓಲೇಕಾರನಾಗಿರುತ್ತಾನೆ.

τὰ πρόβατα τῆς φωνῆς αὐτοῦ ἀκούει

ಕುರಿಗಳು ಕುರುಬನ ಸ್ವರವನ್ನು ಕೇಳುತ್ತವೆ

John 10:4

ἔμπροσθεν αὐτῶν πορεύεται

ಅವನು ಅವುಗಳ ಮುಂದೆ ಹೋಗುತ್ತಾನೆ

ὅτι οἴδασιν τὴν φωνὴν αὐτοῦ

ಯಾಕಂದರೆ ಅವು ಅವನ ಸ್ವರವನ್ನು ತಿಳಿದಿರುತ್ತವೆ

John 10:6

ἐκεῖνοι…οὐκ ἔγνωσαν

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ” ಅಥವಾ 2) “ಜನರು ಅರ್ಥಮಾಡಿಕೊಳ್ಳಲಿಲ್ಲ.”

ταύτην τὴν παροιμίαν

ಇದು ಕುರುಬರ ಕೆಲಸದಿಂದ ತೆಗೆಯಲ್ಪಟ್ಟ ಹಾಗೂ ರೂಪಕಾಲಂಕಾರಗಳನ್ನು ಉಪಯೋಗಿಸಲಾಗಿರುವ ದೃಷ್ಟಾಂತವಾಗಿದೆ. “ಕುರುಬನು” ಎನ್ನುವ ಪದವು ಯೇಸುವಿಗೆ ಉಪಯೋಗಿಸಲಾದ ರೂಪಕಾಲಂಕಾರವಾಗಿದೆ. “ಕುರಿಗಳು” ಎನ್ನುವ ಪದವು ಯೇಸುವನ್ನು ಹಿಂಬಾಲಿಸುತ್ತಿರುವವರನ್ನು ಸೂಚಿಸುತ್ತಿದೆ ಮತ್ತು “ಅಪರಿಚಿತರು” ಎನ್ನುವ ಪದವು ಜನರನ್ನು ಮೋಸಗೊಳಿಸುತ್ತಿರುವ ಯೆಹೂದ್ಯರ ನಾಯಕರನ್ನು ಹಾಗೂ ಫರಿಸಾಯರನ್ನು ಸಹ ಸೂಚಿಸುತ್ತಿದೆ. (ನೋಡಿರಿ: ರೂಪಕ ಅಲಂಕಾರ)

John 10:7

ಯೇಸು ಹೇಳಿರುವ ಸಾಮ್ಯಗಳ ಅರ್ಥವನ್ನು ವಿವರಿಸಲು ಪ್ರಾರಂಭಿಸುತ್ತಾನೆ.

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ἐγώ εἰμι ἡ θύρα τῶν προβάτων

ಇಲ್ಲಿ “ಬಾಗಿಲು” ಎನ್ನುವ ಪದವು ಆತನ ಸನ್ನಿಧಿಯಲ್ಲಿ ವಾಸಿಸುವ ದೇವರ ಜನರ ದೊಡ್ಡಿಗೆ ಪ್ರವೇಶವನ್ನು ಯೇಸು ಕೊಡುವನು ಎನ್ನುವ ಮಾತಿಗೆ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಕುರಿಗಳ ದೊಡ್ಡಿಯೊಳಕ್ಕೆ ಕುರಿಗಳು ಪ್ರವೇಶಿಸುವ ಬಾಗಿಲಂತೆ ನಾನಿದ್ದೇನೆ” (ನೋಡಿರಿ: ರೂಪಕ ಅಲಂಕಾರ)

John 10:8

πάντες ὅσοι ἦλθον πρὸ ἐμοῦ

ಇದು ಜನರಿಗೆ ಬೋಧಿಸಿರುವ ಬೇರೆ ಬೋಧಕರನ್ನು ಅಂದರೆ ಫರಿಸಾಯರು ಹಾಗೂ ಬೇರೆ ಯೆಹೂದ್ಯರ ನಾಯಕರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನನ್ನ ಅಧಿಕಾರವಿಲ್ಲದೆ ಬಂದ ಎಲ್ಲ ಬೋಧಕರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

κλέπται…καὶ λῃσταί

ಈ ಪದಗಳು ರೂಪಕಾಲಂಕಾರಗಳಾಗಿವೆ. ಯೇಸು ಆ ಬೋಧಕರನ್ನು “ಕಳ್ಳರು ಮತ್ತು ದರೋಡೆಕೋರರು” ಎಂದು ಕರೆಯುತ್ತಿದ್ದಾನೆ ಯಾಕಂದರೆ ಅವರ ಬೋಧನೆಗಳು ಸುಳ್ಳಾಗಿದ್ದವು ಮತ್ತು ಸತ್ಯವನ್ನು ಅರಿಯದೆ ದೇವರ ಜನರನ್ನು ನಡೆಸಲು ಪ್ರಯತ್ನಿಸುತ್ತಿದ್ದರು. ಆದಕಾರಣ, ಅವರು ಜನರನ್ನು ಮೋಸಮಾಡಿದ್ದರೆ. (ನೋಡಿರಿ: ರೂಪಕ ಅಲಂಕಾರ)

John 10:9

ἐγώ εἰμι ἡ θύρα

ಇಲ್ಲಿ “ಬಾಗಿಲು” ಎನ್ನುವ ಪದವು ರೂಪಕಾಲಂಕಾರವಾಗಿದೆ. ತನ್ನನ್ನು ತಾನೇ “ಬಾಗಿಲು” ಎಂದು ಸೂಚಿಸಿಕೊಂಡಾಗ, ದೇವರ ರಾಜ್ಯವನ್ನು ಪ್ರವೇಶಿಸಲು ಸತ್ಯವಾದ ಮಾರ್ಗವು ಆತನೇ ಆಗಿದ್ದಾನೆಂದು ಯೇಸು ತೋರಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನಾನು ನಾನೇ ಬಾಗಿಲು ಹಾಗೆ ಇದ್ದೇನೆ” (ನೋಡಿರಿ: ರೂಪಕ ಅಲಂಕಾರ)

νομὴν

“ಹುಲ್ಲುಗಾವಲು” ಎನ್ನುವ ಪದವು ಕುರಿಗಳು ಮೇಯಲು ಹೋಗುವ ಹುಲ್ಲಿರುವ ಸ್ಥಳ ಎಂದರ್ಥ.

John 10:10

οὐκ ἔρχεται εἰ μὴ ἵνα κλέψῃ

ಇದು ದ್ವಂದ್ವ ನಕಾರಾತ್ಮಕವಾಗಿದೆ. ಕೆಲವೊಂದು ಭಾಷೆಗಳಲ್ಲಿ ಸಕಾರಾತ್ಮಕವಾದ ವಾಕ್ಯವನ್ನು ಉಪಯೋಗಿಸುವುದು ಸಹಜವಾಗಿರುತ್ತದೆ. ಪರ್ಯಾಯ ಅನುವಾದ: “ಕದಿಯುವುದಕ್ಕೆ ಮಾತ್ರ ಬರುವನು” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

κλέψῃ, καὶ θύσῃ, καὶ ἀπολέσῃ

ಇಲ್ಲಿ “ಕುರಿಗಳು” ಎನ್ನುವ ಪದವು ದೇವರ ಜನರನ್ನು ಸೂಚಿಸುವ ಅನ್ವಯಿಸಲ್ಪಟ್ಟ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಕುರಿಗಳನ್ನು ಕದ್ದುಕೊಳ್ಳುವುದಕ್ಕೆ ಮತ್ತು ಕೊಲ್ಲುವುದಕ್ಕೆ ಮತ್ತು ನಾಶಮಾಡುವುದಕ್ಕೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ರೂಪಕ ಅಲಂಕಾರ)

ἵνα ζωὴν ἔχωσιν

“ಅವು” ಎನ್ನುವ ಪದವು ಕುರಿಗಳನ್ನು ಸೂಚಿಸುತ್ತಿದೆ. “ಜೀವ” ಎನ್ನುವ ಪದವು ನಿತ್ಯ ಜೀವವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಆದಕಾರಣ ಅವು ಯಾವ ಕೊರತೆಯಿಲ್ಲದೆ ಜೀವಿಸುವವು”

John 10:11

ಒಳ್ಳೆಯ ಕುರುಬನ ಕುರಿತಾದ ಸಾಮ್ಯವನ್ನು ಯೇಸು ಮುಂದುವರೆಸುತ್ತಿದ್ದಾನೆ.

ἐγώ εἰμι ὁ ποιμὴν ὁ καλός

ಇಲ್ಲಿ “ಒಳ್ಳೆ ಕುರುಬ” ಎನ್ನುವ ಪದವು ಯೇಸುವನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ಒಳ್ಳೆಯ ಕುರುಬನಂತೆ ಇದ್ದೇನೆ” (ನೋಡಿರಿ: ರೂಪಕ ಅಲಂಕಾರ)

τὴν ψυχὴν αὐτοῦ τίθησιν

ಏನಾದರು ಕೊಡುವುದು ಎಂದರೆ ಅದರ ಮೇಲೆ ನಿಯಂತ್ರಣವನ್ನು ಬಿಟ್ಟುಬಿಡುವುದು. ಇದು ಸೌಮ್ಯವಾಗಿ ಸಾಯುವುದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಸಾಯುವುದು” (ನೋಡಿರಿ: ಸೌಮ್ಯೋಕ್ತಿಗಳು.)

John 10:12

ὁ μισθωτὸς

“ಕೂಲಿಯಾಳು” ಎನ್ನುವ ಪದವು ಯೆಹೂದ್ಯರ ನಾಯಕರನ್ನು ಮತ್ತು ಬೋಧಕರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ಕೂಲಿಯಾಳುಗಳಂತಿರುವವರು” (ನೋಡಿರಿ: ರೂಪಕ ಅಲಂಕಾರ)

ἀφίησιν τὰ πρόβατα

“ಕುರಿಗಳು” ಎನ್ನುವ ಪದವು ದೇವರ ಜನರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಕೂಲಿಯಾಳು ಕುರಿಗಳನ್ನು ಬಿಟ್ಟು ಹೋಗಿದಂತೆ, ಯೆಹೂದ್ಯರ ನಾಯಕರು ಮತ್ತು ಬೋಧಕರು ದೇವರ ಜನರನ್ನು ಕುರಿತು ಚಿಂತಿಸುವುದಿಲ್ಲವೆಂದು ಯೇಸು ಹೇಳುತ್ತಿದ್ದಾನೆ. (ನೋಡಿರಿ: ರೂಪಕ ಅಲಂಕಾರ)

John 10:13

οὐ μέλει…περὶ τῶν προβάτων

“ಕುರಿಗಳು” ಎನ್ನುವ ಪದವು ದೇವರ ಜನರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಕೂಲಿಯಾಳು ಕುರಿಗಳನ್ನು ಬಿಟ್ಟು ಹೋಗಿದಂತೆ, ಯೆಹೂದ್ಯರ ನಾಯಕರು ಮತ್ತು ಬೋಧಕರು ದೇವರ ಜನರನ್ನು ಕುರಿತು ಚಿಂತಿಸುವುದಿಲ್ಲವೆಂದು ಯೇಸು ಹೇಳುತ್ತಿದ್ದಾನೆ. (ನೋಡಿರಿ: ರೂಪಕ ಅಲಂಕಾರ)

John 10:14

ἐγώ εἰμι ὁ ποιμὴν ὁ καλός

“ಒಳ್ಳೆಯ ಕುರುಬ” ಎನ್ನುವ ಮಾತು ಇಲ್ಲಿ ಯೇಸುವನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ಒಳ್ಳೆಯ ಕುರುಬನಂತೆ ಇದ್ದೇನೆ” (ನೋಡಿರಿ: ರೂಪಕ ಅಲಂಕಾರ)

John 10:15

γινώσκει με ὁ Πατὴρ, κἀγὼ γινώσκω τὸν Πατέρα

ಬೇರೆಯವರು ಅವರನ್ನು ತಿಳಿದಿರದ ರೀತಿಯಲ್ಲಿ ತಂದೆಯಾದ ದೇವರು ಮತ್ತು ದೇವರ ಮಗನು ಒಬ್ಬರನ್ನು ಕುರಿತು ಒಬ್ಬರು ಚೆನ್ನಾಗಿ ತಿಳಿದಿರುತ್ತಾರೆ. “ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τὴν ψυχήν μου τίθημι ὑπὲρ τῶν προβάτων

ಆತನ ಕುರಿಗಳಿಗಾಗಿ ಆತನು ಸಾಯುತ್ತಾನೆ ಎಂದು ಯೇಸು ಸೌಮ್ಯವಾಗಿ ಹೇಳುವುದನ್ನು ಇದು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನಾನು ಕುರಿಗಳಿಗಾಗಿ ಸಾಯುತ್ತೇನೆ” (ನೋಡಿರಿ: ಸೌಮ್ಯೋಕ್ತಿಗಳು.)

John 10:16

ἄλλα πρόβατα ἔχω

ಇಲ್ಲಿ “ಬೇರೆ ಕುರಿಗಳು” ಎನ್ನುವ ಮಾತಿಗೆ ಯೆಹೂದ್ಯರಾಗಿಲ್ಲದ ಯೇಸು ಹಿಂಬಾಲಕರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. (ನೋಡಿರಿ: ರೂಪಕ ಅಲಂಕಾರ)

μία ποίμνη, εἷς ποιμήν

ಇಲ್ಲಿ “ಕುರಿಹಿಂಡು” ಮತ್ತು “ಕುರುಬನು” ಎನ್ನುವ ಪದಗಳು ರೂಪಕಾಲಂಕಾರಗಳಾಗಿವೆ. ಯೇಸು ಹಿಂಬಾಲಕರಾದ ಯೆಹೂದ್ಯರು, ಯೆಹೂದ್ಯರಾಗದವರೆಲ್ಲರೂ ಒಂದೇ ಕುರಿಹಿಂಡಿನಂತೆ ಇರುತ್ತಾರೆ. ಅವರೆಲ್ಲರನ್ನು ಸಂರಕ್ಷಿಸುವ ಕುರುಬನಂತೆ ಆತನು ಇರುವನು. (ನೋಡಿರಿ: ರೂಪಕ ಅಲಂಕಾರ)

John 10:17

ಯೇಸು ಜನರೊಂದಿಗೆ ಮಾತಾಡುವುದನ್ನು ಮುಗಿಸುತ್ತಾನೆ.

διὰ τοῦτό, με ὁ Πατὴρ ἀγαπᾷ, ὅτι ἐγὼ τίθημι τὴν ψυχήν μου

ಮಾನವರ ಪಾಪಗಳಿಗಾಗಿ ದೇವರ ಮಗನು ತನ್ನ ಪ್ರಾಣವನ್ನು ಕೊಡುವುದೇ ದೇವರ ನಿತ್ಯ ಪ್ರಣಾಳಿಕೆಯಾಗಿತ್ತು. ತಂದೆಯ ಮೇಲೆ ಮಗನ ಪ್ರೀತಿಯು ಮತ್ತು ಮಗನ ಮೇಲೆ ತಂದೆಯ ಪ್ರೀತಿಯು ಶಿಲುಬೆಯ ಮೇಲೆ ಯೇಸುವಿನ ಮರಣ ಪ್ರತ್ಯಕ್ಷಪಡಿಸುತ್ತಿದೆ.

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἀγαπᾷ

ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆ. ಇಂತಹ ಪ್ರೀತಿ ಬೇರೆಯವರ ಕುರಿತು ಚಿಂತಿಸುತ್ತದೆ ಮತ್ತು ಅವರು ಏನು ಮಾಡಿದರೂ ಲೆಕ್ಕಮಾಡುವುದಿಲ್ಲ.

ἐγὼ τίθημι τὴν ψυχήν μου, ἵνα πάλιν λάβω αὐτήν

ಇದು ಯೇಸು ಮರಣಹೊಂದುವನೆಂದು ಮತ್ತು ಜೀವಂತನಾಗಿ ಬರುವನೆಂದು ಹೇಳುವ ಸೌಮ್ಯವಾದ ಪದ್ಧತಿಯಾಗಿದೆ. ಪರ್ಯಾಯ ಅನುವಾದ: “ನಾನು ಮತ್ತೆ ಜೀವದಿಂದ ಎದ್ದುಬರಲು ನಾನು ಸಾಯುವುದಕ್ಕೆ ನನ್ನನ್ನು ನಾನು ಒಪ್ಪಿಸಿಕೊಡುತ್ತಿದ್ದೇನೆ” (ನೋಡಿರಿ: ಸೌಮ್ಯೋಕ್ತಿಗಳು.)

John 10:18

ἐγὼ τίθημι αὐτὴν ἀπ’ ἐμαυτοῦ

ಯೇಸು ತನ್ನ ಸ್ವಂತ ಜೀವವನ್ನು ಅರ್ಪಿಸುವನು ಎಂದು ಒತ್ತಾಯಿಸಿ ಹೇಳಲು “ನಾನೇ” ಎನ್ನುವ ಆತ್ಮವಾಚಕ ಸರ್ವನಾಮವನ್ನು ಇಲ್ಲಿ ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: “ನನ್ನಷ್ಟಕ್ಕೆ ನಾನೇ ಅದನ್ನು ಕೊಟ್ಟಿದ್ದೇನೆ” (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

ταύτην τὴν ἐντολὴν ἔλαβον παρὰ τοῦ Πατρός μου

ಇದನ್ನು ಮಾಡಬೇಕೆಂದೇ ನನ್ನ ತಂದೆ ನನಗೆ ಆಜ್ಞಾಪಿಸಿದ್ದಾನೆ. “ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 10:19

ಯೇಸು ಹೇಳಿದಕ್ಕೆ ಯೆಹೂದ್ಯರು ಹೇಗೆ ಪ್ರತಿಸ್ಪಂದಿಸಿದರೆಂದು ಈ ವಚನಗಳು ಹೇಳುತ್ತಿವೆ.

John 10:20

τί αὐτοῦ ἀκούετε

ಯೇಸುವಿನ ಮಾತುಗಳನ್ನು ಜನರು ಕೇಳಬಾರದೆನ್ನುವ ಅಂಶವನ್ನು ಒತ್ತಾಯಿಸಿ ಹೇಳುವದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ಅವನ ಮಾತುಗಳನ್ನು ಕೇಳಬೇಡಿರಿ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 10:21

δαιμόνιον δύναται τυφλῶν ὀφθαλμοὺς ἀνοῖξαι

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ನಿಶ್ಚಯವಾಗಿ ದೆವ್ವ ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವಿಲ್ಲ!” ಅಥವಾ “ನಿಶ್ಚಯವಾಗಿ ದೆವ್ವ ಕುರುಡರಿಗೆ ದೃಷ್ಟಿಯನ್ನು ಕೊಡಲು ಸಾಧ್ಯವಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 10:22

ಪ್ರತಿಷ್ಠೆಯ ಹಬ್ಬವು ನಡೆಯುವಾಗ, ಯೆಹೂದ್ಯರು ಯೇಸುವನ್ನು ಪ್ರಶ್ನಿಸಲು ಪ್ರಾರಂಭಿಸಿದರು. 22 ಮತ್ತು 23ನೇ ವಚನಗಳು ಕಥೆಯ ಕ್ರಮದ ಹಿನ್ನೆಲೆ ಸಮಾಚಾರವನ್ನು ಕೊಡುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἐνκαίνια

ದೇವರು ಸ್ವಲ್ಪ ಎಣ್ಣೆಯಲ್ಲಿ ಎಂಟು ದಿನಗಳ ಕಾಲ ದೀಪವನ್ನು ಬೆಳಗಿಸಿದ ಅದ್ಭುತಕಾರ್ಯವನ್ನು ಸ್ಮರಿಸಲು ಯೆಹೂದ್ಯರು ಆಚರಿಸುತ್ತಿದ್ದ ಎಂಟು ದಿನಗಳ ಚಳಿಗಾಲದ ಹಬ್ಬವಾಗಿತ್ತು. ಯೆಹೂದ್ಯರ ದೇವಾಲಯವನ್ನು ದೇವರಿಗೆ ಪ್ರತಿಷ್ಠಿತ ಮಾಡಲು ಅವರು ದೀಪವನ್ನು ಬೆಳಗಿಸಿದರು. ಯಾವುದನ್ನಾದರೂ ಪ್ರತಿಷ್ಠಿತ ಮಾಡುವುದು ಎಂದರೆ ಅದನ್ನು ವಿಶೇಷ ಉದ್ದೇಶ್ಯಕ್ಕಾಗಿ ಉಪಯೋಗಿಸಲು ವಾಗ್ದಾನ ಮಾಡುವುದೆಂದು ಅರ್ಥ.

John 10:23

περιεπάτει ὁ Ἰησοῦς ἐν τῷ ἱερῷ

ಯೇಸು ನಡೆಯುತ್ತಿದ ಸ್ಥಳ ವಾಸ್ತವಿಕವಾಗಿ ದೇವಾಲಯ ಕಟ್ಟಡದ ಹೊರಗಿನ ಪ್ರಾಂಗಣವಾಗಿತ್ತು. ಪರ್ಯಾಯ ಅನುವಾದ: “ಯೇಸು ದೇವಾಲಯದ ಪ್ರಾಂಗಣದಲ್ಲಿ ನಡೆಯುತ್ತಿದ್ದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

στοᾷ

ಇದು ಕಟ್ಟಡದ ದ್ವಾರಕ್ಕೆ ಜೋಡಿಸಲಾದ ನಿರ್ಮಾಣವಾಗಿತ್ತದೆ; ಇದಕ್ಕೆ ಮೇಲ್ಛಾವಣಿ ಇರುವುದು ಮತ್ತು ಇದಕ್ಕೆ ಗೋಡೆಗಳು ಇರಬಹುದು ಅಥವಾ ಇಲ್ಲದಿರಬಹುದು.

John 10:24

ἐκύκλωσαν οὖν αὐτὸν οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಆಗ ಯೆಹೂದ್ಯರ ನಾಯಕರು ಆತನನ್ನು ಸುತ್ತಿಕೊಂಡರು” (ನೋಡಿರಿ: ಉಪಲಕ್ಷಣಾಲಂಕಾರ)

τὴν ψυχὴν ἡμῶν αἴρεις

ಇದು ನುಡಿಗಟ್ಟಾಗಿದೆ. ಪರ್ಯಾಯ ಅನುವಾದ: “ನಾವು ಸಂದಿಗ್ಧದಲ್ಲಿ ಇರುವಂತೆ” ಅಥವಾ “ನಾವು ಸ್ಪಷ್ಟವಾಗಿ ತಿಳಿಯದಿರಲು?” (ನೋಡಿರಿ: ನುಡಿಗಟ್ಟುಗಳು.)

John 10:25

ಯೆಹೂದ್ಯರಿಗೆ ಯೇಸು ಪ್ರತಿಸ್ಪಂದಿಸಲು ಪ್ರಾರಂಭಿಸುತ್ತಾನೆ.

ἐν τῷ ὀνόματι τοῦ Πατρός μου

ಇಲ್ಲಿ “ಹೆಸರು” ಎನ್ನುವ ಪದವು ದೇವರ ಶಕ್ತಿಯನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. ಇಲ್ಲಿ “ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. ತಂದೆಯ ಶಕ್ತಿ ಮತ್ತು ಅಧಿಕಾರದ ಮೂಲಕ ಯೇಸು ಅದ್ಭುತಕಾರ್ಯಗಳನ್ನು ಮಾಡಿದನು. ಪರ್ಯಾಯ ಅನುವಾದ: “ನನ್ನ ತಂದೆಯ ಶಕ್ತಿಯ ಮೂಲಕ” ಅಥವಾ “ನನ್ನ ತಂದೆಯ ಶಕ್ತಿಯಿಂದ” (ನೋಡಿರಿ: ಲಕ್ಷಣಾಲಂಕಾರ ಮತ್ತು ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ταῦτα μαρτυρεῖ περὶ ἐμοῦ

ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವ ವ್ಯಕ್ತಿ ನಿರೂಪಣೆಗಳನ್ನು ಕೊಟ್ಟಂತೆ ಆತನ ಅದ್ಭುತಕಾರ್ಯಗಳೇ ಆತನ ಕುರಿತಾದ ನಿರೂಪಣೆಗಳಾಗಿವೆ. ಪರ್ಯಾಯ ಅನುವಾದ: “ನನ್ನ ಕುರಿತು ನಿರೂಪಣೆಗಳು ಕೊಡುವುದು” (ನೋಡಿರಿ: ವ್ಯಕ್ತೀಕರಣ)

John 10:26

οὐκ…ἐκ τῶν προβάτων τῶν ἐμῶν

“ಕುರಿಗಳು” ಎನ್ನುವ ಪದವು ಯೇಸುವಿನ ಹಿಂಬಾಲಕರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನನ್ನ ಹಿಂಬಾಲಕರಲ್ಲ” ಅಥವಾ “ನನ್ನ ಶಿಷ್ಯರಲ್ಲ” (ನೋಡಿರಿ: ರೂಪಕ ಅಲಂಕಾರ)

John 10:27

τὰ πρόβατα τὰ ἐμὰ τῆς φωνῆς μου ἀκούουσιν

“ಕುರಿಗಳು” ಎನ್ನುವ ಪದವು ಯೇಸುವಿನ ಹಿಂಬಾಲಕರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಯೇಸುವಿಗೆ “ಕುರುಬನು” ಎನ್ನುವ ರೂಪಕಾಲಂಕಾರ ಸಹ ಅನ್ವಯಿಸಲಾಗಿದೆ. ಪರ್ಯಾಯ ಅನುವಾದ: “ಕುರಿಗಳು ತಮ್ಮ ನಿಜವಾದ ಕುರುಬನ ಸ್ವರಕ್ಕೆ ವಿಧೇಯರಾಗಿದ್ದಂತೆ, ನನ್ನ ಹಿಂಬಾಲಕರು ನನ್ನ ಸ್ವರವನ್ನು ಕೇಳುವರು” (ನೋಡಿರಿ: ರೂಪಕ ಅಲಂಕಾರ)

John 10:28

οὐχ ἁρπάσει…αὐτὰ ἐκ τῆς χειρός μου

ಇಲ್ಲಿ “ಕೈ” ಎನ್ನುವ ಪದವು ಯೇಸುವಿನ ಸಂರಕ್ಷಣೆಯನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ನನ್ನಿಂದ ಯಾರು ಅವರನ್ನು ಕದ್ದುಕೊಳ್ಳುವುದಿಲ್ಲ” ಅಥವಾ “ನನ್ನ ಸಂರಕ್ಷಣೆಯಲ್ಲಿ ಅವರು ಎಂದಿಗೂ ಸುರಕ್ಷಿತರಾಗಿರುತ್ತಾರೆ” (ನೋಡಿರಿ: ಲಕ್ಷಣಾಲಂಕಾರ)

John 10:29

ὁ Πατήρ μου ὃς δέδωκέν μοι

“ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τῆς χειρὸς τοῦ Πατρός

“ಕೈ” ಎನ್ನುವ ಪದವು ದೇವರ ಒಡೆತನ ಮತ್ತು ಸಂರಕ್ಷಣೆಯನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ನನ್ನ ತಂದೆಯಿಂದ ಯಾರು ಅವರನ್ನು ಕದ್ದುಕೊಳ್ಳಲು ಸಾಧ್ಯವಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 10:30

ἐγὼ καὶ ὁ Πατὴρ ἕν ἐσμεν

ಯೇಸು, ದೇವರ ಮಗನು ಮತ್ತು ತಂದೆಯಾದ ದೇವರು ಒಬ್ಬರೇ ಆಗಿದ್ದಾರೆ. “ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 10:31

ἐβάστασαν πάλιν λίθους οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ನಂತರ ಯೆಹೂದ್ಯರ ನಾಯಕರು ಮತ್ತೆ ಕಲ್ಲುಗಳನ್ನು ತೆಗೆಯಲು ಪ್ರಾರಂಭಿಸಿದರು” (ನೋಡಿರಿ: ಉಪಲಕ್ಷಣಾಲಂಕಾರ)

John 10:32

ἀπεκρίθη αὐτοῖς ὁ Ἰησοῦς, πολλὰ ἔργα καλὰ ἔδειξα ὑμῖν ἐκ τοῦ Πατρός

ದೇವರ ಶಕ್ತಿಯಿಂದ ಯೇಸು ಅದ್ಭುತಕಾರ್ಯಗಳನ್ನು ಮಾಡಿದನು. “ತಂದೆ” ಎನ್ನುವ ಪದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

διὰ ποῖον αὐτῶν ἔργον, ἐμὲ λιθάζετε

ಈ ಪ್ರಶ್ನೆ ವ್ಯಂಗ್ಯವಾಗಿದೆ. ಆತನು ಒಳ್ಳೆಯ ಕಾರ್ಯಗಳನ್ನು ಮಾಡಿದ್ದರಿಂದ ಯೆಹೂದ್ಯರ ನಾಯಕರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ಬಯಸುತ್ತಿಲ್ಲವೆಂದು ಯೇಸು ತಿಳಿದಿದ್ದನು. (ನೋಡಿರಿ: ವ್ಯಂಗ್ಯ -)

John 10:33

ἀπεκρίθησαν αὐτῷ οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ವಿರೋಧಿಸಿದ “ಯೆಹೂದ್ಯರ ನಾಯಕರು” ಎನ್ನುವ ಮಾತಿಗೆ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯರ ವಿರೋಧಿಗಳು ಉತ್ತರಿಸಿದರು” ಅಥವಾ “ಯೆಹೂದ್ಯರ ನಾಯಕರು ಆತನಿಗೆ ಉತ್ತರ ಕೊಟ್ಟರು” (ನೋಡಿರಿ: ಉಪಲಕ್ಷಣಾಲಂಕಾರ)

ποιεῖς σεαυτὸν Θεόν

ದೇವರೆಂದು ಹೇಳುಕೊಳ್ಳುತ್ತಿರುವೆ

John 10:34

οὐκ ἔστιν γεγραμμένον ἐν τῷ νόμῳ ὑμῶν, ὅτι ἐγὼ εἶπα, θεοί ἐστε?

ಒತ್ತಾಯಿಸಿ ಹೇಳುವುದಕ್ಕಾಗಿ ಈ ಅಭಿಪ್ರಾಯ ಪ್ರಶ್ನೆಯ ರೂಪದಲ್ಲಿ ಕಾಣುತ್ತದೆ. ಪರ್ಯಾಯ ಅನುವಾದ: “ ‘ನೀವು ದೇವರುಗಳು’ ಎಂದು ನಾನು ಹೇಳಿರುವೆನೆಂದು ನಿಮ್ಮ ಧರ್ಮಶಾಸ್ತ್ರದಲ್ಲಿ ಮುಂಚೆಯೇ ಬರೆಯಲ್ಪಟ್ಟಿದೆಯೆಂದು ನೀವು ತಿಳಿದುಕೊಳ್ಳಬೇಕು.” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

θεοί ἐστε

ದೇವರು ತನ್ನ ಹಿಂಬಾಲಕರನ್ನು “ದೇವರುಗಳು” ಎಂದು ಕರೆದಿರುವ ಲೇಖನವನ್ನು ಯೇಸು ಇಲ್ಲಿ ತೋರಿಸುತ್ತಿದ್ದಾನೆ, ಯಾಕಂದರೆ ಬಹುಶಃ ಅವರು ಆತನ ಪ್ರತಿನಿಧಿಗಳಾಗಿ ಭೂಲೋಕದಲ್ಲಿರಬೇಕೆಂದು ಆತನು ಅವರನ್ನು ನೇಮಿಸಿದ್ದಾನೆ.

John 10:35

ὁ λόγος τοῦ Θεοῦ ἐγένετο

ದೇವರ ಸಂದೇಶ ಎನ್ನುವುದು ಒಬ್ಬ ವ್ಯಕ್ತಿಯಂತೆ ಇದ್ದು ಅದನ್ನು ಕೇಳಿದವರ ಬಳಿಗೆ ಹೋಗುತ್ತದೆ ಎಂದು ಯೇಸು ದೇವರ ಸಂದೇಶದ ಕುರಿತು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ದೇವರು ತನ್ನ ಸಂದೇಶವನ್ನು ಹೇಳಿದ್ದಾನೆ” (ನೋಡಿರಿ: ರೂಪಕ ಅಲಂಕಾರ)

οὐ δύναται λυθῆναι ἡ Γραφή

ಇದಕ್ಕೆ ಈ ಅರ್ಥಗಳು ಸಹ ಇರಬಹುದು 1) “ಲೇಖನಗಳನ್ನು ಬದಲಿಯಲು ಯಾರಿಗೂ ಸಾಧ್ಯವಿಲ್ಲ” ಅಥವಾ 2) “ಲೇಖನಗಳು ಎಂದಿಗೂ ಸತ್ಯವಾಗಿರುತ್ತದೆ.”

John 10:36

ὃν ὁ Πατὴρ ἡγίασεν καὶ ἀπέστειλεν εἰς τὸν κόσμον, ὑμεῖς λέγετε, ὅτι βλασφημεῖς, ὅτι εἶπον, Υἱὸς τοῦ Θεοῦ εἰμι

“ದೇವರ ಮಗನೆಂದು” ಆತನನ್ನು ಆತನೇ ಕರೆದುಕೊಂಡಾಗ ಆತನು ದೇವ ದೂಷಣೆ ಮಾಡುತ್ತಿದ್ದಾನೆಂದು ಹೇಳಿದ ತನ್ನ ವಿರೋಧಿಗಳನ್ನು ಗದರಿಸಲು ಯೇಸು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನಾನು ದೇವರ ಮಗನೆಂದು ಹೇಳಿದಾಗ, ಲೋಕಕ್ಕೆ ಕಳುಹಿಸಲು ದೇವರು ಏರ್ಪಡಿಸಿದ ವ್ಯಕ್ತಿಯನ್ನು ‘ನೀನು ದೇವ ದೂಷಣೆ ಮಾಡುತ್ತಿದ್ದೀಯ” ಎಂದು ನೀವು ಹೇಳಬಾರದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

βλασφημεῖς

ನೀವು ದೇವರನ್ನು ಅವಮಾನಪಡಿಸುತ್ತಿದ್ದೀರಿ. ಆತನು ದೇವರ ಕುಮಾರನೆಂದು ಆತನು ಹೇಳಿದಾಗ, ಆತನನ್ನು ದೇವರಿಗೆ ಸಮಾನವಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೇಸುವಿನ ವಿರೋಧಿಗಳು ಅರ್ಥಮಾಡಿಕೊಂಡರು.

Πατὴρ…Υἱὸς τοῦ Θεοῦ

ಯೇಸು ಮತ್ತು ದೇವರ ನಡುವೆ ಇರುವ ಸಂಬಂಧವನ್ನು ಈ ಪ್ರಾಮುಖ್ಯವಾದ ಹೆಸರುಗಳು ವಿವರಿಸುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 10:37

ಯೇಸು ಯೆಹೂದ್ಯರಿಗೆ ಉತ್ತರಿಸುವುದನ್ನು ಮುಗಿಸುತ್ತಾನೆ.

Πατρός

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

πιστεύετέ μοι

ಇಲ್ಲಿ “ನಂಬುವುದು” ಎನ್ನುವ ಪದವು ಯೇಸು ಹೇಳಿರುವುದು ಸತ್ಯವೆಂದು ನಂಬುವುದು ಅಥವಾ ಅಂಗೀಕರಿಸುವುದು ಎಂದರ್ಥ.

John 10:38

τοῖς ἔργοις πιστεύετε

ಇಲ್ಲಿ “ನಂಬಿಕೆ ಇಡುವುದು” ಎನ್ನುವ ಮಾತಿಗೆ ಯೇಸು ಮಾಡಿರುವ ಕಾರ್ಯಗಳು ತಂದೆಯಿಂದ ಬಂದಿವೆ ಎಂದು ಅಂಗೀಕರಿಸುವುದು.

ἐν ἐμοὶ ὁ Πατὴρ, κἀγὼ ἐν τῷ Πατρί

ದೇವರು ಮತ್ತು ಯೇಸು ಮಧ್ಯದಲ್ಲಿರುವ ವ್ಯಕ್ತಿಗತವಾದ ಹತ್ತಿರದ ಸಂಬಂಧವನ್ನು ಈ ನಾನ್ನುಡಿಗಳು ವ್ಯಕ್ತಪಡಿಸುತ್ತಿವೆ. ಪರ್ಯಾಯ ಅನುವಾದ: “ನನ್ನ ತಂದೆ ಮತ್ತು ನಾನು ಸಂಪೂರ್ಣವಾಗಿ ಒಂದಾಗಿ ಸೇರಿಕೊಂಡಿದ್ದೇವೆ” (ನೋಡಿರಿ: ನುಡಿಗಟ್ಟುಗಳು.)

John 10:39

ἐξῆλθεν ἐκ τῆς χειρὸς αὐτῶν

“ಕೈ” ಎನ್ನುವ ಪದವು ಯೆಹೂದ್ಯರ ನಾಯಕರ ಪಾಲನೆ ಅಥವಾ ಸ್ವಾಧೀನವನ್ನು ಸೂಚಿಸುವ ಸಮಾನಾರ್ಥಕ ಪದವಾಗಿದೆ. ಪರ್ಯಾಯ ಅನುವಾದ: “ಅವರಿಂದ ತಪ್ಪಿಸಿಕೊಂಡು” (ನೋಡಿರಿ: ಲಕ್ಷಣಾಲಂಕಾರ)

John 10:40

πέραν τοῦ Ἰορδάνου

ಯೇಸು ಯೊರ್ದನ್ ಹೊಳೆಯ ಪಶ್ಚಿಮ ದಿಕ್ಕಿನಲ್ಲಿದ್ದನು. ಪರ್ಯಾಯ ಅನುವಾದ: “ಯೊರ್ದನ್ ಹೊಳೆಯ ಪೂರ್ವ ದಿಕ್ಕಿಗೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἔμεινεν ἐκεῖ

ಯೇಸು ಯೊರ್ದನ್ ಹೊಳೆಯ ಪೂರ್ವ ದಿಕ್ಕಿನಲ್ಲಿ ಸ್ವಲ್ಪ ಕಾಲದವರೆಗಿದ್ದನು. ಪರ್ಯಾಯ ಅನುವಾದ: “ಯೇಸು ಅಲ್ಲಿ ತುಂಬಾ ದಿನಗಳಿದ್ದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 10:41

Ἰωάννης μὲν σημεῖον ἐποίησεν οὐδέν; πάντα δὲ ὅσα εἶπεν Ἰωάννης περὶ τούτου ἀληθῆ ἦν

ಯೋಹಾನನು ಯಾವ ಅದ್ಭುತಕಾರ್ಯಗಳನ್ನು ಮಾಡಲಿಲ್ಲ ಎಂಬುದು ಸತ್ಯ, ಆದರೆ ಅದ್ಭುತಕಾರ್ಯಗಳನ್ನು ಮಾಡಿದ ಈ ಮನುಷ್ಯನ ಕುರಿತಾಗಿ ಅವನು ಸತ್ಯವನ್ನು ಹೇಳಿದ್ದಾನೆ.

σημεῖον

ಯಾವುದಾದರು ಸತ್ಯವೆಂದು ಅಥವಾ ಯಾರಿಗಾದರೂ ವಿಶ್ವಾಸಾರ್ಹತೆಯನ್ನು ಕೊಡುವುದು ಎಂದು ಈ ಅದ್ಭುತಕಾರ್ಯಗಳು ನಿರೂಪಿಸುತ್ತಿವೆ.

John 10:42

ἐπίστευσαν εἰς

ಇಲ್ಲಿ “ನಂಬುವುದು” ಎನ್ನುವ ಪದಕ್ಕೆ ಯೇಸು ಹೇಳಿರುವುದು ಸತ್ಯವೆಂದು ಅಂಗೀಕರಿಸುವುದು ಅಥವಾ ವಿಸ್ವಸಿಸುವುದು ಎಂದರ್ಥ.

John 11

ಯೋಹಾನ 11 ಸಾಮಾನ್ಯ ಅಂಶಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

ಬೆಳಕು ಮತ್ತು ಕತ್ತಲು

ಸತ್ಯವೇದವು ಅನೇಕಬಾರಿ ಜನರು ಕತ್ತಲೆಯಲ್ಲಿ ನಡೆಯುತ್ತಿರುವಂತೆ ದೇವರನ್ನು ಮೆಚ್ಚಿಸದ ಜನರ ಕುರಿತಾಗಿ ಮತ್ತು ಅನೀತಿವಂತರ ಕುರಿತಾಗಿ ಮಾತನಾಡುತ್ತದೆ. ಪಾಪಿಗಳಾದ ಜನರನ್ನು ನೀತಿವಂತರನ್ನಾಗಿಸುವಂತೆ, ಅವರು ಮಾಡುವುದು ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮತ್ತು ದೇವರಿಗೆ ವಿಧೇಯರಾಗಿರುವದಕ್ಕೆ ಬೆಳಕು ಇರುತ್ತದೆಯೆಂದು ಬೆಳಕಿನ ಕುರಿತಾಗಿ ಹೇಳಲ್ಪಟ್ಟಿದೆ. (ನೋಡಿರಿ: ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ)

ಪಸ್ಕ

ಯೇಸು ಲಾಜರನನ್ನು ತಿರಿಗಿ ಬದುಕಿಸಿದನಂತರ, ಯೆಹೂದ್ಯರ ನಾಯಕರು ಆತನನ್ನು ಕೊಲ್ಲುವುದಕ್ಕೆ ಪ್ರಯತ್ನಪಟ್ಟರು, ಅದಕ್ಕಾಗಿ ಆತನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಹಸ್ಯವಾಗಿ ಪ್ರಯಾಣಮಾಡುತ್ತಿದ್ದನು. ಇಂತಹ ಸಮಯದಲ್ಲಿ ಆತನು ತಪ್ಪದೇ ಪಸ್ಕಗಾಗಿ ಯೆರೂಸಲೇಮಿಗೆ ಬರುತ್ತಾನೆಂದು ಫರಿಸಾಯರು ಆಲೋಚನೆ ಮಾಡಿಕೊಂಡಿದ್ದರು ಯಾಕಂದರೆ ಯೆರೂಸಲೇಮಿನಲ್ಲಿ ಪಸ್ಕವನ್ನು ಆಚರಿಸಬೇಕೆಂದು ದೇವರು ಯೆಹೂದ್ಯರಿಗೆಲ್ಲರಿಗೆ ಆಜ್ಞೆಯನ್ನು ಕೊಟ್ಟಿದ್ದರು, ಇದರಿಂದ ಅವರು ಆತನನ್ನು ಹಿಡಿದುಕೊಂಡು, ಕೊಲ್ಲಬೇಕೆಂದು ಆಲೋಚನೆ ಮಾಡಿದ್ದರು. (ನೋಡಿರಿ: ಪಸ್ಕ)

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು

“ಜನರೆಲ್ಲರಿಗಾಗಿ ಒಬ್ಬ ಮನುಷ್ಯನು ಸತ್ತುಹೋದನು”

ಪ್ರಾಣಿಗಳನ್ನು ಸಾಯಿಸುವುದರ ಮೂಲಕ ದೇವರು ಜನರ ಪಾಪಗಳನ್ನು ಕ್ಷಮಿಸುತ್ತಾನೆಂದು ಮೋಶೆಯ ಧರ್ಮಶಾಸ್ತ್ರವು ಯಾಜಕರಿಗೆ ಆಜ್ಞೆಯನ್ನು ಕೊಟ್ಟಿದ್ದನು. ಮಹಾ ಯಾಜಕನಾಗಿರುವ ಕಾಯಫ, “ಇಡೀ ದೇಶವೇ ನಾಶವಾಗುವದಕ್ಕಿಂತ ಜನರಿಗಾಗಿ ಒಬ್ಬ ಮನುಷ್ಯನು ಸಾಯುವುದು ಉತ್ತಮ” ಎಂದು ಹೇಳಿದನು ([ಯೋಹಾನ.11:50] (../../ಯೋಹಾನು/10 /50.ಎಂ.ಡಿ.)). ಅವನು ಇದನ್ನು ಹೇಳಿರುವದಕ್ಕೆ ಕಾರಣವೇನೆಂದರೆ ಲಾಜರನನ್ನು ತಿರಿಗಿ ಬದುಕಿಸಿದ ದೇವರನ್ನು ಪ್ರಿತಿಸುವುದಕ್ಕಿಂತ ಹೆಚ್ಚಾಗಿ ಆತನು ತನ್ನ “ಸ್ಥಳವನ್ನು” ಮತ್ತು “ದೇಶವನ್ನು” ಹೆಚ್ಚಾಗಿ ಪ್ರೀತಿಸಿದ್ದನು. ([ಯೋಹಾನ.10:48] (../../ಯೋಹಾನ/10/48.ಎಂ.ಡಿ.)). ಯೇಸು ಸಾಯಬೇಕೆಂದು ಆತನು ಬಯಸಿದ್ದನು, ಇದರಿಂದ ರೋಮಾದವರು ದೇವಾಲಯವನ್ನು ಮತ್ತು ಯೆರೂಸಲೇಮ ಪಟ್ಟಣವನ್ನು ನಾಶಗೊಳಿಸಿದ್ದನು, ಆದರೆ ಯೇಸು ಸಾಯಬೇಕೆಂದು ದೇವರು ಬಯಸಿದ್ದನು, ಯೇಸುವಿನ ಮರಣ ಪುನರುತ್ಥಾನಗಳಿಂದ ಆತನು ತನ್ನ ಜನರ ಪಾಪಗಳೆಲ್ಲವನ್ನು ಕ್ಷಮಿಸುವದಕ್ಕೆ ಸಾಧ್ಯ.

ಕಾಲ್ಪನಿಕವಾದ ಪರಿಸ್ಥಿತಿ

”ನೀವು ಇಲ್ಲಿ ಇರುವುದಾದರೇ, ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಮಾರ್ತಳು ಹೇಳಿದಾಗ, ನಡೆದ ಆ ಸಂಘಟನೆಯು ನಡೆಯಲಿಲ್ಲ ಎನ್ನುವಂತೆ ಆಕೆ ಮಾತನಾಡಿದ್ದಳು. ಯೇಸು ಬಂದಿಲ್ಲ, ತನ್ನ ಸಹೋದರನು ಕೂಡ ಸತ್ತನು.

John 11:1

ಈ ವಚನಗಳು ಲಾಜರನ ಕಥೆಯನ್ನು ಪರಿಚಯಿಸಿ ಮತ್ತು ಅವನ, ಅವನ ಅಕ್ಕಳಾದ ಮರಿಯಳ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ತಿಳಿಸುತ್ತಿವೆ. (ನೋಡಿರಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ. ಮತ್ತು ಹಿನ್ನೆಲೆ ಮಾಹಿತಿ.)

John 11:2

ἦν δὲ Μαρία ἡ ἀλείψασα τὸν Κύριον μύρῳ, καὶ ἐκμάξασα τοὺς πόδας αὐτοῦ ταῖς θριξὶν αὐτῆς

ಯೋಹಾನನು ಮರಿಯಳನ್ನು, ತನ್ನ ತಂಗಿಯಾಗಿರುವ ಮಾರ್ತಳನ್ನು ಪರಿಚಯ ಮಾಡುತ್ತಿರುವಾಗ, ಈ ಕಥೆಯಲ್ಲಿ ತದನಂತರ ಏನು ಸಂಭವಿಸುತ್ತದೆಯೆನ್ನುವ ಮಾಹಿತಿಯನ್ನು ಆತನು ಹಂಚಿಕೊಳ್ಳುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 11:3

ἀπέστειλαν…πρὸς αὐτὸν

ಬರಬೇಕೆಂದು ಯೇಸುವನ್ನು ಕೇಳಿಕೊಂಡರು

φιλεῖς

ಇಲ್ಲಿ “ಪ್ರೀತಿ” ಎನ್ನುವ ಪದವು ಸ್ವಾಭಾವಿಕವಾಗಿ ಸ್ನೇಹಿತರು ಅಥವಾ ಬಂಧುಗಳ ಮಧ್ಯೆದಲ್ಲಿರುವ ಮನುಷ್ಯರ ಪ್ರೀತಿಯನ್ನು ಅಂದರೆ ಸಹೋದರ ಪ್ರೀತಿಯನ್ನು,ಸೂಚಿಸುತ್ತದೆ.

John 11:4

αὕτη ἡ ἀσθένεια οὐκ ἔστιν πρὸς θάνατον

ಲಾಜರನಿಗೆ ಮತ್ತು ತನ್ನ ರೋಗಕ್ಕೆ ಸಂಬಂಧಪಟ್ಟು ಏನು ನಡೆಯುತ್ತದೆಯೆಂದು ಯೇಸುವಿಗೆ ಗೊತ್ತಿತ್ತೆನ್ನುವಂತೆ ಆತನು ತಿಳಿಯಪಡಿಸಿದ್ದನು. ಪರ್ಯಾಯ ಅನುವಾದ: “ಈ ರೋಗದ ಕೊನೆಯ ಫಲಿತಾಂಶವು ಮರಣವಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

θάνατον

ಇದು ಭೌತಿಕ ಮರಣವನ್ನು ಸೂಚಿಸುತ್ತದೆ.

ἀλλ’ ὑπὲρ τῆς δόξης τοῦ Θεοῦ, ἵνα δοξασθῇ ὁ Υἱὸς τοῦ Θεοῦ δι’ αὐτῆς

ಇದರಿಂದ ಹೊರಬರುವ ಫಲಿತಾಂಶ ಆತನಿಗೆ ಗೊತ್ತಿತ್ತೆನ್ನುವಂತೆ ಯೇಸು ತಿಳಿಯಪಡಿಸಿದ್ದನು. ಪರ್ಯಾಯ ಅನುವಾದ: “ಆದರೆ ದೇವರ ಶಕ್ತಿಯಿಂದ ಈ ಕಾರ್ಯವನ್ನು ಮಾಡುವುದರ ಮುಖಾಂತರ ದೇವರು ಎಷ್ಟು ಅದ್ಭುತಕರನು, ಎಷ್ಟು ದೊಡ್ಡವನು ಎಂದು ಜನರೆಲ್ಲರು ತಿಳಿದುಕೊಳ್ಳಬೇಕೆನ್ನುವ ಉದ್ದೇಶವಾಗಿದ್ದಿತ್ತು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

Υἱὸς τοῦ Θεοῦ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 11:5

ἠγάπα δὲ ὁ Ἰησοῦς τὴν Μάρθαν, καὶ τὴν ἀδελφὴν αὐτῆς, καὶ τὸν Λάζαρον

ಇದು ಹಿನ್ನೆಲೆಯ ಮಾಹಿತಿಯಾಗಿರುತ್ತದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 11:8

Ῥαββεί, νῦν ἐζήτουν σε λιθάσαι οἱ Ἰουδαῖοι, καὶ πάλιν ὑπάγεις ἐκεῖ

ಯೇಸು ಯೆರೂಸಲೇಮಿಗೆ ಹೋಗುವದಕ್ಕೆ ಶಿಷ್ಯರು ಇಷ್ಟಪಡಲಿಲ್ಲವೆನ್ನುವ ವಿಷಯವನ್ನು ಒತ್ತಿ ಹೇಳುವದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಪರ್ಯಾಯ ಅನುವಾದ: “ಬೋಧಕನೆ, ನೀವು ಅಲ್ಲಿಗೆ ಹಿಂತಿರುಗಿ ಹೋಗಬಾರದು! ಒಂದುಸಲ ನೀವು ಅಲ್ಲಿದ್ದಾಗ ನಿಮ್ಮನ್ನು ಕಲ್ಲುಗಳಿಂದ ಹೊಡೆಯುವದಕ್ಕೆ ಯೆಹೂದ್ಯರು ಪ್ರಯತ್ನಪಟ್ಟಿದ್ದರು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

οἱ Ἰουδαῖοι

ಯೇಸುವನ್ನು ಧಿಕ್ಕರಿಸಿದ ಯೆಹೂದ್ಯ ನಾಯಕರಿಗಾಗಿ ಇದು ಒಂದು ಉಪಲಕ್ಷಕವಾಗಿದ್ದಿತ್ತು. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

John 11:9

οὐχὶ δώδεκα ὧραί εἰσιν τῆς ἡμέρας

ಒತ್ತಿ ಹೇಳುವದಕ್ಕಾಗಿ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ಒಂದು ಹಗಲಿಗೆ ಹನ್ನೆರಡು ಗಂಟೆಗಳ ಬೆಳಕು ಇರುತ್ತದೆಯಲ್ಲವೇ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ἐάν τις περιπατῇ ἐν τῇ ἡμέρᾳ, οὐ προσκόπτει, ὅτι τὸ φῶς τοῦ κόσμου τούτου βλέπει

ಹಗಲಿನ ಬೆಳಕಿನಲ್ಲಿ ನಡೆಯುವ ಜನರು ಚೆನ್ನಾಗಿ ನೋಡುತ್ತಾರೆ ಮತ್ತು ಅವರು ಕೆಳಗೆ ಬಿದ್ದು ಹೋಗುವುದಿಲ್ಲ. “ಬೆಳಕು” ಎನ್ನುವುದು “ಸತ್ಯ” ಎನ್ನುವ ಪದಕ್ಕೆ ಪರ್ಯಾಯ ಪದವಾಗಿರುತ್ತದೆ. ಸತ್ಯದ ಪ್ರಕಾರ ನಡೆಯುವ ಜನರು ದೇವರು ಮಾಡಬೇಕೆಂದು ಬಯಸಿದ ಕಾರ್ಯಗಳನ್ನೆಲ್ಲಾ ಯಶಸ್ವಿಯಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ” (ನೋಡಿರಿ: ರೂಪಕ ಅಲಂಕಾರ)

John 11:10

ಯೇಸು ತನ್ನ ಶಿಷ್ಯರೊಂದಿಗೆ ಮಾತನಾಡುವುದನ್ನು ಮುಂದೆವರಿಸುತ್ತಿದ್ದಾನೆ.

ἐὰν…τις περιπατῇ ἐν τῇ νυκτί

ಇಲ್ಲಿ “ರಾತ್ರಿ” ಎನ್ನುವದಕ್ಕೆ ದೇವರ ಬೆಳಕಿಲ್ಲದೆ ನಡೆಯುವ ವ್ಯಕ್ತಿಯನ್ನು ಸೂಚಿಸುವದಕ್ಕೆ ರೂಪಕಲಂಕಾರವಾಗಿ ಉಪಯೋಗಿಸಿದ್ದಾರೆ.

τὸ φῶς οὐκ ἔστιν ἐν αὐτῷ

ಈ ಅರ್ಥಗಳು ಇರಬಹುದು, 1) “ಅವನಿಗೆ ದೃಷ್ಟಿಯಿಲ್ಲ” ಅಥವಾ “ಅವನು ದೇವರ ಬೆಳಕನ್ನು ಹೊಂದಿಕೊಂಡಿರಲಿಲ್ಲ.”

John 11:11

Λάζαρος ὁ φίλος ἡμῶν κεκοίμηται

ಇಲ್ಲಿ “ನಿದ್ದೆ ಹೋಗಿದ್ದನು” ಎನ್ನುವ ಮಾತು ಲಾಜರನು ಸತ್ತು ಹೋಗಿದ್ದನು ಎನ್ನುವ ಅರ್ಥವು ಕೊಡುವದಕ್ಕೆ ಪರ್ಯಾಯವಾಗಿ ಬಳಸಿದ್ದಾರೆ. ನಿಮ್ಮ ಭಾಷೆಯಲ್ಲಿ ಈ ರೀತಿಯಾಗಿ ಹೇಳುವ ಮಾತು ಇರುವುದಾದರೆ, ಇಲ್ಲಿ ನೀವು ಅದನ್ನು ಉಪಯೋಗಿಸಬಹುದು. (ನೋಡಿರಿ: ನುಡಿಗಟ್ಟುಗಳು.)

ἀλλὰ πορεύομαι ἵνα ἐξυπνίσω αὐτόν

“ನಿದ್ರೆಯಿಂದ ಅವನನ್ನು ಎಬ್ಬಿಸಿರಿ” ಎನ್ನುವ ಮಾತುಗಳು ನಾಣುಡಿ ಮಾತುಗಳು. ಲಾಜರನನನ್ನು ತಿರುಗಿ ಜೀವಂತನನ್ನಾಗಿ ಮಾಡುವ ತನ್ನ ಪ್ರಣಾಳಿಕೆಯನ್ನು ಯೇಸು ಬಹಿರಂಗಪಡಿಸುತ್ತಿದ್ದಾರೆ. ಈ ಸಂದರ್ಭಕ್ಕಾಗಿ ನಿಮ್ಮ ಭಾಷೆಯಲ್ಲಿ ಏನಾದರೂ ನಾಣುಡಿ ಇದ್ದರೆ, ಅದನ್ನು ನೀವು ಇಲ್ಲಿ ಬಳಸಬಹುದು. (ನೋಡಿರಿ: ನುಡಿಗಟ್ಟುಗಳು.)

John 11:12

13ನೇ ವಚನದಲ್ಲಿ ಲಾಜರನು ನಿದ್ರಿಸುತ್ತಿದ್ದಾನೆಂದು ಯೇಸು ಹೇಳಿದಾಗ, ಅವರ ಉದ್ದೇಶ ಏನಾಗಿರಬಹುದೆನ್ನುವದರ ಕುರಿತಾಗಿ ಶಿಷ್ಯರು ಅಪಾರ್ಥ ಮಾಡಿಕೊಂಡಿರುವದರ ಮೇಲೆ ಯೋಹಾನನ ವ್ಯಾಕ್ಯಗಳು ಹೇಳುತ್ತಿರುವಾಗ ಮುಖ್ಯ ಸಾಲಿಗೆ ವಿರಾಮವನ್ನುಂಟು ಮಾಡಲಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

εἰ κεκοίμηται

ಲಾಜರನು ವಿಶ್ರಾಂತಿ ತೆಗೆದುಕೊಂಡು, ತಿರುಗಿ ಎದ್ದು ಬರುತ್ತಾನೆನ್ನುವುದು ಯೇಸುವಿನ ಉದ್ದೇಶವಾಗಿರಬಹುದೆಂದು ಶಿಷ್ಯರು ಅಪಾರ್ಥ ಮಾಡಿಕೊಂಡಿದ್ದರು.

