Titus
Titus front
ತೀತನಿಗೆ ಬರೆದ ಪತ್ರಿಕೆಯ ಪೀಠಿಕೆ
ಭಾಗ 1: ಸಾಮಾನ್ಯ ಪೀಠಿಕೆ
ತೀತನ ಪುಸ್ತಕದ ಹೊರರೇಖೆ
- ಪೌಲನು ತೀತನಿಗೆ ದೈವಭಕ್ತಿಯುಳ್ಳ ನಾಯಕರನ್ನು ನೇಮಿಸುವಂತೆ ಆಜ್ಞಾಪಿಸುತ್ತಾನೆ (1:1-16)
- ಜನರು ದೈವಭಕ್ತಿಯುಳ್ಳ ಜೀವನವನ್ನು ನಡೆಸಲು ತರಬೇತಿ ನೀಡಬೇಕೆಂದು ತೀತನಿಗೆ ಪೌಲನು ಆಜ್ಞಾಪಿಸುತ್ತಾನೆ (2:1-3:11)
- ಪೌಲನು ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅನೇಕ ವಿಶ್ವಾಸಿಗಳಿಗೆ ವಂದನೆಗಳನ್ನೂ ಹೇಳುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಾನೆ (3:12-15)
ತೀತನ ಪುಸ್ತಕವನ್ನು ಬರೆದವರು ಯಾರು?
ಪೌಲನು ತೀತನ ಪುಸ್ತಕವನ್ನು ಬರೆದನು. ಪೌಲನು ತಾರ್ಸಾ ಪಟ್ಟಣದವನು. ಅವನ ಜೀವನದ ಆದಿಭಾಗದಲ್ಲಿ ಅವನು ಸೌಲನೆಂದು ಅರಿಯಲ್ಪಟ್ಟಿದ್ದನು. ಕ್ರೈಸ್ತನಾಗುವ ಮೊದಲು ಪೌಲನು ಒಬ್ಬ ಫರಿಸಾಯನಾಗಿದ್ದನು. ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದರೆ ಅವನು ಕ್ರೈಸ್ತನಾದ ಮೇಲೆ ಜನರಿಗೆ ಯೇಸುವಿನ ಬಗ್ಗೆ ಹೇಳುತ್ತಾ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಅನೇಕ ಸಲ ಪ್ರಯಾಣಿಸಿದನು.
ತೀತನ ಪುಸ್ತಕದಲ್ಲಿ ಯಾವುದರ ಬಗ್ಗೆ ತಿಳಿಸಿದೆ?
ಪೌಲನು ಈ ಪತ್ರಿಕೆಯನ್ನು ತನ್ನ ಜೊತೆಗೆಲಸದವನಾದ ತೀತನಿಗೆ ಬರೆದನು, ತೀತನು ಕ್ರೇತಾ ದ್ವೀಪದಲ್ಲಿದ್ದ ಸಭೆಗಳ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಸಭೆಯ ನಾಯಕರನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಕುರಿತು ಪೌಲನು ಸೂಚನೆಗಳನ್ನು ನೀಡಿದನು. ವಿಶ್ವಾಸಿಗಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಪೌಲನು ವಿವರಿಸಿದನು. ದೇವರಿಗೆ ಮೆಚ್ಚುಗೆಯಾಗುವಂತೆ ಜೀವನ ನಡೆಸಬೇಕು ಎಂದು ಅವನು ಅವರೆಲ್ಲರನ್ನು ಪ್ರೋತ್ಸಾಹಿಸಿದನು.
ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬೇಕು?
ಭಾಷಾಂತರಕಾರರು ಈ ಪುಸ್ತಕದ ಶೀರ್ಷಿಕೆಯನ್ನು ಸಾಂಪ್ರದಾಯಿಕವಾಗಿ ಹೇಳುವಂತೆ ತೀತ ಎಂದು ಭಾಷಾಂತರಿಸಬಹುದು. ಅಥವಾ ಪೌಲನು ತೀತನಿಗೆ ಬರೆದ ಪತ್ರ ಅಥವಾ ತೀತನಿಗೆ ಒಂದು ಪತ್ರ ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಳ್ಳಬಹುದು. (ನೋಡಿರಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
ಭಾಗ 2: ಪ್ರಮುಖವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು
ಸಭೆಯಲ್ಲಿ ಜನರು ಯಾವ ವಿಭಿನ್ನ ಕರ್ತವ್ಯಗಳಲ್ಲಿ/ಪಾತ್ರಗಳಲ್ಲಿ ಸೇವೆ ಮಾಡಬಹುದು?
ತೀತನ ಪುಸ್ತಕದಲ್ಲಿ ಸಭೆಯಲ್ಲಿ ಸ್ತ್ರೀಯು ಅಥವಾ ವಿವಾಹ ವಿಚ್ಛೇದನ ಪಡೆದ ಪುರುಷನು ನಾಯಕ ಸ್ಥಾನದಲ್ಲಿ ಸೇವೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಅನೇಕ ಬೋಧನೆಗಳಿವೆ. ವಿದ್ವಾಂಸರು ಇಂತಹ ಬೋಧನೆಗಳ ಅರ್ಥದ ಬಗ್ಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಭಾಷಾಂತರ ಮಾಡುವ ಮೊದಲು ಇಂತಹ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದು ಉತ್ತಮ.
ಭಾಗ 3: ಭಾಷಾಂತರದ ಪ್ರಮುಖ ಸಮಸ್ಯೆಗಳು
ಏಕವಚನ ಮತ್ತು ಬಹುವಚನ ನೀನು
ಈ ಪುಸ್ತಕದಲ್ಲಿ ನಾನು ಎಂಬ ಪದ ಪೌಲನನ್ನು ಸೂಚಿಸುತ್ತದೆ. ನೀನು ಎಂಬ ಪದ ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ. ಇದು 3:15 ಅದಕ್ಕೆ ಹೊರತಾದದ್ದು ಆಗಿದೆ. (ನೋಡಿರಿ: [[https://git.door43.org/translationCore-Create-BCS/knta/src/branch/master/translate/figs-exclusive\/01.md]] ಮತ್ತು [[https://git.door43.org/translationCore-Create-BCS/knta/src/branch/master/translate/figs-you\/01.md]])
ನಮ್ಮ ರಕ್ಷಕನಾದ ದೇವರು ಎಂಬುದರ ಅರ್ಥವೇನು?
ಈ ಪತ್ರಿಕೆಯಲ್ಲಿ ಇದೊಂದು ಸಾಮಾನ್ಯ ಪದಗುಚ್ಛವಾಗಿದೆ. ದೇವರು ತನ್ನ ವಿರುದ್ಧ ಪಾಪಮಾಡಿದವರನ್ನು ಕ್ರಿಸ್ತನಲ್ಲಿ ಹೇಗೆ ಕ್ಷಮಿಸಿದನು ಎಂಬುದರ ಬಗ್ಗೆ ಮತ್ತು ದೇವರು ಎಲ್ಲ ಜನರಿಗೆ ನ್ಯಾಯತೀರ್ಪುಮಾಡುವಾಗ ಶಿಕ್ಷೆಯಿಂದ ಇವರನ್ನು ಕ್ಷಮಿಸುವುದರ ಮೂಲಕ ಹೇಗೆ ರಕ್ಷಿಸಿದ ಎಂಬುದನ್ನು ಓದುಗರನ್ನು ಅಲೋಚಿಸುವಂತೆ ಮಾಡಲು ಪೌಲನು ಇದರ ಮೂಲಕ ಉದ್ದೇಶಿಸಿದನು. ಇದೇ ರೀತಿಯ ಇನ್ನೊಂದು ಪದಗುಚ್ಛ ಈ ಪ್ರತಿಕೆಯಲ್ಲಿ ಬರುತ್ತದೆ, ಅದು ನಮ್ಮ ಮಹೋನ್ನತ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು ಎಂಬುದು.
Titus 1
ತೀತ 01 ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆ
ಪೌಲನು ಈ ಪತ್ರಿಕೆಯನ್ನು 1-4 ವಾಕ್ಯಗಳಲ್ಲಿ ಸಾಂಪ್ರಾದಾಯಿಕವಾಗಿ ಪರಿಚಯಿಸುತ್ತಾನೆ. ಪುರಾತನಕಾಲದ ಪೂರ್ವದೇಶದಲ್ಲಿ ಸಾಮಾನ್ಯವಾಗಿ ಲೇಖಕರು ಪತ್ರಗಳನ್ನು ಈ ರೀತಿ ಪ್ರಾರಂಭಿಸುತ್ತಿದ್ದರು
ಸಭೆಯ ಹಿರಿಯರಾಗಿ ಸೇವೆ ಸಲ್ಲಿಸಲು ಹೊಂದಿರಬೇಕಾದ ಅನೇಕ ಗುಣಲಕ್ಷಣಗಳನ್ನು ಪೌಲನು 6-9 ವಾಕ್ಯಗಳಲ್ಲಿ ಪಟ್ಟಿಮಾಡಿ ತಿಳಿಸುತ್ತಾನೆ. (ನೋಡಿರಿ: https://git.door43.org/translationCore-Create-BCS/kn_ta/src/branch/master/translate/figs-abstractnouns/01.md) ಪೌಲನು ಇದೇ ರೀತಿಯ ಪಟ್ಟಿಯನ್ನು 1 ತಿಮೊಥೆ 3 ರಲ್ಲಿ ನೀಡುತ್ತಾನೆ.
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ಹಿರಿಯರು
ಸಭೆಯು ಸಭೆಯ ನಾಯಕರಿಗಾಗಿ ವಿಭಿನ್ನವಾದ ಶಿರೋನಾಮಗಳನ್ನು ಉಪಯೋಗಿಸಿದೆ. ಅಧ್ಯಕ್ಷ/ಮೇಲ್ವಿಚಾರಕ, ಹಿರಿಯ, ಸಭಾಪಾಲಕ ಮತ್ತು ಸಭಾಧ್ಯಕ್ಷ/ಬಿಷಪ್ ಎಂಬ ಅನೇಕ ಶಿರೋನಾಮಗಳು ಅದರಲ್ಲಿ ಒಳಗೊಂಡಿವೆ.
