2 Peter
2 Peter front
2ನೇ ಪೇತ್ರನ ಪತ್ರದ ಪೀಠಿಕೆ
ಭಾಗ 1 :ಸಾಮಾನ್ಯ ಪೀಠಿಕೆ
2 ನೇ ಪೇತ್ರನ ಪತ್ರದ ರೂಪರೇಖೆ
- ಪೀಠಿಕೆ (1:1–2)
- ಆತ್ಮೀಕ ಜೀವನವನ್ನು ನಡೆಸಲು ಜ್ಞಾಪಕ ಮಾಡುವುದು ಏಕೆಂದರೆ ಹಾಗೆ ಮಾಡಲು ದೇವರು ನಮ್ಮನ್ನು ಶಕ್ತಗೊಳಿಸಿದ್ದಾನೆ (1:3-15)
- ಅಪೋಸ್ತಲರ ಬೋಧನೆಯ ಸತ್ಯತೆಯನ್ನು ಜ್ಞಾಪಕ ಮಾಡುವುದು (1:16–21)
- ಸುಳ್ಳು ಬೋಧಕರ ಭವಿಷ್ಯ (2:1–3)
- ದೈವಿಕ ನ್ಯಾಯತೀರ್ಪಿನ ಉದಾಹರಣೆಗಳು (2:4–10a)
- ಸುಳ್ಳು ಬೋಧಕರ ವಿವರಣೆ ಮತ್ತು ಖಂಡನೆ (2:10b–22)
- ಯೇಸು ಸರಿಯಾದ ಸಮಯದಲ್ಲಿ ಹಿಂತಿರುಗುತ್ತಾನೆ ಎಂದು ನೆನಪಿಸುವುದು (3:1-13)
- ಆತ್ಮೀಕ ಜೀವನವನ್ನು ನಡೆಸುವಂತೆ ಉಪದೇಶವನ್ನು ಮುಕ್ತಾಯಗೊಳಿಸುವುದು (3:14-17)
2 ನೇ ಪೇತ್ರನ ಪತ್ರವನ್ನು ಬರೆದವರು ಯಾರು?
ಲೇಖಕನು ಸ್ವತಹ ತನ್ನನ್ನು ಸೀಮೋನ ಪೇತ್ರನೆಂದು ಗುರುತಿಸಿಕೊಂಡಿದ್ದನು. ಸಿಮೋನ ಪೇತ್ರನು ಅಪೋಸ್ತಲನಾಗಿದ್ದನು .ಅವನು 1 ನೇ ಪೇತ್ರನ ಪತ್ರವನ್ನು ಸಹ ಬರೆದಿದ್ದನು. ಬಹುಶಃ ಪೇತ್ರನು ಸಾಯುವ ಮುನ್ನ, ರೋಮ್ ರಾಜ್ಯದ ಸೆರಮನೆಯಲ್ಲಿ ಈ ಪತ್ರವನ್ನು ಬರೆದಿದ್ದಾನೆ. ಪೇತ್ರನು ಈ ಪತ್ರವನ್ನು ತನ್ನ ಎರಡನೆಯ ಪತ್ರಿಕೆ ಎಂದು ಕರೆಯುತ್ತಾನೆ.ಆದುದರಿಂದ ನಾವು ಇದನ್ನು 1ನೇ ಪೇತ್ರನ ಪತ್ರದ ನಂತರದಲ್ಲಿ ಇಡಬಹುದು .ಮೊದಲನಯ ಪತ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರೇಕ್ಷಕರಿಗೇ ಈ ಪತ್ರವನ್ನು ಸಹ ಉದ್ದೇಶಿಸಿದನು. ಬಹುಶಃ ಪ್ರೇಕ್ಷಕರು ಏಷ್ಯಾದಾದ್ಯಾಂತ ಹರಡಿದ ಕ್ರೈಸ್ತರಾಗಿರಬಹುದು .
2ನೇ ಪೇತ್ರನ ಪತ್ರದಲ್ಲಿರುವ ವಿಷಯಗಳೇನು ?
ಉತ್ತಮ ಜೀವಿತವನ್ನು ಜೀವಿಸುವ ಹಾಗೆ ವಿಶ್ವಾಸಿಗಳನ್ನು ಉತ್ತೇಜಿಸಲು ಪೇತ್ರನು ಈ ಪತ್ರವನ್ನು ಬರೆದನು. ಯೇಸುವು ಹಿಂತಿರುಗಿಬರಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದಾನೆಂದು ಹೇಳುತ್ತಿದ್ದ ಸುಳ್ಳು ಬೋಧಕರ ಬಗ್ಗೆ ಅವರನ್ನು ಎಚ್ಚರಿಸಿದನು.ಯೇಸು ಹಿಂತಿರುಗಲು ನಿಧಾನವಾಗಿಲ್ಲ ಎಂದು ಅವನು ಅವರಿಗೆ ಹೇಳಿದನು. ಬದಲಿಗೆ, ಜನರಿಗೆ ಪಶ್ಚಾತ್ತಾಪಪಡಲು ದೇವರು ಸಮಯವನ್ನು ನೀಡುತ್ತಿದ್ದಾನೆ ಆದ್ದರಿಂದ ಅವರು ರಕ್ಷಿಸಲ್ಪಡುತ್ತಾರೆ.
ಈ ಪತ್ರದ ಶೀರ್ಷಿಕೆಯನ್ನು ಹೇಗೆ ಅನುವಾದಿಸುವುದು ?
ಅನುವಾದಕಾರರು ಈ ಪತ್ರವನ್ನು “2 ಪೇತ್ರನು ” ಅಥವಾ “ಎರಡನೆಯ ಪೇತ್ರ” ಎಂಬ ಸಾಂಪ್ರದಾಯಿಕ ಶೀರ್ಷಿಕೆಯಿಂದ ಕರೆಯಲು ಆಯ್ಕೆ ಮಾಡಬಹುದು . ಅಥವಾ ಅವರು ಸ್ಪಷ್ಟವಾದ ಶೀರ್ಷಿಕೆಯನ್ನು ಆಯ್ಕೆ ಮಾಡಬಹುದು, ಉದಾಹರಣೆಗೆ “ಪೇತ್ರನಿಂದ ಎರಡನೇ ಪತ್ರ” ಅಥವ “ ಪೇತ್ರನು ಬರೆದ ಎರಡನೆಯ ಪತ್ರ” (ನೋಡಿ :ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
ಭಾಗ 2: ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆಗಳು
ಪೇತ್ರನ ವಿರುದ್ಧವಾಗಿ ಮಾತನಾಡಿದ ಜನರು ಯಾರು ?
ಪೇತ್ರನ ವಿರುದ್ಧವಾಗಿ ಮಾತನಾಡಿದ ಜನರು ಅರಿವು ಉಳ್ಳವರಾಗಿದ್ದರು ಎಂದು ಕರೆಯಲ್ಪಡುವ ಸಾಧ್ಯತೆಯಿದೆ . ಈ ಬೋಧಕರು ತಮ್ಮ ಸ್ವಂತ ಲಾಭಕ್ಕಾಗಿ ಪವಿತ್ರಶಾಸ್ತ್ರದ ಬೋಧನೆಯನ್ನು ವಿರೂಪಗೊಳಿಸಿದರು. ಅವರು ಅನೈತಿಕ ರೀತಿಯಲ್ಲಿ ವಾಸಿಸುತ್ತಿದ್ದರು ಮತ್ತು ಇತರರಿಗೆ ಅದೇ ರೀತಿ ಇರಲು ಕಲಿಸಿದರು.
ದೇವರ ಪ್ರೇರಿತ ಪವಿತ್ರಶಾಸ್ತ್ರ ಎಂದರೆ ಏನು ?
ಪವಿತ್ರಶಾಸ್ತ್ರದ ಸಿದ್ಧಾಂತವು ಬಹಳ ಮುಖ್ಯವಾದದ್ದು . ಪವಿತ್ರಶಾಸ್ತ್ರದ ಪ್ರತಿಯೊಬ್ಬ ಲೇಖಕರಿಗೂ ತಮ್ಮದೇ ಆದ ವಿಭಿನ್ನ ಬರವಣಿಗೆಯ ವಿಧಾನವಿದ್ದರೂ, ದೇವರೇ ಪವಿತ್ರಶಾಸ್ತ್ರದ ನಿಜವಾದ ಲೇಖಕನೆಂದು ಅರ್ಥಮಾಡಿಕೊಳ್ಳುವಂತೆ ಓದುವವರಿಗೆ 2 ನೇ ಪೇತ್ರನ ಪತ್ರವು ಸಹಾಯಮಾಡುತ್ತದೆ.(1 :20-21).
ಭಾಗ 3 : ಅನುವಾದದ ಪ್ರಮುಖ ಸಮಸ್ಯಗಳು.
ಏಕವಚನ ಮತ್ತು ಬಹುವಚನ “ನೀವು”
ಈ ಪತ್ರದಲ್ಲಿ “ನಾನು” ಎಂಬ ಪದವು ಪೇತ್ರನನ್ನು ಸೂಚಿಸುತ್ತದೆ ಮತ್ತು “ನೀವು” ಎಂಬ ಪದವು ಪೇತ್ರನ ಪ್ರೇಕ್ಷಕರನ್ನು ಸೂಚಿಸುತ್ತದೆ . (ನೋಡಿ :ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".ಮತ್ತು"You" - " ನೀನು " – ವಿವಿಧ ರೂಪಗಳು.)
2ನೇ ಪೇತ್ರನ ಪತ್ರದ ಪಠ್ಯದಲ್ಲಿನ ಪ್ರಮುಖ ಸಮಸ್ಯಗಳು ಯಾವುವು ?
ಕೆಳಗಿನ ವಾಕ್ಯಗಳಿಗೆ, ಕೆಲವು ಪ್ರಾಚೀನ ಹಸ್ತಪ್ರತಿಗಳ ನಡುವೆ ವ್ಯತ್ಯಾಸಗಳಿವೆ. ULT ಪಠ್ಯವು ಹೆಚ್ಚಿನ ವಿದ್ವಾಂಸರು ಮೂಲ ಎಂದು ಪರಿಗಣಿಸುವ ಓದುವಿಕೆಯನ್ನು ಅನುಸರಿಸುತ್ತದೆ ಮತ್ತು ಇತರ ಓದುವಿಕೆಯನ್ನು ಅಡಿಟಿಪ್ಪಣಿಯಲ್ಲಿ ಇರಿಸುತ್ತದೆ. ಸತ್ಯವೇದದ ಅನುವಾದವು ಪ್ರದೇಶದಲ್ಲಿ ವ್ಯಾಪಕವಾದ ಸಂವಹನದ ಭಾಷೆಯಲ್ಲಿ ಅಸ್ತಿತ್ವದಲ್ಲಿದ್ದರೆ, ಭಾಷಾಂತಕಾರರು ಆ ಆವೃತ್ತಿಯಲ್ಲಿ ಕಂಡುಬರುವ ಓದುವಿಕೆಯನ್ನು ಬಳಸುವುದನ್ನು ಪರಿಗಣಿಸಲು ಬಯಸಬಹುದು. ಇಲ್ಲದಿದ್ದರೆ, ULT ನಲ್ಲಿ ಓದುವಿಕೆಯನ್ನು ಅನುಸರಿಸಲು ಅನುವಾದಕಾರರಿಗೆ ಸಲಹೆ ನೀಡಲಾಗುತ್ತದೆ.
- “ನ್ಯಾಯತೀರ್ಪಿನ ತನಕ ಕಡಿಮೆ ಕತ್ತಲೆಯ ಸರಪಳಿಯಲ್ಲಿ ಇರಿಸಲಾಗುವುದು” (2:4). ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ, “ನ್ಯಾಯತೀರ್ಪಿನ ತನಕ ಕಡಿಮೆ ಕತ್ತಲೆಯ ಗುಂಡಿಗಳಲ್ಲಿ ಇಡಬೇಕು” ಎಂದಿರುತ್ತವೆ.
- “ಅವರು ನಿಮ್ಮೊಂದಿಗೆ ಔತಣ ಮಾಡುವಾಗ ತಮ್ಮ ಮೋಸದ ಕಾರ್ಯಗಳನ್ನು ಆನಂದಿಸುತ್ತಾರೆ” (2:13). ಕೆಲವು ಹಸ್ತಪ್ರತಿಗಳಲ್ಲಿ, “ಅವರು ಪ್ರೀತಿಯ ಹಬ್ಬಗಳಲ್ಲಿ ನಿಮ್ಮೊಂದಿಗೆ ಔತಣ ಮಾಡುವಾಗ ಅವರು ತಮ್ಮ ಕ್ರಿಯೆಗಳನ್ನು ಆನಂದಿಸುತ್ತಾರೆ” ಎಂದು ಇರುತ್ತದೆ.
- “ಬೋಸರ್” (2:15). ಇತರ ಕೆಲವು ಹಸ್ತಪ್ರತಿಗಳು “ಬಿಯೋರ್” ಎಂದು ಓದುತ್ತವೆ.
- “ಸಮಸ್ತವು ಬೆಂಕಿಯಿಂದ ಸುಡಲಾಗುತ್ತದೆ, ಮತ್ತು ಭೂಮಿಯು ಹಾಗೂ ಅದರಲ್ಲಿರುವ ಕಾರ್ಯಗಳು ಬಹಿರಂಗಗೊಳ್ಳುತ್ತವೆ” (3:10). ಇತರ ಹಸ್ತಪ್ರತಿಗಳಲ್ಲಿ, “ಸಮಸ್ತವನ್ನು ಬೆಂಕಿಯಿಂದ ಸುಡಲಾಗುತ್ತದೆ, ಮತ್ತು ಭೂಮಿ ಮತ್ತು ಅದರಲ್ಲಿರುವ ಕಾರ್ಯಗಳು ಸುಟ್ಟುಹೋಗುತ್ತವೆ” ಎಂದು ಇರುತ್ತದೆ.
(ನೋಡಿ:ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.) "
2 Peter 1
2 ನೇ ಪೇತ್ರನು ಪತ್ರದ ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಿರ್ಮಾಣ
- ಪೀಠಿಕೆ(1:1–2) 2.ಒಳ್ಳೆಯ ಜೀವನವನ್ನು ನಡೆಸಲು ಜ್ಞಾಪಕ ಮಾಡುವುದು ಏಕೆಂದರೆ ಹಾಗೆ ಮಾಡಲು ದೇವರು ನಮ್ಮನ್ನು ಶಕ್ತಗೊಳಿಸಿದ್ದಾನೆ (1:3-15)
- ಅಪೋಸ್ತಲರ ಬೋಧನೆಯ ಸತ್ಯತೆಯನ್ನು ಜ್ಞಾಪಕ ಮಾಡುವುದು (1:16–21)
ಪೇತ್ರನು ಈ ಪತ್ರವನ್ನು 1:1–2 ನಲ್ಲಿ ತನ್ನ ಹೆಸರನ್ನು ನೀಡುವ ಮೂಲಕ, ತಾನು ಬರೆಯುತ್ತಿರುವ ಜನರನ್ನು ಗುರುತಿಸುವ ಮೂಲಕ ಮತ್ತು ಶುಭಾಶಯವನ್ನು ನೀಡುವ ಮೂಲಕ ಪ್ರಾರಂಭಿಸುತ್ತಾನೆ. ಈ ಸಮಯದಲ್ಲಿ ಜನರು ಸಾಮಾನ್ಯವಾಗಿ ಪತ್ರಗಳನ್ನು ಪ್ರಾರಂಭಿಸುವ ವಿಧಾನವಾಗಿತ್ತು.
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ದೇವರ ಜ್ಞಾನ
ದೇವರ ಜ್ಞಾನದ ಅನುಭವನ್ನು ಹೊಂದುವುದು ಎಂದರೆ ಆತನಿಗೆ ಸೇರಿದವರು ಅಥವಾ ಆತನೊಂದಿಗೆ ಸಂಬಂಧವನ್ನು ಹೊಂದುವುದು. ಇಲ್ಲಿ, “ಜ್ಞಾನ” ಎಂಬುದು ಕೇವಲ ಮಾನಸಿಕವಾಗಿ ದೇವರ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನದು. ಇದು ವೈಯಕ್ತಿಕ ಸಂಬಂಧದ ಜ್ಞಾನವಾಗಿದ್ದು, ಇದರಲ್ಲಿ ದೇವರು ಒಬ್ಬ ವ್ಯಕ್ತಿಯನ್ನು ರಕ್ಷಿಸುತ್ತಾನೆ ಮತ್ತು ಅವನಿಗೆ ಕೃಪೆ ಮತ್ತು ಶಾಂತಿಯನ್ನು ನೀಡುತ್ತಾನೆ. (ನೋಡಿ: ತಿಳಿಯಿರಿ, ಜ್ಞಾನ, ಅಜ್ಞಾತ, ಪ್ರತ್ಯೇಕಿಸು)
ಭಕ್ತಿಯ ಜೀವನವನ್ನು ನಡೆಸುವುದು
ಭಕ್ತಿಯ ಜೀವಿತವನ್ನು ನಡಿಸಲು ಬೇಕಾದ ಎಲ್ಲವನ್ನು ದೇವರು ವಿಶ್ವಾಸಿಗಳಿಗೆ ಕೊಟ್ಟಿದ್ದಾನೆಂದು ಪೇತ್ರನು ಹೇಳುತ್ತಾನೆ. ಆದುದರಿಂದ ದೇವರಿಗೆ ವಿಧಯರಾಗಿರಲು ಅಗತ್ಯವಾದ್ದದ್ದೆಲ್ಲವನ್ನು ವಿಶ್ವಾಸಿಗಳು ಮಾಡಬೇಕು. ವಿಶ್ವಾಸಿಗಳು ಇದನ್ನು ಮುಂದುವರಿಸಿದರೆ ಯೇಸುವಿನೊಂದಿಗಿನ ಸಂಬಂಧದ ಮೂಲಕ ಪರಿಣಾಮಕಾರಿಯಾಗಿರುತ್ತಾರೆ ಮತ್ತು ಫಲವತ್ತಾಗಿರುತ್ತಾರೆ. ಹೇಗಾದರು, ವಿಶ್ವಾಸಿಗಳು ಭಕ್ತಿಯ ಜೀವನವನ್ನು ಮುಂದುವರೆಸದಿದ್ದರೆ ಅವರನ್ನು ರಕ್ಷಿಸಲು ದೇವರು ಕ್ರಿಸ್ತನ ಮೂಲಕ ಮಾಡಿದ್ದನ್ನು ಅವರು ಮರೆತ ಹಾಗೆ.(ನೋಡಿ :ದೈವಭಕ್ತಿಯುಳ್ಳ, ದೈವಭಕ್ತಿ, ದೈವಭಕ್ತಿಯಿಲ್ಲದ, ದೈವಹೀನ, ಭಕ್ತಿಹೀನತೆ, ದೇವರಿಲ್ಲದಿರುವಿಕೆಮತ್ತುರಕ್ಷಿಸು, ರಕ್ಷಿಸುವುದು, ರಕ್ಷಿಸಲ್ಪಟ್ಟಿದೆ, ಸಂರಕ್ಷಣೆ, ರಕ್ಷಣೆ)
ಈ ಅಧ್ಯಾಯದಲ್ಲಿನ ಇತರ ಅನುವಾದದ ತೊಂದರೆಗಳು
ಪವಿತ್ರಶಾಸ್ತ್ರದ ಸತ್ಯ
ಪವಿತ್ರಶಾಸ್ತ್ರದಲ್ಲಿನ ಪ್ರವಾದನೆಗಳು ಮನುಷ್ಯರಿಂದ ಮಾಡಲ್ಪಟ್ಟಿಲ್ಲ ಎಂದು ಪೇತ್ರನು ಕಲಿಸುತ್ತಾನೆ. ಪವಿತ್ರಾತ್ಮನು ದೇವರ ಸಂದೇಶವನ್ನು ಅವುಗಳನ್ನು ಮಾತನಾಡಿದ ಅಥವಾ ಬರೆದ ಮನುಷ್ಯರಿಗೆ ಬಹಿರಂಗಪಡಿಸಿದನು. ಅಲ್ಲದೆ, ಪೇತ್ರನು ಮತ್ತು ಇತರ ಅಪೊಸ್ತಲರು ಯೇಸುವಿನ ಬಗ್ಗೆ ಜನರಿಗೆ ಹೇಳಲು ಕಥೆಗಳನ್ನು ಉಂಟುಮಾಡಲಿಲ್ಲ. ಯೇಸು ಮಾಡಿದ್ದಕ್ಕೆ ಅವರು ಸಾಕ್ಷಿಯಾಗಿದ್ದರು ಮತ್ತು ದೇವರು ಯೇಸುವನ್ನು ತನ್ನ ಮಗನೆಂದು ಕರೆಯುವುದನ್ನು ಕೇಳಿದ್ದರು.
2 Peter 1:1
Σίμων Πέτρος
ಈ ಸಂಸ್ಕೃತಿಯಲ್ಲಿ, ಪತ್ರ ಬರೆಯುವವರು ತಮ್ಮ ಹೆಸರನ್ನು ಮೊದಲು ನೀಡುತ್ತಾರೆ ಮತ್ತು ಅವರು ತಮ್ಮನ್ನು ಮೂರನೇ ವ್ಯಕ್ತಿಯಾಗಿ ಸೂಚಿಸುತ್ತಾರೆ. ನಿಮ್ಮ ಭಾಷೆಯಲ್ಲಿ ಅದು ಗೊಂದಲಕ್ಕೊಳಗಾಗಿದ್ದರೆ, ನೀವು ಮೊದಲ ವ್ಯಕ್ತಿಯನ್ನು ಬಳಸಬಹುದು. ನಿಮ್ಮ ಭಾಷೆಯು ಪತ್ರದ ಲೇಖಕರನ್ನು ಪರಿಚಯಿಸುವ ನಿರ್ದಿಷ್ಟ ವಿಧಾನವನ್ನು ಹೊಂದಿದ್ದರೆ, ನೀವು ಅದನ್ನು ಸಹ ಬಳಸಬಹುದು. ಪರ್ಯಾಯ ಅನುವಾದ: “ನಾನು, ಸಿಮೋನ ಪೇತ್ರ, ಈ ಪತ್ರವನ್ನು ಬರೆಯುತ್ತಿದ್ದೇನೆ” ಅಥವಾ “ಸಿಮೋನ ಪೇತ್ರನಿಂದ” (ನೋಡಿ: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
δοῦλος καὶ ἀπόστολος Ἰησοῦ Χριστοῦ
ಈ ನುಡಿಗಟ್ಟು ಸಿಮೋನ ಪೇತ್ರನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಅವನು ತನ್ನನ್ನು ಯೇಸು ಕ್ರಿಸ್ತನ ಸೇವಕ ಎಂದು ವಿವರಿಸುತ್ತಾನೆ ಮತ್ತು ಕ್ರಿಸ್ತನ ಅಪೊಸ್ತಲ ಎಂಬ ಸ್ಥಾನವನ್ನು ಮತ್ತು ಅಧಿಕಾರವನ್ನು ಹೊಂದಿದವನು. (ನೋಡಿ: ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ)
τοῖς ἰσότιμον ἡμῖν λαχοῦσιν πίστιν
ಈ ಜನರು ನಂಬಿಕೆಯನ್ನು ಪಡೆದಿದ್ದಾರೆ ಎಂದರೆ ದೇವರು ಆ ನಂಬಿಕೆಯನ್ನು ಅವರಿಗೆ ಕೊಟ್ಟಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ದೇವರು ನಮ್ಮೊಂದಿಗೆ ಸಮಾನವಾದ ನಂಬಿಕೆಯನ್ನು ನೀಡಿದವರಿಗೆ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοῖς…λαχοῦσιν
ಈ ಸಂಸ್ಕೃತಿಯಲ್ಲಿ, ತಮ್ಮ ಸ್ವಂತ ಹೆಸರನ್ನು ನೀಡಿದ ನಂತರ, ಪತ್ರ ಬರೆಯುವವರು ಅವರು ಯಾರಿಗೆ ಬರೆಯುತ್ತಿದ್ದಾರೆಂದು ಹೇಳುತ್ತಿದ್ದರು, ಆ ಜನರನ್ನು ಮೂರನೇ ವ್ಯಕ್ತಿಯಲ್ಲಿ ಹೆಸರಿಸುತ್ತಾರೆ. ನಿಮ್ಮ ಭಾಷೆಯಲ್ಲಿ ಅದು ಗೊಂದಲಕ್ಕೊಳಗಾಗಿದ್ದರೆ, ನೀವು ಎರಡನೇ ವ್ಯಕ್ತಿಯನ್ನು ಬಳಸಬಹುದು. ಪರ್ಯಾಯ ಅನುವಾದ: “ಪಡೆದ ನಿಮಗೆ” (ನೋಡಿ: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
ἡμῖν
ಇಲ್ಲಿ “ನಾವು” ಎಂಬ ಪದವು ಪೇತ್ರನನ್ನು ಮತ್ತು ಇತರ ಅಪೊಸ್ತಲರನ್ನು ಸೂಚಿಸುತ್ತದೆ ಹೊರೆತು ಅವನು ಬರೆಯುತ್ತಿರುವವರಿಗಲ್ಲ .ಇನ್ನೊಂದು ಅನುವಾದ : “ಅಪೊಸ್ತಲರಾದ ನಾವು ಸ್ವೀಕರಿಸಿದ್ದೇವೆ”(ನೋಡಿ :ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
Σίμων Πέτρος
ಸಿಮೋನ ಪೇತ್ರ ಎಂಬುದು ಯೇಸುವಿನ ಶಿಷ್ಯರಲ್ಲಿ ಒಬ್ಬನ ಹೆಸರು, . 2 ಪೇತ್ರನ ಪತ್ರದ ಪರಿಚಯದ ಭಾಗ 1 ರಲ್ಲಿ ಅವನ ಬಗ್ಗೆ ಮಾಹಿತಿಯನ್ನು ನೋಡಿ. (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
τοῖς ἰσότιμον…λαχοῦσιν πίστιν
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದ ನಂಬಿಕೆ ಎಂಬ ಹಿಂದಿನ ಕಲ್ಪನೆಯನ್ನು “ನಂಬಿಕೆ” ಅಥವಾ “ವಿಶ್ವಾಸ” ದಂತಹ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ಯಾರನ್ನು ನಂಬುವಂತೆ ಮಾಡಿದನೋ ಅವರಿಗೆ” ಅಥವಾ “ದೇವರು ನಂಬುವಂತೆ ಮಾಡಿದವರಿಗೆ” (ನೋಡಿ: ಭಾವವಾಚಕ ನಾಮಪದಗಳು)
δικαιοσύνῃ τοῦ Θεοῦ ἡμῶν καὶ Σωτῆρος
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದ ನೀತಿವಂತಿಕೆ ಹಿಂದಿನ ಕಲ್ಪನೆಯನ್ನು ನೀವು “ಪ್ರಮಾಣಿಕ” ಅಥವಾ “ಸರಿ” ಎಂಬ ವಿಶೇಷಣದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ನಮ್ಮ ದೇವರು ಮತ್ತು ರಕ್ಷಕನ ನೀತಿವಂತಿಕೆಯ ಕಾರ್ಯಗಳು” ಅಥವಾ “ನಮ್ಮ ದೇವರು ಮತ್ತು ರಕ್ಷಕನ ಸರಿಯಾದ ಮಾರ್ಗ” (ನೋಡಿ: ಭಾವವಾಚಕ ನಾಮಪದಗಳು)
ἐν δικαιοσύνῃ
ಮೂಲಕಎಂಬ ಪದವು ಅವರು ನಂಬಿಕೆಯನ್ನು ಪಡೆದ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀತಿವಂತಿಕೆಯ ಮೂಲಕ”
2 Peter 1:2
χάρις…καὶ εἰρήνη πληθυνθείη
ವಿಶ್ವಾಸಿಗಳಿಗೆ ಕೃಪೆ ಮತ್ತು ಶಾಂತಿ ಯನ್ನು ಕೊಡುವವನು ದೇವರೋಬ್ಬನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಆ ಮಾಹಿತಿಯನ್ನು ಸ್ಪಷ್ಟವಾಗಿ ಮಾಡಬಹುದು. ಪರ್ಯಾಯ ಅನುವಾದ: “ದೇವರು ತನ್ನ ಕೃಪೆಯನ್ನು ಮತ್ತು ಶಾಂತಿಯನ್ನು ಹೆಚ್ಚಿಸಲಿ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
χάρις…καὶ εἰρήνη πληθυνθείη
ಪೇತ್ರನು ಕೃಪೆ ಮತ್ತು ಶಾಂತಿ ಯನ್ನು ಕುರಿತು ಅವುಗಳು ಗಾತ್ರ ಅಥವಾ ಸಂಖ್ಯೆಯಲ್ಲಿ ಹೆಚ್ಚಾಗಬಹುದಾದ ವಸ್ತುಗಳಂತೆ ಮಾತನಾಡುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಗೊಂದಲಮಯವಾಗಿದ್ದರೆ, ನೀವು ಬೇರೆ ರೂಪಕವನ್ನು ಬಳಸಬಹುದು ಅಂದರೆ ಈ ವಿಷಯಗಳು ಹೆಚ್ಚಾಗುತ್ತವೆ ಅಥವಾ ಸರಳ ಭಾಷೆಯನ್ನು ಬಳಸಿ. ಪರ್ಯಾಯ ಅನುವಾದ: “ದೇವರು ಆತನ ಕೃಪೆ ಮತ್ತು ಶಾಂತಿಯನ್ನು ಹೆಚ್ಚಿಸಲಿ” (ನೋಡಿ: ರೂಪಕ ಅಲಂಕಾರ)
ἐν ἐπιγνώσει τοῦ Θεοῦ, καὶ Ἰησοῦ τοῦ Κυρίου ἡμῶν
ನೀವು ಇಲ್ಲಿ ಅಮೂರ್ತ ನಾಮಪದವನ್ನು ಬಳಸದಿದ್ದರೆ, ನೀವು ಮೌಖಿಕ ನುಡಿಗಟ್ಟನ್ನು ಬಳಸಿಕೊಂಡು ಜ್ಞಾನ ಎಂಬುದನ್ನು ಅನುವಾದಸಬಹುದು. ಪರ್ಯಾಯ ಅನುವಾದ: “ಏಕೆಂದರೆ ನೀವು ದೇವರು ಮತ್ತು ನಮ್ಮ ಕರ್ತನಾದ ಯೇಸುವನ್ನು ತಿಳಿದಿದ್ದೀರಿ” (ನೋಡಿ: ಭಾವವಾಚಕ ನಾಮಪದಗಳು)
χάρις ὑμῖν καὶ εἰρήνη πληθυνθείη
ಈ ಸಂಸ್ಕೃತಿಯಲ್ಲಿ, ಪತ್ರ ಬರಹಗಾರರು ಪತ್ರದ ಮುಖ್ಯ ವ್ಯವಹಾರವನ್ನು ಪರಿಚಯಿಸುವ ಮೊದಲು ಸ್ವೀಕರಿಸುವವರಿಗೆ ಶುಭ ಹಾರೈಸುತ್ತಾರೆ. ಇದು ಶುಭಾಶಯ ಮತ್ತು ಆಶೀರ್ವಾದ ಎಂದು ಸ್ಪಷ್ಟಪಡಿಸುವ ರೂಪವನ್ನು ನಿಮ್ಮ ಭಾಷೆಯಲ್ಲಿ ಬಳಸಿ. ಪರ್ಯಾಯ ಅನುವಾದ: “ದೇವರು ನಿಮಗೆ ತನ್ನ ದಯೆಯ ಕಾರ್ಯಗಳನ್ನು ಹೆಚ್ಚಿಸಲಿ ಮತ್ತು ನಿಮ್ಮನ್ನು ಹೆಚ್ಚು ಶಾಂತಿಯುತರನ್ನಾಗಿ ಮಾಡಲಿ” (ನೋಡಿ: INVALID translate/translate-blessing)
χάρις ὑμῖν καὶ εἰρήνη πληθυνθείη
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದಗಳ ಹಿಂದಿನ ಆಲೋಚನೆಗಳನ್ನು ಕೃಪೆ ಮತ್ತು ಶಾಂತಿ ಎಂಬ ಸಮಾನ ಪದಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ನಿಮಗೆ ತನ್ನ ದಯೆಯ ಕಾರ್ಯಗಳನ್ನು ಹೆಚ್ಚಿಸಲಿ ಮತ್ತು ನಿಮಗೆ ಹೆಚ್ಚು ಶಾಂತಿಯುತ ಮನೋಭಾವವನ್ನು ನೀಡಲಿ” (ನೋಡಿ: ಭಾವವಾಚಕ ನಾಮಪದಗಳು)
ὑμῖν
ಇಲ್ಲಿ ಸರ್ವನಾಮ ನೀವು ಎಂಬುದು ಬಹುವಚನವಾಗಿದೆ, ಏಕೆಂದರೆ ಪೇತ್ರನು ಒಂದು ಗುಂಪಾಗಿ ಯೇಸುವಿನಲ್ಲಿ ವಿಶ್ವಾಸವಿರುವವರಿಗೆ ಬರೆಯುತ್ತಿದ್ದಾನೆ. ಸಾಮಾನ್ಯವಾಗಿ, ಪತ್ರದ ಉದ್ದಕ್ಕೂ “ನೀವು” ಮತ್ತು “ನಿಮ್ಮ” ಎಂಬ ಸರ್ವನಾಮಗಳು ಇದೇ ಕಾರಣಕ್ಕಾಗಿ ಬಹುವಚನಗಳಾಗಿವೆ. (ನೋಡಿ: "You" - " ನೀನು " – ವಿವಿಧ ರೂಪಗಳು.)
ἐν ἐπιγνώσει τοῦ Θεοῦ, καὶ Ἰησοῦ τοῦ Κυρίου ἡμῶν
ಇದರ ಅರ್ಥ: (1) “ದೇವರನ್ನು ಮತ್ತು ನಮ್ಮ ಕರ್ತನಾದ ಯೇಸುವನ್ನು ತಿಳಿದುಕೊಳ್ಳುವುದರಿಂದ” ಅಥವಾ (2) “ದೇವರನ್ನು ಮತ್ತು ನಮ್ಮ ಕರ್ತನಾದ ಯೇಸುವನ್ನು ತಿಳಿದುಕೊಳ್ಳುವ ಮೂಲಕ.”
τοῦ Κυρίου ἡμῶν
ಇಲ್ಲಿ, ನಮ್ಮ ಕರ್ತನು ಎಂದರೆ “ನಮ್ಮ ಮೇಲೆ ಅಧಿಪತಿಯಾಗಿರುವ ವ್ಯಕ್ತಿ” ಅಥವಾ “ನಮ್ಮನ್ನು ಆಳುವ ವ್ಯಕ್ತಿ” ಎಂದರ್ಥ. (ನೋಡಿ: ಸ್ವಾದೀನ)
2 Peter 1:3
ὡς…ἡμῖν τῆς θείας δυνάμεως αὐτοῦ…δεδωρημένης
ಇಲ್ಲಿ, ಹಾಗೆ ಎಂಬ ಪದವು ಈ ವಾಕ್ಯವು ನಿರೀಕ್ಷಿತ ಫಲಿತಾಂಶಕ್ಕೆ ಕಾರಣವನ್ನು ಒದಗಿಸುತ್ತದೆ ಎಂಬುದನ್ನು ಸೂಚಿಸುತ್ತದೆ, ಇದು 1:5–7 ನಲ್ಲಿ ಪೇತ್ರನ ಆಜ್ಞೆಯಾಗಿದೆ. ಪರ್ಯಾಯ ಅನುವಾದ: “ಆತನ ದೈವಿಕ ಶಕ್ತಿಯು ನಮಗೆ ಕೊಡಲ್ಪಟ್ಟಿರುವುದರಿಂದ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
πρὸς ζωὴν καὶ εὐσέβειαν
ಇಲ್ಲಿ, ಭಕ್ತಿಎಂಬುದು ಜೀವನ ಎಂಬ ಪದವನ್ನು ವಿವರಿಸುತ್ತದೆ. ಪರ್ಯಾಯ ಅನುವಾದ: “ಭಕ್ತಿಯ ಜೀವನಕ್ಕಾಗಿ” (ನೋಡಿ: ದ್ವಿಪದಾಲಂಕಾರ)
ἡμᾶς
ಇಲ್ಲಿ, ನಮಗೆ ಎಂಬುದು ಪೇತ್ರನನ್ನು ಮತ್ತು ಅವನ ಪ್ರೇಕ್ಷಕರು, ಜೊತೆ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
ἡμῖν
ಇಲ್ಲಿ, ನಮಗೆ ಎಂಬುದು ಪೇತ್ರನನ್ನು ಮತ್ತು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
τῆς θείας δυνάμεως αὐτοῦ
ಆತನ ಎಂಬ ಸರ್ವನಾಮವು ಇವರುಗಳನ್ನುಸೂಚಿಸಬಹುದು: (1) ದೇವರು. ಪರ್ಯಾಯ ಅನುವಾದ: “ದೇವರ ದೈವಿಕ ಶಕ್ತಿ” (2) ಯೇಸು. ಪರ್ಯಾಯ ಅನುವಾದ: “ಯೇಸು, ದೇವರಂತೆ ಆತನ ಶಕ್ತಿಯಿಂದ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τῆς θείας δυνάμεως αὐτοῦ
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಶಕ್ತಿ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು, ಏಕೆಂದರೆ ಆತನು ಏನು ಬೇಕಾದರೂ ಮಾಡಬಹುದು,” (ನೋಡಿ: ಭಾವವಾಚಕ ನಾಮಪದಗಳು)
τῆς θείας δυνάμεως αὐτοῦ…δεδωρημένης
ಪೇತ್ರನು ದೇವರ ದೈವಿಕ ಶಕ್ತಿ ಯ ಬಗ್ಗೆ ಸಾಂಕೇತಿಕವಾಗಿ ಮಾತನಾಡುತ್ತಿದ್ದಾನೆ, ಅದು ಜನರಿಗೆ ಏನನ್ನಾದರೂ ನೀಡಬಲ್ಲ ಜೀವಂತ ಸಂಗತಿಯಾಗಿದೆ. ಕೊಡುವವನು ದೇವರು, ಮತ್ತು ಹಾಗೆ ಕೊಡಲು ಆತನು ತನ್ನ ದೈವಿಕ ಶಕ್ತಿಯನ್ನು ಬಳಸುತ್ತಾನೆ. ಪರ್ಯಾಯ ಅನುವಾದ: “ ಕೊಡಲು ದೇವರು ತನ್ನ ದೈವಿಕ ಶಕ್ತಿಯನ್ನು ಬಳಸಿದ್ದಾನೆ” (ನೋಡಿ: ವ್ಯಕ್ತೀಕರಣ)
πρὸς ζωὴν καὶ εὐσέβειαν
ಇಲ್ಲಿ, ಪ್ರತಿಯಾಗಿ ಎಂಬ ಪದವು ದೇವರು ಈ ಎಲ್ಲ ವಿಷಯಗಳನ್ನು ವಿಶ್ವಾಸಿಗಳಿಗೆ ನೀಡಿದ ಉದ್ದೇಶವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಜೀವನ ಮತ್ತು ಭಕ್ತಿಯ ಉದ್ದೇಶಕ್ಕಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
εὐσέβειαν
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಭಕ್ತಿ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರ ಕಡೆಗೆ ಗೌರವಯುತವಾಗಿ ವರ್ತಿಸುವುದು” (ನೋಡಿ: ಭಾವವಾಚಕ ನಾಮಪದಗಳು)
διὰ τῆς ἐπιγνώσεως
ಇಲ್ಲಿ ಮೂಲಕ ಎಂಬ ಪದವು ಜೀವನ ಮತ್ತು ಭಕ್ತಿಗಾಗಿ ದೇವರು ನಮಗೆ ಎಲ್ಲವನ್ನು ಕೊಟ್ಟಿರುವ ಸಂಗತಿಯನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಜ್ಞಾನದ ಮೂಲಕ”
διὰ τῆς ἐπιγνώσεως τοῦ καλέσαντος ἡμᾶς
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದ ಜ್ಞಾನ ಎಂಬುದನ್ನು ಮೌಖಿಕ ನುಡಿಗಟ್ಟುಗಳೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ನಮ್ಮನ್ನು ಕರೆದವರನ್ನು ತಿಳಿದುಕೊಳ್ಳುವ ಮೂಲಕ” (ನೋಡಿ: ಭಾವವಾಚಕ ನಾಮಪದಗಳು)
τοῦ καλέσαντος ἡμᾶς
ಈ ನುಡಿಗಟ್ಟು ಇವರುಗಳನ್ನು ಸೂಚಿಸಬಹುದು: (1) ದೇವರು. ಪರ್ಯಾಯ ಅನುವಾದ: “ನಮ್ಮನ್ನು ಕರೆದ ದೇವರ” (2) ಯೇಸು. ಪರ್ಯಾಯ ಅನುವಾದ: “ನಮ್ಮನ್ನು ಕರೆದ ಯೇಸುವಿನ”
διὰ δόξης καὶ ἀρετῆς
ಇಲ್ಲಿ, * ಮೂಲಕ * ಎಂಬುದು ದೇವರು ನಮ್ಮನ್ನು ಕರೆದ ವಿಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಆತನ ಮಹಿಮೆಯ ಮತ್ತು ಶ್ರೇಷ್ಠತೆಯ ಮೂಲಕ”
διὰ δόξης καὶ ἀρετῆς
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಮಹಿಮೆ ಮತ್ತು ಶ್ರೇಷ್ಠತೆ ಎಂಬ ಅಮೂರ್ತ ನಾಮಪದಗಳ ಹಿಂದಿನ ಆಲೋಚನೆಗಳನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಏಕೆಂದರೆ ಆತನು ತುಂಬಾ ದೊಡ್ಡವನು ಮತ್ತು ಒಳ್ಳೆಯವನು” (ನೋಡಿ: ಭಾವವಾಚಕ ನಾಮಪದಗಳು)
2 Peter 1:4
δι’ ὧν
ಇಲ್ಲಿ, ಯಾವುದು ಎಂಬುದು ಹಿಂದಿನ ವಾಕ್ಯದ ಪದಗಳನ್ನು ಸೂಚಿಸುತ್ತದೆ. ಇವುಗಳನ್ನು ಸೂಚಿಸಬಹುದು: (1) “ಆತನ ಮಹಿಮೆ ಮತ್ತು ಶ್ರೇಷ್ಠತೆ.” ಪರ್ಯಾಯ ಅನುವಾದ: “ಆತನ ಮಹಿಮೆ ಮತ್ತು ಶ್ರೇಷ್ಠತೆಯ ಮೂಲಕ” (2) “ಜೀವನ ಮತ್ತು ಭಕ್ತಿಗಾಗಿ ಎಲ್ಲಾ ವಿಷಯಗಳು.” ಪರ್ಯಾಯ ಅನುವಾದ: “ನಮಗೆ ಈ ಎಲ್ಲಾ ವಿಷಯಗಳನ್ನು ನೀಡುವ ಮೂಲಕ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
διὰ τούτων
ಇಲ್ಲಿ ಮೂಲಕ ಎಂಬ ಪದವು ನೀವು ದೈವಿಕ ಸ್ವಭಾವದ ಹಂಚಿಕೆದಾರರಾಗಬಹುದಾದ ವಿಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಅವುಗಳ ಮೂಲಕ”
θείας…φύσεως
ಅಮೂರ್ತ ನಾಮಪದ ಸ್ವಭಾವ ಎಂಬುದು ಯಾವುದೋ ಒಂದು ಮೂಲ ಸ್ವರೂಪದ ಲಕ್ಷಣಗಳನ್ನು ಅಥವಾ ಅದು ಹೇಗಿದೆ ಎಂಬುದನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ದೇವರು ಹೇಗಿರುತ್ತಾನೆ” (ನೋಡಿ: ಭಾವವಾಚಕ ನಾಮಪದಗಳು)
ἀποφυγόντες τῆς…φθορᾶς
ದುಷ್ಟ ಆಸೆಗಳು ಉಂಟುಮಾಡುವ ಭ್ರಷ್ಟಾಚಾರದಿಂದ ಜನರು ಬಳಲುತ್ತಿಲ್ಲ ಎಂದು ಪೇತ್ರನು ಸಾಂಕೇತಿಕವಾಗಿ ಮಾತನಾಡುತ್ತಾನೆ, ಅವರು ಆ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡರು. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ಪದದೊಂದಿಗೆ ಹೇಳಬಹುದು. ಪರ್ಯಾಯ ಅನುವಾದ: “ಇನ್ನು ಮುಂದೆ ಭ್ರಷ್ಟಗೊಳಿಸುವದಿಲ್ಲ ” (ನೋಡಿ: ರೂಪಕ ಅಲಂಕಾರ)
δι’ ὧν
ಇಲ್ಲಿ, ಮೂಲಕ ಎಂಬುದು ದೇವರು ತನ್ನ ವಾಗ್ದಾನಗಳನ್ನು ನೀಡಿದ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಯಾವುದರ ಮೂಲಕ"
ἡμῖν
ಇಲ್ಲಿ, ನಮಗೆ ಎಂಬುದು ಪೇತ್ರನನ್ನು ಮತ್ತು ಅವನ ಪ್ರೇಕ್ಷಕರನ್ನು, ಜೊತೆ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
δεδώρηται
ಸರ್ವನಾಮ ಆತನು ಎಂಬುದು ಇವರುಗಳನ್ನು ಸೂಚಿಸಬಹುದು: (1) ದೇವರು. ಪರ್ಯಾಯ ಅನುವಾದ: “ದೇವರು ಕೊಟ್ಟಿದ್ದಾನೆ" (2) ಯೇಸು. ಪರ್ಯಾಯ ಅನುವಾದ: “ಯೇಸು ಕೊಟ್ಟಿದ್ದಾನೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τὰ τίμια καὶ μέγιστα ἡμῖν ἐπαγγέλματα δεδώρηται,
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ಮೌಖಿಕ ನುಡಿಗಟ್ಟಿನೊಂದಿಗೆ ವಾಗ್ದಾನ ಎಂಬ ಪದವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಆತನು ನಮಗೆ ಅಮೂಲ್ಯವಾದ ಮತ್ತು ಮಹತ್ತರವಾದ ವಿಷಯಗಳನ್ನು ವಾಗ್ದಾನ ನೀಡಿದ್ದಾನೆ" (ನೋಡಿ: ಭಾವವಾಚಕ ನಾಮಪದಗಳು)
ἵνα διὰ τούτων γένησθε θείας κοινωνοὶ φύσεως
ಇದು ಉದ್ದೇಶದ ಷರತ್ತು. ದೇವರು ನಮಗೆ ಅಮೂಲ್ಯವಾದ ಮತ್ತು ಮಹತ್ತರವಾದ ವಾಗ್ದಾನಗಳನ್ನು ಕೊಟ್ಟಿರುವ ಉದ್ದೇಶವನ್ನು ಪೇತ್ರನು ಹೇಳುತ್ತಿದ್ದಾನೆ. ನಿಮ್ಮ ಅನುವಾದದಲ್ಲಿ, ಉದ್ದೇಶದ ಷರತ್ತುಗಳಿಗಾಗಿ ನಿಮ್ಮ ಭಾಷೆಯ ಸಂಪ್ರದಾಯಗಳನ್ನು ಅನುಸರಿಸಿ. ಪರ್ಯಾಯ ಅನುವಾದ (ಮುಂಚಿನ ಅಲ್ಪವಿರಾಮವಿಲ್ಲದೆ): “ಅವರ ಮೂಲಕ ನೀವು ದೈವಿಕ ಸ್ವಭಾವದ ಹಂಚಿಕೆದಾರರಾಗಬಹುದು" (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ )
διὰ τούτων
ಇಲ್ಲಿ ಸರ್ವನಾಮ ಅವು ಎಂಬುದು ಹಿಂದಿನ ನುಡಿಗಟ್ಟಿನ ಅಮೂಲ್ಯವಾದ ಮತ್ತು ಮಹತ್ತರವಾದ ವಾಗ್ದಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಈ ವಾಗ್ದಾನಗಳ ಮೂಲಕ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐν τῷ κόσμῳ
ಇಲ್ಲಿ, ಜಗತ್ತು ಎಂದರೆ: (1) ನಾವೆಲ್ಲರೂ ವಾಸಿಸುವ ಸ್ಥಳ, ಅಲ್ಲಿ ನಾವು ಪಾಪದ ಜನರು ಮತ್ತು ಪಾಪ ಮಾಡಲ್ಪಡುವ ಶೋಧನೆಗಳಿಂದ ಸುತ್ತುವರೆದಿದ್ದೇವೆ. ಪರ್ಯಾಯ ಅನುವಾದ: “ಅದು ನಮ್ಮ ಸುತ್ತಲೂ ಇದೆ" (2) ದೇವರನ್ನು ಗೌರವಿಸದ ಜನರು ಹಂಚಿಕೊಳ್ಳುವ ಮೌಲ್ಯಗಳ ವ್ಯವಸ್ಥೆ. ಪರ್ಯಾಯ ಅನುವಾದ: “ಜಗತ್ತಿನ ಭಕ್ತಿಹೀನ ಮೌಲ್ಯ ವ್ಯವಸ್ಥೆ” (ನೋಡಿ: ಲಕ್ಷಣಾಲಂಕಾರ)
ἐν ἐπιθυμίᾳ
ಇಲ್ಲಿ, ಮೂಲಕ ಎಂಬುದು ಜಗತ್ತು ಯಾವ ರೀತಿಯಲ್ಲಿ ಭ್ರಷ್ಟವಾಯಿತು ಎಂಬುದನ್ನು ಸೂಚಿಸುತ್ತದೆ. ಪೇತ್ರನ ವಿಳಾಸದಾರರು ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳುವ ವಿಧಾನಗಳನ್ನು ಇದು ಸೂಚಿಸುವುದಿಲ್ಲ. ಪರ್ಯಾಯ ಅನುವಾದ: “ಕಾಮದಿಂದ”
φθορᾶς
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಭ್ರಷ್ಟತೆ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಿಮ್ಮನ್ನು ಭ್ರಷ್ಟಗೊಳಿಸುವ ವಿಷಯಗಳು” (ನೋಡಿ: ಭಾವವಾಚಕ ನಾಮಪದಗಳು)
2 Peter 1:5
καὶ αὐτὸ τοῦτο δὲ
ಈ ವಿಷಯಕ್ಕೆ ಸಂಬಂಧಿಸಿದಂತೆ ಎಂಬ ನುಡಿಗಟ್ಟು ಹಿಂದಿನ ವಚನಗಳಲ್ಲಿ ಪೇತ್ರನು ಹೇಳಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಮತ್ತು ಈಗ ದೇವರು ಮಾಡಿದ ಈ ಕೆಲಸಗಳ ಕಾರಣ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
σπουδὴν πᾶσαν παρεισενέγκαντες
ಎಲ್ಲಾ ಶ್ರದ್ಧೆಯನ್ನು ಅನ್ವಯಿಸಿಕೊಳ್ಳುವುದು ಎಂಬ ನುಡಿಗಟ್ಟು ಅನುಸರಿಸುವಂತೆ ಪೂರೈಕೆ ಮಾಡುವ ಕ್ರಿಯೆಯನ್ನು ಮಾಡುವ ವಿಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಎಲ್ಲಾ ಶ್ರದ್ಧೆಯನ್ನು ಅನ್ವಯಿಸಿಕೊಳ್ಳುವ ಮೂಲಕ”
σπουδὴν πᾶσαν παρεισενέγκαντες
ಇಲ್ಲಿ, ಎಲ್ಲಾ ಶ್ರದ್ಧೆಯನ್ನು ಅನ್ವಯಿಸಿಕೊಳ್ಳುವುದು ಎಂಬುದು ಒಂದು ಭಾಷಾವೈಶಿಷ್ಟ್ಯವಾಗಿದ್ದು, ಒಬ್ಬರ ಕೈಲಾದದ್ದನ್ನು ಮಾಡುವುದು ಅಥವಾ ಅತ್ಯುತ್ತಮ ಪ್ರಯತ್ನ ಮಾಡುವುದು ಎಂದರ್ಥ. ಪರ್ಯಾಯ ಅನುವಾದ: “ಎಲ್ಲ ಪ್ರಯತ್ನಗಳನ್ನು ಮಾಡುವುದು” (ನೋಡಿ: ನುಡಿಗಟ್ಟುಗಳು.)