John 11:14

τότε…εἶπεν αὐτοῖς ὁ Ἰησοῦς παρρησίᾳ

ಆದ್ದರಿಂದ ಅವರು ಅರ್ಥಮಾಡಿಕೊಳ್ಳಬೇಕೆಂದು ಯೇಸು ಅವರಿಗೆ ಮಾತುಗಳಲ್ಲಿ ಹೇಳಿದರು

John 11:15

ಯೇಸು ತನ್ನ ಶಿಷ್ಯರೊಂದಿಗೆ ಮಾತನಾಡುತ್ತಿರುವದನ್ನು ಮುಂದೆವರಿಸುತ್ತಿದ್ದಾರೆ.

δι’ ὑμᾶς

ನಿಮ್ಮ ಪ್ರಯೋಜನಕ್ಕಾಗಿಯೇ

ἵνα πιστεύσητε, ὅτι οὐκ ἤμην ἐκεῖ

ನಾನು ಅಲ್ಲಿ ಇಲ್ಲ. ಈ ಕಾರಣದಿಂದಲೇ ನೀವು ನನ್ನನ್ನು ಇನ್ನೂ ಹೆಚ್ಚಾಗಿ ನಂಬುವುದಕ್ಕೆ ಕಲಿತುಕೊಳ್ಳುತ್ತೀರಿ.

John 11:16

ὁ λεγόμενος Δίδυμος

ಇದನ್ನು ಕ್ರಿಯಾತ್ಮಕ ರೂಪದಲ್ಲಿ ನೀವು ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದಿದುಮನೆಂದು ಕರೆಯಲ್ಪಡುತ್ತಿರುವ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Δίδυμος

ಇದು ಪುರುಷನ ಹೆಸರು, ಈ ಹೆಸರಿಗೆ “ಅವಳಿ ಜವಳಿ” ಅಂತ ಅರ್ಥ. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

John 11:17

ಯೇಸು ಈಗ ಬೇಥಾನ್ಯದಲ್ಲಿದ್ದಾರೆ. ಯೇಸು ಬರುವುದಕ್ಕೆ ಮುಂಚಿತವಾಗಿ ನಡೆದಿರುವ ವಿಷಯದ ಕುರಿತಾಗಿ ಮತ್ತು ಅಲ್ಲಿರುವ ಪರಿಸ್ಥಿತಿಯ ಕುರಿತಾಗಿ ಈ ವಚನಗಳು ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

εὗρεν αὐτὸν, τέσσαρας ἤδη ἡμέρας ἔχοντα ἐν τῷ μνημείῳ

ಇದನ್ನು ಕ್ರಿಯಾತ್ಮಕ ರೂಪದಲ್ಲಿ ನೀವು ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನಾಲ್ಕು ದಿನಗಳ ಕೆಳಗೆ ಜನರು ಲಾಜರನನ್ನು ಸಮಾಧಿಯಲ್ಲಿಟ್ಟಿದ್ದಾರೆಂದು ಆತನು ತಿಳಿದುಕೊಂಡಿದ್ದನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 11:18

ἀπὸ σταδίων δεκαπέντε

ಮೂರು ಕಿಲೋ ಮೀಟರ್ ಆಚೆಯಿದೆ. “ಕ್ರೀಡಾಂಗಣವು” 185 ಮೀಟರುಗಳು. (ನೋಡಿರಿ: ಸತ್ಯವೇದದಲ್ಲಿ ಬರುವ ಅಂತರಗಳು.)

John 11:19

περὶ τοῦ ἀδελφοῦ

ಲಾಜರನು ಅವರ ಚಿಕ್ಕ ತಮ್ಮನಾಗಿದ್ದನು. ಪರ್ಯಾಯ ಅನುವಾದ: “ತಮ್ಮ ಚಿಕ್ಕ ತಮ್ಮನಿಗಾಗಿ” (ನೋಡಿರಿ. ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 11:21

οὐκ ἂν ἀπέθανεν ὁ ἀδελφός μου

ಲಾಜರನು ಚಿಕ್ಕ ತಮ್ಮನಾಗಿದ್ದನು. ಪರ್ಯಾಯ ಅನುವಾದ: “ನನ್ನ ಚಿಕ್ಕ ತಮ್ಮನು ಜೀವಂತವಾಗಿರುತ್ತಿದ್ದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 11:23

ἀναστήσεται ὁ ἀδελφός σου

ಲಾಜರನು ಚಿಕ್ಕ ತಮ್ಮನಾಗಿದ್ದನು. ಪರ್ಯಾಯ ಅನುವಾದ: “ನಿಮ್ಮ ಚಿಕ್ಕ ತಮ್ಮನು ತಿರುಗಿ ಎದ್ದು ಬರುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 11:24

ἀναστήσεται

ಅವನು ತಿರುಗಿ ಜೀವಂತವಾಗಿ ಎದ್ದು ಬರುವನು

John 11:25

κἂν ἀποθάνῃ

ಇಲ್ಲಿ “ಸತ್ತಿದ್ದಾನೆ” ಎನ್ನುವುದು ಭೌತಿಕ ಮರಣವನ್ನು ಸೂಚಿಸುತ್ತದೆ.

ζήσεται

ಇಲ್ಲಿ “ಜೀವಿಸುವುದು” ಎನ್ನುವದು ಆತ್ಮೀಯ ಜೀವನವನ್ನು ಸೂಚಿಸುತ್ತದೆ.

John 11:26

πᾶς ὁ ζῶν καὶ πιστεύων εἰς ἐμὲ, οὐ μὴ ἀποθάνῃ εἰς τὸν αἰῶνα

ನನ್ನಲ್ಲಿ ನಂಬಿಕೆಯಿಟ್ಟು ಜೀವಿಸುವವರೆಲ್ಲರು ದೇವರಿಂದ ಎಂದಿಗೂ ಬೇರ್ಪಾಟಾಗುವುದಿಲ್ಲ ಅಥವಾ “ನನ್ನಲ್ಲಿ ನಂಬಿಕೆಯಿಟ್ಟು ಜೀವಿಸುವವರೆಲ್ಲರು ದೇವರೊಂದಿಗೆ ಸದಾಕಾಲವೂ ಜೀವಂತವಾಗಿರುವರು”

οὐ μὴ ἀποθάνῃ εἰς τὸν αἰῶνα

ಇಲ್ಲಿ “ಮರಣ” ಎನ್ನುವದು ಆತ್ಮೀಯ ಮರಣವನ್ನು ಸೂಚಿಸುತ್ತದೆ.

John 11:27

λέγει αὐτῷ

ಯೇಸುವಿಗೆ ಮಾರ್ಥಳು ಹೇಳಿದಳು

ναί, Κύριε; ἐγὼ πεπίστευκα ὅτι σὺ εἶ ὁ Χριστὸς, ὁ Υἱὸς τοῦ Θεοῦ, ὁ εἰς τὸν κόσμον ἐρχόμενος

ಯೇಸು ದೇವರ ಮಗನು, ಕ್ರಿಸ್ತನು (ಮೆಸ್ಸಯ್ಯಾ), ಒಡೆಯನು ಎಂದು ಮಾರ್ಥಳು ನಂಬಿದ್ದಳು,

Υἱὸς τοῦ Θεοῦ

ಇದು ಯೇಸುವಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 11:28

ἀπῆλθεν, καὶ ἐφώνησεν Μαριὰμ, τὴν ἀδελφὴν αὐτῆς

ಮರಿಯಳು ಮಾರ್ಥಳಿಗೆ ಚಿಕ್ಕ ತಂಗಿಯಾಗಿದ್ದಳು. ಪರ್ಯಾಯ ಅನುವಾದ: “ಆಕೆ ಆಚೆಗೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಕರೆದಳು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

διδάσκαλος

ಈ ಹೆಸರು ಯೇಸುವನ್ನು ಸೂಚಿಸುತ್ತದೆ.

φωνεῖ σε

ನೀವು ಬರುತ್ತಿರುವಿರಾ ಎಂದು ಕೇಳಿಕೊಳ್ಳುವುದು

John 11:30

οὔπω δὲ ἐληλύθει ὁ Ἰησοῦς εἰς τὴν κώμην

ಇಲ್ಲಿ ಯೇಸು ಇರುವ ಸ್ಥಳದ ಕುರಿತಾಗಿ ಹೆನ್ನೆಲೆಯ ಮಾಹಿತಿಯನ್ನು ಕೊಡುವುದಕ್ಕೆ ಈ ಕಥೆಯಲ್ಲಿ ಯೋಹಾನನು ಚಿಕ್ಕ ವಿರಾಮವನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 11:32

ἔπεσεν αὐτοῦ πρὸς τοὺς πόδας

ಗೌರವ ಕೊಡುವುದಕ್ಕೆ ಯೇಸುವಿನ ಪಾದಗಳ ಬಳಿ ಮರಿಯಳು ಕುಳಿತಿದ್ದಳು ಅಥವಾ ಮೊಣಕಾಲಿನ ಮೇಲೆ ಇದ್ದಿದ್ದಳು.

οὐκ ἄν μου ἀπέθανεν ὁ ἀδελφός

ಲಾಜರನು ಮರಿಯಳ ತಮ್ಮನಾಗಿದ್ದನು. ಯೋಹಾನ.1:1 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ. ಪರ್ಯಾಯ ಅನುವಾದ: “ನನ್ನ ತಮ್ಮನು ಜೀವಂತವಾಗಿರುತ್ತಿದ್ದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 11:33

ἐνεβριμήσατο τῷ πνεύματι καὶ ἐτάραξεν ἑαυτόν

ಯೇಸು ಅನುಭವಿಸಿದ ಕೋಪವನ್ನು ಮತ್ತು ತೀವ್ರವಾದ ಭಾವನಾತ್ಮಕ ಯಾತನೆಯನ್ನು ವ್ಯಕ್ತಪಡಿಸಲು ಒಂದೇ ರೀತಿಯ ಅರ್ಥಗಳನ್ನು ಹೊಂದಿರುವ ಈ ಮಾತುಗಳನ್ನು ಬೆರೆತುಗೊಳಿಸಿ ಯೋಹಾನನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಆತನು ಆತ್ಮದಲ್ಲಿ ವ್ಯಸನಪಟ್ಟು ನೊಂದನು” (ನೋಡಿರಿ: ದ್ವಿರುಕ್ತಿಗಳು)

John 11:34

ποῦ τεθείκατε αὐτόν

“ನೀವು ಎಲ್ಲಿ ಆತನನ್ನು ಸಮಾಧಿ ಮಾಡಿದ್ದೀರಿ?” ಎಂದು ಕೇಳುವುದು ಸೌಮ್ಯವಾದ ವಿಧಾನ. (ನೋಡಿರಿ: ಸೌಮ್ಯೋಕ್ತಿಗಳು.)

John 11:35

ἐδάκρυσεν ὁ Ἰησοῦς

ಯೇಸು ಅತ್ತನು ಅಥವಾ “ಯೇಸು ಆಳುವುದಕ್ಕೆ ಆರಂಭಿಸಿದನು”

John 11:36

ἐφίλει

ಇದು ಒಬ್ಬ ಸ್ನೇಹಿತನಿಗಾಗಿ ಅಥವಾ ಒಬ್ಬ ಕುಟುಂಬ ಸದಸ್ಯನಿಗಾಗಿ ತೋರಿಸುವ ಸಹೋದರ ಪ್ರೀತಿಯನ್ನು ಅಥವಾ ಮನುಷ್ಯ ಪ್ರೀತಿಯನ್ನು ತೋರಿಸುತ್ತದೆ.

John 11:37

οὐκ ἐδύνατο οὗτος, ὁ ἀνοίξας τοὺς ὀφθαλμοὺς τοῦ τυφλοῦ, ποιῆσαι ἵνα καὶ οὗτος μὴ ἀποθάνῃ

ಯೇಸು ಲಾಜರನನ್ನು ಗುಣಪಡಿಸಿಲಿಲ್ಲವೆನ್ನುವ ಯೆಹೂದ್ಯರು ವ್ಯಕ್ತಪಡಿಸಲು ಪ್ರಶ್ನೆ ರೂಪದಲ್ಲಿ ಇದು ಕಂಡುಬರುತ್ತದೆ. ಪರ್ಯಾಯ ಅನುವಾದ: “ಆತನು ಕುರುಡನಾಗಿರುವ ಮನುಷ್ಯನನ್ನು ಗುಣಪಡಿಸಿದಾಗ, ಈ ಮನುಷ್ಯನನ್ನೂ ಗುಣಪಡಿಸುವನು. ಆದರೆ ಅವನು ಸತ್ತು ಹೋಗುತ್ತಿರಲಿಲ್ಲ!” ಅಥವಾ “ಆತನು ಇವನನ್ನು ಸತ್ತು ಹೋಗದಂತೆ ಮಾಡದಿರುವಾಗ, ಆತನು ಗುಣಪಡಿಸಿದ್ದಾನೆಂದು ಅವರು ಹೇಳಿದಾಗ, ಹುಟ್ಟು ಕುರುಡನಾಗಿರುವ ಮನುಷ್ಯನನ್ನು ಗುಣಪಡಿಸದೇ ಇರಬಹುದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ὁ ἀνοίξας τοὺς ὀφθαλμοὺς

ಇದೊಂದು ನಾಣುಡಿ. ಪರ್ಯಾಯ ಅನುವಾದ: “ಕಣ್ಣುಗಳನ್ನು ಗುಣಪಡಿಸಿದನು” (ನೋಡಿರಿ: ನುಡಿಗಟ್ಟುಗಳು.)

John 11:38

ἦν δὲ σπήλαιον, καὶ λίθος ἐπέκειτο ἐπ’ αὐτῷ

ಜನರು ಲಾಜರನನ್ನು ಸಮಾಧಿ ಮಾಡಿದ ಸನ್ನಿವೇಶವನ್ನು ವಿವರಿಸಲು ಯೋಹಾನನು ಈ ಕಥೆಗೆ ಚಿಕ್ಕ ವಿರಾಮವನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 11:39

ἡ ἀδελφὴ τοῦ τετελευτηκότος Μάρθα

ಮಾರ್ಥಳು ಮತ್ತು ಮರಿಯಳು ಲಾಜರನ ಅಕ್ಕಂದಿಯರಾಗಿದ್ದರು. ಪರ್ಯಾಯ ಅನುವಾದ: “ಮಾರ್ಥಳು ಲಾಜರನ ಅಕ್ಕ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἤδη ὄζει

ಈ ಸಮಯಕ್ಕೆ ಬಂದಾಗ ಕೆಟ್ಟ ವಾಸನೆ ಬರುತ್ತಿತ್ತು ಅಥವಾ “ಶವವು ಈಗಾಗಲೇ ದುರ್ಗಂಧ ಹೊಡೆಯುತ್ತಿತ್ತು”

John 11:40

οὐκ εἶπόν σοι, ὅτι ἐὰν πιστεύσῃς, ὄψῃ τὴν δόξαν τοῦ Θεοῦ

ದೇವರು ಏನೋ ಒಂದು ಅದ್ಭುತವನ್ನು ಮಾಡುತ್ತಾನೆಂದು ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಪರ್ಯಾಯ ಅನುವಾದ: “ನೀವು ನನ್ನನ್ನು ನಂಬಿದರೆ, ದೇವರು ಮಾಡುವುದನ್ನು ನೀವು ನೋಡುವಿರಿ ಎಂದು ನಾನು ನಿಮಗೆ ಹೇಳಿದ್ದೇನೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 11:41

Ἰησοῦς ἦρεν τοὺς ὀφθαλμοὺς ἄνω

ಇದೊಂದು ನಾಣ್ಣುಡಿ, ಇದಕ್ಕೆ ಮೇಲೆ ನೋಡುವುದು ಎಂದರ್ಥ. ಪರ್ಯಾಯ ಅನುವಾದ: “ಯೇಸು ಆಕಾಶದ ಕಡೆಗೆ ನೋಡಿದನು” (ನೋಡಿರಿ: ನುಡಿಗಟ್ಟುಗಳು.)

Πάτερ, εὐχαριστῶ σοι ὅτι ἤκουσάς μου

ಯೇಸು ನೇರವಾಗಿ ತಂದೆಗೆ ಪ್ರಾರ್ಥನೆ ಮಾಡುತ್ತಿದ್ದಾರೆ, ಇದರಿಂದ ಆತನ ಸುತ್ತಮುತ್ತ ಇರುವ ಜನರೆಲ್ಲರು ತನ್ನ ಪ್ರಾರ್ಥನೆಯನ್ನು ಕೇಳುವರು. ಪರ್ಯಾಯ ಅನುವಾದ: “ತಂದೆ, ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿನಗೆ ವಂದಿಸುತ್ತೇನೆ” ಅಥವಾ “ತಂದೆ, ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಾನು ನಿಮಗೆ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ”

Πάτερ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 11:42

ἵνα πιστεύσωσιν ὅτι σύ με ἀπέστειλας

ನೀನು ನನ್ನನ್ನು ಕಳುಹಿಸಿದ್ದೀಯೆಂದು ಅವರು ನಂಬಬೇಕೆಂದು ನಾನು ಬಯಸುತ್ತಿದ್ದೇನೆ.

John 11:43

ταῦτα εἰπὼν

ಯೇಸು ಪ್ರಾರ್ಥನೆ ಮಾಡಿದನಂತರ

φωνῇ μεγάλῃ ἐκραύγασεν

ಆತನು ಗಟ್ಟಿಯಾಗಿ ಕೂಗಿದನು

John 11:44

δεδεμένος τοὺς πόδας καὶ τὰς χεῖρας κειρίαις, καὶ ἡ ὄψις αὐτοῦ σουδαρίῳ περιεδέδετο

ಈ ಸಮಯದಲ್ಲಿ ಸಮಾಧಿ ಮಾಡುವ ಪದ್ಧತಿ ಹೇಗಿತ್ತಂದರೆ ನಾರಿನ ಬಟ್ಟೆಯಿಂದ ಶವವನ್ನು ಸುತ್ತಿ, ಸಮಾಧಿಯಲ್ಲಿ ಇಡುತ್ತಿದ್ದರು. ಪರ್ಯಾಯ ಅನುವಾದ: “ಯಾರಾದರೊಬ್ಬರು ಅವನ ಕೈಗಳು ಕಾಲುಗಳ ಸುತ್ತಾ ಬಟ್ಟೆಗಳನ್ನು ಸುತ್ತುತ್ತಿದ್ದರು. ಅವರು ಶವದ ಮುಖದ ಸುತ್ತಲೂ ಬಟ್ಟೆಗಳನ್ನು ಸುತ್ತುತ್ತಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

λέγει αὐτοῖς ὁ Ἰησοῦς

“ಅವರು” ಎನ್ನುವ ಪದವು ಅಲ್ಲಿರುವ ಜನರನ್ನು ಮತ್ತು ಅದ್ಭುತವನ್ನು ಕಂಡಿರುವ ಜನರನ್ನು ಸೂಚಿಸುತ್ತಿದೆ.

John 11:45

ಲಾಜರನನ್ನು ಯೇಸು ಮರಣದಿಂದ ಎಬ್ಬಿಸಿದನಂತರ ಏನು ನಡೆದಿದೆ ಎನ್ನುವದರ ಕುರಿತಾಗಿ ಈ ವಚನಗಳು ನಮಗೆ ಹೇಳುತ್ತಿವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 11:47

ಆದ್ದರಿಂದ ಲಾಜರನು ತಿರುಗಿ ಬರುತ್ತಾನೆಂದು ಅನೇಕಮಂದಿ ಅವರಿಗೆ ಹೇಳಿದರು, ಪ್ರಧಾನ ಯಾಜಕರು ಮತ್ತು ಫಾರಿಸಾಯರು ಸಮಾವೇಶಕ್ಕಾಗಿ ಯೆಹೂದ್ಯರ ಹಿರಿಸಭೆ ಒಂಗೂಡಿಸಿದರು.

οὖν οἱ ἀρχιερεῖς

ಆದನಂತರ ಯಾಜಕರ ಮಧ್ಯೆದಲ್ಲಿ ನಾಯಕರಿದ್ದರು

οὖν

ಈ ವಚನದಲ್ಲಿ ಆರಂಭವಾಗಿರುವ ಸಂಘಟನೆಗಳೆಲ್ಲವೂ [ಯೋಹಾನ.11:45-46] (./45.ಎಂ.ಡಿ) ರಲ್ಲಿ ಆಗಿರುವ ಸಂಘಟನೆಗಳ ಫಲಿತಗಳಾಗಿರುತ್ತವೆಯೆಂದು ಓದುಗಾರರಿಗೆ ಹೇಳುವದಕ್ಕಾಗಿ ಲೇಖಕರು ಈ ಮಾತನ್ನು ಉಪಯೋಗಿಸುತ್ತಿದ್ದಾರೆ.

τί ποιοῦμεν

ಮಹಾ ಸಭೆಯ ಸದಸ್ಯರೆಲ್ಲರೂ ಯೇಸುವಿನ ಕುರಿತಾಗಿ ಮಾತನಾಡುತ್ತಿರುವದನ್ನು ನಮಗೆ ತಿಳಿಯುತ್ತಿದೆ. ಪರ್ಯಾಯ ಅನುವಾದ: “ಯೇಸುವಿನ ವಿಷಯದಲ್ಲಿ ನಾವೇನು ಮಾಡಲಿದ್ದೇವೆ?” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 11:48

πάντες πιστεύσουσιν εἰς αὐτὸν

ಜನರು ಯೇಸುವನ್ನು ತಮ್ಮ ಅರಸನನ್ನಾಗಿ ಮಾಡಲು ಪ್ರಯತ್ನಪಡುತ್ತಿದ್ದಾರೆನ್ನುವ ಭಯವು ಯೆಹೂದ್ಯರ ನಾಯಕರಿಗೆ ಇದ್ದಿತ್ತು. ಪರ್ಯಾಯ ಅನುವಾದ: “ಪ್ರತಿಯೊಬ್ಬರೂ ಆತನಲ್ಲಿ ನಂಬಿಕೆ ಇಟ್ಟಿದ್ದಾರೆ ಮತ್ತು ರೋಮಾದವರಿಗೆ ಧಿಕ್ಕಾರ ಮಾಡುತ್ತಾರೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἐλεύσονται οἱ Ῥωμαῖοι

ಇದು ರೋಮಾ ಸೈನ್ಯಕ್ಕಾಗಿ ಹೇಳಲ್ಪಟ್ಟಿರುವ ಉಪಲಕ್ಷಣವಾಗಿರುತ್ತದೆ. ಪರ್ಯಾಯ ಅನುವಾದ: “ರೋಮಾ ಸೈನ್ಯವು ಬರುತ್ತದೆ“ (ನೋಡಿರಿ: ಉಪಲಕ್ಷಣಾಲಂಕಾರ)

ἀροῦσιν ἡμῶν καὶ τὸν τόπον καὶ τὸ ἔθνος

ನಮ್ಮ ದೇವಾಲಯವನ್ನು ಮತ್ತು ನಮ್ಮ ದೇಶವನ್ನು ನಾಶಪಡಿಸುವರು

John 11:49

εἷς…τις ἐξ αὐτῶν

ಕಥೆಗೆ ಒಂದು ಹೊಸ ಪಾತ್ರಯನ್ನು ಪರಿಚಯ ಮಾಡುವ ವಿಧಾನವಾಗಿರುತ್ತದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡಲು ಒಂದು ವಿಧಾನವಿದ್ದಲ್ಲಿ, ನೀವು ಅದನ್ನು ಇಲ್ಲಿ ಉಪಯೋಗಿಸಬಹುದು. (ನೋಡಿರಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.)

ὑμεῖς οὐκ οἴδατε οὐδέν

ಕಾಯಫ ತನ್ನ ಮಾತುಗಳನ್ನು ಕೇಳುವವರನ್ನು ಅವಮಾನ ಮಾಡುವುದಕ್ಕೆ ಉಪಯೋಗಿಸಿದ ಅತಿಶಯೋಕ್ತಿಗಳಾಗಿದ್ದವು. ಪರ್ಯಾಯ ಅನುವಾದ: “ಏನು ನಡೆಯುತ್ತಿದೆಯೆಂದು ನಿಮಗೇನು ಅರ್ಥವಾಗುತ್ತಿಲ್ಲ” ಅಥವಾ “ನಿಮಗೇನು ಗೊತ್ತಿಲ್ಲ ಎನ್ನುವಂತೆ ನೀವು ಮಾತನಾಡುತ್ತಿದ್ದೀರಿ” (ನೋಡಿರಿ: ಅತಿಶಯೋಕ್ತಿ)

John 11:50

καὶ μὴ ὅλον τὸ ἔθνος ἀπόληται

ಯೇಸುವನ್ನು ಬದುಕಿಸುವದಕ್ಕೆ ಬಿಟ್ಟರೆ, ತಿರಸ್ಕಾರ ಮಾಡುವದಕ್ಕೆ ಅನುಮತಿ ಕೊಟ್ಟರೆ, ಯೆಹೂದ್ಯ ದೇಶದ ಜನರೆಲ್ಲರನ್ನು ರೋಮಾ ಸೈನ್ಯವು ಕೊಲ್ಲುತ್ತದೆಯೆಂದು ಕಾಯಫನ ಮಾತುಗಳಿಗೆ ಅರ್ಥವಾಗಿರುತ್ತದೆ. “ದೇಶ” ಎನ್ನುವ ಪದವು ಇಲ್ಲಿ ಯೆಹೂದ್ಯ ಜನರೆಲ್ಲರನ್ನು ಸೂಚಿಸುವ ಉಪಲಕ್ಷಣದ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ರೋಮಾದವರು ನಮ್ಮ ದೇಶದ ಜನರನ್ನು ಕೊಲ್ಲುವದಕ್ಕಿಂತ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಉಪಲಕ್ಷಣಾಲಂಕಾರ)

John 11:51

ಕಾಯಫನಿಗೆ ಆ ಸಮಯದಲ್ಲಿ ಅರ್ಥವಾಗದಿದ್ದರೂ ಅವನು ಪ್ರವಾದಿಸುತ್ತಿದ್ದಾನೆಂದು 51 ಮತ್ತು 52 ವಚನಗಳು ವಿವರಿಸುತ್ತಿವೆ. ಇದು ಹಿನ್ನೆಲೆ ಸಮಾಚಾರವಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἀποθνῄσκειν ὑπὲρ τοῦ ἔθνους

“ದೇಶ” ಎನ್ನುವ ಪದವು ಉಪಲಕ್ಷಣ ಪದವಾಗಿರುತ್ತದೆ ಮತ್ತು ಇದು ಇಸ್ರಾಯೇಲ್ ದೇಶದ ಜನರನ್ನು ಸೂಚಿಸುತ್ತಿದೆ. (ನೋಡಿರಿ: ಉಪಲಕ್ಷಣಾಲಂಕಾರ)

John 11:52

συναγάγῃ εἰς ἕν

ಇದು ಪದಲೋಪವಾಗಿರುತ್ತದೆ. ಪರ್ಯಾಯ ಅನುವಾದ: “ಒಂದು ಪ್ರಜೆಯಾಗಿ ಎಲ್ಲರನ್ನು ಒಂದು ಸ್ಥಳದಲ್ಲಿ ಸೇರಿಸುವುದು” (ನೋಡಿರಿ: ಪದಲೋಪ)

τέκνα τοῦ Θεοῦ

ಇದು ಯೇಸುವಿನಲ್ಲಿರುವ ನಂಬಿಕೆಯ ಮೂಲಕ ದೇವರಿಗೆ ಸಂಬಂಧಪಟ್ಟಿರುವ ಜನರನ್ನು ಸೂಚಿಸುತ್ತದೆ ಮತ್ತು ಇವರು ಆತ್ಮೀಯಕವಾಗಿ ದೇವರ ಮಕ್ಕಳಾಗಿದ್ದಾರೆ.

John 11:54

ಯೇಸು ಬೆಥನ್ಯಾವನ್ನು ಬಿಟ್ಟು ಎಫ್ರಾಯೀಮುಗೆ ಹೊರಡುತ್ತಾನೆ. 55ನೇ ವಚನದಲ್ಲಿ ಕಥೆಯು ಈಗ ಯೆಹೂದ್ಯರಲ್ಲಿ ಅನೇಕಮಂದಿ ಆಚರಿಸುವ ಪಸ್ಕದ ಕುರಿತಾಗಿ ಹೇಳುವುದಕ್ಕೆ ಮುಂದೆವರಿಸುತ್ತದೆ.

παρρησίᾳ περιεπάτει ἐν τοῖς Ἰουδαίοις

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಯೆಹೂದ್ಯರ ನಾಯಕರಿಗೆ ಉಪಲಕ್ಷಣವಾಗಿ ಹೇಳಲ್ಪಟ್ಟಿರುತ್ತದೆ. ಮತ್ತು “ಬಹಿರಂಗವಾಗಿ ತಿರುಗಾಡುವುದು” ಎನ್ನುವ ಮಾತು ರೂಪಕಲಂಕಾರವಾಗಿ ಹೇಳಲ್ಪಟ್ಟಿರುತ್ತದೆ, ಇದಕ್ಕೆ “ಪ್ರತಿಯೊಬ್ಬರು ಆತನನ್ನು ನೋಡುವ ಸ್ಥಳದಲ್ಲಿ ನಿವಾಸವಾಗಿದ್ದನು” ಅಥವಾ “ಆತನನ್ನು ತಿರಸ್ಕಾರ ಮಾಡಿದ ಯೆಹೂದ್ಯರ ಮಧ್ಯೆದಲ್ಲಿ ಬಹಿರಂಗವಾಗಿ ಓಡಾಡಿದನು” ಎಂದರ್ಥವಾಗಿರುತ್ತದೆ. (ನೋಡಿರಿ: ಉಪಲಕ್ಷಣಾಲಂಕಾರ ಮತ್ತು ರೂಪಕ ಅಲಂಕಾರ)

τὴν χώραν

ಅತೀ ಕಡಿಮೆ ಜನರು ನಿವಾಸ ಮಾಡುವ ಪಟ್ಟಣಗಳ ಆಚೆಯಿರುವ ಗ್ರಾಮೀಣ ಪ್ರಾಂತ್ಯ

κἀκεῖ ἔμεινεν μετὰ τῶν μαθητῶν

ಯೇಸು ಮಾತು ತನ್ನ ಶಿಷ್ಯರು ಸ್ವಲ್ಪ ಕಾಲದಮಟ್ಟಿಗೆ ಎಫ್ರಾಯೀಮುನಲ್ಲಿ ಇಳಿದುಕೊಂಡಿದ್ದರು. ಪರ್ಯಾಯ ಅನುವಾದ: “ಅಲ್ಲಿ ಆತನ ತನ್ನ ಶಿಷ್ಯರೊಂದಿಗೆ ಸ್ವಲ್ಪ ಕಾಲ ನಿವಾಸ ಮಾಡಿದ್ದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 11:55

ἀνέβησαν…εἰς Ἱεροσόλυμα

“ಏರಿ ಹೋದರು” ಎನ್ನುವ ಪದವು ಇಲ್ಲಿ ಉಪಯೋಗಿಸಲ್ಪಟ್ಟಿದೆ, ಯಾಕಂದರೆ ಯೆರೂಷಲೇಮ ಪಟ್ಟಣವು ಅಲ್ಲಿರುವ ಪ್ರಾಂತ್ಯಗಳಿಗಿಂತ ಎತ್ತರದಲ್ಲಿರುತ್ತದೆ.

John 11:56

57ನೇ ವಚನದಲ್ಲಿರುವ ಸಮಾಚಾರವು 56ನೇ ವಚನಕ್ಕೆ ಮುಂಚಿತವಾಗಿ ಕಂಡುಬರುತ್ತದೆ. ಈ ಕ್ರಮವು ನಿಮ್ಮ ಓದುಗಾರರನ್ನು ಗೊಂದಲಪಡಿಸಿದರೆ, ಈ ಎರಡು ವಚನಗಳನ್ನು ಬೆರೆತುಪಡಿಸಿ, 56ನೇ ವಚನಕ್ಕೆ ಮುಂಚಿತವಾಗಿ 57ನೇ ವಚನವನ್ನು ಇಡಬಹುದು. (ನೋಡಿರಿ: ಘಟನಾವಳಿಗಳ ಅನುಕ್ರಮ.)

ἐζήτουν…τὸν Ἰησοῦν

“ಅವರು” ಎನ್ನುವ ಪದವು ಯೆರೂಷಲೇಮಿಗೆ ಪ್ರಯಾಣ ಮಾಡುತ್ತಿರುವ ಯೆಹೂದ್ಯರ ಜನರನ್ನು ಸೂಚಿಸುತ್ತಿದೆ.

τί δοκεῖ ὑμῖν? ὅτι οὐ μὴ ἔλθῃ εἰς τὴν ἑορτήν

ಯೇಸು ಪಸ್ಕ ಹಬ್ಬಕ್ಕೆ ಬರುತ್ತಾನೆನ್ನುವ ಬಲವಾದ ಸಂದೇಹವನ್ನು ವ್ಯಕ್ತಪಡಿಸುವ ಅಲಂಕಾರಿಕ ಪ್ರಶ್ನೆಗಳಾಗಿರುತ್ತವೆ. “ನೀವು ಆಲೋಚನೆ ಮಾಡುತ್ತಿದ್ದೀರಾ” ಎನ್ನುವ ಪದಗಳನ್ನು ಬಿಟ್ಟು ಕೇಳುವ ಎರಡನೇ ಪ್ರಶ್ನೆಯಾಗಿರುತ್ತದೆ. ಯೇಸು ಪಸ್ಕ ಹಬ್ಬದಲ್ಲಿ ಬಂಧಿಸಲ್ಪಡುವ ಅಪಾಯವು ಇರುವದರಿಂದ ಯೇಸು ಹಬ್ಬಕ್ಕೆ ಬರುತ್ತಾನೆನ್ನುವ ಆಶ್ಚರ್ಯವು ಫರಿಸಾಯರಿಗೆ ಇದ್ದಿತ್ತು. ಪರ್ಯಾಯ ಅನುವಾದ: “ಯೇಸು ಬಹುಶಃ ಹಬ್ಬಕ್ಕೆ ಬರದೇ ಇರಬಹುದು. ಆತನು ಬಹುಶಃ ಬಂಧಿಸಲ್ಪಡದೇ ಇರಬಹುದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ಪದಲೋಪ)

John 11:57

δὲ οἱ ἀρχιερεῖς

ಯೇಸು ಪಸ್ಕ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ಎಂದು ಯೆಹೂದ್ಯ ಆರಾಧಿಕರು ಯಾಕೆ ಆಶ್ಚರ್ಯಕ್ಕೆ ಗುರಿಯಾಗುತ್ತಿದ್ದರು ಎಂದು ವಿವರಿಸುವ ಹಿನ್ನೆಲೆ ಸಮಾಚಾರವಾಗಿದ್ದಿತ್ತು. ನಿಮ್ಮ ಭಾಷೆಯಲ್ಲಿ ಈ ಹಿನ್ನೆಲೆಯ ಸಮಾಚಾರವನ್ನು ತಿಳಿಸುವುದಕ್ಕೆ ಮತ್ತೊಂದು ವಿಧಾನವಿದ್ದಲ್ಲಿ, ಅದನ್ನು ಇಲ್ಲಿ ಬಳಕೆ ಮಾಡಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

John 12

ಯೋಹನ 12 ಸಾಧಾರಣ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಕೆಲವೊಂದು ಅನುವಾದಕರು ಕಾವ್ಯಭಾಗದಲ್ಲಿರುವ ಪ್ರತಿಯೊಂದು ಸಾಲನ್ನು ಓದುವುದಕ್ಕೆ ಸುಲಭವಾಗಿರಲು ವಾಕ್ಯಭಾಗದಲ್ಲಿಡದೇ ಬಲಭಾಗದಲ್ಲಿ ಕ್ರಮಪಡಿಸಿ ಇಡುವರು. ಹಳೇ ಒಡಂಬಡಿಕೆಯಿಂದ ತೆಗೆಯಲ್ಪಟ್ಟಿರುವ 12:38,40 ವಚನಗಳಲ್ಲಿರುವ ಕಾವ್ಯಭಾಗವನ್ನು ಯುಎಲ್.ಟಿ ಕ್ರಮಪಡಿಸಿ ಇಟ್ಟಿದೆ.

16ನೇ ವಚನವು ಈ ಸಂಘಟನೆಗಳ ಮೇಲೆಯೇ ವ್ಯಾಖ್ಯಾನವಾಗಿದ್ದಿತ್ತು. ಕಥೆ ಹೇಳದಂತೆ ಇದನ್ನು ಕ್ರಮಪಡಿಸಿ ಆವರಣದಲ್ಲಿಡಲು ಈ ಇಡೀ ವಚನವನ್ನೇ ಇಡುವದು ಸಾಧ್ಯವೇ.

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ಯೇಶಗಳು

ಮರಿಯಳು ಯೇಸುವಿನ ಪಾದಗಳನ್ನು ಅಭಿಷೇಕ ಮಾಡಿದಳು

ಒಬ್ಬ ವ್ಯಕ್ತಿ ಒಳ್ಳೇಯ ಅತಿಥಿ ಭಾವವನ್ನು ಹೊಂದಲು ಮತ್ತು ಆದರಣೆ ಹೊಂದಲು ಆ ವ್ಯಕ್ತಿಯ ತಲೆಯ ಮೇಲೆ ಯೆಹೂದ್ಯರು ಎಣ್ಣೆಯನ್ನು ಇಡುತ್ತಿದ್ದರು. ಆದರೆ ಅದೇ ವ್ಯಕ್ತಿ ಸತ್ತು ಹೋದಾಗ, ಆ ವ್ಯಕ್ತಿಯ ದೇಹವನ್ನು ಸಮಾಧಿ ಮಾಡುವದಕ್ಕೆ ಮುಂಚಿತವಾಗಿ ಆ ದೇಹಕ್ಕೆ ಎಣ್ಣೆಯನ್ನು ಹಚ್ಚುತ್ತಿದ್ದರು. ಆದರೆ ಅವರು ಆ ವ್ಯಕ್ತಿಯ ಪಾದಗಳಿಗೆ ಎಣ್ಣೆಯನ್ನು ಹಚ್ಚಲು ಆಲೋಚನೆ ಮಾಡುತ್ತಿರಲಿಲ್ಲ, ಯಾಕಂದರೆ ಪಾದಗಳು ಧೂಳಿಯಿಂದ ತುಂಬಿರುತ್ತವೆಯೆಂದು ಆಲೋಚನೆ ಮಾಡುತ್ತಿದ್ದರು.

ಕತ್ತೆಗಳು ಮತ್ತು ಮರಿ

ಯೇಸು ಪ್ರಾಣಿಯ ಮೇಲೆ ಕುಳಿತು ಯೆರೂಸಲೇಮಿಗೆ ಹೊರಟನು. ಪ್ರಾಮುಖ್ಯವಾದ ಯುದ್ಧವನ್ನು ಜಯಿಸಿದ ಮೇಲೆ ಪಟ್ಟಣದೊಳಗೆ ಬರುವ ಅರಸನಂತೆ ಆತನು ಆ ವಿಧಾನದಲ್ಲಿ ಬಂದನು. ಹಳೇ ಒಡಂಬಡಿಕೆಯಲ್ಲಿರುವ ಇಸ್ರಾಯೇಲ್ ಅರಸರು ಕೂಡ ಕತ್ತೆಗಳ ಮೇಲೆ ಕುಳಿತು ಬರುತ್ತಿದ್ದರು. ಇತರ ಅರಸರು ಕುದುರೆಗಳ ಮೇಲೆ ಬರುತ್ತಿದ್ದರು. ಆದ್ದರಿಂದ ಯೇಸು ಇಸ್ರಾಯೇಲ್ ಅರಸನೆಂದು ತೋರಿಸಿಕೊಂಡಿದ್ದರು ಮತ್ತು ಆತನು ಇತರ ಅರಸರಂತೆ ಇಲ್ಲವೆಂದು ತೋರಿಸಿಕೊಂಡಿದ್ದರು.

ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನರೆಲ್ಲರೂ ಈ ಸಂಘಟನೆಯ ಕುರಿತಾಗಿ ಬರೆದರು. ಮತ್ತಾಯ ಮತ್ತು ಮಾರ್ಕರು ಯೇಸುವಿಗೆ ಕತ್ತೆಯನ್ನು ಶಿಷ್ಯರು ಬಿಡಿಸಿಕೊಂಡು ಬಂದರೆಂದು ಬರೆದರು. ಯೇಸುವೇ ಕತ್ತೆಯನ್ನು ಹಿಡಿದುಕೊಂಡು ಬಂದರೆಂದು ಯೋಹಾನರವರು ಬರೆದರು. ಅವರು ಆತನಿಗಾಗಿ ಕತ್ತೆ ಮರಿಯನ್ನು ಹಿಡಿದುಕೊಂಡು ಬಂದರೆಂದು ಲೂಕನು ಬರೆದನು. ಮತ್ತಾಯನು ಮಾತ್ರ ಅಲ್ಲಿ ಎರಡು ಕತ್ತೆಗಳು ಮತ್ತು ಒಂದು ಕತ್ತೆ ಮರಿ ಇದ್ದಂತೆ ಬರೆದನು. ಆದರೆ ಯೇಸು ಕತ್ತೆಯ ಮೇಲೆ ಬಂದಿದ್ದನೋ ಅಥವಾ ಕತ್ತೆಯ ಮರಿ ಮೇಲೆ ಬಂದಿದ್ದನೋ ಎಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಒಂದೇ ವಿಷಯವನ್ನು ಎಲ್ಲರು ಹೇಳುತ್ತಿದ್ದಾರೆನ್ನುವ ಮಾತನ್ನು ಹೇಳುವದಕ್ಕೆ ಪ್ರಯತ್ನ ಪಡದೇ ಯು.ಎಲ್.ಟಿ ಯಲ್ಲಿ ಈ ಸಂಘಟನೆಗಳು ಕಾಣಿಸುಕೊಳ್ಳುತ್ತಿರುವಂತೆಯೇ ಅನುವಾದ ಮಾಡುವುದು ಒಳ್ಳೇಯದು. (ನೋಡಿರಿ: [ಮತ್ತಾಯ.21:1-7] (../../21/01.ಎಂಡಿ) ಮತ್ತು [ಮಾರ್ಕ.11:1-7] (../../ಮಾರ್ಕ/11/01.ಎಂಡಿ) ಮತ್ತು [ಲೂಕಾ.19:29-36] (../../ಲೂಕ/19/29.ಎಂಡಿ) ಮತ್ತು [ಯೋಹಾನ.12:14-15] (../../ಯೋಹಾನ/12/14.ಎಂಡಿ))

ಮಹಿಮೆ

ಲೇಖನ ಭಾಗಗಳು ಅನೇಕಬಾರಿ ದೇವರ ಮಹಿಮೆಯು ಒಂದು ಅದ್ಭುತವಾದ ಬೆಳಕಿನಂತೆ ವರ್ಣಿಸುತ್ತವೆ. ಜನರು ಈ ಬೆಳಕನ್ನು ನೋಡಿದಾಗ, ಅವರು ಹೆದರಿಕೊಳ್ಳುತ್ತಾರೆ. ಈ ಅಧ್ಯಾಯದಲ್ಲಿ ಯೇಸುವಿನ ಮಹಿಮೆಯು ಆತನ ಪುನರುತ್ಥಾನವಾಗಿರುತ್ತದೆಯೆಂದು ಯೋಹಾನನು ಹೇಳುತ್ತಾನೆ ([ಯೋಹಾನ.12:16] (../../ಯೋಹಾನ/12/16.ಎಂಡಿ)).

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ರೂಪಕಲಂಕಾರಗಳು

ಸತ್ಯವೇದವು ಅನೇಕಬಾರಿ ಅನೀತಿವಂತರ ಕುರಿತಾಗಿ ಮಾತನಾಡಿದೆ, ಅನೀತಿವಂತರು ಎಂದರೆ ದೇವರಿಗೆ ಇಷ್ಟವಾದವುಗಳನ್ನು ಮಾಡುವುದಕ್ಕೆ ಇಷ್ಟಪಡದೇ ಕತ್ತಲೆಯಲ್ಲಿ ಅಲೆದಾಡುವ ಜನರು ಎಂದರ್ಥ. ಅಂಥಹ ಪಾಪ ಸ್ವಭಾವದ ಜನರು ನೀತಿವಂತರಾಗುವಂತೆ ಮಾಡುವ, ಅವರು ಮಾಡುವ ತಪ್ಪನ್ನು ಅರ್ಥಮಾಡಿಕೊಳ್ಳುವ ಮತ್ತು ದೇವರಿಗೆ ವಿಧೇಯರಾಗುವಂತೆ ಮಾಡುವ ಬೆಳಕಿನ ಕುರಿತಾಗಿ ಇದು ಮಾತನಾಡುತ್ತಿದೆ. (ನೋಡಿರಿ: ರೂಪಕ ಅಲಂಕಾರ ಮತ್ತು ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ)

ಈ ಅಧ್ಯಾಯದಲ್ಲಿ ಇತರ ಕ್ಲಿಷ್ಟವಾದ ಅನುವಾದದ ಸಮಸ್ಯೆಗಳು

ವಿಪರ್ಯಾಸದ ಸತ್ಯ

ವಿಪರ್ಯಾಸದ ಸತ್ಯ ಎಂದರೆ ಅಸಾಧ್ಯವಾದ ಒಂದು ಸಂಗತಿಯನ್ನು ವಿವರಿಸುವದಕ್ಕೆ ಕಾಣುವ ನಿಜವಾದ ವ್ಯಾಖ್ಯೆಯಾಗಿರುತ್ತದೆ. 12:25 ರಲ್ಲಿ ವಿಪರ್ಯಾಸದ ಸತ್ಯವಿರುತ್ತದೆ: “ತನ್ನ ಪ್ರಾಣವನ್ನು ಪ್ರೀತಿಸುವನು ಅದನ್ನು ಕಳಕೊಳ್ಳುವನು, ಈ ಲೋಕದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯದವನು ನಿತ್ಯ ಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು.” ಆದರೆ 12:26ರಲ್ಲಿ ನಿತ್ಯಜೀವಕ್ಕಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವುದರ ಅರ್ಥವನ್ನು ಯೇಸು ವಿವರಣೆ ಕೊಡುತ್ತಿದ್ದಾರೆ. ([ಯೋಹಾನ.12:25-26] (./25.ಎಂಡಿ)).

John 12:1

ಮರಿಯಳು ಎಣ್ಣೆಯಿಂದ ಯೇಸುವಿನ ಪಾದಗಳನ್ನು ಅಭಿಷೇಕ ಮಾಡಿದಾಗ ಯೇಸು ಬೆಥನ್ಯಾದಲ್ಲಿ ರಾತ್ರಿಯ ಊಟಕ್ಕೆ ಕುಳಿತಿದ್ದರು.

πρὸ ἓξ ἡμερῶν τοῦ Πάσχα

ಹೊಸ ಸಂಘಟನೆಯ ಆರಂಭವನ್ನು ಗುರುತಿಸಲು ಲೇಖಕರು ಈ ಮಾತುಗಳನ್ನು ಉಪಯೋಗಿಸುತ್ತಿದ್ದಾರೆ.

ἤγειρεν ἐκ νεκρῶν

ಇದು ನಾಣ್ಣುಡಿಯಾಗಿದ್ದಿತ್ತು. ಪರ್ಯಾಯ ಅನುವಾದ: “ತಿರುಗಿ ಜೀವಂತಗೊಳಿಸಿದನು” (ನೋಡಿರಿ: ನುಡಿಗಟ್ಟುಗಳು.)

John 12:3

λίτραν μύρου

ನೀವು ಇದನ್ನು ಆಧುನಿಕ ಅಳತೆಗೆ ಮಾರ್ಪಡಿಸಬಹುದು. “ ಪರ್ಯಾಯ ಅನುವಾದ: ಒಂದು “ಸೇರ” ಅಂದರೆ ಒಂದು ಕಿಲೋಗ್ರಾಂನಲ್ಲಿ ಮೂರು ಭಾಗದಷ್ಟು ಎಣ್ಣೆ ಎಂದರ್ಥ. ಅಥವಾ ಮೂರು ಭಾಗದಷ್ಟು ಹಿಡಿಯುವ ಒಂದು ಪಾತ್ರೆಯನ್ನು ನೀವು ಸೂಚಿಸಬಹುದು. ಪರ್ಯಾಯ ಅನುವಾದ: “ಒಂದು ಕಿಲೋಗ್ರಾಂ ಜಟಾಮಾಂಸಿ ತೈಲದಲ್ಲಿ ಮೂರು ಭಾಗದಷ್ಟು” ಅಥವಾ “ಜಟಾಮಾಂಸಿಯ ಒಂದು ಡಬ್ಬಿ” (ನೋಡಿರಿ: ಸತ್ಯವೇದದಲ್ಲಿನ ತೂಕಗಳು.)

μύρου

ಇದು ಪರಿಮಳದ ಗಿಡಗಳಿಂದ ಮತ್ತು ಹೂಗಳಿಂದ ತೆಗೆದ ಎಣ್ಣೆಯಿಂದ ತಯಾರು ಮಾಡಿದ ಒಳ್ಳೇಯ ಸುವಾಸನೆಯ ದ್ರವ ಪದಾರ್ಥವಾಗಿರುತ್ತದೆ.

νάρδου

ಇದು ನೇಪಾಲ್, ಚೀನಾ, ಮತ್ತು ಭಾರತ ದೇಶಗಳಲ್ಲಿರುವ ಪರ್ವತಗಳಲ್ಲಿ ಬೆಳೆಯುವ ಘಂಟೆ ಆಕಾರದಲ್ಲಿರುವ ಗುಲಾಬಿ ಬಣ್ಣದ ಹೂವುಗಳಿಂದ ತಯಾರು ಮಾಡಿದ ಸುಗಂಧಿತ ತೈಲ. (ನೋಡಿರಿ: ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.)

ἡ…οἰκία ἐπληρώθη ἐκ τῆς ὀσμῆς τοῦ μύρου

ಇದನ್ನು ಕ್ರಿಯಾತ್ಮಕವಾದ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆಕೆ ತಂದ ಸುಗಂಧಿತ ಎಣ್ಣೆಯ ಸುವಾಸನೆಯು ಮನೆಯೆಲ್ಲಾ ತುಂಬಿತು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 12:4

ὁ μέλλων αὐτὸν παραδιδόναι

ಯೇಸುವನ್ನು ಬಂಧಿಸುವುದಕ್ಕೆ ಶತ್ರುಗಳಿಗೆ ಸಹಾಯ ಮಾಡಿದವನು.

John 12:5

διὰ τί τοῦτο τὸ μύρον οὐκ ἐπράθη τριακοσίων δηναρίων, καὶ ἐδόθη πτωχοῖς

ಇದು ಅಲಂಕಾರಿಕ ಪ್ರಶ್ನೆ. ಇದನ್ನು ನೀವು ಒಂದು ಬಲವಾದ ವ್ಯಾಖ್ಯೆಯನವಾಗಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಈ ಜಟಾಮಾಂಸಿಯ ತೈಲವು ಮೂರು ನೂರು ದೆನಾರಿಗಳಿಗೆ (೩೦೦ ಬೆಳ್ಳಿ ನಾಣ್ಯಗಳಿಗೆ) ಮಾರುತ್ತಾರೆ ಮತ್ತು ಅದಕ್ಕೆ ಬರುವ ಆ ಹಣವನ್ನು ಬಡವರಿಗೆ ಕೊಡುತ್ತಾರೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τριακοσίων δηναρίων

ಇದನ್ನು ನೀವು ಸಂಖ್ಯೆಯಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “300 ದೆನಾರಿಗಳು (ಬೆಳ್ಳಿ ನಾಣ್ಯಗಳು)” (ನೋಡಿರಿ: ಸಂಖ್ಯೆಗಳು.)

δηναρίων

ಒಬ್ಬ ಸಾಮಾನ್ಯ ಕೂಲಿಯು ಒಂದು ದಿನಕ್ಕೆ ಸಂಪಾದಿಸುವ ಒಂದು ಬೆಳ್ಳಿಯ ನಾಣ್ಯವನ್ನು ದೆನಾರಿ ಎಂದು ಕರೆಯುತ್ತಾರೆ. (ನೋಡಿರಿ: ಸತ್ಯವೇದದಲ್ಲಿನ ಹಣದ ಮೌಲ್ಯ.)

John 12:6

εἶπεν δὲ τοῦτο, οὐχ ὅτι περὶ τῶν πτωχῶν ἔμελεν αὐτῷ, ἀλλ’ ὅτι κλέπτης ἦν, καὶ τὸ γλωσσόκομον ἔχων τὰ βαλλόμενα ἐβάσταζεν

ಬಡವರ ಕುರಿತಾಗಿ ಯೂದಾನು ಯಾಕೆ ಪ್ರಶ್ನೆ ಕೇಳಿದ ಎನ್ನುವದರ ವಿಷಯವಾಗಿ ಯೋಹಾನನು ವಿವರಣೆ ಕೊಡುತ್ತಿದ್ದಾನೆ. ಹಿನ್ನೆಲೆಯ ಸಮಾಚಾರವನ್ನು ಕೊಡುವ ವಿಧಾನವು ನಿಮ್ಮ ಭಾಷೆಯಲ್ಲಿ ಇದ್ದಾರೆ, ಅದನ್ನು ಇಲ್ಲಿ ಉಪಯೋಗಿಸಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

εἶπεν…τοῦτο, οὐχ ὅτι περὶ τῶν πτωχῶν ἔμελεν αὐτῷ, ἀλλ’ ὅτι κλέπτης ἦν

ಅವನು ಇದನ್ನು ಹೇಳಿದ್ದನು ಯಾಕಂದರೆ ಅವನು ಕಳ್ಳನಾಗಿದ್ದನು. ಅವನು ಬಡವರನ್ನು ಗಮನಿಸುತ್ತಿರಲಿಲ್ಲ.

John 12:7

ἄφες αὐτήν, ἵνα εἰς τὴν ἡμέραν τοῦ ἐνταφιασμοῦ μου, τηρήσῃ αὐτό

ಯೇಸುವಿನ ಮರಣವು ಮತ್ತು ಸಮಾಧಿಯ ಕುರಿತಾಗಿ ಮುನ್ಸೂಚನೆಯಾಗಿ ಆ ಸ್ತ್ರೀಯ ಕ್ರಿಯೆಗಳು ಇವೆಯೆಂದು ಯೇಸು ತಿಳಿಸುತ್ತಿದ್ದಾರೆ. ಪರ್ಯಾಯ ಅನುವಾದ: “ಆಕೆ ನನ್ನನ್ನು ಎಷ್ಟು ಅಭಿನಂದಿಸುವಳೋ ಎಂದು ತೋರಿಸುವುದಕ್ಕೆ ಆಕೆಗೆ ಅನುಮತಿ ನೀಡಿರಿ! ಈ ಪ್ರಕಾರವಾಗಿ ಸಮಾಧಿಗೆ ನನ್ನ ದೇಹವನ್ನು ಸಿದ್ಧಪಡಿಸುತ್ತಿದ್ದಾಳೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:8

τοὺς πτωχοὺς…πάντοτε ἔχετε μεθ’ ἑαυτῶν

ಬಡ ಜನರಿಗೆ ಸಹಾಯ ಮಾಡಲು ಅನೇಕ ಅವಕಾಶಗಳು ಯಾವಾಗಲೂ ಇರುತ್ತವೆಯೆಂದು ಯೇಸು ಪರೋಕ್ಷವಾಗಿ ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನಿಮ್ಮ ಮಧ್ಯೆದಲ್ಲಿ ಯಾವಾಗಲೂ ಬಡ ಜನರು ಇರುತ್ತಾರೆ, ಮತ್ತು ನೀವು ಬೇಕಾದ ಸಮಯದಲ್ಲಿ ಅವರಿಗೆ ಸಹಾಯ ಮಾಡಬಹುದು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἐμὲ δὲ οὐ πάντοτε ἔχετε

ಈ ಪ್ರಕಾರವಾಗಿ, ಆತನು ಮರಣ ಹೊಂದುತ್ತಾನೆಂದು ಯೇಸು ತಿಳಿಯಪಡಿಸಿದ್ದಾರೆ. ಪರ್ಯಾಯ ಅನುವಾದ: “ಆದರೆ ನಾನು ಯಾವಾಗಲೂ ನಿಮ್ಮ ಮಧ್ಯೆದಲ್ಲಿ ಇರುವುದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:9

οὖν

ಇಲ್ಲಿರುವ ಮಾತು ಮುಖ್ಯ ಕಥೆಯಲ್ಲಿ ವಿರಾಮವನ್ನು ಕೊಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಇಲ್ಲಿ ಯೆರೂಷಲೇಮಿನಿಂದ ಬೆಥನ್ಯಾಗೆ ಬಂದಿರುವ ಜನರ ಹೊಸ ಗುಂಪಿನ ಕುರಿತಾಗಿ ಯೋಹಾನನು ಹೇಳುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 12:11

δι’ αὐτὸν

ಲಾಜರನು ತಿರುಗಿ ಜೀವಂತವಾಗಿ ಬಂದಿರುವ ಸಂಘಟನೆಯಿಂದ ಯೆಹೂದ್ಯರಲ್ಲಿ ಎಲ್ಲರು ಯೇಸುವಿನಲ್ಲಿ ನಂಬಿಕೆ ಇಡಲು ಕಾರಣವಾಯಿತು.