ಈ ಅಧ್ಯಾಯದಲ್ಲಿನ ಇತರ ಭಾಷಾಂತರ ಕ್ಲಿಷ್ಟತೆಗಳು
ಷುಡ್/ಬೇಕು, ಮೇ/ಬಹುಶಃ, ಮಸ್ಟ್/ಮಾಡಲೇ ಬೇಕು
ಯು.ಎಲ್.ಟಿ.ಯಲ್ಲಿ ಅಗತ್ಯಕಾರ್ಯಗಳ ಅಥವಾ ಅನಿವಾರ್ಯತೆಗಳ ಬಗ್ಗೆ ಹೇಳಲು ವಿವಿಧ ಪದಗಳನ್ನು ಬಳಸಲಾಗಿದೆ. ಈ ಕ್ರಿಯಾಪದಗಳಲ್ಲಿ ವಿವಿಧ ಹಂತದ ಬಲಪ್ರಯೋಗ ಇದೆ. ಕೆಲವು ಸೂಕ್ಷ್ಮವಾದ ವಿಭಿನ್ನತೆಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಯು.ಎಸ್.ಟಿ.ಯಲ್ಲಿ ಈ ಕ್ರಿಯಾಪದಗಳನ್ನು ಸಾಮಾನ್ಯ ರೀತಿಯಲ್ಲಿ ಭಾಷಾಂತರಿಸಬಹುದು.
Titus 1:1
κατὰ πίστιν
ನಂಬಿಕೆ ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ.
ἐπίγνωσιν
ಜ್ಞಾನ ಎಂಬುದು ಭಾವವಾಚಕ ನಾಮಪದವಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿರುವುದಾದರೆ, ಯುಎಸ್‌ಟಿಯಲ್ಲಿರುವಂತೆ "ತಿಳಿದುಕೊಳ್ಳಲು" ಎಂಬಂಥ ಕ್ರಿಯಾಪದವನ್ನು ನೀವು ಬಳಸಬಹುದು. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ. (ನೋಡಿರಿ: ಭಾವವಾಚಕ ನಾಮಪದಗಳು)
ἀληθείας
ಸತ್ಯ ಎಂಬುದು ಭಾವವಾಚಕ ನಾಮಪದವಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿರುವುದಾದರೆ, "ಸತ್ಯವಾಗಿರುವಂಥದ್ದನ್ನು" ಅಥವಾ "ಸತ್ಯ ಸಂದೇಶವನ್ನು" ಎಂಬಂಥ ಗುಣವಾಚಕವನ್ನು ನೀವು ಬಳಸಬಹುದು. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ. (ನೋಡಿರಿ: ಭಾವವಾಚಕ ನಾಮಪದಗಳು)
τῆς κατ’ εὐσέβειαν
ಭಕ್ತಿ ಎಂಬುದು ಭಾವವಾಚಕ ನಾಮಪದವಾಗಿದೆ, ಇದು ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಜೀವಿಸಬೇಕೆಂಬುದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ಇದು ದೇವರನ್ನು ಗೌರವಿಸಲು ಸೂಕ್ತವಾದದ್ದು" (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-abstractnouns\/01.md]])
Titus 1:2
ἐπ’ ἐλπίδι ζωῆς αἰωνίου
"ಇದು ನಮಗೆ ನಿತ್ಯಜೀವದ ಕುರಿತು ನಿಶ್ಚಿತವಾದ ನಿರೀಕ್ಷೆಯನ್ನು ಕೊಡುತ್ತದೆ" ಅಥವಾ "ನಿತ್ಯಜೀವಕ್ಕಾಗಿರುವ ನಮ್ಮ ನಿಶ್ಚಿತವಾದ ನಿರೀಕ್ಷೆಯನ್ನು ಆಧರಿಸಿದೆ"
πρὸ χρόνων αἰωνίων
"ಅನಾದಿ ಕಾಲಗಳಿಗಿಂತ ಮುಂಚೆ"
Titus 1:3
καιροῖς ἰδίοις
"ಸೂಕ್ತವಾದ ಸಮಯದಲ್ಲಿ"
ἐφανέρωσεν ... τὸν λόγον αὐτοῦ
ಪೌಲನು ದೇವರ ವಾಕ್ಯವನ್ನು ಕುರಿತು ಮಾತನಾಡುವಾಗ ಅದನ್ನು ಜನರಿಗೆ ತೋರಿಸಲ್ಪಡುವ ಕಣ್ಣಿಗೆ ಕಾಣುವ ವಸ್ತುವೋ ಎಂಬಂತೆ ಮಾತನಾಡಿದನು. ಪರ್ಯಾಯ ಭಾಷಾಂತರ: "ಅವನು ಆತನ ಸಂದೇಶವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದನು" (ನೋಡಿರಿ: ರೂಪಕ ಅಲಂಕಾರ)
ἐν κηρύγματι
“ಸಂದೇಶದ ಸಾರೋಣದ ಮೂಲಕವಾಗಿ”
ὃ ἐπιστεύθην ἐγὼ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-activepassive\/01.md]])
τοῦ Σωτῆρος ἡμῶν Θεοῦ
"ನಮ್ಮನ್ನು ರಕ್ಷಿಸುವ ದೇವರ"
ἡμῶν
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
Titus 1:4
γνησίῳ τέκνῳ
ತೀತನು ಪೌಲನ ಜೈವಿಕ ಮಗನು ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: ರೂಪಕ ಅಲಂಕಾರ)
κοινὴν πίστιν
ಪೌಲನು ಮತ್ತು ತೀತನು ಕ್ರಿಸ್ತನಲ್ಲಿರುವ ಒಂದೇ ನಂಬಿಕೆಯ ಭಾಗಿಗಳಾಗಿದ್ದಾರೆ. ಪರ್ಯಾಯ ಭಾಷಾಂತರ: "ನಾವಿಬ್ಬರೂ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದ್ದರಿಂದ"
χάρις καὶ εἰρήνη
ಇದು ಪೌಲನು ಯಾವಾಗಲೂ ಉಪಯೋಗಿಸುತ್ತಿದ್ದ ಸಾಮಾನ್ಯವಾದ ವಂದನೆಯಾಗಿದೆ. ಅರ್ಥವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: "ಕರುಣೆಯನ್ನು ಮತ್ತು ಮನಃಶಾಂತಿಯನ್ನು ಅನುಭವಿಸುವವರಾಗಿರಿ" (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-ellipsis\/01.md]])
Χριστοῦ Ἰησοῦ τοῦ Σωτῆρος ἡμῶν
"ನಮ್ಮ ರಕ್ಷಕನಾದ ಕ್ರಿಸ್ತ ಯೇಸು"
ἡμῶν
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
Titus 1:5
τούτου χάριν
ಈ ಉದ್ದೇಶದಿಂದ ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (ನೋಡಿರಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
ἀπέλιπόν σε ἐν Κρήτῃ
"ನೀನು ಕ್ರೇತ ದ್ವೀಪದಲ್ಲೇ ಇರಬೇಕೆಂದು ನಾನು ನಿನಗೆ ಹೇಳಿದೆನು"
ἵνα τὰ λείποντα ἐπιδιορθώσῃ
"ಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು"
καταστήσῃς ... πρεσβυτέρους
"ಹಿರಿಯರನ್ನು ನೇಮಿಸು" ಅಥವಾ "ಹಿರಿಯರನ್ನು ನಿಯೋಜಿಸು"
πρεσβυτέρους
ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ.
Titus 1:6
ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ.
εἴ τίς ἐστιν ἀνέγκλητος ... ἀνήρ
ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” ದೋಷರಹಿತನು ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
ἀνέγκλητος
ದೋಷರಹಿತನು ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ನಿಂದಾರಹಿತನು” ಇದನ್ನು ಸಕಾರಾತ್ಮಕವಾಗಿಯೂ ಸಹ ಹೇಳಬಹುದು: “ಒಳ್ಳೆಯ ಖ್ಯಾತಿ ಪಡೆದಿರುವ ವ್ಯಕ್ತಿ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)
μιᾶς γυναικὸς ἀνήρ
ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τέκνα ... πιστά
ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು
Titus 1:7
τὸν ἐπίσκοπον
ಇದು ಪೌಲನು 1:5 ರಲ್ಲಿ "ಹಿರಿಯರು" ಎಂದು ಸೂಚಿಸಿರುವ ಅದೇ ಆತ್ಮಿಕ ನಾಯಕತ್ವದ ಸ್ಥಾನಕ್ಕೆ ಸಮಾನವಾದ ಇನ್ನೊಂದು ನಾಮಧೇಯವಾಗಿದೆ. ಈ ಪದವು ಹಿರಿಯರ ಕಾರ್ಯಭಾರವನ್ನು ಸೂಚಿಸುತ್ತದೆ: ಅವನು ಸಭೆಯ ಕೆಲಸಕಾರ್ಯಗಳ ಮತ್ತು ಜನರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ.
Θεοῦ οἰκονόμον
ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-metaphor\/01.md]])
μὴ πάροινον
"ಅವನು ಮದ್ಯವ್ಯಸನಿಯಾಗಿರಬಾರದು" ಅಥವಾ "ಅತಿ ಹೆಚ್ಚು ಕುಡಿಯುವವನಾಗಿರಬಾರದು"
μὴ πλήκτην
"ಹೊಡೆದಾಡುವವನಾಗಿರಬಾರದು" ಅಥವಾ "ಜಗಳವಾಡಲು ಬಯಸುವವನಾಗಿರಬಾರದು"
Titus 1:8
ἀλλὰ
ಬದಲಾಗಿ ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/grammar-connect-logic-contrast\/01.md]])
φιλάγαθον
"ಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ"
σώφρονα…ἐγκρατῆ
ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: ದ್ವಿರುಕ್ತಿಗಳು)
δίκαιον, ὅσιον
ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: ದ್ವಿರುಕ್ತಿಗಳು)
Titus 1:9
ἀντεχόμενον
ಕ್ರೈಸ್ತ ನಂಬಿಕೆಯ ಬಗ್ಗೆ ಇರುವ ಭಕ್ತಿಯ ಕುರಿತು ಒಬ್ಬನು ಕೈಗಳಿಂದ ನಂಬಿಕೆಯನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಪೌಲನು ಮಾತನಾಡುತ್ತಾನೆ. ಪರ್ಯಾಯ ಭಾಷಾಂತರ: ಸ್ವಸ್ಥ ಬೋಧನೆಯನ್ನು ಜನರು ಸ್ವೀಕರಿಸುವ ಬಗ್ಗೆಯೂ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಅವನು ಭಕ್ತಿವಂತನಾಗಿರಬೇಕು” ಅಥವಾ "ಅವನು ಚೆನ್ನಾಗಿ ತಿಳಿದವನಾಗಿರಬೇಕು" (ನೋಡಿರಿ: ರೂಪಕ ಅಲಂಕಾರ)
κατὰ τὴν διδαχὴν
“ನಾವು ಅವನಿಗೆ ಬೋಧಿಸಿದ ವಿಷಯಗಳಿಗೆ ಅನುಸಾರವಾಗಿರುವ”
τῇ διδασκαλίᾳ τῇ ὑγιαινούσῃ
ಸ್ವಸ್ಥ ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ.