ἐπιχορηγήσατε ἐν τῇ πίστει ὑμῶν
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ನೀವು “ನಂಬಿಕೆ” ಅಥವಾ “ವಿಶ್ವಾಸ” ದಂತಹ ಕ್ರಿಯಾಪದಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನೀವು ಯೇಸುವನ್ನು ನಂಬಿದಂತೆ, ಸೇರಿಸಿ” (ನೋಡಿ: ಭಾವವಾಚಕ ನಾಮಪದಗಳು)
ὑμῶν
ನಿಮ್ಮ ಎಂಬ ಸರ್ವನಾಮವು ಇಲ್ಲಿ ಬಹುವಚನವಾಗಿದೆ, ಏಕೆಂದರೆ ಒಂದು ಗುಂಪಾಗಿ ಯೇಸುವಿನಲ್ಲಿ ವಿಶ್ವಾಸವಿರುರುವವರಿಗೆ ಪೇತ್ರನು ಬರೆಯುತ್ತಿದ್ದಾನೆ. ಸಾಮಾನ್ಯವಾಗಿ, ಪತ್ರದ ಉದ್ದಕ್ಕೂ “ನೀವು” ಮತ್ತು “ನಿಮ್ಮ” ಎಂಬ ಸರ್ವನಾಮಗಳು ಇದೇ ಕಾರಣಕ್ಕಾಗಿ ಬಹುವಚನಗಳಾಗಿವೆ. (ನೋಡಿ: "You" - " ನೀನು " – ವಿವಿಧ ರೂಪಗಳು.)
τὴν ἀρετήν…τῇ ἀρετῇ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಈ ವಾಕ್ಯದಲ್ಲಿ ಎರಡೂ ಘಟನೆಗಳಲ್ಲಿ ವಿಶೇಷಣ ನುಡಿಗಟ್ಟಿನೊಂದಿಗೆ ಅಮೂರ್ತ ನಾಮಪದ ಸದ್ಗುಣ ಎಂಬ ಹಿಂದಿನ ಕಲ್ಪನೆಯನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಒಳ್ಳೆಯದನ್ನು ಮಾಡುವುದು … ಒಳ್ಳೆಯದನ್ನು ಮಾಡುವುದು” (ನೋಡಿ: ಭಾವವಾಚಕ ನಾಮಪದಗಳು)
ἐν δὲ τῇ ἀρετῇ τὴν γνῶσιν
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮತ್ತು ನಿಮ್ಮ ಸದ್ಗುಣದಲ್ಲಿ, ಜ್ಞಾನದಲ್ಲಿ ಪೂರೈಸಿರಿ” (ನೋಡಿ: ಪದಲೋಪ)
τὴν γνῶσιν
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟನ್ನು ಬಳಸಿಕೊಂಡು ಅಮೂರ್ತ ನಾಮಪದ ಜ್ಞಾನ ಎಂಬ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು” (ನೋಡಿ: ಭಾವವಾಚಕ ನಾಮಪದಗಳು)
2 Peter 1:6
ἐν δὲ τῇ γνώσει τὴν ἐνκράτειαν
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮತ್ತು ಜ್ಞಾನದಲ್ಲಿ , ದಮೆಯಲ್ಲಿ ಪೂರೈಸಿರಿ” (ನೋಡಿ: ಪದಲೋಪ)
τῇ γνώσει
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟನ್ನು ಬಳಸಿಕೊಂಡು ಅಮೂರ್ತ ನಾಮಪದ ಜ್ಞಾನ ಎಂಬುದನ್ನು ಅನುವಾದಿಸಬಹುದು. ಪರ್ಯಾಯ ಅನುವಾದ: “ದೇವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು” (ನೋಡಿ: ಭಾವವಾಚಕ ನಾಮಪದಗಳು)
τὴν ἐνκράτειαν…τῇ ἐνκρατείᾳ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಈ ವಾಕ್ಯದಲ್ಲಿ ಎರಡೂ ಘಟನೆಗಳಲ್ಲಿ ಮೌಖಿಕ ನುಡಿಗಟ್ಟುಗಳೊಂದಿಗೆ ನೀವು ಅಮೂರ್ತ ನಾಮಪದ ದಮೆ ಎಂಬ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು . ಪರ್ಯಾಯ ಅನುವಾದ: “ನಿಮ್ಮನ್ನು ನಿಯಂತ್ರಿಸಿಕೊಳ್ಳುವುದು … ನಿಮ್ಮನ್ನು ನಿಯಂತ್ರಿಸಿಕೊಳ್ಳುವುದು” (ನೋಡಿ: ಭಾವವಾಚಕ ನಾಮಪದಗಳು)
ἐν δὲ τῇ ἐνκρατείᾳ τὴν ὑπομονήν
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನುಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮತ್ತು ದಮೆಯಲ್ಲಿ, ತಾಳ್ಮೆಯಲ್ಲಿ ಪೂರೈಕೆ” (ನೋಡಿ: ಪದಲೋಪ)
τὴν ὑπομονήν…τῇ ὑπομονῇ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಈ ವಾಕ್ಯದಲ್ಲಿ ಎರಡೂ ಘಟನೆಗಳಲ್ಲಿ ಮೌಖಿಕ ನುಡಿಗಟ್ಟಿನೊಂದಿಗೆ ತಾಳ್ಮೆ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಕಷ್ಟಗಳನ್ನು ಸಹಿಸಿಕೊಳ್ಳುವುದು … ಕಷ್ಟವನ್ನು ಸಹಿಸಿಕೊಳ್ಳುವುದು” (ನೋಡಿ: ಭಾವವಾಚಕ ನಾಮಪದಗಳು)
ἐν δὲ τῇ ὑπομονῇ τὴν εὐσέβειαν,
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮತ್ತು ತಾಳ್ಮೆಯಲ್ಲಿ, ಭಕ್ತಿಯಲ್ಲಿ ಪೂರೈಕೆ” (ನೋಡಿ: ಪದಲೋಪ)
τὴν εὐσέβειαν
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಭಕ್ತಿ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರ ಕಡೆಗೆ ಗೌರವಯುತವಾಗಿ ವರ್ತಿಸುವುದು” (ನೋಡಿ: ಭಾವವಾಚಕ ನಾಮಪದಗಳು)
2 Peter 1:7
τὴν φιλαδελφίαν…τῇ φιλαδελφίᾳ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಸಹೋದರ ಸ್ನೇಹ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಿಮ್ಮ ಸಹೋದರರು ಮತ್ತು ಸಹೋದರಿಯರ ಬಗ್ಗೆ ಕಾಳಜಿ ವಹಿಸುವುದು … ನಿಮ್ಮ ಸಹೋದರರು ಮತ್ತು ಸಹೋದರಿಯರ ಬಗ್ಗೆ ಕಾಳಜಿ ವಹಿಸುವುದು” (ನೋಡಿ: ಭಾವವಾಚಕ ನಾಮಪದಗಳು)
ἐν δὲ τῇ εὐσεβείᾳ τὴν φιλαδελφίαν
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮತ್ತು ಭಕ್ತಿಯಲ್ಲಿ, ಸಹೋದರ ಸ್ನೇಹದಲ್ಲಿ ಪೂರೈಕೆ” (ನೋಡಿ: ಪದಲೋಪ)
ἐν δὲ τῇ φιλαδελφίᾳ τὴν ἀγάπην
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಹಿಂದಿನ ವಾಕ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮತ್ತು ಸಹೋದರ ಸ್ನೇಹದಲ್ಲಿ, ಪ್ರೀತಿಯಲ್ಲಿ ಪೂರೈಕೆ” (ನೋಡಿ: ಪದಲೋಪ)
τὴν ἀγάπην
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಪ್ರೀತಿ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಇತರರನ್ನು ಪ್ರೀತಿಸುವುದು” (ನೋಡಿ: ಭಾವವಾಚಕ ನಾಮಪದಗಳು)
2 Peter 1:8
ταῦτα
ಇಲ್ಲಿ, ಈ ವಿಷಯಗಳು ಎಂಬುದು 1:5–7 ರಲ್ಲಿ ಪೇತ್ರನು ಸೂಚಿಸಿರುವ ನಂಬಿಕೆ ,ಸದ್ಗುಣ ,ತಿಳುವಳಿಕೆ ,ದಮೆ,ತಾಳ್ಮೆ ,ಭಕ್ತಿ , ಸಹೋದರ ಸ್ನೇಹ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
οὐκ ἀργοὺς οὐδὲ ἀκάρπους καθίστησιν
ಈ ಗುಣಗಳನ್ನು ಹೊಂದದೆ ಇರುವವರು ಫಲ ಕೊಡದ ಭೂಮಿಯ ಹಾಗೆ ಎಂದು ಪೇತ್ರನು ಹೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಗೊಂದಲಮಯವಾಗಿದ್ದರೆ, ನೀವು ಆ ಅರ್ಥದೊಂದಿಗೆ ಬೇರೆ ರೂಪಕವನ್ನು ಬಳಸಬಹುದು ಅಥವಾ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: “ನೀವು ಅನುತ್ಪಾದಕ ಅಥವಾ ಅನುಪಯುಕ್ತವಾಗಲು ಕಾರಣ” (ನೋಡಿ: ರೂಪಕ ಅಲಂಕಾರ)
οὐκ ἀργοὺς οὐδὲ ἀκάρπους
ನಿರುತ್ಪಾದಕ ಮತ್ತು ನಿಷ್ಪಲ ಎಂಬ ಪದಗಳು ಮೂಲತಃ ಒಂದೇ ವಿಷಯವನ್ನು ಅರ್ಥೈಸುತ್ತವೆ. ನಿರಾಕರಣೆಗಳ ಸಂಯೋಜನೆಯಲ್ಲಿ * ಆಗಲಿ * ಮತ್ತು *ಅಥವಾ * ಎಂಬುವು, ಈ ವ್ಯಕ್ತಿಯು ಅನುತ್ಪಾದಕನಾಗುವುದಿಲ್ಲ ಆದರೆ ಯೇಸುವನ್ನು ತಿಳಿದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಅನುಭವಿಸುತ್ತಾನೆ ಎಂದು ಒತ್ತಿಹೇಳಲು ಅವುಗಳನ್ನು ಒಟ್ಟಿಗೆ ಬಳಸಲಾಗುತ್ತದೆ. ನಿಮ್ಮ ಭಾಷೆಯಲ್ಲಿ ಒಂದೇ ಅರ್ಥವಿರುವ ಎರಡು ಪದಗಳನ್ನು ಒಟ್ಟಿಗೆ ಬಳಸುವುದು ಗೊಂದಲಮಯವಾಗಿದ್ದರೆ, ನೀವು ಆ ಅರ್ಥದೊಂದಿಗೆ ಕೇವಲ ಒಂದು ಪದವನ್ನು ಬಳಸಬಹುದು. ಪರ್ಯಾಯ ಅನುವಾದ: “ಅನುತ್ಪಾದಕವಲ್ಲ” (ನೋಡಿ: ದ್ವಿರುಕ್ತಿಗಳು)
εἰς τὴν τοῦ Κυρίου ἡμῶν, Ἰησοῦ Χριστοῦ, ἐπίγνωσιν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ಪದಗುಚ್ಛವನ್ನು ಬಳಸಿಕೊಂಡು ಅಮೂರ್ತ ನಾಮಪದ ಜ್ಞಾನ ಎಂಬ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನೀವು ತಿಳಿದುಕೊಳ್ಳುವಲ್ಲಿ” (ನೋಡಿ: ಭಾವವಾಚಕ ನಾಮಪದಗಳು)
ταῦτα γὰρ ὑμῖν ὑπάρχοντα καὶ πλεονάζοντα
ಇಲ್ಲಿ ಪ್ರತಿಯಾಗಿ ಎಂಬ ಪದವು ಪೇತ್ರನು ತನ್ನ ಪ್ರೇಕ್ಷಕರು 1:5–7 ನಲ್ಲಿ ನೀಡಲಾದ ಆಜ್ಞೆಯನ್ನು ಏಕೆ ಪಾಲಿಸಬೇಕೆಂದು ಕಾರಣವನ್ನು ನೀಡುತ್ತಿದ್ದಾನೆ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: “ಏಕೆಂದರೆ ಈ ವಿಷಯಗಳು ನಿಮ್ಮಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೆಚ್ಚುತ್ತಿರುವ ಕಾರಣ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ταῦτα γὰρ ὑμῖν ὑπάρχοντα καὶ πλεονάζοντα, οὐκ ἀργοὺς οὐδὲ ἀκάρπους καθίστησιν
ಪೇತ್ರನು ಷರತ್ತುಬದ್ಧ ಪರಿಸ್ಥಿತಿಯನ್ನು ವಿವರಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅದನ್ನು ಆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಈ ವಿಷಯಗಳು ನಿಮ್ಮಲ್ಲಿ ಅಸ್ತಿತ್ವದಲ್ಲಿರುತ್ತಿದ್ದರೆ ಮತ್ತು ಹೆಚ್ಚಾಗುತ್ತಿದ್ದರೆ, ಅವು ನಿಮ್ಮನ್ನು ನಿರುತ್ಪಾದಕರನ್ನಾಗಿ ಅಥವಾ ನಿಷ್ಪಲರನ್ನಾಗಿ ಮಾಡುತ್ತವೆ” (ನೋಡಿ: [[https://git.door43.org/STR/kn_ta/src/branch/master/translate/grammar-connect-condition-/01.md hypothetical]])
οὐκ ἀργοὺς οὐδὲ ἀκάρπους καθίστησιν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕಾರಾತ್ಮಕ ಪದಗಳಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ನೀವು ಉತ್ಪಾದಿಸಲು ಮತ್ತು ಫಲವನ್ನು ನೀಡಲು ಕಾರಣ” (ನೋಡಿ: ದ್ವಿಗುಣ ನಕಾರಾತ್ಮಕಗಳು)
2 Peter 1:9
ᾧ…μὴ πάρεστιν ταῦτα, τυφλός ἐστιν
ಇಲ್ಲಿ, ಅವನು ಎಂಬುದು ನಿರ್ದಿಷ್ಟ ವ್ಯಕ್ತಿಯನ್ನು ಸೂಚಿಸುವುದಿಲ್ಲ, ಆದರೆ ಈ ವಿಷಯಗಳನ್ನು ಹೊಂದಿರದ ಯಾವುದೇ ವ್ಯಕ್ತಿಯನ್ನು ಇದು ಸೂಚಿಸುತ್ತದೆ. ಪರ್ಯಾಯ ಅನುವಾದ: “ಈ ವಿಷಯಗಳನ್ನು ಹೊಂದಿರದ ಯಾರಾದರೂ” (ನೋಡಿ: ಸಾರ್ವತ್ರಿಕ ನಾಮಪದ ಪದಗುಚ್ಛಗಳು.)
τυφλός ἐστιν μυωπάζων
ಈ ರೂಪಕದಲ್ಲಿ, ಪೇತ್ರನು ಈ ಗುಣಗಳನ್ನು ಹೊಂದಿರದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾನೆ, ಆ ವ್ಯಕ್ತಿಯು ಕುರುಡ * ಅಥವಾ * ಸಮೀಪದೃಷ್ಟಿ ಉಳ್ಳವನಂತೆ. ಅವನು ಆತ್ಮೀಕ ಅರ್ಥದಲ್ಲಿ ಇದನ್ನು ಅರ್ಥೈಸುತ್ತಾನೆ, ಈ ವ್ಯಕ್ತಿಯು ಆತ್ಮೀಕವಾಗಿ ಯಾವುದು ಮುಖ್ಯವೋ ಅದನ್ನು ನೋಡಲು ಸಾಧ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಅದು ಗೊಂದಲಮಯವಾಗಿದ್ದರೆ, ನೀವು ಆ ಅರ್ಥದೊಂದಿಗೆ ಬೇರೆ ರೂಪಕವನ್ನು ಬಳಸಬಹುದು ಅಥವಾ ಅರ್ಥವನ್ನು ಸರಳವಾಗಿ ಹೇಳಬಹುದು. ಪರ್ಯಾಯ ಅನುವಾದ: “ಕುರುಡು ಅಥವಾ ಸಮೀಪದೃಷ್ಟಿಯ ವ್ಯಕ್ತಿಯಂತೆ ಅವರ ಪ್ರಾಮುಖ್ಯತೆಯನ್ನು ನೋಡಲಾಗುವುದಿಲ್ಲ” (ನೋಡಿ: ರೂಪಕ ಅಲಂಕಾರ)
τοῦ καθαρισμοῦ τῶν πάλαι αὐτοῦ ἁμαρτιῶν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಮೌಖಿಕನುಡಿಗಟ್ಟಿನೊಂದಿಗೆ ಶುದ್ಧೀಕರಣ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ಅವನ ಹಳೆಯ ಪಾಪಗಳಿಂದ ಅವನನ್ನು ಶುದ್ಧೀಕರಿಸಿದ್ದಾನೆ” (ನೋಡಿ: ಭಾವವಾಚಕ ನಾಮಪದಗಳು)
γὰρ
ಪ್ರತಿಯಾಗಿ ಎಂಬುದು ಪೇತ್ರನು ತನ್ನ ಪ್ರೇಕ್ಷಕರು 1:5–7 ನಲ್ಲಿ ನೀಡಲಾದ ಆಜ್ಞೆಯನ್ನು ಏಕೆ ಪಾಲಿಸಬೇಕೆಂದು ಇನ್ನೊಂದು ಕಾರಣವನ್ನು ನೀಡುತ್ತಿದ್ದಾನೆ ಎಂದು ಸೂಚಿಸುತ್ತದೆ. ಪೇತ್ರನು 1:8 ನಲ್ಲಿ ಸಕಾರಾತ್ಮಕ ಕಾರಣವನ್ನು ನೀಡಿದ್ದಾನೆ ಮತ್ತು ಇಲ್ಲಿ ನಕಾರಾತ್ಮಕ ಕಾರಣವನ್ನು ನೀಡಿದ್ದಾನೆ. ಪರ್ಯಾಯ ಅನುವಾದ: “ಏಕೆಂದರೆ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ταῦτα
ಈ ವಿಷಯಗಳು ಎಂಬ ಪದವು ನಂಬಿಕೆ, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ಭಕ್ತಿ, ಸಹೋದರ ಸ್ನೇಹ ಮತ್ತು ಪ್ರೀತಿಯನ್ನು ಸೂಚಿಸುತ್ತದೆ, ಇದನ್ನು ಪೇತ್ರನು 1:5–7 ನಲ್ಲಿ ಸೂಚಿಸಿದ್ದಾನೆ. .md). (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τυφλός ἐστιν μυωπάζων
ಕುರುಡು ಮತ್ತು ಸಮೀಪದೃಷ್ಟಿ ಪದಗಳು ಒಂದೇ ರೀತಿಯ ಅರ್ಥಗಳನ್ನು ಹೊಂದಿದ್ದರೂ, ಕುರುಡು ತನ ಸಮೀಪದೃಷ್ಟಿ ಗಿಂತ ಹೆಚ್ಚು ತೀವ್ರವಾಗಿರುತ್ತದೆ ಮತ್ತು ಒಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಎರಡೂ ಆಗಿರಲು ಸಾಧ್ಯವಿಲ್ಲ. ಈ ಎರಡೂ ಪದಗಳನ್ನು ಈ ರೀತಿಯಲ್ಲಿ ಬಳಸುತ್ತಿರುವ ವ್ಯಕ್ತಿಯನ್ನು ವಿವರಿಸಲು ನಿಮ್ಮ ಭಾಷೆಯಲ್ಲಿ ಗೊಂದಲವಿದ್ದರೆ, ನೀವು ಅವುಗಳ ನಡುವೆ “ಅಥವಾ”ನಂತಹ ಪದವನ್ನು ಬಳಸಬಹುದು ಅಥವಾ ಅವುಗಳು ಹೇಗೆ ಒಟ್ಟಿಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಬಹುದು. ಪರ್ಯಾಯ ಅನುವಾದ: “ಅವನು … ಕುರುಡ ಅಥವಾ ಸಮೀಪದೃಷ್ಟಿಯವನು” ಅಥವಾ “ಅವನು … ಕುರುಡಾಗಿ ಸಮೀಪದೃಷ್ಟಿ ಹೊಂದಿದ್ದಾನೆ” ಅಥವಾ “ಅವನು … ಆತ್ಮೀಕವಾಗಿ ಮುಖ್ಯವಾಗಿರುವುದಕ್ಕೆ ಕುರುಡನಾಗಿದ್ದಾನೆ” (ನೋಡಿ: ದ್ವಿಪದಾಲಂಕಾರ)
λήθην λαβὼν τοῦ καθαρισμοῦ
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟಿನಲ್ಲಿ ಮರೆವು ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಶುದ್ಧೀಕರಣವನ್ನು ಮರೆತುಬಿಟ್ಟಿರುವುದು” (ನೋಡಿ: ಭಾವವಾಚಕ ನಾಮಪದಗಳು)
τοῦ καθαρισμοῦ τῶν πάλαι αὐτοῦ ἁμαρτιῶν.
ಪಾಪವನ್ನು ಕ್ಷಮಿಸುವ ಕುರಿತು ಪೇತ್ರನು ಸಾಂಕೇತಿಕವಾಗಿ ಮಾತನಾಡುತ್ತಿದ್ದಾನೆ, ಪಾಪವು ಜನರನ್ನು ಕೊಳಕು ಮಾಡುವ ವಿಷಯವಾಗಿದೆ ಮತ್ತು ಆದ್ದರಿಂದ ದೇವರಿಂದ ಶುದ್ಧೀಕರಣ ದ ಅಗತ್ಯವಿದೆ. ಪರ್ಯಾಯ ಅನುವಾದ: “ಅವನ ಹಿಂದಿನ ಪಾಪಗಳನ್ನು ಕ್ಷಮಿಸುವುದು” (ನೋಡಿ: ರೂಪಕ ಅಲಂಕಾರ)
2 Peter 1:10
βεβαίαν ὑμῶν τὴν κλῆσιν καὶ ἐκλογὴν ποιεῖσθαι
ಕರೆಯುವುದು ಮತ್ತು ಆರಿಸಿಕೊಳ್ಳುವುದು ಎಂಬ ಪದಗಳು ಒಂದೇ ರೀತಿಯ ಅರ್ಥಗಳನ್ನು ಹಂಚಿಕೊಳ್ಳುತ್ತವೆ ಮತ್ತು ಎರಡೂ ಪದಗಳು ದೇವರು ತನಗೆ ಸೇರಿರುವ ವಿಶ್ವಾಸಿಗಳನ್ನು ಆಯ್ಕೆ ಮಾಡುವುದನ್ನು ಸೂಚಿಸುತ್ತವೆ. ಈ ಕಲ್ಪನೆಯನ್ನು ಒತ್ತಿಹೇಳಲು ಪೇತ್ರನು ಅವುಗಳನ್ನು ಒಟ್ಟಿಗೆ ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಕೇವಲ ಒಂದು ಪದವನ್ನು ಬಳಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು. ಪರ್ಯಾಯ ಅನುವಾದ: “ದೇವರು ನಿಜವಾಗಿಯೂ ನಿಮ್ಮನ್ನು ತನಗೆ ಸೇರಿದವರನ್ನಾಗಿ ಆರಿಸಿಕೊಂಡಿದ್ದಾನೆ ಎಂದು ಖಚಿತಪಡಿಸಿಕೊಳ್ಳಿ” (ನೋಡಿ: ದ್ವಿರುಕ್ತಿಗಳು)
οὐ μὴ πταίσητέ ποτε
ಇಲ್ಲಿ, ಮುಗ್ಗರಿಸುವುದುಎಂದರೆ: (1) ಕ್ರಿಸ್ತನಲ್ಲಿನ ನಂಬಿಕೆಯನ್ನು ಬಿಟ್ಟು ಬಿಡುವುದು. ಪರ್ಯಾಯ ಅನುವಾದ: “ನೀವು ಖಂಡಿತವಾಗಿಯೂ ಕ್ರಿಸ್ತನಲ್ಲಿನ ನಂಬಿಕೆಯನ್ನು ಬಿಟ್ಟು ಬಿಡುವುದಿಲ್ಲ” (2) ಪಾಪ ಮಾಡುವುದು. ಪರ್ಯಾಯ ಅನುವಾದ: “ನೀವು ಖಂಡಿತವಾಗಿಯೂ ಪಾಪದ ನಡವಳಿಕೆಯನ್ನು ಅಭ್ಯಾಸ ಮಾಡುವುದಿಲ್ಲ” (ನೋಡಿ: ರೂಪಕ ಅಲಂಕಾರ)
διὸ
ಪೇತ್ರನು ಈಗ ಹೇಳಿರುವುದರ ಪರಿಣಾಮವಾಗಿ ಅವನ ಓದುಗರು ಏನು ಮಾಡಬೇಕು ಎಂಬುದರ ವಿವರಣೆಯನ್ನು ಪರಿಚಯಿಸಲು ಆದ್ದರಿಂದ ಎಂಬ ಪದವನ್ನು ಬಳಸುತ್ತಾನೆ. 1:8–9 ನಲ್ಲಿ ನೀಡಲಾದ ವಿಧೇಯತೆಯ ಎರಡು ಕಾರಣಗಳನ್ನು ಅವನು ನಿರ್ದಿಷ್ಟವಾಗಿ ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಈ ಕಾರಣಗಳಿಂದಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἀδελφοί
ಪೇತ್ರನು ಪುರುಷರನ್ನು ಮತ್ತು ಮಹಿಳೆಯರನ್ನು ಒಳಗೊಂಡಿರುವ ಸಾಮಾನ್ಯ ಅರ್ಥದಲ್ಲಿ ಸಹೋದರರು ಎಂಬ ಪದವನ್ನು ಬಳಸುತ್ತಿದ್ದಾನೆ. ನಿಮ್ಮ ಅನುವಾದದಲ್ಲಿ ಇದು ಸ್ಪಷ್ಟವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಇದರಿಂದ ನಿಮ್ಮ ಓದುಗರು ಪೇತ್ರನು ಪುರುಷರನ್ನು ಮಾತ್ರ ಸಂಬೋಧಿಸುತ್ತಿದ್ದಾನೆ ಎಂಬ ಅಭಿಪ್ರಾಯವನ್ನು ಹೊಂದುವುದಿಲ್ಲ. ಸಹೋದರರು ಎಂಬ ರೂಪಕವನ್ನು ಅನುವಾದಿಸಲು ನೀವು “ನಂಬಿಗಸ್ತರು” ನಂತಹ ಸಾಂಕೇತಿಕವಲ್ಲದ ಪದವನ್ನು ಬಳಸಿದರೆ, ನಿಮ್ಮ ಭಾಷೆಯಲ್ಲಿ ಆ ಪದದ ಪುಲ್ಲಿಂಗ ಮತ್ತು ಸ್ತ್ರೀಲಿಂಗ ರೂಪಗಳನ್ನು ನೀವು ಬಳಸಬೇಕಾಗಬಹುದು. ನೀವು ರೂಪಕವನ್ನು ಅದರ ಸ್ಥಾನದಲ್ಲಿ ಇಟ್ಟುಕೊಂಡರೆ, ನೀವು “ನನ್ನ ಸಹೋದರರೇ ಮತ್ತು ಸಹೋದರಿಯರೇ” ಎಂದು ಹೇಳಬಹುದು. (ನೋಡಿ: ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.)
ἀδελφοί
ಪೇತ್ರನು ತನ್ನ ಜೊತೆ ವಿಶ್ವಾಸಿಗಳನ್ನು ಯೇಸುವಿನಲ್ಲಿ ನೇರವಾಗಿ ಸಂಬೋಧಿಸುವ ವಿಧವಾಗಿ ಸಹೋದರರು ಎಂಬ ಪದವನ್ನು ಸಾಂಕೇತಿಕವಾಗಿ ಬಳಸುತ್ತಿದ್ದಾನೆ. UST ನೋಡಿ. (ನೋಡಿ: ರೂಪಕ ಅಲಂಕಾರ)
ταῦτα γὰρ ποιοῦντες
ಇಲ್ಲಿ, ಈ ವಿಷಯಗಳು ಎಂಬುದು 1:5–7 ರಲ್ಲಿ ಪೇತ್ರನು ಸೂಚಿಸಿರುವ ನಂಬಿಕೆ, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ಭಕ್ತಿ, ಸಹೋದರ ಸ್ನೇಹ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ταῦτα γὰρ ποιοῦντες οὐ μὴ πταίσητέ ποτε
ಪೇತ್ರನು ಷರತ್ತುಬದ್ಧ ಪರಿಸ್ಥಿತಿಯನ್ನು ವಿವರಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅದನ್ನು ಆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನೀವು ಈ ಕೆಲಸಗಳನ್ನು ಮಾಡಿದರೆ, ನೀವು ಖಂಡಿತವಾಗಿಯೂ ಮುಗ್ಗರಿಸುವುದಿಲ್ಲ” (ನೋಡಿ: Connect - Hypothetical Conditions)
οὐ μὴ πταίσητέ ποτε
ಇಲ್ಲಿ ಪದಗಳ ಸಂಯೋಜನೆಯು ಬಲವಾಗಿ ಒತ್ತು ನೀಡುವ ನಿರಾಕರಣೆಯನ್ನು ವ್ಯಕ್ತಪಡಿಸುತ್ತದೆ. ಪರ್ಯಾಯ ಅನುವಾದ: “ನೀವು ಖಂಡಿತವಾಗಿಯೂ ಎಂದಿಗೂ ಮುಗ್ಗರಿಸುವುದಿಲ್ಲ”
2 Peter 1:11
πλουσίως ἐπιχορηγηθήσεται ὑμῖν ἡ εἴσοδος εἰς τὴν αἰώνιον βασιλείαν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ದೇವರು ನಿಮಗೆ ನಿತ್ಯ ರಾಜ್ಯದ ಪ್ರವೇಶವನ್ನು ಧಾರಾಳವಾಗಿ ಅನುಗ್ರಹಿಸುತ್ತಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
εἰς τὴν αἰώνιον βασιλείαν τοῦ Κυρίου ἡμῶν καὶ Σωτῆρος, Ἰησοῦ Χριστοῦ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದ ರಾಜ್ಯ ಎಂಬ ಹಿಂದಿನ ಕಲ್ಪನೆಯನ್ನು ನೀವು ಮೌಖಿಕ ನುಡಿಗಟ್ಟಿನೊಂದಿಗೆ ವ್ಯಕ್ತಪಡಿಸಬಹುದು, ಉದಾಹರಣೆಗೆ “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನು ಎಲ್ಲಿ ಆಳುತ್ತಾನೆ.” ಪರ್ಯಾಯ ಅನುವಾದ: “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನು ಆಳುವ ನಿತ್ಯ ಸ್ಥಳಕ್ಕೆ” (ನೋಡಿ: ಭಾವವಾಚಕ ನಾಮಪದಗಳು)
γὰρ
ಪ್ರತಿಯಾಗಿ ಎಂಬುದು ತನ್ನ ಓದುಗರು 1:5–7 ಮತ್ತು 1:10 ನಲ್ಲಿ ನೀಡಲಾದ ಆಜ್ಞೆಗಳನ್ನು ಏಕೆ ಪಾಲಿಸಬೇಕೆಂದು ಬಯಸಬೇಕೆಂದು ಪೇತ್ರನು ಕಾರಣವನ್ನು ನೀಡುತ್ತಿದ್ದಾನೆ ಎಂದು ಸೂಚಿಸುತ್ತದೆ. (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
οὕτως
ಇಲ್ಲಿ, ಈ ರೀತಿಯಲ್ಲಿ ಎಂಬುದು ನಂಬಿಕೆ, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ಭಕ್ತಿ, ಸಹೋದರ ಸ್ನೇಹ ಮತ್ತು ಪ್ರೀತಿಯನ್ನು ಒಳಗೊಂಡಿರುವ ಜೀವನ ವಿಧಾನವನ್ನು ಸೂಚಿಸುತ್ತದೆ, ಇದನ್ನು ಪೇತ್ರನು [1:5-7] (../01/05.md)ನಲ್ಲಿ ಸೂಚಿಸಿದ್ದಾನೆ . (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
2 Peter 1:12
διὸ
ಪೇತ್ರನು ತನ್ನ ಪತ್ರದ ಉದ್ದೇಶವನ್ನು ಪರಿಚಯಿಸಲು ಆದ್ದರಿಂದ ಎಂಬುದನ್ನು ಬಳಸುತ್ತಾನೆ. 1:5–10, ಮತ್ತು ವಿಶೇಷವಾಗಿ 1:11, ರಲ್ಲಿನ ವಾಗ್ದಾನದ ಕಾರಣದಿಂದಾಗಿ ಅವನು ಹೇಳಿರುವ ಎಲ್ಲವನ್ನೂ ಮಾಡಲು ಅವನ ಓದುಗರನ್ನು ಉತ್ತೇಜಿಸುವ ಸಲುವಾಗಿ. ಅವರು ಈ ವಿಷಯಗಳ ಬಗ್ಗೆ ಅವರಿಗೆ ನೆನಪಿಸುತ್ತಲೇ ಇರಲು ಬಯಸುತ್ತಾರೆ. ಮೊದಲು ಬಂದದ್ದನ್ನು ಹೇಳಲು ಫಲಿತಾಂಶವನ್ನು ಅಥವಾ ಉದ್ದೇಶವನ್ನು ಇದು ಪರಿಚಯಿಸುತ್ತದೆ ಎಂದು ತೋರಿಸಲು ನಿಮ್ಮ ಭಾಷೆಯಲ್ಲಿ ನೈಸರ್ಗಿಕ ರೂಪವನ್ನು ಬಳಸಿ. ಪರ್ಯಾಯ ಅನುವಾದ: “ಏಕೆಂದರೆ ಈ ವಿಷಯಗಳು ಬಹಳ ಮುಖ್ಯ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἐστηριγμένους ἐν τῇ παρούσῃ ἀληθείᾳ
ಇಲ್ಲಿ, ಸ್ಥಾಪಿಸಲಾಯಿತು ಎಂಬುದನ್ನು ಸಾಂಕೇತಿಕವಾಗಿ ಯಾವುದನ್ನಾದರೂ ದೃಢವಾಗಿ ಬದ್ಧವಾಗಿರುವುದನ್ನು ಸೂಚಿಸಲು ಬಳಸಲಾಗುತ್ತದೆ. ಪರ್ಯಾಯ ಅನುವಾದ: “ನೀವು ಈಗ ಹೊಂದಿರುವ ಸತ್ಯವನ್ನು ನೀವು ಬಲವಾಗಿ ನಂಬುತ್ತೀರಿ” (ನೋಡಿ: ರೂಪಕ ಅಲಂಕಾರ)
τούτων
ಇಲ್ಲಿ, ಈ ವಿಷಯಗಳು ಎಂಬುದು ಹಿಂದಿನ ವಾಕ್ಯಗಳಲ್ಲಿ ಪೇತ್ರನು ನಿರ್ದಿಷ್ಟವಾಗಿ ಹೇಳಿದ್ದ ನಂಬಿಕೆ, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ಭಕ್ತಿ, ಸಹೋದರ ಸ್ನೇಹ ಮತ್ತು ಪ್ರೀತಿಯನ್ನು ಸೂಚಿಸುತ್ತದೆ, ಇದನ್ನು ಪೇತ್ರನು [1:5 –7] (../01/05.md)ನಲ್ಲಿ ಸೂಚಿಸಿದ್ದಾನೆ. (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐστηριγμένους ἐν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ನೀವು ಚೆನ್ನಾಗಿ ಕಲಿತಿದ್ದೀರಿ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἐν τῇ παρούσῃ ἀληθείᾳ
ಇಲ್ಲಿ, ಒಳಗೆ ಎಂಬುದು “ಉಲ್ಲೇಖಿಸಿ” ಅಥವಾ “ಸಂಬಂಧಿಸಿದಂತೆ” ಎಂಬ ಅರ್ಥವನ್ನು ಹೊಂದಿದೆ. ಪರ್ಯಾಯ ಅನುವಾದ: “ಪ್ರಸ್ತುತ ಸತ್ಯವನ್ನು ಉಲ್ಲೇಖಿಸಿ”
ἐν τῇ παρούσῃ ἀληθείᾳ
ಇಲ್ಲಿ, ಪ್ರಸ್ತುತ ಎಂಬುದನ್ನು ಸಾಂಕೇತಿಕವಾಗಿ ಸತ್ಯ ಎಂಬುದಾಗಿ ಪೇತ್ರನ ಪ್ರೇಕ್ಷಕರೊಂದಿಗೆ ಇರಬಹುದಾದ ವಸ್ತುವಿನಂತೆ ಬಳಸಲಾಗಿದೆ. ಇಲ್ಲಿ ಅದು ಪ್ರಸ್ತುತ ಸಮಯವನ್ನು ಸೂಚಿಸುವುದಿಲ್ಲ. ಪರ್ಯಾಯ ಅನುವಾದ: “ನೀವು ಹೊಂದಿರುವ ಸತ್ಯದಲ್ಲಿ” ಅಥವಾ “ನಿಮ್ಮೊಂದಿಗೆ ಇರುವ ಸತ್ಯದಲ್ಲಿ” (ನೋಡಿ: ರೂಪಕ ಅಲಂಕಾರ)
ἐν τῇ παρούσῃ ἀληθείᾳ
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ನೀವು ಸತ್ಯ ನಂತಹ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು, ಉದಾಹರಣೆಗೆ “ನಿಜ” . ಪರ್ಯಾಯ ಅನುವಾದ: “ಈ ನಿಜವಾದ ಬೋಧನೆಗಳಲ್ಲಿ” (ನೋಡಿ: ಭಾವವಾಚಕ ನಾಮಪದಗಳು)
2 Peter 1:13
διεγείρειν ὑμᾶς ἐν ὑπομνήσει
ಪೇತ್ರನು ತನ್ನ ಓದುಗರು ಈ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡಲು ಸಾಂಕೇತಿಕವಾಗಿ ಎಚ್ಚರಿಸು ಎಂಬುದನ್ನು ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಈ ವಿಷಯಗಳನ್ನು ನಿಮಗೆ ನೆನಪಿಸುವುದರಿಂದ ನೀವು ಅವುಗಳ ಬಗ್ಗೆ ಯೋಚಿಸುತ್ತೀರಿ” (ನೋಡಿ: ರೂಪಕ ಅಲಂಕಾರ)
ἐφ’ ὅσον εἰμὶ ἐν τούτῳ τῷ σκηνώματι
ಪೇತ್ರನು ತನ್ನ ದೇಹವನ್ನು ತಾನು ಧರಿಸಿರುವ ಮತ್ತು ತೆಗೆದು ಹಾಕುವ ಗುಡಾರ ಎಂದು ಹೇಳುತ್ತಾನೆ. ಅವನು ದೇಹದಲ್ಲಿ ಇರುವುದು ಜೀವಂತವಾಗಿರುವುದನ್ನು ಪ್ರತಿನಿಧಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ನೇರವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: “ನಾನು ಈ ದೇಹದಲ್ಲಿ ಇರುವವರೆಗೂ” ಅಥವಾ “ನಾನು ಬದುಕಿರುವವರೆಗೂ” (ನೋಡಿ: ರೂಪಕ ಅಲಂಕಾರ)
δὲ
ಆದರೆ ಎಂಬುದಕ್ಕೆ ಇದರ ಅರ್ಥ ಹೀಗಿರಬಹುದು: (1) ಪೇತ್ರನು ಹಿಂದಿನ ವಾಕ್ಯದಲ್ಲಿ ಹೇಳಿದ್ದನ್ನು ಮತ್ತು ಅವನು ಹೇಳಲು ಹೊರಟಿದ್ದನ್ನು ವ್ಯತಿರಿಕ್ತಗೊಳಿಸುತ್ತಿದ್ದಾನೆ. ಅವನ ಪ್ರೇಕ್ಷಕರಿಗೆ ಈಗಾಗಲೇ ಸತ್ಯ ತಿಳಿದಿದೆ, ಆದರೆ ಅವನು ಮತ್ತೊಮ್ಮೆ ಅವರಿಗೆ ನೆನಪಿಸಲು ಬಯಸುತ್ತಾನೆ. UST ನಲ್ಲಿರುವಂತೆ ಪರ್ಯಾಯ ಅನುವಾದ: “ಆದಾಗ್ಯೂ.” (2) ಪೇತ್ರನು ಈ ಹೇಳಿಕೆಯನ್ನು ಹಿಂದಿನ ವಾಕ್ಯದ ಆರಂಭದಲ್ಲಿ ಹೇಳಿದ ವಿಷಯದೊಂದಿಗೆ ಸಂಪರ್ಕಿಸುತ್ತಿದ್ದಾನೆ. ಪೇತ್ರನು ಯಾವಾಗಲೂ ಅವರಿಗೆ ಸತ್ಯವನ್ನು ನೆನಪಿಸಲು ಸಿದ್ಧನಾಗಿರುತ್ತಾನೆ ಮತ್ತು ಹಾಗೆ ಮಾಡುವುದು ಸರಿಯಾಗಿದೆ ಎಂದು ಅವನು ಭಾವಿಸುತ್ತಾನೆ. ಪರ್ಯಾಯ ಅನುವಾದ: “ಮತ್ತು” (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
διεγείρειν ὑμᾶς ἐν ὑπομνήσει
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟಿನಲ್ಲಿ ಅಮೂರ್ತ ನಾಮಪದ ಜ್ಞಾಪಿಸು ಎಂಬುದರ ಹಿಂದಿನ ಕಲ್ಪನೆಯನ್ನು “ನೆನಪಿಸು” ಎಂಬ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಿಮಗೆ ನೆನಪಿಸಲು” (ನೋಡಿ: ಭಾವವಾಚಕ ನಾಮಪದಗಳು)
2 Peter 1:14
ταχινή ἐστιν ἡ ἀπόθεσις τοῦ σκηνώματός μου
ಪೇತ್ರನು ತನ್ನ ದೇಹವನ್ನು ತಾನು ಧರಿಸಿರುವ ಮತ್ತು ತೆಗೆದು ಹಾಕುವ ಗುಡಾರ ಎಂದು ಹೇಳುತ್ತಾನೆ. ಅವನು ದೇಹದಲ್ಲಿ ಇರುವುದು ಜೀವಂತವಾಗಿರುವುದನ್ನು ಪ್ರತಿನಿಧಿಸುತ್ತದೆ ಮತ್ತು ಅದನ್ನು ತೆಗೆದು ಹಾಕುವುದು ಸಾಯುವುದನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಅನುವಾದ: “ನಾನು ಶೀಘ್ರದಲ್ಲೇ ಈ ದೇಹವನ್ನು ತೆಗೆದು ಹಾಕುತ್ತೇನೆ” (ನೋಡಿ: ರೂಪಕ ಅಲಂಕಾರ)
εἰδὼς
ಈ ಷರತ್ತಿನಲ್ಲಿ ಪೇತ್ರನು ಈ ಪತ್ರದಲ್ಲಿ ತನ್ನ ಪ್ರೇಕ್ಷಕರಿಗೆ ಯಾವಾಗಲೂ ಸಿದ್ಧಾಂತದ ಸತ್ಯಗಳನ್ನು ನೆನಪಿಸುವುದಕ್ಕೆ ಕಾರಣವನ್ನು ನೀಡುತ್ತಿದ್ದಾನೆ, ನಿರ್ದಿಷ್ಟವಾಗಿ ನಂಬಿಕೆ, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ಭಕ್ತಿ, ಸಹೋದರ ಸ್ನೇಹ ಮತ್ತು ಪ್ರೀತಿ, ಇವುಗಳನ್ನು ಪೇತ್ರನು 1: 5–7 ನಲ್ಲಿ ಸೂಚಿಸಿದ್ದಾನೆ. ಪರ್ಯಾಯ ಅನುವಾದ: “ಇದು ನನಗೆ ತಿಳಿದಿರುವ ಕಾರಣ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ταχινή ἐστιν ἡ ἀπόθεσις τοῦ σκηνώματός μου
ಅವನ * ಡೇರೆ * ಯನ್ನು * ತೆಗೆದು ಹಾಕು* ವುದು ಸಾಯುವುದನ್ನು ಸೂಚಿಸಲು ಉತ್ತಮ ಮಾರ್ಗವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ನೇರವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: “ನಾನು ಶೀಘ್ರದಲ್ಲೇ ಸಾಯುತ್ತೇನೆ” (ನೋಡಿ: ಸೌಮ್ಯೋಕ್ತಿಗಳು.)
καθὼς καὶ ὁ Κύριος ἡμῶν, Ἰησοῦς Χριστὸς, ἐδήλωσέν μοι
ಸೂಚಿಸಿದ ಅಡಿಟಿಪ್ಪಣಿ: “ಯೋಹಾನ 21:18-19 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ಅವನಿಗೆ ಹೇಳಿದ್ದನ್ನು ಪೇತ್ರನು ಇಲ್ಲಿ ಸೂಚಿಸುತ್ತಿರಬಹುದು.”