ἐπίστευον εἰς τὸν Ἰησοῦν

ಈ ವಾಕ್ಯವು ಯೇಸು ದೇವರ ಮಗನೆಂದು ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಅನೇಕಮಂದಿ ಯೆಹೂದ್ಯರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಯೇಸುವಿನಲ್ಲಿ ಅವರ ನಂಬಿಕೆಯನ್ನು ಇಟ್ಟರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:12

ಯೇಸು ಯೆರೂಷಲೇಮಿನೊಳಗೆ ಪ್ರವೇಶ ಮಾಡಿದನು ಮತ್ತು ಜನರೆಲ್ಲರು ಆತನನ್ನು ಅರಸನನ್ನಾಗಿ ಸನ್ಮಾನ ಮಾಡಿದರು.

τῇ ἐπαύριον

ಹೊಸ ಕಾರ್ಯವನ್ನು ಆರಂಭಿಸುವದಕ್ಕೆ ಗುರುತಾಗಿ ಲೇಖಕರು ಈ ಮಾತುಗಳನ್ನು ಉಪಯೋಗಿಸುತ್ತಿದ್ದಾರೆ. (ನೋಡಿರಿ: ಹೊಸ ಘಟನೆಯ ಪರಿಚಯ.)

ὁ ὄχλος πολὺς

ದೊಡ್ಡ ಜನ ಸಮೂಹ

John 12:13

ὡσαννά

ಈ ಮಾತಿಗೆ “ಈಗ ದೇವರು ನಮ್ಮನ್ನು ರಕ್ಷಿಸಲಿ!” ಎಂದರ್ಥ.

εὐλογημένος

ಈ ಮಾತು ಒಬ್ಬ ವ್ಯಕ್ತಿಗೆ ಒಳ್ಳೇಯ ಕಾರ್ಯಗಳು ನಡೆಯಬೇಕೆನ್ನುವುದೇ ದೇವರ ಆಶೆಯಾಗಿರುತ್ತದೆಯೆಂದು ತಿಳಿಸುತ್ತಿದೆ.

ὁ ἐρχόμενος ἐν ὀνόματι Κυρίου

ಇಲ್ಲಿ “ನಾಮ” ಎನ್ನುವ ಪದವು ಒಬ್ಬ ವ್ಯಕ್ತಿಯ ಅಧಿಕಾರ ಮತ್ತು ಶಕ್ತಿಗೆ ಪರ್ಯಾಯ ಪದವನ್ನಾಗಿ ಉಪಯೋಗಿಸಿದ್ದಾರೆ. ಪರ್ಯಾಯ ಅನುವಾದ: “ಕರ್ತನ ಪ್ರತಿನಿಧಿಯಾಗಿ ಬರುವುದು“ ಅಥವಾ “ಕರ್ತನ ಶಕ್ತಿಯಾಗಿ ಬರುವುದು” (ನೋಡಿರಿ: ಲಕ್ಷಣಾಲಂಕಾರ)

John 12:14

εὑρὼν…ὁ Ἰησοῦς ὀνάριον, ἐκάθισεν ἐπ’ αὐτό

ಯೇಸು ಕತ್ತೆಯನ್ನು ತನಗಾಗಿ ಇಟ್ಟಿದ್ದಾನೆಂದು ಯೋಹಾನ ಅದರ ಹಿನ್ನೆಲೆಯ ಸಮಾಚಾರವನ್ನು ಕೊಡುತ್ತಿದ್ದಾನೆ. ಯೇಸು ಆ ಕತ್ತೆಯ ಮೇಲೆ ಏರಿ ಯೆರೂಷಲೇಮಿಗೆ ಸವಾರಿ ಮಾಡಿಕೊಂಡು ಹೋಗುತ್ತಾನೆಂದು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಆತನು ಪ್ರಾಯದ ಕತ್ತೆಯೊಂದನ್ನು ಕಂಡು, ಅದರ ಮೇಲೆ ಕುಳಿತುಕೊಂಡು, ಪಟ್ಟಣದೊಳಗೆ ಪ್ರವೇಶ ಮಾಡಿದನು” (ನೋಡಿರಿ: ಹಿನ್ನೆಲೆ ಮಾಹಿತಿ. ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

καθώς ἐστιν γεγραμμένον

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಪ್ರವಾದಿಗಳು ಲೇಖನ ಭಾಗಗಳಲ್ಲಿ ಬರೆದಂತೆಯೇ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 12:15

θυγάτηρ Σιών

ಚಿಯೋನಿನ ಮಗಳೇ ಎನ್ನುವ ಈ ಮಾತು ಯೆರೂಸಲೇಮಿನ ಜನರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಯೆರೂಸಲೇಮಿನ ಜನರೇ” (ನೋಡಿರಿ: ಲಕ್ಷಣಾಲಂಕಾರ)

John 12:16

ತದನಂತರ ಶಿಷ್ಯರು ಅರ್ಥ ಮಾಡಿಕೊಂಡಿರುವವುಗಳ ಕುರಿತಾದ ಹಿನ್ನೆಲೆಯನ್ನು ಓದುಗಾರರು ತಿಳಿದುಕೊಳ್ಳಬೇಕೆಂದು ಲೇಖಕರಾಗಿರುವ ಯೋಹಾನನು ಇಲ್ಲಿ ಅಡ್ಡಿಪಡಿಸುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ταῦτα οὐκ ἔγνωσαν αὐτοῦ οἱ μαθηταὶ

ಇಲ್ಲಿ “ಈ ವಿಷಯಗಳಿಗೆ” ಎನ್ನುವ ಮಾತುಗಳು ಯೇಸುವಿನ ಕುರಿತಾಗಿ ಪ್ರವಾದಿ ಬರೆದಿರುವವುಗಳನ್ನು ಸೂಚಿಸುತ್ತಿವೆ.

ὅτε ἐδοξάσθη Ἰησοῦς

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ಯೇಸುವನ್ನು ಮಹಿಮೆಪಡಿಸಿದಾಗ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ταῦτα ἐποίησαν αὐτῷ

“ಈ ವಿಷಯಗಳು” ಎನ್ನುವ ಮಾತು ಯೇಸು ಯೆರೂಸಲೇಮಿನೊಳಗೆ ಕತ್ತೆಯ ಮೇಲೆ ಕುಳಿತು ಬಂದಾಗ ಅಲ್ಲಿರುವ ಜನರು ಮಾಡಿದ ಕಾರ್ಯಗಳನ್ನು (ಆತನನ್ನು ಸ್ತುತಿಸುತ್ತಾ ಮತ್ತು ಖರ್ಜೂರದ ಗರಿಗಳನ್ನು ತೆಗೆದುಕೊಂಡು ಆರ್ಭಟಿಸಿದರು) ಸೂಚಿಸುತ್ತಿದೆ.

John 12:17

οὖν

ಈ ಮಾತು ಮುಖ್ಯ ಕಥೆಯಲ್ಲಿ ವಿರಾಮವನ್ನು ಕೊಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಇಲ್ಲಿ ಅನೇಕಮಂದಿ ಜನರು ಯೇಸುವನ್ನು ಭೇಟಿಯಾಗುವದಕ್ಕೆ ಬಂದಿದ್ದಾರೆಂದು ಯೋಹಾನನು ವಿವರಿಸುತ್ತಿದ್ದಾನೆ. ಯಾಕಂದರೆ ಆತನು ಲಾಜರನನ್ನು ಮರಣದಿಂದ ಎಬ್ಬಿಸಿ, ತಿರಿಗಿ ಜಿವಂತವನ್ನಾಗಿ ಮಾಡಿದ್ದಾನೆಂದು ಇತರರು ಹೇಳಿದ್ದನ್ನು ಕೇಳಿಸಿಕೊಂಡಿದ್ದರು.

John 12:18

ἤκουσαν τοῦτο αὐτὸν πεποιηκέναι τὸ σημεῖον

ಆತನು ಈ ಸೂಚಕ ಕ್ರಿಯೆಯನ್ನು ಮಾಡಿದ್ದಾನೆಂದು ಇತರರು ಹೇಳಿದ್ದನ್ನು ಅವರು ಕೇಳಿಸಿಕೊಂಡಿದ್ದರು

τοῦτο…τὸ σημεῖον

“ಸೂಚಕ ಕ್ರಿಯೆ” ಎನ್ನುವ ಮಾತು ಯಾವುದಾದರೊಂದು ನಿಜವೆಂದು ನಿರೂಪಿಸುವ ಸಂಘಟನೆಯಾಗಿರುತ್ತದೆ ಅಥವಾ ನಡೆಸುವ ಘಟನೆಯಾಗಿರುತ್ತದೆ. ಈ ವಿಷಯದಲ್ಲಿ, ಲಾಜರನನ್ನು ತಿರುಗಿ ಜೀವಂತ ಮಾಡುವ “ಸೂಚಕ ಕ್ರಿಯೆಯು” ಯೇಸು ಮೆಸ್ಸಯ್ಯಾನೆಂದು ನಿರೂಪಣೆ ಮಾಡಿದೆ.

John 12:19

θεωρεῖτε ὅτι οὐκ ὠφελεῖτε οὐδέν

ಯೇಸುವನ್ನು ನಿಲ್ಲಿಸುವುದು ಅಸಾಧ್ಯವೆಂದು ಫರಿಸಾಯರಿಗೆ ಗೊತ್ತಾಯಿತು. ಪರ್ಯಾಯ ಅನುವಾದ: “ಆತನನ್ನು ನಿಲ್ಲಿಸುವುದಕ್ಕೆ ನಾವೇನು ಮಾಡುವುದಕ್ಕೆ ಆಗುತ್ತಿಲ್ಲವೆಂದು ಕಾಣಿಸುತ್ತಿದೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἴδε, ὁ κόσμος ὀπίσω αὐτοῦ ἀπῆλθεν

ಅನೇಕಮಂದಿ ಜನರು ಯೇಸುವನ್ನು ಭೇಟಿ ಮಾಡುವದಕ್ಕೆ ಬಂದಿದ್ದಾರೆಂದು ತಿಳಿದು ಬೆರಗಾಗಿರುವ ತಮ್ಮ ಭಾವನೆಯನ್ನು ವ್ಯಕ್ತಗೊಳಿಸಲು ಫರಿಸಾಯರು ಈ ವಿವರಣೆಯನ್ನು ಉಪಯೋಗಿಸುತ್ತಿದ್ದಾರೆ. ಪರ್ಯಾಯ ಅನುವಾದ: “ಪ್ರತಿಯೊಬ್ಬರೂ ಆತನ ಶಿಷ್ಯರಾಗುತ್ತಿದ್ದಾರೆನ್ನುವಂತೆ ಇದ್ದಿತ್ತು” (ನೋಡಿರಿ: ಅತಿಶಯೋಕ್ತಿ)

ὁ κόσμος

ಇಲ್ಲಿ “ಲೋಕ” ಎನ್ನುವ ಪದವು ಲೋಕದಲ್ಲಿರುವ ಜನರೆಲ್ಲರನ್ನು ಸೂಚಿಸುವದಕ್ಕೆ ಪರ್ಯಾಯ ಪದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಫರಿಸಾಯರು ಯೂದಾದಲ್ಲಿರುವ ಜನರ ಕುರಿತಾಗಿಯೇ ಮಾತನಾಡುತ್ತಿದ್ದಾರೆಂದು ಕೇಳುವವರು ಅರ್ಥಮಾಡಿಕೊಳ್ಳುವಂತೆ ವಿವರಣೆ ಕೊಡುವ ಅವಶ್ಯಕತೆಯಿದೆ. (ನೋಡಿರಿ: ಲಕ್ಷಣಾಲಂಕಾರ ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:20

δὲ Ἕλληνές τινες

“ಕೆಲವು ಮಂದಿ” ಎನ್ನುವ ಮಾತು ಕಥೆಯಲ್ಲಿ ಹೊಸ ಪಾತ್ರಗಳನ್ನು ಪರಿಚಯ ಮಾಡುವುದಕ್ಕೆ ಉಪಯೋಗಿಸಲಾಗಿರುತ್ತದೆ. (ನೋಡಿರಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.)

ἵνα προσκυνήσωσιν ἐν τῇ ἑορτῇ

ಪಸ್ಕ ಹಬ್ಬದಲ್ಲಿ ದೇವರನ್ನು ಆರಾಧಿಸುವದಕ್ಕೆ ಈ “ಗ್ರೀಕರು” ಹೋಗಿದ್ದರೆಂದು ಯೋಹಾನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಪಸ್ಕ ಹಬ್ಬದಲ್ಲಿ ದೇವರನ್ನು ಆರಾಧಿಸುವದಕ್ಕೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:21

Βηθσαϊδὰ

ಈ ಪಟ್ಟಣವು ಗಲಿಲಾಯ ಪ್ರಾಂತ್ಯದಲ್ಲಿ ಇದ್ದಿತ್ತು.

John 12:22

λέγουσιν τῷ Ἰησοῦ

ಯೇಸುವನ್ನು ನೋಡುವದಕ್ಕೆ ಗ್ರೀಕರು ಕೇಳಿಕೊಂಡಿರುವ ಮನವಿಯ ಕುರಿತಾಗಿ ಫಿಲಿಪ್ಪ ಮತ್ತು ಅಂದ್ರೆಯರು ಆತನಿಗೆ ಹೇಳಿದರು. ಇನ್ನೂ ಅನೇಕ ಮಾತುಗಳು ಸೇರಿಸುವದರ ಮೂಲಕ ನೀವು ಇದನ್ನು ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಗ್ರೀಕರು ಹೇಳಿರುವ ಮಾತುಗಳನ್ನು ಅವರು ಯೇಸುವಿಗೆ ಹೇಳಿದರು” (ನೋಡಿರಿ: ಪದಲೋಪ)

John 12:23

ಫಿಲಿಪ್ಪ ಮತ್ತು ಅಂದ್ರೆಯರೊಂದಿಗೆ ಯೇಸು ಸ್ಪಂದಿಸಲು ಆರಂಭಿಸಿದರು.

ἐλήλυθεν ἡ ὥρα ἵνα δοξασθῇ ὁ Υἱὸς τοῦ Ἀνθρώπου

ದೇವರು ಮನುಷ್ಯ ಕುಮಾರನನ್ನು ಮುಂದೆ ಉಂಟಾಗುವ ತನ್ನ ಶ್ರಮೆಗಳ ಮೂಲಕ, ಮರಣದ ಮೂಲಕ ಮತ್ತು ಪುನರುತ್ಥಾನದ ಮೂಲಕ ಸನ್ಮಾನಿಸುವ ಸಮಯ ಈಗ ಬಂದಿದೆಯೆಂದು ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನಾನು ಮರಣ ಹೊಂದಿ, ತಿರುಗಿ ಎದ್ದು ಬಂದಾಗ ದೇವರು ಅತೀ ಶೀಘ್ರದಲ್ಲಿಯೇ ಸನ್ಮಾನಿಸುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:24

ἀμὴν, ἀμὴν, λέγω ὑμῖν

ಪ್ರಾಮುಖ್ಯವಾದದ್ದು ಮತ್ತು ನಿಜವಾದದ್ದು ಎಂದು ಹೇಳುವ ರೀತಿ ನಿಮ್ಮ ಭಾಷೆಯಲ್ಲಿದ್ದರೆ ಅದನ್ನು ಇಲ್ಲಿ ಅನುವಾದ ಮಾಡಿರಿ. [ಯೋಹಾನ.1:51] (../01/51.ಎಂಡಿ) ವಚನದಲ್ಲಿ “ನಿಜ ನಿಜವಾಗಿ” ಎಂದು ನೀವು ಅನುವಾದ ಮಾಡಿದ್ದನ್ನು ನೋಡಿರಿ.

ἐὰν μὴ ὁ κόκκος τοῦ σίτου πεσὼν εἰς τὴν γῆν ἀποθάνῃ, αὐτὸς μόνος μένει; ἐὰν δὲ ἀποθάνῃ, πολὺν καρπὸν φέρει

ಇಲ್ಲಿ “ಗೋಧಿಯ ಕಾಳು” ಅಥವಾ “ಬೀಜ” ಎನ್ನುವ ಪದವು ಯೇಸುವಿನ ಮರಣ, ಸಮಾಧಿ ಮತ್ತು ಪುನರುತ್ಥಾನಗಳಿಗೆ ರೂಪಕಲಂಕಾರವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಬೀಜ ಬಿತ್ತಲ್ಪಟ್ಟು, ಅದು ಬೆಳೆದು ಹಣ್ಣುಗಳನ್ನು ಕೊಡುವಾಗಿ ಮರವಾಗುವಂತೆ, ಯೇಸು ಸಾಯಿಸಲ್ಪಟ್ಟು, ಸಮಾಧಿ ಮಾಡಿ, ತಿರುಗಿ ಜೀವಂತವಾಗಿ ಪುನರುತ್ಥಾನವಾದನಂತರ ಯೇಸುವಿನಲ್ಲಿ ಅನೇಕಮಂದಿ ನಂಬಿಕೆಯನ್ನು ಇಟ್ಟರು. (ನೋಡಿರಿ: ರೂಪಕ ಅಲಂಕಾರ)

John 12:25

ὁ φιλῶν τὴν ψυχὴν αὐτοῦ, ἀπολλύει αὐτήν

ಇಲ್ಲಿ “ತನ್ನ ಪ್ರಾಣವನ್ನು ಪ್ರೀತಿಸುವವನು” ಎನ್ನುವ ಮಾತಿಗೆ ಇತರ ಜೀವನಗಳಿಗಿಂತ ತನ ಭೌತಿಕವಾದ ಜೀವನವನ್ನು ಹೆಚ್ಚಾಗಿ ಪ್ರೀತಿಸುವವನು ಎಂದರ್ಥ. ಪರ್ಯಾಯ ಅನುವಾದ: “ಇತರರಿಗಿಂತ ತನ ಸ್ವಂತ ಜೀವನಕ್ಕೆ ಹೆಚ್ಚಾದ ಬೆಲೆಯನ್ನು ಕೊಡುವವನು ನಿತ್ಯಜೀವವನ್ನು ಪಡೆದುಕೊಳ್ಳುವುದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ μισῶν τὴν ψυχὴν αὐτοῦ ἐν τῷ κόσμῳ τούτῳ, εἰς ζωὴν αἰώνιον φυλάξει αὐτήν

ಇಲ್ಲಿ “ತನ್ನ ಜೀವನವನ್ನು ದ್ವೇಷಿಸುವವನು” ಎನ್ನುವ ಮಾತು ಇತರ ಜೀವನಗಳನ್ನು ಪ್ರೀತಿಸುವುದಕ್ಕಿಂತ ಕಡಿಮೆಯಾಗಿ ತನ ಜೀವನವನ್ನು ಪ್ರೀತಿಸಿಕೊಳ್ಳುವವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ತನ್ನ ಸ್ವಂತ ಜೀವನಕ್ಕಿಂತ ಇತರರ ಜೀವನಗಳನ್ನು ಹೆಚ್ಚಾಗಿ ಪ್ರೀತಿಸಿ ಬೆಲೆ ಕೊಡುವವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:26

ὅπου εἰμὶ ἐγὼ, ἐκεῖ καὶ ὁ διάκονος ὁ ἐμὸς ἔσται

ಆತನನ್ನು ಸೇವಿಸುವವರೆಲ್ಲರು ಪರಲೋಕದಲ್ಲಿ ಆತನೊಂದಿಗೆ ಇರುತ್ತಾರೆಂದು ಯೇಸು ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನಾನು ಪರಲೋಕದಲ್ಲಿರುವಾಗ ನನ್ನೊಂದಿಗೆ ನನ್ನ ಸೇವಕನು ಕೂಡ ಇರುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

τιμήσει αὐτὸν ὁ Πατήρ

ಇಲ್ಲಿ “ತಂದೆ” ಎನ್ನುವ ಹೆಸರು ದೇವರಿಗೆ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 12:27

τί εἴπω, Πάτερ, σῶσόν με ἐκ τῆς ὥρας ταύτης

ಈ ಮಾತು ಅಲಂಕಾರ ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಯೇಸು ಶಿಲುಬೆಯ ಮರಣವನ್ನು ತಪ್ಪಿಸಿಕೊಳ್ಳುವುದಕ್ಕೆ ಬಯಸಿದರೂ, ಆತನು ದೇವರಿಗೆ ಒಳಗಾಗುವದಕ್ಕೆ ಮತ್ತು ಮರಣ ಹೊಂದುವುದಕ್ಕೆ ಇಷ್ಟಪಟ್ಟನು. ಪರ್ಯಾಯ ಅನುವಾದ: “’ಈ ಗಳಿಗೆಯಿಂದ ನನ್ನನ್ನು ರಕ್ಷಿಸು ತಂದೆ’ ಎಂದು ನಾನು ಪ್ರಾರ್ಥನೆ ಮಾಡುವುದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

Πάτερ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τῆς ὥρας ταύτης

ಇಲ್ಲಿ “ಈ ಗಳಿಗೆ” ಎನ್ನುವ ಮಾತು ಯೇಸು ಶ್ರಮೆಗಳನ್ನು ಅನುಭವಿಸಿ, ಶಿಲುಬೆಯಲ್ಲಿ ಮರಣ ಹೊಂದುವ ಸಮಯವನ್ನು ಸೂಚಿಸುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 12:28

δόξασόν σου τὸ ὄνομα

ಇಲ್ಲಿ “ನಾಮ” ಎನ್ನುವ ಪದವು ದೇವರನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನಿಮ್ಮ ಮಹಿಮೆಯನ್ನು ತಿಳಿಯಪಡಿಸಿರಿ” ಅಥವಾ “ನಿಮ್ಮ ಮಹಿಮೆಯನ್ನು ತೋರಿಸಿಕೊಳ್ಳಿರಿ” (ನೋಡಿರಿ: ಲಕ್ಷಣಾಲಂಕಾರ)

ἦλθεν…φωνὴ ἐκ τοῦ οὐρανοῦ

ಇದು ದೇವರು ಮಾತನಾಡುತ್ತಿರುವದನ್ನು ತೋರಿಸುತ್ತದೆ. ಕೆಲವೊಂದುಬಾರಿ ದೇವರನ್ನು ನೇರವಾಗಿ ಸೂಚಿಸುವದಕ್ಕೆ ಜನರು ಹಿಂಜರಿಯುತ್ತಾರೆ, ಯಾಕಂದರೆ ಅವರು ಆತನನ್ನು ಗೌರವಿಸುತ್ತಾರೆ. ಪರ್ಯಾಯ ಅನುವಾದ: “ದೇವರು ಆಕಾಶದೊಳಗಿಂದ ಮಾತನಾಡಿದನು” (ನೋಡಿರಿ: ಲಕ್ಷಣಾಲಂಕಾರ ಮತ್ತು ಸೌಮ್ಯೋಕ್ತಿಗಳು.)

John 12:30

ಪರಲೋಕದಿಂದ ಸ್ವರವು ಕೇಳಿಸಲ್ಪಟ್ಟಿದೆಯೆಂದು ಯೇಸು ವಿವರಣೆ ನೀಡುತ್ತಿದ್ದಾರೆ.

John 12:31

νῦν κρίσις ἐστὶν τοῦ κόσμου τούτου

ಇಲ್ಲಿ “ಈ ಲೋಕವು” ಎನ್ನುವ ಮಾತು ಲೋಕದಲ್ಲಿರುವ ಎಲ್ಲಾ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಮಾತಾಗಿ ಉಪಯೋಗಿಸಿದ್ದಾರೆ. ಪರ್ಯಾಯ ಅನುವಾದ: “ಈಗ ದೇವರು ಎಲ್ಲಾ ಮನುಷ್ಯರಿಗೆ ತೀರ್ಪು ಮಾಡುವ ಸಮಯವಾಗಿದೆ” (ನೋಡಿರಿ: ಲಕ್ಷಣಾಲಂಕಾರ)

νῦν ὁ ἄρχων τοῦ κόσμου τούτου ἐκβληθήσεται ἔξω

ಇಲ್ಲಿ “ಲೋಕಾಧಿಪತಿ” ಎನ್ನುವ ಈ ಮಾತು ಸೈತಾನನನ್ನು ಸೂಚಿಸುತ್ತದೆ. ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಈ ಲೋಕವನ್ನು ಆಳುವ ಸೈತಾನನ ಶಕ್ತಿಯನ್ನು ನಾನು ನಾಶಗೊಳಿಸುವ ಸಮಯ ಈಗ ಬಂದಿದೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 12:32

33ನೇ ವಚನದಲ್ಲಿ ಯೋಹಾನನು “ಮೇಲಕ್ಕೆ ಎಬ್ಬಿಸಲ್ಪಟ್ಟವನಾಗಿರುವದರ” ಕುರಿತಾಗಿ ಯೇಸು ಹೇಳಿದ ಮಾತುಗಳ ಹಿನ್ನೆಲೆಯ ಮಾಹಿತಿಯನ್ನು ಯೋಹಾನನು ನಮಗೆ ಹೇಳುತ್ತಿದ್ದಾನೆ.

κἀγὼ ἐὰν ὑψωθῶ ἐκ τῆς γῆς

ಇಲ್ಲಿ ಯೇಸು ತನ್ನ ಶಿಲುಬೆಯ ಮರಣವನ್ನು ಸೂಚಿಸುತ್ತಿದ್ದಾನೆ. ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಜನರು ನನ್ನನ್ನು ಶಿಲುಬೆಯ ಮೇಲಕ್ಕೆ ಎತ್ತಿ ಹಿಡಿದಾಗ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

πάντας ἑλκύσω πρὸς ἐμαυτόν

ಯೇಸುವಿನ ಶಿಲುಬೆಯ ಮರಣದ ಮೂಲಕ, ಯೇಸು ತನ್ನಲ್ಲಿ ಪ್ರತಿಯೊಬ್ಬರೂ ನಂಬಿಕೆ ಇಡುವುದಕ್ಕೆ ಮಾರ್ಗವನ್ನು ಅನುಗ್ರಹಿಸುವನು.

John 12:33

τοῦτο…ἔλεγεν, σημαίνων ποίῳ θανάτῳ ἤμελλεν ἀποθνῄσκειν

ಜನರು ತನ್ನನ್ನು ಶಿಲುಬೆಗೆ ಹಾಕುತ್ತಾರೆನ್ನುವ ಅರ್ಥದಲ್ಲಿ ಯೋಹಾನನು ಯೇಸುವಿನ ಮಾತುಗಳಿಗೆ ವ್ಯಾಖ್ಯಾನವನ್ನು ಮಾಡುತ್ತಿದ್ದಾನೆ. ಪರ್ಯಾಯ ಅನುವಾದ: “ಆತನು ಯಾವ ರೀತಿ ಮರಣ ಹೊಂದುತ್ತಾನೆನ್ನುವದರ ಕುರಿತಾಗಿಯ ಜನರು ತಿಳಿಯಬೇಕೆಂದು ಆತನು ಹೇಳಿದನು” (ನೋಡಿರಿ: ಹಿನ್ನೆಲೆ ಮಾಹಿತಿ.)

John 12:34

δεῖ ὑψωθῆναι τὸν Υἱὸν τοῦ Ἀνθρώπου

“ಎತ್ತಲ್ಪಡುವುದು” ಎನ್ನುವ ಮಾತಿಗೆ ಶಿಲುಬೆಗೆ ಹಾಕಲ್ಪಡುವುದು ಎಂದರ್ಥ. ಈ ಮಾತುಗಳನ್ನು ನೀವು “ಶಿಲುಬೆಗೆ ಏರಿಸುವುದು” ಎನ್ನುವ ಅರ್ಥದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಮನುಷ್ಯಕುಮಾರನು ತಪ್ಪದೇ ಶಿಲುಬೆಗೆ ಏರಿಸಲ್ಪಡಬೇಕು” (ನೋಡಿರಿ: ಪದಲೋಪ)

τίς ἐστιν οὗτος ὁ Υἱὸς τοῦ Ἀνθρώπου

ಈ ಅರ್ಥಗಳು ಇರಬಹುದು, 1) “ಈ ಮನುಷ್ಯಕುಮಾರನ ಗುರುತು ಏನು? ಅಥವಾ 2) “ನೀವು ಯಾವ ರೀತಿಯ ಮನುಷ್ಯನ ಕುಮಾರನ ಕುರಿತಾಗಿ ಮಾತನಾಡುತ್ತಿದ್ದೀರಿ?”

John 12:35

εἶπεν οὖν αὐτοῖς ὁ Ἰησοῦς, ἔτι μικρὸν χρόνον, τὸ φῶς ἐν ὑμῖν ἐστιν. περιπατεῖτε ὡς τὸ φῶς ἔχετε, ἵνα μὴ σκοτία ὑμᾶς καταλάβῃ; καὶ ὁ περιπατῶν ἐν τῇ σκοτίᾳ, οὐκ οἶδεν ποῦ ὑπάγει

ಇಲ್ಲಿ “ಬೆಳಕು” ಎಂದರೆ ದೇವರ ಸತ್ಯವನ್ನು ತೋರಿಸುವ ಯೇಸುವಿನ ಬೋಧನೆಗಳಿಗೆ ರೂಪಕಲಂಕಾರವಾಗಿ ಉಪಯೋಗಿಸಲ್ಪಟ್ಟಿರುತ್ತದೆ. “ಕತ್ತಲೆಯಲ್ಲಿ ನಡೆಯುವುದು” ಎಂದರೆ ದೇವರ ಸತ್ಯವನ್ನು ಅನುಸರಿಸದೇ ಜೀವನ ಮಾಡುವುದು ಎನ್ನುವದಕ್ಕೆ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ: “ನನ್ನ ಮಾತುಗಳು ನಿಮಗೆ ಬೆಳಕಿನಂತೆ ಇರುತ್ತವೆ, ದೇವರು ಬಯಸಿದ ವಿಧಾನದಲ್ಲಿ ನೀವು ಹೇಗೆ ಜೀವನ ಮಾಡಬೇಕೆಂದು ಅರ್ಥ ಮಾಡಿಕೊಳ್ಳುವುದಕ್ಕೆ ನಿಮಗೆ ಸಹಾಯ ಮಾಡುತ್ತವೆ. ನಾನು ನಿಮ್ಮೊಂದಿಗೆ ಎಷ್ಟೋ ಕಾಲವಿರುವುದಿಲ್ಲ. ನಾನು ನಿಮ್ಮೊಂದಿಗೆ ಇರುವಾಗಲೇ ನೀವು ನನ್ನ ಆಜ್ಞೆಗಳನ್ನು ಅನುಸರಿಸಬೇಕಾದ ಅವಶ್ಯಕತೆಯುಂಟು. ನೀವು ನನ್ನ ಮಾತುಗಳನ್ನು ತಿರಸ್ಕರಿಸಿದರೆ, ನೀವು ಕತ್ತಲೆಯಲ್ಲಿ ನಡೆಯುತ್ತಿರುವಂತೆ ಇರುತ್ತದೆ ಮತ್ತು ನೀವು ಎಲ್ಲಿಗೆ ಹೋಗುತ್ತಿರಿವಿರೋ ನೀವು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ” (ನೋಡಿರಿ: ರೂಪಕ ಅಲಂಕಾರ)

John 12:36

ὡς τὸ φῶς ἔχετε, πιστεύετε εἰς τὸ φῶς, ἵνα υἱοὶ φωτὸς γένησθε

“ಬೆಳಕು” ಎಂದರೆ ದೇವರ ಸತ್ಯವನ್ನು ತೋರಿಸುವ ಯೇಸುವಿನ ಬೋಧನೆಗಳಿಗೆ ರೂಪಕಲಂಕಾರವಾಗಿ ಉಪಯೋಗಿಸಲ್ಪಟ್ಟಿರುತ್ತದೆ. “ಬೆಳಕಿನ ಮಕ್ಕಳು” ಎನ್ನುವ ಮಾತು ಯೇಸುವಿನ ಸಂದೇಶವನ್ನು ಸ್ವೀಕರಿಸಿ ಮತ್ತು ದೇವರ ಸತ್ಯದ ಪ್ರಕಾರ ನಡೆಯುವವರಿಗೆ ರೂಪಕಲಂಕಾರಕವಾಗಿ ಹೇಳಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ನಾನು ನಿಮ್ಮ ಜೊತೆಯಲ್ಲಿರುವಾಗಲೇ, ನನ್ನ ಬೋಧನೆಯನ್ನು ನಂಬಿರಿ, ಇದರಿಂದ ದೇವರ ಸತ್ಯವು ನಿಮ್ಮಲ್ಲಿ ನೆಲೆಗೊಂಡಿರುತ್ತದೆ” (ನೋಡಿರಿ: ರೂಪಕ ಅಲಂಕಾರ)

John 12:37

ಪ್ರವಾದಿಯಾದ ಯೆಶಾಯನ ಮೂಲಕ ಹೇಳಲ್ಪಟ್ಟಿರುವ ಪ್ರವಾದನೆಗಳ ನೆರವೇರಿಕೆಯ ಕುರಿತಾಗಿ ವಿವರಿಸುವುದಕ್ಕೆ ಯೋಹಾನನು ಆರಂಭಿಸುವಾಗ ಮುಖ್ಯ ಕಥೆಯ ಸಾಲಿನಲ್ಲಿ ಇದು ವಿರಾಮವಾಗಿರುತ್ತದೆ.

John 12:38

ἵνα ὁ λόγος Ἠσαΐου τοῦ προφήτου πληρωθῇ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಪ್ರವಾದಿಯಾದ ಯೆಶಯಾನ ಸಂದೇಶವನ್ನು ನೆರವೇರಿಸುವ ಕ್ರಮದಲ್ಲಿ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Κύριε, τίς ἐπίστευσεν τῇ ἀκοῇ ἡμῶν? καὶ ὁ βραχίων Κυρίου τίνι ἀπεκαλύφθη

ಜನರು ಆತನ ಸಂದೇಶವನ್ನು ನಂಬುವುದಿಲ್ಲವೆನ್ನುವ ಪ್ರವಾದಿಯ ನಿರಾಶೆಯನ್ನು ವಿವರಿಸುವುದಕ್ಕೆ ಎರಡು ರೂಪಕಲಂಕಾರ ಪ್ರಶ್ನೆಯ ರೂಪಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಅವುಗಳನ್ನು ಒಂದು ಅಲಂಕಾರಿಕ ಪ್ರಶ್ನೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಕರ್ತನೇ, ನೀವು ಅವರನ್ನು ರಕ್ಷಿಸುವುದಕ್ಕೆ ಶಕ್ತಿವಂತನೆಂದು ಅವರು ನೋಡಿದರೂ ನಮ್ಮ ಸಂದೇಶವನ್ನು ನಂಬುವುದು ಕಠಿಣಕರವಾಗಿರುತ್ತದೆ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ὁ βραχίων Κυρίου

ಶಕ್ತಿಯಿಂದ ರಕ್ಷಿಸುವುದಕ್ಕೆ ಕರ್ತನ ಸಾಮರ್ಥ್ಯವನ್ನು ಸೂಚಿಸುವುದಕ್ಕೆ ಇದು ಪರ್ಯಾಯ ಮಾತಾಗಿ ಉಪಯೋಗಿಸಲಾಗಿರುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 12:40

ἐπώρωσεν αὐτῶν τὴν καρδίαν…νοήσωσιν τῇ καρδίᾳ

ಇಲ್ಲಿ “ಹೃದಯಗಳು” ಎನ್ನುವ ಮಾತು ಒಬ್ಬ ವ್ಯಕ್ತಿಯ ಮನಸ್ಸನ್ನು ಸೂಚಿಸುತ್ತದೆ. “ಅವರ ಹೃದಯಗಳು ಕಠಿಣವಾಗಿವೆ” ಎನ್ನುವ ಮಾತು ಅವರು ಮೊಂಡುತನದಿಂದ ಇದ್ದಾರೆನ್ನುವುದನ್ನು ಹೇಳುವುದಕ್ಕೆ ರೂಪಕಲಂಕಾರವಾಗಿ ಉಪಯೋಗಿಸಲಾಗಿರುತ್ತದೆ. “ಅವರ ಹೃದಯಗಳಿಂದ ಅರ್ಥಮಾಡಿಕೊಳ್ಳುವುದು” ಎಂದರೆ “ನಿಜವಾಗಿ ಅರ್ಥಮಾಡಿಕೊಂಡಿರುವುದು” ಎಂದರ್ಥ. ಪರ್ಯಾಯ ಅನುವಾದ: “ಆತನು ಅವರನ್ನು ಮೊಂಡುತನದವರನ್ನಾಗಿ ಮಾಡಿದನು... ನಿಜವಾಗಿ ಅರ್ಥಮಾಡಿಕೊಳ್ಳುವುದು” (ನೋಡಿರಿ: ಲಕ್ಷಣಾಲಂಕಾರ ಮತ್ತು ರೂಪಕ ಅಲಂಕಾರ)

καὶ στραφῶσιν

ಇಲ್ಲಿ “ತಿರುಗಿಕೋ” ಎನ್ನುವ ಮಾತು “ಪಶ್ಚಾತ್ತಾಪ” ಪಡುವದಕ್ಕೆ ರೂಪಕಲಂಕಾರವಾಗಿ ಹೇಳಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ಮತ್ತು ಅವರು ಪಶ್ಚಾತ್ತಾಪ ಹೊಂದುವರು” (ನೋಡಿರಿ: ರೂಪಕ ಅಲಂಕಾರ)

John 12:42

ἵνα μὴ ἀποσυνάγωγοι γένωνται

ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಅವರು ಸಮಾಜ ಮಂದಿರಗಳಿಗೆ ಹೋಗಲಾರದಂತೆ ಜನರು ನಿಲ್ಲಿಸುವುದಕ್ಕೆ ಆಗುವುದಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 12:43

ἠγάπησαν…τὴν δόξαν τῶν ἀνθρώπων μᾶλλον ἤπερ τὴν δόξαν τοῦ Θεοῦ

ದೇವರು ಅವರನ್ನು ಮಹಿಮೆಪಡಿಸಬೇಕೆನ್ನುವದಕ್ಕಿಂತ ಹೆಚ್ಚಾಗಿ ಜನರು ತಮ್ಮನ್ನು ಹೆಚ್ಚಾಗಿ ಮಹಿಮೆಪಡಿಸಬೇಕೆಂದು ಅವರು ಬಯಸಿದ್ದರು

John 12:44

ಈಗ ಯೋಹಾನರು ಮುಖ್ಯ ಕಥೆಯ ಸಾಲಿಗೆ ಹಿಂದಿರುಗಿ ಬಂದಿದ್ದಾರೆ. ಯೇಸು ಜನ ಸಮೂಹದೊಂದಿಗೆ ಮಾತನಾಡುವುದು ಇದು ಇನ್ನೊಂದು ಸಂದರ್ಭವಾಗಿದ್ದಿತ್ತು.

Ἰησοῦς…ἔκραξεν καὶ εἶπεν

ಇಲ್ಲಿ ಜನ ಸಮೂಹಗಳೆಲ್ಲವು ಯೇಸುವಿನ ಮಾತುಗಳನ್ನು ಕೇಳಲು ಬಂದಿದ್ದರೆಂದು ಯೋಹಾನನು ತಿಳಿಯಪಡಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಸೇರಿ ಬಂದಿರುವ ಜನ ಸಮೂಹದೊಂದಿಗೆ ಯೇಸು ಕೂಗಿ ಹೇಳಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:45

ὁ θεωρῶν ἐμὲ, θεωρεῖ τὸν πέμψαντά με

ಇಲ್ಲಿ “ಆತನು” ಎನ್ನುವ ಶಬ್ದವು ದೇವರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನನ್ನನ್ನು ನೋಡುವವರು ನನ್ನನ್ನು ಕಳುಹಿಸಿದ ದೇವರನ್ನು ನೋಡುತ್ತಾರೆ”

John 12:46

ಯೇಸು ಜನ ಸಮೂಹದೊಂದಿಗೆ ಮಾತನಾಡುವುದನ್ನು ಮುಂದೆವರೆಸುತ್ತಿದ್ದಾರೆ.

ἐγὼ φῶς…ἐλήλυθα

ಇಲ್ಲಿ “ಬೆಳಕು” ಎನ್ನುವ ಶಭ್ದವು ಯೇಸುವಿನ ಮಾದರಿಯ ಜೀವನದ ಕುರಿತಾಗಿ ಹೇಳಲ್ಪಟ್ಟಿರುವ ರೂಪಕಲಂಕಾರವಾಗಿರುತ್ತದೆ. ಪರ್ಯಾಯ ಅನುವಾದ: “ನಾನು ಸತ್ಯವನ್ನು ತೋರಿಸುವುದಕ್ಕೆ ಬಂದಿದ್ದೇನೆ” (ನೋಡಿರಿ: ರೂಪಕ ಅಲಂಕಾರ)

ἐν τῇ σκοτίᾳ μὴ μείνῃ

ಇಲ್ಲಿ “ಕತ್ತಲು” ಎನ್ನುವ ಶಬ್ದವು ದೇವರ ಸತ್ಯವು ತಿರಸ್ಕರಿಸಿ ಬಾಳುವ ಜೀವನದ ಕುರಿತಾಗಿ ಹೇಳಲ್ಪಟ್ಟಿರುವ ರೂಪಕಲಂಕಾರ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ಆತ್ಮೀಕವಾಗಿ ಅಂಧರಾಗಿರಲು ಮುಂದೆವರಿಸಬೇಡಿರಿ” (ನೋಡಿರಿ: ರೂಪಕ ಅಲಂಕಾರ)

τὸν κόσμον

ಇಲ್ಲಿ “ಲೋಕ” ಎನ್ನುವ ಶಬ್ದವು ಲೋಕದಲ್ಲಿರುವ ಜನರೆಲ್ಲರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿರುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 12:47

καὶ ἐάν τίς μου ἀκούσῃ τῶν ῥημάτων, καὶ μὴ φυλάξῃ, ἐγὼ οὐ κρίνω αὐτόν, οὐ γὰρ ἦλθον, ἵνα κρίνω τὸν κόσμον, ἀλλ’ ἵνα σώσω τὸν κόσμον

ಇಲ್ಲಿ “ಲೋಕವನ್ನು ತೀರ್ಪುಗೊಳಿಸುವುದಕ್ಕೆ” ಎನ್ನುವ ಮಾತು ಶಿಕ್ಷೆಯನ್ನುಂಟು ಮಾಡುವುದನ್ನು ಸೂಚಿಸುತ್ತದೆ. ಯೇಸು ಜನರನ್ನು ಶಿಕ್ಷಿಸುವುದಕ್ಕೆ ಬಂದಿಲ್ಲ. ಪರ್ಯಾಯ ಅನುವಾದ: “ಯಾರೆಯಾಗಲಿ ನನ್ನ ಬೋಧನೆಯನ್ನು ಕೇಳಿ, ತಿರಸ್ಕಾರ ಮಾಡಿದರೆ, ನಾನು ಅವರನ್ನು ಶಿಕ್ಷಿಸುವುದಿಲ್ಲ, ನಾನು ಜನರನ್ನು ಶಿಕ್ಷಿಸುವುದಕ್ಕೆ ಬಂದಿಲ್ಲ. ಆದರೆ, ನನ್ನಲ್ಲಿ ನಂಬಿಕೆಯಿಡುವವರನ್ನು ರಕ್ಷಿಸುವುದಕ್ಕೆ ಬಂದಿದ್ದೇನೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 12:48

ἐν τῇ ἐσχάτῃ ἡμέρᾳ

ದೇವರು ಜನರ ಪಾಪಗಳಿಗಾಗಿ ಅವರನ್ನು ಶಿಕ್ಷಿಸುವ ಸಮಯದಲ್ಲಿ

John 12:49

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 12:50

οἶδα, ὅτι ἡ ἐντολὴ αὐτοῦ ζωὴ αἰώνιός ἐστιν

ಸದಾಕಾಲವೂ ಜೀವವನ್ನು ಅನುಗ್ರಹಿಸುವ ಮಾತುಗಳನ್ನೇ ಮಾತನಾಡಬೇಕೆಂದು ಆತನು ನನಗೆ ಆಜ್ಞಾಪಿಸಿದ ಮಾತುಗಳು ಮಾತ್ರವೇ ನನಗೆ ಗೊತ್ತು

John 13

ಯೋಹಾನ 13 ಸಾಮಾನ್ಯ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಈ ಅಧ್ಯಾಯದಲ್ಲಿ ನಡೆದಿರುವ ಸಂಘಟನೆಗಳೆಲ್ಲವು ಸಾಧಾರಣವಾಗಿ ಕರ್ತನ ಭೋಜನಕ್ಕೆ ಸಂಬಂಧಪಟ್ಟಿರುವವುಗಳನ್ನು ಸೂಚಿಸುತ್ತದೆ. ಅನೇಕ ವಿಧಾನಗಳಲ್ಲಿ ಈ ಪಸ್ಕ ಹಬ್ಬವು ದೇವರ ಕುರಿಯಾಗಿ ಯೇಸುವಿನ ಯಜ್ಞಕ್ಕೆ ಸೂಚನೆಯಾಗಿರುತ್ತದೆ. (ನೋಡಿರಿ: ಪಸ್ಕ)

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶ್ಯಗಳು

ಪಾದಗಳನ್ನು ತೊಳೆಯುವುದು

ಪುರಾತನ ಕಾಲದಲ್ಲಿ ಪೂರ್ವದಿಕ್ಕಿನಲ್ಲಿರುವ ಜನರು ತಮ್ಮ ಪಾದಗಳು ತುಂಬಾ ಹೊಲಸಾಗಿ ಇರುತ್ತಿದ್ದವು. ಸೇವಕರು ಮಾತ್ರವೇ ಜನರ ಪಾದಗಳನ್ನು ತೊಳೆಯುತ್ತಿದ್ದರು. ಶಿಷ್ಯರು ತಮ್ಮ ಪಾದಗಳನ್ನು ಯೇಸು ತೊಳೆಯಬೇಕೆಂದು ಬಯಸಲಿಲ್ಲ ಯಾಕಂದರೆ ಅವರು ಆತನನ್ನು ತಮ್ಮ ಯಜಮಾನನನ್ನಾಗಿ ಮತ್ತು ಆವರು ಆತನ ಸೇವಕರುಗಳಾಗಿ ಭಾವಿಸಿದ್ದರು, ಆದರೆ ಆತನು ಒಬ್ಬರಿಗೊಬ್ಬರು ಸೇವೆ ಮಾಡಿಕೊಳ್ಳುವ ಅವಶ್ಯಕತೆಯಿದೆಯೆಂದು ತೋರಿಸಬೇಕೆಂದು ಬಯಸಿದ್ದರು. (ನೋಡಿರಿ: ಸಾಂಕೇತಿಕ ಕ್ರಿಯೆ)

ನಾನೇ

ಈ ಪುಸ್ತಕದಲ್ಲಿ ಈ ಮಾತನ್ನು ನಾಲ್ಕು ಬಾರಿ ಯೇಸು ಹೇಳಿರುವಂತೆ ಯೋಹಾನನು ಬರೆದಿದ್ದಾನೆ. ಈ ಅಧ್ಯಾಯದಲ್ಲಿ ಆದರೆ ಒಂದೇಸಲ ಬರೆದಿದ್ದಾನೆ. ಅವುಗಳು ಒಂದು ಸಂಪೂರ್ಣವಾದ ವಾಕ್ಯ ರೂಪದಲ್ಲಿ ನಿಂತಿಕೊಂಡಿವೆ, ಮತ್ತು ಅದು ನಾನು ಯೆಹೋವನು ಎಂದು ತನ್ನನ್ನು ತಾನು ಮೋಶೆಗೆ ಮಾತ್ರ ತೋರಿಸಿಕೊಂಡಿರುವ “ನಾನೇ” ಎನ್ನುವ ಇಬ್ರಿ ಪದವನ್ನು ಅನುವದಿಸುತ್ತವೆ, ಈ ಕಾರಣಗಳಿಂದ, ಯೇಸು ಈ ಮಾತನ್ನು ಹೇಳಿದ ಪ್ರತಿಯೊಂದುಬಾರಿ ತನ್ನನ್ನು ಯಾವೆ ಎಂಬುದಾಗಿ ಪ್ರಕಟಿಸಿಕೊಳ್ಳುತ್ತಿದ್ದಾನೆಂದು ಅನೇಕ ಜನರು ನಂಬುತ್ತಾರೆ. (ನೋಡಿರಿ: ಯೆಹೋವ).

ಈ ಅಧ್ಯಾಯದಲ್ಲಿ ಇತರ ಅನುವಾದಕ್ಕೆ ಸಂಬಂಧಿತವಾದ ಕ್ಲಿಷ್ಟ ಸಂದರ್ಭಗಳು

“ಮನುಷ್ಯ ಕುಮಾರನು”

ಈ ಅಧ್ಯಾಯದಲ್ಲಿ ಯೇಸು ತನ್ನನ್ನು ತಾನು “ಮನುಷ್ಯ ಕುಮಾರ” ಎಂಬುದಾಗಿ ಹೇಳಿಕೊಂಡಿದ್ದಾನೆ ([ಯೋಹಾನ.13:31] (../ ../ಯೋಹಾನ/13/31.ಎಂಡಿ)). ಜನರು ಬೇರೊಬ್ಬರ ಕುರಿತಾಗಿ ಮಾತನಾಡುವಾಗ, ಜನರು ತಮಗೋಸ್ಕರ ತಾವು ಮಾತನಾಡಿಕೊಳ್ಳುವುದಕ್ಕೆ ನಿಮ್ಮ ಭಾಷೆಯಲ್ಲಿ ಅನುಮತಿ ಇರದಿರಬಹುದು. (ನೋಡಿರಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)

John 13:1

ಯೇಸು ತನ್ನ ಶಿಷ್ಯರೊಂದಿಗೆ ಪಸ್ಕ ಹಬ್ಬದಲ್ಲಿ ಊಟ ಮಾಡುವ ಸಮಯ ಇನ್ನೂ ಬಂದಿಲ್ಲ. ಈ ವಚನಗಳು ಯೇಸು ಮತ್ತು ಯೂದಾನ ಕುರಿತಾಗಿ ಹಿನ್ನೆಲೆಯ ಸಮಾಚಾರವನ್ನು ಕೊಡುತ್ತಿವೆ ಮತ್ತು ಮುಂಬರುವ ಕಥೆಯನ್ನು ಸಿದ್ಧಪಡಿಸುತ್ತವೆ. (ನೋಡಿರಿ: ಹಿನ್ನೆಲೆ ಮಾಹಿತಿ.)

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἀγαπήσας

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

John 13:2

τοῦ διαβόλου ἤδη βεβληκότος εἰς τὴν καρδίαν, ἵνα παραδοῖ αὐτὸν Ἰούδας, Σίμωνος Ἰσκαριώτης

“ಹೃದಯದೊಳಗೆ ಇಟ್ಟನು” ಎನ್ನುವ ಮಾತು ಒಂದು ನಾಣ್ಣುಡಿಯಾಗಿದ್ದಿತ್ತು. ಇದಕ್ಕೆ ಯಾವುದೇ ಒಂದರ ಕುರಿತಾಗಿ ಆಲೋಚನೆ ಮಾಡುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸುವುದು ಎಂದರ್ಥ. ಪರ್ಯಾಯ ಅನುವಾದ: “ಈಗಾಗಲೇ ಸೈತಾನನು ಯೇಸುವನ್ನು ಹಿಡಿದುಕೊಡಬೇಕೆಂದು ಸೀಮೋನನ ಮಗನಾದ ಇಸ್ಕರಿಯೋತ ಯೂದನು ಪ್ರೇರೇಪಿಸಿದೆ” (ನೋಡಿರಿ: ನುಡಿಗಟ್ಟುಗಳು.)

John 13:3

ಯೇಸುವಿಗೆ ಗೊತ್ತಿರುವ ಸಂಗತಿಗಳ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ನಮಗೆ ಹೇಳುವುದಕ್ಕೆ 3ನೇ ವಚನವು ಮುಂದೆವರಿಸುತ್ತದೆ. ಕಥೆಯಲ್ಲಿ ಕ್ರಿಯೆಯು 4ನೇ ವಚನದಲ್ಲಿ ಆರಂಭವಾಗುತ್ತದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

πάντα δέδωκεν αὐτῷ…εἰς τὰς χεῖρας

ಇಲ್ಲಿ “ತನ್ನ ಕೈಗಳು” ಎನ್ನುವ ಮಾತು ಅಧಿಕಾರಕ್ಕೂ ಮತ್ತು ಶಕ್ತಿಗೂ ಪರ್ಯಾಯವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ಎಲ್ಲಾವುದರ ಮೇಲೆ ಸಂಪೂರ್ಣವಾದ ಶಕ್ತಿಯನ್ನು ಮತ್ತು ಅಧಿಕಾರವನ್ನು ಪಡೆದಿದ್ದಾನೆಂದು” (ನೋಡಿರಿ: ಲಕ್ಷಣಾಲಂಕಾರ)

ἀπὸ Θεοῦ ἐξῆλθεν καὶ πρὸς τὸν Θεὸν ὑπάγει

ಯೇಸು ಯಾವಾಗಲೂ ತಂದೆಯೊಂದಿಗೆ ಇರುತ್ತಿದ್ದನು, ಮತ್ತು ಭೂಮಿಯ ಮೇಲೆ ತನ್ನ ಕೆಲಸ ಮುಗಿಸಿದ ನಂತರ ಅಲ್ಲಿಗೆ ತಿರುಗಿ ಹೋಗುವನು.

John 13:4

ἐγείρεται ἐκ τοῦ δείπνου καὶ τίθησιν τὰ ἱμάτια

ಪ್ರಾಂತ್ಯವು ತುಂಬಾ ಹೊಲಸಾಗಿ ಇರುವದರಿಂದ ಅತಿಥಿಗಳು ತಮ್ಮ ಮನೆಗಳಿಗೆ ಬಂದಾಗ ಅವರು ಉಟಕ್ಕೆ ಕುಳಿತುಕೊಳ್ಳುವಾಗ ಆ ಮನೆಯ ಸೇವಕರು ಬಂದು ಅವರ ಪಾದಗಳನ್ನು ತೊಳೆಯಬೇಕಾದ ಆಚಾರವಿದ್ದಿತ್ತು. ಯೇಸು ತನ್ನ ಹೊರ ವಸ್ತ್ರವನ್ನು ತೆಗೆದುಕೊಂಡಿದ್ದನು, ಇದರಿಂದ ಆತನು ಸೇವಕನಾಗಿ ಕಾಣಿಸಿಕೊಂಡಿದ್ದನು.

John 13:5

ἤρξατο νίπτειν τοὺς πόδας τῶν μαθητῶν

ಪ್ರಾಂತ್ಯವು ತುಂಬಾ ಹೊಲಸಾಗಿ ಇರುವದರಿಂದ ಅತಿಥಿಗಳು ತಮ್ಮ ಮನೆಗಳಿಗೆ ಬಂದಾಗ ಅವರು ಉಟಕ್ಕೆ ಕುಳಿತುಕೊಳ್ಳುವಾಗ ಆ ಮನೆಯ ಸೇವಕರು ಬಂದು ಅವರ ಪಾದಗಳನ್ನು ತೊಳೆಯಬೇಕಾದ ಆಚಾರವಿದ್ದಿತ್ತು. ಶಿಷ್ಯರ ಪಾದಗಳನ್ನು ಯೇಸು ತೊಳೆಯುವುದರ ಮೂಲಕ ಆತನು ಸೇವಕನ ಕೆಲಸ ಮಾಡಿದ್ದನು.

John 13:6

Κύριε, σύ μου νίπτεις τοὺς πόδας

ತನ್ನ ಪಾದಗಳನ್ನು ಯೇಸು ತೊಳೆಯುವುದಕ್ಕೆ ಪೇತ್ರನು ಇಷ್ಟಪಡಲಿಲ್ಲವೆನ್ನುವಂತೆ ಪೇತ್ರನ ಪ್ರಶ್ನೆಯು ತೋರಿಸುತ್ತಿದೆ. ಪರ್ಯಾಯ ಅನುವಾದ: “ಪಾಪಿಯಾದ ನನ್ನ ಪಾದಗಳನ್ನು ನೀವು ತೊಳೆಯುವುದು ಸರಿಯಲ್ಲ ಕರ್ತನೇ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 13:8

ἐὰν μὴ νίψω σε, οὐκ ἔχεις μέρος μετ’ ἐμοῦ

ಇಲ್ಲಿ ಪೇತ್ರನ ಪಾದಗಳನ್ನು ತೊಳೆಯಲು ಪೇತ್ರನು ಅನುಮತಿ ಕೊಡುವುದಕ್ಕೆ ಯೇಸು ಎರಡು ಅನಾನುಕೂಲ ವ್ಯಾಖ್ಯೆಗಳನ್ನು ಮಾಡಿ ಒಪ್ಪಿಸಿರುವಂತೆ ಇಲ್ಲಿ ಕಾಣಿಸಿಕೊಳ್ಳುತ್ತದೆ. ಪೇತ್ರನು ಯೇಸುವಿನ ಶಿಷ್ಯನಾಗಿ ಮುಂದೆವರಿಯಬೇಕೆಂದರೆ ತನ್ನ ಪಾದಗಳನ್ನು ತೊಳೆಸಿಕೊಳ್ಳಲೇಬೇಕೆಂದು ಯೇಸು ಹೇಳಿದ್ದನು. ಪರ್ಯಾಯ ಅನುವಾದ: “ನಾನು ತೊಳೆದರೆ, ನೀನು ಎಂದಿಗೂ ನನ್ನೊಂದಿಗೆ ಇರುತ್ತೀ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 13:10

“ನೀವು” ಎನ್ನುವ ಪದವು ಯೇಸುವಿನ ಶಿಷ್ಯರೆಲ್ಲರನ್ನು ಸೂಚಿಸುವುದಕ್ಕೆ ಆತನು ಉಪಯೋಗಿಸಿದ್ದಾನೆ.

ಯೇಸು ಸೀಮೋನ ಪೇತ್ರನೊಂದಿಗೆ ಮಾತನಾಡುವುದನ್ನು ಮುಂದೆವರಿಸುತ್ತಿದ್ದಾನೆ.