ἵνα
ಆದ್ದರಿಂದ ಎಂಬ ಸಂಯೋಜಿಸುವ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕಾರಣವೇನಂದರೆ (ಹಿರಿಯರು ಇತರರಿಗೆ ಸಹಾಯ ಮಾಡಬಹುದು) ಹಿರಿಯರು ವಿಶ್ವಾಸಯೋಗ್ಯವಾದ ಸಂದೇಶವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬಹುದು, ಮತ್ತು ಇದರ ಫಲಿತಾಂಶವೇನಂದರೆ ಹಿರಿಯನು ಇತರರನ್ನು ಪ್ರೋತ್ಸಾಹಿಸಲು ಮತ್ತು ಅವನನ್ನು ವಿರೋಧಿಸುವವರನ್ನು ಗದರಿಸಲು ಸಾಧ್ಯವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟುಗಳ ಕ್ರಮವನ್ನು ಹಿಂದುಮುಂದಾಗಿಸಬಹುದು, ಅವುಗಳನ್ನು “ಏಕೆಂದರೆ” ಎಂಬುದರೊಂದಿಗೆ ಸಂಯೋಜಿಸಬಹುದು. (ನೋಡಿರಿ: ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ)
Titus 1:10
ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ.
ἀνυπότακτοι
ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ ಟೊಳ್ಳು ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು ಟೊಳ್ಳು ಮಾತಿನವರು ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-metaphor\/01.md]])
ματαιολόγοι, καὶ φρεναπάται
ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು”
ματαιολόγοι, καὶ φρεναπάται
ಟೊಳ್ಳು ಮಾತಿನವರು ಮತ್ತು ವಂಚಕರು ಎಂಬ ಇವೆರಡೂ ಪದಗಳು ಒಬ್ಬರನ್ನೇ ಸೂಚಿಸುತ್ತವೆ. ಅವರು ಸುಳ್ಳಾದ, ನಿಷ್ಪ್ರಯೋಜಕವಾದ ವಿಷಯಗಳನ್ನು ಬೋಧಿಸುತ್ತಾರೆ ಮತ್ತು ಜನರು ತಮ್ಮನ್ನು ನಂಬಬೇಕೆಂದು ಅವರು ಬಯಸುತ್ತಾರೆ. (ನೋಡಿರಿ: ದ್ವಿಪದಾಲಂಕಾರ)
οἱ ἐκ τῆς περιτομῆς
ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: INVALID translate/figs-metonymy)
Titus 1:11
οὓς δεῖ ἐπιστομίζειν
"ಅವರು ತಮ್ಮ ಬೋಧನೆಗಳು ಹರಡದಂತೆ ನೀನು ಅವರನ್ನು ತಡೆಯಬೇಕು" ಅಥವಾ "ಅವರು ತಮ್ಮ ಮಾತುಗಳ ಮೂಲಕ ಜನರ ಮೇಲೆ ಪ್ರಭಾವಬೀರದಂತೆ ಯಾರಾದರೂ ಅವರನ್ನು ತಡೆಯಬೇಕು"
ἃ μὴ δεῖ
ಕ್ರಿಸ್ತನ ಮತ್ತು ಧರ್ಮಶಾಸ್ತ್ರದ ಕುರಿತು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದವುಗಳಲ್ಲ.
αἰσχροῦ κέρδους χάριν
ಇದು ಅಗೌರವವಾದ ಕಾರ್ಯಗಳನ್ನು ಮಾಡಿ ಲಾಭ ಪಡೆಯುತ್ತಿರುವ ಜನರ ಕುರಿತಾಗಿ ಮಾತನಾಡುತ್ತದೆ.
ὅλους οἴκους ἀνατρέπουσιν
ಅವರು ಇಡೀ ಮನೆಯವರನ್ನು ಹಾಳು ಮಾಡುತ್ತಿದ್ದಾರೆ. ಅವರು ಕುಟುಂಬಗಳನ್ನು ಸತ್ಯದಿಂದ ದೂರಮಾಡುತ್ತಿದ್ದಾರೆ ಮತ್ತು ಅವರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ ಎಂಬುದು ಸಮಸ್ಯೆಯಾಗಿತ್ತು.
Titus 1:12
τις ἐξ αὐτῶν ἴδιος αὐτῶν προφήτης
"ಸ್ವತಃ ಕ್ರೇತ ದ್ವೀಪದ ಜನರೇ ಪ್ರವಾದಿಯೆಂದು ಪರಿಗಣಿಸಿರುವ"
Κρῆτες ἀεὶ ψεῦσται
"ಕ್ರೇತ ದ್ವೀಪದವರು ಯಾವಾಗಲೂ ಸುಳ್ಳು ಹೇಳುವವರು". ಇದೊಂದು ಉತ್ಪ್ರೇಕ್ಷೆಯಾಗಿದೆ ಇದರ ಅರ್ಥವೇನಂದರೆ ಕ್ರೇತ ದ್ವೀಪದವರು ಸುಳ್ಳುಗಾರರು ಎಂಬ ಅಪಖ್ಯಾತಿಯುಳ್ಳವರಾಗಿದ್ದಾರೆ. (ನೋಡಿರಿ: ಅತಿಶಯೋಕ್ತಿ)
κακὰ θηρία
ಈ ರೂಪಕವು ಕ್ರೇತ ದ್ವೀಪದ ಜನರನ್ನು ಅಪಾಯಕಾರಿಯಾದ ಕಾಡು ಮೃಗಗಳಿಗೆ ಹೋಲಿಸುತ್ತದೆ. ಪರ್ಯಾಯ ಭಾಷಾಂತರ: “ಕಾಡು ಪ್ರಾಣಿಗಳಂತೆ ಅಪಾಯಕಾರಿಯಾದವರು” (ನೋಡಿರಿ: ರೂಪಕ ಅಲಂಕಾರ)
γαστέρες ἀργαί
ಯಾವಾಗಲೂ ತಿನ್ನುವಂಥ ವ್ಯಕ್ತಿಯನ್ನು ಸೂಚಿಸಲು ಆಹಾರವನ್ನು ಶೇಖರಿಸಿಡುವಂಥ ದೇಹದ ಅಂಗವನ್ನು ಬಳಸಲಾಗಿದೆ. ಪರ್ಯಾಯ ಭಾಷಾಂತರ: “ಸೋಮಾರಿಯಾದ ಹೊಟ್ಟೆಬಾಕ” (ನೋಡಿರಿ: ಉಪಲಕ್ಷಣಾಲಂಕಾರ)
Titus 1:13
δι’ ἣν αἰτίαν ἔλεγχε αὐτοὺς ἀποτόμως
"ಆದಕಾರಣ ನೀನು ಕ್ರೇತ ದ್ವೀಪದ ಜನರನ್ನು ತಿದ್ದುವಾಗ, ನೀವು ಹೇಳುವುದನ್ನು ಅವರು ಅರ್ಥಮಾಡಿಕೊಳ್ಳುವಂತೆ ತೀಕ್ಷ್ಣವಾದ ಪದಗಳನ್ನು ಬಳಸಬೇಕು"
ἐν τῇ πίστει
ಇದರಲ್ಲಿ ನಂಬಿಕೆ ಎಂಬ ಭಾವವಾಚಕ ನಾಮಪದವು ಜನರು ದೇವರ ಬಗ್ಗೆ ನಂಬುವಂಥ ವಿಷಯಗಳನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಅವರು ದೇವರ ಬಗ್ಗೆ ನಂಬುವಂಥದ್ದರಲ್ಲಿ” (ನೋಡಿರಿ: ಭಾವವಾಚಕ ನಾಮಪದಗಳು)
δι’ ἣν αἰτίαν
ಈ ಕಾರಣದಿಂದ ಎಂಬ ಸಂಯೋಜಕ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕ್ರೇತದವನಾದ ಪ್ರವಾದಿಯು ತನ್ನ ಜನರ ಬಗ್ಗೆ ಹೇಳಿದ್ದಂಥ ಸಂಗತಿಯು ನಿಜವೇ ಆಗಿದೆ ಎಂಬುದು ಕಾರಣವಾಗಿದೆ (ಅವರು ಸುಳ್ಳುಗಾರರು, ದುಷ್ಟರು ಮತ್ತು ಸೋಮಾರಿಗಳು), ಮತ್ತು ತೀತನು ಅವರನ್ನು ಕಠಿಣವಾಗಿ ಗದರಿಸಬೇಕು (ನೋಡಿರಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
ἵνα ὑγιαίνωσιν ἐν τῇ πίστει
ತೀತ 1:9 ರಲ್ಲಿ ಸ್ವಸ್ಥ ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
ἵνα
ಅದರಿಂದ ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ)
Titus 1:14
μὴ
ಕೊಡದಿರಲಿ/ಬಾರದು ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ)
Ἰουδαϊκοῖς μύθοις
ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ.