2 Peter 1:15
τούτων
ಇಲ್ಲಿ, ಈ ವಿಷಯಗಳು ಎಂಬುದು ಹಿಂದಿನ ವಚನಗಳಲ್ಲಿ ಪೇತ್ರನು ಹೇಳಿದ್ದನ್ನು ಸೂಚಿಸುತ್ತದೆ, ನಿರ್ದಿಷ್ಟವಾಗಿ [1:5-7] ರಲ್ಲಿ ಪೇತ್ರನು ಸೂಚಿಸಿದ ನಂಬಿಕೆ ,ಸದ್ಗುಣ ,ತಿಳುವಳಿಕೆ ,ದಮೆ,ತಾಳ್ಮೆ ,ಭಕ್ತಿ , ಸಹೋದರ ಸ್ನೇಹ ಮತ್ತು ಪ್ರೀತಿ.(../01/05.md). (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ಖಾಲಿ
δὲ καὶ
ಅಂತೆಯೇ ಎಂಬುದನ್ನು ಹೀಗೆ ಅರ್ಥೈಸಬಹುದು: (1) ಈ ಹೇಳಿಕೆಯು ಹಿಂದಿನ ವಾಕ್ಯದಲ್ಲಿ ಪೇತ್ರನು ಹೇಳಿದ್ದಕ್ಕೆ ಹೆಚ್ಚುವರಿಯಾಗಿದೆ. ಪರ್ಯಾಯ ಅನುವಾದ: “ಇದಲ್ಲದೆ” (2) ಈ ಹೇಳಿಕೆಯು ಹಿಂದಿನ ವಾಕ್ಯದಲ್ಲಿ ಅವನು ಹೇಳಲು ಹೊರಟಿದ್ದಕ್ಕೆ ವ್ಯತಿರಿಕ್ತವಾಗಿದೆ. ಪರ್ಯಾಯ ಅನುವಾದ: “ಆದರೆ” (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
ἔχειν ὑμᾶς…τὴν τούτων μνήμην ποιεῖσθαι
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟಿನಲ್ಲಿ ಅಮೂರ್ತ ನಾಮಪದ ಜ್ಞಾಪಿಸು ಎಂಬ ಪದದ ಹಿಂದಿನ ಕಲ್ಪನೆಯನ್ನು“ನೆನಪಿಸು” ಎಂಬ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಈ ವಿಷಯಗಳನ್ನು ನಿಮಗೆ ನೆನಪಿಸಲು” (ನೋಡಿ: ಭಾವವಾಚಕ ನಾಮಪದಗಳು)
μετὰ τὴν ἐμὴν ἔξοδον
ಪೇತ್ರನು ತನ್ನ ಸಾವಿನ ಬಗ್ಗೆ ಮಾತನಾಡಲು ನಿರ್ಗಮನ ಎಂಬ ಪದವನ್ನು ಉತ್ತಮ ರೀತಿಯಲ್ಲಿ ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನಿಮ್ಮ ಭಾಷೆಯಲ್ಲಿ ನೀವು ಬಹಳ ಸಾಮಾನ್ಯವಾದ ಸೌಮ್ಯೋಕ್ತಿಗಳನ್ನು ಬಳಸಬಹುದು ಅಥವಾ ನೇರವಾಗಿ ಹೇಳಬಹುದು. ಪರ್ಯಾಯ ಅನುವಾದ: “ನನ್ನ ಮರಣದ ನಂತರ” ಅಥವಾ “ನಾನು ಸತ್ತ ನಂತರ” (ನೋಡಿ: ಸೌಮ್ಯೋಕ್ತಿಗಳು.)
2 Peter 1:16
γὰρ
1:16–21 ನಲ್ಲಿರುವ ಪ್ರತಿಯಾಗಿ ಎಂಬುದು 1:5–7 ನಲ್ಲಿ ಸೂಚಿಸಿರುವ “ಈ ವಿಷಯಗಳನ್ನು” ಏಕೆ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪೇತ್ರನು ವಿಶ್ವಾಸಿಗಳಿಗೆ ವಿವರಿಸುತ್ತಾನೆ ಎಂದು ಸೂಚಿಸುತ್ತದೆ . ಪರ್ಯಾಯ ಅನುವಾದ: “ಇದು ಏಕೆಂದರೆ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἐγνωρίσαμεν
ಇಲ್ಲಿ, ನಾವು ಎಂಬುದು ಪೇತ್ರನನ್ನು ಮತ್ತು ಇತರ ಅಪೊಸ್ತಲರನ್ನು ಸೂಚಿಸುತ್ತದೆ. ಇದು ಅವನ ಓದುಗರನ್ನು ಸೂಚಿಸುವುದಿಲ್ಲ. ಪರ್ಯಾಯ ಅನುವಾದ: “ಅಪೊಸ್ತಲರಾದ ನಾವು ಅನುಸರಿಸಲಿಲ್ಲ” (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
τὴν…δύναμιν καὶ παρουσίαν
ಶಕ್ತಿ ಮತ್ತು ಬರುವಿಕೆ ಎಂಬ ಪದಗಳು ಒಂದೇ ವಿಷಯವನ್ನು ಸೂಚಿಸಲು ಒಟ್ಟಿಗೆ ಕೆಲಸ ಮಾಡುತ್ತವೆ; ಅವುಗಳನ್ನು ಒಂದೇ ನುಡಿಗಟ್ಟನ್ನಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಶಕ್ತಿಯುತ ಬರುವಿಕೆ” (ನೋಡಿ: ದ್ವಿಪದಾಲಂಕಾರ)
τὴν τοῦ Κυρίου ἡμῶν Ἰησοῦ Χριστοῦ δύναμιν καὶ παρουσίαν
ಈ ಷರತ್ತಿನಲ್ಲಿ ಪೇತ್ರನು ಭೂಮಿಗೆ ಕರ್ತನಾದ ಯೇಸುವಿನ ಎರಡನೇ ಬರುವಿಕೆಯನ್ನು ಸೂಚಿಸುತ್ತಾನೆ. ಮತ್ತಾಯ17:1-8, ಮಾರ್ಕ 9:1-8, ಮತ್ತು ಲೂಕ 9:28-36 ರಲ್ಲಿ ವಿವರಿಸಲಾದ “ರೂಪಾಂತರ" ಎಂದು ಕರೆಯಲ್ಪಡುವ ಯೇಸುವಿನ ಶಕ್ತಿಯುತ ನೋಟದಿಂದ ಈ ಭವಿಷ್ಯದ ಘಟನೆಯನ್ನು ಮುನ್ಸೂಚಿಸಲಾಗಿದೆ. ಪೇತ್ರನು ಆ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದನು.
τοῦ Κυρίου ἡμῶν Ἰησοῦ Χριστοῦ
ಇಲ್ಲಿ, ನಮ್ಮ ಎಂಬುದು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
ἐπόπται γενηθέντες
ಅಪೊಸ್ತಲರು ಯೇಸುವಿನ ಎರಡನೇ ಬರುವಿಕೆಯನ್ನು ಇತರರಿಗೆ ತಿಳಿಸಿದ ವಿಧಾನವನ್ನು ಈ ನುಡಿಗಟ್ಟು ಸೂಚಿಸುತ್ತದೆ. ಅಪೊಸ್ತಲರು ಯೇಸುವಿನ ಬರೋಣದ ಬಗೆಗಿನ ತಮ್ಮ ಬೋಧನೆಯನ್ನು ಭಾಗಶಃ ತಮ್ಮ ಪ್ರತ್ಯಕ್ಷದರ್ಶಿ ಅನುಭವವನ್ನು ಆಧರಿಸಿದ್ದಾರೆ. ಪರ್ಯಾಯ ಅನುವಾದ: “ಪ್ರತ್ಯಕ್ಷದರ್ಶಿಗಳಾಗುವ ಮೂಲಕ”
τῆς ἐκείνου μεγαλειότητος
ಅದು ಎಂಬ ಸರ್ವನಾಮವು ಯೇಸುವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಯೇಸುವಿನ ಘನತೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τῆς ἐκείνου μεγαλειότητος
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ನೀವು “ಘನತೆ” ಯಂತಹ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು ಗಾಂಭೀರ್ಯ ಪರ್ಯಾಯ ಅನುವಾದ: “ಆತನ ಗಾಂಭೀರ್ಯ ಸ್ವಭಾವದ” (ನೋಡಿ: ಭಾವವಾಚಕ ನಾಮಪದಗಳು)
2 Peter 1:17
φωνῆς ἐνεχθείσης αὐτῷ τοιᾶσδε ὑπὸ τῆς Μεγαλοπρεποῦς Δόξης
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಗಾಂಭೀರ್ಯದ ಮಹಿಮೆಯಿಂದ ಅವನ ಬಳಿಗೆ ಬಂದ ಆ ಧ್ವನಿಯನ್ನು ಅವನು ಕೇಳಿದಾಗ” ಅಥವಾ “ ಅವನೊಂದಿಗೆ ಮಾತನಾಡಿದ ಗಾಂಭೀರ್ಯದ ಮಹಿಮೆಯ ಧ್ವನಿಯನ್ನು ಅವನು ಕೇಳಿದಾಗ” ಅಥವಾ “ಗಾಂಭೀರ್ಯದ ಮಹಿಮೆಯು ಅವನೊಂದಿಗೆ ಮಾತನಾಡಿದಾಗ” (ನೋಡಿ: [[rc:/ /en/ta/man/translate/figs-activepassive]])
τῆς Μεγαλοπρεποῦς Δόξης
ಪೇತ್ರನು ದೇವರನ್ನು ಆತನ ಮಹಿಮೆ ಎಂಬ ವಿಷಯದಲ್ಲಿ ಸೂಚಿಸುತ್ತಾನೆ. ದೇವರ ಮಹಿಮೆಯು ದೇವರೊಂದಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಇಲ್ಲಿ ಆತನ ಹೆಸರಿಗೆ ಬದಲಿಯಾಗಿದೆ. ಪರ್ಯಾಯ ಅನುವಾದ: “ ಅತ್ಯುನ್ನತ ಮಹಿಮೆಯುಳ್ಳ, ದೇವರು” (ನೋಡಿ: ಲಕ್ಷಣಾಲಂಕಾರ)
γὰρ
ಇಲ್ಲಿ, ಪ್ರತಿಯಾಗಿ ಎಂಬುದು 1:17–18 ನಲ್ಲಿ ಏನನ್ನು ಅನುಸರಿಸುತ್ತದೆ ಎಂಬುದನ್ನು ಹಿಂದಿನ ವಾಕ್ಯದಲ್ಲಿ ಪೇತ್ರನು ಹೇಳಬಹುದಾದ ಕಾರಣವೇನೆಂದರೆ ಯೇಸುವಿನ ಮಹಿಮೆಯ ಪ್ರತ್ಯಕ್ಷದರ್ಶಿ ಎಂದು ಸೂಚಿಸುತ್ತದೆ. . ಇದು ಒಂದು ಕಾರಣ ಅಥವಾ ವಿವರಣೆ ಎಂದು ಸೂಚಿಸುವ ಸಂಪರ್ಕವನ್ನು ಬಳಸಿ. ಪರ್ಯಾಯ ಅನುವಾದ: “ನಾನು ಇದನ್ನು ಹೇಳುತ್ತೇನೆ ಏಕೆಂದರೆ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
παρὰ Θεοῦ Πατρὸς
ತಂದೆ ಎಂಬುದು ದೇವರಿಗೆ ಒಂದು ಪ್ರಮುಖ ಬಿರುದು. (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
λαβὼν…παρὰ Θεοῦ Πατρὸς τιμὴν καὶ δόξαν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದಗಳನ್ನು ಗೌರವ ಮತ್ತು ಮಹಿಮೆ ಎಂಬ ಕ್ರಿಯಾಪದಗಳನ್ನು ಬಳಸುವ ಸಮಾನ ಪದಗಳೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಮತ್ತು ತಂದೆಯಾದ ದೇವರು ಆತನನ್ನು ಗೌರವಿಸಿದನು ಮತ್ತು ಮಹಿಮೆ ಪಡಿಸಿದನು” (ನೋಡಿ: ಭಾವವಾಚಕ ನಾಮಪದಗಳು)
φωνῆς ἐνεχθείσης αὐτῷ τοιᾶσδε ὑπὸ τῆς Μεγαλοπρεποῦς Δόξης
ನಿಮ್ಮ ಭಾಷೆಯಲ್ಲಿ ನೇರ ಸೂಚನೆಗಳನ್ನು ಪರಿಚಯಿಸುವ ನೈಸರ್ಗಿಕ ವಿಧಾನಗಳನ್ನು ಪರಿಗಣಿಸಿ. ಪರ್ಯಾಯ ಅನುವಾದ: “ಅಂತಹ ಧ್ವನಿಯನ್ನು ಗಾಂಭೀರ್ಯ ಮಹಿಮೆಯಿಂದ ಆತನಿಗೆ ತರಲಾಗಿದೆ, ಮತ್ತು ದೇವರು ಹೇಳಿದ್ದು ಇದನ್ನೇ” (ನೋಡಿ: ಉದ್ಧರಣ ಮತ್ತು Quote Margins/ ಉಲ್ಲೇಖ ವಾಕ್ಯಗಳ ಅಂಚು.)
ἐνεχθείσης αὐτῷ
ಆತನು ಎಂಬ ಸರ್ವನಾಮವು ಯೇಸುವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಯೇಸುವಿನ ಬಳಿಗೆ ತರಲಾಗಿದೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ὁ Υἱός μου
ಮಗನು ಎಂಬುದು ದೇವರ ಮಗನಾದ ಯೇಸುವಿಗೆ ಒಂದು ಪ್ರಮುಖ ಬಿರುದು. (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
μου…μου…ἐγὼ
ನನ್ನ ಮತ್ತು ನನ್ನನ್ನೇ ಎಂಬ ಸರ್ವನಾಮಗಳು ಉದ್ಧರಣದಲ್ಲಿ ಮಾತನಾಡುವ ತಂದೆಯಾದ ದೇವರನ್ನು ಸೂಚಿಸುತ್ತವೆ. (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
2 Peter 1:18
ταύτην τὴν φωνὴν ἡμεῖς ἠκούσαμεν ἐξ οὐρανοῦ, ἐνεχθεῖσαν
ನಾವೇ ಎಂಬ ಪದಗಳೊಂದಿಗೆ, ಪೇತ್ರನು ತನ್ನನ್ನು ಮತ್ತು ದೇವರ ಧ್ವನಿಯನ್ನು ಕೇಳಿದ ಇತರೆ ಶಿಷ್ಯರಾದ ಯಾಕೋಬ ಮತ್ತು ಯೋಹಾನನ್ನು ಸೂಚಿಸುತ್ತಾನೆ. ಪರ್ಯಾಯ ಅನುವಾದ: “ನಾವು, ಯಾಕೋಬ, ಯೋಹಾನ ಮತ್ತು ನಾನು, ಸ್ವರ್ಗದಿಂದ ಬಂದ ಈ ಧ್ವನಿಯನ್ನು ಕೇಳಿದೆವು” (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
ἐξ οὐρανοῦ, ἐνεχθεῖσαν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಸ್ವರ್ಗದಿಂದ ಬಂದಿರುವುದು” ಅಥವಾ “ಸ್ವರ್ಗದಿಂದ ಬಂದದ್ದು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
σὺν αὐτῷ, ὄντες
ಇದು “ಯಾವಾಗ” ಎಂಬುದು ಪ್ರಾರಂಭವಾಗುವ ತಾತ್ಕಾಲಿಕ ನುಡಿಗಟ್ಟು. ಪರ್ಯಾಯ ಅನುವಾದ: “ನಾವು ಆತನೊಂದಿಗೆ ಇದ್ದಾಗ”
σὺν αὐτῷ
ಇಲ್ಲಿ,ಆತನು ಎಂಬುದು ಯೇಸುವನ್ನು ಉಲ್ಲೇಖಿಸುತ್ತದೆ, ತಂದೆಯಾದ ದೇವರಲ್ಲ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಯೇಸುವಿನೊಂದಿಗೆ ಇರುವುದು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τῷ ἁγίῳ ὄρει
ಪರ್ವತ ಎಂದು ಪೇತ್ರನು ಸೂಚಿಸುತ್ತಿರುವುದು "ರೂಪಾಂತರ" ಎಂದು ಕರೆಯಲ್ಪಡುವ ಘಟನೆಯಲ್ಲಿ ಯೇಸು ಶಕ್ತಿಯುತವಾಗಿ ರೂಪಾಂತರಗೊಂಡ ಪರ್ವತವಾಗಿದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಈ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಯೇಸು ಶಕ್ತಿಯುತವಾಗಿ ರೂಪಾಂತರಗೊಂಡ ಪರಿಶುದ್ಧ ಪರ್ವತದ ಮೇಲೆ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
2 Peter 1:19
ἔχομεν βεβαιότερον τὸν προφητικὸν λόγον
ಅತ್ಯಂತ ಖಚಿತ ಎಂದು ಅನುವಾದಿಸಿದ ಪದವು ಇವುಗಳನ್ನು ಸೂಚಿಸಬಹುದು: (1) ಅತ್ಯಂತ ವಿಶ್ವಾಸಾರ್ಹವಾದದ್ದು. ಈ ಸಂದರ್ಭದಲ್ಲಿ, ಪೇತ್ರನು 1:18–19 ನಲ್ಲಿ ಯೇಸುವಿನ ಮಹಿಮೆಗೆ ನಮ್ಮಲ್ಲಿ ಇಬ್ಬರು ವಿಶ್ವಾಸಾರ್ಹ ಸಾಕ್ಷಿಗಳಿವೆ ಎಂದು ಹೇಳುತ್ತಿದ್ದಾನೆ: ರೂಪಾಂತರದ ಪರ್ವತದ ಮೇಲೆ ಮಾತನಾಡುವ ದೇವರ ಸ್ವಂತ ಧ್ವನಿ ಮತ್ತು ಅತ್ಯಂತ ವಿಶ್ವಾಸಾರ್ಹ ಪ್ರವಾದಿಯ ಪವಿತ್ರಶಾಸ್ತ್ರಗಳು. ಪರ್ಯಾಯ ಅನುವಾದ: “ನಮ್ಮಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಪ್ರವಾದಿಯ ವಾಕ್ಯವೂ ಇದೆ” (2) ಯಾವುದೋ ಒಂದು ಅಂಶದಿಂದ ದೃಢೀಕರಿಸಲ್ಪಟ್ಟಿದೆ. ಈ ಸಂದರ್ಭದಲ್ಲಿ, ಪರ್ವತದ ಮೇಲಿನ ದೇವರ ಧ್ವನಿಯು ನಾವು ಈಗಾಗಲೇ ಸಂಪೂರ್ಣವಾಗಿ ನಂಬಿರುವ ಪ್ರವಾದಿಯ ಪವಿತ್ರಶಾಸ್ತ್ರವನ್ನು ದೃಢೀಕರಿಸುತ್ತದೆ ಅಥವಾ ಇನ್ನಷ್ಟು ವಿಶ್ವಾಸಾರ್ಹಗೊಳಿಸುತ್ತದೆ ಎಂದು ಪೇತ್ರನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ನಾವು ಪ್ರವಾದಿಯ ವಾಕ್ಯವನ್ನು ದೃಢೀಕರಿಸಿದ್ದೇವೆ”
ἔχομεν
ಇಲ್ಲಿ, ನಾವು ಎಂಬುದು ಪೇತ್ರನನ್ನು ಮತ್ತು ಅವನ ಓದುಗರನ್ನು ಒಳಗೊಂಡಂತೆ ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
βεβαιότερον τὸν προφητικὸν λόγον
ಇಡೀ ಹಳೆಯ ಒಡಂಬಡಿಕೆಯನ್ನು ಸಾಂಕೇತಿಕವಾಗಿ ಸೂಚಿಸಲು ಪೇತ್ರನು * ಪ್ರವಾದನೆಯ ವಾಕ್ಯ * ಎಂಬ ನುಡಿಗಟ್ಟನ್ನು ಬಳಸುತ್ತಾನೆ. ಇದು “ಪ್ರವಾದಿಗಳು” ಎಂದು ಕರೆಯಲ್ಪಡುವ ಹಳೆಯ ಒಡಂಬಡಿಕೆಯ ಪುಸ್ತಕಗಳನ್ನು ಮಾತ್ರ ಸೂಚಿಸುವುದಿಲ್ಲ ಅಥವಾ ಹಳೆಯ ಒಡಂಬಡಿಕೆಯೊಳಗಿನ ಮುನ್ಸುಚಕ ಪ್ರವಾದನೆಗಳನ್ನು ಮಾತ್ರ ಸೂಚಿಸುವುದಿಲ್ಲ. ಪರ್ಯಾಯ ಅನುವಾದ: “ಪ್ರವಾದಿಗಳು ಹೇಳಿದಂತ, ಪವಿತ್ರಶಾಸ್ತ್ರಗಳು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ᾧ καλῶς ποιεῖτε προσέχοντες
ಇಲ್ಲಿ ಸಂಬಂಧಿತ ಸರ್ವನಾಮ ಯಾವುದು ಎಂಬುದು ಹಿಂದಿನ ನುಡಿಗಟ್ಟಿನಲ್ಲಿ ಸೂಚಿಸಲಾದ ಪ್ರವಾದನೆಯ ವಾಕ್ಯವನ್ನು ಸೂಚಿಸುತ್ತದೆ. ಹಳೆಯ ಒಡಂಬಡಿಕೆಯ ಪ್ರವಾದನೆಯ ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪೇತ್ರನು ವಿಶ್ವಾಸಿಗಳಿಗೆ ಸೂಚಿಸುತ್ತಾನೆ. (ನೋಡಿ: ಸರ್ವನಾಮಗಳು.)
ὡς λύχνῳ φαίνοντι ἐν αὐχμηρῷ τόπῳ
ಪೇತ್ರನು ಪ್ರವಾದನೆಯ ವಾಕ್ಯವನ್ನು ಕತ್ತಲೆಯಲ್ಲಿ ಬೆಳಕನ್ನು ನೀಡುವ ದೀಪ ಕ್ಕೆ ಹೋಲಿಸುತ್ತಾನೆ. * ಕತ್ತಲೆಯ ಸ್ಥಳದಲ್ಲಿ* ನೋಡಲು ಯಾರಿಗಾದರೂ ದೀಪವು ಬೆಳಕನ್ನು ನೀಡುವಂತೆ, ಪ್ರವಾದನೆಯ ವಾಕ್ಯವು ಈ ಪಾಪ-ತುಂಬಿದ ಜಗತ್ತಿನಲ್ಲಿ ಸರಿಯಾಗಿ ಬದುಕಲು ಹೇಗೆ ಮಾರ್ಗದರ್ಶನ ನೀಡುತ್ತದೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಈ ಅರ್ಥವನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಈ ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂದು ತಿಳಿಯಲು ನಿಮಗೆ ಮಾರ್ಗದರ್ಶಿಯಾಗಿರುತ್ತದೆ” (ನೋಡಿ: ಉಪಮಾಲಂಕಾರ.)
φωσφόρος ἀνατείλῃ ἐν ταῖς καρδίαις ὑμῶν
ಪೇತ್ರನು ಕ್ರಿಸ್ತನನ್ನು ಸಾಂಕೇತಿಕವಾಗಿ ಉದಯ ನಕ್ಷತ್ರ ಎಂದು ಹೇಳುತ್ತಾನೆ, ಇದು ಹಗಲು ಮತ್ತು ರಾತ್ರಿಯ ಅಂತ್ಯವನ್ನು ಸೂಚಿಸುವ ನಕ್ಷತ್ರವಾಗಿದೆ. ವಿಶ್ವಾಸಿಗಳ ಹೃದಯದಲ್ಲಿ ಬೆಳಕನ್ನು ತರುವ ಮೂಲಕ ಕ್ರಿಸ್ತನು ಉದಯಿಸುತ್ತಾನೆ, ಎಲ್ಲಾ ಸಂದೇಹಗಳನ್ನು ಕೊನೆಗೊಳಿಸುತ್ತಾನೆ ಮತ್ತು ಆತನು ಯಾರೆಂಬುದರ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ತರುತ್ತಾನೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಈ ಅರ್ಥವನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು ಅಥವಾ ರೂಪಕವನ್ನು ಹೋಲಿಕೆಗೆ ಬದಲಾಯಿಸಬಹುದು. ಪರ್ಯಾಯ ಅನುವಾದ: “ಉದಯ ನಕ್ಷತ್ರವು ತನ್ನ ಬೆಳಕನ್ನು ಜಗತ್ತಿಗೆ ಬೆಳಗುವಂತೆ ಕ್ರಿಸ್ತನು ನಿಮಗೆ ಸಂಪೂರ್ಣ ತಿಳುವಳಿಕೆಯನ್ನು ತರುತ್ತಾನೆ” (ನೋಡಿ: ರೂಪಕ ಅಲಂಕಾರ)
φωσφόρος
ಉದಯ ನಕ್ಷತ್ರ ಎಂಬುದು ಶುಕ್ರ ಗ್ರಹವನ್ನು ಸೂಚಿಸುತ್ತದೆ, ಇದು ಕೆಲವೊಮ್ಮೆ ಸೂರ್ಯೋದಯಕ್ಕೆ ಮುಂಚೆಯೇ ಆಕಾಶದಲ್ಲಿ ಗೋಚರಿಸುತ್ತದೆ, ಹೀಗಾಗಿ ಹಗಲು ಸಮೀಪಿಸುತ್ತಿದೆ ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಈ ಮಾಹಿತಿಯನ್ನು ಹೆಚ್ಚು ಸ್ಪಷ್ಟವಾಗಿ ಮಾಡಬಹುದು. ಪರ್ಯಾಯ ಅನುವಾದ: “ಸೂರ್ಯ ಉದಯಿಸುವ ಮೊದಲು ಕಾಣಿಸಿಕೊಳ್ಳುವ ನಕ್ಷತ್ರ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ᾧ καλῶς ποιεῖτε προσέχοντες
ತನ್ನ ಪ್ರೇಕ್ಷಕರು ಹಳೆಯ ಒಡಂಬಡಿಕೆಯ ಪವಿತ್ರಶಾಸ್ತ್ರಗಳಿಗೆ ಗಮನ ಕೊಡಬೇಕೆಂದು ಹೇಳಲು ನೀವು ಚೆನ್ನಾಗಿ ಮಾಡುತ್ತೀರಿ ಎಂಬ ಹೇಳಿಕೆಯನ್ನು ಪೇತ್ರನು ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟನ್ನು ಸಲಹೆ ಅಥವಾ ಆಜ್ಞೆಯಂತೆ ಅನುವಾದಿಸಬಹುದು. ಪರ್ಯಾಯ ಅನುವಾದ: “ನೀವು ಗಮನ ಕೊಡಬೇಕಾದದ್ದು” (ನೋಡಿ: ಹೇಳಿಕೆ,– ಇತರ ಉಪಯೋಗಗಳು)
ἕως οὗ ἡμέρα διαυγάσῃ
ಪೇತ್ರನು ಕ್ರಿಸ್ತನ ಎರಡನೇ ಬರುವಿಕೆಯನ್ನು ಮುಂಜಾನೆ ಬರುವ ಹೊಸ ದಿನ ಎಂದು ಕರೆಯುವ ಮೂಲಕ ಸಾಂಕೇತಿಕವಾಗಿ ಮಾತನಾಡುತ್ತಾನೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಈ ಅರ್ಥವನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಕ್ರಿಸ್ತನು ಹಿಂದಿರುಗುವ ದಿನದವರೆಗೆ” (ನೋಡಿ: ರೂಪಕ ಅಲಂಕಾರ)
ἐν ταῖς καρδίαις ὑμῶν
ಇಲ್ಲಿ, ಹೃದಯಗಳು ಎಂಬುದು ಜನರ ಮನಸ್ಸಿಗೆ ಒಂದು ಉಪನಾಮವಾಗಿದೆ. ಪರ್ಯಾಯ ಅನುವಾದ: “ನಿಮ್ಮ ಮನಸ್ಸಿನಲ್ಲಿ” ಅಥವಾ “ನೀವು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಲು” (ನೋಡಿ: ಲಕ್ಷಣಾಲಂಕಾರ)
2 Peter 1:20
τοῦτο πρῶτον γινώσκοντες
ಪ್ರಾಮುಖ್ಯತೆಯ ಮಟ್ಟವನ್ನು ಸೂಚಿಸಲು ಪೇತ್ರನು ಇಲ್ಲಿ ಮೊದಲ ಎಂಬುದನ್ನು ಬಳಸುತ್ತಾನೆ. ಇದು ಸಮಯದಲ್ಲಿ ಆದೇಶವನ್ನು ಸೂಚಿಸುವುದಿಲ್ಲ. ಪರ್ಯಾಯ ಅನುವಾದ: “ಅತ್ಯಂತ ಮುಖ್ಯವಾಗಿ, ನೀವು ಅರ್ಥಮಾಡಿಕೊಳ್ಳಬೇಕು”
πᾶσα προφητεία Γραφῆς ἰδίας ἐπιλύσεως οὐ γίνεται
ಇಲ್ಲಿ, ಒಬ್ಬರ ಸ್ವಂತ ವ್ಯಾಖ್ಯಾನ ಎಂದರೆ: (1) ಹಳೆಯ ಒಡಂಬಡಿಕೆಯ ಪ್ರವಾದಿಗಳು ತಮ್ಮ ಯಾವುದೇ ಪ್ರವಾದನೆಗಳನ್ನು ದೇವರು ಹೇಳಿದ್ದನ್ನು ತಮ್ಮದೇ ಆದ ವ್ಯಾಖ್ಯಾನಗಳ ಮೇಲೆ ಆಧರಿಸಲಿಲ್ಲ, ಆದರೆ ದೇವರು ಅವರಿಗೆ ಬಹಿರಂಗಪಡಿಸಿದದನ್ನು ಮಾತ್ರ ಪ್ರವಾದಿಸಿದರು. ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ನೈಸರ್ಗಿಕವಾಗಿದ್ದರೆ, ನೀವು ಮಾಹಿತಿಯ ಕ್ರಮವನ್ನು ಬದಲಾಯಿಸಬಹುದು. ಪರ್ಯಾಯ ಅನುವಾದ: “ಯಾವುದೇ ಪ್ರವಾದಿಯು ತನ್ನ ಪ್ರವಾದನೆಯನ್ನು ತನ್ನ ಸ್ವಂತ ವ್ಯಾಖ್ಯಾನದ ಪ್ರಕಾರ ವ್ಯಾಖ್ಯಾನಿಸಲಿಲ್ಲ” (2) ಯಾವುದೇ ವ್ಯಕ್ತಿ ಅವನ ಅಥವಾ ಅವಳ ಸ್ವಂತವಾಗಿ ಪವಿತ್ರಶಾಸ್ತ್ರವನ್ನು ಅರ್ಥೈಸಲು ಸಾಧ್ಯವಿಲ್ಲ, ಆದರೆ ಪವಿತ್ರಾತ್ಮನ ಮತ್ತು ವಿಶ್ವಾಸಿಗಳ ದೊಡ್ಡ ಸಮುದಾಯದ ಸಹಾಯದಿಂದ ಮಾತ್ರ. ಪರ್ಯಾಯ ಅನುವಾದ: “ಯಾರೂ ತನ್ನ ಸ್ವಂತ ಸಾಮರ್ಥ್ಯದ ಮೂಲಕ ಸತ್ಯವೇದದಲ್ಲಿರುವ ಯಾವುದೇ ಪ್ರವಾದನೆಯನ್ನು ವಿವರಿಸಲು ಸಾಧ್ಯವಿಲ್ಲ” (ನೋಡಿ: ಮಾಹಿತಿ ರಚನೆ.)
τοῦτο πρῶτον γινώσκοντες
ಪೇತ್ರನು ಸೂಚನೆಯನ್ನು ನೀಡಲು ಹೇಳಿಕೆಯನ್ನು ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಆಜ್ಞೆಯಂತೆ ಅನುವಾದಿಸುವ ಮೂಲಕ ಸೂಚಿಸಬಹುದು. ನೀವು ಹಾಗೆ ಮಾಡಿದರೆ, ಇಲ್ಲಿ ಹೊಸ ವಾಕ್ಯವನ್ನು ಪ್ರಾರಂಭಿಸಲು ಸಹಾಯಕವಾಗಬಹುದು. ಪರ್ಯಾಯ ಅನುವಾದ: “ಎಲ್ಲಾದಕ್ಕಿಂತ ಹೆಚ್ಚಾಗಿ, ಇದನ್ನು ತಿಳಿದುಕೊಳ್ಳಿರಿ” (ನೋಡಿ: ಹೇಳಿಕೆ,– ಇತರ ಉಪಯೋಗಗಳು)
ἰδίας ἐπιλύσεως
ವ್ಯಾಖ್ಯಾನ ಎಂಬ ಪದವು ಒಂದು ಕ್ರಿಯೆಯನ್ನು ಪ್ರತಿನಿಧಿಸುವ ಅಮೂರ್ತ ನಾಮಪದವಾಗಿದೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಕ್ರಿಯಾಪದವನ್ನು ಬಳಸಬಹುದು. ಪರ್ಯಾಯ ಅನುವಾದ: “ಯಾವ ಪ್ರವಾದಿಯೂ ತನ್ನ ಪ್ರವಾದನೆಯನ್ನು ತಾನು ಅಂದುಕೊಂಡಂತೆ ವ್ಯಾಖ್ಯಾನಿಸಿಲ್ಲ” (ನೋಡಿ: ಭಾವವಾಚಕ ನಾಮಪದಗಳು)
2 Peter 1:21
ὑπὸ Πνεύματος Ἁγίου φερόμενοι, ἐλάλησαν ἀπὸ Θεοῦ ἄνθρωποι
ಪೇತ್ರನು ಸಾಂಕೇತಿಕವಾಗಿ ಪವಿತ್ರಾತ್ಮನು ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ರೀತಿಯಲ್ಲಿ ದೇವರು ಬಯಸಿದ್ದನ್ನು ಪ್ರವಾದಿಗಳು ಬರೆಯಲು ಸಹಾಯ ಮಾಡುತ್ತಾನೆ ಎಂದು ಹೇಳುತ್ತಾನೆ. ಪರ್ಯಾಯ ಅನುವಾದ: “ಮನುಷ್ಯರು ತಮ್ಮನ್ನು ನಿರ್ದೇಶಿಸುವ ಪವಿತ್ರಾತ್ಮನ ಮೂಲಕ ದೇವರಿಂದ ಬಂದಿದ್ದನ್ನು ಮಾತನಾಡಿದರು” (ನೋಡಿ: ರೂಪಕ ಅಲಂಕಾರ)
γὰρ
ಪ್ರತಿಯಾಗಿ ಎಂಬುದು ಹಿಂದಿನ ವಾಕ್ಯದ ಹೇಳಿಕೆಯು ನಿಜವಾಗಲು ಈ ಕೆಳಗಿನವುಗಳು ಕಾರಣವೆಂದು ಸೂಚಿಸುತ್ತದೆ. ಇದರ ಅರ್ಥ: (1) ಪ್ರವಾದಿಗಳು ತಮ್ಮ ಸ್ವಂತ ವ್ಯಾಖ್ಯಾನಗಳ ಪ್ರಕಾರ ಪ್ರವಾದಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ನಿಜವಾದ ಪ್ರವಾದನೆಯು ಪವಿತ್ರಾತ್ಮನಿಂದ ಮಾತ್ರ ಬರುತ್ತದೆ. (2) ಪವಿತ್ರಾತ್ಮನ ಸಹಾಯವಿಲ್ಲದೆ ಯಾರೂ ಪ್ರವಾದನೆಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ, ಏಕೆಂದರೆ ಪ್ರವಾದನೆಯು ಪವಿತ್ರಾತ್ಮನಿಂದ ಬಂದಿದೆ. ಪರ್ಯಾಯ ಅನುವಾದ: “ಇದಕ್ಕೆ ಕಾರಣವೆಂದರೆ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
οὐ…θελήματι ἀνθρώπου ἠνέχθη προφητεία ποτέ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂಬುದನ್ನು ನೀವು ಹೇಳಬಹುದು. ಪರ್ಯಾಯ ಅನುವಾದ: “ಯಾವುದೇ ಪ್ರವಾದಿಯು ಮನುಷ್ಯನ ಇಚ್ಛೆಯಿಂದ ಪ್ರವಾದಿಸಿಲ್ಲ” ಅಥವಾ “ಮನುಷ್ಯನ ಇಚ್ಛೆಯು ಎಂದಿಗೂ ಯಾವುದೇ ಪ್ರವಾದನೆಯನ್ನು ಉತ್ಪಾದಿಸಲಿಲ್ಲ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
οὐ…θελήματι ἀνθρώπου ἠνέχθη προφητεία ποτέ
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ನೀವು ಇಚ್ಛೆ ಎಂಬ ಮೌಖಿಕ ನುಡಿಗಟ್ಟಿನೊಂದಿಗೆ ವ್ಯಕ್ತಪಡಿಸಬಹುದು, ಉದಾಹರಣೆಗೆ “ಮನುಷ್ಯನು ಏನು ಬಯಸುತ್ತಾನೆ.” ಪರ್ಯಾಯ ಅನುವಾದ: “ಮನುಷ್ಯನು ಅಪೇಕ್ಷಿಸುವ ಪ್ರಕಾರ ಯಾವುದೇ ಪ್ರವಾದನೆಯನ್ನು ಮಾಡಲಾಗಿಲ್ಲ” (ನೋಡಿ: ಭಾವವಾಚಕ ನಾಮಪದಗಳು)
θελήματι ἀνθρώπου
ಪೇತ್ರನು ಪುರುಷರನ್ನು ಮತ್ತು ಮಹಿಳೆಯರನ್ನು ಒಳಗೊಂಡಿರುವ ಸಾಮಾನ್ಯ ಅರ್ಥದಲ್ಲಿ ಮನುಷ್ಯ ಎಂಬ ಪದವನ್ನು ಬಳಸುತ್ತಿದ್ದಾನೆ. ಪರ್ಯಾಯ ಅನುವಾದ: “ಮಾನವ ಬಯಕೆಯಿಂದ” (ನೋಡಿ: ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.)
ἐλάλησαν ἀπὸ Θεοῦ ἄνθρωποι
ಈ ನುಡಿಗಟ್ಟಿನಲ್ಲಿ, ಅರ್ಥವು ಪೂರ್ಣವಾಗಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಪದವನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದವು ನಿಮ್ಮ ಭಾಷೆಯಲ್ಲಿ ಬೇಕಾದರೆ, ಅದನ್ನು ವಾಕ್ಯದಲ್ಲಿ ಹಿಂದಿನಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮನುಷ್ಯರು ದೇವರಿಂದ ಪ್ರವಾದನೆಯನ್ನು ಹೇಳಿದರು” (ನೋಡಿ: ಪದಲೋಪ)
2 Peter 2
2 ನೇ ಪೇತ್ರನ ಪತ್ರದ 2ನೇ ಅಧ್ಯಾಯದ ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಿರ್ಮಾಣ
- ಸುಳ್ಳು ಬೋಧಕರ ಭವಿಷ್ಯ (2:1–3)
- ದೈವಿಕ ನ್ಯಾಯತೀರ್ಪಿನ ಉದಾಹರಣೆಗಳು (2:4–10a)
- ಸುಳ್ಳು ಬೋಧಕರ ವಿವರಣೆ ಮತ್ತು ಖಂಡನೆ (2:10b–22)
ನಿಜವಾದ ಪ್ರವಾದಿಗಳು ಹಳೆಯ ಒಡಂಬಡಿಕೆಯನ್ನು ಬರೆಯುತ್ತಿದ್ದ ಸಮಯದಲ್ಲಿ ಸುಳ್ಳು ಪ್ರವಾದಿಗಳು ಮಾಡಿದಂತೆ, ಸುಳ್ಳು ಬೋಧಕರು ವಿಶ್ವಾಸಿಗಳನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ ಎಂದು ಊಹಿಸುವ ಮೂಲಕ ಪೇತ್ರನು ಈ ಪತ್ರವನ್ನು 2:1-3 ನಲ್ಲಿ ಮುಂದುವರಿಸುತ್ತಾನೆ. ನಂತರ 2:4–10a ನಲ್ಲಿ ಬರುತ್ತಿರುವ ಸುಳ್ಳು ಬೋಧಕರಂತೆ ವರ್ತಿಸಿದವರನ್ನು ದೇವರು ಶಿಕ್ಷಿಸುವ ಉದಾಹರಣೆಗಳನ್ನು ಪೇತ್ರನು ವಿವರಿಸುತ್ತಾನೆ. ನಂತರ ಪೇತ್ರನು2:10b–22 ನಲ್ಲಿ ಈ ಸುಳ್ಳು ಬೋಧಕರ ದುಷ್ಟ ಸ್ವಭಾವ ಮತ್ತು ಕಾರ್ಯಗಳನ್ನು ವಿವರಿಸುವ ಮೂಲಕ ಈ ವಿಭಾಗವನ್ನು ಮುಕ್ತಾಯಗೊಳಿಸುತ್ತಾನೆ.
ಈ ಅಧ್ಯಾಯದಲ್ಲಿ ವಿಶೇಷ ಪರಿಕಲ್ಪನೆಗಳು
ಶರೀರ
“ಶರೀರ” ಎಂಬ ಪದವು ವ್ಯಕ್ತಿಯ ಪಾಪ ಸ್ವಭಾವದ ರೂಪಕವಾಗಿದೆ. ಮನುಷ್ಯನ ಭೌತಿಕ ಭಾಗವು ಪಾಪವಲ್ಲ. “ಶರೀರ”ವು ಮಾನವ ಸ್ವಭಾವವನ್ನು ಪ್ರತಿನಿಧಿಸುತ್ತದೆ, ಅದು ಆತ್ಮೀಕವಾದ ಎಲ್ಲವನ್ನೂ ತಿರಸ್ಕರಿಸಿ ಪಾಪವನ್ನು ಬಯಸುತ್ತದೆ. ಯೇಸುವನ್ನು ನಂಬುವ ಮೂಲಕ ಪವಿತ್ರಾತ್ಮನನ್ನು ಪಡೆಯುವ ಮೊದಲು ಎಲ್ಲಾ ಮಾನವರ ಸ್ಥಿತಿ ಇದಾಗಿತ್ತು. (ನೋಡಿ: ಶರೀರ)
ಸೂಚ್ಯ ಮಾಹಿತಿ
2:4–8 ನಲ್ಲಿ ಹಲವಾರು ಸಾದೃಶ್ಯಗಳಿವೆ, ಹಳೆಯ ಒಡಂಬಡಿಕೆಯನ್ನು ಇನ್ನೂ ಅನುವಾದಿಸದಿದ್ದರೆ ಇವುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೆಚ್ಚಿನ ವಿವರಣೆ ಅಗತ್ಯವಾಗಬಹುದು. (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
2 Peter 2:1
δὲ
ಈಗ ಎಂಬ ಪದವು ಇವುಗಳನ್ನು ಸೂಚಿಸಬಹುದು: (1) ULT ನಲ್ಲಿ ಈಗ ಎಂದು ವ್ಯಕ್ತಪಡಿಸಿರುವುದು ಹೊಸ ವಿಷಯ. (2) ಈ ಷರತ್ತಿನಲ್ಲಿ ಸುಳ್ಳು ಪ್ರವಾದಿಗಳು ಮತ್ತು ಹಿಂದಿನ ವಾಕ್ಯದಲ್ಲಿ ಸೂಚಿಸಲಾದ ನಿಜವಾದ ಹಳೆಯ ಒಡಂಬಡಿಕೆಯ ಪ್ರವಾದಿಗಳ ನಡುವಿನ ವ್ಯತ್ಯಾಸ. ಪರ್ಯಾಯ ಅನುವಾದ: “ಆದರೆ” (ನೋಡಿ: ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ)
ἐν τῷ λαῷ
ಇಲ್ಲಿ, ಜನರು ಎಂಬ ಪದವು ನಿರ್ದಿಷ್ಟವಾಗಿ ಇಸ್ರಾಯೇಲರನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: “ಇಸ್ರಾಯೇಲ ಜನರು” ಅಥವಾ “ಇಸ್ರಾಯೇಲರು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
αἱρέσεις ἀπωλείας
ಇಲ್ಲಿ,* ಧರ್ಮದ್ರೋಹಿ* ಎಂಬ ಪದವು ಕ್ರಿಸ್ತನ ಮತ್ತು ಅಪೊಸ್ತಲರ ಬೋಧನೆಗೆ ವಿರುದ್ಧವಾದ ಅಭಿಪ್ರಾಯಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ವಿನಾಶದ ಅಭಿಪ್ರಾಯಗಳು” (ನೋಡಿ: ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.)