ὁ λελουμένος οὐκ ἔχει χρείαν, εἰ μὴ τοὺς πόδας νίψασθαι

ಇಲ್ಲಿ “ಸ್ನಾನ ಮಾಡಿಕೊಂಡವನು” ಎನ್ನುವ ಮಾತು ರೂಪಕಲಂಕಾರವಾಗಿರುತ್ತದೆ, ಈ ಮಾತಿಗೆ ದೇವರು ಒಬ್ಬ ವ್ಯಕ್ತಿಯನ್ನು ಆತ್ಮೀಯಕವಾಗಿ ತೊಳೆದಿರುವುದು ಎಂದರ್ಥ. ಪರ್ಯಾಯ ಅನುವಾದ: “ಈಗಾಗಲೇ ದೇವರ ಕ್ಷಮೆಯನ್ನು ಪಡೆದುಕೊಂಡಿರುವವರು ಈಗ ಕೇವಲ ತಮ್ಮ ದೈನಂದಿನ ಪಾಪಗಳಿಂದ ಶುದ್ಧಿಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ” (ನೋಡಿರಿ: ರೂಪಕ ಅಲಂಕಾರ)

John 13:11

οὐχὶ πάντες καθαροί ἐστε

ತನ್ನನ್ನು ಹಿಡಿಸಿಕೊಡುವವನು ಅಂದರೆ ಯೂದನು ತನ್ನಲ್ಲಿ ನಂಬಿಕೆಯಿಡಲಿಲ್ಲವೆಂದು ಯೇಸು ತಿಳಿಯಪಡಿಸುತ್ತಿದ್ದಾರೆ. ಆದ್ದರಿಂದ ದೇವರು ತನ್ನ ಪಾಪಗಳನ್ನು ಕ್ಷಮಿಸರಲಿಲ್ಲ. ಪರ್ಯಾಯ ಅನುವಾದ: “ನಿಮ್ಮೆಲ್ಲರಲ್ಲಿ ಅನೇಕರು ದೇವರ ಕ್ಷಮೆಯನ್ನು ಪಡೆದುಕೊಳ್ಳಲಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 13:12

γινώσκετε τί πεποίηκα ὑμῖν

ಈ ಒಂದು ಸಂಘಟನೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಯೇಸು ತನ್ನ ಶಿಷ್ಯರಿಗೆ ಬೋಧನೆ ಮಾಡುವ ವಿಷಯಗಳ ಪ್ರಾಮುಖ್ಯತೆಯನ್ನು ಯೇಸು ಒತ್ತಿ ಹೇಳುವದಕ್ಕಾಯಿತು. ಪರ್ಯಾಯ ಅನುವಾದ: “ನಾನು ನಿಮಗೆ ಏನು ಮಾಡಿದ್ದೇನೆನ್ನುವದರ ಕುರಿತಾಗಿ ನೀವು ಅರ್ಥಮಾಡಿಕೊಳ್ಳುವ ಅವಶ್ಯಕತೆಯುಂಟು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 13:13

ὑμεῖς φωνεῖτέ με ὁ Διδάσκαλος καὶ, ὁ Κύριος

ತನ್ನ ಶಿಷ್ಯರು ತನ್ನ ಮೇಲೆ ಹೆಚ್ಚಾದ ಗೌರವವನ್ನು ಇಟ್ಟುಕೊಂಡಿದ್ದಾರೆಂದು ಇಲ್ಲಿ ಯೇಸು ತಿಳಿಯಪಡಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನೀವು ನನ್ನನ್ನು “ಬೋಧಕನು” ಮತ್ತು “ಒಡೆಯನು” ಎಂದು ಕರೆಯುವಾಗ ನೀವು ನನಗೆ ಹೆಚ್ಚಾದ ಗೌರವವನ್ನು ತೋರಿಸುತ್ತಿದ್ದೀರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 13:15

καθὼς ἐγὼ ἐποίησα ὑμῖν, καὶ ὑμεῖς ποιῆτε

ತನ್ನ ಶಿಷ್ಯರು ತನ್ನ ಮಾದರಿಯನ್ನು ಅನುಸರಿಸುವುದಕ್ಕೆ ಇಷ್ಟಪಟ್ಟು, ಒಬ್ಬರಿಗೊಬ್ಬರು ಸೇವೆ ಮಾಡಿಕೊಳ್ಳಬೇಕೆಂದು ಯೇಸು ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನೀವು ಕೂಡ ತಗ್ಗಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿಕೊಳ್ಳಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 13:16

ಯೇಸು ತನ್ನ ಶಿಷ್ಯರೊಂದಿಗೆ ಮಾತನಾಡುವುದನ್ನು ಮುಂದುವರಿಸುತ್ತಿದ್ದಾರೆ.

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

μείζων

ಅತೀ ಪ್ರಾಮುಖ್ಯವಾದ ವ್ಯಕ್ತಿ ಅಥವಾ ಶಕ್ತಿಯುಳ್ಳ ವ್ಯಕ್ತಿ, ಅಥವಾ ಅತೀ ಸುಲಭವಾದ ಜೀವನವನ್ನು ಅಥವಾ ಅತೀ ಹೆಚ್ಚು ಆಹ್ಲಾದಕರವಾದ ಜೀವನವನ್ನು ಹೊಂದಿಕೊಂಡಿರುವ ವ್ಯಕ್ತಿ.

John 13:17

μακάριοί ἐστε

ಇಲ್ಲಿ “ಧನ್ಯರು” ಎನ್ನುವ ಪದಕ್ಕೆ ಒಬ್ಬ ವ್ಯಕ್ತಿಗೆ ಪ್ರಯೋಜನಕರವಾದ ವಿಷಯಗಳನ್ನುಂಟು ಮಾಡುವ ಅಥವಾ ಒಳ್ಳೇಯದನ್ನು ಮಾಡುವವನು ಎಂದರ್ಥ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ನಿಮ್ಮನ್ನು ಆಶೀರ್ವಾದ ಮಾಡುವನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 13:18

ἵνα ἡ Γραφὴ πληρωθῇ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಇದು ಲೇಖನವನ್ನು ನೆರವೇರಿಸುವ ಕ್ರಮದಲ್ಲಿ ಒಳಗೊಂಡಿರುತ್ತದೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ὁ τρώγων μετ’ ἐμοῦ τὸν ἄρτον, ἐπῆρεν ἐπ’ ἐμὲ τὴν πτέρναν αὐτοῦ

ಇಲ್ಲಿ “ನನ್ನ ರೊಟ್ಟಿಯನ್ನು ತಿನ್ನುವನು” ಎನ್ನುವ ಮಾತು ಒಬ್ಬ ವ್ಯಕ್ತಿ ಸ್ನೇಹಿತನೆಂಬುದಾಗಿ ತೋರಿಸಿಕೊಳ್ಳುವ ವ್ಯಕ್ತಿಗಾಗಿ ಹೇಳಲ್ಪಟ್ಟಿರುವ ನಾಣ್ಣುಡಿಯಾಗಿರುತ್ತದೆ. “ತನ್ನ ಹಿಮ್ಮಡಿಯನ್ನು ಮೇಲಕ್ಕೆತ್ತುವನು” ಎನ್ನುವ ಮಾತು ಕೂಡ ನಾಣ್ಣುಡಿಯಾಗಿರುತ್ತದೆ. ಈ ಮಾತಿಗೆ ಶತ್ರುವಾಗಿ ಮಾರ್ಪಾಟು ಹೊಂದಿದ ವ್ಯಕ್ತಿ ಎಂದರ್ಥ. ನಿಮ್ಮ ಭಾಷೆಯಲ್ಲಿ ಈ ಅರ್ಥಗಳನ್ನು ಹೊಂದಿರುವ ನಾಣ್ಣುಡಿಗಳಿದ್ದರೆ, ನೀವು ಅವುಗಳನ್ನು ಇಲ್ಲಿ ಉಪಯೋಗಿಸಬಹುದು. ಪರ್ಯಾಯ ಅನುವಾದ: “ನನ್ನ ಸ್ನೇಹಿತನೆಂದು ತೋರಿಸಿಕೊಳ್ಳುವ ವ್ಯಕ್ತಿ ನನಗೆ ಶತ್ರುವಾಗಿ ಮಾರ್ಪಾಟು ಹೊಂದುವನು” (ನೋಡಿರಿ: ನುಡಿಗಟ್ಟುಗಳು.)

John 13:19

ἀπ’ ἄρτι λέγω ὑμῖν πρὸ τοῦ γενέσθαι

ಇದು ನಡೆಯುವುದಕ್ಕೆ ಮುಂಚಿತವಾಗಿ ನಡೆಯುವದರ ಕುರಿತಾಗಿ ನಾನೀಗ ನಿಮಗೆ ಹೇಳುತ್ತಿದ್ದೇನೆ.

ἐγώ εἰμι

ಈ ಅರ್ಥಗಳು ಇರಬಹುದು, 1) “ಇರುವಾತನು” ಎಂಬುದಾಗಿ ತನ್ನನ್ನು ತಾನು ತೋರಿಸಿಕೊಂಡಿರುವ ಯೆಹೋವನ ಹಾಗಯೇ ಯೇಸು ತನ್ನನ್ನು ತಾನು ತೋರಿಸಿಕೊಳ್ಳುತ್ತಿದ್ದಾನೆ, ಅಥವಾ 2) “ನಾನೇ ಆತನಾಗಿದ್ದೇನೆ” ಎಂಬುದಾಗಿ ಯೇಸು ಹೇಳುತ್ತಿದ್ದಾನೆ.

John 13:20

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರಿ ಎಂದು ನೋಡಿರಿ.

John 13:21

ἐταράχθη

ನೊಂದುಕೊಂಡನು, ಬಾಧೆಪಟ್ಟನು

ἀμὴν, ἀμὴν

ಯೋಹಾನ.1:1 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ.

John 13:22

ἔβλεπον εἰς ἀλλήλους οἱ μαθηταὶ, ἀπορούμενοι περὶ τίνος λέγει

ಶಿಷ್ಯರು ಒಬ್ಬರನ್ನೊಬ್ಬರು ತಮ್ಮ ಮುಖಗಳನ್ನು ನೋಡಿಕೊಂಡರು ಮತ್ತು ಬೆರಗಾದರು: ಯೇಸುವನ್ನು ಹಿಡಿದುಕೊಡುವವರು ಯಾರು?”

John 13:23

εἷς ἐκ τῶν μαθητῶν αὐτοῦ…ὃν ἠγάπα ὁ Ἰησοῦς

ಇದು ಯೋಹನನನ್ನು ಸೂಚಿಸುತ್ತದೆ.

ἀνακείμενος

ಯೇಸುವಿನ ಕಾಲದಲ್ಲಿ, ಯೆಹೂದ್ಯರು ಅನೇಕಬಾರಿ ಗ್ರೀಕ್ ಶೈಲಿಯಲ್ಲಿಯೇ ಊಟ ಮಾಡುತ್ತಿದ್ದರು, ಅವರು ಚಿಕ್ಕ ಚಿಕ್ಕ ಪದರಗಳ ಮೇಲೆ ಒಂದು ಕಡೆಗೆ ಮಲಗಿಕೊಂಡಿರುವಂತೆ ಇದ್ದು ತಿನ್ನುತ್ತಿದ್ದರು. (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

τῷ κόλπῳ τοῦ Ἰησοῦ

ಗ್ರೀಕ್ ಶೈಲಿಯಲ್ಲಿ ಪಕ್ಕದಲ್ಲಿ ತಿನ್ನುತ್ತಿರುವ ವ್ಯಕ್ತಿಯ ತಲೆಯ ಮೇಲೆ ಆತುಕೊಂಡಿರುವುದು ಅವನೊಂದಿಗೆ ಅತ್ಯಂತ ಹೆಚ್ಚು ಸ್ನೇಹ ಇದೆಯೆಂದು ಹೇಳುವುದಕ್ಕೆ ಚಿಹ್ನೆಯಾಗಿದ್ದಿತ್ತು.

ἠγάπα

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

John 13:26

Ἰσκαριώτη

ಯೂದನು ಕೆರೀಯೋತಿನ ಗ್ರಾಮದಿಂದ ಬಂದವನೆಂದು ಇದು ಸೂಚಿಸುತ್ತಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 13:27

καὶ μετὰ τὸ ψωμίον

“ಯೂದನು ಆ ರೊಟ್ಟಿಯ ತೆಗೆದುಕೊಂಡು” ಎನ್ನುವ ಮಾತುಗಳು ಸಂದರ್ಭದಲ್ಲಿಯೇ ಅರ್ಥಮಾಡಿಕೊಳ್ಳಬಹುದು. ಪರ್ಯಾಯ ಅನುವಾದ: “ಯೂದನು ರೊಟ್ಟಿಯನ್ನು ತೆಗೆದುಕೊಂಡನಂತರವೇ” (ನೋಡಿರಿ: ಪದಲೋಪ)

εἰσῆλθεν εἰς ἐκεῖνον ὁ Σατανᾶς

ಇದು ನಾಣ್ಣುಡಿಯಾಗಿದ್ದಿತ್ತು, ಸೈತಾನನು ಸಂಪೂರ್ಣವಾಗಿ ಯೂದನನ್ನು ನಿಯಂತ್ರಣ ಮಾಡಿದೆಯೆಂದು ಈ ಮಾತಿನ ಆರ್ಥವಾಗಿರುತ್ತದೆ. ಪರ್ಯಾಯ ಅನುವಾದ: “ಸೈತಾನನು ಅವನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ” ಅಥವಾ “ಸಾತಾನನು ಅವನನ್ನು ಆಜ್ಞಾಪಿಸಲು ಆರಂಭಿಸಿದ್ದಾನೆ” (ನೋಡಿರಿ: ನುಡಿಗಟ್ಟುಗಳು.)

λέγει οὖν αὐτῷ ὁ Ἰησοῦς

ಇಲ್ಲಿ ಯೇಸು ಯೂದನೊಂದಿಗೆ ಮಾತನಾಡುತ್ತಿದ್ದಾನೆ.

ὃ ποιεῖς, ποίησον τάχειον

ಮಾಡಬೇಕೆಂದು ಪ್ರಣಾಳಿಕೆ ಮಾಡಿಕೊಂಡಿರುವದನ್ನು ಬೇಗನೇ ಮಾಡು!

John 13:29

τοῖς πτωχοῖς ἵνα τι δῷ

ನೀವು ಈ ಮಾತನ್ನು ನೇರವಾದ ವ್ಯಾಖ್ಯೆಯನ್ನಾಗಿ ಅನುವಾದ ಮಾಡಬಹುದು: “ಹೋಗಿ, ನಿನ್ನ ಬಳಿ ಇರುವ ಹಣವನ್ನು ಬಡವರಿಗೆ ಕೊಡು.”

John 13:30

ἐκεῖνος ἐξῆλθεν εὐθύς; ἦν…νύξ

ಯೂದನು ಕೆಟ್ಟ ಕಾರ್ಯವನ್ನು ಮಾಡುವನು ಅಥವಾ ರಾತ್ರಿಯ ಕತ್ತಲಿನಲ್ಲಿ “ಕತ್ತಲಿನ” ಕ್ರಿಯೆಯನ್ನು ಮಾಡುವನು ಎನ್ನುವ ಸತ್ಯಾಂಶವನ್ನು ಇಲ್ಲಿ ತರುವ ಪ್ರಯತ್ನ ಯೋಹಾನನು ಮಾಡುತ್ತಿರಬಹುದು. ಪರ್ಯಾಯ ಅನುವಾದ: “ಅವನು ರಾತ್ರಿಯ ಕತ್ತಲಿನಲ್ಲಿ ಬೇಗನೇ ಹೊರಟು ಹೋದನು” (ನೋಡಿರಿ: ಹಿನ್ನೆಲೆ ಮಾಹಿತಿ.)

John 13:31

νῦν ἐδοξάσθη ὁ Υἱὸς τοῦ Ἀνθρώπου, καὶ ὁ Θεὸς ἐδοξάσθη ἐν αὐτῷ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಮನುಷ್ಯ ಕುಮಾರನು ಹೇಗೆ ಘನತೆಯನ್ನು ಪಡೆಯುವನು ಮತ್ತು ಹೇಗೆ ಮನುಷ್ಯ ಕುಮಾರನು ಮಾಡುವ ಕಾರ್ಯದಿಂದ ದೇವರು ಘನತೆಯನ್ನು ಪಡೆದುಕೊಳ್ಳುವರೆಂದು ನೋಡುವುದಕ್ಕೆ ಜನರು ಕಾಯುತ್ತಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 13:32

ὁ Θεὸς δοξάσει αὐτὸν ἐν αὐτῷ, καὶ εὐθὺς δοξάσει αὐτόν

ಇಲ್ಲಿ “ಆತನು” ಎನ್ನುವ ಶಬ್ದವು ಮನುಷ್ಯ ಕುಮಾರನನ್ನು ಸೂಚಿಸುತ್ತದೆ. ಇಲ್ಲಿ “ತನ್ನನ್ನು ತಾನು” ಎನ್ನುವ ಮಾತು ದೇವರನ್ನು ಸೂಚಿಸುವ ಅನುವರ್ತಕ ಸರ್ವನಾಮವಾಗಿರುತ್ತದೆ. ಪರ್ಯಾಯ ಅನುವಾದ: “ದೇವರೇ ಮನುಷ್ಯ ಕುಮಾರನಿಗೆ ಅತೀ ಶೀಘ್ರವಾಗಿ ಘನತೆಯನ್ನು ಕೊಡುವರು” (ನೋಡಿರಿ: ಕರ್ತೃವಾಚ್ಯ ಸರ್ವನಾಮಗಳು.)

John 13:33

τεκνία

ಶಿಷ್ಯರು ಯೇಸುವಿಗೆ ಚಿಕ್ಕ ಮಕ್ಕಳಂತೆಯೇ ಆತನು ಅವರನ್ನು ಪ್ರೀತಿಸುತ್ತಿದ್ದಾನೆಂದು ಹೇಳಲು, ಯೇಸು “ಚಿಕ್ಕ ಮಕ್ಕಳೇ” ಎನ್ನುವ ಮಾತನ್ನು ಉಪಯೋಗಿಸುತ್ತಿದ್ದಾರೆ.

καθὼς εἶπον τοῖς Ἰουδαίοις

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಯೇಸುವನ್ನು ತಿರಸ್ಕರಿಸಿದ ಯೆಹೂದ್ಯ ನಾಯಕರಿಗಾಗಿ ಹೇಳಲ್ಪಟ್ಟಿರುವ ಉಪಲಕ್ಷಕ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನಾನು ಯೆಹೂದ್ಯ ನಾಯಕರಿಗೆ ಹೇಳಿರುವಂತೆಯೇ” (ನೋಡಿರಿ: ಉಪಲಕ್ಷಣಾಲಂಕಾರ)

John 13:34

ಯೇಸು ತನ್ನ ಶಿಷ್ಯರೊಂದಿಗೆ ಮಾತನಾಡುವದನ್ನು ಮುಂದೆವರಿಸುತ್ತಿದ್ದಾರೆ.

ἀγαπᾶτε

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

John 13:35

πάντες

ಶಿಷ್ಯರು ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಿಕೊಳ್ಳುತ್ತಿದ್ದಾರೆಂದು ನೋಡುವ ಜನರನ್ನು ಮಾತ್ರ ಈ ಉತ್ರ್ಪೇಕ್ಷೆಯು ಸೂಚಿಸುವುದೆಂದು ನೀವು ಸ್ಪಷ್ಟಪಡಿಸುವ ಅವಶ್ಯಕತೆಯುಂಟು. (ನೋಡಿರಿ: ಅತಿಶಯೋಕ್ತಿ)

John 13:37

τὴν ψυχήν μου…θήσω

ನನ್ನ ಜೀವನವನ್ನೇ ಬಿಟ್ಟುಕೊಡುವೆನು ಅಥವಾ “ಸಾಯುವೆನು”

John 13:38

τὴν ψυχήν σου ὑπὲρ ἐμοῦ θήσεις

ಯೇಸುವಿನ ವ್ಯಾಖ್ಯೆಯನ್ನು ಒತ್ತಿ ಹೇಳುವುದಕ್ಕೆ ಈ ಸಂಘಟನೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುವುದು. ಪರ್ಯಾಯ ಅನುವಾದ: “ನೀನು ನನಗಾಗಿ ಸಾಯುತ್ತೀಯೆಂದು ನೀನು ಹೇಳುವೆ, ಆದರೆ ಸತ್ಯವೇನೆಂದರೆ ನೀನು ಸಾಯುವುದಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

οὐ μὴ ἀλέκτωρ φωνήσῃ, ἕως οὗ ἀρνήσῃ με τρίς

ಕೋಳಿ ಕೂಗುವುದಕ್ಕೆ ಮುಂಚಿತವಾಗಿ ನಾನು ನಿನಗೆ ಗೊತ್ತಿಲ್ಲ ಎಂದು ಮೂರು ಬಾರಿ ಹೇಳುತ್ತೀ

John 14

ಯೋಹಾನ 14 ಸಾಮಾನ್ಯ ಅಂಶಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

“ನನ್ನ ತಂದೆಯ ಮನೆ”

ದೇವರು ದೇವಾಲಯದಲ್ಲಿ ನಿವಾಸವಾಗದೇ ಆತನು ನಿವಾಸವಾಗುವ ಪರಲೋಕದ ಕುರಿತಾಗಿ ಈ ಮಾತುಗಳನ್ನು ಯೇಸು ಉಪಯೋಗಿಸಿದ್ದಾರೆ. (ನೋಡಿರಿ: ಪರಲೋಕ, ಆಕಾಶ, ಪರಲೋಕಗಳು, ಪರಲೋಕದ)

ಪರಿಶುದ್ಧಾತ್ಮ

ಯೇಸು ಅವರಿಗೋಸ್ಕರ ಪವಿತ್ರಾತ್ಮನನ್ನು ಕಳುಹಿಸುತ್ತೇನೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ಪವಿತ್ರಾತ್ಮನು ಎಂದರೆ ಯಾವಾಗಲೂ ದೇವರ ಜನರೊಂದಿಗೆ ಇದ್ದು, ಅವರಿಗೆ ಸಹಾಯ ಮಾಡುವ ಮತ್ತು ಅವರಿಗಾಗಿ ದೇವರ ಮಾತುಗಳನ್ನು ಜ್ಞಾಪಿಸುವ ಆದರಿಸುವಾತನು ([ಯೋಹಾನ.14;16] (../../ಯೋಹಾನ/14/16.ಎಂಡಿ)) ಆಗಿದ್ದಾನೆ, ಈತನು ಸತ್ಯದ ಆತ್ಮವು ಆಗಿದ್ದಾನೆ ([ಯೋಹಾನ.14:17] (../../ಯೋಹಾನ/14/17.ಎಂಡಿ)) ಅಂದರೆ ದೇವರ ಕುರಿತಾದ ಸತ್ಯವನ್ನೇ ದೇವರ ಜನರಿಗೆ ಹೇಳುವಾತನು, ಆದ್ದರಿಂದ ಅವರಿಗೆ ಈತನು ಚೆನ್ನಾಗಿ ಗೊತ್ತು ಮತ್ತು ಆತನನ್ನು ಚೆನ್ನಾಗಿ ಸೇವಿಸುವರು. (ನೋಡಿರಿ: ಪವಿತ್ರಾತ್ಮ, ದೇವರ ಆತ್ಮ, ಕರ್ತನ ಆತ್ಮ, ಆತ್ಮ)

John 14:1

ಮುಂದಿನ ಅಧ್ಯಾಯದಲ್ಲಿರುವ ಕಥೆಯ ಭಾಗವು ಇಲ್ಲಿ ಮುಂದೆವರಿಯುತ್ತಿದೆ. ಯೇಸು ತನ್ನ ಶಿಷ್ಯರೊಂದಿಗೆ ಸೇರಿ ಮೇಜನ್ನು ಹಂಚಿಕೊಂಡು, ಅವರೊಂದಿಗೆ ಮಾತನಾಡುತ್ತಿರುವ ಮಾತುಗಳನ್ನು ಮುಂದೆವರಿಸುತ್ತಿದ್ದಾರೆ.

μὴ ταρασσέσθω ὑμῶν ἡ καρδία

ಇಲ್ಲಿ “ಹೃದಯ “ ಅಂದರೆ ಒಬ್ಬ ವ್ಯಕ್ತಿಯ ಅಂತರಂಗವನ್ನು ಸೂಚಿಸುವ ಪರ್ಯಾಯ ಶಬ್ದವಾಗಿರುತ್ತದೆ. ಪರ್ಯಾಯ ಅನುವಾದ: “ಕಳವಳಪಡುವುದು ಮತ್ತು ಚಿಂತೆಪಡುವುದನ್ನು ನಿಲ್ಲಿಸು” (ನೋಡಿರಿ: ಲಕ್ಷಣಾಲಂಕಾರ)

John 14:2

ἐν τῇ οἰκίᾳ τοῦ Πατρός μου, μοναὶ πολλαί εἰσιν

ನನ್ನ ತಂದೆಯ ಮನೆಯಲ್ಲಿ ನಿವಾಸ ಮಾಡುವುದಕ್ಕೆ ಅನೇಕ ಸ್ಥಳಗಳುಂಟು.

ἐν τῇ οἰκίᾳ τοῦ Πατρός μου

ಇದು ದೇವರ ನಿವಾಸವಾಗಿರುವ ಪರಲೋಕವನ್ನು ಸೂಚಿಸುತ್ತದೆ.

Πατρός

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

μοναὶ πολλαί

“ಮನೆ” ಎನ್ನುವ ಪದವು ಒಂದೇ ಕೊಠಡಿಯನ್ನು ಸೂಚಿಸುತ್ತದೆ ಅಥವಾ ದೊಡ್ಡ ಮನೆಯನ್ನು ಸೂಚಿಸುವುದು.

πορεύομαι ἑτοιμάσαι τόπον ὑμῖν

ಯೇಸುವಿನಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬರಿಗಾಗಿ ಆತನು ಪರಲೋಕದಲ್ಲಿ ಸ್ಥಳವನ್ನು ಸಿದ್ಧಪಡಿಸುವನು. “ನೀವು” ಎನ್ನುವ ಪದವು ಬಹುವಚನವಾಗಿದೆ ಮತ್ತು ಶಿಷ್ಯರೆಲ್ಲರನ್ನು ಸೂಚಿಸುತ್ತಿದೆ. (ನೋಡಿರಿ: "You" - " ನೀನು " – ವಿವಿಧ ರೂಪಗಳು.)

John 14:4

τὴν ὁδόν

ಇದೊಂದು ರೂಪಕಲಂಕಾರವಾಗಿರುತ್ತದೆ, ಇದಕ್ಕೆ ಈ ಅರ್ಥಗಳು ಇರಬಹುದು 1) “ದೇವರ ಬಳಿಗೆ ಹೋಗಲು ಮಾರ್ಗ” ಅಥವಾ 2) “ದೇವರ ಬಳಿಗೆ ಜನರನ್ನು ಕರೆದುಕೊಂಡು ಹೋಗುವ ವ್ಯಕ್ತಿ.” (ನೋಡಿರಿ: ರೂಪಕ ಅಲಂಕಾರ)

John 14:5

πῶς δυνάμεθα τὴν ὁδὸν εἰδέναι

ಅಲ್ಲಿಗೆ ಹೇಗೆ ಹೋಗಬೇಕೆಂದು ನಮಗೆ ಹೇಗೆ ಗೊತ್ತಾಗುತ್ತದೆ?

John 14:6

ἡ ἀλήθεια

ಇದು ರೂಪಕಲಂಕಾರದ ಮಾತು, ಇದಕ್ಕೆ ಈ ಅರ್ಥಗಳು ಕೂಡ ಇರಬಹುದು 1) “ನಿಜವಾದ ವ್ಯಕ್ತಿ” ಅಥವಾ 2) “ದೇವರ ಕುರಿತಾಗಿ ನಿಜವಾದ ಮಾತುಗಳನ್ನು ನುಡಿಯುವ ವ್ಯಕ್ತಿ.” (ನೋಡಿರಿ: ರೂಪಕ ಅಲಂಕಾರ)

ἡ ζωή

ಯೇಸು ಜನರಿಗೆ ನಿತ್ಯಜೀವವನ್ನು ಕೊಡುವನೆಂದೆನ್ನುವ ಅರ್ಥ ಕೊಡುವ ರೂಪಕಲಂಕಾರ ಮಾತಾಗಿದೆ. ಪರ್ಯಾಯ ಅನುವಾದ: “ಜನರನ್ನು ಜೀವಂತಗೊಳಿಸುವ ಒಬ್ಬ ವ್ಯಕ್ತಿ” (ನೋಡಿರಿ: ರೂಪಕ ಅಲಂಕಾರ)

οὐδεὶς ἔρχεται πρὸς τὸν Πατέρα, εἰ μὴ δι’ ἐμοῦ

ಜನರು ಯೇಸುವಿನಲ್ಲಿ ನಂಬಿಕೆ ಇಡುವುದರ ಮೂಲಕ ಮಾತ್ರವೇ ಜನರು ದೇವರ ಬಳಿಗೆ ಬರಬಹುದು ಮತ್ತು ಆತನೊಂದಿಗೆ ನಿವಾಸಿಗಳಾಗಿರಬಹುದು. ಪರ್ಯಾಯ ಅನುವಾದ: “ನನ್ನ ಮೂಲಕವೇ ಹೊರತು ಇನ್ನಾರಿಂದಲೂ ಯಾರೂ ತಂದೆಯ ಬಳಿಗೆ ಬರಲಾರಿರಿ ಮತ್ತು ಆತನೊಂದಿಗೆ ಇರಲಾರಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:8

Κύριε, δεῖξον ἡμῖν τὸν Πατέρα

“ತಂದೆ” ಎನ್ನುವ ಪದವು ದೇವರ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:9

τοσοῦτον χρόνον μεθ’ ὑμῶν εἰμι, καὶ οὐκ ἔγνωκάς με, Φίλιππε

ಯೇಸುವಿನ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಈ ಸಂಘಟನೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ಫಿಲಿಪ್ಪ, ನಾನು ಈಗಾಗಲೇ ಇಷ್ಟೋ ಕಾಲದಿಂದ ಶಿಷ್ಯರುಗಳಾದ ನಿಮ್ಮೊಂದಿಗೆ ಇದ್ದೇನೆ. ಆದರೆ ನೀವು ಈಗ ನನ್ನನ್ನು ತಿಳಿದುಕೊಂಡಿದ್ದೀರಿ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ὁ ἑωρακὼς ἐμὲ, ἑώρακεν τὸν Πατέρα

ಮಗನಾದ ದೇವರಾಗಿರುವ ಯೇಸುವನ್ನು ನೋಡುವುದು ತಂದೆಯಾದ ದೇವರನ್ನು ನೋಡಿದಂತೆಯೇ. “ತಂದೆ” ಎನ್ನುವ ಶಬ್ದವು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

πῶς σὺ λέγεις, δεῖξον ἡμῖν τὸν Πατέρα

ಯೇಸು ಫಿಲಿಪ್ಪನ ಜೊತೆಯಲ್ಲಿ ಹೇಳಿದ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಈ ಸಂಘಟನೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ನೀವು ಸುಮ್ಮನೆ ಹೇಳುವದಲ್ಲ, ‘ನಮಗೆ ತಂದೆಯನ್ನು ತೋರಿಸು!’” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 14:10

ಯೇಸು ಫಿಲಿಪ್ಪನಿಗೆ ಒಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ ಮತ್ತು ಇದಾದನಂತರ ಆತನು ತನ್ನ ಎಲ್ಲಾ ಶಿಷ್ಯರೊಂದಿಗೆ ಮಾತನಾಡುತ್ತಾ ತನ್ನ ಮಾತುಗಳನ್ನು ಮುಂದೆವರಿಸುತ್ತಿದ್ದಾರೆ.

οὐ πιστεύεις ὅτι ἐγὼ ἐν τῷ Πατρὶ, καὶ ὁ Πατὴρ ἐν ἐμοί ἐστιν

ಯೇಸು ಫಿಲಿಪ್ಪನ ಜೊತೆಯಲ್ಲಿ ಹೇಳಿದ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಈ ಸಂಘಟನೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ:”ನೀವು ನಿಜವಾಗಿ ನನ್ನನ್ನು ನಂಬುತ್ತಿದ್ದೀರಾ.” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

Πατρὶ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τὰ ῥήματα ἃ ἐγὼ λαλῶ ὑμῖν, ἀπ’ ἐμαυτοῦ οὐ λαλῶ

ನಾನು ನಿಮಗೆ ಹೇಳುತ್ತಿರುವ ಮಾತುಗಳೆಲ್ಲಾ ನನ್ನಿಂದ ಬಂದವುಗಳಲ್ಲ ಅಥವಾ “ನಾನು ನಿಮಗೆ ಹೇಳಿದ ಮಾತುಗಳೆಲ್ಲಾ ನನ್ನಿಂದ ಬಂದವುಗಳಲ್ಲ”

τὰ ῥήματα ἃ ἐγὼ λαλῶ ὑμῖν

ಇಲ್ಲಿ “ನೀವು” ಎನ್ನುವ ಶಬ್ದವು ಬಹುವಚನ ಪದವಾಗಿರುತ್ತಾದೆ. ಯೇಸು ಈಗ ತನ್ನ ಎಲ್ಲಾ ಶಿಷ್ಯರೊಂದಿಗೆ ಮಾತನಾಡುತ್ತಿದ್ದಾರೆ.

John 14:11

ἐγὼ ἐν τῷ Πατρὶ, καὶ ὁ Πατὴρ ἐν ἐμοί

ಇದು ನಾಣ್ಣುಡಿಯಾಗಿರುತ್ತದೆ, ಈ ಮಾತಿಗೆ ತಂದೆಯಾದ ದೇವರಿಗೆ ಮತ್ತು ಯೇಸುವಿಗೆ ಅನನ್ಯವಾದ ಸಂಬಂಧವಿದೆಯೆಂದು ಅರ್ಥ. ಪರ್ಯಾಯ ಅನುವಾದ: “ನಾನು ತಂದೆಯೊಂದಿಗೆ ಇದ್ದೇನೆ ಮತ್ತು ತಂದೆ ನನ್ನೊಂದಿಗೆ ಇದ್ದಾನೆ” ಅಥವಾ “ನಾನು ಮತ್ತು ನನ್ನ ತಂದೆಯು ಒಂದೇ ಯಾಗಿದ್ದೇವೆ” (ನೋಡಿರಿ: ನುಡಿಗಟ್ಟುಗಳು.)

John 14:12

ἀμὴν, ἀμὴν

ಯೋಹಾನ.1:1 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ὁ πιστεύων εἰς ἐμὲ

ಈ ಮಾತಿಗೆ ಯೇಸು ದೇವರ ಮಗನೆಂದು ನಂಬುವುದು ಎಂದರ್ಥ.

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:13

ὅ τι ἂν αἰτήσητε ἐν τῷ ὀνόματί μου

ಇಲ್ಲಿ “ಹೆಸರು” ಎನ್ನುವ ಶಬ್ದವು ಯೇಸುವಿನ ಅಧಿಕಾರವನ್ನು ಸೂಚಿಸುವ ಪರ್ಯಾಯ ಶಬ್ದವಾಗಿರುತ್ತದೆ. ಪರ್ಯಾಯ ಅನುವಾದ: “ನನ್ನ ಅಧಿಕಾರವನ್ನು ಉಪಯೋಗಿಸಿಕೊಂಡು, ನೀವು ಏನು ಕೇಳಿಕೊಂಡರೂ” (ನೋಡಿರಿ: ಲಕ್ಷಣಾಲಂಕಾರ)

ἵνα δοξασθῇ ὁ Πατὴρ ἐν τῷ Υἱῷ

ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನನ್ನ ತಂದೆಯು ಎಷ್ಟು ದೊಡ್ಡವನೆಂದು ಎಲ್ಲರಿಗೂ ನಾನು ತೋರಿಸಬಲ್ಲೆನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Πατὴρ…Υἱῷ

ಈ ಹೆಸರುಗಳೆಲ್ಲವು ದೇವರಿಗೂ ಮತ್ತು ಯೇಸುವಿಗೂ ಮಧ್ಯದಲ್ಲಿ ಇರುವ ಸಂಬಂಧವನ್ನು ವಿವರಿಸುವ ಪ್ರಾಮುಖ್ಯವಾದ ಹೆಸರುಗಳಾಗಿರುತ್ತವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:14

ἐάν τι αἰτήσητέ με ἐν τῷ ὀνόματί μου, ἐγὼ ποιήσω

ಇಲ್ಲಿ “ಹೆಸರು” ಎನ್ನುವ ಶಬ್ದವು ಯೇಸುವಿನ ಅಧಿಕಾರವನ್ನು ಸೂಚಿಸುವ ಪರ್ಯಾಯ ಶಬ್ದವಾಗಿರುತ್ತದೆ. ಪರ್ಯಾಯ ಅನುವಾದ: “ನನ್ನ ಹಿಂಬಾಲಕರಲ್ಲಿ ಒಬ್ಬರಾಗಿ ನೀವು ಏನು ಕೇಳಿಕೊಂಡರೂ, ಅದನ್ನು ನಿಮಗೆ ಮಾಡುವೆನು” ಅಥವಾ “ನನಗೆ ನೀವು ಏನು ಕೇಳಿಕೊಂಡರು, ಅದನ್ನು ನಿಮಗೆ ಮಾಡುವೆನು ಯಾಕಂದರೆ ನೀವು ನನಗೆ ಸಂಬಂಧಪಟ್ಟಿದ್ದೀರಿ” (ನೋಡಿರಿ: ಲಕ್ಷಣಾಲಂಕಾರ)

John 14:16

Παράκλητον

ಇದು ಪವಿತ್ರಾತ್ಮನನ್ನು ಸೂಚಿಸುತ್ತದೆ.

John 14:17

Πνεῦμα τῆς ἀληθείας

ಇದು ದೇವರ ಕುರಿತಾಗಿ ನಿಜವಾದ ಸಂಗತಿಗಳನ್ನು ಜನರಿಗೆ ಬೋಧಿಸುವ ಪವಿತ್ರಾತ್ಮನನ್ನು ಸೂಚಿಸುತ್ತದೆ.

ὃ ὁ κόσμος οὐ δύναται λαβεῖν

ಇಲ್ಲಿ “ಲೋಕವು” ಎನ್ನುವ ಶಬ್ದವು ದೇವರನ್ನು ತಿರಸ್ಕರಿಸುವ ಜನರನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ಈ ಲೋಕದಲ್ಲಿ ಅವಿಶ್ವಾಸಿಗಳಾದ ಜನರು ಆತನಿಗೆ ಶುಭವನ್ನು ಬಯಸುವುದಿಲ್ಲ” ಅಥವಾ “ದೇವರನ್ನು ತಿರಸ್ಕರಿಸುವವರು ಆತನನ್ನು ಸ್ವೀಕಾರ ಮಾಡುವುದಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 14:18

ἀφήσω ὑμᾶς ὀρφανούς

ಇಲ್ಲಿ ಶಿಷ್ಯರನ್ನು ನೋಡಿಕೊಳ್ಳುವವರನ್ನು ಯಾರು ಇಲ್ಲದ ಹಾಗೆ ಯೇಸು ಅವರನ್ನು ಬಿಡುವುದಿಲ್ಲವೆಂದು ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನಿಮಗೆ ಯಾರೂ ಇಲ್ಲದವರಂತೆ ನಾನು ನಿಮ್ಮನ್ನು ಕೈ ಬಿಡುವುದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 14:19

ὁ κόσμος

ಇಲ್ಲಿ “ಲೋಕ” ಎನ್ನುವ ಶಬ್ದವು ದೇವರಿಗೆ ಸಂಬಂಧವಿಲ್ಲದ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ಅವಿಶ್ವಾಸಿಗಳು” (ನೋಡಿರಿ: ಲಕ್ಷಣಾಲಂಕಾರ)

John 14:20

γνώσεσθε ὑμεῖς ὅτι ἐγὼ ἐν τῷ Πατρί μου

ತಂದೆಯಾದ ದೇವರು ಮತ್ತು ಯೇಸು ಇಬ್ಬರು ಒಬ್ಬ ವ್ಯಕ್ತಿಯಾಗಿ ಜೀವಿಸುವರು. ಪರ್ಯಾಯ ಅನುವಾದ: “ನನ್ನ ತಂದೆ ಮತ್ತು ನಾನು ಒಬ್ಬ ವ್ಯಕ್ತಿಯಾಗಿದ್ದೇವೆಯೆಂದು ನೀವು ತಿಳಿದುಕೊಳ್ಳುವಿರಿ”

Πατρί μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

καὶ ὑμεῖς ἐν ἐμοὶ, κἀγὼ ἐν ὑμῖν

ನೀನು ಮತ್ತು ನಾನು ಒಬ್ಬ ವ್ಯಕ್ತಿಯಾಗಿದ್ದೇವೆ

John 14:21

ἀγαπῶν

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

ὁ…ἀγαπῶν με, ἀγαπηθήσεται ὑπὸ τοῦ Πατρός μου

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನನ್ನನ್ನು ಪ್ರೀತಿಸುವವರನ್ನು ನನ್ನ ತಂದೆ ಪ್ರೀತಿಸುವನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Πατρός μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:22

Ἰούδας, οὐχ ὁ Ἰσκαριώτης

ಇದು ಇನ್ನೊಬ್ಬ ಶಿಷ್ಯನಾದ ಯೂದನನ್ನು ಸೂಚಿಸುತ್ತದೆ ಹೊರತು ಯೇಸುವನ್ನು ಹಿಡಿದುಕೊಟ್ಟ ಕೆರೀಯೋತ ಗ್ರಾಮದಿಂದ ಬಂದಿರುವ ಶಿಷ್ಯನಾಗಿರುವ ಯೂದನಲ್ಲ. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

τί γέγονεν, ὅτι ἡμῖν μέλλεις ἐμφανίζειν σεαυτὸν

ಇಲ್ಲಿ “ಕಾಣಿಸಿಕೊಳ್ಳುವುದು” ಎನ್ನುವ ಮಾತು ಯೇಸು ಅದ್ಭುತಕರನು ಎಂಬುದಾಗಿ ತೋರಿಸುವುದು. ಪರ್ಯಾಯ ಅನುವಾದ: “ಯಾಕೆ ನೀನು ನಮಗೆ ಮಾತ್ರ ಕಾಣಿಸಿಕೊಂಡಿದ್ದೀಯಿ” ಅಥವಾ “ನೀನು ಎಷ್ಟು ಅದ್ಭುತಕರನೆಂದು ನಾವು ಮಾತ್ರ ನೋಡುವುದಕ್ಕೆ ಅವಕಾಶ ಕೊಟ್ಟಿದ್ದೀ?”

οὐχὶ τῷ κόσμῳ

ಇಲ್ಲಿ “ಲೋಕ” ಎನ್ನುವ ಶಬ್ದವು ದೇವರಿಗೆ ಸಂಬಂಧವಿಲ್ಲದ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ದೇವರಿಗೆ ಸಂಬಂಧವಿಲ್ಲದವರಿಗೆ” (ನೋಡಿರಿ: ಲಕ್ಷಣಾಲಂಕಾರ)

John 14:23

ಯೇಸು ಯೂದನ ಜೊತೆಯಲ್ಲಿ ಮಾತನಾಡುತ್ತಿದ್ದಾನೆ (ಇಸ್ಕರಿಯೋತ ಯೂದನ ಜೊತೆಯಲ್ಲಿ).

ἐάν τις ἀγαπᾷ με, τὸν λόγον μου τηρήσει

ನನ್ನನ್ನು ಪ್ರೀತಿಸುವವನು ನಾನು ಮಾಡಬೇಕೆಂದು ಹೇಳಿದ ಪ್ರತಿಯೊಂದು ಕಾರ್ಯವನ್ನು ಮಾಡುವನು

ἀγαπᾷ

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

ὁ Πατήρ μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

πρὸς αὐτὸν ἐλευσόμεθα, καὶ μονὴν παρ’ αὐτῷ ποιησόμεθα

ಯೇಸು ಆಜ್ಞಾಪಿಸಿದವುಗಳಿಗೆ ವಿಧೇಯರಾಗುವವರೊಂದಿಗೆ ತಂದೆ ಮತ್ತು ಮಗ ಜೀವವನ್ನು ಹಂಚಿಕೊಳ್ಳುವರು. ಪರ್ಯಾಯ ಅನುವಾದ: “ನಾವು ಅವನೊಂದಿಗೆ ಜೀವಿಸಲು ಬಂದಿದ್ದೇನೆ, ಮತ್ತು ಅವನೊಂದಿಗೆ ವ್ಯಕ್ತಿಗತವಾದ ಸಂಬಂಧವನ್ನು ಹೊಂದಿರುತ್ತೇವೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 14:24

ὁ λόγος ὃν ἀκούετε, οὐκ ἔστιν ἐμὸς, ἀλλὰ τοῦ πέμψαντός με Πατρός

ನಾನು ನಿಮ್ಮೊಂದಿಗೆ ಹಂಚಿಕೊಂಡಿರುವ ವಿಷಯಗಳು ನನ್ನ ಸ್ವಂತವಾಗಿ ನಿರ್ಣಯ ಮಾಡಿಕೊಂಡು ಹೇಳಿದ ವಿಷಯಗಳಲ್ಲ.

ὁ λόγος

ಸಂದೇಶ

ὃν ἀκούετε

ಇಲ್ಲಿ “ನೀವು” ಎಂದು ಯೇಸು ಉಪಯೋಗಿಸಿದಾಗ, ಆತನು ತನ್ನ ಶಿಷ್ಯರೆಲ್ಲರೊಂದಿಗೆ ಮಾತನಾಡುತ್ತಿದ್ದಾನೆ ಎಂದರ್ಥ.

John 14:26

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:27

κόσμος

“ಲೋಕ” ಎನ್ನುವ ಶಬ್ದವು ದೇವರನ್ನು ಪ್ರೀತಿಸದ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಶಬ್ದವಾಗಿ ಹೇಳಲ್ಪಟ್ಟಿದೆ. (ನೋಡಿರಿ: ಲಕ್ಷಣಾಲಂಕಾರ)

μὴ ταρασσέσθω ὑμῶν ἡ καρδία, μηδὲ δειλιάτω

ಇಲ್ಲಿ “ಹೃದಯ” ಎನ್ನುವ ಶಬ್ದವು ಒಬ್ಬ ವ್ಯಕ್ತಿಯ ಅಂತರಂಗವನ್ನು ತಿಳಿಸುವ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ಆದ್ದರಿಂದ ಕಳವಳಪಡದಿರು, ಮತ್ತು ಹೆದರಬೇಡ” (ನೋಡಿರಿ: ಲಕ್ಷಣಾಲಂಕಾರ)

John 14:28

ἠγαπᾶτέ

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

πορεύομαι πρὸς τὸν Πατέρα

ಇಲ್ಲಿ ಯೇಸು ತನ್ನ ತಂದೆಯ ಬಳಿಗೆ ತಿರುಗಿ ಹೋಗುವುನೆಂದು ಯೇಸು ತಿಳಿಯಪಡಿಸುತ್ತಿದ್ದಾರೆ. ಪರ್ಯಾಯ ಅನುವಾದ: “ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ Πατὴρ μείζων μού ἐστιν

ಇಲ್ಲಿ ಮಗನು ಭೂಮಿಯ ಮೇಲೆ ಇರುವಾಗಲೇ ಮಗನಿಗಿಂತ ತಂದೆಯು ಹೆಚ್ಚಾದ ಅಧಿಕಾರವನ್ನು ಹೊಂದಿರುತ್ತಾನೆಂದು ಯೇಸು ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನನಗೆ ಇಲ್ಲಿ ಇರುವ ಅಧಿಕಾರಕ್ಕಿಂತ ಹೆಚ್ಚಾದ ಅಧಿಕಾರವನ್ನು ತಂದೆಯು ಹೊಂದಿಕೊಂಡಿರುತ್ತಾರೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 14:30

τοῦ κόσμου ἄρχων

ಇಲ್ಲಿ “ಅಧಿಪತಿ” ಎನ್ನುವ ಶಬ್ದವನ್ನು ಸೈತಾನನ್ನು ಸೂಚಿಸುತ್ತದೆ. ಯೋಹಾನ.12:31 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರೆಂದು ಒಮ್ಮೆ ನೋಡಿರಿ. ಪರ್ಯಾಯ ಅನುವಾದ: “ಈ ಲೋಕವನ್ನು ಪಾಲಿಸುವ ಸಾತಾನನು“

ἔρχεται…ἄρχων

ಸೈತಾನನು ಯೇಸುವಿನ ಮೇಲೆ ಧಾಳಿ ಮಾಡುವುದಕ್ಕೆ ಬರುತ್ತಿದ್ದಾನೆಂದು ಅರ್ಥವಾಗುವಂತೆ ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನನ್ನ ಮೇಲೆ ಧಾಳಿ ಮಾಡುವುದಕ್ಕೆ ಸಾತಾನನು ಬರುತ್ತಿದ್ದಾನೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 14:31

ἵνα γνῷ ὁ κόσμος

ಇಲ್ಲಿ “ಲೋಕ” ಎನ್ನುವ ಶಬ್ದವು ದೇವರಿಗೆ ಸಂಬಂಧವಿಲ್ಲದ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ: “ದೇವರಿಗೆ ಸಂಬಂಧವಿಲ್ಲದ ವ್ಯಕ್ತಿ ತಿಳಿದುಕೊಳ್ಳಬಹುದೆನ್ನುವ ಕ್ರಮದಲ್ಲಿ” (ನೋಡಿರಿ: ಲಕ್ಷಣಾಲಂಕಾರ)

τὸν Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 15

ಯೋಹಾನ 15 ಸಾಮಾನ್ಯ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

ದ್ರಾಕ್ಷೆಬಳ್ಳಿ

ಯೇಸು ತನ್ನನ್ನು ತೋರಿಸಿಕೊಳ್ಳುವುದಕ್ಕೆ ದ್ರಾಕ್ಷೆಬಳ್ಳಿ ಎನ್ನುವ ಶಬ್ದವನ್ನು ರೂಪಕಲಂಕಾರವಾಗಿ ಉಪಯೋಗಿಸಿದ್ದಾರೆ. ಇದು ಯಾಕಂದರೆ ದ್ರಾಕ್ಷೆಯ ಬಳ್ಳಿಯು ಭೂಮಿಯಿಂದ ನೀರನ್ನು ಮತ್ತು ಖನಿಜಗಳನ್ನು ತೆಗೆದುಕೊಂಡು ಎಲೆಗಳಿಗೆ ಮತ್ತು ದ್ರಾಕ್ಷೆಗಳಿಗೆ ಕೊಡುತ್ತದೆ. ದ್ರಾಕ್ಷೆಯ ಬಳ್ಳಿ ಇರದಿದ್ದರೆ ದ್ರಾಕ್ಷೆಗಳು ಮತ್ತು ಎಲೆಗಳು ಸಾಯುತ್ತವೆ. ಯೇಸುವನ್ನು ಪ್ರೀತಿಸಿ ಮತ್ತು ಆತನಿಗೆ ವಿಧೇಯತೆ ತೋರಿಸಿದ ಪ್ರತಿಯೊಬ್ಬರು ಉಪಯೋಗವಿಲ್ಲದೆ ಇರಬಾರದೆಂದು, ದೇವರನ್ನು ಮೆಚ್ಚಿಸುವ ಕಾರ್ಯಗಳು ಅವರು ಮಾಡಲು ಸಾಧ್ಯವಾಗುತ್ತಿಲ್ಲವೆಂದೆನ್ನುವ ವಿಷಯಗಳನ್ನು ತನ್ನ ಶಿಷ್ಯರು ತಿಳಿದುಕೊಳ್ಳಬೇಕೆಂದು ಆತನು ಬಯಸುತ್ತಿದ್ದಾನೆ.

John 15:1

ಮುಂಚಿತವಾಗಿರುವ ಅಧ್ಯಾಯದಲ್ಲಿರುವ ಕಥೆಯ ಭಾಗವು ಮುಂದುವರಿಸಲ್ಪಡುತ್ತಿದೆ. ಯೇಸು ತನ್ನ ಶಿಷ್ಯರೊಂದಿಗೆ ಮೇಜನ್ನು ಹಂಚಿಕೊಂಡು, ಅವರೊಂದಿಗೆ ಮಾತನಾಡುವದನ್ನು ಮುಂದೆವರಿಸುತ್ತಿದ್ದಾರೆ.

ἐγώ εἰμι ἡ ἄμπελος ἡ ἀληθινή

ಇಲ್ಲಿ “ನಿಜವಾದ ದ್ರಾಕ್ಷೆಬಳ್ಳಿ” ಎನ್ನುವುದು ರೂಪಕಲಂಕಾರದ ಮಾತು. ಯೇಸು ತನ್ನನ್ನು ತಾನು ದ್ರಾಕ್ಷೆಬಳ್ಳಿಗೆ ಅಥವಾ ದ್ರಾಕ್ಷೆಯ ಕಾಂಡಕ್ಕೆ ಹೋಲಿಸಿಕೊಳ್ಳುತ್ತಿದ್ದಾರೆ.ದೇವರನ್ನು ಮೆಚ್ಚಿಸುವ ವಿಧಾನದಲ್ಲಿ ಜನರು ಜೀವಿಸುವಂತೆ ಮಾಡುವುದಕ್ಕೆ ಆತನೇ ಜೀವನದ ಆಧಾರವಾಗಿದ್ದಾನೆ. ಪರ್ಯಾಯ ಅನುವಾದ: “ಒಳ್ಳೇಯ ಫಲವನ್ನು ಕೊಡುವ ದ್ರಾಕ್ಷೆಯ ಬಳ್ಳಿಯಂತೆ ನಾನು ಇದ್ದೇನೆ” (ನೋಡಿರಿ: ರೂಪಕ ಅಲಂಕಾರ)

ὁ Πατήρ μου ὁ γεωργός ἐστιν

“ತೋಟಗಾರ” ಎನ್ನುವದು ರೂಪಕಲಂಕಾರ. “ತೋಟಗಾರ” ಎನ್ನುವ ವ್ಯಕ್ತಿ ಸಾಧ್ಯವಾದಷ್ಟು ಮಟ್ಟಿಗೆ ದ್ರಾಕ್ಷೆಯ ಗಿಡಗಳು ಫಲಭರಿತವಾಗಿ ಬೆಳೆ ಕೊಡಲು ನೋಡಿಕೊಳ್ಳುತ್ತಾನೆ. ಪರ್ಯಾಯ ಅನುವಾದ: “ನನ್ನ ತಂದೆ ತೋಟಗಾರನು” (ನೋಡಿರಿ: ರೂಪಕ ಅಲಂಕಾರ)

ὁ Πατήρ μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 15:2

πᾶν κλῆμα ἐν ἐμοὶ μὴ φέρον καρπὸν, αἴρει

ಇಲ್ಲಿ “ಪ್ರತಿಯೊಂದು ಕೊಂಬೆ” ಎನ್ನುವ ಮಾತು ಜನರನ್ನು ಸೂಚಿಸುತ್ತದೆ, ಮತ್ತು “ಫಲ ಕೊಡುವವನು” ಎನ್ನುವ ಮಾತು ದೇವರಿಗೆ ಮೆಚ್ಚಿಗೆಯಾದ ವಿಧಾನದಲ್ಲಿ ಜೀವಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. (ನೋಡಿರಿ: ರೂಪಕ ಅಲಂಕಾರ)

αἴρει

ಕತ್ತರಿಸಿ, ಪಕ್ಕಕ್ಕೆ ಹಾಕುತ್ತಾನೆ

πᾶν…καθαίρει

ಪ್ರತಿಯೊಂಬು ಕೊಂಬೆಯನ್ನು ಶುದ್ಧಿ ಮಾಡುತ್ತಾನೆ

John 15:3

ἤδη ὑμεῖς καθαροί ἐστε, διὰ τὸν λόγον ὃν λελάληκα ὑμῖν

ಅಳವಡಿಸಿಕೊಳ್ಳಬಹುದಾದ ರೂಪಕಲಂಕಾರದ ಮಾತು ಇಲ್ಲಿ ಏನಂದರೆ ಈಗಾಗಲೇ “ತೆಗೆದು ಹಾಕಲ್ಪಟ್ಟ” “ಕೊಂಬೆಗಳನ್ನು ಶುದ್ಧಿ” ಮಾಡುವನು ಎನ್ನುವ ಮಾತು. ಪರ್ಯಾಯ ಅನುವಾದ: “ನೀವು ಈಗಾಗಲೇ ತೆಗೆದು ಹಾಕಲ್ಪಟ್ಟು, ಶುದ್ಧಿ ಮಾಡಲ್ಪಟ್ಟ ಕೊಂಬೆಗಳಾಗಿದ್ದೀರಿ, ಯಾಕಂದರೆ ನೀವು ನಾನು ತಿಳಿಸಿದ ಪ್ರತಿಯೊಂದಕ್ಕೂ ವಿಧೇಯತೆಯನ್ನು ತೋರಿಸಿದ್ದೀರಿ” (ನೋಡಿರಿ: ರೂಪಕ ಅಲಂಕಾರ)

ὑμεῖς…ὑμῖν

ಈ ವಾಕ್ಯಭಾಗದಲ್ಲೆಲ್ಲಾ “ನೀವು” ಎನ್ನುವ ಶಬ್ದವು ಬಹುವಚನವಾಗಿರುತ್ತದೆ ಮತ್ತು ಇದು ಯೇಸುವಿನ ಶಿಷ್ಯರನ್ನು ಸೂಚಿಸುತ್ತದೆ. (ನೋಡಿರಿ: "You" - " ನೀನು " – ವಿವಿಧ ರೂಪಗಳು.)