ἀποστρεφομένων τὴν ἀλήθειαν
ಪೌಲನ ಸತ್ಯದ ಬಗ್ಗೆ ಮಾತನಾಡುವಾಗ ಅದನ್ನು ಒಂದು ವಸ್ತುವೋ ಎಂಬಂತೆ ಮಾತನಾಡುತ್ತಿದ್ದಾನೆ, ಒಬ್ಬನು ಅದರಿಂದ ವಿಮುಖನಾಗಬಹುದು ಅಥವಾ ದೂರಹೋಗಬಹುದು. ಪರ್ಯಾಯ ಭಾಷಾಂತರ: "ಸತ್ಯವನ್ನು ತ್ಯಜಿಸುವುದು" (ನೋಡಿರಿ: ರೂಪಕ ಅಲಂಕಾರ)
Titus 1:15
δὲ
ಆದರೆ ಎಂಬ ಸಂಯೋಜಕ ಪದವು ಶುದ್ಧರಾಗಿರುವ ಜನರ ಹಾಗೂ ಅಶುದ್ಧರಾಗಿರುವ ಮತ್ತು ನಂಬಿಕೆಯಿಲ್ಲದ ಜನರ ನಡುವಿನ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ)
πάντα καθαρὰ τοῖς καθαροῖς
"ಜನರು ಅಂತರ್ಯದಲ್ಲಿ ಶುದ್ಧರಾಗಿದ್ದರೆ, ಅವರು ಮಾಡುವ ಎಲ್ಲವೂ ಶುದ್ಧವಾಗಿರುತ್ತದೆ" ಅಥವಾ "ಜನರಲ್ಲಿ ಒಳ್ಳೆಯ ಆಲೋಚನೆಗಳು ಮಾತ್ರ ಇರುವಾಗ, ಅವರು ಮಾಡುವ ಯಾವುದೂ ದೇವರನ್ನು ಬೇಸರಗೊಳಿಸುವುದಿಲ್ಲ/ನೋವನ್ನುಂಟುಮಾಡುವುದಿಲ್ಲ"
τοῖς καθαροῖς
"ದೇವರಿಗೆ ಮೆಚ್ಚಿಗೆ ಉಳ್ಳವರಾಗಿರುವವರಿಗೆ"
τοῖς ... μεμιαμμένοις καὶ ἀπίστοις, οὐδὲν καθαρόν
ಪೌಲನು ಪಾಪಿಗಳನ್ನು ಕುರಿತು ಹೇಳುವಾಗ ಅವರು ದೈಹಿಕವಾಗಿ ಅಶುದ್ಧರಾಗಿದ್ದಾರೆಯೋ ಎಂಬಂತೆ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಜನರು ನೈತಿಕವಾಗಿ ಅಶುದ್ಧರಾಗಿದ್ದರೆ ಮತ್ತು ನಂಬದವರಾಗಿದ್ದರೆ ಅವರಿಂದ ಯಾವುದೇ ಶುದ್ಧಕಾರ್ಯವನ್ನು ಮಾಡಲಾಗುವುದಿಲ್ಲ” ಅಥವಾ “ಜನರು ಪಾಪದಿಂದ ಮತ್ತು ಅಪನಂಬಿಕೆಯಿಂದ ತುಂಬಿದವರಾಗಿರುವಾಗ, ಅವರು ಮಾಡುವ ಯಾವ ಕಾರ್ಯವು ದೇವರಿಗೆ ಮೆಚ್ಚಿಗೆಯಾಗುವುದಿಲ್ಲ” (ನೋಡಿರಿ: ರೂಪಕ ಅಲಂಕಾರ)
Titus 1:16
δὲ
ಆದರೆ ಎಂಬ ಸಂಯೋಜಕ ಪದವು ಅಶುದ್ಧರಾದ ಈ ಜನರು ಹೇಳುವಂಥದ್ದಕ್ಕೂ (ಅವರು ದೇವರನ್ನು ತಿಳಿದವರು) ಮತ್ತು ಅವರ ಕಾರ್ಯಗಳು ಏನು ತೋರಿಸುತ್ತವೆ (ಅವರು ದೇವರನ್ನು ತಿಳಿದವರಲ್ಲ) ಎಂಬುದಕ್ಕೂ ನಡುವೆಯಿರುವ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ)
τοῖς ... ἔργοις ἀρνοῦνται
"ಅವರು ಜೀವಿಸುವ ರೀತಿಯು ಅವರು ಆತನನ್ನು ತಿಳಿದವರಲ್ಲವೆಂದು ಸಾಬೀತುಪಡಿಸುತ್ತದೆ"
βδελυκτοὶ ὄντες
"ಅವರು ಅಸಹ್ಯರು ಆಗಿದ್ದಾರೆ"
Titus 2
ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ಲಿಂಗತ್ವದ ಪಾತ್ರಗಳು
ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.
ದಾಸತ್ವ
ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ.
Titus 2:1
ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.
σὺ δὲ λάλει ἃ πρέπει
ಇಲ್ಲಿ ನೀನು ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು (ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τῇ ὑγιαινούσῃ διδασκαλίᾳ
ತೀತ 1:9 ರ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಸ್ವಸ್ಥ ಉಪದೇಶ” ಅಥವಾ "ಸರಿಯಾದ ಬೋಧನೆಗಳಿಂದ”
Titus 2:2
πρεσβύτας…εἶναι
ಗ್ರೀಕ್ ಭಾಷೆಯಲ್ಲಿ ಆಗಿರು ಎಂಬ ಪದವು ಇಲ್ಲ, ಆದರೆ ವೃದ್ಧರು ಹೀಗಿರಬೇಕು ಎಂಬುದಾಗಿ ಮಾತ್ರವಿದೆ. ಹಿಂದಿನ ವಚನದಲ್ಲಿರುವ ಉಪದೇಶಮಾಡು ಎಂಬ ಪದದ ಕಲ್ಪನೆಯಿಂದ ಬೋಧಿಸು ಅಥವಾ ಪ್ರಬೋಧಿಸು ಎಂಬಂಥ ವಿಷಯವನ್ನು ಊಹಿಸಿಕೊಂಡು ನಾವು ಇಲ್ಲಿ ಕ್ರಿಯಾಪದವನ್ನು ಪೂರೈಸಬೇಕಾಗಿದೆ. ಪರ್ಯಾಯ ಭಾಷಾಂತರ: “ವೃದ್ಧರಿಗೆ ಹೀಗಿರಬೇಕೆಂದು ಬೋಧಿಸು” (ನೋಡಿರಿ: ಪದಲೋಪ)
νηφαλίους…σεμνούς, σώφρονας
ಈ ಮೂರು ಪದಗಳು ನಿಕಟವಾದ ಅರ್ಥವುಳ್ಳವುಗಳಾಗಿವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಮೂರು ಪ್ರತ್ಯೇಕ ಪದಗಳಿಲ್ಲದಿದ್ದರೆ ಒಂದು ಅಥವಾ ಎರಡು ಪದಗಳಾಗಿ ಸೇರಿಸಬಹುದು. (ನೋಡಿರಿ: ದ್ವಿರುಕ್ತಿಗಳು)
νηφαλίους εἶναι
"ಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು"
εἶναι ... σώφρονας
"ತಮ್ಮ ಆಶೆಗಳನ್ನು ನಿಗ್ರಹಿಸಲು"
ὑγιαίνοντας τῇ πίστει, τῇ ἀγάπῃ, τῇ ὑπομονῇ
ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ ನಂಬಿಕೆ ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ:ಭಾವವಾಚಕ ನಾಮಪದಗಳು)
ὑγιαίνοντας τῇ πίστει
ಇದರಲ್ಲಿರುವ "ಸ್ವಸ್ಥ" ಎಂಬ ಪದದ ಅರ್ಥವೇನಂದರೆ ದೃಢವಾಗಿರುವುದು ಮತ್ತು ಅಚಲವಾಗಿರುವುದು ಎಂದಾಗಿದೆ.ಸ್ವಸ್ಥ ಎಂಬುದರ ಕುರಿತಾಗಿ ತೀತ 1:9 ರಲ್ಲಿರುವ ಟಿಪ್ಪಣಿಯನ್ನು ನೋಡಿರಿ ಮತ್ತು ನಂಬಿಕೆಯಲ್ಲಿ ಸ್ವಸ್ಥರು ಎಂಬುದರ ಕುರಿತಾಗಿ ತೀತ 1:13 ರಲ್ಲಿರುವ ಟಿಪ್ಪಣಿಯನ್ನು ನೋಡಿರಿ.
τῇ ἀγάπῃ
ನಿಮ್ಮ ಭಾಷೆಯಲ್ಲಿ ಪ್ರೀತಿ ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಇತರರನ್ನು ನಿಜವಾಗಿಯೂ ಪ್ರೀತಿಸು” (ನೋಡಿರಿ: ಭಾವವಾಚಕ ನಾಮಪದಗಳು)
τῇ ὑπομονῇ
ನಿಮ್ಮ ಭಾಷೆಯಲ್ಲಿ ತಾಳ್ಮೆ ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಕಷ್ಟವಾದಾಗ್ಯೂ ನಿರಂತರವಾಗಿ ದೇವರನ್ನು ಸೇವಿಸಬೇಕು” (ನೋಡಿರಿ: ಭಾವವಾಚಕ ನಾಮಪದಗಳು)
Titus 2:3
πρεσβύτιδας ὡσαύτως ἐν καταστήματι
ಗ್ರೀಕ್ ಭಾಷೆಯಲ್ಲಿ ಆಗಿರಬೇಕು ಎಂಬುದು ಇಲ್ಲ, ಆದರೆ ಹಾಗೆಯೇ ವೃದ್ಧೆಯರು ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು ಬೋಧಿಸು ಅಥವಾ ಪ್ರಬೋಧಿಸು ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-ellipsis\/01.md]])
διαβόλους
ಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ.
οἴνῳ πολλῷ δεδουλωμένας
ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: ರೂಪಕ ಅಲಂಕಾರ)
οἴνῳ πολλῷ δεδουλωμένας
ಇದನ್ನು ಕರ್ತರಿ ಪ್ರಯೋಗದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ತುಂಬಾ ಮದ್ಯಪಾನ ಮಾಡುವುದು ಅಥವಾ ಮದ್ಯಕ್ಕೆ ಗುಲಾಮರಾಗುವುದು" (ನೋಡಿರಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
καλοδιδασκάλους
"ಸದ್ಬೋಧಕಿ" ಎಂಬುದು ಇಲ್ಲಿ ಬಳಸಲಾಗಿರುವ ಗ್ರೀಕ್ ಪದದ ಅರ್ಥವಾಗಿದೆ. ಈ ಒಳ್ಳೆಯ ಸ್ವಭಾವ ಮತ್ತು ಅದರ ಹಿಂದೆಯಿರುವ ಎರಡು ಕೆಟ್ಟ ಸ್ವಭಾವಗಳ ನಡುವಿನ ವ್ಯತ್ಯಾಸವನ್ನು ತಿಳಿಸಲು ಆದರೆ ಆಗಿರಬೇಕು ಎಂಬ ಪದಗುಚ್ಛವನ್ನು ಇಂಗ್ಲಿಷ್‌ನಲ್ಲಿ ಸೇರಿಸಲಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ವಭಾವಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ನೀವು ಇದೇ ರೀತಿಯ ಪದವನ್ನು ಬಳಸಬೇಕಾದರೆ ಇದನ್ನು ಪರಿಗಣಿಸಿ ನೋಡಿರಿ.