τὸν ἀγοράσαντα αὐτοὺς Δεσπότην
ತನ್ನ ಸಾವಿನೊಂದಿಗೆ ಜನರ ಪಾಪಗಳಿಗೆ ದಂಡವನ್ನು ಪಾವತಿಸುವ ಮೂಲಕ ಶಿಕ್ಷೆಯಿಂದ ರಕ್ಷಿಸಿದ ಜನರ ಯಜಮಾನ ಎಂದು ಯೇಸುವನ್ನು ಸಾಂಕೇತಿಕವಾಗಿ ಮಾತನಾಡಲು * ಖರೀದಿಸಿದ ಯಜಮಾನ* ಎಂಬ ನುಡಿಗಟ್ಟನ್ನು ಪೇತ್ರನು ಬಳಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಅವರನ್ನು ರಕ್ಷಿಸಿದ ಯೇಸು” (ನೋಡಿ: ರೂಪಕ ಅಲಂಕಾರ)
αἱρέσεις ἀπωλείας,
ನಿಮ್ಮ ಓದುಗರು ಅಮೂರ್ತ ನಾಮಪದವಾದ ವಿನಾಶ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ವಿನಾಶಕಾರಿ ಧರ್ಮದ್ರೋಹಿ” ಅಥವಾ “ನಾಶಮಾಡುವ ಧರ್ಮದ್ರೋಹಿ” (ನೋಡಿ: ಭಾವವಾಚಕ ನಾಮಪದಗಳು)
αἱρέσεις ἀπωλείας
ಪೇತ್ರನು ವಿನಾಶ ದಿಂದ ನಿರೂಪಿಸಲ್ಪಟ್ಟಿರುವ ಅಭಿಪ್ರಾಯವನ್ನು ವಿವರಿಸಲು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿದ್ದಾನೆ. ನಿಮ್ಮ ಓದುಗರು ಈ ಪದವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು “ವಿನಾಶ” ಎಂಬ ನಾಮಪದದ ಬದಲಿಗೆ “ವಿನಾಶಕಾರಿ” ಎಂಬ ವಿಶೇಷಣವನ್ನು ಬಳಸಬಹುದು. ಪರ್ಯಾಯ ಅನುವಾದ: “ವಿನಾಶಕಾರಿ ಧರ್ಮದ್ರೋಹಿಗಳು” (ನೋಡಿ: ಸ್ವಾದೀನ)
αἱρέσεις ἀπωλείας
ಇಲ್ಲಿ, ವಿನಾಶ ಎಂಬುದು ಇವುಗಳನ್ನು ಸೂಚಿಸಬಹುದು: (1) ಈ ಧರ್ಮದ್ರೋಹಿಗಳನ್ನು ಕಲಿಸುವ ಅಥವಾ ಒಪ್ಪಿಕೊಳ್ಳುವವರ ಶಾಶ್ವತ ಖಂಡನೆ. ಪರ್ಯಾಯ ಅನುವಾದ: “ಅವರ ಶಾಶ್ವತ ಖಂಡನೆಗೆ ಕಾರಣವಾಗುವ ಧರ್ಮದ್ರೋಹಿಗಳು” (2) ಈ ಧರ್ಮದ್ರೋಹಿಗಳನ್ನು ಕಲಿಸುವ ಅಥವಾ ಒಪ್ಪಿಕೊಳ್ಳುವವರ ನಂಬಿಕೆಯ ನಾಶ. ಪರ್ಯಾಯ ಅನುವಾದ: “ಮೆಸ್ಸೀಯನಲ್ಲಿ ಅವರ ನಂಬಿಕೆಯನ್ನು ನಾಶಮಾಡುವ ಧರ್ಮದ್ರೋಹಿಗಳು”
τὸν ἀγοράσαντα αὐτοὺς Δεσπότην
ಇಲ್ಲಿ, * ಯಜಮಾನ* ಎಂಬ ಪದವು ಯೇಸುವನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಅವರನ್ನು ಕೊಂಡುಕೊಂಡ ಯಜಮಾನ ಯೇಸು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐπάγοντες ἑαυτοῖς ταχινὴν ἀπώλειαν
ಇಲ್ಲಿ, ತರುವುದು ಎಂಬುದು ಈ ಷರತ್ತು ಹಿಂದಿನ ಷರತ್ತುಗಳಲ್ಲಿ ವಿವರಿಸಿದ ಸುಳ್ಳು ಬೋಧಕರ ಕಾರ್ಯಗಳ ಫಲಿತಾಂಶವಾಗಿದೆ ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇಲ್ಲಿ ಹೊಸ ವಾಕ್ಯವನ್ನು ಮಾಡಬಹುದು ಮತ್ತು ಈ ಸಂಪರ್ಕವನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಪರಿಣಾಮವಾಗಿ, ಅವರು ತಮ್ಮ ಮೇಲೆ ವೇಗವಾಗಿ ನಾಶವನ್ನು ತರುತ್ತಿದ್ದಾರೆ.” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ταχινὴν ἀπώλειαν
ಇಲ್ಲಿ,ಬೇಗನೆ ಎಂಬುದು ಇವುಗಳನ್ನು ಅರ್ಥೈಸುತ್ತದೆ: (1) ಅವರ ವಿನಾಶ ಶೀಘ್ರದಲ್ಲೇ ಬರಲಿದೆ. ಪರ್ಯಾಯ ಅನುವಾದ: “ಶೀಘ್ರದಲ್ಲೇ ಸಂಭವಿಸುವ ವಿನಾಶ” ಅಥವಾ “ಸನ್ನಿಹಿತ ವಿನಾಶ” (2) ಅವರ ನಾಶವು ಹಠಾತ್ತಾಗಿರುತ್ತದೆ ಅಥವಾ ತ್ವರಿತವಾಗಿರುತ್ತದೆ. ಪರ್ಯಾಯ ಅನುವಾದ: “ತ್ವರಿತ ವಿನಾಶ”
ἐπάγοντες ἑαυτοῖς ταχινὴν ἀπώλειαν
ನಿಮ್ಮ ಓದುಗರು ಅಮೂರ್ತ ನಾಮಪದ ವಿನಾಶ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು “ನಾಶ” ದಂತಹ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರು ಶೀಘ್ರದಲ್ಲೇ ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ” (ನೋಡಿ: ಭಾವವಾಚಕ ನಾಮಪದಗಳು)
2 Peter 2:2
ταῖς ἀσελγείαις
ಇಲ್ಲಿ, ಸ್ವೇಚ್ಛಾವೃತ್ತಿಯ ಕೃತ್ಯಗಳು ಎಂಬುದು ಸ್ವಯಂ ನಿಯಂತ್ರಣದ ಕೊರತೆಯನ್ನು ಪ್ರದರ್ಶಿಸುವ ಅನೈತಿಕ ಲೈಂಗಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಅನಿಯಂತ್ರಿತ ಇಂದ್ರಿಯ ಕ್ರಿಯೆಗಳು”
ἡ ὁδὸς τῆς ἀληθείας βλασφημηθήσεται
ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಾರೆ ಎಂಬುದಾಗಿ ನೀವು ಹೇಳಬಹುದು. ಪರ್ಯಾಯ ಅನುವಾದ: “ಅವಿಶ್ವಾಸಿಗಳು ಸತ್ಯದ ಮಾರ್ಗವನ್ನು ದೂಷಿಸುತ್ತಾರೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
πολλοὶ
ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, UST ಮಾಡುವಂತೆ ನೀವು ಸ್ಪಷ್ಟವಾಗಿ ಸೂಚಿಸಬಹುದು, ಇದು ಜನರನ್ನು ಸೂಚಿಸುತ್ತದೆ. (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐξακολουθήσουσιν
ಇಲ್ಲಿ ಪೇತ್ರನು ಅನುಸರಿಸಿ ಎಂಬ ಪದವನ್ನು ಸಾಂಕೇತಿಕವಾಗಿ ಬಳಸಿದ್ದು, ಅದೇ ದಿಕ್ಕಿನಲ್ಲಿ ಇನ್ನೊಬ್ಬ ವ್ಯಕ್ತಿಯ ಹಿಂದೆ ನಡೆಯುವವರಂತೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುವವರನ್ನು ಸೂಚಿಸಲು. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರ ಸ್ವೇಚ್ಛಾವೃತ್ತಿಯ ಕೃತ್ಯಗಳನ್ನು ಅನುಕರಿಸುತ್ತದೆ” (ನೋಡಿ: ರೂಪಕ ಅಲಂಕಾರ)
αὐτῶν ταῖς ἀσελγείαις
ಇಲ್ಲಿ ಸರ್ವನಾಮ ಅವರ ಎಂಬುದು ಹಿಂದಿನ ವಾಕ್ಯದಲ್ಲಿ ಪರಿಚಯಿಸಲಾದ ಸುಳ್ಳುಬೋಧಕರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಸುಳ್ಳುಬೋಧಕರ ಸ್ವೇಚ್ಛಾವೃತ್ತಿಯ ಕೃತ್ಯಗಳು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
δι’ οὓς
ಇಲ್ಲಿ, ಯಾರು ಎಂಬುದು ಸುಳ್ಳು ಬೋಧಕರನ್ನು ಸೂಚಿಸುತ್ತದೆ. ಇದು ಹಿಂದಿನ ಷರತ್ತಿನಲ್ಲಿನ ಸ್ವೇಚ್ಛಾವೃತ್ತಿಯ ಕೃತ್ಯಗಳನ್ನು ಸೂಚಿಸುವುದಿಲ್ಲ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, UST ಮಾಡುವಂತೆ ನೀವು ಸ್ಪಷ್ಟವಾಗಿ ಸೂಚಿಸಬಹುದು, ಇದು ಸುಳ್ಳು ಬೋಧಕರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರ ಮೂಲಕ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἡ ὁδὸς τῆς ἀληθείας
ಪೇತ್ರನು ಇಲ್ಲಿ ಸಾಂಕೇತಿಕವಾಗಿ ಕ್ರೈಸ್ತ ನಂಬಿಕೆಯನ್ನು ಸೂಚಿಸಲು * ಸತ್ಯದ ಮಾರ್ಗ * ಎಂಬ ಪದವನ್ನು ಬಳಸುತ್ತಾನೆ ಅಥವಾ ಒಬ್ಬ ಕ್ರೈಸ್ತ ವ್ಯಕ್ತಿ ತನ್ನ ಜೀವನವನ್ನು ಹೇಗೆ ನಡೆಸುತ್ತಾನೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಿಜವಾದ ಕ್ರೈಸ್ತನ ಜೀವನ ವಿಧಾನ” ಅಥವಾ “ನಿಜವಾದ ಕ್ರೈಸ್ತನ ನಂಬಿಕೆ” (ನೋಡಿ: ರೂಪಕ ಅಲಂಕಾರ)
ἡ ὁδὸς τῆς ἀληθείας
ಪೇತ್ರನು ಸ್ವಾಮ್ಯಸೂಚಕ ರೂಪವನ್ನು ಸತ್ಯದ ಮೂಲಕ ನಿರೂಪಿಸುವ *ಮಾರ್ಗ *ವನ್ನು ವಿವರಿಸಲು ಬಳಸುತ್ತಿದ್ದಾನೆ. ನಿಮ್ಮ ಓದುಗರು ಈ ನುಡಿಗಟ್ಟು ತಪ್ಪಾಗಿ ಅರ್ಥಮಾಡಿಕೊಂಡರೆ, ನೀವು “ಸತ್ಯ” ಎಂಬ ನಾಮಪದದ ಬದಲಿಗೆ “ನಿಜ” ಎಂಬ ವಿಶೇಷಣವನ್ನು ಬಳಸಬಹುದು. ಪರ್ಯಾಯ ಅನುವಾದ: “ನಿಜವಾದ ಮಾರ್ಗ” (ನೋಡಿ: ಸ್ವಾದೀನ)
ἡ ὁδὸς τῆς ἀληθείας βλασφημηθήσεται
ಪೇತ್ರನು ಸತ್ಯದ ಮಾರ್ಗ ಎಂಬುದನ್ನು ಒಬ್ಬ ವ್ಯಕ್ತಿಯನ್ನು ದೂಷಣೆ ಮಾಡಬಹುದು ಅಥವಾ ಅಗೌರವ ತೋರಿಸಬಹುದು ಎಂಬಂತೆ ಸಾಂಕೇತಿಕವಾಗಿ ಮಾತನಾಡುತ್ತಾನೆ. ಪರ್ಯಾಯ ಅನುವಾದ: “ಅವರು ಸತ್ಯದ ಮಾರ್ಗದ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ” (ನೋಡಿ: ವ್ಯಕ್ತೀಕರಣ)
ἡ ὁδὸς τῆς ἀληθείας βλασφημηθήσεται
ಸುಳ್ಳು ಬೋಧಕರ ಮತ್ತು ಅವರ ಹಿಂಬಾಲಕರ ಭೋಗಾಸಕ್ತ ಜೀವನವನ್ನು ನೋಡಿದಾಗ ಅವಿಶ್ವಾಸಿಗಳು ಕ್ರೈಸ್ತ ನಂಬಿಕೆಯನ್ನು ದೂಷಿಸುವವರು ಎಂದು ತನ್ನ ಪ್ರೇಕ್ಷಕರಿಗೆ ತಿಳಿಯುತ್ತದೆ ಎಂದು ಪೇತ್ರನು ಊಹಿಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: “ಸತ್ಯದ ಮಾರ್ಗವು ಅವಿಶ್ವಾಸಿಗಳಿಂದ ದೂಷಣೆಯಾಗುತ್ತದೆ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
2 Peter 2:3
πλαστοῖς λόγοις
ಇಲ್ಲಿ, ಸುಳ್ಳು ಮಾತುಗಳು ಎಂಬುದು ಸುಳ್ಳು ಬೋಧಕರು ತಮ್ಮ ಬಲಿಪಶುಗಳನ್ನು ಬಳಸಿಕೊಳ್ಳುವ ಸಾಧನವಾಗಿದೆ. ಪರ್ಯಾಯ ಅನುವಾದ: “ಸುಳ್ಳು ಮಾತುಗಳ ಮೂಲಕ”
οἷς τὸ κρίμα ἔκπαλαι οὐκ ἀργεῖ, καὶ ἡ ἀπώλεια αὐτῶν οὐ νυστάζει
ಈ ಎರಡು ದೀರ್ಘ ನುಡಿಗಟ್ಟುಗಳು ಮೂಲತಃ ಒಂದೇ ವಿಷಯವನ್ನು ಅರ್ಥೈಸುತ್ತವೆ ಮತ್ತು ಸುಳ್ಳು ಬೋಧಕರನ್ನು ಖಚಿತವಾಗಿ ಖಂಡಿಸಲಾಗುತ್ತದೆ ಎಂದು ಒತ್ತಿಹೇಳುತ್ತವೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅವುಗಳನ್ನು ಸಂಯೋಜಿಸಬಹುದು. ಪರ್ಯಾಯ ಅನುವಾದ: “ಬಹುಕಾಲದಿಂದಲೂ ಅವರ ನಾಶ ಖಚಿತ” (ನೋಡಿ: ಸಾದೃಶ್ಯತೆ.)
οἷς τὸ κρίμα ἔκπαλαι οὐκ ἀργεῖ, καὶ ἡ ἀπώλεια αὐτῶν οὐ νυστάζει
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, “ಖಂಡನೆ” ಮತ್ತು “ವಿನಾಶ” ಎಂಬ ಅಮೂರ್ತ ನಾಮಪದಗಳ ಹಿಂದಿನ ಆಲೋಚನೆಗಳನ್ನು ನೀವು ಮೌಖಿಕ ರೂಪಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರು ಬಹಳ ಹಿಂದಿನಿಂದಲೂ ನಿಷ್ಪ್ರಯೋಜಕರಾಗಿ ಖಂಡಿಸಲ್ಪಟ್ಟಿಲ್ಲ, ಮತ್ತು ಅವರು ತಡವಾಗಿ ನಾಶವಾಗುವುದಿಲ್ಲ” (ನೋಡಿ: ಭಾವವಾಚಕ ನಾಮಪದಗಳು)
ἐν πλεονεξίᾳ
ಇಲ್ಲಿ, ಇದರಲ್ಲಿ ಎಂಬುದು ಸುಳ್ಳು ಬೋಧಕರು ಮಾಡುವ ಕಾರಣವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ದುರಾಸೆಯಿಂದಾಗಿ”
ἐν πλεονεξίᾳ
ನಿಮ್ಮ ಓದುಗರು ಅಮೂರ್ತ ನಾಮಪದ * ದುರಾಶೆ* ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು “ದುರಾಸೆ” ಯಂತಹ ವಿಶೇಷಣದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಏಕೆಂದರೆ ಅವರು ದುರಾಸೆಯವರಾಗಿದ್ದಾರೆ” (ನೋಡಿ: ಭಾವವಾಚಕ ನಾಮಪದಗಳು)
πλαστοῖς λόγοις
ಪದಗಳನ್ನು ಬಳಸಿ ಇಲ್ಲಿ ತಿಳಿಸಲಾದ ಸುಳ್ಳು ಬೋಧಕರ ಬೋಧನೆಗಳನ್ನು ವಿವರಿಸಲು ಪೇತ್ರನು ಪದಗಳು ಎಂಬ ಪದವನ್ನು ಬಳಸುತ್ತಿದ್ದಾನೆ. ಪರ್ಯಾಯ ಅನುವಾದ: “ಸುಳ್ಳು ಬೋಧನೆಗಳಿಂದ” (ನೋಡಿ: ಲಕ್ಷಣಾಲಂಕಾರ)
ἐμπορεύσονται
ಇಲ್ಲಿ, ಅವರು ಎಂಬುದು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತಾರೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
οἷς τὸ κρίμα ἔκπαλαι οὐκ ἀργεῖ
ಇಲ್ಲಿ, ಯಾರು ಎಂಬುದು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರಿಗೆ ಬಹಳ ಹಿಂದಿನಿಂದಲೂ ಖಂಡನೆಯು ಜಡವಾಗಿಲ್ಲ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
οἷς τὸ κρίμα ἔκπαλαι οὐκ ἀργεῖ
ಇಲ್ಲಿ, ಯಾರಿಗೆ ಎಂಬುದು ಖಂಡನೆಯು ಮತ್ತೆ ಸುಳ್ಳು ಬೋಧಕರಿಗೆ ನಿರ್ದೇಶಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: “ಯಾರ ವಿರುದ್ಧ ಬಹಳ ಹಿಂದಿನಿಂದಲೂ ಖಂಡನೆಯು ಜಡವಾಗಿಲ್ಲ”
οἷς τὸ κρίμα ἔκπαλαι οὐκ ἀργεῖ, καὶ ἡ ἀπώλεια αὐτῶν οὐ νυστάζει
ನೀವು ಈ ನುಡಿಗಟ್ಟುಗಳನ್ನು ಸಕಾರಾತ್ಮಕ ಪದಗಳಲ್ಲಿ ಕ್ರಿಯಾಪದಗಳೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಬಹುಕಾಲದಿಂದಲೂ ಅವರ ಖಂಡನೆಯು ಸಕ್ರಿಯವಾಗಿದೆ ಮತ್ತು ಅವರ ನಾಶವು ಎಚ್ಚರವಾಗಿದೆ” (ನೋಡಿ: ದ್ವಿಗುಣ ನಕಾರಾತ್ಮಕಗಳು)
τὸ κρίμα ἔκπαλαι οὐκ ἀργεῖ, καὶ ἡ ἀπώλεια αὐτῶν οὐ νυστάζει
ಪೇತ್ರನು ಖಂಡನೆ ಮತ್ತು ವಿನಾಶ ಎಂಬ ಪದಗಳನ್ನು ಸಾಂಕೇತಿಕವಾಗಿ ಅವರು ಜಡ ವಾಗಿರುವವರಂತೆ ಅಥವಾ ನಿದ್ದೆ ಮಾಡುವವರಂತೆ ಮಾತನಾಡುತ್ತಾನೆ. ಇದು ನಿಮ್ಮ ಓದುಗರಿಗೆ ಗೊಂದಲವನ್ನು ಉಂಟುಮಾಡಿದರೆ, ನೀವು ಅರ್ಥವನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೀರ್ಘಕಾಲದಿಂದಲೂ ಖಂಡನೆಯು ನಿಷ್ಪರಿಣಾಮಕಾರಿಯಲ್ಲ ಮತ್ತು ಅವರ ನಾಶವು ವಿಳಂಬವಾಗುವುದಿಲ್ಲ” (ನೋಡಿ: ವ್ಯಕ್ತೀಕರಣ)
2 Peter 2:4
εἰ
ಇಲ್ಲಿ, * ಒಂದು ವೇಳೆ* ಎಂಬುದು 2:4 ನಿಂದ 2:10 ವರೆಗೆ ವಿಸ್ತರಿಸುವ ಷರತ್ತುಬದ್ಧ ವಾಕ್ಯದ ಆರಂಭವನ್ನು ಸೂಚಿಸುತ್ತದೆ. ಇದು ಒಂದು ಕಾಲ್ಪನಿಕ ಸಾಧ್ಯತೆಯಂತೆ ಪೇತ್ರನು ಮಾತನಾಡುತ್ತಿದ್ದಾನೆ, ಆದರೆ ಅದು ಸತ್ಯವೆಂಬುದನ್ನು ಅವನು ಅರ್ಥೈಸುತ್ತಾನೆ. ನಿಮ್ಮ ಭಾಷೆಯು ಯಾವುದನ್ನಾದರೂ ಒಂದು ಷರತ್ತು ಎಂದು ಹೇಳದಿದ್ದರೆ ಅದು ಖಚಿತ ಅಥವಾ ನಿಜವಾಗಿದ್ದರೆ ಮತ್ತು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ ಮತ್ತು ಪೇತ್ರನು ಹೇಳುವುದು ಖಚಿತವಾಗಿಲ್ಲ ಎಂದು ಭಾವಿಸಿದರೆ, ನೀವು ಅವನ ಮಾತುಗಳನ್ನು ಸಮರ್ಥನೀಯ ಹೇಳಿಕೆಯಾಗಿಅನುವಾದಿರಿಸಬಹುದು. ಪರ್ಯಾಯ ಅನುವಾದ: “ದೇವರು ಪಾಪ ಮಾಡಿದ ದೇವದೂತರನ್ನು ಬಿಡಲಿಲ್ಲವಾದ್ದರಿಂದ” (ನೋಡಿ: Connect - Factual Conditions)
οὐκ ἐφείσατο
ಇಲ್ಲಿ, ಬಿಡುವಿನ ಎಂದರೆ “ಶಿಕ್ಷಿಸುವುದನ್ನು ತಡೆಯುವುದು.” ಪರ್ಯಾಯ ಅನುವಾದ : “ಶಿಕ್ಷಿಸುವುದನ್ನು ತಡೆಯಲಿಲ್ಲ”
ταρταρώσας
ಟಾರ್ಟಾರಸ್* ಎಂಬ ಪದವು ಪ್ರಾಚೀನ ಗ್ರೀಕ್ ಧರ್ಮದಿಂದ ಬಂದ ಪದವಾಗಿದ್ದು, ದುಷ್ಟಶಕ್ತಿಗಳನ್ನು ಮತ್ತು ಮರಣ ಹೊಂದಿದ ದುಷ್ಟರನ್ನು ಶಿಕ್ಷಿಸುವ ಸ್ಥಳವನ್ನು ಸೂಚಿಸುತ್ತದೆ. ಗ್ರೀಕ್ ಭಾಷೆಯಲ್ಲಿ ಬರೆಯಲಾದ ಕೆಲವು ಪ್ರಾಚೀನ ಯಹೂದಿ ಸಾಹಿತ್ಯವು ಟಾರ್ಟಾರಸ್ ಎಂಬ ಪದವನ್ನು ದೇವರು ದುಷ್ಟರನ್ನು ಶಿಕ್ಷಿಸುವ ಸ್ಥಳದ ಪದವಾಗಿ ಬಳಸುತ್ತದೆ. ಪರ್ಯಾಯ ಅನುವಾದ: “ಆತನು ಅವರನ್ನು ನರಕಕ್ಕೆ ಹಾಕಿದನು” (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
σειροῖς ζόφου
ಈ ನುಡಿಗಟ್ಟು ಇವುಗಳನ್ನು ಸೂಚಿಸಬಹುದು: (1) ಅತ್ಯಂತ ಕತ್ತಲೆಯ ಸ್ಥಳದಲ್ಲಿ ಸರಪಳಿಗಳು. ಪರ್ಯಾಯ ಅನುವಾದ: “ಕತ್ತಲೆಯಲ್ಲಿ ಸರಪಳಿಗಳಲ್ಲಿ” (2) ಸರಪಳಿಗಳಂತೆ ಅವರನ್ನು ಬಂಧಿಸುವ ಅತ್ಯಂತ ಆಳವಾದ ಕತ್ತಲೆ. ಪರ್ಯಾಯ ಅನುವಾದ: “ಸರಪಳಿಗಳಂತೆ ಕತ್ತಲೆಯಲ್ಲಿ ಬಂಧಿಸಲಾಗಿದೆ” (ನೋಡಿ: ರೂಪಕ ಅಲಂಕಾರ)
εἰς κρίσιν
ಈ ನುಡಿಗಟ್ಟು ಪಾಪ ಮಾಡುವ ದೇವದೂತರನ್ನು ಸೆರೆಯಲ್ಲಿ ಬಂಧಿಸಿರುವ ಉದ್ದೇಶ ಅಥವಾ ಗುರಿಯನ್ನು ನೀಡುತ್ತದೆ. ಪರ್ಯಾಯ ಅನುವಾದ: “ನ್ಯಾಯತೀರ್ಪಿನ ಉದ್ದೇಶಕ್ಕಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
γὰρ
ಪ್ರತಿಯಾಗಿ ಎಂಬುದು ಇಲ್ಲಿ ಹಿಂದಿನ ವಾಕ್ಯದಲ್ಲಿ ಸೂಚ್ಯವಾಗಿ ವಿವರಿಸಿದ ಫಲಿತಾಂಶದ ಕಾರಣವನ್ನು ಪೇತ್ರನು ನೀಡುತ್ತಿದ್ದಾನೆ ಎಂದು ಸೂಚಿಸುತ್ತದೆ. ಸುಳ್ಳು ಬೋಧಕರ ನಾಶ ಏಕೆ ನಿಶ್ಚಿತ ಎಂದು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ: “ಇದಕ್ಕೆ ಕಾರಣ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἀγγέλων ἁμαρτησάντων
ದೇವರಿಂದ ಶಿಕ್ಷೆಗೆ ಒಳಗಾದ ದೇವದೂತರನ್ನು ಅವರಲ್ಲದವರಿಂದ ಪ್ರತ್ಯೇಕಿಸಲು ಪೇತ್ರನು ಪಾಪ ಮಾಡಿದವರು ಎಂಬ ಪದವನ್ನು ಬಳಸುತ್ತಾರೆ. (ನೋಡಿ: ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ)
σειροῖς ζόφου
ಕೆಲವು ಅತ್ಯುತ್ತಮ ಪ್ರಾಚೀನ ಹಸ್ತಪ್ರತಿಗಳು "ಸರಪಳಿಗಳು" ಎಂಬುದರ ಬದಲಿಗೆ "ಗುಂಡಿ" ಎಂದು ಓದುತ್ತವೆ. ನಿಮ್ಮ ಪ್ರದೇಶದಲ್ಲಿ ಸತ್ಯವೇದದ ಅನುವಾದವು ಅಸ್ತಿತ್ವದಲ್ಲಿದ್ದರೆ, ಅದರಲ್ಲಿರುವ ಓದುವಿಕೆಯನ್ನು ನೀವು ಬಳಸಲು ಬಯಸಬಹುದು. ನಿಮ್ಮ ಪ್ರದೇಶದಲ್ಲಿ ಸತ್ಯವೇದದ ಅನುವಾದವು ಅಸ್ತಿತ್ವದಲ್ಲಿಲ್ಲದಿದ್ದರೆ, ನೀವು ULT ನಲ್ಲಿ ಓದುವಿಕೆಯನ್ನು ಬಳಸಲು ಬಯಸಬಹುದು. (ನೋಡಿ: ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.)
παρέδωκεν
ಪಾಪ ಮಾಡಿದ ದೇವದೂತರನ್ನು ಒಪ್ಪಿಸಿದವನು ದೇವರೇ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನಿಮ್ಮ ಅನುವಾದದಲ್ಲಿ ನೀವು ಅದನ್ನು ಸ್ಪಷ್ಟವಾಗಿ ಮಾಡಬಹುದು. ಪರ್ಯಾಯ ಅನುವಾದ: “ದೇವರು ಒಪ್ಪಿಸಿದನು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
παρέδωκεν
ಇಲ್ಲಿ, ಸೆರೆಮನೆಯ ಕಾವಲುಗಾರರಿಗೆ ಅಪರಾಧಿಯನ್ನು ಒಪ್ಪಿಸಿದವರಂತೆ ಪಾಪಮಾಡಿದ ದೇವದೂತರನ್ನು ಸೆರೆಮನೆಗೆ ದೇವರು ಸೆರೆಹಿಡಿಯುತ್ತಾನೆ ಎಂದು ಪೇತ್ರನು ಸಾಂಕೇತಿಕವಾಗಿ ಮಾತಾಡುತ್ತಾನೆ. ಪರ್ಯಾಯ ಅನುವಾದ: "ಬಂಧಿಯಾದ" (ನೋಡಿ: ರೂಪಕ ಅಲಂಕಾರ)
εἰς κρίσιν
ನಿಮ್ಮ ಓದುಗರು ಅಮೂರ್ತ ನಾಮಪದ ನ್ಯಾಯತೀರ್ಪು ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದನ್ನು ಮೌಖಿಕ ನುಡಿಗಟ್ಟುಗಳೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: "ನ್ಯಾಯತೀರ್ಮಾನಿಸಲಾಗುವುದು" (ನೋಡಿ: ಭಾವವಾಚಕ ನಾಮಪದಗಳು)
εἰς κρίσιν τηρουμένους
ಈ ನುಡಿಗಟ್ಟು ವಾಕ್ಯದಲ್ಲಿ ಹಿಂದೆ ಸೂಚಿಸಲಾದ ಪಾಪಿ ದೇವದದೂತರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನ್ಯಾಯತೀರ್ಪಿಗಾಗಿ ಇರಿಸಲಾಗಿರುವ ಆ ಪಾಪಿ ದೇವದದೂತರು" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
εἰς κρίσιν τηρουμένους
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ಮೌಖಿಕ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಿದ್ದಾರೆಂದು ನೀವು ಸೂಚಿಸಬಹುದು. ಪರ್ಯಾಯ ಅನುವಾದ: “ ನ್ಯಾಯತೀರ್ಪಿಗಾಗಿ ದೇವರು ಇಟ್ಟವರು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
2 Peter 2:5
ἀρχαίου κόσμου οὐκ ἐφείσατο
ಇಲ್ಲಿ, ಜಗತ್ತು ಎಂಬುದು ಅದರಲ್ಲಿ ವಾಸಿಸುತ್ತಿದ್ದ ಜನರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದ ಜನರನ್ನು ಆತನು ಬಿಡಲಿಲ್ಲ” (ನೋಡಿ: ಲಕ್ಷಣಾಲಂಕಾರ)
ὄγδοον, Νῶε
ಇಲ್ಲಿ, ಎಂಟನೇ ಎಂಬುದು ಎಂಟು ಜನರ ಗುಂಪನ್ನು ಸೂಚಿಸಲು ಬಳಸುವ ಭಾಷಾವೈಶಿಷ್ಟ್ಯವಾಗಿದೆ. ದೇವರು ನಾಶಪಡಿಸದ ಪ್ರಾಚೀನ ಜಗತ್ತಿನಲ್ಲಿ ಕೇವಲ ಎಂಟು ಜನರಲ್ಲಿ ನೋಹನು ಒಬ್ಬನು ಎಂದರ್ಥ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಭಾಷಾವೈಶಿಷ್ಟ್ಯದ ಅಕ್ಷರಶಃ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನೋಹನು ಸೇರಿದಂತೆ ಎಂಟು ಜನರು” ಅಥವಾ “ಇತರ ಏಳು ಮಂದಿಯ ಜೊತೆ, ನೋಹನು” (ನೋಡಿ: ನುಡಿಗಟ್ಟುಗಳು.)
καὶ
ಇಲ್ಲಿ, ಮತ್ತು ಎಂಬುದು 2:4 ರಿಂದ 2:10 ವರೆಗೆ ವಿಸ್ತರಿಸುವ ಷರತ್ತುಬದ್ಧ ವಾಕ್ಯದಲ್ಲಿ ಎರಡನೇ ಸ್ಥಿತಿಯ ಆರಂಭವನ್ನು ಸೂಚಿಸುತ್ತದೆ. ಪೇತ್ರನು ಇದು ಒಂದು ಕಾಲ್ಪನಿಕ ಸಾಧ್ಯತೆಯಂತೆ ಮಾತನಾಡುತ್ತಿದ್ದಾನೆ, ಆದರೆ ಅದು ಸತ್ಯವೆಂದು ಅವನು ಅರ್ಥೈಸುತ್ತಾನೆ. ನಿಮ್ಮ ಭಾಷೆಯು ಯಾವುದನ್ನಾದರೂ ಒಂದು ಷರತ್ತು ಎಂದು ಹೇಳದಿದ್ದರೆ ಅದು ಖಚಿತ ಅಥವಾ ನಿಜವಾಗಿದ್ದರೆ ಮತ್ತು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ ಮತ್ತು ಪೇತ್ರನು ಹೇಳುವುದು ಖಚಿತವಾಗಿಲ್ಲ ಎಂದು ಭಾವಿಸಿದರೆ, ನೀವು ಅವನ ಮಾತುಗಳನ್ನು ಸಮರ್ಥನೀಯ ಹೇಳಿಕೆಯಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಇಂದಿನಿಂದ” (ನೋಡಿ: Connect - Factual Conditions)
οὐκ ἐφείσατο
2:4 ನಲ್ಲಿರುವಂತೆ, ಇಲ್ಲಿ ತಡೆ ಎಂಬ ಪದವು "ಶಿಕ್ಷಿಸುವುದನ್ನು ತಡೆಯುವುದು" ಎಂದರ್ಥ. ಪರ್ಯಾಯ ಅನುವಾದ: "ಶಿಕ್ಷಿಸುವುದನ್ನು ತಡೆಯಲಿಲ್ಲ"
οὐκ ἐφείσατο
ಇಲ್ಲಿ, ಆತನು ಎಂಬುದು ದೇವರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ದೇವರು ತಡೆಯಲಿಲ್ಲ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
Νῶε
ನೋಹ ಎಂಬುದು ಮನುಷ್ಯನ ಹೆಸರು. (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Νῶε, δικαιοσύνης κήρυκα
ಈ ನುಡಿಗಟ್ಟು ನಮಗೆ ನೋಹನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಪ್ರಾಚೀನ ಪ್ರಪಂಚದ ಭಕ್ತಿಹೀನ ಜನರಿಗೆ ನೋಹನು ನೀತಿಯನ್ನು ಸಾರಿದನು ಎಂದು ಅದು ನಮಗೆ ಹೇಳುತ್ತದೆ. ಇದು ನೋಹ ಎಂಬ ಹೆಸರಿನ ಯಾವುದೇ ವ್ಯಕ್ತಿಯಿಂದ ಈ ನೋಹನನ್ನು ಪ್ರತ್ಯೇಕಿಸುವುದಿಲ್ಲ. (ನೋಡಿ: ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ)
δικαιοσύνης κήρυκα
ನಿಮ್ಮ ಓದುಗರು ಅಮೂರ್ತ ನಾಮಪದ ನೀತಿವಂತಿಕೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಈ ಸಂದರ್ಭದಲ್ಲಿ, ಪದ ಎಂಬುದು ನೀತಿಯ ಕಾರ್ಯಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ನೀತಿಯ ಕಾರ್ಯಗಳ ಬೋಧಕ” ಅಥವಾ “ಸರಿಯಾಗಿ ವರ್ತಿಸುವುದು ಹೇಗೆ ಎಂಬುದರ ಬೋಧಕ” (ನೋಡಿ: ಭಾವವಾಚಕ ನಾಮಪದಗಳು)
δικαιοσύνης κήρυκα
ಪೇತ್ರನು ಇದನ್ನು ಸೂಚಿಸಲು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿರಬಹುದು: (1) ನೀತಿವಂತಿಕೆಯ ಗುಣಲಕ್ಷಣಗಳಿರುವ ಬೋಧಕ. ಪರ್ಯಾಯ ಅನುವಾದ: “ನೀತಿವಂತನಾದ ಬೋಧಕ” (2) ಇತರರಿಗೆ ನೀತಿವಂತರಾಗಿ ಬದುಕಲು ಹೇಳುವ ಬೋಧಕ. ಪರ್ಯಾಯ ಅನುವಾದ: “ಇತರರನ್ನು ನೀತಿವಂತರಾಗಿ ಬದುಕಲು ಪ್ರೇರೇಪಿಸಿದವನು” (ನೋಡಿ: ಸ್ವಾದೀನ)
κατακλυσμὸν κόσμῳ ἀσεβῶν ἐπάξας
ದೇವರು ನೋಹನನ್ನು ಮತ್ತು ಅವನ ಕುಟುಂಬದ ಇತರ ಏಳು ಸದಸ್ಯರನ್ನು ರಕ್ಷಿಸಿದ್ದನ್ನು, ಆತನು ಪ್ರಪಂಚದ ಮೇಲೆ ಜಲಪ್ರಳಯವನ್ನು ತಂದದ್ದನ್ನು ಈ ಷರತ್ತು ಸೂಚಿಸುತ್ತದೆ, ಇದನ್ನು UST ನಲ್ಲಿ ಅನುವಾದಿಸಲಾಗಿದೆ.
κόσμῳ ἀσεβῶν
ಪೇತ್ರನು ಇದನ್ನು ಸೂಚಿಸಲು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿರಬಹುದು: (1) ಪ್ರಾಚೀನ ಪ್ರಪಂಚದ ಮಾನವನ ವಿಷಯ. ಪರ್ಯಾಯ ಅನುವಾದ: “ಭಕ್ತಿಯಿಲ್ಲದ ಜನರನ್ನು ಒಳಗೊಂಡಿರುವ ಜಗತ್ತು” (2) ಜಗತ್ತು ಭಕ್ತಿಹೀನತೆಯ ಗುಣಲಕ್ಷಣಗಳನ್ನು ಹೊಂದಿದೆ . ಪರ್ಯಾಯ ಅನುವಾದ: “ ಭಕ್ತಿಹೀನ ಪ್ರಪಂಚ” (ನೋಡಿ: ಸ್ವಾದೀನ)
2 Peter 2:6
πόλεις Σοδόμων καὶ Γομόρρας τεφρώσας
ಈ ನುಡಿಗಟ್ಟು ದೇವರು ಸೊದೋಮ್ ಮತ್ತು ಗೊಮೋರವನ್ನು ನಾಶಪಡಿಸಿದ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಬೂದಿ ಮಾಡುವ ಮೂಲಕ”
ὑπόδειγμα μελλόντων ἀσεβέσιν τεθεικώς
ಈ ಷರತ್ತು ವಾಕ್ಯದ ಹಿಂದಿನ ಷರತ್ತುಗಳಲ್ಲಿ ಏನಾಯಿತು ಎಂಬುದರ ಫಲಿತಾಂಶವನ್ನು ಸೂಚಿಸುತ್ತದೆ. ಸೊದೋಮ್ ಮತ್ತು ಗೊಮೋರವನ್ನು ದೇವರು ನಾಶಪಡಿಸಿದ ಪರಿಣಾಮವಾಗಿ ಅವುಗಳು ಉದಾಹರಣೆಯಾಗಿವೆ ಮತ್ತು ದೇವರಿಗೆ ಅವಿಧೇಯರಾದ ಇತರರಿಗೆ ಏನಾಗುತ್ತದೆ ಎಂಬುದಕ್ಕೆ ಎಚ್ಚರಿಕೆಗಾಗಿವೆ. ಪರ್ಯಾಯ ಅನುವಾದ: “ಅಧರ್ಮಿಗಳಿಗೆ ಸಂಭವಿಸುವ ಸಂಗತಿಗಳಿಗೆ ದೇವರು ಅವುಗಳನ್ನು ಉದಾಹರಣೆಯಾಗಿ ಇಟ್ಟ ಪರಿಣಾಮವಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ )
καὶ
ಇಲ್ಲಿ, ಮತ್ತು ಎಂಬುದು 2:4 ನಿಂದ 2:10 ವರೆಗೆ ವಿಸ್ತರಿಸುವ ಷರತ್ತುಬದ್ಧ ವಾಕ್ಯದಲ್ಲಿ ಮೂರನೇ ಸ್ಥಿತಿಯ ಆರಂಭವನ್ನು ಸೂಚಿಸುತ್ತದೆ. ಪೇತ್ರನು ಇದು ಒಂದು ಕಾಲ್ಪನಿಕ ಸಾಧ್ಯತೆಯಂತೆ ಮಾತನಾಡುತ್ತಿದ್ದಾನೆ, ಆದರೆ ಅದು ಸತ್ಯವೆಂದು ಅವನು ಅರ್ಥೈಸುತ್ತಾನೆ. ನಿಮ್ಮ ಭಾಷೆಯು ಯಾವುದನ್ನಾದರೂ ಒಂದು ಷರತ್ತು ಎಂದು ಹೇಳದಿದ್ದರೆ ಅದು ಖಚಿತ ಅಥವಾ ನಿಜವಾಗಿದ್ದರೆ ಮತ್ತು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ ಮತ್ತು ಪೇತ್ರನು ಹೇಳುವುದು ಖಚಿತವಾಗಿಲ್ಲ ಎಂದು ಭಾವಿಸಿದರೆ, ನೀವು ಅವನ ಮಾತುಗಳನ್ನು ಸಮರ್ಥನೀಯ ಹೇಳಿಕೆಯಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಇಂದಿನಿಂದ” (ನೋಡಿ: Connect - Factual Conditions)
καὶ πόλεις Σοδόμων καὶ Γομόρρας τεφρώσας καταστροφῇ κατέκρινεν
ನಿಮ್ಮ ಭಾಷೆಯಲ್ಲಿ ಇದು ಸ್ವಾಭಾವಿಕವಾಗಿದ್ದರೆ, ನೀವು ಈ ನುಡಿಗಟ್ಟುಗಳ ಕ್ರಮವನ್ನು ಹಿಂತಿರುಗಿಸಬಹುದು. ಪರ್ಯಾಯ ಅನುವಾದ: “ಮತ್ತು ಆತನು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ನಾಶಪಡಿಸಿದನು, ಅವುಗಳನ್ನು ಬೂದಿ ಮಾಡಿದನು” (ನೋಡಿ: ಮಾಹಿತಿ ರಚನೆ.)
Σοδόμων καὶ Γομόρρας
ಸೊದೋಮ್ ಮತ್ತು ಗೊಮೋರ ಎಂಬುದು ಎರಡು ಪಟ್ಟಣಗಳ ಹೆಸರುಗಳು. (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
καταστροφῇ κατέκρινεν
ಇಲ್ಲಿ, ಆತನು ಎಂಬುದು ದೇವರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ದೇವರು ಅವರನ್ನು ವಿನಾಶಕ್ಕೆ ಗುರಿಪಡಿಸಿದನು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
καταστροφῇ κατέκρινεν
ನಿಮ್ಮ ಓದುಗರು ಅಮೂರ್ತ ನಾಮಪದ ವಿನಾಶ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ನಾಶ" ದಂತಹ ಕ್ರಿಯಾಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: "ಅವರು ನಾಶವಾಗುವಂತೆ ಆತನು ಅವರನ್ನು ಖಂಡಿಸಿದನು" (ನೋಡಿ: ಭಾವವಾಚಕ ನಾಮಪದಗಳು)
ἀσεβέσιν
ಇಲ್ಲಿ, ಭಕ್ತಿಹೀನ ಎಂಬ ಪದವು ಸಾಮಾನ್ಯವಾಗಿ ದುಷ್ಟ ಜನರನ್ನು ಸೂಚಿಸುತ್ತದೆ, ಒಬ್ಬ ನಿರ್ದಿಷ್ಟ ದುಷ್ಟ ವ್ಯಕ್ತಿಗೆ ಅಲ್ಲ. ಪರ್ಯಾಯ ಅನುವಾದ: “ಭಕ್ತಿಯಿಲ್ಲದ ವ್ಯಕ್ತಿಗೆ” ಅಥವಾ “ಅಧರ್ಮಿಗಳಿಗೆ” (ನೋಡಿ: ಸಾರ್ವತ್ರಿಕ ನಾಮಪದ ಪದಗುಚ್ಛಗಳು.)
2 Peter 2:7
καὶ
ಇಲ್ಲಿ, ಮತ್ತು ಎಂಬುದು 2:4 ನಿಂದ 2:10 ವರೆಗೆ ವಿಸ್ತರಿಸಿರುವ ಷರತ್ತುಬದ್ಧ ವಾಕ್ಯದಲ್ಲಿ ನಾಲ್ಕನೇ ಸ್ಥಿತಿಯ ಆರಂಭವನ್ನು ಸೂಚಿಸುತ್ತದೆ. ಇದು ಒಂದು ಕಾಲ್ಪನಿಕ ಸಾಧ್ಯತೆಯಂತೆ ಪೇತ್ರನು ಮಾತನಾಡುತ್ತಿದ್ದಾನೆ, ಆದರೆ ಅದು ಸತ್ಯವೆಂದು ಅವನು ಅರ್ಥೈಸುತ್ತಾನೆ. ನಿಮ್ಮ ಭಾಷೆಯು ಯಾವುದನ್ನಾದರೂ ಒಂದು ಷರತ್ತು ಎಂದು ಹೇಳದಿದ್ದರೆ ಅದು ಖಚಿತ ಅಥವಾ ನಿಜವಾಗಿದ್ದರೆ ಮತ್ತು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ ಮತ್ತು ಪೇತ್ರನು ಹೇಳುವುದು ಖಚಿತವಾಗಿಲ್ಲ ಎಂದು ಭಾವಿಸಿದರೆ, ನೀವು ಅವನ ಮಾತುಗಳನ್ನು ಸಮರ್ಥನೀಯ ಹೇಳಿಕೆಯಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಅಲ್ಲಿಂದ” (ನೋಡಿ: Connect - Factual Conditions)
τῶν ἀθέσμων
ಇಲ್ಲಿ, * ಧರ್ಮಶಾಸ್ತ್ರವನ್ನು ನಿರ್ಲಕ್ಷ್ಹಿಸುವವರ* ಎಂಬುದು ಲೋಟನು ವಾಸವಾಗಿದ್ದ ಸೊದೋಮ್ ಪಟ್ಟಣದಲ್ಲಿ ವಾಸಿಸುತ್ತಿದ್ದ ಜನರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಸೊದೋಮಿನ ಧರ್ಮಶಾಸ್ತ್ರವನ್ನು ನಿರ್ಲಕ್ಷ್ಹಿಸುವವರ ಜನರ” ಅಥವಾ “ಸೊದೋಮಿನಲ್ಲಿ ಧರ್ಮಶಾಸ್ತ್ರ ಇಲ್ಲ ಎಂಬಂತೆ ವರ್ತಿಸುವ ಜನರ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐρύσατο
ಇಲ್ಲಿ, ಆತನು ಎಂಬುದು ದೇವರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. UST ನಲ್ಲಿರುವಂತೆ ಪರ್ಯಾಯ ಅನುವಾದ: “ ದೇವರು ರಕ್ಷಿಸಿದನು ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
Λὼτ
ಲೋಟನು ಎಂಬುದು ಮನುಷ್ಯನ ಹೆಸರು. (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
καταπονούμενον ὑπὸ τῆς τῶν ἀθέσμων ἐν ἀσελγείᾳ ἀναστροφῆς
ಈ ಷರತ್ತು ಲೋಟನ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತಿದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಇದನ್ನು ಸ್ಪಷ್ಟಪಡಿಸಲು ನೀವು ಹೊಸ ವಾಕ್ಯವನ್ನು ಇಲ್ಲಿ ಪ್ರಾರಂಭಿಸಬಹುದು. ಪರ್ಯಾಯ ಅನುವಾದ: "ಅವನು ಸ್ವೇಚ್ಛವೃತ್ತಿಪರದ ಕಾನೂನುಬಾಹಿರತನದ ನಡವಳಿಕೆಯಿಂದ ತುಳಿತಕ್ಕೊಳಗಾಗಿದ್ದಾನೆ" (ನೋಡಿ: ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ)
ὑπὸ τῆς τῶν ἀθέσμων ἐν ἀσελγείᾳ ἀναστροφῆς
ಇಲ್ಲಿ, ಮೂಲಕ ಎಂಬುದನ್ನು ಹೀಗೆ ಸೂಚಿಸಬಹುದು: (1) ULT ನಲ್ಲಿರುವಂತೆ ಲೋಟನನ್ನು ದಬ್ಬಾಳಿಕೆ ಮಾಡುವ ವಿಷಯ. (2) ಲೋಟನು ತುಳಿತಕ್ಕೊಳಗಾದ ಕಾರಣ. ಪರ್ಯಾಯ ಅನುವಾದ: “ಸ್ವೇಚ್ಛವೃತ್ತಿಪರದ ಕಾನೂನುಬಾಹಿರ ವರ್ತನೆಯಿಂದಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ὑπὸ τῆς τῶν ἀθέσμων…ἀναστροφῆς
ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಅಮೂರ್ತ ನಾಮಪದ ನಡವಳಿಕೆ ಎಂಬುದನ್ನು ಸಮಾನ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಕಾನೂನುಬಾಹಿರರು ಏನು ಮಾಡಿದರು” ಅಥವಾ “ಕಾನೂನುಬಾಹಿರರು ಹೇಗೆ ವರ್ತಿಸಿದರು” (ನೋಡಿ: ಭಾವವಾಚಕ ನಾಮಪದಗಳು)
ἐν ἀσελγείᾳ ἀναστροφῆς
ಇಲ್ಲಿ, ರಲ್ಲಿ ಎಂಬುದು ಕಾನೂನುಬಾಹಿರ ಜನರು ಏನು ಮಾಡುತ್ತಿದ್ದಾರೆ ಎಂಬುದರ ವಿಷಯವನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ವಿಶೇಷಣದೊಂದಿಗೆ * ಸ್ವೇಚ್ಛಾವೃತ್ತಿಪರರಲ್ಲಿ * ಎಂಬುದನ್ನು ಅನುವಾದಿಸಬಹುದು. ಪರ್ಯಾಯ ಅನುವಾದ: "ಸ್ವೇಚ್ಛಾವೃತ್ತಿಪರ ವರ್ತನೆ"
τῆς τῶν ἀθέσμων ἐν ἀσελγείᾳ ἀναστροφῆς
ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಅಮೂರ್ತ ನಾಮಪದವನ್ನು ಸ್ವೇಚ್ಛವೃತ್ತಿಪರ ಎಂಬುದನ್ನು ವಿಶೇಷಣದೊಂದಿಗೆ ಅನುವಾದಿಸಬಹುದು. ಈ ಪದದ ಬಹುವಚನ ರೂಪವನ್ನು ನೀವು 2:2 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: "ಕಾನೂನುಬಾಹಿರರ ಸ್ವೇಚ್ಛವೃತ್ತಿಪರ ನಡವಳಿಕೆ" ಅಥವಾ "ಕಾನೂನುಬಾಹಿರರ ಮೃಗ ಸ್ವರೂಪದ ಭೋಗಾಸಕ್ತ ನಡವಳಿಕೆ"(ನೋಡಿ: ಭಾವವಾಚಕ ನಾಮಪದಗಳು)
καταπονούμενον ὑπὸ τῆς τῶν ἀθέσμων ἐν ἀσελγείᾳ ἀναστροφῆς
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಸ್ವೇಚ್ಛಚಾರದಲ್ಲಿ ಕಾನೂನುಬಾಹಿರ ವರ್ತನೆಯು ಅವನನ್ನು ತುಳಿತಕೊಳಗಾಗುವಂತೆ ಮಾಡಿತು" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
2 Peter 2:8
ὁ δίκαιος
ಇದು ಲೋಟನನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ನೀತಿವಂತನಾದ ಲೋಟನು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ψυχὴν δικαίαν…ἐβασάνιζεν
ಇಲ್ಲಿ, ಆತ್ಮ ಎಂಬ ಪದವು ಲೋಟನ ಆಲೋಚನೆಗಳು ಮತ್ತು ಭಾವನೆಗಳನ್ನು ಸೂಚಿಸುತ್ತದೆ. ಸೊದೋಮ್ ಮತ್ತು ಗೊಮೋರದ ನಾಗರಿಕರ ಅನೈತಿಕ ನಡವಳಿಕೆಯು ಅವನನ್ನು ಭಾವನಾತ್ಮಕವಾಗಿ ಕದಡಿತು. ಪರ್ಯಾಯ ಅನುವಾದ: “ಬಹಳವಾಗಿ ತೊಂದರೆಯಾಯಿತು” (ನೋಡಿ: ಉಪಲಕ್ಷಣಾಲಂಕಾರ)
γὰρ
ಸೊದೋಮಿನಲ್ಲಿ ಲೋಟನ ಜೀವನದ ಬಗ್ಗೆ ಹಿನ್ನೆಲೆ ಮಾಹಿತಿಯನ್ನು ಒದಗಿಸಲು ಪೇತ್ರನು ಇಲ್ಲಿ ಪ್ರತಿಯಾಗಿ ಎಂಬುದನ್ನು ಬಳಸುತ್ತಾನೆ. ಹಿಂದಿನ ವಾಕ್ಯದಲ್ಲಿ ಪೇತ್ರನು ಲೋಟನನ್ನು ನೀತಿವಂತನೆಂದು ಏಕೆ ಕರೆದಿದ್ದಾನೆ ಎಂಬುದನ್ನು ಓದುಗರಿಗೆ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಫಲಿತಾಂಶವನ್ನು ಸೂಚಿಸಲು ಪೇತ್ರನು ಇಲ್ಲಿ ಪ್ರತಿಯಾಗಿ ಎಂಬುದನ್ನು ಬಳಸುತ್ತಿಲ್ಲ. ಹಿನ್ನೆಲೆ ಮಾಹಿತಿಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ನೈಸರ್ಗಿಕ ರೂಪವನ್ನು ಬಳಸಿ. ಪರ್ಯಾಯ ಅನುವಾದ: “ಈಗ” (ನೋಡಿ: ಹಿನ್ನೆಲೆ ಮಾಹಿತಿ.)