John 15:4

μείνατε ἐν ἐμοί, κἀγὼ ἐν ὑμῖν

ನನ್ನಲ್ಲಿ ನೀವು ನೆಲೆಗೊಂಡಿದ್ದರೆ, ನಾನು ನಿಮ್ಮಲ್ಲಿ ನೆಲೆಗೊಂಡಿರುತ್ತೇನೆ ಅಥವಾ “ನನ್ನೊಂದಿಗೆ ನೀವು ಅಂಟಿಕೊಂಡಿದ್ದರೆ, ನಾನು ನಿಮ್ಮೊಂದಿಗೆ ಅಂಟಿಕೊಂಡಿರುವೆನು”

ἐὰν μὴ ἐν ἐμοὶ μένητε

ಕ್ರಿಸ್ತನಲ್ಲಿ ನೆಲೆಗೊಂಡಿರುವದರ ಮೂಲಕ, ಆತನಿಗೆ ಸಂಬಂಧಪಟ್ಟಿರುವ ಪ್ರತಿಯೊಬ್ಬರೂ ಪ್ರತಿಯೊಂದು ಅಗತ್ಯತೆಗೂ ಆತನ ಮೇಲೆ ಆತುಕೊಂಡಿರುತ್ತಾರೆ. ಪರ್ಯಾಯ ಅನುವಾದ: “ನನ್ನೊಂದಿಗೆ ನೀವು ಆಂಟಿಕೊಂಡಿದ್ದರೆ, ಪ್ರತಿಯೊಂದಕ್ಕೂ ನೀವು ನನ್ನ ಮೇಲೆ ಆತುಕೊಳ್ಳಬಹುದು”

John 15:5

ἐγώ εἰμι ἡ ἄμπελος; ὑμεῖς τὰ κλήματα

“ದ್ರಾಕ್ಷೆಬಳ್ಳಿ” ಎನ್ನುವುದು ಯೇಸುವನ್ನು ಸೂಚಿಸುವ ರೂಪಕಲಂಕಾರವಾಗಿದೆ. “ಕೊಂಬೆಗಳು” ಎನ್ನುವ ಮಾತು ಯೇಸುವಿನಲ್ಲಿ ನಂಬಿಕೆಯಿಟ್ಟವರನ್ನು ಮತ್ತು ಯೇಸುವಿಗೆ ಸಂಬಂಧಪಟ್ಟವರನ್ನು ಸೂಚಿಸುವ ರೂಪಕಲಂಕಾರದ ಮಾತು. ಪರ್ಯಾಯ ಅನುವಾದ: “ನಾನು ದ್ರಾಕ್ಷೆಬಳ್ಳಿಯಂತಿದ್ದೇನೆ ಮತ್ತು ನೀವು ಆ ದ್ರಾಕ್ಷೆಬಳ್ಳಿಗೆ ಆಂಟಿಕೊಂಡಿರುವ ಕೊಂಬೆಗಳಂತೆ ನೀವಿದ್ದೀರಿ” (ನೋಡಿರಿ: ರೂಪಕ ಅಲಂಕಾರ)

ὁ μένων ἐν ἐμοὶ κἀγὼ ἐν αὐτῷ

ಇಲ್ಲಿ ಯೇಸು ದೇವರಿಗೆ ಅಂಟಿಕೊಂಡಿರುವಂತೆಯೇ ಯೇಸುವಿಗೆ ತನ್ನ ಹಿಂಬಾಲಕರು ಅಂಟಿಕೊಂಡಿದ್ದಾರೆಂದು ಯೇಸು ಇಲ್ಲಿ ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನಾನು ನನ್ನ ತಂದೆಯಲ್ಲಿ ನೆಲೆಗೊಂಡಿರುವಂತೆಯೇ, ನನ್ನೊಂದಿಗೆ ಅಂಟಿಕೊಂಡಿರುವವರು ಹಾಗೆಯೇ ಇದ್ದಾರೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

οὗτος φέρει καρπὸν πολύν

ಇಲ್ಲಿ ಅಳವಡಿಸಿಕೊಳ್ಳಬಹುದಾದ ರೂಪಕಲಂಕಾರವು ಏನೆಂದರೆ ಫಲವನ್ನು ಕೊಡುವ ಕೊಂಬೆ ದೇವರನ್ನು ಮೆಚ್ಚಿಸುವ ಜೀವನ ಮಾಡುವ ವಿಶ್ವಾಸಿಯನ್ನು ಸೂಚಿಸುತ್ತದೆ. ದ್ರಾಕ್ಷೆಯ ಬಳ್ಳಿಗೆ ಅಂಟಿಕೊಂಡಿರುವ ಕೊಂಬೆಯು ಹೆಚ್ಚಿನ ಫಲವನ್ನು ಕೊಡುವುದೋ, ಹಾಗೆಯೇ ಯೇಸುವಿಗೆ ಅಂಟಿಕೊಂಡಿರುವವರು ದೇವರಿಗೆ ಇಷ್ಟವಾದ ಅನೇಕ ಕಾರ್ಯಗಳನ್ನು ಮಾಡುತ್ತಾರೆ. ಪರ್ಯಾಯ ಅನುವಾದ: “ನೀವು ಹೆಚ್ಚಾದ ಫಲವನ್ನು ಕೊಡುತ್ತೀರಿ” (ನೋಡಿರಿ: ರೂಪಕ ಅಲಂಕಾರ)

John 15:6

ἐβλήθη ἔξω ὡς τὸ κλῆμα καὶ ἐξηράνθη

ಇಲ್ಲಿ ಅನ್ವಯ ಮಾಡಿಕೊಳ್ಳಬೇಕಾದ ರೂಪಕಲಂಕಾರವು ಏನಂದರೆ ಫಲವನ್ನು ಕೊಡದ ಕೊಂಬೆಯು ಯೇಸುವಿಗೆ ಅಂಟಿಕೊಂಡಿರದವರನ್ನು ಸೂಚಿಸುವ ಮಾತಾಗಿರುತ್ತದೆ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಕೊಂಬೆಯನ್ನು ಕತ್ತರಿಸಿ, ಹೊರ ಹಾಕಿದಾಗ ಒಣಗಿಹೋದಂತೆಯೇ, ತೋಟಗಾರನು ಅವನನ್ನು ಹೊರ ಬೀಸಾಡುವನು” (ನೋಡಿರಿ: ರೂಪಕ ಅಲಂಕಾರ ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

καίεται

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಬೆಂಕಿ ಅವುಗಳನ್ನು ಸುಟ್ಟುಹಾಕುವುದು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 15:7

ὃ ἐὰν θέλητε, αἰτήσασθε

ವಿಶ್ವಾಸಿಗಳು ದೇವರಲ್ಲಿ ಬೇಡಿಕೊಂಡಿರುವ ತಮ್ಮ ಪ್ರಾರ್ಥನೆಗಳಿಗೆ ಉತ್ತರಗಳಿಗಾಗಿ ತಪ್ಪದೇ ಆತನಲ್ಲಿ ಕೇಳಿಕೊಳ್ಳಬೇಕೆನ್ನುವ ಅರ್ಥವನ್ನು ಯೇಸು ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನಿಮಗೆ ಬೇಕಾದವುಗಳನ್ನು ದೇವರಲ್ಲಿ ಬೇಡಿಕೊಳ್ಳಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

γενήσεται ὑμῖν

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆತನು ನಿಮಗಾಗಿ ಅದನ್ನು ಮಾಡುವನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 15:8

ἐν τούτῳ ἐδοξάσθη ὁ Πατήρ μου

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಈ ರೀತಿ ಉಂಟಾಗುವುದರ ಮೂಲಕ ಜನರು ನನ್ನ ತಂದೆಯನ್ನು ಘನಪಡಿಸುವರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ὁ Πατήρ μου

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἵνα καρπὸν πολὺν φέρητε

ಇಲ್ಲಿ “ಫಲ” ಎನ್ನುವ ಶಬ್ದವು ದೇವರಿಗೆ ಇಷ್ಟವಾದ ಜೀವನವನ್ನು ಜೀವಿಸುವುದೆನ್ನುವ ಅರ್ಥವನ್ನು ಕೊಡುವ ರೂಪಕಲಂಕಾರ ಪದವಾಗಿರುತ್ತದೆ. ಪರ್ಯಾಯ ಅನುವಾದ: “ಆತನನ್ನು ಮೆಚ್ಚಿಸುವ ವಿಧಾನದಲ್ಲಿ ನೀವು ಜೀವನ ಮಾಡಿದಾಗ” (ನೋಡಿರಿ: ರೂಪಕ ಅಲಂಕಾರ)

γένησθε ἐμοὶ μαθηταί

ನೀವು ನನ್ನ ಶಿಷ್ಯರೆಂಬುದಾಗಿ ತೋರಿಸಿಕೊಳ್ಳಿರಿ ಅಥವಾ “ನೀವು ನನ್ನ ಶಿಷ್ಯರೆಂದು ಪ್ರತಿಪಾದಿಸಿಕೊಳ್ಳಿರಿ”

John 15:9

καθὼς ἠγάπησέν με ὁ Πατήρ, κἀγὼ ὑμᾶς ἠγάπησα

ಯೇಸುವಿನಲ್ಲಿ ನಂಬಿಕೆ ಇಟ್ಟವರೊಂದಿಗೆ ಸೇರಿಸಿಕೊಂಡು ಆತನಿಗಾಗಿ ತಂದೆಯಾದ ದೇವರು ಹೊಂದಿಕೊಂಡಿರುವ ಪ್ರೀತಿಯನ್ನು ಯೇಸು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ “ತಂದೆ” ಎನ್ನುವ ಶಬ್ದವು ದೇವರಿಗಾಗಿ ಹೇಳಲ್ಪಟ್ಟಿರುವ ಪ್ರಾಮುಖ್ಯವಾದ ಹೆಸರು. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

μείνατε ἐν τῇ ἀγάπῃ τῇ ἐμῇ

ನನ್ನ ಪ್ರೀತಿಯನ್ನು ಅಂಗೀಕಾರ ಮಾಡುವುದಕ್ಕೆ ಮುಂದೆವರಿಯುವುದು

John 15:10

ἐὰν τὰς ἐντολάς μου τηρήσητε, μενεῖτε ἐν τῇ ἀγάπῃ μου, καθὼς ἐγὼ τοῦ Πατρός τὰς ἐντολὰς τετήρηκα, καὶ μένω αὐτοῦ ἐν τῇ ἀγάπῃ

ಯೇಸುವಿನ ಹಿಂಬಾಲಕರು ಆತನಿಗೆ ವಿಧೇಯತೆ ತೋರಿಸಿದಾಗ, ಅವರು ಆತನಿಗಾಗಿ ತಮ್ಮ ಪ್ರೀತಿಯನ್ನು ತೋರಿಸುವರು. ಪರ್ಯಾಯ ಅನುವಾದ: “ನಾನು ನನ್ನ ತಂದೆಗೆ ಒಳಪಟ್ಟು, ಆತನ ಪ್ರೀತಿಯಲ್ಲಿ ಜೀವಿಸುತ್ತಿರುವಂತೆಯೇ, ಮಾಡುವುದಕ್ಕೆ ನಾನು ನಿಮಗೆ ಹೇಳಿದ ಪ್ರತಿಯೊಂದನ್ನು ನೀವು ಮಾಡಿದಾಗ, ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿದ್ದೀರೆಂದರ್ಥ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

τοῦ Πατρός

ಇಲ್ಲಿ “ತಂದೆ” ಎನ್ನುವ ಶಬ್ದವು ದೇವರಿಗೆ ಕೊಟ್ಟಿರುವ ತುಂಬಾ ಪ್ರಾಮುಖ್ಯವಾದ ಹೆಸರಾಗಿರುತ್ತದೆ.

John 15:11

ταῦτα λελάληκα ὑμῖν, ἵνα ἡ χαρὰ ἡ ἐμὴ ἐν ὑμῖν ᾖ

ನಾನು ಈ ಎಲ್ಲಾ ವಿಷಯಗಳನ್ನು ಹೇಳಿದ್ದೇನೆ, ಆದ್ದರಿಂದ ನಾನು ಹೊಂದಿರುವ ಸಂತೋಷವನ್ನೇ ನೀವು ಹೊಂದಿರುವಿರಿ

καὶ ἡ χαρὰ ὑμῶν πληρωθῇ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದ್ದರಿಂದ ನೀವು ಸಂಪೂರ್ಣ ಸಂತೋಷದಿಂದ ಇರುವಿರಿ” ಅಥವಾ “ಆದ್ದರಿಂದ ನಿಮ್ಮ ಸಂತೋಷವನ್ನು ನೀವು ಎಂದಿಗೂ ಕಳಕೊಳ್ಳುವುದಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 15:13

τὴν ψυχὴν

ಇದು ಭೌತಿಕ ಜೀವನವನ್ನು ಸೂಚಿಸುತ್ತದೆ.

John 15:15

πάντα ἃ ἤκουσα παρὰ τοῦ Πατρός μου, ἐγνώρισα ὑμῖν

ನನ್ನ ತಂದೆ ಹೇಳಿದ ಪ್ರತಿಯೊಂದು ಮಾತನ್ನು ನಾನು ನಿಮಗೆ ಹೇಳಿದ್ದೇನೆ

τοῦ Πατρός μου

ಇಲ್ಲಿ “ತಂದೆ” ಎನ್ನುವ ಶಬ್ದವು ದೇವರಿಗೆ ಕೊಟ್ಟಿರುವ ತುಂಬಾ ಪ್ರಾಮುಖ್ಯವಾದ ಹೆಸರಾಗಿರುತ್ತದೆ.

John 15:16

οὐχ ὑμεῖς με ἐξελέξασθε

ಯೇಸುವಿನ ಹಿಂಬಾಲಕರು ಯೇಸುವಿಗೆ ಶಿಷ್ಯರಾಗುವುದಕ್ಕೆ ತಮ್ಮ ಸ್ವಂತ ಆಲೋಚನೆಯಂದ ಶಿಷ್ಯಾರಾಗಿಲ್ಲ. ಪರ್ಯಾಯ ಅನುವಾದ: “ನೀವು ನನ್ನ ಶಿಷ್ಯಾರಗುವುದಕ್ಕೆ ನೀವು ನಿರ್ಣಯ ತೆಗೆದುಕೊಂಡಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὑπάγητε καὶ καρπὸν φέρητε

ಇಲ್ಲಿ “ಫಲ” ಎನ್ನುವ ಶಬ್ದವು ದೇವರನ್ನು ಮೆಚ್ಚಿಸುವ ಜೀವನವನ್ನು ಸೂಚಿಸುವ ರೂಪಕಲಂಕಾರದ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ದೇವರನ್ನು ಮೆಚ್ಚಿಸುವ ಜೀವನಗಳನ್ನು ಜೀವಿಸಿರಿ” (ನೋಡಿರಿ: ರೂಪಕ ಅಲಂಕಾರ)

καὶ ὁ καρπὸς ὑμῶν μένῃ

ನೀವು ಮಾಡುತ್ತಿರುವ ಪ್ರತಿಯೊಂದು ಫಲವು ನಿರಂತರವಾಗಿ ನಿಲ್ಲುತ್ತದೆ

ὅ τι ἂν αἰτήσητε τὸν Πατέρα ἐν τῷ ὀνόματί μου, δῷ ὑμῖν

ಇಲ್ಲಿ “ಹೆಸರು” ಎನ್ನುವ ಶಬ್ದವು ಯೇಸುವಿನ ಅಧಿಕಾರವನ್ನು ಸೂಚಿಸುವ ಶಬ್ದವಾಗಿರುತ್ತದೆ. ಪರ್ಯಾಯ ಅನುವಾದ: “ನೀವು ನನಗೆ ಸಂಬಂಧಪಟ್ಟಿರುವದರಿಂದ, ತಂದೆಯನ್ನು ಏನಾದರೂ ಬೇಡಿಕೊಳ್ಳಿರಿ, ಅದನ್ನು ಆತನು ನಿಮಗೆ ಅನುಗ್ರಹಿಸುವನು” (ನೋಡಿರಿ: ಲಕ್ಷಣಾಲಂಕಾರ)

τὸν Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 15:18

ὁ κόσμος

ದೇವರಿಗೆ ಸಂಬಂಧಪಡದ ಜನರು ಮತ್ತು ಆತನನ್ನು ತಿರಸ್ಕಾರ ಮಾಡಿದ ಜನರು (ನೋಡಿರಿ: ಲಕ್ಷಣಾಲಂಕಾರ)

John 15:19

τοῦ κόσμου

ದೇವರಿಗೆ ಸಂಬಂಧವಿಲ್ಲದ ಜನರು ಮತ್ತು ಆತನನ್ನು ಧಿಕ್ಕರಿಸಿದ ಜನರು (ನೋಡಿರಿ: ಲಕ್ಷಣಾಲಂಕಾರ)

ἐφίλει

ಇದು ಮನುಷ್ಯರನ್ನು ಸೂಚಿಸುತ್ತದೆ, ಇದು ಸಹೋದರ ಪ್ರೀತಿಯನ್ನು ಅಥವಾ ಸ್ನೇಹಿತನಿಗೋಸ್ಕರ ತೋರಿಸುವ ಅಥವಾ ಕುಟುಂಬದಲ್ಲಿರುವ ವ್ಯಕ್ತಿಗಾಗಿ ತೋರಿಸುವ ಪ್ರೀತಿಯನ್ನು ಸೂಚಿಸುತ್ತದೆ.

John 15:20

μνημονεύετε τοῦ λόγου οὗ ἐγὼ εἶπον ὑμῖν

ಇಲ್ಲಿ “ವಾಕ್ಯ” ಎನ್ನುವ ಶಬ್ದವು ಯೇಸುವಿನ ಸಂದೇಶದ ಕುರಿತಾಗಿ ಹೇಳಲ್ಪಟ್ಟಿರುವ ಪರ್ಯಾಯ ಶಬ್ದವಾಗಿರುತ್ತದೆ. ಪರ್ಯಾಯ ಅನುವಾದ: “ನಾನು ನಿಮ್ಮೊಂದಿಗೆ ಮಾತನಾಡಿದ ಸಂದೇಶವನ್ನು ನೆನಪಿನಲ್ಲಿಡಿರಿ“ (ನೋಡಿರಿ: ಲಕ್ಷಣಾಲಂಕಾರ)

John 15:21

διὰ τὸ ὄνομά μου

ಇಲ್ಲಿ “ನನ್ನ ಹೆಸರಿನಿಂದ” ಎನ್ನುವ ಮಾತು ಯೇಸುವನ್ನು ಸೂಚಿಸುವ ಪರ್ಯಾಯ ಮಾತಾಗಿರುತ್ತದೆ. ತನ್ನ ಹಿಂಬಾಲಕರು ಶ್ರಮೆಗಳನ್ನು ಹೊಂದುವಂತೆ ಜನರು ಮಾಡುತ್ತಾರೆ ಯಾಕಂದರೆ ಅವರು ಆತನಿಗೆ ಸಂಬಂಧಪಟ್ಟವರು. ಪರ್ಯಾಯ ಅನುವಾದ: “ನೀವು ನನಗೆ ಸಂಬಂಧಪಟ್ಟವರಾಗಿರುವದರಿಂದ” (ನೋಡಿರಿ: ಲಕ್ಷಣಾಲಂಕಾರ)

John 15:22

εἰ μὴ ἦλθον καὶ ἐλάλησα αὐτοῖς, ἁμαρτίαν οὐκ εἴχοσαν; νῦν δὲ πρόφασιν οὐκ ἔχουσιν περὶ τῆς ἁμαρτίας αὐτῶν

ಯೇಸುವನ್ನು ನಂಬದಿರುವ ಜನರೊಂದಿಗೆ ದೇವರ ಸಂದೇಶವನ್ನು ಹಂಚಿಕೊಂಡಿದ್ದೇನೆಂದು ಯೇಸು ಇಲ್ಲಿ ಹೇಳುತ್ತಿದ್ದಾರೆ. ಪರ್ಯಾಯ ಅನುವಾದ: “ನಾನು ಬಂದು, ಅವರಿಗೆ ದೇವರ ಸಂದೇಶವನ್ನು ಹೇಳಿರುವದರಿಂದ, ಅವರ ಪಾಪಗಳಿಗಾಗಿ ದೇವರು ತೀರ್ಪು ಮಾಡುವಾಗ ಅವರು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 15:23

ὁ ἐμὲ μισῶν, καὶ τὸν Πατέρα μου μισεῖ

ದೇವರ ಮಗನನ್ನು ದ್ವೇಷಿಸುವುದೆಂದರೆ ತಂದೆಯಾದ ದೇವರನ್ನು ದ್ವೇಷ ಮಾಡುವುದು ಎಂದರ್ಥ.

τὸν Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 15:24

εἰ τὰ ἔργα μὴ ἐποίησα ἐν αὐτοῖς ἃ οὐδεὶς ἄλλος ἐποίησεν, ἁμαρτίαν οὐκ εἴχοσαν…δὲ

ನೀವು ದ್ವಂದ್ವ ನಕಾರಾತ್ಮಕದಲ್ಲಿರುವವುಗಳನ್ನು ಸಕಾರಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯಾರೂ ಮಾಡದ ಅನೇಕ ಅದ್ಭುತಕಾರ್ಯಗಳನ್ನು ನಾನು ಅವರ ಮಧ್ಯೆದಲ್ಲಿ ಮಾಡಿದ್ದೇನೆ, ಅವರು ಪಾಪವನ್ನು ಮಾಡಿದರು ಮತ್ತು “ (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

ἁμαρτίαν οὐκ εἴχοσαν

ಅವರಲ್ಲಿ ಯಾವ ಪಾಪವು ಇರಲಿಲ್ಲ. ಯೋಹಾನ.15:22 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರೆಂದು ನೋಡಿರಿ.

καὶ ἑωράκασιν καὶ μεμισήκασιν, καὶ ἐμὲ καὶ τὸν Πατέρα μου

ದೇವರ ಮಗನನ್ನು ದ್ವೇಷಿಸುವುದೆಂದರೆ ತಂದೆಯಾದ ದೇವರನ್ನು ದ್ವೇಷ ಮಾಡುವುದು ಎಂದರ್ಥ.

John 15:25

ἵνα πληρωθῇ ὁ λόγος ὁ ἐν τῷ νόμῳ αὐτῶν γεγραμμένος

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. “ವಾಕ್ಯ” ಎನ್ನುವ ಶಬ್ದವು ಇಲ್ಲಿ ಸಂಪೂರ್ಣವಾದ ದೇವರ ಸಂದೇಶವನ್ನು ಸೂಚಿಸುವುದಕ್ಕೆ ಪರ್ಯಾಯ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ಅವರ ಧರ್ಮಶಾಸ್ತ್ರದಲ್ಲಿ ಪ್ರವಾದನೆಯನ್ನು ನೆರವೇರಿಸುವುದು” ಮತ್ತು “ಅವರ ಧರ್ಮಶಾಸ್ತ್ರದಲ್ಲಿ ಪ್ರವಾದನೆಯನ್ನು ನೆರವೇರಿಸುವುದು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು ಮತ್ತು ಲಕ್ಷಣಾಲಂಕಾರ)

τῷ νόμῳ

ಇದು ಸಾಧಾರಣವಾಗಿ ಸಂಪೂರ್ಣ ಹಳೇ ಒಡಂಬಡಿಕೆಯನ್ನು ಸೂಚಿಸುತ್ತದೆ, ಇದರಲ್ಲಿ ದೇವರು ತನ್ನ ಪ್ರಜೆಗಳಿಗಾಗಿ ಇಟ್ಟಿರುವ ಎಲ್ಲಾ ಆದೇಶಗಳು ಇರುತ್ತವೆ.

John 15:26

πέμψω…παρὰ τοῦ Πατρός, τὸ Πνεῦμα τῆς ἀληθείας…ἐκεῖνος μαρτυρήσει περὶ ἐμοῦ

ಯೇಸು ದೇವರ ಮಗನೆಂದು ಲೋಕಕ್ಕೆ ತೋರಿಸುವುದಕ್ಕೆ ತಂದೆಯಾದ ದೇವರು ಆತ್ಮ ದೇವರನ್ನು ಕಳುಹಿಸಿಕೊಟ್ಟಿದ್ದಾರೆ.

Πατρός

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τὸ Πνεῦμα τῆς ἀληθείας

ಇದು ಪವಿತ್ರಾತ್ಮನಿಗೆ ಕೊಡಲ್ಪಟ್ಟಿರುವ ಹೆಸರಾಗಿರುತ್ತದೆ. ಪರ್ಯಾಯ ಅನುವಾದ: “ದೇವರ ಕುರಿತಾಗಿ ಮತ್ತು ನನ್ನ ಕುರಿತಾಗಿ ಸತ್ಯವನ್ನು ಹೇಳುವ ಆತ್ಮ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 15:27

καὶ ὑμεῖς…μαρτυρεῖτε

ಇಲ್ಲಿ “ಸಾಕ್ಷಿ ಕೊಡುವುದು” ಎಂದರೆ ಯೇಸುವಿನ ಕುರಿತಾಗಿ ಎಲ್ಲರಿಗೆ ಹೇಳುವುದು ಎಂದರ್ಥ. ಪರ್ಯಾಯ ಅನುವಾದ: “ನನ್ನ ಕುರಿತಾಗಿ ನೀನು ತಿಳಿದುಕೊಂಡಿರುವ ಪ್ರತಿಯೊಂದು ವಿಷಯವನ್ನು ನೀನು ತಪ್ಪದೇ ಪ್ರತಿಯೊಬ್ಬರಿಗೆ ಹೇಳಬೇಕು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἀρχῆς

ಇಲ್ಲಿ “ಮೊದಲಿನಿಂದ” ಎನ್ನುವ ಮಾತಿಗೆ ಯೇಸುವಿನ ಸೇವೆಯ ಆರಂಭ ದಿನಗಳು ಎಂದೆನ್ನುವ ಪರ್ಯಾಯ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ನಾನು ಜನರಿಗೆ ಬೋಧನೆ ಮಾಡುವುದಕ್ಕೆ ಮತ್ತು ಅಧ್ಬುತ ಕಾರ್ಯಗಳನ್ನು ಮಾಡುವುದಕ್ಕೆ ಆರಂಭ ಮಾಡಿರುವ ಮೊದಲನೇ ದಿನದಿಂದ” (ನೋಡಿರಿ: ಲಕ್ಷಣಾಲಂಕಾರ)

John 16

ಯೋಹಾನ 16 ಸಾಮಾನ್ಯ ಅಂಶಗಳು

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

ಪವಿತ್ರಾತ್ಮ

ಯೇಸು ತನ್ನ ಶಿಷ್ಯರಿಗೆ ಪವಿತ್ರಾತ್ಮನನ್ನು ಕಳುಹಿಸಿಕೊಡುತೇನೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದರು. ಪವಿತ್ರಾತ್ಮ ಎಂದರೆ ದೇವರ ಜನರಿಗೆ ಸಹಾಯ ಮಾಡುವುದಕ್ಕೆ ಮತ್ತು ಅವರ ಪಕ್ಷವಾಗಿ ದೇವರೊಂದಿಗೆ ಮಾತನಾಡುವುದಕ್ಕೆ ಯಾವಾಗಲೂ ಜೊತೆಯಲ್ಲಿರುವ ಆದರಿಸುವಾತನು ([ಯೋಹಾನ.14:16] (../../ಯೋಹಾನ/14/16.ಎಂ.ಡಿ.)), ಆತನು ದೇವರ ಕುರಿತಾಗಿ ದೇವರ ಜನರಿಗೆ ಯಾವಾಗಲೂ ಸತ್ಯವನ್ನೇ ನುಡಿಯುವ ಸತ್ಯದ ಆತ್ಮವೂ ([ಯೋಹಾನ.14:17] (../../ಯೋಹಾನ/14/17.ಎಂ.ಡಿ.)) ಆಗಿದ್ದಾನೆ. ಆದ್ದರಿಂದ ಆತನ ಕುರಿತು ಅವರಿಗೆ ಚೆನ್ನಾಗಿ ಗೊತ್ತು ಮತ್ತು ಆತನನ್ನು ಅವರು ಚೆನ್ನಾಗಿ ಸೇವಿಸುವರು. (ನೋಡಿರಿ: ಪವಿತ್ರಾತ್ಮ, ದೇವರ ಆತ್ಮ, ಕರ್ತನ ಆತ್ಮ, ಆತ್ಮ)

“ಗಳಿಗೆ ಬರುತ್ತಿದೆ”

ಅರವತ್ತು ನಿಮಿಷಗಳಿಗಿಂತ ಕಡಿಮೆಯಾಗಿಯೂ ಅಥವಾ ಹೆಚ್ಚಾಗಿಯೋ ಇರುವ ಕಾಲಗಳ ಕುರಿತಾಗಿ ಪ್ರವಾದನೆಗಳು ಆರಂಭವಾಗುವದಕ್ಕೆ ಯೇಸು ಈ ಮಾತುಗಳನ್ನು ಉಪಯೋಗಿಸಿದ್ದಾರೆ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: ಜನರು ತನ್ನ ಹಿಂಬಾಲಕಾರನ್ನು ಹಿಂಸೆಗೆ ಗುರಿ ಮಾಡುವ ([ಯೋಹಾನ.16:2] (../../ಯೋಹನ/16/02.ಎಂ.ಡಿ.)) ದಿನಗಳೇ, ವಾರಗಳೇ ಮತ್ತು ವರ್ಷಗಳೇ “ಗಳಿಗೆಯಾಗಿದ್ದಿತ್ತು,” ಆದರೆ ಆ “ಗಳಿಗೆಯಲ್ಲಿಯೇ” ತನ್ನ ಹಿಂಬಾಲಕರು ಚದರು ಹೋಗಿ, ಆತನನ್ನು ಒಬ್ಬಂಟಿಗನನ್ನಾಗಿ ಬಿಟ್ಟು ಹೋಗುವರು ([ಯೋಹಾನ.16:32] (../../ಯೋಹಾನ/16/32.ಎಂ.ಡಿ.)), ಇದು ಅರವತ್ತು ನಿಮಿಷಗಳಿಗಿಂತ ಕಡಿಮೆ ಕಾಲದಲ್ಲಿ ನಡೆದಿತ್ತು. (ನೋಡಿರಿ: ಪ್ರವಾದಿ, ಪ್ರವಾದಿಗಳು, ಪ್ರವಾದನೆ, ಪ್ರವಾದಿಸು, ದರ್ಶಿ, ಪ್ರವಾದಿನಿ)

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು

ಉಪಮಾಲಂಕಾರ

ಒಬ್ಬ ಸ್ತ್ರೀಯಳು ಶಿಶುವಿಗೆ ಜನ್ಮ ಕೊಡುವುದಕ್ಕೆ ನೋವನ್ನು ಅನುಭವಿಸುವಂತೆಯೇ, ಆತನು ಮರಣ ಹೊಂದುವಾಗ ಕೂಡ ತನ್ನ ಹಿಂಬಾಲಕರು ತುಂಬಾ ದುಃಖದಲ್ಲಿರುತ್ತಾರೆ. ಆದರೆ ಶಿಶು ಜನಿಸಿದನಂತರ ಆ ಸ್ತ್ರೀ ಸಂತೋಷಪಡುವಂತೆಯೇ, ತನ್ನ ಹಿಂಬಾಲಕರು ಕೂಡ ಆತನು ತಿರುಗಿ ಜೀವಂತವಾಗಿ ಎದ್ದು ಬಂದಾಗ ಸಂತೋಷಪಡುವರು. (ನೋಡಿರಿ: ಉಪಮಾಲಂಕಾರ.)

John 16:1

ಹಿಂದಿನ ಅಧ್ಯಾಯದಿಂದ ಬರುತ್ತಿರುವ ಕಥೆಯ ಭಾಗವು ಇಲ್ಲಿಯೂ ಮುಂದೆವರಿಯುತ್ತಿದೆ. ಯೇಸು ತನ್ನ ಶಿಷ್ಯರೊಂದಿಗೆ ಮೇಜನ್ನು ಹಂಚಿಕೊಂಡು, ಅವರೊಂದಿಗೆ ಮಾತನಾಡುವುದನ್ನು ಮುಂದೆವರಿಸುತ್ತಿದ್ದಾರೆ.

μὴ σκανδαλισθῆτε

ಇಲ್ಲಿ “ಎಡವಿ ಬೀಳು” ಎನ್ನುವ ಮಾತು ಯೇಸುವಿನಲ್ಲಿ ನಂಬಿಕೆ ಇಡುವವರನ್ನು ನಂಬಿಕೆ ಇಡದಂತೆ ಮಾಡುವುದನ್ನು ತಿಳಿಸುತ್ತಿದೆ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನನ್ನಲ್ಲಿ ನೀವಿಟ್ಟಿರುವ ನಂಬಿಕೆಯನ್ನು ನಿಲ್ಲಿಸಬಾರದು, ಯಾಕಂದರೆ ನೀವು ಹಿಂಸೆಗಳನ್ನು ಎದುರುಗೊಳ್ಳುವಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 16:2

ἔρχεται ὥρα, ἵνα πᾶς ὁ ἀποκτείνας ὑμᾶς, δόξῃ λατρείαν προσφέρειν τῷ Θεῷ

ಒಬ್ಬ ವ್ಯಕ್ತಿ ನಿಮ್ಮನ್ನು ಸಾಯಿಸಿ, ನಾನು ದೇವರಿಗೆ ಒಳ್ಳೇಯ ಕಾರ್ಯವನ್ನು ಮಾಡಿದ್ದೇನೆಂದು ಆಲೋಚನೆ ಮಾಡುವ ಕಾಲ ಬರುತ್ತದೆ.

John 16:3

ταῦτα ποιήσουσιν, ὅτι οὐκ ἔγνωσαν τὸν Πατέρα οὐδὲ ἐμέ

ಅವರು ವಿಶ್ವಾಸಿಗಳಲ್ಲಿ ಕೆಲವರನ್ನು ಸಾಯಿಸುತ್ತಾರೆ ಯಾಕಂದರೆ ಅವರಿಗೆ ತಂದೆಯಾದ ದೇವರಾಗಲಿ ಅಥವಾ ಯೇಸು ಆಗಲಿ ಗೊತ್ತಿರುವುದಿಲ್ಲ.

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:4

ὅταν ἔλθῃ ἡ ὥρα αὐτῶν

ಇಲ್ಲಿ “ಕಾಲ” ಎನ್ನುವ ಶಬ್ದವು ಜನರು ಯೇಸುವಿನ ಹಿಂಬಾಲಕರನ್ನು ಹಿಂಸೆಗೆ ಗುರಿಮಾಡುವ ಸಮಯವನ್ನು ಸೂಚಿಸುವುದಕ್ಕೆ ಪರ್ಯಾಯ ಪದವನ್ನಾಗಿ ಬಳಸಲಾಗಿರುತ್ತದೆ. ಪರ್ಯಾಯ ಅನುವಾದ: “ನಿಮ್ಮನ್ನು ಶ್ರಮೆಗಳಿಗೆ ಗುರಿ ಮಾಡಿದಾಗ” (ನೋಡಿರಿ: ಲಕ್ಷಣಾಲಂಕಾರ)

ἐξ ἀρχῆς

ಇದು ಯೇಸುವಿನ ಸೇವೆಯ ಮೊದಲ ಆರಂಭ ದಿನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀವು ನನ್ನನ್ನು ಹಿಂಬಾಲಿಸುವದಕ್ಕೆ ಆರಂಭ ಮಾಡಿದಾಗ” (ನೋಡಿರಿ: ಲಕ್ಷಣಾಲಂಕಾರ)

John 16:6

ἡ λύπη πεπλήρωκεν ὑμῶν τὴν καρδίαν

ಇಲ್ಲಿ “ಹೃದಯ” ಎನ್ನುವ ಶಬ್ದವು ಒಬ್ಬ ವ್ಯಕ್ತಿಯ ಅಂತರಂಗವನ್ನು ಸೂಚಿಸುವ ಪರ್ಯಾಯ ಪದ. ಪರ್ಯಾಯ ಅನುವಾದ: “ನೀವೀಗ ದುಃಖಭರಿತರಾಗಿದ್ದೀರಿ” (ನೋಡಿರಿ: ಲಕ್ಷಣಾಲಂಕಾರ)

John 16:7

ἐὰν…μὴ ἀπέλθω, ὁ Παράκλητος οὐκ ἐλεύσεται πρὸς ὑμᾶς

ನೀವು ಇದನ್ನು ಸಕಾರಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನಾನು ಹೋದರೆ ಮಾತ್ರ ನಿಮ್ಮ ಬಳಿಗೆ ಸಹಾಯಕನು ಬರುವನು” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

Παράκλητος

ಇದು ಯೇಸು ಹೋದನಂತರ ಶಿಷ್ಯರೊಂದಿಗೆ ಇರುವ ಪವಿತ್ರಾತ್ಮನಿಗೆ ಕೊಡಲ್ಪಟ್ಟ ಹೆಸರಾಗಿರುತ್ತದೆ. ಯೋಹಾನ.14:26 ವಚನದಲ್ಲಿ ಇದನ್ನು ನೀವು ಹೇಗೆ ಅನುವಾದ ಮಾಡಿದ್ದೀರೋ ಎಂದು ನೋಡಿರಿ.

John 16:8

ἐκεῖνος ἐλέγξει τὸν κόσμον περὶ ἁμαρτίας

ಪವಿತ್ರಾತ್ಮನು ಬಂದಾಗ, ಜನರು ಪಾಪಿಗಳೆಂದು ಜನರಿಗೆ ತೋರಿಸುವುದಕ್ಕೆ ಆರಂಭಿಸುತ್ತಾನೆ.

ἐκεῖνος

ಇದು ಪವಿತ್ರಾತ್ಮನನ್ನು ಸೂಚಿಸುತ್ತದೆ. ಯೋಹಾನ.14:16 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರೋ ನೋಡಿರಿ.

κόσμον

ಇದು ಲೋಕದಲ್ಲಿರುವ ಜನರನ್ನು ಸೂಚಿಸುವ ಪರ್ಯಾಯದ ಮಾತಾಗಿರುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 16:9

περὶ ἁμαρτίας μέν, ὅτι οὐ πιστεύουσιν εἰς ἐμὲ

ಅವರು ಪಾಪದ ಅಪರಾಧಿಗಳಾಗಿದ್ದಾರೆ, ಯಾಕಂದರೆ ಅವರು ಆತನಲ್ಲಿ ನಂಬಿಕೆ ಇಡಲಿಲ್ಲ.

John 16:10

περὶ δικαιοσύνης…ὅτι πρὸς τὸν Πατέρα ὑπάγω, καὶ οὐκέτι θεωρεῖτέ με

ನಾನು ದೇವರ ಬಳಿಗೆ ಹೋದಾಗ, ಅವರು ನನ್ನನ್ನು ಎಂದಿಗೂ ನೋಡುವುದಿಲ್ಲ, ನಾನು ಸರಿಯಾದ ಕಾರ್ಯಗಳನ್ನೇ ಮಾಡಿದ್ದೇನೆಂದು ಅವರು ತಿಳಿದುಕೊಳ್ಳುತ್ತಾರೆಷ್ಟೇ.

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:11

περὶ…κρίσεως, ὅτι ὁ ἄρχων τοῦ κόσμου τούτου κέκριται

ಈ ಲೋಕಾಧಿಪತಿಯಾಗಿರುವ ಸಾತಾನನನ್ನು ಶಿಕ್ಷಿಸಿದ ಹಾಗೆಯೇ ದೇವರು ಅವರಿಗೆ ಲೆಕ್ಕ ಕೇಳುವನು ಮತ್ತು ಅವರ ಪಾಪಗಳಿಗಾಗಿ ಶಿಕ್ಷಿಸುವನು,

ὁ ἄρχων τοῦ κόσμου τούτου

ಇಲ್ಲಿ “ಅಧಿಪತಿ” ಎನ್ನುವ ಶಬ್ದವು ಸಾತಾನನನ್ನು ಸೂಚಿಸುತ್ತದೆ. ಯೋಹಾನ.12:31 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

John 16:12

πολλὰ…ὑμῖν λέγειν

ನಿಮಗಾಗಿ ಸಂದೇಶಗಳು ಅಥವಾ “ನಿಮಗಾಗಿ ಮಾತುಗಳು”

John 16:13

τὸ Πνεῦμα τῆς ἀληθείας

ದೇವರ ಕುರಿತಾಗಿ ಜನರಿಗೆ ಸತ್ಯವನ್ನು ಹೇಳುವ ಪವಿತ್ರಾತ್ಮನಿಗೆ ಕೊಡಲ್ಪಟ್ಟ ಹೆಸರು ಇದು.

ὁδηγήσει ὑμᾶς ἐν τῇ ἀληθείᾳ πάσῃ

“ಸತ್ಯ” ಎನ್ನುವ ಶಬ್ದವು ಆತ್ಮೀಯಕವಾದ ಸತ್ಯವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಆತ್ಮೀಯ ಸತ್ಯಗಳನ್ನು ಆತನು ನಿಮಗೆ ಬೋಧಿಸುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὅσα ἀκούσει, λαλήσει

ತಂದೆಯಾದ ದೇವರು ಆತ್ಮನೊಂದಿಗೆ ಮಾತನಾಡುವರೆಂದು ಯೇಸು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಆತನಿಗೆ ದೇವರು ಹೇಳಿದ ಪ್ರತಿಯೊಂದು ಮಾತನ್ನು ಆತನು ಹೇಳುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 16:14

ἐκ τοῦ ἐμοῦ λήμψεται, καὶ ἀναγγελεῖ ὑμῖν

ಇಲ್ಲಿ “ನನ್ನದನ್ನು” ಎನ್ನುವ ಮಾತು ಯೇಸುವಿನ ಬೋಧನೆಯನ್ನು ಮತ್ತು ಆತನ ಅದ್ಭುತ ಕಾರ್ಯಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನಾನು ಹೇಳಿದ್ದು ಮತ್ತು ಮಾಡಿದ್ದು ಎಲ್ಲವು ನಿಜವೆಂದು ಆತನು ನಿಮಗೆ ತೋರಿಸುವನು“ (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 16:15

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἐκ τοῦ ἐμοῦ λαμβάνει, καὶ ἀναγγελεῖ ὑμῖν

ಯೇಸುವಿನ ಮಾತುಗಳು ಮತ್ತು ಕ್ರಿಯೆಗಳು ನಿಜವೆಂದು ಪವಿತ್ರಾತ್ಮ ದೇವರು ಎಲ್ಲಾ ಜನರಿಗೆ ಹೇಳುವನು. ಪರ್ಯಾಯ ಅನುವಾದ: “ನನ್ನ ಮಾತುಗಳು ಮತ್ತು ನನ್ನ ಕ್ರಿಯೆಗಳು ನಿಜವೆಂದು ಪವಿತ್ರಾತ್ಮನು ಪ್ರತಿಯೊಬ್ಬರಿಗೆ ಹೇಳುವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 16:16

μικρὸν

ಅತೀ ಶೀಘ್ರದಲ್ಲಿ ಅಥವಾ “ಎಷ್ಟೊಂದು ಕಾಲವು ಕಳೆಯುವುದಕ್ಕೆ ಮುಂಚಿತವಾಗಿಯೇ”

καὶ πάλιν μικρὸν

ಮತ್ತೊಂದುಬಾರಿ, ಎಷ್ಟೊಂದು ಕಾಲವು ಕಳೆಯುವುದಕ್ಕೆ ಮುಂಚಿತವಾಗಿಯೇ

John 16:17

ಯೇಸು ಹೇಳುತ್ತಿರುವ ಮಾತುಗಳಿಗೆ ಅರ್ಥವೇನೆಂದು ತಿಳಿದುಕೊಳ್ಳುವುದರ ಕುರಿತಾಗಿ ಆತನ ಶಿಷ್ಯರು ಒಬ್ಬರಿಗೊಬ್ಬರು ಕೇಳಿಕೊಳ್ಳುತ್ತಿರುವಾಗ ಯೇಸುವಿನ ಮಾತುಗಳ ಮಧ್ಯದಲ್ಲಿ ಒಂದು ಚಿಕ್ಕ ವಿರಾಮವಿದೆ.

μικρὸν…οὐ θεωρεῖτέ με

ಇದು ಶಿಲುಬೆಯಲ್ಲಿ ಯೇಸುವಿನ ಮರಣವನ್ನು ಸೂಚಿಸುತ್ತದೆಯೆಂದು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ.

πάλιν μικρὸν καὶ ὄψεσθέ με

ಈ ಅರ್ಥಗಳು ಇರಬಹುದು, 1) ಇದು ಯೇಸುವಿನ ಪುನರುತ್ಥಾನವನ್ನು ಸೂಚಿಸಬಹುದು ಅಥವಾ 2) ಇದು ಅಂತ್ಯಕಾಲದಲ್ಲಿ ಯೇಸುವಿನ ಬರೋಣವನ್ನು ಸೂಚಿಸಬಹುದು.

τὸν Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:19

ಯೇಸು ತನ್ನ ಶಿಷ್ಯರೊಂದಿಗೆ ಮಾತನಾಡುವುದನ್ನು ಮುಂದೆವರಿಸುತ್ತಿದ್ದಾರೆ.

περὶ τούτου ζητεῖτε μετ’ ἀλλήλων, ὅτι εἶπον, μικρὸν καὶ οὐ θεωρεῖτέ με; καὶ πάλιν μικρὸν καὶ ὄψεσθέ με

ಯೇಸು ಈ ಪ್ರಶ್ನೆಯನ್ನು ಉಪಯೋಗಿಸುತ್ತಿದ್ದಾರೆ, ಆದ್ದರಿಂದ ತನ್ನ ಶಿಷ್ಯರು ಆತನು ಅವರಿಗೆ ಹೇಳಿದವುಗಳ ಮೇಲೆಯೇ ದೃಷ್ಟಿಯನ್ನು ಸಾರುತ್ತಿದ್ದಾರೆ, ಇದರಿಂದ ಆತನು ಇನ್ನೂ ಹೆಚ್ಚಾಗಿ ವಿವರಣೆ ನೀಡಬಹುದು. ಪರ್ಯಾಯ ಅನುವಾದ: “ನಾನು ಹೇಳಿದಾಗ ಹೇಳಿದ ಮಾತುಗಳಿಗೆ ಅರ್ಥ ಏನೆಂದು ನಿಮಲ್ಲಿ ನೀವೇ ಕೇಳುಕೊಳ್ಳುತ್ತಿದ್ದೀರಿ... ನನ್ನನ್ನು ನೋಡಿರಿ.’ “ (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 16:20

ἀμὴν, ἀμὴν, λέγω ὑμῖν

ನಿಮ್ಮ ಭಾಷೆಯಲ್ಲಿ ಪ್ರಾಮುಖ್ಯವಾದದ್ದು ಮತ್ತು ನಿಜವಾದದ್ದೆಂದು ಒತ್ತಿ ಹೇಳುವ ವಿಧಾನವನ್ನು ಇಲ್ಲಿ ಅನುವಾದ ಮಾಡಿರಿ. ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ὁ δὲ κόσμος χαρήσεται

ಇಲ್ಲಿ “ಲೋಕ” ಎನ್ನುವ ಶಬ್ದವು ದೇವರನ್ನು ತಿರಸ್ಕರಿಸುವ ಜನರಿಗಾಗಿ ಪರ್ಯಾಯ ಪದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ದೇವರನ್ನು ತಿರಸ್ಕರಿಸುವ ಜನರು ಸಂತೋಷವಾಗಿರುವರು” (ನೋಡಿರಿ: ಲಕ್ಷಣಾಲಂಕಾರ)

ἀλλ’ ἡ λύπη ὑμῶν εἰς χαρὰν γενήσεται

ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನಿಮ್ಮ ದುಃಖವು ಸಂತೋಷವಾಗುವುದು” ಅಥವಾ “ದುಃಖವನ್ನು ಅನುಭವಿಸಿದನಂತರ ನೀವು ಸಂತೋಷವಾಗಿರುವಿರಿ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 16:22

χαρήσεται ὑμῶν ἡ καρδία

ಇಲ್ಲಿ “ಹೃದಯ” ಎನ್ನುವ ಶಬ್ದವು ಒಬ್ಬ ವ್ಯಕ್ತಿಯ ಅಂತರಂಗವನ್ನು ಸೂಚಿಸುವುದಕ್ಕೆ ಪರ್ಯಾಯ ಶಬ್ದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ನೀವು ಸಂತೋಷವಾಗಿರುವಿರಿ” ಅಥವಾ “ನೀವು ಆನಂದದಿಂದ ಇರುವಿರಿ” (ನೋಡಿರಿ: ಲಕ್ಷಣಾಲಂಕಾರ)

John 16:23

ἀμὴν, ἀμὴν, λέγω ὑμῖν

ನಿಮ್ಮ ಭಾಷೆಯಲ್ಲಿ ಪ್ರಾಮುಖ್ಯವಾದದ್ದು ಮತ್ತು ನಿಜವಾದದ್ದೆಂದು ಒತ್ತಿ ಹೇಳುವ ವಿಧಾನವನ್ನು ಇಲ್ಲಿ ಅನುವಾದ ಮಾಡಿರಿ. ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

ἄν τι αἰτήσητε τὸν Πατέρα, δώσει ὑμῖν ἐν τῷ ὀνόματί μου

ಇಲ್ಲಿ “ಹೆಸರು” ಎನ್ನುವ ಶಬ್ದವು ಯೇಸುವಿನ ಅಧಿಕಾರವನ್ನು ಮತ್ತು ವ್ಯಕ್ತಿತ್ವವನ್ನು ಸೂಚಿಸುವುದಕ್ಕೆ ಪರ್ಯಾಯ ಪದವನ್ನಾಗಿ ಉಪಯೋಗಿಸಲಾಗಿರುತ್ತದೆ. ಪರ್ಯಾಯ ಅನುವಾದ: “ನೀವು ತಂದೆಯನ್ನು ಏನು ಬೇಡಿಕೊಂಡರೂ, ಆತನು ನಿಮಗೆ ಅದನ್ನು ಕೊಡುವನು, ಯಾಕಂದರೆ ನೀವು ನನಗೆ ಸಂಬಂಧಪಟ್ಟವರಾಗಿರುತ್ತೀರಿ” (ನೋಡಿರಿ: ಲಕ್ಷಣಾಲಂಕಾರ)

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἐν τῷ ὀνόματί μου

ಇಲ್ಲಿ “ಹೆಸರು” ಎನ್ನುವ ಶಬ್ದವು ಯೇಸುವಿನ ಅಧಿಕಾರವನ್ನು ಮತ್ತು ವ್ಯಕ್ತಿತ್ವವನ್ನು ಸೂಚಿಸುವುದಕ್ಕೆ ಪರ್ಯಾಯ ಪದವನ್ನಾಗಿ ಉಪಯೋಗಿಸಲಾಗಿರುತ್ತದೆ. ತಂದೆಯಾದ ದೇವರು ವಿಶ್ವಾಸಿಗಳ ಎಲ್ಲಾ ಮನವಿಗಳನ್ನು ಗೌರವಿಸುತ್ತಾರೆ, ಯಾಕಂದರೆ ಅವರು ಯೇಸುವಿನ ಸಹವಾಸದಲ್ಲಿದ್ದಾರೆ. ಪರ್ಯಾಯ ಅನುವಾದ: “ನೀವು ನನ್ನ ಹಿಂಬಾಲಕರಾಗಿರುವದರಿಂದ” ಅಥವಾ “ನನ್ನ ಅಧಿಕಾರದ ಮೇಲೆ” (ನೋಡಿರಿ: ಲಕ್ಷಣಾಲಂಕಾರ)

John 16:24

ἡ χαρὰ ὑμῶν ᾖ πεπληρωμένη

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ನಿಮಗೆ ಹೆಚ್ಚಿನ ಆನಂದವನ್ನು ಕೊಡುವನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 16:25

ἐν παροιμίαις

ಸ್ಪಷ್ಟತೆಯಿಲ್ಲದ ಭಾಷೆಯಲ್ಲಿ

ἔρχεται ὥρα

ಇದು ಅತೀ ಶೀಘ್ರವಾಗಿ ನಡೆಯುವುದು

παρρησίᾳ περὶ τοῦ Πατρὸς ἀπαγγελῶ ὑμῖν

ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ವಿಧಾನದಲ್ಲಿ ತಂದೆಯ ಕುರಿತಾಗಿ ನಿಮಗೆ ಹೇಳುವನು

Πατρὸς

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:26

ἐν τῷ ὀνόματί μου αἰτήσεσθε

ಇಲ್ಲಿ “ಹೆಸರು” ಎನ್ನುವ ಶಬ್ದವು ಯೇಸುವಿನ ಅಧಿಕಾರವನ್ನು ಮತ್ತು ವ್ಯಕ್ತಿತ್ವವನ್ನು ಸೂಚಿಸುವುದಕ್ಕೆ ಪರ್ಯಾಯ ಪದವನ್ನಾಗಿ ಉಪಯೋಗಿಸಲಾಗಿರುತ್ತದೆ. ಪರ್ಯಾಯ ಅನುವಾದ: “ನೀವು ನನಗೆ ಸಂಬಂಧಪಟ್ಟಿರುವದರಿಂದ ನೀವು ಬೇಡಿಕೊಳ್ಳಬಹುದು” (ನೋಡಿರಿ: ಲಕ್ಷಣಾಲಂಕಾರ)

Πατέρα

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:27

αὐτὸς…ὁ Πατὴρ φιλεῖ ὑμᾶς, ὅτι ὑμεῖς ἐμὲ πεφιλήκατε

ಒಬ್ಬ ವ್ಯಕ್ತಿ ಮಗನಾದ ಕ್ರಿಸ್ತನನ್ನು ಪ್ರೀತಿಸಿದಾಗ, ಅವರು ತಂದೆಯನ್ನೂ ಪ್ರೀತಿಸುತ್ತಿದ್ದಾರೆ, ಯಾಕಂದರೆ ತಂದೆಯು ಮತ್ತು ಮಗನು ಒಬ್ಬರಾಗಿದ್ದಾರೆ.

ἐγὼ παρὰ τοῦ Θεοῦ ἐξῆλθον

ಇಲ್ಲಿ “ತಂದೆ” ಎನ್ನುವ ಹೆಸರು ದೇವರಿಗೆ ಕೊಡಲ್ಪಟ್ಟಿರುವ ಪ್ರಾಮುಖ್ಯವಾದ ನಾಮ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:28

ἐξῆλθον παρὰ τοῦ Πατρὸς, καὶ ἐλήλυθα εἰς τὸν κόσμον; πάλιν ἀφίημι τὸν κόσμον, καὶ πορεύομαι πρὸς τὸν Πατέρα

ಆತನ ಮರಣ ಮತ್ತು ಪುನರುತ್ಥಾನಗಳಾದನಂತರ, ಯೇಸು ತಂದೆಯಾದ ದೇವರ ಬಳಿಗೆ ತಿರುಗಿ ಹೋಗುವರು.

ἐξῆλθον παρὰ τοῦ Πατρὸς…πορεύομαι πρὸς τὸν Πατέρα

ಇಲ್ಲಿ “ತಂದೆ” ಎನ್ನುವ ಹೆಸರು ದೇವರಿಗೆ ಕೊಟ್ಟ ಪ್ರಾಮುಖ್ಯವಾದ ಹೆಸರಾಗಿರುತ್ತದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

κόσμον

“ಲೋಕ” ಎನ್ನುವ ಶಬ್ದವು ಲೋಕದಲ್ಲಿ ನಿವಾಸವಾಗಿರುವ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿ ಉಪಯೋಗಿಸಲಾಗಿರುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 16:29

ಶಿಷ್ಯರು ಯೇಸುವಿಗೆ ಸ್ಪಂದಿಸಿದರು.

John 16:31

ἄρτι πιστεύετε

ಯೇಸುವಿನ ಶಿಷ್ಯರು ಮಾತ್ರ ಈಗ ಆತನನ್ನು ನಂಬುವುದಕ್ಕೆ ಸಿದ್ಧವಾಗಿದ್ದಾರೆನ್ನುವ ವಿಷಯ ತಿಳಿದ ಯೇಸು ಗೊಂದಲಕ್ಕೆ ಒಳಗಾದರೆನ್ನುವದನ್ನು ತೋರಿಸುವುದಕ್ಕೆ ಈ ಸಂಘಟನೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ಆದ್ದರಿಂದ, ನೀವು ಕೊನೆಗೆ ನನಗೆ ನಂಬಿಕೆ ಇಟ್ಟಿದ್ದೀರಿ! (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 16:32

ಯೇಸು ತನ್ನ ಶಿಷ್ಯರ ಜೊತೆಯಲ್ಲಿ ಮಾತನಾಡುವುದನ್ನು ಮುಂದೆವರಿಸುತ್ತಿದ್ದಾರೆ.

σκορπισθῆτε

ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಇತರರು ನಿಮ್ಮನ್ನು ಚೆದುರಿಸುತ್ತಾರೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ὁ Πατὴρ μετ’ ἐμοῦ ἐστιν

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 16:33

ἵνα ἐν ἐμοὶ εἰρήνην ἔχητε

ಇಲ್ಲಿ “ಸಮಾಧಾನ” ಎನ್ನುವ ಶಬ್ದವು ಅಂತರಂಗ ಸಮಾಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀವು ನನ್ನೊಂದಿಗೆ ಸಂಬಂಧವಿಟ್ಟುಕೊಂಡಿರುವದರಿಂದ ನೀವು ಅಂತರಂಗ ಸಮಾಧಾನವನ್ನು ಹೊಂದಿಕೊಂಡಿರುವಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἐγὼ νενίκηκα τὸν κόσμον

ಇಲ್ಲಿ “ಲೋಕ” ಎನ್ನುವ ಶಬ್ದವು ದೇವರನ್ನು ತಿರಸ್ಕಾರ ಮಾಡುವ ಜನರಿಂದ ವಿಶ್ವಾಸಿಗಳು ಎದುರುಗೊಳ್ಳುವ ಸಮಸ್ಯೆಗಳು ಮತ್ತು ಹಿಂಸೆಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನಾನು ಈ ಲೋಕದ ಎಲ್ಲಾ ಸಮಸ್ಯೆಗಳನ್ನು ಜಯಸಿದ್ದೇನೆ” (ನೋಡಿರಿ: ಲಕ್ಷಣಾಲಂಕಾರ)

John 17

ಯೋಹಾನ 17 ಸಾಮಾನ್ಯ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಈ ಅಧ್ಯಾಯದಲ್ಲಿ ಒಂದು ಸುಧೀರ್ಘವಾದ ಪ್ರಾರ್ಥನೆಯುಂಟು

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

ಮಹಿಮೆ

ಲೇಖನ ಭಾಗಗಳು ಅನೇಕಬಾರಿ ದೇವರ ಮಹಿಮೆಯು ದೊಡ್ಡದು, ಅದ್ಭುತವಾದ ಬೆಳಕು ಎಂಬುದಾಗಿ ಹೇಳುತ್ತಾ ಇರುತ್ತದೆ. ಜನರು ಈ ಬೆಳಕನ್ನು ನೋಡಿದಾಗ, ಅವರು ಹೆದರಿಕೊಳ್ಳುತ್ತಾರೆ. ಈ ಅಧ್ಯಾಯದಲ್ಲಿ ತಂದೆಯ ನಿಜವಾದ ಮಹಿಮೆಯನ್ನು ತನ್ನ ಶಿಷ್ಯರಿಗೆ ತೋರಿಸಬೇಕೆಂದು ಯೇಸು ದೇವರನ್ನು ಕೇಳಿಕೊಳ್ಳುತ್ತಿದ್ದಾನೆ ([ಯೋಹಾನ.17:1] (../../ಯೋಹಾನ/17/01.ಎಂ.ಡಿ.)).