Titus 2:4
φιλάνδρους
“ತಮ್ಮ ಸ್ವಂತ ಗಂಡಂದಿರನ್ನು ಪ್ರೀತಿಸುವವರು”
φιλοτέκνους
“ತಮ್ಮ ಸ್ವಂತ ಮಕ್ಕಳ ಪ್ರೀತಿಸುವವರು”
Titus 2:5
ὑποτασσομένας τοῖς ἰδίοις ἀνδράσιν
“ಮತ್ತು ತಮ್ಮ ಸ್ವಂತ ಗಂಡಂದಿರಿಗೆ ಅಧೀನರಾಗಲು”
ἵνα μὴ ὁ λόγος τοῦ Θεοῦ βλασφημῆται
ಇದರಲ್ಲಿರುವ "ವಾಕ್ಯ” ಎಂಬುದು “ಸಂದೇಶ” ಎಂಬುದಕ್ಕಿರುವ ಲಾಕ್ಷಣಿಕ ಶಬ್ದವಾಗಿದೆ, ಇನ್ನೊಂದು ಅರ್ಥದಲ್ಲಿ ಸ್ವತಃ ದೇವರನ್ನೇ ಸೂಚಿಸುವ ಲಾಕ್ಷಣಿಕ ಶಬ್ದವಾಗಿದೆ. ಇದನ್ನು ಕರ್ತರಿ ರೂಪದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ಇದರಿಂದಾಗಿ ದೇವರ ವಾಕ್ಯವನ್ನು ಯಾರೂ ನಿಂದಿಸುವುದಿಲ್ಲ” ಅಥವಾ “ಇದರಿಂದಾಗಿ ಆತನ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಯಾರೂ ದೇವರನ್ನು ನಿಂದಿಸುವುದಿಲ್ಲ” (ನೋಡಿರಿ: INVALID translate/figs-activepassive ಮತ್ತು [[https://git.door43.org/translationCore-Create-BCS/kn_ta/src/branch/master/translate/figs-metonymy\/01.md]])
Titus 2:6
ὡσαύτως
ವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು.
Titus 2:7
σεαυτὸν παρεχόμενος
"ನೀನೇ ತೋರಿಸಿಕೊಡು" ಅಥವಾ "ನೀನೇ ಆಗಿರಬೇಕು"
τύπον καλῶν ἔργων
"ಒಳ್ಳೆಯ ಮತ್ತು ಸರಿಯಾದ ಕಾರ್ಯಗಳನ್ನು ಮಾಡುವಂಥವನ ಮಾದರಿಯಾಗಿ"
Titus 2:8
ὑγιῆ
ಈ ಪದವು 2:7 ರಲ್ಲಿರುವ ಭ್ರಷ್ಟಗೊಳಿಸದಿರುವಿಕೆ ಎಂಬ ಪದದ ಅದೇ ಮೂಲ ಅರ್ಥವುಳ್ಳದಾಗಿದೆ. 2:7 ರಲ್ಲಿ, ಪೌಲನು ಇದನ್ನು ನಕರಾತ್ಮಕವಾದ ಅರ್ಥದಲ್ಲಿ ಹೇಳುತ್ತಾನೆ: ಭ್ರಷ್ಟಗೊಳಿಸದಿರುವಿಕೆ, ಅಂದರೆ, ತಪ್ಪಿಲ್ಲದ, ಮತ್ತು 2:8 ರಲ್ಲಿ ಅವನು ಇದನ್ನು ಸಕಾರಾತ್ಮಕವಾದ ಅರ್ಥದಲ್ಲಿ ಹೇಳುತ್ತಾನೆ: ಸ್ವಸ್ಥ, ಆರೋಗ್ಯಕರ, ಅಂದರೆ ಸರಿಯಾದ. ಇವೆರಡೂ ಪದಗಳು ತೀತನ ಬೋಧನೆಯ ಬಗ್ಗೆ ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಸಕರಾತ್ಮಕವಾದ ಅಥವಾ ನಕರಾತ್ಮಕವಾದ ಪದಗಳನ್ನು ಉಪಯೋಗಿಸಿರಿ, ಅಥವಾ ಎರಡು ಪದಗಳನ್ನು ಬಳಸುವುದು ಕಷ್ಟಕರವಾಗಿದ್ದರೆ ಈ ಅರ್ಥವನ್ನು ಕೊಡುವ ಒಂದೇ ಪದವನ್ನು ಉಪಯೋಗಿಸಿರಿ.
ἵνα ὁ ἐξ ἐναντίας ἐντραπῇ
ತೀತನನ್ನು ವಿರೋಧಿಸುವವವನು ಆ ರೀತಿ ಮಾಡಿದ್ದಕ್ಕಾಗಿ ಅವಮಾನಕ್ಕೊಳಗಾಗುವ ಕಾಲ್ಪನಿಕ ಸನ್ನಿವೇಶವನ್ನು ಇದು ತಿಳಿಸುತ್ತದೆ. ಪರ್ಯಾಯ ಭಾಷಾಂತರ: "ಹಾಗಿದ್ದಲ್ಲಿ ಯಾರಾದರೂ ನಿನ್ನನ್ನು ವಿರೋಧಿಸುವುದಾದರೆ, ಅವನು ಅಪಮಾನ ಹೊಂದುವನು" ಅಥವಾ ” ಹಾಗಿದ್ದಲ್ಲಿ ಜನರು ನಿನ್ನನ್ನು ವಿರೋಧಿಸಿದರೆ, ಅವರು ಅಪಮಾನ ಹೊಂದುವರು” (ನೋಡಿರಿ:ಕಾಲ್ಪನಿಕ ಸನ್ನಿವೇಶಗಳು)
ἡμῶν
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
Titus 2:9
δούλους ἰδίοις δεσπόταις ὑποτάσσεσθαι
ಗ್ರೀಕ್ ಭಾಷೆಯಲ್ಲಿ ಆಗಿರು ಎಂಬ ಪದವು ಇಲ್ಲ, ಆದರೆ ದಾಸರು ತಮ್ಮ ಸ್ವಂತ ಯಜಮಾನರಿಗೆ ಎಂಬುದಾಗಿ ಮಾತ್ರವಿದೆ. ನಾವು 6 ನೇ ವಚನದಿಂದ ಕ್ರಿಯಾಪದ ಕಲ್ಪನೆಯನ್ನು ಊಹಿಸಿಕೊಂಡು ಪ್ರಚೋದಿಸು ಅಥವಾ ಪ್ರಬೋಧಿಸು ಎಂಬಂಥ ಪದಗಳನ್ನು ಇಲ್ಲಿಗೆ ಸೇರಿಸಬೇಕು, ಪರ್ಯಾಯ ಭಾಷಾಂತರ: “ದಾಸರು ತಮ್ಮ ಯಜಮಾನರಿಗೆ ಅಧೀನರಾಗಿರುವಂತೆ ಅವರಿಗೆ ಬೋಧಿಸು” (ನೋಡಿರಿ: ಪದಲೋಪ)
ἰδίοις δεσπόταις
"ಅವರ ಸ್ವಂತ ಯಜಮಾನರು"
ὑποτάσσεσθαι
“ವಿಧೇಯರಾಗಬೇಕು”
ἐν πᾶσιν
"ಎಲ್ಲಾ ಸನ್ನಿವೇಶಗಳಲ್ಲೂ ಅಥವಾ ಯಾವಾಗಲೂ"
εὐαρέστους εἶναι
"ತಮ್ಮ ಯಜಮಾನರನ್ನು ಮೆಚ್ಚಿಸಲು" ಅಥವಾ "ತಮ್ಮ ಯಜಮಾನರನ್ನು ತೃಪ್ತಿಪಡಿಸಲು"
Titus 2:10
μὴ νοσφιζομένους
“ತಮ್ಮ ಯಜಮಾನರಿಂದ ಕದಿಯಬಾರದು”
πᾶσαν πίστιν ἐνδεικνυμένους ἀγαθήν
"ಅವರು ತಮ್ಮ ಯಜಮಾನರ ನಂಬಿಕೆಗೆ ಅರ್ಹರಾಗಿದ್ದಾರೆ ಎಂದು ತೋರಿಸಲು"
ἐν πᾶσιν
"ಅವರು ಮಾಡುವ ಎಲ್ಲಾದರಲ್ಲಿಯೂ"
τὴν διδασκαλίαν τὴν τοῦ Σωτῆρος ἡμῶν Θεοῦ κοσμῶσιν
"ಅವರು ನಮ್ಮ ರಕ್ಷಕನಾದ ದೇವರ ಕುರಿತಾದ ಬೋಧನೆಗಳನ್ನು ಆಕರ್ಷಣೀಯವಾಗಿರುವಂತೆ ಮಾಡಬಹದು" ಅಥವಾ "ಅವರು ನಮ್ಮ ರಕ್ಷಕನಾದ ದೇವರ ಬೋಧನೆಗಳು ಜನರಿಗೆ ಅರ್ಥವಾಗುವಂತೆ ಮಾಡಬಹುದು"
ἡμῶν
ಇದರಲ್ಲಿರುವ ನಮ್ಮ ಎಂಬ ಪದವು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
τὴν τοῦ Σωτῆρος ἡμῶν Θεοῦ
"ನಮ್ಮನ್ನು ರಕ್ಷಿಸುವ ನಮ್ಮ ದೇವರು"
Titus 2:11
ಯೇಸುವಿನ ಅಗಮನವನ್ನು ನಿರೀಕ್ಷಿಸುವಂತೆ ಮತ್ತು ಯೇಸುವಿನ ಮೂಲಕ ದೊರಕಿರುವ ತನ್ನ ಅಧಿಕಾರವನ್ನು ನೆನಪಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸುತ್ತಾನೆ.
ἐπεφάνη ... ἡ χάρις τοῦ Θεοῦ
ಪೌಲನು ದೇವರ ಕೃಪೆಯ ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿಯು ಬಂದಿದ್ದಾನೋ ಎಂಬಂತೆ ಮಾತನಾಡುತ್ತಾನೆ. ಇದನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕಾಗಿ ಯುಎಸ್‌ಟಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಈಗ ತನ್ನ ಕೃಪೆಯನ್ನು ದಯಪಾಲಿಸುತ್ತಿದ್ದಾನೆ” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-personification\/01.md]])
Titus 2:12
παιδεύουσα ἡμᾶς
ಪೌಲನು ದೇವರ ಕೃಪೆಯ (ತೀತ 2:11) ಕುರಿತು ಮಾತನಾಡುವಾಗ ಅದನ್ನು ಪರಿಶುದ್ದ ಜೀವನವನ್ನು ನಡೆಸಬೇಕೆಂದು ತರಬೇತಿ ಕೊಡುವಂಥ ಒಬ್ಬ ವ್ಯಕ್ತಿಯೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಅದರಿಂದ ದೇವರು ನಮ್ಮನ್ನು ತರಬೇತಿಗೊಳಿಸುತ್ತಾನೆ” (ನೋಡಿರಿ:ವ್ಯಕ್ತೀಕರಣ)
ἡμᾶς
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
παιδεύουσα ἡμᾶς, ἵνα ἀρνησάμενοι τὴν ἀσέβειαν
"ದೇವರನ್ನು ಅಗೌರವಿಸುವಂಥ ವಿಷಯಗಳು"
τὰς κοσμικὰς ἐπιθυμίας
"ಈ ಲೋಕದ ವಿಷಯಗಳಿಗೋಸ್ಕರವಿರುವ ಕಡು ಬಯಕೆ" ಅಥವಾ "ಪಾಪಮಯವಾದ ಭೋಗಗಳಿಗೋಸ್ಕರವಾಗಿರುವ ಕಡು ಬಯಕೆ"
ἀσέβειαν…εὐσεβῶς
ಈ ಪದಗಳು ವಿರೋಧಭಾಸವಾದವುಗಳಾಗಿವೆ, ಅಂದರೆ ಅನುಕ್ರಮವಾಗಿ ದೇವರನ್ನು ಅಗೌರವಿಸುವ ಮತ್ತು ದೇವರನ್ನು ಗೌರವಿಸುವ ಎಂಬ ಅರ್ಥವುಳ್ಳವುಗಳಾಗಿವೆ.