βλέμματι γὰρ καὶ ἀκοῇ
ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಅಮೂರ್ತ ನಾಮಪದಗಳನ್ನು ನೋಡುವುದು ಮತ್ತು ಕೇಳುವುದು ಎಂಬ ಮೌಖಿಕ ನುಡಿಗಟ್ಟುಗಳೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಅವನು ನೋಡಿದಕ್ಕೆ ಮತ್ತು ಕೇಳಿದ್ದಕ್ಕೆ” (ನೋಡಿ: ಭಾವವಾಚಕ ನಾಮಪದಗಳು)
ἐνκατοικῶν ἐν αὐτοῖς
ಈ ಷರತ್ತು ಲೋಟನು ಸೊದೋಮಿನಲ್ಲಿ ವಾಸವಾಗಿದ್ದ ಸಮಯವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಅವನು ಅವರ ನಡುವೆ ವಾಸಿಸುತ್ತಿದ್ದಾಗ"
αὐτοῖς
ಇಲ್ಲಿ, ಸರ್ವನಾಮ ಅವರುಎಂಬುದು ಸೊದೋಮಿನ ನಿವಾಸಿಗಳನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗುವುದಾದರೆ, ಅವರು ಎಂಬ ಸರ್ವನಾಮವು ಏನನ್ನು ಸೂಚಿಸುತ್ತದೆ ಎಂಬುದನ್ನು ನೀವು ನಿರ್ದಿಷ್ಟಪಡಿಸಬಹುದು. ಪರ್ಯಾಯ ಅನುವಾದ: "ಸೊದೋಮಿನ ಜನರು" (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐνκατοικῶν ἐν αὐτοῖς ἡμέραν ἐξ ἡμέρας
ಈ ನುಡಿಗಟ್ಟು, ದಿನದಿಂದ ದಿನ, "ದಿನದ ನಂತರ ದಿನ" ಅಥವಾ "ಪ್ರತಿದಿನ" ಎಂಬರ್ಥದ ಭಾಷಾವೈಶಿಷ್ಟ್ಯವಾಗಿದೆ. ನೀವು ಇದನ್ನು ಅಕ್ಷರಶಃ ನಿಮ್ಮ ಭಾಷೆಯಲ್ಲಿ ವ್ಯಕ್ತಪಡಿಸಬೇಕಾಗಬಹುದು. ಪರ್ಯಾಯ ಅನುವಾದ: “ದಿನದಿಂದ ದಿನಕ್ಕೆ ಅವರ ನಡುವೆ ವಾಸಿಸುವುದು” ಅಥವಾ “ಪ್ರತಿದಿನ ಅವರ ನಡುವೆ ವಾಸಿಸುವುದು” (ನೋಡಿ: ನುಡಿಗಟ್ಟುಗಳು.)
ἀνόμοις ἔργοις
ಈ ನುಡಿಗಟ್ಟಿನ ಅರ್ಥ ಹೀಗಿರಬಹುದು: (1) ಕಾನೂನುಬಾಹಿರವಾದ ಕೆಲಸಗಳು ಲೋಟನು ತನ್ನ ಆತ್ಮವನ್ನು ಹಿಂಸಿಸುವ ಸಾಧನಗಳಾಗಿವೆ. ಪರ್ಯಾಯ ಅನುವಾದ: "ಕಾನೂನುಬಾಹಿರ ಕೆಲಸಗಳೊಂದಿಗೆ" (2) ಕಾನೂನುಬಾಹಿರ ಕೆಲಸಗಳು ಲೋಟನು ತನ್ನ ಆತ್ಮವನ್ನು ಹಿಂಸಿಸುವುದಕ್ಕೆ ಕಾರಣವಾಗಿವೆ. ಪರ್ಯಾಯ ಅನುವಾದ: "ಕಾನೂನುಬಾಹಿರ ಕೆಲಸಗಳ ಕಾರಣ"
2 Peter 2:9
οἶδεν Κύριος
ಈ ವಾಕ್ಯ ಮತ್ತು ಮುಂದಿನ ವಾಕ್ಯವು ಷರತ್ತುಬದ್ಧ ವಾಕ್ಯದ ಅಂತ್ಯವಾಗಿದ್ದು ಅದು 2:4 ನಿಂದ 2:10 ವರೆಗೆ ವಿಸ್ತರಿಸುತ್ತದೆ. ಪೇತ್ರನು ಹಿಂದಿನ ಷರತ್ತುಗಳ ಫಲಿತಾಂಶವನ್ನು ಸತ್ಯವೆಂದು ನೀಡುತ್ತಿದ್ದಾನೆ. ನೀವು 2:4–10 ಅನ್ನು ಪ್ರತ್ಯೇಕ ವಾಕ್ಯಗಳಾಗಿ ಮಾಡಿದ್ದರೆ, ನಂತರ ನೀವು 2:9 ಹಿಂದಿನ ಷರತ್ತುಗಳ ಫಲಿತಾಂಶ ಸತ್ಯ ಎಂದು ಸೂಚಿಸಬೇಕಾಗುತ್ತದೆ . ಪರ್ಯಾಯ ಅನುವಾದ: “ಆದ್ದರಿಂದ, ಕರ್ತನಿಗೆ ಹೇಗೆ ತಿಳಿದಿದೆ ಎಂಬುದು ಸತ್ಯ” ಅಥವಾ “ಈ ವಿಷಯಗಳು ಸತ್ಯವಾಗಿರುವುದರಿಂದ, ಅದು ಹೇಗೆ ಎಂದು ಕರ್ತನಿಗೆ ತಿಳಿದಿದೆ” (ನೋಡಿ: [[https://git.door43.org/STR/kn_ta/src/branch/master/translate//01.md grammar-connect-condition-fact]])
ἀδίκους δὲ εἰς ἡμέραν κρίσεως κολαζομένους τηρεῖν
ಇಲ್ಲಿ, ಆದರೆ ಎಂಬುದು ಇವುಗಳನ್ನು ಸೂಚಿಸಬಹುದು: (1) ಹಿಂದಿನ ಷರತ್ತು ಮತ್ತು ULT ಮತ್ತು UST ನಲ್ಲಿರುವಂತೆ ಕೆಳಗಿನವುಗಳ ನಡುವಿನ ವ್ಯತ್ಯಾಸ. (2) ಹಿಂದಿನ ಷರತ್ತು ಮತ್ತು ಕೆಳಗಿನವುಗಳ ನಡುವಿನ ಸರಳ ಸಂಪರ್ಕ. ಪರ್ಯಾಯ ಅನುವಾದ: “ಮತ್ತು ನ್ಯಾಯತೀರ್ಪಿನ ದಿನದಲ್ಲಿ ಅನೀತಿವಂತರನ್ನು ಶಿಕ್ಷಿಸುವಂತೆ” (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
πειρασμοῦ…ἀδίκους δὲ εἰς ἡμέραν κρίσεως κολαζομένους τηρεῖν
ಈ ಷರತ್ತಿನಲ್ಲಿ, ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದಗಳನ್ನು ಹಿಂದಿನ ಷರತ್ತುಗಳಿಂದ ಒದಗಿಸಬಹುದು. ಪರ್ಯಾಯ ಅನುವಾದ: "ಒಂದು ವಿಚಾರಣೆ ಮತ್ತು ನ್ಯಾಯತೀರ್ಪಿನ ದಿನದಲ್ಲಿ ಅನೀತಿವಂತರನ್ನು ಹೇಗೆ ಶಿಕ್ಷಿಸಬೇಕೆಂದು ಕರ್ತನಿಗೆ ತಿಳಿದಿದೆ" (ನೋಡಿ: ಪದಲೋಪ)
κολαζομένους
ಇದು ಉದ್ದೇಶದ ಷರತ್ತು. ದೇವರು ಯಾವ ಉದ್ದೇಶಕ್ಕಾಗಿ ಅನೀತಿವಂತರಾಗಿರುವ ಜನರನ್ನು ಕಾಪಾಡುತ್ತಿದ್ದಾನೆಂದು ಪೇತ್ರನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ (ಮುಂಚಿನ ಅಲ್ಪವಿರಾಮವಿಲ್ಲದೆ): "ಶಿಕ್ಷಿಸಲು" (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
ἀδίκους…κολαζομένους τηρεῖν
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಶಿಕ್ಷಿಸಲು ಅನೀತಿವಂತರನ್ನು ಇರಿಸಿಕೊಳ್ಳಲು" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
εἰς ἡμέραν κρίσεως
ಇಲ್ಲಿ, ರಲ್ಲಿ ಎಂಬುದು ಇವುಗಳನ್ನು ಸೂಚಿಸಬಹುದು: (1) ಅನೀತಿವಂತರನ್ನು ಯಾವಾಗ ಶಿಕ್ಷಿಸಲಾಗುತ್ತದೆ. ಪರ್ಯಾಯ ಅನುವಾದ: “ನ್ಯಾಯತೀರ್ಪಿನ ದಿನದಂದು” (2) ಅನೀತಿವಂತರನ್ನು ಶಿಕ್ಷಿಸುವ ಸಮಯದ ಹಂತ. ಪರ್ಯಾಯ ಅನುವಾದ: "ನ್ಯಾಯತೀರ್ಪಿನ ದಿನದವರೆಗೆ"
ἡμέραν κρίσεως
ಪೇತ್ರನು ದಿನಎಂಬುದನ್ನು ವಿವರಿಸಲು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿದ್ದಾನೆ, ಅದು ನ್ಯಾಯತೀರ್ಪಿನ ಮೂಲಕ ನಿರೂಪಿಸಲ್ಪಟ್ಟಿದೆ. ನಿಮ್ಮ ಓದುಗರು ಈ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಅದನ್ನು ವಿವರಿಸಲು ನೀವು ಒಂದು ನುಡಿಗಟ್ಟನ್ನು ಬಳಸಬಹುದು. ಪರ್ಯಾಯ ಅನುವಾದ: “ದೇವರು ಮಾನವಕುಲಕ್ಕೆ ನ್ಯಾಯತೀರಿಸುವ ದಿನ” (ನೋಡಿ: ಸ್ವಾದೀನ)
2 Peter 2:10
δὲ
ಇಲ್ಲಿ, ಆದರೆ ಎಂಬುದು ಹಿಂದಿನ ವಾಕ್ಯದ ಕೊನೆಯ ಷರತ್ತು ಮತ್ತು ಕೆಳಗಿನವುಗಳ ನಡುವಿನ ಸಂಪರ್ಕವನ್ನು ಸೂಚಿಸುತ್ತದೆ. ಹಿಂದಿನ ವಾಕ್ಯದಲ್ಲಿ “ಅನೀತಿವಂತರು” ಮತ್ತು ಈ ವಾಕ್ಯದಲ್ಲಿ “ಶರೀರವನ್ನು ಅನುಸರಿಸುವವರು” ಎಂಬುವುಗಳ ನಡುವಿನ ವ್ಯತ್ಯಾಸವನ್ನು ಇದು ಸೂಚಿಸುವುದಿಲ್ಲ. ಪರ್ಯಾಯ ಅನುವಾದ: “ಮತ್ತು ವಿಶೇಷವಾಗಿ ಶರೀರವನ್ನು ಅನುಸರಿಸುವವರು” (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
σαρκὸς
ಇಲ್ಲಿ, ಶರೀರ ಎಂಬ ಪದವನ್ನು ವ್ಯಕ್ತಿಯ ಪಾಪ ಸ್ವಭಾವವನ್ನು ಸೂಚಿಸಲು ಸಾಂಕೇತಿಕವಾಗಿ ಬಳಸಲಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರ ಪಾಪ ಸ್ವಭಾವ” (ನೋಡಿ: ಲಕ್ಷಣಾಲಂಕಾರ)
κυριότητος καταφρονοῦντας
ಇಲ್ಲಿ, ಅಧಿಕಾರ ಎಂಬುದು ಇವುಗಳನ್ನು ಸೂಚಿಸಬಹುದು: (1) ಹಿಂದಿನ ವಾಕ್ಯಗಳಲ್ಲಿ ದೇವರ ವಿರುದ್ಧ ದಂಗೆಯೆದ್ದ ಉದಾಹರಣೆಗಳಿಂದ ಸೂಚಿಸಲಾದ ದೇವರ ಅಧಿಕಾರ. ಪರ್ಯಾಯ ಅನುವಾದ: “ದೇವರ ಅಧಿಕಾರವನ್ನು ತಿರಸ್ಕರಿಸುವುದು” (2) ದೇವದೂತರ ಅಧಿಕಾರ, ವಾಕ್ಯದ ಉಳಿದ ಭಾಗದಲ್ಲಿ ಸೂಚಿಸಲಾದ “ಮಹಿಮೆಯುಳ್ಳವರ” ಎಂಬುದನ್ನು ಅವಮಾನದಿಂದ ಸೂಚಿಸಲಾಗಿದೆ. ಪರ್ಯಾಯ ಅನುವಾದ: “ದೇವದೂತರ ಅಧಿಕಾರವನ್ನು ತಿರಸ್ಕರಿಸುವುದು”
αὐθάδεις
ಸ್ವ-ಇಚ್ಛೆ ಎಂದರೆ “ಯಾರು ಏನು ಮಾಡಬೇಕೆಂದಿದ್ದೀರೋ ಅದನ್ನು ಮಾಡುವುದು.” ಪರ್ಯಾಯ ಅನುವಾದ: “ತಮಗೆ ಬೇಕಾದುದನ್ನು ಮಾಡುವವರು”
δόξας
ಇಲ್ಲಿ, ಮಹಿಮೆಯುಳ್ಳವರು ಎಂಬುದು ಇವುಗಳನ್ನು ಸೂಚಿಸಬಹುದು: (1) ದೇವದೂತರು, ರಾಕ್ಷಸರು ಅಥವಾ ಎರಡರಂತಹ ಆತ್ಮೀಕ ಜೀವಿಗಳು. ಪರ್ಯಾಯ ಅನುವಾದ: “ಮಹಿಮೆಯುಳ್ಳ ಆತ್ಮೀಕ ಜೀವಿಗಳು” (2) ಸಭಾ ನಾಯಕರಂತಹ ಪ್ರಮುಖ ಮಾನವರು. ಪರ್ಯಾಯ ಅನುವಾದ: “ಮಹಿಮೆಯುಳ್ಳ ಜನರು”
τοὺς ὀπίσω…πορευομένους
ಅಭ್ಯಾಸವಾಗಿ ಏನನ್ನಾದರೂ ಮಾಡುವುದನ್ನು ಸೂಚಿಸಲು ಪೇತ್ರನು ಸಾಂಕೇತಿಕವಾಗಿ ನಂತರ ಹೋಗುವುದು ಎಂಬ ನುಡಿಗಟ್ಟನ್ನು ಬಳಸುತ್ತಾನೆ. ಸುಳ್ಳು ದೇವರುಗಳನ್ನು ಆರಾಧಿಸುವ ಅಥವಾ ಲೈಂಗಿಕ ಅನೈತಿಕತೆಯಲ್ಲಿ ತೊಡಗಿರುವ ಜನರನ್ನು ವಿವರಿಸಲು ಈ ಪದವನ್ನು ಸತ್ಯವೇದದಲ್ಲಿ ಆಗಾಗ್ಗೆ ಬಳಸಲಾಗುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಆ ಅಭ್ಯಾಸದಲ್ಲಿ ತೊಡಗಿಸಿಕೊಂಡವರು” (ನೋಡಿ: ರೂಪಕ ಅಲಂಕಾರ)
ἐν ἐπιθυμίᾳ μιασμοῦ
ಇಲ್ಲಿ, ರಲ್ಲಿ ಎಂಬುದು ಈ ನುಡಿಗಟ್ಟು ದುಷ್ಟ ಜನರು ಶರೀರವನ್ನು ಹಿಂಬಾಲಿಸುವ ವಿಧಾನಗಳನ್ನು ತೋರಿಸುತ್ತದೆ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: "ಅದರ ಕಲ್ಮಶದ ಕಾಮಗಳನ್ನು ಅಭ್ಯಾಸ ಮಾಡುವ ಮೂಲಕ"
ἐν ἐπιθυμίᾳ μιασμοῦ
ನಿಮ್ಮ ಓದುಗರು ಅಮೂರ್ತ ನಾಮಪದ ಅಶುದ್ಧತೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಮೌಖಿಕ ನುಡಿಗಟ್ಟಿನೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅದರ ಕಾಮಗಳಲ್ಲಿ ಅದು ಅಪವಿತ್ರವಾಗುತ್ತದೆ” (ನೋಡಿ: ಭಾವವಾಚಕ ನಾಮಪದಗಳು)
καὶ κυριότητος καταφρονοῦντας
ಇಲ್ಲಿ, ಮತ್ತು ಎಂಬುದು ಈ ಷರತ್ತು ಹಿಂದಿನ ಷರತ್ತಿನಲ್ಲಿ ಸೂಚಿಸಲಾದ ಹೆಚ್ಚುವರಿ ಗುಣಲಕ್ಷಣಗಳನ್ನು ಒದಗಿಸುತ್ತದೆ ಎಂದು ಸೂಚಿಸುತ್ತದೆ. ಇದು ದುಷ್ಟ ಜನರ ಎರಡನೇ ಗುಂಪನ್ನು ಸೂಚಿಸುವುದಿಲ್ಲ. ಈ ದುಷ್ಟ ಜನರು ತಮ್ಮ ಪಾಪದ ಆಸೆಗಳನ್ನು ಮಾತ್ರ ಅನುಸರಿಸುವುದಿಲ್ಲ, ಆದರೆ ಅಧಿಕಾರವನ್ನು ತಿರಸ್ಕರಿಸುತ್ತಾರೆ. ಪರ್ಯಾಯ ಅನುವಾದ: “ಮತ್ತು ಅಧಿಕಾರವನ್ನು ಸಹ ತಿರಸ್ಕರಿಸುವಂತವರು” (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
τολμηταὶ
* ಧೈರ್ಯಶಾಲಿಗಳು* ಎಂಬುಡು ಈ ಅಧ್ಯಾಯದ ಎರಡನೇ ವಿಭಾಗದ ಆರಂಭವನ್ನು ಗುರುತಿಸುತ್ತದೆ, ಇದು 2:22 ಅಂತ್ಯದವರೆಗೆ ಮುಂದುವರಿಯುತ್ತದೆ. ಈ ವಿಭಾಗದಲ್ಲಿ ಪೇತ್ರನು ಸುಳ್ಳು ಬೋಧಕರ ದುಷ್ಟ ಸ್ವಭಾವವನ್ನು ಮತ್ತು ಕಾರ್ಯಗಳನ್ನು ವಿವರಿಸುತ್ತಾನೆ.
τολμηταὶ αὐθάδεις
ಧೈರ್ಯಶಾಲಿಗಳು ಮತ್ತು ಸ್ವ-ಇಚ್ಛೆಯುಳ್ಳವರು ಎಂಬ ಪದಗಳು ಸುಳ್ಳು ಬೋಧಕರ ದಿಟ್ಟ ಹೆಮ್ಮೆಯನ್ನು ಒತ್ತಿಹೇಳುವ ಉದ್ಗಾರಗಳಾಗಿವೆ. ಪರ್ಯಾಯ ಅನುವಾದ: "ಅವರು ತುಂಬಾ ಧೈರ್ಯಶಾಲಿಗಳು ಮತ್ತು ಸ್ವಯಂ-ಇಚ್ಛೆಯುಳ್ಳವರು!" ಅಥವಾ "ಅವರು ಎಷ್ಟು ಧೈರ್ಯಶಾಲಿಗಳು ಮತ್ತು ಸ್ವಯಂ ಇಚ್ಛೆಯುಳ್ಳವರು!" (ನೋಡಿ: ಭಾವಸೂಚಕಗಳು.)
οὐ τρέμουσιν
ಇಲ್ಲಿ, ಅವರು ಎಂಬುದು ಪೇತ್ರನು 2:1 ನಲ್ಲಿ ಪರಿಚಯಿಸಿದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು ನಡುಗುವುದಿಲ್ಲ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
δόξας…βλασφημοῦντες
ಈ ಷರತ್ತು ಸುಳ್ಳು ಬೋಧಕರು ನಡುಗದ ಸಮಯವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಮಹಿಮಾನ್ವಿತರನ್ನು ಅವಮಾನಿಸುವಾಗ"
2 Peter 2:11
ἰσχύϊ καὶ δυνάμει μείζονες ὄντες
ಈ ಷರತ್ತು ಇವುಗಳನ್ನು ಸೂಚಿಸಬಹುದು: (1) ಈ ಷರತ್ತಿನಲ್ಲಿ * ದೇವದೂತರು * ಎಂಬುದು ವಿವರಣೆಯ ನಡುವಿನ ವ್ಯತಿರಿಕ್ತತೆ ಮತ್ತು ಮುಂದಿನ ಷರತ್ತು. ಪರ್ಯಾಯ ಅನುವಾದ: “ಬಲ ಮತ್ತು ಶಕ್ತಿಯಲ್ಲಿ ಹೆಚ್ಚಿನವರಾಗಿದ್ದರೂ” (2) ದೇವದೂತರು ಗಳ ವಿವರಣೆ. ಪರ್ಯಾಯ ಅನುವಾದ: “ಬಲ ಮತ್ತು ಶಕ್ತಿಯಲ್ಲಿ ಯಾರು ಹೆಚ್ಚು” (ನೋಡಿ: ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ)
οὐ φέρουσιν κατ’ αὐτῶν…βλάσφημον κρίσιν
ಇಲ್ಲಿ, ಅವರು ಎಂಬುದು ಹೀಗೆ ಅರ್ಥೈಸಬಹುದು: (1) “ಮಹಿಮೆಯುಳ್ಳವರು”. ಪರ್ಯಾಯ ಅನುವಾದ: “ಈ ಮಹಿಮೆಯುಳ್ಳವರ ವಿರುದ್ಧ ಅವಮಾನಕರ ತೀರ್ಪು ತರಬೇಡಿ.” (2) ಸುಳ್ಳು ಬೋಧಕರು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರ ವಿರುದ್ಧ ಅವಮಾನಕರ ತೀರ್ಪು ತರಬೇಡಿ.” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἰσχύϊ καὶ δυνάμει μείζονες ὄντες
ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಡುತ್ತಿದ್ದಾನೆ. ಈ ಪದಗಳನ್ನು ಸುತ್ತಮುತ್ತಲಿನ ಸನ್ನಿವೇಶದಿಂದ ಒದಗಿಸಬಹುದು, ಇದು ಸುಳ್ಳು ಬೋಧಕರ ವಿವರಣೆಯಾಗಿದೆ. ಪರ್ಯಾಯ ಅನುವಾದ: "ಈ ಸುಳ್ಳು ಬೋಧಕರಿಗಿಂತ ಬಲದಲ್ಲಿ ಮತ್ತು ಶಕ್ತಿಯಲ್ಲಿ ಹೆಚ್ಚಿನವರು" (ನೋಡಿ: ಪದಲೋಪ)
ἰσχύϊ καὶ δυνάμει μείζονες ὄντες
ಬಲ ಮತ್ತು ಶಕ್ತಿ ಎಂಬ ಪದಗಳು ಒಂದೇ ರೀತಿಯ ವಿಷಯಗಳನ್ನು ಅರ್ಥೈಸುತ್ತವೆ. ಪೇತ್ರನು ಒತ್ತು ನೀಡುವುದಕ್ಕಾಗಿ ಅವುಗಳನ್ನು ಒಟ್ಟಿಗೆ ಬಳಸುತ್ತಿದ್ದಾನೆ. ಒಟ್ಟಾಗಿ, ಪದಗಳು ತೀವ್ರ ಶಕ್ತಿಯನ್ನು ವಿವರಿಸುತ್ತವೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಜೋಡಿ ಪದಗಳನ್ನು ಒಂದೇ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಹೆಚ್ಚು ಶಕ್ತಿಯುತವಾಗಿರುವುದು” (ನೋಡಿ: ದ್ವಿರುಕ್ತಿಗಳು)
2 Peter 2:12
οὗτοι…ὡς ἄλογα ζῷα
ಪೇತ್ರನು ಸುಳ್ಳು ಬೋಧಕರನ್ನು ವಿವೇಚನಾರಹಿತ ಪ್ರಾಣಿಗಳಿಗೆ ಹೋಲಿಸಿ ವಿವರಿಸುತ್ತಾನೆ. ಪ್ರಾಣಿಗಳು ಹೇಗೆ ತರ್ಕಬದ್ಧವಾಗಿ ಯೋಚಿಸುವುದಿಲ್ಲವೋ ಹಾಗೆಯೇ ಈ ಜನರೂ ಸಹ ತರ್ಕಬದ್ಧವಾಗಿ ಯೋಚಿಸಲು ಸಾಧ್ಯವಿಲ್ಲ. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು ತರ್ಕಬದ್ಧವಾಗಿ ಯೋಚಿಸುವ ಸಾಮರ್ಥ್ಯವನ್ನು ಹೊಂದಿರದ ಪ್ರಾಣಿಗಳಂತೆ” (ನೋಡಿ: ರೂಪಕ ಅಲಂಕಾರ)
ἐν οἷς ἀγνοοῦσιν βλασφημοῦντες
ಈ ಷರತ್ತು ಇವುಗಳನ್ನು ಸೂಚಿಸಬಹುದು: (1) ಸುಳ್ಳು ಬೋಧಕರು ಬಗ್ಗೆ ಹೆಚ್ಚಿನ ಮಾಹಿತಿ. ಪರ್ಯಾಯ ಅನುವಾದ: “ಅವರಿಗೆ ಅರಿವಿಲ್ಲದ ವಿಷಯಗಳನ್ನು ಯಾರು ನಿಂದಿಸುತ್ತಾರೆ” (2) ಸುಳ್ಳು ಬೋಧಕರು ನಾಶವಾಗಲು ಕಾರಣ. ಪರ್ಯಾಯ ಅನುವಾದ: “ಏಕೆಂದರೆ ಅವರು ಅರಿವಿಲ್ಲದ ವಿಷಯಗಳನ್ನು ನಿಂದಿಸುತ್ತಾರೆ”
καὶ φθαρήσονται
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತಿದ್ದಾರೆ ಎಂದು ನೀವು ಹೇಳಬಹುದು. ಪರ್ಯಾಯ ಅನುವಾದ: “ದೇವರು ಸಹ ಅವರನ್ನು ನಾಶಮಾಡುವನು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
οὗτοι
ಇಲ್ಲಿ, ಇವು ಎಂಬುದು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
γεγεννημένα φυσικὰ εἰς ἅλωσιν καὶ φθοράν
ಈ ಷರತ್ತು ವಿವೇಚನಾರಹಿತ ಪ್ರಾಣಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ಹೀಗಾಗಿ, ಹೋಲಿಕೆಯ ಮೂಲಕ, ಸುಳ್ಳು ಬೋಧಕರು. ಪರ್ಯಾಯ ಅನುವಾದ: " ಯಾವ ಸ್ವಭಾವದ ಕಾರಣದಿಂದ ಸೆರೆಹಿಡಿಯಲು ಮತ್ತು ವಿನಾಶಕ್ಕಾಗಿ ಹುಟ್ಟಿವೆ" (ನೋಡಿ: ತಿಳಿವಳಿಕೆ ನೀಡುವ ಅಥವಾ ನೆನಪು ಮಾಡುವ ಮತ್ತು ವ್ಯತ್ಯಾಸಮಾಡುವುದು ಇವುಗಳ ನಡುವಿನ ವ್ಯತ್ಯಾಸ)
γεγεννημένα φυσικὰ εἰς ἅλωσιν καὶ φθοράν
ಇಲ್ಲಿ, ಸ್ವಭಾವತಃ ಎಂದರೆ ವಿವೇಚನಾರಹಿತ ಪ್ರಾಣಿಗಳು (ಮತ್ತು ಹೋಲಿಕೆಯಿಂದ ಸುಳ್ಳು ಬೋಧಕರು) ಈ ಉದ್ದೇಶಕ್ಕಾಗಿ ಜನಿಸಿದ ಪ್ರಾಣಿಗಳ ಸ್ವಭಾವದ ಕಾರಣದಿಂದ ಸೆರೆಹಿಡಿಯಲ್ಪಡುತ್ತಾರೆ ಮತ್ತು ವಿನಾಶಕ್ಕೆ ಗುರಿಯಾಗುತ್ತಾರೆ. ಪರ್ಯಾಯ ಅನುವಾದ: "ಅವರ ಸ್ವಭಾವದ ಪ್ರಕಾರ, ಈ ಪ್ರಾಣಿಗಳು ಸೆರೆಹಿಡಿಯಲು ಮತ್ತು ವಿನಾಶಕ್ಕಾಗಿ ಹುಟ್ಟಿವೆ"
εἰς ἅλωσιν καὶ φθοράν
ಇದು ಉದ್ದೇಶದ ಷರತ್ತು. ಇಲ್ಲಿ ಪ್ರತಿಯಾಗಿ ಎಂಬ ಪದವು ಈ ಪ್ರಾಣಿಗಳು ಹುಟ್ಟಿರುವ ಉದ್ದೇಶವನ್ನು ಅನುಸರಿಸುತ್ತದೆ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: “ಸೆರೆಹಿಡಿಯುವ ಮತ್ತು ವಿನಾಶದ ಉದ್ದೇಶಕ್ಕಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
εἰς ἅλωσιν καὶ φθοράν
ನಿಮ್ಮ ಓದುಗರು ಅಮೂರ್ತ ನಾಮಪದಗಳಾದ ಸೆರೆಹಿಡಿ ಮತ್ತು ವಿನಾಶ ಎಂಬ ಪದಗಳನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಕ್ರಿಯಾಪದಗಳೊಂದಿಗೆ ಅವುಗಳ ಹಿಂದಿನ ಆಲೋಚನೆಗಳನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅವರನ್ನು ಸೆರೆಹಿಡಿಯಲು ಮತ್ತು ನಾಶಮಾಡಲು" (ನೋಡಿ: ಭಾವವಾಚಕ ನಾಮಪದಗಳು)
ἐν οἷς ἀγνοοῦσιν
ಇಲ್ಲಿ, ಆ ವಿಷಯಗಳು ಎಂಬುದು ಇವುಗಳನ್ನು ಸೂಚಿಸಬಹುದು: (1) 2:10 ನ “ಮಹಿಮಾನ್ವಿತರು”. ಪರ್ಯಾಯ ಅನುವಾದ: "ಯಾರು ಯಾರನ್ನು ಅಜ್ಞಾನಿಗಳೆಂದು ದೂಷಿಸುತ್ತಾರೆ" (2) ಈ ಸುಳ್ಳು ಬೋಧಕರು ತಿರಸ್ಕರಿಸುತ್ತಿರುವ ಕ್ರೈಸ್ತ ಬೋಧನೆಗಳು. ಪರ್ಯಾಯ ಅನುವಾದ: "ಯಾರು ಅವರ ಅಜ್ಞಾನದ ಬೋಧನೆಗಳನ್ನು ದೂಷಿಸುತ್ತಾರೆ"
ἐν τῇ φθορᾷ αὐτῶν καὶ φθαρήσονται
ಇಲ್ಲಿ, ಅವರು ಮತ್ತು ಅವರ ಎಂಬ ಸರ್ವನಾಮಗಳು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತವೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಈ ಸುಳ್ಳು ಬೋಧಕರು ಸಹ ಅವರ ವಿನಾಶದಲ್ಲಿ ನಾಶವಾಗುತ್ತಾರೆ" (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
καὶ φθαρήσονται
ಇಲ್ಲಿ, ಸಹ ಎಂಬುದನ್ನು ಒತ್ತು ನೀಡಲು ಬಳಸಲಾಗುತ್ತದೆ ಮತ್ತು ಇದನ್ನು "ನಿಜವಾಗಿಯೂ" ಅಥವಾ "ಖಂಡಿತವಾಗಿಯೂ" ಎಂದು ಅನುವಾದಿಸಬಹುದು. ಪರ್ಯಾಯ ಅನುವಾದ: "ಅವರು ನಿಜವಾಗಿಯೂ ನಾಶವಾಗುತ್ತಾರೆ" ಅಥವಾ "ಅವರು ಖಂಡಿತವಾಗಿಯೂ ನಾಶವಾಗುತ್ತಾರೆ"
ἐν τῇ φθορᾷ αὐτῶν
ಈ ಷರತ್ತು ಸುಳ್ಳು ಬೋಧಕರು ನಾಶವಾಗುವ ಸಮಯವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಅವರ ವಿನಾಶದ ಸಮಯದಲ್ಲಿ"
ἐν τῇ φθορᾷ αὐτῶν
ನಿಮ್ಮ ಓದುಗರು ಅಮೂರ್ತ ನಾಮಪದ ವಿನಾಶ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ನಾಶ" ದಂತಹ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅವರು ನಾಶವಾದಾಗ" (ನೋಡಿ: ಭಾವವಾಚಕ ನಾಮಪದಗಳು)
2 Peter 2:13
ἀδικούμενοι μισθὸν ἀδικίας
ಸುಳ್ಳು ಬೋಧಕರು ತಾವು ಗಳಿಸಿದ ಕೂಲಿಯಂತೆ ಸಾಂಕೇತಿಕವಾಗಿ ಪಡೆಯುವ ಶಿಕ್ಷೆಯ ಕುರಿತು ಪೇತ್ರನು ಮಾತನಾಡುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ತಮ್ಮ ಅನ್ಯಾಯಕ್ಕಾಗಿ ಅವರು ಅರ್ಹವಾದ ಶಿಕ್ಷೆಯನ್ನು ಪಡೆಯುತ್ತಿದ್ದಾರೆ” (ನೋಡಿ: ರೂಪಕ ಅಲಂಕಾರ)
τὴν ἐν ἡμέρᾳ τρυφήν
ಇಲ್ಲಿ, ಸಂಭ್ರಮಿಸುತ್ತಿದೆ ಎಂಬುದು ಹೊಟ್ಟೆಬಾಕತನ, ಕುಡಿಕತನ ಮತ್ತು ಲೈಂಗಿಕ ಚಟುವಟಿಕೆಯನ್ನು ಒಳಗೊಂಡಿರುವ ಅನೈತಿಕ ಚಟುವಟಿಕೆಯನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ಅಮೂರ್ತ ನಾಮಪದವನ್ನು ಸಮಾನವಾದ ಪದಯೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಹಗಲಿನಲ್ಲಿ ಆನಂದಿಸುವ ಅವರ ಸಾಮರ್ಥ್ಯ” (ನೋಡಿ: ಭಾವವಾಚಕ ನಾಮಪದಗಳು)
σπίλοι καὶ μῶμοι
ಪೇತ್ರನು ಸುಳ್ಳು ಬೋಧಕರ ಬಗ್ಗೆ ಮಾತನಾಡುತ್ತಾನೆ, ಅವರು ಉಡುಪನ್ನು ಧರಿಸುವವರಿಗೆ ಅವಮಾನವನ್ನು ಉಂಟುಮಾಡುವ ಕಲೆಗಳು ಅಥವಾ ನ್ಯೂನತೆಗಳು ಇದ್ದ ಹಾಗೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ರೂಪಕವನ್ನು ಸಾಮ್ಯವಾಗಿ ಅನುವಾದಿರಿಸಬಹುದು. ಪರ್ಯಾಯ ಅನುವಾದ: “ಬಟ್ಟೆಗಳ ಮೇಲಿನ ಕಲೆಗಳು ಮತ್ತು ನ್ಯೂನತೆಗಳು, ಅವಮಾನಕ್ಕೆ ಕಾರಣವಾಗುತ್ತವೆ” (ನೋಡಿ: ರೂಪಕ ಅಲಂಕಾರ)
ἀδικίας
ನಿಮ್ಮ ಓದುಗರು ಅಮೂರ್ತ ನಾಮಪದ ಅಧರ್ಮ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದನ್ನು ಸಮಾನವಾದ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಅವರು ಮಾಡಿದ ತಪ್ಪು ಕೆಲಸಗಳ” (ನೋಡಿ: ಭಾವವಾಚಕ ನಾಮಪದಗಳು)
ἡδονὴν
ನಿಮ್ಮ ಓದುಗರು ಅಮೂರ್ತ ನಾಮಪದ ಸಂತೋಷ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದನ್ನು ಸಮಾನವಾದ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: "ಸಂತೋಷಪಡಿಸುವ ಏನೋ ವಿಷಯ" (ನೋಡಿ: ಭಾವವಾಚಕ ನಾಮಪದಗಳು)
τὴν ἐν ἡμέρᾳ τρυφήν
ಸುಳ್ಳು ಶಿಕ್ಷಕರು ಸಂಭ್ರಮಿಸುವ ಸಮಯವನ್ನು ಈ ನುಡಿಗಟ್ಟು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ರಲ್ಲಿ ಎಂಬುದನ್ನು "ಸಮಯದಲ್ಲಿ" ಎಂದು ಅನುವಾದಿಸಬಹುದು. "ಹಗಲಿನಲ್ಲಿ" ಈ ಕೆಲಸಗಳನ್ನು ಮಾಡುವುದರಿಂದ ಈ ಜನರು ಈ ನಡವಳಿಕೆಯ ಬಗ್ಗೆ ನಾಚಿಕೆಪಡುವುದಿಲ್ಲ ಎಂದು ಸೂಚಿಸುತ್ತದೆ. ಪರ್ಯಾಯ ಅನುವಾದ: "ಹಗಲಿನಲ್ಲಿ ಸಂಭ್ರಮ"
σπίλοι καὶ μῶμοι
ಕಲೆಗಳು ಮತ್ತು ನ್ಯೂನ್ಯತೆಗಳು ಎಂಬ ಪದಗಳು ಒಂದೇ ರೀತಿಯ ಅರ್ಥಗಳನ್ನು ಹಂಚಿಕೊಳ್ಳುತ್ತವೆ. ಒತ್ತು ನೀಡುವುದಕ್ಕಾಗಿ ಪೇತ್ರನು ಅವುಗಳನ್ನು ಒಟ್ಟಿಗೆ ಬಳಸುತ್ತಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅವುಗಳನ್ನು ಒಂದೇ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಅಸಹ್ಯವಾದ ಕಲೆಗಳು” (ನೋಡಿ: ದ್ವಿರುಕ್ತಿಗಳು)
σπίλοι καὶ μῶμοι
ಒತ್ತು ನೀಡಲು, ಇಲ್ಲಿ ಒಂದು ವಾಕ್ಯವು ಪೂರ್ಣಗೊಳ್ಳಲು ಅನೇಕ ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದಗಳನ್ನು ಸಂದರ್ಭದಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಅವು ಕಲೆಗಳು ಮತ್ತು ನ್ಯೂನ್ಯತೆಗಳು” (ನೋಡಿ: ಪದಲೋಪ)
ἐντρυφῶντες ἐν ταῖς ἀπάταις αὐτῶν
ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅಮೂರ್ತ ನಾಮಪದ ವಂಚನೆಗಳು ಎಂಬುದನ್ನು "ಮೋಸಗೊಳಿಸುವ" ನಂತಹ ವಿಶೇಷಣದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ತಮ್ಮ ಮೋಸಗೊಳಿಸುವ ಕಾರ್ಯಗಳಲ್ಲಿ ಸಂಭ್ರಮಿಸುವುದು” (ನೋಡಿ: ಭಾವವಾಚಕ ನಾಮಪದಗಳು)
2 Peter 2:14
ὀφθαλμοὺς ἔχοντες μεστοὺς μοιχαλίδος
ಇಲ್ಲಿ, ಕಣ್ಣುಗಳು ಎಂಬುದು ವ್ಯಕ್ತಿಯ ಆಸೆಗಳನ್ನು ಸಾಂಕೇತಿಕವಾಗಿ ಸೂಚಿಸುತ್ತದೆ ಮತ್ತು ಕಣ್ಣುಗಳು ತುಂಬಿವೆ ಎಂದರೆ ಒಬ್ಬ ವ್ಯಕ್ತಿಯು ನಿರಂತರವಾಗಿ ಒಂದು ವಿಷಯವನ್ನು ಬಯಸುತ್ತಾನೆ ಎಂದರ್ಥ. ಪರ್ಯಾಯ ಅನುವಾದ: “ವ್ಯಭಿಚಾರಿಣಿಯನ್ನು ನಿರಂತರವಾಗಿ ಅಪೇಕ್ಷಿಸುವುದು” (ನೋಡಿ: ಲಕ್ಷಣಾಲಂಕಾರ)
δελεάζοντες ψυχὰς ἀστηρίκτους
ಇಲ್ಲಿ, ಆತ್ಮಗಳು ಎಂಬ ಪದವು ವ್ಯಕ್ತಿಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಅಸ್ಥಿರ ಜನರನ್ನು ಆಕರ್ಷಿಸುವುದು” (ನೋಡಿ: ಉಪಲಕ್ಷಣಾಲಂಕಾರ)
καρδίαν γεγυμνασμένην πλεονεξίας ἔχοντες
ಪೇತ್ರನು ಅವರ ಆಲೋಚನೆಗಳನ್ನು, ಆಸೆಗಳನ್ನು ಮತ್ತು ಭಾವನೆಗಳನ್ನು ಒಳಗೊಂಡಂತೆ ಸಂಪೂರ್ಣ ವ್ಯಕ್ತಿಗಳನ್ನು ಸೂಚಿಸಲು ಸಾಂಕೇತಿಕವಾಗಿ ಹೃದಯಗಳನ್ನು ಎಂಬ ಪದವನ್ನು ಬಳಸುತ್ತಿದ್ದಾನೆ. ಈ ಪದವನ್ನು ಇಲ್ಲಿ “ತಮ್ಮವರು” ಎಂಬ ಪ್ರತಿಫಲಿತ ಸರ್ವನಾಮದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ತಮ್ಮನ್ನು ಅಪೇಕ್ಷಿಸಲು ತರಬೇತಿ ಪಡೆದವರು” (ನೋಡಿ: ಲಕ್ಷಣಾಲಂಕಾರ)
ὀφθαλμοὺς ἔχοντες μεστοὺς μοιχαλίδος
ಈ ಷರತ್ತು ಹೀಗಿರಬಹುದು: (1) ಸುಳ್ಳು ಬೋಧಕರು ತಾವು ನೋಡಿದ ಯಾವುದೇ ಮಹಿಳೆಯೊಂದಿಗೆ ಅನೈತಿಕ ಲೈಂಗಿಕ ಸಂಬಂಧಗಳನ್ನು ಹೊಂದಲು ನಿರಂತರವಾಗಿ ಬಯಸುತ್ತಾರೆ, ಆ ಮೂಲಕ ಪ್ರತಿ ಮಹಿಳೆಯನ್ನು ಸಂಭಾವ್ಯ ವ್ಯಭಿಚಾರಿಯಾಗಿ ವೀಕ್ಷಿಸುತ್ತಾರೆ. ಪರ್ಯಾಯ ಅನುವಾದ: "ವ್ಯಭಿಚಾರ ಮಾಡುವ ಮಹಿಳೆಯರನ್ನು ನಿರಂತರವಾಗಿ ಅಪೇಕ್ಷಿಸುವುದು" (2) ಸುಳ್ಳು ಬೋಧಕರು ಅನೈತಿಕ ಲೈಂಗಿಕ ಸಂಬಂಧಗಳನ್ನು ಹೊಂದಿರುವ ಅನೈತಿಕ ಮಹಿಳೆಯರನ್ನು ನಿರಂತರವಾಗಿ ಹುಡುಕುತ್ತಿದ್ದರು. ಪರ್ಯಾಯ ಅನುವಾದ: " ಲೈಂಗಿಕ ಅನೈತಿಕ ಮಹಿಳೆಯರನ್ನು ನಿರಂತರವಾಗಿ ಹುಡುಕುವುದು"
δελεάζοντες ψυχὰς ἀστηρίκτους
ಈ ಷರತ್ತು ಪೇತ್ರನು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರ ಕ್ರಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಈ ಸುಳ್ಳು ಬೋಧಕರು ಅಸ್ಥಿರ ಆತ್ಮಗಳನ್ನು ಆಕರ್ಷಿಸುತ್ತಾರೆ" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
καρδίαν γεγυμνασμένην πλεονεξίας ἔχοντες
ಈ ಷರತ್ತು ಪೇತ್ರನು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರ ಕ್ರಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: " ದುರಾಶೆಯಲ್ಲಿ ತರಬೇತಿ ಪಡೆದ ಹೃದಯಗಳನ್ನು ಅವರು ಹೊಂದಿದ್ದಾರೆ" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
καρδίαν γεγυμνασμένην πλεονεξίας ἔχοντες
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂದು ನೀವು ಹೇಳಬಹುದು. ಪರ್ಯಾಯ ಅನುವಾದ: "ಅವರು ತಮ್ಮ ಹೃದಯಗಳನ್ನು ದುರಾಸೆಯಿಂದ ತರಬೇತುಗೊಳಿಸಿದರು" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
καρδίαν γεγυμνασμένην πλεονεξίας ἔχοντες
ನಿಮ್ಮ ಓದುಗರು ಅಮೂರ್ತ ನಾಮಪದವನ್ನು ದುರಾಶೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಕ್ರಿಯಾಪದದೊಂದಿಗೆ ಅದರ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅಪೇಕ್ಷಿಸಲು ತಮ್ಮ ಹೃದಯಗಳನ್ನು ತರಬೇತಿ ನೀಡುವುದು” (ನೋಡಿ: ಭಾವವಾಚಕ ನಾಮಪದಗಳು)
κατάρας τέκνα
ಪೇತ್ರನು ಇಬ್ರಿಯ ಭಾಷಾವೈಶಿಷ್ಟ್ಯವನ್ನು ಬಳಸುತ್ತಿದ್ದಾನೆ, ಅದರಲ್ಲಿ ಒಬ್ಬ ವ್ಯಕ್ತಿಯು ಆ ವ್ಯಕ್ತಿಯನ್ನು ನಿರೂಪಿಸುವ ವಿಷಯದ "ಮಗು" ಎಂದು ಹೇಳಲಾಗುತ್ತದೆ. ಇಲ್ಲಿ ಶಪಿಸುವ ಮಕ್ಕಳು ಎಂಬುದು ದೇವರಿಂದ ಶಾಪಗ್ರಸ್ತರಾದ ಜನರನ್ನು ಸೂಚಿಸುತ್ತದೆ. ಅವನು ಇತರರನ್ನು ಶಪಿಸುವ ಜನರ ಬಗ್ಗೆ ಮಾತನಾಡುವುದಿಲ್ಲ. ಪರ್ಯಾಯ ಅನುವಾದ: “ಶಾಪಗ್ರಸ್ತ ಜನರು” (ನೋಡಿ: ನುಡಿಗಟ್ಟುಗಳು.)
κατάρας τέκνα
ಈ ಪದಗಳು ಸುಳ್ಳು ಬೋಧಕರ ದುಷ್ಟತನವನ್ನು ಒತ್ತಿಹೇಳುವ ಉದ್ಗಾರ. ಪರ್ಯಾಯ ಅನುವಾದ: "ಅವರು ಶಾಪಗ್ರಸ್ತ ಮಕ್ಕಳು!" ಅಥವಾ "ಅವರು ಎಂತಹ ಶಾಪಗ್ರಸ್ತ ಮಕ್ಕಳು!" (ನೋಡಿ: ಭಾವಸೂಚಕಗಳು.)
2 Peter 2:15
καταλειπόντες εὐθεῖαν ὁδὸν
ಒಂದು ನಿರ್ದಿಷ್ಟ ಮಾರ್ಗವನ್ನು ಬಿಟ್ಟು ನಡೆಯುವವರ ಚಿತ್ರಣವನ್ನು ನೀಡಲು ಪೇತ್ರನು ನಿಟಾದ ಮಾರ್ಗವನ್ನು ತ್ಯಜಿಸುವುದು ಎಂಬ ರೂಪಕವನ್ನು ಬಳಸುತ್ತಾನೆ. ಅವರು ಕರ್ತನ ಹಾದಿಯಲ್ಲಿ ನಡೆಯುವುದನ್ನು ನಿಲ್ಲಿಸಿದಂತೆ ಕರ್ತನಿಗೆ ವಿಧೇಯರಾಗಿ ತಮ್ಮ ಜೀವನವನ್ನು ನಡೆಸಲು ನಿರಾಕರಿಸುವ ಸುಳ್ಳು ಬೋಧಕರ ಬಗ್ಗೆ ಅವನು ಸಾಂಕೇತಿಕವಾಗಿ ಮಾತನಾಡುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ದೇವರಿಗೆ ವಿಧೇಯರಾಗುವಂತೆ ಬದುಕಲು ನಿರಾಕರಿಸುವುದು” (ನೋಡಿ: ರೂಪಕ ಅಲಂಕಾರ)
εὐθεῖαν ὁδὸν
ಇಲ್ಲಿ, ನೀಟಾದ ಮಾರ್ಗ ಎನ್ನುವುದು ಸರಿಯಾದ ಮತ್ತು ಕರ್ತನಿಗೆ ಇಷ್ಟವಾಗುವ ಜೀವನ ವಿಧಾನವನ್ನು ಸೂಚಿಸುತ್ತದೆ. 2:2. ಪರ್ಯಾಯ ಅನುವಾದ: “ಕರ್ತನ ಸರಿಯಾದ ಮಾರ್ಗ” (ನೋಡಿ: ನುಡಿಗಟ್ಟುಗಳು.)