ಯೇಸು ನಿತ್ಯಜೀವವಾಗಿದ್ದಾನೆ

ದೇವರು ಈ ಲೋಕವನ್ನು ಸೃಷ್ಟಿ ಮಾಡುವುದಕ್ಕೆ ಮುಂಚಿತವಾಗಿ ಯೇಸು ಅಸ್ತಿತ್ವದಲ್ಲಿದ್ದಾರೆ ([ಯೋಹಾನ.17:5] (../../ಯೋಹಾನ/01/01.ಎಂ.ಡಿ.)).

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಿತವಾದ ಇತರ ಕ್ಲಿಷ್ಟ ಸಂದರ್ಭಗಳು

ಪ್ರಾರ್ಥನೆ

ಯೇಸು ದೇವರ ಒಬ್ಬನೇ ಮಗ ([ಯೋಹಾನ.3:16] (../../ಯೋಹಾನ/03/16.ಎಂ.ಡಿ.)). ಆದ್ದರಿಂದ ಇತರ ಜನರು ಪ್ರಾರ್ಥನೆ ಮಾಡುವ ವಿಧಾನಕ್ಕಿಂತಲೂ ವಿಭಿನ್ನವಾಗಿ ಆತನು ಪ್ರಾರ್ಥನೆ ಮಾಡುವನು. ಆತನು ಆಜ್ಞೆಗಳಂತೆ ಅನೇಕ ಶಬ್ದಗಳನ್ನು ಅಥವಾ ಪದಗಳನ್ನು ಬಳಸಿದ್ದಾನೆ. ಯೇಸುವಿನ ಪ್ರಾರ್ಥನೆಯು ಒಬ್ಬ ಮಗನು ತನ್ನ ತಂದೆಯ ಜೊತೆಯಲ್ಲಿ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡುತ್ತಿದ್ದಂತೆ ಮತ್ತು ತಂದೆ ಮಾಡಬೇಕಾದ ಕಾರ್ಯಗಳನ್ನು ತಂದೆಗೆ ಹೇಳುತ್ತಿದ್ದಂತೆ ನಿಮ್ಮ ಅನುವಾದವು ಇರಬೇಕು. ಇದರಿಂದ ತಂದೆ ತುಂಬಾ ಸಂತೋಷವಾಗಿರುತ್ತಾನೆ.

John 17:1

ಹಿಂದಿನ ಅಧ್ಯಾಯದಿಂದ ನಡೆಯುತ್ತಿರುವ ಕಥೆಯ ಭಾಗವು ಇಲ್ಲಿ ಮುಂದೆವರಿಯುತ್ತಿದೆ. ಯೇಸು ತನ್ನ ಶಿಷ್ಯರೊಂದಿಗೆ ಮಾತನಾಡುತ್ತಿದ್ದರು, ಆದರೆ ಈಗ ಆತನು ದೇವರಿಗೆ ಪ್ರಾರ್ಥನೆ ಮಾಡುವುದಕ್ಕೆ ಆರಂಭಿಸಿದ್ದಾನೆ.

ἐπάρας τοὺς ὀφθαλμοὺς αὐτοῦ εἰς τὸν οὐρανὸν

ಇದೊಂದು ನಾಣ್ಣುಡಿಯಾಗಿರುತ್ತದೆ, ಇದಕ್ಕೆ ಮೇಲೆ ನೋಡುವುದು ಎಂದರ್ಥ. ಪರ್ಯಾಯ ಅನುವಾದ: “ಆತನು ಆಕಾಶದ ಕಡೆಗೆ ನೋಡಿದನು” (ನೋಡಿರಿ: ನುಡಿಗಟ್ಟುಗಳು.)

οὐρανὸν

ಇದು ಆಕಾಶವನ್ನು ಸೂಚಿಸುತ್ತದೆ.

Πάτερ…δόξασόν σου τὸν Υἱόν, ἵνα ὁ Υἱὸς δοξάσῃ σέ

ಯೇಸು ತನ್ನನ್ನು ಮಹಿಮೆಪಡಿಸಬೇಕೆಂದು ತಂದೆಯಾದ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ, ಇದರಿಂದ ಆತನು ದೇವರನ್ನು ಘನಪಡಿಸುವನು.

Πάτερ…Υἱὸς

ಯೇಸುವಿಗೆ ಮತ್ತು ದೇವರಿಗೆ ಮಧ್ಯೆದಲ್ಲಿರುವ ಸಂಬಂಧವನ್ನು ವಿವರಿಸುವ ಪ್ರಾಮುಖ್ಯವಾದ ಹೆಸರುಗಳಾಗಿರುತ್ತವೆ ಅಥವಾ ಬಿರುದುಗಳಾಗಿರುತ್ತವೆ. (ನೋಡಿರಿ; ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ἐλήλυθεν ἡ ὥρα

ಇಲ್ಲಿ “ಸಮಯ” ಎನ್ನುವ ಶಬ್ದವು ಯೇಸು ಶ್ರಮೆ ಹೊಂದುವ ಮತ್ತು ಮರಣಿಸುವ ಸಮಯವನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನಾನು ಶ್ರಮೆ ಹೊಂದುವ ಮತ್ತು ಮರಣಿಸುವ ಸಮಯವು ಬಂದಿವೆ” (ನೋಡಿರಿ: ಲಕ್ಷಣಾಲಂಕಾರ)

John 17:2

πάσης σαρκός

ಇದು ಎಲ್ಲಾ ಜನರನ್ನು ಸೂಚಿಸುತ್ತದೆ.

John 17:3

αὕτη δέ ἐστιν ἡ αἰώνιος ζωὴ, ἵνα γινώσκωσι σὲ, τὸν μόνον ἀληθινὸν Θεὸν, καὶ ὃν ἀπέστειλας, Ἰησοῦν Χριστόν

ನಿತ್ಯ ಜೀವ ಎಂದರೆ ತಂದೆಯಾದ ದೇವರಾಗಿರುವ ಮತ್ತು ಮಗನಾದ ದೇವರಾಗಿರುವ ನಿಜವಾದ ದೇವರನ್ನು ಮಾತ್ರವೇ ತಿಳಿದುಕೊಳ್ಳುವುದು.

John 17:4

τὸ ἔργον…ὃ δέδωκάς μοι ἵνα ποιήσω

ಇಲ್ಲಿ “ಕೆಲಸ” ಎನ್ನುವ ಶಬ್ದವು ಯೇಸುವಿನ ಭೂ ಸಂಬಂಧವಾದ ಸೇವೆಯನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 17:5

δόξασόν με σύ, Πάτερ…τῇ δόξῃ ᾗ εἶχον πρὸ τοῦ τὸν κόσμον, εἶναι παρὰ σοί

“ಈ ಲೋಕವು ಸೃಷ್ಟಿಯಾಗುವುದಕ್ಕೆ ಮುಂಚಿತವಾಗಿ” ಯೇಸು ತಂದೆಯಾದ ದೇವರೊಂದಿಗೆ ಮಹಿಮೆಯನ್ನು ಹೊಂದಿಕೊಂಡಿದ್ದನು, ಯಾಕಂದರೆ ಯೇಸು ಮಗನಾದ ದೇವರಾಗಿದ್ದಾರೆ. ಪರ್ಯಾಯ ಅನುವಾದ: “ತಂದೆಯೇ, ಸೃಷ್ಟಿಯನ್ನುಂಟು ಮಾಡುವುದಕ್ಕೆ ಮುಂಚಿತವಾಗಿ ನಾವು ಇರುವಂತೆಯೇ ನಿಮ್ಮ ಸನ್ನಿಧಿಯೊಳಗೆ ನನ್ನನ್ನು ಕರೆದುಕೊಂಡು ಬರುವುದರ ಮೂಲಕ ನನಗೆ ಘನತೆಯನ್ನು ಅನುಗ್ರಹಿಸು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

Πάτερ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 17:6

ಯೇಸು ತನ್ನ ಶಿಷ್ಯರಿಗಾಗಿ ಪ್ರಾರ್ಥನೆ ಮಾಡುವುದನ್ನು ಆರಂಭಿಸುತ್ತಿದ್ದಾರೆ.

ἐφανέρωσά σου τὸ ὄνομα

ಇಲ್ಲಿ “ಹೆಸರು” ಎನ್ನುವ ಶಬ್ದವು ದೇವರ ವ್ಯಕ್ತಿತ್ವವನ್ನು ಸೂಚಿಸುವದಕ್ಕೆ ಪರ್ಯಾಯ ಪದವನ್ನಾಗಿ ಉಪಯೋಗಿಸಿರುತ್ತಾರೆ. ಪರ್ಯಾಯ ಅನುವಾದ: “ನೀವು ನಿಜವಾಗಿ ಯಾರೆಂದು ಮತ್ತು ನೀವು ಹೇಗಿರುತ್ತೀರೆಂದು ನಾನು ಅವರಿಗೆ ತಿಳಿಸಿದ್ದೇನೆ” (ನೋಡಿರಿ: ಲಕ್ಷಣಾಲಂಕಾರ)

ἐκ τοῦ κόσμου

ಇಲ್ಲಿ “ಲೋಕ” ಎನ್ನುವ ಶಬ್ದವು ದೇವರನ್ನು ತಿರಸ್ಕಾರ ಮಾಡಿದ ಲೋಕದ ಜನರನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. ಇದಕ್ಕೆ ದೇವರನ್ನು ನಂಬದಿರುವ ಜನರಿಂದ ವಿಶ್ವಾಸಿಗಳನ್ನು ಅಧ್ಯಾತ್ಮಿಕವಾಗಿ ದೇವರು ಬೇರ್ಪಾಟು ಮಾಡಿದ್ದಾರೆಂದು ಅರ್ಥ.

τὸν λόγον σου τετήρηκαν

ಇದು ಒಂದು ನಾಣ್ಣುಡಿಯಾಗಿರುತ್ತದೆ, ಇದಕ್ಕೆ ಒಳಪಟ್ಟಿರುವುದು ಎಂದರ್ಥ. ಪರ್ಯಾಯ ಅನುವಾದ: “ನಿಮ್ಮ ಬೋಧನೆಗೆ ಒಳಗಾಗಿದ್ದೇವೆ” (ನೋಡಿರಿ: ನುಡಿಗಟ್ಟುಗಳು.)

John 17:9

οὐ περὶ τοῦ κόσμου ἐρωτῶ

ಇಲ್ಲಿ “ಲೋಕ” ಎನ್ನುವ ಪದವು ದೇವರನ್ನು ತಿರಸ್ಕಾರ ಮಾಡಿದ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನಿಮಗೆ ಸಂಬಂಧವಿಲ್ಲದ ಜನರಿಗಾಗಿ ನಾನು ಪ್ರಾರ್ಥನೆ ಮಾಡುತ್ತಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 17:11

ἐν τῷ κόσμῳ

ಇದು ಭೂಮಿಯ ಮೇಲೆ ಇರುವುದನ್ನು ಮತ್ತು ದೇವರನ್ನು ತಿರಸ್ಕಾರ ಮಾಡಿದ ಜನರ ಮಧ್ಯದಲ್ಲಿರುವುದನ್ನು ಸೂಚಿಸುವುದಕ್ಕೆ ಪರ್ಯಾಯ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ನಿಮಗೆ ಸಂಬಂಧವಿಲ್ಲದ ಜನರ ಮಧ್ಯೆದಲ್ಲಿ” (ನೋಡಿರಿ: ಲಕ್ಷಣಾಲಂಕಾರ)

Πάτερ Ἅγιε, τήρησον αὐτοὺς…ἵνα ὦσιν ἓν, καθὼς ἡμεῖς

ತನ್ನಲ್ಲಿ ನಂಬಿಕೆಯಿಟ್ಟವರನ್ನು ಕಾಪಾಡಬೇಕೆಂದು ಯೇಸು ತಂದೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ, ಇದರಿಂದ ಅವರು ದೇವರೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿಕೊಂಡಿರುತ್ತಾರೆ.

Πάτερ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

τήρησον αὐτοὺς ἐν τῷ ὀνόματί σου, ᾧ δέδωκάς μοι

ಇಲ್ಲಿ “ಹೆಸರು” ಎನ್ನುವ ಶಬ್ದವು ದೇವರ ಶಕ್ತಿಗೆ ಮತ್ತು ಅಧಿಕಾರಕ್ಕೆ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನೀವು ನನಗೆ ಕೊಟ್ಟಿರುವ ನಿಮ್ಮ ಶಕ್ತಿಯಿಂದ ಮತ್ತು ಅಧಿಕಾರದಿಂದ ಅವರನ್ನು ಸುರಕ್ಷಿತವಾಗಿ ಕಾಪಾಡಿರಿ” (ನೋಡಿರಿ: ಲಕ್ಷಣಾಲಂಕಾರ)

John 17:12

ἐγὼ ἐτήρουν αὐτοὺς ἐν τῷ ὀνόματί σου

ಇಲ್ಲಿ “ಹೆಸರು” ಎನ್ನುವ ಪದವು ದೇವರ ಶಕ್ತಿಯನ್ನು ಮತ್ತು ಸಂರಕ್ಷತೆಯನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನಾನು ನಿಮ್ಮ ಸಂರಕ್ಷಣೆಯಿಂದ ಅವರನ್ನು ಕಾಪಾಡುವೆನು” (ನೋಡಿರಿ: ಲಕ್ಷಣಾಲಂಕಾರ)

οὐδεὶς ἐξ αὐτῶν ἀπώλετο, εἰ μὴ ὁ υἱὸς τῆς ἀπωλείας

ಅವರಲ್ಲಿ ನಾಶಕ್ಕಾಗಿರುವವನು ಮಾತ್ರವೇ ನಾಶನದ ಪುತ್ರನಾಗಿರುತ್ತಾನೆ

ὁ υἱὸς τῆς ἀπωλείας

ಇದು ಯೇಸುವನ್ನು ಹಿಡಿದುಕೊಟ್ಟಿರುವ ಯೂದನನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀನು ನಾಶ ಮಾಡುವುದಕ್ಕೆ ಎಷ್ಟೋ ಕಾಲದ ಮುಂಚೆ ನಿರ್ಣಯ ಮಾಡಿದವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἵνα ἡ Γραφὴ πληρωθῇ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಲೇಖನಗಳಲ್ಲಿ ಆತನ ಕುರಿತಾಗಿ ಹೇಳಲ್ಪಟ್ಟಿರುವ ಪ್ರವಾದನೆಯನ್ನು ನೆರವೇರಿಸುವುದಕ್ಕೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 17:13

τῷ κόσμῳ

ಈ ಮಾತುಗಳೆಲ್ಲವೂ ಈ ಲೋಕದಲ್ಲಿ ನಿವಾಸ ಮಾಡುತ್ತಿರುವ ಜನರೆಲ್ಲರನ್ನು ಸೂಚಿಸುವ ಪರ್ಯಾಯ ಮಾತುಗಳಾಗಿರುತ್ತವೆ. (ನೋಡಿರಿ: ಲಕ್ಷಣಾಲಂಕಾರ)

ἵνα ἔχωσιν τὴν χαρὰν τὴν ἐμὴν, πεπληρωμένην ἐν ἑαυτοῖς

ನೀವು ಇದನ್ನು ಕ್ರಿಯಾತ್ಮಕವಾಗಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದ್ದರಿಂದ ನೀವು ಅವರಿಗೆ ಹೆಚ್ಚಾದ ಸಂತೋಷ ಕೊಡುವಿರಿ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 17:14

ἐγὼ δέδωκα αὐτοῖς τὸν λόγον σου

ನಾನು ಅವರೊಂದಿಗೆ ನಿನ್ನ ಸಂದೇಶದ ಮಾತುಗಳನ್ನು ಹಂಚಿಕೊಂಡಿದ್ದೇನೆ.

ὁ κόσμος…ὅτι οὐκ εἰσὶν ἐκ τοῦ κόσμου…ἐγὼ οὐκ εἰμὶ ἐκ τοῦ κόσμου

ಇಲ್ಲಿ “ಲೋಕ” ಎನ್ನುವ ಪದವು ದೇವರನ್ನು ತಿರಸ್ಕಾರ ಮಾಡಿರುವ ಜನರನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ನಿಮ್ಮನ್ನು ದ್ವೇಷಿಸುವ ಜನರು ನನ್ನ ಹಿಂಬಾಲಕರನ್ನು ದ್ವೇಷಿಸಿದ್ದಾರೆ, ಯಾಕಂದರೆ ನಾನು ಅವರಿಗೆ ಸಂಬಂಧಪಡದಂತೆಯೇ ಅವರು ನಂಬದಿರುವ ಜನರಿಗೆ ಸಂಬಂಧಪಟ್ಟವರಲ್ಲ” (ನೋಡಿರಿ: ಲಕ್ಷಣಾಲಂಕಾರ)

John 17:15

τοῦ κόσμου

ಈ ವಾಕ್ಯ ಭಾಗದಲ್ಲಿ “ಲೋಕ” ಎನ್ನುವ ಪದವು ದೇವರನ್ನು ತಿರಸ್ಕಾರ ಮಾಡುವ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿದೆ. (ನೋಡಿರಿ: ಲಕ್ಷಣಾಲಂಕಾರ)

τηρήσῃς αὐτοὺς ἐκ τοῦ πονηροῦ

ಇದು ಸಾತಾನನನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ದುಷ್ಟನಾಗಿರುವ ಸಾತಾನನಿಂದ ಅವರನ್ನು ಸಂರಕ್ಷಿಸು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 17:17

ἁγίασον αὐτοὺς ἐν τῇ ἀληθείᾳ

ಅವರನ್ನು ಪ್ರತಿಷ್ಠೆಪಡಿಸುವ ಉದ್ದೇಶವನ್ನು ಇಲ್ಲಿ ಸ್ಪಷ್ಟವಾಗಿ ಹೇಳಬಹುದು. “ಸತ್ಯದಿಂದ” ಎನ್ನುವ ಮಾತು ಇಲ್ಲಿ ಸತ್ಯವನ್ನು ಬೋಧಿಸುವದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಅವರಿಗೆ ಸತ್ಯವನ್ನು ಬೋಧಿಸುವುದರ ಮೂಲಕ ನಿನ್ನ ಸ್ವಂತ ಪ್ರಜೆಯನ್ನಾಗಿ ಮಾಡಿಕೊಳ್ಳುವುದು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ λόγος ὁ σὸς ἀλήθειά ἐστιν

ನಿಮ್ಮ ಸಂದೇಶವು ನಿಜ ಅಥವಾ “ನೀನು ಹೇಳುವುದೆಲ್ಲಾ ನಿಜ”

John 17:18

εἰς τὸν κόσμον

ಇಲ್ಲಿ “ಲೋಕದೊಳಗೆ” ಎನ್ನುವ ಪದವು ಲೋಕದಲ್ಲಿ ನಿವಾಸವಾಗಿರುವ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ಲೋಕದ ಜನರಿಗೆಲ್ಲಾ “ (ನೋಡಿರಿ: ಲಕ್ಷಣಾಲಂಕಾರ)

John 17:19

ἵνα ὦσιν καὶ αὐτοὶ ἡγιασμένοι ἐν ἀληθείᾳ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಇದರಿಂದ ಅವರು ತಮ್ಮನ್ನು ತಾವು ನಿಮಗೆ ಪ್ರತಿಷ್ಠೆ ಮಾಡಿಕೊಳ್ಳುವರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 17:20

τῶν πιστευόντων διὰ τοῦ λόγου αὐτῶν εἰς ἐμὲ

ಅವರು ನನ್ನ ಕುರಿತಾಗಿ ಬೋಧಿಸುವದರಿಂದ ನನ್ನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ

John 17:21

πάντες ἓν ὦσιν, καθὼς σύ, Πάτερ, ἐν ἐμοὶ, κἀγὼ ἐν σοί, ἵνα καὶ αὐτοὶ ἐν ἡμῖν ὦσιν

ಅವರು ನಂಬಿದಾಗ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ತಂದೆ ಮತ್ತು ಮಗನೊಂದಿಗೆ ಏಕವಾಗಿರುವರು.

Πάτερ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ὁ κόσμος

ಇಲ್ಲಿ “ಲೋಕ” ಎನ್ನುವ ಪದವು ದೇವರ ಕುರಿತಾಗಿ ಇದುವರೆಗೂ ತಿಳಿದುಕೊಂಡಿರದ ಜನರನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. ಪರ್ಯಾಯ ಅನುವಾದ: “ದೇವರನ್ನು ಅರಿಯದ ಜನರು” (ನೋಡಿರಿ: ಲಕ್ಷಣಾಲಂಕಾರ)

John 17:22

κἀγὼ τὴν, δόξαν ἣν δέδωκάς μοι, δέδωκα αὐτοῖς

ನನ್ನನ್ನು ನೀವು ಘನಪಡಿಸಿದಂತೆಯೇ ನಾನು ನನ್ನ ಹಿಂಬಾಲಕರನ್ನು ಘನಪಡಿಸಿದ್ದೇನೆ

ἵνα ὦσιν ἓν, καθὼς ἡμεῖς ἕν

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದ್ದರಿಂದ ನಾವು ಐಕ್ಯವಾಗಿರುವಂತೆಯೇ ಅವರನ್ನು ಐಕ್ಯಪಡಿಸು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 17:23

ἵνα ὦσιν τετελειωμένοι εἰς ἕν

ಅವರು ಸಂಪೂರ್ಣವಾಗಿ ಸಂಪೂರ್ಣವಾಗಿ ಐಕ್ಯತೆಯಲ್ಲಿರುವರು

ἵνα γινώσκῃ ὁ κόσμος

ಇಲ್ಲಿ “ಲೋಕ” ಎನ್ನುವ ಪದವು ದೇವರನ್ನು ಅರಿಯದ ಜನರನ್ನು ಸೂಚಿಸುವ ಪರ್ಯಾಯ ಪದವಾಗಿ ಪರ್ಯಾಯ ಅನುವಾದ: “ಎಲ್ಲಾ ಜನರು ತಿಳಿದುಕೊಳ್ಳುವರು” (ನೋಡಿರಿ: ಲಕ್ಷಣಾಲಂಕಾರ)

ἠγάπησας

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

John 17:24

Πάτερ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ὅπου εἰμὶ ἐγὼ

ಇಲ್ಲಿ “ನಾನಿರುವ ಸ್ಥಳ” ಎನ್ನುವ ಮಾತು ಪರಲೋಕವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಪರಲೋಕದಲ್ಲಿ ನನ್ನೊಂದಿಗೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

θεωρῶσιν τὴν δόξαν τὴν ἐμὴν

ನನ್ನ ಶ್ರೇಷ್ಠತೆಯನ್ನು ನೋಡುವುದಕ್ಕೆ

πρὸ καταβολῆς κόσμου

ಇಲ್ಲಿ ಯೇಸು ಎನ್ನುವ ನಾಮವು ಜಗದುತ್ಪತ್ತಿಗೆ ಮುಂಚಿತವಾಗಿರುವ ಸಮಯವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನಾವು ಲೋಕವನ್ನು ಸೃಷ್ಟಿಸುವುದಕ್ಕೆ ಮುಂಚಿತಾವಾಗಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 17:25

ಯೇಸು ತನ್ನ ಪ್ರಾರ್ಥನೆಯನ್ನು ಮುಗಿಸುತ್ತಿದ್ದಾನೆ.

Πάτερ δίκαιε

ಇಲ್ಲಿ “ತಂದೆ” ಎನ್ನುವ ಹೆಸರು ದೇವರಿಗೆ ಕೊಟ್ಟ ಪ್ರಾಮುಖ್ಯವಾದ ಬಿರುದಾಗಿರುತ್ತದೆ.

ὁ κόσμος σε οὐκ ἔγνω

“ಲೋಕ” ಎನ್ನುವ ಪದವು ದೇವರಿಗೆ ಸಂಬಂಧಪಡದ ಜನರನ್ನು ಸೂಚಿಸುವುದಕ್ಕೆ ಪರ್ಯಾಯ ಪದವಾಗಿ ಬಳಸಲ್ಪಟ್ಟಿದೆ. ಪರ್ಯಾಯ ಅನುವಾದ: “ನಿನಗೆ ಸಂಬಂಧಪಡದವರಿಗೆ ನೀನು ಹೇಗಿರುತ್ತೀ ಎಂದು ಗೊತ್ತಿರುವುದಿಲ್ಲ” (ನೋಡಿರಿ: ಲಕ್ಷಣಾಲಂಕಾರ)

John 17:26

ἐγνώρισα αὐτοῖς τὸ ὄνομά σου

“ಹೆಸರು” ಎನ್ನುವ ಪದವು ದೇವರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀನು ಹೇಗಿರುವಿಯೆಂದು ನಾನು ಅವರಿಗೆ ಪ್ರತ್ಯಕ್ಷಪಡಿಸಿದ್ದೇನೆ” (ನೋಡಿರಿ: ಲಕ್ಷಣಾಲಂಕಾರ)

ἀγάπη…ἠγάπησάς

ಇದು ದೇವರಿಂದ ಬರುವ ಒಂದು ವಿಧವಾದ ಪ್ರೀತಿ, ಇದು ಯಾವುದರ ಮೂಲಕವಾಗಿ ತನಗೆ ಪ್ರಯೋಜನಕರವಾಗಿ ಇಲ್ಲದಿದ್ದರೂ, ಇತರರ ಕ್ಷೇಮವನ್ನುಂಟು ಮಾಡುವುದರ ಮೇಲೆ ಕೇಂದ್ರೀಕರಿಸುವುದು. ಈ ರೀತಿಯಾದ ಪ್ರೀತಿ ಇತರರು ಏನು ಮಾಡುತ್ತಿದ್ದಾರೆನ್ನುವದನ್ನು ನೋಡದೇ ಇತರರ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ,

John 18

ಯೋಹಾನ 18 ಸಾಮಾನ್ಯ ಅಂಶಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

“ಜನರಿಗಾಗಿ ಒಬ್ಬ ಮನುಷ್ಯನು ಸಾಯುವುದು ಒಳ್ಳೇಯದು ಎಂದು ಕಾಯಫ ಯೆಹೂದ್ಯರಿಗೆ ಸಲಹೆ ಕೊಟ್ಟನು” ಎಂದು 14ನೇ ವಚನ ಹೇಳುತ್ತಿದೆ. ಅವರು ಯೇಸುವನ್ನು ಹಿಡಿದುಕೊಳ್ಳುವುದಕ್ಕೆ ಕಾಯಫನು ಯಾಕೆ ಮಧ್ಯೆದಲ್ಲಿ ಬಂದನು ಎಂದು ಓದುಗರು ಅರ್ಥಮಾಡಿಕೊಳ್ಳುವುದಕ್ಕೆ ಈ 14ನೇ ವಾಕ್ಯವು ಸಹಾಯ ಮಾಡುತ್ತದೆಯೆಂದು ಲೇಖಕರು ಹೇಳುತ್ತಿದ್ದಾರೆ. ಈ ಮಾತುಗಳನ್ನು ಪ್ರತ್ಯೇಕವಾದ ಆವರಣಗಳಲ್ಲಿ ಇಡಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

“ಯಾವ ವ್ಯಕ್ತಿಯನ್ನಾಗಲಿ ಸಾಯಿಸುವುದು ನಮಗೆ ನ್ಯಾಯಬದ್ಧವಲ್ಲ”

ರೋಮಾ ಸರ್ಕಾರವು ಅಪರಾಧಿಗಳನ್ನು ಸಾಯಿಸುವುದಕ್ಕೆ ಯೆಹೂದ್ಯರಿಗೆ ಅನುಮತಿಸಲಿಲ್ಲ, ಆದ್ದರಿಂದ ಯೆಹೂದ್ಯರು ಆತನನ್ನು ಸಾಯಿಸುವುದಕ್ಕೆ ರಾಜ್ಯಪಾಲರಾದ ಪಿಲಾತನನ್ನು ಕೇಳಬೇಕಾದ ಅವಶ್ಯಕತೆಯಿತ್ತು ([ಯೋಹಾನ.18:31] (../../ಯೋಹನ/18/31.ಎಂ.ಡಿ.)). ಯೇಸುವಿನ ರಾಜ್ಯ

ಯೇಸುವಿನ ರಾಜ್ಯವು “ಈ ಲೋಕ” ಅಲ್ಲ ಎಂದು ಯೇಸು ಪಿಲಾತನಿಗೆ ಹೇಳಿದಾಗ ಯೇಸು ಹೇಳಿದ ಮಾತುಗಳಿಗೆ ಅರ್ಥವೇನೆಂಬುವುದು ಯಾರಿಗೆ ಗೊತ್ತಿದ್ದಿಲ್ಲ ([ಯೋಹಾನ.18:36] (../../ಯೋಹಾನ/18/36.ಎಂ.ಡಿ.)). ತನ್ನ ರಾಜ್ಯವು ಕೇವಲ ಆತ್ಮೀಯಕವಾದದ್ದು, ಈ ಭೂಮಿಯ ಕಾಣಿಸಿಕೊಳ್ಳುವ ಭೌತಿಕ ರಾಜ್ಯವು ಆತನಿಗೆ ಇಲ್ಲ ಎನ್ನುವುದು ಯೇಸುವಿನ ಮಾತುಗಳಿಗೆ ಅರ್ಥವಿರಬಹುದೆಂದು ಕೆಲವರು ಆಲೋಚನೆ ಮಾಡಿದ್ದರು. ಇತರ ಅರಸರು ತಮ್ಮ ರಾಜ್ಯಗಳನ್ನು ನಿರ್ಮಿಸಿಕೊಂಡಿರುವಂತೆ ಬಲವಂತಿಕೆಯಿಂದ ಯೇಸು ತನ್ನ ರಾಜ್ಯವನ್ನು ನಿರ್ಮಿಸುವುದಿಲ್ಲ ಮತ್ತು ಅಳುವುದಿಲ್ಲ ಎಂದು ಇನ್ನೂ ಕೆಲವರು ಆಲೋಚನೆ ಮಾಡುತ್ತಿದ್ದಾರೆ. “ಈ ಲೋಕವಲ್ಲ” ಎನ್ನುವ ಮಾತನ್ನು “ಈ ಸ್ಥಳದಿಂದ ಅಲ್ಲ” ಅಥವಾ “ಇನ್ನೊಂದು ಸ್ಥಳದಿಂದ ಬರಲ್ಲ” ಎಂದು ಅನುವಾದ ಮಾಡುವುದಕ್ಕೆ ಸಾಧ್ಯವೇ.

ಯೆಹೂದ್ಯರ ಅರಸ

ಯೇಸು ಯೆಹೂದ್ಯರಿಗೆ ಅರಸನೋ ಎಂದು ಪಿಲಾತನು ಕೇಳಿದಾಗ ([ಯೋಹಾನ.18:33] (../../ಯೋಹಾನ/18/33.ಎಂ.ಡಿ.)), ಯೂದ ರಾಜ್ಯವನ್ನು ಆಳುವುದಕ್ಕೆ ರೋಮಿಯನ್ನರು ಅರಸನಾದ ಹೆರೋದನಿಗೆ ಅನುಮತಿ ಕೊಟ್ಟಂತೆಯೇ ಯೇಸು ಪ್ರಕಟಿಸಿಕೊಳ್ಳುತ್ತಿದ್ದಾನೋ ಎಂದು ಅವನು ಕೇಳಿದನು. ಯೆಹೂದ್ಯರ ಅರಸನನ್ನು ಬಿಡುಗಡೆ ಮಾಡಲು ಅವನು ಎಲ್ಲಾ ಜನ ಸಮೂಹವನ್ನು ಕೇಳಿದಾಗ, ಅವನು ಯೆಹೂದ್ಯರನ್ನು ಹಿಯಾಳಿಸಿದ್ದನು, ಯಾಕಂದರೆ ರೋಮನ್ನರು ಮತ್ತು ಯೆಹೂದ್ಯರು ಒಬ್ಬರಿಗೊಬ್ಬರು ದ್ವೇಷಿಸಿಕೊಳ್ಳುತ್ತಿದ್ದರು. ಅವನು ಯೇಸುವನ್ನೂ ಹಿಯಾಳಿಸಿದ್ದನು, ಯಾಕಂದರೆ ಯೇಸು ಅರಸನಾಗಿದ್ದನೆಂಬುದಾಗಿ ಅದುವರೆಗೆ ಅವನು ಆಲೋಚನೆ ಮಾಡಿರಲಿಲ್ಲ, ( ನೋಡಿರಿ: ವ್ಯಂಗ್ಯ -)

John 18:1

1-2 ವಚನಗಳು ಈ ಅಧ್ಯಾಯದಲ್ಲಿ ಮುಂಬರುವ ಸಂಘಟನೆಗಳ ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತಿವೆ. ಅವರು ಎಲ್ಲಿಗೆ ಹೋದರು ಎನ್ನುವ ಸಮಾಚಾರವನ್ನು 1ನೇ ವಚನವು ಹೇಳುತ್ತಿದೆ, ಮತ್ತು 2ನೇ ವಚನ ಯೂದನ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ταῦτα εἰπὼν, Ἰησοῦς

ಹೊಸ ಸಂಘಟನೆಯ ಆರಂಭವನ್ನು ಸೂಚಿಸುವುದಕ್ಕೆ ಲೇಖಕರು ಈ ಮಾತುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. (ನೋಡಿರಿ: ಹೊಸ ಘಟನೆಯ ಪರಿಚಯ.)

Κεδρὼν

ಯೆರೂಷಲೇಮಿನಲ್ಲಿರುವ ಕಣಿವೆಯು ಎಣ್ಣೆ ಮರಗಳ ಬೆಟ್ಟದಿಂದ ದೇವಾಲಯವಿರುವ ಬೆಟ್ಟವನ್ನು ಬೇರ್ಪಡಿಸುವುದು (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

ὅπου ἦν κῆπος

ಇದು ಎಣ್ಣೆ ಮರಗಳ ತೋಪು ಆಗಿತ್ತು. ಪರ್ಯಾಯ ಅನುವಾದ: “ಎಣ್ಣೆ ಮರಗಳ ತೋಪು ಇರುವ ಸ್ಥಳ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:4

ಯೇಸು ಸೈನಿಕರೊಡನೆ, ಅಧಿಕಾರಿಗಳೊಡನೆ ಮತ್ತು ಫರಿಸಾಯರೊಡನೆ ಮಾತನಾಡಲು ಆರಂಭಿಸಿದರು.

Ἰησοῦς οὖν εἰδὼς πάντα τὰ ἐρχόμενα ἐπ’ αὐτὸν

ತದನಂತರ ತನಗೆ ಸಂಭವಿಸುವವುಗಳಲೆಲ್ಲವನ್ನು ತಿಳಿದ ಯೇಸು

John 18:5

Ἰησοῦν τὸν Ναζωραῖον

ಯೇಸು ನಜರೇತಿನಿಂದ ಬಂದ ವ್ಯಕ್ತಿ

ἐγώ εἰμι

“ಆತನು” ಎನ್ನುವ ಪದವು ವಾಕ್ಯದಲ್ಲಿ ಅನ್ವಯವಾಗುತ್ತದೆ. ಪರ್ಯಾಯ ಅನುವಾದ: “ಆತನು ನಾನೇ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ παραδιδοὺς αὐτὸν

ತನ್ನನ್ನು ಹಿಡಿಸಿಕೊಟ್ಟಿರುವವನು

John 18:6

ἐγώ εἰμι

ಇಲ್ಲಿ “ಆತನು” ಎನ್ನುವ ಪದವು ಮೂಲ ವಾಕ್ಯದಲ್ಲಿ ವರ್ತಮಾನಕ್ಕೆ ಸಂಬಂಧಪಟ್ಟದ್ದಲ್ಲ. ಪರ್ಯಾಯ ಅನುವಾದ: “ನಾನೇ ಆತನು” (ನೋಡಿಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἔπεσαν χαμαί

ಯೇಸುವಿನ ಶಕ್ತಿಯಿಂದ ಮನುಷ್ಯರೆಲ್ಲರು ನೆಲಕ್ಕೆ ಬಿದ್ದರು. ಪರ್ಯಾಯ ಅನುವಾದ: “ಯೇಸುವಿನ ಶಕ್ತಿಯಿಂದ ಕೆಳಕ್ಕೆ ಬಿದ್ದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:7

Ἰησοῦν τὸν Ναζωραῖον

ಯೇಸು ನಜರೇತಿನಿಂದ ಬಂದವನು

John 18:8

9ನೇ ವಚನದಲ್ಲಿ ಯೇಸು ಲೇಖನವನ್ನು ನೆರವೇರಿಸುವದರ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ಯೋಹಾನನು ನಮಗೆ ಹೇಳುತ್ತಿರುವಾಗ ಮುಖ್ಯ ಕಥೆಯ ಸಾಲಿನಿಂದ ವಿರಾಮವಿರುವುದನ್ನು ನಾವು ಗಮನಿಸಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

ἐγώ εἰμι

ಇಲ್ಲಿ “ಆತನು” ಎನ್ನುವ ಪದವು ಮೂಲ ವಾಕ್ಯದಲ್ಲಿ ವರ್ತಮಾನಕ್ಕೆ ಸಂಬಂಧಪಟ್ಟದ್ದಲ್ಲ, ಆದರೂ ಇದು ಅನ್ವಯವಾಗುತ್ತದೆ. ಪರ್ಯಾಯ ಅನುವಾದ: “ನಾನೇ ಆತನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:9

ἵνα πληρωθῇ ὁ λόγος ὃν εἶπεν

ಇಲ್ಲಿ “ಮಾತು” ಎನ್ನುವ ಪದವು ಯೇಸು ಪ್ರಾರ್ಥನೆ ಮಾಡಿದ ಮಾತುಗಳನ್ನು ಸೂಚಿಸುತ್ತದೆ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯೇಸು ತನ್ನ ತಂದೆಯ ಜೊತೆಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ ಆತನು ನುಡಿದ ಮಾತುಗಳನ್ನು ನೆರವೇರಿಸುವ ಕ್ರಮದಲ್ಲಿ ಇದೆಲ್ಲಾ ನಡೆದಿದೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 18:10

Μάλχος

ಮಲ್ಕನು ಪ್ರಧಾನ ಯಾಜಕನ ಸೇವಕನಾಗಿದ್ದನು. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

John 18:11

θήκην

ಖಡ್ಗಕ್ಕೆ ಅಥವಾ ನುಣುಪಾದ ಕತ್ತಿಗೆ ಉಪಯೋಗಿಸುವ ಒರೆ, ಇದರಿಂದ ಆ ಕತ್ತಿಯನ್ನು ಒರೆಯಲ್ಲಿ ಇಟ್ಟುಕೊಂಡವನಿಗೆ ಯಾವ ಹಾನಿಯೂ ಉಂಟಾಗದು

τὸ ποτήριον ὃ δέδωκέν μοι ὁ Πατὴρ, οὐ μὴ πίω αὐτό

ಯೇಸುವಿನ ವ್ಯಾಖ್ಯೆಯನ್ನು ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ತಂದೆ ನನಗೆ ಕೊಟ್ಟಿರುವ ಪಾತ್ರೆಯಲ್ಲಿರುವದನ್ನು ನಾನು ಖಂಡಿತವಾಗಿ ಕುಡಿಯಲೇ ಬೇಕು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τὸ ποτήριον

ಇಲ್ಲಿ “ಪಾತ್ರೆ” ಎಂದರೆ ಯೇಸು ಖಂಡಿತವಾಗಿ ಅನುಭವಿಸಬೇಕಾದ ಶ್ರಮೆಗಳನ್ನು ಸೂಚಿಸುವ ರೂಪಕಲಂಕಾರದ ಮಾತು. (ನೋಡಿರಿ: ರೂಪಕ ಅಲಂಕಾರ)

Πατὴρ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 18:12

14ನೇ ವಚನವು ಕಾಯಫನ ಕುರಿತಾಗಿ ಹಿನ್ನೆಲೆಯ ಮಾಹಿತಿಯು ನಮಗೆ ತಿಳಿಸುತ್ತದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

τῶν Ἰουδαίων

ಇಲ್ಲಿ “ಯೆಹೂದ್ಯರು” ಎಂದರೆ ಯೇಸುವನ್ನು ತಿರಸ್ಕರಿಸಿದ ಯೆಹೂದ್ಯ ನಾಯಕರಿಗಾಗಿ ಉಪಯೋಗಿಸಿದ ಉಪಲಕ್ಷಕವಾಗಿರುತ್ತದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

συνέλαβον τὸν Ἰησοῦν καὶ ἔδησαν αὐτὸν

ಯೇಸು ತಪ್ಪಿಸಿಕೊಂಡು ಹೋಗದಂತೆ ಯೇಸುವಿನ ಕೈಗಳನ್ನು ಸೈನಿಕರು ಕಟ್ಟಿ ಹಾಕಿದರು. ಪರ್ಯಾಯ ಅನುವಾದ: “ಯೇಸುವನ್ನು ಹಿಡಿದುಕೊಂಡು, ಆತನು ತಪ್ಪಿಸಿಕೊಂಡು ಹೋಗದಂತೆ ಕಟ್ಟಿ ಹಾಕಿದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:15

ὁ δὲ μαθητὴς ἐκεῖνος ἦν γνωστὸς τῷ ἀρχιερεῖ, καὶ συνεισῆλθεν τῷ Ἰησοῦ

ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಈಗ ಪ್ರಧಾನ ಯಾಜಕನಿಗೆ ಶಿಷ್ಯರ ಕುರಿತಾಗಿ ಗೊತ್ತಿತ್ತು, ಆದ್ದರಿಂದ ಆತನು ಯೇಸುವಿನ ಜೊತೆಯಲ್ಲಿ ಒಳಗಡೆ ಪ್ರವೇಶಿಸಿದನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 18:16

οὖν ὁ μαθητὴς ὁ ἄλλος ὅς ἦν γνωστὸς τοῦ ἀρχιερέως

ಇದನ್ನು ನೀವು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಪ್ರಧಾನ ಯಾಜಕನಿಗೆ ಗೊತ್ತಿದ್ದ ಇನ್ನೊಬ್ಬ ಶಿಷ್ಯನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 18:17

μὴ καὶ σὺ ἐκ τῶν μαθητῶν εἶ τοῦ ἀνθρώπου τούτου

ದ್ವಾರಪಾಲಕಿಯು ಸ್ವಲ್ಪ ಜಾಗರೂಕತೆಯಿಂದ ಕೇಳಲು ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ಬಂಧಿಸಲ್ಪಟ್ಟ ವ್ಯಕ್ತಿಯ ಶಿಷ್ಯರಲ್ಲಿ ನೀನು ಕೂಡ ಒಬ್ಬ ಶಿಷ್ಯನಲ್ಲವೋ! ಹೌದಲ್ಲವೋ?” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 18:18

ἵστήκεισαν δὲ οἱ δοῦλοι καὶ οἱ ὑπηρέται, ἀνθρακιὰν πεποιηκότες, ὅτι ψῦχος ἦν, καὶ ἐθερμαίνοντο

ಇವರೆಲ್ಲರೂ ಪ್ರಧಾನ ಯಾಜಕನ ಸೇವಕರು ಮತ್ತು ದೇವಾಲಯದ ಕಾವಲುಗಾರರು. ಪರ್ಯಾಯ ಅನುವಾದ: “ಆಗ ತುಂಬಾ ಚಳಿಯಿದ್ದಿತ್ತು, ಆದ್ದರಿಂದ ಪ್ರಧಾನ ಯಾಜಕನ ಸೇವಕರು ಮತ್ತು ದೇವಾಲಯದ ಕಾವಲುಗಾರರು ಇದ್ದಲಿನ ಬೆಂಕಿ ಮಾಡಿ, ಅದರ ಸುತ್ತಮುತ್ತಲು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

δὲ

ಮುಖ್ಯ ಕಥೆಯಲ್ಲಿ ವಿರಾಮ ತೆಗೆದುಕೊಳ್ಳಲು ಈ ಮಾತು ಇಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ, ಆದ್ದರಿಂದ ಯೋಹಾನನು ಆ ಬೆಂಕಿಯ ಸುತ್ತಲು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿರುವ ಜನರ ಕುರಿತಾಗಿ ಸಮಾಚಾರವನ್ನು ಸೇರಿಸಿ ಹೇಳುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 18:19

ಇಲ್ಲಿ ಕಥೆಯ ಸಾಲು ತಿರುಗಿ ಯೇಸುವಿನ ಕಡೆಗೆ ಹೋಗಿದೆ.

ὁ…ἀρχιερεὺς

ಇಲ್ಲಿರುವುದು ಕಾಯಫ ([ಯೋಹಾನ:18:13] (../18/13.ಎಂ.ಡಿ.)).

περὶ τῶν μαθητῶν αὐτοῦ, καὶ περὶ τῆς διδαχῆς αὐτοῦ

ಇಲ್ಲಿ “ಆತನ ಉಪದೇಶ” ಎನ್ನುವ ಮಾತು ಯೇಸು ಜನರಿಗೆ ಬೋಧನೆ ಮಾಡಿದ ವಿಷಯಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ತನ್ನ ಶಿಷ್ಯರ ಕುರಿತಾಗಿ ಮತ್ತು ಯೇಸು ಜನರಿಗೆ ಬೋಧನೆ ಮಾಡಿದ ವಿಷಯಗಳ ಕುರಿತಾಗಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:20

ἐγὼ παρρησίᾳ λελάληκα τῷ κόσμῳ

“ಲೋಕ” ಎನ್ನುವ ಪದವು ಯೇಸುವಿನ ಬೋಧನೆಯನ್ನು ಕೇಳಿಸಿಕೊಂಡ ಜನರಿಗೋಸ್ಕರ ಪರ್ಯಾಯ ಪದವಾಗಿ ಹೇಳಿರುವ ಪದವೆಂದು ನೀವು ಸ್ಪಷ್ಟವಾಗಿ ಹೇಳಬೇಕಾದ ಅವಶ್ಯಕತೆಯುಂಟು. ಇಲ್ಲಿ ಉತ್ಪ್ರೇಕ್ಷವಾಗಿ ಹೇಳಲ್ಪಟ್ಟಿರುವ “ಲೋಕ” ಎನ್ನುವ ಪದವು ಯೇಸು ಬಹಿರಂಗವಾಗಿ ಮಾತನಾಡಿದ್ದನ್ನು ಒತ್ತಿ ಹೇಳುತ್ತದೆ. (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಲಕ್ಷಣಾಲಂಕಾರ ಮತ್ತು ಅತಿಶಯೋಕ್ತಿ)

ὅπου πάντες οἱ Ἰουδαῖοι συνέρχονται

ಇಲ್ಲಿ “ಯೆಹೂದ್ಯರೆಲ್ಲರು” ಎನ್ನುವ ಮಾತು ಯೇಸುವಿನ ಬೋಧನೆಯನ್ನು ಕೆಳಬೇಕೆಂದು ಬಯಸುವವರು ಕೇಳುವಂತೆ ಮಾತನಾಡಿದರೆನ್ನುವುದನ್ನು ಒತ್ತಿ ಹೇಳುವುದಕ್ಕೆ ಉತ್ಪ್ರೇಕ್ಷಕ ಮಾತಾಗಿರುತ್ತದೆ. (ನೋಡಿರಿ: ಅತಿಶಯೋಕ್ತಿ)

John 18:21

τί με ἐρωτᾷς

ಯೇಸು ಹೇಳುತ್ತಿರುವುದನ್ನು ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುವುದು. ಪರ್ಯಾಯ ಅನುವಾದ: “ಈ ಪ್ರಶ್ನೆಗಳೆಲ್ಲವನ್ನು ನನಗೆ ಕೇಳಬಾರದು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 18:22

οὕτως ἀποκρίνῃ τῷ ἀρχιερεῖ

ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ಪ್ರಧಾನ ಯಾಜಕನಿಗೆ ಉತ್ತರ ಕೊಡುವ ವಿಧಾನವು ಅದಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 18:23

μαρτύρησον περὶ τοῦ κακοῦ

ನಾನು ಮಾತನಾಡಿದ ತಪ್ಪುಗಳನ್ನು ನನಗೆ ಹೇಳಿರಿ

εἰ…καλῶς, τί με δέρεις

ಯೇಸು ಹೇಳಿರುವವುಗಳನ್ನು ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ನಾನು ಸರಿಯಾಗಿ ಮಾತನಾಡಿದ್ದಲ್ಲಿ, ನೀವು ನನ್ನನ್ನು ಹೊಡೆಯಬಾರದಲ್ಲವೋ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 18:25

ಇಲ್ಲಿ ಕಥೆಯ ಮುಖ್ಯ ಸಾಲು ಪೇತ್ರನ ಕಡೆಗೆ ಹೋಗುತ್ತಿದೆ.

δὲ

ಮುಖ್ಯ ಕಥೆಯಲ್ಲಿ ವಿರಾಮ ಕೊಡಲು ಈ ಮಾತು ಇಲ್ಲಿ ಉಪಯೋಗಿಸಲಾಗಿದೆ, ಆದ್ದರಿಂದ ಯೋಹಾನನು ಪೇತ್ರನ ಕುರಿತಾಗಿ ಸಮಾಚಾರವನ್ನು ಕೊಡಬಹುದು. (ನೋಡಿರಿ: ಹಿನ್ನೆಲೆ ಮಾಹಿತಿ.)

μὴ καὶ σὺ ἐκ τῶν μαθητῶν αὐτοῦ εἶ

ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ನೀನು ಕೂಡ ಆತನ ಶಿಷ್ಯರಲ್ಲಿ ಒಬ್ಬನಲ್ಲವೋ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 18:26

οὐκ ἐγώ σε εἶδον ἐν τῷ κήπῳ μετ’ αὐτοῦ

ಒತ್ತಿ ಹೇಳುವುದಕ್ಕೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ “ಆತನು” ಎನ್ನುವ ಪದವು ಯೇಸುವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಎಣ್ಣೆ ಮರಗಳ ತೋಪಿನಲ್ಲಿ ಅವರು ಆ ಮನುಷ್ಯನನ್ನು ಬಂಧಿಸುವಾಗ ನಾನು ನಿನ್ನನ್ನು ನೋಡಿದ್ದೇ! ನೋಡಿದನಲ್ಲವೇ?” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:27

πάλιν οὖν ἠρνήσατο Πέτρος

ಯೇಸು ನನಗೆ ಗೊತ್ತಿಲ್ಲವೆಂದು ಮತ್ತು ಆತನ ಜೊತೆಯಲ್ಲಿ ನಾನು ಇದ್ದಿಲ್ಲವೆಂದು ಪೇತ್ರನು ನಿರಾಕರಿಸಿದಂತೆ ಇಲ್ಲಿ ಅರ್ಥ ಬರುತ್ತದೆ. ಪರ್ಯಾಯ ಅನುವಾದ: “ಆದನಂತರ ಯೇಸು ನನಗೆ ಗೊತ್ತಿಲ್ಲವೆಂದು ಅಥವಾ ಆತನ ಜೊತೆಯಲ್ಲಿ ನಾನು ಇರಲಿಲ್ಲವೆಂದು ಪೇತ್ರನು ನಿರಾಕರಿಸಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

εὐθέως ἀλέκτωρ ἐφώνησεν

ಇಲ್ಲಿ ಕೋಳಿ ಕೂಗುವುದಕ್ಕೆ ಮುಂಚಿತವಾಗಿಯೇ ಪೇತ್ರನು ಯೇಸುವನ್ನು ನಿರಾಕರಿಸುವನೆಂದು ಯೇಸು ಹೇಳಿದ ಮಾತನ್ನು ಓದುಗರು ಇಲ್ಲಿ ಜ್ಞಾಪಕ ಮಾಡಿಕೊಂಡು ಈ ವಚನಗಳನ್ನು ಊಹಿಸಿಕೊಳ್ಳಬೇಕು. ಪರ್ಯಾಯ ಅನುವಾದ: “ತಕ್ಷಣವೇ ಕೋಳಿ ಕೂಗಿತು, ಯೇಸು ಹೇಳಿದಂತೆಯೇ ನಡೆಯಿತು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:28

ಇಲ್ಲಿ ಕಥೆಯ ಮುಖ್ಯ ಸಾಲು ಯೇಸುವಿನ ಕಡೆಗೆ ಹೋಗುತ್ತಿದೆ. ಸೈನಿಕರು ಮತ್ತು ಯೇಸುವಿನ ಆರೋಪಿಗಳು ಆತನನ್ನು ಕಾಯಫನ ಬಳಿಗೆ ಕರೆದುಕೊಂಡು ಬಂದರು. 28ನೇ ವಚನದಲ್ಲಿ ಅವರು ಯಾಕೆ ಅರಮನೆಯೊಳಗೆ ಪ್ರವೇಶಿಸಲಿಲ್ಲವೆನ್ನುವುದರ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ನಮಗೆ ತಿಳಿಸುತ್ತದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἄγουσιν οὖν τὸν Ἰησοῦν ἀπὸ τοῦ Καϊάφα

ಇಲ್ಲಿ ಅವರು ಕಾಯಫನ ಮನೆಯಿಂದ ಯೇಸುವನ್ನು ಕರೆದುಕೊಂಡು ಹೊಗುತ್ತಿರುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಪರ್ಯಾಯ ಅನುವಾದ: “ಅವರು ಕಾಯಫನ ಮನೆಯಿಂದ ಯೇಸುವನ್ನು ಕರೆದುಕೊಂಡು ಹೋದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

αὐτοὶ οὐκ εἰσῆλθον εἰς τὸ πραιτώριον, ἵνα μὴ μιανθῶσιν

ಪಿಲಾತನು ಯೆಹೂದ್ಯನಲ್ಲ, ಆದ್ದರಿಂದ ಯೆಹೂದ್ಯರ ನಾಯಕರು ತನ್ನ ಅರಮನೆಯೊಳಗೆ ಪ್ರವೇಶ ಮಾಡಲಿಲ್ಲ, ಪ್ರವೇಶಿಸುವುದು ಬಹುಶಃ ಅಪವಿತ್ರತೆಯೆಂದು ಭಾವಿಸುತ್ತಿರಬಹುದು. ಒಂದುವೇಳೆ ಈ ರೀತಿ ಮಾಡುವುದರ ಮೂಲಕ ಅವರು ಪಸ್ಕ ಹಬ್ಬವನ್ನು ಆಚರಿಸುವುದಕ್ಕೆ ಅಡ್ಡಿ ಆಗುತ್ತಿರಬಹುದು. ನೀವು ದ್ವಂದ್ವ ನಕಾರಾತ್ಮಕವಾದ ವಿಷಯವನ್ನು ಸಕಾರಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಅವರು ತಮ್ಮಷ್ಟಕ್ಕೆ ತಾವು ಪಿಲಾತನ ಅರಮನೆಯ ಹೊರ ಭಾಗದಲ್ಲಿ ನಿಂತುಕೊಂಡರು ಯಾಕಂದರೆ ಪಿಲಾತನು ಅನ್ಯನಾಗಿದ್ದನು. ಅವರು ತಮ್ಮನ್ನು ಅಪವಿತ್ರಗೊಳಿಸಿಕೊಳ್ಳುವುದಕ್ಕೆ ಇಷ್ಟಪಟ್ಟಿರಲಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ದ್ವಿಗುಣ ನಕಾರಾತ್ಮಕಗಳು)

John 18:30

εἰ μὴ ἦν οὗτος κακὸν ποιῶν, οὐκ ἄν σοι παρεδώκαμεν αὐτόν

ನೀವು ದ್ವಂದ್ವ ನಕಾರಾತ್ಮಕವಾದ ವಿಷಯವನ್ನು ಸಕಾರಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಈ ಮನುಷ್ಯನು ದುಷ್ಟ ಕ್ರಿಯೆಗಳು ಮಾಡುವನು, ಇವನನ್ನು ಶಿಕ್ಷಿಸುವುದಕ್ಕಾಗಿ ನಿಮ್ಮ ಬಳಿಗೆ ಕರೆದುಕೊಂಡು ಬಂದಿದ್ದೇವೆ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

παρεδώκαμεν αὐτόν

ಇಲ್ಲಿ ಈ ಮಾತಿಗೆ ಶತ್ರುವನ್ನು ಒಪ್ಪಿಸಿಕೊಡುತ್ತಿದ್ದೇವೆ ಎಂದರ್ಥ.

John 18:31

32ನೇ ವಚನದಲ್ಲಿ ಯೇಸು ಯಾವರೀತಿ ಮರಣ ಹೊಂದುವನೆಂದು ಯೇಸು ಹೇಳಿದ ಮಾತುಗಳ ಕುರಿತಾಗಿ ಹಿನ್ನೆಲೆಯ ಸಮಾಚಾರವನ್ನು ಲೇಖಕರು ನಮಗೆ ಹೇಳುತ್ತಿರುವಾಗ ಮುಖ್ಯ ಕಥೆಯಲ್ಲಿನ ಸಾಲಿನಿಂದ ವಿರಾಮವುಂಟು. (ನೋಡಿರಿ: ಹಿನ್ನೆಲೆ ಮಾಹಿತಿ.)