ἐν τῷ νῦν αἰῶνι
"ನಾವು ಈ ಲೋಕದಲ್ಲಿ ಜೀವಿಸುವಾಗ" ಅಥವಾ "ಈ ಕಾಲದಲ್ಲಿ"
Titus 2:13
προσδεχόμενοι
ಸ್ವಾಗತಿಸಲು ಕಾಯುತ್ತಿರುವ
τὴν μακαρίαν ἐλπίδα, καὶ ἐπιφάνειαν τῆς δόξης τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ
ಇದರಲ್ಲಿರುವ ಮಹಿಮೆ ಎಂಬುದು ಮಹಿಮಾನ್ವಿತನಾಗಿ ಪ್ರತ್ಯಕ್ಷನಾಗುವ ಯೇಸುವನ್ನೇ ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: "ಅಂದರೆ ನಮ್ಮ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮಹಿಮಾನ್ವಿತವಾದ ಪ್ರತ್ಯಕ್ಷತೆ” (ನೋಡಿರಿ: ಲಕ್ಷಣಾಲಂಕಾರ)
τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ
ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನು ಎಂಬ ಈ ಎರಡು ಪದಗುಚ್ಛಗಳು ಒಬ್ಬ ವ್ಯಕ್ತಿಯನ್ನೇ ಅಂದರೆ ಯೇಸುಕ್ರಿಸ್ತನನ್ನೇ ಸೂಚಿಸುತ್ತವೆ. ಪರ್ಯಾಯ ಭಾಷಾಂತರ: “ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು” (ನೋಡಿರಿ: ದ್ವಿಪದಾಲಂಕಾರ)
τὴν μακαρίαν ἐλπίδα, καὶ ἐπιφάνειαν τῆς δόξης
ಭಾಗ್ಯಕರವಾದ ನಿರೀಕ್ಷೆ ಮತ್ತು ಮಹಿಮೆಯು ಪ್ರತ್ಯಕ್ಷವಾಗುವುದು ಎಂಬ ಇವೆರಡೂ ಒಂದೇ ಸಂಗತಿಯನ್ನು ಸೂಚಿಸುತ್ತವೆ. ಇದನ್ನು ಸ್ಪಷ್ಟವಾಗಿ ತೋರಿಸಬಹುದು. ಪರ್ಯಾಯ ಭಾಷಾಂತರ: “ನಾವು ಭಾಗ್ಯಕರವಾದ ಮತ್ತು ಮಹಿಮಾನ್ವಿತವಾದ ಪ್ರತ್ಯಕ್ಷತೆಗಾಗಿ ಹಾತೊರೆಯುತ್ತಿದ್ದೇವೆ” (ನೋಡಿರಿ: ದ್ವಿಪದಾಲಂಕಾರ)
τὴν μακαρίαν ἐλπίδα
ಇದರಲ್ಲಿ, ನಾವು ಯಾವುದನ್ನು ನಿರೀಕ್ಷಿಸುತ್ತಿದ್ದೇವೋ ಅದು ಭಾಗ್ಯಕರ ಆಗಿದೆ, ಅದು ಯಾವುದೆಂದರೆ ಯೇಸುಕ್ರಿಸ್ತನ ಪುನರಾಗಮನವಾಗಿದೆ. ಪರ್ಯಾಯ ಭಾಷಾಂತರ: “ನಾವು ನಿರೀಕ್ಷಿಸುತ್ತಿರುವ ಅದ್ಭುತಕರವಾದ ಸಂಗತಿ” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-metonymy\/01.md]])
Titus 2:14
ἔδωκεν ἑαυτὸν ὑπὲρ ἡμῶν
ಇದು ಯೇಸು ಸ್ವ ಇಚ್ಛೆಯಿಂದ ಪ್ರಾಣವನ್ನು ಕೊಟ್ಟಿದ್ದರ ಬಗ್ಗೆ ಹೇಳುತ್ತದೆ. ಪರ್ಯಾಯ ಭಾಷಾಂತರ: "ನಮಗೋಸ್ಕರ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು." (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-explicit\/01.md]])
ἡμῶν
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
λυτρώσηται ἡμᾶς ἀπὸ πάσης ἀνομίας
ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: INVALID translate/figs-metaphor)
λαὸν περιούσιον
"ಆತನು ಅತ್ಯಮೂಲ್ಯವಾದ ಸಂಪತ್ತಿನಂತೆ ಶೇಖರಿಸಿಡುವ ಜನರ ಗುಂಪು"
ζηλωτὴν
"ಮಾಡಲು ಅತ್ಯಾಸಕ್ತಿಯುಳ್ಳವರು"
ἡμᾶς
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-inclusive\/01.md]])
Titus 2:15
παρακάλει
“ಈ ಕಾರ್ಯಗಳನ್ನು ಮಾಡಲು ಅವರನ್ನು ಪ್ರೋತ್ಸಾಹಿಸು”
ἔλεγχε μετὰ πάσης ἐπιταγῆς
ಇದು ಸಹಾಯಕವಾಗಿರುತ್ತದೆ ಅನ್ನಿಸುವುದಾದರೆ, ತೀತನು ತಿದ್ದಬೇಕಾದ ಜನರ ಕುರಿತು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ಈ ಕಾರ್ಯಗಳನ್ನು ಮಾಡದ ಜನರನ್ನು ಪೂರ್ಣ ಅಧಿಕಾರದಿಂದ ತಿದ್ದು" (ನೋಡಿರಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
μηδείς ... περιφρονείτω
"ನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ"
σου περιφρονείτω
ಜನರು ತೀತನನ್ನು ಅಲಕ್ಷ್ಯ ಮಾಡು ರೀತಿಯನ್ನು ಸ್ಪಪ್ಟಪಡಿಸಿ ಹೇಳಬಹುದು. ಪರ್ಯಾಯ ಭಾಷಾಂತರ: "ನಿನ್ನ ಮಾತುಗಳಿಗೆ ಕಿವಿಗೊಡುವುದನ್ನು ತಿರಸ್ಕರಿಸುವ" ಅಥವಾ "ನಿನ್ನನ್ನು ಗೌರವಿಸಲು ನಿರಾಕರಿಸುವ" (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-explicit\/01.md]])
μηδείς σου περιφρονείτω
ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಎಲ್ಲರೂ ನಿನ್ನ ಮಾತನ್ನು ಕೇಳುವಂತೆ ನೋಡಿಕೋ” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-doublenegatives\/01.md]])
Titus 3
ತೀತ 03 ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆ
ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.
15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ವಂಶಾವಳಿಗಳು
ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು.
Titus 3:1
ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ.
ὑπομίμνῃσκε αὐτοὺς ... ὑποτάσσεσθαι
"ನಮ್ಮ ಜನರಿಗೆ ಈಗಾಗಲೇ ತಿಳಿದಿರುವಂಥದ್ದಕ್ಕೆ ಅಧೀನರಾಗಲು ಅವರಿಗೆ ಪುನಃ ಹೇಳು" ಅಥವಾ "ಅಧೀನರಾಗುವಂತೆ ಅವರಿಗೆ ನೆನಪಿಸುತ್ತಲೇ ಇರು"
ἀρχαῖς, ἐξουσίαις, ὑποτάσσεσθαι, πειθαρχεῖν
"ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು"
ὑποτάσσεσθαι, πειθαρχεῖν
ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಎರಡೂ ಪದಗಳು ನಿಮಗೆ ಯಾರಾದರೂ ಏನನ್ನಾದರೂ ಮಾಡಲು ಹೇಳಿದರೆ ಅದನ್ನು ಮಾಡಬೇಕೆಂದು ಸೂಚಿಸುತ್ತದೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: INVALID translate/figs-doublet)
ἀρχαῖς ἐξουσίαις
ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-doublet\/01.md]])
πρὸς πᾶν ἔργον ἀγαθὸν ἑτοίμους εἶναι
"ಅವಕಾಶ ಇರುವಾಗಲ್ಲೆಲ್ಲಾ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ"
Titus 3:2
βλασφημεῖν
"ಕೆಟ್ಟದ್ದಾಗಿ ಮಾತನಾಡುವುದು"
ἀμάχους εἶναι
ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಸಮಾಧಾನದಿಂದಿರಲು” (ನೋಡಿರಿ: [https://git.door43.org/translationCore-Create-BCS/kn_ta/src/branch/master/translate/figs-doublenegatives/01.md]])
Titus 3:3
γάρ ποτε καὶ ἡμεῖς
"ಏಕೆಂದರೆ ನಾವು ಕೂಡ ಒಂದು ಕಾಲದಲ್ಲಿ ಆಗಿದ್ದೇವು"
ποτε
"ಪೂರ್ವಕಾಲದಲ್ಲಿ" ಅಥವಾ "ಕಳೆದ ಕೆಲವು ಸಮಯದಲ್ಲಿ" ಅಥವಾ "ಹಿಂದಿನ ಕಾಲದಲ್ಲಿ"
ἡμεῖς