ἐπλανήθησαν
ಇಲ್ಲಿ, ಪೇತ್ರನು ಹಿಂದಿನ ಷರತ್ತಿನಿಂದ ಮಾರ್ಗ ರೂಪಕವನ್ನು ಮುಂದುವರಿಸುತ್ತಾನೆ. ಅವನು ಸಾಂಕೇತಿಕವಾಗಿ ಸುಳ್ಳು ಬೋಧಕರ ದುಷ್ಟ ಜೀವನಶೈಲಿಯನ್ನು ಅವರು ನಿಟ್ಟಾದ ಮಾರ್ಗದಿಂದ * ದಾರಿತಪ್ಪಿದಂತೆ * ಎಂದು ವಿವರಿಸುತ್ತಾನೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಅವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆ” (ನೋಡಿ: ರೂಪಕ ಅಲಂಕಾರ)
ἐπλανήθησαν
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಅವರು ದಾರಿ ತಪ್ಪಿದರು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἐξακολουθήσαντες τῇ ὁδῷ τοῦ Βαλαὰμ τοῦ Βοσὸρ, ὃς μισθὸν ἀδικίας ἠγάπησεν
ಈ ವಾಕ್ಯದಲ್ಲಿ, ಪೇತ್ರನು ಸುಳ್ಳು ಬೋಧಕರನ್ನು ಬಿಳಾಮ ಗೆ ಹೋಲಿಸುತ್ತಾನೆ. ಪೇತ್ರನು ಹಳೆಯ ಒಡಂಬಡಿಕೆಯ ಪುಸ್ತಕ ಸಂಖ್ಯೆಗಳಲ್ಲಿ ದಾಖಲಿಸಲಾದ ಕಥೆಯನ್ನು ಸೂಚಿಸುತ್ತಿದ್ದಾನೆ ಎಂದು ತನ್ನ ಓದುಗರಿಗೆ ತಿಳಿಯುತ್ತದೆ ಎಂದು ಊಹಿಸುತ್ತಾನೆ. ಆ ಕಥೆಯಲ್ಲಿ, ಇಸ್ರಾಯೇಲ್ಯರನ್ನು ಶಪಿಸಲು ದುಷ್ಟ ರಾಜರು ಬಿಳಾಮನನ್ನು ನೇಮಿಸಿಕೊಂಡರು. ದೇವರು ಬಿಳಾಮನಿಗೆ ಹಾಗೆ ಮಾಡಲು ಅನುಮತಿಸದಿದ್ದಾಗ, ಇಸ್ರಾಯೇಲ್ಯರನ್ನು ಲೈಂಗಿಕ ಅನೈತಿಕತೆಗೆ ಮತ್ತು ವಿಗ್ರಹಾರಾಧನೆಗೆ ಮೋಹಿಸಲು ದುಷ್ಟ ಸ್ತ್ರೀಯರನ್ನು ಬಳಸಿದನು, ಆದ್ದರಿಂದ ದೇವರು ಅವರ ಅವಿಧೇಯತೆಗಾಗಿ ಅವರನ್ನು ಶಿಕ್ಷಿಸುತ್ತಾನೆ. ದುಷ್ಟ ರಾಜರಿಂದ ಪಾವತಿಸಬೇಕೆಂದು ಬಿಳಾಮನು ಈ ದುಷ್ಟ ಕೆಲಸಗಳನ್ನು ಮಾಡಿದನು, ಆದರೆ ಇಸ್ರಾಯೇಲ್ಯರು ಕಾನಾನ್ ದೇಶವನ್ನು ವಶಪಡಿಸಿಕೊಂಡಾಗ ಅವರು ಅಂತಿಮವಾಗಿ ಕೊಲ್ಲಲ್ಪಟ್ಟರು. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ವಿಶೇಷವಾಗಿ ಅವರು ಕಥೆಯನ್ನು ತಿಳಿದಿಲ್ಲದಿದ್ದರೆ ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ, ಹೇಳಿಕೆಯಂತೆ: "ಅಧರ್ಮದ ವೇತನವನ್ನು ತುಂಬಾ ಪ್ರೀತಿಸಿದ ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಅನುಸರಿಸಿ, ಅವನು ಹಣವನ್ನು ಪಡೆಯುವ ಸಲುವಾಗಿ ಇಸ್ರಾಯೇಲ್ಯರನ್ನು ಅನೈತಿಕತೆಗೆ ಮತ್ತು ವಿಗ್ರಹಾರಾಧನೆಗೆ ಕರೆದೊಯ್ದನು" (ನೋಡಿ: [[https://git.door43.org/STR/en _ta/src/branch/master/translate/figs-explicit/01.md]])
ἐξακολουθήσαντες τῇ ὁδῷ τοῦ Βαλαὰμ τοῦ Βοσὸρ
ಇಲ್ಲಿ, ಪೇತ್ರನು ಸಾಂಕೇತಿಕವಾಗಿ ಹಿಂಬಾಲಿಸಿದ ಎಂಬ ಪದವನ್ನು ಸಾಂಕೇತಿಕವಾಗಿ ಬಳಸಿದ್ದು, ಯಾರೋ ಒಬ್ಬರು ಅದೇ ದಿಕ್ಕಿನಲ್ಲಿ ಇನ್ನೊಬ್ಬ ವ್ಯಕ್ತಿಯ ಹಿಂದೆ ನಡೆಯುವವರಂತೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುತ್ತಾರೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಅನುಕರಿಸಿ” (ನೋಡಿ: ರೂಪಕ ಅಲಂಕಾರ)
Βαλαὰμ…Βοσὸρ
ಬಿಳಾಮ ಮತ್ತು ಬೆಯೋರ ಎಂಬುವು ಇಬ್ಬರು ಪುರುಷರ ಹೆಸರುಗಳು. (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
τῇ ὁδῷ τοῦ Βαλαὰμ τοῦ Βοσὸρ
ಇಲ್ಲಿ, ಬಿಳಾಮನು ತನ್ನ ಜೀವನವನ್ನು ಹೇಗೆ ಜೀವಿಸಿದನೆಂದು ಸೂಚಿಸಲು ಪೇತ್ರನು ಬಿಳಾಮನ ಮಾರ್ಗವನ್ನು ಎಂಬುದನ್ನು ಸಾಂಕೇತಿಕವಾಗಿ ಬಳಸುತ್ತಾನೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಬೆಯೋರನ ಮಗನಾದ ಬಿಳಾಮನ ಜೀವನ ವಿಧಾನ” (ನೋಡಿ: ರೂಪಕ ಅಲಂಕಾರ)
ὃς μισθὸν ἀδικίας ἠγάπησεν
ಇಲ್ಲಿ, ಯಾರು ಎಂಬ ಸರ್ವನಾಮವು ಬಿಳಾಮನನ್ನು ಸೂಚಿಸುತ್ತದೆ. ಇದು ಬೇಯೊರನನ್ನು ಅಥವಾ ಸುಳ್ಳು ಬೋಧಕರನ್ನು ಸೂಚಿಸುವುದಿಲ್ಲ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ನೇರವಾಗಿ ಹೇಳಬಹುದು. ನೀವು ಹೊಸ ವಾಕ್ಯವನ್ನು ಪ್ರಾರಂಭಿಸಿದರೆ, ನೀವು ಅಲ್ಪವಿರಾಮವನ್ನು ಅವಧಿಯೊಂದಿಗೆ ಬದಲಾಯಿಸಬೇಕಾಗುತ್ತದೆ. ಪರ್ಯಾಯ ಅನುವಾದ: “ಬಿಳಾಮನು ಅನ್ಯಾಯದ ವೇತನವನ್ನು ಪ್ರೀತಿಸಿದನು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ὃς μισθὸν ἀδικίας ἠγάπησεν
ಪೇತ್ರನು ಸ್ವಾಮ್ಯಸೂಚಕ ರೂಪವನ್ನು ವೇತನ ಎಂಬುದನ್ನು ವಿವರಿಸಲು ಬಳಸುತ್ತಿದ್ದಾನೆ ಅದು ಅಧರ್ಮ ಎಂಬುದರಿಂದ ನಿರೂಪಿಸಲ್ಪಟ್ಟಿದೆ. ನಿಮ್ಮ ಓದುಗರು ಈ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಅದನ್ನು ವಿವರಿಸಲು ನೀವು ಒಂದು ನುಡಿಗಟ್ಟನ್ನು ಬಳಸಬಹುದು. ಪರ್ಯಾಯ ಅನುವಾದ: "ಅಧರ್ಮದ ವೇತನವನ್ನು ಪ್ರೀತಿಸಿದವರು" (ನೋಡಿ: ಸ್ವಾದೀನ)
μισθὸν ἀδικίας
ನಿಮ್ಮ ಓದುಗರು ಅಮೂರ್ತ ನಾಮಪದ ಅಧರ್ಮ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ಅನ್ಯಾಯ" ಎಂಬ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅನ್ಯಾಯದ ವೇತನಗಳು" ಅಥವಾ "ಅನೀತಿಯುತ ಕಾರ್ಯಗಳ ವೇತನ" (ನೋಡಿ: ಭಾವವಾಚಕ ನಾಮಪದಗಳು)
2 Peter 2:16
ἔλεγξιν…ἔσχεν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದ *ಖಂಡಿಸು * ಎಂಬುದನ್ನು ಕ್ರಿಯಾಪದವಾಗಿ ವ್ಯಕ್ತಪಡಿಸಬಹುದು ಮತ್ತು ಯಾರು ಕ್ರಿಯೆಯನ್ನು ಮಾಡಿದವರು ಎಂದು ನೀವು ಹೇಳಬಹುದು. ಪರ್ಯಾಯ ಅನುವಾದ: “ದೇವರು ಅವನನ್ನು ಖಂಡಿಸಿದನು” (ನೋಡಿ: ಭಾವವಾಚಕ ನಾಮಪದಗಳು)
ἐκώλυσεν τὴν τοῦ προφήτου παραφρονίαν
ಇಲ್ಲಿ, ಪ್ರವಾದಿ ಎಂಬ ಪದವು ಬಿಳಾಮನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಪ್ರವಾದಿಯಾದ ಬಿಳಾಮನ ಹುಚ್ಚುತನವನ್ನು ತಡೆದರು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἔλεγξιν…ἔσχεν
ಇದನ್ನು ಮಾಡಿದವರು ಯಾರು ಎಂದು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ, ಬಿಳಾಮನನ್ನು ಯಾರು ಖಂಡಿಸಿದರು ಎಂಬುದನ್ನು ನೀವು ನಿರ್ದಿಷ್ಟಪಡಿಸಬಹುದು. ಈ ಷರತ್ತು ಹೀಗಿರಬಹುದು: (1) ಕತ್ತೆಯು ಬಿಳಾಮನನ್ನು ಖಂಡಿಸಿತು. ಪರ್ಯಾಯ ಅನುವಾದ: "ಒಂದು ಕತ್ತೆ ಅವನನ್ನು ಖಂಡಿಸಿತು" (2) ದೇವರು ಕತ್ತೆಯ ಮೂಲಕ ಬಿಳಾಮನನ್ನು ಖಂಡಿಸಿದನು. ಪರ್ಯಾಯ ಅನುವಾದ: “ದೇವರು ಅವನನ್ನು ಖಂಡಿಸಿದನು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἰδίας παρανομίας
ಈ ಅತಿಕ್ರಮಣ ಎಂಬುದು ನಿರ್ದಿಷ್ಟವಾಗಿ ಇಸ್ರಾಯೇಲ್ಯರನ್ನು ಲೈಂಗಿಕ ಅನೈತಿಕತೆ ಮತ್ತು ವಿಗ್ರಹಾರಾಧನೆಗೆ ಕೊಂಡೊಯ್ಯಲು ದುಷ್ಟ ಮಹಿಳೆಯರನ್ನು ಬಿಳಾಮನು ಉಪಯೋಗಿಸುವುದನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಇಸ್ರಾಯೇಲ್ಯರನ್ನು ಅನೈತಿಕತೆಗೆ ಕರೆದೊಯ್ಯುವ ಅವನ ದುಷ್ಟ ಕೃತ್ಯಕ್ಕಾಗಿ" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τὴν τοῦ προφήτου παραφρονίαν
ನಿಮ್ಮ ಓದುಗರು ಅಮೂರ್ತ ನಾಮಪದ * ತರ್ಕಹೀನತೆ* ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ತರ್ಕಬದ್ಧವಲ್ಲದ" ಅಥವಾ "ಮೂರ್ಖ" ನಂತಹ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಪ್ರವಾದಿಯ ತರ್ಕಬದ್ಧವಲ್ಲದ ಕ್ರಿಯೆ” ಅಥವಾ “ಪ್ರವಾದಿಯ ಮೂರ್ಖ ಕ್ರಿಯೆ” (ನೋಡಿ: ಭಾವವಾಚಕ ನಾಮಪದಗಳು)
2 Peter 2:17
οὗτοί εἰσιν πηγαὶ ἄνυδροι
ಸುಳ್ಳು ಬೋಧಕರ ನಿಷ್ಪ್ರಯೋಜಕತೆಯನ್ನು ವಿವರಿಸಲು ಪೇತ್ರನು ಅವರ ಬಗ್ಗೆ ಸಾಂಕೇತಿಕವಾಗಿ ಮಾತನಾಡುತ್ತಾನೆ. ಬಾಯಾರಿಕೆಯನ್ನು ನೀಗಿಸಲು ಬುಗ್ಗೆಗಳು ನೀರನ್ನು ಒದಗಿಸುತ್ತವೆ ಎಂದು ಜನರು ನಿರೀಕ್ಷಿಸುತ್ತಾರೆ, ಆದರೆ ನೀರಿಲ್ಲದ ಬುಗ್ಗೆಗಳು ಬಾಯಾರಿದ ಜನರನ್ನು ನಿರಾಶೆಗೊಳಿಸುತ್ತವೆ. ಅದೇ ರೀತಿಯಲ್ಲಿ, ಸುಳ್ಳು ಬೋಧಕರು, ಅನೇಕ ವಿಷಯಗಳನ್ನು ಅವರು ವಾಗ್ದಾನ ಮಾಡಿದರೂ, ಅವರು ವಾಗ್ದಾನ ಮಾಡಿದನ್ನು ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಅನುವಾದಿಸಬಹುದು ಅಥವಾ ರೂಪಕವನ್ನು ಸಾದೃಶ್ಯವಾಗಿ ಪರಿವರ್ತಿಸಬಹುದು. ಪರ್ಯಾಯ ಅನುವಾದ: “ಈ ಜನರು ನೀರಿಲ್ಲದ ಬುಗ್ಗೆಗಳಂತೆ ನಿರಾಶಾದಾಯಕರಾಗಿದ್ದಾರೆ” (ನೋಡಿ: ರೂಪಕ ಅಲಂಕಾರ)
ὁμίχλαι ὑπὸ λαίλαπος ἐλαυνόμεναι
ಪೇತ್ರನು ಸುಳ್ಳು ಬೋಧಕರ ನಿಷ್ಪ್ರಯೋಜಕತೆಗೆ ಎರಡನೇ ಸಾಂಕೇತಿಕ ವಿವರಣೆಯನ್ನು ನೀಡುತ್ತಾನೆ. ಜನರು ಬಿರುಗಾಳಿ ಮೋಡಗಳನ್ನು ನೋಡಿದಾಗ, ಅವರು ಮಳೆಯನ್ನು ನಿರೀಕ್ಷಿಸುತ್ತಾರೆ. ಮಳೆ ಬೀಳುವ ಮುನ್ನವೇ ಬಿರುಗಾಳಿಯಿಂದ ಬೀಸಿದ ಗಾಳಿ ಮೋಡಗಳನ್ನು ಹಾರಿಸಿದಾಗ, ಜನರು ನಿರಾಶೆಗೊಳ್ಳುತ್ತಾರೆ. ಅದೇ ರೀತಿಯಲ್ಲಿ, ಸುಳ್ಳು ಬೋಧಕರು, ಅನೇಕ ವಿಷಯಗಳನ್ನು ಅವರು ವಾಗ್ದಾನ ಮಾಡಿದರೂ, ಅವರು ವಾಗ್ದಾನ ಮಾಡಿದನ್ನು ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಅನುವಾದಿಸಬಹುದು ಅಥವಾ ರೂಪಕವನ್ನು ಸಾದೃಶ್ಯವಾಗಿ ಪರಿವರ್ತಿಸಬಹುದು. ಪರ್ಯಾಯ ಅನುವಾದ: “ಅವರು ವಾಗ್ದಾನ ಮಾಡಿದನ್ನು ಅವರು ಎಂದಿಗೂ ನೀಡುವುದಿಲ್ಲ”" ಅಥವಾ “ಬಿರುಗಾಳಿಯು ಓಡಿಸುವ ಮಳೆ ಮೋಡಗಳಂತೆ ಅವರು ನಿರಾಶೆಗೊಳಿಸುತ್ತಾರೆ” (ನೋಡಿ: ರೂಪಕ ಅಲಂಕಾರ)
οἷς ὁ ζόφος τοῦ σκότους τετήρηται
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂದು ನೀವು ಹೇಳಬಹುದು. ಪರ್ಯಾಯ ಅನುವಾದ: “ಯಾರಿಗಾಗಿ ದೇವರು ಕತ್ತಲೆಯ ಅಂಧಕಾರವನ್ನು ಕಾಯ್ದಿರಿಸಿದ್ದಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
οὗτοί
ಈ ಮನುಷ್ಯರು ಎಂಬುದು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
οὗτοί εἰσιν πηγαὶ ἄνυδροι, καὶ ὁμίχλαι ὑπὸ λαίλαπος ἐλαυνόμεναι
ಈ ಎರಡು ರೂಪಕಗಳು ಒಂದೇ ರೀತಿಯ ವಿಷಯಗಳನ್ನು ಅರ್ಥೈಸುತ್ತವೆ. ಪೇತ್ರನು ಒತ್ತು ನೀಡುವುದಕ್ಕಾಗಿ ಅವುಗಳನ್ನು ಒಟ್ಟಿಗೆ ಬಳಸುತ್ತಿದ್ದಾನೆ. ನಿಮ್ಮ ಓದುಗರು ಈ ಸಂಪರ್ಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅವುಗಳನ್ನು ಒಂದೇ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಇವರು ತಾವು ವಾಗ್ದಾನ ಮಾಡುವುದನ್ನು ಎಂದಿಗೂ ನೀಡದಿರುವ ಮನುಷ್ಯರು” ಅಥವಾ “ಇವರು ಖಂಡಿತವಾಗಿ ನಿರಾಶೆಗೊಳಿಸುವ ಮನುಷ್ಯರು” (ನೋಡಿ: ದ್ವಿರುಕ್ತಿಗಳು)
ὁ ζόφος τοῦ σκότους
ಇದರರ್ಥ: (1) ಕಾರ್ಗತ್ತಲೆ ಎಂಬುದು ಕತ್ತಲೆ ಎಂಬುದರಿಂದ ನಿರೂಪಿಸಲ್ಪಟ್ಟಿದೆ. ಪರ್ಯಾಯ ಅನುವಾದ: "ಗಾಢವಾದ ಕಾರ್ಗತ್ತಲೆ" (2) ಕಾರ್ಗತ್ತಲೆಯು ಕತ್ತಲೆಯನ್ನು ಹೋಲುತ್ತದೆ. ಪರ್ಯಾಯ ಅನುವಾದ: "ಕಾರ್ಗತ್ತಲೆಯ ಕತ್ತಲೆ."
ὁ ζόφος τοῦ σκότους
ಇಲ್ಲಿ, ನರಕವನ್ನು ಸೂಚಿಸಲು ಪೇತ್ರನು ಸಾಂಕೇತಿಕವಾಗಿ ಕಾರ್ಗತ್ತಲೆ ಮತ್ತು ಕತ್ತಲೆ ಎಂಬ ಪದಗಳನ್ನು ಬಳಸುತ್ತಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ನೇರವಾಗಿ ಹೇಳಬಹುದು. ಪರ್ಯಾಯ ಅನುವಾದ: "ಯಾರಿಗೆ ದೇವರು ನರಕದ ಕಾರ್ಗತ್ತಲೆಯ ಕತ್ತಲೆಯನ್ನು ಕಾಯ್ದಿರಿಸಿದ್ದಾನೆ" (ನೋಡಿ: ರೂಪಕ ಅಲಂಕಾರ)
2 Peter 2:18
ὑπέρογκα…ματαιότητος φθεγγόμενοι
ಸುಳ್ಳು ಬೋಧಕರು ಇತರರನ್ನು ಪಾಪಕ್ಕೆ ಪ್ರೇರೇಪಿಸುವ ವಿಧಾನಗಳನ್ನು ಈ ಷರತ್ತು ಸೂಚಿಸುತ್ತದೆ. ಪರ್ಯಾಯ ಅನುವಾದ: “ಆಡಂಬರ ತೋರಿಸುವ ಸೊಕ್ಕಿನ ವಿಷಯಗಳನ್ನು ಮಾತನಾಡುವ ಮೂಲಕ”
δελεάζουσιν ἐν ἐπιθυμίαις σαρκὸς
ಇಲ್ಲಿ, ಅವರು ಎಂಬ ಸರ್ವನಾಮವು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು ಶರೀರದ ಆಸೆಗಳಿಂದ ಪ್ರೇರೇಪಣೆಗೆ ಒಳಗಾಗುತ್ತಾರೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τοὺς ὀλίγως ἀποφεύγοντας τοὺς ἐν πλάνῃ ἀναστρεφομένους
ಇಲ್ಲಿ, ಪೇತ್ರನು ಇತ್ತೀಚೆಗೆ ದುಷ್ಟ ಮನುಷ್ಯತ್ವದ ಕಷ್ಟದಿಂದ ತಪ್ಪಿಸಿಕೊಳ್ಳುವ ವಿಶ್ವಾಸಿಗಳಾದ ಜನರ ಬಗ್ಗೆ ಸಾಂಕೇತಿಕವಾಗಿ ಮಾತನಾಡುತ್ತಾನೆ . ಇನ್ನೂ ತಮ್ಮ ಪಾಪದ ಆಸೆಗಳಿಗೆ ಅನುಗುಣವಾಗಿ ಜೀವಿಸುವ ಅವಿಶ್ವಾಸಿಗಳನ್ನು ತಪ್ಪಾಗಿ ಜೀವಿಸುವವರು ಎಂದು ಅವನು ಸೂಚಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಇತರ ಜನರಂತೆ ಇತ್ತೀಚೆಗೆ ಪಾಪಪೂರ್ಣವಾಗಿ ಬದುಕುವುದನ್ನು ನಿಲ್ಲಿಸಿದ ಜನರು” (ನೋಡಿ: ರೂಪಕ ಅಲಂಕಾರ)
γὰρ
ಇಲ್ಲಿ, ಪ್ರತಿಯಾಗಿ ಎಂಬುದು ಹಿಂದಿನ ವಾಕ್ಯದಲ್ಲಿ ಹೇಳಿದಂತೆ ಕಾರ್ಗತ್ತಲೆಯ ಕತ್ತಲೆಯಲ್ಲಿ ಸುಳ್ಳು ಬೋಧಕರು ಶಿಕ್ಷೆಗೆ ಮೀಸಲಾದ ಕಾರಣವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಇದಕ್ಕೆ ಕಾರಣ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ὑπέρογκα…ματαιότητος
ಸೊಕ್ಕಿನ ಭಾಷಣವನ್ನು ವಿವರಿಸಲು ಪೇತ್ರನು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿದ್ದಾನೆ ಅದು * ವ್ಯಾನಿಟಿ* ನಿರೂಪಿಸಲ್ಪಟ್ಟಿದೆ. ಪರ್ಯಾಯ ಅನುವಾದ: “ನಿಷ್ಫಲ, ಸೊಕ್ಕಿನ ವಿಷಯಗಳು” ಅಥವಾ “ನಿಷ್ಫಲ ಮತ್ತು ಸೊಕ್ಕಿನ ವಿಷಯಗಳು” (ನೋಡಿ: ಸ್ವಾದೀನ)
ματαιότητος
ನಿಮ್ಮ ಓದುಗರು ಅಮೂರ್ತ ನಾಮಪದ ವ್ಯಾನಿಟಿ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ನಿಷ್ಫಲ" ದಂತಹ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು. (ನೋಡಿ: ಭಾವವಾಚಕ ನಾಮಪದಗಳು)
ἐν ἐπιθυμίαις σαρκὸς
ಇಲ್ಲಿ, ಶರೀರ ಎಂಬುದನ್ನು ವ್ಯಕ್ತಿಯ ಪಾಪ ಸ್ವಭಾವವನ್ನು ಸೂಚಿಸಲು ಸಾಂಕೇತಿಕವಾಗಿ ಬಳಸಲಾಗುತ್ತದೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ರೂಪಕಕ್ಕೆ ಈ ಅಕ್ಷರಶಃ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರ ಪಾಪ ಸ್ವಭಾವದ ಕಾಮಗಳಿಂದ” (ನೋಡಿ: ರೂಪಕ ಅಲಂಕಾರ)
ἀσελγείαις
ಇಲ್ಲಿ, ಸ್ವೇಚ್ಛಾವೃತ್ತಿಯ ಕೃತ್ಯಗಳು ಎಂಬುವು ಸ್ವಯಂ ನಿಯಂತ್ರಣದ ಕೊರತೆಯನ್ನು ಪ್ರದರ್ಶಿಸುವ ಅನೈತಿಕ ಲೈಂಗಿಕ ಕ್ರಿಯೆಗಳನ್ನು ಸೂಚಿಸುತ್ತದೆ. ನೀವು ಈ ಪದವನ್ನು 2:2 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: "ಅನಿಯಂತ್ರಿತ ಬೋಗಾಸಕ್ತ ಕ್ರಿಯೆಗಳು"
2 Peter 2:19
ἐλευθερίαν αὐτοῖς ἐπαγγελλόμενοι
ಇಲ್ಲಿ, ಸ್ವಾತಂತ್ರ್ಯ ಎಂಬುದು ಒಬ್ಬನು ಬಯಸಿದಂತೆ ಬದುಕುವ ಸಾಮರ್ಥ್ಯದ ರೂಪಕವಾಗಿದೆ. ಪರ್ಯಾಯ ಅನುವಾದ: “ಅವರು ಬದುಕಲು ಬಯಸಿದಂತೆ ಬದುಕುವ ಸಾಮರ್ಥ್ಯವನ್ನು ಅವರಿಗೆ ನೀಡುವುದಾಗಿ ವಾಗ್ದಾನ ಮಾಡುವುದು” (ನೋಡಿ: ರೂಪಕ ಅಲಂಕಾರ)
δοῦλοι
ಸೆರೆಯಿಂದ ತಮ್ಮನ್ನು ತಪ್ಪಿಸಿಕೊಳ್ಳಲು ಅಗತ್ಯವಿರುವ ಪಾಪಕ್ಕೆ ಗುಲಾಮರು ಎಂಬಂತೆ ಪಾಪದಲ್ಲಿ ಬದುಕುವ ಜನರ ಬಗ್ಗೆ ಪೇತ್ರನು ಸಾಂಕೇತಿಕವಾಗಿ ಮಾತನಾಡುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾದೃಶ್ಯವಾಗಿ ಹೇಳಬಹುದು. ಪರ್ಯಾಯ ಅನುವಾದ: “ಗುಲಾಮರಂತೆ” (ನೋಡಿ: ರೂಪಕ ಅಲಂಕಾರ)
ᾧ γάρ τις ἥττηται, τούτῳ δεδούλωται
ಯಾವುದಾದರೂ ವಿಷಯ ಒಬ್ಬ ವ್ಯಕ್ತಿಯ ಮೇಲೆ ನಿಯಂತ್ರಣವನ್ನು ಹೊಂದಿದ್ದಾಗ, ಆ ವ್ಯಕ್ತಿ ಗುಲಾಮನಾಗಿದ್ದಾನೆ ಎಂದು ಪೇತ್ರನು ಮಾತನಾಡುತ್ತಾನೆ, ಆ ವಿಷಯ ಆ ವ್ಯಕ್ತಿಗೆ ಯಜಮಾನನೆಂದು ಮಾತನಾಡುತ್ತಾನೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಾಗಿ ಅಥವಾ ಸಾದೃಶ್ಯವಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಒಬ್ಬ ವ್ಯಕ್ತಿಯು ಯಾವುದೋ ಒಂದು ವಿಷಯದಿಂದ ಪ್ರಭಾವಿತನಾಗಿದ್ದರೆ, ಆ ವ್ಯಕ್ತಿಯು ಆ ವಿಷಯದಿಂದ ನಿಯಂತ್ರಿಸಲ್ಪಡುತ್ತಾನೆ” ಅಥವಾ “ಒಬ್ಬ ವ್ಯಕ್ತಿಯು ಯಾವುದಾದರೂ ಒಂದು ವಿಷಯದಿಂದ ಪ್ರಭಾವಿತನಾಗಿದ್ದರೆ, ಆ ವ್ಯಕ್ತಿಯು ಆ ವಿಷಯದ ಗುಲಾಮನಂತೆ ಆಗುತ್ತಾನೆ” (ನೋಡಿ: [[rc:/ /en/ta/man/translate/figs-metaphor]])
ἐλευθερίαν αὐτοῖς ἐπαγγελλόμενοι
ಈ ಷರತ್ತು ಹಿಂದಿನ ವಾಕ್ಯದಿಂದ ಮುಂದುವರಿದು, ಸುಳ್ಳು ಬೋಧಕರು ತಮ್ಮ ಹಿಂಬಾಲಕರುಗಳನ್ನು ಆಕರ್ಷಿಸುವ ಇನ್ನೊಂದು ವಿಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಅವರು ಅವರಿಗೆ ಸ್ವಾತಂತ್ರ್ಯದ ವಾಗ್ದಾನವನ್ನು ನೀಡುವ ಮೂಲಕ ಅವರನ್ನು ಆಕರ್ಷಿಸುತ್ತಾರೆ"
ἐλευθερίαν αὐτοῖς ἐπαγγελλόμενοι
ಇಲ್ಲಿ, ಅವರು ಎಂಬ ಸರ್ವನಾಮವು ಸುಳ್ಳು ಬೋಧಕರಿಂದ ಮೋಸಹೋದ ಜನರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: " ಮೋಸ ಮಾಡುವವರಿಗೆ ಅವರು ಸ್ವಾತಂತ್ರ್ಯದ ವಾಗ್ದಾನವನ್ನು ನೀಡುತ್ತಾರೆ" (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
αὐτοὶ δοῦλοι ὑπάρχοντες τῆς φθορᾶς;
ಆತ್ಮೀಕವಾಗಿ ಗುಲಾಮರಾಗಿರುವ ಜನರು ಇತರರಿಗೆ ಆತ್ಮೀಕ ಸ್ವಾತಂತ್ರ್ಯವನ್ನು ವಾಗ್ದಾನ ನೀಡುವ ವ್ಯಂಗ್ಯವನ್ನು ಒತ್ತಿಹೇಳಲು ಪೇತ್ರನು ಇಲ್ಲಿ ತಮ್ಮನ್ನು ಎಂಬ ಪದವನ್ನು ಬಳಸುತ್ತಾನೆ. ಪರ್ಯಾಯ ಅನುವಾದ: “ಅವರೇ ವಿನಾಶದ ಗುಲಾಮರಾಗಿರುವಾಗ” (ನೋಡಿ: ಕರ್ತೃವಾಚ್ಯ ಸರ್ವನಾಮಗಳು.)
δοῦλοι…τῆς φθορᾶς
* ಗುಲಾಮರು * ಎಂಬ ಪದವನ್ನು ವಿವರಿಸಲು ಪೇತ್ರನು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿದ್ದಾನೆ ಅದು ವಿನಾಶ ಎಂಬುದರಿಂದ ನಿರೂಪಿಸಲ್ಪಟ್ಟಿದೆ. ಪರ್ಯಾಯ ಅನುವಾದ: “ನಾಶವಾಗುವ ಗುಲಾಮರು” (ನೋಡಿ: ಸ್ವಾದೀನ)
ᾧ γάρ τις ἥττηται, τούτῳ δεδούλωται
ನಿಮ್ಮ ಓದುಗರು ಈ ನಿಷ್ಕ್ರಿಯ ವಾಕ್ಯವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಯಾವುದಾದರೂ ವ್ಯಕ್ತಿಯನ್ನು ಮೀರಿಸಿದರೆ, ಅದು ಆ ವ್ಯಕ್ತಿಯನ್ನು ಗುಲಾಮರನ್ನಾಗಿ ಮಾಡುತ್ತದೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
2 Peter 2:20
αὐτοῖς
ಇಲ್ಲಿ, ಅವರು ಎಂಬ ಸರ್ವನಾಮವು 2:1 ನಲ್ಲಿ ಪರಿಚಯಿಸಲಾದ ಮತ್ತು 2:12–19 ನಲ್ಲಿ ಚರ್ಚಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರು” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
εἰ…ἀποφυγόντες τὰ μιάσματα τοῦ κόσμου, ἐν ἐπιγνώσει τοῦ Κυρίου ἡμῶν καὶ Σωτῆρος, Ἰησοῦ Χριστοῦ, τούτοις δὲ πάλιν ἐμπλακέντες ἡττῶνται, γέγονεν αὐτοῖς τὰ ἔσχατα χείρονα τῶν πρώτων
ಇದು ಒಂದು ಕಾಲ್ಪನಿಕ ಸಾಧ್ಯತೆಯಂತೆ ಪೇತ್ರನು ಮಾತನಾಡುತ್ತಿದ್ದಾನೆ, ಆದರೆ ಅದು ಸತ್ಯವೆಂದು ಅವನು ಅರ್ಥೈಸುತ್ತಾನೆ. ನಿಮ್ಮ ಭಾಷೆಯು ಯಾವುದನ್ನಾದರೂ ಒಂದು ಷರತ್ತು ಎಂದು ಹೇಳದಿದ್ದರೆ ಅದು ಖಚಿತ ಅಥವಾ ನಿಜವಾಗಿದ್ದರೆ ಮತ್ತು ನಿಮ್ಮ ಓದುಗರು ತಪ್ಪಾಗಿ ಅರ್ಥೈಸಿಕೊಂಡರೆ ಮತ್ತು ಪೇತ್ರನು ಹೇಳುವುದು ಖಚಿತವಾಗಿಲ್ಲ ಎಂದು ಭಾವಿಸಿದರೆ, ನೀವು ಅವನ ಮಾತುಗಳನ್ನು ಸಮರ್ಥನೀಯ ಹೇಳಿಕೆಯಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಜ್ಞಾನದ ಮೂಲಕ ಅವರು ಪ್ರಪಂಚದ ಕಲ್ಮಶಗಳಿಂದ ಪಾರಾಗಿದ್ದಾರೆ, ಆದರೆ ಅವುಗಳಿಂದ ಜಯಿಸಲ್ಪಟ್ಟ ನಂತರ ಮತ್ತೆ ಅವುಗಳಲ್ಲಿ ಸಿಕ್ಕಿಹಾಕಿಕೊಂಡರೆ, ಅವರ ಕೊನೆಯ ಸ್ಥಿತಿ ಮೊದಲಿಗಿಂತ ಕೆಟ್ಟದಾಗಿದೆ”(ನೋಡಿ: [[rc //en/ta/man/translate/grammar-connect-condition-fact]])
τὰ μιάσματα τοῦ κόσμου
ಇಲ್ಲಿ, ಜಗತ್ತು ಎಂಬುದು ಪಾಪದಿಂದ ಭ್ರಷ್ಟಗೊಂಡಿರುವ ಮಾನವ ಸಮಾಜವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಪಾಪಿಷ್ಟವಾದ ಮಾನವ ಸಮಾಜದ ಅಪವಿತ್ರಗೊಳಿಸುವ ಅಭ್ಯಾಸಗಳು” (ನೋಡಿ: ಲಕ್ಷಣಾಲಂಕಾರ)
ἐν ἐπιγνώσει τοῦ Κυρίου ἡμῶν καὶ Σωτῆρος, Ἰησοῦ Χριστοῦ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ಮೌಖಿಕ ನುಡಿಕಟ್ಟಿನೊಂದಿಗೆ ಜ್ಞಾನಎಂಬ ಪದವನ್ನು ವ್ಯಕ್ತಪಡಿಸಬಹುದು. ನೀವು ಇದೇ ನುಡಿಗಟ್ಟುಗಳನ್ನು 1:2 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವ ಮೂಲಕ” (ನೋಡಿ: ಭಾವವಾಚಕ ನಾಮಪದಗಳು)
γέγονεν αὐτοῖς τὰ ἔσχατα χείρονα τῶν πρώτων
ಇಲ್ಲಿ, ಗುಣವಾಚಕಗಳು ಕೊನೆಯ ಮತ್ತು ಮೊದಲ ನಾಮಪದಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ಬಹುವಚನಗಳಾಗಿವೆ, ಮತ್ತು ULT ಅದನ್ನು ತೋರಿಸಲು ಪ್ರತಿ ಸಂದರ್ಭದಲ್ಲಿ ವಸ್ತು ಎಂಬ ನಾಮಪದವನ್ನು ಪೂರೈಸುತ್ತದೆ. ನಿಮ್ಮ ಭಾಷೆಯು ಈ ರೀತಿಯಲ್ಲಿ ಗುಣವಾಚಕಗಳನ್ನು ಬಳಸದಿದ್ದರೆ, ನೀವು ಹೆಚ್ಚು ನಿರ್ದಿಷ್ಟವಾದ ಏಕವಚನ ನಾಮಪದವನ್ನು ಒದಗಿಸಬಹುದು. ಪರ್ಯಾಯ ಅನುವಾದ: “ಅವರಿಗೆ ಅಂತಿಮ ಸ್ಥಿತಿಯು ಅವರ ಮೂಲ ಸ್ಥಿತಿಗಿಂತ ಕೆಟ್ಟದಾಗಿದೆ” (ನೋಡಿ: ನಾಮವಾಚಕ ಗುಣವಾಚಕಗಳು.)
γὰρ
ಇಲ್ಲಿ, ಪ್ರತಿಯಾಗಿ ಎಂಬುದು ಇವುಗಳನ್ನು ಸೂಚಿಸಬಹುದು: (1) ಹಿಂದಿನ ವಾಕ್ಯದಲ್ಲಿ ಪೇತ್ರನ ಹೇಳಿಕೆಯ "ತಾವೇ ವಿನಾಶದ ಗುಲಾಮರು" ಎಂಬ ಇನ್ನೊಂದು ವಿವರಣೆ, (2) ಹಿಂದಿನ ವಾಕ್ಯದಲ್ಲಿ ಪೇತ್ರನು ಏನು ಹೇಳುತ್ತಿದ್ದಾನೆ ಎಂಬುದರ ಪರಿವರ್ತನೆ ಈ ವಾಕ್ಯದಲ್ಲಿ ಹೇಳುತ್ತಾರೆ. ಇಲ್ಲಿ, ಪ್ರತಿಯಾಗಿ ಎಂಬುದು ಹಿಂದಿನ ವಾಕ್ಯದಲ್ಲಿ ಹೇಳಿದ ಕಾರಣವನ್ನು ಅಥವಾ ಫಲಿತಾಂಶವನ್ನು ಸೂಚಿಸುವುದಿಲ್ಲ. UST ನಲ್ಲಿರುವಂತೆ ಪರ್ಯಾಯ ಅನುವಾದ: "ಮತ್ತು"
εἰ…ἀποφυγόντες τὰ μιάσματα τοῦ κόσμου
ಅದೇ ರೀತಿಯ ರೂಪಕವನ್ನು 2:18 ನಲ್ಲಿ ಬಳಸುತ್ತಾ, ಇಲ್ಲಿ ಪೇತ್ರನು ವಿಶ್ವಾಸಿಗಳ ಬಗ್ಗೆ ಸಾಂಕೇತಿಕವಾಗಿ ಮಾತನಾಡುತ್ತಾ ಅವರು ಪ್ರಪಂಚದ ಕಲ್ಮಶಗಳಿಗೆ ಗುಲಾಮರಾಗಿದ್ದರು ಮತ್ತು ಆ ಸೆರೆಯನ್ನು ತಪ್ಪಿಸಿಕೊಂಡಿದ್ದಾರೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಅವರು ಪ್ರಪಂಚವು ಕಲ್ಮಶಗೊಳಿಸುವ ರೀತಿಯಲ್ಲಿ ಬದುಕುವುದನ್ನು ನಿಲ್ಲಿಸಿದ್ದರೆ” (ನೋಡಿ: ರೂಪಕ ಅಲಂಕಾರ)
τὰ μιάσματα τοῦ κόσμου
ನಿಮ್ಮ ಓದುಗರು ಅಮೂರ್ತ ನಾಮಪದ ಕಲ್ಮಶ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಪಾಪಿ ಮಾನವ ಸಮಾಜವು ತನ್ನನ್ನು ತಾನು ಅಪವಿತ್ರಗೊಳಿಸಿಕೊಳ್ಳಲು ಮಾಡುವ ಕೆಲಸಗಳು" (ನೋಡಿ: ಭಾವವಾಚಕ ನಾಮಪದಗಳು)
τοῦ Κυρίου ἡμῶν καὶ Σωτῆρος
ಇಲ್ಲಿ, ನಮ್ಮ ಪ್ರಭು ಎಂದರೆ "ನಮ್ಮ ಮೇಲೆ ಅಧಿಪತಿಯಾಗಿರುವ ವ್ಯಕ್ತಿ" ಅಥವಾ "ನಮ್ಮನ್ನು ಆಳುವ ವ್ಯಕ್ತಿ" ಎಂದರ್ಥ. ಮತ್ತು ಎಂಬ ಸಂಯೋಗವು ನಮ್ಮ ಎಂಬುದು ರಕ್ಷಕ ನಿಗೂ ಅನ್ವಯಿಸುತ್ತದೆ ಎಂದು ಸೂಚಿಸುತ್ತದೆ, ಅಂದರೆ "ನಮ್ಮನ್ನು ರಕ್ಷಿಸುವ ವ್ಯಕ್ತಿ." ಪರ್ಯಾಯ ಅನುವಾದ: "ನಮ್ಮನ್ನು ಆಳುವ ಮತ್ತು ನಮ್ಮನ್ನು ರಕ್ಷಿಸುವ ವ್ಯಕ್ತಿಯ" (ನೋಡಿ: ಸ್ವಾದೀನ)
τούτοις…πάλιν ἐμπλακέντες ἡττῶνται
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥಮಾಡಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ವಾಕ್ಯದಲ್ಲಿ ಹಿಂದಿನಿಂದ ಕ್ರಿಯೆಯನ್ನು ಮಾಡುವವರಿಗೆ ನೀವು ಒದಗಿಸಬಹುದು. ಪರ್ಯಾಯ ಅನುವಾದ: “ಈ ವಿಷಯಗಳು ಅವರನ್ನು ಮತ್ತೆ ಸಿಕ್ಕಿಹಾಕಿಕೊಂಡಿವೆ; ಈ ವಿಷಯಗಳು ಅವುಗಳನ್ನು ಜಯಿಸಿವೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
πάλιν ἐμπλακέντες
ಇಲ್ಲಿ ಪೇತ್ರನು ಸಾಂಕೇತಿಕವಾಗಿ ವಿಶ್ವಸಿಗಳಂತೆ ತೋರುವ ಆದರೆ ಅವರು ಬಲೆಯಲ್ಲಿ ಸಿಕ್ಕಿಹಾಕಿಕೊಂಡಂತೆ ಪಾಪದಿಂದ ಬದುಕಲು ಮರಳಿದರು. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಇದು ಸಾಂಕೇತಿಕವಲ್ಲದ ವಿಧಾನ ಎಂದು ನೀವು ಹೇಳಬಹುದು. ಪರ್ಯಾಯ ಅನುವಾದ: "ಅವರು ಮತ್ತೆ ಪಾಪದಿಂದ ಬದುಕಲು ಆರಂಭಿಸಿದ್ದರೆ" (ನೋಡಿ: ರೂಪಕ ಅಲಂಕಾರ)
τούτοις
ಇಲ್ಲಿ, ಈ ವಿಷಯಗಳು ಎಂಬ ಸರ್ವನಾಮವು “ಜಗತ್ತಿನ ಕಲ್ಮಶಗಳನ್ನು” ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನಿಮ್ಮ ಅನುವಾದದಲ್ಲಿ ಇದನ್ನು ನಿರ್ದಿಷ್ಟಪಡಿಸಬಹುದು. ಪರ್ಯಾಯ ಅನುವಾದ: “ಪ್ರಪಂಚದ ಈ ಕಲ್ಮಶಗಳಿಂದ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
2 Peter 2:21
τὴν ὁδὸν τῆς δικαιοσύνης
ಪೇತ್ರನು ಸಾಂಕೇತಿಕವಾಗಿ ಜೀವನವನ್ನು ಮಾರ್ಗ ಅಥವಾ ದಾರಿಯಾಗಿ ಮಾತನಾಡುತ್ತಾನೆ. ಈ ನುಡಿಕಟ್ಟು ಸರಿಯಾದ ಮತ್ತು ಕರ್ತನಿಗೆ ಇಷ್ಟವಾಗುವ ಜೀವನ ವಿಧಾನವನ್ನು ಸೂಚಿಸುತ್ತದೆ. 2:2 ಮತ್ತು “ನಿಟಾದ ಮಾರ್ಗ”ದಲ್ಲಿನ “ಸತ್ಯದ ಮಾರ್ಗ”ದಂತೆಯೇ, ಕ್ರೈಸ್ತ ನಂಬಿಕೆಯನ್ನು ನಿರ್ದಿಷ್ಟವಾಗಿ ಸೂಚಿಸಲು ಪೇತ್ರನು ಇದನ್ನು ಇಲ್ಲಿ ಬಳಸುತ್ತಿರಬಹುದು. 2:15. ಪರ್ಯಾಯ ಅನುವಾದ: “ಕರ್ತನನ್ನು ಮೆಚ್ಚಿಸುವ ಜೀವನ ವಿಧಾನ” (ನೋಡಿ: ನುಡಿಗಟ್ಟುಗಳು.)
ὑποστρέψαι ἐκ τῆς…ἁγίας ἐντολῆς
ಇಲ್ಲಿ, ಇದರಿಂದ ದೂರವಿರಲು ಎಂಬುದು ಒಂದು ರೂಪಕವಾಗಿದೆ, ಅಂದರೆ ಏನ್ನಾದರೂ ಮಾಡುವುದನ್ನು ನಿಲ್ಲಿಸುವುದು. ಪರ್ಯಾಯ ಅನುವಾದ: “ಪರಿಶುದ್ಧ ಆಜ್ಞೆಗೆ ವಿದೇಯರಾಗುವುದನ್ನು ನಿಲ್ಲಿಸಲು” (ನೋಡಿ: ರೂಪಕ ಅಲಂಕಾರ)
τῆς παραδοθείσης αὐτοῖς ἁγίας ἐντολῆς
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂಬುದನ್ನು ನೀವು ಹೇಳಬಹುದು. ಪರ್ಯಾಯ ಅನುವಾದ: “ಅಪೊಸ್ತಲರು ಅವರಿಗೆ ನೀಡಿದ ಪರಿಶುದ್ಧ ಆಜ್ಞೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
γὰρ
ಇಲ್ಲಿ, ಪ್ರತಿಯಾಗಿ ಎಂಬುದು ಹಿಂದಿನ ವಾಕ್ಯದಲ್ಲಿ ಹೇಳಿದಂತೆ ಸುಳ್ಳು ಬೋಧಕರ ಕೊನೆಯ ಸ್ಥಿತಿಯು ಅವರ ಮೊದಲ ಸ್ಥಿತಿಗಿಂತ ಕೆಟ್ಟದಾಗಿದೆ ಎಂಬ ಕಾರಣವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಇದಕ್ಕೆ ಕಾರಣ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
αὐτοῖς
ಇಲ್ಲಿ, ಅವರು ಎಂಬ ಸರ್ವನಾಮವು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರಿಗೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τὴν ὁδὸν τῆς δικαιοσύνης
ಪೇತ್ರನು ಸ್ವಾಮ್ಯಸೂಚಕ ರೂಪವನ್ನು ಮಾರ್ಗ ಎಂಬುದನ್ನು ವಿವರಿಸಲು ಬಳಸುತ್ತಿದ್ದಾನೆ ಅದು ನೀತಿವಂತಕೆ ಎಂಬುದರಿಂದ ನಿರೂಪಿಸಲ್ಪಟ್ಟಿದೆ. ನಿಮ್ಮ ಓದುಗರು ಈ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಅದನ್ನು ವಿವರಿಸಲು ನೀವು ಒಂದು ನುಡಿಗಟ್ಟನ್ನು ಬಳಸಬಹುದು. ಪರ್ಯಾಯ ಅನುವಾದ: “ನೀತಿವಂತ ಮಾರ್ಗ” (ನೋಡಿ: ಸ್ವಾದೀನ)
ἐπιγνοῦσιν
ಈ ಷರತ್ತು ಈ ಷರತ್ತಿನ ಘಟನೆಯ ನಂತರ ಸಂಭವಿಸಿದ ಘಟನೆಯನ್ನು ಮುಂದಿನ ಷರತ್ತು ವಿವರಿಸುತ್ತದೆ ಎಂದು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಅದನ್ನು ತಿಳಿದ ನಂತರ"
τῆς…ἁγίας ἐντολῆς
ಸಾಮಾನ್ಯವಾಗಿ ದೇವರ ಆಜ್ಞೆಗಳ ಬಗ್ಗೆ ಮಾತನಾಡಲು ಪೇತ್ರನು ಪರಿಶುದ್ಧ ಆಜ್ಞೆ * ಎಂಬುದನ್ನು ಬಳಸುತ್ತಾನೆ. ಅವನು ಒಂದು ನಿರ್ದಿಷ್ಟ *ಆಜ್ಞೆಯನ್ನು ಸೂಚಿಸುತ್ತಿಲ್ಲ. ಈ ಆಜ್ಞೆಗಳನ್ನು ಅಪೊಸ್ತಲರು ವಿಶ್ವಾಸಿಗಳಿಗೆ * ತಲುಪಿಸಿದರು*. ಪರ್ಯಾಯ ಅನುವಾದ: “ಪರಿಶುದ್ಧ ಆಜ್ಞೆಗಳು” (ನೋಡಿ: ಸಾರ್ವತ್ರಿಕ ನಾಮಪದ ಪದಗುಚ್ಛಗಳು.)