εἶπον αὐτῷ οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಯೇಸುವಿಗೆ ತಿರಸ್ಕಾರ ಮಾಡಿದ ಮತ್ತು ಆತನನ್ನು ಹಿಡಿದುಕೊಂಡಿರುವ ಯೆಹೂದ್ಯರಿಗಾಗಿ ಉಪಲಕ್ಷಕವಾಗಿ ಹೇಳಲಾಗಿದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು ಆತನಿಗೆ ಹೇಳಿದರು” (ನೋಡಿರಿ: ಉಪಲಕ್ಷಣಾಲಂಕಾರ)

ἡμῖν οὐκ ἔξεστιν ἀποκτεῖναι οὐδένα

ರೋಮಾ ದೇಶದ ಕಾನೂನು ಪ್ರಕಾರ ಯೆಹೂದ್ಯರು ಒಬ್ಬ ವ್ಯಕ್ತಿಗೆ ಮರಣ ದಂಡನೆಯನ್ನು ವಿಧಿಸಬಾರದು. ಪರ್ಯಾಯ ಅನುವಾದ: “ರೋಮಾ ದೇಶದ ಕಾನೂನಿನ ಪ್ರಕಾರ ನಾವು ಒಬ್ಬ ವ್ಯಕ್ತಿಗೆ ಮರಣ ದಂಡನೆಯನ್ನು ವಿಧಿಸಬಾರದು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 18:32

ἵνα ὁ λόγος τοῦ Ἰησοῦ πληρωθῇ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಮುಂಚಿತವಾಗಿ ಯೇಸು ಹೇಳಿದ ಪ್ರತಿಯೊಂದು ಮಾತನ್ನು ನೆರವೇರಿಸು ಕ್ರಮದಲ್ಲಿ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

σημαίνων ποίῳ θανάτῳ ἤμελλεν ἀποθνῄσκειν

ಆತನು ಹೇಗೆ ಮರಣಿಸುತ್ತಾನೆ ಎನ್ನುವ ವಿಷಯಕ್ಕೆ ಸಂಬಂಧಪಟ್ಟು

John 18:35

μήτι ἐγὼ Ἰουδαῖός εἰμι

ಯೆಹೂದ್ಯ ಜನರ ಸಾಂಸ್ಕೃತಿಕ ವಿಷಯಗಳಲ್ಲಿ ಪಿಲಾತನಿಗೆ ಸಂಪೂರ್ಣ ಆಸಕ್ತಿ ಇಲ್ಲವೆನ್ನುವುದನ್ನು ಒತ್ತಿ ಹೇಳುತ್ತಿದ್ದಾನೆ, ಅದರಿಂದಲೆ ಇದು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಪರ್ಯಾಯ ಅನುವಾದ: “ಒಳ್ಳೇಯದು ನಾನು ಯೆಹೂದ್ಯನಲ್ಲ, ಮತ್ತು ನನಗೆ ಈ ವಿಷಯಗಳಲ್ಲಿ ಆಸಕ್ತಿಯಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τὸ ἔθνος τὸ σὸν

ನಿನ್ನ ಜೊತೆಯಲ್ಲಿರುವ ಯೆಹೂದ್ಯರು

John 18:36

ἡ βασιλεία ἡ ἐμὴ οὐκ ἔστιν ἐκ τοῦ κόσμου τούτου

ಇಲ್ಲಿ “ಲೋಕ” ಎನ್ನುವ ಪದವು ಯೇಸುವನ್ನು ತಿರಸ್ಕರಿಸಿದ ಜನರಿಗಾಗಿ ಪರ್ಯಾಯ ಪದವಾಗಿ ಉಪಯೋಗಿಸಲ್ಪಟ್ಟಿರುತ್ತದೆ. ಈ ಅರ್ಥಗಳು ಇರಬಹುದು, 1) “ನನ್ನ ರಾಜ್ಯವು ಈ ಲೋಕಕ್ಕೆ ಸಂಬಂಧಪಟ್ಟಿದ್ದಲ್ಲ” ಅಥವಾ 2) “ಈ ಲೋಕವನ್ನು ಆಳುವುದಕ್ಕೆ ಈ ಲೋಕದ ಅನುಮತಿ ನನಗೆ ಬೇಕಾಗಿಲ್ಲ” ಅಥವಾ “ನಾನು ಅರಸನಾಗುವುದಕ್ಕೆ ನನಗೆ ಅಧಿಕಾರವು ಈ ಲೋಕದಿಂದ ಬರುವುದಿಲ್ಲ.” (ನೋಡಿರಿ: ಲಕ್ಷಣಾಲಂಕಾರ)

ἄν, ἵνα μὴ παραδοθῶ τοῖς Ἰουδαίοις

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನನ್ನನ್ನು ಬಂಧಿಸುವುದಕ್ಕೆ ಯೆಹೂದ್ಯರ ನಾಯಕರಿಗೆ ಅಡ್ಡಿಯಾಗುತ್ತದೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

τοῖς Ἰουδαίοις

ಇಲ್ಲಿ “ಯೆಹೂದ್ಯರು” ಎನ್ನುವ ಶಬ್ದವು ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರ ನಾಯಕರನ್ನು ಸೂಚಿಸುವ ಉಪಲಕ್ಷಕವಾಗಿರುತ್ತದೆ. (ನೋಡಿರಿ: ಉಪಲಕ್ಷಣಾಲಂಕಾರ)

John 18:37

ἐλήλυθα εἰς τὸν κόσμον

ಇಲ್ಲಿ “ಲೋಕ” ಎನ್ನುವ ಪದವು ಲೋಕದಲ್ಲಿ ನಿವಾಸವಾಗುತ್ತಿರುವ ಜನರನ್ನು ಸೂಚಿಸುವ ಉಪಲಕ್ಷಕವಾಗಿರುತ್ತದೆ. (ನೋಡಿರಿ: ಉಪಲಕ್ಷಣಾಲಂಕಾರ)

μαρτυρήσω τῇ ἀληθείᾳ

ಇಲ್ಲಿ “ಸತ್ಯ” ಎನ್ನುವ ಪದವು ದೇವರ ಕುರಿತಾಗಿ ಹೇಳುವ ಸತ್ಯವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ದೇವರ ಕುರಿತಾದ ಸತ್ಯವನ್ನು ಜನರಿಗೆ ಹೇಳಿರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ ὢν ἐκ τῆς ἀληθείας

ದೇವರ ಕುರಿತಾದ ಸತ್ಯವನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸೂಚಿಸುವಂಥ ನಾಣ್ಣುಡಿ ಇದು. (ನೋಡಿರಿ: ನುಡಿಗಟ್ಟುಗಳು.)

μου τῆς φωνῆς

ಇಲ್ಲಿ “ಸ್ವರ” ಎನ್ನುವ ಶಬ್ದವು ಯೇಸು ಹೇಳಿದ ಮಾತುಗಳನ್ನು ಸೂಚಿಸುವದಕ್ಕೆ ಉಪಲಕ್ಷಕವಾಗಿ ಹೇಳಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ನಾನು ಹೇಳುವ ವಿಷಯಗಳು” ಅಥವಾ “ನಾನು” (ನೋಡಿರಿ: ಉಪಲಕ್ಷಣಾಲಂಕಾರ)

John 18:38

τί ἐστιν ἀλήθεια

ಸತ್ಯವೆಂಬುದು ಯಾರಿಗೂ ಗೊತ್ತಿರುವುದಿಲ್ಲ ಎನ್ನುವ ಪಿಲಾತನ ನಂಬಿಕೆಯನ್ನು ಪ್ರತಿಬಿಂಬಿಸುವುದಕ್ಕೆ ಈ ವ್ಯಾಖ್ಯೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ಸತ್ಯ ಏನೆಂಬುವುದು ಯಾರಿಗೂ ಗೊತ್ತಿಲ್ಲ!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

τοὺς Ἰουδαίους

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರ ನಾಯಕರನ್ನು ಸೂಚಿಸುವ ಉಪಲಕ್ಷಕವಾಗಿರುತ್ತದೆ. (ನೋಡಿರಿ: ಉಪಲಕ್ಷಣಾಲಂಕಾರ)

John 18:40

μὴ τοῦτον, ἀλλὰ τὸν Βαραββᾶν

ಇದು ಪದಲೋಪವಾಗಿರುತ್ತದೆ. ಇಲ್ಲಿ ನೀವು ಅನ್ವಯಿಸಿಕೊಳ್ಳಬಹುದಾದ ಮಾತುಗಳನ್ನು ಸೇರಿಸಬಹುದು. ಪರ್ಯಾಯ ಅನುವಾದ: “ಬೇಡ! ಈ ಮನುಷ್ಯನನ್ನು ಬಿಡುಗಡೆ ಮಾಡಬೇಡ! ಅವನಿಗೆ ಬದಲಾಗಿ ಬರಬ್ಬಾನನ್ನು ಬಿಡುಗಡೆ ಮಾಡಿರಿ” (ನೋಡಿರಿ: ಪದಲೋಪ)

ἦν δὲ ὁ Βαραββᾶς λῃστής

ಇಲ್ಲಿ ಬರಬ್ಬನ ಕುರಿತಾದ ಹಿನ್ನೆಲೆಯ ಸಮಾಚಾರವನ್ನು ಯೋಹಾನನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

John 19

ಯೋಹಾನ 19 ಸಾಮಾನ್ಯ ವಿಷಯಗಳು

ನಿರ್ಮಾಣ ಮತ್ತು ಕ್ರಮಪಡಿಸುವಿಕೆ

ಕೆಲವು ಅನುವಾದಗಳು ಓದಲು ಸುಲಭವಾಗುವಂತೆ ಉಳಿದ ವಚನಗಳಿಗಿಂತ ಕವಿತೆಯ ಪ್ರತಿಯೊಂದು ಸಾಲನ್ನು ಸರಿಯಾಗಿ ಹೊಂದಿಸಿ ಇಡುತ್ತಾರೆ. ಹಳೆಯ ಒಡಂಬಡಿಕೆಯ ವಚನಗಳಾದ 19:24ರಲ್ಲಿ ಕವಿತೆಯ ರೂಪದಲ್ಲಿ ಯು.ಎಲ್.ಟಿ ಇದನ್ನು ಹೊಂದಿಸಿಟ್ಟಿರುತ್ತದೆ.

ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶಗಳು

“ನೇರಳೆ ಉಡುಪು”

ನೇರಳೆ ಎನ್ನುವುದು ಕೆಂಪು ಅಥವಾ ನೀಲಿ ಬಣ್ಣದಂತೆ ಒಂದು ಬಣ್ಣದ ಹೆಸರಾಗಿರುತ್ತದೆ. ಜನರೆಲ್ಲರು ಯೇಸುವನ್ನು ಹಿಯಾಳಿಸುತ್ತಿದ್ದರು, ಇದರಿಂದ ಅವರು ಆತನಿಗೆ ನೇರಳೆ ಉಡುಪನ್ನು ಧರಿಸಿದ್ದರು. ಇದು ಯಾಕಂದರೆ ಅರಸರು ನೇರಳೆ ಉಡುಪುಗಳನ್ನು ಧರಿಸುತ್ತಿದ್ದರು. ಅವರು ಅರಸನಿಗೆ ಕೊಡುವ ಗೌರವ ಮರ್ಯಾದೆಗಳಂತೆಯೇ ಮಾತನಾಡಿ, ನಡೆದುಕೊಂಡು ಯೇಸುವನ್ನು ಹಿಯಾಳಿಸುತ್ತಿದ್ದರು, ಆದರೆ ಅವರು ಇದೆಲ್ಲಾ ಯಾಕೆ ಮಾಡುತ್ತಿದ್ದಾರೆಂದು ಪ್ರತಿಯೊಬ್ಬರಿಗೆ ಗೊತ್ತಿತ್ತು ಯಾಕಂದರೆ ಅವರು ಯೇಸುವನ್ನು ದ್ವೇಷಿಸುತ್ತಿದ್ದರು. (ನೋಡಿರಿ: ವ್ಯಂಗ್ಯ -)

“ನೀನು ಕೈಸರನ ಮಿತ್ರನಲ್ಲ”

ಯೇಸು ಅಪರಾಧಿಯಲ್ಲವೆನ್ನುವ ವಿಷಯ ಪಿಲಾತನಿಗೆ ಗೊತ್ತಿತ್ತು, ಆದ್ದರಿಂದ ತನ್ನ ಸೈನಿಕರು ಆತನನ್ನು ಸಾಯಿಸುವುದು ಅವನಿಗೆ ಇಷ್ಟವಿದ್ದಿರಲಿಲ್ಲ. ಆದರೆ ಯೇಸು ಅರಸನೆಂದು ಪ್ರಕಟಿಸಿಕೊಳ್ಳುತ್ತಿದ್ದಾನೆಂದು ಮತ್ತು ಕೈಸರನ ಕಾನೂನು ಉಲ್ಲಂಘಿಸುತ್ತಿದ್ದಾನೆಂದು ಯೆಹೂದ್ಯರು ಕೈಸರನಿಗೆ ದೂರು ಸಲ್ಲಿಸಿದರು ([ಯೋಹಾನ.19:21] (../../ಯೋಹನ/19/12.ಎಂ.ಡಿ.)).

ಸಮಾಧಿ

ಯೇಸುವಿನ ದೇಹವನ್ನು ಇಟ್ಟಿರುವ ಸಮಾಧಿ ([ಯೋಹಾನ.19:41] (../../ಯೋಹಾನ/19/41.ಎಂ.ಡಿ.)) ಶ್ರೀಮಂತರಾದ ಯೆಹೂದ್ಯರು ತಾವು ಸತ್ತುಹೋದಾಗ ಇಡುವುದಕ್ಕೆ ಮಾಡಿಕೊಂಡಿರುವ ಒಂದು ವಿಶೇಷವಾದ ಸಮಾಧಿಯಾಗಿದ್ದಿತ್ತು. ಇದು ವಾಸ್ತವಿಕವಾಗಿ ಬಂಡೆಯೊಳಗೆ ಕೆತ್ತನೆ ಮಾಡಿ ತಯಾರಿಸಿದ ಒಂದು ಕೊಠಡಿಯಾಗಿತ್ತು. ಈ ಕೊಠಡಿಯು ಚದರವಾಗಿದ್ದಿತ್ತು, ಈ ಸ್ಥಳದಲ್ಲಿ ಯೇಸುವಿನ ದೇಹಕ್ಕೆ ಎಣ್ಣೆ, ಸುಗಂಧಗಳನ್ನು ಹಚ್ಚಿ, ಬಟ್ಟೆಗಳಿಂದ ಸುತ್ತಿ ಇಟ್ಟಿದ್ದರು. ಇದಾದನಂತರ ಆ ಸಮಾಧಿಗೆ ದೊಡ್ಡ ಕಲ್ಲನ್ನು ಉರಿಳಿಸಿ ಮುಚ್ಚಿಟ್ಟಿದ್ದರು. ಇದರಿಂದ ಯಾರು ಒಳಗೆ ಹೋಗುವುದಕ್ಕೆ ಆಗುವುದಿಲ್ಲ.

ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು

ವ್ಯಂಗೋಕ್ತಿ

”ಯೆಹೂದ್ಯರ ಅರಸನಿಗೆ, ಶುಭವಾಗಲಿ” ಎಂದು ಸೈನಿಕರು ಕೂಗುತ್ತಾ ಯೇಸುವನ್ನು ಹಿಯಾಳಿಸಿದರು. “ನಿಮ್ಮ ಅರಸನನ್ನು ಶಿಲುಬೆಗೆ ಏರಿಸಬೇಕೋ?” ಎಂದು ಪಿಲಾತನು ಯೆಹೂದ್ಯರನ್ನು ಕೇಳುತ್ತಾ ಹಿಯಾಳಿಸಿದನು. “ಯೆಹೂದ್ಯರ ಅರಸ, ನಜರೇತಿನ ಯೇಸು” ಎಂದು ಪಿಲಾತನು ಬರೆದಾಗ ಅವನು ಯೇಸುವನ್ನು ಮತ್ತು ಯೆಹೂದ್ಯರನ್ನು ಹಿಯಾಳಿಸಿರಬಹುದು. (ನೋಡಿರಿ: ವ್ಯಂಗ್ಯ -)

ಈ ಅಧ್ಯಾಯದಲ್ಲಿ ಅನುವಾದಕ್ಕೆ ಸಂಬಂಧಪಟ್ಟು ಕ್ಲಿಷ್ಟ ಭಾಗಗಳು

ಗಬ್ಬಾಥ, ಗೊಲ್ಗೊಥಾ

ಈ ಎರಡು ಪದಗಳು ಇಬ್ರಿ ಭಾಷೆಯ ಪದಗಳು. ಈ ಪದಗಳಿಗೆ “ನೆಲೆಗಟ್ಟು” ಮತ್ತು “ಕಪಾಲದ ಸ್ಥಳ” ಎಂದರ್ಥಗಳುಂಟು. ಲೇಖಕರು ಗ್ರೀಕು ಅಕ್ಷರಗಳನ್ನು ಬರೆಯುವುದರ ಮೂಲಕ ಅವುಗಳ ಶಬ್ದವನ್ನು ಲಿಪ್ಯಂತರಣವನ್ನು ಮಾಡಿದ್ದಾರೆ.

John 19:1

ಹಿಂದಿನ ಅಧ್ಯಾಯದಲ್ಲಿರುವ ಕಥೆಯ ಅಂಶವು ಇಲ್ಲಿ ಮುಂದೆವರಿಯುತ್ತಿದೆ. ಯೇಸು ಯೆಹೂದ್ಯರಿಂದ ಆರೋಪಿಸಲ್ಪಟ್ಟು ಪಿಲಾತನ ಎದುರುಗಡೆ ನಿಂತುಕೊಂಡಿದ್ದಾನೆ.

τότε οὖν ἔλαβεν ὁ Πειλᾶτος τὸν Ἰησοῦν καὶ ἐμαστίγωσεν

ಪಿಲಾತನು ತನ್ನಷ್ಟಕ್ಕೆ ತಾನು ಯೇಸುವನ್ನು ಹೊಡೆಸಿಲಿಲ್ಲ. ಇಲ್ಲಿ “ಪಿಲಾತ” ಎನ್ನುವ ಪದವು ಯೇಸುವನ್ನು ಚಾವಟಿಯಿಂದ ಹೊಡೆಯಬೇಕೆನ್ನುವ ಆದೇಶ ಕೊಟ್ಟಿದ್ದಾನೆನ್ನುವದಕ್ಕೆ ಸೈನಿಕರಿಗಾಗಿ ಉಪಲಕ್ಷಕವಾಗಿ ಹೇಳಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ತದನಂತರ ಯೇಸುವನ್ನು ಚಾವಟಿಯಿಂದ ಹೊಡೆಯಬೇಕೆಂದು ಪಿಲಾತನು ತನ್ನ ಶಿಷ್ಯರಿಗೆ ಆದೇಶ ಕೊಟ್ಟನು” (ನೋಡಿರಿ: ಉಪಲಕ್ಷಣಾಲಂಕಾರ)

John 19:3

χαῖρε, ὁ Βασιλεὺς τῶν Ἰουδαίων

ಕೈಗಳನ್ನು ಎತ್ತಿ ಮಾಡುವ “ನಮಸ್ಕಾರ” ಎನ್ನುವದು ಶುಭವನ್ನು ಕೋರುವ ಪದವು ಕೇವಲ ಮಹಾ ಕೈಸರನಿಗೆ ಮಾತ್ರ ಉಪಯೋಗಿಸುತ್ತಿದ್ದರು. ಯೇಸುವನ್ನು ಹಿಯಾಳಿಸುವುದಕ್ಕೆ ಸೈನಿಕರು ಮುಳ್ಳಿನ ಕಿರೀಟವನ್ನು ಮತ್ತು ನೇರಳೆ ಉಡುಪನ್ನು ಉಪಯೋಗಿಸಿದ್ದರು, ಇದು ವ್ಯಂಗವಾದ ಕ್ರಿಯೆಯಾಗಿದ್ದಿತ್ತು, ಇದರಿಂದ ಅವರು ಯೇಸು ಅರಸನಲ್ಲವೆಂದು ಪರೋಕ್ಷವಾಗಿ ಹೇಳುತ್ತಿದ್ದಾರೆಂದರ್ಥ. (ನೋಡಿರಿ: ವ್ಯಂಗ್ಯ -)

John 19:4

αἰτίαν ἐν αὐτῷ οὐχ εὑρίσκω

ಯೇಸು ಯಾವ ಅಪರಾಧವನ್ನು ಮಾಡಲಿಲ್ಲವೆಂದು ಪಿಲಾತನು ನಂಬಿದ್ದಾನೆಂದು ಹೇಳುವುದಕ್ಕೆ ಪಿಲಾತನು ಇದನ್ನು ಎರಡುಬಾರಿ ಹೇಳಿದ್ದಾನೆ. ಅವನು ಆತನನ್ನು ಶಿಕ್ಷಿಸುವುದಕ್ಕೆ ಇಷ್ಟವಿಲ್ಲ. ಪರ್ಯಾಯ ಅನುವಾದ: “ಆತನನ್ನು ಶಿಕ್ಷಿಸುವುದಕ್ಕೆ ನಾನು ಯಾವ ಕಾರಣವನ್ನು ನೋಡಲಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:5

τὸν ἀκάνθινον στέφανον καὶ τὸ πορφυροῦν ἱμάτιον

ಕಿರೀಟವನ್ನು ಮತ್ತು ನೇರಳೆ ಉಡುಪುಗಳನ್ನು ಕೇವಲ ಅರಸರು ಮಾತ್ರ ಧರಿಸುತ್ತಿದ್ದರು. ಸೈನಿಕರು ಯೇಸುವನ್ನು ಹಿಯಾಳಿಸುವುದಕ್ಕೆ ಈ ವಿಧಾನದಲ್ಲಿ ಯೇಸುವಿಗೆ ವಸ್ತ್ರಗಳನ್ನು ಧರಿಸಿದ್ದರು. ನೋಡಿರಿ ([ಯೋಹಾನ.19:2] (../19/02.ಎಂ.ಡಿ.)).

John 19:7

ἀπεκρίθησαν αὐτῷ οἱ Ἰουδαῖοι

ಇಲ್ಲಿ “ಯೆಹೂದ್ಯರು” ಎನ್ನುವ ಮಾತು ಯೇಸುವನ್ನು ತಿರಸ್ಕಾರ ಮಾಡಿದ ಯೆಹೂದ್ಯರ ನಾಯಕರಿಗಾಗಿ ಉಪಲಕ್ಷಕವಾಗಿ ಹೇಳಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರು ಪಿಲಾತನಿಗೆ ಉತ್ತರ ಕೊಟ್ಟರು” (ನೋಡಿರಿ: ಉಪಲಕ್ಷಣಾಲಂಕಾರ)

ὀφείλει ἀποθανεῖν, ὅτι Υἱὸν Θεοῦ ἑαυτὸν ἐποίησεν

ಯೇಸು ಶಿಲುಬೆಯ ಮರಣ ದಂಡನೆಯನ್ನು ಪಡೆದುಕೊಂಡನು, ಯಾಕಂದರೆ ಆತನು “ದೇವರ ಮಗ” ಎಂಬುದಾಗಿ ಪ್ರಕಟಿಸಿಕೊಂಡಿದ್ದನು.

Υἱὸν Θεοῦ

ಇದು ದೇವರಿಗಾಗಿ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 19:10

ἐμοὶ οὐ λαλεῖς

ಈ ವ್ಯಾಖ್ಯೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಯೇಸು ತನ್ನನ್ನು ತಾನು ಸಮರ್ಥಿಸಿಕೊಳ್ಳುವುದಕ್ಕೆ ಅವಕಾಶವನ್ನು ತೆಗೆದುಕೊಳ್ಳಲಿಲ್ಲವೆಂದು ನೋಡಿ ಪಿಲಾತನು ಬೆರಗಾಗಿ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ಪರ್ಯಾಯ ಅನುವಾದ: “ನೀನು ನನ್ನೊಂದಿಗೆ ಮಾತನಾಡಲು ತಿರಸ್ಕರಿಸುವುದನ್ನು ನೋಡಿ ನಾನು ನಂಬುವುದಕ್ಕೆ ಆಗುತ್ತಿಲ್ಲ!” ಅಥವಾ “ನನಗೆ ಉತ್ತರ ಕೊಡು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

οὐκ οἶδας ὅτι ἐξουσίαν ἔχω ἀπολῦσαί σε, καὶ ἐξουσίαν ἔχω σταυρῶσαί σε

ಒತ್ತಿ ಹೇಳುವುದಕ್ಕೆ ಈ ವ್ಯಾಖ್ಯೆಯು ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪರ್ಯಾಯ ಅನುವಾದ: “ನಾನು ನಿನ್ನನ್ನು ಬಿಡುಗಡೆ ಮಾಡಬಹುದು ಅಥವಾ ನಿನ್ನನ್ನು ಶಿಲುಬೆಗೆ ಏರಿಸುವುದಕ್ಕೆ ನನ್ನ ಸೈನಿಕರಿಗೆ ಆದೇಶ ಕೊಡಬಹುದು ಎಂದು ನೀನು ತಿಳಿದುಕೊಳ್ಳಬೇಕು!” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

ἐξουσίαν

ಇಲ್ಲಿ “ಅಧಿಕಾರ” ಎನ್ನುವ ಪದವು ಏನಾದರೊಂದು ನಡೆಯುವುದಕ್ಕೆ ಅಥವಾ ಏನಾದರೊಂದನ್ನು ಮಾಡುವ ಸಾಮರ್ಥ್ಯವನ್ನು ಸೂಚಿಸುವ ಪರ್ಯಾಯ ಪದವಾಗಿರುತ್ತದೆ. (ನೋಡಿರಿ: ಲಕ್ಷಣಾಲಂಕಾರ)

John 19:11

οὐκ εἶχες ἐξουσίαν κατ’ ἐμοῦ οὐδεμίαν, εἰ μὴ ἦν δεδομένον σοι ἄνωθεν

ನೀವು ಈ ದ್ವಂದ್ವ ಅನಾನುಕುಲ ಮಾತುಗಳನ್ನು ಸಕಾರಾತ್ಮಕವಾಗಿ ಮತ್ತು ಕ್ರಿಯಾತ್ಮಕ ರೂಪಕವಾಗಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನನಗೆ ವಿರುದ್ಧವಾಗಿ ನೀನು ನಡೆದುಕೊಳ್ಳುತ್ತಿದ್ದೀಯೆಂದರೆ ಅದು ದೇವರು ನಿನಗೆ ಅನುಮತಿ ಕೊಟ್ಟಿದ್ದಾರೆ ಮಾತ್ರ ನಡೆಯುತ್ತದೆ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು ಮರಿಯು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ἄνωθεν

ಇದು ದೇವರನ್ನು ಸೂಚಿಸುವ ಗೌರವ ಪೂರ್ವಕವಾದ ವಿಧಾನವಾಗಿರುತ್ತದೆ.

παραδούς μέ

ಈ ಮಾತಿಗೆ ಇಲ್ಲಿ ಶತ್ರುವನ್ನು ಒಪ್ಪಿಸಿಕೊಡುವುದು ಎಂದರ್ಥ.

John 19:12

ἐκ τούτου

ಇಲ್ಲಿ “ಈ ಉತ್ತರ” ಎನ್ನುವ ಮಾತು ಯೇಸುವಿನ ಉತ್ತರವನ್ನು ಸೂಚಿಸುವ ಮಾತಾಗಿರುತ್ತದೆ. ಪರ್ಯಾಯ ಅನುವಾದ: “ಪಿಲಾತ ಯೇಸುವಿನ ಉತ್ತರವನ್ನು ಕೇಳಿದಾಗ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ὁ Πειλᾶτος ἐζήτει ἀπολῦσαι αὐτόν

ವಾಸ್ತವಿಕವಾಗಿ “ಪ್ರಯತ್ನ” ಎನ್ನುವ ಪದವು ಪಿಲಾತನು “ಕಷ್ಟಪಟ್ಟು” ಪ್ರಯತ್ನ ಮಾಡಿದನು ಅಥವಾ ಯೇಸುವನ್ನು ಬಿಡಿಸುವುದಕ್ಕೆ “ಹೆಚ್ಚಹೆಚ್ಚಾಗಿ ಪ್ರಯತ್ನಪಟ್ಟನು” ಎಂಬುವುದನ್ನು ತೋರಿಸುತ್ತದೆ. ಪರ್ಯಾಯ ಅನುವಾದ: “ಯೇಸುವನ್ನು ಬಿಡಿಸುವುದಕ್ಕೆ ಆತನು ತುಂಬಾ ಹೆಚ್ಚಾಗಿ ಪ್ರಯತ್ನಪಟ್ಟನು” ಅಥವಾ “ಯೇಸುವನ್ನು ಬಿಡಿಸುವುದಕ್ಕೆ ಆತನು ತುಂಬಾಸಲ ಪದೇ ಪದೇ ಪ್ರಯತ್ನ ಮಾಡಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

οἱ δὲ Ἰουδαῖοι ἐκραύγασαν

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಯೇಸುವನ್ನು ತಿರಸ್ಕರಿಸಿದ ಯೆಹೂದ್ಯ ನಾಯಕರಿಗಾಗಿ ಹೇಳಲ್ಪಟ್ಟಿರುವ ಉಪಲಕ್ಷಕ ಪದವಾಗಿರುತ್ತದೆ. ಮೂಲ ಭಾಷೆಯಲ್ಲಿ “ಕೂಗಿ ಹೇಳಿದರು” ಎನ್ನುವ ಮಾತು ಅವರು ಗಟ್ಟಿಯಾಗಿ ಕೂಗಿ ಹೇಳಿದರು ಅಥವಾ ಪದೇ ಪದೇ ಕೂಗಿ ಹೇಳಿದರು ಎನ್ನುವದನ್ನು ತೋರಿಸುತ್ತದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು ಕೂಗುತ್ತಾ ಇದ್ದರು” (ನೋಡಿರಿ: ಉಪಲಕ್ಷಣಾಲಂಕಾರ ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

οὐκ εἶ φίλος τοῦ Καίσαρος

ನೀವು ಕೈಸರನನ್ನು ತಿರಸ್ಕರಿಸುತ್ತಿದ್ದೀರಿ ಅಥವ್ “ನೀವು ಚಕ್ರವರ್ತಿಯನ್ನು ಧಿಕ್ಕರಿಸುತ್ತಿದ್ದೀರಿ”

βασιλέα ἑαυτὸν ποιῶν

ಆತನು ಅರಸನೆಂದು ಪ್ರಕಟಿಸಿಕೊಂಡಿದ್ದನು

John 19:13

ἤγαγεν ἔξω τὸν Ἰησοῦν

ಇಲ್ಲಿ “ಅವನು” ಎನ್ನುವ ಪದವು ಪಿಲಾತನನ್ನು ಸೂಚಿಸುತ್ತದೆ ಮತ್ತು ಇದು “ಪಿಲಾತನು ಸೈನಿಕರಿಗೆ ಆದೇಶಿಸಿರುವ” ಹೇಳಿಕೆಗೆ ಉಪಲಕ್ಷಕವಾಗಿರುತ್ತದೆ. ಪರ್ಯಾಯ ಅನುವಾದ: “ಸೈನಿಕರು ಆತನನ್ನು ಹೊರಗೆ ಕರೆದುಕೊಂಡು ಬರಬೇಕೆಂದು ಅವನು ಆದೇಶಿಸಿದನು” (ನೋಡಿರಿ: ಉಪಲಕ್ಷಣಾಲಂಕಾರ)

ἐκάθισεν

ಪ್ರಸಿದ್ಧಿ ಹೊಂದದ ಜನರು ನಿಂತಿಕೊಂಡಿರುವಾಗ, ಅಧೀಕೃತ ಕಾರ್ಯವನ್ನು ಅವರು ಪ್ರದರ್ಶಿಸಿದಾಗ ಪಿಲಾತನಂತಹ ಪ್ರಮುಖ ಜನರು ಕೆಳಗೆ ಕುಳಿತುಕೊಂಡರು.

ἐπὶ βήματος

ಪಿಲಾತನು ಅಧೀಕೃತ ತೀರ್ಪನ್ನು ಮಾಡುವಾಗ ಪಿಲಾತನಂತಹ ವ್ಯಕ್ತಿಗಳು ಕುಳಿತುಕೊಂಡಿರುವ ವಿಶೇಷವಾದ ಆಸನವಿದು. ಈ ಕ್ರಿಯೆಯನ್ನು ವಿವರಿಸುವುದಕ್ಕೆ ನಿಮ್ಮ ಭಾಷೆಯಲ್ಲಿ ಪ್ರತ್ಯೇಕವಾದ ವಿಧಾನವಿದ್ದಲ್ಲಿ, ಅದನ್ನು ಇಲ್ಲಿ ಉಪಯೋಗಿಸಬಹುದು.

εἰς τόπον λεγόμενον Λιθόστρωτον…δὲ

ಇದು ಪ್ರಮುಖ ವ್ಯಕ್ತಿಗಳು ಮಾತ್ರ ಹೋಗುವುದಕ್ಕೆ ಅನುಮತಿ ಕೊಡುವ ವಿಶೇಷವಾದ ಕಲ್ಲಿನ ವೇದಿಕೆಯಾಗಿದ್ದಿತ್ತು. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ನೆಲೆಗಟ್ಟು ಎಂದು ಕರೆಯುವ ಸ್ಥಳದಲ್ಲಿ, ಆದರೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Ἑβραϊστὶ

ಇದು ಇಸ್ರಾಯೇಲ್ ಜನರು ಮಾತನಾಡುವ ಭಾಷೆಯನ್ನು ಸೂಚಿಸುತ್ತದೆ.

John 19:14

ಸ್ವಲ್ಪಮಟ್ಟಿಗೆ ಸಮಯ ಕಳೆದುಹೋಗಿದೆ, ಈಗ ಆರು ಗಂಟೆ, ಯೇಸುವನ್ನು ಶಿಲುಬೆಗೆ ಏರಿಸಬೇಕೆಂದು ಪಿಲಾತನು ತನ್ನ ಸೈನಿಕರಿಗೆ ಆದೇಶಿಸಿದನು.

δὲ

ಈ ಮಾತು ಕಥೆಯ ಸಾಲಿನಲ್ಲಿ ವಿರಾಮವನ್ನು ಕೊಡುತ್ತಿದೆ, ಆದ್ದರಿಂದ ಯೋಹಾನನು ಮುಂಬರುವಂತಹ ಪಸ್ಕ ಮತ್ತು ಆ ದಿನದ ಕಾಲದ ಬಗ್ಗೆ ಸಮಾಚಾರವನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ὥρα…ἕκτη

ಮಧ್ಯಾಹ್ನ ವೇಳೆಯ ಕುರಿತಾಗಿ

λέγει τοῖς Ἰουδαίοις

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರ ನಾಯಕರನ್ನು ಸೂಚಿಸುವ ಉಪಲಕ್ಷಕವಾಗಿರುತ್ತದೆ. ಪರ್ಯಾಯ ಅನುವಾದ: “ಪಿಲಾತನು ಯೆಹೂದ್ಯರ ನಾಯಕರಿಗೆ ಹೇಳಿದನು” (ನೋಡಿರಿ: ಉಪಲಕ್ಷಣಾಲಂಕಾರ)

John 19:15

τὸν βασιλέα ὑμῶν σταυρώσω

ಇಲ್ಲಿ “ನಾನು” ಎನ್ನುವ ಪದ ಶಿಲುಬೆಗೇರಿಸುವ ವಿಧಾನವನ್ನು ನಡೆಸುವ ಪಿಲಾತನ ಸೈನಿಕರನ್ನು ಸೂಚಿಸುವ ಉಪಲಕ್ಷಕವಾಗಿರುತ್ತದೆ. ಪರ್ಯಾಯ ಅನುವಾದ: “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿ, ಮೊಳೆಗಳಿಂದ ಹೊಡೆಯುವದಕ್ಕೆ ನನ್ನ ಸೈನಿಕರಿಗೆ ಹೇಳುವುದಕ್ಕೆ ನೀವು ನಿಜವಾಗಿಯೂ ಬಯಸುತ್ತಿದ್ದೀರೋ?” (ನೋಡಿರಿ: ಉಪಲಕ್ಷಣಾಲಂಕಾರ)

John 19:16

τότε…παρέδωκεν αὐτὸν αὐτοῖς, ἵνα σταυρωθῇ

ಇಲ್ಲಿ ಯೇಸುವನ್ನು ಶಿಲುಬೆಗೆ ಹಾಕುವುದಕ್ಕೆ ಪಿಲಾತನು ತನ್ನ ಸೈನಿಕರಿಗೆ ಆದೇಶವನ್ನು ಕೊಡುತ್ತಿದ್ದಾನೆ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. “ಆದ್ದರಿಂದ ಯೇಸುವನ್ನು ಶಿಲುಬೆಗೆ ಹಾಕುವುದಕ್ಕೆ ಪಿಲಾತನು ತನ್ನ ಸೈನಿಕರಿಗೆ ಆದೇಶ ಕೊಟ್ಟನು” (ನೋಡಿರಿ:ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:17

εἰς τὸν λεγόμενον, Κρανίου Τόπον

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “’ಕಪಾಲ ಸ್ಥಳ’ ಎಂದು ಜನರೆಲ್ಲರು ಕರೆಯುವ ಸ್ಥಳಕ್ಕೆ,” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ὃ λέγεται Ἑβραϊστὶ, Γολγοθᾶ

ಇಬ್ರಿ ಎನ್ನುವದು ಇಸ್ರಾಯೇಲ್ಯರು ಮಾತನಾಡುವ ಭಾಷೆಯಾಗಿರುತ್ತದೆ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಇಬ್ರಿ ಭಾಷೆಯಲ್ಲಿ ಅವರು ‘ಗೊಲ್ಗೊಥಾ’ ಎಂದು ಕರೆಯುತ್ತಾರೆ.”

John 19:18

μετ’ αὐτοῦ ἄλλους δύο

ಇದು ಪದಲೋಪದ ಚಿಹ್ನೆಯಾಗಿರುತ್ತದೆ. ಅನ್ವಯಿಸಿಕೊಳ್ಳಬಹುದಾದ ಮಾತುಗಳನ್ನು ಸೇರಿಸಿಕೊಂಡು ನೀವು ಇದನ್ನು ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಅವರು ಇನ್ನೂ ಇಬ್ಬರು ಅಪರಾಧಿಗಳನ್ನು ಶಿಲುಬೆಗಳಿಗೆ ಏರಿಸಿದರು” (ನೋಡಿರಿ: ಪದಲೋಪ)

John 19:19

ἔγραψεν…καὶ τίτλον ὁ Πειλᾶτος, καὶ ἔθηκεν ἐπὶ τοῦ σταυροῦ

ಇಲ್ಲಿ “ಪಿಲಾತ” ಎನ್ನುವ ಪದವು ಚಿಹ್ನೆಯ ರೂಪದಲ್ಲಿ ಬರೆದಿರುವ ವ್ಯಕ್ತಿಗಾಗಿ ಉಪಲಕ್ಷಕವಾಗಿ ಹೇಳಲ್ಪಟ್ಟಿರುತ್ತದೆ. ಇಲ್ಲಿ “ಶಿಲುಬೆಯ ಮೇಲೆ” ಎನ್ನುವ ಮಾತು ಯೇಸುವಿನ ಶಿಲುಬೆಯನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಪಿಲಾತನು ಚಿಹ್ನೆಯಾಗಿ ಬರೆಯುವುದಕ್ಕೆ ಮತ್ತು ಅದನ್ನು ಯೇಸುವಿನ ಶಿಲುಬೆಗೆ ಅಂಟಿಸಬೇಕೆಂದು ಬೇರೊಬ್ಬರಿಗೆ ಆಜ್ಞಾಪಿಸಿದನು” (ನೋಡಿರಿ: ಉಪಲಕ್ಷಣಾಲಂಕಾರ)

ἦν…γεγραμμένον, Ἰησοῦς ὁ Ναζωραῖος, ὁ Βασιλεὺς τῶν Ἰουδαίων.

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದ್ದರಿಂದ ಆ ವ್ಯಕ್ತಿ ಈ ಮಾತನ್ನು ಬರೆದಿದ್ದಾನೆ: ಯೆಹೂದ್ಯರ ಅರಸ ನಜರೇತಿನ ಯೇಸು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:20

ὁ τόπος…ὅπου ἐσταυρώθη ὁ Ἰησοῦς

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಸೈನಿಕರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

καὶ ἦν γεγραμμένον Ἑβραϊστί, Ῥωμαϊστί, Ἑλληνιστί

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಚಿಹ್ನೆಯನ್ನು ತಯಾರು ಮಾಡಿದ ವ್ಯಕ್ತಿ 3 ಭಾಷೆಗಳಲ್ಲಿ ಆ ಮಾತುಗಳನ್ನು ಬರೆದಿದ್ದಾನೆ: ಇಬ್ರಿ, ಲ್ಯಾಟಿನ್ ಮತ್ತು ಗ್ರೀಕ್” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Ῥωμαϊστί

ಇದು ರೋಮಾ ಸರ್ಕಾರದ ಭಾಷೆಯಾಗಿದ್ದಿತ್ತು.

John 19:21

ἔλεγον οὖν τῷ Πειλάτῳ οἱ ἀρχιερεῖς τῶν Ἰουδαίων

ಚಿಹ್ನೆಯ ಫಲಕದ ಮೇಲೆ ಬರೆದಿರುವ ಈ ಮಾತುಗಳ ಕುರಿತಾಗಿ ಆತನಿಗೆ ಪ್ರತಿಭಟನೆ ಮಾಡುವುದಕ್ಕೆ ಪ್ರಧಾನ ಯಾಜಕರು ಪಿಲಾತನ ಅರಮನೆಗೆ ಹೋಗಬೇಕಾಗಿದ್ದಿತ್ತು. ಪರ್ಯಾಯ ಅನುವಾದ: “ಪ್ರಧಾನ ಯಾಜಕರು ಪಿಲಾತನ ಬಳಿಗೆ ತಿರುಗಿ ಹೋಗಿ, ಹೇಳಿದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:22

ὃ γέγραφα, γέγραφα

ಚಿಹ್ನೆಯ ಫಲಕದ ಮೇಲಿರುವ ಮಾತುಗಳನ್ನು ಮಾರ್ಪಡಿಸುವುದಕ್ಕೆ ಆಗುವುದಿಲ್ಲ ಎಂದು ಪಿಲಾತನು ಹೇಳಿದನು. ಪರ್ಯಾಯ ಅನುವಾದ: “ಬರೆಯಬೇಕೆಂದು ನಾನು ಬಯಸಿದ್ದನ್ನೇ ನಾನು ಬರೆದಿದ್ದೇನೆ, ಮತ್ತು ನಾನು ಅದನ್ನು ಮಾರ್ಪಡಿಸುವುದಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:23

ಈ ಸಂಘಟನೆಯು ಲೇಖನವನ್ನು ಹೇಗೆ ನೆರವೇರಿಸುತ್ತದೆಯೆಂದು ಯೋಹಾನನು ಹೇಳುವಾಗ 24ನೇ ವಚನದ ಕೊನೆಯ ಭಾಗದಲ್ಲಿ ಮುಖ್ಯ ಕಥೆಯ ಸಾಲಿನಲ್ಲಿ ವಿರಾಮವು ಬರುತ್ತದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

καὶ τὸν χιτῶνα

ಮತ್ತು ಅವರು ಆತನ ಒಳ ಉಡುಪುಗಳನ್ನು ಕೂಡ ತೆಗೆದುಕೊಂಡರು. ಸೈನಿಕರು ಆ ಒಳ ಉಡುಪುಗಳನ್ನು ಪಕ್ಕಕ್ಕೆ ಇಟ್ಟರು, ಅವುಗಳನ್ನು ವಿಂಗಡಣೆ ಮಾಡಲಿಲ್ಲ. ಪರ್ಯಾಯ ಅನುವಾದ: “ಅವರು ತನ್ನ ಒಳ ಉಡುಪುಗಳನ್ನು ಪಕ್ಕಕ್ಕೆ ಇಟ್ಟರು” (ನೋಡಿರಿ; ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:24

λάχωμεν περὶ αὐτοῦ, τίνος ἔσται

ಸೈನಿಕರು ಚೀಟು ಹಾಕಿದರು ಮತ್ತು ಗೆದ್ದವನು ಆ ಅಂಗಿಯನ್ನು ಪಡೆದುಕೊಂಡನು. ಪರ್ಯಾಯ ಅನುವಾದ: “ಒಳ ಉಡುಪುಗಳಿಗಾಗಿ ನಾವು ಚೀಟು ಹಾಕೋಣ, ಗೆದ್ದವನು ಅದನ್ನು ತೆಗೆದುಕೊಳ್ಳಲಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἵνα ἡ Γραφὴ πληρωθῇ ἡ λέγουσα

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಇದು ಹೇಳಲ್ಪಟ್ಟಿರುವ ಲೇಖನವು ನೆರವೇರುವಂತೆ ಮಾಡಿತು” ಅಥವಾ “ಈ ಸಂಘಟನೆಯು ಹೇಳಲ್ಪಟ್ಟಿರುವ ಲೇಖನವು ನಿಜವಾಗುವಂತೆ ಮಾಡಿತು”

λάχωμεν

ಇದು ಅವರವರಲ್ಲೇ ಯೇಸುವಿನ ಬಟ್ಟೆಗಳನ್ನು ಸೈನಿಕರು ಹೇಗೆ ಪಾಲು ಮಾಡಿಕೊಂಡರೆಂಬುವದರ ಕುರಿತಾಗಿ ಹೇಳಲ್ಪಟ್ಟಿದೆ. ಪರ್ಯಾಯ ಅನುವಾದ: “ಅವರು ಚೀಟು ಹಾಕಿಕೊಂಡರು”

John 19:26

τὸν μαθητὴν…ὃν ἠγάπα

ಇಲ್ಲಿ ಇರುವುದು ಈ ಸುವಾರ್ತೆಯನ್ನು ಬರೆದ ಲೇಖಕರು.

γύναι, ἰδοὺ, ὁ υἱός σου

ಇಲ್ಲಿ “ಮಗ” ಎನ್ನುವ ಪದವು ರೂಪಕಲಂಕಾರವಾಗಿರುತ್ತದೆ. ಯೇಸು ತನ್ನ ಶಿಷ್ಯನಾದ ಯೋಹಾನನು ತನ್ನ ತಾಯಿಗೆ ಮಗನಾಗಿರಬೇಕೆಂದು ಬಯಸಿದನು. ಪರ್ಯಾಯ ಅನುವಾದ: “ಅಮ್ಮಾ, ಇಲ್ಲಿರುವ ವ್ಯಕ್ತಿ ನಿನಗೆ ಮಗನಾಗಿರುವನು” (ನೋಡಿರಿ: ರೂಪಕ ಅಲಂಕಾರ)

John 19:27

ἴδε, ἡ μήτηρ σου

ಇಲ್ಲಿ “ಅಮ್ಮಾ” ಎನ್ನುವ ಪದವು ರೂಪಕಲಂಕಾರವಾಗಿರುತ್ತದೆ. ಯೇಸು ತನ್ನ ತಾಯಿಯು ತನ್ನ ಶಿಷ್ಯನಾಗಿರುವ ಯೋಹಾನನಿಗೆ ತಾಯಿಯಾಗಿರಬೇಕೆಂದು ಬಯಸಿದನು. ಪರ್ಯಾಯ ಅನುವಾದ: “ನಿನ್ನ ಸ್ವಂತ ತಾಯಿಯಂತೆ ಈ ಅಮ್ಮನನ್ನು ಸ್ವೀಕರಿಸು” (ನೋಡಿರಿ: ರೂಪಕ ಅಲಂಕಾರ)

ἀπ’ ἐκείνης τῆς ὥρας

ಆ ಕ್ಷಣದಿಂದಲೇ

John 19:28

εἰδὼς…ὅτι ἤδη πάντα τετέλεσται

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಈ ಭೂಲೋಕದಲ್ಲಿ ಮಾಡುವುದಕ್ಕೆ ದೇವರು ತನ್ನನ್ನು ಕಳುಹಿಸಿದ ಪ್ರತಿಯೊಂದನ್ನು ಮಾಡಿದ್ದೇನೆಂದು ಆತನಿಗೆ ಗೊತ್ತು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:29

σκεῦος ἔκειτο ὄξους μεστόν

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆಲ್ಲಿ ಯಾರೋ ಹುಳಿರಸ ತುಂಬಿದ ಪಾತ್ರೆಯನ್ನು ಇಟ್ಟಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ὄξους

ಕಹಿಯಾದ ದ್ರಾಕ್ಷೆರಸ

περιθέντες

ಇಲ್ಲಿ “ಅವರು” ಎನ್ನುವ ಪದವು ರೋಮಾ ಸೈನಿಕರನ್ನು ಸೂಚಿಸುವುದು.

σπόγγον

ನೆನೆತ ಮಾಡಿಕೊಳ್ಳುವ ಒಂದು ಚಿಕ್ಕ ವಸ್ತುವಿನಿಂದ ಹೆಚ್ಚಾಗಿ ದ್ರವವನ್ನು ಹಿಡಿದುಕೊಳ್ಳುವರು

ὑσσώπῳ περιθέντες

ಹಿಸ್ಸೋಪು ಎಂದು ಕರೆಯಲ್ಪಡುವ ಒಂದು ಚಿಕ್ಕ ಗಿಡದ ಕೊಂಬೆ

John 19:30

κλίνας τὴν κεφαλὴν, παρέδωκεν τὸ πνεῦμα

ಯೇಸು ತನ್ನ ಆತ್ಮವನ್ನು ದೇವರಿಗೆ ಒಪ್ಪಿಸಿಕೊಟ್ಟರು ಎನ್ನುವದನ್ನು ಯೋಹಾನನು ನಮಗೆ ಇಲ್ಲಿ ತಿಳಿಯಪಡಿಸುತ್ತಿದ್ದಾರೆ. ಪರ್ಯಾಯ ಅನುವಾದ: “ಆತನು ತಲೆಯನ್ನು ಬಾಗಿಸಿ, ತನ್ನ ಆತ್ಮವನ್ನು ದೇವರಿಗೆ ಒಪ್ಪಿಸಿಕೊಟ್ಟನು” ಅಥವಾ “ಆತನು ತನ್ನ ತಲೆಯನ್ನು ಬಾಗಿಸಿ, ಮರಣ ಹೊಂದಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:31

οἱ…Ἰουδαῖοι

ಇಲ್ಲಿ “ಯೆಹೂದ್ಯರು”ಎನ್ನುವ ಪದವು ಯೇಸುವನ್ನು ತಿರಸ್ಕಾರ ಮಾಡಿರುವ ಯೆಹೂದ್ಯರ ನಾಯಕರಿಗೆ ಉಪಲಕ್ಷಕವಾಗಿ ಹೇಳಲ್ಪಟ್ಟಿರುತ್ತದೆ. ಪರ್ಯಾಯ ಅನುವಾದ: “ಯೆಹೂದ್ಯರ ನಾಯಕರು” (ನೋಡಿರಿ: ಉಪಲಕ್ಷಣಾಲಂಕಾರ)

παρασκευὴ

ಪಸ್ಕಗೆ ಮುಂಚಿತವಾಗಿ ಜನರು ಪಸ್ಕ ಹಬ್ಬಕ್ಕಾಗಿ ಆಹಾರವನ್ನು ಸಿದ್ಧಪಡಿಸುವ ಸಮಯವಿದು.

ἵνα κατεαγῶσιν αὐτῶν τὰ σκέλη, καὶ ἀρθῶσιν

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಶಿಲುಬೆಗೆ ಹಾಕಲ್ಪಟ್ಟ ಮನುಷ್ಯರ ಕಾಲುಗಳನ್ನು ಮುರಿದು ಮತ್ತು ತಮ್ಮ ದೇಹಗಳನ್ನು ಶಿಲುಬೆಗಳಿಂದ ಕೆಳಕ್ಕೆ ಇಳಿಸುವುದು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:32

τοῦ συνσταυρωθέντος αὐτῷ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯೇಸುವಿನ ಹತ್ತಿರ ಶಿಲುಬೆಗೆ ಹಾಕಲ್ಪಟ್ಟವರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:35

ὁ ἑωρακὼς

ಈ ವಾಕ್ಯವು ಕಥೆಗೆ ಹಿನ್ನೆಲೆಯ ಸಮಾಚಾರವನ್ನು ಕೊಡುತ್ತದೆ. ಆತನು ಅಲ್ಲಿದ್ದಾನೆಂದು ಮಾತು ಆತನು ಬರೆದಿರುವ ಪ್ರತಿಯೊಂದನ್ನು ನಾವು ನಂಬಬಹುದೆಂದು ಯೋಹಾನನು ಓದುಗಾರರಿಗೆ ಹೇಳುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

μεμαρτύρηκεν, καὶ ἀληθινὴ αὐτοῦ ἐστιν ἡ μαρτυρία

“ಸಾಕ್ಷಿ” ಹೇಳುವುದು ಎಂದರೆ ಒಬ್ಬ ವ್ಯಕ್ತಿಯು ನೋಡಿದ ವಿಷಯಗಳ ಕುರಿತಾಗಿ ಪ್ರಕಟಿಸುವುದು ಎಂದರ್ಥ. ಪರ್ಯಾಯ ಅನುವಾದ: “ಆತನು ನೋಡಿದ ವಿಷಯಗಳ ಕುರಿತಾಗಿ ಸತ್ಯವನ್ನು ಹೇಳಿದ್ದಾನೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἵνα καὶ ὑμεῖς πιστεύητε

ಇಲ್ಲಿ “ನಂಬಿಕೆ” ಎಂದರೆ ಒಬ್ಬ ವ್ಯಕ್ತಿ ಯೇಸುವಿನಲ್ಲಿ ನಂಬಿಕೆಯನ್ನು ಇಡುವುದು ಎಂದರ್ಥ. ಪರ್ಯಾಯ ಅನುವಾದ: “ನೀವು ಕೂಡ ನಿಮ್ಮ ನಂಬಿಕೆಯನ್ನು ಯೇಸುವಿನಲ್ಲಿ ಇಡುತ್ತೀರಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:36

ಈ ಸಂಘಟನೆಗಳೆಲ್ಲವು ಲೇಖನಗಳನ್ನು ಹೇಗೆ ನೆರವೇರಿಕೆ ಮಾಡಿದವು ಎನ್ನುವುದರ ಕುರಿತಾಗಿ ಯೋಹಾನನು ಹೇಳುತ್ತಿರುವಾಗ ಈ ವಚನಗಳಲ್ಲಿ ಮುಖ್ಯ ಕಥೆ ಸಾಲಿನಲ್ಲಿ ಒಂದು ವಿರಾಮವು ಬರುತ್ತದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἵνα ἡ Γραφὴ πληρωθῇ

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಲೇಖನ ಭಾಗಗಳಲ್ಲಿ ಬರೆಯಲ್ಪಟ್ಟಿರುವ ಮಾತುಗಳನ್ನು ನೆರವೇರಿಸುವುದಕ್ಕೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ὀστοῦν οὐ συντριβήσεται αὐτοῦ

ಇದು ಕೀರ್ತನೆ 34 ರಿಂದ ತೆಗೆಯಲ್ಪಟ್ಟಿರುವ ಉಲ್ಲೇಖನ. ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆತನ ಎಲುಬುಗಳನ್ನು ಯಾರೂ ಮುರಿಯುವುದಕ್ಕೆ ಸಾಧ್ಯವಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:37

ὄψονται εἰς ὃν ἐξεκέντησαν

ಇದು ಜೆಕರ್ಯಾ 12ನೇ ಅಧ್ಯಾಯದಿಂದ ತೆಗೆದ ಉಲ್ಲೇಖನವಾಗಿರುತ್ತದೆ.

John 19:38

Ἰωσὴφ ὁ ἀπὸ Ἁριμαθαίας

ಅರಿಮಥಾಯ ಎನ್ನುವುದು ಒಂದು ಚಿಕ್ಕ ಪಟ್ಟಣ. ಪರ್ಯಾಯ ಅನುವಾದ: “ಅರಿಮಥಾಯ ಎನ್ನುವ ಪಟ್ಟಣದಿಂದ ಬಂದ ಯೋಸೇಫ” (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

διὰ τὸν φόβον τῶν Ἰουδαίων

ಇಲ್ಲಿ “ಯೆಹೂದ್ಯರು” ಎಂದರೆ ಯೇಸುವನ್ನು ತಿರಸ್ಕಾರ ಮಾಡಿದ ಯೆಹೂದ್ಯರ ನಾಯಕರಿಗಾಗಿ ಉಪಯೋಗಿಸಿದ ಉಪಲಕ್ಷಕ. ಪರ್ಯಾಯ ಅನುವಾದ: “ಯೆಹೂದ್ಯ ನಾಯಕರ ಭಯಕ್ಕಾಗಿ” (ನೋಡಿರಿ: ಉಪಲಕ್ಷಣಾಲಂಕಾರ)

ἵνα ἄρῃ τὸ σῶμα τοῦ Ἰησοῦ

ಅರಿಮಥಾಯದ ಯೋಸೇಫನು ಯೇಸು ದೇಹವನ್ನು ಸಮಾಧಿ ಮಾಡಬೇಕೆಂದಿದ್ದನೆಂದು ಯೋಹಾನ ಇಲ್ಲಿ ತಿಳಿಸುತ್ತಿದ್ದಾರೆ. ಪರ್ಯಾಯ ಅನುವಾದ: “ಸಮಾಧಿ ಮಾಡುವುದಕ್ಕಾಗಿ ಶಿಲುಬೆಯಿಂದ ಯೇಸುವಿನ ದೇಹವನ್ನು ಇಳಿಸುವುದಕ್ಕಾಗಿ ಅನುಮತಿ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 19:39

Νικόδημος

ಯೇಸುವನ್ನು ನಂಬಿದ ಫರಿಸಾಯರಲ್ಲಿ ನಿಕೊದೇಮನು ಒಬ್ಬನಾಗಿದ್ದನು. ಯೋಹಾನ.3:1 ವಚನ ದಲ್ಲಿ ಇದನ್ನು ಹೇಗೆ ಅನುವಾದ ಮಾಡಿರುವಿರಿ ಎಂದು ನೋಡಿರಿ.