"ನಾವೂ ಸಹ" ಅಥವಾ "ನಾವೂ ಕೂಡ". ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ, ಇದು ಅವರು ಕ್ರಿಸ್ತನನ್ನು ನಂಬುವುದಕ್ಕಿಂತ ಮುಂಚಿನ ಸಮಯವನ್ನು ಸೂಚಿಸುತ್ತದೆ. (ನೋಡಿರಿ: INVALID translate/figs-inclusive)
ἦμεν ... ἀνόητοι
"ಮೂರ್ಖರಾಗಿದ್ದೆವು" ಅಥವಾ "ಅವಿವೇಕಿಗಳಾಗಿದ್ದೆವು"
πλανώμενοι, δουλεύοντες ἐπιθυμίαις καὶ ἡδοναῖς ποικίλαις
ದುರಾಶೆ ಮತ್ತು ಭೋಗದ ಕುರಿತಾಗಿ ಹೇಳುವಾಗ ಅವುಗಳನ್ನು ಜನರನ್ನು ಆಳುವ ಮತ್ತು ಅವರಿಗೆ ಸುಳ್ಳು ಹೇಳುವ ಮೂಲಕ ಆ ಜನರನ್ನು ದಾಸರನ್ನಾಗಿ ಮಾಡಿಕೊಂಡಿರುವ ಯಜಮಾನರೋ ಎಂಬಂತೆ ಹೇಳಲಾಗಿದೆ. ಪರ್ಯಾಯ ಭಾಷಾಂತರ: "ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸಂತೋಷವನ್ನುಂಟುಮಾಡುತ್ತವೆ ಎಂಬ ಸುಳ್ಳನ್ನು ನಂಬಲು ನಮ್ಮನ್ನು ನಾವು ಒಪ್ಪಿಸಿಕೊಟ್ಟಿದ್ದೇವೆ, ಮತ್ತು ಆಗ ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮ್ಮಿಂದ ಆಗಲಿಲ್ಲ ಅಥವಾ ನಮಗೆ ಸಂತೋಷವನ್ನು ಕೊಡುತ್ತವೆ ಎಂದು ನಾವು ಭಾವಿಸಿದ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಲು ನಮ್ಮಿಂದ ಆಗಲಿಲ್ಲ" (ನೋಡಿರಿ: INVALID translate/figs-personification)
πλανώμενοι, δουλεύοντες ἐπιθυμίαις καὶ ἡδοναῖς ποικίλαις
ಇದನ್ನು ಕರ್ತರಿ ಪ್ರಯೋಗದಲ್ಲಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸುಳ್ಳು ಹೇಳಿ ನಮ್ಮನ್ನು ದಾರಿ ತಪ್ಪಿಸಿದವು” (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-activepassive\/01.md]])
ἐπιθυμίαις
"ಭೋಗಾಪೇಕ್ಷೆಗಳು" ಅಥವಾ "ಬಯಕೆಗಳು"
ἐν κακίᾳ καὶ φθόνῳ διάγοντες
ಇದರಲ್ಲಿರುವ ಕೆಟ್ಟತನ ಮತ್ತು ಹೊಟ್ಟೆಕಿಚ್ಚು ಎಂಬ ಪದಗಳು ಪಾಪದ ಬಗ್ಗೆ ವಿವರಿಸುತ್ತವೆ. ಕೆಟ್ಟತನ ಎಂಬುದು ಪಾಪವನ್ನು ಸೂಚಿಸುವ ಸಾಮಾನ್ಯವಾದ ಪದವಾಗಿದೆ ಮತ್ತು ಹೊಟ್ಟೆಕಿಚ್ಚು ಎಂಬುದು ನಿರ್ದಿಷ್ಟವಾದ ಬಗೆಯ ಪಾಪವನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಇರುವಂಥದ್ದನ್ನು ಆಶಿಸುತ್ತಾ ಇದ್ದೆವು"
στυγητοί
"ಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ"
Titus 3:4
δὲ
ಜನರು ಇರುವಂಥ ಕೆಟ್ಟ ಮಾರ್ಗಕ್ಕೂ (1-3 ವಚನಗಳು) ಮತ್ತು ದೇವರ ಒಳ್ಳೆಯತನಕ್ಕೂ (4-7 ವಚನಗಳು) ನಡುವೆಯಿರುವ ವ್ಯತ್ಯಾಸವನ್ನು ಇಲ್ಲಿ ತೋರಿಸಬೇಕಾದದ್ದು ಮುಖ್ಯವಾಗಿದೆ (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/grammar-connect-logic-contrast\/01.md]])
ὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ
ಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: ವ್ಯಕ್ತೀಕರಣ)
ὅτε…ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ
ಭಾವಸೂಚಕ ನಾಮಪದಗಳಾದ ದಯೆ ಮತ್ತು ಪ್ರೀತಿ ಎಂಬುವುಗಳನ್ನು ವಿಶೇಷಣಗಳಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ನಮ್ಮನ್ನು ರಕ್ಷಿಸುವ ದೇವರು ಮಾನವಕುಲಕ್ಕೆ ಆತನು ಎಷ್ಟು ದಯಾಮಯಿಯು ಮತ್ತು ಪ್ರೀತಿಯುಳ್ಳವನು ಆಗಿದ್ದಾನೆ ಎಂದು ತೋರಿಸಿದಾಗ” (ನೋಡಿರಿ: ಭಾವವಾಚಕ ನಾಮಪದಗಳು)
ἡμῶν
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: INVALID translate/figs-inclusive)
Titus 3:5
κατὰ τὸ αὐτοῦ ἔλεος
"ಏಕೆಂದರೆ ಆತನು ನಮ್ಮ ಮೇಲೆ ಕರುಣೆಯನ್ನು ಇಟ್ಟಿರುವುದರಿಂದ"
λουτροῦ παλινγενεσίας
ಪೌಲನು ಇಲ್ಲಿ ಎರಡು ರೂಪಕಗಳನ್ನು ಸಂಯೋಜಿಸುತ್ತಾನೆ. ಅವನು ದೇವರು ಪಾಪಿಗಳನ್ನು ಮನ್ನಿಸಿದಂಥ ಆತನ ಕ್ಷಮಾಪಣೆಯ ಬಗ್ಗೆ ಮಾತನಾಡುವಾಗ ಅತನು ಅವರನ್ನು ಅವರ ಪಾಪದಿಂದ ದೈಹಿಕವಾಗಿ ತೊಳೆದು ಶುದ್ಧೀಕರಿಸುತ್ತಿದ್ದಾನೋ ಎಂಬಂತೆ ಮಾತನಾಡುತ್ತಿದ್ದಾನೆ. ಅವರು ಪುರ್ನಜನ್ಮ ಪಡೆದವರಂತೆ ದೇವರಿಗೆ ಪ್ರತಿಕ್ರಿಯಾಶೀಲರಾಗಿರುವ ಪಾಪಿಗಳ ಬಗ್ಗೆಯೂ ಅವನು ಮಾತನಾಡುತ್ತಿದ್ದಾನೆ. (ನೋಡಿರಿ: INVALID translate/figs-metaphor)
Titus 3:6
οὗ ἐξέχεεν ἐφ’ ἡμᾶς πλουσίως
ಹೊಸ ಒಡಂಬಡಿಕೆಯನ್ನು ಬರೆದ ಲೇಖಕರಿಗೆ ಪವಿತ್ರಾತ್ಮನನ್ನು ದೇವರು ಭಾರಿ ಪ್ರಮಾಣದಲ್ಲಿ ಸುರಿಸುವ ದ್ರವ್ಯಕ್ಕೆ ಹೋಲಿಸಿ ಹೇಳುವುದು ಸಹಜವಾಗಿದೆ. ಪರ್ಯಾಯ ಭಾಷಾಂತರ: "ದೇವರು ನಮಗೆ ಉದಾರವಾಗಿ ನೀಡುವ" (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-metaphor\/01.md]])
ἡμᾶς
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
διὰ Ἰησοῦ Χριστοῦ τοῦ Σωτῆρος ἡμῶν
"ಯೇಸು ಕ್ರಿಸ್ತನು ನಮ್ಮನ್ನು ರಕ್ಷಿಸಿದಾಗ"
ἡμῶν
ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
Titus 3:7
δικαιωθέντες
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "ದೇವರು ನಮ್ಮನ್ನು ಪಾಪರಹಿತರೆಂದು ಘೋಷಿಸಿರುವುದ್ದರಿಂದ" (ನೋಡಿರಿ: INVALID translate/figs-activepassive)
κληρονόμοι γενηθῶμεν κατ’ ἐλπίδα ζωῆς αἰωνίου
"ನಿತ್ಯ ಜೀವಕ್ಕೆ ಬಾಧ್ಯರಾಗುವಂತೆ ಮಾಡಿ ಅದು ನಮ್ಮಕುಟುಂಬದ ಆಸ್ತಿಯಂತೆಯೂ , ಎಲ್ಲಾ ಹಕ್ಕುಗಳ ಬಾಧ್ಯತೆಯನ್ನು ಪಡೆದು ಕೊಳ್ಳುವಂತೆ ವಾಗ್ದಾನಮಾಡಿ ತಿಳಿಸಿದ್ದಾನೆ "" (ನೋಡಿ: ರೂಪಕ ಅಲಂಕಾರ)
Titus 3:8
ὁ λόγος
ತೀತ 3:7.ರಲ್ಲಿ ಹೇಳಿರುವಂತೆ ದೇವರನ್ನು ನಂಬಿಕೆಯಿಂದ ಸೇವಿಸುವವರನ್ನು ಯೇಸುವಿನ ಮೂಲಕ ಪವಿತ್ರಾತ್ಮನನ್ನು ಸುರಿಸಿ ಆಶೀರ್ವದಿಸುವನು
τούτων
ಇದು ಪೌಲನು 1-7 ವಚನಗಳಲ್ಲಿ ಹೇಳಿರುವಂಥ ಬೋಧನೆಗಳನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ನಾನು ಈಗ ತಾನೇ ಹೇಳಿರುವಂಥ ಈ ಬೋಧನೆಗಳು”
φροντίζωσιν καλῶν ἔργων προΐστασθαι
"ಸತ್ಕಾರ್ಯಗಳನ್ನು ಮಾಡಲು ಜಾಗರೂಕರಾಗಿ ಸಿದ್ಧರಿರಬೇಕು"
Titus 3:9
ತೀತನನ್ನು ಏನನ್ನು ದೂರವಿಡಬೇಕು ಮತ್ತು ವಿಶ್ವಾಸಿಗಳ ಮಧ್ಯೆ ವಿವಾದವನ್ನು ಉಂಟುಮಾಡುವವರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೌಲನು ವಿವರಿಸುತ್ತಾನೆ.
δὲ περιΐστασο
"ಹಾಗಾಗಿ ದೂರವಿಡು" ಅಥವಾ "ಆದ್ದರಿಂದ ದೂರವಿಡು"
μωρὰς ζητήσεις
"ಪ್ರಾಮುಖ್ಯ ಇಲ್ಲದಿರುವ ವಿಷಯಗಳ ಕುರಿತಾದ ವಾದ ವಿವಾದಗಳನ್ನು"
γενεαλογίας
ಇದು ಕೌಟುಂಬಿಕ ಬಾಂಧವ್ಯದ ಸಂಬಂಧಗಳ ಕುರಿತಾದ ಅಧ್ಯಯನವಾಗಿದೆ. ತೀತನ ಪತ್ರಿಕೆಯ ಪೀಠಿಕೆಯನ್ನು ನೋಡಿರಿ.