τῆς…ἁγίας ἐντολῆς
ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅಮೂರ್ತ ನಾಮಪದ ಆಜ್ಞೆ ಎಂಬುದನ್ನು ಹಿಂದಿನ ಆಲೋಚನೆಗಳನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ಏನು ಆಜ್ಞಾಪಿಸಿದ್ದಾನೆ” (ನೋಡಿ: ಭಾವವಾಚಕ ನಾಮಪದಗಳು)
2 Peter 2:22
συμβέβηκεν αὐτοῖς τὸ τῆς ἀληθοῦς παροιμίας
ಇಲ್ಲಿ, ಇದು ಎಂಬುದು ಈ ವಾಕ್ಯದಲ್ಲಿ ನಂತರ ಹೇಳುವ * ಗಾದೆ* ಯನ್ನು ಸೂಚಿಸುತ್ತದೆ. ಇದು ಹಿಂದಿನ ವಾಕ್ಯದ ಹೇಳಿಕೆಯನ್ನು ಸೂಚಿಸುವುದಿಲ್ಲ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಬೇರೆ ಪದವನ್ನು ಬಳಸಬಹುದು. ಪರ್ಯಾಯ ಅನುವಾದ: “ಈ ನಿಜವಾದ ಗಾದೆ ಹೇಳುವುವ ಹಾಗೆ ಅವರಿಗೆ ಸಂಭವಿಸಿದೆ” ಅಥವಾ “ಅವರಿಗೆ ಏನಾಯಿತು ಎಂಬುದನ್ನು ಈ ನಿಜವಾದ ಗಾದೆ ವಿವರಿಸುತ್ತದೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
κύων ἐπιστρέψας ἐπὶ τὸ ἴδιον ἐξέραμα, καί, ὗς λουσαμένη, εἰς κυλισμὸν βορβόρου
αὐτοῖς
ಇಲ್ಲಿ, ಅವರು ಎಂಬ ಸರ್ವನಾಮವು 2:1 ನಲ್ಲಿ ಪರಿಚಯಿಸಲಾದ ಸುಳ್ಳು ಬೋಧಕರನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರಿಗೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
κύων ἐπιστρέψας ἐπὶ τὸ ἴδιον ἐξέραμα, καί, ὗς λουσαμένη, εἰς κυλισμὸν βορβόρου
ಸುಳ್ಳು ಬೋಧಕರು ಏನು ಮಾಡಿದ್ದಾರೆ ಎಂಬುದನ್ನು ವಿವರಿಸಲು ಪೇತ್ರನು ಎರಡು ಗಾದೆಗಳನ್ನು ಬಳಸುತ್ತಾನೆ. ಈ ಗಾದೆಗಳು ಸಾಂಕೇತಿಕ ಹೋಲಿಕೆಯನ್ನು ಮಾಡುತ್ತವೆ: ನಾಯಿಯು ತನ್ನ ವಾಂತಿಯನ್ನು ತಿನ್ನಲು ಹಿಂದಿರುಗುವಂತೆ ಮತ್ತು ತೊಳೆದ ಹಂದಿಯು ಮತ್ತೆ ಕೆಸರಿನಲ್ಲಿ ಉರುಳುವಂತೆ, ಒಮ್ಮೆ ಪಾಪದ ಜೀವನವನ್ನು ನಿಲ್ಲಿಸಿದ ಈ ಸುಳ್ಳು ಬೋಧಕರು ಈಗ ಪಾಪದ ಜೀವನಕ್ಕೆ ಮರಳಿದ್ದಾರೆ. ಅವರಿಗೆ “ನೀತಿಯ ಮಾರ್ಗ” ತಿಳಿದಿದ್ದರೂ ನೈತಿಕವಾಗಿ ಮತ್ತು ಆತ್ಮೀಕವಾಗಿ ತಮ್ಮನ್ನು ಅಪವಿತ್ರಗೊಳಿಸುವ ಕೆಲಸಗಳನ್ನು ಮಾಡಲು ಅವರು ಹಿಂದಿರುಗಿದರು. ನಿಮ್ಮ ಓದುಗರು ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಗಾದೆಗಳನ್ನು ಸಾಮ್ಯಗಳಾಗಿ ಅನುವಾದಿಸಬಹುದು. ಪರ್ಯಾಯ ಅನುವಾದ: "ಅವರು ತಮ್ಮ ವಾಂತಿಯನ್ನು ತಿನ್ನುವ ನಾಯಿಗಳಂತೆ ಅಥವಾ ಕೆಸರಿನಲ್ಲಿ ಉರುಳಲು ಹಿಂತಿರುಗುವ ಶುದ್ಧ ಹಂದಿಗಳಂತೆ." (ನೋಡಿ: ಜ್ಞಾನೋಕ್ತಿಗಳು.)
κύων
ನಾಯಿ ಎಂಬುದು ಯಹೂದಿಗಳು ಮತ್ತು ಪ್ರಾಚೀನ ಪೂರ್ವದ ಅನೇಕ ಸಂಸ್ಕೃತಿಗಳಿಂದ ಅಶುದ್ಧ ಮತ್ತು ಅಸಹ್ಯಕರವೆಂದು ಪರಿಗಣಿಸಲ್ಪಟ್ಟ ಪ್ರಾಣಿಯಾಗಿದೆ. ಆದ್ದರಿಂದ, ಯಾರನ್ನಾದರೂ ನಾಯಿ ಎಂದು ಕರೆಯುವುದು ಅವಮಾನವಾಗಿತ್ತು. ನಾಯಿಗಳು ನಿಮ್ಮ ಸಂಸ್ಕೃತಿಗೆ ಪರಿಚಯವಿಲ್ಲದಿದ್ದರೆ ಮತ್ತು ನೀವು ಅಶುಚಿಯಾದ ಮತ್ತು ಅಸಹ್ಯಕರವೆಂದು ಪರಿಗಣಿಸಲಾದ ವಿಭಿನ್ನ ಪ್ರಾಣಿಯನ್ನು ಹೊಂದಿದ್ದರೆ ಅಥವಾ ಅದರ ಹೆಸರನ್ನು ಅವಮಾನವಾಗಿ ಬಳಸಿದರೆ, ನೀವು ಅದರ ಬದಲಿಗೆ ಈ ಪ್ರಾಣಿಯ ಹೆಸರನ್ನು ಬಳಸಬಹುದು. (ನೋಡಿ: ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.)
ὗς
ಹಂದಿ ಎಂಬುದು ಯಹೂದಿಗಳು ಮತ್ತು ಪ್ರಾಚೀನ ಪೂರ್ವದ ಅನೇಕ ಸಂಸ್ಕೃತಿಗಳಿಂದ ಅಶುದ್ಧ ಮತ್ತು ಅಸಹ್ಯಕರವೆಂದು ಪರಿಗಣಿಸಲ್ಪಟ್ಟ ಪ್ರಾಣಿಯಾಗಿದೆ. ಆದ್ದರಿಂದ, ಯಾರನ್ನಾದರೂ ಹಂದಿ ಎಂದು ಕರೆಯುವುದು ಅವಮಾನವಾಗಿದೆ. ಹಂದಿಗಳು ನಿಮ್ಮ ಸಂಸ್ಕೃತಿಗೆ ಪರಿಚಯವಿಲ್ಲದಿದ್ದರೆ ಮತ್ತು ನೀವು ಅಶುಚಿಯಾದ ಮತ್ತು ಅಸಹ್ಯಕರವೆಂದು ಪರಿಗಣಿಸಲಾದ ಬೇರೆ ಪ್ರಾಣಿಯನ್ನು ಹೊಂದಿದ್ದರೆ ಅಥವಾ ಅದರ ಹೆಸರನ್ನು ಅವಮಾನವಾಗಿ ಬಳಸಿದರೆ, ನೀವು ಈ ಪ್ರಾಣಿಯ ಹೆಸರನ್ನು ಬಳಸಬಹುದು. (ನೋಡಿ: ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.)
2 Peter 3
2 ನೇ ಪೇತ್ರನ ಪತ್ರದ 3 ನೇ ಅಧ್ಯಾಯದ ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಿರ್ಮಾಣ
- ಯೇಸು ಸರಿಯಾದ ಸಮಯದಲ್ಲಿ ಹಿಂತಿರುಗುತ್ತಾನೆ ಎಂದು ನೆನಪಿಸುವುದು (3:1-13)
- ಆತ್ಮೀಕ ಜೀವನವನ್ನು ನಡೆಸುವಂತೆ ಉಪದೇಶವನ್ನು ಮುಕ್ತಾಯಗೊಳಿಸುವುದು (3:14-17)
ಈ ಅಧ್ಯಾಯದಲ್ಲಿ ವಿಶೇಷ ಪರಿಕಲ್ಪನೆಗಳು
ಬೆಂಕಿ
ಜನರು ಸಾಮಾನ್ಯವಾಗಿ ವಸ್ತುವನ್ನು ನಾಶಮಾಡಲು ಬೆಂಕಿಯನ್ನು ಬಳಸುತ್ತಾರೆ ಹಾಗು ಒಂದು ವಸ್ತುವಿನಲ್ಲಿರುವ ಕೊಳಕು ಮತ್ತು ನಿಷ್ಪ್ರಯೋಜಕ ಭಾಗಗಳನ್ನು ಸುಡುವುದ ಮೂಲಕ ಅದನ್ನು ಶುದ್ಧಿಗೋಳಿಸಲು ಬೆಂಕಿಯನ್ನು ಬಳಸುತ್ತಾರೆ . ಆದ್ದರಿಂದ, ದೇವರು ದುಷ್ಟರನ್ನು ಶಿಕ್ಷಿಸಿದಾಗ ಅಥವಾ ತನ್ನ ಜನರನ್ನು ಶುದ್ಧೀಕರಿಸಿದಾಗ, ಆ ಕ್ರಿಯೆಯು ಆಗಾಗ್ಗೆ ಬೆಂಕಿಯೊಂದಿಗೆ ಸಂಬಂಧಿಸಿದೆ. (ನೋಡಿ: ಬೆಂಕಿ, ಉದ್ರೇಕಕಾರಿ, ಧೂಪಾರತಿ, ಅಗ್ಗಿಷ್ಟಿಕೆ, ಕುಲುಮೆ, ಕುಳುಮೆಗಳು)
ಕರ್ತನ ದಿನ
ಕರ್ತನು ಬರುವ ದಿನದ ನಿಖರವಾದ ಸಮಯವು ಜನರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. “ರಾತ್ರಿಯಲ್ಲಿ ಕಳ್ಳನಂತೆ” ಎಂಬುದು ಹೋಲಿಕೆಯ ಅರ್ಥವಾಗಿದೆ. ಈ ಕಾರಣದಿಂದಾಗಿ, ಕ್ರೈಸ್ತರು ಕರ್ತನ ಬರುವಿಕೆಗಾಗಿ ಎಲ್ಲಾ ಸಮಯದಲ್ಲೂ ಸಿದ್ಧರಾಗಿರಬೇಕು. (ನೋಡಿ: ಕರ್ತನ ದಿನ, ಯೆಹೋವನ ದಿನ ಮತ್ತು ಉಪಮಾಲಂಕಾರ.)
2 Peter 3:1
ἀγαπητοί
ಪ್ರಿಯರೇ ಎಂಬುದು ಇಲ್ಲಿ ಪೇತ್ರನು ಬರೆಯುತ್ತಿರುವವರಿಗೆ ಸೂಚಿಸಲ್ಪಡುತ್ತದೆ, ಇದನ್ನು ಎಲ್ಲಾ ವಿಶ್ವಾಸಿಗಳಿಗೂ ವಿಸ್ತರಿಸಬಹುದು. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಪ್ರೀತಿಯ ಜೊತೆವಿಶ್ವಾಸಿಗಳು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
διεγείρω ὑμῶν ἐν ὑπομνήσει τὴν εἰλικρινῆ διάνοιαν
ಇಲ್ಲಿ, ಪೇತ್ರನು ತನ್ನ ಓದುಗರು ಈ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡುವುದನ್ನು ಸೂಚಿಸಲು ತನ್ನ ಓದುಗರ ಮನಸ್ಸು ನಿದ್ರಿಸುತ್ತಿರುವಂತೆ ಸಾಂಕೇತಿಕವಾಗಿ ಪ್ರಚೋದನೆ ಎಂಬುದನ್ನು ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ಪದದೊಂದಿಗೆ ಅನುವಾದಿಸಬಹುದು. ನೀವು ಈ ಪದವನ್ನು 1:13 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ಈ ವಿಷಯಗಳ ಬಗ್ಗೆ ನಿಮ್ಮ ಪ್ರಾಮಾಣಿಕ ಮನಸ್ಸನ್ನು ನೆನಪಿಸಲು ಇದರಿಂದ ನೀವು ಅವುಗಳ ಬಗ್ಗೆ ಯೋಚಿಸುತ್ತೀರಿ” (ನೋಡಿ: ರೂಪಕ ಅಲಂಕಾರ)
ἐν αἷς
ಇಲ್ಲಿ, ಇದು ಎಂಬುದು ಈ ಪತ್ರ ಮತ್ತು ಈ ವಿಶ್ವಾಸಿಗಳ ಗುಂಪಿಗೆ ಪೇತ್ರನು ಬರೆದ ಹಿಂದಿನ ಪತ್ರ ಎರಡನ್ನೂ ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಇದನ್ನು ಸ್ಪಷ್ಟವಾಗಿ ಹೇಳಲು ನೀವು ಹೊಸ ವಾಕ್ಯವನ್ನು ಪ್ರಾರಂಭಿಸಬಹುದು. ಪರ್ಯಾಯ ಅನುವಾದ: “ಈ ಎರಡೂ ಪತ್ರಗಳಲ್ಲಿ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐν ὑπομνήσει
ನಿಮ್ಮ ಓದುಗರು ಅಮೂರ್ತ ನಾಮಪದ ನೆನಪಿನ ಎಂಬದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಕ್ರಿಯಾಪದದೊಂದಿಗೆ ಈ ನುಡಿಗಟ್ಟಿನಲ್ಲಿ ಅದರ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ನೀವು ಈ ಪದವನ್ನು 1:13 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ನೆನಪಿಟ್ಟುಕೊಳ್ಳಲು” (ನೋಡಿ: ಭಾವವಾಚಕ ನಾಮಪದಗಳು)
ὑμῶν…τὴν εἰλικρινῆ διάνοιαν
ಶುದ್ಧ ಎಂಬ ಪದವು ಸಾಮಾನ್ಯವಾಗಿ ಯಾವುದನ್ನಾದರೂ ಕಲುಷಿತಗೊಳಿಸದ ಅಥವಾ ಬೇರೆ ಯಾವುದನ್ನಾದರೂ ಬೆರೆಸದಿರುವುದನ್ನು ಸೂಚಿಸುತ್ತದೆಯಾದರೂ, ತನ್ನ ಓದುಗರು ಸುಳ್ಳು ಬೋಧಕರರಿಂದ ಮೋಸಹೋಗದ ಮನಸ್ಸನ್ನು ಹೊಂದಿದ್ದಾರೆಂದು ಸೂಚಿಸಲು ಪೇತ್ರನು ಅದನ್ನು ಸಾಂಕೇತಿಕವಾಗಿ ಇಲ್ಲಿ ಬಳಸುತ್ತಾನೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ನಿಮ್ಮ ವಂಚಿತ ಮನಸ್ಸುಗಳು” (ನೋಡಿ: ರೂಪಕ ಅಲಂಕಾರ)
2 Peter 3:2
τῶν προειρημένων ῥημάτων, ὑπὸ τῶν ἁγίων προφητῶν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಪರಿಶುದ್ಧ ಪ್ರವಾದಿಗಳು ಮೊದಲೇ ಹೇಳಿದ ಮಾತುಗಳು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τῆς τῶν ἀποστόλων ὑμῶν ἐντολῆς τοῦ Κυρίου καὶ Σωτῆρος
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ನಿಮ್ಮ ಅಪೊಸ್ತಲರು ನಿಮಗೆ ನೀಡಿದ ನಮ್ಮ ಕರ್ತನ ಮತ್ತು ರಕ್ಷಕನ ಆಜ್ಞೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
μνησθῆναι
ಇಲ್ಲಿ, ಪೇತ್ರನು ತಾನು ಈ ಪತ್ರವನ್ನು ಬರೆಯುವ ಉದ್ದೇಶವನ್ನು ಹೇಳುತ್ತಿದ್ದಾನೆ. ಪರ್ಯಾಯ ಅನುವಾದ (ಮೊದಲು ಅಲ್ಪವಿರಾಮವಿಲ್ಲದೆ): “ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು” (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
τῶν προειρημένων ῥημάτων
ಪದಗಳನ್ನು ಬಳಸಿಕೊಂಡು ತಿಳಿಸಲಾದ ಹಳೆಯ ಒಡಂಬಡಿಕೆಯ ಪ್ರವಾದಿಗಳ ಪ್ರವಾದನೆಗಳನ್ನು ವಿವರಿಸಲು ಪೇತ್ರನು ಇಲ್ಲಿ ಪದಗಳನ್ನು ಬಳಸುತ್ತಿದ್ದಾನೆ, ವಿಶೇಷವಾಗಿ ಕ್ರಿಸ್ತನ ಭವಿಷ್ಯದ ಪುನರಾಗಮನದ ಬಗ್ಗೆ ಆ ಪ್ರವಾದನೆಗಳು. ಪರ್ಯಾಯ ಅನುವಾದ: “ಹಿಂದೆ ಹೇಳಲಾದ ಪ್ರವಾದನೆ” (ನೋಡಿ: ಲಕ್ಷಣಾಲಂಕಾರ)
ὑπὸ τῶν ἁγίων προφητῶν
ಇಲ್ಲಿ, ಪ್ರವಾದಿಗಳು ಎಂಬುದು ಹಳೆಯ ಒಡಂಬಡಿಕೆಯ ಪ್ರವಾದಿಗಳನ್ನು ಸೂಚಿಸುತ್ತದೆ ಅವರನ್ನು ಪೇತ್ರನು 1:19–21 ನಲ್ಲಿ ಸೂಚಿಸಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಪರಿಶುದ್ಧ ಹಳೆಯ ಒಡಂಬಡಿಕೆಯ ಪ್ರವಾದಿಗಳಿಂದ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)ality*
τῆς…ἐντολῆς τοῦ Κυρίου καὶ Σωτῆρος
ನಿಮ್ಮ ಓದುಗರು ಅಮೂರ್ತ ನಾಮಪದ ಆಜ್ಞೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಮ್ಮ ಕರ್ತನು ಮತ್ತು ರಕ್ಷಕನು ಏನು ಆಜ್ಞಾಪಿಸಿದ್ದಾನೆ” (ನೋಡಿ: ಭಾವವಾಚಕ ನಾಮಪದಗಳು)
τῆς…ἐντολῆς τοῦ Κυρίου καὶ Σωτῆρος
ಸಾಮಾನ್ಯವಾಗಿ ಯೇಸುವಿನ ಆಜ್ಞೆಗಳ ಕುರಿತು ಮಾತನಾಡಲು ಪೇತ್ರನು ಇಲ್ಲಿ ಆಜ್ಞೆ ಎಂಬುದನ್ನು ಬಳಸುತ್ತಾನೆ. ಅವನು ಒಂದು ನಿರ್ದಿಷ್ಟ ಆಜ್ಞೆಯನ್ನು ಸೂಚಿಸುತ್ತಿಲ್ಲ. ಈ ಆಜ್ಞೆಗಳನ್ನು ಅಪೊಸ್ತಲರು ವಿಶ್ವಾಸಿಗಳಿಗೆ ತಲುಪಿಸಿದರು. ಪರ್ಯಾಯ ಅನುವಾದ: “ಕರ್ತನ ಮತ್ತು ರಕ್ಷಕನ ಆಜ್ಞೆಗಳು” (ನೋಡಿ: ಸಾರ್ವತ್ರಿಕ ನಾಮಪದ ಪದಗುಚ್ಛಗಳು.)
τοῦ Κυρίου
ನಿಮ್ಮ ಓದುಗರು ಅಮೂರ್ತ ನಾಮಪದ ಕರ್ತನು ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಆಳ್ವಿಕೆ ಮಾಡುವ ವ್ಯಕ್ತಿ” (ನೋಡಿ: ಭಾವವಾಚಕ ನಾಮಪದಗಳು)
Σωτῆρος
ನಿಮ್ಮ ಓದುಗರು ಅಮೂರ್ತ ನಾಮಪದ ರಕ್ಷಕ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ರಕ್ಷಿಸಬಲ್ಲ ವ್ಯಕ್ತಿ” (ನೋಡಿ: ಭಾವವಾಚಕ ನಾಮಪದಗಳು)
τῶν ἀποστόλων ὑμῶν
ಈ ನುಡಿಗಟ್ಟು ಪೇತ್ರನ ಓದುಗರಿಗೆ * ಕರ್ತನ ಮತ್ತು ರಕ್ಷಕನ ಆಜ್ಞೆಯನ್ನು * ನೀಡಿದ ವಿಧಾನವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ನಿಮ್ಮ ಅಪೊಸ್ತಲರ ಮೂಲಕ"
τῶν ἀποστόλων ὑμῶν
ಇಲ್ಲಿ, ನಿಮ್ಮ ಅಪೊಸ್ತಲರು ಎಂಬುದು ಇವುಗಳನ್ನು ಸೂಚಿಸಬಹುದು: (1) ಪೇತ್ರನ ಓದುಗರಿಗೆ ಕ್ರಿಸ್ತನ ಬೋಧನೆಗಳನ್ನು ಸಾರಿದ ಅಥವಾ ಕೆಲವು ರೀತಿಯಲ್ಲಿ ಅವರಿಗೆ ಸೇವೆ ಸಲ್ಲಿಸಿದ ಅಪೊಸ್ತಲರು. ಪರ್ಯಾಯ ಅನುವಾದ: "ನಿಮ್ಮ ಸೇವೆ ಮಾಡುವ ಅಪೊಸ್ತಲರು" (2) ಎಲ್ಲಾ ಕ್ರೈಸ್ತರಿಗೆ ಸೇರಿದ ಎಲ್ಲಾ ಅಪೊಸ್ತಲರು. ಪರ್ಯಾಯ ಅನುವಾದ: “ನಮ್ಮೆಲ್ಲರ ಅಪೊಸ್ತಲರು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
2 Peter 3:3
τοῦτο πρῶτον γινώσκοντες
ಪ್ರಾಮುಖ್ಯತೆಯ ಮಟ್ಟವನ್ನು ಸೂಚಿಸಲು ಪೇತ್ರನು ಇಲ್ಲಿ ಮೊದಲು ಎಂಬುವ ಪದವನ್ನು ಬಳಸುತ್ತಾನೆ. ಇದು ಸಮಯದಲ್ಲಿ ಆದೇಶವನ್ನು ಸೂಚಿಸುವುದಿಲ್ಲ. ನೀವು ಇದನ್ನು 1:20 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ಅತ್ಯಂತ ಮುಖ್ಯವಾಗಿ, ನೀವು ಅರ್ಥಮಾಡಿಕೊಳ್ಳಬೇಕು”
κατὰ τὰς ἰδίας ἐπιθυμίας αὐτῶν πορευόμενοι
ಇಲ್ಲಿ, ಆಸೆಗಳು ಎಂಬುದು ದೇವರ ಚಿತ್ತಕ್ಕೆ ವಿರುದ್ಧವಾದ ಪಾಪದ ಆಸೆಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ತಮ್ಮ ಸ್ವಂತ ಪಾಪದ ಆಸೆಗಳಿಗೆ ಅನುಗುಣವಾಗಿ ಬದುಕುವುದು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοῦτο πρῶτον γινώσκοντες
ಪೇತ್ರನು ಸೂಚನೆಯನ್ನು ನೀಡಲು ಹೇಳಿಕೆಯನ್ನು ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಆಜ್ಞೆಯಂತೆ ಅನುವಾದಿಸುವ ಮೂಲಕ ಸೂಚಿಸಬಹುದು. ನೀವು ಹಾಗೆ ಮಾಡಿದರೆ, ಇಲ್ಲಿ ಹೊಸ ವಾಕ್ಯವನ್ನು ಪ್ರಾರಂಭಿಸಲು ಸಹಾಯಕವಾಗಬಹುದು. ನೀವು ಇದನ್ನು 1:20 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ಎಲ್ಲಕ್ಕಿಂತ ಹೆಚ್ಚಾಗಿ, ಇದನ್ನು ತಿಳಿದುಕೊಳ್ಳಿ” (ನೋಡಿ: ಹೇಳಿಕೆ,– ಇತರ ಉಪಯೋಗಗಳು)
ἐλεύσονται…ἐν ἐμπαιγμονῇ ἐμπαῖκται
ನಿಮ್ಮ ಓದುಗರು ಅಮೂರ್ತ ನಾಮಪದ* ಅಪಹಾಸ್ಯ * ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಕ್ರಿಯಾಪದದೊಂದಿಗೆ ಅದರ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅಪಹಾಸ್ಯ ಮಾಡುವವರು ಬಂದು ಅಪಹಾಸ್ಯ ಮಾಡುತ್ತಾರೆ” (ನೋಡಿ: ಭಾವವಾಚಕ ನಾಮಪದಗಳು)
κατὰ τὰς ἰδίας ἐπιθυμίας αὐτῶν πορευόμενοι
ಇಲ್ಲಿ, ಅಭ್ಯಾಸವಾಗಿ ಏನನ್ನಾದರೂ ಮಾಡುವುದನ್ನು ಸೂಚಿಸಲು ಹೋಗುವುದು ಎಂಬುವುದನ್ನು ಪೇತ್ರನು ಸಾಂಕೇತಿಕವಾಗಿ ಬಳಸುತ್ತಾನೆ, ಯಾವುದೋ ಕಡೆಗೆ ನಡೆಯುವವನಂತೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ತಮ್ಮ ಸ್ವಂತ ದುರಾಶೆಗಳಿಗೆ ಅನುಗುಣವಾಗಿ ಬದುಕುವವರು” (ನೋಡಿ: ರೂಪಕ ಅಲಂಕಾರ)
2 Peter 3:4
ποῦ ἐστιν ἡ ἐπαγγελία τῆς παρουσίας αὐτοῦ
ಇಲ್ಲಿ, ವಾಗ್ದಾನ ಎಂಬುದು ಯೇಸು ಹಿಂದಿರುಗುವ ವಾಗ್ದಾನದ ನೆರವೇರಿಕೆಯನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ:“ಆತನ ಬರುವಿಕೆಯ ವಾಗ್ದಾನದ ನೆರವೇರಿಕೆ ಎಲ್ಲಿದೆ?” (ನೋಡಿ: ಲಕ್ಷಣಾಲಂಕಾರ)
οἱ πατέρες ἐκοιμήθησαν
ಇಲ್ಲಿ, ನಿದ್ರೆಗೆ ಜಾರಿದರು ಎಂಬುದು ಸಾಯುವ ಒಂದು ಸೌಮ್ಯೋಕ್ತಿ. ನಿಮ್ಮ ಭಾಷೆಯಲ್ಲಿ ಸಾವಿಗೆ ಇದೇ ರೀತಿಯ ಸೌಮ್ಯೋಕ್ತಿಯನ್ನು ನೀವು ಬಳಸಬಹುದು ಅಥವಾ ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ತಂದೆಗಳು ಮರಣ ಹೊಂದಿದರು” (ನೋಡಿ: ಸೌಮ್ಯೋಕ್ತಿಗಳು.)
πάντα οὕτως διαμένει ἀπ’ ἀρχῆς κτίσεως
ಇಲ್ಲಿ, ಎಲ್ಲಾ ವಿಷಯಗಳು ಎಂಬುದು ಪ್ರಪಂಚದಲ್ಲಿ ಏನೂ ಬದಲಾಗಿಲ್ಲ ಎಂದು ವಾದಿಸಲು ಅಪಹಾಸ್ಯ ಮಾಡುವವರು ಬಳಸುವ ಉತ್ಪ್ರೇಕ್ಷೆಯಾಗಿದೆ, ಆದ್ದರಿಂದ ಯೇಸು ಹಿಂತಿರುಗುತ್ತಾನೆ ಎಂಬುದು ಸತ್ಯವಾಗುವುದಿಲ್ಲ. (ನೋಡಿ: ಅತಿಶಯೋಕ್ತಿ)
ἀπ’ ἀρχῆς κτίσεως
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಮೌಖಿಕ ನುಡಿಗಟ್ಟಿನೊಂದಿಗೆ ಸೃಷ್ಟಿ ಎಂಬ ಅಮೂರ್ತ ನಾಮಪದದ ಹಿಂದಿನ ಕಲ್ಪನೆಯನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ಜಗತ್ತನ್ನು ಸೃಷ್ಟಿಸಿದ್ದರಿಂದ” (ನೋಡಿ: ಭಾವವಾಚಕ ನಾಮಪದಗಳು)
καὶ λέγοντες
ನಿಮ್ಮ ಭಾಷೆಯಲ್ಲಿ ನೇರ ಸೂಚನೆಗಳನ್ನು ಪರಿಚಯಿಸುವ ನೈಸರ್ಗಿಕ ವಿಧಾನಗಳನ್ನು ಪರಿಗಣಿಸಿ. ಪರ್ಯಾಯ ಅನುವಾದ: “ಮತ್ತು ಅವರು ಹೇಳುತ್ತಾರೆ” (ನೋಡಿ: ಉದ್ಧರಣ ಮತ್ತು Quote Margins/ ಉಲ್ಲೇಖ ವಾಕ್ಯಗಳ ಅಂಚು.)
ποῦ ἐστιν ἡ ἐπαγγελία τῆς παρουσίας αὐτοῦ?
ಯೇಸು ಹಿಂತಿರುಗುತ್ತಾನೆ ಎಂದು ಅವರು ನಂಬುವುದಿಲ್ಲ ಎಂದು ಒತ್ತಿಹೇಳಲು ಅಪಹಾಸ್ಯ ಮಾಡುವವರು ಈ ವಾಕ್ಚಾತುರ್ಯದ ಪ್ರಶ್ನೆಯನ್ನು ಕೇಳುತ್ತಾರೆ. ಪರ್ಯಾಯ ಅನುವಾದ: "ಆತನ ಬರೋಣದ ವಾಗ್ದಾನ ಇಲ್ಲ!" ಅಥವಾ "ಆತನ ಬರೋಣದ ವಾಗ್ದಾನ ನಿಜವಲ್ಲ!" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ποῦ ἐστιν ἡ ἐπαγγελία τῆς παρουσίας αὐτοῦ?
ಇಲ್ಲಿ, ವಾಗ್ದಾನಕ್ಕೆ ಏನಾಯಿತು ಎಂದು ಕೇಳಲು ಎಲ್ಲಿ ಎಂಬುದನ್ನು ಭಾಷಾವೈಶಿಷ್ಟ್ಯದಿಂದ ಬಳಸಲಾಗಿದೆ. ಅಪಹಾಸ್ಯ ಮಾಡುವವರು ಯಾವುದೋ ಸ್ಥಳವನ್ನು ಕೇಳುತ್ತಿಲ್ಲ. ನಿಮ್ಮ ಓದುಗರು ಈ ಭಾಷಾವೈಶಿಷ್ಟ್ಯವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಅನುವಾದಿಸಬಹುದು. ಪರ್ಯಾಯ ಅನುವಾದ: "ಆತನ ಬರೋಣದ ವಾಗ್ದಾನಕ್ಕೆ ಏನಾಯಿತು?" ಅಥವಾ "ಅವನ ಬರುವಿಕೆಯ ಭರವಸೆಯ ಬಗ್ಗೆ ಏನು ಬಂದಿದೆ?" (ನೋಡಿ: ನುಡಿಗಟ್ಟುಗಳು.)
ἡ ἐπαγγελία τῆς παρουσίας αὐτοῦ
ಇಲ್ಲಿ, ಆತನ ಎಂಬ ಸರ್ವನಾಮವು ಯೇಸುವನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಯೇಸುವಿನ ಬರೋಣದ ವಾಗ್ದಾನ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
τῆς παρουσίας αὐτοῦ
ಇಲ್ಲಿ, ಆತನ ಬರುವಿಕೆ ಎಂಬುದು ಕರ್ತನಾದ ಯೇಸು ಭೂಮಿಗೆ ಹಿಂದಿರುಗುವುದನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: " ಭೂಮಿಗೆ ಯೇಸುವಿನ ಹಿಂದಿರುಗುವಿಕೆ" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἀφ’ ἧς γὰρ οἱ πατέρες ἐκοιμήθησαν
ಇಲ್ಲಿ, ತಂದೆಗಳು ಎಂಬುದನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಇದು ಇವುಗಳನ್ನು ಸೂಚಿಸಬಹುದು: (1) ಇಸ್ರಾಯೇಲ್ಯರ ಹಳೆಯ ಒಡಂಬಡಿಕೆಯ ಪೂರ್ವಜರು, ಸಾಮಾನ್ಯವಾಗಿ "ಪಿತೃಗಳು" ಎಂದು ಕರೆಯಲ್ಪಡುತ್ತಾರೆ. ಪರ್ಯಾಯ ಅನುವಾದ: “ಇಸ್ರಾಯೇಲ್ಯರ ಪಿತೃಗಳು ನಿದ್ರಿಸಿದಾಗಿನಿಂದ” (2) ಪೇತ್ರನು ಈ ಪತ್ರವನ್ನು ಬರೆಯುವ ಹೊತ್ತಿಗೆ ಮರಣಹೊಂದಿದ ಮೊದಲ ತಲೆಮಾರಿನ ಕ್ರೈಸ್ತ ನಾಯಕರು. ಪರ್ಯಾಯ ಅನುವಾದ: "ಮೊದಲ ಕ್ರೈಸ್ತ ನಾಯಕರು ನಿದ್ರಿಸಿದಾಗಿನಿಂದ" (ನೋಡಿ: ರೂಪಕ ಅಲಂಕಾರ)
2 Peter 3:5
γῆ…συνεστῶσα τῷ τοῦ Θεοῦ λόγῳ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ದೇವರ ವಾಕ್ಯವು ಭೂಮಿಯನ್ನು ರಚಿಸಿತು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἐξ ὕδατος καὶ δι’ ὕδατος συνεστῶσα
ಈ ಷರತ್ತು ದೇವರು ಭೂಮಿಯನ್ನು ನೀರಿನ ಮೂಲಕ * ಮತ್ತು *ಹೊರಗೆ ಮೇಲೆ ಬರುವಂತೆ ಮಾಡುತ್ತಾನೆ ಎಂಬುದನ್ನು ಸೂಚಿಸುತ್ತದೆ, ಭೂಮಿ ಕಾಣಿಸುವಂತೆ ನೀರಿನ್ನು ಒಟ್ಟುಗೂಡಿಸುತ್ತಾನೆ.
λανθάνει γὰρ αὐτοὺς τοῦτο, θέλοντας
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಏಕೆಂದರೆ ಅವರು ಇದನ್ನು ಸ್ವಇಚ್ಛೆಯಿಂದ ತಮ್ಮಿಂದ ಮರೆಮಾಡುತ್ತಾರೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
θέλοντας ὅτι οὐρανοὶ ἦσαν ἔκπαλαι
ಈ ಷರತ್ತು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದಗಳನ್ನು ವಾಕ್ಯದ ಅಂತ್ಯದಿಂದ ಒದಗಿಸಬಹುದು. ಪರ್ಯಾಯ ಅನುವಾದ: "ದೇವರ ವಾಕ್ಯದಿಂದ ಅಕಾಶವು ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು" (ನೋಡಿ: ಪದಲೋಪ)
τῷ τοῦ Θεοῦ λόγῳ
ಇಲ್ಲಿ, ದೇವರ ವಾಕ್ಯ ಎಂಬುದು ಭೂಮಿಯನ್ನು ಸೃಷ್ಟಿಸಿದ ದೇವರ ನಿರ್ದಿಷ್ಟ ಆಜ್ಞೆಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ದೇವರ ಆಜ್ಞೆಗಳಿಂದ” (ನೋಡಿ: ಲಕ್ಷಣಾಲಂಕಾರ)
2 Peter 3:6
δι’ ὧν
ಇಲ್ಲಿ, ಯಾವುದು ಎಂಬುದು ದೇವರ ವಾಕ್ಯ ಮತ್ತು ನೀರು ಎರಡನ್ನೂ ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ದೇವರ ವಾಕ್ಯದ ಮತ್ತು ನೀರಿನ ಮೂಲಕ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ὕδατι κατακλυσθεὶς
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂದು ನೀವು ಹೇಳಬಹುದು. ನೀವು ಹೊಸ ಅಭಿಪ್ರಾಯವನ್ನು ಪ್ರಾರಂಭಿಸಬೇಕಾಗಬಹುದು. ಪರ್ಯಾಯ ಅನುವಾದ: “ದೇವರು ಜಗತ್ತನ್ನು ನೀರಿನಿಂದ ತುಂಬಿಸಿದನು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ὁ τότε κόσμος
ಇಲ್ಲಿ, ಆ ಸಮಯದಲ್ಲಿ ಎಂಬುದು ಪ್ರವಾಹದ ಮೊದಲು ಜಗತ್ತು ಅಸ್ತಿತ್ವದಲ್ಲಿದ್ದ ಸಮಯವನ್ನು ಸೂಚಿಸುತ್ತದೆ. ಇದು ವಿಶ್ವದ ಸೃಷ್ಟಿಯಾದ ನಿಖರವಾದ ಸಮಯವನ್ನು ಸೂಚಿಸುವುದಿಲ್ಲ. ಪರ್ಯಾಯ ಅನುವಾದ: "ಆಗ ಅಸ್ತಿತ್ವದಲ್ಲಿದ್ದ ಜಗತ್ತು"
ὕδατι κατακλυσθεὶς
ಈ ನುಡಿಗಟ್ಟು ಪ್ರಾಚೀನ ಜಗತ್ತು ನಾಶವಾದ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ನೀರಿನಿಂದ ಪ್ರವಾಹಕ್ಕೆ ಒಳಗಾಗುವ ಮೂಲಕ"
2 Peter 3:7
οἱ…νῦν οὐρανοὶ καὶ ἡ γῆ, τῷ αὐτῷ λόγῳ τεθησαυρισμένοι εἰσὶν, πυρὶ
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡಿದ್ದಾರೆ ಎಂದು ಹೇಳಬಹುದು. ಪರ್ಯಾಯ ಅನುವಾದ:“ದೇವರು, ಅದೇ ವಾಕ್ಯದಿಂದ, ಪ್ರಸ್ತುತ ಈಗಿರುವ ಆಕಾಶ ಮತ್ತು ಭೂಮಿಯನ್ನು ಬೆಂಕಿಗಾಗಿ ಕಾಯ್ದಿರಿಸಿದ್ದಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τῷ αὐτῷ λόγῳ
ಇಲ್ಲಿ, ವಾಕ್ಯ ಎಂಬ ಪದವು “ದೇವರ ವಾಕ್ಯ”ವನ್ನು ಸೂಚಿಸುತ್ತದೆ, ಇದು 3:5-6 ನಲ್ಲಿ ಪೇತ್ರನು ಹೇಳಿದ್ದ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ಸಾಧನವಾಗಿದೆ ಮತ್ತು ಜಲಪ್ರಳಯವು ಜಗತ್ತನ್ನು ನಾಶಮಾಡಿತು. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ದೇವರ ಅದೇ ವಾಕ್ಯದಿಂದ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τηρούμενοι εἰς ἡμέραν κρίσεως
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಿದ್ದಾರೆಂದು ಹೇಳಬಹುದು. ಹೊಸ ವಾಕ್ಯವನ್ನು ಪ್ರಾರಂಭಿಸಲು ಸಹ ಇದು ಸಹಾಯಕವಾಗಬಹುದು. ಪರ್ಯಾಯ ಅನುವಾದ: “ದೇವರು ಅವರನ್ನು ನ್ಯಾಯತೀರ್ಪಿನ ದಿನಕ್ಕಾಗಿ ಕಾಯ್ದಿರಿಸುತ್ತಿದ್ದಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἡμέραν κρίσεως καὶ ἀπωλείας τῶν ἀσεβῶν ἀνθρώπων
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದಗಳ ಹಿಂದಿನ ಆಲೋಚನೆಗಳನ್ನು ನ್ಯಾಯತೀರ್ಪು ಮತ್ತು * ವಿನಾಶ* ಎಂಬ ಮೌಖಿಕ ನುಡಿಗಟ್ಟುಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ದೇವರು ಮಾನವಕುಲಕ್ಕೆ ನ್ಯಾಯ ತೀರಿಸುವ ಮತ್ತು ಭಕ್ತಿಹೀನ ಮನುಷ್ಯರನ್ನು ನಾಶಪಡಿಸುವ ದಿನ” (ನೋಡಿ: ಭಾವವಾಚಕ ನಾಮಪದಗಳು)
οἱ δὲ νῦν οὐρανοὶ καὶ ἡ γῆ
ಇಲ್ಲಿ, ಆದರೆ ಎಂಬುದು ಪೇತ್ರನು ಹಿಂದಿನ ವಾಕ್ಯದಲ್ಲಿ ಸೂಚಿಸಿದ ಪ್ರಾಚೀನ ಪ್ರಪಂಚದ ಹಿಂದಿನ ವಿನಾಶವನ್ನು ಪ್ರಸ್ತುತ ಪ್ರಪಂಚದ ಭವಿಷ್ಯದ ವಿನಾಶದೊಂದಿಗೆ ವ್ಯತಿರಿಕ್ತಗೊಳಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ನಿಮ್ಮ ಓದುಗರು ಈ ವ್ಯತಿರಿಕ್ತತೆಯನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ವ್ಯತಿರಿಕ್ತವಾಗಿ, ಪ್ರಸ್ತುತ ಆಕಾಶ ಮತ್ತು ಭೂಮಿ” (ನೋಡಿ: ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ)
πυρὶ
ಇಲ್ಲಿ, ಪ್ರತಿಯಾಗಿ ಎಂಬುದು ದೇವರು ಪ್ರಸ್ತುತ ಆಕಾಶ ಮತ್ತು ಭೂಮಿಯನ್ನು ಕಾಯ್ದಿರಿಸಿರುವ ಉದ್ದೇಶವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಬೆಂಕಿಯ ಉದ್ದೇಶಕ್ಕಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
εἰς ἡμέραν κρίσεως
ಇಲ್ಲಿ, ಪ್ರತಿಯಾಗಿ ಎಂಬುದು ಇವುಗಳನ್ನು ಸೂಚಿಸಬಹುದು: (1) ದೇವರು ಪ್ರಸ್ತುತ ಆಕಾಶ ಮತ್ತು ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಇರಿಸುತ್ತಿದ್ದಾನೆ. ಪರ್ಯಾಯ ಅನುವಾದ: "ನ್ಯಾಯತೀರ್ಪಿನ ದಿನದ ಉದ್ದೇಶಕ್ಕಾಗಿ" (2) ದೇವರು ಪ್ರಸ್ತುತ ಆಕಾಶ ಮತ್ತು ಭೂಮಿಯನ್ನು ಇಟ್ಟುಕೊಳ್ಳುವ ಸಮಯ. ಪರ್ಯಾಯ ಅನುವಾದ: "ನ್ಯಾಯತೀರ್ಪಿನ ದಿನದವರೆಗೆ"
πυρὶ
ಇಲ್ಲಿ, ಬೆಂಕಿ ಏನು ಮಾಡುತ್ತದೆ, ಅದು ಸುಡುತ್ತದೆ ಎಂಬುದನ್ನು ಸೂಚಿಸಲು ಪೇತ್ರನು ಬೆಂಕಿ ಎಂಬ ಪದವನ್ನು ಬಳಸುತ್ತಾನೆ. ಪರ್ಯಾಯ ಅನುವಾದ: “ಬೆಂಕಿಯಿಂದ ಸುಡುವುದಕ್ಕಾಗಿ” (ನೋಡಿ: ಲಕ್ಷಣಾಲಂಕಾರ)
τῶν ἀσεβῶν ἀνθρώπων
ಪುರುಷರು ಎಂಬ ಪದವು ಪುಲ್ಲಿಂಗವಾಗಿದ್ದರೂ, ಪೇತ್ರನು ಇಲ್ಲಿ ಪುರುಷರನ್ನು ಮತ್ತು ಮಹಿಳೆಯರನ್ನು ಒಳಗೊಂಡಿರುವ ಸಾಮಾನ್ಯ ಅರ್ಥದಲ್ಲಿ ಪದವನ್ನು ಬಳಸುತ್ತಿದ್ದಾರೆ. ಪರ್ಯಾಯ ಅನುವಾದ: “ಭಕ್ತಿಯಿಲ್ಲದ ಜನರ” (ನೋಡಿ: ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.)