σμύρνης καὶ ἀλόης

ಸಮಾಧಿ ಮಾಡುವುದಕ್ಕೆ ದೇಹವನ್ನು ಸಿದ್ಧಗೊಳಿಸಲು ಜನರು ಸಾಧಾರಣವಾಗಿ ಜನರು ಉಪಯೋಗಿಸುವ ರಕ್ತ ಬೋಳ ಅಗರುಗಳಾಗಿದ್ದವು.

ὡς λίτρας ἑκατόν

ನೀವು ಇದನ್ನು ಆಧುನಿಕ ಅಳತೆಗೆ ಮಾರ್ಪಡಿಸಬಹುದು. “ಲಿಟ್ರಾ” ಎನ್ನುವುದು ಕಿಲೋಗ್ರಾಮಿನಲ್ಲಿ ಮೂರು ಭಾಗದಷ್ಟು ಇರುತ್ತದೆ. ಪರ್ಯಾಯ ಅನುವಾದ: “ಒಜೆಯಲ್ಲಿ 33 ಕಿಲೋಗ್ರಾಮುಗಳಷ್ಟು” ಅಥವಾ “ಸುಮಾರು ಮೂವತ್ತು ಮೂರು ಕಿಲೋಗ್ರಾಮುಗಳಷ್ಟು ತೂಕ” (ನೋಡಿರಿ: ಸತ್ಯವೇದದಲ್ಲಿನ ತೂಕಗಳು.)

ἑκατόν

100 (ನೋಡಿರಿ: ಸಂಖ್ಯೆಗಳು.)

John 19:41

ἦν δὲ ἐν τῷ τόπῳ ὅπου ἐσταυρώθη κῆπος, καὶ ἐν τῷ κήπῳ μνημεῖον καινόν, ἐν ᾧ οὐδέπω οὐδεὶς ἦν τεθειμένος

ಇಲ್ಲಿ ಯೋಹಾನನು ಯೇಸುವನ್ನು ಸಮಾಧಿ ಮಾಡಿದ ಸ್ಥಳದ ಕುರಿತಾದ ಹಿನ್ನೆಲೆಯ ಸಮಾಚಾರವನ್ನು ಕೊಡುವ ಕ್ರಮದಲ್ಲಿ ಕಥೆಯ ಸಾಲಿನಲ್ಲಿ ವಿರಾಮವನ್ನು ಕೊಡುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

ἦν δὲ ἐν τῷ τόπῳ ὅπου ἐσταυρώθη κῆπος

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಈಗ ಒಂದು ತೋಟವಿದೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ἐν ᾧ οὐδέπω οὐδεὶς ἦν τεθειμένος

ನೀವು ಇದನ್ನು ಕ್ರಿಯಾತ್ಮಕ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಜನರು ಯಾರನ್ನೂ ಸಮಾಧಿ ಮಾಡದ ಸ್ಥಳದಲ್ಲಿ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 19:42

διὰ τὴν παρασκευὴν τῶν Ἰουδαίων

ಯೆಹೂದ್ಯರ ಧರ್ಮಶಾಸ್ತ್ರದ ಪ್ರಕಾರ ಶುಕ್ರವಾರ ದಿನದಂದು ಯಾರೂ ಬಿಸಿಲಿಗೆ ಕೆಲಸ ಮಾಡುವುದಿಲ್ಲ. ಇದು ಸಬ್ಬಾತ್ ಮತ್ತು ಪಸ್ಕದ ಆರಂಭವಾಗಿದ್ದಿತ್ತು. ಪರ್ಯಾಯ ಅನುವಾದ: “ಪಸ್ಕವು ಸಾಯಂಕಾಲದ ಸಮಯದಲ್ಲಿ ಆರಂಭವಾಗುತ್ತದೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20

ಯೋಹಾನನು 20 ಸಾಧಾರಣ ಅಂಶಗಳು

ಈ ಅಧ್ಯಾಯದಲ್ಲಿರುವ ವಿಶೇಷವಾದ ಉದ್ದೇಶ್ಯಗಳು

ಸಮಾಧಿ

(ಯೋಹಾನನು.20:1) ವಚನದಲ್ಲಿ ಯೇಸು ಸಮಾಧಿ ಮಾಡಲ್ಪಟ್ಟ ಸಮಾಧಿಯು ಶ್ರೀಮಂತರಾದ ಯೆಹೂದ್ಯರು ತಮ್ಮ ಸತ್ತವರನ್ನು ಸಮಾಧಿ ಮಾಡುವಂತ ಸಮಾಧಿಯಂತಿತ್ತು. ಅದು ದೊಡ್ಡ ಕಲ್ಲಲ್ಲಿ ಕೆತ್ತಲ್ಪಟ್ಟ ಒಂದು ಕೋಣೆಯಾಗಿತ್ತು. ದೇಹಕ್ಕೆ ಎಣ್ಣೆ ಮತ್ತು ಸುಗಂಧ ದ್ರವ್ಯಗಳನ್ನು ಅಂಟಿಸಿದ ಮೇಲೆ ಒಂದು ಬಟ್ಟೆಯಲ್ಲಿ ಸುತ್ತಿ, ಅದನ್ನು ಮಲಗಿಸಲು ಆ ಕೋಣೆಯ ಒಂದು ಕಡೆ ಚಪ್ಪಟೆಯಾದ ಸ್ಥಳವಿತ್ತು. ಆ ಸಮಾಧಿಯೊಳಕ್ಕೆ ಯಾರು ಹೋಗದಂತೆ ಅಥವಾ ಯಾರು ಅದರೊಳಗೆ ನೋಡದಂತೆ ಅದರ ಮುಂದೆ ಒಂದು ದೊಡ್ಡ ಬಂಡೆಯನ್ನು ಉರುಳಿಸುತ್ತಿದ್ದರು.

“ಪವಿತ್ರಾತ್ಮವನ್ನು ಹೊಂದುವುದು”

ನಿಮ್ಮ ಭಾಷೆಯಲ್ಲಿ “ಉಸಿರು” ಮತ್ತು “ಆತ್ಮಕ್ಕೆ” ಎಂದೇ ಪದಗಳಿದ್ದರೆ, ಯೇಸು ಉಸಿರಾಡುತ್ತಿದ್ದನೆಂದು ಮತ್ತು ಶಿಷ್ಯರು ಯೇಸುವಿನ ಉಸಿರು ಅಲ್ಲದೆ ಪವಿತ್ರಾತ್ಮವನ್ನು ಹೊಂದಿದರೆಂದು ಓದುಗಾರರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಅನುವಾದ ಮಾಡಿರಿ. (ನೋಡಿರಿ: ಸಾಂಕೇತಿಕ ಕ್ರಿಯೆ ಮತ್ತು ಪವಿತ್ರಾತ್ಮ, ದೇವರ ಆತ್ಮ, ಕರ್ತನ ಆತ್ಮ, ಆತ್ಮ)

ಈ ಅಧ್ಯಾಯದಲ್ಲಿ ಎದುರಾಗುವ ಬೇರೆ ಅನುವಾದ ಸಮಸ್ಯೆಗಳು

ರಬ್ಬೂನಿ

ಯೋಹಾನನು ಈ ಪದವನ್ನು ಗ್ರೀಕ್ ಮಾತಿನಂತೆ ಉಪಯೋಗಿಸಿದನು ಮತ್ತು ಆ ಪದದ ಅರ್ಥ “ಬೋಧಕನು” ಎಂದು ವಿವರಿಸಿದನು. ನಿಮ್ಮ ಭಾಷೆಯ ಅಕ್ಷರಗಳನ್ನು ಉಪಯೋಗಿಸಿ ನೀವು ಅದೇ ರೀತಿಯಲ್ಲಿ ಮಾಡಬೇಕು.

ಯೇಸುವಿನ ಪುನರುತ್ಥಾನದ ದೇಹ

ಆತನು ತಿರುಗಿ ಜೀವಂತನಾಗಿ ಬಂದಾಗ ಯೇಸುವಿನ ದೇಹ ಹೇಗಿತ್ತೆಂದು ಯಾರಿಗೂ ನಿಶ್ಚಯತೆ ಇಲ್ಲ. ಆತನ ಶಿಷ್ಯರು ಸೈನಿಕರು ಆತನ ಕೈಕಾಲ್ಗಳಲ್ಲಿ ಮೊಳೆ ಹೊಡೆದಿರುವ ಗಾಯಗಳನ್ನು ಮುಟ್ಟಿದರು ಮತ್ತು ಆತನ ಮುಖವನ್ನು ನೋಡುವುದರ ಮೂಲಕ ಯೇಸುವನ್ನು ಗುರುತಿಸಿದರು ಆದರೆ ಆತನು ದೃಢವಾದ ಗೋಡೆಗಳಿಂದ ಮತ್ತು ಬಾಗಿಲುಗಳ ಮೂಲಕ ನಡೆದಾಡುತ್ತಿದ್ದನು. ಯುಎಲ್ಟಿ ಹೇಳುವುದಕ್ಕಿಂತ ಹೆಚ್ಚಿನ ವಿವರಗಳು ಹೇಳದಿರುವುದು ಉತ್ತಮವಾಗಿರುತ್ತದೆ.

ಬಿಳಿ ವಸ್ತ್ರಗಳಲ್ಲಿದ್ದ ಇಬ್ಬರು ದೂತರು

ಯೇಸುವಿನ ಸಮಾಧಿಯ ಬಳಿ ಇದ್ದ ಸ್ತ್ರೀಯರೊಂದಿಗೆ ದೂತರು ಇದ್ದ ವಿಷಯವನ್ನು ಮತ್ತಾಯನು, ಮಾರ್ಕನು, ಲೂಕ ಮತ್ತು ಯೋಹಾನನು ಬರೆದಿದ್ದಾರೆ. ಇಬ್ಬರು ಲೇಖಕರು ಅವರನ್ನು ಪುರುಷರೆಂದು ಕರೆದರು, ಯಾಕಂದರೆ ಅವರು ಮನುಷ್ಯರ ರೂಪದಲ್ಲಿದ್ದರು. ಇಬ್ಬರು ಲೇಖಕರು ಇಬ್ಬರು ದೇವ ದೂತರ ಕುರಿತಾಗಿ ಬರೆದಿದ್ದಾರೆ, ಆದರೆ ಬೇರೆ ಇಬ್ಬರು ಲೇಖಕರು ಒಬ್ಬ ದೇವ ದೂತನ ಕುರಿತಾಗಿ ಬರೆದಿದ್ದಾರೆ. ಈ ಭಾಗಗಳನ್ನು ಯುಎಲ್ಟಿಯಲ್ಲಿ ಇದ್ದಂತೆ ಒಂದೇ ರೀತಿಯಲ್ಲಿ ಇರಬೇಕೆಂದು ಯಾವ ಮಾರ್ಪಾಟುಗಳನ್ನು ಮಾಡದೇ ಅನುವಾದ ಮಾಡುವುದು ಉತ್ತಮ. (See: ಮತ್ತಾಯನು.28:1-2 ಮತ್ತು ಮಾರ್ಕನು.16:5 ಮತ್ತು ಲೂಕನು.24:4 ಮತ್ತು ಯೋಹಾನನು.20:12)

John 20:1

ಯೇಸುವನ್ನು ಸಮಾಧಿಯಲ್ಲಿ ಇಟ್ಟ ಮೇಲೆ ಇದು ಮೂರನೆಯ ದಿನವಾಗಿದೆ.

μιᾷ τῶν σαββάτων

ಭಾನುವಾರ

βλέπει τὸν λίθον ἠρμένον

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯಾರೋ ಆ ಕಲ್ಲನ್ನು ಉರುಳಿಸಿರುವುದನ್ನು ಆಕೆ ನೋಡಿದಳು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 20:2

μαθητὴν ὃν ἐφίλει ὁ Ἰησοῦς

ಈ ಪುಸ್ತಕದಲ್ಲಿ ತನ್ನನ್ನು ತಾನು ಈ ರೀತಿಯಲ್ಲಿ ಯೋಹಾನನು ಸೂಚಿಸಿಕೊಳ್ಳುತ್ತಿದ್ದಾನೆ ಎಂದು ಈ ಮಾತು ತೋರಿಸುತ್ತಿದೆ. ಇಲ್ಲಿ “ಪ್ರೀತಿ” ಎನ್ನುವ ಪದವು ಸಹೋದರ ಪ್ರೀತಿ ಅಥವಾ ಸ್ನೇಹಿತನ ಅಥವಾ ಕುಟುಂಬ ಸದಸ್ಯರ ಪ್ರೀತಿಯನ್ನು ಸೂಚಿಸುತ್ತಿದೆ.

ἦραν τὸν Κύριον ἐκ τοῦ μνημείου

ಯಾರೋ ಬಂದು ಕರ್ತನ ದೇಹವನ್ನು ಕದ್ದುಕೊಂಡು ಹೋಗಿದ್ದಾರೆಂದು ಮಗ್ದಲದ ಮರಿಯಳು ಅಂದುಕೊಂಡಳು. ಪರ್ಯಾಯ ಅನುವಾದ: “ಸಮಾಧಿಯೊಳಗಿಂದ ಯಾರೋ ಕರ್ತನ ದೇಹವನ್ನು ತೆಗೆದಿದ್ದಾರೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:3

ὁ ἄλλος μαθητής

ತನ್ನ ಹೆಸರನ್ನು ಹೇಳುವುದಕ್ಕೆ ಬದಲಾಗಿ “ಮತೊಬ್ಬ ಶಿಷ್ಯನು” ಎಂದು ತನ್ನನ್ನು ತಾನು ಸೂಚಿಸಿಕೊಳ್ಳುವುದರ ಮೂಲಕ ಯೋಹಾನನು ತನ್ನ ದೀನತೆಯನ್ನು ತೋರಿಸುತ್ತಿದ್ದಾನೆ.

ἐξῆλθεν

ಈ ಶಿಷ್ಯರು ಸಮಾಧಿಯ ಬಳಿಗೆ ಹೋಗುತ್ತಿದ್ದರೆಂದು ಯೋಹಾನನು ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಸಮಾಧಿಯ ಕಡೆಗೆ ಹೊರಟರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:5

ὀθόνια

ಇವು ಯೇಸುವಿನ ಶರೀರವನ್ನು ಸುತ್ತಲು ಜನರು ಉಪಯೋಗಿಸಿದ ಬಟ್ಟೆಗಳಾಗಿದ್ದವು.

John 20:6

ὀθόνια

ಇವು ಯೇಸುವಿನ ಶರೀರವನ್ನು ಸುತ್ತಲು ಜನರು ಉಪಯೋಗಿಸಿದ ಬಟ್ಟೆಗಳಾಗಿದ್ದವು. ಯೋಹಾನ.20:5 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ.

John 20:7

σουδάριον, ὃ ἦν ἐπὶ τῆς κεφαλῆς αὐτοῦ

ಇಲ್ಲಿ “ಆತನ ತಲೆ” ಎನ್ನುವ ಪದವು “ಯೇಸುವಿನ ತಲೆಯನ್ನು” ಸೂಚಿಸುತ್ತಿದೆ. ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯಾರೋ ಯೇಸುವಿನ ಮುಖವನ್ನು ಮುಚ್ಚಲು ಉಪಯೋಗಿಸಿದ ಬಟ್ಟೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ἀλλὰ χωρὶς ἐντετυλιγμένον εἰς ἕνα τόπον

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದರೆ ಯಾರೋ ಅದನ್ನು ಸುತ್ತಿ ಬೇರೆ ನಾರು ಬಟ್ಟೆಗಳಿಂದ ಪ್ರತ್ಯೇಕ ಮಾಡಿ ಪಕ್ಕದಲ್ಲಿ ಇಟ್ಟಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 20:8

ὁ ἄλλος μαθητὴς

ತನ್ನ ಹೆಸರನ್ನು ಹೇಳುವುದಕ್ಕೆ ಬದಲಾಗಿ “ಮತೊಬ್ಬ ಶಿಷ್ಯನು” ಎಂದು ತನ್ನನ್ನು ತಾನು ಸೂಚಿಸಿಕೊಳ್ಳುವುದರ ಮೂಲಕ ಯೋಹಾನನು ತನ್ನ ದೀನತೆಯನ್ನು ತೋರಿಸುತ್ತಿದ್ದಾನೆ.

εἶδεν καὶ ἐπίστευσεν

ಸಮಾಧಿಯು ಕಾಲಿಯಾಗಿ ಇರುವುದನ್ನು ಅವನು ಕಂಡು, ಯೇಸು ಸತ್ತವರಿಂದ ಎದ್ದಿದಾನೆಂದು ಅವನು ನಂಬಿದನು. ಪರ್ಯಾಯ ಅನುವಾದ: “ಈ ಸಂಗತಿಗಳನ್ನು ಅವನು ನೋಡಿ ಯೇಸು ಸತ್ತವರಿಂದ ಎದ್ದಿದಾನೆಂದು ನಂಬುವುದಕ್ಕೆ ಪ್ರಾರಂಭಿಸಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:9

οὐδέπω…ᾔδεισαν τὴν Γραφὴν

ಇಲ್ಲಿ “ಅವರು” ಎನ್ನುವ ಪದವು ಯೇಸು ಎದ್ದುಬರುತ್ತಾನೆ ಎನ್ನುವ ಲೇಖನವನ್ನು ಅರ್ಥಮಾಡಿಕೊಳ್ಳದ ಶಿಷ್ಯರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಶಿಷ್ಯರು ಇನ್ನೂ ಲೇಖನಗಳನ್ನು ಅರ್ಥಮಾಡಿಕೊಂಡಿರಲಿಲ್ಲ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἀναστῆναι

ಮತ್ತೆ ಜೀವಂತನಾದನು

ἐκ νεκρῶν

ಸತ್ತಿರುವವರೆಲ್ಲರಿಂದ. ಈ ಮಾತು ಭೂ ತಳಭಾಗದಲ್ಲಿರುವ ಎಲ್ಲಾ ಸತ್ತ ಜನರನ್ನು ಸೂಚಿಸುತ್ತಿದೆ.

John 20:10

ἀπῆλθον…πάλιν πρὸς αὑτοὺς

ಶಿಷ್ಯರು ಯೆರೂಸಲೇಮಿನಲ್ಲಿ ವಾಸಿಸ ತೊಡಗಿದರು. ಪರ್ಯಾಯ ಅನುವಾದ: “ಯೆರೂಸಲೇಮಿನಲ್ಲಿ ಅವರು ವಾಸ ಮಾಡುತ್ತಿದ್ದ ಸ್ಥಳಕ್ಕೆ ಅವರು ಹಿಂತಿರುಗಿದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:12

θεωρεῖ δύο ἀγγέλους ἐν λευκοῖς

ದೇವ ದೂತರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಪರ್ಯಾಯ ಅನುವಾದ: “ಬಿಳಿ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಆಕೆ ನೋಡಿದಳು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:13

λέγουσιν αὐτῇ ἐκεῖνοι

ಅವರು ಆಕೆಯನ್ನು ಕೇಳಿದರು

ὅτι ἦραν τὸν Κύριόν μου

ನನ್ನ ಕರ್ತನ ದೇಹವನ್ನು ಅವರು ಎತ್ತಿಕೊಂಡು ಹೋಗಿದ್ದಾರೆ ಆದರಿಂದ

οὐκ οἶδα ποῦ ἔθηκαν αὐτόν

ಅವರು ಅದನ್ನು ಎಲ್ಲಿ ಇಟ್ಟಿದ್ದಾರೆಂದು ನನಗೆ ತಿಳಿಯದು

John 20:15

λέγει αὐτῇ Ἰησοῦς

ಯೇಸು ಆಕೆಯನ್ನು ಕೇಳಿದನು

κύριε, εἰ σὺ ἐβάστασας αὐτόν

ಇಲ್ಲಿ “ಆತನು” ಎನ್ನುವ ಪದವು ಯೇಸುವನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನೀನು ಒಂದುವೇಳೆ ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

εἰπέ μοι ποῦ ἔθηκας αὐτόν

ಅದನ್ನು ನೀನು ಎಲ್ಲಿ ಇಟ್ಟಿದ್ದೀಯೆಂದು ನನಗೆ ಹೇಳು

κἀγὼ αὐτὸν ἀρῶ

ಮಗ್ದಲದ ಮರಿಯಳು ಯೇಸುವಿನ ದೇಹವನ್ನು ಪಡೆದುಕೊಂಡು ಅದನ್ನು ಮತ್ತೆ ಸಮಾಧಿ ಮಾಡಬೇಕೆಂದಿದ್ದಳು. ಪರ್ಯಾಯ ಅನುವಾದ: “ನಾನು ದೇಹವನ್ನು ತೆಗೆದುಕೊಂಡು ಬರುವೆನು ಮತ್ತು ಅದನ್ನು ಮತ್ತೆ ಸಮಾಧಿ ಮಾಡುತ್ತೇನೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:16

Ραββουνεί

“ರಬ್ಬೂನಿ” ಎನ್ನುವ ಪದಕ್ಕೆ ಯೇಸು ಮತ್ತು ಆತನ ಶಿಷ್ಯರು ಮಾತಾಡುತ್ತಿದ್ದ ಭಾಷೆಯಾದ ಅರಾಮಿಕ್ ಭಾಷೆಯಲ್ಲಿ ರಬ್ಬಿ ಅಥವಾ ಬೋಧಕನು ಎಂದರ್ಥ.

John 20:17

τοὺς ἀδελφούς

ಯೇಸು ತನ್ನ ಶಿಷ್ಯರನ್ನು ಸೂಚಿಸಲು “ಸಹೋದರರು” ಎನ್ನುವ ಪದವನ್ನು ಉಪಯೋಗಿಸಿದನು.

ἀναβαίνω πρὸς τὸν Πατέρα μου, καὶ Πατέρα ὑμῶν, καὶ Θεόν μου, καὶ Θεὸν ὑμῶν

ಯೇಸು ಸತ್ತವರೊಳಗಿಂದ ಎದ್ದಿದ್ದನು ಮತ್ತು ದೇವರಾಗಿರುವ ಆತನ ತಂದೆಯ ಬಳಿಗೆ ಅಂದರೆ ಪರಲೋಕಕ್ಕೆ ತಿರುಗಿಹೋಗುವೆನೆಂದು ಪ್ರವಾದಿಸಿದನು. ಪರ್ಯಾಯ ಅನುವಾದ: “ನನ್ನ ದೇವರು ಮತ್ತು ನಿಮ್ಮ ದೇವರು, ನನ್ನ ತಂದೆಯೂ ಮತ್ತು ನಿಮ್ಮ ತಂದೆಯೂ ಆಗಿರುವಾತನೊಂದಿಗೆ ಇರಲು ಪರಲೋಕಕ್ಕೆ ನಾನು ಹಿಂತಿರುಗಿ ಹೋಗಲಿದ್ದೇನೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

τὸν Πατέρα μου, καὶ Πατέρα ὑμῶν

ಇವು ಯೇಸು ಮತ್ತು ದೇವರು ಹಾಗೆಯೆ ದೇವರು ಮತ್ತು ವಿಶ್ವಾಸಿಗಳ ನಡುವೆ ಇರುವ ಸಂಬಂಧವನ್ನು ವಿವರಿಸುವ ಪ್ರಾಮುಖ್ಯವಾದ ಹೆಸರುಗಳಾಗಿವೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 20:18

ἔρχεται Μαριὰμ ἡ Μαγδαληνὴ ἀγγέλλουσα τοῖς μαθηταῖς

ಶಿಷ್ಯರು ಇದ್ದ ಸ್ಥಳಕ್ಕೆ ಮಗ್ದಲದ ಮರಿಯಳು ಹೋಗಿ ಆಕೆ ನೋಡಿದ ಹಾಗೂ ಕೇಳಿದ ವಿಷಯಗಳನ್ನು ಅವರಿಗೆ ಹೇಳಿದಳು. ಪರ್ಯಾಯ ಅನುವಾದ: “ಶಿಷ್ಯರಿದ್ದ ಸ್ಥಳಕ್ಕೆ ಮಗ್ದಲದ ಮರಿಯಳು ಹೋಗಿ ಮತ್ತು ಅವರಿಗೆ ಹೇಳಿದಳು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:19

ಈಗ ಸಂಜೆಯಾಗಿದೆ ಮತ್ತು ಯೇಸು ಶಿಷ್ಯರಿಗೆ ಪ್ರತ್ಯಕ್ಷವಾಗುತ್ತಾನೆ.

ἡμέρᾳ ἐκείνῃ τῇ μιᾷ σαββάτων

ಇದು ಭಾನುವಾರವನ್ನು ಸೂಚಿಸುತ್ತಿದೆ.

τῶν θυρῶν κεκλεισμένων ὅπου ἦσαν οἱ μαθηταὶ

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಅವರಿದ್ದ ಮನೆಯ ಬಾಗಿಲುಗಳನ್ನು ಶಿಷ್ಯರು ಮುಚ್ಚಿಕೊಂಡಿದ್ದರು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

διὰ τὸν φόβον τῶν Ἰουδαίων

ಇಲ್ಲಿ “ಯೆಹೂದ್ಯರು” ಎನ್ನುವ ಪದವು ಶಿಷ್ಯರನ್ನು ಬಂಧಿಸಬಹುದಾದ ಯೆಹೂದ್ಯರ ನಾಯಕರನ್ನು ಸೂಚಿಸುವ ಉಪಲಕ್ಷಕವಾಗಿದೆ. ಪರ್ಯಾಯ ಅನುವಾದ: “ಯಾಕಂದರೆ ಯೆಹೂದ್ಯರ ನಾಯಕರು ಅವರನ್ನು ಬಂಧಿಸುತ್ತಾರೆಂದು ಅವರು ಹೆದರಿದ್ದರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

εἰρήνη ὑμῖν

ಇದು “ದೇವರು ನಿಮಗೆ ಸಮಾಧಾನವನ್ನು ಕೊಡಲಿ” ಎಂದು ಅರ್ಥ ಕೊಡುವ ಸಾಮಾನ್ಯವಾದ ಶುಭವಚನವಾಗಿತ್ತು.

John 20:20

ἔδειξεν τὰς χεῖρας καὶ τὴν πλευρὰν αὐτοῖς

ಯೇಸು ತನ್ನ ಗಾಯಗಳನ್ನು ಶಿಷ್ಯರಿಗೆ ತೋರಿಸಿದನು. ಪರ್ಯಾಯ ಅನುವಾದ: “ಆತನ ಕೈಗಳಲ್ಲಿ ಮತ್ತು ಆತನ ಪಕ್ಕೆಯಲ್ಲಿದ್ದ ಗಾಯಗಳನ್ನು ತೋರಿಸಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:21

εἰρήνη ὑμῖν

ಇದು “ದೇವರು ನಿಮಗೆ ಸಮಾಧಾನವನ್ನು ಕೊಡಲಿ” ಎಂದು ಅರ್ಥ ಕೊಡುವ ಸಾಮಾನ್ಯವಾದ ಶುಭವಚನವಾಗಿತ್ತು.

Πατήρ

ಇದು ದೇವರಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

John 20:23

ἀφέωνται αὐτοῖς

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ಅವರನ್ನು ಕ್ಷಮಿಸುವನು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

ἄν τινων κρατῆτε

ನೀವು ಬೇರೆಯವರ ಪಾಪಗಳನ್ನು ಕ್ಷಮಿಸದಿದ್ದರೆ

κεκράτηνται

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದೇವರು ಅವರನ್ನು ಕ್ಷಮಿಸುವುದಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 20:24

Δίδυμος

ಇದು “ದಿದುಮ” ಎಂದು ಅರ್ಥ ಕೊಡುವ ಪುರುಷನ ಹೆಸರಾಗಿದೆ. ಯೋಹಾನ.11:15 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

John 20:25

ἔλεγον…αὐτῷ οἱ…μαθηταί

“ಅವನು” ಎನ್ನುವ ಪದವು ತೋಮನನ್ನು ಸೂಚಿಸುತ್ತಿದೆ.

ἐὰν μὴ ἴδω ἐν ταῖς χερσὶν αὐτοῦ τὸν τύπον τῶν ἥλων, καὶ βάλω τὸν δάκτυλόν μου εἰς τὸν τύπον τῶν ἥλων, καὶ βάλω μου τὴν χεῖρα εἰς τὴν πλευρὰν αὐτοῦ, οὐ μὴ πιστεύσω

ಈ ದ್ವಂದ್ವ ನಕಾರಾತ್ಮಕವನ್ನು ಸಕಾರಾತ್ಮಕ ರೀತಿಯಲ್ಲಿ ನೀವು ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆತನ ಪಕ್ಕೆಯನ್ನು… ನಾನು ನೋಡುದವರೆಗೂ ನಾನು ನಂಬುವುದಿಲ್ಲ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

ἐν ταῖς χερσὶν αὐτοῦ…εἰς τὴν πλευρὰν αὐτοῦ

“ಆತನು” ಎನ್ನುವ ಪದವು ಯೇಸುವನ್ನು ಸೂಚಿಸುತ್ತಿದೆ.

John 20:26

οἱ μαθηταὶ αὐτοῦ

“ಆತನು” ಎನ್ನುವ ಪದವು ಯೇಸುವನ್ನು ಸೂಚಿಸುತ್ತಿದೆ.

τῶν θυρῶν κεκλεισμένων

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಅವರು ಬಾಗಿಲುಗಳನ್ನು ಮುಚ್ಚಿದ್ದಾಗ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

εἰρήνη ὑμῖν

ಇದು “ದೇವರು ನಿಮಗೆ ಸಮಾಧಾನವನ್ನು ಕೊಡಲಿ” ಎಂದು ಅರ್ಥ ಕೊಡುವ ಸಾಮಾನ್ಯವಾದ ಶುಭವಚನವಾಗಿತ್ತು.

John 20:27

μὴ γίνου ἄπιστος, ἀλλὰ πιστός

“ನಂಬುವವನಾಗು” ಎನ್ನುವ ಮಾತನ್ನು ಒತ್ತಾಯಿಸಿ ಹೇಳುವುದಕ್ಕಾಗಿ ಯೇಸು “ಅಪನಂಬಿಕೆಯುಳ್ಳವನಾಗಿರಬೇಡ” ಎನ್ನುವ ದ್ವಂದ್ವ ನಕಾರಾತ್ಮಕವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ದ್ವಂದ್ವ ನಕಾರಾತ್ಮಕಗಳನ್ನು ಅನುಮತಿಸದಿದ್ದರೆ ಅಥವಾ ಯೇಸು ಒತ್ತಾಯಿಸಿ ಹೇಳುವ ಮಾತುಗಳು ಓದುಗಾರರಿಗೆ ಅರ್ಥವಾಗುವುದಿಲ್ಲವೆಂದರೆ, ಆ ಮಾತುಗಳನ್ನು ಅನುವಾದ ಮಾಡದೇ ಬಿಡಬಹುದು. ಪರ್ಯಾಯ ಅನುವಾದ: “ನೀನು ನಂಬಬೇಕು: ಇದೇ ನಿನಗೆ ಪ್ರಾಮುಖ್ಯವಾದ ಸಂಗತಿಯಾಗಿದೆ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)

πιστός

ಇಲ್ಲಿ “ನಂಬುವುದು” ಎನ್ನುವ ಮಾತಿಗೆ ಯೇಸುವನ್ನು ವಿಸ್ವಸಿಸುವುದು ಎಂದರ್ಥ. ಪರ್ಯಾಯ ಅನುವಾದ: “ನನ್ನನ್ನು ನಂಬು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:29

πεπίστευκας

ತೋಮನು ಆತನನ್ನು ನೋಡಿರುವದರಿಂದ ಯೇಸು ಜೀವಿಸುತ್ತಿದ್ದಾನೆಂದು ಅವನು ನಂಬಿದನು. ಪರ್ಯಾಯ ಅನುವಾದ: “ನಾನು ಜೀವಿಸುತ್ತಿದ್ದೇನೆಂದು ನೀನು ನಂಬಿದ್ದೀಯ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

μακάριοι οἱ

“ಅವರಿಗೆ ದೇವರು ದೊಡ್ಡ ಸಂತೋಷವನ್ನು ಕೊಡುವನು” ಎಂದು ಇದರ ಅರ್ಥವಾಗಿದೆ.

μὴ ἰδόντες

ಯೇಸುವನ್ನು ನೋಡದ ಜನರು ಎಂದು ಇದರ ಅರ್ಥ. ಪರ್ಯಾಯ ಅನುವಾದ: “ನನ್ನನ್ನು ಜೀವಂತವಾಗಿ ನೋಡದವರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 20:30

ಕಥೆಯು ಮುಕ್ತಾಯಕ್ಕೆ ಬಂದಿರುವದರಿಂದ, ಯೇಸು ಮಾಡಿರುವ ಅನೇಕ ಕಾರ್ಯಗಳನ್ನು ಕುರಿತು ಲೇಖಕರು ವ್ಯಾಖ್ಯೆಯನ್ನು ಮಾಡುತ್ತಿದ್ದಾನೆ. (ನೋಡಿರಿ: ಕಥೆಯ ಮುಕ್ತಾಯ)

σημεῖα

“ಸೂಚಕಕಾರ್ಯಗಳು” ಎನ್ನುವ ಪದವು ದೇವರು ಸರ್ವಶಕ್ತನೆಂದು, ವಿಶ್ವದ ಮೇಲೆ ಆತನೊಬ್ಬನಿಗೆ ಸರ್ವಾಧಿಕಾರವಿದೆಯೆಂದು ತೋರಿಸುವ ಅದ್ಭುತಕಾರ್ಯಗಳನ್ನು ಸೂಚಿಸುತ್ತಿದೆ.

ἃ οὐκ ἔστιν γεγραμμένα ἐν τῷ βιβλίῳ τούτῳ

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಲೇಖಕರು ಈ ಪುಸ್ತಕದಲ್ಲಿ ಬರೆಯದಿರದ ಸೂಚಕಕ್ರಿಯೆಗಳು” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

John 20:31

ταῦτα δὲ γέγραπται

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆದರೆ ಲೇಖಕರು ಈ ಸೂಚಕಕ್ರಿಯೆಗಳನ್ನು ಕುರಿತು ಬರೆದಿದ್ದಾನೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Υἱὸς τοῦ Θεοῦ

ಇದು ಯೇಸುವಿಗೆ ಕೊಟ್ಟಿರುವ ಪ್ರಾಮುಖ್ಯವಾದ ಹೆಸರಾಗಿದೆ. (ನೋಡಿರಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)

ζωὴν…ἐν τῷ ὀνόματι αὐτοῦ

ಇಲ್ಲಿ “ಜೀವ” ಎನ್ನುವ ಪದವು ಯೇಸು ಕೊಡುವ ಜೀವಕ್ಕೆ ಸಮಾನಾರ್ಥಕವಾಗಿದೆ. ಪರ್ಯಾಯ ಅನುವಾದ: “ಯೇಸು ಇರುವದರಿಂದ ನೀವು ಜೀವವನ್ನು ಹೊಂದುಕೊಳ್ಳುವಿರಿ” (ನೋಡಿರಿ: ಲಕ್ಷಣಾಲಂಕಾರ)

ζωὴν

ಇದು ಆತ್ಮೀಯ ಜೀವವನ್ನು ಸೂಚಿಸುತ್ತಿದೆ.

John 21

ಯೋಹಾನನು 21 ಸಾಧಾರಣವಾದ ಅಂಶಗಳು

ಈ ಅಧ್ಯಾಯದಲ್ಲಿರುವ ಪ್ರಾಮುಖ್ಯವಾದ ಅಲಂಕಾರಗಳು

ಕುರಿಗಳಿಗೆ ರೂಪಕಾಲಂಕಾರ

ಯೇಸು ಮರಣಿಸುವದಕ್ಕೆ ಮುಂಚೆ, ಒಳ್ಳೆಯ ಕುರುಬನು ತನ್ನ ಕುರಿಗಳನ್ನು ಸಂರಕ್ಷಿಸುವಂತೆ ಆತನು ತನ್ನ ಜನರನ್ನು ಸಂರಕ್ಷಿಸುತ್ತಿದ್ದಾನೆಂದು ಆತನು ಹೇಳಿದನು (ಯೋಹಾನನು.10:11). ಆತನು ಮತ್ತೆ ಜೀವದಿಂದ ಎದ್ದುಬಂದಾಗ, ಯೇಸುವಿನ ಕುರಿಗಳನ್ನು ಪೇತ್ರನು ಸಂರಕ್ಷಿಸುವನೆಂದು ಆತನು ಪೇತ್ರನಿಗೆ ಹೇಳಿದನು. (ನೋಡಿರಿ: ರೂಪಕ ಅಲಂಕಾರ)

John 21:1

ತಿಬೇರಿಯ ಸಮುದ್ರದ ಬಳಿ ಯೇಸು ಮತ್ತೆ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಾನೆ. ಯೇಸು ಕಾಣಿಸಿಕೊಳ್ಳುವುದಕ್ಕೆ ಮುಂಚೆ ಕಥೆಯಲ್ಲಿ ಏನು ನಡೆಯಿತೆಂದು 2 ಮತ್ತು 3 ವಚನಗಳು ತಿಳಿಸುತ್ತಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

μετὰ ταῦτα

ಸ್ವಲ್ಪ ಸಮಯದ ನಂತರ

John 21:2

ὁμοῦ…Θωμᾶς ὁ λεγόμενος Δίδυμος

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ದಿದುಮನೆಂದು ನಾವು ಕರೆಯುವ ತೋಮನೊಂದಿಗೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

Δίδυμος

ಇದು “ದಿದುಮ” ಎಂದು ಅರ್ಥ ಕೊಡುವ ಪುರುಷನ ಹೆಸರಾಗಿದೆ. ಯೋಹಾನ.11:15 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)

John 21:5

παιδία

ಇದು “ನನ್ನ ಪ್ರಿಯ ಸ್ನೇಹಿತರೇ” ಎಂದು ಅರ್ಥಕೊಡುವ ಸ್ನೇಹಪೂರ್ವಕವಾದ ಮಾತಾಗಿದೆ.

John 21:6

εὑρήσετε

ಇಲ್ಲಿ “ಕೆಲವು” ಎನ್ನುವ ಪದವು ಮೀನುಗಳನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ನಿಮ್ಮ ಬಲೆಯಲ್ಲಿ ಕೆಲವು ಮೀನುಗಳು ಸಿಗುತ್ತವೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

αὐτὸ ἑλκύσαι

ಬಲೆಯನ್ನು ಎಳೆಯಿರಿ

John 21:7

ἠγάπα

ಇದು ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆ. ಅವರು ಏನು ಮಾಡಿದರು, ಇಂತಹ ಪ್ರೀತಿ ಬೇರೆಯವರ ಕುರಿತು ಚಿಂತಿಸುತ್ತದೆ.

τὸν ἐπενδύτην διεζώσατο

ಅವನು ತನ್ನ ಮೇಲಂಗಿಯನ್ನು ಸುತ್ತಿಕೊಂಡನು ಅಥವಾ “ಅವನು ತನ್ನ ಅಂಗಿಯನ್ನು ಹಾಕಿಕೊಂಡು”

ἦν γὰρ γυμνός

ಇದು ಹಿನ್ನೆಲೆ ಸಮಾಚಾರವಾಗಿದೆ. ಕೆಲಸ ಮಾಡುತ್ತಿರುವಾಗ ಅನುಕೂಲವಾಗಿರಬೇಕೆಂದು ಪೇತ್ರನು ಸ್ವಲ್ಪ ಬಟ್ಟೆಗಳನ್ನು ಬಿಚ್ಚಿಟ್ಟಿದ್ದನು, ಆದರೆ ಅವನೀಗ ಕರ್ತನಿಗೆ ವಂದನೆಗಳನ್ನು ಹೇಳಲು ಹೋಗುತ್ತಿದ್ದನು ಅದರೆಂದ ಹೆಚ್ಚಿನ ಬಟ್ಟೆ ಹಾಕಿಕೊಳ್ಳಲು ಬಯಸಿದನು. ಪರ್ಯಾಯ ಅನುವಾದ: “ಅವನು ಸ್ವಲ್ಪ ಬಟ್ಟೆಯನ್ನು ಬಿಚ್ಚಿಟ್ಟಿದ್ದರಿಂದ” (ನೋಡಿರಿ: ಹಿನ್ನೆಲೆ ಮಾಹಿತಿ.)

ἔβαλεν ἑαυτὸν εἰς τὴν θάλασσαν

ಪೇತ್ರನು ನೀರಿಗೆ ಧುಮುಕಿ ದಡದವರೆಗೆ ಈಜಾಡಿ ಬಂದನು. ಪರ್ಯಾಯ ಅನುವಾದ: “ಸಮುದ್ರದೊಳಕ್ಕೆ ಧುಮುಕಿ ದಡದವರೆಗೆ ಈಜಾಡುತ್ತ ಬಂದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἔβαλεν ἑαυτὸν

ಇದು, ಪೇತ್ರನು ನೀರಿಗೆ ಬೇಗನೆ ಧುಮಿಕಿದನು ಎಂದು ಅರ್ಥಕೊಡುವ ನಾನ್ನುಡಿಯಾಗಿದೆ. (ನೋಡಿರಿ: ನುಡಿಗಟ್ಟುಗಳು.)

John 21:8

οὐ γὰρ ἦσαν μακρὰν ἀπὸ τῆς γῆς…ὡς ἀπὸ πηχῶν διακοσίων

ಇದು ಹಿನ್ನೆಲೆ ಸಮಾಚಾರವಾಗಿದೆ. (ನೋಡಿರಿ: ಹಿನ್ನೆಲೆ ಮಾಹಿತಿ.)

πηχῶν διακοσίων

90 ಮೀಟರ್ಗಳು. ಕ್ಯೂಬಿಟ್ ಎಂದರೆ ಅರ್ಧ ಮೀಟರುಗಿಂತ ಕಡಿಮೆ. (ನೋಡಿರಿ: ಸತ್ಯವೇದದಲ್ಲಿ ಬರುವ ಅಂತರಗಳು.)

John 21:11

ἀνέβη…Σίμων Πέτρος

ಇಲ್ಲಿ “ಮೇಲೆ ಹೋದರು” ಎನ್ನುವ ಪದಕ್ಕೆ ಸೀಮೋನ್ ಪೇತ್ರನು ಹಿಂತಿರುಗಿ ದೋಣಿ ಬಳಿಗೆ ಹೋಗಬೇಕಿತ್ತು ಎಂದರ್ಥ. ಪರ್ಯಾಯ ಅನುವಾದ: “ಆದಕಾರಣ ಸೀಮೋನ್ ಪೇತ್ರನು ದೋಣಿಗೆ ಹಿಂತಿರುಗಿದನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

εἵλκυσεν τὸ δίκτυον εἰς τὴν γῆν

ಬಲೆಯನ್ನು ದಡಕ್ಕೆ ಎಳೆದರು

οὐκ ἐσχίσθη τὸ δίκτυον

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಬಲೆ ಹರಿದಿರಲಿಲ್ಲ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

μεστὸν ἰχθύων μεγάλων

ದೊಡ್ಡ ಮೀನುಗಳು, ಒಂದು ನೂರು ಐವತ್ತು ಮೂರು. ಅದರಲ್ಲಿ 153 ದೊಡ್ಡ ಮೀನುಗಳಿದ್ದವು. (ನೋಡಿರಿ: ಸಂಖ್ಯೆಗಳು.)

John 21:12

ἀριστήσατε

ಬೆಳಗಿನ ಊಟ

John 21:14

τρίτον

“ಮೂರನೆಯ” ಎನ್ನುವ ಕ್ರಮ ಸಂಖ್ಯೆಯನ್ನು ನೀವು “3ನೇ ಬಾರಿ” ಎಂದು ಅನುವಾದ ಮಾಡಬಹುದು. (ನೋಡಿರಿ: ಕ್ರಮಸೂಚಕ ಸಂಖ್ಯೆಗಳು.)

John 21:15

ಸೀಮೋನ್ ಪೇತ್ರನೊಂದಿಗೆ ಸಂಭಾಷಣೆಯನ್ನು ಯೇಸು ಮುಂದುವರೆಸುತ್ತಿದ್ದಾನೆ.

ἀγαπᾷς με

ಇಲ್ಲಿ “ಪ್ರೀತಿ” ಎನ್ನುವ ಪದವು ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆಂದು ಸೂಚಿಸುತ್ತದೆ.

σὺ οἶδας ὅτι φιλῶ σε

ಪೇತ್ರನು ಉತ್ತರಿಸುವಾಗ ಸಹೋದರ ಪ್ರೀತಿ ಅಥವಾ ಸ್ನೇಹಿತನ ಅಥವಾ ಕುಟುಂಬ ಸದಸ್ಯರ ಪ್ರೀತಿಯನ್ನು ಸೂಚಿಸುತ್ತಿರುವ “ಪ್ರೀತಿ” ಎನ್ನುವ ಪದವನ್ನು ಉಪಯೋಗಿಸುತ್ತಿದ್ದಾನೆ.

βόσκε τὰ ἀρνία μου

ಇಲ್ಲಿ “ಕುರಿ ಮರಿಗಳು” ಎನ್ನುವ ಪದವು ಯೇಸುವನ್ನು ಪ್ರೀತಿಸಿ ಮತ್ತು ಆತನನ್ನು ಹಿಂಬಾಲಿಸುವ ಜನರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ಸಂರಕ್ಷಿಸುವ ಜನರನ್ನು ಮೇಯಿಸು” (ನೋಡಿರಿ: ರೂಪಕ ಅಲಂಕಾರ)

John 21:16

ἀγαπᾷς με

ಇಲ್ಲಿ “ಪ್ರೀತಿ” ಎನ್ನುವ ಪದವು ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆಂದು ಸೂಚಿಸುತ್ತದೆ.

ποίμαινε τὰ πρόβατά μου

ಇಲ್ಲಿ “ಕುರಿಗಳು” ಎನ್ನುವ ಪದವು ಯೇಸುವನ್ನು ಪ್ರೀತಿಸಿ ಮತ್ತು ಆತನನ್ನು ಹಿಂಬಾಲಿಸುವ ಜನರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ಕಾಯುವ ಜನರನ್ನು ಕಾಯಿ” (ನೋಡಿರಿ: ರೂಪಕ ಅಲಂಕಾರ)

John 21:17

λέγει αὐτῷ τὸ τρίτον

“ಆತನು” ಎನ್ನುವ ಸರ್ವನಾಮ ಯೇಸುವನ್ನು ಸೂಚಿಸುತ್ತಿದೆ. ಇಲ್ಲಿ “ಮೂರನೆಯ ಸಾರಿ” ಎನ್ನುವ ಪದಕ್ಕೆ “3ನೇಯ ಸಾರಿ” ಎಂದರ್ಥ. ಪರ್ಯಾಯ ಅನುವಾದ: “ಯೇಸು ಅವನಿಗೆ ಮೂರನೆಯ ಸಾರಿ ಹೇಳಿದನು” (ನೋಡಿರಿ: ಕ್ರಮಸೂಚಕ ಸಂಖ್ಯೆಗಳು.)

φιλεῖς με

ಈ ಸಾರಿ ಯೇಸು ಈ ಪ್ರಶ್ನೆಯನ್ನು ಕೇಳುತ್ತಿರುವಾಗ ಆತನು ಸಹೋದರ ಪ್ರೀತಿ ಅಥವಾ ಸ್ನೇಹಿತನ ಅಥವಾ ಕುಟುಂಬ ಸದಸ್ಯರ ಪ್ರೀತಿಯನ್ನು ಸೂಚಿಸುವ “ಪ್ರೀತಿ” ಎನ್ನುವ ಪದವನ್ನು ಉಪಯೋಗಿಸುತ್ತಿದ್ದಾನೆ.

βόσκε τὰ προβάτια μου

ಇಲ್ಲಿ “ಕುರಿಗಳು” ಎನ್ನುವ ಪದವು ಯೇಸುವನ್ನು ಪ್ರೀತಿಸಿ ಮತ್ತು ಆತನನ್ನು ಹಿಂಬಾಲಿಸುವ ಜನರನ್ನು ಸೂಚಿಸುವ ರೂಪಕಾಲಂಕಾರವಾಗಿದೆ. ಪರ್ಯಾಯ ಅನುವಾದ: “ನಾನು ಕಾಯುವ ಜನರನ್ನು ಕಾಯಿ” (ನೋಡಿರಿ: ರೂಪಕ ಅಲಂಕಾರ)

John 21:18

ἀμὴν, ἀμὴν

ಯೋಹಾನ.1:51 ವಚನದಲ್ಲಿ ಇದನ್ನು ಹೇಗೆ ಅನುವಾದ ಮಾಡಿದ್ದೀರೆಂದು ನೋಡಿರಿ.

John 21:19

δὲ

ಕಥೆಯನ್ನು ಮುಂದುವರೆಸುವುದಕ್ಕೆ ಮೊದಲು ಹಿನ್ನೆಲೆ ಸಮಾಚಾರವನ್ನು ಕೊಡಲು ಯೋಹಾನನು ಈ ಪದವನ್ನು ಉಪಯೋಗಿಸುತ್ತಿದ್ದಾನೆ. (ನೋಡಿರಿ: ಹಿನ್ನೆಲೆ ಮಾಹಿತಿ.)

σημαίνων ποίῳ θανάτῳ δοξάσει τὸν Θεόν

ಪೇತ್ರನು ಶಿಲುಬೆಯ ಮೇಲೆ ಸಾಯುವನೆಂದು ಯೋಹಾನನು ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ದೇವರನ್ನು ಮಹಿಮೆಪಡಿಸಲು ಪೇತ್ರನು ಶಿಲುಬೆಯ ಮೇಲೆ ಸಾಯುವನೆಂದು ಸೂಚಿಸಲು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

ἀκολούθει μοι

ಇಲ್ಲಿ “ಹಿಂಬಾಲಿಸು” ಎನ್ನುವ ಪದಕ್ಕೆ “ಶಿಷ್ಯನಾಗು” ಎಂದರ್ಥ. ಪರ್ಯಾಯ ಅನುವಾದ: “ನನ್ನ ಶಿಷ್ಯನಾಗಿರು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 21:20

τὸν μαθητὴν ὃν ἠγάπα ὁ Ἰησοῦς

ಯೋಹಾನನು ತನ್ನ ಹೆಸರನ್ನು ಹೇಳುವುದಕ್ಕೆ ಬದಲಾಗಿ ಈ ಪುಸ್ತಕದಲ್ಲೆಲ್ಲ ತನ್ನನ್ನು ತಾನು ಈ ರೀತಿಯಾಗಿ ಸಂಬೋಧಿಸಿಕೊಂಡಿದ್ದಾನೆ.

ἠγάπα

ಇದು ದೇವರ ಬಳಿಯಿಂದ ಬರುವ ಒಂದು ರೀತಿಯಾದ ಪ್ರೀತಿ ಮತ್ತು ಅದು ಅವರಿಗೆ ಲಾಭಕರವಾಗಿಲ್ಲದ್ದಿದ್ದರು ಇತರರ ಹಿತದ ಮೇಲೆ ಅದು ಕೇಂದ್ರೀಕರಿಸಲಾಗಿರುತ್ತದೆ. ದೇವರು ತಾನೆ ಪ್ರೀತಿಯಾಗಿದ್ದಾನೆ ಮತ್ತು ನಿಜವಾದ ಪ್ರೀತಿಯ ಮೂಲವಗಿದ್ದಾನೆ.

ἐν τῷ δείπνῳ

ಇದು ರಾತ್ರಿ ಭೋಜನದ ಸಮಯವನ್ನು ಸೂಚಿಸುತ್ತಿದೆ (ಯೋಹಾನನು 13).

John 21:21

τοῦτον…ἰδὼν, ὁ Πέτρος

ಇಲ್ಲಿ “ಅವನು” ಎನ್ನುವ ಪದವು “ಯೇಸು ಪ್ರೀತಿಸಿದ ಶಿಷ್ಯನನ್ನು” ಸೂಚಿಸುತ್ತಿದೆ.

Κύριε, οὗτος δὲ τί

ಯೋಹಾನನಿಗೆ ಏನು ಸಂಭವಿಸುತ್ತದೆಂದು ಪೇತ್ರನು ತಿಳಿದುಕೊಳ್ಳಲು ಬಯಸಿದನು. ಪರ್ಯಾಯ ಅನುವಾದ: “(ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 21:22

λέγει αὐτῷ ὁ Ἰησοῦς

ಯೇಸು ಪೇತ್ರನಿಗೆ ಹೇಳಿದನು

ἐὰν αὐτὸν θέλω μένειν

ಇಲ್ಲಿ “ಅವನು” ಎನ್ನುವ ಪದವು ಯೋಹಾನನು.21:20 ವಚನದಲ್ಲಿ “ಯೇಸು ಪ್ರೀತಿಸಿದ ಶಿಷ್ಯನನ್ನು” ಸೂಚಿಸುತ್ತಿದೆ.

ἔρχομαι

ಇದು ಯೇಸುವಿನ ಎರಡನೆಯ ಬರೋಣವನ್ನು, ಆತನು ಪರಲೋಕದಿಂದ ಭೂಲೋಕಕ್ಕೆ ಬರುವುದನ್ನು ಸೂಚಿಸುತ್ತಿದೆ.

τί πρὸς σέ

ಸೌಮ್ಯವಾದ ಗದರಿಕೆಯನ್ನು ಸೂಚಿಸಲು ಈ ಅಭಿಪ್ರಾಯವು ಪ್ರಶ್ನೆಯ ರೂಪದಲ್ಲಿ ಕಾಣುತ್ತಿದೆ. ಪರ್ಯಾಯ ಅನುವಾದ: “ನಿನಗೇನು” ಅಥವಾ “ಅದರ ಕುರಿತು ನಿನಗೇನು” (ನೋಡಿರಿ: ಅಲಂಕಾರಿಕ ಪ್ರಶ್ನೆಗಳು.)

John 21:23

εἰς τοὺς ἀδελφοὺς

ಇಲ್ಲಿ “ಸಹೋದರರು” ಎನ್ನುವ ಪದವು ಯೇಸುವಿನ ಎಲ್ಲಾ ಹಿಂಬಾಲಕರನ್ನು ಸೂಚಿಸುತ್ತಿದೆ.

John 21:24

ಇದು ಯೋಹಾನನ ಸುವಾರ್ತೆಯ ಕೊನೆಯ ಭಾಗವಾಗಿದೆ. ಇಲ್ಲಿ ಲೇಖಕರು, ಅಪೊಸ್ತಲನಾದ ಯೋಹಾನನು, ತನ್ನನ್ನು ಕುರಿತು ತಾನೇ ಕೊನೆಯ ಮಾತುಗಳನ್ನು ಮತ್ತು ಈ ಪುಸ್ತಕದಲ್ಲಿ ಬರೆದಿರುವ ಸಂಗತಿಗಳನ್ನು ಕುರಿತು ಹೇಳುತ್ತಿದ್ದಾನೆ. (ನೋಡಿರಿ: ಕಥೆಯ ಮುಕ್ತಾಯ)

ὁ μαθητὴς

ಯೋಹಾನನು ಎನ್ನುವ ಶಿಷ್ಯನು

ὁ μαρτυρῶν περὶ τούτων

ಇಲ್ಲಿ “ಸಾಕ್ಷಿ” ಎನ್ನುವ ಪದಕ್ಕೆ ಆತನು ವ್ಯಕ್ತಿಗತವಾಗಿ ಯಾವುದನ್ನಾದರೂ ನೋಡುತ್ತಾನೆ ಎಂದರ್ಥ. ಪರ್ಯಾಯ ಅನುವಾದ: “ಈ ಎಲ್ಲಾ ಸಂಗತಿಗಳನ್ನು ನೋಡಿರುವವನು” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

οἴδαμεν

ಇಲ್ಲಿ “ನಾವು” ಎನ್ನುವ ಪದವು ಯೇಸುವನ್ನು ನಂಬುವವರನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ: “ಯೇಸುವಲ್ಲಿ ನಂಬಿಕೆ ಇಟ್ಟಿರುವ ನಮಗೆ ತಿಳಿದಿದೆ” (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)

John 21:25

ἐὰν γράφηται καθ’ ἕν

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಯಾರಾದರು ಅದನ್ನೆಲ್ಲಾ ಬೇರೆದರೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)

οὐδ’ αὐτὸν…τὸν κόσμον χωρήσειν τὰ…βιβλία

ಯೇಸು ಮಾಡಿರುವ ಕಾರ್ಯಗಳನ್ನು ಕುರಿತಾಗಿ ಜನರು ಪುಸ್ತಕಗಳಲ್ಲಿ ಬರೆಯಲು ಸಾಧ್ಯವಿಲ್ಲ ಎನ್ನುವ ವಿಷಯವನ್ನು ಯೋಹಾನನು ಒತ್ತಾಯಿಸಿ ಉತ್ಪ್ರೇಕ್ಷಿಸಿ ಹೇಳುತ್ತಿದ್ದಾನೆ. (ನೋಡಿರಿ: ಅತಿಶಯೋಕ್ತಿ)

τὰ γραφόμενα βιβλία

ಇದನ್ನು ನೀವು ಕ್ರಿಯಾಶೀಲ ರೂಪದಲ್ಲಿ ಅನುವಾದ ಮಾಡಬಹುದು. ಪರ್ಯಾಯ ಅನುವಾದ: “ಆತನು ಮಾಡಿದ ಕಾರ್ಯಗಳ ಕುರಿತಾಗಿ ಜನರು ಪುಸ್ತಕಗಳನ್ನು ಬರೆದರೆ” (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)