ἔρεις
ವಾದ ವಿವಾದಗಳು ಅಥವಾ ಕಚ್ಚಾಟಗಳು
νομικὰς
ಮೋಶೆಯ ಧರ್ಮಶಾಸ್ತ್ರದ ಕುರಿತಾದ
Titus 3:10
ἄνθρωπον ... παραιτοῦ
"ಭಿನ್ನಭೇದಗಳನ್ನು ಉಂಟುಮಾಡುವ ವ್ಯಕ್ತಿಯಿಂದ ದೂರವಿರು"
μετὰ μίαν καὶ δευτέραν νουθεσίαν
"ಒಬ್ಬ ವ್ಯಕ್ತಿಯನ್ನು ಒಂದು ಅಥವಾ ಎರಡುಸಲ ಎಚ್ಚರಿಸಿದ ನಂತರ"
Titus 3:11
ὁ τοιοῦτος
"ಅಂತಹ ವ್ಯಕ್ತಿ"
ἐξέστραπται
ತಪ್ಪಾದ ಕಾರ್ಯಗಳನ್ನು ಮಾಡಲು ನಿರ್ಧರಿಸುವ ವ್ಯಕ್ತಿಯ ಬಗ್ಗೆ ಪೌಲನು ಮಾತನಾಡುವಾಗ, ಆ ವ್ಯಕ್ತಿಯು ತಪ್ಪಾದ ಹಾದಿಯಲ್ಲಿ ನಡೆಯುವುದಕ್ಕಾಗಿ ಸರಿಯಾದ ಮಾರ್ಗವನ್ನು ತೊರೆದುಬಿಟ್ಟಂಥವನಾಗಿದ್ದಾನೆ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-metaphor\/01.md]])
ὢν αὐτοκατάκριτος
"ತನ್ನ ಮೇಲೆಯೇ ನ್ಯಾಯತೀರ್ಪನ್ನು ಬರಮಾಡಿಕೊಳ್ಳುತ್ತಿದ್ದಾನೆ"
Titus 3:12
ಕ್ರೇತಾ ದ್ವೀಪದಲ್ಲಿ ಹಿರಿಯರನ್ನು ನೇಮಿಸಿದ ನಂತರ ಏನು ಮಾಡಬೇಕು ಎಂದು ತೀತನಿಗೆ ಹೇಳುತ್ತಾ ಮತ್ತು ಅವನೊಂದಿಗಿದ್ದ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪತ್ರಿಕೆಯನ್ನು ಪೌಲನು ಮುಕ್ತಾಯಗಳಿಸುತ್ತಾನೆ.
ὅταν πέμψω
"ನಾನು ಕಳುಹಿಸಿದ ಮೇಲೆ"
Ἀρτεμᾶν ... Τυχικόν
"ಇವುಗಳು ವ್ಯಕ್ತಿಗಳ ಹೆಸರುಗಳಾಗಿವೆ" (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/translate-names\/01.md]])
σπούδασον ἐλθεῖν
"ಬೇಗ ಬಾ"
σπούδασον
ಈ ಕ್ರಿಯಾಪದವು ಏಕವಚನದಲ್ಲಿದೆ, ಇದು ತೀತನನ್ನು ಮಾತ್ರ ಸಂಬೋಧಿಸುವಂಥದ್ದಾಗಿದೆ. ಬಹುಶಃ ತೀತನ ಸ್ಥಾನವನ್ನು ವಹಿಸಿಕೊಳ್ಳುವುದಕ್ಕಾಗಿ ಅರ್ತೆಮನ್ನಾಗಲಿ ಅಥವಾ ತುಖಿಕನ್ನಾಗಲಿ ಕ್ರೇತದಲ್ಲಿಯೇ ಇರಬೇಕು.
παραχειμάσαι
"ಚಳಿಗಾಲದಲ್ಲಿ ಉಳಿದುಕೊಳ್ಳಲು"
Titus 3:13
Ζηνᾶν
ಇವುಗಳು ವ್ಯಕ್ತಿಗಳ ಹೆಸರುಗಳಾಗಿವೆ (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/translate-names\/01.md]])
σπουδαίως πρόπεμψο
"ಕಳುಹಿಸುವದರಲ್ಲಿ ತಡಮಾಡಬೇಡ"
καὶ Ἀπολλῶν
"ಮತ್ತೂ ಅಪೋಲ್ಲೋಸನನ್ನು ಸಹ"
ἵνα μηδὲν αὐτοῖς λείπῃ
ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಇದರಿಂದಾಗಿ ಅವರಿಗೆ ಅಗತ್ಯವಿರುವ ಎಲ್ಲವು ಅವರಿಗೆ ಇರುತ್ತದೆ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)
Titus 3:14
ಎಲ್ಲಾ ವಿಶ್ವಾಸಿಗಳು ಅಗತ್ಯವಿರುವವರಿಗೆ ಒದಗಿಸುವುದು ಮುಖ್ಯ ಎಂದು ಪೌಲನು ವಿವರಿಸುತ್ತಾನೆ.
οἱ ἡμέτεροι
ಪೌಲನು ಕ್ರೇತದಲ್ಲಿರುವ ವಿಶ್ವಾಸಿಗಳನ್ನು ಸೂಚಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ಸ್ವಂತ ಜನರು”
οἱ ἡμέτεροι
ಇದರಲ್ಲಿರುವ ನಮ್ಮ ಎಂಬ ಪದವು ಪೌಲನನ್ನು ಮತ್ತು ತೀತನನ್ನು ಒಳಗೊಂಡಿದೆ. ಪದದ ರೂಪವು ದ್ವಿವಚನವಾಗಿ ಅಥವಾ ಅಂತರ್ಗತವಾಗಿ ಇರಬೇಕು.
εἰς τὰς ἀναγκαίας χρείας
"ಅದು ಅತ್ಯಗತ್ಯವಾದ ವಸ್ತುಗಳ ಕೊರತೆಯಿರುವ ಜನರಿಗೆ ಸಹಾಯ ಮಾಡಲು ಶಕ್ತರನ್ನಾಗಿಸುತ್ತದೆ"
εἰς τὰς ἀναγκαίας χρείας, ἵνα μὴ ὦσιν ἄκαρποι
ಪೌಲನು ಜನರು ಮಾಡುತ್ತಿದ್ದ ಸತ್ಕಾರ್ಯಗಳ ಕುರಿತು ಮಾತನಾಡುವಾಗ ಅವರನ್ನು ಒಳ್ಳೆಯ ಫಲವನ್ನು ಕೊಡುವ ಮರಗಳೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: "ಅದರಿಂದಾಗಿ ಅವರು ನಿಷ್ಪ್ರಯೋಜಕವಾದ ಜೀವನವನ್ನು ನಡಿಸುವುದಿಲ್ಲ (ನೋಡಿರಿ: [[https://git.door43.org/translationCore-Create-BCS/kn_ta/src/branch/master/translate/figs-metaphor\/01.md]])
ἵνα μὴ ὦσιν ἄκαρποι
ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಹೀಗೆ ಅವರು ಫಲವನ್ನು ಕೊಡುವವರಾಗುತ್ತಾರೆ” ಅಥವಾ “ಹೀಗೆ ಅವರು ಫಲಪ್ರದರಾಗುತ್ತಾರೆ” (ನೋಡಿರಿ: ದ್ವಿಗುಣ ನಕಾರಾತ್ಮಕಗಳು)
Titus 3:15
ತೀತನಿಗೆ ಬರೆದ ಪತ್ರವನ್ನು ಪೌಲನು ಮುಕ್ತಾಯಗೊಳಿಸುತ್ತಾನೆ
οἱ μετ’ ἐμοῦ πάντες
“ನನ್ನೊಂದಿಗಿರುವ ಜನರೆಲ್ಲರು" ಅಥವಾ "ನನ್ನೊಂದಿಗೆ ಇಲ್ಲಿರುವ ಎಲ್ಲ ವಿಶ್ವಾಸಿಗಳು”
ἀσπάζονταί σε
ಇದರಲ್ಲಿರುವ ನೀನು ಎಂಬುದು ಏಕವಚನವಾಗಿದೆ, ಇದು ತೀತನಿಗೆ ಮಾಡುವ ವೈಯಕ್ತಿಕ ವಂದನೆಯಾಗಿದೆ.
ἡ χάρις μετὰ πάντων ὑμῶν
ಇದು ಸಾಮಾನ್ಯವಾಗಿ ಮಾಡುವ ಕ್ರಿಸ್ತೀಯ ವಂದನೆಯಾಗಿತ್ತು. ಪರ್ಯಾಯ ಭಾಷಾಂತರ: “ದೇವರ ಕೃಪೆಯು ನಿಮ್ಮೊಂದಿಗೆ ಇರಲಿ” ಅಥವಾ “ದೇವರು ನಿಮ್ಮೆಲ್ಲರಿಗೂ ಕೃಪೆ ತೋರಲಿ ಎಂದು ನಾನು ಬೇಡಿಕೊಳ್ಳುತ್ತೇನೆ”
ὑμῶν
ಇದರಲ್ಲಿರುವ ನೀವು ಎಂಬ ಪದವು ಬಹುವಚನವಾಗಿದೆ. ಈ ಆಶೀರ್ವಾದವು ತೀತನಿಗೂ ಮತ್ತು ಕ್ರೇತದಲ್ಲಿರುವ ಎಲ್ಲ ವಿಶ್ವಾಸಿಗಳಿಗೂ ಇರುವಂಥದ್ದಾಗಿದೆ.
τοὺς φιλοῦντας ἡμᾶς ἐν πίστει
ಸಂಭಾವ್ಯ ಅರ್ಥಗಳು 1) "ನಮ್ಮನ್ನು ಪ್ರೀತಿಸುವ ವಿಶ್ವಾಸಿಗಳು" ಅಥವಾ 2) "ನಾವು ಒಂದೇ ನಂಬಿಕೆಯನ್ನು ಹಂಚಿಕೊಳ್ಳುವವರು ಆಗಿರುವುದ್ದರಿಂದ ನಮ್ಮನ್ನು ಪ್ರೀತಿಸುವ ವಿಶ್ವಾಸಿಗಳು"
ἡμᾶς
ಇದರಲ್ಲಿರುವ ನಮ್ಮನ್ನು ಎಂಬ ಪದವು ಬಹುಶಃ ಪ್ರತ್ಯೇಕವಾಗಿ ಪೌಲ ಮತ್ತು ಅವನೊಂದಿಗಿರುವ ಕ್ರೈಸ್ತರ ಗುಂಪನ್ನು ಸೂಚಿಸುತ್ತದೆ. ಪೌಲನು ಈ ಗುಂಪಿನಿಂದ ಕ್ರೇತದಲ್ಲಿ ತೀತನೊಂದಿಗೆ ಇರುವ ಕ್ರೈಸ್ತರ ಗುಂಪಿಗೆ ವಂದನೆಗಳನ್ನು ತಿಳಿಸುತ್ತಿದ್ದಾನೆ.