2 Peter 3:8
ἓν…τοῦτο μὴ λανθανέτω ὑμᾶς
ಪರ್ಯಾಯ ಅನುವಾದ: “ಈ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಬೇಡಿ” ಅಥವಾ “ಈ ಒಂದು ವಿಷಯವನ್ನು ನಿರ್ಲಕ್ಷಿಸಬೇಡಿ”
ὅτι μία ἡμέρα παρὰ Κυρίῳ ὡς χίλια ἔτη
ಇಲ್ಲಿ, ಕರ್ತನೊಂದಿಗೆ ಎಂದರೆ “ಕರ್ತನ ನ್ಯಾಯತೀರ್ಪಿನಲ್ಲಿ.” ಪರ್ಯಾಯ ಅನುವಾದ: “ಕರ್ತನ ದೃಷ್ಟಿಕೋನದಿಂದ, ಒಂದು ದಿನವು ಸಾವಿರ ವರ್ಷಗಳಂತೆ”
μία ἡμέρα παρὰ Κυρίῳ ὡς χίλια ἔτη, καὶ χίλια ἔτη ὡς ἡμέρα μία
ಈ ಎರಡು ನುಡಿಗಟ್ಟುಗಳು ಮೂಲತಃ ಒಂದೇ ಅರ್ಥವನ್ನು ಹೊಂದಿವೆ. ಮಾನವರು ಮಾಡುವಂತೆಯೇ ದೇವರು ಸಮಯವನ್ನು ಗ್ರಹಿಸುವುದಿಲ್ಲ ಎಂದು ಒತ್ತಿಹೇಳಲು ಪುನರಾವರ್ತನೆಯನ್ನು ಬಳಸಲಾಗುತ್ತದೆ. ಜನರಿಗೆ ಅಲ್ಪಾವಧಿ ಅಥವಾ ದೀರ್ಘಾವಧಿ ಎಂದು ತೋರುವುದು ದೇವರಿಗೆ ಹಾಗೆ ತೋರುವುದಿಲ್ಲ. ನಿಮ್ಮ ಓದುಗರು ಈ ಸಂಪರ್ಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ನುಡಿಗಟ್ಟುಗಳನ್ನು ಸಂಯೋಜಿಸಬಹುದು. ಪರ್ಯಾಯ ಅನುವಾದ: “ಒಂದು ದಿನ ಮತ್ತು 1,000 ವರ್ಷಗಳು ಕರ್ತನಿಗೆ ಸಮಾನವಾಗಿವೆ” (ನೋಡಿ: ದ್ವಿರುಕ್ತಿಗಳು)
2 Peter 3:9
οὐ βραδύνει Κύριος τῆς ἐπαγγελίας
ಇಲ್ಲಿ, ವಾಗ್ದಾನ ಎಂಬುದು ಯೇಸುವು ಹಿಂದಿರುಗುವ * ವಾಗ್ದಾನ* ದ ನೆರವೇರಿಕೆಯನ್ನು ಸೂಚಿಸುತ್ತದೆ. ನೀವು ಅದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ 3:4. ಪರ್ಯಾಯ ಅನುವಾದ: “ಕರ್ತನು ತನ್ನ ವಾಗ್ದಾನವನ್ನು ಪೂರೈಸಲು ತಡಮಾಡುವುದಿಲ್ಲ” (ನೋಡಿ: ಲಕ್ಷಣಾಲಂಕಾರ)
ὥς τινες βραδύτητα ἡγοῦνται
ಇಲ್ಲಿ, ಕೆಲವರು ಎಂಬುದು 3:3 ನಲ್ಲಿ ಪರಿಚಯಿಸಲಾದ “ಅಪಹಾಸ್ಯ ಮಾಡುವವರನ್ನು” ಮತ್ತು ಕರ್ತನು ತನ್ನ ವಾಗ್ದಾನಗಳನ್ನು ಪೂರೈಸಲು ತಡಮಾಡುತ್ತಾನೆಂದು ಎಂದು ನಂಬುವ ಯಾರನ್ನಾದರೂ ಸೂಚಿಸುತ್ತದೆ, ಏಕೆಂದರೆ ಯೇಸು ಇನ್ನೂ ಹಿಂದಿರುಗಿರಲಿಲ್ಲ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಕೆಲವರು, ಈ ಅಪಹಾಸ್ಯ ಮಾಡುವವರಂತೆ, ನಿಧಾನತೆಯನ್ನು ಪರಿಗಣಿಸುತ್ತಾರೆ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἀλλὰ μακροθυμεῖ εἰς ὑμᾶς
ಈ ಷರತ್ತು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಪದವನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದವನ್ನು ವಾಕ್ಯದ ಆರಂಭದಿಂದ ಒದಗಿಸಬಹುದು. ನಿಮ್ಮ ಓದುಗರು ಈ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಯಾರು * ತಾಳ್ಮೆಯಿಂದಿರುತ್ತಾರೆ* ಎಂದು ಹೇಳಬಹುದು ಮತ್ತು ಹೊಸ ವಾಕ್ಯವನ್ನು ಪ್ರಾರಂಭಿಸಬಹುದು. ಪರ್ಯಾಯ ಅನುವಾದ: “ಆದರೆ ದೇವರು ನಿಮ್ಮ ಕಡೆಗೆ ತಾಳ್ಮೆಯಿಂದಿರುತ್ತಾನೆ” (ನೋಡಿ: ಪದಲೋಪ)
μὴ βουλόμενός τινας ἀπολέσθαι
ಈ ಷರತ್ತು ದೇವರು ಯೇಸುವಿನ ಹಿಂದಿರುಗುವಿಕೆಯನ್ನು ವಿಳಂಬಗೊಳಿಸುವ ಕಾರಣವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಏಕೆಂದರೆ ಆತನು ಯಾರು ನಾಶವಾಗಲು ಬಯಸುವುದಿಲ್ಲ" (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἀλλὰ πάντας εἰς μετάνοιαν χωρῆσαι
ಈ ಷರತ್ತು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಪದಗಳನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದಗಳನ್ನು ಹಿಂದಿನ ಷರತ್ತುಗಳಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಆದರೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಆತನು ಬಯಸುತ್ತಾನೆ” (ನೋಡಿ: ಪದಲೋಪ)
ἀλλὰ πάντας εἰς μετάνοιαν χωρῆσαι
ನಿಮ್ಮ ಓದುಗರು ಅಮೂರ್ತ ನಾಮಪದ * ಪಶ್ಚಾತ್ತಾಪ * ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಮೌಖಿಕ ನುಡಿಗಟ್ಟುಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಆದರೆ ಎಲ್ಲರೂ ಪಶ್ಚಾತ್ತಾಪ ಪಡಬೇಕು” (ನೋಡಿ: ಭಾವವಾಚಕ ನಾಮಪದಗಳು)
2 Peter 3:10
δὲ
ಇಲ್ಲಿ, ಆದರೆ ಎಂಬುದು ದೇವರ ಬಗ್ಗೆ ಅಪಹಾಸ್ಯ ಮಾಡುವವರು ಏನು ನಂಬುತ್ತಾರೆ ಮತ್ತು ದೇವರು ನಿಜವಾಗಿಯೂ ಏನು ಮಾಡುತ್ತಾನೆ ಎಂಬುದರ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ಕರ್ತನು ತಾಳ್ಮೆಯಿಂದಿರುವನು ಮತ್ತು ಜನರು ಪಶ್ಚಾತ್ತಾಪಪಡಬೇಕೆಂದು ಬಯಸುತ್ತಿದ್ದರೂ, ಆತನು ನಿಜವಾಗಿಯೂ ಹಿಂದಿರುಗುತ್ತಾನೆ ಮತ್ತು ನ್ಯಾಯತೀರ್ಪನ್ನು ತರುತ್ತಾನೆ. (ನೋಡಿ: ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ)
ἥξει…ἡμέρα Κυρίου ὡς κλέπτης
ಅನಿರೀಕ್ಷಿತವಾಗಿ ಬಂದು ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡುವ ಕಳ್ಳ ನಂತೆ ದೇವರು ಪ್ರತಿಯೊಬ್ಬರನ್ನು ನ್ಯಾಯ ನಿರ್ಣಯಿಸುವ ದಿನ ದ ಕುರಿತು ಪೇತ್ರನು ಮಾತನಾಡುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಕರ್ತನ ದಿನವು ಅನಿರೀಕ್ಷಿತವಾಗಿ ಬರುತ್ತದೆ” (ನೋಡಿ: ಉಪಮಾಲಂಕಾರ.)
στοιχεῖα…λυθήσεται
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಾರೆ ಎಂಬುದನ್ನು ನೀವು ಸೂಚಿಸಬಹುದು. ಪರ್ಯಾಯ ಅನುವಾದ: “ದೇವರು ಅಂಶಗಳನ್ನು ನಾಶಪಡಿಸುತ್ತಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
στοιχεῖα…λυθήσεται
ಇಲ್ಲಿ, ಅಂಶಗಳು ಇವುಗಳನ್ನು ಸೂಚಿಸಬಹುದು: (1) ನೈಸರ್ಗಿಕ ವಿಶ್ವವನ್ನು ರೂಪಿಸುವ ಮೂಲಭೂತ ಅಂಶಗಳು. ಪರ್ಯಾಯ ಅನುವಾದ: “ಪ್ರಕೃತಿಯ ಘಟಕಗಳು ನಾಶವಾಗುತ್ತವೆ” (2) ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಂತಹ ಆಕಾಶಕಾಯಗಳು. ಪರ್ಯಾಯ ಅನುವಾದ: “ಆಕಾಶಕಾಯಗಳು ನಾಶವಾಗುತ್ತವೆ”
γῆ καὶ τὰ ἐν αὐτῇ ἔργα εὑρεθήσεται
ದೇವರು ಭೂಮಿಯನ್ನೂ ಮತ್ತು ಪ್ರತಿಯೊಬ್ಬರ ಎಲ್ಲಾ ಕಾರ್ಯಗಳನ್ನು ನೋಡುತ್ತಾನೆ ಮತ್ತು ನಂತರ ಆತನು ಎಲ್ಲವನ್ನೂ ನ್ಯಾಯ ನಿರ್ಣಯಿಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ಪದಗಳಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ದೇವರು ಭೂಮಿಯನ್ನು ಮತ್ತು ಅದರಲ್ಲಿ ಕಾರ್ಯಗಳನ್ನು ಕಂಡುಕೊಳ್ಳುತ್ತಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
κλέπτης, ἐν ᾗ
ಇಲ್ಲಿ, ಯಾವ ಎಂಬುದು "ಕರ್ತನ ದಿನ" ವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು ಮತ್ತು ಹೊಸ ವಾಕ್ಯವನ್ನು ಪ್ರಾರಂಭಿಸಬಹುದು. ಪರ್ಯಾಯ ಅನುವಾದ: “ಒಬ್ಬ ಕಳ್ಳ. ಕರ್ತನ ದಿನದಲ್ಲಿ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
στοιχεῖα δὲ καυσούμενα λυθήσεται
ಇಲ್ಲಿ, ಸುಟ್ಟುಹೋಗುವುದು ಎಂಬುದು ಮೂಲವಸ್ತುಗಳನ್ನು ನಾಶಪಡಿಸುವ ವಿಧಾನಗಳನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಮತ್ತು ಅಂಶಗಳು ಸುಡುವ ಮೂಲಕ ನಾಶವಾಗುತ್ತವೆ" ಅಥವಾ "ಮತ್ತು ಅಂಶಗಳು ಬೆಂಕಿಯ ಮೂಲಕ ನಾಶವಾಗುತ್ತವೆ"
γῆ καὶ τὰ ἐν αὐτῇ ἔργα εὑρεθήσεται
ಇಲ್ಲಿ, * ಕಾರ್ಯಗಳು* ಎಂಬುದು ಭೂಮಿಯ ಮೇಲಿನ ಜನರ ಕ್ರಿಯೆಗಳನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಭೂಮಿ ಮತ್ತು ಅದರಲ್ಲಿ ಜನರು ಏನು ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲಾಗುತ್ತದೆ" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
γῆ καὶ τὰ ἐν αὐτῇ ἔργα εὑρεθήσεται
ಇಲ್ಲಿ, ಕಂಡುಬಂದಿದೆಎಂಬುದು ಆಕಾಶ ಮತ್ತು ಅಂಶಗಳ ತೆಗೆದುಹಾಕುವಿಕೆಯು ಭೂಮಿಯನ್ನು ಬಿಟ್ಟುಹೋಗುತ್ತದೆ ಮತ್ತು ದೇವರು ನೋಡಲು ಮತ್ತು ನ್ಯಾಯ ತೀರಿಸಲು ಅದರ ಮೇಲೆ ಏನು ಮಾಡಲ್ಪಟ್ಟಿದೆ ಎಂಬುದನ್ನು ತೋರಿಸುತ್ತದೆ. ಪರ್ಯಾಯ ಅನುವಾದ: "ಭೂಮಿ ಮತ್ತು ಅದರಲ್ಲಿರುವ ಕಾರ್ಯಗಳು ಬಹಿರಂಗಗೊಳ್ಳುತ್ತವೆ" ಅಥವಾ "ಭೂಮಿ ಮತ್ತು ಅದರಲ್ಲಿರುವ ಕಾರ್ಯಗಳು ಬಹಿರಂಗಗೊಳ್ಳುತ್ತವೆ"
2 Peter 3:11
τούτων οὕτως πάντων λυομένων
ಈ ಷರತ್ತು ವಾಕ್ಯದ ಉಳಿದ ಭಾಗಗಳಲ್ಲಿ ಅನುಸರಿಸುವ ನಿರೀಕ್ಷಿತ ಫಲಿತಾಂಶದ ಕಾರಣವನ್ನು ಸೂಚಿಸುತ್ತದೆ. ದೇವರ ಭವಿಷ್ಯದಲ್ಲಿ ಆಕಾಶ ಮತ್ತು ಭೂಮಿಯ ನಾಶನವು ಅವರು ಪರಿಶುದ್ದ ಮತ್ತು ಆತ್ಮೀಕ ಜೀವನವನ್ನು ನಡೆಸುವಂತೆ ಮಾಡಬೇಕೆಂದು ಪೇತ್ರನು ತನ್ನ ಓದುಗರಿಗೆ ಹೇಳುತ್ತಾನೆ. ಪರ್ಯಾಯ ಅನುವಾದ: “ಈ ಎಲ್ಲಾ ವಸ್ತುಗಳು ಹೀಗೆ ನಾಶವಾಗುವುದರಿಂದ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
τούτων οὕτως πάντων λυομένων
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಾರೆ ಎಂದು ನೀವು ಹೇಳಬಹುದು. ಪರ್ಯಾಯ ಅನುವಾದ: “ದೇವರು ಹೀಗೆ ಎಲ್ಲಾ ವಸ್ತುಗಳನ್ನು ನಾಶಮಾಡುವ ಕಾರಣ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ποταποὺς δεῖ ὑπάρχειν ὑμᾶς?
ಪೇತ್ರನು ಒತ್ತು ನೀಡುವುದಕ್ಕಾಗಿ ಪ್ರಶ್ನೆಯ ರೂಪವನ್ನು ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಆಶ್ಚರ್ಯಸೂಚಕವಾಗಿ ಅನುವಾದಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು. ನೀವು ಈ ಮಾತುಗಳನ್ನು ಹೇಳಿಕೆಯಾಗಿ ಅನುವಾದಿಸಿದರೆ, ನಂತರ ನೀವು ಮುಂದಿನ ವಾಕ್ಯದ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಅವಧಿಗೆ ಬದಲಾಯಿಸಬೇಕಾಗುತ್ತದೆ. ಪರ್ಯಾಯ ಅನುವಾದ: “ನೀವು ಆಗಿರುವುದು ಖಂಡಿತವಾಗಿಯೂ ಅವಶ್ಯಕವಾಗಿದೆ” (ನೋಡಿ: ಅಲಂಕಾರಿಕ ಪ್ರಶ್ನೆಗಳು.)
τούτων
ಇಲ್ಲಿ, ಈ ವಿಷಯಗಳು ಎಂಬುದು ಹಿಂದಿನ ವಾಕ್ಯದಲ್ಲಿ ಸೂಚಿಸಲಾದ ಆಕಾಶ, ಅಂಶಗಳು ಮತ್ತು ಭೂಮಿಯನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ವಿಷಯಗಳನ್ನು ನಾನು ಈಗ ವಿವರಿಸಿದ್ದೇನೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐν ἁγίαις ἀναστροφαῖς καὶ εὐσεβείαις
ಈ ಷರತ್ತು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಪದಗಳನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದಗಳನ್ನು ಸಂದರ್ಭದಿಂದ ಒದಗಿಸಬಹುದು. ಪರ್ಯಾಯ ಅನುವಾದ: "ಪರಿಶುದ್ಧ ನಡವಳಿಕೆಗಳೊಂದಿಗೆ ಮತ್ತು ದೈವಿಕ ಕ್ರಿಯೆಗಳೊಂದಿಗೆ ಜೀವಿಸುವುದು" (ನೋಡಿ: ಪದಲೋಪ)
2 Peter 3:12
οὐρανοὶ…λυθήσονται
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಾರೆ ಎಂಬುದನ್ನು ಹೇಳಬಹುದು. ಪರ್ಯಾಯ ಅನುವಾದ: “ಆಕಾಶಮಂಡಲಗಳು ... ದೇವರು ನಾಶಮಾಡುವನು” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
στοιχεῖα…τήκεται
ಇಲ್ಲಿ, ಅಂಶಗಳು ಎಂಬುದು ಇವುಗಳನ್ನು ಸೂಚಿಸಬಹುದು: (1) ನೈಸರ್ಗಿಕ ಜಗತ್ತನ್ನು ರೂಪಿಸುವ ಮೂಲಭೂತ ಅಂಶಗಳು. ಪರ್ಯಾಯ ಅನುವಾದ: “ಪ್ರಕೃತಿಯ ಘಟಕಗಳು ನಾಶವಾಗುತ್ತವೆ” (2) ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಂತಹ ಆಕಾಶಕಾಯಗಳು. ಪರ್ಯಾಯ ಅನುವಾದ: “ಆಕಾಶಕಾಯಗಳು ನಾಶವಾಗುತ್ತವೆ” ನೀವು ಇದನ್ನು 3:10 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ.
προσδοκῶντας καὶ σπεύδοντας
ಇಲ್ಲಿ, ಕಾಯುವುದು ಮತ್ತು ಆತುರಪಡುವುದು ಎಂಬುದು ಹಿಂದಿನ ವಾಕ್ಯದಲ್ಲಿ ಹೇಳಿರುವಂತೆ ಪರಿಶುದ್ಧ ಮತ್ತು ದೈವಿಕ ಜೀವನವನ್ನು ನಡೆಸುತ್ತಿರುವಾಗ ಪೇತ್ರನು ತನ್ನ ಓದುಗರು ಮಾಡಲು ಬಯಸಿದ ಎರಡು ವಿಷಯಗಳಾಗಿವೆ. ಪರ್ಯಾಯ ಅನುವಾದ: "ನಿರೀಕ್ಷಿಸುತ್ತಿರುವಾಗ ಮತ್ತು ಆತುರಪಡುತ್ತಿರುವಾಗ"
δι’ ἣν
ಇಲ್ಲಿ, ಯಾವ ಎಂಬುದು ಹಿಂದಿನ ಷರತ್ತಿನಿಂದ "ದೇವರ ದಿನ" ವನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಆ ದಿನದ ಕಾರಣ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
πυρούμενοι
ಈ ನುಡಿಗಟ್ಟು ಅಕಾಶವು ನಾಶವಾಗುವ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಬೆಂಕಿ ಹಚ್ಚುವ ಮೂಲಕ"
καυσούμενα
ಈ ನುಡಿಗಟ್ಟು ಅಕಾಶವು ನಾಶವಾಗುವ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಶಾಖದಿಂದ ಸುಟ್ಟುಹೋಗುವ ಮೂಲಕ"
2 Peter 3:13
ἐν οἷς δικαιοσύνη κατοικεῖ
ಇಲ್ಲಿ, ನೀತಿವಂತಿಕೆ ಎಂಬುದನ್ನು ಸಾಂಕೇತಿಕವಾಗಿ ಎಲ್ಲೋ ವಾಸಿಸುತ್ತಿರುವ ವ್ಯಕ್ತಿಯಂತೆ ಮಾತನಾಡಲಾಗಿದೆ. ನಿಮ್ಮ ಓದುಗರಿಗೆ ಇದು ಗೊಂದಲಮಯವಾಗಿದ್ದರೆ, ನೀವು ಈ ಅರ್ಥವನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಇದರಲ್ಲಿ ನೀತಿವಂತಿಕೆ ಅಸ್ತಿತ್ವದಲ್ಲಿದೆ” (ನೋಡಿ: ವ್ಯಕ್ತೀಕರಣ)
καινοὺς…οὐρανοὺς καὶ γῆν καινὴν, κατὰ τὸ ἐπάγγελμα αὐτοῦ προσδοκῶμεν
ಪೇತ್ರನು ಈ ವಾಕ್ಯದ ಮುಂಭಾಗದಲ್ಲಿ ಮುಖ್ಯ ಕ್ರಿಯಾಪದದ ನೇರ ವಸ್ತುವನ್ನು ಒತ್ತು ನೀಡಿದ್ದಾನೆ. ನಿಮ್ಮ ಭಾಷೆಯು ಒತ್ತು ನೀಡಲು ಇದೇ ರೀತಿಯ ನಿರ್ಮಾಣವನ್ನು ಬಳಸಿದರೆ, ನಿಮ್ಮ ಅನುವಾದದಲ್ಲಿ ಅದನ್ನು ಇಲ್ಲಿ ಹೊಂದುವುದು ಸೂಕ್ತವಾಗಿರುತ್ತದೆ. ಆದರೆ ಈ ನಿರ್ಮಾಣವು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು ಈ ಒತ್ತುವನ್ನು ಇನ್ನೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು ಮತ್ತು ವಾಕ್ಯದ ರಚನೆಯನ್ನು ಬದಲಾಯಿಸಬಹುದು. ಪರ್ಯಾಯ ಅನುವಾದ: "ಆತನ ವಾಗ್ದಾನದ ಪ್ರಕಾರ, ನಾವು ಹೊಸ ಆಕಾಶ ಮತ್ತು ಹೊಸ ಭೂಮಿಗಾಗಿ ಕಾಯುತ್ತಿದ್ದೇವೆ" (ನೋಡಿ: ಮಾಹಿತಿ ರಚನೆ.)
κατὰ τὸ ἐπάγγελμα αὐτοῦ
ಇಲ್ಲಿ, ಸರ್ವನಾಮ ಆತನ ಎಂಬುದು ಇವರುಗಳನ್ನು ಸೂಚಿಸಬಹುದು: (1) ದೇವರು. ಪರ್ಯಾಯ ಅನುವಾದ: "ದೇವರ ವಾಗ್ದಾನದ ಪ್ರಕಾರ" (2) ಯೇಸು. ಪರ್ಯಾಯ ಅನುವಾದ: “ಯೇಸುವಿನ ವಾಗ್ದಾನದ ಪ್ರಕಾರ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐν οἷς δικαιοσύνη κατοικεῖ
ನಿಮ್ಮ ಓದುಗರು ಅಮೂರ್ತ ನಾಮಪದ ನೀತಿವಂತಿಕೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಇದರಲ್ಲಿ ಎಲ್ಲರೂ ನೀತಿವಂತರು” ಅಥವಾ “ಎಲ್ಲರೂ ಸರಿಯಾದದ್ದನ್ನೇ ಮಾಡುತ್ತಾರೆ” (ನೋಡಿ: ಭಾವವಾಚಕ ನಾಮಪದಗಳು)
τὸ ἐπάγγελμα αὐτοῦ
ಇಲ್ಲಿ, ವಾಗ್ದಾನ ಎಂಬುದು ಇವುಗಳನ್ನು ಸೂಚಿಸಬಹುದು: (1) ಯೆಶಾಯ 65:17 ಮತ್ತು ಯೆಶಾಯ 66:22 ರಲ್ಲಿ ವಾಗ್ದಾನ ಮಾಡಿದಂತೆ, ಹೊಸ ಆಕಾಶವನ್ನು ಮತ್ತು ಹೊಸ ಭೂಮಿಯನ್ನು ಸೃಷ್ಟಿಸುವ ದೇವರ ವಾಗ್ದಾನ. ಪರ್ಯಾಯ ಅನುವಾದ: "ಹೊಸ ಆಕಾಶ ಮತ್ತು ಹೊಸ ಭೂಮಿಯ ಆತನ ವಾಗ್ದಾನ" (2) 3:4 ನಲ್ಲಿರುವಂತೆ ಯೇಸುವಿನ ಎರಡನೇ ಬರೋಣದ ವಾಗ್ದಾನ. ಪರ್ಯಾಯ ಅನುವಾದ: "ಯೇಸುವಿನ ಹಿಂದಿರುಗುವ ಆತನ ವಾಗ್ದಾನ"
2 Peter 3:14
σπουδάσατε ἄσπιλοι καὶ ἀμώμητοι αὐτῷ εὑρεθῆναι
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಶ್ರದ್ಧೆಯಿಂದಿರಿ ಆಗ ದೇವರು ನಿಮ್ಮನ್ನು ನಿರ್ಮಲರು ಮತ್ತು ನಿರ್ದೋಷಿಗಳು ಎಂದು ಕಂಡುಕೊಳ್ಳುತ್ತಾನೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἄσπιλοι καὶ ἀμώμητοι
ನಿರ್ಮಲರು ಮತ್ತು * ನಿರ್ದೋಷಿಗಳು* ಎಂಬ ಪದಗಳು ಒಂದೇ ರೀತಿಯ ಅರ್ಥಗಳನ್ನು ಹಂಚಿಕೊಳ್ಳುತ್ತವೆ. ಒತ್ತು ನೀಡುವುದಕ್ಕಾಗಿ ಪೇತ್ರನು ಅವುಗಳನ್ನು ಒಟ್ಟಿಗೆ ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅವುಗಳನ್ನು ಒಂದೇ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಸಂಪೂರ್ಣವಾಗಿ ಶುದ್ಧವಾದದ್ದು” (ನೋಡಿ: ದ್ವಿರುಕ್ತಿಗಳು)
αὐτῷ
ಇಲ್ಲಿ, ಸರ್ವನಾಮ ಆತನು ಎಂಬುದು ಇವರನ್ನು ಸೂಚಿಸಬಹುದು: (1) ಯೇಸು. ಪರ್ಯಾಯ ಅನುವಾದ: "ಯೇಸುವಿನಿಂದ" (2) ದೇವರು. ಪರ್ಯಾಯ ಅನುವಾದ: “ದೇವರಿಂದ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
διό
ಪೇತ್ರನು ಈಗ ಹೇಳಿರುವುದರ ಪರಿಣಾಮವಾಗಿ ಅವನ ಓದುಗರು ಏನು ಮಾಡಬೇಕು ಎಂಬುದರ ವಿವರಣೆಯನ್ನು ಪರಿಚಯಿಸಲು ಆದ್ದರಿಂದ ಎಂಬ ಪದವನ್ನು ಬಳಸುತ್ತಾನೆ. ಅವನು 3:10–13 ನಲ್ಲಿ ನೀಡಲಾದ ಬರಲಿರುವ ಕರ್ತನ ದಿನದ ಚರ್ಚೆಯನ್ನು ನಿರ್ದಿಷ್ಟವಾಗಿ ಸೂಚಿಸುತ್ತಿದ್ದಾನೆ. ಪರ್ಯಾಯ ಅನುವಾದ: “ಈ ಕಾರಣಗಳಿಂದಾಗಿ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἀγαπητοί
ಇಲ್ಲಿ, ಪ್ರೀಯರೇ ಎಂಬುದು ಪೇತ್ರನು ಯಾರಿಗೆ ಬರೆಯುತ್ತಿದ್ದಾನೋ ಅವರನ್ನು ಸೂಚಿಸುತ್ತದೆ, ಇದನ್ನು ಎಲ್ಲಾ ವಿಶ್ವಾಸಿಗಳಿಗೂ ವಿಸ್ತರಿಸಬಹುದು. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ನೀವು ಇದನ್ನು 3:1 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ಪ್ರೀತಿಯ ಜೊತೆ ವಿಶ್ವಾಸಿಗಳು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ταῦτα
ಇಲ್ಲಿ, ಈ ವಿಷಯಗಳು ಎಂಬುದು ಬರಲಿರುವ ಕರ್ತನ ದಿನಕ್ಕೆ ಸಂಬಂಧಿಸಿದ ಘಟನೆಗಳನ್ನು ಸೂಚಿಸುತ್ತದೆ, ಇದನ್ನು ಪೇತ್ರನು 3:10–13 ನಲ್ಲಿ ವಿವರಿಸಿದ್ದಾನೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ ಕರ್ತನ ದಿನದಂದು ಈ ಸಂಗತಿಗಳು ಸಂಭವಿಸುತ್ತವೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἐν εἰρήνῃ
ಇಲ್ಲಿ, * ಶಾಂತಿಯಲ್ಲಿ* ಎಂಬುದು ಇವುಗಳನ್ನು ಸೂಚಿಸಬಹುದು: (1) ದೇವರೊಂದಿಗೆ ಶಾಂತಿಯನ್ನು ಹೊಂದಿರುವುದು. UST ಯಲ್ಲಿರುವಂತೆ ಪರ್ಯಾಯ ಅನುವಾದ: "ದೇವರೊಡನೆ ಶಾಂತಿಯಿಂದ" (2) ಒಬ್ಬರ ಹೃದಯದಲ್ಲಿ ಶಾಂತಿಯನ್ನು ಅನುಭವಿಸುವುದು. ಪರ್ಯಾಯ ಅನುವಾದ: "ನಿಮ್ಮ ಹೃದಯದಲ್ಲಿ ಶಾಂತಿಯೊಂದಿಗೆ"
2 Peter 3:15
τὴν τοῦ Κυρίου ἡμῶν μακροθυμίαν, σωτηρίαν ἡγεῖσθε
ಕರ್ತನು ತಾಳ್ಮೆಯಿಂದಿರುವ ಕಾರಣ, ನ್ಯಾಯತೀರ್ಪಿನ ದಿನ ಇನ್ನೂ ಸಂಭವಿಸಿಲ್ಲ. ಪೇತ್ರನು 3:9 ನಲ್ಲಿ ವಿವರಿಸಿದಂತೆ ಇದು ಜನರಿಗೆ ಪಶ್ಚಾತ್ತಾಪ ಪಡಲು ಮತ್ತು ರಕ್ಷಿಸಲ್ಪಡಲು ಅವಕಾಶವನ್ನು ನೀಡುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ನಮ್ಮ ಕರ್ತನ ತಾಳ್ಮೆಯನ್ನು ಪಶ್ಚಾತ್ತಾಪ ಪಡುವ ಮತ್ತು ರಕ್ಷಿಸಲ್ಪಡುವ ಅವಕಾಶವೆಂದು ಪರಿಗಣಿಸಿ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
κατὰ τὴν δοθεῖσαν αὐτῷ σοφίαν
ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಕ್ರಿಯೆಯನ್ನು ಮಾಡಿದವರು ಯಾರು ಎಂಬುದನ್ನು ನೀವು ಹೇಳಬಹುದು. ಪರ್ಯಾಯ ಅನುವಾದ: “ದೇವರು ಅವನಿಗೆ ನೀಡಿದ ಬುದ್ಧಿವಂತಿಕೆಯ ಪ್ರಕಾರ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τὴν τοῦ Κυρίου ἡμῶν μακροθυμίαν, σωτηρίαν ἡγεῖσθε
ನಿಮ್ಮ ಓದುಗರು ಅಮೂರ್ತ ನಾಮಪದಗಳಾದ ತಾಳ್ಮೆ ಮತ್ತು ರಕ್ಷಣೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅವುಗಳ ಹಿಂದಿನ ಆಲೋಚನೆಗಳನ್ನು ಸಮಾನ ಪದಗಳೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: "ನಮ್ಮ ಕರ್ತನು ಜನರನ್ನು ರಕ್ಷಿಸಲು ತಾಳ್ಮೆಯಿಂದಿದ್ದಾನೆ" (ನೋಡಿ: ಭಾವವಾಚಕ ನಾಮಪದಗಳು)
σωτηρίαν
ನಿಮ್ಮ ಓದುಗರು ಅಮೂರ್ತ ನಾಮಪದ ರಕ್ಷಣೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನ ಪದದೊಂಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಜನರನ್ನು ರಕ್ಷಿಸಲು” (ನೋಡಿ: ಭಾವವಾಚಕ ನಾಮಪದಗಳು)
ὁ ἀγαπητὸς ἡμῶν ἀδελφὸς Παῦλος
ಪೌಲನನ್ನು ಯೇಸುವಿನಲ್ಲಿ ಒಬ್ಬ ಜೊತೆ ವಿಶ್ವಾಸಿ ಎಂದು ಸೂಚಿಸಲು ಪೇತ್ರನು ಸಾಂಕೇತಿಕವಾಗಿ ಸಹೋದರ ಎಂಬ ಪದವನ್ನು ಬಳಸುತ್ತಿದ್ದಾನೆ. ಪರ್ಯಾಯ ಅನುವಾದ: “ನಮ್ಮ ಪ್ರೀತಿಯ ಜೊತೆ ಕ್ರೈಸ್ತ ಸಹೋದರ ಪೌಲ” (ನೋಡಿ: https://git.door43.org/STR/kn_ta/src/branch/master/translate/figs-metaphor/01.md)
κατὰ τὴν δοθεῖσαν αὐτῷ σοφίαν
ನಿಮ್ಮ ಓದುಗರು ಅಮೂರ್ತ ನಾಮಪದ ಬುದ್ಧಿವಂತಿಕೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ಬುದ್ಧಿವಂತ" ಎಂಬ ವಿಶೇಷಣದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: "ಅವರಿಗೆ ನೀಡಲಾದ ಬುದ್ಧಿವಂತ ಪದಗಳ ಪ್ರಕಾರ" (ನೋಡಿ: ಭಾವವಾಚಕ ನಾಮಪದಗಳು)
2 Peter 3:16
λαλῶν ἐν αὐταῖς περὶ τούτων
ಇಲ್ಲಿ, ಈ ವಿಷಯಗಳು ಎಂಬುದು ಇವುಗಳನ್ನು ಸೂಚಿಸಬಹುದು: (1) 3:10–13 ನಲ್ಲಿ ಚರ್ಚಿಸಲಾದ ಕರ್ತನ ದಿನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು “ಈ ವಿಷಯಗಳನ್ನು” ಎಂದು ಕರೆಯಲಾಗಿದೆ 3:14. ಪರ್ಯಾಯ ಅನುವಾದ: “ಕರ್ತನ ದಿನದಂದು ಈ ಸಂಗತಿಗಳು ಸಂಭವಿಸುತ್ತವೆ” (2) ಆತ್ಮೀಕ ಜೀವನವನ್ನು ನಡೆಸುವ ಅಗತ್ಯತೆ ಮತ್ತು ದೇವರ ತಾಳ್ಮೆಯು ಜನರನ್ನು ರಕ್ಷಿಸುವುದಕ್ಕಾಗಿದೆ ಎಂಬುದನ್ನು ಪರಿಗಣಿಸುತ್ತದೆ, ಇದನ್ನು3:14–15 ನಲ್ಲಿ ಚರ್ಚಿಸಲಾಗಿದೆ /14.md). ಪರ್ಯಾಯ ಅನುವಾದ: “ನಾನು ನಿರ್ದೋಷಿಯಾಗಿ ಬದುಕುವುದರ ಬಗ್ಗೆ ಮತ್ತು ದೇವರ ತಾಳ್ಮೆಯ ಬಗ್ಗೆ ಈ ವಿಷಯಗಳನ್ನು ಹೇಳಿದ್ದೇನೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
ἃ οἱ ἀμαθεῖς καὶ ἀστήρικτοι στρεβλοῦσιν
ಇಲ್ಲಿ, ಇದುಎಂಬುದು ಅರ್ಥಮಾಡಿಕೊಳ್ಳಲು ಕಷ್ಟಕರವಾದ ಪೌಲನ ಪತ್ರಗಳಲ್ಲಿನ ವಿಷಯಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು ಮತ್ತು ಹೊಸ ವಾಕ್ಯವನ್ನು ಪ್ರಾರಂಭಿಸಬಹುದು. ಪರ್ಯಾಯ ಅನುವಾದ: “ಅಜ್ಞಾನಿಗಳು ಮತ್ತು ಅಸ್ಥಿರರು ಪೌಲನ ಪತ್ರಗಳಲ್ಲಿ ಕಂಡುಬರುವ ಈ ಕಷ್ಟಕರ ವಿಷಯಗಳನ್ನು ವಿರೂಪಗೊಳಿಸುತ್ತಾರೆ” (ನೋಡಿ: ಸರ್ವನಾಮಗಳು- ಅದನ್ನು ಯಾವಾಗ ಉಪಯೋಗಿಸಬೇಕು.)
πρὸς τὴν ἰδίαν αὐτῶν ἀπώλειαν
ಇಲ್ಲಿ, ಕಡೆ ಎಂಬುದು ಈ ಷರತ್ತು “ಅಜ್ಞಾನಿಗಳು ಮತ್ತು ಅಸ್ಥಿರರು” ಪವಿತ್ರಶಾಸ್ತ್ರಗಳನ್ನು ತಪ್ಪಾಗಿ ಅರ್ಥೈಸುವ ಫಲಿತಾಂಶವನ್ನು ಒದಗಿಸುತ್ತಾರೆ ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ತಮ್ಮದೇ ಆದ ವಿನಾಶದ ಫಲಿತಾಂಶ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἐν πάσαις ταῖς ἐπιστολαῖς
ಇಲ್ಲಿ, ಪೌಲನು * ಪತ್ರಗಳ* ಲೇಖಕ ಎಂದು ಸಂದರ್ಭವು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಪೌಲನ ಎಲ್ಲಾ ಪತ್ರಗಳಲ್ಲಿ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἃ οἱ ἀμαθεῖς καὶ ἀστήρικτοι στρεβλοῦσιν
ಇಲ್ಲಿ, ವಿರೂಪಗೊಳಿಸು ಎಂಬುದನ್ನು ಸಾಂಕೇತಿಕವಾಗಿ ಹೇಳಿಕೆಯ ಅರ್ಥವನ್ನು ಬದಲಾಯಿಸುವುದನ್ನು ವಿವರಿಸಲು ಬಳಸಲಾಗುತ್ತದೆ, ಇದರಿಂದಾಗಿ ಏನನ್ನಾದರೂ ತಿರುಚಿದಂತೆ ತಪ್ಪು ಅರ್ಥವನ್ನು ನೀಡುತ್ತದೆ ಇದರಿಂದ ಅದು ಆಕಾರವನ್ನು ಬದಲಾಯಿಸುತ್ತದೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಅಜ್ಞಾನಿಗಳು ಮತ್ತು ಅಸ್ಥಿರರು ತಪ್ಪಾಗಿ ಅರ್ಥೈಸುತ್ತಾರೆ” (ನೋಡಿ: ರೂಪಕ ಅಲಂಕಾರ)
ὡς καὶ τὰς λοιπὰς Γραφὰς
ಇಲ್ಲಿ, ಇತರ ಗ್ರಂಥಗಳು ಎಂಬುದು ಸಂಪೂರ್ಣ ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ಪಠ್ಯಗಳನ್ನು ಸೂಚಿಸುತ್ತದೆ, ಅದು ಪೇತ್ರನು ಈ ಪತ್ರವನ್ನು ಬರೆದ ಸಮಯದಿಂದ ಬರೆಯಲ್ಪಟ್ಟಿದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಇತರ ಅಧಿಕೃತ ಗ್ರಂಥಗಳಂತೆ” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
πρὸς τὴν ἰδίαν αὐτῶν ἀπώλειαν
ನಿಮ್ಮ ಓದುಗರು ಅಮೂರ್ತ ನಾಮಪದ ವಿನಾಶ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಮೌಖಿಕ ನುಡಿಗಟ್ಟುಗಳೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಆದ್ದರಿಂದ ಅವರು ನಾಶವಾಗುತ್ತಾರೆ" (ನೋಡಿ: ಭಾವವಾಚಕ ನಾಮಪದಗಳು)
2 Peter 3:17
οὖν
ಇಲ್ಲಿ, ಪೇತ್ರನು ಅವನು ಹೇಳಿರುವುದರ ಪರಿಣಾಮವಾಗಿ ತನ್ನ ಓದುಗರು ಏನು ಮಾಡಬೇಕು ಎಂಬುದರ ವಿವರಣೆಯನ್ನು ಪರಿಚಯಿಸಲು ಆದ್ದರಿಂದ ಎಂಬ ಪದದನ್ನು ಬಳಸುತ್ತಾನೆ, ಅದು ಹೀಗಿರಬಹುದು: (1) ಹಿಂದಿನ ವಾಕ್ಯದಲ್ಲಿ ಸೂಚಿಸಲಾದ ಪವಿತ್ರಶಾಸ್ತ್ರಗಳನ್ನು ತಪ್ಪಾಗಿ ಅರ್ಥೈಸುವವರ ನಾಶನ. ಪರ್ಯಾಯ ಅನುವಾದ: “ಏಕೆಂದರೆ ಪವಿತ್ರಶಾಸ್ತ್ರಗಳನ್ನು ತಪ್ಪಾಗಿ ಅರ್ಥೈಸುವವರು ನಾಶವಾಗುತ್ತಾರೆ” (2) ಸಂಪೂರ್ಣ ಪತ್ರದ ಹಿಂದಿನ ವಿಷಯ, ವಿಶೇಷವಾಗಿ ಸುಳ್ಳು ಬೋಧಕರ ಖಚಿತವಾದ ನಾಶನ. ಪರ್ಯಾಯ ಅನುವಾದ: “ಈ ಎಲ್ಲಾ ವಿಷಯಗಳ ಕಾರಣದಿಂದ ನಾನು ನಿಮಗೆ ಹೇಳಿದ್ದೇನೆ”
τῇ τῶν ἀθέσμων πλάνῃ συναπαχθέντες
ಇಲ್ಲಿ, ಪೇತ್ರನು ಸಾಂಕೇತಿಕವಾಗಿ *ದಾರಿತಪ್ಪಿದ * ಎಂಬ ಪದವನ್ನು ಸಾಂಕೇತಿಕವಾಗಿ ಬಳಸುತ್ತಾನೆ, ಜನರು ನೇರ ಮಾರ್ಗದಿಂದ ದೂರ ಸರಿಯಲ್ಪಟ್ಟಂತೆ ದುಷ್ಟರಾಗಿ ಬದುಕಲು ಸುಳ್ಳು ಬೋಧಕರಿಂದ ತಮ್ಮನ್ನು ಮೋಸಗೊಳಿಸಿಕೊಳ್ಳುತ್ತಾರೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಅನುವಾದಿಸಬಹುದು. ಪರ್ಯಾಯ ಅನುವಾದ: “ಧರ್ಮಶಾಸ್ತ್ರವನ್ನು ನಿರ್ಲಕ್ಷ್ಹಿಸುವವರ ದೋಷದಿಂದ ದುಷ್ಟರಾಗಿ ಬದುಕಲು ಮೋಸಗೊಳಿಸಿಕೊಳ್ಳಲಾಗಿದೆ” (ನೋಡಿ: ರೂಪಕ ಅಲಂಕಾರ)
ἵνα μὴ…ἐκπέσητε τοῦ ἰδίου στηριγμοῦ
ಇಲ್ಲಿ, ಪೇತ್ರನು ಸಾಂಕೇತಿಕವಾಗಿ ತಾಳ್ಮೆ ಎಂಬ ಪದವನ್ನು ನಂಬುವವರು ಕಳೆದುಕೊಳ್ಳಬಹುದಾದ ಆಸ್ತಿಯಂತೆ ಮಾತನಾಡುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಇದರಿಂದ ನೀವು ದೃಡವಾಗಿರುವುದನ್ನು ನಿಲ್ಲಿಸಬಾರದು” (ನೋಡಿ: ರೂಪಕ ಅಲಂಕಾರ)
ἀγαπητοί
ಇಲ್ಲಿ, ಪ್ರಿಯರೇ ಎಂಬುದು ಪೇತ್ರನು ಯಾರಿಗೆ ಬರೆಯುತ್ತಿದ್ದಾನೋ ಅವರನ್ನು ಸೂಚಿಸುತ್ತದೆ, ಇದನ್ನು ಎಲ್ಲಾ ವಿಶ್ವಾಸಿಗಳಿಗೂ ವಿಸ್ತರಿಸಬಹುದು. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ನೀವು ಇದನ್ನು 3:1 ಮತ್ತು 3:14 ನಲ್ಲಿ ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ. ಪರ್ಯಾಯ ಅನುವಾದ: “ಪ್ರೀತಿಯ ಜೊತೆವಿಶ್ವಾಸಿಗಳು” (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
προγινώσκοντες
ಇಲ್ಲಿ, ಪೇತ್ರನು ತನ್ನ ಓದುಗರು ತನ್ನ ಆಜ್ಞೆಯನ್ನು ಮುಂದಿನ ನುಡಿಗಟ್ಟಿನಲ್ಲಿ ಏಕೆ ಪಾಲಿಸಬೇಕೆಂದು ಕಾರಣವನ್ನು ನೀಡುತ್ತಾನೆ. ಪರ್ಯಾಯ ಅನುವಾದ: “ನಿಮಗೆ ಮೊದಲೇ ತಿಳಿದಿರುವುದರಿಂದ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἵνα μὴ…ἐκπέσητε τοῦ ἰδίου στηριγμοῦ
ನಿಮ್ಮ ಓದುಗರು ಅಮೂರ್ತ ನಾಮಪದ ದೃಢತೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ಸ್ಥಿರ" ಎಂಬ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಇದರಿಂದ ನೀವು ನಿಮ್ಮ ಸ್ವಂತ ಸ್ಥಿರವಾದ ನಂಬಿಕೆಯನ್ನು ಕಳೆದುಕೊಳ್ಳಬಾರದು" (ನೋಡಿ: https://git.door43.org/STR/kn_ta/src/branch/master/translate/figs-abstractnouns/01.md)
τῇ τῶν ἀθέσμων πλάνῃ συναπαχθέντες
ಜನರು ತಮ್ಮದೇ ಆದ ಸ್ಥಿರತೆಯನ್ನು ಕಳೆದುಕೊಳ್ಳುವ ಕಾರಣವನ್ನು ಈ ಷರತ್ತು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಧರ್ಮಶಾಸ್ತ್ರವನ್ನು ನಿರ್ಲಕ್ಷ್ಹಿಸುವವರ ದೋಷದಿಂದ ದಾರಿತಪ್ಪಿದ ಕಾರಣ” (ನೋಡಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
τῇ τῶν ἀθέσμων πλάνῃ συναπαχθέντες
ನಿಮ್ಮ ಓದುಗರು ಈ ನಿಷ್ಕ್ರಿಯ ನುಡಿಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಧರ್ಮಶಾಸ್ತ್ರವನ್ನು ನಿರ್ಲಕ್ಷ್ಹಿಸುವವರ ದೋಷವು ನಿಮ್ಮನ್ನು ದಾರಿತಪ್ಪಿಸಿದೆ” (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τῇ τῶν ἀθέσμων πλάνῃ
ಈ ನುಡಿಗಟ್ಟು ಒಬ್ಬ ವ್ಯಕ್ತಿಯನ್ನು ದಾರಿತಪ್ಪಿಸುವ ವಿಧಾನಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ಧರ್ಮಶಾಸ್ತ್ರವನ್ನು ನಿರ್ಲಕ್ಷ್ಹಿಸುವವರ ದೋಷದ ಮೂಲಕ"
2 Peter 3:18
χάριτι
ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದ ಕೃಪೆ ಎಂಬುದನ್ನು ಸಮಾನ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ದಯೆಯ ಕ್ರಿಯೆಗಳು” (ನೋಡಿ: ಭಾವವಾಚಕ ನಾಮಪದಗಳು)
αὐξάνετε…ἐν χάριτι, καὶ γνώσει τοῦ Κυρίου ἡμῶν καὶ Σωτῆρος, Ἰησοῦ Χριστοῦ
ಇಲ್ಲಿ, ಬೆಳೆ ಎಂಬ ಪದವನ್ನು ಅನುಭವವನ್ನು ವ್ಯಕ್ತಪಡಿಸಲು ಅಥವಾ ಹೆಚ್ಚುತ್ತಿರುವ ಪ್ರಮಾಣದಲ್ಲಿ ಏನನ್ನಾದರೂ ಹೊಂದಲು ಸಾಂಕೇತಿಕವಾಗಿ ಬಳಸಲಾಗುತ್ತದೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಕೃಪೆಯನ್ನು ಮತ್ತು ಜ್ಞಾನವನ್ನು ಹೆಚ್ಚು ಹೆಚ್ಚು ಹೊಂದಿರಿ” (ನೋಡಿ: ರೂಪಕ ಅಲಂಕಾರ)
ἐν χάριτι, καὶ γνώσει
ಇಲ್ಲಿ, ರಲ್ಲಿ ಎಂದರೆ "ಸಂಬಂಧಿಸಿದಂತೆ" ಎಂದರ್ಥ. ಪರ್ಯಾಯ ಅನುವಾದ: "ಕೃಪೆಗೆ ಮತ್ತು ಜ್ಞಾನಕ್ಕೆ ಸಂಬಂಧಿಸಿದಂತೆ"
γνώσει
ನಿಮ್ಮ ಓದುಗರು ಅಮೂರ್ತ ನಾಮಪದ ಜ್ಞಾನ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದನ್ನು ಸಮಾನ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ನಿಮಗೆ ಏನು ಗೊತ್ತು” (ನೋಡಿ: ಭಾವವಾಚಕ ನಾಮಪದಗಳು)
τοῦ Κυρίου ἡμῶν καὶ Σωτῆρος
ಇಲ್ಲಿ, ನಮ್ಮ ಕರ್ತನು ಎಂದರೆ "ನಮ್ಮ ಮೇಲೆ ಅಧಿಪತಿಯಾಗಿರುವ ವ್ಯಕ್ತಿ" ಅಥವಾ "ನಮ್ಮನ್ನು ಆಳುವ ವ್ಯಕ್ತಿ" ಎಂದರ್ಥ. ಸಂಯೋಗ ಮತ್ತು ನಮ್ಮದು * ರಕ್ಷಕ* ಗೂ ಅನ್ವಯಿಸುತ್ತದೆ ಎಂದು ಸೂಚಿಸುತ್ತದೆ, ಅಂದರೆ "ನಮ್ಮನ್ನು ರಕ್ಷಿಸುವ ವ್ಯಕ್ತಿ." ನಿಮ್ಮ ಅನುವಾದದಲ್ಲಿ ಈ ಎರಡೂ ನುಡಿಗಟ್ಟುಗಳನ್ನು ನೀವು ಸೇರಿಸಿದರೆ, ನಂತರ ನೀವು ಎರಡನೇ ನುಡಿಗಟ್ಟಿನ ಕೊನೆಯಲ್ಲಿ ಅಲ್ಪವಿರಾಮವನ್ನು ಹಾಕಬೇಕಾಗುತ್ತದೆ. ಪರ್ಯಾಯ ಅನುವಾದ: “ನಮ್ಮನ್ನು ಆಳುವ ಮತ್ತು ನಮ್ಮನ್ನು ರಕ್ಷಿಸುವ ವ್ಯಕ್ತಿಯ,” (ನೋಡಿ: ಸ್ವಾದೀನ)
αὐτῷ ἡ δόξα
ನಿಮ್ಮ ಓದುಗರು ಅಮೂರ್ತ ನಾಮಪದ ಮಹಿಮೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದನ್ನು ಸಮಾನವಾದ ಪದದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಪ್ರತಿಯೊಬ್ಬರೂ ಆತನನ್ನು ಮಹಿಮೆ ಪಡಿಸಲಿ” (ನೋಡಿ: ಭಾವವಾಚಕ ನಾಮಪದಗಳು)
εἰς ἡμέραν αἰῶνος
ಇಲ್ಲಿ, ಯುಗದ ದಿನದವರೆಗೆ ಎಂಬುದು ಒಂದು ಭಾಷಾವೈಶಿಷ್ಟ್ಯವು "ಶಾಶ್ವತವಾಗಿ" ಎಂದರ್ಥ. ನಿಮ್ಮ ಓದುಗರು ಈ ಭಾಷಾವೈಶಿಷ್ಟ್ಯವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಸಮಾನವಾದ ಭಾಷಾವೈಶಿಷ್ಟ್ಯವನ್ನು ಬಳಸಬಹುದು ಅಥವಾ ಸರಳ ಭಾಷೆಯನ್ನು ಬಳಸಬಹುದು. ಪರ್ಯಾಯ ಅನುವಾದ: "ನಿತ್ಯತ್ವಕ್ಕೆ" ಅಥವಾ "ಶಾಶ್ವತವಾಗಿ" (ನೋಡಿ: ನುಡಿಗಟ್ಟುಗಳು.)